೮)ಕೂಟಸ್ಥ ದೀಪ ಪ್ರಕರಣ:
೧) ಆಕಾಶದಲ್ಲಿರು ಸೂಯ೯ನಿಂದ ಬೆಳಗಲ್ಪಟ್ಟ ಒಂದು
ಗೋಡೆಯು ಕನ್ನಡಿಯಲ್ಲಿ ಪ್ರತಿಬಿಂಬಿಸಿದ(ಅದೇ) ಸೂಯ೯ನಿಂದ (ಮತ್ತೂ)
ಬೆಳಗುವಂತೆ ಕೂಟಸ್ಥನಿಂದ ಬೆಳಗಲ್ಪಟ್ಟ ಶರೀರವು ಬುದ್ಧಿಯಲ್ಲಿ
ಪ್ರತಿಬಿಂಬಿಸಿದ ಚಿದಾಭಾಸನಿಂದ (ಮತ್ತೂ) ಬೆಳಗುತ್ತದೆ.(ಪುಟ
೨೮೬).
೨)ಗೋಡೆಯನ್ನು ಸಾಮಾನ್ಯವಾಗಿಯೂ ವಿಶೇಷವಾಗಿಯೂ
ಬೆಳಗುವ ಸೂಯ೯ನ ಎರಡು ಪ್ರಕಾಶಗಳಂತೆ ಚೈತನ್ಯವು
ಸಾಮಾನ್ಯ ರೂಪದಿಂದಲೂ ವಿಶೇಷರೂಪದಿಂದಲೂ ಶರೀರವನ್ನು
ಬೆಳಗುತ್ತದೆ.(ಪುಟ ೨೮೬)
೩)ಹಾಗೆಯೇ ಚೈತನ್ಯದ ಪ್ರತಿಬಿಂಬದೊಡನೆ
ಕೂಡಿಕೊಂಡಿರುವ ಬುದ್ಧಿವೃತ್ತಿಗಳ
ನಡುನಡುವೆ (ಎಚ್ಚರವೇ ಮೊದಲಾದ ಅವಸ್ಥೆಗಳಲ್ಲಿ)
ಬೆಳಗುತ್ತ(ನಿದ್ರೆ ಮೊದಲಾದ ಅವಸ್ಥೆಗಳಲ್ಲಿ) ಅವುಗಳಿಲ್ಲದಿರುವಾಗಲೂ
ಬೆಳಗುತ್ತ ಈ ಕೂಟಸ್ಥನು
ಬೇರೆಯಾಗಿರುವನು.(೨೮೭)
೪)ಗಡಿಗೆಯ ಆಕಾರವನ್ನು ತಾಳಿದ ಬುದ್ಧಿವೃತ್ತಿಯಲ್ಲಿರುವ
ಚಿದಾಭಾಸನು 'ಇದು ಗಡಿಗೆ' ಎಂದು
ಬೆಳಗುವನು. ಆದರೆ ಈ ಗಡಿಗೆಯನ್ನು
ಅರಿತೆನು ಎಂಬುದನ್ನು
ಆ ಗಡಿಗೆಯ ಕಲ್ಪನೆಗೆ ಆಧಾರವಾದ
ಬ್ರಹ್ಮಚೈತನ್ಯವು ಬೆಳಗುವುದು.(ಪುಟ ೨೮೭)
೫)'ಇದು ಗಡಿಗೆ'ಎಂಬ
ವೃತ್ತಿಜ್ಞಾನವು ಹುಟ್ಟುವುದಕ್ಕೆ
ಮೊದಲು ಬ್ರಹ್ಮಚೈತನ್ಯವು ಗಡಿಗೆಯನ್ನು
ಅಜ್ಞಾತಭಾವದಿಂದ ಬೆಳಗಿತು.'ಇದು ಗಡಿಗೆ'ಎಂಬ
ವೃತ್ತಿ ಜ್ಞಾನವು ಹುಟ್ಟಿದ
ಮೇಲೆಯೂ ಇದು
ತಿಳಿಯಲ್ಪಟ್ಟಿತೆಂಬ ರೂಪದಿಂದ ಆ
ಬ್ರಹ್ಮಚೈತನ್ಯವೇ ಬೆಳಗಿತು.(ಪುಟ ೨೮೭)
೬)ಲೋಹದ ಅಲಗನ್ನು ಮುಂಭಾಗದಲ್ಲಿ
ಇಟ್ಟುಕೊಂಡಿರುವ ಈಟಿಯಂತೆ
ಚಿದಾಭಾಸನನ್ನು ಮುಂಭಾಗದಲ್ಲಿ ಇಟ್ಟುಕೊಂಡಿರುವ
ಬುದ್ಧಿವೃತ್ತಿಯು ಜ್ಞಾನವೆನಿಸುವುದು.ತಾನೇ ಬೆಳಗಿಕೊಳ್ಳದಿರುವ ಜಡತ್ವವೇ
ಅಜ್ಞಾನವೆನಿಸುವುದು.(ಪುಟ ೨೮೮)
೭)ಚಿದಾಭಾಸನಿಲ್ಲದ ಬುದ್ಧಿಯಿಂದ 'ನಾನು ಅರಿತೆನು' ಎಂಬ
ಭಾವವು ಹುಟ್ಟುವುದಿಲ್ಲ.ಚಿದಾಭಾಸನಿಲ್ಲದ ಜಡಬುದ್ಧಿಗೂ ಭೌತವಾದ ಮಣ್ಣು ಮೊದಲಾದವುಗಳಿಗೂ ಏನು
ಭೇದ?(ಪು ೨೮೮)
೮)ಒಂದು ಗಡಿಗೆಗೆ ಕೆಮ್ಮಣ್ಣನ್ನೊ ಅಥವಾ
ಸುಣ್ಣವನ್ನೊ ಬಳಿದರೆ ಆ
ಕಾರಣದಿಂದ ಅದು ತಿಳಿದುಬಂತೆಂತು
ಎಲ್ಲಿಯೂ ಹೇಳಿಲ್ಲ.ಅದರಂತೆ ಚಿದಾಭಾಸನಿಲ್ಲದ
ಕೇವಲ ಬುದ್ಧಿಯಿಂದ ವ್ಯಾಪ್ತವಾದ ಗಡಿಗೆಯು ತಿಳಿಯಬಂತೆಂದು
ಒಪ್ಪಿಕೊಳ್ಳಲಾಗುವುದಿಲ್ಲ.(ಪುಟ ೨೮೯)
೯)ಶ್ರೀ
ಸುರೇಶ್ವರಾಚಾಯ೯ರು ಬ್ರಹ್ಮಚೇತನದೊಡನೆ
(ಚಿದಾಭಾಸನಿಗೆ) ಸಾದೃಷ್ಯವನ್ನು ಹೇಳಿರುತ್ತಾರೆ.ಇವರ ಗುರುಗಳಾದ ಶ್ರೀ ಶಂಕರಾಚಾಯ೯ರು
ಚೈತನ್ಯಕ್ಕೂ ಚಿದಾಭಾಸನಿಗೂ ಇರುವ ಭೇದವನ್ನು ತಮ್ಮ
ಉಪದೇಶಸಾಹಸ್ರಿಯಲ್ಲಿ ವಿವರಿಸಿರುತ್ತಾರೆ.
(ಪುಟ ೨೯0)
೧0)ಹೀಗೆ ಬ್ರಹ್ಮಕ್ಕೂ ಚಿದಾಭಾಸನಿಗೂ ಭೇದವಿರುವುದರಿಂದಲೇ ಪ್ರಮಾಣದ
ಫಲವಾಗಿ ಉತ್ಪನ್ನವಾದ
ಚಿದಾಭಾಸನು ಗಡಿಗೆಯಲ್ಲಿ 'ಇದು ಗಡಿಗೆ' ಎಂಬ ಜ್ಞಾತತ್ವ ಧಮ೯ವನ್ನು
ಹುಟ್ಟಿಸುತ್ತಾನೆ:ಅನಂತರ ಬ್ರಹ್ಮವು ತಿಳಿಯಬರದ ವಸ್ತುಗಳ
ಹಾಗೆ 'ಇದು ನನಗೆ ತಿಳಿಯದು'ಎಂಬ ಜ್ಞಾತತ್ವzsಮ೯ವನ್ನು ಪುನಃ
ಬೆಳಗುತ್ತದೆ.(೨೯0)
೧೧)'ಇದು ಗಡಿಗೆ' ಎಂಬ ಜ್ಞಾನವು ಚಿದಾಭಾಸನ
ಅನುಗ್ರಹದಿಂದಾಗುವುದು. 'ಗಡಿಗೆಯು ಅರಿಯಲ್ಪಟ್ಟಿತು'
ಎಂಬುದು ಬ್ರಹ್ಮನ
ಅನುಗ್ರಹದಿಂದ ಆಗುತ್ತದೆ.(ಪುಟ೨೯೧)
೧೨)ದೇಹದ ಹೊರಗೆ ಚಿದಾಭಾಸನನ್ನೂ ಬ್ರಹ್ಮವನ್ನೂ ಬೇರೆಮಾಡಿ ತಿಳಿಯಬೇಕು. ಚಿದಾಭಾಸನನ್ನೂ ಕೂಟಸ್ಥನನ್ನೂ ದೇಹದ
ಒಳಗೂ ವಿವೇಚಿಸಿ ತಿಳಿಯಬೇಕು.(ಪುಟ ೨೯೧)
೧೩) ಕಾದ ಕಬ್ಬಿಣದಲ್ಲಿ
ಅಗ್ನಿಯು ವ್ಯಾಪಿಸಿಕೊಂಡಿರುವಂತೆ 'ನಾನು'ಎಂಬ ಅಂತಃಕರಣ ವೃತ್ತಿಯಲ್ಲಿಯೂ ಕಾಮ,ಕ್ರೋಧ ಮೊದಲಾದ ಮೊದಲಾದ ವೃತ್ತಿಗಳಲ್ಲಿಯೂ
ಚಿದಾಭಾಸನು ವ್ಯಾಪಿಸಿಕೊಂಡಿರುತ್ತಾನೆ.(ಪುಟ೨೯೧)
೧೪)ಹೇಗೆ ಕಾದ ಕಬ್ಬಿಣವು
ತನ್ನ ಬೆಳಕಿನಿಂದ ತನ್ನನ್ನು ಮಾತ್ರ ಬೆಳಗುವುದೇ
ಹೊರತು ಮತ್ತೊಂದು
ವಸ್ತುವನ್ನು ಎಂದಿಗೂ ಬೆಳಗಲಾರದು.ಹಾಗೆಯೇ
ಚಿದಾಭಾಸನಿಂದ ಕೂಡಿದ ವೃತ್ತಿಗಳು
ತಮ್ಮನ್ನು ಮಾತ್ರ ಬೆಳಗುತ್ತವೆ.(ಇದರಿಂದ
ಚಿದಾಭಾಸನ ಅಸ್ತಿತ್ವವು ತಿಳಿದು
ಬರುತ್ತದೆ.(ಪುಟ ೨೯೨)
೧೫)ಅಂತಃಕರಣದ ವೃತ್ತಿಗಖೆಲ್ಲ ಕ್ರಮ
ಕ್ರಮವಾಗಿ ನಾಶವಾಗಿ
ಪುನಃ ಹುಟ್ಟುತ್ತವೆ: ಗಾಢನಿದ್ರೆ, ಮೂಛೆ೯,ಸಮಾಧಿ-ಈ
ಅವಸ್ಥೆಗಳಲ್ಲಿ ವೃತ್ತಿಗಳೆಲ್ಲ
ಲಯವಾಗುತ್ತವೆ.(ಪುಟ ೧೯೨)
೧೬)ಈ ಸಮಸ್ತ ವೃತ್ತಿಗಳ ಸಂಧಿಗಳನ್ನೂ,ಅವುಗಳ ಅಭಾವವನ್ನೂ ನಿವಿ೯ಕಾರಿಯಾದ ಯಾವ
ಚೇತನವು ಬೆಳಗುತ್ತದೆಯೊ ಅದು ಕೂಟಸ್ಥನೆನಿಸುವುದು.(ಪುಟ ೨೯೨)
೧೭)'ಅಂತಃಕರಣಕ್ಕೂ ಮತ್ತು
ಅದರ ವೃತ್ತ್ತಿಗಳಿಗೂ
ಸಾಕ್ಷಿ.ಇವೇ ಮೊದಲಾದುವನ್ನು ಹೇಳುವ
ಕಡೆ ಕೂಟಸ್ಥನೇ ಸಾಕ್ಷಿಯೆಂದು ಪೂವಾ೯ಚಾಯ೯ರು
ನಿಣ೯ಯಿಸಿದ್ದಾರೆ.(ಪುಟ ೨೯೪)
೧೮)ಲೋಕದಲ್ಲಿ ಬಿಂಬವಾದ
ಮುಖ,,ಪ್ರತಿಬಿಂಬವಾದ ಮುಖ,ಪ್ರತಿಬಿಂಬಕ್ಕೆ ಆಶ್ರಯವಾದ
ಕನ್ನಡಿ-ಈ ಮೂರೂ ಪ್ರತ್ಯಕ್ಷವಾಗಿ
ಕಾಣುವಂತೆ ಬಿಂಬವಾದ
ಕೂಟಸ್ಥ,ಪ್ರತಿಬಿಮಬವದ ಚಿದಾಭಾಸ,ಚಿದಾಭಾಸನಿಗೆ ಆಶ್ರಯವಾದ
ಅಂತಃಕರಣ-ಈ ಮೂರೂ ಶಾಸ್ತ್ರದಿಂದಲೂ ಯುಕ್ತಿಯಿಂದಲೂ ಅರಿಯಲ್ಪಡುವುವು
ಎಂದು ಚಿದಾಭಾಸನನ್ನು ಪೂವಾ೯ಚಾಯ೯ರು ವಣಿ೯ಸಿದ್ದಾರೆ.(ಪುಟ ೨೯೪)
೧೯)ಅಳತೆಯು
ಮರದ್ದಾಗಿರಲಿ ಅಥವಾ
ಕಂಚಿನದ್ದಾಗಿರಲಿ ಅಕ್ಕಿ
ಮೊದಲಾದ ಧಾನ್ಯವನ್ನು ಅಳೆಯುವವನಿಗೆ
ಅಳತೆಯಲ್ಲಿ ಹೆಚ್ಚು ಕಡಿಮೆಯಾಗುವುದಿಲ್ಲ.(ಪುಟ
೨0೫)
೨0)ಸ್ವಲ್ಪ ಪ್ರಕಾಶಿಸುವುದು ಆಭಾಸ.ಪ್ರತಿಬಿಂಬವೆಂದರೂ ಆಭಾಸ.ಪ್ರತಿಬಿಂಬವು
ಮೂಲಬಿಂಬದ ಲಕ್ಷಣವಿಲ್ಲದೆ ಮೂಲದಂತೆ
ಪ್ರಕಾಶಿಸುವುದರಿಂದ ಬಿಂಬಾಭಾಸವೆನಿಸುವುದು.(ಪುಟ ೨೯೫)
೨೧) ಚಿದಾಭಾಸನು ಬುದ್ಧಿಗಿಂತಲೂ ಬೇರೆಯವನು(ಪುಟ ೨೯೬)
೨೨)ಶರೀರವು ಸತ್ತಮೇಲೆಯೂ ಬುದ್ಧಿಯುಂಟೆಂಬುದನ್ನು ಶಾಸ್ತ್ರದಲ್ಲಿ
ಹೇಳಿರುವುದರಿಂದ (ದೇಹಕ್ಕಿಂತ ಬುದ್ಧಿಯನ್ನು ಅಂಗೀಕರಿಸಬೇಕೆಂದು ಹೇಳಿದರೆ ),ಬುದ್ಧಿಗಿಂತಲೂ ಬೇರೆಯವನಾದ ಚಿದಾಭಾಸನು ಇರುತ್ತಾನೆಂದು ಪ್ರವೇಶ ಶ್ರುತಿಯು ಹೇಳುವುದರಿಂದ
(ಚಿದಾಭಾಸನನ್ನು ಅಂಗೀಕರಿಸ ಬೇಕಾಗುವುದು.(ಪುಟ ೨೯೭)
೨೩)ಇಂದ್ರಿಯಾದಿಗಳಿಂದ ಕೂಡಿದ ಈ
ದೇಹವು ನಾನಿಲ್ಲದೆ
ಹೇಗೆತಾನೇ ಉಳಿದೀತು?ಎಂದು ಶ್ರುತಿಯು
ಹೇಳುವುದರಿಂದ ಈಶ್ವರನು ನಡುನೆತ್ತಿಯನ್ನು
ಸೀಳಿಕೊಂಡು ಶರೀರವನ್ನು
ಪ್ರವೇಶಿಸಿ ಎಚ್ಚರ
ಮೊದಲಾದ ಅವಸ್ಥೆಗಳನ್ನು ಅನುಭವಿಸುತ್ತಿರುವನು.(ಪುಟ ೨೯೭)
೨೪) ಈ ಆತ್ಮನು ಪ್ರಜ್ಞಾನ
ಘನನು:ಇವನು ಈ ಪಂಚಭುತಗಳಿಂದಾದ ದೇಹೇಂದ್ರಿಯಗಳಿಂದ
ಜೀವವೆಂಬ ಅಭಿಮಾನವನ್ನು ಹೊಂದಿ ,ಅವುಗಳು ನಾಶವಾದಾಗ
ತನ್ನ ಜೀವತ್ವದ ಅಭಿಮಾನವನ್ನು ಬಿಡುತ್ತಾನೆ.(ಪುಟ ೨೯೮)
೨೫)ಬೃಹದಾರಣ್ಯಕದಲ್ಲಿ ಕೂಟಸ್ಥನು ಚಿದಾಭಾಸನಿಗಿಂತ ಬೇರೆಯವನೆಂದು
ತೋರಿಸಲ್ಪಟ್ಟಿದೆಯೆಂದು ಹೇಳುತ್ತಾರೆ(ಪುಟ ೨೯೮)
೨೬)ಜೀವನು ಶರೀರವನ್ನು
ಬಿಟ್ಟರೆ ಇದು
ಒಣಗಿ ಸಾಯುತ್ತದೆ. ಜೀವನು ಸಾಯುವುದಿಲ್ಲ.(ಛಾಂ.ಉ.೬.೧೧.೩)ಎಂಬ ಶ್ರುತಿಯಿಂದ ಜೀವನಿಗೂ
ಕೂಟ ಅವಿನಾಶತ್ವವನ್ನು ಹೇಳಬೇಕು-ಎಂಬ ಆಕ್ಷೇಪಕ್ಕೆ
ಪರಿಹಾರವನ್ನು ಹೇಳುತ್ತಾರೆ.(ಪುಟ ೨೯0)
೨೭)'ಜೀವನು ಬಿಟ್ಟ ಶರೀರವು
ಸಾಯುತ್ತದೆಯೇ ಹೊರತು ಜೀವನಲ್ಲ
ಎಂಬ ಶ್ರುತಿಯಲ್ಲಿ ಜೀವನ
ಮೋಕ್ಷವನ್ನು ಹೇಳಿಲ್ಲ.ಅವನು ಒಂದು
ದೇಹದಿಂದ ಇನ್ನೊಂದು ದೇಹಕ್ಕೆ ಹೋಗುತ್ತಾನೆಂದು ಹೇಳಿದೆ.(ಪುಟ ೨೯೮)
೨೮)'ನಾನು ಬ್ರಹ್ಮ'ಎಂಬ
ವಾಕ್ಯದಲ್ಲಿ 'ನಾನು'ಎಂಬ ಪದದ ಅಥ೯ವಾದ ಜೀವನೂ
ಬ್ರಹ್ಮನೂ ಒಂದೇ
ವಿಭಕ್ತಿಯಲ್ಲಿ ಕಂಡುಬರುವುದರಿಂದ 'ಸಮಾನಾಧಿರರಣ'.ಒಂದು ಕನ್ನಡಿಯು ನಾಶವಾದರೆ ಅದರಲ್ಲಿ
ತೋರುತ್ತಿದ್ದ ಅಭಾಸಮುಖವೂ (ಪ್ರತಿಬಿಂಬ)ಹೋಗಿ ನಿಜವಾದ
ಮುಖದೊಂದಿಗೆ ಐಕ್ಯವಾಗುವಂತೆ
ಬಾಧ -ಸಮಾನಾಧಿಕರಣದಿಂದ ಅಭೇದವು ಘಟಿಸುತ್ತದೆ.ಜೀವಭಾವದ
ಬಾಧೆಯಿಂದ ಬ್ರಹ್ಮಭಾವವನ್ನು
ಹೊಂದಬಹುದು ಎಂದಥ೯.(ಪುಟ ೨೯೯)
೨೯)ನಾನು
ಬ್ರಹ್ಮ ಎಂಬ ಬುದ್ಧಿಯಿಂದ ಅಹಂ
ಬುದ್ಧಿಯು ಹೋಗುತ್ತದೆ.(ಪುಟ ೨೯೯)
೩0)ಸಮಸ್ತ ಜಗತ್ತಿನ ಆಧಾರವಾದ ಯಾವ
ಚೈತನ್ಯವು ವೇದಾಂತ
ಶಾಸ್ತ್ರಗಳಲ್ಲಿ ನಿರೂಪಿಸಲ್ಪಟ್ಟಿದೆಯೊ ಅದನ್ನೇ
ಈ ವಾಕ್ಯದಲ್ಲಿ ಬ್ರಹ್ಮ-ಶಬ್ದದಿಂದ ಹೇಳಿದೆ.(ಪುಟ ೩00)
೩೧)
೩೧)ಬುದ್ಧಿಯು ಯಾವುದು?ಈ ಚಿದಾಭಾಸನು ಯಾರು?
ಈ ಆತ್ಮನಲ್ಲಿ ಜಗತ್ತು
ಹೇಗಿರುವುದು?ಹೀಗೆ ಇವುಗಳ ಸ್ವರೋಪವನ್ನು
ನಿಣ೯ಯಿಸದೆ ಇರುವುದೇ
ಅಜ್ಞಾನವೆನಿಸುವುದು.ಇದೇ ನಾವು ತೊರೆಯಬೇಕಾದ
ಸಂಸಾರವಾಗಿ ಮುಂದುವರೆಯುವುದು.(ಪುಟ ೩0೨)
೩೧)ಯಾವನು ಬುದ್ಧಿಯೇ
ಮೊದಲಾದವುಗಳ ಸ್ವರೂಪವನ್ನು
ವಿಂಗಡಿಸಿ ತಿಳಿದುಕೊಳ್ಳುವನೊ ಅವನೇ
ತತ್ವವನ್ನು ಅರಿತವನು ,ಅವನೇ ಸಂಸಾರದಿಂದ ಬಿಡುಗಡೆಯನ್ನು
ಹೊಂದಿದವನು -ಎಂದು ಉಪನಿಷತ್ತುಗಳಲ್ಲಿ
ನಿಶ್ಚಯಿಸಿದೆ.(ಪುಟ ೩0೩)
೩೩)ಎಲ್ಲವನ್ನೂ ಕಲ್ಪಿಸುವುದಕ್ಕೆ
ಸಾಮಥ್ಯ೯ವುಳ್ಳ ಮಾಯೆಗೆ ಯಾವುದೂ
ಅಶಕ್ಯವಲ್ಲ.(ಪುಟ ೩0೫)
೩೪)ಕೂಟಸ್ಥನು ಮಾಯಿಕನಾಗಿರಬಹುದಲ್ಲವೆ ಎಂಬುದಕ್ಕೆ ಯಯಾವ ಪ್ರಮಾಣವೂ ಇಲ್ಲ.(ಪುಟ ೩0
೩೫)ಕೂಟಸ್ಥನು ನಿಜವಾಗಿರುವನೆಂದು ಉಪನಿಷತ್ತುಗಳೆಲ್ಲ
ಘೋಷಿಸಿವೆ.ಈ ವಿಷಯದಲ್ಲಿ ಅವನಿಗೆ ಪ್ರತಿಪಕ್ಷವಾದ
ಯಾವವಸ್ತುವನ್ನೂ ಶ್ರುತಿಗಳು ಸಹಿಸಲಾರವು.(ಪುಟ ೩0೬)
೩
೬೫)ನಾವು ಈಗ್ರಂಥವನ್ನು ಪ್ರಾರಂಭಿಸಿರುವುದು ಶ್ರುತಿಯ
ಅಥ೯ವನ್ನು ಸ್ಪಷ್ಟಪಡಿಸುವುದಕ್ಕೇ ಹೊರತು ಯುಕ್ತಿಗಳನ್ನು
ಹೇಳುವುದಕ್ಕಲ್ಲ.(ಪುಟ ೩0೭)
೩೭)ಆದುದರಿಂದ ಮೋಕ್ಷವನ್ನು ಬಯಸುವವನು ಕುತಕ೯ವನ್ನು
ಬಿಟ್ಟು ಶ್ರುತಿಯನ್ನು
ಅನುಸರಿಸಬೇಕು.ಮಮಾಯೆಯೇ ಜೀವೇಶ್ವರರನ್ನು ಕಲ್ಪಿಸುತ್ತದೆ ಎಂದು
ಶ್ರುತಿಯಲ್ಲಿ ತೋರಿಸಲ್ಪಟ್ಟಿತು.(ಪುಟ೩0೭)
೩೮)ಪ್ರಜಾಸ್ವರೂಪನಾಗುವೆನೆಂಬ ಸಂಕಲ್ಪದಿಂದ ಪ್ರಾರಂಭಿಸಿ ಜೀವರೂಪದಿಂದ
ದೇಹವನ್ನು ಪ್ರವೇಶಿಸ್ವವರೆಗಿನ ಸೃಷ್ಟಿಯೆಲ್ಲ
ಈಶ್ವರನಿಮದಾದುದು.ಎಚ್ಚರದಿಂದ ಪ್ರಾರಂಭಿಸಿ ಮೋಕ್ಷದವರೆಗಿನ
ಸಂಸಾರವೆಲ್ಲ ಜೀವನಿಂದಾದದ್ದು.(ಪುಟ ೩0೭)
೩೯) ಕೂಟಸ್ಥನು ಸದಾ ಅಸಂಗನು.ಇವನಿಗೆ
ಸಂಸಾರವೇ ಮೊದಲಾದ ಯಾವ ಅತಿಶಯವೂ
ಇಲ್ಲ.ಕೂಟಸ್ಥನಿಗೆ ಜನ್ಮವೂ ಇಲ್ಲ.ನಾಶವೂ
ಇಲ್ಲ.ಅವನು ಬದ್ಧನೂ ಅಲ್ಲ
ಸಾಧಕನೂ ಅಲ್ಲ.ನೋಕ್ಷವನ್ನು ಬಯಸುವವನೂ
ಅಲ್ಲ ಮೋಕ್ಷವನ್ನು ಹೊಂದಿದವನೂ
ಅಲ್ಲ-ಇದೇ ನಿಜವಾದದ್ದು.(ಪುಟ
೩0೮)
೪0) ಮನಸ್ಸಿನಿಂದಲೂ ಮಾತಿನಿಂದಲೂ ಹೊಂದಲು
ಅಶಕ್ಯವಾದ ಪರಮಾತ್ಮನನ್ನು
ಬೋಧಿಸುವುದಕ್ಕಾಗಿ ಜೀವನನ್ನೂ ಈಶ್ವರನನ್ನೂ
ಜಗತ್ತನ್ನೂ ಆಶ್ರಯಿಸಿಕೊಂ ಬೋಧಿಸುತ್ತದೆ.(ಪುಟ ೩0೮)
೪೧)ಮಂದ ಬುದ್ಧಿಯುಳ್ಳವನು ಎಲ್ಲ
ಶ್ರುತಿಗಳ ತಾತ್ಪಯ೯ವನ್ನು ಅರಿಯದೆ
ತಪ್ಪು ತಿಳುವಳಿಕೆಯನ್ನು ಹೊಂದುತ್ತಾನೆ.ವಿವೇಕಿಯಾದವನು ಎಲ್ಲ ಶ್ರುತಿಗಳಿಗೂ ಬ್ರಹ್ಮವೇ
ತಾತ್ಪಯ೯ವೆಂದು ತಿಳಿದು ಶ್ರುತಿಗಳನ್ನೆಲ್ಲ
ಸಮನ್ವಯ ಮಾಡಿಕೊಂಡು ಆನಂದ
ಸಮುದ್ರದಲ್ಲಿ ಮಗ್ನನಾಗಿರುತ್ತಾನೆ.(ಪುಟ ೩0೯)
೪೨)ಮಾಯೆಯೆಂಬ ಮೇಘವು ಜಗತ್ತೆಂಬ
ನೀರನ್ನು ತನ್ನ
ಮನಸ್ಸಿಗೆ ಬಂದಂತೆ ಮಳೆಗರೆಯುತ್ತಿದ್ದರೂ
ಚ್ಯತನ್ಯವೆಂಬ ಆಕಾಶಕ್ಕೆ ಹಾನಿಯಾಗಲಿ
ಲಾಭವಾಗಲೀ ಇಲ್ಲ-ಎಂದು ವಿವೇಕಿಯ
ನಿಶ್ಚಯವಾಗಿರುತ್ತದೆ.(ಪುಟ ೩0೯)
೪೩)ಯಾವನು ಈ ಕೂಟಸ್ಥ
ದೀಪವನ್ನು ಯಾವಾಗಲೂ
ಅನುಸಂಧಾನ ಮಾಡುವನೊ ಅವನು
ಯಾವಾಗಲೂ ಕೂಟಸ್ಥ ರೂಪದಿಂದ ಬೆಳಗುತ್ತಾನೆ.(ಪುಟ ೩0೯)
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
No comments:
Post a Comment