೯)ಧ್ಯಾನದೀಪ
ಪ್ರಕರಣ:
೧)ಸಂವಾದ ಭ್ರಮೆಯಿಂದ ಪ್ರವತಿ೯ಸುವ ಮನುಷ್ಯನಿಗೆ ಇಷ್ಟವಸ್ತುವಿನ
ಲಾಭವಾಗುವಂತೆ ಬ್ರಹ್ಮ
ತತ್ತ್ವೋಪಾಸನೆಯಿಂದಲೂ ಮುಮುಕ್ಷುವಿಗೆ ಬ್ರಹ್ಮಭಾವ ಲಕ್ಷಣವಾದ ಮೋಕ್ಷವುಂಟಾಗುವುದು.
ಆದುದರಿಂದ ಉತ್ತರತಾಪನೀಯೋಪನಿಷತ್ತಿನಲ್ಲಿ ಉಪಾಸನೆಯನ್ನು
ಬಹುವಿಧವಾಗಿ ಹೇಳಿದೆ.(ಪುಟ ೩೧00
೨)ದೀಪದ ಬೆಳಕಿನ ಕಡೆಗೆ
ಓಡಿದವನಿಗೆ ಮಣಿಯು
ಸಿಕ್ಕುವುದಿಲ್ಲ.ಮಣಿಯ ಬೆಳಕಿನಕಡೆಗೆ ಓಡಿದವನಿಗೆ ಮಣಿಯು
ತಪ್ಪದೇ ಸಿಕ್ಕುತ್ತದೆ.(ಪುಟ ೩೧೧)
೩)ದೀಪದ ಬೆಳಕನ್ನು ನೋಡಿ ತಂದುಕೊಂಡ ಮಣಿಯೆಂಬ ಭ್ರಾಂತಿಯು ವಿಸಂವಾದಿ
ಭ್ರಮೆ ಎನಿಸುತ್ತದೆ.ಮಣಿಯ ಬೆಳಕನ್ನು ನೋಡಿ
ತಂತುಕೊಂಡ ಮಣಿ ಎಂಬ ಭ್ರಾಂತಿಯು ಸಂವಾದಿ
ಭ್ರಮೆ ಎನಿಸುತ್ತದೆ.ಏಕೆಂದರೆ ಮಣಿಯನ್ನು ದೊರಕಿಸಿಕೊಲಾರದು,ಏಕೆಂದ್ರೆ ಮಣಿಯನ್ನು ದೊರಕಿಸಿಕೊಡುತ್ತದೆ.)(ಪುಟ ೩೧೧)
೪)ಪ್ರತುಕ್ಷ,ಅನುಮಾನ, ಆಗಮ -ಈ
ಪ್ರಮಾಣಗಳಲ್ಲಿ ಹಿಂದೆ ಹೇಳಿದ ಸಂವಾದಿ ಭ್ರಮೆಗಳು ಲೆಕ್ಕವಿಲ್ಲದಷ್ಟಿವೆ.(ಪುಟ ೩೧೨)
೫)ಸಂವಾದಿಯು ತಾಮು
ಭ್ರಮವಾಗಿದ್ದರೂ ಜೇಗೆ ಹೇಗೆ
ನಿಜವಾದ ಫಲವನ್ನು ದೊರಕಿಸಿಕೊಡುವುದೊ
ಹಾಗೆಯೇ ಬ್ರಹ್ಮತ್ವದ ಜ್ಞಾನವೂ ಮುಕ್ತಿಯನ್ನು
ದೊರಕಿಸಿಕೊಡುವುದು(ಪುಟ ೩೧೩)
೬)ಉಪನಿಷತ್ತುಗಳಿಂದ ಅಖಂಡೈಕ ರಸ ಸ್ವರೂಪವಾದ ಬ್ರಹ್ಮತತ್ವವನ್ನು
ಪರೋಕ್ಷವಾಗಿ ತಿಳಿದುಕೊಂಡು 'ನಾನೇ ಈಬ್ರಹ್ಮವಾಗಿದೇನೆ' ಎಂದು
ಉಪಾಸನೆ ಮಾಡಬೇಕು.(ಪುಟ ೩೧೩)
೭)ಬುದ್ದಿ ಮೊದಲಾದುವುಗಳ ಸಾಕ್ಷಿಯಾದ ಪ್ರತ್ಯಗಾತ್ಮನ
ಸ್ವರೂಪವನ್ನು ಪ್ರತ್ಯಕ್ಷವಾಗಿ
ಅರಿಯದೆ -ವಿ ಷ್ಣುವೇ ಮೊದಲಾದ
ಮೂತಿ೯ಗಳಿರುವರೆಂದು ಶಾಸ್ತ್ರಗಳಿಂದ ತಿಳಿದಂತೆ -'ಬ್ರಹ್ಮವು ಇದೆ'ಎಂಬ ಸಾಮಾನ್ಯ
ಜ್ಞಾನವು ಈ ಉಪಾಸನೆಯಲ್ಲಿ ಪರೋಕ್ಷ
ಜ್ಞಾನವೆಂದು ಹೇಳಲ್ಪಡುವುದು.(ಪುಟ ೩೧೪)
೮)ವಿಷ್ಣುವಿಗೆ ನಾಲ್ಕು ತೋಳುಗಳೇ ಮೊದಲಾದ ವಿಶೇಷಾಕಾರವಿದೆಯೆಂದು
ಶಾಸ್ತ್ರದಿಂದ ತಿಳಿದಿದ್ದರೂ ಕಣ್ಣಿನಿಂದ
ವಿಷ್ಣುವಿನ ಮೂತಿ೯ಯನ್ನು ನೋಡದೇ
ಇರುವುದರಿಂದ ಉಪಾಸಕನು
ಪರೋಕ್ಷ ಜ್ಞಾನಿಯೇ ಆಗಿರುವನು.ಏಕೆಂದರೆ ಉಪಾಸನಾ ಕಾಲದಲ್ಲಿ ವಿಷ್ಣುವನ್ನು
ನೋಡಲಿಲ್ಲ.(ಪುಟ೩೧೪)
೯)ಶಾಸ್ತ್ರಗಳಲ್ಲಿ ತತ್ವಮಸ್ಯಾದಿ
-ಮಹಾವಾಕ್ಯಗಳು 'ನಮ್ಮೊಳಗಿರುವ ಆತ್ಮನೇ ಬ್ರಹ್ಮ'ಎಂದು
ಎಷ್ಟೇ ವಣಿ೯ಸಿದರೂ ತತ್-ತ್ವಂ ವಿಚಾರವಿಲ್ಲದವನಿಗೆ ಈ
ಪ್ರತ್ಯಗಾತ್ಮ ರೂಪವನ್ನು ಅರಿಯಲು ಕಷ್ಟವಾಗುವುದು.(ಪುಟ ೩೧೫)
೧0)ಪ್ರತ್ಯಕ್ಷವಾದ ದ್ವೈತ ಬುದ್ಧಿಯು ಪರೋಕ್ಷವಾದ
ಅದ್ವೈತ ಬುದ್ಧಿಗೆ ವಿರೋಧವಲ್ಲದುದರಿಂದ ಶಾಸ್ತ್ರ
ದೃಷ್ಟಿಯುಳ್ಳ,ಶ್ರದ್ಧಾಳುವಾದ ಮನುಷ್ಯನಿಗೆ
ಬ್ರಹ್ಮವು ಚೆನ್ನಾಗಿಯೇ ತಿಳಿಯುವುದು.(ಪುಟ ೩೧೬)
೧೧)ಒಂದು ಶಿಲೆಯನ್ನು ಈಶ್ವರನೆಂದು
ಭಾವಿಸಿ ಪೂಜಿಸುವಾಗ
ಅದು ಶಿಲೆಯೆಂಬ ಪ್ರತ್ಯಕ್ಷ ಜ್ಞಾನವು ಪರೋಕ್ಷವಾದ ಈಶ್ವರ
ಭಾವವನ್ನು ಕಳೆಯಲಾರದು.ಪ್ರತಿಮಾದಿಗಳಲ್ಲಿ ವಿಷ್ಣು ಭಾವವು ನೆಲೆಸಿರುವಾಗ ಅವುಗಳನ್ನು
ಶಿಲೆಯೆಂದು ಯಾವನು
ತಾನೇ ನೋಡುವನು?(ಪುಟ ೩೧೩)
೧೨)ಉಪಾಸನೆಗಳ ಅನುಷ್ಠಾನವನ್ನು ಬ್ರಾಹ್ಮ,ವಾಸಿಷ್ಠ ಮೊದಲಾದ ಮೊದಲಾದ
ಮಂತ್ರಕಲ್ಪಗಳಲ್ಲಿ ವಿವರಿಸಲ್ಪಟ್ಟಿದೆ.ತಾವೇ ವಿಚಾರಮಾಡುವುದಕ್ಕೆ ಸಮಥ೯ರಲ್ಲದ ಮನುಷ್ಯರು ಆ
ಉಪಾಸನೆಯನ್ನು ಗುರುಗಳಿಂದರಿತು ಉಪಾಸನೆಯನ್ನು
ಮಾಡುವನು(ಪುಟ ೩೧೮)
೧೩)ಈಗಿನ ಜನರು ವೇದವಾಕ್ಯಗಳ
ಅಥ೯ವನ್ನು ನಿಣ೯ಯಿಸುವುದಕ್ಕಾಗಿ ವಿಚಾರವನ್ನು ಮಾಡಲಿ.ಆದರೆ ಗುರುವಿನ
ಉಪದೇಶದಿಂದಲೇ ಉಪಾಸನೆಯ ಅನುಷ್ಠಾನವು ಸಿದ್ಧಿಸುತ್ತದೆ.(ಪುಟ ೩೧೮)
೧೪)ಮನುಷ್ಯನಿಗೆ ಅಪರೋಕ್ಷ ಜ್ಞಾನವು(ತತ್-ತ್ವಂ ಪದಾಥ೯ಗಳ)ವಿಚಾರದ
ಹೊರತು ಗುರುವಿನ ಉಪದೇಶ ಮಾತ್ರದಿಂದ ಎಲ್ಲಿಯೂ
ಸಂಭವಿಸದು.(ಪುಟ ೩೧೯)
೧೫)ಮರಣ ಪಯ೯ಂತ ವಿಚಾರಮಾಡುತ್ತ ಆತ್ಮನನ್ನು
ಹೊಂದದಿದ್ದರೆ ಮತ್ತೊಂದು
ಜನ್ಮದಲ್ಲಾದರೂ ಅಡ್ಡಿತ್ಯ
ಕಳೆದು ಹೋದಾಗ ಆತ್ಮಸಾಕ್ಷಾತ್ಕಾರವನ್ನು ಹೊಂದುತ್ತಾನೆ.ಗುರುವಿನ
ಉಪದೇಶದಿಂದ ಉಪಾಸನೆಯ ಅನುಷ್ಠಾನವು ಉಂಟಾಗುವಂತೆ ಬ್ರಹ್ಮಸಾಕ್ಷಾತ್ಕಾರವನ್ನು
ಹೊಂದುವುದು ಸಾಧ್ಯವಿಲ್ಲ.ಗುರುವಿನ ಉಪದೇಶದೊಂದಿಗೆ
ಸ್ವ-ವಿಚಾರವೂ ಬೇಕೆಂಬ ಅಭಿಪ್ರಾಯ.(ಪುಟ೩೧೯)
೧೬)ಈ ಜನ್ಮದಲ್ಲಿ ಅನೇಕರು ಶ್ರವಣಮಾಡಿದ್ದರೂ
ಬ್ರಹ್ಮವನ್ನು ಅಪರೋಕ್ಷವಾಗಿ ಸಾಕ್ಷಾತ್ಕರಿಸಲಿಲ್ಲ-ಎಂದು ಶ್ರುತಿಯು ಹೇಳುತ್ತದೆ.(ಪುಟ ೩೨0)
೧೭)ಹಿಂದಿನದಿನದಲ್ಲಿ ಮಾಡಿದ
ಅಧ್ಯಯನದ ಸಂಸ್ಕಾರವು ಮರುದಿನ ತೋರಿಕೊಳ್ಳುವಂತೆ
ಹಿಂದಿನ ಜನ್ಮದಲ್ಲಿ ಮಾಡಿದ ವಿಚಾರದಿಂದಲೇ ವಾಮದೇವನು ಗಭ೯ದಲ್ಲಿರುವಾಗಲೇ
ಆತ್ಮವನ್ನು ಅರಿತನು.(ನಾನು ಗಭ೯ದಲ್ಲಿರುವಗಲೇ ಈ ದೇವತೆಗಳ ಜನ್ಮಗಳನ್ನೆಲ್ಲ
ಅರಿತುಕೊಂಡೆನು.)(ಪುಟ ೩೨0)
೧೮)ಹೇಗೆ ಕೃಷಿ ಗಭ೯
ಮೊದಲಾದವು ಕಾಲದಿಂದ
ಪರಿಪಕ್ವವಾಗುವವೊ ಹಾಗೆ ಆತ್ಮವಿಚಾರವೂ ಕೂಡ ಕಾಲದಿಂದ
ನಿದಾನವಾಗಿ ಪಕ್ವವಾಗುವುದು(ಪುಟ ೩೨0)
೧೯)ಮನುಷ್ಯನು
ಪುನಃ ಪುನಃ ವಿಚಾರ ಮಾಡಿದರೂ
ಮೂರು ಬಗೆಯಾದ ಅಡ್ಡಿಗಳಿಂದ ತತ್ವವನ್ನು ಅರಿಯುವುದಿಲ್ಲ-ಎಂದು ಶ್ರೀ ಸುರೇಶ್ವರಾಚಾಯ೯ರು
ತಮ್ಮ ವಾತಿ೯ಕದಲ್ಲಿ ಚೆನ್ನಾಗಿ
ಹೇಳಿರುತ್ತಾರೆ. ಈಗ ಸುರೇಶ್ವರರ ಏಳು
ವಾತಿ೯ಕಗಳನ್ನು ಕ್ರಮವಾಗಿ ಉದಾಹರಿಸುತ್ತಾರೆ.(ಪುಟ೩೨೧)
೨0) ಈ ಜ್ಞಾನವು ಯಾವುದರಿಂದ ಉಂಟಾಯಿತು
? ಎನ್ನುವೆಯಾದರೆ 'ಅಡ್ಡಿಗಳು ನಾಶವಾದುದರಿಂದ ಉಂಟಾಯಿತು' ಎನ್ನುವುದು ನಮ್ಮ ಉತ್ತರ.ಈ
ಅಡ್ಡಿಯೂಕೂಡ ೧) ಭೂತ ಪ್ರತಿಬಂಧ,೨) ವತ೯ಮಾನ ಪ್ರತಿಬಂಧ
೩)೩) ಭಾವೀ
ಪ್ರತಿಬಂಧ ಎಂದು ಮೂರುಬಗೆಯಾಗಿರುವುದು.(ಪುಟ೩೨೧)
೨೧)ವೇದ -ವೇದಾಥ೯ಗಳನ್ನೆಲ್ಲ ಎಷ್ಟು
ಓದಿದರೂ ಈ
ಅಡ್ಡಿಗಳಿದ್ದ ಮನುಷ್ಯನು ಮುಕ್ತನಾಗಲಾರನು.ಹಿರಣ್ಯನಿಧಿಯ ದೃಷ್ಟಾಂತವನ್ನೇ ಶ್ರುತಿಯಲ್ಲಿ
ಹೇಳಿದೆ.(ಪುಟ ೩೨೨)
೨೨)ನಿಧಿಕ್ಷೇತ್ರವನ್ನು ಅರಿಯದವರು ಕ್ಷೇತ್ರದಲ್ಲಿ
ಅಡಗಿರುವ ನಿಧಿಯಮೇಲೆ ಪುನಃ
ಪುನಃ ನಡೆಯುತ್ತಿದ್ದರೂ ಅದನ್ನು
ಹೇಗೆ ಪಡೆಯುವುದಿಲ್ಲವೊ ಹಾಗೆಯೇ
ಈ ಜಂತುಗಳೆಲ್ಲ ಹೃದಯಾಕಾಶವೆಂಬ ಬೆಹ್ಮಲೋಕವನ್ನು
ಪ್ರತಿದಿನವೂ ನಿದ್ರಾಕಾಲದಲ್ಲಿ
ಹೋಗಿ ಸೇರುತ್ತಿದ್ದರೂ ಅದನ್ನು ಪಡೆದುಕೊಳ್ಳದೆ ಇರುವರು.(ಪುಟ ೩೨೨)
೨೩)ಒಬ್ಬ ಸನ್ಯಾಸಿಯು ಹಿಂದೆ ತಾನು ಗೃಹಸ್ಥನಾಗಿದ್ದಾಗ ಒಂದು
ಎಮ್ಮೆಯ ಮೇಲೆ ತನ್ನ
ಪ್ರೀತಿಯನ್ನೆಲ್ಲ ಇಟ್ಟುಕೊಂಡಿದ್ದನು.ಅನಂತರ ಸನ್ಯಾಸವಾದ ಮೇಲೆ ಗುರುವಿನ
ಬಳಿಯಲ್ಲಿ ವೇದಾಂತ
ಶ್ರವಣ ಮಾಡಿದರೂ ಆ
ಎಮ್ಮೆಯ ಸ್ನೇಹದಿಂದ
ಉಂಟಾದ ಅಡ್ಡಿಯಿಂದ ಅವನು
ತತ್ವವನ್ನು ಅರಿಯಲಿಲ್ಲ.(ಪುಟ ೩೨೨)
೨೪)ಪ್ರತಿಯೊಂದು ವಸ್ತುವಿನಲ್ಲಿಯೂ ಅಸ್ತಿ(ಇರುವಿಕೆ),ಭಾತಿ(ತೋರುವಿಕೆ),ಪ್ರಿಯ,ನಾಮ,ರೂಪವೆಂಬ ಐದು
ಇರುತ್ತವೆ. ಇವುಗಳಲ್ಲಿ ಮೊದಲನೆಯ ಮೂರು
ಬ್ರಹ್ಮದ ಅಂಶಗಳು. ಕೊನೆಯ ಎರಡು
ಮಾಯೆಯ ಅಂಶಗಳು. ಆದುದರಿಂದ ಮಾಯಿಕವಾದ ನಾಮ ರೂಪಗಳನ್ನು ಮನಸ್ಸಿನಿಂದ ತೊರೆದು ಉಳಿದ-ಅಸ್ತಿ-ಭಾತಿ- ಪ್ರಿಯಗಳನ್ನು ಮನಸ್ಸಿಗೆ
ತಂದುಕೊಳ್ಳಬೇಕು. ಅದೇ ಬ್ರಹ್ಮ -ಎಂದು ಗುರುವು
ಉಪದೇಶಿಸಿದನು.(ಪುಟ ೩೨೩)
೨೫)ವತ೯ಮಾನಕಾಲದ ಅಡ್ಡಿಗಳು: ಬಾಹ್ಯ ವಿಷಯಗಳಲ್ಲಿ ಆಸಕ್ತಿ,ಬುದ್ಧಿಯು ಮಂದವಾಗಿರುವಿಕೆ,ಕುತಕ೯,ಆತ್ಮನಿಗೆ ಕತೃ೯ತ್ವ,
ಮೊದಲಾದುವುಗಳಿದೆಯೆಂಬ
ಆಗ್ರಹ-ಇವೇ ವತ೯ಮಾನ ಕಾಲದ
ಅಡ್ಡಿಗಳು.(ಪುಟ ೩೨೩)
೨೬)ಶಮದಮಾದಿಗಳಿಂದಲೂ ,ಶ್ರವಣಾದಿಗಳಿಂದಲೂ ಆಯಾ
ಅಡ್ಡಿಯು ನಾಶವಾಗುತ್ತಿರಲು ಸಾಧಕನು
ತನ್ನ ಆತ್ಮನೇ ಬ್ರಹ್ಮವೆಂದು ಸಾಕ್ಷಾತ್ಕರಿಸುತ್ತಾನೆ.
೨೭)ಶಮ-ದಮ-ತಿತಿಕ್ಷೆ
ಶ್ರದ್ಧೆಗಳಿಂದ ವಿಷಯಾಸಕ್ತಿಯು
ತೊಲಗುವುದು.ಶ್ರವಣ ಮನನ ನಿದಿಧ್ಯಾಸನಗಳಿಂದ ಬುದ್ಧಿಮಾಂದ್ಯ
,ಕುತಕ೯, ಆತ್ಮನಲ್ಲಿ ಕತೃ೯ತ್ವಾದಿ ಬುದ್ಧಿ -ಇವು ಹೋಗುವುವು.(ಪುಟ ೩೨೩)
೨೮) ಭವಿಷ್ಯದ ಪ್ರತಿಬಂಧಗಳು:ಮುಂದೆ
ಬರುವ ಅಡ್ಡಿಯು ವಾಮದೇವನಲ್ಲಿ ಹೇಳಲ್ಪಟ್ಟಿತು.ಅದು ವಾಮದೇವನಿಗೆ ಒಂದು
ಜನ್ಮವನ್ನು ಕೊಟ್ಟು ನಾಶವಾಯಿತು. ಭರತನಿಗೆ
ಮೂರು ಜನ್ಮಗಳನ್ನು ಕೊಟ್ಟು ಮುಗಿಯಿತು.(ಪುಟ
೩೨೩)
೨೯(ಯೋಗ ಭ್ರಷ್ಟನಾದವನಿಗೆ
ಅನೇಕ ಜನ್ಮಗಳು ಕಳೆದಮೇಲೆ ಮುಂದಿನ ಅಡ್ಡಿಯು ನಾಶವಾಗುತ್ತದೆಯೆಂದು ಗೀತೆಯಲ್ಲಿ
ಹೇಳಿದೆ.ಪರತತ್ವ ವಿಚಾರವು ಎಂದಿಗೂ
ನಿರಥ೯ಕವಾಗುವುದಿಲ್ಲ.(ಪುಟ ೩೨೪)
೩0)ಆ ಯೋಗಭ್ರಷ್ಡನು ಪೂವಾ೯ಭ್ಯಾಸದಿಂದ ಅಸ್ವತಂತ್ರನಾಗಿ
ಸೆಳೆಯಲ್ಪಡುತ್ತಾನೆ. ಹೀಗೆ ಅನೇಕ ಜನ್ಮಗಳಲ್ಲಿ
ಮಾಡಲ್ಪಟ್ಟ ಪÀ್ರಯತ್ನದಿಂದ ತತ್ವ ಜ್ಞಾನ ಸಂಪನ್ನನಾಗಿ ಪರಮಗತಿಯನ್ನು
ಹೊಂದುವನು.(ಪುಟ ೩೨೫)
೩೧)ಆತ್ಮನು ಏಕಾಗ್ರವಾದ
ಬುದ್ಧಿಯಿಂದ ನೋಡಲ್ಪಡುತ್ತಾನೆ.(ಪುಟ ೩೨೮)
೩೨)ಉತ್ತರತಾಪನೀಯೋಪನಿಷತ್ತು,ಪ್ರಶ್ನೋಪನಿಷತ್ತು, ಕಠೋಪನಿಷತ್ತು ,ಮಾಂಡೋಕ್ಯಪನಿಷತ್ತು,ಇವೇ ಮೊದಲಾದ ಕಡೆಗಳಲ್ಲೆಲ್ಲ
ನಿಗು೯ಣ ಬ್ರಹ್ಮದ ಉಪಾಸನೆಯನ್ನು ಹೇಳಿದೆ.(ಪುಟ ೩೨೯)
೩೩)ಇತರರು ಮಾಡದಿದ್ದರೂ ವಿವೇಕಿಗಳು ನಿಗು೯ಣೋಪಾಸನೆಯನ್ನು ಬಿಡಕೂಡದು
ಎಂದಥ೯.(ಪುಟ ೩೩೧)
೩೪)ಜ್ಞಾನಕ್ಕೂ ಉಪಾಸನೆಗೂ ಇರುವ
ಭೇದವೇನು?-ಜ್ಞಾನವು ವಸ್ತುವಿನ ಅಧೀನವಾದದ್ದು
,ಉಪಾಸನೆಯು ಉಪಾಸಕನ
ಅಧೀನವಾದದ್ದು.(ಪುಟ ೩೩೩)
೩೫) ಜ್ಞಾನವು ವಸ್ತುತತ್ವದ ವಿಚಾರದಿಂದ
ಹುಟ್ಟುತ್ತದೆ.ಈ ವಸ್ತುವಿನಜ್ಞಾನ ಬೇಡವೆಂದರೂ
ಹೋಗುವುದಿಲ್ಲ.ಬ್ರಹ್ಮವಿಚಾರದಿಂದ ಹುಟ್ಟಿದ ಜ್ಞಾನವು ತಾನು
ಹುಟ್ಟಿದ ಮಾತ್ರದಿಂದಲೇ ಅಜ್ಞಾನಕಾಲದಲ್ಲಿ
ತೋರುತ್ತಿರುವ ಜಗತ್ತಿನ
ಸತ್ಯತ್ವವನ್ನು ಹೋಗಲಾಡಿಸುತ್ತದೆ.(ಪುಟ ೩೩೪)
೩೬)ತತ್ವಜ್ಞಾನವು ಉದಯಿಸಿದ ಮಾತ್ರದಿಂದಲೇ
ನಿತ್ಯತೃಪ್ತಿಯನ್ನು ಹೊಂದುತ್ತಾನೆ.ಅನಂತರ ಜೀವನ್ಮುಕ್ತಿಯನ್ನು ಪಡೆದು
ಪ್ರಾರಬ್ಧ ಕಮ೯ದ ನಾಶವನ್ನೇ ನೋಡುತ್ತಿರುತ್ತಾನೆ.(ಪುಟ ೩೩೪)
೩೭)ಉಪಾಸನೆಯು ಉಪಾಸಕನ ಇಚ್ಛೆಗೆ ಅಧೀನವಾದ್ದರಿಂದ ಅವನ
ಮನಸ್ಸಿಗೆ ಬಂದಂತೆ ಮಾಡುವುದಕ್ಕೂ
ಮಾಡದೆ ಇರುವುದಕ್ಕೂ ಬೇರೊಂದು
ವಿಧದಿಂದ ಮಾಡುವುದಕ್ಕೂ ಆಗುವುದು.ಆದುದರಿಂದ ಉಪಾಸನೆಯನ್ನು
ನಿರಂತರವೂ ಮಾಡಬೇಕು.(ಪುಟ ೩೩೫)
೩೮)ಉಪಾಸಕನು ತನ್ನ ಪ್ರಾರಬ್ಧ
ಕಮ೯ವನ್ನು ಅನುಸರಿಸುತ್ತಿದ್ದರೂ ಬ್ರಹ್ಮದಲ್ಲಿರುವ
ಆಸಕ್ತಿ ವಿಶೇಷದಿಂದ -ಪರ ಪುರುಷನಲ್ಲಿ ಆಸಕ್ತಳಾದ
ಹೆಂಗಸಿನಂತೆ -ಯಾವಾಗಲೂ ಧ್ಯಾನಿಸಲು ಶಕ್ತನಾಗುವನು.ಇದರಲ್ಲಿ ಸಂದೇಹವಿಲ್ಲ.(ಪುಟ
೩೩೬)
೩೯)ಹೀಗೆ
ನಿಷ್ಠೆಯುಳ್ಳವನಾಗಿದ್ದರೂ ಲೋಕವ್ಯವಹಾರವನ್ನು
ಸ್ವಲ್ಪ ಸ್ವಲ್ಪ ಮಾಡ್ಯತ್ತಾನೆ.ಆದರೆ
ಜ್ಞಾನಿಯು ಲೋಕವ್ಯವಹಾರವು
ತತ್ವಜ್ಞಾನಕ್ಕೆ ವಿರೋಧವಾಗದ
ದೆಸೆಯಿಂದ ಅದನ್ನು
ಚೆನ್ನಾಗಿಯೇ ಮಾಡುತ್ತಾನೆ.(ಪುಟ ೩೩೭)
೪0)ಈ ಜಗತ್ತೆಲ್ಲ ಮಾಯಾಮಯವು ಮತ್ತು
ನಮ್ಮೊಳಗಿರುವ ಆತ್ಮನು ಅವಿಕಾರಿಯಾದ ಚೈತನ್ಯ
ಸ್ವರೂಪನು ಎಂಬ ಜ್ಞಾನವಿರುವಾಗ -ಎಂಬ
ಜ್ಞಾನವಿರುವಾಗ ಲೋಕವ್ಯವಹಾರವನ್ನು ಮಾಡುವವನಿಗೆ
ವಿರೋಧವೆಲ್ಲಿ?(ಪುಟ ೩೩೭)
೪೧)ಮನಸ್ಸು ವಾಕ್ಕು ಶರೀರ ಮತ್ತು
ಅವುಗಳಿಗಿಂತ ಬಾಹ್ಯವಾದ
ಮನೆ ,ಗದ್ದೆ ಮೊದಲಾದುವು ವ್ಯವಹಾರಕ್ಕೆ ಬೇಕಾದ
ಸಾಧನಗಳು.ಜ್ಞಾನಿಯು ಅವುಗಳನ್ನು ಮದಿ೯ಸುವುದಿಲ್ಲ. ಆದುದರಿಂದ ಇವನಿಗೇಕೆ ಲೋಕವ್ಯವಹಾರವಿರಮಾರದು?(ಪುಟ ೩೩೮)
೪೨)ಜ್ಞಾನಿಯು ಚಿತ್ತವನ್ನು ಪೀಡಿಸುತ್ತಾನೆ ಎನ್ನುವೆಯಾದರೆ ಅವನಿನ್ನೂ
ಧ್ಯಾನಮಾಡುವವನೇ ಹೊರತು ಜ್ಞಾನಿಯಾಗಿರುವುದಿಲ್ಲ.ಒಂದು ಗಡಿಗೆಯನ್ನು ಅರಿಯುವವನು ತನ್ನ
ಚಿತ್ತವನ್ನು ಪೀಡಿಸಬೇಕಾಗಿಲ್ಲ.ಎಂದರೆ ಚಿತ್ತದ ವೃತ್ತಿಗಳನ್ನು
ನಿರೋಧಿಸಿ ಚಿತ್ತದ
ಏಕಾಗ್ರತೆಯನ್ನುಂಟು ಮಾಡುವ ಅವಶ್ಯಕತೆ ಇಲ್ಲ.(ಪುಟ ೩೩೮)
೪೩)ಜಡವಾದ ಗಡಿಗೆಯೇ ನೋಡಿದೊಡನೆ ಯಾವಾಗಲೂ ಬೆಳಗುವುದರಿಂದ ಸ್ವಯಂಪ್ರಕಾಶಮಾನನಾದ ಈ
ಪ್ರತ್ಯಗಾತ್ಮನು ಗಡಿಗೆಯಂತೆ ಏಕೆ ಬೆಳಗಬಾರದು?(ಪುಟ
೩೩೯)
೪೪)ಜ್ಞಾನಿಯು ಒಂದುಸಲ ಪ್ರತ್ಯಗಾತ್ಮನನ್ನು
ಅರಿತುಕೊಂಡರೆ ಅನಂತರ
ತನಗೆ ಬೇಕಾದಾಗ ಆ
ಆತ್ಮನನ್ನು ತಾನರಿತ ಪ್ರಕಾರವಾಗಿ ಹೇಳುವುದಕ್ಕೂ ಮನನ ಮಾಡುವುದಕ್ಕೂ
ಹಾಗೆಯೇ ಧ್ಯಾನ ಮಾಡುವುದಕ್ಕೂ
ಸಮಥ೯ನಾಗುತ್ತಾನೆ.(ಪುಟ ೩೩೯)
೪೫)ಜ್ಞಾನಿಯು ಉಪಾಸಕನಂತೆ ಧ್ಯಾನಿಸುತ್ತ ಲೋಕವ್ಯವಹಾರವನ್ನು
ಮರೆಯಬಹುದು ಎನ್ನುವೆಯಾದರೆ, ಆ ಮರೆಯುವಿಕೆ ಧ್ಯಾನದಿಂದ
ಆದದ್ದೇ ಹೊರತು ಜ್ಞಾನದಿಂದಲ್ಲ.(ಪುಟ
೩೪0)
೪೬)ಜ್ಞಾನಿಯೂ ಕೂಡ ಮೋಕ್ಷಕ್ಕಾಗಿ
ಧ್ಯಾನವನ್ನು ಮಾಡಬೇಕೇ ?ಎಂಬ ಸಂಶಯಕ್ಕೆ ಹೀಗೆ
ಉತ್ತರಿಸುತ್ತಾರೆ.ಜ್ಞಾನಿಯು ತನಗೆ ಬೇಕಾದರೆ ಧ್ಯಾನಿಸಬಹುದು.ಬ್ರಹ್ಮವನ್ನು ಅರಿಹೊಳ್ಳುವುದರಿಂದಲೇ ಮೋಕ್ಷಸಿದ್ಧಿಯಾಗುವುದರಿಂದ ಜ್ಞಾನದಿಂದಲೇ ಮುಕ್ತಿಯಾಗುವುದೆಂದು
ಶಾಸ್ತ್ರಗಳು ಘೋಷಿಸುತ್ತವೆ.(ಪುಟ ೩೪0)
೪೭)ವಣ೯ ಆಶ್ರಮ ವಯಸ್ಸು
ಅಧಿಕಾರ -ಇವುಗಳಲ್ಲಿ ಯಾವನಿಗೆ
ಅಭಿಮಾನವಿರುವುದೊ ಅವನಿಗೆ
ವಿಧಿ ನಿಷೇಧಗಳೆಲ್ಲ ಇರುತ್ತವೆ.(ಪುಟ ೩೪೧)
೪೮)ಆ ವಣಾ೯ಶ್ರಮಾದಿ ಭೇದಗಳೆಲ್ಲ ಮಾಯೆಯಿಂದ
ಶರೀರದಲ್ಲಿ ಕಲ್ಪಿತವಾಗಿದೆಯೆಂದೂ ಚಿದ್ರೂಪನಾದ
ಆತ್ಮನಿಗೆ ಅವುಗಳ
ಸಂಬಂಧವಿಲ್ಲವೆಂದೂ ಜ್ಞಾನಿಯು
ನಿಶ್ಚಯಿಸಿಕೊಂಡಿರುತ್ತಾನೆ.(ಪುಟ ೩೪೧)
೪೯)ಮನಸ್ಸಿನಲ್ಲಿರುವ
ಆಸಕ್ತಿಗಳನ್ನೆಲ್ಲ ಬಿಟ್ಟು ನಿಮ೯ಲ
ಜ್ಞಾನವನ್ನು ಹೊಂದಿರುವವನು ಮುಕ್ತನೇ.ಅವನು ಸಮಾಧಿಯನ್ನೊ
ಅಥವಾ ಕಮ೯ವನ್ನು ಮಾಡಲಿ ಅಥವಾ ಮಾಡದಿರಲಿ
-ಅದರಿಂದ ಹಾನಿಯಿಲ್ಲ.(೩೪೧)
೫0)ಜ್ಞಾನಿಗೆ ಕತ೯ವ್ಯವಿಲ್ಲ ಎಂಬ ವಿಷಯದಲ್ಲಿ ಇನ್ನೊಂದು ವಚನವನ್ನು ಉದಾಹರಿಸುತ್ತಾರೆ.ಯಾವನ ಮನಸ್ಸಿನಲ್ಲಿ
ವಾಸನೆಗಳಿಲ್ಲವೊ ,ಅವನಿಗೆ ಕಮ೯ತ್ಯಾಗದಿಂದಲೂ ಪ್ರಯೋಜನವಿಲ್ಲ.ಕಮ೯ವನ್ನು ಮಾಡುವುದರಿಂದಲೂ ಪ್ರಯೋಜನವಿಲ್ಲ. ಸಮಾಧಿಯಿಂದಲೂ ಜಪಗಳಿಂದಲೂ ಪ್ರಯೋಜನವಿಲ್ಲ.(ಪುಟ ೩೪೨)
೫೧)ಆತ್ಮನು ಅಸಂಗನೆಂದೂ ಅಮನಿಗಿಂತ ಬೇರೆಯಾದುದೆಲ್ಲ ಮಾಯೆಯಿಂದ
ಕಲ್ಪಿಸಲ್ಪಟ್ಟ ಇಂದ್ರಜಾಲವೆಂದೂ ಸ್ಥಿರವಾದ
ನಿಣ೯ಯವುಳ್ಳ ಮನಸ್ಸಿಗೆ
ವಸನೆಎಲ್ಲಿಯದು?(ಪುಟ ೩೪೨)
೫೨)ಹೀಗೆ ಜ್ಞಾನಿಗೆ ವಿಧಿನಿಷೇಧಗಳೆಂಬ ಪ್ರಸಂಗವೇ
ಇಲ್ಲದಿರುವಾಗ ಅವುಗಳ್ನು
ಮೀರುವುದೆಲ್ಲಿ? ಯಾವನು ವಿಧಿ ನಿಷೇಧವೆಂಬ
ಶಾಸ್ತ್ರಕ್ಕೆ ಒಳಪಟ್ಟಿರುವನೊ ಅವನಿಗೆ
ಮಾತ್ರ ಆ ಮೇರೆಯನ್ನು ಮೀರುವ
ದೋಷವಿರುತ್ತದೆ.(ಪುಟ ೩೪೨)
೫೩)ಬಾಲಕನು ವಿಧಿ ನಿಷೇಧಗಳಿಗೆ
ಒಳಪಡುದುದರಿಂದ ಅವನಿಗೆ ಅವುಗಳನ್ನು ಮೀರುವ
ದೋಷವಿರುವುದಿಲ್ಲ.ಹೀಗೆಯೇ ಜ್ಞಾನಿಗೂ ವಿಧಿನಿಷೇಧಗಳಿಲ್ಲದಿರುವುದರಿಂದ ಅವನಿಗೂ
ಅದನ್ನು ಮೀರುವ ದೋಷವು
ಕಂಡುಬರುವುದಿಲ್ಲ. (ಪುಟ ೩೪೨)
೫೪)ಬಾಲಕನು ಏನೂ ಅರಿಯದವನೆಂದು
ಹೇಳಿದರೆ ಜ್ಞಾನಿಯು
ಎಲ್ಲವನ್ನೂ ಅರಿತವನು.ವಿಧಿನಿಯಮಗಳೆಲ್ಲ ಸ್ವಲ್ಪವನ್ನು ತಿಳಿದವನಿಗೇ ಹೊರತು ಏನನ್ನೂ
ಅರಿಯದವನಿಗೂ ಅಲ್ಲ ,ಎಲ್ಲವನ್ನು ಅರಿತವನಿಗೂ
ಅಲ್ಲ.(ಪುಟ ೩೪೩)
೫೫)ಶಾಪವನ್ನೂ ವರವನ್ನೂ ಕೊಡುವ ಸಾಮಥ್ಯ೯ವು ಯಾವನಿಗಿರುವುದೊ ಅವನೇ
ತತ್ವಜ್ಞಾನಿ ಎನ್ನುವುದಾದರೆ ಅದು ಸರಿಯಲ್ಲ.ಏಕೆಂದರೆ
ಶಾಪವನ್ನು ಕೊಡುವ
ಸಾಮಥ್ಯ೯ವೇ ಮೊದಲಾದುವು ತಪಸ್ಸಿನ ಫಲವೇ ಹೊರತು
ಜ್ಞಾನದ ಫಲವಲ್ಲ.(ಪುಟ ೩೪೩)
೫೬)ವ್ಯಾಸಾದಿಗಳಲ್ಲಿ ಶಾಪಾನುಗ್ರಹ
ಸಾಮಥ್ಯ೯ವಿದ್ದುದರಿಂದ ಅದುಳ್ಳವನೇ
ಜ್ಞಾನಿಯು ಎಂಬ ಸಂಶಯಕ್ಕೆ ಉತ್ತರಿಸುತ್ತಾರೆ.ವ್ಯಾಸರೇ ಮೊದಲಾದವರಲ್ಲಿ
ತಪಸ್ಸಿನ ಬಲದಿಂದ ಆ ಸಾಮಥ್ಯ೯ವು
ಕಂಡುಬರುತ್ತದೆ. ತಪಸ್ಸಿನಿಂದ ಬ್ರಹ್ಮವನ್ನು ಅರಿತುಕೊಳ್ಳಬೇಕೆಂದು ಶೃತಿಯಿರುವುದು ನಿಜ.ಶಾಪಾದಿಗಳಿಗೆ ಕಾರಣವಾದ
ತಪಸ್ಸಿಗಿಂತಲೂ ಬ್ರಹ್ಮಜ್ಞಾನಕ್ಕೆ ಕಾರಣವಾದ
ತಪಸ್ಸು ಬೇರೆ.(ಪುಟ ೩೪೩)
೫೭)ಯಾವನು ಈ ಎರಡು
ಬಗೆಯ ತಪಸ್ಸುಗಳನ್ನು
ಮಾಡುತ್ತಾನೆಯೊ ಅವನಿಗೆ ಶಾಪಾದಿ ಸಾಮಥ್ಯ೯ವೂ ಜ್ಞಾನವೂ
ಉಂಟಾಗುತ್ತದೆ.ಒಂದೇ ಬಗೆಯ ತಪಸ್ಸನ್ನು ಮಾಡಿದವನಿಗೆ ಒಂದೇ
ಫಲವಾಗುತ್ತದೆ.(ಪುಟ ೩೪೪)
೫೮)ವಿಷಯಲಂಪಟರಾದ ಪಾಮರರು ವಣಾಶ್ರಮರೂಪರಾದ ಯತಿಗಳನ್ನು
ನಿಂದಿಸಿದರೇನಾಗುತ್ತದೆ?ಎನ್ನುವೆಯಾದರೆ ದೇಹವನ್ನೇ
ಆತ್ಮವೆಂದು ತಿಳಿದಿರುವ ಯತಿಗಳು ಜ್ಞಾನಿಯನ್ನು
ನಿಂದಿಸಿದರೆ ಕೊರತೆಯೇನು?(ಪುಟ ೩೪೪)
೫೯)ಹೀಗೆ
ದೃಢವಾದ ತತ್ವಜ್ಞಾನವಾಗಿರುವಾಗ ಲೌಕಿಕ
ವ್ಯವಹಾರಕ್ಕೆ ಸಾಧನಗಳಾದ ಮನೋವಾಕ್ಕಾಯಗಳನ್ನು
ಅಡಗಿಸದೇ ಇರುವುದರಿಂದ
ಜ್ಞಾನಿಯು ರಾಜ್ಯ
ಪರಿಪಾಲನೆ ಕೃಷಿ ವಾಣಿಜ್ಯ ಮೊದಲಾದವುಗಳನ್ನು
ಕೂಡ ಚೆನ್ನಾಗಿ ಮಾಡಬಹುದು.(ಪುಟ ೩೪೫)
೬0)ಉಪಾಸಕನು ಯಾವಾಗಲೂ ಧ್ಯಾನವನ್ನೇ
ಮಾಡುತ್ತಿರುತ್ತಾನೆ.ಏಕೆಂದರೆ ತನ್ನಲ್ಲಿ ಧ್ಯಾನದಿಂದ ಸಂಪಾದಿಸಲ್ಪಟ್ಟ ವಿಷ್ಣುತ್ವ
ಮೊದಲಾದವುಗಳಂತೆ ಬ್ರಹ್ಮತ್ವವು ಧ್ಯಾನದಿಂದಲೇ
ಸಂಪಾದಿಸಲ್ಪಟ್ಟಿದೆ.(ಎಂದರೆ ವಿಷ್ಣುತ್ವವು ಇನ್ನೂ
ಪಾರಮಾಥಿ೯ಕವಾಗಿಲ್ಲ.ಪ್ರಮಾಣದಿಂದ ತಿಳಿಯಲ್ಪಟ್ಟಿಲ್ಲ.(ಪುಟ ೩೪೫)
೬೧) ಧ್ಯಾನದಿಂದ ಸಂಪಾದಿಸಲ್ಪಟ್ಟ ಬ್ರಹ್ಮತ್ವವು ಧ್ಯಾನವಿಲ್ಲದಿರುವಾಗ ಅಳಿದು
ಹೋಗುತ್ತದೆ.ಆದರೆ ವಸ್ತವವಾದ ಬ್ರಹ್ಮಭಾವವು
ಜ್ಞಾಪಕವನ್ನು ಕೊಡುವ ಜ್ಞಾನವಿಲ್ಲದಿದ್ದರೂ
ಅಳಿಯುವುದಿಲ್ಲ.(ಪುಟ ೩೪೫)
೬೨)ಬ್ರಹ್ಮತ್ವವು ನಿತ್ಯವಾದುದರಿಂದ ಜ್ಞಾನವು
ಅದನ್ನು ತಿಳಿಯಪಡಿಸುತ್ತದೆಯೇ
ಹೊರತು ಹುಟ್ಟಿಸುವುದಿಲ್ಲ.ಜ್ಞಾಪಕವಾದ ಜ್ಞಾನವು ಇಲ್ಲದ
ಮಾತ್ರದಿಂದ ಸತ್ಯವಾದ
ಬ್ರಹ್ಮಯ್ವವು ಅಳಿಯುವುದಿಲ್ಲ.(ಪುಟ ೩೪೬)
೬೩)ಆ ಬ್ರಹ್ಮತ್ವವನ್ನು ಅರಿಯದಿರುವುದರಿಂದ ಅದರ
ಪ್ರಯೋಜನವು ಉಪಾಸಕನಿಗೂ ಪಾಮರನಿಗೂ
ಸಮಾನವಾಗಿರುವುದು.ಆದರೆ ಉಪವಾಸಕ್ಕಿಂತ ಭಿಕ್ಷೆಯು
ಶ್ರೇಷ್ಠವಾಗಿರುವಂತೆ ಇತರ
ಸಗುಣೋಪಾಸನೆಗಿಂತಲೂ ನಿಗು೯ಣೋಪಾಸನೆಯು
ಶ್ರೇಷ್ಠ.(ಪುಟ ೩೪೬)
೬೪)ಕಮ೯,ಉಪಾಸನೆ,ಜ್ಞಾನ-ಇವುಗಳೇನೂ ಇಲ್ಲದ ಪಾಮರರ
ವ್ಯವಹಾರಕ್ಕಿಂತಲೂ ನಿತ್ಯ-ನೈಮಿತ್ತಿಕ-ಕಮ೯ಗಳ ಅನುಷ್ಠಾನವು ಉತ್ತಮವು. ಅದಕ್ಕಿಂತಲೂ ಸಗುಣೋಪಾಸನೆಯು ಉತ್ತಮವು.ಅದಕ್ಕಿಂತಲೂ ನಿಗು೯ಣೋಪಾಸನೆಯು ಶ್ರೇಷ್ಠ.(ಪುಟ ೩೪೭)
೬೫)ಇವ್ಗಳಲ್ಲಿ ಯಾವುಯಾವುದು ಎಷ್ಟೆಷ್ಟರಮಟ್ಟಿಗೆ
ಬ್ರಹ್ಮಜ್ಞಾನಕ್ಕೆ ಸಮೀಪವಾಗಿರುವುದೊ ಅಷ್ಟರಮಟ್ಟಿಗೆ ಶ್ರೇಷ್ಠವಾಗಿರುವುದು.
ನಿಗು೯ಣೋಪಾಸನೆಯು ಮೆಲ್ಲ ಮೆಲ್ಲನೆ ಬೆಳೆಯುತ್ತ
ಬ್ರಹ್ಮಜ್ಞಾನವಾಗುವುದು.(ಪುಟ ೩೪೭)
೬೬)ಮೂತಿ೯ಧ್ಯಾನವೂ ಮಂತ್ರಜಪಾದಿಯೂ
ಅಪರೋಕ್ಷಜ್ಞಾನಕ್ಕೆ ಕಾರಣವಾಗಬಹುದಲ್ಲವೆ?-ಎನ್ನುವೆಯಾದರೆ ಅದು ನಮಗೆ ಸಮ್ಮತವೆ.ಆದರೂ ಸಗುಣೋಪಾಸನೆಗಿಂತ ನಿಗು೯ಣೋಪಾಸನೆಯು ಜ್ಞಾನಕ್ಕೆ
ಅತ್ಯಂತ ಸಮೀಪದಲ್ಲಿರುವುದರಿಂದ ಅದು ಶ್ರೇಷ್ಠವಾಗಿದೆ.(ಪುಟ೩೪೮)
೬೭)ನಿಗು೯ಣೋಪಾಸನೆಯು ಪಕ್ವವಾಗುತ್ತ ಮೆಲ್ಲಮೆಲ್ಲಗೆ
ಸವಿಕಲ್ಪ ಸಮಾಧಿಯಾಗುವುದು.ಅದರಿಂದ ನಿರೋಧನಾಮಕವಾದ
ವಿವಿ೯ಕಲ್ಪ ಸಮಾಧಿಯು ಆಯಾಸವಿಲ್ಲದೆ
ಲಭಿಸುವುದು.(ಪುಟ ೩೪೮)
೬೮)ಹೀಗೆ ನಿವಿ೯ಕಲ್ಪ ಸಮಾಧಿಯು
ಲಭಿಸಿದರೆ ಮನುಷ್ಯನೊಳಗೆ
ಅಸಂಗವಾದ ಕೂಟಸ್ಥವಾದ
ಚೈತನ್ಯವು ಮಾತ್ರ ಉಳಿಯುತ್ತದೆ.ಆ
ಅಸಂಗ ವಸ್ತುವನ್ನೇ ಮತ್ತೆ ಮತ್ತೆ ಭಾವಿಸುತ್ತಿದ್ದರೆ ಮಹಾವಾಕ್ಯದ
ಮೂಲಕವಾಗಿ 'ನಾನೇ ಬ್ರಹ್ಮ'ಎಂಬ
ತತ್ವಜ್ಞಾನವು ಹುಟ್ಟುತ್ತದೆ.(ಪುಟ ೩೪೯)
೬೯)ವೇದಾಂತ
ಶಾಸ್ತ್ರದಲ್ಲಿ ಹೇಳಿರುವಂತೆ ನ್ವಿ೯ಕಾರತ್ವ,ಅಸಂಗತ್ವ,ನಿತ್ಯತ್ವ,ಸ್ವಯಂಪ್ರಕಾಶತ್ವ,ಏಕತ್ವ,ಪೂಣ೯ತ್ವ-ಇವೇ
ಮೊದಲಾದ ಆತ್ಮನ ಗುಣಗಳು ಬುದ್ಧಿಯಲ್ಲಿ ಬೇಗನೆ ಎದ್ದು ಕಾಣುತ್ತವೆ.(೩೪೯)
೭0)ನಿಗು೯ಣೋಪಾಸನೆಯಿಂದ ಅಪರೋಕ್ಷ
ಜ್ಞಾನವಾಗುವುದೆಂಬ ಅಥ೯ವು
ಅಮೃತ ಬಿಂದೋಪನಿಷತ್ತಿನಲ್ಲಿ ಹೇಳಲ್ಪಟ್ಟಿದೆ.(ಪುಟ ೩೪೯)
೭೧)ನಿಗು೯ಣೋಪಾಸನೆಯನ್ನು ಬಿಟ್ಟು ತೀಥ೯ಯಾತ್ರೆ,ಜಪ ಮೊದಲಾದುವುಗಳನ್ನೇ ಮಾಡುವವರು ಅಂಗೈಯಲ್ಲಿರುವ
ಸಿಹಿಯಾದ ತುತ್ತನ್ನು ಬಿಟ್ಟು ಮುಂಗೈಯನ್ನು
ನೆಕ್ಕುತ್ತಿರುವವರ ಹಾಗೆ ಆಗುತ್ತಾರೆ.(ಪುಟ ೩೫0)
೭೨)ಆತ್ಮವಿಚಾರವನ್ನು ತೊರೆದು ನಿಗು೯ಣೋಪಾಸನೆಯನ್ನು
ಮಾಡುವವರಿಗೂ ಹೀಗಾಗುತ್ತದೆ -ಎನ್ನುವೆಯಾದರೆ ,ಅದು ಸರಿ.ಆದುದರಿಂದಲೇ
ಮಹಾವಾಕ್ಯದ ವಿಚಾರವು ಯಾರಿಗೆ ಅಸಂಭವವಾಗಿರುವುದೊ ಅವರಿಗೆ
ನಿಗು೯ಣೋಪಾಸನೆಯನ್ನು ಹೇಳಿದ್ದಾಗಿದೆ.(ಪುಟ ೩೫0)
೭೩)ಬಹಳ ವ್ಯಾಕುಲರಾದ ಮನಸ್ಸುಳ್ಳವರಿಗೆ ವಿಚಾರದಿಂದ
ತತ್ವ ಜ್ಞಾನವಾಗುವುದಿಲ್ಲ.ಅಂಥವರಿಗೆ ಉಪಾಸನೆಯು ಮುಖ್ಯವಾಗಿದೆ. ಏಕೆಂದರೆ ಉಪಾಸನೆಯಿಂದ ಬುದ್ಧಿಯ
ದೋಷವು ನಾಶವಾಗುತ್ತದೆ.(ಪುಟ ೩೫0)
೭೪)ಜ್ಞಾನನಿಷ್ಠರು ಯಾವ ಸ್ಥಾನವನ್ನು
ಹೊಂದುವರೊ ಅದನ್ನೇ
ಧ್ಯಾನಯೋಗಿಗಳೂ ಹೊಂದುತ್ತಾರೆ.ಜ್ಞಾನಯೋಗವನ್ನೂ ಧ್ಯಾನಯೋಗವನ್ನೂ ಒಂದೇ
ಎಂದು ಯಾವನು ನೋಡುವನೊ ಅವನೇ
ನಿಜವಗಿ ಬಲ್ಲವನು.ಏಕೆಂದರೆ ಫಲವು
ಒಂದೇ ಆಗಿದೆ.(ಪುಟ೩೫೧)
೭೫)'ಸಾಂಖ್ಯದಿಂದಲೂ ಯೋಗದಿಂದಲೂ ಹೊಂದಲ್ಪಟ್ಟ
ಆಜ್ಞಾನವು ಮೋಕ್ಷಕ್ಕೆ ಕಾರಣವಾಗುವುದು.'ಎಂದು ಶ್ರುತಿಯು ಹೇಳುತ್ತದೆ.ಸಖ್ಯಶಾಸ್ತ್ರದಲ್ಲಿಯೂ ಯೀಗಶಾಸ್ತ್ರದಲ್ಲಿಯೂ ಯಾವುದು
ಶ್ರುತಿಗೆ(ವೇದಾಂತಕ್ಕೆ) ವಿರುದ್ಧವಾಗಿದೆಯೋ ಅದು
ಬಾಧಿಸಲ್ಪಡುವುದು.(ಪುಟ ೩೫೧)
೭೬)ಯಾವನಿಗೆ ಈ ಜನ್ಮದಲ್ಲಿ ನಿಗು೯ಣೋಪಾಸನೆಯು ಚೆನ್ನಾಗಿ
ಪಕ್ವವಾಗುವುದಿಲ್ಲವೊ ಅವನು
ಮರಣ ಕಾಲದಲ್ಲಾಗಲಿ ಅಥವಾ
ಬ್ರಹ್ಮಲೋಕದಲ್ಲಾಗಲಿ ಬ್ರಹ್ಮತತ್ವವನ್ನು ಅರಿತುಕೊಂಡು ಮುಕ್ತನಾಗುತ್ತಾನೆ.(ಪುಟ ೩೫೧)
೭೭)ನಿಗು೯ಣ ಬ್ರಹ್ಮಪ್ರಾಪ್ತಿಯೇ ಮುಕ್ತಿ(ಪುಟ ೩೫೨)
೭೮)ಸಂವಾದಿಭ್ರಮವು ಹೆಸರಿನಲ್ಲಿ ಭ್ರಮೆ ಎನಿಸಿದ್ದರೂ ವಾಸ್ತವವಾಗಿ ಯಥಾಥ೯
ಜ್ಞಾನವಾಗಿರುತ್ತದೆ.ಹೆಸರಿನಲ್ಲಿ ಭೇದವೇ ಹೊರತು ಅಥ೯ದಲ್ಲಿ
ಭೇದವಿಲ್ಲ.(ಪುಟ ೩೫೩)
೭೯)ನಿಗು೯ಣ
ಬ್ರಹ್ಮದ ಉಪಾಸನೆಯಿಂದ ಮೂಲಾವಿದ್ಯೆಯನ್ನು ನಾಶ
ಮಾಡುವ ಅಪರೋಕ್ಷಜ್ಞಾನ
ಉಂಟಾಗುತ್ತದೆ.(ಪುಟ ೩೫೩)
೮0)ಮನುಷ್ಯನು ಮೊದಲು ದೇಹವೆಂಬ
ಹಾಸುಗಲ್ಲನ್ನು ಎಬ್ಬಿಸಿ ಅನಂತರ ಬುದ್ಧಿಯೆಂಬ
ಗುದ್ದಲಿಯಿಂದ ಮನಸ್ಸೆಂಬ
ಭೂಮಿಯನ್ನು ಅಗೆದು ಶ್ರೇಷ್ಠ ನಿಧಿಯಾದ ನನ್ನನ್ನು
ತೆಗೆದುಕೊಳ್ಳಬೇಕು.(ಪುಟ ೩೫೮)
೮೧)ಬ್ರಹ್ಮಾನುಭವವಿಲ್ಲದಿದ್ದರೂ 'ನಾನು ಬ್ರಹ್ಮ'ಎಂದು
ಧ್ಯಾನಿಸು.ಧ್ಯಾನ ಮಾಡುವುದರಿಂದ ತನಗೆ
ಮೊದಲಿಲ್ಲದ ದೇವತ್ವವೇ ಮೊದಲಾದುವು ಪ್ರಾಪ್ತವಾಗುವುವು.ಹೀಗಿರುವಾಗ ನಿತ್ಯಪ್ರಾಪ್ತವಾದ ತನ್ನ ಸ್ವರೂಪವೇ ಆಗಿರುವ ಬ್ರಹ್ಮವನ್ನು
ಹೊಂದುತ್ತಾನೆ- ಎಂದು ಹೇಳಬೇಕಾಗಿಲ್ಲ.(ಪುಟ
೩೫೮)
೮೨)ನಿಗು೯ಣ ಬ್ರಹ್ಮ ಧ್ಯಾನದಿಂದ ದೇಹದಲ್ಲಿ
ನಾನೆಂಬ ಅಭಿಮಾನವನ್ನು ಬಿಟ್ಟು
ನಾನೆಂಬ ಅದ್ವಯನಾದ ಆತ್ಮನನ್ನೇ
ನೋಡುತ್ತ ,ತಾನು ಅಮೃತವಾಗಿ ಈ ಶರೀರದಲ್ಲಿಯೇ
ತನ್ನ ನಿಜಸ್ವರೂಪವಾದ ಸಚ್ಚಿದಾನಂದ
ಬ್ರಹ್ಮವನ್ನು ಹೊಂದುವನು(ಪುಟ ೩೫೮)
೮೩)ಈ ಧ್ಯಾನದೀಪವನ್ನು
ಯಾವನು ಚೆನ್ನಾಗಿ ಪರಾಮಶ೯ಮಾಡುವನೊ
ಅವನು ತನ್ನ ಸಂಶಯವನ್ನೆಲ್ಲ ಕಳೆದುಕೊಂಡು ಯಾವಾಗಲೂ
ನಿಗು೯ಣ ಬ್ರಹ್ಮೋಪಾಸನೆಯನ್ನು ಮಾಡುವನು(ಪುಟ ೩೫೯)
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
No comments:
Post a Comment