Sunday, 2 February 2020

Vidyaranya Saara Sangraha - Panchadashi - adhyaya - 1 - Swami Aadidevananda- Summarised by Dr Raveendra Hosadurga


ಪಂಚದಶೀ
                     
ಶ್ರೀ ವಿದ್ಯಾರಣ್ಯ ಮುನಿ ಪ್ರಣೀತಾ
'ಪಂಚದಶೀ'
ಲೇಖಕರು ಸ್ವಾಮಿ ಆದಿದೇವಾನಂದ
ಶ್ರೀ ರಾಮಕೃಷ್ಣ   ಯಾದವಗಿರಿ:ಮೈಸೂರು -0
ಮೂರನೆಯ ಮುದ್ರಣ  ೧೯೯೫

ಸಂಗ್ರಹ:ಡಾ.ರವೀಂದ್ರ ಹೊಸದುಗ೯                  

ಪೀಠಿಕೆ
                              
ಶ್ರೀವಿದ್ಯಾರಣ್ಯರು  ಪಂಚದಶಿಯ ಗ್ರಂಥಕತೃ೯.ಭಾರತೀಯ ತೇಜೋರಾಶಿಯಲ್ಲಿ ಅತ್ಯಂತ ಪ್ರತಿಭೆಯಿಂದ ಬೆಳಗುತ್ತಿರುವ ವ್ಯಕ್ತಿಗಳಲ್ಲಿ ವಿದ್ಯಾರಣ್ಯರು ಒಬ್ಬರು.ಇವರ ಕೀತಿ೯ಯು ಶಂಕರ ಭಗವತ್ಪಾದರ ಹತ್ತಿರಕ್ಕೇ ಬರುತ್ತದೆ.ಇವರ ಪ್ರತಿಭೆ ಬಹುಮುಖವಾದದ್ದು.ಇವರು ತಮ್ಮ ಸಮಕಾಲೀನರಾದ ಶ್ರೀ ವೇದಾಂತದೇಶಿಕರಂತೆ ಸಂಸ್ಕø ವಾಗ್ಮಯದಲ್ಲಿ ಮುಟ್ಟದಿದ್ದ ಜಾಗವಿಲ್ಲ.ವಿಜಯನಗರ ರಾಜ್ಯದ  ಮೊದಲನೆಯ ದಿನಗಳಲ್ಲಿ ಅದರ ರಕ್ಷಕರಾಗಿದ್ದು ಇವರು ಮಾಡಿದಸೇವೆ ಅಪರಿಮಿತವಾಗಿದೆ.ಅನಂತರ ಸವ೯ಸಂಗ ಪರಿತ್ಯಾ ಮಾಡಿದ ಸನ್ಯಾಸಿಗಳಾಗಿ ಇವರು ಮಾಡಿದ ಅಧ್ಯಾತ್ಮಿಕ ಸೇವೆ ಈಗಲೂ ಕಣ್ಣಿಗೆ ಕಟ್ಟುವಂತೆ ಆಗಿರುತ್ತದೆ. ಅದ್ವೈತದ ಪ್ರತಿಪಾದನೆ ಹಾಗೂ ವಿವರಣೆಯಲ್ಲಿ ಶ್ರೀ ಶಂಕರಾಚಾಯ೯ರು ಮೊದಲಿಗರು.ಎರಡನೆಯವರೇ ವಿದ್ಯಾರಣ್ಯರು ಎಂದು ನಿಸ್ಸಂದೇಹವಾಗಿ ಹೇಳಬಹುದು. 

             ಇವರ ಹಿಂದಿನ ಹೆಸರು ಮಾಧವಾಚಾಯ೯.ಇವರು ಪ್ರಸಿದ್ಧವಾದ ಒಂದು ಬ್ರಾಹ್ಮಣ ವಂಶದಲ್ಲಿ ಹುಟ್ಟಿದರು.ಭಾರದ್ವಾಜ ಗೋತ್ರದವರು.ಇವರ ತಂದೆ ಮಾಯಣ ಎಂದೂ ತಾಯಿ ಶ್ರೀಮತಿ ಎಂದು,ಒಂದು ಶ್ಲೋಕದ ಪ್ರಕಾರ ವಿದ್ಯಾತೀಥ೯,ಭಾರತೀ ತೀಥ೯,ಶ್ರೀಕಂಠ- ಮೂವರೂ ಇವರ ಗುರುಗಳೆಂದು ತಿಳಿದು ಬರುತ್ತದೆ.ಪರಾಶರ ಮಾಧವೀಯವು ಇವರು ಬುಕ್ಕರಾಜನ ಕುಲಗುರುಗಳೂ ಮಂತ್ರಿಗಳೂ ಆಗಿದ್ದರೆಂದು ತಿಳಿದು ಬರುತ್ತದೆ.ವಿಜಯನಗರದ ಬುಕ್ಕ ಮತ್ತು ಅವನಮಗ ಹರಿಹರ,ಕಂಪ ಮತ್ತು ಅವನ ಮಗ ಸಂಗಮ-ಇವರೊಂದಿಗೆ ಮೂವರು ಸಹೋದರರೂ ಸಂಬಂಧಿಸಿದ್ದರೆಂದು ಸಾಯಣರ ಗ್ರಂಥಗಳಿಂದ ತಿಳಿದು ಬರುತ್ತದೆ.ವಿದ್ಯಾರಣ್ಯರು ಶಾಲಿವಾಹನ ಶಕದ೧೨೫೮ರ ವೈಶಾಖ ಶುದ್ಧ ಭಾನುವಾರ (0..೧೩೩೫ ಕ್ರಿ..)ವಿಜಯನಗರವಮವನ್ನು ಸ್ಥಾಪಿಸಿದರೆಂದು  ಗುರುವಂಶ ಕಾವ್ಯವು ಹೇಳುತ್ತದೆ.ಇವರಿಗೆ ಕನಾ೯ಟಕ-ಸಿಂಹಾಸನ-ಸ್ಥಾಪನಾಚಾಯ೯ರೆಂಬ ಬಿರುದಿದೆ.ಇವರು ಕ್ರಿ..೧೩೭೭ರಿಂದ ೧೩೮೬ರ ವರೆಗೆ ಶೃಂಗೇರಿ ಮಠದ ಗಾದಿ(ಪೀಠ)ವನ್ನು ಅಲಂಕರಿಸಿದ್ದರೆಂದು ತಿಳಿದು ಬರುತ್ತದೆ.

ಇವರ ಗ್ರಂಥಗಳು:
ಜೀವನ್ಮುಕ್ತಿ ವಿವೇಕ ಮತ್ತು ಪಂಚದಶೀ -ಇವೆರಡು ವೇದಾಂತ ಗ್ರಂಥಗಳನ್ನು  ಮಾಧವಾಚಾಯ೯ರು  ಸನ್ಯಾಸ ಗ್ರಹಣದ ನಂತರ ಬರೆದರು.ಪರಾಶರ ಸ್ಮøತಿ-ವಾಖ್ಯಾ(ಪರಾಶರ -ಮಾಧವೀಯ),ಕಾಲ ನಿಣ೯ಯ,ಜೈಮಿನಿ-ನ್ಯಾಯಮಾಲಾ,ವೈಸಾಸಕ ನ್ಯಾಯಮಾಲಾ  ಸವ೯ದಶ೯ನ ಸಂಗ್ರಹ- ಗ್ರಂಥಗಳನ್ನು ವಿದ್ಯಾರಣ್ಯರು  ತಮ್ಮ ಪೂವಾ೯ಶ್ರಮದಲ್ಲಿದ್ದಾಗಲೇ  ರಚಿಸಿರಬೇಕು.ಪರಾಶರ ಮಾಧವೀಯವು ೨೩00 ಮುದ್ರಿತ ಪುಟಗಳನ್ನು ಹೊಂದಿದೆ.

                  ಪಂಚದಶಿಯು ಹದಿನೈದು ಪ್ರಕರಣಗಳನ್ನುಳ್ಳ ಗ್ರಂಥ.ಅದರ ಕೊನ್ಯ ಐದು ಪ್ರಕರಣಗಳಗು ಒಂದಕ್ಕೊಂದು ಸಂಬಂಧಿಸಿದವುಗಳಾಗಿ 'ಬ್ರಹ್ಮಾನಂದ'ಗ್ರಂಥವೆನಿಸಿರುತ್ತದೆ.ಪೂವ೯ಪಕ್ಷದ ಮತ್ತು ಸಿದ್ಧಾಂತದ  ಪ್ರತಿಪಾದನೆಯಲ್ಲಿಯೂ ಓದುಗರು ಅವರ
ಕಲ್ಪನಾಶಕ್ತಿಯನ್ನೂ  ನವೀನತೆಯನ್ನು ನೋಡಬಹುದು.

ಪ್ರಮಾಣಗಳು:  
ವೇದಾಣತ ಶಾಸ್ತ್ರವು ತತ್ವವನ್ನು ಅದ್ವಯವೆಂದು ಹೇಳುತ್ತದೆ.ಯಾವುದನ್ನು ಅರಿತುಕೋಡರೆ  ಎಲ್ಲವನ್ನೂ ಅರಿತಂತಾಗುವುದೋ ಅಂಥ ಜ್ಞಾನವೆಇದರ ಗುರಿ.ಬ್ರಹ್ಮವು ಎಲ್ಲವೂ ಆಗಿರುವುದರಿಂದ ಅದನ್ನು ಅರಿತಮೇಲೆ ಇನ್ನೂ ಅರಿತುಕೊಳಳಲು ಏನೂ ಇರುವುದಿಲ್ಲ.ಆತ್ಮಜ್ಞಾನವು ವೇದದ ಅಂತ.ಆತ್ಮಾನಂ ವಿದ್ಧಿ ಎಂಬುದು ಉಪನಿಷತ್-ಋಷಿಗಳ ಚರಮಸಂದೇಶ.ಆತ್ಮಜ್ಞಾನಕ್ಕೆ ಮುಖ್ಯವಾದ  ಸಾಧನ ಶಾಸ್ತ್ರದ ಅಧ್ಯಯ£ಕರಣ ವೃತ್ತಿಯು ಹುಟ್ಟುತ್ತದೆ.À;ಇದಕ್ಕೆ ಮನನ-ನಿಧಿಧ್ಯಾಸನಗಳೂ ಶಮದಮಾದಿಗಳೂ  ಸಹಾಯಕವಾದ ಉಪಸಾಧನಗಳಾಗಿರುತ್ತವೆ.ತತ್ವಮಸಿ ಮೊದಲಾದ  ಮಹಾವಾಕ್ಯಗಳ ತಾತ್ಪಯ೯ವನ್ನು ಅರಿತುಕೊಂಡಾಗ ಅಂತಃಕರಣವು ಬ್ರಹ್ಮವೃತ್ತಿತಾಗಿ ಪರಿಣಮಿಸುತ್ತದೆ.ಇದೇ ಬ್ರಹ್ಮ ಸಾಕ್ಷಾತ್ಕಾರ.ಬ್ರಹ್ಮ ಸಾಕಷಾತ್ಕಾರವು ಸಂಸಾರವನ್ನು ಹಿಮ್ಮೆಟ್ಟಿಸಿ ನುರತಿಶಯ ಆನಂದವನ್ನು ತರುತ್ತದೆ.ಪಾಶ್ಚಿಮಾತ್ಯ ತಾತ್ವಿಕರಿಗಿಂತ ಮೊದಲು  ಭಾರತೀಯ ದಶ೯ನಕಾರರು 'ಹೇಗೆ qಅರುಯುತ್ತೇವೆ?'ಎಂಬ ಮೊಟ್ಟಮೊದಲನೆಯ ಪ್ರಶ್ನೆಗೆ ಪರಿಹಾರವನ್ನು ಹೇಳಲು ಪ್ರಯತ್ನಿಸಿರುತ್ತಾರೆ.

       ಅದವೈತ ವೇದಾಂತ ಪ್ರಕಾರ ವಸ್ತುವಿನ ಜ್ಞಾನವು ಹೀಗಾಗುತ್ತದೆ:ಸದ್ರೂಪದಲ್ಲಿರುವ  ಅವಿದ್ಯೆಯೇ  ವ್ಯವಹಾರದ ಭೇದಗಳಿಗೆ ಕಾರಣವಾಗುತ್ತದೆ.ಇದು ಜ್ಞಾನಸ್ವರೂಪನೂ  ಸವ೯ಜ್ಞನೂ ಆತ್ಮನನ್ನು ಆವರಿಸಿತಾನೇ ಬಗೆ ಬಗೆಯ ರೂಪವುಳ್ಳ  ಜಗತ್ತಾಗುತ್ತದೆ.ಅಂತಃಕರಂದ ವೃತ್ತಿಯು ಪ್ರಮೇಯದೊಂದಿಗೆ ಬೆರೆತಾಗ ಆವಸ್ತುವಿನ ಆಕಾರವನ್ನೇ ¥ಡೆಯುವುದು.ಕೆರೆಯತೂಬಿನಿಂದ ಹೊರಟ ನೀರು  ಸಣ್ಣ ಸಣ್ಣ  ನಾಲೆಗಳ ಮೂಲಕ ಗದ್ದೆಯನ್ನು ಪ್ರವೇಶಿಸಿ ಗದ್ದೆಗಳ ಆಕಾರವನ್ನು ಪಡೆಯುವಂತೆ ಅಂತಃಕರಣವು ಆಯಾ ವಸ್ತುಗಳ  ಆಕಾರವನ್ನು ಪಡೆಯುತ್ತದೆ ಅಥವಾ 'ಮೂಸೆಯಲ್ಲಿ ಹೊಯ್ದ ಕರಗಿದ ತಾಮ್ರವು ಮೂಸೆಯ ಆಕಾರವನ್ನೇ ಹೊಂದುವಂತೆರೂಪಾದಿ ವಿಷಯಗಳನ್ನು ಗ್ರಹಿಸುತ್ತಿರುವ  ಚಿತ್ತವು  ಆಯಾ ರೂಪವನ್ನೇ ಹೊಂದುತ್ತದೆ.ಅಥವಾ 'ಬೆಳಗುತ್ತಿರುವ  ಬೆಳಕು ಬೆಳಗಿಸಿಕೊಳ್ಳುತ್ತಿರುವ  ಗಡಿಗೆ ಮೊದಲಾದವುಗಳ ಆಕಾರವನ್ನು ಹೊಂದುವಂತೆ ಬೆಳಗುವ ಬುದ್ಧಿಯುಆ ಎಲ್ಲಾ ವಸ್ತುಗಳ  ಆಕ್ಆರವನ್ನು ಹೊಂದುವುದು.ವಾತಿ೯ಕಕಾರರು ಹೇಳುವಂತೆ ಅಂತಃಕರಣದಲ್ಲಿರುವ ಚೈತನ್ಯದ ಪ್ರತಿಬಿಂಬದ ರೂಪವಾದ ಜೀವನಿಂದ (ಚಿದಾಭಾಸ=ಜೀವ)ಅಂತಃಕರಣ  ವೃತ್ತಿಯು ಹುಟ್ಟುತ್ತದೆ.ಹಾಗೆ ಹುಟ್ಟಿದ ಅಂತಃಕರಣ  ವೃತ್ತಿಯು ಗಡಿಗೆ ಮೊದಲಾದುವನ್ನು ಸೇರುವುದು.ಹಾಗೆ ಸೇರಿಕೊಂಡ ವೃತ್ತಿಯು  ವಿಷಯದ ಆಕಾರವನ್ನೇ ಪಡೆಯುವುದು.ಅಂತಃಕರಣವು ಅವಿದ್ಯೆಯ ಸತ್ವ ಗುಣದ ವಿಕಾರವಾದುದರಿಂದ  ಅದರಲ್ಲಿ ಚೈತನ್ಯವು ಹೊಳೆಯುತ್ತದೆ.

            ಚೈತನ್ಯವು ಅಖಂಡವಾದರೂ ಅದನ್ನು ಪ್ರತಿಬಿಂಬಿಸುವ ಅಂತಃಕರಣ ಭೇದದಿಂದ  ಮೂರುಭಾಗವಾಗಿ ಒಡೆದಿರುನಂತೆ ಕಾಣುತ್ತದೆ.   ) ಅಹಂಕಾರ ರೂಪದಲ್ಲಿರುವ ಅಂತಃಕರಣದ ಅಂಶವು 'ಪ್ರಮಾತೃ'ಎನಿಸ್ತ್ತದೆ.
) ವೃತ್ತಿಯಿಂದ ಪರಿಚಛಿನ್ನವಾದ ಅಂತಃಕರಣದ  ಅಂಶವು 'ಪ್ರಮಾಣ' ಎನಿಸುತ್ತದೆ.
)ವಸ್ತುವಿನ ಅಭಿವ್ಯಕ್ತಿಗೆ  ಯೋಗ್ಯತೆಯನ್ನು ಪಡೆದಿರುವ ಅಂತಃಕರಣವು  'ಪ್ರಮಿತಿ' ಎನಿಸುತ್ತದೆ.
ನಿಜವಾಗಿ ನೋಡಿದರೆ  ಪ್ರಮಾತೃ-ಪ್ರಮಾಣಾದಿ ಭೇದಗಳು ಸುಳ್ಳು.(ಪುಟ೧0 ಮುನ್ನುಡಿ)

          ತತ್ವಶಾಸ್ತ್ರದಲ್ಲಿ ಪ್ರಮಾಣ-ಪ್ರಮೇಯ ವಿಚಾರವು ಪ್ರತ್ಯಕ್ಷವನ್ನು ವಿಶೇಷವಾಗಿ ಅವಲಂಬಿಸಿದೆ.ಜಗತ್ತಿನ  ಸ್ವರೂಪವನ್ನು ಅರಿಯಬೇಕಾದರೆ ಜ್ಞಾನವುಂಟಾಗುವ ರೀತಿಯನ್ನು ಅರಿಯಬೇಕಾಗುತ್ತದೆ.ಸಾಕ್ಷಾತ್ತಾಗಿಯೂ ಅಪರೋಕ್ಷವಾಗಿಯೂ ಇರುವುದು ಪ್ರತ್ಯಕ್ಷದ ವಿಶೇಷ.ಪ್ರತ್ಯಕ್ಷದಿಂದ ಉಂಟಾದ ಜ್ಞಾನವು ಬಾಧಿತವಾಗದಿದ್ದರೆ  ಆಗ ಅದು ಪ್ರಮಾಣವಾಗುತ್ತದೆ. ದೃಷ್ಟಿಯಿಂ ಬ್ರಹ್ಮಜ್ಞಾನವು ಪ್ರಮೆ ಎನಿಸುತ್ತದೆ.ಬ್ರಹ್ಮಜ್ಞಾನಕ್ಕೆ ಸಾಧನವಾಗಿರುವ ವೇದಾಂತವು ಮಾತ್ರ ಪ್ರಮಾಣವಾಗುತ್ತದೆ.ಹೀಗಿದ್ದರೂ ಬ್ರಹ್ಮಜ್ಞಾನವಾಗುವವರೆಗೆ  ಬಾಹ್ಯವಸ್ತುಗಳ ಜ್ಞಾನವು ಬಾಧಿತವಾಗುವುದಿಲ್ಲ.ವ್ಯವರಾರದ ಪ್ರಮಾಣತೆಯು ಜಗತ್ತಿನ ಜ್ಞಾನದಲ್ಲಿ ಮಾತ್ರ  ಸಮಂಜಸತೆಯನ್ನು ಪಡೆದಿದೆ.ಆದರೆ ಬ್ರಹ್ಮಜ್ಞಾನವು ತ್ರಿಕಾಲದಲ್ಲಿಯೂ ಅಬಾಧಿತವಾಗಿ  ಪರಮಾಥ೯ ಸತ್ಯವಾಗಿರುತ್ತದೆ.

      ಪಂಚದಶಿಯಲ್ಲಿ ಅಭಾಸ-ವಾದವು ಪ್ರತಿಪಾದಿತವಾಗಿದೆ. ವಾದದ ಪ್ರಕಾರ  ಪ್ರತ್ಯಕ್ಷವು ಹೀಗಾಗುತ್ತದೆ.ಹೊರಗೆ ಒಂದು ಗಡಿಗೆಯು ಕಾಣುವಾಗ  ನಮ್ಮ ಬುದ್ಧಿಯು ಗಡಿಗೆಯ ಆಕಾರವನ್ನು   ತಾಳಿದ ವೃತ್ತಿಯಾಗುತ್ತದೆ. ವೃತ್ತಿಯಲ್ಲಿರುವ ಚೈತನ್ಯದ ಆಭಾಸವು 'ಇದು ಗಡಿಗೆ'ಎಂದು ಬೆಳಗುತ್ತದೆ.ಆದರೆ ' ಗಡಿಗೆಯನ್ನು ಅರಿತೆನು' ಎಂಬುದನ್ನು ಗಡಿಗೆಯ  ಆಧಾರವಾದ ಬ್ರಹ್ಮಚೈತನ್ಯವು ಬೆಳಗುವುದು.ಗಡಿಗೆಯು ತಿಳಿಯಿತೆಂಬುದನ್ನು ಬ್ರಹ್ಮಚೈತನ್ಯದಿಂದಲೇ ಆಗುವುದಾದರೆ  ಬುಉರಯ್ಓಜನವೇನು?-ಎಂದು ಕೇಳಬಹುದು.ಇದಕ್ಕೆ ಪಂಚದಶೀಕಾರರು ಹೀಗೆ ಉತ್ತರಿಸುತ್ತಾರೆ:'ಇದು ಗಡಿಗೆ'ಎಂಬ ವೃತ್ತಿಜ್ಞಾನವು  ಹುಟ್ಟುವುದಕ್ಕೆ ಮೊದಲು  ಬ್ರಹ್ನಚೈತನ್ಯವು ಗಡಿಗೆಯನ್ನು  ಅಜ್ಞಾತಭಾವದಿಂದ ಬೆಳಗಿತು.'ಇದು ಗಡಿಗ್'ಎಂಬ ವೃತ್ತಿಜ್ಞಾನವು  ಹುಟ್ಟಿದಮೇಲೂ  ಇದು ತಿಳಿಯಲ್ಪಟ್ಟಿತೆಂಬ ರೂಪದಿಂದ ಆಬ್ರಹ್ಮಚೈತನ್ಯವೇ ಬೆಳಗಿತು.

               'ಗಡಿಗೆಯನ್ನು ಅರಿತೆನು'  ಅಥವಾ 'ಗಡಿಗೆಯನ್ನು ಅರಿಯಲಿಲ್ಲ'ಎಂಬ ಎರಡೂ ಬಗೆಯಾದ ಜ್ಞಾನಕ್ಕೂ ಬ್ರಹ್ಮಚೈತನ್ಯವೇ ಆಧಾರವಗಿದೆ.(ಪುಟ೧೧ ಮುನ್ನುಡಿ).ಒಂದು ವಸ್ತುವಿನ ಜ್ಞಾತತ್ವ ಮತ್ತು ಅಜ್ಞಾತತ್ವ -ಇವೆರಡು ಧಮ೯ಗಳೂ  ಬ್ರಹ್ಮದಿಂದಲೇ ವ್ಯಕ್ತವಾಗುತ್ತವೆ.(ಪುಟ೧೧ ಮುನ್ನುಡಿ)

       ಬ್ರಹ್ಮಚೈತನ್ಯವು  ಒಂದು ವಸ್ತುವಿನ  ಜ್ಞಾತತ್ವವನ್ನೂ ಅಜ್ಞಾತತ್ವವನ್ನೂ  ಬೆಳಗುವಂತೆ ಚಿದಾಭಾಸದಿಂದ ಕೂಡಿದಬುದಧಿವೃತ್ತಿಯು 'ಇದು ಗಡಿಗೆ' ಎಂದು ಬೆಳಗುವುದಕ್ಕೆ ಬೇಕಾಗುತ್ತದೆ.ಚಿದಾಭಾಸವಿಲ್ಲದ ಕೇವಲ ಬುದ್ಧಿಯು  ಜಡವಾದ್ದರಿಂದ  ವಸ್ತುವನ್ನು ಬೆಳಗಲಾರದು.ಚಿದಾಭಾಸವು ಒಂದು ಕನ್ನದಿಯಂತೆ ಸ್ವಚ್ಛವಾಗಿರುವುದರಿಂದ  ಅದಕ್ಕೆ ಬೆಳಗಲು ಸಾಮಥ್ಯ೯ವಿರುವುದು;ಆದರೆ ಕಲ್ಲು ಮಣ್ಣುಗಳು ಬೆಳಕನ್ನು ಪ್ರತಿಫಲಿಸಲಾರವು;ಇದು ಗಡಿಗೆ ಎಂದು ತಿಳಿದುಬಂದಾಗ ಫಲವುಂಟಾಗುತ್ತದೆ.ಎಂದರೆ ಗಡಿಗೆಯಲ್ಲಿ ಚೈತನ್ಯದ ಆಭಾಸವಾಗುತ್ತದೆ.;ಇದಕ್ಕೆ ಚಿದಾಭಾಸವೆಂದು ಹೆಸರು.ಚಿದಾಭಾಸದಿಂದ ಕೂಡಿದ ಬುದ್ಧಿವೃತ್ತಿಯು  ಒಂದು ವಸ್ತುವನ್ನು ವ್ಯಾಪಿಸಿಕೊಂಡಾಗ ಅದರಲ್ಲಿ ಚೈತನ್ಯವು ಪ್ರತಿಫಲಿಸುತ್ತದೆ. ಪ್ರತಿಫಲನವು ವಸ್ತುವನ್ನು ವ್ಯಕ್ತಮಾಡುತ್ತದೆ;ಇದಕ್ಕೆ ಫಲವೆಂದು ಹೆಸರು.(ಪುಟ೧೧ ಮುನ್ನುಡಿ)

        ಫಲವು ಬ್ರಹ್ಮಚೈತನ್ಯವಲ್ಲ;ಏಕೆಂದರೆ ವಸ್ತುವು ತಿಳಿಯ ಬರುವುದಕ್ಕೆ ಮೊದಲೂ ತಿಳಿಯ ಬಂದಾಗಲೂ ತಿಳಿದನಂತರವೂ  ಚೈತನ್ಯವು ಇರುತ್ತದೆ.ತಿಳಿಯಬರುವ ವಸ್ತುಗಳಲ್ಲಿ  ಉಂಟಾಗುವ ಫಲವು ಚೈತನ್ಯದ ಆಭಾಸವೇ(ಎಂದರೆ ಚಿದಾಭಾಸವೇ ) ಹೊರತುಚೈತನ್ಯವಲ್ಲ. ಬ್ರಹ್ಮದ ಚೈತನ್ಯವು  ವೃತ್ತಿಯನ್ನೂ  ಆಭಾಸವನ್ನೂ ವಿಷಯವನ್ನೂ ಬೆಳಗಿದರೆ ಆಭಾಸವು ವಿಷಯವನ್ನು ಮಾತ್ರ ಬೆಳಗುತ್ತದೆ.ಚಿದಾಭಸದಿಂದ ಕೂಡಿದ ಬುದ್ಧಿವೃತ್ತಿಯು 'ಇದು ಗಡಿಗೆ'ಎಂದು ಬೆಳಗಿದ ಗಡಿಗೆಗಳನ್ನೆಲ್ಲಾ  ಬ್ರಹ್ಮಚೈತನ್ಯವು 'ಇದನ್ನು ಅರಿಯುತ್ತೇನೆ'ಎಂದು ಬೆಳಗುತ್ತದೆ.(ಪುಟ೧೨ ಮುನ್ನುಡಿ)

            ಅದ್ವೈತವೇದಾಂತವು ) ಪ್ರತ್ಯಕ್ಷ )ಅನುಮಾನ೩) ಉಪಮಾನ೪)ಅಥಾ೯ಪತ್ತಿ )ಅನುಪಲಬ್ಧಿ ) ಆಗಮ-ಇವುಗಳನ್ನು ಪ್ರಮಾಣಗಳೆಂದು ಒಪ್ಪಿಕೊಂಡಿರುತ್ತದೆ. ವೇದಾಂತಕ್ಕೆ ಅತ್ಯಂತವಾದ 'ಮೇಲುಮನವೆ'ಎಂದರೆ ಆಗಮ ಅಥವಾ ಶ್ರುತಿ. ಶ್ರುತಿಯು  ಪ್ರತ್ಯಕ್ಷಕ್ಕಿಂತಲೂ ಅನುಮಾನಕ್ಕಿಂತಲೂ  ಬಲವತ್ತರವಾಗಿದೆ.ವ್ಯವಹಾರದಲ್ಲಿ ಪ್ರತ್ಯಕ್ಷವು ಸರಿಯಾಗಿ ಕೆಲಸ ಮಾಡಬಹುದು.ಏಕೆಂದರೆ ಸಾವಿರಾರು ಶ್ರುತಿಗಳು ಗಡಿಗೆಯನ್ನು ಬಟ್ಟೆಯನ್ನಾಗಿ ಮಾಡಲಾರವು.ಆದರೆ ಅತೀಂದ್ರಿಯ ವಿಷಯಗಳಲ್ಲಿ ಶ್ರುತಿಯೊಂದೇ ವರಿಷ್ಠ.ಪ್ರತ್ಯಕ್ಷ ಅನುಮಾನ ಇವುಗಳಾದ ನಂತರ ಶ್ರುತಿಯು ಪ್ರತಿಪಾದಿಸುವ ಅಭೇದ ಜ್ಞಾನವುಂಟಾಗುವುದರಿಂದ  ಅದು ಪ್ರತ್ಯಕ್ಷ ಅನುಮಾನಗಳನ್ನು ಬಾಧಿಸುತ್ತದೆ.ಮುಂದಿನ ಜ್ಞಾನವು ಹಿಂದಿನ ಜ್ಞಾನವನ್ನು ಬಾಧಿಸುವುದಕ್ಕೆ ಅಪಚ್ಛೇದ ನ್ಯಾಯವೆಂದು ಹೆಸರು.ಪ್ರತ್ಯಕ್ಷಾದಿ ಪ್ರಮಾಣಗಳಿಂದ ಉಂಟಾಗುವ  ಭೇದಜ್ಞಾನವನ್ನು  ಆಗಮ ಜ್ಞಾನವು ಬಾಧಿಸಿ ಅಭಾದ ಜ್ಞಾನವನ್ನುಂಟು ಮಾಡುತ್ತದೆ.ಆದರೂ ಶಾಸ್ತ್ರದ ತಾತ್ಪಯ೯ವನ್ನು ಅರಿತುಕೊಳ್ಳುವುದಕ್ಕೆ  ಉಪಪತ್ತಿಯು(ತಕ೯  ಸರಣಿಯು)ಒಂದು ಮುಖ್ಯವಾದ ಅಂಗವಾಗಿದೆ.(ಪುಟ೧೨ ಮುನ್ನುಡಿ)

ಬ್ರಹ್ಮವು ಸತ್ ಸ್ವರೂಪ:
          ಪ್ರಮಾಣ- ಪ್ರಮೇಯ   ವಿಚಾರದಿಂದ  ಮೂಲತತ್ವದ ವಿಚಾರಕ್ಕೆ  ಬರುವುದು ಸಹಜವಾದ ದಾರಿ.ಸತ್ಯ ಎಂದರೇನು? ಸದ್ವಸ್ತು ಎಂದರೇನು?ಎಂಬ ಪ್ರಶ್ನೆಗೆ  ಅಧ್ಯಾತ್ಮ ಶಾಸ್ರ್ತವು ಮಾತ್ರ ಉತ್ತರವನ್ನು ಕೊಡಬಲ್ಲದು.ಒಂದು ವಸ್ತುವಿನ ಸ್ವರೂಪವನ್ನು ಎರಡು ಬಗೆಯಿಂದ ನಿಣ೯ಯಿಸಬಹುದು.  ಅದರ೧) ನಿಜವಾದ ಸ್ವರೂಪ ) ಅದರ ಆಗಂತುಕ ಗುಣಗಳ ಮೂಲಕ ಅದನ್ನು ಇತರ ವಸ್ತುಗಳಿಂದ ಬೇರೆ ಮಾಡಬಹುದು.ಮೊದಲನೆಯದಕ್ಕೆ ಸ್ವರೂಪ ಲಕ್ಷಣವೆಂದೂ ಎರಡನೆಯದಕ್ಕೆ ತಟಸ್ಥ ಲಕ್ಷಣವೆಂದೂ ಹೆಸರು.
) ಜಗತ್ತಿನ ಕಾರಣತ್ವವು ಬ್ರಹ್ಮದ ತಟಸ್ಥ ಲಕ್ಷಣ.ಸಚ್ಚಿದಾನಂದ ಸ್ವರೂಪವು  ಬ್ರಹ್ಮದ ಸ್ವರೂಪ ಲಕ್ಷಣ.
ಈಗ ನಮಗೆ ಬೇಕಾಗಿರುವುದು   ಬ್ರಹ್ಮದ ಸ್ವರೂಪ ಲಕ್ಷಣ.ಶ್ರುತಿಯು  ಪ್ರತಿಪಾದಿಸುವ ಸ್ವರೂಪ ಲಕ್ಷಣವು  ಬ್ರಹ್ಮದ ಸ್ವರೂಪವನ್ನು          ಅನೃತವೂ ಜಡವೂ ದುಃಖರೂಪವೂ  ಆದ ಜಗತ್ತಿನಿಂದ ಬೇರೆಮಾಡುತ್ತದೆ.ಸತ್-ಚಿತ್-ಆನಂದಗಳು ಬ್ರಹ್ಮದ ಗುಣಗಳೂ ಅಲ್ಲ.ಅವಯವಗಳೂ ಅಲ್ಲ. ಸತ್ಯದಲ್ಲಿ ಸ್ವಗತ-ವಿಗತ ಭೇದಗಳಿಲ್ಲ.ಸತ್-ಚಿತ್-ಆನಂದಗಳು  ಬ್ರಹ್ಮದ ಸ್ವರೂಪವೇ ಆಗಿವೆ.ಅವು ಬ್ರಹ್ಮಕ್ಕಿಂತ ಬೇರೆಯಾಗಿ ಕಂಡರೂ  ಅವು ನಿಜವಾಗಿ ಬ್ರಹ್ಮವೇ ಆಗಿವೆ.(ಪುಟ೧೩ ಮುನ್ನುಡಿ)

      ಹದಿನೈದು  ಪ್ರಕರಣಗಳಿರುವ ಗ್ರಂಥಕ್ಕೆ  ಪಂಚದಶಿಯೆಂಬ ಹೆಸರು  ಹೇಳಿದ್ದಾಯಿತು. ಹದಿನೈದು  ಅಧ್ಯಾಯಗಳನ್ನು ಮೂರು ಪಂಚಕಗಳನ್ನಾಗಿ ವಿಂಗಡಿಸಬಹುದು.) ವಿವೇಕ ಪಂಚಕ-ಬ್ರಹ್ಮದ ಸತ್ ಸ್ವರೂಪವನ್ನು ಪ್ರತಿಪಾದಿಸುತ್ತದೆ.) ದೀಪ ಪಂಚಕ-ಬ್ರಹ್ಮದ ಚುತ್ ಸ್ವರೂಪ£ವನ್ನು ಪ್ರತಿಪಾದಿಸುತ್ತದೆ.) ಆನಂದ ಪಂಚಕವು ಆನಂದ ಸ್ವರೂಪವನ್ನು ಪ್ರತಿಪಾದಿಸುತ್ತದೆ.(ಪುಟ೧೩ ಮುನ್ನುಡಿ)
ಕೆಲವರು ತತ್ವವನ್ನು ವಿಷಯಿಯ ದೃಷ್ಟಿಯಿಂ ಅನ್ವೇಷಿಸುತ್ತಾರೆ. ಮತ್ತೆ ಕೆಲವರು ವಿಷಯದ ದೃಷ್ಟಿಯಿಂದ ಅನ್ವೇಷಿಸುತ್ತಾರೆ.ಒಳಗಿನಿಂದಲೂ ಮತ್ತು ಹೊರಗಿನಿಂದಲೂ  ತತ್ವವನ್ನು ವಿಚಾರಿಸುವುದು  ಉಪನಿಷನಿತ್ತಿನ ರೀತಿ.
) ಹೃದಯದಲ್ಲಿರುವ ಹೃದಯವೋ  ಹೊರಗಿನ ಆಕಾಶವೂ ಒಂದೇ.
)ಸೂಯ೯ಮಂಡಲದಲ್ಲಿರುವ ಪುರುಷನೂ  ಕಣ್ಣಿನಲ್ಲಿರುವ ಪುರುಷನೂ ಒಂದೇ.
)ಏಕವೂ ಅದ್ವಯವೂ ಆದ ಸದ್ವಸ್ತುವಿನಿಂದ  ಬಾಹ್ಯ ಜಗತ್ತು ಹೊರಬರುತ್ತದೆ.
) ಪ್ರತ್ಯಗಾತ್ಮನಿಗೂ ಜಗದಾತ್ಮನಿಗೂ  ಭೇದವಿಲ್ಲ.
ಹೀಗೆ ಪರಮಾಥ೯ಸತ್ಯವು ವೇದಾಂತದಲ್ಲಿ ಪ್ರತಿಪಾದಿಸಲ್ಪಟ್ಟುದೆ. ರೀತಿಯನ್ನು ವಿದ್ಯಾರಣ್ಯರು  ಬಹಳ ಚೆನ್ನಾಗಿ  ಪ್ರಯೋಗಿಸಿದ್ದಾರೆ.

              ಎರಡನೆಯ ಪ್ರಕರಣವಾದ  ಪಂಚಭೂತವಿವೇಕದಲ್ಲಿ ಬಾಹ್ಯದೃಷ್ಟಿಯಿಂದ   ಬ್ರಹ್ಮವನ್ನು ಹೇಗೆ ಜಗತ್ತಿನಿಂದ ಬೇರೆ ಮಾಡಬೇಕು ಎಂಬುದನ್ನು ತಿಳಿಸಿರುತ್ತಾರೆ. ಮೂರನೆಯ  ಪ್ರಕರಣವಾದ ಪಂಚಕೋಶ ವಿವೇಕದಲ್ಲಿ ಅಂತರಿದೃಷ್ಟಿಯಿಂದ  ಬ್ರಹ್ಮವನ್ನು ಪಂಚಕೋಶಗಳಿಂದ ವಿವೇಚಿಸುತ್ತಾರೆ.

ಸತ್ಸ್ವರೂಪವು ಬದಲಾಗುವುದಿಲ್ಲ.ಯದಾವದುದು ಅನೃತವೊ ಅದಕ್ಕೆ ಮಾತ್ರ  ವಿಕಾರವಿದೆ.ಪರಮಾಥ೯ವು ಮಾತ್ರ ಸತ್ಸ್ವರೂಪವೆಂದೂ  ಉಳಿದೆಲ್ಲವೂ ಅಸತ್ಯವೆಂದೂ  ಅನ್ವಯ-ವ್ಯತಿರೇಕಗಳಿಂದ  ವಿದ್ಯಾರಣ್ಯರು ತೋರಿಸುತ್ತಾರೆ.(ಪುಟ ೧೪  ಮುನ್ನುಡಿ) 
     
ನಮ್ಮ ಇಂದ್ರಿಯಗಳಿಗೆ ಗೋಚರವಾಗುವ ನಾಮರೂಪಾತ್ಮಕ ಜಗತ್ತನ್ನು ನಾವು ನಿಜವೆಂದು ತಿಳಿದಿರುತ್ತೇವೆ.ಸ್ವಲ್ಪ ಯೋಚನೆ ಮಾಡಿದರೆ  ರಥಮ ದಶ೯ನ ಅಷ್ಟು ನಿಜವೆಂದು ಕಾಣುವುದಿಲ್ಲ.ನಾವು ಅನುಭವಿಸುವ ಪ್ತಿಯೊಂದು ವಸ್ತುವಿಗೂ ಐದು ಲಕ್ಷಣಗಳಿವೆ.)ಅಸ್ತಿ(ಇರುವಿಕೆ,ಸತ್))ಭಾತಿ (ತೋರುವಿಕೆ)) ಪ್ರಿಯ (ಪ್ರಿಯವಾಗಿರುವಿಕೆ))  ನಾಮ(ಹೆಸರು) ಮತ್ತು ) ರೂಪ(ಆಕಾರ).ಮೊದಲನೆಯ ಮೂರು ಬ್ರಹ್ಮದ ಸಚ್ಚಿದಾನಂದ ಸ್ವರೂಪ.ಯಾವ ವಸ್ತುವೇ ಆಗಲಿ ಅದರಲ್ಲಿರುವ ಅಸ್ತಿ ಭಾತಿ ಪ್ರಿಯಗಳು  ಬ್ರಹ್ಮಕ್ಕೆ ಮಾತ್ರ ಸೇರಿದ್ದು.(ಪುಟ೧೪ ಮುನ್ನುಡಿ.)

ಮಾಯೆಯ  ಮೊದಲನೆಯ ವಿಕಾರವಾದ ಆಕಾಶವು  ಬೆಹ್ಮದ ಸ್ವರೂಪವಾದ ಅಸ್ತಿ-ಭಾತಿ-ಪ್ರಿಯಗಳಿಂದ ಕೂಡಿರುತ್ತದೆ.ಅದರ ಅವಕಾಶವು ಆಕಾಶದ ಸ್ವರೂಪ.ಅದ್ವೈತಿಯು ಆಕದಾಶವದು ಮಿಥ್ಯೆ ಎಂದು ಹೇಳುವಾಗ ಅಸ್ತಿ-ಭಾತಿ-ಪ್ರಿಯಗಳು ಸುಳ್ಳೆಂದು ಹೇಳುವುದಿಲ್ಲ.ಆಕಾಶದ ಸ್ವರೂಪವಾದ ಅವಕಾಶವು ಸುಳ್ಳೆಂದು ಹೇಳುತ್ತಾನೆ.ಅವಕಾಶವು ಸ್ಯಳ್ಳೆಂದು ಹೇಳುವುದಕ್ಕೆ ಕಾರಣಗಳಿವೆ.ಆಕಾಶವು ಹುಟ್ಟುವುದಕ್ಕೆ ಮೊದಲು ಅದು ಇರಲಿಲ್ಲ.ಪ್ರಲಯದಲ್ಲಿ ಆಕಾಶವು ನಾಶವಾದಾಗ ಅದೂ ಹೋಗುತ್ತದೆ.ಯಾವುದು ಆದಿಯಲ್ಲಿ ಮತ್ತು ಅಂತ್ಯದಲ್ಲಿ ಇರುವುದಿಲ್ಲವೊ ಅದು ಮಧ್ಯದಲ್ಲೂ ಇರುವುದಿಲ್ಲ.(ಪುಟ೧೪ ಮುನ್ನುಡಿ)  

ಆದರೆ ಬ್ರಹ್ಮದ ನಿಜ ಸ್ವರೂಪವೂ ಯಾವಾಗಲೂ ಇರುತ್ತದೆ.ಸೃಷ್ಟಿಗೆ ಮೊದಲು ಅದ್ವಯವಾದ ಸದ್ವಸ್ತುವೊಂದೇ ಇತ್ತು.ನಾಮರೂಪಗಳಿರಲಿಲ್ಲ.ಅನಂತರ ಉತ್ಪನ್ನವಾದಭೂತ ಬೌತಿಕವಸ್ತುಗಳೂ  ಇಂದ್ರಿಯಗಳೂ ಮಾಯೆಯ ವಿಕಾರಗಳು.ಇವೆPಲ್ಲವೂ ಅದ್ವಯ ಬ್ರಹ್ಮದಮೇಲೆ ಆರೋಪಿಸಲ್ಪಟ್ಟಿವೆ.ಪರಮಾಥ೯ ಸ್ವರೂಪವಾದ ಸದ್ರೂಪಕ್ಕೆ ಹೊರಗಿನ ಸಂಬಂಧವಾಗಲೀ ಒಳಗಿನ ಭೇದಗಳಾಗಲೀ ಇಲ್ಲ.ಅದಕ್ಕೆ ಸಂಬಂಧಪಡತಕ್ಕ ವಸ್ತುವೇ ಇಲ್ಲ.(ಪುಟ೧೫ ಮುನ್ನುಡಿ)

)ಸ್ವಗತಭೇದ: ಒಂದು ವೃಕ್ಷದ ಒಳಗಿರುವ ಭೇದ-ಫಲ ಪುಷ್ಪ ಪತ್ರ ಕೊಂಬೆ,ಕಾಂಡ,ಬೇರು ಇತ್ಯಾದಿ
) ಸಜಾತೀಯ ಭೇದ:ಒಂದು ವೃಕ್ಷಕ್ಕೂ ಇನ್ನೊಂದು ವೃಕ್ಷಕ್ಕೂ ಇರುವ ಭೇದ.
) ವಿಜಾತೀಯ ಭೇದ:ಮರ ಕಲ್ಲು ಮನುಷ್ಯ ಇತ್ಯಾದಿಗಳಲ್ಲಿರುವ ಭೇದ.
ಆದರೆ ಸತ್ ಸ್ವರೂಪದಲ್ಲಿ ಮೂರು ಭೇದಗಳು ಇರುವುದಿಲ್ಲ.(ಪುಟ ೧೫,ಮುನ್ನುಡಿ).

ಸಚ್ಚಿದಾನಂದಗಳು ಬ್ರಹ್ಮದ ಅವಯವಗಳಲ್ಲ.ಬ್ರಹ್ಮವು ನಿರವಯವ(ಪುಟ೧೫,ಮುನ್ನುಡಿ)

ನಾಮರೂಪಗಳೆಂಬ ಉಪಾಧಿಗಳ ಹೊರತು  ಮತ್ತೊಂದು ಭೇದವು ಸದ್ವಸ್ತುವಿನಲ್ಲಿಲ್ಲ(ಪುಟ೧೫ ಮುನ್ನುಡಿ)

ಮಾಧ್ಯಮಿಕರು ಜಗತ್ತು ಶೂನ್ಯವೆಂದು ಹೇಳುತ್ತಾರೆ. 'ಶೂನ್ಯವೆಂದರೆ ಇಲ್ಲದ್ದು.'ಶೂನ್ಯವಿತ್ತು' ಎಂದು ಹೇಳುವಾಗ  'ಇತ್ತು'ಎಂಬ ಮಾತಿ
ನಲ್ಲಿ  ಇರುವಿಕೆಯ ಅಥ೯ವಿರುವುದು.ಶೂನ್ಯಕ್ಕೆ ಸ್ವರೂಪವಿಲ್ಲದಿರುವುದರಿಂದ  ಅದು ಭಾಂತಿಗೆ ಆಧಾರವಾಗಲಾರದು.ಆಧಾರರಹಿತವಾದ ಭ್ರಾಂತಿಯು ಇಲ್ವೇ ಇಲ್ಲ!(ಪುಟ೧೬ ಮುನ್ನುಡಿ)

ಪ್ರಶ್ನೆ ಮತ್ತು ಉತ್ತರ ದ್ವೈತದ ಭಾಷೆಗೆ ಸೇರಿದುದು.ಅದ್ವೈತದ ಭಾಷೆಯಲ್ಲಿ  ಪ್ರಶ್ನೆಯೂ ಇಲ್ಲ .ಅದಕ್ಕೆ ಉತ್ತ್ರರವೂ ಇಲ್ಲ.(ಪುಟ೧೬ ಮುನ್ನುಡಿ)

ಎಚ್ಚರವನ್ನೂ  ಕನಸನ್ನೂ ಅನುಭವಿಸುವ  ಜ್ಞಾನವು ಬೇರೆ ಬೇರೆಯಾಗಿದ್ದರೆ  ಅವುಗಳ ಐಕ್ಯವು ಸಾಧ್ಯವಾಗುತ್ತಿರಲಿಲ್ಲ.ನಿಜವಾದ ಸತ್ ಸ್ಯರೂಪವು ಜ್ಞಾನಕ್ಕೆ ಮಾತ್ರ ಸೇರಿದ್ದು.ಸ್ವಯಂಪ್ರಕಾಶವೂ ಏಕಾಕಾರವೂ  ಆದ ಈಜ್ಞಾನಕ್ಕೆ ಉದಯಾಸ್ತಗಳಿಲ್ಲ..ಇದು ಯಾವಾಗಲೂ ನಿತ್ಯಪ್ರಕಾಶ.(ಪುಟ೧೭   ಮುನ್ನುಡಿ).

ಪಂಚಕೋಶಗಳೆಲ್ಲವೂ ಅನಿತ್ಯ.ಅನ್ನಮಯವು ಅನ್ನದ ವಿಕಾರ.ಪ್ರಾಣಮಯವೂ  ಆತ್ಮವಲ್ಲ ಏಕೆಂದರೆ ಅದು ಜದವೂ ಅಚೇತನವೂ ಆಗಿದೆ.
ಮನೋಮಯವೂ ಆತ್ಮವಲ್ಲ ಏಕೆಂದರೆ ಅದು ಕಾಮಕ್ರೋಧಾದಿಗಳಿಂದ ಚಂಚಲವಾಗಿದೆ.ವಿಜ್ಞಾನಮಯವೂ ಆತ್ಮವಲ್ಲ.ಏಕೆಂದರೆ ಅದು ನಿದ್ರೆಯಲ್ಲಿ ಲಯವಾಗುತ್ತದೆ.ಆನಂದಮಯವೂ ಆತ್ಮವಾಗಲಾರದುಏಕೆಂದರೆ ಆನಂದವು ಯಾವಾಗಲೊ ಒಂದುಸಲ ಜೀವನದಲ್ಲಿ ಪ್ರತಿಬಿಂಬಿಸುತ್ತದೆ. ಆನಂದಮಯ ಕೋಶಕ್ಕೆ ಕಾರಣವಾದ ಯಾವ   ಆನಂದವಿದೆಯೊ ಅದು ನಿತ್ಯವಾದುದರಿಂದ ಆತ್ಮನು.(ಪುಟ೧೮ ಮುನ್ನುಡಿ)

ಪಂಚಕೋಶಗಳನ್ನು ಮಿಥ್ಯೆಯೆಂದು ತೊರೆದಮೇಲೆ ಉಳಿದುದನ್ನು ಶೂನ್ಯವೆಂದು ಅರಿಯಬಾರದು. ಏಕೆಂದರೆ ಶೂನ್ಯಕ್ಕೂ ಸಾಕ್ಷಿಯು ಬೇಕಾಗುತ್ತದೆ.ಆತ್ಮನ ಅರಿವಾಗದಿದ್ದರೆ ಯಾವ ಅರಿವೂ ಆಗುವುದಿಲ್ಲ.ಇದೇ ಎಲ್ಲ ಅರಿವುಗಳಿಗೆ ಆಶ್ರಯವಾಗಿದೆ.ಇದಕ್ಕೆ ಯಾವ ಪ್ರಮಾಣವೂ ಇಲ್ಲ.ಏಕೆಂದರೆ ಇದು ಪ್ರಮಾಣಗಳಿಗೆಲ್ಲ ಆಧಾರವಾಗಿದೆ.ಆದುದರಿಂದ ಐದು ಕೋಶಗಳಿಗೂ ಸಾಕ್ಷಿಯಾದ ಅರಿವು ಮಾತ್ರ ಉಳಿಯುವುದು.(ಪುಟ೧೮ ಮುನ್ನುಡಿ)

ಬ್ರಹ್ಮವು ಚಿತ್ ಸ್ವರೂಪ:

'ಪ್ರಜ್ಞಾನವು ಬ್ರಹ್ಮ'' ಅವಸ್ಥೆಯಲ್ಲಿ ಪುರುಷನು ಸ್ವಯಂಜ್ಯೋತಿಯಾಗಿರುತ್ತಾನೆ' 'ಆತ್ಮವಾ ಅವನ ಜ್ಯೋತಿಯಾಗಿರುತ್ತದೆ.'ಎಂದು ಶ್ರುತಿಗಳು ಸಾರುತ್ತವೆ.ಬ್ರಹ್ಮವು ಕೇವಲ ಸತ್ ಸ್ವರೂಪವಲ್ಲ ಚಿತ್ ಸ್ವರೂಪವೂ ಹೌದು.ಅದು ಸ್ವಯಂಪ್ರಕಾಶವಾಗಿ ಎಲ್ಲವನ್ನೂ ಬೆಳಗುತ್ತದೆ.ಅದಕ್ಕೆ ಉದಯಾಸ್ತಗಳಾಗಲೀ  ವೃದ್ಧಿಕ್ಷಯಗಳಾಗಲೀ ಇಲ್ಲ.(ಪುಟ೧೯ ಮುನ್ನುಡಿ)

ಯಾವುದರಿಂದ ಎಲ್ಲವನ್ನೂ ಅರಿಯುತ್ತೇವೆಯೊ  ಅದನ್ನು ಅರಿಯುವವನು ಯಾವನಿರುವನು.?ಎಂದು ಯಾಜ್ಞವಲ್ಕ್ಯನು ಕೇಳುತ್ತಾನೆ.ಆತ್ಮನು ಎಲ್ಲವನ್ನೂ ಅರಿಯುತ್ತಾನೆ.ಅವನನ್ನು ಅರಿಯಬಲ್ಲ ಬೇರೊಬ್ಬನಿಲ್ಲ.ಬ್ರಹ್ಮವು ನಾಮರೂಪಾತ್ಮಕವಾದ ಜಗತ್ತೂ ಅಲ್ಲ.  ನಮಗೆ ಗೋಚರಿಸದ ಅವ್ಯಾಕೃತವೂ ಅಲ್ಲ.ಮಾಯೆಯೂ ಅಲ್ಲ. ಮಾಯೆಯ ಕಾಯ೯ವೂ ಅಲ್ಲ.ಅದು ಜ್ಞಾನ ಜ್ಞಾನದ ಬೆಳಕಿಲ್ಲದಿದ್ದರೆ  ಜಗತ್ತೆಲ್ಲ  ಕುರುಡಾಗುತ್ತಿತ್ತು.ಬ್ರಹ್ಮವು ಸ್ವಯಂ ಪ್ರಕಾಶ ಅಥವಾ ಚಿತ್ ಸ್ವರೂಪ ಎಂಬ ಮೂಲತತ್ವದ ಮೇಲೆ ಅದ್ವೈತವು ನಿಂತಿದೆ.ಶ್ರುತಿಯು ಹೇಳುವಂತೆ ಬ್ರಹ್ಮವು ಪ್ರಜ್ಞಾನ.(ಪುಟ೧೯ ಮುನ್ನುಡಿ)

ಅದ್ವೈತದ ಪ್ರಕಾರ ಆತ್ಮನೇ ಬ್ರಹ್ಮ. ಆತ್ಮನು ಚೈತನ್ಯ ಸ್ವರೂಪನು. ಸ್ವಯಂಪ್ರಕಾಶವುಳ್ಳವನು. ಇವನು ಸಾಕ್ಷಿಯಾಗಿ   ಎಲ್ಲವನ್ನೂ ಬೆಳಗುತ್ತಾನೆ.(ಪುಟ೧೯ ಮುನ್ನುಡಿ)

ವಿವೇಕಿಯಾದವನು ಎಲ್ಲಾ ಶ್ರುತಿಗಳಿಗೂ  ಬ್ರಹ್ಮವೇ ತಾತ್ಪಯ೯ವೆಂದು  ಸಮನ್ವಯ ಮಾಡಿಕೊಂಡು  ಆನಂದ ಸಾಗರದಲ್ಲಿ ಮಗ್ನನಾಗಿರುತ್ತಾನೆ.ಅವಿವೇಕಿಯಾದರೋ ಶ್ರುತಿಗಳ ತಾತ್ಪಯ೯ವನ್ನು ಅರಿಯದೆ ತಪ್ಪು ತಿಳುವಳಿಕೆಯನ್ನು ಹೊಂದುತ್ತಾನೆ.(ಪುಟ೨0 ಮುನ್ನುಡಿ)

ನಾಟಕದೀಪದಲ್ಲಿ  ವಿದ್ಯಾರಣ್ಯರು ಸಾಕ್ಷಿಯನ್ನು ನಾಟಕ ಶಾಲೆಯಲ್ಲಿರುವ ದೀಪಕ್ಕೆ ಹೋಲಿಸುತ್ತಾರೆ.ದೀಪವು ಅಲ್ಲಿ ನೆರೆದಿರುವವರನ್ನೆಲ್ಲ -ತಾನು ಯಾವ ಬದಲಾವಣೆಯನ್ನು ಹೊಂದದೆ ಬೆಳಗುತ್ತದೆ.ನಿದ್ರೆ  ಸಮಾಧಿ ಇವ್ಗಳಲ್ಲಿ  ಅಹಂಕಾರಾದಿಗಳು ಇಲ್ಲದಿದ್ದರೂ  ಆತ್ಮನು ಎಂದಿನಂತೆ ತನ್ನಷ್ಟಕ್ಕೆ ತಾನೇ ಬೆಳಗುತ್ತಾನೆ.(ಪುಟ 0 ಮುನ್ನುಡಿ)   

ಬುದ್ಧಿಯೂ ಕೂಡ ಸಾಕ್ಷಿಯ ಬೆಳಕಿನಿಂದಲೇ ಬೆಳಗುತ್ತದೆ.ಸಾಕ್ಷಿಗೆ ಒಳಗೆ ಹೊರಗೆ ಎಂಬ ಭೇದವಿಲ್ಲ.(ಪುಟ೨0 ಮುನ್ನುಡಿ)

ಸಾಕ್ಷಿಯು ಬುದ್ಧಿಯ ಸಹವಾಸದಿಂದ  ಕ್ರಿಯೆಯನ್ನು ಮಾಡುವಂತೆ ತೋರುತ್ತದೆ.(ಪುಟ೨೧ ಮುನ್ನುಡಿ)

ಸಾಕ್ಷಿಯು ಸವ೯ದಾ ಸ್ವಯಂಪ್ರಕಾಶನಾಗಿರುವುದರಿಂದ  ಇಂದ್ರಿಯಗಳ ಸಹಾಯವಿಲ್ಲದೆ ಬೆಳಗುತ್ತಾನೆ.(ಪುಟ೨೧ ಮುನ್ನುಡಿ)

ಚಿತ್ರದೀಪ ಪ್ರಕರಣದಲ್ಲಿ  ಪರಬ್ರಹ್ಮ ,ಕೂಟಸ್ಥ, ಈಶ್ವರ,ಜೀವ  ಎಂಬ ಭಾವನೆಗಳನ್ನೆಲ್ಲ ದೃಷ್ಟಾಂತದ ಮೂಲಕ ವಿವರಿಸಿ ಹೇಳಿದೆ.ಪರಬ್ರಹ್ಮವು  ನಿರುಪಾಧಿಕವಾದ ಆಕಾಶದಂತೆ. 


ಗಡಿಗೆಯ  ನೀರಿನಲ್ಲಿ ಪ್ರತಿಬಿಂಬಿಸುವ ಆಕಾಶವು  ಚಿಕ್ಕದಾಗಿದ್ದರೆ ಮೇಘಗಳಲ್ಲಿ ಪ್ರತಿಬಿಂಬಿಸುವ ಆಕಾಶವು ದೊಡ್ಡದಾಗಿರುತ್ತದೆ. ಮೇಘಗಳಲ್ಲಿ ಪ್ರತಿಬಿಂಬಿಸುವ  ಆಕಾಶಕ್ಕೆ ಈಶ್ವರನನ್ನು ಹೋಲಿಸಬಹುದು.ಹೀಗೆ ಜೀವ ಈಶ್ವರರಿಬ್ಬರೂ ಚೈತನ್ಯದ ಪ್ರತಿಬಿಂಬಗಳು.೯ಪುಟ೨೧ ಮುನ್ನುಡಿ)

ಕಪ್ಪೆಚಿಪ್ಪು ಬೆಳ್ಳಿಯಾಗಿ ತೋರುವಾಗ  'ಇದು'ಎಂಬುದರ ಮೇಲೆ ಬೆಳ್ಳಿಯನ್ನು ಹೊರಿಸುವಂತೆ  ನಿವಿ೯ಕಾರಿಯಾದ ಆತ್ಮನ ಮೇಲೆ'ನಾನು'ಎಂಬುದನ್ನು ಹೊರಿಸುತ್ತೇವೆ.(ಪುಟ೨೨ ಮುನ್ನುಡಿ)

ಪ್ರಾಣಿಗಳೆಲ್ಲ ಪರಮಾನಂದದ ಒಂದಂಶವನ್ನು ತೆಗೆದುಕೊಂಡು  ಬದುಕುತ್ತಿರುವುದರಿಂದ  ಪ್ರಾಣಿಗಳು ಅನುಭವಿಸುವ ಆನಂದವು  ಬ್ರಹ್ಮಾನಂದದ ಒಂದಂಶವಾಗಿದೆ.(ಪುಟ೨೨ ಮುನ್ನುಡಿ)

ಜ್ಞಾನವೇ ಮೋಕ್ಷಕ್ಕೆ ಸಾಕ್ಷಾತ್ ಕಾರಣವಾಗಿದೆ.ಆದರೂ ವಿದ್ಯಾರಣ್ಯರು  ಯೋಗಕ್ಕಗೆ ಎರಡನೆಯ ಸ್ಥಾನವನ್ನು ಕೊಟ್ಟಿದ್ದಾರೆ.(ಪುಟ೨೩ ಮುನ್ನುಡಿ)

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,


)           ತತ್ವ ವಿವೇಕ ಪ್ರಕರಣ:

)ವಿಲಾಸದಿಂದ ಕೂಡಿರುವ ಮಹಾಮೋಹವೆಂಬ ಮೊಸಳೆಯನ್ನು ನಾಶಮಾಡುವುದೇ  ಮುಖ್ಯ ಕಮ೯ವಾಗಿ ಉಳ್ಳ ಶ್ರೀ¸ಶಂಕರಾನಂದ ಗುರುಗಳ ಪಾದಾರವಿಂದಕ್ಕೆ  ವನಮಿಸುತ್ತೇನೆ.(ಪುಟ೧)

) ಗುರುಗಳ ಅಡಿದಾವರೆಗಳ ಸೇವೆಯಿಂದ  ನಿಮ೯ಲವಾದ ಮನಸ್ಸುಳ್ಳ ಅಧಿಕಾರಿಗಳಿಗೆ ಅನಾಯಾಸವಾಗಿ ತತ್ವಜ್ಞಾನವಾಗುವುದಕ್ಕಾಗಿ  ತತ್ವದ ವಿವೇಚನೆಯು ಮಾಡಲ್ಪಟ್ಟಿಡುವುದು.(ಪುಟ )

)ಎಚ್ಚರದಲ್ಲಿ ನಮಗೆ  ವೇದ್ಯವಾದಶಬ್ದ ಸ್ಪಶ೯ಗಳೇ  ಮೊದಲಾದವು  ತಮ್ಮ ವಿಲಕ್ಷಣ ಭಾವಗಳಿಂದ  ಪರಸ್ಪರ ಬೇರೇ ಬೇರೆ ಯಾಗಿ ತೋರುವುವು.ಅರಿಯುತ್ತಿರುವ ಜ್ಞಾನವನ್ನು ಶಬ್ದಾದಿ ವಿಷಯಗಳಿಂದ  ಬುದ್ಧಿಯ ಮೂಲಕ  ಬೇಪ೯ಡಿಸಿ ನೋಡಿದರೆ  ಅದು ಏಕಾಕಾರ
ದಲ್ಲಿರುವುದರಿಂದ  ಪರಸ್ಪರ ಭೇದವನ್ನು ಹೊಂದುವುದಿಲ್ಲ.(ಪುಟ೨)

)ಜಾಗ್ರದವಸ್ಥೆಯಲ್ಲಿ ಹೇಗೋ  ಸ್ವಪ್ನಾವಸ್ಥೆಯಲ್ಲಿಯೂ ಹಾಗೆಯೇ.ಸ್ವಪ್ನದಲ್ಲಿ ಕಂಡುಬರುವ ವಸ್ತುಗಳು  ಸ್ಥಿರವಾಗಿರುವುದಿಲ್ಲ.ಜಾಗ್ರದಾವಸ್ಥೆಯಲ್ಲಿ   ಕಂಡುಬರುವ  ವಸ್ತುಗಳು ಸ್ಥಿರವಾಗಿರುವಂತೆ  ತೋರುತ್ತವೆ.ಆದುದರಿಂದಲದೇ ಅವಸ್ಥೆಗಳಿಗೆ ಭೇದವಿರುತ್ತದೆ.ಆದರೆ ಅವಸ್ಥೆಗಳ ಜ್ಞಾನವು ಏಕರೂಪವಾಗಿರುತ್ತದೆಯೇ ಹೊರತು  ಭಿನ್ನವಾಗಿರುವುದಿಲ್ಲ.(ಪುಟ೨)

)ಸುಷುಪ್ತಿ ಕಾಲದ ಅಜ್ಞಾನವು  ಕಾಲದಲ್ಲಿ ಜ್ಞಾನದಿಂದ ಅನುಭವಿಸಲ್ಪಟ್ಟಿದೆ   ಎಂಬುದು ಸಿದ್ಧವಾಯಿತು.(ಪುಟ೩)


)ಅವಸ್ಥಾತ್ರಯದಲ್ಲಿಯೂ ಜ್ಞಾನವು ಏಕರೂಪವಾಗಿರುತ್ತದೆ.(ಪುಟ )

)ಮಾಸಗಳು ವಷ೯ಗಳು ಯುಗಗಳು  ಕಲ್ಪಗಳು ಭೂತಭವಿಷ್ಯಗಳು -ಇವುಗಳಲ್ಲಿ ಜ್ಞಾನವು ಅಭೇದವಾಗಿ ಹರಿಯುತ್ತದೆ. ಏಕಾಕಾರವಾದ ಜ್ಞಾನಕ್ಕೆ  ಸೈ೯ನಂತೆ ಉದಯಾಸ್ತಗಳಿಲ್ಲ.ತನಗೆ ತಾನೇ ಪ್ರಕಾಶಿಸುತ್ತದೆ.(ಪುಟ )

) ನಿತ್ಯ ಜ್ಞಾನವೇ ಆತ್ಮ    ಎಂಬ ಶಬ್ದದಿಂದ ವ್ಯವಹರಿಸಲ್ಪಡುತ್ತದೆ.'ನಾನು ಎಂದಿಗೂ  ಇಲ್ಲದವನಾಗದಿರಲಿ ,ನಾನು ಯಾವಾಗಲೂ ಇರಲಿ' ಎಂದು ಪ್ರತಿಯೊಬ್ಬನೂ ತನ್ನ ವಿಡಯದಲ್ಲಿ ಪ್ರೀತಿಯನ್ನು ತೋರುತ್ತಾನೆ.ಆದುದರಿಂದ ಪರಮಪ್ರೇಮಾಸ್ಪದನಾದ  ಆತ್ಮನು  ಪರಮಾನಂದ ಸ್ವರೂಪನಾಗಿರುತ್ತಾನೆ.(ಪುಟ )   

)ಹೀಗೆ ಆತ್ಮನು ಸಚ್ಚಿದಾನಂದ ಸ್ವರೂಪನೆಂದು  ಯುಕ್ತಿಯಿಂದ ಸಾಧಿಸಿದ್ದಾಯಿತು.ಪರಬ್ರಹ್ಮವೂ ಸ್ವರೂಪವೇ ಆಗಿದೆ.ಅವರಿಬ್ಬರ ಐಕ್ಯವನ್ನು ಉಪನಿಷತ್ತುಗಳಲ್ಲಿ ಹೇಳಿದೆ.(ಪುಟ )

೯)ಇಲ್ಲಿ ವಿಪರೀತ ಜ್ಞಾನಗಳಿಗೆ  ಮುಖ್ಯಕಾರಣವಾದ ಅನಾದಿ ಅವಿದ್ಯೆಯೇ  ಕಾರಣವು.(ಪ್ದುಟ೬)

0)ಸತ್ವ,ರಜಸ್ಸು ತಮಸ್ಸು-ಇವುಗಳ ಸಾಮ್ಯಾವಸ್ಥೆಗೆ  ಪ್ರಕೃತಿ ಎಂದು ಹೆಸರು. ಪ್ಕøತಿಯು ಎರಡು ಬಗೆಯಾಗಿರುತ್ತದೆ.(ಪುಟ೬)

೧೧)ಅದು ವಿಶುದ್ಧ  ಸತ್ವವು ಪ್ರಧಾನವಾಗಿರುವಾಗ 'ಮಾಯೆ'ಎನಿಸುತ್ತದೆ.
ಮಲಿನ ಸತ್ವವು ಪ್ರಧಾನವಾಗಿರುವಾಗ  ಅವಿದ್ಯೆ ಎನಿಸುತ್ತದೆ.
ವಿಶುದ್ಧ ಸತ್ವವಾದ ಮಾಯೆಯಲ್ಲಿ ಪ್ರತಿಬಿಂಬಿಸಿದ  ಬ್ರಹನವು ಈಶ್ವರ ಎನಿಸುತ್ತದೆ.
ಈಶ್ವರನು ಮಾಯೆಯನ್ನು ವಶಪಡಿಸಿಕೊಂಡು ಸವ೯ಜ್ಞನಾಗಿರುತ್ತಾನೆ.(ಪುಟ )

೧೨)ಅವಿದ್ಯೆಯಲ್ಲಿ ಪ್ರತಿಬಿಂಬಿಸುವ  ಬ್ರಹ್ಮವು ಜೀವ ಎನಿಸುತ್ತದೆ.ಜೀವನು ಅವಿದ್ಯೆಯ ವಶದಲ್ಲಿರುತ್ತಾನೆ.ಜೀವನು ಅವಿದ್ಯಾ ವೈಚಿತ್ರ್ಯದಿಂದ ಅನೇಕ ಬಗೆಯಾಗಿರುತ್ತಾನೆ.ಅವಿದ್ಯೆಯು ಕಾರಣ  ಶರೀರವೆನಿಸಿರುತ್ತದೆ. ಕಾರಣ ಶರೀರದಲ್ಲಿ 'ನಾನು'ಎಂಬ ಅಭಿಮಾನವುಳ್ಳ ಜೀವನು 'ಪ್ರಾಜ್ಞ'ನೆನಿಸುತ್ತಾನೆ.(ಪುಟ )

೧೩)ವಿನ್ಶ ವಿಲ್ಲದ ಪ್ರಜ್ಞೆಯುಳ್ಳವನಾದುದರಿಂದ ಪ್ರಾಜ್ಞನು.(ಪುಟ )

೧೪)ಈಶ್ವರಾಜ್ಞೆಯು ನಿಮಿತ್ತಕಾರಣ.ಪ್ರಕೃತಿಯು ಉಪಾದಾನ ಕಾರಣ.(ಪುಟ )

೧೫)ಆಕಾಶಾದಿ ಪಂಚ ಭೂತಗಳ ಸತ್ವಾಂಶದಿಂದ  ಕ್ರಮವಾಗಿ ಶ್ರೋತ್ರೇಂದ್ರಿಯ ತ್ವಗಿಂದ್ರಿಯ ಚಕ್ಷುರಿಂದ್ರಿಯ ¸ರಸನೇಂದ್ರಿಯ  ಘ್ರಾಣೇಂದ್ರಿಯ  ಎಂಬ ಹೆಸರುಳ್ಳ  ಪಂಚ ಜ್ಞಾನೇಂದ್ರಿಯಗಳು ಹುಟ್ಟುತ್ತವೆ.(ಪುಟ )

೧೬)ಪಂಚ ಭೂತಗಳ ಸತ್ವಾಂಶದಿಂದ  ಅಂತಃಕರಣವು   ಹುಟ್ಟುತ್ತದೆ. ಅಂತಃಕರಣವು ಪರಿಣಾಮ ಭೇದದಿಂದ ಎರಡು ವಿಧವಾಗಿದೆ:
ಸಂಶಯ ರೂಪವಾದದ್ದು ಮನಸ್ಸು.ನಿಶ್ವಯಾತ್ಮಕವಾದದ್ದು ಬುದ್ಧಿ.(ಪುಟ )

೧೭)ಆಕಾಶಾದಿ ಪಂಚಭೂತಗಳ  ರಜಸ್ಸಿನ ಅಂಶಗಳಿಂದ  ಕ್ರಮವಾಗಿ೧)ವಾಕ್ಕು೨) )ಪಾಣಿ೩)ಪಾದ )ಪಾಯು )ಉಪಸ್ಥ-ಎಂಬ ಪಂಚ ಕಮೇ೯ಂದ್ರಿಯಗಳು ಹುಟ್ಟಿದವು.
ಆಕಾಶ-ವಾಕ್ಕು
ವಾಯು-ಪಾಯು
ಅಗ್ನಿ-ಪಾದ
ನೀರು-ಉಪಸ್ಥ
ಭೂಮಿ-ಪಾಯು ಇವು ಹುಟ್ಟುತ್ತವೆ.(ಪುಟ  ೯)

೧೮)ಪಂಚ ಭೂತಗಳ ರಜೋಂಶದಿಂದ ಪ್ರಾಣವು ಹುಟ್ಟಿತು.ಅದು ಪ್ರಾಣನಾದಿ ವ್ಯಾಪಾರ ಭೇದದಿಂದ  ಪ್ರಾಣ ಅಪಾನ ಸಮಾ£  ಉದಾನ ವ್ಯಾನ ಎಂದು ಐದು ವಿಧವಾಗಿದೆ.(ಪುಟ ೯)

೧೯)ಸೂಕ್ಷ್ಮ ಶರೀರ:(ಇದನ್ನೆ ವೇದಾಣತದಲ್ಲಿ ಲಿಂಗ ಶರೀರವೆನ್ನುತ್ತಾರೆ)
  ಜ್ಞಾನೇಂದ್ರಿಯಗಳಗು
  ಕಮೇ೯ಂದ್ರಿಯಗಳು
ಪ್ರಾಣಗಳು   ಮತ್ತು ಮನಸ್ಸು ಹಾಗೂ ಬುದ್ಧಿ.ಇವುಗಳು ಸೇರಿವೆ.(ಪುಟ ೯)

0)ಜೀವ-ಲಿಂಗಶರೀರದಲ್ಲಿರುವ ಅಭಿಮಾನದಿಂದ -ತೈಜಸ ಎನಿಸುತ್ತಾನೆ.
ಈಶ್ವರನು -ಲಿಂಗ ಶರೀರದಲ್ಲಿರುವ ಅಭಿಮಾನದಿಂದ'ಹಿರಣ್ಯಗಣ೯' ಎಣಬ ಹೆಸರನ್ನು ಪಡೆಯುತ್ತಾನೆ.
ಇವರಿಬ್ಬರಿಗೆ ವ್ಯಷ್ಟಿ ಮತ್ತು ಸಮಷ್ಟಿ ಭೇದವಿದೆ.(ಪುಟ 0)

೨೧)ಪರಮೇಶ್ವರನು ಇಂದ್ರಿಯಗಳನ್ನು ಹೊರಗೇ ಹೋಗುವಂತೆ ಮಾದಿರುತ್ತಾನೆ.ಆದುದರಿಂದ ಮನುಷ್ಯನು ಹೊರಗೆ ನೋಡುತ್ತಾನೆ.ಅಂತರಾತ್ಮನನ್ನು ನೋಡುವುದಿಲ್ಲ(ಕಠ ಉ೨..) ಎಂದು ಶ್ರುತಿಯು ಹೇಳುತ್ತದೆ.(ಪುಟ ೧೨)

೨೧)ಅನ್ನಮಯ ಪ್ರಾಣಮಯ ಮನೋಮಯ ವಿಜ್ಞಾನಮಯ ಆನಂದಮಯ -ಇವು ಪಂಚಕೋಶಗಳುಆತ್ಮನು ಪಂಚಕೋಶಗಳಿಂದ ಆಚ್ಛಾದಿತನಾಗಿ (ಆವರಿಸಲ್ಪಟ್ಟು) ಸ್ವಸ್ವರೂಪವನ್ನು ಮರೆತಿದ್ದರಿಂದ ಸಂಸಾರವನ್ನು ಹೊಂದುತ್ತಾನೆ.(ಪುಟ೧೩)

೨೨)ಅನ್ವಯ ವ್ಯತಿರೇಕಗಳ ಮೂಲಕ  ಪ್ರತ್ಯಗಾತ್ಮನನ್ನು ಪಂಚಕೋಶಗಳಿಂದ ಬೇಪ೯ಡಿಸಿ  ಅನಂತರ ಅವುಗಳಿಂದ ತನ್ನನ್ನು   ಉದ್ಧರಿಸಿ (ಚಿದಾನಂದ ರೂಪವನ್ನು ನಿಶ್ಚಯಿಸಿ) ಪರಬ್ರಹ್ಮವನ್ನು ಹೊಂದುತ್ತಾನೆ.(ಪುಟ ೧೪)

೨೩)ಜ್ಞಾನೇಂದ್ರಿಯಗಳು +ಮನಸ್ಸು=ಮನೋಮಯಕೋಶ.
ಜ್ಞಾನೇಂದ್ರಿಯ + ಬುದ್ಧಿ=ವಿಜ್ಞಾನಮಯ ಕೋಶ.(ಪುಟ ೧೩)

೨೪)ತತ್ ಪದಾಥ೯ವಾದ-ಪರಮಾತ್ಮ
ತ್ವಂ ಪದಾಥ೯ವಾದ -ಜೀವಾತ್ಮ.(ಪುಟ

೨೫)ಮುಂಜವೆಂಬ ಹುಲ್ಲಿನಿಂದ ದಂಟನ್ನು ತೆಗೆಯುವಂತೆ ಪ್ರತ್ಯಗಾತ್ಮನನ್ನು  ಅನ್ವಯ-ವ್ಯತಿರೇಕ-ಲಕ್ಷಣೋಪಾಯದ ಮೂಲಕ (ಅಥೂಲ-ಸೂಕ್ಷ್ಮ-ಕಾರಣ) ಶರೀರಗಳಿಂದ ಧೀರರು ಬೇಪ೯ಡಿದರೆ ಪ್ರತ್ಯಗಾತ್ಮನೇ ಪರಬ್ರಹ್ಮವಾಗುವನು.(ಪುಟ೧೬)


೨೬) ಹೀಗೆ ತತ್ ಪದಾಥ೯ವಾದ ಬ್ರಹ್ಮನಿಗೂ (ಪರಮಾತ್ಮನಿಗೂ) ತ್ವಂ ಪದಾಥ೯ವಾದ ಜೀವಾತ್ಮನಿಗೂ ಅಭಿನ್ನತ್ವವು ಯುಕ್ತಿಯಿಂದ ಅಂಗೀಕರಿಸಲ್ಪಟ್ಟಿತು. ಏಕತ್ವವು ತತ್ವಮಸಿ ಮೊದಲಾದ ಮಹಾವಾಕ್ಯಗಳಿಂದ ಬೋಧಿಸಲ್ಪಡುತ್ತದೆ.(ವಿರುದ್ಧಾಂಶಗಳನ್ನು ಬಿಡುವುದರ ಮೂಲಕ ಲಕ್ಷಣಾ ವೃತ್ತಿಯಿಂದ )(ಪುಟ೧೬)

೨೭)ಜೀವನ ಉಪಾಧಿ-ಅವಿದ್ಯೆ
ಬ್ರಹ್ಮದ ಉಪಾಧಿ-ಮಾಯಾ.(ಪುಟ ೧೮)

೨೮)ತತ್ವಮಸ್ಯಾದಿ-ವಾಕ್ಯಗಳಿಂದ  ಅವುಗಳ ಅಥಾ೯ನು ಸಂಧಾನವು  ಶ್ರವಣವಾಗುವುದು.
ಯುಕ್ತಿಯಿಂದ ಕೇಳಲ್ಪಟ್ಟ ಅಥ೯ದ ಅನುಸಂಧಾನವು  ಮನನವಾಗುವುದು.(ಪುಟ೨0)

೨೯)ಆ ಶ್ರವಣ ಮನನಗಳಿಂದ  ಸಂಶಯರಹಿತವಾದ  ವಿಷಯದಲ್ಲಿ ಸ್ಥಾಪಿಸಲ್ಪಟ್ಟ(ಧಾರಣೆಯಿಂದ ಕೂಡಿದ)ಚಿತ್ತದ ಯಾವ ಏಕಾಕಾರ ವೃತ್ತಿ ಪ್ರವಾಹವಿದೆಯೊ ಅದು ನಿದಿಧ್ಯಾಸನವೆಂದು ಪ್ರಸಿದ್ಧವಾಗಿದೆ.(ಪುಟ 0)

0)ಯಾವಾಗ ಚಿತ್ತವು  ಧ್ಯಾನಿಸುವವನು ಮತ್ತು ಧ್ಯಾನ ಎಂಬ ಎರಡನ್ನು ಕ್ರಮವಾಗಿ ತ್ಯಜಿಸಿ  ಧ್ಯೇಯವೊಂದನ್ನೇ ವಿಷಯವಾಗಿ ಹೊಂದಿ ಗಾಳಿಯಿಲ್ಲದ ಪ್ರದೇಶದಲ್ಲಿರುವ ದೀಪದಂತಿರುವುದೊ ಆಗ ಅವಸ್ಥೆಯು  'ಸಮಾಧಿ'ಎಂದು ಕರೆಯಲ್ಪಡುವುದು.(ಪುಟ೨0)

೩೧)ಮನುಷ್ಯನು ತಾನು ಅನುಭವಿಸಿದ್ದನ್ನೇ  ಸ್ಮರಿಸಿಕೊಳ್ಳುತ್ತಾನೆ.(ಪುಟ೨೧)

೩೨)ಯೋಗಿಯು ಫಲದಾಸೆಯನ್ನು ಬಿಟ್ಟಿರುವುದರಿಂದ ಅವನ ಕಮ೯ವು  ಅಶುಕ್ಲವೆನಿಸಿದೆ.ಎಂದರೆ ಪುಣ್ಯವೂ ಅವನನ್ನು ಸೋಂಕುವುದಿಲ್ಲ.ಪಾಪಕಮ೯ವನ್ನು ಮಾಡದೇ ಇರುವುದರಿಂದ ಪಾಪವೂ ಅವನನ್ನು ಸೋಂಕುವುದಿಲ್ಲ.ಇದು ಅಕೃಷ್ಣ.(ಪುಟ೨೧)

೩೩) ಅನಾದಿಯಾದ  ಸಂಸಾರದಲ್ಲಿ  ಸಂಪಾದಿಸಲ್ಪಟ್ಟ  ಅಪರಿಮಿತವಾದ ಕಮ೯ಗಳು  ನಿವಿ೯ಕಲ್ಪ ಸಮಾಧಿಯಿಂದ  ನಾಶವನ್ನು ಹೊಂದುತ್ತವೆ ಮತ್ತು ಶುದ್ಧವಾದ ಧಮ೯ವು ವೃದ್ದಿಸುತ್ತದೆ.( ಪರಾವರ ಬ್ರಹ್ಮವು  ಸಾಕ್ಷಾತ್ಕರಿಸಲ್ಪಟ್ಟರೆ ಇವನ ಕಮ೯ಗಳು  ಕ್ಷೀಣವಾಗುತ್ತವೆ.(ಕ್ಷೀಯಂತೇ ಚಾಸ್ಯ ಕಮಾ೯ಣಿ ತಸ್ಮಿನ್    ದೃಷ್ಟೇ ಪರಾವರೇ(ಮುಂ....೯)(ಪುಟ ೨೨)

೩೪) ಯೋಗಜ್ಞರು ಸಮಾಧಿಯನ್ನು ಧಮ೯ಮೇಘ ಸಮಾಧಿ ಎಂದು ಕರೆಯುತ್ತಾರೆ.(ಪುಟ ೨೨)

೩೫)ಸಮಾಧಿಯ ಪ್ರಯೋಜನಗಳು:) ಅವಾಂತರ ಪಯೋಜನ:ಕಮ೯ಗಳು ನಾಶವಾಗಿ ಧಮ೯ವು ವೃದ್ಧಿಸುತ್ತದೆ. )ಸಮಾಧಿಯ ಪರಮ ಪ್ರಯೋಜನ ಹೀಗಿದೆ. ಸಮಾಧಿಯಿಂದ  ಸಂಸ್ಕಾರ ಸಮೂಹವು ನಾಶಹೊಂದುತ್ತದೆ ಮತ್ತು ಪಾಪ ಪುಣ್ಯಗಳೆಂಬ ಕಮ೯ಗಳ ಗುಂಪು  ಬೇರುಸಹಿತ ನಾಶವಾಗುತ್ತದೆ.ಹಿಂದೆ ಪರೋಕ್ಷವಾಗಿ  ತೋರುತ್ತಿದ್ದ ಬ್ರಹ್ಮತತ್ವದಲ್ಲಿ -ಅಂಗೈಯಲ್ಲಿನ ನೆಲ್ಲಿಕಾತಿಯಂತೆ-ಪ್ರತ್ಯಕ್ಷವಾಗಿ(ಬ್ರಹ್ಮತತ್ವವನ್ನು ಪ್ರಕಟಪಡಿಸುವುದಕ್ಕೆ  ಸಮಥ೯ವಾದ)ಜ್ಞಾನವನ್ನು ಹುಟ್ಟಿಸುತ್ತದೆ.(ಪುಟ೨೩)

೩೬)ಗುರುಮುಖದಿಂದ ಪಡೆದ  ತತ್ವಮಸ್ಯಾದಿ ವಾಕ್ಯಜನ್ಯವಾದ   ಪರೋಕ್ಷ  -ಬ್ರಹ್ಮಜ್ಞಾನವು  ಬುದ್ಧಿಪೂವ೯ಕವಾಗಿ ಮಾಡಲ್ಪಟ್ಟ ಸಮಸ್ತ ಪಾಪವನ್ನೂ ಬೆಂಕಿಯಂತೆ ಸುಡುತ್ತದೆ.(ಪುಟ೨೩)

೩೭)ಮನುಷ್ಯನು ಹೀಗೆ ಆತ್ಮನನ್ನು ಪಂಚಕೋಶಗಳಿಂದ ವಿಂಗಡಿಸಿ  ಶಾಸ್ತ್ರೋಕ್ತ ಪ್ರಕಾರವಾಗಿ ಮನಸ್ಸನ್ನು   ಸ್ಥಿರಗೊಳಿಸಿ(ಅಪರೋಕ್ಷ ಜ್ಞಾನದಿಂದ  ಸಂಸಾರ ಬಂಧನವನ್ನು ಹೋಗಲಾಡಿಸಿಕೊಂಡು  ನಿರತಿಶಯಾನಂದ ರೂಪವಾದ  ಮೋಕ್ಷವನ್ನು  ಶೀಘ್ರವಾಗಿ ಹೊಂದುತ್ತಾನೆ.(ಪುಟ೨೪)

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,


No comments:

Post a Comment