Sunday, 2 February 2020

Vidyaranya Saara Sangraha - Jeevanmukthi Viveka - adhyaya - 4


ನಾಲ್ಕನೆಯ ಪ್ರಕರಣ:ಸ್ವರೂಪಸಿದ್ಧಿ-ಪ್ರಯೋಜನ:

 1) ಜೀವನ್ಮುಕ್ತಿಗೆ  ಐದು ಪ್ರಯೋಜನಗಳಿರುತ್ತವೆ.1)ಜಾನದ ರಕ್ಷಣೆ 2)ತಪಸ್ಸು 3)ವಿಸಂವಾದದ ಅಭಾವ 4)ದುಃಖನಾಶ 5)ಸುಖದ ಆವಿಭಾ೯ವ.(ಪುಟ308)

2)ಮನುಷ್ಯನು ತನ್ನ ಸಂಕಲ್ಪ ವಶದಿಂದಲೇ ಬದ್ಧನಾಗುತ್ತಾನೆ.ಸಂಕಲ್ಪವನ್ನು  ತ್ಯಜಿಸಿದಾಗ ಮುಕ್ತನಾಗುತ್ತಾನೆ.(ಪುಟ310)

3)ತ್ವವನ್ನರಿತಿದ್ದರೂ ಕೂq  ಯಾವನ ಚಿತ್ತವು ವಿಶ್ರಾಂತವಾಗಿರುವುದಿಲ್ಲವೋ ಅಂಥವನಿಗೆ ಸಂಶಯ ಉಂಟಾಗುತ್ತದೆ ಮತ್ತು ಸಂಶಯವು ಅಜ್ಞಾನದಂತೆಯೇ ಮೋಕ್ಷಕ್ಕೆ ಪ್ರತಿಬಂzs ವಾಗಿರುತ್ತದೆ.(ಪುಟ312)

4)ಆದ್ದರಿಂದಲೇ ಶ್ರೀಕೃಷ್ಣನು ಜ್ಞಾನವಿಲ್ಲದವನೂ ಶ್ರದಧೆಯಿಲ್ಲದವನೂ  ಸಂಶಯಾತ್ಮನೂ( ಮೂವರೂ) ನಾಶಹೊಂದುತ್ತಾರೆ.ಸಂಶಯಾತ್ಮನಿಗೆ  ಲೋಕವೂ ಇಲ್ಲ ಪರಲೋಕವೂ ಇಲ್ಲ.ಸುಖವೂ ಇಲ್ಲ.(ಗೀತಾ 4.40)(ಪುಟ312)

5)ಆದ್ದರಿಂದ ಮುಮುಕ್ಷುವು  ಸಂಶಯವನ್ನು ಎಲ್ಲಾ ರೀತಿಯಿಂದಲೂ ಭೇದಿಸಬೇಕು.ಆದ್ದರಿಂದಲೇ ಶ್ರುತಿಯು 'ಎಲ್ಲಾ ಸಂಶಯಗಳೂ ಕತ್ತರಿಸಲ್ಪಡುತ್ತವೆ.(ಮುಂಡಕ..2.2.8)(ಪುಟ 312)

6)ಅಸಂಭಾವನೆ(ಶ್ರದ್ಧೆ ಇಲ್ಲದಿರುವಿಕೆ),ವಿಪರೀತ ಭಾವನೆ ಎಂಬ ರೂಪಗಳನ್ನುಳ್ಳ ಸಂಶಯ-ವಿಪಯ೯ಯಗಳು(ವಿಪರೀತ ಜ್ಞಾನ) ತತ್ವಜ್ಞಾನದ ಫಲವನ್ನು ತಡೆದು ಬಿಡುತ್ತವೆ.(ಪುಟ 314)

7)ಆದ್ದರಿಂದ ಯಾವನ ಚಿತ್ತವು  ಇನ್ನೂ ವಿಶ್ರಾಂತಿಯನ್ನು ಹೊಂದಿರುವುದಿಲ್ಲವೋ ಅಂಥವನಿಗೆ ಸಂಶಯ -ವಿಪಯ೯ಯಗಳ ಮೂಲಕತತ್ವಜ್ಞಾನದ ಫಲಕ್ಕೆ ಅಡ್ಡಿಯಾಗುವುದೆಂಬ  ಲಕ್ಷಣವನ್ನುಳ್ಳ ತಡೆಯಿಂದ -ರಕ್ಷಣೆಯು ಬೇಕೇಬೇಕು.(ಪುಟ314).

8) ವಿಶ್ರಾಂತಚಿತ್ತನಾದವನಿಗೆ ಮನೋನಾಶದ ಮೂಲಕ ಯಾವಾಗ ಜಗತ್ತೇ ಪ್ರಲೀನವಾಗುತ್ತದೆಯೋ  ಆಗ ಸಂಶಯ -ವಿಪಯ೯ಯಗಳ ಪ್ರಸಂಗವೆಲ್ಲಿಂದ ಬಂದೀತು?ಜಗತ್ತೆಂಬ ತೋಕೆ೯ಯು ಹೊರಟು ಹೋಗಿರುವಂಥ ಬ್ರಹ್ಮಜ್ಞಾನಿಯ ದೇಹವ್ಯಾಪಾರವೂ ಕೂಡ ಸ್ವಪ್ರಯತ್ನವಿಲ್ಲದೆಯೇ  ಪರಮೇಶ್ವರನಿಂದ ಪ್ರೇರಿತವಾದ  ಪ್ರಾಣವಾಯುವಿನ ಮೂಲಕ ಉಂಟಾಗುತ್ತದೆ.ಆದ್ದರಿಂದಲೇ ಛಂದೋಗರು ಹೀಗೆ ಪಠಿಸುತ್ತಾರೆ:ಉಪಜನವಾದ ಶರೀರವನ್ನು  ಸ್ಮರಿಸಿಕೊಳ್ಳದೆ ಸಂಚರಿಸುತ್ತಾನೆ.ರಥಕ್ಕೆ ಕಟ್ಟಲ್ಪಟ್ಟ ಮೃಗದಂತೆ  ಪ್ರಾಣನು ಶರೀರಕ್ಕೆ ಕಟ್ಟಲ್ಪಟ್ಟಿರುತ್ತಾನೆ.(ಛಾಂ.8.12.3.)(ಪುಟ315)

) ಆತ್ಮಕ್ರೀಡನೂ ಆತ್ಮರತಿಯೂ  ಕ್ರಿಯಾವಂತನೂ ಆದ ಇವನು ಬ್ರಹ್ಮವಿದರಲ್ಲಿ ವರಿಷಠನು.(ಮುಂಡಕ.3.1.4).ಇಲ್ಲಿ ನಾಲ್ವರು ಸೂಚಿಸಲ್ಪಟ್ಟಿದ್ದಾರೆ.ಬ್ರಹ್ಮವಿದನು ಮೊದಲನೆಯವನು.ಬ್ರಹ್ಮವಿರ್ವರ ಎರಡನೆಯವನು ಬ್ರಹ್ಮವಿದ್ವರೀಯ ಮೂರನೆಯವನು.ಬ್ರಹ್ಮವಿದ್ವರಿಷ್ಠ ನಾಲ್ಕನೆಯವನು.  ನಾಲ್ವರು ಸಪ್ತಯೋಗಭೂಮಿಗಳಲ್ಲಿ  ನಾಲ್ಕನೆಯ ಯೋಗಭೂಮಿಯಿಂದಪ್ರಾರಂಭಿಸಿದ ನಾಲ್ಕ್ಯ ಯೋಗಭೂಮಿಗಳನ್ನು  ಕ್ರಮವಾಗಿ ಹೊಂದಿರುತ್ತಾರೆ ಎಂದು ತಿಳಿಯಬೇಕು.(ಪುಟ 317)

10)ಯೋಗದ ಸಪ್ತ ಭೂಮಿಕೆಗಳು: 1)ಶುಭೇಚ್ಛೆ 2) ವಿಚಾರಣೆ.3)ತನುಮಾನಸ ಮೂರನೆಯದು. 4) ಸತ್ವಾಪತ್ತಿ 5)ಅಸಂಸಕ್ತಿ 6)ಪದಾಥ೯ ಅಭಾವಿನಿ.7)ತುಯ೯ಗಾ .
1) ಶುಭೇಚ್ಛೆ: ಜ್ಞಾನಭೂಮಿಯು 'ನಾನೇಕೆ ಹೀಗಿದ್ದೇನೆ?ಶಾಸ್ತ್ರದ ಮತ್ತು ಸಜ್ಜನರ ಸಹಾಯದಿಂದ ಪರೀಕ್ಷಿಸಿಕೊಳ್ಳುತ್ತೇನೆ'ಎಂದು ವೈರಾಗ್ಯ ಪೂವ೯ಕವಾಗಿ ಇಚ್ಛಿಸುವುದು ಶಭೇಚ್ಛೆ.

2)ವಿಚಾರಣೆ:ಸದ್ವಿಚಾರದಲ್ಲಿ ಉಂಟಾಗುವ ಆಸಕ್ತಿ.

3)ತನುಮಾನಸ: ವಿಚಾರಣೆ  ಮತ್ತು ಶುಭೇಚ್ಛೆ ಇವುಗಳ ಅಭ್ಯಾಸದಿಣದ -ಇಂದ್ರಿಯಾಥ೯ಗಳಲ್ಲಿರುವ  ಆಸಕ್ತಿಯು ಹೋಗುವುದೋ ಅದು ತನುಮಾನಸ.

4)ಸತ್ವಾಪತ್ತಿ:ಮೊದಲಮೂರು ಯೋಗಭೂಮಿಗಳ ಅಭ್ಯಾಸದಿಂದ ಮನಸ್ಸಿನಲ್ಲಿ ಉಂಟಾಗುವ ವಿಷಯ ವಸ್ತು ವಿರಕ್ತಿಯ ದೆಸೆಯಿಂದ  ಶುದ್ಧವಾದ ಸತ್ಸ್ವರೂಪದಲ್ಲಿ  ನೆಲೆಸುವಿಕೆಯು ಸತ್ವಾಪತ್ತಿ.

5)ಅಸಂಸಕ್ತಿ:ಮೊದಲ ನಾಲ್ಕು  ಅವಸ್ಥೆಗಳ ಅಭ್ಯಾಸದಿಂದ ಉಂಟಾಗುವ ,ವಿಷಯಗಳೊಡನೆ  ಸಂಸಗ೯ವನ್ನು ಹೊಂದಿರುವುದೆಂಬ ,ಸತ್ವದಲ್ಲಿ ದೃಢವಾಗಿ ನೆಲೆಸಿರುವುದೆಂಬ  ಯಾವ ಫಲವಿದೆಯೋ ಅದು ಅಸಂಸಕ್ತಿ ಎನಿಸುತ್ತದೆ.

6)ಪದಾಥ೯ -ಅಭಾವಿನಿ: ಆತ್ಮನಲ್ಲಿಯೇ ವಿಶ್ರಂತಿಯನ್ನು ಹೊಂದುವುದು.ಬಾಹ್ಯಾಭ್ಯಂತರ  ವಸ್ತುಗಳ ಅಗ್ರಹಣ ಇದು ಪದಾಥ೯ ಅಭಾವಿನಿ ಎಂಬ ಆರನೆಯ ಭೂಮಿಕೆ.

7)ತುಯ೯ಗ(ತುರೀಯ):ಭೇದಗಳೆಲ್ಲಾ ಗ್ರಹಿಸಲಾಗದಂತೆ ಅಳಿಸಿಹೋಗಿ  ತನ್ನ ಸ್ವರೂಪದಲ್ಲಿಯೇ ನೆಲೆಸಿರುವುದು .ಇದು ತುಯ೯ಗ ಸ್ಥಿತಿ.(ಲಯೋವಾ.13,113,114,116,123)(ಪುಟ 318-31)

11)ಇವುಗಳಲ್ಲಿ  ಮೊದಲ ಮೂರು ಭೂಮಿಕೆಗಳು  ಬ್ರಹ್ಮವಿದ್ಯೆಯ ಸಾಧನವೇ ಹೊರತು  ಬ್ರಹ್ಮವಿದ್ಯೆಯಲ್ಲಿ ಅಂತಗ೯ತವಾಗುವುದಿಲ್ಲ.(ಪುಟ320)

12) ಮೂರರ ಫಲರೂಪವೂ ವೇದಾಂತ ವಾಕ್ಯಾಥ೯ದ ಮೂಲಕ  ಉಂಟಾಗುವ ವಿಕಲ್ಪರಹಿತ (ಬ್ರಹ್ಮ-ಆತ್ಮ-ಐಕ್ಯ) ಸಾಕ್ಷಾತ್ಕಾರವೂ ಆದ
ಆದ ಸತ್ವಾಪತ್ತಿಯೆಂಬ ನಾಲ್ಕನೆಯ  ಭೂಮಿಕೆಯು ಬರುತ್ತದೆ.ನಾಲ್ಕನೆಯ ಭೂಮಿಕೆಯನ್ನು ಹೊಂದಿದವರು  ಅದ್ವೈತದಲ್ಲಿ ಸ್ಥೈಯ೯ವನ್ನು ಹೊಂದಿದಾಗ,ದ್ವೈತವು ಉಪರತಿಯನ್ನು ಪಡೆದಾಗ ,ಲೋಕವನ್ನು ಸ್ವಪ್ನದಂತೆ ಕಾಣುತ್ತಾನೆ.ಅವರ ಚಿತ್ತವು ಶರತ್ಕಾಲದ ಮೇಘದಂತೆ ಲಯಹೊಂದುತ್ತದೆ.ಕೇವಲ ತನ್ನ ಸ್ವರೂಪದಲ್ಲಿ ನೆಲೆನಿಲ್ಲುತ್ತಾನೆ.(ಪುಟ320)

13)ನಾಲ್ಕನೆಯ ಭೂಮಿಯನ್ನು ಪಡೆದಿರುವ ಯೋಗಿಯು  ಬ್ರಹ್ಮವಿದನೆಂದು ಹೇಳಲ್ಪಡುತ್ತಾನೆ.ಐದನೆಯ ಭೂಮಿಕೆಯಿಂದ  ಆರಂಭಿಸಿದ ಮೂರು ಭೂಮಿಕೆಗಳು  ಜೀವನ್ಮುಕ್ತಿಯ ಒಳಭಾದಗಳು.ಐದನೆಯ ಭೂಮಿಕೆಯಲ್ಲಿ ಯೋಗಿಯು ತಾನಾಗಿಯೇ ಎಚ್ಚರಗೊಳ್ಳುತ್ತಾನೆ. ಯೋಗಿಯು ಬ್ರಹ್ಮವಿದ್ವರನು.ಆರನೆಯ ಭೂಮಿಯಲ್ಲಿ ಯೋಗಿಯು ಬಳಿಯಲ್ಲಿರುವವರಿಂದ ಎಚ್ಚರಗೊಳ್ಳುತ್ತಾನೆ.ಇವನು ಬ್ರಹ್ಮವಿದ್ವರೀಯಾನ್ ಆದ ಯೋಗಿಯು. ಎರಡು ಭೂಮಿಗಳಿಗೆ  'ಸುಷುಪ್ತೆ' ಮತ್ತು 'ಗಾಢಸುಷುಪ್ತಿ' ಎಂಬ ಹೆಸರಿದೆ(ಕ್ರಮವಾಗಿ).
'ಸುಷುಪ್ತಿಯನ್ನು ಪಡೆದು ಯೋಗಿಯು  ಎಲ್ಲ ವಿಶೇಷಗಳನ್ನೂ ಶಾಂತವಾಗಿರಿಸಿಕೊಂಡು ಕೇವಲ ಅದ್ವೈತದಲ್ಲಿ ನೆಲೆಸಿರುತ್ತಾನೆ.ನಂತರ ಆರನೆಯ ಭೂಮಿಕೆಯನ್ನು ಪ್ರವೇಶಿಸುತ್ತಾನೆ.ಅಲ್ಲಿ ಅವನು ಅಸತ್ ಅಲ್ಲ ಸದ್ರೂಪನೂ ಅಲ್ಲ.ಅವನಿಗೆ ಅಹಂಕಾರವಾಗಲೀ ಅನಹಂಕಾರವಾಗಲೀ ಇರುವುದಿಲ್ಲ.ದೈತಭಾವನೆಯಾಗಲೀ ಅದೈತಭಾವನೆಯಾಗಲೀ ಇಲ್ಲದೆ ಕೇವಲ  ಮನೋಹೀನನಾಗಿರುತ್ತಾನೆ.ಒಳಗೂ ಹೊರಗೂ ಶೂನ್ಯನಾಗಿ ಆಕಾಶದಲ್ಲಿರುವ ಶೂನ್ಯಕುಂಭದಂತಿರುತ್ತಾನೆ. ಸಮುದ್ರದಲ್ಲಿ ಮುಳುಗಿದ ಕುಂಭದಂತೆ  ಒಳಗೂ ಹೊರಗೂ ಪೂಣ೯ನಾಗಿರುತ್ತಾನೆ.(.ಯೋ.ವಾ.43,7378,77,7)(ಪುಟ322)

14)ತುರೀಯವೆಂಬ  ಹೆಸರುಳ್ಳ ಏಳನೆಯ ಭೂಮಿಕೆಯನ್ನು ಪಡೆದಿರುವ ಯೋಗಿಗೆ ತಾನಾಗಿಯೇ ಆಗಲೀ ಅಥವಾ ಇತರರಿಂದಾಗಲೀ ಎಚ್ಚರಗೊಳ್ಳುವುದೆಂಬುದೇ ಇಲ್ಲ.ಇಂಥ ಯೋಗಿಯನ್ನು ಉದ್ದೇಶಿಸಿಯೇ 'ನಶ್ವರವಾದ ದೇಹವನ್ನು-ಅದು ಕುಳಿತಿರಲಿ ಅಥವಾ ನಿಂತಿರಲಿ  ಸಿದ್ಧನು ನೋಡುವುದಿಲ್ಲ.'(ಭಾಗವತ ವಾಕ್ಯ)ಅಸಂಪ್ರಜಞತ ಸಮಾಧಿಯನ್ನು ಪ್ರತಿಪಾದಿಸಿರುವ  ಯೋಗಶಾಸ್ತ್ರಗಳು ಇಲ್ಲಿಯೇ ನಿಂತಿವೆ.
ಸಾರಾಂಶವಿಷ್ಟೇ.ಐದನೆಯದೇ ಮೊದಲಾದ  ಮೂರು ಭೂಮಿಕೆಗಳ ರೂಪವನ್ನುಳ್ಳ  ಜೀವನ್ಮುಕ್ತಿಯನ್ನು ಸಂಪಾದಿಸಿದಾಗ ದೈತವು ತೋರಿಬರದೆ ಇರುವುದರಿಂದ ತತ್ವಜ್ಞಾನವು ಭಾದೆಯಿಲ್ಲದೆ ರಕ್ಷಿಸಲ್ಪಡುವುದು.ತಪಸ್ಸು ಎರಡನೆಯ ಪ್ರಯೋಜನ.

15)ಯೋಗಭ್ರಷ್ಠನಿಗೆ  ಲೋಕದಲ್ಲಿ ನಾಶವಿಲ್ಲ.ಪರಲೋಕದಲ್ಲಿಯೂ ಇಲ್ಲ.ಏಕೆಂದರೆ ಕಲ್ಯಾಣ ಕಮ೯ಗಳನ್ನು ಮಾಡುವ ಯಾವನೂ ಅಧೋಗತಿಯನ್ನು ಹೊಂದುವುದಿಲ್ಲ.ಯೋಗಭ್ರಞ್ಟನು ಪುಣ್ಯಶಾಲಿಗಳ  ಲೋಕಗಳನ್ನು ಹೊಂದಿ ,ಅಲ್ಲಿ ಅನೇಕ ವಷ೯ಗಳವರೆಗೂ ವಾಸಿಸಿ .ಅನಂತರ ಸದಾಶೀಲರೂ  ಶ್ರೀಮಂತರೂ ಆದವರ ಮನೆಯಲ್ಲಿ ಹುಟ್ಟುವರು..ಅಥವಾ ಧೀಮಂತರಾದ ಯೋಗಿಗಳ ಕುಲದಲ್ಲಿಯೇ ಹುಟ್ಟುವರು.ಇಂಹ ಈಜನ್ಮವು ಲ್ಫಕದಲ್ಲಿ ಹೆಚ್ಚು ದುಲ೯ಭವಾದದ್ದು. ಜನ್ಮದಲ್ಲಿ  ಪೂವ೯ಜನ್ಮ ಸಂಬಂಧವಾದ  ಬುದ್ಧಿ ಸಂಯೋಗವನ್ನು ಹೊಂದುತ್ತಾನೆಕಾಮೇಲೆ ಸಂಸಿದಧಿಗಾಗಿ  ಅಧಿಪ್ರಯತ್ನವನ್ನು ಮಾಡುತ್ತಾನೆ.(ಗೀತಾ 6.37-43)(ಪುಟ325).

16) ಮನಸ್ಸಿನ ಮತ್ತು ಇಂದ್ರಿಯಗಳ ಏಕಾಗ್ರತೆಯೇ ಪರಮ ತಪಸ್ಸು.ಅದು ಎಲ್ಲಾ ಧಮ೯ಗಳಿಗಿಂತಲೂ ಹೆಚ್ಚಿನದು.ಅದು ಪರಧಮ೯ವೆಂದು ಹೇಳಲ್ಪಟ್ಟಿದೆ.(ಪುಟ327)

17)ಕೈಮುತಿಕ ನ್ಯಾಯವು ಕಿಮೇತ ಎನ್ನುವುದರಿಂದ ಬಂದಿದೆ.ಸಣ್ಣ ವಿಷಯದಲ್ಲಿಯೇ ಹೀಗಾದ ಮೇಲೆದೊಡ್ಡದರ ವಿಷಯದಲ್ಲಿ ಹೇಳುವುದೇನಿದೆ?-ಎಂಬುದು ನ್ಯಾಯದ ಅಭಿಪ್ರಾಯ.(ಪುಟ 328)

18)ಉಪಕಾರವನ್ನು ಪಡೆಯುವ ಜನರು ಮೂರುವಿಧ..ಶಿಷ್ಯ,ಭಕ್ತ ನತ್ತು ತಟಸ್ಥ.'ಯಾವನಿಗೆ ಪರಮೇಶ್ವರನಲ್ಲಿ ಪರಾ ಭಕ್ತಿಯಿರುವುದೋ,ಪರಮೇಶ್ವರನಲ್ಲಿದ್ದ ಹಾಗೆ  ಗುರುವಿನಲ್ಲಿಯೂ ಪರಾಭಕ್ತಿಯಿರುವುದೋ ,ಅಂಥ ಮಹಾತ್ಮನಿಗೆಹೇಳಲ್ಪಟ್ಟ ಅಥ೯ಗಳು ಪ್ರಕಾಶ ವಾಗುತ್ತವೆ.(ಶ್ವೇತಾಶ್ವತರ .6.23).ಸ್ಮøತಿಯೂ ಕೂಡ 'ಶ್ರದ್ಧೆಯುಳ್ಳವನೂ  ತತ್ಪರನೂ  ಜಿತೇಂದ್ರಿಯನೂ ಆದವನು ಜ್ಞಾನವನ್ನು ಹೊಂದುತ್ತಾನೆ.ಜ್ಞಾನವನ್ನು ಪಡೆದು ಶೀಘ್ರದಲ್ಲಿಯೇ  ಪರಮಶಾಂತಿಯನ್ನು ಹೊಂದುತ್ತಾನೆ.(ಗೀ ತಾ4.3)(ಪುಟ32)

1)ಅನ್ನದಾನ,ವಸತಿಯ ವಯವಸ್ಥೆ ಮೊದಲಾದವುಗಳ ಮೂಲಕ ಯೋಗಿಯನ್ನು ಸೇವಿಸುತ್ತಿರುವ ಭಕ್ತನು ಅವನ ತಪಸ್ಸನ್ನು ತಾನೇ ಸ್ವೀಕರಿಸುತ್ತಾನೆ.(ಪುಟ 330)

20)ಯೋಗಿಯಿಂದ ನೋಡಲ್ಪಟ್ಟರೆ  ನಾಸ್ತಿಕನೂ ಕೂಡ ಪಾಪದಿಂದ ಮುಕ್ತನಾಗುತ್ತಾನೆ.ಅದನ್ನು ಹೀಗೆ ಹೇಳಿದೆ.'ಯಾವನ ಬುದ್ಧಿಯು ತತ್ವದಲ್ಲಿ ಅನುಭವವನ್ನು ಹೊಂದುವವರೆಗೆ  ಪ್ರವತಿ೯ಸಿದೆಯೋ  ಅವನ ದೃಷ್ಟಿಗೆ ಬಿದ್ದವರೆಲ್ಲಾ  ಸವ೯ಪಾಪಗಳಿಂದಲೂ ಮುಕ್ತರಾಗುತ್ತಾರೆ.(ಸೂ.ಸಂ.2.20.44)(ಪುಟ330)

21)'ಯಾವನ ಮನಸ್ಸು ಬ್ರಹ್ಮವಿಚಾರದಲ್ಲಿ  ಸ್ಥೈಯ೯ವನ್ನು  ಕ್ಷಣಮಾತ್ರವನ್ನಾದರೂ ಹೊಂದಿರುವುದೋ ಅವನು ಸಮಸ್ತ ತೀಥ೯ಗಳಲ್ಲಿಯೂ ಸ್ನಾನ ಮಾಡಿದಂತೆಯೇ.,ಇಡೀ ಭೂಮಿಯನ್ನು ದಾನಮಾಡಿದಂತೆಯೇ,ಸಹಸ್ರ ಯಜ್ಞಗಳನ್ನು ಹೋಮಮಾಡಿದಂತೆಯೇ,ಎಲ್ಲಾ ದೇವತೆಗಳನ್ನೂ ಪೂಜಿಸಿದಂತೆಯೇ.;ಆತನ ಪಿತೃಗಳು ಸಂಸಾರದಿಂದ ಉದ್ಧರಿಸಲ್ಪಡುತ್ತಾರೆ.ಅವನು ಮೂರುಲೋಕಗಳಿಗೂ ಪೂಜ್ಯನು.'
ಯಾವನ ಚಿತ್ತವು  ಅಪಾರವಾದ  ಜ್ಞಾನಾನಂದ ಸಾಗರವಾದ  ಪರಬ್ರಹ್ಮದಲ್ಲಿ ಲೀನವಾಗಿದೆಯೋ  ಅವನ ಕುಲವು ಪವಿತ್ರವಾಗುವುದು.ಆತನ ಜನನಿಯು ಕೃತಾಥ೯ಳಾಗುತ್ತಾಳೆ.ಭೂಮಿಯೇ ಪುಣ್ಯವತಿಯಾಗುತ್ತಾಳೆ.(ಸೂತಸಂಹಿತಾ2.20.45).(ಪುಟ 331)

22)ಯೋಗಿಯ ಶಾಸ್ತ್ರೀಯ ವ್ಯವಹಾರಕ್ಕೆ ಮಾತ್ರ  ತಪೋಭಾವವಿದೆಯೆಂದು ತಿಳಿಯಬಾರದು.ಮತ್ತೇನೆಂದರೆ ಅವನ ಎಲ್ಲಾ ಲೌಕಿಕ ವ್ಯವಹಾರಕ್ಕೂ ಕೂಡ ಇದೆಯೆಂದು ತಿಳಿಯಬೇಕು.ತೈತ್ತಿರೀಯದಲ್ಲಿ ಹೀಗೆ ಹೇಳಿದೆ.'ಹೀಗೆ ಅರಿತಿರುವ  ವಿದ್ವಾಂಸನ  ಯಜ್ಞಕ್ಕೆ ಆತನೇ ಯಜಮಾನನು, ಶ್ರದ್ಧೆಯೇ ಪತ್ನಿ,ಶರೀರವು ಸಮಿತ್ತು,ಎದೆಯೇ ವೇದಿ,ಲೋಮಗಳು ಬಹಿ೯ಗಳು,ವೇದವು ಶಿಖೆ,ಹೃದಯವು ಯೂಪ,ಕಾಮವು ಹವಿಸ್ಸು,ಕೋಪವು ಪಶು,ತಪಸ್ಸೇ ಅಗ್ನಿ,ದಮವೇ ಅಗ್ನಿಯನ್ನು ಆರಿಸುವ ಸಾಧನ,ದಾನವೇ ದಕ್ಷಿಣೆ,ವಾಕ್ಕೇ ಹೋತೃ,ಪ್ರಾಣವು ಉದಾತೃ,ಕಣ್ಣು ಅಧ್ವಯು೯,ಮನಸ್ಸು ಬ್ರಹ್ನಾ,ಶ್ರೋತ್ರವು ಅಗ್ನೀತ್(.ನಾ..80.1).'ಇನ್ನು ಅವನ ತಪಸ್ಸು ದಾನ ಋಜುತ್ವ ಅಹಿಂಸೆ,ಸತ್ಯ-ವಚನ-ಇವೆಲ್ಲ ಯಜ್ಞದ ದಕ್ಷಿಣೆಗಳು'.(ಛಾಂದೋಗ್ಯ..3.17.4) ಎಂದು ಛಂದೋಗರು ಪಥಿಸಿರುತ್ತಾರೆ.(ಪುಟ332)

23)'ಎಲ್ಲಿಯವರೆಗೆ ದೇಹವನ್ನು ಧರಿಸಿರುತ್ತಾನೋ  ಅಲ್ಲಿಯವರೆಗೆ ದೀಕ್ಷಿತನಾಗಿರುತ್ತಾನೆ.ಯಾವುದನ್ನು ತಿನ್ನುತ್ತಾನೋ ಅದು ಹವಿಸ್ಸು.ಏನನ್ನು ಕುಡಿಯುತ್ತಾನೋ ಅದು ಅವನಿಗೆ ಸೋಮಪಾನ,,ಸುಖಪಟ್ಟಾಗ ಅದು ಉಪಸದಗಳು,ಅವನ ಸಂಚಾರ ಕುಳಿತುಕೊಳ್ಳುವುದುಮತ್ತು ನಿಂತುಕೊಳ್ಳುವುದು ಎಂಬ ಕ್ರಿಯೆಗಳು ಪ್ರವಗ್ಯ೯ಗಳು,ಅವನ ಬಾಯಿ ಅಹವನೀಯ,ಮಾತು ಆಹುತಿ,ಅವನ ವಿಜ್ಞಾನವೇ ಹೋಮ,ಬೆಳಿಗ್ಗೆ ಮತ್ತು ಸಂಜೆ ತಿನ್ನುವುದೇ ಸವಿದ್ಧೋಮ,ಅವನಿಗೆ ಸಂಬಂಧಿಸಿದ  ಪ್ರಾತಃಕಾಲ ಮಧ್ಯಾಹ್ನಕಾಲ  ಮತ್ತು ಸಾಯಂಕಾಲಿವು ಸವನಗಳು;ಹಗಲು ರಾತ್ರಿಗಳು ದಶ೯ಪೂಣ೯ಮಾಸಗಳು.ಅಧ೯ಮಾಸಗಳೂ ಮಾಸಗಳೂ ಚಾತುಮಾರಸಗಳು,ಋತುಗಳೇ ಪಶುಬಂಧ,ಸಂವರ್ಸರ-ಪರಿವತ್ಸರಗಳೇ ಅಹಗ೯ಣಗಳು;ತನ್ನಲ್ಲಿರುವುದೆಲ್ಲವನ್ನೂ ದಕ್ಷಿಣೆಯಾಗಿ ಕೊಡಬೇಕಾಗಿರುವ ಇದು  ಸತ್ತ್ರಯಾಗವೇ;ಅವನ ಮರಣವೇ ಅವಭೃಥ'.(.ನಾ.)ಸವ೯ವೇದಸವೆಂದರೆ ಸವ೯ವನ್ನೂ ದಕ್ಷಿಣೆಯಾಗಿ ಉಳ್ಳದ್ದು.ಯಜ್ಞದ ಕೆಲವು ದಿನಗಳಲ್ಲಿ ಯಜಮಾನನು ಆಹಾರವನ್ನು ತೆಗೆದುಕೊಳ್ಳಬಹುದು.ಇದಕ್ಕೆ ಉಪಸತ್ ಎಂದು ಹೆಸರು.ಅವಭೃತ ಎಂದರೆ ಯಜ್ಞಾಂತದಲ್ಲಿ ಮಾಡುವ ಸ್ನಾನ.(ಪುಟ333)

24) ವಿಸಂವಾದ ವಿಲ್ಲದಿರುವುದೆಂಬುದು ಮೂರನೆಯ ಪ್ರಯೋಜನ.ಯೋಗಿಗೆ ಕ್ರೋಧಾದಿಗಳು ಇಲ್ಲವೆಂಬುದನ್ನು ಹೀಗೆ ಹೇಳಿದೆ:ಕೋಪಗೊಂಡವನಿಗೆ ಪ್ರತಿಯಾಗಿ ಕೋಪಿಸಬಾರದು.ನಿಂದಿತನಾದರೂ ಕುಶಲ£ವನ್ನೇ ಹೇಳಬೇಕು.ಅತಿವಾದಗಳನ್ನು ಸಹಿಸಿಕೊಳ್ಳಬೇಕು.ಯಾರನ್ನೂ ಅನುಮಾನಿಸಬಾರದು'(ಮನುಸ್ಮøತಿ6.48.,47)(ಪುಟ336)

25)ತೀಥ೯ವೆಂದರೆ ಶಾಸ್ತ್ರ.ಯಾವುದಾದರೊಂದು ತತ್ವಶಾಸ್ತ್ರವನ್ನು ಅವಲಂಬಿzಸಿದವನು  ತೈಥಿ೯ಕ.(ಪುಟ337)
       
 26) ಆತ್ಮನೊಬ್ಬನನ್ನೇ ತಿಳಿದುಕೊಳ್ಳಿರಿ.ಬೇರೆ ಮಾತುಗಳನ್ನು ಬಿಡಿರಿ.((ಮುಂಡಕ..2.2.5)

27)ಬಹು ಶಬ್ದಗಳನ್ನು ಚಿಂತಿಸಬಾರದು.ಏಕೆಂದರೆ ಅದು ವಾಗಿಂದ್ರಿಯಕ್ಕೆ ಶ್ರಮವನ್ನುಂಟು ಮಾಡುವುದಾಗಿದೆ.(ಬೃ..4.4.21)

28)ಧಾನ್ಯಾಥಿ೯ಯು ಹುಲ್ಲನ್ನು ತ್ಯಜಿಸುವಂತೆ  ಮುಮುಕ್ಷುವು ಗ್ರಂಥಗಳನ್ನು ಸಂಪೂಣ೯ವಾಗಿ ತ್ಯಜಿಸಬೇಕು.ಪರಮವಾದ ಬ್ರಹ್ಮವನ್ನು ತಿಳಿದುಕೊಂಡು ಗ್ರಂಥಗಳನ್ನು ಉಲ್ಕೆಯನ್ನು ತ್ಯಜಿಸುವಂತೆ ,ಬಿಟ್ಟುಬಿಡಬೇಕು.(ಪುಟ338)

2)ಜೈನ ಬೌದ್ಧ ವೈಧೇಷಿಕ ನ್ಯಾಯ ಶೈವ ವೈಷ್ಣವ ಶಾಕ್ತ ಸಾಂಖ್ಯ ಯೋಗ ಮೊದಲಾದ ಮೋಕ್ಷಶಾಸ್ತ್ರಗಳಲ್ಲಿ  ಪ್ರತಿಪಾದಿಸಲ್ಪಡುವ ಪ್ರಮೇಯವು ನಾನಾವಿಧವಾಗಿದ್ದರೂ ಮೋಕ್ಷಸಾಧನವಾದ  ಯಮನಿಯಮಾದಿ ಅಷ್ಟಾಂಗ ಯೋಗವು ಮಾತ್ರ ಏಕರೂಪವಾಗಿಯೇ ಇರುತ್ತದೆ.ಆದ್ದರಿಂದ  ವಿಸಂವಾದವಿಲ್ಲದಿರುವ ಕಾರಣಯೋಗೀಶ್ವರನು ಎಲ್ಲರಿಗೂ ಸಂಮತನು.(ಪುಟ338)

30)ಅಂಗನೆಯರು ಅಂತಃಪುರವನ್ನಾಶ್ರಯಿಸುವಂತೆ  ಆಯ೯ತ್ವಹೃದ್ಯತ್ವಮೈತ್ರಿ ಸೌಮ್ಯತ್ವ ಮುಕ್ತತ್ವ.ಜ್ಞತ್ವ-ಎಂಬೀ ಗುಣಗಳು  ಶಾಶ್ವತವಾಗಿ ಆಶ್ರಯಿಸುವುವು.(ಪುಟ33)

31)ಯಾವನು ಜಾಗ್ರದವಸ್ಥೆಯಲ್ಲಿದ್ದರೂ  ಸುಷುಪ್ತಿಯಲ್ಲಿರುವಂತೆ  ವೃತ್ತಿಗಳನ್ನು ಶಾತಗೊಳಿಸಿರುವನೋ,ಕಲಾನ್ವಿತನಾದ  ಚಂದನನ್ನು ದೇವತೆಗಳು ಸೇವಿಸುವಂತೆ ಯಾವನನ್ನು ಜ್ಞಾನಿಗಳು ಯಾವಾಗಲೂ ಸೇವಿಸುವರೊ  ಅವನು ಇಲ್ಲಿ ಮುಕ್ತನೇ ಎಂದು ಸ್ಮರಿಸಲ್ಪಟ್ಟಿದ್ದಾನೆ.(ಪುಟ340)

32)ತಪಸ್ವಿಗಳ ಬಹುಜ್ಞರ ಯಾಜಕರ ನೃಪರ ಬಲವಂತರ ಮತ್ತು ಗುಣಾಢ್ಯರ ಮಧ್ಯೆ ಶಮಶಾಲಿಯೇ ಪ್ರಕಾಶಿಸುತ್ತಾನೆ.(.ಯೋವಾ.4.61,66)(ಪುಟ341)

33)ದುಃಖನಾಶ ಮತ್ತು ಸುಖದ ಆವಿಭಾ೯ವ  ಎಂಬೀ ರೂಪಗಳನ್ನುಳ್ಳ  ನಾಲ್ಕನೆಯ  ಐದನೆಯ ಪ್ರಯೋಜನಗಳು  ಬ್ರಹ್ಮಾನಂದವೆಂಬ  ಗ್ರಂಥದ  ವಿದ್ಯಾನಂದವೆಂಬ  ನಾಲ್ಕನೆಯ ಅಧ್ಯಾಯದಲ್ಲಿ  ನಿರೂಪಿತವಾಗಿದೆ.(ಪು340)

34)ಪುರುಷನು ಇವನನ್ನು ನಾನೇ ಎಂದರಿತುಕೊಂಡರೆ ,ಯಾವುದನ್ನು ಬಯಸುತ್ತ,ಯಾರ ಪ್ರಯೋಜನಕ್ಕಾಗಿ  ಶರೀರದ  ರೋಗವನ್ನನುಸರಿಸಿ ದುಃಖ ಪಡುವನು?(ಬೃ.4.4.12)(ಪುಟ340)

35)'ನಾನು ಒಳ್ಳೆಯದನ್ನೇಕೆ ಮಾಡಲಿಲ್ಲ?ಪಾಪವನ್ನೇಕೆ ಮಾಡಿದೆನು?ಎಂಬ ಪಶ್ಚಾತ್ತಾಪವು ಇವನನ್ನು ತಪಿಸುವುದಿಲ್ಲ.(ತೈತತಿರೀಯ.2.)(ಪುಟ341)

36)ಸುಖದ ಆವಿಭಾ೯ವವು 1)ಸವ೯ಕಾಮ-ಆವಾಪ್ತಿ 2) ಕೃತಕೃತ್ಯತ್ವ 3)ಪ್ರಾಪ್ತಪ್ರಾಪ್ತವ್ಯತ್ವ.ಎಂದು ಮೂರುವಿಧ.ಸವ೯ಕಾಮ ಆವಾಪ್ತಿಯು ಸವ೯ಸಾಕ್ಷಿತ್ವ,ಸವ೯ತ ಅಕಾಮಹತತ್ವ ಮತ್ತು ಸವ೯ಭೋಕ್ತø ರೂಪತ್ವ ಎಂದು ಮೂರುವಿಧ.(ಪುಟ342)

37)ಸದ್ರೂಪದಿಂದಲೂ ಚಿದ್ರೂಪದಿಂದಲೂ  ಆನಂದ ರೂಪದಿಂದಲೂ ಎಲ್ಲ ಕಡೆಯಲ್ಲಿಯೂ ಇರುವ ತನ್ನ ಆತ್ಮನನ್ನು ಅನುಸಂಧಾನ ಮಾಡುತ್ತಿರುವವನಿಗೆ ಸವ೯ಭೋಕ್ತøತ್ವವಿದೆ  ಎಂಬ ಅಭಿಪ್ರಾಯದಿಂದ ಶ್ರುತಿಯು'ನಾನು ಅನ್ನ,ನಾನು ಅನ್ನ.ನಾನು ಅನ್ನ!ನಾನು ಅನ್ನಾದ ನಾನು ಅನ್ನಾದ ನಾನು ಅನ್ನಾದ(ತೈತ್ತಿರೀಯ. .3.10)ಎಂದು ಹೇಳಿರುತ್ತದೆ.(ಪ್ಯಟ342)

38)ಕೃತಕೃತ್ಯತ್ವವನ್ನು ಕೂಡ ಹೀಗೆ  ಶ್ರುತಿಯಲ್ಲಿ ಹೇಳಿದೆ:ಜ್ಞಾನಾಮೃತದಿಂದ ತೃಪ್ತನೂ ಕೃತಕೃತ್ಯನೂ ಆಗಿರುವ ಯೋಗಿಗೆ ಯಾವ ಕತ೯ವ್ಯವೂ ಇರುವುದೇ ಇಲ್ಲ.ಇದ್ದದ್ದೇ ಆದರೆ ಅವನು ತತ್ವವಿದನಲ್ಲ!'ಯಾವಮಾನವನು ಆತ್ಮನಲ್ಲಿಯೇ ಪ್ರೀತಿಯುಳ್ಳವನಾಗಿ,ಆತ್ಮನಲ್ಲಿಯೇ ತೃಪ್ತನಾಗಿ,ಆತ್ಮನಲ್ಲಿಯೇ ಸಂತುಷ್ಟನಾಗಿ ಇರುವನೋಅವನಿಗೆ ಯಾವಕತ೯ವ್ಯವೂ ಇರುವುದಿಲ್ಲ'(ಗೀತಾ3.17)(ಪುಟ343)

3) ಪ್ಆಪ್ತ-ಪ್ರಾಪ್ತತ್ವವನ್ನು ಕೂಡ   ಶ್ರುತಿಯಲ್ಲಿ ಹೀಗೆ ಹೇಳಿದೆ:'ಜನಕನೆ ಅಭಯವನ್ನು ಹೊಂದಿರುತ್ತೀಯೆ'(ಬೃ.4.2.4).ಆದ್ದರಿಂದ ಅದು ಎಲ್ಲವೂ ಆಯಿತು.(ಬೃ. 1.4.10) ಬ್ರಹ್ಮವನ್ನರಿಯುವವನು ಬ್ರಹ್ಮವೇ ಆಗುತ್ತಾನೆ.(ಮುಂ..3.2.) (ಪುಟ343)

40)ಶ್ರೀರಾಮ:ಹೇ ಭಗವನ್,ಇವರಿಬ್ಬರಲ್ಲಿ ಯಾರು ಹೆಚ್ಚು ಉತ್ತಮರು?ವ್ಯವಹಾರಗಳನ್ನು ಮಾಡುತ್ತಿದ್ದರೂ  ಸಮಾಧಿಯಿಂದ ಎದ್ದವನಂತೆ ಮನೋ ವಿಶ್ರಾಂತಿಯನ್ನು ಪಡೆದಿರುವವನೋ ?ಅಥವಾ ಏಕಾಂತವನ್ನಾಶ್ರಯಿಸಿ  ಸಮಾಧಿ ನಿಯಮದಲ್ಲಿದಲ್ಲಿಯೇ ಇರುವವನೋ?ಹೇ ಭಗವನ್ ಇದನ್ನು ನನಗೆ ತಿಳಿಸು.'
ವಸಿಷ್ಠ:ಎಲೈ ರಾಮ,ಗುಣಗಳ ಮಿಶ್ರಣವಾಗಿರುವ ಈಜಗತ್ತು  ಅನಾತ್ಮವೆಂದು ಅನುಭವಿಸುತ್ತಿರುವವನಿಗೆ ಒಳಗೆ ಯಾವ ಶೀತಲತ್ವ ಉಂಟಾಗುವುದೊ ಅದು ಸಮಾಧಿಯೆಂದು ಹೇಳಲ್ಪಡುತ್ತದೆ.ಹೀಗೆ ಶೀತಲನಾದವನೊಬ್ಬನು"ದೃಶ್ಯವಾಗಿರುವ  ಇವುಗಳೊಡನೆ  ನನಗಾವ ಸಂಬಂಧವೂ ಇಲ್ಲ"ಎಂದು   ನಿಶ್ಚಯಿಸಿ  ವ್ಯವಹಾರದಲ್ಲಿ ತೊಡಗಿರುತ್ತಾನೆ.ಮತ್ತೊಬ್ಬನು ಧ್ಯಾನದಲ್ಲಿ ಮುಳುಗುತ್ತಾನೆ.ಇವರಿಬ್ಬರೂ ಒಳಗಿನ ಶೀತಲತ್ವವನ್ನು ಪಡದೆದವರಾದ್ದರಿಂದ -ಸುಸಮಾಹಿತರೇ.ಏಕೆಂದರೆ ಅವರ  ಅಂತಃಶೀಲತ್ವವು ಅನಂತ ತಪಸಿನ ಫಲವು'(.ಯೋ.ವಾ.25.5-)(ಪುಟ 345)

41) 'ಒಳಗಿನ ಶೀತಲತ್ವವನ್ನು ಹೊಂದಿದರೆ ಜಗತ್ತೂ ಶೀತಲವಾಗುತ್ತದೆ;ಒಳಗಿನ  ತೃಷ್ಣೆಯಿಂದ ಸುಡಲ್ಪಡುತ್ತಿರುವವರಿಗೆ ಜಗತ್ತು ದಾವಾಗ್ನಿಮಯವಾಗಿರುತ್ತದೆ.(.ಯೋ.ವಾ.25,24)(ಪುಟ345)

42)ಸಮಾಧಿಯಲ್ಲಿರುವವನ ಮನಸ್ಸು ವೃತ್ತಿ ಚಾಂಚಲ್ಯವನ್ನು ಹೊಂದಿದ್ದರೆ  ಅವನ ಸಮಾಧಿಯುಹುಚ್ಚರನತ೯ನಕ್ಕೆ ಸಮ!ಆದರೆ ಹುಚ್ಚರನತ೯ನದಲ್ಲಿದ್ದರೂ ಒಬ್ಬನ ಮನಸ್ಸು ವಾಸನಾ ರಹಿತವಾಗಿದ್ದರೆ  ಅವನ ಹುಚ್ಚು ನತ೯ನವು  ಬ್ರಹ್ಮ ಸಮಾಧಿಗೆ ಸಮ(.ಯೋ.ವಾ.25.10,11)(ಪುಟ 346)

43) ವ್ಯವಹಾರಕ್ಕಿಂತ  ಸಮಾಧಿಯು ಪ್ರಶಸ್ತವಾಗಿದ್ದರೂ ,  ಸಮಾಧಿಯು ವಾಸನೆಯಿಂದ  ಕೂಡಿದ್ದರೆ ,ನಿವಾ೯ಸನ ವ್ಯವಹಾರಕ್ಕಿಂತ  ಅದು ಕೀಳೇ ಸರಿ.,ಆದ್ದರಿಂದ ಅದು ಸಮಾಧಹಿಯೇ ಅಲ್ಲ!ಸಮಾಧಿಯಲ್ಲಿರುವವನು,ವ್ಯವಹಾರದಲ್ಲಿರುವವನು -ಇವರಿಬ್ಬರೂ  ತತ್ವವನ್ನರಿಯದವರೂ  ವಾಸನಾರಹಿತರೂ ಆಗಿದ್ದಾಗ ಸಮಾಧಿಗೇ ಪ್ರಾಶಸ್ತ್ಯವಿರ್ಯತ್ತದೆ.(ಪುಟ347)       

             ಹೀಗೆ  ಶ್ರೀ ವಿದ್ಯಾರಣ್ಯ ಮುನಿಗಳಿಂದ ಪ್ರಣೀತವಾದ ಜೀವನ್ಮುಕ್ತಿ ವಿವೇಕವೆಂಬ ಗ್ರಂಥದಲ್ಲಿ ಜೀವನ್ಮುಕ್ತಿ ಸ್ವರೂಪಸಿದಧಿ ಪ್ರಯೋಜನ ನಿರೂಪಣವೆಂಬ  ನಾಲ್ಕನೆಯ ಪ್ರಕರಣವು ಮುಗಿಯಿತು.
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

No comments:

Post a Comment