Sunday, 2 February 2020

Vidyaranya saara sangraha 1. Jeevanmukthi viveka - Adhyaya - 1,2 . - Summarised by Dr. Raveendra Hosadurga



                     ಶ್ರೀಮನ್ವಿದ್ಯಾರಣ್ಯ ಮುನಿ ವಿರಚಿತ
                      ಜೀವನ್ಮುಕ್ತಿ ವಿವೇಕ.

                       ಸ್ವಾಮಿ ಹಷಾನಂದ
                       ಶ್ರೀ ರಾಮಕೃಷ್ಣಾಶ್ರಮ,ಬೆ0ಗಳೂರು.
                       ತೃತೀಯ ಮುದ್ರಣ 1೯೯0.

                       ಉಪೋದ್ಘಾತ
ವಿದ್ಯಾರಣ್ಯರ  ಪ್ರತಿಭೆ ಅತ್ಯಂತ ವಿಶಾಲವೂ ಗಂಭೀರವೂ ಆದದ್ದು.ವಿಜಯನಗರ ರಾಜ್ಯದ ಮೊದಲಲ್ಲಿ ಅದರ ರಕ್ಷಕರಾಗಿದ್ದು  ಕನಾ೯ಟಕ-ಸಿಂಹಾಸನ-ಪ್ರತಿಷ್ಥಾಪನಾಚಾಯ೯ರೆಂದು  ಪ್ರಸಿದ್ಧಿಯನ್ನು ಪಡೆದಿರುತ್ತಾರೆ.ಅನಂತರ ಸನ್ಯಾಸಿಗಳಾಗಿ ಕ್ರಿ.1377 ರಿಂದ 1386 ರವರೆಗೆ  ಶೃಂಗೇರೀ ಮಠದ ಪೀಠವನ್ನು ಅಲಂಕರಿಸಿದ್ದರು.

             ಇವರ  ಪೂವಾಮದ ಹೆಸರು ಮಾಧವಾಚ.ತಂದೆಯ ಹೆಸರು ಮಾಯಣ ತಾಯಿಯ ಹೆಸರು ಶ್ರೀಮತಿ.ಇವರಿಗೆ ವಿದ್ಯಾತೀಥಭಾರತೀ ತೀಥ ಮತ್ತು ಶ್ರೀಕಂಠ ಎಂಬ ಮೂವರು ಗುರುಗಳಿದ್ದರು.ಇವರು ¸ÀªÀzÀ±À£À ಸಂಗ್ರಹ ಇನ್ನೂ ಮುಂತಾದ ಉದ್ಗ್ರಂಥಗಳನ್ನು ರಚಿಸಿರುತ್ತಾರೆ.

                 ಜೀವನ್ಮುಕ್ತಿ ವಿವೇಕ

ಜೀವನ್ಮುಕ್ತಿ ವಿವೇಕವು ಐದು ಪ್ರಕರಣಗಳನ್ನು ಹೊಂದಿದೆ.
1) ಜೀವನ್ಮುಕ್ತಿ ಪ್ರಮಾಣ
2) ವಾಸನಾಕ್ಷಯ
3) ಮನೋನಾಶ
4)ಸ್ವರೂಪ ಸಿದ್ಧಿ ಪ್ರಯೋಜನ
5)ವಿದ್ವತ್ ಸನ್ಯಾಸ                                              

1) ಸುಖದು: ಮೊದಲಾದ ಲಕ್ಷಣಗಳುಳ್ಳ ಚಿತ್ತಧಮ೯ದಿಂದ ಬಿಡುಗಡೆಯನ್ನು ಹೊಂದುವುದೇ  ಜೀವನ್ಮುಕ್ತಿ.(ಪುಟ 4 ಮುನ್ನುಡಿ).      

2)ಜೀವನ್ಮು ಕ್ತಿಉಊ ಸಹ ಪ್ರಾರಬ್ಧದಕಮ  ಫಲದಲ್ಲಿಯೇ ಸೇರಿರುತ್ತದೆ. (ಪುಟ 4 ಮುನ್ನುಡಿ)

3)ಯಾವನು ಸಂಸಾರದ ಚಿಂತೆಗಳನ್ನೆಲ್ಲಾ ಕಳೆದೊಕೊಂಡಿರುವನೊ,ಕಲಾವಂತನಾಗಿದ್ದರೂ ನಿಷ್ಕಲನೊಚಿತ್ತವುಳ್ಳವನಾಗಿದ್ದರೂ ಚಿತ್ತವಿಲ್ಲದಂತಿರುವನೊ,ಅವನು ಜೀವನ್ಮುಕ್ತನೆಂದು ಕರೆಯಲ್ಪಡುತ್ತಾನೆ.(ಮುನ್ನುಡಿ ಪುಟ 4)

4)ತತ್ವಜ್ಞಾನ,ವಾಸನಾಕ್ಷಯ,ಮನೋನಾಶ ಇವು ಮೂರು  ಜೀವನ್ಮುಕ್ತಿಯ ಸಾಧನಗಳು.(ಮುನ್ನುಡಿ ಪುಟ 5)

5)ಯಾವಾಗ ಮನಸ್ಸು ವಿಷಯಾಸಕ್ತಿಯನ್ನು ಬಿಟ್ಟು  ಹೃದಯದಲ್ಲಿ ನಿರುದ್ಧವಾಗಿ ಆನಂದವನ್ನು ಪಡೆಯುವುದೊ,ಆಗ ಯೋಗಿಯು ಮುಕ್ತನಾಗುತ್ತಾನೆ.(ಮುನ್ನುಡಿ ಪುಟ 5)

6)ಭೂತ-ಭವಿಷ್ಯತ್ಕಾಲಗಳಿಗೆ ಸಂಬಂಧಿಸದೆ  ವತಮಾನದಲ್ಲಿ ನಗುತ್ತಾ ಇರುತ್ತಾನೆ.(ಮುನ್ನುಡಿ ಪುಟ6).

7)ಕ್ರಮನಿಗ್ರಹಕ್ಕೆ ಅಧ್ಯಾತ್ಮ ವಿದ್ಯಾ ಪ್ರಾಪ್ತಿ ಮೊದಲಾದವು ಸಾಧನಗಳಾಗಿರುತ್ತವೆ.(ಮುನ್ನುಡಿ ಪುಟ6)

8)ಚಿತ್ತವೃತ್ತಿ ನಿರೋಧಕ್ಕೆ ಯೋಗದ ಯಮ ನಿಯಮಾದಿ ಅಷ್ಟಾಂಗಗಳು  ಉಪಕಾರಿಯಾಗುರುತ್ತವೆ.
(ಮುನ್ನುಡಿ ಪುಟ 6)

)ಜೀವನ್ಮುಕ್ತಿಯ ಪ್ರಯೋಜನಗಳು ನಾಲ್ಕು ಬಗೆ:
1) ಜ್ಞಾನದ ರಕ್ಷಣೆ 2) ತಪಸ್ಸು 3)ವೈಷಮ್ಯದ ಅಭಾವ 4) ದುಃಖನಾಶ  5) ಸುಖದ ಆವಿಭಾ೯ವ (ಮುನ್ನುಡಿ ಪುಟ 7)

10)ಆತ್ಮನನ್ನು ಸಾಕ್ಷಾತ್ಕರಿಸಿಕೊಂಡಿರುವ ಯೋಗಿಯು ಯಾವ ಬಯಕೆಗಾಗಲೀ ,ಭೋಗಕ್ಕಾಗಲೀ ತಪಿಸುವುದಿಲ್ಲ.(ಮುನ್ನುಡಿ ಪುಟ 7)

11)ಜ್ಞಾನೋದಯಕ್ಕೆ ಮೊದಲು ಸಾಧನವಾಗಿದ್ದ ಸನ್ಯಾಸವು ಈಗ ಸಾಧ್ಯವಾಗುತ್ತದೆ.ಇದು ಪರಮಹಂಸನ ಅವಸ್ಥೆ.ಇವನಿಗೆ ವಿಧಿನಿಷೇಧಗಳು ಇಲ್ಲ.ಯಾವವಿಧವಾದ ಪವಾಡವನ್ನೂ ತೋರಿಸುವುದಿಲ್ಲ.ಇಂಥಾ ಮಹಾಪುರುಷನ ಚಿತ್ತವು  ಯಾವಾಗಲೂ ಭಗವಂತನಲ್ಲಿಯೇ ನಿಲ್ಲು ತ್ತದೆ.ಭಗವಂತನು ಇವನಲ್ಲಿ ನೆಲೆಸಿರುತ್ತಾನೆ.(ಮುನ್ನು ಡಿ ಪುಟ 8)

12)'ಜ್ಞಾನಾಮೃತದಿಂದ ತೃಪ್ತನಾದ ಯೋಗಿಯು   ಕೃತಕೃತ್ಯನಾಗುತ್ತಾನೆ.ಅವನಿಗೆ ಮಾಡಬೇಕಾದ ಕತವ್ಯವೇನೂ ಇರುವುದಿಲ್ಲ.ಅಂತಹುದೇನಾದರೂ ಇದ್ದರೆ ಅವನು ತತ್ವವಿದನೆಂದು ಹೇಳಲಾಗುವುದಿಲ್ಲ.(ಮುನ್ನುಡಿ ಪುಟ7)

ಜೀವನ್ಮುಕ್ತಿ -ವಿದೇಹಮುಕ್ತಿ:
13)ವಿದ್ಯೆಯಿಂದ ಅವಿದ್ಯೆಯು ನಾಶವಾದಮೇಲೆ ಕೂಡಲೇ ಮೋಕ್ಷವು ಸಿದ್ಧಿಸುವುದೆಂಬುದು   ಸಹಜವೂ ನ್ಯಾಯವೂ ಆಗಿದೆ.(ಮುನ್ನುಡಿ ಪುಟ 7)

14)ಕ್ಷೀಯಂತೇ ಚಾಸ್ಯ ಕಮಾ೯ಣಿ  ತಸ್ಮಿನ್ದøಷ್ಟೇಪರಾವರೇ.

ಪ್ರಾರಂಭಿಸಿದ ಪ್ರಾರಬ್ಧಕಮ೯ವೂ ಕೂಡ ನಾಶವಾಗಬೇಕಾದ ಕಮ೯ಗಳಲ್ಲಿ ಸೇರಿಕೊಂಡಿದೆ.ಬ್ರಹ್ಮವಿದ್ಯೆಯನ್ನು ಪಡೆದವನು  ಅಶರೀರಿಯೂ ಆಗಬೇಕಾಗಿದೆ.(ಮುನ್ನುಡಿ ಪುಟ 8)

15) ಮನೋನಾಶವದೆಂದರೆ ನಿಜವಾಗಿ ಮನಸ್ಸಿನ ನಾಶವಲ್ಲ. ಮನಸ್ಸು ನಾಶವಾದರೆ ಇನ್ನೇನು ಉಳಿಯುತ್ತದೆ?ಚಿರಕಾಲವೂ ಉದಯಿಸುತ್ತಿರುವ  ಸಂಸ್ಕಾರಗಳು ಸೋತುಹೋಗಿ  ನಿರೋಧರೂಪವಾದ ಸಂಸ್ಕಾರಗಳು ಹುಟ್ಟುತ್ತವೆ.ನಿರೋಧದಿಂದ ಕೂಡಿದ ಕ್ಷಣವು ಚಿತ್ತದೊಡನೆ ಕೂಡಿದಾಗ 'ಮನೋನಾಶ' ವಾಗುತ್ತದೆ.(ಮುನ್ನುಡಿ ಪುಟ 5)

16)ಮನಸ್ಸು ಯಾವಾಗ ವಿಷಯಾಸಕ್ತಿಯಬ್ಬು ಬಿಟ್ಟು ಹೃದಯದಲ್ಲಿ ನಿರುದ್ಧವಾಗಿ  ಆನಂದವನ್ನು ಪಡೆಯುವುದೊ ಆಗ ಯೋಗಿಯು ಮುಕ್ತನಾಗುತ್ತಾನೆ.(ಮುನ್ನುಡಿ ಪುಟ 5)

17)ವಾಸನೆಗಳಿಲ್ಲದಿದ್ದರೂ ಇಂದ್ರಿಯಗಳು ತಮ್ಮ ವಿಷಯದಲ್ಲಿ ಪ್ರವತಿ೯ಸುತ್ತವೆ.(ಮುನ್ನುಡಿ ಪುಟ 6)

18)ಆಸಕ್ತಿಯಿಲ್ಲದೆ ಮುನಿಯು  ಕಮಗಳನ್ನೆಲ್ಲಾ  ಮಾಡುತ್ತಾನೆ.(ಮುನ್ನುಡಿ ಪುಟ 6)

1)ಭೂತ ಭವಿಷ್ಯತ್ ಕಾಲಗಳಿಗೆ ಸಂಬಂಧವಿಲ್ಲದೆ  ವತಮಾನದಲ್ಲಿ ನಗುತ್ತಾ ಇರುತ್ತಾನೆ.(ಮುನ್ನುಡಿ ಪುಟ 6)

20)ಕ್ರಮನಿಗ್ರಹಕ್ಕೆ ಅಧ್ಯಾತ್ಮ ವಿದ್ಯಾ ಪ್ರಾಪ್ತಿ  ಮೊದಲಾದವು  ಸಾಧನಗಳಾಗಿರುತ್ತವೆ.(ಮುನ್ನುಡಿ ಪುಟ 6)

21)ಚಿತ್ತವೃತ್ತಿಗಳ ನಿರೋಧಕ್ಕೆ  ಯೋಗಕ ಯಮ,ನಿಯಮಾದಿಗಳು,  ಉಪಕಾರಿಯಾಗಿರುತ್ತವೆ (ಮುನ್ನುಡಿ ಪುಟ 6)

22)ಸ್ವರೂಪಸಿದ್ಧಿಯ ಅಥವಾ ಜೀವನ್ಮುಕ್ತಿಯ ಪ್ರಯೋಜನಗಳು ಐದು ಬಗೆಯಾಗಿವೆ.
1) ಜ್ಞಾನದ ರಕ್ಷೆ
2)ತಪಸ್ಸು
3)ವೈಷಮ್ಯದ ಅಭಾವ
4)ದುಃಖನಾಶ
5)ಸುಖದ ಆವಿಭಾ (ಮುನ್ನುಡಿ ಪುಟ 8)

23) ತತ್ವಜ್ಞಾನವು  ಪ್ರಮಾಣಗಳಿಂದ ಉತ್ಪನ್ನವಾಗಿದ್ದರೂ ಸಂಶಯ ವಿಪಯ೯ಯಗಳಿಂದ ಅದನ್ನು ಕಾಪಾಡಬೇಕಾಗುತ್ತದೆ.(ಮುನ್ನುಡಿ ಪುಟ 8)

24)ಆತ್ಮನನ್ನು ಸಾಕ್ಷಾತ್ಕರಿಸಿಕೊಂಡಿರುವ ಯೋಗಿಯು  ಯಾವ ಬಯಕೆಗಾಗಲೀ  ಭೋಗಕ್ಕಾಗಲೀ ತಪಿಸುವುದಿಲ್ಲ.(ಮುನ್ನುಡಿ ಪುಟ 8)

25)ಜ್ಞಾನೋದಯಕ್ಕೆ ಮೊದಲು ಸಾಧನವಾಗಿದ್ದ ಸನ್ಯಾಸವು ಈಗ ಸಾಧ್ಯವಾಗುತ್ತದೆ.(ಮುನ್ನು ಡಿ ಪುಟ 7)

26)ಇದು ಪರಮಹಂಸನ ಅವಸ್ಥೆ. ಇವನಿಗೆ ವಿಧಿನಿಷೇಧಗಳಿಲ್ಲ.ಇವನು ಯಾವ ವಿಧವಾದ ಪವಾಡವನ್ನೂ ತೋರಿಸುವುದಿಲ್ಲ.ಇಂಥ ಮಹಾ ಪುರುಷನ ಚಿತ್ತವು ಯಾವಾಗಲೂ  ಭಗವಂತನಲ್ಲಿಯೇ ಇರುತ್ತದೆ.ಭಗವಂತನು ಇವನಲ್ಲಿ ನೆಲೆಸುತ್ತಾನೆ.(ಮುನ್ನುಡಿ ಪುಟ 8)

27)ಅವನಿಗೆ  ಮಾಡಬೇಕಾದ ಕತವ್ಯವೇನೂ ಇರುವುದಿಲ್ಲ. ಅಂತಹುದೇನಾದರೂ ಇದ್ದರೆ  ಅವನು ತತ್ವವಿದನೆಂದು ಹೇಳಲಾಗುವುದಿಲ್ಲ.(ಮುನ್ನುಡಿ ಪುಟ 7)

3) ಜೀವನ್ಮುಕ್ತಿ-ವಿದೇಹ ಮುಕ್ತಿ.

28)ವಿದ್ಯೆಯಿಂದ ಅವಿದ್ಯೆಯು ನಾಶವಾದ ಮೇಲೆ ಕೂಡಲೇ ಮ್ಫಕ್ಷವು ಸಿದ್ಧಿಸುವುದೆಂಬುದು ಸಹಜವೂ ನ್ಯಾಯವೂ ಆಗಿದೆ.
ಇದಕ್ಕೆ ಮುಂಡಕ ಶೃತಿಯ ಆಧಾರವೂ ಇದೆ.(ಮುಂಡಕ 2-2-8) ಕ್ಷೀಯಂತೇ ಚಾಸ್ಯ ಕಮಾ೯ಣಿ  ತಸ್ಮಿನ್ ದೃಷ್ಟೇ ಪರಾವರೇ.
ಪಕ್ವವಾಗಲು ಪ್ರಾರಂಭಿಸಿದ ಪ್ರಾರಬ್ಧಕಮ೯ವೂ ಕೂಡ ಬಾಶವಾಗ ಬೇಕಾದ ಕಮ೯ಗಳಲ್ಲಿ ಸೇರಿಕೊಂಡಿದೆ.(ಮುನ್ನುಡಿ  ಪುಟ7)

30) ಬ್ರಹ್ಮವಿದ್ಯೆಯನ್ನು ಪಡೆಯುವವನು ಅಶರೀರಿಯೂ ಆಗಬೇಕಾಗಿದೆ.(ಮುನ್ನುಡಿ ಪುಟ 8)

31)ಪೂಣಜ್ಞಾನವಿಲ್ಲದವನು ಅದ್ವೈತದ ಆಚಾಯನಾಗಲಾರನು.(ಮುನ್ನುಡಿ ಪುಟ 8)

31)ವಿದ್ಯಾರಣ್ಯರು ಹೇಳುವಂತೆ   ಶರೀರವಿರುವಾಗಲೂ ಜ್ಞಾನವಾಗಬಹುದು ಏಕೆಂದರೆ ಅವನು ಹೊಂದಬೇಕಾದ  ಜ್ಞಾನವೇನೂ ಇರುವುದಿಲ್ಲ.ಮತ್ತು ಕೃತಕೃತ್ಯನಾಗುತ್ತಾನೆ.(ಮುನ್ನುಡಿ ಪುಟ 8)

32)ಸ್ಥಿತಪ್ರಜ್ಞನ ಅವಸ್ಥೆಯು ಯೋಗಾರೂಢನದೆಂದು ಹೇಳಲಾಗುವುದಿಲ್ಲ.ಮೇಲು ಮೇಲಕ್ಕೆ ಹತ್ತುತ್ತಿರ್ಯವ  ಯೋಗಾರೂಢನ ಪ್ರಜ್ಞೆ  ಸ್ಥಿತವಾಗಲಾರದು. ಅಂಥವನು ಅದ್ವೈತದ ಗುರುವಾಗಲಾರ.(ಮುನ್ನುಡಿ ಪುಟ )

33)ಜೀವನು ಮಿತಿಯುಳ್ಳಂತೆ ಕಾಣುತ್ತಿರುವ ಬ್ರಹ್ಮನೇ  ಆಗಿದ್ದರೆ  ಮಿತಿಗೆ ಕಾರಣವಾಗಿರುವ ಅವಚ್ಛೇದಕಗಳು  ನಾಶವಾದರೆ ಜೀವನು  ಬ್ರಹ್ಮವಾಗಬೇಕು.ಬಬ್ರಹ್ಮವಿದನು ಬ್ರಹ್ಮವೇ ಆಗುತ್ತಾನೆ.ಬ್ರಹ್ಮವೇದ ಬ್ರಹ್ಮೈವ ಭವತಿ ಎಂಬ ಶೃತಿಯು (ಮುಂಡಕ 3.2,)  ತಾತ್ಪಯವು  ಇದೇ ಆಗುರುತ್ತದೆ.(ಮುನ್ನುಡಿ ಪುಟ೯)

34)ಸವ೯ಮುಕ್ತಿಯಾಗುವವರೆಗೆ  ಈಶ್ರರನೊಂದಿಗೆ ಐಕ್ಯವು ಸಾಧ್ಯವೇ ಹೊರತು ಬ್ರಹ್ಮದೊಂದಿಗಲ್ಲ.(ಮುನ್ನುಡಿ ಪುಟ 10)

35)ಒಂದು ವಿಧವಾದ ಪ್ರಾರಬ್ಧವು  ಜ್ಞಾನವನ್ನುಂಟು ಮಾಡಿದರೆ  ಇನ್ನೊಂದು ವಿಧವಾದ ಪ್ರಾರಬ್ಧವು ಜ್ಞಾನವನ್ನು ತಡೆಗಟ್ಟಬಹುದು.(ಮುನ್ನುಡಿ ಪುಟ 10)

36)ಪ್ರಾರಬ್ಧಕಮ೯ವು ಎಷ್ಟೇ  ಬಲವತ್ತರವಾಗಿದ್ದರೂ  ಯೋಗಾಭ್ಯಾಸಕ್ಕಾಗಿ ಮಾಡುವ ಪುರುಷ ಪ್ರಯತ್ನವು ವಿಫಲವಾಗುವುದೆಂದು ಹೇಳಲಾಗುವುದಿಲ್ಲ.ಏಕೆಂದರೆ  ಯೋಗಾಭ್ಯಾಸವು ಪ್ರಾರಬ್ಧಕ್ಕಿಂತ ಬಲವತ್ತರವಾಗಿದೆ.(ಮುನ್ನುಡಿ ಪುಟ 10)

37)ಸ್ವತಂತ್ರ ಕಮವಾದ ಯೋಗಾಭ್ಯಾಸವು  ಪ್ರಾರಬ್ಧ ಕಮವನ್ನು ತಡೆಗಟ್ಟಿ ಜೀವನ್ಮುಕ್ತಿಯನ್ನು ಕರೆತರುತ್ತದೆ ಎಂಬುದು ವಿದ್ಯಾರಣ್ಯರ ಸಿದ್ಧಾಂತ

ಉಪೋದ್ಘಾತವು ಮುಕ್ತಾಯವಾಯಿತು.
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

                     ಜೀವನ್ಮುಕ್ತಿ ಪ್ರಮಾಣ ಪ್ರಕರಣ

1) ವ್ಯರಾಗ್ಯವೇ ಸನ್ಯಾಸಕ್ಕೆ ಹೇತುವು.(ಪುಟ1)

2) ಯಾತ್ರೆಯೇ ಮೊದಲಾದವುಗಳಲ್ಲಿ ಅಶಕ್ತಿ ಮತ್ತು ಅಶಕ್ತಿ ಎಂಬಿವುಗಳ ದೃಷ್ಟಿಯಿಂದ  ತೀವ್ರ ವೈರಾಗ್ಯದಲ್ಲಿ  ಕುಟೀಚಕ ಮತ್ತು ಬಹೂದಕ  ಎಂಬ ಎರಡು ವಿಧವಾದ ಸನ್ಆಸಗಳಿರುತ್ತವೆ.(ಪುಟ3)

3)ಕುಟೀಚಕನ ವಿರಕ್ತಿಯು ಪಕ್ವವಾದಾಗ  ಬಹೂದಕನಾಗಲು ಶಕ್ತನಾಗುತ್ತಾನೆ. ಮುಮುಕ್ಷುವು ತೀವ್ರತರವಾದ ವಿರಕ್ತಿಯನ್ನು ಪಡೆದಾಗ ಹಂಸವೆಂಬ ಹೆಸರುನ್ನುಳ್ಳ  ಸನ್ಯಾಸಕ್ಕೆ ಯೋಗ್ಯನಾಗುತ್ತಾನೆ,
ಹಂಸನ ವಿರಕ್ತಿಯು ಪಕ್ವವಾದಾಗ  ನೇರವಾಗಿ ವಿಜ್ಞಾನವನ್ನು ಸಾಧಿಸಿಕೊಡಬಲ್ಲ ಪರಮಹಂಸ ಸನ್ಯಾಸಕ್ಕೆ  ಯೋಗ್ಯತೆಯನ್ನು ಪಡೆಯುತ್ತಾನೆ.(ಪುಟ2) 

4)   ಬ್ರಹ್ಮಲೋಕ ಅಥವಾ ಮೋಕ್ಷ ಎಂಬ ಫಲಭೇದವನ್ನನುಸರಿಸಿ  ತೀವ್ರತರ ವೈರಾಗ್ಯದಲ್ಲಿ ಸನ್ಯಾಸವು ಎರಡು ವಿಧ. (ಬ್ರಹ್ಮ) ಲೋಕದಲ್ಲಿ ತತ್ವವನ್ನರಿಯುವವನು ಹಂಸನು. ಲೋಕದಲ್ಲಿಯೇ ಅರಿತುಕೊಳ್ಳುವವನು ಪರಮಹಂಸನು.(ಪುಟ 3)

5) ಪರಮಹಂಸನು ಜಿಜ್ಞಾಸು ಅಥವಾ ಜ್ಞಾನಿ ಎಂದು ಎರಡುವಿಧ.ವಾಜಸನೇಯಿಗಳು ಜ್ಞಾನಕ್ಕಾಗಿ  ಜಿಜ್ಞಾಸುವಿಗೆ ಸನ್ಯಾಸವನ್ನು ಹೇಳುತ್ತಾರೆ.(ಪುಟ 3)

6)ವಿವಿದಿಷಾ ಸನ್ಯಾಸ:
ಯಾರುಸಂತತಿಯನ್ನು ಇಚ್ಛಿಸಿದರೋ ಅವರು ಸ್ಮಶಾನವನ್ನು ಹೊಂದಿದರು.ಯಾರು ಸಂತಾನವನ್ನು ಬಯಸಲಿಲ್ಲವೊ ಅವರು ಅಮೃತತ್ವವನ್ನೇ ಹೊಂದಿದರು.(ಪುಟ 6)

7) ಮನುಷ್ಯ ಲೋಕವು ಪುತ್ರನ ಮೂಲಕ ಜಯಿಸಿಕೊಳ್ಳತಕ್ಕದ್ದು.(ಪುಟ7)

8)ರಮಹಂಸನೆಂದು ಕರೆಯಲ್ಪಡುವವನು ಬ್ರಹ್ಮವಿಜ್ಞಾನವನ್ನು ಪಡೆಯುವುದಕ್ಕಾಗಿ  ಶಾಂತಿ ದಾಂತಿ  ಮೊದಲಾದ ಎಲ್ಲಾ ಸಾಧನೆಗಳಿಂದಲೂ  ಸಂಪನ್ನನಾಗಬೇಕು.(ಪುಟ 8)

) ಯಾವುದು ನೋಡಲ್ಪಡುವುದೊ ,ಯಾವುದು ಅನುಭವಿಸಲ್ಪಡುವುದೊ  ಅದು ಲೋಕ.(ಪುಟ 8)

10)ತೈತ್ತಿರೀಯವೇ ಮೊದಲಾದವುಗಳಲ್ಲಿ 'ಕಮ೯ದಿಂದಾಗಲೀ,ಸಣತತಿಯಿಂದಾಗಲಿ,ಧನದಿಂದಾಗಲಿ ಅವರು ಅಮೃತತ್ವ ವನ್ನು ಪಡೆಯಲಿಲ್ಲ.ತ್ಯಾಗದಿಂದಲೇ ಕೆಲವರು ಅಮೃತತ್ವ ವನ್ನು ಹೊಂದಿದರು.(ಪುಟ 10)

     ವಿದ್ವತ್ ಸನ್ಯಾಸ:(ಪುಟ 12)
1) ಆತ್ಮನನ್ನೇ ಅರಿತುಕೊಂಡು  ಬ್ರಾಹ್ಮಣರು ಪುತರರಲ್ಲಿ,ಧನದಲ್ಲಿ,ಲೋಕಗಳಲ್ಲಿ ಇರುವ  ಕಾಮನೆಯನ್ನು ಬಿಟ್ಟು ಭಿಕ್ಷಾಚಯೆಯನ್ನು ಮಾಡುತ್ತಾರೆ.(ಪುಟ 13)
2)ಮುನಿತ್ವ ಎಂದರೆ ಮನನಶೀಲತ್ವ.ಅದು ಬೇರೆ ಕತ೯ವ್ಯಗಳು ಇಲ್ಲದೇ ಇರುವ ಸಂದಭ೯ದಲ್ಲಿ ಮಾತ್ರ ಸಂಭವಿಸುವುದರಿಂದ ಇಲ್ಲಿ ಅಥಾತ್ ಸನ್ಯಾಸವನ್ನೇ ಹೇಳಿರುತ್ತದೆ.(ಪುಟ 16)

3)ವಿವಿದಿಷಾ ನನ್ಯಾಸಿಯು ತತ್ವಜ್ಞಾನವನ್ನು ಪಡೆಯಲು  ಹೇಗೆ ಶ್ರವಣ,ಮನನಾದಿಗಳನ್ನು ಸಂಪಾದಿಸಬೇಕೋ ಹಾಗೆಯೇ  ವಿದ್ವತ್ ಸನ್ಯಾಸಿಯೂ ಕೂಡ ಜೀವನ್ಮುಕ್ತಿಯನ್ನು ಪಡೆಯಲು ಮನೋನಾಶ ಹಾಗೂ ವಾಸನಾಕ್ಷಯಗಳನ್ನು ಸಂಪಾದಿಸಿಕೊಳ್ಳಬೇಕು.(ಪುಟ 18).

4)ಆತ್ಮಜ್ಞಾನವಾದಮೇಲೆ  ಆತ್ಮಜ್ಞಾನವೇ ಯಜ್ಞೋಪವೀತವೆಂದು  ಸಮಾಧಾನ ಮಾಡುತ್ತಾನೆ.ಆದ್ದರಿಂದ  ಯಜ್ಞೋಪವೀತವಿಲ್ಲದಿರುವುದರಿಂದ  ಕೂಡ ಪರಮಹಂಸತ್ವವು  ನಿಶ್ಚಯವಗುತ್ತದೆ.(ಪುಟ 1)

5)ಪರಮಹಂಸನಿಗೆ ಶಿಖೆ, ಯಜ್ಞೋಪವೀತಗಳಿಲ್ಲವೆಂದು ಸೂತ ಸಂಹಿತೆಯಲ್ಲಿ ಹೇಳಿರುತ್ತದೆ.(ಪುಟ1)

6)ಪರಮಹಂಸರೆಂಬುವರು ಸನ್ಯಾಸ ಚಿನ್ಹೆಗಳನ್ನು ಧರಿಸುವುದಿಲ್ಲ. ಆಚಾರಗಳನ್ನು ಮೀರಿರುತ್ತಾರೆ. ಉನ್ಮತ್ತರಲ್ಲದಿದ್ದರೂ ಉನ್ಮತ್ತರಂತೆಯೇ ಆಚರಿಸುತ್ತಾರೆ.(ಪುಟ20)

7)ಬತ್ತಲೆಯಾಗಿ  ದ್ವಂದ್ವಾತೀತನಾಗಿ  ಏನನ್ನೂ ಪರಿಗ್ರಹಿಸದೆ ಬ್ರಹ್ಮಮಾಗ೯ದಲ್ಲಿಯೇ ಚೆನ್ನಾಗಿ ಸಂಪನ್ನರಾಗಿ,ಶುದ್ಧಮನಸ್ಕರಾಗಿ ಪ್ರಾಣಧಾರಣೆಗಾಗಿ ಸಕಾಲದಲ್ಲಿ ಯಾರಹಂಗೂ ಇಲ್ಲದೆತನ್ನ ಹೊಟ್ಟೆಯನ್ನು ಭಿಕ್ಷಾಪಾತ್ರೆಯನ್ನಾಗಿ ಮಾಡಿಕೊಂಡು,ಭಿಕ್ಷೆ ಬೇಡುತ್ತಾ ಲಾಭಾಲಾಭಗಳಲ್ಲಿ ಸಮಾನವಾಗಿ  ಪಾಳುಮನೆ,ದೇವಸ್ಥಾನ,ಹುಲ್ಲಿನ ಮೆದೆ,ಹುತ್ತ,ವೃಕ್ಷಮೂಲ,ಕುಂಬಾರನು ಮಡಕೆ ಮಾಡುವಮನೆ,ಅಗ್ನಿಹೋತ್ರ ಗ್ರಹ,ನದಿಯ ಮರಳು,ಬೆಟ್ಟದ ಗುಹೆ,ಕಂದರ,ಮರದ ಪೊಟರೆ,ಝರಿ ಅಥವಾ ಬರಿಯ ನೆಲ ಇವುಗಳಲ್ಲಿ ವಾಸಿಸುತ್ತಾ,ಮನೆ ಇಲ್ಲದವನಾಗಿ ,ಯಾವಪ್ರಯತ್ನವನ್ನೂ ಮಾಡದೆ ಅಹಂಕಾರವಿಲ್ಲದೆ ಜ್ಯೋತಿ ಬ್ರಾಹ್ಮಣದ ಸ್ವರೂಪದಲ್ಲಿದ್ದುಕೊಂಡು ,ಆತ್ಮನಿಷ್ಠನಾಗಿ ಶುಭ ಅಶುಬಗಳನ್ನೂ ನಿಮೂ೯ಲಗೊಳಿಸುತ್ತ,ಸನ್ಯಾಸದ ಮೂಲಕ ದೇಹತ್ಯಾಗವನ್ನು ಯಾವನು ಮಾಡುತ್ತಾನೆಯೋ  ಅವನಿಗೆ ಪರಮಹಂಸನೆಂದು ಹೆಸರು.(ಪುಟ21)

8)ವೇದಗಳಲ್ಲಿ ಆವತನಭಾಗವನ್ನು ಮಾತ್ರ ಮನನ ಮಾಡಬೇಕು.ಉಪನಿಷತ್ತನ್ನು ಆವತ ಮಾಡಬೇಕು.(ಪುಟ22).

)ಪರಮಹಂಸನು ದಂಡವನ್ನಾಗಲೀ,ಶಿಖೆಯನ್ನಾಗಲೀ,ಯಜ್ಞೋಪವೀತವನ್ನಾಗಲೀ,ಹೊದಿಕೆಯನ್ನಾಗಲೀ ಧರಿಸುವುದಿಲ್ಲ.(ಪುಟ23)

10)ಅವನಿಗೆ ಶೀತವಾಗಲೀ ಉಷ್ಣವಾಗಲೀ ಇಲ್ಲ.ಅವನಿಗೆ ದಿಕ್ಕುಗಳೇ ಅಸ್ತ್ರ.ಅವನು ಯಾರಿಗೂ ಪ್ರಮಾಣ ಮಾಡನು.(ಪುಟ23)

11)"ಯಾವುದು ಪೂಣಾ೯ನಂದವೂ ,ಅದ್ವೈತವೂ,ಜ್ಞಾನಸ್ವರೂಪವೂ ಆದೇ ನಾನಾಗಿರುತ್ತೇನೆ"ಎಂದು ಕೃತಕೃತ್ಯನಾಗುತ್ತಾನೆ.(ಪುಟ23)

12)ಯೋಗವು ಪ್ರವೃತ್ತಿಲಕ್ಷಣವುಳ್ಳದ್ದು.ಜ್ಞಾನವಾದರೋ ಸನ್ಯಾಸ ಲಕ್ಷಣವುಳ್ಳದ್ದು.ಆದುದರಿಂದ ಇಲ್ಲಿ ಬುದ್ಧಿವಂತನಾದವನು ಜ್ಞಾನವನ್ನೇ ಪುರಸ್ಕರಿಸಿ ಸನ್ಯಾಸ ಮಾಡಬೇಕು.(ವ್ಯಾಸವಾಕ್ಯ)

13)ಸಂಸಾರವು ನಿಸ್ಸಾರವು ಎಂದರಿತುಕೊಂಡು (ನಿಜವಾದ) ಸಾರವನ್ನು ಕಂಡುಕೊಳ್ಳುವ ಇಚ್ಛೆಯಿಂದ ಕೂಡಿ ವಿವಾಹವನ್ನು ಮಾಡಿಕೊಳ್ಳದೆಅತ್ಯಂತ ವೈರಾಗ್ಯವನ್ನು ಹೊಂದಿ   ಸನ್ಯಾಸವನ್ನು ಕೈಗೊಳ್ಳುತ್ತಾರೆ.(ಬೃಹಸ್ಪತಿ).(ಪುಟ24)

14)ಮುಂಡಕ ಶೃತಿಯು(2.2.8)ಪರಾವರನಾದ ಅವನನ್ನು ನೋಡಿದಾಗ ಹೃದಯದ ಗ್ರಂಥಿಗಳೆಲ್ಲ ಒಡೆದುಕುಳ್ಳುತ್ತವೆ.ಸವ೯ ಸಂಶಯಗಳೂ ಕತ್ತರಿಸಲ್ಪಡುತ್ತವೆ  ಮತ್ತು ಇವನ ಕಮ೯ಗಳೆಲ್ಲ ನಾಶಹೊಂದುತ್ತವೆ.(ಪುಟ26)

15)ಯಾವನಿಗೆ  ನಾನುಕತೃ  ಎಂಬ ಭಾವವಿರುವುದಿಲ್ಲವೋ,ಯಾವನ ಬುದ್ಧಿಯು ಲಿಪ್ತವಾಗುವುದಿಲ್ಲವೋ  ಅವನು ಲೋಕಗಳನ್ನು ಕೊಂದರೂ (ನಿಜವಾಗಿ) ಕೊಲ್ಲುವುದಿಲ್ಲ  ಮತ್ತು ಬಂಧಿಸಲ್ಪಡುವುದಿಲ್ಲ.(ಪುಟ 27)

16)ತತ್ವಜ್ಞಾನಕ್ಕಾಗಿ -ವಿವಿದಿಶಾ ಸನ್ಯಾಸ.
ಜೀವನ್ಮುಕ್ತಿಗಾಗಿ-ವಿದ್ವತ್ ಸನ್ಯಾಸ.(ಪುಟ 25)

ಜೀವನ್ಮುಕ್ತಿ ಸ್ವರೂಪ:(ಪುಟ2)
1)  ಜೀವಂತ ಮನುಷ್ಯನಿಗೆ  ಕತೃತ್ವ,ಭೋಕ್ತøತ್ವ,ಸುಖ ದುಃಖ ಮೊದಲಾದ ಲಕ್ಷಣಗಳುಳ್ಳ  ಚಿತ್ತಧಮ೯ವು ಕ್ಲೇಶರೂಪವಾಗಿರುವುದರಿಂದ
ಬಂಧನವನ್ನು ಉಂಟು ಮಾಡುತ್ತದೆ.ಅದರ ನಿವಾರಣೆಯೇ ಜೀವನ್ಮುಕ್ತಿ.(ಪುಟ 2)

2) ಕೃಷಿಯೇ ಮೊದಲಾದುದರಲ್ಲಿಪುರುಷಪ್ರಯತ್ನವಿದ್ದರೂಫಲವು ಕಂಡು ಬರದೇ ಇರುವಾಗಪ್ರಬಲವಾದ ಕಮ೯ವೊಂದರಿಂದ  ಫಲವು ಪ್ರತಿಬದ್ಧವಾಗಿದೆಯೆಂದು  ಕಲ್ಪಿಸಬೇಕಾಗುತ್ತದೆ.(ಪುಟ31)

3)ಅಜೀಣ೯ವಾಗುವುದೆಂಬ ಭಯದಿಂದ  ಆಹಾರವನ್ನು ಯಾರೂ ಬಿಡುವುದಿಲ್ಲ.ಭಿಕ್ಷುಕರು ಮುತ್ತಿಯಾರೆಂಬ ಭಯದಿಂದ ಯಾರೂ ಅಡಿಗೆಯನ್ನೇ  ಮಾಡದೆ ಹೋಗುವುದಿಲ್ಲ.ಹೇನು ಬಂದೀತೆಂಬ ಭಯದಿಂದ ಬಟ್ಟೆಯನ್ನೇ ತ್ಯಜಿಸುವುದಿಲ್ಲ.(ಪುಟ33)

4) ಲೋಕದಲ್ಲಿ ಚೆನ್ನಾಗಿ ಮಾಡಲ್ಪಟ್ಟ ಪೌರುಷದಿಂದ ಎಲ್ಲರೂ  ಎಲ್ಲವನ್ನೂ ಯಾವಾಗಲೂ ಹೊಂದಬಹುದು.(ಪುಟ34)

5)ಭಾವವೆ0ದರೆ ವಾಸನೆ(ಸಂಸ್ಕಾರ)(ಪುಟ37)

6)ಸಂಸ್ಕಾರವೆಂಬ ನದಿಯು ಶುಭ,ಅಶುಭ ಎಂಬ  ಎರಡು ಮಾಗ೯ದಲ್ಲಿ ಹರಿಯುತ್ತಿದೆ.ಪುರುಷ ಪ್ರಯತ್ನದಿಂದ ಅದನ್ನು ಶುಭಮಾಗದಲ್ಲಿ ಹರಿಸಬೇಕು(ಪ್ಟ 38).

7) ಹಾಗೆಯೇ ಚಿತ್ತವನ್ನೂ ಸಹ ಸತ್ಸಂಗದ ಮೂಲಕ ಅದಕ್ಕೆ ವಿರುದ್ಧವಾದುದನ್ನು ವಿಷಯವಾಗಿ ಹೊಂದಿರುವ ದುಸ್ಸಂಗದಿಂದ ಹಿಂದಿರುಗಿಸಲು ಸಾಧ್ಯ.(ಪುಟ 3)

8)ಬಾಲಕನಂತಿರುವ ಚಿತ್ತವನ್ನು  ಅದರಲ್ಲಿ ಸಮತ್ವವನ್ನುಂಟು ಮಾಡುವುದರಮೂಲಕ  ಸಮಾಧಾನಪಡಿಸುತ್ತ ಶೀಘ್ರವಾಗಿ ವಆದರೆ ಮೆಲ್ಲಮೆಲ್ಲಗೆ ವಶಪಡಿಸಿಕೊಳ್ಳಬಹುದು.ವಶಪಡಿಸಿಕೊಳ್ಳಬಹುದು.(ಪುಟ3-40).ಹಾಗೆಯೇ ಚಿತ್ತವನ್ನು ಶಾತಪಡಿಸಲು   ಎರಡು ಉಪಾಯಗಳಿವೆ.1) ಶತ್ರು ಮಿತ್ರರಲ್ಲಿ ಸಮಭಾವನೆಯನ್ನಿಡುವಂತೆ ಬೋಧಿಸುವುದು.2) ಪ್ರಾಣಾಯಾಮ,ಪ್ರತ್ಯಾಹಾರ -ಮೊದಲಾದ ರೂಪದ ಪುರುಷಪ್ರಯತ್ನ.

)ವಿಷಯಗಳಿಂದ ಹಿಂದಿರುಗಿಸಿದ ಮನಸ್ಸನ್ನು  ಪುನಃ ಅವುಗಳಕಡೆಗೆ ಹೋಗದಂತೆ ಮಾಡುವುದು.ಇದು ಅಷ್ಟಾಂಗಯೋಗದಲ್ಲಿ ಐದನೆಯಮೆಟ್ಟಿಲು(ಪ್ರತ್ಯಾಹಾರ).(ಪುಟ40)
  
10)ಶೀಘ್ರವಾಗಿ (ಫಲವನ್ನು ಕೊಡುವ ಉಪಾಯದ)ಯಾವಾಗ ನಿನ್ನ(ಮನಸ್ಸಿನಲ್ಲಿ)ಸದ್ವಾಸನೆಗಳು ತೋರಿಕೊಳ್ಳುವುವೋಆಗ ಅಭ್ಯಾಸವು ಸಫಲವಾಯಿತೆಂದು ತಿಳಿ(ಪುಟ40)

11)ಶುಭಸಂಸ್ಕಾರಗಳನ್ನು ಆಚರಿಸುತ್ತಿರು.ಪ್ರೀತಿಪಾತ್ರನೆ ಶುಭ ಸಂಸ್ಕಾರಗಳ ವೃದ್ಧಿಯಿಂದ ಯಾವ ದೋಷವೂ ಉಂಟಾಗುವುದಿಲ್ಲ.(ಪುಟ41)

12)ಎಲ್ಲಿಯವರೆಗೆ ನೀನು ಪರಮಪದವನ್ನು ಅರಿತುಕೊಳ್ಳುವುದಿಲ್ಲವೋ,ಅಲ್ಲಿಯವರೆಗೆ ಗುರು,ಶಾಸ್ತ್ರಪ್ರಮಾಣಗಳು-ಇವುಗಳಿಂದ ನಿಶ್ಚಿತವಾದುದನ್ನು  ಅನುಸರಿಸುತ್ತಿರು.(ಪುಟ42)

13)ಹಿತವಾದ ಭಾವಶುದ್ಧಿಯಿಂದ ಕೂಡಿದವನಾಗಿ ಅತ್ಯುತ್ತಮವೂ ,ಆಯರಿಂದ ಸೇವಿತವಾದ  ಶುಭಮಾಗ೯ವನ್ನನುಸರಿಸಿ  ಯಾವಾಗಳೂ ಶೋಕರಹಿತವಾದ  ಸ್ಥಿತಿಯನ್ನು ಹೊಂದು.ಕೊನೆಗೆ ಅದನ್ನೂ ತ್ಯಜಿಸಿ  ಚೆನ್ನಾಗಿ ಬ್ರಹ್ಮದಲ್ಲಿ ನಿಲ್ಲು.(ಪುಟ42).

ಜೀವನ್ಮುಕ್ತನ ಲಕ್ಷಣ:
1) ಜೀವನ್ಮುಕ್ತಿಯು ಉಂಟಾದುದಕ್ಕೆ ಶ್ರು-ಸ್ಮøತಿ ವಾಕ್ಯಗಳು ಪ್ರಮಾಣಗಳು.ಏಷಣೆಗಳಿಂದ ಬಿಡಲ್ಪಟ್ಟು ಮುಕ್ತನಾಗುತ್ತಾನೆ.(ಕಠ..5.1)(ಪುಟ43)

2) ಇವನ ಹೃದಯದಿಂದ ಯಾವಾಗ ಕಾಮನೆಗಳೆಲ್ಲಾ ಬಿಟ್ಟು ಹೋಗುವುವೋ ಆಗ ಮನುಷ್ಯನು ಅಮೃತನಾಗುತ್ತಾನೆ.(ಬೃ..8.8.7)(ಪುಟ44)

3)ಕಣ್ಣಿದ್ದರೂ ಕಣ್ಣಿಲ್ಲದವನಂತೆ,ಕಿವಿಯಿದ್ದರೂ ಕಿವಿಯಿಲ್ಲದವನಂತೆ,ಮನಸ್ಸಿದ್ದರೂ ಮನಸ್ಸಿಲ್ಲದವನಂತೆ,ಪೃಆಣವಿದ್ದರೂ ಪ್ರಾಣವಿಲ್ಲದವನಂತೆ ಇರುತ್ತಾನೆ.(ಪುಟ44)

4)ಸ್ಮøತಿಗಳಲ್ಲಿಕೂಡಜೀವನ್ಮುಕ್ತನನ್ನು  ಸ್ಥಿತಪ್ರಜ್ಞ,ಭಗವದ್ಭಕ್ತ,ಗುಣಾತೀತ,ಬ್ರಾಹ್ಮಣ,ಅತಿವಣಾ೯ಶ್ರಮಿ ಮೊದಲಾದ ಹೆಸರುಗಳಿಂದ ಕರೆದಿದೆ.
(ಪುಟ 44)

5)ವಿದೇಹಮುಕ್ತಿಯಂತೆಯೇ ಇರುವ ಜೀವನ್ಮುಕ್ತಿಯು ಜ್ಞಾನವಿಚಾರವನ್ನು ಮಾಡುತ್ತಿರು ಮನುಷ್ಯರಲ್ಲಿ ಉಂಟಾಗುತ್ತದೆ.(ಪುಟ45)

6)ಜ್ಞಾನಮಾತ್ರದಲ್ಲಿ ನಿಷ್ಠೆಯನ್ನು ಹೊಂದಿರುವುದು ಎಂದರೆ ಲೌಕಿಕ ಮತ್ತು ವೈದಿಕ ಕಮಗಳ ತ್ಯಾಗ,ದೇಹೇಂದ್ರಿಯಗಳು ಇರುವುದು ಇಲ್ಲದಿರುವುದು  ಎಂಬ ದೃಷ್ಟಿಯಿಂತ ಮಾತ್ರ.ಜೀವನ್ಮುಕ್ತಿ,ವಿದೇಹಮುಕ್ತಿಗಳಿಗೆ  ವಿಶೇಷವನ್ನು ಹೇಳುದೆಯೇ ವಿನಾ ಅನುಭವದ ದೃಷ್ಟಿಯಿಂದಲ್ಲ.ಏಕೆಂದರೆ ಎರಡರಲ್ಲಿಯೂ ದ್ವೈತದ ಜ್ಞಾನವಿರುವುದಿಲ್ಲ.(ಪುಟ45)

7) 'ವ್ಯವಹಾರದಲ್ಲಿ ತೊಡಗಿದ್ದರೂಯಾವನಿಗೆ ಇದು ಜಗತ್ತು ಇರುವಂತೆಯೇ ಅಸ್ತವಾಗುವುದೊ,ಚಿದಾಕಾಶವು ಮಾತ್ರ ಉಳಿದುಕೊಳ್ಳುವುದೊ ಅವನು ಜೀವನ್ಮುಕ್ತನೆಂದು ಹೇಳಲ್ಪಡುತ್ತಾನೆ.'(ಪುಟ 46)

8)ಯಾವನುಗೆ ಸುಖಪ್ರಾಪ್ತಿಯಲ್ಲಿ ಹಷ೯ವಾಗಲಿ ದುಃಖಪ್ರಾಪ್ತಿಯಲ್ಲಿ ದ್ಥನ್ಯವಾಗಲೀ ಉಂಟಾಗುವುದಿಲ್ಲವೊ,ಯಾವನು ತಾನಾಗಿಯೇ ಒದಗಿ ಬಂದದ್ದರಲ್ಲಿ ದೇಹರಕ್ಷಣೆಯನ್ನು ಮಾಡಿಕೊಳ್ಳುವನೊ ಅವನು ಜೀವನ್ಮುಕ್ತ್ನೆಂದು ಹೇಳಲ್ಪಡುತ್ತಾನೆ.(ಪುಟ47)

)ಯಾವನು ಸುಷುಪ್ತಿಯಲ್ಲಿದ್ದರೂ ಎಚ್ಚೆತ್ತಿರುವನೊ ಯಾ£ವನಿಗೆ ಜಾಗ್ರದವಸ್ಥೆಯೇ ಇಲ್ಲದಿರುವುದೊ,ಯಾವನ ಜ್ಞಾನವು ವಾಸನಾ ರಹಿತವಾಗಿದೆಯೊ ಅವನು ಜೀವನ್ಮುಕ್ತನೆಂದು ಹೇಳಲ್ಪಡುತ್ತಾನೆ.(ಪುಟ48)

10)ಜ್ಞಾನವನ್ನು  ಪಡೆದುಕೊಂಡಿದ್ದರೂ ಮನೋನಾಶ ವಾಸನಾಕ್ಷಯಗಳನ್ನು  ಮಾಡಿಕೊಳ್ಳದೆ ಇರುವವನು ಜೀವನ್ಮುಕ್ತನಲ್ಲ.(ಪುಟ4)

12)ರಾಗ ದ್ವೇಷ ಭಯ ಮೊದಲಾದವುಗಳಿಗೆ ಅನುರೂಪನಾಗಿ ಆಚರಿಸುತ್ತಿದ್ದರೂ ಯಾವನು ಆಕಾಶದಂತೆ ಒಳಗೆ ಅತಿ ಸ್ವಚ್ಛನಾಗಿರುವನೊ ಅನು ಜೀವನ್ಮುಕ್ತನೆಂದು ಹೇಳಲ್ಪಡುತ್ತಾನೆ.(ಪುಟ4)

13)ಹೇಗೆ ಆಕಾಶವು ಹೊಗೆ ಧೂಳು ಮೋಡ ಮೊದಲಾದವುಗಳಿಂದ ಕೂಡಿದ್ದರೂ ಅವುಗಳಿಂದ ನಿಲಿ೯ಪ್ತವಾಗಿರುವ ಕಾರಣ ಅತಿ ಸ್ಚ್ಛವಾಗಿಯೇ ಇರುವುದೊ ಹಾಗೆಯೇ(ಇಲ್ಲಿಯೂ).(ಪುಟ50)

14)ಕಮಗಳನ್ನು ಮಾಡುತ್ತಿರುವಾಗಲಾಗಲಿ  ಮಾಡದಿರುವಾಗಲಾಗಲಿ ಯಾವನಿಗೆ ಅಹಂಕಾರದಿಂದುಂಟಾದ   ("ನಾನು ಕತೃ"  ಎಂಬ)ಭಾವನೆಯಿರುವುದಿಲ್ಲವೊ,ಯಾವನ ಬುದ್ಧಿಯು ಲಿಪ್ತವಾಗುವುದಿಲ್ಲವೊ ಅವನು ಜೀವನ್ಮುಕ್ತನೆಂದು ಹೇಳಲ್ಪಡುತ್ತಾನೆ.(ಪುಟ50)

15)'ಯಾವನಿಂದ ಲೋಕವು ಉದ್ವೇಗವನ್ನು ಹೊಂದುವುದಿಲ್ಲವೊ ಲೊಕದಿಂದ ಯಾವನು ಉದ್ವೇಗವನ್ನು ಹೊಂದುವುದಿಲ್ಲವೊ ಯಾವನು ಹಷ ಅಸಹನೆ  ಭಯ-ಇವುಗಳಿಂದಬಿಡಲ್ಪಟ್ಟಿರುವನೊ ಅವನು ಜೀವನ್ಮು ಕ್ತನೆಂದು ಹೇಳಲ್ಪಡುತ್ತಾನೆ.(ಪುಟ51)

16)ಯಾವನು ಸಂಸಾರದ ಚಿಂತನೆಗಳನ್ನೆಲ್ಲ ಕಳೆದುಕೊಂಡಿರುವನೊ ,ಕಲಾವಂತನಾಗಿದ್ದರೂ ನಿಷ್ಕಲನೊ,ಚಿತ್ತವುಳ್ಲವನಾಗಿದ್ದರೂ ಚಿತ್ತವಿಲ್ಲದಂತಿರುವನೊ ಅವನು ಜೀವನ್ಮುಕ್ತನೆಂದು ಹೇಳಲ್ಪಡುತ್ತಾನೆ.(ಪುಟ52)
(ಇವನು ಶತ್ರು ಇವನು ಮಿತ್ರ ,ಇದುಮಾನ ಇದು ಅವಮಾನ  ಎಂಬೀರೂಪದ ವಿಕಲ್ಪಗಳೇ  ಸಂಸಾರಕಲನೆಗಳು.ಅರವತ್ನಾಲ್ಕು  ವಿದ್ಯೆಗಳೇ ಕಲೆಗಳು.ಇವೆಲ ವಿದ್ಯೆಗಳು ಇದ್ದರೂ ಅವುಗಳಲ್ಲಿ ಅಭಿಮಾನವನ್ನು ತಾಳುವುದಿಲ್ಲ.ವ್ಯವಹಾರದಲ್ಲಿ ಅವುಗಳನ್ನು ಉಪಯೋಗಿಸುವುದೂ ಇಲ್ಲ.)

17)ಯಾವನು   ಸಮಸ್ತ ವಿಷಯಸಮೂಹಗಳಲ್ಲಿ  ವ್ಯವಹರಿಸ್ತ್ತಿದ್ದರೂ -ಪರಾಥ೯ವಾದ ಕಮಗಳಲ್ಲಿ ತೊಡಗಿರುವವನಂತೆ -ಶೀತಲನಾಗಿರುವನೊ,ಯಾವನು ಪುಣ್ಯಾತ್ಮನೊ  ಅವನು ಜೀವನ್ಮುಕ್ತನೆಂದು ಹೇಳಲ್ಪಡುತ್ತಾನೆ.(ಪುಟ53)

ವಿದೇಹಮುಕ್ತನ ಲಕ್ಷಣ:
1) 'ತನ್ನದೇಹವು ಕಾಲವನ್ನು ಹೊಂದಿದಾಗ -ಗಾಳಿಯು ಸ್ಪಂದನರಹಿತವಾಗುವಂತೆ -(ಅವನು)ಜೀವನ್ಮುಕ್ತ ಪದವಿಯನ್ನು ತ್ಯಜಿಸಿಅದೇಹ ಮುಕ್ತತ್ವವನ್ನು ಹೊಂದುತ್ತಾನೆ'(ಪುಟ54)

2) ವಿದೇಹಮುಕ್ತನು ಉದಯಿಸುವುದಿಲ್ಲ,ಅಸ್ತಮಿತನಾಗುವುದಿಲ್ಲ,ಶಾಂತನಾಗುವುದಿಲ್ಲ:ಅವನು ಸತ್ ಅಲ್ಲ,ಅಸತ್ ಅಲದೂರದಲ್ಲಿರುವುದಿಲ್ಲ.ಹತ್ತಿರದಲ್ಲಿಯೂ ಇರುವುದಿಲ್ಲ;"ನಾನು'ಎಂಬುದೂ ಅಲ್ಲ,"ಇನ್ನೊಬ್ಬನು" ಎಂಬುದೂ ಅಲ್ಲ.(ಪುಟ54)

3)ಐದು ಜ್ಞಾನೇಂದ್ರಿಯಗಳು ,ಐದು ಕಮೇ೯ಂದ್ರಿಯಗಳು ಐದು ಪ್ರಾಣಗಳು ,ಮನಸ್ಸು ಮತ್ತು ಬುದ್ಧಿಇವು ಒಟ್ಟುಗೂಡಿ ಲಿಂಗ ಶರೀರ ಅಥವಾ ಸೂಕ್ಷ್ಮಶರೀರ ಎನಿಸುತ್ತವೆ.ಸಂಸಾರಿಯು ಮರಣಹೊಂದಿದಾಗ ಲಿಂಗಶರೀರವು ಹಾಗೆಯೇ ಉಳಿದುಕೊಂಡು  ಪುನಜ೯ನ್ಮಕ್ಕೆ ಕಾರಣವಾಗುತ್ತದೆ.(ಪುಟ55)

3)ಆಗ ಪ್ರಶಾಂತ ಗಂಭೀರವೂತೇಜಸ್ಸು ತಮಸ್ಸುಗಳಿಲ್ಲದುದೂ,ವ್ಯಾಪಕವೂ  ಅನಾಖ್ಯವೂ ಅನಭಿವ್ಯಕ್ತವೂ ಆದ ಸತ್ ಎಂಬುದೊಂದೇ  ಉಳಿದುಕೊಳ್ಳುತ್ತದೆ.(ಪುಟ100)

ಸ್ಥಿತಪ್ರಜ್ಞಲಕ್ಷಣ:
1)ಜಾರಿಣಿಯಾದ ನಾರಿಯು ಗೃಹಕೃತ್ಯಗಳಲ್ಲಿ ತೊಡಗಿದ್ದರೂ  ಒಳಗೆ ಮನಸ್ಸಿನಲ್ಲಿ ಪರಮಪುರುಷನ ಸಂಗವೆಂಬ  ರಸಾಯನವನ್ನೇ ಆಸ್ವಾದಿಸುತ್ತಿರುತ್ತಾಳೆ.ಹೀಗೆಯೇ ಜ್ಞಾನಿಯು  ಶುದ್ಧವಾದ ಪರತತ್ವದಲ್ಲಿ ವಿಶ್ರಾಂತಿಯನ್ನು ಹೊಂದಿ ಹೊರಗಡೆ ವ್ಯವಹಾರದಲ್ಲಿ ತೊಡಗಿದ್ದರೂ  ಒಳಗೆ ಅದನ್ನೇ ಆಸ್ವಾದಿಸುತ್ತಿರುತ್ತಾನೆ.(ಪುಟ58)

  2)    ಆತ್ಮನಲ್ಲಿಯೇ ಆತ್ಮನಿಂದಲೇ ಸಂತುಷ್ಟನಾಗಿ ಯಾವಾಗ  ಯೋಗಿಯು ಮನಸ್ಸಿನಲ್ಲಿರುವ ಸಮಸ್ತ ಕಾಮಗಳನ್ನು ತ್ಯಾಗಮಾಡುತ್ತಾನೋ  ಆಗ ಸ್ಥಿತಪ್ರಜ್ಞನೆನಿಸುತ್ತಾನೆ.(ಪುಟ5)

3)ಮನಸ್ಸು ಯಾವ ಅವಸ್ಥೆಯಲ್ಲಿ  ವಿಕ್ಷೇಪಗಳನ್ನು ಪರಿತ್ಯಜಿಸಿ ಸಮಾಧಾನವನ್ನು  ಎಂದರೆ ಏಕಾಗ್ರತೆಯನ್ನು ಹೊಂದುವುದೊ ಅದು ಸಮಾಧಿ.ಸ್ಥಿತಪ್ರಜ್ಞನ ಸಮಾಧಿಯು ಅಸಂಪ್ರಜ್ಞಾತ.(ಪುಟ60)

4) ದುಃಖಗಳಲ್ಲಿ ಉದ್ವೇಗವಿಲ್ಲದವನೂ,ಸುಖಗಳಲ್ಲಿ ಆಸೆಯಿಲ್ಲದವನೂ ,ಆಸಕ್ತಿ ಭಯ ಕ್ರೋಧಗಳಿಲ್ಲದವನೂ ಆದ ಮುನಿಯು ಸ್ಥಿತಪ್ರಜ್ಞನೆಂದು ಹೇಳಲ್ಪಡುವನು.(ಪುಟ61)

5) ಸುಖದುಃಖಗಳೆರಡೂ ಪ್ರಾರಬ್ಧಕಮ೯ದಿಂದ ಒದಗುವುದರಿಂದಲೂ ಮತ್ತು ಸಮಾಧಿಸ್ಥಿತಿಯಿಂದ
ಎದ್ದಿರುವವನಿಗೆ ಚಿತ್ತ ವೃತ್ತಿಯು ಸಂಭವಿಸಬಹುದಾದ್ದರಿಂದಲೂ ಅವೆರಡೂ (ಅವನ ವಿಷಯದಲ್ಲಿ) ಹೊಂದುತ್ತವೆ.ವಿವೇಕಿಯಾದವನಿಗೆ  ಉದ್ವೇಗವಾಗಲೀ ಸ್ಪøಹೆಯಾಗಲೀ  ಸಂಭವಿಸುವುದಿಲ್ಲ.(ಪುಟ61)

6) ಜನ್ಮದಲ್ಲಿ ಅನುಭವಿಸುವ ದುಃಖವು  ಹಿಂದಿನ ಜನ್ಮದಲ್ಲಿಮಾಡಿದ ಪಾಪ ಕಮ ಫಲ.(ಪುಟ62)

7)ಯಾವನು ಸವ ವಸ್ತುಗಳಲ್ಲಿಯೂ  ಆಸಕ್ತಿರಹಿತನಾಗಿ  ಯಾ ಪ್ರಿಯಾಪ್ರಿಯ-ವಿಷಯಗಳನ್ನು ಪಡೆದಾಗ ಸಂತೋಷಿಸುವುದಿಲ್ಲವೊ,ದ್ವೇಶಿಸುವುದಿಲ್ಲವೋ ಆತನ ಪ್ರಜ್ಞೆಯು ಸ್ಥಿರವಾಗಿರುವುದು.(ಪುಟ62)

8)ಆಮೆಯು ತನ್ನ ಸವ ಅಂಗಗಳನ್ನು  ಒಳಕ್ಕೆಳೆದುಕೊಳ್ಳುವಂತೆ ಜ್ಞಾನನಿಷ್ಠನಾದ ಯೋಗಿಯು ಯಾವಾಗ ಎಲ್ಲಾ ಕಡೆಗಳಿಂದಲೂ  ಇಂದ್ರಿಯಗಳನ್ನು ಅವುಗಳ ವಿಷಯಗಳಿಂದ  ಎಳೆದುಕೊಳ್ಳುವನೋ ಆಗ ಆತನ ಪ್ರಜ್ಞೆಯು ಸ್ಥಿರವಾಗಿರುತ್ತದೆ.(ಪುಟ63)

)'ನಿರಾಹಾರನಾದ ದೇಹಿಯನ್ನು ತೊರೆದು ಇಂದ್ರಿಯ ವಿಷಯಗಳು ಹಿಂತಿರುಗುತ್ತವೆ;ಆದರೆ ತೃಷ್ಣೆಯು ಬಿಟ್ಟಿರುವುದಿಲ್ಲ.ಪರಬರಹ್ಮವನ್ನು ಸಾಕ್ಷಾತ್ಕರಿಸಿಕೊಂಡ ಮೇಲೆ ಇವನ ತೃಷ್ಣೆಯೂ ಕೂಟ ಹೋಗುತ್ತದೆ.(ಪುಟ5)

10)ರಸ ಎಂದರೆ ಮನಸ್ಸಿನಲ್ಲಿರುವ ತೃಷ್ಣೆ.ಆದರೂ ಕೂಡ ಪರಮಾನಂದ ರೂಪವಾದ  ಪರಬ್ರಹ್ಮದ ದಶನವಾದಾಗ ಅಲ್ಪಾನಂದಕ್ಕೆ ಕಾರಣವಾದ  ವಿಷಯಗಳಿಂದ ಹಿಂದಿರುಗುತ್ತದೆ.(ಪುಟ65)

11)' ಆತ್ಮನನ್ನೇ ಲೋಕವನ್ನೇ ಹೊಂದಿರುವ ನಾವು ಸಂತತಿಯಿಂದ ಏನು ಮಾಡಿಕೊಳ್ಳೋu ಎಂಬ  ಶೃತಿಯು (ಬೃ..8.8.22) ವಿಷಯದಲ್ಲಿ ಪ್ರಮಾಣ.

12)ಪ್ರತಿವ್ಯಕ್ತಿಯ ಪ್ರಾರಬ್ಧವು ಅವನವನ ಪ್ರಯತ್ನದ ಮೂಲಕ ಎರಡನೆಯದನ್ನು  ಒದಗಿಸಿಕೊಡುತ್ತದೆ.(ಪುಟ65)

13)ವಿಕ್ಷೇಪವನ್ನುಂಟು ಮಾಡುವ ಇಂದ್ರಿಯಗಳು ಪ್ರಯತ್ನಶೀಲನೂ ಜ್ಞಾನಿಯೂ ಆದ ಮನುಷ್ಯನ ಮನಸ್ಸನ್ನು ಕೂಡ ಬಲಾತ್ಕಾರದಿಂದ ಅಪಹರಿಸುವುವು.ಆದುದರಿಂದ  ಇಂದ್ರಿಯಗಳನ್ನೆಲ್ಲ ನಿಗ್ರಹಿಸಿ ನನ್ನನ್ನೇ ಶ್ರೇಷ್ಠತತ್ವ (ಪರಮಾತ್ಮನನ್ನೇ) ಎಂದು ಭಾವಿಸಿ ಸಮಾಹಿತ ಚಿತ್ತನಾಗಬೇಕು.ಏಕೆಂದರೆ ಯಾವನ
ಇಂದ್ರಿಯಗಳು   ವಶದಲ್ಲಿ ತರಲ್ಪಟ್ಟಿದೆಯೋ  ಅವನ ಪ್ರಜ್ಞೆಯು ಸ್ಥಿರವಾಗುದುದು(ಪುಟ66)

14)ವಿಷಯಗಳಿಗಾಗಿ ಪ್ರಯತ್ನವನ್ನು ಬಿಟ್ಟು ಬ್ರಹ್ಮದಶನಕ್ಕಾಗಿ ಪ್ರಯತ್ನಿಸುತ್ತಿರುವವನಿಗೂ ಒಮ್ಮೊಮ್ಮೆ ಪ್ರಮಾದವು ಉಂಟಾಗಬಹುದಾದ್ದರಿಂದ ಅದನ್ನು ಪರಿಹರಿಸುವುದಕ್ಕಾಗಿ (ಅವನೂ) ಸಮಾಧಿಯನ್ನು  ಅಭ್ಯಸಿಸಬೇಕು.(ಪುಟ66).

15)ವಿಷಯಗಳನ್ನು ಚಿಂತಿಸುತ್ತಿರುವ ಮನುಷ್ಯನಿಗೆ ಅವುಗಳಲ್ಲಿ ಆಸಕ್ತಿಯು ಹುಟ್ಟುತ್ತದೆ.ಆಸಕ್ತಿಯಿಂದ ಕಾಮವು ಹುಟ್ಟುತ್ತದೆ.ಕಾಮದಿಂದ ಕ್ರೋಧವೂ ಕ್ರೋಧದಿಂದ ಸಂಮೋಹವೂ ಸಂಮೋಹದಿಂದ ಸ್ಮøತಿಯ ಭ್ರಮೆಯೂ ಬುದ್ಧಿನಾಶವೂ ಉಂಟಾಗುತ್ತದೆ.ಬುದ್ಧಿನಾಶದಿಂದ ಪುರುಷನು ನಾಶವಾಗುತ್ತಾನೆ.ಪುಟ66)

16)ರಾಗದ್ವೇಷಗಳಿಂದ   ಬಿಡುಗಡೆಯನ್ನು ಹೊಂದಿ ತನ್ನ ವಶದಲ್ಲಿರುವ ಇಂದ್ರಿಯಗಳಿಂದ  ವಿಷಯಗಳನ್ನು ಅನುಭವಿಸುತ್ತಿರುವ ಸಂಯತಚಿತ್ತವುಳ್ಳ ಮನುಷ್ಯನು ಪ್ರಸನ್ನತೆಯನ್ನು ಹೊಂದುವನು.(ಪುಟ 67)

17)ವಿಧೇಯಾತ್ಮತ್ವ ಎಂದರೆ ಮನಸ್ಸನ್ನು ವಶದಲ್ಲಿಟ್ಟುಕೊಂಡಿರುವಿಕೆ,ಪ್ರಸಾದವೆಂದರೆ ನೈಮ೯ಲ್ಯ,ಬಂಧನವಿಲ್ಲದಿರುವುದು,ಸಮಾಧಿಯ ಅಭ್ಯಾಸದಿಂದ ಕೂಡಿದವವನು  ಸಮಾಧಿಯನ್ನು ಬಿಟ್ಟೆದ್ದಿರುವ ಅವಸ್ಥೆಯಲ್ಲಿ  ಇಂದ್ರಿಯಗಳ ಮೂಲಕ ವ್ಯವಹರಿಸುತ್ತಿದ್ದರೂ ಸಮಾಧಿಯ ಶಾಂತಿಯಬಲದಿಂದ ಶಾಂತಿಯನ್ನು ಚೆನ್ನಾಗಿ ಹೊಂದುತ್ತಾನೆ.(ಪುಟ 68)

ಭಗವದ್ಭಕ್ತನ ಲಕ್ಷಣ:        
1)ಗೀತೆಯ ಹನ್ನೆರಡನೆಯ ಅಧ್ಯಾಯದಲ್ಲಿ ಭಗವಂತನಗು  ಭಗವತ್ಭಕ್ತರನ್ನು ಹೀಗೆ ವಣಿ೯ಸಿದ್ದಾನೆ.'ಯಾವನು ಸವ೯ ಪ್ರಾಣಿಗಳನ್ನು ದ್ವೇಶಿಸುವುದಿಲ್ಲವೊ,ಅವುಗಳಲ್ಲಿ ಮಿತ್ರಭಾವನೆಯನ್ನಿರಿಸಿಕೊಂಡಿರುವನೊ,ಕರುಣೆಯುಳ್ಳವನಾಗಿರುವನೊ,ಅಹಂಕಾರ ಮಮಕಾರಗಳಿಲ್ಲದವನೊ,ಸುಖದುಃಖಗಳಲ್ಲಿ ಸಮನಾಗಿರುವನೊ,ಕ್ಷಮಾಶೀಲನೊ,ಯಾವಾಗಲೂ ಸಂತುಷ್ಟನೊ,ಯೋಗಿಯೂ,ನಿಯತಾತ್ಮನೂ,ಧೃಢನಿಶ್ಚಯನೂ ಆಗಿರುವನೊ ,ಮನೋರಥಗಳನ್ನುನನ್ನಲ್ಲಿ ಅಪಿ೯ಸಿರುವನೊ ನನ್ನಭಕ್ತನಾಗಿರುವನೊಅವನು ನನಗೆ ಪ್ರಿಯನು.(ಪುಟ 6)

2)ಯಾವನಿಂದ ಜನರು ಉದ್ವಾಗ ಹೊಂದುವುದಿಲ್ಲವೊ,ಯಾವನು ಜನರಿಂದ ಉದ್ವೇಗ ಹೊಂದುವುದಿಲ್ಲವೊಮತ್ತು ಯಾವನಿಗೆ ಹಷ೯ವಾಗಲೀ ಅಸಹನೆಯಾಗಲೀ  ಭಯೋದ್ವೇಗಗಳಾಗಲಿ  ಇರುವುದಿಲ್ಲವೊ ಅವನು  ನನಗೆ ಪ್ರಿಯನು.(ಪುಟ70)

3)ಯಾವ ನನ್ನ ಭಕ್ತನು ಅಪೇಕ್ಷಾ ಶೂನ್ಯನೊ ಶಹುಚಿಯಾಗಿರುವನೊಸಮಥ೯ನೊ,ಉದಾಸೀನನೊ,ವ್ಯಥೆಯಿಲ್ಲದವನೊ  ಸವಕಮ ಪರಿತ್ಯಾಗಿಯೊ   ಅವನು ನನಗೆ ಪ್ರಿಯನೊಅವನು ನನಗೆ ಪ್ರಿಯನು(ಪುಟ70)

4)ಯಾವನು ಹಷಿಸುವುದಿಲ್ಲವೊ ದ್ವೇಷಿಸುವುದಿಲ್ಲವೊ ಶೋಕಿಸುವುದಿಲ್ಲವೊ,ಇಚ್ಛಿಸುವುದಿಲ್ಲವೊ ಶುಭಾಶುಭಗಳನ್ನು ಪರಿತ್ಯಜಿಸಿರುವನೊ,ಭಕ್ತಿಯುಳ್ಳವನೊ ಅವನು ನನಗೆ ಪ್ರಿಯನು.(ಪುಟ70)

5)ಶತ್ರು ಮಿತ್ರರಲ್ಲಿ ಸಮಬುದ್ಧಿಯುಳ್ಳವನೊ,ಮಾನಾಪಮಾನಗಳಲ್ಲಿ  ಮತ್ತು ಶೀತೋಷ್ಣ-ಸುಖದುಃಖಗಳಲ್ಲಿ ಸಮನಾಗಿರುವನೊ,ಆಸಕ್ತಿರಹಿತನೂ ,ನಿಂದಾಸ್ತುತಿಗಳನ್ನು ಸಮವಾಗೆಣಿಸುವವನೂ ಮೌನಿಯೂ  ಯಾವುದರಿಂದಲೂ ಸಂತುಷ್ಟನಾಗುವವನೂ
ನಿದಿ೯ಷ್ಟಸ್ಥಾವವಿಲ್ಲದವನೂ,ಸ್ಥಿರಬುದ್ಧಿಯುಳ್ಳವನೂ ಭಕ್ತಿವಂತನೂ ಆದ  ಮನುಷ್ಯನು ನನಗೆ ಪ್ರಿಯನು.(ಪುಟ70)

6)ಆತ್ಮಜ್ಞಾನವುಂಟಾದವನಿಗೆ ದ್ವೇಶರಾಹಿತ್ಯವೇ ಮೊದಲಾದ ಗುಣಗಳು ಪ್ರಯತ್ನವಿಲ್ಲದೆಯೇ ಸಿಧ್ಧಿಸಿರುತ್ತವೆಯೇ ವಿನಃ ಸಾಧನರೂಪದಿಂದಲ್ಲ.(ನೈಷ್ಕಮ್ಯ೯ಸಿಧ್ಧಿ4.6)(ಪುಟ70)

ಗುಣಾತೀತ ಲಕ್ಷಣ:
1)ಗುನಾತೀತನ ಲಕ್ಷಣವನ್ನು ಗೀತೆಯ ಹದಿನಾಲ್ಕನೆಯ ಅಧ್ಯಾಯದಲ್ಲಿ ವಣಿ೯ಸಿದೆ.ಮೂರು ಗುಣಗಳು ಎಂದರೆ ಸತ್ವ,ರಜಸ್ಸು -ತಮಸ್ಸುಗಳು.ಅವುಗಳ ಪರಿಣಾಮ ವಿಶೇಷದಿಂದ  ಎಲ್ಲಾ ಸಂಸಾರವೂ ಪ್ರವತಿ೯ತವಾಗಿರುತ್ತದೆ.ಗುಣಾತೀತತ್ವವೆಂದರೆ  ಅಸಂಸಾರಿತ್ವ,ಜೀವನ್ಮುಕ್ತತ್ವ ಎಂದಥ೯.ಭಗವಂತನು ಹೇಳಿದನು:'ಎಲೈ ಪಾಂಡವನೆಯಾವನು ಪ್ರಕಾಶ-ಪ್ರವೃತ್ತಿ ಮೋಹಗಳು ಬಂದರೂ ದ್ವೇಶಿಸುವುದಿಲ್ಲವೊ,ಹೋದರೂ ಬಯಸುವುದಿಲ್ಲವೊ,ಯಾವನು ಉದಾಸೀನನಂತೆ ಇರುವವನಾಗಿಗುಣಗಳಿಂದ ವಿಚಲಿತನಾಗುವುದಿಲ್ಲವೊ,ಗುಣಗಳು ಪ್ರವತಿ೯ಸುತ್ತವೆ ಎಂದು ತಿಳಿದಿರುತ್ತಾನೆಯೊ,ಚಲಿಸದೆ ಇರುತ್ತಾನೆಯೊ,ಯಾವನು ಸುಖದುಃಖಗಳಲ್ಲಿ ಸಮನಾಗಿರುತ್ತನೆಯೊ,ಸ್ವಸ್ಥನೊ,ಮಣ್ಣು-ಕಲು- ಚಿನ್ನಗಳನ್ನು ಸಮವಾಗೆಣಿಸುವªನೊ,ಪ್ರಿಯಾ ಪ್ರಿಯಗಳಲ್ಲಿ ಸಮನಾಗಿರುವನೊ,ಧೀರನೊ,ಸ್ತುತಿನಿಂದೆಗಳಲ್ಲಿ ಸಮಾನಭಾವವುಳ್ಳವನೊ,ಯಾವನು ಮಾನಾಪಮಾನಗಳಲ್ಲಿ ಸಮಬುದ್ಧಿಯುಳ್ಳವನೊ,ಶತ್ರು ಮಿತ್ರರ ಪಕ್ಷಗಳಲ್ಲಿ ಸಮಚಿತ್ತನಾಗಿರುವನೊ,ಸಮಸ್ತಕಮ೯ಗಳನ್ನೂ ತ್ಯಜಿಸಿರುವನೊ ಅವನು ಗುಣಾತೀತನೆಂದು ಹೇಳಲ್ಪಡುತ್ತಾನೆ.ಯಾವನು ನನ್ನನ್ನು ಐಕಾಂತಿಕ  ಭಕ್ತಿ ಭಾವದಿಂದ ಸೇವಿಸುತ್ತಾನೆಯೊ ಅವನು ಗುಣಗಳನ್ನು ದಾಟಿ ಬ್ರಹ್ಮಭಾವವನ್ನು ಹೊಂದಲು ಸಮಥನಾಗುತ್ತಾನೆ.'(ಪುಟ73)

 2)'ಗುಣಗಳು ಗುಣಗಳಲ್ಲಿ ಪ್ರವತಿ೯ಸುತ್ತವೆ  ಯೇ ಹೊರತು ನಾನಲ್ಲ'ಎಂಬ ವಿವೇಕದಿಂದ ಔದಾಸೀನ್ಯವುಂಟಾಗಿರುತ್ತದೆ.'ನಾನೇ ಮಾಡುತ್ತೇನೆ"  ಎಂಬ ಅಧ್ಯಾಸವೇ ವಿಚಲನೆ.

ಬ್ರಾಹ್ಮಣನ ಲಕ್ಷಣಗಳು:
1)ವ್ಯಾಸರೇ ಮೊದಲಾದವರು ಬ್ರಾಹ್ಮಣನನ್ನು ಹೀಗೆ ವಣಿಸಿರುತ್ತಾರೆ.'ಯಾವನಿಗೆ ಉತ್ತರೀಯವಾಗಲೀ ಬಟ್ಟೆಯಾಗಲೀ ಇಲ್ಲವೊ,ಯಾವನು ತನ್ನ ಬಾಹುಗಳನ್ನೇ ದಿಂಬಾಗಿ ಮಾಡಿಕೊಂಡು ನೆಲದಮೇಲೆ ಮಲಗುತ್ತಾನೆಯೊ,ಯವನು ಶಾಂತನಾಗಿರುವನೊ ಅವನನ್ನು ಬ್ರಾಹ್ಮಣನೆಂದು ದೇವತೆಗಳು ತಿಳಿಯುತ್ತಾರೆ.'(ಮಹಾಭಾರತ ಶಾಂತಿಪವ೯)

 ಇಲ್ಲಿ ಬ್ರಾಹ್ಮಣ ಶಬ್ದವು ಬ್ರಹ್ಮವಿದನನ್ನು ಹೇಳುತ್ತದೆ.ಬ್ರಾಹ್ಮಣನೆಂದರೆ ಬ್ರಹ್ಮವಿದನು.ಬ್ರಹ್ಮವಿದನು ವಿದ್ವತ್ ಸನ್ಯಾಸಿಯು.

2)'ಯಾವುದಲಿಂದಲಾದರೂ ತನ್ನನ್ನು ಹೊದ್ದುಕೊಂಡು  ಯಾವುದನ್ನಾದರೂ ತಿಂದುಕೊಂಡು,ಯಾವಜಾಗದಲ್ಲಿಯಾದರೂ ಮಲಗುತ್ತ(ಜೀವನನಡೆಸುವವನನ್ನು)ದೇವತೆಗಳು ಬ್ರಾಹ್ಮಣನೆಂದು ತಿಳಿಯುತ್ತಾರೆ.

3) ಭಾಗವತದಲ್ಲಿ ಹೀಗೆ ಹೇಳಿದೆ'ಗುಣ  ದೋಷಗಳ ಲಕ್ಷಣಗಳನ್ನು ಎಷ್ಟು ವಣಿಸಿದರೇನು?ಗುಣದೋಷಗಳನ್ನು ಕಾಣುವುದೇ ದೋಷ,ಎರಡನ್ನೂ ಬಿಟ್ಟಿರುವುದೇ ಗುಣ.'

4)(ಯಾವನು)  ಹೊದಿಕೆಯನ್ನೂ ಕೌಪೀನವನ್ನೂ  ದಂಡವನ್ನೂ ಧರುಸಿರುವನೊ ಧ್ಯಾನತತ್ಪರನಾಗಿರುವನೊ ಏಕಾಕಿಯಾಗಿರುವನೊ  ಸದಾ ತನ್ನಲ್ಲಿಯೇ ರಮಿಸುವನೊ ಅವನನ್ನು ದೇವತೆಗಳು ಬ್ರಾಹ್ಮಣನೆಂದು ತಿಳಿಯುತ್ತಾರೆ.

5)ಬ್ರಾಹ್ಮಣನು ಬ್ರಹ್ಮೋಪದೇಶವೇ ಮೊದಲಾದವುಗಳ ಮೂಲಕ ಜೀವಿಗಳಿಗೆ ಅನುಕಂಪೆಯನ್ನು ತೋರುತ್ತಿರುವಾಗ(ತನ್ನ)ಉತ್ತಮತ್ವವನ್ನು (ಅವರಿಗೆ) ಜ್ಞಾಪಿಸುವುದಕ್ಕಾಗಿಯೂ  ಮತ್ತು (ಅವರಲ್ಲಿ) ಶ್ರದ್ಧೆಯನ್ನುಂಟು ಮಾಡುವುದಕ್ಕಾಗಿಯೂ  ದಂಡ ಕೌಪೀನ ಮೊದಲಾದ ಚಿನ್ಹೆಗಳನ್ನು ಧರಿಸಬೇಕೆಂಬುದು  ತನ್ನ ಶರೀರದ ರಕ್ಷಣೆಗಾಗಿಯೂ ಲೋಕೋಪಕಾರಕ್ಕಾಗಿಯೂ ಕೌಪೀನ ದಂಡ ಹೊದಿಕೆ ಮೊದಲಾದವುಗಳನ್ನು ಪರಿಗ್ರಹಿಸಬೇಕು'.(ಪರಮಹಂಸ ಉಪನಿಷತ್ 1).

6)'ಧೀಮಂತನಾದ ಬ್ರಾಹ್ಮಣನು ಆತ್ಮನನ್ನೇ ತಿಳಿದುಕೊಂಡು ಪ್ರಜ್ಞೆಯನ್ನವಲಂಬಿಸಬೇಕು.ಬಹುಶಬದಗಳನ್ನು ಚಿಂತಿಸಕೂಡದು. ಏಕೆಂದರೆ ಅದು  ವಾಗಿಂದ್ರಿಯಕ್ಕೆ ಶ್ರಮವನ್ನೇ ಉಂಟುಮಾಡುತ್ತದೆ.'ಎಂಬ ಬೃಹದಾರಣ್ಯಕ  ಶ್ರುತಿಯಿಂದಲೂ (4.4.21) ಹೀಗೆ ತಿಳಿದು ಬರುತ್ತದೆ.(ಪುಟ77)

7)ಯಾವನು ಆಶೀವಾ ಮಾಡುವುದಿಲ್ಲವೊ,ಕಮ0ಗಳನ್ನು ಪ್ರಾರಂಭಿಸುವುದಿಲ್ಲವೊ,ನಮಸ್ಕಾರವನ್ನಾಗಲೀ  ಸ್ತುತಿಯನ್ನಾಗಲೀ ಮಾಡುವುದಿಲ್ಲವೊ(ದುಃಖಗಳಿಂದ ಕ್ಷೀಣನಾಗುವುದಿಲ್ಲವೊ ಯಾವನಕಮ೯ಗಳು ಕ್ಷಯಿಸಿವೆಯೊ ಅವನನ್ನು ಬ್ರಾಹ್ಮಣನೆಂದು  ದೇವತೆಗಳು ತಿಳಿಯುವರು.(ಶಾಂತಿ ಪವ೯245.24)

8)ಲೋಕದಲ್ಲಿ ವಿಶಿಷ್ಟರಾದ ಸಂಸಾರಿಗಳು  ತಮಗೆ ನಮಸ್ಕಾರ ಮಾಡುತ್ತಿರುವ  ಪುರುಷರಿಗೆ ಆಶೀವಾ ಮಾಡುತ್ತಾರೆ.ಯಾರು ಯಾವುದನ್ನು  ಅಪೇಕ್ಷೆ ಮಾಡುತ್ತಾರೆಯೋ ಅವರಿಗೆ ಅದು ಅಭಿವೃದ್ಧಿಹೊಂದಲೆಂದು  ಮಾಡುವ ಪ್ರಾಥ೯ನೆಯೇ ಆಶೀವಾ೯ದ.

)ಜಂತುವಿಗೆ ಲೊಕವಾಸನೆ ಶಾಸ್ತ್ರವಾಸನೆ ದೇಹವಾಸನೆ -ಇವುಗಳಿಂದ ಜ್ಞಾನವು ಯಥಾವತ್ತಾಗಿ  ಉಂಟಾಗುವುದಿಲ್ಲ.

10)ತನಗೋಸ್ಕರ ಅಥವಾ ಇತರರಿಗೋಸ್ಕರ ಮುಂತಾದವುಗಳನ್ನು ಸಂಪಾದಿಸಲು ಆರಂಭ ಅಥವಾ ಕಮ. ಆಶೀವಾದ -ಕಮ೯ಗಳೆರಡನ್ನೂ  ಮುಕ್ತನು ಬಿಡಬೇಕು.ಆಶೀವಾ೯ವನ್ನು  ಮಾಡದಿದ್ದರೆ ತನಗೆ ನಮಿಸುತ್ತಿರುವ  ಪುರುಷರು ಖೇದಗೊಳ್ಳುವರೆಂದು  ಶಂಕಿಸಬಾರದು.ಏಕೆಂದರೆ ಮುಕ್ತನು  ಲೋಕವಾಸನೆ,ಖೇದ-ಇವೆರಡನ್ನೂ  ಹೋಗಲಾಡಿಸುವುದಕ್ಕಾಗಿ  ಎಲ್ಲಾ ವಿಧದ ಆಶೀವಾ೯ದಗಳಿಗೂ ಪ್ರತಿನಿಧಿಯಾಗಿರುವ  ನಾರಾಯಣ ಶಬ್ದವನ್ನು ಪ್ರಯೋಗಿಸುತ್ತಾನೆ.ಕಮ೯ವು ಎಂಥದ್ದೇ ಆಗಿರಲಿ  ದೋಷಯುಕ್ತವೇ ಆಗಿರುತ್ತದೆ.

11) ದಾರಿತಪ್ಪಿರುವ ಬಹಿಮು೯ಖವಾಗಿರುವ ಚಾಡಿಕೋರರಾದ,ಜಗಳಗಂಟರಾದ ದೈವದಿಂದ ದುಷಿತವಾದ ಹೃದಯವುಳ್ಳ ಸನ್ಯಾಸಿಗಳೂ ಕೂಡಕಂಡುಬರುತಾರೆ.(ಬೃ.ವಾತಿ೯ಕ1.15840)(ಪುಟ80)

12)ಸ್ಮøತಿಯು ಹೀಗೆಹೇಳುತ್ತದೆ'ಭಗವಂತನಾದ ಈಶ್ವರನು ಜೀವಾಂಶದಿಂದ ಸವ೯ಪ್ರಾಣಿಗಳಲ್ಲೂ  ಪ್ರವಿಸ್ತನಾಗಿರುವನೋದು ಭಾವಿಸಿದಂಡದಂತೆ ನೆಲದಲ್ಲಿ ಬಿದ್ದು ಕುದುರೆ ಚಂಡಾಲ  ಹಸು ಕತ್ತೆ ಇವುಗಳನ್ನೂ ಕೂಡ ನಮಸ್ಕರಿಸಬೇಕು.(ಭಾಗವತ ಪುಟಸಂಖ್ಯೆ ಕೊಟ್ಟಿಲ್ಲ)

13)ನಾಮದಿಂದ ಭೂಮದಭೂಮದವರೆಗಿನ ತತ್ವಗಳಲ್ಲಿ ಹಿಂದು ಹಿಂದಿನದಕ್ಕಿಂತ ಮುಂದು ಮುಂದಿನದು ದೊಡ್ಡದು.ಎಲ್ಲಕ್ಕಿಂತ ದೊಡ್ಡದಾದ ಭೂಮವು ಸುಖರೂಪವೂ ಅದ್ವಯವೂ ಆಗಿರುತ್ತದೆ.ಅದು ತನ್ನ ಮಹಿಮೆಯಲ್ಲಿಯೇ ಪ್ರತಿಷ್ಠಿತವಾಗಿರುತ್ತದೆ.ಅದು ಬ್ರಹ್ಮ.ಅದರಲ್ಲಿ ಸ್ಥಿರವಾಗಿರುವವನು ಸ್ವರಾಟ್ ಆಗುತ್ತಾನೆ.....ಅವನೇ ಎಲ್ಲರ ಆತ್ಮನೂ ಆಗಿರುವುದರಿಂದ ಅವನು ಯಾರಿಗೆ ನಮಸ್ಕಾರ ಮಾಡಬೇಕು?-ಎಂಬುದು ಅಭಿಪ್ರಾಯ.(ಪುಟ82)

14)ಅಕ್ಷೀಣತ್ವ ವೆಂದರೆ ಅದೀüೀನತ್ವ.ಆದುದರಿಂದಲೇ 'ಧೃತಿವಂತನಾದವನು  ಸಕಾಲದಲ್ಲ್ರ ಎಲ್ಲಿಯೂ ಅನ್ನವು ಸಿಕ್ಕದಿದ್ದರೆ ವಿಷಾದ ಹೊಂದಬಾರದು;ಸಿಕ್ಕಿದರೆ ಹಷ೯ಪಡಬಾರದು;(ಏಕೆಂದರೆ) ಇವೆರಡೂ ದೈವಾಧೀನವಾಗಿರುತ್ತವೆ'ಎಂದು ಸ್ಮøತಿಯಿರುತ್ತದೆ.(ಪುಟ82)

15)'ವೇದಗಳು  ತ್ರೈಗುಣ್ಯ  ವಿಷಯವನ್ನು ಹೇಳುವಂಥವು.ಆದುದರಿಂದ ನೀನು  ತ್ರೈಗುಣ್ಯರಹಿತನೂ ದ್ವಂದ್ವವಿಲ್ಲದವನೂ  ಸದಾ ಸತ್ವಗುಣವುಳ್ಳವನೂ  ಯೋಗಕ್ಷೇಮವಿಲ್ಲದವನೂ ಆಗು.(ಗೀತಾ2.45)    

16)ವಿಷ್ಣುವನ್ನು ಯಾವಾಗಲೂ ಸ್ಮರಿಸಬೇಕು.ಎಂದಿಗೂ ಮರೆಯಬಾರದು.ಎಲ್ಲಾ ವಿಧಿನಿಷೇಧಗಳೂ ಇವೆರದರ ಸೇವಕರಾಗಿರುತ್ತವೆ.(ವಿಷ್ಣುಪುರಾಣ)(ಪ್ಯಟ83).

17)ತಪಸ್ಸು ಅಸಂಮಾನದಿಂದ  ವೃದ್ಧಿಹೊಂದುತ್ತದೆ.ಸಂಮಾನದಿಂದ ಕ್ಷೀಣಿಸುತ್ತದೆ. ಅಚಿತನೂ ಪೂಜಿತನೂ ಆದ ವಿಪ್ರನು ಹಾಲು ಕರೆಯದೆ ಇರುವ ಹಸುವಿನಂತೆ  ನಾಶಹೊಂದುತ್ತಾನೆ ಎಂದು ಹೇಳುತ್ತದೆ.(ಪುಟ84)

18) ಸ್ಮøತಿಯು ಹೀಗೆ ಹೇಳುತ್ತದೆ:ಯೋಗಿಯಾದವನು ಸತ್ಪುರುಷರ ಧಮ೯ವನ್ನು ಸ್ಮರಿಸಿಕೊಳ್ಳುತ್ತ ಜನರು ತನ್ನನ್ನು ಅವಮಾನಿಸುವಂತೆ  ತನ್ನ ಸಂಗವನ್ನು ಹೊಂದದೆ ಇರುವಂತೆ  ನಡೆದುಕೊಳ್ಳಬೇಕು.(ಪುಟ 84)

1)'ಯತಿಯು ತಾಯಿಯೊಡನೆಯಾಗಲೀ ಸಹೋದರಿಯೊಡನೆಯಾಗಲೀ  ಮಗಳೊಡನೆಯಾಗಲೀ ಒಂದೇ ಹಾಸಿಗೆಯಲ್ಲಿ  ಅಥವಾ ಆಸನದಲ್ಲಿ ಇರಬಾರದು.;ಏಕೆಂದರೆ ಬಲವಂತವಾದ ಇಂದ್ರಿಯ ಸಮೂಹವು  ವಿದ್ವಾಂಸನನ್ನು ಕೂಡ ಸೆಳೆದುಬಿಡುತ್ತದೆ.(ಮನುಸ್ಮøತಿ2.215).

20)  ತಾನೊಬ್ಬನೇ ಇದ್ದರೂ ಯಾವನಿಗೆ ಆಕಾಶವು ಯಾವಾಗಲೂ ಪೂಣವಾದಂತೆ ಇರುವುದೊಮತ್ತು ಜನಸಂದಣಿಯು ಶೂನ್ಯದಂತೆ ಇರುವುದೊಅವನನ್ನು ಬ್ರಾಹ್ಮಣನೆಂದು ದೇವತೆಗಳು ತಿಳಿಯುತ್ತಾರೆ.(ಪುಟ86)

21)ಯಾವಾಗ ಜ್ಞಾನಿಗೆ  ಎಲ್ಲಾ ಪ್ರಾಣಿಗಳೂ ತನ್ನ ಆತ್ಮನೇ ಆಗಿವೆಯೊ,ಆದುದರಿಂದ ಅವುಗಳಲ್ಲಿ ಏಕತ್ವವನ್ನು ನೋಡ್ಯತ್ತಿರುವನೊ,ಅವನಿಗೆ ಮೋಹವಾಗಲಿ ಶೋಕವಾಗಲಿ ಎಲ್ಲಿಯದು?ಎಂಬ ಶ್ರುತಿಯು (ಈಶಾವಾಸ್ಯ .7) ವಿಷಯದಲ್ಲಿ ಪ್ರಮಾಣ.(ಪುಟ 86)

ಅತಿವಣಾ೯ಶ್ರಮಿಯ ಲಕ್ಷಣ:
ಸೂತ ಸಂಹಿತೆಯ  ಮುಕ್ತಿಖಂಡದ  ಐದನೆಯ ಅಧ್ಯಾಯದಲ್ಲಿ  ಪರಮೇಶ್ವರನು ವಿಷ್ಣುವನ್ನು ಕುರಿತು  ಅತಿವಣಾ೯ಶ್ರಮಿಯ ಕುರಿತು ಈರೀತಿ ಹೇಳಿರುತ್ತಾನೆ.

1) 'ಬ್ರಹ್ಮಚಾರಿ  ಗೃಹಸ್ಥ,ವಾನಪ್ರಸ್ಥ,ಭಿಕ್ಷುಕ ಮತ್ತು ಅತಿವಣಾ೯ಶ್ರಮಿ ಇವರು ಕ್ರಮವಾಗಿ ಶ್ರೇಷ್ಠರೂ  ವಿಚಕ್ಷಣರೂ ಆಗಿರುತ್ತಾರೆ.(ಪುಟ87)

2)ಅತಿವಣಾ೯ಶ್ರಮಿಯು ಎಲ್ಲಾ  ಅಧಿಕಾರಿಗಳಿಗೂ  ಗುರುವೆಂದು ಹೇಳಲ್ಪಟ್ಟಿದ್ದಾನೆ.ನನ್ನಹಾಗೆ ಅವನು ಯಾರಿಗೂ ಶಿಷ್ಯನಾಗಬಾರದು.(ಪುಟ87)

3)ಜ್ಞಾನೋತ್ಕಷ ಬಲದಿಂದ ಅತಿವಣಾ೯ಶ್ರಮಿಯಾಗಿರುವವನಿಗಿಂತ ಉತ್ತಮನು ಯಾರೂ ಇಲ್ಲದ್ದರಿಂದ
ಅವನಿಗೆ ಯಾರೂ ಗುರುವಾಗಲಾರನು.ಅವನೇ ಎಲ್ಲರಿಗೂ ಗುರುವಾಗಬಲ್ಲನು.(ಪ್ಯಟ87)

4)ಅತಿವಣಾಶ್ರಮಿಯು ಗುರುಗಳಿಗೂ ಗುರು ಎಂದು ಹೇಳಲ್ಪಟ್ಟಿದ್ದಾನೆಈ ಲೋಕದಲ್ಲಿ ಅವನಿಗಿಂತ  ಅಧಿಕನಾಗಲೀ  ಅಥವಾ ಸಮಾನವಾಗಲೀ  ಇಲ್ಲವೇ ಇಲ್ಲ ಎಂಬುದರಲ್ಲಿ ಸಂದೇಹವಿಲ್ಲ.(ಪುಟ88)

5)ಯಾವನು ವೇದಾಂತ ಮಹಾವಾಕ್ಯದ ಶ್ರವಣದಿಂದಲೇ  ಆತ್ಮನಾದ ಈಶ್ವರನನ್ನು ಅರಿಯುತ್ತಾನೆಯೊ ಅವನು ಅತಿವಣಾಶ್ರಮಿಯಾಗುತ್ತಾನೆ,(ಪುಟ88)

6)"ವಣಾಶ್ರಮಾದಿಗಳು  ಮಾಯೆಯಿಂದ  ದೇಹದಲ್ಲಿ ಕಲ್ಪಿತವಾಗಿವೆ.;ಜ್ಞಾನಸ್ವರೂಪನೂ ಆತ್ಮನೂ ಆದ ನನಗೆ ಅವು ಎಂದಿಗೂ ಇರುವುದಿಲ್ಲ" ಎಂದು  ಯಾವನು ವೇದಾಂತಗಳ ಸಹಾಯದಿಂದ ಅರಿಯಿತ್ತಾನೆಯೋ  ಅವನು ಅತಿವಣಾಶ್ರ್ಮಿಯಾಗುತ್ತಾನೆ.(ಪುಟ8)

7)ಬ್ರಹ್ಮವನ್ನು ಸಾಕ್ಷಾತ್ಕರಿಸಿಕೊಂಡಿರುವುದರಿಂದ ಅತಿವಣಾ೯ಶ್ರಮಿಯು  ಬ್ರಹ್ಮಸಾಕ್ಷಾತ್ಕಾರಕ್ಕೆ  ಸಾಧಗಳಾಗಿರುವ   ವಣಾ೯ಶ್ರಮ ಧಮ೯ಗಳನ್ನು  ಆಚರಿಸಲಿ ಅಥವಾ ಆಚರಿಸದಿರಲಿ  ಅದರಿಂದ ಅವನಿಗೆ ಏನೂ ಆಗುವುದಿಲ್ಲ.ಅವನು ಸವೋತ್ತಮನಾಗಿರುವುದರಿಂದ  ಯಾವಾಗಲೂ ಗುರುವೇ ಆಗಿರುತ್ತಾನೆ(ಪುಟ8)

8)'ಕಮಾಸಕ್ತರಾದ ಅಜ್ಞಾನಿಗಳು ಹೇಗೆ ಕಮ೯ವನ್ನು ಮಾಡುವರೊ  ಹಾಗೆಯೇ ಆಸಕ್ತನಾದ ಜ್ಞಾನಿಯು  ಲೋಕಸಂಗ್ರಹವನ್ನು ಇಚ್ಛಿಸುತ್ತ ಕಮವನ್ನು ಮಾಡಬೇಕು.(ಗೀತಾ 3.25)(ಪುಟ8)

)'ಸೂಯ೯ನ ಸನ್ನಿದಿಯಲ್ಲಿ  ಜನರು ತಾವಾಗಿಯೇ  ತಾವಾಗಿಯೇ   ಕೆಲಸದಲ್ಲಿ ತೊಡಗುವಂತೆ ನನ್ನ ಸಂನಿಧಿಯಿಂದ  ಸಮಸ್ತ ಜಗತ್ತೂ ಕಮ೯ಪ್ರವೃತ್ತವಾಗಿದೆ'ಎಂದು ಯಾವನು ವೇದಾಂತಗಳ ಮೂಲಕ ಅರಿಯುತ್ತಾನೆಯೊ ಅವನು ಅತಿವಣಾ೯ಶ್ರಮಿಯಾಗುತ್ತಾನೆ.(ಪುಟ8)

10) "ಅಜ್ಞಾನದಿಂದ ಚಿನ್ನದಲ್ಲಿ ಹಾರ ತೋಳ್ಬಳೆ ಕಡಗ ಸ್ವಸ್ತಿಕ ಮೊದಲಾದವು ಹೇಗೆ
ಕಲ್ಪಿತವಾಗಿದೆಯೋ  ಹಾಗೆ ನನ್ನಲ್ಲಿಯೇ ಜಗತ್ತು ಯಾವಾಗಲೂ  ಜಗತ್ತು ಮಾಯೆಯಿಂದ ಕಲ್ಪಿತವಾಗಿದೆ"ಎಂದು ಯಾವನು ವೇದಾಂತಗಳ ಮೂಲಕ ಅರಿಯುತ್ತಾನೆಯೊ ಅವನು ಅತಿವಣಾ೯ಶ್ರಮಿಯಾಗುತ್ತಾನೆ.(ಪುಟ8)

11)ಕಪ್ಪೆಯಚಿಪ್ಪಿನಲ್ಲಿ ಬೆಳ್ಳಿಯು ಮಾಯೆಯಿಂದ  ಕಲ್ಪಿತವಾಗುವಂತೆ  ಮಾಯಾಮಯವಾದ ಜಗತ್ತು  ನನ್ನಲ್ಲಿಯೇ ಕಲ್ಪಿತವಾಗಿದೆ "ಎಂದು ಯಾವನು ವೇದಾಂತಗಳಮೂಲಕ ಅರಿಯುತ್ತಾನೆಯೊ ಅವನು ಅತಿವಣಾ೯ಶ್ರಮಿಯಾಗುತ್ತಾನೆ.(ಪುಟ೯0)

12)"ಚಂಡಾಲನದೇಹದಲ್ಲಿ ,ಪಶ್ವಾದಿಗಳ ಶರೀರದಲ್ಲಿ ,ಬ್ರಹ್ಮನಕಾಯದಲ್ಲಿ ಮತ್ತು ತಾರತಮ್ಯಭಾವದಿಂದ ಇರುವ ಇತರರಲ್ಲಿಆಕಾಶದಂತೆ ಯಾವಾಗಲೂ ವ್ಯಾಪ್ತನಾಗಿ ,ಯಾವಸಂಬಂಧಗಳೂ ಇಲ್ಲದೆ  ಒಂದೇ ರೂಪದಿಂದ ಯಾವ ಮಹದೇವನು  ಇದ್ದು ಕೊಂಡಿರುವನೊ  ಅವನೇ ಪರಾಮೃತನಾದ ನಾನು"ಎಂದು ಯಾವನು ವೇದಾಂತಗಳ ಮೂಲಕ ಅರಿಯುತ್ತಾನೆಯೊ ಅವನು ಅತಿವಣಾ೯ಶ್ರಮಿಯಾಗುತ್ತಾನೆ.(ಪುಟ೯0)

13)"ಹೇಗೆ ಸ್ವಪ್ನ ಪ್ರಪಂಚವು ನನ್ನಲ್ಲಿ ಮಾಯೆಯಿಂದ ತೋರುತ್ತಿರುವುದೊ ಹಾಗೆಯೇ ಜಾಗ್ರದವಸ್ಥೆಯ ಪ್ರಪಂಚವು ಕೂಡ ನನ್ನಲ್ಲಿ ಮಾಯೆಯಿಂದ  ತೋರುತ್ತಿದೆ"ಎಂದು ಯಾವನು ವೇದಾಂತಗಳ ಮೂಲಕ ತಿಳಿಯುತ್ತಾನೆಯೊ  ಅವನು ಅತಿ ವಣಾ೯ಶ್ರಮಿಯಾಗುತ್ತಾನೆ.(ಪುಟ೯1)

14)'ಆತ್ಮದಶವನ್ನು ಮಾಡಿಕೊಂಡಿದ್ದರಿಂದ ಯಾವನಿಗೆ ವಣಾ೯ಶ್ರಮಗಳ ಆಚಾರಗಳು ಬಿದ್ದು ಹೋಗಿವೆಯೊಅವನು ಎಲ್ಲಾ ವಣ೯-ಆಶ್ರಮಗಳನ್ನು ಮೀರಿ  ತನ್ನ ಆತ್ಮನಲ್ಲಿಯೇ ನಿಂತಿರುತ್ತಾನೆ.ಯಾವ ಮನುಷ್ಯನು ತನ್ನ ವಣಾಶ್ರಮಗಳನ್ನು ತ್ಯಜಿಸಿ ಹೀಗೆ ತನ್ನ ಆತ್ಮನಲ್ಲಿಯೇ ನೆಲೆ ನೀತಿರುತ್ತಾನೆಯೊ ಅವನು ಅತಿ ವಣಾಶ್ರಮಿ ಎಂದು ಎಲ್ಲ ವೇದಗಳ ಅಥ೯ವನ್ನು ಬಲ್ಲವರು ಹೇಳುತ್ತಾರೆ'.(ಪುಟ೯1)

15)'ನಾನು ದೇಹವಲ್ಲ ಇಂದ್ರಿಯವಲ್ಲ,ಪ್ರಾಣವಲ್ಲ;ಮನಸ್ಸು ಬುದ್ಧಿ ಅಹಂಕಾರಗಳೂ ಅಲ್ಲ;ಚಿತ್ತವಲ್ಲ,ಮಾಯೆಯೂ ಅಲ್ಲ ಆಕಾಶಾದಿ ಜಗತ್ತೂ ಅಲ್ಲ.(ಪುಟ೯2)

16)'ನಾನು ಕತೃವಾಗಲೀ  ಭೋಕ್ತøವಾಗಲೀ  ಭೋಜಯಿತೃವಾಗಲೀ ಅಲ್ಲ.ನಾನು ಚಿತ್ ಸದಾನಂದನು,ನಿಜವಾಗಿ ಆತ್ಮನಾನು ಬ್ರಹ್ಮವೇ ಆಗಿರುತ್ತೇನೆ'.(ಪುಟ೯2)

17)ಸೂಯ೯ನು ಪ್ರತಿಬಿಂಬಿಸಿರುವ  ನೀರಿನಚಲನೆಯಿಂದಲೇ  ಸೂಯ೯ನಿಗೆ ಹೇಗೆ ಚಲನೆಯೊ,ಹಾಗೆ ಅಹಂಕಾರದ ಸಂಸಗ೯ದಿಂದಲೇ  ಆತ್ಮನಿಗೆ ಸಂಸಾರವುಂಟಾಗಿದೆ.'(ಪುಟ೯2)

18)'ಆದುದರಿಂದ ಎಲೈ ಕೇಶವನೆ ಮತ್ತೊಂದರಲ್ಲಿರುವ ವಣಾ೯ಶ್ರಮಗಳೂ ಕೂಡ ಆತ್ಮನಲ್ಲಿ ಭ್ರಾಂತಿಯಿಂದ ಆರೋಪಿತವಾಗಿದೆ.ಅವು ಆತ್ಮಜ್ಞಾನಿಗೆ ಇರುವುದಿಲ್ಲ.'(ಪುಟ೯3)

1)'ಆತ್ಮ ವಿಜ್ಞಾನಿಗಳಿಗೆ ವಿಧಿಯಿಲ್ಲ ನಿಷೇಧವಿಲ್ಲ,ವಜ್ಯ ಅವಜ್ಯ ಎಂಬ ಕಲ್ಪನೆಗಳಿಲ್ಲ ;ಹಾಗೆಯೇ ಜನಾಧ೯ನನೇ ಮತ್ತೊಂದೂ ಇರುವುದಿಲ್ಲ'.(ಪುಡ೯3)

20)'ಎಲೈ ಕಮಲಾಕ್ಷನೆ ,ಸ್ವಾತ್ಮಜ್ಞಾನಿಗಳ ಇಂಥ ನಿಷ್ಠೆಯನ್ನು  ಮಾಯೆಯಿಂದ ಮೋಹಿತರಾದ  ಮತ್ಯ೯ರು ಎಂದೂ ಅರಿಯುವುದಿಲ್ಲ.'(ಪುಟ೯3)

21)ಎಲೈ ಕೇಶವ ವಿದ್ವಾಂಸರಾದ ಬ್ರಹ್ಮಜಾನಿಗಳ  ಸ್ವತಸ್ಸಿದ್ಧವಾದ  ನಿಷ್ಠೆಯನ್ನು ಮಾಂಸಮಯ ಚಕ್ಷುಸ್ಸಿನಿಂದ ನೋಡಲು ಆಗುವುದಿಲ್ಲ.(ಪುಟ೯3)

22)ಕೇಶವನೆ,ಜನರು ನಿತ್ಯವೂ ಎಲ್ಲಿ ನಿದ್ರಿಸುವರೊ  ಅಲ್ಲಿ ಸಂಯಮಿಯು ಎಚ್ಚರಿರುತ್ತಾನೆ.ಅವರು ಎಲ್ಲಿ   ಎಚ್ಚರವಾಗಿರುವರೊ ಅಲ್ಲಿ ವಿದ್ವಾಂಸನು  ನಿದ್ರಿಸಿರುತ್ತಾನೆ.'(ಪುಟ೯4)

23)ಹೀಗೆ ತನ್ನ ಅನುಭವದ ಮೂಲಕ ನಿಶ್ಚಿತವಾದ ,ದ್ವಂದ್ವರಹಿತವೂ ನಿರಾಕಾರವೂ  ನಿರಂಜನವೂ,ನಿತ್ಯಸಿದ್ಧವೂ  ಆಭಾಸವಿಲ್ಲದುದೂ ಕೇವಲ ಸಚ್ಚಿತ್ ಸ್ವರೂಪವೂ  ಪರಾಮೃತವೂ ಆದ  ಆತ್ಮನನ್ನು ಯಾವನು ವೇದಾಂತಗಳ ಸಹಾಯದಿಂದ ಅರಿತುಕೊಳ್ಳುವನೊ  ಅವನು ಅತಿವಣಾಶ್ರಮಿಯೆಂದು ಹೇಳಲ್ಪಡುತ್ತಾನೆ.(ಪುಟ೯4)

24)ಹೀಗೆ 'ವಾಸನೆಗಳಿಂದ ಬಿಡಲ್ಪಟ್ಟವನು ಮುಕ್ತನಾಗುತ್ತಾನೆ'ಎಂಬಿವೇ ಮೊದಲಾದ ಶೃತಿಗಳೂ ಜೀವನ್ಮುಕ್ತ ಸ್ಥಿತಪ್ರಜ್ಞ ಭಗವದ್ಭಕ್ತ ಗುಣಾತೀತ  ಬ್ರಾಹ್ಮಣ  CwªÀuÁ±Àæ«Ä ಅವರನ್ನು ಪ್ರತಿಪಾದಿಸುವ ಶೃತಿವಾಕ್ಯಗಳೂ  ಜೀವನ್ಮುಕ್ತಿಯು ಇರುವುದೆಂಬುದಕ್ಕೆ  ಪ್ರಮಾಣಗಳೆಂಬುದು ಸಿದ್ಧವಾಯಿತು.ಹೀಗೆ ಜೀವನ್ಮುಕ್ತಿ  ಪ್ರಮಾಣಗಳ ಪ್ರಕರಣವಿರುತ್ತದೆ.(ಪುಟ೯5)

           ಇಲ್ಲಿಗೆ ಶ್ರೀಮದ್ವಿದ್ಯಾರಣ್ಯ ಮುನಿಗಳಿಂದ  ವಿರಚಿತವದ ಜೀವನ್ಮುಕ್ತಿ ವಿವೇಕವೆಂಬ  ಗ್ರಂಥದಲ್ಲಿ ಮೊದಲನೆಯದಾದ  ಜೀವನ್ಮುಕ್ತಿ ಪ್ರಮಾಣ ಪ್ರಕರಣವು  ಮುಗಿಯಿತು.
...........................................................................................................................................................                 ಅಧ್ಯಾಯ ಎರಡು. ವಾಸನಾಕ್ಷಯ ಪ್ರಕರಣ.

1) ಈಗ ಜೀವನ್ಮುಕ್ತಿ ಸಾಧನವನ್ನು ನಿರೂಪಿಉತ್ತೇವೆ.ತತ್ವಜ್ಞಾನ,ಮನೋನಾಶ,ವಾಸನಾಕ್ಷಯಇವೇ ಸಾಧನವು.ಇವುಗಳನ್ನು ಸಮಕಾಲದಲ್ಲಿ  ಬಹುಕಾಲ ಅಭ್ಯಾಸಮಾಡಿದರೆ ಅವು ಫಲಗಳನ್ನು ಕೊಡುತ್ತವೆ.
(ಪುಟ೯6)

2) ಮೂರನ್ನು ಏಕಕಾಲದಲ್ಲಿ ,ಪುನಃ ಪುನಃ,ಚೆನ್ನಾಗಿ ಎಲ್ಲಿಯವರೆಗೆ ಅಭ್ಯಾಸ ಮಾಡುವುದಿಲ್ಲವೋ ಅಲ್ಲಿಯವರೆಗೆ-ನೂರು ವಷ೯ಗಳಾದರೂ ಸರಿ- ಪರಮಪದ ಸಂಪ್ರಾಪ್ತಿಯು ಆಗುವುದಿಲ್ಲ.

3) 'ಹೊಗೆಯಿದ್ದಲ್ಲಿ ಬೆಂಕಿಯಿರುವುದು' ಎಂಬ ವಾದವು ಅನ್ವಯ.'ಬೆಂಕಿಯಿಲ್ಲದಿದ್ದರೆ ಹೊಗೆಯೂ ಇರುವುದಿಲ್ಲ'ಎಂಬಂಥ ವಾದವು ವ್ಯತಿರೇಕ.

4)ಒಂದುವೇಳೆ ಇವನ್ನುಒಂದೊಂದಾಗಿ ಅಭ್ಯಸಿಸಿದರೆ  ಬಹುಕಾಲದ ಪ್ರಯತ್ನದಿಂದಲೂ -ಒಟ್ಟಾಗಿ ಹೇಳಬೇಕಾದ ಮಂತ್ರಗಳನ್ನು  ಬೇರೆ ಬೇರೆ ಹೇಳಿದರೆ ಹೇಗೆ ಫಲವನ್ನು ಕೊಡುವುದಿಲ್ಲವೊ ಹಾಗೆ -ಸಿದ್ಧಿಯನ್ನು ಕೊಡಲಾರವು.(ಪುಟ೯7)

5) ಮೂರನ್ನೂ ಚಿರಕಾಲ ಅಭ್ಯಾಸ ಮಾಡಿದರೆ  ದೃಢವಾದ ಹೃದಯಗ್ರಂಥಿಗಳು -ಕಮಲದ ಕಾಂಡವನ್ನು ಕತ್ತರಿಸಿದಾಗ ಅದರ ತಂತುಗಳೂ ಕತ್ತರಿಸಲ್ಪಡುವಂತೆ-ನಿಸ್ಸಂಶಯವಾಗಿಯೂ  ನಾಶವಾಗುತ್ತವೆ.(ಪುಟ೯8)

6)ನೂರಾರು  ಜನ್ಮಗಳಿಂದ ಅಭ್ಯಾಸವಾಗಿರುವ  ಸಂಸಾರ ಸ್ಥಿತಿಯು  ಚಿರಕಾಲ ಮೂರನ್ನೂ ಅಭ್ಯಸಿಸುವುದರಿಂದ  ಸಂಸಾರ ಸ್ಥಿತಿಯು ಚಿರಕಾಲ ಮೂರನ್ನೂ  ಅಭ್ಯಾಸ ಮಾಡದ ಹೊರತು  ಎಂದಿಗೂ ಕ್ಷಯವಾಗುವುದಿಲ್ಲ.(ಪುಟ೯8)

7)ಎಲ್ಲಿಯವರೆಗೆ ಮನಸ್ಸು ಲಯವಾಗುವುದಿಲ್ಲವೊ ಅಲ್ಲಿಯವರೆಗೆ ವಾಸನಾಕ್ಷಯವು ಸಿದ್ಧಿಸುವುದಿಲ್ಲ.ಎಲ್ಲಿಯವರೆಗೆ ವಾಸನೆಗಳು ಕ್ಷೀಣವಾಗುವುದಿಲ್ಲವೊ ಅಲ್ಲಿಯವರೆಗೆ ಚಿತ್ತವು ಶಾಂತವಾಗುವುದಿಲ್ಲ.(ಪುಟ100)

8)ಇವುಗಳನ್ನು ಒಂದಾಗಿ ಅಭ್ಯಾಸ ಮಾಡಿದರೆ  ಫಲವು ದೊರಕದೇ ಹೋಗಬಹುದು.(ಪುಟ೯೯)

)ಯೋಗಶಾಸ್ತ್ರದಲ್ಲಿ  ಪತಂಜಲಿಯು  ಸೂತ್ರವನ್ನು ರಚಿಸಿರುತ್ತಾನೆ.ವ್ಯುತ್ಥಾನ ಸಂಸ್ಕಾರಗಳ ಅಭಿಭವ ನಿರೋಧ ಸಂಸ್ಕಾರಗಳ  ಪ್ರಾದುಭಾ-ಇವು ಉಂಟಾಗುತ್ತವೆ(ಪುಟ100)

10) ವಿವೇಕದಿಂದ ಉಂಟಾದ ಶಾಂತಿ ,ದಾಂತಿ (ಅಥವಾ ಇಂದ್ರಿಯನಿಗ್ರಹ) ಮೊದಲಾದ ಶುದ್ಧವಾಸನೆಗಳು ದೃಢವಾದಾಗ  ಬಾಹ್ಯ ನಿಮಿತ್ತವಿದ್ದರೂ (ಚಿತ್ತದಲ್ಲಿ)  ಕ್ರೋಧಾದಿಗಳು ಉತ್ಪತ್ತಿಯಾಗದಿರುವುದಕ್ಕೆ   ವಾಸನಾ ಕ್ಷಯವೆಂದು ಹೆಸರು.(ಪುಟ101)

11)ಎಲ್ಲಿಯವರೆಗೆ ತತ್ವಜ್ಞಾನವಾಗುವುದಿಲ್ಲವೊ ಅಲ್ಲಿಯವರೆಗೆ ಮನಃಶಾಂತಿಯು  ಎಲ್ಲಿಯದು?ಎಲ್ಲಿಯವರೆಗೆ ಮನಃಶಾಂತಿಯಿಲ್ಲವೊ ಅಲ್ಲಿವರೆಗೆ ತತ್ವಜ್ಞಾನವು ಉಂಟಾಗಲಾರದು.'ಇದೆಲ್ಲವೂ ಆತ್ಮನೇ,ರೂಪರಸಾದಿಗಳಿಂದ ಕೂಡಿ ತೋರಿಬರುತ್ತಿರುವ ಮಾಯಾಮಯ.ಆದರೆ ಇದು ವಸ್ತುತಃ ಇರುವುದಿಲ್ಲ-ಎಂಬ ನಿಶ್ಚಯವೇ ಆತ್ಮಜ್ಞಾನ.(ಪುಟ102)       

12) ಎಲ್ಲಿಯವರೆಗೆ ವಾಸನಾಕ್ಷಯವಾಗುವುದಿಲ್ಲವೊ  ಅಲ್ಲಿಯವರೆಎ ತತ್ವಜ್ಞಾನ ಎಲ್ಲಿಂದ ಬಂದೀತು?ತತ್ವಜ್ಞಾನ ಸಂಪಾದಿಸುವವರೆಗೆ   ವಸನಾ ಕ್ಷಯವು ಸಿದ್ಧಿಸಲಾರದು.(ಪುಟ103)

13) ಅದ್ವಿತೀಯ ಬ್ರಹ್ಮವನ್ನು ಅರಿಯದೇ ಇದ್ದಾಗ ಕ್ರೋಧವೇ ಮೊದಲಾದವು ಸತ್ಯವೆಂಬ ಭ್ರಮೆಯು ಹೋಗದೆ ಇರುವುದರಿಂದ,ವಾಸನೆಯು ಕ್ಷಯವಾಗುವುದಿಲ್ಲ.(ಪುಟ103)

14)ಇತರ ಎಲ್ಲ ವೃತ್ತಿಗಳ ನಾಶವು ತತ್ವಹ್ಞಾನಕ್ಕೆ ಹೇತುವಾಗಿದೆ(ಕಾರಣವಾಗಿದೆ).(ಪುಟ104)

15)ತನ್ನ ದೇಹದ ಅವಯವಗಳಲ್ಲಿ ವ್ಯಾಪಿಸಿರುವಂತೆ ಶತ್ರುವಿನಲ್ಲಿ,ಬಂಧುವಿನಲ್ಲಿ  ಮತ್ತು ತನ್ನ ದೇಹದಲ್ಲಿ ವ್ಯಾಪಿಸಿರುವ  ಒಂದೇ ಆತ್ಮತತ್ವವನ್ನು  ನೋಡುತ್ತಿರುವ ವಿವೇಕಿಗೆ  ಕೋಪವು ಹೇಗೆ ಉಂಟಾದೀತು?(ನ್ಯಷ್ಕಮ್ಯಸಿದ್ಧಿ 2.18)(ಪುಟ105)

16)'ತತ್ವಜ್ಞಾನಕ್ಕೆ ಶ್ರವಣಾದಿಗಳು ಸಾಧನ.ಮನೋನಾಶಕ್ಕೆ ಯೋಗವು.ವಾಸನಾ ಕ್ಷಯಕ್ಕೆ  ಪ್ರತಿಕೂಲವಾಸನೆಗಳ  ಉತ್ಪಾದನೆಯೂ ಸಾಧನ'ಎಂದು  ಅರಿಯುವುದೇ ವಿವೇಕ.(ಪುಟ10)

17)ವಿವಿದಿಶಾ -ಸನ್ಯಾಸಕ್ಕೆ ತತ್ವಜ್ಞಾನವು ಫಲ
ವಿದ್ವತ್ ಸನ್ಯಾಸಕ್ಕೆ-ಜೀವನ್ಮುಕ್ತಿಯೇ ಫಲ.(ಪುಟ107)

18)ಯಾವುದಾದರೂ ಉಪಾಯದಿಂದ ಪನಃ ಪುನಃ ತತ್ವವನ್ನು ಸ್ಮರಿಸಬೇಕು.-ಇದನ್ನುಜ್ಞಾನಾಭ್ಯಾಸವೆನ್ನುತ್ತಾರೆ.ದೃಶ್ಯವಾದ ಈಜಗತ್ತು  ಮತ್ತು 'ನಾನು' ಎಂಬುದು ಸೃಷ್ಟಿಕಾಲದಲ್ಲಿಯೇ ಉತ್ಪನ್ನವಾಗಲಿಲ್ಲ.ಅದು ಯಾವಾಗಲೂ ಇರುವುದಿಲ್ಲ-ಎಂಬ ಇದನ್ನು ಜ್ಞಾನಾಭ್ಯಾಸವೆಂದು ಇತರರು ಅರಿಯುತ್ತಾರೆ.ಪುಟ 10)

1)ದೃಶ್ಯ ಜಗತ್ತು  ಸಂಭವಿಸಲಾರದು ಎಂಬ ಜ್ಞಾನದ ಮೂಲಕರಾಗದ್ವೇಷಾದಿಗಳು  ಕ್ಷೀಣವಾದಾಗ ಯಾವ ಹೊಸ ಆನಂದವು ಉತ್ಪನ್ನವಾಗುವುದೊ ಅದು 'ಬ್ರಹ್ಮಾಭ್ಯಾಸ'ವೆಂದು ಹೇಳಲ್ಪಡುತ್ತದೆ.ಇದೇ ವಾಸನಾಕ್ಷಯದ ಅಭ್ಯಾಸ.(ಪುಟ10)

20)'ವಿಮುಕ್ತನಾದವನು ಬಿಡಲ್ಪಡುತ್ತಾನೆ'(ಕಠ2.1.1.)(111)

21)ದೈವೀ ಸಂಪತ್ತು  ಮೋಕ್ಷಕ್ಕಾಗಿಯೂ ಅಸುರೀ ಸಂಪತ್ತು  ಬಂಧನಕ್ಕಾಗಿಯೂ ಇದೆ.(111)


22)ಮನ ಏವ  ಮನುಷ್ಯಣಾಂ ಕಾರಣಂ ಬಂಧ ಮೋಕ್ಷಯೋಃ
ಬಂಧಾಯ ವಿಷಯಾಸಕ್ತಂ ಮುಕ್ತ್ಯೈ ನಿವಿ೯ಷಯಂ ಸ್ಮøತಂ||

ಎಂಬಂತೆ 'ವಿಷಯಾಸಕ್ತವಾದ ಮನಸ್ಸು ಬಂಧನವನ್ನೂ  ನಿವಿ೯ಷಯವಾದ ಮನಸ್ಸು ಮುಕ್ತಿಯನ್ನೂ  ಕೊಡುತ್ತದೆ' ಎಂದು ಹೇಳಲ್ಪಟ್ಟಿದೆ.(ಪುಟ112)

23) ಯಾವಾಗ ಮನಸ್ಸು ವಿಷಯಾಸಕ್ತಿಯನ್ನು ಬಿಟ್ಟು ಹೃದಯದಲ್ಲಿ ನಿರುದ್ಧವಾಗಿ ಆನಂದವನ್ನು ಪಡೆಯುವುದೊ ಆಗ ಪರಮಪದವನ್ನು ಪಡೆಯುತ್ತಾನೆ.ಹೃದಯದಲ್ಲಿ ಕ್ಷೀಣವಾಗುವವರೆಗೆ ವಿರೋಧಿಸಬೇಕು,ಇದೇ ಜ್ಞಾನ ಇದೇ ಮೋಕ್ಷ.ಉಳಿದೆಲ್ಲವೂ ಕೇವಲ ಗ್ರಂಥವಿಸ್ತಾರ.(113)ವು ವಾಸನಾಕ್ಷಯಕ್ಕೆ ಕಾಋಣವಾಗುವುದೆಂಬುದು  ಶೃತಿಯಲ್ಲಿ ಬಹುವಿಧವಾಗಿ ಹೇಳಲ್ಪಟ್ಟಿದೆ.'ದೇವನನ್ನು ಅರಿತುಕೊಂಡಾಗ ಸವ೯ಪಾಶಗಳ ನಾಶವಾಗುತ್ತದೆ'. (ಸ್ವೇ. 1.11)'ದೇವನನ್ನು  ಅಧ್ಯಾತ್ಮಯೋಗದ ಪ್ರಾಪ್ತಿಯಿಂದ ತಿಳಿದುಕೊಂಡು  ಧೀರನು ಹಷ೯ ಶೋಕಗಳನ್ನು ಬಿಡುತ್ತಾನೆ'.(ಕಠ..1.1.12) 'ಆತ್ಮವಿದನು ಶೋಕವನ್ನು ದಾಟುತ್ತಾನೆ'(7.1,3)ಅಲ್ಲಿ ಏಕತ್ವವನ್ನು ನೋಡುತ್ತಿರುವವನಿಗೆ  ಮೋಹವೆಲ್ಲಿಯದು?ಶೋಕವೆಲ್ಲಿಯದು.(ಈಶ..7)'ಆದರೆ ದೇವನನ್ನು ಅರಿತುಕೊಂಡಾಗ  ಎಲ್ಲ ಪಾಷಗಳಿಂದಲೂ ಬಿಡಲ್ಪಡುತ್ತಾನೆ'.(ಸ್ವೇ..1.8)(ಪುಟ115)

25)'ಆತ್ಮವೇ ಸತ್ಯವೆಂಬ ಜ್ಞಾನದಿಂದ ಮನಸ್ಸು ಯಾವಾಗ ಸಂಕಲ್ಪಿಸುವುದಿಲ್ಲವೊ ಆಗ ಗ್ರಾಹ್ಯವಸ್ತುವು ಇಲ್ಲದಿರುವುದರಿಂದಯಾವುದನ್ನೂ ಗ್ರಹಿಸದೆ ಅದು ಅಮನೀ ಭಾವವನ್ನು (ಎಂದರೆ ಲಯವನ್ನು) ಹೊಂದುವುದು.(ಮಾಂ.ಕಾ.3.32)

26)ಜೀವನ್ಮುಕ್ತಿಗೆ ವಾಸನಾಕ್ಷಯ ಮನೋನಾಶಗಳು ಹೇಗೋ ಹಾಗೆ ವಿದೇಹಮುಕ್ತಿಗೆ  ಜ್ಞಾನವು ಪ್ರಧಾನವಾಗಿರುತ್ತದೆ.ಏಕೆಂದರೆ ಅದು ನೇರವಾದ ಸಾಧನವಾಗಿರುತ್ತದೆ.(ಪುಟ117)

27)ಯಾವ ಕೈವಲ್ಯದಿಂದ ಮನುಷ್ಯನು ಮುಕ್ತನಾಗುತ್ತಾನೋ ಅದು ಜ್ಞಾನದಿಂದಲೇ ಹೊಂದಲ್ಪಡುತ್ತದೆ.(ಪುಟ117)

28)ಕೇವಲನಾದ ಆತ್ಮನ ಭಾವವೇ ಕ್ಯವಲ್ಯ.ಎಂದರೆ ದೇಹಾದಿಗಳಿಲ್ಲದಿರುವುದು.ಅದಾದರೋ ಜ್ಞಾನದಿಂದಲೇ ಹೊಂದಲ್ಪದುತ್ತದೆ.(ಪುಟ117)

2)ಅಜ್ಞಾನದಿಂದ ಕಲ್ಪಿತವಾದ ದೇಹಭಾವವು  ಜ್ಞಾನದಿಂದ ಮಾತ್ರವೇ ಹೋಗುತ್ತದೆ.'ಏವ'ಶಬ್ದವು  ವೈದಿಕ ಕಮ೯ವನ್ನು ಬೇಪ೯ಡಿಸುತ್ತದೆ.ಏಕೆಂದರೆ ಕಮದಿಂದಾಗಲೀ ಸಣತಾನದಿಂದಾಗಲೀ ಧನದಿಂದಾಗಲೀ  ಅಮೃತತ್ವವನ್ನು ಹೊಂದುವುದಿಲ್ಲ.(ತ್ಯ.4.12.3)(ಪುಟ117)

30)ಯಾವನು ಜ್ಞಾನಶಾಸ್ತ್ರದ ಅಭ್ಯಾಸವನ್ನು ಮಾಡದೆ ಕಾಲೋಚಿತವಾಗಿ ವಾಸನಾಕ್ಷಯ -ಮನೋನಾಶಗಳನ್ನು ಅಭ್ಯಸಿಸಿ ಸಗುಣಬ್ರಹ್ಮವನ್ನು ಉಪಾಸಿಸುವನೊ ಅವನಿಗೆ ಕೈವಲ್ಯವಿರುವುದಿಲ್ಲ.ಏಕೆಂದರೆ ಅವನಿಗೆ ಲಿಂಗದೇಹವು ನಾಶವಾಗಿರುವುದಿಲ್ಲ.ಆದ್ದರಿಂದ ಲಿಂಗದೇಹದ ಮೂಲಕ ಅವೆರಡೂ ಕೂಡ ಬೇಪಡಿಸಲ್ಪಟ್ಟಿವೆ.'ಯಾವುದರಿಂದ ಮುಕ್ತನಾಗುವನೊ'(ಯೇನ ಮುಚ್ಯತೇ)ಎಂಬುದಕ್ಕೆ ಇದು ಅಥ೯.:ಯಾವುದರಿಂದ (ಎಂದರೆ) ಜ್ಞಾನದ ಮೂಲಕ ಪ್ರಾಪ್ತವಾದ  ಕೇವಲತ್ವದಿಂದ ,ಸಮಸ್ತ ಬಂಧಗಳಿಂದಲೂ ಬಿಡಲ್ಪಡುವನು.(ಪುಟ117)

 31)ಬಂಧವು ಅನೇಕವಿಧ.ಶ್ರುತಿಗಳಲ್ಲಿ ಅದು ಅವಿದ್ಯಾಗ್ರಂಥಿ.ಅಬ್ರಹ್ಮತ್ವ,ಹೃದಯಗ್ರಂಥಿ,ಇತ್ಯಾದಿ ಶಬ್ದಗಳಿಂದ ವ್ಯವಹರಿಸಲ್ಪಡುತ್ತದೆ.(ಪುಟ118)

32) ಬಂಧಗಳೆಲ್ಲವೂ ಜ್ಞಾನದಿಂದ ನಿವಾರಿಸಲ್ಪಡುತ್ತವೆ.ಶ್ರುತಿಗಳು ಹೀಗೆಯೇ ಹೇಳುತ್ತವೆ.ಹೃದಯ
ದಲ್ಲಿರುವ  ಇದನ್ನೂ ಹೆ ಸೋಮ್ಯಯಾವನು ಅರಿತುಕೊಳ್ಳುತ್ತಾನೆಯೊಅವನು ಅವಿದ್ಯಾಗ್ರಂಥಿಯನ್ನು
ಅವನು ಇಲ್ಲಿಯೇ ನಾಶಮಾಡುತ್ತಾನೆ(2.1.1).ಬ್ರಹ್ಮವನ್ನು ಅರಿತವನು ಬ್ರಹ್ಮವೇ ಆಗುತ್ತಾನೆ.
(ಮುಂ..3.2,)(ಪುಟ110)

33) ಪರಾವರನನ್ನು ಸಾಕ್ಷಾತ್ಕರಿಸಿದಾಗ  ಇವನ ಹೃದಯ ಗ್ರಂಥಿಯು ನಾಶವಾಗುತ್ತದೆ.ಸವಸಂಶಯಗಳೂ ಕತ್ತರಿಸಲ್ಪಡುತ್ತವೆ.ಕಮಗಳು ಕ್ಷೀಣವಾಗುತ್ತವೆ.(ಪುಟ 110)

34)ಯಾವನು ಪರಮವ್ಯೋಮದಲ್ಲಿರುವ  ಗುಹೆಯಲ್ಲಿ  ಬ್ರಹ್ಮವನ್ನು ಅರಿಯುಕೊಳ್ಳುವನೊ ಅವನು ಎಲ್ಲಾ ಕಾಮಗಳನ್ನು ಹೊಂದುತ್ತಾನೆ.(ತ್ಯ..2.1)(ಪುಟ118)

35)ಅವನನ್ನೇ ಅರಿತುಕೊಂಡು ಮೃತ್ಯುವನ್ನು ದಾಟುತ್ತಾನೆ(ಶ್ವೇ..3.8.)(ಪುಟ(118)

36)ಯಾವನು 'ನಾನು ಬ್ರಹ್ಮವಾಗಿರುತ್ತೇನೆ'ಎಂದು ಅರಿಯುವನೊ  ಅವನು ಇದೆಲ್ಲವೂ ಆಗುತ್ತಾನೆ.(ಬೃ..1.4.10)(ಪುಟ 11).

37)ಬ್ರಹ್ಮವನ್ನು ಅರಿತವನಿಗೆ ಆಗಾಮೀ ಪಾಪವು ಸೋಂಕದು.ಸಂಚಿತ ಪಾಪವು ನನಷ್ಟವಾಗುವುದು.ಏಕೆಂದರೆ ಹಾಗೆ (ಶ್ರುತಿಯಲ್ಲಿ)ಹೇಳಿರುತ್ತದೆ.(ಬೃ.ಸೂ4.1.13)(ಪುಟ11)

38)     
38)ಹಿಂದಿದ್ದ ಕತೃತ್ವ-ಭೋಕ್ತøತ್ವಗಳಿಗೆ ವಿರುದ್ಧವಾದ ಮತ್ತು ಮೂರುಕಾಲಗಳಲ್ಲಿಯೂ  ಅಕತೃತ್ವ-ಭೋಕ್ತøತ್ವಗಳಿಗೆ ವಿರುದ್ಧವಾದ  ಮತ್ತು ಮೂರು ಕಾಲಗಳಲ್ಲಿಯೂ  ಅಕತೃತ್ವ-ಅಭೋಕ್ತøತ್ವ -ಸ್ವರೂಪವನ್ನುಳ್ಳ ಬ್ರಹ್ಮವೇ ನಾನಾಗಿರುತ್ತೇನೆ:ಇದಕ್ಕೆ ಮುಂಚೆಯೂ ನಾನು ಕತೃವಾಗಲೀ ಭೋಕ್ತøವಾಗಲೀ ಆಗಿರಲಿಲ್ಲ,ಈಗಲೂ ಆಗಿಲ್ಲ ಮುಂದೆಯೂ ಆಗುವುದಿಲ್ಲ'ಎಂದು ಬ್ರಹ್ಮವಿದನು ಅರಿಯುತ್ತಾನೆ. ಹೀಗಿದ್ದರೆ ಮಾತ್ರ ಮೋಕ್ಷವು ಉಪಪನ್ನವಾಗುತ್ತದೆ.(ಪುಟ11)

3)ಪ್ರಾರಬ್ಧಕಮ ವೇಗದಿಂದ ಸ್ವಲ್ಪಕಾಲವನ್ನು ಇಲ್ಲಿಯೇ ಕಳೆಯುತ್ತಾನೆ.ಅನಂತರ ಪ್ರಾರಬ್ಧ ಕಮವು ಕಳೆಯಲಾಗಿ  ಅತ್ಯಂತ ಆನಂದ ಸ್ವರೂಪನೂ  ವಿಷ್ಣುವಿನ ಪರಮಪದವೂ  ಪುನರಾವೃತ್ತಿ ರಹಿತವೂ ಆದ ಕೈವಲ್ಯವನ್ನು ಹೊಂದುತ್ತಾನೆ.(ಪುಟ121)

40)ಮುಂದಿನ ದೇಹಗಳಿಲ್ಲದಿರುವಿಕೆ ಎಂಬ ಲಕ್ಷಣವನ್ನುಳ್ಳ  ವ್ದೇಹಮುಕ್ತಿಯು ಜ್ಞನಸಮಕಾಲದಲ್ಲಿಯೇ ಉಂಟಾಗುತ್ತದೆಂಬುದು ಸಿದ್ಧವಾಯಿತು(ಪುಟ125)

41)ಅವನನ್ನು ಹೀಗೆ ಅರಿತುಕೊಂಡು  ಇಲ್ಲಿಯೇ ಅಮೃತನಾಗುತ್ತಾನೆ.(ಪುರುಷಸೂಕ್ತ)(ಪುಟ125)

42)ಜ್ಞಾನಸಮಕಾಲದಲ್ಲಿಯೇ  ಮುಕ್ತನೂ ಆದುದರಿಂದ ಹತಸೋಕನೂ ಆದವನು ಪುಣ್ಯಕ್ಷೇತ್ರ
ದಲ್ಲಿಯಾಗಲೀ,ಚಂಡಾಲ ಗೃಹದಲ್ಲಾಗಲೀ  ಸ್ಮøತಿಯನ್ನು ಕಳೆದುಕೊಂಡು ದೇಹವನ್ನು ತ್ಯಾಗ ಮಾಡುತ್ತಿದ್ದರೂ ಕೈವಲ್ಯವನ್ನು ಹೊಂದುತ್ತಾನೆ.ಆದುದರಿಂದ  ವಿದೇಹಮುಕ್ತಿಯಲ್ಲಿ ನೇರಸಾಧನವಾದ ತತ್ವಜ್ಞಾನಕ್ಕೆ ಪ್ರಧಾನತ್ವವು ಹೊಂದುತ್ತದೆ.ವಾಸನಾಕ್ಷಯ ಮನೋನಾಶಗಳಾದರೋ ತತ್ವಜ್ಞಾನಕ್ಕೆ  ಸಾಧನವಗುವುದರ ಮೂಲಕ ವ್ಯವಹಿತವಾಗಿರುವುದರಿಂದ ಅವುಗಳಿಗೆ ಗೌಣತ್ವವು ಹೊಂದುತ್ತದೆ.(ಪುಟ120)

43) ಶಾಂತನೂ ದಾಂತನೂ  ಉಪರತನೂ  ತಿತಿಕ್ಷುವೂ  ಸಮಾಹಿತನೂ ಆಗಿ  ತನ್ನ ಶರೀರದಲ್ಲಿಯೇ  ಆತ್ಮನನ್ನು ನೋಡಬೇಕು,(ಬೃ..4.4.23.)(ಪುಟ12).

44)ಅಭಿಷ್ಟಂಗವೆಂದರೆ  ಮತ್ತೊಂದರಲ್ಲಿ ನಾನೆಂಬ ಬುದ್ಧಿ.(ಪುಟ12)

45)ಸ್ಮøತಿಯೂ ಕೂಡ ಹೀಗೆಯೇ ಹೇಳುತ್ತದೆ.:ಅಮಾನಿತ್ವ,ಅದಂಭಿತ್ವ ಅಹಿಂಸೆ ಕ್ಷಾಂತಿ ಆಜ ಆಚಾಯೋ೯ಪಾಸನೆ  ಶೌಚ ಸ್ಥೈಯ೯  ಆತ್ಮನಿಗ್ರಹ ಇಂದ್ರಿಯ ವಿಷಯಗಳಲ್ಲಿ ವೈರಾಗ್ಯ ,ಅಹಂಕಾರವಿಲ್ಲದಿರುವುದು, ಜನ್ಮ -ಮೃತ್ಯು-ಜರಾ-ವ್ಯಾಧಿ -ದುಃಖಗಳಲ್ಲಿ ದೋಷವನ್ನು ನೋಡುವುದು,ಹೆಂಡತಿ ಮನೆ ಮಕ್ಕಳು ಮೊದಲಾದವುಗಳಲ್ಲಿ ಆಸಕ್ತಿ -ತನ್ಮಯತೆಗಳಿಲ್ಲದಿರುವುದು,ಇಷ್ಟಾನಿಷ್ಟಗಳಗು ಪ್ರಾಪ್ತವಾದಾಗ   ಯಾವಾಗಲೂ ಸಮಚಿತ್ತತೆ,,ನನ್ನಲ್ಲಿ ಅನನ್ಯ ಯೋಗದ ಮೂಲಕ  ಅವ್ಯಭಿಚಾರಿಯಾದ ಭಕ್ತಿ,ನಿಜ೯ನ ಪ್ರದೇಶ -ಸೇವನೆ,ಜನಸಮೂಹದಲ್ಲಿ ಪ್ರೀತಿಯಿಲ್ಲದಿರುವುದು,ಅಧ್ಯಾತ್ಮ ಜ್ಞಾನದಲ್ಲಿ ನಿಷ್ಠೆ,ತತ್ವಜ್ಞಾನಾಥ೯ದ ಆಲೋಚನೆ ಇದು ಜ್ಞಾನವೆಂದು ಹೇಳಲ್ಪಟ್ಟಿದೆ.ಇದಕ್ಕಿಂತ ಭಿನ್ನವಾದುದು  ಜ್ಞಾನ (ಗೀತಾ 13.7.11)(ಪುಟ12)

46)ವಿದ್ವತ್ ಸನ್ಯಾಸಿಗೆ ಜ್ಞಾನವು ಅನುಸರಿಸಿಕೊಂಡು ಬರುತ್ತದೆ.ಉಳಿದೆರಡೂ ಪ್ರಯತ್ನಪೂವಕವಾಗಿ ಸಂಪಾದಿಸಲ್ಪಡಬೇಕು.(ಪುಟ132)

47)ಜ್ಞಾನಾಧಿಕಾರಿಗಳು ಉಪಾಸನೆಯನ್ನು ಮಾಡುವವರು ಹಾಗೂ ಮಾಡದವರು ಎಂದು ಎರಡು ವಿಧ.
ಇದರಲ್ಲಿ ಯಾವನು ಉಪಾಸ್ಯ ವಸ್ತುವಿನ ಸಾಕ್ಷಾತ್ಕಾರವಾಗುವವರೆಗೆ   ಉಪಾಸನೆಯನ್ನು ಅಭ್ಯಸಿಸಿ  ಅನಂತರ ಜ್ಞಾನದಲ್ಲಿ ಅವರಿಗೆ ವಾಸನಾಕ್ಷಯ -ಮನೋನಾಶಗಳು  ದೃಢವಾಗಿರುವುದರಿಂದ  ಜ್ಞಾನಾನಂತರ  ವಿದ್ವತ್ಸನ್ಯಾಸ-ಜೀವನ್ಮುಕ್ತಿಗಳು  ತಾವಾಗಿಯೇ ಸಿದ್ಧಿಸುತ್ತವೆ.
(ಪುಟ132).

48)ಈಗಿನವರಾದರೊ ಬಹುಮಟ್ಟಿಗೆ ಉಪಾಸನೆಯನ್ನು ಅಭ್ಯಸಿಸದೆ ಕೇವಲ ಔತ್ಸುಕ್ಯದಿಂದ ಕೂಡಿದವರಾಗಿ  ಹಠಾತ್ತಾಗಿ  ವಿದ್ಯೆಯಲ್ಲಿ ಪ್ರವತಿಸುತ್ತಾರೆ.ಆದ್ದರಿಂದ ಈಗಿನ ವಿದ್ವತ್ ಸನ್ಯಾಸಿಗಳಿಗೆಜ್ಞಾನದ ಅನುವೃತ್ತಿ ಮಾತ್ರ ಇರುತ್ತದೆ.ವಾಸನಾಕ್ಷಯ ಮತ್ತು ಮನೋನಾಶಗಳನ್ನು (ಅವರು)ಪ್ರಯತ್ನಿಸಬೇಕು.(ಪುಟ133)


4)ವಾಸನೆಗಳ ಭೇದ: ಶುದ್ಧವಾಸನೆ-ಪುನಜನ್ಮದ ನಾಶ
ಮಲಿನವಾಸನೆ-ಪುನಜನ್ಮಕ್ಕೆ ಕಾರಣ(ಪುಟ136)

50)ದೇಹವೇ ಮೊದಲಾದ ಪಂಚಕೋಶಗಳಿಗೂ  ಅವುಗಳ ಸಾಕ್ಷಿಯಾದ ಚಿದಾತ್ಮನಿಗೂ  ಇರುವ ಭೇದವನ್ನು ಯಾವುದು ಮುಚ್ಚುತ್ತದೆಯೊ ಅದು ಅಜ್ಞಾನ.(ಪುಟ136).

51)ತಟಸ್ಥ ಲಕ್ಷಣ-ಸ್ವರೂಪ ಲಕ್ಷಣಗಳ ಮೂಲಕ ತಿಳಿಯುವುದಕ್ಕಾಗಿ ಪರಬ್ರಹ್ಮದ ಸೋಪಾಧಿಕ ಮತ್ತು ನಿರುಪಾಧಿಕ ಎಂಬ ಎರಡು ಸ್ವರೂಪಗಳನ್ನು ಹೇಳಿದೆ.
ತಟಸ್ಥ ಲಕ್ಷಣ:ಯಾವಾಗಲೋ ಒಮ್ಮೆ ಒಂದು ವಸ್ತುವಿನೊಡನೆ  ಸಂಬಂಧವನ್ನು  ಹೊಂದಿದ್ದು ವಸ್ತುವನ್ನು ಸೂಚಿಸುವಂಥದ್ದು ತಟಸ್ಥ ಲಕ್ಷಣ.ಉದಾಹರಣೆಗೆ ಕಾಗೆ ಕುಳಿತಿರುವ ಮನೆಯೇ ದೇವದತ್ತನ ಮನೆ.
ಸ್ವರೂಪ ಲಕ್ಷಣ:ತ್ರಿಕಾಲದಲ್ಲಿಯೂ  ಹಾಗೆಯೇ ವಸ್ತುವಿನೊಡನೆ  ಸಂಬಂಧವನ್ನು ಹೊಂದಿದ್ದು  ಅದನ್ನು ಸೂಚಿಸುವಂಥದ್ದು ಸ್ವರೂಪ ಲಕ್ಷಣ.ಉದಾಹರಣೆಗೆ ನಕ್ಷತ್ರಗಳ ಗುಂಪಿನಲ್ಲಿ  ಹೆಚ್ಚು ಪ್ರಕಾಶವುಳ್ಳದ್ದೇ ಚಂದ್ರ.(ಪುಟ 141)

52)ತತ್ವವನ್ನು ಬಹಳಕಾಲ ನಿರಂತರ ಸತ್ಕಾರಗಳಿಂದ ಭಾವಿಸಿದ್ದರ ಫಲವಾಗಿ ಅನಂತರ (ಮಹಾ) ವಾಕ್ಯವೃತ್ತಿ,ಪರಾಮಶೆ   ಮೊದಲಾದವುಗಳ ಸಹಾಯವಿಲ್ಲದೆಯೇ ಇಂಥ ಜ್ಞಾನವು  ಅನುಸರಿಸಿಕೊಂಡು ಬರುವ ಇಂದ್ರಿಯ ವ್ಯವಹಾರವೇ ಶುದ್ಧವಾಸನೆ.(ಪುಟ142)

2)ಮಲಿನವಾಸನೆಯಲ್ಲಿ ಮೂರುವಿಧ:
1)ಲೋಕವಾಸನೆ
2)ಶಾಸ್ತ್ರವಾಸನೆ
3)ದೇಹವಾಸನೆ(ಪುಟ143)
ಲೋಕವಾಸನೆ:ಎಲ್ಲ ಜನರೂ ನನ್ನನ್ನು ನಿಂದಿಸದೆ ಸ್ತುತಿಸುವಂತೆ ಯಾವಾಗಲೂ ಆಚರಿಸುವೆನು ಎನ್ನುವ ಅಭಿನಿವೇಶವೇ ಲೋಕವಾಸನೆ.ಎಲ್ಲರನ್ನೂ ಸಂತೋಷಪಡಿಸುವಂಥ  ಯಾವ ಉಪಾªಯವೂ ಇರುವುದಿಲ್ಲ.ಆದುದರಿಂದ ಸವಥಾ  ತನಗೆ ಹಿತವಾದುದನ್ನು ಆಚರಿಸಬೇಕು(ಪು144)
  
ಶಾಸ್ತ್ರವಾಸನೆ:ಮೂರು ವಿಧ1)ಪಾಠವ್ಯಸನ2) ಬಹುಶಾಸ್ತ್ರ ವ್ಯಸನ  3)ಅನುಷ್ಠಾನ ವ್ಯಸನ(ಪುಟ 145)

ಬಹುಶಾಸ್ತ್ರ ಕಥನವೆಂಬ ಚಿಂದಿಯನ್ನು ಸುಮ್ಮನೆ ಅಗಿಯುವುದರಿಂದ ಫಲವೇನು?.ತತ್ವಜ್ಞರಾದವರು  ಪ್ರಯತ್ನದಿಂದ ಹುಡುಕಬೇಕು. ನಾಲ್ಕು ವೇದಗಳನ್ನೂ ಧಮಶಾಸ್ತ್ರಗಳನ್ನೂ ಅನೇಕಸಲ ಅಧ್ಯಯನ ಮಾಡಿದ್ದರೂ ಬ್ರಹ್ಮತತ್ವವನ್ನರಿಯದವರು (ತಾನು ಬಡಿಸುತ್ತಿರುವ ಪಾಕದ ರುಚಿಯನ್ನು ಅರಿಯದ ಸೌಟಿನಂತೆಯೇ ಸರಿ!)

ಛಾಂದೋಗ್ಯರೂಕೂಡ ನಾರದನು ಅರವತ್ನಾಲ್ಕು ವಿದ್ಯೆಗಳಲ್ಲಿ ಕುಶಲನಾಗಿದ್ದರೂ ಕೂಡ ಆತ್ಮನನ್ನರಿಯದ್ದರಿಂದ  ದುಃಖಿತನಾಗಿ ಸನತ್ಕುಮಾರನನ್ನು  ಬಳಿಸಾರಿದನು  ಎಂದು ಹೇಳುತ್ತದೆ.  

ಅನುಷ್ಠಾನವ್ಯಸನ:ಋಭುವಿನಿಂದ  ನಿದಾಘನು  ಪುನಃಪುನಃ  ಎಚ್ಚರಿಸಲ್ಪಟ್ಟರೂ  ಕಮ೯ಗಳಲ್ಲಿ ಶ್ರದ್ಧೆಯೆಂಬ ಕಮಗಳನ್ನು ಬಹುಕಾಲ ಬಿಡಲಿಲ್ಲ. ಕಮ೯ವಾಸನೆಯು ಪುನಜನ್ಮಕ್ಕೆ ಕಾರಣವಾದ್ದರಿಂದ ಮಲಿನವು.(ಪುಟ148)

53) ಎಲ್ಲೆಡೆಯಲ್ಲಿಯೂ ನೀರುತುಂಬಿದ್ದರೆ (ಬಾವಿ ಕೆರೆ)ಮೊದಲಾದ ಸಣ್ಣಜಲಾಶಯಗಳಿಂದ  ಎಷ್ಟು ಪ್ರಯೋಜನವೋ(ತತ್ವವನ್ನು) ಅರಿತಿರುವ ಬ್ರಾಹ್ಮಣನಿಗೆ ಎಲ್ಲಾವೇದಗಳಿಂದ ಅಷ್ಟೇ ಪ್ರಯೋಜನ.(ಪುಟ14)

54) 
                54)ಇಲ್ಲದಿರುವುದರ  ಸಂಪಾದನೆಗೆ ಯೋಗವೆಂದೂ  ಇರುವುದರ ರಕ್ಷಣೆಗೆ ಕ್ಷೇಮವೆಂದೂ ಹೆಸರು.(ಪುಟ14)

55)ಶಾಸ್ತ್ರವಾಸನೆಯು ದಪ೯ಕ್ಕೆ ಕಾರಣವಾದುದರಿಂದ  ಮಲಿನವು.(ಪುಟ150)

56)ದೇಹವಾಸನೆಯೂ ಕೂಡಆತ್ಮತ್ವ,ಗುಣಾಧಾನ,ದೋಷಾಪನಯನ, ಎಂಬ ಭ್ರಾಂತಿಯಿಂದಾದ ಭೋಬದಿಂದ ಮೂರುವಿಧವಾಗಿರುತ್ತದೆ.(151)

57)'ಪುರುಷನು ಅನ್ನರಸದ ವಿಕಾರ ' ಎಂದು ಆರಂಭಿಸಿ  ಆದುದರಿಂದ ಅದು ಅನ್ನ ಎಂದು ಕರೆಯಲ್ಪಡುತ್ತದೆ ಎಂದು ಮುಗಿಯುವ ಗ್ರಂಥದಿಂದ   ತೈತ್ತಿರೀಯರೂ ಸ್ಪಷ್ಟ ಪಡಿಸಿರುತ್ತಾರೆ.(ತೈ.2.1.12) (ಪುಟ 151)

58)ಗುಣಾಧಾನವು 1) ಲೌಕಿಕ 2) ಶಾಸ್ತ್ರೀಯ ಎಂದು ಎರಡುವಿಧ.(ಪುಟ 150)

5)ದೇಹವಾಸನೆ ಮಲಿನವೆಂಬುದನ್ನು ವಿಷ್ಣುಪುರಾಣವು ರೀತಿ ಹೇಳುತ್ತದೆ.'ಮಾಂಸ,ರಕ್ತ ಮಲ ,ಮೂತ್ರ, ಸ್ನಾಯು,ಮಜ್ಜೆ, ಇವುಗಳಿಂದ ಸಹಿತವಾದ  ದೇಹದಲ್ಲಿ  ಪ್ರೀತಿಯುಳ್ಳ ಮೂಢನು ನರಕದಲ್ಲಿಯೇ ಪ್ರೀತಿಯುಳ್ಳವನಾಗಿರುವನು.(ಪುಟ 153)

60)ಪೂಣಾಚಾಯರು   ಇದನ್ನೇ ಹೇಳಿರುತ್ತಾರೆ'ಂಭತ್ತು ತೂತುಗಳಿಂದ  ಕೂಡಿರುವ  ದೇಹಗಳು ಮಡಕೆಗಳಂತೆ ಯಾವಾಗಲೂ ಸೋರುತ್ತಲೇ ಇರುತ್ತವೆ.ಅವನ್ನು ಹೊರಗಡೆ ಶುಚಿಮಾಡುವುದರಿಂದ  ಅವು ಶುಚಿಯಾಗವು.ಒಳಗಿನ ಶೌಚವೂ ಇರುವುದಿಲ್ಲ.(ಪುಟ 156)    

61)ಲೋಕವಾಸನೆ,ದೇಹವಾಸನೆ,ಶಾಸ್ತ್ರವಾಸನೆ ಇವುಗಳಿಂದ  ಪ್ರಾಣಿಗಳಿಗೆ ನಿಜವಾದ  ಜ್ಞಾನವು ಹುಟ್ಟುವುದಿಲ್ಲ.(ಪುಟ 157)

62)ಅವಿವೇಕಿಗಳಿಗೆ  ಅನುಕೂಲವೆಂದು ತೋರುತ್ತಿದ್ದರೂ ಲೋಕ,ಶಾಸ್ತ್ರ,ದೇಹವಾಸನಾತ್ರಯವನ್ನು  ವಿವೇಕಿಗಳು ಬಿಡಬೇಕು.(ಪುಟ157)

63)ತಾಕಿ೯ಕರಂತೆ  ಮನಸ್ಸು ಅಣು ಪರಿಣಾಮವುಳ್ಳ ನಿತ್ಯದ್ರವ್ಯವೆಂದು ವೈದಿಕರು ಒಪ್ಪಿಕೊಳ್ಳುವುದಿಲ್ಲ.(ಪುಟ 158)

64)ಮನಸ್ಸು ಸಾವಯವ,ಅನಿತ್ಯ, ಅರಗು ಚಿನ್ನ ಮೊದಲಾದು ವಂತೆ ಯಾವಾಗಲೂ ಬಹುವಿಧವಾದ ಆಮವನ್ನು ಹೊಂದುವಂಥ ದ್ರವ್ಯ ಎಂದೊಪ್ಪುತ್ತಾರೆ.(ಪುಟ 158)

65) ಕಾಮಸಂಕಲ್ಪ,ಸಂದೇಹ, ಶ್ರದ್ಧೆ,  ಅಶ್ರದ್ಧೆ ಧೃತಿ,ಅಧೃತಿ,ಲಜ್ಜೆ,ಭಯ -ಇವೆಲ್ಲವೂ ಮನಸ್ಸೆ.ಹಿಂದಿನಿಂದ ಮುಚ್ಚಲ್ಪಟ್ಟರೂ ಮನಸ್ಸಿನಿಂದಲೇ ಅರಿಯ್ತ್ತಾನೆ. (ಪುಟ 158)

66) ಮನನ ಮಾಡುವುದರಿಂದ ಮನಸ್ಸೆಂದೂ,ಚೇತನವಾಗಿರುವುದರಿಂದ ಚಿತ್ತವೆಂದೂ ಹೇಳಲ್ಪಡುತ್ತದೆ.(ಪುಟ 160)

67)ಚಿತ್ತವು ಸತ್ವ ರಜಸ್ಸು, ತಮೋಗುಣಗಳ ಸ್ವರೂಪವುಳ್ಳದ್ದು.(ಪುಟ160)

68)ಸತ್ವಗುಣದಿಣದ -ಜ್ಞಾನುಂಟಾಗುತ್ತದೆ.
ರಜೋಗುಣ-ಲೋಭ
ತಮೋಚಗುಣ-ಪ್ರಮಾದ,ಮೋಹ,ಅಜ್ಞಾನ  ಇವು ಉಂಟಾಗುತ್ತವೆ.(ಪುಟ 160)

6)ಸತ್ವವು-ಸುಖದಲ್ಲಿ ಸಂಗವನ್ನುಂಟು ಮಾಡುತ್ತದೆ.
ರಜೋಗುಣವು-ಕಮ೯ದಲ್ಲಿ ಸಂಗವನ್ನುಂಟು ಮಾಡುತ್ತದೆ.
ತಮೋಗುಣವು-ಜ್ಞಾನವನ್ನಾವರಿಸಿಕೊಂಡು ಪ್ರಮಾದದಲ್ಲಿ ಸಂಗವನ್ನುಂಟು ಮಾಡುತ್ತದೆ.(ಗೀತಾ 14-6)(ಪುಟ 160).

70)ಸತ್ವಗುಣವು ಪ್ರಧಾನವಾದಾಗ -ದೈವೀ ಸಂಪತ್ತು
ರಜಸ್ಸು ಮೇಲೆದ್ದಾಗ-ಲೋಕವಾಸನೆ ಮುಂತಾದ ಮೂರು ವಾಸನೆಗಳು.
ತಮಸ್ಸು ಮೇಲೆದ್ದಾಗ - ಅಸುರೀ ಸಂಪತ್ತು ಹುಟ್ಟುತ್ತದೆ.

71) ದೇಹದ ಸಮಸ್ತ ಇಂದ್ರಿಯಗಳಲ್ಲಿಯೂ  ಜಗಞನವೆಂಬ  ಪ್ರಕಾಶವು ಯಾವಾಗ ಉಂಟಾಗುತ್ತದೆಯೊ  ಆಗ ಸತ್ವಗುಣವು ವೃದ್ಧಿಹೊಂದಿದೆ  ಎಂದು ತಿಳಿಯಬೇಕು.(14.11)(ಪುಟ 162)

72)ಆದುದರಿಂದ ಜ್ಞಾನಿಯಾದವನಿಗೆ  ಯೋಗಾಭ್ಯಾಸದ ಮೂಲಕ  ರಜಸ್ಸು ತಮಸ್ಸುಗಳು ಹೋಗಲಾಡಿಸಲ್ಪಟ್ಟು ಸತ್ವ ಸ್ವರೂಪವು ಮಾತ್ರ ಉಳಿದುಕೊಳ್ಳುತ್ತದೆ.(ಪುಟ162)

73)ಜ್ಞಾನಿಯ ಚಿತ್ತವು ಚಿತ್ತವೇ ಅಲ್ಲ.ಅದು ಸತ್ವವೆಂದು ಕರೆಯಲ್ಪಡುತ್ತದೆ. ಸತ್ವವಾದರೊ ಚಾಂಚಲ್ಯಕ್ಕೆ ಕಾರಣವಾದ  ರಜೋಗುಣವಿಲ್ಲದುದರಿಂದ  ಏಕಾಗ್ರವಾಗಿರುತ್ತದೆ.(ಪುಟ 162).

74)ಶ್ರುತಿಯು ಸೂಕ್ಷ್ಮದಶಿಗಳು ಏಕಾಗ್ರವೂ  ಸೂಕ್ಷ್ಮವೂ ಆದ ಬುದ್ಧಿಯಿಂದ  ಆತ್ಮನನ್ನು ನೋಡುತ್ತಾರೆ ಎಂದು ಹೇಳುತ್ತದೆ.(ಕಠ.1.3.12)

75)ದುರಾಸೆಯೆಂಬ ಹಾಲನ್ನು ಕುಡಿದು ,ಭೋಗವೆಂಬ ಗಾಳಿಯನ್ನು ಸೇವಿಸಿ ಜಗತ್ತು ಸತ್ಯವೆಂಬ ಭಾವನೆಯ ಕ್ಷೇತ್ರದಲ್ಲಿ ಓಡಾಡಿ ಚಿತ್ತವೆಂಬ ಹಾವು  ಕೊಬ್ಬಿ ಬೆಳೆಯುತ್ತದೆ.(ಪುಟ 164)

76)ಅಸ್ಥೆ ಎಂದರೆ ಪ್ರಪಂಚದಲ್ಲಿ ಅದು  ಸತ್ಯವೆಂಬ ಬುದ್ಧಿ ಇರುವುದು.(ಪು164)

77)ಚಿತ್ತವು ಯಾವುದರ ಸಹಾಯದಿಂದ ಕೊಬ್ಬಿ ಬೆಳೆಯುತ್ತದೆಯೊ  ಅದನ್ನಿಲ್ಲಿ ಕೊಟ್ಟಿದೆ.ಇಲ್ಲಿ ಹೇಳಿರುವುವುಗಳನ್ನು ಚಿತ್ತವು ಸೇವಿಸಲು ಬಿಡದಿದ್ದರೆ, ಅದು ತಾನಾಗಿಯೇ ಕ್ಷಯಿಸಿ ನಾಶಹೊಂದುತ್ತದೆ.(ಪುಟ164)

78)ಬಂಧವೆಂದರೆ ವಾಸನೆಗಳಿಂದಾದ ಬಂಧ. ಮೋಕ್ಷವೆಂದರದೆ  ವಾಸನೆಗಳ ನಾಶ.(ಪುಟ 165)

7)ಕೇವಲ ಚಿನ್ಮಾತ್ರ ವಾಸನೆಯನ್ನು ಹೊಂದಿರು.(ಪುಟ 165)

80)£ಮಾನಸ ವಾಸನೆಯಲ್ಲಿ  ಮೂರು ವಾಸನೆಗಳೂ ಸೇರಿರುತ್ತವೆ.1) ಲೋಕವಾಸನೆ 2) ಶಾಸ್ತ್ರವಾಸನೆ 3) ದೇಹವಾಸನೆ.(ಪುಟ 168)

81)ಮೈತ್ರಿ ಮೊದಲಾದುವನ್ನು  ಪತಂಜಲಿಯ ಸೂತ್ರದಲ್ಲಿ ಹೀಗೆ ಹೇಳಿರುತ್ತದೆ.
ಸುಖಿಗಳು-ಮೈತ್ರಿ
 ದುಃಖಿಗಳು ಕರುಣೆ
ಪುಣ್ಯವಂತರು -ಸಂತೋಷ
ಪಾಪಿಗಳು -ಉಪೇಕ್ಷೆ
ಭಾವನೆಗಳನ್ನು ಮಾಡಬೇಕು.ಅದರಿಂದ ಚಿತ್ತವು ಪ್ರಸನ್ನ ವಾಗುತ್ತದೆ.(ಯೋಗಸೂತ್ರ 1.33) (ಪುಟ 168)

82)ಸುಖಿಗಳಾದ ಇವರೆಲ್ಲರೂ ನನ್ನವರೇ ಎಂದು ಇವನು ಸುಖಿಗಳಲ್ಲಿ  ಮೈತ್ರಿಯನ್ನು ಹೊಂದುವನೊ ಆಗ ಇವರ ಸುಖವು ಇವನದೇ ಆಗುತ್ತದೆ.(ಪುಟ 168)

83)ಮಳೆಗಾಲವು ಕಳೆದಮೇಲೆ ಶರತ್ಕಾಲದಲ್ಲಿ  ನದಿಯ ನೀರು  ತಿಳಿಯಾಗುವಂತೆರಾಗವು ಹೋದಮೇಲೆ ಚಿತ್ತವು ಪ್ರಸನ್ನವಾಗುತ್ತದೆ.(ಪುಟ 168)

 84)ಸುಖವನ್ನನುಭವಿಸಿದವನಿಗೆ ಅದರ ಸ್ಮøತಿಯಿಂದ  ಸುಖದಲ್ಲಿ  ಮತ್ತು ಅದರ ಸಾಧನದಲ್ಲಿ  ಉಂಟಾಗುವ ತೃಷ್ಣೆಯೇ ರಾಗ.(ಪುಟ 16)

85)ದುಃಖವನ್ನನುಭವಿಸಿದವನಿಗೆ  ಹಿಂದಿನ ದುಃಖವನ್ನು ಸ್ಮರಿಸಿಕೊಳ್ಳುವುದರಿಂದ  ಆದುಃಖದಲ್ಲಿ ಮತ್ತು ಅದರ ಸಾಧನದಲ್ಲಿ ಉಂಟಾಗುವ  ಕ್ರೋಧವೇ ದ್ವೇಷ.(ಪುಟ 16)

86)' ಲೋಕದಲ್ಲಿ ಎಲ್ಲರೂ ಸುಖವಾಗಿರಲಿ!  ಎಲ್ಲರೂ ರೋಗಹೀನರಾಗಲಿ!ಎಲ್ಲರೂ ಮಂಗಳಕರವಾದುದನ್ನೇ ನೋಡಲಿ! ಯಾರೂ ದುಃಖವನ್ನು ಹೊಂದದಿರಲಿ!'(ಪುಟ 170)

87)ಮಾನವರು ಪುಣ್ಯದ ಫಲವನ್ನು ಇಚ್ಛಿಸುತ್ತಾರೆಯೇ ಹೊರತು  ಪುಣ್ಯವನ್ನಿಚ್ಛಿಸರು; ಪಾಪದ ಫಲವನ್ನು  ಇಚ್ಛಿಸುವುದಿಲ್ಲವಾದರೂ  ಪ್ರಯತ್ನಪೂವ೯ಕವಾಗಿ ಪಾಪವನ್ನು ಮಾಡುತ್ತಾರೆ.(ಪುಟ 171)

88)ಯೋಗಿಯಾದವನ ವಿಷಯದಲ್ಲಿ  ಕಮ೯ವು ಶುಕ್ಲವು  ಕೃಷ್ಣವೂ ಅಲ್ಲ. ಇತರರ ವಿಷಯದಲ್ಲಿ ಮೂರು ವಿಧವಾಗಿರುತ್ತವೆ.ವಿಹಿತವಾಗಿರುವುದರಿಂ ಕಾಮ್ಯಕಮ೯ವು ಶುಕ್ಲ, ನಿಷಿದ್ದವಾದ ಕಮ೯ವು ಕೃಷ್ಣ ಮಿಶ್ರಣವಾದದ್ದು ಶುಕ್ಲಕೃಷ್ಣ. ಮೂರು ಕಮ೯ಗಳು  ಮೂರು ವಿಧವಾದ ಜನ್ಮವನ್ನು ಕೊಡುತ್ತವೆ. ಇದನ್ನು ವಿಶ್ವರೂಪಾಚಾಯ೯ರು ಹೀಗೆ ಹೇಳಿರುತ್ತಾರೆ.
ಶುಭಕಮ೯ದಿಂದ ದೇವತ್ವವನ್ನೂ ನಿಷಿದ್ಧ ಕಮ೯ಗಳಿಂದ ನರಕಗತಿಯನ್ನೂ  ಪುಣ್ಯಪಾಪಗಳಿಂ ಮನುಷ್ಯತ್ವವನ್ನೂ ಅನಿವಾಯ೯ವಾಗಿ ಹೊಂದುತ್ತಾನೆ'(ಪುಟ 173)

8)ಶುಕ್ಲಕಮ೯ವು  ತಪಸ್ಸು,ಸ್ವಾಧ್ಯಾಯ, ಧ್ಯಾನ ಇವುಗಳನ್ನುಳ್ಳವರಿಗೆ ಆಗತಕ್ಕದ್ದು.(ಪುಟ 174)

0) ನಾಲ್ಕು ವಿಧವಾದ ಕಮಗಳು ) ಕೃಷ್ಣ 2) ಶುಕ್ಲಕೃಷ್ಣ 3)ಶುಕ್ಲ 4) ಶುಕ್ಲ ಮತ್ತು ಅಶುಕ್ಲಕೃಷ್ಣ(ಪುಟ 173)

1)ಯಾರು ಮೈತ್ರಿ ಮೊದಲಾದ ಭಾವನೆಗಳಿಂದ  ಚಿತ್ತವನ್ನು ಪ್ರಸನ್ನಗೊಳಿಸುವರೊ  ಅವರೇ ಯೋಗಿಗಳು.(ಪುಟ175)

2)ಯೋಗಿಯ ಯೋಗತ್ವವು  ಚಿತ್ತದ ಪ್ರಸನ್ನತೆಯಿಂದ ಆಗಿರುವುದೇ ವಿನಾ ಪುಣ್ಯಾತ್ಮರಲ್ಲಿ  ಮೋದವನ್ನು ತಳೆಯುವುದರಿಂದಲ್ಲ.(ಪುಟ 176)

3)ವಿವೇಕವನ್ನು ಜನಕನು ಹೀಗೆ ತೋರಿಸಿಕೊಟ್ಟಿದ್ದಾನೆ.'ಇಂದು ಯಾವ ಮಹತ್ತಿನ ಶಿರದಲ್ಲಿರುವರೊ  ಅವರು ದಿÀಕಳೆದಂತೆ ಕೆಳಕ್ಕೆ ಬೀಳುತ್ತಾರೆ. ಆದ್ದರಿಣದ ಎಲೈ ಮನಸ್ಸೆ,ನಿನಗೆ ಮಹತ್ತಿನಲ್ಲಿ ಏಕಿಷ್ಟು ವಿಶ್ವಾಸ? ರಾಜರುಗಳ ಧನವೆಲ್ಲಾ ಎಲ್ಲಿ ಹೋಯಿತು? ಬ್ರಹ್ಮನು ಸೃಷ್ಟಿಸಿದ ಜಗತ್ತುಗಳೆಲ್ಲಾ ಎಲ್ಲಿ ಹೋದವು? ಅವೆಲ್ಲವೂ ಪೂವ೯ಕಾಲಕ್ಕೆ ಸೇರಿ ಆಗಿಹೋದಂಥವು.ಅವುಗಳಲ್ಲೇಕಿಷ್ಟು ವಿಶ್ವಾಸ ನಿನಗೆ? ಕೋಟಿ ಬ್ರಹ್ಮರು ಆಗಿಹೋದರು!   ಸ್ವಗ೯ದ ಸಾ¯ಲುಗಳೇ ಮುಗಿದುಹೋದವು!ರಾಜರೆಲ್ಲ ಧೂಳಿನಂತೆ ನಾಶವಾದರು? ನನ್ನ ಜೀವನದ ಮೇಲೆ ಯಾವ ನಿಯಂತ್ರಣವಿದ್ದೀತು?ಯಾರು ಕಣ್ಣು ಮಿಟುಕಿಸುವುದರೊಳಗೆ  ಜಗತ್ತು ಹುಟ್ಟಿ ನಾಶವಾಗುತ್ತಿದ್ದವೋ ಅಂಥ (ಪ್ರಜಾಪತಿ ಮೊದಲಾದ)  ಪುರುಷರೇ ನಷ್ಟವಾದಮೇಲೆ ನನ್ನಂಥವರು ಗಣನೆಗೆ ತಾನೇ ಎಲ್ಲಿ ಬಂದಾರು? !(ಲಘಹು ಯೋಗ ವಾಸಿಸ್ಟ,1,3,41,42,4).(ಪುಟ 177)

4)ಯಾವನು ತಾನು ಬ್ರಹ್ಮವಿದನೆಂಬ ಅಭಿಮಾನವನ್ನು ತ್ಯಜಿಸಿರುವನೊ ಅವನೇ ಆತ್ಮಜ್ಞನು.ಮತ್ತೊಬ್ಬನಲ್ಲ.(ಪುಟ 180)

5)ಜ್ಞಾನಿಯಾದವನಿಗೆ ಅಧ್ಆತ್ಮದ ಅಭಿಮಾನವೂ ಇರುವುದಿಲ್ಲ. ಏಕೆಂದರೆ ಅದು ಅಸುರ ಸಂಪತ್ತು. ಜ್ಞಾನಿಗೆ ಅಸುರ ಸಂಪತ್ತಿರಬಹುದಾದರೆ ಬ್ರಹ್ಮದಶ೯ನವು ನಿಷ್ಫಲವಾಗುತ್ತದೆ.(ಪುಟ 181)

6)ಜ್ಞಾನಿಯಲ್ಲಿ ರಾಗವೇ ಮೊದಲಾದವು ಎಷ್ಟು ಬೇಕಾದರೂ ಇರಲಿ! ಅದರಿಂದ ಯಾವ ಅಪರಾಧವೂ ಆಗದು. ಹಲ್ಲಿಲ್ಲದ ಹಾವಿನಂತಿರುವ ಅವಿದ್ಯೆಯು  (ಅವನಿಗೆ ಏನನ್ನು ತಾನೇ ಮಾಡೀತು?(ಬೃವಾತಿ.8.1786) ಅವರೇ ರಾಗಾದಿಗಳನ್ನು ಒಪ್ಪಿರುತ್ತಾರೆ.(ಪುಟ 171) 
     
7)'ಇತರರ ದೋಷಗಳನ್ನು  ನೋಡುವುದರಲ್ಲಿ ನಿಪುಣನಾದಂತೆ ತನ್ನಲ್ಲಿರುವ ದೋಷಗಳಲ್ಲಿ ಹೀಗೆಯೇ ನಿಪುಣನಾದರೆ ಯಾವನು ತಾನೇ ಬಂಧನದಿಂದ ಮುಕ್ತನಾಗುವುದಿಲ್ಲ?'(ಪುಟ 185).

8)ಶೋಕ ಹಷ ಭಯ ಕ್ರೋಧ ಲೋಭ ಮೋಹ ಆಶೆ ಮೊದಲಾದವು  ಜನ್ಮಮೃತ್ಯುಗಳು -ಇವು ಅಹಂಕಾರದ ವಿಡಯದಲ್ಲಿ ಕಂಡುಬರುವುದೇ ವಿನಾ  ಆತ್ಮನಿಗಲ್ಲ.(ಪುಟ 187)

೯೯)ಬಹು ದುಃಖದಿಂದ ಕೂಡಿರುವ ಜಗತ್ತಿನಲ್ಲಿ  ಸಂತೋಷ ಲಾಭವು ಬಹು ಕಷ್ಟ!'( (ಪುಟ 188)

100)ಧನದ ವಿಷಯದಲ್ಲಿ  ವಿವೇಕವು ಹೀಗಿರುತ್ತದೆ:ಧನಸಂಪಾದನೆ-ಧನಪರಿಪಾಲನೆ ಕ್ಲೇಶಕರ!ಧವನವು ನಾಶವಾದರೆ ಅಥವಾ ವ್ಯಯವಾದರೆ ದುಃಖವುಂಟಾಗುತ್ತದೆ.   ಕ್ಲೇಶಕಾರಿಯಾದ ಧನಕ್ಕೆ ಧಿಕ್ಕಾರ.!(ಪುಟ 18)

101) ಸ್ತ್ರೀ ವಿಷಯಕವಾದ  ವಿವೇಕವನ್ನು  ವಸಿಷ್ಠನು ಹೀಗೆ ತೋರಿಸುತ್ತಾನೆ.'ಯಾವನಿಗೆ ಸ್ತ್ರೀ ಇರುವಳೊ ಅವನಿಗೆ ಭೋಗೇಚ್ಛೆ ಉಂಟಾಗುತ್ತದೆ. ಸ್ತ್ರೀ ಇಲ್ಲದವನಿಗೆ ಭೋಗಭೂಮಿಯೆಲ್ಲಿಯದು?ಸ್ತ್ರೀಯನ್ನು ತ್ಯಜಿಸಿದರೆ ಜಗತ್ತನ್ನೇ ತ್ಯಜಿಸಿದಂತೆ.ಜಗತ್ತನ್ನು ತ್ಯಜಿಸಿದವನು ಸುಖಿಯಾಗುತ್ತಾನೆ'(ಲಘು ಯೋಗವಾಸಿಸ್ಟ 8.2,0-100)(ಪುಟ 12)

102)ಪುತ್ರವಿವೇಕವನ್ನು  ಬ್ರಹ್ಮಾನಂದವೆಂಬ ಗ್ರಂಥದಲ್ಲಿ ಹೀಗೆ ತೋರಿಸುತ್ತದೆ.'ಮಗನಾಗದಿದ್ದರೆ ಮಾತಾಪಿತೃಗಳು ಚಿರಕಾಲ ದುಃಖಪಡುತ್ತಾರೆ.ಪುತ್ರನಾಗುವ ಸಂದಭವಿದ್ದರೂ  ಗಭ೯ಪಾತದ ಹೆದರಿಕೆಯಿಂದ ಮತ್ತು  ಅವನು ಹುಟ್ಟುವಾಗ ಪ್ರಸವವೇದನೆಯಿಂದ ನರಳುತ್ತಾರೆ.ಹುಟ್ಟಿದಮೇಲೆ ಅವನಿಗೆ ಗ್ರಹ-ರೋಗಗಳ ಬಾಧೆ. ಕುಮಾರನು ಮೂಖ೯ನೇ ಆಗಿರಬಹುದು.ಉಪನಯನವಾದರೂ  ವಿದ್ಯಾ ವಿಹೀನನಾಗಿರಬಹುದು. ಪಂಡಿತನಾದರೂ ಮದುವೆಯಿಲ್ಲದಿರಬಹುದು.ಅವನು ಯೌವನದಲ್ಲಿ ಪರರ ಹೆಂಡತಿಯನ್ನು ಬಯಸುವ ನೀಚನಾಗಿರಬಹುದು. ಗೃಹಸ್ಥನಾದರೂ ದಾರಿದ್ರ್ಯದಿಂದ ನರಳಬಹುದು.ಧನಿನಾದಾಗಲೇ ಅವನು ಸಾಯಲೂಬಹುದು.ಹೀಗೆ ಪಿತೃಗಳ ದುಃಖಕ್ಕೆ ಕೊನೆಯೇ ಇಲ್ಲ.!'(65-67)(ಪುಟ13)

103) ಹೀಗೆ ವಿದ್ಯೆ ಧನ ಕ್ರೋಧ ಪತ್ನಿ ಪುತ್ರ -ಇವರ ವಿಷಯವಾದ  ಮಲಿನವಾಸನೆಗಳಿಗೆ  ವಿವೇಕದಮೂಲಕ  ಪ್ರತೀಕಾರವನ್ನು ಮಾಡಬೇಕೊ ಹಾಗೆಯೇ ಇತರವಾಸನೆಗಳಿಗೂ ಸಂದಭ೯ಕ್ಕೆ ತಕ್ಕಂತೆ ಶಾಸ್ತ್ರಗಳಮೂಲಕ ಹಾಗೂ ತನ್ನ ಯುಕ್ತಿಗಳಮೂಲಕ ಅವುಗಳ ದೋಷಗಳನ್ನು ಬೇಪಡಿಸಿ  ಪ್ರತೀಕಾರವನ್ನು ಕೈಗೊಳ್ಳಬೇಕು.(ಪುಟ13)
104)ಪ್ರತೀಕಾರವನ್ನು ಮಾಡಿದಾಗ ಜೀವನ್ಮುಕ್ತಿಯ ಲಕ್ಷಣವುಳ್ಳ ಪರಮಪದವು ಲಭಿಸುತ್ತದೆ.(ಪುಟ 13)

105)ವಾಸನೆಗಳನ್ನು ಬಿಡಲು ನೀವು ಸಾಕಷ್ಟು ಪ್ರಯತ್ನವನ್ನು ಮಾಡಿದರೆ ಆಗ ನಿನ್ನ ಎಲ್ಲಾ ಅಧಿವ್ಯಾಧಿಗಳೂ  ತಕ್ಷಣವೇ ಶಿಥಿಲವಾಗುತ್ತª..Éಪುರುಷ ಪ್ರಯತ್ನದ ಮೂಲಕ  ಬಲಾತ್ಕಾರವಾಗಿ ವಾಸನೆಗಳನ್ನು ಪರಿತ್ಯಜಿಸಿ ಮನಸ್ಸನ್ನು ಸಮತಾ ಸ್ಥಿತಿಯಲ್ಲಿ ಕಟ್ಟಿಹಾಕಿದರೆ ಆಗ ಪರಮಪದವನ್ನು ಬಳಿಸಾರುತ್ತೀಯೆ.(13)

106)ಅಜಿಹ್ವತ್ವ,ಷಂಡತ್ವ,ಪಂಗುತ್ವ,ಬದಿರತ್ವ ಮತ್ತು ಮುಗ್ಧತ್ವೀ ಆರರಿಂದ ಭಿಕ್ಷುವು  ನಿಸ್ಸಂಶಯವಾಗಿ ಮೋಕ್ಷವನ್ನು ಪಡೆಯುತ್ತಾನೆ.(ಪುತ16)

117)ವಿಷಯವಸ್ತುವನ್ನು ಭೋಗಿಸಲು ಸಮಥನಾಗಿದ್ದರೂ  ಗಟ್ಟಿಮುಟ್ಟಾದ ಇಂದ್ರಿಯಗಳನ್ನು ಹೊಂದಿದ್ದರೂವಿಷಯವಸ್ತುಗಳ ಸಮೀಪದಲ್ಲಿರುವಾಗಲೂ ಯಾವಾಗಲೂ ನಿದ್ರಿಸುವವನಂತೆ ಯಾವ ಭಿಕ್ಷುವಿರುವನೋ  ಅವನು ಮುಗ್ಧನು.(ನಾರದಪರ್ವ್ರಾಜಕೋಪನಿಷತ್ 3.62-68)

108)ಯತಿಯಾದವನು ಇತರರ ನಿಂದೆಯನ್ನಾಗಲೀ  ಸ್ತುತಿಯನ್ನಾಗಲೀ ಮಾಡ ಮಾಡಬಾರದು.ಯಾರನ್ನೂ ಮಮ೯ಭೇದಕ ಮಾತುಗಳಿಂದ ಚುಚ್ಚಬಾರದು.ಹೆಚ್ಚಾಗಿ ಮಾತನಾಡಬಾರದು.ಹಾಗೆಯೇ ಎಲ್ಲರಲ್ಲಿಯೂ ಸಮದೃಷ್ಟಿಯುಳ್ಳವನಾಗಿರಬೇಕು.ಯಾವಸ್ತ್ರೀಯೊಡನೆಯೂ ಸಂಭಾಷಣೆ ನಡೆಸಬಾರದು. ಹಿಂದೆ ನೋಡಿದ್ದ ಸ್ತೀಯನ್ನು ಸ್ಮರಿಸಲೂ ಬಾರದು.ಅವಳ ವಿಷಯವಾದ  ಮಾತುಗಳನ್ನೂ ಸಹ ಬಿಡಬೇಕು.ಅಷ್ಟೇಕೆ ಅವಳ ಕೈಬರಹವನ್ನೂ ನೋಡಬಾರದು.!'(ಪುಟ 17)

10)ಕೇವಲ ಚಿದ್ವಸ್ತುವಿನಲ್ಲಿ ಮನಸ್ಸನ್ನು ಇಡಬೇಕು.ಜಡವಾದುದನ್ನು ಉಪೇಕ್ಷಿಸಿ  ಕೇವಲ ಚಿದ್ವಸ್ತುವಿನಲ್ಲಿ -ನಿಃಶ್ವಾಸಾದಿಗಳಂತೆ  ಸ್ವಾಭಾವಿಕವಾದ ಮನಃಪ್ರವೃತ್ತಿಯನ್ನು ಸಂಪಾದಿಸಲು ಎಷ್ಟು ಕಾಲ ಬೇಕೋ ಅಷ್ಟು  ಕಾಲ ಚಿನ್ಮಾತ್ರ ವಾಸನೆಗಾಗಿ ಪ್ರಯತ್ನ ಮಾಡಬೇಕು.(ಪುಟ200).

110)ಅಪ್ರಮತ್ತನಾದ ನಾನು ಏಕಾಗ್ರವಾದ ಮನಸ್ಸಿನಿಂದ  ಕೇವಲ ಚಿತ್ಸ್ವರೂಪವನ್ನು ಕುರಿತು ಚಿಂತಿಸುತ್ತೇನೆ.'ಎಂಬ ರೂಪದ ಕತೃ೯-ಕರಣಗಳ  ಅನುಸಂಧಾನದಿಂದ ಕೂಡಿದ,ಧ್ಯಾನ¸ಶಬ್ದದಿಂದ  ಕರೆಯಲ್ಪಟ್ಟಪ್ರಥಮವಾ ಚಿನ್ಮಾತ್ರ ವಾಸನೆ ಯಾವುದುಂಟೋ  ಅದನ್ನು ಪರಿತ್ಯಜಿಸ ಬೇಕು.ಆದರೆ ಯಾವುದು  ಅಭ್ಯಾಸಪಟುತ್ವದಿಂದ ಕತೃ೯ತ್ವಾದಿಗಳ  ಅನುಸಂಧಾನವೆಂಬ ತಡೆಯಿಲ್ಲದೆ, ಇರುವುದೋ,ಸಮಾಧಿಯೆಂದು ಕರೆಯಲ್ಪಡುವುದೋ ಅದನ್ನು ಪರಿಗ್ರಹಿಸ ಬೇಕು.(ಪುಟ 201).

111)ವಾಸನೆಯು ಲಯಹೊಂದಿದಾಗ -ಎಣ್ಣೆಯಿಲ್ಲದ ದೀಪವು ಆರಿಹೋಗುವಂತೆ -ಮನಸ್ಸು ಶಾಂತವಾಗುತ್ತದೆ.(ಪುಟ204)

112)'ಯಾವ ಮಹಾಮತಿಯು  ಎಲ್ಲ ವವಾಸನೆಗಳನ್ನೂ  ತನ್ನ ಹೃದಯದಿಂದ ಕಿತ್ತೊಗೆದು,ವ್ಯಗ್ರತೆಯನ್ನು ಕಳೆದುಕೊಂಡು ನಿಲ್ಲುತ್ತಾನೋ  ಅವನು ಮುಕ್ತನಾದ ಪರಮೇಶ್ವರನೇ.ಯಾವನ ಹೃದಯದಲ್ಲಿ ಎಲ್ಲಾ ಆಸೆಗಳು ಗತಿಸಿ ಹೋಗಿವೆಯೊ ಅಂಥವನು ಸಮಾಧಿಯನ್ನು ಅಥವಾ ಕಮ೯ಗಳನ್ನು ಮಾಡಲಿ ಮಾಡದಿರಲಿ,ಉತ್ತಮಾಶಯನಾದ  ಆತನು ಮುಕ್ತನೇ ಸರಿ. ಯಾವನ ಮನಸ್ಸು  ವಾಸನಾರಹಿತವಾಗಿದೆಯೋ ಅವನಿಗೆ ನೈಷ್ಕಮ್ಯದಿಂದಾಗಲೀ  ಅಥವಾ  ಕಮ೯ಗಳಿಂದಾಗಲೀ ,ಸಮಾಧಿಯಿಂದಾಗಲೀ  ಅಥವಾ  ಜಪದಿಂದಾಗಲೀ  ಆಗಬೇಕಾದ ಯಾವಪ್ರಯೋಜನವೂ ಇಲ್ಲ.ಶಾಸ್ತ್ರ ವಿಚಾರಣೆಯನ್ನು ಸಾಕಷ್ಟು ಮಾಡಿದ್ದಾಗಿದೆ.ಇಷ್ಟಾದರೂ ವಾಸನಾ ತ್ಯಾಗದಿಂದ ಬರುವ ಮೌನಕ್ಕಿಂತ  ಉತ್ತಮವಾದ ಪದವಿರುವುದಿಲ್ಲ.(ಪುಟ 204))

113)'ಹೇಗೆ  ಕಣ್ಣು ಪ್ರಯತ್ನವಿಲ್ಲದೆಯೇ  ಒದಗಿರುವ ಆಕಾಶವನ್ನೂ  ಮತ್ತು ಅದರಲ್ಲಿರುವ ವಸ್ತುಗಳನ್ನೂ -ಅವುಗಳಲ್ಲಿ ಯಾವರಾಗವೂ ಇಲ್ಲದೆ ನೋಡುತ್ತದೆಯೊ  ಹಾಗೆ ಧೀರಬುದ್ಧಿಯುಳ್ಳವನು ಕಾಯ೯ಗಳಲ್ಲಿ ತೊಡಗಬೇಕು.(ಪುಟ 205)

114)'ದೊರಕದೆ ಇರುವುದನ್ನು ನಾನು  ಬಯಸುವುದಿಲ್ಲ. ದೊರಕಿರುವುದನ್ನು ತ್ಯಜಿಸುವುದಿಲ್ಲ. ನನ್ನ ಆತ್ಮನಲ್ಲಿಯೆ ಇರುತ್ತೇನೆ.ಯಾವುದು ನನ್ನದಾಗಿರುವುದೊ ಅದು ಹಾಗೆಯೇ ನನಗಿರಲಿ!"-ಎಂದು ಯೋಚಿಸಿ  ಜನಕನು ತನಗೆ ಒದಗಿದ್ದ ಕಾಯ೯ಗಳನ್ನು -ಸೂಯ೯ನು ದಿನವನ್ನು ಕಳೆಯುವಂತೆ-ಅವುಗಳಲ್ಲಿ ಆಸಕ್ತಿಯನ್ನಿಡದೆ ಮಾಡುವುದಕ್ಕಾಗಿ ಎದ್ದನು.ಅವನು ಕಳೆದು ಹೋದುzಕ್ಕಾಗಿ  ಚಿಂತಿಸುವುದಿಲ್ಲ.ಮುಂದಾಗುವುದನ್ನು ಕುರಿತು ಯೋಚಿಸುವುದಿಲ್ಲ.ವತ೯ಮಾನಕಾಲವನ್ನು ನಗುನಗುತ್ತಾ ಆಚರಿಸುತ್ತಾನೆ.(ಪುಟ208)

         ಹಿಂದೆ ಹೇಳಿದ ವಾಸನಾ ಕ್ಷಯದಿಂದ ,ಜೀವನ್ಮುಕ್ತಿಯುಂಟಾಗುತ್ತದೆಯೆಂಬುದು ಸಿದ್ಧವಾಯಿತು.

ಇಲ್ಲಿಗೆ  ಶ್ರೀ ವಿದ್ಯಾರಣ್ಯ ಮುನಿಗಳಿಂದ ವಿರಚಿತವಾದ  ಜೀವನ್ಮುಕ್ತಿ ವಿವೇಕ ಎಂಬ ಗ್ರಂಥದಲ್ಲಿ ವಾಸನಾ ಕ್ಷಯವೆಂಬ  ಹೆಸರಿನ  ಎರಡನೆಯ ಪ್ರಕರಣವು  ಮುಗಿಯಿತು.
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,



No comments:

Post a Comment