೧೪)ಬ್ರಹ್ಮಾನಂದದಲ್ಲಿವಿದ್ಯಾನಂದ ಪ್ರಕರಣ:
೧)ಸಮಾಧಿಯೋಗದಿಂದಲೂ ,ಗೌಣ-ಮುಖ್ಯಾತ್ಮ -ವಿವೇಕದಿಂದಲೂ ದ್ವೈತವು
ಮಿಥ್ಯೆಯೆಂಬ ಚಿಂತನೆಯಿಂದಲೂ ಬ್ರಹ್ಮಾನಂದವನ್ನು
ಅನುಭವಿಸುತ್ತಿರುವ ಜ್ಞಾನಿಗೆ
ಆಗುವ ವಿದ್ಯಾನಂದವನ್ನು ಹೇಳಲಾಗುವುದು.(ಪುಟ ೪೭೬)
೨)ವಿಷಯಗಳ ಮೂಲಕ ಆಗುವ ಸುಖದಂತೆ ವಿದ್ಯಾನಂದವೂ ಬುದ್ಧಿಯ
ವೃತ್ತಿ ರೂಪ
ದಲ್ಲಿರುವುದು.ಇದು ದುಃಖವಿಲ್ಲದಿರುವಿಕೆಯೇ ಮೊದಲಾದ ರೂಪದಿಂದ
ನಾಲ್ಕು ಬಗೆಯಾಗಿರುವುದು.೯ಪುಟ ೪೭೬)
೩) ದುಃಖವಿಲ್ಲದಿರುವಿಕೆ ೨) ಬಯಕೆಗಳನ್ನು ಹೊಂದುವಿಕೆ
೩)ನಾನು ಕೃತಕೃತ್ಯನು
ಎಂಬುದು ೪)ಪಡೆಯತಕ್ಕದ್ದನ್ನೆಲ್ಲ ಪಡೆದವನಾದೆನು
ಎಂಬ ಈ
ವಿದ್ಯಾನಂದವು ನಾಲ್ಕು ಬಗೆಯಾಗಿದೆ.(ಪುಟ
೪೭೬)
೪)ಈ ಲೋಕದ್ದು ಪರಲೋಕದ್ದು
ಎಂದು ದುಃಖವು ಎರಡು ಬಗೆಯಾಗಿ
ಹೇಳಲ್ಪಟ್ಟಿದೆ.(ಪುಟ ೪೭೭)
೫) ಮನುಷ್ಯನು ತನ್ನನ್ನು ಪರಮಾತ್ಮನನ್ನಾಗಿ ಅರಿತಮೇಲೆ ಯಾವುದನ್ನು ಬಯಸುತ್ತ ಯಾರ
ಬಯಕೆಗಾಗಿ ತನ್ನ ಶರೀರವನ್ನು ಕ್ಲೇಶಗೊಳಿಸುವನು?(ಪುಟ ೪೭೭)
೬)ಶ್ರುತಿಯು ಆತ್ಮನನ್ನು ಜೀವಾತ್ಮನೆಂದೂ ಪರಮಾತ್ಮನೆಂದೂ
ಎರಡು ಬಗೆಯಾಗಿ ಹೇಳುತ್ತದೆ.ಸ್ಥೂಲ-ಸೂಕ್ಷ್ಮ-ಕಾರಣ
ಎಂಬ ಮೂರು ದೇಹಗಳನ್ನೇ ಚೈತನ್ಯವೆಂದು ಭಾವಿಸಿ ಭ್ರಾಂತಿಗೊಂಡಾಗ ಚೈತನ್ಯವು
ಜೀವನೆನಿಸಿ ಭೋಕ್ತøಭಾವವನ್ನು ಹೊಂದುತ್ತದೆ.(೪೭೭)
೭)ಮೂರು ದೇಹಗಳ ವಿವೇಚನೆಯಿಂದ
ಭೋಕ್ತøವೂ ಇರುವುದಿಲ್ಲ.ಭೋಗ್ಯವೂ
ಇರುವುದಿಲ್ಲ.(ಪುಟ ೪೭೭)
೮)ಶರೀರತ್ರಯದಲ್ಲಿ ತಾನೆಂಬ
ಅಭಿಮಾನವನ್ನು ತಾಳಿದ ಜೀವನು
ತನ್ನ ಪ್ರಯೋಜನಕ್ಕಾಗಿ ಸುಖಸಾಧನಗಳನ್ನು
ಬಯಸುತ್ತ ಶರೀರವನ್ನು ಅನುಸರಿಸಿ ತಾಪಪಡುತ್ತಾನೆ. ಜ್ವರಗಳು ಆ ಮೂರು
ಶರೀರಗಳಲ್ಲಿರುವುದೇ ಹೊರತು
ಆತ್ಮನಲ್ಲಿಲ್ಲ.(ಪುಟ ೪೭೮)
೯)ಏಳು ಧಾತುಗಳ ಹೆಚ್ಚು
ಕಡಿಮೆಯಿಂದ ಸ್ಥೂಲದೇಹದಲ್ಲಿರುವ
ಜ್ವರಗಳಿಗೆ ವ್ಯಾಧಿಗಳೆಂದು ಹೆಸರು.ಕಾಮ ಕ್ರೋದಾದಿಗಳು
ಸೂಕ್ಷ್ಮದೇಹದಲ್ಲಿರುವ ಜ್ವರಗಳು.ಈ ಎರಡು ಜ್ಡರಗಳ
ಬೀಜಗಳು ಕಾರಣ ಶರೀರದಲ್ಲಿರುವುವು.(ಪುಟ
೪೭೮)
೧0)ಮಾಯೆಯ ಕಾಯ೯ಗಳಾದ ನಾಮ
ರೂಪಗಳಿಂದ ಆತ್ಮನ್ನು ಬೇರೆ ಮಾಡಬೇಕು.(ಪುಟ
೪೭೮)
೧೧)ಆತ್ಮಾನಂದವೆಂಬ ಪ್ರಕರಣದಲ್ಲಿ ಹೇಳಿದಂತೆ ಜೀವಾತ್ಮನ
ಸ್ವರೂಪವು ಕೂಟಸ್ಥಚೈತನ್ಯವೆಂದು ನಿಧ೯ರಿಸಿದ
ಮೇಲೆ ಇಲ್ಲಿ ಸುಖದುಃಖಗಳನ್ನು ಅನುಭವಿಸುವವನು ಇಲ್ಲವಾಗುವುದರಿಂದ ಶರೀರದ
ಜ್ವರವೆಲ್ಲಿ?(ಪುಟ ೪೨೯)
೧೨)ಹೇಗೆ ತಾವರೆ ಎಲೆಗೆ
ನೀರು ಅಂಟುವುದಿಲ್ಲವೊ ಜ್ಞಾನಿಗೆ
ಅಪರೋಕ್ಷಜ್ಞಾನವಾದ ಮೇಲೆ ಮುಂದೆ
ಮಾಡುವ ಕಮ೯ವು ಅಂತುವುದಿಲ್ಲ.(ಪುಟ
೪೭೯)
೧೩)ಹೇಗೆ ಅರಳೆಯು ಒಂದು ಕ್ಷಣದಲ್ಲಿ ಬೆಂಕಿಯಿಂದ ಸುಟ್ಟು ಹೋಗುತ್ತದೊ ಹಾಗೆಯೆ
ಸಂಚಿತ ಕಮ೯ವು ಅಪರೋಕ್ಷಜ್ಞಾನದ
ಪ್ರಭಾವದಿಂದ ಸುಟ್ಟು ಹೋಗುವುದು.(ಪುಟ೪೭೯)
೧೪)ಪ್ರಜ್ವಲಿಸುತ್ತಿರುವ ಅಗ್ನಿಯು
ಕಟ್ಟಿಗೆಗಳನ್ನು ಬೂದಿಮಾಡುವಂತೆ ಜ್ಞಾನವೆಂಬ
ಅಗ್ನಿಯು ಪುಣ್ಯ ಪಾಪರೂಪವಾದ ಕಮ೯ಗಳನ್ನೆಲ್ಲ ಸುಟ್ಟು
ಬೂದಿ ಮಾಡುವುದು.(ಪುಟ ೪೮0)
೧೫)'ಯಾವನಿಗೆ ನಾನು ಮಾಡುವವನು'
ಎಂಬ ಅಭಿಮಾನವಿರುವುದಿಲ್ಲವೊ ಯಾವನ
ಬುದ್ಧಿಯು ಅಂಟಿಕೊಂಡಿಲ್ಲವೊ (ಪಾಪ ಪುಣ್ಯಗಳಿಂದ)
ಅವನು ಈ ಲೋಕಗಳನ್ನು ಕೊಂದರೂ ಕೊಲೆಗಾರನಾಗುವುದಿಲ್ಲ
ಮತ್ತು ಮತ್ತು
ಆ ಫಲಕ್ಕೆ ಸಿಕ್ಕಿಬಿದ್ದವನಲ್ಲ.(ಪುಟ ೪೮0)
೧೬)ಜ್ಞಾನಿಯು ತಿನ್ನುತ್ತಿರಲಿ ,ಕ್ರೀಡಿಸುತ್ತಿರಲಿ, ಸ್ತ್ರೀಯರೊಡನೆ ಆನಂದಿಸುತ್ತಿರಲಿ,ವಾಹನಗಳಲ್ಲಿ ಹೋಗುತ್ತಿರಲಿ -ಹೀಗೆ ಯಾವ ವಿಷಯ
ಭೋಗವನ್ನು ಹೊಂದಿದರೂ ತನ್ನ
ಶರೀರವನ್ನು ನೆನಪಿಗೆ ತಂದುಕೊಳ್ಳುವುದಿಲ್ಲ.ಪ್ರಾಣದ
ವ್ಯಾಪಾರದಿಂದ ಜೀವಿಸುತ್ತಾನೆ.(ಪುಟ ೪೮೧)
೧೭) ಮಹಾರಾಜನು ಯಾವ ಆನಂದವನ್ನು ಹೊಂದುವನೊ ಅದನ್ನು
ಬ್ರಹ್ಮಜ್ಞಾನಿಯೂ ಹೊಂದುವನು ಮಹಾರಾಜನು
ಸುಖಗಳನ್ನೆಲ್ಲ ಅನುಭವಿಸಿ ತೃಪ್ತನಾದುದರಿಂದ
ಬಯಕೆಯಿಲ್ಲದೆ ಇರುವನು. ಬ್ರಹ್ಮಜ್ಞಾನಿಯು ವಿವೇಕದಿಂದ ಬಯಕೆಯಿಲ್ಲದವನಾಗಿರುವನು.(ಪುಟ ೪೮೨)
೧೮) ಜ್ಞಾನಿಯು ಶ್ರುತಿಯನ್ನು
ಅರಿತವನಾದುದರಿಂದ ವೇದಶಾಸ್ತ್ರಗಳಿಂದ ಭೋಗಗಳಲ್ಲಿರುವ
ದೋಷಗಳನ್ನು ನೋಡುತ್ತಾನೆ.ಆ ದೋಷಗಳು ಯಾವುವೆಂದರೆ
೧)ದೇಹದ ದೋಷಗಳು೨)ಚಿತ್ತದ ದೋಷಗಳು ೩) ಭೋಗ್ಯ
ವಸ್ತುಗಳ ದೋಷಗಳು.(ಪುಟ ೪೮೪)
೧೯)ಜ್ಞಾನಿಗೆ
ದುಃಖ ಭಯಗಳೆಂಬ ಎರಡು ದೋಷಗಳೂ
ಇಲ್ಲದಿರುವುದರಿಂದ ಅವನ
ಆನಂದವು ಹೆಚ್ಚಿನದು.ಇದಲ್ಲದೆ ಮಹಾರಾಜನಿಗೆ ಗಂಧವ೯ರ ಆನಂದವನ್ನು
ಹೊಂದ ಬೇಕೆಂಬ ಆಸೆ
ಬೇರೆ ಇರುತ್ತದೆ.ಜ್ಞಾನಿಗೆ ಅದಿರುವುದಿಲ್ಲ.(ಪುಟ ೪೮೪)
೨0) ಬುದ್ಧಿಗೆ ಸಾಕ್ಷಿಯಾದ ಆತ್ಮನು ತಾನೆಂಬ
ಜ್ಞಾನವಿಲ್ಲದಿರುವುದರಿಂದ ಅಜ್ಞಾನಿಗೆ ತೃಪ್ತಿಯಿರುವುದಿಲ್ಲ.(ಪುಟ ೪೮೬)
೨೧)ಯಾವನು ಹೃದಯಾಕಾಶದಲ್ಲಿರುವ
ಬುದ್ಧಿಯಲ್ಲಿ ಬ್ರಹ್ಮವನ್ನು
ಅರಿತುಕೊಳ್ಳುವನೊ ಅವನು
ಬಯಕೆಗಳನ್ನೆಲ್ಲಾ ಪಡೆಯುತ್ತಾನೆ ಎಂದು ತೈತ್ತಿರೀಯ ಶ್ರುತಿಯು
ಹೇಳುತ್ತದೆ.(ಪುಟ ೪೮೬)
೨೨)ತಾನು ಅಖಂಡವಾದ ಬ್ರಹ್ಮವೆಂದು
ತಿಳಿದವನು ಎಲ್ಲರ
ಆತ್ಮಸ್ವರೂಪನಾಗಿರುವನೆಂದು ಸಾಮವೇದವು
ಹಾಡುತ್ತದೆ.'ನಾನು ಅನ್ನ,ನಾನು
ಅನ್ನವನ್ನು ಉಣ್ಣುವವನು'ಎಂದು ಸಾಮವೇದವು ಅಧ್ಯಯನ
ಮಾಡಲ್ಪಡುವುದು.(ಪುಟ ೪೮೬)
೨೩) ಈ ಲೋಕದಲ್ಲಿ ಪರಲೋಕದಲ್ಲಿ ದುಃಖವಿಲ್ಲದಿರುವಿಕೆ,ಬಯಕೆಗಳನ್ನೆಲ್ಲ ಹೊಂದುವಿಕೆ-ಇವೆರಡೂ ನಿರೂಪಿಸಲ್ಪಟ್ಟವು.'ಕೃತಕೃತ್ಯತ್ವ'
'ಪ್ರಾಪ್ತಪ್ರಾಪ್ತತ್ವ' -ಇವೆರಡೂ
ತೃಪ್ತಿದೀಪ ಪ್ರಕರಣದಲ್ಲಿ ನಿರೂಪಿಸಲ್ಪಟ್ಟಿವೆ.(ಪುಟ ೪೮೭)
೨೪)ಬ್ರಹ್ಮಾನಂದವೆಂಬ ಗ್ರಂಥದಲ್ಲಿ ವಿದ್ಯಾನಂದವೆಂಬ ನಾಲ್ಕನೆಯ
ಅಧ್ಯಾಯವು ಹೇಳಲ್ಪಟ್ಟಿತು.ವಿದ್ಯಾನಂದವು ಉಂಟಾಗುವವರೆಗೂ ಬ್ರಹ್ಮಾಭ್ಯಾಸವು
ಅಂಗೀಕೃತವಾಗಲಿ.(ಪುಟ ೪೮೯)
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
೧೫) ಬ್ರಹ್ಮಾನಂದದಲ್ಲಿ ವಿಷಯಾನಂದ ಪ್ರಕರಣ:
೧)ಬ್ರಹ್ಮಾನಂದದ ಒಂದಂಶವಾಗಿರುವ ವಿಷಯಾನಂದವು
ಅಧ್ಯಾಯದಲ್ಲಿ ಹೇಳಲ್ಪಟ್ಟಿದೆ.ಬ್ರಹ್ಮಾನಂದ ವಾಗುವುದಕ್ಕೆ ವಿಷಯಾನಂದವು ಒಂದು ಬಾಗಿಲಾಗಿರುವುದರಿಂದ
ಅದನ್ನು ಶ್ರುತಿಯು ನಿರೂಪಿಸಿದೆ. ಪುಟ ೪೯0)
೨)ಅಖಂಡೈಕರಸಸ್ವರೂಪವಾದ ಬ್ರಹ್ಮವು
ಪರಮಾನಂದ ಸ್ವರೂಪವಾಗಿರುವುದು. ಪ್ರಾಣಿಗಳೆಲ್ಲ ಪರಮಾನಂದದ ಒಂದಂಶವನ್ನು ತೆಗೆದುಕೊಂಡು ಜೀವಿಸುವುವು.(ಪುಟ ೪೯0)
೩)ಅಂತಃಕರಣದ ವೃತ್ತಿಗಳು (ಸಾತ್ವಿಕ-ರಾಜಸ-ತಾಮಸ ಕ್ರಮದಿಂದ)ಶಾಂತ,ಘೋರ, ಮೂಢ
ಎಂದು ಮೂರುಬಗೆಯಾಗಿರುವುವು. ಅವುಗಳಲ್ಲಿ ವೈರಾಗ್ಯ,ಕ್ಷಮೆ,ಉದಾರತೆ-ಇವೇ
ಮೊದಲಾದವು ಶಾಂತವೃತ್ತಿಗಳು. ಬಯಕೆ,ಮಮತೆ,ಆಸಕ್ತಿ,ಲೋಭ-ಇವೇ ಮೊದಲಾದವು
ಘೋರವೃತ್ತಿಗಳು.ಅಜ್ಞಾನ ಭಯ ಇವೇ
ಮೊದಲಾದುವು ಮೂಢವೃತ್ತಿಗಳು.(ಪುಟ ೪೯೧)
೪)ಬ್ರಹ್ಮದ ಆನಂದವು ಸಾತ್ವಿಕವಾದ ಶಾಂತವೃತ್ತಿಗಳಲ್ಲಿ ಮತ್ರ ಪ್ರತಿಬಿಂಬಿಸುತ್ತದೆ.(ಪುಟ ೪೯೧)
೫)'ಆತ್ಮನು ಆಯಾ ಉಪಾಧಿಗಳ
ಸಂಬಂಧದಿಂದ ಆಯಾ
ರೂಪಗಳನ್ನು ತಾಳಿ ಪ್ರತಿಬಿಂಬರೂಪನಾದನು
ಎಂದು ಶ್ರುತಿಯು ಹೇಳುತ್ತದೆ.(ರೂಪಂ ರೂಪಂ ಪ್ರತಿರೂಪೋ
ಬಭೂವ)(ಬೃ.ಉ.೨.೫.೧೯)
೬) ಏಕನೂ ಜ್ಯೋತಿಮ೯ಯನೂ
ಆದ ಸೂಯ೯ನು ಬೇರೆ
ಬೇರೆ ಜಲಾಶಯಗಳನ್ನು ಅನುಸರಿಸಿ ಉಪಾಧಿಯಿಂದ ಹೇಗೆ ಬಹುವಾಗುವನೊ ಹಾಗೆಯೇ ದೇವನೂ ಅಜನೂ
ಆದ ಆತ್ಮನು
ಬೇರೆ ಬೇರೆ ಕ್ಷೇತ್ರಗಳಲ್ಲಿ ಬಹುವಾಗುವನು(ಪುಟ ೪೯೨)
೭)ಒಬ್ಬನೇ ಆದ ಭೂತಾತ್ಮನು ಪತಿಯೊಂದು
ಪ್ರಾಣಿಯಲ್ಲಿಯೂ ಇರುತ್ತಾನೆ.ಬೇರೆ ಬೇರೆ ಜಲಗಳಲ್ಲಿ
ಬೇರೆ ಬೇರೆಯಾಗಿ ಪ್ರತಿಬಿಂಬಿಸಿರುವ
ಚಂದ್ರನಂತೆ ಅವನು
ಉಪಾಧಿ ಭೇದದಿಂಬ ಏಕರೂಪದಿಂದಲೂ ಬಹುರೂಪದಿಂದಲೂ
ತೋರುತ್ತಾನೆ.(ಪುಟ ೪೯೨)
೮)ಚಂದ್ರನು ಕೆಸರು ನೀರಿನಲ್ಲಿ
ಅಸ್ಪಷ್ಟವಾಗಿ ಕಾಣಿಸಿಕೊಳ್ಳುವಂತೆ ,ತಿಳಿನೀರಿನಲ್ಲಿ ಸ್ಪಷ್ಟವಾಗಿ ಕಾಣಿಸಿಕೊಳ್ಳುವಂತೆ ಬ್ರಹ್ಮವೂ
ಕೂಡ ನಿಮ೯ಲವಾದ ವೃತ್ತಿಗಳಲ್ಲಿ ಚಿದಾನಂದ
ರೂಪವಾಗಿಯೂ ಮಲಿನವೃತ್ತಿಗಳಲ್ಲಿ
ಚಿದ್ರೂಪ ಮಾತ್ರವಾಗಿಯೂ ತೋರುತ್ತದೆ.(೪೯೨)
೯)ನಿಮ೯ಲವಾದ
ನೀರು ಒಂದೇ ಆಗಿದ್ದರೂ ಅದರಲ್ಲಿ ಅಗ್ನಿಯ ಉಷ್ಣಾಂಶವು ಬೆರಕೆಯಾಗಿ ಬೆಳಕಿನ
ಅಂಶವು ಬೆರಕೆಯಾಗದೆ ಇರುವಂತೆ
ಅಂತಃಕರಣವು ಒಂದೇ ಆದರೂ ಅದರಲ್ಲಿ ಚಿದಂಶವು ಮಾತ್ರ ತೋರುತ್ತದೆ.(ಆನಂದಾಂಶವು ಮರೆಯಾಗಿರುತ್ತದೆ).(ಪುಟ ೪೯೩)
೧0)ರಾಗ ಲೋಭ ಮೊದಲಾದ
ರಾಜಸ ವೃತ್ತಿಗಳಲ್ಲಿಯೂ ,ಮರೆವು ಭಯ ಮೊದಲಾದ
ತಾಮಸವೃತ್ತಿಗಳಲ್ಲಿಯೂ ಆನಂದದ ಅನುಭವವು ನಮಗೆ
ಕಂಡುಬರುವುದಿಲ್ಲ.ವೈರಾಗ್ಯ ಕ್ಷಮೆ ಮೊದಲಾದ ಸಾತ್ವಿಕ ವೃತ್ತಿಗಳಲ್ಲಿ ಒಂದೊಂದು
ಸಂದಭ೯ದಲ್ಲಿ ಆನಂದದ ಅತಿಶಯವು ಕಂಡುಬರುತ್ತದೆ.(ಪುಟ ೪೯೪)
೧೧)ಶಾಂತ ವೃತ್ತಿಗಳಲ್ಲಿ ಯಾವ
ಯಾವ ಸುಖವುಂಟಾಗುವುದೊ ಅದೆಲ್ಲ
ಬ್ರಹ್ಮದ ಪ್ರತಿಬಿಂಬವೇ.ಆದುದರಿಂದ ಬ್ರಹ್ಮಾನಂದವೇ ಆಗುವುದು.ಈ ಬ್ರಹ್ಮಾನಂದವು
ಒಳಮುಖವಾದರೆ ವೃತ್ತಿಗಳಲ್ಲಿ
ಅದು ಪ್ರತಿಬಿಂಬಿಸುವುದಕ್ಕೆ ಅಡ್ಡಿಯಿರುವುದಿಲ್ಲ.(ಪುಟ ೪೯೬)
೧೨)ಇರುವಿಕೆ(ಸತ್),ಜ್ಞಾನ(ಚಿತ್,ಅರಿಯುವಿಕೆ) ಆನಂದ
(ಸುಖ) ಎಂಬ ಮೂರು ಬ್ರಹ್ಮದ
ಸ್ವರೂಪ ಕಲ್ಲು ಮಣ್ಣು ಮೊದಲಾದ
ಜಡವಸ್ತುಗಳಲ್ಲಿ ಇರುವಿಕೆಯ
ಸ್ವಭಾವ ಮಾತ್ರ ತೋರುತ್ತದೆಯೇ ಹೊರತು ಉಳಿದೆರಡು
ತೋರುವುದಿಲ್ಲ.(ಪುಟ ೪೯೬)
೧೩) ಅನೃತ, ಜಡ, ದುಃಖ
-ಎಂಬೀ ಮೂರು ಮಾಯೆಯ
ಸ್ವರೂಪವು. ಮನುಷ್ಯನ ಕೊಂಬು ,ಬಂಜೆಯ
ಮಗ ಮೊದಲಾದವುಗಳಲ್ಲಿ
ಅನೃತವು ಕಂಡು ಬರುತ್ತದೆ. ಕಟ್ಟಿಗೆ
ಕಲ್ಲು ಮೊದಲಾದವುಗಳಲ್ಲಿ ಮಾಯೆಯ
ಜಡರೂಪವು ಕಾಣುವುದು.ಕಂಡು ಬರುತ್ತದೆ.
೧೪)ಬ್ರಹ್ಮವು ಹೀಗಿರುವಾಗ ಈ
ಜಗತ್ತಿನಲ್ಲಿ ಯಾವನಾದರೂ
ಶುದ್ಧ ಬ್ರಹ್ನವನ್ನು ಧ್ಯಾನಿಸಬೇಕೆಂದು ಬಯಸುವವನು ಮನುಷ್ಯನ
ಕೊಂಬಿನಂತೆ ಅನೃತವಾದ ಜಡವೂ
ದುಃಖವೂ ಆದ ಮಾತೆಯ
ಅಂಶಗಳನ್ನು ತಿರಸ್ಕರಿಸಿ ಉಳಿದ ಸತ್,ಚಿತ್,ಆನಂದ ಎಂಬ ಬ್ರಹ್ಮಾಂಶಗಳನ್ನು ಆಯಾ
ಸಂದಭ೯ಕ್ಕನುಸಾರವಾಗಿ ಧ್ಯಾನಿಸಬೇಕು. (ಪುಟ ೪೯೮)
೧೫) ಕಲ್ಲು
ಇಟ್ಟಿಗೆ ಮೊದಲಾದ ಜಡವಸ್ತುಗಳಲ್ಲಿ (ಮಾಯೆಯ
ಅಂಶಗಳಾದ) ನಾಮರೂಪಗಳನ್ನು
ಬಿಟ್ಟು ಇರುವಿಕೆಯನ್ನು
ಮಾತ್ರ ಬ್ರಹ್ಮಾಂಶವೆಂದು
ಧ್ಯಾನಿಸಬೇಕು.ರಾಜಸ-ತಾಮಸ-ವೃತ್ತಿಗಳಲ್ಲಿ ಮಾಯಾಂಶವಾದ
ದುಃಖವನ್ನು ದುಃಖವನ್ನು
ಬಿಟ್ಟು ಸಚ್ಚಿದ್ರೂಪಗಳನ್ನು ಬ್ರಹ್ಮವೆಂದು
ಧ್ಯಾನಿಸಬೇನಿಸಬೇಕು.(ಪುಟ ೪೯೮)
೧೬)ನಿಗು೯ಣ ಬ್ರಹ್ಮವನ್ನು
ಧ್ಯಾನಿಸಲು ಅಧಿಕಾರವಿಲ್ಲದ ಮಂದಾಧಿಕಾರಿಗೆ ವ್ಯವಹಾರದಲ್ಲುಂಟಾಗುವ ಸಗುಣ
ಬ್ರಹ್ಮದ ಧ್ಯಾನವು ಶ್ರೇಷ್ಠವು
ಎಂಬುದನ್ನು ತಿಳಿಸಲು ಈ
ವಿಷಯಾನಂದವನ್ನು ಹೇಳಲಾಯಿತು.(ಪುಟ ೪೯೮)
೧೭) ಈ ಬ್ರಹ್ಮಾಕಾರದ ಅನುಭವವು ಧ್ಯಾನದ
ಭೇದವಲ್ಲ. ಅಪರೋಕ್ಷ ಜ್ಞಾನದಿಂದಲೂ
ಸಮಾಧಿ ಯೋಗದಿಂದಲೂ ಉಂಟಾದ ಆ
ಬ್ರಹ್ಮಾಕಾರ ವೃತ್ತಿಯು ಬ್ರಹ್ಮವಿದ್ಯೆಯೇ
ಅಹುದು.ಬ್ರಹ್ಮಧ್ಯಾನದಿಂದ ಚಿತ್ತಕ್ಕೆ ಏಕಾಗ್ರತೆಯುಂಟಾದರೆ ಅದರಲ್ಲಿ
ಬ್ರಹ್ಮಜ್ಞಾನವು ಸ್ಥಿರವಾಗಿ ನೆಲೆಸುವುದು.(ಪುಟ ೪೯೯)
೧೮)ಸಾತ್ವಿಕ-ರಾಜಸ-ತಾಮಸ
ವೃತ್ತಿಗಳೂ ,ಕಲ್ಲು ಮೊದಲಾದವೂ ಬ್ರಹ್ಮ ಸ್ವರೂಪವನ್ನು ಬೇರೆಬೇರೆಯಾಗಿ
ತೋರಿಸುವುದರಿಂದ ಉಪಾಧಿಗಳೆನಿಸಿವೆ.ಚಿತ್ತವೃತ್ತಿ -ನಿರೋಧವಾದ ಯೋಗದಿಂದಲೊಅಥವಾ ವಿವೇಕದಿಂದಲೊಈ ಉಪಾಧಿಗಳನ್ನು ಹಿಮ್ಮೆಟ್ಟಿಸಿ ಅಖಂಡಾಕಾರ ವೃತ್ತಿಯನ್ನು ಮಾಡಿ ಬ್ರಹ್ಮಾನಂದದಲ್ಲಿ ಭಾಗಿಯಾಗಬಹುದು.(ಪುಟ ೫00)
೧೯)ದ್ವೈತರಹಿತವೂ
,ಸ್ವಯಂಪ್ರಕಾಶವೂ ,ಉಪಾಧಿರಹಿತವೂ ಆದ
ಬ್ರಹ್ಮತತ್ವವು ಬೆಳಗುತ್ತಿರುವಾಗ -ಧ್ಯಾನಿಸುವವನು,ಧ್ಯಾನ,ಧ್ಯಾನಿಸಲಾಗುವ ವಸ್ತು(ಧ್ಯೇಯ ವಸ್ತು) ಎಂಬ
ತ್ರಿಪುಟಿ ಇಲ್ಲದಿರುವುದರಿಂದ -ಅದು ಭೂಮಾನಂದವೆನಿಸಿಕೊಳ್ಳುತ್ತದೆ.(ಪುಟ ೫00)
೨0)ಬ್ರಹ್ಮಾನಂದವೆಂಗ ಗ್ರಂಥದಲ್ಲಿ ವಿಷಯಾನಂದವೆಂಬ ಐದನೆಯ ಅಧ್ಯಾಯವು ಹೇಳಲ್ಪಟ್ಟಿತು.ಮಂದಾಧಿಕಾರಿಗಳು ವಿಷಯಾನಂದವೆಂಬ
ಈ ಬಾಗಿಲಿನಿಂದ ಬ್ರಹ್ಮಾನಂದದೊಳಕ್ಕೆ ಪ್ರವೇಶಿಸಲಿ.(ಪುಟ ೫00)
೨೧)ಹರಿಹರ ಸ್ವರೂಪನಾದ ಪರಮಾತ್ಮನು ಬ್ರಹ್ಮಾನಂದವೆಂಬ
ಈಗ್ರಂಥದಿಂದ ಯಾವಾಗಲೂ
ಸುಪ್ರೀತನಾಗಲಿ ಮತ್ತು ತನ್ನನ್ನು ಆಶ್ರಯಿಸಿರುವ
ಶುದ್ಧಮಾನಸರಾದ ಪ್ರಾಣಿಗಳನ್ನೆಲ್ಲ ಕಾಪಾಡಲಿ(ಪುಟ ೫00)
ಶ್ರೀಮದ್ವಿದ್ಯಾರಣ್ಯ ಮುನಿ ಪ್ರಣೀತಾ 'ಪಂಚದಶೀ'ಎಂಬ ಗ್ರಂಥವು ಸಂಪೂಣ೯ವಾಯಿತು.
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
No comments:
Post a Comment