Friday, 4 September 2020

bruhadaranyaka upanishath saara sangraha part 2

 

ಎರಡನೆಯ ಅಧ್ಯಾಯ:

 

1) ಅಧ್ಯಾಯದಲ್ಲಿ ಆರು ಬ್ರಾಹ್ಮಣಗಳಿವೆ

 

ಮೊದಲನೆಯ ಬ್ರಾಹ್ಮಣ: ಗಾಗ್ಯ೯-ಅಜಾತ ಶತ್ರು ಸಂವಾದ ರೂಪದಲ್ಲಿದೆ.ಗಾಗಿ೯ಯು ಅವಿದ್ಯಾರೂಪವಾದ ಬ್ರಹ್ಮವನ್ನು ಮಾತ್ರ ಅರಿತಿದ್ದನು.ಇವನು ಸೋಪಾಧಿಕವಾದ ಬ್ರಹ್ಮವನ್ನು ಮಾತ್ರ ಅರಿತಿದ್ದನು.ಎಂದರೆ ಆದಿತ್ಯ,ಚಂದ್ರ ,ವಿದ್ಯುತ್,ಆಕಾಶ,ವಾಯು, ಅಗ್ನಿ ,ನೀರು.ಕನ್ನಡಿ,ಹೆಜ್ಜೆಯ ಶಬ್ದ,ದಿಕ್ಕುಗಳು ,ಕತ್ತಲೆ,ಹಿರಣ್ಯಗಭ೯-ಇವರಲ್ಲಿರುವ ಪುರುಷನನ್ನೇ,  ಬ್ರಹ್ಮವೆಂದು ಅರಿತಿದ್ದನು.(ಪುಟ 10)

 

2)ಆದರೆ ಅಜಾತ ಶತ್ರುವು  ಇಂಥ ಮತಗಳಿಗೆ (ಅಭಿಪ್ರಾಯಗಳಿಗೆ)_ ವಿರುದ್ಧವಾದ  ನಿರುಪಾಧಿಕ ಆತ್ಮತತ್ವವನ್ನು ಅಜಾತಶತ್ರುವು ಒಪ್ಪಿಕೊಂಡಿದ್ದನು.(ಪುಟ 10)                              ್ರ 

3)ಆದ್ದರಿಂದ ಬಾಲಾಕಿಗೆ(ಗಾಗ್ಯ೯) ಅದನ್ನೇ ಬೋಧಿಸಿದನು.(ಪುಟ 10)

 

4)ಅಗ್ನಿಯಿಂದ ಸಣ್ಣ ಕಿಡಿಗಳು ಹಾರುವಂತೆ ಪರಮಾತ್ಮನಿಂದ ಎಲ್ಲಾ ಪ್ರಾಣಿಗಳೂ,ಎಲ್ಲ ಲೋಕಗಳೂ,ಎಲ್ಲಾ ದೇವತೆಗಳೂ ಬರುತ್ತವೆ.ಪುಟ (10)

 

5)ಜೀವನು ತನ್ನ ಪರಮಾತ್ಮ ಸ್ವರೂಪವನ್ನು ಮರೆತು  ದೇಹೇಂದ್ರಿಯಗಳೆಂಬ ಕಾಡಿನಲ್ಲಿ ಪ್ರವೇಶಿಸಿ  ಸಂಸಾರ ಧಮ೯ವನ್ನು ಪಡೆದಿರುತ್ತಾನೆ.'ನೀನು ಸ್ವರೂಪದವನಲ್ಲ,ಅಸಂಸಾರಿಯಾದ ಪರಬ್ರಹ್ಮವಾಗಿರುವೆ' ಎಂದು ಆಚಾಯ೯ನಿಂದ ಪ್ರೇರಿತನಾಗಿ 'ಎಂದು ಆಚಾಯ೯ನಿಂದ ಬೋಧಿತನಾಗಿ ಏಷಣಾ ತ್ರಯದ ಅನುವೃತ್ತಿಯನ್ನು ಬಿಟ್ಟು.'ಬ್ರಹ್ಮೈವಾಸ್ಮಿ'ಎಂದು ಅರಿತು ಕೊಳ್ಳುತ್ತಾನೆ.(ಪುಟ 11)

 

6)ಪ್ರಾಣಗಳು ಸತ್ಯ.ಪರಮಾತ್ಮನು ಅವುಗಳ ಸತ್ಯ ಎಂದು (3.1.20) ತಿಳಿಸಿದೆ. ಪ್ರಾಣಗಳು ಯಾವುವೆಂಬುದನ್ನು  ಎರಡನೆಯ ಬ್ರಾಹ್ಮಣದಲ್ಲಿ ತಿಳಿಸಿದೆ.(ಪುಟ 11)

 

ಮೂರನೆಯ ಬ್ರಾಹ್ಮಣವು:

 7) ಬ್ರಹ್ಮದ ಎರಡು ರೂಪಗಳನ್ನು ತಿಳಿಸಿದೆ.1) ಮೂತ೯ 2) ಅಮೂತ೯

ಮೂತ೯ವು ಮೃತ್ಯುವೂ ,ಪರಿಚ್ಛಿನ್ನವೂ ಆಗಿದೆ.ಅಮೂತ೯ವು ಅಮೃತವೂ ಅಪರಿಚ್ಛಿನ್ನವೂ ಆಗಿದೆ.(ಪುಟ 11)

 

8)ಮೂತ೯:ಪೃಥ್ವಿ,ನೀರು,ಅಗ್ನಿ

ಅಮೂತ೯:ವಾಯು ,ಆಕಾಶ..'

ನೇತಿ ನೇತಿ' ಎಂಬುದು  ಮೂತ೯ ಅಮೂತ೯ಗಳಲ್ಲದೆ,ಸಮಸ್ತ ವಿಶೇಷಗಳನ್ನೂ ನಿಷೇಧಿಸಿ  ಬ್ರಹ್ಮದ ಸ್ವರೂಪವನ್ನು ನಿಷೇಧಿಸುತ್ತದೆ.(ಪುಟ 11)

 

)ನಾಲ್ಕನೆಯ ಬ್ರಾಹ್ಮಣವು ಆತ್ಮಜ್ಞಾನಕ್ಕೆ ಅಂಗವಾಗಿ  ಸನ್ಯಾಸವನ್ನು ವಿಧಿಸಲು ಒಂದು ಆಖ್ಯಾಯಿಕೆಯನ್ನು ಹೇಳುತ್ತದೆ.(ಪುಟ 11)

 

10)ಬ್ರಹಜ್ಞನಾದ ಯಾಜ್ಞವಲ್ಕ್ಯನಿಗೆ ಇಬ್ಬರು ಪತ್ನಿಯರಿದ್ದರು. ಮೈತ್ರೇಯೀ ಕಾತ್ಯಾಯಿನೀ.(ಪುಟ 11)

 

11)ಯಾಜ್ಞವಲ್ಕ್ಯನು  ಧನಸಾಧ್ಯವಾದ  ಅಗ್ನಿಹೋತ್ರಾದಿ ಕಮ೯ಗಳಿಂದ  ಅಮೃತತ್ವದ ಆಸೆಯೇ ಇಲ್ಲವೆಂದು ಹೇಳಿದನು.(ಪುಟ 11).

 

12)ಯಾಜ್ಞವಲ್ಕ್ಯನು ಅಮೃತತ್ವ ಪ್ರಾಪ್ತಿಗೆ  ಆತ್ಮಜ್ಞಾನವೊಂದೇ  ಮುಖ್ಯ ಸಾಧನವೆಂದು ಉಪದೇಶಿಸಿ ಆತ್ಮನ ವೈಭವವನ್ನು ವಿವರಿಸುತ್ತಾನೆ.(ಪುಟ 12)

 

13) ಪತಿ,ಪತ್ನಿ ,ಮಕ್ಕಳು,ಧನ,ಬ್ರಾಹ್ಮಣ,ಕ್ಷತ್ರಿಯ,ಲೋಕಗಳು ,ದೇವತೆಗಳು ಪ್ರಾಣಗಳು ,ಸವ೯ವು -ಇವುಗಳು ತಮ್ಮ ಪ್ರಯೋಜನಕ್ಕಾಗಿ ತಾವು ಪ್ರಿಯವಾಗಿಲ್ಲ.ಆತ್ಮನ ಪ್ರಯೋಜನಕ್ಕಾಗಿ ಪ್ರಿಯವಾಗಿರುತ್ತವೆ.

(ಪುಟ 12).

 

14)ಆತ್ಮನನ್ನೇ ಶ್ರವಣ,ಮನನ,ನಿದಿಧ್ಯಾಸನದಿಂದ  ಸಾಕ್ಷಾತ್ಕರಿಸಬೇಕು.(ಪುಟ 12)

 

14) ಪರಮಾತ್ಮನಲ್ಲಿ ವಿಶೇಷ ಜ್ಞಾನವಿರುವಂತೆ ಕಂಡುಬಂದರೆ ಅದಕ್ಕೆ ಉಪಾಧಿಯ ಸಂಬಂಧವೇ ಕಾರಣ.(ಪುಟ 12)

 

15) ಎಲ್ಲಿ ದ್ವೈತವಿದೆಯೋ ಅಲ್ಲಿ ಮನುಷ್ಯನು ನೋಡುತ್ತಾನೆ,ಕೇಳುತ್ತಾನೆ, ಮಾತನಾಡುತ್ತಾನೆ.ಆತ್ಮನಿಗಿಂತ ಬೇರೆವಸ್ತುವಿರುವಂತೆ  ಭಾವಿಸುತ್ತಾನೆ.(ಪುಟ 12)

 

16) ಆತ್ಮಜ್ಞಾನಿಗೆ  ಕರಣ-ಕ್ರಿಯಾ-ಕಾರಕಗಳಾಗಲೀ,ಜ್ಞಾತೃ,ಜ್ಞೇಯ,ಜ್ಞಾನಗಳಾಗಲೀ ಇರುವುದಿಲ್ಲ.(ಪುಟ 12)

 

17)ಜಗತ್ತೆಲ್ಲವೂ ಆತ್ಮನಲ್ಲಿಯೇ ಹುಟ್ಟಿ,ಆತ್ಮನಲ್ಲಿಯೇ ಇದ್ದು,ಆತ್ಮನಲ್ಲಿಯೇ ಲಯವನ್ನು ಹೊಂದುತ್ತದೆ.

(ಪುಟ 12)

 

18)ಹೇಗೆ ಅರೆಕಾಲುಗಳು ಚಕ್ರನಾಭಿಯಲ್ಲಿ ಹಾಗೂ ಹೊರವಲಯದಲ್ಲಿ  ನಿಲ್ಲಿಸಲ್ಪಟ್ಟಿವೆಯೊ ಹಾಗೆಯೇ ಪರಮಾತ್ಮನಲ್ಲಿ,ಎಲ್ಲಾ ಪ್ರಾಣಿಗಳು,ಎಲ್ಲ ದೇವತೆಗಳೂ,ಎಲ್ಲಾ ಲೋಕಗಳೂ,ಎಲ್ಲಾ ಜೀವಾತ್ಮರೂ ಸಮಪಿ೯ತರಾಗಿರುವರು.(ಪುಟ 13)

 

1) ಪರಮಾತ್ಮನು ಅದ್ವಯನಾಗಿದ್ದರೂ ಮಾಯೆಯಿಂದ ಬಹುರೂಪವಾಗಿ ಕಾಣುತ್ತಾನೆ.(ಪುಟ 13)

 

20) ಜೀವತತ್ವವೇ ಅಪವ೯ವೂ ,ಅನಪರವೂ, ಅನಂತವೂ,ಅಬಾಹ್ಯವೂ ಆದ ಬ್ರಹ್ಮವೇ ಎಲ್ಲಾ ಉಪನಿಷತ್ತುಗಳ ತಾತ್ಪಯ೯.(ಪುಟ 13)     

 

ಮೂರನೆಯ ಅಧ್ಯಾಯ:

 

1) ಮಧುಕಾಂಡ-ಆಗಮ ಪ್ರಧಾನ,

ಯಾಜ್ಞವಲ್ಕೀಯ  ಖಂಡ-ಯುಕ್ತಿ ಪ್ರಧಾನ.

 

ಜ್ಞಾನ ಪ್ರಾಪ್ತಿಗೆ ಕಾರಣವಾಗಿರುವ (ಸಾಧನವಾಗಿರುವ)  ದಾನವನ್ನು ತಿಳಿಸುತ್ತದೆ(ಪುಟ 13).

 

2) ಅಧ್ಯಾಯದಲ್ಲಿ ಒಂಭತ್ತು ಬ್ರಾಹ್ಮಣಗಳು.ಮೊದಲನೆಯ ಬ್ರಾಹ್ಮಣ ಅಶ್ವಲ ಬ್ರಾಹ್ಮಣ.ತಿಳಿದವರೊಂದಿಗೆ  ವಾದಿಸುವುದು ಜ್ಞಾನಪ್ರಾಪ್ತಿಗೆ ಕಾರಣ.(ಪುಟ 13)

 

3) ಜನಕ ವೈದೇಹನು 'ಬಹುದಕ್ಷಿಣವೆಂಬ ಯಾಗವನ್ನು ಮಾಡಿದನು.ಅಲ್ಲಿಗೆ ಕುರು ಪಾಂಚಾಲ ದೇಶಗಳ

ಬ್ರಾಹ್ಮಣರು ಬಂದಿದ್ದರು.ಇವರಲ್ಲಿ ಬ್ರಹ್ಮಿಷ್ಠರು  ಯಾರೆಂದು ಅರಿತು ಕೊಳ್ಳುವ ಇಚ್ಛೆಯುಂಟಾಯಿತು.

ಅವನು ಒಂದು ಸಾವಿರ ಗೋವುಗಳನ್ನು ದೊಡ್ಡಿಯಲ್ಲಿ ನಿಲ್ಲಿಸಿ ಪ್ರತಿಯೊಮದು ಗೋವಿನ ಕೊಂಬುಗಳಿಗೂ ಹತ್ತು ಹತ್ತು ಚಿನ್ನದ ಪಾದಗಳನ್ನು ಕೆತ್ತಿಸಿ,ಅವುಗಳನ್ನೆ¯್ಲ ಬ್ರಹ್ಮಿಷ್ಠನಾದವನು  ತೆಗೆದುಕೊಂಡು ಹೋಗಬಹುದೆಂದು ಹೇಳಿದನು.(ಪುಟ 13)

 

4)ಅಲ್ಲದ್ದ ಯಾಜ್ಞವಲ್ಕ್ಯನು  ಗೋವುಗಳನ್ನು ಮನೆಗೆ ತೆಗೆದುಕೊಂಡು ಹೋಗಲು  ಸಾಮಶ್ರವನಿಗೆ ಆಜ್ಞಾಪಿಸಿದನು.ಅಶ್ವಲನೆಂಬುವನು ಮೊದಲು ಬಂದು ಎಂಟು ಪ್ರಶ್ನೆಗಳನ್ನು ಹಾಕಿದನು.ಯಾಜ್ಞವಲ್ಕ್ಯನು  ಸಮಪ೯ಕ ಉತ್ತರವನ್ನು ಕೊಟ್ಟನು.(ಪುಟ 14)

 

5)ಎರಡನೆಯ ಬ್ರಾಹ್ಮಣದಲ್ಲಿ ಜಾರತ್ಕಾರವ ಭಾಗ೯ವನು ಯಾಜ್ಷವಲ್ಕ್ಯನಿಗೆ ಅರುಪ್ರಶ್ನೆಗಳನ್ನು ಹಾಕಿ ಉತ್ತರವನ್ನು ಪಡೆದನು.(ಪುಟ 14) 

 

6)ಮೂರನೆಯದು ಭುಜ್ಯಬ್ರಾಹ್ಮಣ.ಕಮ೯ಫಲವು ಎಷ್ಟೇ ಒಳ್ಳೆಯದಾದರೂ  ಸಂಸಾರದಲ್ಲಿಯೇ ಅಂತಗ೯ತವಾಗಿದೆ.ಉಪಾಸನಾ ಸಹಿತವಾದ ಕಮ೯ವು ಮೋಕ್ಷಪ್ರದವಲ್ಲ ಎಂಬುದನ್ನು ತಿಳಿಸಲು ಬ್ರಾಹ್ಮಣವು ಬಂದಿದೆ. ಕಮ೯ವೊಂದೇ ಮನುಷ್ಯನ ಪುಜ೯ನ್ಮಕ್ಕೆ ಮುಖ್ಯ ಕಾರಣ.(ಪುಟ 14)

 

6)ನಾಲ್ಕನೆಯದು ಉಷಸ್ತಬ್ರಾಹ್ಮಣ.ಉಷಸ್ತಚಾಕ್ರಾಯಣನು ಪ್ರಶ್ನಿಸುತ್ತಾನೆ.'ವಿಷಯೇಂದ್ರಿಯಗಳಿಂದ ಗ್ರಸ್ತನಾಗಿ ಸಂಚರಿಸುವ ಆತ್ಮನು ಇದ್ದಾನೆಯೊ ಇಲ್ಲವೊ? ಇರುವುದಾದರೆ  ಅವನ ಸ್ವರೂಪವೇನು?

.

ಯಾಜ್ಞವಲ್ಕ್ಯನು ಉತ್ತರಕೊಡುತ್ತಾನೆ:ಅದು ಪ್ರಾಣಾಪನವ್ಯಾನ ಉದಾನಗಳ ಮೂಲಕ ಕೆಲಸ ಮಾಡುತ್ತದೆ.ಅದು ದ್ರಷ್ಟøವೂ,ಶ್ರೋತೃವೂ ,ಮಂತ್ರೃವೂ  ಜ್ಞಾತೃವು ಆಗಿರುವುದರಿಂದ ಅದನ್ನು ವಿಷಯವಸ್ತುವಿನಂತೆ  ಅದನ್ನು ನೋಡಲು,ಕೇಳಲು,ಭಾವಿಸಲು  ಅಥವಾ ಅರಿತುಕೊಳ್ಳಲು ಸಾಧ್ಯವಿಲ್ಲ.

(ಪುಟ 15)

 

7) ಐದನೆಯದು ಕಹೋಲ ಬ್ರಾಹ್ಮಣ: ಇಲ್ಲಿ ಸನ್ಯಾಸ ಸಹಿತವಾದ ಆತ್ಮಜ್ಞಾನವನ್ನು ಹೇಳಿದೆ.

ಆತ್ಮನು ಹಸಿವು ಬಾಯಾರಿಕೆಗಳನ್ನೂ ,ಮುಪ್ಪು ಮರಣಗಳನ್ನು ದಾಟಿರುತ್ತಾನೆ.ಇಂಥ ಆತ್ಮವನ್ನು ಅರಿತುಕೊಂಡು ಬ್ರಾಹ್ಮಣರು ಪುತ್ರ-ವಿತ್ತ-ಲೋಕಗಳಲ್ಲಿರುವ ಆಸೆಯನ್ನು ಬಿಟ್ಟು ಭಿಕ್ಷಾಚಯೆ೯ಯನ್ನು ಮಾಡುತ್ತಾರೆ.ಬ್ರಹ್ಮಜ್ಞಾನಿಯು ಹೇಗೆ ಆಚರಿಸಿದರೂ ಬ್ರಹ್ಮಜ್ಞಾನಿಯೇ. ಬ್ರಹ್ಮನಿಷ್ಠೆಗೆ ನಾಶವಿಲ್ಲ.ಇದು ಯಾPಜ್ಞವಲ್ಕ್ಯನ ಸಿದ್ಧಾಂತ.(ಪುಟ 15)

 

8)ಆರನೆಯದು ಗಾಗ್ಯ೯ಬ್ರಾಹ್ಮಣ.ಬ್ರಹ್ಮಸ್ವರೂಪವನ್ನು ಅನುಮಾನ ಪ್ರಮಾಣಗಳಿಂದಲೇ ಅರಿಯಲಾಗುವುದಿಲ್ಲ.ಶಾಸ್ತ್ರಾಚಾಯ೯ರಿಂದಲೇ ಅರಿತುಕೊಳ್ಳಬೇಕು.(ಪುಟ 15)

 

9)ಏಳನೆಯದು ಅಂತಯಾ೯ಮೀ ಬ್ರಾಹ್ಮಣ.ಯಾವುದರಿಂದ ಇಹ-ಪರಲೋಕಗಳೂ  ಎಲ್ಲಾ ಪ್ರಾಣಿಗಳೂ  ಪೋಣಿಸಲ್ಪಟ್ಟಿವೆಯೊ ಸೂತ್ರವು ಯಾವುದು?ಯಾವನು ಒಳಗಿದ್ದುಕೊಂಡು ಸವ೯ಪ್ರಾಣಿಗಳನ್ನೂ ,ಇಹಲೋಕ ಪರಲೋಕಗಳನ್ನೂ  ನಿಯಮಿಸುವನೊ ಅಂತಯಾ೯ಮಿಯು ಯಾರು?ಇದು ಉದ್ಧಾಲಕ ಅರುಣಿಯ ಪ್ರಶ್ನೆ.

ಯಾಜ್ಞವಲ್ಕ್ಯನು ಇದಕ್ಕೆ ಉತ್ತರಿಸುತ್ತಾನೆ.'ವಾಯುವೇ ಆಸೂತ್ರವು.ಯಾವನು ಅಗ್ನಿ, ನೀರು,ಪೃಥ್ವಿ,ಅಂತರಿಕ್ಷ  ,ವಾಯು,ದ್ಯುಲೋಕ,ಆದಿತ್ಯ,ದಿಕ್ಕುಗಳು,ಚಂದ್ರ-ನಕ್ಷತ್ರಗಳು,ಆಕಾಶ,ತೇಜಸ್ಸು,ತಮಸ್ಸು,ಸವ೯ಪ್ರಾಣಿಗಳು ,ಸವ೯ ವಾಗಾದಿ ಇಂದ್ರಿಯಗಳು,ಮನಸ್ಸು,ಬುದ್ಧಿ,ರೇತಸ್ಸು -ಇವುಗಳ ಒಳಗಿದ್ದುಕೊಂಡು ನಿಯಮಿಸುವನೊ  ಅವನೇ ಅಣತಯಾ೯ಮಿಯು.ಅಂತಯಾ೯ಮಿಯು ಭೂತ ಬೌತಿಕ ವಸ್ತುಗಳ ಒಳಗಿದ್ದುಕೊಂಡು ಒಳಗಿನಿಂದ ನಿಯಮಿಸುತ್ತಿದ್ದರೂ  ಅವುಗಳ ಆತ್ಮನಾಗಿದ್ದರೂ ಇವನ ಶರೀರವಾದ ವಸ್ತುಗಳು ಇವನನ್ನು ಅರಿಯವು.ಇವನು ಸಾಕ್ಷಿ ಆದರೆ ಇವನನ್ನು ನೋಡಲಾಗುವುದಿಲ್ಲ.ಇವನು ಶ್ರೋತೃ,ಆದರೆ ಇವನನ್ನು ಕೇಳಲಾಗುವುದಿಲ್ಲ.ಇವನು ಮಂತೃ.ಆದರೆ ಇವನು ಮನಸ್ಸಿಗೆ ವಿಷಯನಲ್ಲ.ಇವನು ಜ್ಞಾತೃ.ಆದರೆ ಇವನನ್ನು ಅರಿಯಲಾಗುವುದಿಲ್ಲ.ಇವನಿಗಿಂತ ಬೇರೆಯಾದ  ಸಾಕ್ಷಿಯಾಗಲೀ ,ಶ್ರೋತೃವಾಗಲೀ,ಮಂತೃವಾಗಲೀ,ಜ್ಞಾತೃವಾಗಲೀ ಇಲ್ಲ.ಇವನೇ ಎಲ್ಲರ ಅಮೃತನಾದ ಆತ್ಮನು.ಇವನಿಗಿಂತ ಭಿನ್ನವಾದುದೆಲ್ಲ ನಶ್ವರವು.

(ಪುಟ 16).

 

10)ಎಂಟನೆಯ ಬ್ರಾಹ್ಮಣ.ಅಶನಾಯಾದಿಗಳಿಂದ ನಿಮುಕ್ತವೂ,ನಿರುಪಾಧಿಕವೂ ,ಸಾಕ್ಷಾದಪರೋಕ್ಷವೂ ಸವಾ೯ಂತರವೂ ಆದ ಬ್ರಹ್ಮವನ್ನು ಉಪದೇಶಿಸಲು ಬ್ರಾಹ್ಮಣವು ಆರಂಭವಾಗಿದೆ.

             ಯಾವುದು  ದ್ಯುಲೋಕದ ಮೇಲೆ ಪೃಥ್ವಿಯ ಕೆಳಗೆ ಇರುವುದೊ, ಯಾವುದು ದ್ಯುಲೋಕ ಪೃಥ್ವಿಗಳಾಗಿದೆಯೊ ಮತ್ತು ಅವುಗಳ ನಡುವೆ ಇರುವುದೊ,ಯಾವುದನ್ನು ಭೂತ,ಭವಿಷ್ಯತ್,ವತ೯ಮಾನಗಳೆಂದು ಹೇಳುತ್ತಾರೆಯೊ  ಆಸೂತ್ರವು ಯಾವುದರಿಂದ ವ್ಯಾಪ್ತವಾಗಿದೆ.ಇದು ಮೊದಲನೆಯ ಪ್ರಶ್ನೆ.

ವ್ಯಕ್ತವಾದ ಜಗತ್ತಿಗೆ 'ಸೂತ್ರ'ವೆಂದು ಹೆಸರು.ಇದು ಅವ್ಯಕ್ತವಾದ ಆಕಾಶದಿಂದ ವ್ಯಾಪ್ತವಾಗಿದೆಯೆಂದು ಯಾಜ್ಞವಲ್ಕ್ಯನು ಹೇಳುತ್ತಾನೆ.ಅವ್ಯಕ್ತವಾದ ಆಕಾಶವು ಯಾವುದರಿಂದ ವ್ಯಾಪ್ತವಾಗಿದೆಯೊ ಎಂದು ಗಾಗಿ೯ಯು ಕೇಳಲು ಯಾಜ್ಞವಲ್ಕ್ಯನು ಉತ್ತರಿಸುತ್ತಾನೆ.

                        ಅದನ್ನು ಅಕ್ಷರವೆಂದು ಬ್ರಾಹ್ಮಣರು ಹೇಳುತ್ತಾರೆ.ಅಅದು ಅಸ್ಥೂಲ,ಅನಣು,,ಅಹೃಸ್ವ,ಅದೀಘ೯,ಇತ್ಯಾದಿ.ಅದಕ್ಕೆ ಇಂದ್ರಿಯಗಳಾಗಲೀ ಪ್ರಾಣಗಳಾಗಲೀ ಇಲ್ಲ.ಅದಕ್ಕೆ ಒಳಗಿಲ್ಲ ಹೊರಗಿಲ್ಲ .ಅದು ಯಾವುದನ್ನೂ ತಿನ್ನುವುದಿಲ್ಲ.ಅದನ್ನು ಯಾವುದೂ ತಿನ್ನುವುದಿಲ್ಲ. ಅಕ್ಷರದ ಶಾಸನದಿಂದಲೇ  ಸೂಯ೯ಚಂದ್ರರು ತಮ್ಮ ತಮ್ಮ ಸ್ಥಾನಗಳಲ್ಲಿ  ನಿಲ್ಲಿಸಲ್ಪಟ್ಟಿರುತ್ತಾರೆ.ದ್ಯುಲೋಕ ಪೃಥ್ವಿಗಳೂ ನಿಮಿಷ ಮುಹೂತಾ೯ದಿ ಕಾಲದ ಅವಯವಗಳೂ  ತಮ್ಮ ತಮ್ಮ ಸ್ಥಾನಗಳಲ್ಲಿ ನಿಯಮಿಸಲ್ಪಟ್ಟಿರುತ್ತವೆ ಮತ್ತು ನದಿಗಳೂ ಆಯಾ ದಿಕ್ಕುಗಳಲ್ಲಿಯೇ ಹರಿಯುತ್ತಿರುತ್ತವೆ.

                          ಅಕ್ಷರವನ್ನು ತಿಳಿದುಕೊಳ್ಳದೆ  ಅನೇಕ ಸಹಸ್ರ ವಷ೯ಗಳವರೆಗೆ ಹೋಮ-ಯಾಗ-ತಪಸ್ಸುಗಳನ್ನು ಮಾಡಿದರೂ ಇವು ನಶ್ವರವೇ ಆಗುವವು. ಅಕ್ಷರವನ್ನು ಅರಿತುಕೊಳ್ಳದೆ ಲೋಕವನ್ನು ಬಿಡುವವನು ಕೃಪಣನು.ಆದರೆ ಅಕ್ಷರವನ್ನು ತಿಳಿದುಕೊಂಡು  ಲೋಕವನ್ನು ಬಿಡುವವನು ಬ್ರಹ್ಮವಿದನು ಎಂದು ಯಾಜ್ಞವಲ್ಕ್ಯನು ಉಪಸಂಹಾರ ಮಾಡುತ್ತಾನೆ(ಪುಟ 17).

 

 

11)ಒಂಬತ್ತನೆಯ ಶಾಕಲ್ಯ ಬ್ರಾಹ್ಮಣ:

 

ಇಲ್ಲಿ ವಿದಗ್ಧಶಾಕಲ್ಯನು ದೇವತೆಗಳು ಎಷ್ಟೆಂದು ಕೇಳಲು ಯಾಜ್ಞವಲ್ಕ್ಯನು ಹೇಳುತ್ತಾನೆ.'ದೇವತೆಗಳು ಅಸಂಖ್ಯಾತರಾಗಿದ್ದರೂ  ಅವರೆಲ್ಲ ಒಂದೇ ದೇವತೆಯ  ಎಂದರೆ ಹಿರಣ್ಯ ಗಭ೯ನ ಅಥವಾ ಪ್ರಾಣನ ವಿಭೂತಿಗಳು.ಹಿರಣ್ಯಗಭ೯ನು ಏಕನೂ ಅನಂತನೂ ಆಗಿದ್ದಾನೆ.ಇವನೇ ಅಸಂಖ್ಯಾತನಾಗಿ ವಿಸ್ತರಿಸುತ್ತಾನೆ.ಒಂದೇ ದೇವತೆಯಾಗುತ್ತಾನೆ.ಒಂದೇ ದೇವತೆಯಲ್ಲಿ ಉಂಟಾಗಿರುವ ನಾಮರೂಪ ಭೇದಕ್ಕೆ  ಉಪಾಸಕರ ಭೇದವೇ ಕಾರಣ.'

 

ಯಾಜ್ಞವಲ್ಕ್ಯನು ಅಲ್ಲಿದ್ದ ಬ್ರಾಹ್ಮಣರನ್ನು ಹೀಗೆ ಪ್ರಶ್ನಿಸಿದನು:ಒಂದು  ವೃಕ್ಷವನ್ನು ಕಿತ್ತು ಹಾಕಿದರೆ ಅದು ಪುನಃ ಹುಟ್ಟುವುದಿಲ್ಲ.ಮನುಷ್ಯನು ಮೃತ್ಯುವಿನಿಂದ ಕತ್ತರಿಸಲ್ಪಟ್ಟಮೇಲೆ  ಯಾವ ಬೇರಿನಿಂದ ಹುಟ್ಟುತ್ತಾನೆ?ಮೃತನಾದವನು  ಯಾವುದರಿಂದ ಪುನಃ ಹುಟ್ಟುತ್ತಾನೆಯೊ  ಜಗನ್ಮೂಲವು ಬ್ರಾಹ್ಮಣರಿಗೆ ತಿಳಿದಿರಲಿಲ್ಲ.ವಿಜ್ಞಾನವೂ ಆನಂದವೂ  ಆದ ಮೂಲದಿಮದಲೆ  ಮೃತನಾದ ಮನುಷ್ಯನು ಹುಟ್ಟುತ್ತಾನೆ.

 

ನಾಲ್ಕನೆಯ ಅಧ್ಯಾಯ:

 

12)ಇದರಲ್ಲಿ ಆರು ಬ್ರಾಹ್ಮಣಗಳಿವೆ.ಜನಕ ವೈದೇಹನು ಸಭೆಯಲ್ಲಿ ಕುಳಿತಿರುವಾಗ  ಯಾಜ್ಞವಲ್ಕ್ಯನು ಬಂದು ಕೆಲವು ಪ್ರಶ್ನೆಗಳನ್ನು ಹಾಕುತ್ತಾನೆ.ಜನಕರಾಜನು  ಬ್ರಹ್ಮದ ಕೆಲವು ಲಕ್ಷಣಗಳನ್ನು ಹೀಗೆ ಹೇಳುತ್ತಾನೆ.ವಾಕ್ಕು ಪ್ರಾಣ, ಕಣ್ಣು, ಕಿವಿ, ಮನಸ್ಸು,ಬುದ್ಧಿ ಇವುಗಳ ಅಧಿಷ್ಠಾತೃ ದೇವತೆಗಳಾದ ಅಗ್ನಿ ವಾಯು ,ಆದಿತ್ಯ, ದಿಗ್ದೇವತೆ,ಚಂದ್ರ ಮತ್ತುಪ್ರಜಾಪತಿ (ಹಿರಣ್ಯಗಭ೯)ಇವರನ್ನು ಒಬ್ಬೊಬ್ಬರನ್ನು  ಬ್ರಹ್ಮವೆಂದು ಹೇಳುತ್ತಾನೆ. ಬ್ರಹ್ಮಗಳಿಗೆಲ್ಲ ಒಂದೇ ಕಾಲಿದೆಯೆಂದು  ಯಾಜ್ಞವಲ್ಕ್ಯನು ತಿಳಿಸುತ್ತಾನೆ.

(ಪುಟ  18)

 

13) ಎರಡನೆಯ ಬ್ರಾಹ್ಮಣದಲ್ಲಿ  ಯಾಜ್ಞವಲ್ಕ್ಯನು  ಆತ್ಮನ ಅವಸ್ಥಾತ್ರಯವನ್ನು  ಉಪದೇಶಿಸಿದ್ದಾನೆ:ಜಾಗೃತ- ಸ್ವಪ್ನ- ಸುಷುಪ್ತಿ,ಸ್ಥೂಲ -ಸೂಕ್ಷ್ಮ -ಕಾರಣ ಶರೀರದೊಂದಿಗೆ ತಾದಾತ್ಮ್ಯವನ್ನು ಪಡೆದಿರುತ್ತಾನೆ.ಎಚ್ಚರ-ವಿಶ್ಬ.ಕನಸು-ತೈಜಸ,ಸುಷುಪ್ತಿ-ಪ್ರಾಜ್ಞ ಇವು ಕ್ರಮವಾಗಿ ಆತ್ಮನಿಗೆ ಇರುವ ಹೆಸರುಗಳು.ಸವಾ೯ತ್ಮನಾದ ಪ್ರಾಜ್ಞನಲ್ಲಿ ಎಲ್ಲವನ್ನೂ ಲಯಗೊಳಿಸಿದ ಮೇಲೆ ಯಾವ ವಿಶೇಷವೂ ಉಳಿಯುವುದಿಲ್ಲ.ಇವನು ಅಗೃಹ್ಯನು,ಅಕ್ಷಯನು,ಅಸಂಗನು ಮತ್ತು ಬಂಧರಹಿತನು.(ಪುಟ 18)

 

14) ಮೂರನೆಯದು ಜ್ಯೋತಿಬ್ರಾ೯ಹ್ಮಣ ಅತ್ಯಂತ ದೊಡ್ಡದಾಗಿದೆ. ಸುರೇಶ್ವರಾಚಾಯ೯ರು ಇದರ ಮೇಲೆ 175 ಶ್ಲೋಕಗಳನ್ನು ತಮ್ಮವಾತ್ತಿ೯ಕಗಳಲ್ಲಿ ಬರೆದಿರುತ್ತಾರೆ.ಯಾಜ್ಞವಲ್ಕ್ಯನು

ಆದಿತ್ಯ,ಚಂದ್ರ,ಅಗ್ನಿ,ವಾಕ್ಕು,ಆತ್ಮ -ಇವರ ಜ್ಯೋತಿಗಳನ್ನು ಒಂದೊಂದಾಗಿ ಹೆಳುತ್ತಾನೆ.ದೇಹೇಂದ್ರಿಯ

ಗಳಲ್ಲಿರುವ ಆತ್ಮನು ಯಾವನೆಂದು ಜನಕನು ಪ್ರಶ್ನಿಸಿದಾಗ  ಯಾಜ್ಞವಲ್ಕ್ಯನು ಹೇಳುತ್ತಾನೆ:ಒಂದು ದೊಡ್ಡಮೀನು  ನದಿಯ ಒಂದು ದಡದಿಂದ ಮತ್ತೊಂದು ದಡಕ್ಕೆ ಈಜುವ ಹಾಗೆ ಆತ್ಮನು ಬುದ್ಧಿಯ ರೂಪವನ್ನು ತಾಳಿ ಸ್ವಪ್ನದಿಂದ ಜಾಗ್ರತ್ತಿಗೂ ಜಾಗ್ರತ್ತಿನಿಂದ ಸ್ವಪ್ನಕ್ಕೂ  ಸಂಚರಿಸುತ್ತಾನೆ.ಜಡವಾಗಿರುವ ಬುದ್ಧಿಯು  ಆತ್ಮದೀಪ್ತಿಯಿಂದ ಪ್ರಕಾಶಿಸುವಂತೆ ತೋರುತ್ತದೆ.ಆತ್ಮನು ಮಾತ್ರ ಸ್ವಯಂಜ್ಯೋತಿಯು. ಇವನ ಜ್ಯೋತಿಯಿಂದಲೇ  ಸೂಯ೯ಚಂದ್ರರೆಲ್ಲ ಪ್ರಕಾಶಿಸುತ್ತಾರೆ.ಸಾಮಾನ್ಯವಾಗಿ ಸ್ವಪ್ನವು ಒಂದು ಹೊಸ ಅನುಭವವಲ್ಲ.ಅದು ಜಾಗ್ರದವಸ್ಥೆಯ ಅನುಭವವನ್ನು ಅವಲಂಬಿಸಿರುತ್ತದೆ.ಆದರೆ ಜೀವನದಲ್ಲಿ ಅನುಭವಿಸದ ಕೆಲವು ಸ್ವಪ್ನಗಳನ್ನು ನೋಡುತ್ತೇವೆ.ಇಂಥ ಸ್ವಪ್ನಗಳ ಆಧಾರವು ಹಿಂದಿನ ಜನ್ಮದ ಅನುಭವವೆಂದು  ಸಿದ್ಧವಾಗುತ್ತದೆ.ಸ್ವಪ್ನದಲ್ಲಿ ನೋಡುವ ವಿಷಯಗಳೆಲ್ಲ ಆತ್ಮನಿಂದ ಅಲ್ಲೆ ನಿಮಿ೯ತವದವು.ಸ್ವಪ್ನಲ್ಲಿ ಆತ್ಮನು  ಪಾಪಪುಣ್ಯಗಳ ಫಲವನ್ನು ಸುಮ್ಮನೆ ನೋಡುತ್ತಾನೆಯೇ ವಿನಃ ಸಾಕ್ಷಾತ್ತಾಗಿ ಅನುಭವಿಸುವುದಿಲ್ಲ. ಏಕೆಂದರೆ ಅವನು ಅಸಂಗನು.(ಪುಟ 1)   

 

 

15)ಸುಷುಪ್ತಿಯಲ್ಲಿ ಆತ್ಮನು ಸಂಪೂಣ೯ವಾಗಿ ಪ್ರಸನ್ನನಾಗುತ್ತಾನೆ.ಆದುದರಿಂದ ಸುಷುಪ್ತಿಗೆ 'ಸಂಪ್ರಸಾದ'ವೆಂದು ಹೆಸರು. ಅವಸ್ಥೆಯನ್ನೇ ಎಲ್ಲ ಶೋಕಗಳನ್ನೂ ದಾಟಿರುತ್ತಾನೆ ಎಂದು ಹೇಳಿದೆ.ಇವನು ಪರಮತ್ಮನಿಂದ ಆಲಂಗಿತನಾಗಿ  ಒಳಗಿನ ಅಥವಾ ಹೊರಗಿನ ಯಾವುದನ್ನೂ ಅರಿಯುವುದಿಲ್ಲ. ಅವಸ್ಥೆಯಲ್ಲಿ ನೋಡಲು ಕೇಳಲು ಮುಟ್ಟಲು  ಅಥವಾ ಅರಿತುಕೊಳ್ಳಲು  ಆತ್ಮನಿಗಿಂತ ಭಿನ್ನವಾದ ಎರಡನೆಯ ವಸ್ತುವು ಇರುವುದಿಲ್ಲ.ಸುಷುಪ್ತಿಯಲ್ಲಿ ಅನುಭವಿಸಲ್ಪಟ್ಟ ಆನಂದವು  1) ಮನುಷ್ಯರ2) ಪಿತೃಗಳ 3)ಗಂಧವ೯ರ 4) ಕಮ೯ದೇವತೆಗಳ,5)ಅಜಾನದೇವತೆಗಳ ಅಥವಾ ಹಿರಣ್ಯಗಭ೯ನ ಆನಂದಗಳಿಗಿಂತ ಅತಿಷಯವಾಗಿರುತ್ತದೆ.ಇದೇ ಪರಮಾನಂದ.ಇದೇ ಬ್ರಾಹ್ಮೀಸ್ಥಿತಿ.(ಪುಟ 20)

 

16) ಸುಷುಪ್ತಿಯಲ್ಲಿ ಬಯಕೆಗಳು ಹೊರಟು ಹೋಗಿದ್ದರೂ ಅವುಗಳ ವಾಸನೆಗಳು ಉಳಿದಿರುತ್ತವೆ.(ಪುಟ 20)

 

17)ನಂತರ ಜೀವನು ದೇಹಾಂತರಹೊಂದುವುದನ್ನು ಬ್ರಾಹ್ಮಣವು ಹೇಳುತ್ತದೆ.(ಪುಟ 20)

 

18)ನಾಲ್ಕನೆಯದಾದ ಶಾರೀರಕ ಬ್ರಾಹ್ಮಣದಲ್ಲಿ ಯಾವಾಗ ಮತ್ತು ಹೇಗೆ ಅಂಗಗಳಿಂದ ಕಳಚಿಕೊಳ್ಳುತ್ತಾನೆ ಎಂಬುದನ್ನು ವಿಸ್ತಾರವಾಗಿ ಹೇಳಿದೆ.(ಪುಟ 21)

 

1)ಅಕಾಮಿಯೂ ,ನಿಷ್ಕಾಮನೂ  ಆಪ್ತಕಮಿಯೂ  ಆತ್ಮಕಾಮಿಯೂ ಆದವನ ಇಂದ್ರಿಯಗಳು  ಉತ್ಕ್ರಮಿಸುವುದಿಲ್ಲ. ಬ್ರಹ್ಮನೇ ಆಗಿ ಬ್ರಹ್ಮದಲ್ಲಿ ಲೀನವಾಗುತ್ತಾನೆ.ಹೃದಯದಲ್ಲಿರುವ  ಕಾಮಗಳೆಲ್ಲ ಬಿಟ್ಟು ಹೋದಾಗ  ಮತ್ಯ೯ನು ಅಮೃತನಾಗುತ್ತಾನೆ.(ಪುಟ 21)

 

20) ಸಂಸಾರದಲ್ಲಿರುವಾಗಲೇ  ಬ್ರಹ್ಮವನ್ನು ಅರಿತುಕೊಳ್ಳಬೇಕು.ಇಲ್ಲದಿದ್ದರೆ ಬಹಳ ನಷ್ಟವಾಗುವುದು.(ಪುಟ 21)

 

21)ಬ್ರಹ್ಮದಲ್ಲಿ ಸ್ವಲ್ಪವೂ ನಾನಾತ್ವವಿಲ್ಲ. ಅದರಲ್ಲಿ ನಾನಾತ್ವವನ್ನು ನೋಡುವವನು  ಮೃತ್ಯುವಿನಿಂದ ಮೃತ್ಯುವಿಗೆ ಹೋಗುತ್ತಾನೆ.ಆದುದರಿಂದ ಅಪ್ರಮೇಯವಾದ ಬ್ರಹ್ಮವನ್ನು  ಏಕರಸವಾಗಿಯೇ ತಿಳಿದುಕೊಳ್ಳಬೇಕು.ಸಾಧಕನಾದವನು ಅತ್ಮೈಕತ್ವವನ್ನು ತಿಳಿಸದ ಶಬ್ದಗಳನ್ನು ಚಿಂತಿಸಕೂಡದು.,ಬೇರೆ ಮಾತುಗಳನ್ನು ಬಿಡಿರಿ'(ಅನ್ಯಾವಾಚೋ ವಿಮುಂಚಥ)ಎಂದು  ಶ್ರುತಿಯು ಹೇಳುತ್ತದೆ.(ಪುಟ22)

 

22) ಆತ್ಮನು ಶಾಸ್ತ್ರವಿಹಿತವಾದ ಕಮ೯ದಿಂದ ವಧಿ೯ಸುವುದಿಲ್ಲ.ಶಾಸ್ತ್ರ ಪ್ರತಿಶಿದ್ಧ  ಕಮ೯ದಿಂದ ಅಲ್ಪನಾಗುವುದಿಲ್ಲ.ಇವನನ್ನೇ ಅರಿತುಕೊಂಡು ಮನುಷ್ಯನು ಮುನಿಯಾಗುತ್ತಾನೆ. ಆತ್ಮಲೋಕವನ್ನೇ ಬಯಸುತ್ತಾ,ಮನುಷ್ಯ-ಪಿತೃ-ದೇವಲೋಕವನ್ನು ಬಯಸದೆ ,ಮುಮುಕ್ಷುಗಳು ಪ್ರವ್ರಜನ ಮಾಡುತ್ತಾರೆ.

(ಪುಟ 22)

 

23) ಆತ್ಮಸ್ವರೂಪವು ಹೀಗಿದೆ ಎಂದು ಲಕ್ಷಣಗಳಿಂದ ಹೇಳಲಾಗುವುದಿಲ್ಲ.  'ಹೀಗಲ್ಲ ಹೀಗಲ್ಲ'ಎಂದೇ ಹೇಳಬೇಕು.(ನೇತಿ ನೇತಿ)ಅವನು ಅಗೃಹ್ಯನು,ಅಕ್ಷಯನು,ಅಸಂಗನು.ಇವನು ಶಾಂತನೂ ದಾಂತನೂ  ಉಪರತನೂ ತಿತಿಕ್ಷುವೂ ಸಮಾಹಿತನೂ ಆಗಿ  ತನ್ನ ಶರೀರದಲ್ಲಿಯೇ ಆತ್ಮನನ್ನು ನೋಡುತ್ತಾನೆ.ಇವನು Àಪಾಪರಹಿತನೂ ,ವಿರಜನೂ, ಸಂಶಯರಹಿತನೂ ಆಗಿ ಅಭಯವಾದ ಬ್ರಹ್ಮವೇ ಆಗುತ್ತಾನೆ.(ಪುಟ 22)

 

24) ಐದನೆಯ ಬ್ರಾಹ್ಮಣದಲ್ಲಿ  ಮಧು-ಮುನಿ ಕಾಂಡಗಳಲ್ಲಿ,ಆಗಮ-ಯುಕ್ತಿಗಳಿಂದ ಪ್ರತಿಪಾದಿತವಾದ

 ಬ್ರಹ್ಮತತ್ವವನ್ನು ಉಪಸಂಹಾರ ಮಾಡಿರುತ್ತದೆ.(ಪುಟ 22)

 

25)ಎರಡನೆಯ ಅಧ್ಯಾಯದ  ನಾಲ್ಕನೆಯ ಬ್ರಾಹ್ಮಣವೇ  ಮೈತ್ರೇಯೀ ಬ್ರಾಹ್ಮಣ.ಇಲ್ಲಿ ಮತ್ತೊಮ್ಮೆ ಬಂದಿದೆ.ಆರನೆಯದಾದ ವಂಶಬ್ರಾಹ್ಮಣವು  ಯಾಜ್ಞವಲ್ಕೀಯ ಕಾಂಡದ  ಆಚಾಯ೯ರ ವಂಶವನ್ನು ತಿಳಿಸುತ್ತದೆ.(ಪು 22)

1 comment: