Sunday, 2 February 2020

Vidayaranya Saara Sangraha - Panchadashi - Part -9



೧೨)ಬ್ರಹ್ಮಾನಂದದಲ್ಲಿ ಆತ್ಮಾನಂದ ಪ್ರಕರಣ:

) ಯೋಗಿಯಾದವನು  ಸುಷುಪ್ತಿಯ ಬ್ರಮಾನಂದಕ್ಕಿಂತಲೂ ,ಸುಮ್ಮನಿರುವ ಅವಸ್ಥೆಯ  ವಾಸನಾನಂದಕ್ಕಿಂಯಲೂ  ಬೇರೆಯಾದ  ಆತ್ಮಾನಂದವನ್ನು ಅನುಭವಿಸಬಹುದು. ಅನಾದಿಯಾದ  ಸಂಸಾರದಲ್ಲಿ ಮುಳುಗಿದ ಮೂಢನಗತಿಯೇನು?(ಎಂದು ಶಿಷ್ಯನು ಕೇಳುತ್ತಾನೆ.)(ಪುಟ ೪೧೨)

)ಅವನು ತತ್ವಜ್ಞಾನದಿಂದ ವಿಮುಖನಾಗಿದ್ದರೆ  ಅವನಿಗೆ ಯಥೋಚಿತ ಉಪಾಸನೆಯನ್ನಾಗಲಿ ಅಥವಾ ಕಮ೯ವನ್ನಾಗಲಿ ಹೇಳಬೇಕು.(ಪುಟ ೪೧೩)

)ಹೀಗೆ ಪತಿ ಪ್ಯತ್ರ ಧನ ಬ್ರಾಹ್ಮಣ ಕ್ಷತ್ರಿಯ ಲೋಕಗಳು  ದೇವತೆಗಳು ವೇದಗಳು ಪಂಚಭೂತಗಳು -ಇವೆಲ್ಲವೂ ತನಗೆ ಬೇಕಾಗಿ ಪ್ರಿಯವಾಗಿವೆಯೇ ಹೊರತು  ತಮಗೆ ತಾವೇ ಪ್ರಿಯವಲ್ಲ .(ಎಂದು ಬೋಧಿಸಿದನು)(ಪುಟ೪೧೩)

)ಪತಿಗೋಸ್ಕರ ಪತಿಯು ಪ್ರಿಯಬಲ್ಲ,ಪತ್ನಿಯ ಕಾಮಕ್ಕೋಸ್ಕರ  ಅವನು ಪ್ರಿಯನಾಗಿರುವನು. ಸಮಸ್ತ ಭೋಗ್ಯವಸ್ತುಗಳೆಲ್ಲವೂ  ಭೋಗಿಸುವವನ ಇಚ್ಛೆಯಿಂದಲೇ  ಪ್ರಿಯವಾಗಿರುವುವು..(ಪುಟ ೪೧೪)

)ಎತ್ತಿಗೆ ಭಾರವನ್ನು ಹೊರಲು  ಬಯಕೆ ಇಲ್ಲದಿದ್ದರೂ  ಅದರ ಮಾಲಿಕನ ಬಲಾತ್ಕಾರದಿಂದ  ಭಾರವನ್ನು ಹೊರುತ್ತದೆ.ವ್ಯಾಪಾರಿಯು ತನ್ನ ಪ್ರಯೋಜನಕ್ಕಾಗಿ  ಭಾರವನ್ನು ಹೊರಿಸುತ್ತಾನೆಯೇ ಹೊರತು  ಅದರ ಪ್ರಯೋಜನಕ್ಕಲ್ಲ.(ಪುಟ೪೧೫)
ಹೀಗೆಒಬ್ಬರನ್ನೊಬ್ಬರು ಪ್ರೀತಿಸುವುದಕ್ಕೆ  ತಮ್ಮ ತಮ್ಮ ಕಾಮವು  ಪೂತಿ೯ಯಾಗುವ ಬಯಕೆಯೇ ಕಾರಣವಾಗಿದೆ.೯ಪುಟ ೪೧೪)
)ಸಮಸ್ತ ಪ್ರಾಣಿಗಳೂ :
) ತನ್ನ ಆಧಾರಕ್ಕಾಗಿ ಭೂಮುಯನ್ನೂ
) ಬಾಯಾರಿಕೆಯನ್ನು ನೀಗಲಾಡಿಸಲು ನೀರನ್ನೂ
) ಪಾಕ ಮಾಡಲು ಅಗ್ನಿಯನ್ನೂ
)ಒಣಗಿಸಲು ಗಾಳಿಯನ್ನೂ
)ಅವಕಾಶಕ್ಕಾಗಿ ಆಕಾಶವನ್ನೂ ಬಯಸುತ್ತವೆ.
ಭೂಮಿಯೇ ಮೊದಲಾದ ಪಂಚಭೂತಗಳಿಗೆ  ಆಧಾರಾದಿಗಳು ಬೇಕಿಲ್ಲ.(ಪುಟ ೪೧೭)

)ಲೋಕದಲ್ಲಿ ಸ್ವಾಮಿಯನ್ನು ಸೇವಕನು ಬಯಸುವುದು  ಸೇವಕನು ಸ್ವಾಮಿಯನ್ನು ಬಯಸುವುದು ತಮ್ಮ ತಮ್ಮ ಪ್ರಯೋಜನಕ್ಕೆ.ತಾನು ಮಾಡುವ ಉಪಕಾರವು  ತನಗೇ ಹೊರತಿ ಇತರರಿಗಲ್ಲ.(ಪುಟ೪೧೭)

) ಆತ್ಮನೇ ಶೇಷಿ ಎಂಬ ಜ್ಞಾನದಿಂದ ತನ್ನ ಬುದ್ಧಿಯನ್ನು ಅನುಸಂಧಾನ ಮಾಡಬೇಕು.ತನ್ನ ಕಾಮನೆಗಾಗಿ ಜಗತ್ತಿನಲ್ಲಿರು ವಸ್ತುಗಳೆಲ್ಲ  ಪ್ರಿಯವಾಗಿವೆ.(ಪುಟ ೪೧೮)

೯) ವಿಷಯ ಜನ್ಯವಾದ ಸುಖವು  ಪ್ರೀತಿ ಮಾತ್ರವೆಂದರೆ ಆತ್ಮನು ನಿರತಿಶಯ ಪ್ರೇಮ ವಿಷಯನು.ಒಂದು ವಿಷಯ ಸುಖದಲ್ಲಿ ಹುಟ್ಟಿದ ಪ್ರೀತಿಯು  ಇನ್ನೊಂದು ಸುಖವನ್ನು ಕುರಿತು ಹೋಗುವುದು. ಆದರೆ ಆತ್ಮ ಪ್ರೀತಿಯು ಬೇರೊಂದು ಕಡೆ ಹೋಗುವುದಿಲ್ಲ.

0)ಹೇಗೆ ಮಗನ ಸ್ನೇಹಿತನಿಗಿಂತಲೂ  ಮಗನು ಅತಿಪ್ರಿಯನೊ  ಹಾಗೆಯೇ ಇತರ ವಸ್ತುಗಳಿಗಿಂತ  ಆತ್ಮನು ಪ್ರಿಯತಮನು.(ಪುಟ ೪೨೧)

೧೧)'ನಾನು ಎಂದಿಗೂ ಇಲ್ಲದೆ ಇರಕೂಡದು;ಯಾವಾಗಲೂ ಇರಬೇಕು'ಎಂದು ಎಲ್ಲಾ ಪ್ರಾಣಿಗಳೂ ಪ್ರಾಥಿ೯ಸುವುವು.ಹೀಗೆ ಆತ್ಮನಲ್ಲಿ ಅತಿ ಪ್ರೀತಿಯು ಪ್ರತ್ಯಕ್ಷ ಸಿದ್ಧವಾಗಿದೆ.(ಪುಟ೪೨0) 

೧೨)ಹೀಗೆ ಶ್ರುತಿ ಯುಕ್ತಿ ಅನುಭವ -ಇವುಗಳಿಂದ ಆತ್ಮನು ಪರಮ ಪ್ರಿಯಯನೆಂಬುದು  ಸಿದ್ಧವಾಗಿದ್ದರೂ ಕೆಲವರು  ತಾವು ಹೆಂಡತಿ,ಮಕ್ಕಳುಮೊದಲಾದವರ ಪ್ರಯೋಜನಕ್ಕಾಗಿ ಇರುವವರೆಂದು ಹೇಳುತ್ತಾರೆ.(ಪುಟ ೪೨೨)

೧೩)'ನಾನು ಮುಕ್ತಿಯನ್ನು ಪಡೆಯುತ್ತೇನೆ'ಎಂಬೀ ವ್ಯವಹಾರದಲ್ಲಿ  ಜ್ಞಾನ ಸ್ವರೂಪನಾದ  ಆತ್ಮನೇ ಮುಖ್ಯವಾಗಿರುವನು.ಏಕೆಂದರೆ ಅವನು ಗುರುವಿನಿಂದಲೂ   ಶಾಸ್ತ್ರದಿಂದಲೂ   ಬ್ರಹ್ಮವನ್ನು ಅರಿಯುವನೇ ಹೊರತು  ಮತ್ತೇನನ್ನೂ ಮಾಡಲು ಬಯಸುವುದಿಲ್ಲ.(ಪುಟ ೪೨೭)

೧೪) ವಸ್ತುಗಳು ನಾಲ್ಕು ಬಗೆಯಾಗಿರುವುವು.ಶೇಷಿ,ಶೇಷ,ಉಪೇಕ್ಷಾ ವಿಷಯ,ದ್ವೇಷವಿಷಯ(ಪುಟ ೪೨೮)

೧೫)ಅದು ತನಗೆ ಅನುಕೂಲವಾದಾಗ  ಅದರ ಮೇಲೆ ಪ್ರೀತಿ;ಪ್ರತಿಕೂಲವಾದಾಗ ಅದರ ಮೇಲೆ ದ್ವೇಷ;ಅವೆರಡೂ ಇಲ್ಲದಿದ್ದಾಗ  ಅದರ ಮೇಲೆ ಉಪೇಕ್ಷೆ.ವ್ಯಕ್ತಿಗಳಿಗೆ ಪ್ರಿಯತ್ವ,ದ್ವೇಷತ್ವ,ಉದಾಸೀನತ್ವ ಎಂಬ ನಿಯಮವು ಆಗದೇ ಇರಲಿ.(ಪುಟ ೪೨೯)

೧೬)ಮಗನಿಗಿಂತಲೂ ಹಣಕ್ಕಿಂತಲೂ ಇತರ ಎಲ್ಲಾ ವಸ್ತುಗಳಿಗಿಂತಲೂ  ಯಾವುದು ಒಳಗಿರುವುದೊ ಅದೇ ತತ್ವವು ಅದೇ ಪ್ರಿಯತಮವು.(ಪುರುಷವಿಧ ಬ್ರಾಹ್ಮಣ)(ಪುಟ ೪೨೯)

೧೭)ಅನ್ನಮಯವೇ ಮೊದಲಾದ  ಪಂಚಕೋಶಗಳನ್ನೂ  ಆತ್ಮನಿಂದ ಬೇರೆಮಾಡಿ ಸವಾ೯ಂತರನಾದ ಆತ್ಮನನ್ನು  ಅನುಭವಿಸುವುದೇ  ವಿಚಾರವೆನಿಸುವುದು.(ಪುಟ೪೩೧)

೧೮)ಎಚ್ಚರ ಕನಸು ನಿದ್ರೆ ಎಂಬೀ ಮೂರು ಅವಸ್ಥೆಗಳಹೋಗುವಿಕೆ ಬರುವಿಕೆ  ಯಾವ ಚೈತನ್ಯ ರೂಪವಾದ ಸಾಕ್ಷಿಯಿಂದ ಗೊತ್ತಾಗುವುದೊ  ಅದೇ ಸ್ವಯಂ ಪ್ರಕಾಶವಾದ ಚಿತ್ ಸ್ವರೂಪವು.(ಪುಟ೪೩೨)

೧೯)ಹಣಕ್ಕಿಂತ ಮಗನು ಪ್ರಿಯನು(ತನ್ನ ಮಗನಿಗೆ ಬಂದ ವಿಪತ್ತನ್ನು  ಹೋಗಲಾಡಿಸಿಕೊಳ್ಳಲು ತಂದೆಯು ಬೇಕಾದಷ್ಟು ಹಣವನ್ನು ಖಚು೯ಮಾಡುವುದರಿಂದ),ಮಗನಿಗಿಂತ ಶರೀರವು ಪ್ರಿಯವಾದದ್ದು (ತನ್ನ ಶರೀರವನ್ನು ರಕ್ಷಿಸಿಕೊಳ್ಳಲು ಒಮ್ಮೊಮ್ಮೆ  ಮಕ್ಕಳನ್ನೂ ಇತರರಿಗೆ ಕೊಡುವುದರಿಂದ),ತನ್ನ ಶರೀರಕ್ಕಿಂತಲೂ ಇಂದ್ರಿಯಗಳು ಪ್ರಿಯ(ಇಂದ್ರಿಯಗಳಿಗೆ ಬಂದ ನಾಶವನ್ನು  ಪರಿಹರಿಸಿಕೊಳ್ಳುವುದಕ್ಕಾಗಿ  ಶರೀರಕ್ಕಾಗುವ ವ್ಯಥೆಯನ್ನೂ ಸಹಿಸಿಕೊಳ್ಳುವುದರಿಂದ ),ಇಂದ್ರಿಯಗಳಿಗಿಂತ ಪ್ರಾಣವು ಪ್ರಿಯ (ಪ್ರಾಣವನ್ನು  ಕಾಪಾಡಿಕೊಳ್ಳುವುದಕ್ಕಾಗಿ  ಇಂದ್ರಿಯ ವೈಕಲ್ಯವನ್ನೂ ಅಂಗೀಕರಿಸುವುದರಿಂದ),ಪ್ರಾಣಕ್ಕಿಂತಲೂ ಆತ್ಮನು ಅತಿಪ್ರಿಯನು(ಪರಲೋಕದ ಸುಖಕ್ಕಾಗಿ ಪ್ರಾಣವನ್ನೂ ಬಿಡುವುದರಿಂದ).(ಪುಟ ೪೩೧)

0)ಜ್ಞಾನ(ಚಿತ್)ಸ್ವರೂಪನಾದ ಆತ್ಮನೇ ಪಿಯತಮನೆಂಬುದು ಶ್ರುತಿಯ ನಿಣ೯ಯ(ಪುಟ ೪೩೧)

೨೧)ಆತ್ಮನಿಗಿಂತಲೂ ಬೇರೆಯಾಗಿ  ಅನೃತವಾಗಿಯೂ ಜಡವಾಗಿಯೂ  ದುಃಖರೂಪವಾಗಿಯೂ ಇರುವ  ದೃಷ್ಯ ವಸ್ತುವಿಗಿಂತಲೂ ನಿತ್ಯ ಚೈತನ್ಯವಾದ  ಸಾಕ್ಷಿಯೇ ಪ್ರಿಯತಮನೆಂದು  ಜ್ಞಾನಿಗಳು ಹೇಳುತ್ತಾರೆ. 
(ಪುಟ ೪೩೧)

೨೨)ನಿನಗೆ ಪ್ರಿಯವಾದದ್ದು ಸಾಯುತ್ತದೆ.(ಪುಟ ೪೩೩)

೨೩)ಮಗನು ತಾನು ಹುಟ್ಟುವುದಕ್ಕೆ ಮೊದಲೇ ತಂದೆ ತಾಯಿಗಳಿಗೆ (ಪುತ್ರ,ದಾನ,ತೀಥ೯ಯಾತ್ರೆ ಇವುಗಳ ಮೂಲಕ)ಕಷ್ಟಪಡಿಸುವನು.ಒಂದು ವೇಳೆ ತಾನು ಬಸಿರಾದರೂ ಗಭ೯ಸ್ರಾವ, ಪ್ರಸವವೇದನೆ  ಇವುಗಳ ಮೂಲಕ ತಾಯಿ ತಂದೆಗಳನ್ನು ನೋಯಿಸುವನು.ಹುಟ್ಟಿದ ಮೇಲೆಯೂ ಅವನು ಬಾಲಗ್ರಹ ಮೊದಲಾದ ರೋಗಗಳಿಗೆ ತುತ್ತಾಗಿ  ಅವರಿಗೆ ವ್ಯಥೆಯನ್ನುಂಟು ಮಾಡುವನು.ಅವುಗಳನ್ನೆಲ್ಲ ದಾಟಿದ ಮೇಲೆ  ಹುಡುಗನು ಮೂಖ೯ನಾಗಬಹುದು.ಅನಂತರ ಉಪನಯನವಾದರೂ ಓದದೆ  ಅವರ ದುಃಕ್ಕೆ ಕಾರಣವಾಗಬಹುದು.ಒಂದು ವೇಳೆ ಪಂಡಿತನಾದರೂ  ಅವನು ಮದುವೆಯಾಗದೆ ಪರಸ್ತೀಗಮನ ಮೊದಲಾದವುಗಳಿಂದ  ಅವರಿಗೆ ಕೆಟ್ಟ ಹೆಸರನ್ನು ತರಬಹುದು.ಮದುವೆಯಾದರೂ ದಾರಿದ್ರ್ಯದಿಂದ ಮಾತಪಿತೃಗಳನ್ನು  ನೋಯಿಸಬಹುದು.ಒಂದು ಪಕ್ಷ ಧನಿಕನಾದರೂ  ದುದೈ೯ವದಿಂದ ಅವನು ಸತ್ತ್ರೆ ತಂದೆ ತಾಯಿಗಳ ದುಃಖಕ್ಕೆ ಕೊನೆಯೇ ಇಲ್ಲ.(ಪುಟ ೪೩೩)

೨೪)ಹೀಗೆ ಗಂಡ,ಹೆಂಡತಿ  ಮಗ ಮೊದಲಾದ ವಸ್ತುಗಳಲ್ಲೆಲ್ಲ ವಿವೇಕದಿಂದ ದೋಷಗಳನ್ನು ನೋಡಿ  ಅವುಗಳಲ್ಲಿ ತಾವು ಅವಿವೇಕದಿಂದ ಇಟ್ಟಿದ್ದ   ಪ್ರೀತಿಯನ್ನೂ ತೊರೆದು  ಪ್ರತ್ಯಗಾತ್ಮನೇ ಪ್ರಿಯತಮನೆಂದು  ನಿಶ್ಚಯಿಸಿ ಅವನನ್ನೇ ಹಗಲಿರುಳು ಅನುಸಂಧಾನ ಮಾಡಬೇಕು.(ಪುಟ೪೩೩)

೨೫)ಬ್ರಹ್ಮಜ್ಞಾನಿಯು ಬ್ರಹ್ಮಸ್ವರೂಪವೇ ಆಗಿರುವುದರಿಂದ  ಸಮಥ೯ನಾಗಿರುತ್ತಾನೆ.ಅವನು ಇಷ್ಟವಾದುದನ್ನೇಳಲಿ ,ಅನಿಷ್ಟವಾದುದನ್ನೇ ಹೇಳಲಿ ಅದು ಶಿಷ್ಯನಿಗೂ ಪ್ರತಿವಾದಿಗೂ ಹಾಗೆಯೇ ಆಗುವುದು.(ಪುಟ ೪೩೪)

೨೬)ಬ್ರಹ್ಮಜ್ಞಾನಿಯು  ಬ್ರಹ್ಮಸ್ವಚರೂಪವೇ ಆಗಿರುವುದರಿದ  ಸಮಥ೯ನಾಗಿರುತ್ತಾನೆ.ಅವನು ಇಷ್ಟವಾದುದನ್ನೇ ಹೇಳಲಿ ಅನಿಷ್ಟವಾದುದನ್ನೇ ಹೇಳಲಿಅದು ಶಿಷ್ಯನಿಗೂ ಪ್ರತಿವಾದುಗೂ ಹಾಗೆಯೇ ಆಗುವುದು.(ಪುಟ ೪೩೪)

೨೭)ಆದರೆ ಯಾವನು ದೇಹೇಂದ್ರಿಯಗಳಿಗೆಲ್ಲ  ಸಾಕ್ಷಿಯಾದ ಪ್ರತ್ಯಗಾತ್ಮನನ್ನೇ  ಅತಿಪ್ರಿಯನೆಂದು ಅನುಸಂಧಾನ ಮಾಡುವನೊ ಅಂಥಶಿಷ್ಯನಿಗೆ ಅತಿಪ್ರಿಯಬಾದ ಆತ್ಮನು ಎಂದೂ ನಾಶವಾಗುವುದಿಲ್ಲ,ಯಾವಾಗಲೂ ಆನಂದರೂಪದಿಂದ ಬೆಳಗುತ್ತಿರುವನು.(ಪುಟ ೪೩೪)

೨೮)ಯಾವನು ಆತ್ಮನನ್ನೇ  ಪ್ರಿಯವೆಂದು ಉಪಾಸಿಸುತ್ತಿರುವನೊಅವನಿಗೆ ಪ್ರಿಯವಾದದ್ದು ಸಾಯುವುದಿಲ್ಲ.(ಪುಟ೪೩೪)

೨೯)ಹೀಗೆ ಆತ್ಮನು ಪರಮ ಪ್ರೇಮಕ್ಕೆ ಆಸ್ಪದನಾಗಿರುವುದರಿಂದಲೇ ಪರಮಾನಂದ ಸ್ವರೂಪನು.(ಪುಟ ೪೩೪)

0))ಸಾವ೯ಭೌಮ ) ಮನುಷ್ಯ )ಗಂಧವ೯ )ದೇವ ಗಂಧವ೯ ) ಪಿತೃ ದೇವತೆ )ಅಜಾನದೇವತೆ )ಕಮ೯ದೇವತೆ )ಇಂದ್ರ ೯)ಬೃಹಸ್ಪತಿ 0) ಪ್ರಜಾಪತಿ ೧೧) ಹಿರಣ್ಯ ಗಭ೯-ಇವರ ಪದವಿಗಳು ಒಂದಕ್ಕಿಂತ ಒಂದು ನಗೂರರಷ್ಟು ಅತಿಪ್ರಿಯಗಳಾದುದರಿಂದ  ಅವುಗಳ ಆನಂದವೂ ಒಂದಕ್ಕೊಂದು ನೂರರಷ್ಟು  ಅಧಿಕವಾಗಿದೆಯೆಂದು  ತೈತ್ತಿರೀಯ-ಬೃಹದಾರಣ್ಯಕಗಳು ಹೇಳುತ್ತವೆ.ಆದುದರಿಂದ ಲೋಕದಲ್ಲಿ ಪ್ರೀತಿಯು ಬೆಳೆದಷ್ಟು ಸುಖವೂ ಬೆಳೆಯುತ್ತದೆ.(೪೩೫)

೩೧)ದೀಪಕ್ಕೆ ಉಷ್ಣ-ಪ್ರಕಾಶಗಳೆರಡೂ  ಸ್ವಭಾವವಾಗಿದ್ದರೂ  ಮನೆಯಲ್ಲಿ ಅದರ ಬೆಳಕು ಹರಡಿಕೊಳ್ಳುವುದೇ ಇಲ್ಲ. ಹಾಗೆಯೇ ಚೈತನ್ಯವು ಎಲ್ಲ ವೃತ್ತಿಗಳಲ್ಲಿ ಕಾಣಿಸಿಕೊಳ್ಳುವಂತೆ  ಆನಂದವು ಕಾಣಿಸಿಕೊಳ್ಳುವುದಿಲ.(ಪುಟ ೪೩೫)

೩೨)ಜ್ಞಾನಕ್ಕೂ  ಯೋಗಕ್ಕೂ ಒಂದೇ ಫಲವಾದರೆ  ಶಾಸ್ತ್ರವು ಅವೆರಡರಲ್ಲಿ ಒಂದನ್ನೇ ಹೇಳಬಹಗುದಿತ್ತು.(ಪುಟ ೪೩೮)

೩೩)ಒಬ್ಬನಿಗೆ ಚಿತ್ತನಿರೋಧವದ ಯೋಗವು ಸುಲಭವಲ್ಲ. ಇನ್ನೊಬ್ಬನಿಗೆ ಆತ್ಮಜ್ಞಾನದ ದೃಢ ನಿಶ್ಚಯವು ಸುಲಭವಲ್ಲ.ಹೀಗೆ ಸವ೯ಜ್ಞನಾದ ಪರಮೇಶ್ವರನು  ಅಧಿಕಾರಿಗಳ  ಭೇದಗಳನ್ನು ವಿಚಾರಿಸಿ ಯೂಗಮಾಗ೯ವನ್ನೂ ಜ್ಞಾನಮಾಗ೯ವನ್ನೂ ಹೇಳಿರುವನು.(ಪುಟ ೪೩೮)

೩೪)ಮಂದ ಬುದ್ಧಿಗಳಾದವರಿಗೆ  ಸ್ವರೂಪಾನಂದವನ್ನು ತಿಳಿಸುವುದಕ್ಕೋಸ್ಕರ  ಬ್ರಹ್ಮಾನಂದವೆಂಬ ಈಪ್ರಕರಣದ  ಎರಡನೆಯ ಅಧ್ಯಾಯದಲ್ಲಿ ಆತ್ಮನು ಪ್ರಿಯತಮನೆಂದು ವಿವೇಚನೆ ಮಾಡಿ ಹೇಳಲಾvಯಿತು.(ಪುಟ ೪೪೧)

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,                  


೧೩)ಬ್ರಹ್ಮಾನಂದದಲ್ಲಿ ಅದ್ವೈತಾನಂದ ಪ್ರಕರಣ:

) ಜಗತ್ತು ಆನಂದದಿಂದಲೇ ಹುಟ್ಟಿತು ಆನಂದದಲ್ಲಿಯೇ ಇರುವುದು.ಆನಂದದಲ್ಲಿಯೇ ಲಯವಾಗುವುದು- ಶ್ರುತಿಯು ಹೇಳುವುದರಿಂದ  ಜಗತ್ತು ತನ್ನ ಕಾರಣವಾದ ಆನಂದಕ್ಕಿಂತ ಹೇಗೆ ಬೇರೆಯಾದೀತು?(ಪುಟ ೪೪೨)

)ಮಣ್ಣು ಗಡಿಗೆಗೆ ಉಪಾದಾನ ಕಾರಣವಾದಂತೆ  ಆನಂದವು ಜಗತ್ತಿಗೆ ಉಪಾದಾನ ಕಾರಣವೇ ಹೊರತು  ಕುಂಬಾರನಂತೆ ನಿಮಿತ್ತಕಾರಣವಲ್ಲ.(ಪುಟ ೪೪೩)

)ಆನಂದವು ಜಗತ್ತಿಗೆ ಉಪಾದಾನ ಕಾರಣ.ಜಗತ್ತಿನ ಸ್ಥಿತಿ ಲಯಗಳಿಗೆ  ಆನಂದವೇ ಉಪಾದಾನ ಕಾರಣವೆಂದು  ಶ್ರುತಿಯು ಹೇಳುತ್ತದೆ.(ಪುಟ ೪೪೩)

)ಉಪಾದಾನವು ವಿವತ೯,ಪರಿಣಾಮ,ಆರಂಭಿಕ -ಎಂದು ಮೂರುವಿಧ.ಇವುಗಳಲ್ಲಿ ಪರಿಣಾಮ ,ಆರಂಭಿಕ
ಎಂಬೆರಡು ಉಪಾದಾನಗಳು ಅವಯವವಿಲ್ಲದ ವಸ್ತುವಿನಲ್ಲಿ ಹೊಂದುವುದಿಲ್ಲ.(ಪುಟ ೪೪೪)
(ಆದುದರಿಂದ ಆನಂದವು ಜಗತ್ತಿಗೆ  ವಿವತೋ೯ಪಾದಾನವಾಗಿದೆ)

)ಒಂದು ಬಗೆಯ ವಸ್ತುವಿನಿಂದ  ಇನ್ನೊಂದು ಹುಟ್ಟುವುದೆಂದು  ಆರಂಭವಾದಿಗಳಾದ ವೈಶೇಷಿಕರು  ಮೊದಲಾದವರು ಹೇಳುತ್ತಾರೆ.ನೂಲಿನಿಂದ ಬಟ್ಟೆಯು ಹೊರಬಂದರೂ ನೂಲು ಬಟ್ಟೆಗಳೆರಡೂ ಬೇರೆ ಬೇರೆಯಲ್ಲವೆ?(ಪುಟ ೪೪೪)

)ಒಂದು ವಸ್ತುವು  ತನ್ನ ಮೊದಲನೆಯ ಅವಸ್ಥೆಯನ್ನು ತೊರೆದು ಇನ್ನೊಂದು ಅವಸ್ಥೆಯನ್ನು ಹೊಂದುವುದು  'ಪರಿಣಾಮ'ವೆಂಬ ಉಪಾದಾನ;ಹಾಲು ಮೊಸರಾಗುವಂತೆ,ಮಣ್ಣು ಗಡಿಗೆಯಾಗುವಂತೆ,ಬಂಗಾರವು ಕುಂಡಲವಾಗುವಂತೆ .(ಪುಟ ೪೪೪)

)ಹಗ್ಗವು ಹಾವಾಗಿ ಕಾಣುವಂತೆ(ತನ್ನ ಸ್ವರೂಪವನ್ನು ತೊರೆಯದೆ)ಬೇರೊಂದು ಅವಸ್ಥೆಯ ತೋರಿಕೆಯನ್ನುಂಟು ಮಾಡುವ ದ್ರವ್ಯವು ವಿವತ೯ವೆಂಬ ಉಪಾದಾನ.ಅವಯವವಿಲ್ಲದ ಆಕಾಶದಲ್ಲಿ ಕೊಪ್ಪರಿಗೆ,ನೀಲಿಯ ಬಣ್ಣ  ಮೊದಲಾದವುಗಳನ್ನು ತಿಳಿಯದವರು ಕಲ್ಪಿಸುವಂತೆ  ನಿರವಯವವಾದ ಬ್ರಹ್ಮದಲ್ಲಿ  ವಿವತ೯-ಉಪಾದಾನತ್ವವು  ಉಂಟಾಗುವುದು.(೪೪೫)

) ಬ್ರಹ್ಮಕ್ಕಿಂತ ಬೇರೆಯದಾದ  ಎರಡನೆಯ ವಸ್ತುವಿಲ್ಲದಿದ್ದರೂ  ಆಗಲಾರದ್ದನ್ನೆಲ್ಲ ಮ್ಠಡಬಲ್ಲ  ಮಾಯೆಯೆಂಬ ಆತ್ಮಶಕ್ತಿಯು  ಚೈತನ್ಯದ ಸಾನ್ನಿಧ್ಯದ  ಬಲದಿಂದ ಜಗತ್ತನ್ನು ಕಲ್ಪಿಸುವುದು.(ಪುಟ ೪೪೫)

೯)ಒಂದು ವಸ್ತುವಿನ ಶಕ್ತಿಯು  ಅದಕ್ಕಾಶ್ರಯವಾದ  ವಸ್ತುವಿಗಿಂತ  ಬೇರೆಯಾಗಿರುವುದಿಲ್ಲ.;ಏಕೆಂದರೆ ಹಾಗೆ ಕಂಡುಬರುತ್ತದೆ.(ಪುಟ ೪೪೫)

0)ಅಗ್ನಿಯ ದಾಹಕ ಶಕ್ತಿ ಅಗ್ನಿಗಿಂತ  ಬೇರೆಯಾಗಿ ಕಂಡುಬರುವುದಿಲ್ಲ.(ಪುಟ ೪೪೫)

೧೨) ನ್ತ್ಯವಾ ಸಂಪೂಣ೯ವೂ ಅದ್ವಯವೂ ಆದ ಪರಬ್ರಹ್ಮವು  ಸವ೯ಶಕ್ತಿಗಳಿಂದ ಕೂಡಿರುವುದೆಂದು  ವಸಿಷ್ಠ ಮಹಷಿ೯ಯೂ ಶ್ರೀರಾಮನಿಗೆ ಉಪದೇಶಿಸಿದ್ದಾರೆ.(ಪುಟ ೪೪೬)                        

೧೩)ವಾಯುವಿನಲ್ಲಿ ಚಲನಶಕ್ತಿ  ಕಲ್ಲಿನಲ್ಲಿ ಗಟ್ಟಿಯಾಗಿರು ಶಕ್ತಿ ,ನೀರಿನಲ್ಲಿ ದ್ರವ ಶಕ್ತಿ ,ಅಗ್ನಿಯಲ್ಲಿ ಸುಡುವ ಶಕ್ತಿ,  ಆಕಾಶದಲ್ಲಿ ಶೂನ್ಯ ಶಕ್ತಿ,ಲಯದಲ್ಲಿ ನಾಶ ಶಕ್ತಿ ತೋರುವವು.ಒಂದು ಮೊಟ್ಟೆಯಲ್ಲಿ ಮಹಾಸಪ೯ವು ಕಾಣದಿರುವಂತೆ  ಪರಮಾತ್ಮನಲ್ಲಿ ಜಗತ್ತು ಕಾಣದಿರುವುದು.(ಪುಟ  ೪೪೭)

೧೪)ಹಣ್ಣು ಎಲೆ ಬಳ್ಳಿ ಹೂವು  ಕೊಭೆ ಚಿಗುರು ಬೇರು -ಇವುಗಳಿರುವ  ದೊಡ್ಡಮರವು ಬೀಜದಲ್ಲಿ ಹೇಗೆ ಕಾಣದಿರುವುದೊ  ಹಾಗೆ ದೃಶ್ಯಮಾನವಾದ ಈಜಗತ್ತು  ಬ್ರಹ್ಮದಲ್ಲಿ ಅನಭಿವ್ಯಕ್ತವಾಗಿರುವುದು.ಪುಟ ೪೪೭)

೧೫) ಮಾಯಾ ಶಕ್ತಿಯು  ತನ್ನಿಂದ ಉತ್ಪನ್ನವಾದ  ಜಗತ್ತಿಗಿಂತಲೂ  ತನಗೆ ಆಶ್ರಯವಾದ ಬ್ರಹ್ಮಕ್ಕಿಂತಲೂ  ಬೇರೆಯಾದ ಲಕ್ಷಣವುಳ್ಳದ್ದಾಗಿರುವುದು.ಅಗ್ನಿಯಲ್ಲಿರುವ ಶಕ್ತಿಯು ಅದರಿಂದ ಉಂಟಾದ  ಸ್ಫೋಟ ಮೊದಲಾದವುಕ್ಕಿಂತಲೂ  ಅದಕ್ಕೆ ಆಶ್ರಯವಾದ  ಅಗ್ನಿಗಿಂತಲೂ  ಬೇರೆಯಾಗಿರುವುದೆಂದು ಊಹಿಸಲ್ಪಡುವುದು.(ಪುಟ ೪೫0)

೧೬)ಗಡಿಗೆಯು ಕಾಣಿಸಿಕೊಳ್ಳದಿರುವಾಗ ಶಕ್ತಿಯೆನಿಸುವುದು.ಕಾಣಿಸಿಕೊಂಡಾಗ ಗಡಿಗೆಯೆನಿಸುವುದು.(ಪುಟ ೪೫೩)

೧೭)ಮಾಯಾಮಯವಾದ ಕಾಯ೯ಸಮೂಹವೆಲ್ಲ  ಸುಳ್ಳಾದುದೆಂದೂ  ಕಾಯ೯ವಾದ ಗಡಿಗೆಯೇ ಮೊದಲಾದವುಗಳಿಗೆ  ಆಧಾರವಾದ ಮಣ್ಣು ಮಾತ್ರ ಸತ್ಯವೆಂದೂ  ಛಾಂದೋಗ್ಯ ಶ್ರುತಿಯು ಹೇಳುತ್ತದೆ.    (ಪುಟ ೪೫೩)

೧೮)'ವಸ್ತುವಿನ ಪರಿಣಾಮವು  ವಾಕ್ಕನ್ನು ಅವಲಂಬಿಸಿರುವ ಕೇವಲ ಹೆಸರೇ.ಮಣ್ಣೆಂಬುದೇ ಸತ್ಯ'(ವಾಚಾರಂಭಣೋ ವಿಕಾರೋ ನಾಮಧೇಯಂ ಮೃತ್ತಿಕೇತ್ಯೇವ ಸತ್ಯಂ(ಛಾಂ....).(ಪುಟ ೪೫೪)

೧೯)ಆತ್ಮಾನಂದಕ್ಕಿಂತ  ಬೇರೆಯಾದುದೆಲ್ಲ ಸುಳ್ಳೆಂಬ ಜ್ಞಾನವಾದಾಗ  ಅದ್ವೈತವಾದಿಗಳ ಪುರುಷಾಥ೯ವು ಸಿದ್ಧಿಸುತ್ತದೆ.ಮಣ್ಣು ತನ್ನ ಸ್ವರೂಪವನ್ನು ಬಿಡದೆ ಇರುವುದರಿಂದ  ಅದರ ಕಾಯ೯ವಾದ ಗಡಿಗೆಯಲ್ಲಿ ವಿವತ೯ತ್ವವು ಇರುತ್ತದೆ.(ಪುಟ ೪೫೭)

0)ಒಂದು ವಸ್ತುವು ತನ್ನ ಮೊದಲಿನ ರೂಪವನ್ನು ತೊರೆದು  ಬೇರೊಂದು ರೂಪವನ್ನು ಪಡೆಯುವುದು ಪರಿಣಾಮ.ಹಾಲು ಮೊಸರಾದಾಗ ತನ್ನ ಮೊದಲಿನ ರೂಪವನ್ನು ಬಿಡುತ್ತದೆ.ಮಣ್ಣು ಗಡಿಗೆಯಾದಾಗ,ಚಿನ್ನವು ಕುಂಡಲವಾದಾಗ  ಅವುಗಳ ಹಿಂದಿನರೂಪಗಳು  ಹೋಗುವುದಿಲ್ಲ.(ಪುಟ ೪೫೭)   




೨೧)ಛಾಂದೋಗ್ಯ ಉಪನಿಷತ್ತಿನಲ್ಲಿ  ಅರುಣನ ಮಗನಾದ ಉದ್ಧಾಲಕನು  ಶ್ವೇತಕೇತುವಿಗೆ  ಮಣ್ಣು,ಚಿನ್ನ,ಕಬ್ಬಿಣ ಎಂಬ ಮೂರು ದೃಷ್ಟಾಂತಗಳನ್ನು  ವಿವತೋ೯ಪದಾನಕ್ಕೆ ಹೇಳಿರುತ್ತಾನೆ. ಆದ್ದರಿಂದ ಕಾಯ೯ವಸ್ತುಗಳೆಲ್ಲ  ಅನೃತವಾದವುಗಳೆಂದು ತಿಳಿಯಬೇಕು.(ಪುಟ ೪೫೯)

೨೨)ಕಾರಣವಾದ ಒಂದು ವಸ್ತುವಿನ ಜ್ಞಾನದಿಂದ  ಅದರ ಕಾಯ೯ವಾದ ಎಲ್ಲ ವಸ್ತುಗಳ  ಜ್ಞಾನವು ಆದಂತಾಯಿತೆಂದು ಉದ್ಧಲಕನು ಹೇಳಿದನು.(ಪುಟ ೪೫೯)

೨೩)ತತ್ವಜ್ಞಾನವೇ ಪುರುಷಾಥ೯ವು.ಅನೃತಾಂಶವಲ್ಲ.(ಪುಟ ೪೬0)

೨೪)ಕಾಯ೯ಕ್ಕಿಂತಲೂ ಕಾರಣವು ಬೇರೆ-ಎನ್ನುವ ಆರಂಭವಾದಿಗೂ ,ಕಾಯ೯ದಲ್ಲಿ ನಿಜವಾದ ಪರಿಣಾಮವಿದೆ -ಎನ್ನುವ ಪರಿಣಾಮವಾದಿಗೂ ,ಇದಾವುದನ್ನೂ ಅರಿಯದ ಲೌಕಿಕನಿಗೂಒಂದು ಕಾರಣವನ್ನರಿತುಕೊಂಡರೆ ಅದರ ಕಾಯ೯ಗಳನ್ನೆಲ್ಲ ಅರಿತಂತಾಯಿತೆಂಬುದನ್ನು ಕೇಳಿ ಆಶ್ಚಯ೯ವಾಗುತ್ತದೆ.(ಪುಟ ೪೬೧) 

೨೫)ಹೇಗೆ ಒಂದು ಮಣ್ಣಿನ ಮುದ್ದೆಯ ಜ್ಞಾನದಿಂದ ಮಣ್ಣಿನಿಂದಾದ ಎಲ್ಲ ವಸ್ತುಗಳ ಜ್ಞಾನವಾಗುತ್ತದೆಯೊ  ಹಾಗೆಯೆ ಒಂದು ಬ್ರಹ್ಮದ ಜ್ಞಾನದಿಂದ ಅದರಿಂದ ಉತ್ಪನ್ನವಾದ ಸಮಸ್ತ ಜಗತ್ತಿನ ಜ್ಞಾನವಾಗುತ್ತದೆ.(ಪುಟ ೪೬೨)

೨೬)ಬ್ರಹ್ಮದ ಸ್ವರೂಪವು ಸಚ್ಚಿದಾನಂದ;ಜಗತ್ತಿನ ಸ್ವರೂಪವು ನಾಮ ಮತ್ತು ರೂಪ.ಸಚ್ಚಿದಾನಂದ ಲಕ್ಷಣವುಳ್ಳ ಬ್ರಹ್ಮವನ್ನು ತಾಪನೀಯ ಉಪನಿಷತ್ತಿನಲ್ಲಿ ಹೇಳಿದೆ.(ಪುಟ ೪೬೨)

೨೭)ಬ್ರಹ್ಮವು ಸದ್ರೂಪವೆಂದು ಉದ್ಧಾಲಕ ಅರುಣಿಯೂ ,ಬ್ರಹ್ಮವು ಪ್ರಜ್ಞಾನವೆಂದು ಐತರೇಯ ಉಪನಿಷತ್ತೂ ,ಬ್ರಹ್ಮವು ಆನಂದವೆಂದು ಸನತ್ಕುಮಾರನೂ ಹೇಳಿದ್ದಾನೆ.ಹೀಗೆಯೇ ಇತರ ಶ್ರುತಿಗಳಲ್ಲಿಯೂ ಅರಿಯಬೇಕು.(ಪುಟ ೪೬೨)

೨೮)'ಭಗವಂತನು ದೇವತಾದಿ ಸಮಸ್ತ ರೂಪಗಳನ್ನೂ ಸೃಷ್ಟಿಸಿ ಅವುಗಳಿಗೆ ಹೆಸರುಗಳನ್ನು ಕೊಟ್ಟು  ಇರುತ್ತಾನೆ'.' ಹೆಸರುಗಳನ್ನೂ ವಿಂಗಡಿಸುತ್ತೇನೆ'ಎಂದು ಶೃತಿಗಳು ಹೇಳುವುವು.(ಪುಟ ೪೬೩)

೨೯)ಮಾಯೆಯು ಉಪಾದಾನ ಕಾರಣವೆಂದೂ  ಮಹೇಶ್ವರನು  ಮಾಯೆಯನ್ನಾಳುವನೆಂದೂ  ತಿಳಿಯಬೇಕು.(ಪುಟ ೪೬೩)

0) ಯಾವುದು ಆದಿಯಲ್ಲಿಯೂ ಅಂತ್ಯದಲ್ಲಿಯೂ ಇರುವುದಿಲ್ಲವೊ  ಮಧ್ಯದಲ್ಲಿಯೂ ಇರುವುದಿಲ್ಲ.(ಪುಟ೪೬೪)


                ೩೧)ಒಂದಾನೊಂದು ವಸ್ತುವು  ನಮಗೆ ಅನುಕೂಲವಾಗಿದ್ದರೆ ಮನ್ನ ಮನಸ್ಸಿನಲ್ಲಿ ಹಷ೯ ಉಂಟಾಗುತ್ತದೆ.ಅದು ನಮಗೆ ಪ್ರತಿಕೂಲವಾಗಿದ್ದರೆ  ದುಃಖವುಂಟಾಗುತ್ತದೆ.ಅವೆರಡೂ ಇಲ್ಲದಿದ್ದರೆ  ನಿಜಾನಂದವಾಗುವುದು. ನಿಜದುಃಖವೆಂಬುದು ಎಂದಿಗೂ ಇಲ್ಲ.(ಪುಟ ೪೬೬)

೩೨)ನಿಜಾನಂದವು ನಿತ್ಯವಾಗಿದ್ದರೂ  ಅದನ್ನು ಗ್ರಹಿಸುವ ಮನಸ್ಸು  ಕ್ಷಣಿಕವಾದುದರಿಂದ  ಮಾನಸಿಕವಾದ ಹಷ೯ಶೋಕಗಳೂ  ನಮಗೆ ಕ್ಷಣಿಕವಾಗಿ ತೋರುತ್ತವೆ.*ಪುಟ ೪೬೬)

೩೩)ಜೀವನಲ್ಲಿ  ಹೇಗೊ ಹಾಗೆ  ಆಕಾಶದಲ್ಲಿಯೂ  ಸತ್ ಚಿತ್ ಆನಂದ ಇವು ಒಪ್ಪತಕ್ಕಗಳಾಗಿವೆ.ಹೀಗೆಯೆ ವಾಯುವಿನಿಂದ ದೇಹದವರೆಗಿನ  ವಸ್ತುಗಳಲ್ಲೆಲ್ಲ   ಸಚ್ಚಿದಾನಂದಗಳನ್ನು ಭಾವಿಸಬೇಕು.(ಪುಟ ೪೬೬)

೩೪)ಜನ್ಮ-ನಾಶ ಇವುಗಳಿಂದ ಕೂಡಿದ ಸ್ವರೂಪಹೀನವಾದ  ನಾಮರೂಪಗಳು -ಸಮುದ್ರದಲ್ಲಿ ತೋರಿ ಅಡಗುವ ನೊರೆಗುಳ್ಳೆಗಳಂತೆ -ಅದ್ವ್ಥತ ಬ್ರಹ್ಮದಲ್ಲಿ ಪರಿಕಲ್ಪಿತವಾಗಿವೆ ಎಂದು  ಬುದ್ಧಿಯಿಂದ ತಿಳಿಯುವವನಾಗು.(ಪುಟ ೪೬೭)

೩೫)ಸಚ್ಚಿದಾನಂದ ಸ್ವರೂಪವು  ಪೂಣ೯ವೂ ಆದ ಬ್ರಹ್ಮವನ್ನರಿತರೆ ನಾನಾ ರೂಪಗಳು  ಕಲ್ಪಿತವಾಗಿವೆ ಎಂದು ವಿವೇಕಿಯು ತನಗೆತಾನೇ ಅರಿಯುತ್ತಾನೆ.(ಪುಟ ೪೬೮)     

೩೬)ದ್ವೈತವನ್ನು ಎಷ್ಟೆಷ್ಟು ತಿರಸ್ಕರಿಸಿದರೆ ಅಷ್ಟಷ್ಟು ಬ್ರಹ್ಮಜ್ಞಾನವಾಗುವುದು.ಎಷ್ಟೆಷ್ಟು   ಬ್ರಹ್ಮವನ್ನ್ರಿಯುವನೊ  ಅಷ್ಟಷ್ಟು ನಾಮಗಳನ್ನು ರೂಪಗಳನ್ನು  ಬಿಡುವನು.(ಪುಟ ೪೬೮)

೩೭)ಹೀಗೆ ದ್ವೈತ  ತಿರಸ್ಕಾರ ,ಬ್ರಹ್ಮದಶ೯ನ ಎಂಬೀ ಎರಡು ಬಗೆಯಾದ  ಅಭ್ಯಾಸಗಳಿಂದ  ಬ್ರಹ್ಮವಿದ್ಯೆಯು ದೃಢವಾದಾಗ  ಮನುಷ್ಯನು ಬದುಕಿರುವಾಗಲೇ ಮುಕ್ತನಾಗುವನು. ಅವನ ಶರೀರವು ಪ್ರಾರಬ್ಧದಂತೆ ಹೇಗಾದರೂ ಇರಲಿ.(ಪುಟ ೪೬೮)

೩೮) ಬ್ರಹ್ಮವನ್ನೇ ಚಿಂತಿಸುವುದು ,ಅದನ್ನೇ ಹೇಳುವುದು,ಅದನ್ನೇ ಒಬ್ಬರಿಗೊಬ್ಬರು ತೀಳಿಸುವುದು,ಅದೊಂದರಲ್ಲಿಯೇ ಆಸಕ್ತಿ-ಇದನ್ನೇ 'ಬ್ರಹ್ಮಾಭ್ಯಾಸ'ವೆಂದು ತಿಳಿದವರು ಹೇಳುತ್ತಾರೆ.(ಪುಟ ೪೬೮)

೩೯) ಬಹುಕಾಲದಿಂದ ಎಡೆಬಿಡದೆ ಆದರದಿಂದ ಮಾಡಿದ ಬ್ರಹ್ಮಾಭ್ಯಾಸದಿಂದ ಅನಾದಿಕಾಲದಿಂದ ಬಂದಿರುವ ದೈತವಾಸನೆಯು  ನಿಜವಾಗಿಯೂ ಬಿಟ್ಟು ಹೋಗುವುದು.(ಪುಟ ೪೬೯)

0)ಏಕರೂಪವಾಗಿರುವ  ಬ್ರಹ್ಮವು  ಅನೇಕರೂಪವಾದ ಜಗತ್ತಿಗೆ  ಹೇಗೆ ಕಾರಣವಾದೀತು?-ಎಂಬ ಸಂಶಯಕ್ಕೆ ಮಾಯಾಸಹಿತವಾದ ಬ್ರಹ್ಮವು ಕಾರಣ(ಪುಟ ೪೬೯)

೪೧)ಮಣ್ಣಿನಲ್ಲಿ ಗಡಿಗೆ ಮೊದಲಾದವುಗಳನ್ನು ಹುಟ್ಟಿಸುವ  ಶಕ್ತಿಯಿರುವಂತೆ  ಅದ್ವಯ ಬ್ರಹ್ಮದಲ್ಲಿರುವ ಮಾಯಾಶಕ್ತಿಯು  ಅನೃತವಾದ ಅನೇಕ ವಸ್ತುಗಳನ್ನು ಸೃಷ್ಟಿಸುವುದು.ಜೀವನದಲ್ಲಿರುವ ನಿದ್ರಾಶಕ್ತಿಯಾದ ಕನಸು ತಾನು ಅಸತ್ಯವಾದರೂ  ಅನೇಕ ಅನೃತ ವಸ್ತುಗಳನ್ನು  ಹುಟ್ಟಿಸುತ್ತಿರುವುದು  ವಿಷಯದಲ್ಲಿ ಇನ್ನೊಂದು ನಿದಶ೯ನವಾಗಿರುವುದು. (ಪುಟ ೪೬೯)

೪೨)ಮಣ್ಣಿನಲ್ಲಿರುವ  ಶಕ್ತಿಯು ನಿಜವಾದುದರಿಂದ  ಅದು ಅನೇಕರೂಪಗಳಿಗೆಕಾರಣವಾಗಬಹುದಾದರೂ
ಅನೃತವಾದ ಮಾಯಾಶಕ್ತಿಯಿಂದ ಅಂಥ ಕೆಲಸವು  ಹೇಗೆ ಆದೀತು?-ಎಂಬ ಇನ್ನೊಂದು ಸಂಶಯಕ್ಕೆ ಇದು  ಉತ್ತರ. ಆದುದರಿಂದ ಮಾಯಾಶಕ್ತಿಯು  ಮಿಥ್ಯೆಯಾದರೂ ಜಗತ್ತನ್ನು ಸೃಷ್ಟಿಸಬಹುದು.(ಪುಟ ೪೬೯)

೪೩)ಜೀವನಲ್ಲಿರುವ  ಅನೃತವಾದ ನಿದ್ರಾಶಕ್ತಿಯು  ಅಸಾಧ್ಯವಾದ ಕನಸನ್ನು  ಉಂಟುಮಾಡುವಂತೆ  ಬ್ರಹ್ಮದಲ್ಲಿರುವ ಅನೃತವಾದ ಮಾಯಾಶಕ್ತಿಯೂ ಜಗತ್ತಿನ ಸೃಷ್ಟಿ-ಸ್ಥಿತಿ-ಲಯಗಳನ್ನುಂಟು ಮಾಡುತ್ತದೆ.(ಪುಟ ೪೬೯)

೪೪)ಮನುಷ್ಯನು  ಕನಸಿನಲ್ಲಿ ತಾನು ಆಕಾಶದಲ್ಲಿ ಹಾರುತ್ತಿರುವುದಾಗಿಯೂ,ಒಂದೇ ಮುಹೂತ೯ದಲ್ಲಿ ಅನೇಕ ವಷ೯ಗಳಾದುದನ್ನೂ,ಮೃತರಾದ ಮಕ್ಕಳು ಮೊದಲಾದವನ್ನೂ ನೋಡುತ್ತಾನೆ.(ಪುಟ ೪೭0)

೪೫)ಕನಸಿನಲ್ಲಿ 'ಇದು ಸರಿ' 'ಎದು ಸರಿಯಲ್ಲ' ಎಂಬ ವ್ಯವಸ್ಥೆಯಿಲ್ಲ.ಯಾವುಯಾವುದು ಹೇಗೆ ಹೇಗೆ ಕಾಣುವುದೊ  ಅದದೇ ಸರಿಯೆಂದು ತೋರುತ್ತದೆ.(ಪುಟ ೪೭0)

೪೬)ಮನುಷ್ಯನು ನಿದ್ರಿಸುವಾಗ  ನಿದ್ರಾಶಕ್ತಿಯು  ಬಹುವಿಧವಾದ ಕನಸನ್ನು ಸೃಷ್ಟಿಸುವುದು.ಹೀಗೆಯೇ ನಿವಿ೯ಕಾರವಾದ ಬ್ರಹ್ಮದಲ್ಲಿ  ಮಾಯಾಶಕ್ತಿಯು  ಜಗತ್ತಿನ ನಾನಾ ರೂಪಗಳನ್ನು ಕಲ್ಪಿಸುವುದು.(ಪುಟ ೪೭೧)

೪೭)ಆಕಾಶ,ವಾಯು,ಅಗ್ನಿ, ಜಲ,ಭೂಮಿ,ಬ್ರಹ್ಮಾಂಡ, ಅದರಲ್ಲಿರುವ ಅನೇಕ ಲೋಕಗಳು , ಲೋಕಗಳಿಗೆ ತಕ್ಕ ಪ್ರಾಣಿಗಳು ,ಕಲ್ಲು,ಮರ ಮೊದಲಾದವು -ಇವೆಲ್ಲ ಭೂತ-ಭೌತಿಕ ವಿಕಾರಗಳು.ಆದರೆ ಪ್ರಾಣಿಗಳಿಗೆ  ಬುದ್ಧಿಗಳಲ್ಲಿ ಚೈತನ್ಯದ  ಛಾಯೆಯು ಪ್ರತಿಬಿಂಬಿಸಿದೆ.(ಪುಟ ೪೭0)

೪೮)ಸಚ್ಚಿದಾನಂದ ಲಕ್ಷಣವುಳ್ಳ  ಬ್ರಹ್ಮವು ಚೇತನಗಳಲ್ಲಿಯೂ ಅಚೇತನ(ಜಡ)ಗಳಲ್ಲಿಯೂ  ಸಮಾನವಾಗಿರುವುದು.ನಾಮಗಳೂ ರೂಪಗಳೂ ಬೇರೆ ಬೇರೆಯಾಗಿರುವುವು.(ಪುಟ ೪೭೧)

೪೯)ಬಟ್ಟೆಯ ಮೇಲೆ ಬರೆದ ಚಿತ್ರಗಳಂತೆ  ನಾಮಗಳೂ ರೂಪಗಳೂ  ಬ್ರಹ್ಮದಲ್ಲಿ ಇರುತ್ತವೆ.
ಕಲ್ಪಿತವಾದ ನಾಮರೂಪಗಳನ್ನು ಉಪೇಕ್ಷಿಸಿದರೆ  ಆಧಾರವಾದ ಸಚ್ಚಿದಾನಂದ  ಬ್ರಹ್ಮದ ಜ್ಞಾನವಾಗುವುದು.(ಪುಟ ೪೭೨)

0)ನೀರಿನಲ್ಲಿ ಪ್ರತಿಬಿಂಬಿಸಿದ  ಶರೀರವು ತಲೆಕೆಳಗಾಗಿ ಕಂಡುಬಂದರೂ  ಕೊಳದ ದಡದಲ್ಲಿ ನಿಂತಿರುವವನು  ಅದನ್ನು ಉಪೇಕ್ಷಿಸಿ  ದಡದ ಮೇಲಿರುವ ದೇಹವು ತನ್ನದೆಂದು ತಿಳಿಯುವಂತೆ  ನಾಮ ರೂಪಾದಿಗಳನ್ನು  ಉಪೇಕ್ಷಿಸಿ  ಬ್ರಹ್ಮದ ಜ್ಞಾನವನ್ನು ಪಡೆಯುವನು.(ಪುಟ೪೭೨).      


೫೧)ಮನೋರಾಜ್ಯವು ಲೆಕ್ಕವಿಲ್ಲದಷ್ಟಿದ್ದರೂ (ಪ್ರಯೋಜನವಾಗಲಾರದೆಂದರಿತು) ಅದನ್ನು ಎಲ್ಲರೂ ಉಪೇಕ್ಷೆ ಮಾಡುತ್ತಾರೆ.ಹಾಗೆಯೇ ನಾಮಗಳನ್ನೂ ರೂಪಗಳನ್ನೂ  ವಿವೇಕಿಯು ಉಪೇಕ್ಷೆ ಮಾಡಬೇಕು.(ಪುಟ ೪೭೨)

೫೨)ಮನೋರಾಜ್ಯವು ಪ್ರತಿಕ್ಷಣದಲ್ಲಿಯೂ ಬೇರೆ ಬೇರೆ ಯಾಗುತ್ತಲೇ ಇರುವುದು.ಹಿಂದೆ ಆದದ್ದು ಮುಂದೆ ಬರುವುದೇ ಇಲ್ಲ.ಹಾಗೆಯೇ ಜಗತ್ತಿನ ಹೊರವ್ಯವಹಾರವೂ ಕೂಡ.(ಪುಟ ೪೭೨)

೫೩)ಯೌವನ ಬಂದಾಗ ಬಾಲ್ಯವಿರುವುದಿಲ್ಲ.ಮುಪೊಉ ಬಂದಾಗ ಯೌವನವಿರುವುದಿಲ್ಲ.ಸತ್ತತಂದೆಯು  ಪುನಃ ಇರುವುದಿಲ್ಲ. ಹೋದ
 ದಿನವು ಮತ್ತೆ ಬರುವುದೇ ಇಲ್ಲ.(ಪುಟ ೪೭೩)

೫೪)ಕ್ಷಣಮಾತ್ರದಲ್ಲಿ ನಾಶವಾಗುತ್ತಿರುವ ಲೋಕದ   ವಸ್ತುಗಳಲ್ಲಿ ಮನೋರಾಜ್ಯಕ್ಕಿಂತಲೂ ಏನು ವಿಶೇಷವುರುವುದು?ಆದುದರಿಂದ ದ್ವೈತವು ತೋರುತ್ತಿದ್ದರೂ  ಅದು ನಿಜವೆಂಬ ಬುದ್ಧಿಯನ್ನು ಬಿಡು.(ಪುಟ ೪೭೩)

೫೫)ಲೋಕದ ವಸ್ತುಗಳನ್ನು ಉಪೇಕ್ಷೆಮಾಡಿದರೆ  ಬುದ್ಧಿಯು ಬ್ರಹ್ಮಚಿಂತನದಲ್ಲಿ ನಿವಿ೯ಘ್ನವಾಗಿ ನಿಲ್ಲುವುದು.ಹಾಗಾದರೆ ಜ್ಞಾನಿಯ ವ್ಯವಹಾರವು ಹೇಗೆ ಸಾಗೀತು?ಜ್ಞಾನಿಯು ನಟನ ಹಾಗೆ ಅಭ್ಯಾಸದ ಬಲದಿಂದ  ಲೋಕವ್ಯವಹಾರವನ್ನು ಮಾಡುವನು.(ಪುಟ ೪೭೩)
೫೬)ಮೇಲೆ ನೀರು ಹರಿಯುತ್ತಿದ್ದರೂ ಅದರ ಕೆಳಗಿರುವ ದೊಡ್ಡ ಬಂಡೆಯು ಹೇಗೆ ಸ್ಥಿರವಾಗಿರುತ್ತದೆಯೊ  ಹಾಗೆಯೆ  ಬುದ್ಧಿಯು ನಾಮರೂಪಗಳನ್ನು ಭಾವಿಸುತ್ತಿದ್ದರೂ ಕೂಟಸ್ಥಬ್ರಹ್ಮ ಸ್ವರೂಪನಾದ ಜ್ಞಾನಿಯು  ಸಂಸಾರವನ್ನು ಹೊಂದುವುದಿಲ್ಲ.(ಪುಟ ೪೭೪)

೫೭)ಹೀಗೆ ನಾಮರೂಪಗಳು ಹೋಗಲಾಗಿ  ಪ್ರಪಂಚ ರಹಿತವಾದ ಬ್ರಹ್ಮವು  ಸಚ್ಚಿದಾನಂದ ಲಕ್ಷಣವಾಗಿರುವುದು. ಅದ್ವೈತಾನಂದದಲ್ಲಿ  ಜನರು ಯಾವಾಗಲೂ ವಿಶ್ರಮಿಸುವವರಾಗಲಿ.(ಪುಟ ೪೭೫)

೫೮)ಜಗತ್ತು ಮಿಥ್ಯ ಎಂದು ಚಿಂತಿಸುತ್ತಿದ್ದರೆ  ಅದ್ವೈತಾನಂದವೇ ಆಗುವುದು-ಎಂದು ಬ್ರಹ್ಮಾನಂದವೆಂಬ ಹೆಸರುಳ್ಳ  ಗ್ರಂಥದ ಮೂರನೆಯ  ಅಧ್ಯಾಯವು ಹೇಳಲ್ಪಟ್ಟಿತು.(ಪುಟ ೪೭೫) 

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,        

No comments:

Post a Comment