ಅಧ್ಯಾಯ 21 ಬಂಧಮೋಕ್ಷವ್ಯವಹಾರ:
1)ಮೋಕ್ಷವು ಪಡೆಯುವುದಲ್ಲ.
ನಿತ್ಯ ಪ್ರಾಪ್ತವಾದದ್ದು
ಎಂಬುದು ವೇದಾಂತಿಗಳ ಮತವು
(ಪುಟ 2೯3)
2) ಇದು ಶ್ರುತಿಯುಕ್ತಿ ವಿರುದ್ಧವಾದುದೆಂದು
ಕೆಲವರಿಗೆ
ತೋರುವ ಸಂಭವವಿದೆ.(ಪುಟ 203)
3) ಏಕೆಂದರೆ " ಈ ಸಂಪ್ರಸಾದನು
ಈ ಶರೀರವನ್ನು ಬಿಟ್ಟೆದ್ದು
ತನ್ನ ರೂಪದಿಂದ ಸಿದ್ಧನಾಗುತ್ತಾನೆ.ಅವನೇ ಉತ್ತಮಪುರುಷನು,"ಎಂದು ಛಾಂದೋಗ್ಯ (ಛಾಂ.8-12-3) ಶ್ರುತಿಯು ಹೇಳುತ್ತದೆ.(ಪುಟ 203)
4)ಅವಸ್ಥಾತ್ರಯವು
ಅವಿದ್ಯೆಯಿಂದ ಆತ್ಮನಲ್ಲಿ ತೋರುವುದೇ ಹೊರತು
ನಿಜವಾಗಿಲ್ಲವೆಂದು ಆಗಲೆ ತೋರಿಸಿಕೊಟ್ಟಿದ್ದಾಗಿದೆ.(ಪುಟ 203)
5)ಇಲ್ಲದ್ದು ಹೊಸದಾಗಿ ಹುಟ್ಟಲಾರದು,ಇದ್ದದ್ದು ನಾಶವಾಗಲಾರದು .ಆದ್ದರಿಂದ ಬಂಧ ಮೋಕ್ಷಗಳು ಪರಮಾಥ೯ವಲ್ಲ ಎಂಬುದು ಯುಕ್ತಿ ಯುಕ್ತವೂ ವಾಗಿದೆ.(ಪುಟ 204)
6)ಅವಿದ್ಯೆಯಿಂದ ಬಂಧನವಾಗಿರುವುದರಿಂದ ಅವಿದ್ಯೆಯನ್ನು ಹೋಗಲಡಿಸುವುದಕ್ಕೆ
ವಿದ್ಯೆಯನ್ನು ಸಂಪಾದಿಸುವುದು ಅಗತ್ಯವಾಗಿರುತ್ತದೆ.(ಪುಟ 205)
7)ಅತ್ಮನಿಗೆ ಬ್ರಹ್ಮತ್ವವು
ಸ್ವರೂಪವೇ ಆದರೂ
ಅದು ಯಾವುದಾದರೊಂದು ನಿಮಿತ್ತದಿಂದ
ಬಂಧಾವಸ್ಥೆಯಲ್ಲಿ
ಮರೆಯಾಗಿದ್ದು
ಅಥವಾ ಮಸುಕಾಗಿದ್ದು
ಸಾಧನಗಳಿಂದ
ಆ ನಿಮಿತ್ತವು ಹೋಗಲಾಗಿ
ಮುಕ್ತಾವಸ್ಥೆಯಲ್ಲಿ ತೋರಿಕೊಳ್ಳುವುದು ಎಂಬ ಬಗೆಯ ವಾದಗಳೆಲ್ಲವೂ ನಿಸ್ಸಾರವೆಂಬುದು ಈಗ ಸ್ಪಷ್ಟವಾಗುತ್ತದೆ.(ಪುಟ 207)
8)ಅಜ್ಞರಿಗೆ ನಾವು ನಿತ್ಯ ಶುದ್ಧ ಬುದ್ದ ಮುಕ್ತ ಸ್ವರೂಪರು ಎಂಬ ತಿಳುವಳಿಕೆಯಿಲ್ಲದಿರುವುದರಿಂದ
ಅವರು ನಿತ್ಯಮುಕ್ತರಾಗಿದ್ದರೂ ಬದ್ಧರೇ ಆಗಿರುತ್ತಾರೆ.(ಪುಟ 20೯)
೯)ಜಾಗ್ರದವಸ್ಥೆಯಲ್ಲಿ
ಪರಮಾಥ೯ವಾಗಿರುವಂತೆ ತೋರಿದರೂ
ಸುಷುಪ್ತಿಯಲ್ಲಿ ಯಾವ
ಅವಿದ್ಯಾಕಾಮಕಮ೯ಗಳೂ
ಇರುವುದಿಲ್ಲವೆಂಬುದು ಸವಾ೯ನುಭವ ಸಿದ್ಧವಾಗಿರುತ್ತದೆ.(ಪುಟ 210)
10) "ಅಹಂಬ್ರಹ್ಮಾಸ್ಮಿ"(ನಾನು ಬ್ರಹ್ಮವಾಗಿರುವೆನು)
"ತತ್ವಮಸಿ"೯ನೀ
ನು ಅದೆ (ಬ್ರಹ್ಮವೇ) ಆಗಿದ್ದೀಯೆ
"ಅಯಮಾತ್ಮಾ ಬ್ರಹ್ಮ" (ಈ ಆತ್ಮನು ಬ್ರಹ್ಮವು)-ಇವೇ ಮುಂತಾದ ಮಹಾವಾಕ್ಯಗಳು ಈಗಲೇ ಇಲ್ಲಿಯೆ ಅತ್ಮನು ಬ್ರಹ್ಮವಾಗಿರುವನೆಂದು
ಹೇಳುತ್ತಿವೆ.'ನೀನು ಬ್ರಹ್ಮವೇ ಆಗಿರುವೆ'ಎಂಬ ವಾಕ್ಯವನ್ನು 'ನೀನು ಸತ್ತನಂತರ ಅದಾಗುವೆ 'ಎಂದು ಹೇಳಲಾಗುವುದಿಲ್ಲ.'ವಿಮುಕ್ತಶ್ಚ ವಿಮುಚ್ಯತೇ'(ವಿಮುಕ್ತನೇ ವಿಮುಕ್ತನಾಗುತ್ತಾನೆ) ಎಂಬ ಕಠವಾಕ್ಯವೂ ಆತ್ಮನು
ನಿತ್ಯಮುಕ್ತನೇ ಆಗಿರುತ್ತಾನೆಂದು ಸ್ಪಷ್ಟವಾಗಿ ಹೇಳುತ್ತಿದೆ.
(ಪುಟ 211)
11)ಆದ್ದರಿಂದ ಜ್ಞಾನವು ಬಂದಕೂಡಲೇ ಆಗುವ ಸದ್ಯೋಮುಕ್ತಿಯು ಒಂದೇ.
ಮುಕ್ತಿಯು ಎರಡೆಂಬುದು ಸರಿಯಲ್ಲ.ಮುಕ್ತಿಯೆಂದರೆ ಬ್ರಹ್ಮವೇ(ಪುಟ211)
12)ಬದುಕಿದ್ದಾಗಲೇ ಮುಕ್ತಿಯಾಗುತ್ತದೆ.ಸತ್ತನಂತರ ಅಲ್ಲ ಎಂದು ಅಚಾಯ೯ರು ಪುನಃ ಪುನಃ ಸಾರಿರುತ್ತಾರೆ.(ಪುಟ 212)
ಅಧ್ಯಾಯ 22 ಅಪರಬ್ರಹ್ಮ :
1)ಮೋಕ್ಷವು ಉತ್ಪಾದ್ಯವಲ್ಲ,ವಿಕಾಯ೯ವಲ್ಲ,ಸಂಸ್ಕಾಯ೯ವಲ್ಲ,ಪ್ರಾಪ್ಯವಲ್ಲ.ಆದುದರಿಂದ ಅದು ಸಾಧನದಿಂದ ಪಡೆದುಕೊಳ್ಳುವುದಲ್ಲ.(ಪುಟ 214)
2)ಪರಬ್ರಹ್ಮವು ನಾಮರೂಪಾದಿ ವಿಶೇಷಗಳಿಂದ ಕೂಡಿ
ಉಪಸನೆಗಾಗಿ ಹೇಳಿದಾಗ
ಅದೇ ಬ್ರಹ್ಮವೇ ಅಪರ ಬ್ರಹ್ಮವು ಎನಿಸುತ್ತದೆ.(ಪುಟ 215)
3)ಪರಬ್ರಹ್ಮವು ಪ್ರಾಪ್ಯವಲ್ಲ.(ಪುಟ 217)
4)ಬ್ರಹ್ಮವು ಸವ೯ಗತನೆಂಬ ಯುಕ್ತಿ,ಬ್ರಹ್ಮವು ನಿವಿ೯ಶೇಷವೆಂಬ ಯುಕ್ತಿ,ಸಾಧನದಿಂದ ಪಡೆದದ್ದು
ಕೃತಕವಾಗಿ ಅನಿತ್ಯವಾಗಿರುವುದೆಂಬ ಯುಕ್ತಿ-ಇವೆ ಮುಂತಾದ ಅನುಭವ ಸಮ್ಮತವಾದ
ಯುಕ್ತಿಗಳನ್ನು ಹೇಳಿರುತ್ತದೆ.ಇದರ ಜೊತೆಗೆ ಅವನ ಪ್ರಾಣಗಳು ಉತ್ಕ್ರಾಂತಿಯಾಗುವುದಿಲ್ಲ,'ಬ್ರಹ್ಮವೇ ಆಗಿದ್ದು ಬ್ರಹ್ಮದಲ್ಲಿ ಸೇರಿಹೋಗುತ್ತಾನೆ.' ಇಲ್ಲಿಯೇ ಬ್ರಹ್ಮವನ್ನು ಪಡೆಯುತ್ತಾನೆ-ಮುಂತಾದ ಶ್ರುತಿಗಳು
ಸ್ಪಷ್ಟವಾಗಿ ಪ್ರಾಣೋತ್ಕ್ರಮಣ ನಿಷೇಧವನ್ನೂ,ಇಲ್ಲಿಯೇ ಆಗುವ ಸದ್ಯೋಮುಕ್ತಿಯನ್ನೂ
ಹೇಳುತ್ತವೆ.ಆದ್ದರಿಂದ ಉತ್ಕ್ರಾಂತ್ಯಾದಿಗಳು ಅಪರಬ್ರಹ್ಮದ ವಿಷಯವೇ.(ಪುಟ 220)
5) ಜೀವರಲ್ಲಿ ಕಾಣಬರುವ ಸುಖದುಃಖಗಳೆಲ್ಲವೂ
ಅವಿದ್ಯೆಯಿಂದ ಅಧ್ಯಾರೋಪಿತ ವಾಗಿರುತ್ತವೆ.(ಪುಟ 221)
6)ಪರಬ್ರಹ್ಮವೇ ಉಪಾಧಿಯಿಂದ ಅಪರಬ್ರಹ್ಮವೆನಿಸುತ್ತದೆ.(ಪುಟ 222)
ಅಧ್ಯಾಯ 23 ಉಪಾಸನೆ:
1) ಉಪಾಸಕ, ಉಪಾಸ್ಯ-ಎಂಬ ದ್ವೈತವಿಲ್ಲದೆ ಉಪಾಸನೆಯು ಆಗುವಂತಿಲ್ಲ.ನಿವಿ೯ಶೇಷವಾದ ಅದ್ವೈತ ಬ್ರಹ್ಮದಲ್ಲಿ ಅವಿದ್ಯೆಯಿಂದಲೇ ದ್ವೈತವು ತೋರುತ್ತದೆಯಾದರೂ
ಉಪಾಸನ ವ್ಯವಹಾರವು
ಅವಿದ್ಯಕವೆಂದು ತಾನೇ ಏಪ೯ಡುತ್ತದೆ.(ಪುಟ 225)
2)ಉಪಾಸನೆಗಳಲ್ಲಿ ಕಮಾ೯ಂಗವಾದ ಉಪಾಸನೆಗಳು,ಪ್ರತೀಕೋಪಾಸನೆಗಳು,ಪ್ರಾಣಾದಿ ಉಪಾಸನೆಗಳು,ಸಗುಣ ಬ್ರಹ್ಮೋಪಾಸನೆಗಳು,-ಮುಂತಾಗಿ ಹಲವು ವಿಧಗಳುಂಟು.(226)
3)ಇವುಗಳಲ್ಲಿ ಶಾಸ್ತ್ರೋಕ್ತವಾದ ಯವುದಾದರೊಂದು ವಸ್ತುವನ್ನು ಶಾಸ್ತ್ರದಲ್ಲಿ ಹೇಳುವ ರೀತಿಯಲ್ಲಿ ಒಂದೇ ಚಿತ್ತವೃತ್ತಿಯನ್ನು ಸತತವಾಗಿ ಭಾವಿಸುತ್ತಿರುವ
ರೂಪದವೇ ಆಗಿರುತ್ತವೆ.ಅವು ಅದ್ವೈತ ಜ್ಞಾನದಂತೆ ಅಧ್ಯಾರೋಪಿತ ಕ್ರಿಯಾಕಾರಕ ಫಲಭೇದವನ್ನು
ತೊಲಗಿಸುವುದಿಲ್ಲ.ಆದರೂ ಚಿತ್ತೈಕಾಗ್ರ್ಯದ ಮೂಲಕವಾಗಿ ಅದ್ವೈತಜ್ಞಾನಕ್ಕೆ ಉಪಕಾರಕವಾಗಿರುವುದರಿಂದ ಇವ್ಗಳನ್ನು ಜ್ಞಾನ ಪ್ರಕರಣದಲ್ಲಿಯೇ ಪ್ರಸ್ತಾಪಿಸಿರುತ್ತದೆ.(ಪುಟ 226)
4)ಕಮೋ೯ಪಾಸನೆಯನ್ನು ಮಾಡುವವರಿಗೆ
ಆಯಾ ಕಮ೯ದ ಸಮೃದ್ಧಿಯೂ
ಮುಮುಕ್ಷುಗಳಾದವರಿಗೆ ಜ್ಞಾನದ ಉತ್ಪತ್ತಿಯೂ ಫಲವು.ಪ್ರತೀಕೋಪಾಸಕರಿಗೆ
ಆಯಾ ಪ್ರತೀಕಗಳಿಗನುಗುಣವಾಗಿ
ದೃಷ್ಟಾ ದೃಷ್ಟ ಫಲಗಳು ಆಗುವವು.(ಪುಟ 226)
5) ಸಗುಣಬ್ರಹ್ಮೋಪಾಸಕರಿಗೆ ಬ್ರಹ್ಮಪ್ರಾಪ್ತಿಯೂ ಕ್ರಮಮುಕ್ತಿಯೂ
ಫಲವು.(ಪುಟ226)
6) ಜ್ಞಾನಕ್ಕಾದರೆ
ಯಾವಾಗಲೂ ಜ್ಞಾನಸಮಕಾಲದಲ್ಲಿಯೇ
ಮುಕ್ತಿ ಎಂಬ ಒಂದೇ ವಿಧವಾದ ಫಲುಂಟಾಗುತ್ತದೆ.(ಪುಟ 227)
7)ಸಗುಣಬ್ರಹ್ಮವು ನಿಜವಾದ ಬ್ರಹ್ಮವಲ್ಲ ಎಂದು ಭಾವಿಸಬಾರದು.(ಪುಟ 228)
ಅಧ್ಯಾಯ 24 ಆತ್ಮವಿಜ್ಞಾನಕ್ಕೆ ಸಾಧನಗಳು:
1) ಈಚಿನ ವೇದಾಂತಕಾರರ ರೂಢಿಯನ್ನು ಅನುಸರಿಸಿ
ವಸ್ತುತಂತ್ರ ಜ್ಞಾನವನ್ನು
ಜ್ಞಾನವೆಂದೂ
ಭಾವನಾರೂಪವಾದ ಧ್ಯಾನವನ್ನೇ
ಉಪಾಸನೆಯೆಂದೂ ಕರೆಯುತ್ತೇವೆ.(ಪುಟ 231)
2)ವಸ್ತುತಂತ್ರವಾದ ವಿಜ್ಞಾನವು ಉಂಟಾಗುವುದಕ್ಕೆ
ಶ್ರವಣ,ಮನನ,ನಿದಿಧ್ಯಾಸನಗಳು
ನೇರವಾದ ಸಾಧನಗಳು.(ಪುಟ 233)
3)ಆತ್ಮನ ದಶ೯ನವೆಂದರೆ ದೃಷ್ಟಿಗೆ
ದೃಷ್ಟಿಗೆ ವಿಷಯವಾಗಿಸಿಕೊಳ್ಳುವುದಲ್ಲ. ಅವನೇ ತಾನೆಂಬ ಅರಿವಿನಲ್ಲಿ ನೆಲೆನಿಲ್ಲುವುದು.ಆಗ ಅತ್ಮನನ್ನು ಅರಿಯಬೇಕೆಂಬ ಅಕಾಂಕ್ಷೆ ಉಳಿಯುವುದಿಲ್ಲ (ಪುಟ 233)
4)ಶ್ರವಣವೆಂದರೆ ಶಾಸ್ತ್ರವಾಕ್ಯಗಳನ್ನೂ ಆಚಾಯ೯ವಾಕ್ಯಗಳನ್ನೂ ಕೇಳಿ ಅಥ೯ವನ್ನು ತಿಳಿದುಕೊಳ್ಳುವುದು.
(ಪುಟ 234)
5) ಮನನವೆಂದರೆ ಶ್ರವಣಮಾಡಿದುದನ್ನು ಯುಕ್ತಿಗೆ ಹೊಂದಿಸಿ ಅಲೋಚಿಸುವುದು.(ಪುಟ 234)
6) ನಿದಿಧ್ಯಾಸನವೆಂದರೆ ಅರಿವು ಮನಸ್ಸಿಗೆ ತಟ್ಟಿ
ನಿಶ್ಚಯವಾಗುವಂತೆ
ವಸ್ತುವನ್ನು ಲಕ್ಷ್ಯವಿಟ್ಟು ಚಿಂತಿಸುವುದು.(ಪುಟ 234)
7) ಜ್ಞಾನವು ಪ್ರಮಾಣಕ್ಕೂ
ವಸ್ತುವಿಗೂ ಅನುಗುಣವಾಗಿ
ಆಗತಕ್ಕದ್ದೇ ಹೊರತು
ಮನುಷ್ಯನ ಪ್ರಯತ್ನದಿಂದ ಆಗತಕ್ಕದ್ದಲ್ಲ.(ಪುಟ 235)
8)ಶ್ರವಣಾದಿ ಪ್ರಯತ್ನವನ್ನು ಆತ್ಮಸ್ವರೂಪ ವಿಜ್ಞಾನರೂಪವಾದ ದಶ೯ನವಾಗುವವರೆಗೆ
ಎಂದು ತಾನೇ ಏಪ೯ಡುತ್ತದೆ.(ಪುಟ 235)
೯)ಶ್ರವಣಮಾಡಬೇಕು,ಮನನ ಮಾಡಬೇಕು,ನಿದಿಧ್ಯಾಸನ ಮಾಡಬೇಕು ಎಂದು
ಅನೇಕಸಲ ಹೇಳಿರುವುದು
ಸಾಧನವನ್ನು ಆವೃತ್ತಿ ಮಾಡಬೇಕೆಂದು ಸಿದ್ಧವಾಗುತ್ತದೆ.(ಪುಟ 236)
10)ಪ್ರಪಂಚವು ನಿಜವಾಗಿದ್ದು
ಅದನ್ನು ಪ್ರಲಯ ಮಾಡಬೇಕೆಂದು
ಶಾಸ್ತ್ರವು ಕಟ್ಟು ಮಾಡುತ್ತದೆ ಎನ್ನುವುದಾದರೆ
ಇರುವುದನ್ನು ನಾಶಗೊಳಿಸುವುದು ಯಾವನಿಂದಲೂ ಸಾಧ್ಯವಾಗದು.ಆದ್ದರಿಂದ ಶಾಸ್ತ್ರವು ಅಪ್ರಮಾಣ ಎಂದಾಗುವುದು.ಬ್ರಹ್ಮವೇ ನೀನೆಂಬ
ಉಪದೇಶದಿಂದಲೇ ಅವಿದ್ಯಾ ಕಲ್ಪಿತವಾದ
ಜೀವತ್ವವು ಹೋಗಿಬಿಡುವುದರಿಂದ,ಮತ್ತೆ ಪ್ರಪಂಚ ವಿಲತದ ನಿಯೋಗವು ಬರುವುದಕ್ಕೆ ಸಾಧ್ಯವೇ ಇಲ್ಲ.(ಪುಟ 238)
(ಗಮನಿಸಿ;ಪ್ರಪಂಚವು ಎಂದೂ ಬದಲಾಯ್ಸುವುದಿಲ್ಲ.ಇದು ಹೀಗೆಯೇ ಇರುತ್ತದೆ.ಕಷ್ಟ-ಸುಖ,ನೋವು-ನಲಿವು, ಲಾಭ- ನಷ್ಟ,ಜಯ -ಅಪಜಯ,ಪ್ರೀತಿ-ದ್ವೇಷ
ಮುಂತಾದ ದ್ವಂದ್ವಗಳ ವ್ಯರುಧ್ಯಗಳ ಸಂಗಮ.ಜ್ಞಾನಿಗಳಲ್ಲಿ ಪ್ರಪಂಚವನ್ನು ನೋಡುವ ದೃಷ್ಟಿ ಬದ;ಆಯಿಸುತ್ತದೆಯೇ ಹೊರತು ಪ್ರಪಂಚದ ಸ್ವಭಾವವು ಹೀಗೆಯೇ ಇರುತ್ತದೆ.)
11)ಜ್ಞಾನವು
ಪ್ರಮಾಣಜನ್ಯವಾಗಿ
ವಸ್ತುತಂತ್ರ ವಾಗಿರುವುದರಿಂದ
ನೂರುಗಟ್ಟಲೆ ನಿಯೋಗದಿಂದಲೂ ಅದು ಆಗತಕ್ಕದ್ದಲ್ಲ.(ಪುಟ 238)
12)ಆದ್ದರಿಂದ ಬ್ರಹ್ಮವಿಜ್ಞಾನವುಂಟಾದ ಬಳಿಕ
ಸಾಧಕನಿಗೆ ಯಾವ ಕತ೯ವ್ಯವೂ ಉಳಿಯುವುದಿಲ್ಲ.ಶಾಸ್ತ್ರಕ್ಕೆ ಯಾವ ಕತ೯ವ್ಯವೂ
ಇರುವುದಿಲ್ಲ.(ಪುಟ 240)
13)ನಿದಿಧ್ಯಾಸನಕ್ಕೆ
ಇಲ್ಲಿಯೇ ಜ್ಞಾನ ಪ್ರಾಪ್ತಿಯಾಗಿ
ಬ್ರಹ್ಮ ಸ್ವರೂಪದಲ್ಲಿ ನೆಲೆನಿಲ್ಲುವ
ಕೈವಲ್ಯವೂ ದೊರಕಿಬಿಡುತ್ತದೆ.(ಪುಟ 241)
14)ಜ್ಞಾನದ್ವಾರವಾಗಿ ಮುಕ್ತನಾದವನು
ಅಶರೀರನಾಗುತ್ತಾನೆ. ಏಕೆಂದರೆ
ಸಶರೀರತ್ವವು ಮಿಥ್ಯಾ ಜ್ಞಾನಕೃತವಾಗಿರುತ್ತದೆ.ಅವನು ಜ್ಞಾನದಿಂದ ಅಮನಸ್ತೆಯನ್ನು ಪಡೆದಿರುತ್ತಾನೆ.(ಪುಟ241)
14)ಜ್ಞಾನೋತ್ಪತ್ತಿಗೆ ಕಮ೯ವು ಕಾರಣವು ಎಂಬುದನ್ನು
ಶೃತಿ ಸ್ಮøತಿಗಳಲ್ಲಿ ಹೇಳಿದೆ.(ಪುಟ 253)
15)ಕಮ೯ಕ್ಕೆ ಉಪಾಸನೆಯಿಂದ
ಬೇರೊಂದು ಫಲವನ್ನು
ಕೊಡುವುದಕ್ಕೆ ಶಕ್ತಿ ಬಂದೀತೇ ಹೊರತು
ಅದಕ್ಕೆ ನಿತ್ಯವಾದ
ಫಲಾಂತರವನ್ನು
ಕೊಡುವ ಸಾಮಥ್ಯ೯ವು
ಬರುವುದೆಂಬುದಕ್ಕೆ ಪ್ರಮಾಣವಿಲ್ಲ.(ಪುಟ 254)
16)ಇನ್ನು ವಸ್ತುತಂತ್ರವೇ ಜ್ಞಾನವೆಂದರೆ
ಅದರೊಡನೆ ಕ್ರಿಯಾಕಾರಕ ಫಲಬುದ್ಧಿಯು ಇರಲಾರದಾದ್ದರಿಂದ ಜ್ಞಾನಕಮ೯ಸಮುಚ್ಚಯವೇ
ಹೊಂದಲಾರದು.(ಪುಟ 255)
ಅಧ್ಯಾಯ 25 ಮುಕ್ತಿಸಾಧನಗಳು:
1)ಮೋಕ್ಷವು ಅಕೃತವಾದ್ದರಿಂದ
ಕಮ೯ದಕಾಯ೯ವಲ್ಲ.(ಮುಂ.1-2-12)(ಪುಟ24೯).
2)ಪುಣ್ಯದಿಂದ ಗೆದ್ದುಕೊಂಡ ಲೋಕವು ಕ್ಷಯವಾಗುತ್ತದೆ.((ಛಾಂ8-1-6)(ಪುಟ 24೯)
3)ಕಮ೯ಗಳ ಫಲವು ಕೊನೆಯಾಗಲು ಈ ಲೋಕದಲ್ಲಿ
ಮತ್ತೆ
ಕಮ೯ವನ್ನು ಮಾಡಲು ಬರುತ್ತಾನೆಮುಂ1-2-7)(ಬೃ4-4-6)(ಪುಟ 24೯)
4)ಕಮ೯ದ ಕಾಯ೯ವು 1)ಉತ್ಪಾದ್ಯ 2)ವಿಕಾಯ೯ 3) ಸಂಸ್ಕಾಯ೯ 4)ಆಪ್ಯ-ಎಂಬ ನಾಲ್ವರಲ್ಲಿ ಒಂದಾಗಿರುತ್ತದೆ.
ಮೋಕ್ಷವು1)ಅನುತ್ಪಾದ್ಯ 2)ಅವಿಕಾಯ೯ 3) ಅಸಂಸ್ಕಾಯ೯ 4)ಅನಾಪ್ಯ(ಪುಟ 24೯)
5) ಕಮ೯ದಿಂದ ಮೋಕ್ಷವು ಉಂಟಾಗುವುದಿಲ್ಲ.(ಪುಟ 24೯)
6) ಬ್ರಹ್ಮಜ್ಞಾನದಿಂದ
ಪರಮಪುರುಷಾಥ೯ವಾದ ಅಮೃತತ್ವವು(ಮೋಕ್ಷವು) ಸಿಕ್ಕುತ್ತದೆ ಎಂದು ಶೃತಿಗಳು ಮತ್ತೆ ಮತ್ತೆ ಹೇಳುತ್ತವೆ.(ತೈ2-1).(ಪುಟ 24೯)
7)ಜ್ಞಾನದಿಂದಲೇ ಮೋಕ್ಷವು ಸಿಗುತ್ತದೆ(ಪುಟ 24೯)
8)ಲೋಕದಲ್ಲಿ ಕಾಮಿಗಳು ಹೆಚ್ಚು.ಮುಮುಕ್ಷುಗಳು ಕಡಿಮೆ.(ಪುಟ 250)
೯)ಮೋಕ್ಷವು ನಿತ್ಯಸಿದ್ಧವಾದುದರಿಂದ
ಕಮ೯ದಿಂದ ಪಡೆಯುವ ಫಲವಲ್ಲ.(ಪುಟ ಪುಟ 250)
10)ಮೋಕ್ಷವೆಂದರೆ ಆತ್ಮಸ್ವರೂಪದಲ್ಲಿ ನೆಲೆಸುವುದು.(ಪುಟ251)
11)ಆತ್ಮ ಸ್ವರೂಪದಲ್ಲಿಯೇ
ನೆಲೆ ನಿಲ್ಲುವುದೆಂಬ ಮೋಕ್ಷವು
ಅಯತ್ನದಿಂದ ಕಮ೯ದಿಂದಲೇ ಸಿದ್ಧವಾಗುವುದು ಎಂದು ಮೀಮಾಂಸಕರು ಹೇಳುತ್ತಿದ್ದರು.ಇದು ಸರಿಯಲ್ಲ.(ಪುಟ 251)
12)ಕಮ೯ವು ತಾನೇ ಅವಿದ್ಯಾಕೃತವಾದ ಕಾಮದಿಂದ ಆಗಿರುವುದರಿಂದ
ಎಂದಿಗೂ ಅಜ್ಞಾನವನ್ನು ಕಳೆಯಲಾರದು.ಆತ್ಮಜ್ಞಾನವಿಲ್ಲದೆ
ಎಂದಿಗೂ ಕಮ೯ಕೃತವಾದ
ಸಂಸಾರದ ಅಂತವು ಆಗಲಾರದು.(ಪುಟ 252)
13)ಈಶ್ವರಾಪ೯ಣ ಬುದ್ಧಿಯಿಂದ ಮಾಡಿದ ಕಮ೯ಗಳಿಂದ
ಚಿತ್ತಶುದ್ಧಿಯ ಮೂಲಕವಾಗಿ ಜ್ಞಾನನಿಷ್ಠೆಗೆ ಯೋಗ್ಯತೆಯೂ
ಜ್ಞಾನವೂ ಉಂಟಾಗುವುವು.ಉಪಾಸನಾ ಸಮುಚ್ಚಿತವಾಗಿ(ಕೂಡಿ) ಇಂಥ ಕಮ೯ವನ್ನು ಮಾಡಿದರೆ
ಕಮ೯ವು ವೀಯ೯ವತ್ತರವಾಗುವುದು.(ಪುಟ 253)
14)ಜ್ಞಾನೋತ್ಪತ್ತಿಗೆ ಕಮ೯ವು ಕಾರಣವು ಎಂಬುದನ್ನು
ಶೃತಿ ಸ್ಮøತಿಗಳಲ್ಲಿ ಹೇಳಿದೆ.(ಪುಟ 253)
15)ಕಮ೯ಕ್ಕೆ ಉಪಾಸನೆಯಿಂದ
ಬೇರೊಂದು ಫಲವನ್ನು
ಕೊಡುವುದಕ್ಕೆ ಶಕ್ತಿ ಬಂದೀತೇ ಹೊರತು
ಅದಕ್ಕೆ ನಿತ್ಯವಾದ
ಫಲಾಂತರವನ್ನು
ಕೊಡುವ ಸಾಮಥ್ಯ೯ವು
ಬರುವುದೆಂಬುದಕ್ಕೆ ಪ್ರಮಾಣವಿಲ್ಲ.(ಪುಟ 254)
16)ಇನ್ನು ವಸ್ತುತಂತ್ರವೇ ಜ್ಞಾನವೆಂದರೆ
ಅದರೊಡನೆ ಕ್ರಿಯಾಕಾರಕ ಫಲಬುದ್ಧಿಯು ಇರಲಾರದಾದ್ದರಿಂದ ಜ್ಞಾನಕಮ೯ಸಮುಚ್ಚಯವೇ
ಹೊಂದಲಾರದು.(ಪುಟ 255)
ಅಧ್ಯಾಯ 26) ಜ್ಞಾನ ಸಾಧನಗಳ ವಿನಿಯೋಗ:
1) ಜ್ಞಾನವಿಲ್ಲದೆ ಮತ್ತೆ ಯಾವುದರಿಂದಲೂ ಜ್ಞಾನಪ್ರಾಪ್ತಿ ಇಲ್ಲ.(ಪುಟ 256)
2)ಆದರೆ ಕಮ೯,ಉಪಾಸನೆ ,ಯೋಗ -ಮುಂತಾದವುಗಳನ್ನು ಮುಕ್ತಿ ಸಾಧನವಾಗಿ
ತಿಳಿಸುವ
ವಾಕ್ಯಗಳೂ ಅಲ್ಲಲ್ಲಿ ಶ್ರುತಿಯಲ್ಲಿರುವಂತೆ ತೋರುತ್ತದೆ.(ಪುಟ 257)
3)ಜ್ಞಾನವು ಮೋಕ್ಷಕ್ಕೆ ನೇರವಾದ ಸಾಧನ.(ಪುಟ 252)
4) ಬದುಕಿರುವವರೆಗೂ
ಕಮ೯ವನ್ನು ಮಾಡಬೇಕು
ಎಂದು ಅಶ್ರಮ ಕಮ೯ವನ್ನು ವಿಧಿಸಿದೆ.(ಪುಟ 257)
5)ಕಮ೯ದಿಣದಲೇ ದುರಿತ ಪ್ರತಿಬಂಧವು
ಹೋಗಬೇಕಾಗಿರುವುದರಿಂದಲೂ
ಪ್ರತಿಬಂಧವು ಕಳೆದಲ್ಲದೆ
ಯಾರಿಗೂ ಚಿತ್ತಶುದ್ಧಿಯಾಗಿ
ಜ್ಞಾನೋತ್ಪತ್ತಿಯಾಗುವುದಿಲ್ಲ.(ಪುಟ 25೯)
6)ಕಮ೯ವೊಂದೇ ಮೋಕ್ಷಸಾಧನವು ಎಂದು ಭ್ರಾಂತರಾಗಬಾರದು.(ಪುಟ 26೯)
7)ಆಶ್ರಮಗಳಲ್ಲಿರುವಅಹಿಂಸೆ,ಬ್ರಹ್ಮಚಯ೯,ಸತ್ಯಮುಂತಾದವುಗಳು ಜ್ಞಾನಕ್ಕೆ
ಉಪಕಾರಕಗಳಾಗಿರುತ್ತವೆ.(ಪುಟ 25೯)
8) ಶ್ರವಣ,ಮನನ,ನಿದಿಧ್ಯಾಸನಗಳಂತೂ
ನೆರವಾಗಿಯೇ ಜ್ಞಾನಕ್ಕೆ ಕಾರಣ.(ಪುಟ 25೯)
೯)
ಬಹಿಮು೯ಖಿ-ಕಮ೯ಯೋಗವನ್ನು ಮಾಡಬೇಕು.ಚಿತ್ತಶುದ್ಧಿಯಾಗಿದ್ದು
ಚಿತ್ತಚಾಂಚಲ್ಯವನ್ನು ಕಳೆದುಕೊಳ್ಳಬೇಕೆನ್ನುವವನು ಉಪಾಸನಾ ಯುಕ್ತ ಕಮ೯ಗಳನ್ನು ಮಾಡಬೇಕು.ಅಥವಾ ಕಮ೯ಸನ್ಯಾಸವನ್ನು ಮಾಡಿ
ಶಮಾದಿ ಉಪಾಯಗಳನ್ನು
ಕೈಕೊಳ್ಳಬೇಕು.ಚಿತ್ತಶುದ್ಧಿಯೂ ಚಿತ್ತೈಕಾಗ್ರತೆ ಯೂ
ಇದ್ದವನು ವೇದಾಂತ ಶ್ರವಣವನ್ನು ಮಡಬೇಕು.ಶ್ರವಣಮಾತ್ರದಿಂದ
ಕೃತಕೃತ್ಯನಾಗದವನುಮನನ ನಿದಿದ್ಯಸನಗಳನ್ನು ಮಾಡಬೇಕು(ಪುಟ .260)
10)ಶ್ರವಣಾದಿಗಳು ನೇರವಾಗಿಯೂ ಮಿಕ್ಕವು ಪ್ರತಿಬಂಧ ನಿವೃತ್ತಿಯ ಮೂಲಕವೂ ಜ್ಞಾನಕ್ಕೆ ಕಾರಣವಾಗುವವು(ಪುಟ 261)
11)ಬ್ರಹ್ಮಸಂಸ್ಥನಿಗೇ ಅಮೃತತ್ವವು(ಮುಕ್ತಿಯು) ದೊರೆಯುತ್ತದೆ.ಮಿಕ್ಕ ಆಶ್ರಮಿಗಳಿಗೆ ಪುಣ್ಯಲೋಕವು ದೊರೆಯುತ್ತದೆ ಎಂದು ಶ್ರುತಿಯಲ್ಲಿ ಹೇಳಿದೆ.(ಪುಟ 262)
12)ಬಹಿರಂಗವಾದ ಕಮ೯ದೊಡನೆ ಅಂತರಂಗವಾದ ಧ್ಯಾನಾದಿಗಳನ್ನು ಮಾಡಲು ಸಾಧ್ಯವಿಲ್ಲ.(ಪುಟ 262)
13)ಸಾರಾಂಶ;ಕೇವಲಕಮ೯ವನ್ನೇ ಆಗಲಿ,ಉಪಾಸನಾಸಹಿತವಾದ ಕಮ೯ವನ್ನಾಗಲಿ ,ಮುಮುಕ್ಷುವಾದವನು ಮೋಕ್ಷವಾಗಬೇಕೆಂಬ ಇಚ್ಛೆಯಿಂದ,ಈ ಜನ್ಮದಲ್ಲಿಯೋ ಮುಂದಿನ ಜನ್ಮದಲ್ಲಿಯೋ ಜ್ಞನೋತ್ಪತ್ತಿಗಿಂತ ಮೊದಲೇ ಮಾಡಿದ್ದದ್ದು ತನ್ನ ಶಕ್ತಿಗೆ ಅನುಗುಣವಾಗಿ
ಬ್ರಹ್ಮವನ್ನು ಅರಿತುಕೊಳ್ಳುವುದಕ್ಕೆ ಹಿಂದೆ ಮಾಡಿದ ಪಾಪವನ್ನು ಕಳೆಯುವುದರ ಮೂಲಕ
ಬ್ರಹ್ಮಜ್ಞಾನಕ್ಕೆ ಕಾರಣವಾಗುತ್ತದೆ.ಆಮೇಲೆ ಶ್ರವಣ,ಮನನ,ಶ್ರದ್ಧೆ,ತಾತ್ಪಯ೯ವೇ ಮುಂತಾದ ಅಂತರಂಗ ಸಾಧನಗಳನ್ನು ಅನುಷ್ಠಾನಮಾಡುವುದರ ಮೂಲಕ ಉಂಟಾಗುವ ಬ್ರಹ್ಮವಿದ್ಯೆಯಿಂದಾಗುವ ಮುಕ್ತಿಗೂ ಪರಂಪರೆಯಿಂದ
ಕಾರಣವಾಗುತ್ತದೆ.(ಪುಟ 263)
14)ಋಣತ್ರಯಗಳನ್ನು ಕಳೆದುಕೊಳ್ಳದೆ
ಸನ್ಯಾಸವನ್ನು ತೆಗೆದುಕೊಳ್ಳಕೂಡದು
ಎಂದು ಸ್ಮøತಿಯಿದೆ(ಪುಟ264)
15)ಮುಮುಕ್ಷುಗಳಿಗೆ ಪಾರಿವ್ರಾಜ್ಯವೇ
ಪ್ರಶಸ್ತವಾಗಿರುತ್ತದೆ.(ಪುಟ 265)
16)ಪರಮಹಂಸ ಪಾರಿವ್ರಾಜ್ಯವೇ
ವೇದೋಕ್ತವಾದ ಜ್ಞಾನಾಂಗ ಸನ್ಯಾಸವೆಂದೂ ,ಪರಮ ಹಂಸನಿಗೆ ಶಮದಮಾದಿಗಳನ್ನು ಬಿಟ್ಟರೆ
ಮತ್ತೆ ಯಾವ ಕಮ೯ಗಳೂ ಇಲ್ಲವೆಂದೂ
ಆಚಾಯ೯ರು ತಿಳಿಸಿಕೊಟ್ಟಿರುತ್ತಾರೆ.(ಪುಟ267)
17)ಆದರೆ ಮುಮುಕ್ಷುವಾದವನು ಮತ್ತು ಸನ್ಯಾಸಿಯು
ಅವಶ್ಯವಾಗಿ ಮಾಡಬೇಕಾಗಿರುವ
ಧ್ಯಾನಯೋಗಗಳು ಆತ್ಮಚಿಂತನೆ,ಆತ್ಮಜ್ಞಾನಕ್ಕಾಗಿ ಮಾಡಬೇಕಾದ
ಏಕಾಗ್ರತಾ ರೂಪವಾದ ನಿದಿಧ್ಯಾಸನ -ಇವುಗಳೇ ಹೊರತು ಉಪಾಸನೆಯಲ್ಲ.(ಪುಟ 268)
18)ಚಿತ್ತವೃತ್ತಿರೂಪವಾದ ಯೋಗವಂತೂ ಇಲ್ಲಿ ಪ್ರಕೃತವೇ ಅಲ್ಲ.ಏಕೆಂದರೆ ಆ
ಯೋಗವನ್ನು ವೇದದಲ್ಲಿ ವಿಧಿಸಿಲ್ಲ.ಆತ್ಮಜ್ಞಾನವಾಗದೆ ಯೋಗದಿಂದ ಮುಕ್ತಿಯು ದೊರೆಯುವುದೂ ಇಲ್ಲ.(ಪುಟ 26೯)
1೯) ಕಮ೯ಗಳೂ ಉಪಾಸನೆಗಳೂ
ಪರಂಪರೆಯಿಂದ ಅವಿದ್ಯಾ ನಿವೃತ್ತಿ
ಕಾರಣವಾದ ಜ್ಞಾನಕ್ಕೆ ಉಪಯೋಗವಾºಗುತ್ತದೆ.(ಪುಟ 271)
ಅಧ್ಯಾಯ 27 ಜ್ಞಾನಿಯ ಕೃತಕೃತ್ಯತೆ:
1) ಕಮ೯,ಉಪಾಸನೆ, ಶಮಾದಿಗಳು,ಶ್ರವಣಾದಿಗಳು -ಎಲ್ಲವೂ ಆತ್ಮಜ್ಞಾನಕ್ಕೆ ಕಾರಣವೇ ಹೊರತು
ಅತ್ಮಜ್ಞಾನವುಂಟಾದ ಮೇಲೆ
ಮಾಡತಕ್ಕದ್ದು ಯಾವುದೂ ಇರುವುದಿಲ್ಲ.(ಪುಟ 272)
2)ಆತ್ಮಜ್ಞಾನವಾದ ಮೇಲೂ ಮಾಡತಕ್ಕ ಕತ೯ವ್ಯವಿರುವುದೆಂದು
ಭಾವಿಸುವುದು ಶೃತಿ ಸ್ಮøತಿ ವಿರುದ್ಧವು. ಕತೃ೯ಭೋಕ್ತøವಲ್ಲದ ನಿತ್ಯಮುಕ್ತನಾದ ಆತ್ಮನೇ ನಾನೆಂಬ ಅನುಭವವುಂಟಾದ ಮೇಲೂ
ಮಾಡತಕ್ಕದ್ದು ಇರುತ್ತದೆ ಎಂಬುದು ಯುಕ್ತಿಗೂ ವಿರುದ್ಧವಾಗಿರುತ್ತದೆ. (ಪುಟ 272)
3)ಆತ್ಮಜ್ಞಾನರೂಪವಾದ
ಪಾಂಡಿತ್ಯವನ್ನು ನಿಃಶೇಷಗೊಳಿಸಿದ ನಂತರವೂ
ಬಾಲ್ಯ ಮತ್ತು ಮೌನ ಎಂಬ ಸಾಧನೆಗಳನ್ನು ಮಾಡಬೇಕೆಂದು
ಬೃಹದಾರಣ್ಯಕದಲ್ಲಿ ಹೇಳಿದೆ(ಬೃ3-5-1) (ಪುಟ273)
4)ಪಾಂದಿತ್ಯವೆಂದರೆ ಆಚಾಯ೯ರಿಂದಲೂ
ಆಗಮದಿಂದಲೂ
ಆತ್ಮವಿಜ್ಞಾನವನ್ನು
ನಿಃಶೇಷವಾಗಿ ಮಾಡಿಕೊಂಡು
ಸವ೯ಕಮ೯ಸನ್ಯಾಸವನ್ನು ಮಾಡುವುದು.(ಪುಟ (273)
5)ಬಾಲ್ಯವೆಂದರೆ ಜ್ಞಾನಬಲದೊಡನೆ
ಕೂಡಿಕೊಂಡು
ಅನಾತ್ಮ ಪ್ರತ್ಯಯವನ್ನು ತಿರಸ್ಕರಿಸುತ್ತಿರುವುದು.
ಅಥವಾ ಬಾಲನಂತೆ ತನ್ನ ಜ್ಞಾನ, ಅಧ್ಯಯನ, ಧಾಮಿ೯ಕತ್ವ -ಮುಂತಾದವುಗಳನ್ನು ಪ್ರದಶ೯ನ ಮಾಡದೆ
ಅಮಾನಿತ್ವದಿಂದಿರುವುದು.(ಪುಟ 273)
6)ಮೌನವೆಂದರೆ ಅನಾತ್ಮಪ್ರತ್ಯಯ ತಿರಸ್ಕರಣದ ಫಲವಾದ ಅನುಭವದಲ್ಲಿ ನೆಲೆನಿಲ್ಲುವುದು.ಈ ಮೌನವು ಅಳವಟ್ಟರೇ
ಬ್ರಹ್ಮನಿಷ್ಠನಾದನು ಎಂದು ಶೃತಿಯ ಅಥ೯.(ಪುಟ 273)
7) ಈ ಸಾಧನೆಗಳೆಲ್ಲ ವಿವಿದಿಷಾ (ತತ್ವವನ್ನು ಅರಿಯಬೇಕೆಂಬ)ಸನ್ಯಾಸಿಗೇ ಆಗಿರುವುದರಿಂದ ಅವನಿಗೆ ಮಾಡತಕ್ಕ ಬೇರೆ ಯಾವ ಕಮ೯ಗಳೂ
ಇರುವುದಿಲ್ಲವೆಂಬುದನ್ನು
ಹೇಳಬೇಕಾದ್ದೇ ಇಲ್ಲ.ಜ್ಞಾ ಉಂಟಾದ ಮೇಲೆ ಈ ಸಾಧನೆಗಳು
ಮಿಥ್ಯೆಯೇ ಆಗಿಬಿಡುವವು.(ಪುಟ 274)
8) ಬ್ರಹ್ಮವಿತ್,ಬ್ರಹ್ಮವಿದ್ಯರ,ಬ್ರಹ್ಮವಿದ್ವರಿಷ್ಟ-ಎಂದು ಜ್ಞಾನಿಗಳಲ್ಲಿ
ತರಹತಿಗಳನ್ನೂ ಕೆಲವರು
ಕಲ್ಪಿಸಿಕೊಳ್ಳುತ್ತಾರೆ.ಆದರೆ ಅನುಭವ ರೂಪವಾದ ವಿಜ್ಞಾನದಲ್ಲಿ ಯಾವ ಹೆಚ್ಚು ಕಡಿಮೆಯೂ ಇಲ್ಲ.
(ಪುಟ 275)
೯)ಜ್ಞಾನದಲ್ಲಿ ಭೇದವು ಇರುವುದೆಂದು ಕಲ್ಪಿಸಿದರೂ
ಪರೋಕ್ಷ ,ಅಪರೋಕ್ಷ ಎಂದು ಮಾತ್ರ
ಕಲ್ಪಿಸಬಹುದು. ಆದರೆ ಯಾವುದು ಅಪರೋಕ್ಷವೋ ,ಎಲ್ಲಕ್ಕೂ ಹೆಚ್ಚಿನದೋ,ಅದೇ ಇಞನವೆನಿಸೀತೇ ಹೊರತು ಮಿಕ್ಕದ್ದು ಜ್ಞಾನವೆನಿಸಲಾರದು.(ಪುಟ 276)
10)ಮೋಕ್ಷವೆಂದರೆ ನಿತ್ಯಸಿದ್ದವಾದ ಬ್ರಹ್ಮವೇ.ಜ್ಞಾನವು ಬ್ರಹ್ಮವಿಷಯದ ಅಜ್ಞಾನವನ್ನು ಬಾಧಿಸುವುದೇ ಹೊರತು
ಇಲ್ಲದ ಮುಕ್ತಿಯನ್ನುಂಟು ಮಾಡಿಕೊಡುವುದಿಲ್ಲ.(ಪುಟ 276)
12)ಬೆಳಕು
ಉಂಟಾದ ಕೂಡಲೇ ಕಣ್ಣಿಗೆ ರೂಪವು ತೋರಿಕೊಂಡು ಬಿಡುವಂತೆ
ಜ್ಞಾನವು ಉಂಟಾದ ಕೂಡಲೇ ಅವಿದ್ಯೆಯು ನಾಶವಾಗಿಬಿಡುವುದರಿಂದ ,ನಿತ್ಯಸಿದ್ಧವಾಗಿರುವ ಮುಮುಕ್ಷುವಿನ ಸ್ವರೂಪವೇ ಆಗಿರುವ
ಮುಕ್ತಿಯು ಅದೇ ಕಾಲದಲ್ಲಿಯೇ ತೋರಿಕೊಂಡು ಬಿಡುತ್ತದೆ.ಆ ಮುಕ್ತಿಯು ಜ್ಞಾನದ ಕಾಯ೯ವಲ್ಲ:ಜ್ಞಾನದಿಂದ ವ್ಯಕ್ತವಾಗುವುದು.ಅವಿದ್ಯಾ ಬಂಧವು ನಿವೃತ್ತಿಯಾಗಿರುವುದರಿಂದ
ಅದು ಜ್ಞಾನ ಕಾಯ೯ವು,ಜ್ಞಾನಫಲವು-ಎಂದು ಉಪಚಾರಕ್ಕಾಗಿ ಹೇಳಿರುತ್ತಾರೆ;ಅಷ್ಟೆ.(ಪುಟ 277)
13)ಕಾಮಗಳು ತೊಲಗುವವು;ತತ್ವ ವಿಷಯದಲ್ಲಿ
ಸತತವಾಗಿ ಉಂಟಾಗುತ್ತಿದ್ದ
ಸಂಶಯಗಳು ಕತ್ತರಿಸಿ ಹೋಗುವವು.ಎಲ್ಲಾ ಕಮ೯ಗಳೂ ಕ್ಷಯವಾಗುವವು.ಆದ್ದರಿಂದ ಜ್ಞಾನಿಗೆ ಮಾಡತಕ್ಕದ್ದು ಇನ್ನು ಮುಂದೆ ಏನೂ ಉಳಿಯುವುದಿಲ್ಲ.ಅವನು ಯಾವಾಗಲೂ ಆತ್ಮನಿಷ್ಠನಾಗಿರುತ್ತಾನೆ.(ಪುಟ 277)
14) ಆಚಾಯ೯ರು ಜ್ಞಾನಿಗೆ ವಿಪರೀತ ಪ್ರತ್ಯಯವಾಗಲೀ ,ಸಂಸಾರಿತ್ವವಾಗಲೀ ಇರುವುದಿಲ್ಲವೆಂದು
ಸ್ಪಷ್ಟವಾಗಿ ಹೇಳಿ
ಅವಿದ್ಯಾರಹಿತವಾದ
ಜೀವನ್ಮುಕ್ತಿಯನ್ನೇ ಆದರಿಸಿರುತ್ತಾರೆ.(ಪುಟ 278)
15) ವಿದೇಹಮುಕ್ತಿ-ಮರಣಾನಂತರ ಮುಕ್ತಿ.
ಸದ್ಯೋಮುಕ್ತಿ-ಜ್ಞಾನಸಮಕಾಲದಲ್ಲಿಯೇ ಮುಕ್ತಿ.ಜ್ಞಾನದಿಂದ ಅಜ್ಞಾನವು ನಾಶವಾದರೆ
ಕೂಡಲೆ ಶರೀರವು ಬಿದ್ದುಹೋಗಿ ಮುಕ್ತಿಯಾಗಿ ಬಿಡುತ್ತದೆ.ಇದಕ್ಕೆ ಸದ್ಯೋಮುಕ್ತಿ ಎಂದು ಹೆಸರು.(ಪುಟ 27೯)
16)ಜ್ಞಾನದಿಂದ
ಅವಿದ್ಯೆಯು ಸಂಪೂಣ೯ವಾಗಿ ನಾಶವಾಗುತ್ತದೆ.ಎಂದರೆ ಅದು ನಿಜವಾಗಿ ಇಲ್ಲವೇ ಇಲ್ಲ. ಎಂಬ ನಿಶ್ಚಯವಾಗಿ ಬಿಡುತ್ತದೆ.ಇಷ್ಟೇ ಹೊರತು
ಜ್ಞಾನವು ಅವಿದ್ಯೆಯನ್ನು
ಕೊಡಲಿಯು ಮರವನ್ನು ಕತ್ತರಿಸಿ ಹಾಕುವಂತೆ ಅಥವಾ ಬೆಂಕಿಯು ಕಟ್ಟಿಗೆಯನ್ನು ಸುಡುವಂತೆ
ನಾಶಮಾಡುವುದಿಲ್ಲ.(ಪುಟ 281)
17)ನಾನು ಹಿಂದೆ ಕತೃ೯ಭೋಕ್ತøವಾಗಿರಲಿಲ್ಲ.,ಈಗಲಗೂ ಇಲ್ಲ , ಮುಂದೆಯೂ ಕತೃ೯ ಭೋಕ್ತøವಾಗಿರುವುದಿಲ್ಲ ಎಂಬ ನಿಶ್ಚಯದಿಂದ
ಆಗುವ ಕಮ೯ ಬಂಧದ ಬಿಡುಗಡೆಯನ್ನೇ ಆಚಾಯ೯ರು
ಸದಯೋಮುಕ್ತಿಯೆಂದು ಕರೆದಿರುತ್ತಾರೆ(ಪುಟ 280)
(ಗಮನಿಸಿ: ಇದನ್ನು ಈ ರೀತಿಯೂ ಹೇಳಬಹುದು.ನಾನು ಹಿಂದೆಯೂ ಬ್ರಹ್ಮವಾಗಿದ್ದೆನು,ಈಗಲೂ ಬ್ರಹ್ಮವೇ ,ಮುಂದೆಯೂ ಬ್ರಹ್ಮವೇ,ನನ್ನ
ಸ್ವರೂಪವನ್ನು ಯಾರೂ(ಯಾವುದೂ) ಬದಲಾಯಿಸಲಾರರು
ಇದೇ
ಬ್ರಹ್ಮಜ್ಞಾನ.ಇದೇ ಮುಕ್ತಿ)
18)ಜ್ಞಾನದಿಂದ ಕಮ೯ವು ಅತ್ಯಂತಿಕವಾಗಿ ನಾಶವಾಗಲು
ನಿಷ್ಕ್ರಿಯನಾದ ಪರಮಾತ್ಮನೇ ನಾನೆಂಬ
ಅರಿವಿನಲ್ಲಿ ನೆಲೆನಿಲಲುವುದೇ ನಿಜವಾದ ಸವ೯ಕಮ೯ ಸನ್ಯಾಸವು.(ಪುಟ 281)
1೯)ಸನ್ಯಾಸಿಗಳು ಮಾಡುವ ಕಮ೯ವು ಲೋಕಸಂಗ್ರಹಕ್ಕಾಗಿ .ಎಂದರೆ ಅಜ್ಞರಿಗೆ ಮಾಗ೯ದಶ೯ನಕ್ಕಾಗಿಆದ್ದರಿಂದ ಅವರು ಯಾವ ಆಶ್ರಮದಲ್ಲಿದ್ದರೂ ಕೃತಕೃತ್ಯರೇ.(ಪುಟ 282)
20)ಕ್ರಿಯಾಕಾರಕ ಫಲಗಳನ್ನು ಸತ್ಯವೆಂದು ತಿಳಿದವರು ,ಶೂನ್ಯವಾದಿಗಳು,ಅಥವಾ ಸೋಮಾರಿಗಳು
ಕಮ೯ವನ್ನು ಬಿಡುವುದು ಎಂದಿಗೂ ಸನ್ಯಾಸವಾಗಲಾರದು.(ಪುಟ282)
21) ಜ್ಞಾನವು ಯಾವಾಗಬೇಕಾದರೂ ಉಂಟಾಗಬಹುದು. ವಾಮದೇವನಿಗೆ ಗಭ೯ದಲ್ಲಿರುವಾಗಲೇ ಆಯಿತು(ಪುಟ 283).
22)ಜ್ಞಾನಿಗಳಿಗೆ ಆಯಾ ಆಶ್ರಮಗಳ
ಕಮ೯ಗಳಲ್ಲಿ ಯಾವ
ಪ್ರಯೋಜನವೂ ಕಾಣದೇ ಇರುವುದರಿಂದ ಏಷಣಾ ವ್ಯುತ್ಥಾನರೂಪವಾದ
ಪಾರಿವ್ರಾಜ್ಯವೇ ಪ್ರಾಪ್ತವಾಗುವುದು.ಏಷಣಾತ್ಯಾಗರೂಪವಾದ
ಅಭಾವವೇ ಹೊರತು
ಕ್ರಿಯೆಯಲ್ಲ.೯ಪುಟ 284)
23)ಜ್ಞಾನಿಯು ಲೋಕ ಸಂಗ್ರಹಕ್ಕಾಗಿ
ಆಯಾ ಕಮ೯ವನ್ನು ಮಾಡಿಕೊಂಡಿರುವನೇ ಹೊರತು
ಯಥಾಷ್ಟಚೇಷ್ಟೆಯಲ್ಲಿರಲಾರನು.(ಪುಟ 284)
24)ಆದ್ದರಿಂದ ಜ್ಞಾನಿಯು
ಮಾಡುವ ಕಮ೯ವು ವೈದಿಕ ಕಮ೯ವಾಗಲೀ
ಲೌಕಿಕ ಕಮ೯ವಾಗಲೀ ಅವನಿಗೆ ಅದರಲ್ಲಿ ಕತೃ೯ತ್ವ ಬುದ್ಧಿಯಿಲ್ಲದಿರುವುದರಿಂದಲೂ ಸವ೯ತ್ರ ಬ್ರಹ್ಮಬುದ್ದಿಯಿರುವುದರಿಂದಲೂ ಅದು ಎಂದಿಗೂ ಕಮ೯ವೆನಿಸುವುದಿಲ್ಲ. (ಪುಟ 284)
25)ಆತ್ಮಜ್ಞಾನಕ್ಕೆ ಅಂಗವಾಗಿರುವುದು ಪಾರಿವ್ರಾಜ್ಯ ಮಾತ್ರವೇ(ಪುಟ 288)
26) ಆದ್ದರಿಂ ಮುಮುಕ್ಷುಗಳಾದವರು ಯಾರೇ ಆಗಲಿ ಪರಮಹಂಸ ಪಾರಿವ್ರಾಜ್ಯವನ್ನು ಅಂಗಿಕರಿಸಬೇಕು.(ಪುಟ 288)
27)ಜ್ಞಾನಿಯಾದವನಿಗೆ ಯಾವ ಲೌಕಿಕವೈದಿಕ ವ್ಯವಹಾರವೂ ಇರುವುದಿಲ್ಲ. ಏಕೆಂದರೆ ವ್ಯವಹಾರವೆಲ್ಲವೂ ಅವಿದ್ಯಾಕಾಯ೯ವಾಗಿರುತ್ತದೆ.(ಪುಟ28೯)
28)ಸ್ಥಿತಪ್ರಜ್ಞ,ಯುಕ್ತ,ಭಕ್ತ,ತ್ರಿಗುಣಾತೀತ,-ಎಂಬ ಹೆಸರಿನಿಂದ
ಗೀತೆಯಲ್ಲಿ ಜ್ಞಾನಿಯನ್ನು ವಣಿ೯ಸಿ
ಲಕ್ಷಣಗಳನ್ನು ತಿಳಿಸುತ್ತದೆ.ಈ ಲಕ್ಷಣಗಳೇ ಮುಮುಕ್ಷುಗಳಾದವರಿಗೆ ಸಾಧನಗಳಾಗಿರುತ್ತವೆ.ಪುಟ 28೯)
2೯)ಉಪಾಸನಾ ರೂಪವಾದ ಜ್ಞಾನವು
ಕ್ರಿಯೆಯೇ ಆಗಿರುವುದರಿಂದ
ಅದಕ್ಕೆ ಕಮ೯ದ ಸಹಾಯವು ಇರಲೂ ಬಹುದು.ಜ್ಞಾನಿಗಳು ಗ್ರಹಸ್ಥರಾಗಿರುವಾಗಲೂ
ಅವರ ಕಮ೯ವು ಅಕಮ೯ವಾದ್ದರಿಂದ
ಪರಮಾಥ೯
ದೃಷ್ಟಿಯಿಂದ
ಜ್ಞಾನದೊಡನೆ ಕಮ೯ವು ಇರುವುದಿಲ್ಲ ಎಂದು ತಿಳಿಸಿರುತ್ತದೆ. (ಪುಟ 2೯1)
ಅಧ್ಯಾಯ 28 ಉಪಸಂಹಾರ:
1) ಈ
ಆಚಾಯ೯ರು ಪ್ರತಿಪಾದಿಸುವ
ವೇದಾಂತವಿಷಯವು ಕಾಲದೇಶಗಳ ಎಲ್ಲೆಕಟ್ಟನ್ನು ಮೀರಿರುವ
,ಇಡಿಯ ಜಗತ್ತಿಗೇ ತಿರುಳಾಗಿರುವ,ಪರಬುಹ್ಮವಾಗಿರುತ್ತದೆ.ಆ ಬ್ರಹ್ಮವು ಎಲ್ಲಾ ಕಾಲದ ,ಎಲ್ಲಾ ದೇಶದ,ಎಲ್ಲಾ ಮನುಷ್ಯರಿಗೂ
ಮತ್ತು ಮನುಷ್ಯೇತರ ಜೀವನಿಗೂ
ಆತ್ಮವಾಗಿರುತ್ತದೆ.ಈ ಪರಮಾಥ೯ತತ್ವವನ್ನು ದೇಶಕಾಲಗಳಿಂದ ಮಾಪ೯ಡದ ಸಾವ೯ತ್ರಿಕಾನುಭವದ
ಆಧಾರದಿಂದಲೇ ತಿಳಿಯಹೇಳಿಕೊಟ್ಟಿರುವುದು ಆಚಾಯ೯ರ ಉಪದೇಶ ಕ್ರಮದ ಒಂದು ಅಸಾಧಾರಣ ದಮ೯ವಾಗಿರುತ್ತದೆ.
(ಪುಟ 2೯3)
2)ಜ್ಞಾನಸಮಕಾಇದಲ್ಲಿಯೇ ಕಾಲಕಮ೯ಗಳ ಬಂಧವು ಬಿಚ್ಚಿಕೊಳ್ಳುವುದು ,ಮತ್ಯ೯ನು ಅಮೃತನಾಗುವನು -ಎಂಬ ಸದ್ಯೋ ಮುಕ್ತಿಯು ಮಂಗಲಕರವಾದ ಸಂದೇಶವು.,ಈ ವೇದಾಂತಕ್ಕೆ ಮೀಸಲಾಗಿರುತ್ತದೆ.(ಪುಟ
2೯3)
3)ಜೀವನನ್ಮುಕ್ತನಾದವನು ಲ್ಲರ ಅತ್ಮನೇ ತನ್ನ ಆತ್ಮನು ಎಂಬ ಶಿವತಮವಾದ ನಿಶಚಯವನ್ನು ಪಡಿದಿರುತ್ತಾನಾದ್ದರಿಂದ ,ಅವನು ಎಲ್ಲಾ ಮಾನವರಲ್ಲಿಯೂ
ಎಲ್ಲಾ ಪ್ರಾಣಿಗಳಲ್ಲಿಯೂ ಸಮಾನವಾದ ಪ್ರೇಮವುಳ್ಳವನಾಗಿರುತ್ತಾನೆ.(ಪುಟ 2೯4)
4)ಈ ಸ್ಥಿತಿಯನ್ನು ಪಡೆದವನನ್ನುಸ್ಥ್ತತಪ್ರಜ್ಞ,ಯುಕ್ತ,ತ್ರಿಗುಣಾತೀತ,ಪರಭಕ್ತ,ಅತಿವಣಾ೯ಶ್ರಮಿ,ಬ್ರಾಹ್ಮಣ-ಮುಂತಾದ ಹೆಸರುಗಳಿಂದ ಶಾಸ್ತ್ರದಲ್ಲಿ ಕರೆದಿರುತ್ತದೆ.(ಪುಟ 2೯4)
5)ಸದಾಚಾರ,ಶಮದಮಾದಿಗಳು,ಉತ್ಕಟವಾದ ತತ್ವ ಜಿಜ್ಞಾಸೆ-ಇವುಗಳನ್ನು ಪಡೆದವರೆಲ್ಲರೂ ಈ ವೇದಾಂತ ಸಿದ್ಧಾಂತದ ಜ್ಞಾನವನ್ನು ಸಂಪಾದಿಸಿಕೊಳ್ಳುವುದು ಸಾಧ್ಯವಾಗುತ್ತದೆ.(ಪುಟ 2೯4)
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
ಸಂಪೂಣ೯ವಾಯಿತು .ದಿನಾಂಕ 26.5.2020
,,,
No comments:
Post a Comment