ಅಧ್ಯಾಯ 6 ಅಧ್ಯಾರೋಪ-ಅಪವಾದ:
1) ಬ್ರಹ್ಮವು ನಿವಿ೯ಶೇಷವು ಎಂಬುದು
ವೇದಾಂತದ ಮೂಲಉಪದೇಶವಾಗಿರುತ್ತದೆ.(ಪುಟ 3೯)
2)'ಇದಲ್ಲ ಇದಲ್ಲ 'ಎಂದು ಹೇಳುವ ಮಾಗ೯ಕ್ಕಿಂತ
ಬೇರೆಯ ಹೆಚ್ಚಿನ ಪ್ರಕಾರವು ಇಲ್ಲ ರಂದು ಹೇಳಿರುತ್ತದೆ.(ಪುಟ 3೯)
3)ನೇತಿ ನೇತಿ ಎಂಬ ದ್ವಿರುಕ್ತಿಯು
ವೀಪ್ಸಾಥ೯ದಲ್ಲಿ ಬಂದಿದೆ.ಏನೇನು ಇರಬಹುದೆಂದು
ಕಲ್ಪಿಸಬಹುದೋ ಅದೊಂದೂ ಅಲ್ಲವೇ ಅಲ್ಲವೆಂದು ಶ್ರುತಿಯ ಅಭಿಪ್ರಾಯ.(ಪುಟ40).
4)ವೇದಾಂತಿಗಳು ನಿವಿ೯ಶೇಷವಾದ ಬ್ರಹ್ಮವನ್ನು ತಿಳಿಸಿಕೊಡುವುದಕ್ಕೆ
ಒಂದು ನ್ಯಾಯವನ್ನು ಉಪಯೋಗಿಸುತ್ತಾರೆ. ಅದಕ್ಕೆ "ಅಧ್ಯಾರೋಪ ಅಪವಾದ ನ್ಯಾಯ"ಎಂದು ಹೆಸರು.ಈ ಕ್ರಮದಲ್ಲಿ ಉಪದೇಶಕ್ಕಾಗಿ
ಬ್ರಹ್ಮದಲ್ಲಿರುವುದೆಂದು
ಇಟ್ಟುಕೊಂಡದ್ದು ಅಧ್ಯಾರೋಪವು;ಅಲ್ಲಗಳೆದದ್ದು ಅಧ್ಯಾರೋಪವು.(ಪುಟ 42)
5)ಅಜ್ಞಾನಿಗಳ ಅಧ್ಯಾರೋಪಕ್ಕೂ
ಶ್ರುತ್ಯಾಚಾಯ೯ರ
ಅಧ್ಯಾರೋಪಕ್ಕೂ ಒಂದು ಮುಖ್ಯವಾದ
ವ್ಯತ್ಯಾಸವಿದೆ.ಶ್ರುತ್ಯಾಚಾಯ೯ರ ಅಧ್ಯಾರೋಪವು
ಅಜ್ಞಾನದಿಂದ ಆಗಿರುವುದಿಲ್ಲ. ವಿವೇಕಪೂವ೯ಕವಾಗಿಯೇ ಅಗುತ್ತದೆ.(ಪುಟ 43)
6)ಉಪಾಸ್ಯತ್ವವನ್ನು ಹೇಳಿ ಸಾಧಕತ್ವವನ್ನು ಅಲ್ಲಗಳೆಯುವುದು ಅವಸ್ಥಾ ಸಾಕ್ಷಿತ್ವವನ್ನು ಒಪ್ಪಿ
ಅಪರಿಚ್ಛಿನ್ನತ್ವವನ್ನು
ಕಳೆಯುವುದು, ತುರೀಯತ್ವವನ್ನುಹೇಳಿ ಆ ಸಾಕ್ಷಿತ್ವವನ್ನೂ ತೆಗೆದುಹಾಕುವುದು,ಸಾಧಕತ್ವವನ್ನು ಹೇಳಿ ನಿತ್ಯಸಂಸಾರಿತ್ವವನ್ನು ಅಲ್ಲಗಳೆಯುವುದು,ನಿತ್ಯಮುಕ್ತತ್ವವನ್ನು ಹೇಳಿ ಸಾಧಕಯ್ವವನ್ನು ಅಲ್ಲಗಳೆಯುವುದು-ಈ ಪ್ರಕಾರವಾಗಿ
ಒಂದೊಂದು ಅಧ್ಯಾರೋಪದಿಂದಲೂ
ಬೇರೊಂದು ಕಲ್ಪನೆಯನ್ನು ಕಳೆಯುತ್ತಾ ಹೋಗುವುದು.(ಪುಟ 46)
7)ಪ್ರತಿಯೊಂದು ಅಧ್ಯಾರೋಪವನ್ನೂ ಹಲವು ವಿಕಲ್ಪಗಳ ನಿರಾಸಕ್ಕೆಉಯೋಗಿಸಬಹುದು.ವೇದಾಂತಿಗಳು ಹಾಗೆ ಉಪಯೋಗಿಸಿಯೂ
ಇರುತ್ತಾರೆ.(ಪುಟ 46)
ಅಧ್ಯಾಯ 7: ಪ್ರಮಾಣ ಪ್ರಮೇಯ ವ್ಯವಹಾರ:
1) ಪ್ರಮಾಣ,ಪ್ರಮೇಯ ವ್ಯವಹಾರವೆಲ್ಲವೂ ಅಧ್ಯಾಸರೂಪವಾದ ಅವಿದ್ಯೆಯೇ.(ಪುಟ 47)
2)ಕಮ೯ದಲ್ಲಿ ತೊಡಗುವುದಕ್ಕೆ
ನಾನು ಕತೃ೯,ಭೋಕ್ತø -ಎಂದು ಸಾಮಾನ್ಯವಾಗಿ
ಸಾಮಾನ್ಯವಾಗಿ ಜನರು ತಿಳಿದುಕೊಂಡಿರುವ
ಆತ್ಮಜ್ಞಾನವೇ ಸಾಕಾಗಿರುತ್ತದೆ.(ಪುಟ 47)
3) ಆತ್ಮಜ್ಞಾನವು ಕಮ೯ದಲ್ಲಿ ತೊಡಗುವುದಕ್ಕೆ ವಿರುದ್ಧವೂ ಆಗಿರುತ್ತದೆ(ಪುಟ 47)
4)ಕಮ೯ಶಾಸ್ತ್ರವು ಅವಿದ್ಯಾಕ್ಷೇತ್ರದಲ್ಲಿಯೇ
ಪ್ರಮಾಣವಾಗಿರುವುದೆಂದು
ಹೆಳಿರುದರಲ್ಲಿ ತಪ್ಪಿಲ್ಲ.(ಪುಟ48)
5)ಕಮ೯ಕಾಂಡದ
ವಾಕ್ಯದಿಂದಾಗುವ ಜ್ಞಾನವು
ರಜ್ಜು ಸಪ೯ ಜ್ಞಾನದಂತೆ ಅಧ್ಯಾಸ ಮಾತ್ರವಾದರೆ
,ಏಕತ್ವ ಜ್ಞಾನವನ್ನುಂಟುಮಾಡುವ
ಶ್ರುತಿಯಿಂದ
ಆ ಜ್ಞಾನವು
ಅವಶ್ಯವಾಗಿ ಬಾಧಿತವಾಗುತ್ತದೆ.
(ಪುಟ48)
6)ಇದಲ್ಲದೆ
ಅದ್ವಿತೀಯನಾದ ಅಕತ೯ನಾದ
ಆತ್ಮನ ಜ್ಞಾನವನ್ನು ಶ್ರುತಿಯು
ಉಪದೇಶಿಸುತ್ತದೆ ಎಂದೊಪ್ಪಿದರೆ
ಅದ್ವೈತದಲ್ಲಿ
ಉಪದೇಶ,ಉಪದೇಷ್ಟø, ಉಪದೆಶ್ಯ -ಎಂಬ ಬೇಧಗಳು
ಇರುವುದಕ್ಕೆ ಅವಕಾಶವಿಲ್ಲವಾದ್ದರಿಂದ
ಜ್ಞಾನಕಾಂಡದ ಪ್ರಾಮಾಣ್ಯವೂ ಬಾಧಿತವಾಗುತ್ತದೆ.(ಪುಟ 48)
7)ಪಾಪವು ಕ್ಷಯವಾದರೆ
ಜ್ಞಾನದ ಉತ್ಪತ್ತಿಯಾಗುವುದು,ಅವಿದ್ಯಾ ನಿವೃತ್ತಿಯೂ ಆಗುವುದು ಎಂಬ ಕಾರಣದಿಂದ
ಆ ವಾಕ್ಯವು ಕಮ೯ಗಳನ್ನು ವಿಧಿಸುತ್ತದೆ.ಅವೂ ಪುರುಷಾಥ೯ಕ್ಕೆ
ಉಪಾಯವನ್ನು ಉಪದೇಶಿಸುವುದರಿಂದ ಪ್ರಮಾಣವೇ ಆಗಿರುತ್ತದೆ.ಕಮ೯ಕಾಂಡಕ್ಕೂ
ಜ್ಞಾನಕಾಂಡಕ್ಕೂ ಯಾವವಿರೋಧವೂ ಇರುವುದಿಲ್ಲವಾದ್ದರಿಂದ(ಪುಟ 4೯)
8)ಅದ್ವೈತ ಜ್ಞಾನವಿರುವವರಿಗೆ
ಉಪದೇಶಾದಿಗಳ ಅವಶ್ಯಕತೆಯೇ ಇರುವುದಿಲ್ಲ.(ಪುಟ 4೯)
೯)ಪರಮಾಥ೯ವನ್ನು ಬೋಧಿಸುವುದಕ್ಕಾಗಿಯೇ
ಶಾಸ್ತ್ರ, ಶಿಷ್ಯ,ಗುರು-ಎಂಬ ಭೇದವನ್ನು ಅಧ್ಯಾರೋಪ ಅಪವಾದ ನ್ಯಾಯದಿಂದ ವೇದದಲ್ಲಿ ಅಂಗೀಕರಿಸಿದೆ.(ಪುಟ 50)
10)ಶ್ರುತಿಯು ವೈದಿಕರು ಮಾತ್ರ ಒಪ್ಪಿರುವ ಪ್ರಮಾಣವು.(ಪುಟ 51)
11)ಕಿವಿಯಿಂದ ಶಬ್ದವುಕೇಳಿಬಂದರೆ
ಕಣ್ಣಿನಿಂದ ರೂಪವು ತಿಳಿಯ ಬರುತ್ತದೆಯೇ ಹೊರತು
ಕಿವಿಯಿಂದ ಕೇಳಿ ಬಂದದ್ದು ಶಬ್ದವಲ್ಲ ಎಂದೇನೂ
ಕಣ್ಣು ತಿಳಿಸುವುದಿಲ್ಲ.(ಪುಟ 51)
11)ಅದ್ವೈತ ಶ್ರುತಿಯನ್ನು
ಪ್ರಮಾಣವೆಂದು ನಂಬಬೇಕೆಂದೇನೂ
ನಾವು ಹೇಳುವುದಿಲ್ಲ.ಅದು ಹೇಳುವ ಬ್ರಹ್ಮಾತ್ಮೈಕತ್ವವು ಅನುಭವ ಗೋಚರವಾಗಿರುವುದರಿಂದ
ಅದು ಪ್ರಮಾಣವೆಂದು ಆಗಲೇ ತಿಳಿಸಿರುತ್ತದೆ.(ಪುಟ 51)
12)ಪ್ರತ್ಯಕ್ಷಾದಿಗಳು
ಅಜ್ಞಾನಿಗಳ ವಿಷಯವೆಂದೂ
ಜ್ಞಾನಿಗಳಿಗೆ ಪ್ರತ್ಯಕ್ಷಾದಿಗಳು
ಅಪ್ರಮಾಣವೆಂದೂ
ಶ್ರುತಿಯೇ
ಹೇಳುತ್ತಿರುವುದರಿಂದ
,ಎಚ್ಚರವಾಗುವವರೆಗೆ ಸ್ವಪ್ನ ವ್ಯವಹಾರವು
ಸತ್ಯವಾಗಿರುವಂತೆ
ಪ್ರತ್ಯಕ್ಷಾದಿಗಳೂ
ಬ್ರಹ್ಮಾತ್ಮೈಕತ್ವ ವಾಗುವವರೆಗೆ ಪ್ರಮಾಣವಾಗಿರಬಹುದಾಗಿದೆ.(ಪುಟ 51)
13) ಆತ್ಮನು ಶಾಸ್ತ್ರ ಪ್ರಮಾಣದಿಂದಲೇ
ತಿಳಿದುಬರುವನೆಂದು
ವೇದಾಂತಿಗಳು ಹೇಳಿದರೂ
ಅವನು ಘಟಾದಿಗಳಂತೆ ಪ್ರಮೇಯನೆಂದು ತಿಳಿಯಬಾರದು.(ಪುಟ54)
14)ಶ್ರುತಿ ಸ್ಮøತಿಗಳಲ್ಲಿ
ಆತ್ಮನು ಅಪ್ರಮೇಯನೆಂದು ಹೇಳಿರುತ್ತದೆ.(ಪುಟ 54)
15)ಶಾಸ್ತ್ರವು ಆತ್ಮಸ್ವರೂಪವನ್ನು ತಿಳಿಸುವುದಕ್ಕೆ
ಆಗುವುದಿಲ್ಲವೆಂಬುದಕ್ಕೆ ಅವನು ನಿವಿ೯ಶೇಷನಾಗಿರುತ್ತಾನೆಂಬುದು ಒಂದು ಕಾರಣ(ಪುಟ 54)
16)ಆತ್ಮನು ತಿಳಿಯತಕ್ಕವನ
ಒಳಸ್ವರೂಪವೇ ಆಗಿರುವುದರಿಂದ
ಅವನು ಪ್ರಮೇಯನಲ್ಲವೆಂಬುದಕ್ಕೆ ಇನ್ನೊಂದು ಕಾರಣ.(ಪುಟ 55)
17)ಪ್ರಮಾಣವು ಪ್ರಮೇಯದ ವಿಷಯದಲ್ಲಿ ತೊಡಗುತ್ತದೆ,ಪ್ರಮಾತೃವಿನ ವಿಷಯದಲ್ಲಲ್ಲ.(ಪುಟ 55).
18)ಆತ್ಮನು ಅಪ್ರಮೇಯನಾದರೆ
ಶ್ರುತಿಯು ಹೇಗೆ ಪ್ರಮಾಣವಾದೀತು ?ಪ್ರಮಾಣಕ್ಕೆ ಪ್ರಮೇಯದಲ್ಲಿ ವ್ಯಾಪಾರವಿರಬೇಕಷ್ಟೆ?ಇದಲ್ಲದೆ ಆತ್ಮನು ಅಪ್ರಮೇಯನಾದರೆ
ಪ್ರಮಾಣವಿಲ್ಲದ್ದರಿಂದ
ಆತ್ಮನು ಇಲ್ಲವೆಂದೇ ಯಾರಾದರೂ ವಾದಿಸಬಹುದಾಗಿರುತ್ತದೆ. ಶಾಸ್ತ್ರವೇ
ಆತ್ಮನಿಗೆ ಪ್ರಮಾಣವೆಂದೂ
ಹೇಳಿ ಆತ್ಮನು ಅಪ್ರಮೇಯನೆಂದೂ ಹೇಳುವುದು ವ್ಯಾಹತವು,ಎಂದರೆ ತನಗೆ ತಾನೇ ವಿರುದ್ಧವಾದ ಮಾತು ಆಗಿರುತ್ತದೆ-ಎಂದು ಆತ್ಮಸ್ವಭಾವವನ್ನೂ
ಪ್ರಮಾಣ ಸ್ವಭಾವವನ್ನೂ ತಿಳಿಯದವರು ಹೇಳುತ್ತಾರೆ(ಪುಟ 55)
1೯)ಮೊದಲನೆಯದಾಗಿ
ಶ್ರುತಿಯು ಪ್ರಮಾನವೆನಿಸಿರುವುದು
ಬ್ರಹ್ಮವನ್ನು ಇಂಥವನೆಂದು
ವಿಷಯೀಕರಿಸುವುದರಿಂದಲ್ಲ. ಮತ್ತೇನೆಂದರೆ
ಜಿಜ್ಞಾಸುವಿನ ಪ್ರತ್ಯಗಾತ್ಮನೇ ಆದ್ದರಿಂದ
ಅದು ಆತ್ಮನ ವಿಷಯವಲ್ಲ ಎಂದು ತಿಳಿಸಿ
ಅರಿಯುವವನು(ಜ್ಞಾತೃ),ಅರಿಯಲ್ಪಡತಕ್ಕದ್ದು(ಜ್ಞೇಯ),,ಅರಿವು(ಜ್ಞಾನ) -ಮುಂತಾದ ಭೇದವನ್ನು ತೆಗೆದು ಹಾಕುತ್ತದೆ. ಆತ್ಮನ ಧಮ೯ವಲ್ಲದ್ದನ್ನು ತೆಗೆದುಹಾಕಿ
ಆತ್ಮಸ್ವರೂಒವನ್ನುಳಿಸುವುದರಿಂದ
ಮಾತ್ರವೇ ಶ್ರುತಿಯು ಪ್ರಮಾಣವು.'ಸಿದ್ಧಂತು
ನಿವತ೯ಕತ್ವಾತ್'(ಅದರದ್ದಲ್ಲದ ಪ್ರಮಾಣವನ್ನು
ಕಳೆಯುದರಿಂದ
ಪ್ರಾಮಾಣ್ಯವು ಸಿದ್ಧವಾಗುತ್ತದೆ.)ಎಂಬ ದ್ರವಿಡಾಚಾಯ೯ರ
ಸುತ್ರಕ್ಕೆ ಇದೇ ಅಭಿಪ್ರಾಯ.(ಪುಟ 55)
20)ಶ್ರುಯಿಯು ಅಂತ್ಯಪ್ರಮಾಣವೆಂದೂ
ಅದರಿಂದಾಗುವ
ಜ್ಞಾನವಾದ ಬಳಿಕ
ಪ್ರಮಾಣಾದಿ ವ್ಯವಹಾರವೇ
ಬಾಧಿತವಾಗಿ ಬಿಡುವುದೆಂದೂ
ಹಿಂದೆ(ಪುಟ 51) ಹೇಳಿದೆಪುಟ 55).
21)ಆಕಾಶವೇ ಮೊದಲಾದ
ಪದಾಥ೯ಗಳು
ಪ್ರಮಾಣದ ಬಯಕೆಯಿಲ್ಲದೆ ತಾವೇ ಸಿದ್ಧವಾಗುವಂತಿಲ್ಲವಾದ್ದರಿಂದ
ಅವುಗಳಿಗೆ ಪ್ರತ್ಯಕ್ಷಾದಿ ಪ್ರಮಾಣಗಳು ಬೇಕಾಗಿರುತ್ತವೆ.(ಪುಟ 56)
22) ಆದರೆ ಆತ್ಮನು ಸ್ವಯಂಸಿದ್ದನಾಗಿರುತ್ತಾನೆ.ಪ್ರಮಾಣಾದಿಗಳ ಸಹಾಯದಿಂದ ಸಿದ್ಧನಾಗಬೇಕಾದ್ದಿಲ್ಲ.
ಆತ್ಮನೆಂದರೆ ಪ್ರಮಾತೃವಿನ(ಜ್ಞಾತೃ) ಸ್ವರೂಪವು.ಪ್ರಮಾತೃವಿಗೆ ಪ್ರಮೇಯದ ವಿಷಯಕ್ಕೆ ಪ್ರಮಾಣವು ಬೇಕಾದೀತೇ ಹೊರತು ತನ್ನ ವಿಷಯಕ್ಕೆ ಬೇಕಾಗುವುದಿಲ್ಲ.ಪ್ರಮಾಣಾದಿ ವ್ಯವಹಾರಕ್ಕೆ ಆಶ್ರಯನಾಗಿರುವುದರಿಂದ
ಅವನು ಆವ್ಯವಹಾರಕ್ಕಿಂತ ಮೊದಲೇ ಸಿದ್ಧನಾಗುರುತ್ತಾನೆ.(ಪುಟ 56)
23)ಸ್ವತಃಸ್ಸಿದ್ಧನಾಗಿರುವ ,ತನ್ನ ಸ್ವರೂಪವೇ ಆಗಿರುವ ,ಆತ್ಮನನ್ನು ನಿರಾಕರಿಸುವುದಕ್ಕೆ ಯಾರಿಂದಲೂ ಆಗಲಾರದು.(ಪುಟ 56)
24)ಅರಿಯದ್ದನ್ನು ತಿಳಿಸಿಕೊಡುವುದೇ
ಪ್ಮಾಣದ ಕೃತ್ಯವು ಎಂದು ಭಾವಿಸುವವರಿಗೆ ಅದ್ವೈತ ಶ್ರುತಿಯು
ಪ್ರಮಾಣವೆನ್ನುವುದಕ್ಕೆ ಅಹ೯ವಾಗಲಾರದು. ಏಕೆಂದರೆ ಶ್ರುತಿಯು
ಅದ್ವೈತ ತತ್ವವನ್ನು ನೇರಾಗಿ ತಿಳಿಸುವುದಿಲ್ಲ.ಅದರಲ್ಲದ ಧಮ೯ವನ್ನು ಕಳೆಯುತ್ತದೆ,ಅಷ್ಟೆ.(ಪುಟ 57)
25)ಪ್ರಮಣವು ವಿಷಯವನ್ನು ತಿಳಿಸುವುದು, ಎಂದರೆ ಅದರ ವಿಷಯದಲ್ಲಿರುವ ಅಜ್ಞಾನವನ್ನು ತೊಲಗಿಸುವುದೇ ಹೊರತು
ಅದರ ಜೊತೆಗೆ ತಿಳಿಸುವುದು ಎಂಬ
ಮತ್ತೊಂದು ಕ್ರಿಯೆಯನ್ನೇನೂ ಮಾಡುವುದಿಲ್ಲ.೯ಪುಟ57)
26) ಹಾಗೆ ನೋಡಿದರೆ ಎಲ್ಲಾ ಪ್ರಮಾಣಗಳಿಗೂ ಅಜ್ಞಾನವನ್ನು ತೊಲಗಿಸುವುದೇ ಕೆಲಸವು.(ಪುಟ 57)
27)ಆತ್ಮನು
ಪ್ರಮಾತೃವಿನ
ಪರಮಾಥ೯ ಸ್ವರೂಪವೇ ಆಗಿರುತ್ತಾನೆ.(ಪುಟ 58)
28)ಪ್ರತ್ಯಕ್ಷದಿಂದಾಗಲೀ
ಅನುಮಾನದಿಂದಾಗಲೀ
ಆತ್ಮನನ್ನು ವಿಷಯೀಕರಿಸಿ ಅರಿಯಬಹುದೆಂದು
ಕಲ್ಪಿಸುವುದು ಯುಕ್ತಿ ಹಾಗೂ ಅನುಭವಗಳಿಗೆ ವಿರುದ್ಧವಾಗಿರುತ್ತದೆ.(ಪುಟ58)
2೯)ಆದ್ದರಿಂದ
ಆತ್ಮನು ಅಪ್ರಮೇಯನೆಂಬ ವೇದಾಂತ ಸಿದ್ಧಾಂತವೇ
ಸರಿಯಾದದ್ದು.(ಪುಟ 5೯)
30) ಜ್ಞಾನವಾದ ಬಳಿಕ ಪ್ರಮಾತೃವೇ ಪರನಾತ್ಮನು. ಪ್ರಮಾತೃ ಪ್ರಮೇಯ ವಿಭಾಗವೇ ಅಗ ಇರುವುದಿಲ್ಲ.(ಪುಟ 60)
31)ಈ ಎಲ್ಲಾ ವ್ಯವಹಾರಗಳೂ ಅಧ್ಯಾರೋಪ ದೃಷ್ಟಿಯಿಂದ ಉಂಟು. ಅಪವಾದ ದೃಷ್ಟಿಯಿಂದ ಇಲ್ಲ.(ಪುಟ 60)
ಅಧ್ಯಾಯ 8:ತಕ೯:
1) ಬ್ರಹ್ಮದ ಅನುಭವವು ಪ್ರತ್ಯಕ್ಷಾದಿಗಳಿಂದ ಆಗುವುದಿಲ್ಲ.(ಪುಟ 61)
2)ಇದ್ದುಕೊಂಡಿರುವ ವಸ್ತುವನ್ನು ಭೂತವಸ್ತು,ಪರಿನಿಷ್ಠಿತವಸ್ತು,ಪರಿನಿಷ್ಪನ್ನ ವಸ್ತು ಮುಂತಾದ
ಪಯಾ೯ಯ ಶಬ್ದಗಳಿಂದ ಕರೆಯುತ್ತಾರೆ.(ಪುಟ 61)
3)ತಕ೯ವು
ದೃಷ್ಟವಾದ ವಸ್ತುವಿನ ಹೋಲಿಕೆಯಿಂದ
ಅದೃಷ್ಟವಾದುದನ್ನು
ಸಮಥಿ೯ಸುವುದಕ್ಕೆ ಉಪಯೊಗವಾಗುತ್ತದೆ.ಆದ್ದರಿಂದ
ಅನುಭವಕ್ಕೆ ಹತ್ತಿರವಾಗಿದೆ-ಎಂಬುದು ತಾಕಿ೯ಕರವಾದವು.ಆದರದೆ ಬ್ರಹ್ಮವು ಶಾಸ್ತ್ರದøಷ್ಟವಾದದ್ದೇ ಹೊರತು
ಪ್ರತ್ಯಕ್ಷದೃಷ್ಟವಲ್ಲ.(ಪುಟ 61)
4)ಆದ್ದರಿಂದ ಪ್ರತ್ಯಕ್ಷವನ್ನು ಅವಲಂಬಿಸುವ
ಅನುಮಾನವಾಗಲಿಅಥವಾ ಬೇರೆಯ ಯುಕ್ತಿಯಾಗಲಿ ಇಲ್ಲಿ ಉಪಯೋಗಕ್ಕೆ ಬರುವುದಿಲ್ಲ.ಬ್ರಹ್ಮವು ಅಚಿಂತ್ಯವಾಗಿರುತ್ತದೆ.ಆದ್ದರಿಂದಲೇ ಇದನ್ನು ಕೇವಲ ಕತ೯ದಿಂದ ತಿಳಿಯುವುದು
ಸಿದ್ಧರಾದ
ಕಪಿಲಾದಿ ಋಷಿಗಳಿಗೂ
ಸಾಧ್ಯವಿಲ್ಲವೆಂದು ಶೃತಿ ಸ್ಮøತಿಗಳು ಹೇಳುತ್ತಿರುವುವು.(ಪುಟ 62)
5)ಶ್ರುತಿಯು ಒಂದಾನೊಂದು
ವಿಲಕ್ಷಣರೀತಿಯಿಂದ
ಅನಾತ್ಮವನ್ನೆಲ್ಲ ಬಿಡಿಸಿ
ಆತ್ಮನಲ್ಲಿಯೇ ನಮ್ಮ ಮನಸ್ಸು ವಿಶ್ರಾಂತವಾಗುವಂತೆ ಮಾಡುತ್ತದೆ. ಅದು
ಬೋಧಿಸುತ್ತದೆ. ಈ ಕ್ರಮಕ್ಕೆ ಆಗಮ ಎಂದು ಹೆಸರು.(ಪುಡ 62)
6)ಸಾಧಕನು ಆಚಾಯ೯ನ ಉಕ್ತಿಯಿಂದಲೂ
ತನ್ನ ಬುದ್ಧಿಯಿಂದಲೂ
ಆತ್ಮಜ್ಞಾನವನ್ನು ಮಾಡಿಕೊಳ್ಳಬೇಕು-ಎಂದು
ದೃಷ್ಟಾಂತಪೂವ೯ಕವಾಗಿ
ತಕ೯ದ ಅವಶ್ಯಕತೆಯನ್ನು ಅದು ತಿಳಿಸುತ್ತದೆ.
(ಪುಟ 63)
7) ಇಂಥ ತಕ೯ವನ್ನು
ಶ್ರುತಿಯೇ
ಅನುಭವಕ್ಕಾಗಿ ತಿಳಿಸಿಕೊಡುತ್ತದೆ.ಆದರೆ ಈ ನೆಪದಿಂದ
ಶ್ರುತ್ಯಾಧಾರವಿಲ್ಲದ
ಅಥವಾ ಶ್ರುತಿವಿರುದ್ಧವಾದ
ಒಣತಕ೯ವನ್ನೂ
ಉಪಯೋಗಿಸಿಕೊಳ್ಳುವುದಕ್ಕಾಗುವುದಿಲ್ಲ.(ಪುಟ
63)
8)ಕೇವಲ ತಕ೯,ಶುಷ್ಕತಕ೯, ನಿರಾಗಮ ತಕ೯ -ಇವೆಲ್ಲಶÀ್ರ್ರುತಿ ವಿರುದ್ಧವಾದ,
ನಿಷ್ಪ್ರಮಾಣಕವಾದ,ಅನುಭವ ಸಮ್ಮತಿಯಿಲ್ಲದ
ತಕ೯ಕ್ಕೆ ಹೆಸರುಗಳು.(ಪುಟ 63)
೯)ತಕ೯,ಉಪಪತ್ತಿ, ಯುಕ್ತಿ -ಇವೆಲ್ಲ ಪಯಾ೯ಯ ಪದಗಳು.(ಪುಟ 63)
10)ಯಾವ ತಕ೯ವನ್ನನುಸರಿಸಿ
ಶ್ರುತಿಯ ಅಭಿಪ್ರಾಯವನ್ನು ನಿಣ೯ಯಿಸಿದರೆ ಎಲ್ಲರಿಗೂ ಏಕರೂಪವಾದ
ಅನುಭವ
ಉಂಟಾಗುವುದೋ
ಅದೇ ಶ್ರೌತತಕ೯ವು.(ಪುಟ 64)
11) ಪರಮಾಥ೯ವು ಒಂದೇ ರೂಪವಾಗಿರಬೇಕು
ದೇಶ ಕಾಲ
ನಿಮಿತ್ತಗಳನ್ನು ಬಯಸಿ ಅದು ಬೇರೆ
ಅದು
ಬೇರೆ ಬೇರೆಯಾಗುವುದಿಲ್ಲ.ಅದರ ವಿಷಯವಾದ ಜ್ಞಾನವೇ
ಸಮ್ಯಕ್ ಜ್ಞಾನವು.(ಪುಟ 64).
12)ಆದ್ದರಿಂದ
ಅನುಭವಕ್ಕೆ ಅನುಕೂಲವಾಗುವಂತೆ
ಶ್ರುತಿಯಲ್ಲಿ ಹೇಳಿರುವ ತಕ೯ವೂ ಅದಕ್ಕೆ ಅನುಗುಣವಾಗಿ ನಾವೇ ಕಲ್ಪಿಸುವ
ಲೌಕಿಕ ತಕ೯ವೂ
ಸತ್ತಕ೯ವು.(ಪುಟ 64)
13)ತಾಕಿ೯ಕರ
ಯುಕ್ತಿಗಳು
ಶ್ರುತಿಯಿಂದಾಗುವ ಜ್ಞಾನಕ್ಕೆ
ಎಷ್ಟರಮಟ್ಟಿಗೆ ಉಪಯೋಗವಾಗುತ್ತವೆಯೋ
ಅಷ್ಟರಮಟ್ಟಿಗೆ
ಅದನ್ನು ಉಪಕರಣವಾಗಿ ಉಪಯೋಗಿಸಲೂ ಬಹುದು.
ಆದ್ದರಿಂದಲೇ "ಪರಮತಮ್ ಅಪ್ರತಿಷಿದ್ಧಮ್ ಅನುಮತಂ ಭವತಿ"ಎಂಬ ನ್ಯಾಯವನ್ನು ವೇದಾಂತದಲ್ಲಿ ಒಪ್ಪಿದೆ.ಹಾಗೆ ಒಪ್ಪಿದ ಕಕ೯ಗಳು ಶ್ರೌತತಕ೯ಕ್ಕೆ
ಹೊಂದಿಕೆಯಾಗಿ
ಅಥವಾ ಅದಕ್ಕೆ ಸಮೀಪವಾದಷ್ಟು ಮಟ್ಟಿಗೆ
ಅವನ್ನು ವೇದಾಂತಿಗಳು ಒಪ್ಪಿಯೇ ಒಪ್ಪುತ್ತಾರೆ.(ಪುಟ 65)
14)ತಾಕ೯
ಪ್ರಧಾನವಾದ ದಶ೯ನಗಳಿಗೂ ವೇದಾಂತಕ್ಕೂ ಇರುವ ಒಂದು ಮುಖ್ಯವಾದ ವ್ಯತ್ಯಾಸವೆಂದರೆ
ತಾಕಿ೯ಕರು ದೃಷ್ಟಾಂತ ಬಲದಿಂದಲೇ
ಕಾರಣ,ಕಾಯ೯
ಮುಂತದವುಗಳ
ಸ್ವರೂಪವನ್ನು ನಿಣ೯ಯಿಸುವುದಕ್ಕೆ ಹೊರಟಿರುತ್ತಾರೆ.ಆದ್ದರಿಂದ ಅವರಿಗೆ ಪ್ರತ್ಯಕ್ಷವಾಗಿ ಕಂಡಿರುವ
ದೃಷ್ಟಾಂತವು
ಅತ್ಯವಶ್ಯವಾಗಿರುತ್ತವೆ.ಅವರು ದೃಷ್ಟಾಂತವನ್ನು ಬಿಟ್ಟು
ಸ್ವಲ್ಪುವೂ ಅತ್ತಿತ್ತ ಕದಲುವುದಿಲ್ಲ.ವೇದಾತಿಗಳು ಶೃತಿಪ್ರಮಾಣದಿಂದ ಉಂಟಾಗುವ
ಅನುಭವವನ್ನು ಪ್ರಧಾನವಾಗಿ ಇಟ್ಟುಕೊಂಡಿರುತ್ತಾರೆ.(ಪುಟ 66)
15)ನಮಗೆಬೇಕಾಗಿದೆ ಎಂಬ ಕಾರಣದಿಂದ ವಸ್ತು ಸಿದ್ಧಿಯನ್ನು ನಿಶ್ಚಯಿಸುವುದಕ್ಕೆ ಆಗಲಾರದು.(ಪುಟ 67)
16) ಬೆಂಕಿಯು ತಣ್ಣಗಿದೆ
ಎಂದಾಗಲಿ ಸೂಯ೯ನು ಚಂದ್ರನಂತೆ
ತಂಪಾದ ಕಿರಣಗಳಗುಳ್ಳವ
ನೆಂದಾಗಲಿ ಯಾವಕಾರಣದಿಂದಲೂ ಆಗಲಾರದು(ಪುಟ 67)
ಅಧ್ಯಾಯ ೯ ವೇದಾಂತವಾಕ್ಯ:
1)ಶಾಂಕರ ವೇದಾಂತದಲ್ಲಿ
ಬ್ರಹ್ಮಕ್ಕೆ ಶಾಸ್ತ್ರವೇ ಪ್ರಮಾಣ.(ಪುಟ 68)
2) ಬ್ರಹ್ಮಜ್ಞಾನವು ವೇದಾಂತವಾಕ್ಯಗಳ ಅಥ೯ದ ವಿಚಾರದಿಂದ
ಮಾಡಿದ ನಿಶ್ಚಯದಿಂದ
ಉಂಟಾಗುತ್ತದೆ ಎಂಬುದೇ
ಈ ದಶ೯ನದ ಮುಖ್ಯೋಪದೇಶವಾಗಿರುತ್ತದೆ.(ಪುಟ 68)
3)ಶಾಸ್ತ್ರವು ಕಮ೯ವನ್ನೇ ತಿಳಿಸಬೇಕೆಂಬುದು
ಕಮ೯ಕಾಂಡದ ವಿಷಯ.(ಪುಟ 6೯)
4)ಜ್ಞಾನ ಕಾಂಡದಲ್ಲಿಯೂ ಕೆಲವು ಉಪಾಸನಾ ವಿಧಿಗಳಿವೆ."ಆತ್ಮಾವಾ ಅರೇ ದ್ರಷ್ಟವ್ಯಃ ಶ್ರೋತವ್ಯೋ
ಮಂತವ್ಯೋ ನಿದಿಧ್ಯಾಸಿತವ್ಯಃ"(ಬೃ 2-4-೯)."ಎಲೈ, ಆತ್ಮನನ್ನು ಕಾಣಬೇಕು,ಕೇಳಬೇಕು
ಯೋಚಿಸಬೇಕು, ಧ್ಯಾನಮಾಡಬೇಕು".ಸೋನ್ವೇಷ್ಟವ್ಯಃ ವಿಜಿಜ್ಞಾಸಿತವ್ಯಃ"(ಛಾಂ.8-7-1) ;ಆತನನ್ನು
ಹುಡುಕಬೇಕು
ಆತನನ್ನೇ ತಿಳಿದುಕೊಳ್ಳ ಬೇಕು'.
.'ಆತ್ಮೇ ತ್ಯೇವೋಪಾಸೀತ್'ಆತ್ಮನೆಂದೇ ಉಪಾಸನೆ ಮಾಡಬೇಕು-ಎಂದು ಮುಂತಾದವು ಇಂಥ ವಿಧಿಗಳು.(ಪುಟ 71)
5)ಉಪಾಸನೆ ಮಾಡಬೇಕಾದ ಬ್ರಹ್ಮನ ಅಥವಾ ಪರಮಾತ್ಮನ
ಸ್ವರೂಪವನ್ನು ತಿಳಿಸುವುದಕ್ಕೆ
ವಿಧಿಯಿಲ್ಲದ ಬ್ರಹ್ಮವಾಕ್ಯಗಳು ಬಂದಿರುತ್ತವೆ-ಎಂಬುದು ಅವರ ಅಭಿಪ್ರಾಯವು.ಹೇಗೆ ಅದೃಷ್ಟವಾದ ಸ್ವಗ೯ವು ಕಮ೯ದಿಂದ ಪಡೆಯತಕ್ಕದ್ದೋ
ಅದರಂತೆ ಅದೃಷ್ಟವಾದ ಮೋಕ್ಷವೂ
ಉಪಾಸನಾ ರೂಪವಾದ ಮಾನಸ ಕಮ೯ದಿಂದ ದೊರಯತಕ್ಕದ್ದು ಎಂದು ಅವರು ತಿಳಿದು ಕೊಂಡಿರುತ್ತಾರೆ.ಈ
ಉಪಾಸನೆಯಿಂದ
ಅವಿದ್ಯೆಯು ಹೋಗುವುದೆಂದು ಕೆಲವರ ನಂಬಿಕೆ.(ಪುಟ 71)
6) ಆದರೆ ಇದು ಸರಿಯಲ್ಲ.ಉಪನಿಷತ್ತಿನಿಂದ
ಮಾತ್ರವೇ ತಿಳಿದು ಬರುವ ಪರಮಪುರುಷನನ್ನು
ಇಲ್ಲವೆನ್ನುವುದಾಗಲಿ
ವೇದದಿಂದ ತಿಳಿದುಬರುವುದಿಲ್ಲ ವೆನ್ನುವುದಾಗಲಿ ಶಕ್ಯವಲ್ಲ.ಏಕೆಂದರೆ ನಿವಿ೯ಶೇಷನಾದ
ನಮ್ಮ ಆತ್ಮನೆಂದೇ ಉಪನಿಷತ್ತುಗಳಲ್ಲಿ ಕರೆದಿದೆ.ಆತ್ಮನನ್ನು ಇಲ್ಲವೆಂದು ನಿರಾಕರಿಸುವುದಕ್ಕೆ ಆಗಲಾರದು;ಏಕೆಂದರೆ ಯಾವನು ಹಾಗೆ ನಿರಾಕರಿಸುವುದಕ್ಕೆ
ಪ್ರಯತ್ನಿಸುವನೋ ಅವನೇ ಆತ್ಮನು.ಅವನನ್ನು ಔಪನಿಷದ ಪುರುಷನೆಂದು
ಕರೆಯುವುದರಿಂದ
ಅವನನ್ನು ಪ್ರಧಾನವಾಗಿಯೇ
ಉಪನಿಷತ್ತುಗಳಲ್ಲಿ ಪ್ರತಿಪಾದಿಸಿದೆ.ಮತ್ತೊಂದು ವಿಧಿಗೆ ವಿಶೇಷವಾಗಿ ಅಲ್ಲ-ಎಂಬುದು ಸ್ಪಷ್ಟವಾಗುತ್ತದೆ.(ಪುಟ 71)
7)ಬ್ರಹ್ಮಾತ್ಮ ಸ್ವರೂಪವನ್ನು ತಿಳಿಸುವುದರಲ್ಲಿಯೇ ಉಪನಿಷತ್ತಿಗೆ ತಾತ್ಪಯ೯ವಿದೆ ಎಂದು ತಿಳಿಯಬೇಕು.
(ಪುಟ71)
8) ಬ್ರಹ್ಮವು ಯಾವಶಬ್ದಕ್ಕೂ ಗೋಚರವಲ್ಲವೆಂಬುದೇ
ಸಿದ್ಧಾಂತವು(ಪುತ 73)
೯)ಬ್ರಹ್ಮ -ಆತ್ಮ ಮುಂತಾದ ಶಬ್ದಗಳು ಕೂಡ ಬ್ರಹ್ಮವನ್ನು ತಿಳಿಸಲಾರವು.(ಪುಟ 73)
10)ಆದರದೂ ಅಧ್ಯಾರೋಪ ಅಪವಾದ ನ್ಯಾಯದಿಂದ
ಕೆಲವು ನಾಮ, ರೂಪ, ಕಮ೯ಗಳನ್ನು ಅಧ್ಯಾರೋಪ ಮಾಡಿಯೇ
ವಿಜ್ಞಾನ,ಆನಂದ,ವಿಜ್ಞಾನ ಘನ,ಬ್ರಹ್ಮ, ಆತ್ಮ ಮೊಂತಾದ
ಮುಂತಾದ ಶಬ್ದಗಳನ್ನು ಬ್ರಹ್ಮಕ್ಕೆ
ಉಪಯೋಗಿಸಿರುತ್ತದೆ-ಎಂದು ತಿಳಿಯಬೇಕು.
ಬ್ರಹ್ಮವನ್ನು ಸತ್ಯವೆಂದು ಕರೆಯುವುದರಿಂದ ಅದು ಹುಸಿಯಲ್ಲವೆಂದು ತಿಳಿಸಿದಂತೆ ಆಗುತ್ತದೆ.
ಬ್ರಹ್ಮವನ್ನು ಜ್ಞಾನವೆಂದು ಕರೆಯುವುದರಿಂದ ಅದು ಜಡವಲ್ಲ ಎಂದು ತಿಳಿಸಿದಂತೆ ಆಗುತ್ತದೆ.
ಇದರಂತೆ ಬ್ರಹ್ಮವೆಂಬ ಶಬ್ದವು
ಅದು ಅಲ್ಪವಲ್ಲವೆಂದು ತಿಳಿಸುವುದಕ್ಕೆ ಉಪಯೋಗವಗುತ್ತದೆ.
ಅದರಲ್ಲಿ ಬೃಹತ್ವವೆಂಬ ಧಮ೯ವಿದೆ ಎಂದು ತಿಳಿಸುವುದಕ್ಕಲ್ಲ.( ಪುಟ 74)
11)ದೇಹವುಳ್ಳ ಪ್ರತ್ಯಗಾತ್ಮನನ್ನು ತಿಳಿಸುವ ಆತ್ಮ ಎಂಬ ಶಬ್ದಕ್ಕೆ ದೇಹಾದಿ ಅತೀತನಾಗಿರುವ ವಸ್ತುವನ್ನು ತಿಳಿಸುವುದಕ್ಕೆ
ಧಾತುವಿನ ಅಥ೯ವನ್ನನುಸರಿಸಿ ತಿಳಿಸಲಾಗುತ್ತದೆ.ವ್ಯಾಪಿಸಿಕೊಂಡಿರುವುದು,ಎಲ್ಲವನ್ನೂ ತೆಗೆದುಕೊಳ್ಳುವುದು, ಎಲ್ಲವನ್ನೂ ತಿನ್ನುವುದು ಅಥವಾ ಸಂಹರಿಸುವುದು,ಸಂತತವಾಗಿರುವುದು ಎಂಬುದು ಆತ್ಮ ಶಬ್ದದ ಅಥ೯ವು.(ಪುಟ 74)
12) ಬ್ರಹ್ಮವು ಪದವಾಚ್ಯ ವಲ್ಲದಿದ್ದರೂ
ಅಧ್ಯಾರೋಪದಿಂದ
ಬ್ರಹ್ಮವನ್ನು ಕೆಲವು ಶಬ್ದಗಳು ತಿಳಿಸಬಹುದಾಗಿವೆ.ಆದ್ದರಿಂದ ಬ್ರಹ್ಮವು ವಾಚ್ಯವಲ್ಲದಿದ್ದರೆ
ಬ್ರಹ್ಮವಾಕ್ಯವಿರಲಾರದು
ಎಂಬ ಶಕೆಗೆ ಕಾರಣವಿಲ್ಲ.(ಪುಟ 74)
13)ಬ್ರಹ್ಮವಾಕ್ಯಗಳು ಮುಖ್ಯವಾಗಿ ಎರಡು ವಿಧವಾಗಿರುತ್ತವೆ.'ಸತ್ಯಂ ಜ್ಞಾನಮನಂತಂ ಬ್ರಹ್ಮ'ಮುಂತಾದ ಕೆಲವು ವಾಕ್ಯಗಳು
ಲಕ್ಷನವಾಕ್ಯಗಳು. ಎಂದರೆ ಬ್ರಹ್ಮದ ಸ್ವರೂಪವನ್ನು ತಿಳಿಸುವ
ವಾಕ್ಯಗಳು.'ತತ್ವಮಸಿ'ಮುಂತಾದ ವಾಕ್ಯಗಳು
ನಮ್ಮಗಳ ಆತ್ಮನು ಪರಮಾಥ೯ವಾಗಿ ಬ್ರಹ್ಮವೇ ಎಂದು ತಿಳಿಸುವವು.(ಪುಟ 75)
ಅಧ್ಯಾಯ 10. ವಾಕ್ಯಜನ್ಯ ಜ್ಞಾನ:
1)ಕಮ೯ಕಾಂಡದ ವಾಕ್ಯಗಳು -ವ್ಯಕ್ತಿ ಅಧೀನ-ಅಭ್ಯುದಯವನ್ನು ಕೊಡುವ ಧಮ೯ವನ್ನು ತಿಳಿಸುತ್ತವೆ.
ಜ್ಞಾನಕಾಂಡದ ವಾಕ್ಯಗಳು- ವಸ್ತು ಅಧೀನ-ಬ್ರಹ್ಮವನ್ನು ತಿಳಿಸುತ್ತವೆ.(ಪುಟ 81)
2)ಬ್ರಹ್ಮಜ್ಞಾನವಾದ ಬಳಿಕ ಮತ್ತೇನೂ ಮಾಡಬೇಕಾದ್ದಿರುವುದಿಲ್ಲ.ಆ ಜ್ಞಾನವು ಬಂದಕೂಡಲೇ
ನಾನು ಕತೃ೯ ಭೋಕ್ತøವಲ್ಲದ
ಸವಾ೯ತ್ಮನು ಎಂಬ ಅರಿವು ಉಂಟಾಗುತ್ತದೆ.(ಪುಟ 81)
3)ಉಪಾಸನಾ ವಾಕ್ಯಗಳು ಉಪಾಸನಾ ಪರವಾಗಿರುವುದರಿಂದ
ಅವು ಬ್ರಹ್ಮ ಸ್ವರೂಪವನ್ನು ನಿಧ೯ರಿಸುವುದಕ್ಕೆ
ಮುಖ್ಯ ಪ್ರಮಾನವಾಗಲಾರವು.(ಪುಟ 82)
4) ವಾಕ್ಯ ಶ್ರವಣ ಮಾತ್ರದಿಂದ ಯಾರಿಗೂ
ಜ್ಞಾನವಾಗುವುದಕ್ಕೆ ಅವಕಾಶವಿಲ್ಲ.ಏಕೆಂದರೆ ವೇದಾಂತವನ್ನು ಶ್ರವಣ ಮಾಡಿದರೂ
ಜ್ಞಾನವಾಗದೆ ಇರುವವರು
ಬಹಳ ಜನರಿದ್ದಾರೆಂದು ಶ್ರುತಿಯಲ್ಲಿಯೇ ಹೇಳಿದೆ.(ಕ.1-2-7) (ಪುಟ 83)
5)ಉಪನಿಷತ್ತುಗಳಲ್ಲಿ ಮಾತ್ರವೇ ಕಂಡುಬರುವ
ಪರಮಾತ್ಮ ವಿಜ್ಞಾನವು
ಕಮ೯ಕ್ಕೆ ಶೇಷವಾಗಿರಲಾರದೆಂದು
ಮೊದಲೇ ಹೇಳಿದೆ(ಪುಟ 86)
6)ವೇದಾಂತ ವಾಕ್ಯದಿಂದ
ನಾನೇ ಎಂಬ ಜ್ಞಾನವು
ಅಪರೋಕ್ಷವಾಗಿಯೇ ಉಂಟಾಗಬಹುದಾಗಿದೆ.(ಪುಟ 88)
7) ಆತ್ಮನು ಪ್ರತ್ಯಕ್ಷ ಗೋಚರವಲ್ಲ.(ಪುಟ 88)
8)ದಶಮನ ಜ್ಞಾನದಂತೆ ಆತ್ಮನ ಜ್ಞಾನವು
ಹೊಸದಾಗಿ ಉಂಟಾಗುವುದೆಂಬುದೂ ಸರಿಯಲ್ಲ,(ಪುಟ ೯1)
೯)ಜ್ಞಾನಕಾಂಡದಲ್ಲಿ ಕಂಡುಬರುವ
ಬ್ರಹ್ಮವಾಕ್ಯದಿಂದುಂಟಾಗುವ ಜ್ಞಾನವು
ಯಾವಬಗೆಯಿಂದಲೂ ವಿಧೇಯವಲ್ಲ ಎಂಬುದೇ ಶಾಂಕರ ವೇದಾಂತದ ಸಿದ್ಧಾಂತವು.(ಪುಟ ೯2)
10) ವಾಕ್ಯದಿಂದ ಬ್ರಹ್ಮಜ್ಞಾನವಾದ ಬಳಿಕ
ಯಾವ ಆಕಾಂಕ್ಷೆಯೂ ಉಂಟಾಗುವುದಿಲ್ಲ.ಮಾಡಬೇಕಾದ್ದೂ ಉಳಿದಿರುವುದಿಲ್ಲ.ಏಕೆಂದರೆ
ಆಜ್ಞಾನದಿಂದ ಅಬ್ರಹ್ಮತ್ವ ,ಅನಾತ್ಮತ್ವ
ಎರಡೂ ಹೋಗಿಬಿಡುತ್ತವೆ.(ಪುಟ ೯2)
11)ಉಪಾಸನೆ -ಪುರುಷತಂತ್ರ
ಜ್ಞಾನ-ವಸ್ತು ತಂತ್ರ.ಎಂದರೆ ಪ್ರಮಾಣದಿಂದ
ವಸ್ತುವಿದ್ದಂತೆ
ಆಗತಕ್ಕ ಅರಿವಾಗಿದೆ.(ಪುಟ ೯3)
No comments:
Post a Comment