Friday, 12 June 2020

'shaankara vedantha saara' part 3

ಅಧ್ಯಾಯ 11 ಸಾಕ್ಷಿ:

1) ಮೀಮಾಂಸಕರು  ಹಾಗೂ ತಾಕಿ೯ಕರು  ಆತ್ಮನು 'ಅಹಂಪ್ರತ್ಯಯಗಮ್ಯನು'ಎಂದೇ ವಾದಿಸುತ್ತಾರೆ.ಆದರೆ ನಾನು ಎಂಬ ಅರಿವು ಉಂಟಾಗುತ್ತಿದ್ದರೂ  ಚಾವಾ೯ಕರೂ  ಬೌದ್ಧರೂ  ದೇಹಾದಿಗಳಿಗಿಂತ  ಬೇರೆಯಾದ ಆತ್ಮನನ್ನು ಒಪ್ಪುವುದಿಲ್ಲ.(ಪುಟ 4)

2)ವೇದಾಂತವಚನಗಳು ಪರಮಾತ್ಮನ ಸ್ವರೂಪವನ್ನು  ತಿಳಿಸುವುದರಲ್ಲಿಯೇ  ಸಮನ್ವಯವಾಗಿರುತ್ತವೆ.(ಪುಟ 5)

3)ಚೈತನ್ಯದಿಂದೊಡಗುಡಿದ  ದೇಹಕ್ಕಿಂತ ಬೇರೆಯಾದ ಆತ್ಮನಿಲ್ಲ  ಎಂದು ಲೋಕಾಯತಿಕರು(ಚಾವಾ೯ಕರು) ಹೇಳುತ್ತಾರೆ.(ಪುಟ 5)

4) ದೇಹಕ್ಕಂತ ಬೇರೆಯಾದ  ವಿಜ್ಞಾನವೊಂದಿದೆಯೆಂದೂ  ಅದು ತನ್ನನ್ನು ತಾನೇ ಅರಿಯುವುದೆಂದೂ
 ಅದೇ ಆತ್ಮನೆಂದೂ  ವಿಜ್ಞಾನವಾದಿಗಳಾದ ಬೌದ್ಧರು ಹೇಳುತ್ತಾರೆ.(ಪುಟ 5)

5)ಸೂಯ೯ನು ಎಲ್ಲವನ್ನೂ ನೇರಾಗಿ ಬೆಳಗುವಂತೆ  ಸಾಕ್ಷಿಯಾದ ಅತ್ಮನು  ಎಲ್ಲವನ್ನೂ ಅರಿಯುತ್ತಾನೆ.(ಪುಟ ೯೯)

6) ಸಾಕ್ಷಿಯು ಸ್ವಯಂಸಿದ್ಧ(ಪುಟ107)

7)ಸಾಕ್ಷಿಯನ್ನು  ಪ್ರಮಾಣದಿಂದಾಗಲೀ ತಕ೯ದಿಂದಾಗಲೀ  ಸಾಧಿಸುವುದಕ್ಕಾಗಲೀ ನಿರಾಕರಿಸುವುದಕ್ಕಗಲಿ ಹೊರಡುವವನೇ  ಪ್ರಮಾಣತಕ೯ಗಳಿಗೂ  ಸಾಕ್ಷಿಯಾಗಿರುವುದರಿಂದ ಅವನನ್ನು ಇಲ್ಲವೆನ್ನುವುದು  ಯಾರಿಂದಲೂ ಆಗಲಾರದೆಂಬುದೇ  ಸರಿಯಾದ ಸಿದ್ಧಾಂವು.(ಪುಟ 107)

ಅಧ್ಯಾಯ 12 ಆತ್ಮನಿಗೆ ಜಗತ್ಕಾರಣತ್ವ:

1)ಮಣ್ಣಿನಿಂದ ಹುಟ್ಟಿ ಮಣ್ಣಿÂ ಲ್ಲಿಯೇ ಇದ್ದು  ಮಣ್ಣಿನಲ್ಲೇ ಲಯವಾಗುವ ಗಡಿಗೆ,ಮಡಕೆ,ಕುಡ್ಇಕೆ ಮುಂತಾದುವುಗಳು  ಮಣಿÂ್ಣಗಿಂತ ಬೇರೆಯಾಗಿರುವುದಿಲ್ಲ.ಅದರಂತೆ ಬ್ರಹ್ಮದಲ್ಲಿಯೇ ಹಟ್ಟಿ,ಬ್ರಹ್ಮದಲ್ಲಿಯೇೀ ಇದ್ದು,  ಬ್ರಹ್ಮದಲ್ಲಿಯೇ ಲಯವಾಗುವ ಜಗತ್ತು  ಬ್ರಹ್ಮಕ್ಕಿಂತ ಬೇರೆಯಾಗಿರುವುದಿಲ್ಲ.
(ಪುಟ 10)

2)ಅಚೇತನ ವಾದದ್ದು ಯಾವುದೂ  ಕಾರಣವಲ್ಲವೆಂದು ತಿಳಿಯಪಡಿಸುವುದಕ್ಕಾಗಿ  ಜಗತ್ಕಾರನವನ್ನು ಉಪದೇಶಿಸಿದೆಯೇ ಹೊರತು  ಬ್ರಹ್ಮವು ನಿಜವಾಗಿ ಕಾಯ೯ಕಾರಣ ಭಾವವುಳ್ಳದ್ದು  ಎಂಬ ಅಭಿಪ್ರಾಯದಿಂದಲ್ಲ.(ಪುಟ 110)

3)ಏಕೆಂದರೆ ಚೇತನನಾದ ಕುಂಬಾರನು  ಗಡಿಗೆಗೆ ನಿಮಿತ್ತಕಾರಣನಾಗಿರುತ್ತಾನೆಯೇ ಹೊರತು  ಮಣ್ಣಿನಂತೆ ಉಪಾದಾನ ಕಾರಣನಾಗಿರುವುದಿಲ್ಲ.(ಪುಟ 111)

4) ಏಕೆಂದರೆ ಎಲ್ಲವೂ ಬ್ರಹ್ಮದಿಂದ ಉಂಟಾಗಿದೆ  ಎಂಬುದೇ ವೇದಾಂತಿಗಳ ಮತವು.(ಪುಟ 114)

5)ಬ್ರಹ್ಮದಿಂದ ಎಲ್ಲವೂ ಹುಟ್ಟಿದರೆ  ಚೇತನ ಮತ್ತು ಅಚೇತನ ಎಂಬ ವಿಭಾಗವೇಕೆ?ಎಂದು ಪ್ರತಿವಾದಿಯು ಕೇಳಬಹುದು.ಅಚೇತನ ವಸ್ತುಗಳಲ್ಲಿ  ಚೈತನ್ಯವು ಕಾಣದೆ ಇರುವುದರಿಂದ  ಅವನ್ನು ಅಚೇತನವೆಂದು ವ್ಯವಹರಿಸುತ್ತಾರೆ.ಆದ್ದರಿಂದ ಚೇತನವಾದ ಬ್ರಹ್ಮದಿಂದ  ಜಗತ್ತು ಉಂಟಾಗಿದೆ ಎಂಬುದು  ತಕ೯ವಿರುದ್ಧವಲ್ಲ.(ಪುಟ 114)

6) ಶ್ರುತಿಯು  ಚೇತನವಾದ ಬ್ರಹ್ಮವು  ಚೇತನ ಅಚೇತನವಾಗಿರುವ ಜಗತ್ತಾಯಿತೆಂದು  ಹೇಳಿರುವುದರಿಂದ  ಬ್ರಹ್ಮವಾದವು ಶ್ರುತಿ ಸಮ್ಮತವಾಗಿದೆ.(ಪುಟ 114)

7)ಬ್ರಹ್ಮವು ನಿಜವಾಗಿ ಪರಿಣಾಮವಾಗುವುದೆಂಬುದು ಶ್ರುತಿ ಸ್ಮøತಿ  ವಿರುದ್ದವಾಗಿದೆ(ಪುಟ 116)

ಅಧ್ಯಾಯ  13 ಸತ್ಕಾಯ೯ವಾದ:

1) ಬ್ರಹ್ಮಕ್ಕೂ ಜಗತ್ತಿಗೂ ಕಾಯ೯ಕಾರಣ ಭಾವವನ್ನು ಹೇಳಿರುವುದು ಸದ್ರೂಪವಾದ ಬ್ರಹ್ಮವೊಂದೇ ಸತ್ಯವೆಂದೂ ಅದರಲ್ಲಿ ಕಾಯ೯ವಾದ ಜಗತ್ತು ಇಲ್ಲವೇ ಇಲ್ಲವೆಂದು ತಿಳಿಸುವುದಕ್ಕೆ .(ಪುಟ 118)

2)ಆದ್ದರಿಂದ ವೇದಾಂತಿಗಳು ಹೇಳುವ ಬ್ರಹ್ಮಕಾರಣವಾದವು ಕಾಯ೯ಕಾರಣವಾದವನ್ನು ಗಟ್ಟಿಗೊಳಿಸುವುದಕ್ಕಲ್ಲ,ಇತರವಾದಿಗಳು  ಹೇಳುವ ಸತ್ಕಾಯ೯ವಾದ ಅಸತ್ಕಾಯ೯ವಾದ -ಮುಂತಾದ ವಾದಗಳನ್ನು ತಳ್ಳಿಹಾಕುವುದಕ್ಕೆ ಎಂದು ತಿಳಿಯಬೇಕು.(ಪುಟ 118)

3)ವೇದಾಂತಿಗಳು ಅಜಾತಿವಾದವನ್ನು  ಎಂದರೆ ಬ್ರಹ್ಮವೊಂದೇ ಪರಮಾಥ೯ವಾಗಿರುತ್ತದೆ ,ಅದು ಅವಿಕಾರಿ, ಅದರಲ್ಲಿ ನಿಜವಾದ ಕಯ೯ಕಾರಣ ಭಾವವಿಲ್ಲ  ಎಂಬ ವಾದವನ್ನು ಮಂದಮಧ್ಯಮಾಧಿಕಾರಿಗಳಿಗೆಕ್ರಮ ಕ್ರಮವಾಗಿ ತಿಳಿಸುವುದಕ್ಕಾಗಿ  ಒಪ್ಪಿರುವ  ಕಾಯ೯ಕಾರಣವಾದಕ್ಕೂ ಸತ್ಕಾಯ೯ವಾದವೆಂದೇ ಹೆಸರು. (ಪುಟ 11)

3) ಸಾಂಖ್ಯರು -ಸತ್ಕಾಯ೯ವಾದ, ವೈಶೇಷಿಕರೂ  ಬೌದ್ಧರೂ  ಒಪ್ಪಿರುವ  ಅಸತ್ಕಾಯ೯ವದವನ್ನೂ ತಳ್ಳಿಹಾಕುವುದಕ್ಕಾಗಿ  ಸತ್ಕಾಯ೯ವಾದವನ್ನು  ವೇದಾಂತಿಗಳು ಅಂಗೀಕರಿಸಿರುತ್ತಾರೆ.(ಪುಟ 120)

4)'ಸದ್ರೂಪವಾದ  ಬ್ರಹ್ಮವೊಂದೇ ಮಾಯಿಕವಾಗಿ  ಉತ್ಪತ್ಯಾದಿಗಳನ್ನು ಪಡೆಯುವಂತೆ ತೋರುತ್ತದೆ.'         
ಎಂಬ ವಾದವೇ ನಿಜವಾದ ಸತ್ಕಾಯ೯ವಾದ.(ಪುಟ 120)

5) ಆದ್ದರಿಂದ ಪರಮಾಥ೯  ತತ್ವವು  ಹುಟ್ಟುವುದಲ್ಲ ,ಅದು ಅದ್ವಿತೀಯವೇ ಎಂಬುದೇ ವೇದಾಂತಿಗಳ ಮತ(ಪುಟ 120)

6)ಸಾಂಖ್ಯರೂ  ವೈಶೇಷಿಕರೂ  ಒಬ್ಬರೊಡನೊಬ್ಬರು ಮಾಡುತ್ತಿರುವ ವಿವಾದದಿಂದಲೆ  ಅಜಾತಿವಾದವು ಸಿದ್ಧವಾಗುತ್ತದೆ.(ಪುಟ120)

7)ಸಂಖ್ಯರ ಸತ್ಕಾಯ೯ವಾದವು ಎಲ್ಲಾ ಬಗೆಯಿಂದಲೂ  ತಕ೯ವಿರುದ್ಧವಾಗಿರುತ್ತದೆ.(121)

8)ಬೌದ್ಧರ ಅಸತ್ಕಾಯ೯ವಾದ:ಬೀಜವು ಒಡೆದುಕೊಂಡು ತಾನು ಇಲ್ಲವಾದ ಮೇಲೆಯೇ  ಅಲ್ಲವೆ ಮೊಳಕೆಯಾಗುತ್ತದೆ.ಇದರಂತೆ ಪ್ರತಿಯೊಂದು ಕಾರಣವೂ  ಇಲ್ಲವಾದ ಮೇಲೆಯೇ  ಕಾಯ೯ವು ಉಂಟಾಗುವುದರಿಂದ ಅಭಾವವೇ ಕಾರಣ ಎನ್ನಬೇಕು-ಎಂಬುದು ಅವರ ವಾದವು. ವಾದವು ಸರಿಯಲ್ಲ.(ಪುಟ 123)

)ಆತ್ಮಭಿನ್ನವಾದದ್ದೆಲ್ಲವೂ  ತನ್ನ ರೂಪದಿಂದ ಅನೃತವು,ಆತ್ಮರೂಪದಿಂದ ಸತ್ತೇ ಎಂಬುದು ವೇದಾಂತ ಸಿದ್ಧಾಂತವು.(ಪುಟ132)

10)ಏಕೆಂದರೆ ಮಾಯಿಕವಾದ ಉಂಟಾಗುವ  ಜಗತ್ತಿಗೆ ಸತ್ತಿನಲ್ಲಿ ಭ್ರಾಂತಿ ಬುದ್ಧಿಕಲ್ಪಿತವಾದ  ಅವಯವಗಳೇ ಸಾಕಾಗಿರುತ್ತವೆ.(ಪುಟ 132)

            ಅಧ್ಯಾಯ 14 ಮಾಯೆ:

1)ಬ್ರಹ್ಮವೊಂದೇ  ಪರಮಾಥ೯ತತ್ವವೆಂಬುದನ್ನು  ಮಂದ ಮಧ್ಯಮಾದಿಕಾರಿಗಳಿಗೆ ತಿಳಿಸುವುದಕ್ಕೋಸ್ಕರ
 ಜಗತ್ತು ಬ್ರಹ್ಮದಿಂದ ಮಾಯಿಕವಾಗಿ ಹುಟ್ಟುತ್ತದೆ ಎಂಬ  ಸತ್ಕಾಯ೯ವಾದವನ್ನು  ವೇದಾಂತದಲ್ಲಿ ಅಂಗೀಕರಿಸಿದೆಯಷ್ಟೆ.(ಪುಟ 134)

2)ಬ್ರಹ್ಮವನ್ನು ಜಗತ್ತಿನ ಅಪೇಕ್ಷೆಯಿಂದ  ಈಶ್ವರನೆಂದು ಕರೆಯುತ್ತಾರೆ.(ಪುಟ 134)

3)ಅವಿದ್ಯೆಯಿಂದ ಕಲ್ಪಿತವಾಗಿರುವ ನಾಮರೂಪ  ಬೀಜವೇ  ಮಾಯೆಯು.(ಪುಟ 134)

4)ಇದು ಪ್ರಲಯಕಾಲದಲ್ಲಿ  ಸೃಷ್ಟಿಯಾಗುವುದಕ್ಕೆ ಮುಂಚೆ ಅವ್ಯಾಕೃತವಾಗಿ ಬಿಡಿ ಬಿಡಿಯಾಗಿ ತೋರದೆ ಇರುತ್ತದೆ. ಅವ್ಯಾಕೃತವೇ ಪರಮಾತ್ಮನು ಜಗತ್ತನ್ನು ಸೃಷ್ಟಿಸುವುದಕ್ಕೆ  ಕಾರಣವಾಗಿರುವುದರಿಂದ  ಇದನ್ನು ಈಶ್ವರನ ಶಕ್ತಿಯೆಂದೂ  ಪ್ರಕೃತಿ ಎಂದೂ ಕರೆಯುವರು.ಜಗತ್ತು ಈಗ ನಾಮರೂಪಗಳಿಂದ ಬಿಡಿ ಬಿಡಿಯಾಗಿ ತೋರುತ್ತಿದೆ.ಇದು ವ್ಯಾಕೃತ ಜಗತ್ತು.(ಪುಟ 134)

5)ಆತ್ಮನು ಜಗದ್ರೂಪವಾಗಿ ಪರಿಣಮಿಸುವನೆಂದು ಹೇಳಿದರೂ  ಅವನು ಪರಮಾಥ೯ವಾಗಿ  ಸವ೯ವ್ಯವಹಾರಾತೀತನಾಗಿ  ಕೂಟಸ್ಥನೇ ಆಗಿರುತ್ತಾನೆ.(ಪುಟ 135)

6)ನಾಮರೂಪಗಳು  ಅವ್ಯಾಕೃತವಾಗಿದ್ದು ವ್ಯಾಕೃತವಾಗುವವೆಂದರೆ ಅವು ಬ್ರಹ್ಮಕ್ಕಿಂತ ಬೇರೆಯಾಗಿರುದೆಂದೇನೂ ಅಥ೯ವಲ್ಲ.(ಪುಟ 135)

7)ಅವ್ಯಾಕೃತ ನಾಮರೂಪಗಳು  ಆತ್ಮಸ್ವರೂಪವನ್ನು ಇಟ್ಟುಕೊಂಡೇ  ವ್ಯಾಕೃತವಾಗುತ್ತವೆ.ನಾಮರೂಪಗಳಿಗೆ ಬ್ರಹ್ಮವೇ ಸ್ವರೂಪವು.ಬ್ರಹ್ಮಕ್ಕೆ ನಾಮರೂಪಗಳು ಸ್ವರೂಪವಲ್ಲ.ಈಗಲೂ ಎಲ್ಲಾ ಕಡೆಯಲ್ಲೂ ಆತ್ಮನೇ ಇರುತ್ತಾನೆಂದು ಶೃತಿಯುಹೇಳುವುದಕ್ಕೆ ಅದೇ ಕಾರಣ.ಅವನಿಗಿಂತ  ಬೇರೆಯಾದ ಅನಾತ್ಮವೆಂಬುದು ಇಲ್ಲವೇ ಇಲ್ಲ.(ಪುಟ 136)   

8)ಪ್ರಧಾನವು  ಅಚೇತನವಾಗಿದ್ದರೂ  ತಾನೇ ಸ್ವತಂತ್ರವಾಗಿ ಜಗತ್ತಾಗಿ  ಪರಿಣಮಿಸುವುದೆಂದು  ಕಕ೯ ವಿರುದ್ಧವಾಗಿ ಸಾಂಖ್ಯರು ಹೇಳುತ್ತಾರೆ.(ಪುಟ 137)

)ಕಾಯ೯ವಾದ ಜಗತ್ತು ಈಶ್ವರನ ಶಕ್ತಿಗಿಂತ ಬೇರೆಯಲ್ಲ. ಶಕ್ತಿಯು ಕಾರಣವಾದ ಜಗತ್ತಿಗಿಂತ ಬೇರೆಯಲ್ಲ.(ಪುಟ 137)

10)ವ್ಯಕೃತವಾಗಿರುವ ಜಗತ್ತೆಂಬ ಕಾಯ೯ವೂ  ಅದಕ್ಕೆ ಕಾರಣವಾಗಿರುವ ಅವ್ಯಾಕೃತವೆಂಬ ಮಾಯೆಯೂ
ಅವಿದ್ಯಾ ಕಲ್ಪಿತವಾಗಿವೆ ಎಂಬುದನ್ನು ಮನಗಾಣಬೇಕು.(138)

12)ಮಾಯೆ ,ಅವಿದ್ಯೆ -ಇವುಗಳು  ಅಧ್ಯಾರೋಪ ಅಪವಾದ ನ್ಯಾಯದಿಂದ  ಕಲ್ಪಿಸಿರುವ ಪದಾಥ೯ಗಳೇ ಹೊರತು   ಪರಮಾಥ೯ವಲ್ಲ ಎಂಬುದನ್ನು ಮರೆತದ್ದರಿಂದ  ಹೊರ ತೋರಿಕೊಳ್ಳುತ್ತದೆ.(ಪುಟ 13)

13)ಆದ್ದರಿಂದ ದ್ವೈತ ಪ್ರಪಂಚವು ನಿಜವಾಗಿದ್ದುಕೊಂಡು  ಅದ್ವೈತ ಜ್ಞಾನವಾದ ಬಳಿಕ  ನಿವೃತ್ತವಾಗುವುದಿಲ್ಲ.ಹಗ್ಗದಲ್ಲಿ ಹಾವು ಎಂದಿಗೂ ಇರುವುದೇ ಇಲ್ಲ.ಆದರೂ ಅದು ಜ್ಞಾನದಿಂದ ಹೋಗುತ್ತದೆ.(ಪುಟ 140)

14) "ಇಂದ್ರೋ ಮಾಯಾಭಿಃ  ಪ್ರುರೂಪ ಈಯತೇ" ಎಂದರೆ ಇಂದ್ರನು  ಬಹುರೂಪಗಳಗಿಂದ ಬಹುರೂಪನಾಗಿ ಕಾಣುತ್ತಾನೆ.ಮಾಯೆ ಎಂದರೆ ಇಂದ್ರಿಯಗಳಿಂದಾದ ಅರಿವು ಎಂದಥ೯. ಇಂದ್ರಿಯಗಳ ಅರಿವು ಅವಿದ್ಯಾರೂಪವಾಗಿರುವುದರಿಂದ  ಮಾಯೆಗಳಿಂದ ಇಂದ್ರನು ಬಹುರೂಪವಾಗಿ ಕಾಣುತ್ತಾನೆ.ಸರಿಯಾದ ದೃಷ್ಟಿಯಿಂದ ನೋಡಿದರೆ  ಒಬ್ಬನೇ ಆಗಿರುತ್ತಾನೆ-ಎಂದಥ೯.(ಪುಟ 141)

15)ಅದ್ದರಿಂದ  ಪ್ರಪಂಚವು ಮಾಯಿಕವಾಗಿದೆ.ಕನಸು ,ಇಂದ್ರಜಾಲ,ಗಂಧವ೯ನಗರ  ಮುಂತಾದವುಗಳಂತೆ ಹುಸಿತೋರಿಕೆ ಎಂಬ ಅದ್ವೈತವೇ  ವೇದಾಂತ ಸಿದ್ಧಾಂತವೆಂದು ಹೇಳುವುದಕ್ಕೆ  ಯಾವ ಅಡೆಇಯೂ ಇರುವುದಿಲ್ಲ.(ಪುಟ 141)

ಅಧ್ಯಾಯ 15 ಬ್ರಹ್ಮವು ಜಗತ್ತಿಗೆ ನಿಮಿತ್ತಕಾರಣವೂ ಆಗಿದೆ:

1)ಸಾಂಖ್ಯರು-ಪ್ರಧಾನವೇ ಜಗತ್ಕಾರಣ
 ವೈಶೇಷಿಕರು - ಪರಮಾಣುಗಳೇ ಜಗತ್ಕಾರಣ
ಅದ್ವೈತ ವೇದಾಂತ-ಬ್ರಹ್ಮವು ಜಗತ್ಕಾರಣ (ಪುಟ 142)

2) ಬ್ರಹ್ಮವು ಜಗತ್ತಿಗೆ ಉಪಾದಾನ ಕಾರಣ ಹಾಗೂ ನಿಮಿತ್ತಕಾರಣವೂ ಆಗಿದೆ.(144)

3)ಒಂದು ಮಣ್ಣಿನ ಮುದ್ದೆಯನ್ನು ಅರಿತುಕೊಂಡರೆ  ಮಣ್ಣಿನ ಕಾಯ೯ವೆಲ್ಲವನ್ನೂ ಅರಿತುಕೊಂಡಂತೆ  ಹೇಗೆ ಆಗುವುದೋ  ಎಂದು ಉಪಾದಾನಕಾರಣವನ್ನೇ ಶ್ರುತಿಯಲ್ಲಿ  ದೃಷ್ಟಾಂತವಾಗಿ  ಉದಾಹರಿಸಿರುತ್ತದೆ.ಆದ್ದರಿಂದಲೂ  ಬ್ರಹ್ಮವು ಜಗತ್ತಿಗೆ  ಉಪಾದಾನವೂ ಆಗಿದೆ  ಎಂಬುದು ಅದ್ವೈತ ವೇದಾಂತಿಗಳ ಅಭಿಪ್ರಾಯ.(ಪುಟ 144)

4)ಬ್ರಹ್ಮವು ಜಗತ್ಕತø೯ವಾದರೆ ಅದಕ್ಕೆ ಕುಂಬಾರನೇ ಮುಂತಾದ  ಕತೃ೯ಗಳಂತೆ ಅನೇಕ ಕಾರಕಗಳು
ಸೃಷ್ಟಿಗೆ ಬೇಕಾಗುತ್ತವೆ.ಕುಂಬಾರ ನೇಕಾರ  ಮುಂತಾದವರು ಗಡಿಗೆ ಬಟ್ಟೆ ಮುಂತಾದ ಕಾಯ೯ಗಳನ್ನು ಮಾಡುವುದಕ್ಕೆ  ಮಣ್ಣು ಕೋಲು ತಿಗರಿ ನೂಲು ಇತ್ಯಾದಿ ಗಳನ್ನು ಬಯಸುವುದು ಕಂಡಿದೆ.ಅದ್ವಿತೀಯನಾದ  ಬ್ರಹ್ಮಕ್ಕೆ ಯಾವ ಕಾರಕವೂ ಇಲ್ಲದ್ದರಿಂದ ಅದು ಹೇಗೆ ಜಗತ್ಕಾರಣವಾದೀತು ಎಂದು ಆಕ್ಷೇಪಿಸಬಹುದು(ಪುಟ 147)

5)ಪರಮಾತ್ಮನು ಜಗತ್ತನ್ನು ಸೃಷ್ಟಿಸಿ  ಅದರಲ್ಲಿ ತಾನೇ ಜೀವರೂಪದಿಂದ  ಹೊಕ್ಕನು ಎಂದು ಶೃತಿಯಲ್ಲಿದೆ(ಪುಟ 14)

6)ಜೀವರ ಸುಖದುಃಖಾದಿ ವೈಷಮ್ಯಕ್ಕೆ  ಅವರವರ ಕಮ೯ವೇಕಾರಣ(ಪುಟ 151)

7)ಬ್ರಹ್ಮವು ಚೈತನ್ಯ ಮಾತ್ರವಾಗಿದ್ದು  ಸವ೯ಕ್ಕೂ ಸಾಕ್ಷಿಯಾಗಿದೆ.(ಪುಟ 152)

8)ಸೃಷ್ಟಿಯು ಕೇವಲ ಭಗವಂತನ ಲೀಲೆಯಾಗಿದೆ.(ಪುಟ 151)

) ಅವಿದ್ಯಾಕಲ್ಪಿತವಾದ  ನಾಮರೂಪಗಳ ವ್ಯವಹಾರದ ವಿಷಯವೇ ಸೃಷ್ಟಿ(ಪುಟ 152)

ಅಧ್ಯಾಯ 16 ಸೃಷ್ಟಿ ಶ್ರುತಿಗಳು:

1)ಕಾಯ೯ಕಾರನವಾದ,ಸತ್ಕಾಯ೯ವಾದ,ಮಾಯಾವಾದ  ಇವೆಲ್ಲವೂ ಅಧ್ಯಾರೋಪ ಅಪವಾದ ನ್ಯಾಯದಿಂದ  ಆತ್ಮೈಕತ್ವವನ್ನು ತಿಳಿಸುವುದಕ್ಕೆ ಉಪಾಯವಾಗಿಯೇ ಶ್ರುತಿಯಲ್ಲಿ ಅಂಗೀಕೃತವಾಗಿವೆ-ಎಂದು ತಿಳಿಸಿದೆ.(ಪುಟ 153)

2) ಬ್ರಹ್ಮದಲ್ಲಿ ದ್ವೈತವು  ಪರಮಾಥ೯ವಾಗಿ ಇಲ್ಲವೇ ಇಲ್ಲ ,ಮಾಯಿಕವೇ -ಎಂದು ಶ್ರುತಿ ಯುಕ್ತಿಗಳ ಸಹಾಯದಿಂ ಸಾಧಿಸಿದ್ದಾಯಿತು(ಪು 153)

3)ತತ್ಸøಷ್ಟ್ವಾ|ತದೇವಾನು ಪ್ರಾವಿಶತ್(ತೈ2-6) ಪರಮಾತ್ನು ಜಗತ್ತನ್ನು ಸೃಷ್ಟಿಸಿ ತಾನೇ ಪ್ರವೇಶಿಸಿದನು(ಪುಟ 154)

4)ಕಾಯ೯ವು ಕಾರಣಕ್ಕಿಂತ ಅನನ್ಯ ಎಂಬ ನ್ಯಾಯವನ್ನು ಉಪಯೋಗಿಸಿಕೊಂಡು ಆತ್ಮೈಕ್ಯತ್ವವನ್ನು ತಿಳಿಸುವುದಕ್ಕೆ  ಮಣ್ಣು,ಕಬ್ಬಿಣ,ಕಿಡಿ ಮುಂತಾದ  ದೃಷ್ಟಾಂತಗಳಿಂದ  ಶ್ರುತಿಯು ಸೃಷ್ಟಿಯನ್ನು ತಿಳಿಸುತ್ತದೆ.(ಪುಟ 154)

5)ಸೃಷ್ಟಿಯು ಸವ೯ಥಾ ಇಲ್ಲವಾದರೆ  ಶ್ರುತಿಯಲ್ಲಿ ಅಷ್ಟು  ವಿಸ್ತಾರವಾಗಿ  ಸೃಷ್ಟಿಯನ್ನು ಹೇಳಿದೆ?(ಪುಟ 15)

6)ಆದರೆ  ಶ್ರುತಿಯು  ಏಕತ್ವಜ್ಞಾನಕ್ಕಾಗಿಯೇ ಸೃಷ್ಟಿಯನ್ನು ಹೇಳಿದೆ(ಪುಟ 15)

ಅಧ್ಯಾಯ 17  ಸಾಮಾನ್ಯ ವಿಶೇಷಭಾವ:

1)ಬ್ರಹ್ಮಕ್ಕೂ ಜಗತ್ತಿಗೂ  ಕಾಯ೯ಕಾರಣಭಾವವನ್ನು ಒಪ್ಪಿ  ಬ್ರಹ್ಮದಿಂದ  ಜಗತ್ತಿನ ಸೃಷ್ಟಿ ಸ್ಥಿತಿ ಲಯಗಳಾಗುವುದೆಂದು  ಹೇಳಿರುವುದು ಬ್ರಹ್ಮಕ್ಕಿಂತ ಜಗತ್ತು ಬೇರೆಯಾಗಿ  ಇಲ್ಲವೆಂದು ತಿಳಿಹೇಳುವುದಕ್ಕೇ ಹೊರತು  ಕಾಯ೯ಕಾರಣ ಭಾವವು  ಸತ್ಯವೆಂದು ಪ್ರತಿಪಾದಿಸುವುದಕ್ಕಲ್ಲ.(ಪುಟ 161)

2)ತಾಕಿ೯ಕರು  1)ದ್ರವ್ಯ 2) ಗುಣ 3)ಕಮ೯ 4) ಸಾಮಾನ್ಯ 5) ವಿಶೇಷ 6) ಸಮವಾಯ ಎಂಬ ಆರು ಪದಾಥ೯ಗಳನ್ನು ಒಪ್ಪುತ್ತಾರೆ.
1)ದ್ರವ್ಯ-ಇವುಗಳಲ್ಲಿ ದ್ರವ್ಯತ್ವ ಎಂಬ  ಸಾನಾನ್ಯವಿದೆ.
2)ಗುಣಗಳಲ್ಲಿ ಗುಣತ್ವ ಎಂಬ ಸಾಮಾನ್ಯವಿದೆ.
3) ಕಮ೯ಗಳಲ್ಲಿ ಕಮ೯ತ್ವ ಎಂಬ ಸಾಮಾನ್ಯವಿದೆ ಎಂಬ್ದು ಅವರ ಹೇಳಿಕೆ.
ದ್ರವ್ಯಕ್ಕಿಂತ  ಕೆಳಗಿನ ಅಂತಸ್ತಿಗೆ ಸೇರಿದ  ಪೃಥಿವೀತ್ವ ಮತ್ತು  ಅಪ್ತ್ವ ಮುಂತದ ಅಪರ ಸಾಮಾನ್ಯಗಳಿರುತ್ತವೆ.(ಪುಟ 161)

3) ಆದರೆ   ದ್ರವ್ಯತ್ವ, ಗುಣತ್ವ, ಕಮ೯ತ್ವ- ಇವೆಲ್ಲಕ್ಕೂ  ವ್ಯಾಪಕವಾಗಿರುವ 'ಸತ್ತಾ'(ಇರವು) ಎಂಬ  ಮಹಾಸಾಮನ್ಯ ವಿರುತ್ತದೆ.(ಪುಟ 161)  

4)ದ್ರವ್ಯಕ್ಕಿಂತ ಬೇರೆಯಾಗಿ ಗುಣಗಳಾಗಲಿ ಸದ್ರೂಪವಾಗಿರುವ  ಆತ್ಮನಿಗಿಂತ ಬೇರಯಾಗಿ ಸತ್ತಾದಿ ಸಾಮಾನ್ಯಗಳಾಗಲಿ ಇರುವುವೆಂಬುದಕ್ಕೆ ಯಾವ ಪ್ರಮಣವೂ ಇರುವುದಿಲ್ಲ.(ಪುಟ 162)

5)ವೈಶೇಷಿಕರು ಹೇಳು ಸತ್ತಾಸಾಮಾನ್ಯಕ್ಕೂ  ವೇದಾಂತಿಗಳು ಹೇಳುವ ಸತ್ತಿಗೂ ಇರು ತಾರತಮ್ಯವೇನೆಂದರೆ  ಸತ್ತೆಂಬುದು ಸುಷುಪ್ತಿಯಲ್ಲಿಯೂ  ಪ್ರಲಯದಲ್ಲಿಯೂ ತಾನೊಂದೇ ಇರಬಹುದೆಂದು  ವೇದಾಂತಿಗಳು ಹೇಳುತ್ತಾರೆ.ಆದರೆ ವೈಶೇಷಿಕರು ಬರಿಯ ಸತ್ತನ್ನು ಯವಾಗಲೂ ಒಪ್ಪುವುದಿಲ್ಲ.(ಪುಟ 163)

6) ಜ್ಞಾನಾಭಾಸವಾದ  ವೃತ್ತಿಯನ್ನು  ಜ್ಞಾನಶಬ್ದದಿಂದ ಕರೆಯುವಂತೆಯೇ  ಸುಖಾಭಾಸವಾದ ವೃತ್ತಿಯನ್ನು  ಸುಖವೆಂದು ಜನರು ಕರೆಯುತ್ತಾರೆ(ಪುಟ 165)

7)ಆನಂದದಲ್ಲಿ ಆನಂದ ,ಆನಂದಿ ಎಂಬ ಭೇದವಿರುವುದೇ ಇಲ್ಲ. ಆತ್ಮನೇ ಆನಂದವು ಆನಂದಿಯು(ಪುಟ 165)

8)ಆತ್ಮನು  ಅಹಂ ಪ್ರತ್ಯಯ ವಿಷಯನೆಂದು  ತಿಳಿಯುವ ಮಿಥ್ಯಾಜ್ಞಾನವೇ  ಬ್ರಹ್ಮಾನಂದವು ಅನುಭವಗೋಚರವೆಂಬ ವಾದಕ್ಕೆ ಹೊಣೆ.(ಪುಟ 166)

)ಸಾರಾಂಶ: ಪ್ರಕರಣದಲ್ಲಿ ಹೇಳಿರುವ  ಸಾರವೆಲ್ಲ ಇಷ್ಟು.ಸತ್ತಾ ಸಾಮಾನ್ಯ,ಚಿತ್ಸಾಮಾನ್ಯ, ಸುಖಸಾಮಾನ್ಯ -ಎಂದು ನಮಗೆ ಲೋಕದಲ್ಲಿ ಕಾಣುವುದೆಲ್ಲಆತ್ಮ ಸ್ವರೂಪವೇ.ಸದ್ವಿಶೇಷಗಳು,ಚಿದ್ವಿಶೇಷಗಳು,,ಸುಖವಿಶೇಷಗಳು -ಎಂದು ಕಾಣುವುದು ಆಯಾ ಬುದ್ಧಿವೃತ್ತಿಯ ಸಂಬಂಧದಿಂದ.(ಪುಟ 168)

ಅಧ್ಯಾಯ 18. ಜೀವೇಶ್ವರ ವಿಭಾಗ: 
1) ಈಶ್ವರನು ವಿವಕ್ಷಿತಾಗಿರುತ್ತಾನೆ ಅವನಿಗಿಂತ ಬೇರೆಯವನಾದ ಜೀವನು ವಿವಕ್ಷಿತನಲ್ಲ. (ಪುಟ 168)
(ವಿವಕ್ಷೆ=ಬಯಕೆ, ಆಸೆ,ವಿಭಜನೆ,ಅಥ೯)

2)ಆತ್ಮನು ಏಕನೂ ಅದ್ವಿತೀಯನೂ ಆಗಿದ್ದರೂ  ಅವನಲ್ಲಿ ಜೀವೇಶ್ವರ ವಿಭಾಗವನ್ನು
ಕಲ್ಪಿಸಿರುವುದೇಕೆಂದರೆ ಲೋಕಸಿದ್ಧನಾದ ಜೀವನನ್ನು  ಅನುವಾದ ಮಾಡಿಕೊಂಡು  ಜೀವನ ಪರಮಥ೯ ದ್ವರೂಪವಾದ   ಈಶ್ವರನನ್ನು ತಿಳಿಸುವುದಕ್ಕೆ.(ಪುಟ 168)

3)ಜೀವನು ಪರಮಾತ್ಮನಿಗಿಮತ ಬೇರೆಯಾಗಿ ಇರುತ್ತಾನೆಂದು  ಶ್ರುತಿಯಲ್ಲಾಗಲಗಿ ಸೂತ್ರ(ಬ್ರಹ್ಮಸೂತ್ರ)ಗಳಲ್ಲಾಗಲಿ  ಎಲ್ಲಿರುವುದಿಲ್ಲ.(ಪುಟ 16)

4)ಶಾರೀರ, ಪ್ರಾಣಭೃತ್,ಪ್ರಾಣಿ,ಜನ್ತು ,ವಿಜಾನಾತ್ಮಾ,ಕತಾ೯,ಭೋಕ್ತ,ಕ್ಷೇತ್ರಜ್ಞಃ, ಜ್ಞಃ-ಇವೆಲ್ಲಾ ಜೀವನ ಪಯಾ೯ಯ ವಾಚಕಗಳು.(ಪುಟ 16)

5)ಭೇದಜ್ಞಾನದಿಂದ ಸಂಸಾರವೂ ಅಭೇದಜ್ಞಾನದಿಂದ ಮೋಕ್ಷವೂ ಆಗುವುದೆಂದು ಹೇಳಿರುತ್ತದೆ.(ಪುಟ 16)

6)ಶ್ರುತಿಯಲ್ಲಿ  ಜೀವ ಪರಮೇಶ್ವರರ  ಭೇದವನ್ನು ನಂಬುವುದು ಸರಿಯಲ್ಲವೆಂದೂ  ನಿಂದಿಸಿರುತ್ತದೆ.ಆತ್ಮೈಕತ್ವವನ್ನು  ಹೊಗಳಿರುತ್ತದೆ.(ಪುಟ 16)

7)ಶಾಸ್ತ್ರವು ಜ್ಞಾಪಕವೇ ಹೊರತು ಕಾರಕವಲ್ಲ.ಅದು ಇದ್ದುದನ್ನು ತಿಳಿಸುತ್ತದೆ.ಇಲ್ಲದ್ದನ್ನು ಉಂಟುಮಾಡುವುದಿಲ್ಲ.(ಪುಟ (ಪುಟ 171)

8)ಪರಮಾತ್ಮನು ಅದ್ವಿತೀಯನೇ ಆಗಿದ್ದರೂ ಅವನಲ್ಲಿ ಜೀವೇಶ್ವರ ಭೇದವನ್ನು ಕಲ್ಪಿಸಿರುವುದಕ್ಕೆ ಅವಿದ್ಯಾ  ಕಲ್ಪಿತ ನಾಮರೂಪಗಳಿಂದಾಗಿರುವ  ಕಾಯ೯ಕರಣ ಸಂಘಾತಗಳೆಂಬ ಉಪಾಧಿಗಳೇ ಕಾರಣ.(72)

)ಆತ್ಮೈಕತ್ವವನ್ನು ತಿಳಿದಾಗ  ನಿರುಪಾಧಿಕವಾದ ಆತ್ಮಸ್ವರೂಪದಲ್ಲಿ  ಯಾವ ಜೀವೇಶ್ವರ ವಿಭಾಗವೂ ಇರುವುದಿಲ್ಲ.(ಪುಟ 172)

10)ಆದ್ದರಿಂದ ಮಾಯಾವಿಯೊಬ್ಬನೇ  ಮಾಯೆಯಿಂದ ಅನೇಕರಾಗಿ ಕಾಣುವಂತೆ ಅದ್ವಿತೀಯಾತ್ಮನೊಬ್ಬನೇ  ಅವಿದ್ಯೆಯಿಂದ ನಾನಾರೂಪವಾಗಿಕಾಣುತ್ತಾನೆ ಎಂದು ನಿಶ್ಚಯಿಸಬೇಕು(ಪುಟ 174)

11)ಜೀವನಿಗೆ ಹುತ್ತು ಸಾವುಗಳು ಪ್ರತ್ಯಕ್ಷವಾಗಿಲ್ಲ.ಶರೀರ ಸಂಬಂಧದಿಂದ ಹುತ್ತುತ್ತಾನೆ ಸಾಯುತ್ತಾನೆ(ಪುಟ 176)

12)ಶರೀರವು ಪ್ರತ್ಯಕ್ಷವಾಗಿದ್ದರೂ  ಆತ್ಮನು ಪ್ರತ್ಯಕ್ಷನಲ್ಲವಾದ್ದರಿಂದ  ಆತ್ಮಶರೀರಗಳ  ಸಂಬಂಧವೂ ಪ್ರತ್ಯಕ್ಷವಲ್ಲ.(ಪುಟ 176)

13)ಸಾಧನಫಲಗಳು ಸತ್ಯವೆಂದು ನಂಬಿರುವ  ಅವಿದ್ಯಾವಂತರಿಗಾಗಿಯೇ  ಶಾಸ್ತ್ರವು ಕಮೋ೯ಪದೇಶವನ್ನು ಮಾಡುತ್ತದೆ.(ಪುತ 176)

14)ಆಕಾಶವು ಒಂದೇ ಅದರೂ ಘಟಾಕಾಶಗಳು ಹಲವು ಇರುವಂತೆಯೂ  ಸೂಯ೯ನು ಒಬ್ಬನೇ ಆದರೂ  ಜಲಸೂಯ೯ಕವಾದ ಪ್ರತಿಬಿಂಬಗಳು ಹಲವು ಇರುವಂತೆಯೂ  ಪರಮಾತ್ಮನು ಒಬ್ಬನೇ ಆದರೂ ಜೀವರು ಹಲವರು ಇರಬಹುದಾಗಿದೆ.(ಪುಟ178)

15) ಸೃಷ್ಟವಾದ ಶರೀರಗಳಲ್ಲಿ  ಪರಮೇಶ್ವರನೇ ಜೀವನಾಗಿ ಒಳಹೊಕ್ಕಿರುವನೆಂದು  ಶ್ರುತಿಯು ಹೇಳುತ್ತದೆ. 'ಪರಮೇಶ್ವರನೇ ನೀನು'ಎಂದು ಉಪದೇಶಿಸುತ್ತದೆ. ಹೀಗಿರುವುದರಿಂದ  ಪರಮೇಶ್ವರನೇ ಜಗತ್ತನ್ನು ಸೃಷ್ಟಿಸಿ  ಶರೀರವನ್ನು ಪಡೆದುಕೊಂಡು  ಸಂಸಾರಿಯಾಗಿರುವನೆಂದು  ಹೇಳಿದಂತೆ ಆಗುತ್ತದೆ.(ಪುಟ 17)

16)ಜೀವನು ಪರಮಾತ್ಮನೇ.(ಪುಟ 180)

ಅಧ್ಯಾಯ 1 ಪಂಚಕೋಶವಿವೇಕ:

1)ಸಾಕ್ಷಿ  ಎಂದರೆ ಪ್ರಮಾತೃವನ್ನು(ಜ್ಞಾತೃ) ಕೂಡ ಬೆಳಗುತ್ತಿರುವ ಆತ್ಮ ಚೈತನ್ಯವು(ಪುಟ 182)

2)ಸಾಕ್ಷಿ ದೃಷ್ಟಿಯನ್ನು  ಪ್ರತ್ಯಗ್ದøಷ್ಟಿ(ಒಳಗಿನ ನೋಟ) ಎಂತಲೂ  ಪ್ರಮಾತೃ ದ್ರಷ್ಟಿಯನ್ನು  ಪರಾಗ್ದøಷ್ಟಿ (ಹೊರಗಿನ ದೃಷ್ಟಿ )ಎಂತಲೂ  ಕರೆಯುವರು.ಪರಾಗ್ದøಷ್ಟಿಯು ಅವಿದ್ಯಕ.(ಪುಟ (184)

3)ದೇಹಾದಿಗಳಲ್ಲಿ  ಅತ್ಮಬುದ್ಧಿಯನ್ನು  ಕ್ರಮಕ್ರಮವಾಗಿ ಕಳೆಯುವುದಕ್ಕಾಗಿ  ತೈತ್ತಿರೀಯ ಸ್ರುತಿಯಲ್ಲಿ ಉಪಯೋಗಿಸಿರುವ  ಅಧ್ಯಾರೋಪ ಅಪವಾದ ನ್ಯಾಯಕ್ಕೆ  ಪಂಚಕೋಶವಿವೇಕವೆಂದು ಹೆಸರು.(ಪುಟ 185)

4)ಇಲ್ಲಿ ಅನ್ನಮಯ,ಪ್ರಾಣಮಯ,ಮನೋಮಯ,ವಿಜ್ಞಾನಮಯ,ಅನಂದಮಯ -ಇವು ಒಂದನ್ನೊಂದು  ವ್ಯಾಪಿಸಿಕೊಂಡಿರುವ  ಆತ್ಮನ ಕೋಶಗಳು.ಕತ್ತಿಯನ್ನು ಮುಚ್ಚಿಕೊಂಡಿರುವ ಒರೆಯಂತೆ  ಇವು ಅತ್ಮನನ್ನು  ಮುಸುಕಿಕೊಂಡು ತಾವೇ ಆತ್ಮನೆಂಬ ಭ್ರಾಂತಿಯನ್ನು ಉಂಟು ಮಾಡುತ್ತಿರುವುವು.(ಪುಟ 185)    

5)ಅನ್ನಮಯ ಶರೀರವು ಹೊರಗಿನ ಸ್ಥೂಲ ಪ್ರಪಂಚದ  ಒಂದು ಭಾಗವು.

6) ಪ್ರಾಣಮಯವು  ಕ್ರಿಯಾತ್ಮಕವಾದ  ಸಮಷ್ಟಿವಾಯುವಿನ ಒಂದು ಭಾಗವು. ಉಪಾಧಿಯಿಂದ ನಾವು ಪ್ರಾಣಿಗಳೆನಿಸಿರುವೆವು.(ಪುಟ 186)

7)ಮನೋಮಯವು ವೆದಾತ್ಮಕವಾದ  ವೃತ್ತಿಯ ಸಮಷ್ಟಿ ಮನಸ್ಸಿನ  ಒಂದು ಭಾಗವು. ಉಪಾಧಿಯಿಂದ ನಾವು 'ಮಂತೃ'(ಮನನ ಮಾಡುವವರು) ಎನಿಸಿರುವೆವು.(ಪುಟ 186)

8)ವಿಜ್ಞಾನಮಯವು ವೇದಾಥ೯ವನ್ನು ನಿಶ್ಚಯಿಸಿಕೊಂಡು  ಕಮ೯ವನ್ನು ಮಾಡುವ ಸಮಷ್ಟಿ ಬುದ್ಧಿಯ ಒಂದು  ಭಾಗವು. ಉಪಾಧಿಯಿಂದಲೇ ನಾವು ಜ್ಞಾತೃ ,ಕತೃ೯ ಎನಿಸಿಕೊಂಡಿರುವುದು.(ಪುಟ 186)

) ಆನಂದಮಯವ್ಯ ನಮ್ಮ ಭೋಕ್ತø೯ತ್ವಕ್ಕೆ  ಸಾಕ್ಷಿಯಾಗಿರುತ್ತದೆ.(ಪುಟ 186)

10) ಹೀಗೆ  ಅನ್ನಮಯವನ್ನು ಹಿಡಿದು  ಆನಂದಮಯದ ವರೆಗಿನ   ಐದು ಕೋಶಗಳೂ ಆತ್ಮನ ಉಪಾಧಿಯೆಂದರಿಯದೆ  ನಾವು ಅವನ್ನು ಅತ್ಮನಲ್ಲಿ ಬೆರೆಸಿಕೊಂಡೇ  ವ್ಯವಹಾರ ಮಾಡುತ್ತಾ ಅವೇ ಆತ್ಮನೆಂಬ ಭ್ರಾಂತಿಗೆ ಒಳಗಾಗಿರುವೆವು.(ಪುಟ 186)

11) ಸವಾ೯ಂತರನೂ  ಸವ೯ಸಾಕ್ಷಿಯೂ  ಆಗಿರುವ ನಿವಿ೯ಶೇಷನಾದ  ಆನಂದ ಸ್ವರೂಪನಾದ ಆತ್ಮನನ್ನು  ಮೇಲೆ ಹೇಳಿದ ಕ್ರಮದಿಂದ ಅರಿತುಕೊಂಡರೆ  ಆಗ ಆತ್ಮನಿಗೆ ಯಾವ ದೇಹಾದಿಗಳಾಗಲೀ  ಪಂಚಭೂತಗಳ ಸಂಬಂಧವಾಗಲೀ  ಇಲ್ಲವೆಂದು ಅರಿತುಕೊಂಡು  ಸಂಸಾರ ಭಯವಿಲ್ಲದೆ  ತನ್ನ ಸ್ವರೂಪದಲ್ಲಿಯೇ  ತಾನು ನೆಲೆ ನಿಲ್ಲುವನೆಂದು  ತೈತ್ತಿರೀಯ ಉಪನಿಷತ್ತಿನಲ್ಲಿ ಹೇಳಿದೆ.(ಪುಟ 186)

ಅಧ್ಯಾಯ 20 ಅವಸ್ಥಾತ್ರಯ ವಿವೇಕ:

1) ಎಚ್ಚರ -ವಿಶ್ವ-ಅಕಾರ
ಕನಸು-ತೈಜಸ-ಉಕಾರ
ನಿದ್ರೆ -ಪ್ರಾಜ್ಞ-ಮಕಾರ

2) ಮಾಂಡೂಕ್ಯ  ಉಪನಿಷತ್ತಿನಲ್ಲಿ  ವೈಶ್ವಾನರನನ್ನು ಹೀಗೆಂದು ವಣಿ೯ಸಿದೆ.

ಆತ್ಮನಿಗೆ ಹೊರ ಅರಿವು, ದ್ಯುಲೋಕವೇ ಮುಂತಾದ ಏಳು ಅಂಗಗಳಗು,ಇಂದ್ರಿ ಪ್ರಾ ಅಂತಃಕರಣ ರೂಪವಾದ  ಹತ್ತೊಂಭತ್ತು ಅರಿವಿನ  ದ್ವಾರಗಳು,ಸ್ಥೂಲವಿಷಯ ಭೋಗವೂ ಇರುವುವು.ಇವನು ಆತ್ಮನ ಒಂದು ಪಾದವು ಮಾತ್ರ(ಪುಟ 12)

3) ಕನಸಿನ ಪ್ರಪಂಚವನ್ನು ನೋಡುತ್ತಿರುವ  ಆತ್ಮನಿಗೆ ತೈಜಸನೆಂದು,ಹಿರಣಯಗಭ೯ನೆಂದು ಹೆಸರು.
ಮಾಂಡೂಕ್ಯದಲ್ಲಿ ತ್ಯಜಸನನ್ನು ಹೀಗೆ ವಣಿ೯ಸಿದ್ದಾರೆ. ಅವನಿಗೆ ಒಳ ಅರಿವು,ದ್ಯುಲೋಕವೇ ಮುಂತಾದ ಏಳು ಅಂಗಗಳು,ಇಂದ್ರಿ ಪ್ರಾಣ ಅಂತಃಕರಣರೂಪವಾದ  ಹತ್ತೊಂಭತ್ತು ಅರಿವಿನ ದ್ವಾರಗಳೂ ಇವೆ
ಸೂಕ್ಷ್ಮ ವಿಷಯ ಭೋಗವಿರುವುದು ,ಇವನು ಆತ್ಮನ ಎರಡನೆಯ ಪಾದವು.ಆತ್ಮನ ಸ್ವತಃಸ್ಸಿದ್ಧರೂಪವಿದಲ್ಲ.(ಪುಟ 13)

4)ಎಚ್ಚರಕ್ಕೂ ಕನಸಿಗೂ ಯಾವ ವ್ಯತ್ಯಾಸವೂ ಇಲ್ಲ. ಅದ್ವೈತ ಜ್ಞಾನವಾದಾಗ  ಇವೆರಡೂ ಮಿಥ್ಯೆಯೆಂದು ನಿಶ್ಚಯವಾದಾಗ  ವೇದಾಂತಿಗಳು ಇವೆರಡನ್ನೂ ಕನಸು ಎಂದೇ ಕರೆಯುತ್ತರೆ.(ಪುಟ 14) 

5)ಬೌದ್ಧರೂ ಎಚ್ಚರ ಕನಸುಗಳು ಸಮಾನವಾಗಿವೆ ಎಂದು ಹೇಳುತ್ತಾರೆ.ಆದರೆ ಅವುಗಳನ್ನು ನೋಡುವ
ಯಾವ ಕೂಟಸ್ಥಚ್ಯತನ್ಯವನ್ನೂ  ಒಪ್ಪುವುದಿಲ್ಲ.ಆದ್ದರಿಂದ ಅವರ ವಾದವು ನಿಲ್ಲುವುದಿಲ್ಲ.(ಪುಟ 15)

6)ಆತ್ಮನಲ್ಲಿಯೇ ಜಾಗ್ರತ ಸ್ವಪ್ನಗಳೆರಡೂ ಕಲ್ಪಿತವಾಗಿವೆ.(ಪುಟ 16)

7)ಸುಷುಪ್ತಾವಸ್ಥೆಯಲ್ಲಿ  ಪ್ರಪಂಚವೆಲ್ಲವೂ ಆತ್ಮನಲ್ಲಿಯೇ ಅಡಕವಾಗಿರುತ್ತದೆ.(ಪುಟ 17)

8)ಛಾಂದೋಗ್ಯದಲ್ಲಿ ಜೀವನು ಅವಸ್ಥೆಯಲ್ಲಿ (ಸುಷುಪ್ತಿಯಲ್ಲಿ)  ಸದ್ರೂಪವಾದ ಬ್ರಹ್ಮದಲ್ಲಿ ಒಂದಾಗಿರುನೆಂದು ಹೇಳಿದೆ.(17)

)ಬೃಹದಾರಣ್ಯಕದಲ್ಲಿ ಪ್ರಾಜ್ಞನೊಡನೆ ಆಲಿಂಗಿತನಾಗಿರುವನೆಂದು ಹೇಳಿದೆ.(ಪುಟ 187)

10)ಮಾಂಡೂಕ್ಯದಲ್ಲಿ  ಆತ್ಮನು ಈಕೀಭೂತನೂ  ಪ್ರಜ್ಞಾನ ಘನನೂ ಆನಂದಮಯನೂ  ಆಗಿರುವನೆಂದು ವಣಿ೯ಸಿದೆ.ಕೇವಲ ಚಿನ್ಮತ್ರವಾಗಿರುವ ರೂಪಕ್ಕೆ ಪ್ರಾಜ್ಞನೆಂದು ಹೆಸರು.ಸುಷ್ಪ್ತಿಯು ಆತ್ಮನ ಮೂರನೆಯ ಪಾದವು .ಆತ್ಮನ ಪರಮಾಥ೯ರೂಪವಲ್ಲ.(ಪುಟ 17) 

11)ಅಲ್ಲಿ ನಾನು ನೀನು ಅವನು ಎಂಬ ವಿಶೇಷರೂಪವಾದ ಅರಿವಿಲ್ಲದಿರುವುದು ನಿಜ)ಸುಷುಪ್ತಿಯಲ್ಲಿ ಯಾವ ವಿಶೇಷ ಅರಿವೂ ಇರುವುದಿಲ್ಲ.ಆದರೆ ಆತ್ಮನ ಸ್ವರೂಪವಾದ ಅರಿವೂ ಆಗ ಇರುವುದಿಲ್ಲ.
  ಅಲ್ಲಿ ನಾನು ನೀನು ಅವನು ಎಂಬ ವಿಶೇಷರೂಪವಾದ ಅರಿವಿಲ್ಲದಿರುವುದು ನಿಜ.ಅಲ್ಲಿ ಅಂತಃಕರಣ,ಇಂದ್ರಿಯ,ವಿಷಯ-ಎಂದು ವಿಂಗಡಿಸಿಕೊಂಡಿರುವ  ಇಡಿಯ ಜಗತ್ತು ಪರಮಾತ್ಮನಲ್ಲಿ ಒಂದಾಗಿರುವುದೇ ಅದಕ್ಕೆ ಕಾರಣವು.ಅತ್ಮನಿಲ್ಲದ್ದಲ್ಲ.(ಪುಟ 16)

12) ದೃಷ್ಟಿಯಿಂದಲೇ ಜೀವನು ಸುಷುಪ್ತಿಯಲ್ಲಿ ಬ್ರಹ್ಮದೊಡನೆ ಒಂದಾಗಿರುವನೆಂದೂ  ಬ್ರಹ್ಮದಿಂದ ಪ್ರಾಣಾದಿ ಸವ೯ಜಗತ್ತೂ ಎಚ್ಚರದಲ್ಲಿ ಉತ್ಪನ್ನವಾಗುವುದೆಂದೂ ಶ್ರುತಿಯಲ್ಲಿ ಹೇಳಿರುತ್ತದೆ.(ಪುಟ 1೯೯)

13)ಅವಸ್ಥಾತ್ರಯವೆಂಬುದು ಆತ್ಮನಲ್ಲಿ  ಅಧ್ಯಾರೋಪಿತವಾಗಿದೆಯೇ  ಹೊರತು ಪರಮಾಥ೯ವಲ್ಲ.ಆದ್ದರಿಂದಲೇ ಶ್ರುತಿಯು 'ಇವು ಮೂರೂ ಸ್ವಪ್ನಗಳು'ಎಂದು ಹೇಳುತ್ತವೆ.(ಪುಟ 1೯೯).

14) ಆತ್ಮನಿಗೆ ಯಾವ ಅವಸ್ಥೆಯೂ ಇಲ್ಲದ್ದರಿಂದ  ಅವನು ಮೇಲೆಹೇಳಿದ ವೈಶ್ವಾನರ,ತೈಜಸ,ಪ್ರಾಜ್ಞ-ಎಂಬ ಅಧ್ಯಾರೋಪಿತ  ರೂಪಗಳಿಗಿಂತ  ಅತ್ಯಂತ ವಿಲಕ್ಷನನಾದ ತುರೀಯನು.(ಪುಟ 1೯೯)

15)ಮಾಂಡೂಕ್ಯ ಉಪನಿಷತ್ತಿನಲ್ಲಿ  ಓಂಕಾರ ನಿಣ೯ಯವನ್ನು ಮಾಡಿರುತ್ತದೆ.ಓಂಕಾರ ,ಬ್ರಹ್ಮ,ಆತ್ಮ- ಮುರೂ ಒಂದೇ ತತ್ವಕ್ಕೆ ಹೆಸರುಗಳು.ಪರಮಾಥ೯ತತ್ವದಲ್ಲಿ ನಾಮವೂ ಇಲ್ಲ ರೂಪವೂ ಇಲ್ಲ.(ಪುಟ 200)

16)ಓಂಕಾರಕ್ಕೆ ಲಕ್ಷ್ಯವಾದ ಬ್ರಹ್ಮವು ,ನಮ್ಮ ಆತ್ಮನೇ ಆಗಿದ್ದು  ಪಾದತ್ರಯ ವಿಲಕ್ಷಣವೂ ಮಾತ್ರಾತ್ರಯಾತೀತವೂ ಆಗಿರುತ್ತದೆ.(ಪುಟ 201)

17) ವೈಶ್ವಾನರ-ಅಕಾರ
ತ್ಯಜಸ-ಉಕಾರ
ಪ್ರಾಜ್ಞ -ಮಕಾರ  ಇವು ಮೂರು ಮತ್ರೆಗಳು.(ಪುಟ 201)

18)ಪಾದತ್ರಯ ವಿಲಕ್ಷಣನಾದ ತುರೀಯಾತ್ಮನುಬ್ರಹ್ಮಪದಕ್ಕೆ ಲಕ್ಷ್ಯಾಥ೯ವೂ   ಮಾತ್ರಾತ್ರಯಕ್ಕೆ  ಅತೀತವಾಗಿರುವುದರಿಂದ  ಓಂಕಾರಕ್ಕೆ ಲಕ್ಷ್ಯಾಥ೯ವೂ ಆಗಿರುತ್ತಾನೆ. ಬ್ರಹ್ಮದಲ್ಲಿ ಅಥವಾ ಓಂಕಾರದಲ್ಲಿ ಯಾವ ನಾಮವೂ ಇಲ್ಲ ಯಾವರೂಪವೂ ಇಲ್ಲ-ಎಂದು ಉಪನಿಷತ್ತಿನಲ್ಲಿಯೂ ಅದರ ವ್ಯಾಖ್ಯಾನ ರೂಪವಾದ  ಗೌಡಪಾದರ  ಆಗಮಪ್ರಕರಣದಲ್ಲಿಯೂ ತಿಳಿಸಿರುತ್ತದೆ.(ಪ್ಟ 201)

1) ಪರಮಾಥ೯ ತತ್ವವನ್ನು ಯಾವೊಂದು ಪದದಿಂದಲೂ ಹೇಳುವುದಕ್ಕೆ ಬರುವುದಿಲ್ಲ.(ಪುಟ 201)

No comments:

Post a Comment