೭) ತೃಪ್ತಿದೀಪ ಪ್ರಕರಣ:
೧)ಮನುಷ್ಯನು ತನ್ನನ್ನು 'ಈ ಪರಮಾತ್ಮನೇ ನಾನು' ಎಂದು
ಅರಿತುಕೊಂಡರೆ ಯಾವುದನ್ನು
ಬಯಸುತ್ತ,ಯಾರ ಪ್ರೀತಿಗೋಸ್ಕರ
ಶರೀರವನ್ನನುಸರಿಸಿ ದುಃಖ
ಪಡು
ವನು(ಬೃ.ಉ೪.೪,೧೨).(ಪುಟ ೧೯೩)
೨)ಮಾಯೆಯು ತನ್ನಲ್ಲಾಗುವ ಚಿದಾಭಾಸದಿಂದ ಜೀವೇಶ್ವರರನ್ನು
ಕಲ್ಪಿಸುತ್ತದೆ-ಎಂದು ಶ್ರುತಿಯಲ್ಲಿ ಹೇಳಿರುವುದರಿಂದ ಜೀವೇಶ್ವರರು
ಕಲ್ಪಿತರೇ ಆಗಿರುವರು.ಅವರಿಬ್ಬರಿಂದ ಜಗತ್ತೆಲ್ಲವೂ
ಕಲ್ಪಿತವಾಗಿದೆ.(ಪುಟ ೧೯೨)
(ಸಚ್ಚಿದಾನಂದ
ಸ್ವರೂಪವಾದ ಪರಬ್ರಹ್ಮದ
ಪ್ರತಿಬಿಂಬದೊಡನೆ ಕೂಡಿದ
ಪ್ರಕೃತಿಯೇ ಇಲ್ಲಿ ಮಾಯೆ ಎನಿಸಿದೆ.)
೩)ಅವನು ಪುರಗಳಲ್ಲಿ (ಎಂದರೆ
ಶರೀರಗಳಲ್ಲಿ)ವಾಸಿಸುವುದರಿಂದ ಪುರುಷನೆನಿಸಿರುತ್ತಾನೆ.(ಪುಟ ೧೯೩)
೪)ಯಾವಾಗ ಜೀವನು ಕೂಟಸ್ಥ ಚೈತನ್ಯದೊಡನೆ ಯುಕ್ತವಾದ
ಚಿದಾಭಾಸನೊಡನೆ ಕೂಡಿದ ಸ್ಥೂಲ ಸೂಕ್ಷ್ಮ
ಶರೀರಗಳನ್ನು ತನ್ನ ಸ್ವರೂಪವಾಗಿ ಸ್ವೀಕರಿಸುವನೊ
ಆಗ ನಾನು ಸಂಸಾರಿ'ಎಂದು
ಅಭಿಮಾನವನ್ನು ಮಾಡುತ್ತಾನೆ.(ಪುಟ ೧೯೪)
೫)ಯಾವಾಗ ದೇಹದ್ವಯಸಹಿತವಾದ
ಚಿದಾಭಾಸನನ್ನು ತಿರಸ್ಕರಿಸಿ ಕೂಟಸ್ಥ
ಚೈತನ್ಯವನ್ನು ತನ್ನ ಸ್ವರೂಪವಾಗಿ ಸ್ವೀಕರಿಸುವನೊ
ಆಗ'ನಾನು ಚಿದಾತ್ಮನಾಗಿದ್ದೇನೆ,ಅಸಂಗನಾಗಿದ್ದೇನೆ
ಎಂದು ಅರಿಯುತ್ತಾನೆ.(ಪುಟ ೧೯೪)
೬)'ನಾನು ಹೋಗುತ್ತೇನೆ'-ಇದೇ
ಮೊದಲಾದ ಲೌಕಿಕ ವ್ಯವಹಾರದಲ್ಲಿ
ಪಂಡಿತನಾದವನು ಕೂಟಸ್ಥ ಚೈತನ್ಯದಿಂದ ಚಿದಾಭಾಸನನ್ನು (ಬುದ್ಧಿಯ ಮೂಲಕ)ವಿಂಗಡಿಸಿ
ಚಿದಾಭಾಸನನ್ನೇ ಅಹಂ-ಶಬ್ದದಿಂದ ಹೇಳುತ್ತಾನೆ.(ಇಲ್ಲಿ ಲೌಕಿಕ ವ್ಯವಹಾರದಲ್ಲಿ ಅಹಂ
ಶಬ್ದದ ಅಥ೯ವನ್ನು ಹೇಳಿದೆ.)(ಪುಟ ೧೯೫)
೭)ಪಂಡಿತನಾದವನು ವೇದಾಂತ ಶ್ರವಣದಿಂದ ಉತ್ಪನ್ನವಾದ
ಜ್ಞಾನದಿಂದ'ನಾನು ಅಸಂಗನು ,ನಾನು
ಚಿತ್ಸ್ವರೂಪನು 'ಎಂಬ ವೈದಿಕ ವ್ಯವಹಾರದಲ್ಲಿ
(ಚಿದಾಭಾಸದಿಂದ ಕೂಟಸ್ಥ ಚೈತನ್ಯವನ್ನು ವಿಂಗಡಿಸಿ
) ಆ ಕೂಟಸ್ಥ ಚೈತನ್ಯವನ್ನೇ
ಅಹಂ-ಶಬ್ದದಿಂದ ಹೇಳುತ್ತಾನೆ.(ಪುಟ ೧೯೬)
೮)ಚಿದಾಭಾಸ ಸ್ವರೂಪವು ಮಿಥ್ಯೆಯಾಗಿದೆ ಮತ್ತು ಕೂಟಸ್ಥವೊಂದೇ
ಶೇಷವಾಗಿ ಉಳಿಯುತ್ತದೆ.ಆದುದರಿಂದ ಚಿದಾಭಾಸನು ಕೂಟಸ್ಥನೇ.(ಪುಟ ೧೯೭)
೯)ಕೂಟಸ್ಥನೇ
ಚಿದಾಭಾಸನ ನಿಜಸ್ವರೂಪ.(೧೯೭)
೧0)
"ದೇಹವೇ ಆತ್ಮ" ಎಂಬ ದೃಢಜ್ಞಾನದಂತೆ
ದೇಹಾತ್ಮ ಜ್ಞಾನವನ್ನೂ ಬಾಧಿಸುವ 'ಅಹಂ ಬ್ರಹ್ಮಾಸ್ಮಿ'ಎಂಬ
ದೃಢವಾದ ಅಪರೋಕ್ಷ
ಜ್ಞಾನವು ಪ್ರತ್ಯಗಾತ್ಮನಲ್ಲಿ ಯಾವನಿಗೆ ಉಂಟಾಗುವುದೊ ಅವನು
ಮೋಕ್ಷವನ್ನು ಬಯಸದಿದ್ದರೂ ಮುಕ್ತನಾಗುತ್ತಾನೆ.(ಪುಟ ೧೯೮)
(ಉಪದೇಶ
ಸಾಹಸ್ರೀ.೪.೫)
೧೧)ಆತ್ಮನು ಸದಾ ಅಪರೋಕ್ಷನಾಗಿದ್ದರೂ ಅವನು
ಪರೋಕ್ಷನೆಂದೂ ಅಪರೋಕ್ಷನೆಂದೂ ಜ್ಞಾನ
-ಅಜ್ಞಾನಗಳಿಗೆ ವಿಷಯನೆಂದೂ -ಹತ್ತನೆಯವನ ವಿಷಯದಲ್ಲಿ
ಹೇಗೋ ಹಾಗೆ -ಹೇಳಬಹುದು.(ಪುಟ
೧೯೯)
೧೨) ಒಂಭತ್ತು ಜನರನ್ನು ಎಣಿಸುತ್ತಿದ್ದ ಹತ್ತನೆಯವನು
-ಒಂಬತ್ತು ಎಂಬ ಸಂಖ್ಯೆಯಿಂದ -ಆ
ಒಂಬತ್ತು ಜನರನ್ನು ಸರಿಯಾಗಿ ನೋಡುತ್ತಿದ್ದರೂ,ಭ್ರಾಂತಿಯಿಂದ 'ನಾನು
ಹತ್ತನೆಯವನು ಎಂಬುದನ್ನು ಅರಿಯುವುದಿಲ್ಲ. (ದಶಮನ ಕಥೆ)(೧೯೯)
೧೩)ಅಜ್ಞಾನ,ಆವರಣ,ವಿಕ್ಷೇಪ,ಪರೋಕ್ಷಜ್ಞಾನ,ಅಪರೋಕ್ಷ ಜ್ಞಾನ ,ತೃಪ್ತಿ,ದುಃಖ ನಿವೃತ್ತಿ -ಎಂಬ
ಅವಸ್ಥಾಸಪ್ತಕವನ್ನು ಆತ್ಮನಲ್ಲಿಯೂ
ಆಯೋಜಿಸಿಕೊಳ್ಳಬೇಕು.(ಪುಟ ೨00)
೧೪)ಈ ಚಿದಾಭಾಸನು ಸಂಸಾರದಲ್ಲಿ
ಆಸಕ್ತವಾದ ಚಿತ್ತವುಳ್ಳವನಾಗಿ
(ಶ್ರುತಿಯ ವಿಚಾರಕ್ಕೆ ಮೊದಲು)ಎಂದಿಗೂ ತನ್ನ
ನಿಜರೂಪವು ಸ್ವಯಂಪ್ರಕಾಶವುಳ್ಳ ಕೂಟಸ್ಥನೆಂಬುದನ್ನು
ಅರಿಯುವುದಿಲ್ಲ. ಇದು ಅಜ್ಞಾನವೆಂಬ ಮೊದಲನೆಯ
ಅವಸ್ಥೆ.(ಪುಟ ೨೧೧)
೧೫)ಚಿದಾತ್ಮ ವಿಷಯಕವಾದ
ಪ್ರಸಂಗವೊದಗಿದಾಗ ಕೂಟಸ್ಥನಿಲ್ಲ,ಅವನು ತೋರುತ್ತಿಲ್ಲ'ಎಂದು
ಹೇಳುವುದು ಎರಡನೆಯ
ಅವಸ್ಥೆಯಾದ ಆವರಣ. ನಾನು ಕತೃ೯ವಾಗಿದ್ದೇನೆ
ಭೋಕ್ತøವಾಗಿದ್ದೇನೆ 'ಎಂದಿ ಅವನು ಹೇಳುತ್ತ ಮೂರನೆಯ
ಅವಸ್ಥೆಯಾದ ವಿಕ್ಷೇಪವನ್ನು ಹೊಂದುತ್ತಾನೆ,(ಪುಟ ೨0೧)
೧೬)'ಕೂಟಸ್ಥನು ಇರುವನು' ಎಂದು ಅವನು ಮೊದಲು
ಗುರುವಿನ ವಾಕ್ಯದಿಂದ ಪರೋಕ್ಷವಾಗಿ
ಅರಿಯುತ್ತಾನೆ.ಅನಂತರ ಶ್ರವಣಾದಿ ಪರಿಪಾಕದ ದೆಸೆಯಿಂದ 'ತಾನೇ
ಕೂಟಸ್ಥನು 'ಎಂದು ಅಪರೋಕ್ಷವಾಗಿ ಅರಿಯುತ್ತಾನೆ.(ಪುಟ ೨0೧)
೧೭)'ನಾನು ಕತೃ೯','ನಾನು
ಭೋಕ್ತø'-ಎಂಬಿವಾ ಮೊದಲಾದ ಶೋಕ
ಸಮೂಹವನ್ನು ತ್ಯಜಿಸುತ್ತಾನೆ.ಇದು ಆರನೆಯ ಅವಸ್ಥೆ.ಕೊನೆಗೆ ಮಾಡತಕ್ಕದ್ದೆಲ್ಲವೂ ಮಾಡಲ್ಪಟ್ಟಿತು.ಹೊಂಧತಕ್ಕ ಫಲವೆಲ್ಲ ಹೊಂದಲ್ಪಟ್ಟಿತು-ಎಂದು
ಸಂತೋಷಪಡುತ್ತಾನೆ.ಇದು ಏಳನೆಯ ಅವಸ್ಥೆ.(ಪುಟ ೨0೨)
೧೮)ಹೀಗೆ ೧)ಅಜ್ಞಾನ೨)
ಆವರಣ೩)ವಿಕ್ಷೇಪ೪)ಪರೋಕ್ಷ ಜ್ಞಾನ ೫)ಅಪರೋಕ್ಷ ಜ್ಞಾನ೬)ಶೋಕ
ನಿವೃತ್ತಿ೭) ನಿರಂಕುಶವಾದ ತೃಪ್ತಿ-ಎಂಬ ಏಳು
ಅವಸ್ಥೆಗಳು ಆತ್ಮನಲ್ಲಿವೆ.(ಪುಟ ೨0೩)
೧೯)ಈ ಏಳು ಅವಸ್ಥೆಗಳೂ ಚಿದಾಭಾಸನಲ್ಲಿವೆ.ಕೂಟಸ್ಥನಲ್ಲಿಲ್ಲ.ಇವುಗಳಲ್ಲಿ ೧)ಅಜ್ಞಾನ೨)ಎರಡು
೩) ವಿಕ್ಷೇಪ-ಎಂಬ ಮೂರು
ಅವಸ್ಥೆಗಳು ಬಂಧನವನ್ನುಂಟು ಮಾಡುತ್ತವೆ.ಉಳಿದ ನಾಲ್ಕು ಮೋಕ್ಷವನ್ನುಂಟು
ಮಾಡುತ್ತವೆ.(ಪುಟ ೨0೨)
೨0)ಸಂಸಾರವೆಂಬ ಹೆಸರುಳ್ಳ ಕತೃ೯ತ್ವವೇ
ಮೊದಲಾದ ಸಮಸ್ತ
ಶೋಕವೂ ಈ
ಚಿದಾಭಾಸನ ಕಾಯ೯ವು.(ಪುಟ ೨0೩)
೨೧) 'ನಾನು ಸಂಸಾರಿ' 'ನಾನು
ಜ್ಞಾನಿ' 'ನಾನು ಶೋಕರಹಿತನು' 'ನಾನು
ಸಂತುಷ್ಟನು'-ಇವೇ ಮೊದಲಾದ ಮುಂದಿನ
ಐದು ಅವಸ್ಥೆಗಳು ಜೀವನಲ್ಲಿರುವುದೇ
ಹೊರತು ಬ್ರಹ್ಮದಲ್ಲಿಲ್ಲ.(ಪುಟ ೨೧೪)
೨೨)ಬಂಧಹೇತುವಾದ ಅಜ್ಞಾನ,ಆವರಣ,ವಿಕ್ಷೇಪ-ಎಂಬ ಅವಸ್ಥಾತ್ರಯವನ್ನು
ತೋರಿಸಿ ಈಗ ಮುಕ್ತಿ
ಹೇತುವಾದ ಪರೋಕ್ಷ ಅಪರೋಕ್ಷ ಜ್ಞಾನಗಳನ್ನು
ಹೇಳುತ್ತಾರೆ.(ಪುಟ ೨0೫)
೨೩)ಸವ೯ ಸಂಸಾರವೂ ತೊಲಗಿದಾಗ ನಿತ್ಯಮುಕ್ತ
ಭಾವವು ಪ್ರಕಾಶಿಸುತ್ತದೆ.ಪುನಃ ಶೋಕವು ಉತ್ಪನ್ನವಾಗದಿರುವುದರಿಂದ ನಿರಂಕುಶವಾದ
ತೃಪ್ತಿಯು ಉಂಟಾಗುತ್ತದೆ.(ಪುಟ೨0೬)
೨೪)'ನಾನು ಬ್ರಹ್ಮ'ಎಂದು
ಬ್ರಹ್ಮವನ್ನು 'ಬ್ರಹ್ಮವು ಇದೆ'ಎಂದು ತಿಳಿಯುವುದೇ
ಪರೋಕ್ಷ ಜ್ಞಾನವು.ಈ ಸಾಮಾನ್ಯ
ಜ್ಞಾನವು ಮುಂದೆ ಬಾಧಿಸಲ್ಪಡದಿರುವುದರಿಂದ ಮಿಥ್ಯಾ
ಜ್ಞಾನವಲ್ಲ.(ಪುಟ ೨0೭)
೨೫)'ಈ ಆತ್ಮನು ದ್ರಹ್ಮವು'
ಎಂಬ ಮಹಾವಾಕ್ಯದ ಅಥ೯ವನ್ನು ನಿಃಶೇಷವಾಗಿ
ವಿಚಾರಿಸಿದಾಗ -ಹತ್ತನೆಯವನು ನೀನು ಎಂಬ ವಾಕ್ಯದಿಂದ
ಹತ್ತನೆಯವನು ತನ್ನನ್ನು ಹೇಗೆ ಅರಿತುಕೊಳ್ಳುವನೊ-ಹಾಗೆಯೇ
'ನಾನು ಬ್ರಹ್ಮ'ಎಂದು ಮುಮುಕ್ಷುವು ತನ್ನನ್ನು
ಸಾಕ್ಷಾತ್ಕರಿಸಿಕೊಳ್ಳುತ್ತಾನೆ.(ಪುಟ ೨0೯)
೨೬)ಸೃಷ್ಟಿಗೆ ಮೊದಲು ಸದ್ರೂಪವಾದ ಬ್ರಹ್ಮವೊಂದೇ
ಇತ್ತು'-ಇದೇ ಮೊದಲಾದ ವಾಕ್ಯದಿಂದ ಪರಬ್ರಹ್ಮದ
ಅಸ್ತಿತ್ವವನ್ನು ಪರೋಕ್ಷವಾಗಿ ಗ್ರಹಿಸಿ ಅನಂತರ
ತತ್ವಮಸ್ಯಾದಿ ವಾಕ್ಯದಿಂದ ಅದ್ವಿತೀಯವಾದ ಬ್ರಹ್ಮರೂಪವಾದ ತನ್ನನ್ನು ('ಅಹಂ ಬ್ರಹ್ಮಾಸ್ಮಿ') ಎಂದು
ಸಾಕ್ಷಾತ್ಕರಿಸಿಕೊಳ್ಳಬೇಕು.(ಪುಟ ೨೧0)
೨೭) ಆನಂದದಿಂದಲೇ ಈ
ಪ್ರಾಣಿಗಳು ಹುತ್ತುತ್ತವೆ.ಆನಂದದಿಂದಲೇ ಜೀವಿಸುತ್ತವೆ ಮತ್ತು ಆನಂದವನ್ನೇ ಪ್ರವೇಶಿಸುತ್ತವೆ.(ತೈ.ಉ ೩.೬)(ಪುಟ೨೧೨)
೨೮)ಬ್ರಹ್ಮವು ಸತ್ಯ ಜ್ಞಾನ ಅನಂತ-
ಎಂದು ಬ್ರಹ್ಮದ ಸ್ವರೂಪ ಲಕ್ಷಣವನ್ನುಹೇಳಿ ಯಾವನು
ಪರಮವ್ಯೋಮದಲ್ಲಿರುವ ಗುಹ್ರೆಯಲ್ಲಿ ಬ್ರಹ್ಮವನ್ನು ಅರಿತುಕೊಳ್ಳುವನೊ'ಎಂಬ ವಾಕ್ಯದಿಂದ ಪಂಚಕೋಶಗಳಲ್ಲಿ ಪ್ರತ್ಯಗಾತ್ಮ
ಸ್ವರೂಪವು ತೋರಿಸಲ್ಪಟ್ಟಿತು.ಬ್ರಹ್ಮಕ್ಕೂ ಪ್ರತ್ಯಗಾತ್ಮನಿಗೂ ಭೇದವಿಲ್ಲ.(ಪುಟ೨೧೨).
೨೯)ಯಾವ ಆತ್ಮನು
(ಎಂಬ ಪ್ರಜಾಪತಿಯ ಪಾಪರಹಿತನೂ ಮೃತ್ಯುರಹಿತನೂ ಶೋಕರಹಿತನೂ
ಹಸಿವು ಬಾಯಾರಿಕೆಗಳಿಲ್ಲದವನೂ ಸತ್ಯಕಾಮನೂ ಸತ್ಯ
ಸಂಕಲ್ಪನೂ ಆಗಿರುವನೊ ಅವನನ್ನೇ ಹುಡುಕಬೇಕು) ಎಂಬ
ಪ್ರಜಾಪತಿಯ ವಾಕ್ಯದಿಂದ ಇಂದ್ರನು
ಬ್ರಹ್ಮವನ್ನು ಪರೋಕ್ಷವಾಗಿ ಅರಿತುಕೊಂಡು
ಅದನ್ನು ಪ್ರತ್ಯಕ್ಷವಾಗಿ ಸಾಕ್ಷಾತ್ಕರಿಸಿಕೊಳ್ಳಲು ಇಚ್ಛೆಯುಳ್ಳವನಾಗಿನಾಲ್ಕು
ಸಲ ತನ್ನ ಗುರುವಿನ ಬಳಿಗೆ
ಹೋದನು.(ಪುಟ ೨೧೩)
೩0)'ಸೃಷ್ಟಿಗೆ ಮೊದಲೂ ಈ ಜಗತ್ತು
ಆತ್ಮನೊಬ್ಬನೇ ಆಗಿತ್ತು..ಇವೇ ಮೊದಲಾದ ವಾಕ್ಯದಲ್ಲಿ
ಬ್ರಹ್ಮವು ಪರೋಕ್ಷವಾಗಿ ಲಕ್ಷಿಸಲ್ಪಟ್ಟಿತು.
ಅಧ್ಯಾರೋಪ ಅಪವಾದ -ಇವುಗಳಿಂದ 'ಪ್ರಜ್ಞಾನವು ಬ್ರಹ್ಮ'ಎಂದು ತೋರಿಸಲ್ಪಟ್ಟಿತು.(ಆತ್ಮಾ ವಾ ಇದಮೇಕ
ಏವಾಗ್ರ ಆಸೀತ್(ಐ.ಉ.೧.೧.೧)(ಪುಟ ೨೧೩)
೩0)'ಸೃಷ್ಟಿಗೆ ಮೊದಲೂ
ಈ ಜಗತ್ತು ಆತ್ಮನೊಬ್ಬನೇ
ಆಗಿತ್ತು..ಇವೇ ಮೊದಲಾದ ವಾಕ್ಯದಲ್ಲಿ
ಬ್ರಹ್ಮವು ಪರೋಕ್ಷವಾಗಿ ಲಕ್ಷಿಸಲ್ಪಟ್ಟಿತು.
ಅಧ್ಯಾರೋಪ ಅಪವಾದ -ಇವುಗಳಿಂದ 'ಪ್ರಜ್ಞಾನವು ಬ್ರಹ್ಮ'ಎಂದು ತೋರಿಸಲ್ಪಟ್ಟಿತು.(ಆತ್ಮಾ ವಾ ಇದಮೇಕ
ಏವಾಗ್ರ ಆಸೀತ್(ಐ.ಉ.೧.೧.೧)
(ಪುಟ ೨೧೩)
೩೧) ಅವನಿಗೆ (ಬಲಗಣ್ಣು, ಮನಸ್ಸು
ಹೃದಯ-ಎಂಬ) ಮೂರು ವಾಸಸ್ಥಾನಗಳು.ಜಾಗ್ರತ್-ಸ್ವಪ್ನ-ಸುಷುಪ್ತಿ
ಎಂಬ ಮೂರು ಸ್ವಪ್ನಗಳು.ಎಂಬಲ್ಲಿ ಬ್ರಹ್ಮಕ್ಕೆ ಜಗತ್ತಿನ
ಅಧ್ಯಾರೋಪವನ್ನು ಮಾಡಿದೆ.(ಪುಟ ೨೧೩)
೩೨)ಸ್ವರೂಪವನ್ನು ಬೋಧಿಸದ ಇತರ ವಾಕ್ಯಗಳಿಂದಲೂ ಪರೋಕ್ಷವಾದ
ಬ್ರಹ್ಮಜ್ಞಾನವುಂಟಾಗುವುದು.ಸವ೯ತ್ರ ಮಹಾವಾಕ್ಯದ ವಿಚಾರದಿಂದ ಅಪರೋಕ್ಷ
ಜ್ಞಾನವುಂಟಾಗುವುದು.(ಪುಟ೨೧೩)
೩೩)ಬ್ರಹ್ಮ ಸಾಕ್ಷಾತ್ಕಾರದ ಸಿದ್ಧಿಗಾಗಿ ಮಹಾವಾಕ್ಯವು
ಬಂದಿದೆ ಎಂದು
ಶ್ರೀ ಶಂಕರಾಚಾಯ೯ರು ವಾಕ್ಯವೃತ್ತಿಯಲ್ಲಿ
ಹೇಳಿದ್ದಾರೆ.ಆದುದರಿಂದ ಬ್ರಹ್ಮಸಾಕ್ಷಾತ್ಕಾರ
ರೂಪದ ಅಪರೋಕ್ಷ
ಜ್ಞಾನವುಂಟಾಗುತ್ತದೆ ಎಂಬ ವಿಷಯದಲ್ಲಿ ಯಾವ
ವಿವಾದವೂ ಇಲ್ಲ.(ಪುಟ೨೧೪)
೩೪)'ಹತ್ತನೆಯವನು ನೀನು' ಎಮಬ ವಾಕ್ಯದಿಂದ ಅಪರೋಕ್ಷ
ಜ್ಞಾನವುಂಟಾಗುತ್ತದೆ.(ಪುಟ೨೧೭)
೩೫)ಅಂತಃಕರಣ ಸಂಬಂಧವಿರುವುದೇ ಜೀವನ
ಉಪಾಧಿ.ಅಂಥ ಸಂಬಂಧವಿಲ್ಲದಿರುವುದೇ
ಬ್ರಹ್ಮನ ಉಪಾಧಿ.ಇದಲ್ಲದೆ ಬೇರೆ
ಭೇದವಿಲ್ಲ.(ಪುಟ೨೧೮)
೩೬)ಅಂತಃಕರಣವನ್ನು ಪರಿತ್ಯಾಗ ಮಾಡಿದಮೇಲೆ ಉಳಿದ ಚಿದಾತ್ಮನಾದ ಸಾಕ್ಷಿಯಲ್ಲಿ'ನಾನೇ ಬ್ರಹ್ಮವಾಗಿದ್ದೇನೆ'ಎಂಬ
ಮಹಾವಾಕ್ಯದಿಂದ ಅನುಭವಿಸಿದ್ಧವಾಗುವುದು.(ಪುಟ೨೨0)
೩೭) ಈ
ಬ್ರಹ್ಮಾತ್ಮೈಕ್ಯತ್ವ ವಿಷಯದಲ್ಲಿ ಮಹಾವಾಕ್ಯದಿಂದ
ಪ್ರತ್ಯಕ್ಷಜ್ಞಾನವುಂಟಾದರೂ ಅದು
ಒಂದೇಸಲ ದೃಢವಾಗುವುದಿಲ್ಲ.ಆದುದರಿಂದ ಜ್ಞಾನವು ದೃಢವಾಗುವವರೆಗೂ
ಪುನಃ ಪುನಃ ಶ್ರವಣಾದಿಗಳನ್ನು ಮಾಡಬೇಕೆಂದು ಹೇಳಿರುತ್ತಾರೆ.(ಪುಟ ೨೨೨)
೩೮)ವೇದಾಂತ ಶ್ರವಣವನ್ನು ಪುನಃಪುನಃ
ಜ್ಞಾನವು ದೃಢವಾಗುವವರೆಗೆ ಮಾಡಬೇಕು.(ಪುಟ೨೨೩)
೩೯)ಬ್ರಹ್ಮಸೂತ್ರಗಳ
ಸಮನ್ವಯಾಧ್ಯಾಯದಲ್ಲಿ ಶ್ರೀ
ವ್ಯಾಸರು ಈ
ಶ್ರವಣವನ್ನು ಚೆನ್ನಾಗಿ ಹೇಳಿರುತ್ತಾರೆ:ವೇದಾಂತಾಥ೯ದ ಮನನವು ಬುದ್ಧಿಗೆ
ಸಮಾಧಾನವನ್ನುಂಟು ಮಾಡುವ ಯುಕ್ತಿಗಳಿಂದ
ಅವಿರೋಧವೆಂಬ ಎರಡನೆಯ ಅಧ್ಯಾಯದಲ್ಲಿ ಹೇಳಿದೆ.(ಪುಟ ೨೨೪)
೪0)ಅನೇಕ ಜನ್ಮಗಳ ದೃಢಾಭ್ಯಾಸದಿಂದ ದೇಹಾದಿಗಳಲ್ಲಿ
'ನಾನು' ಎಂಬ ಆತ್ಮಬುದ್ಧಿಯೂ ,ಜಗತ್ತು
ಸತ್ಯವೆಂಬ ಬುದ್ಧಿಯೂ ಕ್ಷಣಮಾತ್ರದಲ್ಲಿ
ಪುನಃ ಪುನಃ ಹುಟ್ಟುತ್ತದೆ.ಇದೇ
ವಿಪರೀತ ಭಾವನೆ.ಇದು ಚಿತ್ತದ
ಏಕಾಗ್ರತೆಯಿಂದ ಹೋಗುವುದು.ಈ ಚೆತ್ತೈಕಾಗ್ರತೆಯು ,ನಿಗು೯ಣ
ಬ್ರಹ್ಮದ ಉಪದೇಶವನ್ನು ಪಡೆಯುವುದಕ್ಕೆ ಮೊದಲೇ ಸಗುಣೋಪಾಸನೆಯಿಂದ
ಉಂಟಾಗುವುದು.(ಪುಟ ೨೨೪)
೪೧)ಆದುದರಿಂದಲೇ ವೇದಾಂತ ಶಾಸ್ತ್ರದಲ್ಲಿ
ಉಪಾಸನೆಗಳು ವಿಧಿಸಲ್ಪಟ್ಟಿವೆ. ನಿಗು೯ಣ ಬ್ರಹ್ಮೋಪದೇಶವನ್ನು
ಪಡೆಯುವುದಕ್ಕೆ ಮೊದಲು ಸಗುಣೋಪಾಸನೆಯ
ಅಭ್ಯಾಸವನ್ನು ಮಾಡದವನಿಗೆ ಅನಂತರವಾದರೂ
ಬ್ರಹ್ಮೋಪಾಸನೆಯಿಂದ(ಬ್ರಹ್ಮಾಭ್ಯಾಸದಿಂದ) ಏಕಾಗ್ರತೆ ಉಂಡಾಗುವುದು.(ಪುಟ೨೨೫)
೪೨)ಬ್ರಹ್ಮ ಸ್ವರೂಪದ ಚಿಂತನೆ
,ಅದರ ವಿಷಯವಾಗಿಯೇ ಪರಸ್ಪರವಾಗಿ
ಮಾತನಾಡುವುದು ಮತ್ತು ತಿಳಿದುಕೊಳ್ಳುವುದು,ಅದರಲ್ಲಿಯೇ
ಬುದ್ಧ್ಯನ್ನು ನೆಲೆಗೊಳಿಸುವುದು-ಇವುಗಳನ್ನು ಜ್ಞಾನಿಗಳು
ಬ್ರಹ್ಮಾಭ್ಯಾಸವೆಂದು ಹೇಳುತ್ತಾರೆ.(ಪುಟ೨೨೫)
೪೩)'ಧೀಮಂತನಾದ ಬ್ರಾಹ್ಮಣನು ಪ್ರತ್ಯಗ್ರೂಪನಾದ
ಪರಮಾತ್ಮನನ್ನೇ ತಿಳಿದುಕೊಂಡು ಪ್ರಜ್ಞೆಯನ್ನು
ಅವಲಂಬಿಸಬೇಕು. ಬಹು ಶಬ್ದಗಳನ್ನು ಚಿಂತಿಸಕೂಡದು:
ಏಕೆಂದರೆ ಅದು ವಾಗಿಂದ್ರಿಯಕ್ಕೆ ಶ್ರಮವನ್ನುಂಟು
ಮಾಡುತ್ತದೆ.(ಪುಟ೨೨೫)
೪೪)ಅನನ್ಯರಾಗಿ ನನ್ನನ್ನು ಧ್ಯಾನಿಸುತ್ತಿರುವ ಯಾವ ಜನರು ಉಪಾಸನೆ
ಮಾಡುತ್ತಾರೋ ಅಂಥ
ನಿತ್ಯಯುಕ್ತರಾದ ಭಕ್ತರ ಯೋಗ
ಕ್ಷೇಮವನ್ನು ನಾನು ವಹಿಸಿಕೊಳ್ಳುತ್ತೇನೆ.(ಪುಟ
೨೨೬)
೪೫)ವಿಪರೀತ ಭಾವನೆಯು ನಿಜವಾದ ಭಾವನೆಯಿಂದ ಹೋಗುವುದು.ಆದುದರಿಂದ ಪ್ರತ್ಯಗಾತ್ಮನು ಶರೀರಕ್ಕಿಂತ
ಭಿನ್ನವೆಂದೂ ಜಗತ್ತು
ಮಿಥ್ಯೆಯೆಂದೂ ಸದಾ ಭಾವಿಸಬೇಕು.(ಪುಟ
೨೨೭)
೪೬)ಪ್ರತ್ಯಗಾತ್ಮನು ದೇಹಕ್ಕಿಂತ ಬೇರೆಯವನೆಂದು
ಮಾಡುವ ಬ್ರಹ್ಮಾಭ್ಯಾಸದಲ್ಲಿ ಧಯದಾನದ ಹಾಗೆ ಯಾವ
ನಿಬ೯ಂಧವೂ ಇಲ್ಲ.(ಪುಟ ೨೨೯)
೪೭)ವಿಜಾತೀಯ ಪ್ರತ್ಯಯವಿಲ್ಲದೆ ಬುದ್ಧಿಯ
ಸಂಬಂಧಿಗಳಾದ ದೇವತಾದಿ
ಮೂತಿ೯ಗೋಚರವಾದ ಪ್ರತ್ಯಯಗಳು ಎಡೆಬಿಡದೆ ಹರಿಯುತ್ತಿರುವುದು
ಧ್ಯಾನವೆನಿಸುವುದು.ಆ ಧ್ಯಾನದಲ್ಲಿ ಚಂಚಲ
ಸ್ವಭಾವವುಳ್ಳ ಮನಸ್ಸಿಗೆ ಅತಿ ನಿಬ೯ಂಧವುಂಟಾಗುವುದು.(ಪುಟ
೨೩0)
೪೮)ಸಂಕೋಲೆಗಳಿಂದ ಬಂಧಿಸಲ್ಪಟ್ಟ ದೇಹದಂತೆ
ಬ್ರಹ್ಮಸ್ವರೂಪವನ್ನು ಹೇಳುವ ಮತ್ತು
ಚಿಂತಿಸುವ ಬ್ರಹ್ಮಾಭ್ಯಾಸದಲ್ಲಿ ಯಾವ
ನಿಬ೯ಂಧವೂ ಇಲ್ಲ. (ಪುಟ ೨೩೧)
೪೯)ಕೃಷಿ
ವಾಣಿಜ್ಯ ಸೇವೆ-ಇವೇ ಮೊದಲಾದವುಗಳನ್ನು
ಮಾಡುವುದರಿಂದಲೂ ಕಾವ್ಯ
ತಕಾ೯ದಿಗಳನ್ನು ಓದುವುದರಿಂದಲೂ ಬುದ್ಧಿಗೆ ವಿಕ್ಷೇಪವುಂಟಾಗುವುದು.ಏಕೆಂದರೆ ಅವುಗಳಲ್ಲಿ 'ನಾನು
ಬ್ರಹ್ಮ' ಎಂಬ ನೆನಪು ಉಂಟಾಗುವುದಿಲ್ಲ.(೨೩೧)
೫0) ಬ್ರಹ್ಮಸ್ವರೂಪವನ್ನು ಮರೆತ ಮಾತ್ರದಿಂದಲೇ ಆದರೆ
ನಾನು ಶರೀರ ಎಂಬ ವಿಪರೀತ
ಭಾವನೆಯಿಂದ ಹಾನಿಯುಂಟಾಗುವುದು.ಮತ್ತೆ ಬ್ರಹ್ಮ ಸ್ಮರಣೆಯು
ಬೇಗ ಬರುವುದರಿಂದ ವಿಪರೀತ ಭಾವನೆಗೆ ಕಾಲವೇ
ಇರುವುದಿಲ್ಲ.(ಪುಟ ೨೩೨)
೫೧) ಇತರ ಶಾಸ್ತ್ರಗಳನ್ನು
ಓದುತ್ತಿರುವ ಮನುಷ್ಯನಿಗೆ ಬ್ರಹ್ಮ
ಸ್ವರೂಪದ ಸ್ಮರಣೆಗೆ ಅವಕಾಶವೇ ಇರುವುದಿಲ್ಲ.ಇದಲ್ಲದೆ
ಅಂಥ ಅಧ್ಯಯನವು ಬ್ರಹ್ಮಾಭ್ಯಾಸಕ್ಕೆ
ವಿರೋ
ಧಿಯಾಗಿರುವುದರಿಂದ
ಅದರ ಬಲದ ದೆಸೆಯಿಂದ ಬ್ರಹ್ಮ ಸ್ವರೂಪವು ಉಪೇಕ್ಷಿಸಲ್ಪಡುವುದು.(ಪುಟ ೨೩೨)
೫೨)'ಆ ಪರಮಾತ್ಮನೊಬ್ಬನನ್ನೇ ತಿಳಿದುಕೊಳ್ಳಿರಿ ಬೇರೆಯಮಾತುಗಳನ್ನು
ಬಿಡಿರಿ ಎಂದು ಮುಂಡಕ ಶ್ರುತಿಯು
ಹೇಳುತ್ತದೆ.(೨.೨.೫)ಹಾಗೇ ಇನ್ನೊಂದು ಶೃತಿಯು
(ಬೃ.ಉ.೪.೪.೨೧) ಬಹು ಶಬ್ದಗಳ
ಚಿಂತನೆಯು ವಾಗಿಂದ್ರಿಯಕ್ಕೆ
ಶ್ರಮವನ್ನುಂಟು ಮಾಡುತ್ತದೆಓದು ಹೇಳುತ್ತದೆ.(ಪುಟ ೨೩೨)
೫೩)'ಜನಕನು ಜ್ಞಾನಿಯಾಗಿದ್ದರೂ ರಾಜ್ಯ
ಪರಿಪಾಲನಾದಿಗಳು ಹೇಗೆ
ಸಾಧ್ಯವಾಯಿತು?'ಎನ್ನುವೆಯಾದರೆ ಅವರಿಗೆ
ದೃಢವಾದ ಪ್ರತ್ಯಕ್ಷ ಜ್ಞಾನವಿದ್ದುದರಿಂದ ಸಾಧ್ಯವಾಯಿತು
ಎಂದು ತಿಳಿದುಕೊ.ನಿನಗೂ ಅಂಥ ದೃಢ
ಜ್ಞಾನ ವಿದ್ದರೆ ತಕ೯ವನ್ನಾದರೂ ಓದು,ಬೇಸಾಯವನ್ನಾದರೂ ಮಾಡು.(ಪುಟ ೨೩೩)
೫೪)ಜ್ಞಾನಿಗಳಿಗೆ ಜಗತ್ತು ಮಿಥ್ಯೆಯೆಂದು ತಿಳಿದಿದ್ದರೂ ಅವರು
ಪ್ರಾರಬ್ಧಕಮ೯ವು ಕ್ಷಯವಾಗಲಿ ಎಂಬ ಆಕಾಂಕ್ಷೆಯಿಂದ ಕ್ಲೇಶವನ್ನು
ಹೊಂದದೆ ತಮ್ಮ
ತಮ್ಮ ಪ್ರಾರಬ್ಧಕ್ಕನುಸಾರವಾಗಿ ಸಂಸಾರದಲ್ಲಿ
ಪ್ರವತಿ೯ಸುತ್ತಾರೆ.(೨೩೩)
೫೫)ತಮ್ಮ ಪ್ರಾರಬ್ಧ ಕಮ೯ಬ
ವಶಕ್ಕೊಳಗಾಗಿ ಪ್ರವತಿ೯ಸುತ್ತಿರುವ
ಜ್ಞಾನಿಗಳು ನಿಷಿದ್ಧ
ಕಮ೯ವನ್ನು ಮಾಡುತ್ತಾರೆಂದು ಶಂಕಿಸಬಾರದು.;ಅಥವಾ ಒಂದು ವೇಳೆ
ಹಾಗೆಯೇ ಆಗಲಿ!ಪ್ರಾರಬ್ಧಕಮ೯ವನ್ನು ನಿವಾರಿಸಲು
ಯಾವನು ಶಕ್ತನಾಗಿರುವನು?(ಪುಟ ೨೩೪)
೫೬)ಜಗತ್ತು ಮಿಥ್ಯೆ -ಎಂಬ
ದೃಢಜ್ಞಾನದಿಂದ ಬಯಸತಕ್ಕ
ವಸ್ತುವೂ ಹೋಗುತ್ತದೆ.ಬಯಸುವವನೂ ಹೋಗುತ್ತಾನೆ.ಕಾಮ್ಯವಸ್ತುವೂ ಕಾಮುಕನೂ ಇಲ್ಲದಿದ್ದರೆ -ಎನ್ನೆಯಿಲ್ಲದ
ದೀಪದಂತೆ-ಕಾಮನೆಯಿಂದ ಉಂಟಾಗುವ ಸಂತಾಪವೂ
ಕಡಿಮೆಯಾಗುತ್ತದೆ.(ಪುಟ ೨೩೫)
೫೭)ನೋಡುವುದಕ್ಕೆ ಮಾತ್ರ
ರಮಣೀಯವಾಗಿರುವ ಭೋಗ್ಯ ವಸ್ತುಗಳಲ್ಲಿ 'ಇದು ನೋಡುವುದಕ್ಕೆ
ಮಾತ್ರ ರಮಣೀಯವಾಗಿದೆ'ಎಂದು ವಿಚಾರ ಮಾಡಿದವನು ಅವುಗಳಲ್ಲಿ
ಅನುರಕ್ತನಾಗುವುದಿಲ್ಲ.ಮತ್ತೇನೆಂದರೆ ಅವುಗಳಲ್ಲಿ ದೋಷವನ್ನು ನೋಡಿ ಅವುಗಳನ್ನು
ಬಿಡಲು ಬಯಸುತ್ತಾನೆ.(ಪುಟ ೨೩೫)
೫೮)ವಿಷಯಗಳನ್ನು ಗಳಿಸುವಾಗಲೂ ಕ್ಲೇಶ,ಗಳಿಸಿದ್ದನ್ನು ಕಾಪಾಡಿಕೊಳ್ಳುವಾಗಲೂ ಕ್ಲೇಶ;ಅವುಗಳು ನಾಶವಾದರೂ
ದುಃಖ,,ಅವುಗಳನ್ನು ಭೋಗಿಸಿದ್ದರಿಂದ ತೀರಿಹೋದರೂ ದುಃಖ;ಕ್ಲೇಶಕಾರಿಗಳಾದ ಈ
ವಿಷಯಕ್ಕೆ ಧಿಕ್ಕಾರ!(ಪುಟ ೨೩೬)
೫೯) ನರಗಳು ಎಲುಬುಗಳು,ಮಾಂಸದ
ಗಂಟುಗಳು,-ಇವುಗಳಿಂದ ಕೂಡಿರುವ ಮಾಂಸದ ಗೊಂಬೆಯಂತಿರುವ
ಯಂತ್ರದಂತೆ ಚಂಚಲವಾದ ಸ್ತ್ರೀಯರ
ಅಂಗ-ಪಂಜರದಲ್ಲಿ ಯಾವ
ಚೆಲುವಿದೆ?.(ಪುಟ ೨೩೬)
೬0)ಜ್ಞಾನಿಗಳಿಗೆ ಜಗತ್ತು ಮಿಥ್ಯೆಯೆಂದು ತಿಳಿದಿದ್ದರೂ
ಅವರು ಪ್ರಾರಬ್ಧಕಮ೯ವು ಕ್ಷಯವಾಗಲಿ ಎಂಬ
ಆಕಾಂಶೆಯಿಂದ ಕ್ಲೇಶವನ್ನು ಹೊಂದದೆ ತಮ್ಮ
ತಮ್ಮ ಪ್ರಾರಬ್ಧ ಕಮ೯ಕ್ಕನುಸಾರವಾಗಿ ಸಂಸಾರದಲ್ಲಿ ಪ್ರವತಿ೯ಸುತ್ತಾರೆ.(ಪುಟ೨೩೩)
೬0)ಜ್ಞಾನಿಗಳಿಗೆ ಜಗತ್ತು ಮಿಥ್ಯೆಯೆಂದು ತಿಳಿದಿದ್ದರೂ
ಅವರು ಪ್ರಾರಬ್ಧಕಮ೯ವು ಕ್ಷಯವಾಗಲಿ ಎಂಬ
ಆಕಾಂಶೆಯಿಂದ ಕ್ಲೇಶವನ್ನು ಹೊಂದದೆ ತಮ್ಮ
ತಮ್ಮ ಪ್ರಾರಬ್ಧ ಕಮ೯ಕ್ಕನುಸಾರವಾಗಿ ಸಂಸಾರದಲ್ಲಿ ಪ್ರವತಿ೯ಸುತ್ತಾರೆ.(ಪುಟ೨೩೩)
೬೨)ಭೋಗ್ಯವಸ್ತುಗಳ ಭೋಗದಿಂದ ಬಯಕೆಯು
ಎಂದಿಗೂ ತೀರುವುದಿಲ್ಲ.ತುಪ್ಪದಿಂದ ಅಗ್ನಿಯು ಇನ್ನೂ ಧಗ
ಧಗಿಸುವಂತೆ ಬಯಕೆಯು
ಇನ್ನೂ ಹೆಚ್ಚಾಗಿ ಬೆಳೆಯುತ್ತದೆ.(ಪುಟ೨೩೮)
೬೩)ಪ್ರಾರಬ್ಧ ಕಮ೯ವು ಅನೇಕ ಬಗೆಯಾಗಿದೆ.ಪ್ರಾರಬ್ಧ ಕಮ೯ವು ನೂರು ಬಗೆಯಾಗಿದೆ.
೧) ಇಚ್ಛಾ ಪ್ರಾರಬ್ಧ: ತಾನೇ
ಬಯಸಿ ಭೋಗಿಸುವುದು.
೨)ಅನಿಚ್ಛಾ ಪ್ರಾರಬ್ಧ:ತಾನು
ಬಯಸದೆ ಭೋಗಿಸುವುದು
೩)ಪರೇಚ್ಛಾ ಪ್ರಾರಬ್ಧ:ಇತರರ
ಬಯಕೆಯಂತೆ ಭೋಗಿಸುವುದು.(ಪುಟ ೨೪0)
೬೪)ಜ್ಞಾನವುಳ್ಳವನೂ ಕೂಡ ತನ್ನ ಪ್ರಕೃತಿಗೆ
ಅನುರೂಪವಾಗಿ ನಡೆಯುತ್ತಾನೆ.ಪ್ರಾಣಿಗಳು ತಮ್ಮ ಪ್ರಕೃತಿಯನ್ನು ಹೊಂದುತ್ತವೆ.ಹೀಗಿರುವಾಗ ನಿಗ್ರಹವು ಏನು ಮಾಡಬಲ್ಲದು?(ಪುಟ೨೪0)
೬೫)ಮುಂದೆ ಖಂಡಿತ ಆಗಬೇಕಾದವಾಗಿ ಸುಖದುಃಖಾದಿ-ಕಮ೯ಗಳಿಗೆ ಪರಿಹಾರವಿದ್ದ ಪಕ್ಷದಲ್ಲಿ ನಳ,ಶ್ರೀರಾಮ, ಧಮ೯ರಾಯ
-ಇವರು ದುಃಖಗಳಿಗೆ ಈಡಾಉತ್ತಿರಲಿಲ್ಲ.(ಪುಟ ೨೪೧)
೬೬)ಸುಖದುಃಖಾದಿಗಳು ನಡೆದೇ
ತೀರಬೇಕೆಂಬುದನ್ನು ಈಶ್ವರನೇ
ಮಾಡಿದ್ದಾನೆ.(ಪುಟ ೨೪೧)
೬೭)ರಜೋ ಗುಣವು ಹುಟ್ಟಿದ
ಬಳಿಕ ಕಾಮವೇ ಕ್ರೋಧವಾಗುತ್ತದೆ.ಇದು
ಸವ೯ಗ್ರಾಸಿ,ಮಹಾಪಾಪಿ,ಇದನ್ನು ಸಂಸಾರದಲ್ಲಿ
ಶತ್ರುವೆಂದು ತಿಳಿ.(ಪುಟ೨೪೨)
೬೮)ಜ್ಞಾನಿಗೆ ಬಯಕೆಯೇ ಇಲ್ಲವೆಂದು ಶ್ರುತಿ
ಹೇಳಲಿಲ್ಲ.ಆದರೆ ಹುರಿದ ಬೀಜದ
ಹಾಗೆ ಇಚ್ಛೆಯ
ಬಾಧವು ಹೇಳಲ್ಪಟ್ಟಿತು.(ಪುಟ೨೪೩)
೬೯)ಬಯಸತಕ್ಕ
ವಸ್ತುಗಳೆಲ್ಲ ಮಿಥ್ಯೆ ಎಂಬ ಜ್ಞಾನವು ಅವನಿಗಿರುವುದರಿಂದ
ಅವು ವ್ಯಸನಾದಿ ಕಾಯ೯ವನ್ನು ಉಂಟು
ಮಾಡಲಾರವು.(ಪುಟ೨೪೩)
೭0)ಯಾವ ಭೋಗವು ನಮಗೆ
ಬರಲು ಯೋಗ್ಯವಲ್ಲವೊ ಅದು ಬರುವುದಿಲ್ಲ.ಯಾವುದು
ಬರತಕ್ಕದ್ದೊ ಅದು
ಬರದೆ ತಪ್ಪದು'ಎಂಬೀ ಚಿಂತೆಯೆಂಬ
ವಿಷವನ್ನು ನಾಶಮಾಡುವ ಜ್ಞಾನವು ಭ್ರಾಂತಿಯನ್ನು
ಹೋಗಲಾಡಿಸುವುದಾಗಿರುವುದು.(ಪುಟ ೨೪೫)
No comments:
Post a Comment