Monday, 28 September 2020

ಏಳನೆಯ ಅಧ್ಯಾಯ(ಭೂಮ ವಿದ್ಯೆ): 1)ನಾರದರು ಸನತ್ಕುಮಾರನನ್ನು ಬಳಿಸಾರಿದನು.'ಭಗವಂತನೆ,ನನಗೆ ಉಪದೇಶಿಸಬೇಕು'ಎಂದನು.ಸನತ್ಕುಮಾರನು ಹೇಳಿದನು:'ನೀನು ಯಾವುದನ್ನು ತಿಳಿದುಕೊಂಡಿರುವೆಯೊ ಅದನ್ನು ಹೇಳುವುದರ ಮೂಲಕನನ್ನ ಬಳಿಗೆ ಬಾ.ಅದಕ್ಕಿಂತ ಮುಂದಿರುವುದನ್ನು ಉಪದೇಶಿಸುತ್ತೇನೆ.' (ಪುಟ 323) 2)ನಾರದ-ಸನತ್ಕುಮಾರರ ಆಖ್ಯಾಯಿಕೆಯು ಪರವಿದ್ಯೆಯ ಸ್ತುತಿಗಾಗಿ ಬಂದಿದೆ.(ಪುಟ 323) 3)ನಾರದನು ಸವ೯ ವಿದ್ಯೆಗಳನ್ನು ಅರಿತುಕೊಂಡು ಕೃತ ಕೃತ್ಯನಾಗಿದ್ದರೂ ಆತ್ಮನನ್ನು ಆತ್ಮನನ್ನು ಅರಿತುಕೊಳ್ಳದೆ ಇದ್ದುದರಿಂದಶೋಕಿಸುತ್ತಿದ್ದನು.ನಾರದರ ಅವಸ್ಥೆಯೇ ಹೀಗಿರುವಾಗ ಅಲ್ಪಜ್ಞನೂ ಪುಣ್ಯರಹಿತನೂ ಅಕೃತಕೃತ್ಯನೂ ಆದ ಸಂಸಾರೀ ಜೀವನ ದುಃಖವನ್ನು ವಿವರಿಸ ಬೇಕಾಗಿಲ್ಲ.(ಪುಟ 324) 4)ಏಕೆಂದರೆ ಸವ೯ಜ್ಞಾನಗಳು,ಸಾಧನಗಳು,ಶಕ್ತಿಗಳು -ಇವುಗಳಿಂದ ಕೂಡಿದ್ದರೂ ದೇವಷಿ೯ಯಾದ ನಾರದನಿಗೆ ಶ್ರೇಯಸ್ಸು ಉಂಟಾಗಲಿಲ್ಲ.ಉತ್ತಮವಾದ ವಂಶ,ವಿದ್ಯೆ,ಚಯೆ೯(ಸದಾಚಾರ), ಸಾಧನ ಶಕ್ತಿಇವ್ಗಳಿಂದ ಉಂಟಾಗುವ ಅಹಂಕಾರವನ್ನು ನಾರದನು ತ್ಯಜಿಸಿಶ್ರೇಯಃ ಸಾಧನವನ್ನು ಪಡೆದುಕೊಳ್ಳಲು ಸಾಮಾನ್ಯ ಜನರಂತೆ ಸನತ್ಕುಮಾರನನ್ನು ಬಳಿಸಾರಿದನು.ಇದರಿಂದ ಶ್ರೇಯಃ ಪ್ರಾಪ್ತಿಗೆ ಆತ್ಮವಿದ್ಯೆಯು ನಿರತಿಶಯ ಸಾಧನವೆಂದು ತಿಳಿದು ಬರುತ್ತದೆ.(ಪುಟ 324) 5)ನಾರದ:'ಭಗವಂತನೆ,ಋಗ್ವೇದವನ್ನು ಅರಿತಿರುತ್ತೇನೆ. ಯಜುವೇ೯ದ,ಸಾಮವೇದ,ನಾಲ್ಕನೆಯದಾದ ಅಥವ೯ ವೇದ,ಐದನೆಯದಾದ ಇತಿಹಾಸ ಪುರಾಣಗಳು,ವೇದಗಳ ವೇದ(ವ್ಯಾಕರಣ),ಪಿತ್ರ್ಯ(ಶ್ರಾದ್ಧ ಕಲ್ಪ),ಗಣಿತ,ದೈವ,ನಿಧಿ ಶಾಸ್ತ್ರ,ತಕ೯ಶಾಸ್ತ್ರ,ನೀತಿಶಾಸ್ತ್ರ,ನಿರುಕ್ತ(ಶಿಕ್ಷಾ,ಕಲ್ಪ.ಛಂದಸ್ಸು ಮುಂತಾದವುಗಳು),ಬ್ರಹ್ಮವಿದ್ಯೆ,ಭೂತವಿದ್ಯೆ,ಧನುವೇ೯ದ,ಜ್ಯೋತಿಷ,ಸಪ೯ವಿದ್ಯೆ,ದೇವಜನವಿದ್ಯೆ(ಪರಿಮಳ ದ್ರವ್ಯಗಳ ತಯಾರಿಕೆ)-ಇವುಗಳನ್ನೆಲ್ಲ ಭಗವಂತನೆ, ಅರಿತಿರುತ್ತೇನೆ.(ಪುಟ 325) 6) ಸನತ್ಕುಮಾರ:ನೀನು ಏನೇನನ್ನು ಅಧ್ಯಯನ ಮಾಡಿರುತ್ತೀಯೋ ಅದೆಲ್ಲ ಹೆಸರೇ.ಶಬ್ದವೆಲ್ಲ ಕೇವಲ ಹೆಸರೇ.ಹೆಸರೆಲ್ಲವೂ ಮಂತ್ರಗಳಲ್ಲಿ ಅಂತಗ೯ತವಾಗಿರುತ್ತದೆ.ಮಂತ್ರಗಳು ಕಮ೯ಗಳನ್ನು ತಿಳಿಸುವುದಕ್ಕೆ ಪ್ರವೃತ್ತವಾಗಿವೆ.ಆದುದರಿಂದ ಮಂತ್ರವಿತ್ ಎಂದರೆ ಕಮ೯ವನ್ನು ಅರಿತಿರುವವನು.'ಮಂತ್ರಗಳು ಕಮ೯ಗಳಲ್ಲಿ ಅಡಗಿರುತ್ತವೆ'(ಮಂತ್ರೇಷು ಕಮಾ೯ಣಿ7.4.1)ಎಂದು ಶ್ರುತಿಯೇ ಮುಂದೆ ಹೇಳುತ್ತದೆ.(ಪುಟ 326) 7)ಆತ್ಮಜ್ಞಾನವೆಂಬ ನೌಕೆಯಿಂದ ದಾಟಿಸಬೇಕು.ಅಭಯವನ್ನು ಹೊಂದುವಂತೆ ಮಾಡಬೇಕು ಎಂದಥ೯.(ಪುಟ 326) 8)'ವಿಕಾರವೆಂಬುದು ವಾಕ್ಕನ್ನು ಅವಲಂಬಿಸಿರುವ ಕೇವಲ ಹೆಸರೇ.'(ವಾಚಾರಂಭಣೋ ವಿಕಾರೋ ನಾಮಧೇಯಮ್(6.1.4)) .(ಪುಟ 326) ೯)ಸನತ್ಕುಮಾರ:ನಾಮವೇ ಋಗ್ವೇದ,ಯಜುವೇ೯ದ,ನಾಲ್ಕನೆಯದಾದ ಅಥವ೯ವೇದ,ಐದನೆಯದಾದ ಇತಿಹಾಸ ಪುರಾಣಗಳು,ವ್ಯಾಕರಣ,,ಪಿತ್ರ್ಯ,ಗಣಿತ,ದೈವ,ನಿಧಿಶಾಸ್ತ್ರ,ತಕ೯ಶಾಸ್ತ್ರ,ನೀತಿಶಾಸ್ತ್ರ,ನಿರುಕ್ತ,ಬ್ರಹ್ಮವಿದ್ಯೆ,ಧನುವೇ೯ದ,ಜ್ಯೋತಿಷ,ಸಪ೯ವಿದ್ಯೆ,ದೇವಜನವಿದ್ಯೆ-ಇವು ನಾಮವೇ.ನಾಮವನ್ನು ಬ್ರಹ್ಮವೆಂದು ಉಪಾಸಿಸು.(ಪುಟ 326) 10)ಪ್ರತಿಮೆಯನ್ನು ವಿಷ್ಣುಬುದ್ಧಿಯಿಂದ ಉಪಾಸಿಸುವಂತೆ,ಋಗ್ವೇದವೇ ಮೊದಲಾದ ಹೆಸರುಗಳನ್ನು ಬ್ರಹ್ಮಬುದ್ಧಿಯಿಂದ ಉಪಾಸಿಸಬೇಕು.(ಪುಟ 326) 11)ನಾರದ:ನಾಮಕ್ಕಿಂತ ಅಧಿಕವಾದುದು ಯಾವುದಾದರೂ ಇದೆಯೇ? ಎರಡನೆಯ ಖಂಡ: 12) ವಾಕ್ಕೇ ನಾಮಕ್ಕಿಂತ ಅಧಿಕವಾದುದು.ವಾಕ್ಕೇ ಎಲ್ಲವನ್ನೂ ಋಗ್ವೇದ,ಯಜುವೇ೯ದ,ನಾಲ್ಕನೆಯದಾದ ಅಥವ೯ವೇದ,ಐದನೆಯದಾದ ಇತಿಹಾಸ ಪುರಾಣಗಳು,ವ್ಯಾಕರಣ,,ಪಿತ್ರ್ಯ,ಗಣಿತ,ದೈವ,ನಿಧಿಶಾಸ್ತ್ರ,ತಕ೯ಶಾಸ್ತ್ರ,ನೀತಿಶಾಸ್ತ್ರ,ನಿರುಕ್ತ,ಬ್ರಹ್ಮವಿದ್ಯೆ,ಧನುವೇ೯ದ,ಜ್ಯೋತಿಷ,ಸಪ೯ವಿದ್ಯೆ,ದೇವಜನವಿದ್ಯೆ,ದ್ಯ್ಲೋಕವನ್ನೂ,ಪೃಥ್ವಿಯನ್ನೂ ವಾಯುವನ್ನೂ,ಆಕಾಶವನ್ನೂ ನೀರನ್ನೂ ತೇಜಸ್ಸನ್ನೂ ದೇವತೆಗಳನ್ನೂ ಮನುಷ್ಯರನ್ನೂ ಪಶುಗಳನ್ನೂ ಪಕ್ಷಿಗಳನ್ನೂ,ಹುಲ್ಲು ಮರಗಳನ್ನೂ,ಹಿಂಸ್ರಜಂತುಗಳನ್ನೂ,ಕೀಟ ಪತಂಗ -ಇರುವೆಯವರೆಗೂ (ಎಲ್ಲಜಂತುಗಳನ್ನೂ)ಧಮಾ೯ಧಮ೯ಗಳನ್ನೂ ಸತ್ಯಾನೃತಗಳನ್ನೂ,ಸಾಧುವಾದುದನ್ನೂ,ಅಸಾಧುವಾದುದನ್ನೂಮನೋಹರವಾದುದನ್ನೂ ಮನೋಹರವಲ್ಲದುದನ್ನೂ ತಿಳಿಸಿಕೊಡುತ್ತದೆ.ವಾಕ್ಕಿಲ್ಲದಿದ್ದರೆ,ಧಮಾ೯ಧಮ೯ಗಳಾಗಲೀ ಸತ್ಯಾನೃತಗಳಾಗಲೀ ಸಾಧಿವಾದುದಾಗಲೀ ಅಸಾಧುವಾದುದಾಗಲೀ ಮನೋಹರವಾದುದಾಗಲೀ ಮನೋಹರವಲ್ಲದುದಾಗಲೀ ತಿಳಿದು ಬರುತ್ತಿರಲಿಲ್ಲ. ವಾಕ್ಕು ಇದೆಲ್ಲವನ್ನೂ ತಿಳಿಸಿಕೊಡುತ್ತದೆ.ವಾಕ್ಕನ್ನು ಬ್ರಹ್ಮವೆಂದು ಉಪಾಸಿಸು.(ಪುಟ 32೯) ನಾರದ:'ಭಗವಂತನೆ ವಾಕ್ಕಿಗಿಂತ ಅಧಿಕವಾದುದು ಇದೆಯೇ? ಮೂರನೆಯ ಖಂಡ: 13)ಮನಸ್ಸೇ ವಾಕ್ಕಿಗಿಂತ ಅಧಿಕವಾದುದು.ಮನಸ್ಸು ವಾಕ್ಕನ್ನೂ ನಾಮವನ್ನೂ ಒಳಗೊಳ್ಳುತ್ತದೆ.ಅವನು ಯಾವಾಗ "ಮಂತ್ರಗಳನ್ನು ಅಧ್ಯಯನ ಮಾಡುವೆನು"ಎಂದು ಮನಸ್ಸು ಮಾಡುತ್ತಾನೋ ಆಗ ಅಧ್ಯಯನ ಮಾಡುತ್ತಾನೆ.ಅವನು ಯಾವಾಗ"ಕಮ೯ಗಳನ್ನು ಮಾಡುವೆನು" ಎಂದು ಮನಸ್ಸು ಮಾಡುತ್ತಾನೆಯೋ ಆಗ ಮಾಡುತ್ತಾನೆ.ಮನಸ್ಸೇ ಆತ್ಮನು,ಮನಸ್ಸೇ ಲೋಕವು,ಮನಸ್ಸೇ ಬ್ರಹ್ಮವು.ಮನಸ್ಸನ್ನು ಬ್ರಹ್ಮವೆಂದು ಉಪಾಸಿಸು.(ಪುಟ 331) ನಾರದ:'ಭಗವಂತನೆ,ಮನಸ್ಸಿಗಿಂತ ಅಧಿಕವಾದುದು ಇದೆಯೇ? ನಾಲ್ಕನೆಯ ಖಂಡ: 14)ಸನತ್ಕುಮಾರ:ಸಂಕಲ್ಪವೇ ಮನಸ್ಸಿಗಿಂತ ಅಧಿಕವಾದುದು.ಯಾವಾಗ ಸಂಕಲ್ಪಿಸುತ್ತಾನೋ ಆಗ ಮನನ ಮಾಡುತ್ತಾನೆ.ಅನಂತರ ವಾಕ್ಕನ್ನು ಪ್ರೇರಿಸುತ್ತಾನೆ.ವಾಕ್ಕನ್ನು ನಾಮೋಚ್ಛಾರಣೆಗಾಗಿ ಪ್ರೇರಿಸುತ್ತಾನೆ.ಮಂತ್ರಗಳು ನಾಮದಲ್ಲಿ ಒಂದಾಗುತ್ತವೆ.ಕಮ೯ಗಳು ಮಂತ್ರಗಳಲ್ಲಿ ಒಂದಾಗುತ್ತವೆ.(ಪುಟ 332) 15) ಸಂಕಲ್ಪವೂ ಕೂಡ ಮನನದಂತೆ ಅಂತಃಕರಣದ ಒಂದು ವೃತ್ತಿ.ಮಾಡತಕ್ಕದ್ದು ಮಾಡತಕ್ಕದ್ದಲ್ಲ ಎಂದು ವಿವೇಚಿಸುತ್ತದೆ.ಮಂತ್ರವಿಲ್ಲದೆ ಕಮ೯ವಿಲ್ಲ.(ಪುಟ 332) ನಾರದ: 'ಭಗವಂತನೆ, ಸಂಕಲ್ಪಕ್ಕಿಂತ ಅಧಿಕವಾದುದು ಇದೆಯೇ?' ಐದನೆಯ ಖಂಡ: 16)'ಚಿತ್ತವೇ ನಾಮಕ್ಕಿಂತ ಅಧಿಕವಾದುದು.ಅವನು ಯಾವಾಗ ಅರಿತುಕೊಳ್ಳುವನೊ ಆಗ ಸಂಕಲ್ಪಿಸುತ್ತಾನೆ.ಅನಂತರ ವಾಕ್ಕನ್ನು ಪ್ರೇರಿಸುತ್ತಾನೆ.ವಾಕ್ಕನ್ನು ನಾಮೋಚ್ಛರಣೆಗಾಗಿ ಪ್ರೇರಿಸುತ್ತಾನೆ.ಮಂತ್ರಗಳು ನಾಮದಲ್ಲಿ ಒಂದಾಗುತ್ತವೆ.ಕಮ೯ಗಳು ಮಂತ್ರಗಳಲ್ಲಿ ಒಂದಾಗುತ್ತವೆ.(ಪುಟ 335) ಚಿತ್ತವೇ ಏಕಮಾತ್ರಗತಿ.ಚಿತ್ತವೇ ಆತ್ಮನು.ಚಿತ್ತವೇ ಪ್ರತಿಷ್ಠೆ.ಚಿತ್ತವನ್ನು ಬ್ರಹ್ಮವೆಂದು ಉಪಾಸಿಸು.(ಪುಟ 336) ನಾರದ:'ಭಗವಂತನೆ ಚಿತ್ತಕ್ಕಿಂತ ಶ್ರೇಷ್ಠವಾದುದು ಇದೆಯೇ' ಆರನೆಯ ಖಂಡ: 17)ಸನತ್ಕುಮಾರ:ಧ್ಯಾನವೇ ಚಿತ್ತಕ್ಕಿಂತ ಅಧಿಕವಾದುದು.ಪೃಥ್ವಿಯು ಧ್ಯಾನಿಸುವಂತಿದೆ,ಅಂತರಿಕ್ಷವು ಧ್ಯಾನಿಸುವಂತಿದೆ.ದ್ಯುಲೋಕವು ಧ್ಯಾನಿಸುವಂತಿದೆ.ನೀರು ಧ್ಯಾನಿಸುವಂತಿದೆ.ಪವ೯ತಗಳು ಧ್ಯಾನಿಸುವಂತಿವೆ.ದೇವತೆಗಳು ಮತ್ತು ಮನುಷ್ಯರು ಧ್ಯಾನಿಸುವಂತೆ ಇರುವರು.ಆದುದರಿಂದ ಮನುಷ್ಯರಲ್ಲಿ ಯಾರು ಈ ಲೋಕದಲ್ಲಿ ಮಹತ್ವವನ್ನು ಹೊಂದಿರುತ್ತಾರೋಅವರು ಧ್ಯಾನಫಲ ಲಾಭದ ಅಂಶವನ್ನು ಪಡೆದವರಂತೆ ಇರುತ್ತಾರೆ.ಧ್ಯಾನವನ್ನು ಬ್ರಹ್ಮವೆಂದು ಉಪಾಸಿಸು.(ಪುಟ 338) ನಾರದ: 'ಭಗವಂತನೆ,ಧ್ಯಾನಕ್ಕಿಂತ ಅಧಿಕವಾದುದು ಇದೆಯೇ?" ಏಳನೆಯ ಖಂಡ: 18)ವಿಜ್ಞಾನವೇ ಧ್ಯಾನಕ್ಕಿಂತ ಅಧಿಕವಾದುದು. ವಿಜ್ಞಾನದಿಂದಲೇ ಋಗ್ವೇದ,ಯಜುವೇ೯ದ ಸಾಮವೇದ ಅಥವ೯ಣವೇದವನ್ನೂ ಅರಿಯುತ್ತಾನೆ.ಐದನೆಯದಾದ ಇತಿಹಾಸ ಪುರಾಣಗಳು,ವ್ಯಾಕರಣ,,ಪಿತ್ರ್ಯ,ಗಣಿತ,ದೈವ,ನಿಧಿಶಾಸ್ತ್ರ,ತಕ೯ಶಾಸ್ತ್ರ,ನೀತಿಶಾಸ್ತ್ರ,ನಿರುಕ್ತ,ಬ್ರಹ್ಮವಿದ್ಯೆ,ಧನುವೇ೯ದ,ಜ್ಯೋತಿಷ,ಸಪ೯ವಿದ್ಯೆ,ದೇವಜನವಿದ್ಯೆ,ದ್ಯುಲೋಕವನ್ನೂ,ಪೃಥ್ವಿಯನ್ನೂ ವಾಯುವನ್ನೂ,ಆಕಾಶವನ್ನೂ ನೀರನ್ನೂ ತೇಜಸ್ಸನ್ನೂ ದೇವತೆಗಳನ್ನೂ ಮನುಷ್ಯರನ್ನೂ ಪಶುಗಳನ್ನೂ ಪಕ್ಷಿಗಳನ್ನೂ,ಹುಲ್ಲು ಮರಗಳನ್ನೂ,ಹಿಂಸ್ರಜಂತುಗಳನ್ನೂ,ಕೀಟ ಪತಂಗ -ಇರುವೆಯವರೆಗೂ (ಎಲ್ಲಜಂತುಗಳನ್ನೂ)ಧಮಾ೯ಧಮ೯ಗಳನ್ನೂ ಸತ್ಯಾನೃತಗಳನ್ನೂ,ಸಾಧುವಾದುದನ್ನೂ,ಅಸಾಧುವಾದುದನ್ನೂಮನೋಹರವಾದುದನ್ನೂ ಮನೋಹರವಲ್ಲದುದನ್ನೂ ಅನ್ನವನಗನೂ ರಸವನ್ನೂ ಈ ಲೋಕವನ್ನೂ ಆಲೋಕವನ್ನೂ ವಿಜ್ಞಾನದಿಂದಲೇ ತಿಳಿಯುತ್ತಾನೆ.ವಿಜ್ಞಾನವನ್ನು ಬ್ರಹ್ಮವೆಂದು ಉಪಾಸಿಸು.(ಪುಟ 341) ನಾರದ:'ಭಗವಂತನೆ ವಿಜ್ಞಾನಕ್ಕಿಂತಲೂ ಅಧಿಕವಾದುದು ಇದೆಯೇ? ಎಂಟನೆಯ ಖಂಡ: 1೯) ಬಲವೇ ವಿಜ್ಞಾನಕ್ಕಿಂತ ಅಧಿಕವಾದುದು.ಒಬ್ಬ ಬಲಿಷ್ಠನು ವಿಜ್ಞಾನವುಳ್ಳ ನೂರುಮಂದಿಯನ್ನು ಕೂಡ ಕಂಪಿಸುವಂತೆ ಮಾಡುತ್ತಾನೆ.ಅವನು ಯಾವಾಗ ಬಲಿಷ್ಟನಾಗುವನೊ ಆಗ ಏಳುತ್ತಾನೆ.ಎದ್ದು ಆಚಾಯ೯ರ ಪರಿಚಯೆ೯ಯನ್ನು ಮಾಡುತ್ತಾನೆ.ನಂತರ ಉಪಸತ್ತಿಯನ್ನು ಮಾಡುತ್ತಾನೆ.ಉಪಸತ್ತಿಯನ್ನು ಮಾಡಿ ದೃಷ್ಟøವೂ ಶ್ರೋತ್ರವೂ ಮಂತೃವೂ ಬೋದ್ಧೃವೂ, ಕತೃ೯ವೂ ವಿಜ್ಞಾತೃವೂ ಆಗುತ್ತಾನೆ.ಬಲದಿಂದಲೇ ಪೃಥ್ವಿಯು ನಿಂತಿದೆ.ಬಲದಿಂದಲೇ ಅಂತರಿಕ್ಷ,ದ್ಯುಲೋಕ,ಪವ೯ತಗಳು, ದೇವತೆಗಳು ಮತ್ತು ಮನುಷ್ಯರು, ಪಶುಪಕ್ಷಿಗಳು,ಮರಗಳು,ಹಿಂಸ್ರ ಜಂತುಗಳು,,ಕೀಟ- ಪತಂಗ- ಇರುವೆಗಳವರೆಗೆ ಎಲ್ಲವೂ ನಿಂತಿದೆ.ಬಲದಿಂದಲೇ ಲೋಕವು ನಿಂತಿದೆ.ಬಲವನ್ನು ಬ್ರಹ್ಮವೆಂದು ಉಪಾಸಿಸು.(ಪುಟ 342) 20)ತಿಳಿದುಕೊಳ್ಳಬೇಕಾದ ವಿಷಯದಲ್ಲಿ ಮನಸ್ಸಿಗೆ ಬರುವ ಪ್ರತಿಭಾವನೆ-ಸಾಮಥ್ಯ೯ಕ್ಕೆ ಬಲವೆಂದು ಹೆಸರು.(ಪುಟ 343) 21)ಶಿಷ್ಯನು ಏಕಾಗ್ರತೆಯಿಂದ ಆಚಾಯ೯ನನ್ನು ನೋಡಿ ಅವನು ಹೇಳಿದ್ದನ್ನು ಕೇಳಿ ಮನನ ಮಾಡಿಕೊಂಡು,ಇದು ಹೀಗೆಯೇ ಸರಿ ಎಂದು ನಿಧ೯ರಿಸಿ ಅನಂತರ ಅಥ೯ವನ್ನು ಮಾಡಿಕೊಂಡು ,ಅದರಂತೆಯೆ ಆಚರಿಸಿ ,ಅದರ ಫಲವನ್ನು ಅನುಭವಿಸುತ್ತಾನೆ.(ಪುಟ 343) ನಾರದ: 'ಭಗವಂತನೆ,ಬಲಕ್ಕಿಂತ ಅಧಿಕವಾದುದು ಇದೆಯೇ?' ಒಂಬತ್ತನೆಯ ಖಂಡ: 22)ಅನ್ನವೇ ಬಲಕ್ಕಿಂತ ಅಧಿಕವಾದುದು.ಆದುದರಿಂದ ಒಬ್ಬ ಮನುಷ್ಯನು ಹತ್ತು ರಾತ್ರಿಗಳು ಊಟಮಾಡದಿದ್ದರೂ (ಒಂದುವೇಳೆ) ಜೀವಿಸಿದ್ದರೆ,ಅವನು ನೋಡಲು,ಕೇಳಲು ಮನನ ಮಾಡಲು ಅರಿಯಲು ಕೆಲಸಮಾಡಲು ಮತ್ತು ಫಲವನ್ನು ಅನುಭವಿಸಲು ಶಕ್ತನಾಗುವುದಿಲ್ಲ.ಆದರೆ ಅವನು ಅನ್ನವನ್ನು ಪಡೆದಾಗ ನೋಡಲು ಕೇಳಲು ಮನನ ಮಾಡಲು ಅರಿಯಲು ಕೆಲಸಮಾಡಲು ಮತ್ತು ಫಲವನ್ನು ಅನುಭವಿಸಲು ಶಕ್ತನಾಗುತ್ತಾನೆ.ಅನ್ನವನ್ನು ಬ್ರಹ್ಮವೆಂದು ಉಪಾಸಿಸು.(ಪುಟ 344) ನಾರದ: 'ಭಗವಂತನೆ ಅನ್ನಕ್ಕಿಂತ ಅಧಿಕವಾದುದು ಇದೆಯೇ? ಹತ್ತನೆಯ ಖಂಡ: 23)ನೀರೇ ಅನ್ನಕ್ಕಿಂತ ಅಧಿಕವಾದುದು.ಆದುದರಿಂದಲೇ ಸಂವೃಷ್ಟಿಯಾಗದಿದ್ದರೆ (ಚೆನ್ನಾಗಿ ಮಳೆಯಾಗದಿದ್ದರೆ)ಪ್ರಾಣಿಗಳು ಅನ್ನವು ಕಡಿಮೆಯಾಗುವುದೆಂದು ದುಃಖಪಡುತ್ತವೆ.ಆದರೆ ಸಂವೃಷ್ಟಿಯಾದಾಗ ಅನ್ನವು ಹೆಚ್ಚಾಗುವುದೆಂದು ಆನಂದಪಡುತ್ತವೆ.ಈ ನೀರೇ ವಿವಿಧ ಮೂತ೯ ರೂ¥ಗಳನ್ನು ಧರಿಸಿ ಈ ಪೃಥ್ವಿ ಈ ಅಂತರಿಕ್ಷ ಈ ದ್ಯುಲೋಕ ಈ ಪವ೯ತಳು ದೇವತೆಗಳು, ಮನುಷ್ಯರು ಪಶುಪಕ್ಷಿಗಳು,ಹುಲ್ಲುಮರಗಳು ಹಿಂಸ್ರ ಜಂತುಗಳು,ಕೀಟ-ಪತಂಗ-ಇರುವೆಯವರೆಗೆ ಎಲ್ಲವೂ ಆಗಿದೆ.ನೀರೇ ಈ ಮೂತ೯ಗಳಾಗಿದೆ.ನೀರನ್ನು ಬ್ರಹ್ಮವೆಂದು ಉಪಾಸಿಸು.(ಪುಟ 346) ನಾರದ: ನೀರಿಗಿಂತ ಅಧಿಕವಾದುದು ಇದೆಯೇ? ಹನ್ನೊಂದನೆಯ ಖಂಡ: 24) ತೇಜಸ್ಸೇ ನೀರಿಗಿಂತ ಅಧಿಕವಾದುದು.ಆ ಈ ತೇಜಸ್ಸೇ ವಾಯುವನ್ನು ಅವಲಂಬಿಸಿಕೊಂಡುಆಕಾಶವನ್ನು ತಪಿಸುತ್ತದೆ..ಆಗ "ತಪಿಸುತ್ತಿದೆ,ದಹಿಸುತ್ತಿದೆ,ಮಳೆಗರೆಯುತ್ತದೆ"ಎಂದು ಜನರು ಹೇಳುತ್ತಾರೆ.ಆ ಈ ತೇಜಸ್ಸೇ ಮೊದಲು ಕಾಣಿಸಿಕೊಂಡು ಅನಂತರ ನೀರನ್ನು ಸೃಷ್ಟಿಸುತ್ತದೆ.ಆ ಈ ತೇಜಸ್ಸೆ ಸಿಡಿಲಿನ ರೂಪದಿಂದ ಮಳೆಗೆ ಕಾರಣವಾಗುತ್ತದೆ.ಊಧ್ವ೯ವಾಗಿ ಮತ್ತು ಅಡ್ಡಲಾಗಿ ಹೊಳೆಯುತ್ತಿರುವ ಮಿಂಚುಗಳಿಂದ ಕೂಡಿದ ಸಿಡಿಲುಗಳು ಸಂಚರಿಸುತ್ತವೆ.ಆದುದರಿಂದ ಜನರು "ಮಿಂಚುತ್ತಿದೆ,ಗುಡುಗುತ್ತಿದೆ,ಮಳೆಗರೆಯುವುದು"ಎಂದು ಹೇಳುತ್ತಾರೆ.ಆ ತೇಜಸ್ಸೇ ಮೊದಲು ಕಾಣಿಸಿಕೊಂಡು ಅನಂತರ ನೀರನ್ನು ಸೃಷ್ಟಿಸುತ್ತದೆ.ತೇಜಸ್ಸನ್ನು ಬ್ರಹ್ಮವೆಂದು ಉಪಾಸಿಸು.(ಪುಟ 348) ನಾರದ:'ಭಗವಂತನೆ,ತೇಜಸ್ಸಿಗಿಂತ ಅಧಿಕವಾದುದು ಇದೆಯೇ?' ಹನ್ನೆರಡನೆಯ ಖಂಡ: 25)ಆಕಾಶವೇ ತೇಜಸ್ಸಿಗಿಂತ ಅಧಿಕವಾದುದು.ಸೂಯ೯ಚಂದ್ರರು ಮಿಂಚು ನಕ್ಷತ್ರಗಳು ಅಗ್ನಿ ಆಕಾಶದಲ್ಲಿಯೇ ಇರುತ್ತಾರೆ.ಒಬ್ಬನು ಇನ್ನೊಬ್ಬನನ್ನು ಆಕಾಶದ ಮೂಲಕ ಕರೆಯುತ್ತಾನೆ.ಕರೆದಾಗ ಇನ್ನೊಬ್ಬನು ಆಕಾಶದಿಂದ ಕೇಳುತ್ತಾನೆ.ಆಕಾಶದಿಂದ ಪ್ರತಿಶ್ರವಣ ಮಾಡುತ್ತಾನೆ.ಆಕಾಶದಲ್ಲಿಯೇ ಪ್ರತಿಯೊಬ್ಬನೂ ಮತ್ತೊಬ್ಬನೊಡನೆ ರಮಿಸುತ್ತಾನೆ. ಬಂಧು ವಿಯೋಗವಾದಾಗ ಆಕಾಶದಲ್ಲಿಯೇ ರಮಿಸುವುದಿಲ್ಲ.ಆಕಾಶದಲ್ಲಿಯೇ ವಸ್ತುವು ಹುಟ್ಟುತ್ತದೆ,ಆಕಾಶದ ಕಡೆಗೆ ಬೆಳೆಯುತ್ತದೆ.ಆಕಾಶವನ್ನು ಬ್ರಹ್ಮವೆಂದು ಉಪಾಸಿಸು.(ಪುಟ 34೯) 26) ವಾಯುಸಹಿತವಾದ ತೇಜಸ್ಸಿಗೆ ಆಕಾಶವು ಕಾರಣವಾಗಿದೆ.(ಪುಟ 34೯) ನರದ: 'ಆಕಾಶಕ್ಕಿಂತ ಅಧಿಕವಾದುದು ಇದೆಯೇ?' ಹದಿಮೂರನೆಯ ಖಂಡ: 27)ಸನತ್ಕುಮಾರ:ಸ್ಮøತಿಯೇ ಆಕಾಶಕ್ಕಿಂತ ಅಧಿಕವಾದುದು.ಆದುದರಿಂದ ಒಂದು ಸ್ಥಳದಲ್ಲಿ ಬಹುಮಂದಿ ಕುಳಿತಿದ್ದರೂ ಸ್ಮøತಿಯಿಲ್ಲದವರಾದರೆ ಏನನ್ನೂ ಕೇಳಲಾರರು.ಮನನ ಮಾಡಲಾರರು,ಅರಿಯಲಾರರು,ಯಾವಾಗ ಅವರು ಸ್ಮರಿಸಿಕೊಳ್ಳುವರೊ ಆಗ ಕೇಳುವರು,ಮನನ ಮಡುವರು,ಅರಿಯುವರು.ಮನುಷ್ಯನು ಸ್ಮøತಿಯಿಂದಲೇ ಪಶುಗಳನ್ನು ಅರಿಯುತ್ತಾರೆ.ಸ್ಮøತಿಯನ್ನು ಬ್ರಹ್ಮವೆಂದು ಉಪಾಸಿಸು.(ಪುಟ 351) 28) ನೆನಪಿಗೆ ತಂದುಕೊಳ್ಳುವ ಒಂದು ಅಂತಃಕರಣ ಧಮ೯ (ಪುಟ 351) ನಾರದ:'ಭಗವಂತನೆ ಸ್ಮøತಿಗಿಂತ ಅಧಿಕವಾದುದು ಯಾವುದಾದರೂ ಇದೆಯೇ? ಹದಿನಾಲ್ಕನೆಯ ಖಂಡ: 2೯)ಸನತ್ಕುಮಾರ:'ಆಸೆಯೇ ಸ್ಮøತಿಗಿಂತ ಅಧಿಕವಾದುದು.ಆಶೆಯಿಂದ ಉದ್ದೀಪಿತನಾದಾಗಲೇ ಸ್ಮರಿಸಿಕೊಂಡು ಮಂತ್ರಗಳನ್ನು ಅಧ್ಯಯನ ಮಾಡುತ್ತಾನೆ.ಕಮ೯ಗಳನ್ನು ಮಾಡುತ್ತಾನೆ.ಪುತ್ರರನ್ನೂ ಪಶುಗಳನ್ನೂ ಬಯಸುತ್ತಾನೆ.ಇಹಲೋಕವನ್ನೂ ಪರಲೋಕವನ್ನೂ ಇಚ್ಛಿಸುತ್ತಾನೆ.ಆಶೆಯನ್ನು ಬ್ರಹ್ಮವೆಂದು ಉಪಾಸಿಸು.(ಪುಟ (352) ನಾರದ: ಆಸೆಗಿಂತ ಅಧಿಕವಾದುದು ಯಾವುದಾದರೂ ಇದೆಯೇ? ಹದಿನೈದನೆಯ ಖಂಡ: 30)ಸನತ್ಕುಮಾgರ: 'ಪ್ರಾಣವೇ ಆಸೆಗಿಂತ ಅಧಿಕವಾದುದು.ಹೇಗೆ ಅರೆಕಾಲುಗಳು ಚಕ್ರದ ನಾಭಿಯಲ್ಲಿ ಸೇರಿಕೊಂಡಿರುವುವೊ ಹಾಗೆಯೇ ಈ ಪ್ರಾಣದಲ್ಲಿ ಎಲ್ಲವೂ ಸೇರಿಕೊಂಡಿರುತ್ತದೆ.ಪ್ರಾಣವು ಪ್ರಾಣದಿಂದಲೇ ಹೋಗುತ್ತದೆ.ಪ್ರಾಣವು ಪ್ರಾಣವನ್ನು ಕೊಡುತ್ತದೆ.ಪ್ರಾಣವೇ ತಂದೆ,ಪ್ರಾಣವೇ ತಾಯಿ.ಪ್ರಾಣವೇ ಸೋದರ. ಪ್ರಾಣವೇ ಸೋದರಿ.ಪ್ರಾಣವೇ ಆಚಾಯ೯,ಪ್ರಾಣವೇ ಬ್ರಾಹ್ಮಣ'.(ಪುಟ 354) 31) ಪ್ರಾಣನು ಸವ೯ವ್ಯಾಪಿಯಾಗಿ ಒಳಗೂ ಹೊರಗೂ ಇದ್ದುಕೊಂಡು-ದಾರವು ಮಣಿಗಳನ್ನು ಕಟ್ಟಿರುವಂತೆ,-ಇಡೀ ಜಗತ್ತನ್ನು ಕಟ್ಟಿ ಹಿಡಿದುಕೊಂಡಿರುವನು. ಆದುದರಿಂದಲೇ ಪ್ರಾಣನು ಸೂತ್ರಾತ್ಮನೆನಿಸಿರುವನು.(354) 32) ತನ್ನ ಶಕ್ತಿಯಿಂದಲೇ ಹೋಗುತ್ತದೆ.ಗಮನಾದಿ ಕ್ರಿಯೆಗಳಲ್ಲಿ,ಪ್ರಾಣಕ್ಕಿರುವ ಸಾಮಥ್ಯ೯ವು ಬೇರೊಂದರಿಂದ ಬಂದಿಲ್ಲ.ಕ್ರಿಯಾ-ಕರಣ-ಫಲ ಸಮೂಹವೆಲ್ಲ ಪ್ರಾಣವೇ.ಪ್ರಾಣಕ್ಕಿಂತ ಬಹಿಭೂ೯ತವಾದ ಯಾವ ವಸ್ತುವೂ ಇಲ್ಲ.(ಪುಟ 354) 33)ಸನತ್ಕುಮಾರ: ಪ್ರ್ರಾಣವೇ ಇದೆಲ್ಲವೂ ಆಗಿರುತ್ತದೆ.ಹೀಗೆ ನೋಡುತ್ತಾ, ಮನನಮಾಡುತ್ತಾ,ಅರಿಯುತ್ತ ಇರುವವನು ಅತಿವಾದಿಯಾಗುತ್ತಾನೆ.ಯಾರಾದರೂ ಇವನನ್ನು ಕುರಿತು "ನೀನು ಅತಿವಾದಿಯಾಗಿರುವೆ"ಎಂದು ಹೇಳಿದರೆ ,ಅವನು "ನಾನು ಅತಿವಾದಿಯಾಗಿರುವೆನು"ಎಂದೇ ಹೇಳಬೇಕು.ನಿರಾಕರಿಸ ಬಾರದು.(ಪುಟ 357) 34)ನಾಮದಿಂದ ಪ್ರಾರಂಭಿಸಿ ಆಶೆಯವರೆಗೆ ಇರುವ ತತ್ವಗಳನ್ನೆಲ್ಲ ಅತಿಕ್ರಮಿಸಿರುವ ಪ್ರಾಣವನ್ನು ಹೇಳು ವ ಸ್ವಭಾವವುಳ್ಳವನು.ಎಂದರೆ 'ಬ್ರಹ್ಮದಿಂದ ಹಿಡಿದು ಹುಲ್ಲಿನವರೆಗಿನ ಜಗತ್ತಿಗೆಲ್ಲ ಜಗತ್ತಿಗೆಲ್ಲ ಆತ್ಮವಾದ ಪ್ರಾಣವೇ ನಾನು'ಎಂದು ಹೇಳುವವನು.ಸವೇ೯ಶ್ವರನಾದ ಪ್ರಾಣವನ್ನೇ ತಾನು ಎಂದು ಅರಿತಿರುವುದರಿಂದ.(ಪುಟ 357) ಹದಿನಾರನೆಯ ಖಂಡ: 35)ಸನತ್ಕುಮಾರ:'ಆದರೆ ಯಾವನು ಸತ್ಯದಿಂದ ಅತಿವಾದಿಯಾಗಿರುವನೊ ಅವನೇ ನಿಜವಾದ ಅತಿವಾದಿಯಾಗಿರುತ್ತಾನೆ.'(ಪುಟ 357) 36)ಪ್ರಾಣವಿದನು ನಿಜವಾದ ಅತಿವಾದಿಯಲ್ಲ.ಮುಂದೆ ಹೇಳಲ್ಪಡುವವನೇ ಅತಿವಾದಿ.ಯಾವನು ಭೂಮವೆಂಬ ಹೆಸರಿನ,ಎಲ್ಲವನ್ನೂ ಅತಿಕ್ರಮಿಸಿರುವ ಪರಮಾಥ೯ ಸತ್ಯವನ್ನು ಅರಿತಿರುವನೊ ಅವನೇ ನಿಜವಾದ ಅತಿವಾದಿ.(ಪುಉಟ 358) ಹದಿನೇಳನೆಯ ಖಂಡ: 37)ಸನತ್ಕುಮಾರ: ಯಾವಾಗ ತಿಳಿದುಕೊಳ್ಳುವನೊ ಆಗ ಸತ್ಯವನ್ನು ಹೇಳುತ್ತಾನೆ.ತಿಳಿಯದಿರುವವನು ಸತ್ಯವನ್ನು ಹೇಳುವುದಿಲ್ಲ.ತಿಳಿದವನೇ ಸತ್ಯವನ್ನು ಹೇಳುತ್ತಾನೆ.ವಿಜ್ಞಾನವನ್ನೇ ತಿಳಿದುಕೊಳ್ಳಲು ಬಯಸಬೇಕು.(ಪುಟ 358) 38) ಪ್ರಾಣವು ವ್ಯಾವಹಾರಿಕ ಸತ್ಯವಾಗಿದ್ದರೂ ಪಾರಮಾಥಿ೯ಕವಲ್ಲವೆಂಬುನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.(ಪು ಟ(35೯) ಹದಿನೆಂಟನೆಯ ಖಂಡ: 3೯)ಸನತ್ಕುಮಾರ: ಯಾವಾಗ ಮನನಮಾಡುತ್ತಾನೋ ಆಗ ತಿಳಿದುಕೊಳ್ಳುತ್ತಾನೆ.ಮನನ ಮಾಡದೆ ತಿಳಿದುಕೊಳ್ಳಲಾರನು.ಮನನ ಮಾಡಿಯೇ ತಿಳಿದುಕೊಳ್ಳುತ್ತಾನೆ.ಮನನವನ್ನೇ ತಿಳಿದುಕೊಳ್ಳಲು ಬಯಸಬೇಕು.'(ಪುಟ 360) ನಾರದ: 'ಭಗವಂತನೆ ಮನನವನ್ನೇ ತಿಳಿದುಕೊಳ್ಳಲು ಬಯಸುತ್ತೇನೆ.' 40)ಸನತ್ಕುಮಾರ : 'ಯಾವಾಗ ಶ್ರದ್ಧೆಯಿಡುವನೊ ಆಗ ಮನನ ಮಾಡುತ್ತಾನೆ.ಶ್ರದ್ಧೆಯಿಲ್ಲದವನು ಮನನ ಮಾಡಲಾರನು.ಶ್ರದ್ಧೆಯಿರುವವನೇ ಮನನ ಮಾಡುತ್ತಾನೆ.ಶ್ರದ್ಧೆಯನ್ನೇ ತಿಳಿದುಕೊಳ್ಳಲು ಬಯಸಬೇಕು.'(ಪುಟ 360) 41) ಶ್ರದ್ಧೆ ಎಂದರೆ ಆಸ್ತಿಕ್ಯ ಬುದ್ಧಿ(ಪುಟ 360) ಇಪ್ಪತ್ತನೆಯ ಖಂಡ: 42)ಸನತ್ಕುಮಾರ: ಯಾವಾಗ ನಿಷ್ಠೆಯನ್ನು ಮಾಡುತ್ತಾನೋ ಆಗ ಶ್ರದ್ಧೆಯಿಡುತ್ತಾನೆ.ನಿಷ್ಠೆಯಿಲ್ಲದವನು ಶ್ರದ್ಧೆಯಿಡಲಾರನು.ನಿಷ್ಠೆಯುಳ್ಳವನೇ ಶ್ರದ್ಧೆಯಿಡುತ್ತಾನೆ.ನಿಷ್ಠೆಯನ್ನೇ ತಿಳಿದುಕೊಳ್ಳಲು ಬಯಸಬೇಕು.(ಪುಟ 361) 43) ಬ್ರಹ್ಮ ಜ್ಞಾನಕ್ಕಾಗಿ ಗುರು ಶುಶ್ರೂಷಾದಿಗಳಲ್ಲಿ ತತ್ಪರನಾಗಿರುವುದು ನಿಷ್ಠೆ.(ಪುಟ 360) ಇಪ್ಪತ್ತೊಂದನೆಯ ಖಂಡ: 44)'ಯಾವಾಗ ಕೃತಿಯನ್ನು ಮಾಡುತ್ತಾನೋ ಆಗ ನಿಷ್ಠೆಯುಳ್ಳವನಾಗುತ್ತಾನೆ.ಕೃತಿಯನ್ನು ಮಾಡದೆ ನಿಷ್ಠೆಯುಳ್ಳವನಾಗುವುದಿಲ್ಲ.ಕೃತಿಯನ್ನು ಮಾಡಿಯೇ ನಿಷ್ಠೆಯುಳ್ಳವನಾಗುತ್ತಾನೆ.ಕೃತಿಯನ್ನೇ ತಿಳಿದುಕೊಳ್ಳಲು ಬಯಸಬೇಕು.'(ಪುಟ 361) 45) ಕೃತಿ ಎಂದರೆ ಇಂದ್ರಿಯ ಸಂಯಮವನ್ನು ಮತ್ತು ಚಿತ್ತದ ಏಕಾಗ್ರತೆಯನ್ನು ಮಾಡಿಕೊಳ್ಳುವುದು.(ಪುಟ 361) ಇಪ್ಪತ್ತೆರಡನೆಯ ಖಂಡ: 46)ಸನತ್ಕುಮಾರ:ಯಾವಾಗ ಸುಖವನ್ನು ಹೊಂದುತ್ತಾನೆಯೊ ಆಗ ಕೃತಿಯನ್ನು ಮಾಡುತ್ತಾನೆ.ಸುಖವನ್ನು ಪಡೆಯದೆ ಕೃತಿಯನ್ನು ಪಡೆಯಲಾರರು.ಸುಖವನ್ನೇ ಹೊಂದಿ ಕೃತಿಯನ್ನು ಮಾಡುತ್ತಾನೆ.ಸುಖವನ್ನೇ ತಿಳಿದುಕೊಳ್ಳಲು ಬಯಸಬೇಕು.(ಪುಟ362) 47) ಮನುಷ್ಯನು ಪ್ರತಿಯೊಂದು ಕಮ೯ವನ್ನು ಮಾಡುವುದು ಸುಖ ಪ್ರಾಪ್ತಿಗಾಗಿ ಎಂಬುದು ತಿಳಿದು ಬರುತ್ತದೆ.ಕಮ೯ಕ್ಕೂ ಸುಖಕ್ಕೂ ಇರುವ ಸಂಬಂಧವು ಇಹ-ಪರಗಳೆರಡರಲ್ಲೂ ಸಾವ೯ತ್ರಿಕವಾಗಿದೆ.ಉಪಾಸಕನು ನಿರತಿಶಯ ಸುಖವನ್ನು ಪಡೆಯಬೇಕೆಂದು ಬಯಸಿದಾಗ ಗುರು ಶುಶ್ರೂಷೆ ಮೊದಲಾದ ಕಮ೯ಗಳಲ್ಲಿ ನಿರತನಾಗುತ್ತಾನೆ.ಆದುದರಿಂದ ನಿರತಿಶಯ ಸುಖವನ್ನು ಪಡೆಯಲು ಉತ್ಕಟವಾದ ಇಚ್ಛೆಯಿರಬೇಕು.ಉತ್ಕಟವಾದ ಬಯಕೆ ಇಲ್ಲದಿದ್ದರೆ ಗುರುಶುಶ್ರೂಷಾದಿ ಕಮ೯ಗಳು ವಿಶಾಷ ಪ್ರಯೋಜನವಾಗುವುದಿಲ್ಲ.(ಪುಟ 362) ಇಪ್ಪತ್ತಮೂರನೆಯ ಖಂಡ: 48) 'ಯಾವುದು ಭೂಮವೊ ಅದು ಸುಖವು.ಅಲ್ಪದಲ್ಲಿ ಸುಖವಿಲ್ಲ.ಭೂಮವೇ ಸುಖವು.ಭೂಮವ ನ್ನೆ ತಿಳಿದುಕೊಳ್ಳಲು ಬಯಸಬೇಕು.(ಯೋ ವೈ ಭೂಮಾ ತತ್ಸುಖಂ.ನಾಲ್ಪೇ ಸುಖಮಸ್ತಿ)(ಪುಟ 362) 4೯)ದೊಡ್ಡದು,ಮಹತ್,ನಿರತಿಶಯವಾದುದು,ಬಹು -ಇವು ಭೂಮದ ಪಯಾ೯ಯ ಶಬ್ದಗಳು.ಭೂಮಕ್ಕಿಂತ ಕೆಳಗಿರುವುದೆಲ್ಲ ಅಲ್ಪ.ಅಲ್ಪ ವಸ್ತುವಿನಲ್ಲಿ ಸುಖವಿಲ್ಲ.ಏಕೆಂದರೆ ಅಲ್ಪವು ಅಧಿಕವಾದುದರ ತೃಷೆಯನ್ನುಂಟು ಮಾಡುತ್ತದೆ.ಆದರೆ ತೃಷ್ಣೆಯು ದುಃಖಕ್ಕೆ ಕಾರಣವಾಗುತ್ತದೆ.ಆದುದರಿಂದ ಅಲ್ಪ ವಸ್ತುವಿನಲ್ಲಿ ಸುಖವಿಲ್ಲ.ಭೂಮವೇ ಸುಖ.(ಪುಟ 363) ಇಪ್ಪತ್ತನಾಲ್ಕನೆಯ ಖಂಡ: 50)ಸನತ್ಕುಮಾರ:'ಎಲ್ಲಿ ಬೇರೊಂದನ್ನು ನೋಡುವುದಿಲ್ಲವೊ,ಬೇರೊಂದನ್ನು ಕೇಳುವುದಿಲ್ಲವೊಬೇರೊಂದನ್ನು ಅರಿಯುವುದಿಲ್ಲವೊ ಅದು ಭೂಮವು.ಆದರೆ ಎಲ್ಲಿ ಬೇರೊಂದನ್ನು ನೋಡುತ್ತಾನೆಯೊ ಬೇರೊಂದನ್ನು ಕೇಳುವನೊ ಬೇರೊಂದನ್ನು ಅರಿಯುವನೊ ಅದು ಅಲ್ಪವು.ಯಾವುದು ಭೂಮವೊ ಅದು ಅಮೃತವು.ಅದು ಮತ್ಯ೯ವು.'(ಪುಟ 364) 51)'ಭಗವಂತೆ ಭೂಮವು ಯಾವುದರಲ್ಲಿ ಪ್ರತಿಷ್ಠಿತವಾಗಿದೆ?' 52) ಸನತ್ಕುಮಾರ: ಅದು ತನ್ನ ಮಹಿಮೆಯಲ್ಲಿ ಪ್ರತಿಷ್ಠಿತವಾಗಿದೆ ಅಥವಾ ತನ್ನ ಮಹಿಮೆಯಲ್ಲಿಯೂ ಪ್ರತಿಷ್ಠಿತವಾಗಿಲ್ಲ.(ಪುಟ 364) 53)ಇಲ್ಲಿ ಭೂಮದ ಲಕ್ಷಣವನ್ನು ಹೇಳಿದೆ.ಸಾಮಾನ್ಯವಾಗಿ ಇಂದ್ರಿಯಗಳಿಂದ ಉಂಟಾದ ಜ್ಞಾತ್ರೃ -ಜ್ಞೇಯಗಳ ಸಂಬಂಧದಿಂದ ವಸ್ತುವಿನ ಜ್ಞಾನವುಂಟಾಗುತ್ತದೆ.ಆದರೆ ಭೂಮದಲ್ಲಿ ಜ್ಞಾತೃ -ಜ್ಞೇಯಗಳು ಇರುವುದಿಲ್ಲ.ಆದುದರಿಂದ ಭೂಮವನ್ನು ಅರಿತುಕೊಂಡವನು ಬೇರೇನನ್ನೂ ನೋಡುವುದಿಲ್ಲ,ಕೇಳುವುದಿಲ್ಲ ,ಅರಿಯುವುದಿಲ್ಲ.ಭೂಮಜ್ಞಾನವು ನಾಮರೂಪಗಳನ್ನು ಗ್ರಹಿಸುವ ಮನಸ್ಸಿನ ವ್ಯಾಪಾರವಲ್ಲ ಎಂಬುದು ಸ್ಪಷ್ಟವಾಗುತ್ತದೆ.(ಪುಟ 364) 54) ಭೂಮವನ್ನು ಬಿಟ್ಟರೆ ಬೇರೆ ಯಾವ ದಶ೯ನ-ಶ್ರವಣ-ಜ್ಞಾನಗಳೂ ಇಲ್ಲ ಎಂದು ಉಪನಿಷತ್ತು ಹೇಳುವಾಗ ಅದು ಸಂಸಾರಾತೀತವೆಂಬುದು ಅಥವಾ ನಿವಿ೯ಶೇಷವೆಂಬುದು ಸಿದ್ಧವಾಗುತ್ತದೆ.ಇಲ್ಲಿ ಸಮಸ್ತ ಪ್ರತ್ಯಯಗಳಿಗೂ ಆಧಾರವಾದ ಆತ್ಮನನ್ನು ನಿರಾಕರಿಸಿಲ್ಲ ಎಂಬುದನ್ನು ಮರೆಯಬಾರದು.(ಪುಟ 364) 55)ಶಿಷ್ಯನು ಭೂಮಕ್ಕೆ ಯಾವುದಾದರೂ ಒಂದು ಪ್ರತಿಷ್ಠೆಯನ್ನು ಬಯಸಿದರೆ 'ತನ್ನ ಮಹಿಮೆ ಯಲ್ಲಿ'ಎಂಬುದು ಅದಕ್ಕೆ ಉತ್ತರ.ಆದರೆ ಅವನು ಪರಮಾತ್ಮವನ್ನೇ ಕೇಳಲು ಬಯಸಿದರೆ 'ತನ್ನ ಮಹಿಮೆಯಲ್ಲೂ ಪ್ರತಿಷ್ಠಿತವಾಗಿಲ್ಲ'ಎಂಬುದು ಉತ್ತರ.ಭೂಮಕ್ಕೆ ನಿಜವಾಗಿ ಪ್ರತಿಷ್ಠೆಯಾಗಲೀ ಆಶ್ರಯವಾಗಲಿ ಇಲ್ಲ.(ಪುಟ 364) 56)ಸನತ್ಕುಮಾರ:'ಇಲ್ಲಿ ಅಶ್ವಗಳು ಗೋವುಗಳು ಆನೆಗಳು ಚಿನ್ನ ಸೇವಕರು ಭಾಯೆ೯ಯರು ಹೊಲಗದ್ದೆಗಳು ಮನೆಗಳು-ಇವುಗಳನ್ನು ಮಹಿಮೆ ಎಂದು ಜನರು ಹೇಳುತ್ತಾರೆ.ಆದರೆ ನಾನು ಹೀಗೆ ಹೇಳುತ್ತಿಲ್ಲ.ಏಕೆಂದರೆ ಒಬ್ಬನು ಬೇರೊಂದರಲ್ಲಿಪ್ರತಿಷ್ಠಿತನಾಗುತ್ತಾನೆ.ಹೀಗೆ ಹೇಳುತ್ತೇನೆ.(ಪುಟ365) 57)ಭೂಮವು ತನಗಿಂತ ಬೇರೆ ಯಾವ ಮಹಿಮೆಯನ್ನೂ ಆಶ್ರಯಿಸಿಲ್ಲ ಎಂಬುದು ಅಥ೯(ಪುಟ 368) ಇಪ್ಪತ್ತೈದನೆಯ ಖಂಡ: 58) ಸನತ್ಕುಮಾರ:ಆ ಭೂಮವೇ ಕೆಳಗಿದೆ.ಮೇಲಿದೆ,ಹಿಂದಿದೆ,ಮುಂದಿದೆ,ಬಲಕ್ಕಿದೆ,ಎಡಕ್ಕಿದೆ-ಅದೇ ಇದೆಲ್ಲವೂ ಆಗಿದೆ. ಇನ್ನು ಭೂಮವು ಅಹಂಕಾರದ ಮೂಲಕ ಉಪದೇಶಿಸಲ್ಪಡುತ್ತದೆ.ನಾನೇ ಕೆಳಗಿರುವೆನು.ಮೇಲಿರುವೆನು,ಹಿಂದಿರುವೆನು,ಮುಂದಿರುವೆನು ಬಲಕ್ಕಿರುವೆನು,ಎಡಕ್ಕಿರುವೆನು-ನಾನೇ ಇದೆಲ್ಲವೂ ಆಗಿರುವೆನು.(ಪುಟ 366) 5೯)ಯಾವಕಾರಣದಿಂದ ಭೂಮವು ಎಲ್ಲಿಯೂ ಪ್ರತಿಷ್ಠಿತವಾಗಿಲ್ಲೆಂಬುದನ್ನು ಹೇಳಿದೆ.ಭೂಮವು ಎಲ್ಲೆಲ್ಲಿಯೂ ಇರುವುದರಿಂದ ಅದಕ್ಕಿಂತ ವ್ಯತಿರಿಕ್ತವಾಗಿರುವುದು ಯಾವುದೂ ಇಲ್ಲ.(ಪುಟ 366) 60)ಸನತ್ಕುಮಾರ:ಇನ್ನು,ಆದುದರಿಂದ ಭೂಮವು ಆತ್ಮನ ಮೂಲಕ ಉಪದೇಶಿಸಲ್ಪಡುತ್ತದೆ.ಆತ್ಮನೇ ಕೆಳಗಿರುವನು,ಮೇಲಿರುವನು,ಹಿಂದಿರುವನು,ಮುಂದಿರುವನು,ಬಲಕ್ಕಿರುವನು,ಎಡಕ್ಕಿರುವನು-ಆತ್ಮನೇ ಇದೆಲ್ಲವೂ ಆಗಿರುವನು.(ಪುಟ 367) 61)ಹೀಗೆ ನೋಡಿ,ಮನನಮಾಡಿ,ಅರಿತುಕೊಂಡು,ಆತ್ಮರತಿಯೂ,ಆತ್ಮಕ್ರೀಡನೂ,ಆತ್ಮಮಿಥುನನೂ ಆಗಿ ಅವನು ಸ್ವರಾಟ್ ಆಗುತ್ತಾನೆ.ಅವನಿಗೆ ಸವ೯ಲೋಕಗಳಲ್ಲಿಯೂ ಸ್ವಚ್ಛಂದ ಗತಿಯಿರುತ್ತದೆ.ಇನ್ನು ಯಾರು ಇದಕ್ಕಿಂತ ಬೇರೆಯಾಗಿ ಅರಿತುಕೊಂಡಿರುವರೊ ಅವರು ಅನ್ಯರಾಜನ ಅಧೀನಕ್ಕೆ ಒಳಪಟ್ಟುಕ್ಷಯವುಳ್ಳ ಲೋಕಗಳಲ್ಲಿ ವಾಸಿಸುತ್ತಾರೆ.ಅವರಿಗೆ ಯಾವ ಲೋಕಗಳಲ್ಲಿಯೂ ಸ್ವಚ್ಛಂದ ಗತಿಯಿರುವುದಿಲ್ಲ.(ಪುಟ 367) 62)ಆತ್ಮರತಿ ಎಂದರೆ ಆತ್ಮನಲ್ಲಿಯೇ ರಮಿಸುವವನು.ಆತ್ಮಕ್ರೀಡ ಎಂದರೆ ಆತ್ಮನಲ್ಲಿಯೇ ಕ್ರೀಡಿಸುವವನು. ದೇಹಸಾಧನವಾಗಲೀ ಅಥವಾ ಬಾಹ್ಯಸಾಧನವಾಗಲಿ ಬೇಕಿಲ್ಲ.ಆತ್ಮಮಿಥುನವೆಂದರೆ ದ್ವಂದ್ವದಿಂದ ಉಂಟಾವುವ ಸುಖ.ಈ ಸುಖವು ಜ್ಞಾನಿಗೆ ದ್ವಂದ್ವದ ಅಪೇಕ್ಷೆಯಿಲ್ಲದೆ ಉಂಟಾಗುತ್ತದೆ.ಅಜ್ಞಾನಿಗಳಿಗೆ ವಿಷಯಗಳಿಂದಲೇ ಉಂಟಾಗುತ್ತದೆ.(ಪುಟ 367) 63) ಆದರೆ ಆನಂದವು ಆತ್ಮನಿಮಿತ್ತದಿಂದಲೇ ಸವ೯ದಾ ಸವ೯ ಪ್ರಕಾರದಿಂದ ಉಂಟಾಗುತ್ತದೆ.ಇಂಥ ಜ್ಞಾನಿಯು ಬದುಕಿರುವಾಗಲೇ ಸ್ವರಾಜ್ಯದಲ್ಲಿ ಅಭಿಷಿಕ್ತನಾಗಿದ್ದು ದೇಹವು ಹೋದಮೇಲೂ ಸ್ವರಾಟ್ ಆಗುತ್ತಾನೆ.ಎಂದರೆ ಅವನ ಸ್ಥಿತಿಯು ಯಾವ ವಿಧದಲ್ಲಿಯೂ ಬದಲಾವಣೆಯನ್ನು ಹೊಂದುವುದಿಲ್ಲ. (ಪುಟ 367) ಇಪ್ಪತ್ತಾರನೆಯ ಖಂಡ: 64)ಸನತ್ಕುಮಾರ:ಯಾವನು ಹೀಗೆ ನೋಡುತ್ತಾನೆಯೊ,ಮನನ ಮಾಡುತ್ತಾನೆಯೊ ಅರಿಯುತ್ತಾನೆಯೊ ಅವನಿಗೆ ಆತ್ಮನಿಂದಲೇ ಪ್ರಾಣವು ಉಂಟಾಗುತ್ತದೆ.ಆತ್ಮನಿಂದಲೇ ಆಶೆಯುಂಟಾಗುತ್ತದೆ.ಆತ್ಮನಿಂದಲೇ ಸ್ಮøತಿಯುಂಟಾಗುತ್ತದೆ.ಹೀಗೆ ಆಕಶ,ತೇಜಸ್ಸು,ನೀರು,ಆವಿಭಾ೯ವತಿರೋಭಾವಗಳು,ಅನ್ನ,ಬಲ,ವಿಜ್ಞಾನ,ಧ್ಯಾನ,ಚಿತ್ತ,ಸಂಕಲ್ಪ,ಮನಸ್ಸು,ವಾಕ್ಕು,ನಾಮ,ಮಂತ್ರಗಳು,ಕಮ೯ಗಳು-ಇವೆಲ್ಲವೂ ಆತ್ಮನಿಂದಲೆ ಉಂಟಾಗುತ್ತವೆ. (ಪುಟ 368) 65) ಹೀಗೆ ಸಮಸ್ತ ವ್ಯವgಹಾರವೂ ಸ್ವಾರಾಜ್ಯವನ್ನುಹೊಂದಿದ ಜ್ಞಾನಿಗೆ ತನ್ನ ಆತ್ಮನಿಂದಲೇ ಉಂಟಾಗುತ್ತಿರುವುದು.(ಪುಟ 36೯) 66) ವಿದ್ಯಾ ಫಲದ ವಿಷಯದಲ್ಲಿ ಈ ಶ್ಲೋಕವಿದೆ. "ತತ್ವವಿದನು ಮೃತ್ಯುವನ್ನು ನೋಡುವುದಿಲ್ಲ.ರೋಗವನ್ನಾಗಲಿ ದುಃಖವನ್ನಾಗಲಿ ನೋಡುವುದಿಲ್ಲ.ತತ್ವವಿದನು ಎಲ್ಲವನ್ನೂ ನೋಡುತ್ತಾನೆ.ಸವ೯ ಪ್ರಕಾರದಿಂದಲೂ ಎಲ್ಲವನ್ನೂ ಪಡೆಯುತ್ತಾನೆ."(ಪುಟ 370) 67) "ಸೃಷ್ಟಿಗೆ ಮೊದಲು ತತ್ವವಿದನು ಅದ್ವಯನಾಗಿರುತ್ತಾನೆ.ಅನಂತರ ಸೃಷ್ಟಿಕಾಲದಲ್ಲಿ ಮೂರುಬಗೆಯಾಗುತ್ತಾನೆ.ಐದು,ಏಳು,ಒಂಬತ್ತು,ಹನ್ನೊಂದು ನೂರಾಹತ್ತು,ಹತ್ತು ಸಾವಿರದ ಇಪ್ಪತ್ತು ಬಗೆ ಎನಿಸುತ್ತಾನೆ."(ಪುಟ 370) 68)"ಆಹಾರವು ಶುದ್ಧವಾದಾಗ ಅಂತಃಕರಣವು ಶುದ್ಧವಾಗುತ್ತದೆ.ಅಂತಃಕರಣವು ಶುದ್ಧವಾದಾಗ ಸ್ಮøತಿಯು ಅವಿಚ್ಛಿನ್ನವಾಗುತ್ತದೆ.ಸ್ಮøತಿಯನ್ನು ಪಡೆದಾಗ ಎಲ್ಲ ಗ್ರಂಥಿಗಳ ವಿನಾಶವು ಆಗುತ್ತದೆ.(ಪುಟ 370) 6೯)ರಾಗಾದಿ ದೋಷಗಳಿಂದ ವಿಮುಕ್ತನಾದ ನಾರದನಿಗೆ ಭಗವಂತನಾದ ಸನತ್ಕುಮಾರನು ತಮಸ್ಸಿನ ಆಚೆಯ ದಡವನ್ನು ತೋರಿಸಿದನು.ಅವನನ್ನು ಸ್ಕಂದನೆಂದು ಕರೆಯುತ್ತಾರೆ.ಅವನನ್ನು ಸ್ಕಂದನೆಂದು ಕರೆಯುತ್ತಾರೆ.(ಪುಟ370) 70)ಪುನಃ ಸಂಹಾರ ಕಾಲದಲ್ಲಿಮೂಲವಾಗಿರುವ ತನ್ನ ಪಾರಮಾಥಿ೯ಕವಾದ ಅದ್ವಯ ಭಾವವನ್ನೇ ಪಡೆಯುತ್ತಾನೆ.(ಪುಟ 370) 71)ಇಲ್ಲಿ ಆಹಾರವೆಂದರೆ ಶಬ್ದವೇ ಮೊದಲಾದ ವಿಷಯಗಳ ಜ್ಞಾನ.ಇವ್ಗಳನ್ನು ಭೋಕ್ತøವು ಒಳಗೆ ತೆಗೆದುಕೊಳ್ಳುವುದರಿಂದ ಆಹಾರವೆನಿಸಿದೆ.ರಾಗ-ದ್ವೇಶ ಮೋಹಗಳೆಂಬ ದೋಷಗಳ ಸ್ಪಶ೯ವಿಲ್ಲದ ವಿಷಯ ಜ್ಞಾನ ಎಂದಥ೯.(ಪುಟ 370) 72)ರಾಗದ್ವೇಷಾದಿ ದೋಷಗಳಿಗೆ 'ಕಷಾಯ'ವೆಂದು ಹೆಸರು.ಏಕೆಂದರೆ ಇದು ಸತ್ವೀ ಕಷಾಯವು ಜ್ಞಾ ವೈರಾಗ್ಯಭ್ಯಾಸ ರೂಪವಾದ ಕ್ಷಾರದಿಂದ ನಾಶವಾಗುತ್ತದೆ.ಏಕೆಂದರೆ ಅದು ಸತ್ವಕ್ಕೆ ಬಣ್ಣವನ್ನುಂಟು ಮಾಡುತ್ತದೆ.(ಪುಟ 370) 73) 'ಭೂತಗಳ ಉತ್ಪತ್ತಿ ಪ್ರಲಯ ಗತಿ ವಿಗತಿ ವಿದ್ಯೆ,ಅವಿದ್ಯೆ,ಇವುಗಳನ್ನು ಯಾವನು ಅರಿತುಕೊಂಡಿರುವನೊ ಅವನನ್ನು ಭಗವಂತನೆಂದು ಕರೆಯುತ್ತಾರೆ.(ಪುಟ 371) ,,,,,,,,,,,,,,,,,,,,,,,,,,,,,,,,,,,,,,,,,,,ಏಳನೆಯ ಅಧ್ಯಾಯ ಸಂÀಪೂಣ೯ವಾಯಿತು,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,, ಅಧ್ಯಾಯ ಎಂಟು: 1) ಈ ಬ್ರಹ್ಮಪುರದಲ್ಲಿ ಸಣ್ಣದಾದ (ಹೃದಯ)ಪದ್ಮವೆಂಬ ಮನೆಯಿದೆ.ಅದರಲ್ಲಿ ಸಣ್ಣದಾದ ಒಂದು ಅಂತರಾಕಾಶವಿದೆ.ಅದರಲ್ಲಿ ಯಾವುದಿದೆಯೊ ಅದನ್ನು ಅನ್ವೇಶಿಸಬೇಕು.ಅದನ್ನೇ ಅರಿತುಕೊಳ್ಳಲು ಬಯಸಬೇಕು.(ಪುಟ 372) 2) ಬ್ರಹ್ಮವಿದರಿಗೆ ವಿಷಯಗಳಿಂದ ಉಪರತಿಯು ತಾನೇ ಉಂಟಾಗಬಹುದಾಗಿದ್ದರೂ ಅನೇಕ ಜನ್ಮಗಳಲ್ಲಿ ಮಾಡಿದ ವಿಷಯಸೇವಾಭ್ಯಾಸದಿಂದ ಉಂಟಾದ ವಿಷಯ ತೃಷ್ಣೆಯನ್ನು ಕೂಡಲೇ ಹೋಗಲಾಡಿಸಲು ಕಷ್ಟವಾದುದರಿಂದ ಬ್ರಹ್ಮಚಯಾ೯ದಿ ಸಾಧನ ವಿಶೇಷವನ್ನು ವಿಧಿಸಬೇಕಾಗಿದೆ.(ಪುಟ 372) 3)ಗಂತೃಗಮನ ಗಂತವ್ಯವು ಆತ್ಮವಿದನಿಗೆ ಇಲ್ಲದ್ದರಿಂದ ಶರೀರ ಸ್ಥಿತಿಗೆ ಬೇಕಾದ ಅವಿದ್ಯಾದಿ ನಿಮಿತ್ತವು ಕ್ಷಯವಾಗಲಾಗಿ ಅವನಿಗೆ ಮಿಂಚು ಗಗನದಲ್ಲಿ ಲೀನವಾಗುವಂತೆ-ತನ್ನ ಆತ್ಮನಲ್ಲಿಯೇ ಲಯವುಂಟಾಗುವುದು.(ಪುಟ 373) 4) ಆದರೆ ಗಂತೃ-ಗಮನಾದಿ ವಾಸನೆಯಿಂದ ಕೂಡಿ ಹೃದಯ ದೇಶದಲ್ಲಿ ಸಗುಣ ಬ್ರಹ್ಮವನ್ನು ಉಪಾಸಿಸುವವರಿಗೆ ನೆತ್ತಿಯ ನಾಡಿಯ ಮೂಲಕ'ಗತಿ'ಯನ್ನು ಹೇಳಬೇಕಾಗಿದೆ.ಇವುಗಳಿಗಾಗಿ ಎಂಡನೆಯ ಅಧ್ಯಾಯವನ್ನು ಪ್ರಾರಂಭಿಸಿದೆ.(ಪುಟ 373) 5)'ದಿಕ್ಕು ,ದೇಶ,ಗುಣ,ಗತಿ,ಫಲ ಭೇದಗಳಿಲ್ಲದ ಪರಮಾಥ೯ ಸತ್ ಆದ ಅದ್ವಯ ಬ್ರಹ್ಮವು ಮಂದಮತಿಗಳಿಗೆ ಅಸತ್ತಿನಂತೆ ತೋರುತ್ತದೆ.ಈ ಮಂದ ಬುದ್ಧಿಗಳು ಮೊದಲು ಸನ್ಮಾಗ೯ದಲ್ಲಿರಲಿ,ಅನಂತರ ಕ್ರಮೇಣ ಪರಮಾಥ೯ ತತ್ವವನ್ನು (ಸತ್ತನ್ನು) ತಿಳಿಸಿಕೊಡುತ್ತೇವೆ' ಎಂಬುದು ಶ್ರುತಿಯ ಅಭಿಪ್ರಾಯ.(373) 6)ಬ್ರಹ್ಮಕ್ಕೆ ಆಕಾಶವೆಂಬುದು ಪ್ರಸಿದ್ಧವಾದ ಹೆಸರು.'ಆಕಾಶವು ನಾಮ ರೂಪಗಳ ನಿವಾ೯ಹಕವು'ಎಂದು ಶ್ರುತಿಯೇ ಹೇಳುತ್ತದೆ.(ಆಜಾಶೋ ವೈ ನಾಮ(8.14.1)(ಪುಟ 373). 7)ಶಿಷ್ಯರು ಆಚಾಯ೯ನನ್ನು ಕುರಿತು " ಈ ಬ್ರಹ್ಮಪುರದಲ್ಲಿ ಸಣ್ಣದಾದ (ಹೃದಯ)ಪದ್ಮವೆಂಬ ಮನೆಯಿದೆ.ಅದರಲ್ಲಿ ಸನ್ನದಾದ ಒಂದು ಅಂತರಾಕಾಶವಿದೆ.ಅದರಲ್ಲಿ ಯಾವುದಿದೆಯೊ ಅದನ್ನು ಅನ್ವೇಶಿಸಬೇಕು.ಅದನ್ನೇ ಅರಿತುಕೊಳ್ಳಲು ಬಯಸಬೇಕು" ಎಂದು ಹೇಳಿದಿರಲ್ಲ ,ಅಂತಹುದು ಅಲ್ಲೇನಿದೆ.?ಎಂದು ಕೇಳಿದರೆ ಅವನು ಹೀಗೆ ಹೇಳಬೇಕು.'ಆ ಆಕಾಶವು ಎಷ್ಟು ದೊಡ್ಡದಾಗಿದೆಯೊ ಹೃದಯದಲ್ಲಿರುವ ಈ ಆಕಾಶವು ಅಷ್ಟೇ ದೊಡ್ಡದಾಗಿದೆ.ಇದರಲ್ಲಿ ದ್ಯುಲೋಕ -ಪೃಥ್ವಿಗಳೆರಡೂ ಅಂತಗ೯ತವಾಗಿವೆ.ಅಗ್ನಿ ವಾಯುಗಳಿಬ್ಬರೂ ಸೂಯ೯ಚಂದ್ರರಿಬ್ಬರೂ ,ಮಿಂಚು- ನಕ್ಷತ್ರಗಳೂ ಮತ್ತು ಇಲ್ಲಿ ದೇಹವುಳ್ಳ ಆತ್ಮನಿಗೆ ಏನೇನಿರುವುದೊ ಎಲ್ಲವೂ ಇದರಲ್ಲಿ ಅಂತಗ೯ತವಾಗಿವೆ.(ಪುಟ375) 8)ಶಿಷ್ಯನು ಆಚಾಯ೯ರನ್ನು ಕುರಿತು'ಈ ಬ್ರಹ್ಮಪುರದಲ್ಲಿ ಎಲ್ಲವೂ ಅಂತಗ೯ತವಾಗಿದ್ದರೆ,ಎಲ್ಲ ಪ್ರಾಣಿಗಳು ಎಲ್ಲ ಕಾಮಗಳು (ಅಂತಗ೯ತವಾಗಿದ್ದರೆ)ಈ ಶರೀರವು ಮುಪ್ಪನ್ನು ಹೊಂದಿದಾಗ ಅಥವಾ ನಾಶವಾದಾಗ ಏನು ಉಳಿದುಕೊಳ್ಳುತ್ತದೆ.?ಎಂದು ಕೇಳಿದರೆ ಹೀಗೆ ಹೇಳಬೇಕು:ಶರೀರದ ಈ ಮುಪ್ಪಿನಿಂದ ಆಕಾಶವೆಂಬ ಈ ಬ್ರಹ್ಮವು ಮುಪ್ಪನ್ನು ಹೊಂದುವುದಿಲ್ಲ.ಶರೀರದ ವಧೆಯಿಂದ ಇದು ನಾಶವಾಗುವುದಿಲ್ಲಲ್ಲ. ಇದು ಸತ್ಯವಾದ ಬ್ರಹ್ಮಪುರವು..ಇದರಲ್ಲಿ ಕಾಮಗಳು ಅಂತಗ೯ತವಾಗಿವೆ.ಇದು ಪಾಪ ಮುಪ್ಪು ಮೃತ್ಯು ಹಸಿವು ಶೋಕ ಬಾಯಾರಿಕೆ ಇವುಗಳಿಲ್ಲದವನಾದ ಸತ್ಯಕಾಮನಾದ ಸತ್ಯಸಂಕಲ್ಪನಾದ ಆತ್ಮನು.(ಪುಟ 376) ೯) ಆದರೆ ಶರೀರವು ಅನೃತವಾದ ಬ್ರಹ್ಮಪುರ.ಬ್ರಹ್ಮವೇ ಸತ್ಯವಾದ ಬ್ರಹ್ಮಪುರ.(ಪುಟ 377) 10)'ನೇತಿ ನೇತಿ'(ಬೃ.ಉ.2.3.6) 'ಇದಲ್ಲ ಇದಲ್ಲ'(ಪುಟ 377) 11)ಹೇಗೆ ಇಲ್ಲಿ ಕಮಾ೯ಜಿ೯ತವಾದ ಭೋಗವು ಕ್ಷೀಣವಾಗುತ್ತದೆಯೊ ಹಾಗೆಯೇ (ಅಗ್ನಿಹೋತ್ರಾದಿ) ಪುಣ್ಯದಿಂದ ಅಜಿ೯ತವಾದ ಭೂಗವು ಕ್ಷೀಣವಾಗುತ್ತದೆ.ಆದರೆ ಯಾರು ಇಲ್ಲಿ ಆತ್ಮನನ್ನೂ ಈ ಸತ್ಯವಾದ ಕಾಮಗಳನ್ನೂ ತಿಳಿದುಕೊಂಡು ಹೋಗುವರೊ ಅವರಿಗೆ ಸವ೯ಲೋಕಗಳಲ್ಲಿ ಸ್ವತಂತ್ರ ಗತಿಯಿರುತ್ತದೆ.(ಪುಟ 378) ಎರಡನೆಯ ಖಂಡ: 12)ಅವನು ಪಿತೃಲೋಕವನ್ನು ಬಯಸುವವನಾದರೆ ಅವನ ಸಂಕಲ್ಪದಿಂದಲೇ ಪಿತೃಗಳು ಏಳುತ್ತಾರೆ. ಅವನು ಆ ಪಿತೃಲೋಕ ಭೋಗದಿಂದ ಸಂಪನ್ನನಾಗಿ ಮಹಿಮೆಯನ್ನು ಅನುಭವಿಸುತ್ತಾನೆ(ಪುಟ 378). 13) ಅವನು ಮಾತೃಲೋಕವನ್ನು ಬಯಸುವವನಾದರೆ ಅವನ ಸಂಕಲ್ಪದಿಂದಲೇ ಮಾತೃಗಳು(ತಾಯಿಯರು) ಏಳುತ್ತಾರೆ.ಅವನು ಆ ಮಾತೃಲೋಕ ಭೋಗದಿಂದ ಸಂಪನ್ನನಾಗಿ ಮಹಿಮೆಯನ್ನು ಅನುಭವಿಸುತ್ತಾನೆ(37೯) 14) ಅವನು ಭ್ರಾತೃಲೋಕವನ್ನು ಬಯಸುವವನಾದರೆ ಅವನ ಸಂಕಲ್ಪದಿಂದಲೇ ಭ್ರಾತೃಗಳು(ತಾಯಿಯರು) ಏಳುತ್ತಾರೆ.ಅವನು ಆ ಭ್ರಾತೃಲೋಕ ಭೋಗದಿಂದ ಸಂಪನ್ನನಾಗಿ ಮಹಿಮೆಯನ್ನು ಅನುಭವಿಸುತ್ತಾನೆ(37೯) 15) ಅವನು ಸೋದರಿಯರ ಲೋಕವನ್ನು ಬಯಸುವವನಾದರೆ ಅವನ ಸಂಕಲ್ಪದಿಂದಲೇ ಸೋದರಿಯರು ಏಳುತ್ತಾರೆ.ಅವನು ಆ ಸೋದರಿಯರ ಲೋಕದ ಭೋಗದಿಂದ ಸಂಪನ್ನನಾಗಿ ಮಹಿಮೆಯನ್ನು ಅನುಭವಿಸುತ್ತಾನೆ(380) 16)ಅವನು ಸ್ನೇಹಿತರ ಲೋಕವನ್ನು ಬಯಸುವವನಾದರೆ ಅವನ ಸಂಕಲ್ಪದಿಂದಲೇ ಸ್ನೇಹಿತರು ಏಳುತ್ತಾರೆ.ಅವನು ಆ ಸ್ನೇಹಿತರ ಲೋಕದ ಭೋಗದಿಂದ ಸಂಪನ್ನನಾಗಿ ಮಹಿಮೆಯನ್ನು ಅನುಭವಿಸುತ್ತಾನೆ(380) 17)ಅವನು ಗಂದ-ಮಾಲೆಗಳ ಲೋಕವನ್ನು ಬಯಸುವವನಾದರೆ ಅವನ ಸಂಕಲ್ಪದಿಂದಲೇ ಗಂಧಮಾಲೆಗಳು ಏಳುತ್ತವೆ.ಅವನು ಆ ಗಂಧಮಾಲೆಗಳ ಲೋಕದ ಭೋಗದಿಂದ ಸಂಪನ್ನನಾಗಿ ಮಹಿಮೆಯನ್ನು ಅನುಭವಿಸುತ್ತಾನೆ(380) 18)ಅವನು ಅನ್ನಪಾನಗಳ ಲೋಕವನ್ನು ಬಯಸುವವನಾದರೆ ಅವನ ಸಂಕಲ್ಪದಿಂದಲೇ ಅನ್ನಪಾನಗಳು ಏಳುತ್ತವೆ.ಅವನು ಆ ಅನ್ನಪಾನಗಳ ಲೋಕದ ಭೋಗದಿಂದ ಸಂಪನ್ನನಾಗಿ ಮಹಿಮೆಯನ್ನು ಅನುಭವಿಸುತ್ತಾನೆ(380) 1೯)ಅವನು ಗೀತವಾದ್ಯಗಳ ಲೋಕವನ್ನು ಬಯಸುವವನಾದರೆ ಅವನ ಸಂಕಲ್ಪದಿಂದಲೇ ಗೀತವಾದ್ಯಗಳು ಏಳುತ್ತವೆ.ಅವನು ಆ ಗೀತವಾದ್ಯಗಳ ಲೋಕದ ಭೋಗದಿಂದ ಸಂಪನ್ನನಾಗಿ ಮಹಿಮೆಯನ್ನು ಅನುಭವಿಸುತ್ತಾನೆ(381) 20)ಅವನು ಸ್ತೀ ಲೋಕವನ್ನು ಬಯಸುವವನಾದರೆ ಅವನ ಸಂಕಲ್ಪದಿಂದಲೇ ಸ್ತ್ರೀಯರು ಏಳುತ್ತಾರೆ..ಅವನು ಆ ಸ್ತ್ರೀ ಲೋಕದ ಭೋಗದಿಂದ ಸಂಪನ್ನನಾಗಿ ಮಹಿಮೆಯನ್ನು ಅನುಭವಿಸುತ್ತಾನೆ(381) 21) ಯಾವನು ಯಾವ ಯಾವ ಪ್ರದೇಶವನ್ನು ಬಯಸುವನೊ ಯಾಯ ಕಾಮವನ್ನು ಬಯಸುವನೊ ಅವನ ಸಂಕಲ್ಪದಿಂದಲೇ ಅದು ಏಳುತ್ತದೆ. ಆದರೆ ಭೋಗದಿಂದ ಸಂಪನ್ನನಾಗಿ ಮಹಿಮೆಯನ್ನು ಸನುಭವಿಸುತ್ತಾನೆ.(ಪುಟ 381) ಮೂರನೆಯ ಖಂಡ: 22)ನಿಧಿ ಕ್ಷೇತ್ರವನ್ನು ಅರಿಯದವರು ಪುನಃ ಪುನಃಕ್ಷೇತ್ರದಲ್ಲಿ ಅಡಗಿರುವ ನಿಧಿಯಮೇಲೆಯೇ ನಡೆಯುತ್ತಿದ್ದರೂ ಅದನ್ನು ಹೇಗೆ ಪಡೆಯುವುದಿಲ್ಲವೊ ಹಾಗೆಯೇ ಈ ಜಂತುಗಳಲ್ಲಿ ಹೃದಯಾಕಾಶವೆಂಬ ಬ್ರಹ್ಮಲೋಕವನ್ನು ಪ್ರತಿದಿನವೂ ಸುಷುಪ್ತಿಕಾಲದಲ್ಲಿ ಹೋಗಿ ಸೇರುತ್ತಿದ್ದರೂ ಅದನ್ನು ಪಡೆದುಕೊಳ್ಳದೆ ಇರುವರು.ಏಕೆಂದರೆ ಇವರು ಅನೃತದಿಂದ ಒಯ್ಯಲ್ಪಟ್ಟಿರುವರು.(ಪುಟ 383) 23)ಆ ಈ ಆತ್ಮನೇ ಹೃದಯದಲ್ಲಿ ಇರುವುದು ಹೃದಯಕ್ಕೆ ಹೃದಿ ಅಯಂ ಎಂಬುದು ಶಬ್ದ ನಿಷ್ಪತ್ತಿಯ ವಿವರಣೆ.ಆದುದರಿಂದ ಆತ್ಮನೇ ಹೃದಯವು.ಹೀಗೆ ಅರಿತುಕೊಂಡಿರುವವನು ಶಬ್ದಲೋಕವನ್ನು (ಎಂದರೆ ಹೃದಯಬ್ರಹ್ಮವನ್ನು )ಪ್ರತಿದಿನವೂ ಸೇರುತ್ತಾನೆ.(ಪುಟ 384) 24)ದೇಹಪಾತವಾದ ಮೇಲೂ ಉಪಾಸನಾ ಫಲವು ಅವಶ್ಯವಾಗಿ ಉಪಾಸಕನಿಗೆ ಆಗುತ್ತದೆ.(ಪುಟ 384) 25)ಇನ್ನು ಈ ಸಂಪ್ರಸಾದ ಗುಣವುಳ್ಳ ಆತ್ಮನು ಶರೀರದಿಂದ ಎದ್ದು ಪರಮಜ್ಯೋತಿಯನ್ನು ಸೇರಿ,ತನ್ನ ಸ್ವರೂಪದಲ್ಲಿ ಸ್ಥಿತಿಯನ್ನು ಪಡೆಯುತ್ತಾನೆ.ಇವನೇ ಆತ್ಮನು' ಎಂದು ಆಚಾಯ೯ನು ಹೇಳಿದನು.ಇದೇ ಅಮೃತವು,ಅಭಯವು,ಇದೇ ಬ್ರಹ್ಮವು ಆ ಈ ಬ್ರಹ್ಮಕ್ಕೆ ಸತ್ಯವೆಂದು ಹೆಸರು.(ಪುಟ 384) 26)ಅಶರೀರತ್ವವೇ ಆತ್ಮನ ಸ್ವರೂಪವು.(ಪುಟ 385) 27)(ಬ್ರಹ್ಮದ ಸತ್ಯವೆಂಬ ಹೆಸರು)ಸ ತೀ ಯಮ್ ಎಂಬ ಮೂರು ಅಕ್ಷರಗಳನ್ನು ಒಳಗೊಂಡಿದೆ.ಇಲ್ಲಿ ಯಾವುದು ಸತ್ ಎಂಬುದೊ ಅದು ಅಮೃತವು.ಯಾವುದು ತೀ ಎಂಬುದೊ ಅದು ಮತ್ಯ೯ವು ಮತ್ತು ಯಾವುದು ಯಮ್ ಎಂಬುದೊ ಅದರಿಂದ ಎರಡನ್ನೂ ವಶದಲ್ಲಿಟ್ಟಿರುತಾನೆ.ಇದರಿಂದ ಎರಡನ್ನೂ ವಶದಲ್ಲಿಟ್ಟಿರುವುದರಿಂದ ಯಮ್ ಎನಿಸಿದೆ.ಹೀಗೆ ಅರಿತುಕೊಂಡವನು ಪ್ರತಿದಿನವೂ ಸ್ವಗ೯ಲೋಕಕ್ಕೆ ಹೋಗುತ್ತಾನೆ.(ಪುಟ 384) ನಾಲ್ಕನೆಯ ಖಂಡ: 28)ಈ ಲೋಕಗಳು ನಾಶವಾಗದಿರಲು ಆತ್ಮನು ಸೇತುವೂ ವಿಧೃತಿಯೂ ಆಗಿದ್ದಾನೆ.ಅಹೋ ರಾತ್ರಿಗಳು ಈ ಸೇತುವನ್ನು ದಾಟುವುದಿಲ್ಲ. ಮುಪ್ಪು,ಮೃತ್ಯು ಶೋಕ,ಸುಕೃತ,ದುಷ್ಕøತಿವು ಈ ಸೇತುವನ್ನು ದಾಟುವುದಿಲ್ಲ. ಎಲ್ಲ ಪಾಪಗಳೂ ಇದರಿಂದ ಹಿಂತಿರುಗುವುವು.ಏಕೆಂದರೆ ಬ್ರಹ್ಮಲೋಕವು ಪಾಪರಹಿತವಾಗಿದೆ.(ಪುಟ 387) 2೯)ಆದುದರಿಂದಲೇ ಈ ಆತ್ಮನೆಂಬ ಸೇತುವನ್ನು ದಾಟಿದರೆ ಅಂಧನಾಗಿದ್ದರೂ ಅಂಧನಲ್ಲದವನಾಗುವನು.ಶರೀರವಿದ್ದಾಗ ಹೊಡೆಯಲ್ಪಟ್ಟವನಾಗಿದ್ದರೂ ಹೊಡೆಯಲ್ಪಡದವನಾಗುವನು.ರೋಗಾದಿಗಳಿಂದ ಸಂತಪ್ತನಾಗಿದ್ದರೂ ಅಸಂತಪ್ತನಾಗುವನು.ಆದುದರಿಂದಲೇ ಈ ಸೇತುವನ್ನು ದಾಟಿದರೆ ತಮೋರೂಪವಾದ ರಾತ್ರಿಯೂ ಹಗಲೇ ಆಗುತ್ತದೆ.ಏಕೆಂದರೆ ಈ ಬ್ರಹ್ಮಲೋಕವು ಸದಾ ಪ್ರಕಾಶಿಸುತ್ತಲೇ ಇರುತ್ತದೆ.(ಪುಟ 387) 30)ಯಾರು ಇಲ್ಲಿ ಬ್ರಹ್ಮಲೋಕವನ್ನು ಬ್ರಹ್ಮಚಯ೯ದಿಂದ ತಿಳಿದುಕೊಳ್ಳುವರೊ ಅವರಿಗೇ ಈ ಬ್ರಹ್ಮಲೋಕವು ಇರುತ್ತದೆ.ಅವರಿಗೇ ಸವ೯ಲೋಕಗಳಲ್ಲಿಯೂ ಸ್ವತಂತ್ರಗತಿಯಿರುತ್ತದೆ.(ಪುಟ 388) ಐದನೆಯ ಖಂಡ: 31)ಯಾವುದನ್ನು ಯಜ್ಞ ಎಂದು ಹೇಳುವರೊ ಅದು ಬ್ರಹ್ಮಚಯ೯ವೇ. ಏಕೆಂದರೆ ಜ್ಞಾತೃವಾದವನು ಅದನ್ನು ಬ್ರಹ್ಮಚಯ೯ದಿಂದಲೇ ಹೊಂದುತ್ತಾನೆ.ಯಾವುದನ್ನು ಇಷ್ಟ ಎಂದು ಹೇಳುವರೊ ಅದು ಬ್ರಹ್ಮಚಯ೯ವೇ.ಏಕೆಂದರೆ ಬ್ರಹ್ಮಚಯ೯ದಿಂದಲೇ ಈಶ್ವರನನ್ನು ಪೂಜಿಸಿ ಆತ್ಮನನ್ನು ಹೊಂದುತ್ತಾನೆ.(ಪುಟ 38೯) 32)ಯಜ್ಞದ ಫಲವನ್ನೇ ಬ್ರಹ್ಮಚಾರಿಯು ಪಡೆದುಕೊಳ್ಳುತ್ತಾನೆ.ಆದುದರಿಂದ ಯಜ್ಞವೂ ಬ್ರಹ್ಮಚಯ೯ವೇ. 'ಯಃ ಜ್ಞಾತಾ'ಮತ್ತು 'ಯಜ್ಞಃ' ಎಂಬಲ್ಲಿಯ ಯ ಮತ್ತು ಜ್ಞ ಸಾಮಾನ್ಯವಾಗಿರುವುದರಿಂದ ಯಜ್ಞವು ಬ್ರಹ್ಮಚಯ೯ವೇ.(ಪುಟ 38೯) 33)ಯಾವುದನ್ನು ಸತ್ತ್ರಾಯಣ ಎಂದು ಹೇಳುವರೊ ಅದು ಬ್ರಹ್ಮಚಯ೯ವೇ.ಏಕೆಂದರೆ ಪರಮಾತ್ಮನಿಂದ ತನ್ನ ರಕ್ಷಣೆಯನ್ನು ಬ್ರಹ್ಮಚಯ೯ದ ಮೂಲಕವೇ ಪಡೆಯುತ್ತಾನೆ.ಯಾವುದನ್ನು ಮೌನ ಎಂದು ಹೇಳುವರೊ ಅದು ಬ್ರಹ್ಮಚಯ೯ವೇ.ಏಕೆಂದರೆ ಆತ್ಮನನ್ನು ಬ್ರಹ್ಮಚಯ೯ದಿಂದಲೇ ಅರಿತುಕೊಂಡು ಧ್ಯಾನಿಸುತ್ತಾನೆ.(ಪುಟ 38೯) 34)ಯಾವುದನ್ನು ಉಪವಾಸ ಎನ್ನುವರೊ ಅದು ಬ್ರಹ್ಮಚಯ೯ವೇ.ಏಕೆಂದರೆ ಯಾವುದನ್ನು ಬ್ರಹ್ಮಚಯ೯ದಿಂದ ಪಡೆದುಕೊಳ್ಳುವರೊ ಆ ಆತ್ಮನು ನಾಶವಾಗುವುದಿಲ್ಲ.ಯಾವುದನ್ನು ಅರಣ್ಯವಾಸ ಎಂದು ಹೇಳುವರೊ ಅದು ಬ್ರಹ್ಮಚಯ೯ವೇ.ಆ ಬ್ರಹ್ಮಲೋಕದಲ್ಲಿ ಎಂದರೆ ಈ ಪೃಥ್ವಿಯಿಂದ ಮೂರನೆಯದಾದ ದ್ಯುಲೋಕದಲ್ಲಿ- 'ಅರ' ಮತ್ತು 'ಣ್ಯ'ಎಂಬ ಸರೋವರಗಳಿವೆ.ಅಲ್ಲಿ ಐರಂಮದೀಯ ಎಂಬ ಸರಸ್ಸಿದೆ.ಅಲ್ಲಿ ಸೋಮಸವನ ಎಂಬ ಅಶ್ವತ್ಥವಿದೆ.ಅಲ್ಲಿ ಬ್ರಹ್ಮನ 'ಅಪರಾಜಿತಾ'ಎಂಬ ಪುರವಿದೆ.ಅಲ್ಲಿ ಬ್ರಹ್ಮನ ಮೂಲಕ ವಿಶೇಷರೂಪದಿಂದ ನಿಮಿ೯ತವಾದ ಹಿರಣ್ಮಯ ಮಂಟಪವಿದೆ. ಆರನೆಯ ಖಂಡ(ನಾಡೀ ಖಂಡ): 35)ಈ ಹೃದಯದ ನಾಡಿಗಳು ಕಂದು,ಬಿಳಿ,ನೀಲಿ,ಹಳದಿ, ಕೆಂಪು ಈ ಬಣ್ಣಗಳ ಸೂಕ್ಷ್ಮರಸದಿಂದ ತುಂಬಿರುತ್ತವೆ.ಹಾಗೆಯೇ ಈ ಆದಿತ್ಯನೂ ಕಂದುಬಣ್ಣದವನೂ ಬಿಳಿಯ ವಣ೯ದವನೂ ನೀಲಿ ವಣ೯ದವನೂ ಹಳದಿಯ ಬಣ್ಣದವನೂ ಕೆಂಪು ಬಣ್ಣದವನೂ ಆಗಿರುತ್ತಾನೆ.(ಪುಟ 3೯2) 36)ಇನ್ನು ಯಾವಾಗ ಈ ಶರೀರದಿಂದ ಉತ್ಕ್ರಮಿಸುವನೊ ಆಗ ಈ ರಶ್ಮಿಗಳಿಂದಲೇ ಮೇಲಕ್ಕೆ ಹೋಗುತ್ತಾನೆ.ಅಥವಾ ಓಂ ಎಂದು ಹೇಳುತ್ತಾ ಮೇಲಕ್ಕೆ ಹೋಗುತ್ತಾನೆ.ಅವನ ಮನಸ್ಸು ಎಷ್ಟುಬೇಗ ಹೋಗುವುದೊ ಅಷ್ಟೇ ಬೇಗ ಆದಿತ್ಯನನ್ನು ಸೇರುತ್ತಾನೆ.ಇವನೇ ಬ್ರಹ್ಮಲೋಕದ ದ್ವಾರವು.ಜ್ಞಾನಿಗಳಿಗೆ ಪ್ರವೇಶ,ಅಜ್ಞಾನಿಗಳಿಗೆ ತಡೆ.೯ಪುಟ 3೯5) 37)ಈ ವಿಷಯದಲ್ಲಿ ಈ ಶ್ಲೋಕವಿದೆ.'ಹೃದಯಕ್ಕೆ ನೂರೊಂದು ನಾಡಿಗಳಿವೆ.ಅವುಗಳಲ್ಲಿ ಒಂದು ನೆತ್ತಿಯನ್ನು ಭೇದಿಸಿಕೊಂಡು ಹೊರಟಿರುವುದು.ಅದರ ಮೂಲಕ ಹೋಗುವವನು ಅಮೃತತ್ವವನ್ನು ಪಡೆಯುತ್ತಾನೆ.ಎಲ್ಲ ಕಡೆಯಲ್ಲಿಯೂ ಹರಡಿರುವ ಇತರ ನಾಡಿಗಳು ಸಂಸಾರಕ್ಕೆ ಕಾರಣವಾಗಿರುತ್ತವೆ.(ಪುಟ 3೯6) ಏಳನೆಯ ಖಂಡ:(ಇಂದ್ರ ವಿರೋಚನ ಪ್ರಜಾಪತಿ ಸಂವಾದ) 38)ಪ್ರಜಾಪತಿಯು ಹೇಳಿದನು:ಯಾವ ಆತ್ಮನು ಪಾಪರಹಿತನೊ, ಮುಪ್ಪಿಲ್ಲದವನೂ,ಮೃತ್ಯು ರಹಿತನೂ ಶೋಕರಹಿತನೂ ಹಸಿವಿಲ್ಲದವನೂ ಬಾಯಾರಿಕೆ ಇಲ್ಲದವನೂ ಸತ್ಯಕಾಮನೂ ಸತ್ಯ ಸಂಕಲ್ಪನೂ ಆಗಿರುವನೊ ಅವನನ್ನೇ ಅನ್ವೇಶಿಸಬೇಕು.ಯಾವನು ಈ ಆತ್ಮನನ್ನು ಕಂಡುಹಿಡಿದು ಅರಿತುಕೊಳ್ಳುವನೊ ಅವನು ಸವ೯ಲೋಕಗಳನ್ನೂ ಸವ೯ಕಾಮಗಳನ್ನೂ ಪಡೆದುಕೊಳ್ಳುತ್ತಾನೆ.(ಪುಟ 3೯7) 3೯)'ಈ ಸಂಪ್ರಸಾದ ಗುಣವುಳ್ಳ ಆತ್ಮನು ಶರೀರದಿಂದ ಎದ್ದು ಪರಂಜ್ಯೋತಿಯನ್ನು ಸೇರಿ ತನ್ನ ಸ್ವರೂಪದಲ್ಲಿ ಸ್ಥಿತಿಯನ್ನು ಪಡೆಯುತ್ತಾನೆ.ಇವನೇ ಆತ್ಮನು'(8.3.4).(ಪುಟ 387). 40) ಪ್ರಜಾಪತಿಯ ಆ ಮಾತನ್ನು ದೇವಾಸುರರಿಬ್ಬರೂ ಕೇಳಿದರು'.ಸರಿ, ಯಾವ ಆತ್ಮನನ್ನು ಹುಡುಕಿದರೆ ಸವ೯ಲೋಕಗಳನ್ನೂ ಸವ೯ಕಾಮಗಳನ್ನೂ ಹೊಂದುತ್ತಾನೆಯೊ ಆ ಆತ್ಮನನ್ನೇ ಅನ್ವೇಶಿಸೋಣ' ಎಂದು ಅವರು ಕೇಳಿಕೊಂಡರು.ದೇವತೆಗಳಲ್ಲಿ ಇಂದ್ರನೇ ಹೊರಟನು.ಅಸುರರಲ್ಲಿ ವಿರೋಚನನು ಹೊರಟನು.ಅವರು ಒಬ್ಬರಿಗೊಬ್ಬರು ತಿಳಿಸದೆಯೇ ಸಮಿತ್ಪಾಣಿಗಳಾಗಿ ಪ್ರಜಾಪತಿಯ ಸಮೀಪಕ್ಕೆ ಬಂದರು.(ಪುಟ 3೯೯) 41)ಅವರಿಬ್ಬರೂ ಮೂವತ್ತೆರಡು ವಷ೯ಗಳವರೆಗೆ ಬ್ರಹ್ಮಚಯ೯ ವಾಸವನ್ನು ಮಾಡಿದರು.'ಏನನ್ನು ಬಯಸುತ್ತ ವಾಸಿಸಿದಿರಿ?'ಎಂದು ಪ್ರಜಾಪತಿಯು ಅವರನ್ನು ಕೇಳಿದನು.'ಆತ್ಮನನ್ನು ಬಯಸುತ್ತ ಇಲ್ಲಿ ವಾಸಿಸಿದೆವು ಎಂದು ಹೇಳಿದನು.(ಪುಟ 400) 42)ಪ್ರಜಾಪತಿಯು ಅವರಿಗೆ ಹೇಳಿದನು.ಕಣ್ಣಿನಲ್ಲಿ ಯಾವ ಪುರುಷನು ಕಾಣಿಸಿಕೊಳ್ಳುತ್ತಾನೋ ಅವನೇ ಆತ್ಮನು.ಇದೇ ಅಮೃತವು, ಅಭಯವು;ಇದೇ ಬ್ರಹ್ಮವು.(ಪುಟ 400) 43)ಅವರು ಪ್ರಶ್ನಿಸಿದರು:ಅವರು ಪ್ರಶ್ನಿಸಿದರು ಹಾಗಾದರೆ ಭಗವಂತನೆ ನೀರಿನಲ್ಲಿಯೂ ಮತ್ತು ಕನ್ನಡಿಯಲ್ಲಿಯೂ ಕಂಡುಬರುತ್ತಿರುವ ಇವರಲ್ಲಿ ಆತ್ಮನು ಯಾರು? ಪ್ರಜಾಪತಿ ಅವನೇ ಇವುಗಳಲ್ಲೆಲ್ಲ ಕಂಡುಬರುತ್ತಾನೆ.(ಪುಟ 401) ಎಂಟನೆಯ ಖಂಡ: 44) ನೀರು ತುಂಬಿರುವ ಒಂಉ ಪಾತ್ರೆಯಲ್ಲಿನಿಮ್ಮನ್ನು ನೋಡಿಕೊಳ್ಳಿರಿ ಮತ್ತು ಆತ್ಮನ ವಿಷಯದಲ್ಲಿ ಏನನ್ನು ತಿಳಿಯುವುದಿಲ್ಲವೊ ಅದನ್ನು ನನಗೆ ಹೇಳಿರಿ.ಅವರು ನೀರಿನ ಪಾತ್ರೆಯಲ್ಲಿ ತಮ್ಮನ್ನು ನೋಡಿಕೊಂಡರು.ಅನಂತರ ಪ್ರಜಾಪತಿಯು ಅವರನ್ನು ಕೇಳಿದನು: 'ಏನನ್ನು ನೋಡುತ್ತೀರಿ?' ನಾವಿಬ್ಬರೂ ಈ ಸಮಗ್ರಶರೀರವನ್ನೂ -ರೋಮ-ನಖಗಳವರೆಗೆ ಇರುವ ಪ್ರತಿಬಿಂಬವನ್ನು ನೋಡುತ್ತಿದ್ಧೇವೆ.ಛಾಯಾತ್ಮನೇ ಆತ್ಮನು'ಎಂಬ ಜ್ಞಾನದ ಅರಿವು ಅವರಿಗೆ ನಿಶ್ಚಯವಾಗಿಯೇ ಇದ್ದಿತು.(ಪುಟ 402) 45)ನಂತರ ಶರೀರವೇ ಆತ್ಮನೆಂಬ ಜ್ಞಾನದ ಉಪನಿಷತ್ತನ್ನು ಪ್ರಜಾಪತಿಯು ಭೋದಿಸಿದನು.(ದೇಹಾತ್ಮ ಜ್ಞಾನ)(ಪುಟ 405). ಒಂಬತ್ತನೆಯ ಖಂಡ: 46)ಇಂದ್ರನು ಛಾಯಾತ್ಮ ದಶ೯ನದಲ್ಲಿ ಯಾವ ಭೋಗ್ಯವನ್ನೂ ಕಾಣಲಿಲ್ಲ(ಪುಟ 407) 47)ನೀನು ಸರಿಯಾಗಿ ಅಥ೯ಮಾಡಿಕೊಂಡಿದ್ದೀಯೆ.ಛಾಯೆಯು ಆತ್ಮನಲ್ಲ.ಒಂದು ಸಲ ವ್ಯಾಖ್ಯಾನ ಮಾಡಿದ್ದನ್ನು ದೋಷರಹಿತರಾದವರು ಅರಿತುಕೊಳ್ಳಬೇಕಾಗಿದ್ದರೂ ನೀನು ಗ್ರಹಿಸಲಿಲ್ಲ.ಆದುದರಿಂದ ಯಾವುದೊ ಒಂದು ದೋಷದಿಂದ ನಿನ್ನ ಗ್ರಹಣ ಶಕ್ತಿಗೆ ಅಡಚಣೆಯಾಗಿದೆ.ಆ ದೋಷವನ್ನು ನಿವಾರಿಸಲು ಪುನಃ ಮೂವತ್ತೆರಡು ವಷ೯ಗಳವರೆಗೆ ಇಲ್ಲಿ ಬ್ರಹ್ಮಚಯ೯ವಾಸ ಮಾಡು ಎಂದಥ೯.(ಪುಟ 40೯) ಹತ್ತನೆಯ ಖಂಡ: 48)'ಯಾವನು ಸ್ವಪ್ನದಲ್ಲಿ ಪೂಜನೀಯವಗಿ ಸಂಚರಿರಿಸುತ್ತಿರುವನೊ ಅವನೇ ಆತ್ಮನು'ಎಂದು ಪ್ರಜಾಪತಿಯು ಬೋಧಿಸಿದನು.(ಪುಟ 410). 4೯) ಆದರೆ 'ಸ್ವಪ್ನಾತ್ಮ ಜ್ಞಾನದಲ್ಲಿ'ಯಾವ ಭೋಗ್ಯವನ್ನೂ ಇಂದ್ರನು ಕಾಣಲಿಲ್ಲ.(ಪುಟ 410) 50)ಆತ್ಮನುಅಮೃತ-ಅಭಯ-ಗುಣವುಳ್ಳವನೆಂದು ಪ್ರಜಾಪತಿಯ ಅಭಿಪ್ರಾಯವಿದೆ.ಅವನು ಎರಡುಸಲ ಯುಕ್ತಿಯಿಂದ ತಿಳಿಸಿದರೂ ಇವನು ಯಥಾವತ್ತಾಗಿ ತಿಳಿದುಕೊಳ್ಳಲಿಲ್ಲ.ಆದುದರಿಂದ ಆದುದರಿಂದ ಹಿಂದಿನಂತೆ ಈಗಲಗೂ ಯಾವುದೊ ಒಂದು ಪ್ರತಿಬಂಧವಿದೆಯೆಂದು ಎಣಿಸಿ ಅದನ್ನು ತೊಲಗಿಸಲು ಪುನಃ ಮೂವತ್ತೆರಡು ವಷ೯ಗಳು ವಾಸಮಾಡಬೇಕೆಂದು ಆಜ್ಞಾಪಿಸಿದನು.ಚಿತ್ತಶುದ್ಧಿಯನ್ನು ಗಳಿಸಿಕೊಂಡಮೇಲೆಪ್ರಜಾಪತಿಯು ಇಂದ್ರನಿಗೆ ಹೇಳಿದನು.(ಪುಟ 412) ಹನ್ನೊಂದನೆಯ ಖಂಡ: 51)'ಅಲ್ಲಿ ಯಾವಾಗ ಇಂದ್ರಿಯ ವೃತ್ತಿಗಳೆಲ್ಲವನ್ನೂ ಉಪಸಂಹರಿಸಿಕೊಂಡು ಸುಪ್ತನೂ ಪ್ರಸನ್ನನೂ ಆಗಿ ಸ್ವಪ್ನವನ್ನು ಅರಿಯದೆ ಇರುವನೊ ಆ ಇವನೇ ಆತ್ಮನು.ಇದೇ ಅಮೃತವು,ಇದೇ ಅಭಯವು.,ಇದೇ ಬ್ರಹ್ಮವು.'(ಪುಟ 412) 52)ಇಂದ್ರನು ಹೇಳಿದನು:'ಭಗವಂತನೆ,ಸುಷುಪ್ತಿಯಲ್ಲಿರುವ ಇವನು ಈಗ "ನಾನು"ಇಂಥವನು ಎಂದು ನನ್ನನ್ನು ತಿಳಿದಿರುವುದೇ ಇಲ್ಲ.ವಿನಾಶವನ್ನು ಹೊಂದಿದವನಂತೆ ಇರುತ್ತಾನೆ.ಆದುದರಿಂದ ನನು ಯಾವ ಭೋಗ್ಯವನ್ನೂ ನೋಡೆನು.'(ಪುಟ413) 53)ಪ್ರಜಾಪತಿ:ಇಂದ್ರನೇ ಇದು ಹೀಗೆಯೇ.ಆದರೆ ಈ ಆತ್ಮನನ್ನು ನಿನಗೆ ಇನ್ನೂ ಸ್ಪಷ್ಟವಾಗಿ ತಿಳಿಸಿಕೊಡುತ್ತೇನೆ.ಇವನನ್ನು ಬಿಟ್ಟು ಬೇರೆ ಯಾವನನ್ನೂ ಹೇಳುವುದಿಲ್ಲ.ನೀನು ಇನ್ನೂ ಐದು ವಷ೯ಗಳವರೆಗೆ ಇಲ್ಲಿ ವಾಸಿಸು.ಒಟ್ಟು ನೂರೊಂದು ವಷ೯ಇಂದ್ರನು ಪ್ರಜಾಪತಿಯ ಬಳಿಯಲ್ಲಿ ಬ್ರಹ್ಮಚಯ೯ವಾಸ ಮಾಡಿದನು.(ಪುಟ 414) 54) ಹೀಗೆ ಜ್ಞಾªನವು ಇಂದ್ರತ್ವಕ್ಕಿಂತಲೂ ಗುರುತರವಾದುದು.(ಪುಟ 414) ಹನ್ನೆರಡನೆಯ ಖಂಡ: 55)ಪ್ರಜಾಪತಿಯು ಇಂದ್ರನಿಗೆ ಹೇಳಿದನು.'ಇಂದ್ರನೆ,ಈ ಶರೀರವು ಮತ್ಯ೯ವೇ.ಮೃತ್ಯುವಿನಿಂದ ಗ್ರಸ್ತವಾಗಿರುತ್ತದೆ.ಇದು ಅಮೃತನೂ ಅಶರೀರನೂ ಆದ ಆತ್ಮನಿಗೆ ಅಧಿಷ್ಠಾನ.ಶರೀರವುಳ್ಳವನು ಪ್ರಿಯ ಅಪ್ರಿಯಗಳಿಂದ ಗ್ರಸ್ತನಾಗಿರುತ್ತಾನೆ.ಶರೀರವುಳ್ಳವನಿಗೆ ಪ್ರಿಯಾಪ್ರಿಯಗಳ ವಿನಾಶವು ಇಲ್ಲವೇ ಇಲ್ಲ.ಶರೀರವಿಲ್ಲದವನನ್ನು ಪ್ರಿಯಾಪ್ರಿಯಗಳು ಸೋಂಕುವುದೇ ಇಲ್ಲ.(ಪುಟ 415) 56)ವಾಯುವು ಶರೀರ ರಹಿತವಾದುದು.;ಮೇಘ ಗುಡುಗು ಮಿಂಚುಗಳು- ಇವು ಶರೀರರಹಿತವಾದುವುಇವು ಹೇಗೆ ಆಕಶದಿಂದ ಎದ್ದು ಸೂಯ೯ನ ಪರಂಜ್ಯೋತಿಯನ್ನು ಸೇರಿ ತಮ್ಮ ರೂಪದಿಂದ ಕಾಣಿಸಿಕೊಳ್ಳುತ್ತವೆಯೊ ಹಾಗೆಯೇ ಸಂಪ್ರಸಾದ ಗುಣವುಳ್ಳ ಆತ್ಮನು ಈ ಶರೀರದಿಂದ ಎದ್ದು ಪರಮಾತ್ಮನ ಜ್ಯೋತಿಯನ್ನು ಸೇರಿಕೊಂಡು ತನ್ನ ರೂಪದಿಂದ ಕಾಣಿಸಿಕೊಳ್ಳುತ್ತಾನೆ.ಅವನು ಉತ್ತಮ ಪುರುಷನು.ಅಲ್ಲಿ ಅವನು ನಗುತ್ತ ,ಕ್ರೀಡಿಸುತ್ತ,ಸ್ತ್ರೀಯರೊಂದಿಗೆಅಥವಾ ವಾಹನಗಳಿಂದ ರಮಿಸುತ್ತಾತಾನು ಹುಟ್ಟಿದ ಈ ಶರೀರವನ್ನು ಸ್ಮರಿಸಿಕೊಳ್ಳದೆಸಂಚರಿಸುತ್ತಾನೆ.ರಥಕ್ಕೆ ಕಟ್ಟಲ್ಪಟ್ಟ ಕುದುರೆಯಂತೆ ಆತ್ಮನು ಈ ಶರೀರಕ್ಕೆ ಕಟ್ಟಲ್ಪಟ್ಟಿರುತ್ತಾನೆ.(ಪುಟ 417) 57)ತನ್ನ ಕಮ೯ಫಲದ ಉಪಭೋಗದ ನಿಮಿತ್ತದಿಂದ-ಕುದುರೆಯು ಗಾಡಿಗೆ ಕಟ್ಟಲ್ಪಟ್ಟಿರುವಂತೆ ಆತ್ಮನು ಈ ಶರೀರಕ್ಕೆ ನಿಯುಕ್ತನಾಗಿರುತ್ತಾನೆ.(ಕಟ್ಟಲ್ಪಟ್ಟಿರುತ್ತಾನೆ).(ಪುಟ 417) 58)'ಎಲ್ಲಿ ದೃಷ್ಟಿಯು ಆಕಾಶವನ್ನು ಸೇರಿಕೊಂಡಿರುವುದೊ ಅಲ್ಲಿ ಚಾಕ್ಷುಶ-ಪುರುಷನಿರುವನು.ಅವನು ನೋಡುವುದಕ್ಕೆ ಕಣ್ಣು ಇಂದ್ರಿಯವು..ಯವನು "ಇವನು ಮೂಸುತ್ತಾನೆ"ಎಂದು ಅರಿತುಕೊಂಡಿರುವನೊ ಅವನೇ ಆತ್ಮನು.ಅವನು ಮೂಸುವುದಕ್ಕೆ ಮೂಗು ಇಂದ್ರಿಯವು.ಯಾವನು "ಇದನ್ನು ಮೂಸುತ್ತಾನೆ"ಎಂದು ಅರಿತುಕೊಂಡಿರುವನೊ ಅವನು ಆತ್ಮನು.ಅವನು ಮೂಸುವುದಕ್ಕೆ ಮೂಗು ಇಂದ್ರಿಯವು.ಯಾವನು"ಇದನ್ನು ನುಡಿಯುತ್ತೇನೆ"ಎಂದು ಅರಿತುಕೊಂಡಿರುವನೊ ಅವನು ಆತ್ಮನು.ಅವನು ಮಾತನಾಡುವುದಕ್ಕೆ ವಾಕ್ಕು ಇಂದ್ರಿಯವು.ಯಾವನು "ಇದನ್ನು ಕೇಳುತ್ತೇನೆ"ಎಂದುಕೊಂಡಿರುವನೊ ಅವನು ಆತ್ಮನು.ಅವನು ಕೇಳುವುದಕ್ಕೆ ಕಿವಿಯು ಇಂದ್ರಿಯವು.(ಪುಟ 418) 5೯)'ಯವನು"ಇದನ್ನು ಮನನ ಮಡುತ್ತೇನೆ"ಎಂದು ಅರಿತುಕೊಂಡಿರುವನೊ ಅವನು ಆತ್ಮನು.ಅವನಿಗೆ ಮನಸ್ಸು ದೈವಚಕ್ಷುಸ್ಸು,ಅವನು ದೈವ ಚಕ್ಷುಸ್ಸಾದ ಮನಸ್ಸಿನಿಂದ ಬ್ರಹ್ಮಲೋಕದಲ್ಲಿರುವ ಈ ಕಾಮಗಳನ್ನೆಲ್ಲ ನೋಡುತ್ತ ರಮಿಸುತ್ತಾನೆ.(ಪುಟ 41೯) 60)'ಯಃ ವೇದಃ ಸ ಆತ್ಮಾ'ಎಂದು ಪ್ರಯೋಗಿಸಿರುವುದರಿಂದ ಜ್ಞಾನವೇ ಇವನ ಸ್ವರೂಪವೆಂದು ತಿಳಿದು ಬರುತ್ತದೆ.(ಪುಟ 41೯) 61) ಯಾವನು ಶಾಸ್ತ್ರಾಚಾಯ೯ರಿಂದ ಈ ಆತ್ಮವನ್ನು ಅನ್ವೇಶಿಸಿ ತಿಳಿದುಕೊಳ್ಳುವನೊ ಅವನು ಸವ೯ಲೋಕಗಳನ್ನೂ ಸವ೯ಕಾಮಗಳನ್ನೂ ಹೊಂದುತ್ತಾನೆ'ಎಂದು ಪ್ರಜಾಪತಿಯು ಹೇಳಿದನು.(ಪುಟ420) 62)ಏಕೆಂದರೆ ಆತ್ಮಜ್ಞಾನವೂ ಅದರ ಫಲಪ್ರಾಪ್ತಿಯೂಎಲ್ಲರಿಗೂ ಸಮಾನವಾಗಿದೆ.(ಪುಟ 420) ಹದಿಮೂರನೆಯ ಖಂಡ: 63)'ಶ್ಯಾಮದಂತಿರುವ ಹಾದ೯ಬ್ರಹ್ಮದಿಂದ ಕಮಧೇನುವಿನಂತಿರುವ ಬ್ರಹ್ಮಲೋಕವನ್ನು ಹೊಂದುತ್ತೇನೆ.ಅಶ್ವವು ತನ್ನ ರೋಮಗಳನ್ನು ಒದರುವಂತೆ ಪಾಪವನ್ನು ಹೋಗಲಾಡಿಸಿಕೊಂಡು ಚಂದ್ರನು ರಾಹುವಿನ ಬಾಯಿಂದ ಬಿಡಿಸಿಕೊಂಡಂತೆ ಶರೀರದಿಂದ ಬಿಡಿಸಿಕೊಂಡು ಕೃತಕೃತ್ಯನಾಗಿ ನಿತ್ಯವಾದ ಬ್ರಹ್ಮಲೋಕವನ್ನು ಹೊಂದುತ್ತೇನೆ.,ನಿಜವಾಗಿ ಹೊಂದುತ್ತೇನೆ.(ಪುಟ 421) 64)ಶ್ಯಾಮಾಚ್ಛ ಬಲಂ ಪ್ರಪದ್ಯೇಎಂಬುದು ಪಾವನವಾದ ಮಂತ್ರ.ಇದನ್ನು ಜಪಿಸುವುದಕ್ಕಾಗಿ ಅಥವಾ ಧ್ಯಾನಕ್ಕಾಗಿ ಇಲ್ಲಿ ಹೇಳಿದೆ.(ಪುಟ 421) 65)ಉಪಾಸಕರಲ್ಲದವರಿಗೆ ದುಷ್ಪ್ರವೇಶ್ಯವಾಗಿರುವುದರಿಂದ ಶ್ಯಾಮವೆನಿಸಿದೆ.(ಪುಟ 421) ಹದಿನಾಲ್ಕನೆಯ ಖಂಡ: 66)ಆಕಶವೆಂಬ ಪ್ರಸಿದ್ಧವಾದ ಬ್ರಹ್ಮವು ನಾಮರೂಪಗಳನ್ನು ವಿಂಗಡಿಸುತ್ತದೆ.ನಾಮರೂಪಗಳು ಯಾವುದರಲ್ಲಿ ಇವೆಯೊ ಅದು ಬ್ರಹ್ಮವು,ಅದು ಅಮೃತವು,ಅದು ಆತ್ಮನು.(ಪುಟ 422) 67)ನಾನು ಪ್ರಜಾಪತಿಯ ಸಭೆಯನ್ನೂ ಅರಮನೆಯನ್ನೂ ಹೊಂದುತ್ತೇನೆ.ನಾನು ಬ್ರಾಹ್ಮಣರ ಯಶಸ್ಸಾಗುತ್ತೇನೆ.ರಾಜರ ಯಶಸ್ಸಾಗುತ್ತೇನೆ. ವೈಶ್ಯರಯಶಸ್ಶಾಗುತ್ತೇನೆ. ನಾನು ಯಶಸ್ಸನ್ನು ಪಡೆಯಲು ಬಯಸುತ್ತೇನೆ.ನಾನು ಯಶಸ್ಸುಗಳ ಯಶಸ್ಸು.ಲೋಹಿತವೂ ದಂತರಹಿತವೂ ಆದ ಯೋನಿಯನ್ನು ನಾನು ಹೊಂದದಿರಲಿ.ಯೋನಿಯನ್ನು ನಾನು ಹೊಂದದಿರಲಿ. ಹದಿನ್ಥದನೆಯ ಖಂಡ: 68)ಈ ಆತ್ಮಜ್ಞಞವನ್ನು ಹಿರಣ್ಯಗಭನುಕಶ್ಯಪ ಪ್ರಜಾಪತಿಗೆಹೇಳಿದನು.ಕಶ್ಯಪ ಪ್ರಜಾಪತಿಯುಮನುವಿಗೂ,ಮನವು ಮಾನವರಿಗೂ ಹೇಳಿದನು.(ಪುಟ 424) 6೯)ಗುರುವಿನ ಶುಶೂಷಾದಿ ಕಮ೯ವನ್ನು ಮಾಡಿ ಉಳಿದ ಕಾಲದಲ್ಲಿ ನಿಯಮಾನುಸಾರವಾಗಿ ವೇದ£ವನ್ನು ಅಧ್ಯಯಸ ಮಾಡಿ,ಗುರುಗೃಹದಿಂದ ಸಮಾವತ೯ನಮಡಿ,ಕುಟುಂಬದಲ್ಲಿ ನಿಂತುಪವಿತ್ರವಾದ ಸ್ಥಳದಲ್ಲಿಸ್ವಾಧ್ಯಾಯವನ್ನು ಮಾಡುತ್ತಶಿಷ್ಯರನ್ನೂ ಪುತ್ರರನ್ನೂ ಧಾಮಿ೯ಕರನ್ನಾಗಿ ಮಾಡುತ್ತ,ಆತ್ಮನಲ್ಲಿ ಸವೇ೯ಂದ್ರಿಯಗಳನ್ನೂ ಉಪಸಂಹರಿಸಿಕೊಂಡು ,ತೀಥ೯ಗಳನ್ನು ಬಿಟ್ಟು ಉಳಿದ ಕಡೆಗಳಲ್ಲಿ ಯಾವ ಜಂತುವನ್ನೂ ಹೊಂಸೆ ಮಾಡದೆ,ಬದುಕಿರುವವರೆಗೂ ಹೀಗೆ ಆಚರಿಸುತ್ತಿದ್ದರೆಅವನು ಬ್ರಹ್ಮಲೋಕವನ್ನು ಹೊಂದುತ್ತಾನೆ.ಹಿಂತಿರುಗುವುದಿಲ್ಲ.ಖಂಡಿತವಾಗಿಯೂ ಹಿಂತಿರುಗುವುದಿಲ್ಲ(ಪುಟ 424) 70)ಆರನೆಯ ಅಧ್ಯಾಯದಿಂದ ಇಲ್ಲಿನವರೆಗೆ ಬ್ರಹ್ಮವಿದ್ಯೆಯು ಸಫಲವೆಂದುನಿಧ೯ರಿಸಲ್ಪಟ್ಟಿದೆ.ಆದುದರಿಂದ ಯಜ್ಞಾದಿ ಕಮ೯ಗಳಿಂದ ಯಾವ ಪ್ರಯೋಜನವೂ ಉಂಟಾಗುವುದಿ¯್ಲವೆಂಬ ಸಂದೇಹವು ಉಂಟಾಗಬಹುದು.ಅದನ್ನು ಪರಿಹರಿಸಲು ಜ್ಞಾನಿಗಳು ಮಾಡುವ ಕಮ೯ಕ್ಕೂ ವಿಶಿಷ್ಟ ಫಲವಿರುವುದೆಂದು ಇಲ್ಲಿ ಹೇಳಲಾಗಿದೆ.(ಪುಟ 424) ,,,,,,,,,,,,,,,,,ಛಾಂದೋಗ್ಯ ಉಪನಿಷತ್ತು ಸಂಪೂಣ೯ವಾಯಿತು.(ದಿನಾಂಕ15'೯.2020) ,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

No comments:

Post a Comment