Thursday, 3 September 2020

bruhsdaranyaka upanishath saara sangraha part 1 source bruhadaranyaka upanishath by sri swamy adidevananda,published by sri ramakrishnashrama ,musuru selected by dr raveendra hosadurga.

ಬೃಹದಾರಣ್ಯಕ ಉಪನಿಷತ್-ಸಾರ ಸಂಗ್ರಹ

ಲೇಖಕರು :ಸ್ವಾಮಿ ಆದಿದೇವಾನಂದ

ರಾಮಕೃಷ್ಣಾಶ್ರಮ,ಮೈಸೂರು 20

ಸಂಗ್ರಹ:ಡಾ.ರವೀಂದ್ರ ಹೊಸದುಗ೯

ನಾಲ್ಕನೆಯ ಮುದ್ರಣ 1೯೯0

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

 

 

 

 ಶಾಂತಿಪಾಠ:

ಹರಿಃ ಓಂ

ಪೂಣ೯ಮದಃ ಪೂನ೯ಮಿದಂ

ಪೂಣಾ೯ತ್ ಪೂಣ೯ಮುದ್ಯತೇ|

ಪೂಣ೯ಸ್ಯ ಪೂಣ೯ಮಾದಾಯ

ಪೂಣ೯ಮೇವಾವ ಸಿಷ್ಯತೇ

ಒಂ  ಶಾಂತಿಃ ಶಾಂತಿಃ ಶಾಂತಿಃ

 

ಹರಿಃ ಒಂ

 

ಅದು (ಪರಬ್ರಹ್ಮವು ) ಪೂಣ೯ವು.ಇದು(ವ್ಯಕ್ತವಾದ ಜಗತ್ತು) ಪೂಣ೯ವು.ಪೂಣ೯ದಿಂದ(ಪರಬ್ರಹ್ಮದಿಂದ )ಪೂಣ೯ವು (ಜಗತ್ತು) ಹೊರಟು ಬಂದಿದೆ.:ಪೂಣ೯ದ(ಜಗತ್ತಿನ) ಪೂಣ೯ತ್ವವನ್ನು(ಬ್ರಹ್ಮತ್ವವನ್ನು) ತೆಗೆದಮೇಲೆ(ಗ್ರಹಿಸಿದ ಮೇಲೆ) ಪೂಣ೯ವೇ (ಪರಬ್ರಹ್ಮವೇ) ಉಳಿಯುತ್ತದೆ.

 

ಓಂ ಶಾಂತಿಃ ಶಾಂತಿಃ ಶಾಂತಿಃ

 

ಪ್ರಸ್ತಾವನೆ(ಮುನ್ನುಡಿ):

 

1) ಬೃಹದಾರಣ್ಯಕೋಪನಿಷತ್ತು ಗಾತ್ರದಿಂದಲೂ ವಿಷಯ ಸಮೃದ್ಧಿಯಿಂದಲೂ ಅತ್ಯಂತ ಬೃಹತ್ತಾಗಿದೆ. ಉಪನಿಷತ್ತು ಶುಕ್ಲ ಯಜುವೇ೯ದದ ಶತಪಥ ಬ್ರಾಹ್ಮಣಕ್ಕೆ ಸೇರಿದೆ.ಇಲ್ಲಿ ಕಾಣ್ವ ಪಾಠವನ್ನು ಅನುಸರಿಸಲಾಗಿದೆ.(ಪುಟ 3 ಪ್ರಸ್ತಾವನೆ)

 

2) ಬೃಹದಾರಣ್ಯಕೋಪನಿಷತ್ತು  ಆರು ಅಧ್ಯಾಯಗಳನ್ನೂ ನಲವತ್ತೇಳು ಖಂಡಗಳನ್ನೂ ಹೊಂದಿದೆ.ಇವುಗಳನ್ನು ಬ್ರಾಹ್ಮಣಗಳೆಂದು ಕರೆಯುತ್ತಾರೆ.(ಅದೇ ಪುಟ)

 

  3) ಬ್ರಾಹ್ಮಣಗಳು ಪುನಃ ಸಣ್ಣ ಸಣ್ಣ ವಿಭಾಗಗಳಾಗಿ  ವಿಂಗಡಿಸಲ್ಪಟ್ಟಿವೆ.ಇವುಗಳನ್ನು  ಕಂಡಿಕೆಗಳೆಂದು ಕರೆಯುತ್ತಾರೆ.(ಪುಟ 3 ಪ್ರಸ್ತಾ)

 

4) ಉಪನಿಷತ್ತನ್ನು 1) ಮಧುಕಾಂಡ 2) ಯಾಜ್ಞವಲ್ಕ್ಯ ಕಾಂಡ ಅಥವಾ ಮುನಿಕಾಂಡ 3)ಖಿಲಕಾಂಡ ಎಂದೂ ವಿಂಗಡಿಸಲಾಗಿದೆ.(ಪುಟ 3 ಪ್ರಸ್ತಾ)

 

5) ಮೂರು ಕಾಂಡಗಳು ಉಪದೇಶ-ಉಪಪತ್ತಿ-ಉಪಾಸನೆಗಳನ್ನು ನಿರೂಪಿಸುತ್ತವೆಯೆಂದು ಶ್ರೀ ವಿದ್ಯಾರಣ್ಯರು ಹೇಳಿರುತ್ತಾರೆ.(ಪುಟ 3 ಪ್ರಸ್ತಾ)

 

6)ಮೊದಲೆರಡು ಅಧ್ಯಾಯಗಳು-ಬಹುದೇವತೋಪಾಸನೆಯನ್ನು ಮೀರಿರುವ ಆತ್ಮತತ್ವವನ್ನು ನಿರೂಪಿಸುತ್ತವೆ.(ಪುಟ 3

  ಪ್ರಸ್ತಾ)

 

7)ಮೂರು ಮತ್ತು ನಾಲ್ಕನೆಯ ಅಧ್ಯಾಯಗಳು- ಉಪನಿಷತ್ತಿನ ಸಾರವನ್ನು ಒಳಗೊಂಡಿವೆ.(ಪುಟ ಪ್ರಸ್ತಾ)

 

8)ಕೊನೆಯ ಎರಡು ಅಧ್ಯಾಯಗಳು  ಉಪಾಸನೆ ಹಾಗೂ ಉತ್ಕ್ರಾಂತಿಯ ಕ್ರಮವನ್ನು  ಹೇಳಿವೆ.(ಪುಟ 4.ಪ್ರಸ್ತಾ)

) .ಎಸ್.ಗಾದೆನ್ ಎಂಬ ವಿದ್ವಾಂಸನು  ಯಾಜ್ಷವಲ್ಕ್ಯನ ಪ್ರತಿಭೆಯನ್ನು ಹೀಗೆ ಕೊಡಾಡಿದ್ದಾನೆ:ಜಗತ್ತಿನ ಅನೇಕ ಭಾಗಗಳಲ್ಲಿ ತತ್ವೋದಯದ ಕನಸೇ ಇಲ್ಲದಿದ್ದಾಗ ಯಾಜ್ಞವಲ್ಯನು ಎಂಥಾ  ಶ್ರೇಷ್ಠನಾದ ಕ್ರಾಂತಿದಶಿ೯ಯೂ  ದಶ೯ನಕಾರನೂ ಆಗಿದ್ದನು ಆಗಿದ್ದನೆಂದು ತಿಳಿಯಲು ಆಶ್ಚಯ೯ವಾಗುತ್ತದೆ.(ಪುಟ 3.ಪ್ರಸ್ತಾವನೆ).

'iಜಿ he ime ಡಿeಠಿಡಿeseಟಿಣs ಚಿ ಡಿeಚಿಟ iಟಿಜiviuಚಿಟiಣಥಿ,ಚಿಟಿಜ is ಟಿo meಡಿeಟಥಿ ಚಿ iಣಟe ubeಡಿ  ತಿhose sheಟಣeಡಿ mಚಿಥಿ ಛಿoಟಿveಡಿgeಟಿಣ  hough ಚಿಟಿಜ ಡಿeಚಿsoಟಿiಟಿgs  hಚಿve ಜಿouಟಿಜ exಠಿಡಿessioಟಿ,ಥಿಚಿರಿಟಿಚಿvಚಿಟಞಥಿಚಿ  mಚಿಥಿ ಛಿಟಚಿim ಚಿ ಠಿಟಚಿಛಿe ತಿih gಡಿeಚಿಣes hiಟಿಞeಡಿs  oಜಿ he ತಿoಡಿಟಜ oಡಿ oಜಿ ಚಿಟಿಥಿ ಚಿge.'

                                                           -.S.ಉಂಆಇಓ, ಈಔಖಇIಉಓ Sಅಊಔಐಂಖ

 

 

ಮೊದಲನೆಯ ಅಧ್ಯಾಯ:

 

)ಮೊದ¯ನೆಯ ಅಧ್ಯಾಯ:ಆರು ಬ್ರಾಹ್ಮಣಗಳು.

1)ಅಶ್ವಲ ಬ್ರಾಹ್ಮಣ:ಇದು ಯಜ್ಞಕ್ಕೆ ಅಹ೯ವಾದ ಕುದುರೆಯ ಶರೀರವನ್ನು ಅಶ್ವಮೇಧ ಯಜ್ಞದ ದೇವತೆಯಾದ ಪ್ರಜಾಪತಿಯ ವಿರಾಡ್ರೂಪವಾಗಿ ವಣಿ೯ಸುತ್ತದೆ(ಪುಟ 4 ಪ್ರಸ್ತಾ)

 

10)ನಮ್ಮ ಅಜ್ಞಾನವನ್ನು ನಾಶಮಾಡಿ ಸಂಸಾರವನ್ನು  ತಪ್ಪಿಸಲು ಬ್ರಹ್ಮಜ್ಞಾನಕ್ಕೆ ಮಾತ್ರ ಸಾಧ್ಯ

(ಪುಟ5)

 

11) ಮೊದಲನೆಯ ಅಧ್ಯಾಯದ  ಎರಡನೆಯ ಖಂಡಕ್ಕೆ  ಅಗ್ನಿ ಬ್ರಾಹ್ಮಣವೆವೆಂದು ಹೆಸರು.(ಪುಟ 5)

 

12)ಮೂರನೆಯ ಖಂಡಕ್ಕೆ  ಉದ್ಗೀಥ ಬ್ರಾಹ್ಮಣವೆಂದು ಹೆಸರು.ವೇದೋ ಕ್ತವಾದ  ಉಪಾಸನಾ ಕಮ೯ಗಳ ಫಲವೆಲ್ಲ   ಸಂಸಾರ ವಿಷಯವೆಂಬುದೂ ,ಕೇವಲ ಬ್ರಹ್ಮವಿದ್ಯೆಯು  ಮೋಕ್ಷಕ್ಕೆ ಕಾರಣವೆಂಬುದೂ ಸಿದ್ಧಾಂತ.ಬ್ರಹ್ಮಜ್ಞಾನವು ಮಾತ್ರ ನಮ್ಮ  ಅಜ್ಞಾನವನ್ನು ನಾಶಮಾಡಬಲ್ಲದು.(ಪುಟ 5)

 

13)ನಾಲ್ಕನೆಯ ಖಂಡಕ್ಕೆ ಪುರುಷವಿಧ ಬ್ರಾಹ್ಮಣವೆಂದು ಹೆಸರು.(ಪುಟ5)

 

14) ಪುರುಷಾಧ೯ಕ್ಕೆ ಮನುವೆಂದೂ ಸ್ತ್ರೀ ಅಧ೯ಕ್ಕೆ  ಶತರೂಪೆಯೆಂದೂ ಹೆಸರಾಯಿತು.(ಪುಟ 5)

 

15)ಆತ್ಮತತ್ವವು ಎಲ್ಲದಕ್ಕಿಂತಲೂ ಅಂತರತಮವಾದುದು(ಒಳಗಿನದು)

 

16) ಆತ್ಮನನ್ನೇ ಪ್ರಿಯವೆಂದು  ಅರಿತುಕೊಂಡು  ಆತ್ಮನನ್ನೇ ಉಪಾಸಿಸಬೇಕು.(1.4.7.).ಆತ್ಮನನ್ನೇ ಪ್ರಿಯವೆಂದು  ಅರಿಯುವವನ ಪ್ರಿಯ ವಸ್ತುವು ನಾಶವಾಗುವುದಿಲ್ಲ(ಪುಟ 6)

 

17)ಸೃಷ್ಟಿಗೆ ಮೊದಲು ಅವ್ಯಾಕೃತವಾದ ಜಗತ್ತು  ನಾಮರೂಪಗಳಿಂದ ವ್ಯಾಕೃತವಾಯಿತು.(ಪುಟ7)

 

18) ಅಗ್ನಿಯು ಸೌದೆಯಲ್ಲಿರುವಂತೆ -ಸಮಸ್ತ ಶರೀರಗಳನ್ನು ನಖಾಗ್ರದವರೆಗೆ ಪ್ರವೇಶಿಸಿ ಸಾಮಾನ್ಯ ರೂಪದಿಂದಲೂ  ವಿಶೇಷರೂಪದಿಂದಲೂ  ಇರುತ್ತಾನೆ.ಅವನು ಪ್ರಾಣನ ಕ್ರಿಯೆಯನ್ನು ಮಾಡಿದಾಗ ಪ್ರಾಣನೆಂತಲೂ,ಮಾತಾಡುವಾಗ ವಾಕ್ಕೆಂದೂ,ನೋಡುವಾಗ ಕಣ್ಣೆಂದೂ ,ಕೇಳುವಾಗ ಶ್ರೋತ್ರವೆಂದೂ ,ಮನನ ಮಡುವಾಗ ಮನಸ್ಸೆಂದೂ, ಕರೆಯಲ್ಪಡುತ್ತಾನೆ.(ಪುಟ 7)  

 

1)ಆತ್ಮನು ತನ್ನ ಸ್ವರೂಪವನ್ನು ಎಂದಿಗೂ  ಬಿಡುವುದಿಲ್ಲ.(ಪುಟ 7)

 

20) ಅವಿದ್ಯಾನಾಶವೇ ಮುಕ್ತಿ(ಪುಡ 7)

 

21)ಆತ್ಮಜ್ಞಾನವು ಅವಿದ್ಯಾ ಮೂಲವನ್ನು ಕಿತ್ತುಹಾಕಿ  ಸಂಸಾರ ಚಕ್ರವನ್ನು ನಿಲ್ಲಿಸುವುದು.ಅದರೆ ಆತ್ಮಜ್ಞಾನವು ಹೊಸದಾಗಿ ಉಂಟಾಗತಕ್ಕ ಕ್ರಯೆಯಲ್ಲ.ಅದು ಸಾಕ್ಷಾತ್ ಅಪರೋಕ್ಷ ವಾಗಿರುವ ಅರಿವು.(ಪುಟ7)

 

22)ಕಾಲವೂ ಕೂಡ ಅವಿದ್ಯೆಯ ಒಂದು ಕಾಯ೯ವಾಗಿದೆ.(ಪುಟ 7)

 

23)ಋಷಿವಾಮದೇವನು ಜೀವಾತ್ಮನನ್ನೇ ಪರಮಾತ್ಮನೆಂದು ಅರಿತುಕೊಂಡು 'ನಾನು ಮನು  ಮತ್ತು ಸೂಯ೯'ಎಂದು ಹೇಳಿದನು.(ಋಗ್ಯೇದ 4.36.1)(ಪುಟ 7)

 

24)ಬ್ರಹ್ಮಭಾವವನ್ನು ಯಾರು ಬೇಕಾದರೂ ಹೊಂದಬಹುದು.(ಪುಟ 7)

 

25) ದೇವತೆಗಳ ವಗೀ೯ಕರಣ:

ಅಗ್ನಿ -ಬ್ರಾಹ್ಮಣ,ಇಂದ್ರ,ವರುಣ,ಸೋಮ,ಯಮ,ಈಶಾನ ಮೊದಲಾದವರು ಕ್ಷತ್ರಿಯರು.ವಸುಗಳು ,ರುದ್ರರು,ಆದಿತ್ಯರು ಮೊದಲಾದವರು ವೈಶ್ಯರು.ಪೂಷನ್ ಶೂದ್ರನು. ನಾಲ್ಕು  ದೇವಜಾತಿಗಳಿಂದ ನಾಲ್ಕು ಮನುಷ್ಯ ಜಾತಿಗಳು  ಹುಟ್ಟಿದವು.(ಪುಟ 8)

 

26)ಅಜ್ಞಾನಿಯು  ಯಾವ ಜಾತಿಗಾದರೂ ಸೇರಿರಲಿ ದೇವತೆಗಳಿಂದ ಪ್ರಾರಂಭಿಸಿ ಇರುವೆಯವರೆಗೆ ಎಲ್ಲರಿಗೂ ಭೋಗ್ಯನಾಗಿರುತ್ತಾನೆ.(ಪುಟ 8)

 

27) ಇವರೆಲ್ಲರೂ  ಪಂಚಯಜ್ಞಗಳ ಮೂಲಕ  ದೇವತೆಗಳಿಗೆ,ಋಷಿಗಳಿಗೆ,ಪಿತೃಗಳಿಗೆ,ಮನುಷ್ಯರಿಗೆ ಮತ್ತು ಭೂತಗಳಿಗೆ  ತಮ್ಮ ತಮ್ಮ ಋಣವನ್ನು ಸಲ್ಲಿಸಬೇಕೆಂದು ಹೇಳಿದೆ.(ಪುಟ 8)

 

28) ಮನುಷ್ಯ ಜೀವನವನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿರುವ  ಕಾಮವು ಸಾಧ್ಯ ಮತ್ತು ಸಾಧನ ರೂಪದದಿಂದ ಎರಡು ಬಗೆಯಾಗಿದೆ.ಪತ್ನಿ- ಪುತ್ರ- ವಿತ್ತಾದಿಗಳು ಸಾಧನಗಳು.ಮನುಷ್ಯ-ಪಿತೃ- ದೇವಲೋಕಗಳು ಫಲವು.(ಪುಟ 8)

 

2) ಕಾಮದಿಂದ ಪ್ರೇರಿತನಾದ ಮನುಷ್ಯನು -ತಾನೇ ಹೆಣೆದುಕೊಂಡ ರೇಷ್ಮೆ ಗೂಡಿನಲ್ಲಿರುವ ರೇಷ್ಮೆ ಹುಳುವಿನಂತೆ -ಕಮ೯ಗಳಲ್ಲಿ ಸಿಕ್ಕಿ ಬೀಳುತ್ತಾನೆ.(ಪುಟ ಪುಟ 8)

 

30) ಆತ್ಮೋಪಾಸನೆಯೊಂದೇ ಮನುಷ್ಯನನ್ನು ಕಾಪಾಡಬಲ್ಲದು.(ಪುಟ 8)

 

31)ಐದನೆಯ ಖಂಡಕ್ಕೆ ಸಪ್ತಾನ್ನ ಬ್ರಾಹ್ಮಣವೆಂದು ಹೆಸರು.ಇಲ್ಲಿ ಅನ್ನವನ್ನುಏಳಾಗಿ ವಿಂಗಡಿಸಿದೆ.(ಪುಟ 8 )

 

1) ಒಂದು ಅನ್ನವು ಎಲ್ಲರಿಗೂ ಸಾಮಾನ್ಯವಾಗಿದೆ.(ಪುಟ 8)    

2)ಹುತ -ಪ್ರಹುತ ಇವು ದೇವತೆಗಳ ಅನ್ನ.(ಪುಟ 8)

3) ವಾಕ್ ಪ್ರಾಣ ಮನಸ್ಸು ಎಂಬ ಉಳಿದ ಮೂರುಅನ್ನಗಳನ್ನು ಪ್ರಜಾಪತಿಯು ಅಥವಾ ತಂದೆಯು ತನಗಾಗಿ ಇಟ್ಟುಕೊಂಡನು.(ಇವು ಆತ್ಮನ ಅನ್ನ)(ಪುಟ 8)

 

32) ವಾಕ್ ಪ್ರಾಣ ಮನಸ್ಸುಗಳು ಇಡೀ ಜಗತ್ತು ವ್ಯಾಪಿಸಿಕೊಂಡಿವೆ.(ಪುಟ 8)

 

33)ಸಂವತ್ಸರ ರೂಪವಾದ ಪ್ರಜಾಪತಿಯೇ ಕಾಲವು.(ಪುಟ )

 

34) 'ನಾನೇ ಎಲ್ಲವನ್ನೂ ಪರಿಸ್ಪಂದಿಸುವ ಪ್ರಾಣಾತ್ಮನು' ಎಂದು ಪ್ರಾಣೋಪಾಸನೆಯನ್ನು ಮಾಡಬೇಕು.(ಪುಟ )

 

35)ವ್ಯಾಕೃತ -ಅವ್ಯಾಕೃತ ಜಗತ್ತೆಲ್ಲ  ನಾಮ ರೂಪ  ಕಮ೯ ಎಂಬ ಮೂರೇ ಆಗಿವೆ(ಪುಟ )

 

36)ನಾಮ ರೂಪ ಕಮ೯ಗಳೆಂಬ  ಅನಾತ್ಮದಿಂದ ಯಾರ ಮನಸ್ಸು ಹಿಂದಿರುಗುವುದಿಲ್ಲವೋ  ಅವನಿಗೆ ಆತ್ಮಲೋಕದಲ್ಲಿ ಆಸಕ್ತಿ ಇರುವುದಿಲ್ಲ.(ಪುಟ )

 

37) ಬಾಹ್ಯ ಪ್ರವೃತ್ತಿಗೂ  ಪ್ರತ್ಯಗಾತ್ಮ  ಪ್ರವೃತ್ತಿಗೂ ಅತ್ಯಂತ ವಿರೋಧವಿದೆ.(ಪುಟ )

 

 


No comments:

Post a Comment