Friday, 25 September 2020
ಛಾಂದೋಗ್ಯ ಉಪನಿಷತ್ ಸಾರಸಂಗ್ರಹ : Chandogya Upanishad Saara Sangraha - Selected by Dr Raveendra Hosadurga - Source : Chandogya Upanishad by Swami Adidevananda, Ramaksrishna Ashrama, Mysore
ಛಾಂದೋಗ್ಯ ಉಪನಿಷತ್ ಸಾರಸಂಗ್ರಹ
ಮೂಲ ಲೇಖಕರು: ಸ್ವಾಮಿ ಆದಿದೇವಾನಂದ
ಶ್ರೀರಾಮಕೃಷ್ಣ ಆಶ್ರಮ
ಯಾದವಗಿರಿ:ಮೈಸೂರು570020
ಸಂಗ್ರಹ:ಡಾ.ರವಿಂೀದ್ರ ಹೊಸದುಗ೯
ಐದನೆಯ ಮುದ್ರಣ,1೯೯5
..................................................
ಪ್ರಸ್ತಾವನೆ(ಮುನ್ನುಡಿ):
1) ಸಾಮವೇದಕ್ಕೆ ಸೇರಿರುವ ಛಾಂದೋಗ್ಯ ಉಪನಿಷತ್ತು ವೇದಾಂತ ದಶ೯ನಕ್ಕೆ ಮೂಲ ವಿಷಯಗಳನ್ನು ಒದಗಿಸಿರುವ ಅತ್ಯಂತ ಪ್ರಾಚೀನವಾದ ಆಕರ ಗ್ರಂಥವಾಗಿದೆ.(ಪುಟ 5 ಮುನ್ನುಡಿ)
2)ಈ ಉಪನಿಷತ್ತು ತಾಂಡಿಗಳ ಶಾಖೆಗೆ ಸೇರಿರಬಹುದೆಂದು ಕೆಲವರು ಅಭಿಪ್ರಾಯಪಟ್ಟಿರುತ್ತಾರೆ.(ಪುಟ 5 ಮುನ್ನುಡಿ)
3)ಸೂತ್ರ ಭಾಷ್ಯದಲ್ಲಿ ಈ ಉಪನಿಷತ್ತಿನಿಂದ ಆರಿಸಿಕೊಂಡಿರುವ ವಿಷಯವಾಕ್ಯಗಳ ಸಂಖ್ಯೆಯನ್ನು ನೋಡಿದರೆ ವೇದಾಂತ ದಶ೯ನದಲ್ಲಿ ಈ ಉಪನಿಷತ್ತಿಗೆ ವಿಶೇಷ ಪ್ರಾಧಾನ್ಯವಿದೆ ಎಂಬುದು ಸ್ಪಷ್ಟವಾಗುತ್ತದೆ.ಛಾಂದೋಗ್ಯ ಉಪನಿಷತ್ತು ಬಹು ಮುಖ್ಯವಾದ ದಹರವಿದ್ಯೆ,ಶಾಂಡಿಲ್ಯ ವಿದ್ಯೆ ಮೊದಲಾದ ಉಪಾಸನೆಗಳನ್ನು ಒಳಗೊಂಡಿದೆ.ಈ ಉಪಾಸನೆಗಳು ಛಾಂದೋಗ್ಯ ಉಪನಿಷತ್ತಿಮ ಒಂದು ವೈಶಿಷ್ಟ್ಯ.(ಪುಟ 5 ಮುನ್ನುಡಿ)
3)ಈಗ ನಮಗೆ ಸಿಕ್ಕಿರುವ ಛಾಂದೋಗ್ಯ ಉಪನಿಷತ್ ಭಾಷ್ಯಗಳಲ್ಲಿ ಶ್ರೀ ಶಕರಾಚಾಯ೯ರ ಭಾಷ್ಯವು ಅತ್ಯಂತ ಪ್ರಾಚೀನವಾಗಿದೆ.(ಪುಟ 5 ಮುನ್ನುಡಿ)
ಮೊದಲನೆಯ ಅಧ್ಯಾಯ:
4)ಶಾಸ್ತ್ರವು ತಿಳಿಸಿಕೊಡುವ ಒಂದು ಆಲಂಬನವನ್ನು ತೆಗೆದುಕೊಂಡು ಅದರಲ್ಲಿ ಸಮಾನ ಚಿತ್ತವೃತ್ತಿಯನ್ನುಂಟು ಮಾಡುವುದು ಉಪಾಸನೆ.(ಪುಟ 6 ಮುನ್ನುಡಿ)
5)ಉಪಾಸನೆಯು ಸತ್ವಶುದ್ಧಿಯನ್ನುಂಟು ಮಾಡಿ ವಸ್ತುತತ್ವವನ್ನು ಪ್ರಕಾಶಿಸುವುದರಿಂದ ಅದ್ವೈತ ಜ್ಞಾನಕ್ಕೆ ಉಪಕಾರವಾಗಿರುತ್ತದೆ.(ಪುಟ 6 ಮುನ್ನುಡಿ)
6)ಕಮ೯ದಲ್ಲಿಯೇ ಧೃಢವಾದ ಮನಸ್ಸುಳ್ಳ ಸಾಧಕನಿಗೆ ಕಮ೯ವನ್ನು ಬಿಟ್ಟು ಉಪಾಸನೆಯಲ್ಲಿ ಮನಸ್ಸನ್ನು ತಿರುಗಿಸುವುದು ಕಷ್ಟಸಾಧ್ಯವಾದುದರಿಂದ ಉಪನಿಷತ್ತು ಕಮಾ೯ಂಗ ವಿಷಯವಾದ ಉಪಾಸನೆಯನ್ನೇ ಮೊದಲು ಪ್ರಾರಂಭಿಸುತ್ತದೆ. (ಪುಟ 6)
7)ಮೊದಲನೆಯ ಅಧ್ಯಾಯಕ್ಕೆ ಹದಿಮೂರು ಖಂಡಗಳಿವೆ. ಉದ್ಗೀತದ ಅವಯವವಾದ ಓಂಕಾರದ ಉಪಾಸನೆಯು ಮೊದಲನೆಯ ಖಂಡದ ವಿಷಯವಾಗಿದೆ.(ಪುಟ 6 ಮುನ್ನುಡಿ)
8)ವಿಗ್ರಹವು ಪರಮಾತ್ಮನ ಪ್ರತೀಕವಾಗಿರುವಂತೆ ಓಂಕಾರವು ಬ್ರಹ್ಮದ ಪತೀಕವಾಗಿದೆ.(ಪುಟ 6 ಮುನ್ನುಡಿ)
೯) ಓಂಕಾರವು ನಾಮವೂ ಪ್ರತೀಕವೂ ಆಗಿ ಪರಮಾತ್ಮನ ಉಪಾಸನೆಗೆ ಶ್ರೇಷ್ಠವಾದ ಸಾಧನವಾಗಿರುತ್ತದೆ.(ಪುಟ 6 ಮುನ್ನುಡಿ)
10)ಸಾಮದ ಭಾಗಗಳಿಗೆ ಭಕ್ತಿಗಳೆಂದು ಹೆಸರು.ಉದ್ಗಾತೃವು ಹಾಡುವ ಭಾಗವು ಉದ್ಗೀಥವೆನಿಸಿದೆ.ಇವನು ಓಂ ಎಂದು ಹಾಡುವುದರಿಂದ ಓಂಕಾರವು ಉದ್ಗೀತವೆನಿಸಿದೆ.ಉದ್ಗೀಥವು ಜ್ಯೋತಿಷ್ಟೋಮ ಕಮ೯ದ ಅಂಗವಾಗಿದ್ದರೂ ಇಲ್ಲಿ ಸ್ವತಂತ್ರವಾದ ಉಪಾಸನೆಯಾಗಿದೆ.(ಪುಟ 6 ಮುನ್ನುಡಿ)
11) ಎರಡನೆಯ ಖಂಡದಲ್ಲಿ ಉದ್ಗೀಥವನ್ನು ಪ್ರಾಣವೆಂದೇ ಉಪಾಸಿಸಬೇಕೆಂದು ಹೇಳಿದೆ.(ಪುಟ7 ಮುನ್ನುಡಿ)
12)ಮೂರನೆಯ ಖಂಡದಲ್ಲಿ ಆದಿತ್ಯದೃಷ್ಟಿಯಿಂದ ಉದ್ಗೀಥೋಪಾಸನೆಯನ್ನು ಹೇಳಿದೆ.ಪ್ರಾಣ ಆದಿತ್ಯ ಇವರಿಗೆ ಸ್ಥಾನಭೇದವಿದ್ದರೂ ತತ್ವ ಭೇದವಿಲ್ಲ.ತತ್ವವು ಅಭಿನ್ನವಾಗಿರುವುದರಿಂದ ಉದ್ಗೀಥವನ್ನು ಪ್ರಾಣನೆಂದೂ ಉಪಾಸಿಸಬೇಕು.(ಪುಟ 7 ಮುನ್ನುಡಿ)
13)ನಾಲ್ಕನೆಯ ಖಂಡದಲ್ಲಿ ಓಂಕಾರೋಪಾಸನೆಯು ಮುಂದುವರಿಯುತ್ತದೆ.ಓಂಕಾರವು ಅಮೃತವೂ ಅಭಯವೂ ಆಗಿರುತ್ತದೆ.ಓಂಕಾರವು ಅಮೃತ,ಅಭಯ ಎಂಬ ಗುಣಗಳಿಂದ ಕೂಡಿರುವುದೆಂದು ಯಾವನು ಉಪಾಸಿಸುವನೊ ಅವನು ಅಮೃತನೂ ಅಭಯನೂ ಆಗುತ್ತಾನೆ.(ಪುಟ 7 ಮುನ್ನುಡಿ)
14)ಋಗ್ವೇದದಲ್ಲಿ ಉಕ್ತವಾಗಿರುವ ಪ್ರಣವವೇ ಸಾಮವೇದಕ್ಕೆ ಸೇರಿದ ಛಾಂದೋಗ್ಯದಲ್ಲಿ ಉದ್ಗೀಥಶಬ್ದ ವಾಚ್ಯವಾಗಿದೆ.(ಪುಟ 7 ಮುನ್ನುಡಿ)ಆಖ್ಯಾಯಿಕಾ ರೂಪದಿಂದ ಎಂಡನೆಯ ಮತ್ತು ಒಂಬತ್ತನೆಯಖಂಡಗಳಲ್ಲಿ ಹೇಳಿದೆ.)
15)ಆರನೆಯ ಖಂಡದಲ್ಲಿ ಸವ೯ಫಲ-ಸಂಪತ್ತಿಗಾಗಿ ಉದ್ಗೀಥದ ಇನ್ನೊಂದು ಉಪಾಸನೆಯನ್ನು ವಿಧಿಸಿದೆ(ಪುಟ 7 ಮುನ್ನುಡಿ)
16) ಏಳನೆಯ ಖಂಡದಲ್ಲಿ ಓಂಕಾರವನ್ನು ಆದಿತ್ಯ ಚಕ್ಷುಪುರುಷನ ದೃಷ್ಟಿಯಿಂದ ಉಪಾಸಿಸಬೇಕೆಂದು ಹೇಳಿದೆ.(ಪುಟ 7 ಮುನ್ನುಡಿ)
17)ಪರೋವರೀಯ ಸತ್ವ-ಗುಣವೆಂಬ ಫಲವುಳ್ಳ (ಎಂದರೆ ಉತ್ತರೋತ್ತರ ಉತ್ಕøಷ್ಟಗುಣವಿಶಿಷ್ಟವಾದ ಫಲವುಳ್ಳ)ಉದ್ಗೀತದ ಬೇರೊಂದು ಉಪಾಸನೆಯನ್ನು ಆಖ್ಯಾಯಿಕಾ ರೂಪದಿಂದ ಎಂಟನೆಯ ಮತ್ತು ಒಂಬತ್ತನೆಯ ಖಂಡಗಳಲ್ಲಿ ಹೇಳಿದೆ.)
18)ಉದ್ಗೀತೋಪಾಸನೆಯ ಪ್ರಸಂಗದಲ್ಲಿ ಪ್ರಸ್ತಾವ,ಪ್ರತಿಹಾರ ಎಂಬ ಹೆಸರುಳ್ಳ ಸಾಮ ಭಕ್ತಿಗಳ ಉಪಾಸನೆಯನ್ನು ಹೇಳಲು ಪ್ರಸ್ತಾವ,ಉದ್ಗೀತ,ಪ್ರತಿಹಾರ ಎಂಬ ಈ ಭಕ್ತಿಗಳನ್ನು ಪ್ರಾಣ,ಆದಿತ್ಯ,ಅನ್ನ ಇವುಗಳ ದೃಷ್ಟಿಯಿಂದ ಉಪಾಸಿಸಬೇಕೆಂದು ಈ ಖಂಡದ ಮತ್ತು ಮುಂದಿನ ಖಂಡದ ಒಟ್ಟಥ೯.ಪ್ರಾಣಾದಿ ದೇವತೆಗಳ ಭಾವವನ್ನು ಪಡೆಯುವುದು ಅಥವಾ ಕಮ೯ಸಮೃದ್ಧಿ ಈ ಉಪಾಸನೆಯ ಫಲ.(ಪುಟ 8 ಮುನ್ನುಡಿ)
1೯)ಹನ್ನೆರಡನೆಯ ಖಂಡ:ದೇವತೆಗಳ ರೂಪದಲ್ಲಿರುವ ನಾಯಿಗಳಿಗೆ ಗೋಚರವಾದ ಶೌವ ಉದ್ಗೀಥವನ್ನು ಅನ್ನ ಲಾಭಕ್ಕೋಸ್ಕರ ಈ ಖಂಡದಲ್ಲಿ ಹೇಳಿದೆ.(ಪುಟ 8 ಮುನ್ನುಡಿ)
20)ಹದಿಮೂರನೆಯ ಖಂಡ: ಸ್ತೋಭಾಕ್ಷರ ವಿಷಯವಾದ ಬೇರೆ ಬೇರೆ ಉಪಾಸನೆಯನ್ನು ಒಟ್ಟುಗೂಡಿಸಿ ಹೇಳಿದೆ.(ಪುಟ 8 ಮುನ್ನುಡಿ)
ಎರಡನೆಯಅಧ್ಯಾಯ:
21) ಮೊದಲನೆಯ ಅಧ್ಯಾಯದಲ್ಲಿ ಸಾಮಾಯವಯವ ವಿಷಯವಾದ ಅನೇಕ ಫಲಗಳುಳ್ಳ ಉಪಾಸನೆಯನ್ನೂ ಅನಂತರ ಸ್ತೋಭಾಕ್ಷರ ವಿಷಯವಾದ ಉಪಾಸನೆಯನ್ನೂ ಹೇಳಿದ್ದಾಯಿತು.ಆದರೆ ಅದು ಸಾಮದ ಏಕದೇಶಕ್ಕೇ ಸಂಬಂಧ ಪಟ್ಟಿರುವುದರಿಂದ ಈಗ ಎರಡನೆಯ ಅಧ್ಯಾಯದಲ್ಲಿ ಸಮಸ್ತಸಾಮದಲ್ಲಿ ಸಮಸ್ತ ಸಾಮವಿಷಯವಾದ ಉಪಾಸನೆಗಳನ್ನು ಉಪದೇಶಿಸಿದೆ.(ಪುಟ 8 ಮುನ್ನುಡಿ)
22) ಎರಡನೆಯ ಅಧ್ಯಾಯದಲ್ಲಿ ಇಪ್ಪತ್ನಾಲ್ಕು ಖಂಡಗಳಿವೆ.
ಮೊದಲನೆಯ ಖಂಡ: ಸಮಸ್ತ ಅವಯವಗಳಿಂದ ಕೂಡಿದ ಸಾಮದಲ್ಲಿ ಸಾಧುದೃಷ್ಟಿಯನ್ನು ವಿಧಿüಸಿರುವುದು ಮೊದಲನೆಯ ಖಂಡದ ತಾತ್ಪಯ೯.(ಪುಟ 8 ಮುನ್ನುಡಿ)
23)ಆದರೆ ಸಾಮದ ಏಕದೇಶೋಪಾಸನೆಯು ಅಸಾಧುವೆಂದು ತಿಳಿಯಕೂಡದು.ಉದ್ಗಾತೃವೇ ಮೊದಲಾದವರು ಪಠಿಸುವ ಸಾಮದ ಅವಯವಗಳಿಗೆ ಭಕ್ತಿಗಳೆಂದು ಹೆಸರು.ಹಿಂಕಾರ,ಪ್ರಸ್ತಾವ,ಉದ್ಗೀಥ ಪ್ರತಿಹಾರ,ನಿಧನ-ಇವು ಸಾಮದ ಪಂಚ ಅವಯವಗಳು.ಈ ಪಂಚವಿಧಸಾಮಗಳನ್ನು
1)ಪೃಥಿವ್ಯಾದಿ-ಲೋಕದೃಷ್ಟಿಯಿಂದಲೂ
2)ಪುರೋವಾತಾದಿ ಲೋಕ-ವೃಷ್ಟಿದೃಷ್ಟಿಯಿಂದಲೂ
3)ಮೇಘವೇ ಮೊದಲಾದ ನೀರಿನ ದೃಷ್ಟಿಯಿಂದಲೂ
4) ವಸಂತಾದಿ ಋತು ದೃಷ್ಟಿಯಿಂದಲೂ
5) ಆಡು ಕುರಿ ಮೊದಲಾದ ಪಶು ದೃಷ್ಟಿಯಿಂದಲೂ
6) ಪ್ರಾಣ ದೃಷ್ಟಿಯಿಂದಲೂ
ಉಪಾಸಿಸಬೇಕೆಂದು 2-7 ಅಧ್ಯಾಯಗಳಲ್ಲಿ ಹೇಳಿದೆ.(ಪುಟ 8 ಮುನ್ನುಡಿ)
24) ಪಂಚವಿಧ ಸಾಮಕ್ಕೆ ಆದಿ, ಉಪದ್ರವಗಳನ್ನು ಸೇರಿಸಿದರೆ ಸಪ್ತವಿಧ ಸಾಮವಾಗುವುದು.ಸಾಮದ ಸಪ್ತವಿಧ ಸಾಮವನ್ನು ವಾಗ್-ದೃಷ್ಟಿಯಿಂದ ಉಪಸಿಸಬೇಕೆಂಬುದು ಎಂಟನೆಯ ಖಂಡದ ವಿಷಯ.ಅನ್ನಾದನೂ ಅನ್ನವಂತನೂ ಆಗುವುದು ಈ ಉಪಾಸನೆಯ ಫಲ.(ಪುಟ ೯ ಮುನ್ನುಡಿ)
25) ಒಂಬತ್ತನೆಯ ಖಂಡ: ಹಿಂದೆ ಅವಯವ ಮಾತ್ರವಾದ ಆದಿತ್ಯದೃಷ್ಟಿಯನ್ನು ಇಡಬಾಕೆಂದು ಹೇಳಿದೆ.ಈ ಆದಿತ್ಯನನ್ನು ಸಮಸ್ತಸಾಮದಲ್ಲಿ ಅವಯವ-ವಿಭಾಗಶಃ ಅಭ್ಯಾಸ ಮಾಡಿಕೊಂಡು ಸಪ್ತವಿಧ ಸಾಮವನ್ನು ಉಪಾಸಿಸಬೇಕೆಂದು ಒಂಬತ್ತೆನೆಯ ಖಂಡದಲ್ಲಿ ಉಪದೇಶಿಸಿದೆ.ಇಂಥ ಉಪಾಸಕನು ಆದಿತ್ಯನ ದೃಷ್ಟಿಯನ್ನೇ ಪಡೆಯುತ್ತಾನೆ.(ಪುಟ ೯ ಮುನ್ನುಡಿ)
26)1,3,6ರಲ್ಲಿ ಉದ್ಗೀಥ ಭಕ್ತಿಯ ನಾಮಾಕ್ಷರಗಳನ್ನು ಉತ್-ಗೀ-ಥ ಎಂದು ಉಪಾಸಿಸ ಬೇಕೆಂದು ಹೇಳಿದೆ. (ಪುಟ ೯ ಮುನ್ನುಡಿ)
27) ಮನಸ್ಸು,ವಾಕ್ಕು,ಚಕ್ಷುಸ್ಸು, ಶ್ರೋತ್ರ,ಪ್ರಾಣ-ಇವುಗಳ ದೃಷ್ಟಿಯಿಂದ ಗಾಯತ್ರ ಸಾಮವನ್ನು ಉಪಸ್ಸಬೇಕೆಂದು ಹನ್ನೊಂದನೆಯ ಖಂಡದಲ್ಲಿ ಹೇಳಿದೆ.(ಪುಟ ೯ ಮುನ್ನುಡಿ)
28)ಹನ್ನೆರಡನೆಯ ಸಾಮದಲ್ಲಿ ಮಂಥನ, ಧೂಮ, ಜ್ವಾಲೆ, ಅಂಗಾರ,ಉಪಶಾಂತಿ,ಸಂಶಾಂತಿ-ಇವುಗಳ ದೃಷ್ಟಿಯಿಂದ ರಥಾಂತರ ಸಾಮವನ್ನು ಉಪಾಸಿಸ ಬೇಕೆಂದು ಹನ್ನೆರಡನೆಯ ಖಂಡದಲ್ಲಿ ಹೇಳಿದೆ.(ಪುಟ ೯ ಮುನ್ನುಡಿ)
28)ಹದಿಮೂರನೆಯ ಸಾಮ: ಇದರಲ್ಲಿ ಉಪಮಂತ್ರಣಾದಿಗಳ ದೃಷ್ಟಿಯಿಂದ ವಾಮದೇವ ಸಾಮವನ್ನು ಉಪಾಸಿಸ ಬೇಕೆಂದು ಹೇಳಿದೆ.(ಪುಟ ೯ ಮುನ್ನುಡಿ)
2೯) 14 ರಿಂದ 21 ಖಂಡಗಳು:
1)ಆದಿತ್ಯ ದೃಷ್ಟಿಯಿಂದ ಬೃಹತ್ಸಾಮ ಉಪಾಸನೆಯನ್ನೂ
2)ಅಭ್ರಾದಿ ದೃಷ್ಟಿಯಿಂದ ವೈರೂಪ- ಸಾಮೋಪಾಸನೆಯನ್ನು
ವಸಂತಾದಿ ದೃಷ್ಟಿಯಿಂದ ವೈರಾಜ- ಸಾಮೋಪಾಸನೆಯನ್ನು
3) ಪೃಥಿವ್ಯಾದಿ ದೃಷ್ಟಿಯಿಂದಲೂ ಶಕ್ವರೀ- ಸಾಮೋಪಾಸನೆಯನ್ನು
ಆಡು ಮೊದಲಾದವುಗಳ ದೃಷ್ಟಿಯಿಂದ ರೇವತಿ-ಸಾಮೋಪಾಸನೆಯನ್ನು
4)ಲೋಮಾದಿ ದೃಷ್ಟಿಯಿಂದ ಯಜ್ಞಾ-ಯಜ್ಞೇಯ-ಸಾಮೋಪಾಸನೆಯನ್ನು
5)ಅಗ್ನ್ಯಾದಿ ದೃಷ್ಟಿಯಿಂದ ರಾಜನ-ಸಾಮೋಪಾಸನೆಯನ್ನು
6)ತ್ರಯೀವಿದ್ಯಾ ದೃಷ್ಟಿಯಿಂದ ಸಾಮ ಸಾಮೋಪಾಸನೆಯನ್ನೂ 14 ರಿಂದ 21ನೆಯ ಖಂಡದಲ್ಲಿ ವಿಧಿಸಿದೆ.
ಹೀಗೆ ಸವಾ೯ತ್ಮಕ ಸಾಮವನ್ನು ಅರಿತುಕೊಂಡಿರುವವನು ಸವಾ೯ತ್ಮಕನಾಗುವನು.(ಪುಟ 10 ಮುನ್ನುಡಿ)
30)ಇಪ್ಪತ್ತೆರಡನೆಯ ಖಂಡ: ಸಾಮೋಪಾಸನೆಯ ಪ್ರಸಂಗದಿಂದ ಉದ್ಗಾತೃವಿಗೆ ಗಾನ ವಿಶೇಷಾದಿ ಸಂಪತ್ತಿಯನ್ನು ಉಪದೇಶಿಸಿದೆ.(ಪುಟ 10 ಮುನ್ನುಡಿ)
31)ಇಪ್ಪತ್ತಮೂರನೆಯ ಖಂಡ: ಇಲ್ಲಿ ಓಂಕಾರೋಪಾಸನೆಯನ್ನು ವಿಧಿಸಿದೆ.ಗೃಹಸ್ಥಾದಿಗಳಿಗೆ ಸ್ವಧಮಾ೯ಚರಣೆಯಿಂದ ಪುಣ್ಯಲೋಕ ಪ್ರಾಪ್ತಿಯು ಫಲವಾಗಿದ್ದರೂ ಓಂಕಾರೋಪಾಸಕನಿಗೆ ಅಮೃತತ್ವವೆಂಬ ವಿಶಿಷ್ಟ ಫಲವು ಪ್ರಾಪ್ತಯಾಗುತ್ತದೆ. (ಪುಟ 10 ಮುನ್ನುಡಿ)
32) ಇಪ್ಪತ್ತನಾಲ್ಕನೆಯ ಖಂಡ:ಪ್ರಾಸಂಗಿಕವಾದ ಓಂಕಾರಸ್ತುತಿಯನ್ನು ಬಿಟ್ಟು ಈಗ ಪುನಃ ಯಜ್ಞಾಂಗವಾದ ಸಾಮ,ಹೋಮ,ಮಂತ್ರ,ಉತ್ಥಾನ ಇವುಗಳನ್ನು ಶ್ರುತಿಯು ಈ ಅಧ್ಯಾಯದ ಕೊನೆಯ ಖಂಡದಲ್ಲಿ ಹೇಳಿದೆ.ಆಯಾ ಸಾಮಗಳನ್ನು ಆಯಾ ಸವನದಲ್ಲಿ ಹಾಡಿ ,ಆಯಾ ಮಂತ್ರಗಳಿಂದ ಹೋಮವನ್ನೂ ಉತ್ಥಾನವನ್ನೂ ಮಾಡಿದರೆ ಸವನದೇವತೆಗಳು ಸವನದ ಫಲವನ್ನು ಅನುಗ್ರಹಿಸುತ್ತಾರೆ.(ಪುಟ 10 ಮುನ್ನುಡಿ)
ಮೂರನೆಯ ಅಧ್ಯಾಯ:
33)ಹಿಂದೆ ಯಜ್ಞಾಂಗವೂ ಯಜ್ಞವಿಷಯಕವೂ ಆದ ಸಾಮ,ಹೋಮ,ಮಂತ್ರೋತ್ಥಾನಗಳನ್ನು ಆಯಾ ವಿಶಿಷ್ಟ ಫಲ ಪ್ರಾಪ್ತಿಗಾಗಿ ಹೇಳಿದ್ದಾಯಿತು.(ಪುಟ 10 ಮುನ್ನುಡಿ)
34)ಸವ೯ಯಜ್ಞಗಳ ಕಾಯ೯ಸಿದ್ಧಿರೂಪನಾದ ಆದಿತ್ಯನು ಮಹದೈಶ್ವಯ೯ದಿಂದ ಪ್ರಕಾಶಿಸುತ್ತಿದ್ದಾನೆ.ಸವ೯ ಪ್ರಾಣಿಗಳ ಕಮ೯ಫಲಸ್ವರೂಪನಾದ ಇವನನ್ನು ಆಶ್ರಯಿಸಿ ಎಲ್ಲರೂ ಜೀವಿಸುತ್ತಾರೆ.(ಪುಟ 10 ಮುನ್ನುಡಿ)
35)ಆದುದರಿಂದ ಯಜ್ಞದ ನಿರೂಪಣೆಯು ಆದಮೇಲೆ ಅದರ ಕಾಯ೯ವಾದ ಆದಿತ್ಯ ವಿಷಯಕ ಉಪಾಸನೆಯನ್ನು -ಅದು ಸವ೯ ಪುರುಷಾಥ೯ಗಳಿಗಿಂತಲೂ ಶ್ರೇಷ್ಠ ಫಲವುಳ್ಳದ್ದಾದುದರಿಂದ -ವಿಧಿಸಲು ಈ ಅಧ್ಯಾಯವು ಪ್ರಾರಂಭವಾಗಿರುತ್ತದೆ.(ಪುಟ 10 ಮುನ್ನುಟಿ)
36)ಮೊದಲ ಹನ್ನೊಂದು ಖಂಡಗಳಲ್ಲಿ ಮಧುವಿದ್ಯೆಯನ್ನು ಹೇಳಿದೆ.ಆದಿತ್ಯನು ದೇವತೆಗಳಿಗೆ ಮಧು.ಎಂದರೆ ಜೇನುತುಪ್ಪದಂತೆ ಮೋದವನ್ನುಂಟು ಮಾಡುತ್ತಾನೆ.ಈ ಮಧುವಿಗೆ ದ್ಯುಲೋಕವು ಅಡ್ಡತೊಲೆ,ಅಂತರಿಕ್ಷವು ಜೇನುಗೂಡು ಮತ್ತು ರಶ್ಮಿಗಳಲ್ಲಿರುವ ಜಲಬಿಂದುಗಳು ಮೊಟ್ಟೆಗಳು,ಆದಿತ್ಯನ ಪೂವ೯ ರಶ್ಮಿಗಳು ಜೇನುಗೂಡಿನಲ್ಲಿzರುವ ರಂದ್ರಗಳು.(ಪುಟ 11 ಮುನ್ನುಡಿ)
37)ಈ ಕಮ೯ದಿಂದಲೇ ಯಶಸ್ಸು ಮೊದಲಾದ ರಸವು ಉತ್ಪನ್ನವಾಗುತ್ತದೆ.ಈ ರಸವು ಆದಿತ್ಯನ ಲೋಹಿತರೂಪ.ಅನುಷ್ಠಿಸಲ್ಪಟ್ಟ ಕಮ೯ದ ಫಲವು ಆದಿತ್ಯನನ್ನು ಆಶ್ರಯಿಸುತ್ತದೆ.ಹೀಗೆಯೆ ರೂಪಕವು ಯಜಸ್ಸು ಸಾಮ,ಅಥವ೯ಇವುಗಳ ವಿಷಯದಲ್ಲಿ ಮುಂದುವರೆಯುತ್ತದೆ.( ಪುಟ 11ಮುನ್ನುಡಿ)
38)12-13ನೆಯ ಖಂಡಗಳು ಗಾಯತ್ರೀ ಬ್ರಹ್ಮೋಪಾಸನೆಯನ್ನು ಹೊಂದಿವೆ.ಇಲ್ಲಿ ಗಾಯತ್ರೀದ್ವಾರದಿಂದ ಬ್ರಹ್ಮವನ್ನು ಉಪದೇಶಿಸಲು ಅನೇಕ ಕಾರಣಗಳಿವೆ.1)ದೇವತೆಗಳು ಇತರ ಛಂದಸ್ಸುಗಳ ಮೂಲಕ ಸೋಮವನ್ನು ತರಲು ವಿಫಲರಾದಾಗ ಗಾಯತ್ರಿಯು ಅದನ್ನು ದ್ಯುಲೋಕದಿಂದ ತಂದಿತು.2) ಜಗತೀ-ತ್ರಿಷ್ಟುಪ್-ಛಂದಸ್ಸುಗಳು ತಮ್ಮ ಕೆಲವು ಅಕ್ಷರಗಳನ್ನು ಬಿಟ್ಟುಬಂದಾಗ ಗಾಯತ್ರಿಯು ಅವುಗಳನ್ನು ತಂದಿತು.3)ಇದಕ್ಕೆ ಯಜ್ಞದಲ್ಲಿ ಪ್ರಾಧಾನ್ಯವಿದೆ.4)ಇದು ಬ್ರಾಹ್ಮಣನಿಗೆ ಸಾರವಾಗಿದೆ.ಶಬ್ದರೂಪವಾದ ವಾಕ್ಕು ಗಾಯತ್ರಿಯೇ.ಏಕೆಂದರೆ ವಾಕ್ಕೇ ಪ್ರಾಣಿಗಳನ್ನೆಲ್ಲ ಹೆಸರಿಸುತ್ತದೆ(ಗಾಯತಿ) ಮತ್ತು ಕಾಪಾಡುತ್ತದೆ.(ತ್ರಾಯತೇ).ಆದುದರಿಂದ ಸ್ಥಾವರ ,ಜಂಗಮ ರೂಪದಲ್ಲಿ ಇರುವುದೆಲ್ಲ ಗಾಯತ್ರಿಯೇ..ಹೀಗೆಯೇ ಭೂತಗಳು,ಪೃಥ್ವಿ,ಶರೀರ,ಹೃದಯ,ಪ್ರಾಣ-ಇವೂ ಕೂಡಾ ಗಾಯತ್ರಿಯೇ.ಈ ಆರು ರೂಪಗಳನ್ನೂ ನಾಲ್ಕು ಪಾದಗಳನ್ನೂ ಪಡೆದಿರುವ ಗಾಯತ್ರಿಯ ಮಹಿಮೆಯು ವಿಕಾರ ರೂಪವಾದ ಗಾಯತ್ರೀ ಬ್ರಹ್ಮಕ್ಕಿಂತಲೂ ಸಮಸ್ತ ಗಾಯತ್ರಿಯ ಆತ್ಮನೂ ಪರಮಾಥ೯ ಸತ್ಯ ಸ್ವರೂಪನೂ ಆದ ಪುರುಷನು ದೊಡ್ಡವನು(ಪುಟ 12 ಮುನ್ನುಡಿ)
3೯)ಈ ಜಗತ್ತೆಲ್ಲ ಇವನ ಒಂದು ಪಾದವು.ಉಳಿದ ಮೂರು ಪಾದಗಳು ದ್ಯುಲೋಕದಲ್ಲಿ (ಎಂದರೆ ತನ್ನ ಸ್ವರೂಪದಲ್ಲಿ ) ಇವೆ.ಗಾಯತ್ರೀ ದ್ವಾರದಿಂದ ಹೇಳಿದ ಬ್ರ್ಮವೇ ನಮ್ಮ ಹೊರಗಿನ ಆಕಾಶವಾಗಿದೆ.(ಪುಟ 12 ಮುನ್ನುಡಿ)
40)ಹೊರಗಿರುವ ಆಕಾಶವು ನಮ್ಮ ಒಳಗಿನ ಆಕಾಶವಾಗಿದೆ.ಒಳಗಿರುವ ಆಕಾಶವೇ ನಮ್ಮ ಹೃದಯಾಕಾಶವಾಗಿದೆ.(ಪುಟ 12 ಮುನ್ನುಡಿ)
41) ಹೃದಯಾಕಾಶದಲ್ಲಿ ಧ್ಯಾನಿಸಲ್ಪಡುವ ಬ್ರಹ್ಮವು ಪೂವ೯ವು ,ಅವಿನಾಶಿ ಎಂದು ಉಪಾಸಿಸಬೇಕು.(ಪುಟ 12 ಮುನ್ನುಡಿ)
42)ಹದಿನಾಲ್ಕನೆಯ ಖಂಡದಲ್ಲಿ ಶಾಂಡಿಲ್ಯ ವಿದ್ಯೆಯನ್ನು ಉಪದೇಶಿಸಿದೆ.ಮನುಷ್ಯನು ಮರಣಕಾಲದಲ್ಲಿ ಯಾವ ನಿಶ್ಚಯದಿಂದ ದೇಹವನ್ನು ಬಿಡುವನೋ ಅದಕ್ಕೆ ಅನುಸಾರವಾಗಿ ಅದರ ಫಲವನ್ನೇ ಹೊಂದುವನು.(ಪುಟ 12 ಮುನ್ನುಡಿ)(ಇದರ ಪ್ರಕಾರ ಬ್ರಹ್ಮನಿಶ್ಚಯವನ್ನು ಮಾಡಿದವನಿಗೆ ಬ್ರಹ್ಮವೇ ಪ್ರಾಪ್ತಿ ಎಂದಾಯಿತು)
43)ಬ್ರಹ್ಮದಿಂದ ತೇಜಸ್ಸು,ನೀರು ಅನ್ನ ಮೊದಲಾದ ಎಲ್ಲವೂ ಹುಟ್ಟಿವೆ.ಆದುದರಿಂದ ಅದು ತಜ್ಜಮ್,ಹೀಗೆಯೇ ಎಲ್ಲವೂ ಪ್ರತಿಲೋಮದಿಂದ ಬ್ರಹ್ಮದಲ್ಲಿಯೇ ಲಯವಾಗಿ ಬ್ರಹ್ಮರೂಪದಿಂದ ಉಳಿದುಕೊಳ್ಳುತ್ತವೆ.ಆದುದರಿಂದ ಅದುತಲ್ಲಮ್.ಇದೇ ರೀತಿಯಲ್ಲಿಎಲ್ಲವೂ ಬ್ರಹ್ಮದಲ್ಲಿಯೇ ಪ್ರಾಣನ ಕ್ರಿಯೆಯನ್ನು ಮಾಡಿಕೊಂಡಿರುತ್ತವೆ.ಆದುದರಿಂದ ಅದು ತದನಂ.ಹೀಗೆ ಜಗತ್ತು ತ್ರಿಕಾಲದಲ್ಲಿಯೂ ಬ್ರಹ್ಮಸ್ವರೂಪದಲ್ಲಿ ಇರುವುದರಿಂದ ಅದು ಬ್ರಹ್ಮವೇ.(ಪುಟ12 ಮುನ್ನುಡಿ)
(ತಜ್ಜಮ್,ತಲ್ಲಮ್,ತದನಮ್)
44)ಸಾಧಕನು ರಾಗದ್ವೇಷಾದಿಗಳಿಲ್ಲದೆ ಶಾಂತನಾಗಿ ಎಲ್ಲವೂ ಆದ ಬ್ರಹ್ಮವನ್ನು ಮನೋಮಯತ್ವಾದಿಗುಣಗಳಿಂದ ಉಪಾಸಿಸಬೇಕು.(ಪುಟ 12 ಮುನ್ನುಡಿ)
45)ಹದಿನೈದನೆಯ ಖಂಡ: ಇಲ್ಲಿ ವೀರ ಪುತ್ರನ ದೀಘ೯ ಆಯುಸ್ಸಿಗೋಸ್ಕರ ಕೋಶವಿದ್ಯೆಯನ್ನು ಉಪದೇಶಿಸಿದೆ.(ಪುಟ 12 ಮುನ್ನುಡಿ)
46)ಹದಿನಾರನೆಯ ಖಂಡ ಹದಿನೇಳನೆಯ ಖಂಡದಲ್ಲಿ ಪುರುಷವಿದ್ಯೆಯನ್ನು ಹೇಳಿದೆ.ಮಹೀದಾಸ ಐತರೇಯನು ಈ ಯಜ್ಞ ದಶ೯ನವನ್ನು ಅರಿತುಕೊಂಡು ರೋಗವನ್ನು ಕುರಿತು ಹೀಗೆ ಹೇಳಿದನು.'ರೋಗವೆ ನನ್ನನ್ನು ಏಕೆ ಉಪತಪಿಸುತ್ತೀಯೆ? ನಾನು ಇದರಿಂದ ಸಾಯುವುದಿಲ್ಲ!' ಹೀಗೆ ಉಪಾಸಿಸುವವನು ಮಹೀದಾಸನಂತೆ ನೂರಾಹದಿನಾರು ವಷ೯ಗಳ ಕಾಲ ಜೀವಿಸುತ್ತಾನೆ.(ಪುಟ 13 ಮುನ್ನುಡಿ)
47)ಹದಿನೆಂಟನೆಯ ಖಂಡ:ಇಲ್ಲಿ ಮನ-ಆಕಾಶಗಳಲ್ಲಿ ಸಮಸ್ತ ಮನೋದೃಷ್ಟಿಯನ್ನು ವಿಧಿಸುವುದಕ್ಕಾಗಿ ಮನೋಬ್ರಹ್ಮವನ್ನು ಹೇಳಿದೆ.(ಪುಟ 13 ಮುನ್ನುಡಿ)
48)ಹತ್ತೊಂಬತ್ತನೆಯ ಖಂಡ:ಆದಿತ್ಯನು ಬ್ರಹ್ಮ ಎಂದು ಆದೇಶ.ಆದಿತ್ಯ ಬ್ರಹ್ಮವನ್ನು ಉಪಾಸಿಸುವವನ
ಬಳಿಗೆ ಮಂಗಳ ಘೋಷಗಳು ಬರುತ್ತವೆ ಹಾಗೂ ಸುಖವನ್ನುಟು ಮಾಡುತ್ತವೆ.(ಪುಟ 13 ಮುನ್ನುಡಿ)
ನಾಲ್ಕನೆಯ ಅಧ್ಯಾಯ:
4೯)ಈ ಅಧ್ಯಾಯಕ್ಕೆ ಹದಿನೇಳು ಖಂಡಗಳು.ವಾಯು -ಪ್ರಾ£ಣಗಳು ಬ್ರಹ್ಮದ ಪಾದಗಳೆಂದು ಹಿಂದೆ ಹೇಳಿದೆ.ಈಗ ಅವುಗಳನ್ನು ಸಾಕ್ಷಾತ್ ಬ್ರಹ್ಮವೆಂದೇ ಉಪಾಸಿಸಬೇಕೆಂದು ಶ್ರುತಿಯು ಹೇಳುತ್ತದೆ.
ಶ್ರದ್ಧೆ,ಅನ್ನದಾನ,ವಿನಯ-ಇವು ವಿದ್ಯಾ ಪ್ರಾಪ್ತಿಗೆ ಸಾಧನಗಳೆಂಬುದನ್ನೂ ತಿಳಿಸಿದೆ.(ಪುಟ 13 ಮುನ್ನುಡಿ)
50)ರಾಜನಾದ ಜಾನಶ್ರುತಿ ಪೌತ್ರಾಯಣನು ಅನ್ನದಾನಿಯೆಂದು ಪ್ರಸಿದ್ಧನಾಗಿದ್ದನು. ಒಂದು ರಾತ್ರಿ ರಾಜನು ಅರಮನೆಯ ಉಪ್ಪರಿಗೆಯ ಮೇಲೆ ಇದ್ದಾಗ ಕೆಲವು ಹಂಸಗಳು ಹಾರಿಹೋದವು.ಆಗ ಒಂದು ಹಂಸವು ಇನ್ನೊsಂದು ಹಂಸಕ್ಕೆ ಹೇಳಿತು.'ಹೋ ಭಲ್ಲಾಕ್ಷ!ಜಾನಶ್ರುತಿಯ ಈ ಜ್ಯೋತಿಯು ದ್ಯುಲೋಕದಂತೆ ಹರಡಿಕೊಂಡಿದೆ.ಅದನ್ನು ಸೋಂಕಬೇಡ,ಅದು ನಿನ್ನನ್ನು ಸುಡದಿರಲಿ!'ಎಂದು ಹೇಳಿತು.'ಆ ಗಾಡಿ ರೈಕ್ವನು ಎಂಥವನು?' ಎಂದು ಕೇಳಲಾಗಿ ಹಂಸವು ರೈಕ್ವನನ್ನು ತುಂಬಾ ಪ್ರಶಂಸೆ ಮಾಡಿತು.ಅನಂತರ ರಾಜನು ಇವನನ್ನು ನೋಡಲು ಇವನಿದ್ದಲ್ಲಿಗೆ ಬಂದನು.ರೈಕ್ವನು ಒಂದು ಗಾಡಿಯ ಕೆಳಗೆ ಕುಳಿತಿದ್ದನು.ರಾಜನು ಬೆಲೆಯುಳ್ಳ ವಸ್ತುಗಳನ್ನು ದಾನಮಾಡಿ,'ಭಗವಂತನೆ,ನೀನು ಯಾವ ದೇವತೆಯನ್ನು ಉಪಾಸಿಸುತ್ತೀಯೋ ಆ ದೇವತೆಯನ್ನು ನನಗೆ ಉಪದೇಶಿಸು' ಎಂದು ಬೇಡಿಕೊಂಡನು. ರೈಕ್ವನು ಜಾನಶ್ರುತಿಗೆ 'ಸಂವಗ೯ವಿದ್ಯೆ'ಯನ್ನು ಹೇಳಿಕೊಟ್ಟನು.ಯಾವುದು ತನ್ನಲ್ಲಿ ಎಳೆದುಕೊಂಡು ಲಯ ಮಾಡಿಕೊಳ್ಳುವುದೊ ಅದು ಸಂವಗ೯.ದೇವತೆಗಳಲ್ಲಿ ವಾಯುವನ್ನೂ ಇಂದ್ರಿಯಗಳಲ್ಲಿ ಪ್ರಾಣವನ್ನೂ ಸಂವಗ೯ವೆಂದು ಉಪಾಸಿಸಬೇಕು.(ಪುಟ 14 ಮುನ್ನುಡಿ)
51)ನಾಲ್ಕನೆಯ ಖಂಡ:ಅನ್ನ-ಅನ್ನಾದತ್ವ ರೂಪದಿಂದ ಸಂಸ್ತುತವೂ ವಾಗಾದಿ-ಅಗ್ನ್ಯಾದಿ ರೂಪದಿಂದಿರುವುದೂ ಆದ ಜಗತ್ತನ್ನು ಕಾರಣರೂಪದಿಂದ ಏಕವೆಂದು ಭಾವಿಸಿ,ಹದಿನಾರು ಪ್ರಕಾರದಿಂದ ವಿಂಗಡಿಸಿ
ಅದರಲ್ಲಿ ಬ್ರಹ್ಮದೃಷ್ಟಿಯನ್ನಿಡಬೇಕೆಂದು ನಾಲ್ಕನೆಯ ಖಂಡವನ್ನು ಹೇಳಿದೆ.ಇದಕ್ಕೆ ಷೋಡಶಕಲವಿದ್ಯೆ ಎಂದು ಹೆಸರು.(ಪುಟ 14 ಮುನ್ನುಡಿ)
52)ಶ್ರದ್ಧಾ-ತಪಸ್ಸುಗಳು ಬ್ರಹ್ಮೋಪಾಸನೆಗೆ ಅಂಗವೆಂಬುದನ್ನು ತಿಳಿಸಲು ಸತ್ಯಕಾಮನ ಕಥೆಯು ಬಂದಿದೆ.ವಾಯು(ಋಷಭ),ಅಗ್ನಿ,ಸೂಯ೯(ಹಂಸ) ಮತ್ತು ಪ್ರಾಣ(ನೀರುಕೋಳಿ)-ಇವರು ಸತ್ಯಕಾಮನಿಗೆ ಬ್ರಹ್ಮದ ನಾಲ್ಕು ಪಾದಗಳನ್ನು ತಿಳಿಸಿಕೊಡುತ್ತಾರೆ.
ನಾಲ್ಕು -ಬ್ರಹ್ಮದ ಮೊದಲನೆಯ ಪಾದವು-ಇದಕ್ಕೆ 'ಪ್ರಕಾಶವಾನ್' ಎಂದು ಹೆಸರು.
ಪೃಥ್ವಿ,,ಅಂತರಿಕ್ಷ,ದ್ಯುಲೋಕ,ಸಮುದ್ರ-ಇವು ಬ್ರಹ್ಮನ 'ಅನಂತವಾನ್' ಎಂಬ ಎರಡನೆಯ ಪಾದವು.
ಅಗ್ನಿ,ಸೂಯ೯,ಚಂದ್ರ,ಮಿಂಚು-ಇವು ಬ್ರಹ್ಮದ 'ಜ್ಯೋತಿಷ್ಮಾನ್' ಎಂಬ ಮೂರನೆಯ ಪಾದವು.
ಪ್ರಾಣ,ಕಣ್ಣು,ಕಿವಿ,ಮನಸ್ಸು -ಇವು ಬ್ರಹ್ಮದ ಆಯತನವೆಂಬ ನಾಲ್ಕನೆಯ ಪಾದವು.ಸತ್ಯಕಾಮನು ದೇವತೆಗಳಿಂದ ಷೋಡಶಕಲ ವಿದ್ಯೆಯನ್ನು ಪಡೆದಿದ್ದರೂ ತನ್ನ ಆಚಾಯ೯ನಾದ ಹಾರಿದ್ರುಮನಿಂದ ಇದೇ
ವಿದ್ಯೆಯನ್ನು ಪುನಃ ಪಡೆಯುತ್ತಾನೆ.ಇಲ್ಲಿಗೆ ಒಂಬತ್ತನೆಯ ಖಂಡವು ಮುಗಿಯುತ್ತದೆ.(ಪುಟ 14 ಮುನ್ನುಡಿ)
53)ಹತ್ತನೆಯ ಖಂಡ:ಇನ್ನೊಂದು ಪ್ರಕಾರದಿಂದ ಬ್ರಹ್ಮವಿದ್ಯೆಯನ್ನೂ ಬ್ರಹ್ಮಜ್ಞಾನಿಯ ಗತಿಯನ್ನೂ ಅಗ್ನಿ ವಿದ್ಯೆಯನ್ನು ಇಲ್ಲಿ ತಿಳಿಸಿದೆ. ಉಪಕೋಸಲ ಕಾಮಲಾಯನನು ಸತ್ಯಕಾಮ ಜಾಬಾಲನ ಮನೆಯಲ್ಲಿ ಬ್ರಹ್ಮಚಯ೯ವಾಸ ಮಾಡಿದನು.ಸತ್ಯಕಾಮನು ಇತರ ಶಿಷ್ಯರಿಗೆ ಉಪದೇಶ ಮಾಡಿದ್ದರೂ ಉಪಕೋಸಲನಿಗೆ ಮಾತ್ರ ಉಪದೇಶ ಮಾಡಿರಲಿಲ್ಲ.ಮಾನಸ ದುಃಖದಿಂದ ಸಂತ್ರಪ್ತನಾದ ಉಪಕೋಸಲನು ಉಪವಾಸ ಮಾಡಲು ಪ್ರಾರಂಭಿಸಿದನು.ಅನಂತರ ಅಗ್ನಿಗಳು ಒಂದೊಂದಾಗಿಯೂ ಒಟ್ಟಾಗಿಯೂತಮ್ಮ ತಮ್ಮ ವಿದ್ಯೆಗಳನ್ನು ಹೇಳಿಕೊಟ್ಟವು.ಅನಂತರ ಅಗ್ನಿಗಳು ಉಪಕೋಸಲನಿಗೆ ಉಪದೇಶ ಮಾಡಿದ್ದು ತಿಳಿಯಿತು. ಅವನು ಅಗ್ನಿಗಳು ನಿನಗೆ ಲೋಕಗಳನ್ನು ಮಾತ್ರ ಉಪದೇಶಿಸಿರುತ್ತವೆ.ಆದರೆ ನಾನು ಬ್ರಹ್ಮವನ್ನು ಉಪದೇಶಿಸುತ್ತೇನೆ.ಪದ್ಮಪತ್ರಕ್ಕೆ ನೀರು ಅಂಟಿಕೊಳ್ಳದಂತೆ ಬ್ರಹ್ಮಜ್ಞಾನಿಗೆ ಪಾಪವು ಅಂಟಿಕೊಳ್ಳುವುದಿ
ಲ್ಲ' ಎಂದು ಹೇಳಿದನು.(ಪುಟ 15 ಮುನ್ನುಡಿ)
ಐದನೆಯ ಅಧ್ಯಾಯ:
54)ಹಿಂದೆ ಸಗುಣೋಪಾಸನೆಗೆ ಉತ್ತರಾಯಣದ ಗತಿಯು ಫಲವೆಂದು ಹೇಳಿದ್ದಾಯಿತು.(ಪುಟ 15ಮುನ್ನುಡಿ)
55)ಈಗ ಐದನೆಯ ಅಧ್ಯಾಯದಲ್ಲಿ ಪಂಚಾಗ್ನಿಗಳನ್ನು ಅರಿತುಕೊಂಡಿರುವ ಗೃಹಸ್ಥರಿಗೂ ಮತ್ತು ಅನ್ಯೋಪಾಸಕರಾದ ಊಧ್ವ೯ರೇತಸ್ಕರಿಗೂ ಉತ್ತರ ಮಾಗ೯ವೇ ಗತಿಯೆಂದು ಹೇಳಲಗುತ್ತದೆ.(ಪುಟ 15 ಮುನ್ನುಡಿ)
56)ಅನಂತರ ಕೇವಲ ಕಮಿ೯ಗಳಿಗೆ ಪುನರಾವೃತ್ತಿ ರೂಪವಾದ ಮತ್ತು ಧೂಮಾದಿ ಲಕ್ಷಣವುಳ್ಳ ದಕ್ಷಿಣಗತಿಯನ್ನು ಹೇಳಲಾಗುತ್ತದೆ.(ಪುಟ 15 ಮುನ್ನುಡಿ)
57)ಬ್ರಹ್ಮಜ್ಞಾನಕ್ಕೆ ಸಾಧನವಾದ ವೈರಾಗ್ಯವನ್ನು ಉಪಾಸಕರಲ್ಲಿ ಹುಟ್ಟಿಸುವುದೇ ಈ ಸಮಸ್ತ ವಣ೯ನೆಯ ಉದ್ದೇಶ.ಈ ಅಧ್ಯಾಯದಲ್ಲಿ ಇಪ್ಪತ್ನಾಲ್ಕು ಅಧ್ಯಾಯಗಳಿವೆ.(ಪುಟ16 ಮುನ್ನುಡಿ)
58)ಮೊದಲನೆಯ ಮತ್ತು ಎರಡನೆಯ ಖಂಡದಲ್ಲಿ ಪ್ರಾಣೋಪಾಸನೆಯನ್ನೂ ,ಪ್ರಾಣೋಪಾಸಕನಿಗೆ ಶ್ರೀಮಂಥ ಕಮ೯ವನ್ನೂ ವಿಧಿಸಿದೆ.ಪ್ರಾಣವೇ ಜ್ಯೇಷ್ಠ ಮತ್ತು ಶ್ರೇಷ್ಠ ಎಂಬುದನ್ನು ರೂಪಕದ ಮೂಲಕ ಹೇಳಿದೆ.(ಪುಟ 16 ಮುನ್ನುಡಿ)
5೯)ಸತ್ಯಕಾಮ ಜಾಬಾಲನು ಈ ಪ್ರಾಣೋಪಾಸನೆಯನ್ನು ಗೋಶ್ರುತು ವೈಯಘ್ರಪದ್ಯನಿಗೆ 'ಇದನ್ನು ಒಣಗಿದ ಮೋಟುಮರಕ್ಕೆ ಹೇಳಿದರೂ ಅದರಲ್ಲಿ ಕೊಂಬೆಗಳು ಹುಟ್ಟಿಯೇ ಹುಟ್ಟುವುವು.ಎಲೆಗಳು ಚಿಗುರುವುವು'ಎಂದು ಅದರ ಮಹಿಮೆಯನ್ನು ಹೊಗಳಿರುತ್ತಾನೆ.(ಪುಟ16 ಮುನ್ನುಡಿ)
60)ಮಹತ್ವ ಉಂಟಾದರೆ ಧನವು ಒದಗುತ್ತದೆ.ಧನವು ಒದಗಿದರೆ ಕಮ೯ವನ್ನು ಮಾಡಬಹುದು.(ಪುಟ 16 ಮುನ್ನುಡಿ)
61)ಕಮ೯ದಿಂದಲೇ ದೇವಯಾನ ಅಥವಾ ಪಿತೃಯಾಣ ಎಂಬ ಮಾಗ೯ವನ್ನು ಹೊಂದಬಹುದು.ಇಂಥವನು ಶ್ರೀಮಂಥ ಕಮ೯ವನ್ನು ಮಾಡಬೇಕೇ ಹೊರತು ವಿಷಯ ಭೋಗಿಯಲ್ಲ.(ಪುಟ 16 ಮುನ್ನುಡಿ)
62)ಮೂರನೆಯ ಖಂಡ:ಪಂಚಾಗ್ನಿ ವಿದ್ಯೆಯನ್ನು ಹೇಳಲಾಗುತ್ತದೆ. ಪ್ರವಾಹಣ ರಾಜನು ಶ್ವೇತಕೇತುವಿಗೆ
ಐದು ಪ್ರಶ್ನೆಗಳನ್ನು ಹಾಕುತ್ತಾನೆ.
1) ಈ ಜನರು ಮೃತರಾದ ಮೇಲೆ ಬೇರೆ ಬೇರೆ ಮಾಗ೯ಗಳಲ್ಲಿ ಹೇಗೆ ಹೋಗುವರು?
2)ಮತ್ತೆ ಇವರು ಈ ಲೋಕಕ್ಕೆ ಹೇಗೆ ಹಿಂತಿರುಗುವರು?
3) ಹೀಗೆ ಬಹು ಜನರು ಪುನಃ ಪುನಃ ಸಾಯುತ್ತಿದ್ದರೂ ಹೇಗೆ ಈ ಲೋಕವು ತುಂಬುತ್ತಿಲ್ಲ?
4)ಎಷ್ಟನೆಯ ಆಹುತಿಯನ್ನು ಹೋಮಮಾಡಿದ ಮೇಲೆ ನೀರು ಪುರುಷವಾಕ್ಕಾಗಿ ಎದ್ದು ನಿಂತು ಮಾತಾಡುತ್ತದೆ?
5)ಯಾವ ಕಮ೯ದಿಂದ ದೇವಯಾನ ಅಥವಾ ಪಿತೃಯಾನೆವೆಂಬ ಪಥವನ್ನು ಜನರು ಪಡೆಯುತ್ತಾರೊ ಅವುಗಳನ್ನು ನೀನು ಅರಿತಿರುವೆಯಾ?ಎಂಬುದಾಗಿ ಐದು ಪ್ರಶ್ನೆಗಳನ್ನು ಕೇಳಿದನು.ಇವುಗಳಲ್ಲಿ ಯಾವ ಒಂದು ಪ್ರಶ್ನೆಯೂ ಶ್ವೇತಕೇತುವಿಗೆ ಗೊತ್ತಿರಲಿಲ್ಲ.
63)ಅನಂತರ ಶ್ವೇತಕೇತುವಿನ ತಂದೆಯಾದ ಗೌತಮನಿಗೆ ಪ್ರವಾಹಣ ರಾಜನು ಪಂಚಾಗ್ನಿ ವಿದ್ಯೆಯನ್ನು
ಉಪದೇಶಿಸುತ್ತಾನೆ.(ಪುಟ 16 ಮುನ್ನುಡಿ)
64)ಹನ್ನೊಂದನೆಯ ಖಂಡದಿಂದ ವೈಶ್ವಾನರ ವಿದ್ಯೆಯು ಆರಂಭವಾಗುತ್ತದೆ.ಐದು ಜನ ಶ್ರೋತ್ರಿಯರು
ವೈಶ್ವಾನರನನ್ನು ಕುರಿತು ಅರಿತುಕೊಳ್ಳಲು ಉದ್ಧಾಲಕ ಅರುಣಿಯೊಂದಿಗೆ ಅಶ್ವಪತಿ ಕೈಕೇಯನ ಬಳಿಗೆ ಬರುತ್ತಾರೆ.ರಾಜನು ಅವರನ್ನು ಒಬ್ಬೊಬ್ಬರನ್ನಾಗಿ 'ನೀನು ಯಾರನ್ನು ವೈಶ್ವಾನರಾತ್ಮನೆಂದು ಉಪಾಸಿಸುತ್ತೀಯೆ'ಎಂದು ಪ್ರಶ್ನಿಸುತ್ತಾನೆ.ಇವರೆಲ್ಲರಿಗೂ ಆತ್ಮನ ಒಂದು ಅವಯವವು ಮಾತ್ರ ಗೊತ್ತಿತ್ತೇವಿನಾಪೂಣಾತ್ಮನ ಜ್ಞಾನವಿರಲಿಲ್ಲ.(ಪುಟ 17 ಮುನ್ನುಡಿ)
65)ಅನಂತರ ರಾಜನು ಇವರನ್ನು ಕುರಿತು 'ಯಾವನು ಪ್ರಾದೇಶ ಮಾತ್ರನೊ ಅಭಿಮಾನಿಯೂ ಆದ ಈ ವೈಶ್ವಾನರನನ್ನು ಹೀಗೆ ಉಪಾಸಿಸುವನೊ ಅವನು ಸವ೯ ಲೋಕಗಳಲ್ಲಿಯೂ ಸವ೯ ಪ್ರಾಣಿಗಳಲ್ಲಿಯೂ ಸವ೯ರ ಆತ್ಮಗಳಲ್ಲಿಯೂ ಆತ್ಮವನ್ನು ತಿನ್ನುತ್ತಾನೆ'ಎಂದು ಉಪದೇಶಿಸುತ್ತಾನೆ.ಈ ಉಪಾಸಕನು ತನ್ನ ಭೋಜನ ಕ್ರಿಯೆಯನ್ನೇ ಪ್ರಾಣಾಗ್ನಿಹೋತ್ರವೆಂದು ಕಲ್ಪಿಸಿಕೊಳ್ಳಬೇಕು.ಊಟಮಾಡುವಾಗ
1)ಮೊದನೆಯ ಅನ್ನ-ಪ್ರಾಣಾಯ ಸ್ವಾಹಾ
2)ಎರಡನೆಯ ಅನ್ನವನ್ನು-ವ್ಯಾನಾಯ ಸ್ವಾಹಾ
3)ಮೂರನೆಯ ಅನ್ನವನ್ನು -ಅಪಾನಾಯ ಸ್ವಾಹಾ
4)ನಾಲ್ಕನೆಯ ಅನ್ನ-ಸಮಾನಾಯ ಸ್ವಾಹಾ
5) ಐದನೆಯ ಅನ್ನವನ್ನು-ಉದಾನಾಯ ಸ್ವಾಹಾ
ಎಂದು ಹೇಳುತ್ತಾ ಬಾಯಿಗೆ ಹಾಕಿಕೊಳ್ಳಬೇಕು.
ಪ್ರತಿಯೊಂದು ಆಹುತಿಗೂ ನಿದಿ೯ಷ್ಟವಾದ ಫಲವಿದೆ.
ಈ ವೈಶ್ವಾನರ ದಶ೯ನವನ್ನು ಅರಿತುಕೊಳ್ಳದೆ ಅಗ್ನಿಹೋತ್ರವನ್ನು ಮಾಡಿದರೆ ಅದು ಕೆಂಡವಿಲ್ಲದ ಬೂದಿಯಲ್ಲಿ ಹೋಮಮಾಡಿದಂತಾಗುವುದು.ಇದನ್ನು ಅರಿತುಕೊಂಡು ಹೋಮ ಮಾಡುವವನ ಆಹುತಿಯು ಸವ೯ಲೋಕಗಳಲ್ಲಿಊ ಸವ೯ ಸವ೯ಪ್ರಾಣಿಗಳಲ್ಲಿಯೂ ಸವ೯ ಆತ್ಮರಲ್ಲಿಯೂ ಹುತವಾಗುವುದು.ಇವನ ಧಮ೯ ಅಧಮ೯ಗಳೆಲ್ಲ ನಾಶವಾಗಿ ,ಪ್ರಾರಬ್ಧ ಕಮ೯ವು ಮುಗಿದ ಮೇಲೆ ವೈಶ್ವಾನರನನ್ನೇ ಪಡೆದು ಕೊಳ್ಳುತ್ತಾನೆ.(ಪುಟ 17)
ಆರನೆಯ ಅಧ್ಯಾಯ:
66)ಐದನೆಯ ಅಧ್ಯಾಯದಲ್ಲಿ ಪ್ರಾಣೋಪಾಸಕನು ಊಟ ಮಾಡಿದರೆ ಜಗತ್ತೆಲ್ಲವೂ ತೃಪ್ತವಾಗುತ್ತದೆ ಎಂದು ಹೇಳಿದ್ದಾಯಿತು.ಆತ್ಮನು ಏಕಮಾತ್ರನಾಗಿದ್ದರೆ ಮಾತ್ರ ಇದು ಸಾಧ್ಯವೇ ಹೊರತು ಆತ್ಮನು ಅನೇಕರಾಗಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ.ಆದುದರಿಂದ ಆತ್ಮನ ಏಕತ್ವವನ್ನು ಪ್ರತಿಪಾದಿಸಲು ಆರನೆಯ ಅಧ್ಯಾಯವು ಪ್ರಾರಂಭವಾಗಿದೆ.(ಪುಟ 17 ಮುನ್ನುಡಿ)
67)ಇಲ್ಲಿ ತತ್ವೋಪದೇಶವೇ ಮುಖ್ಯವಾಗಿರುವುದರಿಂದ ಈ ಭಾಗವು ಛಾಂದೊಗ್ಯ ಉಪನಿಷತ್ತಿನಲ್ಲೆಲ್ಲ
ಅತ್ಯಂತ ಮುಖ್ಯವೆಂದು ಹೇಳಬಹುದು.ಈ ಅಧ್ಯಾಯಕ್ಕೆ ಹದಿನಾರು ಖಂಡಗಳಿವೆ.(ಪುಟ 17 ಮುನ್ನುಡಿ)
68)ಶ್ವೇತಕೇತುವು ಹನ್ನೆರಡು ವಷ೯ಗಳವರೆಗೆ ವೇದಗಳನ್ನೆಲ್ಲ ಅಧ್ಯಯನ ಮಾಡಿದನು.ಆದರೆ ಅವನು ನಿರಹಂಕಾರಿಯೂ ವಿನೀತ ಸ್ವಭಾವದವನೂ ಆಗಲಿಲ್ಲ.ತನ್ನ ಮಗನ ಮನಸ್ಸನ್ನು ಅರಿತುಕೊಂಡ ಉದ್ಧಾಲಕ ಅರುಣಿಯು ಅವನನ್ನು ಹೀಗೆ ಪ್ರಶ್ನಿಸಿದನು.'ಯಾವುದರಿಂದ ಅಶ್ರುತವು ಶ್ರುತವಾಗುವುದೊ,ಅಮತವು ಮತವಾಗುವುದೊ,,ಅವಿಜ್ಞಾತವು ಜ್ಞಾತವಾಗುವುದೊ ಆ ಆದೇಶವನ್ನು ಕೇಳಿದೆಯಾ?'.ಶ್ವೇತಕೇತುವಿಗೆ ಆ ಆದೇಶವು ತಿಳಿದಿರಲಿಲ್ಲ.ವೇದಗಳನ್ನೆಲ್ಲ ಅಧ್ಯಯನ ಮಾಡಿದ್ದರೂ ಆತ್ಮತತ್ವವನ್ನು ತಿಳಿದುಕೊಳ್ಳದ್ದರಿಂದ ಅವನು ಅಕೃತಾಥ೯ನಾಗಿಯೇ ಇದ್ದನು.ಅನಂತರ ಉದ್ಧಾಲಕನು 1)ಮಣ್ಣಿನ ಮುದ್ದೆ2) ಚಿನ್ನದ ಗಟ್ಟಿ 3) ಕಬ್ಬಿಣದ ಉಗುರು ಕತ್ತರಿ ಎಂಬ ಮೂರು ದೃಷ್ಟಾಂತಗಳಿಂದ ಕಾಯ೯ಕಾರಣಗಳ ಅಭೇದವನ್ನು ತಿಳಿಸುತ್ತಾನೆ.ಗಡಿಗೆ ಮುಂತಾದುವಕ್ಕೆ ಮಣ್ಣು ಮುದ್ಧೆಯು ಕಾರಣವಾಗಿದೆ.ಕಾಯ೯ವೂ ಕಾರಣವೂ ಅನನ್ಯವಾಗಿರುವುದರಿಂದ ಒಂದನ್ನು ಅರಿತುಕೊಂಡರೆ ಇನ್ನೊಂದನ್ನು ಅರಿತುಕೊಂಡಂತೆ ಆಗುವುದು.(ಪುಟ 18 ಮುನ್ನುಡಿ)
68) ವಸ್ತುವಿನ ಪರಿಣಾಮವು ವಾಕ್ಕನ್ನು ಅವಲಂಬಿಸಿರುವ ಹೆಸರೇ.(ಪುಟ 18 ಮುನ್ನುಡಿ)
6೯) 'ಇದು ಕಾರಣ.ಇದು ಅದರ ಪರಿಣಾಮ'ಎಂಬ ಲೋಕವ್ಯವಹಾರಕ್ಕೆ ಇದು ಉತ್ತರ.(ಪುಟ 18ಮುನ್ನುಡಿ).
70)ಸೃಷ್ಟಿಗೆ ಮೊದಲು ಈಜಗತ್ತು ಏಕವಾದ ಸತ್ಸ್ವರೂಪವೇ ಆಗಿತ್ತು.ಆ ಸದ್ವಸ್ತುವು ತಾನು ಬಹುವಾಗುವೆನೆಂದು ಸಂಕಲ್ಪಿಸಿ ತೇಜಸ್ಸನ್ನು ಸೃಷ್ಟಿಸಿತು.ಅನಂತರ ತೇಜಸ್ಸಿನಿಂದ ನೀರೂ ,ನೀರಿನಿಂದ ಪೃಥ್ವಿಯೂ ಸೃಷ್ಟಿಸಲ್ಪಟ್ಟವು.
71) ಈ ತೇಜೋಬನ್ನ ಕಾಯ೯ವಾದ (ಎಂದರೆ ತೇಜಸ್ಸು,ನೀರು.ಪೃಥ್ವಿ ಇವುಗಳ ಕಾಯ೯ವಾದ)ಭೂತಗಳಲ್ಲಿ ಮೂಲಕಾರಣವಾದ ಸದ್ವಸ್ತುವು ಜೀವರೂಪದಿಂದ ಪ್ರವೇಶಿಸಿ ನಾಮ ರೂಪಗಳನ್ನು ವಿಂಗಡಿಸಿತು.ಹೀಗೆ ನಾಮರೂಪಗಳನ್ನು ವಿಂಗಡಿಸುವಾಗ ತೇಜೋ ಬನ್ನಾದಿಗಳಲ್ಲಿ ಒಂದೊಂದನ್ನೂ ಮೂರು ಮೂರಾಗಿ ಮಾಡಿತು.ಇದಕ್ಕೆ ತ್ರಿವೃತ್ಕರಣವೆಂದು ಹೆಸರು. ತ್ರಿವೃತ್ಕರಣದಲ್ಲಿ ಒಂದು ಭೂತದ ಅಂಶವು ಹೆಚ್ಚಾಗಿಯೂ ಉಳಿದ ಎರಡು ಭೂತಗಳ ಅಂಶವು ಕಡಿಮೆಯಾಗಿಯೂ ಇರುತ್ತವೆ.(ಪುಟ 18 ಮುನ್ನುಡಿ).
72) ಎಲ್ಲವೂ ಸದ್ವಸ್ತುವಿನ ವಿಕಾರವಾದ್ದರಿಂದ ಸದ್ವಸ್ತುವನ್ನು ಅರಿತುಕೊಂಡರೆ ಎಲ್ಲವನ್ನೂ ಅರಿತುಕೊಂಡಂತೆ ಆಗುವುದು.(ಪುಟ 18 ಮುನ್ನುಡಿ)
73)ಹೀಗೆ ಪ್ರತಿಯೊಂದು ವಸ್ತುವೂ ತ್ರಿವೃತ್ಕøತವಾಗಿದೆ.(ಪುಟ 18 ಮುನ್ನುಡಿ )
74) ಆದುದರಿಂದ ಎಲ್ಲಾ ಭೇದಗಳಿಗೂ ವಿಕಾರಗಳಿಗೂ ನಾಮಗಳಿಗೂ ಸದ್ವಸ್ತುವೇ ಆಧಾರವಾಗಿದೆ.(ಪುಟ 1೯ ಮುನ್ನುಡಿ)
75)ಮನುಷ್ಯನು ಹೇಗೆ ಹದಿನಾರು ಕಲೆಗಳುಳ್ಳವನು ಎಂಬುದನ್ನು ಹೇಳಿದೆ.(ಪುಟ 1೯ ಮುನ್ನುಡಿ)
76)ಎಂಟನೆಯ ಖಂಡ:ಜೀವನು ಮನೋಮಯನಾಗಿರುವುದರಿಂದ ಶ್ರವಣ-ಮನನಗಳು ಸಾಧ್ಯ.ಮನಸ್ಸು ಸುಷುಪ್ತಿಯಲ್ಲಿ ಉಪರತಿಯನ್ನು ಹೊಂದಿದಾಗ ಜೀವನು ಪರಮಾತ್ಮ ಸ್ವರೂಪವನ್ನು ¥ಡೆದು ಕೊಳ್ಳುತ್ತಾನೆ ಎಂಬುದನ್ನು ಎಂಟನೆಯ ಖಂಡದಲ್ಲಿ ಹೇಳಿದೆ.(ಪುಟ 1೯ ಮುನ್ನುಡಿ)
77)ಮನುಷ್ಯನು ಯಾವಾಗ ನಿದ್ರಿಸುತ್ತಾನೆ ಎನ್ನಿಸಿಕೊಳ್ಳುವನೊ ಆಗ ಪರದೇವತೆಯೊಂದಿಗೆ ಏಕೀಭೂತನಾಗಿರುತ್ತಾನೆ.ಸ್ವರೂಪವನ್ನು ಹೊಂದಿರುತ್ತಾನೆ.ಆದುದರಿಂದ ಇವನನ್ನು 'ಸ್ವಪಿತಿ' ಎನ್ನುತ್ತಾರೆ.(ಪುಟ 1೯ ಮುನ್ನುಡಿ)
78)ದಾರದಿಂದ ಕಟ್ಟಲ್ಪಟ್ಟಿರುವ ಪಕ್ಷಿಯು ದಿಕ್ಕುದಿಕ್ಕಿಗೆ ಹಾರಾಡಿ ಮತ್ತೆಲ್ಲಿಯೂ ಆಶÀ್ರಯವನ್ನು ಪಡೆಯದೆ
,ತನ್ನನ್ನು ಬಂಧಿಸಿರುವ ಸ್ಥಳಕ್ಕೇ ಹೇಗೆ ಬರುವುದೊ ಹಾಗೆಯೆ ಮನಸ್ಸೆಂಬ ಉಪಾಧಿಯನ್ನು ಪಡೆದು ಜೀವನು ಸುಷುಪ್ತಿಯಲ್ಲಿ ಪರದೇವತೆಯನ್ನೇ ಸೇರಿಕೊಳ್ಳುತ್ತಾನೆ.(ಪುಟ 1೯ ಮುನ್ನುಡಿ)
2೯)ಸಾಯುತ್ತಿರುವ ಮನುಷ್ಯನಲ್ಲಿ ವಾಕ್ಕು ಮನಸ್ಸಿನಲ್ಲಿಯೂ ,ಮನಸ್ಸು ಪ್ರಾಣದಲ್ಲಿಯೂ,ಪ್ರಾಣವು ತೇಜಸ್ಸಿನಲ್ಲಿಯೂ ,ತೇಜಸ್ಸು ಪರದೇವತೆಯಲ್ಲಿಯೂ ಉಪಸಂಹೃತವಾಗುತ್ತದೆ.ಮುಕ್ತನಾದವನು ಹಿಂತಿರುಗುವುದಿಲ್ಲ.ಆದರೆ ಅಜ್ಞಾನಿಯು -ನಿದ್ರೆಯಿಂದ ಎಚ್ಚರಗೊಂಡವನಂತೆ -ತನ್ನ ಮೂಲವಾದ ಸದ್ವಸ್ತುವಿನಿಂದ ಪುನಃ ದೇಹಜಾಲವನ್ನು ಪಡೆಯುತ್ತಾನೆ.(ಪುಟ 1೯ ಮುನ್ನುಡಿ)
80)ಯಾವುದು ಸೂಕ್ಷ್ಮತಮವಾದ ಜಗನ್ಮೂಲವೊ ಅದರಿಂದಲೇ ಈ ಜಗತ್ತೆಲ್ಲವೂ ಆತ್ಮವಂತವಾಗಿದೆ.ಅದೇ ಸತ್ಯವು,ಅದೇ ಆತ್ಮನು.'ಓ ಶ್ವೇತಕೇತು ಅದೇ ನೀನಾಗಿರುವೆ' ಎಂದು ಉದ್ಧಾಲPನು ಮಗನಿಗೆ ಹೇಳುತ್ತಾನೆ.(ಪುಟ 1೯ ಮುನ್ನುಡಿ)
81)ಜೇನು ಹುಳುಗಳು ನಾನಾ ವೃಕ್ಷಗಳ ದಸಗಳನ್ನು ಶೇಖರಿಸುತ್ತವೆ.ಆದರೆ ಆ ರಸಗಳು 'ನಾನು ಆಮರದ ರಸ ನಾನು ಈಮರದ ರಸ' ಎಂಬ ವಿವೇಕವನ್ನು ಪಡೆದಿರುವುದಿಲ್ಲ. ಹಾಗೆಯೇ ಈ ಪ್ರಾಣಿಗಳೆಲ್ಲ ಸದ್ವಸ್ತುವಿನಲ್ಲಿ ಲಯವಾಗಿ ನಾವು ಸದ್ವಸ್ತುವಿನಲ್ಲಿ ಲಯವಾಗಿದ್ದೇವೆ ಎಂದು ಅರಿಯವು.(ಪುಟ 20 ಮುನ್ನುಡಿ)
82) ಹಾಗೆಯೇ ನದಿಗಳು ಬೇರೆ ಬೇರೆ ದಿಕ್ಕುಗಳಿಗೆ ಹರಿದು ಸಮುದ್ರದಲ್ಲಿ ಒಂದಾಗುತ್ತವೆ.ಅವು ಸಮುದ್ರವನ್ನು ಸೇರಿದಾಗ 'ನಾನು ಗಂಗೆ ನಾನು ಯಮುನೆ' ಎಂಬುದನ್ನು ಅರಿಯವು.(ಪುಟ 21 ಮುನ್ನುಡಿ)
83)ಇದೇ ರೀತಿಯಲ್ಲಿ ಜೀವನು ಶರೀರವನ್ನು ಬಿಟ್ಟರೆ ಅದು ಒಣಗಿ ಸಾಯುತ್ತದೆ.ಜೀವನು ಸಾಯುವುದಿಲ್ಲ.(ಪುಟ 21 ಮುನ್ನುಡಿ)
84)ಅನಂತರ ಶ್ವೇತಕೇತುವು ಅತ್ಯಂತ ಸೂಕ್ಷ್ಮವೂ ನಾಮರಹಿತವೂ ಆದಸದ್ವಸ್ತುವಿನಿಂದ ಅತ್ಯಂತ ಸ್ಥೂಲವೂ ಆದ ಪೃಥಿವ್ಯಾದಿ ನಾಮರೂಪಗಳಗುಳ್ಳದ್ದೂ ಆದ ಈ ಜಗತ್ತು ಹೇಗೆ ಉಂಟಾಯಿತೆಂದು ಪ್ರಶ್ನಿಸುತ್ತಾನೆ.
ಮೂರು ಉದಾಹರಣೆಗಳು:
1)ಆಲದ ಮರದ ಹಣ್ಣಿನ ಉದಾಹರಣೆ:ಆಲದ ಮರದ ಬೀಜದಿಂದ ದೊಡ್ಡ ಆಲದಮರ ಉಂಟಾಗುವುದು.
2) ಉಪ್ಪು -ನೀರಿನ ಉದಾಹರಣೆ:ನೀರಿಗೆ ಉಪ್ಪನ್ನು ಹಾಕಿದರೆ ಕರಗಿ ಹೋಗುತ್ತದೆ.ಅದನ್ನು ನೀರಿನಿಂದ ತೆಗೆಯಲು ಆಗುವುದಿಲ್ಲ.ಆದರೆ ಆ ನೀರನ್ನು ಯಾವುದೇ ಭಾಗದಿಂದ ಸವಿದರೂ ಎಲ್ಲೆಲ್ಲಿಯೂ ಉಪ್ಪೇ ಆಗಿರುತ್ತದೆ.ಹಾಗೆಯೇ ಜಗನ್ಮೂಲವಾದ ಸದ್ವಸ್ತುವು ನಮ್ಮ ಶರೀರದಲ್ಲಿದೆ.ಇಂದ್ರಿಯಗಳಿಗೆ ಗೋಚರವಾಗುವುದಿಲ್ಲ.ಆದರೆ ಬೇರೊಂದು ಉಪಾಯದಿಂದ ಈ ಜಗನ್ಮೂಲವನ್ನು ಕಂಡು ಹಿಡಿಯಬಹುದು.
3)ಗಾಂಧಾರ ದೇಶದವನ ಕಥೆ: ಗಂಧಾರದೇಶದ ಮನುಷ್ಯನೊಬ್ಬನನ್ನು ಕಣ್ಣು ಕಟ್ಟಿ ಕರೆತಂದು ಅವನನ್ನು ಒಂದು ನಿಜ೯ನ ಪ್ರದೇಶದಲ್ಲಿ ಬಿಟ್ಟರು.ಅವನು ಅರಚಿಕೊಳ್ಳುತ್ತಾ ಸಹಾಯವನ್ನು ಬೇಡುತ್ತಿದ್ದನು.ಆಗ ಕಾರುಣಿಕನಾದ ಗುರುವೊಬ್ಬನು ಅವನ ಕಣ್ಣುಗಳ ಕಟ್ಟನ್ನು ಬಿಚ್ಚಿ ಗಂಧಾರದೇಶದ ದಿಕ್ಕನ್ನು ತೋರಿಸಿದನು.ಹಾಗೆಯೇ ಈ ಸಂಸಾರದಲ್ಲಿ ಅಜ್ಞಾನಿಯಾದವನು ಆಚಾಯ೯ನ ಉಪದೇಶದಿಂದ ಆತ್ಮನನ್ನು ಅರಿತುಕೊಳ್ಳುತ್ತಾನೆ.(ಪುಟ 22 ಮುನ್ನುಡಿ)
85)ಹಾಗೆಯೇ ಪ್ರಾರಬ್ಧ ಕಮ೯ವು ನಾಶವಾದ ಮೇಲೆ ಅವನು ಸದ್ವಸ್ತುವಿನಲ್ಲಿಯೇ ಸೇರಿಕೊಂಡು ಮುಕ್ತನಾಗುತ್ತಾನೆ.(ಪುಟ 22 ಮುನ್ನುಡಿ)
86)ಹದಿನೈದನೆಯ ಖಂಡ:ಇಲ್ಲಿ ಮುಮುಕ್ಷುವು ಸದ್ವಸ್ತುವಿನಲ್ಲಿ ಸೇರುವ ಕ್ರಮವನ್ನು ಉಪದೇಶಿಸಿದೆ.(ಪುಟ 22 ಮುನ್ನುಡಿ)
87)ಅಜ್ಞಾನಿಯು ತನ್ನ ಹಿಂದಿನ ಕಮ೯ದ ಪ್ರಕಾರ ಪುನಃ ಹುಟ್ಟುತ್ತಾನೆ.ಜ್ಞಾನಿಯು ಶಾಸ್ತ್ರಾಚಾಯ೯ರ ಉಪದೇಶದಿಂದ ಸದ್ಬ್ರಹ್ಮವನ್ನು ಪ್ರವೇಶಿಸಿ ಪುನಃ ಹುಟ್ಟುವುದಿಲ್ಲ.(ಪುಟ 22 ಮುನ್ನುಡಿ)
88)ಉದ್ಧಾಲಕನು ಶೇತಕೇತುವಿಗೆ 'ಅದೇ ನೀನಾಗಿರುವೆ'(ತತ್ವಮಸಿ)(ತತ್ ತ್ವಮ್ -ಅಸಿ) ಎಂದು ಹೀಗೆ ಉದಾಹರಣೆಗಳ ಮೂಲಕ ಉಪದೇಶಿಸುತ್ತಾನೆ.(ಪುಟ 23 ಮುನ್ನುಡಿ)
ಏಳನೆಯ ಅಧ್ಯಾಯ:
8೯)ಪರಮಾಥ೯ ತತ್ವವೇ ಪ್ರಧಾನವಾಗಿದ್ದ ಆರನೆಯ ಅಧ್ಯಾಯದಲ್ಲಿ ಬ್ರಹ್ಮ-ಜೀವರ ಏಕತ್ವವು ನಿಣ೯ಯಿಸಲ್ಪಟ್ಟಿತು.(ಪುಟ 23 ಮುನ್ನುಡಿ)
೯0)ಶಾಖಾ ಚಂದ್ರ ನ್ಯಾಯದಲ್ಲಿ ಶಾಖೆಯನ್ನು ನೆಪಮಾಡಿಕೊಂಡು ಚಂದ್ರನನ್ನು ನಿದೇ೯ಶಿಸುವಂತೆ ನಾಮಾದಿ ತತ್ವಗಳನ್ನು 'ಭೂಮ'ಎಂಬ ಹೆಸರಿನ ನಿರತಿಶಯ ತತ್ವವನ್ನು ಉಪದೇಶಿಸಲು ಏಳನೆಯ ಅಧ್ಯಾಯವನ್ನು ಪ್ರಾರಂಭಿಸಿದೆ.(ಪುಟ 23 ಮುನ್ನುಡಿ)
೯1)ಏಕೆಂದರೆ ಸದ್ವಸ್ತುವಿಗಿಂತ ಈಚೆಯಿರುವ ತತ್ವಗಳನ್ನು ನಿದೇ೯ಶಿಸದೆ ಸದ್ವಸ್ತುವೊಂದನ್ನೇ ಉಪದೇಶಿಸಿದರೆ ಇನ್ನೂ ಯಾವುದೊ ಒಂದು ತತ್ವವು ಅವಿಜ್ಞಾತವಾಗಿರಬಹುದೆಂಬ ಸಂದೇಹವುಂಟಾಗಬಹುದು.(ಪುಟ 23 ಮುನ್ನುಡಿ)
೯2)ನಾರದ -ಸನತ್ಕುಮಾರರ ಆಖ್ಯಾಯಿಕೆಯು ಪರವಿದ್ಯೆಯ ಸ್ತುತಿಗಾಗಿ ಬಂದಿದೆ.ದೇವಷಿ೯ಯಾದ ನಾರದನು ಸವ೯ವಿದ್ಯೆಗಳನ್ನು ಅರಿತುಕೊಂಡಿದ್ದರೂ ಆತ್ಮನನ್ನು ಅರಿತುಕೊಳ್ಳದೆ ಇರುವುದರಿಂದ ಶೋಕಿಸುತ್ತಿದ್ದನು.ನಾರದನ ಅವಸ್ಥೆಯೇ ಹೀಗಿರುವಾಗ ಅಲ್ಪಜ್ಞನೂ ಪುಣ್ಯರಹಿತನೂ ಅಕೃತಕೃತ್ಯನೂ ಆದ ಸಂಸಾರಿ ಜೀವನ ದುಃಖವನ್ನು ವಿವರಿಸಬೇಕಾಗಿಲ್ಲ.(ಪುಟ 23 ಮುನ್ನುಡಿ)
೯3)ನಾರದನು ಬ್ರಹ್ಮವಿದ್ಯೆಯನ್ನು ಕಲಿಯಲು ಸನತ್ಕುಮಾರನ ಬಳಿಗೆ ಬಂದಾಗ,ಅವನು ಕಲಿತೆದ್ದೆಲ್ಲಾ ನಾಮವೆಂದೂ ,ನಾಮವನ್ನೇ ಬ್ರಹ್ಮವೆಂದು ಉಪಾಸಿಸಬೇಕೆಂದು ಸನತ್ಕುಮಾರನು ಹೇಳುತ್ತಾನೆ.ಆಗ ನಾರದನು ನಾಮಕ್ಕಿಂತ ಅಧಿಕವಾದುದು ಇದೆಯೇ ?ಎಂದು ಕೇಳಲು ಅದಕ್ಕಿಂತ ವಾಕ್ಕು ಹೆಚ್ಚಿನದೆಂದು ಹೇಳುತ್ತಾನೆ.ಹೀಗೆಯೇ ನಾಮ,ವಾಕ್ಕು ಮನಸ್ಸು,ಸಂಕಲ್ಪ ,ಚಿತ್ತ,ಧ್ಯಾನ,ವಿಜ್ಞಾನ,ಅನ್ನ,ನೀರು ತೇಜಸ್ಸು,ಆಕಾಶ,ಸ್ಮøತಿ,ಆಶೆ,ಪ್ರಾಣ-ಇವು ಒಂದಕ್ಕಿಂತ ಒಂದು ಅಧಿಕವಾದುದೆಂದೂ ,ಪ್ರತಿಯೊಂದನ್ನೂ ಬ್ರಹ್ಮವೆಂದು ಉಪಾಸಿಸಬೇಕೆಂದೂ ಹೇಳುತ್ತಾನೆ. (ಪುಟ 23 ಮುನ್ನುಡಿ)
೯4)ಪ್ರಾಣಾತ್ಮವಾದಿಯು ನಿಜವಾದ ಅತಿವಾದಿಯಲ್ಲ.ಯಾವನು 'ಭೂಮ' ಎಂಬ ಹೆಸರಿನ ಎಲ್ಲವನ್ನೂ ಅತಿಕ್ರಮಿಸಿರುವ ಪರಮಾಥ೯ ತತ್ವವನ್ನು ಅರಿತಿರುವನೋ ಅವನೇ ನಿಜವಾದ ಅತಿವಾದಿ.(ಪುಟ 24 ಮುನ್ನುಡಿ)
೯5) ಪರಮಾಥ೯ ತತ್ವವನ್ನು ಅರಿತುಕೊಳ್ಳುವುದೇ ವಿಜ್ಞಾನವು.(ಪುಟ 24 ಮುನ್ನುಡಿ)
೯6)ವಿಜ್ಞಾನಕ್ಕೆ ಮನನವೂ ,ಮನನಕ್ಕೆ ಶ್ರದ್ಧೆಯೂ,,ಶ್ರದ್ಧೆಗೆ ನಿಷ್ಠೆಯೂ,,ನಿಷ್ಠೆಗೆ ಇಂದ್ರಿಯ ಸಂಯಮವೂ,ಇಂದ್ರಿಯ ಸಂಯಮಕ್ಕೆ ಸುಖವೂ ಆಶ್ರಯವಾಗಿರುತ್ತದೆ.(ಪುಟ 24 ಮುನ್ನುಡಿ)
೯7)ಆ ಸುಖವು ಭೂಮವು.ಅಲ್ಪದಲ್ಲಿ ಸುಖವಿಲ್ಲ.ಭೂಮವನ್ನೇ ತಿಳಿದುಕೊಳ್ಳಲು ಬಯಸಬೇಕು.(ಪುಟ 24 ಮುನ್ನುಡಿ)
೯8) 'ಎಲ್ಲಿ ಬೇರೊಂದನ್ನು ನೋಡುವುದಿಲ್ಲವೊ,ಬೇರೊಂದನ್ನು ಕೇಳುವುದಿಲ್ಲವೊ,ಬೇರೊಂದನ್ನು ಅರಿಯುವುದಿಲ್ಲವೊ ಅದೇ ಭೂಮವು'ಎಂದು ಸನತ್ಕುಮಾರನು ಉಪದೇಶಿಸುತ್ತಾನೆ.(ಪುಟ 24 ಮುನ್ನುಡಿ)
೯೯) ಭೂಮವು ಯಾವುದರಲ್ಲಿ ಪ್ರತಿಷ್ಠಿತವಾಗಿದೆಯೆಂದು ನಾರದನು ಕೇಳುತ್ತಾನೆ.'ತನ್ನ ಮಹಿಮೆಯಲ್ಲಿ' ಎನ್ನಬಹುದು.ಆದರೆ ಭೂಮವು ತನ್ನ ಮಹಿಮೆಯಲ್ಲಿಯೂ ಪ್ರತಿಷ್ಠಿತವಾಗಿಲ್ಲವೆಂಬುದು ಉತ್ತರ.ಭೂಮಕ್ಕೆ ನಿಜವಾಗಿ ಯಾವ ಪ್ರತಿಷ್ಠೆಯೂ ಇಲ್ಲ.ಆ ಭೂಮವೇ ಮೇಲೆ ಕೆಳಗೆ, ಎಲ್ಲೆಲ್ಲಿಯೂ ಇದೆ.ಅದೇ ಎಲ್ಲೆಲ್ಲಿಯೂ ನಾನು ಎಂದು ಕರೆಸಿಕೊಳ್ಳತಕ್ಕದ್ದು.ಆದರೆ ಅವಿವೇಕಿಗಳು ಅರಿಯು 'ನಾನು'ಎಂಬ ದೇಹಾದಿ ಸಂಘಾತವಲ್ಲ.ಕೇವಲ ಸದ್ರೂಪನಾದ ಆತ್ಮನೇ ಭೂಮವು.ಹೀಗೆ ಅರಿತುಕೊಂಡವನು 'ಸ್ವರಾಟ್' ಆಗುತ್ತಾನೆ. ಅವನಿಗೆ ಸವ೯ಲೋಕಗಳಲ್ಲಿಯೂ ಸ್ವಚ್ಛಂದ ಗತಿಯಿರುತ್ತದೆ.ಇದಕ್ಕಿಂತ ಬೇರೆಯಾಗಿ ಅರಿತುಕೊಂಡವರು ಕ್ಷರವಾದ ಲೋಕಗಳಲ್ಲಿ ವಾಸಿಸುತ್ತಾರೆ.ಇಲ್ಲಿಗೆ ಇಪ್ಪತ್ತೈದನೆಯ ಖಂಡವು ಮುಗಿಯುತ್ತದೆ.(ಪುಟ 25 ಮುನ್ನುಡಿ)
100)ಹೀಗೆ ಸಮಸ್ತ ವ್ಯವಹಾರವೂ ಸ್ವಾರಾಜ್ಯವನ್ನು ಹೊಂದಿದ ಜ್ಞಾನಿಗೆ ತನ್ನ ಆತ್ಮನಿಂದಲೇ ಉಂಟಾಗುತ್ತಿರುವುದು.ಇಂಥ ತತ್ವವಿದನಿಗೆ ಮೃತ್ಯು ರೋಗ, ದುಃಖ ಮೊದಲದ ಅನಥ೯ಗಳೂ ಇರುವುದಿಲ್ಲ.ಅವನು ಎಲ್ಲವೂ ಆಗಿ ಎಲ್ಲವನ್ನೂ ಪಡೆದುಕೊಳ್ಳುತ್ತಾನೆ.ಸೃಷ್ಟಿಗೆ ಮೊದಲು ಅವನು ಅದ್ವಯನಾಗಿದ್ದರೂ ಅನಂತರ ಸ್ವಲ್ಪಕಾಲದಲ್ಲಿ ನಾನಾ ಬಗೆಯಾಗಿ ತೋರಿಕೊಂಡು ಪುನಃ ಸಂಹಾರಕಾಲದಲ್ಲಿ ಮೂಲವಾಗಿರುವ ತನ್ನ ಪಾರಮಾಥಿ೯ಕ ಅದ್ವಯ ಭಾವವನ್ನೇ ಪಡೆಯುತ್ತಾನೆ.(ಪುಟ25 ಮುನ್ನುಡಿ)
101)ಇಂಥ ಜ್ಞಾನವನ್ನು ಪಡೆಯಲು ಆಹಾರಶುದ್ದಿಯು ,ಎಂದರೆ ರಾಗದ್ವೇಷ ಮೋಹಗಳೆಂಬ ದೋಷಗಳಿಲ್ಲದ ವಿಷಯ ಜ್ಞಾನವು ಅತ್ಯಾವಶ್ಯಕವಾಗಿದೆ.ಆಹಾರವು ಶುದ್ಧಿಯಾದಾಗ ಅಂತಃಕರಣವು
ಶುದ್ಧಿಯಾಗುತ್ತದೆ.ಅಂತಃಕರಣವು ಶುದ್ಧವಾದಾಗ ಭೂಮಾತ್ಮನಲ್ಲಿ ಧ್ರುವವಾದ ಸ್ಮøತಿಯುಂಟಾಗುತ್ತದೆ.
(ಪುಟ 25 ಮುನ್ನುಡಿ)
102)ಸನತ್ಕುಮಾರನನ್ನು ಸ್ಕಂದನೆಂದು ಕರೆಯುgತ್ತಾರೆ.(ಪುಟ 25 ಮುನ್ನುಡಿ)
ಎಂಟನೆಯ ಅಧ್ಯಾಯ:
103) ದಿಕ್ಕು ದೇಶ ಕಾಲಾದಿಗಳಿಲ್ಲದ ಬ್ರಹ್ಮವು ಏಕವೂ ಅದ್ವಿತೀಯವೂ ಆದ ಸದ್ವಸ್ತುವೆಂದು ಹಿಂದಿನ ಎರಡು ಅಧ್ಯಾಯಗಳಲ್ಲಿ ಹೇಳಲ್ಪಟ್ಟಿತು(ಪುಟ 26 ಮುನ್ನುಡಿ)
104)ಆ ಬ್ರಹ್ಮ ಸಾಕ್ಷಾತ್ಕಾರಕ್ಕಾಗಿ ಹೃದಯಪದ್ಮವೆಂಬ ದೇಶವನ್ನು(ಸ್ಥಳವನ್ನು) ಹೇಳಬೇಕಾಗಿದೆ.(ಪುಟ 26 ಮುನ್ನುಡಿ)
105)ಆತ್ಮತತ್ವವು ನಿಗು೯ಣವಾದರೂ ಸಾಮನ್ಯ ಜನರಿಗೆ ಸಗುಣ ಭಾವವು ಇಷ್ಟವಾದ್ದರಿಂದ ಅದು ಸತ್ಯಕಾಮಾದಿ ಗುಣಗಳಿಂದ ಕೂಡಿರುವುದೆಂದು ಉಪದೇಶಿಸ ಬೇಕಾಗಿದೆ.(ಪುಟ 26 ಮುನ್ನುಡಿ)
106)ಬ್ರಹ್ಮವಿದರಿಗೆ ವಿಷಯಗಳಿಂದ ಉಪರತಿಯು ತಾನೇ ಉಂಟಾಗ ಬಹುದಾಗಿದ್ದರೂ ,ಪೂವ೯ಜನ್ಮಗಳ ವಿಷಯ ಸೇವಾಭ್ಯಾಸದಿಂದ ಉಂಟಾದ ವಿಷಯ ತೃಷ್ಣೆಯನ್ನು ಕೂಡಲೇ ತೊಡಗಿಸಲು ಕಷ್ಟವಾದುದರಿಂದ ಬ್ರಹ್ಮಚಯಾ೯ದಿ ಸಾಧನ ವಿಶೇಷವನ್ನು ವಿಧಿಸಬೇಕಾಗಿದೆ.(ಪುಟ 26 ಮುನ್ನುಡಿ)
107)ಗಂತೃ-ಗಮನ-ಗಂತವ್ಯಗಳು(ಹೋಗುವುದು-ಬರುವುದು)ಬ್ರಹ್ಮವಿದನಿಗೆ ಇಲ್ಲದ್ದರಿಂದ ಅವನಿಗೆ ತನ್ನ ಆತ್ಮನಲ್ಲಿಯೇ ಲಯ ಉಂಟಾಗುವುದು.ಆದರೆ ಸಾಮಾನ್ಯ ಜನರಿಗೆ ನೆತ್ತಿಯ ನಾಡಿಯ ಮೂಲಕ ಗತಿಯನ್ನು ಹೇಳಬೇಕಾಗಿದೆ.(ಪುಟ 26 ಮುನ್ನುಡಿ)
108)ಈ ಅಧ್ಯಾಯದಲ್ಲಿ ಒಟ್ಟು ಹದಿನೈದು ಖಂಡಗಳಿವೆ.
ಮೊದಲ ಖಂಡದಲ್ಲಿ 'ದಹರವಿದ್ಯೆ'ಯನ್ನು ಹೇಳಿದೆ. 'ದಹರ'ಎಂದರೆ ಸಣ್ಣ ಎಂದಥ೯.ಬ್ರಹ್ಮಪುರವಾದ ನಮ್ಮ ಶರೀರದಲ್ಲಿ ಹೃದಯಪದ್ಮವೆಂಬ ಮನೆಯಿದೆ.ಅದರಲ್ಲಿರುವ ದಹರಾಕಾಶದಲ್ಲಿ ಯಾವುದಿದೆಯೊ ಅದನ್ನು ಅನ್ವೇಶಿಸಬೇಕು.ಅದನ್ನೇ ಅರಿತುಕೊಳ್ಳಲು ಬಯಸಬೇಕು.ಈ ದಹರಾಕಾಶವೇ ಬ್ರಹ್ಮ.ಬ್ರಹ್ಮಕ್ಕೆ ಆಕಾಶವೆಂಬುದು ಪ್ರಸಿದ್ಧವಾದ ಹೆಸರು.ಹೃದಯದಲ್ಲಿರುವ ಆಕಾಶವನ್ನು ಬ್ರಹ್ಮವೆಂದು ಹೇಳಿರುವುದರಿಂದ ಅದು ಹೃದಯಾಕಾಶದಷ್ಟೇ ಸಣ್ಣದೆಂದು ಭಾವಿಸಬಾರದು.ಇಲ್ಲಿ ದ್ಯುಲೋಕ-ಪೃಥ್ವಿಗಳ ಅಗ್ನಿ ವಯುಗಳು ,ಸೂಯ೯-ಚಂದ್ರರು ಮತ್ತು ಏನೇನಿದೆಯೊ ಏನೇನಿಲ್ಲವೋ(ಕಾಣುವ ಹಾಗೂ ಕಾಣದ)ಎಲ್ಲವೂ ಅಂತಗ೯ತವಗಿವೆ.(ಪುಟ 27 ಮುನ್ನುಡಿ)
10೯)ಶರೀರದ ಮುಪ್ಪಿನಿಂದ ಆಕಾಶವೆಂಬ ಬ್ರಹ್ಮಕ್ಕೆ ಮುಪ್ಪಿಲ್ಲ.(ಪುಟ 27 ಮುನ್ನುಡಿ)
110)ಯಾರು ಇಲ್ಲಿ ಆತ್ಮನನ್ನು ಉಪಾಸಿಸಿ ದೇಹತ್ಯಾಗ ಮಾಡುವರೊ ಅವರು ಸವ೯ಲೋಕಗಳಲ್ಲಿಯೂ
ಸ್ವತಂತ್ರಗತಿಯನ್ನು ಪಡೆಯುತ್ತಾರೆ.ಇದು ಮೊದಲನೆಯ ಖಂಡದ ವಿಷಯ(ಪುಟ 27 ಮುನ್ನುಡಿ)
111)ಎರಡನೆಯ ಖಂಡ:ಇವರು -ಭೂಮಿಯಲ್ಲಿ ಅಡಗಿರುವ ನಿಧಿಯ ಮೇಲೆ ನಡೆಯುತ್ತಿದ್ದರೂ ಅದನ್ನು ಅರಿಯದ ಅಜ್ಞಾನಿಗಳಂತೆ -ಬ್ರಹ್ಮಲೋಕವನ್ನು ಪ್ರತಿದಿನವೂ ಸೇರುತ್ತಿದ್ದರೂ ಅದನ್ನು ಪಡೆದುಕೊಳ್ಳದೆ ಇರುವರು.(ಪುಟ 27 ಮುನ್ನುಡಿ)
112)ಅಪಹತ- ಪಾಪತ್ವವೇ ಮೊದಲಾದ ಗುಣಗಳಿಂದ ಆತ್ಮನು ಹೃದಯದಲ್ಲಿರುತ್ತಾನೆ.(ಪುಟ 27 ಮುನ್ನುಡಿ)
113)ಮೂರನೆಯ ಖಂಡ:ಹೀಗೆ ಸುಷುಪ್ತಿ ಕಾಲದಲ್ಲಿ ಸದ್ವಸ್ತುವಿನೊಂದಿಗೆ ಸಂಪನ್ನನಾದ ಪುರುಷನು ಶರೀರವೆಂಬ ಭಾವನೆಯನ್ನು ಬಿಟ್ಟು ಪರಮಾತ್ಮನ ಲಕ್ಷಣವಾದ ಜ್ಯೋತಿಯನ್ನು ಸೇರಿ ತನ್ನ ಸ್ವರೂಪದಲ್ಲಿಯೇ ನಿಲ್ಲುತ್ತಾನೆ.ಇವನೇ ಆತ್ಮನು,ಅಮೃತ,ಅಭಯ ಬ್ರಹ್ಮ.ಈ ಬ್ರಹ್ಮಕ್ಕೆ ಸತ್ಯವೆಂಬುದು ಹೆಸರು.(ಪುಟ 27 ಮುನ್ನುಡಿ)
114) ನಾಲ್ಕನೆಯ ಖಂಡ: ಈ ಲೋಕಗಳು ನಾಶವಾಗದಿರಲು ಆತ್ಮನು ಸೇತುವಾಗಿದ್ದಾನೆ.(ಪುಟ 28 ಮುನ್ನುಡಿ)
105)ಬ್ರಹ್ಮಲೋಕವು ಸದಾ ಪ್ರಕಾಶಿಸುತ್ತಲೇ ಇರುತ್ತದೆ.ಬ್ರಹ್ಮಲೋಕವನ್ನು ಬ್ರಹ್ಮಚಯ೯ದಿಂದಲೇ ಪಡೆದುಕೊಳ್ಳಬೇಕು.(ಪುಟ 28 ಮುನ್ನುಡಿ)
106) ಈ ಸೇತುವನ್ನು ದಾಟಿದರೆ ತಮೋ ರೂಪವಾದ ರಾತ್ರಿಯೂ ಚೈತನ್ಯ ಜ್ಯೋತಿಯೆಂಬ ಹಗಲೇ ಆಗುತ್ತದೆ.(ಪುಟ 28 ಮುನ್ನುಡಿ)
107)ಯಜ್ಞವೇ ಬ್ರಹ್ಮಚಯ೯ವು.ಏಕೆಂದರೆ ಜ್ಞಾತೃವಾದವನು ಯಜ್ಞಫಲವನ್ನು ಬ್ರಹ್ಮಚಯ೯ದಿಂದಲೇ ಹೊಂದುತ್ತಾನೆ. ಹೀಗೆಯೇ ಇಷ್ಟ,ಸತ್ತ್ರಾಯಣ,ಮೌನ,ಉಪವಾಸ,ಅರಣ್ಯವಾಸ ಇವೂ ಬ್ರಹ್ಮಚಯ೯ವೇ.ಏಕೆಂದರೆ ಇವೆಲ್ಲವೂ ಆತ್ಮಲಾಭಕ್ಕೆ ನಾನಾವಿಧವಾಗಿ ಕಾರಣಗಳಾಗಿರುವುವು.(ಪುಟ 28 ಮುನ್ನುಡಿ)
ಐದನೆಯ ಖಂಡ:
108)ಬ್ರಹ್ಮಲೋಕದಲ್ಲಿ ಅರ ಮತ್ತು ಣ್ಯ ಎಂಬ ಎರಡು ಸರೋವರಗಳಿವೆ.ಐರಂಮದೀಯವೆಂಬ ಸರಸ್ಸಿದೆ.ಸೋಮಸವನವೆಂಬ ಅಶ್ವತ್ಥವಿದೆ.ಅಲ್ಲಿ ಬ್ರಹ್ಮನ ಅಪರಾಜಿತಾ ಎಂಬ ಸರೋವರವಿದೆ.ಅಲ್ಲಿ ಬ್ರಹ್ಮನು ನಿಮಿ೯ಸಿರುವ ಹಿರಣ್ಮಯ ಮಂಟಪವಿದೆ.ಬ್ರಹ್ಮಚಯ೯ವುಳ್ಳ ಉಪಾಸಕರಿಗೆ ಬ್ರಹ್ಮಲೋಕವೂ ಸ್ವತಂತ್ರಗತಿಯೂ ಇರುತ್ತದೆ.(ಪುಟ 28 ಮುನ್ನುಡಿ)
105)ಆತ್ಮತತ್ವವು ನಿಗು೯ಣವಾದರೂ ಸಾಮಾನ್ಯ ಜನರಿಗೆ ಸಗುಣ ಭಾವವು ಇಷ್ಟವಾದ್ದರಿಂದ ಅದು ಸತ್ಯಕಾಮಾದಿ ಗುಣಗಳಿಂದ ಕೂಡಿರುವುದೆಂದು ಉಪದೇಶಿಸ ಬೇಕಾಗಿದೆ.(ಪುಟ 26 ಮುನ್ನುಡಿ)
106)ಬ್ರಹ್ಮವಿದರಿಗೆ ವಿಷಯಗಳಿಂದ ಉಪರತಿಯು ತಾನೇ ಉಂಟಾಗ ಬಹುದಾಗಿದ್ದರೂ ,ಪೂವ೯ಜನ್ಮಗಳ ವಿಷಯ ಸೇವಾಭ್ಯಾಸದಿಂದ ಉಂಟಾದ ವಿಷಯ ತೃಷ್ಣೆಯನ್ನು ಕೂಡಲೇ ತೊಡಗಿಸಲು ಕಷ್ಟವಾದುದರಿಂದ ಬ್ರಹ್ಮಚಯಾ೯ದಿ ಸಾಧನ ವಿಶೇಷವನ್ನು ವಿಧಿಸಬೇಕಗಿದೆ.(ಪುಟ 26 ಮುನ್ನುಡಿ)
107)ಗಂತೃ-ಗಮನ-ಗಂತವ್ಯಗಳು(ಹೋಗುವುದು-ಬರುವುದು)ಬ್ರಹ್ಮವಿದನಿಗೆ ಇಲ್ಲದ್ದರಿಂದ ಅವನಿಗೆ ತನ್ನ ಆತ್ಮನಲ್ಲಿಯೇ ಲಯ ಉಂಟಾಗುವುದು.ಆದರೆ ಸಾಮನ್ಯ ಜನರಿಗೆ ನೆತ್ತಿಯ ನಾಡಿಯ ಮೂಲಕ ಗತಿಯನ್ನು ಹೇಳಬೇಕಾಗಿದೆ.(ಪುಟ 26 ಮುನ್ನುಡಿ)
108)ಈ ಅಧ್ಯಾಯದಲ್ಲಿ ಒಟ್ಟು ಹದಿನೈದು ಖಂಡಗಳಿವೆ.
ಮೊದಲ ಖಂಡದಲ್ಲಿ 'ದಹರವಿದ್ಯೆ'ಯನ್ನು ಹೇಳಿದೆ. 'ದಹರ'ಎಂದರೆ ಸಣ್ಣ ಎಂದಥ೯.ಬ್ರಹ್ಮಪುರವಾದ ನಮ್ಮ ಶರೀರದಲ್ಲಿ ಹೃದಯಪದ್ಮವೆಂಬ ಮನೆಯಿದೆ.ಅದರಲ್ಲಿರುವ ದಹರಾಕಾಶದಲ್ಲಿ ಯಾವುದಿದೆಯೊ ಅದನ್ನು ಅನ್ವೇಶಿಸಬೇಕು.ಅದನ್ನೇ ಅರಿತುಕೊಳ್ಳಲು ಬಯಸಬೇಕು.ಈ ದಹರಾಕಾಶವೇ ಬ್ರಹ್ಮ.ಬ್ರಹ್ಮಕ್ಕೆ ಆಕಾಶವೆಂಬುದು ಪ್ರಸಿದ್ಧವಾದ ಹೆಸರು.ಹೃದಯದಲ್ಲಿರುವ ಆಕಾಶವನ್ನು ಬ್ರಹ್ಮವೆಂದು ಹೇಳಿರುವುದರಿಂದ ಅದು ಹೃದಯಾಕಾಶದಷ್ಟೇ ಸಣ್ಣದೆಂದು ಭಾವಿಸಬಾರದು.ಇಲ್ಲಿ ದ್ಯುಲೋಕ-ಪೃಥ್ವಿಗಳ ಅಗ್ನಿ ವಯುಗಳು ,ಸೂಯ೯-ಚಂದ್ರರು ಮತ್ತು ಏನೇನಿದೆಯೊ ಏನೇನಿಲ್ಲವೋ(ಕಾಣುವ ಹಾಗೂ ಕಾಣದ)ಎಲ್ಲವೂ ಅಂತಗ೯ತವಗಿವೆ.(ಪುಟ 27 ಮುನ್ನುಡಿ)
10೯)ಶರೀರದ ಮುಪ್ಪಿನಿಂದ ಆಕಾಶವೆಂಬ ಬ್ರಹ್ಮಕ್ಕೆ ಮುಪ್ಪಿಲ್ಲ.(ಪುಟ 27 ಮುನ್ನುಡಿ)
110)ಯಾರು ಇಲ್ಲಿ ಆತ್ಮನನ್ನು ಉಪಾಸಿಸಿ ದೇಹತ್ಯಾಗ ಮಾಡುವರೊ ಅವರು ಸವ೯ಲೋಕಗಳಲ್ಲಿಯೂ
ಅವರು ಸವ೯ಲೋಕಗಳಲ್ಲಿಯೂ ಸ್ವತಂತ್ರಗತಿಯನ್ನು ಪಡೆಯುತ್ತಾರೆ.ಇದು ಮೊದಲನೆಯ ಖಂಡದ ವಿಷಯ(ಪುಟ 27 ಮುನ್ನುಡಿ)
111)ಎರಡನೆಯ ಖಂಡ:ಇವರು -ಭೂಮಿಯಲ್ಲಿ ಅಡಗಿರುವ ನಿಧಿಯ ಮೇಲೆ ನಡೆಯುತ್ತಿದ್ದರೂ ಅದನ್ನು ಅರಿಯದ ಅಜ್ಞಾನಿಗಳಂತೆ -ಬ್ರಹ್ಮಲೋಕವನ್ನು ಪ್ರತಿದಿನವೂ ಸೇರುತ್ತಿದ್ದರೂ ಅದನ್ನು ಪಡೆದುಕೊಳ್ಳದೆ ಇರುವರು.(ಪುಟ 27 ಮುನ್ನುಡಿ)
112)ಅಪಹತ- ಪಾಪತ್ವವೇ ಮೊದಲಾದ ಗುಣಗಳಿಂದ ಆತ್ಮನು ಹೃದಯದಲ್ಲಿರುತ್ತಾನೆ.(ಪುಟ 27 ಮುನ್ನುಡಿ)
113)ಮೂರನೆಯ ಖಂಡ:ಹೀಗೆ ಸುಷುಪ್ತಿ ಕಾಲದಲ್ಲಿ ಸದ್ವಸ್ತುವಿನೊಂದಿಗೆ ಸಂಪನ್ನನಾದ ಪುರುಷನು ಶರೀರವೆಂಬ ಭಾವನೆಯನ್ನು ಬಿಟ್ಟು ಪರಮಾತ್ಮನ ಲಕ್ಷಣವಾದ ಜ್ಯೋತಿಯನ್ನು ಸೇರಿ ತನ್ನ ಸ್ವರೂಪದಲ್ಲಿಯೇ ನಿಲ್ಲುತ್ತಾನೆ.ಇವನೇ ಆತ್ಮನು,ಅಮೃತ,ಅಭಯ ಬ್ರಹ್ಮ.ಈ ಬ್ರಹ್ಮಕ್ಕೆ ಸತ್ಯವೆಂಬುದು ಹೆಸರು.(ಪುಟ 27 ಮುನ್ನುಡಿ)
ಆರನೆಯ ಖಂಡ(ನಾಡೀ ಖಂಡ):
114)ಬ್ರಹ್ಮಚಯಾ೯ದಿ ಸಾಧನಗಳಿಂದ ಕೂಡಿ ಅನೃತವಾದ ಬಾಹ್ಯವಿಷಯಗಳಲ್ಲಿ ತೃಷ್ಣೆಯನ್ನು ಬಿಟ್ಟು
ಹೃದಯ ಪುಂಡರೀಕದಲ್ಲಿರುವ ಬ್ರಹ್ಮವನ್ನು ಉಪಾಸಿಸುವವನಿಗೆ ನೆತ್ತಿಯ ಮೂಲಕ ಹೋಗುವ ನಾಡಿಯಿಂದ ಗತಿಯನ್ನು ಹೇಳಲು ಈ ನಾಡೀಖಂಡವನ್ನು ಆರಂಭಿಸಿದೆ. ಹೃದಯದಿಂದ ನೂರೊಂದು ಮಾಡಿಗಳು ಹೊರಟಿವೆ.ಒಂದು ಮಹಾಪಥವು ಎರಡು ಗ್ರಾಮಗಳನ್ನು ಕೂಡಿಸುವಂತೆ ಅದಿತ್ಯನ ರಶ್ಮಿಗಳು ಹೃದಯವನ್ನೂ ಆದಿತ್ಯ ಮಂಡಲವನ್ನೂ ಕೂಡಿಸುತ್ತವೆ.ಜೀವನು ಸುಷುಪ್ತಿ ಕಾಲದಲ್ಲಿ ಈ ನಾಡಿಗಳಲ್ಲಿ ಪ್ರವೇಶಿಸಿ ಹೃದಯಾಕಾಶವನ್ನು ಪ್ರವೇಶಿಸುತ್ತಾನೆ.ಅಲ್ಲಿ ಯಾವ ಪಾಪವೂ ಅವನನ್ನು ಸೋಂಕುವುದಿಲ್ಲ.ಏಕೆಂದರೆ ದೇಹೇಂದ್ರಿಯಗಳಿಂದ ಕೂಡಿರುವವನನ್ನೇ ಪಾಪವು ಸೋಂಕುತ್ತದೆ.ಅದರೆ ಸದ್ವಸ್ತುವಿನಿಂದ ಸಂಪನ್ನನಾದವನಿಗೆ ಇಂಥ ಅನುಭವವುಂಟಾಗುವುದಿಲ್ಲ.(ಪುಟ 2೯ ಮುನ್ನುಡಿ)
115)ಏಳನೆಯ ಖಂಡ:'ಈ ಸಂಪ್ರಸಾದನು ಶರೀರದಿಂದ ಎದ್ದು ಪರಂಜ್ಯೋತಿಯನ್ನು ಸೇರಿ ತನ್ನ
ಸ್ವರೂಪದಲ್ಲಿ ಸ್ಥಿತಿಯನ್ನು ಪಡೆಯುತ್ತಾನೆ. ಇವನೇ ಆತ್ಮನು ಎಂದು ಹೇಳಿದ್ದಾನೆ.(ಪುಟ 2೯ ಮುನ್ನುಡಿ)
116)'ಯಾವ ಆತ್ಮನು ಪಾಪರಹಿತನೂ ...ಸತ್ಯಕಾಮನೂ ಸತ್ಯಸಂಕಲ್ಪನೂ ಆಗಿರುವನೊ ಅವನನ್ನೆ ಅನ್ವೇಶಿಸವೇಕು.ಅವನನ್ನೇ ಅರಿತುಕೊಳ್ಳಲು ಬಯಸಬೇಕು.ಯಾವನು ಈ ಆತ್ಮನನ್ನು ಕಂಡುಹಿಡಿದು ಅರಿತುಕೊಳ್ಳುವನೋ ಅವನು ಸವ೯ಲೋಕಗಳನ್ನೂ ಸವ೯ಕಮ೯ಗಳನ್ನೂ ಪಡೆದುಕೊಳ್ಳುತ್ತಾನೆ.'
ಎಂಬ ಪ್ರಜಾಪತಿಯ ಮಾತನ್ನು ದೇವಾಸುರರು ಕೇಳಿದರು.ಈ ಆತ್ಮವನ್ನು ಅರಿತುಕೊಳ್ಳಲು ದೇವತೆಗಳಲ್ಲಿ ಇಂದ್ರನೂ ಅಸುರರಲ್ಲಿ ವಿರೋಚನನೂ ಸಮಿತ್ಪಾಣಿಯಾಗಿ ಹೊರಟು ಪ್ರಜಾಪತಿಯನ್ನು ಸೇರಿದರು.ಇಲ್ಲಿ ಪ್ರಜಾಪತಿ-ಇಂದ್ರ-ವಿರೋಚನ ಸಂವಾದವು ನಿರೂಪಿಸಲ್ಪಟ್ಟಿದೆ.(ಪುಟ 31 ಮುನ್ನುಡಿ)
117)ಜ್ಞಾನವು ಇಂದ್ರತ್ವಕ್ಕಿಂತಲೂ ಗುರುತರವಾದುದು.(ಪುಟ 31 ಮುನ್ನುಡಿ)
118)ಇಂದ್ರನಿಗೆ ಅವಸ್ಥಾತ್ರಯ ದೋಷದ ಸಂಬಂಧವಿಲ್ಲದ ಮತ್ತು ಅಪಹತಪಾಪ್ಮತ್ವಾದಿ ಲಕ್ಷಣಗಳುಳ್ಳ ಆತ್ಮಸ್ವರೂಪವನ್ನು ಪ್ರಜಾಪತಿಯು ಉಪದೇಶಿಸುತ್ತಾನೆ.(ಪುಟ 31 ಮುನ್ನುಡಿ)
11೯)'ಈ ಶರೀರವು ಮತ್ಯ೯ವೇ,ಮೃತ್ಯುವಿನಿಂದ ಗ್ರಸ್ತವಾಗಿರುತ್ತದೆ.ಇದು ಅಮೃತನೂ ಅಶರೀರನೂ ಆದ ಆತ್ಮನಿಗೆ ಅಧಿಷ್ಠಾನ.ಶರೀರವುಳ್ಳವನು ಪ್ರಿಯಾ ಪ್ರಿಯಗಳಿಂದ ಗ್ರಸ್ತನಾಗಿರುತ್ತಾನೆ.ಅವನಿಗೆ ಪ್ರಿಯಾ ಪ್ರಿಯಗಳ ನಾಶವು ಇಲ್ಲವೇ ಇಲ್ಲ.ಶರೀರವಿಲ್ಲದವನನ್ನು ಪ್ರಿಯಾ ಪ್ರಿಯಗಳು ಸೋಕುವುದೇ ಇಲ್ಲ.'(ಪುಟ 31 ಮುನ್ನುಡಿ)
120)'ನಾನು ಶರೀರವು ಶರೀರವೇ ನಾನು 'ಎಂಬ ಅವಿವೇಕದಿಂದ ತಾದಾತ್ಮ್ಯವನ್ನು ಪಡೆದಿರುವವನು ಶರೀರವುಳ್ಳವನು';ದೇಹಾಭಿಮಾನದಿಂದ ಬಿಡುಗಡೆಯನ್ನು ಹೊಂದಿ ಅಶರೀರ ಸ್ವರೂಪ-ವಿಜ್ಞಾನದಿಂದ ಅವಿವೇಕ ಜ್ಞಾನವನ್ನು ತೊಲಗಿಸಿಕೊಂಡಿರುವವನು 'ಶರೀರವಿಲ್ಲದವನು'(ಪುಟ 32 ಮುನ್ನುಡಿ)
121)ಹನ್ನೆರಡನೆಯ ಖಂಡ:ಅಶರೀರನೂ ಸಂಪ್ರಸಾದ ಗುಣವುಳ್ಳವನೂ ಆದ ಆತ್ಮನು ತನ್ನ ಶರೀರತ್ವವನ್ನು ಬಿಟ್ಟು ಪರಮಾತ್ಮ ಜ್ಯೋತಿಯನ್ನು ಸೇರಿಕೊಂಡು ತನ್ನ ರೂಪದಿಂದ ಕಾಣಿಸಿಕೊಳ್ಳುತ್ತಾನೆ.ಇವನೇ ಉತ್ತಮ ಪುರುಷನು(ಪುಟ 32 ಮುನ್ನುಡಿ)
122) ಮುಕ್ತನು ಸವಾ೯ತ್ಮ ಭಾವವನ್ನು ಹೊಂದಿ ಸವ೯ಕಾಮಗಳನ್ನೂ ಪಡೆಯುತ್ತಾನೆ.(ಪುಟ 32 ಮುನ್ನುಡಿ)
123) ವಿಶೇಷ ಜ್ಞಾನವು ಚಕ್ಷುಸ್ಸೇ ಮೊದಲಾದ ಕರಣಗಳಿಂದ ಉಂಟಾಗುತ್ತಿದ್ದರೂ ಚೈತನ್ಯ ಸ್ವರೂಪವು ಆತ್ಮನದೇ.(ಪುಟ 32 ಮುನ್ನುಡಿ)
124)'ಶ್ಯಾಮಾಚ್ಛಬಲಂ ಪ್ರಪದ್ಯೇ' ಎಂಬ ಪವಿತ್ರವಾದ ಮಂತ್ರವನ್ನು ಧ್ಯನಕ್ಕಾಗಿ ಹೇಳಿದೆ.(ಪುಟ 32 ಮುನ್ನುಡಿ)
125)ಹದಿನಲ್ಕನೆಯ ಖಂಡ: ಆಕಾಶವೆಂಬ ಹೆಸರಿನಿಂದ ಪ್ರಸಿದ್ಧವಾದ ಬ್ರಹ್ಮವು ನಾಮರೂಪಗಳನ್ನು ವಿಂಗಡಿಸುತ್ತದೆ.ನಾಮ ರೂಪಗಳು ಯಾವುದರಲ್ಲಿ ಇವೆಯೊ ಅದು ಬ್ರಹ್ಮವು,ಅಮೃತವು.
126)ಕೊನೆಯ ಮೂರು ಅಧ್ಯಾಯಗಳಲ್ಲಿ ಬ್ರಹ್ಮವಿದ್ಯೆಯು ಸಫಲವೆಂದು ನಿಧ೯ರಿಸಲ್ಪಟ್ಟಿದ್ದgರೂ ಯಜ್ಞಾದಿ ಕಮ೯ಗಳಿಂದ ಯಾವ ಪ್ರಯೋಜನವೂ ಇಲ್ಲವೆಂದು ಭಾವಿಸಬಾರದು.ಅಂಥ ತಪ್ಪು ಜ್ಞಾನವನ್ನು ಪರಿಹರಿಸಲು ಜ್ಞಾನಿಗಳು ಮಾಡುವ ಕಮ೯ಕ್ಕೂ ವಿಶಿಷ್ಟ ಫಲವಿದೆ ಎಂದು ಹೇಳಲಾಗಿದೆ.(ಪುಟ 32 ಮುನ್ನುಡಿ)
127) ಇಲ್ಲಿಯೂ ಕೂಡ ತಾತ್ಪಯ೯ ಟಿಪ್ಪಣಿಗಳು ಶಂಕರ ಭಾಷ್ಯವನ್ನೇ ಅವಲಂಬಿಸಿವೆ.(ಪುಟ 32 ಮುನ್ನುಡಿ)
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
ಮೊದಲನೆಯ ಅಧ್ಯಾಯ:
ಶಾಂತಿಪಾಠ:
ಅಪ್ಯಾಯಂತು ಮಮಾಂಗಾನಿ ವಾಕ್ ಪ್ರಾಣ ಚಕ್ಷುಃ
ಶ್ರೋತ್ರಮಥೋ ಬಲಮಿಂದ್ರಿಯಾಣಿಚ ಸವಾ೯ಣಿ
ಸವ೯ಂಬ್ರಹ್ಮೌಪನಿಷದಂ ಮಾಹಂ ಬ್ರಹ್ಮ ನಿರಾಕುಯಾ೯ಂ
ಮಾ ಮಾ ಬ್ರಹ್ಮನಿರಾಕರೋದನಿರಾಕರಣಮಸ್ತ್ವ ನಿರಾಕರಣಂ
ಮೇಸ್ತು ತದಾತ್ಮನಿ ನಿರತೇಯ ಉಪನಿಷತ್ಸು
ಧಮಾ೯ಸ್ತೇ ಮಯಿ ಸಂತು ತೇ ಮಯಿಸಂತು||
ಓಂ ನನ್ನ ಅವಯವಗಳೂ ವಾಕ್ಕೂ ಪ್ರಾಣವೂ ಚಕ್ಷುಸ್ಸೂ ಶ್ರೋತ್ರವೂ ಬಲವೂ ಮತ್ತು ಎಲ್ಲ
ಇಂದ್ರಿಯಗಳು ಪುಷ್ಟಿಯನ್ನು ಹೊಂದಲಿ ,ಎಲ್ಲವೂ ಉಪನಿಷತ್ ಪ್ರತಿಪಾದ್ಯವಾದ ಬ್ರಹ್ಮವೇ.ನಾನು ಬ್ರಹ್ಮವನ್ನು ನಿರಾಕರಿಸದಿರಲಿ.ಬ್ರಹ್ಮವು ನನ್ನನ್ನು ನಿರಾಕರಿಸದಿರಲಿ,ನಿರಾಕರಣವೇ ಇಲ್ಲದಿರಲಿ;ನನ್ನಿಂದಲೂ ನಿರಾಕರಣವಿಲ್ಲದಿರಲಿ.ಉಪನಿಷತ್ತುಗಳಲ್ಲಿ ಉಕ್ತವಾಗಿರುವ ಧಮ೯ಗಳು ಆತ್ಮನಿರತನಾದ ನನ್ನಲ್ಲಿ ಇರಲಿ;ಅವು ನನ್ನಲ್ಲಿರಲಿ.
ಓಂ ಶಾಂತಿಃ ಶಾಂತಿಃ ಶಾಂತಿಃ
ಮೊದಲನೆಯ ಅಧ್ಯಾಯ:
ಮೊದಲನೆಯ ಖಂಡ:
1)ಉದ್ಗೀಥ-ಶಬ್ದವಾಚ್ಯವಾದ ಓಂ ಎಂಬ ಈ ಅಕ್ಷರವನ್ನು ಉಪಸಿಸಬೇಕು;ಏಕೆಂದರೆ ಈ ಉದ್ಗಾತೃವು ಓಂಕಾರದಿಂದ ಪ್ರಾರಂಭಿಸಿಯೇ ಹಾಡುತ್ತಾನೆ.ಓಂಕಾರದ ಉಪವ್ಯಾಖ್ಯಾನವು ಪ್ರಾರಂಭಿಸಲ್ಪಡುತ್ತದೆ.(ಪುಟ 3)
2)ಆದುದರಿಂದ ಸಂಸಾರದ ಮೂರೂ ಗತಿಗಳನ್ನು ನಿರಾಕರಿಸಿ ಕಮ೯ನಿರಪೇಕ್ಷವಾದ (ಕಮ೯ವನ್ನು ಅಪೇಕ್ಷಿಸದ)ಅದ್ವೈತಾತ್ಮ- ವಿಜ್ಞಾನವನ್ನು ಉಪದೇಶಿಸಲು ಉಪನಿಷತ್ತನ್ನು ಪ್ರಾರಂಭಿಸಿದೆ.(ಪುಟ 3)
(ಸಂಸಾರದ ಮೂರುಗತಿಗಳು ಈ ರೀತಿ ಇವೆ.1)ಉಪಾಸನಾ ಸಹಿತವಾದ ಕಮ೯ದ ಮೂಲಕ ಅಚಿ೯ರಾದಿ ಮಾಗ೯ದಿಂದ ಅಪರಬ್ರಹ್ಮ ಪ್ರಾಪ್ತಿ 2)ಉಪಾಸನಾ ರಹಿತವಾದ ಕಮ೯ದ ಮೂಲಕ ಧೂಮಾದಿ ಮಾಗ೯ದಿಂದ ಚಂದ್ರಲೋಕದ ಅಥವಾ ಪಿತೃಲೋಕದ ಪ್ರಾಪ್ತಿ 3) ಶಾಸ್ತ್ರಚೋದನೆಯ್ಲ್ಲದೆ ತಮ್ಮ ಸ್ವಭಾವವನ್ನೇ ಅನುಸರಿಸುವವರಾಗಿ ಉಭಯ ಮಾಗ೯ಗಳಿಂದಲೂ ಭ್ರಷ್ಟರಾದವರ ಅಧೋಗತಿ.)
3)ತನ್ನ ಸ್ವರೂಪದಲ್ಲಿಯೇ ಇರುವವನೂ ಅವಿಕ್ರಿಯನೂ ಆದ ಆತ್ಮನಲ್ಲಿ ಕತ್ರಾ೯ದಿ -ಕಾರಕಗಳು ,ಕ್ರಿಯೆ,ಫ¯ ಎಂಬ ಭೇದಜ್ಞಾನವನ್ನು ತೊಲಗಿಸುವುದು ಅದ್ವೈತ ಜ್ಞಾನ(ಪುಟ 3)
4) ಶಾಸ್ತ್ರವು ತಿಳಿಸಿಕೊಡುವ ಒಂದು ಆಲಂಬನವನ್ನು ತೆಗೆದುಕೊಂಡು ಅದರಲ್ಲಿ ಸಮಾನ ಚಿತ್ತವೃತ್ತಿಯನ್ನು -ಅದಕ್ಕಿಂತ ಭಿನ್ನವಾದ ಪ್ರತ್ಯಯವು ಬಾರದಂತೆ -ಉಂಟು ಮಾಡುವುದು ಉಪಾಸನೆ.(ಪುಟ 3)
5)ಈ ಉಪಾಸನೆಗಳು ಸತ್ವಶುದ್ಧಿಯನ್ನುಂಟುಮಾಡಿ ವಸ್ತುತತ್ವವನ್ನು ಪ್ರಕಾಶಿಸುವುದರಿಂದ ಅದ್ವೈತ ಜ್ಞಾನಕ್ಕೆ ಉಪಕಾರವಾಗಿರುತ್ತವೆ.(ಪುಟ 3)
6)ಉದ್ಗೀಥವು ಜ್ಯೋತಿಷ್ಟೋಮಯಾಗದ ಅಂಗವಾಗಿದ್ದರೂ ಇಲ್ಲಿ ಸ್ವತಂತ್ರವಾದ ಉಪಾಸನೆಯಾಗಿದೆ.
(ಪುಟ 4)
7)ನಾಮವೂ ಪ್ರತೀಕವೂ ಆಗಿ ಓಂಕಾರವು ಪರಮಾತ್ಮೋಪಾಸನೆಗೆ ಶ್ರೇಷ್ಠವಾದ ಸಾಧನವಾಗಿದೆ.(ಪುಟ 4)
8)ಉಪಾಸನೆ ,ಫಲ,ವಿಭೂತಿ-ಇವುಗಳನ್ನು ವಿಸ್ತಾರವಾಗಿ ತಿಳಿಸುವುದಕ್ಕೆ ಉಪವ್ಯಾಖ್ಯಾನವೆಂದು ಹೆಸರು.(ಪುಟ 4)
೯)ಪೃಥ್ವಿಯು ಚರಾಚರ ಭೂತಗಳ ರಸವು.ನೀರು ಪೃಥ್ವಿಯ ರಸವು.ಓಷಧಿಗಳು ನೀರಿನ ರಸವು.ಪುರುಷ ಶರೀರವು ಓಷಧಿಗಳ ರಸವು.ವಾಗಿಂದ್ರಿಯವು ಪುರುಷನ (ಅವಯವಗಳ) ರಸವು.ಋಕ್ಕು ವಾಗಿಂದ್ರಿಯದ ರಸವು.ಸಾಮವು ಋಕ್ಕಿನ ರಸವು.ಉದ್ಗೀಥವು ಸಾಮದ ರಸವು.(ಪುಟ 4)
10)ಈ ಓಂಕಾರವು ರಸಗಳಿಗೆಲ್ಲ ರಸತಮವು. ಪರಮವು ,ಪರಾಥ೯ವು ಮತ್ತು ಎಂಟನೆಯದು(ಪುಟ 5)
(ಪೃಥಿವ್ಯಾದಿ ರಸಗಳಲ್ಲಿ ಕ್ರಮವಾಗಿ ಎಂಟನೆಯದು)
11) ಯಾವುದು ಋಕ್ಕು?ಯಾವುದು ಸಾಮವು? ಯಾವುದು ಉದ್ಗೀಥವು-ಇವುಗಳನ್ನು ಈಗ ವಿಮಶಿ೯ಸ ಬೇಕಾಗಿದೆ.(ಪುಟ 6)
12)ವಾಕ್ಕೇ ಋಕ್ಕು,ಪ್ರಾಣವು ಸಾಮವು ,ಓಂ ಎಂಬ ಈ ಅಕ್ಷರವು ಉದ್ಗೀಥವು.(ಪುಟ6)
13) ಯಾವನು ಉದ್ಗೀಥವೆಂಬ ಅಕ್ಷರವನ್ನು ಹೀಗೆ ಅರಿತುಕೊಂಡು ಉಪಾಸಿಸುತ್ತಾನೆಯೊ ಅವನು ಯಜಮಾನನ ಕಾಮಗಳನ್ನು ಪಡೆಯುವವನಾಗುತ್ತಾನೆ(ಪುಟ 7)
14) ಓಂಕಾರವೇ ಅನುಮತಿಯನ್ನು ಸೂಚಿಸುವ ಅಕ್ಷರವು(ಪುಟ 8)
15( ಲೌಕಿಕ -ವೈದಿಕ ವ್ಯವಹಾರಗಳಲ್ಲಿ ಓಂ ಎಂದು ಹೇಳುವುದು ಸಮ್ಮತಿಯನ್ನು ಸೂಚಿಸುತ್ತದೆ.(ಪುಟ 8)
16)ವೈದಿಕ ಕಮ೯ಗಳೆಲ್ಲ ಪರಮಾತ್ಮನ ಪೂಜೆಗಾಗಿಯೇ ಪ್ರವೃತ್ತವಾಗಿವೆ.(ಗೀತೆ18-46)(ಪುಟ 8)
17)ಪ್ರಣವೋಚ್ಛಾರಣ ಪೂವ೯ಕವಾಗಿ ಮಾಡಿದ ಯಜ್ಞದಿಂದ ಮಳೆ,ಅನ್ನ,ಪ್ರಾಣ,ಇವುಗಳು ಉತ್ಪನ್ನವಾಗಿ ಪುನಃ ಯಜ್ಞಕ್ಕೆ ಉಪಕರಣವಾಗುವುದರಿಂದ ಪ್ರಣವದ ಮಹಿಮೆಯಿಂದಲೂ ರಸದಿಂದಲೂ ಕಮ೯ವಾಗುತ್ತದೆ ಎಂದಥ೯.(ಪುಟ ೯)
18)ಆದುದರಿಂದ ಬ್ರಹ್ಮವಾದಿಗಳು ಓಂ ಎಂದು ಉಚ್ಛರಿಸಿ ಶಾಸ್ತ್ರಸಮ್ಮತವಾದ ಯಜ್ಞ-ದಾನ-ತಪಸ್ಸು-ಕ್ರಿಯೆಗಳನ್ನು ಯಾವಾಗಲೂ ಪ್ರಾರಂಭಿಸುತ್ತಾರೆ.(ಪುಟ ೯)
1೯)ಇವೆಲ್ಲವೂ ಈ ಅಕ್ಷರದ ಉಪವ್ಯಾಖ್ಯಾನವಾಗಿರುತ್ತದೆ.(ಪುಟ ೯)
ಎರಡನೆಯ ಖಂಡ:
20)ಅವರು ಉದ್ಗೀಥವನ್ನು ನಾಸಿಕದಲ್ಲಿರುವ ಘ್ರಾಣವೆಂದು ಉಪಾಸಿಸಿದರ.ು ಅದನ್ನು ಪಾಪದಿಂದ ಭೇದಿಸಿದರು.ಆದುದರಿಂದ ಘ್ರಾಣದ ದ್ವಾರಾ ಸುಗಂಧ-ದುಗ೯ಂದಾದಿಗಳೆರಡನ್ನೂ ಮೂಸುತ್ತಾನೆ.ಏಕೆಂದರೆ ಇದು ಪಾಪದಿಂದ ಭೇದಿಸಲ್ಪಟ್ಟಿದೆ.(ಪುಟ 11)
21) ಅದೇ ರೀತಿಯಲ್ಲಿ ಉದ್ಗೀಥವನ್ನು
1) ವಾಗ್ದೇವತೆಯೆಂದು ಉಪಾಸಿಸಿದರು-ಅಸುರರು ಪಾಪದಿಂದ ಭೇದಿಸುವುದು-ಆದುದರಿಂದ ವಾಕ್ಕಿನ ದ್ವಾರಾ-ಸತ್ಯ ಮತ್ತು ಸುಳ್ಳು ಎರಡನ್ನೂ ಹೇಳುತ್ತಾನೆ.
2)ಚಕ್ಷುದೇ೯ವತೆಯ ಉಪಾಸನೆ-ಅಸುರರ ಭೇದಿಸುವಿಕೆ-ಒಳ್ಳೆಯದು ಮತ್ತು ಕೆಟ್ಟದ್ದನ್ನು ನೋಡುತ್ತಾನೆ.
3)ಶ್ರೋತ್ರದೇವತೆ ಉಪಾಸನೆ-ಅಸುರರ ಭೇದಿಸುವಿಕೆ-ಒಳ್ಳೆಯ ಮತ್ತು ಕೆಟ್ಟ ಆಲೋಚನೆಗಳು
ಅಥವಾ ಸಂಕಲ್ಪಿಸತಕ್ಕದ್ದು-ಸಂಕಲ್ಪಿಸಬಾರದ್ದು ಎರಡನ್ನೂ)
4)ಮುಖ್ಯಪ್ರಾಣ ಉಪಾಸನೆ-ಅಸುರರ ಭೇದಿಸುವಿಕೆ-ಆದರದೆ ಆಗ ಅಸುರರು ಕಲ್ಲಿನಮೆಲೆ ಹೊಡೆಯಲ್ಪಟ್ಟಮಣ್ಣು ಹೆಂಟೆಯು ಪುಡಿ ಪುಡಿಯಾಗುವಂತೆ-ಅಸುರರು ನಾಶವಾದರು.(ಪುಟ 13)
5)ಪ್ರಾಣೋಪಾಸಕನು ಅಭೇದ್ಯವಾದ ಕಲ್ಲಿನಂತೆ ಇರುತ್ತಾನೆ.(ಪುಟ 14)
22)ಅಂಗಿರಸ್ಸು ಉದ್ಗೀಥವನ್ನು ಪ್ರಾಣನೆಂದು ಉಪಾಸಿಸಿದನು. ಪ್ರಾಣನು ಅಂಗಗಳ ರಸ.ಆದುದರಿಂದ ಇವನನ್ನೇ ಅಂಗಿರಸನೆಂದು ಕರೆಯುತ್ತಾರೆ.(ಪುಟ15)
23)ಹಾಗೆಯೇ ಬೃಹಸ್ಪತಿಯು ಉದ್ಗೀಥವನ್ನು ಪ್ರಾಣನೆಂದು ಉಪಾಸಿಸಿದನು.ವಾಕ್ಕು-ಬೃಹತಿ.ಪ್ರಾಣನು ಅದರ ಪತಿಯಾದ್ದರಿಂದ ಬೃಹಸ್ಪತಿ.(ವಾಕ್ಕು -ಬೃಹತಿ, ಪ್ರಾಣನು -ಬೃಹಸ್ಪತಿ) (ಪುಟ16)
24)ಪ್ರಾಣನು ಬಾಯಿಂದ ಬರುವ ಕಾರಣ ಇವನನ್ನು ಆಯಾಸ್ಯನೆಂದು ಕರೆಯುತ್ತಾರೆ.(ಪುಟ 16)
ಮೂರನೆಯ ಖಂಡ:
25)ವಾಕ್ಕು ಋಕ್ಕು.ಋಕ್ಕು ಸಾಮವು.ಆದುದರಿಂದ ಮನುಷ್ಯನು ಉಸಿರನ್ನು ಬಿಡದಿರುವಾಗ ತೆಗೆದುಕೊಳ್ಳದಿರುವಾಗ ಸಾಮಗಾನ ಮಾಡುತ್ತಾನೆ.ಸಾಮವು ಉದ್ಗೀಥವು.(ಪುಟ 20)
26)ಉದ್ಗೀಥವನ್ನು ವ್ಯಾನವೆಂದೇ ಉಪಾಸಿಸಬೆಕು.(ಪುಟ 21)
27)ಉದ್ಗೀಥದ ಅಕ್ಷರಗಳನ್ನು ಉತ್-ಗೀ-ಥ ಎಂದು ಉಪಾಸಿಸಬೇಕು.ಪ್ರಾಣವೇ ಉತ್.ಏಕೆಂದರೆ ಮನುಷ್ಯನು ಪ್ರಾಣದಿಂದಲೆ ಮೇಲಕ್ಕೆ ಏಳುತ್ತಾನೆ.ವಾಕ್ಕು ಗೀ.ಏಕೆಂದರೆ ವಾಕ್ಕುಗಳನ್ನು ಶಿಷ್ಯರು ಗಿರಃ ಎಂದು ಹೇಳುತ್ತಾರೆ.ಅನ್ನವು ಏಕೆಂದರೆ ಇದೆಲ್ಲವೂ ಅನ್ನದಲ್ಲಿಯೇ ಸ್ಥಿತವಾಗಿದೆ.(ಪುಟ 21)
28) ದ್ಯುಲೋಕವೇ ಉತ್,ಅಂತರಿಕ್ಷವು ಗೀ, ಪೃಥ್ವಿಯು ಥ.
ಆದಿತ್ಯನೇ ಉತ್ ವಾಯುವು ಗೀ,ಅಗ್ನಿಯು ಥ.
ಸಾಮವೇದವೇ ಉತ್,ಯಜುವೇ೯ದವು ಗೀ ,ಋಗ್ವೇದವು ಥ.ಯಾವನು ಹೀಗೆ ತಿಳಿದುಕೊಂಡು ಉಪಾಸಿಸುತ್ತಾನೆಯೊ ವಾಕ್ಕು ಅವನಿಗೆ ತನ್ನ ಫಲವೇ ಆದ ಹಾಲನ್ನು ಕರೆಯುತ್ತದೆ.ಅವನು ಅನ್ನವಂತನೂ ಅನ್ನವನ್ನು ತಿನ್ನುವವನೂ ಆಗುತ್ತಾನೆ.(ಪುಟ 22)
ನಾಲ್ಕನೆಯ ಖಂಡ:
2೯)ಉದ್ಗೀಥವಾದ ಓಂ ಎಂಬ ಅಕ್ಷರವನ್ನು ಉಪಾಸಿಸಬೇಕು.ಏಕೆಂದರೆ ಉದ್ಗಾತೃವು ಓಂಕಾರದಿಂದ ಪ್ರಾರಂಭಿಸಿಯೇ ಹಾಡುತ್ತಾನೆ.ಓಂಕಾರದ ಉಪವ್ಯಾಖ್ಯಾನವು ಪ್ರಾರಂಭಿಸಲ್ಪಡುತ್ತದೆ.(ಪುಟ 25)
30) ಯಾವಾಗ ಮನುಷ್ಯನು ಋಗ್ವೇದ,ಯಜುವೇ೯ದ,ಸಾಮವೇದ ಇವುಗಳನ್ನು ಅಧ್ಯಯನದ ಮೂಲಕ ಪಡೆಯುವಾಗ ಓಂ ಎಂದೇ ಆದರದಿಂದ ಉಚ್ಛರಿಸುತ್ತಾನೆ.ಈ ಅಕ್ಷರವೇ ಸ್ವರವು.ಇದು ಅಮೃತವು ಮತ್ತು ಅಭಯವು.(ಪುಟ 27)
ಐದನೇ ಖಂಡ:
31)ಉದ್ಗೀಥವು ಪ್ರಣವವು,ಪ್ರಣವವು ಉದ್ಗೀಥವು.ಆ ಆದಿತ್ಯನೇ ಉದ್ಗೀಥವು ಮತ್ತು ಪ್ರಣವವು.ಏಕೆಂದರೆ ಅವನು ಓಂ ಎಂದು ಉಚ್ಛರಿಸುತ್ತಾ ಹೋಗುತ್ತಾನೆ.(ಪುಟ 28)
32)ಈಗ ಅಧ್ಯಾತ್ಮೋಪಾಸನೆ.ಬಾಯಲ್ಲಿರುವ ಪ್ರಾಣನನ್ನೇ ಉದ್ಗೀಥವೆಂದು ಉಪಾಸಿಸಬೇಕು.ಏಕೆಂದೆ ಇವನು ಓಂ ಎಂದು ಉಚ್ಛರಿಸುತ್ತ ಹೋಗುತ್ತಾನೆ.(ಪುಟ 2೯)
ಆರನೆಯ ಖಂಡ:
33)ಈ ಪೃಥ್ವಿಯೇ ಋಕ್ಕು,ಅಗ್ನಿಯು ಸಾಮ,ಅಗ್ನಿಯೆಂಬ ಆ ಸಾಮವು ಪೃಥ್ವಿಯೆಂಬ ಈ ಋಕ್ಕಿನ ಮೇಲೆ ಅಧಿಷ್ಠಿತವಗಿದೆ.ಪೃಥ್ವಿಯೇ ಸಾ,ಅಗ್ನಿಯೇ ಅಮ ಅದು ಸಾಮ.(ಪುಟ 31)
34)ಅಂತರಿಕ್ಷವೇ ಋಕ್ಕು. ವಾಯುವು ಸಾಮ.ಆ ಸಾಮವು ಈಋಕ್ಕಿನ ಮೇಲೆ ಅಧಿಷ್ಠಿತವಾಗಿದೆ.ಅಂತರಿಕ್ಷವೇ ಸಾ.ವಾಯುವೇ ಅಮ;ಅದು ಸಾಮ.(ಪುಟ 32)
35) ದ್ಯುಲೋಕವೇ ಋಕ್ಕು.ಆದಿತ್ಯನು ಸಾಮ.ದ್ಯುಲೋಕವೇ ಸಾ ,ಆದಿತ್ಯನೇ ಅಮ.ಅದು ಸಾಮ.(ಪುಟ 32)
36)ನಕ್ಷತ್ರಗಳೇ ಋಕ್ಕು,ಚಂದ್ರನು ಸಾಮನಕ್ಷತ್ರಗಳೇ ಸಚಂದ್ರನು ಅಮ;ಅದು ಸಾಮ(ಪುಟ 33)
37)ಆದಿತ್ಯನ ಈ ಶುಭ್ರ ದೀಪ್ತಿಯೇ ಸಾ.ಕಪ್ಪನ್ನು ಅತಿಶಯಿಸಿರುವ ನೀಲದೀಪ್ತಿಯೇ ಅಮ;ಅದು ಸಾಮವು.ಇನ್ನು ಆದಿತ್ಯ ಮಂಡಲದಲ್ಲಿ ಕಾಣುತ್ತಿರುವ ಜ್ಯೋತಿಮ೯ಯನಾದ ಈ ಪುರುಷನು ಜ್ಯೋತಿಮ೯ಯನಾದ ದಾರಿಯುಳ್ಳವನು,ಕೇಶವುಳ್ಳವನು ಮತ್ತು ಉಗುರಿನವರೆಗೂ ಎಲ್ಲವೂ ಜ್ಯೋತಿಮ೯ಯನಾಗಿಯೇ ಇರುತ್ತಾನೆ.(ಪುಟ 34)
38)ಇಲ್ಲಿ ಪುರುಷನೆಂದರೆ ಪರಮ ಪುರುಷನು.ಆದಿತ್ಯ ಪುರುಷನಲ್ಲ.(ಪುಟ 34)
3೯) ಜಗತ್ತನ್ನು ತನ್ನ ಸ್ವರೂಪದಿಂದ ವ್ಯಾಪಿಸಿಕೊಂಡಿರುವುದರಿಂದ ಪುರುಷನು.ಇಂದ್ರಿಯಗಳನ್ನು ಹಿಂತಿರುಗಿಸಿ ಬ್ರಹ್ಮಚಯಾ೯ದಿ ಸಾಧನಗಳಿಂದ ಕೂಡಿ ಸಮಾಹಿತ ಚಿತ್ತರಾಗಿರುವವರಿಗೆ ಮಾತ್ರ ಇವನನ್ನು ನೋಡಲು ಸಾಧ್ಯ.(ಪುಟ 34)
40)ಅವನಿಗೆ (ಪುರುಷನಿಗೆ) ಕೆಂದಾವರೆಯತೆ ಕೆಂಪಗಿರುವ ಕಣ್ಣುಗಳಿರುವುವು.ಅವನಿಗೆ ಉತ್ ಎಂದು ಹೆಸರು.ಇವನು ಸಮಸ್ತ ಪಾಪಗಳನ್ನೂ ಬಿಟ್ಟು ಎದ್ದಿರುತ್ತಾನೆ.ಯಾವನು ಹೀಗೆ ಅvರಿತುಕೊಂಡಿರುವನೊ ಅವನು ಸಮಸ್ತ ಪಾಪಗಳನ್ನೂ ಬಿಟ್ಟು ಎದ್ದೇಳುತ್ತಾನೆ.(ಪುಟ 35)
41)ಇವನು (ಪುರುಷನು) ಸಮಸ್ತ ಪಾಪಗಳಿಂದಲೂ ಅವುಗಳ ಕಾಯ೯ಗಳಿಂದಲೂ ಎದ್ದಿರುತ್ತಾನೆ.ಯ ಆತ್ಮಾ ಅಪಹತಪಾಪ್ಮಾ(8,7,1)ಎಂದು ಶ್ರುತಿಯು ಮುಂದೆ ಹೇಳುತ್ತದೆ.(ಪುಟ 35)
42)ಋಕ್ ಸಾಮಗಳು ಅವನ ಎರಡು ಕೀಲುಗಳು.ಆದುದರಿಂದ ಅವನು ಉದ್ಗೀಥನು.ಅವನು ಉತ್ತನ್ನು ಹಾಡುವುದರಿಂದ ಉದ್ಗಾತೃವೆನಿಸಿರುವನು.ಇದು ಅಧಿದೈವತವು.(ದೈವಕ್ಕೆ ಸಂಬಂಧಪಟ್ಟಿದ್ದು)(ಪುಟ 35)
ಏಳನೆಯ ಖಂಡ:
43)ಈಗ ಅಧ್ಯಾತ್ಮೋಪಾಸನೆಯು:ವಾಕ್ಕೇ ಋಕ್ಕು,ಪ್ರಾಣವು ಸಾವi,ಸಾಮವು ವಾಕ್ಕೆಂಬ ಈ ಋಕ್ಕಿನಮೇಲೆ ಅಧಿಷ್ಠಿತವಾಗಿದೆ.ಆದ್ದರಿಂದ ಋಕ್ಕಿನಮೇಲೆ ಅಧಿಷ್ಠಿತವಾಗಿರುವಂತೆ ಸಾಮವನ್ನು ಹಾಡುತ್ತಾರೆ.ವಾಕ್ಕೇ ಸಾ ಪ್ರಾಣವು ಅಮ;ಅದು ಸಾಮ(ಪುಟ 36)
44)ಋಕ್ಕಿನಲ್ಲಿ ವಾಕ್ದೃಷ್ಟಿಯನ್ನೂ ಸಾಮದಲ್ಲಿ ಪ್ರಾಣದೃಷ್ಟಿಯನ್ನೂ ಇಡಬೇಕು.ಹೀಗೆಯೆ ಉಳಿದಕಡೆಗಳಲ್ಲಿಯೂ ಅನ್ವಯಿಸಿಕೊಳ್ಳಬೇಕು.(ಪುಟ 36)
45) ಚಕ್ಷುಸ್ಸೇ ಋಕ್ಕು,ಚಕ್ಷುಸ್ಸಿನಲ್ಲಿ ಪ್ರತಿಬಿಂಬಿತವಾದ ದೇಹಚ್ಛಾಯೆಯು ಸಾಮ.ಛಾಯೆಯೆಂಬ ಆ ಸಾಮವು ಚಕ್ಷುಸ್ಸೆಂಬ ಈ ಋಕ್ಕಿನ ಮೇಲೆ ಪ್ರತಿಷ್ಠಿತವಾಗಿದೆ.ಆದುದರಿಂದ ಋಕ್ಕಿನ ಮೆಲೆ ಅಧಿಷ್ಠಿತವಾಗಿರುವಂತೆ ಸಾಮವನ್ನು ಹಾಡುತ್ತಾರೆ.ಚಕ್ಷುಸ್ಸು ಸಾ.ಛಾಯೆಯೇ ಅಮ;ಅದು ಸಾಮ(ಪುಟ 36)
45)ಅದೇ ರೀತಿಯಲ್ಲಿ
1) ಶ್ರೋತ್ರವೇ ಋಕ್ಕುಮನಸ್ಸು ಸಾಮ
2)ಕಣ್ಣಿನ ಶುಭ್ರ ದೀಪ್ತಿಯು ಋಕ್ಕು.ಕಪ್ಪನ್ನು ಆಶ್ರಯಿಸಿರುವ ನೀಲದೀಪ್ತಿಯು ಸಾಮ
3)ಕಣ್ಣಿನಲ್ಲಿ ಕಾಣುತ್ತಿರುವ ಪುರುಷನೇ ಋಕ್ಕು,ಸಾಮವು ಉಕ್ಥ,ಯಜುಸ್ಸು, ಮತ್ತು ವೇದಗಳು
46)ಯಾವನು ಹೀಗೆ ಅರಿತುಕೊಂಡು ಸಾಮಗಾನ ಮಾಡುತ್ತಾನೆಯೋ,ನಿಜವಾಗಿಯೂ ಸಾಮಗಾನದಿಂದ ಉದ್ಗಾನ ಮಡುತ್ತಾನೆಯೊ ಅವನೇ ಉದ್ಗಾನದಿಂದ ಕಾಮನೆಯನ್ನು ಸಂಪಾದಿಸಲು ಸಮಥ೯ನಾಗುತ್ತಾನೆ.(ಪುಟ40)
ಎಂಟನೆಯ ಖಂಡ:
47) ಹಿಂದೆ ಶಿಲಕ ಶಾಲಾವತ್ಯ,ಚೈಕಿತಾಯನ ದಾಲ್ಭ್ಯ,ಪ್ರವಾಹಣ ಜೈವಲಿ ಎಂಬ ಮೂವರು ಉದ್ಗೀಥ ಜ್ಞಾನದಲ್ಲಿ ನಿಪುಣರಾಗಿದ್ದರು.ಅವರು ಹೀಗೆ ಹೇಳಿದರು:ನಾವು ಉದ್ಗೀಥ ಜ್ಞಾನದಲ್ಲಿ ನಿಪುಣರಾಗಿದ್ದೇವೆ.ಉದ್ಗೀಥ ವಿಷಯದಲ್ಲಿ ವಾದ ಮಾಡೋಣ.(ಪುಟ 41)
48) ಶಿಲಕ ಶಾಲಾವತ್ಯ:ಉದ್ಗೀಥದ ಗತಿಯು ಯಾವುದು.
ಜೈಕಿತಾಯನ:'ಸ್ವರ'
ಶಿಲಕ:ಸ್ವರದ ಗತಿ ಯಾವುದು?
ಜೈಕಿತಾಯನ: 'ಪ್ರಾಣವು.'
ಶಿಲಕ:'ಪ್ರಾಣದ ಗತಿಯಾವುದು?'
ಜೈಕಿತಾಯನ;'ಅನ್ನವು'
ಶಿಲಕ:ಅನ್ನದ ಗತಿ ಯಾವುದು?
ಜೈಕಿತಾಯನ:'ನೀರು'
ಏಕೆಂದರೆ ಸ್ವರವು ಪ್ರಾಣದಿಂದಲೇ ಉಂಟಾಗುತ್ತದೆ.,ಪ್ರಾಣವು ಅನ್ನವನ್ನು ಆಶ್ರಯಿಸಿರುತ್ತದೆ.ಅನ್ನವು ನೀರಿನಿಂದ ಉಂಟಾಗುತ್ತದೆ.(ಪುಟ 43)
4೯)ಶಿಲಕ:ನೀರಿನ ಗತಿಯಾವುದು?
ಜೈ: 'ಆ ಲೋಕವು'
ಶಿ: 'ಆ ಲೋಕದ ಗತಿ ಯಾವುದು?
ಜೈ:'ಸ್ವಗ೯ಲೋಕದ ಆಚೆಗೆ ಸಾಮವನ್ನು ಒಯ್ಯಬಾರದು.'
ನಾವು ಸ್ವಗ೯ಲೋಕದಲ್ಲಿ ಸಾಮವನ್ನು ಸ್ಥಾಪಿಸಿರುತ್ತೇವೆ.ಏಕೆಂದರೆ ಸಾಮವೇ ಸ್ವಗ೯ವೆಂದು ಸ್ತುತಿಸಲ್ಪಟ್ಟಿದೆ'.(ಪುಟ 47)
50)ಸ್ವಗ೯ಲೋಕವೇ ಸಾಮವೇದವು.(ಸ್ವಗೋ೯ ವೈ ಲೋಕಃ ಸಾಮವೇದಃ ಎಂದು ಶ್ರುತಿಯು ಹೇಳುತ್ತದೆ.(ಪುಟ 43)
51)ಶಿಲಕ: ನಿನ್ನ ಸಾಮವು ಪ್ರತಿಷ್ಠಿತವಾಗಿಲ್ಲ.ಈಗ ಯಾವನಾದರೂ "ನಿನ್ನ ತಲೆಯು ಬೀಳುವುದು"ಎಂದು ಹೇಳಿದರೆ ನಿನ್ನ ತಲೆಯು ಬೀüಳುವುದು"ಎಂದು ಹೇಳಿದರೆ ನಿನ್ನ ತಲೆಯು ಬಿದ್ದೇ ಹೋಗುವುದು.
51)
ಚೈಕಿತಾಯನ: 'ಅನುಮತಿ ಕೊಟ್ಟರೆ ನಾನು ಪೂಜ್ಯನಾದ ನಿನ್ನಿಂದ ಅರಿತುಕೊಳ್ಳುತ್ತೇನೆ'
ಶಿಲಕ:'ಅರಿತುಕೊ'
ಚೈಕಿತಾಯನ: 'ಆ ಲೋಕದ ಗತಿ ಯಾವುದು?'
ಶಿಲಕ: ಈ ಭೂಮಿಯು
ಚೈಕಿತಾಯನ: 'ಈ ಭೂಮಿಯ ಗತಿ ಯಾವುದು.?'
ಶಿಲಕ: ಪ್ರತಿಷ್ಠಾ ಭೂಮಿಯ ಆಚೆಗೆ ಸಾಮವನ್ನು ಒಯ್ಯಬಾರದು:ನಾವು ಪ್ರತಿಷ್ಠಾ ಭೂಮಿಯಲ್ಲಿ ಸಾಮವನ್ನು ಸ್ಥಾಪಿಸಿರುತ್ತೇವೆ.ಏಕೆಂದರೆ ಸಾಮವೇ ಪ್ರತಿಷ್ಠೆಯೆಂದು ಸ್ತುತಿಸಲ್ಪಟ್ಟಿದೆ'.(ಪುಟ 45)
52)ಯಾಗ-ದಾನ-ಹೋಮಾದಿಗಳಿಂದ ಈ ಲೋಕವು ಆ ಲೋಕವನ್ನು ಪೋಷಿಸುತ್ತಿರುವುದರಿಂದ ಅದಕ್ಕೆ ಗತಿಯಾಗಿದೆ.(ಪುಟ 45)
53)ಈ ಲೋಕವು ಸವ೯ ಪ್ರಾಣಿಗಳಿಗೂ ಪ್ರತಿಷ್ಠೆಯೆಂಬುದು ಪ್ರತ್ಯಕ್ಷವಾಗಿರುವುದರಿಂದ ಸಾಮಕ್ಕೂ ಇದು ಪ್ರತಿಷ್ಠೆಯೆಂಬುದು ಯುಕ್ತವು.(ಪುಟ 45)
54) 'ಈ ಭೂಮಿಯೇ ರಥಂತರವು'("ಇಯಂ ವೈ ರಥಂತರಮ್" ತಾಂಡ್ಯನ್ರಾಹ್ಮಣ(18,6,11)).ಆದುದರಿಂದ ರಥಂತರಸಾಮವು ಉದ್ಗೀತದ ಪ್ರತಿಷ್ಠೆಯಾಗಿರುವುದು. ಯುಕ್ತವು.(ಪುಟ45)
ಒಂಬತ್ತನೆಯ ಖಂಡ:
55)ಶಿಲಕ: 'ಈ ಲೋಕದ ಗತಿಯಾವುದು?'
ಪ್ರವಾಹಣ ಜೈವಲಿ:ಆಕಾಶವುಈ ಭೂತಗಳೆಲ್ಲವೂ ಆಕಾಶದಿಂದಲೇ ಉತ್ಪನ್ನವಾಗುತ್ತವೆ.ಆಕಾಶದಲ್ಲಿಯೇ ಲಯವಾಗುತ್ತವೆ.ಏಕೆಂದರೆ ಆಕಾಶವೇ ಇವುಗಳಿಗಿಂತ ಮಹತ್ತರವು.ಆಕಾಶವೇ ಮೂರುಕಾಲಗಳಲ್ಲಿಯೂ ಪ್ರತಿಷ್ಠೆ.(ಇಲ್ಲಿ ಆಕಾಶವನ್ನೇ ಪರಮಾತ್ಮನೆಂದು ಹೇಳಿದೆ)(ಪುಟ47)
ಹತ್ತನೆಯಖಂಡ:
56)ಕುರು ದೇಶದ ಸಸ್ಯಗಳು ಆಲಿಕಲ್ಲು ಮಳೆಯಿಂದ ನಾಶವಾಗಲುಉಷಸ್ತಿ ªಚಾಕ್ರಾಯಣನು ಅತ್ಯಂತ ದುರವಸ್ಥೆಯನ್ನು ಹೊಂದಿ ತನ್ನ ಪತ್ನಿಯೊಂದಿಗೆ ಇಭ್ಯ ಗ್ರಾಮದಲ್ಲಿ ವಾಸಿಸುತ್ತಿದ್ದನು(ಪುಟ 4೯)
57)ಉದ್ಗೀಥೋಪಾಸನೆಯ ಪ್ರಸಂಗದಲ್ಲಿ ಪ್ರಸ್ತಾವ,ರತಿಹಾರ,ಎಂಬ ಹೆಸರಿನ ಸಾಮ ಭಕ್ತಿಗಳ ಉಪಾಸನೆಯನ್ನು ಹೇಳಲು ಈ ಖಂಡವು ಆರಂಭವಾಗಿದೆ.(ಪುಟ 4೯)
58)ಅವನು ಕುತ್ಸಿತವಾದ ಉದ್ದನ್ನು ತಿನ್ನುತ್ತಿರುವ ಮಾವಟಿಗನನ್ನು ಆಹಾರಕ್ಕಾಗಿ ಬೇಡಿದನು.ಮಾವಟಿಗನು ಅವನಿಗೆ ಹೀಗೆ ಹೇಳಿದನು;'ನನಗೆ ಬಡಿಸಿರುವ ಇದನ್ನು ಬಿಟ್ಟರೆ ಬೇರೆ ಕಾಳುಗಳಿಲ್ಲ'.
'ಇದರಲ್ಲಿಯೇ ಸ್ವಲ್ಪವನ್ನು ಕೊಡು' ಎಂದು ಉಷಸ್ತಿಯು ಕೇಳಿದನುಆ ಮಾವಟಿಗನು ಉದ್ದನ್ನು ಅವನಿಗೆ ಕೊಟ್ಟು 'ಇಗೋ ಕುಡಿಯುವ ನೀರು'ಎಂದು ಹೇಳಿದನು'ಇದನ್ನು ನಾನು ಕುಡಿದರೆ ಉಚ್ಛಿಷ್ಟವನ್ನೇ ಕುಡಿದಂತೆ ಆದೀತು'ಎಂದು ಉಷಸ್ತಿಯು ಹೇಳಿದನು.(ಪುಟ 50)
5೯)'ಇದು ಉಚ್ಛಿಷ್ಟವಲ್ಲವೇ' ಎಂದು ಮಾವಟಿಗನು ಕೇಳಿದನು'ಇದನ್ನು ತಿನ್ನದಿದ್ದರೆ ನಾನು ಬದುಕುತ್ತಲೇ ಇರಲಿಲ್ಲ.ಆದರೆ ನೀರು ನನಗೆ ಬೇಕಾದಷ್ಟು ಸಿಗುತ್ತದೆ'ಎಂದು ಉಷಸ್ತಿಯು ಹೇಳಿದನು(ಪುಟ 50)
(ಜ್ಞಾನಿಯಾದವನು ಸ್ವೇಚ್ಛೆಯಾಗಿ ಏನನ್ನೂ ಮಾಡಬಾರದು ಎಂಬ ಭಾವ)(ಪುಟ50)
60) ಉಷಸ್ತಿಯು ಅದನ್ನು ತಿಂದುಉಳಿದುದನ್ನು ಪತ್ನಿಗೆ ಕೊಟ್ಟನು.ಆಕೆಯು ಮೊದಲೇ ಭಿಕ್ಷೆಯನ್ನು ಪಡೆದಿದ್ದರಿಂದ ಅದನ್ನು ತೆಗೆದುಕೊಂಡು ಒಂದುಕಡೆ ಇಟ್ಟಳು.(ಪುಟ 50)
61)ಬೆಳಗ್ಗೆ ಎದ್ದಕೂಡಲೇ ಹೀಗೆ ಹೇಳಿದನು.'ಅಯ್ಯೋ ನಮಗೆ ಸ್ವಲ್ಪ ಆಹಾರ ದೊರಕುವುದಾದರೆ
ಸ್ವಲ್ಪ ಧನವೂ ದೊರಕೀತು!ಇಲ್ಲಿಯ ರಾಜನು ಯಾಗಮಾಡುವನು;ಅವನು ನಮ್ಮನ್ನು ಸಮಸ್ತ ಋತ್ವಿಕ್ಕಮ೯ಗಳಿಗೂ ಆರಿಸಿಯಾನು.'(ಪುಟ 51)
62)ಯಜ್ಞಕ್ಕೆ ಬಂದು ಸ್ತೋತ್ರ ಭೂಮಿಯಲ್ಲಿ ಸ್ತುತಿಸಲ್ಪಡುವ ಉದ್ಗಾತೃಗಳ ಬಳಿಯಲ್ಲಿ ಕುಳಿತುಕೊಂಡನು.ಅವನು ಪಸ್ತೋತೃವನ್ನು ಕುರಿತು ಹೀಗೆ ಹೇಳಿದನು. (ಪುಟ 52)
63)ಪ್ರಸ್ತೋತೃವೆ ,ಪ್ರಸ್ತಾವಕ್ಕೆ ಅನುಗತವಾದ ದೇವತೆಯನ್ನು ಅರಿತುಕೊಳ್ಳದೆ(ನನ್ನ ಸಮ್ಮುಖದಲ್ಲಿ)ಪ್ರಸ್ತಾವ ಮಾಡುವೆಯಾದರೆ ನಿನ್ನತಲೆಯು ಬಿದ್ದು ಹೋಗುವುದು.
64)ಉಪಾಸನೆಯನ್ನು ಅರಿಯದೆ ಕೇವಲ ಕಮ೯ವನ್ನು ತಿಳಿದವರು ವಿದ್ವಾಂಸರ ಸಮ್ಮುಖದಲ್ಲಿ ಅವರ ಅನುಮತಿಯಿಲ್ಲದೆ ಕಮ೯ವನ್ನು ಮಾಡಕೂಡದು.ಆದರೆ ಅವರಿಗೆ ಕಮ೯ದಲ್ಲಿ ಅಧಿಕಾರವಿಲ್ಲವೆಂದು ತಿಳಿಯಬಾರದು.ಏಕೆಂದರೆ ಅಜ್ಞಾನಿಗಳ ಕಮ೯ವು ದಕ್ಷಿಣಮಾಗ೯ದಲ್ಲಿ ಕಮಿ೯ಯನ್ನು ಒಯ್ಯುವುದೆಂದು
ಸ್ರುತಿಗಳು ಹೇಳುತ್ತವೆ.(ಪುಟ 52)
65)ಅವನು ಮೊದಲು ಉದ್ಗಾತೃವನ್ನು ಕೇಳಿದನು.:ಉದ್ಗಾತೃವೆ ಉದ್ಗೀತಕ್ಕೆ ಅನುಗತವಾದ ದೇವತೆಯನ್ನು ಅರಿತುಕೊಳ್ಳದೆ ನನ್ನ ಸಮ್ಮುಖದಲ್ಲಿಪ್ರತೀಹಾರ ಮಾಡುವೆಯಾದರೆ ನಿನ್ನ ತಲೆಯು ಬೀಳುವುದು.ಅವರು ತಮ್ಮ ಕಮ೯ಗಳನ್ನು ನಿಲ್ಲಿಸಿ ಸುಮ್ಮನೆ ಹಾಗೆಯೇ ಕುಳಿತುಕೊಂಡರು.(ಪುಟ 53)
66) ಅದೇರೀತಿ
1) ಅವನು ಪ್ರಸ್ತೋತೃ-ಪ್ರಸ್ತಾವ
2)ಉದ್ಗಾತೃ -ಉದ್ಗಾನ
3)ಪ್ರತಿಹತೃ೯-ಪ್ರತಿಹಾರ
ಇವರಿಗೂ ಹೇಳಿದನು.ಇವಕ್ಕೆ ಕ್ರಮವಾಗಿ ದೇವತೆಗಳು 1)ಪ್ರಾಣ 2) ಆದಿತ್ಯ 3)ಅನ್ನ ಆದೇವತೆಗಳು.
ಪ್ರಸ್ತಾವ,ಉದ್ಗೀಥ,ಪ್ರತಿಹಾರ ಎಂಬ ಈ ಭಕ್ತಿಗಳನ್ನು ಪ್ರಾಣ,ಆದಿತ್ಯ,ಅನ್ನ ಇವುಗಳ ದೃಷ್ಟಿಯಿಂದ
ಉಪಾಸನೆ ಮಡಬೇಕು ಎನ್ನುವುದು ಈ ಎರಡು ಖಂಡಗಳ ಒಟ್ಟಾಥ೯.(ಪುಟ 58)
ಹನ್ನೆರಡನೆಯ ಖಂಡ:
67)ದೇವತೆಗಳ ರೂಪದಲ್ಲಿರುವ ನಾಯಿಗಳಿಗೆ ಗೋಚರವಾದ ಶೌವ ಉದ್ಗೀಥವನ್ನು ಅನ್ನಲಾಭಕ್ಕೋಸ್ಕರ ಹೇಳಿದೆ.(ಪುಟ 58)
ಹದಿಮೂರನೆಯ ಖಂಡ:
68)ಸಾಮದ ಅವಯವಗಳಾದ ಉದ್ಗೀಥವೇ ಮೊದಲಾದ ಭಕ್ತಿಗಳ ವಿಷಯದಲ್ಲಿ ಉಪಾಸನೆಯನ್ನು ಹಿಂದೆ ತಿಳಿಸಿದೆ.ಈಗ ಸಾಮದ ಮತ್ತೊಂದು ಅವಯವವಾದ ಸ್ತೋಭಾಕ್ಷರಗಳನ್ನು ವಿಷಯವಾಗಿ ಉಳ್ಳ ಬೇರೆ ಬೇರೆ ಉಪಾಸನೆಗಳನ್ನು ಒಟ್ಟುಗೂಡಿಸಿ ಇಲ್ಲಿ ಹೇಳಲಗಿದೆ.ಸಾಮಗಾನಕ್ಕಾಗಿ ಮಧ್ಯೆ ಮಧ್ಯೆ ಸೇರಿಸಿಕೊಂಡಿರುವ ಅಥ೯ಶೂನ್ಯವಾದ ಅಕ್ಷರ ವಿಶೇಷಗಳಿಗೆ ಸ್ತೋಭವೆಂದು ಹೆಸರು.ಈ ಖಂಡದಲ್ಲಿ ಹಾಉ,ಹಾಇ,ಅಥ,ಈಊ,ಏ,ಔಹೋಯಿ ಹಿಂ,ಸ್ವರ,ಯಾ,ವಿರಾಟ್,ಮತ್ತು ಅನಿರುಕ್ತವಾದ ಹುಂಕಾರ ಇವೇ ಮೊದಲಾದ ಸ್ತೋಭಗಳು ಬರುತ್ತವೆ.ಇಂತಿಂಥ ಸ್ತೋಭಗಳು ಇಂತಿಂಥ ಸ್ಥಾನದಲ್ಲಿ ಬರುತ್ತವೆಂದು ಭಾಷ್ಯಕಾರರು ಹೇಳಿದ್ದಾರೆ.(ಪುಟ62)
6೯)
1)ಹಾಉ-ಕಾರವು-ರಥಂತರಸಾಮದಲ್ಲಿ ಈಲೋಕವೆಂದು ಉಪಾಸಿಸಬೇಕು.
2)ಹಾಇ-ಕಾರ-ವಾಮದೇವ್ಯಸಾಮ-ವಾಯು ನೀರು ಇವುಗಳ ಸಂಬಂಧ ಉಪಾಸಿಸಬೇಕು.
3)ಅಥ-ಕಾರ- ಈ ಜಗತ್ತು ಅನ್ನದಲ್ಲಿಯೇಸ್ಥಿತವಾಗಿದೆ-ಚಂದ್ರ ದೃಷ್ಟಿಯಿಂದ ಉಪಾಸನೆ.
4)ಇಹಕಾರವು- ಆತ್ಮನೆಂದು ಉಪಾಸಿಸಬೇಕು.
5)ಈ-ಕಾರವು-ಆಗ್ನೇಯ ಸಾಮ-ಅಗ್ನಿಯೆಂದು ಉಪಾಸಿಸಬೇಕು.(ಪುಟ 62)
70) ಯಾವನು ಹೀಗೆ ಈ ಸಾಮಗಳ ದಶ೯ನವನ್ನು ಅರಿತುಕೊಳ್ಳುವನೊ -ಸಾಮಗಳ ದಶ೯ನವನ್ನು ಅರಿತುಕೊಳ್ಳುವನೊ -ಅವನಿಗೆ ವಾಕ್ಕು ತನ್ನ ಫಲವೇ ಆದ ಹಾಲನ್ನು ಕರೆಯುತ್ತದೆ.ಅವನು ಅನ್ನವಂತನೂ ಅನ್ನವನ್ನು ತಿನ್ನುವವನೂ ಆಗುತ್ತಾನೆ.ಸ್ತೋಭಾಕ್ಷರಗಳ ಉಪಾಸನೆಯ ಫಲವನ್ನು ಇಲ್ಲಿ ಹೇಳಿದೆ.
(ಪುಟ 64)
,,,,,,,,,,,,,,,,,,,,,,,,,,,,,,,,,,,ಮೊದಲನೆಯ ಅಧ್ಯಾಯ ಮುಕ್ತಾಯವಾಯಿತು,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
ಎರಡನೆಯ ಅಧ್ಯಾಯ: (ಸಾಮೋಪಾಸನೆ)
1)ಓಂ,ಸಮಸ್ತವಾದ ಸಾಮದ ಉಪಾಸನೆಯು ಸಾಧುವು.ಯಾವುದು ಸಾಧುವೊ ಅದನ್ನು ಸಾಮವೆಂದು ಕರೆಯುತ್ತಾರೆ.ಯಾವುದು ಅಸಾಧುವೊ ಅದನ್ನು ಅಸಾಮವೆಂದು ಕರೆಯುವರು.(ಪುಟ 65)
2)ಯಾವನು ಅದನ್ನು ಹೀಗೆ ಅರಿತುಕೊಂಡು ಸಾಮವನ್ನು ಸಾಧುವೆಂದು ಉಪಾಸಿಸುವನೊ ಅವನನ್ನು ಸಾಧುಧಮ೯ಗಳು ಬಳಿಸಾರುವವು ಮತ್ತು ಅವನಿಗೆ ಭೋಗ್ಯಗಳಾವುವುವು.(ಪುಟ 67)
ಎರಡನೆಯ ಖಂಡ:
3) ಪಂಚವಿಧ ಸಾಮವನ್ನು ಪೃಥಿವಾದಿಲೋಕಗಳೆಂದು ಉಪಾಸಿಸಬೇಕು.
ಪೃಥ್ವಿಯು ಹಿಂಕಾರವು,ಅಗ್ನಿಯು ಪ್ರಸ್ತಾವವು,ಅಂತರಿಕ್ಷವು ಉದ್ಗೀಥವು,ಆದಿತ್ಯನು ಪ್ರತಿಹಾರವು,ದ್ಯುಲೋಕವು ನಿಧನವು.ಹೀಗೆ ಊಧ್ವಲೋಕಗಳ ವಿಷಯದಲ್ಲಿ ಉಪಾಸನೆಗಳು(ಪುಟ 68)
3) ಇನ್ನು ಕೆಳಗಿರುವ ಲೋಕಗಳ ವಿಷಯದಲ್ಲಿ:ದ್ಯುಲೋಕವು ಹಿಂಕಾರವು,ಆದಿತ್ಯನು ಪ್ರಸ್ತಾವವು,
ಅಂತರಿಕ್ಷವು ಉದ್ಗೀಥವು,ಅಗ್ನಿಯು ಪ್ರತಿಹಾರವು.ಪೃಥ್ವಿಯು ನಿಧನವು.(ಪುಟ 68)
4)ಹೀಗೆ ಇದನ್ನು ಅರಿತುಕೊಂಡು ಪಂಚವಿಧ ಸಾಮವನ್ನು ಲೋಕಗಳೆಂದು ಉಪಾಸಿಸುತ್ತಾನೆಯೊ,ಅವನಿಗೆ ಊಧ್ವ೯ವಾದ ಮತ್ತು ಅಧೋಮುಖವಾದ ಲೋಕಗಳು ಭೋಗ್ಯವಾಗುತ್ತವೆ.(ಪುಟ 6೯)
ಮೂರನೆಯ ಖಂಡ:
5) ಪಂಚವಿಧ ಸಾಮವನ್ನು ಮಳೆ ಎಂದು ಉಪಾಸಿಸಬೇಕು.ಪುರೋವಾತವು ಹಿಂಕಾರವು,ಹುಟ್ಟುತ್ತಿರುವ ಮೇಘವು ಹಿಂಕಾರವು,ಮಳೆಗರೆಯುವುದು ಉದ್ಗೀಥವು,ಮಿಂಚುವುದು ಗುಡುಗುವುದು ಪ್ರತಿಹಾರವು,ಮಳೆ ನಿಲ್ಲುವುದು ನಿಧನವು.ಯಾವನು ಇದನ್ನು ಅರಿತುಕೊಂಡು ಪಂಚವಿಧಸಾಮವನ್ನು ಮಳೆಯೆಂದು ಉಪಾಸಿಸುತ್ತಾನೆಯೊ ಅವನಿಗೆ ಮಳೆಗರೆಯುತ್ತದೆ.(ಪುಟ 70)
ನಾಲ್ಕನೆಯ ಖಂಡ:
6)ಎಲ್ಲ ನೀರಿನಲ್ಲಿಯೂ ಪಂಚವಿಧ ಸಾಮವನ್ನು ಉಪಾಸಿಸಬೇಕು. ಒಟ್ಟುಗೂಡುವ ಮೇಘವು ಹಿಂಕಾರವು,ಅದು ಮಳೆಗರೆದಾಗ ಪ್ರಸ್ತಾವವು,ಪೂವ೯ದಿಕ್ಕಿಗೆ ಪ್ರವಹಿಸುವ ನೀರು ಉದ್ಗೀಥವು.ಪಶ್ಚಿಮದಿಕ್ಕಿಗೆ ಪ್ರವಹಿಸುವುದು ಪ್ರತಿಹಾರವು,ಸಮುದ್ರವು ನಿಧನವು(ಪುಟ 71)
7)ಯಾರು ಹೀಗೆ ಇದನ್ನು ಅರಿತುಕೊಂಡು ಎಲ್ಲ ನೀರಿನಲ್ಲಿಯೂ ಪಂಚವಿಧ ಸಾಮವನ್ನು ಉಪಾಸಿಸುತ್ತಾನೆಯೊ ಅವನು ನೀರಿನಲ್ಲಿ ಸಾಯುವುದಿಲ್ಲ.,ಜಲಸಂಪನ್ನನೂ ಆಗುತ್ತಾನೆ.(ಪುಟಟ 71)
ಐದನೆಯ ಖಂಡ:
8) ಪಂಚವಿಧ ಸಾಮವನ್ನು ಋತುಗಳೆಂದು ಉಪಾಸಿಸಬೇಕು.ವಸಂತವು ಹಿಂಕಾರವು,ಬೇಸಿಗೆಯು ಪ್ರಸ್ತಾವವು,ಮಳೆಗಾಲವು ಉದ್ಗೀಥವು,ಶರದೃತುವು ಪ್ರತಿಹಾರವು,ಹೇಮಂತವು ನಿಧನವು.(ಪುಟ 72)
೯) ಯಾವನು ಹೀಗೆ ಅರಿತುಕೊಂಡು ಪಂಚವಿಧ ಸಾಮವನ್ನು ಋತುಗಳೆಂದು ಉಪಾಸಿಸುವನೊ ಅವನಿಗೆ ಋತುಗಳು ಭೋಗ್ಯವಾಗುವುವು.ಅವನು ಋತುಮಂತನೂ ಆಗುವನು (ಪುಟ72)
ಆರನೆಯ ಖಂಡ:
10)ಪಂಚವಿಧ ಸಾಮಗಳನ್ನು ಪಶುಗಳಲ್ಲಿ ಉಪಾಸಿಸಬೇಕು.ಆಡುಗಳು ಹಿಂಕಾರ,ಕುರಿಗಳು ಪ್ರಸ್ತಾವವು,ಗೋವುಗಳು ಉದ್ಗೀಥವು,ಕುದುರೆಗಳು ಪ್ರತಿಹಾರವು.ಪುರುಷನು ನಿಧನವು.(ಪುಟ 73)
11) ಯಾವನು ಹೀಗೆ ಇದನ್ನು ಅರಿತುಕೊಂಡು ಪಂಚವಿಧ ಸಾಮವನ್ನು ಉಪಾಸಿಸುತ್ತಾನೆಯೊ ಅವನಿಗೆ ಪಶುಗಳು ಭೋಗ್ಯವಾಗುತ್ತವೆ.ಅವನು ಪಶುವಂತನೂ ಆಗುತ್ತಾನೆ.(ಪುಟ 73)
ಏಳನೆಯ ಖಂಡ:
12)ಪಂಚವಿಧ ಸಾಮಗಳನ್ನು ಇಂದ್ರಿಯಗಳೆಂದು ಉಪಾಸಿಸಬೇಕು.ಘ್ರಾಣೇಂದ್ರಿಯವು ಹಿಂಕಾರವು,ವಾಕ್ಕು ಪ್ರಸ್ತಾವವು,ಚಕ್ಷುಸ್ಸು ಉದ್ಗೀಥವು,ಶ್ರೋತ್ರವು ಪ್ರತಿಹಾರವು,ಮನಸ್ಸು ನಿಧನವು,ಇವೇ ಉತ್ತರೋತ್ತರ
ಅಧಿಕತರ ಗುಣವುಳ್ಳವು.(ಪುಟ 74)
13)ಯಾವನುಹೀಗೆ ಅರಿತುಕೊಂಡು ಪಂಚವಿಧ ಸಾಮಗಳನ್ನು ಇಂದ್ರಿಯಗಳೆಂದು ಉಪಾಸಿಸುವನೊ ಅವನಿಗೆ ಉತ್ತರೋತ್ತರ ಉತ್ಕøಷ್ಟತರವಾದ ಜೀವನವು ಆಗುತ್ತದೆ.(ಪುಟ 75)
ಎಂಟನೆಯ ಖಂಡ:
14)ಈಗ ಸಪ್ತವಿಧ ಸಾಮದ ಉಪಾಸನೆ.ಸಪ್ತವಿಧ ಸಾಮವನ್ನು ವಾಕ್ಕಿನಲ್ಲಿ ಉಪಾಸಿಸಬೇಕು.ವಾಕ್ಕಿನಲ್ಲಿ ಯಾವುದು ಹುಂ ಎಂದಿರುವುದೊ ಅದು ಹಿಂಕಾರ;ಯಾವುದು ಪ್ರ ಎಂದಿರುವುದೊಅದು ಪ್ರಸ್ತಾವ,ಯಾವುದು ಆ ಎಂದಿರುವುದೊ ಅದು ಆದಿ,ಯಾವುದು ಉತ್ ಎಂದಿರುವುದೊ ಅದು
ಉದ್ಗೀಥ,ಯಾವುದು ಪ್ರತಿಎಂದಿರುವುದೊ ಅದು ಪ್ರತಿಹಾರ,ಯಾವುದು ಉಪ ಎಂದಿರುವುದೊ ಅದು ಉಪದ್ರವ,ಯಾವುದು ನಿ ಎಂದಿರುವುದೊ ಅದು ನಿಧನ.(ಪುಟ 76)
15)ಯಾವನು ಹೀಗೆ ತಿಳಿದುಕೊಂಡು ವಾಕ್ಕಿನಲ್ಲಿ ಸಪ್ತ ವಿಧ ಸಾಮವನ್ನು ಉಪಾಸಿಸುತ್ತಾನೆಯೊ ಅವನಿಗೆ ವಾಕ್ಕು ತನ್ನ ಫಲವೇ ಆದ ಹಲನ್ನು ಕರೆಯುತ್ತದೆ.ಅವನು ಅನ್ನವಂತನೂ ಅನ್ನವನ್ನು ತಿನ್ನುವವನೂ ಆಗುತ್ತಾನೆ(ಪುಟ76)
ಒಂಬತ್ತನೆಯ ಖಂಡ:
16)ಈಗ ಸಪ್ತವಿಧ ಸಾಮವನ್ನು ಆದಿತ್ಯನೆಂದು ಉಪಾಸಿಸಬೇಕು.ಅವನು ಯಾವಾಗಲೂ ಸಮನಾಗಿರುವುದರಿಂದ ಸಾಮನು.ನನಗೆ ಅಭಿಮುಖನಾಗಿದ್ದಾನೆ,ನನಗೆ ಅಭಿಮುಖನಾಗಿದ್ದಾನೆ ಎಂದು ಎಲ್ಲರಿಗೂ ಸಮನಾಗಿರುವುದರಿಂದ ಸಮವು.(ಪುಟ 77)
17)ಈ ಭೂತಗಳೆಲ್ಲವೂ ಆದಿತ್ಯನಲ್ಲಿ ಅನುಗತವಾಗಿವೆ ಎಂದು ಅರಿತುಕೊಳ್ಳಬೇಕು.
ಉದಯಕ್ಕೆ ಮೊದಲು ಯಾವರೂಪವಿದೆಯೊ ಅದು ಹಿಂಕಾರವು,ಪಶುಗಳು ಆದಿತ್ಯನೆಂಬ ಸಾಮದ (ಹಿಂಕಾರ -ಭಕ್ತಿಯಲ್ಲಿ) ಅನುಗತವಾಗಿದೆ.ಆದುದರಿಂದ ಅವು ಓಂಕಾರವನ್ನು ಮಾಡುತ್ತವೆ.ಏಕೆಂದ್ರೆ ಅವು ಈ ಸಾಮದ ಹೊಂಕಾರಕ್ಕೆ ಭಾಗಿಗಳಾಗಿವೆ(ಪುಟ 78)
18)ಉದಯಿಸಿದ ಕೂಡಲೇ ಸೂಯ೯ನಿಗೆ ಯಾವ ರೂಪವಿರುವುದೊ ಅದೇ ಪ್ರಸ್ತಾವವು.ಮನುಷ್ಯರು ಆದಿತ್ಯನೆಂಬ ಸಾಮದ (ಪ್ರಸ್ತಾವ ಭಕ್ತಿಯಲ್ಲಿ)ಅನುಗತರಾಗಿದ್ದಾರೆ(ಪುಟ 78)
1೯)
1) ಆದಿತ್ಯನು ಉದಯಿಸುವಕಾಲ(ಸಂಗಮವೇಳೆ)-ಆದಿ
2) ಮಧ್ಯಾನ್ಹ ಕಾಲ-ಉದ್ಗೀಥವು
3)ಮಧ್ಯಾನ್ಹದವೇಳೆ ಮತ್ತು ಅಪರಾನ್ಹಕ್ಕೆ ಮೊದಲು-ಪ್ರತಿಹಾರ
4)ಅಪರಾನ್ಹದ ನಂತರ ಮತ್ತು ಅಸ್ತಮಿಸುವುದಕ್ಕೆ ಮೊದಲು-ಉಪದ್ರವ
5) ಸೂಯ೯ನು ಅಸ್ತಮಿಸಿದ ಕೂಡಲೇ ಇರುವ ರೂಪವು -ನಿಧನ
20)ಇಲ್ಲಿಂದ ಸಪ್ತವಿಧ ಸಾಮದ ಉಪಾಸನೆ:
1) ಹಿಂಕಾರ 2)ಪ್ರಸ್ತಾವ 3)ಆದಿ 4)ಉದ್ಗೀಥ 5)ಪ್ರತಿಹಾರ 6) ಉಪದ್ರವ 7))ನಿಧನ
ಇವೇ ಸಪ್ತಾವಯವ ಸಾಮದ ಇಪ್ಪತ್ತೆರಡು ಅಕ್ಷರಗಳು.
21)ಯಾವನು ಹೀಗೆ ಅರಿತುಕೊಂಡು ಸಮ್ಮಿತವೂ ಅತಿಮೃತ್ಯುವೂ ಆದ ಸಪ್ತವಿಧ ಸಾಮವನ್ನು ಉಪಾಸಿಸುತ್ತಾನೆಯೊ ಅವನು ಮೃತ್ಯುವನ್ನು ಜಯಿಸುತ್ತಾನೆ.ಮೃತ್ಯುವಿನ ಜಯಕ್ಕಿಂತಲೂ ಹೆಚ್ಚಿನ ಜಯವು ಇವನಿಗೆ ಆಗುವುದು.(ಪುಟ 85)
22) ಮೃತ್ಯುವನ್ನು ಜಯಿಸಲು ಕಾರಣವಾಗಿರುವುದರಿಂದ ಅತಿಮೃತ್ಯು(ಪುಟ 82)
ಹನ್ನೊಂದನೆಯ ಖಂಡ:
23)ಹಿಂದೆ ಸಾಮದ ಹೆಸರನ್ನು ಹೇಳದೆ ಪಂಚವಿಧ ಹಗೂ ಸಪ್ತವಿಧ ಸಾಮೋಪಾಸನೆಯನ್ನು ಹೇಳಿದ್ದಾಯಿತು.ಈಗ ಗಾಯತ್ರವೇ ಮೊದಲಾದ ವಿಶಿಷ್ಟ ಫಲಗಳುಳ್ಳ ಸಾಮೋಪಾಸನೆಯನ್ನು ನಾ-ಗ್ರಹಣ ಪೂವ೯ಕವಾಗಿ ಹೇಳಲಾಗುತ್ತದೆ.(ಪುಟ 85)
24)ಮನಸ್ಸು ಹಿಂಕಾರ,ವಾಕ್ಕು ಪ್ರಸ್ತಾವ,ಚಕ್ಷುಸ್ಸು ಉದ್ಗೀಥ,ಶ್ರೋತ್ರವು ಪ್ರತಿಹಾರ,ಪ್ರಾಣವು ನಿಧನ,ಈ ಗಾಯತ್ರ ಸಾಮವು ಪ್ರಾಣಗಳಲ್ಲಿ ಪ್ರೋತವಾಗಿದೆ.(ಪುಟ 85)
25) 'ಪ್ರಾಣವೇ ಗಾಯತ್ರಿ'(ಪ್ರಾಣೋವೈ ಗಾಯತ್ರೀ'ಎಂದು ಶ್ರುತಿಯು ಹೇಳುತ್ತದೆ.) ಪುಟ 85)
26) ಅಕ್ಷಂದ್ರ ಚಿತ್ತ ಎಂದರೆ ಉದಾರ ಹೃದಯದವನು ಎಂದಥ೯(ಪುಟ 86)
ಹನ್ನೆರಡನೆಯ ಖಂಡ:
27)ಈ ರಥಂತರ ಸಾಮವು ಅಗ್ನಿಯಲ್ಲಿ ಪ್ರೋತವಾಗಿದೆ.
1) ಅಗ್ನಿಯ ಉತ್ಪತ್ತಿಗಾಗಿ ಅರಣಿಗಳನ್ನು ಕಡೆಯುವುದು-ಹಿಂಕಾರ
2)ಧೂಮೋತ್ಪತ್ತಿಯಾಗುವುದು -ಪ್ರಸ್ತಾವವು
3) ಅಗ್ನಿಯ ಪ್ರಜ್ವಲನವು- ಉದ್ಗೀಥವು
4)ಕೆಂಡಗಳಾಗುವುದು -ಪ್ರತಿಹಾರವು
5)ಅಗ್ನಿಯು ಕ್ಷೀಣವಾಗುವುದು -ನಿಧನವು(ಪುಟ 87)
28) ಹೀಗೆ ಅಗ್ನಿಯಲ್ಲಿ ಪ್ರೋತವಾಗಿರುವ ರಥಂತರ ಸಾಮವನ್ನು ಯಾರು ಅರಿತಿರುವನೊ ಅವನು ಬ್ರಹ್ಮವಚ೯ಸ್ವಿಯೂ ಅನ್ನಾದನೂ ಆಗುತ್ತಾನೆ.ಪೂಣಾ೯ಯುಷ್ಯವನ್ನು ಹೊಂದುತ್ತಾನೆ.ಉಜ್ವಲವಾಗಿ ಜೀವಿಸುತ್ತಾನೆ.ಸಂತತಿಯಿಂದಲೂ ಪಶುಗಳಿಂದಲೂ ಕೀತಿ೯ಯಿಂದಲೂ ಮಹಾನ್ ಆಗುತ್ತಾನೆ.(ಪುಟ 88)
ಹದಿಮೂರನೆಯ ಖಂಡ:
2೯) ಈ ವಾಮದೇವ್ಯ ಸಾಮವು ಮಿಥುನದಲ್ಲಿ ಪ್ರೋತವಾಗಿದೆ.ಯಾವನು ಹೀಗೆ ಮಿಥುನದಲ್ಲಿ ಪ್ರೋತವಾಗಿರುವ ಈ ವಾಮದೇವ್ಯವನ್ನು ಅರಿತುಕೊಳ್ಳುವನೊ ಅವನು ಮಿಥುನಿಯಾಗುತ್ತಾನೆ.ಅಮೋಘ ವೀಯ೯ನಾಗುತ್ತಾನೆ.ಪುಣಾ೯ಯಸ್ಸನ್ನು ಹೊಂದುತ್ತಾನೆ.ಜೀವಿಸುತ್ತಾನೆ.ಸಂತತಿಯಿಂದಲೂ ಪಶುಗಳಿಂದಲೂ ಮಹಾನ್ ಆಗುತ್ತಾನೆ.ಮಿಥುನಿಯಾಗುತ್ತಾನೆ ಎಂದರೆ ವಿದುರನಾಗುವುದಿಲ್ಲ ಎಂದಥ೯.(ಪುಟ 85)
ಹದಿನಾಲ್ಕನೆಯ ಖಂಡ:
30)
1) ಉದಯಿಸುತ್ತಿರುವ ಆದಿತ್ಯನು-ಹಿಂಕಾರ
2)ಉದಯಿಸಿದ ಆದಿತ್ಯನು - ಪ್ರಸ್ತಾವ
3) ಮಧ್ಯಾನ್ಹದ ಆದಿತ್ಯನು -ಉದ್ಗೀಥ
4)ಅಪರಾನ್ಹದ ಆದಿತ್ಯನು -ಪ್ರತಿಹಾರ
5)ಅಸ್ತಮಿಸುತ್ತಿರುವ ಆದಿತ್ಯನು -ನಿಧನ
ಈ ಬೃಹತ್ಸಾಮವು ಆದಿತ್ಯನಲ್ಲಿ ಪ್ರೋತವಾಗಿದೆ.ಪುಟ 8೯)
30)ಯಾವನು ಹೀಗೆ ಆದಿತ್ಯನಲ್ಲಿ ಪ್ರೋತವಾಗಿರುವ ಬೃಹತ್ಸಾಮವನ್ನು ಅರಿತುಕೊಂಡಿರುವನೊ ಅವನು ತೇಜಸ್ವಿಯೂ ಅನ್ನಾದನೂ ಆಗುತ್ತನೆ.ಪೂಣಾ೯ಯಸ್ಸನ್ನು ಹೊಂದುತ್ತಾನೆ.ಉಜ್ವಲವಾಗಿ ಜೀವಿಸುತ್ತಾನೆ.ಸಂತತಿಯಿಂದಲೂ ಪಶುಗಳಿಂದಲೂ ಕೀತಿ೯ಯಿಂದಲೂ ಮಹಾನ್ ಆಗುತ್ತಾನೆ.ಈ ಉಪಾಸಕನ ವ್ರತವು -ಅವನು ತಪಿಸುತ್ತಿರುವ ಸೂಯ೯ನನ್ನು ನಿಂದಿಸಬಾರದು.(ಪುಟ ೯0)
ಹದಿನೈದನೆಯ ಖಂಡ:
31)
1)ಒಟ್ಟುಗೂಡುತ್ತಿರುವ ಅಭ್ರಗಳು -ಹಿಂಕಾರ,
2)ಉತ್ಪನ್ನವಾದ (ಜಲವಷೀ೯) ಮೇಘವು-ಪ್ರಸ್ತಾವ
3)ಮಳೆಗರೆಯುವುದು- ಉದ್ಗೀಥ
4)ಮಿಂಚುವುದು ಮತ್ತು ಗುಡುಗುವುದು -ಪ್ರತಿಹಾರ
5)ಮಳೆ ನಿಲ್ಲುವುದು- ನಿಧನ(ಪುಟ ೯1)
ಈ ವೈರೂಪ ಸಾಮವು ಪಜ೯ನ್ಯದಲ್ಲಿ ಪ್ರೋತವಾಗಿದೆ.
32)ಯಾವನು ಹೀಗೆ ಪಜ೯ನ್ಯದಲ್ಲಿ ಪ್ರೋತವಾಗಿರುವ ಈ ವೈರೂಪ ಸಾಮವನ್ನು ಅರಿತುಕೊಂಡಿರುವನೊ ಅವನು ವಿವಿಧ ರೂಪವನ್ನುಳ್ಳ ಸುರೂಪಿಗಳೂ ಆದ ಪಶುಗಳನ್ನು ಹೊಂದುತ್ತಾನೆ.ಪೂಣಾ೯ಯಸ್ಸನ್ನು ಹೊಂದುತ್ತಾನೆ.ಉಜ್ವಲವಾಗಿ ಜೀವಿಸುತ್ತಾನೆ.ಸಂತತಿಯಿಂದಲೂ ಪಶುಗಳಿಂದಲೂ ಕೀತಿ೯ಯಿಂದಲೂ ಮಹಾನ್ ಆಗುತ್ತಾನೆ.ಇದು ಈ ಉಪಾಸಕನ ವ್ರತವು.-ಅವನು ಮಳೆಗರೆಯುತ್ತಿರುವ ಮೇಘವನ್ನು ನಿಂದಿಸಬಾರದು.(ಪುಟ ೯1)
ಹದಿನಾರನೆಯ ಖಂಡ:
33)ವೈರಾಜ ಸಾಮ:
1)ವಸಂತವು ಹಿಂಕಾರ
2)ಗ್ರೀಷ್ಮವು ಪ್ರಸ್ತಾವ
3)ಮಳೆಗಾಲವು ಉದ್ಗೀಥ
4)ಶರದೃತುವು ಪ್ರತಿಹಾರ
5)ಹೇಮಂತವು ನಿಧನ
ಈ ವೈರಾಜಸಾಮವು ಋತುಗಳಲ್ಲಿ ಪ್ರೋತವಾಗಿದೆ.(ಪುಟ ೯2)
34)ಯಾವನು ಹೀಗೆ ಈ ಋತುಗಳಲ್ಲಿ ಪ್ರೋತವಾಗಿರುವ ಸಾಮವನ್ನು ಅರಿತುಕೊಂಡಿರುವನೊ ಅವನು ಸಂತತಿಯಿಂದಲೂ ಪಶುಗಳಿಂದಲೂ ಬ್ರಹ್ಮವಚ೯ಸ್ಸಿನಿಂದಲೂ ವಿರಾಜಿಸುತ್ತಾನೆ.ಪೂಣಾ೯ಯಸ್ಸನ್ನು ಹೊಂದುತ್ತಾನೆ.ಉಜ್ವಲವಾಗಿ ಜೀವಿಸುತ್ತಾನೆ.ಸಂತತಿಯಿಂದಲೂ ಪಶುಗಳಿಂದಲೂ ಕೀತಿ೯ಯಿಂದಲೂ ಮಹಾನ್ ಆಗುತ್ತಾನೆ.ಇದು ಈ ಉಪಾಸಕನ ವ್ರತವು -ಅವನು ಋತುಗಳನ್ನು ನಿಂದಿಸಕೂಡದು.
ಹದಿನೇಳನೆಯ ಖಂಡ:ಶಕ್ವರೀ ಸಾಮ:
35)
1)ಪೃಥ್ವಿಯು -ಹಿಂಕಾರ
2)ಅಂತರಿಕ್ಷವು- ಪ್ರಸ್ತಾವ
3)ದ್ಯುಲೋಕವು- ಉದ್ಗೀಥ
4) ದಿಕ್ಕುಗಳು -ಪ್ರತಿಹಾರ
5)ಸಮುದ್ರವು -ನಿಧನ
36) ಯಾವನು ಹೀಗೆ ಲೋಕಗಳಲ್ಲಿ ಪ್ರೋತವಾಗಿರುವ ಈ ಶಕ್ವರೀ ಸಾಮವನ್ನು ಅರಿತುಕೊಂಡಿರುವನೊ ಅವನು ಲೋಕಗಾಮಿಯಾಗುತ್ತಾನೆ.ಪೂಣಾ೯ಯಸ್ಸನ್ನು ಹೊಂದುತ್ತಾನೆ.ಉಜ್ವಲವಾಗಿ ಜೀವಿಸುತ್ತಾನೆ.ಸಂತತಿಯಿಂದಲೂ ಪಶುಗಳಿಂದಲೂ ಕೀತಿ೯ಯಿಂದಲೂ ಮಹಾನ್ ಆಗುತ್ತಾನೆ.ಇದು ಈ ಉಪಾಸಕನ ವ್ರತವು -ಅವನು ಲೋಕಗಳನ್ನು ನಿಂದಿಸಕೂಡದು.(ಪುಟ೯5)
ಹದಿನೆಂಟನೆಯ ಖಂಡ(ರೇವತೀ ಸಾಮ):
37)
1) ಆಡುಗಳು -ಹಿಂಕಾರ
2) ಕುರಿಗಳು- ಪ್ರಸ್ತಾವ
3)ಗೋವುಗಳು- ಉದ್ಗೀಥ
4)ಕುದುರೆಗಳು -ಪ್ರತಿಹಾರ
5)ಪುರುಷನು -ನಿಧನ.
ಈ ರೇವತೀ ಸಾಮವು ಪಶುಗಳಲ್ಲಿ ಪ್ರೋತವಾಗಿದೆ.(ಪುಟ ೯5)
38) ಪಶುಗಳು ರೇವತೀ ಸಾಮವು.'ಪಶವೋ ವೈ ರೇವತೀ' ಎಂದು ಶ್ರುತಿಯಲ್ಲಿ ಹೆಳಿದೆ.(ಪುಟ ೯5)
3೯)ಯಾವನು ಹೀಗೆ ಪಶುಗಳಲ್ಲಿ ಪ್ರೋತವಾಗಿರುವ ಈ ರೇವತೀ ಸಾಮವನ್ನು ಅರಿತುಕೊಂಡಿರುವನೊ ಅವನು ಪಶುಗಳನ್ನು ಪಡೆಯುತ್ತಾನೆ.ಪೂಣಾ೯ಯುಸ್ಸನ್ನು ಹೊಂದುತ್ತಾನೆ. ಉಜ್ವಲವಾಗಿ ಜೀವಿಸುತ್ತಾನೆ.ಸಂತತಿಯಿಂದಲೂ ಪಶುಗಳಿಂದಲೂ ಕೀತಿ೯ಯಿಂದಲೂ ಮಹಾನ್ ಆಗುತ್ತಾನೆ.ಇದು ಈ ಉಪಾಸಕನ ವ್ರತವು -ಇವನು ಪಶುಗಳನ್ನು ನಿಂದಿಸಕೂಡದು.(ಪುಟ ೯5)
ಹತ್ತೊಂಬತ್ತನೆಯ ಖಂಡ(ಯಜ್ಞಾಯಜ್ಞೀಯ ಸಾಮ):
40)
1) ಲೋಮವು -ಹಿಂಕಾರ
2)ಚಮ೯ವು ಪ್ರಸ್ತಾವ
3)ಮಾಂಸವು-ಉದ್ಗೀಥ
4)ಅಸ್ಥಿಯು- ಪ್ರತಿಹಾರ
5)ಮಜ್ಜೆ -ನಿಧನ
ಈ ಯಜ್ಞಾಯಜ್ಞೀಯ ಸಾಮವು ಅಂಗಗಳಲ್ಲಿ ಪ್ರೋತವಾಗಿದೆ.(ಪುಟ ೯6)
41) ಮನುಷ್ಯನ ಅಂಗಗಳೆಲ್ಲವೂ ಅನ್ನರಸದ ವಿಕಾರವಾದುದರಿಂದ ಈ ಸಾಮವು ಅಂಗಗಳಲ್ಲಿ ಪ್ರತಿಷ್ಠಿತವಾಗಿದೆ.(ಪುಟ ೯6)
42) ಯಾವನು ಹೀಗೆ ಅಂಗಗಳಲ್ಲಿ ಪ್ರೋತವಾಗಿರುವ ಈ ಯಜ್ಞಾಯಜ್ಞೀಯ-ಸಾಮವನ್ನು ಅರಿತುಕೊಂಡಿರುವನೊಅವನಿಗೆ ಯಾವ ಅಂಗದಲ್ಲಿಯೂ ಕೊರತೆಯುಂಟಾಗುವುದಿಲ್ಲ. ಪೂಣಾ೯ಯುಸ್ಸನ್ನು ಹೊಂದುತ್ತಾನೆ. ಉಜ್ವಲವಾಗಿ ಜೀವಿಸುತ್ತಾನೆ.ಸಂತತಿಯಿಂದಲೂ ಪಶುಗಳಿಂದಲೂ ಕೀತಿ೯ಯಿಂದಲೂ ಮಹಾನ್ ಆಗುತ್ತಾನೆ.ಇದು ಈ ಉಪಾಸಕನ ವ್ರತವು -ಅವನು ಒಂದು ವಷ೯ದವರೆಗೆ ಮತ್ಸ್ಯಮಾಂಸಗಳನ್ನು ತಿನ್ನಬಾರದು ಅಥವಾ ಮತ್ಸ್ಯ ಮಾಂಸಗಳನ್ನು ತಿನ್ನಲೇಕೂಡದು.(ಪುಟ ೯7)
ಇಪ್ಪತ್ತನೆಯ ಖಂಡ(ರಾಜನ ಸಾಮ):
43)
1)ಅಗ್ನಿಯು -ಹಿಂಕಾರ
2)ವಾಯುವು -ಪ್ರಸ್ತಾವ
3)ಆದಿತ್ಯನು ಉದ್ಗೀಥ
4)ನಕ್ಷತ್ರಗಳು -ಪ್ರತಿಹಾರ
5)ಚಂದ್ರನು -ವನಿಧನ
ಈ ರಾಜನ-ಸಾಮವು ದೇವತೆಗಳಲ್ಲಿ ಪ್ರೋತವಾಗಿದೆ.(ಪುಟ ೯8)
44) ಯಾವನು ಹೀಗೆ ದೇವತೆಗಳಲ್ಲಿ ಪ್ರೋತವಾಗಿರುವ ರಾಜನ-ಸಾಮವನ್ನು ಅರಿತುಕೊಂಡಿರುವನೊ ಅವನು ಇದೇ ದೇವತೆಗಳ ಸಾಲೋಕ್ಯವನ್ನು ಅಥವಾ ಸಮಾನವಾದ ಋದ್ಧಿಯನ್ನು ಅಥವಾ ಸಾಯುಜ್ಯವನ್ನು ಹೊಂದುತ್ತಾನೆ. ಪೂಣಾ೯ಯುಸ್ಸನ್ನು ಹೊಂದುತ್ತಾನೆ. ಉಜ್ವಲವಾಗಿ ಜೀವಿಸುತ್ತಾನೆ.ಸಂತತಿಯಿಂದಲೂ ಪಶುಗಳಿಂದಲೂ ಕೀತಿ೯ಯಿಂದಲೂ ಮಹಾನ್ ಆಗುತ್ತಾನೆ.ಇದು ಈ ಉಪಾಸಕನ ವ್ರತವು -ಅವನು ಬ್ರಾಹ್ಮಣರನ್ನು ನಿಂದಿಸಕೂಡದು.(ಪುಟ ೯8)
ಇಪ್ಪತ್ತೊಂದನೆಯ ಖಂಡ(ಸವಾ೯ತ್ಮಕಸಾಮ):
45)
1) ತ್ರಯೀವಿದ್ಯೆಯು- ಹಿಂಕಾರ
2)ಈ ಮೂರು ಲೋಕಗಳು -ಪ್ರಸ್ತಾವ
3)ಅಗ್ನಿ ವಾಯು ಆದಿತ್ಯ ಎಂಬ ದೇವತೆಗಳು ಉದ್ಗೀಥ
4)ನಕ್ಷತ್ರಗಳು ಪಕ್ಷಿಗಳು ಕಿರಣಗಳು-ಪ್ರತಿಹಾರ
5)ಸಪ೯ಗಳು ಗಂಧವ೯ರು ಪಿತೃಗಳು-ಇವರು ನಿಧನ.
ಈ ಸಾಮಸಮುದಾಯವು ಎಲ್ಲ ಪದಾಥ೯ಗಳಲ್ಲಿಯೂ ಪ್ರೋತವಾಗಿದೆ.(ಪುಟ ೯೯)
46)ಯಾವನು ಹೀಗೆ ಸವ೯ವಸ್ತುಗಳಲ್ಲಿಯೂ ಪ್ರೋತವಾಗಿರುವ ಸಾಮಸಮುದಾಯವನ್ನು ಅರಿತುಕೊಂಡಿರುವನೊಅವನು ಸವೇ೯ಶ್ವರನಾಗುತ್ತಾನೆ.(ಪುಟ ಪುಟ 100)
47)'ಎಲ್ಲವೂ ಆಗಿರುವೆನು' ಎಂದು ಉಪಾಸಿಸಬೇಕು.ಅದು ವ್ರತವು.ಅದು ವ್ರತವ.ಯಾರು ಈ ಸವಾ೯ತ್ಮಕ ಸಾಮವನ್ನು ಅರಿತಿರುವನೊ ಅವನು ಎಲ್ಲವನ್ನೂ ಅರಿತಿರುವನು.ಸವ೯ಜ್ಞನಾಗುತ್ತಾನೆ.(ಪುಟ 101)
ಇಪ್ಪತ್ತೆರಡನೆಯ ಖಂಡ:
48)'ಪಶುಗಳಿಗೆ ಗಂಭೀರವೂ ಹಿತಕರವೂ ಆದ ಸಾಮದ ಗಾನವನ್ನು ಪ್ರಾಥಿ೯ಸುತ್ತೇನೆ'ಎಂದು (ಯಜಮಾನನು ಅಥವಾ ಉದ್ಗಾತೃವು ಹೇಳಿದ)ಉದ್ಗಾನವು ಅಗ್ನಿಯದು;ಅನಿರುಕ್ತವು ಪ್ರಜಾಪತಿಯದು,ನಿರುಕ್ತವು ಸೋಮನದು,ಮೃದುವೂ ಕೋಮಲವೂ ಆದುದು ವಾಯುವಿನದು,ಕೋಮಲವೂ ಪ್ರಯತ್ನಸಾಧ್ಯವೂ ಆದುದು ಇಂದ್ರನದು.ಕ್ರೌಂಚಪಕ್ಷಿಯ ಧ್ವನಿಗೆ ಸಮಾನವಾದುದು ಬೃಹಸ್ಪತಿಯು.ಒಡೆದ ಕಂಚಿನ ಧ್ವನಿಗೆ ಸನಾನವಾದುದು ವರುಣನದು.ಇವೆಲ್ಲವನ್ನೂ ಪ್ರಯೋಗಿಸಬೇಕು.ಆದರೆ ವರುಣ ಸಂಬಂಧೀ ಸ್ವರವನ್ನು ಮಾತ್ರ ತ್ಯಜಿಸಬೇಕು.(ಪುಟ 101)
4೯)'ದೇವತೆಗಳಿಗೆ ಅಮೃತವನ್ನು ಗಾನದ ದ್ವಾರಾ ಸಾಧಿಸುವೆನು' ಎಂದು ಯೋಚಿಸುತ್ತ ಗಾನಮಾಡಬೇಕು.
ಪಿತೃಗಳಿಗೆ -ಸ್ವಧೆಯನ್ನೂ
ಮನುಷ್ಯರಿಗೆ- ಆಸೆಯನ್ನೂ
ಪಶುಗಳಿಗೆ- ಹುಲ್ಲು ನೀರುಗಳನ್ನೂ
ಯಜಮಾನನಿಗೆ -ಸ್ವಗ೯ಲೋಕವನ್ನೂ
ನನಗೆ-ಅನ್ನವನ್ನೂ ಗಾನದ ಮೂಲಕ ಸಾಧಿಸುವೆನು.'ಎಂದು ಇವನ್ನು ಮನಸ್ಸಿನಿಂದ ಧ್ಯಾನಿಸುತ್ತ
ಜಾಗರೂಕನಾಗಿ ಸ್ತುತಿಸಬೇಕು.(ಪುಟ 102)
50)ಸ್ವರ,ಊಷ್ಮ,ವ್ಯಂಜನ ಇವುಗಳ ವಿಷಯಗಳಲ್ಲಿ ಸ್ತುತಿಸಬೇಕು.(ಪುಟ 102)
51)ಎಲ್ಲ ಸ್ವರಗಳೂ ಇಂದ್ರನ ಅವಯವಗಳು.
ಎಲ್ಲ ಊಷ್ಮಗಳೂ ಪ್ರಜಾಪತಿಯ ಅವಯವಗಳು
ಎಲ್ಲ ಸ್ಪಶ೯ಗಳೂ ಮೃತ್ಯುವಿನ ಅವಯವಗಳು
ಹೀಗೆ ಅರಿತಿರುವ ಉದ್ಗಾತೃವನ್ನು ಸ್ವರಗಳ ವಿಷಯದಲ್ಲಿ ಯಾರಾದರೂ ನಿಂದಿಸಿದರೆ 'ನಾನು ಇಂದ್ರನನ್ನು ಶರಣು ಹೊಕ್ಕಿರುತ್ತೇನೆ,ಅವನು ನಿನಗೆ ಉತ್ತರವನ್ನು ಕೊಡುವನು'ಎಂದು ಅವನಿಗೆ ಹೇಳಬೇಕು.(ಪುಟ 103)
52)ಹೀಗೆ ಅರಿತಿರುವುದ್ಗತೃವನ್ನು ಊಷ್ಮಗಳ ವಿಷಯದಲ್ಲಿ ಯರಾದರೂ ನಿಂದಿಸಿದರೆ 'ನಾನು ಪ್ರಜಾಪತಿಯನ್ನು ಶರಣು ಹೊಕ್ಕಿರುತೇನೆ.ಅವನು ನಿನ್ನನ್ನು ಪುಡಿ ಪುಡಿ ಮಾಡುವನು'ಂದು ಹೇಳಬೇಕು.(ಪುಟ104)
53)'ನಾನು ಇಂದ್ರನಿಗೆ ಬಲವನ್ನು ಕೊಡುತ್ತೇನೆ'ಎಂದು ಯೋಚಿಸಿ ಎಲ್ಲ ಸ್ವರಗಳನ್ನು ಘೋಷದಿಂದ ಕೂಡಿಯೂ ಬಲದಿಂದ ಕೂಡಿಯೂ ಉಚ್ಛರಿಸಬೇಕು.'ಪ್ರಜಾಪತಿಗೆ ನನ್ನನ್ನು ಕೊಡುತ್ತೇನೆ'ಎಂದು ಯೋಚಿಸಿ ಎಲ್ಲ ಊಷ್ಮಗಳನ್ನು ಒಳಗೆ ನುಂಗದೆ ,ಹೊರಗೆ ಹಾಕದೆ ಸ್ಪಷ್ಟವಾಗಿ ಉಚ್ಛರಿಸಬೇಕು.'ಮೃತ್ಯುವಿನಿಂದ ಬಿಡಿಸಿಕೊಳ್ಳುತ್ತೇನೆ' ಎಂದು ಯೋಚಿಸಿ ಎಲ್ಲ ಸ್ಪಶ೯ಗಳನ್ನು ಮೆಲ್ಲಗೆ ಒಂದಕ್ಕೊಂದನ್ನು ಕೂಡಿಸದೆ ಉಚ್ಛರಿಸಬೇಕು(ಪುಟ 104)
ಇಪ್ಪತ್ತಮೂರನೆಯ ಖಂಡ:
54)ಧಮ೯ ಸ್ಕಂದಗಳು ಮೂರು. ಯಜ್ಞ ಅಧ್ಯಯನ,ದಾನ-ಇವು ಮೊದಲನೆಯದು.ತಪಸ್ಸು ಎರಡನೆಯದು.ಯಾವಜ್ಜೀವವೂ ಆಚಾಯ೯ ಗೃಹದಲ್ಲಿ ವಾಸಿಸುತ್ತ ಅಲ್ಲಿ ದೇಹದಂಡನೆಯನ್ನು ಮಾಡಿಕೊಳ್ಳುತ್ತಿರುವ ಬ್ರಹ್ಮಚಾರಿಯು ಮೂರನೆಯವನು.ಇವರೆಲ್ಲರೂ ಪುಣ್ಯಲೋಕವನ್ನು ಪಡೆಯುತ್ತಾರೆ.ಬ್ರಹ್ಮದಲ್ಲಿ ಸಮ್ಯಕ್ ಸ್ಥಿತನಾಗಿರುವವನು ಅಮೃತತ್ವವನ್ನು ಹೊಂದುತ್ತಾನೆ.(ಪುಟ 105)
55)ಆಚಾಯ೯ಗೃಹದಲ್ಲಿ ಅಧ್ಯಯನಕ್ಕಾಗಿ ವಾಸಮಾಡುವ ಶಿಷ್ಯನಿಗೆ ಉಪಕುವಾ೯ಣ ಬ್ರಹ್ಮಚಾರಿಯೆಂದು ಹೆಸರು.(ಪುಟ106)
56)ಬ್ರಹ್ಮಸಂಸ್ಥ ಶಬ್ದವು ಸವ೯ಕಮ೯ಗಳನ್ನೂ ಅವುಗಳ ಸಾಧನಗಳನ್ನೂ ತ್ಯಜಿಸಿದ ಅತ್ಯಾಶ್ರಮಿಯಾದಪರಮ-ಹಂಸ-ಪರಿವ್ರಾಜಕನಿಗೆ ಮಾತ್ರ ಹೊಂದುತ್ತದೆ.(ಪುಟ 106)
57)ಹೀಗೆ ಚಿಂತಿಸಲ್ಪಟ್ಟ ತ್ರಯೀ ವಿದ್ಯೆಯಿಂದ ಭೂಃ ಭುವಃ ಸುವಃ ಸ್ವಃ ಎಂಬ ಈ ಅಕ್ಷರಗಳು ಹೊರಕ್ಕೆ ಬಂದವು(ಪುಟ106)
58)ಓಂಕಾರವೇ ಇದೆಲ್ಲವೂ ಆಗಿದೆ.(ಏವೇದಂಸವ೯ಮೋಂಕಾರ ಏವೇದಂ ಸವ೯ಂ)(ಪುಟ 107)
5೯)ಅಭಿಧೇಯವಾದ ಪರಮಾತ್ಮನಿಗೂ ಅಭಿದಾನವಾದ ಒಂಕಾರಕ್ಕೂ ಯಾವ ಭೇದವೂ ಇಲ್ಲ.(ಪುಟ 107)
60)ಪ್ರಾಸಂಗಿಕವಾದ ಓಂಕಾರ ಸ್ತುತಿಯನ್ನು ಬಿಟ್ಟು ಈಗ ಪುನಃ ಯಜ್ಞಾಂಗವಾದ ಸಾಮ ಹೋಮ ಮಂತ್ರ,ಉತ್ಥಾನ ಇವುಗಳನ್ನು ಉಪದೇಶಿಸಬೇಕೆಂದು ಶ್ರುತಿಯು ಹೇಳುತ್ತದೆ.(ಪುಟ 108)
61)ಆದರೆ 'ಯಾವನು ಯಾಗ ಮಾಡುತ್ತಾನೆಯೊ ಅವನು ಲೋಕಕ್ಕಾಗಿ ಯಾಗ ಮಡುತ್ತಾನೆ.(ಲೋಕಾಯ ವೈ ಯಜತೇ ಯೋ ಯಜತೇ'ಎಂದು ಶ್ರುತಿಯು ಹೇಳುತ್ತ್ದೆ.(ಪುಟ108)
62)ಯಜಮಾನನು ಗಾಹ೯ಪತ್ಯಾಗ್ನಿಯ ಹಿಂಭಗದಲ್ಲಿ ಉತ್ತರಮುಖನಾಗಿ ಕುಳಿತುಕೊಂಡು ಪ್ರಾತರನುವಾಕವನ್ನು ಪ್ರಾರಂಭಿಸುವುದಕ್ಕೆ ಮೊದಲು ವಾಸವ-ಸಾಮವನ್ನು ಹೀಗೆ ಹಾಡಬೇಕು.'ಹೇ ಅಗ್ನಿ,ಪೃಥ್ವಿ ಲೋಕದ್ವಾರವನ್ನು ತೆರೆ; ಪೃಥ್ವೀಲೋಕದ ಭೋಗಕ್ಕಾಗಿ ನಾವು ನಿನ್ನನ್ನು ಕಾಣುವಂತಾಗಲಿ.(ಪುಟ 10೯)
63)ವಾಸವ-ಸಾಮ ಎಂದರೆ ವಸುಗಳೆಂಬ ದೇವತೆಗಳುಳ್ಳ ಸಾಮವನ್ನು ಎಂದಥ೯(ಪುಟ 10೯)
64)ಪ್ರಾತರನುವಾಕ ಎಂದರೆ ಪ್ರಾತಃಕಾಲದಲ್ಲಿ ಉಚ್ಛರಿಸುವ ಶಸ್ತ್ರವೆಂಬ ಹೆಸರಿನ ಋಕ್ಕುಗಳು.(ಪುಟ 10೯)
65)ಯಜಮಾನನು ದಕ್ಷಿಣಾಗ್ನಿಯ ಹಿಂಭಾಗದಲ್ಲಿ ಕುಳಿತುಕೊಂಡು ಮಾಧ್ಯಂದಿನ-ಸವನವನ್ನು ಪ್ರಾರಂಭಿಸುವುದಕ್ಕೆ ಮೊದಲು ರೌದ್ರಸಾಮವನ್ನು ಹೀಗೆ ಹಾಡಬೇಕು.'ಹೇ ಅಗ್ನಿ,ಅಂತರಿಕ್ಷ ಲೋಕದ ದ್ವಾರವನ್ನು ತೆರೆ;ಅಂತರಿಕ್ಷಲೋಕದ ಭೋಗಕ್ಕಾಗಿ ನಾವು ನಿನ್ನನ್ನು ಕಾಣುವಂತಾಗಲಿ'.(ಪುಟ 111)
66)'ಅನಂತರ ಈ ಹೋಮದಿಂದ ಹೋಮ ಮಾಡಬೇಕು.ಅಂತರಿಕ್ಕ್ಷಲೋಕ ನಿವಾಸಿಯಾದ ವಾಯುವಿಗೆ ನಮಸ್ಕಾರ.ಯಜಮಾನನಾದ ನನಗೆ ಈ ಲೋಕವನ್ನು ಪಡೆಯಿಸು.ಇದಾ ಯಜಮಾನನ ಲೋಕ.ಇಲ್ಲಿ ಯಜ್ಞಮಾಡುತ್ತಿರುವವನು ನಾನು ಆಯಸ್ಸು ಮುಗಿದಮೇಲೆ ಅಂತರಿಕ್ಷಲೋಕಕ್ಕೆ ಹೋಗುವವನಾಗಿದ್ದೇನೆ.ಸ್ವಾಹಾ!' 'ಲೋಕದ್ವಾರದ ಅಗುಳಿಯನ್ನು ತೆಗೆ' ಎಂದು ಹೇಳುತ್ತ ಏಳಬೇಕುರುದ್ರರು ಮಾಧ್ಯಂದಿನ
ಸವನಕ್ಕೆ ಸಂಬಂಧಿಸಿದ ಲೋಕವನ್ನು ಕೊಡುತ್ತಾರೆ.(ಪುಟ 111)
67)ಯಜಮಾನನು ಅಹವನೀಯಾಗ್ನಿಯಲ್ಲಿ ಉತ್ತರಮುಖಿಯಾಗಿ ಕುಳಿತುಕೊಂಡು ತೃತೀಯ ಸವನವನ್ನು ಪ್ರಾರಂಭಿಸುವುದಕ್ಕೆ ಮೊದಲು ಆದಿತ್ಯದೇವತಾಕವಾದ ಸಾಮವನ್ನೂ ವೈಶ್ವದೇವತಾಕವಾದ ಸಾಮವನ್ನೂ ಹಾಡಬೇಕು;'ಹೇ ಅಗ್ನಿ ದ್ಯುಲೋಕದ ದ್ವಾರವನ್ನು ತೆರೆ;ದ್ಯುಲೋಕದ ಸ್ವಾರಾಜ್ಯಕ್ಕಾಗಿ ನಾವು ನಿನ್ನನ್ನು ಕಾಣುವಂತಾಗಲಿ '.ಇದು ಆದಿತ್ಯದೇವತಾಕವಾದ ಸಾಮ:ಹೇ ಅಗ್ನಿ,ದ್ಯುಲೋಕದ ದ್ವಾರವನ್ನು ತೆರೆ.
ದ್ಯುಲೋಕದ ಸಾಮ್ರಾಜ್ಯಕ್ಕಾಗಿ ನಾವು ನಿನ್ನನ್ನು ಕಾಣುವಂತಾಗಲಿ.'(ಪುಟ 112)
68)ಅನಂತರ ಈ ಮಂತ್ರದಿಂದ ಹೋಮಮಾಡಬೇಕು:ದ್ಯುಲೋಕನಿವಾಸಿಗಳಾದ ಆದಿತ್ಯರಿಗೂ ರ್ವಿವೇ ದೇವತೆಗಳಿಗೂ ನಮಸ್ಕಾರ.ಯಜಮಾನನಾದ ನನಗೆ ಈ ಲೋಕವನ್ನು ಪಡೆಯಿಸಿರಿ.ಇದೇ ಯಜಮಾನನ ಲೋಕ.ಇಲ್ಲಿ ಯಜ್ಞಮಾಡುತ್ತಿರುವ ನಾನು ಆಯಸ್ಸು ಮುಗಿದಮೇಲೆ ದ್ಯುಲೋಕಕ್ಕೆ ಹೋಗುವವನಾಗಿದ್ದೇನೆ.ಸ್ವಾಹಾ.'ಲೋಕದ್ವಾರದ ಅಗುಳಿಯನ್ನು ತೆಗೆಯಿರಿ ಎಂದು ಹೇಳುತ್ತ ಏಳಬೇಕು.(ಪುಟ 113)
6೯) ಯಜ್ಞದ ಯಾಥಾತ್ಮ್ಯವನ್ನು ಅರಿತುಕೊಂಡವನಿಗೆ ಅದರ ಅನುಷ್ಠಾನದ ಮೂಲಕ ಆಯಾ ಫಲವು ಉಂಟಾಗುತ್ತದೆ.(ಪುಟ 114)
,,,,,,,,,,,,,,,,,,,,,,,,ಎರಡನೆಯ ಅಧ್ಯಾಯ ಮುಕ್ತಾಯವಾಯಿತು,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
ಮೂರನೆಯ ಅಧ್ಯಾಯ(ಮಧುವಿದ್ಯೆ):
ಮೊದಲನೆಯ ಖಂಡ:
1)ಓಂ. ಆದಿತ್ಯನೇ ದೇವತೆಗಳ ಮಧು.ಈ ಮಧುವಿಗೆ ದ್ಯುಲೋಕವೇ ಅಡ್ಡತೊಲೆ.ಅಂತರಿಕ್ಷವೇ ಜೇನುಗೂಡು.ರಶ್ಮಿಗಳಲ್ಲಿರುವ ಪ್ರಕಾಶಮಾನವಾದ ಜಲಬಿಂದುಗಳೇ ಮೊಟ್ಟೆಗಳು.(ಪುಟ 115)
2)ಆದಿತ್ಯನು ದೇವತೆಗಳಿಗೆ ಜೇನುತುಪ್ಪದಂತೆ ಮೋದವನ್ನುಂಟು ಮಾಡುವುದರಿಂದ ಮಧು.
3)ಆದಿತ್ಯನ ಪೂವ೯ದಿಕ್ಕಿನ ರಶ್ಮಿಗಳು ಅವನ ಪೂವ೯ದ ಮಧುನಾಡಿಗಳು.
ಋಕ್ಕುಗಳೇ ಜೇನುಹುಳುಗಳು
ಋಗ್ವೇದದಲ್ಲಿ ವಿಹಿತವಾದ ಕಮ೯ವು ಪುಷ್ಪ.
ಆ ಕಮ೯ದಲ್ಲಿ ಪ್ರಯೋಗಿಸುವ ಸೋಮಾಜ್ಯ ಪಯೋರೂಪದ ನೀರೇ ಅಮೃತ.
ಜೇನುಹುಳುಗಳೆನಿಸಿದ ಆ ಈ ಋಕ್ಕುಗಳೇ ಪುಷ್ಪರೂಪವಾದ ಕಮ೯ವನ್ನು ಅಭಿತಪಿಸಿದುವು.
ಹಾಗೆ ಅಭಿತಪ್ತವಾದ ಕಮ೯ಗಳಿಂದ ಯಶಸ್ಸು ತೇಜಸ್ಸು ಇಂದ್ರಿಯ ವೀಯ೯ ಅನ್ನಾದ್ಯ ಎಂಬ ರಸವು ಉಂಟಾಯಿತು. (ಪುಟ 116)
4)ಕಮ೯ದಿಂದಲೇ ರಸವು ಉತ್ಪನ್ನವಾಗುತ್ತದೆ.(ಪುಟ 116)
5) ಆ ರಸವು ಹೊರಟು ಹೋಯಿತು.ಅದು ಅದಿತ್ಯನ ಪಾಶ್ವ೯ದಲ್ಲಿ ಆಶ್ರಯವನ್ನು ಪಡೆಯಿತು.ಆದಿತ್ಯನ ಯಾವ ಈ ಲೋಹಿತ ರೂಪವಿದೆಯೊ ಇದೇ ಅದು.(ಪುಟ 117)
ಎರಡನೆಯ ಖಂಡ:
6)ಆದಿತ್ಯನ ದಕ್ಷಿಣದಿಕ್ಕಿನ ರಶ್ಮಿಗಳು ಅವನ ದಕ್ಷಿಣದ ಮಧು ನಾಡಿಗಳು.ಯಜುಸ್ಸುಗಳೇಜೇನುಹುಳುಗಳು.ಯಜುವೇ೯ದದಲ್ಲಿ ವಿಹಿತವಾದ ಕಮ೯ವು ಪುಷ್ಪ,ಆ ನೀರೇ ಅಮೃತ.(ಪುಟ 117)
7)ಜೇನುಹುಳುಗಳೆನಿಸಿದ ಈ ಯಶಸ್ಸುಗಳೇ ಪುಷ್ಪರೂಪವಾದ ಕಮ೯ವನ್ನು ಅಭಿತಪಿಸಿದವು. ಹಗೆ ಅಭಿತಪ್ತವಾದ ಕಮ೯ದಿಂದ ಯಶಸ್ಸು ತೇಜಸ್ಸು ಇಂದ್ರಿಯ ವೀಯ೯ ಅನ್ನಾದ್ಯ ಎಂಬ ರಸವು ಉಂಟಾಯಿತು.(ಪುಟ 118)
8) ಆ ರಸವು ಹೊರಟು ಹೋಯಿತು.ಅದು ಆದಿತ್ಯನ ಪಾಶ್ವ೯ದಲ್ಲಿ ಆಶ್ರಯವನ್ನು ಪಡೆಯಿತು.ಆದಿತ್ಯನ ಯಾವ ಈ ಶುಕ್ಲ ರೂಪವಿದೆಯೊ ಇದೇ ಅದು.(ಪುಟ118)
ಮೂರನೆಯ ಖಂಡ:
೯)ಈ ಆದಿತ್ಯನ ಪಶ್ಚಿಮದಿಕ್ಕಿನ ರಶ್ಮಿಗಳು ಅವನ ಪಶ್ಚಿಮದ ಮಧುನಾಡಿಗಳು.ಸಾಮಗಳೇ ಜೇನುಹುಳುಗಳು.ಸಾಮವೇದದಲ್ಲಿ ವಿಹಿತವಾದ ಕಮ೯ವು ಪುಷ್ಪ,ಆ ನೀರೇ ಅಮೃತ(ಪುಟ 118)
10)ಜೇನುಹುಳುಗಳೆನಿಸಿದ ಈ ಸಾಮಗಳೇ ಪುಷ್ಪರೂಪವಾದ ಕಮ೯ವನ್ನು ಅಭಿತಪಿಸಿದವು.ಹಾಗೆ ಅಭಿತಪ್ತವಾದ ಕಮ೯ದಿಂದ ಯಶಸ್ಸು ಇಂದ್ರಿಯ ವೀಯ೯ ಅನ್ನಾದ್ಯ ಎಂಬ ರಸವು ಉಂಟಾಯಿತು.(ಪುಟ 11೯)
11)ಆ ರಸವು ಹೊರಟು ಹೋಯಿತು.ಅದು ಆದಿತ್ಯನ ಪಾಶ್ವ೯ದಲ್ಲಿ ಆಶ್ರಯವನ್ನು ಪಡೆಯಿತು.ಆದಿತ್ಯನ ಯಾವ ಈ ಕರಿಯ ರೂಪವಿದೆಯೊ ಇದೇ ಅದು.(ಪುಟ 11೯)
ನಾಲ್ಕನೆಯ ಖಂಡ:
12)ಇನ್ನು ಈ ಆದಿತ್ಯನ ಉತ್ತರ ದಿಕ್ಕಿನ ರಶ್ಮಿಗಳು.ಅವನ ಉತ್ತರದ ಮಧುನಾಡಿಗಳು.ಅಥಯ೯ ಅಂಗಿರಸ್ಸುಗಳೇ ಜೇನುಹುಳುಗಳು.ಇತಿಹಾಸ ಪುರಾಣಗಳು ಪುಷ್ಪ,ಆ ನೀರೇ ಅನೃತ.(ಪುಟ 120)
13)ಜೆನು ಹುಳುಗಳೆನಿಸಿದ ಆ ಈ ಅಥವ೯ ಅಂಗಿರಸ್ಸುಗಳೇ ಪುಷ್ಪರೂಪವಾದ ಇತಿಹಾಸ-ಪುರಾಣಗಳನ್ನು ಅಭಿತಪಿಸಿದವು.ಹಾಗೆ ಅಭಿತಪ್ತವಾದ ಅವುಗಳಿಂದ ಯಶಸ್ಸು ತೇಜಸ್ಸು ಇಂದ್ರಿಯ ವೀಯ೯ ಅನ್ನಾದ್ಯ ಎಂಬ ರಸವು ಉಂಟಾಯಿತು.(ಪುಟ120)
14) ಆ ರಸವು ಹೊರಟು ಹೋಯಿತು.ಅದು ಆದಿತ್ಯನ ಪಾಶ್ವ೯ದಲ್ಲಿ ಆಶ್ರಯವನ್ನು ಪಡೆಯಿತು.ಆದಿತ್ಯನ ಯಾವ ಈ ಅತ್ಯಂತ ಕರಿಯ ರೂಪವಿದೆಯೊ ಇದೇ ಅದು.(ಪುಟ 120)
ಐದನೆಯ ಖಂಡ:
15)ಆದಿತ್ಯನ ಊಧ್ವ೯ಭಾಗದ ರಶ್ಮಿಗಳು ಅವನ ಊಧ್ವ೯ದ ಮಧುನಾಡಿಗಳು. ಉಪನಿಷತ್ತಿನ ರಹಸ್ಯವಾದ ಆದೇಶಗಳೇ ಜೇನುಹುಳುಗಳು.ಪ್ರಣವವೇ ಪುಷ್ಪ.ಆ ನೀರೇ ಅಮೃತ.(ಪುಟ 121)
16)ಆ ಈ ರಹಸ್ಯವಾದ ಆದೇಶಗಳೇ ಪುಷ್ಪರೂಪವಾದ ಪ್ರಣವವನ್ನು ಅಭಿತಪಿಸಿದವು.ಹಾಗೆ ಅಭಿತಪ್ತವಾದ ಅದರಿಂದ ಯಶಸ್ಸು ತೇಜಸ್ಸು ಇಂದ್ರಿಯ ವೀಯ೯ ಅನ್ನಾದ್ಯ ಎಂಬ ರಸವು ಉಂಟಾಯಿತು.(ಪುಟ 121)
17)ಆ ರಸವು ಹೊರಟು ಹೋಯಿತು.ಅದು ಆದಿತ್ಯನ ಪ್ಆಶ್ವ೯ದಲ್ಲಿ ಆಶ್ರಯವನ್ನು ಪಡೆಯಿತು.ಆದಿತ್ಯಮ ಮಧ್ಯದಲ್ಲಿ ಯಾವ ಇದು ಕ್ಷೋಭಿಸುವಂತೆ ಕಾಣುವುದೊ ಅದೇ ಇದು.(ಪುಟ 122)
18)ಈ ಲೋಹಿತಾದಿ ವಣ೯ವಿಶೇಷಗಳು ರಸಗಳು.ಏಕೆಂದರೆ ವೇದಗಳು ಲೋಕಗಳ ರಸಗಳು ಮತ್ತು ಈ ವಣ೯ವಿಶೇಷಗಳು ಅವುಗಳಿಗೂ ರಸಗಳು.ಈ ಲೋಹಿತಾದಿ -ವಣ೯ವಿಶೇಷಗಳೇ ಅಮೃತಗಳ ಅಮೃತಗಳು.ಏಕೆಂದರೆ ವೇದಗಳು ಅಮೃತಗಳು ಮತ್ತು ಈ ವಣ೯ವಿಶೇಷಗಳು ಅವುಗಳಿಗೂ ಅಮೃತಗಳು.(ಪುಟ 122)
1೯) ವೇದಗಳು ನಿತ್ಯವಾಗಿರುವುದರಿಂದ ಅಮೃತಗಳು.(ಪುಟ 122)
ಆರನೆಯ ಖಂಡ:
20) ದೇವತೆಗಳು ತಿನ್ನುವುದೂ ಇಲ್ಲ,ಕುಡಿಯುವುದೂ ಇಲ್ಲ;ಅಮೃತವನ್ನು ನೋಡಿಯೇ ತೃಪ್ತರಾಗುತ್ತಾರೆ.(ಪುಟ 123)
21)ಧ್ಯೇಯವಾದ ಅಮೃತಗಳನ್ನು ಹೇಳಿದಮೇಲೆ ಈಗ ಅವುಗಳ ಉಪಜೀವಿಗಳಾದ ಗಣಗಳನ್ನು ಉಪಾಸಿಸಬೇಕೆಂದು ಶ್ರುತಿಯು ಹೇಳುತ್ತದೆ.(ಪುಟ 123)
22)ಭೋಗಕಾಲವು ಬರುವವರೆಗೆ ದೇವತೆಗಳು ಉದಾಸೀನರಾಗಿರುತ್ತಾರೆ..ಯಾವಾಗ ಅಮೃತದ ಭೋಗಕಾಲವು ಬರುವುದೊ ಆಗ ಅದರ ಭೋಗಕ್ಕಾಗಿ ಉತ್ಸಾಹಿಗಳಾಗುತ್ತಾರೆ..ಏಕೆಂದರೆ ಉತ್ಸಾಹ ರಹಿತರಿಗೆ ಭೋಗಪ್ರಾಪ್ತಿಯಿಲ್ಲ.(ಪುಟ 123)
23)ಯಾವನು ಈ ಅಮೃತವನ್ನು ಹೀಗೆ ಅರಿತುಕೊಂಡಿರುವನೊ ಅವನು ವಸುಗಳಲ್ಲಿಯೇ ಒಂದಾಗಿ ಅಗ್ನಿಯನ್ನು ಪ್ರಧಾನವಾಗಿ ಮಾಡಿಕೊಂಡು ಇದೇ ಅಮೃತವನ್ನು ನೋಡಿಯೇ ತೃಪ್ತನಾಗುತ್ತಾನೆ.ಅವನು ಇದೇ ರೂಪವನ್ನು ಪ್ರವೇಶಿಸುತ್ತಾನೆ.ಈ ರೂಪದಿಂದಲೇ ಮೇಲಕ್ಕೆ ಏಳುತ್ತಾನೆ.(ಪುಟ 124)
24)ದೇವತೆಗಳ ಧ್ಯೇಯ ಸ್ವರೂಪವನ್ನು ಹೇಳಿದಮೇಲೆಈಗ ಶ್ರುತಿಯು ಧ್ಯಾನವಿಧಿಯನ್ನು ತಿಳಿಸುತ್ತದೆ.(ಪುಟ 124)
25)ಆದಿತ್ಯನು ಎಲ್ಲಿಯವರೆಗೆ ಪೂವ೯ದಲ್ಲಿ ಉದಯಿಸುತ್ತಾನೋ ಮತ್ತು ಪಶ್ಚಿಮದಲ್ಲಿ ಅಸ್ತಮಿಸುತ್ತಾನೊ ಅಲ್ಲಿಯವರೆಗೆ ಉಪಾಸಕನು ವಸ್ತುಗಳ ಅಧಿಪತ್ಯವನ್ನೂ ಸ್ವಾರಾಜ್ಯವನ್ನೂ ಹೊಂದುತ್ತಾನೆ(ಪುಟ 125)
26)ಹೀಗೆ ಅರಿತಿರುವವನು ಅಧಿಪತ್ಯವನ್ನೂ ಮತ್ತು ಸಾಮ್ರಾಡ್- ಭಾವವನ್ನೂ ಪಡೆಯುತ್ತಾನೆ.(ಪುಟ 125)
27)ಚಂದ್ರಮಂಡಲದಲ್ಲಿರುವ ಕೇವಲ ಕಮಿ೯ಯು ಪರತಂತ್ರನಾಗಿ ದೇವತೆಗಳಿಗೆ ಅನ್ನವಾಗುತ್ತಾನೆ.(ಪುಟ 125)
ಏಳನೆಯ ಖಂಡ:
ಎಂಡನೆಯ ಖಂಡ
ಒಂಬತ್ತನೆಯ ಖಂಡ
ಹತ್ತನೆಯ ಖಂಡ
ಹನ್ನೊಂದನೆಯ ಖಂಡ:
28)ಹೀಗೆ ಮಧು ವಿದ್ಯೆಯನ್ನು ಹೇಳಿದ್ದಾಯಿತು.ಈಗ ಅದು ಕ್ರಮೇಣ ಮುಕ್ತಿ ಎಂಬ ಫಲದಲ್ಲಿ ಹೇಗೆ ಕೊನೆಗೊಳ್ಳುತ್ತದೆ ಎಂಬುದನ್ನು ಹೇಳಿದೆ.(ಪುಟ 132)
2೯)ಆದಿತ್ಯನು ತನ್ನ ಉದಯಾಸ್ತಗಳೆಂಬ ಕ್ರಿಯೆಗಳಿಂದ ಪ್ರಾಣಿಗಳಿಗೆ ಅವುಗಳ ಕಮ೯ಕ್ಕನುಸಾರವಾಗಿ ಫಲ ಭೋಗಗಳನ್ನು ಅನುಗ್ರಹಿಸುತ್ತಾನೆ.ಅವುಗಳ ಕಮ೯ ಫಲ ಭೋಗವು ಕ್ಷಯಿಸಿದ ಮೇಲೆ ಆ ಪ್ರಾಣಿ ಸಮೂಹಗಳನ್ನು ತನ್ನಲ್ಲಿಯೇ ಉಪಸಂಹರಿಸಿಕೊಳ್ಳುತ್ತಾನೆ.ಹೀಗೆ ಪ್ರಾಣಿಗಳನ್ನು ಅನುಗ್ರಹಿಸಿದ ಮೇಲೆ ಆದಿತ್ಯನು ತಾನು ಮಾಡುವ ಕ್ರಿಯೆಗಳನ್ನು ಅತಿಕ್ರಮಿಸಿ ಉದಯಾಸ್ತಗಳಿಲ್ಲದ ಏಕನೂ ಅದ್ವಿತೀಯನೂ ಅವಯವರಹಿತನೂ ಆಗಿ ತನ್ನ ಸ್ವರೂಪವಾದ ಬ್ರಹ್ಮದಲ್ಲಿಯೇ ನಿಲ್ಲುತ್ತಾನೆ.(ಪುಟ 132)
30)'ಆ ಬ್ರಹ್ಮಲೋಕದಲ್ಲಿ ಉದಯಾಸ್ತಗಳಿಂದ ಉಂಟಾಗುವ ಆಯುಃಕ್ಷಯವಿಲ್ಲ.ಅಲ್ಲಿ ಆದಿತ್ಯನು ಎಂದಿಗೂ ಅಸ್ತಮಿಸುವುದಿಲ್ಲ.ಎಂದಿಗೂ ಉದಯಿಸುವುದಿಲ್ಲ.ಓ ದೇವತೆಗಳೆ,ಈ ಸತ್ಯವಚನಗಳಿಂದ ನಾನು ಬ್ರಹ್ಮಸ್ವರೂಪಕ್ಕೆ ವಿರುದ್ಧವಾಗದಿರಲಿ.(ಪುಟ 133)
31)ಯಾವನು ಈ ಬ್ರಹ್ಮೋಪನಿಷತ್ತನ್ನು ಹೀಗೆ ಅರಿತುಕೊಂಡಿರುವನೊ ವನಿಗೆ ಆದಿತ್ಯನು ಉದಯಿಸುವುದೇ ಇಲ್ಲ.ಅಸ್ತಮಿಸುವುದೇ ಇಲ್ಲ.ಇವನಿಗೆ ಯಾವಾಗಲೂ ಹಗಲೇ ಆಗಿರುತ್ತದೆ.(ಪುಟ133)
32)ಹಿರಣ್ಯಗಭ೯ನು ಈ ಮಧುಜ್ಞಾನವನ್ನು ಪ್ರಜಾಪತಿಗೆ ಹೇಳಿದನು.ಪ್ರಜಾಪತಿಯು ಮನುವಿಗೂ ಮನುವು ಪ್ರಜೆಗಳಿಗೂ ಹೇಳಿದನು.ಮಧುಜ್ಞಾನವನ್ನು ಉದಧಾಲಕ ಅರುಣಿ ಎಂಬ ಜ್ಯೇಷ್ಟಪುತ್ರನಿಗೆ ಅವನ ತಂದೆಯು ಹೇಳಿದನು.(ಪುಟ 134)
33)ಈ ಮಧುಜ್ಞಾನವನ್ನು ತಂದೆಯು ಜ್ಯೇಷ್ಟಪುತ್ರನಿಗೆ ಅಥವಾ ಯೋಗ್ಯನಾದಶಿಷ್ಯನಿಗೆ ಹೇಳಬಹುದು.(ಪುಟ 134)
34)ಈ ಮಧುಜ್ಞಾನವನ್ನು ಬೇರೆ ಯಾರಿಗೂ ಉಪದೇಶಿಸಕೂಡದು.ಏಕೆಂದರೆ ಸಮುದ್ರ ಪರಿವೇಷ್ಟಿತವೂ ಧನದಿಂದ ಪೂಣ೯ವೂ ಆದ ಈ ಪೃಥ್ವಿಯನ್ನು ಯಾರಾದರೂ ಆಚಾಯ೯ನಿಗೆ ಕೊಟ್ಟರೆ ಅದಕ್ಕಿಂತಲೂ ಈ ವಿದ್ಯೆಯೇ ಶ್ರೇಷ್ಠವಾಗಿರುತ್ತದೆ.(ಪುಟ 134)
ಹನ್ನೆರಡನೆಯ ಖಂಡ (ಗಾಯತ್ರೀ ಉಪಾಸನೆ):
35)ಇಲ್ಲಿ ಏನೇನಿದೆಯೊ ಅದೆಲ್ಲವೂ ಗಾಯತ್ರಿಯೇ.ವಾಕ್ಕೇ ಗಾಯತ್ರಿ.ಏಕೆಂದರೆ ವಾಕ್ಕೇ ಪ್ರಾಣಿಗಳನ್ನೆಲ್ಲಾ ಹೆಸರಿಸುತ್ತದೆ.ಇಲ್ಲಿ ಗಾಯತ್ರಿ ದ್ವಾರದಿಂದ ಬ್ರಹ್ಮವನ್ನು ಉಪದೇಶಿಸುವುದಕ್ಕೆ ಅನೇಕ ಕಾರಣಗಳಿವೆ.
1) ದೇವತೆಗಳು ತ್ರಿಷ್ಟುಪ್,ಜಗತೀ ಮೊದಲಾದವುಗಳ ಮೂಲಕ ಸೋಮನನ್ನು ತರಲು ವಿಫಲರಾದಾಗ ಗಾಯತ್ರಿಯು ಅದನ್ನು ದ್ಯುಲೋಕದಿಂದ ತಂದಿತು.
2)ಜಗತೀ ತ್ರಿಷ್ಟುಪ್ ಈ ಛಂದಸ್ಸುಗಳು ತಮ್ಮ ಕೆಲವು ಅಕ್ಷರಗಳನ್ನು ಬಿಟ್ಟು ಬಂದಾಗ ಗಾಯತ್ರಿಯು ಅವುಗಳನ್ನು ತಂದಿತು.
3)ಇದು ಎಲ್ಲ ಸವನಗಳನ್ನೂ ವ್ಯಾಪಿಸಿಕೊಂಡಿದೆ.
4) ಇದಕ್ಕೆ ಯಜ್ಞದಲ್ಲಿ ಪ್ರಾಧಾನ್ಯವಿದೆ.
5) ಇದು ಬ್ರಾಹ್ಮಣನಿಗೆ ಸಾರವಾಗಿದೆ.(ಪುಟ 135)
36)ಈ ಗಾಯತ್ರಿಯೇ ಈ ಪೃಥ್ವಿ.ಏಕೆಂದರೆ ಈ ಪೃಥ್ವಿಯಲ್ಲಿಯೇ ಭೂತವೆಲ್ಲವೂ ಪ್ರತಿಷ್ಠಿತವಾಗಿದೆ ಮತ್ತು ಇದನ್ನು ಅತಿಕ್ರಮಿಸುವುದಿಲ್ಲ.(ಪುಟ 135)
37)ಆ ಪೃಥ್ವಿಯೇ ಪುರುಷನಲ್ಲಿರುವ ಈ ಶರೀರವು.ಏಕೆಂದರೆ ಇದರಲ್ಲಿ ಈ ಪ್ರಾಣಗಳು ಪ್ರತಿಷ್ಠಿತವಾಗಿವೆ ಮತ್ತು ಇದನ್ನು ಅತಿಕ್ರಮಿಸುವುದಿಲ್ಲ.(ಪುಟ 136)
38)ಪುರುಷನಲ್ಲಿರುವ ಈ ಶರೀರವೇ ಪುರುಷನಲ್ಲಿರುವ ಈ ಹೃದಯವು.ಏಕೆಂದರೆ ಇದರಲ್ಲಿ ಈ ಪ್ರಾಣಿಗಳು ಪ್ರತಿಷ್ಠಿತವಾಗಿವೆ ಮತ್ತು ಇದನ್ನು ಅತಿಕ್ರಮಿಸುವುದಿಲ್ಲ.(ಪುಟ 136)
3೯)ಈ ಗಾಯತ್ರಿಯು ನಾಲ್ಕು ಪಾದಗಳನ್ನು ಹೊಂದಿದೆ ಮತ್ತು ವಿಧವಗಿದೆ.ಈ ಗಾಯತ್ರೀ ಬ್ರಹ್ಮವು ಈಋಕ್ಕಿನಿಂದ (11.೯0.3) ಉಕ್ತವಾಗಿದೆ.(ಪುಟ ಪುಟ 137)
40)ನಾಲ್ಕು ಪಾದಗಳು ಎಂದರೆ ಆರು ಅಕ್ಷರಗಳುಳ್ಳ ನಾಲ್ಕು ಪಾದಗಳು(ಪುಟ 137)
42) ವಾಕ್ಕು ,ಭೂತ,ಪೃಥ್ವಿ,ಶರೀರ,ಹೃದಯ,ಪ್ರಾನೆಂಬ ರೂಪದಲ್ಲಿ ವಾಕ್ ಪ್ರಾಣಗಳು ಗಾಯತ್ರೀ -ಹೃದಯಗಳ ಸಂಬಂಧವನ್ನು ಭೂತದೊಂದಿಗೆ ತೋರಿಸಲು ಪ್ರಯೋಗಿಸಲ್ಪಟ್ಟಿದ್ದರೂ ಇಲ್ಲಿ ಅವು ಗಾಯತ್ರಿಯ ಪ್ರಕಾರಗಳೆಂದು ತಿಳಿಯಬೇಕು.(ಪುಟ 137)
43)ಇದರ ಮಹಿಮೆಯು ಅಷ್ಟು.ಆದರೆ ಪುರುಷನು ಅದಕ್ಕಿಂತಲೂ ದೊಡ್ಡವನು.ಈ ಜಗತ್ತೆಲ್ಲ ಇವನ ಒಂದು ಪಾದವಾಗಿದೆ.ಇವನ ಅಮೃತವಾದ ಮೂರು ಪಾದಗಳು ದ್ಯುಲೋಕದಲ್ಲಿವೆ.(ಪುಟ 137)
44)ಎಲ್ಲವನ್ನು ತುಂಬಿಕೊಂಡಿರುವುದರಿಂದಲೂ ಪುರ(ಶರೀರ) ದಲ್ಲಿ ಇರುವುದರಿಂದಲೂ ಪುರುಷನು.(ಪುಟ 138)
45) ಆ ಈ ಬ್ರಹ್ಮವೇ ಪುರುಷನ ಹೊರಗಿರುವ ಆಕಾಶವು.ಪುರುಷನ ಹೊರಗಿರುವ ಆಕಾಶವೇ ಪುರುಷನ ಒಳಗಿರುವ ಆಕಾಶವು.ಪುರುಷನ ಒಳಗಿರುವ ಆಕಾಶವೇ ಹೃದಯದಲ್ಲಿರುವ ಆಕಾಶವು.ಹೃದಯದಲ್ಲಿರುವ ಈ ಆಕಾಶವೇ ಪೂಣ೯ವೂ ಅವಿನಾಶಿಯೂ ಆದ ಶ್ರೀಯನ್ನು ಹೊಂದುತ್ತಾನೆ.(ಪುಟ138)
46)ಆಕಾಶವು ಒಂದೇ ಆಗಿದ್ದರೂ ಇದಕ್ಕೆ ಇಲ್ಲಿ ಮೂರು ಭೇದಗಳನ್ನು ಕಲ್ಪಿಸಿದೆ.
1) ಬಾಹ್ಯೇಂದ್ರಿಯ ವಿಷಯವಾದ ಜಾಗ್ರತ ಸ್ಥಾನದಲ್ಲಿರುವ ಭೌತಿಕವಾದ ಆಕಾಶ.
2) ಶರೀರದಲ್ಲಿರುವ ಸ್ವಪ್ನ ಸ್ಥಾನವಾದ ಆಕಾಶ
3)ಹಾದಾ೯ಕಾಶ:ಇಲ್ಲಿ ಯಾವಕಾಮವನ್ನೂ ಬಯಸುವುದಿಲ್ಲ.ಯಾವ ಸ್ವಪ್ನವನ್ನೂ ನೋಡುವುದಿಲ್ಲ.ಆದುದರಿಂದ ಸವ೯ ದುಃಖ ನಿವೃತ್ತಿ ರೂಪವಾದ್ದು ಸುಷಿಪ್ತಿ ಸ್ಥಾನದಲ್ಲಿರುವ ಆಕಾಶವು.(ಪುಟ 13೯)
47)ಹೃದಯದಲ್ಲಿ ಆಕಾಶವನ್ನು ಸಂಕೋಚಗೊಳಿಸಿರುವುದು ಚಿತ್ತ ಸಮಾಧಾನ ಸ್ಥಾನದ ಸ್ತುತಿಗಾಗಿ..ಹೃದಯದಲ್ಲಿ ಮಾತ್ರ ಆಕಾಶವಿದೆಯೆಂದು ತಿಳಿಯಬಾರದು.(ಪುಟ 13೯)
ಹದಿಮೂರನೆಯ ಖಂಡ:
4೯)ಆ ಈ ಹೃದಯಕ್ಕೆ ಐದು ದೇಹ ದ್ವಾರಗಳಿವೆ.
ಹೃದಯದ ಪೂವ೯ ದ್ವಾರವು ಪ್ರಾಣವು.ಅದು ಕಣ್ಣು,ಆದಿತ್ಯನು. ಆ
ಇದನ್ನು ತೇಜಸ್ಸು, ಅನ್ನಾದ್ಯ ಎಂದು ಉಪಾಸಿಸಬೇಕು.ಯಾವನು ಹೀಗೆ ಅರಿತುಕೊಂಡಿರುವನೊ ಅವನು ಅನ್ನಾದನೂ ತೇಜಸ್ವಿಯೂ ಆಗುವನು.(ಪುಟ 13೯)
50)ವಾಯುವು 'ಪ್ರಾಕ್'ಎಂದರೆ ಮುಂದುಗಡೆ 'ಅನಿತಿ'ಬಲಿಸುತ್ತಿರುವುದರಿಂದ ಪ್ರಾಣವೆನಿಸುತ್ತದೆ.(ಪುಟ 140)
51)ಆದಿತ್ಯನಿಂದ ಮಳೆಯೂ ,ಮಳೆಯಿಂದ ಅನ್ನವೂ,ಅನ್ನದಿಂದ ಪ್ರಾಣಿಗಳೂ ಉಂಟಾಗುತ್ತವೆ.ಆದುದರಿಂದ ಆದಿತ್ಯನು ಅನ್ನಕ್ಕೆ ಆದಿಯು.(ಪುಟ 140)
52)'ಆದಿತ್ಯನೇ ಹೊರಗಿನ ಪ್ರಾಣವು' (ಆದಿತ್ಯೋ ಹ ವೈ ಬಾಹ್ಯಪ್ರಾಣಃ) ಎಂದು ಶ್ರುತ್ಹಿಯು ಹೇಳುತ್ತದೆ.(ಪುಟ 140)
53)ಇನ್ನು ಈ ಹೃದಯದ ದಕ್ಷಿಣ ದ್ವಾರವು ವ್ಯಾನವು.ಅದು ಶ್ರವಣೇಂದ್ರಿಯವು.ಅದು ಚಂದ್ರನು.ಈ ವ್ಯಾನವನ್ನು ಶ್ರೀ,ಯಶಸ್ಸು ಎಂದು ಉಪಾಸಿಸಬೇಕು.ಯಾವನು ಹೀಗೆ ಅರಿತುಕೊಂಡಿರುವನೊ ಅವನು ಶ್ರೀಮಂತನೂ ಯಶಸ್ವಿಯೂ ಆಗುತ್ತಾನೆ.(ಪುಟ 141)
54)ಇನ್ನು ಹೃದಯದಲ್ಲಿರುವ ಪಶ್ಚಿಮ ದ್ವಾರವು ಅಪಾನವುಅದು ವಾಗಿಂದ್ರಿಯವು.ಅಗ್ನಿಯು.ಈ ಅಪಾನವನ್ನು ಬ್ರಹ್ಮವಚ೯ಸ್ಸು ,ಅನ್ನಾದ್ಯ ಎಂದು ಉಪಾಸಿಸಬೇಕು.ಯವನು ಹೀಗೆ ಅರಿತುಕೊಂಡಿರುವನೊ ಅವನು ಬ್ರಹ್ಮವಚ೯ಸ್ವಿಯೂ ಅನ್ನಾದನೂ ಆಗುತ್ತಾನೆ.(ಪುಟ 141)
55) ಶ್ರೋತ್ರದಿಂದ ದಿಕ್ಕುಗಳೂ ಚಂದ್ರನೂ ಸೃಷ್ಟವಾಗುತ್ತಾರೆ ಎಂದು ಶೃತಿಯು ಹೇಳುತ್ತದೆ.(ಶ್ರೋತ್ರೇಣ ಸೃಷಾ ದಿಶಶ್ಚ ಎಂದು (ಐ.ಅ.1.7)ಹೇಳುತ್ತದೆ.(ಪುಟ 141)
56)ಅಪಾನವೆಂದರೆ ಮೂತ್ರ-ಪುರೀಷಾದಿಗಳನ್ನು ವಾಯು ವಿಶೇಚ.(ಪುಟ 141)
57)ವಾಕ್ಕೇ ಅಪಾನವೆಂದು ಶ್ರುತಿಯು ಹೇಳುತ್ತದೆ.(5.21.2).ಆದುದರಿಂದ ಅಪಾನ ,ವಾಕ್ಕು,ಅಗ್ನಿ ಇವೆಲ್ಲ ಒಂದೇ ಆಗಿವೆ(ಪುಟ 141)
58) ಅಧ್ಯಯನ-ನಿಮಿತ್ತವಾದ ತೇಜಸ್ಸಿಗೆ ಬ್ರಹ್ಮವಚ೯ಸ್ ಎಂದು ಹೆಸರು.(ಪುಟ 141)
5೯)ಅನ್ನವನ್ನು ನುಂಗುವುದಕ್ಕೆ ಕಾರಣವಾದುದರಿಂದ ಅಪಾನವು ಅನ್ನಾದ.(ಪುಟ 141)
60) ಈ ಹೃದಯದ ಉತ್ತ್ರ ದ್ವಾರವು ಸಮಾನವು.ಅದು ಮನಸ್ಸು.ಅದು ಪಜ೯ನ್ಯನು.ಈ ಸಮಾನವನ್ನು ಕೀತಿ೯ ದೇಹಲಾವಣ್ಯ ಎಂದು ಉಪಾಸಿಸಬೇಕು.ಯವನು ಹೀಗೆ ಅರಿತುಕೊಂಡಿರುವನೊ ಅವನು ಕೀತಿ೯ವಂತನೂ ಕಾಂತಿವಂತನೂ ಆಗುತ್ತಾನೆ.(ಪುಟ 142)
62)ದೇಹದ ಊಧ್ವ೯ದ್ವಾರವು ಉದಾನ.ಅದು ವಾಯು .ಅದು ಆಕಾಶ.ಈ ಉದಾನವನ್ನು ಓಜಸ್ಸೆಂದೂ ಮಹಸ್ಸೆಂದೂ ಉಪಾಸಿಸಬೇಕು.ಯಾವನು ಹೀಗೆ ಅರಿತುಕೊಂಡಿರುವನೊ ಅವನು ಓಜಸ್ವಿಯೂ ಮಹಸ್ವಂತನೂ ಆಗುವನು.(ಪುಟ 142)
63)ಈ ಪಂಚ ಬ್ರಹ್ಮ ಪುರುಷರೇ ಸ್ವಗ೯ಲೋಕದ ದ್ವಾರಪಾಲಕರು.ಯರು ಹೀಗೆ ಅರಿತುಕೊಂಡಿರುವನೊಅವನ ಕುಲದಲ್ಲಿ ವೀರರು ಹುಟ್ಟುತ್ತಾರೆ.(ಪುಟ 146)
64) ಅರಿತುಕೊಳ್ಳುವುದು ಎಂದರೆ ಉಪಾಸನೆಯ ಮೂಲಕ ಇಂದ್ರಿಯಗಳನ್ನು ವಶಪಡಿಸಿಕೊಳ್ಳುವುದು.(ಪುಟ144).
65)ಚೈತನ್ಯಾತ್ಮಜ್ಯೋತಿಯು ನಾಮ ರೂಪಗಳನ್ನು ವಿಂಗಡಿಸಲು ಶರೀರವನ್ನು ಪ್ರವೇಶಿಸಿದೆ.ಈ ಶರೀರದ ಉಷ್ಣವು ಆತ್ಮಜ್ಯೋತಿಯ ಪ್ರತೀಕವಾಗಿದೆ.(ಪುಟ 145)
66).ಈ ಔಷ್ಣ್ಯವು ಪ್ರಾಣಿ ಜೀವನದ ಪ್ರತೀಕವಾಗಿದೆ.ಏಕೆಂದರೆ ಪ್ರಾಣಿಗಳು ಮೃತವಾದಾಗ ಅವುಗಳ ಶರೀರಗಳು ತಣ್ಣಗಗುತ್ತವೆ.(ಪುಟ 145)
67)ಮರಣ ಕಾಲದಲ್ಲಿ ತೇಜಸ್ಸು ಪರದೇವತೆಯಲ್ಲಿ ಸೇರುತ್ತದೆ.ತೇಜಃ ಪರಸ್ಯಾಂ ದೇವತಾಯಾಂಎಂದು ಶ್ರುತಿಯು (6.8.6)ರಲ್ಲಿ ಹೇಳಿದೆ.ಆದುದರಿಂದ ಈ ಒಔಷ್ಣ್ಯವು ಅತ್ಮಜ್ಯೋತಿಯ ಲಿಂಗವಾಗಿದೆ.(ಪುಟ 145)
ಹದಿನಾಲ್ಕನೆಯ ಖಂಡ:
68) ತಜ್ಜಲಾನ್ ಆಗಿರುವುದರಿಂದ ಇದೆಲ್ಲವೂ ಬ್ರಹ್ಮವೇ.ಆದುದರಿಂದ ಶಾಂತನಾಗಿ ಉಪಾಸಿಸಬೇಕು..ಇನ್ನು ಈ ಪುರುಷನು ಕ್ರತುಮಯನೇ.ಈ ಲೋಕದಲ್ಲಿ ಪುರುಷನು ಎಂಥ ಕ್ರತುವುಳ್ಳವನೊ ಇಲ್ಲಿಂದ ಹೋದಮೇಲೆ ಹಾಗೆಯೇ ಆಗುತ್ತಾನೆ. ಆದುದರಿಂದ ಅವನು ಕ್ರತುವನ್ನು ಮಾಡಬೇಕು.(ಪುಟ 146)
(ಕ್ರತು ಎಂದರೆ ನಿಶ್ಚಯ).
6೯) ಅನಂತಗುಣಗಳಿಂದ ಕೂಡಿರುವುದೂ ಅನಂತ ಶಕ್ತಿಯುಳ್ಳದ್ದೂ ಅನೇಕ ಭೇದಗಳಿಂದ ಉಪಾಸ್ಯವಾಗಿರುವುದೂ ಆದ ಬ್ರಹ್ಮವನ್ನು ವಿಶಿಷ್ಟಗುಣಶಕ್ತಿಯುಳ್ಳದ್ದೆಂದು ಉಪಸಿಸಬೇಕು ಎಂದು ಶುತಿಯು ಹೇಳುತ್ತದೆ.(ಪುಟ 146)
70)ಸವ೯ವೂ ಬ್ರಹ್ಮವೆಂಬುದು ಹೇಗೆ ಎಂಬ ಪ್ರಶ್ನೆಗೆ ಶ್ರುತಿಯು ಉತ್ತರ ಕೊಡುತ್ತದೆ.ಆ ಬ್ರಹ್ಮದಿಂದಲೇ ತೇಜಸ್ಸು,ನೀರು,ಅನ್ನ ಇವೇ ಮೊದಲಾದ ಕ್ರಮದಿಂದ ಎಲ್ಲವೂ ಹುಟ್ಟಿವೆ.ಆದುದರಿಂದ ತಜ್ಜಂ.ಹೀಗೆ ಎಲ್ಲವೂ ಕ್ರಮದಿಂದ ಬ್ರಹ್ಮದಲ್ಲಿಯೇ ಲಯವಾಗಿ ಅದರ ರೂಪದಿಂದ ಉಳಿದುಕೊಳ್ಳುತ್ತದೆ.ಆದುದರಿಂದ ತಲ್ಲಂ.ಇದೇ ರೀತಿ ಎಲ್ಲವೂ ಬ್ರಹ್ಮದಲ್ಲಿಯೇ ಪ್ರಾಣನ ಕ್ರಿಯೆಯನ್ನು ಮಾಡಿಕೊಂಡು ಇರುತ್ತವೆ.ಆದುದರಿಂದ ತದನಂ.ಹೀಗೆ ಜಗತ್ತು ಮೂರು ಕಾಲದಲ್ಲಿಯೂ ಬ್ರಹ್ಮದ ಸ್ವರೂಪದಲ್ಲಿಯೇ ಇರುವುದರಿಂದ ಅದು ಬ್ರಹ್ಮವೇ.('ತಜ್ಜಂ,ತಲ್ಲಂ ತದನಂ')(ಪುಟ 146)
71)ರಾಗದ್ವೇಷಗಳಿಲ್ಲದ ಸಂಯಮಿಯೂ ಆದ ಬ್ರಹ್ಮವನ್ನು ಮುಂದೆ ಹೇಳುವ ಮನೋನಯತ್ವಾದಿ ಗುಣಗಳಿಂದ ಉಪಾಸಿಸಬೇಕು.(ಪುಟ 146)
72)ಕ್ರತು-ಪದಕ್ಕೆ ನಿಶ್ಚಯ,ಅಧ್ಯವಸಾಯ ಎಂಬ ಅಥ೯ಗಳಿವೆ.ಇದು ಹೀಗೆಯೇ.ಬೇರೆ ರೀತಿಅಲ್ಲ ಎಂಬ ಅಚಲನಾದ ಪ್ರತ್ಯಯವೇ ಕ್ರತು.ಸಾಧಕನಿಗೆ ಅಧ್ಯವಸಾಯಾತ್ಮಕವಾದ ಬುದ್ಧಿಯೂ ಇರಬೇಕು.ಮತ್ತು ಉಪದೇಶದಲ್ಲಿ ಶ್ರದ್ಧೆಯೂ ಇರಬೇಕು ಎಂದಥ೯. (ಪುಟ 146)
73)ಸಾಧಕನು ಮರಣಕಾಲದಲ್ಲಿ ಯಾವ ಯಾವ ಭಾವವನ್ನು ಸ್ಮರಿಸಿಕೊಂಡು ದೇಹವನ್ನು ಬಿಡುವನೊ ಅವನು ಅದನ್ನೇ ಹೊಂದುವನು' ಎಂದು ಗೀತೆಯಲ್ಲಿ ಹೇಳಿದೆ.ಕ್ರತುವಿಗೆ ಅನುಗುಣವಾದ ಫಲವನ್ನು ಹೊಂದುತ್ತಾನೆ ಎಂದಥ೯.(8.7)
74)ಆ ಈಶ್ವರನು ಮನೋಮಯನು,ಪ್ರಾಣಶರೀರನು,ಭಾರೂಪನು,ಸತ್ಯಸಂಕಲ್ಪನು, ಆಕಾಶಾತ್ಮನು,ಸವ೯ಕಮ೯ನು,ಸವ೯ಕಾಮನು,ಸವ೯ಗಂಧನು,ಸವ೯ರಸನು ಸವ೯ವ್ಯಾಪಿಯು ಸವೇ೯ಂದ್ರಿಯ ರಹಿತನು,ಮತ್ತು ಸಂಭ್ರಮಹಹಿತನು.(ಪುಟ147)
75)ಮನೋಮಯನು-ಎಂದರೆ ಮನಸ್ಸೇ ಯಾವನ ಪ್ರವೃತ್ತಿ-ನಿವೃತ್ತಿಗಳಿಗೆ ಕಾರಣವೊಅವನು ಮನೋಮಯನು.(ಪುಟ 147)
76)ಜ್ಞಾನ ಕ್ರಿಯೆ ಎಂಬ ಶಕ್ತಿದ್ವಯದಿಂದ ಕೂಡಿರುವ ಲಿಂಗ ಶರೀರಕ್ಕೆ ಪ್ರಾಣವೆಂದು ಹೆಸರು.ಆ ಪ್ರಾಣವು ಯಾರಿಗೆ ಶರೀರವೊ ಅವನು ಪ್ರಾಣಶರೀರನು.(ಪುಟ 147)
77) ಈ ವಿಶೇಷಣವು ಜೀವನಿಗೆ ಅನ್ವಯಿಸಿದರೂ ಜೀವ- ಬ್ರಹ್ಮೈಕ್ಯ-ದೃಷ್ಟಿಯಿಂದ ಬ್ರಹ್ಮಕ್ಕೂ ಅನ್ವಯಿಸುತ್ತದೆ.(ಪುಟ147)
78)ಭಾ ಎಂದರೆ ಪ್ರಕಾಶ.ಚೈತನ್ಯ ಲಕ್ಷಣವಾದ ದೀಪ್ತಿಯು ಯಾವನಿಗೆ ರೂಪವೊ ಅವನು ಭಾರೂಪನು.(ಪುಟ 147)
75)ಆಕಾಶದಂತೆ ಸ್ವರೂಪವು ಯಾವನಿಗಿರುವುದೊ ಅವನು ಆಕಾಶಾತ್ಮನು.ಈಶ್ವರನು ಸವ೯ಗತನೂ ಸೂಕ್ಷ್ಮನೂ ರೂಪಾದಿರಹಿತನೂ ಅಗಿರುವುದರಿಂದ ಇವನಿಗೂ ಆಕಾಶಕ್ಕೂ ಹೋಲಿಕೆಯನ್ನು ಹೇಳಿದೆ.(ಪುಟ 147)
76)ಸವ೯ವೂ ಎಂದರೆ ವಿಶ್ವವೆಲ್ಲ ಈಶ್ವರನಿಂದ ಸೃಷ್ಟಿಸಲ್ಪಟ್ಟಿರುವುದರಿಂದ ಜಗತ್ತೆಲ್ಲ ಅವನ ಕಮ೯ವಾಗಿದೆ.ಆದುದರಿಂದ ಅವನು ಸವ೯ಕಮ೯ನು.'ಅವನು ಸವ೯ಕತೃ೯' 'ಸ ಹಿ ಸವ೯ಸ್ಯ ಕತಾ೯' (ಬೃ.ಉ.4.4.13)ಎಂದು ಶ್ರುತಿಯು ಹೇಳುತ್ತದೆ.(ಪುಟ 147)
77)ದೋಷರಹಿತವಾದ ಸವ೯ಕಾಮಗಳೂ ಇವನಿಗೆ ಇರುವುದರಿಂದ ಸವ೯ಕಾಮನು.'ಪ್ರಾಣಿಗಳಲ್ಲಿರುವ ಧಮ೯ಕ್ಕೆ ಅವಿರುದ್ಧವಾದ ಕಾಮನಾಗಿರುತ್ತೇನೆ.')'ಧಮೋ೯ ವಿರುದ್ಧೋ ಭೂತೇಷು ಕಾಮೋಸ್ಮಿ 'ಎಂದು ಗೀತೆಯಲ್ಲಿ(7.11) ಹೇಳಿದೆ.(ಪುqಟ 147).
78) ಸುಖಕರವಾದ ಎಲ್ಲ ಗಂಧಗಳೂ ಇವನಿಗೆ ಇರುವುದರಿಂದ ಇವನು ಸವ೯ಗಂಧನು.'ನಾನು ಪೃಥ್ವಿಯಲ್ಲಿರುವ ಒಳ್ಳೆಯ ಗಂಧವು'ಪುಣೋಗಂಧ ಪೃಥಿವ್ಯಾಂ'ಎಂದು ಗೀತೆಯು(7.೯) ಹೇಳುತ್ತದೆ.
(ಪುಟ 147)
7೯)ಹಿಗೆಯೇ ಸವ೯ರಸನು.
80)ಪ್ರಾಣಿ-ಪಾದಗಳಿಲ್ಲದೆ ವೇಗವುಳ್ಳವನೂ ,ವಸ್ತುಗಳನ್ನು ಗ್ರಹಿಸುವವನೂ ಆಗಿರುತ್ತಾನೆ.ಕಣ್ಣಿಲ್ಲದೆ ನೋಡುತ್ತಾನೆ.ಕಿವಿಯಿಲ್ಲದೆ ಕೇಳುತ್ತಾನೆ.'ಅಪಾಣಿಪಾದೋ ಜವನೋ ಗ್ರಹೀತಾ ಪಶ್ಯತ್ಯಚಕ್ಷುಃ ಸ ಶೃಣೋತ್ಯಕಣ೯ಃ'(ಶ್ವೇ.ಉ.3.1೯)ಎಂದು ಶ್ರುತಿಯು ಹೇಳುತ್ತದೆ.(ಪುಟ 148)
81) ಸಂಭ್ರಮರಹಿತ:ಅನಾಪ್ತ ಕಾಮನಿಗೆ ಇಲ್ಲದೆ ಇರುವುದನ್ನು ಪಡೆಯುವುದಕ್ಕೆ ಸಂಭ್ರಮವಾಗುತ್ತದೆ.ಆದರೆ ನಿತ್ಯ ತೃಪ್ತನಾದ ಈಶ್ವರನು ಆಪ್ತಕಾಮನಾಗಿರುವುದರಿಂದ ಸಂಭ್ರಮವಿಲ್ಲ.(ಪುಟ 188)
82)ಹೃದಯ ಪುಂಡಲೀಕದಲ್ಲಿರುವ ಇವನು ನನ್ನ ಆತ್ಮನು.ಇವನು ಬತ್ತದ ಕಾಳಿಗಿಂತಲೂ ಯವೆಯ ಕಾಳಿಗಿಂತಲೂ ಅಣುವಾಗಿರುವನು.ಹೃದಯ ಪುಂಡರೀಕದಲ್ಲಿರುವ ಈ ನನ್ನ ಅತ್ನು ಪೃಥ್ವಿಗಿಂತಲೂ ದೊಡ್ಡವನು,ದ್ಯುಲೋಕಕ್ಕಿಂತಲೂ ದೊಡ್ಡವನು.ಈ ಎಲ್ಲಾ ಲೋಕಗಳಿಗಿಂತಲೂ ದೊಡ್ಡವನು.(ಪುಟ 148)
88) ಆತ್ಮನು ಕೇವಲ ಅಣು ಪರಿಣಾಮದವನಲ್ಲ.ವಿಭುವೂ ಆಗಿದ್ದಾನೆ ಎಂಬುದನ್ನು ತಿಳಿಸಲು 'ಜ್ಯಾಯಾನ್'ಎಂದು ಹೇಳಿದೆ.(ಪುಟ 148)
8೯)ಪ್ರತ್ಯಗಾತ್ಮನಿಗೂ ಪರಮಾತ್ಮನಿಗೂ ಯಾವ ಭೇದವೂ ಇಲ್ಲ ಎಂಬುದನ್ನು ಹೇಳಿದೆ.(ಪುಟ 148)
೯0)ಈಶ್ರನು ಸವ೯ಕಮ೯ನು ಸವ೯ಕಾಮನು ಸವ೯ಗಂಧನು ಸವ೯ರಸನು,ಸವ೯ವ್ಯಾಪಿಯು,ಸವೇ೯ಂದ್ರಿಯ ರಹಿತನು ಮತ್ತು ಸಂಭ್ರಮರಹಿತನು.ಹೃದು ಪುಂಡರೀಕದಲ್ಲಿರುವ ಇವನು ನನ್ನ ಆತ್ಮನು.ಇವನೇ ಬ್ರಹ್ಮ.ಇಲ್ಲಿಂದ ಹೊರಟುಹೋಗಿ ಇವನನ್ನು ಹೊಂದುವವನಾಗಿರುತ್ತೇನೆ.ಯವನಿಗೆ ಇಂಥ ನಿಶ್ಚಯವಿರುವಿದೊ ,ಸಂಶಯವಿರುವುದಿಲ್ಲವೊ ಅವನು ಈಶ್ವರ ಭಾವವನ್ನು ಹೊಂದುತ್ತಾನೆ ಎಂದು ಶಾಂಡಿಲ್ಯನು ಹೇಳಿದನು,ಶಾಂಡಿಲ್ಯನು ಹೇಳಿದನು.(ಪುಟ14೯)
ಹದಿನೈದನೆಯ ಖಂಡ(ಕೋಶ ವಿಜ್ಞಾನ):
೯1)ಅಂತರಿಕ್ಷವೇ ಉದರವಾಗಿರುವ ಭೂಮಿಯೇ ತಳವಾಗಿರುವ ಕೋಶವು ನಾಶವಾಗುವುದಿಲ್ಲ.ಏಕೆಂದರೆ ದಿಕ್ಕುಗಳು ಅದರ ಕೋನಗಳು.ದ್ಯುಲೋಕವು ಇದರ ಮೇಲಿನ ಮುಚ್ಚಳವು.ಆ ಈ ಕೋಶವು ಬೊಕ್ಕಸವು.ಅದರಲ್ಲಿ ಇದೆಲ್ಲವೂ ಆಶ್ರಿತವಾಗಿದೆ.(ಪುಟ 150)
೯2) ಅನುಶಿಷ್ಟನಾದ ಪುತ್ರನನ್ನು "ಲೋಕಪ್ರಾಪ್ತಿಗೆ ಉಪಾಯನು"ಎಂದು ಹೇಳಲ್ಪಟ್ಟಿದೆ.(ತಸ್ಮಾತ್ ಪುತ್ರಂ ಅನುಶಿಷ್ಟಂ ಲೋಕ್ಯಂ ಆಹುಃ) ಎಂದು ಬೇರೊಂದು (ಬೃ.ಉ1.5.17)ಶ್ರುತಿಯು ಹೇಳುತ್ತದೆ.(ಪುಟ 150)
೯3) ಅನುಶಿಷ್ಟನೂ ದೀಘಾ೯ಯುವೂ ಆದ ಪುತ್ರನಿದ್ದರೆಅವನು ತನಗೂ ತನ್ನ ಪಿತೃಗಳಿಗೂ ಒಳ್ಳೆಯದನ್ನು ಮಾಡಲು ಶಕ್ತನಾಗುತ್ತಾನೆ.ಕೇವಲ ವೀರನು ಹುಟ್ಟಿದ ಮಾತ್ರಕ್ಕೇ ತಂದೆಯನ್ನು ಕಾಪಾಡಿದಂತಾಗುವುದಿಲ್ಲ.ಆದ್ದರಿಂದ ದೀಘಾ೯ಯುಸ್ಸಿಗೋಸ್ಕರ ಕೋಶ ವಿಜ್ಞಾನವು ಹೇಳಲ್ಪಟ್ಟಿದೆ.(ಪುಟ 150)
೯4)ಕೋಶದಂತಿರುವುದರಿಂದ ಕೋಶವು.(ಚೀಲ)(ಪುಟ 150)
೯5)ತ್ರೈಲೋಕ್ಯ ಸ್ವರೂಪವಾಗಿರುವುದರಿಂದ ನಾಶವಾಗುವುದಿಲ್ಲ.(ಪುಟ 150)
೯6)ಪ್ರಾಣಿಗಳ ಕಮ೯ಫಲವು (ಹಣವು) ಇದರಲ್ಲಿ ಇಡಲ್ಪಡುವುದರಿಂದ ಬೊಕ್ಕಸ ಅಥವಾ ವಸುಧಾನ ಎನಿಸಿದೆ.(ಬೊಕ್ಕಸ=ವಸುಧಾನ)(ಪುಟ 150)
೯7)ಆ ಕೋಶದ ಪೂವ೯ ದಿಕ್ಕಿಗೆ 'ಜುಹೂ' ಎಂದು ಹೆಸರು.
ದಕ್ಷಿಣದಿಕ್ಕಿಗೆ ಸಹಮಾನಾ ಎಂದು ಹೆಸರು
ಪಶ್ಚಿಮ ದಿಕ್ಕು ರಾಜ್ಞೀ ಎಂದು ಹೆಸರು.
ಉತ್ತರ ದಿಕ್ಕಿಗೆ ಸುಭೂತಾ ಎಂದು ಹೆಸರು.
ವಾಯು ಅವುಗಳ ಮಗು.(ಪುಟ 151)
೯8)ಯಾವನು ಹೀಗೆ ವಾಯುವು ಅವುಗಳ ಮಗು ಎಂದು ಅರಿತುಕೊಂಡಿರುವನೊ ಅವನು ಪುತ್ರ ರೋದನವನ್ನು ಮಾಡುವುದಿಲ್ಲ.(ಪುಟ151)
೯೯)ವಾಯುವು ದಿಕ್ಕುಗಳಲ್ಲಿ ಉತ್ಪನ್ನವಾಗುತ್ತದೆ.(ಪುಟ 151)
100) ಯಜ್ಞಕಮ೯ದಲ್ಲಿ ಧ್ರುವ,ಉಪಭೃತ್,ಜುಹೂ ಸ್ರುಕ್ ಎಂಬ ನಾಲ್ಕು ಚಮಸಗಳಿಂದ ಆಹುತಿಗಳನ್ನು ಕೊಡುತ್ತಾರೆ.(ಪುಟ 151)
101) ಅಧ್ವಯು೯ವು -ಜುಹೂ ಎಂಬ ದಕ್ಷಿಣ ಹಸ್ತದಲ್ಲಿರುವ ಚಮಸದಿಂದ ದ್ರವ್ಯವನ್ನು ಆಹುತಿ ಕೊಡುತ್ತಾನೆ.ಇವನು ಪೂವಾ೯ಭಿಮುಖವಾಗಿ ಹೋಮ ಮಾಡುವುದರಿಂದ ಪೂವ೯ದಿಕ್ಕು ಜುಹೂ ಎನಿಸಿದೆ.(ಪುಟ 151)
102) ದಕ್ಷಿಣ ದಿಕ್ಕಿನಲ್ಲಿರುವ ಯಮಪುರಿಯಲ್ಲಿ ಪ್ರಾಣಿಗಳು ಪಾಪಕಮ೯ದ ಫಲವನ್ನು ಸಹಿಸುವುದರಿಂದ 'ಸಹಮಾನಾ' ಎನಿಸಿದೆ.(ಪುಟ 151)
103)ಈ ದಿಕ್ಕು ರಾಜನಾದ ವರುಣನಿಂದ ಅಧಿಷ್ಠಿತವಾಗಿರುವುದರಿಂದ 'ರಾಜ್ಞೀ'ಎನಿಸಿದೆ.(ಪುಟ 151)
114) ಭೂತಿಯುಳ್ಳ ಈಶ್ವರ ಕುಬೇರ ಮೊದಲಾದವರು ಆಳುತ್ತಿರುವುದರಿಂದ ಉತ್ತರ ದಿಕ್ಕು ಸುಭೂತಾ ಎನಿಸಿದೆ.(ಪುಟ 151)
115) ಇವನಿಗಾಗಿ ಇವನಿಗಾಗಿ ಇವನಿಗಾಗಿ ಅವಿನಾಶಿಯಾದ ಕೋಶವನ್ನು ಶರಣು ಹೊಕ್ಕಿರುವೆನು.
ಇವನಿಗಾಗಿ ಇವನಿಗಾಗಿ ಇವನಿಗಾಗಿ ಪ್ರಾಣವನ್ನು ಶರಣು ಹೊಕ್ಕಿರುವೆನು.
ಇವನಿಗಾಗಿ ಇವನಿಗಾಗಿ ಇವನಿಗಾಗಿ ಭೂಃ ಎಂಬುದನ್ನು ಶರಣು ಹೊಕ್ಕಿರುವೆನು.
ಇವನಿಗಾಗಿ ಇವನಿಗಾಗಿ ಇವನಿಗಾಗಿ ಭುವಃ ಎಂಬುದನ್ನು ಶರಣು ಹೊಕ್ಕಿರುವೆನು.
ಇವನಿಗಾಗಿ ಇವನಿಗಾಗಿ ಇವನಿಗಾಗಿ ಸ್ವಃ ಎಂಬುದನ್ನು ಶರಣು ಹೊಕ್ಕಿರುವೆನು.
ಇಲ್ಲಿ ಅಮುನಾ ಎಂಬ ಸ್ಥಳದಲ್ಲಿ ಮಗನ ಹೆಸರನ್ನು ಹೇಳಬೇಕು.ಮಗನ ಆಯಸ್ಸಿಗಾಗಿ ಶರಣು ಹೊಕ್ಕಿರುವೆನು ಎಂದಥ೯.(ಪುಟ 152)
116) 'ಹೇಗೆ ಅರೆಕಾಲುಗಳು ಗುಂಬದಲ್ಲಿ ಸೇರಿಕೊಂಡಿವೆಯೊ ಹಾಗೆ ಈಪ್ರಾಣನಲ್ಲಿ ಎಲ್ಲವೂ ಸೇರಿಕೊಂಡಿದೆ' ಎಂದಥ೯.(ಪುಟ 152)
117)'ಭೂಃ ವನ್ನು ಶರಣು ಹೊಕ್ಕಿರುವೆನು' ಎಂದು ಹೇಳಿದಾಗ ಪೃಥ್ವಿ ಅಂತರಿಕ್ಷ ದ್ಯುಲೋಕ ಇವುಗಳಿಗೂ ಅನ್ವಯಿಸುತ್ತದೆ.(ಪುಟ 153)
118) 'ಭುವಃ ಎಂಬುದನ್ನು ಶರಣು ಹೊಕ್ಕಿರುವೆನು' ಎಂದು ಹೇಳಿದಾಗ ಅಗ್ನಿ ವಾಯು ಆದಿತ್ಯರಿಗೂ ಅನ್ವಯಿಸುತ್ತದೆ.(ಪುಟ 153)
11೯)'ಸ್ವಃ ಎಂಬುದನ್ನು ಶರಣು ಹೊಕ್ಕಿರುವೆನು'ಎಂದು ಹೇಳಿದಾಗ ಋಗವೇದ,ಯಜುವೇ೯ದ ಸಾಮವೇದ ಇವುಗಳಿಗೂ ಅನ್ವಯಿಸುತ್ತದೆ.(ಪುಟ 153)
ಹದಿನಾರನೆಯ ಖಂಡ:
120)ಪುರುಷನೇ ಯಜ್ಞ.ಅವನ ಮೊದಲನೆಯ ಇಪ್ಪತ್ತನಾಲ್ಕು ವಷ೯ಗಳು ಪ್ರಾತಃಸವನ.ಗಾಯತ್ರಿಗೆ ಇಪ್ಪತ್ತನಾಲ್ಕು ಅಕ್ಷರಗಳಿವೆ.ಪ್ರಾತಃ ಸವನವು ಗಾಯತ್ರ.ಈ ಪುರುಷಯಜ್ಞದ ಪ್ರಾತಃಸವನದಲ್ಲಿ ವಸುಗಳು ಅನುಗತರಾಗಿರುವರು.ಪ್ರಾಣಗಳೇ ವಸುಗಳು.ಏಕೆಂದರೆ ಇವು ಇದೆಲ್ಲವನ್ನೂ ವಾಸಮಾಡಿಸುತ್ತವೆ.(ಪುಟ 154)
121)ಪ್ರಾಣಗಳು ದೇಹದಲ್ಲಿ ವಾಸಮಾಡಿಕೊಂಡಿದ್ದರೆ ಇವೆಲ್ಲವೂ ವಾಸಿಸುತ್ತವೆ.ಆದುದರಿಂದ ತಾವು ವಾಸವಾಸಿಸುವುದರಿಂದಲೂ ,ಎಲ್ಲವನ್ನೂ ವಾಸಮಾಡುವುದರಿಂದಲೂ ಪ್ರಾಣಗಳು ವಸುಗಳು.(ಪುಟ 154)
122)ಮನುಷ್ಯನ ಇಡೀ ಜೀವನವನ್ನು ಯಜ್ಞವಾಗಿ ಕಲ್ಪಿಸಿರುವುದರಿಂದ ಮನುಷ್ಯನನ್ನೇ ಯಜ್ಞವೆಂದು ಕರೆದಿದೆ.ಯಜ್ಞದಲ್ಲಿ ಯಾವುದಾದರೂ ಲೋಪವುಂಟಾದರೆ ಅದು ಫಲರಹಿತವಾಗಿರುತ್ತದೆ.ಹಾಗೆಯೆ ರೋಗ ಅಥವಾ ಮೃತ್ಯು ಮನುಷ್ಯನ ಪೂಣಾ೯ಯುಸ್ಸನ್ನು ಲೋಪಗೊಳಿಸಿದರೆ ಮನುಷ್ಯನೆಂಬ ಯಜ್ಞವು ಅಸಂಪೂಣ೯ವಾಗುವುದು.(ಪುಟ155)
123)ಇನ್ನು ಅವನ ಮುಂದಿನ ನಲವತ್ತನಾಲ್ಕು ವಷ೯ಗಳು ಮಾಧ್ಯಂದಿನ ಸವನ.ತ್ರಿಷ್ಟುಪ್ಪಿಗೆ ನಲವತ್ತನಾಲ್ಕು ಅಕ್ಷರಗಳಿವೆ.ಮಾಧ್ಯಂದಿನ ಸವನವು ತ್ರಿಷ್ಟುಪ್ ಛಂದಸ್ಸಿಗೆ ಸೇರಿದೆ.ಈ ಪುರುಷ ಯಜ್ಞದ ಮಾಧ್ಯಂದಿನ ಸವನದಲ್ಲಿ ರುದ್ರರು ಅನುಗತರಾಗಿರುವರು.ಪ್ರಾಣಗಳೇ ರುದ್ರರು.ಏಕೆಂದರೆ ಇವು ಇವೆಲ್ಲವನ್ನೂ ರೋದಿಸುವಂತೆ ಮಾಡುತ್ತವೆ.(ಪುಟ 156)
124)ಅವನನ್ನು ಯಾವುದಾದರೂ ರೋಗವು ಈ ವಯಸ್ಸಿನಲ್ಲಿ ಉಪತಾಪಗೊಳಿಸಿದರೆ ಅವನು ಈ ಮಂತ್ರವನ್ನು ಹೇಳಬೇಕು.'ಪ್ರಾಣ ರುದ್ರರೆ ನನ್ನ ಈ ಮಾಧ್ಯಂದಿನ ಸವನವನ್ನು ತೃತೀಯಸವನಕ್ಕೆ ಸೇರಿಸಿರಿ.ಯಜ್ಞರೂಪವಾದ ನಾನು ಪ್ರಾಣರೂಪವಾದ ರುದ್ರರ ಮಧ್ಯದಲ್ಲಿ ನಾಶವಾಗದಿರಲಿ'ಅವನು ಆರೋಗದಿಂದ ಪಾರಾಗುತ್ತಾನೆ.ಆರೋಗ್ಯವಂತನಾಗುತ್ತಾನೆ.(ಪುಟ 156)
125)ಇನ್ನು ಅವನ ಕೊನೆಯ ನಲವತ್ತನಾಲ್ಕು ವಷ೯ಗಳು ಮಾಧ್ಯಂದಿನ ಸವನ.ಜಗತೀ ಛಂದಸ್ಸಿಗೆ ನಲವತ್ತೆಂಟು ಅಕ್ಷರಗಳಿವೆ.ತೃತೀಯಸವನವು ಜಗತೀ ಛಂದಸ್ಸಿಗೆ ಸೇರಿದೆ.ಈ ಪುರುಷಯಜ್ಞದ ತೃತೀಯ ಸವನದಲ್ಲಿ ಆದಿತ್ಯರು ಅನುಗತರಾಗಿರುವರು.ಪ್ರಾಣಗಳೇ ಆದಿತ್ಯರು.(ಪುಟ157)
126)ಅವನನ್ನು ಯಾವುದಾದರೂ ರೋಗವು ಈ ವಯಸ್ಸಿನಲ್ಲಿ ಉಪತಾಪಗೊಳಿಸಿದರೆ ಅವನು ಈ ಮಂತ್ರವನ್ನು ಹೇಳಬೇಕು.'ಪ್ರಾಣ ಆದಿತ್ಯ್ರರೆ ನನ್ನ ಈ ತೃತೀಯ ಸವನವನ್ನು ಆಯುಸ್ಸಿಗೆ ಸೇರಿಸಿರಿ.ಯಜ್ಞರೂಪವಾದ ನಾನು ಪ್ರಾಣರೂಪವಾದ ಆದಿತ್ಯರ ಮಧ್ಯದಲ್ಲಿ ನಾಶವಾಗದಿರಲಿ'ಅವನು ಆರೋಗದಿಂದ ಪಾರಾಗುತ್ತಾನೆ.ಆರೋಗ್ಯವಂತನಾಗುತ್ತಾನೆ.(ಪುಟ 157)
127)ಮಹಿದಾಸ ಐತರೇಯನು ಈ ಯಜ್ಞವನ್ನು ಅರಿತುಕೊಂಡು ರೋಗವನ್ನು ಕುರಿತು ಹೀಗೆ ಹೇಳಿದನು.'ಆ ನೀನು ನನ್ನನ್ನು ಹೀಗೇಕೆ ಉಪತಪಿಸುತ್ತೀಯೆ.?ಏಕೆಂದರೆ ನಾನು ಇದರಿಂದ ಸಾಯುವುದಿಲ್ಲ.ಅವನು ನೂರಾಹದಿನಾರು ವಷ೯ಗಳು ಬದುಕಿದ್ದನು.ಯಾವನು ಹೀಗೆ ಅರಿತುಕೊಂಡಿರುವನೊ ಅವನು ನೂರಾ ಹದಿನಾರು ವಷ೯ಗಳವರೆಗೆ ಜೀವಿಸಿರುತ್ತಾನೆ.(ಪುಟ 158)
ಹದಿನೇಳನೆಯ ಖಂಡ:
128) ಪುರುಷ ಯಜ್ಞವನ್ನು ಮಾಡುವವನಿಗೆ ಉಂಟಾಗುವ ಹಸಿವು,ನೀರಡಿಕೆ,ಆನಂದದ ಅಭಾವ-ಇವೆಲ್ಲ ಈ ಯಜ್ಞದ ದೀಕ್ಷೆಗಳು.(ಪುಟ 15೯)
12೯)ಇನ್ನು ಅವನ ತಪಸ್ಸು ,ದಾನ,ಋಜುತ್ವ,ಅಹಿಂಸೆ,ಸತ್ಯವಚನ,-ಇವನ ಯಜ್ಞದ ದಕ್ಷಿಣೆಗಳು.(ಪುಟ 160)
130)ಆದುದರಿಂದ ಜನರು 'ಸೋಷ್ಯತಿ,ಅಸೋಷ್ಟ'ಎಂದು ಹೇಳುವಾಗ ಅದು ಇದರ ಪುನರುತ್ಪಾದನೆಯೆ.ಮರಣವೇ ಇದರ ಅವಭೃತ.(ಪುಟ 160)
131)ಯಜ್ಞವು ಅವಭೃತದಲ್ಲಿ ಕೊನೆಗೊಳ್ಳುವಂತೆ ಪುರುಷಯಜ್ಞವು ಮೃತ್ಯುವಿನಲ್ಲಿ ಕೊನೆಗೊಳ್ಳತ್ತದೆ.( ಪುಟ 160)
132)ಘೋರ ಅಂಗ್ರಸನು ಈ ಯಜ್ಞದಶ೯ನವನ್ನು ದೇವಕೀ ಪುತ್ರನಾದ ಕೃಷ್ಣನಿಗೆ ಉಪದೇಶಿಸಿ ಹೇಳಿದನು:ಇಂಥ ಯಜ್ಞವಿದನು ಅಂತಕಾಲದಲ್ಲಿ ಮೂರು ಮಂತ್ರಗಳನ್ನು ಶರಣು ಹೋಗಬೇಕು.-" ನೀನು ಅಕ್ಷಯವಾಗಿದ್ದೀಯೆ,ನೀನು ಅಚ್ಯುತನಾಗಿದ್ದೀಯೆ,ನೀನು ಪ್ರಣ ಸ್ವರೂಪನಗಿದ್ದೀಯೆ."ಕೃಷ್ಣನು ಇದನ್ನು ಕೇಳಿ ಇತರ ವಿದ್ಯೆಯಲ್ಲಿ ನಿಸ್ಪøಹನಾದನು.ಈ ವಿಷಯದಲ್ಲಿ ಎರಡು ಋಕ್ಕುಗಳಿವೆ.(ಪುಟ 162)
133)ಯಾವುದು ಸ್ವಯಂಪ್ರಕಾಶವಾದ ಬ್ರಹ್ಮದಲ್ಲಿ ಪ್ರಕಾಶಿಸುವುದೊ ಆ ಪುರಾತನವೂ ಜಗತ್ಕಾರಣವೂಹಗಲಿನಂತೆ ಸವ೯ವ್ಯಾಪಿಯೂ ಆದ ಪರಮ ಜ್ಯೋತಿಯನ್ನು ಬ್ರಹ್ಮಜ್ಞನಿಗಳು ಎಲ್ಲೆಲ್ಲಿಯೂ ನೋಡುತ್ತಾರೆ.(ಪುಟಚ162)
ಹದಿನೆಂಟನೆಯ ಖಂಡ:
134) ಮನಸ್ಸನ್ನು ಬ್ರಹ್ಮವೆಂದು ಉಪಾಸಿಸಬೇಕು.ಇದು ಅಧ್ಯಾತ್ಮ.ಇನ್ನು ಅಧಿದೈವತ.ಆಕಾಶವನ್ನು ಬ್ರಹ್ಮವೆಂದು ಉಪಾಸಿಸಬೇಕು.ಹೀಗೆ ಅಧ್ಯಾತ್ಮ,ಅಧಿದೈವತ-ಎರಡೂ ಉಪದಿಷ್ಟವಾಗಿವೆ.(ಪುಟ 163)
135) ಈ ಬ್ರಹ್ಮಕ್ಕೆ ನಾಲ್ಕು ಪಾದಗಳಿವೆ.ವಾಗಿಂದ್ರಿಯವು ಒಂದು ಪಾದ.ಚಕ್ಷುರಿಂದ್ರಿಯವು ಒಂದು ಪಾದ.ಶ್ರೋತ್ರೇಂದ್ರಿಯವು ಒಂದು ಪಾದಿದು ಅಧ್ಯಾತ್ಮ.ಇನ್ನು ಅಧಿದೈವತ!ಅಗ್ನಿ ಒಂದು ಪಾದ,ವಾಯು ಒಂದುಪಾದ,ಆದಿತ್ಯ ಒಂದು ಪಾದ,ದಿಕ್ಕುಗಳು ಒಂದುಪಾದ,ಹೀಗೆ ಅಧ್ಯಾತ್ಮಧಿದೈವತ-ಇವೆರಡೂ ಉಪದಿಷ್ಟವಾಗಿವೆ.(ಪುಟ 164)
136)ವಾಗಿಂದ್ರಿಯವೇ ಮನೋಬ್ರಹ್ಮದ ನಾಲ್ಕನೆಯ ಪಾದ.ಅದು ಅಗ್ನಿಜ್ಯೋತಿಯಿಂದ ಪ್ರಕಾಶಿಸುತ್ತದೆ ಮತ್ತು ತಪಿಸುತ್ತದೆ.ಯಾವನು ಹೀಗೆ ಅರಿತುಕೊಂಡಿರುವನೊ ಅವನು ಕೀತಿ೯ಯಿಂದಲೂ ಯಶಸ್ಸಿನಿಂದಲೂ ಬ್ರಹ್ಮವಚ೯ಸ್ಸಿನಿಂದಲೂ ಪ್ರಕಾಶಿಸುತ್ತಾನೆ ಮತ್ತು ತಪಿಸುತ್ತಾನೆ.(ಪುಟ 165)
137) ಘ್ರಾಣೇಂದ್ರಿಯವೇ ಬ್ರಹ್ಮದ ನಾಲ್ಕನೆಯ ಪಾದ.ಅದು ವಾಯುಜ್ಯೋತಿಯಿಂದ ಪ್ರಕಾಶಿಸುತ್ತದೆ.ಯಾವನು ಹೀಗೆ ಅರಿತುಕೊಂಡಿರುವನೊ ಅವನು ಕೀತಿ೯ಯಿಂದಲೂ ಯಶಸ್ಸಿನಿಂದಲೂ ಬ್ರಹ್ಮವಚ೯ಸ್ಸಿನಿಂದಲೂ ಪ್ರಕಾಶಿಸುತ್ತಾನೆ ಮತ್ತು ತಪಿಸುತ್ತಾನೆ.(ಪುಟ 165)
138) ಚಕ್ಷುರಿಂದ್ರಿಯವೇ ಬ್ರಹ್ಮದ ನಾಲ್ಕನೆಯ ಪಾದ. ಅದು ಆದಿತ್ಯ ಜ್ಯೋತಿಯಿಂದ ಪ್ರಕಾಶಿಸುತ್ತದೆ. ಯಾವನು ಹೀಗೆ ಅರಿತುಕೊಂಡಿರುವನೊ ಅವನು ಕೀತಿ೯ಯಿಂದಲೂ ಯಶಸ್ಸಿನಿಂದಲೂ ಬ್ರಹ್ಮವಚ೯ಸ್ಸಿನಿಂದಲೂ ಪ್ರಕಾಶಿಸುತ್ತಾನೆ ಮತ್ತು ತಪಿಸುತ್ತಾನೆ.(ಪುಟ 165)
13೯)ಶ್ರೋತ್ರೇಂದ್ರಿಯವೇ ಬ್ರಹ್ಮದ ನಾಲ್ಕನೆಯಪಾದ.ಅದು ದಿಕ್ಕುಗಳ ಜ್ಯೋತಿಯಿಂದ ಶಬ್ದ ಗ್ರಹಣಕ್ಕಾಗಿ ಪ್ರಕಾಶಿಸುತ್ತದೆ.ಯಾವನು ಹೀಗೆ ಅರಿತುಕೊಂಡಿರುವನೊ ಅವನು ಕೀತಿ೯ಯಿಂದಲೂ ಯಶಸ್ಸಿನಿಂದಲೂ ಬ್ರಹ್ಮವಚ೯ಸ್ಸಿನಿಂದಲೂ ಪ್ರಕಾಶಿಸುತ್ತಾನೆ ಮತ್ತು ತಪಿಸುತ್ತಾನೆ.(ಪುಟ 166)
140)ಬ್ರಹ್ಮಪ್ರಾಪ್ತಿಯೆಂಬುದು ಅದೃಷ್ಟಫಲವಾಗಿದೆ(ಪುಟ166)
ಹತ್ತೊಂಬತ್ತನೆಯ ಖಂಡ:
142)ಆದಿತ್ಯನು ಬ್ರಹ್ಮದ ಪಾದವೆಂದು ಹೇಳಿದ್ದಾಯಿತು.ಈಗ ಆದಿತ್ಯನಲ್ಲಿ ಸಕಲ ಬ್ರಹ್ಮದೃಷ್ಟಿಯನ್ನು ವಿಧಿಸಲು ಈ ಭಾಗವನ್ನು ಆರಂಭಿಸಿದೆ.(ಪುಟ 167)
143)ಆ ಅಂಡಕಪಾಲಗಳ ರಜತಭಾಗವು ಪೃಥ್ವಿಯಾಯಿತು.ಸುವಣ೯ ಭಾಗವು ದ್ಯುಲೋಕವಾಯಿತು.ಜರಾಯುವು ಪವ೯ತಗಳಾಯಿತು.ಉಲ್ಬವು ಮೇಘಗಳಿಂದ ಕೂಡಿದ ಮಂಜಾಯಿತು.ಧಮನಿಗಳು ನದಿಗಳಾದವು.ಮೂತ್ರಕೋಶದಲ್ಲಿದ್ದ ಉದಕವು ಸಮುದ್ರವಾಯಿತು.(ಪುಟ 168)(ಜರಾಯು ಎಂದರೆ ಮೊಟ್ಟೆಯ ಮೇಲಿರುವ ಸ್ಥೂಲವಾದ ಪೊರೆ.ಉಲ್ಬ ಎಂದರೆ ಗಭ೯ದಮೇಲಿನ ಸೂಕ್ಷ್ಮವಾದ ಪೊರೆ.ಧಮನಿ ಎಂದರೆ ರಕ್ತನಾಳಗಳು)
144)ಇನ್ನು ಅದರಿಂದ ಯಾವುದು ಹುಟ್ಟಿತೋ ಅವನೇ ಆದಿತ್ಯನು.(ಪುಟ 168)
145)ಯಾವನು ಇದನ್ನು ಹೀಗೆ ಅರಿತುಕೊಂಡು ಉಪಾಸಿಸುವನೊಅವನು ಬ್ರಹ್ಮ ಸ್ವರೂಪವನ್ನು ಹೊಂದುತ್ತಾನೆ.ಅವನ ಬಳಿಗೆ ಶೀಘ್ರವಾಗಿ ಮಂಗಳಘೋಷಗಳು ಬರುವುವು ಮತ್ತು ಸುಖವನ್ನುಂಟು ಮಾಡುವುವು.ನಿಜವಾಗಿ ಸುಖವನ್ನುಂಟು ಮಾಡುವುವು.(ಪುಟ 16೯)
,,,,,,,,,,,,,,,,,,,,,,,,,,,,,,,,,,,,,,,,,,,,,,ಮೂರನೇ ಅಧ್ಯಾಯ ಮುಕ್ತಾಯವಾಯಿತು.,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
ಅಧ್ಯಾಯ ನಾಲ್ಕು:(ರೈಕ್ವ-ಜಾನುಶ್ರುತಿ ಸಂವಾದ)(ಸಂವಗ೯ ವಿದ್ಯೆ)
1)ಜಾನುಶ್ರುತಿ ಪೌತ್ರಾಯಣನು ಶ್ರದ್ಧಾದೇಯನೂ ಬಹುದಾಯಿಯೂ ಬಹುಪಾಕ್ಯನೂ ಆಗಿದ್ದನು.ಅವನು ಎಲ್ಲೆಲ್ಲಿಯೂ ಅನ್ನಸತ್ರಗಳನ್ನು ಕಟ್ಟಿಸಿದ್ದನು.(ಪುಟ170)
ಇಲ್ಲಿ ವಾಯು ಮತ್ತು ಪ್ರಾಣಗಳು ಸಾಕ್ಷಾತ್ ಬ್ರಹ್ಮವೆಂದೇ ಉಪಾಸಿಸಬೇಕೆಂದು ಹೇಳುತ್ತದೆ.ಶ್ರದ್ಧೆ ಮತ್ತು ಅನ್ನದಾನ ಇವು ವಿದ್ಯಾಪ್ರಾಪ್ತಿಗೆ ಸಾಧನಗಳೆಂಬುದನ್ನೂ ಇಲ್ಲಿ ತಿಳಿಸಿದೆ.(ಪುಟ 170)
ಒಂದುಸಲ ಹಂಸಗಳು ರಾತ್ರಿಕಾಲದಲ್ಲಿ ಮನೆಯಮೇಲೆ ಹಾರಿಹೋದವು.ಒಂದು ಹಂಸವು ಇನ್ನೊಂದು ಹಂಸವನ್ನು ಕುರಿತು ಹೇಳಿತು. ಜಾನುಶ್ರುತಿ ಪೌತ್ರಾಯಣನ ಜ್ಯೋತಿಯು ದ್ಯುಲೋಕದಂತೆ ಹರಡಿಕೊಂಡಿದೆ.ಅದನ್ನು ಸೋಂಕಬೇಡ.ಅದು ನಿನ್ನನ್ನು ಸುಡದಿರಲಿ.ಆಗ ಇನ್ನೊಂದು ಹಂಸವು ಹೇಳಿತು.
'ಜಾನುಶ್ರುತಿಯನ್ನು ಗಾಡಿಯೊಂದಿಗೆ ಇರ್ವ ರೈಕ್ವನಂತೆ -ಯಾವನೆಂದು ಹೇಳುತ್ತೀಯೆ?' 'ಗಾಡಿಯೊಂದಿಗೆ ಇರುವ ರೈಕ್ವನು ಎಂಥವನು?' (ಪುಟ 172)
'ಕೃತವನ್ನು ಜಯಿಸಿದವನಿಗೆ ಕೆಳಗಿನದಾಳದ ಸಂಖ್ಯೆಗಳು ಸೇರುವಂತೆ ಜನರು ಏನೇನು ಒಳ್ಳೆಯದನ್ನು ಮಾಡುವರೊ ಅವೆಲ್ಲವೂ ರೈಕ್ವನನ್ನು ಸೇರುತ್ತದೆ.ರೈಕ್ವನು ಯಾವುದನ್ನು ಅರಿತುಕೊಂಡಿರುವನೊ ಅದನ್ನು ಅರಿತುಕೊಂಡವನಿಗೂ ಹಾಗೇ.ಅವನನ್ನೇ ನಾನು ಹೀಗೆ ಹೇಳಿದ್ದು'ಎಂದು ಇನ್ನೊಂದು ಹಂಸವು ಹೇಳಿತು.(ಪುಟ172)
2) ನಾಲ್ಕನೆಯ ಸಂಖ್ಯೆಯನ್ನು ಹೊಂದಿರುವ ದಾಳದ ಭಾಗಕ್ಕೆ ಕೃತವೆಂದು ಹೆಸರು.(ಪುಟ172)
3)ಜಾನುಶ್ರುತಿಯು ರೈಕ್ವನನ್ನು ಹುಡುಕಿ ಕಂಡನು.ರೈಕ್ವನು ಗಾಡಿಯ ಕೆಳಗೆ ಕುಳಿತುಕೊಂಡು ಕಜ್ಜಿಯನ್ನು ಕೆರೆಯುತ್ತಿದ್ದನು.ಅವನು ರೈಕ್ವನಿಗೆ ಹೇಳಿದನು."ಇಗೋ ಆರುನೂರು ಗೋವುಗಳು ,ಇದು ಕಂಠಹಾರ,ಇದು ಅಶ್ವತರೀರಥ'.ಭಗವಂತನೆ ನೀನು ಯಾವದೇವತೆಯನ್ನು ಉಪಾಸಿಸುತ್ತಿರುವೆಯೋ ಆ ದೇವತೆಯನ್ನು ನನಗೆ ಉಪದೇಶಿಸು." ರೈಕ್ವನು ಅವುಗಳನ್ನು ಸ್ವೀಕರಿಸಲಿಲ್ಲ.(177)
4)ನಂತರ ಯಾವ ಯಾವ ಗ್ರಾಮಗಳಲ್ಲಿ ರೈಕ್ವನು ವಾಸವಾಗಿದ್ದೊ ಅವುಳೆಲ್ಲವನ್ನೂ ರಾಜನು ರೈಕ್ವನಿಗೆದಾನ ಮಾಡಿದನು.(ಪುಟ 178)
5) ವಿದ್ಯಾದಾನಕ್ಕೆ ಈ ಆರು ಜನ ತೀಥ೯ಗಳು ಅಥವಾ ದ್ವಾರಗಳು:
1)ಬ್ರಹ್ಮಚಾರಿ 2)ಧನದಾಯಿ 3)ಮೇಧಾವಿ 4)ಶ್ರೋತ್ರಿಯ, 5)ಪ್ರಿಯ 6)ವಿದ್ಯೆಗೆ ವಿದ್ಯೆಯನ್ನು ಕೊಡುವವನು. ಈ ಆರೂ ತೀಥ೯ಗಳು.(ಪುಟ178)
6)ಯವುದು ತನ್ನಲ್ಲಿ ಎಳೆದುಕೊಳ್ಳುವುದೊ ಅಥವಾ ಲಯಮಾಡಿಕೊಳ್ಳುವುದೊ ಅಥವಾ ಎಲ್ಲವನ್ನೂ ಒಳಗೊಳ್ಳುವುದೋ ಅದು ಸಂವಗ೯.ವಾಯುವೇ ಸಂವಗ೯ಗುಣದಿಂದ ಕೂಡಿರುವುದೆಂದು ತಿಳಿಯಬೇಕು. ಯಾವಾಗ ಅಗ್ನಿಯು ನಂದಿಹೋಗುತ್ತದೆಯೊ ಆಗ ವಾಯುವಿನಲ್ಲಿಯೇ ಲೀನವಗುತ್ತದೆ.ಯಾವಾಗ ಸೂಯ೯ನು ಅಸ್ತಮಿಸುತ್ತಾನೋ ಆಗ ಆಗ ವಾಯುವಿನಲ್ಲಿಯೇ ಲೀನವಾಗಿ ಹೋಗುತ್ತಾನೆ.ಚಂದ್ರನೂ ಕೂಡ ಅಸ್ತಮಿಸಿದಗ ವಾಯುವಿನಲ್ಲಿಯೇ ಲೀನವಾಗುತ್ತಾನೆ.(ಪುಟ 178)
7)ಪ್ರಲಯಕಾಲದಲ್ಲಿ ಸೂಯ೯ಚಂದ್ರರ ಸ್ವರೂಪವು ನಾಶವಾಗುವಾಗ ತೇಜೋರೂಪವನ್ನು ಪಡೆದು ಅವರು ವಾಯುವಿನಲ್ಲಿಯೇ ಲೀನವಾಗುತ್ತಾರೆ.(ಪುಟ17೯)
8)ಯಾವಾಗ ನೀರು ಒಣಗುತ್ತದೆಯೊ ಆಗ ವಾಯುವಿನಲ್ಲಿಯೇ ಲೀನವಾಗುತ್ತದೆ.ಏಕೆಂದರೆ ವಾಯುವೇ ಇವೆಲ್ಲವನ್ನು ಒಳಗುಳ್ಳುತ್ತದೆ.ಇದು ದೇವತಾ ವಿಷಯಕವಾದ ಸಂವಗ೯ದಶ೯ನ.(ಪುಟ17೯)
೯)ಇನ್ನು ಶರೀರವಿಷಯವಾದ ಸಂವಗ೯ದಶ೯ನ.ಮುಖ್ಯಪ್ರಾಣವೇ ಸಂವಗ೯.ಮನುಷ್ಯನು ಯಾವಾಗ ನಿದ್ರಿಸುವನೊ ಆಗ ವಾಕ್ಕು ಪ್ರಾಣದಲ್ಲಿಯೇ ಲೀನವಾಗಿ ಹೋಗುತ್ತದೆ.ಹೀಗೆಯೇ ಚಕ್ಷುಸ್ಸು,ಶ್ರೋತ್ರ ಮತ್ತು
ಮನಸ್ಸು ;ಏಕೆಂದರೆ ಪ್ರಾಣವೇ ಇವೆಲ್ಲವನ್ನೂ ಒಳಗೊಳ್ಳುತ್ತವೆ.(ಪುಟ17೯)
10)ಆ ಇವೆರಡೇ ಸಂವಗ೯ಗಳು :ದೇವತೆಗಳಲ್ಲಿ ವಾಯುವೇ,ಇಂದ್ರಿಯಗಳಲ್ಲಿ ಪ್ರಾಣವೇ.(ಪುಟ180)
11)ಒಂದು ಸಲ ಶೌನಕ, ಕಾಪೇಯ, ಅಭಿಪ್ರತಾರಿ ಕಾಕ್ಷಸೇನಿ-ಇವರು ಭೋಜನ ಮಡುತ್ತಿರುವಾಗ ಪಬ್ಬ ಬ್ರಹ್ಮಚಾರಿಯು ಭಿಕ್ಷೆ ಬೇಡಿದನು.ಅವರು ಅವನಿಗೆ ಏನನ್ನೂ ಕೊಡಲಿಲ್ಲ.
(ಶುನಕನ ಮಗನು ಶೌನಕ,ಕಪಿ-ಗೋತ್ರದವನು ಕಾಪೇಯ,ಕಕ್ಷಸೇನನ ಮಗನು ಕಾಕ್ಷಸೇನಿ. ಇವರೆಲ್ಲರೂ ಸಂವಗ೯ವಿದ್ಯಾ ಉಪಾಸಕರು)(ಪುಟ180)
12)ಬ್ರಹ್ಮಚಾರಿಯು ಹೀಗೆ ಹೇಳಿದನು.'ಒಬ್ಬನೇ ದೇವನಾದ ಪ್ರಜಾಪತಿಯು ನಾಲ್ವರು ಮಹಾತ್ಮರನ್ನು ನುಂಗಿದ್ದಾನೆ.ಓ ¥ಕಾಪೇಯ,ಓ ಅಭಿಪ್ರತಾರಿ,ಬಹುರೂಪದಿಂದ ಇರುತ್ತಿರುವ ಅವನನ್ನು ಮತ್ಯ೯ರು ನೋಡಲಾರರು.ಯಾವನಿಗೆ ಅನ್ನವು ಸೇರಿದೆಯೊ ಅವನಿಗೆ ಅನ್ನವನ್ನು ಕೊಡಲಿಲ್ಲ.(ಪುಟ 181)
13)'ನನಗೆ ಭಿಕ್ಷೆಯನ್ನು ಕೊಡದಿರುವುದು ಆ ದೇವನಿಗೆ ಕೊಡದಿದ್ದಂತೆಯೆ'(ಪುಟ 181)
14)ಅವರು ಅವನಿಗೆ ಅನ್ನವನ್ನು ಕೊಟ್ಟರು. ಶ್ರುತಿಯ ಪ್ರಕರ ಅನ್ನಕ್ಕೆ ವಿರಾಟ್ ಎಂಬ ಹೆಸರಿದೆ.(ವಿರಾಡನ್ನಂ)(ಪುಟ 183)
ನಾಲ್ಕನೆಯ ಖಂಡ(ಸತ್ಯಕಾಮಜಾಬಾಲನ ಕಥೆ):
15)ಅನ್ನ-ಅನ್ನಾದತ್ವ-ರೂಪದಿಂದ ಸಂಸ್ತುತವೂ ವಾಗಾದಿ-ಅಗ್ನ್ಯಾದಿರೂಪದಿಂದಿರುವುದೂ ಆದ ಜಗತ್ತನ್ನು ಕಾರಣರೂಪದಿಂದ ಏಕವೆಂದು ಭಾವಿಸಿ,ಹದಿನಾರು ಪ್ರಕಾರದಿಂದ ವಿಂಗಡಿಸಿ ಅದರಲ್ಲಿ ಬ್ರಹ್ಮದೃಷ್ಟಿಯನ್ನು ವಿಧಿಸಬೇಕೆಂದು ಈ ಭಾಗವು ಆರಂಭವಾಗಿದೆ.ಶ್ರದ್ಧಾ ತಪಸ್ಸುಗಳು ಬ್ರಹ್ಮೋಪಾಸನೆಗೆ ಅಂಗವೆಂಬುದನ್ನು ತಿಳಿಸಲು ಈ ಆಖ್ಯಾಯಿಕೆಯು ಬಂದಿದೆ(ಪುಟ 184)
16)ಜಾಬಾಲೆಯು ಸತ್ಯಕಾಮನನ್ನು ಕುರಿತು ಹೇಳಿದಳು.'ನೀನು ಯಾವಗೋತ್ರದವನೊ ನಾನು ಅರಿಯೆನು.
ನಾನು ಯೌವನದಲ್ಲಿ ಪರಿಚಾರಿಕೆಯಾಗಿದ್ಧಾಗ ನಿನ್ನನ್ನು ಪಡೆದೆನು.ನೀನು ಯಾವ ಗೋತ್ರದವನೊ ನಾನು ಅದನ್ನು ಅರಿಯೆನು.ನಾನು ಜಬಾಲಾ ಎಂಬ ಹೆಸರಿನವಳು.ನೀನು ಸತ್ಯಕಾಮನೆಂಬ ಹೆಸರಿನವನು.ಆದ್ದರಿಂದ ಸತ್ಯಕಾಮ ಜಾಬಾಲಾ ಎಂದು ಹೇಳಿಕೊ.'(ಪುಟ 184)
17)ಸತ್ಯಕಾಮನು ಗುರು ಗೌತಮ ಹಾರಿದ್ರುಮನ ಬಳಿ ಬಂದು ಹೇಳಿದನು."ಭಗವಂತನಾದ ತಮ್ಮಲ್ಲಿ ಬ್ರಹ್ಮಚಯ೯ವಾಸ ಮಾಡಬೇಕೆಂದಿರುವೆನು.
ಗೌತಮ:'ನೀನು ಯಾವ ಗೋತ್ರದವನು?'
ಸತ್ಯಕಾಮ: 'ನಾನು ಯಾವ ಗೋತ್ರದವನೊ ಅದನ್ನು ನಾನು ಅರಿಯೆನು.ನಾನು ತಾಯಿಯನ್ನು ಪ್ರಶ್ನಿಸಿದೆನು.ಅವಳು ಗೊತ್ತಿಲ್ಲವೆಂದು ಹೇಳಿದಳು.ನಾನು ಜಾಬಾಲಳ ಮಗನಾದ್ದರಿಂದ ಸತ್ಯಕಾಮ ಜಾಬಾಲನು'.
(ಪುಟ 186)
ಗೌತಮ:ಅಬ್ರಾಹ್ಮಣನು ಇದನ್ನು ಹೇಳಲಾರನು.ಸೋಮ್ಯ,ಸಮಿತ್ತನ್ನು ತೆಗೆದುಕೊಂಡು ಬಾ.ನಿನಗೆ ಉಪನಯನ ಮಾಡಿಸುವೆನು.ನೀನು ಸತ್ಯದಿಂದ ಚಲಿಸಲಿಲ್ಲ.(ಇಲ್ಲಿ ನಾವು ತಿಳಿದಿರುವಂತೆ ಜಾತಿಯು ಹುಟ್ಟಿನಿಂ ದ ನಿಧ೯ರವಾಗುತ್ತಿರಲಿಲ್ಲ ಎಂಬುದು ತಿಳಿಯುತ್ತದೆ.)(ಪುಟ 186)
18) ಗೌತಮನು ಸತ್ಯಕಾಮನಿಗೆ ಕೃಶವೂ ದುಬ೯ಲವೂ ಆದ ನಾನೂರು ಗೋವುಗಳನ್ನು ಕೊಟ್ಟು ಹೀಗೆ ಹೇಳಿದನು:'ಸೋಮ್ಯ ,ನೀನು ಇವುಗಳನ್ನು ಹಿಂಬಾಲಿಸು'.(ಪುಟ 186)
1೯) ಸತ್ಯಕಾಮನು 'ಸಹಸ್ರವಾಗದೆ ನಾನು ಹಿಂತಿರುಗುವುದಿಲ್ಲ'ವೆಂದು ತನಗೆ ತಾನೇ ಹೇಳಿಕೊಂಡನು.ಅವನು ಅನೇಕ ವಷ೯ಗಳವರೆಗೆ ಕಾಡಿನಲ್ಲಿ ವಾಸಮಾಡಿದನು. ಅವು ಸರಸ್ರವಾದಾಗ-(ಪುಟ 186)
ಐದನೆಯ ಖಂಡ:
20) ಮಂದೆಯಲ್ಲಿದ್ದ ಒಂದು ಹೋರಿಯು ಇವನನ್ನು ಕುರಿತು ಹೇಳಿತು."ಸತ್ಯಕಾಮ,ನಾವು ಸಾವಿರವಾಗಿದ್ಧೇವೆಆಚಾಯ೯ರ ಮನೆಗೆ ನಮ್ಮನ್ನು ಸೇರಿಸು.'.
(ಶ್ರದ್ಧಾ ತಪಸ್ಸುಗಳಿಂದ ಸಿದ್ಧವಾಗಿದ್ದ ಸತ್ಯಕಾಮನಲ್ಲಿ ದಿಕ್ಸಂಬಂಧವಾದ ವಾಯು ದೇವತೆಯು ತೃಪ್ತವಾಗಿ ಅವನನ್ನು ಅನುಗ್ರಹಿಸುವುದಕ್ಕೆ ಹೋರಿಯನ್ನು ಪ್ರವೇಶಿಸಿ ಋಷಭ ಭಾವವನ್ನು ಪಡೆಯಿತು.(ಪುಟ 187)
21)ನಿನಗೆ ಬ್ರಹ್ಮದ ಒಂದು ಪಾದವನ್ನು ಉಪದೇಶಿಸುತ್ತೇನೆ.'ಪೂವ೯ದಿಕ್ಕು ಒಂದುಕಲೆ,ಪಶ್ಚಿಮದಿಕ್ಕು ಒಂದುಕಲೆ.ದಕ್ಷಿಣ ದಿಕ್ಕು ಒಂದು ಕಲೆ,ಉತ್ತರದಿಕ್ಕು ಒಂದು ಕಲೆ. ಇದೇ 'ಪ್ರಕಾಶವಾನ್' ಎಂಬ ನಾಲ್ಕು ಕಲೆಗಳುಳ್ಳ ಪಾದವು.(ಪುಟ100)
22) ಯಾವನು ಹೀಗೆ ಬ್ರಹ್ಮದ ಈ ಚತುಷ್ಕಲ ಪಾದವನ್ನು ಹೀಗೆ ಉಪಾಸಿಸುವನೊ ಅವನು ಈ ಲೋಕದಲ್ಲಿ ಪ್ರಖ್ಯಾತನಾಗುವನು.(ಪುಟ 188)
ಐದು,ಆರು ಏಳು ಎಂಟನೆಯ ಖಂಡ(ಸಾರಾಂಶ):
23)ಸಾರಾಂಶ:(ಷೋಡಶಕಲವಿದ್ಯೆ,ಹದಿನಾರು ಕಲೆಗಳು)
10 ವಾಯುದೇವತೆ-ಹೋರಿಯ ರೂಪ- ಪೂವ೯,ಪಶ್ಚಿಮ,ದಕ್ಷಿಣ,ಉತ್ತರ-'ಪ್ರಕಾಶವಾನ್'
2) ಅಗ್ನಿದೇವತೆ-ಅಗ್ನಿ ರೂಪ-ಪೃಥ್ವಿ,ಅಂತರಿಕ್ಷ,ದ್ಯುಲೋಕ,ಸಮುದ್ರ ಇವು ನಾಲ್ಕು ಕಲೆಗಳು.-'ಅನಂತವಾನ್'
3) ಆದಿತ್ಯ-ಹಂಸದ ರೂಪ-ಅಗ್ನಿ,ಸೂಯ೯,ಚಂದ್ರ,ವಿದ್ಯುತ್ತು ನಾಲ್ಕು ಕಲೆಗಳು-'ಜ್ಯೋತಿಷ್ಮಾನ್'
4)ಪ್ರಾಣ - ಮದ್ಗು(ಇದೊಂದು ಪಕ್ಷಿ)-ಪ್ರಾಣ,ಚಕ್ಷುಸ್ಸು,ಶ್ರೋತ,್ರಮನಸ್ಸು ಎಂಬ ನಾಲ್ಕು ಕಲೆಗಳು.-ಇದೇ ಬ್ರಹ್ಮದ 'ಆಯತನವಾನ್' ಎಂಬ ಪಾದ.(ಪುಟ1೯4)
ಒಂಬತ್ತನೆಯ ಖಂಡ:
24) ಸತ್ಯಕಾಮನು ಆಚಾಯ೯ ಗೃಹವನ್ನು ಸೇರಿದನು.(ಪುಟ 1೯5)
25)ಬ್ರಹ್ಮಜ್ಞಾನಿಯು ಪ್ರಸನ್ನವಾದ ಮುಖವುಳ್ಳವನೂ ನಗುಮುಖದವನೂ ವಿಶ್ಚಿಂತನೂ ಕೃಥಾಥ೯ನೂ ಆಗಿರುತ್ತಾನೆ.(ಪುಟ 1೯5)
26) ದೇವತೆಗಳು ಉಪದೇಶಿಸಿದ್ದರೂ ಆಚಾಯ೯ನು ಹೇಳಿಕೊಟ್ಟ ಮೇಲೆಯೇ ಅದಕ್ಕೆ ಬೆಲೆಯಿರುವುದು.ಆಚಾಯ೯ನು ಸತ್ಯಕಾಮನಿಗೆ ಇದನ್ನೇ ಉಪದೇಶಿಸಿದನು.(ಪುಟ 1೯5)
ಹತ್ತನೆಯ ಖಂಡ:
27) ಒಂದಾನೊಂದು ಕಾಲದಲ್ಲಿ ಉಪಕೋಸಲ ಕಾಮಲಾಯನನು ಸತ್ಯಕಾಮ ಜಾಬಾಲನ ಮನೆಯಲ್ಲಿ ಬ್ರಹ್ಮಚಯ೯ವಾಸ ಮಾಡಿದನು.ಉಪಕೋಸಲನು ಸತ್ಯಕಾಮನ ಅಗ್ನಿಗಳನ್ನು ಹನ್ನೆರಡು ವಷ೯ ನೋಡಿಕೊಂಡನು.ಸತ್ಯಕಾಮನು ಇತರ ಶಿಷ್ಯರಿಗೆ ಅಧ್ಯಯನವನ್ನು ಮಾಡಿಸಿ ಕಳುಹಿಸಿಕೊಟ್ಟನು.ಆದರೆ ಉಪಕೋಸಲನನ್ನು ಮಾತ್ರ ಕಳುಹಿಸಿಕೊಡಲಿಲ್ಲ.(ಪುಟ 1೯7)
28) ಆಗ ಅಗ್ನಿಗಳು ತಪೋನಿಷ್ಠನಾದ ಬ್ರಹ್ಮಚಾರಿಯು ನಮಗೆ ಚೆನ್ನಾಗಿ ಸೇವೆ ಮಾಡಿದ್ದಾನೆ.ಇವನಿಗೆ ಉಪದೇಶಿಸೋಣ ಎಂದು ಈ ರೀತಿ ಉಪದೇಶಿಸಿದವು.'ಪ್ರಾಣವು ಬ್ರಹ್ಮ,ಸುಖವು ಬ್ರಹ್ಮ,ಆಕಾಶವು ಬ್ರಹ್ಮ,'ಎಂದು ಅಗ್ನಿಗಳು ಅವನಿಗೆ ಉಪದೇಶಿಸಿದವು.(ಪುಟ 1೯8)
2೯)ಅಗ್ನಿಗಳು 'ಯಾವುದು ಕಮ್ ಎಂಬುದೊ ಅದೇ ಖಮ್,ಯಾವುದು ಖಮ್ ಎಂಬುದೊ ಅದೇ ಕಮ್'ಎಂದು ಪ್ರಾಣವನ್ನೂ ಅದರ ಆಕಾಶವನ್ನೂ ಅವನಿಗೆ ಉಪದೇಶಿಸಿದುವು.(ಪುಟ 1೯೯)
30)ಕ ಎಂದರೆ ಸುಖ,ಖ ಎಂದರೆ ಆಕಾಶ.ಈ ಎರಡು ಪದಗಳು ಒಂದಕ್ಕೊಂದು ವಿಶೇಷಣವಾಗಿ ಬ್ರಹ್ಮಾನಂದವೆಂಬ ಒಂದೇ ಅಥ೯ವನ್ನು ಕೊಡುತ್ತವೆ.೯ಪುಟ 1೯೯)
ಹನ್ನೊಂದನೆಯ ಖಂಡ:
31)ಅನಂತರ ಗಾಹ೯ಪತ್ಯಾಗ್ನಿಯು ಉಪಕೋಸಲನಿಗೆ ಅನುಶಾಸನ ಮಾಡಿತು:ಪೃಥ್ವಿ,ಅಗ್ನಿ,ಅನ್ನ,ಆದಿತ್ಯ -ಇವು ನನ್ನ ನಾಲ್ಕು ರೂಪಗಳು. ಆದಿತ್ಯನಲ್ಲಿ ಕಂಡುಬರುವ ಪುರುಷನೇ ನಾನಾಗಿದ್ದೇನೆ.ಅವನೇ ನಾನಾಗಿದ್ದೇನೆ.'(ಪುಟ 200)
32)ಪೃಥ್ವಿ ಅನ್ನ ಇವು ಭೋಜ್ಯರೂಪವಾಗಿವೆ.ಆದರೆ ಅಗ್ನಿ ಆದಿತ್ಯ ಇವು ಭೋಕ್ತø ರೂಪಗಳು.
ಆದರೆ ಬ್ರಹ್ಮವು ಈ ನಾಲ್ಕು ರೂಪಗಳಲ್ಲಿಯೂ ವ್ಯಕ್ತವಾಗಿರುವುದು.(ಪುಟ 200)
33)ಯಾವನು ಹೀಗೆ ಅರಿತುಕೊಂಡು ಉಪಾಸಿಸುವನೊ ಅವನು ಪಾಪಕಮ೯ವನ್ನು ನಾಶಗೊಳಿಸಿಕೊಳ್ಳುತ್ತಾನೆ.ಅಗ್ನಿಲೋಕವನ್ನು ಹೊಂದುತ್ತಾನೆ.ಪೂಣಾ೯ಯಸ್ಸನ್ನು ಪಡೆಯುತ್ತಾನೆ.ಉಜ್ವಲವಾಗಿ ಜೀವಿಸುತ್ತಾನೆ.ಇವನ ಸಂತತಿಯು ನಾಶವಾಗುವುದಿಲ್ಲ.ಯಾವನು ಇದನ್ನು ಹೀಗೆ ಅರಿತುಕೊಂಡು ಉಪಾಸಿಸುವನೊ ಅವನನ್ನು ಈ ಲೋಕದಲ್ಲಿಯೂ ಪರಲೋಕದಲ್ಲಿಯೂ ಕಾಪಾಡುತ್ತೇವೆ.(ಪುಟ 201)
ಹನ್ನೆರಡನೆಯ ಖಂಡ:
34) ಅನಂತರ ಅನ್ವಾಹಾಯ೯ ಪಚನವು ಉಪಕೋಸಲನಿಗೆ ಅನುಶಾಸನ ಮಾಡಿತು:'ನೀರು,ದಿಕ್ಕುಗಳು,ನಕ್ಷತ್ರಗಳು,ಚಂದ್ರ-ಇವು ನನ್ನ ನಾಲ್ಕು ರೂಪಗಳು.ಚಂದ್ರನಲ್ಲಿ ಕಂಡುಬರುವ ಪುರುಷನೇ ನಾನಾಗಿದ್ಧೇನೆ;
ಅವನೇ ನಾನಾಗಿದ್ದೇನೆ.(ಪುಟ 201)
35)ಇಷ್ಟಿ-ಯಜ್ಞದಲ್ಲಿ ಋತ್ವಿಕ್ಕುಗಳು ಯಾವ ಅನ್ನ ದಕ್ಷಿಣೆಯನ್ನು ಪಡೆಯುತ್ತಾರೆಯೊ ಅದಕ್ಕೆ ಅನ್ವಾಹಾಯ೯ವೆಂದು ಹೆಸರು.(ಪುಟ201)
36ಯಾವನು ಹೀಗೆ ಅರಿತುಕೊಂಡು ಉಪಾಸಿಸುವನೊ ಅವನು ಪಾಪಕಮ೯ವನ್ನು ನಾಶಗೊಳಿಸಿಕೊಳ್ಳುತ್ತಾನೆ.ಅಗ್ನಿಲೋಕವನ್ನು ಹೊಂದುತ್ತಾನೆ.ಪೂಣಾ೯ಯಸ್ಸನ್ನು ಪಡೆಯುತ್ತಾನೆ.ಉಜ್ವಲವಾಗಿ ಜೀವಿಸುತ್ತಾನೆ.ಇವನ ಸಂತತಿಯು ನಾಶವಾಗುವುದಿಲ್ಲ.ಯಾವನು ಇದನ್ನು ಹೀಗೆ ಅರಿತುಕೊಂಡು ಉಪಾಸಿಸುವನೊ ಅವನನ್ನು ಈ ಲೋಕದಲ್ಲಿಯೂ ಪರಲೋಕದಲ್ಲಿಯೂ ಕಾಪಾಡುತ್ತೇವೆ.(ಪುಟ 202)
ಹದಿಮೂರನೆಯ ಖಂಡ:
37)ಅನಂತರ ಅಹನೀಯಾಗ್ನಿಯು ಅನುಶಾಸನ ಮಾಡಿತು.ಪ್ರಾಣ ಆಕಾಶ ದ್ಯುಲೋಕ ಮಿಂಚು-ಇವು ನನ್ನ ನಾಲ್ಕು ರೂಪಗಳು.ಮಿಂಚಿನಲ್ಲಿ ಕಾಣಬರುವ ಪುರುಷನೇ ನಾನಾಗಿದ್ದೇನೆ.(ಪುಟ 202)
38)
ಯಾವನು ಹೀಗೆ ಅರಿತುಕೊಂಡು ಉಪಾಸಿಸುವನೊ ಅವನು ಪಾಪಕಮ೯ವನ್ನು ನಾಶಗೊಳಿಸಿಕೊಳ್ಳುತ್ತಾನೆ.ಅಗ್ನಿಲೋಕವನ್ನು ಹೊಂದುತ್ತಾನೆ.ಪೂಣಾ೯ಯಸ್ಸನ್ನು ಪಡೆಯುತ್ತಾನೆ.ಉಜ್ವಲವಾಗಿ ಜೀವಿಸುತ್ತಾನೆ.ಇವನ ಸಂತತಿಯು ನಾಶವಾಗುವುದಿಲ್ಲ.ಯಾವನು ಇದನ್ನು ಹೀಗೆ ಅರಿತುಕೊಂಡು ಉಪಾಸಿಸುವನೊ ಅವನನ್ನು ಈ ಲೋಕದಲ್ಲಿಯೂ ಪರಲೋಕದಲ್ಲಿಯೂ ಕಾಪಾಡುತ್ತೇವೆ.(ಪುಟ 203)
ಹದಿನಾಲ್ಕನೆಯ ಖಂಡ:
3೯)ಅನಂತರ ಅಗ್ನಿಗಳು ಒಟ್ಟಾಗಿ ಇವನಿಗೆ ಹೇಳಿದವು:ಉಪಕೋಸಲ ಇದು ನಿ£ಗೆನಾವು ಉಪದೇಶಿಸಿರುವ ನಮ್ಮ ವಿದ್ಯೆ ಮತ್ತು ಆತ್ಮವಿದ್ಯೆ.ಆದರೆ ಆಚಾಯ೯ನು ವಿದ್ಯಾಫಲ ಪ್ರಾಪ್ತಿಗಾಗಿ ನಿನಗೆ ಗತಿಯನ್ನು ಉಪದೇಶಿಸುವನು..ಇವನ ಆಚಾಯ೯ನು ಹಿಂತಿರುಗಿ ಬಂದನು. ಮತ್ತು ಉಪಕೋಸಲನನ್ನು ಕೇಳಿದನು.(ಪುಟ 204)
40)ಸೋಮ್ಯ ನಿನ್ನ ಮುಖವು ಬ್ರಹ್ಮಜ್ಞಾನಿಯ ಮುಖದಂತೆ ಹೊಳೆಯುತ್ತಿದೆ.ನಿನಗೆ ಯಾವನು ಉಪದೇಶಿಸಿದನು?ಅವು ನಿನಗೆ ಏನನ್ನು ಹೇಳಿದವು?೯ಪುಟ 205)
41)ಆಚಾಯ೯: ಸೋಮ್ಯ,ನಿನಗೆ ಅಗ್ನಿಗಳು ಲೋಕಗಳನ್ನೇ ಉಪದೇಶಿಸಿವೆ.ಆದರೆ ನಾನು ನಿನಗೆ ಬ್ರಹ್ಮವನ್ನು ಉಪದೇಶಿಸುತ್ತೇನೆ.ಹೇಗೆ ಪದ್ಮಪತ್ರಕ್ಕೆ ನೀರು ಅಂಟಿಕೊಳ್ಳುವುದಿಲ್ಲವೊ ಹಾಗೆಯೇ ಬ್ರಹ್ಮವನ್ನು ಅರಿತುಕೊಂಡಿರುವವನಿಗೆ ಪಾಪಕಮ೯ವು ಅಂಟಿಕೊಳ್ಳುವುದಿಲ್ಲ.(Àುಟ 205)
ಹದಿನೈದನೆಯ ಖಂಡ:
42) ಕಣ್ಣಿನಲ್ಲಿ ಯಾವ ಪುರುಷನು ಕಾಣಿಸಿಕೊಳ್ಳುತ್ತಾನೆಯೊ ಅವನೇ ಆತ್ಮನು.ಇದೇ ಅಮೃತ,ಅಭಯ;ಇದು ಬ್ರಹ್ಮ.ಆದುದರಿಂದ ಪುರುಷಸ್ಥಾನವಾದ ಕಣ್ಣಿನಲ್ಲಿ ತುಪ್ಪವನ್ನಾಗಲಿ ನೀರನ್ನಾಗಲೀ ಚಿಮುಕಿಸಿದರೆ ಅದು ಕಣ್ಣಿನ ಅಂಚುಗಳಲ್ಲಿ ಹರಿದುಹೋಗುತ್ತದೆ.' ಎಂದು ಆಚಾಯ೯ನು ಹೇಳಿದನು.(ಪುಟ 206)
43)ಇವನನ್ನು 'ಸಂಯದ್ವಾಮ'ನೆಂದು ಕರೆಯುತ್ತಾರೆ.ಏಕೆಂದರೆ ಎಲ್ಲಾ ಶುಭವಸ್ತುಗಳೂ ಇವನನ್ನು ಬಂದು ಸೇರುತ್ತವೆ.(ಪುಟ 207)
44)ಪುನಃ ಇವನೇ ವಾಮನಿಯು.ಏಕೆಂದರೆ ಇವನು ಶುಭಗಳನ್ನೆಲ್ಲ ನಡೆಸಿಕೊಂಡು ಹೋಗುತ್ತಾನೆ.ಯಾವನು ಹೀಗೆ ಅರಿತುಕೊಂಡಿರುವನೊ ಅವನು ಎಲ್ಲಾ ಶುಭಗಳನ್ನೂ ನಡೆಸುತ್ತಾನೆ.(ಪುಟ 207)
45)ಪುನಃ ಇವನೇ ಭಾಮನಿಯು.ಏಕೆಂದರೆ ಇವನು ಎಲ್ಲ ಲೋಕಗಳಲ್ಲಿಯೂ ಪ್ರಕಾಶಿಸುತ್ತಾನೆ.ಯಾವನು ಹೀಗೆ ಅರಿತುಕೊಂಡಿರುವನೊ ಅವನು ಎಲ್ಲ ಲೋಕಗಳಲ್ಲಿಯೂ ಪ್ರಕಾಶಿಸುತ್ತಾನೆ.(ಪುಟ 208)
46)'ಅವನ ಪ್ರಕಾಶದಿಂದಲೇ ಇವೆಲ್ಲವೂ ಪ್ರಕಾಶಿಸುವುದು'(ತಸ್ಯ ಭಾಸಾ ಸವ೯ಮಿದಂ ವಿಭಾತಿ(ಮುಂ.ಉ.
2.2.11)
47) ಇಂಥ ಉಪಾಸಕರು ಮೃತರಾದಾಗ (ಇವರಿಗೆ ಋತ್ವಿಕ್ಕುಗಳು ಶವದಹನ ಕಮ೯ವನ್ನು ಮಾಡಲಿ ಮಾಡದಿರಲಿ ಇವರು ಅಚಿ೯ದೇವತೆಯನ್ನು ಸೇರುತ್ತಾರೆ. ಅಲ್ಲಿಂದ ಅಹ೯ದೇವತೆ -ಶುಕ್ಲಪಕ್ಷದೇವತೆ-ಉತ್ತರಾಯಣ ದೇವತೆಗಳನ್ನು- ಸಂವತ್ಸರ ದೇವತೆಯನ್ನು-ಆದಿತ್ಯ-ಚಂದ್ರ-ವಿದ್ಯುದ್ದೇವತೆಯನ್ನು ಸೇರುತ್ತಾರೆ.ಅಲ್ಲಿರುವ ಅಮಾನುಷ ಪುರುಷನೊಬ್ಬನು ಸತ್ಯಲೋಕದಲ್ಲಿರುವ ಬ್ರಹ್ಮದ ಬಳಿಗೆ ಸೇರಿಸುತ್ತಾನೆ.ಇದು ದೇವಪಥವು,ಬ್ರಹ್ಮಪಥವು.ಇದರಿಂದ ಹೋಗಿ ಬ್ರಹ್ಮವನ್ನು ಸೇರುವವರು ಈ ಸಂಸಾರ ಚಕ್ರಕ್ಕೆ ಹಿಂತಿರುಗುವುದಿಲ್ಲ.(ಪುಟ20೯)
ಹದಿನಾರನೆಯ ಖಂಡ:
48)ಯಾವನು ಬೀಸುತ್ತಾನೆಯೊ ಇವನೇ ಯಜ್ಞ.ಇವನೇ ಹೋಗುತ್ತಾ ಇದೆಲ್ಲವನ್ನೂ ಪವಿತ್ರಗೊಳಿಸುತ್ತಾನೆ.ಇವನು ಹೋಗುತ್ತ ಇದೆಲ್ಲವನ್ನೂ ಪವಿತ್ರಗೊಳಿಸುವುದರಿಂದ ಇವನೇ ಯಜ್ಞ.ಮನಸ್ಸು ಮತ್ತು ಯಜ್ಞ ಇವೆರಡೂ ಈ ಯಜ್ಞಕ್ಕೆ ದಾರಿಗಳು.(ಪುಟ 211)
4೯) ವಾಯುವು ಚಲನಾತ್ಮಕವಾದುದು.ಯಜ್ಞವು ಕ್ರಿಯಾತ್ಮಕವಾದುದು.ಆದುದರಿಂದ ವಾಯುವೇ ಯಜ್ಞವು.(ಪುಟ 211)
50)ವಾಕ್ ಮನಸ್ಸುಗಳಿಂದ ಯಜ್ಞವು ಸಾಗುವುದರಿಂದ ಅವು ಯಜ್ಞಕ್ಕೆ ದಾರಿಗಳು.(ಪುಟ 211)
51) ಈ ಎರಡು ದಾರಿಗಳಲ್ಲಿ ಒಂದನ್ನು ಬ್ರಹ್ಮನೆಂಬ ಋತ್ವಿಕ್ಕು ವಿವೇಚನಾ ಜ್ಞಾನವುಳ್ಳ ಮನಸ್ಸಿನಿಂದ ಸಂಸ್ಕರಿಸುತ್ತಾನೆ. ಹೋತ್ರ ಅಧ್ವಯು೯ ಉದ್ಗಾತೃ ಎಂಬ ಋತ್ವಿಕ್ಕುಗಳು ಇನ್ನೊಂದನ್ನು ವಾಕ್ಕಿನಿಂದ ಸಂಸ್ಕರಿ¸ುತ್ತಾರೆ.(ಪುಟ 212)
52) ಮೌನವಿಜ್ಞಾನವನ್ನು ಅರಿತುಕೊಂಡಿರುವ ಬ್ರಹ್ಮವೆಂದು ಋತ್ವಿಕ್ಕಿನಿಂದ ಕೂಡಿದ ಯಜ್ಞವನ್ನು ಮಾಡಿದುದರಿಂದ ಯಜಮಾನನು ಶ್ರೇಷ್ಠನಗುವನು.(ಪುಟ 213)
ಹದಿನೇಳನೆಯ ಖಂಡ:
53) ಪ್ರಜಾಪತಿಯು ಲೋಕಗಳನ್ನು ಉದ್ದೇಶಿಸಿ ತಪಸ್ಸು ಮಾಡಿದನು.ಹೀಗೆ ತಪ್ಯಮಾನವಾದ ಆ ಲೋಕಗಳಿಂದ ರಸಗಳನ್ನು ಹಿಂಡಿ ತೆಗೆದನು.
ಪೃಥ್ವಿಯಿಂದ-ಅಗ್ನಿ ರೂಪವಾದ ರಸ
ಅಂತರಿಕ್ಷದಿಂದ -ವಾಯುರೂಪವಾದ ರಸ
ದ್ಯುಲೋಕದಿಂದ -ಆದಿತ್ಯ ರೂಪವಾದ ರಸ.(ಪುಟ 214)
54) ಪ್ರಜಾಪತಿಯು ಈ ಮೂರು ದೇವತೆಗಳನ್ನು ಉದ್ದೇಶಿಸಿ ತಪಸ್ಸು ಮಾಡಿದನು.ಆ ದೇವತೆಗಳಿಂದ ರಸವನ್ನು ಹಿಂಡಿ ತೆಗೆದನು.
ಅಗ್ನಿಯಿಂದ-ಋಕ್ಕುಗಳನ್ನು
ವಾಯುವಿನಿಂದ- ಯಜುಸ್ಸುಗಳನ್ನು
ಆದಿತ್ಯನಿಂದ- ಸಾಮಗಳನ್ನು.
ತ್ರಯೀ ವಿದ್ಯೆಗಳನ್ನು ಉದ್ಧರಿಸಿದನು ಎಂದಥ೯(ಪುಟ 214)
55) ಪ್ರಜಾಪತಿಯು ಈ ತ್ರಯೀ ವಿದ್ಯೆಯನ್ನು ಕುರಿತು ತಪಸ್ಸು ಮಾಡಿದನು.ಹೀಗೆ ತಪ್ಯಮಾನವಾದ ಆ ಲೋಕಗಳಿಂದ ರಸವನ್ನು ಹಿಂಡಿ ತೆಗೆದನು.
ಋಕ್ಕುಗಳಿಂದ ಭೂಃ ಎಂಬ ವ್ಯಾಹೃತಿ ರೂಪವಾದ ರಸವನ್ನು,,
ಯಜುಸ್ಸುಗಳಿಂದ-ಭುವಃ ಎಂಬ ವ್ಯಾಹೃತಿರೂಪವದ ರಸವನ್ನು
ಸಾಮಗಳಿಂದ-ಸ್ವಃ ಎಂಬ ವ್ಯಾಹೃತಿರೂಪವಾದ ರಸವನ್ನು.
ಆದುದರಿಂದ ಈ ಮಹಾ ವ್ಯಾಹೃತಿಗಳು ಲೋಕಗಳ ದೇವತೆಗಳ ಮತ್ತು ವೇದಗಳ ರಸಗಳಾಗಿವೆ.(ಪುಟ 215)
56) ಹೇಗೆ ಹೆಣ್ಣು ಕುದುರೆಯು ಯೋಧರನ್ನು ಕಾಪಾಡುತ್ತದೆಯೊ ಹಾಗೆಯೇ ಮಾನವನೂ ಬ್ರಹ್ಮನೂ ಆದ ಋತ್ವಿಕ್ಕನೊಬ್ಬನೇ ಕತೃ೯ಗಳನ್ನು ಕಾಪಡುತ್ತಾನೆ.ಹೀಗೆ ಅರಿತುಕೊಂಡಿರುವ ಬ್ರಹ್ಮನೇ ಯಜ್ಞವನ್ನೂ ಯಜಮಾನನ್ನೂ ಎಲ್ಲ ಋತ್ವಿಕ್ಕುಗಳನ್ನು ಕಾಪಡುತ್ತಾನೆ.ಆದುದರಿಂದ ಹೀಗೆ ಅರಿತುಕೊಂಡಿರುವವನನ್ನೇ ಬ್ರಹ್ಮನನ್ನಾಗಿ ನಿಯಮಿಸಬೇಕು.ಹೀಗೆ ಅರಿಯದವನನ್ನಲ್ಲ. (ಪುಟ20೯)
57)ಮೌನಾಚರಣೆಯಿಂದ ಅಥವಾ ಮನನದಿಂದ ಅಥವಾ ಜ್ಞಾನವುಳ್ಳವನಾದುದರಿಂದ ಮಾನವನು ಎನಿಸಿದ್ದಾನೆ.(ಪುಟ 21೯)
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,ನಾಲ್ಕನೆಯ ಅಧ್ಯಾಯ ಮುಕ್ತಾಯವಾಯಿತು,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
ಐದನೆಯ ಅಧ್ಯಾಯ:
1) ಪ್ರಾಣಸಂವಾದ: ಯಾವನು ಜ್ಯೇಷ್ಠವೂ ಶ್ರೇಷ್ಠವೂ ಆಗಿರುವುದನ್ನು ತಿಳಿದಿರುವನೊ ಅವನು ಜ್ಯೇಷ್ಠವೂ ಶ್ರೇಷ್ಠವೂ ಆಗುತ್ತಾನೆ.ಪ್ರಾಣವೇ ಜ್ಯೇಷ್ಠವೂ ಶ್ರೇಷ್ಠವೂ ಆಗಿದೆ.(ಪುಟ 220)
2)ಹಿಂದೆ ಸಗುಣ ಬ್ರಹ್ಮೋಪಾಸನೆಗೆ ಉತ್ತರಾಯಣದ ಗತಿಯು ಫಲವೆಂದು ಹೇಳಿದೆ.(ಪುಟ 220)
3)ಈಗ ಪಂಚಾಗ್ನಿಗಳನ್ನು ಅರಿತುಕೊಂಡಿರುವ ಗೃಹಸ್ಥರಿಗೂ ಮತ್ತು ಅನ್ಯೋಪಾಸಕರಾದ ಊಧ್ವ೯ರೇತಸ್ಕರಿಗೂ ಉತ್ತರಮಾಗ೯ವೇ ಗತಿಯೆಂದು ಹೇಳಿದೆ.(ಪುಟ 220)
4)ಅನಂತರ ಕೇವಲ ಕಮಿ೯ಗಳಿಗೆ ಪುನರಾವೃತ್ತಿರಹಿತವಾದ ಮತ್ತು ಧೂಮಾದಿ ಲಕ್ಷಣಗಳುಳ್ಳ ದಕ್ಷಿಣಗತಿಯನ್ನು ಹೇಳುತ್ತದೆ.(ಪುಟ 220)
5)ಕೊನೆಯಲ್ಲಿ ಉಪಾಸನಾ ರಹಿತರೂ ಶಾಸ್ತ್ರೀಯ ಕಮ೯ರಹಿತರೂ ಆದ ಪ್ರಾಕೃತ ಮನುಷ್ಯರಿಗೆ ಧೂಮಮಾಗ೯ಕ್ಕಿಂತಲೂ ಕಷ್ಟಕರವಾದ ಸಂಸಾರಗತಿಯನ್ನು ಹೇಳಿದೆ.ಬ್ರಹ್ಮಜ್ಞಾನಕ್ಕೆ ಸಾಧನವಾದ
ವೈರಾಗ್ಯವನ್ನುಂಟು ಮಾಡುವುದೇ ಈ ಸಮಸ್ತ ವಣ೯ನೆಯ ಉದ್ದೇಶ.(ಪುಟ 220)
6)ಯಾವನು ವಸಿಷ್ಠನನ್ನು ತಿಳಿದಿರುವನೊ ಅವನು ತನ್ನ ಸಂಬಂಧಿಗಳಲ್ಲಿ ವಸಿಷ್ಠನಾಗುತ್ತಾನೆ.ವಾಕ್ಕೇ ವಸಿಷ್ಠವು(ಪುಟ 221)
7)ಯಾವನು ಪ್ರತಿಷ್ಠೆಯನ್ನು ತಿಳಿದಿರುವನೊ ಅವನು ಈ ಲೋಕದಲ್ಲಿಯೂ ಆಲೋಕದಲ್ಲಿಯೂ ಪ್ರತಿಷ್ಠಿತನಾಗುತ್ತಾನೆ.ಚಕ್ಷುಸ್ಸೇ ಪ್ರತಿಷ್ಠೆ.(ಪುಟ 221)
8)ಯಾವನು ಸಂಪತ್ತನ್ನು ತಿಳಿದಿರುವನೊ ಅವನಿಗೆ ದೈವಕಾಮಗಳೂ ಮಾನುಷಕಾಮಗಳೂ ಸಂಪಾದಿತವಾಗುತ್ತವೆ.ಶ್ರೋತ್ರವೇ ಸಂಪತ್ತು.(ಪುಟ 221)
೯)ಯಾವನು ಆಶ್ರಯವನ್ನು ತಿಳಿದಿರುವನೊ ಅವನು ತನ್ನ ಸಂಬಂಧಿಗಳಿಗೆ ಆಶ್ರಯವಾಗುವನು.ಮನಸ್ಸೇ ಆಶ್ರಯವು.(ಪುಟ 222)
10) ಒಂದುಸಲ ಪಂಚೇಂದ್ರಿಯಗಳು ತಮ್ಮ ತಮ್ಮ ಶ್ರೇಷ್ಠತ್ವ ವಿಷಯದಲ್ಲಿ 'ನಾನು ಶ್ರೇಷ್ಠನಾಗಿರುವೆನು ನಾನು ಶ್ರೇಷ್ಠನಾಗಿರುವೆನು' ಎಂದು ವಾದಿಸಿದವು.ಆ ಇಂದ್ರಿಯಗಳು ತಂದೆಯಾದ ಪ್ರಜಾಪತಿಯ ಬಳಿಗೆ ಹೋಗಿ ಕೇಳಿದವು.'ಭಗವಂತನೆ,ನಮ್ಮಲ್ಲಿ ಯಾವುದು ಶ್ರೇಷ್ಠವು.'ಅವನು ಹೇಳಿದನು.'ನಿಮ್ಮಲ್ಲಿ ಯಾರು ಉತ್ಕ್ರಮಿಸಿದರೆ ಶರೀರವು ಪಾಪಿಷ್ಠತರವಾದಂತೆ ಕಾಣುವುದೊ ಅದು ನಿಮ್ಮಲ್ಲಿ ಶ್ರೇಷ್ಠವು.'(ಪುಟ 223)
11)ಮೊದಲು ವಾಕ್ಕು ಉತ್ಕ್ರಮಿಸಿತು.ಅದು ಒಂದು ವಷ೯ ಹೊರಗಿದ್ದು ಹಿಂತಿರುಗಿ ಬಂದು ಹೇಳಿತು:'ನಾನಿಲ್ಲದೆ ನೀವು ಇರಲು ಹೇಗೆ ಶಕ್ಯವಾಗಿದ್ದಿರಿ?'ಅವು ಹೇಳಿದವು: ಹೇಗೆ ಮೂಕನು ಮಾತನಾಡದೆ,ಪ್ರಾಣದಿಂದ ಜೀವಿಸುತ್ತ ,ಕಣ್ಣಿಂದ ನೋಡುತ್ತ,ಕಿವಿಯಿಂದ ಕೇಳುತ್ತ,ಮನಸ್ಸಿನಿಂದ ಯೋಚಿಸುತ್ತ ,ಇರುವರೊ ಹಾಗೆಯೇ ಜೀವಿಸಿದ್ದೆವು.ಆಗ ವಾಗಿಂದಿಯ್ರವು ಶರೀರವನ್ನು ಪ್ರವೇಶಿಸಿತು(ಪುಟ 224)
12) ಕಣ್ಣು ಉತ್ಕ್ರಮಿಸಿತು. ಕ್ರಮವಾಗಿ ಕಿವಿ,ಮನಸ್ಸುಗಳೊ ಒಂದೊಂದಾಗಿ ಉತ್ಕ್ರಮಿಸಿದವು.ಇವೆಲ್ಲವುಗಳಿಗೂ ಮೇಲೆ ಹೇಳಿದ ರೀತಿಯೇ ಅನ್ವಯಿಸುತ್ತದೆ.(ಪುಟ 225)
13)ಅನಂತರ ಪ್ರಾಣವು ಉತ್ಕ್ರಮಿಸಲು ಸಿದ್ಧವಾದಾಗ ಇತರೆ ಇಂದ್ರಿಯಗಳನ್ನು ಕಿತ್ತು ಹಾಕಿತು.ಅವು ಪ್ರಾಣದ ಬಳಿಗೆ ಒಟ್ಟಾಗಿ ಬಂದು ಹೇಳಿದವು.'ಭಗವಂತನೆ,ನೀನು ನಮ್ಮ ಸ್ವಾಮಿಯಾಗು.ನೀನು ನಮ್ಮಲ್ಲಿ ಶ್ರೇಷ್ಠನಾಗಿರುವೆ.ಉತ್ಕ್ರಮಿಸಬೇಡ.!'
14) ಜನರು ಇವುಗಳನ್ನು ವಾಕ್ಕುಗಳೆಂದಾಗಲಿ,ಕಣ್ಣುಗಳೆಂದಾಗಲಿ,ಕಿವಿಗಳೆಂದಾಗಲಿ,ಮನಸ್ಸುಗಳೆಂದಾಗಲಿ ಕರೆಯುವುದಿಲ್ಲ.ಪ್ರಾಣಗಳೆಂದೇ ಕರೆಯುತ್ತಾರೆ.ಏಕೆಂದರೆ ಪ್ರಾಣವೇ ಇವೆಲ್ಲವೂ ಆಗಿದೆ.(ಪುಟ 227).
ಎರಡನೆಯ ಖಂಡ(ಪ್ರಾಣದಶ೯ನ):
15)ಪ್ರಾಣವು ಹೇಳಿತು'ನನಗೆ ಅನ್ನವು ಯಾವುದು?'.ಇಂದ್ರಿಯಗಳು ಹೇಳಿದವು:'ನಾಯಿ ಪಕ್ಷಿ-ಇವುಗಳವರೆಗೆ ಯಾವ ಯಾವ ಅನ್ನವಿದೆಯೊ ಅದೆಲ್ಲವೂ ನಿನ್ನ ಅನ್ನ..ಆ ಇದೇ ಪ್ರಾಣದ ಅನ್ನ.ಅನ್ನ ಎಂಬುದೇ ಪ್ರತ್ಯಕ್ಷವಾದ ಹೆಸರು.ಹೀಗೆ ಅರಿತುಕೊಂಡವನಿಗೆ ಯಾವುದೂ ಅನನ್ನವಾಗುವುದಿಲ್ಲ.(ಪುಟ 228)
16)ಪ್ರಾಣವು ಎಲ್ಲ ವಿಧವಾದ ಅನ್ನವನ್ನು ತಿನ್ನುತ್ತದೆ.ಸವ೯ ಪ್ರಾಣಿಗಳಲ್ಲಿಯೂ ಪ್ರಾಣವಾಗಿರುವ ನಾನೇ
ಎಲ್ಲಾ ಅನ್ನಗಳನ್ನೂ ತಿನ್ನುತ್ತೇನೆ.(ಪುಟ228)
17)ನೀರೇ ಪ್ರಾಣಕ್ಕೆ ಬಟ್ಟೆಯು.ಆದುದರಿಂದಲೇ ಭೋಜನ ಮಾಡುವವರು ಭೋಜನಕ್ಕೆ ಮೊದಲೂ ಮತ್ತು ಅನಂತರವೂ ನೀರಿನ ಮೂಲಕ ಆಚಮನ ಮಾಡಿ ಪ್ರಾಣವನ್ನು ಮುಚ್ಚುತ್ತಾರೆ.ಪ್ರಾಣವು ಹೀಗೆ ಬಟ್ಟೆಯನ್ನು ಪಡೆಯುತ್ತದೆ.ನಗ್ನವಾಗುವುದಿಲ್ಲ.(ಪುಟ 22೯)
18)ಸತ್ಯಕಾಮ-ಜಾಬಾಲನು ಈ ಪ್ರಾಣ ದಶ೯ನವನ್ನು ಗೋಶ್ರುತಿವೈಯಾಘ್ರನಿಗೆ ಉಪದೇಶಿಸಿ ಹೀಗೆ ಹೇಳಿದನು.'ಇದನ್ನು ಒಣಗಿದ ಮೋಟು ಮರಕ್ಕೆ ಹೇಳಿದರೂ ಅದರಲ್ಲಿ ಕೊಂಬೆಗಳು ಹುಟ್ಟಿಯೇ ಹುಟ್ಟುವುವು.ಎಲೆಗಳು ಚಿಗುರುವುವು.'(ಪುಟ 230)
1೯)ಒಂದು ಮಂತ್ರವು ಹೀಗಿದೆ.'ನಿನಗೆ ಅಮ ಎಂಬ ಹೆಸರಿದೆ.ಏಕೆಂದರೆ ಈ ಜಗತ್ತೆಲ್ಲವೂ ನಿನ್ನಲ್ಲಿದೆ.ಪ್ರಾಣನಾದ ನೀನು ಜ್ಯೇಷ್ಠನೂ ಶ್ರೇಷ್ಠನೂ ರಾಜನೂ ಅಧಿಪತಿಯೂ ಆಗಿರುವೆ.ಪ್ರಾಣನಾದ ನೀನು ನನ್ನನ್ನು ಜ್ಯೇಷ್ಠನನ್ನಾಗಿಯೂ ಶ್ರೇಷ್ಠನನ್ನಾಗಿಯೂ ಮಾಡು ರಾಜನನ್ನಾಗಿಯೂ ಅಧಿಪತಿಯನ್ನಾಗಿಯೂ ಮಾಡು.
ನಾನೇ ಇದೆಲ್ಲವೂ ಆಗಿರುವಂತಾಗಲಿ.(ಪುಟ 232)
20)ಅಮ ಎಂಬುದು ಪ್ರಾಣನ ಹೆಸರು.ಪ್ರಾಣವು ಅನ್ನದಿಂದಲೇ ದೇಹದಲ್ಲಿನ ಪ್ರಾಣನ ಕ್ರಿಯೆಯನ್ನು ಮಾಡುತ್ತದೆ.ಆದುದರಿಂದ ಪ್ರಾಣದ ಆಹಾರವಾದ ಮಂಥವನ್ನೇ ಇಲ್ಲಿ ಅಮ ಅಥವಾ ಪ್ರಾಣ ಎಂದು ಹೊಗಳಿದೆ.(ಪುಟ 232)
ಮೂರನೆಯ ಖಂಡ:
21)ಬ್ರಹ್ಮನಿಂದ ಆರಂಭಿಸಿ ಸ್ಥಾವರದವರೆಗೆ ಇರುವ ಸಂಸಾರಗತಿಯನ್ನು ಮುಮುಕ್ಷುಗಳಿಗೆ ವೈರಾಗ್ಯವನ್ನುಂಟು ಮಾಡಲು ಇಲ್ಲಿ ಹೇಳಿದೆ.ಈ ವಿಷಯವೇಬೃಹದಾರಣ್ಯಕ ಉಪನಿಷತ್ತಿನ 6.2 ರಲ್ಲಿ ಬಂದಿದೆ(ಪುಟ 234)
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
(ಬೃಹದಾರಣ್ಯಕದಿಂದ)
(ಆರನೆಯ ಅಧ್ಯಾಯ,ಎರಡನೆಯ ಬ್ರಾಹ್ಮಣದಿಂದ ಆಯ್ದುಕೊಳ್ಳಲಾಗಿದೆ)
1) ಒಂದು ಸಲ ಅರುಣನ ಮೊಮ್ಮಗನಾದ ಶ್ವೇತಕೇತುವು ಪಂಚಾಲರ ಪರಿಷತ್ತಿಗೆ ಬಂದನು.ಅಲ್ಲಿ ಜೀವಲನ ಮಗನಾದ ಪ್ರವಾಹಣನನ್ನು ಎದುರುಗೊಂಡನು.'ನಿನ್ನ ತಂದೆಯವರಿಂದ ಉಪದಿಷ್ಟನಾಗಿರುವೆಯೊ?'ಎಂದು ರಾಜನು ಪ್ರಶ್ನಿಸಿದನು.'ಹೌದು'ಎಂದು ಶ್ವೇತಕೇತುವು ಹೇಳಿದನು.(ಪುಟ 403)
2) ಇದು ಖಿಲ ಪ್ರಕರಣ.ಹಿಂದೆ ಹೇಳದ ಕೆಲವು ವಿಷಯಗಳನ್ನು ಇಲ್ಲಿ ಹೇಳಿದೆ. ಇಲ್ಲಿ ಮುಖ್ಯವಾಗಿ ಕಮ೯ವಿಪಾಕವನ್ನು ಪಡೆಯುವುದಕ್ಕೆ ಇರುವ ಸಂಸಾರಗತಿಗಳನ್ನೆಲ್ಲ ಉಪಸಂಹರಿಸಿದೆ(ಪುಟ 403)
3)ಪ್ರವಾಹಣ ರಾಜನು ಈ ಐದು ಪ್ರಶ್ನೆಗಳನ್ನು ಕೇಳಿದನು:
1) ಈ ಜನರು ಮೃತರಾದ ಮೇಲೆ ಬೇರೆ ಬೇರೆ ಮಾಗ೯ಗಳಲ್ಲಿ ಹೇಗೆ ಹೋಗುವರು?
2)ಮತ್ತೆ ಇವರು ಈ ಲೋಕಕ್ಕೆ ಹೇಗೆ ಹಿಂತಿರುಗುವರು?
3) ಹೀಗೆ ಬಹು ಜನರು ಪುನಃ ಪುನಃ ಸಾಯುತ್ತಿದ್ದರೂ ಹೇಗೆ ಈ ಲೋಕವು ತುಂಬುತ್ತಿಲ್ಲ?
4)ಎಷ್ಟನೆಯ ಆಹುತಿಯನ್ನು ಹೋಮಮಾಡಿದ ಮೇಲೆ ನೀರು ಪುರುಷವಾಕ್ಕಾಗಿ ಎದ್ದು ನಿಂತು ಮಾತಾಡುತ್ತದೆ?
5)ಯಾವ ಕಮ೯ದಿಂದ ದೇವಯಾನ ಅಥವಾ ಪಿತೃಯಾನೆವೆಂಬ ಪಥವನ್ನು ಜನರು ಪಡೆಯುತ್ತಾರೊ ಅದನದನು ನೀನು ಅರಿತಿರುವೆಯಾ?
ಎಂಬುದಾಗಿ ಐದು ಪ್ರಶ್ನೆಗಳನ್ನು ಕೇಳಿದನು.ಇವುಗಳಲ್ಲಿ ಯಾವ ಒಂದು ಪ್ರಶ್ನೆಯೂ ಶ್ವೇತಕೇತುವಿಗೆ ಗೊತ್ತಿರಲಿಲ್ಲ.
ಶೇತಕೇತುವು ತಂದೆಯ ಬಳಿ ಬಂದು ಇವುಗಳಲ್ಲಿ ಒಂದು ಪ್ರಶ್ನೆಯೂ ತನಗೆ ತಿಳಿದಿರಲಿಲ್ಲವೆಂದು ಹೇಳಿದನು.(ಪುಟ 415)
6)'ಕುಮಾರ ನನ್ನಲಿ ನಂಬಿಕೆಯಿದು.ನಾನು ಏನೇನನ್ನು ತಿಳಿದಿರುವೆನೊ ಅದೆಲ್ಲವನ್ನೂ ನಿನಗೆ ಹೇಳಿರುವೆನು.ಬಾ ಅಲ್ಲಿಗೆ ಹೋಗಿ ಬ್ರಹ್ಮಚಯ೯ವಾಸ ಮಾಡೋಣ' ಎಂದು ಹೇಳಿದನು.ಅವನು ಒಪ್ಪಲಿಲ್ಲ.ಗೌತಮನು ಪ್ರವಾಹಣ ಜೈವಲಿಯ ಸಭೆಗೆ ಬಂದನು.(ಪುಟ 40೯)
7) ಪೂವಿ೯ಕರು ವಾಕ್ಕಿನಿಂದಲೇ ಶಿಷ್ಯತ್ವವನ್ನು ಗ್ರಹಿಸುತ್ತಿದ್ದರು. ಗೌತಮನು 'ಶಿಷ್ಯತ್ವವನ್ನು ಗ್ರಹಿಸಿದ್ದೇನೆ' ಎಂದು ವಾಕ್ಕಿನಿಂದಲೇ ಹೇಳಿ ಬ್ರಹ್ಮಚಾರಿಯಾಗಿ ವಾಸಿಸಿದನು.
8) ಪಂಚಾಗ್ನಿ ವಿದ್ಯೆ: 1) ದ್ಯುಲೋಕ 2)ಪಜ೯ನ್ಯ 3)ಈ ಲೋಕ 4)ಪುರುಷ 5) ಸ್ತ್ರೀ ಇವೆ ಪಂಚಾಗ್ನಿಗಳು.ಇವುಗಳಲ್ಲಿ ಕ್ರಮವಾಗಿ ಶ್ರದ್ಧೆ,ಸೋಮ,ಮಳೆ,ಅನ್ನ,ರೇತಸ್ಸುಎಂಬ ರೂಪದಿಂದ ಸ್ಥೂಲ ತಾರತಮ್ಯ ಕ್ರಮವನ್ನು ಹೊಂದುವ ಶ್ರದ್ಧಾಶಬ್ದ ವಾಚ್ಯವಾದ ನೀರು ಪುರುಷನನ್ನು ಉಂಟುಮಾಡುತ್ತದೆ.
ಐದನೆಯ ಆಹುತಿಯನ್ನು ಸ್ತ್ರೀ ಎಂಬ ಅಗ್ನಿಯಲ್ಲಿ ಹೋಮಮಾಡಲಾಗಿ ರೇತಸ್ಸಾದ ನೀರು ಪುರುಷವಾಕ್ಕಾಗಿ ಎದ್ದು ನಿಲ್ಲುವುದು.(ಪುಟ414)
೯)ಸೂಕ್ಷ್ಮರೂಪದಲ್ಲಿರುವ ಹಾಲು ಮುಂತಾದ ಆಹುತಿ ದ್ರವ್ಯವನ್ನು ಶ್ರದ್ಧೆಯೆಂದು ಹೇಳಿದೆ.'ಶ್ರದ್ಧೆಯೇ ನೀರು' (ಶ್ರದ್ಧಾ ವಾ ಆಪಃ)ಎಂದು ತೈತ್ತಿರೀಯ ಸಂಹಿತೆಯು (1,6,8)ಹೇಳುತ್ತದೆ.(ಪುಟ 411)
10)ಇವನ ಹಿಂದಿನ ಕಮ೯ವು ಈಶರೀರದಲ್ಲಿ ಎಲ್ಲಿತವರೆಗೆ ಇವನನ್ನು ಇರುವಂತೆ ಮಾಡುವುದೊ ಅಲ್ಲಿಯವರೆಗೆ ಇರುತ್ತಾನೆ.(ಪುಟ 414)
11)ಆಗ ಋತ್ವಿಕ್ಕುಗಳು ಇವನನ್ನು ಅಗ್ನಿಯಲ್ಲಿ ಆಹುತಿ ಮಾಡಲು ಒಯ್ಯುತ್ತಾರೆ.ಅವನಿಗೆ ಅಗ್ನಿಯೇ ಅಗ್ನಿಯಾಗುತ್ತದೆ.ಈ ಅಗ್ನಿಯಲ್ಲಿ ದೇವತೆಗಳು ಪುರುಷನನ್ನು ಹೋಮ ಮಾಡುತ್ತಾರೆ.ಆ ಆಹುತಿಯಿಂಒದ ಪುರುಷನು ದೀಪ್ತಿವಂತನಾಗುತ್ತಾನೆ.(ದಹಮಕ್ರಿಯೆ)(ಪುಟ 415)
12)ಶ್ರದ್ಧೆಯಿಂದ ಹೀಗೆ ಪಂಚಾಗ್ನಿ ವಿದ್ಯೆಯನ್ನು ಅರಿತುಕೊಂಡಿರುವವರು ಮತ್ತು ಅರಣ್ಯದಲ್ಲಿ ಸತ್ಯಬ್ರಹ್ಮವನ್ನು ಉಪಾಸಿಸುವವರು ಅಚಿ೯ದೇವತೆಯನ್ನು ಸೇರುತ್ತಾರೆ.
ಅಚಿ೯ದೇವತೆಯಿಂದ -ಅಹದೇ೯ವತೆ-ಶುಕ್ಲ ಪಕ್ಷದೇವತೆ-ಉತ್ತರಾಯಣದೇವತೆ-ದೇವಲೋಕಾಭಿಮಾನೀ ದೇವತೆ--ಆದಿತ್ಯ-ವಿದ್ಯುದ್ದೇವತೆಯನ್ನು ಸೇರುತ್ತಾರೆ.ಮ್ರಹ್ಮನ ಮನಸ್ಸಿನಿಂದ ಸೃಷ್ಟವಾಗಿರುವ ಪುರುಷನೊಬ್ಬನು ಬಂದು ವಿದ್ಯುದ್ದೇವತೆಯನ್ನು ಹೊಂದಿದ(ಸೇರಿದ) ಅವರನ್ನು ಬ್ರಹ್ಮಲೋಕಗಳಿಗೆ ಕರೆದುಕೊಂಡು ಹೋಗುತ್ತಾನೆ.ಅವರು ಆ ಬ್ರಹ್ಮಲೋಕದಲ್ಲಿ ಪ್ರಕೃಷ್ಟರಾಗಿ ಅನೇಕ ಸಂವತ್ಸರಗಳವರೆಗೆ ವಾಸಿಸುತ್ತಾರೆ. ಅವರು ಸಂಸಾರಕ್ಕೆ ಹಿಂದಿರುಗುವುದಿಲ್ಲ.(ಪುಟ416)
13)ಯಾರು ಯಜ್ಞದಿಂದಲೂ ದಾನದಿಂದಲೂ ತಪಸ್ಸಿನಿಂದಲೂ ಲೋಕಗಳನ್ನು ಜಯಿಸಿಕೊಳ್ಳುತ್ತಾರೆಯೋ ಅವರು ಧೂಮದೇವತೆಯನ್ನು ಸೇರುತ್ತಾರೆ.ಧೂಮದೇವತೆಯಿಂದ -ರಾತ್ರಿದೇವತೆ,-ಕೃಷ್ಣಪಕ್ಷದೇವತೆ-ದಕ್ಷಿಣಾಯನ ದೇವತೆಗಳನ್ನು- ಪಿತೃಲೋಕದೇವತೆಯನ್ನು-ಚಂದ್ರನನ್ನು
ಸೇರುತ್ತಾರೆ.ಅವರು ಚಂದ್ರನನ್ನು ಸೇರಿ ಅನ್ನವಾಗುತ್ತಾರೆ.ಅವರ ಕಮ೯ವು ಕ್ಷಯವಾದ ಮೇಲೆ ಅವರು ಆಕಾಶದಂತೆ ಆಗುತ್ತಾರೆ. ಆಕಾಶದಿಂದ ವಾಯು,ವಾಯುವಿನಿಂದ ಮಳೆ,ಮಳೆಯಿಂದ ಪೃಥ್ವಿಯನ್ನು ಸೇರಿ ಅವರು ಅನ್ನವಾಗುತ್ತಾರೆ.ಅವರು ಪುನಃ ಪುರುಷಾಗ್ನಿಯಲ್ಲಿ ಹುತರಾಗುತ್ತಾರೆ.ಅನಂತರ ಸ್ತೀ ಎಂಬ ಅಗ್ನಿಯಲ್ಲಿ (ಹುತರಾಗಿ ಎಂದರೆ ಆಹುತಿಯಾಗಿ) ಹುಟ್ಟುತ್ತಾರೆ. ಲೋಕಗಳನ್ನು ಹೊಂದುವುದಕ್ಕಾಗಿ ಅವರು (ಅಗ್ನಿಹೋತ್ರಾದಿ ಕಮ೯ಗಳನ್ನು ಮಾಡುತ್ತಾರೆ.ಹೀಗೆಯೇ ಅವರು ಸುತ್ತುತ್ತಾರೆ.ಇನ್ನು ಯಾರು ಈ ಎರಡೂ ಮಾಗ೯ಗಳನ್ನು ಅರಿಯರೊ ಅವರು ಕೀಟಗಳೂ ಪತಂಗಗಳೂ ಮತ್ತು ಸೊಳ್ಳೆಯೂ ಆಗುತ್ತಾರೆ.(ಪುಟ 41೯)
(ಆಕಾಶ,ವಾಯು, ಮಳೆ,ಮಳೆಯಿಂದ ಪೃಥ್ವಿ,ಪೃಥ್ವಿಯಲ್ಲಿ ಅನ್ನ,ಪುರುಷ,ಸ್ತೀಯಲ್ಲಿ ಜನನ)
14)ಕೀಟಗಳಗತಿಯು ಅತ್ಯಂತ ಕಷ್ಟವಾಗಿರುತ್ತದೆ.ಏಕೆಂದರೆ ಇದರಲ್ಲಿ ಬಿದ್ದವನನ್ನು ಉದ್ಧರಿಸುವುದು ದುಲ೯ಭವಾಗಿರುತ್ತದೆ.(ಛಾ.ಉ.5,10,8).ಆದುದರಿಂದ ಸವೋ೯ತ್ಸಾಹದಿಂದ ದಕ್ಷಿಣೋತ್ತರ ಮಾಗ೯ಗಳನ್ನು ಹೊಂದಲು ಸಾಧನವಾದ ಶಾಸ್ತ್ರೀಯ ಕಮ೯ವನ್ನು ಅಥವಾ ಜ್ಞಾನವನ್ನು ಅನುಷ್ಠಿಸಬೇಕು.
ಇಲ್ಲಿ ಎರಡನೆಯ ಮತ್ತು ಮೂರನೆಯ ಪ್ರಶ್ನೆಗಳಿಗೆ ಪರಿಹಾರವನ್ನು ಹೇಳಿದೆ.ಅನೇಕರು ಈ ಲೋಕಕ್ಕೆ ಹಿಂದಿರುಗುತ್ತಿರುವುದರಿಂದಲೂ ಮತ್ತೆ ಕೆಲವರು ಕೀಟ ಪತಂಗಾದಿ ಜನ್ಮವನ್ನು ಪಡೆಯುತ್ತಿರುವುದರಿಂದಲೂ ಆ ಲೋಕವು ತುಂಬುತ್ತಿಲ್ಲ.(ಪುಟ 420)
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
ನಾಲ್ಕನೆಯ ಖಂಡ:
36)ಗೌತಮನು ಈ ವಿದ್ಯೆಗೆ ಸರಿಯಾದ ಪಾತ್ರನೆಂದು ಅರಿತುಕೊಂಡು ರಾಜನು ಅಲ್ಲಿಯವರೆಗೂ ಕ್ಷತ್ರಿಯರಲ್ಲಿಯೇ ಇದ್ದ ಈ ವಿದ್ಯೆಯನ್ನು -ಗೌತಮನಿಗೆ ಉಪದೇಶಿಸಿದನು.
37)'ಗೌತಮ ,ದ್ಯುಲೋಕವೇ ಅಗ್ನಿಯು;ಆದಿತ್ಯನೇ ಅದಕ್ಕೆ ಸಮಿತ್ತು.ಅವನ ರಶ್ಮಿಗಳೇ ಅದಕ್ಕೆ ಹೊಗೆ.ಹಗಲು ಅದಕ್ಕೆ ಜ್ವಾಲೆ.ಚಂದ್ರನು ಅದಕ್ಕೆ ಕೆಂಡ.ನಕ್ಷತ್ರಗಳು ಅದಕ್ಕೆ ಕಿಡಿಗಳು(ಪುಟ 23೯)
38) ಆ ಈ ಅಗ್ನಿಯಲ್ಲಿ ದೇವತೆಗಳು ಶ್ರದ್ಧೆಯನ್ನು ಹೋಮಮಾಡುತ್ತಾರೆ.ಆ ಆಹುತಿಯಿಂದ ಸೋಮರಾಜನು ಹುಟ್ಟುತ್ತಾನೆ.(ಪುಟ 240)
3೯)ಅಗ್ನಿಹೋತ್ರದ ಆಹುತಿಗಳ ಪರಿಣಾಮಾವಸ್ಥೆಯ ರೂಪದಲ್ಲಿರುವ ಸೂಕ್ಷ್ಮವಾದ 'ಶ್ರದ್ಧಾ ವಾ ಆಪಃ'
'ಶ್ರದ್ಧೆಯೇ ನೀರು' ಎಂದು ತೈತ್ತಿರೀಯ ಸಂಹಿತೆಯು(1.6.8) ಹೇಳುತ್ತದೆ.(ಪುಟ 240)
ಐದನೆಯ ಖಂಡ:
40)ಗೌತಮ,ಪಜ೯ನ್ಯನೇ ಅಗ್ನಿಯು;ವಾಯುವೇ ಅವನಿಗೆ ಸಮಿತ್ತು.ಮೇಘವು ಅವನಿಗೆ ಹೊಗೆ.ಮಿಂಚು ಅವನಿಗೆ ಜ್ವಾಲೆ.ಸಿಡಿಲು ಅವನಿಗೆ ಕೆಂಡ.ಗುಡುಗುಗಳು ಅವನಿಗೆ ಕಿಡಿಗಳು.'(ಪುಟ 240)
41)ಆ ಈ ಅಗ್ನಿಯಲ್ಲಿ ದೇವತೆಗಳು ಸೋಮರಾಜನನ್ನು ಹೋಮ ಮಾಡುತ್ತಾರೆ.ಆ ಆಹುತಿಯಿಂದ ಮಳೆಯು ಹುಟ್ಟುತ್ತದೆ.(ಪುಟ 241)
ಆರನೆಯ ಖಂಡ:
42)ಗೌತಮ,ಪೃಥ್ವಿಯೇ ಅಗ್ನಿಯು;ಸಂವತ್ಸರವೇ ಅದಕ್ಕೆ ಸಮಿತ್ತು.ಆಕಾಶವು ಅದಕ್ಕೆ ಹೊಗೆ.ರಾತ್ರಿ ಅದಕ್ಕೆ ಜ್ವಾಲೆ.ದಿಕ್ಕುಗಳು ಅದಕ್ಕೆ ಕೆಂಡಗಳು,ಅವಾಂತರ ದಿಕ್ಕುಗಳು ಅದಕ್ಕೆ ಕಿಡಿಗಳು.(ಪುಟ 241)
43) ಈ ಅಗ್ನಿಯಲ್ಲಿ ದೇವತೆಗಳು ಮಳೆಯನ್ನು ಹೋಮಮಾಡುತ್ತಾರೆ.ಆ ಆಹುತಿಯಿಂದ ಅನ್ನವು ಉಂಟಾಗುತ್ತದೆ.(ಪುಟ 242)
(ಮಳೆಯಿಂದ ಬತ್ತ ,ಜವೆಮೊದಲಾದುವು ಉತ್ಪನ್ನವಾಗುತ್ತವೆ.)
ಏಳನೆಯ ಖಂಡ:
43)ಗೌತಮ,ಪುರುಷನೇ ಅಗ್ನಿಯು,ವಾಕ್ಕೇ ಅವನಿಗೆ ಸಮಿತ್ತು.ಪ್ರಾಣವು ಅವನಿಗೆ ಹೊಗೆ.ಜಿಹ್ವೆ ಅವನಿಗೆ ಜ್ವಾಲೆ,ಚಕ್ಷುಸ್ಸು ಅವನಿಗೆ ಕೆಂಡ.ಶ್ರೋತ್ರವು ಅವನಿಗೆ ಕಿಡಿಗಳು.(ಪುಟ 242)
44)ಆ ಈ ಅಗ್ನಿಯಲ್ಲಿ ದೇವತೆಗಳು ಅನ್ನವನ್ನು ಹೋಮ ಮಾಡುತ್ತಾರೆ.ಆ ಆಹುತಿಯಿಂದ ರೇತಸ್ಸು ಉಂಟಾಗುತ್ತದೆ.(ಪುಟ 243)
ಎಂಟನೆಯ ಖಂಡ:
45)ಗೌತಮ ,ಸ್ತೀಯೇ ಅಗ್ನಿಯು...ಆ ಅಗ್ನಿಯಲ್ಲಿ ದೇವತೆಗಳು ಹೋಮಮಾಡುತ್ತಾರೆ.ಆ ಆಹುತಿಯಿಂದ ಗಭ೯ವು ಉಂಟಾಗುತ್ತದೆ.(ಪುಟ 243)
46) ಹೀಗೆ ದ್ಯುಲೋಕ,ಪಜ೯ನ್ಯ,ಈ ಲೋಕ,ಪುರುಷ,ಸ್ತ್ರೀ ಎಂಬ ಪಂಚಾಗ್ನಿಯಲ್ಲಿ ಕ್ರಮೇಣ ಹುತವಾಗುವ ಮತ್ತು ಶ್ರದ್ಧ-ಸೋಮ-ವಷಾ೯ನ್ನ-ರೇತೋರೂಪದಿಂದ ಸ್ಥೂಲ-ತಾರತಮ್ಯ-ಕ್ರಮವನ್ನು ಹೊಂದುವ ಶ್ರದ್ಧಾ ಶಬ್ದವಾಚ್ಯವಾದ ನೀರು ಗಭ೯ವಾಗುತ್ತದೆ.(ಪುಟ 243)
ಒಂಬತ್ತನೆಯ ಖಂಡ:
47) ಐದನೆಯ ಆಹುತಿಯಲ್ಲಿ ನೀರು ಪುರುಷನೆಂಬ ಹೆಸರನ್ನು ಪಡೆಯುತ್ತದೆ.ಆ ಗಭ೯ವು ಜರಾಯುವೆಂಬ ಜರೆಯಿಂದ ಆವೃತವಾಗಿ ಒಂಬತ್ತೋ ಹತ್ತೋ ತಿಂಗಳವರೆಗೆ ಅಥವಾ ಎಷ್ಟುಕಾಲವಿರಬೇಕೋ ಅಷ್ಟು ಒಳಗಿದ್ದುಅನಂತರ ಹುಟ್ಟುತ್ತದೆ.(ಪುಟ 244)
48) 'ಅವನು ಹುಟ್ಟಿದಮೇಲೆ ಆಯಸ್ಸು ಇರುವವರೆಗೆ ಬದುಕಿರುತ್ತಾನೆ.ಕಮ೯ದಿಂದ ನಿದಿ೯ಷ್ಟವಾದ ಪರಲೋಕಕ್ಕೆ ಹೋಗಲು ಮೃತವಾದಾಗ ಅವನನ್ನು -ಯಾವ ಅಗ್ನಿಯಿಂದ ಇಲ್ಲಿಗೆ ಬಂದಿದ್ದನೊ ಯಾವುದರಿಂದ ಹುಟ್ಟಿರುತ್ತಾನೆಯೊ-ಆ ಅಗ್ನಿಗೇ ಇಲ್ಲಿಂದ ಒಯ್ಯುತ್ತಾರೆ.' (ಪುಟ 244)
ಹತ್ತನೆಯ ಖಂಡ:
4೯)ಅವರಲ್ಲಿ ಹೀಗೆ ಅರಿತುಕೊಂಡಿರುವವರು (ಪಂಚಾಗ್ನಿ ವಿದ್ಯೆಯನ್ನು ಅರಿತವರು) ಹಾಗೂ ಅರಣ್ಯದಲ್ಲಿ ಶ್ರದ್ದೆ,ತಪಸ್ಸು,ಮೊದಲಾದುವನ್ನು ಉಪಾಸಿಸುವವರು ಅಚಿ೯ದೇವತೆಯನ್ನು ಸೇರುತ್ತಾರೆ. ಅಚಿ೯ದೇವತೆಯಿಂದ ಅಹದೇ೯ವತೆ-ಶುಕ್ಲಪಕ್ಷದೇವತೆ-ಉತ್ತರಾಯಣ ದೇವತೆ-ಸಂವತ್ಸರ ದೇವತೆಯನ್ನು-ಆದಿತ್ಯದೇವತೆ-ಚಂದ್ರನನ್ನು-ವಿದ್ಯುದ್ದೇವತೆಯನ್ನು ಸೇರುತ್ತಾರೆ.
ಅಲ್ಲಿರುವ ಇವರನ್ನು ಅಮಾನುಷ ಪುರುಷನೊಬ್ಬನು ಸತ್ಯಲೋಕದಲ್ಲಿರುವ ಬ್ರಹ್ಮದ ಬಳಿಗೆ ಸೇರಿಸುತ್ತಾನೆ.ಇದು ದೇವಯಾನ ಮಾಗ೯.(ಪುಟ 245)
50)ಇಲ್ಲಿಂದ ಜನರು ಎಲ್ಲಿಗೆ ಹೋಗುತ್ತಾರೆ ಎಂಬುದನ್ನು ಅರಿತಿರುವೆಯಾ?ಎಂಬ ಪ್ರಶ್ನೆಗೆ ಇಲ್ಲಿ ಉತ್ತರವನ್ನು ಹೇಳಿದೆ.(ಪುಟ 245)
51)ಇನ್ನು ಗ್ರಾಮಗಳಲ್ಲಿ ವಾಸಮಾಡುತ್ತ ಇಷ್ಟಾ-ಪೂತ೯-ದತ್ತಾದಿಗಳನ್ನು ಉಪಾಸಿಸುವವರು ಧೂಮಾಭಿಮಾನೀ ದೇವತೆಯನ್ನು ಸೇರುತ್ತಾರೆ.-ಅಲ್ಲಿಂದ-ರಾತ್ರಿದೇವತೆ-ಕೃಷ್ಣಪಕ್ಷದೇವತೆ-ದಕ್ಷಿಣಾಯನದ ಆರುತಿಂಗಳ ಅಭಿಮಾನಿ ದೇವತೆಯನ್ನು ಸೇರುತ್ತಾರೆ.ಅವರು ಸಂವತ್ಸರ ದೇವತೆಯನ್ನು ಹೊಂದುವುದಿಲ್ಲ.(ಪುಟ 246)
52)ಇಷ್ಟವೆಂದರೆ ಅಗ್ನಿಹೋತ್ರಾದಿ ವೈದಿಕ ಕಮ೯,ಪೂತ೯ವೆಂದರೆವಾಪಿ-ಕೂಪ-ತಡಾಗಾದಿಗಳನ್ನು ಮಾಡಿಸುವುದು.ದತ್ತವೆಂದರೆ ಯಜ್ಞದಲ್ಲಿ ಕೊಡುವ ದಕ್ಷಿಣೆಯಲ್ಲದೆ ವೇದಿಯ ಹೊರಗೆ ಮಾಡುವ ದಾನ)(ಪುಟ 246)
53)ದಕ್ಷಿಣಾಯನದೇವತೆಗಳಿಂದ -ಪಿತೃಲೋಕದೇವತೆ-ಆಕಾಶವನ್ನು-ಚಂದ್ರನನ್ನು ಸೇರುತ್ತಾರೆ.ಇವನು ಸೋಮರಾನು.ಇವನು ದೇವತೆಗಳಿಗೆ ಅನ್ನವು.ಇವನನ್ನು ದೇವತೆಗಳು ತಿನ್ನುತ್ತಾರೆ.(ಪುಟ 247)
54)ಹಿಂದೆ ಶ್ರದ್ಧಾ ಶಬ್ದವಾಚ್ಯವಾದ ನೀರು ದ್ಯುಲೋಕಾಗ್ನಿಯಲ್ಲಿ ಹುತವಾಗಿ ಸೋಮವಾಗುತ್ತದೆ ಎಂದು ಹೇಳಿತ್ತು.ಚಂದ್ರತ್ವವನ್ನು ಪಡೆದುಕೊಂಡ ಆ ನೀರು ಇಷ್ಟವೇ ಮೊದಲಾದ ಕಮ೯ಗಳನ್ನು ಮಾಡುವ ಶರೀರಾದಿಗಳನ್ನು ಉಂಟು ಮಾಡುತ್ತದೆ.ಇವರು ಇಷ್ಟವೇ ಮೊದಲಾದವುಗಳ ಫಲಗಳನ್ನು ಭೋಗಿಸುತ್ತ ದೇವತೆಗಳಿಗೂ ಭೋಗ್ಯವಾಗಿ ಕಮ೯ಕ್ಷಯವಾಗುವವರೆಗೂ ಅಲ್ಲಿಯೇ ಇರುವರು.(ಪುಟ 247)
55)ಅಲ್ಲಿ ಕಮ೯ಕ್ಷಯವಾಗುವವರೆಗೂ ಇದ್ದು ಅನಂತರ ಬಂದ ಮಾಗ೯ದಿಂದಲೇ ಪುನಃ ಹಿಂತಿರುಗುವರು.ಅವರು ಭೌತಿಕಾಕಾಶವನ್ನು ಸೇರುತ್ತಾರೆ.ಭೌತಿಕಾಕಾಶದಿಂದ ವಾಯುವನ್ನು;ವಾಯುವಾಗಿ ಧೂಮವಾಗುತ್ತಾರೆ.ಧೂಮವಾಗಿ ಅಭ್ರವಾಗುತ್ತಾರೆ.(ಅಭ್ರ ಎಂದರೆ ಮೋಡ)
(ಪುಟ 248)
56)ಅಭ್ರವಾಗಿ ಮೇಘವಾಗುತ್ತಾರೆ.ಮೇಘವಾಗಿ ಮಳೆಯ ಧಾರೆಯ ರೂಪದಿಂದ ಕೆಳಗೆ ಬೀಳುತ್ತಾರೆ.ಅವರು ಅಲ್ಲಿ ಬತ್ತ,ಜವೆ,ಮೂಲಿಕೆಮರಗಳು,ಎಳ್ಳುದ್ದುಗಳು ಆಗಿಹುಟ್ಟುತ್ತಾರೆ.ಆದುದರಿಂದಲೇ ಇವುಗಳಿಂದ ತಪ್ಪಿಸಿಕೊಳ್ಳುವುದು ಕಷ್ಟ.ಏಕೆಂದರೆ ಯಾವ ಯಾವನು ಅನ್ನವನ್ನು ತಿನ್ನುತ್ತಾನೆಯೊ ರೇತಸ್ಸನ್ನು ಸೇಚಿಸುತ್ತಾನೆಯೊ ಅವನಂತೆಯೇ ಆಗುತ್ತಾರೆ.(ಪುಟ 248)
57)ಮೂಲದಲ್ಲಿ ಏಕವಚನ ನಿದೇ೯ಶವಿರುವುದು ಜೀವರೆಲ್ಲ ಮೇಘದಲ್ಲಿ ಒಂದಾಗಿರುವುದರಿಂದ(ಪುಟ 248)
58)ಗೋವಿನಿಂದ ಗವಾಕೃತಿಯು ಹುಟ್ಟುತ್ತದೆಯೇ ಹೊರತು ಬೇರೊಂದು ಜಾತಿಯ ಆಕೃತಿಯು ಹುಟ್ಟುವುದಿಲ್ಲ.(ಪುಟ 24೯)
5೯)ಅವರಲ್ಲಿ ಯಾರು ಇಲ್ಲಿ ರಮಣೀಯಚರಣರೊ ಅವರು ರಮಣೀಯ ಯೋನಿಯನ್ನು -ಬ್ರಾಹಣ ಯೋನಿಯನ್ನಾಗಲಿ,ಕ್ಷತ್ರಿಯ ಯೋನಿಯನ್ನಾಗಲಿ ಅಥವಾ ವೈಶ್ಯಯೋನಿಯನ್ನಗಲಿ- ಪಡೆಯುತ್ತಾರೆ. ಆದರೆ ಯಾರು ಇಲ್ಲಿ ಕಪೂರಚರಣರೊ ಅವರು ಕೆಟ್ಟ ಯೋನಿಯನ್ನು-ನಾಯಿಯ ಯೋನಿಯನ್ನಾಗಲಿ ಸೂಕರ ಯೋನಿಯನ್ನಾಗಲಿ ಅಥವಾ ಚಂಡಾಲ ಯೋನಿಯನ್ನಾಗಲಿ ಪಡೆಯುತ್ತಾರೆ.(ಪುಟ 24೯)
60)ಇನ್ನು ಈ ಎರಡು ಪಥಗಳಲ್ಲಿ ಯಾವೊಂದರಿಂದಲೂ ಹೋಗದವರು ಪುನಃ ಪುನಃ ಹಿಂತಿರುಗುವ ಕ್ಷುದ್ರವಾದ ಜಂತುಗಳಾಗಿ ಹುಟ್ಟುತ್ತಾರೆ."ಹುಟ್ಟು ಸಾಯಿ"ಎಂಬುದು ಇವರ ಮೂರನೆಯ ಸ್ಥಾನವು.ಆದ ಕಾರಣ ಆ ಚಂದ್ರಲೋಕವು ತುಂಬುವುದಿಲ್ಲ.ಆದುದರಿಂದ ಜಿಗುಪ್ಸೆಪಡಬೇಕು.(ಪುಟ 250)
61) ಇಷ್ಟಾದಿ ಕಮ೯ಗಳನ್ನು ಮಾಡಿ ಧೂಮಾದಿಮಾಗ೯ದಲ್ಲಿ ಹೋಗಿ ಬರುವವರು ಒಂದು ಪಥ. ಪಂಚಾಗ್ನಿ ವಿದ್ಯೆಯೇ ಮೊದಲಾದವನ್ನು ಪಡೆದು ಅಚಿ೯ರಾದಿ ಮಾಗ೯ದಿಂದ ಹೋಗುವವರು ಎರಡನೆಯ ಪಥದವರು.ಉಭಯಮಾಗ೯ ಭ್ರಷ್ಟರು ಎಂದಥ೯.ಸಂಸಾರಗತಿಯಲ್ಲಿ ಜಿಗುಪ್ಸೆ ಮಾಡಬೇಕು ಎಂದು ವ್ಯರಾಗ್ಯ ಉಪದೇಶವನ್ನು ಹೇಳಿದೆ. (ಪುಟ 250)
62)ಚಿನ್ನವನ್ನು ಕದಿಯುವವನು,ಹೆಂಡವನ್ನು ಕುಡಿಯುವವನು,ಗುರುತಲ್ಪಗಮನ ಮಾಡುವವನು,ಬ್ರಹ್ಮಹತ್ಯೆ ಮಾಡುವವನು -ಈ ನಾಲ್ವರು ಮತ್ತು ಇವರೊಂದಿಗೆ ಆಚರಿಸುವ ಐದನೆಯವನು ಪತಿತರಾಗುವರು.(ಪುಟ 251)
ಹನ್ನೊಂದನೆ ಖಂಡ:
63)ಪ್ರಾಚೀನಶಾಲ ಔಪಮನ್ಯವ,ಸತ್ಯಯಜ್ಞ ಪೌಲುಷಿ,ಇಂದ್ರದ್ಯುಮ್ನ ಭಾಲ್ಲವೇಯ,ಜನಶಾಕ೯ರಾಕ್ಷ್ಯ,ಬುಡಿಲ ಅಶ್ವತರಾಸ್ವಿ ಎಂಬ ಮಹಾ ಗೃಹಸ್ಥರೂ ಮಹಾ ಶ್ರೋತ್ರಿಯರೂ ಆದ ಐವರು ಒಟ್ಟುಗೂಡಿ ನಮ್ಮ ಆತ್ಮನು ಯಾರು?ಬ್ರಹ್ಮವು ಯಾವುದು?ಎಂದು ವಿಚಾರ ಮಾಡಿದರು.(ಪುಟ 252)
64) ಆತ್ಮಬ್ರಹ್ಮ ಶಬ್ದವು ಶರೀರದಿಂದ ಪರಿಚ್ಚಿನ್ನವಾದ ಆತ್ಮನನ್ನು ಪ್ರತ್ಯೇಕಿಸುತ್ತದೆ.ಇವೆರಡರಲ್ಲಿ ಯಾವ ಭೇದವೂ ಇಲ್ಲದಿರುವುದರಿಂದ ಆತ್ಮನೇ ಬ್ರಹ್ಮ.ಬ್ರಹ್ಮವೇ ಆತ್ಮ. ಬ್ರಹ್ಮ ಎಂಬ ಶಬ್ದಗಳು ಒಂದಕ್ಕೊಂದು ವಿಶೇಷ -ವಿಶೇಷ್ಯಗಳಾಗಿವೆ.ಆದುದರಿಂದ ವೈಶ್ವಾನರ ಬ್ರಹ್ಮವೇ ನಮ್ಮ ನಮ್ಮ ಆತ್ಮನೆಂಬುದು ಸಿದ್ಧವಾಗುತ್ತದೆ.(ಪುಟ 253)
65)ಅವರೆಲ್ಲರೂ ಸೇರಿ ವಿಚಾರಮಾಡಿದರೂ ನಿಶ್ಚಯವನ್ನು ಹೊಂದದೆ ಒಬ್ಬ ಉಪದೇಶಕನನ್ನು ಗೊತ್ತುಪಡಿಸಿಕೊಂಡರು.'ಉದ್ಧಾಲಕ ಅರುಣಿಯು ಈ ವೈಶ್ವಾನರಾತ್ಮನನ್ನು ಚೆನ್ನಾಗಿ ಅರಿತುಕೊಂಡಿರುತ್ತಾನೆ.ಸರಿ ಅವನ ಬಳಿಗೆ ಹೋಗೋಣ'ಎಂದು ಅವರು ಅವನ ಬಳಿಗೆ ಹೋದರು.(ಪುಟ 253)
66)ಉದ್ಧಾಲಕನು ಇನ್ನೊಬ್ಬ ಆಚಾಯ೯ ಅಶ್ವಪತಿ ಕೈಕೇಯನು ಈ ವ್ಯಶ್ವಾನರ ಆತ್ಮವನ್ನು ಚೆನ್ನಾಗಿ ಅರಿತುಕೊಂಡಿರುತ್ತಾನೆ.ಅವನ ಬಳಿಗೆ ಹೋಗೋಣ' ಎಂದು ಎಲ್ಲರೂ ಅವನ ಬಳಿಗೆ ಹೋದರು.
(ಪುಟ 254)
67) ಮರುದಿನ ಬೆಳಿಗ್ಗೆ ಸಮಿತ್ಪಾಣಿಯಾಗಿ ರಾಜನಲ್ಲಿಗೆ ಬಂದರು.ಅವರಿಗೆ ಉಪನಯನವನ್ನು ಮಾಡದೆಯೇ ಇದನ್ನು (ವೈಶ್ವಾನರವಿದ್ಯೆಯನ್ನು) ಹೇಳುದನು(ಪುಟ 256)
ಹನ್ನೆರಡನೆಯ ಖಂಡ:
68)ರಾಜ:ಹೇ ಔಪಮನ್ಯುವ,'ನೀನು ಯಾರನ್ನು ವ್ಯಶ್ವಾನರಾತ್ಮನೆಂದು ಉಪಾಸಿಸುತ್ತೀಯೆ?'
ಔಪಮನ್ಯವ:ಭಗವಂತನಾದ ರಾಜನೆ ದ್ಯುಲೋಕವನ್ನೇ'
ರಾಜ:ನೀನು ಯಾರನ್ನು ಆತ್ಮನೆಂದು ಉಪಾಸಿಸುತ್ತೀಯೊ ಅವನು ಸಂತೇಜಸ್ಸನೆಂಬ ವೈಶ್ವಾನರಾತ್ಮನು.ಆದುದರಿಂದ ನಿನ್ನ ಕುಲದಲ್ಲಿ ಸುತ,ಪ್ರಸುತ,ಆಸುತ ಎಂಬ ಸೋಮಪಾನೀಯಗಳು ಕಂಡುಬರುತ್ತವೆ.ನೀನು ಅನ್ನವನ್ನು ತಿನ್ನುತ್ತೀಯೆ.ಪುತ್ರ ಪೌತ್ರಾದಿ ಪ್ರಿಯರನ್ನು ನೋಡುತ್ತೀಯೆ.ಯಾವನು ಹೀಗೆ ವೈಶ್ವಾನರನನ್ನು ಉಪಾಸಿಸುವನೊ ಅವನು ಅನ್ನವನ್ನು ತಿನ್ನುತ್ತಾನೆ.,ಪ್ರಿಯವನ್ನು ನೋಡುತ್ತಾನೆ.ಅವನ ಕುಲದಲ್ಲಿ ಬ್ರಹ್ಮವಚ೯ಸ್ಸು ಇರುತ್ತದೆ.ಆದರೆ ಇವನು ವೈಶ್ವನರಾತ್ಮನ ತಲೆಯೇ.ನೀನು ನನ್ನ ಬಳಿಗೆ ಬಾರದೇ ಇದ್ದರೆ ನಿನ್ನ ತಲೆ ಬಿದ್ದು ಹೋಗುತ್ತಿತ್ತು.'(ಪುಟ 257)
ಹದಿಮೂರನೆಯ ಖಂಡ:
6೯) ರಾಜನು ಸತ್ಯಯಜ್ಞ ಪೌಲುಶಿಯನ್ನು ಕೇಳಿದನು.ನೀನು ಯಾರನ್ನು ವೈಶ್ವಾನರನೆಂದು ಉಪಾಸಿಸುತ್ತೀಯೆ?
ಸತ್ಯಯಜ್ಞ:ಭಗವಂತನಾದ ರಾಜನೆ,ಆದಿತ್ಯನನ್ನೇ'.
ಸತ್ಯಯಜ್ಞ:ಭಗವಂತನಾದ ರಾಜನೆ ಆದಿತ್ಯನನ್ನೇ'
ರಾಜ:ನೀನು ಯಾರನ್ನು ಆತ್ಮನೆಂದು ಉಪಾಸಿಸುತ್ತೀಯೊ ಅವನು ವಿಶ್ವರೂಪನೆಂಬ ವೈಶ್ವಾನರಾತ್ಮನು.ಆದುದರಿಂದ ನಿನ್ನ ಕುಲದಲ್ಲಿ ಬಹು ವಿಶ್ವರೂಪವು ಕಂಡುಬರುತ್ತವೆ.ನೀನು ಅನ್ನವನ್ನು ತಿನ್ನುತ್ತೀಯೆ.ಪುತ್ರ ಪೌತ್ರಾದಿ ಪ್ರಿಯರನ್ನು ನೋಡುತ್ತೀಯೆ.ಯಾವನು ಹೀಗೆ ಈ ವೈಶ್ವಾನರಾತ್ಮನನ್ನು ಉಪಾಸಿಸುವನೊ ಅವನು ಅನ್ನವನ್ನು ತಿನ್ನುತ್ತಾನೆ,ಪ್ರಿಯವನ್ನು ನೋಡುತ್ತಾನೆ.ಅವನ ಕುಲದಲ್ಲಿ ಬ್ರಹ್ಮವಚ೯ಸ್ಸು ಇರುತ್ತದೆ.ಆದರೆ ಇವನು ವೈಶ್ವನರಾತ್ಮನ ಕಣ್ಣೇ.ನೀನು ನನ್ನ ಬಳಿಗೆ ಬಾರದೇ ಇದ್ದರೆ ನಿನ್ನ ಕಣ್ಣು ಕುರುಡಾಗುತ್ತಿತ್ತು.'(ಪುಟ 257)
ಹದಿನಾಲ್ಕನೆಯ ಖಂಡ:
70)ರಾಜನು ಇಂದ್ರದ್ಯುಮ್ನ ಭಾಲ್ಲವೇಯನನ್ನು ಕೇಳಿದನು.ಹೇ ವೈಯಾಗ್ರ ಪದ್ಯ,ನೀನು ಯಾರನ್ನು ವೈಶ್ವಾನರಾತ್ಮನೆಂದು ಉಪಾಸಿಸುತ್ತೀಯೆ?
ಇಂದ್ರದ್ಯುಮ್ನ:'ಭಗವಂತನಾದ ರಾಜನೆ ವಾಯುವನ್ನೆ'
ರಾಜ:ನೀನು ಯಾರನ್ನು ಆತ್ಮನೆಂದು ಉಪಾಸಿಸುತ್ತೀಯೊ ಅವನು ಪೃಥಗ್ವಥ೯ನೆಂಬ ವೈಶ್ವಾನರಾತ್ಮನು.ಆದುದರಿಂದ ನಿನಗೆ ಕಾಣಿಕೆಗಳು ನಾನಾ ಕಡೆಯಿಂದ ಬರುತ್ತಿವೆ.ರಥಶ್ರೇಣಿಗಳು ನಾಮಾ ವಿಧವಾಗಿ ನಿನ್ನನ್ನು ಅನುಸರಿಸುತ್ತಿವೆ.ನೀನು ಅನ್ನವನ್ನು ತಿನ್ನುತ್ತೀಯೆ.ಪುತ್ರ ಪೌತ್ರಾದಿ ಪ್ರಿಯರನ್ನು ನೋಡುತ್ತೀಯೆ.ಯಾವನು ಹೀಗೆ ಈ ವೈಶ್ವಾನರಾತ್ಮನನ್ನು ಉಪಾಸಿಸುವನೊ ಅವನು ಅನ್ನವನ್ನು ತಿನ್ನುತ್ತಾನೆ,ಪ್ರಿಯವನ್ನು ನೋಡುತ್ತಾನೆ.ಅವನ ಕುಲದಲ್ಲಿ ಬ್ರಹ್ಮವಚ೯ಸ್ಸು ಇರುತ್ತದೆ.ಆದರೆ ಇವನು ವೈಶ್ವನರಾತ್ಮನ Pಪ್ರಾಣವೇ.ನೀನು ನನ್ನ ಬಳಿಗೆ ಬಾರದೇ ಇದ್ದರೆ ನಿನ್ನ ಪ್ರಾಣವು ಉತ್ಕ್ರಮಿಸುತ್ತಿತ್ತು.'(ಪುಟ 260)
ಹದಿನೈದನೆಯ ಖಂಡ:
71)ರಾಜನು ಜನನನ್ನು ಕೇಳಿದನು ಹೇ, ಶಾಕ೯ರಾಕ್ಷ್ಯ'ನೀನು ಯಾರನ್ನು ವೈಶ್ವಾನರನೆಂದು ಉಪಾಸಿಸಿತ್ತೀಯೆ?
ಜನ:ಭಗವಂತನಾದ ರಾಜನೆ ಆಕಾಶವನ್ನೇ'.
ರಾಜ:ನೀನು ಯಾರನ್ನು ಆತ್ಮನೆಂದು ಉಪಾಸಿಸುತ್ತೀಯೊ ಅವನು ಬಹುಲನೆಂಬ ವೈಶ್ವಾನರಾತ್ಮನು.ಆದುದರಿಂದ ನೀನು ಸಂತತಿಯಿಂದಲೂ ಧನದಿಂದಲೂ ಪೂಣ೯ನಾಗಿರುವೆ.ನೀನು ಅನ್ನವನ್ನು ತಿನ್ನುತ್ತೀಯೆ.ಪುತ್ರ ಪೌತ್ರಾದಿ ಪ್ರಿಯರನ್ನು ನೋಡುತ್ತೀಯೆ.ಯಾವನು ಹೀಗೆ ಈ ವೈಶ್ವಾನರಾತ್ಮನನ್ನು ಉಪಾಸಿಸುವನೊ ಅವನು ಅನ್ನವನ್ನು ತಿನ್ನುತ್ತಾನೆ,ಪ್ರಿಯವನ್ನು ನೋಡುತ್ತಾನೆ.ಅವನ ಕುಲದಲ್ಲಿ ಬ್ರಹ್ಮವಚ೯ಸ್ಸು ಇರುತ್ತದೆ.ಆದರೆ ಇವನು ವೈಶ್ವನರಾತ್ಮನ ಮುಂಡವೇ.ನೀನು ನನ್ನ ಬಳಿಗೆ ಬಾರದೇ ಇದ್ದರೆ ನಿನ್ನ ಮುಂಡವು ನಾಶವಾಗುತ್ತಿತ್ತು.'(ಪುಟ 260)
ಹದಿನಾರನೆಯ ಖಂಡ:
72)ರಾಜನು ಬುಡಿಲ ಅಶ್ವತರಾಶ್ವಿಯನ್ನು ಕೇಳಿದನು:ಹೇ,ವೈಯಾಗ್ರಪದ್ಯ,ನೀನು ಯಾರನ್ನು ವೈಶ್ವಾನರನೆಂದು ಉಪಾಸಿಸುತ್ತೀಯೆ?'
ಜನ: 'ಭಗವಂತನಾದ ರಾಜನೆ,ಆಕಾಶವನ್ನೆ'
ರಾಜ:ನೀನು ಯಾರನ್ನು ಆತ್ಮನೆಂದು ಉಪಾಸಿಸುತ್ತೀಯೊ ಅವನು ರಯಿ ಎಂಬ ವೈಶ್ವಾನರಾತ್ಮನು.ಆದುದರಿಂದ ನೀನು ಧನವಂತನೂ ಪುಷ್ಟಿವಂತನೂ ಆಗಿರುವೆ.ನೀನು ಅನ್ನವನ್ನು ತಿನ್ನುತ್ತೀಯೆ.ಪುತ್ರ ಪೌತ್ರಾದಿ ಪ್ರಿಯರನ್ನು ನೋಡುತ್ತೀಯೆ.ಯಾವನು ಹೀಗೆ ಈ ವೈಶ್ವಾನರಾತ್ಮನನ್ನು ಉಪಾಸಿಸುವನೊ ಅವನು ಅನ್ನವನ್ನು ತಿನ್ನುತ್ತಾನೆ,ಪ್ರಿಯವನ್ನು ನೋಡುತ್ತಾನೆ.ಅವನ ಕುಲದಲ್ಲಿ ಬ್ರಹ್ಮವಚ೯ಸ್ಸು ಇರುತ್ತದೆ.ಆದರೆ ಇವನು ವೈಶ್ವನರಾತ್ಮನ ಮೂತ್ರಾಶಯವೇ.ನೀನು ನನ್ನ ಬಳಿಗೆ ಬಾರದೇ ಇದ್ದರೆ ನಿನ್ನ ಮೂತ್ರಾಶಯವು ನಾಶವಾಗುತ್ತಿತ್ತು.'(ಪುಟ 262)
ಹದಿನೇಳನೆಯ ಖಂಡ:
73)ರಾಜನು ಉದ್ಧಾಲಕ ಅರುಣಿಯನ್ನು ಕೇಳಿದನು:'ಹೇ ಗೌತಮ.ನೀನು ಯಾರನ್ನು ವೈಶ್ವಾನರನೆಂದು ಉಪಾಸಿಸುತ್ತೀಯೆ?'
ಉದ್ಧಾಲಕ:'ಭಗವಂತನಾದ ರಾಜನೆ,ಪೃಥ್ವಿಯನ್ನೇ.'
ರಾಜ:ನೀನು ಯಾರನ್ನು ಆತ್ಮನೆಂದು ಉಪಾಸಿಸುತ್ತೀಯೊ ಅವನು ಪ್ರತಿಷ್ಠೆ ಎಂಬ ವೈಶ್ವಾನರಾತ್ಮನು.ಆದುದರಿಂದ ನೀನು ಸಂತತಿಯಿಂದಲೂ ಪಶುಗಳಿಂದಲೂ ಪ್ರತಿಷ್ಠಿತನಾಗಿರುವೆ.ನೀನು ಅನ್ನವನ್ನು ತಿನ್ನುತ್ತೀಯೆ.ಪುತ್ರ ಪೌತ್ರಾದಿ ಪ್ರಿಯರನ್ನು ನೋಡುತ್ತೀಯೆ.ಯಾವನು ಹೀಗೆ ಈ ವೈಶ್ವಾನರಾತ್ಮನನ್ನು ಉಪಾಸಿಸುವನೊ ಅವನು ಅನ್ನವನ್ನು ತಿನ್ನುತ್ತಾನೆ,ಪ್ರಿಯವನ್ನು ನೋಡುತ್ತಾನೆ.ಅವನ ಕುಲದಲ್ಲಿ ಬ್ರಹ್ಮವಚ೯ಸ್ಸು ಇರುತ್ತದೆ.ಆದರೆ ಇವನು ವೈಶ್ವನರಾತ್ಮನ ಪಾದಗಳೇ.ನೀನು ನನ್ನ ಬಳಿಗೆ ಬಾರದೇ ಇದ್ದರೆ ನಿನ್ನ ಪಾದಗಳು ಶಿಥಿಲವಾಗುತ್ತಿತ್ತು.'(ಪುಟ 26
ಹದಿನೆಂಟನೆಯ ಖಂಡ:
74) ರಾಜನು ಅವನನ್ನು ಕುರಿತು ಹೇಳಿದನು.'ನೀವೆಲ್ಲರೂ ಈ ವೈಶ್ವಾನರಾತ್ಮನನ್ನು ಬೇರೆಯಾಗಿದ್ದಂತೆ
ಅರಿತವರಾಗಿ ಅನ್ನವನ್ನು ತಿನ್ನುತ್ತಿದ್ದೀರಿ.ಆದರೆ ಆವನು ಪ್ರಾದೇಶಮಾತ್ರನೊ,ಅಭಿವಿಮಾನಿಯೂ ಆದ ಈ ವೈಶ್ವಾನರಾತ್ಮನನ್ನು ಹೀಗೆ ಉಪಾಸಿಸುವನೊ ಅವನು ಸವ೯ಲೋಕಗಳಲ್ಲಿಯೂ ಸವ೯ಪ್ರಾಣಿಗಳಲ್ಲಿಯೂ ,ಎಲ್ಲ ಆತ್ಮಗಳಲ್ಲಿಯೂ ಅನ್ನವನ್ನು ತಿನ್ನುತ್ತಾನೆ.(ಪುಟ 264)
75) ಎಲ್ಲ ನರರನ್ನೂ ಪಾಪಪುಣ್ಯಾನುರೂಪವಾದ ಗತಿಗೆ ಒಯ್ಯುವುದರಿಂದ ಸವಾ೯ತ್ಮನಾದ ಈಶ್ವರನು ವೈಶ್ವಾನರನು ಎನಿಸಿರುವನು.ಅಥವಾ ಎಲ್ಲಾ ನರರೂ ಅವನೇ ಆಗಿರುವುದರಿಂದ ವೈಶ್ವಾನರನು.(ಪುಟ 264)
76)ಈ ವೈಶ್ವಾನರಾತ್ಮ ತಲೆಯೇ ಸಂತೇಜಸ್ಸು,ಕಣ್ಣೇ ವಿಶ್ವರೂಪವುಪ್ರಾಣನು ಪೃಥಗ್ವತ್ಮಾತ್ಮನು.ಮುಂಡವೇ ಬಹುಲನು,ಮೂತ್ರಾಶಯವೇ ರಯಿಯು,ಪಾದಗಳೇ ಪೃಥ್ವಿಯು,ಎದೆಯೇ ವೇದಿ.(ಎದೆಯಮೇಲೆ ಹರಡಿಕೊಂಡಿರುವವನು),ರೋಮಗಳೇ ಬಹಿ೯,ಹೃದಯವೇ ಗಾಹ೯ಪತ್ಯ,ಮನಸ್ಸೇ ದಕ್ಷಿಣಾಗ್ನಿ.ಬಾಯೇ ಅಹವನೀಯವು.(ಪುಟ 266)
ಹತ್ತೊಂಬತ್ತನೆಯ ಖಂಡ:
77) ಭೋಜನಕಾಲದಲ್ಲಿ ಮೊದಲು ತೆಗೆದುಕೊಂಡ ಅನ್ನವನ್ನು ಹೋಮಮಾಡಬೇಕು.
1) ಪ್ರಾಣಾಯ ಸ್ವಾಹಾ-ಪ್ರಾಣವು ತೃಪ್ತವಾಗುತ್ತದೆ.
2)ವ್ಯಾನಾಯ ಸ್ವಾಹಾ-ಕಿವಿಯು ತೃಪ್ತವಾಗುತ್ತದೆ.
3)ಅಪಾನಾಯ ಸ್ವಾಹಾ-ವಾಕ್ಕು ತೃಪ್ತವಾಗುತ್ತದೆ.
4)ಸಮಾನಾಯ ಸ್ವಾಹಾ-ಮನಸ್ಸು ತೃಪ್ರವಾಗುತ್ತದೆ.
5)ಉದಾನಾಯ ಸ್ವಾಹಾ-ಚಮ೯ವು ತೃಪ್ತವಾಗುತ್ತದೆ (ಪುಟ272)
78) ಆದರೆ ಯಾವ ವೈಶ್ವಾನರೋಪಾಸಕನು ಇದನ್ನು ಹೀಗೆ ಅರಿತುಕೊಂಡು ಅಗ್ನಿಹೋತ್ರವನ್ನು ಅರಿತುಕೊಂಡು ಹೋಮಮಾಡುವನೊ ಅZವನ ಆಹುತಿಯು ಸವಲೋಕಗಳಲ್ಲಿಯೂ ಸವ೯ಪ್ರಾಣಿಗಳಲ್ಲಿಯೂ ಸವ೯ ಆತ್ಮಗಳಲ್ಲಿಯೂ ಹುತವಾಗುತ್ತದೆ.(ಪುಟ 273)
7೯)ಯಾವನು ಇದನ್ನು ಹೀಗೆ ಅರಿತುಕೊಂಡು ಅಗ್ನಿಹೋತ್ರವನ್ನು ಹೋಮಮಾಡುವನೊ ಅವನ ಎಲ್ಲ ಪಾಪಗಳೂ -ಅಗ್ನಿಯಲ್ಲಿ ಹಾಕಿದ ಇóಷೀಕದ ಕಡ್ಡಿಗಳಂತೆ -ಸುಟ್ಟುಹೋಗುತ್ತವೆ.(ಪುಟ 274)
80) "ಹಸಿದ ಮಕ್ಕಳು ತಾಯಿಯನ್ನೇ ಹೇಗೆ ಉಪಾಸಿಸುವರೊ ಹಾಗೆಯೇ ಸವ೯ಪ್ರಾಣಿಗಳು ಅಗ್ನಿಹೋತ್ರವನ್ನು ಉಪಾಸಿಸುತ್ತವೆ.ನಿಜವಾಗಿ ಅಗ್ನಿಹೋತ್ರವನ್ನು ಉಪಾಸಿಸುತ್ತವೆ.(ಪುಟ275)
81)ತಾಯಿಯಸುತ್ತಲೂ ಕುಳಿತುಕೊಂಡು 'ತಾಯಿಯು ನಮಗೆ ಯಾವಾಗ ಅನ್ನವನ್ನು ಕೊಡುವಳೊ'ಎಂದು ನಿರೀಕ್ಷಿಸುವರೊ(ಪುಟ275)
82)ಇವನು ಯಾವಾಗ ಭೋಜನವನ್ನು ಮಾಡುವನೊ ಎಂದು ಕಾದುಕೊಂಡಿರುತ್ತವೆ.(ಪುಟ 275)
83)ಜಗತ್ತೆಲ್ಲವೂ ಇಂಥ ಉಪಾಸಕನ ಭೋಜನದಿಂದ ತೃಪ್ತವಾಗುತ್ತವೆ ಎಂದಥ೯(ಪುಟ 275)
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,ಐದನೆಯ ಅಧ್ಯಾಯ ಮುಕ್ತಾಯ,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
ಆರನೆಯ ಅಧ್ಯಾಯ: (ಇಲ್ಲಿಂದ ಬ್ರಹ್ಮವಿದ್ಯೆ ಪ್ರಾರಂಭ)
ಮೊದಲನೆಯ ಖಂಡ:
1)ಒಂದಾನೊಂದು ಕಾಲದಲ್ಲಿ ಶ್ವೇತಕೇತು ಆರುಣೇಯ ಎಂಬುವವನು ಇದ್ದನು.ಅವನ ತಂದೆಯಾದ ಉದ್ಧಾಲಕ ಆರುಣಿಯು ಅವನಿಗೆ ಹೇಳಿದನು:'ಶ್ವೇತಕೇತು ,ಬ್ರಹ್ಮಚಯ೯ವನ್ನು ವಾಸಮಾಡು.ಸೋಮ್ಯ,ನಮ್ಮ ಕುಲದಲ್ಲಿ ಹುಟ್ಟಿದ ಯಾವನೂ ಅಧ್ಯಯನ ಮಾಡದೆ ಬ್ರಹ್ಮಬಂಧುವಿನಂತೆ ಇರುವುದಿಲ್ಲ.'(ಪುಟ 276)
(ನಮ್ಮ ಕುಲಕ್ಕೆ ಅನುರೂಪನಾದ ಗುರುವಿನ ಬಳಿಗೆ ಹೋಗಿಬ್ರಹ್ಮಚಯ೯ವನ್ನು ಅವಲಂಬಿಸು ಎಂದಥ೯)
(ಸ್ವಯಂ ಬ್ರಾಹ್ಮಣ ಶೀಲವಿಲ್ಲದವನಾಗಿ ಇತರ ಬ್ರಾಹ್ಮಣರನ್ನು ತನ್ನ ನೆಂಟರೆಂದು ಹೇಳಿಕೊಳ್ಳುವವನು.)
2)ಶ್ವೇತಕೇತುವು ತಾನು ಹನ್ನೆರಡು ವಷ೯ದವನಾದಾಗ ಆಚಾಯ೯ನ ಬಳಿ ಸಾರಿ ಇಪ್ಪತ್ತನಾಲ್ಕು ವಷ೯ದವನಾಗುವವರೆಗೆ ವೇದಗಳನ್ನೆಲ್ಲ ಅಧ್ಯಯನ ಮಾಡಿ ಗಂಭೀರಮನಸ್ಸುಳ್ಳವನೂ ವೇದಜ್ಞಾನಾಭಿಮಾನಿಯೂ ಅವಿನೀತ ಸ್ವಭಾವದವನೂ ಆಗಿ ಹಿಂತಿರುಗಿದನು.ಅವನ ತಂದೆಯು ಅವನಿಗೆ ಹೀಗೆ ಹೇಳಿದನು: 'ಶ್ವೇತಕೇತು ,ಸೋಮ್ಯ,ನೀನು ಗಂಭೀರಮನಸ್ಸುಳ್ಳವನೂ ವೇದಜ್ಞಾನಾಭಿಮಾನಿಯೂ ಅವಿನೀತ ಸ್ವಭಾವದವನೂಆಗಿರುವುದರಿಂದ-,ಯಾವುದರಿಂದ ಶ್ರುತವು ಅಶ್ರುತವಾಗುವುದೊ, ಅಮೃತವು ಮೃತವಾಗುವುದೊ,ಅವಿಜ್ಞಾತವು ವಿಜ್ಞಾತವಾಗುವುದೊ -ಆ ಆದೇಶವನ್ನು ಕೇಳಿದೆಯೊ?'(ಪುಟ 278)
(ವೇದಗಳನ್ನೆಲ್ಲ ಅಧ್ಯಯನ ಮಾಡಿದ್ದರೂ ಆತ್ಮತತ್ವವನ್ನು ಅರಿತುಕೊಳ್ಳದೆ ಇರುವವರೆಗೆ ಮನುಷ್ಯನು ಅಕೃತಾಥ೯ನಾಗಿರುತ್ತಾನೆ ಎಂದಥ೯.)
ಶ್ವೇತಕೇತು:'ಭಗವಂತನೆ ಆ ಆದೇಶವು ಯಾವುದು?'
3)'ಸೋಮ್ಯ.ಹೇಗೆ ಒಂದು ಮಣ್ಣುಮುದ್ದೆಯನ್ನು ಅರಿತುಕೊಂಡಿದ್ದರಿಂದ ಮಣ್ಣಿನಿಂದ ಮಾಡಿದ ವಸ್ತುಗಳೆಲ್ಲ ತಿಳಿಯಲ್ಪಟ್ಟದ್ದಾಗುವುದೊ-(ಏಕೆಂದರೆ) ವಸ್ತುವಿನ ಪರಿಣಾಮವು ವಾಕ್ಕನ್ನು ಅವಲಂಬಿಸಿರುವ ಕೇವಲ ಹೆಸರೇ:
ಸೋಮ್ಯ,ಹೇಗೆ ಒಂದು ಚಿನ್ನದ ಗಟ್ಟಿಯನ್ನು ಅರಿತುಕೊಂಡಿದ್ದರಿಂದ ಚಿನ್ನದಿಂದ ಮಾಡಿದ ವಸ್ತುಗಳೆಲ್ಲಾ ತಿಳಿಯಲ್ಪಟ್ಟದ್ದಾಗುವುದೊ-(ಏಕೆಂದರೆ) ವಸ್ತುವಿನ ಪರಿಣಾಮವು ವಾಕ್ಕನ್ನು ಅವಲಂಬಿಸಿರುವ ಕೇವಲ ಹೆಸರೇ;
ಸೋಮ್ಯ,ಹೇಗೆ ಒಂದು ಕಬ್ಬಿಣದ ಉಗುರುಕತ್ತರಿಯನ್ನು ತಿಳಿದುಕೊಂಡಿದ್ದರಿಂದ ಕಬ್ಬಿಣದಿಂದ ಮಾಡಿದ ವಸ್ತುಗಳೆಲ್ಲ ತಿಳಿಯಲ್ಪಟ್ಟಿದ್ದಾಗುವುದೊ -(ಏಕೆಂದರೆ) ವಸ್ತುವಿನ ಪರಿಣಾಮವು ವಾಕ್ಕನ್ನು ಅವಲಂಬಿಸಿರುವ ಕೇವಲ ಹೆಸರೇ;ಹಾಗೆಯೇ ಸೋಮ್ಯನೆ,ಆ ಆದೇಶ.'(ಪುಟ 27೯)
(ಗಡಿಗೆ ಮೊದಲಾದುವಕ್ಕೆ ಕಾರಣವಾಗಿರುವ ಮಣ್ಣು ಮುದ್ದೆ;ಕಾರಣವೂ ಕಾಯ೯ವೂ ಅನನ್ಯ ವಾಗಿರುವುದರಿಂದ ಒಂದನ್ನು ಅರಿತುಕೊಂಡರೆ ಇನ್ನೊಂದನ್ನು ಅರಿತುಕೊಂಡಂತಾಗುತ್ತದೆ.'ಇದು ಕಾರಣ,ಇದು ಇದರ ಪರಿಣಾಮ'ಎಂಬ ಲೋಕ ವ್ಯವಹಾರಕ್ಕೆ ಇದು ಉತ್ತರ.)(ಪುಟ 27೯)
3)ಶ್ವೇತಕೇತು:ಪೂಜ್ಯರಾದ ಆಚಾಯ೯ರು ಇದನ್ನು ತಿಳಿದುಕೊಂಡಿರಲಿಲ್ಲ.ಏಕೆಂದರೆ ಇದನ್ನು ಅವರು ಅರಿತಿದ್ದರೆ ನನಗೆ ಹೇಳದೆ ಇರುತ್ತಿರಲಿಲ್ಲ.ಭಗವಂತನೇ ನನಗೆ ಅದನ್ನು ಉಪದೇಶಿಸಬೇಕು.(ಪುಟ 27೯)
4)ಉದ್ಧಾಲಕ:ಹಾಗೆಯೇ ಆಗಲಿ.
ಎರಡನೆಯ ಖಂಡ:
ಉದ್ಧಾಲಕ:ಸೋಮ್ಯನೆ,ಸೃಷ್ಟಿಗೆ ಮೊದಲು ಈ ಜಗತ್ತು ಏಕವೂ ಅದ್ವಿತೀಯವೂ ಆದ ಸತ್ ಸ್ವರೂಪವೇ ಆಗಿತ್ತು.(ಸದೇವ ಸೋಮ್ಯೇದಮಗ್ರಾಸೀದೇಕಮೇವಾದ್ವಿತೀಯಮ್)(ಪುಟ280)
2)ಏಕವೆಂದರೆ ಸ್ವಜಾತೀಯ ಭೇದವಾಗಲಿ ಸ್ವಗತ ಭೇದವಾಗಲೀ,ವಿಜಾತೀಯ ಭೇದವಾಗಲೀ ಇಲ್ಲದ್ದು.(ಪುಟ 280)
3)ಸವ೯ ವೇದಾಂತಗಳಿಂದಲೂ ತಿಳಿದುಬರುವ ಸೂಕ್ಷ್ಮವೂ ನಿವಿ೯ಶೇಷವೂ ಸವ೯ಗತವೂ ನಿರಂಜನವೂ ನಿರವಯವವೂ ಆದ ಚೈತನ್ಯ.(ಪುಟ280)
4)ಉದ್ಧಾಲಕ:ಸೋಮ್ಯನೆ,ಆದರೆ ಇದು ಹೇಗಾದೀತು?ಅಸದ್ವಸ್ತುವಿನಿಂದ ಸದ್ವಸ್ತುವು ಹೇಗೆ ಹುಟ್ಟುವುದು?ನಿಜವಾಗಿಯೂ ಸೃಷ್ಟಿಗೆ ಮೊದಲು ಈ ಜಗತ್ತು ಏಕವೂ ಅದ್ವಿತೀಯವೂ ಆದ ಸತ್ಸ್ವರೂಪವೇ ಆಗಿತ್ತು.(281)
5)"ಆ ಸದ್ವಸ್ತುವು 'ಬಹುವಾಗುವೆನು ,ಉತ್ಪನ್ನವಾಗುವೆನು' ಎಂದು ಯೋಚಿಸಿತು.ಅದು ತೇಜಸ್ಸನ್ನು ಸೃಷ್ಟಿಸಿತು.ತೇಜಸ್ಸಿನಿಂದ ನೀರು ಸೃಷ್ಟಿಯಾಯಿತು.ಆದುದರಿಂದ ಮನುಷ್ಯನು ಎಲ್ಲೆಲ್ಲಿ ಶೋಕಿಸುವನೊ ಅಥವಾ ಬೆವರುವನೊ ಅಲ್ಲಲ್ಲಿ ನೀರು ತೇಜಸ್ಸಿನಿಂದಲೇ ಉಂಟಾಗುತ್ತದೆ.(ಪುಟ 282)
6) ಅಕ್ಷರಶಃ'ನೋಡಿತು'ಎಂದಥ೯.ಇದರಿಂದ ಸ್ವಸ್ತುವು ಚೇತನವೆಂದು ತಿಳಿಯ ಬರುತ್ತದೆ.ಸಾಂಖ್ಯರು
ಕಲ್ಪಿಸಿರುವ ಅಚೇತನವಾದ ಪ್ರಧಾನವಲ್ಲ.(ಪುಟ 282)
7)ತೈತ್ತಿರೀಯದಲ್ಲಿ(2.1)'ಆ ಈ ಆತ್ಮನಿಂದ ಆಕಾಶವುಂಟಾಯಿತು.ಆಕಾಶದಿಂದ ವಾಯು,ವಾಯುವಿನಿಂದ ಅಗ್ನಿ,ಅಗ್ನಿಯಿಂದ ನೀರು,ನೀರಿನಿಂದ ಪೃಥ್ವಿ'ಎಂದು ಹೇಳಿದೆ.(ಪುಟ 282)
8)ಆನೀರು"ಬಹುವಾಗುವೆನು ,ಉತ್ಪನ್ನವಾಗುವೆನು "ಎಂದು ಯೋಚಿಸಿತು.ಅದು ಅನ್ನವನ್ನು ಸೃಷ್ಟಿಸಿತು.ಆದುದರಿಂದ ಎಲ್ಲೆಲ್ಲಿ ಹೆಚ್ಚು ಮಳೆಯಾಗುತ್ತದೆಯೋ ಅಲ್ಲಲ್ಲಿ ಹೆಚ್ಚ್ಚಾಗಿ ಅನ್ನವುಂಟಾಗುತ್ತದೆ.ನೀರಿನಿಂದಲೇ ಅಲ್ಲಿ ತಿನ್ನಲಿಕ್ಕೆ ಅನ್ನವು ಉಂಟಾಗುತ್ತದೆ'.(ಪುಟ (ಪುಟ 282)
ಮೂರನೆಯ ಖಂಡ:
೯) ಜೀವಾವಿಷ್ಟವಾದ ಆ ಈ ಪ್ರಾಣಿಗಳಿಗೆ 1)ಅಂಡಜ 2)ಜರಾಯುಜ 3)ಉದ್ಭಿಜ್ಜ ಎಂಬ ಮೂರು ಕಾರಣಗಳಿರುತ್ತವೆ.(ಪುಟ 283)
10)ಆ ಈ ದೇವತೆಯು ಯೋಚಿಸಿತು.:"ಸರಿ,ನಾನು ಈ ಜೀವಾತ್ಮ ರೂಪದಿಂದ ಈ ಮೂರು ದೇವತೆಗಳನ್ನು ಪ್ರವೇಶಿಸಿ ನಾಮರೂಪಗಳನ್ನು ವಿಂಗಡಿಸಿಸುವೆನು."(ಪುಟ 285)
11) ಇವುಗಳಲ್ಲಿ ಒಂದೊಂದನ್ನೂ ಮೂರುಮೂರಾಗಿ ಮಾಡುತ್ತೇನೆ"ಎಂದು ಯೋಚಿಸಿ ಆ ಈ ಜೀವಾತ್ಮ ರೂಪದಿಂದಲೇ ಈ ಮೂರು ದೇವತೆಗಳನ್ನು ಪ್ರವೇಶಿಸಿ ನಾಮರೂಪಗಳನ್ನು ವಿಂಗಡಿಸಿತು.(ಪುಟ 284)
12) ತ್ರಿವತ್ಕರಣದಲ್ಲಿ ಒಂದು ಭೂತದ ಅಂಶವು ಹೆಚ್ಚಾಗಿಯೂ ಉಳಿದ ಎರಡು ಭೂತಗಳ ಅಂಶಗಳು ಕಡಮೆಯಾಗಿಯೂ ಇರುತ್ತವೆ.ಇದು ಈ ರೀತಿ ಇರುತ್ತದೆ:
ತೇಜಸ್ಸು1/2 +ನೀರು1/4+ಪೃಥ್ವಿ1/4
ನೀರು 1/2+ಪೃಥ್ವಿ1/4+ತೇಜಸ್ಸು1/4
ಪೃಥ್ವಿ1/2+ತೇಜಸ್ಸು1/4+ನೀರು1/4
ಇದೇ ರೀತಿ ಪಂಚೀಕರಣವನ್ನೂ 1/2+1/8+1/8+1/8+1/8 ತಿಳಿದುಕೊಳ್ಳಬೇಕು.(ಪುಟ 284)
13) ಆ ದೇವತೆಯು ತೇಜಸ್ಸು ನೀರು ಪೃಥ್ವಿ ಇವುಗಳಲ್ಲಿ ಒಂದೊಂದನ್ನು ಮೂರುಮೂರು ಭಾಗಗಳುಳ್ಳದ್ದಾಗಿ ಮಾಡಿತು. ಸೋಮ್ಯ,ಹೇಗೆ ಈ ಮೂರು ದೇವತೆಗಳು ಒಂದೊಂದೂ ಮೂರು ಮೂರು ಭಾಗಗಳುಳ್ಳದ್ದಾಗುತ್ತದೆಯೊ ಅದನ್ನು ನನ್ನಿಂದ ತಿಳಿದುಕೊ.(ಪುಟ 285)
14)ತ್ರಿವೃತ್ಕರಣದಲ್ಲಿ ಹೊರಗಿನ ತ್ರಿವೃತ್ಕರಣ ಮತ್ತು ಒಳಗಿನ ತ್ರಿವೃತ್ಕರಣವನ್ನು ಹೇಳಲಾಗುತ್ತದೆ.6.5.1ರಿಂದ ಒಳಗಿನ ತ್ರಿವೃತ್ಕರಣವನ್ನು ಹೇಳಲಾಗುವುದು.(ಪುಟ 285)
ನಾಲ್ಕನೆಯ ಖಂಡ:
15)ಯಾವುದು ಅಗ್ನಿಯ -ಕೆಂಪು ಬಣ್ಣವೊ ಅದು ತೇಜಸ್ಸಿನ ಬಣ್ಣ.
ಯಾವುದು ಅಗ್ನಿಯ ಬಿಳಿಯ ಬಣ್ಣವೊ ಅದು ನೀರಿನ ಬಣ್ಣ
ಯಾವುದು ಅಗ್ನಿಯ ಕಪ್ಪು ಬಣ್ಣವೊ ಅದು ಪೃಥ್ವಿಯ ಬಣ್ಣ.
ಪರಿಣಾಮವೆಂಬುದು ವಾಕ್ಕನ್ನು ಅವಲಂಬಿಸಿರುವ ಕೇವಲ ಹೆಸರೇ.ಮೂರು ಬಣ್ಣಗಳೆಂಬುದೇ ಸತ್ಯ.(ಪುಟ286)
16)ಯಾವುದು ಆದಿತ್ಯನಕೆಂಪು ಬಣ್ಣ-ತೇಜಸ್ಸಿನ ಬಣ್ಣ
ಆದಿತ್ಯನಬಿಳಿಯ ಬಣ್ಣ-ನೀರಿನ ಬಣ್ಣ
ಆದಿತ್ಯನ ಕಪ್ಪು ಬಣ್ಣ-ಅದು ಪೃಥ್ವಿಯ ಬಣ್ಣ
ಹೀಗೆ ಆದಿತ್ಯನಿಂದ ಆದಿತ್ಯತ್ವವು ಹೋಯಿತು.ಪರಿಣಾಮವೆಂಬುದು ವಾಕ್ಕನ್ನು ಅವಲಂಬಿಸಿರುವ ಕೇವಲ ಹೆಸರೇ.ಮೂರು ಬಣ್ಣಗಳೆಂಬುದೇ ಸತ್ಯ.(ಪುಟ286)
17)ಅದೇ ರೀತಿಯಲ್ಲಿ:
ಯಾವುದು ಚಂದ್ರನ ಕೆಂಪು ಬಣ್ಣವೊ -ಅದು ತೇಜಸ್ಸಿನ ಬಣ್ಣ
ಯಾವುದು ಚಂದ್ರನ ಬಿಳಿಯ ಬಣ್ಣವೊ-ಅದು ನೀರಿನ ಬಣ್ಣ
ಯಾವುದು ಚಂದ್ರನಕಪ್ಪು ಬಣ್ಣವೊ-ಅದು ಪೃಥ್ವಿಯ ಬಣ್ಣ
ಹೀಗೆ ಚಂದ್ರನಿಂದ ಚಂದ್ರತ್ವವು ಹೋಯಿತು.ಪರಿಣಾಮವೆಂಬುದು ವಾಕ್ಕನ್ನು ಅವಲಂಬಿಸಿರುವ ಹೆಸರೇ.ಮೂರು ಬಣ್ಣಗಳೆಂಬುದೇ ಸತ್ಯ.(ಪುಟ 387)
18)ಇದೇ ತತ್ವವು ವಿದ್ಯುತ್ತಿಗೂ ಅನ್ವಯಿಸುತ್ತದೆ.
ವಿದ್ಯುತ್ತಿನ ಕೆಂಪು ಬಣ್ಣ -ತೇಜಸ್ಸಿನ ಬಣ್ಣ
ಯಾವುದು ವಿದ್ಯುತ್ತಿನ ಬಿಳಿಯ ಬಣ್ಣವೊ-ಅದು ನೀರಿನ ಬಣ್ಣ
ಯಾವುದು ವಿದ್ಯುತ್ತಿನ ಕಪ್ಪು ಬಣ್ಣವೊ- ಅದು ಪೃಥ್ವಿಯ ಬಣ್ಣ.
ಪರಿಣಾಮವೆಂಬುದು ವಾಕ್ಕನ್ನು ಅವಲಂಬಿಸಿರುವ ಕೇವಲ ಹೆಸರೇ.(ಪುಟ 287)
1೯) ಈ ತ್ರಿವೃತ್ಕರಣವನ್ನು ಅರಿತುಕೊಂಡ ಪೂವಿ೯ಕರಾದ ಮಹಾ ಗೃಹಸ್ಥರೂ ಮತ್ತು ಶ್ರೋತ್ರಿಯರೂ ಹೀಗೆ ಹೇಳಿದರು:"ಈಗ ನಮ್ಮಲ್ಲಿ ಯಾರೂ ಅಶ್ರುತವಾದುದನ್ನು ಅಚಿಂತಿತವಾದುದನ್ನು ಅವಿದಿತವಾದುದನ್ನು ಉದಾಹರಿಸುವುದಿಲ"್ಲ.ಅವರು ಹೀಗೆ ಹೇಳಲು ಸಮಥ೯ರಾಗಿದ್ದರು.ಏಕೆಂದರೆ ಈ ಮೂರು ರೂಪಗಳಿಂದಲೇ ಅವರು ಅರಿತುಕೊಂಡಿದ್ದರು.(ಪುಟ 288)
20)ಸತ್ ವಿಜ್ಞಾನದಿಂದ ಸವ೯ಜ್ಞರೇ ಆಗಿದ್ದರು.ಉಪಲಕ್ಷಣವಾಗಿ ಹೇಳಿದ ಅಗ್ನ್ಯಾದಿ ದೃಷ್ಟಾಂತಗಳಿಂದ ಉಳಿದಿದೆಲ್ಲವನ್ನೂ ಅರಿತುಕೊಂಡರು ಎಂದು ತಾತ್ಪಯ೯.(ಪುಟ 288)
21)ಯಾವುದು ಅವರಿಗೆ ಕೆಂಪಿನಂತೆ ಕಂಡಿತೊ ಅದನ್ನು ತೇಜಸ್ಸಿನ ಬಣ್ಣವೆಂದು ಅರಿತುಕೊಂಡರು.ಯಾವುದು ಅವರಿಗೆ ಭಿಳಿಯ ಬಣ್ಣದಂತೆ ಕಂಡಿತೊ ಅದನ್ನು ನೀರಿನ ಬಣ್ಣವೆಂದು ಅರಿತುಕೊಂಡರು.ಯಾವುದು ಅವರಿಗೆ ಕಪ್ಪಾಗಿ ಕಂಡುಬಂದಿತೊ ಅದನ್ನು ಪೃಥ್ವಿಯ ಬಣ್ಣವೆಂದು ಅರಿತುಕೊಂಡರು.(ಪುಟ 28೯)
22)ಯಾವುದು ಅವರಿಗೆ ಅವಿಜ್ಞಾತದಂತೆ ಕಂಡಿತೊ ಅದನ್ನು ಈ ದೇವತೆಗಳ ಸಮುದಾಯವೆಂದು ಅರಿತುಕೊಂಡರು.ಆದರೆ ಸೋಮ್ಯ,ಹೇಗೆ ಈ ಮೂರು ದೇವತೆಗಳು ಮನುಷ್ಯರಲ್ಲಿ ಸೇರಿಕೊಂಡು ಒಂದೊಂದೂ ಮೂರುಮೂರಾಗುವುದೊ ಅದನ್ನು ನನ್ನಿಂದ ತಿಳಿದುಕೊ.(ಪುಟ 28೯)
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
ಐದನೆಯ ಖಂಡ(ಅಧ್ಯಾತ್ಮಿಕ ತ್ರಿವೃತ್ಕರಣ):
23) ಭುಕ್ತವಾದ ಅನ್ನವು ಜಾಠರಾಗ್ನಿಯಿಂದ ಪಕ್ಷವಾಗಿ ಮೂರು ಬಗೆಯಾಗುತ್ತದೆ.ಆ ಅನ್ನದಲ್ಲಿ ಯಾವುದು ಸ್ಥೂಲತಮವಾದ ಧಾತುವೊ ಅದು ಮಲವಾಗುತ್ತದೆ.ಯಾವುದು ಮಧ್ಯಮ ಧಾತುವೊ ಅದು ಮಾಂಸವಾಗುತ್ತದೆ.ಯವುದು ಸೂಕ್ಷ್ಮತಮ ಧಾತುವೊ ಅದು ಮನಸ್ಸಾಗುತ್ತದೆ.(ಪುಟ 2೯0)
24)ಕುಡಿಯಲ್ಪತ್ತನೀರು ಮೂರು ಬಗೆಯಾಗುತ್ತದೆ.ಯಾವುದು ಸ್ಥೂಲತಮ ಧಾತುವೊ ಅದು ಮೂತ್ರವಾಗುತ್ತದೆ.ಯಾವುದು ಮಧ್ಯಮ ಧಾತುವೊ ಅದು ರಕ್ತವಾಗುತ್ತದೆ.ಯಾವುದು ಸೂಕ್ಷ್ಮತಮಧಾತುವೊ ಅದು ಪ್ರಾಣವಾಗುತ್ತದೆ.(ಪುಟ 2೯1)
25)ಭುಕ್ತವಾದ ತೇಜಸ್ಸು ಮೂರು ಬಗೆಯಾಗುತ್ತದೆ.ಆ ತೇಜಸ್ಸಿನಲ್ಲಿ ಯವುದು ಸ್ಥೂಲತಮವಾದ ಧಾತುವೊ ಅದು ಅಸ್ಥಿಯಾಗುತ್ತದೆ.ಯಾವುದು ಮಧ್ಯಮ ಧಾತುವೊ ಅದು ಮಜ್ಜೆಯಾಗುತ್ತದೆ.
ತಾವುದು ಸೂಕ್ಷ್ಮತಮ ಧಾತುವೊ ಅದು ವಾಕ್ಕಾಗುತ್ತದೆ.(ಪುಟ2೯1)
26) ಸೋಮ್ಯ,ಮನಸ್ಸು ಅನ್ನಮಯ
ಪ್ರಾಣವು ಆಪೋಮಯ
ವಾಕ್ಕು ತೇಜೋಮಯ(ಪುಟ 2೯1)
27)ತ್ರಿವೃತ್ಕರಣವಾಗದ ವಸ್ತುವು ತಿನ್ನುವುದಕ್ಕೆ ಸಿಕ್ಕುವುದಿಲ್ಲ.ಆದುದರಿಂದ ಮನಃಪ್ರಾಣವಾಕ್ಕುಗಳ ಯಾವುದೇ ಒಂದು ಅಂಶವಾಗಲಿಪೃಥ್ವಿ,ನೀರು,ತೇಜಸ್ಸುಇವುಗಳನ್ನು ಒಳಗೊಂಡಿರುತ್ತದೆ.(ಪುಟ 2೯2)
ಆರನೆಯ ಖಂಡ:
28)ಸೋಮ್ಯ,ಮೊಸರನ್ನು ಕಡೆದಾಗ ಅದರಲ್ಲಿ ಯಾವುದು ಸೂಕ್ಷ್ಮ ಅಂಶವೊ ಅದು ಮೇಲೇಳುತ್ತದೆ ಮತ್ತು ಬೆಣ್ಣೆಯಾಗುತ್ತದೆ.(ಪುಟ 2೯2)
2೯) ಹೀಗೆಯೇ ಸೋಮ್ಯ,ಅನ್ನವನ್ನು ಭುಂಜಿಸಿದಾಗ ಅದರಲ್ಲಿ ಯಾವುದು ಸೂಕ್ಷ್ಮ ಅಂಶವೊ ಅದು ಮೇಲೇಳುತ್ತದೆ ಮತ್ತು ಮನಸ್ಸಾಗುತ್ತದೆ.(ಪುಟ 2೯3)
30)ಹೀಗೆಯೇ ನೀರನ್ನು ಕುಡಿದಾಗ ಅದರಲ್ಲಿ ಯಾವುದು ಸೂಕ್ಷ್ಮಾಂಶವೊ ಅದು ಮೇಲಕ್ಕೇಳುತ್ತದೆ ಮತ್ತು ಪ್ರಾಣವಾಗುತ್ತದೆ.(ಪುಟ 2೯3)
31)ಸೋಮ್ಯ,ತೇಜಸ್ಸನ್ನು ಭುಂಜಿಸಿದಾಗ ಅದರಲ್ಲಿ ಯಾವುದು ಸೂಕ್ಷ್ಮಾಂಶವೊ ಅದು ಮೇಲಕ್ಕೇಳುತ್ತದೆ. ಮತ್ತು ವಾಕ್ ಆಗುತ್ತದೆ.(ಪುಟ 2೯3)
32) ಸೋಮ್ಯ,
ಮನಸ್ಸು ಅನ್ನಮಯ
ಪ್ರಾಣವು ಆಪೋಮಯ
ವಾಕ್ಕು ತೇಜೋಮಯ(ಪುಟ 2೯6)
ಏಳನೆಯ ಖಂಡ:
33)ಸೋಮ್ಯ,ಮನುಷ್ಯನು ಹದಿನಾರು ಕಲೆಗಳುಳ್ಳವನು.ಹದಿನೈದು ದಿನಗಳವರೆಗೆ ಊಟಮಾಡಬೇಡ
ಬೇಕಾದಷ್ಟು ನೀರನ್ನು ಕುಡಿ.ಏಕೆಂದರೆ ಪ್ರಾಣವು ನೀರಿನ ಪರಿಣಾಮವಾಗಿದೆ.ನೀರು ಕುಡಿಯುವವನಿಗೆ ಪ್ರಾಣವು ವಿಚ್ಛೇದವಾಗುವುದಿಲ್ಲ.(ಪುಟ 34)
34)ಭುಕ್ತವಾದ ಅನ್ನ ಸೂಕ್ಷ್ಮತಮವಾದ ಧಾತುವು ಮನಸ್ಸಿನಲ್ಲಿ ಶಕ್ತಿಯನ್ನುಂಟು ಮಾಡುತ್ತದೆ.ಅನ್ನದಿಂದ ಬೆಳೆದ ಮಾನಸಿಕ ಶಕ್ತಿಯನ್ನು ಹದಿನಾರು ಪಾಲಾಗಿ ವಿಂಗಡಿಸಿ ಅದು ಪುರುಷನ ಕಲೆಗಳೆಂದು ಈ ಖಂಡದಲ್ಲಿ ತೋರಿಸಿದೆ.ಹದಿನಾರು ಕಲೆಗಳಿಂದ ಕೂಡಿದ ಕಾಯ೯ಕರಣ ಸಂಘಾತನೂ ಜೀವ-ವಿಶಿಷ್ಟನೂ ಆದ ಮನುಷ್ಯನನ್ನು ಷೋಡಶ-ಕಲನೆಂದು ಇಲ್ಲಿ ಹೇಳಿದೆ.ಈ ಶಕ್ತಿಯಿಂದಲೇ ಮನುಷ್ಯನು ಶ್ರೋತೃ,ಮಂತ್ರ,ಬೋದ್ಧø,ಕತೃ೯,ವಿಜ್ಞಾತೃ,ಎನಿಸಿ ಸವ೯ಕ್ರಿಯೆಗಳನ್ನೂ ಮಾಡಲು ಸಮಥ೯ನಾಗಿರುತ್ತಾನೆ..ಮಾನಸಬಲದಿಂದ ಕೂಡಿದ್ದರೆ ಶಾರೀರಕ ಬಲವೂ ಉಂಟಾಗುತ್ತದೆ.ಆದುದರಿಂದ ಮಾನುಸ
ವೀಯ೯ವು ಅನ್ನದಿಂದಲೇ ಉಂಟಾದದ್ದು.(ಪುಟ 2೯5)
35)ಶೇತಕೇತುವು ಹದಿನೈದು ದಿನಗಳವರೆಗೆ ಊಟಮಾಡಲಿಲ್ಲ.ಅನಂತರ ತಂದೆಯ ಬಳಿಗೆ ಬಂದನು.'ಭಗವಂತನೆ ನಾನು ಏನನ್ನು ಹೇಳಲಿ?'ಎಂದನು(ಪುಟ 2೯5)
36)ನಿನ್ನ ಹದಿನಾರು ಕಲೆಗಳಲ್ಲಿ ಒಂದು ಕಲೆಯು ಉಳಿದುಕೊಂಡಿದೆ.ಆ ಒಂದು ಕಲೆಯಿಂದ ಈಗ ನೀನು ವೇದಗಳನ್ನು ಅರಿಯದಿರುವೆ.ಅನಂತರ ನನ್ನ ಮಾತನ್ನು ಅರಿತುಕೊಳ್ಳುವೆ.(ಪುಟ 2೯6)
37)ಅವನು ಊಟ ಮಾಡಿದನು.ಅನಂತರ ತಂದೆಯನ್ನು ಬಳಿಸಾರಿದನು.ತಂದೆಯು ಅವನನ್ನು ಕುರಿತು ಏನೇನು ಪ್ರಶ್ನಿಸಿದನೊ ಅದೆಲ್ಲವನ್ನೂ ಅರಿತಿದ್ದನು.ಋಕ್ಕೇ ಮೊದಲಾದ ಎಲ್ಲವನ್ನೂ ಗ್ರಂಥರೂಪದಿಂದಲೂ ಅಥ೯ರೂಪದಿಂದಲೂ ಅರಿತುಕೊಂಡಿದ್ದನು.(ಪುಟ 2೯6)
38)ಉದ್ಧಾಲಕ:ಸೋಮ್ಯ,ಹೇಗೆ ಪ್ರಜ್ವಲಿತವದ ಮಹಾಗ್ನಿಯು ಮಿಣುಕು ಹುಳುವಿನ ಗಾತ್ರದಷ್ಟು ಉಳಿದಿರುವ ಕೆಂಡವೊಂದನ್ನು ಹುಲ್ಲು ಸೇರಿಸಿ ಪ್ರಜ್ವಲಿಸಬಹುದೊ ,ಆ ಕೆಂಡದಿಂದ ಅದಕ್ಕಿಂತಲೂ ದೊಡ್ಡದಾದುದನ್ನು ಸುಡಬಹುದೊ ಹಾಗೆಯೇ ಸೋಮ್ಯನೆ,ನಿನ್ನ ಹದಿನಾರು ಕಲೆಗಳಲ್ಲಿ ಒಂದು ಕಲೆಯು ಉಳಿದಿದ್ದು ,ಅದು ಅನ್ನದಿಂದ ವಧಿ೯ತವಾಗಿ ಪ್ರಜ್ವಲಿಸಿತು.ಆದ್ದರಿಂದ ಈಗ ವೇದಗಳನ್ನು ಅರಿತಿರುವೆ.ಆದುದರಿಂದ ಸೋಮ್ಯ,ಮನಸ್ಸು ಅನ್ನಮಯ,ಪ್ರಾಣವು ಆಪೋಮಯ,ವಾಕ್ಕು ತೇಜೋಮಯ.'
ಶ್ವೇತಕೇತುವು ತಂದೆಯ ಆ ಉಪದೇಶವನ್ನು ಅರಿತುಕೊಂಡನು.ಸರಿಯಾಗಿ ಅರಿತುಕೊಂಡನು.(ಪುಟ 2೯7)
3೯) ಹೀಗೆ ಅನ್ವಯ-ವ್ಯತಿರೇಕಗಳಿಂದ ಮನಸ್ಸು ಅನ್ನಮಯವೆಂಬುದು ಸಿದ್ಧವಾಗಿದೆ.(ಪುಟ 2೯7)
.,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
ಎಂಟನೆಯ ಖಂಡ:
40) ಉದ್ಧಾಲಕ ಅರು£ಣಿಯು ತನ್ನ ಪುತ್ರನಾದ ಶ್ವೇತಕೇತುವಿಗೆ ಹೇಳಿದನು:'ಸೋಮ್ಯ,ಸುಷುಪ್ತಿಯನ್ನು ನನ್ನಿಂದ ಅರಿತುಕೊ. ಯಾವಾಗ ಮನುಷ್ಯನು "ನಿದ್ರಿಸುತ್ತಾನೆ" ಎನಿಸಿಕೊಳ್ಳುವನೊ ಅಗ ಸದ್ವಸ್ತುವಿನೊಂದಿಗೆ ಏಕೀಭೂತನಾಗಿರುತ್ತಾನೆ.ಸ್ವರೂಪವನ್ನು ಹೊಂದಿರುತ್ತಾನೆ.ಆದುದರಿಂದ ಇವನನ್ನು "ಸ್ವಪಿತಿ" ಎಂದು ಹೇಳುತ್ತಾರೆ.ಏಕೆಂದರೆ ಸ್ವ-ರೂಪವನ್ನು ಹೊಂದಿರುತ್ತಾನೆ.(ಪುಟ 2೯8)
41)ಸ್ವರೂಪವೆಂಬ ಅವಸ್ಥೆಯನ್ನು ಬಿಟ್ಟರೆ ಇನ್ನೆಲ್ಲಿಯೂ ಶ್ರಮ ಪರಿಹಾರವು ಆಗಲಾರದು.(ಪುಟ 2೯೯)
42).ಹೇಗೆ ಪಕ್ಷಿಯು ದಾರದಿಂದ ಕಟ್ಟಲ್ಪಟ್ಟಿರುವಾಗ ದಿಕ್ಕು ದಿಕ್ಕಿಗೆ ಹಾರಾಡಿ'ಬೇರೆ ಕಡೆಯಲ್ಲಿ ಆಶ್ರಯವನ್ನು ಪಡೆಯದೆ,ತನ್ನ ಬಂಧನ ಸ್ಥಾನವನ್ನೇ ಆಶ್ರಯಿಸುವುದೊ ಹಾಗೆಯೇ ಸೋಮ್ಯ,ಆ ಮನಸ್ಸು ದಿಕ್ಕು ದಿಕ್ಕಿಗೆ ಹಾರಾಡಿ ಬೇರೆ ಕಡೆಯಲ್ಲಿ ಆಶ್ರಯವನ್ನು ಪಡೆಯದೆ ಪ್ರಾಣವನ್ನೇ ಆಶ್ರಯಿಸುತ್ತದೆ.ಏಕೆಂದರೆ ಸೋಮ್ಯ,ಮನಸ್ಸು ಪ್ರಾಣದಿಂದ ಬಂಧಿಸಲ್ಪಟ್ಟಿದೆ.(ಪುಟ 2೯೯)
43)ಸೋಮ್ಯ,ಹಸಿವು ಬಾಯಾರಿಕೆಗಳನ್ನು ನನ್ನಿಂದ ತಿಳಿದುಕೊಮನುಷ್ಯನು ಹಸಿದಿರುವನು ಎನಿಸಿಕೊಂಡಾಗ ನೀರೇ ಅವನು ತಿಂದಿದ್ದನ್ನು ಒಯ್ಯುತ್ತದೆ.ಮನುಷ್ಯರು ಗೋಪಾಲಕ,ಅಶ್ವಪಾಲಕ,ಮನುಷ್ಯನಾಯಕ ಎಂದು ಹೇಳುವಂತೆ ನೀರನ್ನೂ "ಅಶನಾಯಾ"ಎಂದು ಹೇಳುವರು.ಆದುದರಿಂದ ಸೋಮ್ಯ,ಈ ಶರೀರರೂಪವಾದ ಅಂಕುರವನ್ನು ಬೇರಿನಿಂದ ಹುಟ್ಟಿರುವುದೆಂದು ತಿಳಿದುಕೊ ;ಏಕೆಂದರೆ ಅದು ಬೇರಿಲ್ಲದೆ ಇರಲಾರದು.(ಪುಟ300)
44)ಶರೀರವು ಅನ್ನದ ಕಾಯ೯ವೆಂದು ತಿಳಿದು ಬರುತ್ತದೆ.(ಪುಟ 300)
45)'ಆದರೆ ಬೇರು ಅನ್ನವನ್ನು ಬಿಟ್ಟು ಮತ್ತೆಲ್ಲಿದ್ದೀತು.ಹೀಗೆಯೆ ಸೋಮ್ಯ,ಅನ್ನವೆಂಬ ಅಂಕುರದಿಂದ ನೀರೆಂಬ ಬೇರನ್ನು ಹುಡುಕು ನೀರೆಂಬ ಅಂಕುರದಿಂದ ತೇಜಸ್ಸೆಂಬ ಬೇರನ್ನು ಹುಡುಕು.ತೇಜಸ್ಸೆಂಬ ಅಂಕುರದಿಂದ ಸತ್ ಎಂಬ ಬೇರನ್ನು ಹುಡುಕು.ಸ್ಥಾವಬ-ಜಂಗಮ ರೂಪವಾದ ಈ ಪ್ರಾಣಿಗಳೆಲ್ಲ ಸದ್ವಸ್ತುವನ್ನೇ ಮೂಲವಾಗಿ ಪಡೆದಿವೆ.ಸದ್ವಸ್ತುವನ್ನೇ ಆಶ್ರಯವಾಗಿ ಪಡೆದಿವೆ ಮತ್ತು ಸದ್ವಸ್ತುವನ್ನೇ ಲಯಸ್ಥಾನವಾಗಿ ಪಡೆದಿವೆ.(ಪುಟ 301)
46)ಮನುಷ್ಯನು ದಾಹವಾಗಿರುವನು ಎನ್ನಿಸಿಕೊಂಡಾಗ ತೇಜಸ್ಸೇ ಅವನು ಕುಡಿದದ್ದನ್ನು ಒಯ್ಯುತ್ತದೆ.ಮನುಷ್ಯರು ಗೋಪಲಕ,ಅಶ್ವಪಾಲಕ,ಮನುಷ್ಯ ನಾಯಕ ಎಂದು ಹೇಳುವಂತೆ ಆ ತೇಜಸ್ಸನ್ನೂ "ಉನನ್ಯಾ""ಎಂದು ಕರೆಯುವರು.ಆದುದರಿಂದ ಈ ಶರೀರರೂಪವಾದ ಅಂಕುರವನ್ನು ಬೇರಿನಿಂದ ಹುಟ್ಟಿದುದೆಂದು ತಿಳಿದುಕೊ.ಏಕೆಂದರೆ ಅದು ಬೇರಿಲ್ಲದೆ ಇರಲಾರದು.(ಪುಟ 302)
47)'ಅದರ ಬೆರು ನೀರನ್ನು ಬಿಟ್ಟು ಮತ್ತೆಲ್ಲಿದ್ದೀತು?ನೀರೆಂಬ ಅಂಕುರದಿಂದ ತೇಜಸ್ಸೆಂಬ ಅಂಕುರದಿಂದ ಸತ್ ಎಂಬ ಬೇರನ್ನು ಹುಡುಕು.ಸ್ಥಾವರ -ಜಂಗಮ -ರೂಪವಾದ ಈ ಪ್ರಾಣಿಗಳೆಲ್ಲ ಸದ್ವಸ್ತುವನ್ನೇ ಆಶ್ರಯವಾಗಿ ಪಡೆದಿವೆ ಮತ್ತು ಸದ್ವಸ್ತುವನ್ನೇ ಲಯಸ್ಥಾನವಾಗಿ ಪಡೆದಿವೆ.ಹೇಗೆ ಪೃಥ್ವಿ,ವನೀರು,ತೇಜಸ್ಸು ಈ ಮೂರು ದೇವತೆಗಳು ಮನುಷ್ಯನನ್ನು ಹೊಂದಿ ಒಂದೊಂದು ಮೂರು ಮೂರಾಗುವುದೊ ಅದನ್ನು ಮೊದಲೇ ಹೇಳಿದ್ದಾಗಿದೆ.
ಸಾಯುತ್ತಿರುವ ಮನುಷ್ಯನ ಈ ವಾಕ್ಕು ಮನಸ್ಸಿನಲ್ಲಿಯೂ ,ಮನಸ್ಸು ಪ್ರಾಣದಲ್ಲಿಯೂ ಪ್ರಾಣವು ತೇಜಸ್ಸಿನಲ್ಲಿಯೂ ,ತೇಜಸ್ಸು ಪರದೇವತೆಯಲ್ಲಿಯೂ ,ಉಪಸಂಹೃತವಗುತ್ತದೆ.(ಪುಟ 303)
48)ಕನ್ನಡಿಯು ಒಡೆದು ಹೋದಾಗ ಕನ್ನಡಿಯಲ್ಲಿ ಪ್ರತಿಬಿಂಬಿತವಾದ ಮುಖವು ನಿಜವಾದ ಮುಖದಲ್ಲಿ ಲಯವಾಗುವಂತೆ ಮನಸ್ಸು ಮೊದಲಾದ ಇಂದ್ರಿಯಗಳು ಲಯಹೊಂದಿದಾಗ ಜೀವಾತ್ಮನೂ ಕೂಡ ತನ್ನ ಸ್ವರೂಪದಲ್ಲಿಯೇ ಸೇರುತ್ತಾನೆ.ಮುಕ್ತನಾದವನು ಹಿಂತಿರುಗುವುದಿಲ್ಲ.ಆದರೆ ಅಜ್ಞಾನಿಯು -ತನಿ ನಿದ್ರೆಯಿಂದ ಎಚ್ಚರವಾಗುವಂತೆ -ತನ್ನ ಮೂಲವಾದ ಸದ್ವಸ್ತುವಿನಿಂದಲೇ ಹೊರಟು ಪುನಃ ದೇಹಜಾಲವನ್ನು ಪಡೆಯುತ್ತಾನೆ.(ಪುಟ 304)
4೯)ಯಾವುದು ಸೂಕ್ಷ್ಮತಮವಾದ ಈ ಜಗನ್ಮೂಲವೊ ಅದರಿಂದಲೇ ಈ ಜಗತ್ತೆಲ್ಲವೂ ಆತ್ಮವಂತವಾಗಿದೆ.ಅದು ಸತ್ಯವು,ಅದು ಆತ್ಮನು,ಓ ಶ್ವೇತಕೇತು ,ಅದು ನೀನಾಗಿರುವೆ'.(ಪುಟ 304).
ಒಂಬತ್ತನೆಯ ಖಂಡ:(ಜೇನುಹುಳುಗಳ ಉದಾಹರಣೆ)
50)ಸೋಮ್ಯ,ಹೇಗೆ ಜೇನುಹುಳುಗಳು ನಾನಾ ದಿಕ್ಕಿನಲ್ಲಿರುವ ಮರಗಳ ರಸಗಳನ್ನು ಸಂಗ್ರಹಿಸಿ ಜೇನುತುಪ್ಪವನ್ನು ತಯಾರಿಸುವವೊ ಮತ್ತು ಅವುಗಳನ್ನು ಒಂದಾಗಿ ಮಾಡುವುವೊ ,ಆ ರಸಗಳು ಹೇಗೆ ಅಲ್ಲಿ "ನಾನು ಆ ಮರದ ರಸವಾಗಿರುವೆನು" "ನಾನು ಈ ಮರದ ರಸವಾಗಿರುವೆವನು "ಎಂದು ವಿವೇಕವನ್ನು ಪಡೆಯುವುದಿಲ್ಲವೊ ಹಾಗೆಯೇ ಸೋಮ್ಯ,ಈ ಪ್ರಾಣಿಗಳೆಲ್ಲ ಸದ್ವಸ್ತುವಿನಲ್ಲಿ ಲಯವಾಗಿ "ಸದ್ವಸ್ತುವಿನಲ್ಲಿ ಲಯವಾಗಿರುವೆವು" ಎಂದು ಅರಿಯವು.(ಪುಟ 305)
51)'ನಾನು ಮಾವಿನ ಮರದ ರಸ ,ಹಲಸಿನಮರದ ರಸ'ಇತ್ಯಾದಿ .(ಪುಟ 305)
52)ಇಲ್ಲಿಈ ಪ್ರಾಣಿಗಳು ಏನಾಗಿರುವುವೊ-ಹುಲಿ,ಸಿಂಹ,ತೋಳ,ವರಾಹ,ಕೀಟ ,ಪತಂಗ,ತೊಣಚಿ ಅಥವಾ ಸೊಳ್ಳೆ-ಅವು ಪುನಃ ಪುನಃ ಅವೇ ಆಗುವವು.(ಪುಟ 306)
51)ತಾನು ಹುಲಿ ಸಿಂಹ ಎಂಬ ಆಯಾ ಕಮ೯ಜ್ಞಾನಗಳ ವಾಸನೆಯಿಂದ ಅಂಕಿತವಾಗಿ ಸದ್ವಸ್ತುವನ್ನು ಪ್ರವೇಶಿಸಿದ್ದರೂ ,ಅದರ ಭಾವನೆಯಿಂದಲೇ ಪುನಃ ಹುಟ್ಟುತ್ತವೆ ಅಥವಾ ಎಚ್ಚರಗೊಳ್ಳುತ್ತವೆ.ಸಹಸ್ರ ಯುಗಗಳ ಅಂತರವಿದ್ದರೂ ಸಂಸಾರಿಯಾದ ಜೀವನಿಗೆ ಹಿಂದೆ ಭಾವಿತವಾದ ವಾಸನೆಯು ನಾಶವಾಗುವುದಿಲ್ಲ ಎಂದಥ೯.ಹಿಂದಿನ ಜನ್ಮದ ಜ್ಞಾನದಂತೆ ಹುಟ್ಟುತ್ತಾರೆ.('ಯಥಾ ಪ್ರಜ್ಞಂ ಹಿ ಸಂಭವಾಃ' ಎಂದು ಐತರೇಯ ಅರಣ್ಯಕವು ಹೇಳುತ್ತದೆ.(2.3.2))
52)ಯಾವುದು ಸೂಕ್ಷ್ಮತಮವಾದ ಈ ಜಗನ್ಮೂಲವೊ ಅದರಿಂದಲೇ ಈ ಜಗತ್ತೆಲ್ಲವೂ ಆತ್ಮವಂತವಾಗಿದೆ.ಅದು ಸತ್ಯವು.ಅದು ಆತ್ಮನು.ಓ ಶ್ವೇತಕೇತು ಅದು ನೀನಾಗಿರುವೆ.(ತತ್ವಮಸಿ).'
ಹತ್ತನೆಯ ಖಂಡ:
53)"ಸೋಮ್ಯ,ಪೂವ೯ವಾಹಿನಿಯಾದ ಈ ನದಿಗಳು ಪೂವ೯ದಿಕ್ಕಿಗೂ ಪಶ್ಚಿಮವಾಹಿಬಿಯಾದ ಈ ನದಿಗಳು ಪಶ್ಚಿಮದಿಕ್ಕಿಗೂ ಹರಿಯುತ್ತವೆ.ಅವು ಸಮುದ್ರದಿಂದಲೇ ಎದ್ದು ಸಮುದ್ರವನ್ನೇ ಸೇರುತ್ತವೆ.ಅವು ಸಮುದ್ರವೇ ಆಗುತ್ತವೆ.ಹೇಗೆ ಅವು ಅಲ್ಲಿ "ನಾನು ಈ ನದಿಯಾಗಿರುವೆನು""ನಾನು ಆ ನದಿಯಾಗಿರುವೆನು "ಎಂದು ಅರಿಯವೊ ಹಾಗೆಯೇ ಸೋಮ್ಯನೇ ಈ ಪ್ರಾಣಿಗಳೆಲ್ಲ ಸದ್ವಸ್ತುವಿನಿಂದ ಬಂದು "ನಾವು ಸದ್ವಸ್ತುವಿನಿಂದ ಬಂದಿದ್ದೇವೆ " ಎಂದು ಅರಿಯವು.ಇಲ್ಲಿ ಈ ಪ್ರಾಣಿಗಳು ಏನಾಗಿರುವುವೊ -ಹುಲಿ,ಸಿಂಹ,ವರಾಹ ಕೀಟ,ಪತಂಗ,ತೊಣಚಿ ಅಥವಾ ಸೊಳ್ಳೆ-ಅವು ಪುನಃ ಪುನಃ ಅದೇ ಆಗುವವು.'
(ಪುಟ 308)
54)ಸಮುದ್ರದಿಂದ ಆವಿಯ ರೂಪದಲ್ಲಿ ಎದ್ದು ವೃಷ್ಟಿರೂಪದಿಂದ ಕೆಳಗೆ ಬಿದ್ದು ನದಿಗಳ ರೂಪದಿಂದ ಪುನಃ ಸಮುದ್ರವನ್ನೇ ಸೇರುತ್ತವೆ.(ಪುಟ 308)
55)"ಯಾವುದು ಸೂಕ್ಷ್ಮತಮವಾದ ಈ ಜಗನ್ಮೂಲವೊ ಅದರಿಂದಲೇ ಈ ಜಗತ್ತೆಲ್ಲವೂ ಆತ್ಮವಂತವಾಗಿದೆ.ಅದು ಸತ್ಯವು,ಅದು ಆತ್ಮನು, ಓ ಶ್ವೇತಕೇತು,ಅದು ನೀನಾಗಿರುವೆ(ತತ್ವಮಸಿ)."
ಹನ್ನೊಂದನೆಯ ಖಂಡ:
56)ಸೋಮ್ಯ,ಯಾವನಾದರೂ ದೊಡ್ಡ ಮರದ ಬುಡವನ್ನು ಕೊಡಲಿಯಿಂದ ಹೊಡೆದರೆ ಅದು ರಸವನ್ನು ಸ್ರವಿಸುವುದು.ಆದರೆ ಬದುಕಿರುತ್ತದೆ.ಯಾವನಾದರೂ ಅದನ್ನು ಮಧ್ಯದಲ್ಲಿ ಹೊಡೆದರೆ ಅದು ರಸವನ್ನು ಸ್ರವಿಸುವುದು.ಆದರೆ ಬದುಕಿರುತ್ತದೆ.ಯಾವನಾದರೂ ಅದರ ತುದಿಯನ್ನು ಹೊಡೆದರೆ ಅದು ರಸವನ್ನು ಸ್ರವಿಸುವುದು.ಆದರೆ ಬದುಕಿರುತ್ತದೆ.ಆ ಮರವು ಜೀವಾತ್ಮನಿಂದ ವ್ಯಾಪ್ತವಾಗಿ ರಸವನ್ನು ಕುಡಿಯುತ್ತ ಹಷ೯ಪಡುತ್ತ ನಿಂತಿರುತ್ತದೆ.(ಪುಟ 30೯)
57)ಜೀವನು ಈ ಮರದ ಒಂದು ಕೊಂಬೆಯನ್ನು ಬಿಟ್ಟರೆ ಆಗ ಅದು ಒಣಗುತ್ತದೆ.ಎರಡನೆಯ ಕೊಂಬೆಯನ್ನು ಬಿಟ್ಟರೆ ಆಗ ಅದು ಒಣಗುತ್ತದೆ.ಮೂರನೆಯ ಕೊಂಬೆಯನ್ನು ಬಿಟ್ಟರೆ ಆಗ ಅದು ಒಣಗುತ್ತದೆ.ಜೀವನು ಇಡೀ ಮರವನ್ನು ಬಿಟ್ಟರೆ ಮರವೆಲ್ಲ ಒಣಗುತ್ತದೆ.(ಪುಟ 310)
58)'ಹೀಗೆಯೇ ಇದನ್ನು ತಿಳಿದಿಕೊ.ಜೀವನು ಶರೀರವನ್ನು ಬಿಟ್ಟರೆಇದು ಒಣಗಿ ಸಾಯುತ್ತದೆ.ಜೀವನು ಸಾಯುವುದಿಲ್ಲ.ಯಾವುದು ಈ ಸೂಕ್ಷ್ಮತಮವಾದ ಈ ಜಗನ್ಮೂಲವೊ ಅದರಿಂದಲೇ ಈ ಜಗತ್ತೆಲ್ಲವೂ ಆತ್ಮವಂತವಾಗಿದೆ.ಅದು ನಿತ್ಯವು ಅದು ಆತ್ಮನು. ಓ ಶ್ವೇತಕೇತು ಅದು ನೀನಾಗಿರುವೆ.'(ಪುಟ 311)
ಹನ್ನೆರಡನೆಯ ಖಂಡ:
5೯)'ಆ ದೊಡ್ಡ ಆಲದಮರದಿಂದ(ನ್ಯಗ್ರೋಧ) ಒಂದು ಹಣ್ಣನ್ನು ತೆಗೆದುಕೊಂಡು ಬಾ.
'ತಂದೆನು ಭಗವಂತನೆ.'
'ಒಡೆ'
'ಒಡೆದೆನು ಭಗವಂತನೆ'
'ಇದರಲ್ಲಿ ಏನನ್ನು ನೋಡುತ್ತೀಯೆ?'
'ಅಣುಗಳಂತಿರುವ ಬೀಜಗಳನ್ನು ನೋಡುತ್ತೇನೆ ಭಗವಂತನೆ'.
'ಇವುಗಳಲ್ಲಿ ಒಂದನ್ನು ಒಡೆ.'
'ಒದೆದೆನು ಭಗವಂತನೆ'
'ಇದರಲ್ಲಿ ಏನನ್ನು ನೋಡುತ್ತೀಯೆ?'
'ಏನೂ ಇಲ್ಲ ಭಗವಂತನೆ.'
60)ಉದ್ಧಾಲಕ: ಸೋಮ್ಯ,ಯಾವ ಈ ಸೂಕ್ಷ್ಮ ಅಂಶವನ್ನು ನೋಡದಿರುವೆಯೊ,ಈ ಸೂಕ್ಷ್ಮಾಂಶದಿಂದಲೇ ,ಸೋಮ್ಯ,ಈ ದೊಡ್ಡ ಆಲದಮರವು ಹುಟ್ಟಿದೆ..ಸೋಮ್ಯ,ಶ್ರದ್ಧೆಯಿಡು.ಶ್ರದ್ಧೆಯಿದ್ದರೆ ತಿಳಿದುಕೊಳ್ಳಬೇಕಾದ ಅಥ೯ವು ಮನಸ್ಸಿನಲ್ಲಿ ನಿಲ್ಲುವುದು.(ಪುಟ 312)
61)ಯಾವುದು ಈ ಸೂಕ್ಷ್ಮತಮವಾದ ಈ ಜಗನ್ಮೂಲವೊ ಅದರಿಂದಲೇ ಈಜಗತ್ತೆಲ್ಲವೂ ಆತ್ಮವಂತವಾಗಿದೆ.ಅದು ಸತ್ಯವು,ಅದು ಆತ್ಮನು ಓ ಶ್ವೇತಕೇತು ಅದುನೀನಾಗಿರುವೆ.(ಪ್ಟ 313)
ಹದಿಮೂರನೆಯ ಖಂಡ:(ಉಪ್ಪು-ನೀರಿನ ಉದಾಹರಣೆ)
62)'ಈ ಉಪ್ಪನ್ನು ನೀರಿನಲ್ಲಿಹಾಕಿ ಅನಂತರ ಬೆಳಿಗ್ಗೆನನ್ನ ಬಳಿಗೆ ಬಾ.' ಶ್ವೇತಕೇತುವು ಹಾಗೆಯೇ ಮಾಡಿದನು.
'ಉದ್ಧಾಲಕ:ವತ್ಸ,ನಿನ್ನೆ ರಾತ್ರಿ ಯಾವ ಉಪ್ಪನ್ನು ನೀರಿನಲ್ಲಿ ಹಾಕಿದೆಯೊ ಅದನ್ನು ತೆಗೆದುಕೊಂಡು ಬಾ"
ಶ್ವೇತಕೇತುವು ಅದನ್ನು ಹುಡುಕಿದರೂ ಸಿಗಲಿಲ್ಲ.ಏಕೆಂದರೆ ಅದು ನೀರಿನಲ್ಲಿ ಕರಗಿ ಹೋಗಿತ್ತು.
ನಂತ್ರ ಉದ್ಧಾಲಕನು ನೀರನ್ನು ಮೇಲ್ಭಾಗವನ್ನು ಕುಡಿಯಲು ಹೇಳಿದನು.
ಶ್ವೇತಕೇತು:'ಉಪ್ಪಾಗಿದೆ.'
ಉದ್ಧಾಲಕ:'ಈ ನೀರಿನ ಮಧ್ಯಭಾಗವನ್ನು ಕುಡಿ ಹೇಗಿದೆ?'
ಶ್ವೇತಕೇತು:' ಉಪ್ಪಾಗಿದೆ.'
ಉದ್ಧಾಲಕ:'ಈ ನೀರಿನ ಕೆಳಭಾಗವನ್ನು ಕುಡಿ'
ಶ್ವೇತಕೇತು: 'ಉಪ್ಪಾಗಿದೆ.'
ಉದ್ಧಾಲಕ: 'ಇದನ್ನು ಚೆಲ್ಲಿ ಅನಂತರ ನನ್ನ ಬಳಿಗೆ ಬಾ.'
ಅವನು ಹಗೆಯೇ ಮಾಡಿದ.'ರಾತ್ರಿ ನೀರಿನಲ್ಲಿ ಹಕಿದ ಉಪ್ಪು ಯವಾಗಲೂ ಅದೇ ನೀರಿನಲ್ಲಿಯೇ ಇರುತ್ತದೆ.
ಉದ್ಧಾಲಕ:'ಸೋಮ್ಯ,ಅದು ಅಲ್ಲಿಯೇ ಇದ್ದರೂ ನೀನು ಅದನ್ನು ನೋಡಲಿಲ್ಲ.ಹೀಗೆ ಸ್ವಸ್ತುವು ಈ ಶರೀರದಲ್ಲಿಯೇ ಇದೆ.'(ಪುಟ314)
63) ಯಾವುದು ಸೂಕ್ಷ್ಮತಮವಾದ ಈ ಜಗನ್ಮೂಲವೊ ಅದರಿಂದಲೇ ಈ ಜಗತ್ತೆಲ್ಲವೂ ಆತ್ಮವಂತವಾಗಿದೆ.ಅದು ಸತ್ಯವು.ಅದು ಆತ್ಮನು.ಓ ಶ್ವೇತಕೇತು ಅದೇ ನೀನಾಗಿರುವೆ(ತತ್ವಮಸಿ)(ಪುಟ 315).
ಹದಿನಾಲ್ಕನೆಯ ಖಂಡ:
64) ಗಂಧಾರ ದೇಶದ ಕಥೆ:
ಸೋಮ್ಯ,ದರೋಡೆಕೋರರು ಗಂಧಾರ ದೇಶದಿಂದ ಮನುಷ್ಯನೊಬ್ಬನನ್ನು ಕಣ್ಮುಚ್ಚಿ ಕರೆತಂದು ಅವನನ್ನು ನಿಜ೯ನವಾದ ಪ್ರದೇಶದಲ್ಲಿ ಬಿಟ್ಟರು.ಅವನು ದಾರಿಗಾಗಿ ತಡಕಾಡುತ್ತಿದ್ದನು.ಆಗ ಕಾರುಣಿಕನೊಬ್ಬನು ಬಂದು ಅವನ ಕಣ್ಣು ಕಟ್ಟುಗಳನ್ನು ಬಿಚ್ಚಿ "ಈ ದಿಕ್ಕಿನಲ್ಲಿ ಗಂಧಾರ ದೇಶ.ಈದಿಕ್ಕಿನಲ್ಲಿ ಹೋಗು ಎಂದು ಹೇಳಿದನು".ಅವನು ಹೀಗೆ ಅರಿತುಕೊಂಡು ಗಂಧಾರ ದೇಶವನ್ನು ಸೇರಿದನು.ಹಾಗೆಯೇ ಈ ಸಂಸಾರದಲ್ಲಿ ಆಚಾಯ೯ನನ್ನು ಪಡೆದ ಮನುಷ್ಯನೇ ಅರಿತುಕೊಳ್ಳುತ್ತಾನೆ.ಅವನಿಗೆ ಎಲ್ಲಿಯವರೆಗೆ ಮೋಕ್ಷವಾಗುವುದಿಲ್ಲವೂ ಅಲ್ಲಿಯವರೆಗೆ ವಿಳಂಬ.ಆಗಲೇ ಅವನು ಸದ್ವಸ್ತುವನ್ನು ಹೊಂದುತ್ತಾನೆ.(ಪುಟ 317)
65)ಹಿಂದಿನ ಯಾವುದೋ ಒಂದು ಪುಣ್ಯ ಕಮ೯ದ ವಶದಿಂದ ಪರಮ ಕಾರುಣಿಕನೂ ಮುಕ್ತನೂ ಆದ ಒಬ್ಬ ಬ್ರಹ್ಮವಿದನನ್ನು ಸಂಧಿಸುತ್ತೇವೆ.ಅವನು ಮಾಗ೯ವನ್ನು ತೋರಿಸುತ್ತನೆ.ಆಗ ನಾವು ಸಂಸಾರ ವಿಷಯಗಳಿಂದ ಮುಕ್ತರಾಗಿ ನಮ್ಮ ಆತ್ಮ ಸ್ವರೂಪವನ್ನು ಅರಿತುಕೊಂಡು ಸುಖಿಗಳಾಗುತ್ತೇವೆ.(ಪುಟ 317)
66)ಯವುದು ಸೂಕ್ಷ್ಮತಮವಾದ ಈ ಜಗನ್ಮೂಲವೊ ಅದರಿಂದ ಈಜಗತ್ತೆಲ್ಲವೂ ಆತ್ಮವಂತವಾಗಿದೆ.ಅದು ಸತ್ಯವು.ಅದು ಆತ್ಮನು.ಓ ಶ್ವೇತಕೇತು ಅದೇ ನೀನಾಗಿರುವೆ.(ಪುಟ 318)
ಹದಿನೈದನೆಯ ಖಂಡ:
67)'ಇನ್ನು ಯವಾಗ ಇವನ ವಾಕ್ಕು ಮನಸ್ಸಿನಲ್ಲಿ ಲಯವಾಗುವುದೊ ,ಮನಸ್ಸು ಪ್ರಾಣದಲ್ಲಿ ಲಯವಾಗುವುದೊ ,ಪ್ರಾಣವು ತೇಜಸ್ಸಿನಲ್ಲಿ ಲಯವಗುವುದೊ,ತೇಜಸ್ಸು ಪರದೇವತೆಯಲ್ಲಿ ಲಯವಾಗುವುದೊ ಆಗ ಅವರನ್ನು ಅರಿಯುವುದಿಲ್ಲ(ಪುಟ 31೯)
68)ಸಂಸಾರಿಯ ಮರಣಕ್ಕೂ ,ಜ್ಞಾನಿಯ ಸತ್ಸಂಪತ್ತಿ ಕ್ರಮಕ್ಕೂ ಯಾವ ಭೇದವೂ ಇಲ್ಲ,ಅಜ್ಞಾನಿಯು ತನ್ನ ಹಿಂದಿ ಕಮ೯ಫಲದ ಪ್ರಕಾರ ಪುನಃ ಹುಟ್ಟುತ್ತಾನೆ. ಆದರೆ ಜ್ಞನಿಯು ಶಾಸ್ತ್ರಾಚಾಯ೯ರ ಉಪದೇಶದಿಂದ ಉತ್ಪನ್ನವಾದ ಜ್ಞಾನದೀಪದಿಂದ ಪ್ರಕಾಶಮಾನವಾದ ಸದ್ಬ್ರಹ್ಮವನ್ನು ಪ್ರವೇಶಿಸಿ ಸಂಸಾರಕ್ಕೆ ಹಿಂದಿರುಗುದಿಲ್ಲ.(ಪುಟ 31೯)
6೯)ಯಾವುದು ಸೂಕ್ಷ್ಮತಮವಾದ ಈ ಜಗನ್ಮೂಲವೊ ಅದರಿಂದ ಈ ಜಗತ್ತೆಲ್ಲವೂ ಆತ್ಮವಂತವಾಗಿದೆ.ಅದು ಸತ್ಯವು.ಅದು ಆತ್ಮನು.ಓ ಶ್ವೇತಕೇತು ಅದು ನೀನಾಗಿರುವೆ.(ತತ್ವಮಸಿ)(ಪುಟ 320)
ಹದಿನಾರನೆಯ ಖಂಡ:
70)ಒಬ್ಬ ಮನುಷ್ಯನನ್ನು ಕೈಯಿಂದ ಹಿಡಿದುಕೊಂಡು ಕರೆತರುತ್ತಾರೆ;"ಇವನು ಅಪಹರಿಸಿರುತ್ತಾನೆ.ಇವನು ಕದ್ದಿರುತ್ತಾನೆ"ಎಂದು ಹೇಳುತ್ತಾರೆ.(ಅವನು ತಾನು ಕದ್ದಿಲ್ಲವೆಂದು ಹೇಳದರೆ "ಇವನಿಗಾಗಿ ಕೊಡಲಿಯನ್ನು ಕಾಯಿಸಿರಿ"ಎನ್ನುತ್ತಾರೆ.ಆ ಅನೃತವಾದಿಯು ಅನೃತದಿಂದ ತನ್ನನ್ನು ಮುಚ್ಚಿಕೊಂಡು ಕಾದ ಕೊಡಲಿಯನ್ನು ಹಿಡಿದುಕೊಳ್ಳುತ್ತಾನೆ.ಅವನು ದಹಿಸಲ್ಪಡುತ್ತಾನೆ.ರಾಜಭಟರಿಂದ ಹೊಡೆಯಲ್ಪಡುತ್ತಾನೆ.(ಪುಟ 321)
71)ಅವನು ಕಳ್ಳತನವನ್ನು ಮಾಡದಿದ್ದರೆ ಅದರಿಂದಲೇ ತನ್ನನ್ನು ಸತ್ಯವಾದಿಯನ್ನಾಗಿ ಮಾಡಿಕೊಳ್ಳುತ್ತಾನೆ.ಸತ್ಯವಾದಿಯು ಸತ್ಯದಿಂದ ತನ್ನನ್ನು ಮುಚ್ಛಿಕೊಂಡು ಕಾದ ಕೊಡಲಿಯನ್ನು ಹಿಡಿದುಕೊಳ್ಳುತ್ತಾನೆ.ಅವನು ದಹಿಸಲ್ಪಡುವುದಿಲ್ಲ.(ಪುಟ 321)
(ಈಗಿನ ಕಾಲಕ್ಕೆ ಇದು ಅನ್ವಯಿಸುವುದಿಲ್ಲ)
ಕಾದ ಕೊಡಲಿ ಮತ್ತು ಅದನ್ನು ಹಿಡಿದುಕೊಳ್ಳುವುದು ಸತ್ಯವಾದಿಗೂ ಅಮೃತವಾದಿಗೂ ಸಮಾನವಾಗಿದ್ದರೂ ಅನೃತವಾದಿಗೆ ಶಿಕ್ಷೆಯಾಗುತ್ತದೆ.ಸತ್ಯವದಿಗೆ ಬಿಡುಗಡೆ ಯಾಗುತ್ತದೆ.ಇದೇ ಪ್ರಕಾರ ಸಂಸಾರಿಯ ಮತ್ತು ಮುಮುಕ್ಷುವಿನ ಲಯಕ್ರಮವು ಸಮಾನವಾಗಿದ್ದರೂ ಮುಮುಕ್ಷುವು ಮೋಕ್ಷವನ್ನು ಪಡೆಯುತ್ತಾನೆಮತ್ತು ಸಂಸಾರಿಯು ಪುನಃ ಹುಟ್ಟುತ್ತಾನೆ.(ಪುಟ 321)
ಅವನು ಹೇಗೆ ಅಲ್ಲಿ ದಹಿಸಲ್ಪಡಲಿಲ್ಲವೊ (ಹಾಗೆಯೇ ಇಲ್ಲಿಯೂ ಕೂಡ)ಈ ಜಗತ್ತೆಲ್ಲವೂ ಆತ್ಮವಂತವಾಗಿದೆ.ಅದು ಸತ್ಯವು.ಅದು ಆತ್ಮನು.ಶ್ವೇತಕೇತು ಅದು ನೀನಾಗಿರುವೆ.(ಪುಟ 322)
ಶ್ವೇತಕೇತುವು ಉದ್ಧಾಲಕನ ಉಪದೇಶದಿಂದ ಸದ್ವಸ್ತುವನ್ನು ಅರಿತುಕೊಂಡನು.(ಪುಟ 322)
ಶ್ವೇತಕೇತುವು ಉದ್ಧಾಲಕನಿಂದ ಉಪದೇಶವನ್ನು ಪಡೆಯುವುದಕ್ಕೆ ಮೊದಲುತಾನು ಕಾಯ೯-ಕಾರಣಗಳಿಗಿಂತ ಭಿನ್ನವಾಗಿರುವ ಸದ್ರೂಪನು ಎಂಬುದನ್ನು ಅರಿತಿರಲಿಲ್ಲ.ತಂದೆಯು ತಕ೯ದಿಂದಲೂ,ದೃಷ್ಟಾಂತಗಳಿಂದಲೂ 'ಅದೇ ನೀನಾಗಿರುವೆ"ಎಂದು ಉಪದೇಶಿಸಲು ಆ ಸದ್ವಸ್ತುವೇ ತಾನು ಎಂಂಬುದನ್ನು ಅರಿತುಕೊಂಡನು.ವಿಕಾರವೂ ಅನೃತವೂ ಆದ ಕತೃ೯ತ್ವ-ಭೋಕ್ತøತ್ವಗಳಲ್ಲಿ ಅಧಿಕಾರಿಯು ತಾನು ಎಂಬ ಜೀವಾತ್ಮ ವಿಜ್ಞಾನವನ್ನು ಹೋಗಲಾಡಿಸುವುದು'ತತ್ವಮಸಿ'ವಾಕ್ಯಕ್ಕೆ ತಾತ್ಪಯ೯ವಾಗಿದೆ.(ಪುಟ 322)
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,ಆರನೆಯ ಆಧ್ಯಾಯ ಮುಕ್ತಾಯವಾಯಿತು.,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
ಏಳನೆಯ ಅಧ್ಯಾಯ(ಭೂಮ ವಿದ್ಯೆ):
1)ನಾರದರು ಸನತ್ಕುಮಾರನನ್ನು ಬಳಿಸಾರಿದನು.'ಭಗವಂತನೆ,ನನಗೆ ಉಪದೇಶಿಸಬೇಕು'ಎಂದನು.ಸನತ್ಕುಮಾರನು ಹೇಳಿದನು:'ನೀನು ಯಾವುದನ್ನು ತಿಳಿದುಕೊಂಡಿರುವೆಯೊ ಅದನ್ನು ಹೇಳುವುದರ ಮೂಲಕನನ್ನ ಬಳಿಗೆ ಬಾ.ಅದಕ್ಕಿಂತ ಮುಂದಿರುವುದನ್ನು ಉಪದೇಶಿಸುತ್ತೇನೆ.' (ಪುಟ 323)
2)ನಾರದ-ಸನತ್ಕುಮಾರರ ಆಖ್ಯಾಯಿಕೆಯು ಪರವಿದ್ಯೆಯ ಸ್ತುತಿಗಾಗಿ ಬಂದಿದೆ.(ಪುಟ 323)
3)ನಾರದನು ಸವ೯ ವಿದ್ಯೆಗಳನ್ನು ಅರಿತುಕೊಂಡು ಕೃತ ಕೃತ್ಯನಾಗಿದ್ದರೂ ಆತ್ಮನನ್ನು ಆತ್ಮನನ್ನು ಅರಿತುಕೊಳ್ಳದೆ ಇದ್ದುದರಿಂದಶೋಕಿಸುತ್ತಿದ್ದನು.ನಾರದರ ಅವಸ್ಥೆಯೇ ಹೀಗಿರುವಾಗ ಅಲ್ಪಜ್ಞನೂ ಪುಣ್ಯರಹಿತನೂ ಅಕೃತಕೃತ್ಯನೂ ಆದ ಸಂಸಾರೀ ಜೀವನ ದುಃಖವನ್ನು ವಿವರಿಸ ಬೇಕಾಗಿಲ್ಲ.(ಪುಟ
324)
4)ಏಕೆಂದರೆ ಸವ೯ಜ್ಞಾನಗಳು,ಸಾಧನಗಳು,ಶಕ್ತಿಗಳು -ಇವುಗಳಿಂದ ಕೂಡಿದ್ದರೂ ದೇವಷಿ೯ಯಾದ ನಾರದನಿಗೆ ಶ್ರೇಯಸ್ಸು ಉಂಟಾಗಲಿಲ್ಲ.ಉತ್ತಮವಾದ ವಂಶ,ವಿದ್ಯೆ,ಚಯೆ೯(ಸದಾಚಾರ), ಸಾಧನ ಶಕ್ತಿಇವ್ಗಳಿಂದ ಉಂಟಾಗುವ ಅಹಂಕಾರವನ್ನು ನಾರದನು ತ್ಯಜಿಸಿಶ್ರೇಯಃ ಸಾಧನವನ್ನು ಪಡೆದುಕೊಳ್ಳಲು ಸಾಮಾನ್ಯ ಜನರಂತೆ ಸನತ್ಕುಮಾರನನ್ನು ಬಳಿಸಾರಿದನು.ಇದರಿಂದ ಶ್ರೇಯಃ ಪ್ರಾಪ್ತಿಗೆ ಆತ್ಮವಿದ್ಯೆಯು ನಿರತಿಶಯ ಸಾಧನವೆಂದು ತಿಳಿದು ಬರುತ್ತದೆ.(ಪುಟ 324)
5)ನಾರದ:'ಭಗವಂತನೆ,ಋಗ್ವೇದವನ್ನು ಅರಿತಿರುತ್ತೇನೆ. ಯಜುವೇ೯ದ,ಸಾಮವೇದ,ನಾಲ್ಕನೆಯದಾದ ಅಥವ೯ ವೇದ,ಐದನೆಯದಾದ ಇತಿಹಾಸ ಪುರಾಣಗಳು,ವೇದಗಳ ವೇದ(ವ್ಯಾಕರಣ),ಪಿತ್ರ್ಯ(ಶ್ರಾದ್ಧ ಕಲ್ಪ),ಗಣಿತ,ದೈವ,ನಿಧಿ ಶಾಸ್ತ್ರ,ತಕ೯ಶಾಸ್ತ್ರ,ನೀತಿಶಾಸ್ತ್ರ,ನಿರುಕ್ತ(ಶಿಕ್ಷಾ,ಕಲ್ಪ.ಛಂದಸ್ಸು ಮುಂತಾದವುಗಳು),ಬ್ರಹ್ಮವಿದ್ಯೆ,ಭೂತವಿದ್ಯೆ,ಧನುವೇ೯ದ,ಜ್ಯೋತಿಷ,ಸಪ೯ವಿದ್ಯೆ,ದೇವಜನವಿದ್ಯೆ(ಪರಿಮಳ ದ್ರವ್ಯಗಳ ತಯಾರಿಕೆ)-ಇವುಗಳನ್ನೆಲ್ಲ ಭಗವಂತನೆ, ಅರಿತಿರುತ್ತೇನೆ.(ಪುಟ 325)
6) ಸನತ್ಕುಮಾರ:ನೀನು ಏನೇನನ್ನು ಅಧ್ಯಯನ ಮಾಡಿರುತ್ತೀಯೋ ಅದೆಲ್ಲ ಹೆಸರೇ.ಶಬ್ದವೆಲ್ಲ ಕೇವಲ ಹೆಸರೇ.ಹೆಸರೆಲ್ಲವೂ ಮಂತ್ರಗಳಲ್ಲಿ ಅಂತಗ೯ತವಾಗಿರುತ್ತದೆ.ಮಂತ್ರಗಳು ಕಮ೯ಗಳನ್ನು ತಿಳಿಸುವುದಕ್ಕೆ ಪ್ರವೃತ್ತವಾಗಿವೆ.ಆದುದರಿಂದ ಮಂತ್ರವಿತ್ ಎಂದರೆ ಕಮ೯ವನ್ನು ಅರಿತಿರುವವನು.'ಮಂತ್ರಗಳು ಕಮ೯ಗಳಲ್ಲಿ ಅಡಗಿರುತ್ತವೆ'(ಮಂತ್ರೇಷು ಕಮಾ೯ಣಿ7.4.1)ಎಂದು ಶ್ರುತಿಯೇ ಮುಂದೆ ಹೇಳುತ್ತದೆ.(ಪುಟ 326)
7)ಆತ್ಮಜ್ಞಾನವೆಂಬ ನೌಕೆಯಿಂದ ದಾಟಿಸಬೇಕು.ಅಭಯವನ್ನು ಹೊಂದುವಂತೆ ಮಾಡಬೇಕು ಎಂದಥ೯.(ಪುಟ 326)
8)'ವಿಕಾರವೆಂಬುದು ವಾಕ್ಕನ್ನು ಅವಲಂಬಿಸಿರುವ ಕೇವಲ ಹೆಸರೇ.'(ವಾಚಾರಂಭಣೋ ವಿಕಾರೋ ನಾಮಧೇಯಮ್(6.1.4)) .(ಪುಟ 326)
೯)ಸನತ್ಕುಮಾರ:ನಾಮವೇ ಋಗ್ವೇದ,ಯಜುವೇ೯ದ,ನಾಲ್ಕನೆಯದಾದ ಅಥವ೯ವೇದ,ಐದನೆಯದಾದ ಇತಿಹಾಸ ಪುರಾಣಗಳು,ವ್ಯಾಕರಣ,,ಪಿತ್ರ್ಯ,ಗಣಿತ,ದೈವ,ನಿಧಿಶಾಸ್ತ್ರ,ತಕ೯ಶಾಸ್ತ್ರ,ನೀತಿಶಾಸ್ತ್ರ,ನಿರುಕ್ತ,ಬ್ರಹ್ಮವಿದ್ಯೆ,ಧನುವೇ೯ದ,ಜ್ಯೋತಿಷ,ಸಪ೯ವಿದ್ಯೆ,ದೇವಜನವಿದ್ಯೆ-ಇವು ನಾಮವೇ.ನಾಮವನ್ನು ಬ್ರಹ್ಮವೆಂದು ಉಪಾಸಿಸು.(ಪುಟ 326)
10)ಪ್ರತಿಮೆಯನ್ನು ವಿಷ್ಣುಬುದ್ಧಿಯಿಂದ ಉಪಾಸಿಸುವಂತೆ,ಋಗ್ವೇದವೇ ಮೊದಲಾದ ಹೆಸರುಗಳನ್ನು ಬ್ರಹ್ಮಬುದ್ಧಿಯಿಂದ ಉಪಾಸಿಸಬೇಕು.(ಪುಟ 326)
11)ನಾರದ:ನಾಮಕ್ಕಿಂತ ಅಧಿಕವಾದುದು ಯಾವುದಾದರೂ ಇದೆಯೇ?
ಎರಡನೆಯ ಖಂಡ:
12) ವಾಕ್ಕೇ ನಾಮಕ್ಕಿಂತ ಅಧಿಕವಾದುದು.ವಾಕ್ಕೇ ಎಲ್ಲವನ್ನೂ ಋಗ್ವೇದ,ಯಜುವೇ೯ದ,ನಾಲ್ಕನೆಯದಾದ ಅಥವ೯ವೇದ,ಐದನೆಯದಾದ ಇತಿಹಾಸ ಪುರಾಣಗಳು,ವ್ಯಾಕರಣ,,ಪಿತ್ರ್ಯ,ಗಣಿತ,ದೈವ,ನಿಧಿಶಾಸ್ತ್ರ,ತಕ೯ಶಾಸ್ತ್ರ,ನೀತಿಶಾಸ್ತ್ರ,ನಿರುಕ್ತ,ಬ್ರಹ್ಮವಿದ್ಯೆ,ಧನುವೇ೯ದ,ಜ್ಯೋತಿಷ,ಸಪ೯ವಿದ್ಯೆ,ದೇವಜನವಿದ್ಯೆ,ದ್ಯ್ಲೋಕವನ್ನೂ,ಪೃಥ್ವಿಯನ್ನೂ ವಾಯುವನ್ನೂ,ಆಕಾಶವನ್ನೂ ನೀರನ್ನೂ ತೇಜಸ್ಸನ್ನೂ ದೇವತೆಗಳನ್ನೂ ಮನುಷ್ಯರನ್ನೂ ಪಶುಗಳನ್ನೂ ಪಕ್ಷಿಗಳನ್ನೂ,ಹುಲ್ಲು ಮರಗಳನ್ನೂ,ಹಿಂಸ್ರಜಂತುಗಳನ್ನೂ,ಕೀಟ ಪತಂಗ -ಇರುವೆಯವರೆಗೂ (ಎಲ್ಲಜಂತುಗಳನ್ನೂ)ಧಮಾ೯ಧಮ೯ಗಳನ್ನೂ ಸತ್ಯಾನೃತಗಳನ್ನೂ,ಸಾಧುವಾದುದನ್ನೂ,ಅಸಾಧುವಾದುದನ್ನೂಮನೋಹರವಾದುದನ್ನೂ ಮನೋಹರವಲ್ಲದುದನ್ನೂ ತಿಳಿಸಿಕೊಡುತ್ತದೆ.ವಾಕ್ಕಿಲ್ಲದಿದ್ದರೆ,ಧಮಾ೯ಧಮ೯ಗಳಾಗಲೀ ಸತ್ಯಾನೃತಗಳಾಗಲೀ ಸಾಧಿವಾದುದಾಗಲೀ ಅಸಾಧುವಾದುದಾಗಲೀ ಮನೋಹರವಾದುದಾಗಲೀ ಮನೋಹರವಲ್ಲದುದಾಗಲೀ ತಿಳಿದು ಬರುತ್ತಿರಲಿಲ್ಲ.
ವಾಕ್ಕು ಇದೆಲ್ಲವನ್ನೂ ತಿಳಿಸಿಕೊಡುತ್ತದೆ.ವಾಕ್ಕನ್ನು ಬ್ರಹ್ಮವೆಂದು ಉಪಾಸಿಸು.(ಪುಟ 32೯)
ನಾರದ:'ಭಗವಂತನೆ ವಾಕ್ಕಿಗಿಂತ ಅಧಿಕವಾದುದು ಇದೆಯೇ?
ಮೂರನೆಯ ಖಂಡ:
13)ಮನಸ್ಸೇ ವಾಕ್ಕಿಗಿಂತ ಅಧಿಕವಾದುದು.ಮನಸ್ಸು ವಾಕ್ಕನ್ನೂ ನಾಮವನ್ನೂ ಒಳಗೊಳ್ಳುತ್ತದೆ.ಅವನು ಯಾವಾಗ "ಮಂತ್ರಗಳನ್ನು ಅಧ್ಯಯನ ಮಾಡುವೆನು"ಎಂದು ಮನಸ್ಸು ಮಾಡುತ್ತಾನೋ ಆಗ ಅಧ್ಯಯನ ಮಾಡುತ್ತಾನೆ.ಅವನು ಯಾವಾಗ"ಕಮ೯ಗಳನ್ನು ಮಾಡುವೆನು" ಎಂದು ಮನಸ್ಸು ಮಾಡುತ್ತಾನೆಯೋ ಆಗ ಮಾಡುತ್ತಾನೆ.ಮನಸ್ಸೇ ಆತ್ಮನು,ಮನಸ್ಸೇ ಲೋಕವು,ಮನಸ್ಸೇ ಬ್ರಹ್ಮವು.ಮನಸ್ಸನ್ನು ಬ್ರಹ್ಮವೆಂದು ಉಪಾಸಿಸು.(ಪುಟ 331)
ನಾರದ:'ಭಗವಂತನೆ,ಮನಸ್ಸಿಗಿಂತ ಅಧಿಕವಾದುದು ಇದೆಯೇ?
ನಾಲ್ಕನೆಯ ಖಂಡ:
14)ಸನತ್ಕುಮಾರ:ಸಂಕಲ್ಪವೇ ಮನಸ್ಸಿಗಿಂತ ಅಧಿಕವಾದುದು.ಯಾವಾಗ ಸಂಕಲ್ಪಿಸುತ್ತಾನೋ ಆಗ ಮನನ ಮಾಡುತ್ತಾನೆ.ಅನಂತರ ವಾಕ್ಕನ್ನು ಪ್ರೇರಿಸುತ್ತಾನೆ.ವಾಕ್ಕನ್ನು ನಾಮೋಚ್ಛಾರಣೆಗಾಗಿ ಪ್ರೇರಿಸುತ್ತಾನೆ.ಮಂತ್ರಗಳು ನಾಮದಲ್ಲಿ ಒಂದಾಗುತ್ತವೆ.ಕಮ೯ಗಳು ಮಂತ್ರಗಳಲ್ಲಿ ಒಂದಾಗುತ್ತವೆ.(ಪುಟ 332)
15) ಸಂಕಲ್ಪವೂ ಕೂಡ ಮನನದಂತೆ ಅಂತಃಕರಣದ ಒಂದು ವೃತ್ತಿ.ಮಾಡತಕ್ಕದ್ದು ಮಾಡತಕ್ಕದ್ದಲ್ಲ ಎಂದು ವಿವೇಚಿಸುತ್ತದೆ.ಮಂತ್ರವಿಲ್ಲದೆ ಕಮ೯ವಿಲ್ಲ.(ಪುಟ 332)
ನಾರದ: 'ಭಗವಂತನೆ, ಸಂಕಲ್ಪಕ್ಕಿಂತ ಅಧಿಕವಾದುದು ಇದೆಯೇ?'
ಐದನೆಯ ಖಂಡ:
16)'ಚಿತ್ತವೇ ನಾಮಕ್ಕಿಂತ ಅಧಿಕವಾದುದು.ಅವನು ಯಾವಾಗ ಅರಿತುಕೊಳ್ಳುವನೊ ಆಗ ಸಂಕಲ್ಪಿಸುತ್ತಾನೆ.ಅನಂತರ ವಾಕ್ಕನ್ನು ಪ್ರೇರಿಸುತ್ತಾನೆ.ವಾಕ್ಕನ್ನು ನಾಮೋಚ್ಛರಣೆಗಾಗಿ ಪ್ರೇರಿಸುತ್ತಾನೆ.ಮಂತ್ರಗಳು ನಾಮದಲ್ಲಿ ಒಂದಾಗುತ್ತವೆ.ಕಮ೯ಗಳು ಮಂತ್ರಗಳಲ್ಲಿ ಒಂದಾಗುತ್ತವೆ.(ಪುಟ 335)
ಚಿತ್ತವೇ ಏಕಮಾತ್ರಗತಿ.ಚಿತ್ತವೇ ಆತ್ಮನು.ಚಿತ್ತವೇ ಪ್ರತಿಷ್ಠೆ.ಚಿತ್ತವನ್ನು ಬ್ರಹ್ಮವೆಂದು ಉಪಾಸಿಸು.(ಪುಟ 336)
ನಾರದ:'ಭಗವಂತನೆ ಚಿತ್ತಕ್ಕಿಂತ ಶ್ರೇಷ್ಠವಾದುದು ಇದೆಯೇ'
ಆರನೆಯ ಖಂಡ:
17)ಸನತ್ಕುಮಾರ:ಧ್ಯಾನವೇ ಚಿತ್ತಕ್ಕಿಂತ ಅಧಿಕವಾದುದು.ಪೃಥ್ವಿಯು ಧ್ಯಾನಿಸುವಂತಿದೆ,ಅಂತರಿಕ್ಷವು ಧ್ಯಾನಿಸುವಂತಿದೆ.ದ್ಯುಲೋಕವು ಧ್ಯಾನಿಸುವಂತಿದೆ.ನೀರು ಧ್ಯಾನಿಸುವಂತಿದೆ.ಪವ೯ತಗಳು ಧ್ಯಾನಿಸುವಂತಿವೆ.ದೇವತೆಗಳು ಮತ್ತು ಮನುಷ್ಯರು ಧ್ಯಾನಿಸುವಂತೆ ಇರುವರು.ಆದುದರಿಂದ ಮನುಷ್ಯರಲ್ಲಿ ಯಾರು ಈ ಲೋಕದಲ್ಲಿ ಮಹತ್ವವನ್ನು ಹೊಂದಿರುತ್ತಾರೋಅವರು ಧ್ಯಾನಫಲ ಲಾಭದ ಅಂಶವನ್ನು ಪಡೆದವರಂತೆ ಇರುತ್ತಾರೆ.ಧ್ಯಾನವನ್ನು ಬ್ರಹ್ಮವೆಂದು ಉಪಾಸಿಸು.(ಪುಟ 338)
ನಾರದ: 'ಭಗವಂತನೆ,ಧ್ಯಾನಕ್ಕಿಂತ ಅಧಿಕವಾದುದು ಇದೆಯೇ?"
ಏಳನೆಯ ಖಂಡ:
18)ವಿಜ್ಞಾನವೇ ಧ್ಯಾನಕ್ಕಿಂತ ಅಧಿಕವಾದುದು. ವಿಜ್ಞಾನದಿಂದಲೇ ಋಗ್ವೇದ,ಯಜುವೇ೯ದ ಸಾಮವೇದ ಅಥವ೯ಣವೇದವನ್ನೂ ಅರಿಯುತ್ತಾನೆ.ಐದನೆಯದಾದ ಇತಿಹಾಸ ಪುರಾಣಗಳು,ವ್ಯಾಕರಣ,,ಪಿತ್ರ್ಯ,ಗಣಿತ,ದೈವ,ನಿಧಿಶಾಸ್ತ್ರ,ತಕ೯ಶಾಸ್ತ್ರ,ನೀತಿಶಾಸ್ತ್ರ,ನಿರುಕ್ತ,ಬ್ರಹ್ಮವಿದ್ಯೆ,ಧನುವೇ೯ದ,ಜ್ಯೋತಿಷ,ಸಪ೯ವಿದ್ಯೆ,ದೇವಜನವಿದ್ಯೆ,ದ್ಯುಲೋಕವನ್ನೂ,ಪೃಥ್ವಿಯನ್ನೂ ವಾಯುವನ್ನೂ,ಆಕಾಶವನ್ನೂ ನೀರನ್ನೂ ತೇಜಸ್ಸನ್ನೂ ದೇವತೆಗಳನ್ನೂ ಮನುಷ್ಯರನ್ನೂ ಪಶುಗಳನ್ನೂ ಪಕ್ಷಿಗಳನ್ನೂ,ಹುಲ್ಲು ಮರಗಳನ್ನೂ,ಹಿಂಸ್ರಜಂತುಗಳನ್ನೂ,ಕೀಟ ಪತಂಗ -ಇರುವೆಯವರೆಗೂ (ಎಲ್ಲಜಂತುಗಳನ್ನೂ)ಧಮಾ೯ಧಮ೯ಗಳನ್ನೂ ಸತ್ಯಾನೃತಗಳನ್ನೂ,ಸಾಧುವಾದುದನ್ನೂ,ಅಸಾಧುವಾದುದನ್ನೂಮನೋಹರವಾದುದನ್ನೂ ಮನೋಹರವಲ್ಲದುದನ್ನೂ ಅನ್ನವನಗನೂ ರಸವನ್ನೂ ಈ ಲೋಕವನ್ನೂ ಆಲೋಕವನ್ನೂ ವಿಜ್ಞಾನದಿಂದಲೇ ತಿಳಿಯುತ್ತಾನೆ.ವಿಜ್ಞಾನವನ್ನು ಬ್ರಹ್ಮವೆಂದು ಉಪಾಸಿಸು.(ಪುಟ 341)
ನಾರದ:'ಭಗವಂತನೆ ವಿಜ್ಞಾನಕ್ಕಿಂತಲೂ ಅಧಿಕವಾದುದು ಇದೆಯೇ?
ಎಂಟನೆಯ ಖಂಡ:
1೯) ಬಲವೇ ವಿಜ್ಞಾನಕ್ಕಿಂತ ಅಧಿಕವಾದುದು.ಒಬ್ಬ ಬಲಿಷ್ಠನು ವಿಜ್ಞಾನವುಳ್ಳ ನೂರುಮಂದಿಯನ್ನು ಕೂಡ ಕಂಪಿಸುವಂತೆ ಮಾಡುತ್ತಾನೆ.ಅವನು ಯಾವಾಗ ಬಲಿಷ್ಟನಾಗುವನೊ ಆಗ ಏಳುತ್ತಾನೆ.ಎದ್ದು ಆಚಾಯ೯ರ
ಪರಿಚಯೆ೯ಯನ್ನು ಮಾಡುತ್ತಾನೆ.ನಂತರ ಉಪಸತ್ತಿಯನ್ನು ಮಾಡುತ್ತಾನೆ.ಉಪಸತ್ತಿಯನ್ನು ಮಾಡಿ ದೃಷ್ಟøವೂ ಶ್ರೋತ್ರವೂ ಮಂತೃವೂ ಬೋದ್ಧೃವೂ, ಕತೃ೯ವೂ ವಿಜ್ಞಾತೃವೂ ಆಗುತ್ತಾನೆ.ಬಲದಿಂದಲೇ ಪೃಥ್ವಿಯು ನಿಂತಿದೆ.ಬಲದಿಂದಲೇ ಅಂತರಿಕ್ಷ,ದ್ಯುಲೋಕ,ಪವ೯ತಗಳು, ದೇವತೆಗಳು ಮತ್ತು ಮನುಷ್ಯರು,
ಪಶುಪಕ್ಷಿಗಳು,ಮರಗಳು,ಹಿಂಸ್ರ ಜಂತುಗಳು,,ಕೀಟ- ಪತಂಗ- ಇರುವೆಗಳವರೆಗೆ ಎಲ್ಲವೂ ನಿಂತಿದೆ.ಬಲದಿಂದಲೇ ಲೋಕವು ನಿಂತಿದೆ.ಬಲವನ್ನು ಬ್ರಹ್ಮವೆಂದು ಉಪಾಸಿಸು.(ಪುಟ 342)
20)ತಿಳಿದುಕೊಳ್ಳಬೇಕಾದ ವಿಷಯದಲ್ಲಿ ಮನಸ್ಸಿಗೆ ಬರುವ ಪ್ರತಿಭಾವನೆ-ಸಾಮಥ್ಯ೯ಕ್ಕೆ ಬಲವೆಂದು ಹೆಸರು.(ಪುಟ 343)
21)ಶಿಷ್ಯನು ಏಕಾಗ್ರತೆಯಿಂದ ಆಚಾಯ೯ನನ್ನು ನೋಡಿ ಅವನು ಹೇಳಿದ್ದನ್ನು ಕೇಳಿ ಮನನ ಮಾಡಿಕೊಂಡು,ಇದು ಹೀಗೆಯೇ ಸರಿ ಎಂದು ನಿಧ೯ರಿಸಿ ಅನಂತರ ಅಥ೯ವನ್ನು ಮಾಡಿಕೊಂಡು ,ಅದರಂತೆಯೆ ಆಚರಿಸಿ ,ಅದರ ಫಲವನ್ನು ಅನುಭವಿಸುತ್ತಾನೆ.(ಪುಟ 343)
ನಾರದ: 'ಭಗವಂತನೆ,ಬಲಕ್ಕಿಂತ ಅಧಿಕವಾದುದು ಇದೆಯೇ?'
ಒಂಬತ್ತನೆಯ ಖಂಡ:
22)ಅನ್ನವೇ ಬಲಕ್ಕಿಂತ ಅಧಿಕವಾದುದು.ಆದುದರಿಂದ ಒಬ್ಬ ಮನುಷ್ಯನು ಹತ್ತು ರಾತ್ರಿಗಳು ಊಟಮಾಡದಿದ್ದರೂ (ಒಂದುವೇಳೆ) ಜೀವಿಸಿದ್ದರೆ,ಅವನು ನೋಡಲು,ಕೇಳಲು ಮನನ ಮಾಡಲು ಅರಿಯಲು ಕೆಲಸಮಾಡಲು ಮತ್ತು ಫಲವನ್ನು ಅನುಭವಿಸಲು ಶಕ್ತನಾಗುವುದಿಲ್ಲ.ಆದರೆ ಅವನು ಅನ್ನವನ್ನು ಪಡೆದಾಗ ನೋಡಲು ಕೇಳಲು ಮನನ ಮಾಡಲು ಅರಿಯಲು ಕೆಲಸಮಾಡಲು ಮತ್ತು ಫಲವನ್ನು ಅನುಭವಿಸಲು ಶಕ್ತನಾಗುತ್ತಾನೆ.ಅನ್ನವನ್ನು ಬ್ರಹ್ಮವೆಂದು ಉಪಾಸಿಸು.(ಪುಟ 344)
ನಾರದ: 'ಭಗವಂತನೆ ಅನ್ನಕ್ಕಿಂತ ಅಧಿಕವಾದುದು ಇದೆಯೇ?
ಹತ್ತನೆಯ ಖಂಡ:
23)ನೀರೇ ಅನ್ನಕ್ಕಿಂತ ಅಧಿಕವಾದುದು.ಆದುದರಿಂದಲೇ ಸಂವೃಷ್ಟಿಯಾಗದಿದ್ದರೆ (ಚೆನ್ನಾಗಿ ಮಳೆಯಾಗದಿದ್ದರೆ)ಪ್ರಾಣಿಗಳು ಅನ್ನವು ಕಡಿಮೆಯಾಗುವುದೆಂದು ದುಃಖಪಡುತ್ತವೆ.ಆದರೆ ಸಂವೃಷ್ಟಿಯಾದಾಗ ಅನ್ನವು ಹೆಚ್ಚಾಗುವುದೆಂದು ಆನಂದಪಡುತ್ತವೆ.ಈ ನೀರೇ ವಿವಿಧ ಮೂತ೯ ರೂ¥ಗಳನ್ನು ಧರಿಸಿ ಈ ಪೃಥ್ವಿ ಈ ಅಂತರಿಕ್ಷ ಈ ದ್ಯುಲೋಕ ಈ ಪವ೯ತಳು ದೇವತೆಗಳು, ಮನುಷ್ಯರು ಪಶುಪಕ್ಷಿಗಳು,ಹುಲ್ಲುಮರಗಳು ಹಿಂಸ್ರ ಜಂತುಗಳು,ಕೀಟ-ಪತಂಗ-ಇರುವೆಯವರೆಗೆ ಎಲ್ಲವೂ ಆಗಿದೆ.ನೀರೇ ಈ ಮೂತ೯ಗಳಾಗಿದೆ.ನೀರನ್ನು ಬ್ರಹ್ಮವೆಂದು ಉಪಾಸಿಸು.(ಪುಟ 346)
ನಾರದ: ನೀರಿಗಿಂತ ಅಧಿಕವಾದುದು ಇದೆಯೇ?
ಹನ್ನೊಂದನೆಯ ಖಂಡ:
24) ತೇಜಸ್ಸೇ ನೀರಿಗಿಂತ ಅಧಿಕವಾದುದು.ಆ ಈ ತೇಜಸ್ಸೇ ವಾಯುವನ್ನು ಅವಲಂಬಿಸಿಕೊಂಡುಆಕಾಶವನ್ನು ತಪಿಸುತ್ತದೆ..ಆಗ "ತಪಿಸುತ್ತಿದೆ,ದಹಿಸುತ್ತಿದೆ,ಮಳೆಗರೆಯುತ್ತದೆ"ಎಂದು ಜನರು ಹೇಳುತ್ತಾರೆ.ಆ ಈ ತೇಜಸ್ಸೇ ಮೊದಲು ಕಾಣಿಸಿಕೊಂಡು ಅನಂತರ ನೀರನ್ನು ಸೃಷ್ಟಿಸುತ್ತದೆ.ಆ ಈ ತೇಜಸ್ಸೆ ಸಿಡಿಲಿನ ರೂಪದಿಂದ ಮಳೆಗೆ ಕಾರಣವಾಗುತ್ತದೆ.ಊಧ್ವ೯ವಾಗಿ ಮತ್ತು ಅಡ್ಡಲಾಗಿ ಹೊಳೆಯುತ್ತಿರುವ ಮಿಂಚುಗಳಿಂದ ಕೂಡಿದ ಸಿಡಿಲುಗಳು ಸಂಚರಿಸುತ್ತವೆ.ಆದುದರಿಂದ ಜನರು "ಮಿಂಚುತ್ತಿದೆ,ಗುಡುಗುತ್ತಿದೆ,ಮಳೆಗರೆಯುವುದು"ಎಂದು ಹೇಳುತ್ತಾರೆ.ಆ ತೇಜಸ್ಸೇ ಮೊದಲು ಕಾಣಿಸಿಕೊಂಡು ಅನಂತರ ನೀರನ್ನು ಸೃಷ್ಟಿಸುತ್ತದೆ.ತೇಜಸ್ಸನ್ನು ಬ್ರಹ್ಮವೆಂದು ಉಪಾಸಿಸು.(ಪುಟ 348)
ನಾರದ:'ಭಗವಂತನೆ,ತೇಜಸ್ಸಿಗಿಂತ ಅಧಿಕವಾದುದು ಇದೆಯೇ?'
ಹನ್ನೆರಡನೆಯ ಖಂಡ:
25)ಆಕಾಶವೇ ತೇಜಸ್ಸಿಗಿಂತ ಅಧಿಕವಾದುದು.ಸೂಯ೯ಚಂದ್ರರು ಮಿಂಚು ನಕ್ಷತ್ರಗಳು ಅಗ್ನಿ ಆಕಾಶದಲ್ಲಿಯೇ ಇರುತ್ತಾರೆ.ಒಬ್ಬನು ಇನ್ನೊಬ್ಬನನ್ನು ಆಕಾಶದ ಮೂಲಕ ಕರೆಯುತ್ತಾನೆ.ಕರೆದಾಗ ಇನ್ನೊಬ್ಬನು ಆಕಾಶದಿಂದ ಕೇಳುತ್ತಾನೆ.ಆಕಾಶದಿಂದ ಪ್ರತಿಶ್ರವಣ ಮಾಡುತ್ತಾನೆ.ಆಕಾಶದಲ್ಲಿಯೇ ಪ್ರತಿಯೊಬ್ಬನೂ ಮತ್ತೊಬ್ಬನೊಡನೆ ರಮಿಸುತ್ತಾನೆ. ಬಂಧು ವಿಯೋಗವಾದಾಗ ಆಕಾಶದಲ್ಲಿಯೇ ರಮಿಸುವುದಿಲ್ಲ.ಆಕಾಶದಲ್ಲಿಯೇ ವಸ್ತುವು ಹುಟ್ಟುತ್ತದೆ,ಆಕಾಶದ ಕಡೆಗೆ ಬೆಳೆಯುತ್ತದೆ.ಆಕಾಶವನ್ನು ಬ್ರಹ್ಮವೆಂದು ಉಪಾಸಿಸು.(ಪುಟ 34೯)
26) ವಾಯುಸಹಿತವಾದ ತೇಜಸ್ಸಿಗೆ ಆಕಾಶವು ಕಾರಣವಾಗಿದೆ.(ಪುಟ 34೯)
ನರದ: 'ಆಕಾಶಕ್ಕಿಂತ ಅಧಿಕವಾದುದು ಇದೆಯೇ?'
ಹದಿಮೂರನೆಯ ಖಂಡ:
27)ಸನತ್ಕುಮಾರ:ಸ್ಮøತಿಯೇ ಆಕಾಶಕ್ಕಿಂತ ಅಧಿಕವಾದುದು.ಆದುದರಿಂದ ಒಂದು ಸ್ಥಳದಲ್ಲಿ ಬಹುಮಂದಿ ಕುಳಿತಿದ್ದರೂ ಸ್ಮøತಿಯಿಲ್ಲದವರಾದರೆ ಏನನ್ನೂ ಕೇಳಲಾರರು.ಮನನ ಮಾಡಲಾರರು,ಅರಿಯಲಾರರು,ಯಾವಾಗ ಅವರು ಸ್ಮರಿಸಿಕೊಳ್ಳುವರೊ ಆಗ ಕೇಳುವರು,ಮನನ ಮಡುವರು,ಅರಿಯುವರು.ಮನುಷ್ಯನು ಸ್ಮøತಿಯಿಂದಲೇ ಪಶುಗಳನ್ನು ಅರಿಯುತ್ತಾರೆ.ಸ್ಮøತಿಯನ್ನು ಬ್ರಹ್ಮವೆಂದು ಉಪಾಸಿಸು.(ಪುಟ 351)
28) ನೆನಪಿಗೆ ತಂದುಕೊಳ್ಳುವ ಒಂದು ಅಂತಃಕರಣ ಧಮ೯ (ಪುಟ 351)
ನಾರದ:'ಭಗವಂತನೆ ಸ್ಮøತಿಗಿಂತ ಅಧಿಕವಾದುದು ಯಾವುದಾದರೂ ಇದೆಯೇ?
ಹದಿನಾಲ್ಕನೆಯ ಖಂಡ:
2೯)ಸನತ್ಕುಮಾರ:'ಆಸೆಯೇ ಸ್ಮøತಿಗಿಂತ ಅಧಿಕವಾದುದು.ಆಶೆಯಿಂದ ಉದ್ದೀಪಿತನಾದಾಗಲೇ ಸ್ಮರಿಸಿಕೊಂಡು ಮಂತ್ರಗಳನ್ನು ಅಧ್ಯಯನ ಮಾಡುತ್ತಾನೆ.ಕಮ೯ಗಳನ್ನು ಮಾಡುತ್ತಾನೆ.ಪುತ್ರರನ್ನೂ ಪಶುಗಳನ್ನೂ ಬಯಸುತ್ತಾನೆ.ಇಹಲೋಕವನ್ನೂ ಪರಲೋಕವನ್ನೂ ಇಚ್ಛಿಸುತ್ತಾನೆ.ಆಶೆಯನ್ನು ಬ್ರಹ್ಮವೆಂದು ಉಪಾಸಿಸು.(ಪುಟ (352)
ನಾರದ: ಆಸೆಗಿಂತ ಅಧಿಕವಾದುದು ಯಾವುದಾದರೂ ಇದೆಯೇ?
ಹದಿನೈದನೆಯ ಖಂಡ:
30)ಸನತ್ಕುಮಾgರ: 'ಪ್ರಾಣವೇ ಆಸೆಗಿಂತ ಅಧಿಕವಾದುದು.ಹೇಗೆ ಅರೆಕಾಲುಗಳು ಚಕ್ರದ ನಾಭಿಯಲ್ಲಿ ಸೇರಿಕೊಂಡಿರುವುವೊ ಹಾಗೆಯೇ ಈ ಪ್ರಾಣದಲ್ಲಿ ಎಲ್ಲವೂ ಸೇರಿಕೊಂಡಿರುತ್ತದೆ.ಪ್ರಾಣವು ಪ್ರಾಣದಿಂದಲೇ ಹೋಗುತ್ತದೆ.ಪ್ರಾಣವು ಪ್ರಾಣವನ್ನು ಕೊಡುತ್ತದೆ.ಪ್ರಾಣವೇ ತಂದೆ,ಪ್ರಾಣವೇ ತಾಯಿ.ಪ್ರಾಣವೇ ಸೋದರ.
ಪ್ರಾಣವೇ ಸೋದರಿ.ಪ್ರಾಣವೇ ಆಚಾಯ೯,ಪ್ರಾಣವೇ ಬ್ರಾಹ್ಮಣ'.(ಪುಟ 354)
31) ಪ್ರಾಣನು ಸವ೯ವ್ಯಾಪಿಯಾಗಿ ಒಳಗೂ ಹೊರಗೂ ಇದ್ದುಕೊಂಡು-ದಾರವು ಮಣಿಗಳನ್ನು ಕಟ್ಟಿರುವಂತೆ,-ಇಡೀ ಜಗತ್ತನ್ನು ಕಟ್ಟಿ ಹಿಡಿದುಕೊಂಡಿರುವನು. ಆದುದರಿಂದಲೇ ಪ್ರಾಣನು ಸೂತ್ರಾತ್ಮನೆನಿಸಿರುವನು.(354)
32) ತನ್ನ ಶಕ್ತಿಯಿಂದಲೇ ಹೋಗುತ್ತದೆ.ಗಮನಾದಿ ಕ್ರಿಯೆಗಳಲ್ಲಿ,ಪ್ರಾಣಕ್ಕಿರುವ ಸಾಮಥ್ಯ೯ವು ಬೇರೊಂದರಿಂದ ಬಂದಿಲ್ಲ.ಕ್ರಿಯಾ-ಕರಣ-ಫಲ ಸಮೂಹವೆಲ್ಲ ಪ್ರಾಣವೇ.ಪ್ರಾಣಕ್ಕಿಂತ ಬಹಿಭೂ೯ತವಾದ ಯಾವ ವಸ್ತುವೂ ಇಲ್ಲ.(ಪುಟ 354)
33)ಸನತ್ಕುಮಾರ:
ಪ್ರ್ರಾಣವೇ ಇದೆಲ್ಲವೂ ಆಗಿರುತ್ತದೆ.ಹೀಗೆ ನೋಡುತ್ತಾ, ಮನನಮಾಡುತ್ತಾ,ಅರಿಯುತ್ತ ಇರುವವನು ಅತಿವಾದಿಯಾಗುತ್ತಾನೆ.ಯಾರಾದರೂ ಇವನನ್ನು ಕುರಿತು "ನೀನು ಅತಿವಾದಿಯಾಗಿರುವೆ"ಎಂದು ಹೇಳಿದರೆ ,ಅವನು "ನಾನು ಅತಿವಾದಿಯಾಗಿರುವೆನು"ಎಂದೇ ಹೇಳಬೇಕು.ನಿರಾಕರಿಸ ಬಾರದು.(ಪುಟ 357)
34)ನಾಮದಿಂದ ಪ್ರಾರಂಭಿಸಿ ಆಶೆಯವರೆಗೆ ಇರುವ ತತ್ವಗಳನ್ನೆಲ್ಲ ಅತಿಕ್ರಮಿಸಿರುವ ಪ್ರಾಣವನ್ನು ಹೇಳು ವ ಸ್ವಭಾವವುಳ್ಳವನು.ಎಂದರೆ 'ಬ್ರಹ್ಮದಿಂದ ಹಿಡಿದು ಹುಲ್ಲಿನವರೆಗಿನ ಜಗತ್ತಿಗೆಲ್ಲ ಜಗತ್ತಿಗೆಲ್ಲ ಆತ್ಮವಾದ ಪ್ರಾಣವೇ ನಾನು'ಎಂದು ಹೇಳುವವನು.ಸವೇ೯ಶ್ವರನಾದ ಪ್ರಾಣವನ್ನೇ ತಾನು ಎಂದು ಅರಿತಿರುವುದರಿಂದ.(ಪುಟ 357)
ಹದಿನಾರನೆಯ ಖಂಡ:
35)ಸನತ್ಕುಮಾರ:'ಆದರೆ ಯಾವನು ಸತ್ಯದಿಂದ ಅತಿವಾದಿಯಾಗಿರುವನೊ ಅವನೇ ನಿಜವಾದ ಅತಿವಾದಿಯಾಗಿರುತ್ತಾನೆ.'(ಪುಟ 357)
36)ಪ್ರಾಣವಿದನು ನಿಜವಾದ ಅತಿವಾದಿಯಲ್ಲ.ಮುಂದೆ ಹೇಳಲ್ಪಡುವವನೇ ಅತಿವಾದಿ.ಯಾವನು ಭೂಮವೆಂಬ ಹೆಸರಿನ,ಎಲ್ಲವನ್ನೂ ಅತಿಕ್ರಮಿಸಿರುವ ಪರಮಾಥ೯ ಸತ್ಯವನ್ನು ಅರಿತಿರುವನೊ ಅವನೇ ನಿಜವಾದ ಅತಿವಾದಿ.(ಪುಉಟ 358)
ಹದಿನೇಳನೆಯ ಖಂಡ:
37)ಸನತ್ಕುಮಾರ: ಯಾವಾಗ ತಿಳಿದುಕೊಳ್ಳುವನೊ ಆಗ ಸತ್ಯವನ್ನು ಹೇಳುತ್ತಾನೆ.ತಿಳಿಯದಿರುವವನು ಸತ್ಯವನ್ನು ಹೇಳುವುದಿಲ್ಲ.ತಿಳಿದವನೇ ಸತ್ಯವನ್ನು ಹೇಳುತ್ತಾನೆ.ವಿಜ್ಞಾನವನ್ನೇ ತಿಳಿದುಕೊಳ್ಳಲು ಬಯಸಬೇಕು.(ಪುಟ 358)
38) ಪ್ರಾಣವು ವ್ಯಾವಹಾರಿಕ ಸತ್ಯವಾಗಿದ್ದರೂ ಪಾರಮಾಥಿ೯ಕವಲ್ಲವೆಂಬುನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.(ಪು ಟ(35೯)
ಹದಿನೆಂಟನೆಯ ಖಂಡ:
3೯)ಸನತ್ಕುಮಾರ: ಯಾವಾಗ ಮನನಮಾಡುತ್ತಾನೋ ಆಗ ತಿಳಿದುಕೊಳ್ಳುತ್ತಾನೆ.ಮನನ ಮಾಡದೆ ತಿಳಿದುಕೊಳ್ಳಲಾರನು.ಮನನ ಮಾಡಿಯೇ ತಿಳಿದುಕೊಳ್ಳುತ್ತಾನೆ.ಮನನವನ್ನೇ ತಿಳಿದುಕೊಳ್ಳಲು ಬಯಸಬೇಕು.'(ಪುಟ 360)
ನಾರದ: 'ಭಗವಂತನೆ ಮನನವನ್ನೇ ತಿಳಿದುಕೊಳ್ಳಲು ಬಯಸುತ್ತೇನೆ.'
40)ಸನತ್ಕುಮಾರ : 'ಯಾವಾಗ ಶ್ರದ್ಧೆಯಿಡುವನೊ ಆಗ ಮನನ ಮಾಡುತ್ತಾನೆ.ಶ್ರದ್ಧೆಯಿಲ್ಲದವನು ಮನನ ಮಾಡಲಾರನು.ಶ್ರದ್ಧೆಯಿರುವವನೇ ಮನನ ಮಾಡುತ್ತಾನೆ.ಶ್ರದ್ಧೆಯನ್ನೇ ತಿಳಿದುಕೊಳ್ಳಲು ಬಯಸಬೇಕು.'(ಪುಟ 360)
41) ಶ್ರದ್ಧೆ ಎಂದರೆ ಆಸ್ತಿಕ್ಯ ಬುದ್ಧಿ(ಪುಟ 360)
ಇಪ್ಪತ್ತನೆಯ ಖಂಡ:
42)ಸನತ್ಕುಮಾರ: ಯಾವಾಗ ನಿಷ್ಠೆಯನ್ನು ಮಾಡುತ್ತಾನೋ ಆಗ ಶ್ರದ್ಧೆಯಿಡುತ್ತಾನೆ.ನಿಷ್ಠೆಯಿಲ್ಲದವನು ಶ್ರದ್ಧೆಯಿಡಲಾರನು.ನಿಷ್ಠೆಯುಳ್ಳವನೇ ಶ್ರದ್ಧೆಯಿಡುತ್ತಾನೆ.ನಿಷ್ಠೆಯನ್ನೇ ತಿಳಿದುಕೊಳ್ಳಲು ಬಯಸಬೇಕು.(ಪುಟ 361)
43) ಬ್ರಹ್ಮ ಜ್ಞಾನಕ್ಕಾಗಿ ಗುರು ಶುಶ್ರೂಷಾದಿಗಳಲ್ಲಿ ತತ್ಪರನಾಗಿರುವುದು ನಿಷ್ಠೆ.(ಪುಟ 360)
ಇಪ್ಪತ್ತೊಂದನೆಯ ಖಂಡ:
44)'ಯಾವಾಗ ಕೃತಿಯನ್ನು ಮಾಡುತ್ತಾನೋ ಆಗ ನಿಷ್ಠೆಯುಳ್ಳವನಾಗುತ್ತಾನೆ.ಕೃತಿಯನ್ನು ಮಾಡದೆ ನಿಷ್ಠೆಯುಳ್ಳವನಾಗುವುದಿಲ್ಲ.ಕೃತಿಯನ್ನು ಮಾಡಿಯೇ ನಿಷ್ಠೆಯುಳ್ಳವನಾಗುತ್ತಾನೆ.ಕೃತಿಯನ್ನೇ ತಿಳಿದುಕೊಳ್ಳಲು ಬಯಸಬೇಕು.'(ಪುಟ 361)
45) ಕೃತಿ ಎಂದರೆ ಇಂದ್ರಿಯ ಸಂಯಮವನ್ನು ಮತ್ತು ಚಿತ್ತದ ಏಕಾಗ್ರತೆಯನ್ನು ಮಾಡಿಕೊಳ್ಳುವುದು.(ಪುಟ 361)
ಇಪ್ಪತ್ತೆರಡನೆಯ ಖಂಡ:
46)ಸನತ್ಕುಮಾರ:ಯಾವಾಗ ಸುಖವನ್ನು ಹೊಂದುತ್ತಾನೆಯೊ ಆಗ ಕೃತಿಯನ್ನು ಮಾಡುತ್ತಾನೆ.ಸುಖವನ್ನು ಪಡೆಯದೆ ಕೃತಿಯನ್ನು ಪಡೆಯಲಾರರು.ಸುಖವನ್ನೇ ಹೊಂದಿ ಕೃತಿಯನ್ನು ಮಾಡುತ್ತಾನೆ.ಸುಖವನ್ನೇ ತಿಳಿದುಕೊಳ್ಳಲು ಬಯಸಬೇಕು.(ಪುಟ362)
47) ಮನುಷ್ಯನು ಪ್ರತಿಯೊಂದು ಕಮ೯ವನ್ನು ಮಾಡುವುದು ಸುಖ ಪ್ರಾಪ್ತಿಗಾಗಿ ಎಂಬುದು ತಿಳಿದು ಬರುತ್ತದೆ.ಕಮ೯ಕ್ಕೂ ಸುಖಕ್ಕೂ ಇರುವ ಸಂಬಂಧವು ಇಹ-ಪರಗಳೆರಡರಲ್ಲೂ ಸಾವ೯ತ್ರಿಕವಾಗಿದೆ.ಉಪಾಸಕನು ನಿರತಿಶಯ ಸುಖವನ್ನು ಪಡೆಯಬೇಕೆಂದು ಬಯಸಿದಾಗ ಗುರು ಶುಶ್ರೂಷೆ ಮೊದಲಾದ ಕಮ೯ಗಳಲ್ಲಿ ನಿರತನಾಗುತ್ತಾನೆ.ಆದುದರಿಂದ ನಿರತಿಶಯ ಸುಖವನ್ನು ಪಡೆಯಲು ಉತ್ಕಟವಾದ ಇಚ್ಛೆಯಿರಬೇಕು.ಉತ್ಕಟವಾದ ಬಯಕೆ ಇಲ್ಲದಿದ್ದರೆ ಗುರುಶುಶ್ರೂಷಾದಿ ಕಮ೯ಗಳು ವಿಶಾಷ ಪ್ರಯೋಜನವಾಗುವುದಿಲ್ಲ.(ಪುಟ 362)
ಇಪ್ಪತ್ತಮೂರನೆಯ ಖಂಡ:
48) 'ಯಾವುದು ಭೂಮವೊ ಅದು ಸುಖವು.ಅಲ್ಪದಲ್ಲಿ ಸುಖವಿಲ್ಲ.ಭೂಮವೇ ಸುಖವು.ಭೂಮವ
ನ್ನೆ ತಿಳಿದುಕೊಳ್ಳಲು ಬಯಸಬೇಕು.(ಯೋ ವೈ ಭೂಮಾ ತತ್ಸುಖಂ.ನಾಲ್ಪೇ ಸುಖಮಸ್ತಿ)(ಪುಟ 362)
4೯)ದೊಡ್ಡದು,ಮಹತ್,ನಿರತಿಶಯವಾದುದು,ಬಹು -ಇವು ಭೂಮದ ಪಯಾ೯ಯ ಶಬ್ದಗಳು.ಭೂಮಕ್ಕಿಂತ ಕೆಳಗಿರುವುದೆಲ್ಲ ಅಲ್ಪ.ಅಲ್ಪ ವಸ್ತುವಿನಲ್ಲಿ ಸುಖವಿಲ್ಲ.ಏಕೆಂದರೆ ಅಲ್ಪವು ಅಧಿಕವಾದುದರ ತೃಷೆಯನ್ನುಂಟು ಮಾಡುತ್ತದೆ.ಆದರೆ ತೃಷ್ಣೆಯು ದುಃಖಕ್ಕೆ ಕಾರಣವಾಗುತ್ತದೆ.ಆದುದರಿಂದ ಅಲ್ಪ ವಸ್ತುವಿನಲ್ಲಿ ಸುಖವಿಲ್ಲ.ಭೂಮವೇ ಸುಖ.(ಪುಟ 363)
ಇಪ್ಪತ್ತನಾಲ್ಕನೆಯ ಖಂಡ:
50)ಸನತ್ಕುಮಾರ:'ಎಲ್ಲಿ ಬೇರೊಂದನ್ನು ನೋಡುವುದಿಲ್ಲವೊ,ಬೇರೊಂದನ್ನು ಕೇಳುವುದಿಲ್ಲವೊಬೇರೊಂದನ್ನು ಅರಿಯುವುದಿಲ್ಲವೊ ಅದು ಭೂಮವು.ಆದರೆ ಎಲ್ಲಿ ಬೇರೊಂದನ್ನು ನೋಡುತ್ತಾನೆಯೊ ಬೇರೊಂದನ್ನು ಕೇಳುವನೊ ಬೇರೊಂದನ್ನು ಅರಿಯುವನೊ ಅದು ಅಲ್ಪವು.ಯಾವುದು ಭೂಮವೊ ಅದು ಅಮೃತವು.ಅದು ಮತ್ಯ೯ವು.'(ಪುಟ 364)
51)'ಭಗವಂತೆ ಭೂಮವು ಯಾವುದರಲ್ಲಿ ಪ್ರತಿಷ್ಠಿತವಾಗಿದೆ?'
52) ಸನತ್ಕುಮಾರ: ಅದು ತನ್ನ ಮಹಿಮೆಯಲ್ಲಿ ಪ್ರತಿಷ್ಠಿತವಾಗಿದೆ ಅಥವಾ ತನ್ನ ಮಹಿಮೆಯಲ್ಲಿಯೂ ಪ್ರತಿಷ್ಠಿತವಾಗಿಲ್ಲ.(ಪುಟ 364)
53)ಇಲ್ಲಿ ಭೂಮದ ಲಕ್ಷಣವನ್ನು ಹೇಳಿದೆ.ಸಾಮಾನ್ಯವಾಗಿ ಇಂದ್ರಿಯಗಳಿಂದ ಉಂಟಾದ ಜ್ಞಾತ್ರೃ -ಜ್ಞೇಯಗಳ ಸಂಬಂಧದಿಂದ ವಸ್ತುವಿನ ಜ್ಞಾನವುಂಟಾಗುತ್ತದೆ.ಆದರೆ ಭೂಮದಲ್ಲಿ ಜ್ಞಾತೃ -ಜ್ಞೇಯಗಳು ಇರುವುದಿಲ್ಲ.ಆದುದರಿಂದ ಭೂಮವನ್ನು ಅರಿತುಕೊಂಡವನು ಬೇರೇನನ್ನೂ ನೋಡುವುದಿಲ್ಲ,ಕೇಳುವುದಿಲ್ಲ ,ಅರಿಯುವುದಿಲ್ಲ.ಭೂಮಜ್ಞಾನವು ನಾಮರೂಪಗಳನ್ನು ಗ್ರಹಿಸುವ ಮನಸ್ಸಿನ ವ್ಯಾಪಾರವಲ್ಲ ಎಂಬುದು ಸ್ಪಷ್ಟವಾಗುತ್ತದೆ.(ಪುಟ 364)
54) ಭೂಮವನ್ನು ಬಿಟ್ಟರೆ ಬೇರೆ ಯಾವ ದಶ೯ನ-ಶ್ರವಣ-ಜ್ಞಾನಗಳೂ ಇಲ್ಲ ಎಂದು ಉಪನಿಷತ್ತು ಹೇಳುವಾಗ ಅದು ಸಂಸಾರಾತೀತವೆಂಬುದು ಅಥವಾ ನಿವಿ೯ಶೇಷವೆಂಬುದು ಸಿದ್ಧವಾಗುತ್ತದೆ.ಇಲ್ಲಿ ಸಮಸ್ತ ಪ್ರತ್ಯಯಗಳಿಗೂ ಆಧಾರವಾದ ಆತ್ಮನನ್ನು ನಿರಾಕರಿಸಿಲ್ಲ ಎಂಬುದನ್ನು ಮರೆಯಬಾರದು.(ಪುಟ 364)
55)ಶಿಷ್ಯನು ಭೂಮಕ್ಕೆ ಯಾವುದಾದರೂ ಒಂದು ಪ್ರತಿಷ್ಠೆಯನ್ನು ಬಯಸಿದರೆ 'ತನ್ನ ಮಹಿಮೆ
ಯಲ್ಲಿ'ಎಂಬುದು ಅದಕ್ಕೆ ಉತ್ತರ.ಆದರೆ ಅವನು ಪರಮಾತ್ಮವನ್ನೇ ಕೇಳಲು ಬಯಸಿದರೆ 'ತನ್ನ ಮಹಿಮೆಯಲ್ಲೂ ಪ್ರತಿಷ್ಠಿತವಾಗಿಲ್ಲ'ಎಂಬುದು ಉತ್ತರ.ಭೂಮಕ್ಕೆ ನಿಜವಾಗಿ ಪ್ರತಿಷ್ಠೆಯಾಗಲೀ ಆಶ್ರಯವಾಗಲಿ ಇಲ್ಲ.(ಪುಟ 364)
56)ಸನತ್ಕುಮಾರ:'ಇಲ್ಲಿ ಅಶ್ವಗಳು ಗೋವುಗಳು ಆನೆಗಳು ಚಿನ್ನ ಸೇವಕರು ಭಾಯೆ೯ಯರು ಹೊಲಗದ್ದೆಗಳು ಮನೆಗಳು-ಇವುಗಳನ್ನು ಮಹಿಮೆ ಎಂದು ಜನರು ಹೇಳುತ್ತಾರೆ.ಆದರೆ ನಾನು ಹೀಗೆ ಹೇಳುತ್ತಿಲ್ಲ.ಏಕೆಂದರೆ ಒಬ್ಬನು ಬೇರೊಂದರಲ್ಲಿಪ್ರತಿಷ್ಠಿತನಾಗುತ್ತಾನೆ.ಹೀಗೆ ಹೇಳುತ್ತೇನೆ.(ಪುಟ365)
57)ಭೂಮವು ತನಗಿಂತ ಬೇರೆ ಯಾವ ಮಹಿಮೆಯನ್ನೂ ಆಶ್ರಯಿಸಿಲ್ಲ ಎಂಬುದು ಅಥ೯(ಪುಟ 368)
ಇಪ್ಪತ್ತೈದನೆಯ ಖಂಡ:
58) ಸನತ್ಕುಮಾರ:ಆ ಭೂಮವೇ ಕೆಳಗಿದೆ.ಮೇಲಿದೆ,ಹಿಂದಿದೆ,ಮುಂದಿದೆ,ಬಲಕ್ಕಿದೆ,ಎಡಕ್ಕಿದೆ-ಅದೇ ಇದೆಲ್ಲವೂ ಆಗಿದೆ.
ಇನ್ನು ಭೂಮವು ಅಹಂಕಾರದ ಮೂಲಕ ಉಪದೇಶಿಸಲ್ಪಡುತ್ತದೆ.ನಾನೇ ಕೆಳಗಿರುವೆನು.ಮೇಲಿರುವೆನು,ಹಿಂದಿರುವೆನು,ಮುಂದಿರುವೆನು ಬಲಕ್ಕಿರುವೆನು,ಎಡಕ್ಕಿರುವೆನು-ನಾನೇ ಇದೆಲ್ಲವೂ ಆಗಿರುವೆನು.(ಪುಟ 366)
5೯)ಯಾವಕಾರಣದಿಂದ ಭೂಮವು ಎಲ್ಲಿಯೂ ಪ್ರತಿಷ್ಠಿತವಾಗಿಲ್ಲೆಂಬುದನ್ನು ಹೇಳಿದೆ.ಭೂಮವು ಎಲ್ಲೆಲ್ಲಿಯೂ ಇರುವುದರಿಂದ ಅದಕ್ಕಿಂತ ವ್ಯತಿರಿಕ್ತವಾಗಿರುವುದು ಯಾವುದೂ ಇಲ್ಲ.(ಪುಟ 366)
60)ಸನತ್ಕುಮಾರ:ಇನ್ನು,ಆದುದರಿಂದ ಭೂಮವು ಆತ್ಮನ ಮೂಲಕ ಉಪದೇಶಿಸಲ್ಪಡುತ್ತದೆ.ಆತ್ಮನೇ ಕೆಳಗಿರುವನು,ಮೇಲಿರುವನು,ಹಿಂದಿರುವನು,ಮುಂದಿರುವನು,ಬಲಕ್ಕಿರುವನು,ಎಡಕ್ಕಿರುವನು-ಆತ್ಮನೇ ಇದೆಲ್ಲವೂ ಆಗಿರುವನು.(ಪುಟ 367)
61)ಹೀಗೆ ನೋಡಿ,ಮನನಮಾಡಿ,ಅರಿತುಕೊಂಡು,ಆತ್ಮರತಿಯೂ,ಆತ್ಮಕ್ರೀಡನೂ,ಆತ್ಮಮಿಥುನನೂ ಆಗಿ ಅವನು ಸ್ವರಾಟ್ ಆಗುತ್ತಾನೆ.ಅವನಿಗೆ ಸವ೯ಲೋಕಗಳಲ್ಲಿಯೂ ಸ್ವಚ್ಛಂದ ಗತಿಯಿರುತ್ತದೆ.ಇನ್ನು ಯಾರು ಇದಕ್ಕಿಂತ ಬೇರೆಯಾಗಿ ಅರಿತುಕೊಂಡಿರುವರೊ ಅವರು ಅನ್ಯರಾಜನ ಅಧೀನಕ್ಕೆ ಒಳಪಟ್ಟುಕ್ಷಯವುಳ್ಳ ಲೋಕಗಳಲ್ಲಿ ವಾಸಿಸುತ್ತಾರೆ.ಅವರಿಗೆ ಯಾವ ಲೋಕಗಳಲ್ಲಿಯೂ ಸ್ವಚ್ಛಂದ ಗತಿಯಿರುವುದಿಲ್ಲ.(ಪುಟ 367)
62)ಆತ್ಮರತಿ ಎಂದರೆ ಆತ್ಮನಲ್ಲಿಯೇ ರಮಿಸುವವನು.ಆತ್ಮಕ್ರೀಡ ಎಂದರೆ ಆತ್ಮನಲ್ಲಿಯೇ ಕ್ರೀಡಿಸುವವನು.
ದೇಹಸಾಧನವಾಗಲೀ ಅಥವಾ ಬಾಹ್ಯಸಾಧನವಾಗಲಿ ಬೇಕಿಲ್ಲ.ಆತ್ಮಮಿಥುನವೆಂದರೆ ದ್ವಂದ್ವದಿಂದ ಉಂಟಾವುವ ಸುಖ.ಈ ಸುಖವು ಜ್ಞಾನಿಗೆ ದ್ವಂದ್ವದ ಅಪೇಕ್ಷೆಯಿಲ್ಲದೆ ಉಂಟಾಗುತ್ತದೆ.ಅಜ್ಞಾನಿಗಳಿಗೆ ವಿಷಯಗಳಿಂದಲೇ ಉಂಟಾಗುತ್ತದೆ.(ಪುಟ 367)
63) ಆದರೆ ಆನಂದವು ಆತ್ಮನಿಮಿತ್ತದಿಂದಲೇ ಸವ೯ದಾ ಸವ೯ ಪ್ರಕಾರದಿಂದ ಉಂಟಾಗುತ್ತದೆ.ಇಂಥ ಜ್ಞಾನಿಯು ಬದುಕಿರುವಾಗಲೇ ಸ್ವರಾಜ್ಯದಲ್ಲಿ ಅಭಿಷಿಕ್ತನಾಗಿದ್ದು ದೇಹವು ಹೋದಮೇಲೂ ಸ್ವರಾಟ್ ಆಗುತ್ತಾನೆ.ಎಂದರೆ ಅವನ ಸ್ಥಿತಿಯು ಯಾವ ವಿಧದಲ್ಲಿಯೂ ಬದಲಾವಣೆಯನ್ನು ಹೊಂದುವುದಿಲ್ಲ.
(ಪುಟ 367)
ಇಪ್ಪತ್ತಾರನೆಯ ಖಂಡ:
64)ಸನತ್ಕುಮಾರ:ಯಾವನು ಹೀಗೆ ನೋಡುತ್ತಾನೆಯೊ,ಮನನ ಮಾಡುತ್ತಾನೆಯೊ ಅರಿಯುತ್ತಾನೆಯೊ ಅವನಿಗೆ ಆತ್ಮನಿಂದಲೇ ಪ್ರಾಣವು ಉಂಟಾಗುತ್ತದೆ.ಆತ್ಮನಿಂದಲೇ ಆಶೆಯುಂಟಾಗುತ್ತದೆ.ಆತ್ಮನಿಂದಲೇ ಸ್ಮøತಿಯುಂಟಾಗುತ್ತದೆ.ಹೀಗೆ ಆಕಶ,ತೇಜಸ್ಸು,ನೀರು,ಆವಿಭಾ೯ವತಿರೋಭಾವಗಳು,ಅನ್ನ,ಬಲ,ವಿಜ್ಞಾನ,ಧ್ಯಾನ,ಚಿತ್ತ,ಸಂಕಲ್ಪ,ಮನಸ್ಸು,ವಾಕ್ಕು,ನಾಮ,ಮಂತ್ರಗಳು,ಕಮ೯ಗಳು-ಇವೆಲ್ಲವೂ ಆತ್ಮನಿಂದಲೆ ಉಂಟಾಗುತ್ತವೆ.
(ಪುಟ 368)
65) ಹೀಗೆ ಸಮಸ್ತ ವ್ಯವgಹಾರವೂ ಸ್ವಾರಾಜ್ಯವನ್ನುಹೊಂದಿದ ಜ್ಞಾನಿಗೆ ತನ್ನ ಆತ್ಮನಿಂದಲೇ ಉಂಟಾಗುತ್ತಿರುವುದು.(ಪುಟ 36೯)
66) ವಿದ್ಯಾ ಫಲದ ವಿಷಯದಲ್ಲಿ ಈ ಶ್ಲೋಕವಿದೆ.
"ತತ್ವವಿದನು ಮೃತ್ಯುವನ್ನು ನೋಡುವುದಿಲ್ಲ.ರೋಗವನ್ನಾಗಲಿ ದುಃಖವನ್ನಾಗಲಿ ನೋಡುವುದಿಲ್ಲ.ತತ್ವವಿದನು ಎಲ್ಲವನ್ನೂ ನೋಡುತ್ತಾನೆ.ಸವ೯ ಪ್ರಕಾರದಿಂದಲೂ ಎಲ್ಲವನ್ನೂ ಪಡೆಯುತ್ತಾನೆ."(ಪುಟ 370)
67) "ಸೃಷ್ಟಿಗೆ ಮೊದಲು ತತ್ವವಿದನು ಅದ್ವಯನಾಗಿರುತ್ತಾನೆ.ಅನಂತರ ಸೃಷ್ಟಿಕಾಲದಲ್ಲಿ ಮೂರುಬಗೆಯಾಗುತ್ತಾನೆ.ಐದು,ಏಳು,ಒಂಬತ್ತು,ಹನ್ನೊಂದು ನೂರಾಹತ್ತು,ಹತ್ತು ಸಾವಿರದ ಇಪ್ಪತ್ತು ಬಗೆ ಎನಿಸುತ್ತಾನೆ."(ಪುಟ 370)
68)"ಆಹಾರವು ಶುದ್ಧವಾದಾಗ ಅಂತಃಕರಣವು ಶುದ್ಧವಾಗುತ್ತದೆ.ಅಂತಃಕರಣವು ಶುದ್ಧವಾದಾಗ ಸ್ಮøತಿಯು ಅವಿಚ್ಛಿನ್ನವಾಗುತ್ತದೆ.ಸ್ಮøತಿಯನ್ನು ಪಡೆದಾಗ ಎಲ್ಲ ಗ್ರಂಥಿಗಳ ವಿನಾಶವು ಆಗುತ್ತದೆ.(ಪುಟ 370)
6೯)ರಾಗಾದಿ ದೋಷಗಳಿಂದ ವಿಮುಕ್ತನಾದ ನಾರದನಿಗೆ ಭಗವಂತನಾದ ಸನತ್ಕುಮಾರನು ತಮಸ್ಸಿನ ಆಚೆಯ ದಡವನ್ನು ತೋರಿಸಿದನು.ಅವನನ್ನು ಸ್ಕಂದನೆಂದು ಕರೆಯುತ್ತಾರೆ.ಅವನನ್ನು ಸ್ಕಂದನೆಂದು ಕರೆಯುತ್ತಾರೆ.(ಪುಟ370)
70)ಪುನಃ ಸಂಹಾರ ಕಾಲದಲ್ಲಿಮೂಲವಾಗಿರುವ ತನ್ನ ಪಾರಮಾಥಿ೯ಕವಾದ ಅದ್ವಯ ಭಾವವನ್ನೇ ಪಡೆಯುತ್ತಾನೆ.(ಪುಟ 370)
71)ಇಲ್ಲಿ ಆಹಾರವೆಂದರೆ ಶಬ್ದವೇ ಮೊದಲಾದ ವಿಷಯಗಳ ಜ್ಞಾನ.ಇವ್ಗಳನ್ನು ಭೋಕ್ತøವು ಒಳಗೆ ತೆಗೆದುಕೊಳ್ಳುವುದರಿಂದ ಆಹಾರವೆನಿಸಿದೆ.ರಾಗ-ದ್ವೇಶ ಮೋಹಗಳೆಂಬ ದೋಷಗಳ ಸ್ಪಶ೯ವಿಲ್ಲದ ವಿಷಯ ಜ್ಞಾನ ಎಂದಥ೯.(ಪುಟ 370)
72)ರಾಗದ್ವೇಷಾದಿ ದೋಷಗಳಿಗೆ 'ಕಷಾಯ'ವೆಂದು ಹೆಸರು.ಏಕೆಂದರೆ ಇದು ಸತ್ವೀ ಕಷಾಯವು ಜ್ಞಾ ವೈರಾಗ್ಯಭ್ಯಾಸ ರೂಪವಾದ ಕ್ಷಾರದಿಂದ ನಾಶವಾಗುತ್ತದೆ.ಏಕೆಂದರೆ ಅದು ಸತ್ವಕ್ಕೆ ಬಣ್ಣವನ್ನುಂಟು ಮಾಡುತ್ತದೆ.(ಪುಟ 370)
73) 'ಭೂತಗಳ ಉತ್ಪತ್ತಿ ಪ್ರಲಯ ಗತಿ ವಿಗತಿ ವಿದ್ಯೆ,ಅವಿದ್ಯೆ,ಇವುಗಳನ್ನು ಯಾವನು ಅರಿತುಕೊಂಡಿರುವನೊ ಅವನನ್ನು ಭಗವಂತನೆಂದು ಕರೆಯುತ್ತಾರೆ.(ಪುಟ 371)
,,,,,,,,,,,,,,,,,,,,,,,,,,,,,,,,,,,,,,,,,,,ಏಳನೆಯ ಅಧ್ಯಾಯ ಸಂÀಪೂಣ೯ವಾಯಿತು,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
ಅಧ್ಯಾಯ ಎಂಟು:
1) ಈ ಬ್ರಹ್ಮಪುರದಲ್ಲಿ ಸಣ್ಣದಾದ (ಹೃದಯ)ಪದ್ಮವೆಂಬ ಮನೆಯಿದೆ.ಅದರಲ್ಲಿ ಸಣ್ಣದಾದ ಒಂದು ಅಂತರಾಕಾಶವಿದೆ.ಅದರಲ್ಲಿ ಯಾವುದಿದೆಯೊ ಅದನ್ನು ಅನ್ವೇಶಿಸಬೇಕು.ಅದನ್ನೇ ಅರಿತುಕೊಳ್ಳಲು ಬಯಸಬೇಕು.(ಪುಟ 372)
2) ಬ್ರಹ್ಮವಿದರಿಗೆ ವಿಷಯಗಳಿಂದ ಉಪರತಿಯು ತಾನೇ ಉಂಟಾಗಬಹುದಾಗಿದ್ದರೂ ಅನೇಕ ಜನ್ಮಗಳಲ್ಲಿ ಮಾಡಿದ ವಿಷಯಸೇವಾಭ್ಯಾಸದಿಂದ ಉಂಟಾದ ವಿಷಯ ತೃಷ್ಣೆಯನ್ನು ಕೂಡಲೇ ಹೋಗಲಾಡಿಸಲು ಕಷ್ಟವಾದುದರಿಂದ ಬ್ರಹ್ಮಚಯಾ೯ದಿ ಸಾಧನ ವಿಶೇಷವನ್ನು ವಿಧಿಸಬೇಕಾಗಿದೆ.(ಪುಟ 372)
3)ಗಂತೃಗಮನ ಗಂತವ್ಯವು ಆತ್ಮವಿದನಿಗೆ ಇಲ್ಲದ್ದರಿಂದ ಶರೀರ ಸ್ಥಿತಿಗೆ ಬೇಕಾದ ಅವಿದ್ಯಾದಿ ನಿಮಿತ್ತವು ಕ್ಷಯವಾಗಲಾಗಿ ಅವನಿಗೆ ಮಿಂಚು ಗಗನದಲ್ಲಿ ಲೀನವಾಗುವಂತೆ-ತನ್ನ ಆತ್ಮನಲ್ಲಿಯೇ ಲಯವುಂಟಾಗುವುದು.(ಪುಟ 373)
4) ಆದರೆ ಗಂತೃ-ಗಮನಾದಿ ವಾಸನೆಯಿಂದ ಕೂಡಿ ಹೃದಯ ದೇಶದಲ್ಲಿ ಸಗುಣ ಬ್ರಹ್ಮವನ್ನು ಉಪಾಸಿಸುವವರಿಗೆ ನೆತ್ತಿಯ ನಾಡಿಯ ಮೂಲಕ'ಗತಿ'ಯನ್ನು ಹೇಳಬೇಕಾಗಿದೆ.ಇವುಗಳಿಗಾಗಿ ಎಂಡನೆಯ ಅಧ್ಯಾಯವನ್ನು ಪ್ರಾರಂಭಿಸಿದೆ.(ಪುಟ 373)
5)'ದಿಕ್ಕು ,ದೇಶ,ಗುಣ,ಗತಿ,ಫಲ ಭೇದಗಳಿಲ್ಲದ ಪರಮಾಥ೯ ಸತ್ ಆದ ಅದ್ವಯ ಬ್ರಹ್ಮವು ಮಂದಮತಿಗಳಿಗೆ ಅಸತ್ತಿನಂತೆ ತೋರುತ್ತದೆ.ಈ ಮಂದ ಬುದ್ಧಿಗಳು ಮೊದಲು ಸನ್ಮಾಗ೯ದಲ್ಲಿರಲಿ,ಅನಂತರ ಕ್ರಮೇಣ ಪರಮಾಥ೯ ತತ್ವವನ್ನು (ಸತ್ತನ್ನು) ತಿಳಿಸಿಕೊಡುತ್ತೇವೆ' ಎಂಬುದು ಶ್ರುತಿಯ ಅಭಿಪ್ರಾಯ.(373)
6)ಬ್ರಹ್ಮಕ್ಕೆ ಆಕಾಶವೆಂಬುದು ಪ್ರಸಿದ್ಧವಾದ ಹೆಸರು.'ಆಕಾಶವು ನಾಮ ರೂಪಗಳ ನಿವಾ೯ಹಕವು'ಎಂದು ಶ್ರುತಿಯೇ ಹೇಳುತ್ತದೆ.(ಆಜಾಶೋ ವೈ ನಾಮ(8.14.1)(ಪುಟ 373).
7)ಶಿಷ್ಯರು ಆಚಾಯ೯ನನ್ನು ಕುರಿತು " ಈ ಬ್ರಹ್ಮಪುರದಲ್ಲಿ ಸಣ್ಣದಾದ (ಹೃದಯ)ಪದ್ಮವೆಂಬ ಮನೆಯಿದೆ.ಅದರಲ್ಲಿ ಸನ್ನದಾದ ಒಂದು ಅಂತರಾಕಾಶವಿದೆ.ಅದರಲ್ಲಿ ಯಾವುದಿದೆಯೊ ಅದನ್ನು ಅನ್ವೇಶಿಸಬೇಕು.ಅದನ್ನೇ ಅರಿತುಕೊಳ್ಳಲು ಬಯಸಬೇಕು" ಎಂದು ಹೇಳಿದಿರಲ್ಲ ,ಅಂತಹುದು ಅಲ್ಲೇನಿದೆ.?ಎಂದು ಕೇಳಿದರೆ ಅವನು ಹೀಗೆ ಹೇಳಬೇಕು.'ಆ ಆಕಾಶವು ಎಷ್ಟು ದೊಡ್ಡದಾಗಿದೆಯೊ ಹೃದಯದಲ್ಲಿರುವ ಈ ಆಕಾಶವು ಅಷ್ಟೇ ದೊಡ್ಡದಾಗಿದೆ.ಇದರಲ್ಲಿ ದ್ಯುಲೋಕ -ಪೃಥ್ವಿಗಳೆರಡೂ ಅಂತಗ೯ತವಾಗಿವೆ.ಅಗ್ನಿ ವಾಯುಗಳಿಬ್ಬರೂ ಸೂಯ೯ಚಂದ್ರರಿಬ್ಬರೂ ,ಮಿಂಚು- ನಕ್ಷತ್ರಗಳೂ ಮತ್ತು ಇಲ್ಲಿ ದೇಹವುಳ್ಳ ಆತ್ಮನಿಗೆ ಏನೇನಿರುವುದೊ ಎಲ್ಲವೂ ಇದರಲ್ಲಿ ಅಂತಗ೯ತವಾಗಿವೆ.(ಪುಟ375)
8)ಶಿಷ್ಯನು ಆಚಾಯ೯ರನ್ನು ಕುರಿತು'ಈ ಬ್ರಹ್ಮಪುರದಲ್ಲಿ ಎಲ್ಲವೂ ಅಂತಗ೯ತವಾಗಿದ್ದರೆ,ಎಲ್ಲ ಪ್ರಾಣಿಗಳು ಎಲ್ಲ ಕಾಮಗಳು (ಅಂತಗ೯ತವಾಗಿದ್ದರೆ)ಈ ಶರೀರವು ಮುಪ್ಪನ್ನು ಹೊಂದಿದಾಗ ಅಥವಾ ನಾಶವಾದಾಗ ಏನು ಉಳಿದುಕೊಳ್ಳುತ್ತದೆ.?ಎಂದು ಕೇಳಿದರೆ ಹೀಗೆ ಹೇಳಬೇಕು:ಶರೀರದ ಈ ಮುಪ್ಪಿನಿಂದ ಆಕಾಶವೆಂಬ ಈ ಬ್ರಹ್ಮವು ಮುಪ್ಪನ್ನು ಹೊಂದುವುದಿಲ್ಲ.ಶರೀರದ ವಧೆಯಿಂದ ಇದು ನಾಶವಾಗುವುದಿಲ್ಲಲ್ಲ.
ಇದು ಸತ್ಯವಾದ ಬ್ರಹ್ಮಪುರವು..ಇದರಲ್ಲಿ ಕಾಮಗಳು ಅಂತಗ೯ತವಾಗಿವೆ.ಇದು ಪಾಪ ಮುಪ್ಪು ಮೃತ್ಯು ಹಸಿವು ಶೋಕ ಬಾಯಾರಿಕೆ ಇವುಗಳಿಲ್ಲದವನಾದ ಸತ್ಯಕಾಮನಾದ ಸತ್ಯಸಂಕಲ್ಪನಾದ ಆತ್ಮನು.(ಪುಟ 376)
೯) ಆದರೆ ಶರೀರವು ಅನೃತವಾದ ಬ್ರಹ್ಮಪುರ.ಬ್ರಹ್ಮವೇ ಸತ್ಯವಾದ ಬ್ರಹ್ಮಪುರ.(ಪುಟ 377)
10)'ನೇತಿ ನೇತಿ'(ಬೃ.ಉ.2.3.6) 'ಇದಲ್ಲ ಇದಲ್ಲ'(ಪುಟ 377)
11)ಹೇಗೆ ಇಲ್ಲಿ ಕಮಾ೯ಜಿ೯ತವಾದ ಭೋಗವು ಕ್ಷೀಣವಾಗುತ್ತದೆಯೊ ಹಾಗೆಯೇ (ಅಗ್ನಿಹೋತ್ರಾದಿ) ಪುಣ್ಯದಿಂದ ಅಜಿ೯ತವಾದ ಭೂಗವು ಕ್ಷೀಣವಾಗುತ್ತದೆ.ಆದರೆ ಯಾರು ಇಲ್ಲಿ ಆತ್ಮನನ್ನೂ ಈ ಸತ್ಯವಾದ ಕಾಮಗಳನ್ನೂ ತಿಳಿದುಕೊಂಡು ಹೋಗುವರೊ ಅವರಿಗೆ ಸವ೯ಲೋಕಗಳಲ್ಲಿ ಸ್ವತಂತ್ರ ಗತಿಯಿರುತ್ತದೆ.(ಪುಟ 378)
ಎರಡನೆಯ ಖಂಡ:
12)ಅವನು ಪಿತೃಲೋಕವನ್ನು ಬಯಸುವವನಾದರೆ ಅವನ ಸಂಕಲ್ಪದಿಂದಲೇ ಪಿತೃಗಳು ಏಳುತ್ತಾರೆ.
ಅವನು ಆ ಪಿತೃಲೋಕ ಭೋಗದಿಂದ ಸಂಪನ್ನನಾಗಿ ಮಹಿಮೆಯನ್ನು ಅನುಭವಿಸುತ್ತಾನೆ(ಪುಟ 378).
13) ಅವನು ಮಾತೃಲೋಕವನ್ನು ಬಯಸುವವನಾದರೆ ಅವನ ಸಂಕಲ್ಪದಿಂದಲೇ ಮಾತೃಗಳು(ತಾಯಿಯರು) ಏಳುತ್ತಾರೆ.ಅವನು ಆ ಮಾತೃಲೋಕ ಭೋಗದಿಂದ ಸಂಪನ್ನನಾಗಿ ಮಹಿಮೆಯನ್ನು ಅನುಭವಿಸುತ್ತಾನೆ(37೯)
14) ಅವನು ಭ್ರಾತೃಲೋಕವನ್ನು ಬಯಸುವವನಾದರೆ ಅವನ ಸಂಕಲ್ಪದಿಂದಲೇ ಭ್ರಾತೃಗಳು(ತಾಯಿಯರು) ಏಳುತ್ತಾರೆ.ಅವನು ಆ ಭ್ರಾತೃಲೋಕ ಭೋಗದಿಂದ ಸಂಪನ್ನನಾಗಿ ಮಹಿಮೆಯನ್ನು ಅನುಭವಿಸುತ್ತಾನೆ(37೯)
15) ಅವನು ಸೋದರಿಯರ ಲೋಕವನ್ನು ಬಯಸುವವನಾದರೆ ಅವನ ಸಂಕಲ್ಪದಿಂದಲೇ ಸೋದರಿಯರು ಏಳುತ್ತಾರೆ.ಅವನು ಆ ಸೋದರಿಯರ ಲೋಕದ ಭೋಗದಿಂದ ಸಂಪನ್ನನಾಗಿ ಮಹಿಮೆಯನ್ನು ಅನುಭವಿಸುತ್ತಾನೆ(380)
16)ಅವನು ಸ್ನೇಹಿತರ ಲೋಕವನ್ನು ಬಯಸುವವನಾದರೆ ಅವನ ಸಂಕಲ್ಪದಿಂದಲೇ ಸ್ನೇಹಿತರು ಏಳುತ್ತಾರೆ.ಅವನು ಆ ಸ್ನೇಹಿತರ ಲೋಕದ ಭೋಗದಿಂದ ಸಂಪನ್ನನಾಗಿ ಮಹಿಮೆಯನ್ನು ಅನುಭವಿಸುತ್ತಾನೆ(380)
17)ಅವನು ಗಂದ-ಮಾಲೆಗಳ ಲೋಕವನ್ನು ಬಯಸುವವನಾದರೆ ಅವನ ಸಂಕಲ್ಪದಿಂದಲೇ ಗಂಧಮಾಲೆಗಳು ಏಳುತ್ತವೆ.ಅವನು ಆ ಗಂಧಮಾಲೆಗಳ ಲೋಕದ ಭೋಗದಿಂದ ಸಂಪನ್ನನಾಗಿ ಮಹಿಮೆಯನ್ನು ಅನುಭವಿಸುತ್ತಾನೆ(380)
18)ಅವನು ಅನ್ನಪಾನಗಳ ಲೋಕವನ್ನು ಬಯಸುವವನಾದರೆ ಅವನ ಸಂಕಲ್ಪದಿಂದಲೇ ಅನ್ನಪಾನಗಳು ಏಳುತ್ತವೆ.ಅವನು ಆ ಅನ್ನಪಾನಗಳ ಲೋಕದ ಭೋಗದಿಂದ ಸಂಪನ್ನನಾಗಿ ಮಹಿಮೆಯನ್ನು ಅನುಭವಿಸುತ್ತಾನೆ(380)
1೯)ಅವನು ಗೀತವಾದ್ಯಗಳ ಲೋಕವನ್ನು ಬಯಸುವವನಾದರೆ ಅವನ ಸಂಕಲ್ಪದಿಂದಲೇ ಗೀತವಾದ್ಯಗಳು ಏಳುತ್ತವೆ.ಅವನು ಆ ಗೀತವಾದ್ಯಗಳ ಲೋಕದ ಭೋಗದಿಂದ ಸಂಪನ್ನನಾಗಿ ಮಹಿಮೆಯನ್ನು ಅನುಭವಿಸುತ್ತಾನೆ(381)
20)ಅವನು ಸ್ತೀ ಲೋಕವನ್ನು ಬಯಸುವವನಾದರೆ ಅವನ ಸಂಕಲ್ಪದಿಂದಲೇ ಸ್ತ್ರೀಯರು ಏಳುತ್ತಾರೆ..ಅವನು ಆ ಸ್ತ್ರೀ ಲೋಕದ ಭೋಗದಿಂದ ಸಂಪನ್ನನಾಗಿ ಮಹಿಮೆಯನ್ನು ಅನುಭವಿಸುತ್ತಾನೆ(381)
21) ಯಾವನು ಯಾವ ಯಾವ ಪ್ರದೇಶವನ್ನು ಬಯಸುವನೊ ಯಾಯ ಕಾಮವನ್ನು ಬಯಸುವನೊ ಅವನ ಸಂಕಲ್ಪದಿಂದಲೇ ಅದು ಏಳುತ್ತದೆ. ಆದರೆ ಭೋಗದಿಂದ ಸಂಪನ್ನನಾಗಿ ಮಹಿಮೆಯನ್ನು ಸನುಭವಿಸುತ್ತಾನೆ.(ಪುಟ 381)
ಮೂರನೆಯ ಖಂಡ:
22)ನಿಧಿ ಕ್ಷೇತ್ರವನ್ನು ಅರಿಯದವರು ಪುನಃ ಪುನಃಕ್ಷೇತ್ರದಲ್ಲಿ ಅಡಗಿರುವ ನಿಧಿಯಮೇಲೆಯೇ ನಡೆಯುತ್ತಿದ್ದರೂ ಅದನ್ನು ಹೇಗೆ ಪಡೆಯುವುದಿಲ್ಲವೊ ಹಾಗೆಯೇ ಈ ಜಂತುಗಳಲ್ಲಿ ಹೃದಯಾಕಾಶವೆಂಬ ಬ್ರಹ್ಮಲೋಕವನ್ನು ಪ್ರತಿದಿನವೂ ಸುಷುಪ್ತಿಕಾಲದಲ್ಲಿ ಹೋಗಿ ಸೇರುತ್ತಿದ್ದರೂ ಅದನ್ನು ಪಡೆದುಕೊಳ್ಳದೆ ಇರುವರು.ಏಕೆಂದರೆ ಇವರು ಅನೃತದಿಂದ ಒಯ್ಯಲ್ಪಟ್ಟಿರುವರು.(ಪುಟ 383)
23)ಆ ಈ ಆತ್ಮನೇ ಹೃದಯದಲ್ಲಿ ಇರುವುದು ಹೃದಯಕ್ಕೆ ಹೃದಿ ಅಯಂ ಎಂಬುದು ಶಬ್ದ ನಿಷ್ಪತ್ತಿಯ ವಿವರಣೆ.ಆದುದರಿಂದ ಆತ್ಮನೇ ಹೃದಯವು.ಹೀಗೆ ಅರಿತುಕೊಂಡಿರುವವನು ಶಬ್ದಲೋಕವನ್ನು (ಎಂದರೆ ಹೃದಯಬ್ರಹ್ಮವನ್ನು )ಪ್ರತಿದಿನವೂ ಸೇರುತ್ತಾನೆ.(ಪುಟ 384)
24)ದೇಹಪಾತವಾದ ಮೇಲೂ ಉಪಾಸನಾ ಫಲವು ಅವಶ್ಯವಾಗಿ ಉಪಾಸಕನಿಗೆ ಆಗುತ್ತದೆ.(ಪುಟ 384)
25)ಇನ್ನು ಈ ಸಂಪ್ರಸಾದ ಗುಣವುಳ್ಳ ಆತ್ಮನು ಶರೀರದಿಂದ ಎದ್ದು ಪರಮಜ್ಯೋತಿಯನ್ನು ಸೇರಿ,ತನ್ನ ಸ್ವರೂಪದಲ್ಲಿ ಸ್ಥಿತಿಯನ್ನು ಪಡೆಯುತ್ತಾನೆ.ಇವನೇ ಆತ್ಮನು' ಎಂದು ಆಚಾಯ೯ನು ಹೇಳಿದನು.ಇದೇ ಅಮೃತವು,ಅಭಯವು,ಇದೇ ಬ್ರಹ್ಮವು ಆ ಈ ಬ್ರಹ್ಮಕ್ಕೆ ಸತ್ಯವೆಂದು ಹೆಸರು.(ಪುಟ 384)
26)ಅಶರೀರತ್ವವೇ ಆತ್ಮನ ಸ್ವರೂಪವು.(ಪುಟ 385)
27)(ಬ್ರಹ್ಮದ ಸತ್ಯವೆಂಬ ಹೆಸರು)ಸ ತೀ ಯಮ್ ಎಂಬ ಮೂರು ಅಕ್ಷರಗಳನ್ನು ಒಳಗೊಂಡಿದೆ.ಇಲ್ಲಿ ಯಾವುದು ಸತ್ ಎಂಬುದೊ ಅದು ಅಮೃತವು.ಯಾವುದು ತೀ ಎಂಬುದೊ ಅದು ಮತ್ಯ೯ವು ಮತ್ತು ಯಾವುದು ಯಮ್ ಎಂಬುದೊ ಅದರಿಂದ ಎರಡನ್ನೂ ವಶದಲ್ಲಿಟ್ಟಿರುತಾನೆ.ಇದರಿಂದ ಎರಡನ್ನೂ ವಶದಲ್ಲಿಟ್ಟಿರುವುದರಿಂದ ಯಮ್ ಎನಿಸಿದೆ.ಹೀಗೆ ಅರಿತುಕೊಂಡವನು ಪ್ರತಿದಿನವೂ ಸ್ವಗ೯ಲೋಕಕ್ಕೆ ಹೋಗುತ್ತಾನೆ.(ಪುಟ 384)
ನಾಲ್ಕನೆಯ ಖಂಡ:
28)ಈ ಲೋಕಗಳು ನಾಶವಾಗದಿರಲು ಆತ್ಮನು ಸೇತುವೂ ವಿಧೃತಿಯೂ ಆಗಿದ್ದಾನೆ.ಅಹೋ ರಾತ್ರಿಗಳು ಈ ಸೇತುವನ್ನು ದಾಟುವುದಿಲ್ಲ. ಮುಪ್ಪು,ಮೃತ್ಯು ಶೋಕ,ಸುಕೃತ,ದುಷ್ಕøತಿವು ಈ ಸೇತುವನ್ನು ದಾಟುವುದಿಲ್ಲ. ಎಲ್ಲ ಪಾಪಗಳೂ ಇದರಿಂದ ಹಿಂತಿರುಗುವುವು.ಏಕೆಂದರೆ ಬ್ರಹ್ಮಲೋಕವು ಪಾಪರಹಿತವಾಗಿದೆ.(ಪುಟ 387)
2೯)ಆದುದರಿಂದಲೇ ಈ ಆತ್ಮನೆಂಬ ಸೇತುವನ್ನು ದಾಟಿದರೆ ಅಂಧನಾಗಿದ್ದರೂ ಅಂಧನಲ್ಲದವನಾಗುವನು.ಶರೀರವಿದ್ದಾಗ ಹೊಡೆಯಲ್ಪಟ್ಟವನಾಗಿದ್ದರೂ ಹೊಡೆಯಲ್ಪಡದವನಾಗುವನು.ರೋಗಾದಿಗಳಿಂದ ಸಂತಪ್ತನಾಗಿದ್ದರೂ ಅಸಂತಪ್ತನಾಗುವನು.ಆದುದರಿಂದಲೇ ಈ ಸೇತುವನ್ನು ದಾಟಿದರೆ ತಮೋರೂಪವಾದ
ರಾತ್ರಿಯೂ ಹಗಲೇ ಆಗುತ್ತದೆ.ಏಕೆಂದರೆ ಈ ಬ್ರಹ್ಮಲೋಕವು ಸದಾ ಪ್ರಕಾಶಿಸುತ್ತಲೇ ಇರುತ್ತದೆ.(ಪುಟ 387)
30)ಯಾರು ಇಲ್ಲಿ ಬ್ರಹ್ಮಲೋಕವನ್ನು ಬ್ರಹ್ಮಚಯ೯ದಿಂದ ತಿಳಿದುಕೊಳ್ಳುವರೊ ಅವರಿಗೇ ಈ ಬ್ರಹ್ಮಲೋಕವು ಇರುತ್ತದೆ.ಅವರಿಗೇ ಸವ೯ಲೋಕಗಳಲ್ಲಿಯೂ ಸ್ವತಂತ್ರಗತಿಯಿರುತ್ತದೆ.(ಪುಟ 388)
ಐದನೆಯ ಖಂಡ:
31)ಯಾವುದನ್ನು ಯಜ್ಞ ಎಂದು ಹೇಳುವರೊ ಅದು ಬ್ರಹ್ಮಚಯ೯ವೇ. ಏಕೆಂದರೆ ಜ್ಞಾತೃವಾದವನು ಅದನ್ನು ಬ್ರಹ್ಮಚಯ೯ದಿಂದಲೇ ಹೊಂದುತ್ತಾನೆ.ಯಾವುದನ್ನು ಇಷ್ಟ ಎಂದು ಹೇಳುವರೊ ಅದು ಬ್ರಹ್ಮಚಯ೯ವೇ.ಏಕೆಂದರೆ ಬ್ರಹ್ಮಚಯ೯ದಿಂದಲೇ ಈಶ್ವರನನ್ನು ಪೂಜಿಸಿ ಆತ್ಮನನ್ನು ಹೊಂದುತ್ತಾನೆ.(ಪುಟ 38೯)
32)ಯಜ್ಞದ ಫಲವನ್ನೇ ಬ್ರಹ್ಮಚಾರಿಯು ಪಡೆದುಕೊಳ್ಳುತ್ತಾನೆ.ಆದುದರಿಂದ ಯಜ್ಞವೂ ಬ್ರಹ್ಮಚಯ೯ವೇ.
'ಯಃ ಜ್ಞಾತಾ'ಮತ್ತು 'ಯಜ್ಞಃ' ಎಂಬಲ್ಲಿಯ ಯ ಮತ್ತು ಜ್ಞ ಸಾಮಾನ್ಯವಾಗಿರುವುದರಿಂದ ಯಜ್ಞವು ಬ್ರಹ್ಮಚಯ೯ವೇ.(ಪುಟ 38೯)
33)ಯಾವುದನ್ನು ಸತ್ತ್ರಾಯಣ ಎಂದು ಹೇಳುವರೊ ಅದು ಬ್ರಹ್ಮಚಯ೯ವೇ.ಏಕೆಂದರೆ ಪರಮಾತ್ಮನಿಂದ ತನ್ನ ರಕ್ಷಣೆಯನ್ನು ಬ್ರಹ್ಮಚಯ೯ದ ಮೂಲಕವೇ ಪಡೆಯುತ್ತಾನೆ.ಯಾವುದನ್ನು ಮೌನ ಎಂದು ಹೇಳುವರೊ ಅದು ಬ್ರಹ್ಮಚಯ೯ವೇ.ಏಕೆಂದರೆ ಆತ್ಮನನ್ನು ಬ್ರಹ್ಮಚಯ೯ದಿಂದಲೇ ಅರಿತುಕೊಂಡು ಧ್ಯಾನಿಸುತ್ತಾನೆ.(ಪುಟ 38೯)
34)ಯಾವುದನ್ನು ಉಪವಾಸ ಎನ್ನುವರೊ ಅದು ಬ್ರಹ್ಮಚಯ೯ವೇ.ಏಕೆಂದರೆ ಯಾವುದನ್ನು ಬ್ರಹ್ಮಚಯ೯ದಿಂದ ಪಡೆದುಕೊಳ್ಳುವರೊ ಆ ಆತ್ಮನು ನಾಶವಾಗುವುದಿಲ್ಲ.ಯಾವುದನ್ನು ಅರಣ್ಯವಾಸ ಎಂದು ಹೇಳುವರೊ ಅದು ಬ್ರಹ್ಮಚಯ೯ವೇ.ಆ ಬ್ರಹ್ಮಲೋಕದಲ್ಲಿ ಎಂದರೆ ಈ ಪೃಥ್ವಿಯಿಂದ ಮೂರನೆಯದಾದ ದ್ಯುಲೋಕದಲ್ಲಿ- 'ಅರ' ಮತ್ತು 'ಣ್ಯ'ಎಂಬ ಸರೋವರಗಳಿವೆ.ಅಲ್ಲಿ ಐರಂಮದೀಯ ಎಂಬ ಸರಸ್ಸಿದೆ.ಅಲ್ಲಿ ಸೋಮಸವನ ಎಂಬ ಅಶ್ವತ್ಥವಿದೆ.ಅಲ್ಲಿ ಬ್ರಹ್ಮನ 'ಅಪರಾಜಿತಾ'ಎಂಬ ಪುರವಿದೆ.ಅಲ್ಲಿ ಬ್ರಹ್ಮನ ಮೂಲಕ ವಿಶೇಷರೂಪದಿಂದ ನಿಮಿ೯ತವಾದ ಹಿರಣ್ಮಯ ಮಂಟಪವಿದೆ.
ಆರನೆಯ ಖಂಡ(ನಾಡೀ ಖಂಡ):
35)ಈ ಹೃದಯದ ನಾಡಿಗಳು ಕಂದು,ಬಿಳಿ,ನೀಲಿ,ಹಳದಿ, ಕೆಂಪು ಈ ಬಣ್ಣಗಳ ಸೂಕ್ಷ್ಮರಸದಿಂದ ತುಂಬಿರುತ್ತವೆ.ಹಾಗೆಯೇ ಈ ಆದಿತ್ಯನೂ ಕಂದುಬಣ್ಣದವನೂ ಬಿಳಿಯ ವಣ೯ದವನೂ ನೀಲಿ ವಣ೯ದವನೂ ಹಳದಿಯ ಬಣ್ಣದವನೂ ಕೆಂಪು ಬಣ್ಣದವನೂ ಆಗಿರುತ್ತಾನೆ.(ಪುಟ 3೯2)
36)ಇನ್ನು ಯಾವಾಗ ಈ ಶರೀರದಿಂದ ಉತ್ಕ್ರಮಿಸುವನೊ ಆಗ ಈ ರಶ್ಮಿಗಳಿಂದಲೇ ಮೇಲಕ್ಕೆ ಹೋಗುತ್ತಾನೆ.ಅಥವಾ ಓಂ ಎಂದು ಹೇಳುತ್ತಾ ಮೇಲಕ್ಕೆ ಹೋಗುತ್ತಾನೆ.ಅವನ ಮನಸ್ಸು ಎಷ್ಟುಬೇಗ ಹೋಗುವುದೊ ಅಷ್ಟೇ ಬೇಗ ಆದಿತ್ಯನನ್ನು ಸೇರುತ್ತಾನೆ.ಇವನೇ ಬ್ರಹ್ಮಲೋಕದ ದ್ವಾರವು.ಜ್ಞಾನಿಗಳಿಗೆ ಪ್ರವೇಶ,ಅಜ್ಞಾನಿಗಳಿಗೆ ತಡೆ.೯ಪುಟ 3೯5)
37)ಈ ವಿಷಯದಲ್ಲಿ ಈ ಶ್ಲೋಕವಿದೆ.'ಹೃದಯಕ್ಕೆ ನೂರೊಂದು ನಾಡಿಗಳಿವೆ.ಅವುಗಳಲ್ಲಿ ಒಂದು ನೆತ್ತಿಯನ್ನು ಭೇದಿಸಿಕೊಂಡು ಹೊರಟಿರುವುದು.ಅದರ ಮೂಲಕ ಹೋಗುವವನು ಅಮೃತತ್ವವನ್ನು ಪಡೆಯುತ್ತಾನೆ.ಎಲ್ಲ ಕಡೆಯಲ್ಲಿಯೂ ಹರಡಿರುವ ಇತರ ನಾಡಿಗಳು ಸಂಸಾರಕ್ಕೆ ಕಾರಣವಾಗಿರುತ್ತವೆ.(ಪುಟ 3೯6)
ಏಳನೆಯ ಖಂಡ:(ಇಂದ್ರ ವಿರೋಚನ ಪ್ರಜಾಪತಿ ಸಂವಾದ)
38)ಪ್ರಜಾಪತಿಯು ಹೇಳಿದನು:ಯಾವ ಆತ್ಮನು ಪಾಪರಹಿತನೊ, ಮುಪ್ಪಿಲ್ಲದವನೂ,ಮೃತ್ಯು ರಹಿತನೂ ಶೋಕರಹಿತನೂ ಹಸಿವಿಲ್ಲದವನೂ ಬಾಯಾರಿಕೆ ಇಲ್ಲದವನೂ ಸತ್ಯಕಾಮನೂ ಸತ್ಯ ಸಂಕಲ್ಪನೂ ಆಗಿರುವನೊ ಅವನನ್ನೇ ಅನ್ವೇಶಿಸಬೇಕು.ಯಾವನು ಈ ಆತ್ಮನನ್ನು ಕಂಡುಹಿಡಿದು ಅರಿತುಕೊಳ್ಳುವನೊ
ಅವನು ಸವ೯ಲೋಕಗಳನ್ನೂ ಸವ೯ಕಾಮಗಳನ್ನೂ ಪಡೆದುಕೊಳ್ಳುತ್ತಾನೆ.(ಪುಟ 3೯7)
3೯)'ಈ ಸಂಪ್ರಸಾದ ಗುಣವುಳ್ಳ ಆತ್ಮನು ಶರೀರದಿಂದ ಎದ್ದು ಪರಂಜ್ಯೋತಿಯನ್ನು ಸೇರಿ ತನ್ನ ಸ್ವರೂಪದಲ್ಲಿ ಸ್ಥಿತಿಯನ್ನು ಪಡೆಯುತ್ತಾನೆ.ಇವನೇ ಆತ್ಮನು'(8.3.4).(ಪುಟ 387).
40) ಪ್ರಜಾಪತಿಯ ಆ ಮಾತನ್ನು ದೇವಾಸುರರಿಬ್ಬರೂ ಕೇಳಿದರು'.ಸರಿ, ಯಾವ ಆತ್ಮನನ್ನು ಹುಡುಕಿದರೆ ಸವ೯ಲೋಕಗಳನ್ನೂ ಸವ೯ಕಾಮಗಳನ್ನೂ ಹೊಂದುತ್ತಾನೆಯೊ ಆ ಆತ್ಮನನ್ನೇ ಅನ್ವೇಶಿಸೋಣ' ಎಂದು ಅವರು ಕೇಳಿಕೊಂಡರು.ದೇವತೆಗಳಲ್ಲಿ ಇಂದ್ರನೇ ಹೊರಟನು.ಅಸುರರಲ್ಲಿ ವಿರೋಚನನು ಹೊರಟನು.ಅವರು ಒಬ್ಬರಿಗೊಬ್ಬರು ತಿಳಿಸದೆಯೇ ಸಮಿತ್ಪಾಣಿಗಳಾಗಿ ಪ್ರಜಾಪತಿಯ ಸಮೀಪಕ್ಕೆ ಬಂದರು.(ಪುಟ 3೯೯)
41)ಅವರಿಬ್ಬರೂ ಮೂವತ್ತೆರಡು ವಷ೯ಗಳವರೆಗೆ ಬ್ರಹ್ಮಚಯ೯ ವಾಸವನ್ನು ಮಾಡಿದರು.'ಏನನ್ನು ಬಯಸುತ್ತ ವಾಸಿಸಿದಿರಿ?'ಎಂದು ಪ್ರಜಾಪತಿಯು ಅವರನ್ನು ಕೇಳಿದನು.'ಆತ್ಮನನ್ನು ಬಯಸುತ್ತ ಇಲ್ಲಿ ವಾಸಿಸಿದೆವು ಎಂದು ಹೇಳಿದನು.(ಪುಟ 400)
42)ಪ್ರಜಾಪತಿಯು ಅವರಿಗೆ ಹೇಳಿದನು.ಕಣ್ಣಿನಲ್ಲಿ ಯಾವ ಪುರುಷನು ಕಾಣಿಸಿಕೊಳ್ಳುತ್ತಾನೋ ಅವನೇ ಆತ್ಮನು.ಇದೇ ಅಮೃತವು, ಅಭಯವು;ಇದೇ ಬ್ರಹ್ಮವು.(ಪುಟ 400)
43)ಅವರು ಪ್ರಶ್ನಿಸಿದರು:ಅವರು ಪ್ರಶ್ನಿಸಿದರು ಹಾಗಾದರೆ ಭಗವಂತನೆ ನೀರಿನಲ್ಲಿಯೂ ಮತ್ತು ಕನ್ನಡಿಯಲ್ಲಿಯೂ ಕಂಡುಬರುತ್ತಿರುವ ಇವರಲ್ಲಿ ಆತ್ಮನು ಯಾರು?
ಪ್ರಜಾಪತಿ ಅವನೇ ಇವುಗಳಲ್ಲೆಲ್ಲ ಕಂಡುಬರುತ್ತಾನೆ.(ಪುಟ 401)
ಎಂಟನೆಯ ಖಂಡ:
44) ನೀರು ತುಂಬಿರುವ ಒಂಉ ಪಾತ್ರೆಯಲ್ಲಿನಿಮ್ಮನ್ನು ನೋಡಿಕೊಳ್ಳಿರಿ ಮತ್ತು ಆತ್ಮನ ವಿಷಯದಲ್ಲಿ ಏನನ್ನು ತಿಳಿಯುವುದಿಲ್ಲವೊ ಅದನ್ನು ನನಗೆ ಹೇಳಿರಿ.ಅವರು ನೀರಿನ ಪಾತ್ರೆಯಲ್ಲಿ ತಮ್ಮನ್ನು ನೋಡಿಕೊಂಡರು.ಅನಂತರ ಪ್ರಜಾಪತಿಯು ಅವರನ್ನು ಕೇಳಿದನು: 'ಏನನ್ನು ನೋಡುತ್ತೀರಿ?' ನಾವಿಬ್ಬರೂ ಈ ಸಮಗ್ರಶರೀರವನ್ನೂ -ರೋಮ-ನಖಗಳವರೆಗೆ ಇರುವ ಪ್ರತಿಬಿಂಬವನ್ನು ನೋಡುತ್ತಿದ್ಧೇವೆ.ಛಾಯಾತ್ಮನೇ ಆತ್ಮನು'ಎಂಬ ಜ್ಞಾನದ ಅರಿವು ಅವರಿಗೆ ನಿಶ್ಚಯವಾಗಿಯೇ ಇದ್ದಿತು.(ಪುಟ 402)
45)ನಂತರ ಶರೀರವೇ ಆತ್ಮನೆಂಬ ಜ್ಞಾನದ ಉಪನಿಷತ್ತನ್ನು ಪ್ರಜಾಪತಿಯು ಭೋದಿಸಿದನು.(ದೇಹಾತ್ಮ ಜ್ಞಾನ)(ಪುಟ 405).
ಒಂಬತ್ತನೆಯ ಖಂಡ:
46)ಇಂದ್ರನು ಛಾಯಾತ್ಮ ದಶ೯ನದಲ್ಲಿ ಯಾವ ಭೋಗ್ಯವನ್ನೂ ಕಾಣಲಿಲ್ಲ(ಪುಟ 407)
47)ನೀನು ಸರಿಯಾಗಿ ಅಥ೯ಮಾಡಿಕೊಂಡಿದ್ದೀಯೆ.ಛಾಯೆಯು ಆತ್ಮನಲ್ಲ.ಒಂದು ಸಲ ವ್ಯಾಖ್ಯಾನ ಮಾಡಿದ್ದನ್ನು ದೋಷರಹಿತರಾದವರು ಅರಿತುಕೊಳ್ಳಬೇಕಾಗಿದ್ದರೂ ನೀನು ಗ್ರಹಿಸಲಿಲ್ಲ.ಆದುದರಿಂದ ಯಾವುದೊ ಒಂದು ದೋಷದಿಂದ ನಿನ್ನ ಗ್ರಹಣ ಶಕ್ತಿಗೆ ಅಡಚಣೆಯಾಗಿದೆ.ಆ ದೋಷವನ್ನು ನಿವಾರಿಸಲು ಪುನಃ ಮೂವತ್ತೆರಡು ವಷ೯ಗಳವರೆಗೆ ಇಲ್ಲಿ ಬ್ರಹ್ಮಚಯ೯ವಾಸ ಮಾಡು ಎಂದಥ೯.(ಪುಟ 40೯)
ಹತ್ತನೆಯ ಖಂಡ:
48)'ಯಾವನು ಸ್ವಪ್ನದಲ್ಲಿ ಪೂಜನೀಯವಗಿ ಸಂಚರಿರಿಸುತ್ತಿರುವನೊ ಅವನೇ ಆತ್ಮನು'ಎಂದು ಪ್ರಜಾಪತಿಯು ಬೋಧಿಸಿದನು.(ಪುಟ 410).
4೯) ಆದರೆ 'ಸ್ವಪ್ನಾತ್ಮ ಜ್ಞಾನದಲ್ಲಿ'ಯಾವ ಭೋಗ್ಯವನ್ನೂ ಇಂದ್ರನು ಕಾಣಲಿಲ್ಲ.(ಪುಟ 410)
50)ಆತ್ಮನುಅಮೃತ-ಅಭಯ-ಗುಣವುಳ್ಳವನೆಂದು ಪ್ರಜಾಪತಿಯ ಅಭಿಪ್ರಾಯವಿದೆ.ಅವನು ಎರಡುಸಲ ಯುಕ್ತಿಯಿಂದ ತಿಳಿಸಿದರೂ ಇವನು ಯಥಾವತ್ತಾಗಿ ತಿಳಿದುಕೊಳ್ಳಲಿಲ್ಲ.ಆದುದರಿಂದ ಆದುದರಿಂದ ಹಿಂದಿನಂತೆ ಈಗಲಗೂ ಯಾವುದೊ ಒಂದು ಪ್ರತಿಬಂಧವಿದೆಯೆಂದು ಎಣಿಸಿ ಅದನ್ನು ತೊಲಗಿಸಲು ಪುನಃ ಮೂವತ್ತೆರಡು ವಷ೯ಗಳು ವಾಸಮಾಡಬೇಕೆಂದು ಆಜ್ಞಾಪಿಸಿದನು.ಚಿತ್ತಶುದ್ಧಿಯನ್ನು ಗಳಿಸಿಕೊಂಡಮೇಲೆಪ್ರಜಾಪತಿಯು ಇಂದ್ರನಿಗೆ ಹೇಳಿದನು.(ಪುಟ 412)
ಹನ್ನೊಂದನೆಯ ಖಂಡ:
51)'ಅಲ್ಲಿ ಯಾವಾಗ ಇಂದ್ರಿಯ ವೃತ್ತಿಗಳೆಲ್ಲವನ್ನೂ ಉಪಸಂಹರಿಸಿಕೊಂಡು ಸುಪ್ತನೂ ಪ್ರಸನ್ನನೂ ಆಗಿ ಸ್ವಪ್ನವನ್ನು ಅರಿಯದೆ ಇರುವನೊ ಆ ಇವನೇ ಆತ್ಮನು.ಇದೇ ಅಮೃತವು,ಇದೇ ಅಭಯವು.,ಇದೇ ಬ್ರಹ್ಮವು.'(ಪುಟ 412)
52)ಇಂದ್ರನು ಹೇಳಿದನು:'ಭಗವಂತನೆ,ಸುಷುಪ್ತಿಯಲ್ಲಿರುವ ಇವನು ಈಗ "ನಾನು"ಇಂಥವನು ಎಂದು ನನ್ನನ್ನು ತಿಳಿದಿರುವುದೇ ಇಲ್ಲ.ವಿನಾಶವನ್ನು ಹೊಂದಿದವನಂತೆ ಇರುತ್ತಾನೆ.ಆದುದರಿಂದ ನನು ಯಾವ ಭೋಗ್ಯವನ್ನೂ ನೋಡೆನು.'(ಪುಟ413)
53)ಪ್ರಜಾಪತಿ:ಇಂದ್ರನೇ ಇದು ಹೀಗೆಯೇ.ಆದರೆ ಈ ಆತ್ಮನನ್ನು ನಿನಗೆ ಇನ್ನೂ ಸ್ಪಷ್ಟವಾಗಿ ತಿಳಿಸಿಕೊಡುತ್ತೇನೆ.ಇವನನ್ನು ಬಿಟ್ಟು ಬೇರೆ ಯಾವನನ್ನೂ ಹೇಳುವುದಿಲ್ಲ.ನೀನು ಇನ್ನೂ ಐದು ವಷ೯ಗಳವರೆಗೆ ಇಲ್ಲಿ ವಾಸಿಸು.ಒಟ್ಟು ನೂರೊಂದು ವಷ೯ಇಂದ್ರನು ಪ್ರಜಾಪತಿಯ ಬಳಿಯಲ್ಲಿ ಬ್ರಹ್ಮಚಯ೯ವಾಸ ಮಾಡಿದನು.(ಪುಟ 414)
54) ಹೀಗೆ ಜ್ಞಾªನವು ಇಂದ್ರತ್ವಕ್ಕಿಂತಲೂ ಗುರುತರವಾದುದು.(ಪುಟ 414)
ಹನ್ನೆರಡನೆಯ ಖಂಡ:
55)ಪ್ರಜಾಪತಿಯು ಇಂದ್ರನಿಗೆ ಹೇಳಿದನು.'ಇಂದ್ರನೆ,ಈ ಶರೀರವು ಮತ್ಯ೯ವೇ.ಮೃತ್ಯುವಿನಿಂದ ಗ್ರಸ್ತವಾಗಿರುತ್ತದೆ.ಇದು ಅಮೃತನೂ ಅಶರೀರನೂ ಆದ ಆತ್ಮನಿಗೆ ಅಧಿಷ್ಠಾನ.ಶರೀರವುಳ್ಳವನು ಪ್ರಿಯ
ಅಪ್ರಿಯಗಳಿಂದ ಗ್ರಸ್ತನಾಗಿರುತ್ತಾನೆ.ಶರೀರವುಳ್ಳವನಿಗೆ ಪ್ರಿಯಾಪ್ರಿಯಗಳ ವಿನಾಶವು ಇಲ್ಲವೇ ಇಲ್ಲ.ಶರೀರವಿಲ್ಲದವನನ್ನು ಪ್ರಿಯಾಪ್ರಿಯಗಳು ಸೋಂಕುವುದೇ ಇಲ್ಲ.(ಪುಟ 415)
56)ವಾಯುವು ಶರೀರ ರಹಿತವಾದುದು.;ಮೇಘ ಗುಡುಗು ಮಿಂಚುಗಳು- ಇವು ಶರೀರರಹಿತವಾದುವುಇವು ಹೇಗೆ ಆಕಶದಿಂದ ಎದ್ದು ಸೂಯ೯ನ ಪರಂಜ್ಯೋತಿಯನ್ನು ಸೇರಿ ತಮ್ಮ ರೂಪದಿಂದ ಕಾಣಿಸಿಕೊಳ್ಳುತ್ತವೆಯೊ ಹಾಗೆಯೇ ಸಂಪ್ರಸಾದ ಗುಣವುಳ್ಳ ಆತ್ಮನು ಈ ಶರೀರದಿಂದ ಎದ್ದು ಪರಮಾತ್ಮನ ಜ್ಯೋತಿಯನ್ನು ಸೇರಿಕೊಂಡು ತನ್ನ ರೂಪದಿಂದ ಕಾಣಿಸಿಕೊಳ್ಳುತ್ತಾನೆ.ಅವನು ಉತ್ತಮ ಪುರುಷನು.ಅಲ್ಲಿ ಅವನು ನಗುತ್ತ ,ಕ್ರೀಡಿಸುತ್ತ,ಸ್ತ್ರೀಯರೊಂದಿಗೆಅಥವಾ ವಾಹನಗಳಿಂದ ರಮಿಸುತ್ತಾತಾನು ಹುಟ್ಟಿದ ಈ ಶರೀರವನ್ನು ಸ್ಮರಿಸಿಕೊಳ್ಳದೆಸಂಚರಿಸುತ್ತಾನೆ.ರಥಕ್ಕೆ ಕಟ್ಟಲ್ಪಟ್ಟ ಕುದುರೆಯಂತೆ ಆತ್ಮನು ಈ ಶರೀರಕ್ಕೆ ಕಟ್ಟಲ್ಪಟ್ಟಿರುತ್ತಾನೆ.(ಪುಟ 417)
57)ತನ್ನ ಕಮ೯ಫಲದ ಉಪಭೋಗದ ನಿಮಿತ್ತದಿಂದ-ಕುದುರೆಯು ಗಾಡಿಗೆ ಕಟ್ಟಲ್ಪಟ್ಟಿರುವಂತೆ ಆತ್ಮನು ಈ ಶರೀರಕ್ಕೆ ನಿಯುಕ್ತನಾಗಿರುತ್ತಾನೆ.(ಕಟ್ಟಲ್ಪಟ್ಟಿರುತ್ತಾನೆ).(ಪುಟ 417)
58)'ಎಲ್ಲಿ ದೃಷ್ಟಿಯು ಆಕಾಶವನ್ನು ಸೇರಿಕೊಂಡಿರುವುದೊ ಅಲ್ಲಿ ಚಾಕ್ಷುಶ-ಪುರುಷನಿರುವನು.ಅವನು ನೋಡುವುದಕ್ಕೆ ಕಣ್ಣು ಇಂದ್ರಿಯವು..ಯವನು "ಇವನು ಮೂಸುತ್ತಾನೆ"ಎಂದು ಅರಿತುಕೊಂಡಿರುವನೊ ಅವನೇ ಆತ್ಮನು.ಅವನು ಮೂಸುವುದಕ್ಕೆ ಮೂಗು ಇಂದ್ರಿಯವು.ಯಾವನು "ಇದನ್ನು ಮೂಸುತ್ತಾನೆ"ಎಂದು ಅರಿತುಕೊಂಡಿರುವನೊ ಅವನು ಆತ್ಮನು.ಅವನು ಮೂಸುವುದಕ್ಕೆ ಮೂಗು ಇಂದ್ರಿಯವು.ಯಾವನು"ಇದನ್ನು ನುಡಿಯುತ್ತೇನೆ"ಎಂದು ಅರಿತುಕೊಂಡಿರುವನೊ ಅವನು ಆತ್ಮನು.ಅವನು ಮಾತನಾಡುವುದಕ್ಕೆ ವಾಕ್ಕು ಇಂದ್ರಿಯವು.ಯಾವನು "ಇದನ್ನು ಕೇಳುತ್ತೇನೆ"ಎಂದುಕೊಂಡಿರುವನೊ ಅವನು ಆತ್ಮನು.ಅವನು ಕೇಳುವುದಕ್ಕೆ ಕಿವಿಯು ಇಂದ್ರಿಯವು.(ಪುಟ 418)
5೯)'ಯವನು"ಇದನ್ನು ಮನನ ಮಡುತ್ತೇನೆ"ಎಂದು ಅರಿತುಕೊಂಡಿರುವನೊ ಅವನು ಆತ್ಮನು.ಅವನಿಗೆ ಮನಸ್ಸು ದೈವಚಕ್ಷುಸ್ಸು,ಅವನು ದೈವ ಚಕ್ಷುಸ್ಸಾದ ಮನಸ್ಸಿನಿಂದ ಬ್ರಹ್ಮಲೋಕದಲ್ಲಿರುವ ಈ ಕಾಮಗಳನ್ನೆಲ್ಲ ನೋಡುತ್ತ ರಮಿಸುತ್ತಾನೆ.(ಪುಟ 41೯)
60)'ಯಃ ವೇದಃ ಸ ಆತ್ಮಾ'ಎಂದು ಪ್ರಯೋಗಿಸಿರುವುದರಿಂದ ಜ್ಞಾನವೇ ಇವನ ಸ್ವರೂಪವೆಂದು ತಿಳಿದು ಬರುತ್ತದೆ.(ಪುಟ 41೯)
61) ಯಾವನು ಶಾಸ್ತ್ರಾಚಾಯ೯ರಿಂದ ಈ ಆತ್ಮವನ್ನು ಅನ್ವೇಶಿಸಿ ತಿಳಿದುಕೊಳ್ಳುವನೊ ಅವನು ಸವ೯ಲೋಕಗಳನ್ನೂ ಸವ೯ಕಾಮಗಳನ್ನೂ ಹೊಂದುತ್ತಾನೆ'ಎಂದು ಪ್ರಜಾಪತಿಯು ಹೇಳಿದನು.(ಪುಟ420)
62)ಏಕೆಂದರೆ ಆತ್ಮಜ್ಞಾನವೂ ಅದರ ಫಲಪ್ರಾಪ್ತಿಯೂಎಲ್ಲರಿಗೂ ಸಮಾನವಾಗಿದೆ.(ಪುಟ 420)
ಹದಿಮೂರನೆಯ ಖಂಡ:
63)'ಶ್ಯಾಮದಂತಿರುವ ಹಾದ೯ಬ್ರಹ್ಮದಿಂದ ಕಮಧೇನುವಿನಂತಿರುವ ಬ್ರಹ್ಮಲೋಕವನ್ನು ಹೊಂದುತ್ತೇನೆ.ಅಶ್ವವು ತನ್ನ ರೋಮಗಳನ್ನು ಒದರುವಂತೆ ಪಾಪವನ್ನು ಹೋಗಲಾಡಿಸಿಕೊಂಡು ಚಂದ್ರನು ರಾಹುವಿನ ಬಾಯಿಂದ ಬಿಡಿಸಿಕೊಂಡಂತೆ ಶರೀರದಿಂದ ಬಿಡಿಸಿಕೊಂಡು ಕೃತಕೃತ್ಯನಾಗಿ ನಿತ್ಯವಾದ ಬ್ರಹ್ಮಲೋಕವನ್ನು ಹೊಂದುತ್ತೇನೆ.,ನಿಜವಾಗಿ ಹೊಂದುತ್ತೇನೆ.(ಪುಟ 421)
64)ಶ್ಯಾಮಾಚ್ಛ ಬಲಂ ಪ್ರಪದ್ಯೇಎಂಬುದು ಪಾವನವಾದ ಮಂತ್ರ.ಇದನ್ನು ಜಪಿಸುವುದಕ್ಕಾಗಿ ಅಥವಾ ಧ್ಯಾನಕ್ಕಾಗಿ ಇಲ್ಲಿ ಹೇಳಿದೆ.(ಪುಟ 421)
65)ಉಪಾಸಕರಲ್ಲದವರಿಗೆ ದುಷ್ಪ್ರವೇಶ್ಯವಾಗಿರುವುದರಿಂದ ಶ್ಯಾಮವೆನಿಸಿದೆ.(ಪುಟ 421)
ಹದಿನಾಲ್ಕನೆಯ ಖಂಡ:
66)ಆಕಶವೆಂಬ ಪ್ರಸಿದ್ಧವಾದ ಬ್ರಹ್ಮವು ನಾಮರೂಪಗಳನ್ನು ವಿಂಗಡಿಸುತ್ತದೆ.ನಾಮರೂಪಗಳು ಯಾವುದರಲ್ಲಿ ಇವೆಯೊ ಅದು ಬ್ರಹ್ಮವು,ಅದು ಅಮೃತವು,ಅದು ಆತ್ಮನು.(ಪುಟ 422)
67)ನಾನು ಪ್ರಜಾಪತಿಯ ಸಭೆಯನ್ನೂ ಅರಮನೆಯನ್ನೂ ಹೊಂದುತ್ತೇನೆ.ನಾನು ಬ್ರಾಹ್ಮಣರ ಯಶಸ್ಸಾಗುತ್ತೇನೆ.ರಾಜರ ಯಶಸ್ಸಾಗುತ್ತೇನೆ. ವೈಶ್ಯರಯಶಸ್ಶಾಗುತ್ತೇನೆ. ನಾನು ಯಶಸ್ಸನ್ನು ಪಡೆಯಲು ಬಯಸುತ್ತೇನೆ.ನಾನು ಯಶಸ್ಸುಗಳ ಯಶಸ್ಸು.ಲೋಹಿತವೂ ದಂತರಹಿತವೂ ಆದ ಯೋನಿಯನ್ನು ನಾನು ಹೊಂದದಿರಲಿ.ಯೋನಿಯನ್ನು ನಾನು ಹೊಂದದಿರಲಿ.
ಹದಿನ್ಥದನೆಯ ಖಂಡ:
68)ಈ ಆತ್ಮಜ್ಞಞವನ್ನು ಹಿರಣ್ಯಗಭನುಕಶ್ಯಪ ಪ್ರಜಾಪತಿಗೆಹೇಳಿದನು.ಕಶ್ಯಪ ಪ್ರಜಾಪತಿಯುಮನುವಿಗೂ,ಮನವು ಮಾನವರಿಗೂ ಹೇಳಿದನು.(ಪುಟ 424)
6೯)ಗುರುವಿನ ಶುಶೂಷಾದಿ ಕಮ೯ವನ್ನು ಮಾಡಿ ಉಳಿದ ಕಾಲದಲ್ಲಿ ನಿಯಮಾನುಸಾರವಾಗಿ ವೇದ£ವನ್ನು ಅಧ್ಯಯಸ ಮಾಡಿ,ಗುರುಗೃಹದಿಂದ ಸಮಾವತ೯ನಮಡಿ,ಕುಟುಂಬದಲ್ಲಿ ನಿಂತುಪವಿತ್ರವಾದ ಸ್ಥಳದಲ್ಲಿಸ್ವಾಧ್ಯಾಯವನ್ನು ಮಾಡುತ್ತಶಿಷ್ಯರನ್ನೂ ಪುತ್ರರನ್ನೂ ಧಾಮಿ೯ಕರನ್ನಾಗಿ ಮಾಡುತ್ತ,ಆತ್ಮನಲ್ಲಿ ಸವೇ೯ಂದ್ರಿಯಗಳನ್ನೂ ಉಪಸಂಹರಿಸಿಕೊಂಡು ,ತೀಥ೯ಗಳನ್ನು ಬಿಟ್ಟು ಉಳಿದ ಕಡೆಗಳಲ್ಲಿ ಯಾವ ಜಂತುವನ್ನೂ ಹೊಂಸೆ ಮಾಡದೆ,ಬದುಕಿರುವವರೆಗೂ ಹೀಗೆ ಆಚರಿಸುತ್ತಿದ್ದರೆಅವನು ಬ್ರಹ್ಮಲೋಕವನ್ನು ಹೊಂದುತ್ತಾನೆ.ಹಿಂತಿರುಗುವುದಿಲ್ಲ.ಖಂಡಿತವಾಗಿಯೂ ಹಿಂತಿರುಗುವುದಿಲ್ಲ(ಪುಟ 424)
70)ಆರನೆಯ ಅಧ್ಯಾಯದಿಂದ ಇಲ್ಲಿನವರೆಗೆ ಬ್ರಹ್ಮವಿದ್ಯೆಯು ಸಫಲವೆಂದುನಿಧ೯ರಿಸಲ್ಪಟ್ಟಿದೆ.ಆದುದರಿಂದ ಯಜ್ಞಾದಿ ಕಮ೯ಗಳಿಂದ ಯಾವ ಪ್ರಯೋಜನವೂ ಉಂಟಾಗುವುದಿ¯್ಲವೆಂಬ ಸಂದೇಹವು ಉಂಟಾಗಬಹುದು.ಅದನ್ನು ಪರಿಹರಿಸಲು ಜ್ಞಾನಿಗಳು ಮಾಡುವ ಕಮ೯ಕ್ಕೂ ವಿಶಿಷ್ಟ ಫಲವಿರುವುದೆಂದು ಇಲ್ಲಿ ಹೇಳಲಾಗಿದೆ.(ಪುಟ 424)
,,,,,,,,,,,,,,,,,ಛಾಂದೋಗ್ಯ ಉಪನಿಷತ್ತು ಸಂಪೂಣ೯ವಾಯಿತು.(ದಿನಾಂಕ15'೯.2020) ,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
Subscribe to:
Post Comments (Atom)
No comments:
Post a Comment