Sunday, 2 February 2020

Vidyaranya Saara Sangraha - Jeevanmukthi Viveka - Adhyaya - 3


ಮೂರನೆಯ ಅಧ್ಯಾಯ: ಮನೋನಾಶ ಪ್ರಕರಣ:
1) ಸಂಪೂಣವಾಗಿ ವಾಸನಾ ಕ್ಷಯವಾದಾಗ  ಮನಸ್ಸೂ ಕೂಡ ನಷ್ಟವಾಗುತ್ತದೆ.ಹಾಗಿದ್ದರೂ ಸ್ವತಂತ್ರವಾಗಿ ಮನೋ ನಾಶವನ್ನು  ಚೆನ್ನಾಗಿ ಅಭ್ಯಾಸ ಮಾಡಿದರೆ ವಾಸನಾ ಕ್ಷಯವು ರಕ್ಷಿತವಾಗುತ್ತದೆ.(ಪುಟ 20)

2)ಸಾವಿರಾರು  ಮೊಳಕೆಗಳನ್ನೂ  ಕೊಂಬೆಗಳನ್ನೂ ,ಹಣ್ಣುಗಳನ್ನೂ  ಎಲೆಗಳನ್ನೂ ಹೊಂದಿರುವ ಸಂಸಾರ ವೃಕ್ಷಕ್ಕೆ ಮನಸ್ಸೇ ಬೇರು.(ಪುಟ 210).

3)ಮನಸ್ಸು ಸಂಕಲ್ಪರೂಪವಾದುದು.ಸಂಕಲ್ಪವನ್ನು ಉಪಶಮನಗೊಳಿಸುವುದರ ಮೂಲಕ ಆಮನಸ್ಸನ್ನು ನಾಶಪಪಡಿಸಬೇಕು.ಹೀಗೆ ಸಂಸಾರವೃಕ್ಷವು ಒಣಗಿ ಹೋಗುತ್ತದೆ.ನಾನು ಜಾಗೃತನಾಗಿರುವೆನು!ಮನಸ್ಸೆಂಬ ಹೆಸರುಳ್ಳ ,ಆತ್ಮನನ್ನಪಹರಿಸುವ ಕಳ್ಳನನ್ನು ಕಂಡುಹಿಡಿದೆನು!ಇವನನ್ನಿಲ್ಲಿಯೇ ಕೊಲ್ಲುವೆನು.ಬಹುಕಾಲ ಮನಸ್ಸುನಿಂದ ಕೊಲ್ಲಲ್ಪಟ್ಟಿದ್ದೆನು.(ಪುಟ 210)

4)ಮನಸ್ಸಿನ ಅಭ್ಯದಯವೇ  ಮನುಷ್ಯನ ನಾಶ.
ಮನೋ ನಾಶವೇ ಮಹೋದಯ.(ಪುಟ 212).

5)ಜ್ಞಾನಿಯ ಮನಸ್ಸು ನಾಶಹೊಂದುತ್ತದೆ.ಅಜಞನಿಗಾದರೋ ಮನಸ್ಸೇ ಸಂಕೋಲೆ.ಎಲ್ಲಿಯವರೆಗೆ ಏಕತ್ವಚಹಿಂತನವೆಂಬ  ಅಭ್ಯಾಸವನ್ನು ದೃಢವಾಗಿ ಮಾಡುವುದರ ಮೂಲಕ ಮನಸ್ಸನ್ನು ಗೆದ್ದು ಕೊಳ್ಳುವುದಿಲ್ಲವೋ ಅಲ್ಲಿಯವರೆಗೆ  ವಾಸನೆಗಳೆಂಬ ಮಧ್ಯರಾತ್ರಿಯ ಪಿಶಾಚಿಗಳು  ಹೃದಯದಲ್ಲಿ ನತನಮಾಡುತ್ತವೆ.(ಪುಟ212)

6)ಚಿತ್ತದ ದಪವನ್ನು  ಕ್ಷಯಮಾಡಿಕೊಂಡು  ಇಂದ್ರಿಯಗಳೆಂಬ ಶತ್ರುಗಳನ್ನು  ಜಯಿಸಿಕೊಂಡವನಿಗೆ ಭೋಗವಾಸನೆಗಳು  ಛಳಿಗಾಲದಲ್ಲಿ ಪದ್ಮದ ಮೊಗ್ಗುಗಳು ಬಾಡಿಹೋಗುವಂತೆ ಕ್ಷೀಣವಾಗುತ್ತವೆ.(ಪುಟ 212)

7)ಯಾರ ಹೃದಯವೆಂಬ ಬಿಲದಲ್ಲಿ ತೀವ್ರವಾದ ವಾಸನಾ ವಿಷವನ್ನು ಧರಿಸಿರುವ ಮನಸ್ಸೆಂಬ ಸಪವು ಸುರುಳಿ ಸುತ್ತಿಕೊಂಡು ಶಾಂತವಾಗಿ ಮಲಗಿರುವುದೋಯಾವನು ಪೂಣ೯೯ಚಂದ್ರನಂತೆ ಉದಯಿಸಿರುವನೊ  ಅಂಥ ಅವ್ಯಯನಾದ ಪುರುಷನನ್ನು  ನಮಸ್ಕರಿಸ್ಸುತೇನೆ.(ಪುಟ 212)

 8)ಗೌಡಪಾದಾಚಾಯರು ಹೀಗೆ ಹೇಳಿರುತ್ತಾರೆ.'ಎಲ್ಲಾ ಯೋಗಿಗಳಿಗೂ  ಅಭಯ ದುಃಖಕ್ಷಯ ಜ್ಞಾನ ಅಕ್ಷಯವಾದ ಶಾಂತಿ-ಇವು ಮನೋನಿಗ್ರಹದಿಂದಲೇ ಉಂಟಾಗುತ್ತವೆ. (ಮಾಂ.ಕಾ.3.40)

)ಮನಸ್ಸು ಚಂಚಲವಾದದ್ದು. ಕ್ಷೋಭೆಯನ್ನುಂಟು ಮಾಡುವ ಸ್ವಭಾವವುಳ್ಳದ್ದು,ಬಲವುಳ್ಳದ್ದು ಮತ್ತು ದೃಢವಾದದ್ದು.ಅದರ ನಿಗ್ರಹವು  ವಾಯು ನಿಗ್ರಹದಂತೆ ಅತ್ಯಂತ ಕಷ್ಟ.(214)

10)ಸರಿಯಾದ ಯುಕ್ತಿಯನ್ನನುಸರಿಸದಿದ್ದರೆ  ಎಷ್ಟುಸಲ ಆಸನದಲ್ಲಿ ಕುಳಿತು ಪುನಃ ಪುನಃ ಏಕ್ಆಗ್ರತೆಯಿಂದ ಪ್ರಯತ್ನಿಸಿದರೂ  ಮನಸ್ಸನ್ನು ಗೆಲ್ಲಲಾಗುವುದಿಲ್ಲ.(ಪುಟ 214)

11) ನಿಗ್ರಹವು  ಹಠದಿಂದಾದದ್ದು,ಯುಕ್ತಿಯಿಂದಾದದ್ದು  ಎಂದು ಎರಡು ವಿಧ.(ಪುಟ 214)

12ಅಧ್ಯಾತ್ಮ ವಿದ್ಯಾ ಸಂಪಾದನೆ,,ಸಾಧುಸಂಗ, ವಾಸನೆಗಳ ತ್ಯಾಗ,ಪ್ರಾಣಸ್ಪಂದನದ ನಿರೋಧ  ಇವು ಚಿತ್ತಜಯಕ್ಕಾಗಿ ಇರುವ ಪುಷ್ಟವಾದ ಯುಕ್ತಿಗಳು.(ಪುಟ 214)

13)ಮಾಧವಾಚಾಯರು  ಹಠಾತ್ತಾಗಿ ಮನೋಜಯವನ್ನು  ಮಾಡಲು ತೊಡಗಿರುವರೊ ಅವರು ಮದಿಸಿದ ಆನೆಯನ್ನು  ಬಿಸತಂತುವಿನಿಂದ (ಬಿಸತಂತು ಎಂದರೆ ಕಮಲದ ದಂಟಿನಲ್ಲಿರುವ  ಸೂಕ್ಷ್ಮವಾದ ನಾರು) ಬಂಧಿಸುತ್ತಾನೆ.(ಪುಟ214)

14) ಹಠನಿಗ್ರಹ ಮತ್ತು ಕ್ರಮನಿಗ್ರಹ  ಎಂದು ನಿಗ್ರಹವು ಎರಡು ವಿಧ.(ಪುಟ 215)

15) ಮನಸ್ಸು ತನಗೆ ಗೋಚರವಾಗಿರುವ  ದೃಶ್ಯವಸ್ತುಗಳಲ್ಲಿ ಪ್ರಯೋಜನವಿರುವುದಿಲ್ಲ ವೆಂಬುದನ್ನೂ ಪ್ರಯೋಜನವಿರುವ ದೃಗ್ವಸ್ತುವು ನನಗೆ ಅಗೋಚರವೆಂಬುದನ್ನು ಅರಿತು  ಸೌದೆಯಿಲ್ಲದ ಬೆಂಕಿಯಂತೆ ತಾನಾಗಿಯೇ ಶಾಂತವಾಗುತ್ತದೆ.(ಪುಟ 215)

16)ಯೋನಿ ಎಂದರೆ ಕಾರಣ.ಉಪದೇಶಿಸಲ್ಪಟ್ಟರೂ ತತ್ವವನ್ನು ಯಾವನು ಚೆನ್ನಾಗಿ ಅರಿತುಕೊಳ್ಳಲಾರನೊ ಮತ್ತು ಯಾವನು  ಉಪದಿಷ್ಟವಾದ ತತ್ವವನ್ನು ಮರೆಯುವನೊ ಇವರಿಬ್ಬರಿಗೂ ಸಾಧುಸಂಗಮವೇ ತತ್ವಜ್ಞಾನದ ಉಪಾಯ.(ಪುಟ 217)

17)ವೃತ್ತಿಗಳೆಂಬ ಬಳ್ಳಿಗಳನ್ನು ಧರಿಸಿರುವ ಚಿತ್ತವೃಕ್ಷಕ್ಕೆ ಎರಡು ಬೀಜಗಳಿವೆ.ಮೊದಲನೆಯದು ಪ್ರಾಣಸ್ಪಂದನ,ಎರಡನೆಯದು  ದೃಢವಾದ ವಾಸನೆ.ಸವ೯ಗತವಾಗಿರುವ ಅರಿವು  ಪ್ರಾಣಸ್ಪಂದನದಿಂದ ಜಾಗೃತವಾಗುತ್ತದೆ.(ಲಘು ಯೋಗವಾಸಿಷÀ್ಠ 28-40)(ಪುಟ 217)

18)ಜನ್ಮ ಮುಪಪು ಮರಣ-ಇವುಗಳಿಗೆ ಕಾರನವೂ  ಮತ್ತು ಅತಿ ಚಂಚಲವೂ ಆದ  ಚಿತ್ತವು ವಿಷಯ ಪದಾಥ೯ಗಳನ್ನು  ಏಕರೀತಿಯಿಂದ ಬಹುವಾಗಿ ಚಿಂತಿಸುವುದರ ಮೂಲಕ ಉಂಟಾಗುತ್ತದೆ.(ಪುಟ218)

1)'ಪ್ರಾಣಸ್ಪಂದ  ವಾಸನೆ-ಇವು  ಚಿತ್ತವೃಕ್ಷದ ಎರಡು ಬೀಜಗಳಗು.ಇವೆರಡರಲ್ಲಿ ಒಂದು ನಾಶವಾದರೆ  ಬೇಗನೆ ಎರಡೂ ನಾಶಹೊಂದುತ್ತವೆ.(ಪುಟ 21)

20)ಅಸಂಗವಾಗಿ ವ್ಯವಹಾರವನ್ನು ನಡೆಸುವುದರಿಂದಲೂ  ಸಂಸಾರ ಭಾವನೆಗಳನ್ನು ತ್ಯಜಿಸುವುದರಿಂದಲೂ ಶರೀರವು ನಾಶವಾಗುತ್ತದೆಂಬ  ಸತ್ಯವನ್ನು ಮನಸ್ಸಿಗೆ ತೋರಿಸಿಕೊಡುವುದರಿಂದಲೂ  ವಾಸನೆಯು ಪ್ರವತಿ೯ಸಲಾರದು.(ಪುಟ22)

21)ಯಾವಾಗ ಇಷ್ಟ ಅನಿಷ್ಟ ರೂಪವಾದ ಯಾವುದನ್ನೂ ಚಿಂತಿಸುವುದಿಲ್ಲವೋ,ಎಲ್ಲವನ್ನೂ ಬಿಟ್ಟು ನಿಲ್ಲುವನೊ ಆಗ ಚಿತ್ತವು ಹುಟ್ಟುವುದೇ ಇಲ್ಲ.

22)ವಾಸನೆ ಇಲ್ಲದಿರುವುದರಿಂದ ಯಾವಾಗ ಮನಸ್ಸು  ಮನನ ಮಾಡುವುದಿಲ್ಲವೊ ಆಗ ಪರಮ ಶಾಂತಿಯನ್ನು ಕೊಡುವ ಅಮನಸ್ತ್ವವು ಉಂಟಾಗುತ್ತದೆ.(ಪುಟ221)

23)ಶಾಂತಿಯಿಲ್ಲ ದಿರುವುದೆಂಬುದನ್ನು ಹೀಗೆ ಹೇಳಿದೆ:ವಿತ್ತವೆಂಬ ಯಕ್ಷನಿಂದ ಹಿಡಿಯಲ್ಪಟ್ಟವನನ್ನು  ಸ್ನೇಹ್ತರಾಗಲೀ  ಬಂಧುಗಳಾಗಲೀ  ಗುರುಗಳಾಗಲಿ ಅಥವಾ ಇತರ ಮಾನವರಾಗಲಿ ರಕ್ಷಿಸಲಾರರು.(ಪ್ಯಟ 221)

24)ಆಸನ-ಅಶನ-ಯೋಗದಿಂದ'ಎಂದು ಯಾವುದನ್ನು ಹೇಳಲಾಯಿತೊ ಅವುಗಳಲ್ಲಿ ಆಸನದ ಲಕ್ಷಣ,ಉಪಾಯ,ಫಲಿವುಗಳನ್ನು ಪತಂಜಲಿಯು  ಮೂರು ಸೂತ್ರಗಳಿಂ ಹೆಳಿರುತ್ತಾನೆ. ಸ್ಥಿರವೂ ಸುಖವೂ ಆದುದು  ಆಸನವು.(ಪುಟ222)

25)ಚಿತ್ತದ ಅನಂತ -ಸಮಾಪತ್ತಿಯು (ಆಸನ ಸಿದ್ಧಿಗೆ)ಅಲೌಕಿಕವಾದ ಉಪಾಯವೆಂದರೆ 'ಯಾವ ಅನಂತನು  ತನ್ನ ಸಾವಿರ ಹೆಡೆಗಳಿಂದ ಭೂಮಿಯನ್ನು ಧರಿಸಿಕೊಂಡು ಸ್ಥೈಯದಿಂದ  ಇರುತ್ತಾನೆಯೋ  ಅವನೇ ನಾನಾಗಿರುತ್ತೇನೆ'ಎಂಬ ಧ್ಯಾನ.(ಪುಟ 223)

26)ಅಶನ ಯೋಗವೆಂದರೆ ಮಿತ್ತಾಹಾರತ್ವ.(ಪುಟ224)  

27)ಆಹಾರಾದಿಗಳಲ್ಲಿ ಮಿತವಾಗಿರುವವನಿಗೆ ಕಮಗಳಲ್ಲಿ ಮಿತವಾದ ವ್ಯಾಪಾರವುಳ್ಳವನಿಗೆ  ಮತ್ತು ನಿದ್ರೆ ಎಚ್ಚರಗಳಲ್ಲಿ ಮಿತವಾಗುರುವವನಿಗೆ ಯೋಗವು ದುಃಖನಾಶಕವಾಗಿರುತ್ತದೆ.(ಗೀತಾ೯-16-17)(ಪುಟ 225).

28)ಭಯಂಕರವಾದ  ಸಂಸಾರ ಪ್ರವಾಹಗಳನ್ನು ಓಂಕಾರವೆಂಬ ತೆಪ್ಪದಿಂದ ದಾಟಬೇಕು.(ಪುಟ 225)

2)ಕೆಟ್ಟ ಕುದಿರೆಗಳನ್ನು ಕಟ್ಟಿದ ರಥವನ್ನು (ಸಾರಥಿಯು ಹೇಗೆ ನಿಗ್ರಹಿಸುವನೊ ) ಹಾಗೆ ಜಾಗರೂಕನಾಗಿ ತನ್ನ ಮನಸ್ಸನ್ನು ನಿಗ್ರಹಿಸಬೇಕು.(ಶ್ವೇ. 2-8-)(ಪುಟ 225)

30)ಯೋಗಿಯು ಎರಡು ವಿಧ.1) ವಿದ್ಯಾಮದವೇ ಮೊದಲಾದ ಅಸುರೀ ಸಂಪತ್ತುಳ್ಳವನು2) ಅವಿಲ್ಲದವನು.(ಪುಟ 226)

31)ಪವತದಿಂದ ಉತ್ಪನ್ನವಾದ ಖನಿಜಗಳು ,ಕಲ್ಮಶಗಳು  ಕರಗಿಸುವುದರಿಂದ ಹೇಗೆ ಸುಟ್ಟು ನಾಶವಾಗುವವೋ  ಹಾಗೆಯೇ ಪ್ರಾಣನಿಗ್ರಹದಿಂದ  ಇಂದ್ರಿಯ ಕೃತ ದೋಷಗಳು  ಸುಡಲ್ಪಡುತ್ತವೆ.(ಪುಟ226).

32)ಯಾವನು ಸಂಚರಿಸುವಾಗಲೂ ಸಂಚರಿಸದಿರುವಾಗಲೂ  ವ್ಯಥೆಪಡುವುದಿಲ್ಲವೋ ಮತ್ತು ನಾಶವಾಗುವುದಿಲ್ಲವೋ ಅವನೇ ನಮ್ಮಲ್ಲಿ ಶ್ರೇಷ್ಠನು.(ಪುಟ 227)

33)ಪೋಣಿಸಲ್ಪಟ್ಟ ಮಣಿಗಳು  ದಾರದಲ್ಲಿರುವಂತೆ  ಎಲ್ಲ ವಸ್ತುಗಳೂ ವಾಯುವಿನಿಂದ  ವ್ಯಾಪಿಸಲ್ಪಟ್ಟಿರುವುದರಿಂದ  ಅದಕ್ಕೆ ಸೂತ್ರವೆಂದು ಹೆಸರು.(ಪುಟ 228)

34)ಪ್ರಾಣಗಳನ್ನು ನಿರೋಧಿಸಿ.(ಪುಟ230)

35)ಪ್ರಾಣವನ್ನು ಎಳೆದಿಟ್ಟುರುವವನು ವ್ಯಾಹೃತ,ಪ್ರಣವ ಮತ್ತು ಶಿರಸ್ಸುಗಳಿಂದ  ಕೂಡಿದ ಗಾಯತ್ರಿಯನ್ನು  ಮೂರುಸಲ ಪಠಿಸಬೇಕು.(ಪುಟ 230)

36)ಭೂಃ,ಭುವಃ ಸ್ವಃ-ಇವ್ಗಳಿಗೆ ವ್ಯಾಹೃತಿಗಳೆಂದು ಹೆಸರು.(ಪುಡ 231)

37)ರೇಚಕವಾದ ಮೇಲೆ ಮಾಡುವ ಕುಂಭಕವು ಬಾಹ್ಯ,ಪೂರಕಾನಂತರ ಮಾಡುವ ಕುಂಭಕವು ಅಂತರ(232)

38)ರೇಚಕವೇ ಬಾಹ್ಯವೃತ್ತಿ
ಪೂರಕವು ಅಭ್ಯಂತರ ವೃತ್ತಿ
ಕುಂಭಕವು ಸ್ತಂಭವೃತ್ತಿ.(ಪುತ233)

3) ಪ್ರಾಣಾಯಾಮದಿಂದ  ಪ್ರಕಾಶಾವರಣವು ಕ್ಷೀಣವಾಗುತ್ತದೆ.(ಯೊಸೂ2.52)(ಪುಟ 236)

40)  ಮನಸ್ಸಿಗೆ ಧಾರಣೆಗಳಲ್ಲಿ ಯೋಗ್ಯತೆ ಉಂಟಾಗುತ್ತದೆ.(ಯೋ ಸೂ 2 .53)(ಪುಟ236)  ಗುದ,ನಾಭಿ ಹೃದಯ  ಭ್ರೂಮಧ್ಯಭಾಗ, ಬ್ರಹ್ಮರಂದ್ರ, ಇವೇ ಮೊದಲಾದ ವಿಶೇಷ ಪ್ರದೇಶಗಳಲ್ಲಿ  ಚಿತ್ತವನ್ನೆಳೆದು ಕೊಂಡು  ಸ್ಥಾಪಿಸುವುದು ಧಾರಣೆ ಎನಿಸುತ್ತದೆ. ಚಿತ್ತವನ್ನು ವ್ಶೇಷ ಸ್ತಾನದಲ್ಲಿ ಸ್ಥಾಪಿಸುವುದು ಧಾರಣೆ.(ಯೋ ಸೂ 3.1)

41)ಶೃತಿಯೂ ಕೂಡ 'ಬುದ್ಧಿವಂತನು  ಮನಸ್ಸು ಸಂಕಲ್ಪಾತ್ಮಕ ಎಂದು ಧ್ಯಾನಿಸಿ ಅದನ್ನು ಸಂಗ್ರಹಿಸಿ  ಆತ್ಮನಲ್ಲಿ ನಿಲ್ಲಿಸಿ  ಹಾಗೆಯೇ ಇರಗೊಳಿಸುತ್ತಾನೆ.ಇದು ಧಾರಣೆಯೆಂದು ಕರೆಯಲ್ಪಡುತ್ತದೆ( ನಾ 15)(ಪುಟ237)

42)ಪ್ರಾಣಾಯಾಮದ ಮೂಲಕ ಮನಸ್ಸು ರಜೋ ಗುಣದ ಕಾಯ೯ವಾದ  ಚಾಂಚಲ್ಯದಿಂದಲೂ, ತಮೋಗುಣದ ಕಾಯ೯ವಾದ ಆಲಸ್ಯ ಮೊದಲಾದವುಗಳಿಂದಲೂ  ಬಿಡಿಸಲ್ಪಟ್ಟು ದಹಾರಣೆಯಲ್ಲಿ ಯೋಗ್ಯತೆಯನ್ನು ಪಡೆಯುತ್ತದೆ."ಪ್ರಾಣಾಯಾಮದ ದೃಢಾಭ್ಯಾಸದಿಂದಲೂ ಮತ್ತು ಹೇಳಲ್ಪಟ್ಟ ಯುಕ್ತಿಯಿಂದಲೂ (.28.1.22 ಪುಟ 21)  ಎಂಬಲ್ಲಿರುವ ಯುಕ್ತಿ ಶಬ್ದದಿಂದ -ಶಿರಸ್ಸೆಂಬ  ಮೇರುವಿನ ಚಲನೆ,ನಾಲಗೆಯತುದಿಯಿಂದ  ಕಿರುನಾಲಗೆಯನ್ನು ತಿರುಗಿಸುವುದು.,ನಾಭಿಚಕ್ರದಲ್ಲಿ ಮತ್ತು ಹೃದಯದಲ್ಲಿ  ಜ್ಯೋತಿಯನ್ನು ಧ್ಯಾನಿಸುವುದು.,ವಿಸ್ಮøತಿಯನ್ನುಂಟು ಮಾಡುವ ಔಷಧಿಗಳ ಸೇವನೆ ಇವೇ ಮೊದಲಾದವನ್ನು ಗ್ರಹಿಸಬೇಕು.(ಪುಟ 237)

43)ಹೀಗೆ ಮನೋನಾಶಕ್ಕೆ  ಉಪಾಯಗಳಾದ  ಅಧ್ಯಾತ್ಮ ವಿದ್ಯೆ,ಸಾಧುಸಂಗಮ,ವಾಸನಾ ಕ್ಷಯ  ಮತ್ತು ಪ್ರಾಣ ನಿರೋಧ  ಇವುಗಳನ್ನು ಹೇಳಲಾಯಿತು.ಈಗ ಅದಕ್ಕೆ ಉಪಾಯಯಾದ   ಸಮಾಧಿಯನ್ನು ಹೇಳಿದೆ.ಐದು ಭೂಮಿಗಳಿಂದ ಕೂಡಿದ ಚಿತ್ತವು  ಮೊದಲ ಮೂರನ್ನು ಬಿಟ್ಟು  ಕಡೆಯ ಎರಡರಲ್ಲಿರುವುದು ಸಮಾಧಿ. ಯೋಗ ಭಾಷ್ಯಕಾರರಾದ ವ್ಯಾಸರು  ಐದು ಭೂಮಿಗಳನ್ನು  ಹೀಗೆ ಹೇಳಿದ್ದಾರೆ. ಕ್ಷಿಪ್ತ,ಮೂಢ,ವಿಕ್ಷಿಪ್ತ,ಏಕಾಗ್ರ ,ನಿರುದ್ಧ ಐದು ಚಿತ್ತದ ಭೂಮಿಗಳು.(ಯೋಗ ಭಾಷ್ಯ1.1,ಪುಟ 100)
ಕ್ಷಿಪ್ತ:ಅಸುರಸಂಪತ್ತು,ಲೋಕಾದಿ ವಾಸನಾ ತ್ರಯ  ಇವುಗಳಲ್ಲಿರುವ ಚಿತ್ತವು ಕ್ಷಿಪ್ತ.   
ಮೂಢ: ನಿದ್ರೆ ಆಲಸ್ಯಗಳಿಂದ ಕೂಡಿದ್ದು ಮೂಢ.
ವಿಕ್ಷಿಪ್ತ : ಚಂಚಲವಾಗಿದ್ದರೂ  ಒಮ್ಮೊಮ್ಮೆ ಧ್ಯಾನಯುಕ್ತವಾಗಿರುವುದರ ಮೂಲಕ ಕ್ಷಿಪ್ತಾವಸ್ಥೆಗಿಂತಲೂ  ವಿಶಿಷ್ಟವಾದ  ಅವಸ್ಥೆಯು  ವಿಕ್ಷಿಪ್ತ.

ಏಕಾಗ್ರ: ಏಕಾಗ್ರವಾದ ಚಿತ್ತದಲ್ಲಿ  ಯಾವ ಅವಸ್ಥೆಯು  ವಸ್ತುವಿನ ನಿಜಸ್ವರೂಪವನ್ನು ಪ್ರಕಟಪಡಿಸುವುದೋ  ಕ್ಲೇಶಗಳನ್ನು ನಾಶಪಡಿಸುವುದೊ ಕಮ೯ಬಂಧನಗಳನ್ನು ಸಡಿಲಗೊಳಿಸುವುದೊ  ಮತ್ತು ನ್ರೋಧಾವಸ್ತೆಯಕಡೆಗೆ  ಚಿತ್ತವನ್ನು ತಿರುಗಿಸುವುದೊ ಅದನ್ನು 'ಸಂಪ್ರಜ್ಞಾತ ಸಮಾಧಿ' ಎಂದು ಕರೆಯಲ್ಪಡುತ್ತದೆ.ಎಲ್ಲಾ  ವೃತ್ತಿಗಳು ನಿರುದ್ಧವಾದರೆ ಅದು 'ಅಸಂಪ್ರಜ್ಞಾತ ಸಮಾದಿಎನಿಸುವುದು.
ಇವುಗಳಲ್ಲಿ  ಸಂಪ್ರಜ್ಞಾತ ಸಮಾಧಿ ಭೂಮಿಯಾದ ಏಕಾಗ್ರತೆಯನ್ನು  ಸೂತ್ರದಲ್ಲಿ ಹೇಳಿದೆ.'ಶಾಂತವಾದ  ಮತ್ತು ಉದುತವಾದ ಪ್ರತ್ಯಯಗಳು  ತುಲ್ಯವಾದಾಗ ಚಿತ್ತವು ಏಕಾಗ್ರತಾರೂಪದಿಂದ ಪರಿಣಾಮಹೊಂದುವುದು.'ಶಾಂತವೆಂದರೆ ಹಿಂದಿನದು ,ಉದಿತವೆಂದರೆ ಈಗಿನದು ,ಪ್ರತ್ಯಯವೆಂದರೆ ಚಿತ್ತವೃತ್ತಿ.ಯಾವಾಗ ಹಿಂದಿನ ಚಿತ್ತವೃತ್ತಿಯನ್ನೇ ಈಗಿನ ಚಿತ್ತವೃತ್ತಿಯೂ ಆವರಿಸುವುದೊ ಆಗ ಅವದೆರಡೂ ಚಿತ್ತವೃತ್ತಿಗಳು  ತುಲ್ಯ(= ಸಮಾನ)ವಾಗುತ್ತವೆ.ಅಂಥಚಿತ್ತದ ಪರಿಣಾಮವು ಏಕಾಗ್ರತೆಯೆಂದು ಕರೆಯಲ್ಪಡುತ್ತದೆ.(ಚುತ್ತದ ಅವಸ್ಥಾ ಭೂಮಿಗಳಿಗೆ ಭೂಮಿ ಎಂದು ಹೆಸರು.)( ಅವಿದ್ಯೆ,ಅಸ್ಮಿತೆ,ರಾಗ ದ್ವೇಷ,ಅಭಿನಿವೇಶ-ಈಐದಕ್ಕೆ ಕಲೇಶಗಳೆಂದು ಹೆಸರು.)
     
44) ಸವಾತೆಯು ಮರೆಯಾಗಿ  ಏಕಾಗ್ರತೆಯು ಉದಯವಾದಾಗ  ಚಿತ್ತವು ಸಮಾಧಿರೂಪ ಪರಿಣಾಮವನ್ನು Éೂಂದುತ್ತದೆ.ರಜೋಗುಣದಿಂದ ಚಲಿಸಲ್ಪಡುತ್ತಿರುವ  ಚಿತ್ತವು ಕ್ರಮವಾಗಿ  ಎಲ್ಲಾ ಪದಾಥ೯ಗಳನ್ನೂ ಗ್ರಹಿಸುತ್ತದೆ. ರಜೋಗುಣದ ನಿರೋಧಕ್ಕಾಗಿ  ಯೋಗಿಯು ಮಾಡುವ  ವಿಶೇಷ ಪ್ರಯತ್ನದಿಂದ ದಿನೇ ದಿನೇ ಸವಾತೆಯು ಕ್ಷಯವಾಗುತ್ತದೆ ಮತ್ತು ಏಕಾಗ್ರತೆಯು ಹುಟ್ಟುತ್ತದೆ.ಚಿತ್ತದ ಇಂಥ ಪರಿಣಾಮವು ಸಮಾಧಿಯೆಂದು ಹೇಳಲ್ಪಡುತ್ತದೆ.(ಪುಟ240)

45) ಸಮಾಧುಯ ಎಂಟು ಅಂಗಗಳಲ್ಲಿ  ಯಮ,ನಿಯಮ,ಆಸನ ಪ್ರಾಣಾಯಾಮ ಪ್ರತ್ಯಾಹಾರ- ಐದು ಬಾಹ್ಯ ಅಂಗಗಳು.ಇವುಗಳಲ್ಲಿ ಪತಂಜಲಿಯು  ಯಮಗಳನ್ನು ಹೀಗೆ ಹೇಳುತ್ತಾನೆ.1)ಅಹಿಂಸೆ 2) ಸತ್ಯ 3) ಅಸ್ತೇಯ 4) ಬ್ರಹ್ಮಚಯ೯ 5) ಅಪರಿಗ್ರಹ-ಇವು ಯಮಗಳು(ಯೋ.ಸೂ .2.30)
ಶೌಚ ಸಂತೋಷ ತಪಸ್ಸು  ಸ್ವಾಧ್ಯಾಯ ಈಶ್ವರ ಪ್ರಣಿದಾನ -ಇವು ನಿಯಮಗಳು.ಜನ್ಮಕ್ಕೆ ಕಾರಣವಾದ ಕಾಮ್ಯಧಮ೯ದಿಂದ (ಯೋಗಿಯನ್ನು) ಹಿಂದಕ್ಕೆ ತಿರುಗಿಸಿ  ಮೋಕ್ಷಕ್ಕೆ ಕಾರಣವಾದ ನಿಷ್ಕಾಮ ಧಮ೯ದಲ್ಲಿ  ಪ್ರೇರಿಸುವುದರಿಂದ  ಅವು ನಿಯಮಗಳೆನಿಸಿವೆ.

46) ಯಮ ನಿಯಮಗಳ ಫಲಗಳನ್ನು  ಸೂತ್ರದಲ್ಲಿ ಹೇಳಿದೆ.'ಅವನ ಸನ್ನಿಧಿಯಲ್ಲಿ ವೈರವು ತ್ಯಜಿಸಲ್ಪಡುತ್ತದೆ.ಕ್ರಿಯಾಫಲಾಶ್ರಯತ್ವವು
ಸಿದ್ಧಿಸುತ್ತದೆ.ಸವರತ್ನಗಳೂ ಅವನ ಬಳಿಯಲ್ಲಿಡಲ್ಪಡುತ್ತವೆ. ವೀಯ೯ಲಾಭವಾಗುತ್ತದೆ.ಹಿಂದಿನ ಜನ್ಮಗಳ ಜ್ಞಾನ ಮತ್ತು ಜನನಾದಿ ಭಯದ ಅಭಾವ ಇವೂ ಉಂಟಾಗುತ್ತವೆ.'ಶೌಚದಿಂದ ತನ್ನ ಅಂಗಗಳಲ್ಲಿ ಜಿಗುಪ್ಸೆಯೂ ಇತರರೊಡನೆ ಅಸಂಸಗ೯ವೂ ಉಂಟಾಗುತ್ತದೆ.'ಸತ್ವ ಶುದ್ಧಿ ಸೌಮನಸ್ಯ  ಐಕಾಗ್ರ್ಯ ಇಂದ್ರಿಯಜಯ ಮತ್ತು ಆತ್ಮದಶ೯ನಕ್ಕೆ ಬೇಕಾದ ಯೋಗ್ಯತೆ  ಫಲಗಳೆಲ್ಲವೂ ಉಂಟಾಗುತ್ತವೆ.'ಸಂತೋಷದಿಂದ ಆನುತ್ತಮವಾದ ಸುಖಲಾಭ''ಶರೀರೇಂದ್ರಿಯ  ಬುದ್ಧಿಗಳ ಶುದ್ಧಿಯು  ಅಶುದ್ಧಿಕ್ಷಯದಿಂದ ಉಂಟಾಗುತ್ತದೆ.ಇದು ತಪಸ್ಸಿನಫಲ.'ಸ್ವಾಧ್ಯಾಯದಿಂದ  ಇಷ್ಟದೇವತಾ -ಸಂಪ್ರಯೋಗವಾಗುತ್ತದೆ. ಈಶ್ವರ ಪ್ರಣಿದಾನದಿಂದ ಸಮಾಧಿಸಿದ್ಧಿಯಾಗುತ್ತದೆ.(ಪುಟ242)

47)ಯಾವಪ್ರಾಣಿಗೂ   ಸವಥಾ ಸವ೯ದಾ ದ್ರೋಹ ಮಾಡದಿರುವುದು ಅಹಿಂಸೆ.ಇಂಥ ಅಹಿಂಸಕಕನ ಬಳಿಯಲ್ಲಿ ಗೋವ್ಯಾಘ್ರಗಳೂ ಪರಸ್ಪರ  ವೈರಭಾವನೆಯನ್ನು ತ್ಯಜಿಸಿರುತ್ತವೆ.
ಯಥಾಥ೯ವಾದುದರಲ್ಲಿ ವಾಕ್ ಮನಸ್ಸುಗಳನ್ನಿಡುವುದು ಸತ್ಯ.;ಎಂದರೆ ಇದ್ದುದನ್ನು ಇದ್ದಂತೆ ಹೇಳುವುದು.ಹಾಗೆಯೇ ಆಲೋಚಿಸುವುದು.ಇದರ ಫಲ ಕ್ರಿಯಾಫಲಾಶ್ರಯತ್ವ;ಕ್ರಿಯೆ ಎಂದರೆ ಯಾಗಾದಿಗಳು.ಅವುಗಳ ಫಲಗಳಗು ಸ್ವಗಾ೯ದಿಗಳು.,ಇವು ಅವನಲ್ಲಿ ಆಶ್ರಯವನ್ನು ಪಡೆಯುತ್ತವೆ.ಅವನ ಕೇವಲ ವಚನದಿಂದಲೇ  ಯಾಗಾದಿಗಳನ್ನು ಮಾಡದಿರುವವನಿಗೂ  ಸ್ವಗ೯ಫಲಗಳು ಸಿಸಿಕ್ಕುತ್ತವೆ ಎಂದಥ೯. ಅಶಾಸ್ತ್ರಪೂವ೯ಕವಾಗಿ  ಇತರರ ದ್ರವ್ಯಗಳನ್ನು ಸ್ವೀಕರಿಸುವುದು  ಸ್ತೇಯ.ಇದಕ್ಕೆ ವಿರುದ್ಧವಾದದ್ದು ಅಸ್ತೇಯ.ಇದು ಅಸ್ಪøಹಾ ರೂಪವಾದದ್ದು. ಇದರ ಫಲ: ಎಲ್ಲ ಕಡೆಗಳಲ್ಲಿರುವ ರತ್ನಗಳೂ ಇವನ ಬಳಿ ಬಂದು ಬೀಳುತ್ತವೆ,ಅಷ್ಟವಿಧ ಮೈಥುನ  ತ್ಯಾಗವೇ ಬ್ರಹ್ಮಚಯ.ಇದರ ಫಲ ವೀಯ೯ಲಾಭ.,ನಿರತಿಶಯ ಸಾಮಥ್ಯ೯.ವಿಷಯಗಳಲ್ಲಿ ಅಜನೆ,ರಕ್ಷಣೆ,ನಾಶ,ಸಂಗ, ಹಿಂಸೆ ಎಂಬ ದೋಷಗಳನ್ನು ನೋಡಿ  ಅವುಗಳನ್ನು ಸ್ವೀಕರಿಸದಿರುವುದು  ಅಪರಿಗ್ರಹ.ಅದರ ಫಲ ಪೂವ೯ಜನ್ಮಸ್ಮರಣೆ.

        ಶೌಚವೆಂದರೆ  ಹೊರಗಣ ಮತ್ತು ಒಳಗಣ ಶುದ್ಧಿ.ಇದರ ಫಲ ತನ್ನ ಅಂಗಗಳಲ್ಲಿ ಜಿಗುಪ್ಸೆ  ಮತ್ತು ಇತರರೊಡನೆ ಅಸಂಸಗ೯. ಶರೀರವು ಮಲಿನವೇ ಎಂಬ ಭಾವನೆ ಮತ್ತು ಅದರಿಂದ ತನ್ನ ಶರೀರದಲ್ಲಾಗಲೀ ಇತರರ ಶರೀರದಲ್ಲಾಗಲೀ  ಅನಾಸಕ್ತಿ. ಮತ್ತು ಸತ್ವಶುದ್ದಿ(ಅಂತಃಕರಣ ಶುದ್ಧಿ) ಸೌಮನಸ್ಯ,(ಖೇದರಹಿತ ಮನಃಪ್ರೀತಿ),ಏಕಾಗ್ರತೆ ,ಇಂದ್ರಿಯ ಜಯ,,ಆತ್ಮದಶ೯ನ ಯೋಗ್ಯತೆ  ಇವೂ ಕೂಡ ಉಂಟಾಗುತ್ತದೆ.

ಸಂತೋಷವೆಂದರೆ  ಇದ್ದುದರಲ್ಲಿ ತೃಪ್ತಿ.ಇದರ ಫಲ ಅತ್ಯುತ್ತಮವಾದ ಸುಖಲಾಭ.ಇದು ಅಂತರಿಕ ಸುಖ. ಬಾಹ್ಯ ಸುಖಗಳು ಇದರ ಶತಾಂಶಕ್ಕೂ ಸಮನಲ್ಲ.
ತಪಸ್ಸು ಎಂದರೆ ದ್ವಂದ್ವಗಳನ್ನು ಸಹಿಸುವುದು.ಹಸಿವು ನೀರಡಿಕೆ,ಶೀತ ಉಷ್ಣ,ಮೊದಲಾದವೇ ದ್ವಂದ್ವಗಳು.ಇದರ ಫಲ : ಅಸುದ್ಧಿ ಕ್ಷಯ ದ್ವಾರಾ ಶರೀರೇಂದ್ರಿಯಗಳ ಸಿದ್ಧಿಗಳು ,ದೂರದಲ್ಲಿ ರುವ  ಶಬ್ದಗಳನ್ನು ಕೇಳುವುದುಇತ್ಯಾದಿಗಳು ಇಂದ್ರಿಯ ಸಿಧ್ಧಿಗಳು.       
ಸ್ವಾಧ್ಯಾಯವೆಂದರೆ ಮೋಕ್ಷಶಾಸ್ತ್ರಗಳ ಅಧ್ಯಯನ ಅಥವಾ ಪ್ರಣವ ಜಪ.ಇದರ ಫಲ:ಇಷ್ಟದೇವತೆ ದಶನವನ್ನೀಯುತ್ತದೆ.ಈಶ್ವರ ಪ್ರಣಿದಾನವೆಣದರೆ   ಪರಮಗುರುವಾದ ಈಶ್ವರನಲ್ಲಿ  ಸವ೯ಕಮ೯ಸಮಪ೯ಣೆ.(ಪುಟ 243)

48)ಪ್ರತ್ಯಾಹಾರವನ್ನು ಕುರಿತು ಪತಂಜಲಿಯು ಸೂತ್ರವನ್ನು ರಚಿಸಿರುತ್ತಾನೆ."ತಮ್ಮ ವಿಷಯಗಳೊಡನೆ  ಸೇರಿಲ್ಲದಿರುವಾಗ ಇಂದ್ರಿಯಗಳು  ಚಿತ್ತದ ಸ್ವರೂಪವನ್ನೇ ಅನುಕರಿಸುವಂತೆ  ಇರುತ್ತದೆ.ಇದು ಇಂದ್ರಿಯ ಪ್ರತ್ಯಾಹಾರ. ಪ್ರತ್ಯಾಹಾರದಿಂದ  ಇಂದ್ರಿಯಗಳ  ಪರಮವಶ್ಯತೆಯು ಸಿದ್ದಿಸುತ್ತದೆ.(ಪುಟ 244)

4) ಧ್ಯಾ ಧಾರಣೆ ಸಮಾಧಿಗಳನ್ನು ಮೂರುಸೂತ್ರಗಳಿಂದ  ಹೇಳಿದೆ.ಚಿತ್ತವನ್ನು ವಿಶೇಷ ದೇಶದಲ್ಲಿ ಸ್ಥಾಪಿಸುವುದು  ಧಾರಣೆ.(ಯೋ ಸೂ 3.1)ಅದರಲ್ಲಿ ಸದೃಶ  ಪ್ರತ್ಯಯಗಳ ಪ್ರವಾಹವು  ಧ್ಯಾನವೆಂದೆನಿಸುತ್ತದೆ.ಅದೇ ಧ್ಯಾನವೇ ಧ್ಯೇಯವಸ್ತು ಮಾತ್ರ ತೋರುತ್ತಿದ್ದು  ಧ್ಯಾನಸ್ವರೂಪವಿಲ್ಲದಂತೆ ತೋರುತ್ತಿರುವಾಗ -ಸಮಾಧಿಯೆಂದೆನಿಸುವುದು.(ಯೋ ಸೂ 3.3)(ಪುಟ 246)


50)ಬುಧ್ಧಿವಂತನು  ಮನಸ್ಸು ಸಂಕಲ್ಪಾತ್ಮಕವೆಂದು ಭಾವಿಸಿ  ಅದನ್ನು ಸಂಗ್ರಹಿಸಿ ಆತ್ಮನಲ್ಲಿ ನಿಲ್ಲಿಸಿ ಅಲ್ಲಿಯೇ ಇರಗೊಳಿಸುತ್ತಾನೆ.ಇದು ಧಾರಣೆಯೆಂದು ಕರೆಯಲ್ಪಟ್ಟಿದೆ.(ಅಮೃತನಾದೋಪನಿಷತ್ 15)(ಪುಟ 246)

51) ಯಾವ ಮನಸ್ಸು  ಎಲ್ಲಾ ವಸ್ತುಗಳನ್ನು ಕುರಿತು ಸಂಕಲ್ಪಿಸುವುದೊ ಅದು ಆತ್ಮನನ್ನೇ ಸಂಕಲ್ಪಿಸಲಿ.ಇತರ ವಸ್ತುವನ್ನು ಸಂಪಲ್ಪಿಸುವುದು ಬೇಡ. ಎಂಬೀ ವಿಧದ ಪ್ರಯತ್ನವೇ ಆತ್ಮವನಲ್ಲಿ ಸಂಕ್ಷೇಪಿಸುವುದು.,'ಪ್ರತ್ಯಯದ ಏಕತಾನತೆ'  ಎಂದರೆ ಒಂದೇ ತತ್ವವನ್ನು  ವಿಷಯವಾಗಿ ಹೊಂದಿ  ಅದರ ಕಡೆಗೆ ಪ್ರವಹಿಸುವುದು.ಇದು ಎರಡು ವಿಧ. ಬಿಟ್ಟು ಬಿಟ್ಟು ಉಂಟಾಗತಕ್ಕದ್ದು. ಮತ್ತು ಸಂತತವಾಗಿ  ಉಂಟಾಗತಕ್ಕದ್ದು. ಇವೆರಡೂ ಕ್ರಮವಾಗಿ  ಧ್ಯಾನ-ಸಮಾಧಿಗಳೆನಿಸುವುವು.(ಪುಟ 246).

52)ಧ್ಯಾನದ ಅಭ್ಯಾಸವನ್ನು ಬಹುವಾಗಿ ಮಾಡಿದ್ದರಿಂದ  ಉಂಟಾಗುವ,ಅಹಂಕಾರ ಜನ್ಯವಾದ  ಬ್ರಹ್ಮಾಕಾರವನ್ನು ಪಡೆದಿರುವ  ಮನೋವೃತ್ತಿಗಳ ಪ್ರವಾಹವು 'ಸಂಪ್ರಜ್ಞಾತ ಸಮಾಧಿ'ಎಂದೆನಿಸುತ್ತದೆ.(ಪುಟ 246)

53)ಅದನ್ನೇ ಶಂಕರ ಭಗವತ್ಪಾದರು ಹೀಗೆ ವಿವರಿಸುತ್ತಾರೆ.'ಯಾವ  ಪರಬ್ರಹ್ಮವು  ನಿವಿ೯ಷಯ -ಜ್ಞಾನ-ಸ್ವರೂಪವೊ,ಆಕಾಶದಂತೆ ಸವ೯ಗತವೊ,ಯಾವಾಗಲೂ ಸ್ಪಷ್ಟವಾಗಿ ಭಾಸಿತವಾಗಿರುವುದೊ ಅಜವೊ ಏಕನೊ ಅಕ್ಷರವೊ ನಿಲಿಪ್ತವೊ ಅದ್ವಯವೊ ಅದೇ ನಾನು!ನಾನು ಯಾವಾಗಲೂ ಮಿಮುಕ್ತನೇ!ಓಂ.ನಾನು ಯಾವವಿಕಾರವೂ ಇಲ್ಲದ  ಪರಿಶುದ್ಧವಾದ ಜ್ಞಾನಸ್ವರೂಪನು.ನನಗೆ ಸ್ವಭಾವದಿಂದಲೇ ಯಾವ ವಿಷಯವೂ ಇರುವುದಿಲ್ಲ.ಮುಣದೆ ಅಡ್ಡಲಾಗಿ ಮೇಲೆ ಮತ್ತು ಕೆಳಗೆ ,ಎಲ್ಲಾ ಕಡೆಯಲ್ಲಿಯೂ ಇರುವ ಸಂಪೂಣ೯ಭೂಮವು ನಾನೇ,ಅಜನಾದ ನಾನು ಆತ್ಮನಲ್ಲಿಯೇ ನೆಲೆಸಿರುತ್ತೇನೆ. ನಾನು ಅಜರನು ಅಮೃತನು:ನಾನು ಸ್ವಯಂಪ್ರಕಾಶನು ,ಸವ೯ಗತನು,ಮತ್ತು ಅದ್ವಯನು ನನಗೆ ಕಾರಣವೂ ಇಲ್ಲ .ಕಾಯ೯ವೂ ಇಲ್ಲ.ನಾನು ಅತಿನಿಮ೯ಲನು  ನಿತ್ಯತೃಪ್ತನು.ಆದುದರಿಂದ ವಿಮುಕ್ತನೇ.ಓಂ,(ಉಪದೇಶ ಸಾಹಸ್ರಿ(10.1.3).
(ಪುಟ247)

54)ಸಿದ್ಧಿಗಳು ಮುಕ್ತಿಗೆ ಕಾರಣವಾದ ಸಮಾಧಿಗೆ  ವಿರೋಧಿಗಳ್ಇರುತ್ತವೆ.(ಪುಟ 248)

55)ಸೂತ್ರಗಳು ಹಾಗೆಯೇ ಹೇಳುತ್ತವೆ.'ಅವು ಸಮಾಧಿಯಲ್ಲಿ ವಿಘ್ನಗಳು.ವ್ಯುತ್ಥಾನಕಾಲದಲ್ಲಿ   ಸಿದ್ಧಿಗಳು.(ಪುಟ248)

56)ಪುರುಷನನ್ನು ಕುರಿತು ಧಾರಣ- ಧ್ಯಾನ-ಸಮಾಧಗಳನ್ನು ಅನುಷ್ಠಿಸಿದ ಮೇಲೆ  ವ್ಯುತ್ಥಾನಕಾಲದಲ್ಲಿ   ಪ್ರಾತಿಭ್ಯ(ದಿವ್ಯಜ್ಞಾನ)ಶ್ರಾವಣ(ದಿವ್ಯಶಬ್ದಗಳನ್ನು ಕೇಳುವ ಶಕ್ತಿ)ವೇದನ(ದಿವ್ಯಸ್ಪಶ೯) ಇತ್ಯಾದಿ ವಿಭೂತಿಗಳು ಯೋಗಿಗೆ ಉಂಟಾಗುತ್ತವೆ.(ಪುಟ24)        

57)ಯೋಗಿಗಳು ನಾಲ್ಕು ವಿಧ:ಪ್ರಥಮಕಲ್ಪಿಕ,ಮಧ್ಯ ಭೂಮಿಕ,ಪ್ರಜ್ಞಾ ಜ್ಯೋತಿ, ಮತ್ತು ಅತಿಕ್ರಾಂತ ಭಾವನೀಯ.ಇವರಲ್ಲಿ ಮೊದಲನೆಯವನು ಅಭ್ಯಾಸಿ.ಇವನಿಗೆ ಸಿದ್ಧಿಗಳು ಕರಗತವಾಗಿಲ್ಲ.ಎರಡನೆಯವನಿಗೆ ಭೂತೇಂದ್ರಿಯಗಳನ್ನು ಗೆಲ್ಲುವ  ಇಚ್ಛೆಯಿರುತ್ತದೆ.ಇವರಿಗೆ ಋತಂಭರಪ್ರಜ್ಞನೆಂದೂ ಹೆಸರಿದೆ.ಮೂರನೆಯವನು ಭೂತೇಂದ್ರಿಯಗಳನ್ನು ಜಯಿಸಿರುತ್ತಾನೆ..ನಾಲ್ಕನೆಯವನು ಜೀವನ್ಮುಕ್ತನು.ಮೊದಲನೆಯವನು ಸಿದ್ಧಿಗಳಿಗಿನ್ನೂ ಯೋಗ್ಯನಲ್ಲ.ಕಡೆಯ ಇಬ್ಬರು ಸಿದ್ಧಿಗಳ ಆಕಷ೯ಣವನ್ನೂ ಮೀರಿದವರು.ಆದ್ದರಿಂದ ಸೂತ್ರವು ಎರಡನೆಯ ಯೋಗಿಯನ್ನು ಕುರಿತದ್ದು.

58) ಶ್ರೀರಾಮ-ವಸಿಷ್ಠರ ಸಂವಾದ ಹೀಗಿದೆ.
ಶ್ರೀರಾಮ" ಎಲೈ ಶ್ರೇಷ್ಠನೆ,-ಆತ್ಮಜ್ಞಾನವನ್ನು  ಪಡೆದುಕೊಂಡು ಬದುಕಿರುವಾಗಲೇ  ಶರೀರಬಂಧನದಿಂದ ಮುಕ್ತರಾದವರಿಗೆ ಆಕಾಶಗಮನವೇ ಮೊದಲಾದ ಶಕ್ತಿಗಳು ಹೇಗೆ ಕಂಡುಬರುವುದಿಲ್ಲ?'

ವಸಿಷ್ಠ:'ಹೇರಾಘವ,ಆತ್ಮನನ್ನ್ರಿತುಕೊಳ್ಳದೆ ಮುಕ್ತನಲ್ಲದೆ ಇರುವವನೂ ಕೂಡ ಸರಿಯಾದ ದ್ರವ್ಯ,ಮಂತ್ರಕ್ರಿಯೆ, ಕಾಲ-ಇವುಗಳ ಶಕ್ತಿಯಿಂದ ಆಕಾಶದಲ್ಲಿ ವಿಹರಿಸುವುದೇ ಮುಣತಾದ  ಶಕ್ತಿಗಳನ್ನು ಪಡೆದೇ ಪಡೆಯುತ್ತಾನೆ.ಆತ್ಮಜ್ಞನಿಗೆ ಇವು ವಿಷಯವೇ ಅಲ್ಲ.ಏಕೆಂದರೆ ಆತ್ಮಜ್ಞನು ಕೇವಲ ಆತ್ಮನನ್ನೇ ನೋಡುತ್ತಿರುತ್ತಾನೆ.ಆತ್ಮನಿಂದ ಆತ್ಮನಲ್ಲಿಯೇ ತೃಪ್ತಿಯನ್ನು ಪಡೆಯುತ್ತಾನೆ.ಅವಿದ್ಯೆಯ ಹಿಂದೆ ಓಡುವುದಿಲ್ಲ. ಜಗತ್ತಿನ ವಸ್ತುಗಳು ಏನೇನಿವೆಯೋ  ಅವೆಲ್ಲವೂ ಅವಿದ್ಯಾಮಯವೆಂದೂ  ಜ್ಞಾನಿಗಳು ಅರಿತಿರುತ್ತಾರೆ.ದ್ರವಯ,ಮಂತ್ರ ಕ್ರಿಯೆ ಕಾಲ ಮತ್ತು ಶಕ್ತಿ ಇವು ನಿಜವಾಗಿಯೂ  ಸಿದ್ಧಿಯನ್ನು ಕೊಡಬಲ್ಲವು.ಅವು ಯಾವುವೂ ಪರಮಾತ್ಮ ಪದವನ್ನು ಹೊಂದುವುದರಲ್ಲಿ ಸಹಾಯ ಮಾಡವು.(28.5)
ಜಾಲದಂತಿರುವ ಎಲ್ಲಾ ಆಸೆಗಳೂ ಶಾಂತವಾದಾಗ  ಯಾವ ಆತ್ಮಲಾಭವು ಉದಯಿಸುವುದೊ ಅದು ಸಿದ್ದಿಗಳೆಂಬ ಆಸೆಗಳಲ್ಲಿ ಮುಳುಗಿದವನಿಗೆ  ಹೇಗೆ ತಾನೇ ಲಭಿಸೀತು?ತತ್ವಜ್ಞನನ್ನು ಯಾವ ಜಗದ್ವಸ್ತುಗಳೂ ರಂಜಿಸಲಾರವು.ಇಹಲೋಕದಲ್ಲಿ ಕಂಡುಬರುತ್ತಿರುವ  ಶಕ್ತಿಗಳು ಚಿದಾತ್ಮನವು.ಆದುದರಿಂದ ಆಶ್ಚಯಜಾಲಗಳಲ್ಲಿ ಅವನಿಗೆ ಕುತೂಹಲ ಹುಟ್ಟುವುದಿಲ್ಲ.( 27-67'(ಪುಟ251)

5)ಈಗ ಐದನೆಯ ಹಂತವಾದ ನಿರೋಧಸಮಾಧಿಯ ನಿರೂ ಪಣೆ. ನಿರೋಧವನ್ನು  ಸೂತ್ರವು ಹೀಗೆ ವಿವರಿಸುತ್ತದೆ:ವ್ಯುತ್ಥಾನ ಸಂಸ್ಕಾರಗಳ ಅಭಿಭವ,ನಿರೋಧ ಸಂಸ್ಕಾರಗಳ ಪ್ರಾದುಭಾ -ಇವು ಉಂಟಾಗುತ್ತವೆ.ಹೀಗೆ ಉಂಟಾದ ವನಿರೋಧ ಕ್ಷಣವು  ಚಿತ್ತದೊಡನೆ ಸಂಬಂಧ ಹೊಂದುತ್ತದೆ.ಇದು ನಿರೋಧ ಪರಿಣಾಮ ಎಂದು ಹೇಳಲ್ಪಡುತ್ತದೆ.(ಯೋ.ಸೂ 3..)(ಪುಟ 253)

60)ಯಾವಾಗ ನಿಗ್ರಹಿಸಲ್ಪಟ್ಟ ಚಿತ್ತವು ಆತ್ಮನಲ್ಲಿಯೇ ನಿಲ್ಲುವುದೊ  ಆಗ ಎಲ್ಲಾ ಕಾಮಗಳಲ್ಲಿಯೂ ಬಯಕೆಯಿಲ್ಲದವನಾಗಿ  "ಯೋಗಿ" ಎಂದು ಕರೆಯಲ್ಪಡುತ್ತಾನೆ.(ಪುಟ256).

61)ವಿರಾಮವೆಂದರೆ ವೃತ್ತಿಗಳ ಉಪರಮೆ.(ಪುಟ 257)

62)ಭಗವಂತನು ಸ್ಪಷ್ಟವಾಗಿ ಹೇಳಿರುತ್ತಾನೆ:ಸಂಕಲ್ಪದಿಂದ ಉತ್ಪನ್ನವಾದ ಎಲ್ಲಾ ಕಾಮಗಳನ್ನೂ  ಸಂಪೂಣ೯ವಾಗಿ ತ್ಯಜಿಸಿ  ಮನಸ್ಸಿನಿಂದಲೇಇಂದ್ರಿಯಗಳ ಸಮೂಹವನ್ನು ಎಲ್ಲಾ ಕಡೆಗಳಿಂದಲೂ ನಿಗ್ರಹಿಸಿ,ಧೈಯ೯ದಿಂದ  ಕೂಡಿದ  ಬುದ್ಧಿಯಿಂದ  ಮೆಲ್ಲಮೆಲ್ಲಗೆ ಹಿಂದಿರುಗಿಸಬೇಕು. ಮನಸ್ಸನ್ನು ಆತ್ಮನಲ್ಲಿ ನಿಲ್ಲಿ ಏನನ್ನೂ ಚಿಂತಿಸಕೂಡದು.ಚಂಚಲವೂ ಅಸ್ಥಿರವೂ ಆದ  ಮನಸ್ಸು ಯಾವ ಯಾವ ವಿಷಯದಿಂದ  ಹೊರಕ್ಕೆ ಬರುವುದೋ  ಆಯಾ ವಿಷಯದಿಂದ ಅದನ್ನು ನಿಗ್ರಹಿಸಿ ಆತ್ಮನಲ್ಲಿಯೇ ವಶಪಡಿಸಿಕೊಳ್ಳಬೇಕು.(ಗೀತಾ 6.24-26)(ಪುಟ258)

  63)ಜನರು ಕಾಮಿಸುತ್ತಿರುವ  ಹೂಮಾಲೆ ಚಂದನ ವನಿತೆ ಪುತ್ರ ಮಿತ್ರ ಗೃಹ ಕ್ಷೇತ್ರ ಮೊದಲಾದವು ಮೋಕ್ಷಶಾಸ್ತ್ರ ಕುಶಲರೂ ವಿವೇಕಿಗಳೂ ಆದ ಜನರಿಗೆಜನರಿಗೆ ಚೆನ್ನಾಗಿ ತಿಳಿದಿರುವ ಅನೇಕ ದೋಷಗಳಿಂದ ಕೂಡಿದ್ದರೂ ,ಅನಾದಿಯಾದ ಅವಿದ್ಯೆಯ ದೆಸೆಯಿಂದ ದೋಷಗಳನ್ನು ಮುಚ್ಚಿ ವಿಷಯಗಳಲ್ಲಿ ನಿದೋ೯ಷತ್ವವನ್ನು  ಕಲ್ಪಿಸುತ್ತದೆ. ಸಂಕಲ್ಪದಿಂದ 'ಇದು ನನಗೆ ಇರಲಿ' ಎಂಬೀ  ರೂಪದ ಕಾಮಗಳು ಉಂಟಾಗುತ್ತವೆ. ವಿವೇಕದಿಂದ  ವಿಷಯಗಳಲ್ಲಿರುವ  ದೋಷಗಳನ್ನು ಸ್ಪಷ್ಟವಾಗಿ ಅರಿತಾಗ-ನಾಯಿ ವಾಂತಿಮಾದಿದ ಪಾಯಸದಲ್ಲಿ ಆಶೆಯು ಹೊರಟುಹೋಗುವಂತೆ-ಕಾಮಗಳು ಹೊರಟು ಹೋಗುತ್ತವೆ.(ಪುಟ25)


64)ಭೂಮಿಕೆಗಳನ್ನು ಒಂದಾದಮೇಲೊಂದರಂತೆ ಜಯಿಸಬೇಕೆಂದು ಹೇಳಿರುವುದರಿಂದ 'ಮೆಲ್ಲಮೆಲ್ಲಗೆ'(ಶನೈಃ ಶನೈಃ)ಎಂದು ಹೇಳಿದೆ. ನಾಲ್ಕು ಭೂಮಿಕೆಗಳನ್ನು ಕಠವಲ್ಲಿ ಹೀಗೆ ಹೇಳಿರುತ್ತದೆ.:ವಿವೇಕಿಯು ವಾಕ್ಕನ್ನು ಮನಸ್ಸಿನಲ್ಲಿ ಲಯಮಾಡಿಕೊಳ್ಳಬೇಕು.ಮನಸ್ಸನ್ನು ಪ್ರಕಾಶ ಸ್ವರೂಪವಾದ  ಬುದ್ಧಿಯಲ್ಲಿ ಲಯಮಾಡಿಕೊಳ್ಳಬೇಕು.ಬುದ್ಧಿಯನ್ನು ಮಹತ್ ಆತ್ಮನಲ್ಲಿ (ಹಿರಣ್ಯಗಭ೯ಬುದ್ಧಿಯಲ್ಲಿ) ಲಯಮಾಡಿಕೊಳ್ಳಬೇಕು.ಅದನ್ನು ಶಾಂತನಾದ ಆತ್ಮನಲ್ಲಿ  ಲಯಗೊಳಿಸಬೇಕು.'(ಕಠ 1.3.13)(ಪುಟ 260)

65)ಪಂಚಭೂತಗಳನ್ನು ಜಯಿಸುವುದರಿಂದ  1)ಅಣಿಮಾ (ಪರಮಾಣುತುಲ್ಯತ್ವ),ಮಹಿಮಾ,(ವಿಭುತ್ವ),ಲಘಿಮಾ (ಹತ್ತಿಯ ಮುದ್ದೆಯಷ್ಠು ಹಗುರವಾಗುವುದು),ಗರಿಮಾ (ಮೇರುಪವ೯ತದಂತೆ  ಭಾರವಾಗುವುದು),ಪ್ರಾಪ್ತಿ (ಅಂಗುಲಿಯಿಂದಚಂದ್ರಸ್ಪಶ೯ಮಾಡುವುದು,ಎಂದರೆ ಸವವಸ್ತುಗಳ ಸಾನ್ನಿಧ್ಯ),ಪ್ರಾಕಾಮ್ಯ(ಸತ್ಯ ಸಂಕಲ್ಪತ್ವ) ವಶಿತ್ವ(ಭೂತಗಳ  ಮತ್ತು ಭೌತಗಳ  ನ್ಯಂತೃತ್ವ) ಈಶಿತ್ವ((ಭೂತಗಳ ಸೃಷ್ಟ್ಯಾದಿಗಳಿಗೆ  ಡಿತನ)-ಎಂಬ ಎಂಟು ಐಶ್ವಯ೯ಗಳು ಅಥವಾ ಸಿದ್ಧಿಗಳು  ಉಂಟಾಗುತ್ತವೆಯೆಂದು   ಯೋಗಭಾಷ್ಯದಲ್ಲಿ(3.45) ಹೇಳಿದೆ.ಇವುಗಳ ಕಾಮನೆಯು  ಸಮಾಧಿ ಪ್ರತಿಬಂಧಕವಾದ್ದರಿಂದ  ಅದನ್ನು ತ್ಯಜಿಸಬೇಕು! (ಪುಟ260)

66)ವಾಕ್ಕಿನ ವ್ಯಾಪಾರವು ಎರಡುವಿಧ.1)ಲೌಕಿಕ 2)ವೈದಿಕ.ಹರಟುವುದೇ ಮೊದಲಾದ ರೂಪವುಳ್ಳದ್ದು  ಲೌಕಿಕ.ಜಪವೇ ಮೊದಲಾದ ರೂಪವುಳ್ಳದ್ದು  ವೈದಿಕ.ಸ್ಮøತಿಯಲ್ಲಿ ಈರೀತಿ ಹೇಳಿದೆ:ಏಕದಂಡಿಯಾದವನು ಮೌನ ಯೋಗಾಸನ ಯೋಗ ತಿತಿಕ್ಷೆ ಏಕಾಂತಶೀಲತೆ  ನಿಃಸ್ಪøಹತ ಮತ್ತು ಸಮತ್ವ ಎಂಬ ಏಳನ್ನು ಹೊಂದಿರಬೇಕು.(ಪುಟ 261)

67) ಆತ್ಮನು ಜ್ಞಾನಾತ್ಮ ಮಹಾತ್ಮ ಮತ್ತು ಶಾಂತಾತ್ಮ ಎಂದು ಮೂರುವಿಧ.(ಪುಟ263)

68)ಶೃತಿಯು ಸ್ಪಷ್ಟವಾಗಿ ಹೇಳಿರುತ್ತದೆ.'ಇಂದ್ರಿಗಳಿಗಿಂತ ವಿಷಯಗಳು ಶ್ರೇಷ್ಠವಾದುವು.ವಿಷಯಗಳಿಗಿಂತ ಮನಸ್ಸೂ ,ಮನಸ್ಸಿಗಿಂತ 
ಬುದ್ದಿಯೂ,ಬುದಧಿಗಿಂತ ಮಹಾನ್ ಆತ್ಮನೂ ,ಮಹಾನ್ ಆತ್ಮನಿಗಿಂತ ಅವ್ಯಕ್ತವೂ,ಅವ್ಯಕ್ತಕ್ಕಿಂತ ಪುರುಷನೂ ಶ್ರೇಷ್ಠ.ಪುರುಷನಿಗಿಂತ ಶ್ರೇಷ್ಠವಾದದ್ದು ಯಾವುದೂ ಇಲ್ಲ.ಅದೇ ಕೊನೆ.ಅದೇ ಶ್ರೇಷ್ಠವಾದ ಗತಿ.(ಕಠ.1.3.10,11)

6)ಅಜು೯ನನನ್ನು ಕುರಿತು ಭಗವಂತನು'ಎಲೈ ಮಹಾಬಾಹುವೆ ಮನಸ್ಸು  ದುನ೯ಗ್ರಹವಾದದ್ದು. ಮತ್ತು ಚಂಚಲವಾದದ್ದು. ಎಂಬುದು ನಿಃಸಂಶಯವು.ಆದರೆ ಎಲೈ ಅಜು೯ನ ಇದನ್ನು ಅಭ್ಯಾಸ  ವೈರಾಗ್ಯಗಳಿಂದ ನಿಗ್ರಹಿಸಬಹುದು.ಮನೋ ನಿಗ್ರಹವನ್ನು ಮಾಡದವನಿಗೆ  ಯೋಗವು ದುಷ್ಪ್ರಾಪ್ಯವೆಂದು ನನ್ನ ಮತ;ಆದರೆ ಯತ್ನಶೀಲನೂ  ಜಿತೇಂದ್ರಿಯನೂ  ಆದವನಿಗೆ ಮೇಲೆ ಹೇಳಿದ ಉಪಾಯದಿಂದ ಇದನ್ನು ಹೊಂದಲು ಸಾಧ್ಯ.(ಗೀತಾ6.35,36) ಎಂದು ಪ್ರತ್ಯುತ್ತರ ಕೊಟ್ಟಿರುತ್ತಾನೆ.(ಪುಟ265)

70)'ಬಲವಂತನಾದವನು ತಾನೊಬ್ಬನೇ ಅನೇಕರೊಡನೆ  ವಿರೋಧ ಕಟ್ಟಿಕೊಳ್ಳಬಾರದು.ಸಮುದ್ರವು ಟಿಟ್ಟಿಭದಿಂದ ಸೋಲಿಸಲ್ಪಟ್ಟಂತೆ ಅವನು ಸೋಲನ್ನು ಹೊಂದುತ್ತಾನೆ.(ಪುಟ 265).

71)ಎದೆಗುಂದದೆ ಪರಮಾಥ೯ವಾದ ಮನೋ ನಿರೋಧದಲ್ಲಿ  ಪ್ರವತಿ೯ಸುವ ಯೋಗಿಯನ್ನು ಈಶ್ವರನು ಅನುಗ್ರಹಿಸುತ್ತಾನೆ.(ಪುಟ266).   

72)ವಸಿಷ್ಠನು ಹೀಗೆ ಹೇಳಿರುತ್ತಾನೆ: ಯೋಗಮಾಗ೯ದಲ್ಲಿ ಈಗತಾನೇ ಪ್ರವತಿ೯ಸಿರುವವನು  ತನ್ನ ಮನಸ್ಸಿನ ಅಧ೯ಭಾಗವನ್ನು  ಭೋಗಗಳಿಂದಲೂ ಕಾಲು ಭಾಗವನ್ನು ಶಾಸ್ತ್ರದಿಂದಲೂ  ಉಳಿದ ಕಾಲುಭಾಗವನ್ನು  ಗುರು ಶುಶ್ರೂಷೆಯಿಣದಲೂ  ತುಂಬಿಸಬೇಕು.ಸ್ವಲ್ಪ ಅಭ್ಯಸ್ತನಾದವನು  ತನ್ನ ಮನಸ್ಸಿನ ಕಾಲು ಭಾಗವನ್ನು ಭೋಗಗಳಗಿಂದಲೂ ಅಧ೯ವನ್ನು ಗುರು ಶುಶ್ರೂಷೆಯಿಂದಲೂ,ಉಳಿದ ಕಾಲುಭಾಗವನ್ನು ಶಾಸ್ತ್ರಾಥ೯ಚಿಂತನೆಯಿಂದಲೂ ತುಂಬಿಸಬೇಕು.ಯೋಗಮಾಗ೯ದಲ್ಲಿ ಕುಶಲತೆಯನ್ನು ಸಂಪಾದಿಸಿರುವವನು ತನ್ನ ಮನಸ್ಸಿನ ಅಧ೯ಭಾಗವನ್ನು ಶಾಸ್ತ್ರ ಚಿಂತನ-ವೈರಾಗ್ಯದಿಂದಲೂ,ಉಳಿದಧ೯ವನ್ನು ಧ್ಯಾನ-ಗುರುಪೂಜೆಗಳಿಂದಲೂ ಅಹನಿ೯ಶಿಯೂ ತುಂಬಬೇಕು.(.ಯೋ.ವಾ.21.36-38) (ಪುಟ 267)

73)ಯೋಗವು ಪ್ರಧಾನವಾಗಿರುವಂತೆ  ಇತರ ವ್ಯಾಪಾರಗಳನ್ನೂ ಸೇರಿಸಿಕೊಂಡು  ಅವನ್ನು ಕೂಡಲೇ ನಡೆಸಿಗಿದಾಗ ಎಷ್ಟು ಮುಹೂತ೯ಗಳನ್ನು  ಯೋಗದಲ್ಲಿ ಕಳೆದಾಯಿತೆಂಬುದನ್ನು ಲೆಕ್ಖಮಾಡಬೇಕು.(ಪುಟ 26)

74)ಹೀಗೆ ಯೋಗವೊಂದನ್ನೇ ಹಿಡಿದರೆ ಇತರ ಕಾಯ೯ಗಳು ನಷ್ಟವಾಗುತ್ತವೆಯಲ್ಲ ಎಂದು ಶಂಕಿಸಬಾರದು.ಏಕೆಂದರೆ ಇತರ ಎಲ್ಲಾ ಕಾಯ೯ಗಳನ್ನು ಬಿಟ್ಟವನಿಗೇ ಯೋಗದಲ್ಲಿ ಅಧಿಕಾರವಿರುತ್ತದೆ.ಆದುದರಿಂದಲೇ ವಿದ್ವತ್ ಸನ್ಯಾಸವು ಅಪೇಕ್ಷಣೀಯವಾಗಿದೆ.ಆದುದರಿಂದ ಅದರಲ್ಲಿಯೇ  ಏಕನಿಷ್ಠನಾಗಿರುವ ಪುರುಷನು -ಅಧ್ಯಯನ ಮಾಡಲು ಕಲಿಯುತ್ತಿರುವ  ಬ್ರಹ್ಮಚಾರಿಯಂತೆ  ಅಥವಾ ವ್ಯಾಪಾರಿಯಂತೆ -ಕ್ರಮವಾಗಿ ಯೋಗಾರೂಢನಾಗುತ್ತಾನೆ.(ಪುಟ 26)

75)ಆದುದರಿಂದ ಪುನಃಪುನಃ ಒದಗುತ್ತಿರುವ ಸಂಕಲ್ಪ-ವಿಕಲ್ಪಗಳನ್ನು ಉದ್ಧಾಲಕನಂತೆಯೇ ಪುರುಷ ಪ್ರಯತ್ನದಿಂದ  ಪರಿತ್ಯಜಿಸಿ ಅಹಂಕತೃ೯ವಾದ ಜ್ಞಾನಾತ್ಮನಲ್ಲಿ ಮನಸ್ಸನ್ನು ಲಯಗೊಳಿಸಬೇಕು.(ಪುಟ 26)

76)ಪಾಂಡಿತ್ಯವುಂಟಾದ ಮೇಲೆ  ಮುಂದಿನ ಗ್ರಂಥದ ಅಥ೯ವು ತಾನಾಗಿಯೇ ಹೇಗೆ ಹೊಳೆಯುತ್ತದೆಯೋ ಹಾಗೆಯೇ ಹಿಂದಿನ ಭೂಮಿಕೆಯನ್ನು ಚೆನ್ನಾಗಿ ವಶದಲ್ಲಿಟ್ಟುಕೊಂಡಿರುವ  ಮುಓದಿನ ಭೂಮಿಕೆಯ ವಶೋಪಾಯವು  ತಾನಾಗಿಯೇ ಹೊಳೆಯುತ್ತದೆ.(ಪುಟ 2710

77) ಯೋಗವನ್ನು ಯೋಗದಿಂದ ತಿಳಿಯಬೇಕು. ಯೋಗವು ಯೋಗದಿಂದ ಪ್ರವೃತ್ತವಾಗುತ್ತದೆ. ಯಾವನು ಯೋಗದ ಮೂಲಕ ಅಪ್ರಮತ್ತನಾಗಿರುನೊ  ಅಂಥ ಯೋಗಿಯು ಚಿರಕಾಲ ಸುಖವನ್ನು ಹೊಂದುತ್ತಾನೆ.(ಯೋ.ಭಾ.3.6)

78)ಚಿತ್ತವು  ಸ್ವಭಾವದಿಂದಲೇ  ಆತ್ಮಾಕಾರದಲ್ಲೋ ಅನಾತ್ಮಾಕಾರದಲ್ಲೋ ನೆಲೆಸಿರುತ್ತದೆ.ಅದು ಅನಾತ್ಮ ದೃಷ್ಟಿಯನ್ನು ತಿರಸ್ಕರಿಸಿ ಆತ್ಮಾಕಾರದಿಂದಲೇ ನಿಲ್ಲುವಂತೆ ವಿಧಿಸಬೇಕು.(ಪುಟ273)

7)ಮನಸ್ಸಿಗೆ ಸುಖದುಃಖಾದಿ ರೂಪವು  ಧಮ೯ವೇ ಮೊದಲಾದ ಕಾರಣದಿಂದ ಉಂಟಾಗುತ್ತದೆ.ಆದರೆ ವಸ್ತುತಃ ಅದಕ್ಕೆ ನಿರ್ಹೇತುಕವಾದ
ಆತ್ಮಜ್ಞಾನ ರೂಪವಿರುತ್ತದೆ.ವೃತ್ತಿಗಳೆಲ್ಲ ಪ್ರಶಾಂತವಾದ ಚಿತ್ತವು ಪರಮಾನಂದ ಸ್ಫುರಣಕ್ಕೆ ಕಾರನವಾಗಿರುತ್ತದೆ.ಅಸಂಪ್ರಜ್ಞಾತವೆಂಬ  ಹೆಸರು¼ಳ್ಳ ಈಸಮಾಧಿಯು  ಯೋಗಿಗಳಿಗೆ ಪ್ರಿಯವಾದುದಾಗಿರುತ್ತದೆ.(ಪುಟ275).      

80)ಮನಸ್ಸನ್ನು ಆತ್ಮನಲ್ಲಿ ನಿಲ್ಲಿಸಿ  ಏನನ್ನೂ ಚಿಂತಿಸಕೂಡದು.(ಗೀತೆ 6.25)(ಪುಟ275)

81)ನಿವಿ೯ಕಾರನಾದ ಪುರುಷನು ಯಾವಾಗಲೂ  ಸ್ವರೂಪದಲ್ಲಿಯೇ ನಿಂತಿರುತ್ತಾನೆ.(ಪುಟ276)

82)ಮನೋ ನಾಶಕ್ಕೆ ಯೋಗ ಮತ್ತು ಜ್ಞಾನವೆಂಬ  ಎರಡು ಮಾಗ೯ಗಳಿವೆ. ಚಿತ್ತದ ವೃತ್ತಿಯನ್ನು ನಿರೋಧಿಸುವುದೇ  ಯೋಗ.ವಸ್ತುಗಳ ಯಾಥಾತ್ಮ್ಯ(ಯಥಾಥ೯) ದೃಷ್ಟಿಯೇ ಯೋಗ.ಒಬ್ಬನಿಗೆ ಯೋಗವು ಅಸಾಧ್ಯ.ಮತ್ತೊಬ್ಬನಿಗೆ ಜ್ಞಾನನಿಶ್ಚಯವು ಅಸಾಧ್ಯ.ಆದ್ದರಿಂದ ದೇವನಾದ ಪರಮೇಶ್ವರನು  ಎರಡು ಪ್ರಕಾರವಾದ ಮಾಗ೯ವನ್ನು ಹೇಳಿದ್ದಾನೆ.(ಲಯೋವಾ 27.72.2,60)(ಪುಟ 277).

83)ಸಂಪ್ರಜಾತ ಅಸಂಪ್ರಜ್ಞಾತ ಸಮಾಧಿಗಳ ನಡುವೆ ಸ್ವರೂಪದಿಂದಲೂ ಸಾಧನದಿಂದಲೂ ಮಹತ್ತಾದ ವೈಲಕ್ಷಣ್ಯವಿದ್ದೇ ಇರುತ್ತದೆ.
ಒಂದಕ್ಕೆ ವೃತ್ತಿಗಳಿರುವುದು  ಇನ್ನೊಂದಕ್ಕೆ ವೃತ್ತಿಗಳಿಲ್ಲದಿರುವುದು.(ಪುಟ278)

84)ಅಸಂಪ್ಜ್ಞಾತ ಸಮಾಧಿಯು ಇತರರಿಗೆ(ಯೋಗಿಗಳಿಗೆ) ಶ್ರದ್ಧೆ,ವೀಯ೯ ಸ್ಮøತಿ ಸಮಾಧಿಪ್ರಜ್ಞೆ -ಇವುಗಳ ಮೂಲಕ ಉಂಟಾಗುತ್ತದೆ.(ಯೋ ಸೂ 1.20)

85)ಯೋಗದ ಶ್ರೇಷ್ಠತೆಯನ್ನು ಸ್ಮøತಿಯಲ್ಲಿ ಹೀಗೆ ಹೇಳಿದೆ.'ತಪಸ್ವಿಗಳಿಗಿಂತಲೂ ಜ್ಞಾನಿಗಳಿಗಿಂತಲೂ  ಕಮಿ೯ಗಳಿಗಿಂತಲೂ  ಯೋಗಿಯು ಶ್ರೇಷ್ಠನೆಂದು ನನ್ನ ಅಭಿಪ್ರಾಯ.'(ಗೀತಾ 6.46)(ಪುಟ27)

86)ಶಾಸ್ತ್ರ ಜ್ಞಾನವು (ಬಹಿರಂಗವಾಗಿದ್ದರೆ) ಇದು ಅಂತರಂಗವಾಗಿರುವುದರಿಂದಲೂ ಚಹಿತ್ತವೃತ್ತಿಗಳ ವಿಶ್ರಾಂತಿಗೆ ಕಾರಣವಾಗಿರುವುದರಿಂದಲೂ ( ಯೋಗವು) ಜ್ಞಾನಕ್ಕಿಂತ ಶ್ರೇಷ್ಠವಾದದ್ದು.ಹೀಗೆ ಅರಿಯುವವನಿಗೆ ಯೋಗದಲ್ಲಿ ಶ್ರದ್ಧೆಯು ಹುಟ್ಟುತ್ತದೆ.(ಪುಟ27)

87)ಸಮಾಧಿಯನ್ನು  ಚೆನ್ನಾಗಿ ಅನುಷ್ಠಾನಮಾಡಿದಾಗಋತಂಬರ ಪ್ರಜ್ಞೆಯು ಹುಟ್ಟುತ್ತದೆ.(ಪುಟ27)

88)ಇಂಥಪ್ರಜ್ಞೆಯನ್ನು ಕಾರಣವಾಗಿ ಹೊಂದಿರುವ ಅಸಂಪ್ರಜ್ಞಾತ ಸಮಾಧಿಯು ಇತರರಿಗೆ ಎಂದರೆ ದೇವಾದಿಗಳಿಗಿಂತ ಈಚೆ ಇರುವ
  ಮನುಷ್ಯರಿಗೆಸಿದ್ಧಿಸುತ್ತದೆ.(ಪುಟ27)

8) ಪ್ರಜ್ಞೆಯನ್ನು ಈಸೂತ್ರದಲ್ಲಿ ಹೇಳಿರುತ್ತದೆ.'ಅಲ್ಲಿ ಪ್ರಜ್ಞೆಯು ಋತಂಭರವಾಗಿರುತ್ತದೆ'.'ಋತ'ಎಂದರೆ ಸತ್ಯ  ಅಥವಾ ವಸ್ತುವಿನ ನಿಜ ಸ್ವರೂಪ.ಇದನ್ನು ಭರಣಮಾಡುವುದು ಎಂದರೆ ಪ್ರಕಾಶಪಡಿಸುವುದು.ಇಂಥ ಪ್ರಜ್ಞೆಯು ಋತಂಭರಾ ಎನಿಸಿದೆ.(ಪುಟ280)

0)ಯೋಗಿಗಳಲ್ಲದವರಿಗೆ ಸೂಕ್ಷ್ಮವಾದ , ಮರೆಮಾಚಲ್ಪಟ್ಟಿರುವ  ಮತ್ತು ದೂರ ಇರುವ ವಸ್ತುಗಳು ಪ್ರತ್ಯಕ್ಷಗೋಚರವಲ್ಲ.ಅಂಥ ಯೋಗಿಗಳಿಂದ  ವಸ್ತುಗಳು ಆಗಮ,ಅನುಮಾನ, ಪ್ರಮಾಣಗಳ ಮೂಲಕ ತಿಳಿಯಲ್ಪಡುತ್ತದೆ.ಮತ್ತು ಶಾಸ್ತ್ರದಿಂದಲೂ ಅನುಮಾನದಿಂದಲೂ  ಹುಟ್ಟುವ ಪ್ರಜ್ಞೆಯು (ಎಂದರೆ ಜ್ಞಾನವು) ವಸ್ತುವಿನ ಸಾಮಾನ್ಯ ಲಕ್ಷಣವನ್ನು ಮಾತ್ರ ತೋರಿಸಿಕೊಡುತ್ತವೆ.ಆದರೆ ವಸ್ತುವಿನ ವಿಶೇಷ ಲಕ್ಷಣವು ಯೋಗಿಗಳಿಗೆ  ಪ್ರತ್ಯಕ್ಷವಾಗಿ ಗೋಚರಿಸುವಂತೆ  ಮಾಡುವುದರಿಂದ ಇದು ಋತಂಭರ ಎನಿಸಿದೆ.(ಪುಟ280)

1) ಸುಷುಪ್ತಿಗೆ ಸಮಾನವಾಗಿರುವ  ಸಮಾಧಿಯನ್ನು  ಸಾಕ್ಚಿಚೈತನ್ಯನು  ಅನುಭವಿಸಲು ಶಕ್ಯ.(ಪುಟ281)

2)ಸುಷುಪ್ತಿಯಲ್ಲಿ ಮನಸ್ಸು ಲಯವಾಗುತ್ತದೆ.ನಿಗೃಹೀತವಾದ ಮನಸ್ಸು ಲಯವಾಗುವುದಿಲ್ಲ.ಅದೇ ನಿಭ೯ಯವೂ ಎಲ್ಲೆಲ್ಲಿಯೂ ಜ್ಞಾನಪ್ರಕಾಶವೂ ಆದ ಬ್ರಹ್ಮ.(282)
3)ಆದ್ದರಿಂದ ಸುಷುಪ್ತವಾದ ಮನಸ್ಸಿಗೂ  ಸಮಾಹಿತ ಮನಸ್ಸಿಗೂ ಭೇದವುಂಟು(282)

4)ಬ್ರಹ್ಮಜ್ಞಾನಿಯು ಯಾವುದಕ್ಕೂ ಹೆದರುವುದಿಲ್ಲ.ಭಯಕ್ಕೆ  ನಿಮಿತ್ತವಾದ  ದ್ವೈತ ಜ್ಞಾನವೆಂಬ  ಕಾರಣವಿಲ್ಲದಿರುವುದರಿಂದ ಮನಸ್ಸು ಶಾಂತವೂ ಅಭಯವೂ  ಆದ ಬ್ರಹ್ಮವಾಗುತ್ತದೆ.(ಪುಟ282).6)

5) ಅನ್ಯಥಾ ಗ್ರಹಣವೆಂದರೆ ಅದ್ವೈತ ವಸ್ತುವು ದ್ವೈತದಂತೆ ತೋರುವುದು.(ಪ್ಟ283)

6)ಮಿಥ್ಯಾ ಜ್ಞಾನವು ಮಿಥ್ಯೆಯಿಂದ ಕ್ಷೀಣವಾದಾಗ  ತುರೀಯ ಪದವನ್ನು  ಎಂದರೆ ಅದ್ವೈತ ವಸ್ತುವನ್ನು  ಹೊಂದುತ್ತಾನೆ ಅಥವೇ  ಅನುಭವಿಸುತ್ತಾನೆ.(ಪುಟ283)   

7)ಸುಷುಪ್ತಿಗೆ ಕಮ೯ಕ್ಷಯವು ನಿಮಿತ್ತವಾಗಿರುತ್ತದೆ.ಆದ್ದರಿಂದ ತತ್ವಜ್ಞಾನಿಗೂ ಕೂಡ ಕ್ಲೇಶಕ್ಷಯಕ್ಕೋಸ್ಕರ ಅಸಂಪ್ರಜ್ಞಾತ ಸಮಾಧಿಯು ಬೇಕೇ ಬೇಕು.(ಪುಟ384)

8)ಜೀವಾತ್ಮನು  ಜಾಗ್ರದವಸ್ಥೆಯ ಸಣಬಂಧವನ್ನು ಹೊಂದಿರುವಾಗ ವಿಶ್ವ ಅಥವಾ ವೈಶ್ವಾನರನೆಂತಲೂ ,ಸ್ವಪ್ನಯುಕ್ತ ನಿದ್ರಾ ಸಂಬಂಧವನ್ನು ಹೊಂದಿದಾಗ ತೈಜಸನೆಂತಲೂ ಗಾಢನಿದ್ರೆಯ ಸಂಬಂಧವನ್ನು ಹೊಂದಿರುವಾಗ  ಪ್ರಾಜ್ಞನೆಂತಲೂ  ಅವಸ್ಥಾತೀತನಾಗಿ  ತನ್ನ ಸ್ವರೂಪದಲ್ಲಿ ನೆಲೆಸಿರುವಾಗ  ತುರೀಯಾತ್ಮನೆಂತಲೂ ಕರೆಯಲ್ಪಡುತ್ತಾನೆ.(ಪುಟ284)

೯೯)ಅವಿದ್ಯೆ  ಅಸ್ಮಿತಹೆ ರಾಗ ದ್ವೇಷ ಅಭಿನಿವೇಶ ಐದನ್ನು ಯೋಗಶಾಸ್ತ್ರದಲ್ಲಿ ಕ್ಲೇಶಗಳೆಂದು ಕರೆದಿದ್ದಾರೆ.(ಯೋ ಸೂ 2.3)(ಪುಟ 285)

100)ಅವಿದ್ಯೆ ಎಂದರೆ  ಮೋಹ ವಿಪರೀತ ಬುದ್ಧಿ.ಅಂತಃಕರಣದಲ್ಲಿ 'ಇದೇ ನಾನಾಗಿದ್ದೇನೆ'ಎಂಬ ಭಾವನೆಯು ಅಸ್ಮಿತಹೆ.ಸುಖಸಾಧನಗಳಲ್ಲಿ ತೃಷ್ಣೆಯು ರಾಗ.ದುಃಖ ಸಾಧನಗಳಲ್ಲಿ ನಿಂದಾ ರೂಪವಾದ  ಬುದ್ಧಿಯು ದ್ವೇಶ.ಜೀವದ ಮೇಲಿನ ಆಸೆಯೇ ಅಭಿನಿವೇಶ.(ಪುಟ285)

101)ಸುಷುಪ್ತಿಯಲ್ಲಿ  ಕಅಯಿಕ-ವಾಚಿಕ-ಮಾನಸಿಕ ಕಮ೯ಗಳಾವುವೂ ಇರುವುದಿಲ್ಲ.(ಪು285)

102)ಸಮಾಧಿಯ ಭೂಮಿಕೆಗಳು:
1) ಮೊದಲನೆ ಭೂಮಿಕೆ-ವಾಕ್ ನಿರೋಧ
2)ಎರಡನೆಯ ಭೂಮಿಕೆ-ಮನೋರಾಹಿತ್ಯ
3) ಮೂರನೆಯ ಭೂಮಿಕೆ -ಅಹಂಕಾರ ರಾಹಿತ್ಯ.
4)ನಾಲ್ಕನೆಯ ಭೂಮಿಕೆ-ಸುಷುಪ್ತಿಯಲ್ಲಿರುವಂತೆ  ಮಹತ್ತತ್ವ ರಾಹಿತ್ಯ.ನಾಲ್ಕನೆಯ ಭೂಮಿಕೆಯ ಅಭ್ಯಾಸವನ್ನು ಗೌಡಪಾದಾಚಾಯ೯ರು ಹೀಗೆ ಹೇಳುತ್ತಾರೆ:ಕಾಮಭೋಗಗಳಲ್ಲಿ  ವಿಕ್ಷಿಪ್ತವಾದ ಮನಸ್ಸನ್ನೂ ಲಯದಲ್ಲಿ ಸುಪ್ರಸನ್ನವಾದ ಮನಸ್ಸನ್ನೂ ನಿಗ್ರಹಿಸಬೇಕು.ಕಾಮದಂತೆ ಲಯವೂ ಅನಥ೯ಹೇತು.ಎಲ್ಲವೂ ದುಃಖವೆಂಬುದನ್ನು ಅರಿತು ಕಾಮದ ಭೋಗದಿಂದ ಮನಸ್ಸನ್ನು ಹಿಂತಿರುಗಿಸಬೇಕು.ಎಲ್ಲವೂ ಅಜವೆಂಬುದನ್ನು ಸ್ಮರಿಸಿಕೊಂಡರೆ  ಹುಟ್ಟಿರುವುದನ್ನು ನೋಡುವುದೇ ಇಲ್ಲ.ಚಿತ್ತವು ಸುಷುಪ್ತಿಯಲ್ಲಿ ಲಯಹೊಂದಿದರೆ ಅದನ್ನು ಎಚ್ಚರಗೊಳಿಸಬೇಕು.ವಿಕ್ಷಿಪ್ತವಾದರೆ ಶಮನ ಮಾಡಬೇಕು. ಎರಡು ಅವಸ್ಥೆಗಳ   ನಡುವೆ ಚಿತ್ತವು ಕಷಾಯದಿಂದ ಕೂಡಿರುವುದೆಂದು ತಿಳಿಯಬೇಕು.ಸಮತೆಯನ್ನು ಹೊಂದಿದರೆ ಅದನ್ನು ಅಲುಗಾಡಿಸ ಬಾರದು.ಅಲ್ಲಿ ಸುಖವನ್ನು ಸವಿಯಕೂಡದು.,ಪ್ರಜ್ಞೆಯಿಂದ ನಿಸ್ಸಂಗನಾಗಿರಬೇಕು.ನಿಶ್ಚಲ ಭಾವವನ್ನು ಹೊಂದಿದ ಮನಸ್ಸು ಹೊರಹೊರಟರೆ  ಅದನ್ನು ಆತ್ಮನೊಂದಿಗೆ ಪ್ರಯತ್ನದಿಂದಪ್ರಯತ್ನದಿಂದ ಏಕೀಕರಿಸಬೇಕು.ಯಾವಾಗ ಚಿತ್ತವು ಸುಷುಪ್ತಿಯಲ್ಲಿ ಲಯವಾಗುವುದಿಲ್ಲವೊ ಪುನಃ ವಿಕ್ಷಿಪ್ತವೂ ಆಗುವುದಿಲ್ಲವೋ,ಅಲುಗಾಡುವುದಿಲ್ಲವೋ (ಕಲ್ಪಿತವಾದ ವಿಷಯಭಾವದಿಂದ )ತೋರಿಸಿಕೊಳ್ಳುವುದಿಲ್ಲವೋ ಆಗ ಅದು ಬ್ರಹ್ಮಸ್ವರೂಪವನ್ನು ಹೊಂದುತ್ತದೆ.(ಮಾಂ.ಕಾ.3.42-46).(ಪುಟ287)

103)ಚಿತ್ತದ ನಾಲ್ಕು ಅವಸ್ಥೆಗಳು:1)ಲಯ 2) ವಿಕ್ಷೇಪ 3)ಕಷಾಯ 4)ಸಮಪ್ರಾಪ್ತಿ. ಬಲ್ಲವರು ಹೀಗೆ ಹೇಳುತ್ತಾರೆ.:'ನಿದ್ರೆಯನ್ನು ಮುಗಿಸಿಚೆನ್ನಾಗಿ ಜೀಣ೯ವಾಗುವ ಆಹಾರವನ್ನು ಮಿತವಾಗಿ ಉಂಡು ,ಶ್ರಮವನ್ನು ವಜಿ೯ಸಿ,ಬಾಧೆಗಳಿಲ್ಲದ ನಿಜ೯ನ ಪ್ರದೇಶದಲ್ಲಿ ಕುಳಿತುಕೊಳ್ಳಬೇಕು.ಯಾವಾಗಲೂ ಆಶಾರಹಿತನಾಗಿಯೂ  ಪ್ರಯತ್ನ ರಹಿತನಾಗಿಯೂ ಇರಬೇಕು.ಅಥವಾ ತನ್ನ ಅಭ್ಯಾಸ ಮಾಗ೯ಕ್ಕೆ ಅನುಗುಣವಾಗಿ  ಪ್ರಾಣಾಯಾಮವನ್ನು ಮಾಡಬೇಕು.'

104)ಯದಿಂದ ಎಬ್ಬಿಸಲ್ಪಟ್ಟ ಚಿತ್ತವು  ಪ್ರತಿದಿನವೂ ಎಚ್ಚರದ ಅವಸ್ಥೆಯಲ್ಲಿ ಆಗಿರುವ   ಅಭ್ಯಾಸದ ಬಲದಿಂದ ಕಾಮಭೋಗಗಳಲ್ಲಿ ವಿಕ್ಷಿಪ್ತಗೊಂಡರೆ (ಎಂದರೆ ಎಸೆಯಲ್ಪಟ್ಟರೆ)ಆಗ ವಿವೇಕಿ ಜನರಿಗೆ ಚೆನ್ನಾಗಿ ತಿಳಿದಿರುವ ,ಭೋಗವಸ್ತುಗಳಲ್ಲಿ ಅಂತಗ೯ತವಾಗಿರುವ ,ಎಲ್ಲಾ ದುಃಖಗಳನ್ನು ಸ್ಮರಿಸುವುದರ ಮೂಲಕವೂ ,ಶಾಸ್ತ್ರದಲ್ಲಿ  ಪ್ರಸಿದ್ಧವಾಗಿರುವ ಅಜವೂ  ಅದ್ವಿತೀಯವೂ ಆದ ಬ್ರಹ್ಮತತ್ವವನ್ನು ಸ್ಮರಿಸುವುದರ ಮೂಲಕವೂ  ಭೋಗವಸ್ತುವನ್ನು ನೋಡುತ್ತ,ಪುನಃ ಪುನಃ   ವಿಕ್ಷೇಪದಿಂದ ಚಿತ್ತವನ್ನು ಶಮನಗೊಳಿಸಬೇಕು.ಕಷಾಯವೆಂದರೆ ತೀವ್ರವಾದ  ಚಿತ್ತದೋಷ.ತೀವ್ರವಾದ ರಾಗದ್ವೇಷವೇ ಮೊದಲಾದ   ಮೊದಲಾದ ಸಂಸ್ಕಾರದಿಂದ ನುಂಗಲ್ಪಟ್ಟ ಚಿತ್ತವು ,ಕೆಲವುಸಲ ಸಮಾಹಿತವಾದಂತೆ  ಲಯವಿಕ್ಷೇಪರಹಿತವಾದಂತೆ  ಇದ್ದುಕೊಂಡು,ದುಃಖದಲ್ಲಿ ಏಕಾಗ್ರವಾಗಿ ನೆಲೆಸಿರುತ್ತದೆ.ಅಂಥ ಚಿತ್ತವನ್ನು ಅರಿತುಕೊಂಡು,ಲಯವಿಕ್ಷೇಪಗಳಿಗೆ ಪ್ರತೀಕಾರವನ್ನು ಮಾಡುವಂತೆಕಷಾಯಕ್ಕೂ ಪ್ರತೀಕಾರವನ್ನು ಮಾಡಬೇಕು.ಸಮ ಎಂಬ ಶಬ್ದದಿಂದ ಬ್ರಹ್ಮವನ್ನು ಹೇಳಿದೆ.ಏಕೆಂದರೆ 'ಸಮಸ್ತ ಪ್ರಾಣಿಗಳಲ್ಲಿ  ಸಮನಾಗಿರುವ ಪರಮೇಶ್ವರನನ್ನು (ಗೀತಾ13.27)ಎಂದು ಸ್ಮøತಿ ಪ್ರಮಾಣವಿದೆ.(ಪುಟ28).

105)ಲಯ, ವಿಕ್ಷೇಪ,ಕಷಾಯ -ಇವು ಪರಿಹರಿಸಲ್ಪಟ್ಟಾಗ  ಪರಿಶೇಷನ್ಯಾಯದಿಂದ ಚಿತ್ತವು ಸಮನಾದ  ಬ್ರಹ್ಮವನ್ನು ಹೊಂದುತ್ತದೆ.(ಪುಟ28).

106)'ಸಮಾಧಿಯಮೂಲಕ ಪರಿಶುದ್ಧವಾದ ,ಆತ್ಮನಲ್ಲಿ ಪ್ರವೇಶಿಸಿರುವ,ಚಿತ್ತಕ್ಕೆ ಯಾವ ಸುಖವುಂಟಾಗುವುದೋ ಅದನ್ನು ಮಾತಿನಿಂದ ವಣಿ೯ಸಲು ಸಾಧ್ಯವಿಲ್ಲ. ಅದು ಅಂತಃಕರಣದಿಂದ ನೇರವಾಗಿ ಗ್ರಹಿಸಲ್ಪಡುತ್ತದೆ.(ಪುಟ20)

107)ಪ್ರಜ್ಞೆಯೆಂದರೆ ಸವಿಕಲ್ಪವಾದ ಜ್ಞಾನ.ಅದರೊಡನೆ ಸಂಗವನ್ನು ತ್ಯಜಿಸಬೇಕು.(ಎಂದರೆ ನಿವಿ೯ಕಲ್ಪ ಜ್ಞಾನವನ್ನು ಹೊಂದಬೇಕು ಎಂದಥ೯) ಅಥವಾ ಧೈಯ೯ಯುಕ್ತವಾದ  ಬುದ್ಧಿಯೇ ಪ್ರಜ್ಞೆ.(ಪುಟ22)

108)ಲಯ ,ವಿಕ್ಷೇಪ ಕಷಾಯ,ಸುಖಾಸ್ವಾದ-ಇವುಗಳಿಂದ ಬಿಡಲ್ಪಟ್ಟ ಚಿತ್ತವು ಅವಿಚ್ಛಿನ್ನವಾಗಿ ಬ್ರಹ್ಮದಲ್ಲಿ ನೆಲೆಸಿರುತ್ತದೆ.ಕಠವಲ್ಲಿಯಲ್ಲಿ ಹೀಗೆ ಹೇಳಿರುತ್ತದೆ.'ಯಾವಾಗ ಪಂಚಜ್ಞಾನೇಂದ್ರಿಯಗಳು  ಮನಸ್ಸಿನೊಡನೆ ಶಾಂತವಾಗುವವೋ ,ಬುದ್ಧಿಯು ಅಲ್ಲಾಡುವುದಿಲ್ಲವೋ  ಆಗ ಅದನ್ನು ಪರಮಗತಿ ಎಂದು ಹೇಳುತ್ತಾರೆ.ಸ್ಥಿರವಾದ ಇಂದ್ರಿಯ ಧಾರಣೆಯನ್ನೇ ಯೋಗವೆಂದು ತಿಳಿಯುತ್ತಾರೆ.ಆಗ ಅದನ್ನುಳ್ಳವನು ಅಪ್ರಮತ್ತನಾಗುತ್ತಾನೆ;ಏಕೆಂದರೆ ಯೋಗಕ್ಕೆ ಉತ್ಪತ್ತಿ ನಾಶಗಳುಂಟು.(ಕಠ2.6.10,11) (ಪುಟ 23).

10)ಯೋಗವೆಂದರೆ ಚಿತ್ತವೃತ್ತಿಗಳ ನಿರೋಧ(ಯೋ.ಸೂ.1.2)(23)

110)ಉಪೇಕ್ಷಿಸಲ್ಪಟ್ಟ ಯೋಗವು ಇಂದ್ರಿಯವೃತ್ತಿಗಳ  ಜನನಕ್ಕೆ ಕಾರಣವಾಗುತ್ತದೆ.ಅನುಷ್ಠಿಸಲ್ಪಟ್ಟರೆ ಅವುಗಳ ಲಯಕ್ಕೆ ಕಾರಣವಾಗುತ್ತದೆ.(ಪುಟ23)

111)ಐದು ಅವಯವಗಳನ್ನುಳ್ಳ ವೃತ್ತಿಗಳು ಕ್ಲಿಷ್ಟ ಮತ್ತು ಅಕ್ಲಿಷ್ಟ ಎಂದು ಎರಡುಬಗೆ.ಕ್ಲೇಶರೂಪವದ ರಾಗ ದ್ವೇಶಗಳೇ ಮೊದಲಾದ ಅಸುರೀ ವೃತ್ತಿಗಳು.ರಾಗಾದಿ ರಹಿತವಾದ ದೈವೀ ವೃತ್ತಿಗಳು ಅಕ್ಲಿಷ್ಟ ವೃತ್ತಿಗಳು.(ಪುಟ24)



112)ಹೆಸರು ಮತ್ತು ಲಕ್ಷಣ -ಇವುಗಳ ಮೂಲಕ ವೃತ್ತಿಗಳನ್ನು ವಿಶದಪಡಿಸುವುದಕ್ಕಾಗಿ  ಆರು ಸೂತ್ರಗಳನ್ನು ಹೇಳಿರುತ್ತಾರೆ.1)ಪ್ರಮಾಣ2)ವಿಪಯ೯ಯ 3) ವಿಕಲ್ಪ 4)ನಿದ್ರೆ 5)ಸ್ಮøತಿ ಇವಾ ಐದು ಅವಯವಗಳು. ಪ್ರತ್ಯಕ್ಷ ಪ್ರಮಾಣ ಆಗಮ ಇವು ಪ್ರಮಾಣಗಳು.ವಿಪಯ೯ಯವೆಂದರೆ   ಅದರದಲ್ಲದೇ ಇರುವ ರೂಪದಲ್ಲಿ ನೆಲೆಸಿರುವ ಮಿಥ್ಯಾಜ್ಞಾನ.ವಸ್ತುವಿಲ್ಲದಿದ್ದರೂ ಕೇವಲ  ಶಬ್ದಜ್ಞಾನದಿಂದುಂಟಾಗುವ  ನಿಶ್ಚಯವು ವಿಕಲ್ಪ.ಅಭಾವ ಪ್ರತ್ಯಯವನ್ನು ಅವಲಂಬಿಸಿರುವ  ವೃತ್ತಿಯೇ ನಿದ್ರೆ.ಅನುಭವಿಸಿದ ವಿಷಯವನ್ನು ಚಿತ್ತದಿಂದ ಹೊರಬಿಡದಿರುವುದೇ  ಸ್ಮøತಿ(ಪುಟ 25)

113)ಪಂಚವಿಧವೃತ್ತಿಗಳ ನಿರೋಧ ಸಾಧನವನ್ನು  ಸೂತ್ರ ರೂಪದಲ್ಲಿ ಹೀಗೆ ಹೇಳಿದೆ.'ಅಭ್ಯಾಸ -ವೈರಾಗ್ಯಗಳಿಂದ ಅವುಗಳ ನಿರೋಧವು ಸಾಧಿಸಲ್ಪಡುತ್ತದೆ. (ಪುಟ26).

114)ನಿರೋಧಕ್ಕ್ಆಗಿ ಮಾಡುವ ಯತ್ನವೇ ಅಭ್ಯಾಸ.ಯತ್ನವೆಂದರೆ ಮಾನಸಿಕವಾದ ಉತ್ಸಾಹ.'ತಾನಾಗಿಯೇ  ಹೊರಗೆ ಹರಿಯುವಂಥ ಸ್ವಭಾವವನ್ನುಳ್ಳ   ಚಿತ್ತವನ್ನು ಎಲ್ಲಾ ರೀತಿಯಿಂದಲೂ ವಿರೋಧಿಸುವೆನು'ಎಂಬೀ ರೂಪದ ಪುನಃ ಪುನಃ ಮಾಡುವ ಉತ್ಸಾಹವು  ಅಭ್ಯಾಸವೆಂದು ಕರೆಯಲ್ಪಡುತ್ತದೆ.ಯೋಗವನ್ನು  ಅನೇಕ ಸಂವತ್ಸರಗಳಷ್ಟು  ಅಥವಾ ಅನೇಕ ಜನ್ಮಗಳಷ್ಟು ದೀಘ೯ಕಾಲ ಸೇವಿಸಬೇಕು.ಸ್ಮøತಿಯೂ ಹೀಗೆ ಹೇಳುತ್ತದೆ.'ಅನದೇಕ ಜನ್ಮಗಳಿಂದ ಸಿದ್ಧಿಯನ್ನು ಹೊಂದಿದ ಯೋಗಿಯು ಅನಂತರ ಪ್ಮಗತಿಯನ್ನು ಹೊಂದುತ್ತಾನೆ.(ಗೀತಾ 6.45)(ಪುಟ27)

114)ಯೋಗವನ್ನು ನಿರಂತರವಾಗಿ ಸೇವಿಸಬೇಕು.'ಯಾವುದನ್ನು ಹೊಂದಿ ಬೇರೆ ಲಾಭವನ್ನು ಅದಕ್ಕಿಂತ ಅಧಿವೆಂದು ಎಣಿಸುವುದಿಲ್ಲವೋ ಅದನ್ನು ಯೋಗವೆಂಬ ಹೆಸರುಳ್ಳದ್ದು ಎಂದು ತಿಳಿಯಬೇಕು.(ಗೀತಾ 6:22)(ಪುಟ28)

115)ಆತ್ಮಲಾಭಕ್ಕಿಂತ ಮತ್ತೊಂದರ ಲಾಭವು ಅಧಿಕವಲ್ಲವೆಣಬುದನ್ನು ಕಚವೃತ್ತಾಂತದ ಮೂಲಕ ವಇಷ್ಠನು ಹೀಗೆ ಉದಾಹರಿಸಿದನು.'Uಚನು ಒಂದು ಸಲ ಸಮಾಧಿಯಿಂದ ಎದ್ದು  ಸಂತುಷ್ಟಮನಸ್ಕನಾಗಿ ಏಕಾಂತದಲ್ಲಿ ಇದನ್ನು ಹೀಗೆ ಹೇಳಿದನು:"ಏನನ್ನು ಮಾಡಲಿ ?ಎಲ್ಲಿಗೆ ಹೋಗಲಿ?ಏನನ್ನು ತೆಗೆದುಕೊಳಳಲಿ?ಏನನ್ನು ಬಿಡಲಿ?ಏಕೆಂದರೆ ಪ್ರಲಯಕಾಲದ  ನೀರಿನಿಂದ  ವಿಶ್ವವು ತುಂಬಿರುವಂತೆ  ಇಡೀ ಜಗತ್ತು ಆತ್ಮನಿಂದ ತುಂಬಿದೆ.ದೇಹದ ಒಳಗೆ ,ಹೊರಗೆ,ಕೆಳಗೆ,ಮೇಲೆ,ದಿಕ್ಕುಗಳಲ್ಲಿ, ಕಡೆ,ಇಲ್ಲಿ-ಎಲ್ಲಾಕಡೆಯಲ್ಲಿಯೂ ಆತ್ಮನೇ.ಆತ್ಮಮಯವಾಗದ್ದು ಯಾವುದೂ   ಎಲ್ಲಿಯೂ  ಇಲ್ಲ.ಎಲ್ಲಿ ನಾನಿಲ್ಲವೋ ಅದಿ;.ಯಾವುದು ನನ್ನಲ್ಲಿಲ್ಲವೋ ಅದಿಲ್ಲ.ಮತ್ತೆ ಯಾವುದನ್ನು ಬಯಸಲಿ?ಎಲ್ಲವೂ ಜ್ಞಾನಮಯವಾಗಿ ವ್ಯಾಪ್ತವಾಗಿದೆ."(.ಯೋವಾ 18.37-40).ಜಗತ್ತಿನ  ಐಶ್ವಯ೯ಗಳು ಚಿದಾದಿತ್ಯನ  ಮಹಾತೇಜಸ್ಸಿನ ಮುಂದೆ ಬಿಸಿಲ್ಗುದುರೆಯಿದ್ದಂತೆ!"(.ಯೋ.ವಾ18.35)(ಪುಟ2೯೯).

116)ವ್ಯರಾಗ್ಯವು  ಪರ ಮತ್ತು ಅರ ಎಂದು ಎರಡು ವಿಧ.ಅಪರ ವೈರಾಗ್ಯವು ನಾಲ್ಕು ವಿಧ.1)ಯತಮಾನತ್ವ 2)  ವ್ಯತಿರೇಕತ್ವ 3) ಏಕೇಂದ್ರಿಯತ್ವ 4) ವಶೀಕಾರತ್ವ.
1) ಯತಮಾನತ್ವ:ಮಾಲೆಚಂದನ ಸ್ತ್ರೀ,ಪುತ್ರ,ಮಿತ್ರ ಕ್ಷೇತ್ರ ಧನ -ಇವೇ ಮೊದಲಾದವು ದೃಷ್ಟಭೋಗಗಳು.ವೇದದಲ್ಲಿ ಹೇಳಿರುವ ಸ್ವಗಾ೯ದಿಗಳು ಅನುಶ್ರವಿಕ ಭೋಗಗಳು.ಇವುಗಳಲ್ಲಿ ಎರಡೂ ಕಡದೆಯೂ ತೃಷ್ಣೆಯು ಇದ್ದರೂ  ವಿವೇಕ ತಾರತಮ್ಯದಿಂದ ಯತಮಾನತ್ವವೇ ಮೊದಲಾದ ಮೂರು ವೈರಾಗ್ಯಗಳುಂಟಾಗುತ್ತವೆ.1) ಜಗತ್ತಿನಲ್ಲಿ ಸಾರವಾವುದು ಅಸಾರವಾವುದು  ಎಂಬುದನ್ನು ಗುರುವಿನಿಂದಲೂ ಶಾಸ್ತ್ರಗಳಿಂದಲೂ ಅರಿಯುವೆನು ಎಂಬ ಉದ್ಯೋಗವು ಯತಮಾನತ್ವ2)ತನ್ನ ಚಿತ್ತದPಲ್ಲಿ ಹಿಂದಿನಿಂದಲೂ ಇದ್ದುಕೊಂಡಿರುವ  ದೋಷಗಳ ನಡುವೆ  ವಿವೇಕವನ್ನು ಅಭ್ಯಾಸ ಮಾಡುವುದರ ಮೂಲಕ ,'ಇವು ಪಕ್ವವಾಗಿವೆ,ಇವು ಇನ್ನೂ ಉಳಿದುಕೊಂಡಿವೆ'  ಎಂದು  ಬೇಪ೯ಡಿಸುವುದು ವ್ಯತಿರೇಕ.3)ದೃಷ್ಟ iತ್ತು ಅನುಶ್ರವಿಕ  ವಿಷಯಗಳಲ್ಲಿ ಪ್ರವೃತ್ತಿಯು ದುಃಖರೂಪವಾದದ್ದು  ಎಂದು ಅರಿಯುವುದರ ಮೂಲಕ ಪ್ರವೃತ್ತಿಯನ್ನು ಪರಿತ್ಯಜಿಸಿ  ಕೇವಲ ಔತ್ಸುಕ್ಯದಿಂದ  ಮನಸ್ಸನ್ನು ವಿತೃಷ್ಣಾವಸ್ಥೆಯಲ್ಲಿಟ್ಟಿರುವುದು ವಿಕೇಂದ್ರಿಯತ್ವ.4) ವಿತೃಷ್ಣತ್ವವೇ (ಆಶೆಯಿಲ್ಲದಿರುವುದೇ)  ವಶೀಕಾರ.(ಪುಟ 302)

104)ಪುರುಷನ ಸಾಕ್ಷಾತ್ಕಾರದಿಂದ  ಗುಣತ್ರಯದ  ಎಲ್ಲಾ ವ್ಯವಹಾರಗಳಲ್ಲೂ ಯಾವ ವಿತೃಷ್ಣೆಉಂಟಾಗುತ್ತದೆಯೋ  ಅದು ಪರಮ ವೈರಾಗ್ಯವೆನಿಸುವುದು.೯ಪುತ 303)

105)ತೀವ್ರವಾದ ಸಂವೇಗವನ್ನುಳ್ಳವರಿಗೆ  ಸಮಾಧಿ ಲಾಭವು ಸನ್ನಿಹಿತವಾಗಿರುತ್ತದೆ.(ಯೋ.ಸೂ.1.21)(ಪುಟ303)

116)ಮನೋನಾಶದಿಂದ ವಾಸನಾಕ್ಷಯವು ರಕ್ಷಿತವಾಗಲು ,ಜೀವನ್ಮುಕ್ತಿಯು  ಚೆನ್ನಾಗಿ ನೆಲೆಗೊಳ್ಳತ್ತದೆ ಮತ್ತು ಮನೋನಾಶದಿಂದ ವಿದೇಹಮುಕ್ತಿಯಾಗುತ್ತದೆಯೇ ಹೊರತುಜೀವನ್ಮುಕ್ತಿಯಲ್ಲ ಎಂದು ಶಂಕಿಸಬಾರದು.(ಪುಟ304)

107)ಆಸೆಗಳಿಗೆ ಆಧಾರವಾದ ಮನಸ್ಸು ನಷ್ಟವಾದಾಗ  ಮೈತ್ರಿಯೇ ಮೊದಲಾದ ಗುಣಗಳಿಂದ ಕೂಡಿದ ಸತ್ವವು ಖಂಡಿತವಾಗಿ  ಹುಟ್ಟುತ್ತದೆ.ಜೀವನ್ಮುಕ್ತನ ಅಂಥ ಮನಸ್ಸು  ಪುನಃ ಜನ್ಮರಹಿತವಾಗಿರುತ್ತದೆ.(ಪುಟ 306) 

108)ಜೀವನ್ಮುಕ್ತರು ಸುಖ ದುಃಖಗಳ ರಸವನ್ನನುಭವಿಸುವುದರಲ್ಲಿ ಮೋಹಗೊಳ್ಳುವುದಿಲ್ಲ.ಪ್ರಾಕೃತಪ್ರವೃತ್ತಿಯಿಂದ ಏನನ್ನಾದರೂ ಮಾಡುತ್ತಾರೆ ಅಥವಾ ಮಾಡುವುದಿಲ್ಲ.ಆದುದರಿಂದ  ಸರೂಪ ಮನೋನಾಶವು  ಜೀವನ್ಮುಕ್ತಿಗೆ ಸಾಧನವೆಂಬುದು  ಸಿದ್ಧವಾಯಿತು.(ಪುಟ 307)
                 
            ಇಲ್ಲಿಗೆ ಶ್ರೀಮದ್ವಿದ್ಯಾರಣ್ಯಮುನಿಗಳಿಂದ ವಿರಚಿತವಾದ  ಜೀವನ್ಮುಕ್ತಿವಿವೇಕವೆಂಬ ಗ್ರಂಥದಲ್ಲಿ ಮನೋನಾಶ ನಿರೂಪಣವೆಂಬ  ಮೂರನೆಯ ಪ್ರಕರಣವು ಮುಗುಯಿತು.(ಪುಟ 307)

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,



                    



No comments:

Post a Comment