Sunday, 2 February 2020

Vidyaranya Saara Sangraha - Panchadashi - adhyaya -2



)ಪಂಚಭೂತ ವಿವೇಕ ಪ್ರಕರಣ:

) ಶಬ್ದ ಸ್ಪಶ೯ ರಸ ರೂಪ ಗಂಧಈ ಐದು ಪಂಚಭೂತಗಳ ಗುಣಗಳು.
ಆಕಾಶಕ್ಕೆ ಒಂದು ಗುಣ-ಶಬ್ದ
ವಾಯು -ಎರಡು ಗುಣ(ಶಬ್ದ ಸ್ಪಶ೯)
ಅಗ್ನಿಗೆ-ಮೂರು ಗುಣ-ಶಬ್ದ ಸ್ಪಶ೯ ರಸ
ನೀರು-ನಾಲ್ಕು ಗುಣ - ಶಬ್ದ ಸ್ಪಶ೯ ರೂಪ,ರಸ
ಪೃಥ್ವಿ- ಐದು ಗುಣ-ಸ್ಪಶ೯ ಶಬ್ದ ರೂಪ ರಸ   ಗಂಧ  

ಗುಣಗಳನ್ನು ಗ್ರಹಿಸಲು ಐದು ಜ್ಞಾನೇಂದ್ರಿಯಗಳು  ಇವೆ.ರಸವು ನೀರಿನ ,ಗಂಧವು  ಪೃಥ್ಚಿಯ ಗುಣ.(ಪುಟ ೨೬)

)ಐದು ಕಮೇ೯ಂದ್ರಿಯಗಳು:

) ಮಾತನಾಡುವುದು -ವಾಕ್ಕು
)ತೆಗೆದುಕಿಳ್ಳುವುದು-ಕೈ
) ನಡೆಯುವುದು- ಕಾಲು
)ವಿಸಜ೯ನೆ ಮಾಡುವುದು-ಪಾಯು
)ಆನಂದಿಸುವುದು-ಉಪಸ್ಥ
ದಶೇಂದ್ರಿಯಗಳಿಗೆ  ಅಧ್ಯಕ್ಷವಾದ ಮನಸ್ಸು ಹೃದಯಪದ್ಮವೆಂಬ  ಗೋಲಕದಲ್ಲಿರುವುದು.ಇಂದ್ರಿಯಗಳ ಸಹಾಯವಿಲ್ಲದೆ  ಹೊರಗೆ ಸ್ವತಂತ್ರ ಗಮನವಿಲ್ಲದಿರುವುದರಿಂದ  ಮನಸ್ಸು ಅಂತಃಕರಣವೆನಿಸಿದೆ.(ಪುಟ೨೮)

)ಮನಸ್ಸಿಗೆ ಸತ್ವ ರಜಸ್ಸು ತಮಸ್ಸು  ಇವು ಗುಣಗಳಾಗಿರುವುದರಿಂದ  ನಾನಾ ವಿಧವಾದ ವಿಕಾರಗಳನ್ನು ಹೊಂದುವುದು.

)ಸತ್ವಗುಣ- ವೈರಾಗ್ಯ ಕ್ಷಮೆ ಔದಾಯ೯.
)ರಜೋಗುಣ-ಕಾಮ ಕ್ರೋಧ ಲೋಭ ಇತ್ಯಾದಿ
) ತಮೋಗುಣ-ಆಲಸ್ಯ ಭಾಂತಿ ತೂಕಡಿಕೆ.(ಪುತ ೨೯)

)ಇಂದ್ರಿಯಗಳೂ ಕೂಡ ಭೌತಿಕವೇ  ಎಂಬುದನ್ನು ಶಾಸ್ತ್ರದಿಂದಲೂ ಯುಕ್ತಿಯಿಂದಲೂ  ತಿಳಿಯಬೇಕು.
ಮನಸ್ಸು-ಅನ್ನಮತ
ಪ್ರಾಣ-ಆಪೋಮಯ
ವಾಕ್ಕು -ತೇಜೋಮಯಪುಟ 0)

)ಸೃಷ್ಟಿಗೆ ಮುಂಚೆ  ಇದೆಲ್ಲವೂ ಏಕವೂ,ಅದ್ವಿತೀಯವೂ  ಆದ ಸತ್ ಸ್ವರೂಪವೇ ಆಗಿತ್ತು;ನಾಮರೂಪಗಳು ಇರಲಿಲ್ಲ.(ಪುಟ 0)

)ಮೂರು ಭೇದಗಳು:
) ಸ್ವಗತ ಭೇದ:ವೃಕ್ಷಕ್ಕೆ  ಪತ್ರ ಫಲ ಪುಷ್ಪಗಳಿಂದ ಸ್ವಗತ ಭೇದವಿರುತ್ತದೆ.
)ಸಜಾತೀಯ ಭೇದ: ಒಂದು ವೃಕ್ಷದಿಂದ ಇನ್ನೊಂದು ವೃಕ್ಷವು  ಬೇರೆಯಾಗಿರುವುದು 'ಸಜಾತೀಯ ಭೇದ'
) ವೃಕ್ಷ, ಕಲ್ಲು ಮೊದಲಾದವುಗಳಿಗಿಂತ  ಬೇರೆಯಾಗಿರುವುದು  ವಿಜಾತೀಯ ಭೇದ.(ಪುಟ ೩೧)

)  ನಾಮರೂಪಗಳ ಉತ್ಪತ್ತಿಯೇ ಸೃಷ್ಟಿ.ಅವು ಸೃಷ್ಟಿಗೆ ಮೊದಲು ಇರುವುದಿಲ್ಲ.(ಪುಟ ೩೧)

)ಸಮುದ್ರದಲ್ಲಿ  ಮುಳುಗಿದವನ ಇಂದ್ರಿಯಗಳು ಕಳವಳಪಡುವಂತೆ ಶೂನ್ಯವಾದಿಯ ಬುದ್ಧಿಯು  ಅಖಂಡೈಕರಸವಾದ  ಬ್ರಹ್ಮವಸ್ತುವನ್ನು ಕೇಳಿ  ಸಂಚಾರವಿಲ್ಲದ್ದಾಗಿ  ಅದಕ್ಕೆ ಹೆದರುತ್ತದೆ.(ಪುಟ೩೩)

೯)ಅಸ್ಪಶ೯ಯೋಗವನ್ನು ಹೊಂದಲು ಎಲ್ಲ ಯೋಗಿಗಳಿಗೂ  ಕಷ್ಟವಾಗಿದೆ.ಏಕೆಂದರೆ ಯೋಗಿಗಳು  ಅಭಯದಲ್ಲಿ ಭಯವನ್ನು ನೋಡುತ್ತ ಇದಕ್ಕೆ ಹೆದರುವರು.(ಪುಟ೩೩)
(ನಿವ್೯ಕಲ್ಪ ಸಮಾಧಿಯನ್ನು: ಯಾವಬಗೆಯ ಸೊಶ೯ವೂ ಇಲ್ಲದುದರಿಂದ ಇದು ಅಸ್ಪಶ೯ ಯೋಗ)

0)ಮಾಯೆಯ ಕಾಯ೯ಗಳಾದ ಆಕಾಶಾದಿಗಳು  ಬ್ರಹ್ಮವೆಂಬ ಅಧಿಷ್ಟಾನವಿಲ್ಲದಿದ್ದರೆ ಇರಲಾರವು(ಪುಟ ೩೫)

೧೧)ಇದೆಲ್ಲವೂ ಮೊದಲು ಅಸತ್ತೇ ಆಗಿತ್ತು.(ಅಸದೇವ  ಇದಮಗ್ರ ಆಸೀತ್)(ಛಾಂ. .೧೯.....)(ಪುಟ ೩೫)

೧೨)ಪ್ರಶ್ನೆ ಮತ್ತು ಉತ್ತರ ದ್ವೈತಭಾಷೆಯಲ್ಲಿ ಮಾತ್ರ ಮಾಡಲ್ಪಡುತ್ತದೆ.ಅದ್ವೈತದ ಭಾಷೆಯಲ್ಲಿ ಪ್ರಶ್ನೆಯಗೂ ಇಲ್ಲ.ಅದಕ್ಕೆ ಉತ್ತರವೂ ಇಲ್ಲ.(ಪ್ಟ ೩೭)

೧೩)ಪರಮಾಥ೯ ದಶೆಯಲ್ಲಿ  ನಿಶ್ಚಲವಾದ, ಗಂಭೀರವಾದ,ಸ್ವಯಂಪ್ರಕಾಶವಾದ ,ತಮಸ್ಸಿಗಿಂತ ವಿಲಕ್ಷಣವಾದ ,ವ್ಯಾಪ್ತವಾದ ವ್ಯಾಖ್ಯಾನಮಾಡಲಶಕ್ಯವಾದ, ಅನಭಿವ್ಯಕ್ತವಾದ,ಶೂನ್ಯವಿಲಕ್ಷಣವಾದ 'ಇದು'  ಎಂದು ನಿದೇ೯ಶಿಸಲು ಅಶಕ್ಯವಾದ ಬ್ರಹ್ಮವು ಮಾತ್ರ ಉಳಿಯುತ್ತದೆ.(ಪುಟ ೩೭)

೧೪)ಬ್ರಹ್ಮಕ್ಕೆ ಸ್ವಯಂಪ್ರಕಾಶತ್ವವಿದೆ.(ಪುಟ ೩೯)

೧೫)ಅಗ್ನಿಯಲ್ಲಿರುವ ದಹನ ಶಕ್ತಿಯಂತೆ  ಸದ್ವಸ್ತುವಿನಲ್ಲಿರುವ  ಶಕ್ತಿಗೆ ಮಾಯೆ ಎಂದು ಹೆಸರು.ಇದು ಸದ್ವಸ್ತುವಿಗಿಂತ ಬೇರೆಯಾಗಿಲ್ಲ.ಇದನ್ನು  ಆಕಾಶಾರಿ  ಕಾಯ೯ಗಳಿಂದಲೇ ಅನುಮಾನಿಸ ಬೇಕಾಗಿದೆ.ಕಾಯ೯ವು ಉತ್ಪನ್ನವಾಗುವುದಕ್ಕೆ ಮೊದಲು ಅದರ ಶಕ್ತಿಯನ್ನು ಯಾವನೂ  ಎಲ್ಲಿಯೂ ಅರಿಯಲಾರನು.(ಪುಟ೩೯)   

೧೬)ಶಕ್ತಿಯು  ಅಧಿಕವಾಗಿದ್ದರೆ ಮನುಷ್ಯನ ಜೀವಿತವೂ ಅಧಿಕವಾಗಿರುತ್ತದೆ ಎಂದು ನೀನು ಹೇಳುವೆಯಾದರೆ ಶಕ್ತಿಯು ಜೀವಿತವಧ೯ನಕ್ಕೆ ಕಾರಣವಲ್ಲ.ಶಕ್ತಿಯಿಂದ ಯುದ್ಧ ಮೊದಲಾದವು ಆಗುತ್ತವೆ.(ಪುಟ೪೧)

೧೭)ಸವ೯ ವಿಧದಿಂದಲೂ ಕೇವಲ ಶಕ್ತಿಗೆ ಎಲ್ಲಿಯೂ ಅಸ್ತಿತ್ವವಿಲ್ಲ.ಸೃಷ್ಟಿಗೆ ಮೊದಲು ಮಾಯಾಶಕ್ತಿಯ ಕಾಯ೯ವೇ ಇರಲಿಲ್ಲ.(ಪುಟ೪೧)

೧೮)ಹೇಗೆ ಒಂದು ಗೋಡೆಯ ಮೇಲೆ ಬಣ್ಣಗಳಿಂದ ನಾನಾ ವಿಧವಾದ ಚಿತ್ರಗಳನ್ನು ಬರೆಯಬಹುದೋ ಹಾಗೆಯೇ ಬ್ರಹ್ಮವನ್ನು ಆಶ್ರಯಿಸಿಕೊಂಡಿರುವ  ಮಾಯಾ ಶಕ್ತಿಯು  ಬ್ರಹ್ಮದಲ್ಲಿ  ಕಾಯ೯ವಿಶೇಷಗಳನ್ನು ಕಲ್ಪಿಸುವುದು.(ಪುಟ೪೩)   .

೧೯)ಆಕಾಶವು  ಮೊದಲನೆಯ ಕಾಯ೯ವಿಶೇಷವು;ಅವಕಾಶವು ಅದರ ಸ್ವರೂಪವು.'ಆಕಾಶವು ಇದೆ' ಎನ್ನುವಾಗ  ಬ್ರಹ್ಮದ ಸತ್ಸ್ವರೂಪವು ಆಕಾಶದಲ್ಲಿಯೂ ಅನುವತಿ೯ಸಿದೆಎಂದಥ೯(ಪುಟ೪೪)
0)ಚಿತ್ತೈಕಾಗ್ರತೆ  ಇಲ್ಲದಿದ್ದರೆ ಧ್ಯಾನದಿಂದಸಾವಧಾನಚಿತ್ತವುಳ್ಳವನಾಗು.ಸಂಶಯವಿರುವ ಪಕ್ಷದಲ್ಲಿ  ಪ್ರಮಾಣದಿಂದಲೂ ಯುಕ್ತಿಯಿಂದಲೂ  ವಿವೇಚನವನ್ನು ಮಾಡು.ಆಗ ದೃಢ ನಿಶ್ಚಯವಾಗುವುದು.(ಪುಟ೪೮)

೨೧)ಧ್ಯೇಯವಸ್ತುವನ್ನು  (ಬೇರೆ ಪ್ರತ್ಯಯವಿಲ್ಲದೆ)ಅವಲಂಬಿಸಿರುವ  ಪ್ರತ್ಯಯವು  ಅವಿಚ್ಛಿನ್ನವಾಗಿ ಹರಿಯುತ್ತಿದ್ದರೆ ಧ್ಯಾನವಾಗುತ್ತದೆ.(ಪುಟ

೨೨)ಜ್ಞಾನಿಗೆ ಆಕಾಶವು ಯಾವಾಗಲೂ ಮಾಯಾಕಾಯ೯ವಾಗಿಯೂ  ಸದ್ವಸ್ತುವಾದ ಬ್ರಹ್ಮವು  ನಿರವಕಾಶ ಪೂವ೯ಕವಾಗಿಯೂ  ಪ್ರಕಾಶಿಸುವುದು.(ಪುಟ ೪೮)

೨೩)ಮಾಯೆಯು ಅವ್ಯಕ್ತ.ಅದರ ಕಾಯ೯ವು ವ್ಯಕ್ತ(ಪುಟ ೫೧)

೨೪)ಆಕಾಶಾದಿ ಭೂತಪಂಚಕದಲ್ಲಿಮುಂದುಮುಂದಿನವು ಹಿಂದು ಹಿಂದಿನ  ಭೂತದ ಹತ್ತನೆಯ  ಒಂದು ಭಾಗದಷ್ಟಿದೆಯೆಂದು ಪುರಾಣಗಳಲ್ಲಿ ಹೇಳಿದೆ.

೨೫)ಆಕಾಶಾದಿ ಪಂಚಭೂತಗಳು ,ಅವುಗಳ ಕಾಯ೯ಗಳು,ಮಾಯೆ ಇವುಗಳ ಮಿಥ್ಯಾತ್ವವು  ಚಿತ್ತದಲ್ಲಿ ದೃಢವಾಗಿ ನೆಲೆಸಿದ ಮೇಲೆ ಸದ್ವಸ್ತುವು ಅದ್ವೈತ  ಎಂಬ ಬುದ್ಧಿಯು ಎಂದಿಗೂ ಬದಲಾಗುವುದಿಲ್ಲ.(ಪುಟ ೫೫)

೨೬)ಸಾಂಖ್ಯ ,ವೈಶೇಷಿಕ,ಭೌದ್ಧ-ಇವರೇ ಮೊದಲಾದವರು ಅನೇಕ ಯುಕ್ತಿಗಳಿಂದ  ವಣಿ೯ಸಿದ ದ್ವೈತ ಜಗತ್ತು  ವ್ಯವಹಾರದಲ್ಲಿ ನಮಗೂ ಬೇಕಾಗಿದೆ.(ಪುಟ ೫೬).

೨೭)ದ್ವೈತದ ಅನಾವರಣವು ಚಿತ್ತದಲ್ಲಿ ಸ್ಥಿರವಾಗಿ ನೆಲಸಿದರೆ  ಬುದ್ಧಿಯು  ಅದ್ವೈತ ಬ್ರಹ್ಮಸ್ವರೂಪದಲ್ಲಿ ಸ್ಥಿರವಾಗುವುದು.ಅಂಥ ಸ್ಥಿರತ್ವ ಬುದ್ಧಿಯುಳ್ಳ  ಮುಷ್ಯನು ಜೀವನ್ಮುಕ್ತನೆನಿಸುವನು.(ಪುಟ ೫೭)

೨೮)ಅಂತಕಾಲವೆಂದರೆ ವತ೯ಮಾನ ದೇಹದ ಪಾತವಲ್ಲ.ಸದ್ರೂಪವಾದ ಅದ್ವಯ ಬ್ರಹ್ಮಕ್ಕೂ  ಅನೃತವಾದ ದ್ವೈತಕ್ಕೂ ,ಅನ್ಯೋನ್ಯ-ಅಧ್ಯಾಸ-ಲಕ್ಷಣವುಳ್ಳ  ಯಾವ ಐಕ್ಯಜ್ಞಾನವಿದೆಯೋ ಅದರ ಅಂತಕಾಲ.ಎಂದರೆ ಅದ್ವೈತ -ದೈತಗಳ ಭೇದ ಬುದ್ಧಿ.(ಪುಟ ೫೭)

೨೯)ಇವನು ರೋಗವಿಲ್ಲದೆ ಕುಳಿತುಕೊಂಡು ಅಥವಾ ರೋಗಿಯಾಗಿ ನೆಲದ ಮೇಲೆ ಹೊರಳಾಡುತ್ತ ಅಥವಾ ಮೂಛಿ೯ತನಾಗಿ  ಪ್ರಾಣಗಳನ್ನು ಬಿಟ್ಟರೂ  ಯಾವ ವಿಧದಿಂದಲೂ  ದ್ವೈತ ಭ್ರಾಂತಿಯು  ಉಂಟಾಗುವುದಿಲ್ಲ.(ಪುಟ೫೮)

0)ವೇದ ಪ್ರಮಾಣದಿಣದ ಹುಟ್ಟಿದ ಬ್ರಹ್ಮವಿದ್ಯೆಯು  ಪ್ರಬಲವಾದ ಮತ್ತೊಂದು ಪ್ರಮಾಣವಿಲ್ಲದೆ ನಾಶವಾಗುವುದಿಲ್ಲ.ವೇದಕ್ಕಿಂತ ಪ್ರಬಲವಾದ ಪ್ರಮಾಣವನ್ನು ನಾವುನೋಡಲಾರೆವು.(ಪುಟ ೫೮)

೩೧)ಮರಣಕಾಲದಲ್ಲಿ ಕೂಡ ಚೇದಾಂತದಿಂದ ಸಿದ್ಧಿಸಿದ ಸದದ್ವೈತವು  ಭಾಧಿತವಾಗುವುದಿಲ್ಲ.ಆದ ಕಾರಣ  ಪಂಚಭೂತಗಳ ವಿವೇಕದಿಂದ ಮೋಕ್ಷವು ಸಿದ್ಧವಾಗುವುದು.(ಪುಟ ೫೯)
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

)ದ್ವೈತವಿವೇಕ ಪ್ರಕರಣ:

) ಮಾಯೆಯನ್ನೇ ಪ್ರಕೃತಿ ಎಂದೂ  ಮಾಯೋಪಾಧಿಕನನ್ನೇ  ಮಹೇಶ್ವರನೆಂದೂ ತಿಳಿಯಬೇಕು.ಮಾಯೋಪಾಧಿಕನಾದ ಈಶ್ವರನೇ  ಜಗತ್ತನ್ನೆಲ್ಲ ಸೃಷ್ಟಿಸುತ್ತಾನೆಂದು ತಿಳಿಯಬೇಕು ಎಂದು ಶ್ವೇತಾಶ್ವತರ ಶಾಖೆಯವರು ಹೇಳುತ್ತಾರೆ.(ಪುಟ೭೫)

)ಸೃಷ್ಟಿಗೆ ಮೊದಲು  ಜಗತ್ತೆಲ್ಲವೂ ಆತ್ಮನೇ ಆಗಿತ್ತು.'ಲೋಕಗಳನ್ನು ಸೃಷ್ಟಿಸುವೆನು'ಎಂದು ಅವನು ಆಲೋಚಿಸಿದನು. ಪರಮಾತ್ಮನು ತನ್ನ ಸಂಕಲ್ಪ ಬಲದಿಂದಲೇ  ಲೋಕಗಳನ್ನೆಲ್ಲ ಸೃಷ್ಟಿಸಿದನು.(ಪುಟ೭೫)

) ಆತ್ಮನಾದ ಬ್ರಹ್ಮದಿಂದಲೇ  ಆಕಾಶ ವಾಯು ಅಗ್ನಿ ಜಲ ಭೂಮಿ ಸಸ್ಯಗಳು  ಅನ್ನ ಶರೀರಗಳು -ಇವುಗಳು ಒಂರಿಂದ ಒಂದು ಕ್ರಮವಾಗಿ ಉತ್ಪನ್ನವಾದವು.(ಪುಟ ೭೬)

)ಅಗ್ನಿಯಿಂದ ಕಿಡಿಗಳು ಹೇಗೆ ಉತ್ಪನ್ನವಾಗುತ್ತವೆಯೋ ಹಾಗೆಯೇ ಅಕ್ಷರದಿಂದ ಚೇತನವೂ  ಜಡವೂ ಆದ ವಿವಿಧ ವಸ್ತುಗಳು  ಹುಟ್ಟ್ಯತ್ತವೆ-ಎಂದು ಅಥವ೯ಣ ಶ್ರುತಿಯು ಹೇಳುತ್ತದೆ.

)ಸೃಷ್ಟಿಗೆ ಮೊದಲು ಜಗತ್ತು ಅವ್ಯಾಕೃತ ಶಬ್ದದಿಂದ  ಹೇಳಲ್ಪಟ್ಟ ಬ್ರಹ್ಮವಾಗಿಯೇ ಇತ್ತು. ಈಗ ದೃಶ್ಯವಾದ ನ್ಆಮರೂಪಗಳಿಂದ ವ್ಯಕ್ತವಾಗಿದೆ. ನಾಮರೂಪಗಳು ವಿರಾಟ್ ಮೊದಲಾದ  ಸ್ಥೂಲಕಾಯ೯ಗಳಲ್ಲಿ ಸ್ಫುಟವಾಗಿ ತೋರುತ್ತದೆ.(ಪುಟ೭೭)

)ಈಶ್ವರನು ದೇಹಸಂಬಂಧಿವಾದ ಬೇರೆ ರೂಪವನ್ನು ಮಾಡಿ  ಶರೀರಸಮೂಹವನ್ನು ಪ್ರವೇಶಿಸಿದನೆಂದು  ಉಪನಿಷತ್ತುಗಳು ಹೇಳುತ್ತವೆ.ಪ್ರಾಣಗಳನ್ನು ಧರಿಸಿರುವುದರಿಂದ ಜೀವತ್ವವುಂಟಾಯಿತು.(ಪುಟ೭೮)
(ಅದನ್ನು(ಜಗತ್ತನ್ನು) ಸೃಷ್ಟಿಸಿ ಅದನೇ ಪ್ರವೇಶಿಸಿದನು.ತತ್ ಸೃಷ್ಟಾ ತದೇವ ಅನುಪ್ರಾವಿಶತ್)(ತೈ...)

)ಸೂಕ್ಷ್ಮಶರೀರದ ಕಲ್ಪನೆಗೆ ಅಧಾರವಾದ ಚೈತನ್ಯ  ಚೈತನ್ಯದಲ್ಲಿ ಕಲ್ಪಿಸಲ್ಪಟ್ಟ ಸೂಕ್ಷ್ಮಶರೀರ  ಮತ್ತು ಸೂಕ್ಷ್ಮ ಶರೀರದಲ್ಲಿರುವ ಚೈತನ್ಯದ ಪ್ರತಿಬಿಂಬ - ಮೂರರ ಸಮೂಹವು ಜೀವ ಶಬ್ದದಿಂದ ಹೇಳಲ್ಪಡುತ್ತದೆ.(ಪುಟ ೭೮)

)ಮಹೇಶ್ವರ ಸಂಬಂಧಿಯಾದ ಯಾವ ಶಕ್ತಿಯುಂಟೊ  ಅದಕ್ಕೆ ಜಗನ್ನಿಮಾ೯ಣ ಸಾಮಥ್ಯವಿರುವಂತೆ  ಮೋಹನ ಸಾಮಥ್ಯ೯ವೂ ಇರುತ್ತದೆ. ಮೋಹನ ಸಾಮಥ್ಯ೯ವು ಜೀವನನ್ನು ಮೋಹಗೊಳಿಸುತ್ತದೆ.(ಪುಟ ೭೯)

೯)ಜೀವನು  ಮೋಹದಿಂದ ಅನೀಶ್ವರ ಭಾವವನ್ನು ಪಡೆದು  ಶರೀರದಲ್ಲಿ ತಾದಾತ್ಮ್ಯಾಭಿಮಾನವನ್ನು ಹೊಂದಿದವನಾಗಿ ಶೋಕಿಸುತ್ತಾನೆ.ಈಶ್ವರನಿಂದ ಸೃಷ್ಟಿಸಲ್ಪಟ್ಟ ದ್ವೈತವೆಲ್ಲವೂ  ಸಂಕ್ಷೇಪವಾಗಿ ಹೇಳಲ್ಪಟ್ಟಿತು.(ಪುಟ ೭೯)

0)ಸಪ್ತಾನ್ನ ಬ್ರಾಹ್ಮಣದಲ್ಲಿ ಜೀವನಿಂದ ಸೃಷ್ಟಿಸಲ್ಪಟ್ಟ  ದ್ವೈತ ಜಗತ್ತನ್ನು ವಿವರವಾಗಿ ಹೇಳಿದೆ.ಜೀವನು ಜ್ಞಾನದಿಂದಲೂ ಕಮ೯ದಿಂದಲೂ ಏಳು ಬಗೆಯಾದ  ಅನ್ನವನ್ನು ಸೃಷ್ಟಿಸಿದನೆಂದು ಹೇಳಿದೆ.(ಪುಟ ೭೯)

೧೧)ಸಪ್ತಾನ್ನಗಳು(ಏಳು ಅನ್ನಗಳು):
) ಬತ್ತ ಮೊದಲಾದವು -ಮನುಷ್ಯನ ಅನ್ನ
) ಮಾಡುವ ಹೋಮಗಳು-ದೇವತೆಗಳ ಅನ್ನ   
)ಪಶುಗಳ ಅನ್ನ -ಹಾಲು.
) ಆತ್ಮನ ಅನ್ನ-ವಾಕ್ ಪ್ರಾಣ ಮನಸ್ಸು ಇವು ಆತ್ಮನ ಅನ್ನ.(ಪುಟ 0)

೧೨) ಸಪ್ತಾನ್ನಗಳು ಈಶ್ವರನಿಂದ ಸೃಷ್ಟಿಸಲ್ಪಟ್ಟಿದ್ದರೂ  ಜೀವನು ತನ್ನ ಜ್ಞಾನ ಕಮ೯ಗಳಿಂದ  ಅವುಗಳನ್ನು ತನಗೆ ಅನ್ನವಾಗಿ  (ಭೋಗೋಪಕರಣಗಳನ್ನಾಗಿ ಮಾಡಿಕೊಂಡಿರುತ್ತಾನೆ.(ಪುಟ 0)

೧೩)ತಂದೆಯಿಂದ ಹುಟ್ಟಿದ ಮಗಳು  ಗಂಡನಿಗೆ ಭೋಗ್ಯವಸ್ತುವಾಗಿ  ಇಬ್ಬರಿಗೂ ಸಂಬಂಧಪಟ್ಟಿರುತ್ತಾಳೆ. ಇದೇ ರೀತಿ (ಸಪ್ತಾನ್ನರೂಪವಾಗಿ ಹೇಳಲ್ಪಟ್ಟ್  ಧಾನ್ಯಾದಿ)ಜಗತ್ತು ಈಶನ ಕಾಯ೯ವಾಗಿ ಜೀವನಿಗೆ ಭೋಗ್ಯವಾಗಿ ಇಬ್ಬರಿಗೂ ಸಂಬಂಧ ಪಟ್ಟಿರುತ್ತದೆ.(ಪುಟ ೮೧)

೧೪)ಮನಸ್ಸಿನ ವೃತ್ತಿಯು ಪ್ರಮೇಯದೊಂದಿಗೆ (ಜ್ಞೇಯ)  ಬೆರೆತಾಗ  ವಿಷಯದ ಆಕಾರವನ್ನೇ ಪಡೆಯುವುದು.ಇದನ್ನೇ ಶ್ರೀ ಶಂಕರಾಚಾಯ೯ರೂ ಸುರೇಶ್ವರಾಚಾಯ೯ರೂ ಹೇಳಿರುತ್ತಾರೆ.(ಪುಟ ೮೩)

೧೫)ಒಂದು ಘಟವನ್ನು ನೋಡಿದಾಗ  ಮೃನ್ಮಯ ಧೀಮಯ  ಎಂಬ ಎರಡು ವಿಷಯಗಳಿರುವುವು.ಮೃಣ್ಮಯವಾದ  ಘಟವು ಮನಸ್ಸಿನಿಂದ ಗ್ರಹಿಸಲ್ಪಟ್ಟರೆ  ಮನೋಮಯವಾದ ಘಟವು  ಸಾಕ್ಷಿಯಿಂದ ಗ್ರಹಿಸಲ್ಪಡುತ್ತದೆ.±(ಪುಟ೮೫)

೧೬) ಆಗುದರಿಂದ ಮನೋಮಯವಾದ ವಸ್ತುವನ್ನು ಗ್ರಹಿಸಲು  ಬೇರೊಬ್ಬನಿಲ್ಲವೆಂದು ಹೇಳಕೂಡದು.(ಪುಟ ೮೫)

೧೭)ಮಾನಸ ಪ್ರಪಂಹವಿರುವವರೆಗೆ ಸುಖ ದುಃಖಗಳಿರುತ್ತವೆ.ಅದು ಇಲ್ಲದಿರುವಾಗ ಸುಖ ದುಃಖಗಳಿರುವುದಿಲ್ಲ.(ಪುಟ ೮೫)

೧೮)ಸ್ವಪ್ನಾದಿಗಳಲ್ಲಿ ಬಾಹ್ಯವಸ್ತುಗಳಿಲ್ಲದಿದ್ದರೂ  ಮನುಷ್ಯನು ತನ್ನ ಮನೋವ್ಯಾಪಾರದಿಂದ  ಬಂಧಿತನಾಗುತ್ತಾನೆ.ಸಮದಾಧಿ-ಸುಷುಪ್ತಿ-ಮೂಛೆ೯ಗಳಲ್ಲಿ ವಸ್ತುಗಳಿದ್ದರೂ  ಬಂಧಿತವಾಗುವುದಿಲ್ಲ.(ಪುಟ೮೫)

೧೯)ದೂರದೇಶಕ್ಕೆ ಹೋಗಿದ್ದ ತನ್ನ ಮಗನು ಬದುಕಿರುವಾಗಲೂ ಅವನ ತಓದೆಯು  ಒಬ್ಬ ವಂಚಕನಿಂದ 'ನಿನ್ನ ಮಗನು ಸತ್ತನು' ಎಂಬಸುಳ್ಳು ಮಾತನ್ನು ಕೇಳಿ ,ತನ್ನ ಮಗನು ಸತ್ತನು ಎಂದು ಭಾವಿಸಿ ರೋದಿಸುತ್ತಾನೆ. ಮಗನು ಸತ್ತಿದ್ದರೂ  ಮರಣ ವಾತೆ೯ಯನ್ನು ಕೇಳದ ತಂದೆಯು ರೋದಿಸುವುದಿಲ್ಲ.ದುದರಿಂದ ಸಮಸ್ತ ಜೀವರಾಶಿಗೆ  ಮಾನಸ ಜಗತ್ತೇ ಬಂಧನವನ್ನುಂಟು ಮಾಡುತ್ತದೆ.
(ಪುಟ ೮೬)   

0)ಬಾಹ್ಯ ವಸ್ತುವು ವ್ಯಥ೯ವಾದರೂ ಅದನ್ನು ನಿರಾಕರಿಸಲಾರೆವು.ಪ್ರತಾಕ್ಷ್ಯಾದಿ ಪ್ರಮಾಣಗಳು ವಸ್ತು ಸಿದ್ಧಿಯನ್ನು ಅಪೇಕ್ಷಿಸುತ್ತವೆಯೇ ಹೊರತು ಪ್ರಯೋಜನವನ್ನು ಅಪೇಕ್ಷಿಸುವುದಿಲ್ಲ.(ಪುಟ೮೬)

೨೧)ಮಾನಸ ಪ್ರಪಂಚವು ಬ್ರಹ್ಮಜ್ಞಾನವಿಲ್ಲದೆ  ನಾಶವಾಗಲಾರದು  ಎಂದು ಉಪನಿಷತ್ತುಗಳು ಭೇರಿನಾದದಿಂದ  ಘೋಷಿಸುತ್ತವೆ.(ಪುಟ೮೭)

೨೨)ಈಶ್ವರನಿಂದ ಸೃಷ್ಟಿಸಲ್ಪಟ್ಟ ದ್ವೈತವು ನಾಶವಾಗದಿದ್ದರೂ  ಅದನ್ನು ಮಿಥ್ಯೆಯೆಂದು ತಿಳಿದು  ಪರಬ್ರಹ್ಮವನ್ನು ಅರಿತುಕೊಳ್ಳುವುದಕ್ಕೆ ಅದ್ವೈತಿಗೆ ಶಕ್ಯವಾಗುತ್ತದೆ.(ಪುಟ ೮೭) )

೨೩)ಈಶ್ವರ ನಿಮಿ೯ತವಾದ ಬಾಧಕವಲ್ಲ.ಗುರು ಶಾಸ್ತ್ರಾದಿ ರೂಪವಾಗಿ  ಬ್ರಹ್ಮಜ್ಞಾನಕ್ಕೆಸಾಧಕವಾಗಿರುತ್ತದೆ.ಆಕಾಶಾದಿರೂಪವಾದ ದ್ವೈತವನ್ನು ನಿವಾರಿಸಲು ನಮ್ಮಿಂದ ಶಕ್ಯವಲ್ಲ.(ಪುಟ ೮೮)

೨೪)ಬ್ರಹ್ಮಜ್ಞಾನವಾಗುವವರೆಗೂ  ಶಾಸ್ತ್ರೀಯ ಪ್ರಪಂಚವನ್ನು ಒಪ್ಪಿಕೊಳ್ಳಬೇಕು.(ಪುಟ೮೮)

೨೫)ಮೇಧಾವಿಯಾದವನು ಶಾಸ್ತ್ರಗಳನ್ನು ಓದಿ  ಪುನಃಪುನಃ ಅಭ್ಯಾಸ ಮಾಡಿ ಪರಬೆಹ್ಮವನ್ನು ಸಾಕ್ಷಾತ್ಕರಿಸಿ ,ನಂತರ ಶಾಸ್ತ್ರಗಳನ್ನು ಪಂಜಿನಂತೆ ಬಿಡಬೇಕು.(ಅಮೃತಬಿಂದೋಪನಿಷತ್  ಮೊದಲನೆಯ ಶ್ಲೋಕ)(ಪುಟ ೮೯).

೨೬)ಶಾಸ್ತ್ರಜ್ಞಾನದಲ್ಲಿಯೂ  ಅನುಭವದಲ್ಲಿಯೂ  ತತ್ಪರನಾದ ಮೇಧಾವಿಯು  ಗ್ರಂಥವನ್ನು ಅಭ್ಯಾಸ ಮಾಡಿದಮೇಲೆ-ಧಾನ್ಯಾಥಿ೯ಯು ಹುಲ್ಲನ್ನು ತ್ಯಜಿಸುವಂತೆ -ಗ್ರಂಥಗಳನ್ನು ಸಂಪೂಣ೯ವಾಗಿ ತ್ಯಜಿಸಬೇಕು!(ಬ್ರಹ್ಮಬಿಂದೂಪನಿಷತ್. ೧೮ನೆಯ ಶ್ಲೋಕ(ಪುಟ ೮೯)

೨೭).ಆತ್ಮನೊಬ್ಬನನ್ನೇ  ತಿಳಿದುಕೊಳ್ಳಿರಿ. ಬೇರೆ ಮಾತುಗಳನ್ನು ಬಿಡಿರಿ.;ವಿವೇಕಿಯು ವಾಕ್ಕನ್ನು ಮನಸ್ಸಿನಲ್ಲಿ ಲಯ ಮಾಡಿಹೊಳ್ಳಬೇಕು-ಇವೇ ಮೊದಲಾದ ಶ್ರುತಿಗಳು (ಶಾಸ್ತ್ರೀಯ- ಮಾನಸಪ್ರಪಂಚ- ತ್ಯಾಗವನ್ನು)ಸ್ಫುಟವಾಗಿ ಹೇಳುತ್ತವೆ.(ಪುಟ 0)

೨೮)ಜ್ಞಾನೋದಯವಾದ ಮೇಲೂ ಜೀವನ್ಮುಕ್ತಿಯ ಸಿದ್ಧಿಗಾಗಿ ಅಶಾಸ್ತ್ರೀಯ ಮಾನಸ ಪ್ರಪಂಚವನ್ನು ಬಿಡಬೇಕು.ಕಾಮಾದಿ ರೂಪವಾದ ಕ್ಲೇಶದಿಂದ ಕೂಡಿದವನಿಗೆ  ಜೀವನ್ಮುಕ್ತತ್ವವೇ ಇಲ್ಲ.(ಪುಟ 0)

೨೯)ಬ್ರಹ್ಮವನ್ನು ಅರಿತುಕೊಂಡ ಮೇಲೂ  ಕಾಮಾದಿಗಳನ್ನು ನಿ:ಶೇಷವಾಗಿ ಬಿಡಲು  ಅಸಮಥ೯ನಾಗಿದ್ದರೆ  ವಿಧಿನಿಷೇಧಗಳನ್ನು ಅತಿಕ್ರಮಿಸಿದ ನಿನಗೆ  ಸ್ವೇಚ್ಛಾಚರಣವುಂಟಾಗುವುದು.(ಪುಟ೯೧)

0) ಬ್ರಹ್ಮಜ್ಞಾನಿಯಾದ ನೀನು ವರಾಹಾದಿ (ಹಂದಿ ಮೊದಲಾದ)ನೀಚಜಂತುಗಳೊಡನೆ  ಸಾಮ್ಯವನ್ನು ಬಯಸಬೇಡ!ಸಮಸ್ತ ವಿತ್ತದೋಷಗಳ ಪರಿತ್ಯಾಗದಿಂದ ದೇವನಂತೆ ಅಲ್ಲ ಜನರ ಪೂಜೆಗೆ ಅಹ೯ನಾಗು.(೯೨)

೩೧)ನಮಗೆ ತೋರುತ್ತಿರುವ ನಾಮರೂಪಾತ್ಮಕವಾದ ಜಗತ್ತೇಇಲ್ಲ-ಎಂಬ ಜ್ಞಾನದಿಂದ ಮನಸ್ಸಿನ ದೃಷ್ಯ ಪ್ರಪಂಚವು ನಿವಾರಿಸಲ್ಪಟ್ಟರೆ  ಆಗ ನಿರತಿಶಯ ಮೋಕ್ಷವು ಉಂಟಾಗುತ್ತದೆ.(ನೇಹ ನಾನಾಸ್ತಿ ಕಿಂಚನ ಇಲ್ಲ ನಾನಾತ್ವವು ಸ್ವಲ್ಪವೂ ಇಲ್ಲ.ಬೃ....೧೯)

೩೨)ಯಾವನಿಗೆ ಚಿತ್ತ ವಿಕ್ಷೇಪವಿಲ್ಲವೊ ಅವನಿಗೆ ಬ್ರಹ್ಮವಿದನೆಂಬ ಹೆಸರು ಹೊಂದುವುದಿಲ್ಲ.ಏಕೆಂದರೆ 'ಇವನು ಬ್ರಹ್ಮವೇ'ಎಂದು ವೇದಾಂತ ಪಾರಗರಾದ  ಮುನಿಗಳು ಹೇಳುತ್ತಾರೆ.( ಸ್ವಯಂ ಬ್ರಹ್ಮ ಸ್ವರೂಪವಾಗಿರುವಾಗ ಜ್ಞಾನಿಯು  ಅವನನ್ನು ಬ್ರಹ್ಮವಿದನೆಂದು ಕರೆಯುವುದು ಯುಕ್ತವಲ್ಲ.)(ಪುಟ ೯೫)

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,


)ಮಹಾವಾಕ್ಯ ವಿವೇಕ ಪ್ರಕರಣ:

)ಪ್ರಜ್ಞಾನಂ ಬ್ರಹ್ಮ(....):
ಯಾವುದರಿಂದ ಪುರುಷನು ದಶ೯ನ ಯೋಗ್ಯವಾದ ರೂಪವನ್ನು ನೋಡುತ್ತಾನೆಯೊ  ಶಬ್ದಗಳನ್ನು ಕೇಳುತ್ತಾನೆಯೊ ಗಂಧಗಳನ್ನು ಆಘ್ರಾಣಿಸುತ್ತಾನೆಯೊ  ಮಾತುಗಳನ್ನಾಡುತ್ತಾನೆಯೊ  ಸಿಹಿ ಕಹಿಗಳನ್ನು ಅರಿಯುತ್ತಾನೆಯೊ  ಅದು ರಜ್ಞಾನವೆಂದು ಹೇಳಲ್ಪಟ್ಟಿದೆ.(ಪುಟ ೯೭)

)ಬ್ರಹ್ಮ ಇಂದ್ರ  ಮೊದಲಾದ ದೇವತೆಗಳಲ್ಲಿಯೂ ,ಮನುಷ್ಯ ಕುದುರೆ ಹಸು  ಮೊದಲಾದುವುಗಳಲ್ಲಿಯೂ ಇರುವ ಒಂದೇ ಚೈತನ್ಯವು ಬ್ರಹ್ಮವೆನಿಸಿರುವುದು.ಆದುದರಿಂದ ನನ್ನಲ್ಲಿರುವ ಪ್ರಜ್ಞಾನವೂ ಬ್ರಹ್ಮವೆ.(ಪುಟ ೯೭)

 ಅಹಂಬ್ರಹ್ಮಾಸ್ಮಿ (ಬೃ....0) :
) ಪರಿಪೂಣ೯ನಾದ ಪರಮಾತ್ಮನೇ ಮಹಾವಾಕ್ಯದಲ್ಲಿ ಬ್ರಹ್ಮ ಶಬ್ದದಿಂದ ಹೇಳಲ್ಪಡುತ್ತಿರುವನು.'ಆಗಿದ್ದೇನೆ'ಎಂಬುದು ಇವರಿಬ್ಬರ ಐಕ್ಯವನ್ನು ಸೂಚಿಸುತ್ತದೆ.ಆದುದರಿಂದ  ನಾನು ಬ್ರಹ್ಮವಾಗಿದ್ದೇನೆ.(ಜೀವ ಬ್ರಹ್ಮೈಕ್ಯ)(ಪುಟ೯೮)  

  'ತತ್ವಮಸಿ'(ಛಾಂ.)
) ಯಾವುದು ಸೃಷ್ಟಿಗೆ ಮೊದಲು ನಾಮರೂಪರಹಿತವೂ  ಏಕವೂ ಅದ್ವಿತೀಯವೂ ಆಗಿತ್ತೊ  ಮತ್ತು ಜಿಜ್ಞಾಸುಗಳಿಗೆ ಈಗಲೂ ಕೂಡ ವಿಚಾರ-ದೃಷ್ಟಿಯಿಂದ ಹಾಗೆಯೊ ಇದೆಯೊ  ಸದ್ವಸ್ತುವು  ಈವಾಕ್ಯದಲ್ಲಿ(ತತ್ವಮಸಿ) ತತ್ ಪದದಿಂದ ಹೇಳಲ್ಪಡುತ್ತದೆ.( ದೇವ ಸೋಮ್ಯ ಇದಮಗ್ರ ಆಸೀದೇಕಮೇವಾ ದ್ವಿತೀಯಂ.(ಛಾಂ....)(ಪುಟ ೯೮)

)ಮುಮುಕ್ಷುವಿನ ದೇಹೇಂದ್ರಿಯಗಳನ್ನು ಅತಿಕ್ರಮಿಸಿರುವ(ದಾಟಿದ) ಸದ್ವಸ್ತುವು  ಮಹಾವಾಕ್ಯದಲ್ಲಿ ತ್ವೋ ಪದದಿಂದ ಹೇಳಲ್ಪಡುವುದು.'ಆಗಿದ್ದೀಯೆ'ಎಂಬ ಪದದಿಂದ ಐಕ್ಯವು ಗ್ರಹಿಸಲ್ಪಡುವುದು.ಎಲ್ಲರೂ ಐಕ್ಯವನ್ನು ಅನುಭವಿಸಲಿ.(ಪುಟ ೯೯)

'ಅಯಮಾತ್ಮಾ ಬ್ರಹ್ಮ':
) ಆತ್ಮನೇ ಬ್ರಹ್ಮವು'ಎಂಬ ಮಹಾವಾಕ್ಯದಲ್ಲಿ  '' ಎಂಬ  ಪದವು ಆತ್ಮನಿಗೆ ಸ್ವಯಂಪ್ರಕಾಶತ್ವದಿಂದ  ಪ್ರತ್ಯಕ್ಷವನ್ನು ಸೂಚಿಸುತ್ತದೆ.ಅಹಂಕಾರದಿಂದ ಪ್ರಾರಂಭಿಸಿ ,ಶರೀರದವರೆಗೆ  ಎಲ್ಲಕ್ಕಿಂತಲೂ ಒಳಗಿರುವುದರಿಂದ ಆತ್ಮನು ಪ್ರತ್ಯಗಾತ್ಮನೆನಿಸುವನು.(ಪುಟ೯೯)

)ಬ್ರಹ್ಮ ಶಬ್ದದ ಅಥ೯'ತೋರುತ್ತಿರುವ ಸಮಸ್ತ ಜಗತ್ತಿಗೆ ಅಧಿಷ್ಠಾನವಾದ  ಯಾವ ವಸ್ತುವಿದೆಯೊ  ಅದು ಬ್ರಹ್ಮಶಬ್ದದಿಂದ  ಹೇಳಲ್ಪಡುತ್ತದೆ. ಬ್ರಹ್ಮವೇ ಸ್ವಯಂಪ್ರಕಾಶವಾದ ಆತ್ಮನೇ ಆಗಿದೆ.(ಪುಟ೧00)

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,


No comments:

Post a Comment