Friday, 4 September 2020

ನಾಲ್ಕನೆಯ ಅಧ್ಯಾಯ:

 

12)ಇದರಲ್ಲಿ ಆರು ಬ್ರಾಹ್ಮಣಗಳಿವೆ.ಜನಕ ವೈದೇಹನು ಸಭೆಯಲ್ಲಿ ಕುಳಿತಿರುವಾಗ  ಯಾಜ್ಞವಲ್ಕ್ಯನು ಬಂದು ಕೆಲವು ಪ್ರಶ್ನೆಗಳನ್ನು ಹಾಕುತ್ತಾನೆ.ಜನಕರಾಜನು  ಬ್ರಹ್ಮದ ಕೆಲವು ಲಕ್ಷಣಗಳನ್ನು ಹೀಗೆ ಹೇಳುತ್ತಾನೆ.ವಾಕ್ಕು ಪ್ರಾಣ, ಕಣ್ಣು, ಕಿವಿ, ಮನಸ್ಸು,ಬುದ್ಧಿ ಇವುಗಳ ಅಧಿಷ್ಠಾತೃ ದೇವತೆಗಳಾದ ಅಗ್ನಿ ವಾಯು ,ಆದಿತ್ಯ, ದಿಗ್ದೇವತೆ,ಚಂದ್ರ ಮತ್ತುಪ್ರಜಾಪತಿ (ಹಿರಣ್ಯಗಭ೯)ಇವರನ್ನು ಒಬ್ಬೊಬ್ಬರನ್ನು  ಬ್ರಹ್ಮವೆಂದು ಹೇಳುತ್ತಾನೆ. ಬ್ರಹ್ಮಗಳಿಗೆಲ್ಲ ಒಂದೇ ಕಾಲಿದೆಯೆಂದು  ಯಾಜ್ಞವಲ್ಕ್ಯನು ತಿಳಿಸುತ್ತಾನೆ.

(ಪುಟ  18)

 

13) ಎರಡನೆಯ ಬ್ರಾಹ್ಮಣದಲ್ಲಿ  ಯಾಜ್ಞವಲ್ಕ್ಯನು  ಆತ್ಮನ ಅವಸ್ಥಾತ್ರಯವನ್ನು  ಉಪದೇಶಿಸಿದ್ದಾನೆ:ಜಾಗೃತ- ಸ್ವಪ್ನ- ಸುಷುಪ್ತಿ,ಸ್ಥೂಲ -ಸೂಕ್ಷ್ಮ -ಕಾರಣ ಶರೀರದೊಂದಿಗೆ ತಾದಾತ್ಮ್ಯವನ್ನು ಪಡೆದಿರುತ್ತಾನೆ.ಎಚ್ಚರ-ವಿಶ್ಬ.ಕನಸು-ತೈಜಸ,ಸುಷುಪ್ತಿ-ಪ್ರಾಜ್ಞ ಇವು ಕ್ರಮವಾಗಿ ಆತ್ಮನಿಗೆ ಇರುವ ಹೆಸರುಗಳು.ಸವಾ೯ತ್ಮನಾದ ಪ್ರಾಜ್ಞನಲ್ಲಿ ಎಲ್ಲವನ್ನೂ ಲಯಗೊಳಿಸಿದ ಮೇಲೆ ಯಾವ ವಿಶೇಷವೂ ಉಳಿಯುವುದಿಲ್ಲ.ಇವನು ಅಗೃಹ್ಯನು,ಅಕ್ಷಯನು,ಅಸಂಗನು ಮತ್ತು ಬಂಧರಹಿತನು.(ಪುಟ 18)

 

14) ಮೂರನೆಯದು ಜ್ಯೋತಿಬ್ರಾ೯ಹ್ಮಣ ಅತ್ಯಂತ ದೊಡ್ಡದಾಗಿದೆ. ಸುರೇಶ್ವರಾಚಾಯ೯ರು ಇದರ ಮೇಲೆ 175 ಶ್ಲೋಕಗಳನ್ನು ತಮ್ಮವಾತ್ತಿ೯ಕಗಳಲ್ಲಿ ಬರೆದಿರುತ್ತಾರೆ.ಯಾಜ್ಞವಲ್ಕ್ಯನು

ಆದಿತ್ಯ,ಚಂದ್ರ,ಅಗ್ನಿ,ವಾಕ್ಕು,ಆತ್ಮ -ಇವರ ಜ್ಯೋತಿಗಳನ್ನು ಒಂದೊಂದಾಗಿ ಹೆಳುತ್ತಾನೆ.ದೇಹೇಂದ್ರಿಯ

ಗಳಲ್ಲಿರುವ ಆತ್ಮನು ಯಾವನೆಂದು ಜನಕನು ಪ್ರಶ್ನಿಸಿದಾಗ  ಯಾಜ್ಞವಲ್ಕ್ಯನು ಹೇಳುತ್ತಾನೆ:ಒಂದು ದೊಡ್ಡಮೀನು  ನದಿಯ ಒಂದು ದಡದಿಂದ ಮತ್ತೊಂದು ದಡಕ್ಕೆ ಈಜುವ ಹಾಗೆ ಆತ್ಮನು ಬುದ್ಧಿಯ ರೂಪವನ್ನು ತಾಳಿ ಸ್ವಪ್ನದಿಂದ ಜಾಗ್ರತ್ತಿಗೂ ಜಾಗ್ರತ್ತಿನಿಂದ ಸ್ವಪ್ನಕ್ಕೂ  ಸಂಚರಿಸುತ್ತಾನೆ.ಜಡವಾಗಿರುವ ಬುದ್ಧಿಯು  ಆತ್ಮದೀಪ್ತಿಯಿಂದ ಪ್ರಕಾಶಿಸುವಂತೆ ತೋರುತ್ತದೆ.ಆತ್ಮನು ಮಾತ್ರ ಸ್ವಯಂಜ್ಯೋತಿಯು. ಇವನ ಜ್ಯೋತಿಯಿಂದಲೇ  ಸೂಯ೯ಚಂದ್ರರೆಲ್ಲ ಪ್ರಕಾಶಿಸುತ್ತಾರೆ.ಸಾಮಾನ್ಯವಾಗಿ ಸ್ವಪ್ನವು ಒಂದು ಹೊಸ ಅನುಭವವಲ್ಲ.ಅದು ಜಾಗ್ರದವಸ್ಥೆಯ ಅನುಭವವನ್ನು ಅವಲಂಬಿಸಿರುತ್ತದೆ.ಆದರೆ ಜೀವನದಲ್ಲಿ ಅನುಭವಿಸದ ಕೆಲವು ಸ್ವಪ್ನಗಳನ್ನು ನೋಡುತ್ತೇವೆ.ಇಂಥ ಸ್ವಪ್ನಗಳ ಆಧಾರವು ಹಿಂದಿನ ಜನ್ಮದ ಅನುಭವವೆಂದು  ಸಿದ್ಧವಾಗುತ್ತದೆ.ಸ್ವಪ್ನದಲ್ಲಿ ನೋಡುವ ವಿಷಯಗಳೆಲ್ಲ ಆತ್ಮನಿಂದ ಅಲ್ಲೆ ನಿಮಿ೯ತವದವು.ಸ್ವಪ್ನಲ್ಲಿ ಆತ್ಮನು  ಪಾಪಪುಣ್ಯಗಳ ಫಲವನ್ನು ಸುಮ್ಮನೆ ನೋಡುತ್ತಾನೆಯೇ ವಿನಃ ಸಾಕ್ಷಾತ್ತಾಗಿ ಅನುಭವಿಸುವುದಿಲ್ಲ. ಏಕೆಂದರೆ ಅವನು ಅಸಂಗನು.(ಪುಟ 1)   

 

 

15)ಸುಷುಪ್ತಿಯಲ್ಲಿ ಆತ್ಮನು ಸಂಪೂಣ೯ವಾಗಿ ಪ್ರಸನ್ನನಾಗುತ್ತಾನೆ.ಆದುದರಿಂದ ಸುಷುಪ್ತಿಗೆ 'ಸಂಪ್ರಸಾದ'ವೆಂದು ಹೆಸರು. ಅವಸ್ಥೆಯನ್ನೇ ಎಲ್ಲ ಶೋಕಗಳನ್ನೂ ದಾಟಿರುತ್ತಾನೆ ಎಂದು ಹೇಳಿದೆ.ಇವನು ಪರಮತ್ಮನಿಂದ ಆಲಂಗಿತನಾಗಿ  ಒಳಗಿನ ಅಥವಾ ಹೊರಗಿನ ಯಾವುದನ್ನೂ ಅರಿಯುವುದಿಲ್ಲ. ಅವಸ್ಥೆಯಲ್ಲಿ ನೋಡಲು ಕೇಳಲು ಮುಟ್ಟಲು  ಅಥವಾ ಅರಿತುಕೊಳ್ಳಲು  ಆತ್ಮನಿಗಿಂತ ಭಿನ್ನವಾದ ಎರಡನೆಯ ವಸ್ತುವು ಇರುವುದಿಲ್ಲ.ಸುಷುಪ್ತಿಯಲ್ಲಿ ಅನುಭವಿಸಲ್ಪಟ್ಟ ಆನಂದವು  1) ಮನುಷ್ಯರ2) ಪಿತೃಗಳ 3)ಗಂಧವ೯ರ 4) ಕಮ೯ದೇವತೆಗಳ,5)ಅಜಾನದೇವತೆಗಳ ಅಥವಾ ಹಿರಣ್ಯಗಭ೯ನ ಆನಂದಗಳಿಗಿಂತ ಅತಿಷಯವಾಗಿರುತ್ತದೆ.ಇದೇ ಪರಮಾನಂದ.ಇದೇ ಬ್ರಾಹ್ಮೀಸ್ಥಿತಿ.(ಪುಟ 20)

 

16) ಸುಷುಪ್ತಿಯಲ್ಲಿ ಬಯಕೆಗಳು ಹೊರಟು ಹೋಗಿದ್ದರೂ ಅವುಗಳ ವಾಸನೆಗಳು ಉಳಿದಿರುತ್ತವೆ.(ಪುಟ 20)

 

17)ನಂತರ ಜೀವನು ದೇಹಾಂತರಹೊಂದುವುದನ್ನು ಬ್ರಾಹ್ಮಣವು ಹೇಳುತ್ತದೆ.(ಪುಟ 20)

 

18)ನಾಲ್ಕನೆಯದಾದ ಶಾರೀರಕ ಬ್ರಾಹ್ಮಣದಲ್ಲಿ ಯಾವಾಗ ಮತ್ತು ಹೇಗೆ ಅಂಗಗಳಿಂದ ಕಳಚಿಕೊಳ್ಳುತ್ತಾನೆ ಎಂಬುದನ್ನು ವಿಸ್ತಾರವಾಗಿ ಹೇಳಿದೆ.(ಪುಟ 21)

 

1)ಅಕಾಮಿಯೂ ,ನಿಷ್ಕಾಮನೂ  ಆಪ್ತಕಮಿಯೂ  ಆತ್ಮಕಾಮಿಯೂ ಆದವನ ಇಂದ್ರಿಯಗಳು  ಉತ್ಕ್ರಮಿಸುವುದಿಲ್ಲ. ಬ್ರಹ್ಮನೇ ಆಗಿ ಬ್ರಹ್ಮದಲ್ಲಿ ಲೀನವಾಗುತ್ತಾನೆ.ಹೃದಯದಲ್ಲಿರುವ  ಕಾಮಗಳೆಲ್ಲ ಬಿಟ್ಟು ಹೋದಾಗ  ಮತ್ಯ೯ನು ಅಮೃತನಾಗುತ್ತಾನೆ.(ಪುಟ 21)

 

20) ಸಂಸಾರದಲ್ಲಿರುವಾಗಲೇ  ಬ್ರಹ್ಮವನ್ನು ಅರಿತುಕೊಳ್ಳಬೇಕು.ಇಲ್ಲದಿದ್ದರೆ ಬಹಳ ನಷ್ಟವಾಗುವುದು.(ಪುಟ 21)

 

21)ಬ್ರಹ್ಮದಲ್ಲಿ ಸ್ವಲ್ಪವೂ ನಾನಾತ್ವವಿಲ್ಲ. ಅದರಲ್ಲಿ ನಾನಾತ್ವವನ್ನು ನೋಡುವವನು  ಮೃತ್ಯುವಿನಿಂದ ಮೃತ್ಯುವಿಗೆ ಹೋಗುತ್ತಾನೆ.ಆದುದರಿಂದ ಅಪ್ರಮೇಯವಾದ ಬ್ರಹ್ಮವನ್ನು  ಏಕರಸವಾಗಿಯೇ ತಿಳಿದುಕೊಳ್ಳಬೇಕು.ಸಾಧಕನಾದವನು ಅತ್ಮೈಕತ್ವವನ್ನು ತಿಳಿಸದ ಶಬ್ದಗಳನ್ನು ಚಿಂತಿಸಕೂಡದು.,ಬೇರೆ ಮಾತುಗಳನ್ನು ಬಿಡಿರಿ'(ಅನ್ಯಾವಾಚೋ ವಿಮುಂಚಥ)ಎಂದು  ಶ್ರುತಿಯು ಹೇಳುತ್ತದೆ.(ಪುಟ22)

 

22) ಆತ್ಮನು ಶಾಸ್ತ್ರವಿಹಿತವಾದ ಕಮ೯ದಿಂದ ವಧಿ೯ಸುವುದಿಲ್ಲ.ಶಾಸ್ತ್ರ ಪ್ರತಿಶಿದ್ಧ  ಕಮ೯ದಿಂದ ಅಲ್ಪನಾಗುವುದಿಲ್ಲ.ಇವನನ್ನೇ ಅರಿತುಕೊಂಡು ಮನುಷ್ಯನು ಮುನಿಯಾಗುತ್ತಾನೆ. ಆತ್ಮಲೋಕವನ್ನೇ ಬಯಸುತ್ತಾ,ಮನುಷ್ಯ-ಪಿತೃ-ದೇವಲೋಕವನ್ನು ಬಯಸದೆ ,ಮುಮುಕ್ಷುಗಳು ಪ್ರವ್ರಜನ ಮಾಡುತ್ತಾರೆ.

(ಪುಟ 22)

 

23) ಆತ್ಮಸ್ವರೂಪವು ಹೀಗಿದೆ ಎಂದು ಲಕ್ಷಣಗಳಿಂದ ಹೇಳಲಾಗುವುದಿಲ್ಲ.  'ಹೀಗಲ್ಲ ಹೀಗಲ್ಲ'ಎಂದೇ ಹೇಳಬೇಕು.(ನೇತಿ ನೇತಿ)ಅವನು ಅಗೃಹ್ಯನು,ಅಕ್ಷಯನು,ಅಸಂಗನು.ಇವನು ಶಾಂತನೂ ದಾಂತನೂ  ಉಪರತನೂ ತಿತಿಕ್ಷುವೂ ಸಮಾಹಿತನೂ ಆಗಿ  ತನ್ನ ಶರೀರದಲ್ಲಿಯೇ ಆತ್ಮನನ್ನು ನೋಡುತ್ತಾನೆ.ಇವನು Àಪಾಪರಹಿತನೂ ,ವಿರಜನೂ, ಸಂಶಯರಹಿತನೂ ಆಗಿ ಅಭಯವಾದ ಬ್ರಹ್ಮವೇ ಆಗುತ್ತಾನೆ.(ಪುಟ 22)

 

24) ಐದನೆಯ ಬ್ರಾಹ್ಮಣದಲ್ಲಿ  ಮಧು-ಮುನಿ ಕಾಂಡಗಳಲ್ಲಿ,ಆಗಮ-ಯುಕ್ತಿಗಳಿಂದ ಪ್ರತಿಪಾದಿತವಾದ

 ಬ್ರಹ್ಮತತ್ವವನ್ನು ಉಪಸಂಹಾರ ಮಾಡಿರುತ್ತದೆ.(ಪುಟ 22)

 

25)ಎರಡನೆಯ ಅಧ್ಯಾಯದ  ನಾಲ್ಕನೆಯ ಬ್ರಾಹ್ಮಣವೇ  ಮೈತ್ರೇಯೀ ಬ್ರಾಹ್ಮಣ.ಇಲ್ಲಿ ಮತ್ತೊಮ್ಮೆ ಬಂದಿದೆ.ಆರನೆಯದಾದ ವಂಶಬ್ರಾಹ್ಮಣವು  ಯಾಜ್ಞವಲ್ಕೀಯ ಕಾಂಡದ  ಆಚಾಯ೯ರ ವಂಶವನ್ನು ತಿಳಿಸುತ್ತದೆ.(ಪು 22)

 

ಐದನೆಯ ಅಧ್ಯಾಯ:

 

1) ಕೊನೆಯದಾದ ಖಿಲಕಾಂಡವು  ಐದನೆಯ ಮತ್ತು ಆರನೆಯ  ಅಧ್ಯಾಯಗಳನ್ನೊಳಗೊಂಡಿದೆ.ಖಿಲವೆಂದರೆ ಅನುಬಂಧ ಅಥವಾ ಪರಿಶಿಷ್ಟ.ಹಿಂದಿನ ನಾಲ್ಕು ಅಧ್ಯಾಯಗಳಲ್ಲಿ

ನಿರುಪಾಧಿಕ ಬ್ರಹ್ಮವನ್ನು ನಿರೂಪಿಸಲಾಯಿತು.ಇಲ್ಲಿ ಸೋಪಾಧಿಕ ಬ್ರಹ್ಮದ ಕೆಲವು ಉಪಾಸನೆಗಳನ್ನು ಹೇಳಿದೆ.(ಪುಟ 23)

 

2) ಓಂಕಾರವು ಬ್ರಹ್ಮದ  ಪ್ರತೀಕವೂ ನಾಮವೂ ಆಗಿದೆ(ಪುಟ 23)

 

3) ಓಂ ಎಂದು ಆತ್ಮನನ್ನು  ಧ್ಯಾನಿಸಬೇಕೆಂದು  ಮುಂಡಕ ಶ್ರುತಿಯೂ ಹೇಳಿದೆ.(ಪುಟ 23)

 

4) ಎರಡನೆಯ ಅಧ್ಯಾಯದಲ್ಲಿ ದಮ,ದಾನ,ದಯೆಗಳನ್ನು  ಉಪಾಸನೆಗೆ ಅಂಗವಾಗಿ ಹೇಳಿದೆ.(ಪುಟ 23)

 

5) ಮೂರನೆಯ ಬ್ರಾಹ್ಮಣ:ಬುದ್ಧಿಯು  ನಾಮ-ರೂಪ-ಕಮ೯ಗಳ  ಪ್ರತಿಷ್ಠೆಯೆಂದೂ,ಸವ೯ ಪ್ರಾಣಿಗಳ ಆತ್ಮನೆಂದೂ  ಹೇಳಲ್ಪಟ್ಟಿದೆ.(ಪುಟ 23)

 

6) ನಾಲ್ಕನೆಯ ಬ್ರಾಹ್ಮಣ:ಹೃದಯ ಬ್ರಹ್ಮವು ಸತ್ಯವು ಎಂಬ ಉಪಾಸನೆಯನ್ನು ವಿಧಿಸುತ್ತದೆ.(ಪಗುಟ 23)

 

7)ಐದನೆಯ ಬ್ರಾಹ್ಮಣವು ಸತ್ಯ ಬ್ರಹ್ಮವನ್ನು ಸ್ತುತಿಸುತ್ತದೆ.(ಪುಟ 23)

 

8) ಆರನೆಯ ಬ್ರಾಹ್ಮಣ:ಬ್ರಹ್ಮಕ್ಕೆ ಅನೇಕ ವಿಶೇಷಣಗಳೂ  ಉಪಾಧಿಗಳೂ ಇರುವುದರಿಂದ ಅದು ಮನಸ್ಸೆಂಬ ಉಪಾಧಿಯಿಂದ ವಿಶಿಷ್ಟವಾಗಿರುವಂತೆ ಉಪಾಸನೆಯನ್ನು ವಿಧಿಸಿದೆ.(ಪುಟ 23)

 

)ಏಳು ಎಂಟು ಒಂಬತ್ತನೆಯ ಬ್ರಾಹ್ಮಣಗಳು:ವಿದ್ಯುತ್ತು,ವಾಗ್ಧೇನು,ಜಾಠರಾಗ್ನಿ-ಇವೆಲ್ಲ ಬ್ರಹ್ಮವು ಎಂಬ ಉಪಾಸನೆಯನ್ನು ಹೇಳುತ್ತವೆ.(ಪುಟ23) 

 

10)ಹತ್ತನೆಯ ಬ್ರಾಹ್ಮಣ: ಹಿಂದೆ ವಿವರಿಸಿದ ಉಪಾಸನೆಗಳನ್ನು ಅರಿತುಕೊಂಡವನು  ಹೋಗುವ ದಾರಿಯನ್ನು ಮತ್ತು ಹೊಂದುವ ಫಲವನ್ನು ಇಲ್ಲಿ ಹೇಳಿದೆ.(ಪುಟ 23)

 

11)ಹನ್ನೊಂದನೆಯ ಬ್ರಾಹ್ಮಣ: ಜ್ವರವೇ ಮೊದಲಾದುವನ್ನು  ಅಥವಾ ತನ್ನ ಶರೀರವನ್ನು ದಹನ ಕ್ರಿಯೆಗಾಗಿ ಒಯ್ಯುವುದನ್ನು ಮನುಷ್ಯನು ತಪಸ್ಸೆಂದು ಭಾವಿಸಬೇಕೆಂದು ಹೇಳುತ್ತದೆ.(ಪುಟ 24)

 

12)ಹನ್ನೆರಡನೆಯ ಬ್ರಾಹ್ಮಣ:ಅನ್ನ ಮತ್ತು ಪ್ರಾಣಗಳನ್ನು  ಬ್ರಹ್ಮವೆಂದು ಉಪಾಸಿಸಬೇಕೆಂದು ಹೇಳಿದೆ.

೯ಪುಟ 23)

 

13)ಹದಿಮೂರನೆಯ ಬ್ರಾಹ್ಮಣ:ಪ್ರಾಣವನ್ನು ಉಕ್ಥ,ಯಜುಸ್ಸು ಸಾಮ ಮತ್ತು ಕ್ಷತ್ರವೆಂದು ಉಪಾಸನೆ ಮಾಡಬೇಕೆಂದು ಹೇಳಿದೆ.(ಪುಟ 24)

 

14)ಹದಿನಾಲ್ಕನೆಯ ಬ್ರಾಹ್ಮಣ:ಬ್ರಹ್ಮವನ್ನು ಗಾಯತ್ರಿಯೆಂಬ ಉಪಾಧಿಯಿಂದ ಉಪಾಸಿಸಲು ಹೇಳಿದೆ.ಗಾಯತ್ರಿಗೆ ನಾಲ್ಕು ಪಾದಗಳು.

 

1)ಭೂಮಿ,ಅಂತರಿಕ್ಷ,ದ್ಯುಲೋಕ ಇವು ಮೊದಲನೆ ಪಾದವು.           

                                    

                                           

2) ಎರಡನೆಯ ಪಾದ: ಋಕ್,ಯಜುಸ್ಸು,ಸಾಮವೆದಗಳು

3) ಮೂರನೆಯ ಪಾದ:ಪ್ರಾಣೋಪಾನ ವ್ಯಾನಗಳು.

4) ನಾಲ್ಕನೆಯ ಪಾದ:ಗಾಯತ್ರಿಯ ಕಾಣುವಂತಿರುವ ರಜೋತೀತವಾದ ಪಾದವೇ ಆದಿತ್ಯ.(ಪುಟ 24)

15) 

 

15)ಹದಿನೈದನೆಯ ಬ್ರಾಹ್ಮಣ:ಜ್ಞಾನ-ಕಮ೯ ಸಮುಚ್ಛಯವನ್ನು ಮಾಡಿರುವವನು  ಮರಣಕಾಲದಲ್ಲಿ ಆದಿತ್ಯನಿಗೆ ಮಾಡುವ ಪ್ರಾಥ೯ನೆಯಿದೆ.(ಪುಟ 24)

 

ಆರನೆಯ ಅಧ್ಯಾಯ:

 

1) ಆರನೆಯಅಧ್ಯಾಯಕ್ಕೆ ಐದು ಬ್ರಾಹ್ಮಣಗಳು.

 

2) ಮೊದಲನೆಯ ಬ್ರಾಹ್ಮಣ: ಪ್ರಾಣವೇ ಜ್ಯೇಷ್ಠವು ಮತ್ತು ಶ್ರೇಷ್ಠವು.

 

3) ಎರಡನೆಯ ಬ್ರಾಹ್ಮಣ:ಪಂಚಾಗ್ನಿ ವಿದ್ಯೆಯನ್ನೂ  ಸಂಸಾರಗತಿಗಳನ್ನೂ ಹೇಳಿದೆ.

ಶ್ವೇತಕೇತುವು ತನ್ನ ಪಾಂಡಿತ್ಯವನ್ನು ಪ್ರದಶಿ೯ಸಲು ಪ್ರವಾಹಣ ರಾಜನ ಸಭೆಗೆ ಹೋಗುತ್ತಾನೆ.ಅಲ್ಲಿ ರಾಜನು ಇವನಿಗೆ ಐದು ಪ್ರಶ್ನೆಗಳನ್ನು ಹಾಕುತ್ತಾನೆ.

1) ಮೃತರಾದ ಮೇಲೆ  ಮನುಷ್ಯರು ಬೇರೆ ಬೇರೆ ಮಾಗ೯ಗಳಲ್ಲಿ ಹೇಗೆ ಹೋಗುತ್ತಾರೆ.

2) ಅವರು ಲೋಕಕ್ಕೆ ಹೇಗೆ ಹಿಂತಿರುಗುವರು?

3) ಇಲ್ಲಿ ಬಹುಜನರು ಪುನ: ಪುನಃ ಸಾಯುತ್ತಿದ್ದರೂ ಪರಲೋಕವು ಏಕೆ ಪೂಣ೯ವಾಗುತ್ತಿಲ್ಲ?

4)ಎಷ್ಟನೆಯ ಆಹುತಿಯನ್ನು ಮಾಡಿದಮೇಲೆ ನೀರು ಪುರುಷವಾಕ್ಕಾಗಿ ಎದ್ದು ನಿಂತು ಮಾತಾಡುತ್ತದೆ?

5) ದೇವಯಾನ- ಪಿತೃಯಾಣಗಳನ್ನು  ಹೇಗೆ ಪಡೆಯಬಹುದು?

ಶೇತಕೇತುವಿಗೆ ಒಂದು ಪ್ರಶ್ನೆಯ ಉತ್ತರವೂ ಕೂಡ ಗೊತ್ತಿರಲಿಲ್ಲ.

ರಾಜನು ಗೌತಮನಿಗೆ  ಪಂಚಾಗ್ನಿ ವಿದ್ಯೆಯನ್ನು ಉಪದೇಶಿಸಿದನು.

1)ದ್ಯುಲೋಕ 2) ಪಜ೯ನ್ಯ 3) ಲೋಕ 4) ಪುರುಷ 5) ಯೋಷಾಗ್ನಿ(ಸ್ತ್ರೀ) ಇವೇ ಪಂಚಾಗ್ನಿಗಳು.

ಪಂಚಾಗ್ನಿ ವಿದ್ಯೆಯನ್ನು ಅರಿತುಕೊಂಡ ಗೃಹಸ್ಥನೂ  ಶ್ರದ್ಧೆಯಿಂದ  ಹಿರಣ್ಯಗಭ೯ನನ್ನು ಉಪಾಸಿಸುವ  ವಾನಪ್ರಸ್ಥರೂ ಮತ್ತು ಪರಿವ್ರಾಜಕರೂ  ಬ್ರಹ್ಮಲೋಕಕ್ಕೆ ಹೋಗುತ್ತಾರೆ. ಅವರಿಗೆ ಪುನರಾವೃತ್ತಿಯಿಲ್ಲ.ಇದು ದೇವಯಾನ ಅಥವಾ ಉತ್ತರಮಗ೯.(ಪುಟ 25)

 

6)ಆದರೆ ಯಜ್ಞಯಾಗಾದಿಗಳನ್ನು ಪಿತೃಯಾಣದ  ಮೂಲಕ ಚಂದ್ರನನ್ನು ಸೇರುತ್ತಾರೆ.(ಪುಟ 26)

 

7)ಇವರು ಉತ್ತರಮಾಗ೯ಕ್ಕೆ  ಹೋಗುವವರೆಗೆ  ಅಥವಾ ಸದ್ಯೋಮುಕ್ತಿಯನ್ನು ಹೊಂದುವವರೆಗೆ ಸಂಸಾರದಲ್ಲಿ ಚಕ್ರದಂತೆ  ಸುತ್ತುತ್ತಿರುತ್ತಾರೆ. ಎರಡೂ  ಮಾಗ೯ಗಳನ್ನು ಅರಿಯದವರು  ಕೀಟ ಪತಂಗಗಳಾಗಿ ಹುಟ್ಟುತ್ತಾರೆ.(ಪುಟ 26)

 

8) ಮೂರನೆಯ ಬ್ರಾಹ್ಮಣದಲ್ಲಿ ಶ್ರೀಮಂಥ ಕಮ೯ವನ್ನು ಹೇಳಿದೆ.(ಪುಟ 26)

 

)ನಾಲ್ಕನೆಯ ಬ್ರಹ್ಮದಲ್ಲಿ  ಪುತ್ರಮಂಥ ಕಮ೯ವನ್ನು ಹೆಲಿದೆ.೯ಪುತ 26) 

 

10)ಐದನೆಯದಾದ  ವಂಶ ಬ್ರಾಹ್ಮಣವು ಇಡೀ ಉಪನಿಷತ್ತಿನ  ಆಚಾಯ೯ ವಂಶವನ್ನು ಹೇಳಿದೆ.

 

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

ಇಲ್ಲಿಯ ವಿವರಣೆಗಳು ಶಾಂಕರ ಭಾಷ್ಯವನ್ನೇ ಅವಲಂಬಿಸಿವೆ.

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

 

 

ಬೃಹದಾರಣ್ಯಕೋಪನಿಷತ್:

 ಮೊದಲನೆಯ ಅಧ್ಯಾಯ:

ಮೊದಲನೆಯ ಬ್ರಾಹ್ಮಣ:

 

1) ಧಮ೯ವೆಂದು ಹೇಳಲ್ಪಡುವ  ವೈದಿಕ ಕಮ೯ವು ಎರಡು ವಿಧವಾಗಿರುತ್ತದೆ.1) ಉಪಾಸನ್ ಪೂವ೯ಕವಾದುದು 2) ಕೆವಲವಾದುದು(ಜ್ಞಾನ ಮಾಗ೯).(ಪುಟ 3)

 

2) ಅಶ್ವಮೇಧ ಯಾಗದ ಫಲವೂ ಕೂಡ ಅನಿತ್ಯವಾದುದರಿಂದ ಉಪಾಸಕನ ಸಂಸಾರವನ್ನು ತಪ್ಪಿಸಲಾರದು.(ಪುಟ 3)

 

3) ರಾಜರಿಗೆ ಮತ್ರ ಅಶ್ವಮೇಧಯಾಗದಲ್ಲಿ ಅಧಿಕಾರವಿದೆ.(ಪುಟ 3)

 

4) ಅಶ್ವಮಧ ಯಜ್ಞದ ಅಶ್ವವನ್ನು ಪ್ರಜಾಪತಿಯೆಂದು ಉಪಾಸಿಸಬೇಕು(ಪುಟ 3)

 

 

ಎರಡನೆಯ  ಬ್ರಾಹ್ಮಣ:

1) ಇಲ್ಲಿ ಮೊದಲು ಯವುದೂ ಇರಲಿಲ.್ಲಇದು ಭೋಜನೇಚ್ಛೆಯುಳ್ಳ ಮೃತ್ಯುವಿನಿಂದಲೇ  ಆವೃತವಾಗಿತ್ತು.ಹಸಿವೇ ಮೃತ್ಯುವು.ನಂತರ ಮನಸ್ಸು ಸೃಷ್ಟಿಯಾಯಿತು.ಪೂಜಿಸುತ್ತಿರುವ ಅವನಿಗೆ ನೀರು ಉತ್ಪನ್ನವಾಯಿತು.ನೀರೇ ಅಕ೯(ಅಗ್ನಿ).ಅಲ್ಲಿ ಯಾವುದು ನೀರಿನ ಗರಣೆಯಂತಿದ್ದಿತೊ  ಅದು ಗಟ್ಟಿಯಗಿ  ಪೃಥ್ವಿಯಾಯಿತು.

 

2) ಅವನು ಎಲ್ಲವನ್ನೂ ತಿನ್ನುತ್ತಾದ್ದರಿಂದ ಅವನಿಗೆ(ಮೃತ್ಯುವಿಗೆ) 'ಅದಿತಿ'ಎಂಬ  ಹೆಸರುಂಟಾಗಿದೆ.(ಪುಟ 12)

 

ಮೂರನೆಯ ಬ್ರಾಹ್ಮಣ:

1) ಪ್ರಜಾಪತಿಯ ಮಕ್ಕಳು ಎರಡುಬಗೆ. ದೇವತೆಗಳು ಮತ್ತು ಅಸುರರು.ದೆವತೆಗಳು ಅಲ್ಪಸಂಖ್ಯಾಕರು.,ಅಸುರರು ಬಹು ಸಂಖ್ಯಾಕರು.ಅವರು ಲೋಕಗಳ ಅಧಿಪತ್ಯಕ್ಕಾಗಿ ಪರಸ್ಪರ ಸ್ಪಧಿ೯ಸಿದರು.(ಪುಟ 17)

 

2)ನಾವು ಈಯಜ್ಞದಲ್ಲಿ  ಉದ್ಗೀಥದ ಮೂಲಕ ಅಸುರರನ್ನು ಮೀರೋಣ' ಎಂದು ದೇವತೆಗಳು ಹೇಳಿದರು.(ಪುಟ 17)

 

3)'ನೀನು ನಮಗೋಸ್ಕರ ಉದ್ಗೀಥವನ್ನು ಹಾಡು' ಎಂದು ದೇವತೆಗಳು   ವಾಕ್ಕಿಗೆ ಹೇಳಿದರು.ವಾಕ್ಕು ಅವರಿಗೆ ಉದ್ಗೀತವನ್ನು ಹಾಡಿತು. ' ಉದ್ಗಾತೃವಿನ ಮೂಲಕವೇ ದೇವತೆಗಳು ನಮ್ಮನ್ನು ಮೀರುವರು ಎಂದು ಅಸುರರು ತಿಳಿದುಕೊಂಡರು.ಅವರು ವಾಕ್ಕಿನ ಕಡೆಗೆ ನುಗ್ಗಿ ಅದನ್ನು ಪಾಪದಿಂದ ಹೊಡೆದರು.

ಲೋಕದಲ್ಲಿ ಕಂಡುಬರುವ  ಶಾಸ್ತ್ರ ಪ್ರತಿಶಿದ್ಧವಾದ ಮಾತೇ  ಪಾಪವು(ಪುಟ 18)

 

4)ಅದೇ ರೀತಿ ಘ್ರಾಣೇಂದ್ರಿಯ,ಚಕ್ಷು,ಶ್ರೋತ್ರ, ಮನಸ್ಸು  ಪ್ರಾಣ ಇವುಗಳಿಗೂ ದೇವತೆಗಳು ಉದ್ಗೀಥವನ್ನು ಹಾಡಲುಹೇಳಿದರು.ಅವು ಹಾಡಿದವು.

 

5) ದೇವತೆಯು(ಪ್ರಾಣ) 'ದೂರ್'ಎಂಬ ಹೆಸರಿನಿಂದ  ಪ್ರಖ್ಯಾತವಾಗಿದೆ. ಏಕೆಂದರೆ ಮೃತ್ಯುವು ಇದಕ್ಕೆ ದೂರವಾಗಿದೆ.ಯಾವನು ಹೀಗೆ ತಿಳಿಯುವನೊ  ಅವನಿಗೆ ಮೃತ್ಯುವು ದೂರವಾಗಿಯೇ ಇರುವುದು.(ಪುಟ 25)

 

6) ಇಂದ್ರಿಯ -ವಿಷಯಗಳಿಗೆ ಸಂಸ್ಪಶ೯ವುಂಟಾಗಿ  ಆಸಕ್ತಿಯು ಜನಿಸುತ್ತದೆ.(ಪುಟ 26)

 

7)ಶರೀರದಲ್ಲಿ ಪ್ರತಿಷ್ಠಿತವಾಗಿರುವುದಕ್ಕೋಸ್ಕರ ಪ್ರಾಣನು ಅನ್ನವನ್ನು ತಿನ್ನುವನು.(ಪುಟ 30)

 

8)ಯಾವ ಮನುಷ್ಯನು ಪ್ರ್ರಾಣನ ಮುಲಕ ಅನ್ನವನ್ನು ತಿನ್ನುತ್ತಾನೋ  ಅದರ ಮೂಲಕ ದೇವತೆಗಳು ತೃಪ್ತರಗುವರು.(ಪುಟ 31)

 

)ಸ್ವವಿಷಯವನ್ನು  ಪ್ರಕಾಶಿಸುವುದರಿಂದ 'ದೇವತೆಗಳು'ಎಂದು ಹೇಳಲ್ಪಟ್ಟಿವೆ.(ಪುಟ 32)

 

10) ವಾಕ್ಕೇ ಮೊದಲಾದ ಪಂಚೇಂದ್ರಿಯಗಳು  ಪ್ರಾಣನನ್ನೇ ಆಶ್ರಯಿಸಿವೆ.(ಪುಟ 32)

 

11)ಪ್ರಾಣವೇ ಅಂಗಗಳ ರಸವು.(ಪುಟ32)

 

12)ಪ್ರಾಣನು ಶರೀರೇಂದ್ರಿಯಗಳಿಗೆ  ಆತ್ಮನೆಂಬುದು ಸಿದ್ಧವಾಯಿತು.ಆದುದರಿಂದ ವಾºಗಾದಿಗಳನ್ನು ಬಿತ್ತು ಪ್ರಾಣನನ್ನೇ ಉಪಾಸಿಸಬೇಕು.(ಪುಟ 32)

 

13) ಪುನಃ ಇವನೇ (ಪ್ರಾಣನೇ) ಬೃಹಸ್ಪತಿಯು.ವಾಕ್ಕೇ ಬೃಹತಿ.ಇವನು ಅದರ ಪತಿಯು.ಆದುದರಿಂದ ಇವನು ಬೃಹಸ್ತತಿ.(ಪುಟ 33)

 

14)ವಾಕ್ಕೇ ಸಾ ಪ್ರಾಣವೇ ಅಮ. ಮತ್ತು ಅವi ಆಗಿರುವುದರಿಂದ ಸಾಮವೆನಿಸಿದೆ.ಗೆದ್ದಲು ಆನೆ ಸೊಳ್ಳೆಗೆ ಸಮಾನವಾಗಿರುವುದರಿಂದ , ಮೂರುಲೋಕಗಳಿಗೆ ಸಮಾನವಾಗಿರುವುದರಿಂದ ,ಇದೆಲ್ಲಕ್ಕೂ ಸಮಾನವಾಗಿರುವುದರಿಂದ,ಸಾಮ.ಯವನು ಸಾಮವನ್ನು ಹೀಗೆ ಅರಿಯುವನೊ  ಅವನು ಸಾಮದೊಂದಿಗೆ ಸಾಯುಜ್ಯವನ್ನೂ ,ಸಾಲೋಕ್ಯವನ್ನೂ ಪಡೆಯುತ್ತಾನೆ.(ಪುಟ 34)

 

15)ಪುನಃ ಪ್ರಾಣವೇ ಉದ್ಗೀಥ, ಪ್ರಾಣನೇ ಉತ್. ಏಕೆಂದರೆ ಪ್ರಾಣನಿಂದಲೇ ಇವೆಲ್ಲವೂ ಎತ್ತಿ ಹಿಡಿಯಲ್ಪಟ್ಟಿವೆ.ಪ್ರಾಣನು ಉತ್ ಮತ್ತು ಗೀಥೆಯೂ ಆಗಿರುವುದರಿಂದ ಉದ್ಗೀಥ.(ಪುಟ 35)

 

16) ಅವನು ಗಾನ ಮಾಡುವ ಸಂದಭ೯ದಲ್ಲಿ  ಮೂರು ಯಜುಮ೯ಂತ್ರಗಳನ್ನು  ಜಪಿಸಬೇಕು.

1) ಅಸತ್ತಿನಿಂದ ಸದ್ವಸ್ತುವಿಗೆ  ಕರೆದುಕೊಂಡು ಹೋಗು. ತಮಸ್ಸಿನಿಂದ ಜ್ಯೋತಿಗೆ ನನ್ನನ್ನು ಕರೆದುಕೊಂಡು ಹೋಗು.(ಅಸತೋಮಾ ಸದ್ಗಮಯ),ತಮಸೋಮಾ ಜ್ಯೋತಿಗ೯ಮಯ ಎಂಬ ಮಂತ್ರದಲ್ಲಿ ತಮಸ್ ಎಂದರೆ ಮೃತ್ಯುವೇ.ಜ್ಯೋತಿ ಎಂದರೆ ಅಮೃತ. 'ಮೃತ್ಯೋಮ೯ ಅಮೃತಂಗಮಯ'

ಎಂದರೆ ಮೃತ್ಯುವಿನಿಂದ ಅಮೃತತ್ವಕ್ಕೆ ಕರೆದುಕೊಂಡು ಹೋಗು  ಎಂದಥ೯.(ಪುಟ41)

 

17) ಪ್ರಾಣಾತ್ಮನು ತಾನೇ ಎಂದರಿತವನು  ಅದನ್ನು ಹೊಂದಲು ಅಸೆ ಪಡುವುದಿಲ್ಲ.(ಪುಟ 42)

 

ನಾಲ್ಕನೆಯ ಬ್ರಾಹ್ಮಣ:

 

18)ಮೊದಲು ಜಗತ್ತು ಪುರುಷಾಕಾರವಾದ  ಅತ್ಮನೇ ಆಗಿತ್ತು.(ಆತ್ಮೈವೇದಮಗ್ರ  ಆಸೀತ್ ಪುರುಷವಿಧಃ.)'ಆತ್ಮನು ಪುತ್ರರಿಗಿಂತಲೂ ಪ್ರಿಯತಮನು.(ತದೇತತ್ ಪ್ರೇಯಃ ಪುತ್ರಾತ್(1.4.8.).

(ಪುಟ 44)

 

1) ಎರಡನೆದಯರಿಂದಲೇ ಭಯವುಂಟಹುತ್ತದೆ.(ದ್ವಿತೀಯಾದ್ವೈ ಭಯಂ ಭವತಿ)(ಪುಟ 45)

 

20) ಎರಡನೆಯ ವಸ್ತು ಅವಿದ್ಯೆಯಿಂದ ಬಂದಿದೆ. ಅದೃಶ್ಯವಾದ  ಎರಡನೆಯ ವಸ್ತು ಭಯವನ್ನುಂಟು ಮಾಡಲಾರದು.'ಅಲ್ಲಿ ಏಕತ್ವವನ್ನು ನೋಡುವವನಿಗೆ  ಶೋಕವೆಲ್ಲಿ?(ತತ್ರ ಕೋ ಮೋಹಃ ಕಃ ಶೋಕ ಏಕತ್ವಮನು ಪಶ್ಯತಃ(..7)

 

21)ಸ್ತ್ರೀ ಎಂಬ ಅಧ೯ವಿಲ್ಲದಿರುವಾಗ ಪುರುಷಾಧ೯ವು ಅಪೂಣ೯ವಾಗುತ್ತದೆ. ವಿವಾಹವಾದಮೇಲೆ ಸ್ತ್ರೀ ಅಧ೯ದಿಂದ  ಪುರುಷಾಥ೯ವು ಪೂಣ೯ವಾಗುತ್ತದೆ.(ಪುಟ 47)

 

22)'ನನ್ನಿಂದ ಸೃಷ್ಟಿಸಲ್ಪಟ್ಟ ಜಗತ್ತು ನನ್ನಿಂದ ಅಭಿನ್ನವಾಗಿರುವುದರಿಂದ ನಾನೇ ಜಗತ್ತಾಗಿರುವೆನು .ಅದು ನನ್ನಿಂದ ಅಭಿನ್ನವಾಗಿಲ್ಲ.'ಎಂಉ ಪ್ರಜಾಪತಿಯು ಅರಿತುಕೊಂಡನು(ಪುಟ 4)

 

23)(ಸೃಷ್ಟಿಸಿದ ವಸ್ತುಗಳು ಸೃಷ್ಟಿಕತ೯ನಿಗಿಂತ ಬೇರೆ ಅಲ್ಲ.)(ಪುಟ 4)

 

24)ಸೋಮವೇ ಅನ್ನ .ಅಗ್ನಿ ಅನ್ನಾದ.(ಅನ್ನವನ್ನು ತಿನ್ನುವವನು.)(ಪುಟ 51)

 

25)' ಜಗತ್ತು ಆಗ ಅವ್ಯಕ್ತವಾಗಿತ್ತು. ಅವ್ಯಕ್ತವಾದ ಜಗತ್ತು ನಾಮರೂಪಗಳಿಂದಲೇ  ವ್ಯಕ್ತವಾಯಿತು.(ಪುಟ 53)

 

26)ಅಗ್ನಿಯು ಸೌದೆಯಲ್ಲಿ ಹೇಗೆ ಅಡಗಿರುತ್ತದೆಯೊ  ಹಾಗೆ ಆತ್ಮನು ಶರೀರಗಳಲ್ಲಿ ನಖಾಗ್ರದವರೆಗೂ ಅಡಗಿರುತ್ತಾನೆ.(ಪುಟ 53)

 

27)£ವನನ್ನು ನೋಡಲಾಗುವುದಿಲ್ಲ. ಅವನು ಪ್ರಾಣನ ಕ್ರಿಯೆಯನ್ನು ಮಾಡುವಾಗ ಪ್ರಾಣನೆಂದೂ,,ಮಾತನಾಡುವಾಗ ವಾಕ್ಕೆಂದೂ,,ನೋಡುವಾಗ ಕಣ್ಣೆಂದೂ,,ಕೇಳುವಾಗ ಶ್ರೋತ್ರವೆಂದೂ ,ಮನನ ಮಾಡುವಾಗ ಮನಸ್ಸೆಂದೂ  ಕರೆಯಲ್ಪಡುತ್ತಾನೆ. ಇವನಿಗೆ ಹೆಸರುಗಳು ಕಮ೯ದಿಂದ ಉಂಟಾಗಿವೆ.(ಪುಟ 53)

 

28) ಆತ್ಮನನ್ನೇ ಉಪಾಸಿಸಬೇಕು. ಏಕೆಂದರೆ ಇವನಲ್ಲಿ ಇವೆಲ್ಲವೂ ಒಂದಾಗುವವು.(ಪುಟ 53)

 

2)ಈಗ ಶ್ರುತಿಯು  ಜಗತ್ತು ವ್ಯಕ್ತವಾಗುವುದಕ್ಕೆ ಮುಂಚೆ ಇದ್ದ ಬೀಜಾವಸ್ಥೆಯನ್ನುತಿಳಿಸುತ್ತದೆ. ಸಂಸಾರ ವೃಕ್ಷಕ್ಕೆ ಕಮ೯ವು ಬೀಜ.ಅವಿದ್ಯೆಯು ಕ್ಷೇತ್ರ. ಸಂಸಾರ ವೃಕ್ಷವನ್ನು ಸಮೂಲವಾಗಿ ಕಿತ್ತು ಹಾಕಿದರೆ ಪುರುಷಾಥ೯ ಪ್ರಾಪ್ತಿಯಾಗುವುದು.ಕಾಥಕದಲ್ಲಿ (2.6.1.) ಮತ್ ಗೀತೆಯಲ್ಲಿ 15.1) ಪ್ರಸಿದ್ಧವಾದ ಅಶ್ವತ್ಥವೃಕ್ಷವು ಇದೇ(ಪುಟ 54)

 

30) ಅಮೃತತ್ವವು ಮಗನಿಗಿಂತಲೂ ಪ್ರಿಯತರವು,ಸಂಪತ್ತಿಗಿಂತಲೂ ಪ್ರಿಯತರವು,.ಇತರ ಎಲ್ಲಕ್ಕಿಂತಲೂ ಪ್ರಿಯತರವು.ಯಾವನು ಆತ್ಮನನ್ನೇ ಪ್ರಿಯವೆಂದು ಉಪಾಸಿಸುವನೊ  ಅವನಿಗೆ ಪ್ರಿಯವಾದುದು ಸಾಯುವುದಿಲ್ಲ.(ಪುಟ 55)

 

31) ಇದು ಮೊದಲು ಬ್ರಹ್ಮವೇ ಆಗಿತ್ತು.(ಬ್ರಹ್ಮ ವಾ ಇದಮಗ್ರ ಆಸೀತ್).ನಾನು ಅಬ್ರಹ್ಮವಾಗಿರುವೆನು ಎಮದು ಅದು ತನ್ನನ್ನದೇ ತಾನು ಅರಿತುಕೊಂಡಿತು.ಆದುದರಿಂದ ಅದು ಎಲ್ಲವೂ ಆಯಿತು.

ದೇವತೆಗಳಲ್ಲಿ  ಯಾವನು  ಅದನ್ನು ತಿಳಿದುಕೊಂಡನೊ ಅವನೇ ಅದಾದನು. ಹಾಗೆಯೆ ಋಷಿಗಳಲ್ಲಿಯೂ  ಮತ್ತು ಮನುಷ್ಯರಲ್ಲಿಯೂ.ಋಷಿ ವಾಮದೇವನು  ಇದನ್ನು ಅದು ಎಂದು ಸಾಕ್ಷಾತ್ಕರಿಸಿದಾಗ

'ನಾನು ಮನು ಮತ್ತು ಸೂಯ೯' ಎಂದು ಅರಿತುಕೊಂಡನು.

ಈಗಲೂ ಯಾವನು ಇದನ್ನು ಹೀಗೆ ಎಂದು ತಿಳಿದುಕೊಳ್ಳುವನೊ ಅವನು ಇದೆಲ್ಲವೂ ಆಗುತ್ತಾನೆ.(ಪುಟ 57)

 

32)ಯಾವನು 'ಇವನು ಬೇರೆ''ನಾನು ಬೆರೆ' ಎಂದು ಬೇರೆ ದೇವತೆಯನ್ನು ಉಪಾಸಿಸುವನೊ  ಅವನು ಅರಿಯನು.(ಪುಟ 57)

 

33) ಅಜ್ಞಾನದಿಂದ ಉಂಟಾದ  ಅಧ್ಯಾರೋಪಣೆಯ  ನಿವೃತ್ತಿಯೇ ಶ್ರುತಿಯ ತಾತ್ಪಯ೯(ಪುಟ 57)

 

34)ಸವ೯ಭಾವವನ್ನು ಯಾರು ಬೇಕಾದರೂ ಹೊಂದಬಹುದು.ದೇವತೆಗಳಾಗಲೀ ಋಷಿಗಳಾಗಲೀ ಆಗಿರಬೇಕೆಂಬ ನಿಯಮವಿಲ್ಲ(ಪುಟ 58)

 

35)ದೇವಲೋಕವು ಕಮ೯ವಂತರಿಂದ ತುಂಬಲ್ಪಟ್ಟಿದೆ. ಮನುಷ್ಯರು ಇವನನ್ನು ಮೀರಿಹೋಗುವುದು  ದೇವತೆಗಳಿಗೆ ಇಚ್ಛೆಯಿಲ್ಲ.(ಮಹಾಭಾರತ,14,20,5)

 

36)ಇದು ಮೊದಲು ಬ್ರಹ್ಮವೊಂದೇ ಆಗಿತ್ತು( ಬ್ರಹ್ಮ ವಾ ಇದಮಗ್ರ ಆಸೀದೇಕಮೇವ).ಅದು ಒಂದೇ  ಆಗಿದ್ದುದರಿಂದ ಕಮ೯ವನ್ನು ಮಾಡಲು ಸಮಥ೯ವಾಗಿರಲಿಲ್ಲ.ಅದು ಶ್ರೇಯೋರೂಪಿಯಾದ  ಕ್ಷತ್ರಿಯನನ್ನು

ಸೃಷ್ಟಿಸಿತು.  ದೆವತ್ರಗಳಲ್ಲಿ ಕ್ಷತ್ರಿಯರಾದವರು ಇವರು:ಇಂದ್ರ,ವರುಣ,ಸೋಮ.ರುದ್ರ,ಪಜ೯ನ್ಯ,ಯಮ,ಮೃತ್ಯು,ಈಶಾನ.ಆದುದರಿಂದ ಕ್ಷತ್ರಿಯನಿಗಿಂತ ಶ್ರೇಷ್ಠವಾದುದು ಇಲ್ಲ.ಆದುದರಿಂದ ರಾಜಸೂಯ ಯಜ್ಞದಲ್ಲಿ ಬ್ರಾಹ್ಮಣನು ಕ್ಷತ್ರಿಯನನ್ನು  ಕೆಳಗಿನ ಅಂತಸ್ತಿನಿಂದ ಉಪಾಸಿಸುತ್ತಾನೆ. ತಶಸ್ಸನ್ನು ಬ್ರಾಹ್ಮಣನು ಕ್ಷತ್ರಿಯನಿಗೆ ಕೊಟ್ಟನು.ಆದುದರಿಂದ ಕ್ಷತ್ರಿಯನು  (ಯಜ್ಞದಲ್ಲಿ) ಶ್ರೇಷ್ಠತೆಯನ್ನು ಹೊಂದಿದರೂ  ಕೊನೆಗೆ ತನ್ನ ಕಾರಣನಾದ ಬ್ರಾಹ್ಮಣವನ್ನೇ  ಆಶ್ರಯಿಸುತ್ತಾನೆ.(ಪುಟ60)

 

37) ಯಾವನು ಬ್ರಾಹ್ಮಣನನ್ನು ಕಡೆಗಣಿಸುತ್ತಾನೆಯೊ  ಅವನು ತನ್ನ ಮೂಲವನ್ನು ನಾಶಮಾಡಿಕೊಳ್ಳುತ್ತಾನೆ. ಶ್ರೇಷ್ಠನನ್ನು ಕಡೆಗಣಿಸಿದರೆ ಹೇಗೋ ಹಾಗೆ ಅವನು ಹೆಚ್ಚು ಪಾಪಿಯಾಗುತ್ತಾನೆ. (ಪುಟ 60)

 

38)ಅವನು ವೈಶ್ಯಜಾತಿಯನ್ನು ಸೃಷ್ಟಿಸಿದನು.ಇವು ಎಂಟು ವಸುಗಳು,ಹನ್ನೊಂದು ರುದ್ರರು,ಹನ್ನೆರಡು ಆದಿತ್ಯರು, ಹದಿಮೂರು ವಿಶ್ವೇದೇವತೆಗಳು ಮತ್ತು ನಲವತ್ತೊಂಬತ್ತು ಮರುತ್ತುಗಳು.(ಪುಟ 60)

 

3) ಅವನು ಇನ್ನೂ ಕಮ೯ಗಳನ್ನು ಸಮಥ೯ನಾಗಲಿಲ್ಲ.ಅವನು ಶೂದ್ರಜಾತಿಯನ್ನು  ಪೂಷನನ್ನು ಸೃಷ್ಟಿಸಿದನು.ಎಲ್ಲವನ್ನೂ ಪೋಷಿಸುಚುರಿಂದ  ಪೂಷನ್.  (ಪುಟ 61)

 

40)  ಅವನು ಧಮ೯ವನ್ನು ಸೃಷ್ಟಿಸಿದನು. ಧಮ೯ವು  ಕ್ಷತ್ರಿಯನ ನಿಯಂತೃವಾಗಿದೆ.ಆದುದರಿಮದ ಧಮ೯ಕ್ಕಿಂತ ಶ್ರೇಷ್ಠವಾದುದು ಇಲ್ಲ. ಧಮ೯ವೇ ಸತ್ಯ. (ಪುಟ62)

 

41) ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ  ವಸ್ತುವನ್ನು ಅರಿತುಕೊಳ್ಳುವುದು ಸತ್ಯ.ಅದನ್ನೇ ಅನುಷ್ಠಾನ ಮಾಡಿದರೆ  ಧಮ೯ ಎನಿಸುವುದು.ಹೀಗೆ ಸತ್ಯಧಮ೯ಗಳು ಒಂದನ್ನೊಂದು ಅವಲಂಬಿಸಿವೆ.(ಪುಟ62) 

 

42) ಆತ್ಮನೆಂಬ ಲೋಕವನ್ನೇ  ಉಪಾಸಿಸಬೇಕು.ಯಾವನು ಬ್ರಹ್ಮಲೋಕವನ್ನೇ ಉಪಾಸಿಸುತ್ತಾನೆಯೊಅವನ ಕಮ೯ವು ಕ್ಷಯವೇ ಅಗುವುದಿಲ್ಲ.ಏಕೆಂದರೆ ಅವನು ಯಾವು ಯಾವುದನ್ನು ಬಯಸುತ್ತಾನೆಯೊ ಅದನ್ನು ಆತ್ಮನಿಂದಲೆ ಸೃಷ್ಟಿಸಿಕೊಳ್ಳುತ್ತಾನೆ.(ಪುಟ64)

 

43) ಆತ್ಮನೇ (ಗೃಹಸ್ಥನೇ) ಎಲ್ಲ ಪ್ರಾಣಿಗಳಿಗೂ ಭೋಗ್ಯನು.ಅವನು

ಅಗ್ನಿಯಲ್ಲಿ ಹೋಮ ಮಾಡುವುದರಿಂದ ದೇವತೆಗಳಿಗೆ ಭೋಗ್ಯನಾಗುತ್ತಾನೆ.ಅವನು ವೇದಾಧ್ಯಯನ ಮಾಡುವುದರಿಂದ  ಋಷಿಗಳಿಗೆ ಭೋಗ್ಯನಾಗುತ್ತಾನೆ.ಅವನು ಪಿತೃಗಳಿಗೆ ಪಿಂಡೋದಕವನ್ನು ಕೊಡುವುದರಿಂದ,ಸಂತಾನೋತ್ಪತ್ತಿಗೆ ಪ್ರಯತ್ನಮಾಡುವುದರಿಂದ ಪಿತೃಗಳಿಗೆ ಭೋಗ್ಯನಾಗುತ್ತಾನೆ.ಅವನು ಮನುಷ್ಯರಿಗೆ ವಸ,ಅನ್ನ ಇವುಗಳನ್ನು ಕೊಡುವುದರಿಂದ  ಅವರಿಗೆ ಭೋಗ್ಯನಾಗುತ್ತಾನೆ.ಅವನು ಪಶುಗಳಿಗೆ  ತೃಣೋದಕವನ್ನು ಕೊಡುವುದರಿಂದ ಅವುಗಳಿಗೆ ಭೋಗ್ಯನಾಗುತ್ತಾನೆ.ಅವನ ಮನೆಯಲ್ಲಿ ಮೃಗಗಳು, ಪಕ್ಷಿಗಳು,ಇರುವೆಗಳೂ ಕೂಡ ಉಪಜೀವಿಸುವುದರಿಂದ  ಅವನು ಇವುಗಳಿಗೆ ಭೋಗ್ಯನಾಗುತ್ತಾನೆ.ಮನುಷ್ಯನು ತನ್ನ ಶರೀರಕ್ಕೆ ಕ್ಷೇಮವನ್ನು ಹೇಗೆ ಬಯಸುವನೊ  ಹಾಗೆಯೇ ಎಲ್ಲಾ ಪ್ರಾಣಿಗಳೂ ಹೀಗೆ ಅರಿತಿರುವವನಿಗೆ ಕ್ಷೇಮವನ್ನು ಇಚ್ಛಿಸುತ್ತವೆ.೯ಪುಟ 66)

 

44) ಇದು  ಮೊದಲು ಆತ್ಮನೇ ಆಗಿತ್ತು-ಒಂದೇ ಆಗಿತ್ತು.(ಆತ್ಮೈವೇದ ಆಸೀದೇಕ  ಏವಃ).ಅವನು ಬಯಸಿದನು .'ನಾನು ಪುತ್ರ ರೂಪದಿಂದ ಹುಟ್ಟಲು  ನನಗೆ ಪತ್ನಿಯು ಬೇಕು.ನಾನು ಕಮ೯ವನ್ನು ಮಾಡಲು ನನಗೆ ಸಂಪತ್ತು ಬೇಕು.'.ಕಾಮವೆಲ್ಲ ಇಷ್ಟೆ.ಇಚ್ಛಿಸಿದರೂ ಇದಕ್ಕಿಂತ ಹೆಚ್ಚಾಗಿ ಪಡೆಯಲಾರನು.

ಅವನು ಎಲ್ಲಿಯವರೆಗೆ   ಇವುಗಳಲ್ಲಿ ಒಂದೊಂದನ್ನು ಕೂಡ ಹೊಂದುವುದಿಲ್ಲವೊ ಅಲ್ಲಿಯವರೆಗೆ ತನು ಅಪೂಣ೯ನೆಂದೇ ತಿಳಿvಯುತ್ತಾನೆ.

 

ಅವನ ಸಂಪೂಣ೯ತೆಯು ಹಿಗೆ ಉಂಟಾಗುತ್ತದೆ: ಮನಸ್ಸು ಅವನ ಆತ್ಮವು. ವಾಕ್ಕದು ಅವನ ಪತ್ನಿ,ಪ್ರಾಣವು ಅವನ ಸಂತತಿ,ಕಣ್ಣು ಅವನ ಮಾನುಷ ಸಂಪತ್ತು.ಏಕೆಂದರೆ ಕಣ್ಣಿನಿಂದಲೇ ಅದನ್ನು ಪಡೆಯುತ್ತಾನೆ.ಶ್ರೋತ್ರವು ಅವನ ದೈವೀ ಸಂಪತ್ತು.ಏಕೆಂದರೆ ಅವನು  ಶ್ರೋತ್ರದಿಂದಲೇ ಅದನ್ನು ಕೇಳುತ್ತಾನೆ.ಶರೀರವು ಅವನ ಕಮ೯ಕ್ಕೆ ಕರಣವು. ಏಕೆಂದರೆ ಶರೀರದಿಂದಲೇ ಅವನು ಕಮ೯ವನ್ನು ಮಾಡುತ್ತಾನೆ. ಯಜ್ಞಕ್ಕೆ ಐದು ಅಂಗಗಳಿವೆ.ಪಶುಗಳಿಗೆ  ಐದು ಅಂಗಗಳಿವೆ.ಮನುಷ್ಯನಿಗೆ ಐದು ಅಂಗಗಳಿವೆ.ಏನೇನಿದೆಯೋ ಇದೆಲ್ಲವೂ ಐದು ಅಂಗಗಳನ್ನು ಹೊಂದಿದೆ,ಯವನು ಹೀಗೆ ಅರಿತುಕೊಳ್ಳುವನೊ ಅವನು ಇವೆಲ್ಲವನ್ನೂ ಅರಿಯುತ್ತಾನೆ.(ಪುಟ 68)

 

44)ಮನುಷ್ಯನ ಪ್ರವೃತ್ತಿಗಳಿಗೆಲ್ಲ ಕಾಮ ಅಥವಾ ಏಷಣೆ ಹೇತುವು.(ಕಾರಣವು).(ಪುಟ 6)

 

45)ಸಮಸ್ತ ಪ್ರವೃತ್ತಿಗಳೂ ಕಾಮದಿಂದಲೇ ಹೊರಡುತ್ತವೆ.(ಪುಟ 6)

 

46)ಪತ್ನಿಯಿಲ್ಲದಿದ್ದರೆ ಯಜಮಾನನಿಗೆ ಕಮ೯ಕ್ಕೆ ಅಧಿಕಾರವಿಲ್ಲ.(6)

 

47) ಮನಸ್ಸು,ವಕ್ಕು, ಪ್ರಾಣ,ಕಣ್ಣು,ಕಿವಿ, ಮನುಷ್ಯರ ಮತ್ತು ಪಶುಗಳ ಸಹಾಯದಿಂದ  ಒಂದು

ಯಜ್ಞವು ನೆರವೇರುತ್ತದೆ.([ಉಟ 6)   

 

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

 

ಐದನೆಯ ಬ್ರಾಹ್ಮಣ(ಸಪ್ತಾನ್ನಗಳು):

1)ಸಪ್ತಾನ್ನಗಳು:

1) ಸಾಮಾನ್ಯ ಅನ್ನ

2) ಎರಡು ದೇವತೆಗಳ ಅನ್ನ:ಹುತ-ಪ್ರಹುತ

3)ವಾಕ್ ಪ್ರಾಣ ಮನಸ್ಸು -ಇವು ಆತ್ಮನ ಅನ್ನ.(ಪುಟ71)

4) ಹಾಲು -ಪಶುಗಳ ಅನ್ನ.

 

2) ಜಗತ್ತು ಏಳುವಿಧವಾಗಿ ಕಾಯ೯-ಕಾರಣ ಭಾವದಿಂದ  ವಿಂಗಡಿಸಲ್ಪಟ್ಟಿದೆ.(ಪುಟ 71)

 

3) ಮನುಷ್ಯನೇ ಅವುಗಳ (ಅನ್ನಗಳ) ಅಕ್ಷಯಕ್ಕೆ ಕಾರಣನು. ಏಕೆಂದರೆ ಅವನು ಅನ್ನವನ್ನು ಉಪಾಸನೆಯಿಂದಲೂ ,ಕಮ೯ದಿಂದಲೂ ಸೃಷ್ಟಿಸುತ್ತಾನೆ(ಪುಟ 74)

 

4) ಮನುಷ್ಯನು ಅನ್ನವನ್ನು ಪ್ರತೀಕವಾಗಿ(ಪ್ರಧಾನವಾಗಿ) ತಿನ್ನುತ್ತಾನೆ.

 

5)ಅನ್ನವು ಎಲ್ಲರಿಗೂ ಸೇರಿರುವುದರಿಂದ ತಾನುಬ್ಬನೇ ತಿನ್ನಕುಡದು.(ಮೋಘಮನ್ನಂ ವಿದತೇ.ಋಗ್ವೇದ 10,2,6)

 

6)ಮನಸ್ಸಿನಿಂದಲೇ ಎಲ್ಲರೂ ನೋಡುತ್ತಾರೆ ಮತ್ತು ಕೇಳುತ್ತಾರೆ.(ಪುಟ 76)

 

7) ಕಾಮ,ಸಂಕಲ್ಪ,ಸಂದೇಹ,ಶ್ರದ್ಧೆ,ಅಶ್ರದ್ಧೆ,ಧೃತಿ,ಅಧೃತಿ,ಲಜ್ಜೆ,ಬುದ್ಧಿ, ಭಯ-ಇವೆಲ್ಲವೂ ಮನಸ್ಸೇ.(ಪುಟ 76)

 

8)ಯವ ವಿಧವಾದ ಶಬ್ದವೇ  ಆಗಲಿ ಅದು ವಾಕ್ಕೇ.ಏಕೆಂದರೆ ಅದುಅಂತವನ್ನು ಮುಟ್ಟುತ್ತದೆ.ಅದು ತನ್ನನ್ನು ಪ್ರಕಾಶಿಸಿಕೊಳ್ಳುವುದಿಲ್ಲ.(ಪುಟ 76)

 

)ಪ್ರಾಣ,ಅಪಾನ,ವ್ಯಾನ,ಉದಾನ, ಸಮಾನ,ಅನಿವೆಲ್ಲವು ಪ್ರಾಣವೇ.(ಪುಟ 76)

 

10)ಆತ್ಮನು ಇವೆಲ್ಲವೂ ಆಗಿದ್ದಾನೆ.ವಾಗ್ಮಯನು,ಮನೋಮಯನು, ಪ್ರಾಣಮಯನು.(ಪುಟ 76)

 

11)ಮುಂದೆ ಬರುವುದರಿಂದ(ಮೂಗು ಬಾಯಿ)(ಪ್ರಣಯನಾತ್) ಪ್ರಾಣ ಎಂದೆನಿಸಿದೆ.(ಪುಟ 77)

 

12)ಇವೇ ಮೂರು ಲೋಕಗಳು.

ವಾಕ್ಕು - ಲೋಕ

ಮನಸ್ಸು-ಅಂತರಿಕ್ಷಲೋಕ

ಪ್ರಾಣವು -ದ್ಯುಲೋಕ(ಸ್ವಗ೯)(ಪುಟ 78)

 

13)ವಾಕ್ಕು-ಋಗ್ವೇದ

ಮನಸ್ಸು-ಯಜುವೇ೯ದ,ಪರಾಣವು ಸಾಮವೇದ.(ಪುಟ 78)

 

14)ವಾಕ್ಕು-ದೇವತೆಗಳು

ಮನಸ್ಸು -ಪಿತೃಗಳು

ಪ್ರಾಣವು-ಮನುಷ್ಯರು.(ಪುಟ 78)

 

15)ಮನಸ್ಸು-ತಂದೆ

ವಾಕ್ಕು-ತಾಯಿ

ಪ್ರಾಣವು-ಸಂತತಿ(ಪುಟ 7)

 

16)ಇವೇ ಅರಿಯಲ್ಪಟ್ಟಿದ್ದು,ಅರಿಯಲ್ಪಡಬೇಕಾದುದು, ಮತ್ತು ಅರಿಯಲ್ಪಡದಿರುವುದು.

ಯಾವುದು ಅರಿಯಲ್ಪಟ್ಟಿದೆಯೊ-ಅದು ವಾಕ್ಕಿನ ರೂಪ.ಏಕೆಂದರೆ ಅದು ಜ್ಞಾತೃವಾಗಿದೆ.ವಾಕ್ಕು ಇದನ್ನು ಅರಿತಿರುವವರನ್ನು ಅದೇ ಆಗಿ ಕಾಪಾಡುತ್ತದೆ.(ಪುಟ 78)

 

17)ಯಾವು ಯಾವುದು ಅರಿಯಲ್ಪಡಬೇಕಾದುದೊ ಅದು ಮನಸ್ಸಿನ ರೂಪ.ಏಕೆಂದರೆ ಮನಸ್ಸು ಅರಿಯಲ್ಪಡಬೇಕಾಗಿರುವುದು..ಮನಸ್ಸು ಇದನ್ನು ಅರಿತಿರುವವರನ್ನು ಅದೇ ಆಗಿ ಕಾಪಾzಡುತ್ತದೆ.(7)

 

18) ಯಾವು ಯಾವುದು ಅರಿಯಲ್ಪಡದಿರುವುದೊ ಅದು  ಪ್ರಾಣದ ರೂಪ.ಏಕೆಂದರೆ ಅದು ಅರಿಯಲ್ಪಡದಿರುವುದು.ಪ್ರಾಣವು ಇದನ್ನು ಅರಿತಿರುವವರನ್ನು ಅದೇ ಆಗಿ ಕಾಪಾಡುತ್ತದೆ.(ಪುಟ 80)

 

1)ವಾಕ್ಕು-ಪೃಥ್ವಿಯ ಶರೀರ

ಅಗ್ನಿಯು -ಜ್ಯೋತಿಯ ರೂಪ

ಮನಸ್ಸಿಗೆ -ದ್ಯುಲೋಕವು ಶರೀರ

ಪ್ರಾಣಕ್ಕೆ -ನೀರು ಶರೀರ(ಪುಟ 82)

 

20) ಕಾಲರೂಪನಾಗ ಪ್ರಜಾಪತಿಯು(ಹಿರಣ್ಯಗಭ೯ನು) ಹದಿನಾರು ಕಲೆಗಳುಳ್ಳವನು. ಅವನಿಗೆ ರತ್ರಿಗಳೇ ಹದಿನೈದು ಕಲೆಗಳು.ಹದಿನಾರನೆಯ ಕಲೆಯು ನಿತ್ಯವಾಗಿಯೇ ಇದೆ.ಅವನು ರಾತ್ರಿಗಳಿಂದಲೇ ವೃದ್ಧಿಯಾಗುತ್ತಾನೆ ಮತ್ತು ಕ್ಷೀಣನಾಗುತ್ತಾನೆ.

ಅವನು ಅಮಾವಾಸೆಯ ರಾತ್ರಿ ಹದಿನರನೆಯ ಕಲೆಯಿಂದ ಎಲ್ಲಾ ಪ್ರಾಣಿ ಸಮೂಹವನ್ನು  ಪ್ರವೇಶಿಸಿ ಮರುದಿನ ಬೆಳಿಗ್ಗೆ ಹುಟ್ಟುತ್ತಾನೆ.ಆದುದರಿಂದ ಸೋಮದೇವತೆಯ ಗೌರವಕ್ಕಾಗಿ  ರಾತ್ರಿಯಲ್ಲಿ  ಪ್ರಾಣಿಯ ಪ್ರಾಣವನ್ನು ತೆಗೆಯ ಕೂಡದು.(ಪುಟ 83)

 

21)ಕಾಲರೂಪನೂ ,ಹದಿನಾರು ಕಲೆಗಳುಳ್ಳವನೂ  ಆದ ಪ್ರಜಾಪತಿಯೇ ಹೀಗೆ ಅರಿತುಕ್ಪಂಡಿರುವ ಪುರುಷನು.ಅವನಿಗೆ ಸಂಪತ್ತೇ ಹದಿನೈದು ಕಲೆಗಳು.ಆತ್ಮನೇ ಇವನ ಹದಿನಾರನೆಯ ಕಲೆ.(ಪುಟ 85)

 

22)ಮನುಷ್ಯಲೋಕ,ಪಿತೃಲೋಕ,ದೇವಲೋಕ ಎಂದು ಮೂರು ಲೋಕಗಳು.

ಮನುಷ್ಯ ಲೋಕವು ಪುತ್ರನಿಂದ

ಪಿತೃಲೋಕವು ಕಮ೯ದಿಂದ

 ದೇವಲೋಕವು ಉಪಾಸನೆಯಿಂದ ಜಯಿಸಿಕೊಳ್ಳಬೇಕು.(ಪುಟ 86)

 

23)ತಂದೆಯು ಯಾವ ಪ್ರಕಾರದಿಂದ  ಮಗನಿಗೆ ಕತ೯ವ್ಯಭಾರವನ್ನು ವಹಿಸಿಕೊಟ್ಟಿರುತ್ತಾನೆಯೊ  ಕಮ೯ ವಿಶೇಷಕ್ಕೆ 'ಸಂಪತ್ತಿ' ಎಂದು ಹೆಸರು.(ಪುಟ 88)

 

24)ತಂದೆಯು ಸಾಯುತ್ತೇನೆಂದು ಅರಿತುಕೊಂಡಾಗ  ತನ್ನ ಪುತ್ರನಿಗೆ ಹೇಳುತ್ತಾನೆ;'ನೀನು ಬ್ರಹ್ಮ,ನೀನು ಯಜ್ಞ,ನೀನು ಲೋಕ'.ಪುತ್ರನು ಉತ್ತರಿಸುತಾನೆ.'ನಾನು ಬ್ರಹ್ಮ,ನಾನು ಯಜ್ಞ,ನಾನು ಲೋಕ'.

ಯಾವು ಯಾವುದು ಓದಲ್ಪಟ್ಟಿದೆಯೋ  ಅದೆಲ್ಲವೂ ಬ್ರಹ್ಮ ಪದದಲ್ಲಿ ಒಂದಾಗಿದೆ.ಎಲ್ಲಾ ಯಜ್ಞಗಳೂ ಯಜ್ಞ ಪದದಲಿ ಒಂದಾಗಿದೆ.ಯಾವ ಯಾವ ಲೋಕಗಳಿವೆಯೊ   ಅವೆಲ್ಲವೂ ಲೋಕ ಪದದಲ್ಲಿ ಒಂದಾಗಿವೆ. ಪುತ್ರನು ಇದೆಲ್ಲವೂ ಆಗಿ ನನ್ನನ್ನು ಇಹಲೋಕದಿಂದ ಕಾಪಾಡುವನು.' ಅದುದರಿಂದ ಅನುಶಿಷ್ಟನಾದ ಪುತ್ರನನ್ನು ಲೋಕಪ್ರಾಪ್ತಿಗೆ ಉಪಾಯನು ಎನ್ನುವರು.(ಪುಟ 88)

 

25) ತಂದೆಯು ಪುತ್ರನಿಂದಲೇ ಲೋಕದಲ್ಲಿ  ಪ್ರತಿಷ್ಠಿತನಾಗಿರುತ್ತಾನೆ.ದೈವವೂ ಅಮೃತವೂ ಆದ ವಾಕ್ ಮನ ಪ್ರಾಣಗಳು ಇವನನ್ನು ಪ್ರವೇಶಿಸುತ್ತವೆ.(ಪುಟ 88)

 

26)ತಂದೆಯು ಮಾಡದೆ ಇದ್ದ ಕತ೯ವ್ಯವನ್ನು ಪೂಣ೯ಗೊಳಿಸಿ ಲೋಕಪ್ರಾಪ್ತಿಗೆ ಇದ್ದ ಅಡ್ಡಿಯಿಂದ  ತಂದೆಯನ್ನು ಬಿಡಿಸುತ್ತಾನೆ.(ಪುಟ 88)

 

27)ಪೃಥ್ವಿ ಅಗ್ನಿ ಇವುಗಳಿಂದ ಬಂದ ದೈವೀ ವಾಕ್ಕು  ಇವನನ್ನು ಪ್ರವೇಶಿಸುತ್ತದೆ.ಯಾವುದರಿಂದ ಇವನು ಹೇಳಿದ್ದೆಲ್ಲ ಆಗುವುದೊ  ಅದೇ ದೈವೀ ವಾಕ್ಕು.(ಪುಟ8)

 

28)ಯಾವುದರಿಂದ  ಆನಂದಿಯೇ ಆಗುತ್ತಾನೆಯೋ  ಮತ್ತು ಶೋಕಿಸುವುದಿಲ್ಲವೋ  ಅದೇ ದೈವೀ ಮನಸ್ಸು.(ಪುಟ 8)

 

2)ನೀರಿನಿಂದಲೂ  ಮತ್ತು ಚಂದ್ರನಿಂದಲೂ  ಬಂದ ದೈವ ಪ್ರಾಣನು  ಇವನನ್ನು ಪ್ರವೇಶಿಸುತ್ತಾನೆ.(ಪುಟ 1)

 

30)ಪರಿಚ್ಛಿನ್ನ ಬುದ್ಧಿಯಿಂದ  ಶೋಕವುಂಟಾಗುತ್ತದೆ. ಆದರೆ ಸವಾ೯ತ್ಮನಾದವನು ಯಾವುದನ್ನೂ ಸೇರದಿರುವುದರಿಂದಲೂ  ಬಿಡದಿರುವುದರಿಂದಲೋ ಶೋಕಿಸುವುದಿಲ್ಲ (ಪುಟ 1)

.

31) ದೇವತಾ ವಿಷಯಕ ದಶ೯ನ:ವಾಯುವು ಅಸ್ತಮಿಸದ ದೇವತೆ.ಇತರ ದೆವತೆಗಳು ಅಸ್ತಮಿಸುತ್ತವೆ.(ಪುಟ 4)

 

32)ಸೂಯ೯ನು ಪ್ರಾಣನಿಂದಲೇ ಉದಯಿಸುತ್ತಾನೆ.ಪ್ರಾಣನಲ್ಲಿಯೇ ಅಸ್ತಮಿಸುತ್ತಾನೆ.

 

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

 

ಆರನೆಯ ಬ್ರಾಹ್ಮಣ:

1) ಜಗತ್ತೆಲ್ಲವೂ ನಾಮ ರೂಪ ಕಮ೯ಗಳೆಂಬ ಮೂರೇ ಆಗಿದೆ. ನಾಮಗಳಿಗೆ ವಾಕ್ಕೇ ಕಾರಣವು.ಏಕೆಂದರೆ ಎಲ್ಲ ನಾಮಗಳು ಅದರಿಂದ ಉತ್ಪನ್ನವಾಗಿವೆ.ಇದು ಇವುಗಳ ಸಾಮವು.ಏಕೆಂದರೆ ಇದು ಎಲ್ಲಾ ನಾಮಗಳಿಗೂ  ಸಾಮಾನ್ಯವಾಗಿದೆ.ಇದು ಇವುಗಳ ಬ್ರಹ್ಮ. ಏಕೆಂದರೆ ಇದು ಎಲ್ಲ ಹೆಸರುಗಳನ್ನು ಧರಿಸಿದೆ.(ಪುಟ 7)

 

2) ರೂಪಗಳಿಗೆ ಚಕ್ಷುಸ್ಸು ಕಾರಣವು.ಏಕೆಂದರೆ ಎಲ್ಲಾ ರೂಪಗಳೂ ಅದರಿಂದ ಉತ್ಪನ್ನವಾಗಿವೆ.ಇದು ಇವುಗಳ ಸಾಮವು.ಏಕೆಂದರೆ ಇದು ಎಲ್ಲಾ ರೂಪಗಳಿಗೂ ಸಾಮಾನ್ಯವಗಿದೆ.(ಪುಟ 8)

 

3) ಕಮ೯ಗಳಿಗೆ ಶರೀರವು ಕಾರಣವು. ಏಕೆಂದರೆ ಎಲ್ಲಾ ಕಮ೯ಗಳೂ ಅದರಿಂದ ಉತ್ಪನ್ನವಾಗಿವೆ.ಇದು ಇವು¸ಗಳ ಸಾಮವು.ಏಕೆಂದರೆ ಇದು ಎಲ್ಲಾ ಕಮ೯ಗಳಿಗೂ ಸಾಮಾನ್ಯವಾಗಿದೆ.

,,,,,,,,,,,,,,,,,,,,,,,,,,,,,,,,,,,,,,,,,,,, ಮೊದಲನೆಯ ಅಧ್ಯಾಯ ಸಂಪೂಣ೯ವಾಯಿತು,,,,,,,,,,,,,,,,,,,,

 

ಎರಡನೆಯ ಅಧ್ಯಾಯ

 

ಮೊದಲನೆಯ ಬ್ರಾಹ್ಮಣ:

 

1)ಮುಮುಕ್ಷುಗಳು ಬ್ರಹ್ಮವಿದ್ಯಾ ವಿಷಯವನ್ನು  ಸುಲಭವಾಗಿ ಅರಿತುಕೊಳ್ಳಲು  ಗಾಗ್ಯ೯-ಅಜಾತಶತೃವಿನ ಸಂವಾದ  ರೂಪದಲ್ಲಿದೆ.ಗಗ೯ ಗೋತ್ರಕ್ಕೆ ಸೇರಿದವನಾದ್ದರಿಂ ಗಾಗ್ಯ೯.ಇವನ ಹೆಸರು ದೃಪ್ತಬಾಲಾಕಿ.ಅಜಾತ ಶತ್ರುವು ಕಾಶೀ ರಾಜನಾಗಿದ್ದನು.(ಪುಟ 101)

 

2)ಹಿಂದಿನ ಅಧ್ಯಾಯದಲ್ಲಿ ಅವಿದ್ಯಾ ವಿಷಯವಾದ ಪ್ರಾಣವು 'ಭಿನ್ನ ಭಿನ್ನ ಆಧಾರಗಳಲ್ಲಿ ಅನೇಕ ವಿಧವಾಗಿ ವ್ಯಾಪಿಸಿಕೊಂಡು,ವಿರಾಟ್,ವೈಶ್ವಾನರ, ಪ್ರಜಾಪತಿ, ಹಿರಣ್ಯಗಭ೯,ಮೊದಲಾದ ಹೆಸರುಗಳಿಂದ ಕರೆಯಿಸಿಕೊಂಡು.ಏಕವೂ ಅನೇಕವೂ ಆಗಿದೆ ಎಂದು ಹೇಳಿದ್ದಾಯಿತು(ಪುಟ 100)  

 

3) ಬ್ರಹ್ಮ ಜ್ಞಾನಕ್ಕೆ ಪರಮ ಶ್ರದ್ಧೆಯು ಅವಶ್ಯಕ(ಪುಟ 101)

 

4) ಗಾಗ್ಯ೯ನು ಅಜಾತ ಶತೃವಿನ ಬಳಿಗೆ ಹೋಗಿ 'ನಾನು ನಿನಗೆ ಬ್ರಹ್ಮೋಪದೇಶವನ್ನು ಮಾಡುತ್ತೇನೆ ' ಎಂದು ಹೇಳಿದನು.(ಪುಟ 100)

 

5) ದೃಪ್ತ ಎಂದರೆ ಗವಿ೯ತ,ಬಾಲಾಕಿ ಎಂದರೆ ಬಲಾಕಾ ಎಂಬುವಳ ಮಗನು.ಇವನು ಬ್ರಹ್ಮವನ್ನು ಸರಿಯಾಗಿ ತಿಳಿಯದೆ ಇದ್ದುದರಿಂದ ಗವಿ೯ತನಾಗಿದ್ದನು.ಆದುದರಿಂದ ಅವನಿಗೆ ದೃಪ್ತಬಾಲಾಕಿ ಎಂದು ಹೆಸರು ಇದ್ದಿತು.(ಪುಟ 101)

 

6) ಜನರು ಜನನಕನ ದಾನ,ಶ್ರವಣೇಚ್ಛೆ ಮೊದಲಾದವನ್ನು ಕೇಲಿ ಅವನಿರುವಲ್ಲಿಗೆ ಬರುತ್ತಾರೆ.

ನನ್ನಲ್ಲಿಯೂ ಜನಕನ ಗುಣಗಳಿವೆ ಮತ್ತು ಅವುಗಳ  ಪ್ರದಶ೯ನಕ್ಕೆ  ಒಂದು ಅವಕಾಶವನ್ನು

ಕಲ್ಪಿಸಿರುತ್ತೀಯೆ.ಆದುದರಿಂದ ಬ್ರಹ್ಮ ವಿಷಯವನ್ನು ಕೇಳುವ ಮೊದಲೇ ಗೋ ಸಹಸ್ರವನ್ನು ಕೊಡುತ್ತೇನೆ ಎಂಬುದು ಅಜಾತ ಶತೃವಿನ ಅಭಿಪ್ರಾಯ.

 

7) ಗಾಗಿ೯ಯು ಸೋಪಾಧಿಕ ಬ್ರಹ್ಮವನ್ನು ಮಾತ್ರ ತಿಳಿದಿದ್ದನು .ಅವನಿಗೆ ನಿರುಪಾಧಿಕ ಬ್ರಹ್ಮವು ತಿಳಿದಿರಲಿಲ್ಲ.ಆದ್ದರಿಂದ ಅವನು 1)ಸೂಯ೯ 2) ಚಂದ್ರ 3) 3) ವಿದ್ಯುತ್ 4) ಆಕಾಶ 5) ವಾಯು 6)ಅಗ್ನಿ

7)ನೀರು 8) ಕನ್ನಡಿಯಲ್ಲಿರು ಪುರುಷ ) ದಿಕ್ಕುಗಳು.

 

1) ಗಾಗ್ಯ೯:ಆದಿತ್ಯನಲ್ಲಿರುವ ಪುರುಷನನ್ನೇ ಬ್ರಹ್ಮವೆಂದು ನಾನು ಉಪಸಿಸುತ್ತೇನೆ.  

 

ಅಜಾತ ಶತ್ರು: ವಿಷಯದಲ್ಲಿ ಹೀಗೆ ಮಾತನಾಡಬೇಡ.ಅತಿಷ್ಠನೆಂದೂ  ಸವ೯ಪ್ರಾಣಿಗಳಿಗೆ ಶಿರಃಪ್ರಾಯನೆಂದೂ  ದೀಪ್ತಿವಂತನೆಂದು  ಇವನನ್ನೇ ನಾನು ಉಪಾಸಿಸುತ್ತೇನೆ. 

 

ಯಾವನು ಇವನನ್ನು ಹೀಗೆ ಉಪಾಸಿಸು ತ್ತಾನೆಯೋ  ಅವನು ಅತಿಷ್ಠನೂ ಸವ೯ಪ್ರಾಣಿಗಳಿಗೆ  ಶಿರಃಪ್ರಾಯನೂ ದೀಪ್ತಿವಂತನೂ ಆಗುವನು.

ಸವ೯ ಪ್ರಾಣಿಗಳನ್ನೂ ಮೀರಿರುವುದರಿಂದ ಅತಿಷ್ಠನು.(ಅತೀತ ಭೂತಾನಿ  ತಿಷ್ಠತೀತಿ ಅತಿಷ್ಠಾ)(ಪುಟ 102)

 

2)ಇದೇ ರೀತಿಯಲ್ಲಿ ಚಂದ್ರನಲ್ಲಿರುವ ಪುರುಷ,ಆಕಾಶದಲ್ಲಿರುವ ಪುರುಷ, ವಾಯುವಿನಲ್ಲಿರುವ ಪುರುಷ,

ಅಗ್ನಿಯಲ್ಲಿರುವ ಪುರುಷ,ನೀರಿನಲ್ಲಿರುವ ಪುರುಷ, ಕನ್ನಡಿಯಲ್ಲಿರುವ ಪುರುಷ,ದಿಕ್ಕುಗಳಲ್ಲಿರುವ ಪುರುಷ, ಕತ್ತಲೆಯಲ್ಲಿರುವ ಪುರುಷ, ಹಿರಣ್ಯಗಭ೯ನಲ್ಲಿರುವ ಪುರುಷ ಇವರುಗಳನ್ನು ಬ್ರಹ್ಮವೆಂದು ಉಪಾಸಿಸುತ್ತೇನೆಂದು ಹೇಳಿದನು.ಪುಟ 110)

 

3) ಗಾಗ್ಯ೯ನಿಗೆ ಅವಿದ್ಯಾ ವಿಷಯಕವಾದ  ಸೋಪಾಧಿಕ ಬ್ರಹ್ಮವು ತಿಳಿದಿತ್ತೇ ಹೊರತು ನಿರುಪಾಧಿಕ ಬ್ರಹ್ಮವು ತಿಳಿದಿರಲಿಲ್ಲ. 'ಇಷ್ಟನ್ನು ಅರಿತಿದ್ದರಿಂದ  ನೀನು ಬ್ರಹ್ಮವನ್ನು ಅರಿತಂತಾಗಲಿಲ್ಲ'ಎಂದು ಅಜಾತಶತ್ರುವು  ಗಾಗ್ಯ೯ನಿಗೆ ಹೇಳಿದನು.(ಪುಟ 111)

 

4) ಶಿಷ್ಯನಾಗದವನಿಗೆ  ಉಪದೇಶವನ್ನು ಮಾಡಕೂಡದೆಂಬುದು ಆಚಾರ ವಿಧಿಯು.

ಗಾಗ್ಯ೯ನು ಶಿಷ್ಯನಾಗಿ ಅಜಾತಶತ್ರುವನ್ನು ಬಳಿಸಾರಿದನು.(ಪುಟ 111)

 

5) ಬ್ರಾಹ್ಮಣನು ಕ್ಷತ್ರಿಯನ ಬಳಿಗೆ  ಶಿಷ್ಯನಾಗಿ  ಬ್ರಹ್ಮಜ್ಞಾನಕ್ಕಾಗಿ ಬರುವುದು ಪ್ರತಿಲೋಮ.ಆದರೂ ನಿನಗೆ ಉಪದೇಶಿಸುತ್ತೇನೆ ಎಂದು ಅಜಾತ ಶತ್ರುವು ಹೇಳಿದನು.(112)

 

6)ವಿಜ್ಞಾನವೆಂದರೆ ಅಂತಃಕರಣ  ಅಥವಾ ಬುದ್ದಿ.ಯಾವನು ಬುದ್ಧಿಯಲ್ಲಿ  ಮತ್ತು ಬುದ್ಧಿಯ ದ್ವಾರಾ ಅರಿಯಲ್ಪಡುವನೊ ಮತ್ತು ಬುದ್ಧಿಯಿಂದ ಅರಿಯುವನೊ ಇವನು ವಿಜ್ಞಾನಮಯನು ಎಂದಥ೯.ಇಲ್ಲಿ ಮಯಟ್ ಪ್ರತ್ಯಯಕ್ಕೆ ಅವಯವ, ಉಪಮಾನ ಎಂಬ ಅಥ೯ಗಳು ಹೊಳೆಯುವುದಿಲ್ಲ.'ಪೂಣ೯' ಎಂಬಥ೯ದಲ್ಲಿಯೇ  ತೆಗೆದುಕೊಳ್ಳಬೇಕು.(ಪುಟ 113)

 

7) ಆತ್ಮನ ಸವಾ೯ತೀತತ್ವವನ್ನು  ಅಜಾತ ಶತ್ರುವು ಉಪದೇಶಿಸುತ್ತಾನೆ.(ಪುಟ 113)

 

8)ಯಾವಾಗ ಪುರುಷನು ಇಂದ್ರಿಯ ಸಮೂಹವನ್ನು ಹಿಂದಕ್ಕೆ ಎಳೆದುಕೊಳ್ಳುತ್ತಾನೆಯೋ ಆಗ ಅವನಿಗೆ 'ಸ್ವಪಿತಿ' ಎಂಬ ಹೆಸರುಂಟಾಗುತ್ತದೆ.ಆಗ ಘ್ರಾಣೇಂದ್ರಿಯ,ಎಲೆಯಲ್ಪಟ್ಟಿರುತ್ತದೆ.ವಾಕ್ಕು,ಚಕ್ಷುಸ್ಸು, ಶ್ರೋತ್ರವು  ಎಳೆಯಲ್ಪಟ್ಟಿರುತ್ತದೆ.ಮನಸ್ಸು ಎಳೆಯಲ್ಪಟ್ಟಿರುತ್ತದೆ.(ಸ್ವಮೇವ  ಆತ್ಮಾನಂ ಅಪೀತಿ ಅಪಿಗಚ್ಛತಿ ಇತಿ ಸ್ವಪಿತಿ ಇತ್ಯುಚ್ಯತೇ.)(ಪುಟ (ಪುಟ 114)

 

) ವಿಜ್ಞಾನಮಯನು  ಇಂದ್ರಿಯಗಳನ್ನು ಕರೆದುಕೊಂಡು  ತನ್ನ ಶರೀರದಲ್ಲಿ ಸ್ವೇಚ್ಛೆಯಾಗಿ ಸುತುತ್ತಾನೆ.(ಪುಟ 115)

 

 

10)ಹೇಗೆ ಬಾಲಕನು ಅಥವಾ ಮಹಾರಾಜನು ಅಥವಾ ಮಹಾ ಬ್ರಾಹ್ಮಣನು  ಆನಂದದ ಪರಾಕಾಷ್ಠೆಯನ್ನು ಹೊಂದಿ ಇರುವನೊ ಹಾಗೆಯೇ ಇವನು ಮಲಗಿರುತ್ತಾನೆ.(ಪುಟ 116)

 

11) ಹೃದಯವು ಬುದ್ಧಿಯ ಸ್ಥಾನ.(ಪುಟ 117)(ಪುಟ 117)

 

12) ಆತ್ಮನು ತನಗಿಂತ ಬೇರೆಯಾದ ಮತ್ತೊಂದು ವಸ್ತುವಿನಲ್ಲಿ ಇರಲಿಲ್ಲ.ತನಗಿಂತ ಬೇರೆಯಾದ ಮತ್ತೊಂದು ಸ್ಥಾನದಿಂದ ಬರಲಿಲ್ಲ. ಅವನು ತನ್ನಲ್ಲಿಯೇ ಇದ್ದನು.ತನ್ನ ಆತ್ಮನಲ್ಲಿಯೇ ಲಯವಾಗುತ್ತಾನೆ.ಸ್ವಮಪೀತೋಭವತಿ(ಛಾ..6.8,1)ಎಂದು ಶ್ರುತಿಯಲ್ಲಿ ಹೇಳಿದೆ.(ಪುಟ 117)

 

13) ಹೇಗೆ ಜೇಡರಹುಳುವು ತಾನು ಉತ್ಪಾದಿಸಿದ ತಂತುವಿನ ಮೂಲಕ ಹೋಗುತ್ತದೆಯೊ,ಹೇಗೆ ಅಗ್ನಿಯ ಸಣ್ಣ ಕಿಡಿಗಳು ಹಾರುತ್ತವೆಯೊ ಹಾಗೆಯೇ ಆತ್ಮನಿಂದಲೇ ಎಲ್ಲ ಪ್ರಾಣಗಳೂ,ಎಲ್ಲ ಲೋಕಗಳೂ ,ಎಲ್ಲ ದೇವತೆಗಳೂ,ಎಲ್ಲ ಪ್ರಾಣಿಗಳೂ ಬರುತ್ತವೆ.'ಸತ್ಯದ ಸತ್ಯವು' ಎಂಬುದು ಅವನ ರಹಸ್ಯನಾಮವು.ಪ್ರಾಣಗಳೇ ಸತ್ಯವು.ಇವನು ಅವುಗಳ ಸತ್ಯವು.(ಪುಟ 118)

 

14) ಯಾವುದು ಬ್ರಹ್ಮದ ಸಮೀಪಕ್ಕೆ ಒಯ್ಯುವುದೊ ಅದು ಉಪನಿಷತ್ತು. ಶಬ್ದವು ಬ್ರಹ್ಮವನ್ನು ಸೂಚಿಸುತ್ತದೆ.(ಪುಟ 118)

 

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

.................................

ಎರಡನೆಯ ಬ್ರಾಹ್ಮಣ: 

1)ಪ್ರಾಣಗಳೇ ಸತ್ಯವು.ಅವನು(ಬ್ರಹ್ಮವು) ಅವುಗಳ ಸತ್ಯ.(ಪುಟ 11)

 

2)ಕಣ್ಣುಗಳು,ಕಿವಿಗಳು, ಮೂಗಿನ ಹೊಳ್ಳೆಗಳು ಮತ್ತು ಬಾಯಿ ಇವು ಮನುಷ್ಯನ ಜೊತೆಯಲ್ಲಿಯೇ ಹುಟ್ಟಿರುವುದರಿಂದ  ಜ್ಞಾತಿಗಳೆಂದು ಹೇಳಿದೆ. ಇಂದ್ರಿಯ ದ್ವಾರಗಳು ನಮ್ಮನ್ನು ಆತ್ಮದೃಷ್ಟಿಯಿಂದ   ವಿಷಯಗಳ ಕಡೆ ತಿರುಗಿಸುವುದರಿಂದ ದ್ವೇಷಿಸುವ ಜ್ಞಾತಿಗಳೆಂದು ಹೇಳಿದೆ.(ಪುಟ 11)

 

3) ಇಂದ್ರಿಯಗಳೇ  ಏಳು ಋಷಿಗಳು.

ಎರಡು ಕಿವಿಗಳು ಗೌತಮ ಮತ್ತು ಭರದ್ವಾಜ.ಎರಡು ಕಣ್ಣುಗಳೇ ಜಮದಗ್ನಿ ಮತ್ತು ವಿಶ್ವಾಮಿತ್ರ. ಎರಡು ಮೂಗಿನ ಸೊಳ್ಳೆಗಳೇ ವಸಿಷ್ಠ ಮತ್ತು ಕಶ್ಯಪ.ವಾಕ್ಕೇ ಅತ್ತಿ.ಏಕೆಂದರೆ ವಾಕ್ಕಿನಿಂದಲೇ ಅನ್ನವು ತಿನ್ನಲ್ಪಡುತ್ತದೆ.'ಅತ್ರಿ'ಎಂಬುವುದು 'ಅತಿ'್ತ ಎಂಬುದರ ಹೆಸರೇ.ಯಾವನು ಹೀಗೆ ಅರಿತುಕೊಳ್ಳುವನೊ  ಅವನು ಎಲ್ಲ ಅನ್ನವನ್ನು ತಿನ್ನುವವನಾಗುವನು  ಮತ್ತು ಎಲ್ಲವೂ ಅವನ ಅನ್ನವಾಗುತ್ತದೆ.(ಪುಟ 124)

 

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

 

ಮೂರನೆಯ ಬ್ರಾಹ್ಮಣ:

1)ಬ್ರಹ್ಮಕ್ಕೆ ಎರಡು ರೂಪಗಳಿವೆ.

1) ಮೂತ೯ ಅಮೂತ೯   

2)ಮತ್ಯ೯ ಮತ್ತು ಅಮೃತ

3) ಪರಿಚ್ಛಿನ್ನ ಮತ್ತು ಅಪರಿಚ್ಛಿನ್ನ

4) ಸತ್ ಮತ್ತುತ್ಯತ್ (ಪುಟ 125)

 

ಇತರ ವಿಶೇಷ್ಯಗಳಿಂದ  ಬೇಪ೯ಡಿಸುವ  ಲಕ್ಷಣಗಳಿಂದ ಕೂಡಿರುವುದು ಸತ್.ಇದಕ್ಕೆ ವಿರುದ್ಧವಾಗಿ  ಪರೋಕ್ಷವಾಗಿ ಹೇಳುವುದಕ್ಕೆ  ಯೋಗ್ಯವಾದುದು ತ್ಯತ್.

 

2) ನೀರು ಅಗ್ನಿ ಪೃಥ್ವಿ-ಮೂತ೯ ಸ್ವರೂಪ,ಮತ್ಯ೯,ಪರಿಚ್ಛಿನ್ನ,ಸತ್

ವಾಯು ಆಕಾಶ-ಇವು  ಅಮೂತ೯ ಸ್ವರೂಪ,ಅಮೃತ.ಅಪರಿಚ್ಛಿನ್ನ

ಮೂತ೯ದ,ಮತ್ಯ೯ದ,ಪರಿಚ್ಛಿನ್ನದ ಮತ್ತು ಸತ್ತಿನ ರಸವು ಸೂಯ೯ನು.ಏಕೆಂದರೆ ಇವನು ಭೂತತ್ರಯದ ರಸವು.(ಪುಟ 126)

 

3)ಅಮೂತ೯ವು- ವಾಯು ಮತ್ತು ಅಂತರಿಕ್ಷ(ಆಕಾಶ)ಇದು ಅಮೃತವು,ಅಪರಿಚ್ಛಿನ್ನವು,ಇದು ತ್ಯತ್. ಅಮೂತ೯ದ ,ಅಮೃತದ,ಅಪರಿಚ್ಛಿನ್ನದ ಮತ್ತು ತತ್ತಿನ ರಸವು ಸೂಯ೯ಮಂಡಲದಲ್ಲಿರುವ ಪುರುಷನು.ಏಕೆಂದರೆ ಇವನು ವಾಯು ಆಕಾಶಗಳ ರಸವು.ಇದು ಅಧಿದೈವತ.'ತ್ಯತ್' ಎಂದರೆ ಪರೋಕ್ಷ ಶಬ್ದಕ್ಕೆ ವಾಚ್ಯವಾದುದು.ಅಧಿದೈವತ ಎಂದರೆ  ದೇವತೆಗಳಿಗೆ ಸಂಬಂಧಿಸಿದುದು.(ಪುಟ 127).  

 

4)ಯಾವುದು ವಾಯುವಿಗಿಂತ ಮತ್ತು ಆಕಾಶಕ್ಕಿಂತ ಬೇರೆಯಾದುದೋ ಅದೇ ಮೂತ೯ವು.ಇದು ಮತ್ಯ೯ವು ,ಪರಿಚ್ಛಿನ್ನವು.ಇದು ಸತ್. ಮೂತ೯ದ,ಮತ್ಯ೯ದ,ಪರಿಚ್ಛಿನ್ನದ, ಮತ್ತು ಸತ್ತಿನ ರಸವು ಚಕ್ಷುಸ್ಸು.ಏಕೆಂದರೆ ಇದು ಭೂತತ್ರಯದ ರಸವು.(ಪುಟ 128)

 

5)ಈಗ ಅಮೂತ೯ವು.ವಾಯು ಮತ್ತು ಶರೀರದಲ್ಲಿರುವ ಆಕಾಶ.ಇದು ಅಮೃತವು. ಇದು ಇದು ಅಪರಿಚ್ಛಿನ್ನವು,ಇದು ಸತ್. ಅಮೂತ೯ದ ,ಅಮೃತದ,ಅಪರಿಚ್ಛಿನ್ನದ ಮತ್ತು ತ್ಯತ್ತಿನ ರಸವು ಬಲಗಣ್ಣಿನಲ್ಲಿರುವ ಪುರುಷನು.ಏಕೆಂದರೆ ಇವನು ವಾಯು ಆಕಾಶಗಳ  ರಸವು.(ಪುಟ 128)

 

6)ಈಗ ಬ್ರಹ್ಮದ ನಿದೇ೯ಶವು:'ಹೀಗಲ್ಲ ಹೀಗಲ್ಲ'(ನೇತಿ ನೇತಿ).ಏಕೆಂದರೆ 'ಹೀಗಲ್ಲ'ಎಂಬುದಕ್ಕಿಂತ  ಬೇರೆ ಶ್ರೇಷ್ಠವಾದ ನಿದೇ೯ಶವಿಲ್ಲ..ಈಗ ಮಾಮಧೇಯವು.'ಸತ್ಯದ ಸತ್ಯವು'(ಏಕೆಂದರೆ) ಪದರದಾಣಗಳೇ ಸತ್ಯವು.ಇವನು ಅವುಗಳ ಸತ್ಯ.(ಪುಟ 12)

 

7) ಸತ್ಯಶಬ್ದವಾಚ್ಯವಾದ ,ಅಧ್ಯಾತ್ಮ ಅಧಿದೈವvತೆಗಳಿಗೆ ಸಂಬಂಧಿಸಿದ,ಬ್ರಹ್ಮಕ್ಕೆ ಉಪಾಧಯಾಗಿರುವ,ಕಯ೯-ಕರಣಗಳೆಂದು ವಿಂಗಡಿಸಲ್ಪಟ್ಟಿರುವ ಮೂತ೯-ಅಮೂತ೯ಗಳ ವಿಭಾಗವನ್ನು ಹೇಳಿದ್ದಾಯಿತು.(ಪುಟ 12)

 

8)ಈಗ ಪುರುಷನ ಲಿಂಗರೂಪವನ್ನು ಹೇಳಲಾಗುತ್ತದೆ. ಲಿಂಗ ರೂಪವು ವಾಸನಾಮಯವಾಗಿದೆ.ಮೂತಾ೯ ಮೂತ೯ ವಸನೆ ಮತ್ತು ವಿಜ್ಞಾನಮಯಿವುಗಳ ಸಂಯೋಗದಿಂದ ಉಂಟಾಗಿದೆ.ಇದು ಪಟದಲ್ಲಿ ರೂಪಿಸಿರುವ ವಣ೯ಚಿತ್ರಗಳಂತೆ,ಬಣ್ಣಬಣ್ಣವುಳ್ಳದ್ದಾಗಿಯೂ ,ಮಾಯೆ ಇಂದ್ರಜಾಲ ಬಿಸಿಲ್ಗುದುರೆ ಇವುಗಳಂತೆ ಸವ೯ವ್ಯಾಮೋಸ್ಪದವಾಗಿಯೂ ಇದೆ.(ಪುಟ 130)

 

)'ಸತ್ಯದ' ಸ್ವರೂಪವನ್ನು  ವಿವರಿಸಿದ ಮೇಲೆ ಸತ್ಯದ ಸತ್ಯವದ ಬ್ರಹ್ಮದ ಸ್ವರೂಪವು  ನಿಧ೯ರಿಸಲ್ಪಡುವುದು.(ಪುಟ130)

 

10) ಪರಬೆಹ್ಮವೇ ಸತ್ಯದ ಸತ್ಯ ವಾಗಿದೆ.(ಪುಟ 130)

 

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

 

ನಾಲ್ಕನೆಯ ಬ್ರಾಹ್ಮಣ:(ಎರಡನೇ ಅಧ್ಯಾಯದ ನಾಲ್ಕನೆಯ ಬ್ರಾಹ್ಮಣ ಯಾಜ್ಞವಲ್ಕ್ಯ-ಮೈತ್ರೇಯಿ ಸಂವಾದ  )

 

1) ಯಾಜ್ಞವಲ್ಕ್ಯ:ಎಲೈ ಮ್ಯತ್ರೇಯಿ .ನಾನು ಗ್ರಹಸ್ಥ್ಯಾಶ್ರಮವನ್ನು ಬಿಡುತೆನೆ.ನಿನಗೂ ಕಾತ್ಯಾಯಿನಿಗೂ ಇರುವ  ಸಂಬಂಧವನ್ನು ಅಂತ್ಯಗೊಳಿಸುತ್ತೇನೆ.(ಪುಟ 131)

 

2)ಆತ್ಮಜ್ಞಾನಕ್ಕೆ ಅಂಗವಾಗಿ ಸನ್ಯಾಸವನ್ನು ವಿಧಿಸಲು ಆಖ್ಯಾಯಿಕೆಯು ಬಂದಿರುತ್ತದೆ. (ಸನ್ಯಾಸದ  ಉದ್ದೇಶ -ಆತ್ಮಜ್ಞಾನ.)(ಪುಟ131)

 

3)ಧನದ ಮೂಲಕ ಅಮೃತತ್ವದ ಆಶೆಯಿಲ್ಲ.(ಪುಟ 132)

 

4)ಮೈತ್ರೇಯಿ:ಹೇ ಭಗವನ್.ಧನಪರಿಪೂಣ೯ವಾದ ಪೃಥ್ವಿಯೆಲ್ಲ ನನಗಿದ್ದರೆ  ನಾನು ಅದರ ಮೂಲಕ ಅಮೃತಳಾಗುವೆನೆ?'

 

ಯಾಜ್ಞವಲ್ಕ್ಯ:ಇಲ್ಲ.ಉಪಕರಣವುಳ್ಳವರ(ಅನುಕೂಲಸ್ಥರ) ಜೀವಿತವು ಹೇಗಿರುವುದೊ ಹಾಗೆಯೆ ನಿನ್ನ ಜೀವಿತವೂ ಆಗುವುದು.ಆದರೆ ಧನದ ಮೂಲಕ ಅಮೃತತ್ವದ ಆಶೆಇಲ್ಲ.(ಪುಟ 132)

 

5) ಮೈತ್ರೇಯಿ:ಯಾವುದರಿಂದ ನಾನು ಅಮೃತಳಾಗುವುದಿಲ್ಲವೊ ಅದರಿಂದ ಏನು ಮಾಡಲಿ?ನೀನು ಯವುದನ್ನು ಅರಿತುಕೊಂಡಿರುವೆಯೋ ಅದನ್ನೇ ನನಗೆ ಹೇಳು'(ಅಮೃತತ್ವ ಸಾಧನವನ್ನು) .(ಪುಟ 133)

 

6) ಯಾಜ್ಞವಲ್ಕ್ಯ:ಎಲೈ ಮೈತ್ರೇಯಿ(ಹಿಂದೆಯೂ ಕೂಡ) ನೀನು ನನಗೆ ಪ್ರಿಯಳಾಗಿದ್ದೆ. ಈಗ ಪ್ರಿಯವನ್ನು ಹೇಳುತ್ತಿದ್ದೀಯೆ. ಬಾ,ಕುಳಿತುಕೊ ನಿನಗೆ ವ್ಯಾಖ್ಯಾನ ಮಾಡುತ್ತೇನೆ.ನಾನು ವ್ಯಾಖ್ಯಾನ ಮಾಡುವಾಗ ಏಕಾಗ್ರವಾಗಿ ಅದರ ಅಥ೯ವನ್ನು ಧ್ಯಾನಿಸು.(ಪುಟ 133)

 

7) ಅನೃತ್ವ ಕ್ಕೆ ಸಾಧನವಾದುದು ಅತ್ಮಜ್ಞಾನ.(ಪುಟ 133)

 

8)ದ್ರವ್ಯಸಾಧ್ಯವಾದ  ಕಮ೯ವು ಅಮೃತತ್ವಕ್ಕೆ ಸಾಧನವೆಂಬುದನ್ನು ಮೈತ್ರೇಯಿಯು ತಿರಸ್ಕರಿಸಲು  ಯಾಜ್ಞವಲ್ಕ್ಯನಿಗೆ ಸಂತೋಷವಾಯಿತು.(ಪುಟ 133)

 

) ಯಾಜ್ಞವಲ್ಕ್ಯ:ಪತಿಯ ಪ್ರಯೋಜನಕ್ಕಾಗಿ  ಪತಿಯು  ಪತ್ನಿಗೆ ಪರಿಯವಗಿರುವುದಿಲ್ಲ.ತನ್ನ ಎಂದರೆ ಪತ್ನಿಯ ಪ್ರಯೋಜನಕ್ಕಾಗಿ  ಪತಿಯು ಪ್ರಿಯನಾಗಿರುತ್ತನೆ.ಪತ್ನಿಯ  ಪ್ರಯೋಜನಕ್ಕಾಗಿ  ಪತ್ನಿಯು ಪತಿಗೆ ಪ್ರಿಯಳಾಗಿರುವುದಿಲ್ಲ.ತನ್ನ (ಪತಿಯ) ಪ್ರಯೋಜಮಕ್ಕಾಗಿ  ಪತ್ನಿಯು ಪ್ರಿಯಳಾಗಿರುತ್ತಾಳೆ.ಮಕ್ಕಳ ಪ್ರಯೋಜನಕ್ಕಾಗಿ ಮಕ್ಕಳು (ತಂದೆ ತಾಯಿಗಳಿಗೆ) ಪ್ರಿಯರಾಗಿvರುವುದಿಲ್ಲ.ತನ್ನ ತಂದೆ ತಾಯಿಗಳ ಪ್ರಯೋಜನಕ್ಕಗಿ  ಮಕ್ಕಳು ಪ್ರಿಯರಾಗಿರುತ್ತಾರೆ.ಧನದ ಪ್ರಯೋಜನಕ್ಕಗಿ ಧನವು ಪ್ರಿಯವಾಗಿರುವುದಿಲ್ಲ. ತನ್ನ(ಮನುಷ್ಯನ) ಪ್ರಯೋಜನಕ್ಕಾಗಿ ಧನವು ಪ್ರಿಯವಾಗಿರುತ್ತದೆ.ಬ್ರಾಹ್ಮಣನ ಪ್ರಯೋಜನಕ್ಕಾಗಿ  ಬ್ರಾಹ್ಮಣನು ಪ್ರಿಯವಾಗಿರುವುದಿಲ್ಲ.ಇತರರ ಪ್ರಯೋಜನಕ್ಕಾಗಿ ಬ್ರಾಹ್ಮಣನು ಇತರರಿಗೆ  ಪ್ರಿಯನಾಗಿರುತ್ತಾನೆ.ಕ್ಷತ್ರಿಯನ ಪ್ರಯೋಜನಕ್ಕಾಗಿ ಕ್ಷತ್ರಿಯನು ಪ್ರಿಯನಾಗಿರುದಿಲ್ಲ.ತನ್ನ(ಇತರರ) ಪ್ರಯೋಜನಕ್ಕಾಗಿ  ಕ್ಷತ್ರಿಯನು ಇತರರಿಗೆ ಪ್ರಿಯನಾಗಿರುತ್ತಾನೆ.ಲೋಕಗಳ ಪ್ರಯೋಜನಕ್ಕಾಗಿ ಲೋಕಗಳು ಪ್ರಿಯವಾಗಿರುವುದಿಲ್ಲ.ತನ್ನ(ಜೀವರ) ಪ್ರಯೋಜನಕ್ಕಾಗಿ ಲೋಕಗಳು ಜೀವರಿಗೆ ಪ್ರಿಯವಾಗಿರುತ್ತವೆ. ದೇವತೆಗಳ ಪ್ರಯೋಜನಕ್ಕಾಗಿ ದೇವತೆಗಳು ಪ್ರಿಯರಾಗಿರುವುದಿಲ್ಲ.ತನ್ನ(ಯಾಜ್ಞಿಕರ) ಪ್ರಯೋಜನಕ್ಕಾಗಿ ದೇವತೆಗಳು ಯಾಜ್ಷಿಕರಿಗೆ ಪ್ರಿಯವಗಿರುತ್ತಾರೆ.ಪ್ರಾಣಿಗಳ ಪ್ರಯೋಜನಕ್ಕಾಗಿ ಪ್ರಾಣಿಗಳು ಪ್ರಿಯವಾಗಿರುವುದಿಲ್ಲ.ತನ್ನ  ಪ್ರಯೋಜನಕ್ಕಾಗಿ ಪ್ರಾಣಿಗಳು  ಪ್ರಿಯವಾಗಿರುತ್ತವೆ.ಎಲೆ ಮೈತ್ರೇಯಿ,ಆತ್ಮನನ್ನು ನೋಡಬೇಕು ಶ್ರವಣ ಮಾಡಬೇಕು

ಮನನಮಡಬೇಕು.ನಿದಿಧ್ಯಾಸನ ಮಾಡಬೇಕು. ಎಲೈ ಮೈತ್ರೇಯಿ, ಆತ್ಮನ ದಶ೯ನದಿಂದ,ಶ್ರವಣದಿಂದ, ಮನನದಿಂದ,ನಿದಿಧ್ಯಾಸನದಿಂದ  ಇದೆಲ್ಲವೂ ತಿಳಿಯಲ್ಪಡುತ್ತದೆ.(ಪುಟ135)

 

10)ಅಮೃತತ್ವಕ್ಕೆ ಸಾಧನವಾದ  ವೈರಾಗ್ಯವನ್ನು ಉಪದೇಶಿಸಲು  ಯಾಜ್ಞವಲ್ಕ್ಯನು ಹೆಂಡತಿ ಗಂಡ ಮಕ್ಕಳು  ಮೊದಲಾದವರಲ್ಲಿ -ಅವುಗಳ ತ್ಯಾಗಕ್ಕಾಗಿ- ವಿರಕ್ತಿಯನ್ನುಂಟು ರ್ಮಡುತ್ತಾನೆಜಗತ್ತಿನಲ್ಲಿ ಪ್ರತಿಯೊಂದು ವಸ್ತುವು  ಆತ್ಮನ ಪ್ರಯೋಜನಕ್ಕಾಗಿ ಪ್ರಿಯವಾಗಿರುತ್ತದೆ.(ಪುಟ 135)

 

11) ಆತ್ಮಪ್ರೀತಿಯು ಮುಖ್ಯವೆಂದು  ಆತ್ಮಪ್ರೀತಿಗೆ ಸಾಧನವಾಗಿರುವ ಇತರ ವಸ್ತುಗಳಲ್ಲಿರುವ ಪ್ರೀತಿಯು ಗೌಣವೆಣದೂ ತಿಳಿಯಬೇಕು.ಇಡೀ ಭಾಗವು ಬದಲಾವಣೆಯೊಂದಿಗೆ   ಪುನಃ (4,4) ರಲ್ಲಿ ಬರುತ್ತದೆ.     

(ಪುಟ 135).

 

12) ಇಲ್ಲಿ ಹೇಳಿರುವ  ಪತಿ-ಪತ್ನಿ-ಪುತ್ರ-ವಿತ್ತಾದಿಗಳ  ಕ್ರಮವು ನಮಗೆ ಅವುಗಳಲ್ಲಿರುವ ಪ್ರೀತಿಯ ಪ್ರಮಾಣವನ್ನು ಸೂಚಿಸುತ್ತದೆ. ಮೊದಲು ಮೊದಲು ಹೇಳಿರುವುದನ್ನು  ಕ್ರಮವಾಗಿ  ತ್ಯಜಿಸಬೇಕು ಎಂದಥ೯.(ಪುಟ 135)

 

13)ಕೇವಲ ಶ್ರವಣದಿಂದ  ಆತ್ಮದಶ೯ನವಾಗುವುದಿಲ್ಲ. ಶ್ರವಣ-ಮನನ-ನಿದಿಧ್ಯಾಸನಗಳು ಒಂದಾದಾಗ  ಬ್ರಹ್ಮೈಕತ್ವ ವಿಷಯದ ಸಮ್ಯಗ್ದಶ೯ನವು ಪ್ರಸನ್ನವಾಗುತ್ತದೆ.(ಪುಟ 136)

 

14) ಬ್ರಾಹ್ಮಣ, ಕ್ಷತ್ರಿಯ, ಲೋಕಗಳು, ದೇವತೆಗಳು, ಪ್ರಾಣಗಳು, ಸವ೯ವು- ಆತ್ಮನೇ(ಪುಟ 137)

 

15)ಆತ್ಮನಿಗಿಂತ ಭಿನ್ನವಾದ ವಸ್ತುವು  ಯವುದೂ ಇಲ್ಲ:ಎಲ್ಲವೂ ಆತ್ಮನೇ.ಆದುದರಿಂದ ಆತ್ಮನನ್ನು ಅರಿತುಕೊಂಡರೆ ಎಲ್ಲವನ್ನೂ ಅರಿತಂತೆ ಆಗುವುದು. ಆತ್ಮನೇ ಹೇಗೆ ಎಲ್ಲವೂ ಆಗಿದ್ದಾನೆ ಎಂಬುದನ್ನು ಶ್ರುತಿಯು ಇಲ್ಲಿ ತಿಳಿಸುತ್ತದೆ.(ಪುಟ 137)

 

16)ಎಲ್ಲವೂ ಆತ್ಮನಲ್ಲಿಯೇ ಹುಟ್ಟಿ,ಆತ್ಮನಲ್ಲಿಯೆ ಇದ್ದು ಆತ್ಮನಲ್ಲಿಯೇ ಲಯವಗುತ್ತದೆ.ಸ್ಥಿತಿಕಲದಲ್ಲಿ  ಆತ್ಮಮಯವಗಿರುವುದರಿಂದ  ಆತ್ಮನಿಗಿಂತ ಭಿನ್ನವಾಗಿ  ಯಾವುದನ್ನೂ ಗ್ರಹಿಸುವುದಕ್ಕೂ ಸಾಧ್ಯವಿಲ್ಲ.

(ಆತ್ಮೈವ ಸವ೯ಂ)(ಪುಟ 137)

 

17)

ದುಂದುಭಿಯನ್ನು ಹೊಡೆಯುತ್ತಿರುವಾಗ(ಅದರಿಂದ  ಉಂಟಾಗುವ) ಹೇಗೆ ವಿಶೇಷ ಶಬ್ದಗಳನ್ನು ಬೇರೆ ಬೇರೆಯಾಗಿ  ಗ್ರಹಿಸುವುದಕ್ಕೆ ಆಗುವುದಿಲ್ಲವೊ,ಆದರೆ ದುಂದುಭಿಯ ಶಬ್ದ ಸಾಮಾನ್ಯವನ್ನು  ಗ್ರಹಿಸುವುದರಿಂದ ಅಥವಾ ದುಂದುಭಿಯ ಶಬ್ದಸಾಮಾನ್ಯವನ್ನು (ಗ್ರಹಿಸುವುದರಿಂದ) ಶಬ್ದವು ಗ್ರಹಿಸಲ್ಪಡುತ್ತದೆ.(ಪುಟ137)

 

18)ಚಿನ್ಮಾತ್ರವೇ ಸವ೯ತ್ರ ಅನುಭವವಾಗುವುದರಿಂದ  ಎಲ್ಲವೂ ಚಿತ್ ಸ್ವರೂಪವೆಂದು ಅರಿತುಕೊಳ್ಳಬೇಕು.(ಪುಟ 137)

 

1)ಹೀಗೆಯೇ ಶಂಖ,ವೀಣೆ,ಇವುಗಳ ಉದಾಹರಣೆಯನ್ನೂ ತೆಗೆದುಕೊಳ್ಳಬಹುದು.(138)

 

20)ಹೇಗೆ ಉರಿಯುತ್ತಿರುವ ಹಸಿ ಸೌದೆಯ ಬೆಂಕಿಯಿಂದ  ಬಗೆ ಬಗೆಯ ಹೊಗೆಯು ಹೊರ ಬರುತ್ತದೆಯೊ ಹಾಗೆಯೇ ಋಗ್ವೇದ,ಯಜುವೇ೯,ಸಾಮವೇದ,ಆಥವ೯ಣವೇದ,ಇತಿಹಾಸ,ಪುರಾಣ,

ಕಲೆಗಳು,ಉಪನಿಷತ್ತುಗಳು,ಶ್ಲೋಕಗಳು, ಸೂತ್ರಗಳು, ಮಂತ್ರ ವಿವರಣೆಗಳು,ಅಥ೯ವಾದಗಳು-ಇವೆಲ್ಲ ಮಹತ್ ಪರಮಾಥ೯ತ ನಿಶ್ವಾಸದಂತೆ.ಇವು ಅದರ ನಿಶ್ವಾಸದಂತೆ.(ಪುಟ 140)

 

21)ಬೆಂಕಿಯ ಕಿಡಿಗಳು,ಹೊಗೆ,ಕೆಂಡ,ಜ್ವಾಲೆ -ಇವೆಲ್ಲ ವಿಂಗಡವಾಗುವುದಕ್ಕೆ ಮೊದಲು  ಅಗ್ನಿಯೇ ಆಗಿರುವಂತೆ,ನಾಮರೂಪಗಳಿಂದ ಆಗಿರುವ ಜಗತ್ತು ಉತ್ಪತ್ತಿಗೆ ಮೊದಲು  ಪ್ರಜ್ಞಾನ ಘನವೇ ಆಗಿತ್ತು.ಇದನ್ನು ಅರಿತುಕೊಳ್ಳಬೇಕು.(ಪುಟ 140)

 

22)'ಇದು ಮೊದಲು ಅಸತ್ತೇ ಆಗಿತ್ತು' (ಅಸದ್ವಾ ಇದಮಗ್ರ ಆಸೀತ್ ಅಸದ್ವಾ(ತೈ..2.7))ಪುಟ 140)

 

23) ಪುರುಷನ ನಿಶ್ವಾಸದಂತೆ ವೇದವು ಪರಮಾತ್ಮನಿಂದ ಅಭಿವ್ಯಕ್ತವಾಗಿರುವುದೇ ವಿನಾ ಪುರುಷ

ಬುದ್ಧಿಪೂವ೯ಕವಾಗಿ  ಉತ್ಪನ್ನವಾಗಿಲ್ಲ.(ಪುಟ 140).

 

24) ಹೇಗೆ ಸಮುದ್ರವು ನೀರಿಗೆ ಏಕಮಾತ್ರಗತಿಯೊ ಹಾಗೆಯೇ ಚಮ೯ವು ಎಲ್ಲಸ್ಪಶ೯ಗಳಿಗೂ ಏಕಮಾತ್ರಗತಿ.ಹಾಗೆಯೇ ಮೂಗು  ಎಲ್ಲಾ ಗಂಧಗಳಿಗೂ ಏಕಮಾತ್ರಗತಿ.ಹಾಗೆಯೇ ನಾಲಗೆಯು ಎಲ್ಲಾ ರಸಗಳಿಗೂ ಏಕಮಾತ್ರಗತಿ.ಹಾಗೆಯೇ ಕಣ್ಣು  ಎಲ್ಲಾ ರೂಪಗಳಿಗೂ ಏಕಮಾತ್ರಗತಿಯು.ಕಿವಿಯು ಎಲ್ಲಾ ಶಬ್ದಗಳಿಗೂ ಏಕಮಾತ್ರಗತಿಯು.ಮನಸ್ಸು ಎಲ್ಲಾ ವಿದ್ಯೆಗಳಿಗೂ ಏಕಮಾತ್ರಗತಿಯು.ಬುಧ್ಧಿಯು ಎಲ್ಲಾ ವಿದ್ಯೆಗಳಿಗೂ ಏಕಮಾತ್ರಗತಿ.ಹಾಗೆಯೇ ಕೈಗಳು  ಎಲ್ಲಾ ಕಮ೯ಗಳಿಗೂ ಏಕಮಾತ್ರಗತಿಯು.ಉಪಸ್ಥವು ಎಲ್ಲಾ ಆನಂದಗಳಿಗೂ  ಏಕಮಾತ್ರಗತಿ;ಹಾಗೆಯೇ ಪಾಯುವು  ಎಲ್ಲಾ ವಿಸಗ೯ಗಳಿಗೂ   ಏಕಮಾತ್ರಗತಿಯು.ಹಾಗೆಯೇ ಪಾದಗಳು ಎಲ್ಲಾ ನಡೆಗಳಿಗೂ ಏಕಮಾತ್ರ ಗತಿಯು.ಹಾಗೆಯೇ ವಾಕ್ಕು ಎಲ್ಲಾ ವೇದಗಳಿಗೂ ಏಕಮಾತ್ರಗತಿ.(ಪುಟ 142)

 

25)ಬ್ರಹ್ಮವು ಪ್ರಜ್ಞಾನಘನವೂ ಏಕರಸವೂ ಆಗಿದೆ.(ಪುಟ 142)

 

26)ಹೇಗೆ ನೀರಿನಲ್ಲಿ ಹಾಕಲ್ಪಟ್ಟ ನೀರಿನ ಗಟ್ಟಿಯು ನೀರಿನಲ್ಲೇ ಲಯವಾಗುತ್ತದೆಯೋ  ಮತ್ತು ನೀರಿನಹರಳನ್ನು ತೆಗೆದುಕೊಳ್ಳುವುದಕ್ಕೆ ಆಗುವುದಿಲ್ಲವೊ,,ಆದರೆ ನೀರು ಎಲ್ಲೆಲ್ಲಿಂದ ತೆಗೆದುಕೊಂಡರೂ  ಉಪ್ಪೇ ಆಗಿರುವುದೊ,ಹಾಗೆಯೇ ಅನಂತರವೂ ಅಪಾರವೂ ಆದ ಮಹತ್  ಪರಮಾಥ೯ವು  ವಿಜ್ಞಾನಘನವೇ ಆಗಿದೆ.ಆತ್ಮನ ಭಿನ್ನತೆಯು  ಭೂತಗಳಿಂದ ಉಂಟಾಗಿ ಭೂತವಗ೯ದ ಲಯದೊಂದಿಗೆ ತಾನೂ ಲಯವಾಗುತ್ತದೆ.(ಪುಟ 143)

 

27)ದೇಹೇಂದ್ರಿಯಗಳಿಂದ ಮುಕ್ತಿ ಹೂಂದಿದ ಮೇಲೆ  ವಿಶೇಷಜ್ಞಾನವಿರುವುದಿಲ್ಲ.(ಪುಟ 143) 

 

28) ಬ್ರಹ್ಮವಿದ್ಯೆಯಿಂದ ಜ್ಞಾನಿಗಳಿಗೆ ಆಗುವ  ಬುದ್ಧಿಪೂವ೯ಕವಾದ ಪ್ರಳಯ ಅತ್ಯಂತಿಕ ಪ್ರಳಯವೆನಿಸಿದೆ.ಇದು ಪೌರಾಣಿಕರು ಕರೆಯುವ ಸ್ವಾಭಾವಿಕ ಪ್ರಳಯವಲ್ಲ.ಜ್ಞಾನದಿಂದಾಗುವ ಅತ್ಯಂತಿಕ ಪ್ರಳಯ.

(ಪುಟ143)

 

2)ನಾನು ಇಂಥವನು,ಇಂಥವರ ಮಗನು,,ಇದು ನನ್ನ ಹೊಲ,ನಾನು ಸುಖಿ, ದುಃಖಿ,ಮೊದಲಾದ ಅವಿದ್ಯೆಯಿಂದ ಉಂಟಾಗುವ ವಿಶೇಷ ಜ್ಞಾನ.(ಪುಟ 143)

 

30)ದೇಹೇಂದ್ರಿಯಗಳಿಂದ ಮುಕ್ತಿ ಹೊಂದಿದಮೇಲೆ  ವಿಶೇಷ ಜ್ಞಾನವಿರುವುದಿಲ್ಲ.(ಪುಟ 144)

 

31)ಚಂದ್ರನನ್ನು ಪ್ರತಿಬಿಂಬಿಸುತ್ತಿರುವ  ಕನ್ನಡಿ,ನೀರು ಮೊದಲಾದ ಆಧಾರಗಳು ನಾಶವಾದರೆ ಪ್ರತಿಬಿಂಬಗಳು ನಾಶವಾಗುತ್ತವೆಯೇ ಹೊರತು  ನಿಜವಾದ ಚಂದ್ರನು ನಾಶವಾಗುವುದಿಲ್ಲ.ಹಾಗೆಯೇ ಭೂತಗಳೆಲ್ಲ ನಾಶವಾದರೂ ವಿಜ್ಞಾನ ಘನನಾದ ಬ್ರಹ್ಮಸ್ವರೂಪಕ್ಕೆ ನಾಶವಿಲ್ಲ.(ಪುಟ 144)

 

32)ಎಲ್ಲಿ ದ್ವೈತವಿರುವಂತೆ ತೋರುವುದೊ ಅಲ್ಲಿ  ಒಬ್ಬನು ಇನ್ನೊಂದನ್ನು  ಮೂಸುತ್ತಾನೆ,ಇನ್ನೊಂದನ್ನು ನೋಡುತ್ತಾನೆ,ಇನ್ನೊಂದನ್ನು ಕೇಳುತ್ತಾನೆ.ಇನ್ನೊಂದನ್ನು ಮಾತನಾಡುತ್ತಾನೆ.ಇನ್ನೊಂದನ್ನು ಯೋಚಿಸುತ್ತಾನೆ.ಇನ್ನೊಂದನ್ನು ತಿಳಿದುಕೊಳ್ಳುತ್ತಾನೆ.ಎಲ್ಲಿ ಇವನಿಗೆ ಎಲ್ಲವೂ ಆತ್ಮನೇ ಆಗಿದೆಯೋ  ಅಲ್ಲಿ ಯಾವುದರಿಂದ ಯಾವುದನ್ನು ಮೂಸಿಯಾನು,ಯಾವುದನ್ನು ನೋಡಿಯಾನು,ಯಾವುದನ್ನು  ಕೇಳಿಯಾನುಯಾವುದನ್ನು ಮಾತಾಡಿಯನು,ಯಾವುದನ್ನು ಯೋಚಿಸಿಯಾನು,ಯಾವುದನ್ನು ಅರಿತುಕೊಂಡಾನು?ಯಾವನಿಂದ ಇದೆಲ್ಲವೂ ತಿಳಿಯಲ್ಪಡುತ್ತದೆಯೊ  ಅವನನ್ನು ಯಾವುದರಿಂದ ತಿಳಿದುಕೊಂಡಾನು?

ವಿಜ್ಞಾತೃವನ್ನು ಯಾವುದರಿಂದ ತಿಳಿದುಕೊಂಡಾನು?(ಯೇನೇದಂ ಸವ೯ಂ ವಿಜಾನಾತಿ  ತಂ ಕೇನ ವಿಜಾನೀಯಾತ್?)(ಪುಟ 145)

 

33) ಏಕಾತ್ಮ ಬಾವವನ್ನು ಪಡೆದಮೇಲೆ ವಿಶೇಷಜ್ಞಾನವಿಲ್ಲವೆಂಬುದಕ್ಕೆ ಉತ್ತರವನ್ನು ಇಲ್ಲಿ ಹೇಳಿದೆ:ಅವಿದ್ಯಾ ಕಲ್ಪಿತವಾದ ಕಾಯ೯-ಕರಣ-ಸಂಘಾತವೆಂಬ ಉಪಾಧಿಯಿಂದ ಜನಿತವಾದ ವಿಶೇಷಾತ್ಮನೆಂಬ ಖಿಲಭಾವವು ಉಂಟಾಗಿರುವಾಗ,ಪರಮಾಥ೯ತಃ ಅದ್ವೈತವಾದ ಬ್ರಹ್ಮದಲ್ಲಿ ದ್ವೈತವಿರುವಂತೆ ಎಂದರೆ ಆತ್ಮನಿಗಿಂತ ಬೇರೆ ವಸ್ತುವಿರುವಂತೆ ಕಂಡುಬರುತ್ತದೆ.(ಪುಟ146)

 

34) ಜ್ಞಾನಿಯು ಜ್ಞೇಯವನ್ನು ಅರಿತುಕೊಳ್ಳಲು ಬಯಸುತ್ತಾನೆಯೇ ವಿನಃ ತನ್ನನ್ನು ಅರಿತುಕೊಳ್ಳಲು ಇಚ್ಛಿಸುವುದಿಲ್ಲ.ಅಗ್ನಿಯು ಇತರ ವಸ್ತುಗಳನ್ನು ದಹಿಸುತ್ತದೆಯೇ ಹೊರತು ತನ್ನನ್ನು ದಹಿಸಿಕೊಳ್ಳಲಾರದು.ಹಾಗೆಯೇ ಜ್ಞಾತೃವು ತನಗೆ ವಿಷಯವಲ್ಲದ  ಯವ ವಸ್ತುವನ್ನೂ ಗ್ರಹಿಸಲಾರನು.

(ಪುಟ146)

 

,,,,,,,,,,,,,,,,,,,,,,,,,,,,,,,,,,,ನಾಲ್ಕನೆಯ ಬ್ರಾಹ್ಮಣ ಸಂಪೂಣ೯ವಾಯಿತು,,,,,,,,,,,,,,,,,,,,,,,,,,,,,,,

 

ಐದನೆಯ ಬ್ರಾಹ್ಮಣ: 

 

1) ಪೃಥ್ವಿಯು ಎಲ್ಲಾ ಪ್ರಾಣಿಗಳಿಗೂ ಮಧು. ಎಲ್ಲಾ ಪ್ರಾಣಿಗಳದೂ ಪೃಥ್ವಿಗೆ ಮಧು. ಪೃಥ್ವಿಯಲ್ಲಿರುವ  ತೇಜೋಮಯನೂ ಆಮೃತಮಯನೂ  ಆದ ಪುರುಷನು. ಪೃಥಿವ್ಯಾದಿ ಚತುಷ್ಟಯವು  ಆತ್ಮನೇ. ಆತ್ಮಜ್ಞಾನವು ಅಮೃತತ್ವಕ್ಕೆ ಕಾರಣವು.ಇದು ಬ್ರಹ್ಮ.ಇದು ಎಲ್ಲವೂ(ಇದಂ ಬ್ರಹ್ಮ,ಇದಂ ಸವ೯ಂ)

 

2)ಪೃಥಿವ್ಯಾದಿ ಜಗತ್ತೆಲ್ಲವೂ ಒಂದಕ್ಕೊಂದು ಉಪಕಾಯ೯ -ಉಪಕಾರಕವಾಗಿರುತ್ತದೆ.(ಪುಟ 148)

 

3) ಬ್ರಹ್ಮದಿಂದ ಸ್ತಂಬದವರೆಗೆ  ಎಲ್ಲಾ ಪ್ರಾಣಿಗಳಿಗೂ  ಮಧು ಎಂದರೆ ಕಾಯ೯ವು. ಜೇನಿನಂತೆ ಕಾಯ೯ವಾಗಿರುವುದರಿಂದ  ಪೃಥ್ವಿಯು ಮಧು ಎನಿಸಿದೆ. ಅನೇಕ ಜೇನುಹುಳುಗಳಿಂದ ಜೇನುಗೂಡು ಅಗಿರುವಂತೆ  ಅನೇಕ ಪ್ರಾಣಿಗಳಿಂದ ಪೃಥ್ವಿಯು  ಮಾಡಲ್ಪಟ್ಟಿದೆ.(ಪುಟ 148)

 

4)ಲಿಂಗ ಶರೀರದ ಅಭಿಮಾನಿ ಎಂದರೆ ಜೀವಾತ್ಮ.(ಪುಟ 148)

 

5) ವಿಷಯಗಳನ್ನು ಪ್ರಕಾಶಿಸುವ ಇಂದ್ರಿಯ ಮನಸ್ಸುಗಳಿಂದ ಕೂಡಿರುವ ಪಾಥಿ೯ವ ಶರೀರ ಅಥವಾ ಲಿಂಗಶರೀರ.ಇದು ಅತ್ಯಂತಿಕ ಮೋಕ್ಷವಾಗುವರೆಗೂ ಇರುತ್ತದೆ.(ಪುಟ  148)

 

6) ಪೃಥಿವ್ಯಾದಿ ಚತುಷ್ಟಯವು  ಎಲ್ಲ ಪ್ರಾಣಿಗಳಿಗೂ ಕಾಯ೯ವು.ಎಲ್ಲ ಪ್ರಾಣಿಗಳೂ ಇದರ ಕಾಯ೯ವು. ಆದುದರಿಂದ ಜಗತ್ತು ಒಂದೇ ಕಾರಣದಿಂದ ಹುಟ್ಟಿದೆ.ಯಾವ ಕಾರಣದಿಂದ  ಇದು ಹುಟ್ಟಿದೆಯೊ ಕಾರಣವೇ ಎಂದರೆ ಬ್ರಹ್ಮವೇ ನಿಜವಾದುದು.ಉಳಿದೆಲ್ಲವೂ ಕಾಯ೯ವು.ವಿಕಾರವು ಹೆಸರು ಮತ್ತು ವಾಚಾರಂಭಣ..ಇದೇ ಮಧು ಪಯಾ೯ಯಗಳ ಸಂಕ್ಷೇಪಾಥ೯.(ಪುಟ 148)

 

7)ವಿಕಾರವು ಕೇವಲ ಹೆಸರು ಮತ್ತು ವಾಚಾರಂಭಣ.(ಪುಟ 148)

 

8)ಒಬ್ಬನೇ ಆದ ಆತ್ಮನು  ಪೃಥ್ವಿ,ಪ್ರಾಣಿಗಳು  ಪಾಥಿ೯ವ ಶರೀರ ಶರೀರದಲ್ಲಿರುವ ಜೀವ-ಇವೆಲ್ಲ ಆಗಿರುತ್ತಾನೆ.ಇವೆಲ್ಲವೂ ಆತ್ಮನೇ.'ಇದಂ ಸವ೯ಂ ಯದಯಮಾತ್ಮಾ(2.4.6) (ಪುಟ 148)

 

)ಯಾವ ಬ್ರಹ್ಮದ ವಿಜ್ಞಾನದಿಂದ ಎಲ್ಲವೂ ಆಗುತ್ತಾನೆಯೋ ಅದು.(ಬ್ರಹ್ಮಜ್ಞಾನ)(ಪುಟ 148)

 

10)ಅದೇರೀತಿಯಲ್ಲಿ ನೀರು ಎಲ್ಲ ಪ್ರಾಣಿಗಳಿಗೂ ಮಧು.ಶರೀರ ಸಂಬಂಧಿಯಾಗಿ ರೈತಸ.(ರೇತಸ್ಸು)

ಇದು ಬ್ರಹ್ಮ ಇದು ಎಲ್ಲವು.(ಪುಟ 14) ಅಗ್ನಿಯು ಎಲ್ಲಾ ಪ್ರಾಣಿಗಳಿಗೂ  ಮಧು.ಶರೀರ ಸಂಬಂಧಿಯಾಗಿ  ವಾಗಭಿಮಾನಿಯು(ಪುಟ 148)

 

12) ಅದೇರೀತಿಯಲ್ಲಿ ವಾಯು -ಪ್ರಾಣಾಭಿಮಾನಿ(ಶರೀರ ಸಂಬಂಧದಿಂದ)(ಪುಟ 150)

 

13) ಆದಿತ್ಯ -ಶರೀರಸಂಬಂಧದಿಂದ- ಚಕ್ಷು.(ಪುಟ 151)

 

14) ದಿಕ್ಕುಗಳು-ಶರೀರ ಸಂಬಂಧಿಯಾಗಿ ಶ್ರವಣಾಭಿಮಾನಿ.(ಪುಟ  151)

 

15)ಚಂದ್ರ  -ಶರೀರಸಂಬಂಧದಿಂದ - ಮನೋಭಿಮಾನಿ(ಪುಟ 152)

 

16)ಮಿಂಚು-ಶರೀರ ಸಂಬಂಧವಾಗಿ -ತ್ವಗಿಂದ್ರಿಯ(ಚಮ೯)(ಪುಟ 153)

 

17) ಮೇಘಗಜ೯ನೆ-ಶರೀರ ಸಂಬಂಧುಯಾಗಿ- ಶಬ್ದ ಸ್ವರಗಳ ಅಭಿಮಾನಿ(ಪುಟ 153)

 

 18)ಆಕಾಶವು ಎಲ್ಲ  ಪ್ರಾಣಿಗಳಿಗೂ ಮಧು.ಎಲ್ಲ ಪ್ರಾಣಿಗಳು ಆಕಾಶಕ್ಕೆ ಮಧು.ಶರೀರ

ಸಂಬಂಧಿಯಾಗಿ  ಹೃದಯಾಭಿಮಾನಿಯಾಗಿಯೂ,ಆಗಿದ್ದಾನೆ. ಆಕಾಶಾದಿ ಚತುಷ್ಟಯವು ಬ್ರಹ್ಮವೇ.

ಆತ್ಮಜ್ಞಾನವು ಅಮೃತತ್ವಕ್ಕೆ ಕಾರಣವು.ಇದು ಬ್ರಹ್ಮ.ಇದು ಎಲ್ಲವೂ.

 

1)ಧಮ೯ವು ಎಲ್ಲಾ ಪ್ರಣಿಗಳಿಗೂ ಮಧು.ಎಲ್ಲ ಪ್ರಾಣಿಗಳು ಧಮ೯ಕ್ಕೆ ಮಧು.ಶರೀರಾಭಿನಾನಿಯಾಗಿ ಧಮಾ೯ಭಿಮಾನಿ. ಧಮಾ೯ದಿಚತುಷ್ಟಯವು ಆತ್ಮನೇ. ಆತ್ಮಜ್ಞಾನವು ಅಮೃತತ್ವಕ್ಕೆ ಕಾರಣವು.ಇದು ಬ್ರಹ್ಮ,ಇದು ಎಲ್ಲವೂ.(ಪುಟ155)

.................................................................................................................................

ಗಮನಿಸಿ: 1) ಎಲ್ಲಾ ಚತುಷ್ಟಯಗಳಲ್ಲಿಯೂ 1) ಅಮೃತಮಯನೂ ತೇಜೋಮಯನೂ ಆದ ಪುರುಷನು ಎಂದು ಹೇಳಿದೆ.ಪುನರಾವತ೯ನೆಯು ಯಾಂತ್ರಿಕವಾಗುತ್ತದೆಯೆಂದು  ಪುನಃ ಪುನಃ ಇಲ್ಲಿ ಹೇಳಿಲ್ಲ. 

 

2) ಎಲ್ಲಾ ವಾಕ್ಯಗಳ ಕೊನೆಯಲ್ಲಿ ಆತ್ಮಜಾನವು ಅಮೃತತ್ವಕ್ಕೆ ಕಾರಣವು.ಇದು ಬ್ರಹ್ಮ,ಇದು ಎಲ್ಲವೂ ಎಂದು ಹೇಳಿದೆ.

 

3)  ಶರೀರಸಂಬಂಧದಲ್ಲಿ ಮಾತ್ರ ವ್ಯತ್ಯಾಸವಿದೆ.

.............................................................................................................................................

 

20)ಸತ್ಯಾದಿ ಚತುಷ್ಟಯ-ಶರೀರ ಸಂಬಂಧಿಯಾಗಿ - ಸತ್ಯಾಭಿಮಾನಿ.(ಪುಟ 155)

 

21)ಮನುಷ್ಯಾದಿ ಚತುಷ್ಟಯ-ಶರೀರಸಂಬಂಧಿಯಾಗಿ- ಮಾನುಷಾಭಿಮಾನಿ(ಪುಟ 156)

 

22) ಶರೀರವು ಎಲ್ಲಾ ಪ್ರಾಣಿಗಳಿಗೂ ಮಧು.ಎಲ್ಲ ಪ್ರಾಣಿಗಳು ಶರೀರಕ್ಕೆ ಮಧು.ಶರೀರಾಭಿಮಾನಿಯಾಗಿ  ವಿಜ್ಞಾನಮಯನು.ಶರೀರಾದಿ ಚತುಷ್ಟಯವು ಆತ್ಮವೇ (ಪುಟ 157)

 

23) ಆತ್ಮನು ಎಲ್ಲಾ ಪ್ರಾಣಿಗಳಿಗೂ  ಅಧಿಪತಿಯು.ಎಲ್ಲ ಪ್ರಾಣಿಗಳಿಗೂ ರಾಜನು.ಹೇಗೆ ಅರೆಕಾಲುಗಳು ಚಕ್ರದ ನಾಭಿಯಲ್ಲಿ ಮತ್ತು ಹೊರವಲಯಲ್ಲಿ  ನಿಲ್ಲಿಸಲ್ಪಟ್ಟಿವೆಯೊ ಹಾಗೆಯೇ  ಆತ್ಮನಲ್ಲಿ ಎಲ್ಲ ಪ್ರಾಣಿಗಳು ,ಎಲ್ಲ ದೇವತೆಗಳು,ಎಲ್ಲಾ ಲೋಕಗಳೂ,ಎಲ್ಲ ಇಂದ್ರಿಯಗಳೂ ಎಲ್ಲಾ ಜೀವಾತ್ಮರೂ ನಿಲ್ಲಿಸಲ್ಪಟ್ಟಿರುವರು.(ಪುಟ 158)

 

24)ಅವಿದ್ಯಾಕೃತನಾದ,ಕಾಯ೯-ಕರಣ-ಸಂಘಾತವೆಂಬ  ಉಪಾಧಿಯಿಂದ ಕೂಡಿದ ಜೀವಾತ್ಮನು ಬ್ರಹ್ಮವಿದ್ಯೆಯಿಂದ  ಪರಮಾತ್ಮನಲ್ಲಿ ಪ್ರವೇಶಿಸಿ,ಮುಕ್ತನಾಗಿ,ಬಾಹ್ಯಾಂತರಗಳಿಲ್ಲದೆ ಸವ೯ಭೂತಗಳಿಗೂ ಉಪಾಸ್ಯನಾಗುತ್ತಾನೆ.(ಪುಟ158)

 

25) ಬ್ರಹ್ಮವಿದ್ಯೆಯಿಂದ ನಾವು ಎಲ್ಲವೂ ಆಗುತ್ತೇವೆ.೯ಪುಟ158)

 

26) ಮಧು ಬ್ರಾಹ್ಮಣದಲ್ಲಿ ಉಪದೇಶಿಸಿದ ಹಾಗೆ ತಾನು ಸವಾ೯ತ್ಮನೆಂದು  ಆಚಾಯಾ೯ಗಮಗಳಿಂದ ಶ್ರವಣಮಾಡಿ,ತಕ೯ದಿಂದ ಮನನ ಮಾಡಿ  ತಾನೇ ಸಾಕ್ಷಾತ್ತಾಗಿ ಅರಿತುಕೊಂಡು ತಾನೇ ಸವ೯ವೂ ಆಯಿತು.(ಪುಟ 158)

 

27)ದಧ್ಯಂಗ್-ಅಥವ೯ಣನು ಅಶ್ವಿನಿ ದೇವತೆಗಳಿಗೆ ಉಪದೇಶಿಸಿದ ಮಧುವಿದ್ಯೆಯು ಇದೇ.(ಪುಟ 15)

 

28) ಅಮೃತತ್ವಕ್ಕೆ ಸಾಧನವಾದ ಬ್ರಹ್ಮವಿದ್ಯೆಯು ಸಮಾಪ್ತವಾಯಿತು(ಪುಟ 15)

 

2) ಆಖ್ಯಾಯಿಕೆಯು  ಶಥಪಥಬ್ರಾಹ್ಮಣದಲ್ಲಿ ಬಂದಿದೆ.ಮಧು ವಿದ್ಯೆಯು ಅಶ್ವಿನೀ ದೇವತೆಗಳಿಗೆ ಪ್ರಿಯವಾದ ವಿಷಯವಾಗಿತ್ತು.

 

ಅಧ್ಯಾಯದಲ್ಲಿ ಬರುವ ಚತುಷ್ಟಯಗಳು:

1)ಪ್ರಥಿವ್ಯಾದಿ ಚತುಷ್ಟಯ

2)ಜಲಾದಿ ಚತುಷ್ಟಯ

3)ಅಗ್ನ್ಯಾದಿ ಚತುಷ್ಟಯ

4)ವಾಯ್ವಾದಿ ಚತುಷ್ಟಯ

5)ಆದಿತ್ಯಾದಿ ಚತುಷ್ಟಯ

6)ದಿಗಾದಿ ಚತುಷ್ಟಯ

7)ಚಂದ್ರಾದಿ ಚತುಷ್ಟಯ

8)ವಿದ್ಯುದಾದಿ ಚತುಷ್ಟಯ

)ಮೇಘಗಜ೯ನಾದಿ ಚತುಷ್ಟಯ

10)ಆಕಾಶಾದಿ ಚತುಷ್ಟಯ

11)ಧಮಾ೯ದಿ ಚತುಷ್ಟಯ

12)ಸತ್ಯಾದಿ ಚತುಷ್ಟಯ

13)ಮನುಶ್ಯಾದಿ ಷತುಷ್ಟಯ

14)ಶರೀರಾದಿ ಚತುಷ್ಟಯ

,,,,,,,,,,,,,,,,,,,,,,,,,

30)ಅವನು ಶರೀರಗಳಲ್ಲಿ(ಪುರಗಳಲ್ಲಿ) ವಾಸಿಸುವುದರಿಂ ಪುರುಷನೆನಿಸಿದ್ಧಾನೆ೯ಪುಟ (161)

 

31)ಪರಮೇಶ್ವರನು  ಅವ್ಯಕ್ತವಾದ ನಾಮರೂಪಗಳನ್ನು ವ್ಯಕ್ತಮಾಡುವವನಾಗಿ  ಮೊದಲು ಭೂರಾದಿ ಲೊಕಗಳನ್ನೂ ನಂತರ ಎರಡು ಕಾಲಿನಿಂದ ಉಪಲಕ್ಷಿತವಾದಮುಷ್ಯ-ಪಕ್ಷಿ-ಶರೀರಗಳನ್ನೂ ,ನಾಲ್ಕು ಕಾಲಿನಿಂದ ಉಪಲಕ್ಷಿತವಾದ  ಪಶು ಶರೀರಗಳನ್ನೂ ಸೃಷ್ಟಿಸಿದನು.(ಪುಟ 161)

 

32)ಪರಮಾತ್ಮನೇ ನಾಮರೂಪಗಳಾಗಿಯೂ ಶರೀರೇಂದ್ರಿಯ ರೂಪದಿಂದಲೂ ಒಳಗೂ ಹೊರಗೂ ಇರುತ್ತಾನೆ.ಆತ್ಮೈಕತ್ವವೇ ಮಂತ್ರದ ತಾತ್ಪಯ೯( ಪುರುಷನು ಮೊದಲು ಪಕ್ಷಿಯಾಗಿ ಶರೀರಗಳನ್ನು ಪ್ರವೇಶಿಸಿದನು)(161)

 

33) ಪರಮೇಶ್ವರನು ಮಾಯೆಯದ್ವಾರಾ  ಬಹುರೂಪದಿಂದ ಕಾಣುತ್ತಾನೆ.(ಇಂದ್ರೋ ಮಾಯಾಭಿಃ ಪುರುರೂಪ ಈಯತೇ)

(ಪುಟ 162)

 

34) ಇವನಿಗೆ ಹತ್ತು ಇಂದ್ರಿಯಗಳು-ಅಷ್ಟೇ ಅಲ್ಲ ನೂರಾರು-ಸೇರಿಸಲ್ಪಟ್ಟಿವೆ.ಇವನೇ ಇಂದ್ರಿಯಗಳು,ಇವನೇ ಹತ್ತು ಮತ್ತು ಅನೇಕ ಸಾವಿರ,ನಹು ಮತ್ತು ಅವನಂತ. ಬ್ರಹ್ಮವು ಅಪೂವ೯ವು.ಅನಪರವು,ಅನಂತರವು,ಅಬಾಹ್ಯವು,ಸವ೯ವನ್ನೂ ಅನುಭವಿಸುತ್ತಿರುವ ಆತ್ಮನು ಬ್ರಹ್ಮವು.ಇದೇ ಎಲ್ಲಾ ವೇದಾಂತಗಳ ಉಪದೇಶ.(163)

 

35) ಇಂದ್ರಿಯಗಳು  ವಿಷಯಗಳ ಕಡೆಗೆ  ಆತ್ಮನನ್ನು ಹರಣಮಾಡುವುದರಿಂದ 'ಹರಿ'ಎನಿಸಿವೆ.(163)

 

,,,,,,,,,,,,,,,,,,,,,,,,,,,,,,,,,,,,,,,,,,,,,,,,,ಐದನೆಯ ಬ್ರಾಹ್ಮಣ ಸಂಪೂಣ೯....................................

 

ಆರನೆಯ ಬ್ರಾಹ್ಮಣ: ಬ್ರಾಹ್ಮಣದಲ್ಲಿ ಆಚಾಯ೯ ಪರಂಪರೆಯನ್ನು ತಿಳಿಸಿದೆ.ಬ್ರಹ್ಮನು ಸ್ವಯಂಭು.ಬ್ರಹ್ಮನಿಗೆ ನಮಸ್ಕಾರ.

(ಪುಟ 166)

,,,,,,,,,,,,,,,,,,,,,,,,,,,,,,,,,,,,,,,,,,,,,,,,ಆರನೆಯ ಬ್ರಾಹ್ಮಣ ಸಂಪೂಣ೯,,,,,,,,,,,,,,,,,,,,,,,,,,

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

 

ಬೃಹದಾರಣ್ಯಕ ಉಪನಿಷತ್:ಮೂರನೆಯ ಅಧ್ಯಾಯ:

 

ಮೊದಲನೆಯ ಬ್ರಾಹ್ಮಣ:

 

1)ಓಂ  ವಿದೇಹದೇಶದ ರಾಜನಾದ ಜನಕನು ಬಹುದಕ್ಷಿಣವೆಂಬ ಯಜ್ಞವನ್ನು ಮಾಡಿದನು.ಅಲ್ಲಿ ಕುರು ಪಂಚಾಲ ದೇಶಗಳ ಬ್ರಾಹ್ಮಣರು ಸಮಾಗತರಾಗಿದ್ದರು. ಬ್ರಾಹ್ಮಣರಲ್ಲಿ ಯಾರು ಹೆಚ್ಚು ಅನುವಚನ ಸಾಮಥ್ಯ೯ವುಳ್ಳವನು ಯಾರು ಎಂದು ಜನಕನಿಗೆ ಜಿಜ್ಞಾಸೆಯುಂಟಾಯಿತು.ಅವನು ಒಂದು ಸಾವಿರ ಗೋವುಗಳನ್ನು ದೊಡ್ಡಿಯಲ್ಲಿ ಕಟ್ಟಿಹಾಕಿಸಿದನು. ಪ್ರತಿಯೊಂದು  ಗೋವಿನ ಕೊಂಬುಗಳಿಗೂ  ಹತ್ತು ಚಿನ್ನದ  ಪಾದಗಳನ್ನು ಕಟ್ಟಿಸಿದನು.(ಪುಟ 167)

 

2) ಈಗ ಯಾಜ್ಞವಲ್ಕ್ಯ ಕಾಂಡ ಪ್ರಾರಂಭ.ಮಧುಕಾಂಡವು ಆಗಮ ಪ್ರಧಾನವಾಗಿದ್ದರೆ ಇದು ಉಪಸತ್ತಿ ಅಥವಾ ಯುಕ್ತಿ ಪ್ರಧಾನವಾಗಿದೆ.(ಪುಟ 168)

 

3) ದಾನವು ಜ್ಞಾನ ಪ್ರಾಪ್ತಿಗೆ ಸಾಧನ.(ಪುಟ 168)

 

3)ವೇದಾಥ೯ವನ್ನು ಅನುವಚನ ಮಾಡುವ ಶಕ್ತಿಯುಳ್ಳವನಿಗೆ  ಅನೂಚಾನನೆಂದು ಹೆಸರು.(ಪುಟ 168)

 

4)ಯಾಜ್ಞವಲ್ಕ್ಯನು ತನ್ನ ಶಿಷ್ಯನಾದ ಸಾಮಶ್ರವನಿಗೆ  ಗೋವುಗಳನ್ನು ಅಟ್ಟಿಕೊಂಡು ಹೋಗಲು ಹೇಳಿದನು.(ಪುಟ 16)

 

5) ಸಾಮವಿಧಿಯನ್ನು ಕಲಿತಿರುವವನು  ಸಾಮಶ್ರವ.ಯಾಜ್ಞವಲ್ಕ್ಯನು ಚತುವೇ೯ದಿ.(ಪುಟ170)

 

6)ಅಶ್ವಲನು ಅವನನ್ನು ಪ್ರಶ್ನಿಸಿದನು.'ಯಾಜ್ಞವಲ್ಕ್ಯ ,ಇದೆಲ್ಲವೂ ಮೃತ್ಯುವಿನಿಂದ ವ್ಯಾಪ್ತವಾಗಿರುವುದರಿಂದ ,ಎಲ್ಲವೂ ಮೃತ್ಯುವಿನಿಂದ ವ್ಯಾಪ್ತವಾಗಿರುವುದರಿಂದ,ಯಜಮಾನನು  ಯಾವುದರ ಮೂಲಕ ಮೃತ್ಯುವಿನ ವಶ್ಯತೆಯನ್ನು ದಾಟಿ  ಮುಕ್ತನಾಗುತ್ತಾನೆ.?

 

ಯಾಜ್ಞವಲ್ಕ್ಯ: ಹೋತೃವೆಂಬ ಋತ್ವಿಕ್ಕಿನ ಮೂಲಕ.ಅಗ್ನಿಯಾದ ವಾಕ್ಕಿ ಮೂಲಕ.ಯಜಮಾನನ ವಾಕ್ಕೇ  ಹೋತೃ. ಯಜಮಾನನ ವಾಕ್ಕೇ ಅಗ್ನಿ,ಅಗ್ನಿಯು ಹೋತೃ.ಅಗ್ನಿಯು ಮುಕ್ತಿಗೆ ಸಾಧನ.ಅದೇ ಅತಿ ಮುಕ್ತಿ(ಪುಟ170)

 

7) ಯಜ್ಞವೇ ಯಜಮಾನನು.(ಪುಟ171) ಯಜ್ಞೋವೈ ಯಜಮಾನಃ)(.ಬ್ರಾ.14.2.2,24)

 

8) ಅಶ್ವಲ:ಯಜಮಾನನು ಯಾವುದರ ಮೂಲಕ  ಮೃತ್ಯುವಿನ ವಶ್ಯತೆಯನ್ನು ದಾಟಿ ಮುಕ್ತನಾಗುತ್ತಾನೆ.

 

ಯಾಜ್ಞವಲ್ಕ್ಯ:ಅಧ್ವಯು೯ವೆಂಬ ಋತ್ವಿಕ್ಕಿನ ಮೂಲಕ.ಆದಿತ್ಯನಾದ  ಚಕ್ಷುಸ್ಸಿನ ಮೂಲಕ. ಯಜಮಾನನ ಚಕ್ಷುಸ್ಸೇ ಆದಿತ್ಯನು.ಯಜಮಾನನ ಚಕ್ಸುಸ್ಸೇ  ಅಧ್ವಯು೯ವು.ಆದಿತ್ಯನು ಹೋತೃ.ಆದಿತ್ಯನು ಮುಕ್ತಿಗೆ ಸಾಧನ.ಅದೇ ಅತಿಮುಕ್ತಿ.(ಪುಟ172)

 

)ಆದಿತ್ಯ ಭಾವವನ್ನು ಹೊಂದಿದವರಿಗೆ  ಅಹೋರಾತ್ರಿಗಳಿರುವುದಿಲ್ಲ.(ಪುಟ 172)

 

10)ಅಶ್ವಲ:ಯಜಮಾನನು ಯಾವುದರ ವಶ್ಯತೆಯನ್ನು ದಾಟಿ  ಮುಕ್ತನಾಗುತ್ತಾನೆ?

 

ಯಾಜ್ಞವಲ್ಕ್ಯ: ಉದ್ಗಾತೃವೆಂಬ ಋಕ್ಕಿನ ಮೂಲಕ.ವಾಯುವಾದ ಪ್ರಾಣನ ಮೂಲಕ.  ಯಜಮಾನನ  ಪ್ರಾಣವೇ ಉದ್ಗಾತೃ. ಯಜಮಾನನ ಪ್ರಾಣವೇ ವಾಯುವು.ವಾಯುವು ಉದ್ಗಾತೃ. ವಾಯುವು ಮುಕ್ಕ್ತಿಗೆ ಸಾಧನ. ಅದೇ ಅತಿಮುಕಿ.್ತ(ಪುಟ 173)

 

11)ಅಶ್ವಲ;ಯಾಜ್ಞವಲ್ಕ್ಯ, ಅಂತರಿಕ್ಷವು ಆಲಂಬನವಿಲ್ಲದಂತೆ ತೋರುವುದರಿಂದ ಯವ ಅವಲಂಬನದಿಂದ ಯಜಮಾನನು ಸ್ವಗ೯ಲೋಕವನ್ನು ಹೊಂದುತ್ತಾನೆ?

 

ಯಾಜ್ಞವಲ್ಕ್ಯ:ಬ್ರಹ್ಮನೆಂಬ ಋತ್ವಿಕ್ಕಿನ ಮೂಲಕ.ಚಂದ್ರನಾದ ಮನಸ್ಸಿನ ಮೂಲಕ.ಯಜಮಾನನ ಮನಸ್ಸೇ ಬ್ರಹ್ಮ.ಯಜಮಾನನ ಮನಸ್ಸೇ ಚಂದ್ರನು.ಚಂದ್ರನು ಮುಕ್ತಿಗೆ ಸಾಧನ.ಅದೇ ಅತಿಮುಕ್ತಿ.ಇವು ಮೋಕ್ಷದ ಮಾಗ೯ಗಳು.ಈಗ ಸಂಪತ್ತುಗಳು.(ಪುಟ 174)

 

12) ಫಲ ಸಂಪಾದನೆಗಾಗಿ ಉಪಾಸಿಸುವುದೇ ಸಂಪತ್ತು.(ಪುಟ 174)

 

13)ಅಶ್ವಲ: ಇದು ಹೋತೃವು.ಎಷ್ಟು ಋಕ್ಕುಗಳಿಂದ  ಯಜ್ಞದಲ್ಲಿ ತನ್ನ ಕಾಯ೯ವನ್ನು ಮಾಡುವನು?'

ಯಾಜ್ಞವಲ್ಕ್ಯ: 'ಮೂರು ಋಕ್ಕುಗಳಿಂದ'

ಅಶ್ಯಲ: ಋಕ್ಕುಗಳು ಯಾವುವು?

ಪುರೋನು ವಾಕ್ಯಾ,ಯಾಜ್ಯಾ, ಮತ್ತು ಮೂರನೆಯದಾದ ಶಸ್ಯಾ.

ಅಶ್ವಲ: ಅವುಗಳ ಮೂಲಕ ಏನನ್ನು ಜಯಿಸಿಕೊಳ್ಳುತ್ತಾನೆ?

ಯಾಜ್ಞವಲ್ಕ್ಯ: ಪ್ರಾಣಿಗಳೆಲ್ಲವನ್ನೂ.

 

14)ಅಶ್ವಲ:ಯಾಜ್ಞವಲ್ಕ್ಯ,ಇಂದು ಅಧ್ವಯು೯ವು ಎಷ್ಟು ಆಹುತಿಗಳನ್ನು ಯಜ್ಞದಲ್ಲಿ ಹೋಮ ಮಾಡುತ್ತಾನೆ?

ಯಾPಜ್ಞ: ಮೂರು ಆಹುತಿಗಳನ್ನು.

ಅಶ್ವಲ: ಮೂರು ಯಾವುವು?

ಯಾಜ್ಞ: 'ಯಾವುವು ಹುತವಾದಾಗ ಉಜ್ವಲಿಸುವುವೊ,,ಯಾವುವು  ಹುತವಾದಾಗ  ಹೆಚ್ಚು ಶಬ್ದ ಮಾಡುವುವೊ,ಯಾವುದು ಹುತವಾದಾಗ ಕೆಳಗಿಳಿಯುವವೊ'

ಅಶ್ವಲ: ಅವುಗಳ ಮೂಲಕ ಏನನ್ನು ಜಯಿಸಿಕೊಳ್ಳುತ್ತಾನೆ.?

ಯಾಜ್ಞ: ಯಾವುದು ಹುತವಾದಾಗ  ಉಜ್ವಲಿಸುವುವೊ ಅವುಗಳ ಮೂಲಕ ದೇವಲೋಕವನ್ನು ಜಯಿಸಿಕೊಳ್ಳುತ್ತಾನೆ.ಏಕೆಂದರೆ ಲೋಕವು ಉಜ್ವಲಿಸುವಂತೆ ಇರುತ್ತದೆ.ಯಾವುವು ಹುತವಾದಾಗ ಹೆಚ್ಚ್ಚಾಗಿ ಶಬ್ದ ಮಾಡುವುವೊ ಅವುಗಳ ಮೂಲಕ ಪಿತೃಲೋಕವನ್ನು ಜಯಿಸಿಕೊಳ್ಳುತ್ತಾನೆ. ಏಕೆಂದರೆ ಆಲೋಕವು ಹೆಚ್ಚಾಗಿ ಶಬ್ದ ಮಡುವಂತೆ ಇರುತ್ತದೆ.ಯಾವುವು ಹುತವಾದಾಗ ಕೆಳಗಿಳಿಯುವವೊ ಅವುಗಳ ಮೂಲಕ ಮನುಷ್ಯ ಲೋಕವನ್ನು  ಜಯಿಸಿಕೊಳ್ಳುತ್ತಾನೆ.(ಪುಟ 177)

 

15)

1) ಸಮಿತ್ತು ತುಪ್ಪ ಮೊದಲಾದುವನ್ನು ಆಹುತಿ ಕೊಟ್ಟಾಗ-ಉಜ್ವಲಿಸುವುವು-ದೇವಲೋಕ

2)ಮಾಂಸ ಮೊದಲಾದುವನ್ನು ಆಹುತಿ ಕೊಟ್ಟಾಗ -ಶಬ್ದ ಮಾಡುವುವು-ಪಿತೃಲೋಕ

3) ಹಾಲು,ಸೋಮ ಮೊದಲಾದುವನ್ನು ಆಹುತಿ ಕೊಟ್ಟಾಗ-ಕೆಳಗಿಳಿಯುತ್ತವೆ- ಲೋಕ

ವೆಂದೂ ಉಪಾಸಿಸಿದರೆ ಆಯಾ ಫಲಗಳನ್ನು ಸಂಪಾದಿಸಿಕೊಳ್ಳುತ್ತಾನೆ.(ಪುಟ 177) 

 

 

16) ಅಶ್ವಲ: 'ಯಾಜ್ಞವಲ್ಕ್ಯ,ಇಂದು ಬ್ರಹ್ಮನೆಂಬ ಋತ್ವಿಕ್ಕನು  ಎಷ್ಟು ದೇವತೆಗಳ ಮೂಲಕ ಬಲಗಡೆಯಲ್ಲಿ  ಯಜ್ಞವನ್ನು ಕಾಪಾಡುತ್ತಾನೆ?'

 

ಯಾಜ್ಞವಲ್ಕ್ಯ: 'ಒಬ್ಬ ದೇವತೆಯ ಮೂಲಕ'

ಅಶ್ವಲ: ' ಒಬ್ಬ ದೇವತೆಯು ಯಾರು?'

ಯಜ್ಞ: 'ಮನಸ್ಸೇ.ಮನಸ್ಸು ಅನಂತವೇ ಮತ್ತು ವಿಶ್ವೇದೇವತೆಗಳು ಅನಂತರು. ಉಪಾಸನೆಯಿಂದ ಉಪಾಸಕನು  ಅನಂತ ಲೋಕವನ್ನೇ ಜಯಿಸಿಕೊಳ್ಳುತ್ತಾನೆ.(ಪುಟ 178)

 

17) ಮನಸ್ಸಿನಿಂದಲೇ ಧ್ಯಾನದಿಂದಲೇ ಬ್ರಹ್ಮನು ತನ್ನ ಕಾಯ೯ವನ್ನು ಮಾಡುತ್ತಾನೆ.(ಪುಟ 178)

 

18) 'ಅಶ್ವಲ:ಯಾಜ್ಞವಲ್ಕ್ಯ,ಇಂದು ಉದ್ಗಾತೃವು ಎಷ್ಟು ಸ್ತೋತ್ರಿಯಗಳನ್ನು  ಯಜ್ಞದಲ್ಲಿ  ಸ್ತುತಿಸುವನು.?'

 

'ಯಾಜ್ಞವಲ್ಕ್ಯ:ಮೂರು ಸ್ತೋತ್ರಿಯಗಳನ್ನು'

ಅಶ್ವಲ: ' ಮೂರು ಯಾವುವು?'

 

ಯಾಜ್ಞ: 'ಪುರೋನುವಾಕ್ಯಾ,ಯಾಜ್ಯಾ,ಶಸ್ಯಾ'

ಅಶ್ವಲ: 'ಇವುಗಳಲ್ಲಿ ಯಾವುವು ಶರೀರಕ್ಕೆ ಸಂಬಂಧಪಟ್ಟವು'

ಯಾಜ್ಞ:'ಪ್ರಾಣವೇ ಪುರೋನುವಾಕ್ಯಾ' ಅಪಾನವು ಯಾಜ್ಯಾ,ವ್ಯಾನವು ಶಸ್ಯಾ.'

ಅಶ್ವಲ: ಅವುಗಳ ಮೂಲಕ ಏನನ್ನು ಜಯಿಸಿಕೊಳ್ಳುತ್ತಾನೆ?

ಯಾಜ್ಞವಲ್ಕ್ಯ:

ಪುರೋನುವಾಕ್ಯಾ-ಪೃಥ್ವೀಲೋಕ

ಯಾಜ್ಯದಿಂದ -ಅಂತರಿಕ್ಷಲೋಕ

ಶಸ್ಯದಿಂದ -ದ್ಯುಲೋಕವನ್ನೂ ಜಯಿಸಿಕೊಳ್ಳುತ್ತಾನೆ.

ಆಗ ಹೋತೃವಾದ ಅಶ(ಪುಟ 17)್ವಲನು ಸುಮ್ಮನಾದನು.

 

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

 

ಎರಡನೆಯ ಬ್ರಾಹ್ಮಣ:

 

ಜಾರತ್ಕಾರವ ಆತ೯ಭಾಗನು ಯಾಜ್ಞವಲ್ಕ್ಯನನ್ನು ಪ್ರಶ್ನಿಸಿದನು.

ಗ್ರಹಗಳೆಷ್ಟು?ಅತಿಗ್ರಹಗಳೆಷ್ಟು?

 

1)ಗ್ರಹಗಳು ಎಂಟು- ಅತಿಗ್ರಹಗಳು ಎಂಟು.

1)ಪ್ರಾಣವೇ ಗ್ರಹವು-ಅಪಾನವು ಅತಿಗ್ರಹ.                

2)ವಾಕ್ಕು-ನಾಮ

3)ಜಿಹ್ವೆ-ರಸ

4)ಚಕ್ಷುಸ್ಸು -ರೂಪ

5)ಶ್ರೋತ್ರ-ಶಬ್ದ

6) ಮನಸ್ಸು-ಬಯಕೆ

7) ಕೈಗಳು-ಕಮ೯

8)ಚಮ೯-ಸ್ಪಶ೯

ಇವೇ ಎಂಟು ಗ್ರಹಗಳು ಮತ್ತು ಅತಿಗ್ರಹಗಳು.ಗ್ರಹಗಳು ಅತಿಗ್ರಹಗಳಿಂದ ಹಿಡಿಯಲ್ಪಟ್ಟಿವೆ.

 

2) ಆತ೯ಭಾಗ:ಯಾಜ್ಞವಲ್ಕ್ಯ,ಇವೆಲ್ಲವೂ ಮೃತ್ಯುವಿನ ಅನ್ನವಾಗಿದ್ದರೆ,,ಯಾವ ದೇವತೆಗೆ ಮೃತ್ಯುವು ಅನ್ನವಾಗಿದೆಯೋ ಅದು ಯಾವುದು?

ಯಾಜ್ಞವಲ್ಕ್ಯ:ಇದೆಲ್ಲವೂ ಮೃತ್ಯುವು.ಇದು ನೀರಿಗೆ ಅನ್ನವಾಗಿದೆ.ಯಾವನು ಹೀಗೆ ಅರಿತುಕೊಳ್ಳುವನೊ 

ಅವನು ಪುನಮ೯øತ್ಯುವನ್ನು ಜಯಿಸಿಕೊಳ್ಳುತ್ತಾನೆ.(ಪುಟ183)

 

3) ಗ್ರಹ-ಅತಿಗ್ರಹರೂಪವಾದ  ಬಂಧದಿಂದ ಬಿಡುಗಡೆಯನ್ನು ಹೊಂದಿದರೆ ಅಮೃತತ್ವವನ್ನು ಪಡೆಯಬಹುದು.(ಪುಟ 184)

 

4) ಗ್ರಹ-ಅತಿಗ್ರಹಗಳೆಂಬ ಬಂಧನವು ನಾಶವಾದಾಗ ಮುಕ್ತನು ಎಲ್ಲಿಗೂ ಹೋಗುವುದಿಲ್ಲ.(ಪುಟ 184)

 

5)ವಾಸನಾ  ರೂಪದಿಂದ ಮನುಷ್ಯನನ್ನು ಕೆಲಸಕ್ಕೆ ಪ್ರೇರಿಸುತ್ತವೆ  ಇಂದ್ರಿಯ-ವಿಷಯಗಳು.(ಪುಟ 184)

 

6)ವಿಷಯೇಂದ್ರಿಯಗಳೆಲ್ಲವೂ  ಪರಬ್ರಹ್ಮದಲ್ಲಿ ಏಕೀಭಾವವನ್ನು ಪಡೆಯುತ್ತವೆ.(ಪುಟ 184)

 

6) ಕಲಾಶಬ್ದವಾಚ್ಯವಾಗಿರುವ ಪ್ರಾಣಗಳು  ಪರಮಾತ್ಮನಲ್ಲಿ ಲಯಹೊಂದುತ್ತವೆ.(ಪ್ರಶ್ನೋಪನಿಷತ್ತು 6,5)

 

7) ಆತ೯ಭಾಗ:ಯಾಜ್ಞವಲ್ಕ್ಯ, ಪುರುಷನು ಮೃತನಾದಾಗ ಇವನನ್ನು ಬಿಡದಿರುವುದು ಯಾವುದು??

ಯಾಜ್ಞವಲ್ಕ್ಯ:ನಾಮವು.ನಾಮವೇ ಅನಂತವು. ವಿಶ್ವೇದೇವತೆಗಳು ಅನಂತರು.ಯಾವನು ಹೀಗೆ ಅರಿಯುತ್ತಾನೆಯೋ ಅವನು ಅಂತಹ ಜ್ಞಾನದಿಂದ ಅನಂತವಾದ ಲೊಕವನ್ನೇ ಜಯಿಸುತ್ತಾನೆ.(ಪುಟ 185)

 

8) ಕಾಮಕಮಾ೯ದಿಗಳೆಲ್ಲ ನಾಶವಾದರೂ  ಕೇವಲ ನಾಮವು ಉಳಿಯುತ್ತದೆ.ಜನರು ಇವನನ್ನು ಮುಕ್ತನೆಂದು ಹೇಳುತ್ತಾರೆ ಎಂಬುದೇ ನಾಮ-ಪದದ ಅಥ೯.ಆದರೆ ಮುಕ್ತನಿಗೆ ನಾಮವೆಂಬುದೂ ಇಲ್ಲ.(ಪುಟ 185)

 

)ಆತ೯ಭಾಗ:ಯಾಜ್ಞವಲ್ಕ್ಯ,ಮೃತನಾದ ಪುರುಷನ ವಾಕ್ಕು  ಅಗ್ನಿಯಲ್ಲಿಯೂ,ಪ್ರಾಣವು ವಾಯುವಿ

ನಲ್ಲಿಯೂ,ಚಕ್ಷುಸ್ಸು ಆದಿತ್ಯನಲ್ಲಿಯೂ,ಮನಸ್ಸು ಚಂದ್ರನಲ್ಲಿಯೂ,ಶ್ರೋತ್ರವು ದಿಕ್ಕುಗಳಲ್ಲಿಯೂ, ಶರೀರವು ಪೃಥ್ವಿಯಲ್ಲಿಯೂ,ಆತ್ಮನ ಅಧಿಷ್ಠಾನವಾದ ಹೈದಯಾಕಾಶವು ಆಕಾಶದಲ್ಲಿಯೂ,ರೋಮಗಳು ಮೂಲಿಕೆಗಳಲ್ಲಿಯೂ,ಕೂದಲುಗಳು ವನಸ್ಪತಿಗಳಲ್ಲಿಯೂ ಲಯವಾದಾಗ  ರಕ್ತವೂ ರೇತಸ್ಸೂ ನೀರಿನಲ್ಲಿ ಇಡಲ್ಪಟ್ಟಾಗ ಪುರುಷನು ಎಲ್ಲಿರುತ್ತಾನೆ?

 

ಯಾಜ್ಞವಲ್ಕ್ಯ:ಆತ೯ಭಾಗ ಕೈಯನ್ನು ಕೊಡು,ನಾವೇ ವಿಷಯವನ್ನೆಲ್ಲ ನಿಣ೯ಯಿಸೋಣ,ಜನಸಂದಣಿಯಲ್ಲಿ ಇದನ್ನು ಮಾಡಲಾಗದು.

ಅವರಿಬ್ಬರೂ ಹೊರಗೆ ಹೋಗಿ ವಿಚಾರಮಾಡಿದರು..ಕಮ೯ವನ್ನೇ ಅವರು ಮಾತನಾಡಿದ್ದು.ಕಮ೯ವನ್ನೇ ಅವರು ಪ್ರಶಂಸಿಸಿದ್ದು.ಆದುದರಿಂದ ಮನುಷ್ಯನು ಪುಣ್ಯಕಮ೯ದಿಂದ ಪುಣ್ಯನಾಗುತ್ತಾನೆ.ಪಾಪ ಕಮ೯ದಿಂದ ಪಾಪಿಯಾಗುತ್ತಾನೆ. ಆಗ ಜಾರತ್ಕಾರವ ಆತ೯ಭಾಗನು ಸುಮ್ಮನಾದನು.(ಪುಟ 187)

 

10)ಪುನಃ ಪುನಃ ಗ್ರಹ-ಅತಿಗ್ರಹ ರೂಪವಾದ  ಇಂದ್ರ್ಯ-ವಿಷಯ ಸಂಘಾತವನ್ನು ತೆಗೆದುಕೊಳ್ಳಲು ಕಮ೯ವೇ ಕಾರಣವೆಂದು ನಿಣ೯ಯಿಸಿದರು(ಪುಟ 187)

 

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

 

ಮೂರನೆಯ ಬ್ರಾಹ್ಮಣ:

 

1)ಆಗ ಭುಜ್ಯು ಲಾಹ್ಯಾಯನಿಯು ಅವನನ್ನು ಪ್ರಶ್ನಿಸಿದನು.'ಯಾಜ್ಞವಲ್ಕ್ಯ, ನಾವು ಅಧ್ಯಯನಕ್ಕೋಸ್ಕರ ವ್ರತಾಚಾರಿಗಳಾಗಿ ಪಯ೯ಟನೆ ಮಾಡುತ್ತಾ,ಪತಂಜಲ ಕಾಶ್ಯಪನ ಮನೆಗೆ ಬಂದೆವು.ಅವನ ಮಗಳು ಒಬ್ಬ ಗಂಧವ೯ನಿಂದ ಹಿಡಿಯಲ್ಪಟ್ಟಿದ್ದಳು.ನಾವು ಅವನನ್ನು ಪ್ರಶ್ನಿಸಿದೆವು."ನೀನು ಯಾರು?".ನಾನು "ಅಂಗಿರಸ ಸುಧನ್ವನು"ಎಂದು ಅವನು ಹೇಳಿದನು.ನಾವು ಅವನನ್ನು ಕುರಿತು ಲೋಕಗಳ ಅಂತರವನ್ನು ಕೇಳಿದಾಗ, ಅವನಿಗೆ ಹೇಳಿದೆವು:'ಪಾರಿಕ್ಷಿತರು ಎಲ್ಲಿಗೆ ಹೋದರು?" ಯಾಜ್ಞವಲ್ಕ್ಯ,ನಾನು ನಿನ್ನನ್ನು ಕೇಳುತ್ತೇನೆ

ಪಾರಿಕ್ಷಿತರು ಎಲ್ಲಿಗೆ ಹೋದರು?ಎಂಬುದನ್ನು ಹೇಳು.(ಪುಟ 18)

 

2) ಉಪಾಸನಾ ರಹಿತ ಕಮ೯ವು ಮೋಕ್ಷಪ್ರದವಲ್ಲ ಎಂಬುದನ್ನು ತಿಳಿಸಲು ಬ್ರಾಹ್ಮಣವು ಬಂದಿದೆ.

(ಪುಟ 18)

 

3)ಅಶ್ವಮೇಧ ಯಾಗವನ್ನು ಮಾಡಿದ ಪರೀಕ್ಷಿತನ ವಂಶಜರು.(ಪುಟ 18)

 

4)ಯಾಜ್ಞವಲ್ಕ್ಯ:ಅಶ್ವಮೇಧ ಯಾಜಿಗಳು ಎಲ್ಲಿಗೆ ಹೋಗುವರೊ ಅಲ್ಲಿಗೆ ಪಾರಿಕ್ಷಿತರು ಹೋದರೆಂದು  ಗಂಧವ೯ನು ನಿನಗೆ ಹೇಳಿಯೇ ಇರಬೇಕು.(ಪುಟ 10) 

 

5)ಭುಜ್ಯು: 'ಅಶ್ವಮೇಧಯಾಜಿಗಳು ಎಲ್ಲಿಗೆ ಹೋಗುತ್ತಾರೆ?'

 

ಯಾಜ್ಞವಲ್ಕ್ಯ: ಸೂಯ೯ನ ರಥವು ಒಂದು ದಿನದಲ್ಲಿ  ಎಷ್ಟು ದೇಶವನ್ನು ಸುತ್ತುವುದೊ ಅದರ ಮೂವತ್ತೆರಡರಷ್ಟು ಲೋಕವು. ಅದರ ಸುತ್ತಲೂ ಅದರ ಎರಡರಷ್ಟು ಪೃಥ್ವಿಯು ಸುತ್ತಿಕೊಂಡಿದೆ.ಪೃಥ್ವಿಯ ಸುತ್ತಲೂ ಅದರ ಎರಡರಷ್ಟು  ಸಮುದ್ರವು ಸುತ್ತಿಕೊಂಡಿದೆ.ಈಗ ಕ್ಷೌರಕತ್ತಿಯ ಅಲಗಿನಂತೆ  ಅಥವಾ ನೊಣದ ರೆಕ್ಕೆಯಂತೆ (ಬ್ರಹ್ಮಾಂಡ ಕಪಾಲಗಳ)ಸಂಧಿಯಲ್ಲಿ  ಅವಕಾಶ ಅಥವಾ ಹಾದಿಯಿದೆ.ಅದರ ಮೂಲಕ ಪರೀಕ್ಷಿತರು ಹೋಗುತ್ತಾರೆ.ಅಗ್ನಿಯು ಗಿಡುಗನಾಗಿ  ಅವರನ್ನು ವಾಯುವಿಗೆ ಕೊಡುತ್ತಾನೆ.ವಾಯುವು ತನ್ನಲ್ಲಿ ಇಟ್ಟುಕೊಂಡು  ಅಶ್ವಮೇಧವಾಜಿಗಳು ಇರುವಲ್ಲಿಗೆ ಹೋಗುತ್ತಾನೆ.(ಪುಟ 11)

 

6) ವಾಯುವೇ ವ್ಯಷ್ಟಿ ವಾಯುವೇ ಸಮಷ್ಟಿ (ಪುಟ 11)

 

7)ಇಲ್ಲಿ ( ಲೋಕದಲ್ಲಿ)  ಪ್ರಾಣಿಗಳು ತಮ್ಮ ಕಮ೯ಫಲವನ್ನು ಉಪಭೋಗಿಸುತ್ತವೆ.(ಅನುಭವಿಸುತ್ತವೆ)ಆದುದರಿಂದ ಇದಕ್ಕೆ ಲೋಕವೆಂದು ಹೆಸರು.(ಪುಟ11)

 

8)ವ್ಯಷಿÂ್ಟ ರೂಪದಿಂದ  ವಾಯುವು ಪ್ರತಿಯೊಬ್ಬರಲ್ಲಿಯು ಇರುತ್ತಾನೆ.ಸಮಷ್ಟಿ ರೂಪದಿಂದ  ಇಡಿಯ ಜಗತ್ತನ್ನು ವ್ಯಾಪಿಸಿಕೊಂಡಿರುತ್ತಾನೆ.ಉಪಾಸನಾ  ಸಹಿತವಾದ ಕಮ೯ದಿಂದ ಪುರುಷನು  ವಾಯುವಿನೊಂದಿಗೆ ತಾದಾತ್ಮ್ಯವನ್ನು ಹೊಂದುತ್ತಾನೆ.ಇದು ಮೋಕ್ಷವಲ್ಲ.(ಪುಟ 10)

 

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

 

ನಾಲ್ಕನೆಯ ಬ್ರಾಹ್ಮಣ:

1)ಉಷಸ್ತ ಚಾಕ್ರಾಯಣನು ಯಾಜ್ಞವಲ್ಕ್ಯ ನನ್ನು ಪ್ರಶ್ನಿಸಿದನು.'ಯಾಜ್ಞವಲ್ಕ್ಯ,ಸಾಕ್ಷಾತ್ತಾಗಿ ಅಪರೋಕ್ಷವಾಗಿ  ಇರುವ ಬ್ರಹ್ಮವನ್ನು-ಸವಾ೯ಂತವ೯ತಿ೯ಯಾದ  ಆತ್ಮನನ್ನು ಅತ್ಮನನ್ನು -ಸರಿಯಾಗಿ ತಿಳಿಸು.'

ಸವಾ೯ಂತವ೯ತಿ೯ಯಾದ ಇವನೇ ನಿನ್ನ ಆತ್ಮನು.ಯಾವನು ಪ್ರಾಣದ ಮೂಲಕ  ಪ್ರಾಣಕ್ರಿಯೆಯನ್ನು ಮಾಡುತ್ತಾನೆಯೋ,ಸವಾ೯ಂತಯಾ೯ಮಿಯಾದ ಅವನೇ ನಿನ್ನ ಆತ್ಮನು.ಯಾವನು ಉಪಾನದಿಂದ  ಉಪಾನ ಕ್ರಿಯೆ ಮಾಡುತ್ತಿರುವನೊ,ಸವಾ೯ಂತರನಾದ ಅವನೆ ನಿನ್ನ ಆತ್ಮನು.(ಪುಟ 13)

 

2)ಆತ್ಮನು ಕ್ರಿಯಾ ಕಾರಕಗಳಿಲ್ಲದ  ನಿರುಪಾಧಿಕ ರೂಪನೆಂದು ಅರಿತುಕೊಂಡರೆ  ಹಿಂದೆ ಹೇಳಿದ ಬಂಧನದಿಂದ ಮುಕ್ತನಾಗುತ್ತಾನೆ.(13)

 

3)ಉಷಸ್ತ   ಚಾಕ್ರಾಯಣ:ಯಾಜ್ಞವಲ್ಕ್ಯ,ಯಾವ ಆತ್ಮನು ಸವಾ೯ಂತರನು?(ಪುಟ 14)

 

ಯಾಜ್ಞವಲ್ಕ್ಯ: ದೃಷ್ಟಿಯ ದೃಷ್ಟøವನ್ನು ನೀನು ನೋಡಲಾರೆ.ಶ್ರವಣದ ಶ್ರೋತ್ರವನ್ನು ನೀನು ಕೇಳಲಾರೆ.ಮನನದ ಮಂತೃವನ್ನು ನೀನು ಯೋಚಿಸಲಾರೆ.ವಿಜ್ಞಾನದ ವಿಜ್ಞಾತೃವನ್ನು ನೀನು ಅರಿಯಲಾರೆ.ಸವಾ೯ಂತವ೯ತಿ೯ಯಾದ ಇವನೇ ನಿನ್ನ ಆತ್ಮನು.ಆತ್ಮನಿಗಿಂತ ಭಿನ್ನವಾದುದೆಲ್ಲ ನಶ್ವರವಾದುದು(14)

 

4)ಆತ್ಮನನ್ನು ಗೋವು ,ಅಶ್ವ ಇವುಗಳಂತೆ ವಿಷಯೀಕರಿಸಿ ಅರಿಯಲು ಸಾಧ್ಯವಿಲ್ಲ.ಜ್ಞಾನದ ದ್ವಾರಗಳಾದ ದೃಷ್ಟಿ,ಶ್ರವಣ ಮೊದಲಾದವು ಆತ್ಮನಲ್ಲಿಯೇ ಅಡಗಿರುವುದರಿಂದ ಯಾವುದರ ಮೂಲಕ ಅವನನ್ನು ನೋಡುತ್ತೀಯೆ ಅಥವಾ ಕೇಳುತ್ತೀಯೆ?(ಪುಟ 14)

 

5)ದೃಷ್ಟಿಯು ಎರಡು ವಿಧ:ಲೌಕಿಕ ದೃಷ್ಟಿ ಮತ್ತು ಪಾರಮಾಥಿ೯ಕ ದೃಷ್ಟಿ.ಕಣ್ಣಿನೊಂದಿಗೆ ಕೂಡಿರುವ ಅಂತಃಕರಣ ವೃತ್ತಿಯು ಲೌಕಿಕ ದೃಷ್ಟಿ.ಆತ್ಮನ ಸ್ವಾಭಾವಿಕ ದೃಷ್ಟಿಯು ಪಾರಮಾಥಿ೯ಕವು.ಇದು ದೃಷ್ಟøವಾದ ಆತ್ಮನ ಸ್ವರೂಪವಾಗಿರುವುದರಿಂದ ಹುಟ್ಟುವುದೂ ಇಲ್ಲ ನಾಶವಾಗುವುದೂ ಇಲ್ಲ.(ಪುಟ 15)

 

6)ನಾಶರಹಿತನೂ ಕೂಟಸ್ಥನೂ ಆದ ಆತ್ಮನೊಬ್ಬನೇ ಎಲ್ಲದರಲ್ಲಿಯೂ ಇದ್ದಾನೆ.(ಪುಟ 15)

 

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

 

ಐದನೆಯ ಬ್ರಾಹ್ಮಣ:

 

ಕಹೋಲ ಕೌಷೀತಕೇಯನು ಪ್ರಶ್ನಿಸಿದನು: ಯಾಜ್ಞವಲ್ಕ್ಯ,ಸಾಕ್ಷಾತ್ತಾಗಿ ಅಪರೋಕ್ಷವಾಗಿರುವ  ಬ್ರಹ್ಮವನ್ನು-ಸವಾ೯ಂತವ೯ತಿ೯ಯಾದ ಆತ್ಮನನ್ನು -ನನಗೆ ಸರಿಯಾಗಿ ತಿಳಿಸು.

 

ಯಾಜ್ಞವಲ್ಕ್ಯ: 'ಸವಾ೯ಂತವ೯ತಿ೯ಯಾದ ಇವನೇ ನಿನ್ನ ಆತ್ಮನು'.

ಕಹೋಲ: 'ಯಾವ ಆತ್ಮನು ಸವಾ೯ಂತರನು?"

 

ಯಾಜ್ಞವಲ್ಕ್ಯ:ಯಾವನು ಶೋಕಮೋಹಗಳನ್ನೂ,ಹಸಿವು ಬಾಯಾರಿಕೆಗಳನ್ನೂ ,ಮುಪ್ಪು ಮರಣಗಳನ್ನೂ ದಾಟಿರುವನೊ ಅವನು.ಅಂತಹ ಆತ್ಮನನ್ನೇ ಅರಿತುಕೊಂಡು  ಬ್ರಾಹ್ಮಣರು ಪುತ್ರರಲ್ಲಿ,ವಿತ್ತದಲ್ಲಿ,ಲೋಕಗಳಲ್ಲಿ  ಇರುವ ಕಾಮನೆಯನ್ನು ಬಿಟ್ಟು, ಭಿಕ್ಷಾಚಯ೯ವನ್ನು ಮಾಡುತ್ತಾರೆ.ಯಾವುದು ಪುತ್ರಕಾಮನೆಯೊ  ಅದು ವಿತ್ತಕಾಮನೆ,ಯಾವುದು ವಿತ್ತಕಾಮನೆಯೊ ಅದು ಲೋಕಕಾಮನೆ.ಏಕೆಂದರೆ ಇವೆರಡೂ ಕಾಮನೆಯೇ ಅಗಿರುತ್ತವೆ.ಆದುದರಿಂದ ಬ್ರಾಹ್ಮಣನು ಆತ್ಮಜ್ಞಾನವನ್ನು  ಪೂಣ೯ವಾಗಿ ಅರಿತುಕೊಂಡು

ಅದರ ಬಲದಿಂದ ನಿಲ್ಲಲು ಯತ್ನಿಸಬೇಕು(ಬಯಸಬೇಕು). ಬಲವನ್ನೂ  ಆತ್ಮಜ್ಞಾನವನ್ನೂ  ನಿಶ್ಯೇಷವಾಗಿ ಅರಿತುಕೊಂಡು ಮುನಿಯಗುತ್ತಾನೆ.ಮೌನವನ್ನೂ ಅಮೌನವನ್ನೂ  ನಿಶ್ಯೇಷವಾಗಿ ಅರಿತುಕೊಂಡು ಬ್ರಾಹ್ಮಣನಾಗುತ್ತಾನೆ. ಬ್ರಾಹ್ಮಣನು ಹೇಗೆ ಅಚರಿಸುತ್ತಾನೆ??ಅಥವಾ ಅವನು ಹೇಗೆ ಅಚರಿಸಿದರೂ ಹೀಗೆಯೇ ಇರುತ್ತಾನೆ.(ಪುಟ18)

 

ಬ್ರಹ್ಮನಿಷ್ಠೆಯನ್ನು ಬಿಟ್ಟರೆ ಉಳಿದೆಲ್ಲವೂ ನಶ್ವರವು೯ಪುಟ 18)

 

ಪ್ರಾಣನ ವಿಶೇಷಣಗಳು-ಹಸಿವು ಬಾಯಾರಿಕೆ

ಮನಸ್ಸಿನ ವಿಶೇಷಗಳು-ಶೋಕ ಮೋಹಗಳು

 

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

 

ಆರನೆಯ ಬ್ರಾಹ್ಮಣ:(ಅಂತಯಾ೯ಮಿ)

1)ಗಾಗಿ೯ ವಾಚಕ್ನವಿಯು ಇವನನ್ನು ಪ್ರಶ್ನಿಸಿದಳು;'ಯಾಜ್ಞವಲ್ಕ್ಯ,ಇದೆಲ್ಲವೂ ನೀರಿನಿಂದ ವ್ಯಾಪ್ತವಾಗಿದ್ದರೆ ನೀರು ಯಾವುದರಿಂದ ವ್ಯಾಪ್ತವಾಗಿದೆ?(ಪುಟ 200)

 

1) ನೀರು ವಾಯುವಿನಿಂದ2) ವಾಯುವು ಅಂತರಿಕ್ಷಲೋಕದಿಂದ 3)ಅಂತರಿಕ್ಷವು ಗಂಧವ೯ ಲೋಕದಿಂದ 4)ಗಂಧವ೯ ಲೋಕವು ಆದಿತ್ಯ ಲೋಕದಿಂದ 5)ಆದಿತ್ಯ ಲೋಕವು ಚಂದ್ರಲೋಕದಿಂದ 6)ಚಂದ್ರಲೋಕವು ನಕ್ಷತ್ರ ಲೋಕದಿಂದ 7)ನಕ್ಷತ್ರಲೋಕವು ದೇವಲೋಕದಿಂದ 8) ದೇವಲೋಕವು ಇಂದ್ರಲೋಕದಿಂದ )ಇಂದ್ರಲೋಕವು ಪ್ರಜಾಪತಿ ಲೋಕದಿಂದ 10)ಪ್ರಜಪತಿ ಲೋಕವು ಬ್ರಹ್ಮಲೋಕದಿಂದ ಎಂದು ಯಾಜ್ಞವಲ್ಕ್ಯನು ಗಾಗಿ೯ಗೆ ಹೇಳಿದನು.(ಪುಟ 200)

 

2)'ಬ್ರಹ್ಮಲೋಕವು ಯಾವುದರಿಂದ  ವ್ಯಾಪ್ತವಾಗಿದೆ' ಎಂದು ಗಾಗಿ೯ಯು ಕೇಳಿದಳು.

'ಗಾಗಿ೯ ನಿನ್ನ ತಲೆಯು ಬಿದ್ದು ಹೋಗದಿರಬೇಕಾದರೆ ಅತಿಪ್ರಶ್ನೆಯನ್ನು ಮಾಡಬೆಡ.ಪ್ರಶ್ನೆಯ ವಿಷಯವನ್ನು ಮೀರಿರುವ ದೇವತೆಯುನ್ನು ಕುರಿತು ಅತಿಪ್ರಶ್ನೆ ಮಡುತ್ತಿರುವೆ' ಎಂದು ಹೇಳಿದನು.

ಗಾಗಿ೯ ವಾಚಕ್ನವಿಯು  ಸುಮ್ಮನಾದಳು.

 

3)ದೇವತೆಯ ಸ್ವರೂಪವನ್ನು ಅನುಮಾನ ಪ್ರಮಾಣದಿಂದ ಅರಿತುಕೊಳ್ಳಲು ಸಾಧ್ಯವಿಲ್ಲ. ಶಾಸ್ತ್ರಾಚಾಯ೯ರಿಂದಲೇ ಅರಿತುಕೊಳ್ಳಬೇಕು.(ಪುಟ 201)

 

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

 

 

ಏಳನೆಯ ಬ್ರಾಹ್ಮಣ:(ಅಂತಯಾ೯ಮೀ ಬ್ರಾಹ್ಮಣ)

 

 

1) ಉದ್ಧಾಲಕ ಅರುಣಿಯು ಅವನನ್ನು ಪ್ರಶ್ನಿಸಿದನು:' ಯಾಜ್ಞವಲ್ಕ್ಯ ,ಮದ್ರ ದೇಶದಲ್ಲಿರುವ ಪತಂಚಲ ಕಾಪ್ಯನ ಮನೆಯಲ್ಲಿ ಯಜ್ಞ ಶಾಸ್ತ್ರವನ್ನು ಅಧ್ಯಯನ ಮಾಡುತ್ತಾಇದ್ದೆವು.ಅವನ ಭಾಯೆ೯ಯು ಗಂಧವ೯ನಿಂದ ಹಿಡಿಯಲ್ಪಟ್ಟಿದ್ದಳು."ನೀನು ಯಾರು?" ಎಂದು ನಾವು ಅವನನ್ನು ಕೇಳಿದೆವು.'ನಾನು ಕಬಂಧ ಅಥವ೯ಣನು' ಎಂದು ಅವನು ಹೇಳಿದನು.

 

ಗಂಧವ೯ನು ಅವನು ಸವ೯ವಿದನು."ಗಂಧವ೯ನು ಎರಡನ್ನೂ ಅವರಿಗೆ ಹೇಳಿದನು.ಅದನ್ನು ನಾನು ಅರಿತಿರುವೆನು.ಹೇಳಿದನು."ಕಾಪ್ಯ ಯಾವನು ಒಳಗಿದ್ದುಕೊಂಡು  ಲೋಕವನ್ನೂ ಪರಲೋಕವನ್ನೂ  ಸವ೯ ಪ್ರಾಣಿಗಳನ್ನು ನಿಯಮಿಸುತ್ತಾನೆಯೋ ಅಂತಯಾ೯ಮಿಯನ್ನು ತಿಳಿದಿದ್ದೀಯಾ?"  "ಭಗವಮತನೆ ನಾನು ಅವನನ್ನು ತಿಳಿಯೆನು" ಎಂದು ಪತಂಜಲ ಕಾಪ್ಯನು  ಹೇಳಿದನು.ಗಂಧವ೯ನು  ಅವನನ್ನೂ  ಸೂತ್ರವನ್ನೂ ಅಂತಯಾ೯ಮಿಯನ್ನೂ  ಹೀಗೆ ಅರಿತುಕೊಂಡಿರುವನೊ  ಅವನು ಬ್ರಹ್ಮವಿದನುಅವನು ಲೋಕವಿದನು.ಅವನು ದೇವವಿದನು. ಅವನು ವೇದ ವಿದನು.ಅವನು ಭೂತವಿದನು. ಅವನು ಅತ್ಮವಿದನು.ಅವನು ಸಯ೯ವಿದನು"ಗಂಧವ೯ನು ಎರಡನ್ನೂ ಅವರಿಗೆ ಹೇಳಿದನು.ಅದನ್ನು ನಾನು ಅರಿತಿರುವೆನು.ಯಜ್ಞವಲ್ಕ್ಯ  ಸೂತ್ರವನ್ನೂ  ಅಂತಯಾ೯ಮಿಯನ್ನೂ  ಅರಿತುಕೊಳ್ಳದೆ ಬ್ರಹ್ಮವಿದರ ಸೊತ್ತಾದ ಗೂವುಗಳನ್ನು  ಹೊಡೆದುಕೊಂಡು ಹೋದರೆ ನಿನ್ನ ತಲೆಯು ಬಿದ್ದು ಹೋಗುವುದು.

(ಪುಟ 204)

ಯಾಜ್ಞವಲ್ಕ್ಯ:ನಾನು ಆಸೂತ್ರವನ್ನೂ ಅಂತಯಾ೯ಮಿಯನ್ನೂ ಅರಿತಿರುತ್ತೇನೆ.

ವಯುವೇ ಆಸೂತ್ರವು.ವಾಯುವೆಂಬ ಸೂತ್ರದಿಂದಲೇ ಲೋಕವೂ  ಪರಲೋಕವೂ ಎಲ್ಲಾ ಪ್ರಾಣಿಗಳೂ ಪೋಣಿಸಲ್ಪಟ್ಟಿವೆ.(ಪುಟ 206)

 

'ಅಂತಯಾ೯ಮಿ' ಎಂದರೆ ಎಲ್ಲದರ ಒಳಗಿದ್ದು ನಿಯಮಿಸುವವನು.

1) ಯಾವನು ಪೃಥ್ವಿಯಲ್ಲಿರುವವನಾಗಿ ಪೃಥ್ವಿಯ ಒಳಗಿರುವನೊ,ಯಾವನನ್ನು ಪೃಥ್ವಿಯು ತಿಳಿಯದೊ,ಯಾವುದು ಪೃಥ್ವಿಯ ಶರೀರವೂ ಆಗಿಹುದೊ ,ಒಳಗಿದ್ದುಕೊಂಡು ಪೃಥ್ವಿಯನ್ನು ನಿಯಮಿಸುವನೊ,ಅವನೇ ಅಂತಯಾ೯ಮಿಯು.ನಿನ್ನ ಅಮೃತನಾದ ಆತ್ಮನು.(ಪುಟ207)

ಇದೇ ರೀತಿ ನೀರು,ಅಗ್ನಿ,ಅಂತರಿಕ್ಷ,ವಾಯು ,ದ್ಯುಲೋಕ,ಆದಿತ್ಯ ಲೋಕ,ದಿಕ್ಕುಗಳು,ಚಂದ್ರನಕ್ಷತ್ರ,ಆಕಾಶ,ತಮಸ್ಸು,ತೇಜಸ್ಸು,ಸವ೯ ಪ್ರಾಣಿಗಳು,ಘ್ರಾಣದಲ್ಲಿ,ವಾಕ್ಕಿನಲ್ಲಿ,ಕಣ್ಣಿನಲ್ಲಿ,ಶ್ರೋತ್ರದಲ್ಲಿ,ಮನಸ್ಸಿನಲ್ಲಿ,ಚಮ೯ದಲ್ಲಿ,ಬುದ್ಧಿಯಲ್ಲಿ,ರೇತಸ್ಸಿನಲ್ಲಿ ಮೊದಲಾದವುಗಳ ವಿಷಯದಲ್ಲಿಯೂ ತಿಳಿದುಕೊಳ್ಳಬೇಕು.

(ಪುಟ 207)

2) ಇನ್ನೊಂದು ಉದಾಹರಣೆ:

ಯಾವನು ನೀರಿನಲ್ಲಿರುವವನಾಗಿ ನೀರಿನ ಒಳಗಿರುವನೊ,ಯಾವನನ್ನು ನೀರು ತಿಳಿಯದೊ,ಯಾವನಿಗೆ ನೀರು ಶರೀರವೊ,ಯಾವನು ಒಳಗಿದ್ದುಕೊಂಡು ನೀರನ್ನು ನಿಯಮಿಸುವನೊ,ಅವನೇ ಅಂತಯಾ೯ಮಿಯು.ನಿನ್ನ ಅಮೃತನಾದ ಆತ್ಮನು.ಇದು ಉಳಿದ ಎಲ್ಲಾ ವಿಷಯಗಳಿಗೂ ಅನ್ವಯಿಸುತ್ತದೆ.(ಪುಟ 207)

 

        ಅವನು ನೋಡಲ್ಪಡುವುದಿಲ್ಲ.ಆದರೆ ಸಾಕ್ಷಿಯು.ಅವನು ಕೇಳಲ್ಪಡುವುದಿಲ್ಲ ಆದರೆ ಶ್ರೋತ್ರವು.ಅವನು ಮನಸ್ಸಿಗೆ ವಿಷಯನಲ್ಲ.ಅದರೆ ಮಂತೃವು.ಅವನು ತಿಳಿಯಲ್ಪಡುವುದಿಲ್ಲ.ಅದರೆ ತಿಳಿಯುವವನು.ಅವನಿಗಿಂತ ಬೇರೆಯಾದ ಸಾಕ್ಷಿಯಿಲ್ಲ..ಅವನಿಗಿಂತ  ಬೇರೆಯಾದ ಶ್ರೋತ್ರವಿಲ್ಲ.ಅವನಿಗಿಂತ ಬೇರೆಯಾದ ಮಂತೃವಿಲ್ಲ.ಅವನಿಗಿಂತ ಬೇರೆಯಾದ ಅರಿಯುವವನಿಲ್ಲ.ಇವನೇ ಅಂತಯಾ೯ಮಿಯು.ನಿನ್ನ ಅಮೃತನಾದ ಆತ್ಮನು.ಇವನಿಗಿಂತ ಭಿನ್ನವಾದುದೆಲ್ಲ ನಶ್ವರವು.ಆಗ ಉದ್ಧಾಲಕ ಅರುಣಿಯು ಸುಮ್ಮನಾದನು.(ಪುಟ 216)

 

ಅಂತಯಾ೯ಮಿಯು  ದೃಗ್ರೂಪದಿಂದ ಕಣ್ಣಿನಲ್ಲಿ ಸನ್ನಿಹಿತವಾಗಿರುವುದರಿಂದ ಅವನೇ ಸಾಕ್ಷಿಯಾಗಿರುತ್ತಾನೆ.

ಅವನು ಶ್ರವಣಶಕ್ತಿಯುಳ್ಳವನು.ಸವ೯ ಶ್ರೋತೃಗಳಲ್ಲಿ ಸನ್ನಿಹಿತನಾಗಿರುವುದರಿಂದಶ್ರೋತೃವಾಗಿರುತ್ತಾನೆ.

(ಪುಟ 216)

 

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

 

ಎಂಟನೆಯ ಬ್ರಾಹ್ಮಣ:

 

1) ಗಾಗಿ೯ವಾಚಕ್ನವಿಯು ಹೇಳಿದಳು:'ಬ್ರಾಹ್ಮಣರೆ,ನಿಮ್ಮ ಅನುಮತಿಯಿಂದ ಎರಡು ಪ್ರಶ್ನೆಗಳನ್ನು ಇವನಿಗೆ ಹಾಕುತ್ತೇನೆ.ಇವನು ಅವುಗಳಿಗೆ ಉತ್ತರವನ್ನು ಕೊಡಬಲ್ಲನಾದರೆ  ನಿಮ್ಮಲ್ಲಿ ಯಾವನೂ   ಎಂದಿಗೂ  ಇವನನ್ನು ಬ್ರಹ್ಮವಾದದಲ್ಲಿ ಜಯಿಸನಾರನು.(ಪುಟ 217)

 

ಯಾಜ್ಞವಲ್ಕ್ಯ :  'ಪ್ರಶ್ನಿಸು ಗಾಗಿ೯'.

ಈಗ ಹಸಿವು ಮೊದಲಾದವುಗಳಿಲ್ಲದ ನಿರುಪಾಧಿಕವೂ  ಸಾಕ್ಷಾದಪರೋಕ್ಷವೂ  ಸವಾ೯ಂತರವೂ  ಆದ ಬ್ರಹ್ಮವನ್ನು  ಉಪದೇಶಿಸಲು ಬ್ರಾಹ್ಮಣವು ಆರಂಭವಾಗಿದೆ.

 

2)ಗಾಗಿ೯:ಯಾಜ್ಞವಲ್ಕ್ಯ ಯಾವುದು ದ್ಯುಲೋಕದ ಮೇಲೆ ಪೃಥ್ವಿಯ ಕೆಳಗೆ ಇರುವುದೊ,ಯಾವುದು ದ್ಯುಲೋಕ ಪೃಥ್ವಿಗಳಾಗಿವೆಯೊ  ಮತ್ತು ಅವುಗಳ ನಡುವೆ ಇರುವುದೊ ,ಯಾವುದನ್ನು ಭೂತ-ಭವಿಷ್ಯತ್-ವತ೯ಮಾನಗಳೆಂದು ಹೇಳುತ್ತಾರೊ ಸೂತ್ರವು  ಯಾವುದರಿಂದ ವ್ಯಾಪ್ತವಾಗಿದೆ?(ಪುಟ 21)

 

ಯಾಜ್ಞವಲ್ಕ್ಯ: 'ಯಾವನು ದ್ಯುಲೋಕದ ಮೇಲೆ ಮತ್ತು ಕೆಳಗೆ ಇರುವನೊ ,ಯಾವುದು ದ್ಯುಲೋಕ -ಪೃಥ್ವಿಗಳಾಗಿವೆಯೊ ಮತ್ತು ಅವುಗಳ ನಡುವೆ ಇರುವುದೊ,ಯಾವುದನ್ನು ಭೂತ-ಭವಿಷ್ಯತ್-ವತ೯ಮಾನಗಳೆಂದು ಕರೆಯುತ್ತಾರೊ ಸೂತ್ರವು  ಅವ್ಯಕ್ತವಾದ ಆಕಾಶದಿಂದ ವ್ಯಾಪ್ತವಾಗಿದೆ.(ಪುಟ 21)

 

ವ್ಯಕ್ತವಾದ ಜಗತ್ತಿಗೆ ಸೂತ್ರವೆಂದು ಹೆಸರು.(ಪುಟ 21)

 

ಗಾಗಿ೯: ನನ್ನ ಪ್ರಶ್ನೆಗೆ ಉತ್ತರವನ್ನು ಕೊಟ್ಟಿರುವ ನಿನಗೆ ನಮಸ್ಕಾರ.ಈಗ ಇನ್ನೊಂದು ಪ್ರಶ್ನೆ'.

ಯಾವುದು ದ್ಯುಲೋಕದ ಮೇಲೆ ಪೃಥ್ವಿಯ ಕೆಳಗೆ ಇರುವುದೊ,ಯಾವುದು ದ್ಯುಲೋಕ -ಪೃಥ್ವಿಗಳಾಗಿದೆಯೊ ಮತ್ತು ಅವುಗಳ ನಡುವೆ ಇರುವುದೊ,ಯವುದನ್ನು ಭೂತ -ಭವಿಷ್ಯತ್-ವತ೯ಮಾನಗಳೆಂದು ಕರೆಯುತ್ತಾರೊ, ಸೂತ್ರವು ಯಾವುದರಿಂದ ವ್ಯಾಪ್ತವಾಗಿದೆ?

 

ಯಾಜ್ಞವಲ್ಕ್ಯ:ಗಾಗಿ೯ ಯಾವುದು  ದ್ಯುಲೋಕದ ಮೇಲೆ ಪೃಥ್ವಿಯ ಕೆಳಗೆ ಇರುವುದೊ,ಯಾವುದು  ದ್ಯುಲೋಕ ಪೃಥ್ವಿಗಳಾಗಿದೆಯೊ ಮತ್ತು ಅವುಗಳ ನಡುವೆ ಇರುವುದೊ,ಭೂತ-ಭವಿಷ್ಯತ್-ವತ೯ಮಾನಗಳೆಂದು ಹೇಳುತ್ತಾರೋ  ಸೂತ್ರವು ಆಕಾಶದಿಂದ ವ್ಯಾಪ್ತವಾಗಿದೆ.(ಪುಟ 221)

 

3) ಅವ್ಯಕ್ತವಾದ ಆಕಾಶವು ಯಾವುದರಿಂದ ವ್ಯಾಪ್ತವಾಗಿದೆ.?

 

4) ಕಾಲತ್ರಯವನ್ನು ಮೀರಿದ ಆಕಾಶವನ್ನೇ ವ್ಯಾಪಿಸಿಕೊಂಡಿರುವ ಅಕ್ಷರವು ಅತ್ಯಂತ ಸೂಕ್ಷ್ಮವಾಗಿರುವುದರಿಂದ  ಅದನ್ನು ಹೇಳುವುದಕ್ಕೆ ಸಾದ್ಯವಿಲ್ಲ.ಒಂದು ವೇಳೆ ಹೇಳಲು ಯತ್ನಿಸಿದರೆ ಅವಾಚ್ಯವಾದುದನ್ನು ಹೇಳುವುದರೆ ದೋಷಕ್ಕೆ ಪಾತ್ರನಾಗುತ್ತಾನೆ.(ಪುಟ221)

 

5)ಯಾಜ್ಞವಲ್ಕ್ಯ :ಗಾಗಿ೯ ಇದೇ ಅಕ್ಷರವು ಎಂದು ಬ್ರಾಹ್ಮಣರು ಹೇಳುತ್ತಾರೆ.ಅದು ಅಸ್ಥೂಲವು,ಅನಣು,ಅಹ್ರಸ್ವವು,ಅದೀಘ೯ವು,ಅಲೋಹಿತವು,ಅಸ್ನೇಹವು,ಅಚ್ಛಾಯವು,ಅತಮಸ್ಸು,ಅವಾಯು,ಅನಾಕಾಶವು,ಅಸಂಗವು,ಅರಸವು,ಅಗಂಧವು,ಅಚಕ್ಷುಸ್ಸು,ಅಶ್ರೋತ್ರವು,ಅವಾಕ್ಕು,ಅಮನಸ್ಸು,ಅತೇಜಸ್ಸು,ಅಪ್ರಾಣವು,ಅಮುಖವು,ಅಮಾತ್ರವು,ಅನಂತರವು,ಅಬಹ್ಯವು,ಅದು ಯಾವುದನ್ನೂ ತಿನ್ನುವುದಿಲ್ಲ.ಅದನ್ನು ಯಾವುದೂ ತಿನ್ನುವುದಿಲ್ಲ.(ಪುಟ222)

 

6) ಪರಿಣಾಮವನ್ನು ಹೇಳುವ  ನಾಲ್ಕು ವಿಶೇಷಣಗಳಿಂದ(ಅಸ್ಥೂಲ,ಅನಣು,ಅಹ್ರಸ್ವ,ಅದೀಘ೯)ದ್ರವ್ಯದ ಗುಣಗಳನ್ನೆಲ್ಲ ನಿರಾಕರಿಸಿದಂತಾಯಿತು.ಅಕ್ಷರವು ದ್ರವ್ಯವಲ್ಲ ಎಂಬುದು ಅಥ೯.

(ರಸ ರೂಪ ಗಂಧ ಸ್ಪಶ೯ವಿಲ್ಲದುದು,ನಿಗು೯ಣ)(ಪುಟ 222)

 

7)ಲೋಹಿತ ಎಂದರೆ  ಕೆಂಪು ಬಣ್ಣ.(ಪುಟ 222)

 

8)ಅಕ್ಷರಕ್ಕೆ ಕಣ್ಣು ಎಂಬ ಕರಣವಿಲ್ಲ.ಕಣ್ಣಿಲ್ಲದೆ ನೋಡುತ್ತದೆ(ಪಶ್ಯತ್ಯಚಕ್ಷುಃ) (ಶ್ವೇ..3.1) (ಪುಟ 222)

 

)ಕಿವಿಯಿಲ್ಲದೆ ಕೇಳುತ್ತದೆ.( ಶೃಣೋತ್ಯಕಣ೯ಃ(ಶ್ವೇ..8.3.1)

 

10)ಅಮಾತ್ರವು ಎಂದರೆ ಅಳತೆಯಿಲ್ಲದುದು.(ಪುಟ (ಪುಟ 222)

 

11)ಅಕ್ಷರ ಅಥವಾ ಬ್ರಹ್ಮವು ಏಕಮೇವಾದ್ವಿತೀಯವಾದುದರಿಂದ  ಸವ೯ ವಿಶೇಷಣ ರಹಿತವಾಗಿದೆ.(ಪುಟ222)

 

12) ಯಾಜ್ಞವಲ್ಕ್ಯ: ಅಕ್ಷರದ ಶಾಸನದಿಂದಲೇ ಗಾಗಿ೯,ಸೂಯ೯ಚಂದ್ರರು ತಮ್ಮ ತಮ್ಮ ಸ್ಥಾನಗಳಲ್ಲಿ ನಿಲ್ಲಿಸಲ್ಪಟ್ಟಿರುತ್ತಾರೆ.; ಅಕ್ಷರದ ಪ್ರಶಾಸನದಿಂದಲೇ ,ಗಾಗಿ೯,ನಿಮಿಷಗಳು,ಮುಹೂತ೯ಗಳು,ಅಹೋರಾತ್ರಿಗಳು, ಪಕ್ಷಗಳು ಮಾಸಗಳು ವಷ೯ಗಳು ತಮ್ಮ ಸ್ಥಾನಗಳಲ್ಲಿ ನಿಮಿ೯ಸಲ್ಪಟ್ಟಿರುತ್ತವೆ; ಅಕ್ಷರ ಶಾಸನದಿಂದಲೇ ,ಗಾಗಿ೯,ಕೆಲವು ನದಿಗಳು  ಪೂವ೯ವಾಹಿನಿಗಳಾಗಿಯೂ ,ಇನ್ನು ಕೆಲವು ಪಶ್ಚಿಮವಾಹಿನಿಗಳಾಗಿಯೂ ಮತ್ತೆ ಆಯಾ  ದಿಕ್ಕುಗಳಲ್ಲಿ ಹರಿಯುತ್ತಿರುತ್ತವೆ. ಅಕ್ಷರದ(ಬ್ರಹ್ಮದ) ಶಾಸನದಿಂದಲೇ,ಗಾಗಿ೯ಮನುಷ್ಯರು ದಾನಿಗಳನ್ನು ಹೊಗಳುತ್ತಾರೆ.ದೇವತೆಗಳು ಯಜಮಾನನನ್ನೂ  ಪಿತೃಗಳು ದವೀ೯ ಹೋಮವನ್ನೂ ಅವಲಂಬಿಸಿರುತ್ತಾರೆ.(ಪುಟ 223)

 

13) ದಾನಿಗೆ ಫಲವನ್ನು ಕೊಡುವವನು ಇಲ್ಲದಿದ್ದರೆ ದನದ ಪ್ರಶಂಸೆಯನ್ನು ಯಾರೂ ಮಾಡುತ್ತಿರಲಿಲ್ಲ.ಏಕೆಂದರೆ ದಾನಿ ದಾನವನ್ನು ತೆಗೆದುಕೊಳ್ಳುವವನು ಮತ್ತು ದಾನ ಇವೆಲ್ಲವೂ ನಶ್ವರವಾದುವುಗಳು.ದಾನಿಗೂ ದಾನ ಫಲಕ್ಕೂ ಕಮ೯ಫಲವನ್ನು ಕೊಡಿಸುವವನು ಈಶ್ವರನೆಂದು ಇದರಿಂದ  ಸಿದ್ಧವಾಗುತ್ತದೆ.(ಪುಟ 224)

 

14)ಗಾಗಿ೯,ಯಾವನು ಅಕ್ಷರವನ್ನು ತಿಳಿದುಕೊಳ್ಳದೆ ಅನೇಕ ಸಹಸ್ರ ವಷ೯ಗಳವರೆಗೂ  ಲೋಕದಲ್ಲಿ ಹೋಮಮಾಡುತ್ತಾನೆಯೊ,,ಯಾಗಗಳನ್ನು ಮಾಡುತ್ತಾನೆಯೊ,ತಪಸ್ಸು ಮಾಡುತ್ತಾನೆಯೊ  ಅವನ ಕಮ೯ಫಲ ನಶ್ವರವೇ ಆಗುವುದು.ಯಾವನು ಅಕ್ಷರವನ್ನು ತಿಳಿದುಕೊಳ್ಳದೆ ಲೋಕದಿಂದ ಹೋಗುವನೊ ಅವನು ಕೃಪಣನೇ ಸರಿ.ಆದರೆ ಗಾಗಿ೯,ಯಾವನು ಅಕ್ಷರವನ್ನು ತಿಳಿದುಕೊಂಡು  ಲೋಕದಿಂದ ಹೋಗುವನೊ ಅವನು ಬ್ರಹ್ಮವಿದನು.(ಪುಟ 225)

 

15) ಕಮ೯ಫಲದ ಭೋಗವು  ಮುಗಿದ ಮೇಲೆ ಕಮ೯ವು ಕೊನೆಗಾಣುತ್ತದೆ.ಏಕೆಂದರೆ ಜನನ-ಮರಣಗಳ ಸಂಕಟ ಇವನಿಗೆ ತಪ್ಪುವುದಿಲ್ಲ(ಪುಟ 225)

 

16) ಅಕ್ಷರನು ನೋಡಲ್ಪಡುವುದಿಲ್ಲ. ಆದರೆ ಸಾಕ್ಷಿಯು. ಅದು ಕೇಳಲ್ಪಡುವುದಿಲ್ಲ.ಆದರೆ ಶ್ರೋತೃವು.ಅವನು ಮನಸ್ಸಿಗೆ ವಿಷಯವಲ್ಲ. ಆದರೆ ಮಂತೃವು.ಅದು ತಿಳಿಯಲ್ಪಡುವುದಿಲ್ಲ.ಆದರೆ ವಿಜ್ಞಾತೃವು ಅದಕ್ಕಿಂತ ಬೇರೆಯಾದ ಸಾಕ್ಷಿಯಿಲ್ಲ.ಅದಕ್ಕಿಂತ ಬೇರೆಯಾದ ಶ್ರೋತೃವಿಲ್ಲ.ಅದಕ್ಕಿಂತ ಬೇರೆಯಾದ ಮಂತೃವಿಲ್ಲ.ಅದಕ್ಕಿಂತ ಬೇರೆಯಾದ ವಿಜ್ಞಾತೃವಿಲ್ಲ. ಅಕ್ಷರದಿಂದಲೇ ಅವ್ಯಕ್ತವಾದ ಆಕಾಶವು  ವ್ಯಾಪ್ತವಾಗಿದೆ.(ಪುಟ 226)

 

17) ಜೀವಾತ್ಮ,ಈಶ್ವರ ಮತ್ತು ಅಕ್ಷರ(ಬ್ರಹ್ಮ) ಮೂವರಲ್ಲಿ ಯಾವ ವ್ಯತ್ಯಾಸವೂ ಇಲ್ಲ.(ಪುಟ 226)

 

18)ಗಾಗಿ೯: ಭಗವಂತರಾದ ಬ್ರಾಹ್ಮಣರೆ,ನಮಸ್ಕಾರದ ಮೂಲಕ ಯಾಜ್ಞವಲ್ಕ್ಯನಿಂದ ನೀವು ಬಿಡುಗಡೆಯನ್ನು ಹೊಂದಿದರೆ ಅದನ್ನೇ ಹೆಚ್ಚೆಂದು ತಿಳಿದುಕೊಳ್ಳಿರಿ.ನಿಮ್ಮಲ್ಲಿ ಯಾವನೂ

ಎಂದಿಗೂ ಬ್ರಹ್ಮವಾದದಲ್ಲಿ ಇವನನ್ನು ಜಯಿಸಲಾರನು.

ಅನಂತರ ವಾಚಕ್ನವಿಯು ಸುಮ್ಮನಾದಳು.(ಆಕಾಶವು ಅಕ್ಷರದಿಂದ ವ್ಯಾಪ್ತವಾಗಿದೆ.)(ಪುಟ 227)

 

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

 

ಒಂಬತ್ತನೆಯ ಬ್ರಾಹ್ಮಣ:(ವಿದಗ್ಧ-ಯಾಜ್ಞವಲ್ಕ್ಯ ಸಂವಾದ)  

 

1)ವಿದಗ್ಧ ಶಾಕಲ್ಯನು ಅವನನ್ನು ಪ್ರಶ್ನಿಸಿದನು.:'ಯಾಜ್ಞವಲ್ಕ್ಯ,ದೇವತೆಗಳು ಎಷ್ಟು?ಯಾಜ್ಞವಲ್ಕ್ಯನು  ನಿವಿತ್ತಿನ ಮೂಲಕವೇ ಇದನ್ನು ನಿಣ೯ಯಿಸಿ ಹೇಳಿದನು.ವೈಶ್ಯದೇವನ ನಿವಿತ್ತಿನಲ್ಲಿ  ಎಷ್ಟು ದೇವತೆಗಳು ಉಕ್ತರಾಗಿರುವರೊ  ಅಷ್ಟು.-ಮುನ್ನೂರ ಮೂರು ಮತ್ತು ಮೂರುಸಾವಿರದ ಮೂರು,'

 

ಯಾPಜ್ಞವಲ್ಕ್ಯ: 'ದೇವತೆಗಳು ಎಷ್ಟು?'

ಮೂವತ್ತಮೂರು

ಯಾಜ್ಞವಲ್ಕ್ಯ  ದೇವತೆಗಳು ಎಷ್ಟು?

'ಮೂರು'

ಯಾಜ್ಞವಲ್ಕ್ಯ,ದೇವತೆಗಳು ಎಷ್ಟು?

'ಎರಡು'

ಯಾಜ್ಞವಲ್ಕ್ಯ,ದೇವತೆಗಳು ಎಷ್ಟು?

'ಒಂದು'

' ಮುನ್ನೂರಮೂರು  ಮತ್ತು ಮೂರುಸಾವಿರದ ಮೂರು ದೇವತೆಗಳು ಯಾರು?

 

2) ನಿವಿತ್ ಎಂದರೆ ದೇವತೆಗಳ ಸಂಖ್ಯೆಯನ್ನು ತಿಳಿಸುವ ಕೆಲವು ಮಂತ್ರಗಳು.ಇವು ವೈಶ್ವದೇವ ಶಸ್ತದಲ್ಲಿ ಹೇಳಲ್ಪಟ್ಟಿವೆ.ದೇವತೆಗಳನ್ನು ಪ್ರಶಂಸಿಸಲು ಪ್ರಯೋಗಿಸುವ ಋಕ್ಕಿಗೆ  ಶಸ್ತವೆಂದು ಹೆಸರು.(ಪುಟ 22)

 

3)ಯಾಜ್ಞವಲ್ಕ್ಯ: ಇವು ಅವರದೇ ಆದ ಮಹಿಮೆಗಳು.ಆದರೆ ಮೂವತ್ತಮೂರು ದೇವತೆಗಳೇ ಇರುವರು.

 

ವಿದಗ್ಧ: ಮೂವತ್ತಮೂರು ದೇವತೆಗಳು ಯಾರು?

ಯಾಜ್ಞವಲ್ಕ್ಯ:ಅಷ್ಟವಸುಗಳು,ಏಕಾದಶ ರುದ್ರರು, ಮತ್ತು ದ್ವಾದಶ ಆದಿತ್ಯರು-ಇವರು ಮೂವತ್ತೊಂದು:ಇಂದ್ರನೂ ಪ್ರಜಾಪತಿಯೂ ಸೇರಿ  ಮೂವತ್ತಮೂರು ಆಗುವರು.(ಪುಟ 230)

 

ವಿದಗ್ಧ: ವಸುಗಳು ಯಾರು?

ಯಾಜ್ಞವಲ್ಕ್ಯ:ಅಗ್ನಿ,ಪೃಥ್ವಿ,ವಾಯು, ಅಂತರಿಕ್ಷ,ಆದಿತ್ಯ,ದ್ಯುಲೋಕ,,ಚಂದ್ರ  ಮತ್ತು ನಕ್ಷತ್ರಗಳು -ಇವು ವಸುಗಳು;ಏಕೆಂದರೆ ಇವುಗಳಲ್ಲಿ ಇದೆಲ್ಲವೂ ಇಡಲ್ಪಟ್ಟಿದೆ.ಆದ್ದರಿಂದ ಇವು ವಸುಗಳೆಂದು ಕರೆಯುತ್ತಾರೆ.(ಪುಟ 230)

 

4) ಜಗತ್ತೆಲ್ಲವನ್ನೂ ವಾಸಮಾಡಿಸಿ ತಾವೂ ಅದರಲ್ಲಿ ವಾಸಮಾಡುವುದರಿಂದ  ವಸುಗಳು ಎನಿಸಿದ್ದಾರೆ.

 

5) ವಿದಗ್ಧ: ರುದ್ರನು ಯಾರು?

ಯಾಜ್ಞವಲ್ಕ್ಯ:ಶರೀರದಲ್ಲಿರುವ ಹತ್ತು ಇಂದ್ರಿಯಗಳು ಮತ್ತು ಹನ್ನೊಂದನೆಯದಾದ ಮನಸ್ಸು.ಯಾವಾಗ ಇವು  ಮತ್ಯ೯ ಶರೀರದಿಂದ ಉತ್ಕ್ರಿಮಿಸುತ್ತವೆಯೋ  ಆಗ ಬಂಧುಗಳು ರೋದಿಸುವಂತೆ ಮಾಡುತ್ತವೆ. ಹೀಗೆ ಅವರನ್ನು ರೋದಿಸುವಂತೆ ಮಾಡುವುದರಿಂದ ಇವುಗಳನ್ನು ರುದ್ರರು ಎಂದು ಕರೆಯುತ್ತಾರೆ.(ಪಂಚ ಕಮೇ೯ಂದ್ರಿಯಗಳು ಪಂಚ ಜ್ಞಾನೇಂದ್ರಿಯಗಳು)

 

 

6)ಆದಿತ್ಯರು ಯಾರು?

ಯಾಜ್ಞವಲ್ಕ್ಯ:ಸಂವತ್ಸರದ ಅವಯವಗಳಾದ  ಹನ್ನೆರಡು ಮಾಸಗಳು.ಇವು ಆದಿತ್ಯರು.ಏಕೆಂದರೆ ಇವು ಇದೆಲ್ಲವನ್ನೂ ತೆಗೆದುಕೊಂಡು ಹೋಗುತ್ತದೆ.ಹೀಗೆ ಎಲ್ಲವನ್ನೂ ತೆಗೆದುಕೊಂಡು ಹೋಗುವುದರಿಂದ 'ಆದಿತ್ಯರು' ಎಂದು ಕರೆಯಲ್ಪಡುತ್ತವೆ.(ಪುಟ 232)

 

7) ಪ್ರಾಣಿಗಳ ಆಯುಸ್ಸನ್ನು  ಮತ್ತು ಕಮ೯ಫಲವನ್ನು  ತೆಗೆದುಕೊಂಡು ಹೋಗುತ್ತವೆ.ಕಾಲಗತಿಯಲ್ಲಿ ಎಲ್ಲವೂ ಸವೆಯುತ್ತವೆ.(ಪುಟ 232)

 

8)ವಿದಗ್ಧ:ಇಂದ್ರನು ಯಾರು?ಪ್ರಜಾಪತಿಯುಯಾರು?

ಯಾಜ್ಞವಲ್ಕ್ಯ: ಸಿಡಿಲನ್ನುಂಟು ಮಾಡುವ  ಮೇಘವೇ ಇಂದ್ರನು.ಯಜ್ಞವು ಪ್ರಜಾಪತಿಯು.

 

ವಿದಗ್ಧ:ಸಿಡಿಲನ್ನುಂಟು ಮಾಡುವ  ಮೇಘವು ಯಾವುದು?

ಯಾಜ್ಞವಲ್ಕ್ಯ:ಸಿಡಿಲು'

ವಿದಗ್ಧ: ಯಜ್ಞವು ಯಾವುದು?

ಯಾಜ್ಞವಲ್ಕ್ಯ:ಪಶುಗಳು

 

)ವಿದಗ್ಧ: 'ಆರು ದೇವತೆಗಳು ಯಾರು?'

ಯಾಜ್ಞವಲ್ಕ್ಯ: ಅಗ್ನಿ,ಪೃಥ್ವಿ,ವಾಯು,ಅಂತರಿಕ್ಷ,ಆದಿತ್ಯ, ದ್ಯುಲೋಕ,ಇವೇ ಆರು ದೇವತೆಗಳು.ಏಕೆಂದರೆ ಆರೇ ಎಲ್ಲ ದೇವತೆಗಳು   ಆಗಿವೆ'.(ಪುಟ 233)

(ಹಿಂದೆ ಹೇಳಿದ ಮೂವತ್ತಮೂರು ದೇವತೆಗಳು ಆರರಲ್ಲಿ ಸೇರಿದ್ದಾರೆ).

 

10) ವಿದಗ್ಧ: ' ಮೂರು ದೇವತೆಗಳು ಯಾರು'.

ಯಾಜ್ಞವಲ್ಕ್ಯ: ಮೂರು ಲೋಕಗಳೇ.ಏಕೆಂದರೆ ಇವುಗಳಲ್ಲಿ ಎಲ್ಲಾ ದೇವತೆಗಳು ಅಂತಗ೯ತರಾಗಿರುತ್ತಾರೆ..

ವಿದಗ್ಧ: ಇಬ್ಬರು ದೇವತೆಗಳು ಯಾರು?

ಯಾಜ್ಞವಲ್ಕ್ಯ: 'ಅನ್ನ ಮತ್ತು ಪ್ರಾಣ'

ವಿದಗ್ಧ: 'ಒಂದೂವರೆ ದೇವತೆಯು ಯಾರು?'

ಯಾಜ್ಞವಲ್ಕ್ಯ: ಬೀಸುವ ವಾಯು.(ಪುಟ 234)

 

11) ಪೃಥ್ವಿ+ಅಗ್ನಿ=ಮೊದಲನೇ ದೇವತೆ

ಅಂತರಿಕ್ಷ+ವಾಯು= ಎರಡನೇ ದೇವತೆ

ದ್ಯುಲೋಕ+ ಆದಿತ್ಯ=ಮೂರನೇ ದೇವತೆ.(ಪುಟ 234)

 

12) ಯಾಜ್ಞವಲ್ಕ್ಯ:'ವಾಯುವು ಒಂದೇ ಸಮನಾಗಿ ಬೀಸುತ್ತಿರುವಾಗ  ಅದು ಒಂದೂವರೆ ಹೇಗೆ ಆಗುವುದು?'.ಎಲ್ಲ ಪ್ರಾಣಿಗಳು  ಇದರ ಮೂಲಕ ಋದ್ಧಿಯನ್ನು ಪಡೆಯುತ್ತಿರುವುದರಿಂದ ಇದು ಒಂದೂವರೆ.'

ವಿದಗ್ಧ;'ಒಂದು ದೇವತೆ ಯಾರು?'

ಯಾಜ್ಞವಲ್ಕ್ಯ:ಪ್ರಾಣ,ಅದೇ ಬ್ರಹ್ಮ.ಅದನ್ನೇ 'ತ್ಯತ್' ಎಂದು ಕರೆಯುತ್ತಾರೆ(ಪುಟ 235)

 

13)ಪ್ರಾಣವೆಂದರೆ ಹಿರಣ್ಯಗಭ೯'.ಇವನು ಒಂದೇ ದೇವತೆಯಾಗಿದ್ದರೂ  ಅನಂತ ಸಂಖ್ಯಾತನಾಗಿ ವಿಸ್ತರಿಸಿರುತ್ತಾನೆ.ಒಂದೇ ದೇವತೆಗೆ ನಾಮ,ರೂಪ,ಕಮ೯,ಗುಣ,ಶಕ್ತಿ ಇವುಗಳಿಂದ ಉಂಟಾಗಿರುವ  ಭೇಧವು ಉಪಾಸಕರ ಭೇದದಿಂದ ಉಂಟಾಗಿದೆ.(ಪುಟ 235)

 

14)ತ್ಯತ್ ಶಬ್ದವು ಪರೋಕ್ಷವನ್ನು ಸೂಚಿಸುತ್ತದೆ.(ಪುಟ 235)

 

15)ವಿದಗ್ಧ:'ಯಾವನಿಗೆ ಪೃಥ್ವಿಯು ಕಣ್ಣೋ,ಯಾವನು ಮನೋ ಜ್ಯೋತಿಯೋ ಯಾವನು ಶರೀರೇಂದ್ರಿಯಗಳಿಗೆಲ್ಲ  ಆಶ್ರಯನೋ, ಪುರುಷನನ್ನು ,ಯಾಜ್ಞವಲ್ಕ್ಯಯಾವನು ಅರಿತುಕೊಂಡಿರುವನೊ  ಅವನೇ ಅರಿತಿರುವನು.'

 

ಯಾಜ್ಞವಲ್ಕ್ಯ: 'ಯಾವ ಪುರುಷನನ್ನು ಶರೀರೇಂದ್ರಿಯಗಳಿಗೆಲ್ಲ ಆಶ್ರಯನೆಂದು ಹೇಳುತ್ತೀಯೋ  ಅವನನ್ನು ಅರಿತುಕೊಂಡಿರುತ್ತೇನೆ.ಶರೀರದಲ್ಲಿರುವ ಪುರುಷನೇ ಅವನು.ಶಾಕಲ್ಯ ಇನ್ನೂ ಪ್ರಶ್ನಿಸು'.

ವಿದಗ್ಧ: 'ಅವನಿಗೆ ದೇವತೆ ಯಾರು?'

ಯಾಜ್ಞವಲ್ಕ್ಯ :'ಅನ್ನ ಕ್ಷೀರ'.(ಪುಟ 236)

 

16)ಈಗ ಪ್ರಾಣ ಬ್ರಹ್ಮದ ಎಂಟು ಪ್ರಭೇದಗಳನ್ನು  ಒಂದೊಂದಾಗಿ ಉಪಾಸನೆಗೋಸ್ಕರ ಹೇಳಿದೆ.(ಪುಟ 236)

 

17)ವಿದಗ್ಧ: 'ಯಾವನಿಗೆ ಕಾಮವೇ ಆಶ್ರಯವೊ,ಯಾವನಿಗೆ ಬುದ್ಧಿಯೆ ಕಣ್ಣೊ, ಯಾವನು ಮನೋಜ್ಯೋತಿಯೊ,ಯಾವನು ಶರೀರೇಂದ್ರಿಯಗಳಿಗೆಲ್ಲ ಆಶ್ರಯನೊ, ಪುರುಷನನ್ನು ,ಯಾಜ್ಞವಲ್ಕ್ಯ,ಯಾವನು ಅರಿತಿರುವವನೊ ಅವನೇ ಅರಿತಿರುವವನು.'

 

ಯಾಜ್ಞವಲ್ಕ್ಯ:ಯಾವ ಪುರುಷನನ್ನು ಶರೀರೇಂದ್ರಿಯಗಳಿಗೆಲ್ಲ  ಆಶ್ರಯನೆಂದು ಹೇಳುತ್ತೀಯೋ  ಅವನನ್ನು ಅರಿತುಕೊಂಡಿರುತ್ತೇನೆ.ಕಾಮಮಯನಾದ ಪುರುಷನೇ ಅವನು.ಶಾಕಲ್ಯ ಇನ್ನೂ ಪ್ರಶ್ನಿಸು.'

ವಿದಗ್ಧ:'ಅವನಿಗೆ ದೇವತೆ ಯಾರು?'

ಯಾಜ್ಞವಲ್ಕ್ಯ: 'ಸ್ತ್ರೀಯರು'(ಇವರಿಂದ ಕಾಮದ ದೀಪ್ತಿಯಾಗುವುದರಿಂದ)(ಪುಟ 237)

 

18) ವಿದಗ್ಧ:ಯಾವನಿಗೆ ರೂಪಗಳೇ ಆಶ್ರಯವೊ,ಯಾವನಿಗೆ ಚಕ್ಷುಸ್ಸು ಕಣ್ಣೊ,ಯಾವನು ಮನೋಜ್ಯೋತಿಯೊ,ಯಾವನು ಶರೀರೇಂದ್ರಿಯಗಳಿಗೆ ಆಶ್ರಯನೊ ಪುರುಷನನ್ನು ,ಯಾಜ್ಞವಲ್ಕ್ಯ ,ಯಾವನು ಅರಿತಿರುವನೊ  ಅವನೇ ಅರಿತಿರುವವನು.'

 

ಯಾಜ್ಞವಲ್ಕ್ಯ:ಯಾವ ಪುರುಷನು ಶರೀರೇಂದ್ರಿಯಗಳಿಗೆಲ್ಲ ಆಶ್ರಯನೆಂದು ಹೇಳುತ್ತೀಯೊ ಅವನನ್ನು ಅರಿತುಕೊಂಡಿರುತ್ತೇನೆ.ಆದಿತ್ಯನಲ್ಲಿರುವ ಪುರುಷನೇ ಅವನು.ಶಾಕಲ್ಯ ,ಇನ್ನೂ ಪ್ರಶ್ನಿಸು.

ವಿದಗ್ಧ: ಅವನಿಗೆ ದೇವತೆ ಯಾರು?

ಯಾಜ್ಞವಲ್ಕ್ಯ:ಸತ್ಯವು.

(ಇಲ್ಲಿ ಸತ್ಯವೆಂದರೆ ಚಕ್ಷುಸ್ಸು.ಏಕೆಂದರೆ ಶರೀರ ಸಂಬಂಧವಾದ ಚಕಕ್ಷುಸ್ಸಿನಿಂದಲೆ ಅಧಿದೈವತನಾದ  ಆದಿತ್ಯನ ಉತ್ಪತ್ತಿ.)

 

1) ವಿದಗ್ಧ:'ಯಾವನಿಗೆ ಆಕಾಶವೇ ಆಶ್ರಯವೊ,ಯಾವನಿಗೆ ಶ್ರೋತ್ರವು ಕಣ್ಣೊ,ಯವನು ಮನೋಜ್ಯೋತಿಯೊ,ಯಾವನು ಶರೀರೇಂದ್ರಿಯಗಳಿಗೆಲ್ಲ ಆಶ್ರಯನೊ, ಪುರುಷನನ್ನು  ಯಾಜ್ಞವಲ್ಕ್ಯ,ಯಾವನು ಅರಿತು ಕೊಂಡಿರುವನೊ ಅವನೆ ಅರಿತಿರುವವನು.'

 

ಯಾಜ್ಞವಲ್ಕ್ಯ:ಯಾವಪುರುಷನನ್ನು ಶರೀರೇಂದ್ರಿಯಗಳಿಗೆಲ್ಲ ಆಶ್ರಯನೆಂದು ಹೇಳುತ್ತೀಯೋ ಅವನನ್ನು ಅರಿತುಕೊಂಡಿರುತ್ತೇನೆ.ಶ್ರೋತ್ರಾಭಿಮಾನಿಯೂ  ಪ್ರತಿ ಶ್ರವಣ ವೇಳೆಯಲ್ಲಿ  ವಿಶೇಷವಾಗಿ ಅಭಿಮಾನಿಯಾಗಿರುವನೂ ಆದ ಪುರುಷನೇ ಅವನು.ಶಾಕಲ್ಯ ಇನ್ನೂ

ಪ್ರಶ್ನಿಸು.'

ವಿದಗ್ಧ:ಅವನಿಗೆ ದೇವತೆ ಯಾರು?

ಯಾಜ್ಞವಲ್ಕ್ಯ;'ದಿಕ್ಕುಗಳು'.(ಪುಟ238)

 

(ದಿಕ್ಕುಗಳಿಂದ ಶರೀರದಲ್ಲಿರುವ ಪುರುಷನು ಉತ್ಪತ್ತಿಯಾಗುತ್ತಾನೆಂದು ಶ್ರುತಿಗಳು ಹೇಳುತ್ತವೆ.)

 

20) ವಿದಗ್ಧ: ಯಾವನಿಗೆ ತಮಸ್ಸೇ ಆಶ್ರಯವೊ,ಯಾವನಿಗೆ ಬುದ್ದಿಯು ಕಣ್ಣೊ,ಯಾವನು ಮನೋಜ್ಯೋತಿಯೊ,ಯಾವನು ಶರೀರೇಂದ್ರಿಯಗಳಿಗೆಲ್ಲ ಆಶ್ರಯನೊ, ಪುರುಷನನ್ನು ಯಾವನು ಅರಿತಿರುವನೊ ಅವನೇ ಅರಿತಿರುವವನು..'

 

ಯಾಜ್ಷವಲ್ಕ್ಯ:ಯಾವ ಪುರುಷನನ್ನು ಶರೀರೇಂದ್ರಿಯಗಳಿಗೆಲ್ಲ ಆಶ್ರಯನೆಂದು ಹೇಳುತ್ತೀಯೊ ಅವನನ್ನು  ಅರಿತುಕೊಂಡಿರುತ್ತೇನೆ. ಅಜ್ಞಾನಮಯನಾದ ಪುರುಷನೇ ಅವನು.ಶಾಕಲ್ಯ ಇನ್ನೂ ಪ್ರಶ್ನಿಸು

ವಿದಗ್ಧ;ಅವನಿಗೆ ದೇವತೆ ಯಾರು

ಯಾಜ್ಞವಲ್ಕ್ಯ: 'ಮೃತ್ಯು'.(ಪುಟ 23)

 

21)ಯಾವನಿಗೆ ರೂಪಗಳು ಆಶ್ರಯವೊ,ಯಾವನಿಗೆ ಚಕ್ಷುಸ್ಸು ಕಣ್ಣೊ,ಯಾವನು ಮನೋಜ್ಯೋ ತಿಯೊ,ಯವನು ಶರೀರೇಂದ್ರಿಯಗಳಿಗೆಲ್ಲ ಆಶ್ರಯನೊ, ಪುರುಷನನ್ನು  ಯಾವನು ಅರಿತಿರುವನೊ ಅವನೇ ಅರಿತಿರುವವನು.

ಯಾಜ್ಞವಲ್ಕ್ಯ:ಯಾವ ಪುರುಷನನ್ನು ಶರೀರೇಂದ್ರಿಯಗಳಿಗೆಲ್ಲ ಆಶ್ರಯವೆಂದು ಹೇಳುತ್ತೀಯೊ ಅವನನ್ನು ಅರಿತುಕೊಂಡಿರುತ್ತೇನೆ.ಕನ್ನಡಿಯಲ್ಲಿರುವ ಪುರುಷನೇ ಅವನು.ಶಾಕಲ್ಯ ,ಇನ್ನೂ ಪ್ರಶ್ನಿಸು.

 

ವಿದಗ್ಧ:ಅವನಿಗೆ ದೇವತೆ ಯಾರು?

ಯಾಜ್ಞವಲ್ಕ್ಯ:'ಪ್ರಾಣವು'.(ಪುಟ240)

 

22)ವಿದಗ್ಧ: ಯಾವನಿಗೆ ನೀರು ಆಶ್ರಯವೊ, ಯಾವನಿಗೆ ಬುದ್ಧಿಯು ಕಣ್ಣೊ,ಯಾವನು ಮನೋಜ್ಯೋತಿಯೊ ,ಯಾವನು ಶರೀರೇಂದ್ರಿಯಗಳಿಗೆ ಆಶ್ತಯನೊ ಪುರುಷನನ್ನು,ಯಾವನು ಅರಿತುಕೊಂಡಿರುವನೊ ಅವನೇ ಅರಿತಿರುವವನು.

 

ಯಾಜ್ಞವಲ್ಕ್ಯ: ಯಾವಪುರುಷನು ಶರೀರೇಂದ್ರಿಯಗಳಿಗೆಲ್ಲ ಆಶ್ರಯನೆಂದು ಹೇಳುತ್ತೀಯೊ ಅವನನ್ನು ಅರಿತುಕೊಂಡಿರುತ್ತೇನೆ.ನೀರಿನಲ್ಲಿರುವ ಪುರುಷನೇ ಇವನು.ಶಾಕಲ್ಯ,ಇನ್ನೂ ಪ್ರಶ್ನಿಸು'

ವಿದಗ್ಧ: 'ಅವನಿಗೆ ದೇವತೆ ಯಾರು?'

ಯಾಜ್ಞವಲ್ಕ್ಯ: 'ವರುಣನು.'(ಪುಟ 241)

 

23) ವಿದಗ್ಧ: 'ಯಾವನಿಗೆ  ರೇತಸ್ಸು ಆಶ್ರಯವೊ,ಯಾವನಿಗೆ ಬುದ್ಧಿಯು ಕಣ್ಣೊ,ಯಾವನು ಮನೋಜ್ಯೋತಿಯೋ,ಯಾವನು ಶರೀರೇಂದ್ರಿಯಗಳಿಗೆಲ್ಲ  ಆಶ್ರಯನೊ ಪುರುಷನನ್ನು  ಯಾವನು ಅರಿತುಕೊಂಡಿರುವನೊ, ಅವನೇ ಅರಿತಿರುವವನು'.

 

ಯಾಜ್ಞವಲ್ಕ್ಯ:ಯಾವ ಪುರುಷನನ್ನು ಶರೀರೇಂದ್ರಿಯಗಳಿಗೆಲ್ಲ  ಆಶ್ರಯವೆಂದು ಹೇಳುತ್ತೀಯೊ ಅವನನ್ನು ಅರಿತುಕೊಂಡಿರುತ್ತೇನೆ.ಪುತ್ರಮಯನಾದ  ಪುರುಷನೇ ಅವನು.ಶಾಕಲ್ಯ ಇನ್ನೂ ಪ್ರಶ್ನಿಸು.

ವಿದಗ್ಧ:ಅವನಿಗೆ ದೇವತೆ ಯಾರು?

ಯಾಜ್ಞವಲ್ಕ್ಯ: 'ತಂದೆ'.  (ಪುಟ 241)

 

24)ಯಾಜ್ಞವಲ್ಕ್ಯ: ' ಬ್ರಾಹ್ಮಣರು  ನಿನ್ನನ್ನು  ಕೆಂಡ ಹಿಡಿಯುವ ಇಕ್ಕಳವನ್ನಾಗಿ ಮಾಡಿರುವರೋ?(ಪುಟ 242)

(ಹಿಂದೆ ಉಪಾಸನೆಗಾಗಿ ಒಂದೇ ಪ್ರಾಣವನ್ನು ಅಷ್ಟಭೇದಗಳಿಂದ ಹೇಳಿದ್ದಾಯಿತು.)(ಪುಟ 242)

 

25)ಉಪಾಸನೆಯಮೂಲಕ ಉಪಾಸಕನು ಉಪಾಸ್ಯ ದೇವತೆಯೊಂದಿಗೆ ತಾದಾತ್ಮ್ಯವನ್ನು ಪಡದೆಯದುತ್ತಾನೆ(ಪುಟ243)

 

26)ವಿದಗ್ಧ: 'ಪೂವ೯ದಿಕ್ಕಿನಲ್ಲಿ ಯಾವದೇವತೆಯೊಂದಿಗೆ ಏಕೀಭೂತನಾಗಿರುವೆ?'

ಯಾಜ್ಞ:ಆದಿತ್ಯದೇವತೆಯೊಂದಿಗೆ'.

ವಿದಗ್ಧ: ಯಾವುದರಲ್ಲಿ ಆದಿತ್ಯನು ಪ್ರತಿಷ್ಠಿತನಾಗಿದ್ದಾನೆ?

ಯಾಜ್ಞ: 'ಚಕ್ಷುಸ್ಸಿನಲ್ಲಿ'

ವಿದಗ್ಧ: ಯಾವುದರಲ್ಲಿ ಚಕ್ಷುಸ್ಸು ಪ್ರತಿಷ್ಠಿತವಾಗಿದೆ?

ಯಾಜ್ಞ:ರೂಪದಲ್ಲಿ.ಏಕೆಂದರೆ ಮನುಷ್ಯನು  ಚಕ್ಷುಸ್ಸಿನಿಂದ ರೂಪಗಳನ್ನು ನೋಡುತ್ತಾನೆ.'

ವಿದಗ್ಧ:ರೂಪಗಳು ಯಾವುದರಲ್ಲಿ ಪ್ರತಿಷ್ಠಿತವಾಗಿದೆ?

ಯಾಜ್ಞ:ಮನಸ್ಸಿಬಲ್ಲಿ.ಏಕೆಂದರೆ ಮನಸ್ಸಿನ ಮೂಲಕ ಮನುಷ್ಯನು ರೂಪಗಳನ್ನು  ಅರಿಯುತ್ತಾನೆ.ಆದುದರಿಂದ ರೂಪಗಳು ಮನಸ್ಸಿನಲ್ಲಿಯೆ ಪ್ರತಿಷ್ಠಿತವಾಗಿವೆ.

ವಿದಗ್ಧ: 'ಇದು ಹೀಗೆಯೇ ಸರಿ.'

 

27)ಚಕ್ಷುಸ್ಸಿನಿಂದ ಸೂಯ೯ನು ಹುಟ್ಟಿದನು(ಚಕ್ಷೋಃಸೂಯೋ೯ ಅಜಾಯತ)(ಋಗ್ವೇದ10,0,13)

 

28)ವಾಸನಾತ್ಮಕವಾದ ರೂಪಗಳ ಸ್ಮರಣೆಯು ಮನಸ್ಸಿನ ಮೂಲಕವೇ ಆಗುತ್ತದೆ.(ಪುಟ244)

 

2)ವಿದಗ್ಧ: ದಕ್ಷಿಣದಿಕ್ಕಿನಲ್ಲಿ ಯಾವದೇವತೆಯೊಂದಿಗೆ  ಏಕೀಭೂತನಾಗಿರುವೆ?

 

ಯಾಜ್ಞವಲ್ಕ್ಯ:ಯಮದೇವತೆಯೊಂದಿಗೆ

ವಿದಗ್ಧ: ಯಾವುದರಲ್ಲಿ ಯಮನು ಪ್ರತಿಷ್ಠಿತನಾಗಿದ್ದಾನೆ?

ಯಾಜ್ಞವಲ್ಕ್ಯ:  'ಯಜ್ಞದಲ್ಲಿ'

ವಿದಗ್ಧ: ಯಜ್ಞವು ಯಾವುದರಲ್ಲಿ ಪ್ರತಿಷ್ಠಿತವಾಗಿದೆ?

ಯಾಜ್ಞವಲ್ಕ್ಯ:ದಕ್ಷಿಣೆಯಲ್ಲಿ'

ವಿದಗ್ಧ: ಯಾವುದರಲ್ಲಿ ದಕ್ಷಿಣೆಯು ಪ್ರತಿಷ್ಠಿತವಾಗಿದೆ.?

ಯಾಜ್ಞವಲ್ಕ್ಯ:'ಶ್ರದ್ಧೆಯಲ್ಲಿ' ಏಕೆಂದರೆ ಮನುಷ್ಯನು ಶ್ರದ್ಧಾವಂತನಾಗಿರುವಾಗ ದಕ್ಷಿಣೆಯನ್ನು ಋತ್ವಿಕ್ಕುಗಳಿಗೆ ಕೊಡುತ್ತಾನೆ.

ವಿದಗ್ಧ: ಶ್ರದ್ಧೆಯು  ಯಾವುದರಲ್ಲಿ ಪ್ರತಿಷ್ಠಿತವಾಗಿದೆ?

ಯಾಜ್ಞವಲ್ಕ್ಯ: 'ಹೃದಯದಲ್ಲಿ.ಏಕೆಂದರೆ ಹೃದಯದ ಮೂಲಕ ಮನುಷ್ಯನು ಶ್ರದ್ಧೆಯನ್ನು ಅರಿತುಕೊಳ್ಳುತ್ತಾನೆ'.ಆದ್ದರಿಂದ ಶ್ರದ್ಧೆಯು ಮನಸ್ಸಿನಲ್ಲಿ ಪ್ರತಿಷ್ಠಿತವಾಗಿದೆ.

ವಿದಗ್ಧ: ಇದು ಹೀಗೆಯೇ ಸರಿ.(ಪುಟ ಪುಟ 245)

 

2)ದಕ್ಷಿಣೆಯ ಮೂಲಕ ಯಜ್ಞವು ನಿಷ್ಕ್ರಿಯವಾಗುತ್ತದೆ.(ಪುಟ 246)

 

30) ಶ್ರದ್ಧೆಯು ಹೃದಯದ ಒಂದು ಗುಣ(246)

 

31)ವಿದಗ್ಧ: 'ಪಶಿಮ ದಿಕ್ಕಿನಲ್ಲಿ ಯಾವದೇವತೆಯೊಂದಿಗೆ  ಏಕೀಭೂತನಾಗಿರುವೆ?'

ಯಾಜ್ಞವಲ್ಕ್ಯ: 'ವರುಣ ದೇವತೆಯೊಂದಿಗೆ'

ವಿದಗ್ಧ: 'ವರುಣನು ಯಾವುದರಲ್ಲಿ ಪ್ರತಿಷ್ಠಿತನಾಗಿದ್ದಾನೆ'

ಯಾಜ್ಞವಲ್ಕ್ಯ:ನೀರಿನಲ್ಲಿ

ವಿದಗ್ಧ:ಯಾವುದರಲ್ಲಿ ನೀರು ಪ್ರತಿಷ್ಠಿತವಾಗಿದೆ?

ಯಾಜ್ಞವಲ್ಕ್ಯ: 'ರೇತಸ್ಸಿನಲ್ಲಿ'

ವಿದಗ್ಧ: ರೇತಸ್ಸು ಯಾವುದರಲ್ಲಿ ಪ್ರತಿಷ್ಠಿತವಾಗಿದೆ?

ಯಾಜ್ಞವಲ್ಕ್ಯ: 'ಹೃದಯದಲ್ಲಿ'.ಆದುದರಿಂದಲೇ ಅನುರೂಪನಾಗಿ ಹುಟ್ಟಿರುವ ಪುತ್ರನ ವಿಷಯವಾಗಿ'ಇವನು ತಂದೆಯ ಹೃದಯದಿಂದ  ಬಂದಂತೆ ಇರುವನು'ಎಂದು ಹೇಳುತ್ತಾರೆ.ಆದುದರಿಂದ ರೇತಸ್ಸು ಹೃದಯದಲ್ಲಿ ಪ್ರತಿಷ್ಠಿತವಾಗಿದೆ.

ವಿದಗ್ಧ:ಇದು ಹೀಗೆಯೇ ಸರಿ.

 

31) 'ಶ್ರದ್ಧೆಯೇ ನೀರು'.(ಶ್ರದ್ಧಾ ವಾ ಆಪಃ)(ತೈ.ಸಂ.1.6.8.1)(ಪುಟ 247)

 

32)ರೇತಸ್ಸಿನಿಂದ ನೀರು ಸೃಷ್ಟಿಸಲ್ಪಟ್ಟಿದೆ.(ರೇತಸೋ ಹ್ಯಾಪಃ ಸೃಷ್ಟಾಃ (..1.1.4)(ಪುಟ 247)

 

33)ಕಾಮವು ಹೃದಯದ ವೃತ್ತಿಯಾದುದರಿಂದ  ರೇತಸ್ಸು ಕಾಮಿಯಾದವನ ಹೃದಯದಿಂದ ಚಲಿಸುವುದು.(ಪುಟ247)

 

34)ವಿದಗ್ಧ:  ಉತ್ತರದಿಕ್ಕಿನಲ್ಲಿ ಯಾವದೇವತೆಯೊಂದಿಗೆ  ಏಕೀ ಭೂತನಾಗಿರುವೆ?

ಯಾಜ್ಞವಲ್ಕ್ಯ:ಸೋಮ ದೇವತೆಯೊಂದಿಗೆ

ವಿದಗ್ಧ: ಯಾವುದರಲ್ಲಿ ಸೋಮನು ಪ್ರತಿಷ್ಠಿತನಾಗಿದ್ದಾನೆ?

ಯಾಜ್ಞವಲ್ಕ್ಯ: ದೀಕ್ಷೆಯಲ್ಲಿ

ವಿದಗ್ಧÀ: ಯಾವುದರಲ್ಲಿ ದೀಕ್ಷೆಯು ಪ್ರತಿಷ್ಠಿತವಾಗಿದೆ.?

 ಯಾಜ್ಞವಲ್ಕ್ಯ: 'ಸತ್ಯದಲ್ಲಿ'.ಆದುದರಿಂದ ದೀಕ್ಷಿತನನ್ನು ಕುರಿತು ಸತ್ಯವನ್ನು ಹೇಳು ಎಂದು ಹೇಳುತ್ತಾರೆ.ಏಕೆಂದರೆ ಸತ್ಯವು ದೀಕ್ಷೆಯಲ್ಲಿ ಪ್ರತಿಷ್ಠಿತವಾಗಿದೆ.'

ವಿದಗ್ಧ: ಸತ್ಯವು ಯಾವುದರಲ್ಲಿ ಪ್ರತಿಷ್ಠಿತವಾಗಿದೆ.?

ಯಾಜ್ಞವಲ್ಕ್ಯ: ಹೃದಯದಲ್ಲಿ'. ಏಕೆಂದರೆ ಹೃದಯದಿಂದ ಮನುಷ್ಯನು  ಸತ್ಯವನ್ನು ಅರಿಯುತ್ತಾ

ನೆ. ಆದುದರಿಂದ ಸತ್ಯವು ಹೃದಯದಲ್ಲಿ ಪ್ರತಿಷ್ಠಿತವಾಗಿದೆ.

ವಿದಗ್ಧ: ಇದು ಹೀಗೆಯೇ ಸರಿ. (ಪುಟ 248)

 

35) ಸೋಮ ಎಂದರೆ ಚಂದ್ರ(ಪುಟ 248)

 

36)ಸತ್ಯಭಂಗವು ದೀಕ್ಷೆಯನ್ನು ನಾಶಮಾಡುತ್ತದೆ.(ಪುಟ248)

 

37)ವಿದಗ್ಧ:ಧ್ರುವ (ಊಧ್ವ೯)  ದಿಕ್ಕಿನಲ್ಲಿ ಯಾವ ದೇವತೆಯೊಂದಿಗೆ  ಏಕೀಭೂತವಾಗಿರುವೆ?

ಯಾಜ್ಞವಲ್ಕ್ಯ: 'ಅಗ್ನಿ ದೇವತೆಯೊಂದಿಗೆ'

ವಿದಗ್ಧ: 'ಯಾವುದರಲ್ಲಿ ಅಗ್ನಿಯು ಪ್ರತಿಷ್ಠಿತವಾಗಿದ್ದಾನೆ?'

ಯಾಜ್ಞವಲ್ಕ್ಯ: 'ವಾಕ್ಕಿನಲ್ಲಿ'

ವಿದಗ್ಧ:ಯಾವುದರಲ್ಲಿ ವಾಕ್ಕು ಪ್ರತಿಷ್ಠಿತವಾಗಿದೆ?

ಯಾಜ್ಞವಲ್ಕ್ಯ: 'ಹೃದಯದಲ್ಲಿ'

ವಿದಗ್ಧ:ಯಾವುದರಲ್ಲಿ ಹೃದಯವು ಪತಿಷ್ಠಿತವಾಗಿದೆ?   ( ಪುಟ 24)

 

38)ಯಾಜ್ಞವಲ್ಕ್ಯ: ಹೃದಯವು ಶರೀರದಲ್ಲಿ ಪ್ರತಿಷ್ಠಿತವಾಗಿದೆ ಮತ್ತು ನಾಮ-ರೂಪ-ಕಮಾ೯ತ್ಮಕವಾದ   ಶರೀರವು  ಹೃದಯದಲ್ಲಿ ಪ್ರತಿಷ್ಠಿತವಾಗಿದೆ.(ಪುಟ 250)

 

3)ವಿದಗ್ಧ: 'ಯಾವುದರಲ್ಲಿ ನಿನ್ನ ಶರೀರ ಮತ್ತು ಮನಸ್ಸು ಪ್ರತಿಷ್ಠಿತವಾಗಿದೆ.?'

ಯಾಜ್ಞವಲ್ಕ್ಯ: 'ಪ್ರಾಣದಲ್ಲಿ'

ವಿದಗ್ಧ: ಪ್ರಾಣವು ಯಾವುದರಲ್ಲಿ ಪ್ರತಿಷ್ಠಿತ ವಾಗಿದೆ?

ಯಾಜ್ಞವಲ್ಕ್ಯ: 'ಅಪಾನದಲ್ಲಿ'

 

ಯಾಜ್ಞವಲ್ಕ್ಯ:ಅಪಾನವು ವ್ಯಾನದಲ್ಲಿ,ವ್ಯಾನವು ಉದಾನದಲ್ಲಿ,ಉದಾನವು ಸಮಾನದಲ್ಲಿ ಪ್ರತಿಷ್ಠಿತವಾಗಿದೆ.

'ಹೀಗಲ್ಲ.ಹೀಗಲ್ಲ ಎಂದು ಹೇಳಲ್ಪಟ್ಟಿರುವ ಅವನೇ ಆತ್ಮನು.ಅವನು ಅಗೃಹ್ಯನು ಏಕೆಂದರೆ ಅವನನ್ನು ಹಿಡಿಯಲಾಗುವುದಿಲ್ಲ,ಅವನು ಅಕ್ಷಯನು  ಏಕೆಂದರೆ ಕ್ಷೀಣವಾಗುವುದಿಲ್ಲ.ಅವನು ಅಸಂಗನು,ಏಕೆಂದರೆ ಆಸಕ್ತನಾಗುವುದಿಲ್ಲ.ಅವನು ಬಂಧರಹಿತನು.ಆದುದರಿಂದ ವ್ಯಥೆಪಡುವುದಿಲ್ಲ ಮತ್ತು ಹಿಂಸಿತನಾಗುವುದಿಲ್ಲ.(ಪುಟ 251)

 

3) ಯಾಜ್ಞವಲ್ಕ್ಯ: ಇವು ಎಂಟು ಶರೀರಗಳು,ಎಂಟು ದಶ೯ನೇಂದ್ರಿಯಗಳು,ಎಂಟು ದೇವತೆಗಳು,ಎಂಟು ಪುರುಷರು.ಯಾವನು ಎಂಟು ಪುರುಷರನ್ನು  ತನ್ನಿಂದಲೇ ಸೃಷ್ಟಿಸಿ, ತನ್ನಲ್ಲಿಯೇ ಉಪಸಂಹಹಿಸಿ ಅತಿಕ್ರಮಿಸಿರುವನೋ ಔಪನಿಷದ ಪುರುಷನನ್ನು  ಕುರಿತು ನಿನ್ನನ್ನು ಪ್ರಶ್ನಿಸುತ್ತೇನೆ.೯ಪುಟ 254)

 

40)ಇವನ ಚಮ೯ದಿಂದಲೇ ರಕ್ತವು ಹರಿಯುತ್ತದೆ.ಸಸ್ಯರಸವೂ ಕೂಡ ತೊಗಟೆಯಿಂದ ಹರಿಯುತ್ತದೆ.ಆದುದರಿಂದ ಹೊಡೆದ ಮರದಿಂದ ಸಸ್ಯರಸವು ಸುರಿಯುವಂತೆ, ಘಾಸಿಹೊಂದಿದ ಮನುಷ್ಯನಿಂದ ರಕ್ತವು ಹರಿಯುತ್ತದೆ.(ಪುಟ 254)

 

41)ಇವನ ಮಾಂಸವು ಅದರ ಒಳಗಿನ ತೊಗಟೆ.ಇವನ ಸ್ನಾಯುವು ಅದರ ಅಂತರತಮವಾದ ತೊಗಟೆ.ಅದು ಸ್ಥಿರವಾಗಿದೆ.ಸ್ನಾಯುವಿನ ಒಳಗಿರುವ ಅಸ್ಥಿಗಳು ಅದರ ಮರವು.ಇವನ ಮಜ್ಜೆಯು ಅದರ ತಿರುಳಿನಂತೆ ಮಾಡಲ್ಪಟ್ಟಿದೆ.(ಪುಟ 254)

 

42)ಒಂದು ವೃಕ್ಷವು ಕತ್ತರಿಸಲ್ಪಟ್ಟರೆ  ಅದು ಬೇರಿನಿಂದ ಹೊಸದಾಗಿ ಮೊಳೆಯುತ್ತದೆ.ಮತ್ಯ೯ನು ಮೃತ್ಯುವಿನಿಂದ ಕತ್ತರಿಸಲ್ಪಟ್ಟಮೇಲೆ ಯಾವ ಬೇರಿನಿಂದ ಹುಟ್ಟುತ್ತಾನೆ.?(ಪುಟ 255)

 

43)ರೇತಸ್ಸಿನಿಂದ'ಎಂದು ಹೇಳಬೇಡಿರಿ. ಏಕೆಂದರೆ  ಅದು ಜೀವಂತವಾದ  ಮನುಷ್ಯನಿಂದಲೇ ಹುಟ್ಟುತ್ತದೆ.ವೃಕ್ಷವು ಬೀಜದಿಂದ ಚಿಗುರುತ್ತದೆ. ಅದು ಸತ್ತಮೇಲೆ ನಿಶ್ಚಯವಾಗಿ ಪುನಃ ಹುಟ್ಟುತ್ತದೆ.(255)

 

44)ಒಂದು ವೃಕ್ಷವನ್ನು ಬೇರುಮಟ್ಟ ಕಿತ್ತು ಹಾಕಿದರೆ  ಅದು ಪುನಃ ಹುಟ್ಟುವುದಿಲ್ಲ.ಮತ್ಯ೯ನು ಮೃತ್ಯುವಿನಿಂದ ಕತ್ತರಿಸಲ್ಪಟ್ಟ ಮೇಲೆ ಯಾರು ಅವನನ್ನು ಪುನಃ ಹುಟ್ಟಿಸುವವನು? ಯಾರು ಅವನನ್ನು ಪುನಃ ಹುಟ್ಟಿಸುವನು?.ಪುಟ 256)

 

45)ವಿಜ್ಞಾನವೂ  ಅನಂದವೂ ಆದ ಬ್ರಹ್ಮವು.ಅದು ಧನವನ್ನು ಕೊಡುವವನಿಗೂ  ತತ್ವವನ್ನು ಅರಿತುಕೊಂಡು ಅದರಲ್ಲಿಯೇ ನಿಂತಿರುವ ತತ್ವಜ್ಞಾನಿಗೂ ಪರಾಯಣವು.(ಪುಟ 25)   

 

46) ಜಗತ್ತಿನ ಮೂಲವಾದ ಬ್ರಹ್ಮವನ್ನು ಉಪನಿಷತ್ತು ತನ್ನ ರೂಪದಿಂದಲೇ ನಮಗೆ ತಿಳಿಸುತ್ತದೆ.ವಿಜ್ಞಾನವೆಂದರೆ  ಆನಂದ ರೂಪವಾದ ವಿಜ್ಞಪ್ತಿ.ದುಃಖದಿಂದ ಹೊಡೆಯಲ್ಪಟ್ಟ ವಿಷಯಜ್ಞಾನವಲ್ಲ.ಅದು ಯಾವುದು?ಪ್ರಸನ್ನವೂ ಶಿವವೂ ಅತುಲವೂ ಅನಾಯಾಸವೂ ನಿತ್ಯತೃಪ್ತವೂ ಏಕರಸವೂ ಆದ ಬ್ರಹ್ಮವು.

(ಪುಟ 257)

 

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

ಮೂರನೆಯ ಅಧ್ಯಾಯ ಸಂಪೂಣ೯.

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

ನಾಲ್ಕನೆಯ ಅಧ್ಯಾಯ:(ಜನಕ-ಯಾಜ್ಞವಲ್ಕ್ಯ ಸಂವಾದ)

 

ಮೊದಲನೇ ಅಧ್ಯಾಯ:

 

1) ಓಂ.ವಿದೇಹದ ರಾಜನಾದ ಜನಕನು(ಸಭೆಯಲ್ಲಿ) ಕುಳಿತಿರುವಾಗ ಯಾಜ್ಞವಲ್ಕ್ಯನು ಬಂದನು.

ಜನಕ: ಯಾಜ್ಞವಲ್ಕ್ಯ,  ಯಾತಕ್ಕೋಸ್ಕರ ಇಲ್ಲಿಗೆ ಬಂದಿರುತ್ತೀಯೆ?ಗೋವುಗಳನ್ನು ಇಚ್ಛಿಸುತ್ತಲೊ  ಅಥವಾ ಸೂಕ್ಷ್ಮವಾದ ಪ್ರಶ್ನೆಗಳನ್ನು  ನನ್ನಿಂದ ಕೇಳಬೇಕೆಂದೊ'ಎಂದು ಜನಕನು ಅವನನ್ನು ಕೇಳಿದನು.

ಯಾಜ್ಞವಲ್ಕ್ಯ:'ಸಾಮ್ರಾಟ್ ಎರಡನ್ನೂ' (ಪುಟ 258)

 

2)ಜನಕನು ವಾಜಪೇಯ ಯಾಗವನ್ನು ಮಾಡಿದ್ದನೆಂದು ಸಾಮ್ರಟ್ ಪದವು ಸೂಚಿಸುತ್ತದೆ.(ಪುಟ 258)

 

3) ಯಾಜ್ಞವಲ್ಕ್ಯ: 'ಯಾರಾದರೂ ಏನಾದರೂ ನಿನಗೆ ಹೇಳಿಕೊಟ್ಟಿದ್ದರೆ ಅದನ್ನು ಹೇಳು.'

ಜನಕ: ವಾಕ್ಕೇ ಬ್ರಹ್ಮವೆಂದು ಜಿತ್ವಾ ಶೈಲ್ನಿನಿಯು  ನನಗೆ ಹೇಳಿದ್ದನು.

 

ಯಾಜ್ಞವಲ್ಕ್ಯ: ತಾಯಿಯಿರುವವನೂ  ತಂದೆಯಿರುವವನೂ  ಆಚಾಯ೯ನಿರುವವನು  ಹೇಳುವಂತೆ  ಹೇಳುವಂತೆ  ವಾಕ್ಕೇ ಬ್ರಹ್ಮವೆಂದು ಶೈಲಿನಿಯು ನಿನಗೆ ಹೆಳಿರುವನು.ಏಕೆಂದರೆ ಮೂಕನಿಗೆ ಏನಾಗುವುದು?ಆದರೆ ನಿನಗೆ ಬ್ರಹ್ಮದ  ಶರೀರವನ್ನೂ ಪ್ರತಿಷ್ಠೆಯನ್ನೂ ಹೇಳಗಿದನೆ?

 

ಜನಕ: 'ಅವನು ನನಗೆ ಹೇಳಲಿಲ್ಲ.'

ಯಾಜ್ಞವಲ್ಕ್ಯ:ಸಮ್ರಾಟ್, ಬ್ರಹ್ಮಕ್ಕೆ ಒಂದೇ ಕಾಲಿದೆ

ಜನಕ: 'ಹಾಗಾದರೆ ನೀನು ಹೇಳು ಯಜ್ಞವಲ್ಕ್ಯ.'

ಯಾಜ್ಞವಲ್ಕ್ಯ: 'ವಾಕ್ಕೇ ಇದರ ಶರೀರವು,ಆಕಾಶವು ಇದರ ಪ್ರತಿಷ್ಠೆ ಮತ್ತು ಇದನ್ನು ಪ್ರಜ್ಞೆಯೆಂದು ಉಪಾಸಿಸ ಬೇಕು.'

 

ಜನಕ: 'ಯಾಜ್ಞವಲ್ಕ್ಯ,  ಪ್ರಜ್ಞೆಯ ಸ್ವರೂಪವೇನು?'

ಯಾಜ್ಞವಲ್ಕ್ಯ:'ವಾಕ್ಕೇ, ಸಮ್ರಾಟ್.ವಾಕ್ಕಿನ ಮೂಲಕವೆ ಸಮ್ರಾಟ್ ಸ್ನೇಹಿತನನ್ನು ತಿಳಿಯಬಹುದು.ಋಗ್ವೇದ,ಯಜುವೇ೯ದ,ಸಾಮವೇದ,ಅಥವ೯ವೇದ,ಇತಿಹಾಸ,ಪುರಾಣ,ವಿದ್ಯೆ,ಉಪನಿಷತ್ತುಗಳು, ಶ್ಲೋಕಗಳು,ಸೂತ್ರಗಳು,ಅನುವ್ಯಾಖ್ಯಾನಗಳು,,ವ್ಯಾಖ್ಯಾನಗಳು ,ಯಾಗ ಫಲ,ಹೋಮಫಲ,

ಅನ್ನದಾನದ ಫಲ, ಜಲಪಾನದ ಫಲ, ಲೋಕ ನತ್ತು ಪರಲೋಕ,ಸವ೯ ಪ್ರಾಣಿಗಳು-ಇವೆಲ್ಲವನ್ನೂ  ಸಮ್ರಾಟ್,ವಾಕ್ಕಿನ ಮೂಲಕವೇ ತಿಳಿಯಬಹುದು.ಸಮ್ರಾಟ್ ವಾಕ್ಕೇ ಪರಬ್ರಹ್ಮ.ಹೀಗೆ ಅರಿತುಕೊಂಡು ಬ್ರಹ್ಮೋಪಾಸನೆಯನ್ನು ಮಾಡುವವನನ್ನು ವಾಕ್ಕು ತ್ಯಜಿಸುವುದಿಲ್ಲ.ಎಲ್ಲ ಪ್ರಾಣಿಗಳೂ ಇವನನ್ನು ಅನ್ವೇಶಿಸುತ್ತವೆ.ದೇವನಾಗಿ ದೇವತೆಗಳನ್ನು ಸೇರುವನು.'

      

ಜನಕ: 'ಆನೆಯಂತಿರುವ ಹೋರಿಯೊಂದಿಗೆ ಸಹಸ್ರ ಗೋವುಗಳನ್ನು ಕೊಡುತ್ತೇನೆ.'

 

ಯಾಜ್ಞವಲ್ಕ್ಯ: ಶಿಷ್ಯನಿಗೆ ಸರಿಯಾಗಿ ಉಪದೇಶ ಮಾಡದೆ ದಾನವನ್ನು ಪರಿಗ್ರಹಿಸಕೂಡದೆಂದು  ನನ್ನ ತಂದೆಯು  ಅಭಿಪ್ರಾಯಪಟ್ಟಿದ್ದನು.

 

4) ಯಾವನಿಗೆ ಅನುಶಾಸನವನ್ನು ಮಾಡುವ ತಾಯಿಯಿರುವಳೊ ಅವನು ಮಾತೃಮಾನ್.ಹೀಗೆಯೇ ಇತರ ಎಲ್ಲಾ ಸ್ಥಳಗಳಲ್ಲಿಯೂ ತಿಳಿದುಕೊಳ್ಳಬೇಕು.(ಪುಟ 261)

 

5) ಯಾಜ್ಷವಲ್ಕ್ಯ: 'ಯಾರಾದರೂ ನಿನಗೆ ಏನಾದರೂ ಹೇಳಿಕೊಟ್ಟಿದ್ದರೆ ಅದನ್ನು ಕೇಳೋಣ.'

 

ಜನಕ: 'ಪ್ರಾಣವೆ ಬ್ರಹ್ಮವೆಂದು  ಉದಂಕ ಶೌಲ್ಬಾಯನನು ನನಗೆ ಹೆಳಿದ್ದನು'.

ಯಾಜ್ಞವಲ್ಕ್ಯ:'ತಾಯಿಯಿರುವನೂ ತಂದೆಯಿರುವವನೂ ಆಚಾಯ೯ನಿರುವವನೂ ಹೇಳುವಂತೆ  ಪ್ರಾಣವೇ ಬ್ರಹ್ಮವೆಂದು ಶೌಲ್ಬಾಯನನು ನಿನಗೆ ಹೇಳಿರುವನು.ಏಕೆಂದರೆ ಪ್ರಾಣವಿಲ್ಲದವನಿಗೆ ಏನಾಗುವುದು?ಆದರೆ ನಿನಗೆ ಬ್ರಹ್ಮದ ಶರೀರವನ್ನೂ  ಪ್ರತಿಷ್ಠೆಯನ್ನೂ  ಹೇಳಿದನೆ?'

 

ಜನಕ: ಅವನು ನನಗೆ ಹೇಳಲಿಲ್ಲ.

ಯಾಜ್ಞವಲ್ಕ್ಯ:'ಪ್ರಾಣವೇ ಇದರ ಶರೀರವು.ಅವ್ಯಾಕೃತವು ಇದರ ಪ್ರತಿಷ್ಠೆ ಮತ್ತು ಇದನ್ನು ಪ್ರಿಯವೆಂದು ಉಪಾಸಿಸಬೇಕು.'

 

ಜನಕ: ಪ್ರಿಯತೆಯ ಸ್ವರೂಪವೇನು?

 

ಯಾಜ್ಞವಲ್ಕ್ಯ:'ಪ್ರಾಣನೇ ,ಸಮ್ರಾಟ್,ಪ್ರಾಣಕ್ಕೋಸ್ಕರವೇ ಸಾಮ್ರಾಟ್,ಮನುಷ್ಯನು ಅನಧಿಕಾರಿಗೂ  ಯಾಗವನ್ನು ಮಾಡಿಸುತ್ತಾನೆ.ದಾನವನ್ನು ಮಾಡಲು ಅಹ೯ನಲ್ಲದವನಿಂದಲೂ ದಾನವನ್ನು ತೆಗೆದುಕೊಳ್ಳುತ್ತಾನೆ.ಸಮ್ರಾಟ್,ಪ್ರಾಣಕ್ಕೋಸ್ಕರ ಯಾವದಿಕ್ಕಿಗೆ ಹೋದರೂ  ಅಲ್ಲಿ ಗಂಡಾಂತರಕ್ಕೆ ಈಡಾಗುತ್ತಾನೆ.ಸಮ್ರಾಟ್,ಪ್ರಾಣನೇ ಪರಮಬ್ರಹ್ಮ.ಹೀಗೆ ಅರಿತುಕೊಂಡು ಬ್ರಹ್ಮೋಪಾಸನೆಯನ್ನು  ಮಾಡುವವನನ್ನು  ಪ್ರಾಣನು ತ್ಯಜಿಸುವುದಿಲ್ಲ. ಅಲ್ಲಾ ಪ್ರಾಣಿಗಳೂ ಇವನನ್ನು ಅನ್ವೇಶಿಸುತ್ತವೆ.ದೇವನಾಗಿ ದೇವತೆಗಳನ್ನು ಸೇರುವನು.'(ಪುಟ 263)

 

ಜನಕ: 'ಆನೆಯಂತಿರುವ ಹೋರಿಯೊಂದಿಗೆ ಸಹಸ್ರ ಗೋವುಗಳನ್ನು ಕೊಡುತ್ತೇನೆ..'

 

6)ಯಾಜ್ಞವಲ್ಕ್ಯ:ಶಿಷ್ಯನಿಗೆ ಸರಿಯಾಗಿ ಉಪದೇಶ ಮಾಡದೆ ದಾನವನ್ನು ಸ್ವೀಕರಿಸ(ಪರಿಗ್ರಹಿಸ) ಬಾರದೆಂದು  ನನ್ನ ತಂದೆಯು ಅಭಿಪ್ರಾಯ ಪಟ್ಟಿದ್ದನು.

 

ಯಾಜ್ಞವಲ್ಕ್ಯ: 'ಯಾರಾದರೂ ನಿನಗೆ ಏನಾದರೂ ಹೇಳಿಕೊಟ್ಟಿದ್ದರೆ ಅದನ್ನು ಕೇಳೋಣ(ಹೇಳು).'

 

ಜನಕ: 'ಚಕ್ಷುಸ್ಸೇ  ಬ್ರಹ್ಮವೆಂದು  ಬಕು೯ ವಾಷ್ಣ೯ನು ನನಗೆ ಹೇಳಿದ್ದನು..'

 

ಯಾಜ್ಞವಲ್ಕ್ಯ: ತಾಯಿಯಿರುವವನೂ ತಂದೆಯಿರುವವನೂ ಆಚಾಯ೯ನಿರುವವನೂ ಹೇಳುವಂತೆ ಚಕ್ಷುಸ್ಸೇ ಬ್ರಹ್ಮವೆಂದು  ವಾಷ್ಣ೯ನು ನಿನಗೆ ಹೇಳಿರುವನು.ಏಕೆಂದರೆ ನೋಡದವನಿಗೆ ಏನಾಗುವುದು?ಆದರೆ ನಿನಗೆ ಬ್ರಹ್ಮದ  ಶರೀರವನ್ನೂ ಪ್ರತಿಷ್ಠೆಯನ್ನೂ ಹೇಳಿದನೆ?.'

 

ಜನಕ: ಅವನು ನನಗೆ ಹೇಳಲಿಲ್ಲ.

ಯಾಜ್ಞವಲ್ಕ್ಯ: 'ಸಮ್ರಾಟ್, ಬ್ರಹ್ಮಕ್ಕೆ ಒಂದೇ ಕಾಲಿದೆ.

ಜನಕ: 'ಹಾಗಾದರೆ ನೀನು ಹೇಳು ಯಾಜ್ಞವಲ್ಕ್ಯ.'

ಯಾಜ್ಞವಲ್ಕ್ಯ:ಚಕ್ಷುಸ್ಸೇ ಇದರ ಶರೀರವು,ಅವ್ಯಾಕೃತವು ಇದರ ಪ್ರತಿಷ್ಠೆ ಮತ್ತು ಇದನ್ನು ಸತ್ಯವೆಂದು ಉಪಾಸಿಸಬೇಕು.'(ಪುಟ 265)

 

ಜನಕ: ' ಸತ್ಯತೆಯ ಸ್ವರೂಪವೇನು?'

 

ಯಾಜ್ಞವಲ್ಕ್ಯ: ಚಕ್ಷುಸ್ಸೇ ಸಮ್ರಾಟ್,ಚಕ್ಷುಸ್ಸಿನಿಂದಲೇ ನೋಡಿದವನನ್ನು  ಯಾರಾದರೂ "ನೀನು ನೋಡಿರುವೆಯಾ?"ಎಂದು ಕೇಳಿದರೆ ಅವನು "ನಾನು ನೋಡಿದೆನು" ಎಂದು ಹೇಳುತ್ತಾನೆ.ಅದು ಸತ್ಯವಾಗಿರುತ್ತದೆ.ಸಮ್ರಾಟ್ ಚಕ್ಷುಸ್ಸೇ ಪರಬ್ರಹ್ಮ.ಹೀಗೆ ಅರಿತುಕೊಂಡು ಬ್ರಹ್ಮೋಪಾಸನೆಯನ್ನು ಮಾಡುವವನನ್ನು ಚಕ್ಷುಸ್ಸು ತ್ಯಜಿಸುವುದಿಲ್ಲ.ಎಲ್ಲಾ ಪ್ರಾಣಿಗಳೂ ಇವನನ್ನು ಅನ್ವೇಶಿಸುತ್ತವೆ.ದೇವನಾಗಿ ದೇವತೆಗಳನ್ನು ಸೇರುತ್ತಾನೆ.'

 

ಜನಕ:'ಆನೆಯಂತಿರುವ ಹೋರಿಯೊಂದಿಗೆ  ಸಹಸ್ರ ಗೋವುಗಳನ್ನು ಕೊಡುತ್ತೇನೆ.'

 

ಯಾPಜ್ಞವಲ್ಕ್ಯ:'ಶಿಷ್ಯನಿಗೆ ಉಪದೇಶ ಮಾಡದೆ  ದಾನವನ್ನು ಪರಿಗ್ರಹಿಸ ಕೂಡದೆಂದು  ನನ್ನ ತಂದೆಯು ಅಭಿಪ್ರಾಯ ಪಟ್ಟಿದ್ದನು.'

 

7) ಯಾರಾದರೂ ನಿನಗೆ ಏನಾದರೂ ಹೇಳಿಕೊಟ್ಟಿದ್ದರೆ ಅದನ್ನು ಕೇಳೋಣ'.

ಜನಕ: ಶ್ರೋತ್ರವೇ ಬ್ರಹ್ಮವೆಂದು  ಭಾರದ್ವಾಜನು  ನನಗೆ ಹೇಳಿರುವನು.ಏಕೆಂದರೆ ಕೇಳದವನಿಗೆ ಏನಾಗುವುದು ಆದರೆ ನನಗೆ ಬ್ರಹ್ಮದ  ಶರೀರವನ್ನೂ ಪ್ರತಿಷ್ಠೆಯನ್ನೂ  ಹೇಲಿದನೆ?

ಜನಕ: ಅವನು ನನಗೆ ಹೆಳಲಿಲ್ಲ.

ಯಾಜ್ಞವಲ್ಕ್ಯ: 'ಸಮ್ರಾಟ್, ಬ್ರಹ್ಮಕ್ಕೆ ಒಂದೇ ಒಂದು ಕಾಲಿದೆ.'

 

ಜನಕ:'ಹಾಗಾದರೆ ನೀನು ಹೇಳು ಯಾಜ್ಞವಲ್ಕ್ಯ.'

 

ಯಾಜ್ಞವಲ್ಕ್ಯ: 'ಶ್ರೋತ್ರವೇ ಇದರ ಶರೀರವು,ಆಕಾಶವು ಇದರ ಪ್ರತಿಷ್ಠೆ ಮತ್ತು ಇದನ್ನು ಆನಂದವೆಂದು ಉಪಾಸಿಸಬೇಕು'

 

ಜನಕ: ' ಅನಂತತೆಯ ಸ್ವರೂಪವೇನು ?'

 

ಯಾಜ್ಞವಲ್ಕ್ಯ:'ಶ್ರೋತ್ರವೇ ಸಮ್ರಾಟ್. ಆದುದರಿಂದ ಮನುಷ್ಯನು ಯಾವ ಯಾವ ದಿಕ್ಕಿಗೆ ಹೋದರೂ ದಿಕ್ಕಿನ ಅಂತವನ್ನು ಸೇರುವುದೇ ಇಲ್ಲ. ಆದುದರಿಂದ ದಿಕ್ಕುಗಳು ಅನಂತ.ಸಮ್ರಾಟ್,ದಿಕ್ಕುಗಳೇ ಶ್ರೋತ್ರವು.ಶ್ರೋತ್ರವೇ ಪರಬ್ರಹ್ಮ.ಹೀಗೆ ಅರಿತುಕೊಂಡು ಬ್ರಹ್ಮೋಪಾಸನೆಯನ್ನು ಮಾಡುವವನನ್ನು ಶ್ರೋತ್ರವು ತ್ಯಜಿಸುವುದಿಲ್ಲ.ಎಲ್ಲ ಪ್ರಾಣಿಗಳು ಇವನನ್ನು ಅನ್ವೇಶಿಸುತ್ತವೆ.(ಪುಟ267)

 

ಇದೇ ರೀತಿಯಲ್ಲಿ ಸಂವಾದವು ಮನಸ್ಸು ಹಾಗೂ ಹೃದಯಕ್ಕೂ ಅನ್ವಯಿಸುತ್ತದೆ.

 

ಇದನ್ನು ಹೀಗೆ ಸಂಗ್ರಹಿಸಬಹುದು:

.........................................................................................................................................................

.ಬ್ರಹ್ಮ..................................ಶರೀರ...............................................ಪ್ರತಿಷ್ಠೆ.......................ಉಪಾಸನೆ

.1)ವಾಕ್ಕು            ವಾಕ್ಕು                    ಆಕಾಶ          ಪ್ರಜ್ಞೆ  

........................................................................................................................................................

2) ಪ್ರಾಣ            ಪ್ರಾಣ                  ಅವ್ಯಾಕೃತ          ಪ್ರಿಯ

.........................................................................................................................................................

3)ಚಕ್ಷುಸ್ಸು           ಚಕ್ಷುಸ್ಸು                  ಅವ್ಯಾಕೃತ        ಸತ್ಯ

......................................................................................................................................................

4)ಶ್ರೋತ್ರ           ಶ್ರೋತ್ರ                   ಆಕಾಶ          ಅನಂತ

................................................................................................................................................

5) ಮನಸ್ಸು         ಮನಸ್ಸು                  ಅವ್ಯಾಕೃತ         ಆನಂದ

................................................................................................................................................

6) ಹೃದಯ         ಹೃದಯ                 ಅವ್ಯಾಕೃತ         ಸ್ಥಿತಿ

................................................................................................................................................

 

8)ಮನಸ್ಸೇ ಪರಬ್ರಹ್ಮ.ಮನಸ್ಸಿನಿಂದಲೇ ಸ್ತ್ರೀಯನ್ನು ಬಯಸುತ್ತಾನೆಅವಳಲ್ಲಿ ತಂದೆಗೆ ಅನುರೂಪನಾದ ಮಗನು ಹುಟ್ಟುತ್ತಾನೆ.ಅವನು ಆನಂದಕ್ಕೆ ಕಾರಣನು.ಎಲ್ಲ ಪ್ರಾಣಿಗಳು ಇವನನ್ನು ಅನ್ವೇಶಿಸುತ್ತವೆ.

 

) ಹೃದಯವೇ ಪರಬ್ರಹ್ಮ.ಹೃದಯವೇ ಎಲ್ಲಾ ಪ್ರಾಣಿಗಳ  ಪ್ರತಿಷ್ಠೆ.(ಪುಟ 270)

 

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

 

ಎರಡನೆಯ ಬ್ರಾಹ್ಮಣ:

 

1) ವಿದೇಹನಾದ ಜನಕನು ಆಸನದಿಂದ ಎದ್ದು ಯಾಜ್ಞವಲ್ಕ್ಯನನ್ನು ಸಮೀಪಿಸಿ'ಯಾಜ್ಞವಲ್ಕ್ಯ' ನಿನಗೆ ನಮಸ್ಕಾರ.ನನಗೆ ಉಪದೇಶಿಸು' ಎಂದು ಹೇಳಿದನು.(ಪುಟ272)

 

2) ಶರೀರದಿಂದ ಬಿಡುಗಡೆಯನ್ನು ಹೊಂದಿದಾಗ ನೀನು ಎಲ್ಲಿಗೆ ಹೋಗುವೆ.?(ಪುಟ 273)

 

3)ಜನಕ: ಭಗವಂತನೆ,ಎಲ್ಲಿಗೆ ಹೋಗುವೆನೊ ಅದನ್ನು ನಾನು ಅರಿಯೆನು.

 

4) ಹಾಗಾದರೆ ನೀನು ಎಲ್ಲಿಗೆ ಹೋಗುತ್ತೀಯೆಂಬುದನ್ನು ಹೇಳುತ್ತೇನೆ.(ಪುಟ 273)

 

5)ಯಾಜ್ಞವಲ್ಕ್ಯ:'ಬಲಗಣ್ಣಿನಲ್ಲಿರುವ ಪುರುಷನು  ಇಂಧನೆಂಬ ಹೆಸರಿನವನು.ಇಂಧನಾಗಿರುವ ಇವನನ್ನು ಇಂದ್ರನೆಂದು ಪರೋಕ್ಷವಾಗಿ ಹೇಳುತ್ತಾಗೆ.ಏಕೆಂದರೆ ದೇವತೆಗಳು ಪರೋಕ್ಷಪ್ರಿಯರು.ಪ್ರತ್ಯಕ್ಷನಾಮಗಳನ್ನು ದ್ವೇಶಿಸುತ್ತಾರೆ.(ಪುಟ 274)

 

6)ಎಡಗಣ್ಣಿನಲ್ಲಿರುವ ಪುರುಷರೂಪವು(ಎಂದರೆ ಭೋಕ್ತøವಾದ ಇಂದ್ರನ)ಪತ್ನಿಯಾದ ವಿರಾಟ್.(ಎಂದರೆ ಭೋಗ್ಯವಾದ ಅನ್ನ)ಹೃದಯದಲ್ಲಿರುವ ಆಕಾಶವು ಇವರಿಬ್ಬರ ಮಿಳನಸ್ಥಾನ.(ಪುಟ275)

 

7)ವಿಶ್ವ(ವೈಶ್ವಾನರ),ತೈಜಸ ಮತ್ತು ಪ್ರಾಜ್ಞ- ಮೂರು ಜಾಗ್ರತ್ ಸ್ವಪ್ನ ಸುಷುಪ್ತಿಗಳಲ್ಲಿ  ಸ್ಥೂಲ ಸೂಕ್ಷ್ಮ ಕಾರಣ-ಶರೀರಗಳೊಂದಿಗೆ ತಾದಾತ್ಮ್ಯವನ್ನು ಪಡೆದಿರುವ ಆತ್ಮನ ಹೆಸರುಗಳು.ಇಲ್ಲಿ ಮಿಳನ ಸ್ಥಾನವೆಂದರೆ ಸ್ವಪ್ನಾವಸ್ಥೆ.ವೈಶ್ವಾನರ ಅಥವಾ ಇಂದ್ರ,ವಿರಾಟ್ ಅಥವಾ ಅವನ ಪತ್ನಿ ಇವರಿಬ್ಬರೂ ಭೋಕ್ತø ಭೋಗರೂಪದಿಂದ  ಸ್ವಪ್ನದಲ್ಲಿ ಒಂದಾಗುತ್ತಾರೆ. (ಪುಟ 275)

 

8)ಪಾಂಚಭೌತಿಕವಾದ ಸ್ಥೂಲ ಶರೀರವು ಅಗ್ನಿಯಿಂದ  ಪಕ್ವವಾದ ಅನ್ನದ ಮಧ್ಯಮ ರಸವನ್ನು ತೆಗೆದುಕೊಳ್ಳುತ್ತದೆ.(ಪುಟ 275)

 

)ಪ್ರಾಣತತ್ವವನ್ನು ತಿಳಿದಿರುವ ಜ್ಞಾನಿಗೆ ಪೂವ೯ದಿಕ್ಕು ಪೂವ೯ದ ಪ್ರಾಣಗಳು,ದಕ್ಷಿಣ ದಿಕ್ಕು ದಕ್ಷಿಣದ ಪ್ರಾಣಗಳು,ಪಶ್ಚಿಮದ ದಿಕ್ಕು ಪಶ್ಚಿಮದ ಪ್ರಾಣಗಳು,ಉತ್ತರ ದಿಕ್ಕು ಉತ್ತರದ ಪ್ರಾಣಗಳು,ಊಧ್ವ೯  ದಿಕ್ಕು ಊಧ್ವ೯ದ ಪ್ರಾಣಗಳು,ಕೆಳಗಿನ ದಿಕ್ಕು ಕೆಳಗಿನ ಪ್ರಾಣಗಳು,"ಹೀಗಲ್ಲ ಹೀಗಲ್ಲ" ಎಂದು ಹೇಳಲ್ಪಟ್ಟಿರುವ

ಅವನೇ ಅತ್ಮನು.ಏಕೆಂದರೆ ಅವನನ್ನು ಹಿಡಿಯಲಗುವುದಿಲ್ಲ.ಅವನು ಅಕ್ಷಯನು,ಏಕೆಂದರೆ ಅವನು ಕ್ಷೀಣನಾಗುವುದಿಲ್ಲ.ಅವನು ಅಸಂಗನು,ಏಕೆಂದರೆ ಆಸಕ್ತನಾಗುವುದಿಲ್ಲ.ಇವನು ಬಂಧರಹಿತನು.ಆದುದರಿಂದ ವ್ಯಥೆಪಡುವುದಿಲ್ಲ ಮತ್ತು ಹಿಂಸಿತನಾಗುವುದಿಲ್ಲ.ಜನಕನೆ ನೀನು ಅಭಯವನ್ನೇ ಹೊಂದಿರುತ್ತೀಯೆ'ಎಂದು ಯಾಜ್ಞವಲ್ಕ್ಯನು ಹೇಳಿದನು.(ಪುಟ 277)

 

10)ಜನಕ: ಭಗವಂತನಾದ ಯಾಜ್ಞವಲ್ಕ್ಯನೆ,ಅಭಯವು ನಿನ್ನದಾಗಲಿ.ಏಕೆಂದರೆ ಅಭಯವನ್ನು ತಿಳಿಯುವಂತೆ ಮಾಡಿರುತ್ತೀಯೆ.ನಿನಗೆ ನಮಸ್ಕಾರ. ವಿದೇಹ ರಾಜ್ಯ ಮತ್ತು ನಾºನು ನಿನ್ನ ಸೆವೆಗಗಿ ಇರುತ್ತೇವೆ.(ಪುಟ 277)

 

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

 

ಮೂರನೆಯ ಬ್ರಾಹ್ಮಣ:(ಜ್ಯೋತಿ ಬ್ರಾಹ್ಮಣ)

 

1)ಹಿಂದಿನ ಬ್ರಾಹ್ಮಣದಲ್ಲಿ ಯಾಜ್ಞವಲ್ಕ್ಯನುಜಾಗ್ರತ-ಸ್ವಪ್ನ-ಸುಷುಪ್ತಿಗಳಲ್ಲಿರುವಾತ್ಮ ಸ್ವರೂಪವನ್ನು ನಿಧ೯ರಿಸಿ ಆಗಮದ ಮೂಲಕ ಸಂಕ್ಷೇಪವಾಗಿ ಜನಕನಿಗೆ  ಅಭಯ ಬ್ರಹ್ಮವನ್ನು ಉಪದೇಶಿಸಿದನು.ಈಗ ಅವಸ್ಥಾತ್ರಯದ ಮೂಲಕವೇ ತಕ೯ದಿಂದ ವಿಸ್ತಾರವಾಗಿ ಆತ್ಮ ಸ್ವರೂಪವನ್ನು ಉಪದೇಶಿಸಲು ಆರಂಭಿಸಿದೆ.(ಪುಟ27)

 

2)ಜನಕ: ಪುರುಷನಿಗೆ ಜ್ಯೋತಿಯು ಯಾವುದು?

ಯಾಜ್ಞವಲ್ಕ್ಯ: 'ಸಮ್ರಾಟ್,ಆದಿತ್ಯನ ಜ್ಯೋತಿಯು.ಏಕೆಂದರೆ ಆದಿತ್ಯನ ಜ್ಯೋತಿಯಿಂದಲೇ ಇವನು ಕುಳಿತುಕೊಳ್ಳುತ್ತಾನೆ,ಹೊರಗೆ ಹೋಗುತ್ತಾನೆ ಮತ್ತು ಹಿಂದಿರುಗುತ್ತಾನೆ.(ಪುಟ 27)

 

3) ಇಲ್ಲಿ ಪುರುಷನೆಂದರೆ ಶರೀರೇಂದ್ರಿಯಗಳಿಂದ ಕೂಡಿದಮನುಷ್ಯನು. ಮನುಷ್ಯನು ತನ್ನ ಅವಯವ ಸಂಘಾತಕ್ಕಿಂತ ಹೊರಗಿರುವ ಬೇರೊಂದು ಜ್ಯೋತಿಯಿಂದ ವ್ಯವಹರಿಸುತ್ತಾನೆಯೊ ಅಥವಾ ತನ್ನ ಅವಯವ ಸಂಘಾತದಲ್ಲಿ  ಕೂಡಿರುವ ಜ್ಯೋತಿಯಿಂದ  ವ್ಯವಹರಿಸುತ್ತಾನೆಯೊ ಎಂಬುದು ಪ್ರಶ್ನೆ.(ಪುಟ27)

 

4)ಜನಕ: ಯಾಜ್ಞವಲ್ಕ್ಯ, ಆದಿತ್ಯನು ಅಸ್ತಮಿಸಿದಾಗ ಪುರುಷನಿಗೆ ಯಾವುದು ಜ್ಯೋತಿಯು?

ಯಾಜ್ಞವಲ್ಕ್ಯ: ಚಂದ್ರನೇ ಅವನ ಜ್ಯೋತಿಯಾಗಿರುತ್ತಾವನೆ.(ಪುಟ 281) 

 

5) ಇದೇ ರೀತಿ ಕ್ರಮವಾಗಿ ಆದಿತ್ಯ,ಚಂದ್ರ,ಅಗ್ನಿ,ಶಬ್ದ ಕೊನೆಗೆ ಆತ್ಮನೇ ಅವನಿಗೆ(ಮನುಷ್ಯನಿಗೆ) ಜ್ಯೋತಿಯಾಗುತ್ತಾನೆ.(ಪುಟ282)

 

6)ಜನಕ: ಆತ್ಮನು ಯಾವನು?

ಯಾಜ್ಞವಲ್ಕ್ಯ:ವಿಜ್ಞಾನಮಯನೂ,ಇಂದ್ರಿಯಗಳ ಮಧ್ಯದಲ್ಲಿರುವವನೂ,ಬುದ್ಧಿಯಲ್ಲಿರುವ ಸ್ವಯಂಜ್ಯೋತಿಯೂ,ಆದ ಪುರುಷನು.ಅವನ ಬುದ್ಧಿಗೆ ಸಮಾನವಾದ ಆಕಾರವನ್ನು ಪಡೆದು ಇಹಲೋಕ-ಪರಲೋಕಗಳ ಮಧ್ಯೆ ಸಂಚರಿಸುತ್ತಾನೆ.ಅವನು ಧ್ಯಾನಿಸುವಂತೆ ಚಲಿಸುವಂತೆ ಇರುತ್ತಾನೆ.ಏಕೆಂದರೆ ಅವನು ಸ್ವಪ್ನವಾಗಿ  ಲೋಕವನ್ನು  ಮತ್ತು ಮೃತ್ಯುವಿನ ರೂಪಗಳನ್ನು ಅತಿಕ್ರಮಿಸುತ್ತಾನೆ.(ಪುಟ283)

(ಆತ್ಮನು ಅಚಲ. ಆದರೆ ಬುದ್ಧಿಯ ಚಲನೆಯಿಂದ ಆತ್ಮನು ಚಲಿಸುವಂತೆ ತೋರುತ್ತಾನೆ.)

(ಧ್ಯಾಯತೀವ ಲೀಲಾಯತೀವ)

 

7)ವಿಜ್ಞಾನಮಯ ಶಬ್ದದಲ್ಲಿರುವ  -ಮಯಟ್ ಪ್ರತ್ಯಯವು ವಿಕಾರವನ್ನು ಸೂಚಿಸುವುದಿಲ್ಲ.ಏಕೆಂದರೆ ಆತ್ಮನು ವಿಜ್ಞಾನದ ಅಥವಾ ಬುದ್ಧಿಯ ವಿಕಾರವಲ್ಲ.ವಿಜ್ಞಾನ ಪ್ರಾಯನು ಎಂದಥ೯.ಗಾಜಿನ ಗೋಳ

ದಲ್ಲಿ ಪ್ರಕಾಶಿಸುವ ದೀಪವು ಗೋಳದ ರೂಪ ವಣ೯ಗಳನ್ನು ಪಡೆಯುವಂತೆ  ಆತ್ಮನು ವಿಜ್ಞಾನದ ರೂಪವನ್ನು ಪಡೆಯುತ್ತಾನೆ ಎಂದಥ೯. (ಪುಟ 283)

 

8) ಆತ್ಮನು-ಮನಸ್ಸು,ಇಂದ್ರಿಯ, ಶರೀರ,ಬಾಹ್ಯವಸ್ತುಗಳನ್ನು  ಕ್ರಮವಾಗಿ ಪ್ರಕಾಶಿಸುತ್ತಾನೆ.(ಪುಟ 283)

 

) ಆಕಾಶದಂತೆ ಸವ೯ಗತನಾಗಿ  ಪೂಣ೯ವಾಗಿರುವುದರಿಂದ ಪುರುಷನು,(ಪುಟ 283)

(ಶರೀರವೆಂಬ ಪುರದಲ್ಲಿ ವಾಸಿಸುವುದರಿಂದ ಪುರುಷನು ಎಂಬ ಅಥ೯ವೂ ಇದೆ)

 

10)ಸುಷುಪ್ತಿಯಿಂದ  ಎಚ್ಚರವಾದ ಮೇಲೆ 'ನಾನು ಸುಖವಾಗಿ ನಿದ್ರಿಸಿದೆನು'ಎಂದು ಮನುಷ್ಯನು ಹೇಳುತ್ತಾನೆ.ಹೇಳುತ್ತಾನೆ. ಅನುಭವಕ್ಕೆ ಸಾಕ್ಷಿಯಾಗಿ  ಯಾವುದೊ ಒಂದು ಜ್ಯೋತಿಯು ಇದ್ದಿರಬೇಕು.ಅದು ಆತ್ಮನೆಂಬುದು ಯಾಜ್ಞವಲ್ಕ್ಯನ ಉತ್ತರ.(ಪುಟ 283)

 

11) ಸ್ಫಟಿಕವು ಸಮೀಪದಲ್ಲಿರುವ ಜಪಾಕುಸುಮದಿಂದ ಕೆಂಪು ಬಣ್ಣವನ್ನು ಪಡೆಯುವಂತೆ ಅತ್ಯಂತ ಸಮೀಪದಲ್ಲಿರುವ  ಬುದ್ಧಿಯಿಂದ  ಶುದ್ಧವಾದ ಆತ್ಮನು ರಂಜಿತನಾದಂತೆ ಆಗುತ್ತಾನೆ.(ಪುಟ 283)

 

12)ಆತ್ಮನು ನಿಷ್ಕ್ರಿಯನಾಗಿದ್ದರೂ  ಬುದ್ಧಿಯ ಚಲನೆಯಿಂದ  ತಾನು ಧ್ಯಾನಿಸುವಂತೆ ಚಲಿಸುವಂತೆ ತೋರುತ್ತಾನೆ.(ಪುಟ 284)

 

13)ಕಮ೯,ಅವಿದ್ಯೆ ಇವು ಮೃತ್ಯುವಿನ ರೂಪಗಳು. (284)

 

14) ಪುರುಷನು ಹುಟ್ಟುವಾಗ  ಎಂದರೆ ಶರೀರಗಳನ್ನು ಪಡೆಯುವಾಗ ಪಾಪಗಳಿಂದ ಸಂಯೋಜಿಸಲ್ಪಡುತ್ತಾನೆ;ಮತ್ತು ಸಾಯುವಾಗ  ಎಂದರೆ ಶರೀರವನ್ನು ಬಿಡುವಾಗ  ಪಾಪಗಳನ್ನು ಬಿಡುತ್ತಾನೆ,(ಪುಟ284)

 

15)ಪ್ರಕೃತಿ ಶರೀರದಲ್ಲಿ  ವಿಜ್ಞಾನಮಯನಾದ ಜೀವನುಶರೀರೇಂದ್ರಿಯಗಳ ಸಂಯೋಗ -ವಿಯೋಗದಿಂದ ಜಾಗ್ರತ್-ಸ್ವಪ್ನ-ಸುಷುಪ್ತಿಗಳಲ್ಲಿ ತಿರುಗಾಡುವಂತೆ ಮೋಕ್ಷವನ್ನು ಪಡೆಯುವವರೆಗೂ ಜನ್ಮ ಮೃತ್ಯುಗಳ ಮೂಲಕ ಶರೀರೇಂದ್ರಿಯಗಳ ಸಂಯೋಗ-ವಿಂೂೀಗವನ್ನು ಪಡೆಯುತ್ತನೆ.ಇದರಿಂದ ಆತ್ಮಜ್ಯೋತಿಯು ಪಾಪರೂಪವಾದ ಶರೀರೇಂದ್ರಿಯಗಳಿಂದ ವ್ಯತಿರಿಕ್ತವೆಂದು ಸಿದ್ಧವಾಗುತ್ತದೆ.(ಪುಟ 284)

 

16)' ಪುರುಷನಿಗೆ ಎರಡೇ ಸ್ಥಾನಗಳು :ಇದು ಮತ್ತು ಪರಲೋಕಸ್ಥಾನ.ಮೂರನೆಯದಾದ ಸ್ವಪ್ನಸ್ಥಾನವು ಇವೆರಡರ ಸಂಧಿಯಲ್ಲಿರುವುದು. ಸಂಧಿಸ್ಥಾಸನದಲ್ಲಿ ಇದ್ದುಕೊಂಡು  ಲೋಕ ಪರಲೋಕ ಸ್ಥಾನ- ಎರಡು ಸ್ಥಾನಗಳನ್ನು ನೋಡುತ್ತಾನೆ.ಅವನು ಕನಸು ಕಾಣುವಾಗ ಸವ೯ಪಾಲಕವಾದ ಶರೀರದ  ಒಂದು ಅಂಶವನ್ನು ತೆಗೆದುಕೊಂಡು ,ತನ್ನ ಶರೀರವನ್ನು ಅಚೇತನಗೊಳಿಸಿ ,ಸ್ವಪ್ನಶರೀರವನ್ನು ನಿಮಿ೯ಸಿಕೊಂಡು ತನ್ನ ಜ್ಯೋತಿಯಿಂದ ತನ್ನ ಶರೀರವನ್ನು ಅಚೇತನಗೊಳಿಸಿ, ಸ್ವಪ್ನಶರೀರವನ್ನು  ನಿಮಿ೯ಸಿಕೊಂಡು  ತನ್ನ ಜ್ಯೋತಿಯಿಂದ  ತನ್ನ ಪ್ರಕಾಶವನ್ನು ವ್ಯಕ್ತಗೊಳಿಸಿ  ಕನಸು ಕಾಣುತ್ತಾನೆ. ಅವಸ್ಥೆಯಲ್ಲಿ ಪುರುಷನು ಸ್ವಯಂಜ್ಯೋತಿಯಾಗುತ್ತನೆ.'(ಪುಟ 286)

 

   

17)ಹೊರಗಿನ ಭೂತ ಭೌತಿಕ ವಸ್ತುಗಳ ಸಂಬಂಧವಿಲ್ಲದ ಜ್ಯೋತಿಯಾಗಿರುತ್ತಾನೆ(ಪುಟ 286)

 

18)'ಸ್ವಪ್ನದಲ್ಲಿ ರಥಗಳಾಗಲಿ ಅವುಗಳಿಗೆ ಕಟ್ಟಲ್ಪಟ್ಟಿರುವ ಕುದುರೆಯೇ ಮೊದಲಾದ  ಪ್ರಾಣಿಗಳಾಗಲಿ ,ಪಥಗಳಾಗಲಿ ಇಲ್ಲ.ಆದರೆ ಅವನು ಪ್ರಾಣಿಗಳನ್ನೂ ಪಥಗಳನ್ನೂ ಸೃಷ್ಟಿಸಿಕೊಳ್ಳುತ್ತಾನೆ.ಅಲ್ಲಿ

ಆನಂದಗಳಾಗಲಿ  ಹಷ೯ಗಳಾಗಲಿ ಪ್ರಮೋದಗಳಾಗಲಿ ಇರುವುದಿಲ್ಲ.ಆದರೆ ಅವನು ಆನಂದಗಳನ್ನೂ  ಹಷ೯ಗಳನ್ನೂ  ಪ್ರಮೋದಗಳನ್ನೂ ಸೃಷ್ಟಿಸಿಕೊಳ್ಳುತ್ತಾನೆ.ಅಲ್ಲಿ ಕೆರೆಗಳಾಗಲಿ ಸರೋವರಗಳಾಗಲಿ ನದಿಗಳಾಗಲಿ ಇರುವುದಿಲ್ಲ.ಅವನು ಕೆರೆಗಳನ್ನೂ ಸರೋವರಗಳನ್ನೂ ನದಿಗಳನ್ನೂ  ಸೃಷ್ಟಿಸಿಕೊಳ್ಳುತ್ತಾನೆ. ಏಕೆಂದರೆ ಅವನು ಕತೃ೯ವು .(ಪುಟ 287)  

 

1)ಒಬ್ಬನೇ ಆಗಿ ಸಂಚರಿಸುವ ಪುರುಷನು ಸ್ವಪ್ನಭಾವದ ಮೂಲಕ ಶರೀರವನ್ನು  ನಿಶ್ಚೇಷ್ಟವಾಗಿ ಮಾಡಿ

ತಾನು ಎಚ್ಚರವುಳ್ಳವನಾಗಿ  ಬೆಳಗುವ ಇಂದ್ರಿಯಗಳ ಒಂದು ಅಂಶವನ್ನು ತೆಗೆದುಕೊಂಡು  ಸುಪ್ತವಾಗಿರುವ ವಿಷಯಗಳನ್ನು ನೋಡುತ್ತಾನೆ.ಮತ್ತೆ ಜಾಗ್ರದವಸ್ಥೆಗೆ ಮರಳಿ ಬರುತ್ತಾನೆ.(ಪುಟ 288)

 

 

20)ಒಬ್ಬನೇ ಅಗಿ ಸಂಚರಿಸುವ ಚೈತನ್ಯಜ್ಯೋತಿ ಸ್ವಬಾವದವನೂ ಅಮೃತನೂ ಆದ ಪುರುಷನು ಪ್ರಾಣದ ಮೂಲಕ ನಿಕೃಷ್ಟವಾದ  ಗೂಡನ್ನು ರಕ್ಷಿಸುತ್ತ,ತಾನು ಹೊರಗೆ ಸಂಚರಿಸುತ್ತಾನೆ.ಅಮೃತನಾದ  ಅವನು ಮನಸ್ಸಿದ್ದೆಡೆಗೆ ಹೋಗುತ್ತಾನೆ.(ಪುಟ 28)

 

21) ದೇವನು ಸ್ವಪ್ನದಲ್ಲಿ ಉಚ್ಛವಾದ ಮತ್ತು ನಿಕೃಷ್ಟವಾದ ಭಾವಗಳನ್ನು ಪಡೆಯುತ್ತ ಬಹು ರೂಪಗಳನ್ನು ಸೃಷ್ಟಿಸಿಕೊಳ್ಳುತ್ತಾನೆ.ಸ್ತ್ರೀಯರೊಡನೆ ಸಂತೋಷಪಡುವಂತೆಯೂ ನಗುವಂತೆಯೂ ಭಯಂಕರವಾದುದನ್ನು ನೋಡುವಂತೆಯೂ ಇರುತ್ತಾನೆ.(ಪುಟ 20)

 

21)ಸ್ವಪ್ನದಲ್ಲಿ ಪುರುಷನು  ಸ್ವಯಂಜ್ಯೋತಿಯಾಗಿರುತ್ತಾನೆ.(ಪುಟ 21)

 

22)ಒಂದು ಮಹಾಮತ್ಸ್ಯವು ನದಿಯ ಪೂವ೯-ಪಶ್ಚಿಮದಡಳಿಗೆ  ಒಂದಾದ ಮೇಲೆ ಮತ್ತೊಂದರಂತೆ

ಸಂಚರಿಸುವ ಹಾಗೆ ಪುರುಷನು ಸ್ವಪ್ನ ಮತ್ತು ಜಾಗ್ರತ್ತು ಎಂಬ ಎರಡು ಅವಸ್ಥೆಗಳಿಗೂ  ಒಂದಾದ ಮೇಲೆ ಮತ್ತೊಂದರಂತೆ ಕ್ರಮವಾಗಿ ಸಂಚರಿಸುತ್ತಾನೆ.(ಪುಟ 24)

 

23) ಮೃತ್ಯುವಿನ ರೂಪಗಳಾದ  ಶರೀರೇಂದ್ರಿಯಗಳು  ತಮ್ಮನ್ನು ಪ್ರೇರಿಸುವ ಕಾಮಕ್ರಮ೯ಗಳೊಂದಿಗೆ  ಅನಾತ್ಮದ ಧಮ೯ವಾಗಿರುತ್ತದೆ. ಆತ್ಮನು ಇವುಗಳಿಗಿಂತ ವಿಲಕ್ಷಣನು ಮತ್ತು ನಿತ್ಯ ಮುಕ್ತ ಶುದ್ಧ  ಬುದ್ದ ಸ್ವಭಾವದವನು  ಎಂಬುದು ದೃಷ್ಟಾಂತದಿಂದ ತಿಳಿದುಬರುತ್ತದೆ(24)

 

24)ಜಾಗ್ರದವಸ್ಥೆಯೂ ಕೂಡ ಸ್ವಪ್ನವೆ.(ಜಾಗರಿತೇಪಿ ಯದ್ದಶ೯ನಂ ತದಪಿ ಸ್ವಪ್ನಂ ಮನ್ಯತೇ ಶ್ರುತಿಃ)

(ಪುಟ 25)

 

25) ಸಾವಿರ ಪಾಲಾಗಿ ಒಡೆದ  ಕೇಶದಂತೆ  ಸೂಕ್ಷ್ಮವಾದ 'ಹಿತಾ' ಎಂಬ ನಾಡಿಗಳು  ಮನುಷ್ಯನಲ್ಲಿವೆ.(ಪುಟ 26)

 

26)ಅದೇ ಇವನ ರೂಪ-ಧಮಾ೯ಧಮ೯ ವಜಿ೯ತವೂ  ಅಭಯವೂ ಆದದ್ದು.ಪ್ರಿಯಳಾದ ಸ್ತ್ರೀಯೊಂದಿಗೆ  ಆಲಂಗಿತನಾದ ಪುರುಷನು ಹೊರಗಿನ ಅಥವಾ ಒಳಗಿನ ಯವುದನ್ನೂ ತಿಳಿಯದಿರುವಂತೆ ಪರಮಾತ್ಮನಿಂದ ಆಲಂಗಿತನಾದ ಪುರುಷನು  ಹೊರಗಿನ ಅಥವಾ ಒಳಗಿನ ಯವುದನ್ನು ತಿಳಿಯದಿರುವನು.ಅದೇ ಇವನ ಪೂಣ೯ಕಾಮವೂ ಆತ್ಮಕಾಮವೂ ಕಾಮರಹಿತವೂ ಅಶೋಕವೂ ಅದದ್ದು.(ಪುಟ 27)  

 

 

27)ಅವಿದ್ಯಾ- ಕಾಮ-ಕಮ೯ಗಳಿಂದ ವಜಿ೯ತವಾದ  ಆತ್ಮನ ಅತಿಚ್ಛಂದರೂಪದ ಅನುಭವವು ಸುಷುಪ್ತಿಯಲ್ಲಿ ಉಂಟಾಗುತ್ತದೆ.ಸುಷುಪ್ತಿಯಲ್ಲಿ ಅವಿದ್ಯೆಯು ನಾಶವಾಗಿದೆಯೆಂದು ತಿಳಿಯಬಾರದು.ಅದರ ಅಭಿವ್ಯಕ್ತತೆ ಮಾತ್ರ ಇರುವುದಿಲ್ಲ(ಪುಟ 28)

 

28)ಸುಷುಪ್ತಿಯಲ್ಲಿ ತಂದೆಯು ತಂದೆಯಲ್ಲ,ತಾಯಿಯು ತಾಯಿಯಲ್ಲ,ಲೋಕಗಳು ಲೋಕಗಳಲ್ಲ,

,ದೇವತೆಗಳು ದೇವತೆಗಳಲ್ಲ,ವೇದಗಳು ವೇದಗಳಲ್ಲ, ಅವಸ್ಥೆಯಲ್ಲಿ ಕಳ್ಳನು ಕಳ್ಳನಲ್ಲ,ಭ್ರೂಹತ್ಯೆಯನ್ನು ಮಾಡಿದವನು ಭ್ರೂಣಘ್ನನಲ್ಲ.ಚಾಂಡಾಲನು ಚಾಂಡಾಲನಲ್ಲ,ಪೌಲಸ್ಕನು ಪೌಲ್ಕಸನಲ್ಲ,ಶ್ರಮಣನು ಶ್ರಮಣನಲ್ಲ,ತಾಪಸನು ತಾಪಸನಲ್ಲ, ರೂಪವು ಪುಣ್ಯದಿಂದ ಸ್ಪøಷ್ಟವಾಗಿಲ್ಲ. ಏಕೆಂದರೆ ಆಗ ಅವನು ಬುದಧಿಯ ಶೂೀಕಗಳನ್ನೆಲ್ಲ ದಾಟಿರುತ್ತಾನೆ. (ಪುಟ 2೯೯)

 

2)ಪೌಲ್ಕಸ   ಎಂದರೆ ಶೂದ್ರನಿಂದ ಬ್ರಾಹ್ಮಣಿಯಲ್ಲಿ ಹುಟ್ಟಿದವನು (ಪುಟ 2೯೯)

 

30)ಶ್ರಮಣ ಎಂದರೆ ಶೂದ್ರನಿಂದ ಕ್ಷತ್ರಿಯ ಸ್ತ್ರೀಯಲ್ಲಿ ಹುಟ್ಟಿದವನು(ಪುಟ 2೯೯)

 

31) ಅವನು ಸುಷುಪ್ತಿಯಲ್ಲಿ ನೋಡದಿರುವುದಕ್ಕೆ  ಕಾರಣವೇನೆಂದರೆ ಆಗ ಅವನು ನಿಜವಾಗಿ ನೋಡುತ್ತಿದ್ದರೂ ನೋಡುವುದಿಲ್ಲ.ಏಕೆಂದರೆ ದ್ರಷ್ಟøವು ಅವಿನಾಶಿಯಾಗಿರುವುದರಿಂದ  ದ್ರಷ್ಟøವಿನ ದೃಷ್ಟಿಗೆ ನಾಶವಿಲ್ಲ.ಆದರೆ ನೋಡಬಹುದಾದ ಎರಡನೆಯ ವಸ್ತುವು  ತನಗಿಂತ ಬೇರೆಯಗಿ ವಿಂಗಡವಾಗಿರುವುದಿಲ್ಲ(ಪುಟ 300)

 

32)ಅವನು ಸುಷುಪ್ತಿಯಲ್ಲಿ ಘ್ರಾಣಿಸದಿರುವುದಕ್ಕೆ ಕಾರಣವೇನೆಂದರೆ  ಅಗ ಅವನು ನಿಜವಾಗಿ ಘ್ರಾಣಿಸುತ್ತಿದ್ದರೂ ಘ್ರಾಣಿಸುವುದಿಲ್ಲ.ಎಕೆಂದರೆ ಘ್ರಾಣಿಸುವವನು ಅವಿನಾಶಿಯಾಗಿರುವುದರಿಂದ  ಘ್ರಾಣಿಸುವವನ ಘ್ರಾಣಕ್ಕೆ £ನಾಶವಿಲ್ಲ.ಆದರೆ ಘ್ರಾಣಿಸಬಹುದಾದ  ಎರಡನೆಯ ವಸ್ತುವು ತನಗಿಂತ ಬೇರೆಯಾಗಿ ವಿಂಗಡವಾಗಿರುದಿಲ್ಲ(ಪುಟ 301)

 

33)ಇದೇ ರೀತಿಯಲ್ಲಿ

1)ನೋಡದಿರುವುದಕ್ಕೆ

2)ಘ್ರಾಣಿಸದಿರುವುದಕ್ಕೆ

3)ಸವಿಯದಿರುವುದಕ್ಕೆ

4)ಮಾತನಾಡದಿರುವುದಕ್ಕೆ

5)ಕೇಳದಿರುವುದಕ್ಕೆ

6)ಮನನ,ಆಡದಿರುವುದಕ್ಕೆ

7)ಸ್ಪಶಿ೯ಸದಿರುವುದಕ್ಕೆ

8)ಅರಿಯದಿರುವುದಕ್ಕೆ

ಅರಿಯಬೇಕಾದ ಎರಡನೆಯ ವಸ್ತುವು ತನಗಿಂತ ಬೇರೆಯಾಗಿ ವಿಂಗಡವಾಗದಿರುವುದೇ ಕಾರಣ.

ಇದು ಎಲ್ಲಾ ಕ್ರಿಯೆಗಳಿಗೂ ಅನ್ವಯಿಸುತ್ತದೆ.(ಪುಟ303)

 

34)'ಎಲ್ಲಿ ಇನ್ನೊಂದರಂತೆ ಇರುವುದೊ ಅಲ್ಲಿ ಒಬ್ಬನು ಇನ್ನೊಂದನ್ನು ನೋಡಿಯಾನು,ಒಬ್ಬನು ಇನ್ನೊಂದನ್ನು ಘ್ರಾಣಿಸಿಯಾನು,ಒಬ್ಬನು ಇನ್ನೊಂದನ್ನು ಸವಿದಾನು,ಒಬ್ಬನು ಇನ್ನೊಂದನ್ನು ಮಾತನಾಡಿಯಾನು,ಒಬ್ಬನು ಇನ್ನೊಂದನ್ನು ಕೇಳಿಯಾನು, ಒಬ್ಬನು ಇನ್ನೊಂದನ್ನು ಸ್ಪಶಿ೯ಸಿಯಾನು.ಒಬ್ಬನು ಇನ್ನೊಂದನ್ನು ಮನನ ಮಾಡಿಯಾನು,ಒಬ್ಬನು ಇನ್ನೊಂದನ್ನು ಅರಿತಾನು.(ಪುಟ 304)

 

35)ಎಚ್ಚರದಲ್ಲಿ  ಅಥವಾ ಸ್ವಪ್ನದಲ್ಲಿ  ಆತ್ಮನಿಗೆ ಬೇರೊಂದರಂತೆ  ಯಾವುದನ್ನಾದರೂ ಅವಿದ್ಯೆಯು ಮುಂದಿಟ್ಟಿದ್ದರೆ ಆಗ ಆವಸ್ತುವಿಗಿಂತ ತಾನು  ಭಿನ್ನವೆಂದು ಮನುಷ್ಯನು ಭಾವಿಸಿಕೊಳ್ಳುತ್ತ್ತಾನೆ.ಆದರೆ ಆತ್ಮನಿಗಿಂತ ಭಿನ್ನವಾದ ಯಾವವಸ್ತುವೂ ಇಲ್ಲ.(ಪುಟ 304)

 

36)ಆತ್ಮನು ಸುಷುಪ್ತಿಯಲ್ಲಿ ನೀರಿನಂತೆ ಸ್ವಚ್ಛನೂ  ಏಕನೂ,ದ್ರಷ್ಟøವೂ ದ್ವೈತರಹಿತವೂ ಆಗಿರುತ್ತಾನೆ.

ಇದು ಬ್ರಾಹ್ಮೀ ಸ್ಥಿತಿ.,ಸಮ್ರಾಟ್;ಇದು ಇವನ ಪರಮಗತಿ,ಇದು ಇವನ ಪರಮ ಸಂಪತ್ತು,ಇದು ಇವನ ಪರಮಲೋಕ,ಇದು ಇವನ ಪರಮಾನಂದ,; ಆನಂದದ ಒಂದು ಕಲೆಯನ್ನೇ ಅವಲಮಬಿಸಿ ಇತರ ಪ್ರಾಣಿಗಳು ಜೀವಿಸುತ್ತವೆ'ಎಂದು ಯಾಜ್ಞವಲ್ಕ್ಯನು ಜನಕನಿಗೆ ಅನುಶಾಸನ ಮಾಡಿದನು.(ಪುಟ 305)

 

37)ಎರಡನೆಯದು  ಇಲ್ಲದಿರುವುದರಿಂದ ಅವಿದ್ಯೆಯೇ ಎರಡನೆಯದನ್ನು ವಿಂಗಡಿಸುತ್ತದೆ.(ಪುಟ 305)

 

38)ದೇಹಗ್ರಹಣ ರೂಪವಾದ ಇತರ ಗತಿಗಳೆಲ್ಲ ಅವಿದ್ಯಾ ಕಲ್ಪಿತವಾಗಿರುತ್ತವೆ.(ಪುಟ 305)

 

3)ಏಕೆಂದರೆ ಇದು ಇವನಿಗೆ ಸ್ವಾಭಾವಿಕವಾಗಿರುತ್ತವೆ;ಇತರ ಸಂಪತ್ತುಗಳೆಲ್ಲ ಕೃತಕವಾದುವು(ಪುಟ 305)

 

40)ಕಮ೯ಫಲಕ್ಕೆ  ಆಶ್ರಯವಾದ ಇತರ ಲೋಕಗಳೆಲ್ಲ ನಿಕೃಷ್ಟವಾದವು ಮತ್ತು ಅನಿಷ್ಠವಾದುವು.(ಪುಟ305)

 

ಆನಂದದ ಸ್ವರೂಪ:

 

41)ಯಜ್ಞವಲ್ಕ್ಯ:ಸಮ್ರಾಟ್,ಯಾವನು ಮನುಷ್ಯರಲ್ಲಿ ಸಮಗ್ರವಾದ ಅವಯವವುಳ್ಳವನೊ,ಸಮೃದ್ಧನೊ,ಇತರರಿಗೆ ಅಧಿಪತುಯೊ, ಎಲ್ಲ ಮನುಷ್ಯ ಭೋಗಗಳಿಂದ  ಸಂಪನ್ನತಮನೊ, ಅವನು ಮನುಷ್ಯರ ಪರಮಾನಂದ. ನೂರು ಮಾನುಷ ಆನಂದಗಳು ಲೋಕವನ್ನು ಜಯಿಸಿರು  ಪಿತೃಗಳ ಒಂದು ಆನಂದ.

 

1)ಪಿತೃಗಳ ನೂರು ಆನಂದಗಳು-ಗಂಧವ೯ ಲೋಕದ ಒಂದು ಆನಂದ

2)ಗಂಧವ೯ ಲೋಕದ ನೂರು ಆನಂದಗಳು -ಕಮ೯ದೇವತೆಗಳ ಒಂದು ಆನಂದ

3)ಕಮ೯ದೇವತೆಗಳ ನೂರು ಆನಂದ-ಅಜಾನದೇವತೆಗಳ ಒಂದು ಆನಂದ ಮತ್ತು ಅಕಾಮಹತನಾದ  ಪಾಪರಹಿತನಾದ ಶ್ರೋತ್ರಿಯನ ಒಂದು ಆನಂದ.

4)ಅಜಾನದೇವತೆಗಳ ನೂರು ಆನಂದ-ಪ್ರಜಾಪತಿ ಲೋಕದ ಒಂದು ಆನಂದ ಮತ್ತು ಅಕಾಮಹತನಾದ  ಪಾಪರಹಿತನಾದ  ಶ್ರೋತ್ರಿಯನ ಆನಂದ

5)ಪ್ರಜಾಪತಿ ಲೋಕದ ನೂರು ಆನಂದ-ಬ್ರಹ್ಮಲೋಕದ ಒಂದು ಆನಂದ ಮತ್ತು ಅದು ಅಕಾಮಹತನಾದ ಪಾಪರಹಿತನಾದ ಶ್ರೋತ್ರಿಯನ ಒಂದು ಆನಂದ.ಅನಂತರ ಇದೇ ಪರಮಾನಂದ .ಇದೇ ಬ್ರಾಹ್ಮೀ ಸ್ಥಿತಿ.(ಪುಟ 307)

 

6)ಉಪ್ಪಿನ ಹರಳಿನಿಂದ ಉಪ್ಪಿನ ಬೆಟ್ಟವನ್ನು ತಿಳಿಸಿಕೊಡುವಂತೆ -ತಿಳಿಸಿ ಕೊಡಲು ಯಾಜ್ಞವಲ್ಕ್ಯನು ಹೇಳುತ್ತಾನೆ.(ಪುಟ 307)

 

7)ಆನಂದಿಗೂ ಆನಂದಕ್ಕೂ ನಿಜವಾದ ಯಾವ ಭೇದವೂ ಇಲ್ಲ.ಇಡಿಯ ಜಗತ್ತೆ ಪರಮಾನಂದರೂಪವಾದ

ಬ್ರಹ್ಮನ ಆಭಾಸವಾಗಿದೆ.(ಪುಟ 307)

 

8) ಅನಂದವನ್ನು ಗುರುತಿಸುವುದು  ಇಲ್ಲಿ ನಿಲ್ಲುತ್ತದೆ.ವಿರಕ್ತನಾದ ಶ್ರೋತ್ರಿಯನಿಗೆ ಪರಮಾನಂದವು ಪ್ರತ್ಯಕ್ಷವಾಗಿರುತ್ತದೆ.(ಪುಟ 308) 

 

)ಆತ್ಮನು ದೇಹದಿಂದ ದೇಹಕ್ಕೆ ಹೋಗುವುದು ಸ್ವಪ್ನದಿಂದ ಎಚ್ಚರಕ್ಕೆ ಬಂದ ಹಾಗೆ.(ಪುಟ 30)

 

10)ನಿಜವಾಗಿ ಸವ೯ವ್ಯಾಪಿಯಾದ ಆತ್ಮನು ಎಲ್ಲಿಗೂ ಹೋಗುವುದಿಲ್ಲ.ಚೈತನ್ಯಜ್ಯೋತಿಯಿಂದ  ಪ್ರಕಾಶಿಸಲ್ಪಡುವ ಪ್ರಾಣ ಪ್ರಧಾನವಾದ  ಲಿಂಗಶರೀರವು ಹೋಗುವಾಗ ಅದನ್ನು  ಉಪಾಧಿಯಾಗಿ ಪಡೆದಿರುವ  ಆತ್ಮನು ಹೋಗುವಂತೆ ಕಾಣುತ್ತಾನೆ.(ಪುಟ 30)

 

11) ಪುರುಷನು  ಶರೀರದ ಅಂಗಗಳಿಂದ ಸಂಪೂಣ೯ವಾಗಿ ಬಿಡಿಸಿಕೊಂಡು  ಪುನಃ ಹೋದದಾರಿಯಿಂದಲೇ ವಿಶಿಷ್ಟ ಯೋನಿಗಳಿಗೆ ಪ್ರಾಣವಿಕಾಸಕ್ಕಾಗಿಯೇ ತ್ವರೆಯಿಂದ ಬರುತ್ತಾನೆ.(ಪುಟ 310)

 

12)ಸುಷುಪ್ತಿಗೆ ಹೊಗುವಾಗ ದೇಹವನ್ನು ಕಾಪಾಡಲು  ಪ್ರಾಣವನ್ನು ಹಿಂದೆ ಬಿಟ್ಟು ಹೋಗುತ್ತಾನೆ.ಆದರೆ ಈಗ ಪ್ರಾಣದೊಂದಿಗೆ ಬೇರೆ ದೇಹಕ್ಕೆ ಹೋಗುತ್ತಾನೆ.'ಸಂಪ್ರಮುಚ'್ಛ ಎಂಬಲ್ಲಿ ಇದು ಸಂ ಎಂಬುದರ ಅಥ೯.(ಪುಟ 311)

 

13)ಹಿಂದಿನ ಜನ್ಮಗಳಲ್ಲಿ ಹೋದಹಾಗೆ  ಇನ್ನೊಂದು ಶರೀರಕ್ಕೆ -ತನ್ನ ಕಮ೯,ಜ್ಞಾನ,ವಾಸನೆ ಇವುಗಳಿಗೆ ಅನುಸಾರವಾಗಿ -ಹೋಗುತ್ತಾನೆ.(ಪುಟ 310)

 

14)'ರಾಜನು ಬರುತ್ತಿರುವಾಗ ದಂಡಾಧಿಕಾರಿಗಳಾದ ಉಗ್ರರೂ ಸೂತಗ್ರಾಮಣ್ಯರೂ 'ಇಲ್ಲಿ ಇವನು ಬರುತ್ತಾನೆ,ಇಗೋ ಇವನು ಬರುತ್ತಾನೆ'ಎಂದು ಅನ್ನ ಪಾನವಸತಿಗಳಿಂದ ಸ್ವಾಗತಿಸಲು ನಿರೀಕ್ಷಿಸುವಂತೆ ಸಮಸ್ತ ಭೂತಗಳೂ ಹೀಗೆ ಅರಿತಿರುವವನನ್ನು "ಬ್ರಹ್ಮವು ಬರುತ್ತದೆ,ಬ್ರಹ್ಮವು ಬರುತ್ತದೆ"ಎಮದು ಸ್ವಾಗತಿಸಲು ನಿರೀಕ್ಷಿಸುತ್ತವೆ.(ಪುಟ 311) 

 

16) ಉಗ್ರ ಎಂದರೆ ಕ್ಷತ್ರಿಯ ತಂದೆಯದ ಶೂದ್ರ ಸ್ತ್ರೀಯಲ್ಲಿ ಹುಟ್ಟಿದವನು.ಅಥವಾ ಉಗ್ರ ಕಮ೯ಗಳನ್ನು ಮಾಡುವವನು.(ಪುಟ 311)

 

17)ವಣ೯ಸಂಕರದಿಂದ ಹುಟ್ಟಿದ ಜಾತಿ ವಿಶೇಷಕ್ಕೆ ಸೂತರೆಂದು ಹೆಸರು.ಗ್ರಾಮದ ನಾಯಕರು ಗ್ರಾಮಣ್ಯರು.(ಪುಟ 311)

 

18)'ಭೋಕ್ತøವೂ ಕತೃ೯ವೂ ಆದ ಬ್ರಹ್ಮವು ಬರುತ್ತಿದೆ' ಎಂದಥ೯.ಜೀವ -ಪರಮಾತ್ಮರಿಗೆ ಅಭೇದವಿರುವುದರಿಂದ  ಸಂಸಾರಿ ಜೀವನನ್ನು  ಬ್ರಹ್ಮವೆಮದು ಕರೆದಿದೆ.(ಪುಟ 311)

 

1)ರಾಜನು ಹೊರಟು ಹೋಗುತ್ತಿರುವಾಗ  ದಂಡಾಧಿಕಾರಿಗಳಾದ ಉಗ್ರರೂ  ಸೂತ ಗ್ರಾಮಣ್ಯರೂ ಅವನ ಸುತ್ತಲೂ ಒಟ್ಟು ಗೂಡುವಂತೆ ಆತ್ಮನ ಅಂತಿಮಕಾಲದಲ್ಲಿ -ಅವನು ಉಸಿರಾಡಲು ಕಷ್ಟಪಡುತ್ತಿರುವಗ -ಅವನ ಸುತ್ತಲೂ ಎಲ್ಲ ಇಂದ್ರಿಯಗಳು ಒಟ್ಟುಗೂಡುವುವು.(ರಾಜನಿಂದ ಆಜ್ಞೆಯನ್ನು ಪಡೆಯದಿದ್ದರೂ,ಅವನ ಕಮ೯ವಶದಿಂದ ಪ್ರೇರಿತರಾಗಿ)(ಪುಟ312)

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

 

ನಾಲ್ಕನೆಯ ಬ್ರಾಹ್ಮಣ:

1)ಕಣ್ಣಿನಲ್ಲಿರುವ ಅಧಿಷ್ಠಾತೃ ದೇವತೆಯು  ಯಾವಾಗ ಎಲ್ಲ ಕಡೆಯಿಂದಲೂ ಹಿಂತಿರುಗುವುದೊ

ಆಗ ಸಾಯುತ್ತಿರುವವನು ರೂಪವನ್ನು ಅರಿಯುವುದಿಲ್ಲ.(ಪುಟ 313).

 

2)ಮಿಕ್ಕ ಇಂದ್ರಿಯಗಳ  ಅಧಿಷ್ಠಾತೃ ದೇವತೆಗಳೂ ಕೂಡ.ಮನುಷ್ಯನು ಹುಟ್ಟಿದಾಗ ಇವು ತಮ್ಮ ತಮ್ಮ ಗೋಲಕಗಳಿಗೆ ಪುನಃ ಹಿಂದಿರುಗುತ್ತವೆ.(ಪುಟ 314)

 

3)ಲಿಂಗ ಶರೀರದೊಂದಿಗೆ ಕಣ್ಣು ಒಂದಾಗುತ್ತದೆ;ಆಗ ಮನುಷ್ಯರು ಜನರು 'ಅವನು ನೋಡುತ್ತಿಲ್ಲ' ಎಂದು ಹೇಳುತ್ತಾರೆ.ಮೂಗು ಒಂದಾಗುತ್ತದೆ.ಆಗ 'ಅವನು ಮೂಸುತ್ತಿಲ್ಲ' ಎಂದು ಹೇಳುವರು.ನಾಲಗೆ ಒಂದಾಗುತ್ತದೆ.ಆಗ 'ಅವನು ಸವಿಯುತ್ತಿಲ್ಲ'ಎಂದು ಹೇಳುತ್ತಾರೆ.ವಾಕ್ಕು ಒಂದಾಗುತ್ತದೆ.ಆಗ ಜನರು' ಅವನು ಮಾತನಾಡುತ್ತಿಲ್ಲ'ಎಂದು ಹೇಳುವರು. ಕಿವಿಯು ಒಂದಾಗುತ್ತದೆ;ಆಗ ಜನರು "ಅವನು ಕೇಳುತ್ತಿಲ್ಲ" ಎಂದು ಹೇಳುತ್ತಾರೆ.ಮನಸ್ಸು ಒಂದಾಗುತ್ತದೆ.ಆಗ "ಅವನು ಮನನ ಮಾಡುತ್ತಿಲ್ಲ"ಎಂದು ಜನರು ಹೇಳುತ್ತಾರೆ.ತ್ವಗಿಂದ್ರಿಯವು ಒಂದಾಗುತ್ತದೆ.ಆಗ ಅವನು"ಸ್ಪಶ೯ ಮಾಡುತ್ತಿಲ್ಲ"ಎಂದು ಜನರು ಹೇಳುತ್ತಾರೆ.ಬುದ್ಧಿಯು ಒಂದಾಗುತ್ತದೆ.ಆಗ ಜನರು "ಅವನು ಅರಿಯುತ್ತಿಲ್ಲ"ಎಂದು ಹೇಳುತ್ತಾರೆ.

ಆಗ ಹೃದಯದ ನಾಡೀ ಮುಖವು ಪ್ರಜ್ಡಲಿಸುತ್ತದೆ. ಜ್ಯೋತಿಯ ಸಹಾಯದಿಂದ  ಆತ್ಮನು ಕಣ್ಣಿನ ಮೂಲಕ ಅಥವಾ ತಲೆಯ ಮೂಲಕ ಅಥವಾ ಯಾವುದಾದರೂ ಶರೀರ ದೇಶದ ಮೂಲಕ ನಿಷ್ಕ್ರಮಿಸುತ್ತಾನೆ.ಹಾಗೂ ಉತ್ಕ್ರಮಿಸುತ್ತಿರುವ ಅಬನನ್ನು  ಅನುಸರಿಸಿ  ಪ್ರಾಣನೂ ಉತ್ಕ್ರಮಿಸುತ್ತಾನೆ.ಉತ್ಕ್ರಮಿಸುತ್ತಿರುವ  ಪ್ರಾಣವನ್ನು ಅನುಸರಿಸಿ ಇಂದ್ರಿಯಗಳೆಲ್ಲ ಉತ್ಕ್ರಮಿಸುತ್ತವೆ.ಆಗ ಆತ್ಮನು ವಿಶೇಷ ವಿಜ್ಞಾನವುಳ್ಳವನಾಗುತ್ತಾನೆ ಮತ್ತು ವಿಶೇಷ ಜ್ಞಾನದಿಂದ (ಪ್ರಕಾಶಿಸಲ್ಪಟ್ಟ ಶರೀರವನ್ನೇ) ಪ್ರವೇಶಿಸುತ್ತಾನೆ.ವಿದ್ಯೆ,ಕಮ೯ ಮತ್ತು ಹಿಂದಿನ ಪ್ರಜ್ಞೆ-ಇವು ಅವನನ್ನು  ಹಿಂಬಾಲಿಸುತ್ತವೆ.(ಪುಟ 316)

 

4) ವಿಶೇಷ ಜ್ಞಾನವೆಂದರೆ ಮುಂದಿನ ಶರೀರದ ಜ್ಞಾನ. ಜ್ಞಾನವು ಉತ್ಕ್ರಮಿಸುತ್ತಿರುವ  ಜೀವನ ಹಿಂದಿನ ಕಮ೯ವನ್ನು ಅವಲಂಬಿಸುತ್ತಿರುತ್ತದೆ.ಆದುದರಿಂದ ಪ್ರತಿಯೊಬ್ಬನೂ  ಪಾಪಕಮ೯ಗಳನ್ನು ಮಾಡದೆ ಉಪಾಸನಾದಿಗಳ ಸಹಿತ  ಪುಣ್ಯಕಮ೯ವನ್ನೇ ಮಾಡಬೇಕು.ಹೀಗೆ ಮಾಡುವುದರಿಂದ ಮರಣಕಾಲದಲ್ಲಿ  ಒಳ್ಳೆಯ ಭಾವನೆಗಳೇ ಉಂಟಾಗುವುವು.(ಪುಟ316)

 

5)ವಿದ್ಯಾ-ಕಮ೯-ಪೂವ೯ಪ್ರಜ್ಞೆಗಳು ಪರಲೋಕಕ್ಕೆ ಬುತ್ತಿಯಂತೆ.(ಪುಟ 316)

 

6)ಹೇಗೆ ತೃಣಜಲಾಯುಕವು(ಹುಲ್ಲಿನಲ್ಲಿರುವ ಒಂದು ವಿಧವಾದ ಜಿಗುಣೆ) ಒಂದು ಹುಲ್ಲಿನ ತುದಿಯಿಂದ  ಇನ್ನೊಂದು ಆಶ್ರಯವನ್ನು(ಎಂದರೆ ಹುಲ್ಲನ್ನು)ಹಿಡಿದುಕೊಂಡು  ತನ್ನನ್ನು ಎಳೆದುಕೊಳ್ಳುತ್ತದೆಯೊ ಹಾಗೆಯೇ  ಆತ್ಮನು ಶರೀರವನ್ನು ತ್ಯಜಿಸಿ -ಅಚೇತನಗೊಳಿಸಿ -ಇನ್ನೊಂದು ಆಶ್ರಯವನ್ನು ತೆಗೆದುಕೊಂಡು ತನ್ನನ್ನು ಎಳೆದುಕೊಳ್ಳುತ್ತಾನೆ.(ಪುಟ 317)

 

7)" ಆತ್ಮನೇ ಬ್ರಹ್ಮ-ಇವನೇ ವಿಜ್ಞಾನಮಯನು,ಮನೋಮಯನು,ಪ್ರಾಣಮಯನು,ಚಕ್ಷುಮ೯ಯನು,ಶ್ರೋತ್ರಮಯನು,ಪೃಥ್ವೀಮಯನು,ಆಪೋಮಯನು,ವಾಯುಮಯನು,ಆಕಾಶಮಯನು,ತೇಜೋಮಯನು,ಅತೇಜೋಮಯನು,ಕಾಮಮಯನು,ಅಕಾಮಮಯನು,ಕ್ರೋಧಮಯನು,,ಅಕ್ರೋಧಮಯನು,ಧಮ೯ಮಯನು,ಅಧಮ೯ಮಯನು,ಸವ೯ಮಯನು,ಇವನು ಇದಂ-ಮಯನು,,ಅದೋಮಯನು,ಎಂಬುದು ಸಿದ್ಧವಾಗಿದೆ.ಇವನು ಹೇಗೆ ಮಾಡುವನೊ,ಹೇಗೆ ಆಚರಿಸುವನೊ ಹಾಗೆ ಅಗುವನು.

ಸಾಧುಕಾರಿಯಾದವನು ಸಾಧುವಾಗುತ್ತಾನೆ.ಪಾಪಕಾರಿಯಾದವನು ಪಾಪಿಯಾಗುತ್ತಾನೆ. ಪುಣ್ಯಕಮ೯ದಿಂದ ಪುಣ್ಯವಂತನಾಗುವನು.ಪಾಪಕಮ೯ದಿಂದ ಪಾಪಿಯಾಗುವನು.ಇನ್ನು ಕೆಲವರು ಹೀಗೆ ಹೇಳುತ್ತಾರೆ:" ಪುರುಷನು ಕಾಮಮಯನೇ;ಅವನು ಎಂಥಕಾಮದವನೊ ಅಂಥ ಕೃತಸಂಕಲ್ಪದವನು.ಎಂಥ ಕೃತಸಂಕಲ್ಪನೊ ಅಂಥಕಮ೯ವನ್ನು ಮಾಡುತ್ತಾನೆ.ಎಂಥ ಕಮ೯ವನ್ನು ಮಾಡುವನೊ ಅದನ್ನೇ ಪಡೆಯುತ್ತಾನೆ.(ಪುಟ 320)

 

8) ಆತ್ಮನ ಉಪಾಧಿಗಳಿಗೆ ಬಂಧನಗಳೆಂದು ಹೆಸರು.ಆತ್ಮನು ಬಂಧನಗಳೊಂದಿಗೆ ಕೂಡಿ ತನ್ಮಯನಾದಂತೆ ತೋರುತ್ತಾನೆ. ಕಂಡಿಕೆಯಲ್ಲಿ ಬಂಧನರೂಪವಾದ  ಉಪಾಧಿಗಳನ್ನೆಲ್ಲ ಒಟ್ಟುಗೂಡಿಸಲಾಗಿದೆ.

(ಪುಟ 322)

 

)ಕಾಮವೇ ಸಂಸಾರಕ್ಕೆ ಕಾರಣ.ಜ್ಞಾನಿಯು ಫಲಾಭಿಸಂಧಿಯಿಲ್ಲದೆ(ನಿಷ್ಕಾಮ ಕಮ೯) ಕೆಲಸವನ್ನು ಮಾಡಿದರೆ  ಪುನಜ೯ನ್ಮವನ್ನುಂಟು ಮಾಡುವ  ಪುಣ್ಯಾಪುಣ್ಯಗಳು ಉದಯಿಸುವುದಿಲ್ಲ.(ಪುಟ 320)

 

10)  ವಿಷಯದಲ್ಲಿ ಶ್ಲೋಕವಿದೆ."ಸಂಸರಿಸುತ್ತಿರುವ ಆತ್ಮನು  ಆಸಕ್ತನಾಗಿ ಎಲ್ಲಿ ಇವನ ಲಿಂಗಶರೀರವು ಅಥವಾ ಮನಸ್ಸು  ಆಸಕ್ತವಾಗಿದೆಯೊ ಅದನ್ನೇ ಕಮ೯ದೊಂದಿಗೆ ಸೇರುತ್ತಾನೆ.ಇಹಲೋಕದಲ್ಲಿ ಯಾವ ಕಮ೯ವನ್ನು ಮಾಡಿದನೋ  ಅದರ ಅಂತವನ್ನು  ಪರಲೋಕದಲ್ಲಿ ಅನುಭವಿಸಿಕೊಂಡು ಅಲ್ಲಿಂದ ಪುನಃ ಲೋಕಕ್ಕೆ ಹೊಸ ಕಮ೯ಕ್ಕಾಗಿ ಹಿಂತಿರುಗುತ್ತಾನೆ." ಹೀಗೆ ಫಲಕಾಮಿಯು ಸಂಸರಿಸುತ್ತಾನೆ.ಈಗ ಅಕಾಮಿಯಾದವನು:ಯಾವನು ಅಕಾಮನೊ ನಿಷ್ಕಾನೊ,ಅಪ್ತಕಾಮನೊ,ಆತ್ಮಕಾಮನೊ ಅವನ ಇಂದ್ರಿಯಗಳು ಉತ್ಕ್ರಮಿಸುವುದಿಲ್ಲ.ಬ್ರಹ್ಮವೇ ಆಗಿ ಬ್ರಹ್ಮದಲ್ಲಿ ಲೀನವಾಗುತ್ತಾನೆ.(ಪುಟ 321)

 

1)ಲಿಂಗ ಶರೀರದಲ್ಲಿ ಮನಸ್ಸು ಪ್ರಧಾನವಾದ್ದರಿಂದ ಮನಸ್ಸನ್ನೇ ಲಿಂಗವೆಂದು ಕರೆದಿದೆ.ಲಿಂಗವೆಂದರೆ ಸೂಚಿ.ಏಕೆಂದರೆ ಇದು ಆತ್ಮನನ್ನು ಸೂಚಿಸುತ್ತದೆ.(ಪುಟ 322)

 

11)ಮನಸ್ಸಿನಲ್ಲಿ ಅಭಿಲಾಷೆ ಉಂಟಾದರೆ ಕಮ೯ವು ನಡೆಯುತ್ತದೆ.(ಪುಟ 322)

 

12)'ಬ್ರಹ್ಮದಲ್ಲಿ ಲೀನವಾಗುತ್ತಾನೆ'ಎಂಬುದು ಕೇವಲ ಉಪಚಾರಕ್ಕಾಗಿ ಹೇಳಿದೆ.ಏಕೆಂದರೆ ಮೋಕ್ಷವು  ಕಮ೯ದ್ವಾರಾ ಉಂಟಾಗುವ ವಸ್ತುವಲ್ಲ.ಅದು ಆತ್ಮನ ಸ್ವರೂಪವಾಗಿ ಅಲ್ಲಿಯೇ ಇದೆ.)ಅದು ಲೀನವಾಗಲು  ಮೊದಲು ಬೇಪ೯ಟ್ಟೇ ಇಲ್ಲ) .ಬ್ರಹ್ಮಜ್ಞಾನಿಗೆ ಗಮನ ಆಗಮನವಾಗಲೀ ಶರೀರ ಗ್ರಹಣವಾಗಲೀ ಇಲ್ಲ.(ಪುಟ 322)

 

13)"ಇವನ ಹೃದಯದಲ್ಲಿರು ಕಾಮನೆಗಳೆಲ್ಲ ಬಿಟ್ಟುಹೋಗುವವೊ,ಆಗ ಮನುಷ್ಯನು ಅಮೃತನಾಗುತ್ತಾನೆ ಮತ್ತು ಶರೀರದಲ್ಲಿಯೇ ಬ್ರಹ್ಮವನ್ನು ಹೊಂದುತ್ತಾನೆ.ಹೇಗೆ ಪ್ರಾಣರಹಿತವಾದ ಹಾವಿನಪೊರೆಯು  ಹುತ್ತದಲ್ಲಿ ಬಿಡಲ್ಪಟ್ಟು ಬಿದ್ದಿರುತ್ತದೆಯೊ ಹಾಗೆಯೇ ಶರೀರವೂ ಬಿದ್ದಿರುತ್ತದೆ.ಆಗ ಆತ್ಮನು ಅಶರೀರನು, ಅಮೃತನೂ ಪರಮಾತ್ಮನೂ  ಬ್ರಹ್ಮವೂ ತೇಜಸ್ಸೂ ಆಗುತ್ತಾನೆ.(ಪುಟ 323)

 

14)ಅವಿದ್ಯಾ ರೂಪವಾದ ಅನಾತ್ಮ ವಿಷಯನಾದ ಕಾಮಗಳೇ ಮೃತ್ಯುಗಳು.ಆದುದರಿಂದ ಕಾಮಗಳು ಸಮೂಲವಾಗಿ ಹೊರಟು ಹೋದರೆ ಅಮೃತತ್ವವು ಉಂಟಾಗುತ್ತದೆ.(ಪುಟ323)

 

15) "ಸೂಕ್ಮವೂ ವಿಸ್ತಾರವೂ ಚಿರಂತನವೂ ಆದ ಜ್ಞಾನ ಮಾಗ೯ವು ನನ್ನನ್ನು ಸ್ಪಶಿ೯ಸಿದೆ.ನಾನು ಅದನ್ನು ಅರಿತುಕೊಂಡಿದ್ದೇನೆ.ಪ್ರಜ್ಞಾವಂತರಾದ ಬ್ರಹ್ಮವಿದರು,  ಮಾಗ೯ದ ಮೂಲಕ ಬದುಕಿರುವಾಗಲೇ

ವಿಮುಕ್ತರಾಗುತ್ತಾರೆ.(ಜೀವನ್ಮುಕ್ತ)(ಪುಟ324)

 

16)ಯಾರು ಅವಿದ್ಯೆಯನ್ನು ಉಪಾಸನೆ ಮಾಡುತ್ತಾರೋ  ಅವರು ಕುರುಡುಗತ್ತಲೆಯನ್ನು ಪ್ರವೇಶಿಸುತ್ತಾರೆ.ಆದರೆ ಯಾರು ವಿದ್ಯೆಯಲ್ಲಿ ನಿರತರಾಗಿರುವರೊ ಅವರು ಅದಕ್ಕಿಂತ ಹೆಚ್ಛಿನ ಕತ್ತಲೆಯನ್ನು ಪ್ರವೇಶಿಸುತ್ತಾರೆ.(ಪುಟ 325)

 

17)ಅವಿದ್ಯಾ ವಸ್ತುವನ್ನು ಪ್ರತಿಪಾದಿಸುವ ಕಮಾ೯ಥ೯ವಾದ ತ್ರಯೀ ವಿದ್ಯೆಯಲ್ಲಿ.ಇದರಲ್ಲಿ ಅಭಿರತರಾಗಿರುವವರು  ವಿಧಿನಿಷೇಧವಾದ ವೇದವಲ್ಲದೆ ಉಪನಿಷತ್ತನ್ನು ಲೆಕ್ಕಿಸುವುದಿಲ್ಲ.(ಪುಟ 325)

 

18)ಪುರುಷನು ಪರಮಾತ್ಮನನ್ನು 'ಇವನೇ ನಾನು' ಎಂದು ಅರಿತುಕೊಂಡರೆ ಯಾವುದನ್ನು ಬಯಸುತ್ತ,ಯಾವ ಪ್ರಯೋಜನಕ್ಕಾಗಿ ಶರೀರದ ರೋಗವನ್ನು ಅನುಸರಿಸಿ ದುಃಖಪಡುವನು?(ಪುಟ326)

 

1)"ಅನಥ೯ಬಹುಳವೂ  ಗಹನವೂ ಆದ (ಶರೀರವನ್ನು) ಪ್ರವೇಶಿಸಿರುವ ಯಾವನು ಪಡೆದುಕೊಂಡಿರುವನೊ ಮತ್ತು ಸಾಕ್ಷಾತ್ಕರಿಸಿರುವನೊ ಅವನು ವಿಶ್ವದ ಕತೃ೯ವಾಗಿರುತ್ತಾನೆ.ಏಕೆಂದರೆ ಅವನು ಎಲ್ಲದರ ಕತೃ೯ವು;ಸವ೯ವೂ ಅವನ ಆತ್ಮವಾಗಿದೆ ಮತ್ತು ಅವನು ಎಲ್ಲದರ ಆತ್ಮವಾಗಿರುತ್ತಾನೆ.(ಪುಟ327)

 

20)" ಶರೀರದಲ್ಲಿಯೇ ಇದ್ದುಕೊಂಡು ನಾವು ಹೇಗೊ ಬ್ರಹ್ಮತತ್ವವನ್ನು ಅರಿತುಕೊಂಡಿರುತ್ತೇವೆ.ಇಲ್ಲದಿದ್ದರೆ ಅಜ್ಞಾನಿಯಾಗಿರುತ್ತಿದ್ದೆನು ಮತ್ತು ಮಹಾ ವಿನಾಶವುಂಟಾಗುತ್ತಲಿತ್ತು.   

 ಯಾರು ಅದನ್ನು ಅರಿತುಕೊಂಡಿರುವರೊ  ಅವರು ಅಮೃತರಾಗುತ್ತಾರೆ.ಇನ್ನು ಇತರರು ದುಃಖವನ್ನೇ ಪಡೆಯುತ್ತಾರೆ.(ಪುಟ328)

 

21) "ಯಾವಾಗ ಪುರುಷನು ಆಚಾಯ೯ನಿಂದ ಅನುಗ್ರಹೀತನಾಗಿ ಕಾಲತ್ರಯದ ಈಶನೂ  ಪ್ರಕಾಶಮಾನನೂ  ಆದ ಆತ್ಮನನ್ನು ಸಾಕ್ಷಾತ್ತಾಗಿ ನೋಡುತ್ತಾನೆಯೊ ಆಗ ಅವನಿಂದ ಕಾಪಾಡಿಕೊಳ್ಳಲು ಇಚ್ಛಿಸುವುದಿಲ್ಲ."(ಪುಟ 328)

 

22)ಭೇದದಶಿ೯ಯು ಈಶ್ವರನಿಂದ ತನ್ನನ್ನು ರಕ್ಷಿಸಿಕೊಳ್ಳಲು ಬಯಸುತ್ತಾನೆ.ಆದರೆ  ಏಕತ್ವದಶಿ೯ಯು  ಯಾವುದಕ್ಕೂ ಹೆದರುವುದಿಲ್ಲವಾದ್ದರಿಂದ  ಕಾಪಡಿಕೊಳ್ಳಲು ಇಚ್ಛಿಸುವುದಿಲ್ಲ.ಅಥವಾ ಇವನು ಯಾರನ್ನೂ ನಿಂದಿಸುವುದಿಲ್ಲ.ಏಕೆಂದರೆ ಸವ೯ವನ್ನೂ ತನ್ನ ಆತ್ಮನನ್ನಾಗಿ ನೋಡುವನು.(ಪುಟ 320)

 

23) ಯವುದರಲ್ಲಿ ಐದು ಪಂಚ ಜನರೊ,ಆಕಾಶವೂ ಪ್ರತಿಷ್ಠಿತವಾಗಿದೆಯೊ, ಆತ್ಮವನ್ನೇ ಅಮೃತ ಬ್ರಹ್ಮವೆಂದು ತಿಳಿಯುತ್ತೇನೆ.ಬ್ರಹ್ಮವನ್ನು ಅರಿತುಕೊಂಡು ಅಮೃತನಾಗಿದ್ದೇನೆ.(ಪುಟ 32)

 

23)ಗಂಧವ೯ರು,ಪಿತೃಗಳು,ದೇವತೆಗಳು,ಅಸುರರು,ರಾಕ್ಷಸರು,ಅಥವಾ ಬ್ರಾಹ್ಮಣ,ಕ್ಷತ್ರಿಯ,ಶೂದ್ರ,ನಿಷಾದ ಎಂಬ ಐದು ವಣ೯ಗಳು.(ಪುಟ 32)

 

24)ಅಜ್ಞಾನಿಯಾದ ನಾನು ಮತ್ಯ೯ನಾಗಿದ್ದೆನು.ಅದು ತೊಲಗಿದ್ದರಿಂದ ಜ್ಞಾನಿಯಾದ ನಾನು  ಅಮೃತನಾಗಿದ್ಧೇನೆ.(ಪುಟ 32)

 

25)ಯಾರು ಪ್ರಾಣದ ಪ್ರಾಣವನ್ನೂ,ಕಣ್ಣಿನ ಕಣ್ಣನ್ನೂ, ಕಿವಿಯ ಕಿವಿಯನ್ನೂ ,ಮನಸ್ಸಿನ ಮನಸ್ಸನ್ನೂ,ಅರಿತುಕೊಂಡಿರುವರೊ,ಅವರು ಚಿರಂತನವೂ  ಆದ್ಯವೂ ಆದ ಬ್ರಹ್ಮವನ್ನು ನಿಶ್ಚಯವಾಗಿ ಸಾಕ್ಷಾತ್ಕರಿಸಿರುತ್ತಾರೆ.(ಪುಟ 330)

 

26)ಪ್ರಾಣವೇ ಮೊದಲಾದ ಇಂದ್ರಿಯಗಳು ಜಡವಾಗಿದ್ದರೂ,ಆತ್ಮಚೈತನ್ಯ ಜ್ಯೋತಿಯಿಂದ  ತಮ್ಮ ಕಮ೯ಗಳನ್ನು ಮಾಡುತ್ತವೆ.ಇದರಿಂದ ಪ್ರತ್ಯಗಾತ್ಮನ ಇರುವಿಕೆಯನ್ನು ಊಹಿಸಬಹುದು.(ಪುಟ 330)

 

27) ಇದನ್ನು ಮನಸ್ಸಿನಿಂದಲೇ ತಿಳಿದುಕೊಳ್ಳಬೇಕು.ಇಲ್ಲಿ ನಾನಾತ್ವವು ಸ್ವಲ್ಪವೂ ಇಲ್ಲ.ಯಾವನು ಇಲ್ಲಿ ನಾನಾತ್ವವಿರುವಂತೆ ನೋಡುತ್ತಾನೆಯೊ ಅವನು ಮೃತ್ಯುವಿನಿಂದ ನೃತ್ಯುವನ್ನು ಹೊಂದುತ್ತಾನೆ.(ಪುಟ0330)

 

28)'ನೇಹ ನಾನಾಸ್ತಿ ಕಿಂಚನ' ಎಂದರೆ ಇಲ್ಲಿ ದ್ವೈತವು ಸ್ವಲ್ಪವೂ ಇಲ್ಲ ಎಂದಥ೯.(ಪುಟ 330)

 

2)ನಾನಾತ್ವವಿಲ್ಲದಿದ್ದರೂ ಮನುಷ್ಯನು(ಪುರುಷನು) ಅವಿದ್ಯೆಯಿಂದ ನಾನಾತ್ವವನ್ನು ನೋಡುತ್ತಾನೆ.(ಪುಟ330)

 

30)ಸ್ವಗತ ಭೇದ,ಸ್ವಜಾತೀಯ ಭೇದ,ವಿಜಾತೀಯ ಭೇದವಾಗಲಿ ಇಲ್ಲ(ಪುಟ 330)

 

31)"ಇದನ್ನು ಒಂದೇ ಪ್ರಕಾರದಿಂದ ಸಾಕ್ಷಾತ್ಕರಿಸಬೇಕು.ಏಕೆಂದರೆ ಇದು ಅಪ್ರಮೇಯವೂ ನಿತ್ಯವೂ ಆಗಿರುತ್ತದೆ.ಆತ್ಮನು ರಜಸ್ಸಿಲ್ಲದವನು.ಅವ್ಯಾಕೃತಕ್ಕಿಂತಲೂ ವ್ಯತಿರಿಕ್ತನು,ಜನ್ಮರಹಿತನು,ಮಹಾನ್ ಮತ್ತು ಅವಿನಾಶಿಯು".(ಪುಟ 331)

 

32) ಆತ್ಮತತ್ವವನ್ನು ಪ್ರತ್ಯಕ್ಷ, ಅನುಮಾನ ಮೊದಲಾದ ಪ್ರಮಾಣಗಳಿಂದ ವಿಷಯೀಕರಿಸಲು ಸಾಧ್ಯವಾಗುವುದಿಲ್ಲ.ಆದರೆ ಉಪನಿಷತ್ತುಗಳು ಪ್ರಮಾತೃ ಪ್ರಮಾಣ ಮೊದಲಾದವುಗಳ ವ್ಯಾಪಾರವನ್ನು ನಿಷೇಧಿಸಿ  ಆತ್ಮತತ್ವವನ್ನು ತಿಳಿಸಿಕೊಡುತ್ತವೆಯೇ ವಿನಃ ಅಭಿದಾನ ಅಭಿದೇಯ ಎಂಬ ವಾಕ್ಯಧಮ೯ವನ್ನು ಅಂಗೀಕರಿಸಿ ತಿಳಿಸಿಕೊಡುವುದಿಲ್ಲ.(ಪುಟ 331)

 

33)ಜನ್ಮ,ಸ್ಥಿತಿ,ವೃದ್ಧಿ,ಪರಿಣಾಮ,ಕ್ಷಯ,ಮರಣ ಮೊದಲಾದ ಭಾವ ವಿಕಾರಗಳಿಲ್ಲದವನು.(ಪುಟ331)

 

34)ಧೀಮಂತನಾದ ಬ್ರಾಹ್ಮಣನು ಆತ್ಮನನ್ನೇ ತಿಳಿದುಕೊಂಡು ಪ್ರಜ್ಞೆಯನ್ನು ಅವಲಂಬಿಸಬೇಕು.ಬಹುಶಬ್ದಗಳನ್ನು ಚಿಂತಿಸಕೂಡದು.ಏಕೆಂದರೆ ಅದು ವಾಗಿಂದ್ರಿಯಕ್ಕೆ ಶ್ರಮವನ್ನುಂಟು ಮಾಡುತ್ತದೆ.(ಪುಟ332)

 

35)ಬೇರೆ ಮಾತುಗಳನ್ನು ಬಿಡಿರಿ.(ಅನ್ಯಾ ವಾಚೋ ಮಿಮುಂಚಥ.(ಮುಂ..2.2.5)

 

36) ಓಂ ಎಂದು ಆತ್ಮನನ್ನು ಧ್ಯಾನಿಸಿರಿ.(ಓಂ ಇತ್ಯೇವಂ ಧ್ಯಾಯಥ ಆತ್ಮಾನಂ.(ಮುಂ..2.2.6)

 

37)'ವಿಜ್ಞಾನಮಯನೂ,ಇಂದ್ರಿಯಗಳ ಮಧ್ಯದಲ್ಲಿರುವವನೂ,ಜನ್ಮರಹಿತನೂ,ಮಹಾಂತನೂ,ಆದ ಆತ್ಮನು ಹೃದಯದಲ್ಲಿರುವ ಆಕಾಶದಲ್ಲಿ ಇರುತ್ತಾನೆ.ಅವನು ಸವ೯ನಿಯಾಮಕನು.ಎಲ್ಲರ ಪ್ರಭುವು,ಎಲ್ಲರ ಅಧಿಪತಿಯು,ಅವನು ಶಾಸ್ತ್ರವಿಹಿತವಾದ ಕಮ೯ದಿಂದ ವಧಿ೯ಸುವುದಿಲ್ಲ.ಶಾಸ್ತ್ರ ಪ್ರತಿಷಿದ್ಧ ಕಮ೯ದಿಂದ ಅಲ್ಪನಾಗುವುದಿಲ್ಲ.ಇವನು ಸವೇ೯ಶ್ವರನು.ಸವ೯ ಪ್ರಾಣಿಗಳ ಅಧಿಪತಿಯು,ಸವ೯ ಪ್ರಾಣಿಗಲ ಪಾಲಕನು, ಲೋಕಗಳು ಪರಸ್ಪರ ಮಿಶ್ರಣವಾಗದಿರುವುದಕ್ಕೆ ಇವನು ವಿಧಾರಕವಾದ ಸೇತು.ನಿತ್ಯ ಸ್ವಾಧ್ಯಾಯದಿಂದಲೂ ಯಜ್ಞದಿಂದಲೂ ಮತ್ತು ನಾಶಕರವಲ್ಲದ ತಪಸ್ಸಿನಿಂದಲೂ,ಇವನನ್ನು ಅರಿತುಕೊಳ್ಳಲು ಬಯಸುತ್ತಾರೆ.ಇವನನ್ನೇ ಅರಿತುಕೊಂಡು ಪುರುಷನು ಮುನಿಯಾಗುತ್ತಾನೆ.ಸನ್ಯಾಸಿಗಳು ಆತ್ಮಲೋಫಕವನ್ನೇ ಬಯಸುತ್ತ ಪ್ರವ್ರಜನ ಮಾಡುತ್ತಾರೆ.ಹೀಗೆ ಪ್ರವ್ರಜನ ಮಾಡುವುದಕ್ಕೆ ಇದು ಕಾರಣವು:" ಲೋಕವನ್ನೇ  ಹೊಂದಿರುವ ನಾವು  ಸಂತತಿಇಂದ  ಏನು ಮಾಡಿಕೊಳ್ಳೋಣ.?"ಎಂದು ಯೋಚಿಸುತ್ತ ಹಿಂದಿನ ಬ್ರಹ್ಮಜ್ಞಾನಿಗಳು ಸಂತತಿಯನ್ನು ಬಯಸಲಿಲ್ಲ.ಅವರು ಪುತ್ರರಲ್ಲಿ,ವಿತ್ತದಲ್ಲಿ,ಲೋಕಗಳಲ್ಲಿ,ಇರುವ ಕಾಮನೆಯನ್ನು ಬಿಟ್ಟು ಭಕ್ಷಾಚಯೆ೯ಯನ್ನು ಮಾಡುತ್ತಾರೆ.ಯಾವುದು ಪುತ್ರಕಾಮನೆಯೊ ಅದುವಿತ್ತಕಾಮನೆ ಯಾವುದು ವಿತ್ತಕಾಮನೆಯೊ ಅದು  ಲೋಕಕಾಮನೆ:ಏಕೆಂದರೆ ಇವೆರಡೂ ಕಾಮನೆಗಳೇ ಅಗಿರುತ್ತವೆ."ಹೀಗಲ್ಲ ಹೀಗಲ್ಲ" ಎಂದು ಹೇಳಲ್ಪಟ್ಟಿರುವ ಅವನೇ ಆತ್ಮನು.ಅವನು ಅಗೃಹ್ಯನುಏಕೆಂದರೆ ಅವನನ್ನು ಹಿಡಿಯಲಾಗುವುದಿಲ್ಲ;ಅವನು ಅಕ್ಷಯನು  ಏಕೆಂದರೆ ಅವನು ಕ್ಷೀಣನಾಗುವುದಿಲ್ಲ,ಅವನು ಅಸಂಗನು ಏಕೆಂದರೆ ಅವನು ಆಸಕ್ತನಾಗುವುದಿಲ್ಲ.ಅವನು ಬಂಧರಹಿತನುಆದುದರಿಂದ ವ್ಯಥೆಪಡುವುದಿಲ್ಲ ಮತ್ತು  ಹಿಂಸಿತನಾಗುವುದಿಲ್ಲ."ಇದಕ್ಕಾಗಿ ಪಾಪವನ್ನು ಮಾಡಿದೆನು" "ಇದಕ್ಕಾಗಿ ಪುಣ್ಯವನ್ನು ಮಾಡಿದೆನು"ಎಂಬ ಎರಡು ಚಿಂತೆಗಳು ಇವನನ್ನು ವ್ಯಾಕುಲಗೊಳಿಸುವುದಿಲ್ಲ.ಇವನು ಇವೆರಡನ್ನೂ ದಾಟುತ್ತಾನೆ.ಮಾಡಿದ್ದು  ಮತ್ತು ಮಾಡದಿರುವುದು ಇವನನ್ನು ತಪಿಸುವುದಿಲ್ಲ'(ಪುಟ 334)

 

38) ಆತ್ಮನು ಕಮ೯ದೊಂದಿಗೆ  ಸಂಬಂಧವನ್ನು ¥ಡೆದಿರುವುದಿಲ್ಲವಾದುದರಿಂದ  ಕಮ೯ದ ಪಾಪ ಪುಣ್ಯಗಳಿಂದ ಅಸ್ಪøಷ್ಯನಾಗಿರುತ್ತಾನೆ.(ಪುಟ 335)

 

3)ಅನಾಶಕವೆಂದರೆ ಮನಸ್ಸಿಗೆ ಬಂದಂತೆ ತಿನ್ನದೇ ಇರುವುದೇ ವಿನಾ ಭೋಜನ ತ್ಯಾಗವಲ್ಲ.ಭೋಜನವನ್ನು ಬಿಟ್ಟರೆ ಮನುಷ್ಯನು ಮೃತನಾಗುತ್ತಾನೆಯೇ ಹೊರತು ಆತ್ಮಜಾನವನ್ನು ಹೊಂದುವುದಿಲ್ಲ.(ಪುಟ 335)

 

40)ವೇದಾನುವಚನ,ಯಜ್ಞ.ದಾನ,ತಪಸ್ಸು-ಇವು ಸತ್ವ ಶುದ್ಧಿಯ ದ್ವಾರಾ  ಆತ್ಮ ಜ್ಞಾನಕ್ಕೆ ಸಾಧನಗಳಾಗಿವೆ.(ಪುಟ 335)   

 

41)ಆದುದರಿಂದ ಕಾಮ್ಯಕಮ೯ವನ್ನು ಬಿಟ್ಟು  ವೇದದ ಮಿಕ್ಕಭಾಗವೆಲ್ಲವೂ  ಜ್ಞಾನಕ್ಕಾಗಿ ವಿನಿಯೋಗವಾಗಿದೆ.(ಪುಟ 335)

 

42) 'ಸಂತತಿಯು' ಕಮೋ೯ಪಾಸನೆಗಳನ್ನು ಸೂಚಿಸುತ್ತದೆ.(ಪುಟ 335)

 

43)'ಇದು ಋಕ್ಕಿನಿಂದ  ಪ್ರಕಾಶಿಸಲ್ಪಟ್ಟಿದೆ: "ಇದು ಬ್ರಹ್ಮಜ್ಞಾನಿಯ ನಿತ್ಯವಾದ ಮಹಿಮೆಯು.ಏಕೆಂದರೆ ಅದು ಕಮ೯ದಿಂದ ವಧಿ೯ಸುವುದಿಲ್ಲ,ಕಡಮೆಯಾಗುವುದಿಲ್ಲ.ಆದುದರಿಂದ ಮಹಿಮೆಯ  ಸ್ವರೂಪವನ್ನೇ ತಿಳಿದುಕೊಳ್ಳಬೆಕು.ಅದನ್ನು ಅರಿತುಕೊಂಡು  ಪುರುಷನು ಪಾಪಕಮ೯ದಿಂದ  ಲಿಪ್ತನಾಗುವುದಿಲ್ಲ."

ಆದುದರಿಂದ ಹೀಗೆ ಅರಿತುಕೊಂಡಿರುವವನು  ಶಾಂತನೂ ದಾಂತನೂ ಉಪರತನೂ ತಿತಿಕ್ಷುವೂ ಸಮಾಹಿತನೂ  ಆಗಿ ತನ್ನ ಶರೀರದಲ್ಲಿಯೇ ಆತ್ಮನನ್ನು ನೋಡುತ್ತಾನೆ;ಸವ೯ವನ್ನೂ ಆತ್ಮನನ್ನಾಗಿ ನೋಡುತ್ತಾನೆ.  

ಪಾಪವು ಇವನನ್ನು ಅತಿಕ್ರಮಿಸುವುದಿಲ್ಲ.ಆದರೆ ಎಲ್ಲ ಪಾಪವನ್ನು ಇವನು ಅತಿಕ್ರಮಿಸುತ್ತಾನೆ. ಪಾಪವು ಇವನನ್ನು ತಪಿಸುವುದಿಲ್ಲ.ಆದರೆ ಇವನು ಎಲ್ಲ ಪಾಪವನ್ನು ತಪಿಸುತ್ತಾನೆ.ಇವನು ಪಾಪರಹಿತವನೂ ವಿರಜನೂ ಸಂಶಯರಹಿತನೂ  ಬ್ರಹ್ಮವಿದನೂ ಆಗುತ್ತಾನೆ.ಸಮ್ರಾಟ್,ಇದು'ಬ್ರಹ್ಮಲೋಕವು'ಎಂದು ಯಾಜ್ಞವಲ್ಕ್ಯನು ಹೇಳಿದನು.'ಭಗವಂತನಾದ ನಿನಗೆ ವಿದೇಹರಾಜ್ಯವನ್ನು ಕೊಡುತ್ತೇನೆ ಮತ್ತು ಅದರೊಂದಿಗೆ ನನ್ನನ್ನೂ ದಾಸ್ಯಕ್ಕೆ ಕೊಡುತ್ತೇನೆ'ಎಂದು ಜನಕ ವೈದೇಹನು ಹೇಳಿದನು.(ಪುಟ337)

 

44)ಬ್ರಹ್ಮಜ್ಞಾನಿಗೆ ಅಧಮ೯ದಂತೆ  ಧಮ೯ವೂ ಪಾಪವಾಗಿರುತ್ತದೆ.(ಪುಟ 337)

 

45)ಬಾಹ್ಯೇಂದ್ರಿಯ ವ್ಯಾಪಾರದಿಂದ ಉಪಶಾಂತನಾದವನು ಎಂದಥ೯(ಶಾಂತ) (ಪುಟ 337)

 

46)ದಂತ- ಅಂತಃಕರಣ ವ್ಯಾಪಾರದಿಂದ ನಿವೃತ್ತನಾದವನು.(ಪುಟ 337)

 

47) ಉಪರತ-ಎಲ್ಲ ಏಷಣೆಗಳಿಂದ ಮುಕ್ತನಾದವನು.(ಪುಟ 337)

 

48)ತಿತಿಕ್ಷು-ದ್ವಂದ್ವ ಸಹಿಷ್ಣು(ಪುಟ 337)

 

4)ಸಮಾಹಿತ-ಇಂದ್ರಿಯ ಅಂತಃಕರಣಗಳ ಚಾಪಲ್ಯರೂಪದಿಂದ ಹಿಂತಿರುಗಿ ಏಕಾಗ್ರ್ಯ ರೂಪದಿಂದ ಸಮಾಧಾನವನ್ನು ಪಡೆದವನು(ಪುಟ 337)

 

50)ಮಹಾಂತನೂ ಜನ್ಮರಹಿತನೂ ಆದ ಆತ್ಮನು ಅನ್ನಾದನು.ಮತ್ತು ವಸುದಾನಿಯು.,ಯಾವನು ಹೀಗೆ ಅರಿತು ಕೊಂಡಿರುವವನೊ ಅವನು ಧನವನ್ನು ಪಡೆಯುgತ್ತಾನೆ.(ಪುಟ 338)

 

51)ಅನ್ನಾದ ಎಂದರೆ ಸವ೯ಪ್ರಾಣಿಗಳಲ್ಲಿಯೂ ಇದ್ದು  ಎಲ್ಲ ಅನ್ನವನ್ನು ತಿನ್ನುವವನು(ಪುಟ 338)

 

52) ವಸು ಎಂದರೆ ಧನವು.ಇಲ್ಲಿ ಸವ೯ಪ್ರಾಣಿಗಳ ಕಮ೯ಫಲ ಎಂದುತಿಳಿಯ ಬೇಕು.(ಪುಟ 338)

 

6)ಮಹಾಂತನೂ ,ಜನ್ಮರಹಿತನೂ ಜರಾ ಶೂನ್ಯನೂ ,ಮೃತ್ಯುರಹಿತನೂ,ಅಮೃತನೂ ಭಯಶೂನ್ಯನೂ ಆದ ಆತ್ಮನೇ ಬ್ರಹ್ಮ.ಬ್ರಹ್ಮವು ಅಭಯವು.ಯಾವನು ಹೀಗೆ ಅರಿತುಕೊಂಡಿರುವನೊ  ಅವನು ಅಭಯವಾದ ಬ್ರಹ್ಮವೇ ಆಗಿದ್ದಾನೆ.(ಪುಟ 338)

 

7)ಕಾಮ,ಕಮ೯,ಮೋಹ ಇವುಗಳಿಲ್ಲದವನು. ಭಯವೆಂಬುದು ಅವಿದ್ಯೆಯ ಕಾಯ೯ವು.(ಪುಟ 33)

 

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

........................

ಐದನೆಯ ಬ್ರಾಹ್ಮಣ:

 

1)  ಹೇತು ಪ್ರಧಾನವಾದ ಉಪದೇಶವಾದ ಬಳಿಕ ಆಗಮ ಪ್ರಧಾನವಾದ  ಮೈತ್ರೇಯೀ ಬ್ರಾಹ್ಮಣದಲ್ಲಿ ಪೂವೋ೯ಕ್ತ ಪ್ರಜ್ಞೆಯ ಉಪಸಂಹಾರವನ್ನು ಮಾಡಲಾಗಿದೆ.(ಪುಟ 340)

 

2)ಮಧುಕಾಂಡ:ಆಗಮ ಪ್ರಧಾನವಾದ ಕಾಂಡದಲ್ಲಿ  ಬ್ರಹ್ಮತತ್ವವು ನಿಧ೯ರಿಸಲ್ಪಟ್ಟಿತು.(ಪುಟ 340)

 

3) ಯಾಜ್ಞವಲ್ಕೀಯ ಕಾಂಡಪಕ್ಷ-ಪ್ರತಿ ಪಕ್ಷಗಳನ್ನಿಟ್ಟುಕೊಂಡು  ವಾದದ ಮೂಲಕ ಅದನ್ನೇ ವಿಚಾರ ಮಾಡಲಾಯಿತು.(ಪುಟ 340)

 

4)ನಾಕ್ಕನೆ ಅಧ್ಯಾಯದಲ್ಲಿ ಅದನ್ನೇ ಗುರು-ಶಿಷ್ಯರ ಪ್ರಶ್ನೆ ಪ್ರತಿವಚನ ನ್ಯಾಯದಿಂದ ಅದನ್ನೇ ವಿಸ್ತಾರವಾಗಿ ವಿಚಾರಮಾಡಿ ಉಪಸಂಹಾರ ಮಾಡಲಾಯಿತು.(ಪುಟ 340)

 

5) ಈಗ ನಿಗಮಸ್ಥಾನೀಯವಾದ  ಮ್ಥತ್ರೇಯೀ ಬ್ರಾಹ್ಮಣವು ಆರಂಭಿಸಲ್ಪಟ್ಟಿದೆ. (ಪುಟ 340)

 

6) ಗೃಹಕೃತ್ಯದ ಮನೋಭಾವಕ್ಕೆ 'ಸ್ತ್ರೀಪ್ರಜ್ಞೆ'ಎಂದು ಹೆಸರು.(ಪುಟ 344)

 

7)ಮೈತ್ರೇಯೀ ಬ್ರಾಹ್ಮಣವು ಹಿಂದೆ ಮೊದಲೇ ಬಂದಿದೆ.(ಆದ್ದರಿಂದ ಪುನತಾ ವತ೯ನೆಯನ್ನು ಬಿಟ್ಟು ಉಳಿದ ಭಾಗವನ್ನು ಮಾತ್ರ ಹೇಳಿದೆ.

 

8) ಈಹಿಂದೆ ದುಂದುಭಿ,ಶಂಖ, ವೀಣೆ-ಇವುಗಳ ಉದಾಹರಣೆಯನ್ನು ಹೆಳಿತ್ತು.

ದುಂದುಭಿಯನ್ನು ಹೊಡೆಯುತ್ತಿರುವಾಗ ಅದರಿಂದ ಉಂಟಾಗುವ  ವಿಶೇಷ ಶಬ್ದಗಳನ್ನು  ಬೇರೆ ಬೇರೆಯಾಗಿ ಗ್ರಹಿಸುವುದಕ್ಕೆ ಆಗುವುದಿಲ್ಲ.ಆದರೆ ದುಂದುಭಿಯ ಶಬ್ದ ಸಾಮಾನ್ಯವನ್ನು ಗ್ರಹಿಸಬಹುದು.

(ಪುಟ  345)

 

)ಹೆಗೆ ಸಮುದ್ರವು ಎಲ್ಲ ನೀರಿಗೂ ಏಕಮಾತ್ರಗತಿಯೊ,ಹಾಗೆಯೇ ಚಮ೯ವು ಎಲ್ಲ ಸ್ಪಶ೯ಗಳಿಗೂ ಏಕಮಾತ್ರ ಗತಿ.ಹಾಗೆಯೇ ಮೂಗು ಎಲ್ಲಾ ಗಂಧಗಳಿಗೂ ಏಕಮಾತ್ರಗತಿ.ಹಾಗೆಯೇ ನಾಲಗೆಯು ಎಲ್ಲ ರಸಗಳಿಗೂ ಏಕಮಾತ್ರ ಗತಿ.ಕಣ್ಣು ಎಲ್ಲ ರೂಪಗಳಿಗೆ,ಕಿವಿಯು ಎಲ್ಲ ಶಬ್ದಗಳಿಗೆ ಏಕಮಾತ್ರ ಗತಿ.

ಮನಸ್ಸು ಎಲ್ಲ ಸಂಕಲ್ಪಗಳಿಗೂ ,ಬುದ್ದಿಯು ಎಲ್ಲ  ವಿದ್ಯೆಗಳಿಗೂ ಏಕಮಾತ್ರ ಗತಿ.ಕೈಗಳು ಎಲ್ಲ ಕಮ೯ಗಳಿಗೂ ಏಕಮಾತ್ರಗತಿ.ಉಪಸ್ಥವು ಎಲ್ಲ ಆನಂದಗಳಿಗೂ ಏಕಮಾತ್ರಗತಿ.ಪಾಯುವು ಎಲ್ಲ ವಿಸಗ೯ಗಳಿಗೂ ಏಕಮಾತ್ರ ಗತಿ.ಪಾದಗಳು ಎಲ್ಲ ನಡೆಗಳಿಗೂ ಏಕಮಾತ್ರ ಗತಿ.ಹಗೆಯೇ ಜಾಕ್ಕು ಎಲ್ಲ  ವೇದಗಳಿಗೂ ಏಕಮಾತ್ರ ಗತಿ.(ಪುಟ348)

 

10)ಹೇಗೆ ಉಪ್ಪಿನ ಗಟ್ಟಿಯು ಒಳಹೊರಗಿಲ್ಲದೆ ಪೂಣವಾಗಿ ಸಮರಸವಾಗಿರುವುದೊ  ಹಾಗೇ ಎಲೈ

ಮೈತ್ರೇಯಿ, ಆತ್ಮನು ಒಳಹೊರಗಿಲ್ಲದೆ  ಪೂಣ೯ವಾದ ಪ್ರಜ್ಞಾನಘನ ವಾಗಿರುವುದು.ಆತ್ಮನ ಭಿನ್ನತೆಯು  ಭೂತಗಳಿಂದ ಉಂಟಾಗಿ  ಭೂತವಗ೯ದ ಲಯದೊಂದಿಗೆತಾನೂ ಇಯವಾಗುತ್ತದೆ.ದೇಹೇಂದ್ರಿಯಗಳಿಂದ ಮುಕ್ತಿಹೊಂದಿದ ಮೇಲೆ ವಿಶೇಷ ಜ್ಞಾನವಿರುವುದಿಲ್ಲ. (ಪುಟ 348)

 

11) ಆತ್ಮನು ಅವಿಕ್ರಿಯನು ಮತ್ತು ವಿನಾಶ ರಹಿತನು.(ಪುಟ 34)

 

12) ಪ್ರಜ್ಞಾನ ಘನನಾದ  ಅತ್ಮನಿಗೆ ವಿಶೇಷ ಜ್ಞಾನವಿರುವುದಿಲ್ಲ.(ಪುಟ 34)

 

13)ದೇಹೇಂದ್ರಿಯಗಳಿಂದ ಮುಕ್ತಿಹೊಂದಿದ ಮೆಲೆ ಹೇಗೆ ವಿಶೇಷ ಜ್ಞಾªನವು ಹೋಗುವುದು?(ಪುಟ 34)

 

14)ಏಕೆಂದರೆ ಎಲ್ಲಿ ದ್ವೈತವಿರುವಂತೆ ಇರುವುದೊ ಅಲ್ಲಿ ಒಬ್ಬನು ಇನ್ನೊಂದನ್ನು ನೋಡುತ್ತಾನೆ.ಇನ್ನೊಂದನ್ನು ಮೂಸುತ್ತಾನೆ,ಇನ್ನೊಂದನ್ನು ಸವಿಯುತ್ತಾನೆ.ಇನ್ನೊಂದನ್ನು ಮಾತಾಡುತ್ತಾನೆ.ಇನ್ನೊಂದನ್ನು ಕೇಳುತ್ತಾನೆ,ಇನ್ನೊಂದನ್ನು ಯೋಚಿಸುತ್ತಾನೆ.,ಇನ್ನೊಂದನ್ನು ಸ್ಪಶಿ೯ಸುತ್ತಾನೆ.ಇನ್ನೊಂದನ್ನು ತಿಳಿದುಕೊಳ್ಳುತ್ತಾನೆ.ಆದರೆ ಎಲ್ಲಿ ಇವನಿಗೆ ಎಲ್ಲವು ಆತ್ಮನೇ ಆಗಿರುವುದೊ  ಅಲ್ಲಿ ಯಾವ್ದರಿಮದ ಯಾವುದನ್ನು ನೋಡಿಯಾನು,ಯಾವುದನ್ನು ಮೂಸಿಯಾನು,ಯವುದನ್ನು ಸವಿದಾನು,ಯಾವುದನ್ನು ಮಾತನಾಡಿಯಾನು, ಯಾವುದನ್ನು ಕೇಳಿಯಾನು? ಯವುದನ್ನು ಯೋಚಿಸಿಯಾನು,ಯಾವುದನ್ನು ಸ್ಪಶಿ೯ಸಿಯಾನು,

ಯಾವುದನ್ನು ಅರಿತುಕೊಂಡಾನು?ಯಾವನಿಂದ ಇದೆಲ್ಲವನ್ನೂ ತಿಳಿದುಕೊಳ್ಳುತ್ತಾನೆಯೊ ಅವನನ್ನು ಯಾವುದರಿಂದ ತಿಳಿದುಕೊಂಡಾನು?"ಹೀಗಲ್ಲ ಹೀಗಲ್ಲ ಎಂದು ಹೇಳಲ್ಪಟ್ಟಿರುವ ಅವನೇ ಆತ್ಮನು.

ಅವನು ಅಗೃಹ್ಯನು ಏಕೆಂದರೆ ಅವನನ್ನು ಹಿಡಿಯಲಾಗುವುದಿಲ್ಲ.ಅವನು ಅಕ್ಷಯನು, ಏಕೆಂದರೆ ಕಷೀಣನಾಗುವುದಿಲ್ಲ,ಅವನು ಅಸಂಗನು,ಏಕೆಂದರೆ ಅವನು ಆಸಕ್ತನಾಗುವುದಿಲ್ಲ.ಅವನು ಬಂಧರಹಿತನು,ಆದುದರಿಂದ ವ್ಯಥೆಪಡುವುದಿಲ್ಲ ಮತ್ತು ಹಿಂಸಿತನಾಗುವುದಿಲ್ಲ.ಮೈತ್ರೇಯಿ,ನೀನು ಹೀಗೆ ಅನುಶಾಸಿತಳಾಗಿರುವೆ.ಇಷ್ಟೇ ಅಮೃತತ್ವಕ್ಕೆ  ಸಾಧನವು.ಹೀಗೆಂದು ಹೇಳಿ ಯಾಜ್ಞವಲ್ಕ್ಯನು ಹೊರಟು ಹೋದನು.(ಪುಟ 351)

 

15) ಸನ್ಯಾಸದಲ್ಲಿ ಪಯ೯ವಸಾನವಾಗುವ ಬ್ರಹ್ಮವಿದ್ಯೆಯು ಮುಗಿಯಿತು.ಇಷ್ಟೇ ಉಪದೇಶ,ಇದೇ ವೇದಾನುಶಾಸನ,ಇದೇ ಪರಮನಿಷ್ಠೆ,ಇದೇ ಪುರುಷಾಥ೯ ಕತ೯ವ್ಯದ ಕೊನೆ.(ಪುಟ 351)

 

16) ಯಾವನಿಂದ ಇದೆಲ್ಲವನ್ನೂ ತಿಳಿಯುತ್ತಾನೆಯೊ ಅವನನ್ನು ಯಾವುದರಿಂದ ತಿಳಿದುಕೊಂಡಾನು?

(ವಿಜ್ಞ್ಞಾತಾರಮರೇ ಕೇನ ವಿಜಾನೀಯಾತ್)

 

17) ಎಲ್ಲಿ ದ್ವೈತವು ಇದ್ದಂತೆ ತೋರುವುದೋ ಎಂದರೆ ದ್ವೈತವು ಜ್ಞಾನಕ್ಕೆ ಮೊದಲು ನಿಜವಾಗಿಯೂ ಇದ್ದು ಜ್ಞಾನವುಂಟಾದ ನಂತರÀ ಹೋಗುವುದಿಲ್ಲ. ಅದು ಮೊ¸ದಲೇ ಇರುವುದಿಲ್ಲ..(ಯತ್ರ ಹಿ ದ್ವೈತಮಿವ ಭವತಿ)(ಪುಟ 350)

 

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

ಆರನೆಯ ಬ್ರಾಹ್ಮಣ:

                                                         ್ರ 

 ಇಲ್ಲಿ ಆಚಾಯ೯ರ ವಂಶವನ್ನು ಹೇಳಿದೆ.ಬ್ರಹ್ಮನು ಸ್ವಯಂಭು.(ತನ್ನಿಂದ ತಾನೇ ಆದವನು)ಬ್ರಹ್ಮನಿಗೆ ನಮಸ್ಕಾರ.

...........................................................................................................................................

 

 

ಖಿಲಕಾಂಡ:

 

ಐದನೆಯ ಅಧ್ಯಾಯ:

 

ಮೊದಲನೆಯ ಬ್ರಾಹ್ಮಣ:

 

 ಶಾಂತಿಪಾಠ:

ಹರಿಃ ಓಂ

ಪೂಣ೯ಮದಃ ಪೂಣ೯ಮಿದಂ

ಪೂಣಾ೯ತ್ ಪೂಣ೯ಮುದ್ಯತೇ|

ಪೂಣ೯ಸ್ಯ ಪೂಣ೯ಮಾದಾಯ

ಪೂಣ೯ಮೇವಾವ ಶಿಷ್ಯತೇ

ಓಂ  ಶಾಂತಿಃ ಶಾಂತಿಃ ಶಾಂತಿಃ

 

ಹರಿಃ ಒಂ

 

ಅದು (ಪರಬ್ರಹ್ಮವು ) ಪೂಣ೯ವು.ಇದು(ವ್ಯಕ್ತವಾದ ಜಗತ್ತು) ಪೂಣ೯ವು.ಪೂಣ೯ದಿಂದ(ಪರಬ್ರಹ್ಮದಿಂದ )ಪೂಣ೯ವು (ಜಗತ್ತು) ಹೊರಟು ಬಂದಿದೆ:ಪೂಣ೯ದ(ಜಗತ್ತಿನ) ಪೂಣ೯ತ್ವವನ್ನು(ಬ್ರಹ್ಮತ್ವವನ್ನು) ತೆಗೆದಮೇಲೆ(ಗ್ರಹಿಸಿದ ಮೇಲೆ) ಪೂನ೯ವೇ (ಪರಬ್ರಹ್ಮವೇ ಉಳಿಯುತ್ತದೆ.

 

ಓಂ ಶಾಂತಿಃ ಶಾಂತಿಃ ಶಾಂತಿಃ

 

 

1) ಓಂಕಾರವು ಆಕಾಶಬ್ರಹ್ಮವು-ಚಿರಂತನವಾದ ಆಕಾಶವು.(ಭೌತಿಕ ಆಕಾಶವಲ್ಲ ಪರಮಾತ್ಮನು).'ವಾಯುವನ್ನು ಒಳಗೊಂಡ ಆಕಾಶವು'ಎಂದು ಕೌರವಾೈಣಿಯ ಮಗನು ಹೇಳಿರುತ್ತಾನೆ.ಓಂಕಾರವು ಅದನ್ನು ಅರಿತುಕೊಳ್ಳುವುದಕ್ಕೆ ಸಾಧನವು ಎಂದು ಬ್ರಾಹ್ಮಣರು ತಿಳಿದಿರುತ್ತಾರೆ.ಏಕೆಂದರೆ ಇದರ ಮೂಲಕ ಮನುಷ್ಯನು ಅರಿಯತಕ್ಕದ್ದನ್ನು  ತಿಳಿಯುವನು.

(ಪುಟ 356)

 

2) ಓಂಕಾರವು ಬ್ರಹ್ಮಕ್ಕೆ  ಅತ್ಯಂತ ನಿಕಟವತಿ೯ಯಾದ ಹೆಸರು.ಆದುದರಿಂದ ಇದು ಬ್ರಹ್ಮಪ್ರಾಪ್ತಿಗೆ  ಶ್ರೇಷ್ಠವಾದ ಸಾಧನವಾಗಿರುತ್ತದೆ.(ಪುಟ 356)

 

3)ಆತ್ಮ,ಬ್ರಹ್ಮ ಮೊದಲಾರ ಶಬ್ದಗಳು ಬ್ರಹ್ಮಕ್ಕೆ  ವಾಚಕಗಳು.(ಪುಟ 35)

 

4) ನಿರುಪಾಧಿಕವಾಗಲೀ ಸೋಪಾಧಿಕವಾಗಲೀ ಓಂಕಾರವು ಸಾಧನವಾಗಿಯೇ ಇರುತ್ತದೆ.(ಪುಟ 356)

 

5)ವೇದಗಳೆಲ್ಲವೂ ಓಂಕಾರವೇ ಆಗಿದೆ ಎಂದು ಬ್ರಾಹ್ಮಣರು ಅರಿತುಕೊಂಡಿರುತ್ತಾರೆ.ಅದರ ಮೂಲಕ ಅರಿಯ ತಕ್ಕದ್ದನ್ನು ಅರಿಯಬಹುದು.(ಪುಟ 356)

 

6)ಓಂಕಾರವು ಸಮಸ್ತ ಶಬ್ದಗಳನ್ನು ವ್ಯಾಪಿಸಿಕೊಂಡಿರುತ್ತದೆಂದು ಛಾಂದೋಗ್ಯ ಉಪನಿಷತ್ತು ಹೇಳುತ್ತದೆ.(2,23,3)

 

7) ಬೌತಿಕ ಆಕಾಶವಲ್ಲ,ಪರಮಾತ್ಮನು.(ಪುಟ 356)

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

 

ಎರಡನೆಯ ಬ್ರಾಹ್ಮಣ:

1)ದಮ,ದಾನ,ದಯೆ ಎಂಬ ಮೂರನ್ನು ಕಲಿತುಕೊಳ್ಳಬೇಕು.(ಪುಟ 35)

 

2)ಪ್ರಜಾಪತಿಯ ಮಕ್ಕಳು ಮೂರು ವಗ೯.ದೇವತೆಗಳು,ಮನುಷ್ಯರು,ಅಸುರರು.

ದೇವತೆಗಳು ,ಮನುಷ್ಯರು,ಅಸುರರು ಎಂಬ ಮೂರುಶಬ್ದಗಳು ಮನುಷ್ಯರ ಸ್ವಾಭಾವಿಕ ಪ್ರವೃತ್ತಿಗನುಗುಣವಾಗಿ ಅವರಿಗೇ ಅನ್ವಯಿಸುತ್ತವೆ.(ಪುಟ 35)

 

1)ದೇವತೆಗಳು:ಉತ್ತಮ ಗುಣಗಳಿಂದ ಕೂಡಿದ್ದರೂ ಕಾಮುಕೆಆಗಿರುವ ಮನುಷ್ಯರು ದೇವತೆಗಳು.

 2) ಅತ್ಯಂತ ಲೋಭವುಳ್ಳವರು ಮನುಷ್ಯರು.

3)ಹಿಂಸಾಪರರೂ ಕ್ರೂರಿಗಳೂ  ಆಗಿರುವವರು ಅಸುರರು.

ಆದುದರಿಂದ ಮನುಷ್ಯರು ಮೂರು ದುಗು೯ಣಗಳನ್ನು ಬಿಡಬೇಕು.(ಪುಟ 35)

 

3)ಕಾಮ,ಕ್ರೋಧ ಲೋಭ,ಇವು ನರಕದ ದ್ವಾರಗಳು.ಆದುದರಿಂದ ಮೂರನ್ನೂ ಬಿಡಬೇಕು.

 

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

 

ಮೂರನೆಯ ಬ್ರಾಹ್ಮಣ:

 

1) ಇವನು ಪ್ರಜಾಪತಿಯು- ಹೃದಯವು.(ಬುದ್ಧಿಯು) ಅದು ಬ್ರಹ್ಮವು.ಅದು ಎಲ್ಲವು.ಹೃ-- ಎಂಬ ಮೂರು ಅಕ್ಷರಗಳನ್ನು ಒಳಗೊಂಡಿದೆ.(ಪುಟ 360)

 

2) ಹೃದಯವು ನಾಮ ರೂಪ ಕಮ೯ಗಳ ಪ್ರತಿಷ್ಠೆಯೆಂದೂ ಸವ೯ ಪ್ರಾಣಿಗಳ ಆತ್ಮವೆಂದೂ ಹೇಳಲ್ಪಟ್ಟಿದೆ.ಹೃದಯವೇ ಪ್ರಜಾಪತಿ.(ಪುಟ 360)

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

 

ನಾಲ್ಕನೆಯ ಬ್ರಾಹ್ಮಣ:

 

1) ಪ್ರಥಮಜ ಎಂದರೆ ಬ್ರಹ್ಮ.(ಎಲ್ಲ ಸಂಸಾರಿಗಳಿಗಿಂತ ಮೊದಲೇ ಹುಟ್ಟುದುದರಿಂದ  ಪ್ರಥಮಜ)

 

2) ಹೃದಯಬ್ರಹ್ಮವೇ ಇದು-ಸತ್ಯವೇ. ಎಂಬ ಉಪಾಸನೆಯನ್ನು ವಿಧಿಸಲು  ಬಾಹ್ಮಣವು ಬಂದಿದೆ.(ಪುಟ 362)

 

3)ಸತ್ ಎಂದರೆ ಮೂತ೯.

ತ್ಯತ್ ಎಂದರೆ ಅಮೂತ೯(ಪುಟ 362)

ಪಂಚಭೂತಾತ್ಮಕವಾದುದು ಎಂದಥ೯.(ಪುಟ 362)

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

 

ಐದನೆಯ ಬ್ರಾಹ್ಮಣ:

 

1) ಜಗತ್ತು ಮೊದಲೂ ನೀರೇ ಆಗಿತ್ತು. ನೀರು ಸತ್ಯವನ್ನು ಸೃಷ್ಟಿಸಿತು.ಸತ್ಯವು ಹಿರಣ್ಯಗಭ೯.ಹಿರಣ್ಯ

 ಗಭ೯ನು ಪ್ರಜಾಪತಿಯನ್ನು ಸೃಷ್ಟಿಸಿದನು.ದೇವತೆಗಳು ಸತ್ಯವನ್ನೇ ಉಪಾಸಿಸುತ್ತಾರೆ.(ಪುಟ 363)

 

2)ಸತ್ಯವೆಂಬ ನಾಮವು ಮೂರು ಅಕ್ಷರಗಳನ್ನು ಹೊಂದಿದೆ.

ಎಂಬುದು ಒಂದು ಅಕ್ಷರ

ತಿ ಎಂಬುದು ಎರಡನೆಯ ಅಕ್ಷರ

 

  ಎಂಬುದು ಮೂರನೆಯ ಅಕ್ಷರ.

ಮೊದಲನೆಯ ಹಾಗೂ ಕೊನೆಯ ಅಕ್ಷರಗಳು ಸತ್ಯವು.ಮಧ್ಯದಲ್ಲಿರುವುದು ಅನೃತವು.(ಪುಟ364)

 

3)ಆದಿತ್ಯ ಪುರುಷನು ರಶ್ಮಿಗಳ ಮೂಲಕ  ಅಕ್ಷಿಪುರುಷನಲ್ಲಿ ಪ್ರತಿಷ್ಠಿತನಾಗಿದ್ದಾನೆ.(ಪುಟ 365)

 

4) ಆದಿತ್ಯ ಮಂಡಲದಲ್ಲಿರುವ ಪುರುಷನಿಗೆ 'ಭೂಃ'ಎಂಬುದು ಶಿರವು.ಎಕೆಂದರೆ ಶಿರವು ಒಂದು,'ಭುವಃ'ಎಂಬುದು ಬಾಹುಗಳು.ಏಕೆಂದರೆ ಬಾಹುಗಳು ಎರಡುಮತ್ತು ಅಕ್ಷರಗಳೂ ಎರಡು

'ಸ್ವಃ'ಎಂಬುದು ಎರಡು ಪಾದಗಳು ಏಕೆಂದರೆ ಪಾದಗಳು ಎರಡು ಮತ್ತು ಅಕ್ಷರಗಳೂ ಎರಡು.

(ಪುಟ366)

5) 'ಅಹಸ್' ಎಂಬುದು ಅವನ ರಹಸ್ಯ ನಾಮವು(ಪುಟ 366)

 

6)ಬಲಗಣ್ಣಿನಲ್ಲಿರುವ ಪುರುಷನಿಗೆ  'ಭೂಃ'ಎಮಬುದು ಶಿರವು.ಎಕೆಂದರೆ ಶಿರವು ಒಂದು,'ಭುವಃ'ಎಂಬುದು ಬಾಹುಗಳು.ಏಕೆಂದರೆ ಬಾಹುಗಳು ಎರಡುಮತ್ತು ಅಕ್ಷರಗಳೂ ಎರಡು

'ಸ್ವಃ'ಎಂಬುದು ಎರಡು ಪಾದಗಳು ಏಕೆಂದರೆ ಪಾದಗಳು ಎರಡು ಮತ್ತು ಅಕ್ಷರಗಳೂ ಎರಡು.

(ಪುಟ366)

'ಅಹಂ'ಎಂಬುದು ಅವನ ರಹಸ್ಯ ನಾಮವು.(ಪುಟ 366)

 

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

 

ಆರನೆಯ ಬ್ರಾಹ್ಮಣ:

 

1) ಪುರುಷನು ಮನೋಮಯನು,ಭಾಸ್ವರನು,ಬತ್ತದ ಕಾಳಿನಂತೆ ಅಥವಾ ಯವೆಯ ಕಾಳಿನಂತೆ ಅಂತಹೃ೯ದಯದಲ್ಲಿ ಕಾಣುತ್ತಾನೆ.ಇವನು ಎಲ್ಲರ ಈಶನು,ಎಲ್ಲರ ಅಧಿಪತಿಯು ಮತ್ತು ಇರುವುದನ್ನೆಲ್ಲ ಶಾಸನ ಮಾಡುತ್ತಾನೆ.(ಪುಟ 367)

 

2) ಮನಸ್ಸಿನಲ್ಲಿ ತಿಳಿಯಲ್ಪಡುವುದರಿಂದಲೂ,ಮತ್ತು ಮನಸ್ಸಿನ ದ್ವಾರಾ ತಿಳಿಯುವುದರಿಂದಲೂ ಮನೋಮಯನು.(ಪುಟ 367)

 

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

 

ಏಳನೆಯ ಬ್ರಾಹ್ಮಣ:

 

1) ವಿದ್ಯುತ್ತು ಬ್ರಹ್ಮ ಎಂದು ಹೇಳುತ್ತಾರೆ.ಅದು ಮೇಘಾಂಧಕಾರವನ್ನು ಚೆದರಿಸುವುದರಿಂದ  ವಿದ್ಯುತ್ ಎನಿಸಿದೆ.(ಪುಟ 368)

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

 

ಎಂಟನೆಯ ಬ್ರಾಹ್ಮಣ:

 

1)ವೇದವನ್ನು ಧೇನು ಎಂದು ಉಪಾಸಿಸಬೇಕು.ಸ್ವಾಹಾ,ವಷಟ್,ಹುತ,ಸ್ವಧಾ ಎಂಬ ಶಬ್ದಗಳು ಅದರ ಕೆಚ್ಚಲುಗಳು.

ದೇವತೆಗಳು ಸ್ವಾಹಾಕಾರ.,ವಷಟ್ಕಾರ ಎಂಬ ಎರಡು ಕೆಚ್ಚಲುಗಳನ್ನು ಅವಲಂಬಿಸಿ ಉಪಜೀವಿಸುತ್ತಾರೆ.ಮನುಷ್ಯರು ಹಂತಕಾರವನ್ನೂ ,ಪಿತೃಗಳು ಸ್ವಧಾಕಾರವನ್ನೂ ಅವಲಂಬಿಸಿ ಉಪಜೀವಿಸುತ್ತಾರೆ.ಪ್ರಾಣವು ಅದರ ವೃಷಭ.ಮನಸ್ಸು ಅದರ ಕರು.(ಪುಟ36)

 

2) ಸ್ವಾಹಾಕಾರ ವಷಟ್ಕಾರ  ಪದಗಳನ್ನು ಹೇಳಿ  ದೇವತೆಗಳು ಹವಿಸ್ಸನ್ನು ಕೊಡುತ್ತಾರೆ.

3)'ಹಂತ'ಎಂದು ಹೇಳಿ ಮನುಷ್ಯರಿಗೆ ಅನ್ನವನ್ನು ಕೊಡುತ್ತಾರೆ. 'ಹಂತ' ಎಂದರೆ 'ನಿನಗೆ ಬೇಕಾದರೆ'

 ಎಂದಥ೯.(ಪುಟ 36)

4) ಸ್ವಧಾಕಾರವನ್ನು ಹೇಳಿ ಪಿತೃಗಳಿಗೆ  ಆಹಾರವನ್ನು ಕೊಡುತ್ತಾರೆ.(ಪುಟ36)

 

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

 

ಒಂಭತ್ತನೆಯ ಬ್ರಾಹ್ಮಣ:

 

1) ಪುರುಷನಲ್ಲಿರುವ ಮತ್ತು ತಿನ್ನಲ್ಪಟ್ಟ ಆಹಾರವನ್ನು  ಪಚನ ಮಾಡುವ ಅಗ್ನಿಯು  ವೈಶ್ವಾನರ.ಕಿವಿಗಳನ್ನು ಮುಚ್ಚಿಕೊಂಡರೆ ಕೇಳುವ ಶಬ್ದವು ಅವನಿಂದ ಉಂಟಾಗುತ್ತದೆ.(ಪುಟ 371)

 

2) ಇದು ಸತ್ಯಬ್ರಹ್ಮದ ಮತ್ತೊಂದು ಉಪಾಸನೆ.(ಪುಟ 371)

 

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

 

ಹತ್ತನೆಯ ಬ್ರಾಹ್ಮಣ:

 

1) ಮನುಷ್ಯನು ಲೋಕವನ್ನು ಬಿಡುವಾಗ  ವಾಯು(ದೇವತೆ)ಯನ್ನು ಸೇರುತ್ತಾನೆ.ಅಲ್ಲಿಂದ ಆದಿತ್ಯ,ಚಂದ್ರನನ್ನು ಸೇರುತ್ತಾನೆ.ಅವನು ಅದರ ಮೂಲಕ ವಿಶೋಕವೂ ಹಿಮರಹಿತವೂ ಆದ ಪ್ರಜಾಪತಿಯ ಲೋಕವನ್ನು ಸೇರುತ್ತಾನೆ.ಅಲ್ಲಿ ಅನಂತ ವಷ೯ಗಳವರೆಗೆ  ಉಪಾಸಿಸುತ್ತಾನೆ.(ಪುಟ 373)

(ಮನುಷ್ಯ-ವಾಯು-ಆದಿತ್ಯ-ಚಂದ್ರ-ಪ್ರಜಾಪತಿಲೋಕ)

 

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

 

ಹನ್ನೊಂದನೆಯ ಬ್ರಾಹ್ಮಣ:

 

1)ವ್ಯಾಧಿಗ್ರಸ್ತನಾದ ಮನುಷ್ಯನು ತಪಿಸುವುದೇ  ಪರಮತಪಸ್ಸು.ಹೀಗೆ ಅರಿತುಕೊಂಡವನು ಪರಮಲೋಕವನ್ನು ಜಯಿಸಿಕೊಳ್ಳುತ್ತಾನೆ.ಮೃತನಾದವನನ್ನು ಅಗ್ನಿಯಲ್ಲಿ ಸುಡುವುದೇ ಪರಮತಪಸ್ಸು.(ಪುಟ 374)

 

2) ರೋಗಿಯು ಜ್ವರಾದಿಗಳಿಂದ ಪೀಡಿತನಾದಾಗ ತನ್ನ ಸಂಕಟವನ್ನೇ ತಪಸ್ಸೆಂದು ಭಾವಿಸಬೇಕು.ಏಕೆಂದರೆ ದುಃಖವು  ತಪಸ್ಸಿಗೂ ವ್ಯಾಧಿಗೂ ಸಮಾನವಾಗಿರುತ್ತದೆ.ಆದುಉದರಿಮದ ರೋಗವನ್ನು ನಿಂದಿಸದೆ ಅಥವಾ ವ್ಯಥೆಪಡದೆ ಹೀಗೆ ಚಿಂತಿಸುವವನಿಗೆ ಅಂತಹ ತಪಸ್ಸೇ ಕಮ೯ಕ್ಷಯಕ್ಕೆ ಕಾರಣವಾಗಿರುತ್ತದೆ.ಅದೇ ರೀತಿ ಮೃತನಾಗುವವನು ತನ್ನ ಶರೀರವನ್ನು ದಹನ ಕ್ರಿಯೆಗೆ ಒಯ್ಯುವುದನ್ನು

ಮತ್ತು ತನ್ನ ಶರೀರಕ್ಕೆ ಮಾಡುವ ಅಗ್ನಿ ಸಂಸ್ಕಾರವನ್ನು  ತಪಸ್ಸೆಂದು ಭಾವಿಸಬೇಕು.(ಪುಟ 374)

 

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

 

ಹನ್ನೆರಡನೆಯ ಬ್ರಾಹ್ಮಣ:

 

1) ಅನ್ನವನ್ನು ಬ್ರಹ್ಮವೆಂದು ಕೆಲವರು ಹೇಳುತ್ತಾರೆ.ಅದು ಸರಿಯಲ್ಲ.ಏಕೆಂದರೆ ಪ್ರಾಣವಿಲ್ಲದಿದ್ದರೆ ಅನ್ನವು ಕೊಳೆಯುತ್ತದೆ.ಪ್ರಾಣವು ಬ್ರಹ್ಮ ಎಂದು  ಕೆಲವರು ಹೇಳುತ್ತಾರೆ.ಅದೂ ಸರಿಯಲ್ಲ.ಏಕೆಂದರೆ ಅನ್ನವಿಲ್ಲದಿದ್ದರೆ ಅನ್ನವೂ ಒಣಗುತ್ತದೆ.ಆದರೆ ಇವೆರಡೂ ದೇವತೆಗಳು ಏಕೀಭೂತರಾಗಿ  ಬ್ರಹ್ಮತ್ವವನ್ನು ಹೊಂದುತ್ತಾರೆ.(ಪುಟ 376)

 

2)ಅದು "ವಿ".ಅನ್ನವೇ "ವಿ",ಏಕೆಂದರೆ ಪ್ರಾಣಿಗಳೆಲ್ಲ ಅನ್ನದಲ್ಲಿ ವಾಸಿಸುತ್ತವೆ.ಅದು"ದಂ".ಪ್ರಾಣವೇ "ರಂ".ಏಕೆಂದರೆ ಪ್ರಾಣಿಗಳೆಲ್ಲ ಪ್ರಾಣವಿದ್ದರೆ ರಮಿಸುತ್ತವೆ.ಹೀಗೆ ಅರಿತುಕೊಂಡವನಲ್ಲಿ ಪ್ರಾಣಿಗಳೆಲ್ಲ ವಾಸಿಸುತ್ತವೆ ಮತ್ತು ರಮಿಸುತ್ತವೆ. (ಪುಟ  376)

 

3) ಹೀಗೆ ಅನ್ನ ಮತ್ತು ಪ್ರಾಣಗಳಿಂದ  ಕೂಡಿದ ಬ್ರಹ್ಮದ ಉಪಾಸನೆಯನ್ನು ಹೇಳಿದೆ,(ಪುಟ376)

 

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

 

ಹದಿಮೂರನೆಯ ಬ್ರಾಹ್ಮಣ:

 

1) ಪ್ರಾಣವನ್ನು ಉಕ್ಥ ಎಂದು ಉಪಾಸಿಸಬೇಕು.ಪ್ರಾಣವೇ ಉಕ್ಥವು.ಏಕೆಂದರೆ ಅದು ಇದೆಲ್ಲವನ್ನೂ ಎತ್ತಿ ಹಿಡಿದಿರುತ್ತದೆ.(ಪುಟ 378)

 

2)ಪ್ರಾಣವನ್ನು ಯಜುಸ್ಸು ಎಂದು ಉಪಾಸಿಸಬೇಕು.ಪ್ರಾಣವೇ ಯಜುಸ್ಸು, ಪ್ರಾಣಿಗಳೆಲ್ಲ ಪರಸ್ಪರ ಕೂಡಿಕೊಂಡಿರುತ್ತವೆ.ಅವನು ಯಜುಸ್ಸಿನೊಂದಿಗೆ ಸಾಯುಜ್ಯವನ್ನೂ ಸಾಲೋಕ್ಯವನ್ನೂ  ಜಯಿಸಿಕೊಳ್ಳುತ್ತಾನೆ.(ಪುಟ 378)

 

3) ಪ್ರಾಣವನ್ನು ಸಾಮವೆಂದು ಉಪಾಸಿಸಬೇಕು.ಪ್ರಾಣವೇ ಸಾಮವು.ಏಕೆಂದರೆ ಪ್ರಾಣಿಗಳೆಲ್ಲ ಒಂದಾಗುತ್ತವೆ.ಸಾಮದೊಂದಿಗೆ  ಸಾಯುಜ್ಯವನ್ನೂ ಸಾಲೋಕ್ಯವನ್ನೂ  ಜಯಿಸಿಕೊಳ್ಲುತ್ತಾನೆ.(ಪುಟ 378)

 

4)ಪ್ರಾಣವನ್ನು ಕ್ಷತ್ತ್ರ ಎಂದು ಉಪಾಸಿಸಬೇಕು.ಪ್ರಾಣವೇ ಕ್ಷತ್ತ್ರ.ಏಕೆಂದರೆ ಅದೇ ಕ್ಷತ್ತ್ರವಾಗಿರುತ್ತದೆ.ಪ್ರಾಣವು ಶ್ರೀರವನ್ನು ಗಾಯದಿಂದ ಕಾಪಾಡುತ್ತದೆ.ಹೀಗೆ ಅರಿತುಕೊಂಡವನು  ಮತ್ತೊಬ್ಬ ರಕ್ಷಕ ಬೇಕಾಗದ ಕ್ಷತ್ತ್ರವನ್ನು (ಪ್ರಾಣವನ್ನು) ಹೊಂದುತ್ತಾನೆ.ಅವನು ಕ್ಷತ್ತ್ರದೊಂದಿಗೆ ಸಾಯುಜ್ಯವನ್ನೂ ಸಾಲೋಕ್ಯವನ್ನೂ ಪಡೆಯುತ್ತಾನೆ.(ಪುಟ 37)

 

5) ಯಾವುದು ಕ್ಷತಿ ಅಥವಾ ಗಾಯದಿಂದ ಕಾಪಾಡುವುದೊ ಅದು ಕ್ಷತ್ರ.(37)

 

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

 

ಹದಿನಾಲ್ಕನೆಯ ಬ್ರಾಹ್ಮಣ:

 

1) ಭೂಮಿ,ಅಂತರಿಕ್ಷ,ದ್ಯುಲೋಕ-ಇವು ಎಂಟು ಅಕ್ಷರಗಳು.ಗಾಯತ್ರಿಯ ಮೊದಲ ಪಾದಕ್ಕೂ ಎಂಟು ಅಕ್ಷರಗಳಿವೆ.ಆದುದರಿಂದ ಗಾಯತ್ರಿಯ ಮೊದಲನೆಯ ಪಾದವು ತ್ರೈಲೋಕ್ಯ ಸ್ವರೂಪವಗಿದೆ.ಹೀಗೆ ಗಾಯತ್ರಿಯ ಮೊದಲನೆಯ ಪಾದವನ್ನು ಅರಿತಿರುವವನು  ಮೂರು ಲೋಕಗಳಲ್ಲಿಎಷಿÂ್ಟರುವುದೊ

ಅಷ್ಟನ್ನೂ ಜಯಿಸಿಕೊಳ್ಳುತ್ತಾನೆ.(ಪುಟ 380)

 

2) ಛಂದಸ್ಸುಗಳಲ್ಲೆಲ್ಲ  ಗಾಯತ್ರಿ ಛಂದಸ್ಸು ವಿಶಿಷ್ಟವಾದುದು."ತತ್ ಸವಿತುವ೯ರೇಣ್ಯಂ  ಭಗೋ೯ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್".

ಪ್ರಕಾಶಮಾನವಾದ  ಸವಿತೃವಿನ ವರಣೀಯವಾದ  ತೇಜಸ್ಸನ್ನು ಧ್ಯಾನಿಸುತ್ತೇನೆ.ಅವನು ನಮ್ಮ

ಬುದ್ಧಿಯನ್ನು ಪ್ರಚೋದಿಸಲಿ.(ಋಗ್ವೇದ 3,62,10). i ಂತ್ರದ ಮೂರು ಪಾದಗಳಲ್ಲಿಯೂ  ಎಂಟೆಂಟು ಅಕ್ಷರಗಳಿವೆ.  ಮೊದಲನೆಯ ಪಾದದಲ್ಲಿ ಎಂಟು ಅಕ್ಷರಗಳನ್ನು ಮಾಡಿಕೊಳ್ಳಲು  ವರೇಣ್ಯ ಶಬ್ದದ''ಕಾರವನ್ನು ಬಿಡಿಸಿ ಎಣಿಸಬೇಕು.(ಪುಟ 382)

 

3)ಋಕ್ಕುಗಳು ಯಜುಸ್ಸುಗಳು ಸಾಮಗಳು -ಇವು ಎಂಟು ಅಕ್ಷರಗಳು.ಗಾಯತ್ರಿಯ ಎರಡನೆಯ ಪಾದಕ್ಕೂ ಎಂಟು ಅಕ್ಷರಗಳಿವೆ.ಆದುದರಿಂ ಗಯತ್ರಿಯ ಎರಡನೆಯ ಪಾದವು  ಮೂರುವೇದಗಳ ಸ್ವರೂಪವಾಗಿದೆ. ಹೀಗೆ ಗಾಯತ್ರಿಯ ಎರಡನೆಯ ಪಾದವನ್ನು ಅರಿತಿರುವವನು ತ್ರಯೀ ವಿದ್ಯೆಯಿಂದ ಎಷ್ಟು  ಫಲವನ್ನು ಹೊಂದಬಹುದೊ  ಅಷ್ಟನ್ನು ಜಯಿಸಿಕೊಳ್ಳುತ್ತಾನೆ.ಪ್ರಾಣ,ಅಪಾನ,ವ್ಯಾನ-ಇವು ಎಂಟು ಅಕ್ಷರಗಳು.ಆದುದರಿಂದ ಗಾಯತ್ರಿಯ ಮೂರನೆಯ ಪಾದವು  ಮೂರು ಪ್ರಾಣಗಳ ಸ್ವರೂಪವಾಗಿದೆ.ಹೀಗೆ ಗಾಯತ್ರಿಯ ಮೂರನೆಯ ಪಾದವನ್ನು ಅರಿತಿರುವವನು ಪ್ರಾಣಿ ಸಮೂಹ ಎಷ್ಟಿರುವುದೊ  ಅಷ್ಟನ್ನು ಜಯಿಸಿಕೊಳ್ಳುತ್ತಾನೆ.

 

ಈಗ ಗಾಯತ್ರಿಯ ತುರೀಯವಾದ ,ಕಾಣುವಂತಿರುವ ,ರಜೋತೀತವಾದ  ಪಾದವು.ಇದೇ -ತಪಿಸುತ್ತಿರುವ ಆದಿತ್ಯನು.'ತುರೀಯ'ಎಂದರೆ ನಾಲ್ಕನೆಯದು.(ಚತುರೀಯ).ಆದಿತ್ಯ ಪುರುಷನು ಯೋಗಿಗಳಿಗೆ ಕಾಣುವಂತೆ ಇರುವುದರಿಂದ 'ಕಾಣುವಂತಿರುವ ಪಾದವು.ಇವನೇ ಜಗತ್ತಿಗೆಲ್ಲ ಅಧಿಪತಿಯಾಗಿ  ತಪಿಸುತ್ತಿರುವುದರಿಮದ

'ರಜೋತೀತವಾದ'.ಹೀಗೆ ಗಾಯತ್ರಿಯ ಪಾದವನ್ನು  ಅರಿತಿರುವವನು  ಶ್ರೀಯಿಂದಲೂ ತಪಸ್ಸಿನಿಂದಲೂ ತಪಿಸುತ್ತಾನೆ.(ಪುಟ 382)

 

4) ಶಬ್ದಾತೀತವಾದ ಗಾಯತ್ರಿಯ ಮೂರುಪಾದಗಳನ್ನು ಹೇಳಿದ್ದಾಯಿತು. ಈಗ ಅಭಿದೇಯವಾಗಿರುವ  ನಾಲ್ಲನೆಯ ಪಾದವು ಹೇಳಲ್ಪಡುವುದು.(ಪುಟ 382)

 

5) ಗಾಯತ್ರಿಯು ತುರೀಯವೂ ಕಾಣದಂತಿರುವುದೊ ರಜೋತೀತವೂ ಆದ ಪಾದ

ದಲ್ಲಿಪ್ರತಿಷ್ಠಿತವಾಗಿದೆ. ಅದು ಪುನಃ ಸತ್ಯದಲ್ಲಿ ಪ್ರತಿಷ್ಠಿತವಾಗಿದೆ.ಚಕ್ಚುಸ್ಸು ಸತ್ಯವು.ಸತ್ಯವು ಬಲದಲ್ಲಿ ಪ್ರತಿಷ್ಠಿತವಾಗಿದೆ.ಪ್ರಾಣವೇ ಬಲವು.ಆದುದರಿಂದ ಸತ್ಯವು  ಪ್ರಾಣದಲ್ಲಿ ಪ್ರತಿಷ್ಠಿತವಾಗಿದೆ.ಆದುದರಿಂದ 'ಬಲವು ಸತ್ಯಕ್ಕಿಂತ ಓಜಸ್ವಿಯಾಗಿದೆ'ಎಂದು ಹೇಳುತ್ತಾರೆ.ಹೀಗೆ ಗಾಯತ್ರಿಯು ಶರೀರದಲ್ಲಿರುವ ಪ್ರಾಣದಲ್ಲಿ ಪ್ರತಿಷ್ಠಿತವಾಗಿದೆ. ಗಾಯತ್ರಿಯೇ ಗಯಗಳನ್ನು ಕಾಪಾಡಿತು.ಇಂದ್ರಿಯಗಳು ಗಯಗಳು.ಆದುದರಿಂದ ಅದು ಇಂದ್ರಿಯಗಳನ್ನು ಕಾಪಾಡಿತು.ಅದು ಗಯಗಳನ್ನು ಕಾಪಾಡುತ್ತಿರುವುದರಿಂದ ಗಾಯತ್ರಿ ಎನಿಸಿದೆ.ಆಚಾಯ೯ನು ಶಿಷ್ಯನಿಗೆ ಉಪದೇಶಿಸುವ  ಸಾವಿತ್ರಿಯು ಇದು.ಗಾಯತ್ರಿಯು ಉಪದೇಶವನ್ನು ಪಡೆಯುವ ಶಿಷ್ಯನ ಇಂದ್ರಿಯಗಳನ್ನು ಕಾಪಾಡುತ್ತದೆ.(ಪುಟ  384).

 

5)ಪ್ರಾಣವು ಹಿರಣ್ಯಗಭ೯ರೂಪದಿಂದ  ಜಗತ್ತೆಲ್ಲವನೂ ವ್ಯಾಪಿಸಿಕೊಂಡಿದೆ.ಗಾಯತ್ರಿಯೂ ಕೂಡ  ಪ್ರಾಣರೂಪದಿಂದ ಜಗದಾತ್ಮಕವಾಗಿದೆ.(ಪುಟ 384)

 

6)ಗಾಯತ್ರಿಯಾದ ಸಾವಿತ್ರಿಯನ್ನೇ ಶಿಷ್ಯನಿಗೆ ಉಪದೇಶ ಮಾಡಬೇಕು.ಹೀಗೆ ಅರಿತಿರುವವನು ಬಹುವಾಗಿರುವಂತೆ ತೋರುವ  ದಕ್ಷಿಣೆಯನ್ನು ಪ್ರತಿಗ್ರಹಮಾಡಿದರೂ(ಸ್ವೀಕರಿಸಿದರೂ) ಅದು ಗಾಯತ್ರಿಯ ಒಂದು ಪಾದಕ್ಕೂ ಸಾಕಾಗುವುದಿಲ್ಲ.(ಪುಟ 385)

 

7) (ಋಗ್ವೇದ 5,82,1ಮತ್ತು ಛಾ..5,2,7).ಇದರ ಅಥ೯ಹೀಗಿದೆ:'ಶ್ರೇಷ್ಠವೂ  ಜಗತ್ತೆಲ್ಲವನ್ನು ಧರಿಸಬಲ್ಲದೂ  ಆದ ಸವಿತೃದೇವನ ಅನ್ನಕ್ಕಾಗಿ ಪ್ರಾಥಿ೯ಸುತ್ತೇವೆ. ನಾವು ಶೀಘ್ರವಾಗಿ ಭಗನ ಸ್ವರೂಪವನ್ನು ಧ್ಯಾನಿಸುತ್ತೇವೆ.(ಪುಟ 385)

 

8)ಗಾಯತ್ರಿಯು ಪ್ರಾಣವಾಗಿರುವುದರಿಂದಲೂ ವಾಗ್ರೂಪವಾದ ಸರಸ್ವತಿಯನ್ನು  ಮತ್ತು ಇತರ ಇಂದ್ರಿಯಗಳನ್ನು ಒಳಗೊಂಡಿರುವುದರಿಂದಲೂ(ಪುಟ 385)

 

)ಜ್ಞಾನಿಯು  ಸವಾ೯ತ್ಮಕವಾದುದರಿಂದ  ಪ್ರತಿಗ್ರಹವು ಎಷ್ಟು ಹೆಚ್ಚಾಗಿ ತೋರಿದರೂ ನಿಜವಾಗಿ ಹೆಚ್ಚಾಗಲಾರದು.ಇಲ್ಲಿ ಪ್ರಾಸಂಗಿಕವಾಗಿ ಗಾಯತ್ರೀವಿದನನ್ನು ಹೊಗಳಿದೆ.(ಪುಟ 385)

 

10)ಗಾvಯತ್ರಿಯ ಅಭಿವಂದನೆ:'ಗಾಯತ್ರಿ ನೀನು ಏಕಪದೀ,ದ್ವಿಪದೀ,ತ್ರಿಪದೀ,ಚತುಷ್ಪದೀ, ನೀನು ಪಾದರಹಿತಳೂ ಆಗಿರುವೆ.ಏಕೆಂದರೆ ನೀನು ಹೊಂದಲ್ಪಡುವವಳಲ್ಲ. ತುರೀಯಳೂ ಕಾಣುವಂತಿರುವ ರಜೋತೀತಪಾದಳೂ  ಆದ ನಿನಗೆ ನಮಸ್ಕಾರ.(ಪುಟ 387)

 

11)ತ್ರೈಲೋಕ್ಯ ಪಾದದಿಂದ ಏಕಪದಿ.ತ್ರಯೀವಿದ್ಯಾರೂಪವಾದ  ದ್ವಿತೀಯಪಾದದಿಂದ  ದ್ವಿಪದಿಯಾಗಿರುವೆ,ಪ್ರಾಣವೇ ಮೊದಲಾದ ಮೂರನೆಯ ಪಾದದಿಂದ ತ್ರಿಪದಿಯಾಗಿರುವೆ.ನಾಲ್ಕನೆಯದಾದ ತುರೀಯಪಾದದಿಂದ ಚತುಷ್ಪದಿಯಾಗಿರುವೆ.ನಿರುಪಾಧಿಕವಾದ ನಿನ್ನ ಸ್ವರೂಪದಿಂದ ಅಪದಿ ಆಗಿರುವೆ.

'ನೇತಿ ನೇತಿ'ಎಂದು ಹೇಳುವ ಆತ್ಮನ ಸ್ವರೂಪಳಾಗಿರುವುದರಿಂದ ನೀನು ಅಜ್ಞಾತಳು.(ಪುಟ 388)

 

12)ಗಾಯತ್ರಿಯ ಉಪಾಸನೆಯ ವಿಷಯದಲ್ಲಿ ಕಥಿಯಿದೆ:ಜನಕ ವೈದೇಹನು ಅಶ್ವತರಾಶ್ವನ ಮಗನಾದ ಬುಡಿಲನಿಗೆ ಹೇಳಿದನು.'ಸರಿ ನೀನು ಗಾಯತ್ರಿವಿದನೆಂದು ಹೇಳಿಕೊಂಡೆ.ಹಾಗಾದರೆ ಆನೆಯಾಗಿ ನನ್ನನ್ನು  ಏಕೆ ಹೊರುತ್ತಿರುವೆ?

 

ಬುಡಿಲ:ಸಮ್ರಾಟ್,ಏಕೆಂದರೆ ನಾನು ಗಾಯತ್ರಿಯ ಮುಖವನ್ನು ತಿಳಿದುಕೊಂಡಿರುವುದಿಲ್ಲ.

 

ಜನಕ: ಅಗ್ನಿಯೇ ಗಾಯತ್ರಿಯ ಮುಖವು.ಅಗ್ನಿಯಲ್ಲಿ ಹೆಚ್ಚು ಸೌದೆಯನ್ನು ಹಾಕಿದರೂ  ಅದೆಲ್ಲವನ್ನೂ ಅಗ್ನಿಯು ದಹಿಸುತ್ತದೆ.ಹಾಗೆಯೇ ಹೀಗೆ ಅರಿತುಕೊಂಡಿರುವವನು ಬಹುಪಾಪವನ್ನು ಮಾಡಿದರೂ  ಅದೆಲ್ಲವನ್ನೂ ದಹಿಸುತ್ತ ಅವನು ಶುದ್ಧನೂ ಪವಿತ್ರನೂ ಅಜನೂ ಅಮೃತನೂ ಆಗುವನು.'(ಪುಟ 38)

 

13)ಒಂದು ಅಂಗದಲ್ಲಿ ನ್ಯೂನತೆ ಇರುವುದರಿಂದ ನನ್ನ ಗಾಯತ್ರೀ ವಿಜ್ಞಾನವು ನಿಷ್ಫಲವಾಯಿತು.(ಪುಟ 38),

 

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

 

ಹದಿನೈದನೆಯ ಬ್ರಾಹ್ಮಣ:

 

1) ಪೂಷನ್: ಜಗತ್ತನ್ನು ಪೋಷಿಸುವುದರಿಂದ ಪೂಷನ್(ಸೂಯ೯).(ಪುಟ 31)

 

2) ಸೂಯ೯ನು ಒಬ್ಬನೇ ಋಷಿಯಾದುದರಿಂದ ಏಕಷಿ೯.ಏಕೆಂದರೆ ಇವನು ಜಗತ್ತಿಗೆಲ್ಲಾ ಆತ್ಮನೂ ಕಣ್ಣೂ ಆಗಿ ಎಲ್ಲವನ್ನೂ ನೋಡುತ್ತಾನೆ.ಸೂಯ೯ನು ಏಕಾಕಿಯಾಗಿ ಸಮಚರಿಸುತ್ತಾನೆ.(ಸೂಯ೯ಃ ಏಕಾಈ ಚರತಿ(ತೈ.ಸಂಹಿತೆ 7,4,18,1) (ಪುಟ 32)

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

 

 

ಆರನೆಯ ಅಧ್ಯಾಯ:

 

ಮೊದಲನೆಯ ಬ್ರಾಹ್ಮಣ:(ಪ್ರಾಣಸಂವಾದ)(ಪ್ರಾಣವು ಜ್ಯೇಷ್ಠ ಮತ್ತು ಶ್ರೇಷ್ಠ)

 

1) ಪ್ರಾಣವೇ ಜ್ಯೇಷ್ಠವೂ ಶ್ರೇಷ್ಠವೂ ಆಗಿದೆ. ಹೀಗೆ ತಿಳಿದಿರುವವನು ಜ್ಯೇಷ್ಠನೂ ಶ್ರೇಷ್ಠನೂ ಆಗುತ್ತಾನೆ.

(ಪ್ರಾಣವು ಜ್ಯೇಷ್ಠವೂ ಶ್ರೇಷ್ಠವೂ ಎಂದು ಉಪಾಸಿಸುವನು)(ಪುಟ33)

 

2)ವಾಕ್ಕೇ ವಸಿಷ್ಠವು.(ಪುಟ 34)

 

3)ಚಕ್ಷುಸ್ಸೇ ಪ್ರತಿಷ್ಠೆ.ಏಕೆಂದರೆ ಚಕ್ಷುಸ್ಸಿನಿಂದ  ಮನುಷ್ಯನು ಸಮವೂ ವಿಷಮವೂ ಆದ ದೇಶಕಾಲಗಳಲ್ಲಿ ಸ್ಥಿರವಾಗಿ ನಿಲ್ಲುತ್ತಾನೆ.ಯಾವುದು ಸ್ಥೈಯ೯ವನ್ನು ಹೊಂದಿರುವುದೊ ಅದು ಪ್ರತಿಷ್ಠೆ.(ಪುಟ 34)

 

4)ಶ್ರೋತ್ರವೇ ಸಂಪತ್ತು.ಯಾವನು ಸಂಪತ್ತನ್ನು ತಿಳಿದಿರುವನೋ  ಅವನು ಬಯಸಿದ ಕಾಮವನ್ನು ಪಡೆಯುತ್ತಾನೆ.ಶ್ರೋತ್ರವಿದ್ದರೆ ವೇದಗಳೆಲ್ಲ ಸಂಪಾದಿತವಾಗುವುವು.ಹೀಗೆ ತಿಳಿದಿರುವವನು  ಯಾವಕಾಮನೆಯನ್ನು ಬಯಸುತ್ತಾನೆಯೊ ಅದನ್ನು ಪಡೆಯುತ್ತಾನೆ.(ಪುಟ 35)

 

5)ಮನಸ್ಸೇ ಆಶ್ರಯವು.ಹೀಗೆ ತಿಳಿದಿರುವವನು  ತನ್ನ ಸಂಬಂಧಿಗಳಿಗೂ ಮತ್ತು ಇತರ ಜನರಿಗೂ ಆಶ್ರಯವಾಗುವನು.(ಪುಟ 35)

 

6) ಜನನೇಂದ್ರಿಯವೆ ಪ್ರಜಾಪತಿಯು.ಹೀಗೆ ತಿಳಿದಿರುವವನು  ಸಂತತಿಯಿಂದಲೂ ಪಶುಗಳಿಂದಲೂ ಸಂಪನ್ನನಾಗುತ್ತಾನೆ.(ಪುಟ 36)

 

7)ಒಂದು ಸಲ ಇಂದ್ರಿಯಗಳು ತಮ್ಮಲ್ಲಿಯೇ ಕಲಹ ಮಾಡುತ್ತಾ ತಮ್ಮ ಪ್ರಾಧಾನ್ಯವನ್ನು ಸ್ಥಾಪಿಸಲು

ಬ್ರಹ್ಮನ ಬಳಿ ಹೋಗಿ ನಮ್ಮಲ್ಲಿ 'ನಮ್ಮಲ್ಲಿ ವಸಿಷ್ಠವು ಯಾವುದು'?  ಎಂದು ಕೇಳಿದವು.'ನಿಮ್ಮಲ್ಲಿ ಉತ್ಕ್ರಮಿಸಿದರೆ  ಶರೀರವು ಅಶುಚಿಯೆಂದು ಜನರು ಎಣಿಸುತ್ತಾರೆಯೊ ಅದೇ ನಿಮ್ಮಲ್ಲಿ ಶ್ರೇಷ್ಠವು' ಎಂದು ಬ್ರಹ್ಮನು ಹೇಳಿದನು.ಆಗ ವಾಕ್ಕೇ ಮೊದಲಾದ ಇಂದ್ರಿಯಗಳು ತಮ್ಮ ಶ್ರೇಷ್ಠತ್ವವನ್ನು  ಸ್ಥಾಪಿಸಲು  ಶರೀರದಿಂದ ಒಂದೊಂದಾಗಿ  ಹೊರಟವು.ಆದರೆ ಶರೀರವು ಮೊದಲಿಗಿಂತ ಹೆಚ್ಚ್ಚಾಗಿ ಕೆಡಲಿಲ್ಲ.ಕೊನೆಗೆ ಮುಖ್ಯಪ್ರಾಣವು  ಉತ್ಕ್ರಮಿಸಲು ಸಿದ್ಧವಾದಾಗ ಇಂದ್ರಿಯಗಳೆಲ್ಲ ತಮ್ಮ ತಮ್ಮ ಸ್ಥಾನದಿಂದ ಕಿತ್ತು ಹಾಕಲ್ಪಟ್ಟವು. ಆಗ ಇಂದ್ರಿಯಗಳು  ಪ್ರಾಣವನ್ನು ಶರೀರದಿಂದ ಉತ್ಕ್ರಮಿಸಬಾರದೆಂದು  ಬೇಡಿಕೊಂಡವು.

ಆದುದರಿಂದ ಪ್ರಾಣವೇ ಜ್ಯೇಷ್ಠ ಮತ್ತು ಶ್ರೇಷ್ಠ. ಪ್ರಸಂಗಕ್ಕೆ 'ಪ್ರಾಣಸಂವಾದ' ಎಂದು ಹೆಸರು.(ಪುಟ 402)

 

7) ಪ್ರಾಣವು ಹೇಳಿತು.'ಅಂತಹ ನನಗೆ ಅನ್ನವುಯಾವುದು,ಬಟ್ಟೆಯು ಯಾವುದು?'ಇಂದ್ರಿಯಗಳು ಹೇಳಿದವು.:ನಾಯಿ,ಕ್ರಿಮಿ,ಕೀಟ,ಪತಂಗ,-ಇವುಗಳವರೆಗೆ  ಯಾವ ಯಾವ  ಅನ್ನವಿದೆಯೊ  ಅದೆಲ್ಲವೂ ನಿನ್ನ ಅನ್ನವು.ಮತ್ತು ನೀರು ನಿನ್ನ ಬಟ್ಟೆಯು.ಶ್ರೋತ್ರೀಯರಾದ ಜ್ಞಾನಿಗಳು  ಊಟಮಾಡುವಾಗ  ಮತ್ತು ಊಟ ಮಾಡಿದ ಮೇಲೆ ಆಚಮನ ಮಾಡುತ್ತಾರೆ. ಅವರು ಪ್ರಾಣದ ನಗ್ನತೆಯನ್ನು  ತೆºಗೆದೆವೆಂದು ಭಾವಿಸುತ್ತಾರೆ.(ಪುಟ 412)

 

8) ಎಲ್ಲವೂ ಪ್ರಾಣಕ್ಕೆ ಅನ್ನವು ಎಂಬ ದೃಷ್ಟಿಯನ್ನು ಇಲ್ಲಿ ವಿಧಿಸಿದೆ.(ಪುಟ 402)

 

) ನೀರು ಪ್ರಾಣದ ಬಟ್ಟೆ.(ಪುಟ 402)

 

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

..............................

ಎರಡನೆಯ ಬ್ರಾಹ್ಮಣ:   (ಪಂಚಾಗ್ನಿ ವಿದ್ಯೆ ಹಾಗೂ ಐದು ಪ್ರಶ್ನೆಗಳು)

 

1) ಒಂದು ಸಲ ಅರುಣನ ಮೊಮ್ಮಗನಾದ ಶ್ವೇತಕೇತುವು ಪಂಚಾಲರ ಪರಿಷತ್ತಿಗೆ ಬಂದನು.ಅಲ್ಲಿ ಜೀವಲನ ಮಗನಾದ ಪ್ರವಾಹಣನನ್ನು ಎದುರುಗೊಂಡನು.'ನಿನ್ನ ತಂದೆಯವರಿಂದ ಉಪದಿಷ್ಟನಾಗಿರುವೆಯೊ?'ಎಂದು ರಾಜನು ಪ್ರಶ್ನಿಸಿದನು.'ಹೌದು'ಎಂದು ಶ್ವೇತಕೇತುವು ಹೇಳಿದನು.(ಪುಟ 403)

 

2) ಇದು ಖಿಲ ಪ್ರಕರಣ.ಹಿಂದೆ ಹೇಳದ ಕೆಲವು ವಿಷಯಗಳನ್ನು ಇಲ್ಲಿ ಹೇಳಿದೆ. ಇಲ್ಲಿ ಮುಖ್ಯವಾಗಿ ಕಮ೯ವಿಪಾಕವನ್ನು ಪಡೆಯುವುದಕ್ಕೆ ಇರುವ ಸಂಸಾರಗತಿಗಳನ್ನೆಲ್ಲ ಉಪಸಂಹರಿಸಿದೆ(ಪುಟ 403)

 

3)ಪ್ರವಾಹಣ ರಾಜನು ಐದು ಪ್ರಶ್ನೆಗಳನ್ನು ಕೇಳಿದನು:

 

1) ಜನರು ಮೃತರಾದ ಮೇಲೆ ಬೇರೆ ಬೇರೆ ಮಾಗ೯ಗಳಲ್ಲಿ  ಹೇಗೆ ಹೋಗುವರು?

 

2)ಮತ್ತೆ ಇವರು ಲೋಕಕ್ಕೆ ಹೇಗೆ ಹಿಂತಿರುಗುವರು?

 

3) ಹೀಗೆ ಬಹು ಜನರು ಪುನಃ ಪುನಃ ಸಾಯುತ್ತಿದ್ದರೂ   ಹೇಗೆ ಲೋಕವು ತುಂಬುತ್ತಿಲ್ಲ?

 

4)ಎಷ್ಟನೆಯ ಆಹುತಿಯನ್ನು ಹೋಮಮಾಡಿದ ಮೇಲೆ ನೀರು ಪುರುಷವಾಕ್ಕಾಗಿ ಎದ್ದು ನಿಂತು ಮಾತಾಡುತ್ತದೆ?

 

5)ಯಾವ ಕಮ೯ದಿಂದ ದೇವಯಾನ ಅಥವಾ ಪಿತೃಯಾನೆವೆಂಬ ಪಥವನ್ನು ಜನರು ಪಡೆಯುತ್ತಾರೊ ಅದನದನು ನೀನು ಅರಿತಿರುವೆಯಾ?

ಎಂಬುದಾಗಿ ಐದು ಪ್ರಶ್ನೆಗಳನ್ನು ಕೇಳಿದನು.ಇವುಗಳಲ್ಲಿ ಯಾವ ಒಂದು ಪ್ರಶ್ನೆಯೂ  ಶ್ವೇತಕೇತುವಿಗೆ ಗೊತ್ತಿರಲಿಲ್ಲ.

ಶೇತಕೇತುವು ತಂದೆಯ ಬಳಿ ಬಂದು ಇವುಗಳಲ್ಲಿ ಒಂದು ಪ್ರಶ್ನೆಯೂ ತನಗೆ ತಿಳಿದಿರಲಿಲ್ಲವೆಂದು ಹೇಳಿದನು.(ಪುಟ 415)

 

6)'ಕುಮಾರ ನನ್ನಲಿ ನಂಬಿಕೆಯಿದು.ನಾನು ಏನೇನನ್ನು ತಿಳಿದಿರುವೆನೊ ಅದೆಲ್ಲವನ್ನೂ ನಿನಗೆ ಹೇಳಿರುವೆನು.ಬಾ ಅಲ್ಲಿಗೆ ಹೋಗಿ ಬ್ರಹ್ಮಚಯ೯ವಾಸ ಮಾಡೋಣ' ಎಂದು ಹೇಳಿದನು.ಅವನು ಒಪ್ಪಲಿಲ್ಲ.ಗೌತಮನು ಪ್ರವಾಹಣ ಜೈವಲಿಯ ಸಭೆಗೆ ಬಂದನು.(ಪುಟ 40)

 

7) ಪೂವಿ೯ಕರು ವಾಕ್ಕಿನಿಂದಲೇ ಶಿಷ್ಯತ್ವವನ್ನು ಗ್ರಹಿಸುತ್ತಿದ್ದರು. ಗೌತಮನು 'ಶಿಷ್ಯತ್ವವನ್ನು ಗ್ರಹಿಸಿದ್ದೇನೆ' ಎಂದು ವಾಕ್ಕಿನಿಂದಲೇ ಹೇಳಿ  ಬ್ರಹ್ಮಚಾರಿಯಾಗಿ ವಾಸಿಸಿದನು.

 

8) ಪಂಚಾಗ್ನಿ ವಿದ್ಯೆ: 1) ದ್ಯುಲೋಕ 2)ಪಜ೯ನ್ಯ 3) ಲೋಕ(ಪೃಥ್ವಿ) 4)ಪುರುಷ 5) ಸ್ತ್ರೀ ಇವೆ ಪಂಚಾಗ್ನಿಗಳು.ಇವುಗಳಲ್ಲಿ ಕ್ರಮವಾಗಿ ಶ್ರದ್ಧೆ,ಸೋಮ,ಮಳೆ,ಅನ್ನ,ರೇತಸ್ಸುಎಂಬ ರೂಪದಿಂದ ಸ್ಥೂಲ ತಾರತಮ್ಯ  ಕ್ರಮವನ್ನು ಹೊಂದುವ ಶ್ರದ್ಧಾಶಬ್ದ ವಾಚ್ಯವಾದ ನೀರು ಪುರುಷನನ್ನು ಉಂಟುಮಾಡುತ್ತದೆ.

ಐದನೆಯ ಆಹುತಿಯನ್ನು ಸ್ತ್ರೀ ಎಂಬ ಅಗ್ನಿಯಲ್ಲಿ  ಹೋಮಮಾಡಲಾಗಿ ರೇತಸ್ಸಾದ ನೀರು ಪುರುಷವಾಕ್ಕಾಗಿ ಎದ್ದು ನಿಲ್ಲುವುದು.(ಪುಟ414)

 

)ಸೂಕ್ಷ್ಮರೂಪದಲ್ಲಿರುವ ಹಾಲು ಮುಂತಾದ ಆಹುತಿ ದ್ರವ್ಯವನ್ನು ಶ್ರದ್ಧೆಯೆಂದು ಹೇಳಿದೆ.'ಶ್ರದ್ಧೆಯೇ ನೀರು' (ಶ್ರದ್ಧಾ ವಾ ಆಪಃ)ಎಂದು ತೈತ್ತಿರೀಯ ಸಂಹಿತೆಯು (1,6,8)ಹೇಳುತ್ತದೆ.(ಪುಟ  411)

 

10)ಇವನ ಹಿಂದಿನ ಕಮ೯ವು  ಈಶರೀರದಲ್ಲಿ ಎಲ್ಲಿಯವರೆಗೆ ಇವನನ್ನು ಇರುವಂತೆ ಮಾಡುವುದೊ ಅಲ್ಲಿಯವರೆಗೆ ಇರುತ್ತಾನೆ.(ಪುಟ 414)

 

11)ಆಗ ಋತ್ವಿಕ್ಕುಗಳು ಇವನನ್ನು ಅಗ್ನಿಯಲ್ಲಿ ಆಹುತಿ ಮಾಡಲು ಒಯ್ಯುತ್ತಾರೆ.ಅವನಿಗೆ ಅಗ್ನಿಯೇ ಅಗ್ನಿಯಾಗುತ್ತದೆ. ಅಗ್ನಿಯಲ್ಲಿ  ದೇವತೆಗಳು ಪುರುಷನನ್ನು ಹೋಮ ಮಾಡುತ್ತಾರೆ. ಆಹುತಿಯಿಂದ ಪುರುಷನು ದೀಪ್ತಿವಂತನಾಗುತ್ತಾನೆ.(ದಹಮಕ್ರಿಯೆ)(ಪುಟ 415)

 

12)ಶ್ರದ್ಧೆಯಿಂದ  ಹೀಗೆ ಪಂಚಾಗ್ನಿ ವಿದ್ಯೆಯನ್ನು ಅರಿತುಕೊಂಡಿರುವವರು ಮತ್ತು ಅರಣ್ಯದಲ್ಲಿ ಸತ್ಯಬ್ರಹ್ಮವನ್ನು ಉಪಾಸಿಸುವವರು ಅಚಿ೯ದೇವತೆಯನ್ನು ಸೇರುತ್ತಾರೆ.

ಅಚಿ೯ದೇವತೆಯಿಂದ -ಅಹದೇ೯ವತೆ-ಶುಕ್ಲ ಪಕ್ಷದೇವತೆ-ಉತ್ತರಾಯಣದೇವತೆ-ದೇವಲೋಕಾಭಿಮಾನೀ ದೇವತೆ--ಆದಿತ್ಯ-ವಿದ್ಯುದ್ದೇವತೆಯನ್ನು ಸೇರುತ್ತಾರೆ.ಮ್ರಹ್ಮನ ಮನಸ್ಸಿನಿಂದ ಸೃಷ್ಟವಾಗಿರುವ ಪುರುಷನೊಬ್ಬನು ಬಂದು  ವಿದ್ಯುದ್ದೇವತೆಯನ್ನು ಹೊಂದಿದ(ಸೇರಿದ) ಅವರನ್ನು ಬ್ರಹ್ಮಲೋಕಗಳಿಗೆ ಕರೆದುಕೊಂಡು ಹೋಗುತ್ತಾನೆ.ಅವರು ಬ್ರಹ್ಮಲೋಕದಲ್ಲಿ ಪ್ರಕೃಷ್ಟರಾಗಿ  ಅನೇಕ ಸಂವತ್ಸರಗಳವರೆಗೆ ವಾಸಿಸುತ್ತಾರೆ. ಅವರು ಸಂಸಾರಕ್ಕೆ ಹಿಂದಿರುಗುವುದಿಲ್ಲ.(ಪುಟ416)

 

13)ಯಾರು ಯಜ್ಞದಿಂದಲೂ ದಾನದಿಂದಲೂ ತಪಸ್ಸಿನಿಂದಲೂ  ಲೋಕಗಳನ್ನು ಜಯಿಸಿಕೊಳ್ಳುತ್ತಾರೆಯೋ ಅವರು ಧೂಮದೇವತೆಯನ್ನು ಸೇರುತ್ತಾರೆ.ಧೂಮದೇವತೆಯಿಂದ -ರಾತ್ರಿದೇವತೆ,-ಕೃಷ್ಣಪಕ್ಷದೇವತೆ-ದಕ್ಷಿಣಾಯನ ದೇವತೆಗಳನ್ನು- ಪಿತೃಲೋಕದೇವತೆಯನ್ನು-ಚಂದ್ರನನ್ನು

ಸೇರುತ್ತಾರೆ.ಅವರು ಚಂದ್ರನನ್ನು ಸೇರಿ ಅನ್ನವಾಗುತ್ತಾರೆ.ಅವರ ಕಮ೯ವು ಕ್ಷಯವಾದ ಮೇಲೆ  ಅವರು ಆಕಾಶದಂತೆ ಆಗುತ್ತಾರೆ. ಆಕಾಶದಿಂದ ವಾಯು,ವಾಯುವಿನಿಂದ ಮಳೆ,ಮಳೆಯಿಂದ ಪೃಥ್ವಿಯನ್ನು ಸೇರಿ ಅವರು ಅನ್ನವಾಗುತ್ತಾರೆ.ಅವರು ಪುನಃ ಪುರುಷಾಗ್ನಿಯಲ್ಲಿ ಹುತರಾಗುತ್ತಾರೆ.ಅನಂತರ ಸ್ತೀ ಎಂಬ ಅಗ್ನಿಯಲ್ಲಿ (ಹುತರಾಗಿ ಎಂದರೆ ಆಹುತಿಯಾಗಿ) ಹುಟ್ಟುತ್ತಾರೆ. ಲೋಕಗಳನ್ನು ಹೊಂದುವುದಕ್ಕಾಗಿ ಅವರು (ಅಗ್ನಿಹೋತ್ರಾದಿ ಕಮ೯ಗಳನ್ನು ಮಾಡುತ್ತಾರೆ.ಹೀಗೆಯೇ ಅವರು ಸುತ್ತುತ್ತಾರೆ.ಇನ್ನು ಯಾರು  ಎರಡೂ ಮಾಗ೯ಗಳನ್ನು ಅರಿಯರೊ ಅವರು ಕೀಟಗಳೂ ಪತಂಗಗಳೂ ಮತ್ತು ಸೊಳ್ಳೆಯೂ ಆಗುತ್ತಾರೆ.(ಪುಟ 41)

 

(ಆಕಾಶ,ವಾಯು, ಮಳೆ,ಮಳೆಯಿಂದ ಪೃಥ್ವಿ,ಪೃಥ್ವಿಯಲ್ಲಿ ಅನ್ನ,ಪುರುಷ,ಸ್ತೀಯಲ್ಲಿ ಜನನ)

 

 

14)ಕೀಟಗಳಗತಿಯು ಅತ್ಯಂತ ಕಷ್ಟವಾಗಿರುತ್ತದೆ.ಏಕೆಂದರೆ ಇದರಲ್ಲಿ  ಬಿದ್ದವನನ್ನು  ಉದ್ಧರಿಸುವುದು ದುಲ೯ಭವಾಗಿರುತ್ತದೆ.(ಛಾ..5,10,8).ಆದುದರಿಂದ ಸವೋ೯ತ್ಸಾಹದಿಂದ ದಕ್ಷಿಣೋತ್ತರ ಮಾಗ೯ಗಳನ್ನು ಹೊಂದಲು ಸಾಧನವಾದ ಶಾಸ್ತ್ರೀಯ ಕಮ೯ವನ್ನು ಅಥವಾ ಜ್ಞಾನವನ್ನು ಅನುಷ್ಠಿಸಬೇಕು.

                   ಇಲ್ಲಿ ಎರಡನೆಯ ಮತ್ತು ಮೂರನೆಯ  ಪ್ರಶ್ನೆಗಳಿಗೆ ಪರಿಹಾರವನ್ನು ಹೇಳಿದೆ.ಅನೇಕರು ಲೋಕಕ್ಕೆ ಹಿಂದಿರುಗುತ್ತಿರುವುದರಿಂದಲೂ  ಮತ್ತೆ ಕೆಲವರು ಕೀಟ ಪತಂಗಾದಿ ಜನ್ಮವನ್ನು  ಪಡೆಯುತ್ತಿರುವುದರಿಂದಲೂ  ಲೋಕವು ತುಂಬುತ್ತಿಲ್ಲ.(ಪುಟ 420)

 

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

 

ಮುರನೆಯ ಬ್ರಾಹ್ಮಣ:

1) ಜ್ಞಾನವು ಮತ್ತೊಂದು ಸಾಮಗ್ರಿಯನ್ನು ಅಪೇಕ್ಷಿಸದೆ ಸ್ವತಂತ್ರವಾಗಿರುತ್ತದೆ.ಆದರೆ ಕಮ೯ವು ದೈವ-ಮಾನುಷ ವಿತ್ತಗಳನ್ನು ಅವಲಂಬಿಸಿರುತ್ತದೆ.(ಪುಟ 322)

 

2) ಬ್ರಾಹ್ಮಣವು ಶ್ರೀಮಂಥಕಮ೯ವನ್ನು ಹೇಳುತ್ತದೆ.ಪ್ರಾಣೋಪಾಸನೆಯನ್ನು ಬಲ್ಲವನಿಗೆ ಇದರಲ್ಲಿ ಅಧಿಕಾರ.ಇದರಲ್ಲಿ ಅಧಿಕಾರ ಮಹತ್ವವನ್ನು ಹೊಂದಿ ಅದರ ಮೂಲಕ ಯಜ್ಞಾದಿ ಕಮ೯ಗಳಿಗೆ ಅವಶ್ಯಕವಾದ  ಧನಸಂಪಾದನೆಯನ್ನು ಮಾಡಲು  ಶ್ರೀಮಂಥವನ್ನು ಮಾಡಬೇಕು.ಅನಂತರ ವಿದ್ಯೆಯನ್ನು ಉಪದೇಶಿಸಿದ ಆಚಾಯ೯ರ ಪರಂಪರೆಯನ್ನು ಕೊಟ್ಟಿದೆ. ಪ್ರತಿಯೊಬ್ಬನೂ 'ಇದನ್ನು ಒಣಗಿದ ಮೋಟುಮರದ ಮೇಲೆ ಚುಮುಕಿಸಿದರೂ  ಕೊಂಬೆಗಳು ಹುಟ್ಟುವುವು ಮತ್ತು ಎಲೆಗಳು ಚಿಗುರುವುವು'ಎಂದು ತನ್ನ ಶಿಷ್ಯನಿಗೆ ಹೇಳಿ  ಶ್ರೀಮಂಥವನ್ನೇ ಸ್ತುತಿಸುತ್ತಾನೆ.ಇದನ್ನು ತನ್ನ ಮಗನಿಗೆ ಅಥವಾ ಶುಷ್ಯನಿಗೆ ಮಾತ್ರ ಉಪದೇಶಿಸಬೇಕು.(ಪುಟ 26ಪ್ರಸ್ತಾವನೆಯಲ್ಲಿ)

(ಇದರ ವಿವರಣೆಗಾಗಿ ಮೂಲಗ್ರಂಥವನ್ನು ಓದಿರಿ)

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

 

 ನಾಲ್ಕನೆಯ ಬ್ರಾಹ್ಮಣ:

 

ನಾಲ್ಕನೆಯ ಬ್ರಾಹ್ಮಣದಲ್ಲಿ ಪುತ್ರಮಂಥಕಮ೯ವನ್ನು ಹೇಳಿದೆ.ಯೋಗ್ಯನಾದ ಪುತ್ರನು ಮತ್ತು ತನ್ನ ತಂದೆಗೂ  ಉತ್ತಮವಾದ ಲೋಕಗಳನ್ನು ಜಯಿಸಿಕೊಳ್ಳುತ್ತಾನೆ.ಅಂಥ ಪುತ್ರನನ್ನು ಪಡೆಯಲು ಕಮ೯ವು ಸಮಥ೯ವಾಗಿದೆ.ಪ್ರಾಣೋಪಾಸಕನಾಗಿ  ಶ್ರೀಮಂಥವನ್ನು ಮಾಡಿರುವವನಿಗೆ ಮಾತ್ರ  ಪುತ್ರ ಮಂಥದಲ್ಲಿ ಅಧಿಕಾರ.ಇಲ್ಲಿ ಶಿಶುಜನನಕ್ಕೆ ಮೊದಲು ಮತ್ತು ಜನನಾನಂತರ  ಮಾಡುವ ಕೆಲವು ಸಂಸ್ಕಾರಗಳನ್ನು ಹೇಳಿದೆ.(ಪುಟ 26 ಪ್ರಸ್ತಾವನೆ)

 

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

 

ಐದನೆಯ ಬ್ರಾಹ್ಮಣ:

 

ವಂಶ ಬ್ರಾಹ್ಮಣದಲ್ಲಿ ಇಡೀ ಉಪನಿಷತ್ತಿನ ಆಚಾಯ೯ ವಂಶವನ್ನು ಹಿರಣ್ಯಚಭ೯ನಿಂದ ಪೌತಿಮಾ ಷೀ ಪುತ್ರನವರೆಗೆ ಹೇಳಿದೆ.(ಪುಟ 26 ಪ್ರಸ್ತಾವನೆ).

ಪ್ರಜಾಪತಿಯಿಂದ ಸಾಜೀವಿನೀ ಪುತ್ರನವರೆಗೆ ಗುರುಪರಂಪರೆಯು ಒಂದೇ ಆಗಿದೆ.ಶಾಖಾ ಭೇದಗಳಾಗಿರುವುದು ಅನಂತರ.

ಬ್ರಹ್ಮನು ಸ್ವಯಂಭು.(ತನ್ನಿಂದ ತಾನೇ ಆದವನು.ಅವನು ಯಾವುದರ ಕಾಯ೯ವಾಗಲೀ ಕಾರಣವಾಗಲೀ ಅಲ್ಲ).ಬ್ರಹ್ಮಕ್ಕೆ ನಮಸ್ಕಾರ.

 

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

ಇಲ್ಲಿಗೆ ಬೃಹದಾರಣ್ಯಕ ಉಪನಿಷತ್ತಿನ (ಬೃಹತ್ ಉದ್ಗ್ರಂಥವು) ಸಾರಾಂಶವು ಸಂಪೂಣ೯(ಸಮಾಪ್ತ) ವಾಯಿತು. (ದಿನಾಂಕ.13.8.2020) 

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

 

ಗಮನಿಸಿ:

ಎರಡನೆಯ ಅಧ್ಯಾಯದ ಐದನೆಯ ಬ್ರಾಹ್ಮಣದಲ್ಲಿ ಹದಿನಾಲ್ಕು ಚತುಷ್ಟಯಗಳ್ಯ ಹೇಳಲ್ಪಟ್ಟಿವೆ.

ಎಲ್ಲಾ ಚತುಷ್ಟಯಗಳ ವಿವರಣೆಯಲ್ಲೂ ತೇಜೋಮಯನೂ ಅಮೃತಮಯನೂ ಆದ ಪುರುಷನು ಎಂದು ಸಾಮಾನ್ಯವಾಗಿ ಬರುತ್ತದೆ.ಉಳಿದ ವ್ಯತ್ಯಾಸಗಳು ಹೀಗಿವೆ:

 

 

                     (ಶರೀರ ಸಂಬಂಧಿಯಾಗಿ)

 

1) ಪೃಥಿವ್ಯಾದಿ ಚತುಷ್ಟಯ-(ಶರೀರಸಂಬಂಧಿಯಾಗಿ)ಲಿಂಗ ಶರೀರಾಭಿಮಾನಿ

 

2)ಜಲಾದಿ ಚತುಷ್ಟಯ: ರೈತಸ

 

3)ಅಗ್ನ್ಯಾದಿ ಚತುಷ್ಟಯ:ವಾಗಭಿ£ಮಾನಿ

 

4)ವಾಯ್ವಾದಿ ಚತುಷ್ಟಯ:ಪ್ರಾಣಾಭಿಮಾನಿ

 

5)ಆದಿತ್ಯಾದಿ ಚತುಷ್ಟಯ:ಚಕ್ಷುರಭಿಮಾನಿ

 

6)ದಿಗಾದಿ ಚತುಷ್ಟಯ: ಶ್ರವಣಾಭಿಮಾನಿ

 

7) ಚಂದ್ರಾದಿ ಚತುಷ್ಟಯ:ಮನೋಭಿಮಾನಿ

 

8) ವಿದ್ಯುದಾದಿ ಚತುಷ್ಟಯ:ತ್ವಗಿಂದ್ರಿಯದ ಅಭಿಮಾನಿ

 

)ಮೇಘ ಗಜ೯ನಾದಿ ಚತುಷ್ಟಯ:ಶಬ್ದಸ್ವರಗಳ ಅಭಿಮಾನಿ

 

10) ಆಕಾಶಾದಿ ಚತುಷ್ಟಯ: ಹೃದಯಾಭಿಮಾನಿ

 

11)ಧಮಾ೯ದಿ ಚತುಷ್ಟಯ:ಧಮಾ೯ಭಿಮಾನಿ

 

12)ಸತ್ಯಾದಿ ಚತುಷ್ಟಯ:ಸತ್ಯಾಭಿಮಾನಿ

 

13)ಮನುಷ್ಯಾದಿ ಚತುಷ್ಟಯ:ಮಾನುಷಾಭಿಮಾನಿ

 

14)ಶರೀರಾದಿ ಚತುಷ್ಟಯ:ಶರೀರಾಭಿಮಾನಿ

 

ಚತುಷ್ಟಯಗಳು ಬ್ರಹ್ಮವೇ.

 

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

ಇಲ್ಲಿಗೆ ಬೃಹದಾರಣ್ಯಕ ಉಪನಿಷತ್ತಿನ (ಬೃಹತ್ ಉದ್ಗ್ರಂಥವು) ಸಾರಾಂಶವು ಸಂಪೂಣ೯(ಸಮಾಪ್ತ) ವಾಯಿತು. (ದಿನಾಂಕ.13.8.2020) 

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

 

 

 

 


No comments:

Post a Comment