Sunday, 2 February 2020

Vidyaranya Saara Sangraha - Panchadashi - Part -3



)ಚಿತ್ರದೀಪ ಪ್ರಕರಣ:

)ಪರಮಾತ್ಮನಲ್ಲಿ ಆರೋಪಿತವಾಗಿರುವ ಜಗತ್ತಿನ ಸ್ಥಿತಿ ಪ್ರಕಾರವನ್ನು  ದೃಷ್ಟಾಂತ ಸಹಿತವಾಗಿ ಹೇಳುತ್ತಾರೆ.(ಪುಟ೧0)

)ಹೇಗೆ ಚಿತ್ರಪಟವು ಧೌತ,ಘಟ್ಟಿತ,ಲಾಂಛಿತ,ರಂಜಿತ-ಎಂಬ ನಾಲ್ಕು ಅವಸ್ಥೆಗಳನ್ನು ಹೊಂದುವುದೊ  ಹಾಗೆಯೇ ಪರಮಾತ್ಮನು ಚಿತ್,ಅಂತಯಾ೯ಮಿ,ಸೂತ್ರಾತ್ಮ,ವಿರಾಟ್-ಎಂಬ ನಾಲ್ಕು ಅವಸ್ಥೆಗಳನ್ನು  ಹೊಂದುತ್ತಾನೆ.(ಪುಟ೧0)

)( ನಾಲ್ಕು ಅವಸ್ಥೆಗಳಲ್ಲಿದ್ರವ್ಯಾಂತರ ಸಂಬಂಧವಿಲ್ಲದೆ)ಸ್ವತಃ ಶುಭ್ರವಾದ  ವಸ್ತುವು ಧೌತ ವಾಗುವುದು.ಗಂಜಿಯನ್ನು ಲೇಪಿಸುವುದರಿಂದ  ಅದು ಘಟ್ಟಿತವಾಗುವುದು;ಮಸಿಯಿಂದ ಆಕಾರ ರೇಖೆಗಳನ್ನು ಬರೆದಾಗ ಲಾಂಛಿತವಾಗುವುದು;ಅದನ್ನು ಬಣ್ಣದಿಂದ ತುಂಬಿಸಿದಾಗ ರಂಜಿತವಾಗುವುದು.(ಪುಟ (ಪುಟ 0)

)ಇದೇರೀತಿ ಪರಮಾತ್ಮನು
)'ಚಿತ್' ಎಂದು ಹೇಳಲ್ಪಡುತ್ತಾನೆ.
) ಮಾಯೆಯ ಸಂಬಂಧದಿಂದ  ಅಂತಯಾ೯ಮಿ ಎನಿಸುತ್ತಾನೆ.
)ಸೂತ್ರಾತ್ಮ- ಸಮಷ್ಟಿಯಾದ ಸೂಕ್ಷ್ಮ ಶರೀರದ ಸಂಬಂಧದಿಂದ
)ವಿರಾಟ್-ಸಮಷಿÂ್ಟಯಾದ ಸ್ಥೂಲ ಶರೀರದಿಂದ(  ಪುಟ 0)

) ಪರಮಾತ್ಮನಲ್ಲಿ ಬ್ರಹ್ಮದಿಂದ ಪ್ರಾರಂಭಿಸಿ ಹುಲ್ಲಿವರೆಗೆ ಚೇತನ-ಅಚೇತನ ವಸ್ತುಗಳು ಉತ್ತಮ-ಅಧಮ ಭಾವದಿಂದಚಿತ್ರಪಟದಲ್ಲಿರುವಂತೆ ಇರುವುವು.(ಪುಟ 0)

 )ಹೀಗೆಯೇ ಪರಮಾತ್ಮನಲ್ಲಿ ಆರೋಪಿಸಲ್ಪಟ್ಟ ದೇವ ಮನುಷ್ಯಾದಿ ಪ್ರಾಣಿಗಳಿಗೆ ಜೀವವೆಂಬ ಹೆಸರುಳ್ಳ ಚಿದಾಭಾಸನು  ಬೇರೆ ಬೇರೆಯಾಗಿ
ಕಲ್ಪಿಸಲ್ಪಟ್ಟಿದ್ದಾರೆ. ಜೀವರು ಬಹು ಪ್ರಕಾರವಾಗಿ ಸಂಸಾರವನ್ನು ಹೊಂದುತ್ತಾರೆ.ಹೀಗೆ ಸಂಸಾರವಿರುವುದು ಜೀವನಿಗೇ ಹೊರತು ಆತ್ಮನಿಗಲ್ಲ.(ಪುಟ೧0)

)ಹೀಗೆ ಆತ್ಮನಲ್ಲಿ ಆರೋಪಿತವಾದ ಸಂಸಾರವು  ಜ್ಞಾನದಿಂದ ಹೋಗುತ್ತದೆ ಎಂಬುದನ್ನು ಸಾಧಿಸಲು  ಅದರ ಮೂಲವಾದ ಅವಿದ್ಯೆಯ  ಸ್ವರೂಪವನ್ನು ಹೇಳುತ್ತಾರೆ.(ಪುಟ 0)

) ಸಂಸಾರವು ನಿಜವಾದುದು  ಮತ್ತು ತನ್ನ ಸ್ವರೂಪವಾದ  ಆತ್ಮನಲ್ಲಿ ಸಂಲಗ್ನವಾಗಿದೆ -ಎಂಬ ಭ್ರಾಂತಿಯು ಅವಿದ್ಯೆಯಾಗಿದೆ. ಅವಿದ್ಯೆಯು ಭ್ರಾಂತಿಯಿಂದ ಹೋಗುವುದು.(ಪುಟ 0)

೯)ಚಿದಾಭಾಸನಾದ ಜೀವನಿಗೆ (ಚದಾಭಾಸ=ಜೀವ)ಸಂಸಾರವಿದೆಯೆ ಹೊರತು  ಆತ್ಮ ವಸ್ತುವಿಗಲ್ಲ-ಎಂಬ ಜ್ಞಾನವೇ ಬ್ರಹ್ಮವಿದ್ಯೆಯಾಗುವುದು. ವಿದ್ಯೆಯು ವಿಚಾರದಿಂದ ಹೊಂದಲ್ಪಡುವುದು.(ಪುಟ 0)

0)ಆದುದರಿಂದ ಜಗತ್ತು ಜೀವ ಪರಮಾತ್ಮ- ಮೂವರ ಸ್ವರೂವನ್ನು ಯಾವಾಗಲೂ ವಿಚಾರಿಸತಕ್ಕದ್ದು.ಜೀವಭಾವಕ್ಕೂ  ಜಗದ್ಬಾವಕ್ಕೂ  ಬಾಧೆಯುಂಟಾದರೆ  ಆತ್ಮನೊಬ್ಬನೇ ಉಳಿಯುತ್ತಾನೆ.(ಪುಟ೧0)

    




೧೧)ಪರಮಾತ್ಮನೊಬ್ಬನೇ ಉಳಿಯುತ್ತಾನೆಂದರೆ ಪರಮಾತ್ಮನು ಸತ್ಯವೆಂಬ ನಿಶ್ಚಯಜ್ಞಾನವು ಆಗುವುದೇ ಹೊರತು ಜಗತ್ತನ್ನು ಮರೆತುಬಿಡುವುದಲ್ಲಹಾಗಿಲ್ಲದಿದ್ದರೆ ಜೀವನ್ಮುಕ್ತಿಯು ಸಂಭವಿಸುತ್ತಿರಲಿಲ್ಲ.(ಪುಟ 0)

೧೨)ವಿಚಾರದಿಂದ ಹುಟ್ಟತಕ್ಕವಿದ್ಯೆಯು  ಪರೋಕ್ಷ  ಮತ್ತು ಅಪರೋಕ್ಷ ಎಂದು ಎರಡುವಿಧ.ಇವೆರಡರಲ್ಲಿ  ಅಪರೋಕ್ಷ ಜ್ಞಾನವುಂಟಾದರೆ  ವಿಚಾರವು ಪರಿಸಮಾಪ್ತಿಯನ್ನು ಹೊಂದುತ್ತದೆ.(ಪುಟ 0)

೧೩)'ಬ್ರಹ್ಮವು ಇದೆ ಎಂದು ತಿಳಿದುಕೊಂಡರೆ  ಅದೇ ಪರೋಕ್ಷ ಜ್ಞಾನ.'ನಾನೇ ಬ್ರಹ್ಮವಾಗಿದ್ದೇನೆ'ಎಂದು ತಿಳುದುಕೊಂಡರೆ ಅದು ಅಪರೋಕ್ಷ ಅಪರೋಕ್ಷ ಜ್ಞಾನವಾಗುವುದು-ಎಂದು ಹೇಳಲ್ಪಟ್ಟಿದೆ.(ಪುಟ 0)

೧೪)ಯಾವ ಸಾಕ್ಷಾತ್ಕಾರದಿಂದ  ಪುರುಷನು ಸವ೯ ಸಂಸಾರದಿಂದ  ಕೂಡಲೇ ವಿಮುಕ್ತನಾಗುವನೋ ಸಾಕ್ಷಾತ್ಕಾರದ ಸಿದ್ಧಿಗೋಸ್ಕರ ಆತ್ಮಸ್ವರೂಪವು ವಿವೇಚಿಸಲ್ಪಡುತ್ತದೆ.(0)

೧೫)ಒಂದೇ ಆಕಾಶವು )ಘಟಾಕಾಶ )ಮಹಾಕಾಶ )ಜಲಾಕಾಶ ) ಮೇಘಾಕಾಶ -ಎಂದು ನಾಲ್ಕು ಬಗೆಯಾಗಿ ತೋರುವಂತೆ  ಒಬ್ಬನೇ ಆದ ಪರಮಾತ್ಮ  ಚೈತನ್ಯವು )ಕೂಟಸ್ಥ )ಬ್ರಹ್ಮ ) ಜೀವ )ಈಶ್ವರ-ಎಂದು ನಾಲ್ಕು ಬಗೆಯಾಗಿ ತೋರುವುದು.(ಪುಟ 0)

೧೬)ಪ್ರಾಣಗಳನ್ನು ಧರಿಸಿರುವುದರಿಂದ ಜೀವಿ ಎನಿಸಿದ್ದಾನೆ. ಜೀವನಿಗೆ ಸಂಸಾರವಿದೆ.(ಪು 0)

೧೭)ಜಲಾಕಾಶದಿಂದ ಘಟಾಕಾಶವೆಲ್ಲವೂ  ಹೇಗೆ ಮುಚ್ಚಲ್ಪಡುತ್ತದೆಯೊ  ಹಾಗೆಯೇ ಜೀವನಿಂದ ಕೂಟಸ್ಥನು ಮುಚ್ಚಲ್ಪಡುತ್ತಾನೆ. ತಿರೋದಾನಕ್ಕೆ ಅನ್ಯೋನ್ಯಾಧ್ಯಾಸವೆಂದು ಹೆಸರು.(ಪುಟ೧0)

೧೮)ಜೀವನು ತಾನು ಕೂಟಸ್ಥನಿಗಿಂತ ಬೇರೆಯವನೆಂದು  ಎಂದಿಗೂ ತಿಳಿಯನು. ಅನಾದಿಯಾದ ಅವಿವೇಕವನ್ನೇ  'ಮೂಲಾವಿದ್ಯೆ'ಎಂದು ತಿಳಿಯಬೇಕು.(ಪುಟ೧0) 

೧೯)ಅವಿದ್ಯೆಯು ವಿಕ್ಷೇಪರೂಪದಿಂದಲೂ  ಆವರಣರೂಪದಿಂದಲೂ ಎರಡು ವಿಧವಾಗಿರುವುದು.'ಕೂಟಸ್ಥನಿಲ್ಲ,ಅವನು ಪ್ರಕಾಶಿಸುವುದಿಲ್ಲ'ಎಂದು ಹೇಳುವುದಕ್ಕೆ  ಆವರಣ ಶಕ್ತಿಯೇ ಕಾರಣವಾಗಿರುವುದು.(ಪುಟ೧0)

0) ಚೈತನ್ಯವು ಅವಿದ್ಯೆಗೆ  ವಿರೋಧಿಯಾಗಿದ್ದರೆ  ಅವಿದ್ಯೆಯ ಆವರಣವನ್ನು ಯಾರು ಅನುಭವಿಸುತ್ತಿದ್ದರು?ವಿವೇಕವಾದರೋ ಅವಿದ್ಯೆಗೆ ವಿರೋಧವಾಗಿರುವುದು;ಇದನ್ನು ತತ್ವಜ್ಞಾನಿಯಲ್ಲಿ ನೋಡಬಹುದು.(೧೧0)








೨೧)ದೃಷ್ಟಾಂತವಾದ ಕಪ್ಪೆಯಚಿಪ್ಪಿನಲ್ಲಿ ಆರೋಪಿಸಲ್ಪಟ್ಟ ವಸ್ತುವಿಗೆ 'ಬೆಳ್ಳಿ'ಎಂದು ಹೆಸರಿರುವಂತೆ  ಕೂಟಸ್ಥನಲ್ಲಿ  ಕಲ್ಪಿಸಲ್ಪಟ್ಟ ಚಿದಾಭಾಸನಿಗೆ 'ನಾನು'ಎಂಬ ಹೆಸರುಂಟಾಗಿದೆ.
(ಪುಟ೧೧೧) 

೨೨)ಆತ್ಮಚೈತನ್ಯವು ಅಚೇತನಗಳಲ್ಲಿಯೂ ಇರುತ್ತದೆ.(ಪುಟ 0)

೨೩)ಚೇತನಕ್ಕೂ ಅಚೇತನಕ್ಕೂ ಇರುವ ಭೇದವು ಕೂಟಸ್ಥನಿಂದ ಆಗಲಿಲ್ಲ.ಬುದ್ಧಿಯಲ್ಲಿ
 ಕಲ್ಪಿಸಲ್ಪಟ್ಟ ಚಿದಾಭಾಸನಿಂದ ಭೇದವಾಗಿದೆ ಎಂದು ಗ್ರಹಿಸಲ್ಪಡಲಿ.(ಪುಟ ೧೧೪)

೨೪)ಹೇಗೆ ಚೇತನನಾದ ಚಿದಾಭಾಸನು (ಎಂದರೆ ಜೀವನು)ಕೂಟಸ್ಥಾತ್ಮನಲ್ಲಿ ಭ್ರಾಂತಿಯಿಂದ ಕಲ್ಪಿತನಾಗಿರುವನೊ  ಹಾಗೆಯೇ ಅಚೇತನವಾದ ಘಟಾದಿಗಳೂ ಕೂಡ ಕೂಟಸ್ಥನಲ್ಲಿಯೇ
ಕಲ್ಪಿಸಲ್ಪಟ್ಟಿವೆ.(ಪುಟ ೧೧೪)

೨೫) ಜೀವನು ಕೂಟಸ್ಥನಲ್ಲಿ ಕಲ್ಪಿಸಲ್ಪಟ್ಟಿದ್ದಾನೆಂದು ತಿಳಿಯಲ್ಪಡಲಿ.(ಪುಟ೧೧೬)

೨೬) ಚಿತ್ರದೀಪ ಪ್ರಕರಣದಲ್ಲಿ  ಅವಿದ್ಯೆಯಿಂದ ಕಲ್ಪಿಸಲ್ಪಟ್ಟ  ಅನ್ಯೋನ್ಯಾಧ್ಯಾಸವೇ  ಭ್ರಾಂತಿಗೆ ಕಾರಣವೆಂದು ಹೇಳಲ್ಪಟ್ಟಿತು. ಅವಿದ್ಯೆಯು ಹೋದರೆ ಅದರ ಕಾಯ೯ವಾದ ಅನ್ಯೋನ್ಯಾಧ್ಯಾಸವೂ ಹೋಗುತ್ತದೆ.(ಪುಟ ೧೧೬)

೨೭)ಅವಿದ್ಯೆಯ ಕಾಯ೯ಗಳಾದ ಆವರಣವೂ ಅಧ್ಯಾಸವೂ  ವಿದ್ಯೆಯಿಂದಲೇ ನಾಶವನ್ನು ಹೊಂದುವವು.ಪ್ರಾಎಬ್ಧ ಕಮ೯ದಿಂದ ಕೂಡಿದ ಅವಿದ್ಯೆಯಿಂದ ಹುಟ್ಟಿದ  ವಿಕ್ಷೇಪದ ಸ್ವರೂಪವು ಪ್ರಾರಬ್ಧ ಕಮ೯ವು ನಾಶವಾಗುವವರೆಗೀ ಇರುವುದು.(ಪುಟ ೧೧೭)

೨೮)ಪ್ರಾರಬ್ಧ ಕಮ೯ವು ಇರುವವರೆಗೆ  ಶರೀರವು ಇರುತ್ತದೆ.(ಪುಟ೧೧೮)

೨೯)ಬೇರೆ ಬೇರೆ  ವಾದಗಳು ಈರೀತಿ ಇವೆ.
)ದೇಹಾತ್ಮವಾದ:ದೇಹವೇ ಆತ್ಮನೆಂಬ ಭಾವನೆ
)ಇಂದ್ರಿಯಾತ್ಮವಾದ :ಇಂದ್ರಿಯಗಳೇ ಆತ್ಮನೆಂಬ ವಾದ.
 )ಮನೋ ಆತ್ಮವಾದ:ಮನಸ್ಸೇ ಆತ್ಮನೆಂಬ ವಾದ.
)ಪ್ರಾಣಾತ್ಮವಾದ:ಪ್ರಾಣನಾ ಆತ್ಮನೆಂಬ ವಾದ.
)ವಿಜ್ಞಾನಾತ್ಮವಾದ: ಕ್ಷಣಿಕ ವಿಜ್ಞಾನ.ಮನಸ್ಸಿನ ಒಳಗಿರುವ  ವಿಜ್ಞಾನಕ್ಕೆ ಆತ್ಮವನ್ನು ಹೇಳುವ ಭೌದ್ಧ ಮತ.
) ಶೂನ್ಯವಾದ:ಶೂನ್ಯವೇ  ಆತ್ಮನೆಂಬ ವಾದ.(ಮಾಧ್ಯಮಿಕರು) (ಪುಟ ೧೨೪)


ಈಗ  ಆತ್ಮನು ಯಾರೆಂಬುದನ್ನು ಹೇಳುತ್ತದೆ:

0)ಆತ್ಮನು ಅಣುಪರಿಣಾಮವುಳ್ಳವನೂ ಅಲ್ಲ.ಮಧ್ಯಮ ಪರಿಣಾಮವುಳ್ಳವನೂ ಅಲ್ಲ. ಮಹತ್ಪರಿಣಾಮವುಳ್ಳವನು.ಅವನು ಆಕಾಶದಂತೆ ಸವ೯ವ್ಯಾಪಿಯು  ಮತ್ತು ಅವಯವರಹಿತನು. ಮತವು ಶ್ರುತಿಗಳಿಗೆ ಸಮ್ಮತವಾಗಿದೆ.(ಪುಟ ೧೨೭)


೩೧)        ಪುರುಷನು ಅಸಂಗನು(ಬೃ....೧೫)(ಪುಟ ೧೩೨)

೩೨)ಕ್ಲೇಶ,ಕಮ೯,ಫಲ, ಆಶ್ರಯ-ಇವುಗಳಿಂದ ಅಸ್ಫøಷ್ಟನಾದ  ಪುರುಷ ವಿಶಾಷನು ಝಶ್ವರನಾಗುತ್ತಾನೆ. ಈಶ್ವರನೂ ಕೂಡ ಜೀವನಂತೆ ಅಸಂಗನು ಮತ್ತು ಚಿದ್ರೂಪನು (ಪುಟ ೧೩೩)
(ಅವಿದ್ಯಾ ಅಸ್ಮಿತಾ ರಾಗ ದ್ವೇಷ,ಅಭಿನಿವೇಶ-ಎಂಬ ಪಂಚಕ್ಲೇಶಗಳು ,
ಶುಕ್ಲ ,ಕೃಷ್ಣ,ಅಶುಕ್ಲಕೃಷ್ಣ-ಎಂಬ ಮೂರು ವಿಧವಾದ ಕಮ೯ಗಳು.
ಜಾತಿ,ಆಯುಷ್ಯ,ಭೋಗ ಎಂಬ -ಕಮ೯ಫಲಗಳು)

೩೩) ಶ್ವರನು ನಿಯಾಮಕನಾಗದಿದ್ದರೆ ಬಂಧ ಮೋಕ್ಷಗಳಿರುವುದಿಲ್ಲ.(೧೩೩)

೩೪)ಈಶ್ವರನಿಗೆ ಕ್ಲೇಶಾದಿಗಳಿಲ್ಲದಿರುವುದು,ಜೀವನಿಗೆ ಇರುವುದು ಇವರಿಬ್ಬರಿಗೆ ಇರುವ ಭೇದ.(ಪುಟ೧೩೪)

೩೫)ಮಾಯೆಯನ್ನೇ ಪ್ರಕೃತಿಯೆಂದೂ,ಮಾಯಾವಿಯನ್ನೇ ಮಹೇಶ್ಡರನೆಂದೂ ತಿಳಿಯಬೇಕಿ.ಇವರ ಅಂಶರೂಪರಾದ ಚರಾತ್ಮಕ ಜೀವರಿಂದ  ಜಗತ್ತೆಲ್ಲ ವ್ಯಾಪ್ತವಾಗಿದೆ.(ಪುಟ ೧೩೮)

೩೬)ಇಲ್ಲಿ ನಾನಾತ್ವವು ಸ್ವಲ್ಪವೂ ಇಲ್ಲ.(ನೇಹ ನಾನಾಸ್ತಿ ಕಿಂಚನ   ಬೃ...,೧೯))  

೩೭) ಮಾಯೆಯನ್ನು ಮೂರು ದೃಷ್ಟಿಗಳಿಂದ ತಿಳಿಯಬಹುದು.
) ಶ್ರುತಿಯ ಪ್ರಕಾರ ಅದು ತುಚ್ಛವಾಗಿದೆ.
)ಯುಕ್ತಿಯ ಪ್ರಕಾರ ಅದು ಅನಿವ೯ಚನೀಯ ವಾಗಿದೆ.
) ಲೋಕ ದೃಷ್ಟಿಯಿಂದ ಅದು  ವಾಸ್ತವವಾಗಿದೆ.(ಪುಟ ೧೪೧)

೩೮) ಮಾಯೆಯು ಕೂಟಸ್ಥನೂ ಅಸಂಗನೂ  ಆದ ಆತ್ಮವನ್ನು  ಜಗತ್ತಾಗಿಮಾಡುತ್ತದೆ. ಮಯೆಯು ತನ್ನಲ್ಲಿ ಆಗುವ ಚಿದಾಭಾಸದಿಂದ  ಜೀವನನ್ನೂ ಈಶ್ವರನನ್ನೂ  ಸೃಷ್ಟಿಸುತ್ತದೆ.(ಪುಟ೧೪೧).

೩೯)ನೀರಿನಲ್ಲಿ ದ್ರವತ್ವವೂ ,ಅಗ್ನಿಯಲ್ಲಿ ಉಷ್ಣತ್ವವೂ ,ಕಲ್ಲಿನಲ್ಲಿ ಕೇಠಿಣ್ಯವೂ  ಇರುವಂತೆ ಮಾಯೆಯಲ್ಲಿ ದುಘ೯ಟತ್ವವು ಸ್ವಾಭಾವಿಕವಾಗಿಯೇ ಹೊರತು  ಬೇರೊಂದರಿಂತ ಉಂಟಾಗಿಲ್ಲ.(ಪುಟ ೧೪೨)

0)ಜಗತ್ತು ಸತ್ಯವೆಂದು ವಾದಿಸುವ ತಾಕಿ೯ಕಾದಿಗಳಿಗೆ  ಮಾಯೆಯ ಕಾಯ೯ಗಳು ಚೋದ್ಯವಾಗಿ ಕಾಣುತ್ತವೆ.ಆದರೆ ಚೋದ್ಯವೇ ಮಾಯೆಯ  ಏಕಸ್ವರೂಪವಾಗಿರುವುದರಿಂದ ಮಾಯೆಯ ವಿಷಯದಲ್ಲಿ ಚೋದ್ಯಪಡಬೇಕಾದುದೇನೂ ಇಲ್ಲ.(ಪುಟ ೧೪೨)

ಮಾಯೆಯ ಲಕ್ಷಣಗಳು:
೪೧) ಯಾವುದು ಇಂದ್ರಜಾಲಾದಿಗಳಲ್ಲಿ  ನಿರೂಪಿಸುವುದಕ್ಕೆ ಶಕ್ಯವಾಗದೆ ಅತ್ಯಂತ ಸ್ಪಷ್ಟವಾಗಿ  ಪ್ರಕಾಶಿಸುತ್ತಿರುವುದೊ ಅದೇ ಮಾಯೆಯೆಂದು ಜನರು ಅರಿಯುತ್ತಾರೆ.(ಪುಟ೧೪೩)

೪೨)ದೃಷ್ಟವಾದ ಈಜಗತ್ತು ಸ್ಪಷ್ಟವಾಗಿ ತೋರುವುದು.ಆದರೆ ಅದರ ಸ್ವರೂಪವನ್ನು ನಿಧ೯ರಿಸುವುದಕ್ಕೆ ಸಾಧ್ಯವಿಲ್ಲ.ಆದುದರಿಂದ ಪಕ್ಷಪಾತವಿಲ್ಲದೆ ಜಗತ್ತು ಮಾಯಾಮಯವೆಂದು ಅರಿಯುವವನಾಗು.೯ಪುಟ ೧೪೪)  

೪೩)ದೇಹೇಂದ್ರಿಯಗಳೇ ಮೊದಲಾದ ಅವಯವಗಳು  ವೀಯ೯ದಿಂದ ಹೇಗೆ ಉತ್ಪಾದಿಸಲಲ್ಪಟ್ಟವು? ಅವಯವಗಳಲ್ಲಿ ಚೈತನ್ಯವು ಹೇಗೆ  ಉಂಟಾಯಿತು?-ಎಂದು ಪ್ರಶ್ನಿಸಿದರೆ  ನೀನು ಹೇಳುತ್ತೀಯೆ?(ಪುಟ ೧೪೪)

೪೪)ಇದು ವೀಯ೯ದ ಸ್ವಭಾವವು ಎಂದು ಹೇಳಿದರೆ  ಅದು ನಿನಗೆ ಹೇಗೆತಿಳಿಯಿತು?.
ಅನ್ವಯ ವ್ಯತಿರೇಕಗಳಿಂದಲೂ  ಇದು ವೀಯ೯ಸ್ವಭಾವವೆಂದು ಹೇಳಲಾಗುವುದಿಲ್ಲ.ಏಕೆಂದರೆ ಇದು ವಂಧ್ಯಾ ಸ್ರೀಯಲ್ಲಿ ವೀಯ೯ವು ವ್ಯಥ೯ವಾಗುವುದರಿಂದ ಅನ್ವಯ ವ್ಯತಿರೇಕಗಳಿಗೆ  ವ್ಯಾಪ್ತಿಯಿರುವುದಿಲ್ಲ.(ಪುಟ ೧೪೪)
(ಎಲ್ಲಿ  ವೀಯ೯ವಿದೆಯೊ ಅಲ್ಲಿ ದೇಹೇಂದ್ರಿಯಗಳು  ಉತ್ಪನ್ನವಾಗುವುವು- ಎಂಬುದು ಅನ್ವಯ.ಎಲ್ಲಿ ವೀಯ೯ವಿಲ್ಲವೊ  ಅಲ್ಲಿ ದೇಹೇಂದ್ರಿಯಗಳು ಉತ್ಪನ್ನವಾಗುವುದಿಲ್ಲ-ಎಂಬುದು ವ್ಯತಿರೇಕ.(ಪುಟ ೧೪೫)


೪೫) ಗಭ೯ದಲ್ಲಿ ಯಾವ ರೇತಸ್ಸಿರುವುದೊ  ಅದು ಕೈ ಕಾಲು ತಲೆ ಮೊದಲಾದ ಅವಯವಗಳಾಗಿ ಪರಿಣಮಿಸಿ  ಅನಂತರ ಕ್ರಮವಾಗಿ  ಶಿಶುತ್ವ,ಯೌವನ,ಮುಪ್ಪು ಮೊದಲಾದ  ದೇಹಗಳಿಂದ ಕೂಡಿ  ಚೇತನವಾಗಿರುವುದೊ,ನೋಡುವುದೊ,ತಿನ್ನುವುದೊ ಆಘ್ರಾಣಿಸುವುದೊ  ಬರುವುದೊ ಹೋಗುವುದೊ-ಇದಕ್ಕಿಂತಲೂ ವಿಚಿತ್ರವಾದ  ಯಾವ ಇಂದ್ರಜಾಲವಿರುವುದು?(ಪುಟ ೧೪೫)

೪೬)ದೇಹದಂತೆ ಆಲದಬೀಜ ಮೊದಲಾದವನ್ನೂ ವಿಚಾರಿಸಿ ನೋಡು.ಸೂಲ್ಷ್ಮವಾದ ಬೀಜವೆಲ್ಲಿ?ದೊಡ್ಡದಾದ ಮರವೆಲ್ಲಿ?ಆದುದರಿಂದ ಇದೆಲ್ಲವನ್ನೂ ಮಾಯೆಯೆಂದು ತಿಳಿದುಕೊ.(ಪುಟ ೧೪೬)

೪೭)ಬೀಜದಲ್ಲಿ ಮರವು ಗುಪ್ತವಾಗಿರುವ ಹಾಗೆ  ಸುಷುಪ್ತಿಯಲ್ಲಿ ಜ್ಆಗ್ರತ್-ಸ್ವಪ್ನ-ಸ್ವರೂಪವಾದ  ಜಗತ್ತು ಅಡಗಿರುತ್ತದೆ.(ಪುಟ ೧೪೭)

೪೮)ಮಾಯೆಯು ತನ್ನಲ್ಲಿ ಪ್ರತಿಬಿಂಬಿತವಾದ  ಚೈತನ್ಯದ ಮೂಲಕ ಜೀವೇಶ್ವರರನ್ನು ಸೃಷ್ಟಿಸುತ್ತದೆಯೆಂದು ಶ್ರುತಿಯು ಹೇಳುತ್ತದೆ.(ಪುಟ ೧೪೭)

೪೯)ಶುದ್ಧ ಚೈತನ್ಯವು ಉಪಾಧಿಯಿಂದ  ಈಶ್ವರತ್ವವನ್ನು ಹೊಂದಿದೆ ಎಂದಥ೯(೧೪೮)

0)ಶ್ರುತಿಯು ಹೇಳುತ್ತದೆ.' ಆನಂದಮಯಕೋಶವು ಸವೇ೯ಶ್ವರನು'. ಆನಂದಮಯನೇ ವೇದೋಕ್ತವಾದ ಈಶ್ವರನು.(ಪುಟ ೧೪೯)

೫೧)ಆನಂದಮಯ ಕೋಶಕ್ಕೆ  ಸವ೯ಜ್ಞತ್ವಾದಿಕವು  ಇರುವುದೆಂಬ ವಿಷಯದಲ್ಲಿ  ವಾದಿಸಬೇಡ.(೧೪೯)

೫೨)ಆದುದರಿಂದ ಆನಂದಮಯನು ಸವೇ೯ಶ್ವರನೆಂದು ಶ್ರುತಿಯು ಹೇಳುತ್ತದೆ.(೧೪೯)

೫೩)ಸಮಸ್ತ ಜೀವರ  ಬುದ್ಧಿವಾಸನೆಗಳು  ಆನಂದಮಯ ಕೋಶದಲ್ಲಿರುವವು. ಬುದ್ಧಿವಾಸನೆಗಳಿಂದ ಎಲ್ಲವೂ ಅರಿಯಲ್ಪಡುವುದರಿಂದ  ಆನಂದಮಯನು ಸವ೯ಜ್ಷನೆಂದು ಹೇಳಲ್ಪಟ್ಟಿದ್ದಾನೆ.(ಪುಟ ೧೪೯)

೫೪)ಈಶ್ವರನು ವಿಜ್ಞಾದಿಮಯ ಕೋಶಗಳಲ್ಲಿಯೂ  ಪೃಥಿವ್ಯಾದಿಗಳಲ್ಲಿಯೂ ಒಳಗಿದ್ದುಪ್ರೇರಿಸುವುದರಿಂದ  ಅಂತಯಾ೯ಮಿತ್ವವನ್ನು ಹೊಂದಿರುತ್ತಾನೆ.(ಪುಟ ೧೫0)

೫೫)ಈಶ್ವರನು ಬುದ್ಧಿಯಲ್ಲಿರುವನೆಂದೂ , ಬುದ್ಧಿಯ ಒಳಗಿರುವನೆಂದೂ  ಅವನಿಗೆ ಬುದ್ಧಿಯೇ ಶರೀರವಾಗಿರುವುದೆಂದೂ,ಅವನು  ಬುದ್ಧಿಯಿಂದ ಅರಿಯಲ್ಪಡುವನೆಂದೂ ,ಒಳಗಿದ್ದು ಬುದ್ಧಿಯನ್ನು ನಿಯಮಿಸುವನೆಂದೂ -ವೇದವು ಘೋಷಿಸಿದೆ.

೫೬)ಬಟ್ಟೆಯಲ್ಲಿ  ದಾರವು ಹೇಗೆ  ಅದಕ್ಕೆ ಉಪಾದಾನ ಕಾರಣವಾಗಿರುವುದೋ  ಹಾಗೆಯೆ ಅಂತಯಾ೯ ಸವ೯ ಜಗತ್ತಿಗೂ ಉಪಾದಾನ ಕಾರಣನಾಗಿರುವುದರಿಂದ   ಎಲ್ಲೆಲ್ಲಿಯೂ ಇರುವನು.(ಪುಟ ೧೫೧)

೫೭)ಬಟ್ಟೆಗಿಂತಲೂ ನೂಲು ಸೂಕ್ಷ್ಮವಾಗಿರುವಂತೆ ,ನೂಲಿಗಿಂತಲೂ ಅದರ ಅಂಶವು ಸೂಕ್ಷ್ಮವಾಗಿರುವಂತೆ ,ಅಂತಯಾ೯ಮಿಯ ಬಳಿಯಲ್ಲಿ  ಅಂತರತ್ವವು ತನ್ನ ಕೊನೆಯನ್ನು ಮುಟ್ಟುತ್ತದೆ.ಆದುದರಿಂದ ಅದನ್ನು ಅನುಮಾನದಿಂದ ತಿಳಿಯಬೇಕು.(ಪುಟ ೧೫೧)

೫೮)ಅಂತಯಾ೯ಮಿಯು ಸೂಕ್ಷ್ಮ ವಸ್ತುವಿಗಿಂತ  ಸೂಕ್ಷ್ಮವಾಗಿರುವುದರಿಂದ  ಅವನು ತೋರುವುದಿಲ್ಲ.ಆದುದರಿಂದ ಯುಕ್ತಿ ಮತ್ತು ಶ್ರುತಿ-ಇವುಗಳಿಂದ ಅವನನ್ನು ನಿಣ೯ಯಿಸಬಹುದು.(೧೫೧).

೫೯)ಸವ೯ಪ್ರಾಣಿಗಳನ್ನು  ಯಂತ್ರಾ ರೂಢವಾದ ಬೊಂಬೆಗಳಂತೆ  ಮಾಯೆಯಿಂದ ತಿರುಗಿಸುತ್ತ
ಅಂತಯಾ೯ಮಿಯಾದ ಈಶ್ವರನು  ಸವ೯ ಜೀವರ  ಹೃದಯ ಪ್ರದೇಶದಲ್ಲಿ ನೆಲೆಸಿರುತ್ತಾನೆ.(ಪುಟ ೧೫೩)

0)'ನಾನು ಧಮ೯ವನ್ನು ಅರಿತಿರುವೆನು.ಆದರೆ ಅದನ್ನು ಆಚರಿಸಲು ನನಗೆ ಪ್ರವೃತ್ತಿಯಿಲ್ಲ.ನಾನು ಅಧಮ೯ವನ್ನೂ ಅರಿತಿರುವೆನು,ಆದರೆ ಅದನ್ನು ಬಿಡಲು ನನ್ನ ಕೈಲಾಗುವುದಿಲ್ಲ.ನನ್ನ ಹೃದಯದಲ್ಲಿ ನೆಲೆಸಿರುವ ಯಾವನೊ  ಒಬ್ಬ ದೇವನಿಂದ  ಹೇಗೆ ನಿಯೋಜಿಸಲ್ಪಡುವೆನೊ ಹಾಗೆ ಮಾಡುತ್ತೇನೆ.(ಪುಟ೧೫೪)
(ಇದು ಮಹಾಭಾರತದಲ್ಲಿ ದುಯೋ೯ಧನನು ಆಡುವ ಮಾತು.)

೬೧)ಪುರುಷ ಪ್ರಯತ್ನದಿಂದ  ಪ್ರಯೋಜನವಿಲ್ಲವೆಂದು ಶಂಕಿಸಬಾರದು .ಏಕೆಂದರೆ ಈಶ್ವರನೇ  ಪುರುಷ ಪ್ರಯತ್ನ ರೂಪದಿಂದ ವಿವತಿ೯ಸುತ್ತಾನೆ.(ಪುಟ ೧೫೫)

೬೧)ಪುರುಷ ಪ್ರಯತ್ನದಿಂದ  ಪ್ರಯೋಜನವಿಲ್ಲವೆಂದು ಶಂಕಿಸಬಾರದು .ಏಕೆಂದರೆ ಈಶ್ವರನೇ  ಪುರುಷ ಪ್ರಯತ್ನ ರೂಪದಿಂದ ವಿವತಿ೯ಸುತ್ತಾನೆ.(ಪುಟ ೧೫೫)    
(ಆದುದರಿಂದ ಜನರ ಪ್ರಯತ್ನವೆಲ್ಲ  ಅಂತಯಾ೯ಮಿಯಾ ಈಶ್ವರನ ಪ್ರಯತ್ನವೇ ಆಗಿದೆ.)

೬೨)ಅಷ್ಟರಿಂದಲೇ ಮುಕ್ತಿಯಾಗುವುದೆಂದು  ಶ್ರುತಿಗಳೂ ಸ್ಮøತಿಗಳೂ  ಹೇಳುತ್ತವೆ.'ಶ್ರುತಿ ಸ್ಮøತಿಗಳೆರಡೂ  ನನ್ನ ಆಜ್ಞೆಗಳು'ಎಂದು ಭಗವಂತನೇ ಹೇಳಿರುತ್ತಾನೆ.(ಪುಟ ೧೫೫)

೬೩)ಈಶ್ವರನ ಭಯದಿಂದ (ವಾಯು ಸೂಯ೯ ಮೊದಲಾದವರು ತಮ್ಮ ತಮ್ಮ ಕಮ೯ವನ್ನು ಮಾಡಿಸುತ್ತಾರೆಂದು ಶ್ರುತಿಯಲ್ಲಿ ಹೇಳಿದೆ.(ತೈ...)

೬೪) ಅಕ್ಷರದ ಪ್ರಭಾವದಿಂದಲೇ ಸೂಯ೯ಚಂದ್ರರು ತಮ್ಮ ತಮ್ಮ ಸ್ಥಾನಗಳಲ್ಲಿ
ನಿಲ್ಲಿಸಲ್ಪಟ್ಟಿರುತ್ತಾರೆ. ಎಂದು ಶ್ರುತಿಯು ಹೇಳುತ್ತದೆ(ಬೃ....೯).'ಈಶ್ವರನು ಪ್ರಾಣಿಗಳ ಶರೀರಗಳೊಳಗೆ  ಪ್ರವೇಶಿಸಿ ಶಿಕ್ಷಕನಾಗಿರುತ್ತಾನೆ' ಎಂದು ಇನ್ನೊಂದು ಶ್ರುತಿಯು ಹೇಳುತ್ತದೆ.(ಪುಟ ೧೫೬).

೬೫) ಜಗತ್ತನ್ನು ಸೃಷ್ಟಿಸುವುದರಿಂದಲೂ  ನಾಶಗೊಳಿಸುವುದರಿಂದಲೂ  ಈಶ್ವರನು ಜಗತ್ಕಾರಣನಾಗಿರುತ್ತಾನೆ.ಸೃಷ್ಟಿ ಪ್ರಳಯಗಳೆಂದರೆ  ಆವಿಭಾ೯ವ ತಿರೋಭಾವಗಳೇ.(ಪುಟ ೧೫೬)

೬೬)ಚಿತ್ರಪಟವನ್ನು ಬಿಚ್ಚಿದಾಗ  ಅದರಲ್ಲಿರುವ ಚಿತ್ರವು ಕಾಣುವಂತೆ  ಈಶ್ವರನು ತನ್ನಲ್ಲಿ ಲಯವಾಗಿರುವ  ಸಮಸ್ತ ಜಗತ್ತನ್ನು  ಜೀವರ ಪೂವ೯ಕಮ೯ಕ್ಕನುಸಾರವಾಗಿ  ವ್ಯಕ್ತಗೊಳಿಸುತ್ತಾನೆ.(ಪುಟ ೧೫೬)

೬೭)ರಾತ್ರಿ ಹಗಲುಗಳಂತೆ ,ಸುಷುಪ್ತಿ ಜಾಗ್ರದವಸ್ಥೆಗಳಂತೆ ,ಕಣ್ಣು ತೆರೆದು ಮುಚ್ಚುವಂತೆ ,ಮೌನ ಕಲ್ಪನೆಗಳಂತೆ  ಸೃಷ್ಟಿ ಲಯಗಳು.(೧೫೭)

೬೮)ಈಶ್ವರನು  ಜಗತ್ತಿಗೆ ಆವಿಭಾ೯ವ-ತಿರೋಭಾವಗಳನ್ನು  ಮಾಡತಕ್ಕ ಶಕ್ತಿಯುಳ್ಳವನಾದುದರಿಂದ  ಆರಂಭವಾದ,ಪರಿಣಾಮವಾದ  ಮೊದಲಾದ ಚೋದ್ಯಗಳು ಇಲ್ಲಿ ಸಂಭವಿಸುವುದಿಲ್ಲ.(ಪುಟ ೧೫೭)

೬೯) ಏಕೆಂದರೆ ಹಗ್ಗವು ಹಾವಾಗಿ ಕಾಣುವಂತೆ  ಈಶ್ವರನು ಜಗತ್ತಾಗಿ ಕಾಣುತ್ತಾನೆ ಎಂಬ ವಿವತ೯ವಾದವನ್ನು ಅದ್ವೈತವೇದಾಂತವು ಒಪ್ಪಿಕೊಂಡಿದೆ.(ಪುಟ ೧೫೭)

0)ಗಂಜಿಯಿಂದ ಲಿಪ್ತವಾದ ವಸ್ತ್ರವು  ಗಟ್ಟಿಯಾದ ರೂಪದಿಂದ ಏಕತ್ವವನ್ನು ಹೊಂದುವಂತೆ  ಅನ್ಯೋನ್ಯಾಧ್ಯಾಸರೂಪನಾದ ಈಶ್ವರನು ಮಾಯಾಭ್ರಾಂತಿಯಿಂದ  ಬ್ರಹ್ಮದೊಡನೆ ಅಭೇದವನ್ನು ಹೊಂದುವಂತೆ ವಿಚಾರರಹಿತರಾದ ಜನರಿಗೆ ತೋರುವನು.(ಪುಟ ೧೫೯)                                


                ೭೧)'ಬ್ರಹ್ಮವು ಜ್ಞಾನ,ಅನಂತ'ಎಂದು ಪ್ರಾರಂಭಿಸಿ 'ಯಾವುದರಿಂದ ವಾಕ್ಕು ಹಿಂದಿರುಗುತ್ತದೆಯೊ 'ಎಂದು  ಶ್ರುತಿಯು ಉಪಸಂಹರಿಸಿ  ಬ್ರಹ್ಮದ ಅಸಂಗತ್ವವನ್ನು ನಿಣ೯ಯಿಸುತ್ತದೆ.(ಪುಟ ೧೬0)

೭೨) ಮಾಯಾ ಶಕ್ತಿಯುಳ್ಳ ಈಶ್ವರನು  ವಿಶ್ವವನ್ನು ಸೃಷ್ಟಿಗೊಳಿಸುತ್ತಾನೆ:ಅದರಲ್ಲಿ ಮತ್ತೊಬ್ಬನು (ಎಂದರೆ ಜೀವನು) ಬಂಧಿಸಲ್ಪಟ್ಟಿದ್ದಾನೆ-ಎಂದು ಶ್ರುತಿಯು ಹೇಳುತ್ತದೆ.ಆದುದರಿಂದ ಈಶ್ವರನೇ ಸೃಷ್ಟಿಕತ೯ನು.(ಪುಟ ೧೬೧)

೭೩)ಎರಡು ಬಗೆಯಾದ ಕ್ರಮಸೃಷ್ಟಿ ಮತ್ತು ಒಂದೇ ಸಲ ನಡೆಯುವ ಸೃಷ್ಟಿ -ಎಂಬ ಎರಡೂ ಸೃಷ್ಟಿಗಳೂ ವೇದಸಮ್ಮತವಾಗಿವೆ.ಇದು ಸ್ವಪ್ನದಲ್ಲಿ ಎರಡು ವಿಧವಾದ  ಸೃಷ್ಟಿಯನ್ನು ನೋಡಿದಂತೆ.(ಪುಟ ೧೬೧)

೭೪)ಅಂತಯಾಂದ ಪ್ರಾರಂಭಿಸಿ  ಗುದ್ದಲಿವರೆಗೆ ಎಲ್ಲವನ್ನೂ ಪ್ರತ್ಯೇಕವಾಗಿ ಈಶ್ವರ ಭಾವದಿಂದ ಪೂಜಿಸಬಹುದೆಂದು ಈಗ ಮೂರು ಶೋಕಗಳಲ್ಲಿ ಹೇಳುತ್ತಾರೆ.(ಪುಟ ೧೬೩)

೭೫)ಈಶ್ವರ ಹಿರಣ್ಯಗಭಬ್ರಹ್ಮ್ಣು,ರುದ್ರ,ಇಂದ್ರ,ಅಗ್ನಿ,ಗಣೇಶಭೈರವ,ಮೈರಾಲ,ಮಾರಿಕಾ,ಯಕ್ಷರು,ರಾಕ್ಷಸರು,ಬ್ರಾಹ್ಮಣರು,ಕ್ಷತ್ರಿಯರು,ವೈಶ್ಯರು,ಶೂದ್ರರು, ಗೋವು, ಕುದುರೆ, ಮೃಗ-ಪಕ್ಷಿಗಳು ,ಅಶ್ವತ್ಥ,ಆಲದಮರ,ಮಾವಿನಮರ,ಗೋಧಿ,ನೆಲ್ಲು,ತೃಣ ಮೊದಲಾದವುಗಳು,ನೀರು,ಕಲ್ಲು,ಮಣ್ಣು,ಕಟ್ಟಿಗೆ,ಬಾಚಿ,ಗುದ್ದಲಿ-ಇವೆಲ್ಲವನ್ನೂ ಈಶ್ವರ ಭಾವದಿಂದ ಪೂಜಿಸಿದರೆ ಫಲವನ್ನು ಕೊಡುತ್ತವೆ.(ಪುಟ ೧೬೪)

೭೬)ಎಚ್ಚರವಾಗುವವರೆಗೆ  ತನ್ನ ಸ್ವಪ್ನವು ಹೋಗದಂತೆ ಮುಕ್ತಿಯೂ ಕೂಡ ತಾನು ಬ್ರಹ್ಮವೆಂಬ ಜ್ಞಾನದಿಂದಲೇ ಹೊರತು ಬೇರೊಂದು ವಿಧದಿಂದ ಆಗುವುದಿಲ್ಲ.(ಪುಟ ೧೬೪)

೭೭)ಈಶ್ವರ-ಜೀವರೂಪದಿಂದಿರುವ ಚೇತನ ಅಚೇತನಾತ್ಮಕವಾದ  ಜಗತ್ತೆಲ್ಲ
ಅದ್ವಿತೀಯವಾದ  ಬ್ರಹ್ಮತತ್ವದ ದೃಷ್ಟಿಯಿಂದ  ಸ್ವಪ್ನಕ್ಕೆ ಸಮಾನವಾಗಿದೆ.(ಪುಟ೧೬೫)

೭೮)ಈಶ್ವರನು ಆನಂದಮಯಕೋಶನಾಗುತ್ತಾನೆ;ಜೀವನು ವಿಜ್ಞಾನಮಯಕೋಶನಾಗುತ್ತಾನೆ.ಇವರಿಬ್ಬರೂ ಮಾಯೆಯಿಂದ  ಕಲ್ಪಿಸಲ್ಪಟ್ಟಿರುವರು. ಸಮಸ್ತ ಜಗತ್ತೂ ಇವರಿಬ್ಬರಿಂದಲೇ ಕಲ್ಪಿಸಲ್ಪಟ್ಟಿದೆ.(ಪುಟ೧೬೫)

೭೯)ಸೃಷ್ಟಿಯ ಸಂಕಲ್ಪದಿಂದ ಪ್ರಾರಂಭಿಸಿ  ಸೃಷ್ಟಿಯನ್ನು ಪ್ರವೇಶಿಸುವವರೆಗೆ  ಇರುವ ಸೃಷ್ಟಿಯು  ಈಶ್ವರನಿಂದ ಕಲ್ಪಿತವಾಗಿದೆ.ಜಾಗ್ರದವಸ್ಥೆಯಿಂದ ಪ್ರಾರಂಭಿಸಿ  ಮೋಕ್ಷದವರೆಗಿರುವ  ಸಂಸಾರವು ಜೀವನಿಂದ ಕಲ್ಪಿತವಾಗಿದೆ.(ಪುಟ ೧೬೫)

0)                                                      ್ರ
ಅದ್ವಯವೂ ಅಸಂಗವೂ  ಆದ ಬ್ರಹ್ಮತತ್ವವನ್ನು  ವಾದಿಗಳು ಅರಿಯರು.ಇವರು ಮಾಯಾಕಲ್ಪಿತವಾದ ಜೀವೇಶ್ವರರ ವಿಚಾರದಲ್ಲಿ  ವಿಷಯದಲ್ಲಿ  ವ್ಯಥ೯ವಾಗಿಯೇ ಕಲಹವನ್ನು ಮಾಡುತ್ತಾರೆ.(ಪುಟ ೧೬೬)

೮೧)ಹುಲ್ಲನ್ನು ಪೂಜಿಸುವವರು  ಮೊದಲುಗೊಂಡು  ಪಾತಂಜಲರವರೆಗೆ ಇರುವ ವಾದಿಗಳೆಲ್ಲರೂ ಈಶ್ವರನ ವಿಷಯದಲ್ಲಿ  ಭ್ರಾಂತಿಯನ್ನು ಹೊಂದಿರುತ್ತಾರೆ.ಲೋಕಾಯತರು ಮೊದಲುಗೊಂಡು  ಸಾಂಖ್ಯರವರೆಗೆ  ಇರುವ ವಾದಿಗಳೆಲ್ಲರೂ  ಜೀವನ ವಿಷಯದಲ್ಲಿ ಭ್ರಾಂತಿಯನ್ನು ಹೊಂದಿರುತ್ತಾರೆ.(ಪುಟ ೧೬೭)

೮೨)ಯಾವಾಗ ಅದ್ವಯ ಬ್ರಹ್ಮದ  ತತ್ವವನ್ನು ತಿಳಿಯದವರಾದರೊ ಆಗಲೇ ಅವರೆಲ್ಲರೂ ಭ್ರಾಂತರಾದರು.ಅಂಥವರಿಗೆ ಮುಕ್ತಿಯೆಲ್ಲಿ? ಅಥವಾ ಲೋಕದಲ್ಲಿ ಸುಖವಾದರೂ ಎಲ್ಲಿ.(ಪುಟ ೧೬೭)

೮೩) ಜೀವೇಶ್ವರ ವಾದಗಳಿಂದ  ಮುಕ್ತಿಯು ಸಂಭವಿಸುವುದಿಲ್ಲವಾದ್ದರಿಂದ  ಮುಮುಕ್ಷುಗಳು  ಇವುಗಳನ್ನು ಗಮನಿಸಬಾರದೆಂದು  ಉಪಸಂಹರಿಸುತ್ತಾರೆ.(ಪುಟ ೧೬೭)

೮೪)ಆದುದರಿಂದ ಮುಮುಕ್ಷುಗಳು  ಜೀವೇಶ್ವರ ವಾದಗಳಲ್ಲಿ  ಬುದ್ಧಿಯನ್ನಿರಿಸ ಕೂಡದು.ಆದರೆ ಬ್ರಹ್ಮತತ್ವವನ್ನು  ಶ್ರುತಿಯ ಮೂಲಕ  ವಿಚಾರಿಸಬೇಕು.(ಪುಟ ಮತ್ತು ಸಾಕ್ಷಾತ್ಕರಿಸ ಬೇಕು.(ಪುಟ ೧೬೮)

೮೫)ಜೀವೇಶ್ವರ ವಾದಗಳಲ್ಲಿ  ವಿವೇಕಶೂನ್ಯನಾಗಿ ಮುಳುಬಬೇಡ.(ಪುಟ ೧೬೮)

೮೬)ಸಾಂಖ್ಯ -ಯೋಗ ಶಾಸ್ತ್ರದಲ್ಲಿ  ಪ್ರತಿಪಾದಿತವಾದ  ತತ್-ತ್ವಂ ಪದಗಳ ಅಥ೯ವು  ನಮ್ಮ ಸಿದ್ಧಾಂತ ಭಾವವನ್ನು ಹೊಂದುವುದಿಲ್ಲ.ತತ್-ತ್ವಂ ಪದಗಳಿಗೆ  ನಾವು ಮಾಡುವ ಸ್ವಲ್ಪ ಭೇದವು  ಅದ್ವೈತದ ಬೋಧನೆಗೋಸ್ಕರವೆ.   ಏಹೆಂದರೆ  ಅವರ ಮತದ ಪ್ರಕಾರ  ಜೀವಾಶ್ವರರಿಗೆ ನಿಜವಾದ ಭೇದವಿರುತ್ತದೆ. ಆದರೆ ಭೇದವು ಅದ್ವೈತದಲ್ಲಿ ನಿಜವಾಗಿಲ್ಲ.
(ಪುಟ ೧೬೯)  

೮೭)ತತ್-ತ್ವಂಪದಾಥ೯ಗಳ ಶೋಧನೆಗಾಗಿಯೇ  ಹಿಂದೆ ಘಟಾಕಾಶ,ಮಹಾಕಾಶ,ಜಲಾಕಾಶ,ಮೇಘಾಹಾಶ-ಎಂಬ ನಾಲ್ಕು ದೃಷ್ಟಾಂತಗಳು ಚೆನ್ನಾಗಿ ಹೇಳಲ್ಪಟ್ಟವು.(ಪುಟ೧೬೯)

೮೮)ಜಲಾಕಾಶ -ಮೇಘಾಕಾಶಗಳೆರಡೂ  ಗಡಿಗೆಯಲ್ಲಿರುವ ಜಲ,ಮೇಘದಲ್ಲಿರುವ ಜಲ ಎಂಬ ಎರಡು ಉಪಾಧಿಗಳಿಗೆ  ಅಧೀನವಾಗಿವೆ.ಇವೆರಡಕ್ಕೂ ಆಧಾರವಾದ ಃಟಾಕಾ -ಮಹಾಕಾಶಗಳು ಪರಿಶುದ್ಧವಾಗಿವೆ(ಪುಟ ೧೬೯)

೮೯)ಆತ್ಮರ ಭಿನ್ನತ್ವ,ಜಗತ್ತಿನ ಸತ್ಯತ್ವ,ಈಶ್ವರನ ಅನ್ಯತ್ವ-ಎಂಬ ಮೂರು ಅಂಶಗಳನ್ನು  ಅವರು ಬಿಟ್ಟರೆಆಗ ಯೋಗ ಸಾಂಖ್ಯಗಳೆರಡೂ  ವೇದಾಂತಕ್ಕೆ ಸಮಾನವಾಗುತ್ತವೆ.(ಪುಟ ೧೭೧)

0)ಅದ್ವೈತ ಜ್ಞಾನದ ಹೊರತು ಬೇರಾವುದರಿಂದಲೂ ಆತ್ಮನಿಗೆ ಅಸಂಗತ್ವವು ಸಿದ್ಧಿಸುವುದಿಲ್ಲ.(ಪುಟ ೧೭೧)

೯೧)ಆತ್ಮನಿಗೆ ನಾಶವೂ ಇಲ್ಲ.ದೇಹ ಸಂಬಂಧವೂ ಇಲ್ಲ.ಅವನು ಸುಖ ದುಃಖಾದಿ ಧಮ೯ಗಳಿಂದ ಕೂಡಿದ  ಬದ್ಧನೂ ಅಲ್ಲ.ಶ್ರವಣಾದಿಗಳನ್ನು ಅನುಷ್ಠಿಸುವ ಸಾಧಕನೂ ಅಲ್ಲ.ಅವನು ಸಾಧನ ಚತುಷ್ಟಯ ಸಂಪನ್ನನಾದ  ಮುಮುಕ್ಷುವೂ ಅಲ್ಲ.ಅವಿದ್ಯೆಯನ್ನು ಹೋಗಲಾಡಿಸಿಕೊಂಡ ಮುಕ್ತನೂ ಅಲ್ಲ.ಹೀಗೆ ಇದು ಪರಮಾಥ೯ವು.(ಪುಟ ೧೭೩)

೯೨)ಯಾವಾಗ ದ್ವೈತವು  ಅಸತ್ಯವೆಂದೂ ಆತ್ಮನೊಬ್ಬನೇ ಪರಮಾಥ೯ವೆಂದೂ ನಿಷ್ಕಷಿ೯ಸಲ್ಪಟ್ಟಿತೋ ಆಗ ಲೌಕಿಕ-ವೈದಿಕ ವ್ಯವಹಾರಗಳೆಲ್ಲವೂ ಅವಿದ್ಯಾದಿ ವಿಷಯಗಳೆಂದು  ಸಿದ್ಧವಾಗುತ್ತದೆ.(ಪುಟ ೧೭೩)

೯೩)ಮಾಯೆಯೆಂಬ ಹೆಸರುಳ್ಳ ಕಾಮಧೇನುವಿಗೆ ಜೀವ ಈಶ್ವರ ಎಂಬ ಎರಡು ಕರುಗಳಿರುವರು.ದ್ವೈತವೆಂಬ ಹಾಲನ್ನು ಅವರು ಯಥೇಷ್ಟವಾಗಿ ಕುಡಿಯಲಿ?ಆದರೆ ಪರಮಾಥ೯ವು ಅದ್ವೈವೇ.(ಪುಟ ೧೭೩)

೯೪)ಕೂಟಸ್ಥನಿಗೂ ಬ್ರಹ್ಮಕ್ಕೂ ಇರುವ ಭೇದವು  ನಾಮಮಾತ್ರದಿಂದ ಆಗಿದೆಯೇ ಹೊರತು  ನಿಜವಾಗಲ್ಲ.ಘಟಾಕಾಶಕ್ಕೂ ಮಹಾಕಾಶಕ್ಕೂ ಎಂದಿಗೂ ಭೇದವಿಲ್ಲ(ಪುಟ೧೭೪)

೯೫)ಸೃಷ್ಟಿಗೆ ಮೊದಲು  ಯಾವ ಅದ್ವಯ ಬ್ರಹ್ಮವನ್ನು ಶ್ರುತಿಯು ಹೇಳಿದೆಯೊ ಅದೇ ಈಗಲೂ ಇದೆ.ಮುಂದೆಯೂ ಮೋಕ್ಷಾವಸ್ಥೆಯಲ್ಲಿಯೂ ಇರುತ್ತದೆ.ಮಾಯೆಯು ವೃಥಾ ಭ್ರಮಿಸುವಂತೆ ಮಾಡುತ್ತದೆ.(ಪುಟ ೧೭೪)

೯೬)ಯಾರು ಜಗತ್ತು ಮಾಯಾಮಯವೆಂದೂ  ಪರತತ್ವವು ಅದ್ವಿತೀಯವೆಂದೂ  ಹೇಳುವರೊ ಅವರೂ ಕೂಡ ಅವಿದ್ಯೆಯಿಂದ  ಭ್ರಮೆಯನ್ನು ಹೊಂದುತ್ತಲಿದ್ದಾರೆ. ತತ್ವಜ್ಞಾನದಿಂದ  ಏನು ಪ್ರಯೋಜನ?-ಎಂದರೆ(ಕಮ೯ದಿಂದ  ಅವರು ವ್ಯವಹರಿಸುತ್ತಿದ್ದರೂ)ಹಿಂದಿನಂತೆ ಅವರಿಗೆ ಭ್ರಾಂತಿ ಇರುವುದಿಲ್ಲ.(ಪುಟ ೧೭೪)

೯೭)ಇಹಲೋಕದ ಮತ್ತು ಪರಲೋಕದ  ಸಂಸಾರವೆಲ್ಲವೂ ನಿಜವು  ಆದುದರಿಂದ ಅದ್ವಯ ಬ್ರಹ್ಮವೂ ಇಲ್ಲ,ತೋರುವುದೂ ಇಲ್ಲ-ಎಂಬುದು ಅಜ್ಞಾನಿಗಳ ನಿಧಾ೯ರವಾಗಿರುವುದು. ಪುತ್ರ ಕಲತ್ರಾದಿಗಳ ಪೋಷಣೆ  ಇಹಲೋಕದ ಸಂಸಾರ ಸ್ವಗ೯ ಸುಖಾದಿಗಳು ಪರಲೋಕದ ಸಂಸಾರ.(ಪುಟ ೧೭೫)

೯೮)ಅಜ್ಞಾನಿಯ ನಿಧಾ೯ರಕ್ಕಿಂತಲೂ ಜ್ಞಾನಿಯ ನಿಧಾರವು ಬೇರೆಯಾಗಿರುತ್ತದೆ.ತಮ್ಮ ಯಮ್ಮ ನಿಧಾ೯ರಕ್ಕೆ ಅನುಸಾರವಾಗಿ  'ನಾನು ಬದ್ಧನು'ಎಂದು ಅಜ್ಞಾನಿಯೂ 'ನಾನು ಮುಕ್ತನು ಎಂದು ಜ್ಞಾನಿಯೂ  ತಿಳಿಯುತ್ತಾರೆ.(ಪುಟ ೧೭೫)

೯೯)ಅದ್ವೈತ ಬ್ರಹ್ಮ ಸ್ವರೂಪವು  ಪ್ರತ್ಯಕ್ಷವಾಗಿ ಪ್ರಕಾಶಿಸುತ್ತಿಲ್ಲವೆಂದು  ಹೇಳುವುದು ಸರಿಯಲ್ಲ. ಏಕೆಂದರೆ ಅದು ಚಿದ್ರೂಪದಿಂದ ಸದಾ ಸ್ಫುರಿಸುತ್ತಿರುತ್ತದೆ.ಅದು ಪೂಣ೯ವಾಗಿ ಪ್ರಕಾಶಿಸುತ್ತಿಲ್ಲವೆಂದು  ದ್ವೈತವೂ ಪೂಣ೯ವಾಗಿ ಪ್ರಕಾಶಿಸುತ್ತಿಲ್ಲ.ಪುಟ ೧೭೫)

00)ಗಡಿಗೆಯು ತೋರುತ್ತದೆ ಬಟ್ಟೆಯು ತೋರುತ್ತದೆ -ಎಂದು ಹೇಳುವಾಗ  ಗಡಿಗೆ ಬಟ್ಟೆ ಮೊದಲಾದವುಗಳಲ್ಲಿ ಚಿದರೂಪವೇ ಸ್ಫುರಿಸುತ್ತದೆ.

0)ದ್ವೈತವು  ಮಾಯಾಮಯವಾಗಿರುವುದರಿಂದ  ಅಸತ್ಯವು.ಆದುದರಿಂದ ವಾಸ್ತವವಾದ  ಆದುದರಿಂ  ವಾಸ್ತವವಾದ ಅದ್ವೈತವೇ ಪರಿಶೇಷ ನ್ಯಾಯದಿಂದ  ಪ್ರಕಾಶಿಸುತ್ತದೆ.(ಪುಟ ೧೭೬)

0)ಮನಸ್ಸಿಬಿಂದ ಚಿಂತಿಸಲಾಗದ  ಶಕ್ಯವಾಗದ ರಚನಾ ರೂಪವುಳ್ಳ ಸಮಸ್ತ ಜಗತ್ತು ಮಾಯೆಯೇ  ಅಹುದು-ಎಂದು ನಿಶ್ಚಯಿಸಿ  ಉಳಿಯುವುದು ವಾಸ್ತವವಾದ ಅದ್ವೈತವೇ  ಎಂದು ನಿಧ೯ರಿಸಬೇಕು.(ಪುಟ೧೭೭)

0)ಪುನರಾವೃತ್ತಿಯನ್ನು ಮಾಡಬೇಕು. ಏಕೆಂದರೆ ಅನೇಕವೇಳೆ  ಹಾಗೆ ಉಪದೇಶ ಮಾಡಿರುತ್ತದೆ.'ಆವೃತ್ತಿ ರಸ  ಕೃದುಪದೇಶಾತ್'(ಬ್ರ.ಸೂ..,)ಎಂದು ವ್ಯಾಸರು ಹೇಳಿದ್ದಾರೆ.(ಪುಟ ೧೭೭)

0)'ಏಕತ್ವವನ್ನು ನೋಡುವವನಿಗೆ  ಶೋಕವೆಲ್ಲಿ?ಎಂದು ಶ್ರುತಿಯು ಹೇಳುತ್ತದೆ.ಇದೇ ಅಧ್ಯಾಯದ  ಹದಿನೈದನೆಯ ಶ್ಲೋಕದಲ್ಲಿ  'ಅಪರೋಕ್ಷ ಜ್ಞಾನ ಉಂಟಾದಾಗ  ವಿಚಾರವು ಮುಗಿಯುತ್ತದೆ-ಎಂದು ಹೇಳಿದೆ.(ಪುಟ ..) ಹೇಳಿದೆ.(ಪುಟ ೧೭೭)

0)ಉತ್ಪತ್ತಿಗೆ ಮೊದಲು ಇಲ್ಲದಿರುವಿಕೆಗೆ ಪ್ರಾಗಭಾವವೆಂದು ಹೆಸರು.(ಪುಟ ೧೭೯)

0)ಪ್ರಾಗಭಾವದಿಂದ ಕೂಡಿದ ದ್ವೈತವು  ಘಟಾದಿಗಳಹಾಗೆ  ರಚಿಸಲ್ಪಟ್ಟದ್ದು.ಹಾಗಿದ್ದರೂ ರಚನೆಯು ಅಚಿಂತ್ಯವಾಗಿದೆ.ಆದುದರಿಂದ ಐಂದ್ರಜಾಲಿಕ ವಸ್ತುವಿನಂತೆ ಅದು ಮಿಥ್ಯೆ.(ಪುಟ ೧೮0)

0) ಚಾವಾ೯ಕರು  ಬುದ್ಧಿದೋಷದಿಂದ  ಸರಿಯಾಗಿ ವಿಚಾರವನ್ನು ಮಾಡಲಿಲ್ಲ-ಎನ್ನುವೆಯಾದರೆ,ಅದೇ ಪ್ರಕಾರ  ವೇದಾಂತದ ಅಥ೯ವನ್ನು ಅರಿತುಕೊಂಡು  ಅಸಂತುಷ್ಟರಾದರೂ  ವೇದಾಂತವನ್ನು ವಿಶೇಷವಾಗಿ ಅರಿತುಕೊಂಡಿಲ್ಲ-ಎಂಬುದು ನಮ್ಮ ಉತ್ತರ.(ಪುಟ ೧೮0).

0)'ಯಾವಾಗ ಇವನ ಹೃದಯದಲ್ಲಿರುವ ಕಾಮನೆಗಳು ಬಿಟ್ಟು ಹೋಗುವುವೊ  ಆಗ ಮನುಷ್ಯನೆ ಅಮೃತನಾಗುತ್ತಾನೆ. ಶರೀರದಲ್ಲಿಯೇ ಬ್ರಹ್ಮವನ್ನು ಹೊಂದುತ್ತಾನೆ-ಎಂದು ಶ್ರುತಿಯು ಹೇಳಿದ ಫಲವು  ದೃಷ್ಟವಾದದ್ದು.ಅದು ಪ್ರತ್ಯಕ್ಷವಲ್ಲ ಎಂದು ಹೇಳುವೆಯಾದರೆ ಅದು ಜ್ಞಾನಿಗಳಿಗೆ ಅನುಭವ ಸಿದ್ಧವಾಗಿದೆ  ಎನ್ನುತ್ತೇವೆ.(ಪುಟ ೧೮೧)

0೯)ಅಹಂಕಾರಕ್ಕೂ  ಚಿದಾತ್ಮನಿಗೂ ಇರುವ ತಾದಾತ್ಮ್ಯಾಧ್ಯಾಸದ ನಿವೃತ್ತಿಯೇ  ಗ್ರಂಥಿನಾಶ. 
ಇದು ಅನುಭವ ಸಿದ್ಧವಾಗಿದೆ.(ಪುಟ ೧೮೧)

೧೧0)ಅವಿವೇಕದ ದೆಸೆಯಿಂದ  ಅಹಂಕಾರವನ್ನೂ  ಚಿದಾತ್ಮನನ್ನೂ ಒಂದಾಗಿ  ಮಾಡಿ 'ಇದು ನನಗೆ ಆಗಬೇಕು,ಇದು ನನಗೆ ಆಗಬೇಕು'ಎಂದಾಗುವ ಬಯಕೆಗಳೇ  ಕಾಮವೆಂಬ ಶಬ್ದದಿಂದ ಹೇಳಲ್ಪಡುತ್ತವೆ.(೧೮೧)


                ೧೧೧)ಚಿದಾತ್ಮನನ್ನು  ಅಹಂಕಾರದಲ್ಲಿ ಸೇರಿಸದೆ,ಅಹಂಕಾರವನ್ನೂ ಆತ್ಮನಿಂದ ಬೇರೆಯಾಗಿ ನೂೀಡುತ್ತಾ ,ಕೋಟಿ ವಸ್ತುಗಳನ್ನು ಬಯಸಿದರೂ ಬಾಧೆಯಾಗುವುದಿಲ್ಲ.:ಏಕೆಂದರೆ ಗ್ರಂಥಿಗಳು ನಾಶವಾಗಿವೆ.ಅಧ್ಯಾಸವಿಲ್ಲದ ಕಾಮದಿಂದ ಬಾಧೆಯಿಲ್ಲವೆಂದಥ೯.(೧೮೨)

೧೧೨)ವೇದಾಂತವನ್ನು ಅರಿತಿದ್ದರೂ  ಪಾಪಬಾಹುಜ೧೪)ಬ್ರಹ್ಮಾನಂದದಲ್ಲಿವಿದ್ಯಾನಂದ ಪ್ರಕರಣ:

)ಸಮಾಧಿಯೋಗದಿಂದಲೂ ,ಗೌಣ-ಮುಖ್ಯಾತ್ಮ -ವಿವೇಕದಿಂದಲೂ  ದ್ವೈತವು ಮಿಥ್ಯೆಯೆಂಬ ಚಿಂತನೆಯಿಂದಲೂ  ಬ್ರಹ್ಮಾನಂದವನ್ನು ಅನುಭವಿಸುತ್ತಿರುವ  ಜ್ಞಾನಿಗೆ ಆಗುವ ವಿದ್ಯಾನಂದವನ್ನು ಹೇಳಲಾಗುವುದು.(ಪುಟ ೪೭೬)

)ವಿಷಯಗಳ ಮೂಲಕ ಆಗುವ   ಸುಖದಂತೆ  ವಿದ್ಯಾನಂದವೂ  ಬುದ್ಧಿಯ ವೃತ್ತಿ ರೂಪ
ದಲ್ಲಿರುವುದು.ಇದು ದುಃಖವಿಲ್ಲದಿರುವಿಕೆಯೇ ಮೊದಲಾದ  ರೂಪದಿಂದ ನಾಲ್ಕು ಬಗೆಯಾಗಿರುವುದು.೯ಪುಟ ೪೭೬)

) ದುಃಖವಿಲ್ಲದಿರುವಿಕೆ ) ಬಯಕೆಗಳನ್ನು ಹೊಂದುವಿಕೆ )ನಾನು ಕೃತಕೃತ್ಯನು ಎಂಬುದು )ಪಡೆಯತಕ್ಕದ್ದನ್ನೆಲ್ಲ ಪಡೆದವನಾದೆನು ಎಂಬ  ವಿದ್ಯಾನಂದವು ನಾಲ್ಕು ಬಗೆಯಾಗಿದೆ.(ಪುಟ ೪೭೬)

) ಲೋಕದ್ದು ಪರಲೋಕದ್ದು ಎಂದು ದುಃಖವು ಎರಡು ಬಗೆಯಾಗಿ ಹೇಳಲ್ಪಟ್ಟಿದೆ.(ಪುಟ ೪೭೭)

) ಮನುಷ್ಯನು ತನ್ನನ್ನು ಪರಮಾತ್ಮನನ್ನಾಗಿ ಅರಿತಮೇಲೆ ಯಾವುದನ್ನು ಬಯಸುತ್ತ  ಯಾರ ಬಯಕೆಗಾಗಿ ತನ್ನ ಶರೀರವನ್ನು ಕ್ಲೇಶಗೊಳಿಸುವನು?(ಪುಟ ೪೭೭)

)ಶ್ರುತಿಯು ಆತ್ಮನನ್ನು ಜೀವಾತ್ಮನೆಂದೂ  ಪರಮಾತ್ಮನೆಂದೂ ಎರಡು ಬಗೆಯಾಗಿ  ಹೇಳುತ್ತದೆ.ಸ್ಥೂಲ-ಸೂಕ್ಷ್ಮ-ಕಾರಣ ಎಂಬ ಮೂರು ದೇಹಗಳನ್ನೇ  ಚೈತನ್ಯವೆಂದು ಭಾವಿಸಿ  ಭ್ರಾಂತಿಗೊಂಡಾಗ  ಚೈತನ್ಯವು ಜೀವನೆನಿಸಿ  ಭೋಕ್ತøಭಾವವನ್ನು ಹೊಂದುತ್ತದೆ.(೪೭೭)

)ಮೂರು ದೇಹಗಳ ವಿವೇಚನೆಯಿಂದ ಭೋಕ್ತøವೂ ಇರುವುದಿಲ್ಲ.ಭೋಗ್ಯವೂ ಇರುವುದಿಲ್ಲ.(ಪುಟ ೪೭೭)

)ಶರೀರತ್ರಯದಲ್ಲಿ  ತಾನೆಂಬ ಅಭಿಮಾನವನ್ನು ತಾಳಿದ  ಜೀವನು ತನ್ನ ಪ್ರಯೋಜನಕ್ಕಾಗಿ  ಸುಖಸಾಧನಗಳನ್ನು ಬಯಸುತ್ತ ಶರೀರವನ್ನು ಅನುಸರಿಸಿ ತಾಪಪಡುತ್ತಾನೆ. ಜ್ವರಗಳು ಮೂರು ಶರೀರಗಳಲ್ಲಿರುವುದೇ  ಹೊರತು ಆತ್ಮನಲ್ಲಿಲ್ಲ.(ಪುಟ ೪೭೮)

೯)ಏಳು ಧಾತುಗಳ  ಹೆಚ್ಚು ಕಡಿಮೆಯಿಂದ  ಸ್ಥೂಲದೇಹದಲ್ಲಿರುವ ಜ್ವರಗಳಿಗೆ ವ್ಯಾಧಿಗಳೆಂದು ಹೆಸರು.ಕಾಮ ಕ್ರೋದಾದಿಗಳು ಸೂಕ್ಷ್ಮದೇಹದಲ್ಲಿರುವ  ಜ್ವರಗಳು. ಎರಡು ಜ್ಡರಗಳ ಬೀಜಗಳು ಕಾರಣ ಶರೀರದಲ್ಲಿರುವುವು.(ಪುಟ ೪೭೮)

0)ಮಾಯೆಯ ಕಾಯ೯ಗಳಾದ ನಾಮ ರೂಪಗಳಿಂದ ಆತ್ಮನ್ನು ಬೇರೆ ಮಾಡಬೇಕು.(ಪುಟ ೪೭೮)

೧೧)ಆತ್ಮಾನಂದವೆಂಬ ಪ್ರಕರಣದಲ್ಲಿ ಹೇಳಿದಂತೆ  ಜೀವಾತ್ಮನ ಸ್ವರೂಪವು ಕೂಟಸ್ಥಚೈತನ್ಯವೆಂದು  ನಿಧ೯ರಿಸಿದ ಮೇಲೆ ಇಲ್ಲಿ ಸುಖದುಃಖಗಳನ್ನು ಅನುಭವಿಸುವವನು  ಇಲ್ಲವಾಗುವುದರಿಂದ  ಶರೀರದ ಜ್ವರವೆಲ್ಲಿ?(ಪುಟ ೪೨೯)

೧೨)ಹೇಗೆ ತಾವರೆ ಎಲೆಗೆ ನೀರು ಅಂಟುವುದಿಲ್ಲವೊ  ಜ್ಞಾನಿಗೆ ಅಪರೋಕ್ಷಜ್ಞಾನವಾದ ಮೇಲೆ  ಮುಂದೆ ಮಾಡುವ ಕಮ೯ವು ಅಂತುವುದಿಲ್ಲ.(ಪುಟ ೪೭೯)

೧೩)ಹೇಗೆ ಅರಳೆಯು  ಒಂದು ಕ್ಷಣದಲ್ಲಿ  ಬೆಂಕಿಯಿಂದ ಸುಟ್ಟು ಹೋಗುತ್ತದೊ ಹಾಗೆಯೆ ಸಂಚಿತ ಕಮ೯ವು  ಅಪರೋಕ್ಷಜ್ಞಾನದ ಪ್ರಭಾವದಿಂದ ಸುಟ್ಟು ಹೋಗುವುದು.(ಪುಟ೪೭೯)

೧೪)ಪ್ರಜ್ವಲಿಸುತ್ತಿರುವ  ಅಗ್ನಿಯು ಕಟ್ಟಿಗೆಗಳನ್ನು   ಬೂದಿಮಾಡುವಂತೆ  ಜ್ಞಾನವೆಂಬ ಅಗ್ನಿಯು ಪುಣ್ಯ ಪಾಪರೂಪವಾದ ಕಮ೯ಗಳನ್ನೆಲ್ಲ  ಸುಟ್ಟು ಬೂದಿ ಮಾಡುವುದು.(ಪುಟ ೪೮0)

೧೫)'ಯಾವನಿಗೆ ನಾನು ಮಾಡುವವನು' ಎಂಬ ಅಭಿಮಾನವಿರುವುದಿಲ್ಲವೊ  ಯಾವನ ಬುದ್ಧಿಯು ಅಂಟಿಕೊಂಡಿಲ್ಲವೊ (ಪಾಪ ಪುಣ್ಯಗಳಿಂದ)  ಅವನು ಲೋಕಗಳನ್ನು ಕೊಂದರೂ  ಕೊಲೆಗಾರನಾಗುವುದಿಲ್ಲ ಮತ್ತು  ಮತ್ತು ಫಲಕ್ಕೆ ಸಿಕ್ಕಿಬಿದ್ದವನಲ್ಲ.(ಪುಟ ೪೮0)

೧೬)ಜ್ಞಾನಿಯು ತಿನ್ನುತ್ತಿರಲಿ ,ಕ್ರೀಡಿಸುತ್ತಿರಲಿ, ಸ್ತ್ರೀಯರೊಡನೆ ಆನಂದಿಸುತ್ತಿರಲಿ,ವಾಹನಗಳಲ್ಲಿ ಹೋಗುತ್ತಿರಲಿ -ಹೀಗೆ ಯಾವ ವಿಷಯ ಭೋಗವನ್ನು ಹೊಂದಿದರೂ  ತನ್ನ ಶರೀರವನ್ನು ನೆನಪಿಗೆ ತಂದುಕೊಳ್ಳುವುದಿಲ್ಲ.ಪ್ರಾಣದ ವ್ಯಾಪಾರದಿಂದ ಜೀವಿಸುತ್ತಾನೆ.(ಪುಟ ೪೮೧)

೧೭) ಮಹಾರಾಜನು ಯಾವ ಆನಂದವನ್ನು ಹೊಂದುವನೊ  ಅದನ್ನು ಬ್ರಹ್ಮಜ್ಞಾನಿಯೂ ಹೊಂದುವನು  ಮಹಾರಾಜನು ಸುಖಗಳನ್ನೆಲ್ಲ ಅನುಭವಿಸಿ  ತೃಪ್ತನಾದುದರಿಂದ ಬಯಕೆಯಿಲ್ಲದೆ ಇರುವನು. ಬ್ರಹ್ಮಜ್ಞಾನಿಯು ವಿವೇಕದಿಂದ  ಬಯಕೆಯಿಲ್ಲದವನಾಗಿರುವನು.(ಪುಟ ೪೮೨)

೧೮) ಜ್ಞಾನಿಯು  ಶ್ರುತಿಯನ್ನು ಅರಿತವನಾದುದರಿಂದ  ವೇದಶಾಸ್ತ್ರಗಳಿಂದ  ಭೋಗಗಳಲ್ಲಿರುವ ದೋಷಗಳನ್ನು ನೋಡುತ್ತಾನೆ. ದೋಷಗಳು ಯಾವುವೆಂದರೆ )ದೇಹದ ದೋಷಗಳು೨)ಚಿತ್ತದ ದೋಷಗಳು )  ಭೋಗ್ಯ ವಸ್ತುಗಳ ದೋಷಗಳು.(ಪುಟ ೪೮೪)

೧೯)ಜ್ಞಾನಿಗೆ ದುಃಖ ಭಯಗಳೆಂಬ ಎರಡು ದೋಷಗಳೂ ಇಲ್ಲದಿರುವುದರಿಂದ  ಅವನ ಆನಂದವು ಹೆಚ್ಚಿನದು.ಇದಲ್ಲದೆ ಮಹಾರಾಜನಿಗೆ ಗಂಧವ೯ರ  ಆನಂದವನ್ನು ಹೊಂದ ಬೇಕೆಂಬ  ಆಸೆ ಬೇರೆ ಇರುತ್ತದೆ.ಜ್ಞಾನಿಗೆ ಅದಿರುವುದಿಲ್ಲ.(ಪುಟ ೪೮೪)

0) ಬುದ್ಧಿಗೆ ಸಾಕ್ಷಿಯಾದ ಆತ್ಮನು  ತಾನೆಂಬ ಜ್ಞಾನವಿಲ್ಲದಿರುವುದರಿಂದ ಅಜ್ಞಾನಿಗೆ ತೃಪ್ತಿಯಿರುವುದಿಲ್ಲ.(ಪುಟ ೪೮೬)

೨೧)ಯಾವನು  ಹೃದಯಾಕಾಶದಲ್ಲಿರುವ ಬುದ್ಧಿಯಲ್ಲಿ  ಬ್ರಹ್ಮವನ್ನು ಅರಿತುಕೊಳ್ಳುವನೊ  ಅವನು ಬಯಕೆಗಳನ್ನೆಲ್ಲಾ ಪಡೆಯುತ್ತಾನೆ ಎಂದು ತೈತ್ತಿರೀಯ ಶ್ರುತಿಯು ಹೇಳುತ್ತದೆ.(ಪುಟ ೪೮೬)

೨೨)ತಾನು ಅಖಂಡವಾದ ಬ್ರಹ್ಮವೆಂದು ತಿಳಿದವನು  ಎಲ್ಲರ ಆತ್ಮಸ್ವರೂಪನಾಗಿರುವನೆಂದು  ಸಾಮವೇದವು ಹಾಡುತ್ತದೆ.'ನಾನು ಅನ್ನ,ನಾನು ಅನ್ನವನ್ನು ಉಣ್ಣುವವನು'ಎಂದು ಸಾಮವೇದವು ಅಧ್ಯಯನ ಮಾಡಲ್ಪಡುವುದು.(ಪುಟ ೪೮೬)

೨೩) ಲೋಕದಲ್ಲಿ ಪರಲೋಕದಲ್ಲಿ  ದುಃಖವಿಲ್ಲದಿರುವಿಕೆ,ಬಯಕೆಗಳನ್ನೆಲ್ಲ ಹೊಂದುವಿಕೆ-ಇವೆರಡೂ ನಿರೂಪಿಸಲ್ಪಟ್ಟವು.'ಕೃತಕೃತ್ಯತ್ವ' 'ಪ್ರಾಪ್ತಪ್ರಾಪ್ತತ್ವ'  -ಇವೆರಡೂ ತೃಪ್ತಿದೀಪ ಪ್ರಕರಣದಲ್ಲಿ  ನಿರೂಪಿಸಲ್ಪಟ್ಟಿವೆ.(ಪುಟ ೪೮೭)

೨೪)ಬ್ರಹ್ಮಾನಂದವೆಂಬ ಗ್ರಂಥದಲ್ಲಿ  ವಿದ್ಯಾನಂದವೆಂಬ  ನಾಲ್ಕನೆಯ ಅಧ್ಯಾಯವು ಹೇಳಲ್ಪಟ್ಟಿತು.ವಿದ್ಯಾನಂದವು   ಉಂಟಾಗುವವರೆಗೂ  ಬ್ರಹ್ಮಾಭ್ಯಾಸವು ಅಂಗೀಕೃತವಾಗಲಿ.(ಪುಟ ೪೮೯)
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,್ಯದಿಂದ ಅಸಂತೋಷವುಂಟಾಗುವ ಹಾಗೆ  ಹೃದಯ ಗ್ರಂಥಿಗಳು ನಾಶವಾಗಿದ್ದರೂ  ಪ್ರಾರಬ್ಧದ ದೋಷದಿಂದ  ಬಯಕೆಗಳು ಸಂಭವಿಸಬಹುದು.(ಪುಟ ೧೮೨)

೧೧೩)ವೃಕ್ಷವೇ ಮೊದಲಾದವುಗಳ   ಉತ್ಪತ್ತಿ ನಾಶಗಳಿಂದ ಆತ್ಮನಿಗೆ ಲಾಭನಷ್ಟಗಳು ಆಗದಂತೆ,ಅಹಂಕಾರಗತವಾದ  ಬಯಕೆಗಳಿಂದಲೂ  ದೇಹಗತವಾದ ರೋಗಗಳಿಂದಲೂ  ಚಿದ್ರೂಪನಾದ ಆತ್ಮನಿಗೆ ಏನೂ ಆಗುವುದಿಲ್ಲ.(೧೮೨)

೧೧೪)ಗ್ರಂಥಿನಾಶಕ್ಕಿಂತ ಮೊದಲೂ  (ಎಂದರೆ ಅಜ್ಞಾನ ಕಾಲದಲ್ಲಿಯೂ)ಆತ್ಮನು ಅಸಂಗನಾಗಿದ್ದನು-ಎನ್ನುವೆಯಾದರೆ ಇದನ್ನು ಎಂದಿಗೂ ಮರೆಯಬೇಡ.ಇಂಥ ಜ್ಞಾನವೇ ಗ್ರಂಥಿನಾಶವಾಗುತ್ತದೆ. ಗ್ರಂಥಿನಾಶದಿಂದ ಕೃತಾಥ೯ನಾಗು.(ಪುಟ ೧೮೩)

೧೧೫)ಹೀಗೆ ಆತ್ಮನು ಅಸಂಗನು ಎಂಬುದನ್ನು ಮೂಢರು ಅರಿಯರು ಎನ್ನುವೆಯಾದರೆ,ಹಾಗೆ ಅರಿಯದಿರುವುದೇ ಗ್ರಂಥಿಯು ಗ್ರಂಥಿಯು,ಬೇರೊಂದಲ್ಲ.ಗ್ರಂಥಿಯಿರುವುದೂ ಗ್ರಂಥಿಯಿಲ್ಲದಿರುವುದೂ  ಅಜ್ಞಾನಿ ಜ್ಞಾನಿಗಳಲ್ಲಿರುವ ಭೇದ.(ಪುಟ೧೮೩)

೧೧೬)ಕಮ೯ಗಳನ್ನು ಮಾಡುವಾಗ ಅಥವಾ ಮಾಡದಿರುವಾಗ  ಜ್ಞಾನಿಗೂ ಅಜ್ಞಾನಿಗೂ  ದೇಹ ಇಂದ್ರಿಯ ಮನಸ್ಸು ಬುದ್ಧಿ -ಇವುಗಳಲ್ಲಿ ಸ್ವಲ್ಪವಾದರೂ ಭೇದವಿರುವುದಿಲ್ಲ.(ಪುಟ೧೮೩)

೧೧೭) ಪತಿತನಾದ ಬ್ರಾಹ್ಮಣನಿಗೂ  ಶ್ರೋತ್ರೀಯನಿಗೂ  ವೇದದ ಅನಧುಯನ ಅಧ್ಯಯನ -ಇವುಗಳಿಂದಲೇ ಭೇದವಾಗಿದೆ.ಆಹಾರಾದಿಗಳಲ್ಲಿ ಬೇಧವಿಲ್ಲ. ನ್ಯಾವನ್ನೇ ಜ್ಞಾನಿ ಅಜ್ಞಾನಿಗಳ ವಿಷಯದಲ್ಲಿಯೂ ಯೋಜಿಸಬೇಕು.(ಪುಟ ೧೮೩)   

೧೧೮)ದುಃಖಗಳು ಬಂದರೆ ಜ್ಞಾನಿಯು ದ್ವೇಶಿಸುವುದಿಲ್ಲ.ಸುಖಗಳಗು ಹೊರಟು ಹೋದರೆ ಬಯಸುವುದಿಲ್ಲ.ಉದಾಸೀನವಾಗಿರುವಂತೆ ಇರುತ್ತಾನೆ-ಎಂದು ಗೀತೆಯಲ್ಲಿ ಗ್ರಂಥಿನಾಶವನ್ನು ಹೇಳಿದೆ.(ಪುಟ ೧೮೪)

೧೧೯)ಪುರಾಣವು ಜ್ಞಾನಿಗೆ  ಔದಾಸೀನ್ಯವನ್ನು ಹೇಳುತ್ತದೆಯೇ ಹೊರತು  ಕಾಯ೯ದಲ್ಲಿ ಅಪ್ರವೃತ್ತಿಯನ್ನು ಹೇಳುವುದಿಲ್ಲ.(ಪುಟ ೧೮೫)

೧೨0)ಲೋಕದಲ್ಲಿ ಸಂಗವುಳ್ಳವನು  ಬಾಧಿಸಲ್ಪಡುತ್ತಾನೆ. ಸಂಗವಿಲ್ಲದವ್ನು ಸುಖವನ್ನು ಹೊಂದುತ್ತಾನೆ.ಆದುದರಿಂದ ಸುಖವನ್ನು ಬಯಸುವವನು ಯಾವಾಗಲೂ ಸಂಗವನ್ನು ಯಾವಾಗಲೂ ಬಿಡಬೇಕು.(ಪುಟ ೧೮೫)

                ೧೨0)ಲೋಕದಲ್ಲಿ ಸಂಗವುಳ್ಳವನು  ಬಾಧಿಸಲ್ಪಡುತ್ತಾನೆ. ಸಂಗವಿಲ್ಲದವ್ನು ಸುಖವನ್ನು ಹೊಂದುತ್ತಾನೆ.ಆದುದರಿಂದ ಸುಖವನ್ನು ಬಯಸುವವನು ಯಾವಾಗಲೂ ಸಂಗವನ್ನು ಯಾವಾಗಲೂ ಬಿಡಬೇಕು.(ಪುಟ ೧೮೫)

೧೨೨) ವೈರಾಗ್ಯ ಜ್ಞಾನ ಉಪರತಿ- ಮೂರೂ ಪರಸ್ಪರ ಸಹಾಯಕಗಳಾಗಿರುತ್ತವೆ.ಪ್ರಾಯೇಣ ಮೂರೂ ಒಬ್ಬನಲ್ಲಿ ಒಟ್ಟಾಗಿರುತ್ತವೆ.ಕೆಲವರಲ್ಲಿ ಹೀಗೆ ಇಲ್ಲದೆಯೂ ಇರಬಹುದು.(ಪುಟ
 ೧೮೬)

೧೨೩)ವಿಷಯ ವಸ್ತುಗಳಲ್ಲಿ ದೋಷವನ್ನು ನೋಡುವುದು ಅವುಗಳಲ್ಲಿ ಜಿಜ್ಞಾಸೆ ಮತ್ತು ದೈನ್ಯವನ್ನು ಹೊಂದದಿರುವುದು- ಮೂರು ವೈರಾಗ್ಯಕ್ಕೆ ಅಸಾಧಾರಣವಾದ ಕಾರಣವೂ ಸ್ವರೂಪವೂ  ಕಾಯ೯ವೂ ಆಗಿರುವುವು.(ಪುಟ ೧೮೬)
ಅವುಗಳು ಅನಿತ್ಯವೆಂದು;ಇದು ವೈರಾಗ್ಯಕ್ಕೆ ಕಾರಣ
ಅವುಗಳನ್ನು ಬಿಡುವುದು;ಇದು ವೈರಾಗ್ಯದ ಸ್ವರೂಪ
ತ್ಯಜಿಸಿದ್ದರಲ್ಲಿ ಪುನಃ ಭೋಗೇಚ್ಛೆಯುಂಟಾಗದಿರುವುದು;ಇದು ವೈರಾಗ್ಯದ ಕಾಯ೯

೧೨೪)ಶ್ರವಣ-ಮನನ-ನಿದಿಧ್ಯಾಸನಗಳು,ತತ್ವ-ಮಿಥ್ಯಾ ವಿವೇಚನೆ,ಪುನಃ ಹೃದಯಗ್ರಂಥಿಯು ಹುಟ್ಟದಿರುವುದು - ಮೂರೂ ಜ್ಞಾನದ ಕಾರಣವೂ ಸ್ವರೂಪವೂ ಕಾಯ೯ವೂ ಆಗಿರುವುವು,(ಪುಟ ೧೮೭)

೧೨೫)ಆತ್ಮನು ಬೇರೆ ಅಹಂಕಾರವು ಬೇರೆ  ಎಂಬ ವಿವೇಚನೆಯು ಜ್ಞಾನದ ಸ್ವರೂಪ.ಅನ್ಯೋನ್ಯಾಧ್ಯಾಸ ರೂಪವಾದ  ಹೃದಯ ಗ್ರಂಥಿಯು ಹುಟ್ಟದಿರುವುದೇ  ಜ್ಞಾನದ ಕಾಯ೯ (ಉಟ ೧೮೭)

೧೨೬)ಯಮ-ನಿಯಮಾದಿಗಳು,ಚಿತ್ತವೃತ್ತಿ ನಿರೋಧ,ವ್ಯವಹಾರದ ನಾಶ- ಮೂರೂ ಉಪರತಿಯ   ಕಾರಣ-ಸ್ವರೂಪ-ಕಾಯ೯ಗಳಾಗಿರುತ್ತವೆ.ಹೀಗೆ ವೈರಾಗ್ಯ-ಜ್ಞಾನ-ಉಪರತಿಗಳು ಬೇರೆಯಾಗಿರುತ್ತವೆ.(ಪುಟ ೧೮೭) 

೧೨೭)ಸಾಕ್ಷಾತ್ತಾಗಿ ಮೋಕ್ಷವನ್ನು ಕೊಡುವುದರಿಂದ ತತ್ವಜ್ಞಾನವು ಪ್ರಧಾನವಾಗಿರುತ್ತದೆ.ಉಳಿದ ವೈರಾಗ್ಯ -ಉಪರತಿಗಳೆರಡೂ  ಜ್ಞಾನಕ್ಕೆ ಸಹಾಯಕವಾಗಿರುತ್ತವೆ.(ಪುಟ ೧೮೮)

೧೨೮)ನಿತ್ಯವಸ್ತುವು  ಅನಿತ್ಯ ಕಮ೯ದಿಂದ ಆಗುವುದಿಲ್ಲ-ಎಂದು ಬ್ರಾಹ್ಮಣನು ವೈರಾಗ್ಯವನ್ನು ಹೊಂದಬೇಕು.(ಪುಟ ೧೮೮)

೧೨೯)ಶಾಂತನೂ ದಾಂತನೂ  ಉಪರತನೂ ತಿತಿಕ್ಷುವೂ  ಸಮಾಹಿತನೂ ಆಗಿ  ತನ್ನ ಶರೀರದಲ್ಲಿಯೇ ಆತ್ಮನನ್ನು ನೋಡಬೇಕು.(ಪುಟ೧೮೮)

೧೩0)ವೈರಾಗ್ಯ ಜ್ಞಾನ ಉಪರತಿಗಳು ಒಬ್ಬನಲ್ಲಿಯೇ ಅತ್ಯಂತ ಪರಿಪಕ್ವಗಳಾಗಿದ್ದರೆ ಅದು ಮಹಾ ತಪಸ್ಸಿನ ಫಲವೆಂದು ತಿಳಿಯಬೇಕು.ಪಾಪಕಮ೯ದಿಂದ  ಮೂರರಲ್ಲಿ ಒಂದೊ  ಅಥವಾ ಎರಡೊ  ಯಾವನೊ ಒಬ್ಬನಲ್ಲಿ ಒಂದಾನೊಂದು  ಕಾಲದಲ್ಲಿ ಪ್ರತಿಬಂಧವನ್ನು ಹೊಂದುವುದು.(ಪುಟ ೧೮೮)

                ೧೩೧) ಒಬ್ಬನಲ್ಲಿ  ವೈರಾಗ್ಯ  ಉಪರತಿಗಳು ಪಕ್ವವಾಗಿದ್ದು ತತ್ವಜ್ಞಾನವು ಪ್ರತಿಬದ್ಧವಾಗಿದ್ದರೆ ಅವನಿಗೆ ಮೋಕ್ಷವಾಗುವುದಿಲ್ಲ.ಆದರೆ ವೈರಾಗ್ಯಾದಿರೂಪವಾದ ತಪೋಬಲದಿಂದ  ಪುಣ್ಯಲೋಕ ಪ್ರಾಪ್ತಿಯಾಗುವುದು.(ಪುಟ ೧೮೯)

೧೩೨)ಜ್ಞಾನವು ಪೂಣ೯ವಾಗಿರುವಾಗ ,ವೈರಾಗ್ಯ ಉಪರತಿಗಳು ಪ್ರತಿಬದ್ಧವಾಗಿದ್ದರೂ  ಮೋಕ್ಷವು ಲಭಿಸುವುದು.ಆದರೆ ಪ್ರಾಎಬಗಧ ಕಮ೯ದಿಂದಾಗತಕ್ಕ  ದುಃವು ಹೋಗದು.(ಪುಟ೧೮೯)

೧೩೩)ಬ್ರಹ್ಮಲೋಕವನ್ನು ತಿರಸ್ಕರಿಸುವುದು ಕೂಡ  ವೈರಾಗ್ಯದ ಅವಧಿಯು.ಸಾಮಾನ್ಯ ಜನರು  ದೇಹವನ್ನೇ ಆತ್ಮವೆಂದು ಭಾವಿಸುವಂತೆ  ತಾನೇ ಪೊಮಾತ್ಮನೆಂಬ ದಾಢ್ಯ೯ವು ಜ್ಞಾನದ ಕೊನೆಯಾಗಿರುತ್ತದೆ.(ಪುಟ೧೮೯)

೧೩೪)ಜ್ಞಾನಿಗಳ ಪ್ರಾರಬ್ಧ ಕಮ೯ವು ನಾನಾ ಬಗೆಯಾಗಿರುವುದರಿಂದ  ಅವರ ವತ೯ನೆಗಳೂ ನಾನಾ ಬಗೆಯಾಗಿರುವುವು.ಆದ್ದರಿಂದ ಶಾಸ್ತ್ರಾಥ೯ ವಿಷಯದಲ್ಲಿ ಪಂಡಿತರು ಭ್ರಮೆಯನ್ನು ಹೊಂದಕೂಡದು.(ಪುಟ ೧೯0)

೧೩೫)ಜ್ಞಾನಿಗಳು ತಮ್ಮ ತಮ್ಮ ಪ್ರಾರಬ್ಧಕಮಾ೯ನುಸಾರವಾಗಿ  ಬೇರೆ ಬೇರೆ ಬಗೆಯಿಂದ ವತಿ೯ಸಲಿ.ಆದರೆ 'ಬ್ರಹ್ಮಾಹಮಸ್ಮಿ'(ಅಹಂ ಬ್ರಹ್ಮಾಸ್ಮಿ) ಎಂಬ ಜ್ಞಾನವು ಏಕಾಕಾರವಾಗಿರುವುದು ಮತ್ತು ಮುಕ್ತಿಯು ಎಲ್ಲರಿಗೂ ಸಮಾನವಾದುದು- ಎಂಬುದು ಅದ್ವೈತದ ಸಿದ್ಧಾಂತವಾಗಿರುವುದು.(ಪುಟ ೧೯0)

೧೩೬)ಬಟ್ಟೆಯ ಮೇಲೆ ಚಿತ್ರವನ್ನು ಬರೆದಂತೆ  ಸ್ವಚೈತನ್ಯದಲ್ಲಿ ಎಂದರೆ (ಎಂದರೆ ಪರಬ್ರಹ್ಮದಲ್ಲಿ) ಮಾಯೆಯಿಂದ ಚಿತ್ರರೂಪವಾದ ಜಗತ್ತು  ಕಲ್ಪಿಸಲ್ಪಟ್ಟಿದೆ. ಮಿಥೆಯಾದ ಜಗತ್ತನ್ನು  ಉಪೇಕ್ಷಿಸಿದರೆ  ಉಳಿಯುವುದು ಚೈತನ್ಯವೇ.(ಪುಟ ೧೯0)

೧೩೭)ಯಾವ ಪಂಡಿತರು ಚಿತ್ರದೀಪವೆಂಬ  ಗ್ರಂಥವನ್ನು  ನಿತ್ಯವೂ ಅನುಸಂಧಾನ ಮಾಡುವರೊ  ಅವರು ಚಿತ್ರರೂಪವಾದ ಜಗತ್ತನ್ನು ನೋಡುತ್ತಿದ್ದರೂ  ಹಿಂದಿನ ಹಾಗೆಮರುಳಾಗುವುದಿಲ್ಲ.
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
ಟಿಪ್ಪಣಿ:)  ತಾನೇ ಪರಮಾತ್ಮನೆಂಬ ದಾಢ್ಯ೯ವು  ಜ್ಞಾನದ ಕೊನೆಯಾಗಿರುತ್ತದೆ. (ಶ್ಲೋಕ ೨೮೫. ಪುಟ ೧೮೯)
)  ಜಗತ್ತನ್ನು ಉಪೇಕ್ಷಿಸಿದರೆ ಉಳಿಯುವುದು  ಚೈತನ್ಯವೊಂದೇ(ಪುಟ ೧೯0)

)ಬ್ರಹ್ಮಾಹಮಸ್ಮಿ'(ಅಹಂ ಬ್ರಹ್ಮಾಸ್ಮಿ) ಎಂಬ  ಜ್ಞಾನವು ಏಕಪ್ರಕಾರವಾಗಿರುವುದು  ಮತ್ತು ಮುಕ್ತಿಯು ಎಲ್ಲರಿಗೂ ಸಮನಾಗಿರುವುದು.(ಪುಟ ೧೯0)    
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,




No comments:

Post a Comment