Sunday, 2 February 2020

Vidyaranya Saara Sangraha - Panchadashi - Part -5







೭೧)ಕನಸು-ಎಚ್ಚರ -ಇವೆರಡೂ ಸವ೯ ವಿಧದಿಂದಲೂ  ಒಂದೇ ಎಂದು ಅನುಸಂಧಾನ ಮಾಡಿ (ಕನಸಿನಲ್ಲಿ ತೋರುವ ವಸ್ತುಗಳಂತೆಎಚ್ಚರದಲ್ಲಿ ತೋರುವ ವಸ್ತುಗಳೂ  ಮಿಥ್ಯೆಯೆಂದು ಅರಿತವನು  ಹಿಂದಿನಂತೆ ಅವುಗಳಲ್ಲಿ  ಆಸಕ್ತನಾಗನು.(ಪುಟ ೨೪೬)

೭೨)ಪ್ರಾರಬ್ಧಕಮ೯ಭೋಗದ ವಿಷಯವೇ ಬೇರೆ.ಜಗತ್ತು ಮಿಇಥ್ಯೆ ಎಂಬ ಜ್ಞಾನವೇ ಬೇರೆ.(ಪುಟ೨೪೬)

೭೩)ಬ್ರಹ್ಮದ ಮತ್ತು ಜಗತ್ತಿನ ಸ್ವರೂಪವನ್ನು ತಿಳಿಸುತ್ತಿರುವ  ಜ್ಞಾನವು  ಜಗತ್ತು ಇಂದ್ರಜಾಲದಂತೆ  ಮಿಥ್ಯೆ ಎಂಬ ಅನುಸಂಧಾನವನ್ನು  ನಿಬ೯ಂಧಿಸುವುದಲ್ಲದೆ ಪ್ರಾರಬ್ಧ ಕಮ೯ ಭೋಗವೂ ಕೂಡ  ಜೀವನಿಗೆ ಸುಖದುಃಖಪ್ರಾರಬ್ಧ ಕಮ೯ವೂ ಕೂಡ  ಜೀವನಿಗೆ ಪ್ರಾರಬ್ಧ ಭೋಗದ  ನಾಶವನ್ನು  ಮಾಡಲಾರವು.ಪ್ರಾರಬ್ಧ ಕಮ೯ವೂ ಕೂಡ ಜೀವನಿಗೆ ಸುಖ ದುಃಖಗಳನ್ನು ಜೀವನಿಗೆ  ಸುಖ ದುಃಖಗಳನ್ನು ಉಂಟು ಮಾಡುವುದೇ ಹೊರತು ಭೋಗ ವಸ್ತುಗಳನ್ನು  ನಿಜವಾಗಿರುವಂತೆ ಮಾಡಲಾರವು.(ಪುಟ ೨೪೭)

೭೪)ಕನಸಿನಲ್ಲಿ ಕಲ್ಪಿತವಾದ  ವಸ್ತುಗಳಿಂದಲೂ  ಕಡಿಮೆಯಾಗದ ಸುಖ ದುಃಖಗಳ  ಅನುಭವವು ಉಂಟಾಗುತ್ತದೆ.ಹೀಗೆಯೇ ಎಚ್ಚರದ ವಸ್ತುಗಳಿಂದಲೂ  ಭೋಗವಾಗುತ್ತದೆಂದು ತಿಳಿತಬೇಕು.(ಪುಟ೨೮೪)

೭೫)ಯಾವ ಅವಸ್ಥೆಯಲ್ಲಿ   ಜಗತ್ತೆಲ್ಲ ಜ್ಞಾನಿಗೆ ಆತ್ಮವಾಗಿರುವುದೊ  ಅಲ್ಲಿ ಅವನು ಯಾವುದರಿಂದ ಯಾವುದನ್ನು ನೋಡಿಯಾನು?ಯಾವುದನ್ನು ಮೂಸಿಯಾನು?ಯಾವುದನ್ನು ಮಾತಾಡಿಯಾನುಎಂದು ಶೃತಿಯಲ್ಲಿ ಬಹುವಿಧವಾಗಿ  ಘೋಷಿಸಲ್ಪಡ್ಡಿದೆ.(ಪುಟ ೨೪೯)

೭೬)ಆದುದರಿಂ ಜ್ಞಾನವು ನಾಶಮಾಡಿ ಉದಯಿಸುತ್ತದೆಯೇ ಹೊರತು ಜಗತ್ತನ್ನು ನಾಶಮಾಡದೆ ಉದಯಿಸುವುದಿಲ್ಲ.(ಪುಟ೨೪೯)

೭೭)ದ್ವೈತವು ತೋರುತ್ತದ್ದರೆ ಅದ್ವೈತ ಜ್ಞಾನವಿಲ್ಲ.ದ್ವೈತವು ತೋರದಿದ್ದರೆ ವಾಕ್ಯವನ್ನು ಹೇಳಲಾಗುವುದಿಲ್ಲ.(ಪುಟ ೨೪೯)

೭೮)ಆತ್ಮಜ್ಞಾನವೇ ಬ್ರಹ್ಮವಿದ್ಯೆ .ಚಿತ್ತವೃತ್ತಿ ನಿರೋಧವು ಅವಶ್ಯಕ -ಎಂಬುದನ್ನು ಅಂಗೀಕರಿಸಿದೆ ಎಂದಥ೯.(ಪುಟ ೨೫೧)

೭೯)ಸುಖ ದುಃಖಗಳಲ್ಲಿ  ಅಭಿಮಾನ ಲಕ್ಷಣವುಳ್ಳ  ವಿಕಾರಕ್ಕೆ ಭೋಗವೆಂದು ಹೆಸರುನಿವಿ೯ಕಾರಿಯಾದ ಕೂಟಸ್ಥನು  ವಿಕಾರವುಳ್ಳವನು ಎಂಬುದರಲ್ಲಿ  ವಿರೋಧವಾಗುವುದಿಲ್ಲವೆ?(ಪುಟ೨೫೩)

0)ಚಿದಾಭಾಸನಿಗೂ ಭೋಕ್ತøತ್ವವಿಲ್ಲವೆಂದು ಹೇಳುತ್ತಾರೆ.ಚಿದಾಭಾಸನು ವಿಕಾರವನ್ನು ಹೊಂದಿದ ಬುದ್ಧಿ ಎಂಬ ಉಪಾಧಿಗೆ ಅಧೀನವಾಗಿರುವುದರಿಂದ  ತನ್ನಲ್ಲಿ ವಿಕಾರವುಂಟಾದರೂ ತನ್ನ ಆಧಾರವಾದ  ಕೂಟಸ್ಥನನ್ನು ಬಿಟ್ಟು  ಭೋಕ್ತøತ್ವವನ್ನು ಹೊಂದಲಾರನು.(೨೫೩)       


೮೧)ಭೋಗ್ಯವೆಲ್ಲ ಕೂಟಸ್ಥಸಹಿತವಾದ ಚಿದಾಭಾಸನಿಗೇ ಹೊರತು  ಕೂಟಸ್ಥನಿಗಲ್ಲ ಎಂದು ಹೇಳುತ್ತಾರೆ.(ಪುಟ೨೫೫)

೮೨)ಭೋಕ್ತøವು ತನ್ನ ಭೋಗಕ್ಕೋಸ್ಕರ  ಪತಿ ಪತ್ನಿ ಮೊದಲಾದುವನ್ನು ಬಯಸುತ್ತಾನೆ ಲೋಕದ  ರೂಢಿಯನ್ನು ಶ್ರುತಿಯು ಹೇಳುತ್ತದೆಯೇ  ಹೊರತು  ಕೂಟಸ್ಥನಿಗೆ ಭೋಗವಿದೆಯೆಂದು ಹೇಳುವುದಿಲ್ಲ.೨೫೫)

೮೩)'ಅವಿವೇಕಿಗಳಿಗೆ  ವಿಷಯವಸ್ತುಗಳಲ್ಲಿ ಯಾವ ದೃಢವಾದ ಪ್ರೀತಿಯಿದೆಯೊ  ಅಂಥ ಪ್ರೀತಿಯು ನಿನ್ನನ್ನು  ಸ್ಮರಿಸುತ್ತಿರುವ ನನ್ನ ಹೃದಯದಿಂದ  ಎಂದಿಗೂ ಹೋಗದಿರಲಿ.(ವಿಷ್ಣು ಪುರಾಣ .0.೧೯)

೮೪)ಮುಮುಕ್ಷುವು ಯಾವಾಗಲೂ ತನ್ನ ಸ್ವರೂಪವನ್ನು ವಿಚಾರಿಸಬೇಕು.(ಪುಟ೨೫೬)

೮೫)ಪಾಮರನಾದವನು ಹೂವು ಚಂದನ  ಹಣ್ಣು ಬಟ್ಟೆ ಬಂಗಾರ  ಇವೇ ಮೊದಲಾದವುಗಳಲ್ಲಿ ಆಸಕ್ತನಾಗಿರುವಂತೆ  ಮುಮುಕ್ಷುವು ಆತ್ಮ ವಿಷಯದಲ್ಲಿ ಆಸಕ್ತನಾಗಿರುತ್ತಾನೆ.(ಪುಟ ೨೫೬)

೮೬)ಹೇಹೆ ಕಮಿ೯ಯಾದವನು  ಸ್ವಗ೯ವೇ ಮೊದಲಾದ ಬಯಕೆಗಳಿಂದ  ಜಪ-ಯಾಗ-
ಉಪಾಸನಾದಿಗಳನ್ನು    ಶ್ರದ್ಧೆಯಿಂದ ಮಾಡುವಂತೆ  ಮುಮುಕ್ಷುವಾದವನು  ಮೋಕ್ಷೇಚ್ಛೆಯಿಂದ  ಆತ್ಮವಿಷಯದಲ್ಲಿ ವಿಶ್ವಾಸವನ್ನು ಇಡಬೇಕು.(ಪುಟ ೨೫೭)

೮೭)ಹೇಗೆ ಯೋಗಿಯು ಅಣಿಮಾದಿ ಅಷ್ಟೈಶ್ವಯ೯ದ ಬಯಕೆಯಿಂದ  ಅತಿ ಪ್ರಯಾಸವನ್ನೂ ಲೆಕ್ಕಿಸದೆ  ಚಿತ್ತದ ಏಕಾಗ್ರತೆಯನ್ನು ಸಾಧಿಸುವನೊ  ಹಾಗೆಯೆ ಮುಮುಕ್ಷುವಾದವನು  ಮೋಕ್ಷೇಚ್ಛೆಯಿಂದ ತನ್ನ ಸ್ವರೂಪವನ್ನು  ದೇಹಾದಿಗಳಿಗಿಂತ ಬೇರೆಯೆಂದು  ವಿವೇಚಿಸಬೇಕು.(ಪುಟ ೨೫೭)

೮೮)ಎಚ್ಚರ ಕನಸು ನಿದ್ರೆಗಳಲ್ಲಿ  ಯಾವ ಅವಸ್ಥೆಯಲ್ಲಾಗಲೀ  ಸಾಕ್ಷಿಯು ಯಾವುದನ್ನು ಅನುಭವಿಸುತ್ತಾನೆಯೊ   ದೃಷ್ಯವು  ಅವಸ್ಥೆಯಲ್ಲಿ ಇರುವುದೇ ಹೊರತು  ಬೇರೆ ಅವಸ್ಥೆಯಲ್ಲಿರುವುದಿಲ್ಲ.ಆದರೆ ಸಾಕ್ಷಿಯು ಅವಸ್ಥಾತ್ರಯದಲ್ಲಿರುನೆಂಬ ಅನುಭವವು ಸವ೯ ಸಮ್ಮತವಾಗಿದೆ.(ಪುಟ ೨೫೮)

೮೯) ಎಚ್ಚರ-ಕನಸು-ನಿದ್ರೆಗಳಲ್ಲಿ  ಸಾಕ್ಷಿಯಾದ ಆತ್ಮನು  ಒಬ್ಬನೇ ಎಂದು ತಿಳಿಯತಕ್ಕದ್ದು;ಹೀಗೆ ಮೂರು ಅವಸ್ಥೆಗಳಿಂದಲೂ  ಪಾರಾದವನಿಗೆ  ಪುನಜ೯ನ್ಮವೇ ಇಲ್ಲ.(ಪುಟ ೨೫೯)

0)ಮೂರು ಅವಸ್ಥೆಗಳಲ್ಲಿಯೂ ಭೋಕ್ತø,ಭೋಗ್ಯ,ಮತ್ತು ಭೋಗ ಎಂಬ ಮೂರಕ್ಕಿಂತ ಬೇರೆಯವನೂ ಚಿನ್ಮಾತ್ರನೂ ಬೇರೆಯವನೂ  ಸಾಕ್ಷಿಯೂ ಆದ ಸದಾಶಿವನು ನಾಮಾಗಿರುವೆನು.(ಪುಟ ೨೬0)
)ಎಚ್ಚರದಲ್ಲಿ -ಸ್ಥೂಲ ವಿಷಯ
)ಕನಸಿನಲ್ಲಿ ಸೂಕ್ಷ್ಮವಿಷಯ
)ನಿದ್ರೆಯಲ್ಲಿ ಆನಂದವನ್ನು ಅನುಭವಿಸುವ  ಭೋಕ್ತøವಿಗೆ ಪ್ರಾಜ್ಞನೆಂದು ಹೆಸರು.(ಪುಟ ೨೬0)

೯೧ಸ್ಥೂಲ ಶರೀರಸೂಕ್ಷ್ಮ ಶರೀರಕಾರಣ ಶರೀರ-ಎಂದು ದೇಹವು ಮೂರು ಬಗೆಯಾಗಿರುವುದು.ಆಯಾ ಶರೀರದಲ್ಲಿ ಜ್ಡರವೂಕೂಡ  ಅವಷ್ಯವಾಗಿ ಮೂರು ಬಗೆಯಾಗಿಯೇ ಇರುವುದು.(ಪುಟ ೨೬೨)

೯೨)ಸ್ಥೂಲ ದೇಹ;ವಾತ ಪಿತ್ತ ಕಫಗಳಿಂದ ಹುಟ್ಟಿದ ವ್ಯಾಧಿಗಳು   ಅಸಂಖ್ಯಾತವಾಗುರುವುವು.ಹಾಗೆಯೇ ದುಗ೯ಂಧ,ಕುರೂಪ ,ಬಾಯಾರಿಕೆ,ಆಯಾಸ ಮೊದಲಾದವುಗಳೂ ಕೂಡ  ಶರೀರದಲ್ಲಿ ಇರುವವು.
ಸೂಕ್ಷ್ಮ ದೇಹ;ರಜೋಗುಣದಿಂದ ಹುಟ್ಟಿದ ಕಾಮ ಕ್ರೋಧಾದಿಗಳು,ಸತ್ವ ಗುಣದಿಂದ ಹುಟ್ಟಿದ ಶಮದಮಾದಿಗಳೂ ಸೂಕ್ಷ್ಮ ಶರೀರದ ಜ್ವರಗಳು.
ಕಾರಣ ಶರೀರ:ಆತ್ಮನು ಕಾರಣ ಶರೀರದಲ್ಲಿ (ಎಂದರೆ ಗಾಢನಿದ್ರೆಯಲ್ಲಿತನ್ನನ್ನೂ ಇತರರನ್ನೂ ಅರಿಯನು ; ಕಾರಣ ಶರೀರವು ಮುಂದೆ ಬರುವ  ದುಃಖಗಳಿಗೆ ಬೀಜವೂ ಆಗಿದೆ(ಪುಟ ೨೬೪)

೯೩)ಹೇಗೆ ದಾರಗಳಿಲ್ಲದೆ ಬಟ್ಟೆ ಇರಲಾರದೊ,ಉಣ್ಣೆಇಲ್ಲದಿದ್ದರೆ  ಕಂಬಳಿ ಇರಲಾರದೊ ಹಾಗೆಯೇ ಜ್ವರಗಳಿಲ್ಲದಿದ್ದರೆ ಶರೀರವೂ ಇರಲಾರದು.(ಪುಟ ೨೬೪)

೯೪)ಚಿದಾಭಾಸನಿಗೆ ಸ್ವಂತವಾದ ಯಾವ ಜ್ವರವೂ ಇಲ್ಲ.(ಪುಟ ೨೬೫)

೯೫)ಯಾವಾಗ  ಜೀವನು ಕೂಟಸ್ಥನನ್ನೂ  ತನ್ನನ್ನೂ,ಶರೀರ ತ್ರಯಗಳನ್ನೂ  ವಿವೇಚಿಸಿ  ಇದೆಲ್ಲ ನಿಜವೆಂಬ ಭ್ರಾಂತಿಯನ್ನು ಬಿಟ್ಟು ತನ್ನ ಆಭಾಸದ ಸ್ವರೂಪವನ್ನೂ ಲೆಕ್ಕಿಸದೆ ತನ್ನ ನಿಜವಾದ ಸ್ವರೂಪವಾದ  ಕೂಟಸ್ಥ ಸಾಕ್ಷಿಯನ್ನೇ ಸದಾ ಚಿಂತಿಸುವನೊ  ಆಗ ಶರೀರವನ್ನೇಕೆ ಅನುಸರಿಸಿ ಸಂತಾಪ ಪಡಬೇಕು.(ಪುಟ ೨೬೫)

೯೬)ಹಗ್ಗವನ್ನು ಹಾವದೆಂದು ತಿಳಿದು  ಮನುಷ್ಯನು  ಹೆದರಿ ಓಡಿಹೋಗುತ್ತಾನೆ.ಅನಂತರ ಅದು ಹಾವಲ್ಲ,ಹಗ್ಗ ಎಂದು ತಿಳಿದಾಗ  ಅವನು ನಾನು ಓಡಿಹೋದದ್ದು ವ್ಯಥ೯ವೆಂದು  ಪಶ್ಚಾತ್ತಾಪ ಪಡುತ್ತಾನೆ.(ಪುಟ ೨೬೬)

೯೭)ಯಾವನು ಬ್ರಹ್ಮವನ್ನು ತಿಳಿದುಕೊಳ್ಳುವನೊ  ಅವನು ಬ್ರಹ್ಮವೇ ಆಗುವನು.ತದೇಕಚಿತ್ತನಾಗಿ   ಬ್ರಹ್ಮವನ್ನೇ ಅರಿಯುವನು.ಬೇರೊಂದನ್ನು ಅರಿಯುವುದಿಲ್ಲ.(ಪುಟ ೨೬೮)

೯೮)ಬ್ರಹ್ಮ ಭಾವವುಂಟಾದರೆ  ಚಿದಾಭಾಸತ್ವವು ನಾಶವಾಗುತ್ತದೆ.(ಪುಟ ೨೬೮)

೯೯)ದೇವತ್ವವನ್ನು ಅಪೇಕ್ಷಿಸುವವರು  ಅಗ್ನಿಯೇ ಮೊದಲಾದುವುಗಳನ್ನು ಪ್ರವೇಶಿಸುವಂತೆ  ಚಿದಾಭಾಸನು ಸಾಕ್ಷಿರೂಪದಿಂದ ಉಳಿಯಲು ತನ್ನ ವಿನಾಶವನ್ನು ಬಯಸುತ್ತಾನೆ.(ಪುಟ ೨೬೮)

00)ಬ್ರಹ್ಮ ಸಾಕ್ಷಾತ್ಕಾರವಾದರೂ  ಪ್ರಾರಬ್ಧ ಕಮ೯ದ ಭೋಗವು  ನಿಧಾನವಾಗಿ ಹೋಗುತ್ತದೆಯೇ ಹೊರತು  ಒಮ್ಮೆಯೇ ಹೋಗುವುದಿಲ್ಲ;ಮತ್ತು ಪ್ರಾರಬ್ಧ ಕಮ೯ವನ್ನು ಭೋಗಿಸುತ್ತಿರುವಾಗ  ಯಾವಾಗಲೋ ಒಂದುಸಲ 'ನಾನು ಮನುಷ್ಯನು ಎಂದು ಭಾಸವಾಗಬಹುದು.(ಪುಟ೨೬೯)

0)ಯಾವಾಗಲೋ ಒಮ್ಮೆ 'ನಾನು ಮನುಷ್ಯನು'ಎಂದು ತೋರಿಕೊಂಡ ಮಾತ್ರದಿಂದಲೇ (ಆಗಮ ಪ್ರಮಾಣದಿಂದ ಹುಟ್ಟಿದತ್ವಜ್ಞಾನವು ನಾಶವಾಗುವುದಿಲ್ಲಜೀವನ್ಮುಕ್ತಿಯು ಒಂದು ವ್ರತವಲ್ಲ.ವಸ್ತು ಸ್ವಭಾವವಾಗಿದೆ.(ಪುಟ೨೬೯)

0)ಹತ್ತನೆಯವನೂ ಕೂಡ ತಲೆಯನ್ನು ಚಚ್ಚಿಕೊಂಡು  ಅತ್ತು 'ನಾನು ಹತ್ತನೆಯವನುಎಂದು ತಿಳಿದು ರೋದಿಸುವುದಿಲ್ಲ.ಆದರೆ ತಲೆಯನ್ನು ಚಚ್ಚಿಕೊಂಡದ್ದರಿಂದ  ಆದ ಗಾಯವು  ಒಂದು ತಿಂಗಳಾದ ಮೇಲೆ ನಿಧಾನವಾಗಿ ಹೋಗುತ್ತದೆಯೇ ಹೊರತು ಕೂಡಲೇ ಹೋಗುವುದಿಲ್ಲ.(ಪುಟ ೨೭0)

0)'ಹತ್ತನೆಯವನು  ಬದುಕಿದ್ದಾನೆ'ಎಂಬ ಜ್ಞಾನದಿಂದ ಉಂಟಾದ  ಹಷ೯ವು  ತಲೆಯನ್ನು ಚಚ್ಚಿಕೊಂಡದ್ದರಿಂದ  ಉಂಟಾದ ಗಾಯದ ದುಃಖವನ್ನು ಮರೆಯುವಂತೆ ಮಾಡುತ್ತದೆ.ಅದರಂತೆಯೇ ಜೀವನ್ಮುಕ್ತಿಯಿಂದಾದ  ಲಾಭವು  ಪ್ರಾರಬ್ಧ ಕಮ೯ದಿಂದಾಗುವ ದುಃಖವನ್ನು ಮರೆಯುವಂತೆ ಮಾಡುತ್ತದೆ.(ಪುಟ ೨೭0)

0)ಜೀವನ್ಮುಕ್ತಿಯು ಒಂದು ವ್ರತವಾಗದಿದ್ದರೂ  ಯಾವಾಗ ದೇಹವೇ ನಾನು ಎಂಬ ಭ್ರಾಂತಿ ಉಂಟಾಗ್ವುದೊ  ಆಗ ವಿವೇವನೆ ಮಾಡಬೇಕು.ಜೀವನ್ಮುಕ್ತನೂ ಪುನಃ ವಿವೇಚಿಸಬೇಕು.(ಪುಟ೨೭0)

0)ಹೇಗೆ ಹತ್ತನೆಯವನು  ತನ್ನ ಗಾಯವನ್ನು  ಔಷಧದಿಂದ ಗಾಯವನ್ನು ವಾಸಿ ಮಾಡಿಕೊಳ್ಳುವನೊ ಹಾಗೆಯೆ ಜ್ಞಾನಿಯು   ಪ್ರಾರಬ್ಧ ಕಮ೯ವನ್ನು ಭೋಗದಿಂದ ನೀಗಿಸಿಕೊಂಡು  ವಿದೇಹ ಮುಕ್ತಿಯನ್ನು ಪಡೆಯುವನು.(ಪುಟ ೨೭೧)

0ಜೀವನ ಏಳು ಅವಸ್ಥೆಗಳಲ್ಲಿ ತೃಪ್ತಿಯೇ ಏಳನೆಯದು.(ಪುಟ೨೭೧)

0)ಜ್ಞಾನಿಯು ಮಾಡಬೇಕಾದ್ದು ಮಾಡಲ್ಪಟ್ಟಿದೆ.ಹೊಂದಬೇಕಾದ್ದು ಹೊಂದಲ್ಪಟ್ಟಿದೆ-ಎಂದು ತೃಪ್ತನಾಗುತ್ತಾನೆ.ವಿಷಯ ಲಾಭದಿಂದ ಆಗುವ ತೃಪ್ತಿಯು ಸಾಂಕುಶ.ವಿಷಯದ ಬಯಕೆ ಇಲ್ಲದೆ   ಬ್ರಹ್ಮ ಸಾಕ್ಷಾತ್ಕಾರದಿಂದ ಹುಟ್ಟುವ  ಇನ್ನೊಂದು ತೃಪ್ತಿಯು ನಿರಂಕುಶವೆನಿಸುತ್ತz.
É(ಪುಟ ೨೭೧)  

0)ಇವನು ಜ್ಞಾನೋತ್ಪತ್ತಿಗೆ ಮುನ್ನ   ಲೋಕದ ಮತ್ತು ಪರಲೋಕದ  ಭೋಗಗಳನ್ನು ಪಡೆಯುವುದಕ್ಕಾಗಿ  ಕೃಷಿ ವಾಣಿಜ್ಯ ಯಾಗೋಪಾಸನೆಗಳನ್ನೂ  ಮೋಕ್ಷವನ್ನು ಪಡಯುವುದಕ್ಕಾಗಿ  ಶ್ರವಣಾದಿಗಳನ್ನೂ ಮಾಡಬೇಕಾಯಿತು.ಈಗ ಯಾವ ಸಂಸಾರದ ಫಲೇಚ್ಛೆಯು ಇಲ್ಲದಿರುವುದರಿಂದಲೂ ಮತ್ತು ಬ್ರಹ್ಮಾನಂದದ ಸಾಕ್ಷಾತ್ಕಾರವು  ಸಿದ್ಧವಾಗಿರುವುದರಿಂದಲೂ ಎಲ್ಲವನ್ನೂ ಮಾಡಿದಂತೆಯೇ ಆಯಿತು.(ಪುಟ ೨೭೨)

0೯)ದುಃಖಿಗಳಾದ ಅಜ್ಞಾನಿಗಳು  ಮಡದಿ ಮಕ್ಕಳು ಮೊದಲಾದ  ಬಯಕೆಗಳಿಂದ  ಬೇಕಾದಷ್ಟು ಸ್ವಗ೯ ನರಕಗಳಲ್ಲಿ ಸುತ್ತುತ್ತಿರಲಿ.ಬ್ರಹ್ಮಾನಂದದಿಂದ ಪೂಣ೯ವಾಧ ನಾನು  ಯಾವ ಬಯಕೆಯಿಂದ ಸುತ್ತಲಿ?(ಪುಟ ೨೭೨)

೧೧0)ಸಮಸ್ತಲೋಕಗಳ  ಆತ್ಮನಾದ ನಾನು  ಯಾವ ಕಾರಣದಿಂದ ಯಾವ  ಕಮ೯ವನ್ನು ಹೇಗೆ ಮಾಡಲಿ?ಪುಟ ೨೭೩)  

೧೧೧ ಕಮ೯ಗಳಲ್ಲಿ ಅಧಿಕಾರಿಗಳಾಗಿರುವವರು  ವೇದಾಂಗಗಳಾದ  ವ್ಯಾಕರಣಾದಿ-ಶಾಸ್ತ್ರಗಳನ್ನು ಶಿಷ್ಯರಿಗೆ  ಹೇಳಲಿ ಅಥವಾ ವೇದಗಳನ್ನು ಅಧ್ಯಯನ ಮಾಡಲಿ .ಆದರೆ ಕ್ರಿಯೆಗಳನ್ನು ಮಾಡದಿರುವ ನನಗೆ  ವೈದಿಕ ಧಮ೯ದಲ್ಲಿ ಅಧಿಕಾರವಿಲ್ಲ.(ಪುಟ ೨೭೩)

೧೧೨)ನಾನು ನಿದ್ರೆ,ಭಿಕ್ಷೆ,ಸ್ನಾನ,ಶೌಚ ಇವುಗಳನ್ನು ಮಾಡುವುದು ಕಂಡುಬಂದರೂ  ಇವುಗಳ ಬಯಕೆಯೂ ನನಗಿಲ್ಲ.ಮಾಡುವುದೂ ಇಲ್ಲ.ನೋಡುವವರು ನನ್ನಲ್ಲಿ ಇವುಗಳನ್ನು ಕಲ್ಪಿಸಿದರೆ  ಅದರಿಂದ ನನಗೇನಾಗುತ್ತದೆ.(ಪುಟ ೨೭೩)

೧೧೩)ತತ್ವವನ್ನು ತಿಳಿಯದ ಅಜ್ಞಾನಿಗಳು  ವೇದಾಂತವನ್ನು ಕೇಳಲಿಅದನ್ನು ತಿಳುದಿರುವ ನಾನು ಶವಣವನ್ನು ಏಕೆ ಮಾಡಲಿ?ಸಂಶಯವನ್ನು ಹೊಂದಿದವರು ಮನನವನ್ನೂ ಮಾಡಲಿ, ಸಂಶಯರಹಿತನಾದ ನಾನು  ಮನನವನ್ನು ಮಾಡಲಾರೆನು..(ಪುಟ ೨೭೪)

೧೧೪)ದೇಹೇಂದ್ರಿಯಗಳಲ್ಲಿ 'ನಾನುಎಂಬ ವಿಪರೀತ ಜ್ಞಾನವುಳ್ಳವನು  ನಿದಿಧ್ಯಾಸನವನ್ನು ಮಾಡಲಿ;ನನಗೆ ವಿಪರೀತ ಜ್ಞಾನವಿಲ್ಲದುದರಿಂದ ನಾನೇಕೆ ನಿದಿಧ್ಯಾಸನವನ್ನು ಮಾಡಲಿ?ದೇಹವೇ ಆತ್ಮವೆಂಬ ವಿಪರೀತ ಜ್ಞಾನವನ್ನು ನಾನೆಂದಿಗೂ ಹೊಂದುವುದಿಲ್ಲ.(ಪುಟ ೨೭೪)

೧೧೫)ನನಗೆ ವಿಪರೀತ ಜ್ಞಾನವಿಲ್ಲದಿದ್ದರೂ 'ನಾನು ಮನುಷ್ಯ'ಎಂಬ ವ್ಯವಹಾರವು  ಬಹುಕಾಲದ ಅಭ್ಯಾಸದಿಂದ  ಉಂಟಾಗಿರುವ ವಾಸನೆಯಿಂದಲೇ ಆಗುತ್ತದೆ.(ಪುಟ ೨೭೫)

೧೧೬)ಪ್ರಾರಬ್ಧ ಕಮ೯ವು ಕ್ಷೀಣವಾದಾಗ  ಲೋಕವ್ಯವಹಾರವು ತೊಲಗುತ್ತದೆ.ಪ್ರಾರಬ್ಧ ಕಮ೯ವು ಕ್ಷಯವಾಗದಿದ್ದರೆ  ಲೋಕ ವ್ಯವಹಾರವು ಸಾವಿರಾರು ಧ್ಯಾನಗಳಿಂದಲೂ  ಹೋಗಲಾರದು.(ಪುಟ ೨೭೫)

೧೧೭)ಲೋಕದ ವ್ಯವಹಾರವು  ಕಡಮೆಯಾಗಬೇಕೆಂಬ ಬಯಕೆ ಇದ್ದರೆ  ನೀನು ಧ್ಯಾನವನ್ನು ಮಾಡು.ಆದರೆ ವ್ಯವಹಾರದಿಂದ ಯಾವ ಬಾಧೆಯೂ ಆಗದ ನನಗೆ ಧ್ಯಾನವೇತಕ್ಕೆ?(ಪುಟ ೨೭೫)

೧೧೬)ನನಗೆ ಚಿತ್ತವಿಕ್ಷೇಪವಿಲ್ಲದಿರುವುದರಿಂದ ಚಿತ್ತ ವೃತ್ತಿ ನಿರೋಧ ರೂಪವಾದ  ಸಮಾಧಿಯೂ ಇಲ್ಲ.ಚಿತ್ತ ವಿಕ್ಷೇಪವೂ  ಸಮಾಧಿಯೂ ಬದಲಾವಣೆಯನ್ನು ಹೊಂದುವ ಮನಸ್ಸಿಗೆ ಸಂಬಂಧಪಟ್ಟ ವಿಷಯಗಳು.(ಪುಟ ೨೭೫

೧೧೭)ನಿತ್ಯಾನುಭವ ಸ್ವರೂಪನಾದ ನನಗೆ  ಬೇರೆ ಅನುಭವವು ಎಲ್ಲಿಯದು?ಆದುದರಿಂದ ಮಾಡಬೇಕಾದ್ದನ್ನೆಲ್ಲ ಮಾಡಿದ್ದಾಯಿತು.ಪಡೆಯತಕ್ಕದ್ದನ್ನೆಲ್ಲ ಪಡೆದದ್ದಾಯಿತು  ಎಂಬುದು ನಿಶ್ಚಯವಾಗಿದೆ.(ಪುಟ ೨೭೬)

೧೧೮)ಲೌಕಿಕವಾದ ಅಥವಾ ಶಾಸ್ತ್ರೀಯವಾದ  ಅಥವಾ ಅನ್ಯವಿಧವಾದ ವ್ಯವಹಾರವನ್ನು ಮಾಡುವವನಲ್ಲವಾದರೂ  ಸಂಗರಹಿತನೂ ಆದ ನನಗೆ  ನನ್ನ ಪ್ರಾರಬ್ಧದ ಪ್ರಕಾರ ಉಂಟಾಗಲಿ.(೨೭೬)

೧೧೯)ನಾನು ಮಾಡತಕ್ಕದ್ದನ್ನೆಲ್ಲ ಮಾಡಿದ್ದಾಗಿದ್ದರೂ  ಪ್ರಾಣಿಗಳನ್ನು ಅನುಗ್ರಹಿಸ ಬೇಕೆಂಬ ಬಯಕೆಯಿಂದ ಶಾಸ್ತ್ರದಲ್ಲಿ  ವಿಧಿಸಿದಂತೆಯೇ ನಡೆಯುತ್ತೇನೆ.ಅದರಿಂದ ನನಗೆ ಯಾವ ಹಾನಿಯೂ ಇಲ್ಲ.(ಪುಟ೨೭೬)

೧೨0) ಶರೀರವು ದೇವತಾಚ೯ನೆ ,ಸ್ನಾನ,ಶೌಚ,ಭಿಕ್ಷೆ ಮೊದಲಾದವುಗಳನ್ನು ಮಾಡಲಿ.ಹಾಗೆಯೇ  ನಾಲಗೆಯು ಒಂಕಾರವನ್ನು ಜಪಿಸಲಿ ಮತ್ತು ಶ್ರುತಿಶಿರಸ್ಸೆನಿಸಿದ  ಉಪನಿಷತ್ತುಗಳನ್ನು ಪಠಿಸಲಿ.(ಪುಟ ೨೭೭)

೧೨೧) ಬುದ್ಧಿಯು ವಿಷ್ಣುವನ್ನು ಧ್ಯಾನಿಸಲಿ ಅಥವಾ ಬ್ರಹ್ಮಾನಂದದಲ್ಲಿ ಮುಳುಗಲಿ   ಮೂರು ಕರಣಗಳಿಗೆ  ಸಾಕ್ಷಿಯಾದ ನಾನು  ಏನನ್ನೂ ಮಾಡುವುದಿಲ್ಲ.(ಪುಟ ೨೭೭)

೧೨೨)ಹೀಗೆ ಪೂವ೯ದ ಮತ್ತು ಪಶ್ಚಿಮದ ಸಮುದ್ರಗಳಂತೆ  ವಿಷಯಗಳು ಬೇರೆ ಬೇರೆ ಯಾಗಿರುವಾಗ  ಕಮಿ೯ಗೂ ನನಗೂ ಜಗಳವು ಹೇಗೆ ಹುಟ್ಟುತ್ತದೆ?(೨೭೭)

೧೨೩)ಶಾಸ್ರ್ತೀಯ ಕಮ೯ಗಳನ್ನು ಮಾಡಲೇ ಬೇಕೆಂಬ ನಿಯಮವು ಶರೀರ-ವಾಕ್ಕು--ಬುದ್ಧಿಗಳಲ್ಲಿ ಇರುವುದೇ ಹೊರತು  ಅವುಗಳ ಸಾಕ್ಷಿಗಲ್ಲ.ಜ್ಞಾನಿಗಾದರೋ ಸಾಕ್ಷಿಯು ನಿಲೇ೯ಪನು  ಎಂಬುದರಲ್ಲಿ ನಿಯಮವೇ ಹೊರತು  ಕಮ೯ದಲ್ಲಿಲ್ಲ.(ಪುಟ೨೭೭)

೧೨೪)ಹೀಗೆ ಜ್ಞಾನಿ ಕಮಿ೯ಗಳು ಬೇರೆ ಬೇರೆಯಾಗಿದ್ದರೂ ತಮ್ಮ ತಮ್ಮ ಅಕತೃ೯ತ್ವ ಇವುಗಳನ್ನು ಅರಿಯದೆ ಇಬ್ಬರು ಕಿವುಡರ ಹಾಗೆ  ಕಲಹ ಮಾಡಿಕೊಳ್ಳಲಿ.ಬುದ್ಧಿವಂತರಾದವರು ಇದನ್ನು ನೋಡಿ ನಗುತ್ತಾರೆ.(ಪು ೨೭೮)

೧೨೫)ಕಮಿ೯ಯು ಅಸಂಗನಾದ ಯಾವ ಸಾಕ್ಷಿಯನ್ನು ಅರಿಯನೊ   ಸಾಕ್ಷಿಯನ್ನು ತತ್ವಜ್ಞಾನಿಯು ಬ್ರಹ್ಮವೆಂದು ತಿಳಿಯಲಿ.ಇದರಿಂದ ಕಮ೯ಠನಿಗೆ ಏನು ಹೋಗುತ್ತದೆ?(ಪುಟ ೨೭೮)

೧೨೬)ತತ್ವಜ್ಞಾನಿಯಾದವನು  ದೇಹ ವಾಕ್ಕು ಬುದ್ಧಿ-ಇವುಗಳೆಲ್ಲ ಸುಳ್ಳು  ಎಂಬ ಬುದ್ಧಿಯಿಂದ ಬಿಟ್ಟುಬಿಡುತ್ತಾನೆ.ಇದರಿಂದ ಜ್ಞಾನಿಗೇನು ಹೋಗುತ್ತದೆ?(ಪುಟ ೨೭೮)

೧೨೭)ಕಮಾ೯ನುಷ್ಠಾನವು ಪ್ರಯೋಜನವಿಲ್ಲವೆಂದು ಜ್ಞಾನಿಯು ಹೇಳಿದರೆ ,ಕಮ೯ವನ್ನು ಬಿಟ್ಟಿದ್ದರಿಂದ ಏನು ಪ್ರಯೋಜನವಾಯಿತುಎಂದು ಕಮಿ೯ಯು ಕೇಳುತ್ತಾನೆ.ಕಮ೯ವನ್ನು ಬಿಡುವುದು ಜ್ಞಾನಕ್ಕೆ ಕಾರಣವಾಗುತ್ತದೆ ಎಂದು ಜ್ಞಾನಿಯು ಹೇಳಿದರೆ ಕಮ೯ವನ್ನು ಮಾಡುವುದು ಜಿಜ್ಞಾಸೆಗೆ  ಕಾರಣವಾಗುತ್ತದೆಎಂದು ಕಮಿ೯ಯು ಹೇಳುತ್ತಾನೆ.(ಪುಟ೨೭೮)

೧೨೮)ಒಮ್ಮೆ ಹುಟ್ಟಿದ ಜ್ಞಾನಕ್ಕೆ ಸ್ಥಿರತ್ವವುಂಟಾಗಲು ಕಮ೯ದ ನಿವೃತ್ತಿಯು ಬೇಕಾಗಿದೆ.ಸ್ಥಿರತ್ವವು  ಒಂದು ಜ್ಞ್ಆನದಿಂದ ಇನ್ನೊಂದು ಜ್ಞಾನವು ಸುಳ್ಳಾಗದಿರುವುದನ್ನು ಬಯಸುತ್ತದೆಯೇ ಹೊರತು ಬೇರೆ ಸಾಧನವನ್ನು ಅಪೇಕ್ಷಿಸುವುದಿಲ್ಲ.(ಪುಟ ೨೭೯)

೧೨೯)ವೇದಾಂತವಾಕ್ಯವೆಂಬ  ಪ್ರಮಾಣದಿಂದ ಹಿಟ್ಟಿದ  ಜ್ಞಾನವು ಬೇರೊಂದು ಬಲವತ್ತರವಾದ ಪ್ರಮಾಣದಿಂದ ಸುಳ್ಳಾಗದುರುವುದರಿಂದ  ಪುನಃ ಜ್ಞಾನಾನುಸಂಧಾನವುಂಟಾಗಲಿಇದಕ್ಕಾಗಿ ಕಮ೯ವನ್ನು ಮಾಡಬೇಕಾಗಿಲ್ಲ.(ಪುಟ ೨೭೯)

೧೩0)ಅವಿದ್ತೆಯಾಗಲಿ ಅದರ ಕಾಯ೯ವಾಗಲಿ  ಜ್ಞಾನವನ್ನು ಬಾಧಿಸಲು ಶಕ್ತವಾಗುವುದಿಲ್ಲ.ಏಕೆಂದರೆ ಮೊದಲೇ  ಇವೆರಡೂ ತತ್ವಜ್ಞಾನದಿಂದ ಬಾಧಿಸಲ್ಪಟ್ಟವು.(ಪುಟ ೨೭೯)                




                ೧೩೧)ಇಂದ್ರಿಯಗಳು  ಬಾಧಿತವಾದ ಅವಿದ್ಯಾ ಕಾಯ೯ವಾದ  ಜಗತ್ತನ್ನು ನೋಡಲಿ ಅವಿದ್ಯಾಕಾಯ೯ದಿಂದ ಜ್ಞಾನಕ್ಕೆ ಯಾವ ಹಾನಿಯೂ ಇಲ್ಲ.(ಪುಟ ೨೮0)

೧೩೨)ದ್ವೈತದ ತೋಕೆ೯ಯಿಂದ ತತ್ವಜ್ಞಾನಕ್ಕೆ  ಯಾವ ಭಯವೂ ಇಲ್ಲ.(ಪುಟ ೨೮೧)

೧೩೩)ಜ್ಞಾನಹೀನನಿಗೆ ಕಮ೯ವನ್ನು ಮಾಡುವುದರಲ್ಲಿ  ನಿಬ೯ಂಧವು ಎಲ್ಲ ಬಗೆಯಿಂದಲೂ ನ್ಯಾಯವಾದದ್ದು.ಆದುದರಿಂದ  ಅಂಥ ಮನುಷ್ಯರು  ಸ್ವಗ೯ಕ್ಕಾಗಲದಿ ಮೋಕ್ಷಕ್ಕಾಗಲಿ ಪ್ರಯತ್ನಿಸಬೇಕು.(ಪುಟ ೨೮೧)

೧೩೪)ಜ್ಞಾನಿಯಾದವನು ಅಂಥ ಕಮಿ೯ಗಳ ಮಧ್ಯದಲ್ಲಿರುವಾಗ  ಅವರಂತೆಯೆ ಕಮ೯ಗಳನ್ನೆಲ್ಲ  ಶರೀರದಿಂದಲೂ ವಾಕ್ಕಿನಿಂದಲೂ  ಮನಸ್ಸಿನಿಂದಲೂ ಮಾಡುತ್ತಾನೆ.(ಪು  ೨೮೧)

೧೩೫)ಜ್ಞಾನವಿಲ್ಲದ ಕಮಿ೯ಗಳು  ಕಮ೯ವನ್ನು ಮಾಡದೆ ಉಭಯ ಭ್ರಷ್ಟರಾಗುತ್ತಾರೆ.(ಪುಟ ೨೮೨)

೧೩೬)ಮೊಲೆಯುಣ್ಣುವ ಮಗುವನ್ನು ಅನುಸರಿಸಿ  ತಂದೆಯಾದವನು ನಡೆಯುವಂತೆ  ಅಜಞನಿಗಳಿಗನುಸಾರವಾಗಿ  ಜ್ಞಾನಿಯು ನಡೆಯುವುದು ಯುಕ್ತವಾಗಿದೆ.(ಪುಟ ೨೮೨)

೧೩೭)ಅಜ್ಞಾನಿಗಳು ಜ್ಞಾನಿಯನ್ನು ನಿಂದಿಸಿದರೂ ಜೊಗಳಿದರೂ  ಅವನು ಅವರನ್ನು ನಿಂದಿಸುವುದೂ ಇಲ್ಲ ಹೊಗಳುವುದೂ ಇಲ್ಲ.ಮತ್ತೇನೆಂದರೆ ಅವರಿಗೆ ಜ್ಞಾನವುಂಟಾಗುವಂತೆ ನಡೆಯುತ್ತಾನೆ.(ಪುಟ೨೮೩)

೧೩೮ಅಜ್ಞಾಗಳಿಗೆ ಬೋಧಿಸುವುದನ್ನು ಬಿಟ್ಟರೆ  ಜ್ಞಾನಿಗೆ ಮತ್ತೊಂದು ಕತ೯ವ್ಯವಿಲ್ಲ.(ಪುಟ ೨೮೩)

೧೩೯)ಬ್ರಹ್ಮಸ್ವರೂಪವು ಸ್ಪಷ್ಟವಾಗಿ ತೋರುತ್ತಿರುವುದರಿಂದ ನಾನು ಧನ್ಯನು!ನಾನು ಧನ್ಯನು!(ಪುಟ ೨೮೩)

೧೪0)ನನಗೆ ಯಾವ ಕತ೯ವ್ಯವೂ ಇಲ್ಲ.ನನಗೆ ಬೇಕಾದುದೆಲ್ಲ ಇಂದು ಬಂದಿರುವುದರಿಂದ ನಾನು ಧನ್ಯನು!(ಪುಟ೨೮೪)

೧೪೧ಸಮ್ಯಕ್ ಜ್ಞಾನಕ್ಕೆ ಕಾರಣವಾದ  ಶಾಸ್ತ್ರವನ್ನೂ ಗುರುವನ್ನೂ ನೆನೆಸಿಕೊಂಡು  ಸಂತೋಷಿಸುತ್ತಾರೆ.(ಪುಟ೨೮೫)

೧೪೨)ಯಾವ ಪಂಡಿತರು  ತೃಪ್ತಿದೀಪವನ್ನು  ಯಾವಾಗಲೂ ಮನಸ್ಸಿಗೆ ತಂದುಕೊಳ್ಳುವರೊ  ಅವರು ಬ್ರಹ್ಮಾನಂದದಲ್ಲಿ  ಮುಳುಗಿದವರಾಗಿ  ನಿರಂತರವೂ ತೃಪ್ತಿಪಡುತ್ತಾರೆ.(ಪುಟ ೨೮೫)

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,


No comments:

Post a Comment