ಐದನೆಯ ಪ್ರಕರಣ : ವಿದ್ವತ್ ಸನ್ಯಾಸ;
ಐದನೆಯ ಪ್ರಕರಣ : ವಿದ್ವತ್
ಸನ್ಯಾಸ;
1)ವಿದ್ವತ್
ಸನ್ಯಾಸವು ಪರಮಹಂಸೋಪನಿಷತ್ತಿನಲ್ಲಿ ಪ್ರತಿಪಾದಿತವಾಗಿದೆ.ಆ ಉಪನಿಷತ್ತನ್ನೇ ಅನುವಾದ
ಮಾಡಿ ಇಲ್ಲಿ ವ್ಯಾಖ್ಯಾನಿಸಲಾಗಿದೆ.(ಪುಟ348)
2)ತತ್ವವನ್ನರಿತುಕೊಂಡಿರುವ
,ಲೋಕವ್ಯವಹಾರದಿಂದ ವಿಕ್ಷಿಪ್ತವಾಗುತ್ತಿರುವ ಮನಸ್ಸನ್ನು
ಹೊಂದಿರುವ ಮತ್ತು ಮನೋ ವಿಶ್ರಾಂತಿಯನ್ನು
ಬಯಸುತ್ತಿರುವ (ಪುರುಷನೇ)ಅದಕ್ಕೆ ಅಧಿಕಾರಿ.ಆದ್ದರಿಂದ ಅಥ ಶಬ್ದಕ್ಕೆ 'ಅಂಥ ಅಧಿಕಾರವನ್ನು
ಸಂಪಾದಿಸಿದ ಮೇಲೆ'ಎಂದಥ೯.ಕೇವಲಯೋಗಿಯನ್ನೂ
ಕೇವಲ ಪರಮಹಂಸನನ್ನೂ ಬೇರೆಮಾಡುವುದಕ್ಕಾಗಿ (ಯೋಗಿಗಳಾದ ಪರಮಹಂಸರ-ಎಂಬ)ಎರಡು
ಪದಗಳನ್ನು ಹೇಳಿರುತ್ತದೆ.
3)ತತ್ವಜಾನವಿಲ್ಲದಿರುವುದರಿಂದ
ಕೇವಲ ಯೋಗಿಯು ತ್ರಿಕಾಲಜ್ಞಾನ ಆಕಾಶಗಮನಿವೇ
ಮೊದಲಾದ ಯೋಗೈಶ್ವೈಯ೯ದ ಚಮತ್ಕಾರಗಳ ವ್ಯವಹಾರದಲ್ಲಿಆಸಕ್ತನಾಗಿ
ಅಲ್ಲಲ್ಲಿ ಉದ್ಯುಕ್ತನಾಗುತ್ತಾನೆ.ಆದ್ದರಿಂದ ಪರಮಪುರುಷಾಥ೯ದಲ್ಲಿ ಭ್ರಷ್ಟನಾಗುತ್ತಾನೆ.ಈ ಅಥ೯ದಲ್ಲಿ ಸೂತ್ರವನ್ನು
ಹಿಂದೆಯೇ ಉದಾಹರಿಸಲಾಯಿತು:ಅವು ಸಮಾಧಿಯಲ್ಲಿ ವಿಘ್ನಗಳು,ವ್ಯುತ್ಥಾನಕಾಲದಲ್ಲಿ ಸಿದ್ಧಿಗಳು.
(ಯೋ.ಸೂ3.37)(ಪುಟ247)(ಪುಟ34೯).
4) ಒಂದು
ವಸ್ತುವಿನ ಮೇಲೆ ಮಾಡುವ ಧಾರಣೆ,ಧ್ಯಾನ,ಸಮಾಧಿಗಳಿಗೆ'ಸಂಯಮ'ಎಂದು ಹೆಸರು.(ಪುಟ34೯)
5)ಕೇವಲ
ಪರಮಹಂಸನಾದರೋ ತತ್ವವಿವೇಕದ
ಮೂಲಕ ಈ ಯೋಗೈಶ್ವಯ೯ಗಳಲ್ಲಿ
ಸಾರವಿಲ್ಲದುದನ್ನು ಕಂಡು ಅವುಗಳಲ್ಲಿ
ವಿರಕ್ತಿ ಹೊಂದುತ್ತಾನೆ.(ಪುಟ350)
6)ಇಹಲೋಕದಲ್ಲಿ
ಕಂಡು ಬರುತ್ತಿರುವ ಈ ಶಕ್ತಿಗಳು ಚಿದಾತ್ಮನವು
.ಆದುದರಿಂದ ಅವನು ಈ
ಆಶ್ಚಯ೯ಜಾಲಗಳಲ್ಲಿ ಅವನಿಗೆ ಕುತೂಹಲವು ಹುಟ್ಟುವುದಿಲ್ಲ.(ಲ.ಯೋ.ವಾ.27.62)(ಪುಟ 350).
7) ಎಲೈ,ಮ್ಯತ್ರೇಯ,ಕಲಿಯುಗವು ಬಂದಾಗ ಎಲ್ಲರೂ ಬ್ರಹ್ಮವನ್ನು
ಕುರಿತು ಹೇಳುವವರೇ!ಒಬ್ಬರೂ ಅನುಷ್ಠಾನ ಮಾಡರು!
ಏಕೆಂದರೆ ಅವರೆಲ್ಲರೂ ಶಿಶ್ನೋದರಗಳ ಸೌಖ್ಯವನ್ನನುಭವಿಸುವುದರಲ್ಲಿಯೇ ನಿರತರಾಗಿರುತ್ತಾರೆ!'(ವಿಷ್ಣುಪುರಾಣ)ಆದರೆ ಯೋಗಿಯಾದ ಪರಮ¸ಹಂಸನಲ್ಲಿ ಈ ಎರಡು ದೋಷಗಳೂ ಇರುವುದಿಲ್ಲ.(ಯೋಗೈಶ್ವಯ೯ಗಳಲ್ಲಿ
ಕುತೂಹಲ ಮತ್ತು ವಿಧಿನಿಷೇಧಗಳ ಉಲ್ಲಂಘನೆ)(ಪುಟ350)
8)ಜೀವನ್ಮುಕ್ತನಲ್ಲಿ
ವಿಶೇಷ(ಅತಿಶಯ).ಎಲ್ಲಾ ಕಡೆಗಳಲ್ಲಿಯೂ
ಆಸೆಯನ್ನು ತ್ಯಜಿಸಿರುವುದರಿಂದ ,ಇವನ ಮನಸ್ಸು ರಾಗರಹಿತವೂ
ಪರಿಶುದ್ಧವೂ ಆಗಿರುತ್ತದೆ.ಈ ತತ್ವಜ್ಞಾನಿಗೆ ಇರುವ
ಚಿಹ್ನೆಯು ಇಷ್ಟೇ: ಕಾಮ ಕ್ರೋಧ
ದುಃಖ ಮೋಹ ಲೋಭ ಆಪತ್ತು-ಇವುಗಳು ದಿನೇ ದಿನೇ
ಚೆನ್ನಾಗಿ ಕ್ಷೀಣವಾಗುತ್ತವೆ.(ಲ.ಯೋ.ವಾ.42.1-3.5-6)(ಪುಟ 352)
೯)ಈ ಪರಮಹಂಸರ ಮಾಗ೯ವು
ಲೋಕದಲ್ಲಿ ಸಿಕ್ಕುವುದು ಬಹು
ಕಷ್ಟ ಆದರೆ ಬಹಳವಾಗಿಲ್ಲ ಎಂದು
ಪ್ರಶಂಸಿಸಿರುತ್ತದೆ.(ಪು353)
10)ಒಬ್ಬನಾದರೂ
ಇಂಥ ಪರಮಹಂಸನಾದರೆ ಅವನೇ
ನಿತ್ಯಪೂತಸ್ಥನು,ಅವನೇ ವೇದಪುರುಷನು ಎಂದು
ವಿದ್ವಾಂಸರು ಎಣಿಸುತ್ತಾರೆ.(ಪುಟ354)
11)'ಸಾವಿರ
ಮನುಷ್ಯರಲ್ಲಿ ಯಾವನೋ ಒಬ್ಬನು ನನ್ನನ್ನು
ಯಥಾಥ೯ವಾಗಿ ತಿಳಿಯುತ್ತಾನೆ'(ಗೀತಾ 7.3)(ಪುಟ354)
12)'ಯಾವನು
ದಶ೯ನ ಅದಶ೯ನಗಳನ್ನು ಬಿಟ್ಟು ಕೇವಲ
ಸ್ವರೂಪದಲ್ಲಿಯೇ ನಿಂತಿರುತ್ತಾನೋ ಅವನು
ಬ್ರಹ್ಮಜ್ಞಾನಿಯಲ್ಲ.,ಅವನೇ ಬ್ರಹ್ಮವು.'ಆದುದರಿಂದ
ಪ್ರಯೋಜನವಿಲ್ಲವೆಂಬುದನ್ನು ಶಂಕಿಸಲೂ ಸಾಧ್ಯವಿಲ್ಲ.(ಪುಟ355)
13)ಮಹಾಪುರುಷನು
ತನ್ನ ಯಾವಮನಸ್ಸಿದೆಯೋ ಅದನ್ನು ಯಾವಾಗಲೂ ನನ್ನಲ್ಲಿಯೇ ಸ್ಥಾಪಿಸುತ್ತಾನೆ;ಆದುದರಿಂದ ನಾನು ಕೂಡ ಅವನಲ್ಲಿಯೇ
ನೆಲೆಸಿರುತ್ತೇನೆ.'(ಪುಟ356)
14)ಯೋಗಿಗಳಲ್ಲದ
ತತ್ವಜ್ಞಾನಿಗಳಲ್ಲಿ ಕೂಡ
ಅವರು ಹೊರಗಿನ
ಚಿತ್ತವೃತ್ತಿಗಳಿಂದ ಆವೃತರಾಗಿರುವ ಕಾರಣ ಪರಮಾತ್ಮನ ಆವಿಭಾ೯ವವಿರುವುದಿಲ್ಲ.(ಪುಟ 356)
15)'ಇವನು
ತನ್ನ ಪುತ್ರ ಮಿತ್ರ ಪತ್ನಿ
ಬಂಧು ಮೊದಲಾದವರನ್ನೂ ,ಶಿಖೆ ಯಜ್ಞೋಪವೀತ ಸ್ವಾಧ್ಯಾಯ ಮತ್ತು
ಎಲ್ಲಾ ಕಮ೯ಗಳು -ಇವೆಲ್ಲವನ್ನೂ ತ್ಯಾಗಮಾಡಿ
,ಬ್ರಹ್ಮಾಂಡವನ್ನೂ ಕೂಡ ಬಿಟ್ಟು,ತನ್ನ
ಶರೀರ ಸಂರಕ್ಷಣಕ್ಕಾಗಿಯೂ ಲೋಕೋಪಕಾರಕ್ಕಾಗಿಯೂ ಕೌಪೀನ-ದಂಡ-ಹೊದಿಕೆಗಳನ್ನು ಪರಿಗ್ರಹಿಸಬೇಕು.(ಪುಟ357)
16)ತತ್ವಜ್ಞಾನಿಗೆ
ಕತೃ೯ತ್ವ ಬುದ್ಧಿಯಿಲ್ಲದಿರುವುದರಿಂದ ವಿಧಿ-ನಿಷೇಧಗಳಲ್ಲಿ ಅಧಿಕಾರವಿರುವುದಿಲ್ಲ.ಸ್ಮøತಿಯಲ್ಲಿ ಹೀಗೆ
ಹೇಳಿರುತ್ತದೆ:ಜ್ಞಾನಾಮೃತದಿಂದ ತೃಪ್ತನೂ ಕೃತಕೃತ್ಯನೂ
ಆದಯೋಗಿಗೆ ಯಾವಕರ್ತವ್ಯವೂ
ಇರುವುದಿಲ್ಲ.ಇದ್ದದ್ದೇ ಆದರೆ ಅವನು ತತ್ವಜ್ಞಾನಿಯೇ
ಅಲ್ಲ!(ಪುಟ358)
17) ಎಲ್ಲ
ಕಮ೯ಗಳನ್ನು ಎಂದರೆ1)ನಿತ್ಯ2)ನೈಮಿತ್ತಿಕ
3)ನಿಷಿದ್ಧ 4)ಕಾಮ್ಯ 5) ಲೌಕಿಕ 6)ವೈದಿಕ ಎಲ್ಲವೂ
ಸೇರಿದೆ.(ಪುಟ362)
18) ಸ್ಮøತಿಯೂ ಹೀಗೆ ಹೇಳುತ್ತದೆ:'ಎರಡು ಕೌಪೀನಗಳು,ಬಟ್ಟೆ,ಶೀತವನ್ನು ಹೋಗಲಾಡಿಸಬಲ್ಲ ಹೊದಿಕೆ ಮತ್ತು ಪಾದುಕೆಗಳು
ಇವನ್ನು ಗ್ರಹಿಸಬೇಕು.ಇತರ ವಸ್ತುಗಳ ಸಂಗ್ರಹವನ್ನು
ಮಾಡಬಾರದು'(ವೃದ್ಧಹಾರೀತ ಸ್ಮøತಿ 6.7)(ಪುಟ363)
1೯) ಕೌಪೀನಾದಿಗಳ ಯಾವ ಪರಿಗ್ರಹವನ್ನು ಹೇಳಿದೆಯೋ
ಅದೂಕೂಡ ಪರಮಹಂಸಯೋಗಿಗೆ ಮುಖ್ಯನಿಯಮವಿಲ್ಲ.(ಪುಟ364)
20)'ಜ್ಞಾನಿಯು
ದಂಡವಿಲ್ಲದೆ -ಬಿಟ್ಟಬಾಣವು ಹೋಗುವ ಮೂರರಷ್ಟು ದೂರ
ಕೂಡ ಹೋಗಬಾರದು.'ದಂಡವು ಕಳೆದು ಹೋದರೆ ನೂರು
ಪ್ರಾಣಾಯಾಮಗಳನ್ನು ಪ್ರಾಯಶ್ಚಿತ್ತವಾಗಿ ಸ್ಮರಿಸಿದೆ.'ದಂಡವು ಕಳೆದು ಹೋದರೆ
ನೂರನ್ನು ಮಾಡಬೇಕು.(ಪುಟ364)
21) ದಂಡ
ಶಿಖೆ ಯಜ್ಞೋಪವೀತ ಆಚ್ಛಾದನ-ಇವಿಲ್ಲದೆಯೇ ಪರಮಹಂಸನು ಪಯ೯ಟನ ಮಾಡುತ್ತಾನೆ.(ಪುಟ365)
22)ಹಸಿವು-
ಬಾಯಾರಿಕೆ-ಪ್ರಾಣ
ಶೋಕ -ಮೋಹ-ಮನಸ್ಸು
ಮುಪ್ಪು-ಮರಣ-ದೇಹ
ಈ ಮೂರು ದ್ವಂದ್ವಗಳು (ಷಡೂಮಿ೯ಗಳು).ಈ ಮೂರು ದ್ವಂದ್ವಗಳು ಕ್ರಮವಾಗಿ ಪ್ರಾಣ,ಮನಸ್ಸು,ದೇಹ-ಇವುಗಳ
ಧಮಯವ್ಆಗಿದೆ.
(ಪುಟ367)
23)ನಿಂದೆ,ಗವ೯,ಮತ್ಸರ,ದಂಭ,ಇಚ್ಛೆ,ದ್ವೇಷ, ಸುಖ
ದುಃಖ,ಕಾಮ,ಕ್ರೋಧ ಲೋಭ
ಮೋಹ ಹಷ೯ ಅಸೂಯೆ ಅಹಂಕಾರ-ಮೊದಲಾದವುಗಳನ್ನು ತ್ಯಜಿಸಿ.(ಪುಟ368)
24)ವಿವಿಧಜನರಿಂದ
ತನ್ನಲ್ಲಿ ಆಪಾದಿತವಾದ ದೋಷೋಕ್ತಿಯೇ
ನಿಂದೆ.'ಇತರರಿಗಿಂತ ನಾನು ಹೆಚ್ಚು 'ಎಂಬ
ಚಿತ್ತವೃತ್ತಿಯೇ ಗವ೯'ವಿದ್ಯೆ ಧನ ಮೊದಲಾದವುಗಳ
ಮೂಲಕ ಮತ್ತೊಬ್ಬನಂತೆಯೇ ನಾನೂ ಆಗುತ್ತೇನೆ'ಎಂಬ
ಬುದ್ಧಿಯೇ ಮತ್ಸರ.ಇತರರ ಮುಂದೆ
ಜಪಧ್ಯ್ಆನಾದಿಗಳನ್ನು ದಂಭ.ಇತರರ ನಿಂದೆಯಲ್ಲಿ
ದೃಢ ಬುದ್ಧಿಯೇ ದಪ೯.ಧನಾದಿಗಳ ಆಸೆಯೇ ಇಚ್ಛೆ.ಶತ್ರುವಧೆಯೇ
ಮೊದಲಾದವುಗಳಲ್ಲಿರುವ ಬುದ್ಧಿಯು ದ್ವೇಶ.ಅನುಕೂಲವಾದ ದ್ರವ್ಯಾದಿಗಳು ದೊರಕುವುದರಿಂದ
ಉಂಟಗುವ ಬುದ್ಧಿ ಸ್ವಸ್ಥತೆಯೇ ಸುಖ.ಅದಕ್ಕೆ ವಿರುದ್ಧವಾದುದು ದುಃಖ.ಸ್ತ್ರೀಯರೇ ಮೊದಲಾದವರಲ್ಲಿ ಅಭಿಲಾಷೆಯೇ ಕಾಮ.ಬಯಸಿದ ವಸ್ತುವು
ನಾಶವಾಗುವುದರಿಂದ ಉಂಟಾಗುವ ಬುದ್ಧಿ ಕ್ಷೋಭೆಯೇ
ಕ್ರೋಧ.ಲಬ್ಧವಾದ ಹಣದ ತ್ಯಾಗವನ್ನು ಸಹಿಸದಿರುವುದು ಲೋಭ.ಹಿತರಲ್ಲಿ ಅಹಿತರೆಂಬ ಅಹಿತರಲ್ಲಿ
ಹಿತವೆಂಬ ಬುದ್ಧಿಯೇ
ಮೋಹ.ಇತರರ ಗುಣಗಳಲ್ಲಿ ದೋಷಾರೋಪಣೆಯು
ಅಸೂಯೆ.ದೇಹೇಂದ್ರಿಯಾದಿ ಸಂಘಾತಗಳಲ್ಲಿ ಆತ್ಮನೆಂಬ ಭ್ರಮವೇ ಅಹಂಕಾರ.ನಿಂದೆಯೇ
ಮೊದಲಾದ ಇವೆಲ್ಲವನ್ನೂ ತ್ಯಜಿಸಿ ,ಎಂದರೆ ಹಿಂದೆ ಹೇಳಿದ
ವಾಸನಾಕ್ಷಯದ ಅಭ್ಯಾಸದಿಂದ ಅದನ್ನು ಪರಿತ್ಯಜಿಸಿ ಸ್ಥಿರನಾಗಬೇಕು.(ಪುಟ36೯)
25)'ಸಂಶಯ,ವಿಪರೀತ,-ಮಿಥ್ಯಾಜ್ಞಾನಗಳಿಗೆ
ಆವುದು ಹೇತುವೋ ಅದರಿಂದ ಸದಾ
ನಿವೃತ್ತನಾಗಿರುತ್ತಾನೆ.(ಪುಟ370)
26)ಮಿಥ್ಯಾಜ್ಞಾನದ ಕಾರಣವು
ನಾಲ್ಕು ವಿಧ;ಏಕೆಂದರೆ 'ಅನಿತ್ಯ,ಅಶುಚಿ,ದುಃಖ ಅನಾತ್ಮ
ಆದ ವಸ್ತುಗಳಲ್ಲಿ ನಿತ್ಯ ಶುಚಿ ಸುಖ
ಆತ್ಮ ಎಂಬ ತಿಳುವಳಿಕೆಯು ಅವಿದ್ಯೆ.ಬೆಟ್ಟ ನದಿ ಸಮುದ್ರ ಮೊದಲಾದ
ಅನಿತ್ಯ ವಸ್ತುಗಳಲ್ಲಿ ಅವು
ನಿತ್ಯವೆಂಬ ಭ್ರಾಂತಿಯು
ಮೊದಲನೆಯದು.
ಮಗ ಹೆಂಡತಿ ಮೊದಲಾದವರ
ಅಶುಚಿಯಾದ ಶರೀರಗಳಲ್ಲಿ ಶುಚಿತ್ವದ ಭ್ರಾಂತಿಯು ಎರಡನೆಯದು.ಕಷ್ಟಕರವಾದ ಕೃಷಿ ವಾಣಿಜ್ಯ ಮೊದಲಾದುವುಗಳಲ್ಲಿ
ಸೌಖ್ಯದ ಭ್ರಾಂತಿಯು ಮೂರನೆಯದು.ಅಮುಖ್ಯವೂ ಮಿಥ್ಯೆಯೂ
ಆಗಿರುವ ಆತ್ಮನಲ್ಲಿ ಎಂದರೆ ಪುತ್ರ ಭಾಯಾ೯ದಿಗಳಲ್ಲಿ
ಮತ್ತು ಅನಾತ್ಮವಾದ ಅನ್ನಮಯಾದಿ ಕೋಶಗಳಲ್ಲಿ ಅವು
ಮುಖ್ಯ,ಅವು ಆತ್ಮೆ ಎಂಬ
ಭ್ರಾಂತಿಯು ನಾಲ್ಕನೆಯದು.ಅಜ್ಞಾನವು ಯೋಗಿಯಾದ ಪರಮಹಂಸನಿಗೆ ಮಹಾವಾಕ್ಯಾಥ೯ಜ್ಞಾನದಿಂದ
ಹೋಗಿರುತ್ತದೆ.ವಾಸನೆಯಾದರೋ ಯೋಗಾಭ್ಯಾಸದಿಂದ ವಿವೃತ್ತವಾಗಿರುತ್ತದೆ.(ಪುಟ372)
27)ಯೋಗಿಯಾದವನು 'ಧೀರನಾದ ಬ್ರಾಹ್ಮಣನುಅವನನ್ನೇ ಅರಿತು
ಪ್ರಜ್ಞೆಯನ್ನವಲ<ಬಿಸಬೇಕು.(ಬೃ.ಉ4.4.21)ಎಂಬ
ಶೃತಿಯನ್ನನುಸರಿಸಿ ಯೋಗದಿಂದ ಚಿತ್ತ ವಿಕ್ಷೇಪಗಳನ್ನು
ಪರಿಹರಿಸಿ ನಿರಂತರವಾಗಿ ಪರಮಾತ್ಮ ವಿಷಯವಾದ ಪ್ರಜ್ಞೆಯನ್ನು
ಮಾಡುತ್ತಾನೆ.ಆದುದರಿಂದ ಜ್ಞಾನವು ನಿತ್ಯವಾದುದರಿಂದ ,ಜ್ಞಾನದಿಂದ
ನಾಶವಾಗುವ ಅಜ್ಞಾನ ಮತ್ತು ಅದರ
ವಾಸನೆ ಇವುಗಳ ನಿವೃತ್ತಿಯೂ ಸಹ
ನಿತ್ಯವಾಗಿರುತ್ತದೆ.(ಪುಟ373)
28)ವೇದಾಂತಗಳಿಂದ
ತಿಳಿದುಬರುವ ಪರಬ್ರಹ್ಮವು ಯಾವುದಿದೆಯೋ ಅದು ನಾನೇ ,ನನಗಿಂತ
ಬೇರೆಯಲ್ಲ -ಎಂದು ನಿಶ್ಚಯಿಸಿ ಯೋಗಿಗೆ
ಇಂಥ ಅವಸ್ಥೆಯುಂಟಾಗುತ್ತದೆ.ಆಯೋಗಿಗೆ ಬ್ರಹ್ಮಾನುಭವದರೀತಿಯನ್ನು ತೋರಿಸಿಕೊಡುತ್ತದೆ:ಶಾಓತವೂ
ಅಚಲವೂ ಅದ್ವಯಾನಂದವೂ ವಿಜ್ಞಾನ
ಘನವೂ ಆದ ಅದೇ ನಾನಾಗಿರುವೆನು.:ಅದೇ ನನ್ನ ಪರಮಧಾಮ.(374)
2೯)ಯಾವ ಪರಮಾತ್ಮನು ಶಾಂತನೋ
(ಕ್ರೋಧಾಧಿವಿಕ್ಷೇಪಗಳಿಲ್ಲದವನೋ
)ಅಚಲನೂ (ಗಮನಾದಿ ಕ್ರಿಯೆಗಳಿಲ್ಲದವನೋ)ಸ್ವಗತ
ಸಜಾತೀಯ ವಿಜಾತೀಯ ಭೇದಗಳಿಲ್ಲದವನೋ, ಸಚ್ಚಿದಾನಂದೈಕರಸನೋಅವನು
ನಾನೇ ಆಗಿರುತ್ತೇನೆ.ಆ ಬ್ರಹ್ಮತತ್ವವೇ ಯೋಗಿಯಾದ
ನನಗೆ ಪರಮಧಾಮವು ಎಂದರೆ ನಿಜಸ್ವರೂಪವು,ಕತೃ೯ತ್ವ
-ಭೋಕ್ತøತ್ವ ಮೊದಲಾದವುಗಳಿಂದ
ಕೂಡಿದ ಇದು ನನ್ನ ನಿಜಸ್ವರೂಪವಲ್ಲ;ಏಕೆಂದರೆ ಇದು ಮಾಯೆಯಿಂದ
ಕಲ್ಪಿತವಾಗಿರುತ್ತದೆ.ಆತ್ಮನು ಪರಬ್ರಹ್ಮವೇ ಆದರೆ
ಈಗಲೇ ಆನಂದದ ಪ್ರಾಪ್ತಿಯು ಏಕೆ
ಆಗುವುದಿಲ್ಲ?-ಎಂಬ ಪ್ರಶ್ನೆಗೆ ಉತ್ತರಿಸುತ್ತಾರೆ:'ಹಸುಗಳ ಶರೀರದಲ್ಲಿರುವ ತುಪ್ಪವು ಅವುಗಳ
ಅಂಗವನ್ನು ಪೋಷಿಸುವುದಿಲ್ಲ.ಆದರೆ ಅದೇ ತುಪ್ಪವು
ವಿಶೇಷ ಕಮ೯ದಿಂದ ಸಂಸ್ಕರಿಸಲ್ಪಟ್ಟಾಗ ಅದೇ
ಹಸುವಿಗೆ ಔಷಧವಾಗುತ್ತದೆ.ಹೀಗೆಯೇ ದೇವನಾದ ಪರಮೇಶ್ವರನು
ಎಲ್ಲರ ಶರೀರದಲ್ಲಿಯೂ ತುಪ್ಪದಂತೆ (ಅಂತಯಾ೯ಮಿಯಾಗಿ)ಇದ್ದುಕೊಂಡಿದ್ದರೂ ಉಪಾಸನೆ ಇಲ್ಲದಿದ್ದರೆ ನರರಿಗೆ
ಹಿತವನ್ನುಂಟು ಮಾಡನು'(ಪುಟ375)
30)ಯೋಗಿಯು
ಪೂವಾ೯ಶ್ರಮದಲ್ಲಿ ಆಚಾಯ೯ ತಂದೆ ತಾಯಿ
ಭ್ರಾತೃ ಮೊದಲಾದವರೆಂದು ಪ್ರಸಿದ್ಧರಾಗಿದ್ದ ,ಕಮಿ೯ಗಳು ಜಡಶ್ರದ್ಧೆಯುಳ್ಳವರೂ ಆದ
ಅವರು (ಯೋಗಿಗೆ) ಶಿಖೆ
ಯಜ್ಞೋಪವೀತ ಸಂಧ್ಯಾವಂದನೆ ಮೊದಲಾದುವು ಇಲ್ಲದ್ದರಿಂದ ಅವನಲ್ಲಿ ಪಾಷಂಡಭಾವವನ್ನು ಆರೋಪಿಸಿ ವ್ಯಾಮೋಹಗೊಳಿಸಲು
ಯತ್ನಿಸಿದರೆ.ಅಂತಹ ವ್ಯಾಮೋಹವು ಹುಟ್ಟದಿರುವಂತೆ
ಯೋಗಿಗೆ ಇರಬೇಕಾದ ನಿಶ್ವಯವನ್ನು ಶ್ರುತಿಯು
ತೋರಿಸುತ್ತದೆ:ಅದೇ (ಅವನಿಗೆ)ಶಿಖೆ
ಮತ್ತು ಅದೇ ಅವನಿಗೆ ಉಪವೀತ.ಪರಮಾತ್ಮ ಆತ್ಮರ ಏಕತ್ವಜ್ಞಾನದಿಂದ
ಅವರ ಭೇದವು ಭಗ್ನವಾºಗಿರುತ್ತದೆ.ಅದೇ ಸಂಧ್ಯೆ'(ಪುಟ377)
31)ವಿಷಯಾನಂದವೆಲ್ಲವೂ
ಬ್ರಹ್ಮಾನಂದದ ಅಂಶವಾಗಿರುತ್ತದೆ.'ಈ ಆನಂದದ ಒಂದು
ಅಂಶವನ್ನೇ ಅನುಸರಿಸಿ ಇತರ ಪ್ರಾಣಿಗಳು ಜೀವಿಸುತ್ತವೆ.(ಬೃ.ಉ.4.3.32)(ಪುಟ
327)
32)ಸೂತ್ರ
ಎಂದರೆ ಪರಮಪದವು.ಬಾಹ್ಯ ಸೂತ್ರವು
ಪರಮಪದವನ್ನು ಸೂಚಿಸುವುದರಿಂದ ಅದನ್ನು ಸೂತ್ರವೆಂದು ಹೇಳುತ್ತಾರೆ.ಆ ಸೂತ್ರವನ್ನು ಯಾವನು
ಅರಿತಿರುವನೋ ಅವನ
ವೇದಪಾರಗನದಾದ ವಿಪ್ರನು.(ಪುಟ 327)
33)ಯಾವನು
ಬ್ರಹ್ಮಭಾವವೆಂಬ ಈಸೂತ್ರವನ್ನು ಧರಿಸಿರುವನೋ ಅವನು ಚೇತನನು.ಆ
ಸೂತ್ರವನ್ನು ಧರಿಸುವುದರಿಂದ ಅವನ
ಮೇಲೆ ಉಚ್ಛಿಷ್ಟದ ಪರಿಣಾಮವಿರುವುದಿಲ್ಲ.ಅವನು ಅಶುಚಿಯಾಗುವುದಿಲ್ಲ.ಯಾರಿಗೆ
ಸೂತ್ರವು ಒಳಗಿರುವುದೋ ಯಾರು
ಜ್ಞಾನವನ್ನೇ ಯಜ್ಞೋಪವೀತವಾಗಿ ಉಳ್ಳವರೋ ಅವರೇ ಲೋಕದಲ್ಲಿ
ಸೂತ್ರವನ್ನು ಬಲ್ಲವರು ಮತ್ತು ಅವರೇ
ಯಜ್ಞೋಪವೀತ ಧಾರಿಗಳು.ಯಾರು ಜ್ಞಾನವನ್ನೇ
ಶಿಖೆಯನ್ನಾಗಿ ಹೊಂದಿರುವರೋ ,ಜ್ಞಾನನಿಷ್ಠರಾಗಿರುವರೋ,ಜ್ಞಾನವನ್ನೇ ಯಜ್ಞೋಪವೀತವಾಗಿ ಹೊಂದಿರುವರೋ ಅವರಿಗೆ
ಜ್ಞಾನವೇ ಪರವಸ್ತು.(ಪುಟ 378).
34)ತತ್ವಜ್ಞಾನಿಯೇ
ನಿಜವಾದ ಯಜ್ಞೋಪವೀತ ಧಾರಿಯುಅದನ್ನರಿತವರು ಅವನನ್ನು ನಿಜವಾದ ಯಜ್ಞಿಯೆಂದು (ಯಜ್ಞಕತೃ೯)ವೆಂದು ತಿಳಿದಿರುತ್ತಾರೆ.(ಬ್ರಹ್ಮೋಪನಿಷತ್
3)(ಪುಟ378).
35)ಈ ಏಕತ್ವ ಬುದ್ಧಿಯು (ಜೀವಬ್ರಹ್ಮೈಕ್ಯ)
ಆ ಇಬ್ಬರು ಆತ್ಮರ ಸಂಧಿಯಲ್ಲಿ ಹುಟ್ಟುವುದರಿಂದ
'ಸಂಧ್ಯಾ' ಎಂದು ಕರೆಯಲ್ಪಡುತ್ತದೆ.ಹಗಲು
-ರಾತ್ರಿಗಳ ಸಂಧಿಯಲ್ಲಿ ಅನುಷ್ಠಿಸಬೇಕಾದ ಕ್ರಿಯೆಯು ಹೇಗೆ ಸಂಧ್ಯಾ ಎನಿಸಿದೆಯೋ ಹಾಗೆಯೇ
ಇಲ್ಲಿಯೂ ಅರಿಯಬೇಕು.ಶ್ರದ್ಧಾಜಡರಿಂದ ಯೋಗಿಯನ್ನು ವ್ಯಾಮೋಹಗೊಳಿಸಲು ಶಕ್ಯವಾಗುವುದಿಲ್ಲ.(ಪುಟ 37೯)
36)'ಸವ೯ಕಾಮಗಳನ್ನೂ
ಪರಿತ್ಯಜಿಸಿ ಅದ್ವೈತದಲ್ಲಿ ಪರಮಸ್ಥಿತಿಯು ಆಗುತ್ತದೆ.'(ಪುಟ 37೯)
37)"ಈ
ಪ್ರುಷನು ಕಾಮಮಯನೇ "(ಬೃ.ಉ.4.4,5)ಆದುದರಿಂದ
ಯೋಗಿಯ ನಿಷ್ಕಾಮವಾದ ಚಿತ್ತಕ್ಕೆ ಅದವದೈತದಲ್ಲಿ ನಿವಿ೯ಘ್ನವಾದ ಸ್ಥಿತಿಯು ಹೊಂದುತ್ತದೆ.(ಪುಟ37೯)
38) ಯಾವನು
ಜ್ಞಾನವೆಂಬ ದಂಡ£ವನ್ನು ಧರಿಸಿರುವನೋ
ಅವನು ಏಕದಂಡಿ ಎಂದು ಕರೆಯಲ್ಪಡುತ್ತಾನೆ.ಯಾವನು ಕೇವಲ ಕಾಷ್ಠದಂಡವನ್ನು
ಧರಿಸಿ ಎಲ್ಲವನ್ನೂ ಭಕ್ಷಿಸುವನೋ ,ಜ್ಞಾನರಹಿತನಾಗಿರುವನೋ ಅವನು
ಮಹಾರೌರವವೆಂಬ ಹೆಸರುಳ್ಳ ಘೋರನರಕಗಳನ್ನು
ಹೊಂದುತ್ತಾನೆ.ಯಾವನು ತಿತಿಕ್ಷೆಜ್ಞಾನ ವೈರಾಗ್ಯ
ಶಮ ಮೊದಲಾದ ಗುಣಗಳಿಲ್ಲದೆ ಕೇವಲ
ಭಿಕ್ಷೆಯಿಂದ ಜೀವಿಸುವನೋ ಅವನು
ಪಾಪಿಯು.ಅವನು ಯತಿವೃತ್ತಿಯನ್ನು ಮಾಡಿದವನು.ಈ ಭೇದವನ್ನರಿತು ಅವನು
ಪರಮಹಂಸನಾಗುವನು"(ಪುಟ380)
3೯)ವಾಗ್ದಂಡದಲ್ಲಿ ಮೌನವನ್ನಾಚರಿಸಬೇಕು.ಕಮ೯ದಂಡದಲ್ಲಿ ಆಶಾರಾಹಿತ್ಯವನ್ನು ಅಭ್ಯಸಿಸಬೇಕು.ಮಾನಸದಂಡದಲ್ಲಿ ಪ್ರಾಣಾಯಾಮವನ್ನು ವಿಧಿಸಿರುತ್ತದೆ.(ಪುಟ 381)
40)'ಯತಿಯಾದ
ಪರಮಹಂಸನೇ ಶ್ರ್ಯತಿಯಲ್ಲಿ ಹೇಳಿರುವ ನಾಲ್ಕನೆಯವನು..ಯಮನಿಯಮಗಳಿಂದ ಕೂಡಿದ
ಅವನು ವಿಷ್ಣುರೂಪಿಯು,ತ್ರಿದಂಡಧಾರಿಯು'(ಪುಟ382)
41)ನಾಲ್ಕು
ವಣ೯ಗಳಲ್ಲಿಯೂ ಭಿಕ್ಷೆಯನ್ನಾಚರಿಸಬೇಕು.ಇವು ಜ್ಞಾನಿಯನ್ನು ಕುರಿತವು.(ಪುಟ383)
42)ಪರಮಹಂಸನು
ಯಾವಪ್ರಕಾರದಿಂದಲೇ ಆಗಲಿ ಅವನು ಯಾವಾಗಲೂ
ಜ್ಞಾನಾಭ್ಯಾಸಿಯಾಗಿರಬೇಕು.(ಪುಟ384).
43)'ಭಿಕ್ಷುವು
ದಿಗಂಬರನು.ಇತರರಿಗೆ ನಮಸ್ಕಾರ ಮಾಡನು."ಸ್ವಧಾ"ಎಂಬ ಉಚ್ಛಾರಣವನ್ನು ಮಾಡನು.ಅವನಿಗೆ ನಿಂದೆಯಾಗಲೀ ಸ್ತುತಿಯಾಗಲೀ
ಇಲ್ಲ.ನಿಬ೯ಂಧವಿಲ್ಲ.ಆವಾಹನೆಯಿಲ್ಲ.ವಿಸಜ೯ನೆ ಇಲ್ಲ.ಮಂತ್ರವಿಲ್ಲ,ಧ್ಯಾನವಿಲ್ಲ,ಉಪಾಸನೆಯಿಲ್ಲ,ಲಕ್ಷ್ಯವಿಲ್ಲ,ಅಲಕ್ಷ್ಯವಿಲ್ಲ,ಪೃಥಕ್ತ್ವ-ಅಪೃಥಕ್ತ್ವಗಳಿಲ್ಲ,,'ನಾನೂ ನೀನೂ ಉಳಿದೆಲ್ಲವೂ'ಎಂಬ ಭಾವನೆಗಳಿಲ್ಲ.ಭಿಕ್ಷುವು
ಅನಿಕೇತನ ಸ್ಥಿತಿಯುಳ್ಳವನೇ.ಚಿನ್ನಮೊದಲಾದವುಗಳಿಂದ ಮಾಡಿದ ವಸ್ತುಗಳನ್ನು ಪರಿಗ್ರಹಿಸಬಾರದು.ಜನರನ್ನು ಶಿಷ್ಯರನ್ನಾಗಿ ಪರಿಗ್ರಹಿಸಬಾರದು.,ಅವರನ್ನು ನೋಡಲೂಬಾರದು.'(ಪುಟ385)
44)ಆಶಾ
ಎಂದರೆ ದಿಕ್ಕುಗಳು.ಅವೇ ಯಾವನಿಗೆ ಅಂಬರವೋ
ಎಂದರೆ ವಸ್ತುವೋ ಆಚ್ಛಾದನವೋ ಅವನು
ಆಶಾಂಬರನು.(ಪುಟ386)
45) ದೇವಪೂಜೆಯಲ್ಲಿ
'ಭಿಕ್ಷಾಟನೆ,ಜಪ,ಶೌಚ,ಸ್ನಾನ
ಧ್ಯಾನ ದೇವಪೂಜೆ-ಈ ಆರು ಯತಿಗೆ
ರಾಜಾಜ್ಞೆPಯಂತೆ ಕತ೯ವ್ಯಗಳು.ಎಂಬ
ಯಾವ ಸ್ಮøತಿ ಬಂಧವಿದೆಯೋ
ಅದೂಕೂಡ ಯೋಗಿಯಲ್ಲದವನನ್ನು ಕುರಿತದ್ದು.(ಪುಟ387)
46)ಒಂದೇ
ಸಲ ಸ್ಮರಿಸುವುದು ಧ್ಯಾನ ನಿರಂತರವಾಗಿ ಪುನಃಪುನಃಸ್ಮರಿಸುವುದು
ಉಪಾಸನೆ-ಎಂಬುದು ಅವೆರಡರಲ್ಲಿರುವಭೇದ.(ಪುಟ387)
47)ಅವನ ಚಿತ್ತವು
ಬ್ರಹ್ಮದಲ್ಲಿ ವಿಶ್ರಾಂತಿ ಹೊಂದಿರುತ್ತದೆ.ಆದುದರಿಂದಲೇ ಆ ಭಿಕ್ಷುವು ಮನೆಯಿಲ್ಲದೆ
ಇರುತ್ತಾನೆ.(ಪುಟ388)
48)ಗೌಡಪಾದಾಚಾಯ೯ರು
ಹೀಗೆ ಹೇಳಿರುತ್ತಾರೆ."ಸ್ತುತಿ ನಮಸ್ಕಾರಗಳಿಲ್ಲದೆ ಶ್ರಾದ್ಧಾದಿಕಮ೯ವಿಲ್ಲದೆ
ಚಲ-ಅಚಲ ನಿಕೇತನಗಳನ್ನಾಶ್ರಯಿಸಿ ಯತಿಯು
ನಿಬ೯ಂಧರಹಿತವಾಗಿರಬೇಕು.(ಮಾಂ.ಕಾ2.37)(ಪುಟ388)
4೯) ಚಲ ಎಂದರೆ ಶರೀರ.ಅಚಲ ಎಂದರೆ ಆತ್ಮತತ್ವ.(ಪುಟ38೯)
50)ಆಸನ
ಪಾತ್ರ ಲೋಪ ಸಂಚಯ ಶಿಷ್ಯಸಂಗ್ರಹ
ದಿವಾಸ್ವಾಪ ವ್ಯಥಾ೯ಲಾಪ-ಈ ಆರು ಯತಿಗೆ
ಬಂಧವನ್ನುಂತು ಮಾಡುತ್ತದೆ.ಮಲೆಗಾಲವನ್ನುಳಿದು ಬೇರೆಸಮಯದಲ್ಲಿ ,ಒಂದು ಗ್ರಾಮದಲ್ಲಿ ದಿನವೊಂದಕ್ಕಿಂತ
ಅಧಿಕವಾಗಿಯೂ ಪಟ್ಟಣದಲ್ಲಿ ಐದು ದಿನಗಳಿಗಿಂತ ಅಧಿಕವಾಗಿಯೂ ನಿಂತರೆ ಅದು ಆಸನ
ಎನಿಸುವುದು.ಮೇಲೆ ಹೇಳಿದ ಸೋರೆಬುರುಡೆಯೇ ಮುಂತಾದ
ಪಾತ್ರೆಗಳಲ್ಲಿ ಒಂದನ್ನಾದರೂ ಭಿಕ್ಷುವು ಸಂಗ್ರಹಿಸಬಾರದು.ಅದು ಪಾತ್ರಲೋಪವೆನಿಸುತ್ತದೆ.ದಂಡ
ಮೊದಲಾದವನ್ನು ಹಿಡಿದಿರುವವನು
ಕಾಲಾಂತರದ ಭೋಗಕ್ಕಾಗಿ ಎರಡನೆಯ ದಂಡಾದಿಗಳನ್ನು
ಗ್ರಹಿಸಿದರೆ ಅದು ಸಂಚಯ ಎನಿಸುತ್ತದೆ.ಕರುಣೆಯಿಂದಲ್ಲದೆ ಶುಶ್ರೂಷೆ ಲಾಭ ಪೂಜೆ ಯಶಸ್ಸು
ಇವುಗಳಿಗೋಸ್ಕರ ಶಿಷ್ಯರನ್ನು
ಪರಿಗ್ರಹಿಸಿದರೆ ಅದು ಶಿಷ್ಯ ಸಂಗ್ರಹವೆನಿಸಿತ್ತದೆ.ದಿವಾ ಎಂದರೆ ವಿದ್ಯೆ.ಸ್ವಾಪವೆಂದರೆ ನಿದ್ರೆ.ಅವಿದ್ಯೆಯು ರಾತ್ರಿಯೆಂದು
ಕರೆಯಲ್ಪಡುತ್ತದೆ.ವಿದ್ಯಾಭ್ಯಾಸದ ವಿಷಯದಲ್ಲಿ ಮಾಡುವ ಪ್ರಮಾದವೇದಿವಾಸ್ವಾಪವೆನಿಸುವುದು.ಅಧ್ಯಾತ್ಮಿಕ ಕಥೆಯನ್ನು ಬಿಟ್ಟು ಭಿಕ್ಷಾಚಯೆ೯ಗೆ
ಸಂಬಂಧಪಟ್ಟ ಮಾತು ದೇವತಾಸ್ತುತಿ ಇತರರಿಗೆ
ಆಶೀವಾ೯ದಮಾಡುವುದು ದಾರಿಯಲ್ಲಿ
ಇತರರ ಕ್ಷೇಮಸಮಾಚಾರ-ಇವು ವೃಥಾಲಾಪ ಎನ್ನಿಸಿವೆ.(ಪುಟ 2೯2)
51)'ಸ್ಥಿರ
ಚರ -ಸ್ವತ್ತುಗಳುಬೀಜ ಲೋಹ ವಿಷ ಆಯುಧ-ಈ ಆರನ್ನು -ಮೂತ್ರ
ಪುರೀಷದಂತೆ -ಯತಿಯು ಗ್ರಹಿಸಬಾರದು.ರಸಾಯನ
ಶಾಸ್ತ್ರ ವ್ಯಾಕರಣ ಜ್ಯೋತಿಷ ಮಾರಾಟ
ಕೊಂಡುಕೊಳ್ಳುವುದು ವಿವಿಧ
ಶಿಲ್ಪವಿದ್ಯೆಗಳು -ಇವನ್ನು ಮತ್ತೊಬ್ಬನ ಹೆಂಡತಿಯಂತೆ
ಭಾವಿಸಿ ಯ್ಯಜಿಸಬೇಕು.'(ಪುಟ3೯2)
52)"ಭಿಕ್ಷುವು ಚಿನ್ನವನ್ನು
ರಸದಿಂದ ನೋಡಿದರೆ ಬ್ರಹ್ಮಹತ್ಯೆಯನ್ನು
ಮಾಡಿದವನಾಗುತ್ತಾನೆ. ಭಿಕ್ಷುವು ಚಿನ್ನವನ್ನು ರಸದಿಂದ ಮುಟ್ಟಿದರೆ ಪೌಲ್ಕಸನಾಗುತ್ತಾನೆ.ಭಿಕ್ಷುವು ಚಿನ್ನವನ್ನು ರಸದಿಂದ ತೆಗೆದುಕೊಂಡರೆ ಆತ್ಮಘ್ನನಾಗುತ್ತಾನೆ.ಆದುದರಿಂದ ಭಿಕ್ಷುವು ಚಿನ್ನವನ್ನು ರಸದಿಂದ ನೋಡಬಾರದು,ಮುಟ್ಟಬಾರದು
ಮತ್ತು ತೆಗೆದುಕೊಳ್ಳಬಾರದು.(ಪುಟ3೯3)
53)ರಸದಿಂದ
ಕೂಡಿದ ಅಭಿಲಾಷೆಯಿಂದ ಕೂಡಿದ ಆದರದಿಂದ ಚಿನ್ನವು ನೋಡಲ್ಪಟ್ಟರೆಆಗ ಆದ್ರಷ್ಟøವಾದ ಭಿಕ್ಷುವು ಬ್ರಹ್ಮಹತ್ಯೆಯನ್ನು
ಮಾಡಿದವನಾಗುತ್ತಾನೆ.
54)ಯಾವನು
ಆತ್ಮನಲ್ಲಿಯೇ ನೆಲೆನಿಂತಿರುವನೋ ಅವನ
ಎಲ್ಲಾ ಇಂದ್ರಿಯಗಳೂ ಉಪರತವಾಗದಿರುತ್ತವೆ.(ಪುಟ3೯7)
55)ದ್ವೇಷಸಂತೋಷಗಳಿಲ್ಲದ
ಯಾವ ಪುರುಷನು ಆತ್ಮನಲ್ಲಿಯೇ ಯಾವಾಗಲೂ
ನೆಲೆಸಿರುವನೋ ಅವನ ಎಲ್ಲಾ ಇಂದ್ರಿಯಗಳ
ಗತಿಯು ,ಎಂದರೆ ಪೃವೃತ್ತಿಯು ಉಪರತವಾಗಿರುತ್ತದೆ.(ಪುಟ 3೯8)
56) ಅನಂತ್ರ
ಶ್ರುತಿಯು ವಿದ್ವತ್ ಸನ್ಯಾಸವನ್ನು
ಉಪಸಂಹರಿಸುತ್ತದೆ:ಯಾವುದು ಪೂಣಾ೯ನಂದವೂ ಅದ್ವಿತೀಯವೂ ಜ್ಞಾನರೂಪವೂ
ಆದ ಬ್ರಹ್ಮವೋ ಅದು ನಾನಾಗಿರುವೆನು-ಎಂದು
ಅರಿತುಕೊಂಡು ಕೃತಕೃತ್ಯನಾಗುತ್ತಾನೆ,ಕೃತಕೃತ್ಯನಾಗುತ್ತಾನೆ.(ಪುಟ3೯8)
57) 'ಜ್ಞಾನಾಮೃತದಿಂದ
ತೃಪ್ತನೂ ಕೃತಕೃತ್ಯನೂ
ಆದ ಯೋಗಿಗೆ ಯಾವ ಕತ೯ವ್ಯವೂ
ಇರುವುದಿಲ್ಲ.ಇದ್ದದ್ದೇ ಆದರೆ ಅವನು
ತತ್ವವಿದನೇ ಅಲ್ಲ!'(ಪುಟ3೯೯)
'ವಿದ್ಯಾತೀಥ೯ ಮಹೇಶ್ವರನು ಜೀವನ್ಮುಕ್ತಿ
ವಿವೇಕದ ಮೂಲಕ ಹೃದಯಾಂಧಕಾರವನ್ನು ಹೋಗಲಾಡಿಸಿ
(sakala purusharthavannu)
ಕೊಡಲಿ!'
ಹೀಗೆ ಶ್ರೀಮದ್ವಿದ್ಯಾರಣ್ಯ ಮುನಿಗಳಿಂದ ವಿರಚಿತವಾದ ಜೀವನ್ಮುಕ್ತಿ ವಿವೇಕವೆಂಬ ಗ್ರಂಥದಲ್ಲಿ ವಿದ್ವತ್ಸನ್ಯಾಸ ನಿರೂಪಣವೆಂಬ ಹೆಸರಿನ ಐದನೆಯ ಪ್ರಕರಣವು
ಮುಗಿಯಿತು.
ಇಲ್ಲಿಗೆ ಶ್ರೀಮದ್ವಿದ್ಯಾರಣ್ಯ ಮುನಿಗಳಿಂದ
ವಿರಚಿತವಾದ ಈ ಜೀವನ್ಮುಕ್ತಿ ವಿವೇಕ
ಗ್ರಂಥವು ಸಮಾಪ್ತವಾಯಿತು.
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
ದಿನಾಂಕ
28.12.201೯
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
No comments:
Post a Comment