೯)ಧ್ಯಾನದೀಪ
ಪ್ರಕರಣ:
೧)ಸಂವಾದ ಭ್ರಮೆಯಿಂದ ಪ್ರವತಿ೯ಸುವ ಮನುಷ್ಯನಿಗೆ ಇಷ್ಟವಸ್ತುವಿನ
ಲಾಭವಾಗುವಂತೆ ಬ್ರಹ್ಮ
ತತ್ತ್ವೋಪಾಸನೆಯಿಂದಲೂ ಮುಮುಕ್ಷುವಿಗೆ ಬ್ರಹ್ಮಭಾವ ಲಕ್ಷಣವಾದ ಮೋಕ್ಷವುಂಟಾಗುವುದು.
ಆದುದರಿಂದ ಉತ್ತರತಾಪನೀಯೋಪನಿಷತ್ತಿನಲ್ಲಿ ಉಪಾಸನೆಯನ್ನು
ಬಹುವಿಧವಾಗಿ ಹೇಳಿದೆ.(ಪುಟ ೩೧00
೨)ದೀಪದ ಬೆಳಕಿನ ಕಡೆಗೆ
ಓಡಿದವನಿಗೆ ಮಣಿಯು
ಸಿಕ್ಕುವುದಿಲ್ಲ.ಮಣಿಯ ಬೆಳಕಿನಕಡೆಗೆ ಓಡಿದವನಿಗೆ ಮಣಿಯು
ತಪ್ಪದೇ ಸಿಕ್ಕುತ್ತದೆ.(ಪುಟ ೩೧೧)
೩)ದೀಪದ ಬೆಳಕನ್ನು ನೋಡಿ ತಂದುಕೊಂಡ ಮಣಿಯೆಂಬ ಭ್ರಾಂತಿಯು ವಿಸಂವಾದಿ
ಭ್ರಮೆ ಎನಿಸುತ್ತದೆ.ಮಣಿಯ ಬೆಳಕನ್ನು ನೋಡಿ
ತಂತುಕೊಂಡ ಮಣಿ ಎಂಬ ಭ್ರಾಂತಿಯು ಸಂವಾದಿ
ಭ್ರಮೆ ಎನಿಸುತ್ತದೆ.ಏಕೆಂದರೆ ಮಣಿಯನ್ನು ದೊರಕಿಸಿಕೊಲಾರದು,ಏಕೆಂದ್ರೆ ಮಣಿಯನ್ನು ದೊರಕಿಸಿಕೊಡುತ್ತದೆ.)(ಪುಟ ೩೧೧)
೪)ಪ್ರತುಕ್ಷ,ಅನುಮಾನ, ಆಗಮ -ಈ
ಪ್ರಮಾಣಗಳಲ್ಲಿ ಹಿಂದೆ ಹೇಳಿದ ಸಂವಾದಿ ಭ್ರಮೆಗಳು ಲೆಕ್ಕವಿಲ್ಲದಷ್ಟಿವೆ.(ಪುಟ ೩೧೨)
೫)ಸಂವಾದಿಯು ತಾಮು
ಭ್ರಮವಾಗಿದ್ದರೂ ಜೇಗೆ ಹೇಗೆ
ನಿಜವಾದ ಫಲವನ್ನು ದೊರಕಿಸಿಕೊಡುವುದೊ
ಹಾಗೆಯೇ ಬ್ರಹ್ಮತ್ವದ ಜ್ಞಾನವೂ ಮುಕ್ತಿಯನ್ನು
ದೊರಕಿಸಿಕೊಡುವುದು(ಪುಟ ೩೧೩)
೬)ಉಪನಿಷತ್ತುಗಳಿಂದ ಅಖಂಡೈಕ ರಸ ಸ್ವರೂಪವಾದ ಬ್ರಹ್ಮತತ್ವವನ್ನು
ಪರೋಕ್ಷವಾಗಿ ತಿಳಿದುಕೊಂಡು 'ನಾನೇ ಈಬ್ರಹ್ಮವಾಗಿದೇನೆ' ಎಂದು
ಉಪಾಸನೆ ಮಾಡಬೇಕು.(ಪುಟ ೩೧೩)
೭)ಬುದ್ದಿ ಮೊದಲಾದುವುಗಳ ಸಾಕ್ಷಿಯಾದ ಪ್ರತ್ಯಗಾತ್ಮನ
ಸ್ವರೂಪವನ್ನು ಪ್ರತ್ಯಕ್ಷವಾಗಿ
ಅರಿಯದೆ -ವಿ ಷ್ಣುವೇ ಮೊದಲಾದ
ಮೂತಿ೯ಗಳಿರುವರೆಂದು ಶಾಸ್ತ್ರಗಳಿಂದ ತಿಳಿದಂತೆ -'ಬ್ರಹ್ಮವು ಇದೆ'ಎಂಬ ಸಾಮಾನ್ಯ
ಜ್ಞಾನವು ಈ ಉಪಾಸನೆಯಲ್ಲಿ ಪರೋಕ್ಷ
ಜ್ಞಾನವೆಂದು ಹೇಳಲ್ಪಡುವುದು.(ಪುಟ ೩೧೪)
೮)ವಿಷ್ಣುವಿಗೆ ನಾಲ್ಕು ತೋಳುಗಳೇ ಮೊದಲಾದ ವಿಶೇಷಾಕಾರವಿದೆಯೆಂದು
ಶಾಸ್ತ್ರದಿಂದ ತಿಳಿದಿದ್ದರೂ ಕಣ್ಣಿನಿಂದ
ವಿಷ್ಣುವಿನ ಮೂತಿ೯ಯನ್ನು ನೋಡದೇ
ಇರುವುದರಿಂದ ಉಪಾಸಕನು
ಪರೋಕ್ಷ ಜ್ಞಾನಿಯೇ ಆಗಿರುವನು.ಏಕೆಂದರೆ ಉಪಾಸನಾ ಕಾಲದಲ್ಲಿ ವಿಷ್ಣುವನ್ನು
ನೋಡಲಿಲ್ಲ.(ಪುಟ೩೧೪)
೯)ಶಾಸ್ತ್ರಗಳಲ್ಲಿ ತತ್ವಮಸ್ಯಾದಿ
-ಮಹಾವಾಕ್ಯಗಳು 'ನಮ್ಮೊಳಗಿರುವ ಆತ್ಮನೇ ಬ್ರಹ್ಮ'ಎಂದು
ಎಷ್ಟೇ ವಣಿ೯ಸಿದರೂ ತತ್-ತ್ವಂ ವಿಚಾರವಿಲ್ಲದವನಿಗೆ ಈ
ಪ್ರತ್ಯಗಾತ್ಮ ರೂಪವನ್ನು ಅರಿಯಲು ಕಷ್ಟವಾಗುವುದು.(ಪುಟ ೩೧೫)
೧0)ಪ್ರತ್ಯಕ್ಷವಾದ ದ್ವೈತ ಬುದ್ಧಿಯು ಪರೋಕ್ಷವಾದ
ಅದ್ವೈತ ಬುದ್ಧಿಗೆ ವಿರೋಧವಲ್ಲದುದರಿಂದ ಶಾಸ್ತ್ರ
ದೃಷ್ಟಿಯುಳ್ಳ,ಶ್ರದ್ಧಾಳುವಾದ ಮನುಷ್ಯನಿಗೆ
ಬ್ರಹ್ಮವು ಚೆನ್ನಾಗಿಯೇ ತಿಳಿಯುವುದು.(ಪುಟ ೩೧೬)
೧೧)'ಇದು ಮಡಕೆ''ಇದು
ಬಟ್ಟೆ'ಎಂಬ ನಾನಾ ವಿಕಾರಗಳನ್ನು
ಹೊಂದುತ್ತದೆ.ಬುದ್ಧಿಗೆ ಜಡತ್ವವೂ ಉಂಟಾಗಿರುವುದರಿಂದ
ಸ್ವತಃ ಸ್ಫೂತಿ೯ಯಿಲ್ಲ.ಆದುದರಿಂದ ಸವ೯ಪ್ರಕಾಶಕವಾದ ಸಾಕ್ಷಿಯು ಬೇಕಾಗಿರುವುದು.(ಪುಟ ೩೬೪)
೧೨)ಚಿದಾಭಾಸನಿಂದ ಕೂಡಿದ ಅಹಂಕಾರವು ರಾಜನಂತೆ;
ಶಬ್ದಾದಿ
ವಿಷಯಗಳು ಸಭಾಸದರಂತೆ ;
ಬುದ್ಧಿಯು
ನತ೯ಕಿಯಂತೆ ;
ಇಂದ್ರಿಯಗಳು
ತಾಳಮದ್ದಲೆಗಳನ್ನು ಹಿಡಿದಿರುವ ಜನರಂತೆ;
ಎಲ್ಲವನ್ನೂ
ಬೆಳಗುವ ಸಾಕ್ಷಿಯು ದೀಪದಂತೆ.(ಪುಟ ೩೬೪)
೧೩)ದೀಪವು ತನ್ನ ಸ್ಥಾನದಲ್ಲಿದ್ದುಕೊಂಡು
ಎಲ್ಲಿಗೂ ಹೋಗದೆ ಎಲ್ಲ ಕಡೆಗಳಲ್ಲೂ
ಹೇಗೆ ಬೆಳಗುತ್ತದೆಯೊ ಹಾಗೆಯೇ ಸ್ಥಿರಸ್ಥಾಯಿಯಾದ ಸಾಕ್ಷಿಯು
ಯಾವ ಬದಲಾವಣೆಯನ್ನು ಹೊಂದದೆ ದೇಹದ ಒಳಗೂ
ಹೊರಗೂ ಬೆಳಗುವನು.(೩೬೫)
೧೪)ಸಾಕ್ಷಿಗೆ ಒಳಗೆ ಹೊರಗೆ ಎಂಬ ಭೇದವಿಲ್ಲ.ಅದು
ದೇಹದ ಅಪೇಕ್ಷೆಯಿಂದ ಆದದ್ದು;ಶಬ್ದ ಸ್ಪಶಾ೯ದಿ
ವಿಷಯಗಳು ದೇಹದ
ಹೊರಗಿರುವುವು.ಚಿದಾಭಾಸನಿಂದ ಕೂಡಿದ ಅಹಂಕಾರವು ಒಳಗಿರುವುದು.(ಪುಟ ೩೬೫)
೧೫)ಒಳಗೆ ಹೊರಗೆ-ಎಂಬವು
ಬುದ್ಧಿಯ ಸ್ಥಳಗಳು.ಆದುದರಿಂದ ಸಾಕ್ಷಿಯು
ಹೊರಗೂ ಇಲ್ಲ,ಒಳಗೂ ಇಲ್ಲ;ಎಲ್ಲಿ ಬುದ್ಧಿ
ಇಂದ್ರಿಯ ಮೊದಲಾದವುಗಳ ವ್ಯಾಪಾರವು ಸಂಪೂಣ೯ವಾಗಿ ನಿಲ್ಲುತ್ತದೆಯೊ ಅಲ್ಲಿ ಸಾಕ್ಷಿಯು ಇರುತ್ತಾನೆ
ಮತ್ತು ಬೆಳಗುತ್ತಾನೆ.(ಪುಟ ೩೬೬)
೧೬)ಮಾತಿಗೂ ಬುದ್ಧಿಗೂ ನಿಲುಕದಂಥವನು
.ಅಂಥವನು ನನ್ನ ಅರಿವಿಗೆ ಹೇಗೆ
ಗೋಚರವಾದಾನು?-ಎನ್ನುವೆಯಾದರೆ ,ಹಾಗೆ ಅರಿವಿಗೆ ಗೋಚರನಾಗದಿರುವುದು ನಮಗೆ
ಸಮ್ಮತವೆ!ದ್ವೈತ ವ್ಯವಹಾರವೆಲ್ಲವೂ ಅಡಗಿದ
ಮೇಲೆ ಪರಮಾತ್ಮನಾದ ತಾನೊಬ್ಬನೆ ಉಳಿಯುವನು.(ಪುಟ ೩೬೭)
೧೭)ಆತ್ಮನು ತನ್ನ ಪ್ರಕಾಶದಿಂದಲೇ
ಬೆಳಗುವುದರಿಂದ ಬೇರೆ
ಪ್ರಮಾಣವು ಬೇಕಿಲ್ಲ.ಹಾಗೆಂದು ನಿಶ್ವಯಿಸುವುದಕ್ಕಾದರೂ
ಒಂದು ಪ್ರಮಾಣವು
ಬೇಕೆಂದರೆ ಗುರುವಿನ ಮೂಲಕ ಶ್ರುತಿಯನ್ನು
ಓದಿ ತಿಳಿ.(ಪುಟ ೩೬೮)
೧೮)ದ್ವೈತ ವ್ಯವಹಾರವನ್ನೆಲ್ಲ ಬಿಡಲು
ನಿನಗಾಗದಿದ್ದರೆ ಬುದ್ಧಿಯಲ್ಲಿ
ಶರಣುಹೊಂದು.ಬುದ್ದಿಗೆ ಸಾಕ್ಷಿಯಾದ ಪರಮಾತ್ಮನನ್ನು ಒಳಗೂ
ಹೊರಗೂ ಅನುಭವಿಸುವವನಾಗು.(ಪುಟ ೩೬೮)
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
೧0)ನಾಟಕದೀಪ ಪ್ರಕರಣ:
೧)ಸೃಷ್ಟಿಗಿಂತಲೂ ಮೊದಲು ಅದವಯವೂ
ಆನಂದ ಸ್ವರೂಪನೂ ಪರಿಪೂಣ೯ನೂ
ಆದ ಯಾವ
ಪರಮಾತ್ಮನಿರುವನೊ ಅವನೇ
ತನ್ನ ಮಾಯಾಶಕ್ತಿಯಿಂದ ಜಗದ್ರೂಪವನ್ನು
ತಾಳಿ,ಅದರಲ್ಲಿ ತಾನೇ ಜೀವರೂಪದಿಂದ
ಪ್ರವೇಶಿಸಿದನು.(ಪುಟ ೩೬0)(ತತ್
ಸೃಷ್ಟಾ ಅನುಪ್ರಾವಿಶತ್.ತೈ.ಉ.೨.೬)
೨)ಆ ಪರಮಾತ್ಮನೇ
ವಿಷ್ಣುವೇ ಮೊದಲಾದ ಉತ್ತಮ
ಶರೀರಗಳನ್ನು ಪ್ರವೇಶಿಸಿ ದೇವತೆಯಾಗುತ್ತಾನೆ.ಮನುಷ್ಯರೇ ಮೊದಲಾದವರ ಅಧಮ
ದೇಹಗಳನ್ನು ಪ್ರವೇಶಿಸಿ ಮತ್ಯ೯ಭಾವವನ್ನು
ಹೊಂದುತ್ತಾನೆ.(ಪುಟ ೩೬0)
೩)ಮನುಷ್ಯನು ಅನೇಕ ಜನ್ಮಗಳಲ್ಲಿ ಬ್ರಹ್ಮಸಮಪ೯ಣ
ರೂಪವಾದ ಒಳ್ಳೆಯ
ಕಮ೯ವನ್ನು ಮಾಡಿದ್ದರಿಂದ ಅವನು
ತನ್ನ ನಿಜಸ್ವರೂಪವನ್ನು ವಿಚಾರ ಮಾಡಲು ಬಯಸುತ್ತಾನೆ.ತನ್ನ ವಿಚಾರವನ್ನು ಮಾಡುವುದರಿಂದಲೆ ಮಾಯೆಯು
ನಾಶವಾಗಿ ಅದವಯಾನಂದ ಪೂಣ೯ವಾದ ತಾನೊಬ್ಬನೇ ಉಳಿಯುವನು.(ಶ್ರವಣ ಮನನ ನಿದಿಧ್ಯಾಸನ-ಇವುಗಳನ್ನು ಮಾಡಲು ಬಯಸುತ್ತಾನೆ.(ಪುಟ
೩೬೧)
೪)ಅದ್ವಯಾನಂದ ಸ್ವರೂಪನಾದ ಆತ್ಮನಿಗೆ ದ್ವೈತವೇ
ದುಃಖವೆಂದೂ ಬಂಧವೆಂದೂ
ಹೇಳಲ್ಪಟ್ಟಿದೆ.ತನ್ನ ಅದ್ವಯಾನಂದ ಸ್ವರೂಪದಲ್ಲಿರುದೇ
ಮುಕ್ತಿ.(ಪುಟ ೩೬೧)
೫)ಆತ್ಮತತ್ವವನ್ನು ವಿಚಾರಮಾಡದೆ ಇರುವುದರಿಂದ ಉಂಟಾದ
ಸಂಸಾರ ಬಂಧವು ಆತ್ಮತತ್ವ
ವಿಚಾರದಿಂದ ಹುಟ್ಟುದ ಜ್ಞಾನದಿಂದಲೇ
ತೊಲಗುತ್ತದೆ.ಆದುದರಿಂ ಜೀವಾತ್ನ ಮತ್ತು
ಪರಮಾತ್ಮನ ಸ್ವರೂಪವನ್ನು ಯಾವಾಗಲೂ ವಿವೇಚಿಸಬೇಕು.(ಪುಟ
೩೬೧)
೬)ಅಹಂಕಾರ ರೂಪವಾದ ಜೀವನನ್ನೂ
'ನಾನು''ಇದು'ಎಂಬ ಒಳಗಣ
ಮತ್ತು ಹೊರಗಣ ವೃತ್ತಿಗಳನ್ನೂ ಇಂದ್ರಿಯಗಳು
ಗ್ರಹಿಸುವ ಶಬ್ದಾದಿ ವಿಷಯಗಳನ್ನು ಯಾವ ಪರಮಾತ್ಮನು ಒಂದೇಸಲ ಚಿದ್ರೂಪದಿಂದ
ಬೆಳಗುತ್ತಾನೆಯೊ ಅವನನ್ನೇ ಸಾಕ್ಷಿಯೆಂದು
ವೇದಾಂತ ಶಾಸ್ತ್ರದಲ್ಲಿ ಹೇಳುತ್ತಾರೆ.(ಪುಟ ೩೬೩)
೭)ನೃತ್ಯಶಾಲೆಯಲ್ಲಿರುವ ರಂಗಸ್ಥಲದಲ್ಲಿ
ನಡೆಯುವುದನ್ನೆಲ್ಲ ಬೆಳಗುವಂತೆ 'ನಾನು ರೂಪವನ್ನು ನೋಡುತ್ತೇನೆ''ನಾನು ಗಂಧವನ್ನು ಮೂಸಿ
ನೋಡುತ್ತೇನೆ' 'ನಾನು ರಸವನ್ನು
ಸವಿಯುತ್ತೇನೆ''ನಾನು ಸ್ಪಶ೯ವನ್ನು ಸೋಂಕುತ್ತಲಿದ್ದೇನೆ'ಎಂದು ಸಾಕ್ಷಿಯು ಬೆಳಗುವನು.(ಪುಟ
೩೬೩)
೮)ನೃತ್ಯಶಾಲೆಯಲ್ಲಿರುವ ದೀಪವು ಅಲ್ಲಿರುವ
ರಾಜನನ್ನೂ ಸಭಾಸದರನ್ನೂ ನತ೯ಕಿಯನ್ನೂ
-ತನ್ನಲ್ಲಿ ಯಾವಬದಲಾವಣೆಯನ್ನು ಹೊಂದದೆ-ಬೆಳಗುತ್ತದೆ. ಮತ್ತೆ
ಅವರು ಯಾರೂ ಇಲ್ಲದಿದ್ದರೂ
ಅದು ತನ್ನಷ್ಟಕ್ಕೆ ತಾನೇ ಬೆಳಗುತ್ತದೆ(ಪುಟ
೩೬
೯)ಹಾಗೆಯೇ
ಈ ಶರೀರದಲ್ಲಿರುವ ಸಾಕ್ಷಿಯಾದ
ಕೂಟಸ್ಥನು ಚಿದಾಭಾಸನಿಂದ ಕೂಡಿದ ಅಹಂಕಾರವನ್ನೂ ಬುದ್ಧಿಯನ್ನೂ ಶಬ್ದಾದಿ
ವಿಷಯಗಳನ್ನೂ ಬೆಳಗುತ್ತಾನೆ.ತನಿನಿದ್ರೆ,ಮೂಛೆ೯,ಮಿದಲಾದವುಗಳಲ್ಲಿ ಅಹಂಕಾರವೆ ಮೊದಲಾದವುಗಳು
ಇಲ್ಲದಿದ್ದರೂ ಆತ್ಮನು
ತನ್ನಷ್ಟಕ್ಕೆ ತಾನೇ ಮೊದಲಿನಂತೆ ಬೆಳಗುತ್ತಾನೆ.(ಪುಟ ೩೬೩)
೧0)ಯಾವ ಬದಲಾವಣೆಯನ್ನೂ ಹೊಂದದ
ಸಾಕ್ಷಿಯು ಸ್ವಪ್ರಕಾಶ
ಚೈತನ್ಯ ರೂಪದಿಂದ ಯಾವಾಗಲೂ
ಬೆಳಗುತ್ತಿದ್ದರೇನೇ ಆ ಬೆಳಕಿನಿಂದ ಈ ಬುದ್ಧಿಯು ಬೆಳಗಲ್ಪಟ್ಟು
ಅನೇಕ ಪ್ರಕಾರವಾಗಿ ಕುಣಿಯುತ್ತದೆ.(ಪುಟ ೩೬೪)
೧೧)'ಇದು ಮಡಕೆ''ಇದು
ಬಟ್ಟೆ'ಎಂಬ ನಾನಾ ವಿಕಾರಗಳನ್ನು
ಹೊಂದುತ್ತದೆ.ಬುದ್ಧಿಗೆ ಜಡತ್ವವೂ ಉಂಟಾಗಿರುವುದರಿಂದ
ಸ್ವತಃ ಸ್ಫೂತಿ೯ಯಿಲ್ಲ.ಆದುದರಿಂದ ಸವ೯ಪ್ರಕಾಶಕವಾದ ಸಾಕ್ಷಿಯು ಬೇಕಾಗಿರುವುದು.(ಪುಟ ೩೬೪)
೧೨)ಚಿದಾಭಾಸನಿಂದ ಕೂಡಿದ ಅಹಂಕಾರವು ರಾಜನಂತೆ;
ಶಬ್ದಾದಿ
ವಿಷಯಗಳು ಸಭಾಸದರಂತೆ ;
ಬುದ್ಧಿಯು
ನತ೯ಕಿಯಂತೆ ;
ಇಂದ್ರಿಯಗಳು
ತಾಳಮದ್ದಲೆಗಳನ್ನು ಹಿಡಿದಿರುವ ಜನರಂತೆ;
ಎಲ್ಲವನ್ನೂ
ಬೆಳಗುವ ಸಾಕ್ಷಿಯು ದೀಪದಂತೆ.(ಪುಟ ೩೬೪)
೧೩)ದೀಪವು ತನ್ನ ಸ್ಥಾನದಲ್ಲಿದ್ದುಕೊಂಡು
ಎಲ್ಲಿಗೂ ಹೋಗದೆ ಎಲ್ಲ ಕಡೆಗಳಲ್ಲೂ
ಹೇಗೆ ಬೆಳಗುತ್ತದೆಯೊ ಹಾಗೆಯೇ ಸ್ಥಿರಸ್ಥಾಯಿಯಾದ ಸಾಕ್ಷಿಯು
ಯಾವ ಬದಲಾವಣೆಯನ್ನು ಹೊಂದದೆ ದೇಹದ ಒಳಗೂ
ಹೊರಗೂ ಬೆಳಗುವನು.(೩೬೫)
೧೪)ಸಾಕ್ಷಿಗೆ ಒಳಗೆ ಹೊರಗೆ ಎಂಬ ಭೇದವಿಲ್ಲ.ಅದು
ದೇಹದ ಅಪೇಕ್ಷೆಯಿಂದ ಆದದ್ದು;ಶಬ್ದ ಸ್ಪಶಾ೯ದಿ
ವಿಷಯಗಳು ದೇಹದ
ಹೊರಗಿರುವುವು.ಚಿದಾಭಾಸನಿಂದ ಕೂಡಿದ ಅಹಂಕಾರವು ಒಳಗಿರುವುದು.(ಪುಟ ೩೬೫)
೧೫)ಒಳಗೆ ಹೊರಗೆ-ಎಂಬವು
ಬುದ್ಧಿಯ ಸ್ಥಳಗಳು.ಆದುದರಿಂದ ಸಾಕ್ಷಿಯು
ಹೊರಗೂ ಇಲ್ಲ,ಒಳಗೂ ಇಲ್ಲ;ಎಲ್ಲಿ ಬುದ್ಧಿ
ಇಂದ್ರಿಯ ಮೊದಲಾದವುಗಳ ವ್ಯಾಪಾರವು ಸಂಪೂಣ೯ವಾಗಿ ನಿಲ್ಲುತ್ತದೆಯೊ ಅಲ್ಲಿ ಸಾಕ್ಷಿಯು ಇರುತ್ತಾನೆ
ಮತ್ತು ಬೆಳಗುತ್ತಾನೆ.(ಪುಟ ೩೬೬)
೧೬)ಮಾತಿಗೂ ಬುದ್ಧಿಗೂ ನಿಲುಕದಂಥವನು
.ಅಂಥವನು ನನ್ನ ಅರಿವಿಗೆ ಹೇಗೆ
ಗೋಚರವಾದಾನು?-ಎನ್ನುವೆಯಾದರೆ ,ಹಾಗೆ ಅರಿವಿಗೆ ಗೋಚರನಾಗದಿರುವುದು ನಮಗೆ
ಸಮ್ಮತವೆ!ದ್ವೈತ ವ್ಯವಹಾರವೆಲ್ಲವೂ ಅಡಗಿದ
ಮೇಲೆ ಪರಮಾತ್ಮನಾದ ತಾನೊಬ್ಬನೆ ಉಳಿಯುವನು.(ಪುಟ ೩೬೭)
೧೭)ಆತ್ಮನು ತನ್ನ ಪ್ರಕಾಶದಿಂದಲೇ
ಬೆಳಗುವುದರಿಂದ ಬೇರೆ
ಪ್ರಮಾಣವು ಬೇಕಿಲ್ಲ.ಹಾಗೆಂದು ನಿಶ್ವಯಿಸುವುದಕ್ಕಾದರೂ
ಒಂದು ಪ್ರಮಾಣವು
ಬೇಕೆಂದರೆ ಗುರುವಿನ ಮೂಲಕ ಶ್ರುತಿಯನ್ನು
ಓದಿ ತಿಳಿ.(ಪುಟ ೩೬೮)
೧೮)ದ್ವೈತ ವ್ಯವಹಾರವನ್ನೆಲ್ಲ ಬಿಡಲು
ನಿನಗಾಗದಿದ್ದರೆ ಬುದ್ಧಿಯಲ್ಲಿ
ಶರಣುಹೊಂದು.ಬುದ್ದಿಗೆ ಸಾಕ್ಷಿಯಾದ ಪರಮಾತ್ಮನನ್ನು ಒಳಗೂ
ಹೊರಗೂ ಅನುಭವಿಸುವವನಾಗು.(ಪುಟ ೩೬೮)
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
೧೧)ಬ್ರಹ್ಮಾನಂದದಲ್ಲಿ ಯೋಗಾನಂದ ಪ್ರಕರಣ:
೧)ಬ್ರಹ್ಮರೂಪವಾದ ಆನಂದವನ್ನು ಹೇಳುತ್ತೇವೆ.ಅದನ್ನು ತಿಳಿದುಕೊಂಡರೆ ಈಲೋಕದ
ಮತ್ತು ಪರಲೋಕದ ಸಂಬಂಧವಾದ ಅನಥ೯
ಸಮೂಹವನ್ನು ನಿಶೇಷವಾಗಿ
ಕಳೆದುಕೊಂಡು ಮುಮುಕ್ಷುವು
ಸುಖರೂಪವದ ಬ್ರಹ್ಮವೇ ಆಗುವನು.(ಪುಟ ೩೬೯)
೨)ಬ್ರಹ್ಮಜ್ಞಾನದಿಂದ ಅನಿಷ್ಟದ
ನಿವೃತ್ತಿ ಮತ್ತು
ಇಷ್ಟದ ಪ್ರಾಪ್ತಿ ಆಗುತ್ತದೆ.(ಪುಟ ೩೬೯)
೩)ಬ್ರಹ್ಮವನ್ನು ಅರಿತವನು ಬ್ರಹ್ಮವನ್ನು
ಹೊಂದುತ್ತಾನೆ.ಆತ್ಮನನ್ನು ಅರಿತವನು ಶೋಕವನ್ನು
ದಾಟುತ್ತಾನೆ.ಬ್ರಹ್ಮವು ರಸವು.ಆನಂದ ರಸವನ್ನು
ಹೊಂದಿ ಆನಂದಿಯಾಗುತ್ತಾನೆ.ಇದಲ್ಲದೆ ಬೇರೆ ದಾರಿಯಿಲ್ಲ.(ಪುಟ ೩೬೯)
೪)ಯಾವಾಗ ತನ್ನಲ್ಲಿ ಪ್ರತಿಷ್ಠೆಯನ್ನು
ಹೊಂದುತ್ತಾನೆಯೊ ಆಗ
ಅಭಯವನ್ನು ಪಡೆಯುತ್ತಾನೆ.ಬ್ರಹ್ಮದಲ್ಲಿ ಸ್ವಲ್ಪ ಭೇದವನ್ನುಂಟು ಮಾಡಿದರೂ ಅವನಿಗೆ
ಭಯವುಂಟಾಗುತ್ತದೆ-ಎಂದು ಶ್ರುತಿಯು ಹೇಳುತ್ತದೆ.(ಪುಟ ೩೬೯)
೫)ಬ್ರಹ್ಮಾನಂದವನ್ನು ಅನುಭವಿಸಿದ
ಮನುಷ್ಯನು ಯಾವುದರಿಂದಲೂ ಹೆದರುವುದಿಲ್ಲ. ಪುಣ್ಯ ಪಾಪ ರೂಪವಾದ
ಕಮ೯ವೆಂಬ ಅಗ್ನಿಯಿಂದ ಉಂಟಾಗತಕ್ಕ ಚಿಂತೆಯು
ಇವನನ್ನು ತಪಿಸುವುದಿಲ್ಲ.(ಪುಟ ೩೭0)
೬)ಬ್ರಹ್ಮವೇ ನಾನು ಎಂಬ ಜ್ಞಾನವಿಲ್ಲದಿದ್ದರೆ
ವಾಯು ಮೊದಲಾದ ದೇವತೆಗಳಿಗೂ ಭಯವ್ಯ ತಪ್ಪಿದ್ದಲ್ಲವೆಂದು ಹೇಳುತ್ತಾರೆ.(ಪುಟ ೩೭0)
೭)ಯಾವನು ಹೀಗೆ ಅರಿತುಕೊಂಡಿರುವನೊ ಅವನು
ಪುಣ್ಯರೂಪವಾದ ಮತ್ತು
ಪಾಪ ರೂಪವಾದ ಕಮ೯ಗಳೆರಡನ್ನೂ
ಬಿಟ್ಟು ಯಾವಾಗಲೂ ಆತ್ಮನನ್ನು ನೆನೆಯುತ್ತಾನೆ.ಅವನು ತಾನು ಮಾಡುವ
ಕಮ೯ವನ್ನೆಲ್ಲ ತನ್ನ
ಆತ್ಮ ರೂಪದಿಂದಲೇ ನೋಡುತ್ತಾನೆ.(ಪುಟ ೩೭೧)
೮)ಹಿರಣ್ಯಗಭ೯ನ ಪದವಿಯೂ ಕೂಡ ಯಾವನಿಗೆ
ನಿಕೃಷ್ಟವಾಗಿದೆಯೊ ಅಂಥ
ಪರಮಾತ್ಮನ ಸಾಕ್ಷಾತ್ಕಾರವಾದಾಗ ಬುದ್ಧಿಗೂ
ಆತ್ಮನಿಗೂ ಬಿದ್ದಿರುವ
ಗಂಟು ಕಳಚಿಕೊಂಡು ಹೋಗುವುದು.ಸಂಶಯಗಳೆಲ್ಲ ಕತ್ತರಿಸಿ ಹೋಗುವುವು.ಪುಣ್ಯಪಾಪರೂಪವಾದ ಕಮ೯ಗಳೆಲ್ಲ ನಾಶವಾಗುವುವು.(ಪುಟ ೩೭೧)
೯)ಕೇವಲ
ಜ್ಞಾನದಿಂದಲೇ ಮೋಕ್ಷವಾಗುವುದು ಕಮ೯ದಿಂದಲ್ಲ(ಪುಟ ೩೭೧)
೧0)ಅವನನ್ನೇ ತನ್ನ ಆತ್ಮನೆಂದು
ಅರಿತುಕೊಂಡವನು ಮೃತುವನ್ನು ದಾಟುತ್ತಾನೆ. ಬೇರೆ ದಾರಿಯಿಲ್ಲ.ದೇವನನ್ನು
ಅರಿತುಕೊಂಡಾಗ ಕಾಮ ಕ್ರೋಧಗಳೇ ಮೊದಲಾದ
ಸವ೯ಪಾಪಗಳೂ ನಾಶವಾಗುತ್ತವೆ.ಅವಿದ್ಯೆಯೇ ಮೊದಲಾದ ಕ್ಲೇಶಗಳೆಲ್ಲ
ನಾಶವಾಗುವುದರಿಂದ ಅವನು
ಮತ್ತೆ ಹುಟ್ಟುವುದಿಲ್ಲ.(ಪುಟ ೩೭೧)
೧೧)'ಯಾವುದರಿಂದ ಈ ಪ್ರಾಣಿಗಳು ಹುಟ್ಟುವುವೊ,ಯಾವುದರಲ್ಲಿ ಇರುವುವೊ,ಯಾವುದರಲ್ಲಿ ಅಡಗುವುವೊ
ಅದನ್ನು ತಿಳಿದುಕೊ;ಅದು ಬ್ರಹ್ಮ'(ಯತೋ
ವಾ ಇಮಾನ್ ಭೂತಾನಿ ಜಾಯಂತೇ
|ಯೇನ ಜಾತಾನಿ ಜೀವಂತಿ|ಯತ್
ಪ್ರಯತ್ಯಭಿ ಸಂವಿಶಂತಿ|ತದ್ವಿಜಿಜ್ಞಾಸಸ್ವ|ತದ್ಬ್ರಹ್ಮೇತಿ(ತೈ.ಉ.೩.೧.)
೧೨)ಆನಂದದಿಂದಲೇ ಪ್ರಾಣಿಗಳು ಹುಟ್ಟುತ್ತವೆ;ಆನಂದದಿಂದಲೇ ಪ್ರಾಣಿಗಳು ಬದುಕುವುತ್ತವೆ;ಆನಂದದಲ್ಲಿಯೇ ಅವುಗಳು ಅಡಗುತ್ತವೆ ಆನಂದವೇ
ಬ್ರಹ್ಮವೆಂಬ ವಿಷಯದಲ್ಲಿ ಸಂದೇಹವಿಲ್ಲ.(ಪುಟ ೩೭೩)
೧೩)ಆಕಾಶಾದಿ ಭೂತಗಳೂ ಅವುಗಳ
ಕಾಯ೯ಗಳಾದ ಪ್ರಾಣಿಗಳೂ ಹುಟ್ಟುವುದಕ್ಕೆ
ಮೊದಲು ಜ್ಞಾತೃ-ಜ್ಞಾನ-ಜ್ಞೇಯವೆಂಬದ್ವೈತ ಪ್ರಪಂಚವು ಇಲ್ಲದಿರುವುದರಿಂದ
ತ್ರಿವಿಧ ಪರಿಚ್ಛೇದ ರಹಿತವಾದ ಭೂಮವೊಂದೇ ಇತ್ತು.ಇದು ಸವ೯ ವೇದಾಂತ
ಪ್ರಸಿದ್ಧವು(ಪುಟ ೩೭೪)
೧೪)ಪರಮಾತ್ಮನಿಂದ ಹುಟ್ಟಿ ಬುದ್ದಿಯೆಂಬ
ಉಪಾಧಿಯುಳ್ಳ ಜೀವನೇ
ಎಲ್ಲವನ್ನೂ ಅರಿಯುವವನು.ಜ್ಞೇಯ ವಸ್ತುಗಳನ್ನು ಅರಿಯುವುದಕ್ಕೆ ಸಾಧನವಾದ
ಮನೋಮಯವೆಂಬ ಹೆಸರುಳ್ಳ ಚೈತನ್ಯವೇ
ಜ್ಞಾನವು. ಪ್ರಸಿದ್ಧವಾದ ಶಬ್ದ ಸ್ಪಶಾ೯ದಿ ವಿಷಯಗಳೇ ಜ್ಞೇಯವೆನಿಸುವುವು.ಉತ್ಪತ್ತಿಗೆ
ಮೊದಲು ಈ ಮೂರೂ ಇರಲಿಲ್ಲ.(ಪುಟ ೩೭೪)
೧೫) ಜ್ಞಾತೃ-ಜ್ಞೇಯ-ಜ್ಞಾನಗಳಿಲ್ಲದಿರುವಾಗ ಎರಡನೆಯದಿಲ್ಲದ
ಪೂಣ೯ನಾದ ಆತ್ಮನೇ ಅನುಭವದಲ್ಲಿ
ತೋರುವನು.ನಿವ್೯ಕಲ್ಪ ಸಮಾಧಿಯಲ್ಲಿಯೂ ಗಾಢನಿದ್ರೆಯಲ್ಲಿಯೂ ಮೂಛೆ೯ಯಲ್ಲಿಯೂ
ಪೂಣ೯ನಾದ ಆತ್ಮನೇ ಅನುಭವಿಸಲ್ಪಡುವವನು.ಹೀಗೆ
ಸೃಷ್ಟಿಗಿಂತ ಮೊದಲು ಅಪರಿಚ್ಛಿನ್ನವಾದ ಬ್ರಹ್ಮವೊಂದೇ
ಇತ್ತು.(ಪುಟ ೩೭೪)
೧೬)ಯಾವುದು ಭೂಮವೊ ಅದು
ಸುಖ.ಜ್ಞಾತೃ-ಜ್ಞಾನ-ಜ್ಞೇಯ
ಎಂಬ ಭೇದವುಳ್ಳ ಅಲ್ಪದಲ್ಲಿ ಸುಖವಿಲ್ಲ-ಎಂದು ಭಗವಂತನಾದ
ಸನತ್ಕುಮಾರನು ಅತ್ಯಂತ
ದುಃಖಿತನಾಗಿದ್ದ ನಾರದನಿಗೆ
ಉಪದೇಶಿಸಿದನು.(ಪುಟ ೩೭೫)
೧೭)ನಾರದನು ಪುರಾಣಗಳನ್ನೂ
ವೇದಗಳನ್ನೂ ಇತರ ಶಾಸ್ತ್ರಗಳನ್ನೂ
ಅರಿತಿದ್ದರೂ ಆತ್ಮನನ್ನು
ಅರಿಯದಿದ್ದರಿಂದ ಅತ್ಯಂತ ಶೋಕವನ್ನು ಪಡೆದನು.ಈ ಆಖ್ಯಾಯಿಕೆಯು ಛಾಂದೋಗ್ಯ
ಉಪನಿಷತ್ತಿನಲ್ಲಿ ಪ್ರಸಿದ್ಧವಾಗಿದೆ. ಸನತ್ಕುಮಾರನ ಉಪದೇಶವು ಭೂಮವಿದ್ಯೆಯೆಂದು
ಪ್ರಸಿದ್ಧವಾಗಿದೆ.(ಪುಟ ೩೭೫)
೧೮)'ಈ ಸಂಸಾರದ ಪಾರವು ಆನಂದವೇ'ಎಂದು
ಸನತ್ಕುಮಾರನು ನಾರದನಿಗೆ ಉಪದೇಶಿಸಿದನು.(ಪುಟ ೩೭೬)
೧೯)ಅದ್ವೈತದಲ್ಲಿ
ಸುಖವಿಲ್ಲದೆ ಹೋಗಲಿ.ಆದರೆ ಸದ್ವೈವೇ
ಸುಖವಾಗಿದೆ;ಅದ್ವೈತವೇ ಸುಖವೆನ್ನುವುದಕ್ಕೆ ಪ್ರಮಾಣವೇನು?-ಎನ್ನುವೆಯಾದರೆ ತನ್ನ
ಬೆಳಕಿನಿಂದಲೇ ಬೆಳಗುವ ವಸ್ತುವಿಗೆ ಪ್ರಮಾಣವೇ ಬೇಕಾಗಿಲ್ಲ.(ಪುಟ ೩೭೬)
೨0)ಅದ್ವೈತವು ತನ್ನ ಬೆಳಕಿನಿಂದ ತಾನೇ
ಬೆಳಗುವುದೆಂಬುದಕ್ಕೆ ನಿನ್ನ ಮಾತೇ ಪ್ರಮಾಣ;ಏಕೆಂದರೆ ನೀನು ಯಾವ
ಪ್ರಮಾಣವನ್ನೂ ಬಯಸದೆ ಅದ್ವೈತವನ್ನು ಅಂಗೀಕರಿಸಿ
ಅದರಲ್ಲಿ ಸುಖವಿಲ್ಲವೆಂದು ಹೇಳುತ್ತೀಯೆ.(ಆದುದರಿಂದ ಅದ್ವೈತವು ಸ್ವಪ್ರಕಾಶ)(ಪುಟ ೩೭೭) ü
೨೧)ಮೊದಲು ಅದ್ವೈತವಿತ್ತೊ
ಅಥವಾ ದ್ವೈತವಿತ್ತೊ? ಅಥವಾ ಇವೆರಡಕ್ಕಿಂತ
ಬೇರೆಯಾದದ್ದು ಏಮಾದರೂ ಇತ್ತೊ. ಇವೆರಡಕ್ಕಿಂತ
ಬೇರೆಯಾದದ್ದನ್ನು ಯಾರೂ ನೋಡಿಲ್ಲ.ವಸ್ತುಗಳು
ಹುಟ್ಟುವುದಕ್ಕೆ ಮೊದಲು ದ್ವೈತವಿರಲಾರದು.ಆದುದರಿಂದ
ಅದ್ವೈತವೆಂಬ ಮೊದಲನೆಯ ಪಕ್ಷವೇ ಉಳಿಯುತ್ತದೆ.(ಪುಟ ೩೭೭)
೨೨)ದೃಷ್ಟಾಂತ ರಹಿತವಾದ ಯುಕ್ತಿಯು
ಏನನ್ನೂ ಸಾಧಿಸಲಾರದು.(ಪುಟ ೩೭೮)
೨೩)ತನ್ನ ಗಾಢನಿದ್ರೆಯನ್ನೇ ಅರಿಯದವನಿಗೆ ಮತ್ತೊಬ್ಬನ
ಗಾಢನಿದ್ರೆಯ ಜ್ಞಾನವು ಉಂಟಾಗುತ್ತೆ ಎಂದು
ಹೇಳುವುದು ಎಲ್ಲಿಯ ಮಾತು?(ಪುಟ
೩೭೮)
೨೪)ಒಬ್ಬನು ಗಾಢನಿದ್ರೆಯಲ್ಲಿದ್ದಾನೆ;ಏಕೆಂದರೆ ಪ್ರಾಣಾಯಾಮವಿದ್ದರೂ ಅವನಲ್ಲಿ
ಯಾವ ಚೇಷ್ಟೆಯೂ ಕಂಡು ಬರುತ್ತಿಲ್ಲ;'ನಾನು
ಹೇಗೋ ಹಾಗೆ'ಎನ್ನುವೆಯಾದರೆ
ಉದಾಹರಿಸುತ್ತಿರುವ ನಿನ್ನ ಗಾಢನಿದ್ರೆಗೆ
ಸ್ವಯಂಪ್ರಕಾಶತ್ವವು ಸುಷುಪ್ತಿ ದೃಷ್ಟಾಂತ ಸಾಮಥ್ಯ೯ದಿದಲೇ ಆಗುವುದು.(ಪುತ ೩೭೯)
೨೫)ತನ್ನ ಗಾಢನಿದ್ರೆಗೆ ಸ್ವಯಂಪ್ರಕಾಶತ್ವವಿಲ್ಲದಿದ್ದರೆ'ನನಗೆ ಚೆನ್ನಾಗಿ ನಿದ್ದೆಯಾಯಿತು'ಎಂದು ಹೇಳಲು ಆಗುತ್ತಲೇ
ಇರಲಿಲ್ಲ.ಆದುದರಿಂದ ತನ್ನ ಗಾಢನಿದ್ರೆಯು
ತನ್ನ ಬೆಳಕಿನಿಂದಲೇ ಪ್ರಕಾಶಿಸುತ್ತದೆ ಎಂದು ಒಪ್ಪಿಕೊಂಡಂತೆಯೇ ಆಯಿತು.
೨೬) ನಿನ್ನ ಗಾಢನಿದ್ರೆಯಲ್ಲಿ ಅದನ್ನು
ಗ್ರಹಿಸತಕ್ಕ ಇಂದ್ರಿಯವಿಲ್ಲ;ನಮ್ಮಿಬ್ಬರಿಗೂ ಸಮ್ಮತವಾದ ದೃಷ್ಟಾಂತವೂ ಇಲ್ಲ.ಹೀಗಿದ್ದರೂ ನೀನು
ಗಾಢಮಿದ್ದೆಯನ್ನು ಅಂಗೀಕರಿಸಿರುವೆ. ಜ್ಞಾನದ ಸಾಧನೆಗಳಿಲ್ಲದೆ ಬೆಳಗುವುದೆಂಬುದು
ಯಾವುದಿದೆಯೊ ಅದೆ
ಸುಷುಪ್ತಿಯಲ್ಲಿ ಸ್ವಯಂಪ್ರಕಾಶವೆಂದು
ಅರಿತುಕೊ.(ಪುಟ ೩೭೯)
ü
೨೭)ಅದ್ವೈತ ಭವವೆಂಬುದೂ ಸ್ವಯಂಪ್ರಕಾಶತ್ವವೆಂಬುದೂ ಹಾಗಿರಲಿ;ಗಾಢನಿದ್ರೆಯಲ್ಲಿ ಸುಖವು
ಹೇಗಿರುವುದು?ಹೇಳು ಎನ್ನುವೆಯಾದರೆ 'ಗಾಢನಿದ್ರೆಯಲ್ಲಿ
ದುಃಖವಿಲ್ಲದಿರುವುದರಿಂದ ಹಾಗೆಯೇ ಉಳಿಯುತ್ತದೆ.'(ಪುಟ
೩೮0)
೨೮)ಗಾಢನಿದ್ರೆಯಲ್ಲಿ ಕುರುಡನು;ಗಾಯವನ್ನು ಹೊಂದಿದವನು
ಗಾಯವಿಲ್ಲದವನಾಗುವನು;ರೋಗವುಳ್ಳವನು ರೋಗವಿಲ್ಲದವನಾಗುವನು.'ಎಂದು ಶ್ರುತಿಯು ಹೇಳುವುದು.
ಇದು ಎಲ್ಲರಿಗೂ ತಿಳಿದಿದೆ.(ಪುಟ ೩೮0)
೨೯)ಸುಖಕ್ಕೆ
ವಿರೋಧಿಯಾದ ದುಃಖವಿಲ್ಲದಿರುವುದರಿಂದ ಗಾಢನಿದ್ದೆಯಲ್ಲಿ ಸುಖವು
ಯಾವ ಬಾಧೆಯೂ ಇಲ್ಲದೆ ಅಂಗೀಕರಿಸಲ್ಪಡಲಿ(ಪುಟ ೩೮0)
೩0)ಗಾಢನಿದ್ರೆಯಲ್ಲಿ ಆನಂದವಿಲ್ಲದಿದ್ದರೆ ಮನುಷ್ಯರು
ಮಹಾ ಪ್ರಯಾಸದಿಂದ ಮೆತ್ತಗಿರುವ
ಹಾಸಿಗೆಮದಿಂಬು ಮೊದಲಾದ ಸಾಧನಗಳನ್ನು ಚೆನ್ನಾಗಿ ನಿದ್ರೆ ಬರಲೆಂದು ಏಕೆ ಗಳಿಸುವರು?(ಪುಟ
೩೮೧)
೩೧)ನಿದ್ರೆ ಬರುವುದಕ್ಕೆ
ಮೊದಲು ಜೀವನು ಹಾಸಿಗೆ
ಮೊದಲಾದ ಸುಖಕ್ಕೆ ಅಭಿಮುಖವಾದ
ಬುದ್ಧಿಯುಳ್ಳವನಾಗಿ ಅನಂತರ
ತನ್ನ ನಿರತಿಶಯವಾದ ಸ್ವರೂಪದ
ಸುಖದಲ್ಲಿ ಮುಳುಗುತ್ತಾನೆ.(ಪುಟ ೩೮೨)
೩೨)ಆ ತ್ರಿಪುಟೀ ದಶ೯ನದಿಂದ ಉಂಟಾದ
ಬಳಲಿಕೆಯನ್ನು ಕಳೆದುಕೊಳ್ಳುವುದಕ್ಕಾಗಿ ಜೀವನು ಆನಂದ
ರೂಪವಾದ ಬ್ರಹ್ಮದಕಡೆಗೆ ಓಡುತ್ತಾನೆ. ಆ ಬ್ರಹ್ಮದೊಡನೆ ಒಂದಾಗಿ ತಾನು
ಕೂಡ ಆ ಸುಷುಪ್ತಿಯಲ್ಲಿರುವ
ಬ್ರಹ್ಮಾನಂದ ಸ್ವರೂಪವೇ ಆಗುತ್ತಾನೆ.(ಪುಟ ೩೮೩)
೩೩)ಸುಷುಪ್ತಿ ಸಂಬಂಧವಾದ ಬ್ರಹ್ಮಾನಂದದ ವಿಷಯದಲ್ಲಿ ಗಿಡುಗ,ಹುಡುಗ,ಮಹಾರಾಜ,ಮಹಾಬ್ರಾಹ್ಮಣ-ಎಂಬ ಐದು ದೃಷ್ಟಾಂತಗಳನ್ನು ಶ್ರುತಿಯು ಕೊಡುತ್ತದೆ.(ಪುಟ ೩೮೪)
೩೪) ಮನಸ್ಸೆಂಬ ಉಪಾಧಿಯಿಂದ ಕೂಡಿದ ಜೀವನು ಬ್ರಹ್ಮಾನಂದ ಪ್ರಾಪ್ತಿಯ ಅಭಿಲಾಶೆಯುಳ್ಳವನಾಗಿ ಗಾಢನಿದ್ರೆಗಾಗಿ
ಹೃದಯಾಕಾಶಕ್ಕೆ ಓಡಿ ಬರುವನು(ಪುಟ
೩೮೫)
೩೫) ಶಿಶುವು ತನಗೆ ಬೇಕಾದಷ್ಟು
ಸ್ತನ್ಯವನ್ನು ಕುಡಿದು ತಾಯಿ
ಸಿದ್ಧಗೊಳಿಸಿದ ಮೃದುವಾದ ಹಾಸಿಗೆಯ ಮೇಲೆ ಮಲಗಿ,ತನಗೆ ರಾಗ ದ್ವೇಡ
ಮೊದಲಾವುಗಳು ಇಲ್ಲದಿರುವುದರಿಂದ ನಗುತ್ತ
ಆನಂದದ ಮೂತಿ೯ಯಂತೆ ಇರುತ್ತದೆ.(ಪುಟ ೩೮೫)
೩೬) ಚಕ್ರವತಿ೯ಯಾದ ಮಹಾರಾಜನು ಸಮಸ್ತ
ಭೋಗಗಳಿಂದ ತುಷ್ಟನಾಗಿ
,ಮನುಷ್ಯನ ಆನಂದದ ತುಟ್ಟತಿದಿಯ ಮೇಲೇರಿ ಆನಂದವೇ
ಮೂತ೯ಗೊಂಡಂತೆ ಇರುತಾನೆ.(ಪುಟ ೩೮೫)
೩೭)ಬ್ರಹ್ಮವನ್ನು ಅರಿತುಕೊಂಡ ಮಹಾ ಬ್ರಾಹ್ಮಣನು ಕೃತಕೃತ್ಯತ್ವದ ಲಕ್ಷಣವುಳ್ಳ ವಿದ್ಯಾನಂದದ
ತುಟ್ಟತುದಿಯನ್ನು (ಎಂದರೆ
ಜೀವನ್ಮುಕ್ತಿತ್ವವನ್ನು ) ಏರಿ ಪರಮಾನಂದ ಸ್ವರೂಪನಾಗಿರುತ್ತಾನೆ.(ಪುಟ ೩೮೫)
೩೮)ಲೋಕದಲ್ಲಿ ಮೂರುಜನರು ಸುಖಿಗಳೆಂದು ಪ್ರಸಿದ್ಧರಾಗಿದ್ದಾರೆ.ಅವಿವೇಕಿಗಳ ಮಧ್ಯದಲ್ಲಿ;ವಿವೇಕಿಗಳ ಮಧ್ಯದಲ್ಲಿ ಮಹಾರಾಜ
ಮತ್ತು ಅತಿವಿವೇಕಿಗಳ ಬ್ರಹ್ಮಾನಂದವನ್ನು
ಸಾಕ್ಷಾತ್ಕರಿಸಿರುವ ಮಹಾ
ಬ್ರಾಹ್ಮಣ;ಇವರನ್ನು ಬಿಟ್ಟರೆ ಉಳಿದವರೆಲ್ಲ ದುಖಿಗಳೇ ಹೊರತು ಸುಖಿಗಳಲ್ಲ.(ಪುಟ೩೮೬)
೩೯)ಬಾಲಕನೂ
ಮಹಾರಾಜನೂ ಮಹಾಬ್ರಾಹ್ಮಣನೂ ಆನಂದವನ್ನು ಅನುಭವಿಸುತ್ತಿರುವಂತೆ-ಬಾಹ್ಯವಿಷಯಗಳನ್ನಾಗಲಿ ಅಂತರಿಕ ವಿಷಯವನ್ನಾಗಲಿ ಅರಿಯನು.(ಪುಟ ೩೮೬)
೪0)ಗಾಢನಿದ್ರೆಯಲ್ಲಿ ಬ್ರಹ್ಮವಿರುವುದೇ ಹೊರತು ಜೀವನಲ್ಲ(ಪುಟ೩೮೭)
೪೧)ತಮಸ್ಸಿನಿಂದ ಆವರಿಸಲ್ಪಟ್ಟ ಜೀವನು ಸುಖರೂಪವಾದ ಬ್ರಹ್ಮವನ್ನು
ಹೊಂದುತ್ತಾನೆ.-ಎಂದು ಅಥವ೯ ವೇದಕ್ಕೆ
ಸೇರಿದ ಕೈವಲ್ಯ
ಶ್ರುತಿಯು ಹೇಳುತ್ತದೆ.(ಪುಟ ೩೮೮)
೪೨)'ಏನನ್ನೂ ಅರಿಯೆನು' ಎಂಬ
ಅಜ್ಞಾನದಲ್ಲಿ ವಿಜ್ಞಾನಮಯ
ಕೋಶವೂ ಮನೋಮಯಕೋಶವೂ
ಲಯವಾಗುವುದರಿಂದ ಆ
ಕೋಶಗಳ ಲಯಾವಸ್ಥೆಗೆ ನಿದ್ರೆಯದೆಂದು
ಹೆಸರು.ಜ್ಞಾನಿಗಳು ಆ ನಿದ್ರೆಯನ್ನೇ
ಅಜ್ಞಾನವೆಂದು ಹೇಳುತ್ತಾರೆ.(ಪುಟ ೩೮೯)
೪೩)ಗಾಢನಿದ್ರೆಯಲ್ಲಿ ಆತ್ಮನು
ಆನಂದಮಯರೂಪದಿಂದ ಅನುಭವಿಸುವವನಾದರೆ ಎಚ್ಚರದಲ್ಲಿ
ವಿಜ್ಞಾನಮಯ ರೂಪದಿಂದ ಸ್ಮರಿಸಿಕೊಳ್ಳುವವನಾಗುತ್ತಾನೆ.(ಪುಟ ೩೮೯)
೪೪)ಗಾಢನಿದ್ರೆಯಲ್ಲಿ ಆನಂದಮಯನು ಅನುಭವಿಸುವನೆಂದೂ ಬ್ರಹ್ಮಾನಂದವು
ಅನುಭವಿಸತಕ್ಕದ್ದೆಂದೂ-ಮಾಂಡೂಕ್ಯ ಮತ್ತು ತಾಪನೀಯ ಉಪನಿಷತ್ತಿನಲ್ಲಿ
ಹೇಳೆದೆ.(ಪುಟ ೩೯೧)
೪೫)ಹೀಗೆ ಜೀವನು ಬ್ರಹ್ಮಾನಂದವನ್ನು ಅನುಭವಿಸಿದರೂ ಪುಣ್ಯ
ಪಾಪರೂಪವಾದ ಕಮ೯ದಿಂದ
ಪ್ರೇರಿತನಾಗಿ ಬ್ರಹ್ಮಾನಂದವನ್ನು
ತೊರೆದು ಎಚ್ಚರಕ್ಕೆ
ಬರುತ್ತಾನೆ.(ಪುಟ ೩೯೨)
೪೬)ತನ್ನ ಸ್ವರೂಪವಾದ ಈ
ಈ ಆನಂದವನ್ನು ನ್ರಹ್ಮವೆಂದು
ಅರಿತರೆ ಅಷ್ಟುಮಾತ್ರದಿಂದಲೇ ಅವರು ಕೃತಾಥ೯ರಾಗುತ್ತಾರೆ-ಎಂಬುದು
ನಿಶ್ವಯ.ಆದರೆ ಅತ್ಯಂತ ಗಂಭೀರವಾದ
ಬ್ರಹ್ಮವನ್ನು ಗುರು-ಶಾಸ್ತ್ರಗಳ ಸಹಾಯದ ಹೊರತು ಯಾವನು
ಅರಿತುಕೊಳ್ಳುತ್ತಾನೆ.(ಪುಟ ೩೯೪)
೪೭)ಮಾಯೆ ಮತ್ತು ಅದರ
ಕಾಯ೯ವಾದ ಜಗತ್ತು -ಇವು ಯಾವುವೂ
ಇಲ್ಲದೆ ಅಖಂಡೈಕರಸವಾದ
ಬ್ರಹ್ಮದಲ್ಲಿ ಪೂಣ೯
ಮ್ಮು ಭಾಗ ಎಂಬ ಮಾತಿಗೆ
ಅವಕಾಶವೆಲ್ಲಿ?(ಪುಟ ೩೯೫)
೪೮)ವ್ಯಾಕರಣ ಮೊದಲಾದ ಶಾಸ್ತ್ರಗಳಿಂದ
ನೀನು ಪದದ ಅಥ೯ಗಳನ್ನು ತಿಳಿದುಕೊಂಡಿದ್ದರೆ ಸಾಕ್ಷಾತ್ಕಾರವು
ಇನ್ನೂ ಉಳಿದಿರುತ್ತದೆ.'ನಾನು ಕೃತಾಥ೯ನಾಗಿದ್ದೇನೆ'ಎಂಬ
ಬುದ್ಧಿಯು ಉಂಟಾಗುವವರೆಗೂ ನೀನು
ಅಹಂಕಾರವನ್ನು ಬಿಟ್ಟು ಗುರುವನ್ನು
ಸೇವಿಸಬೇಕಾಗುತ್ತದೆ.(ಪುಟ ೩೯೬)
೪೯)೧)ಗಾಢನಿದ್ರೆಯಲ್ಲಿ ತೋರುವ ಬ್ರಹ್ಮಾನಂದ
೨) ಸುಮ್ಮನಿರುವಾಗ ತೋರುವ ವಾಸನಾನಂದ
೩)ಅಂತಮು೯ಖವಾದ ಮನೋ ವೃತ್ತಿಯಲ್ಲಿ ತೋರುವ
ವಾಸನಾನಂದ
-ಈ ಮೂರರ ಹೊರತು ಜಗತ್ತಿನಲ್ಲಿ ಬೇರೆ
ಆನಂದವೆಂಬುದು ಜಗತ್ತಿನಲ್ಲಿ ಬೇರೆ ಯಾವುದೂ ಇಲ್ಲ.(ಪುಟ ೩೯೬)
೫0)ಇದಲ್ಲದೆ ನಿಜಾನಂದ,ಮುಖ್ಯಾನಂದ,ಆತ್ಮಾನಂದ,ಯೋಗಾನಂದ,ಅದ್ವೈತಾನಂದ-ಇವುಗಳನ್ನೆಲ್ಲ ಬ್ರಹ್ಮಾನಂದದಲ್ಲಿಯೆ
ಅಂತಗ೯ತ ಮಾಡಿಕೊಳ್ಳಬೇಕು.(೩೯೭)
೫೧)ಜೀವನು ಕಣ್ಣಿನಲ್ಲಿದ್ದಾಗ ಎಚ್ಚರದ
ಅವಸ್ಥೆಯುಳ್ಳವನಾಗುವನು.,ಕಂಠದಲ್ಲಿದ್ದಾಗ ಕನಸಿನ
ಅವಸ್ಥೆಯುಳ್ಳವನಾಗುವನು.ಸುಷುಪ್ತಿಯಲ್ಲಿರುವಾಗ ಹೃದಯ
ಕಮಲದಲ್ಲಿರುವನು.ಹೀಗೆ ಕಣ್ಣಿನಲ್ಲಿರುವಾಗ
ಜೀವನು ಪಾದದಿಂದ
ತಲೆಯವರೆಗೆ ವ್ಯಾಪಿಸಿಕೊಂಡು ಎಚ್ಚರವನ್ನು
ಹೊಂದುವನು.(ಇದು ಬ್ರಹ್ಮೋಪನಿಷತ್ತಿನ ಸಾರ.ಞ (ಪುಟ ೩೯೮)
೫೨)ಕಾದ ಕಬ್ಬಿಣದ ಮುದ್ದೆಯಂತೆ ಜೀವನು ಶರೀರದೊಡನೆ ಒಂದಾದವನಾಗಿ 'ನಾನು ಮನುಷ್ಯ'ಎಂದು
ನಿಶ್ಚಯಿಸಿಕೊಂಡಿರುತ್ತಾನೆ.(೩೯೮)
೫೩) ದೇಹವೇ ತಾನೆಂಬ ಅಭಿಮಾನದಿಂದ ಜೀವನಿಗೆ
೧)ಉದಾಸೀನ೨)ಸುಖಿ
೩) ದುಃಖಿ -ಎಂಬ ಮೂರು
ಅವಸ್ಥೆಗಳು ಉಂಟಾಗುವುವು.
ಸುಖ ದುಃಖಗಳು ಪುಣ್ಯಪಾಪಕಮ೯ಗಳ
ಫಲವು.ಉದಾಸೀನತೆಯು ಸ್ವಭಾವದಿಂದ ಉಂಟಾಗುತ್ತದೆ.(ಪುಟ ೩೯೯)
೫೪)'ನಾನು' 'ನೀನು' ಮೊದಲಾದ
ವೃತ್ತಿಗಳು ಲಯವಾದಾಗ ಚಿತ್ತಕ್ಕೆ
ಸೂಕ್ಷ್ಮತ್ವ ಉಂಟಾಗುವುದು.(ಪುಟ ೪00)
೫೫)ಯಾವಾಗ ದ್ವೈತ ಪ್ರಪಂಚವು ತೋರುವುದಿಲ್ಲವೋ
ಮತ್ತು ನಿದ್ರೆಯು ಕೂಡ ಬರುವುದಿಲ್ಲವೊ ಆಗ
ಇರುವ ಸುಖವು ಬ್ರಹ್ಮಾನಂದವೆಂದು
ಶ್ರೀಕೃಷ್ಣನು ಅಜು೯ನನಿಗೆ ಹೇಳಿದ್ದಾನೆ.(ಪುಟ ೪0೧)
೫೬)ಇಂದ್ರಿಯಗಳ ಸಮೂಹವನ್ನು ಎಲ್ಲ
ಕಡೆಯಿಂದಲೂ ನಿಗ್ರಹಿಸಿ ಧೈಯ೯ದಿಂದ
ಕೂಡಿದ ಬುದ್ಧಿಯಿಂದ ಮೆಲ್ಲಮೆಲ್ಲಗೆ
ಹಿಂದಿರುಗಬೇಕು. ಮನಸ್ಸನ್ನು ಆತ್ಮನಲ್ಲಿ ನಿಲ್ಲಿಸಿ ಏನನ್ನೂ ಚಿಂತಿಸಬಾರದು.(ಪುಟ
೪0೧)
೫೭) ಚಂಚಲವೂ ಅಸ್ಥಿರವೂ
ಆದ ಮನಸ್ಸು ಯಾವ
ಯಾವ ವಿಷಯಗಳ ಕಡೆ ಹೋಗುವುದೊ
ಆಯಾ ವಿಷಯಗಳಿಂದಲೇ ಈ
ಮನಸ್ಸನ್ನು ನಿಗ್ರಹಿಸಿ ಆತ್ಮನಲ್ಲಿಯೇ
ವಶಪಡಿಸಿಕೊಳ್ಳಬೇಕು.(ಪುಟ ೪0೧)
೫೮)ದೋಷರಹಿತನಾದ ಯೋಗಿಯು
ಹೀಗೆ ಅತ್ಮನನ್ನು
ಅನುಸಂಧಾನ ಮಾಡುತ್ತ ಅನಾಯಾಸದಿಂದ ಬ್ರಹ್ಮಸಂಸ್ಪಶ೯ವೆಂಬ
ಉತ್ಕøಷ್ಟವಾದ ಸುಖವನ್ನು ಪಡೆಯುತ್ತಾನೆ.(ಪುಟ ೪0೩)
೫೯) ಮನೋ ನಿಗ್ರಹದಿಂದ ಬ್ರಹ್ಮಾನಂದದ
ಪ್ರಾಪ್ತಿಯಾಗುತ್ತದೆ ಎಂಬುದನ್ನು ಗೀತೆಯಲ್ಲಿ ಅಲ್ಲದೆ
ಮೈತ್ರಾಯಣೀ ಶಾಖೆಯಲ್ಲಿಯೂ ಹೇಳಿದೆ.(ಪುಟ ೪0೩)
೬0)ಚಿತ್ತವು ಜಗತ್ತಿಗೆ
ಉಪಾದಾನ ಕಾರಣವಾಗದಿದ್ದರೂ ಜಗತ್ತಿನ
ಅನುಭವಕ್ಕೆ ಚಿತ್ತವೇ
ಕಾರಣವಾಗಿರುವುದು.ಆದುದರಿಂದ ಅಭ್ಯಾಸದಿಂದಲೂ ವೈರಾಗ್ಯದಿಂದಲೂ ಚಿತ್ತದಲ್ಲಿರುವ
ರಜಸ್ತಮೋ ಗುಣಗಳನ್ನು ತೆಗೆದು ಅದನ್ನು
ಸತ್ವಮಾತ್ರವಾಗಿ ಮಾಡಬೇಕು. ಮನುಷ್ಯನು ಯಾವುದರಲ್ಲಿ ಮನಸ್ಸುಳ್ಳವನಾಗುತ್ತಾನೆಯೊ ಅದೇ ಆಗುತ್ತಾನೆ.ಇದು
ಸನಾತನವಾದ ರಹಸ್ಯ.(ಪುಟ ೪0೫)
೬೧) ಮನುಷ್ಯನ ಮನಸ್ಸು ಇಂದ್ರಿಯಗಳಿಗೆ ಗೋಚರವಾಗುವ ವಿಷಯಗಳಕಡೆಗೆ
ಹೋಗುವಂತೆ ಬ್ರಹ್ಮದ
ಕಡೆ ಹೋಗುವುದಾದರೆ ಯಾವನಿಗೆ
ತಾನೇ ಸಂಸಾರದ
ಬಂಧನವು ಹೋಗುವುದಿಲ್ಲ!(ಪುಟ ೪0೫)
೬೨)ಮನಸ್ಸು ಶುದ್ಧ ಮತ್ತು
ಅಶುದ್ಧ ಎಂದು ಎರಡು ಬಗೆಯಾಗಿವೆ.
ಕಾಮ ಕ್ರೋಧಾದಿಗಳ ಸಂಬಂಧವುಳ್ಳದ್ದು ಅಶುದ್ಧವು. ಕಾಮಾದಿಗಳಿಲ್ಲದ್ದು ಶುದ್ಧವು.(ಪುಟ ೪0೬)
೬೩)ಮನ ಏವ ಮನುಷ್ಯಾಣಾಂ
ಕಾರಣಂ ಬಂಧ ಮೋಕ್ಷಯೋಃ
ಬಂಧಾಯ ವಿಷಯಾಸಕ್ತಂ ಮುಕ್ತೈಃ
ನಿವಿ೯ಷಯಂ ಸ್ಮøತಂ|
ಮನುಷ್ಯನ
ಬಂಧಕ್ಕೂ ಮೋಕ್ಷಕ್ಕೂ ಮನಸ್ಸೇ
ಕಾರಣವಾಗಿದೆ. ಮನಸ್ಸು ವಿಷಯಗಳಲ್ಲಿ ಆಸಕ್ತವಾದರೆ
ಬಂಧವಾಗುತ್ತದೆ.ವಿಷಯಗಳಲ್ಲಿ ಆಸಕ್ತವಾಗದಿದ್ದರೆ ಬಂಧವಾಗುತ್ತದೆ-ಎಂದು ಹೇಳಿದೆ.(ಪುಟ೪0೬)
೬೪)ಶುದ್ಧವಾದ ಪರತತ್ವದಲ್ಲಿ ವಿಶ್ರಾಂತಿಯನ್ನು
ಹೊಂದಿದ ಧೀಮಂತನು ಹೊರಗೆ
ಎಷ್ಟು ವ್ಯವಹರಿಸುತ್ತಿದ್ದರೂ ಒಳಗೆ
ಆ ಬ್ರಹ್ಮಾನಂದವನ್ನೇ ಆಸ್ವಾದಿಸುತ್ತಾನೆ.(ಪುಟ ೪0೮)
೬೫)ಇಂದ್ರಿಯಗಳು ವಿಷಯಗಳ
ಕಡೆ ಹೋಗಲು ಶಕ್ತವಾಗಿದ್ದರೂ
ಬ್ರಹ್ಮಾನಂದವನ್ನು ಸವಿಯುವ ಬಯಕೆಯಿಂದ ತನ್ನ
ಇಂದ್ರಿಯಗಳನ್ನೆಲ್ಲ ಹೊರಗೆ
ಹೋಗದಂತೆ ತಡೆ ಹಿಡಿದು ,ಆ
ಬ್ರಹ್ಮಾನಂದದ ವಿಷಯದಲ್ಲಿ(ಅನುಸಂಧಾನದಲ್ಲಿ) ಪ್ರವತಿ೯ಸುವಿಕೆಯು ಧೀರತ್ವವೆನಿಸುವುದು.(ಪುಟ ೪0೮)
೬೬)ಕಾಗೆಯ ಎಡಗಣ್ಣಿನ ಗೋಳಕ್ಕೂ
ಬಲಗಣ್ಣಿನ ಗೋಳಕ್ಕೂ ಒಂದೇ
ಚಕ್ಷುರಿಂದ್ರಿಯವಿದೆ.ಅದು ಆಕಡೆಗೆ ಈ
ಕಡೆಗೆ ಹೋಗುತ್ತಲೂ ಬರುತ್ತಲೂ ಇರುತ್ತದೆ.ಹಾಗೆಯೆ ಬ್ರಹ್ಮಜ್ಞಾನಿಯ ಬುದ್ಧಿಯೂ
ಕೂಡ ಒಮ್ಮೆ ವಿಷಯಾನಂದದ ಕಡೆಗೂ
ಇನ್ನೊಮ್ಮೆ ಬ್ರಹ್ಮಾನಂದದ ಕಡೆಗೆ ಹೋಗುತ್ತಲೂ ಬರುತ್ತಲೂ
ಇರುತ್ತದೆ.(ಪುಟ ೪೧೯)
೬೭)ತತ್ವಜ್ಞಾನಿಯು ಪ್ರಾರಬ್ಧಕಮ೯ದಿಂದ ಬರುವ ವಿಷಯಗಳನ್ನು
ಅನುಭವಿಸುತ್ತ ಅವುಗಳಿಂದ
ಹುಟ್ಟಿದ ವಿಷಯಾನಂದವನ್ನೂ ಉಪನಿಷತ್ತಿನಿಂದ ತಿಳಿದುಕೊಂಡ
ಬ್ರಹ್ಮಾನಂದವನ್ನೂ ಅನುಭವಿಸುತ್ತ
-ಎರಡು ಭಾಷೆಗಳನ್ನು ಬಲ್ಲ ಪಂಡಿತನಂತೆ -ಲೌಕಿಕವೂ
ವೈದಿಕವೂ ಆದ ಎರಡು
ಆನಂದಗಳನ್ನೂ ಅರಿಯುತ್ತಾನೆ.(ಪುಟ ೪೧0)
೬೮)ಬ್ರಹ್ಮಾನಂದವೆಂಬ ಅಧ್ಯಾಯ ಪಂಚಕದಲ್ಲಿ ಯೋಗಾನಂದವೆಣಬ ಮೊದಲನೆಯ ಅಧ್ಯಾಯದಲ್ಲಿ
ಯೋಗಿಗಳಿಗೆ ಪ್ರತ್ಯಕ್ಷವಾದ ಬ್ರಹ್ಮಾನಂದವನ್ನು ಹೇಳಿದ್ದಾಯಿತು.(ಪುಟ ೪೧೧)
ಗಾಢನಿದ್ರೆಯಲ್ಲೂ ಸುಮ್ಮನಿರುವಾಗಲೂ ಸಮಾಧಿಯಲ್ಲಿಯೂ ಸುಖದುಃಖಗಳ
ಅನುಭವಕಾಲದಲ್ಲಿಯೂ ಯೋಗಿಗೆ
ನಿದ್ರೆಯಲ್ಲಿ ಬ್ರಹ್ಮಾನಂದವೂ ನಿದ್ರೆಯಿಂದ
ಎಚ್ಚೆತ್ತೊಡನೆ ಬ್ರಹ್ಮಾನಂದವೂ ನಿದ್ರೆಯಿಂದ
ಎಚ್ಚೆತ್ತೊಡನೆ ವಾಸನಾನಂದವೂ ಸುಮ್ಮನಿರುವಾಗ
ಮುಖ್ಯಾನಂದವೂ ಮನೋಲಯವಾದಾಗ ನಿಜಾನಂದವೂ
ತೋರುವುದು.(ಪುಟ ೪೧೧)
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
No comments:
Post a Comment