Friday, 14 May 2021

'viveka chudamani ' writen by ssri hankaracharya bhagavathpada writen by sri swami aidevananda ,ramakrishnashrama,mysuru,published by president ,ramakrashnashrama. sangraha by dr raveendra hosadurga

 

 

 

 

 

s

 

ಶ್ರೀ ಶಂಕರ ಭಗವತ್ಪಾದ ಪ್ರಣೀತ  'ವಿವೇಕ ಚೂಡಾಮಣಿ':

(ಕೃಪೆ)ಮೂಲ ಲೇಖಕರು:ಸ್ವಾಮಿ ಅದಿದೇವಾನಂದ

ಪ್ರಕಾಶಕರು:ಶ್ರೀ ರಾಮಕೃಷ್ಣಾಶ್ರಮ ಮ್ಯಸೂರು.

ವಿವೇಕ ಚೂಡಾಮಣಿ  ಸಾರ ಸಂಗ್ರಹ:

ಸಂಗ್ರಹ:ಡಾ|ರವೀಂದ್ರ ಹೊಸದುಗ೯

ಅರನೆಯ ಮುದ್ರಣ,187

...................................................................

ಮೂಲ ಲೇಖಕರು,ರಾಮಕೃಷ್ಣಾಶ್ರಮ ಮೈಸೂರು,ಅಧ್ಯಕ್ಷರು, ಆಡಳಿತವಗ೯ ಹಾಗೂ ಸಿಬ್ಬಂದುವಗ೯ಕ್ಕೆಪ್ರಕಾಶಕರಿಗೆ ನನ್ನ ನಮನಗಳು ಹಾಗೂ ಕೃತಜ್ಞತೆಗಳು.

.............................................................................................................................

 

 

1)ಮಂಗಳಾಚರಣೆ:

1)ಸಮಸ್ತ  ಉಪನಿಷತ್ತುಗಳ  ತಾತ್ಪಯ೯ಕ್ಕೆ ಮಾತ್ರ  ವಿಷಯನಾಗಿರುವವನೂ  ವಾಕ್ ಮನಸ್ಸುಗಳಿಗೆ ವಿಷಯನಲ್ಲದವನೂ  ಪರಮಾನಂದ ಸ್ವರೂಪನೂ  ಸದ್ಗುರುವೂ ಆದ ಗೋವಿಂದನಿಗೆ ಮಣಿಯುತ್ತೇನೆ.(ಪುಟ 1)

 

2)ಮುಕ್ತಿಯ ಮಹತ್ವ:

 

2)ಪ್ರಾಣಿಗಳಿಗೆ ಮನುಷ್ಯ ಜನ್ಮವು ಕಷ್ಟಸಾಧ್ಯವಾದುದು. ಮನುಷ್ಯತ್ವಕ್ಕಿಂತಲೂ ಪುರುಷತ್ವ ಹೆಚ್ಚಿನದು.

ಪುರುಷತ್ವಕ್ಕಿಂತ ಬ್ರಾಹ್ಮಣತ್ವವು  ದುಲ೯ಭವು.ಬ್ರಾಹ್ಮಣತ್ವಕ್ಕಿಂತಲೂ  ವೈದಿಕ-ಧಮ೯ಮಾಗ೯ದಲ್ಲಿ ವಿಶ್ವಾಸವು ದುಲ೯ಭವು.

ಇದಕ್ಕಿಂತಲೂ ಶಾಸ್ತ್ರ ಪಾಂಡಿತ್ಯವು  ಅಧಿಕವಾದುದು.ಆತ್ಮ ಅನಾತ್ಮ ಇವುಗಳ ವಿಚಾರ ,ಸ್ವಾತ್ಮಾನುಭವ,ಬ್ರಹ್ಮಾತ್ಮ ಭಾವದಲ್ಲಿರುವುದು .ಇವು ಕ್ರಮವಾಗಿ ಒಂದಕ್ಕಿಂತ ಒಂದು ಅಧಿಕವಾಗಿರುವುದು.ಇಂಥ ಜನ್ಮವು ನೂರು ಕೋಟಿ  ಜನ್ಮಗಳಲ್ಲಿ ಸಂಪಾದಿಸಿದ ಪುಣ್ಯವಿಲ್ಲದೆ ಲಭಿಸುವುದಿಲ್ಲ.(ಪುಟ 2)

 

3)ಭಗವಂತನ  ಅನುಗ್ರಹವೇ  ಕಾರಣವಾಗಿರುವ ಮೂರು ಕಷ್ಟಸಾಧ್ಯವೇ;ಮನುಷ್ಯಜನ್ಮ,ಮೋಕ್ಷವನ್ನು ಪಡೆಯಬೇಕೆಂಬ ಇಚ್ಛೆ,ಮತ್ತು ಮಹಾತ್ಮರ ಸಂಗ(ಅಥವಾ ಆಶ್ರಯ).(ಪುಟ 2)

 

4)ದುಃಸ್ಸಾಧ್ಯವಾದ  ಮನುಷ್ಯಜನ್ಮವನ್ನು ಹೇಗೋ ಪಡೆದುಕೋಡು ,ಅದರಲ್ಲೂ ಪುರುಷತ್ವವನ್ನು ಮತ್ತು ವೇದ ಪ್ರವೀಣತೆಯನ್ನು  ಹೊಂದಿದ್ದರೂ  ಮೂಢಬುದ್ದಿಯುಳ್ಳ ಯಾವ ಮನುಷ್ಯನು  ತನ್ನ ಮೋಕ್ಷಕ್ಕಾಗಿ ಪ್ರಯತ್ನಿಸುವುದಿಲ್ಲವೋ ಅವನು ಆತ್ಮಹತ್ಯಾಕಾರನು.ಏಕೆಂದರೆ   ಅವನು ಮಿಥ್ಯಾವಸ್ತುಗಳನ್ನು ಹಿಡಿದುಕೊಳ್ಳುವುದರ ಮೂಲಕ  ದಶೆಯಿಂದ ತನ್ನನ್ನು ಕೊಂದುಕೊಳ್ಳುತ್ತಾನೆ(ಪುಟ3)

 

5)ದುಲ೯ಭವಾದ ಮನುಷ್ಯ ಶರೀರವನ್ನು ,ಅದರಲ್ಲಿಯೂ ಪುರುಷ ಶರೀರವನ್ನು ಪಡೆದು ಮೋಕ್ಷವಿಷಯದಲ್ಲಿ ಯಾವನು ಅಸಡ್ಡೆ ಮಾಡುತ್ತಾನೋ ಅವನಿಗಿಂತಲೂ ಅವುವೇಕಿಯಾದವನು ಯಾವನಿರುವನು?(ಪುಟ4)

 

6)ಮನುಷ್ಯರು ಶಾಸ್ತ್ರಗಳನ್ನು ಉಲ್ಲೇಖಿಸಲಿ,ದೇವತೆಗಳಿಗೆ ಯಜ್ಞಮಾಡಲಿ ,ಕಮ೯ಗಳನ್ನು ಅನುಷ್ಠಿಸಲಿದೇವತೆಗಳನ್ನು ಭಜಿಸಲಿ,ಜೀವ-ಪರಮಾತ್ಮರ ಐಕ್ಯ ಜ್ಞಾನವಿಲ್ಲದೆ  ನೂರು ಮಂದಿ ಬ್ರಹ್ಮರು ಪ್ರಳಯವನ್ನು ಪಡೆದರೂ  ಮುಕ್ತಿಯು ಸಿದ್ಧಿಸುವುದಿಲ್ಲ.(ಪುಟ4)

 

7)ದ್ರವ್ಯದ ಮೂಲಕ ಅಮೃತತ್ವದ ಆಸೆಯಿಲ್ಲ-ಹೀಗೆಂದೇ ಶ್ರುತಿಯು ಹೇಳುತ್ತದೆ.ಏಕೆಂದರೆ ಮುಕ್ತಿಗೆ ಕಮ೯ವು  ಕಾರಣವಲ್ಲವೆಂಬುದು ಸ್ಫುಟವಾಗಿದೆ.(ಪುಟ 5)

 

8) ಆದುದರಿಂದ ವಿವೇಕಿಯಾದವನು (ರೂಪ ರಸ ಗಂಧ,ಸೊಶ೯ಮೊದಲಾದ) ಬಾಹ್ಯವಿಷಯಗಳಿಂದ ಉಂಟಾಗುವ ಸುಖದ ಆಸೆಯನ್ನು ತ್ಯಜಿಸಿ ,ಸತ್ಪುರುಷನೂ ಮಹಾತ್ಮನೂ  ಆದ ಆಚಾಯ೯ನನ್ನು ಬಳಿಸಾರಿ,ಅವನು ಉಪದೇಶಿಸಿದ ತತ್ವದಲ್ಲಿ  ಸಮಾಹಿತವಾದ ಮನಸ್ಸುಳ್ಳವನಾಗಿ ಮುಕ್ತಿಗಾಗಿ ಪ್ರಯತ್ನಿಸಬೇಕು.(ಪುಟ 6)

 

)ಸಮುಗ್ ಜ್ಞಾನದಲ್ಲಿರುವ  ನಿಷ್ಠೆಯಿಂದ  ಯೋಗಾರೂಢತ್ವವನ್ನು ಪಡೆದು,ಸಂಸಾರ ಸಮುದ್ರದಲ್ಲಿ ಮುಳುಗಿರುವ  ತನ್ನನ್ನು ತನ್ನಿಂದಲೇ ಉದ್ಧರಿಸಿಕೊಳ್ಳಬೇಕು.(ಪುಟ6)

 

10)ಆತ್ಮಚಿಂತನದಲ್ಲಿ ನಿಷ್ಠೆಯುಳ್ಳವರೂ  ಧೀಮಂತರೂ  ಆದ ವಿವೇಕಿಗಳು  ಸವ೯ಕಮ೯ಗಳನ್ನೂ  ತ್ಯಜಿಸಿ  ಸಂಸಾರವೆಂಬ ಕಟ್ಟಿನಿಂದ  ಬಿಡಿಸಿಕೊಳ್ಳಲು ಪ್ರಯತ್ನಿಸಲಿ(ಪುಟ7)

 

3) ಜ್ಞಾನ ಪ್ರಾಪ್ತಿಗೆ ಸಾಧನಗಳಗು:

 

11)ಕಮ೯ವು ಚಿತ್ತ ಶುದ್ಧಿಗಾಗಿಯೇ ಇರುವುದೇ ಹೊರತು  ಪರವಸ್ತುವಿನ ಸಾಕ್ಷಾತ್ಕಾರಕ್ಕಾಗಿ ಅಲ್ಲ.ವಸ್ತುವಿನ ಸಾಕ್ಷಾತ್ಕಾರವು  ವಿಚಾರದಿಂದ ಉಂಟಾಗುವುದೇ ವಿನಾ  ಕೋಟಿಕಮ೯ಗಳಿಂದಲೂ ಆಗುವುದಿಲ್ಲ.(ಪುಟ 8)

 

12)ಭ್ರಾಂತಿ ಜನಿತವಾದ  ಮಹಾ ಸಪ೯ದಿಂದ ಉಂಟಾಗುವ ಭುಯ ದುಃಖಗಳನ್ನು ಹೋಗಲಾಡಿಸುವ

ಹಗ್ಗವೆಂಬ ನಿಜ ಸ್ಥಿತಿಯ  ನಿಶ್ಚಯವು  ಸಮ್ಯಗ್ವಿಚಾರದಿಂದಲೇ  ಸಿದ್ಧವಾಗುವುದು.(ಪುಟ8)

 

13)ತತ್ವ ನಿಶ್ಚಯವು ಆಪ್ತವಾಕ್ಯವನ್ನು  ಅನುಸರಿಸಿದ  ವಿಚಾರದಿಂದ ಸಿದ್ಧಿಸುತ್ತದೆಯೇ ವಿನಾ  ಸ್ನಾನದಿಂದಾಗಲೀ ದಾನದಿಂದಾಗಲೀ  ಅಥವಾ ನೂರಾರು ಪ್ರಾಣಾಯಾಮಗಳಿಂದಾಗಲೀ ಸಿದ್ದಿಸುವುದಿಲ್ಲ(ಪುಟ )

 

4)ಅಧಿಕಾರಿಯ ನಿರೂಪಣ:

 

14)ಬ್ರಹ್ಮಜ್ಞಾನವೆಂಬ ಫಲಪ್ರಾಪ್ತಿಯು ಶಮ-ದಮಾದಿಗಳಿಂದ ಕೂಡಿದ  ಅಧಿಕಾರಿಯನ್ನು  ವಿಶೇಷವಾಗಿ ಅಪೇಕ್ಷಿಸುತ್ತದೆ. ವಿಷಯದಲ್ಲಿ ದೇಶ ಕಾಲ ಸಹಾಯಕ ಸಾಧನ.(ಪುಟ೯)

 

15)ಆದುದರಿಂದ ಜ್ಞಾಸುವು  ಬ್ರಹ್ಮಜ್ಞಾನಿಗಳಲ್ಲಿ ಶ್ರೇಷ್ಠನೂ  ದಯಾಸಾಗರನೂ  ಆದ ಗುರುವನ್ನು ಬಳಿಸಾರಿ  ಆತ್ಮತತ್ವದ ವಿಚಾರವನ್ನು  ಮಾಡಬೇಕು.(ಪುಟ 10)

 

16)ಮೇಧಾವಿಯೂ ವಿದ್ವಾಂಸನೂ  ಊಹಾಪೋಹಗಳಲ್ಲಿ ಚತುರನೂ ,ಇಲ್ಲಿಯವರೆಗೆ ಹೇಳಲ್ಪಟ್ಟ ಲಕ್ಷಣಗಳುಳ್ಳವನೂ  ಆದ ಪುರುಷನು  ಆತ್ಮವಿದ್ಯೆಯಲ್ಲಿ  ಅಧಿಕಾರಿಯಾಗಿರುತ್ತಾನೆ.(ಪುಟ 10)

 

17)ವಿವೇಕಿಯೂ ವಿರಕ್ತನೂ  ಶಮದಮ ಮೊದಲಾದ ಗುಣಗಳಿಂದ ಕೂಡಿದವನೂ  ಆದ ಮುಮುಕ್ಷುವಿಗೆ ಮಾತ್ರ ಬ್ರಹ್ಮವಿಚಾರವನ್ನು ಮಾಡುವುದರಲ್ಲಿ ಅಹ೯ತೆ ಇರುತ್ತದೆ.(ಪುಟ 11)

 

5)ಸಾಧನ ಚತುಷ್ಟಯ:

 

18) ಬ್ರಹ್ಮಜ್ಞಾನ ವಿಷಯದಲ್ಲಿ ಜ್ಞಾನಿಗಳು ನಾಲ್ಕು ಸಾಧನಗಳನ್ನು ಹೇಳುತ್ತಾರೆ.ಅವು ಇದ್ದರೇ ಬ್ರಹ್ಮನಿಷ್ಠೆಯು ಸಿದ್ಧಿಸುವುದು.(ಪುಟ11)

 

1)ನಿತ್ಯಾನಿತ್ಯ ವಿವೇಕವು ಮೊದಲನೆಯದು.ಇಲ್ಲಿ ಮತ್ತು ಪರಲೋಕದಲ್ಲಿ ಅನುಭವಿಸುವ  ಕಮ೯ಫಲದ ಭೋಗಗಳಲ್ಲಿ  ವೈರಾಗ್ಯವು ಎರಡನೆಯದು. ಶಮವೇ ಮೊದಲಾದ(ಶಮ,ದಮ,ಉಪರತಿ,ತಿತಿಕ್ಷೆ,

ಶ್ರದ್ಧೆ,ಮತ್ತು ಸಮಾಧಾನ)ಮೂರನೆಯ ಸಾಧನ.ಮೋಕ್ಷೇಚ್ಛೆಯು ನಾಲ್ಕನೆಯ ಸಾಧನ.ಎಂದು ಜ್ಞಾನಿಗಳು  ಸ್ಪಷ್ಟವಾಗಿ ಎಣಿಸಿರುತ್ತಾರೆ(ಪುಟ 12)

 

20)ಪರಬ್ರಹ್ಮ ವಸ್ತುವೊಂದೇ ಸತ್ಯ. ಜಗತ್ತೆಲ್ಲ ಮಿಥ್ಯ-ಎಂಬೀ ರೂಪದ ವಿನಿಣ೯ಯವು ನಿತ್ಯಾನಿತ್ಯ ವಿವೇಕ ಎಂದು ಹೇಳಲ್ಪಟ್ಟಿದೆ(ಪುಟ 12)21)ದೇಹದಿಂದ ಪ್ರಾರಂಭಿಸಿ  ಬ್ರಹ್ಮನವರೆಗಿರುವ  ಅನಿತ್ಯವಾದ ಭೋಗವಸ್ತುವಿನಲ್ಲಿ  ದಶ೯ನಶ್ವಣಾದಿಗಳಿಂದ  ಯಾವ ಜುಗುಪ್ಸೆ ಉಂಟಾಗುವುದೋ ಅದೇ ವೈರಾಗ್ಯವು.(ಪುಟ 13)

 

22)ವಿಷಯ ವಸ್ತುಗಳಲ್ಲಿ  ಪುನಃ ಪುನಃ ದೋಷಗಳನ್ನು ನೋಡುವುದರ ಮೂಲಕ  ಅವುಗಳಿಂದ ಮನಸ್ಸನ್ನು ಬೇಪ೯ಡಿಸಿ  ತನ್ನ ಗುರಿಯಲ್ಲಿ  ಅದನ್ನು ನಿಯಮದಿಂದ ಸ್ಥಾಪಿಸುವುದೇ  ಶಮವು ಎನಿಸುತ್ತದೆ.(ಪುಟ 13)

 

23)  

ಎರಡು ಬಗೆಯ ಇಂದ್ರಿಯಗಳನ್ನೂ(ಕಮೇಂದ್ರಿಯ ಮತ್ತು ಜ್ಞಾನೇಂದ್ರಿಗಳು)  ವಿಷಯ ವಸ್ತುಗಳಿಂದ  ಹಿಂತಿರುಗಿಸಿ  ತಮ್ಮ ತಮ್ಮ ಗೋಲಗಳಲ್ಲಿ ಸ್ಥಾಪಿಸುವುದೇ  ದಮವೆನಿಸುತ್ತದೆ.ಮನಸ್ಸಿನ ವೃತ್ತಿಯು  ಹೊರಗಿನ ಯಾವವಸ್ತುವನ್ನೂ  ಅವಲಂಬಿಸದಿರುವುದೇ ಉತ್ತಮವ್ಆದ ಉಪರತಿಯು.(ಪುಟ 14)

 

ವಿವರಣೆ:ಜ್ಞಾನೇಂದ್ರಿಯಗಳು ಕಣ್ಣು ,ಕಿವಿ,ಮೂಗು ನಾಲಗೆ ,ಚಮ೯

ಕಮೇ೯ಂದ್ರಿಯಗಳು: ವಾಕ್ಕು,ಕೈಕಾಲುಗಳು,ಗುದ,ಉಪಸ್ಥಗಳು

 

24)ನಾನಾ ಬಗೆಯಾದ ದುಃಖಗಳು ಸಂಭವಿಸುವ ಸಮಯದಲ್ಲಿ  ಅವುಗಳ ಪರಿಹಾರಕ್ಕೆ  ಯಾವುದೊಂದು  ಪ್ರತೀಕಾರವನ್ನು ಮಾಡದೆ,ಮನಸ್ಸಿನಲ್ಲಿ ಕೊರಗದೆ  ಮತ್ತು ಶೋಕಿಸದೆ ಸಹಿಸಿಕೊಂಡಿರುವುದನ್ನು ತಿತಿಕ್ಷೆ ಎನ್ನುತ್ತಾರೆ.(ಪುಟ 14)

 

25)ಶಾಸ್ತ್ರ ಮತ್ತು ಗುರು  ಉಪದೇಶಿಸುವ ವೇದಾಂತವ್ಆಕ್ಯ -ಇವು ಸತ್ಯವಂಬ ಬುದ್ದಿಯಿಂದ  ಮನಸ್ಸಿನಲ್ಲಿ ನಿಧ೯ರಿಸಿಕೊಳ್ಳುವುದು  ಶ್ರದ್ಧೆ ಎಂದು ಸಾಧುಗಳು ಹೇಳುತ್ತಾರೆ.ಇದು ಬ್ರಹ್ಮ ಸಾಕ್ಷಾತ್ಕಾರಕ್ಕೆ ಸಾಧನವಾಗಿರುವುದು.(ಪುಟ 15)

 

26)ಶುದ್ದಬ್ರಹ್ಮದಲ್ಲಿ ಯಾವಾಗಲೂ ಬುದ್ಧಿಯನ್ನು ಸ್ಥಿರಗೊಳಿಸುವುದೇ  ಸಮಾಧಾನವೆಂದು ಹೇಳಲ್ಪಡುತ್ತದೆ.ಮನಸ್ಸಿನ ಲಾಲನೆಯು ಸಮಾಧಾನವಲ್ಲ.(ಪುಟ 15)

 

27)ಅಹಂಕಾರದಿಂದ ಪ್ರಾರಂಭಿಸಿ  ತನ್ನ ಶರೀರದವರೆಗಿರುವ  ಅಜ್ಞಾನದಿಂದ ಕಲ್ಪಿತವಾದ  ಕಟ್ಟುಗಳನ್ನು ತನ್ನ ನಿಜವಾದ ಆತ್ಮಸ್ವರೂಪದ ಜ್ಞಾನದಿಂದ  ಬಿಡಿಸಿಕೊಳ್ಳಬೇಕೆಂಬ ಇಚ್ಛೆಯು  ಮುಮುಕ್ಷತ್ವವೆನಿಸುತ್ತದೆ.(ಪುಟ 16)

 

28) ಮುಮುಕ್ಷತ್ವವು  ಮಂದ-ಮಧ್ಯಮ-ಸ್ಥಿತಿಯಲ್ಲಿದ್ದರೂ   ವೈರಾಗ್ಯದಿಂದಲೂ  ಶಮದಮಾದಿ ಸಾಧನದಿಂದಲೂ  ಗುರುವಿನ ಅನುಗ್ರಹದಿಂದಲೂ  ಪ್ರಬಲವಾಗಿ  ಫಲವನ್ನು ಉಂಟುಮಾಡುತ್ತದೆ.(ಪುಟ16)

 

2)ಆದರೆ ಯಾವನಲ್ಲಿ  ವೈರಾಗ್ಯವು ಮುಮುಕ್ಷತ್ವವು  ತೀವ್ರವಾಗಿರುವುದೋ ಅವನಲ್ಲಿಯ ಶಮದಮಾದಿಗಳು ಸಾಥ೯ಕವೂ ಸಫಲವೂ ಆಗುವವು.(ಪುಟ16)

 

30)ಯಾವನಲ್ಲಿ ವೈರಾಗ್ಯ ಮುಮುಕ್ಷತ್ವಗಳು ಮಂದವಾಗಿವೆಯೋ  ಅವನಲ್ಲಿ-ಮರುಭೂಮಿಯಲ್ಲಿ ನೀರು ತೋರುವಂತೆ-ಶಮಾದಿಗಳ ತೋಕೆ೯ಯು  ಮಾತ್ರ ಇರುತ್ತದೆ.(ಪುಟ 17)

 

6)ಭಕ್ತಿ:

 

31)ಮೋಕ್ಷಕ್ಕೆ ಸಹಾಯಕವಾಗಿರುವ  ಸಲಕರಣೆಗಳಲ್ಲಿ ಭಕ್ತಿಯೇ ಶ್ರೇಷ್ಠ.ತನ್ನ ನಿಜವಾದ ಆತ್ಮಸ್ವರೂಪದ ಅನುಸಂಧಾನವೇ ಭಕ್ತಿ ಎನಿಸುತ್ತದೆ.(ಪುಟ 17)

 

32) ಕೆಲವರು  ತಮ್ಮ ಆತ್ಮನ ನಿಜಸ್ವರೂಪದ ಅನು ಸಂಧಾನವೇ ಭಕ್ತಿ  ಎನಿಸುತ್ತದೆ.ಹಿಂದೆ ಹೇಳಿದ ವಿವೇಕಾದಿ -ಸಾಧನಗಳಿಂದ ಸಂಪನ್ನನಾದವನೂ ಆತ್ಮತತ್ವವನ್ನು  ತಿಳಿಯಲು ಬಯಸುವವನೂ ಆದ ಮುಮುಕ್ಷುವು,ಯಾವನಿಂದ ಸಂಸಾರವೆಂಬ ಬಂಧದ ಬಿಡುಗಡೆಯಾಗುತ್ತದೆಯೋ  ಅಂತ ಜ್ಞಾನಿಯಾದ ಗುರುವನ್ನು ಬಳಿ ಸಾರಬೇಕು.(ಪುಟ 18)

 

7) ಗುರೂಪಸತ್ತಿ:

 

33)ಯಾವನು ಶ್ರೋತ್ರೀಯನೊ  ಪಾಪರಹಿತನೊ, ಕಾಮವಿಲ್ಲದವನೊ  ಬ್ರಹ್ಮವಿದರಲ್ಲಿ ಶ್ರೇಷ್ಠನೊ ,ಬ್ರಹ್ಮದಲ್ಲಿ ನೆಲಸಿರುವನೊ  ಕಟ್ಟಿಗೆಯನ್ನೆಲ್ಲ ಸುಟ್ಟಿರುವ ಬೆಂಕಿಯಂತೆ  ಶಾಂಂತನೂ  ಯಾವ ಪ್ರತಿಫಲವನ್ನು ಬಯಸದೆ ದಯಾಸಿಂಧುವಾಗಿರುವನೊ  ನಮಿಸಿದ ಸಾಧುಗಳಿಗೆ ಬಂಧುವೊ(ಪುಟ1)

 

34)ಅಂಥ ಗುರುವನ್ನು ಭಕ್ತಿಯಿಂದ ಆರಾಧಿಸಿ ,ನಮ್ರತೆ,ವಿನಯ,ಸೇವೆ ಇವುಗಳಿಂದ ಪ್ರಸನ್ನನಾದ ಅವನನ್ನು  ಬಳಿಸಾರಿ  ತಾನು ತಿಳಿಯಬೇಕೆಂದಿರುವುದನ್ನು   ಕುರಿತು ಪ್ರಶ್ನಿಸಬೇಕು.(ಪುಟ1)

 

35)ನಮಿಸುತ್ತಿರುವ ಜನರ ಬಂಧುವೆ ಕರುಣಸಾಗರನೆ,ಸ್ವಾಮಿ, ನಿನಗೆ ನಮಸ್ಕಾರ! ಸಂಸಾರಸಾಗರದಲ್ಲಿ ಬಿದ್ದಿರುವ  ನನ್ನನ್ನು ಕರುಣಾಮೃತವನ್ನು ವಷಿ೯ಸುತ್ತಿರುವ  ನಿನ್ನ ಸರಳವಾದ  ಕಟಾಕ್ಷದಿಂದ ಉದ್ಧರಿಸು.(ಪುಟ 20)

 

 36) ಪರಿಹರಿಸಲಶಕ್ಯವಾದ  ಸಂಸಾರವೆಂಬ ಕಾಡ್ಗಿಚ್ಚಿನಿಂದ ಬೆಂದು ,ದುರದೃಷ್ಟವೆಂಬ  ಬಿರುಗಾಳಿಗಳಿಂದ ಕಂಪಿಸುತ್ತ,ಭಯಗೊಂಡು,ನಿನ್ನಲ್ಲಿಯೇ ಶರಣಾಗತನಾಗಿರುವ  ನನ್ನನ್ನು ಸಂಸಾರವೆಂಬ -ಮೃತ್ಯುವಿನಿಂದ  ಕಾಪಾಡು.ಏಕೆಂದರೆ ಬೇರೊಬ್ಬ ರಕ್ಷಕನನ್ನು ನಾನು ಅರಿಯೆನು.(ಪುಟ 20)

  

 

37)ಭಯಂಕರವಾದ ಸಂಸಾರಸಾಗರವನ್ನು  ತಾವು ದಾಟಿ, ಯಾವ ನಿಮಿತ್ತವೂ ಇಲ್ಲದೆ ,ಇತರ ಜನರನ್ನು ದಾಟಿಸುವ ಶಾಂತರೂ ಮಹನೀಯರೂ  ಆದ ಸತ್ಪುರುಷರು ವಸಂತ  ಋತುವಿನಂತೆ  ಲೋಕ ಕಲ್ಯಾಣವನ್ನು ಮಾಡುತ್ತಾ ಇರುತ್ತಾರೆ.(ಪುಟ 21)

 

38)ಇತರರ ಶ್ರಮವನ್ನು  ಪರಿಹರಿಸುವುದರಲ್ಲಿ  ತಾವಾಗಿಯೇ ಪ್ರವತಿ೯ಸುವುದು  ಮಹಾತ್ಮರ ಸ್ವಭಾವವು. ಸೂಯ೯ನ ತೀಕ್ಷ್ಣವಾದ ಬಿಸಿಲಿನಿಂದ  ಬೆಂದಿರು ಭೂಮಿಯನ್ನು ಚಂgದ್ರನು ತಾನಾಗಿಯೇ ರಕ್ಷಿಸುತ್ತಾನಲ್ಲವೇ?(ಪುಟ21)

 

3)ಹೇ ಪ್ರಭೋ,ಸಂಸಾರ ತಾಪತ್ರಯವೆಂಬ  ಕಾಡ್ಗಿಚ್ಚಿನ ಜ್ವಾಲೆಗಳಿಂದ  ಬೆಂದಿರುವ  ನನ್ನನ್ನು

,ಬ್ರಹ್ಮಾನಂದ ರಸಾನುಭವದಿಂದ  ಮಧುರವೂ  ಶುದ್ದವೂ ಅತಿಶೀತಲವೂ  ಹಿತಕರವೂ ಆದ  ನಿಮ್ಮ ಮಾತೆಂಬ ಕಲಶದಿಂದ  ಹೊರಹೊಮ್ಮಿ ಕೇಳುವುದಕ್ಕೆ ಇಂಪಾಗಿರುವ ಉಪದೇಶಾಮೃತ ಧಾರೆಗಳಿಂದ  ಚಿಮುಕಿಸು.; ನಿಮ್ಮ ಕಟಾಕ್ಷದ  ಕ್ಷಣಮಾತ್ರ-ಪ್ರಸರಣೆಗೆ  ಪಾತ್ರರಾಗಿ  ಪರಿಗೃಹೀತರಾಗಿರುವವರೇ ಧನ್ಯರು.(ಪುಟ 22)

 

40) ಸಂಸಾರವನ್ನು ಹೇಗೆ ದಾಟಬಲ್ಲೆನು?ನನಗೆ ಗತಿ ಯಾವುದು? ನನಗೆ ಮೋಕ್ಷೋಪಾಯವು ಯಾವುದು?ಇದಾವುದನ್ನೂ ನಾನು ಅರಿಯೆನು. ಹೇ ಪ್ರಭೋ ,ನನ್ನನ್ನು ಕೃಪೆಯಿಂದ ಕಾಪಾಡು.ನನ್ನ ಸಂಸಾರ ದುಃಖವನ್ನು ಸಂಪೂಣ೯ವಾಗಿ ನಾಶಮಾಡು.(ಪುಟ22)

 

41) ಹೀಗೆ ಹೇಳುತ್ತಿರುವ, ಸಂಸಾರವೆಂಬ ಕಾಡ್ಗಿಚ್ಚಿನಿಂದ  ಬೆಂದು ಶರಣಾಗತನಗಿರುವ ತನ್ನ ಶಿಷ್ಯನನ್ನು  ಮಹಾತ್ಮನಾದ ಗುರುವು  ಕಾರುಣ್ಯ ರಸದಿಂದ ನೆನೆದಿರುವ  ದೃಷ್ಟಿಯಿಂದ ನೋಡಿ ಕೂಡಲೇ ಅಭಯವನ್ನು ನೀಡಬೇಕು.(ಪುಟ23)

 

42)ಬ್ರಹ್ಮವಿದನಾದ ಗುರುವು  ಹೀಗೆ ಉಪಸತ್ತಿಯನ್ನು ಬಯಸುತ್ತಿರುವ,ಮುಮುಕ್ಷುವಾದ ,ಹೇಳಿದಂತೆ ಸರಿಯಾಗಿ ನಡೆಯುವ ಪ್ರಶಾಂತ ಚಿತ್ತನಾದ,ಶಮಾದಿ ಗುಣಗಳಿಂದ ಕೂಡಿರುವ  ಶಿಷ್ಯನಿಗೆ ಕೃಪೆಯಿಂದಲೇ  ತತ್ವೋಪದೇಶವನ್ನು ಮಾಡಬೇಕು.(ಪುಟ23) 

 

43)ಹೇ ವಿದ್ವಾಂನೇ ಹೆದರಬೇಡ! ನಿನಗೆ ಅಪಾಯವಿಲ್ಲ.ಸಂಸಾರ ಸಾಗರವನ್ನು ದಾಟುವುದಕ್ಕೆ ಸಾಧ್ಯವಿದೆ.ಯಾವ ಮಾಗ೯ದಿಂದ ಯತಿಗಳು  ಸಂಸಾರದ ಆಚೆಯ ತೀರವನ್ನು  ಹೊಂದಿದರೊ ಅದನ್ನೇ ನಿನಗೂ ತೋರಿಸುತ್ತೇನೆ.(ಪುಟ24)

 

44)ಸಂಸಾರ ಭಯವನ್ನು ನಾಶಮಾಡುವ  ಒಂದು ದೊಡ್ಡ ಉಪಾಯವಿದೆ.ಅದರಿಂದ ಸಂಸಾರ ಸಮುದ್ರವನ್ನು ದಾಟಿ  ಪರಮಾನಂದವನ್ನು ಹೊಂದುತ್ತೀಯೆ.(ಪುಟ 25)

 

45)ಉಪನಿಷತ್-ವಾಕ್ಯಾಥ೯ದ ವಿಮಶೆ೯ಯಿಂದ ಉತ್ತಮ ಜ್ಞಾನವು ಉತನ್ನವಾಗುತ್ತದೆ.ಕೂಡಲೇ ಆಜ್ಞಾನದಿಂದ  ಸಂಸಾರ ದುಃಖದ ಸಂಪೂಣ೯ ನಾಶವುಂಟಾಗುತ್ತದೆ.(ಪುಟ 25)

 

46)ಶ್ರದ್ಧೆ,ಭಕ್ತಿ,ಧ್ಯಾನಯೋಗ-ಇವುಗಳೇ ಮುಮುಕ್ಷುವಿನ  ಮುಕ್ತಿಗೆ ಕಾರಣಗಳೆಂದು ಶ್ರುತಿವಾಕ್ಯವೇ ಪ್ರತ್ಯಕ್ಷವಾಗಿ ಹೇಳುತ್ತಲಿದೆ.ಯಾವನು ಇವುಗಳಲ್ಲಿ ನೆಲೆಗೊಂಡಿರುವನೊ  ಅವನಿಗೆ ಅವಿದ್ಯೆಯಿಂದ

ಕಲ್ಪಿತವಾಗಿರುವ  ದೇಹಸಂಬಂಧದಿಂದ ಬಿಡುಗಡೆಯಾಗುವುದು.(ಪುಟ26)

 

47)ಪರಮಾತ್ಮನಾದ ನಿನಗೂ  ಅವಿದ್ಯಾ ಸಂಬಂಧದಿಂದಲೇ  ದೇಹಾಭಿಮಾನವು ಉಂಟಾಗಿದೆ.ಅದರಿಂದಲೇ ಜನನ ಮರಣ ರೂಪವಾದ ಸಂಸಾರ.ಆತ್ಮ ಅನಾತ್ಮ- ಎರಡರ ವಿಚಾರದಿಂದ ಉತ್ಪನ್ನವಾದ  ಜ್ಞಾನಾಗ್ನಿಯು ಅವಿದ್ಯೆಯ ಕಾಯ೯ವಾದ (ಬಂಧವೆಂಬ ಮರವನ್ನು)  ಬೇರಿನೊಡನೆ ದಹಿಸುವುದು.(ಪುಟ 26)

 

ಶಿಷ್ಯನ ಪ್ರಶ್ನೆಗಳು:

ಶಿಷ್ಯ  ಉವಾಚ:

 

48)ಶಿಷ್ಯನು ಹೇಳಿದನು:ಹೇ ಸ್ವಾಮಿನ್,ನಾನು ಕೇಳುವ ಪ್ರಶ್ನೆಯನ್ನು  ಕೃಪೆಯಿಂದ ಲಾಲಿಸಿರಿ. ನಿಮ್ಮ ಬಾಯಿಂದ ಪ್ರಶ್ನೆಗೆಉತ್ತರವನ್ನು ಕೇಳಿ ಕೃತಾಥ೯ನಾಗುತ್ತೇನೆ(ಪುಟ27)

 

4) ಬಂಧವೆಂಬುದು ಯಾವುದು?ಇದು ಹೇಗೆ ಬಂದಿರುತ್ತದೆ?ಇದು ನೆಲೆಗೊಂಡಿರುವುದು ಹೇಗೆ?ಇದರಿಂದ ಬಿಡುಗಡೆಯಾಗುವುದು ಹೇಗೆ?ಅನಾತ್ಮ ವಸ್ತುವು ಯಾವುದು?ಪರಮಾತ್ಮನು ಯಾರು? ಆತ್ಮಾನಾÀತ್ಮರನ್ನು ವಿವೇಚಿಸುವುದು ಹೇಗೆ? ವಿಷಯವನ್ನು ಹೇಳಬೇಕು.(ಪುಟ 27)

 

50)ಗುರುವು ಹೇಳಿದನು:ನೀನು ಧನ್ಯನು,ಕೃತಕೃತ್ಯನು.ನಿನ್ನ ಕುಲವು ನಿನ್ನಿಂದ  ಪವಿತ್ರ ಮಾಡಲ್ಪಟ್ಟಿತು.ಏಕೆಂದರೆ ಅವಿದ್ಯಾ ಬಂಧದಿಂದ ಬಿಡಿಸಿಕೊಂಡು  ಬ್ರಹ್ಮಭಾವವನ್ನು ಪಡೆಯಲು ಯತ್ನಿಸುತ್ತಿರುವೆ(ಪುಟ 28)

 

51)ಸ್ವಪ್ರಯತ್ನದ ಪ್ರಾಧಾನ್ಯ: ತಂದೆಯನ್ನು  ಸಾಲದಿಂದ ಬಿಡಿಸಲು  ಮಗನೇ ಮೊದಲಾದವರು  ಇದ್ದಾರೆ. ಆದರೆ ಅವಿದ್ಯಾ ಬಂಧನದಿಂದ ಬಿಡುಗಡೆ ಮಾಡಲು ತನ್ನನ್ನು ಬಿಟ್ಟರೆ ಬೇರೆ ಯಾರೂ ಇಲ್ಲ.(ಪುಟ28)

 

52)ತನ್ನ ತಲೆಯ ಮೇಲಿರುವ ಹೇರಿನಿಂದ  ಉಂಟಾದ ಕಷ್ಟವನ್ನು ಇತರರಿಂದ ಹೋಗಲಾಡಿಸಿಕೊಳ್ಳಬಹುದು. ಆದರೆ ಹಸಿವು ಮೊದಲಾದವುಗಳಿಂದ ಉಂಟಾದ  ಕಷ್ಟವನ್ನು ತನ್ನಿಂದಲ್ಲದೆ ಬೇರೆಯಾರಿಂದಲೂ  ಪರಿಹರಿಸಿಕೊಳ್ಳಲು  ಸಾಧ್ಯವಿಲ್ಲ.(ಪುಟ2)

 

53)ಯಾವ ರೋಗಿಯು ಔಷಧಸೇವನೆ ಪಥ್ಯ ಇವುಗಳನ್ನು ಮಾಡುತ್ತಾನೆಯೊ  ಅವನಿಗೆ ಆರೋಗ್ಯ ಲಾಭವು ಕಂಡು ಬರುತ್ತದೆ.ಇತರರು ಮಾಡಿದ ಕೆಲಸದಿಂದಲ್ಲ.(ಪುಟ 2)

(ಶಾಸ್ತ್ರಾಚಾಯ೯ರ ಉಪದೇಶದಿಂದತನ್ನ ಅನುಭವಕ್ಕೆ ಬಂದಿರುವ  ಜ್ಞಾನವೇ ಚಕ್ಷುಸ್ಸು)

 

54)ಯಾರು ಜ್ಞಾನ ಚಕ್ಷುಸ್ಸಿನಿಂದ ತಿಳಿದುಕೊಳ್ಳುತ್ತಾರೋ  ಅವರು ಬ್ರಹ್ಮವನ್ನು ಹೊಂದುತ್ತಾರೆ.ಶಾಸ್ತ್ರಾಚಾಯ೯ರ ಉಪದೇಶದಿಂದತನ್ನ ಅನುಭವಕ್ಕೆ ಬಂದಿರುವ  ಜ್ಞಾನವೇ ಚಕ್ಷುಸ್ಸು.(ಪುಟ 30)

 

55) ಅವಿದ್ಯಾ-ಕಾಮ-ಕಮ೯ಗಳೇ ಮೊದಲಾದ  ಪಾಶಗಳ ಬಂಧದಿಂದ  ಬಿಡಿಸಿಕೊಳ್ಳುವುದಕ್ಕೆ,ತನ್ನನ್ನು ಬಿಟ್ಟರೆ ನೂರು ಕೋಟಿ ಕಲ್ಪಗಳ ಕಾಲದಲ್ಲಿಯೂ  ಮತ್ತೆ ಯಾರಿಂದ ಸಾಧ್ಯವಾದೀತು?(ಪುಟ30)

 

12) ಅಭೇದ ಜ್ಞಾನದಿಂದ ಮೋಕ್ಷ:

 

56)ಯೋಗದಿಂದಾಗಲೀ ಸಾಂಖ್ಯದಿಂದಾಗಲೀ ಕಾಮ್ಯ ಕಮ೯ದಿಂದಾಗಲಿ ಮೋಕ್ಷವು ಸಿದ್ಧಿಸುವುದಿಲ್ಲ.ಜೀವ ಪರಮಾತ್ಮರ ಅಭೇದಜ್ಞಾನದಿಂದಲೇ  ಮೋಕ್ಷವು.ಸಿದ್ಧಿಸುವುದು,ಮತ್ತಾವುದರಿಂದಲೂ ಅಲ್ಲ.(ಪುಟ 31)

 

57)ಒಂದು ವೀಣೆಯ ರೂಪಸೌಂದಯ೯ ಮತ್ತು ಅದರ ತಂತಿಗಳ ವಾದನದಿಂದ  ಉಂಟಾಗುವ ಸೌಷ್ಠವ-ಇವುಗಳಿಂದ ಜನರ ಮನೋರಂಜನೆಗೆ ಅನುಕೂಲವಾಗುತ್ತದೆಯೇ ಹೊರತು ಸಾಮ್ರಾಜ್ಯಕ್ಕೆ ಸಾಧನವಾಗುವುದಿಲ್ಲ.(31)

 

58)ಪಂಡಿತರ ವಾಗ್ವೈಖರಿ,ಶಬ್ದಗಳ ಪ್ರವಾಹ,ಶಾಸ್ತ್ರ ವಿವರಣೆಯಲ್ಲಿ ಕೌಶಲ ಮತ್ತು ಪಾಡಿತ್ಯ -ಇವು ಭೋಗಕ್ಕೆ ಸಾಧನವಾಗಬಲ್ಲವೇ ವಿನಾ ಮುಕ್ತಿಗೆ  ಆಗಲಾರವು.(ಪುಟ 32)

 

5)ಪರತತ್ವವನ್ನು ತಿಳಿದುಕೊಳ್ಳದಿದ್ದರೆ, ಶಾಸ್ತ್ರಾಧ್ಯಯನವು ನಿಷ್ಫಲವು.ಪರತತ್ವವನ್ನು ತಿಳಿದುಕೊಂಡರೂ ಶಾಸ್ತ್ರಾಧ್ಯಯನವು.

(ಅವಿದ್ಯೆಯಲ್ಲಿರುವಾಗ ಲೌಕಿಕ ಪಂಡಿತನ ಶಾಸ್ತ್ರಾಧ್ಯಯನವು ನಿಷ್ಫಲವಾಗಿರುವಂತೆ ಜ್ಞಾನವನ್ನು ಪಡೆದ ಪಂಡಿತನ  ಶಾಸ್ತ್ರಾಧ್ಯಯನವೂ ನಿಷ್ಫಲವೇ.)

 

60)ಶಾಸ್ತ್ರಗಳ ಶಬ್ದ ಸಮೂಹವು ದೊಡ್ಡ ಅರಣ್ಯದಂತಿರುವುದರಿಂದ  ಮನಸ್ಸಿನ ಭ್ರಾಂತಿಗೆ ಕಾರಣವಾಗಿದೆ.ಆದುದರಿಂದ ಆತ್ಮಜ್ಞಾನಿಯಿಂದ  ಆತ್ಮತತ್ವವನ್ನು  ಪ್ರಯತ್ನಪೂವ೯ಕವಾಗಿ ಅರಿತುಕೊಳ್ಳಬೇಕು.

(ವಿಚಾರ ಮಾಡದೆ  ಶಾಸ್ತ್ರಗಳ ಪದಗಳನ್ನೂ  ಪದಾಥ೯ಗಳನ್ನೂ ಗ್ರಹಿಸಿದರೆ  ಅದು ಒಂದು  ಮಹಾರಣ್ಯದಂತಾಗಿ ಪುರುಷಾಥ೯ದಿಂದಭ್ರಷ್ಟವಾಗಲು ಕಾರಣವಾಗುತ್ತದೆ.)

 

61)ಅವಿದ್ಯೆಯೆಂಬ ಹಾವಿನಿಂದ ಕಚ್ಚಲ್ಪಟ್ಟವನಿಗೆ  ಬ್ರಹ್ಮಜ್ಞಾನವೆಂಬ ಔಷಧವನ್ನು ಬಿಟ್ಟರೆ ವೇದಗಳಿಂದಲೂ ಶಾಸ್ತ್ರಗಳಿಂದಲೂ ಏನು ಪ್ರಯೋಜನ?ಮಂತ್ರಗಳಿಂದಲೂ ಔಷಧಗಳಿಂದಲೂ ಏನು ಪ್ರಯೋಜನ?(ಪುಟ33)

 

62)ಔಷಧವನ್ನು ಕುಡಿಯದೆ ಕೇವಲ ಔಷಧವೆಂಬ ಹೆಸರನ್ನು ಹೇಳಿದರೆ  ರೋಗವು ಹೋಗದು.ಹೀಗೇ ಬ್ರಹ್ಮ ಸಾಕ್ಷಾತ್ಕಾರವಾಗದೆ  ಬ್ರಹ್ಮ ಮೊದಲಾದ ಹೆಸರುಗಳನ್ನು ಹೇಳಿದ ಮಾತ್ರದಿಂದ ಮುಕ್ತನಾಗುವುದಿಲ್ಲ.(ಪುಟ33)

 

63)ದೃಶ್ಯವಸ್ತುಗಳ ಲಯವನ್ನು ಮಾಡದೆ,ಆತ್ನತತ್ವವನ್ನು ತಿಳಿದುಕೊಳ್ಳದೆ ಉಚ್ಛಾರರಣ ಮಾತ್ರ ಫಲವಾಗಿರುವ  ಹೊರಗಿನ ಶಬ್ದಗಳಿಂದ ಮುಕ್ತಿಯು ಹೇಗಾಗುವುದು?

 

64)ಶತ್ರುಗಳನ್ನು ಸಂಹರಿಸದೆ,,ಸಮಸ್ತ ರಾಜ್ಯಲಕ್ಷ್ಮಿಯನ್ನು ಪಡೆಯದೆ'ನಾನು ರಾಜನು' ಎಂದು ಹೇಳಿಕೊಳ್ಳುವುದರಿಂದಲೇ ಅವನು ರಾಜನಾಗಲು ಅಹ೯ನಾಗುವುದಿಲ್ಲ.

 

65)ಆಪ್ತವಾಕ್ಯ,ಅಗೆಯುವುದು,ಮೇಲಿರುವ ಕಲ್ಲು ಮಣ್ಣು ಮೊದಲಾದುವನ್ನು ತೆಗೆಯುವುದು,ಕೈಯಲ್ಲಿ ತೆಗೆದುಕೊಳ್ಳುವುದು-ಇವುಗಳಿಂದ  ನಿಧಿಯನ್ನು ಹೊರಕ್ಕೆ ತರಬಹುದು. ಬರಿಯ ನಾತುಗಳಿಂದ ಅದು ಹೊರಕ್ಕೆ ಬರುವುದಿಲ್ಲ. ಹೀಗೆಯೇ ಬ್ರಹ್ನಜ್ಞಾನಿಯು ಮಾಡಿದ ಉಪದೇಶದರ ಶ್ರವಣ,ಮನನ,ನಿದಿಧ್ಯಾಸನ(ಧ್ಯಾನ)ದಿಂದಲೇ  ಮಾಯೆಯ ಕಾಯ೯ದಿಂದ ಮುಚ್ಚಲ್ಪಟ್ಟ ,ತನ್ನದೇ ಆಗಿರುವ  ವಿಮಲವಾದ ತತ್ವವು  ಪ್ರಾಪ್ತವಾಗುವುದಲ್ಲದೆ ಕುತಕ೯ಗಳಿಂದ ಪ್ರಾಪ್ತವಾಗಲಾರದು.(ಪುಟ 35)

 

('ಆತ್ಮನನ್ನು ನೋಡಬೇಕು ,ಶ್ರವಣ ಮಾಡಬೇಕು, ನಿದಿಧ್ಯಾಸನ ಮಾಡಬೇಕು.'ಆತ್ಮಾ ವಾ ಅರೇ ದ್ರಷ್ಟವ್ಯಃ ಶ್ರೋತವ್ಯೋ ಮಂತವ್ಯೋನಿದಿಧ್ಯಾಸಿತವ್ಯಃ(ಬೃ..2.4.5)

 

66)ಆದಕಾರಣ ಪಂಡಿತರಾದವರು  ರೋಗಾದಿಗಳು ಬಂದೊದಗಿದಾಗ  ಹೇಗೆ ಬಿಡಿಸಿಕೊಳ್ಳಲು ಯತ್ನಿಸುವರೊ ಹಗೆಯೇ  ಸವ೯ಪ್ರಯತ್ನದಿಂದಲೂ  ಸಂಸಾರ ಬಂಧದಿಂದ  ಬಿಡಿಸಿಕೊಳ್ಳಲು ತಾನೇ ಯತ್ನವನ್ನು ಮಾಡಬೇಕು.(ಪುಟ36)

 

14) ಮೋಕ್ಷಹೇತುಗಳು:

 

67)

ಎಲೈ ಶಿಷ್ಯನೇ ಇಂದು ನೀನು ಮಾಡಿದ  ಪ್ರಶ್ನೆಯು ಶ್ರೇಷ್ಠವಾದುದು.ಶಾಸ್ತ್ರಜ್ಞರಿಗೆ ಸಮ್ಮತವಾದುದು.ಸೂತ್ರಸದೃಶವಾದುದು.ಗಂಭೀರ ಅಥ೯ವುಳ್ಳದ್ದು ಮತ್ತು ಮುಮುಕ್ಷುಗಳಿಂದ ತಿಳಿಯಲ್ಪಡತಕ್ಕದ್ದು.(ಪುಟ36)

 

68)ಎಲೈ ಶಿಷ್ಟನೆ, ನಾನು ಯಾವುದನ್ನು  ಹೇಳುತ್ತೇನೆಯೊ ಅದನ್ನು ಸಾವಧಾನ ಮನಸ್ಕನಾಗಿ ಕೇಳು.ಇದನ್ನು ಕೇಳಿದರೆ  ಸಂಸಾರ ಬಂಧನದಿಂದ ಕೂಡಲೇ  ಬಿಡುಗಡೆಯನ್ನು ಹೊಂದುತ್ತೀಯೆ.

 

6)ಅಶಾಶ್ವತವಾದ ವಸ್ತುಗಳಲ್ಲಿ ಅತ್ಯಂತ ವೈರಾಗ್ಯವೇ  ಮೋಕ್ಷಕ್ಕೆ ಮೊದಲನೆಯ ಹೆಜ್ಜೆ.ಶಮ,ದಮ,ತಿತಿಕ್ಷೆ ಮತ್ತು ಪ್ರಾಪ್ತವಾಗಿರುವ  ಸಮಸ್ತ ಕಮ೯ಗಳ ಸಂಪೂಣ೯ ತ್ಯಾಗ-ಇವು ಅನಂತರದ ಸಾಧನಗಳಾಗಿವೆ.(ಪುಟ

 

70)ಅನಂತರ ವೇದಾಂತ ವಾಕ್ಯಗಳ ಶ್ರವಣ, ವಾಕ್ಯಾಥ೯ಗಳ ಮನನ, ಮತ್ತು ನಿತ್ಯವೂ ನಿರಂತರವೂ  ಮಾಡುವ ಸತತವೂ ಆದ ಆತ್ಮೈಕ ಚಿಂತನ ಇವು ಮುನಿಗೆ ಸಾಧನಗಳಾಗಿವೆ.ಅನಂತರ ವಿದ್ವಾಂಸನು ಪರಮ-ನಿವಿ೯ಕಲ್ಪ ಸಮಾಧಿಯನ್ನು  ಬದುಕಿರುವಾಗಲೇ ಪರಮ ನಿವಾ೯ಣ ಸುಖವನ್ನು ಹೊಂದುತ್ತಾನೆ.

(ಇಲ್ಲಿಯೇ ಬ್ರಹ್ಮವನ್ನು ಹೊಂದುತ್ತಾನೆ.'ಅತ್ರ ಬ್ರಹ್ಮ ಸಮಶ್ನುತೇ(ಕಠ 2-6-14)

 

15) ಆತ್ಮಾನಾತ್ಮ ವಿವೇಕ:

 

71)ಈಗ ನೀನು ಯಾವ ಆತ್ಮಾನಾತ್ಮ-ವಿವೇಚನೆಯನ್ನು ತಿಳಿದುಕೊಳ್ಳಬೇಕೋ ಅದನ್ನು ಹೇಳುತ್ತೇನೆ.ಅದನ್ನು ಚೆನ್ನಾಗಿ ಮನಸ್ಸಿನಲ್ಲಿ ನಿಶ್ಚಯಿಸಿಕೊ(ಪುಟ 38)

 

16)ಸ್ಥೂಲ ಶರೀರದ ವಣ೯ನೆ:

 

72)ಮಜ್ಜೆ ಮೂಳೆಕೊಬ್ಬು ಮಾಂಸ ರಕ್ತ ಚಮ೯ ಹೊರಚಮ೯ ಎಂಬ ಸಪ್ತಧಾತುಗಳಿಂದ ಕೂಡಿ,ಕಾಲು ತೊಡೆ,ಎದೆ ತೋಳು ಬೆನ್ನು  ತಲೆ ಮೊದಲಾದ ಅಂಗಗಳಿಂದಲೂ  ಉಪಾಂಗಗ

ಳಿಂದಲೂ ಕೂಡಿ....(ಪುಟ3)

 

73)'ನಾನು''ನನ್ನದು' ಎಂದು ಪ್ರಸಿದ್ಧವಾಗಿ ,ಮೋಹಕ್ಕೆ ಆಸ್ಪದವಾಗಿರುವ  ಇದನ್ನು ಸ್ಥೂಲ ಶರೀರವೆಂದು  ಪಂಡಿತರು ಹೇಳುತ್ತಾರೆ.ಆಕಾಶ  ವಾಯು ಅಗ್ನಿ ನೀರು ಭೂಮಿ ಇವು ಸೂಕ್ಷ್ಮಭೂತಗಳು.( ಪಂಚ ಭೂತಗಳಿಂದಲೇ ಶರೀರವು ಸ್ಥೂಲವಾಗುತ್ತದೆ.ಸೂಕ್ಷ್ಮವಾಗಿರುವ ಪಂಚಭೂತಗಳು  ಮುಂದೆ ಸ್ಥೂಲವಾಗುತ್ತದೆ.(ಪುಟ 3)

(ಪಂಚಭೂತಗಳಿಂದಲೇ ಶರೀರ ವಾಗಿದೆ)

 

74) ಸೂಕ್ಷ್ಮಭೂತಗಳು  ಪರಸ್ಪರ ಅಂಶಗಳಲ್ಲಿ ಮಿಶ್ರವಾಗಿ  ಸ್ಥೂಲಗಳಾಗಿ ಸ್ಥೂಲಶರೀರಕ್ಕೆ ಕಾರಣವಾಗುತ್ತದೆ.ಇವುಗಳ ಸೂಕ್ಷ್ಮಾಂಶಗಳಾದ  ಅಥವಾ ಗುಣಗಳಾದ  ಶಬ್ದವೇ ಮೊದಲಾದ  ಐದು ಜೀವನ ಸುಖಕ್ಕೆ ವಿಷಯಗಳಾಗುತ್ತವೆ.

( ಐದು ಸೂಕ್ಷ್ಮಭೂತಗಳಿಂದ  ಐದು ಸ್ಥೂಲಭೂತಗಳುಂಟಾಗುವ  ಕ್ರಮಕ್ಕೆ ಪಂಚೀಕರಣವೆಂದು ಹೆಸರು.ಪಂಚೀಕರಣವು ಹೀಗಾಗುತ್ತದೆ.ಪಂಚಭೂತಗಳಲ್ಲಿ  ಪ್ರತಿಯೊಂದು ಭೂತವೂ  ಎರಡೆರಡು ಭಾಗಗಳಾಗುತ್ತವೆ.ಇದರಲ್ಲಿ ಒಂದು ಭಾಗವು  ಪುನಃ ನಾಲ್ಕು ಭಾಗಗಳಾಗುತ್ತವೆ.ಅನಂತರ ಒಂದುಭೂತದ 1|2ಭಾಗ ಉಳಿದ ನಾಲ್ಕು ಭೂತಗಳ  1|8ಭಾಗ ಸೇರಿಕೊಂಡು  ಒಂದು ಸ್ಥೂಲಭೂತವಾಗುತ್ತದೆ.(1|2+1|8+1|8+1|8 +1|8).

 

ಐದು ವಿಷಯಗಳು:ಶಬ್ದ, ರಸ,ರೂಪ.ರಸ.ಗಂಧ,ಸ್ಪಶ೯.

 

17)ವಿಷಯನಿಂದೆ:

   75)ಯಾವ ಮೂಢರು  ವಿಷಯಗಳಲ್ಲಿ ಪ್ರಬಲವಾದ ರಾಗವೆಂಬ  ದೃಢವಾದ ಪಾಶದಿಂದ  ಬದ್ಧರಾಗುರುತ್ತಾರೆಯೋ ಅವರು ಸ್ವಕಮ೯ವೆಂಬ ದೂತನಿಂದ ವೇಗವಾಗಿ ಒಯ್ಯಲ್ಪಟ್ಟು  ಮೇಲಕ್ಕೂ ಕೆಳಕ್ಕೂ ಹೋಗುತ್ತಲೂ ಬರುತ್ತಲೂ ಇರುತ್ತಾರೆ.(ಪುಟ 40)

 

76)ಜಿಂಕೆ ಆನೆ ಮಿಡತೆ ಮೀನು ದುಂಬಿ - ಐದು ಶಬ್ದವೇ ಮೊದಲಾದ  ಪಂಚ ವಿಷಯಗಳಲ್ಲಿ  ತಮ್ಮ ತಮ್ಮ ಅಭಿಲಾಶೆಗೆ ಗೋಚರವಾಗುವ ಯಾವುದೋ ಒಂದು ಗುಣಕ್ಕೆ  ಬದ್ಧವಾಗಿ ಮೃತ್ಯುವನ್ನು ಹೊಂದುತ್ತವೆ ಪಂಚೇಂದ್ರಿಯಗಳಿಂದಲೂ ಕೂಡಿರುವ ಮನುಷ್ಯನ ವಿಷಯದಲ್ಲಿ  ಹೇಳುವುದೇನಿದೆ?.

 

(ಜಿಂಕೆ-ಬೇqಟೆಗಾರನು ಮಾಡುವ ಶಬ್ದ,ಆನೆಯು ಹೆಣ್ಣಾನೆಯ ಸ್ಪಶ೯ದಿಂದಲೂ ,ಮಿಡತೆಯು ದೀಪದ ರೂಪದಿಂದಲೂ ,ಮೀನು ಗಾಳದ ಹುಳುವಿನ ರುಚಿಯಿಂದಲೂ ,ದುಂಬಿಯು ಪುಷ್ಪದ ಪರಿಮಳದಿಂದಲೂ

ನಾಶವಾಗುತ್ತವೆ.ಹೀಗೆ ಒಂದೊಂದು  ಇಂದ್ರಿಯದ ವಶಕ್ಕೆ ಒಳಪಟ್ಟ ಜಂತುವಿನ ಅವಸ್ಥೆಯೇ ಹೀಗಾದರೆ ಪಂಚೇಂದ್ರಿಯಗಳ ಹೊಡೆತಕ್ಕೆ ಸಿಕ್ಕಿ ಬಿದ್ದಿರುವ ಮನುಷ್ಯನ ಗತಿಯೇನು?)

 

77)ಇಂದ್ರಿಯ ವಿಷಯವು  ದೋಷದಲ್ಲಿ  ಕಾಳ ಸಪ೯ದ ವಿಷಕ್ಕಿಂತಲೂ  ತೀಕ್ಷ್ಣವಾಗಿರುವುದು.ವಿಷವಾದರೋ ತಿನ್ನುವವನನ್ನು ಮಾತ್ರ ಕೊಲ್ಲುತ್ತದೆ. ಆದರೆ ವಿಷಯವು  ಕಣ್ಣಿನಿಂದ ನೋಡುವವನನ್ನು  ಕೂಡ ಕೊಲ್ಲುತ್ತದೆ.

(ಕಣ್ಣಿಂದ ನೋಡುವುದು  ಇತರ ಇಂದ್ರಿಯಗಳಿಗೂ ಉಪಲಕ್ಷಣವಾಗಿರುತ್ತದೆ.ಬಾಹ್ಯ ವಿಷಯಗಳೊಂದಿಗೆ  ಯಾವುದಾದರೊಂದು ಇಂದ್ರಿಯದ ಸಂಯೋಗವಾದರೆ  ಸಾಕು-ಎಂದಥ೯.(ಪುಟ 42)

 

78)ಬಿಡಿಸಿಕೊಳ್ಳುವುದಕ್ಕೆ ಅಶಕ್ಯವಾಗಿರುವ ವಿಷಯಾಭಿಲಾಸೆಯೆಂಬ  ಮಹಾಪಾಶದಿಂದ ಯಾವನು  ಮುಕ್ತನಾಗಿರುವನೊ ಅವನೇ ಮುಕ್ತಿಗೆ ಅಹ೯ನಾಗುತ್ತಾನೆ.ಇನ್ನೊಬ್ಬನು ಆರುಶಾಸ್ರ್ತಗಳನ್ನು ಬಲ್ಲವನಾದರೂ  ಮುಕ್ತುಗೆ ಅಹ೯ನಾಗುವುದಿಲ್ಲ.

(ನ್ಯಾಯ-ವೈಶೇಷಿಕ, ಸಾಂಖ್ಯ,ಯೋಗ,ಮೀಮಾಂಸಾ,ವೇದಾಂತ-ಎಂಬಿವೇ  ಆರು ಶಾಸ್ತ್ರಗಳು.)(ಪುಟ 42)

 

7)ಸಂಸಾರ ಸಮುದ್ರದ ಆಚೆಯ ತೀರವನ್ನು ಹೊಂದಬೇಕೆಂದು  ಪ್ರಯತ್ನಿಸಿರುವ ಮಂದ ವೈರಾಗ್ಯವುಳ್ಳ  ಮುಮುಕ್ಷುಗಳನ್ನು ಆಸೆಯೆಂಬ ಮೊಸಳೆಯು  ಕೊರಳಿನಲ್ಲಿ ಹಿಡಿದ ವೇಗದ ದೆಸೆಯಿಂದ  ಹಿಂತಿರುಗಿಸಿ ಮಧ್ಯದಲ್ಲಿ ಮುಳುಗಿಸುತ್ತದೆ.

(ವಿಷಯಗಳಲ್ಲಿ ತೀವ್ರ ವೈರಾಗ್ಯವಿಲ್ಲದಿದ್ದರೆ ಉಂಟಾಗುವ  ಅನಥ೯ವನ್ನು ಇಲ್ಲಿ ಹೇಳಿದೆ.)(ಪುಟ43)

 

80)ಯಾವನು ದೃಢ ವೈರಾಗ್ಯವೆಂಬ ಕತ್ತಿಯಿಂದ  ವಿಷಯಾಭಿಲಾಸೆ ಎಂಬ ಮೊಸಳೆಯನ್ನು  ಕೊಲ್ಲುತ್ತಾನೆಯೋ  ಅವನೇ ವಿಘ್ನಶೂನ್ಯನಾಗಿ ಸಂಸಾರ  ಸಮುದ್ರದ ಆಚೆಯದಡವನ್ನು ದಾಟುತ್ತಾನೆ.

 

ಸಂಸಾರಗತಿಯ ಕೊನೆಯನ್ನು ಹೊಂದುತ್ತಾನೆ. ತದ್ವಿಷ್ಣೋಃ ಪರಮಂ ಪದಂ. ಅದೇ ವಿಷ್ಣುವಿನ ಪರಮಪದ.ಸೋಧ್ವನಃ ಪಾರಮಾಪ್ನೋತಿ ತದ್ವಿಷ್ಣೋಃ ಪರಮಂ ಪದಂ ಎಂದು ಕಠ ಶ್ರುತಿಯಲ್ಲಿ ಹೇಳಿದೆ.(1-3-)

 

81)ಭಯಂಕರವಾದ  ವಿಷಯಮಾಗ೯ದಲ್ಲಿ ಹೋಗುತ್ತಿರುವ ಮಲಿನಬುದ್ಧಿಯುಳ್ಳವನನ್ನು  ಮೃತ್ಯುವು ಹೆಜ್ಜೆ ಹೆಜ್ಜೆಗೂ ಹಿಂಬಾಲಿಸುತ್ತಿರುವುದೆಂದು ತಿಳಿದು ಹಿತರು ಗುರುಗಳು ಸಾಧುಗಳು-ಇವರ ಮಾತಿಗೆ ಮತ್ತು ತನ್ನ ಯುಕ್ತಿಗೆ ಅನುಸಾರವಾಗಿ  ನಡೆಯುತ್ತಿರುವವನಿಗೆ ಮೋಕ್ಷಲಾಭವು ಸಿದ್ಧಿಸುತ್ತದೆ.ಇದು ಸತ್ಯವೆಂದು ತಿಳಿದುಕೊ.(ಪುಟ44)

 

82)ನಿನಗೆ ಮೋಕ್ಷದ ಅಭಿಲಾಷೆಯು ಇದ್ದದ್ದೇ ಆದರೆ  ವಿಷಯಗಳನ್ನು ವಿಷದಂತೆ ದೂರದಲ್ಲಿಯೇ ತ್ಯಜಿಸು.ಸಂತೋಷ,ದಯೆ,ಕ್ಷಮೆ,ಸರಳತೆ ಶಮೆ,ದಮೆ ಇವುಗಳನ್ನು ಅಮೃತದಂತೆ ನಿತ್ಯವೂ  ಪ್ರೀತಿಯಿಂದ ಸೇವಿಸು.(ಪುಟ44)

 

18)ದೇಹಾಸಕ್ತಿಯ ನಿಂದೆ:

 

83)ಯಾವುದನ್ನು ಪ್ರತಿಕ್ಷಣವೂ  ಮಾಡಬೇಕೊ ಅಂಥ ಅನಾದಿಯಾದ ಅವಿದ್ಯೆಯಿಂದ  ಮಾಡಲ್ಪಟ್ಟ ಸಂಸಾರ ಬಂಧದ ಬಿಡುಗಡೆಯನ್ನು ತ್ಯಜಿಸಿ,ಪರರಿಗೆ ಪ್ರಯೋಜನವಾಗಿರುವ ಶರೀರದ ಪೋಷಣ

ದಲ್ಲಿಯೇ ಯಾವನು ಆಸಕ್ತನಾಗಿರುವನೊ ಅವನು ಶರೀರ ಪೋಷಣದಿಂದಲೇ ತನ್ನನ್ನು ಕೊಂದುಕೊಳ್ಳತ್ತಾನೆ.(ಪುಟ45)

 

84)ಯಾವನು ಶರೀರ ಪೋಷಣವನ್ನೇ ಬಯಸುವವನಾಗಿ  ಆತ್ಮನನ್ನೂ ಸಾಕ್ಷಾತ್ಕರಿಸಲು ಬಯಸುತ್ತಾನೆಯೊ ಅವನು ಮೊಸಳೆಯನ್ನು ಮರವೆಂಬ ಬುದ್ಧಿಯಿಂದ  ಹಿಡಿದುಕೊಂಡು  ನದಿಯನ್ನು ದಾಟುವುದಕ್ಕೆ ಹೋಗುತ್ತಾನೆ.(ಪುಟ86)

 

85) ಮುಮುಕ್ಷುವಿಗೆ  ಶರೀರವೇ ಮೊದಲಾದವುಗಳಲ್ಲಿರುವ ಮೋಹವೇ ಮಹಾಮೃತ್ಯುವು. ಯಾವನು ಮೋಹವನ್ನು ಜಯಿಸಿರುತ್ತಾನೋ  ಅವನು ಮೋಕ್ಷ ಸ್ವರೂಪವನ್ನು ಹೊಂದಲು  ಯೋಗ್ಯನಾಗುತ್ತಾನೆ.

(ಪುಟ46)

 

86)ಶರೀರ ಹೆಂqತಿ ಮಕ್ಕಳು  ಮೊದಲಾದವುಗಳಲ್ಲಿರುವ  ಮೋಹವೆಂಬ ಮಹಾಮೈತ್ಯುವನ್ನು ನಾಶಮಾಡು.ಮೋಹವನ್ನು ಜಯಿಸಿದ ಮುನಿಗಳು  ಶ್ರುತಿಪ್ರಸಿದ್ಧವಾದ ವಿಷ್ಣುವಿನ ಪರಮಪದವನ್ನು ಹೊಂದುತ್ತಾರೆ.(ಕಠೋಪನಿಷತ್1-3-)(ಪುಟ47)

 

1)ಸ್ಥೂಲಶರೀರ:

 

87)ಚಮ೯ ಮಾಂಸ ರಕ್ತ ಸ್ನಾಯು ಕೊಬ್ಬು ಮಜ್ಜೆ ಮೂಳೆ-ಇವುಗಳಿಂದ ಕೂಡಿರುವ ,ಮಲಮೂತ್ರಗಳಿಂದ ತುಂಬಿರುವ,ನಿಂದ್ಯವಾದ ದೇಹವೇ ಸ್ಥೂಲ ಶರೀರವು.(ಪುಟ 47)

 

88)ಪೂವ೯ಕಮ೯ದಿಂದಲೂ  ಮತ್ತು ಪಂಚೀಕೃತವೂ  ಸ್ಥೂಲವೂ ಆದ(ಪೃಥಿವ್ಯಾದಿ)ಭೂತಗಳಮೂಲಕವೂ ಉತ್ಪನ್ನವಾದ ಸ್ಥೂಲ ಶರೀರವು  ಆತ್ಮನ ಅನುಭವಕ್ಕೆ ಆಶ್ರಯವಾಗಿದೆ.

ಶರೀರಕ್ಕೆ ಜಾಗ್ರತ್ತು ಒಂದು  ಅವಸ್ಥೆಯಾಗಿದೆ. ಅವಸ್ಥೆಯಿಂದಲೇ ಸ್ಥೂಲವಸ್ತುಗಳ ಅನುಭವವುಂಟಾಗುತ್ತದೆ.(ಪುಟ48)

 

8) ಜೀವಾತ್ಮನು ದೇಹಾಭಿಮಾನವನ್ನು ಪಡೆದು  ತಾನೇ ಹೊರಗಿನ ಇಂದ್ರಿಯಗಳಿಂದ ಹೂ ಮಾಲೆ ಚಂದನ,ಸ್ತ್ರೀಯರು  ಮೊದಲಾದ ವಿಚಿತ್ರ ರೂಪವುಳ್ಳ ಸ್ಥೂಲ ಪದಾಥ೯ಗಳ ಸೇವನೆಯನ್ನು ಮಾಡುತ್ತಾನೆ. ಆದುದರಿಂದ ಈಶರೀರಕ್ಕೆ  ಜಾಗ್ರತಾವಸ್ಥೆಯಲ್ಲಿ ಪ್ರಾಶಸ್ತ್ಯವಿರುತ್ತದೆ.(ಪುಟ 48)

 

0)ಮನುಷ್ಯನ ಬಾಹ್ಯ ಸಂಸಾರವೆಲ್ಲವೂ  ಯಾವುದನ್ನು ಆಶ್ರಯಿಸಿಕೊಂಡಿರುವುದೊ ಅಂಥ ಸ್ಥೂಲ ಶರೀರವನ್ನು  ಗೃಹಸ್ಥನ ಮನೆಯಂತೆ ಎಂದು ತಿಳಿ.

(ಜಗತ್ತಿನಲ್ಲಿ ಯಾವನೂ ತಾನು ವಾಸಿಸುತ್ತಿರುವ ಮನೆಯನ್ನು  ತನ್ನ ಆತ್ಮನೆಂದು ಹೇಗೆ ತಿಳಿಯುವುದಿಲ್ಲವೋ ಹಾಗೆಯೇ ಸ್ಥೂಲಶರೀರದಲ್ಲಿ 'ನಾನು'ಎಂಬ ಅಭಿಮಾನವನ್ನು ಎಂದಿಗೂ ಮಾಡಬಾರದು)ಪುಟ4)

1)ಹುಟ್ಟು-ಮುಪ್ಪು-ಸಾವುಗಳು,ಸ್ಥೂಲತ್ವ ಮೊದಲಾದವು  ಸ್ಥೂಲಶರೀರದ ಬಹುವಿಧವಾದ ಲಕ್ಷಣಗಳಗು.ಶಿಶುತ್ವಮೊದಲಾದವು ಅದರ ಅವಸ್ಥೆಗಳು.ಅದಕ್ಕೆ ವಣಾ೯ಶ್ರಮಾದಿ ನಿಯಮಗಳಿವೆ.ಅದು ನಾ ನಾ ವಿಧವಾದ ರೋಗಗಳನ್ನು ಪಡೆಯುತ್ತದೆ.ಪೂಜೆ ,ಅವಮಾನ,ಬಹುಮಾನ ಮೊದಲಾದ ವಿಶೇಷಗಳನ್ನು ಹೊಂದುತ್ತದೆ.

(ಹುಟ್ಟುವುದು,ಇರುವುದು,ವಧಿ೯ಸುವುದು,ಪರಿಣಮಿಸುವುದು,ಕ್ಷಯವಾಗುವುದು  ಮತ್ತು ನಾಶವಾಗುವುದು-ಇವು ಶರೀರದ ಆರು ವಿಕಾರಗಳು. ಎಂದು ಯಾಸ್ಕರು ಹೇಳಿದ್ದಾರೆ.)(ಪುಟ4)

 

20) ದಶೇಂದ್ರಿಯಗಳು:

 

2) ಕಿವಿಗಳು,ಚಮ೯,ಕಣ್ಣುಗಳು,ಮೂಗು,ನಾಲಗೆ-ಇವು ವಿಷಯಗಳನ್ನು ತಿಳಿಸುವುದರಿಂದ  ಜ್ಞಾನೇಂ

ದ್ರಿಯಗಳು ಎನಿಸುವವು.ವಾಕ್ಕು ಕೈಗಳು,ಕಾಲುಗಳು,ಗುದ,ಉಪಸ್ಥ -ಇವು ಕಮ೯ಗಳಲ್ಲಿ ಪ್ರವೃತ್ತವಾಗಿರುವುದರಿಂದ ಕಮೇ೯ಂದ್ರಿಯಗಳು ಎನಿಸಿವೆ.(ಪುಟ51)

 

22)ಅಂತಃಕರಣ ಚತುಷ್ಟಯ:

 

3-4) ಅಂತಃಕರಣವೇ  ತನ್ನ ವೃತ್ತಿಗಳಿಗೆ ಅನುಸಾರವಾಗಿ  ಮನಸ್ಸು,ಬುದ್ಧಿ,ಚಿತ್ತ,ಅಹಂಕಾರ ಎಂದು ಹೇಳಲ್ಪಡುತ್ತದೆ.ಸಂಕಲ್ಪ ವಿಕಲ್ಪಗಳನ್ನು ಮಾಡುವುದರಿಂದ ಮನಸ್ಸೆಂದೂ,ವಸ್ತುವನ್ನು  ನಿಶ್ಚಯಿಸುವ

ಧಮ೯ವುಳ್ಳದ್ದರಿಂದ ಬುದ್ಧಿಯೆಂದೂ,ಶರೀರದಲ್ಲಿ ನಾನು,ಎಂಬ ಅಭಿಮಾನವನ್ನು ಮಾಡುವುದರಿಂದ ಅಹಂಕಾರವೆಂದೂ,ಸ್ವಸುಖ ಸಾಧನಗಳನ್ನು ಕುರಿತು ಚಿಂತಿಸುವುದರಿಂದ ಚಿತ್ತವೆಂದೂ ಹೇಳಲ್ಪಡುತ್ತದೆ.(ಪುಟ52)

 

22)ಪಂಚಪ್ರಾಣಗಳು:

 

5)ಸುವಣ೯ ನೀರು ಇವು ವಿಕಾರ ಭೇದದಿಂದ ವಿವಿಧ ಹೆಸರುಗಳನ್ನು ಪಡೆಯುವಂತೆ ಪ್ರಾಣವು ತಾನೊಂದೇ ಆಗಿದ್ದರೂ,ಕ್ರಿಯಾ ಭೇದದಿಂದ ಪ್ರಾನ,ಅಪಾನವ್ಯಾನ ಉದಾನ ಸಮಾನವೆಂಬ ನಾಮಗಳನ್ನು ಪಡೆಯುತ್ತದೆ.(ಪುಟ52)

 

23)ಪುಯ೯ಷ್ಟಕ:

 

 

6)ವಾಕ್ಕು ಮೊದಲಾದ ಐದು ಕಮೇ೯ಂದ್ರಿಯಗಳು ,ಶ್ರವಣವೇ ಮೊದಲಾದ ಐದು ಜ್ಞಾಂದ್ರಿಯಗಳು,ಪ್ರಾಣವೇ ಮೊದಲಾದ ಪಂಚಪ್ರಾಣಗಳು ಆಕಾಶವೇ ಮೊದಲಾದ ಸೂಕ್ಷ್ಮಭೂತಗಳು,ಬುದ್ಧಿಯೇ ಮೊದಲಾದ ನಾಲ್ಕು,ಅವಿದ್ಯೆ,ಕಾಮ,ಕಮ೯- ಎಂಟು ಪುರಗಳನ್ನು  ಸೂಕ್ಷ್ಮಶರೀರವೆಂದು ಹೇಳುತ್ತಾರೆ.

(ಎಂಟು ಪುರಗಳು) ಐದು ಕಮೇ೯ಂದ್ರಿಯಗಳು,2) ಐದು ಜ್ಞಾನೇಂದ್ರಿಯಗಳು 3)ಪಂಚಪ್ರಾಣಗಳು4)

ಆಕಾಶವೇ ಮೊದಲಾದ ಸೂಕ್ಷ್ಮಭೂತಗಳು5)ಬುದ್ದಿ ಮೊದಲಾದ ನಾಲ್ಕು 6)ಅವಿದ್ಯೆ7)ಕಾಮ8) ಕಮ೯

ಇವೇ ಎಂಟು ಪುರಗಳು-ಸೂಕ್ಷ್ಮಶರೀರ).(ಪುಟ52)

 

24) ಸೂಕ್ಷ್ಮ ಶರೀರ:

 

7)ಸೂಕ್ಷ್ಮ ಶರೀರವೆಂಬ ಹೆಸರುಳ್ಳ ,ಪಂಚೀಕೃತವಾದ,ಭೂತಗಳಿಂದ ಉತ್ಪನ್ನವಾದ,ವಾಸನೆಯಿಂದ ಕೂಡಿರುವ ಮತ್ತು ಕಮ೯ಫಲಗಳ ಅನುಭವವನ್ನುಂಟು ಮಾಡುವ ಲಿಂಗ ಶರೀರದ ವಿಷಯವನ್ನು ಕೇಳು.ತನ್ನಸ್ವರೂಪವನ್ನು ತಿಳಿಯದೆ, ಇರುವುದರಿಂದ ಇದು ಆತ್ಮನಿಗೆ ಅನಾದಿಯಾದ ಉಪಾಧಿಆಗಿದೆ.

(ಪುಟ53)

 

8-೯೯) ಸೂಕ್ಷ್ಮ ಶರೀರಾಭಿಮಾನಿಯಾದ ಜೀವನಿಗೆ ಸ್ವಪ್ನವು ಜಾಗ್ರತ್ತಿಗಿಂತ ಭಿನ್ನವಾದ ಅವಸ್ಥೆ.ಅಲ್ಲಿ ಅವನು ತಾನೊಬ್ಬನೇ ಉಳಿದುಕೊಂಡು  ಪ್ರಕಾಶಿಸುತ್ತಾನೆ. ಸ್ವಪ್ನದಲ್ಲಿ ಅಂತಃಕರಣವು ತಾನೊಂದೇ ಜಾಗ್ರದವಸ್ಥೆಯ ನಾನಾ ವಿಧವಾದ ಅನುಭವಗಳ  ವಾಸನೆಗಳಿಂದ ಕತೃ೯ವೇ  ಮೊದಲಾದ ಭಾವವನ್ನು ಹೊಂದಿ  ಪ್ರಕಾಶಿಸುತ್ತದೆ.ಆದರೆ ಇಲ್ಲಿ ಪರಮಾತ್ಮನು ಸ್ವಯಂಜ್ಯೋತಿಯಾಗಿರುತ್ತಾನೆ.ಕೇವಲ ಅಂತಃಕರಣವೆಂಬ ಉಪಾಧಿಯನ್ನು ಹೊಂದಿದವನಾಗಿ,ಅಶೇಷಸಾಕ್ಷಿಯಾಗಿರುವ ಆತ್ಮನು  ಅಂತಃಕರಣದಿಂದಾದ  ಕಮ೯ಲೇಶದಿಂದಲೂ  ಲಿಪ್ತನಾಗುವುದಿಲ್ಲ.ಇವನು ಅಸಂಗನಾಗಿರುವುದರಿಂದಲೇ 

ಉಪಾಧಿಯಿಂದಾದ ಕಮ೯ಗಳಿಂದ  ಸ್ವಲ್ಪವೂ ಲಿಪ್ತನಾಗುವುದಿಲ್ಲ.(ಪುಟ54)

 

 

100)ಚಿತ್ಸ್ವರೂಪವಾದ  ಮನುಷ್ಯನಿಗೆ  ಸೂಕ್ಷ್ಮಶರೀರವು -ಬಡಗಿಗಳಿಗೆ ಉಳಿಯೇ ಮೊದಲಾದ ಕರಣಗಳಂತೆ-ಸಮಸ್ತ ಪ್ರವೃತ್ತಿಗೂ  ಕಾರಣವಾಗಿರುತ್ತದೆ.ಆದುದರಿಂದಲೇ ಆತ್ಮನು ನಿಲಿ೯ಪ್ತನಾಗಿರುತಾನೆ.(ಪುಟ55)

 

101)ಕಣ್ಣಿನ ಸೌಗುಣ್ಯದಿಂದ ತೀಕ್ಷ್ಣತ್ವವೂ ವೈಗುಣ್ಯದಿಂದ ಕುರುಡೂ ಮಂದತ್ವವೂ ಉಂತಾಗುತ್ತವೆ.

ಹೀಗೆಯೇ ಕಿವುಡು ಮೂಕತನ ಮೊದಲಾದವು  ಕಿವಿಯೇ ಮೊದಲಾದವುಗಳ ಧಮ೯ವೇ ಹೊರತು

ಜ್ಞಾತೃವಾದ ಆತ್ಮನ ಧಮ೯ಗಳಲ್ಲ.(ಪುಟ55)

 

25) ಪ್ರಾಣದ ಧಮ೯ಗಳು:

 

102)ಉಚ್ಛ್ವಾಸ-ನಿಃಶ್ವಾಸ,ಆಕಳಿಕೆ,ಸೀನು,ಸ್ರಾವ,ಶರೀರ ತ್ಯಾಗ-ಇವೇ ಮೊದಲಾದ ಕ್ರಿಯೆಗಳನ್ನು -ಪ್ರಾಣವಿದರು ಪ್ರಾಣವೇ ಮೊದಲಾದವುಗಳ ಧಮ೯ವೆಂದು ಹೇಳುತ್ತಾರೆ.ಹಸಿವು ಬಾಯಾರಿಕೆಗಳೂ ಪ್ರಾಣನ ಧಮ೯ಗಳು.(ಪುಟ56)

 

26)ಅಹಂಕಾರ:

 

103)ಅಂತಃಕರಣವು ಚಕ್ಷುಸ್ಸು ಮೊದಲಾದವುಗಳಲ್ಲಿಯೂ ಮತ್ತು ಶರೀರದಲ್ಲಿಯೂ 'ನಾನು'ಎಂಬ ಅಭಿಮಾನವನ್ನು ಪಡೆದುಆತ್ಮನ ಪ್ರತಿಚ್ಛಾಯೆಯೊಂದಿಗೆ ಕೂಡಿ ಇರುತ್ತದೆ.(ಚಿತ್ ವಸ್ತುವಿನ ಸಾನ್ನಿಧ್ಯ

ದಲ್ಲಿ  ಅದರ ಪ್ರಕಾಶದಂತಿರುವ  ತೋಕೆ೯ಯನ್ನು  ಚಿದಾಭಾಸವೆಂದು ಹೇಳುತ್ತಾರೆ.(ಪುಟ56)

 

104)ಯಾವುದು ಶರೀರದಲ್ಲಿ ಅಭಿಮಾನವನ್ನು ಪಡೆದು ಕತೃ೯ವೂ ಭೋಕ್ತøವೂ ಆಗುತ್ತದೆಯೊ  ಮತ್ತು ಸತ್ವವೇ ಗುಣಗಳ ಸಂಬಂಧದಿಂದ (ಜಾಗ್ರತ-ಸ್ವಪ್ನ-ಸುಷುಪ್ತಿಗಳೆಂಬ)ಅವಸ್ಥಾತ್ರಯವನ್ನು ಪಡೆಯುತ್ತದೆಯೊ ಅದನ್ನೇ ಅಹಂಕಾರವೆಂದು ತಿಳಿಯಬೇಕು.

(ರಜೋಗುಣ ಸಂಬಂಧದಿಂದ-ಜಾಗ್ರದವಸ್ಥೆ.

ಸತ್ವಗುಣದಿಂದ-ಸ್ವಪ್ನಾವಸ್ಥೆ,ತಮೋಗುಣ ಸಂಬಂಧದಿಂದ-ಸುಷುಪ್ತಿಯೂ ಉಂಟಾಗುತ್ತದೆ.)(ಪುಟ57)

 

105)ಇಂದ್ರಿಯ ವಿಷಯಗಳು ಅನುಕೂಲವಾಗಿರುವಾಗ ಅದು ಸುಖಯಾಗುತ್ತದೆ.ಅವು ವಿಪರೀತವಾದಾಗ ದುಃಖವಾಗುತ್ತದೆ.ಸುಖದುಃಖಗಳು ಅಹಂಕಾರದ ಧಮ೯ಗಳಾಗಿರುತ್ತವೆಯೇ ಹೊರತು ನಿತ್ಯಾನಂದ ಸ್ವರೂಪನನಾದ ಆತ್ಮನ ಧಮ೯ಗಳಲ್ಲ.(ಪುಟ58)

 

27) ಆತ್ಮನೇ ಪ್ರಿಯತಮನು:

 

106)ಇಂದ್ರಿಯ ವಿಷಯವು ಆತ್ಮನ ಪ್ರಯೋಜನಕ್ಕಾಗಿ ಪ್ರಿಯವಾಗಿರುತ್ತವೆ.ತನ್ನಷ್ಟಕ್ಕೆ ತಾನೇ ಪ್ರಿಯವಲ್ಲ.ಏಕೆಂದರೆ ಆತ್ಮನು ಎಲ್ಲರಿಗೂ  ತಾನೇ ಪ್ರಿಯತಮನಾಗಿರುತ್ತಾನೆ.ಆದುದರಿಂದ ಆತ್ಮನು ನಿತ್ಯಾನಂದ ಸ್ವರೂಪನಾಗಿರುತ್ತಾನೆ.ಇವನಿಗೆ ಎಂದೂ ದುಃಖವಿಲ್ಲ.

(ಜಗತ್ತಿನಲ್ಲಿ ಯಾವ ವಸ್ತುವೂ ತನ್ನಷ್ಟಕ್ಕೆ ತಾನೇ ಪ್ರಿಯವಾಗಿರುವುದಿಲ್ಲ.ಆತ್ಮನ  ಪ್ರಯೋಜನಕ್ಕಾಗಿಯೇ ಪ್ರಿಯವಾಗಿರುತ್ತದೆ.ಆತ್ಮ ಪ್ರೀತಿಯು ಮುಖ್ಯವೆಂದೂ  ಆತ್ಮ ಪ್ರೀತಿಗೆ ಸಾಧನವಾಗಿರುವ  ಇತರ ವಸ್ತುಗಳಲ್ಲಿರುವ ಪ್ರೀತಿಯು  ಗೌಣವೆಂದೂ ಅರಿಯಬೇಕು.(ಬೃಉ2-25).

 

107)ಸುಷುಪ್ತಿಯಲ್ಲಿ ಯಾವ ವಿಷಯದ ಸಹಾಯವೂ ಇಲ್ಲದೆ ಆತ್ಮಾನಂದವು ಅನುಭವಿಸಲ್ಪಡುತ್ತದೆ.ಶ್ರುತಿಯೂ,ಪ್ರತ್ಯಕ್ಷವೂ,ಆಪ್ತೋಕ್ತಿಯೂ  ಅನುಮಾನವೂ ಇದನ್ನು ಸಿದ್ಧಪಡಿಸುತ್ತದೆ.

(ಇದು ಇವನ ಪರಮಗತಿ,ಇದು ಇವನ ಪರಮಸಂಪತ್ತು,ಇದು ಇವನ ಪರಮಲೋಕ,ಇದು ಇವನ ಪರಮಾನಂದ,ಏಷಾಸ್ಯ ಪರಮಾ ಗತಿಃ,ಏಷಾಸ್ಯ ಪರಮಾ ಸಂಪತ್,ಏಷೋಸ್ಯ ಪರಮೋಲೋಕಃ ,ಏಷೋಸ್ಯ ಪರಮಾನಂದಃ(ಬೃ..4-3-22)

 

28)ಮಾಯೆಯ ನಿರೂಪಣೆ:

 

108)ಅವಿದ್ಯೆಗೆ ಅಥವಾ ಮಾಯೆಗೆ ಅವ್ಯಕ್ತವೆಂಬ ಹೆಸರಿದೆ.ಇದೇ ಅನಾದಿ.ಪರಮೇಶ್ವರನ ಶಕ್ತಿ,ಸತ್ವರಜೋತಮೋ ಗುಣಗಳನ್ನೊಳಗೊಂಡಿದೆ.ತನ್ನ ಕಾಯ೯ವಗ೯ಕ್ಕಿಂತ ಶ್ರೇಷ್ಠವಾದದ್ದು.ಇದನ್ನು ಧೀಮಂತನಾದವನೇ  ಕಾಯ೯ದಿಂದ ಅನುಮಾನಿಸಬೇಕು.ಇದರಿಂದ ಜಗತ್ತೆಲ್ಲ ಉತ್ಪನ್ನವಾಗಿದೆ.

(1) ಮಹತ್ತಿಗಿಂತ ಅವ್ಯಕ್ತವು ಶ್ರೇಷ್ಠವಾದುದು.ಮಹತಃ ¥ರಮವ್ಯಕ್ತವ್ಯಮ್(ಕಠ..1-3-111)

 

2)ಪೃಕೃತಿಯನ್ನು ಮಾಯೆಯೆಂದು ಅರಿತುಕೊ.ಮಹೇಶ್ವರನು ಮಾತಯೆಯ ಈಶನು.(ಸ್ವೇತಾ±್ವತರ .

4-11)

3) ಕಾರಣವು ಯಾವಾಗಲೂ ತನ್ನ ಕಾಯ೯ಕ್ಕಿಂತ ಶ್ರೇಷ್ಠವಾದದ್ದು.ಏಕೆಂದರೆ ಇದನ್ನು ಪ್ರತ್ಯಕ್ಷವಾಗಿ ಅರಿತುಕೊಳ್ಳಲು ಆಗುವುದಿಲ್ಲ.

4) ಅವ್ಯಕ್ತದಿಂದ ಎಲ್ಲಾ ಚರಾಚರ ವಸ್ತುಗಳೂ ಹುಟ್ಟುತ್ತವೆ.)

 

10)(ಪರಮೇಶ್ವರನ ಶಕ್ತಿಯಾದ ಮಾಯೆಯು )ಸದ್ರೂಪವಲ್ಲ,ಅಸದ್ರೂಪವಲ್ಲ,ಸತ್-ಅಸತ್ ರೂಪವೂ ಅಲ್ಲ.(ಪರಮೇಶ್ವರನಿಗಿಂತ)ಭಿನ್ನವೂ ಅಲ್ಲ,ಅಭಿನ್ನವೂ ಅಲ್ಲ,ಭಿನ್ನ-ಅಭಿನ್ನವೂ ಅಲ್ಲ.ಅದು ಸಾಯವವವೂ ಅಲ್ಲ,ನಿರವಯವವೂ ಅಲ್ಲ.,ಸಾವಯವ-ನಿರವಯವವೂ ಅಲ್ಲ,;ಅದು ಅತ್ಯಂತ ಅದ್ಭುತವಾಗಿದೆ.ಅನಿವ೯ಚನೀಯರೂಪವಾಗಿದೆ.(ಪುಟ 60)

 

110)'ಇದು ಹಾವು' ಎಂಬ ಭ್ರಾಂತಿಯು ಇದು ಹಗ್ಗ'ಇದು ಹಗ್ಗ'ಎಂಬ ವಿವೇಕದಿಂದ ಹೇಗೆ ನಾಶವಾಗುವುದೊ  ಹಾಗೆ ಶುದ್ಧವೂ ಅದ್ವಿತೀಯವೂ ಆದ ಪರಬ್ರಹ್ಮದ ಜ್ಞಾನದಿಂದ ಮಾಯೆಯು ನಾಶವಾಗುವುದು.ಸತ್ವ,ರಜಸ್ಸು,ತಮಸ್ಸು ಎಂಬ ಮಾvಯೆಯ ಸಂಬಂಧಿಗಳಾದ ಗುಣಗಳು ವ್ಯಕ್ತವಾಗಿರುವ ತಮ್ಮ ಕಾಯ೯ಗಳಿಂದಲೇ ಪ್ರಸಿದ್ಧವಾಗಿವೆ.(ಪುಟ 61)

 

2) ವಿಷೇಪ ಶಕ್ತಿ -ರಜೋಗುಣ:

 

111)ಕ್ರಿಯಾತ್ಮಕವಾದ  ವಿಕ್ಷೇಪ ಶಕ್ತಿಯು ರಜೋಗುಣಕ್ಕೆ ಸೇರಿದ್ದು.ಆವರಣ ಶಕ್ತಿಯು ವಸ್ತುವಿನ ಸ್ವರೂಪವನ್ನು ಮುಚ್ಚಿದಾಗ ವಿಕ್ಷೇಪ ಶಕ್ತಿಯು ಒಂದು ಹೊಸ ರೂಪವನ್ನು ಸೃಷ್ಟಿಸುವುದು.(ಪುಟ 62)

 

112)ಕಾಮ ಕ್ರೋಧ ಲೋಭ ದಂಭ ಅಸೂಯೆ ಅಹಂಕಾರ ಈಷ್ಯೆ೯ ಮತ್ಸರಿವೇ ಮೊದಲಾದ ಘೋರಧಮ೯ಗಳು -ಯಾವುದರಿಂದ ಪುರುಷ ಪ್ರವೃತ್ತಿಯು ಉಂಟಾಗಿರುವುದೊ- ರಜೋಗುಣಕ್ಕೆ ಸಂಬಂಧಪಟ್ಟವು.ಆದುದರಿಂದ ರಜೋಗುಣವು ಬಂಧಕ್ಕೆ ಕಾರಣವಾಗಿದೆ.(ಪುಟ62)

 

30) ಆವರಣ ಶಕ್ತಿ:

 

113)ಯಾವುದರಿಂದ  ವಸ್ತುವು ಬೇರೊಂದು ಬಗೆಯಾಗಿ ತೋರುತ್ತದೆಯೊ ಅದೇ ತಮೋಗುಣದ ಆವರಣವೆಂಬ ಪ್ರಸಿದ್ಧವಾದ  ಶಕ್ತಿಯು.(63)

 

114) ಮನುಷ್ಯನು ಮೇಧಾವಿಯಾಗಿದ್ದರೂ,ಶಾಸ್ತ್ರಜ್ಞನಾಗಿದ್ದರೂ,ಲೌಕಿಕ ವ್ಯವಹಾರದಲ್ಲಿ ಚತುರನಾಗಿದ್ದರೂ  ಅತ್ಯಂತ ಸೂಕ್ಷ್ಮವಾದ ವಿಷಯಗಳನ್ನು ಅರಿತಿದ್ದರೂ ,ತಮಸ್ಸಿನಿಂದ ಮುಚ್ಚಲ್ಪಟ್ಟರೆ,ಅನೇಕ ವಿಧದಿಂದ ಸ್ಫುಟವಾಗಿ ಬೋಧಿಸಲ್ಪಟ್ಟರೂ ತತ್ವವನ್ನು ಅರಿಯಲಾರರು.ಭ್ರಾಂತಿಯಿಂದ ತಾನು ಆರೋಪಿಸಿದ್ದನ್ನೇ  ಸರಿಯೆಂದು ಎಣಿಸುತ್ತಾನೆ.ಅದರ ಕಾಯ೯ಗಳನ್ನೇ ಆಶ್ರಯಿಸುತ್ತಾನೆ.ತಮಸ್ಸಿನ ಆವರಣ ಶಕ್ತಿಯು ಎಷ್ಟು ಪ್ರಬಲವಾದುದು!

(ಮೇಧಾ ಶಕ್ತಿಯಿಂದಲೂ ಬಹು ಶ್ರವಣದಿಂದಲೂ ಲಭ್ಯನಲ್ಲ. ನಮೇಧಯಾ ನಬಹುನಾ ಶ್ರುತೇನ(ಕಠ. 1-2-23)

'ಶ್ರವಣ ಮಾಡಿದಮೇಲೂ ಇವನನ್ನು ಬಹುಜನರು ಅರಿಯರು.'. ಶೃಣ್ವಂತೋಪಿ ಬಹವೋ ಯಂ ವಿದ್ಯುಃ(ಕಠ .1-2-7))(ಪುಟ 64)

 

115)ಅಭಾವನೆ,ವಿಪರೀತ ಭಾವನೆ,ಅಸಂಭಾವನೆ, ಸಂದೇಹ-ಇವು ಆವರಣ ಶಕ್ತಿಯ ಸಂಬಂಧದಿಂದ  ಕೂಡಿರುವ ಮನುಷ್ಯನನ್ನು  ಖಂಡಿತವಾಗಿ  ಬಿಡುವುದಿಲ್ಲ.(ಪುಟ 65)

 

116)ಅಜ್ಞಾನ ಆಲಸ್ಯ ನಿದ್ರೆ ಜಡತ್ವ  ಪ್ರಮಾದ ಮೂಢತ್ವ   ಮೊದಲಾಬವು ತಮಸ್ಸಿನ ಗುಣಗಳು.

ಇವುಗಳಿಂದ ಕೂಡಿರುವವನು  ನಿದ್ರಿಸುವವನಂತೆ ಏನನ್ನೂ ಅರಿಯುವುದಿಲ್ಲ..ಕಂಬದಂತೆಯೇ ಇರುತ್ತಾನೆ.

ಶ್ರೇಯಸ್ಸಿಗಾಗಿ ಪ್ರಯತ್ನಿಸುವುದಿಲ್ಲ ಎಂದಥ೯.(ಪುಟ 65)

 

31)ಸತ್ವಗುಣ:

 

117)ಸತ್ವಗುಣವು ನೀರಿನಂತೆ ನಿಮ೯ಲವಾದುದು.ಆದರೂ ¸ಜಸ್ತಮೋ ಗುಣಗಳೊಂದಿಗೆ ಬೆರೆತು  ಸಂಸಾರಕ್ಕೆ ಕಾರಣವಾಗುತ್ತದೆ.ಸತ್ವಗುಣದಲ್ಲಿ ಆತ್ಮಸ್ವರೂಪವು ಪ್ರತಿಬಿಂಬಿಸಿ ಸೂಯ೯ನಂತೆ ಜಡಜಗತ್ತೆಲ್ಲವನ್ನೂ ಪ್ರಕಾಶಿಸುತ್ತದೆ.

ಸತ್ವಗುಣ¸ದಿಂದ ಜ್ಞಾನವುಂಟಾಗುತ್ತದೆ.ಸತ್ವಾತ್ ಸಂಜಾಯತೇ  ಜ್ಞಾನಂ)(ಪುಟ66)

ಸತ್ವಗುಣವಿಲ್ಲದಿದ್ದರೆ ಆತ್ಮನು ಪ್ರಕಾಶಿಸುವುದೂ ಇಲ್ಲ.ಮೋಕ್ಷಕ್ಕೆ ಕಾರಣವಾದ ಜ್ಞಾನವೂ ಉಂಟಾಗುವುದಿಲ್ಲ.ನೀರಿನಂತೆ ಸ್ವಚ್ಛವಾಗಿದ್ದರೂ  ಸತ್ವವು ಇತರ ಗುಣಗಳೊಡನೆ ಕೂಡಿಕೊಂಡರೆ  ಸಂಸಾರವನ್ನುಂಟು ಮಾಡುವುದು)(ಪುಟ 66)

 

118)ಅಮಾನಿತ್ವವೇ ಮೊದಲಾದವು ,ಯಮನಿಯಮಗಳೇ ಮೊದಲಾದವು, ಶ್ರದ್ಧೆ,ಭಕ್ತಿ,ಮುಮುಕ್ಷತ್ವ,ದೈವೀ ಸಂಪತ್ತಿ,ಅಸುರ ಸಂಪತ್ತಿಯನ್ನು ಬಿಡುವುದು,-ಇವು ಮಿಶ್ರ ಸತ್ವದ ಧಮ೯ಗಳು.

ಅಹಿಂಸೆ ,ಸತ್ಯ ಇವು ಯಮಗಳು,ಶೌಚ ಸಂತೋಷ ಮೊದಲಾದುವು ನಿಯಮಗಳು.(ಪುq67)

 

11) ಮನಸ್ಸಿನ ಪ್ರಸನ್ನತೆ,ಆತ್ಮಾನುಭವ,ಪರಮಶಾಂತಿ,ತೃಪ್ತಿ,ಆಹ್ಲಾದ,ಯಾವಾಗಲೂ ಆನಂದರಸವನ್ನು ಹೊಂದಿಸುವ  ಪರಮಾತ್ಮ ನಿಷ್ಠೆ.-ಇವು ವಿಶುದ್ಧ ಸತ್ವದ ಗುಣಗಳು.(ಪುಟ 67)

(ವಿಶುದ್ಧ ಎಂದರೆ ರಜಸ್ಸು ತಮಸ್ಸುಗಳೊಂದಿಗೆ  ಮಿಶ್ರವಾಗಿರುವ  ಸತ್ವ)

 

ಕಾರಣ ಶರೀರ:

 

120)ಮೂರು ಗುಣಗಳಿಂದ ಕೂಡಿರುವುದೆಂದು ವಿವರಿಸಿರುವುದೇ  ಅವ್ಯಕ್ತವು.ಇದು ಆತ್ಮನ ಕಾರಣ ಶರೀರವೆಂದು ಪ್ರಸಿದ್ಧವಾಗಿದೆ.ಎ್ಲಲಾ  ಇಂದ್ರಿಯಗಳೂ  ಬುದ್ಧಿಯ ವೃತ್ತಿಗಳೂ  ಲಯವಾಗುವ ತನಿನಿದ್ರೆಯೇ ಇದರ ವಿಶೇಷವಾದ ವ್ಯವಸ್ಥೆಯು.(ಪುಟ 67)

 

121)(ಪ್ರತ್ಯಕ್ಷ ಅನುಮಿತಿ ಮೊದಲಾದ)  ಸವ೯ವಿಧ ಜ್ಞಾನಗಳ  ಶಾಂತಿ ಬುದ್ದಿಯು  ಕಾರಣ ಸ್ವರೂಪದಿಂದ ಇರುವುದು-ಎಂಬುದೇ ಸುಷುಪ್ತಿ.'ನಾನು  ಯಾವುದನ್ನು ಅರಿಯೆನು 'ಎಂಬ ಲೋಕ

ಪ್ರಸಿದ್ಧಿಯಿಂದ (ಆತ್ಮನ) ಕಾರಣ ಶರೀರವು  ಅಥವ ಜ್ಞಾನ ರೂಪವಾದ ಬೀಜವು  ನಮ್ಮ ಅನುಭವಕ್ಕೆ ಬರುತ್ತದೆ.

(ಸುಷುಪ್ತಿಯಲ್ಲಿ  ಸಮಸ್ತ ವೃತ್ತಿಗಳೂ ಲಯವಾದರೆ  ಅವ್ಯಕ್ತವೆಂಬ ಅಜ್ಞಾನವು  ಇದೆ ಎಂಬುದಕ್ಕೆ ಪ್ರಮಾಣವೇನು?ತನಿ ನಿದ್ರೆಯಿಂದ  ಎಚ್ಚೆತ್ತಿರುವವನ 'ನನಗೇನೂ ತಿಳಿಯಲಿಲ್ಲ' ಎಂಬ ಜ್ಞಾನದಿಂದಲೇ  ಸುಷುಪ್ತಿಯಲ್ಲಿ ಅಜ್ಞಾನವಿದೆ  ಎಂದು ಸಿದ್ಧವಾಗುತ್ತದೆ.(ಪುಟ68)

 

33)ಅನಾತ್ಮ ನಿರೂಪಣ:

 

122)ದೇಹ ಇಂದ್ರಿಯಗಳು ಪ್ರಾಣಗಳು ಮನಸ್ಸು, ಅಹಂಕಾರ ಇವೇ ಮೊದಲಾದ ಎಲ್ಲ ವಿಕಾರಗಳು,ಶಬ್ದ, ಸ್ಪಶ೯ ಮೊದಲಾದ ವಿಷಯಗಳು,ಸುಖವೇ ಮೊದಲಾದುವು ,ಆಕಾಶವೇ ಮೊದಲಾದ ಪಂಚಭೂತಗಳಿಮದ -ಅವ್ಯಕ್ತದವರೆಗಿನ ಪ್ರಪಂಚ -ಇವೆಲ್ಲವೂ ಅನಾತ್ಮವೇ.(6)

 

123)ಮಾಯೆ,ಮಹತ್ತೇ ಮೊದಲಾಗಿ ದೇಹದವರೆಗಿನ  ಮಾಯೆಯ ಕಾಯ೯-ಇದೆಲ್ಲವನ್ನೂ  ಬಿಸಿಲ್ಗುದುರೆಯಂತೆ ಅಸತ್ತಾಗಿರುವ ಅನಾತ್ಮವೆಂದು ತಿಳಿದುಕೊ(ಪುಟ 6)

 

34) ಆತ್ಮನಿರೂಪಣ:

 

124) ನಿನಗೆ ಪರಮಾತ್ಮನ ಸ್ವರೂಪವನ್ನು ಹೇಳುವೆನು.ಮನುಷ್ಯನು ಇದನ್ನು ತಿಳಿದುಕೊಂಡು  ಸಂಸಾರ ಬಂಧದಿಂದ ಮುಕ್ತನಾಗಿ ಕೈವಲ್ಯವನ್ನು ಹೊಂದುತ್ತಾನೆ.(ಪುಟ70)

 

125)ಸ್ವತಃಸ್ಸಿದ್ಧನೂ ,'ನಾನು' ಎಂಬ ಪ್ರತ್ಯಯಕ್ಕೆ ಆಶ್ರಯನೂ ಅವಸ್ಥಾತ್ರಯಕ್ಕೆ (ಎಚ್ಚರ,ಕನಸು ನಿದ್ರೆ)ಸಾಕ್ಷಿಯೂ,ಪಂಚಕೋಶಗಳಿಗಿಂತ ಭಿನ್ನನೂ  ಆತ್ಮನೊಬ್ಬನು ಯಾವಾಗಲೂ ಇರುತ್ತಾನೆ(ಪುಟ 70)

 

(ಅವಸ್ಥಾತ್ರಯಗಳು:ಎಚ್ಚರ,ಕನಸು,ನಿದ್ರೆ

ಪಂಚಕೋಶಗಳು:ಅನ್ನಮಯ,ಪ್ರಾಣಮಯ.ಮನೋಮಯ,ವಿಜ್ಞಾನಮಯ,ಆನಂದಮಯ ಎಂಬ ಐದು.

ಮೊದಲನೆಯದು -ಸ್ಥೂಲ ಶರೀರ,ಮೊಂದಿನ ಮೂರು ಕೋಶಗಳೇ ಸೂಕ್ಷ್ಮ ಶರೀರ,ಮತ್ತು ಕೊನೆಯದು ಕಾರಣ ಶರೀರ.)

 

126) ಯಾವನು ಜಾಗ್ರತ್-ಸ್ವಪ್ನ -ಸುಷುಪ್ತಿಗಳಲ್ಲಿ ತೋರುವುದೆಲ್ಲವನ್ನೂ ಅರಿತುಕೊಳ್ಳುತ್ತಾನೆಯೋ,

ಮನಸ್ಸಿನ ಮತ್ತು ಅದರ ವೃತ್ತಿಗಳ ಇರುವಿಕೆ  ಅಥವಾ ಇಲ್ಲದಿರುವಿಕೆ -ಇವುಗಳನ್ನು ಅರಿಯುತ್ತಾನೆಯೋ ಮತ್ತು 'ನಾನು'ಎಂಬುದಕ್ಕೆ ಆಶಯ್ರನಾಗಿರುವನೋ  ಅವನೇ ಆತ್ಮನು.(ಪುಟ71) 

 

127)ಯಾವನು ತಾನಾಗಿಯೇ ಎಲ್ಲವನ್ನೂ ನೋಡುತ್ತಾನೆಯೋ ,ಯಾವನನ್ನು ಯಾವನೊಬ್ಬನೂ ನೋಡಲಾರನೊ,ಯಾವನು ಬುದ್ಧಿ ಮೊದಲಾದುವನ್ನು ಚೇತನಗೊಳಿಸುತ್ತಾನೆಯೊ ,ಯಾವನನ್ನು ಅವು ಚೇತನಗೊಳಿಸಲಾರವೊ ಅವನೇ ಆತ್ಮನು.(ಪುಟ 71)

 

128)ಆವನಿಂದ ವಿಶ್ವವೆಲ್ಲವೂ ವ್ಯಾಪ್ತವಾಗಿರುವುದೊ,ಯಾವುದನ್ನು ಯವುದೂ ವ್ಯಾಪಿಸಲಾರದೊ,ಪ್ರಕಾಶಿಸುತ್ತಿರುವ ಯಾವನನ್ನು ಅನುಸರಿಸಿ  ಪ್ರಕಶ ರೂಪವಾದ  ಇದೆಲ್ಲವೂ ಬೆಳಗುತ್ತಿರುವುದೊ ಅವನೇ ಆತ್ಮನು.

(ತಮೇವ ಭಾಂತಮನುಭಾತಿ ಸವ೯ಂ ತಸ್ಯ ಭಾಸಾ ಸವ೯ವಿದಂ ವಿಭಾತಿ-ಕಠ..2-5-15,ಮತ್ತು ಮುಂಡಕ 2-2-11)

 

12)ಅವನ ಸಾನ್ನಿಧ್ಯ ಮಾತ್ರದಿಂದ  ದೇಹ ಇಂದ್ರಿಯ ಮನಸ್ಸು ಬುದ್ಧಿ-ಇವು ತಮ್ಮ ತಮ್ಮ ವಿಷಯಗಳಲ್ಲಿ  ಪ್ರೇರಿಸಲ್ಪಟ್ಟಂತೆ ಪ್ರವತಿ೯ಸುತ್ತವೆ.(ಪುಟ 72)

 

130)ಅಹಂಕಾರವೇ ಮೊದಲಾಗಿ  ದೇಹದವರೆಗಿನ ವಿಷಯಗಳೂ  ಶಬ್ದವೇ ಮೊದಲಾದ ವಿಷಯಗಳೂ ,ಸುಖವೇ ಮೊದಲಾದವುಗಳೂ  ನಿತ್ಯಜ್ಞಾನ ಸ್ವರೂಪಿಯಾದ  ಆತ್ಮನಿಂದ ಗಡಿಗೆಯಂತೆ  ಅರಿಯಲ್ಪಡುತ್ತವೆ.

(ಅವಿನಾಶಿಯಾಗಿರುವುದರಿಂದ  ದ್ರಷ್ಟøವಿನ (ಎಂದರೆ ಆತ್ಮನ) ದೃಷ್ಟಿಗೆ ನಾಶವಿಲ್ಲ.)

 

131)ಇವನೇ ಅಂತರಾತ್ಮನು.ಪುರಾಣ ಪುರುಷನು,ನಿತ್ಯ ಅಖಂಡ ಸುಖಾನುಭವವುಳ್ಳವನು,ಯಾವಾಗಲೂ ಒಂದೇ ವಿಧವಾದ ಸ್ವರೂಪವುಳ್ಳವನು,ಜ್ಞಾನಮಾತ್ರ ಸ್ವರೂಪನು.

ಇವನ ಪ್ರೇರಣೆಯಿಂದ ವಾಕ್ಪ್ರಾಣಗಳು(ವಾಕ್ ಮತ್ತು ಪ್ರಾಣಗಳು) ಚಲಿಸುತ್ತಿರುವುವು.

('ಸವಾ೯ಂತಯಾ೯ಮಿಯಾದ ಇವನೇ ನಿನ್ನ ಆತ್ಮನು.' ಏಷ ಆತ್ಮಾ ಸವಾ೯ಂತರಃ'.(ಬೃ..3-4-1)

(ಪುಟ 73)

 

132) ಶರೀರದಲ್ಲಿಯೇ ಸತ್ವಗುಣ ಪ್ರಧಾನವಾದ ಮನಸ್ಸಿದೆ.ಅದರಲ್ಲಿ ಬುದ್ಧಿಯೆಂಬ ಗುಹೆಯಿದೆ.ಅದರಲ್ಲಿರುವ ಅವ್ಯಾಕೃತವೆಂಬ ಆಕಾಶದಲ್ಲಿ  ಕಮನೀಯ ಪ್ರಕಾಶನಾದ ಆತ್ಮನು  ಆಕಾಶದಲ್ಲಿರುವ ಸೂಯ೯ನಂತೆ  ತನ್ನ ತೇಜಸ್ಸಿನಿಂದ  ವಿಶ್ವವನ್ನೆಲ್ಲಾ ಬೆಳಗುತ್ತ  ಸವೋ೯ತ್ಕøಷ್ಟನಾಗಿ ಪ್ರಕಾಶಿಸುತ್ತಾನೆ.(ಪುಟ 74)

 

133)ಮನಸ್ಸು, ಅಹಂಕಾರ ಇವುಗಳ ವಿಕಾರಗಳನ್ನೂ ,ದೇಹೇಂದ್ರಿಯ ಪ್ರಾಣಗಳಿಂದಾಗುವ  ಕ್ರಿಯೆಗಳನ್ನೂ  ಅರಿಯತಕ್ಕವನು.--ಕಾದ ಕಬ್ಬಿಣದಲ್ಲಿರುವ ಅಗ್ನಿಯಂತೆ ಅವುಗಳನ್ನು ಅನುಸರಿಸುತ್ತಿದ್ದರೂ  ಯಾವ ಕ್ರಿಯೆಯನ್ನೂ ಮಾಡುವುದಿಲ್ಲ.ಯಾವ ವಿಕಾರವನ್ನೂ ಹೊಂದುವುದಿಲ್ಲ.(ಪುಟ 74)

  

134) ಆತ್ಮನು ಹುಟ್ಟುವುದಿಲ್ಲ,ಸಾಯುವುದಿಲ್ಲ,ಬೆಳೆಯುವುದಿಲ್ಲ,ಕ್ಷಯಿಸುವುದಿಲ್ಲ,,ಪರಿಣಮಿಸುವುದಿಲ್ಲ. (ಅಪರಿಣಾಮಿ) ಏಕೆಂದರೆ ಶಾಶ್ವತವಾಗಿರುತ್ತಾನೆ. ಶರೀರವು ನಾಶವಾದರೂ  ಗಡಿಗೆಯಲ್ಲಿರುವ ಆಕಾಶದಂತೆ ತಾನು ಮಾತ್ರ ನಾಶವಾಗುವುದಿಲ್ಲ.

(ಗಡಿಗೆಯು ಒಡೆದ ಮೇಲೂ  ಅದರಲ್ಲಿದ್ದ ಆಕಾಶಕ್ಕೆ ಏನೂ ಆಗುವುದಿಲ್ಲ.)(ಪುಟ 75)

 

135)ಪರಮಾತ್ಮನು ಕಾಯ೯-ಕಾರಣಗಳಿಗಿಂತ  ವಿಲಕ್ಷಣವಾಗಿ ,ನಿಮ೯ಲ ಚಿತ್-ಸ್ವರೂಪನಾಗಿ ,ನಿವಿ೯ಶೇಷನಾಗಿ ,ಶ್ಥುಸೂಕ್ಷ್ಮವಾದ ಜಗತ್ತೆಲ್ಲವನ್ನೂ ಬೆಳಗುತ್ತಾ ,ಜಾಗ್ರತ್ತೇ ಮೊದಲಾದ ಅವಸ್ಥೆಗಳಲ್ಲಿ 'ನಾನು ನಾನು' ಎಂದು ಬುದ್ಧಿಗೆ ಸಾಕ್ಷಿಯಾಗಿ ಸಾಕ್ಷಾತ್ತಾಗಿ ಪ್ರಕಾಶಿಸುತ್ತಾನೆ.(ಪುಟ76)

(ನಾವು ಮಾಡುವಂತೆ ಕಾಣುವ  ಕ್ರಿಯೆಗಳೆಲ್ಲ ಬಿದ್ಧಿಯಿಂದಲೇ ಆಗುವುದೇ ವಿನಾ  ನಿಷ್ಕ್ರಿಯನಾದ ಸಾಕ್ಷಿಯಿಂದಲ್ಲ.)

 

136)ಎಲೈ ಶಿಷ್ಯನೆ,ಯಮನಿಯಮಾದಿಗಳಿಂದ ಮನಸ್ಸನ್ನು ವಶಪಡಿಸಿಕೊಂಡು  ಪ್ರಸನ್ನ ಚಿತ್ತದಿಂದ  ನಿನ್ನ  ಆತ್ಮನನ್ನು 'ಇವನೇ ನಾನು'ಎಂದು ಸಾಕ್ಷಾತ್ತಾಗಿ ತಿಳಿದುಕೊ.ಹುಟ್ಟು ಸಾವುಗಳೆಂಬ ಅಲೆಗಳಿಂದ ಕೂಡಿ  ಅಪಾರವಾಗಿರುವ ಸಂಸಾರ ಸಮುದ್ರವನ್ನು  ದಾಟು. ಪರಬ್ರಹ್ಮ ಸ್ವರೂಪದಲ್ಲಿ ನಿಂತವನಾಗಿ  ಕೃತಕೃತ್ಯನಾಗು.(ಪುಟ 76)

(ಅಸಂಭಾವನೆ,ಸಂಶಯ,ವಿಪರೀತ ಭಾವನೆ-ಇವುಗಳಿಲ್ಲದೆ,'ಸೂಕ್ಷ್ಮದಶಿ೯ಗಳು  ಏಕಾUಗ್ರವಾದ ಸೂಕ್ಷ್ಮವಾದ  ಬುದ್ಧಿಯಿಂದ ನೋಡುತ್ತಾರೆ.'ದೃಶ್ಯತೇ ತ್ವಗ್ರಯಾ ಬುದ್ಧ್ಯಾಸೂಕ್ಷ್ಮಯಾ ಸೂಕ್ಷ್ಮದಶಿ೯ಭಿಃ(ಕಠ..1-3-12)ಎಂದಿ ಶ್ರುತಿಯು ಹೇಳುತ್ತದೆ. ಸ್ಥೂಲಸೂಕ್ಷ್ಮಕಾರಣ ಶರೀರದೊಂದಿಗೆ ಆದಾತ್ಮ್ಯವನ್ನು  ಪಡೆಯದೆ ತತ್ವಮಸಿ ಎಂಬ ಶ್ರುತಿವಾಕ್ಯದಂತೆ ' ಆತ್ಮನೇ ನಾನು' ಎಂದು ಸಾಕ್ಷಾತ್ಕರಿಸಿಕೊಳ್ಳಬೇಕು.) 

 

35)ಅಧ್ಯಾಸ:

 

137)ಶರೀರವೇ ಮೊದಲಾದ  ಅನಾತ್ಮವಸುವಿನಲ್ಲಿ 'ನಾನು'ಎಂಬ ಬುದ್ಧಿಯೇ  ಬಂಧವು.ಜನನ ಮರಣಗಳೆಂಬ ಕ್ಲೇಶಗಳ ಹೊಡೆತಕ್ಕೆ  ಕಾರಣವಾದ ಬಂಧವು  ಮನುಷ್ಯನಿಗೆ ಅಜ್ಞಾನದಿಂದ ಸಂಭವಿಸಿದೆ. ಅಭಿಮಾನದಿಂದಲೇ  ಇವನು ಅಸತ್ಯವಾದ  ಶರೀರವನ್ನು ಸತ್ಯವೆಂದು ಭಾವಿಸಿಕೊಂಡು  ಅದು ತಾನೇ ಎಂಬ ಬುದ್ಧಿಯಿಂದ -ರೇಶ್ಮೆಯ ಹುಳು ದಾರದಿಂದ ತನ್ನ ಸುತ್ತಲೂ  ಗೂಡನ್ನು ಕಟ್ಟಿಕೊಳ್ಳುವಂತೆ -ಅದನ್ನು ವಿಷಯಗಳಿಂದ ಪೋಷಿಸುತ್ತಾರೆ,ಸ್ನಾನ ಮಾಡಿಸುತ್ತಾನೆ,ಕಾಪಾಡುತ್ತಾನೆ.ಪುಟ 77)

(ಮನುಷ್ಯನು ವಿಷಯವಸ್ತುಗಳು ತನಗೆ ಅನುಕೂಲವೆಂದು ಭಾವಿಸಿ  ಅವುಗಳ ಹಿಂದೆ ಧಾವಿಸುತ್ತಾನೆ.ಪ್ರಮತ್ತನಾದ ಸಂಸಾರಿಗೆ ವಿಷಯಗಳು ಬಂಧವನ್ನುಂಟು ಮಾಡುವುವೆಂದು ತಿಳಿದಿರುವುದಿಲ್ಲ. )

 

138)ಅಜ್ಞಾನವೆಂಬ ಅಂಧಕಾರದಿಂದ  ವಿಶೇಷವಾಗಿ ಮೂಢನಾದವನಿಗೆ'ಅದು ಅಲ್ಲದ್ದರಲ್ಲಿ ಅದು'ಎಂಬ ಬುದ್ಧಿಯು ಉಂಟಾಗುತ್ತದೆ.ವಿವೇಕವಿಲ್ಲದಿರುವುದರಿಂದಲೇ ಹಾವಿನಲ್ಲಿ ಹಗ್ಗವೆಂಬ ಬುದ್ಧಿಯು ಹೊಳೆಯುತ್ತದೆ.ಇಂಥ ಬುದ್ಧಿಯಿಂದ ಅದನ್ನು ತೆಗೆದುಕೊಳ್ಳುವವನಿಗೆ ಅಧಿಕವಾದ ಅನಥ೯ ಪರಂಪರೆಯೇ ಬಂದೊದಗುತ್ತದೆ.ಆದುದರಿಂದ ಎಲೈ ಸ್ನೇಹಿತನೆ,ಕೇಳು ಅಸದ್ವಸ್ತುವನ್ನು ಸದ್ವಸ್ತುವೆಂದು  ಗ್ರಹಿಸುವುದೇ  ಬಂಧವಾಗಿರುತ್ತದೆ.(ಪುಟ 78)

(ಅನಾತ್ಮ ವಸ್ತುವಿನಲ್ಲಿ ಆತ್ಮವೆಂಬ ಬುದ್ಧಿ,ಅಥವಾ ಸದ್ವಸ್ತುವನ್ನು ಅಸತ್ ಎಂದು ಭಾವಿಸುವುದು)

 

13)ಅಖಂಡವೂ ನಿತ್ಯವೂ ಅದ್ವಯವೂ  ಆದ ಜ್ಞಾನಶಕ್ತಿಯಿಂದ ಹೊಳೆಯುತ್ತಿರುವ ಮತ್ತು ಅನಂತ ವೈಭವದಿಂದ ಕೂಡಿರುವ  ಆತ್ಮನನ್ನು ರಾಹುವು  ಸೂಯ೯ಮಂಡಲವನ್ನು ಆವರಿಸುವಂತೆ -ತೇಜೋಮಯವಾದ ಆವರಣ ಶಕ್ತಿಯು ಆವರಿಸುತ್ತದೆ.(ಪುಟ 7)

 

140)ಮನುಷ್ಯನು ಅನಾತ್ಮವಾದ ದೇಹವನ್ನೇ  ಅಜ್ಞಾನದಿಂದ 'ನಾನು'ಎಂದು ಭಾವಿಸುತ್ತಾನೆ.ಅನಂತರ ವಿಕ್ಷೇಪವೆಂಬ ಹೆಸರುಳ್ಳ  ರಜೋಗುಣದ ಪ್ರಬಲ ಶಕ್ತಿಯು  ಕಾಮಕ್ರೋಧಗಳೇ ಮೊದಲಾದ  ಬಂಧಕ ಗುಣಗಳಿಂದ  ಇವನನ್ನು ವಿಶೇಷವಾಗಿ ವ್ಯಥೆಗೊಳಿಸುತ್ತದೆ.(ಪುಟ7)

 

141)ಮಹಾಮೋಹವೆಂಬ ಮೊಸಳೆಯು ನುಂಗಿದ್ದರಿಂದ  ಆತ್ಮಜ್ಞಾನ ವಿಹೀನನಾಗಿ  ಬುದ್ದಿಯು ಭಿನ್ನ ಭಿನ್ನ ಅವಸ್ಥೆಗಳನ್ನು ಆಯಾ ಗುಣದ ಅಭಿಮಾನದಿಂದ ತಾನೇ ,ವಿಷಯವಿಷದಿಂದ ತುಂಬಿರುವ  ಅಪಾರವಾದ ಸಂಸಾರಸಾಗರದಲ್ಲಿ  ಮುಳುಗುತ್ತಾ ಏಳುತ್ತ ದುಮಾ೯ಗಿ೯ಯೂ  ಕುಮತಿಯೂ ಆದ ಜೀವನು  ಅಲೆಯುತ್ತಾನೆ.

(ಜಲದಲ್ಲಿ ಅಲೆಯುತ್ತಿರುವ ಸೂಯ೯ನ ಪ್ರತಿಬಿಂಬವು  ಜಲದೊಂದಿಗೆ ತಾನೂ ಚಲಿಸುತ್ತಾನೆ)

 

142)ಸೂಯ೯ನ ಕಿರಣಗಳಿಂದ ಉಂಟಾದ  ಮೇಘ ಪಂಕ್ತಿಯು ಸೂಯ೯ನನ್ನೇ ಮರೆಮಾಡಿ  ಹೇಗೆ ಮೆರೆಯುವುದೊ ಹಾಗೆಯೇ  ಹಾಗೆಯೇ ಆತ್ಮನಿಂದಲೇ ಉತ್ಪನ್ನವಾದ ಅಹಂಕಾರವೂ ಕೂಡ  ಆತ್ಮಸ್ವರೂಪವನ್ನು ಮರೆಮಾಡಿ  ತಾನೇ ಮೆರೆಯುತ್ತದೆ.

(ಆವರಣಕ್ಕೆ ಉದಾಹರಣೆ ಸೂಯ೯ ಮತ್ತು ಮೋಡ,ವಿಕ್ಷೇಪಕ್ಕೆ ಉದಾಹರಣೆ ಸಮುದ್ರ ಮತ್ತು ಅಲೆಗಳು)

 

36) ಆವರಣ ಮತ್ತು ವಿಕ್ಷೇಪ:

 

143)ನಿಬಿಡವಾದ ಮೇಘಗಳಿಂದ ಸೂಯ೯ನು ಮರೆಯಾದ  ದುದಿ೯ನದಲ್ಲಿ  ಉಗ್ರವೂ ಶೀತಲವೂ ಆದ  ಬಿರುಗಾಳಿಯು  ಲೋಕದ ಜನರನ್ನು ಹೇಗೆ  ವ್ಯಥೆಗೊಳಿಸುವುದೊ  ಹಗೆಯೇ ನಿಬಿಡವಾದ ಅಜ್ಞಾನಾಂಧಕಾರವು  ಆತ್ಮನನ್ನು  ಆವರಿಸಿದಾಗ  ತೀವ್ರವಾದ ವಿಕ್ಷೇಪ ಶಕ್ತಿಯು  ಮೂಢ ಬುದ್ಧಿಯನ್ನು ಅನೇಕ ವ್ಯಸನಗಳಿಂದ ವ್ಯಥೆಗೊಳಿಸುತ್ತದೆ.(ಪುಟ 81)

 

144)ಆವರಣ-ವಿಕ್ಷೇಪ ಎಂಬ ಎರಡು ಶಕ್ತಿಗಳಿಂದಲೇ  ಮನುಷ್ಯನಿಗೆ ಸಂಸಾರ ಬಂಧವು  ಉಂಟಾಗಿದೆ.ಇವೆರಡರಿಂದ ವಿಮೋಹಿತನಾಗಿ  ಶರೀರವೇ ಆತ್ಮನೆಂದು ತಿಳಿದುಕೊಂಡು ಇವನು ಸಂಸಾರದಲ್ಲಿ ಅಲೆಯುತ್ತಾನೆ.(ಪುಟ 82)

 

37) ಬಂಧ ನಿರೂಪಣೆ:

 

145)ಸಂಸಾರವೆಂಬ ವೃಕ್ಷಕ್ಕೆ ಅಜ್ಞಾನವೇ ಬೀಜವು.ದೇಹದಲ್ಲಿರುವ ಆತ್ಮಬುದ್ಧಿಯೇ ಮೊಸಳೆಯು,ಆಸಕ್ತಿಯೇ ಚಿಗುರು,ಕಮ೯ವೇ ನೀರು, ಶರೀರವೇ ಮಧ್ಯಭಾಗವು.ಪ್ರಾಣಗಳೇ ಕೊಂಬೆಗಳು.ಇಂದ್ರಿಯ ಸಮೂಹವೇ ಕೊಂಬೆಯ ತುದಿಗಳು,ವಿಷಯಗಳೇ ಪುಷ್ಪಗಳು,ಬಗೆ ಬಗೆಯ  ಕಮ೯ಗಳಿಂದ ಉತ್ಪನ್ನವಾದದ  ಬಹುವಿಧವಾದ ದುಃಖವೇ ಫಲವು.ಇಲ್ಲಿ ಫಲವನ್ನು ಅನುಭವಿಸುವ  ಜೀವನೇ ಪಕ್ಷಿಯು.(ಪುಟ82)

(ಎರಡು ಪಕ್ಷಿಗಳು  ಒಂದು ಮರವನ್ನು ಆಶ್ರಯಿಸಿಕೊಂಡಿವೆಯೆಂದು ಮುಂಡಕೋಪನಿಷತ್ತಿನಲ್ಲಿ (3-1)ಹೇಳಿದೆ.ಇವೆರಡರಲ್ಲಿ ಒಂದು ಜೀವಾತ್ಮ ಮತ್ತೊಂದು ಪರಮಾತ್ಮ)(ಪುಟ 83)

 

146) ಅನಾತ್ಮ ಬಂಧವು ಅಜ್ಞಾನದಿಂದ ಉಂಟಾಗಿದೆ.ಇದು ನೈಸಗಿ೯ಕವಾಗಿಯೂ ಅನಾದಿಯಾಗಿಯೂ

ಅನಂತವಾಗಿಯೂ ಇದೆಯೆಂದು ಹೇಳಲ್ಪಟ್ಟಿದೆ.ಇದು ಜೀವನನ್ನು  ಜನ್ಮ ನಾಶ ವ್ಯಾಧಿ ಮುಪ್ಪು ಮೊದಲಾದ ದುಃಖ ಪ್ರವಾಹದಲ್ಲಿ ಬೀಳುವಂತೆ ಮಾಡುತ್ತದೆ.(ಪುಟ83)

(ನೈಸಗಿ೯ಕವೆಂದರೆ,ಇದು ಬೇರೆ ಕಾರಣವನ್ನು ಅಪೇಕ್ಷಿಸದೆ  ತಾನಾಗಿಯೇ ಹುಟ್ಟುತ್ತದೆ.)

 

  

38) ಬಂಧನಾಶಕ್ಕೆ ಸಾಧನಗಳು:

 

147) ಬಂಧವನ್ನು ಅಸ್ತ್ರಗಳಿಂದಾಗಲೀ  ಶಸ್ತ್ರಗಳಿಂದಾಗಲೀ  ಗಾಳಿಯಿಂದಾಗಲೀ  ಬೆಂಕಿಯಿಂದಾಗಲೀ  ಕತ್ತರಿಸಲು ಸಾಧ್ಯವಿಲ್ಲ.ಕೋಟಿ ಕಮ೯ಗಳಿಂದಲೂ ಸಾದ್ಯವಿಲ್ಲ.ಪರಮಾತ್ಮನ ಅನುಗ್ರಹದಿಂದ  ತೀಕ್ಷ್ಣವಾದ ಮನೋಹರವಾದ  ವಿವೇಕ ಜ್ಞಾನವೆಂಬ  ಮಹಾ ಖಡ್ಗದಿಂದಲೇ ಸಾಧ್ಯ.(ಧಾತುವಿನ ಅನುಗ್ರಹದಿಂದ  ಆತ್ಮನ ಮಹಿಮೆಯನ್ನು ನೋಡುತ್ತಾನೆ.'(ಕಠ..1-2-20)

 

148)ಶ್ರುತಿ ಪ್ರಮಾಣದಲ್ಲಿಯೇ ಬುದ್ಧಿಯನ್ನಿಟ್ಟು ಕೊಂಡವನಿಗೆ  ಸ್ವಧಮ೯ದಲ್ಲಿ ನಿಷ್ಠೆಯುಂಟಾಗುವುದು.zರಿಂದಲೇ ಅವನಿಗೆ ಚಿತ್ತಶುದ್ಧಿಯುಂಟಾಗುವುದು. ಚಿತ್ತಶುದ್ಧಿಯುಂಟಾದವನಿಗೆ  ಪರಮಾತ್ಮ ಜ್ಞಾನವು ಉಂಟಾಗುವುದು.ಅದರಿಂದಲೇ ಸಂಸಾರವು  ನಿಮೂ೯ಲವಾಗಿ ನಾಶವಾಗುತ್ತದೆ.(ಪುಟ 84)

 

14)ಪಾಚಿಯ ಪದರಗಳಿಂದ ಮುಚ್ಚಲ್ಪಟ್ಟ ಕೊಳದಲ್ಲಿ ನೀರು ಕಾಣದಿರುವಂತೆ  ತನ್ನ ಶಕ್ತಿಯಿಂದಲೇ  ಉಂಟಾಗಿರುವ ಅನ್ನಮಯಾದಿ ಪಂಚಕೋಶಗಳಿಂದ ಮುಚ್ಚಲ್ಪಟ್ಟ  ಅತ್ಮನು ಕಾಣಿಸಿಕೊಳ್ಳದೆ ಇರುತ್ತಾನೆ.(ಪುಟ 85)

 

150)ನೀರನ್ನು ಮುಚ್ಚಿಕೊಂಡಿರುವ ಪಾಚಿಯನ್ನು ತೆಗೆದರೆ ಮನುಷ್ಯನ ತೃಷ್ಣೆಯ ಸಂಕಟವನ್ನು ಹೋಗಲಾಡಿಸುವ,ಕೂಡಲೆ ಅತ್ಯಂತ ಸುಖವನ್ನುಂಟು ಮಾಡುವ,ನಿಮ೯ಲವಾದ ನೀರು ಚೆನ್ನಾಗಿ ಕಾಣಬರುವುದು.(ನೀರನ್ನು ಎಲ್ಲಿಂದಲೂ ತರಬೇಕಾಗಿಲ್ಲ.ನೀರು ಅಲ್ಲೇ ಇದೆ.ಅದರ ಮೇಲಿರುವ ಆವರಣವನ್ನು ಮಾತ್ರ ತೆಗೆಯಬೇಕು.ಹೀಗೆಯೇ ಆತ್ಮನ ವಿಷಯದಲ್ಲಿಯೂ ಅರಿಯಬೇಕು.(ಪುಟ 85)

                                                      

151)ಆನಂದಮಯವೇ ಮೊದಲಾದ ಪಂಚಕೋಶಗಳನ್ನು ತೆಗೆದು ಹಾಕಿದರೆ ನಿತ್ಯಾನಂದೈಕರಸನೂ  ಸವಾ೯ಂತರನೂ,ಸವೋ೯ಕ್ಕøಷ್ಟನೂ ಆದ ಸ್ವಯಂಪ್ರಕಾಶನೂ  ಶುದ್ಧನೂ ಆದ  ಆತ್ಮನು ಕಾಣಿಸಿಕೊಳ್ಳುತ್ತಾನೆ.(ಪುಟ 86)

 

152)ಪಂಡಿತನಾದವನು  ಬಂಧದಿಂದ ಬಿಡುಗಡೆಯನ್ನು ಹೊಂದಲು  ಆತ್ಮ,ಅನಾತ್ಮ ಇವುಗಳ ವಿಂಗಡಣೆಯನ್ನು ಮಾಡಿಕೊಳ್ಳಬೇಕು. ವಿವೇಕದಿಂದಲೇ ತನ್ನ ಸಚ್ಚಿದಾನಂದ ಸ್ವರೂಪವನ್ನು ತಿಳಿದುಕೊಂಡು ಆನಂದಿಯಾಗುತ್ತಾನೆ.(ಪುಟ 86)

 

153)ಮುಂಜವೆಂಬ ಹುಲ್ಲಿನಿಂದ ಅದರ ದಂಟನ್ನು ಬೇಪ೯ಡಿಸುವಂತೆ  ಯಾವನು ದೃಶ್ಯ ಸಮೂಹದಿಂದ

 ಸಂಗ ರಹಿತನೂ ಕ್ರಿಯಾಶೂನ್ಯನೂ ಆದ ಪ್ರತ್ಯಗಾತ್ಮನನ್ನು ಬೇಪ೯ಡಿಸಿ , ಆತ್ಮನಲ್ಲಿ ಅನಾತ್ಮ ವಗ೯ವೆಲ್ಲವನ್ನೂ ಲಯಹೊಂದಿಸಿ  ಆತ್ಮಸ್ವರೂಪದಿಂಲೇ ನಿಲ್ಲುವನೊ  ಅವನು ಮುಕ್ತನು.(ಪುಟ 87)

 

3)ಅನ್ನಮಯಕೋಶ:

 

154) ಶರೀರವು ಅನ್ನದಿಂದ ಹುಟ್ಟಿದೆ.ಅನ್ನಮಯಕೋಶವಾಗಿದೆ.ಇದು ಅನ್ನದಿಂದ ಬದುಕಿರುವುದು,ಅದಿಲ್ಲದಿದ್ದರೆ ನಾಶವಾಗುತ್ತದೆ.ತ್ವಕ್ಕು,ಚಮ೯ ಮಂಂಸ ರಕ್ತ ಮೂಳೆ ಮಲಿವುಗಳ ರಾಶಿಯಾಗಿರುವ ಶರೀರವು ನಿತ್ಯಶುದ್ಧವಾದ ಆತ್ಮವಸ್ತುವಾಗಲಾರದು.(ಪುಟ 87)

 

155) ಶರೀರವು ಹುಟ್ಟುವುದಕ್ಕಿಂತ ಮೊದಲೂ  ಸತ್ತಮೇಲೆಯೂ ಇರುವುದಿಲ್ಲ.ನಡುವೆ ಕೆಲವು ಕಾಲ ಇರುತದೆ.ಇದು ಕ್ಷಣಿಕ ಗುಣವುಳ್ಳದ್ದು,ನಿಯತವಾದ ಸ್ವಭಾವವಿಲ್ಲದ್ದು.ಅನೇಕ ರೂಪಗಳುಳ್ಳದ್ದು.ಇದು ಜಡವಾಗಿ ಗಡಿಗೆಯಂತೆ  ದೃಶ್ಯವಾಗಿರುತ್ತದೆ.ದೇಹವೇ ಮೊದಲಾದ  ಸಂಘಾತದ ವಿಕಾರಗಳನ್ನು ಅರಿಯುವ  ಆತ್ಮನು ಹೇಗಾದೀತು?(ಪುಟ 88)

 

156)ಕೈ ಕಾಲು  ಮೊದಲಾದ ಅವಯವಗಳುಳ್ಳ  ದೆಹವು ಆತ್ಮನಲ್ಲ. ಏಕೆಂದರೆ ಯಾವುದಾದರೊಂದು ಅಂಗವು ನಾಶವಾದರೂ ಬದುಕಿರುತ್ತಾನೆ ಮತ್ತು ಆಯಾ ಶಕ್ತಿಯೂ ನಾಶವಾಗುವುದಿಲ್ಲ . ಆತ್ಮನು ನಿಯಮಿಸಲ್ಪಡುವವನಲ್ಲ ಆದರೆ ನಿಯಾಮಕನು.

( ಜೀವನು  ಮರದ ಒಂದು ಕೊಂಬೆಯನ್ನು ಬಿಟ್ಟರೆ  ಆಗ ಅದು ಒಣಗುತ್ತದೆ.ಜೀವನು ಇಡೀ ಮರವನ್ನು ಬಿಟ್ಟರೆ  ಮರವೆಲ್ಲಾ ಒಣಗುತ್ತದೆ.(ಛಾಂದೋಗ್ಯ .6-11-2).ಯಾವ್ದಾದರೂ ಒಂದು ಅಂಗವು ನಾಶವಾದರೂ ಕೂಡ  ಕೃತಕವಾದ ಅಂಗಗಳ ಮೂಲಕ ಕಾಯ೯ವನ್ನು ನಿವ೯ಹಿಸಬಹುದು.)

(ಪುಟ 8)

 

157)ದೇಹ ಅದರ ಧಮ೯ಗಳು,ಅದರ ಕಮ೯ಗಳು,ಅದರ ಅವಸ್ಥೆಗಳು-ಇವೇ ಮೊದಲಾದವುಗಳಿಗೆ

 ಸಾಕ್ಷಿಯಾಗಿರುವ  ಆತ್ಮನು ಅವುಗಳಿಗಿಂತ ಸ್ವಭಾವದಿಂದಲೇ ವಿಲಕ್ಷಣನೆಂದು ಸ್ವತಃಸ್ಸಿದ್ಧವಾಗಿದೆ.

(ಅವಸ್ಥೆಗಳು-ಬಾಲ್ಯ,ಯೌವನ ಇತ್ಯಾದಿ)(ಪುಟ8)

 

158)ಮೂಳೆಗಳ ರಾಶಿಯಾಗಿರುವ  ಮಾಂಸದಿಂದ ಮುಚ್ಚಲ್ಪಟ್ಟಿರುವ  ಮಲಪೂಣ೯ವಾಗಿ ಅತ್ಯಂತ ಕಶ್ಮಲವಾಗಿರುವ ಶರೀರವು ತನಗಿಂತ ವಿಲಕ್ಷಣವಾದ  ಅರಿಯುವವನಾದ ಆತ್ಮನು ಹೇಗಾದೀತು?

(ಪುಟ8)

 

15)ಚಮ೯,ಮಾಂಸ,ಮೇದಸ್ಸು,ಮೂಳೆ,ಮಲ-ಇವುಗಳ ರಾಶಿಯಾಗಿರುವ  ಶರೀರದಲ್ಲಿ ಮೂಢ

ಜನವು 'ನಾನು'ಎಂಬ ಬುದ್ಧಿಯನ್ನು ಮಾಡುತ್ತದೆ.ವಿವೇಕಿಯಾದವನು (ಶರೀರಾದಿಗಳಿಗಿಂತ) ಭಿನ್ನವಾದ ಮತ್ತು ಪರಮಾಥ೯ವಾದ  ತನ್ನ ಸ್ವರೂಪವನ್ನು ಅರಿತುಕೊಳ್ಳುತ್ತಾನೆ(ಪುಟ೯0)

 

160)ಜಡವಾದ ಮನುಷ್ಯನು ತಾನೇ ಶರೀರವೆಂದು ಭಾವಿಸಿಕೊಳ್ಳುತ್ತಾನೆ.ಲೌಕಿಕ ಪಂಡಿತನಾದವನು  ಸ್ಥೂಲ ಶರೀರದಲ್ಲಿಯೂ  ಮತ್ತು ಜೀವನಲ್ಲಿಯೂ 'ನಾನು'ಎಂಬ ಬುದ್ಧಿಯನ್ನು ಮಾಡುತ್ತಾನೆ.ಆತ್ಮಾನಾತ್ಮ ವಿವೇಚನದಲ್ಲಿ  ನಿಪುಣನಾದ ಮಹಾತ್ಮನಿಗೆ ಅವಿನಾಶಿಯಾದ ಆತ್ಮ ಸ್ವರೂಪದಲ್ಲಿಯೇ 'ನಾನು ಬ್ರಹ್ಮ' ಎಂಬ ಬುದ್ಧಿಯುಂಟಾಗುತ್ತದೆ.(ಪುಟ 81)

 

161) ಹೇ ಮೂಢಬುದ್ಧಿ !ತ್ವಕ್ಕು ಮಾಂಸ ಮೇದಸ್ಸು ಮೂಳೆ ಮಲ ಇವುಗಳ ರಾಶಿಯಾದ  ಶರೀರದಲ್ಲಿ 'ನಾನು'ಎಂಬ ಬುದ್ಧಿಯನ್ನು ಬಿಡು.ಸವಾ೯ತ್ಮವೂ ನಿವಿ೯ಕಲ್ಪವೂ  ಆದ ಬ್ರಹ್ಮದಲ್ಲಿ 'ನಾನು'ಎಂಬ ಬುದ್ಧಿಯನ್ನು ಮಾಡು.ಪರಮಶಾಂತಿಯನ್ನು ಪಡೆ.(ಪುಟ೯1)

 

162)ವಿವೇಚನದಲ್ಲಿ  ಕುಶಲನಾದವನು  ದೇಹೇಂದ್ರಿಯವೇ ಮೊದಲಾದವುಗಳಲ್ಲಿ'ನಾನು'ಎಂಬ

ಬುದ್ಧಿಯೇ  ಜನ್ಮವೇ ಮೊದಲಾದ ದುಃಖಗಳಿಗೆ ಕಾರಣವಾಗುತ್ತದೆ.ಆದುದರಿಂದ ನೀನು ಪ್ರಯತ್ನಪೂವ೯ಕವಾಗಿ ಅಂಥ ದೇಹಾತ್ಮ ಬುದ್ಧಿಯನ್ನು ತೊಡೆ.ದೇಹಾತ್ಮ ಬುದ್ದಿಯು ಹೋದರೆ  ಪುನಜ೯ನ್ಮದ ಸಂಭವವೇ ಇಲ್ಲ.(ಪುಟ೯3)

 

163)ಶರೀರದ ನೆರಳಿನಲ್ಲಿ (ಕನ್ನಡಿಯೇ ಮೊದಲಾದವುಗಳಲ್ಲಿ) ಪ್ರತಿಬಿಂಬಿತವಾದ ಶರೀರದಲ್ಲಿ,ಕನಸಿನಲ್ಲಿ ಕಾಣುವ ಶರೀರದಲ್ಲಿ  ಮತ್ತು ಮನಸ್ಸಿನಲ್ಲಿ ಕಲ್ಪಿತವಾದ  ಶರೀರದಲ್ಲಿ 'ನಾನು'ಎಂಬ ಬುದ್ಧಿಯು ಹೇಗೆ ಸ್ವಲ್ಪವೂ ಇರುವುದಿಲ್ಲವೋ  ಹಾಗೆಯೇ ಜೀವಿಸಿರುವ  ಶರೀರದಲ್ಲಿಯೂ  ('ನಾನು' ಎಂಬ

ಬುದ್ಧಿಯು) ನಿನಗೆ ಉಂಟಾಗದಿರಲಿ.(ಪುಟ೯2)

 

164)ಅವಿವೇಕಬುದ್ಧಿಯುಳ್ಳ ಜನರಿಗೆ  ದೇಹಾದಿಗಳಲ್ಲಿರುವ 'ನಾನು' ಎಂಬ ಬುದ್ಧಿಯೇ ಜನ್ಮವೇ ಮೊದಲಾದ ದುಃಖಗಳಿಗೆ ಕಾರಣವಾಗಿರುತ್ತದೆ.ಆದುದರಿಂದ ನೀನು ಪ್ರಯತ್ಮಪೂವ೯ಕವಾಗಿ ಅಂಥ ದೇಹಾತ್ಮ ಬುದ್ಧಿಯನ್ನು ತೊರೆ.ದೇಹಾತ್ಮ ಬುದ್ಧಿಯು ಹೋದರೆ  ಪುನಜ೯ನ್ಮದ ಸಂಭವವೇ ಇಲ್ಲ.   

(ಛಾಂದೋಗ್ಯೋಪನಿಷತ್ತಿನಲ್ಲಿ (8-12-1)ಶರೀರವುಳ್ಳವನು ಪ್ರಿಯಾ ಪ್ರಿಯಗಳಿಂದ  ಗ್ರಸ್ತನಾಗುವನೆಂದು ಹೇಳಿದೆ.)(ಪುಟ೯3)

 

ಪ್ರಾಣಮಯ ಕೋಶ:

 

165)ಪಂಚಕಮೇ೯ಂದ್ರಿಯಗಳೊಂದಿಗೆ  ಕೂಡಿರುವ ಪ್ರಾಣವು  ಪ್ರಾಣಮಯ ಕೋಶವಾಗುತ್ತದೆ.ಅನ್ನಮಯಕೋಶವು ಪ್ರಾಣಮಯದಿಂದ ತುಂಬಲ್ಪಟ್ಟು ಆತ್ಮವಂತನಾಗಿ ಎಲ್ಲಾ ಕ್ರಿಯೆಗಳಲ್ಲಿಯೂ

ಪ್ರವತಿ೯ಸುತ್ತದೆ.(ಪುಟ೯4)

 

166) ಪ್ರಾಣಮಯಕೋಶವು  ವಾಯುವಿನ ರೂಪಾಂತರವಾಗಿರುವುದರಿಂದ  ಆತ್ಮವಲ್ಲ.ಏಕೆಂದರೆ ವಾಯುವಿನಂತೆ ಒಳಕ್ಕೆ ಹೋಗುತ್ತಲೂ ಹೊರಕ್ಕೆ ಬರುತ್ತಲೂ  ಇರುತ್ತದೆ.ಇದು ಎಲ್ಲಿಯೂ ಇಷ್ಟವನ್ನಾಗಲೀ ಅನಿಷ್ಟವನ್ನಾಗಲೀ  ಸ್ವಲ್ಪವೂ ಅರಿತುಕೊಳ್ಳಲಾರದು.ತನ್ನನ್ನಾಗಲೀ ಮತ್ತೊಂದನ್ನಾಗಲೀ ಸ್ವಲ್ಪವೂ ಅರಿಯಲಾರದು.ಯಾವಾಗಲೂ ಪರಾಧೀನವಾಗಿರುತ್ತದೆ.(ಪುಟ೯4)

 

167)ಜ್ಞಾನೇಂದ್ರಿಯವೂ ಮನಸ್ಸೂ ಸೇರಿಕೊಂಡು ಮನೋಮಯ ಕೋಶವಾಗಿದೆ.ಇದು 'ನಾನು''ನನ್ನದು' ಎಂಬ ವಸ್ತುಗಳ ಭೇದಕ್ಕೆ ಕಾರಣವಾಗಿದೆ.ನಾಮವೆ ಮೊದಲಾದ ಭೇದಗಳ ಕಲ್ಪನೆಯಿಂದ ಕೂಡಿರುತ್ತದೆ.(ಪುಟ 5)

 

168)ಪಂಚೇಂದ್ರಿಯಗಳೆಂಬ ಪಂಚಹೋತೃಗಳು  ಸುರಿಯುತ್ತಿರುವ ವಿಷಯಗಳೆಂಬ ತುಪ್ಪದ ಧಾರೆಯಿಂದ  ವಧಿ೯ಸುತ್ತಿರುವ ,ಬಹುಬಗೆಯ ವಾಸನೆಗಳೆಂಬ ಕಟ್ಟಿಗೆಗಳಿಂದ  ಪ್ರಜ್ವಲಿಸುತ್ತಿರುವ  ಮನೋಮಯ ಕೋಶವೆಂಬ  ಅಗ್ನಿಯು  ಇಡೀ ಪ್ರಪಂಚವನ್ನೇ ಸುಡುತ್ತಾಇರುವುದು.

(ಮನೋಮಯ ಕೋಶವು ಜಗತ್ತೆಲ್ಲವನ್ನೂ ಹೇಗೆ ಬಂಧಿಸಿದೆಯೆಂದು ಹೇಳಿದೆ.)(ಪುಟ 6)

 

16)ಮನಸ್ಸಿಗಿಂತಲೂ ಬೇರೆಯಾದ ಅವಿದ್ಯೆಯು ಇಲ್ಲವೇ ಇಲ್ಲ.ಮನಸ್ಸೇ ಸಂಸಾರ ಬಂಧನಕ್ಕೆ ಕಾರಣವಾದ ಅವಿದ್ಯೆಯು.ಅದು ನಷ್ಟವಾದಾಗ ಎಲ್ಲವೂ ನಷ್ಟವಾಗುತ್ತದೆ.ಅದು ವಿಜೃಂಭಿಸುತ್ತಿರುವಾನ ಎಲ್ಲವೂ ವಿಜೃಂಭಿಸುತ್ತದೆ.

(ಸುಷುಪ್ತಿಯಲ್ಲಿ  ಮನಸ್ಸು ನಷ್ಟವಾದಾಗ ಇಡೀ ಜಗತ್ತು ನಷ್ಟವಾದಂತೆಯೇ.ಆದುದರಿಂದ ಮನಸ್ಸೇ ಭವಬಂಧನಕ್ಕೆ ಕಾರಣವೆಂಬುದು ಸ್ಪಷ್ಟವಾಗಿದೆ.(ಪುಟ೯6)

 

170)ಯಾವುದೊಂದು ಬಾಹ್ಯ ವಸ್ತುವೂ ಇಲ್ಲದಿರುವ ಸ್ವಪ್ನಾವಸ್ಥೆಯಲ್ಲಿ  ಮನಸ್ಸೇ ತನ್ನ ಶಕ್ತಿಯಿಂದ  ಭೋಕ್ತøವೇ ಮೊದಲಾದ  ಪ್ರಪಂಚವನ್ನೆಲ್ಲಾ ಸೃಷ್ಟಿಸುತ್ತದೆ.ಹಾಗೆಯೇ  ಜಾಗ್ರದಾವಸ್ಥೆಯಲ್ಲಿಯೂ ಯಾವ ವಿಶೇಷವೂ ಇರುವುದಿಲ್ಲ.ಆದುದರಿಂದ ಇದೆಲ್ಲವೂ ಮನಸ್ಸಿನ ವಿಜೃಂಭಣೆಯೇ.(ಪುಟ 7). 

 

171)ಸುಷುಪ್ತಿ ಕಾಲದಲ್ಲಿ ಮನಸ್ಸು ಲಯವಾಗಿರುವಾಗ  ಯವುದಾದರೊಂದು  ವಸ್ತುವೂ ಇರುವುದಿಲ್ಲವೆಂಬುದು ಜಗತ್ಪ್ರಸಿದ್ಧವಾದ ವಿಷಯ.ಆದುದರಿಂದ ಮನುಷ್ಯನಿಗೆ ಸಂಸಾರವು ಮನಸ್ಸಿನಿಂದಲೇ

ಕಲ್ಪಿತವಾಗಿರುವುದು.ಯಥಾಥ೯ವಾಗಿರುವುದಿಲ್ಲ.(ಪುಟ 7)

 

172)ಮೇಘವು ಗಾಳಿಯಿಂದಲೇ ಬರುತ್ತದೆ ಮತ್ತು ಗಾಳಿಯಿಂದಲೇ ಹೋಗುತ್ತದೆ.ಹಾಗೆಯೆ ಸಂಸಾರ ಬಂಧವೂ ಮೋಕ್ಷವೂ ಮನಸ್ಸಿನಲ್ಲಿಯೇ  ಕಲ್ಪಿತವಾಗಿರುತ್ತವೆ.(ಪುಟ 8)

 

173) ಮನಸ್ಸು  ದೇಹವೇ ಮೊದಲಾದ ಸಮಸ್ತ ವಿಷಯಗಳಲ್ಲಿಯೂ  ಆಸಕ್ತಿಯನ್ನುಂಟು ಮಾಡಿ ಅದರಿಂದಲೇ  ಮನುಷ್ಯನನ್ನು ಹಗ್ಗದಿಂದ -ಹಗ್ಗದಿಂದ ಪಶುವನ್ನು ಕಟ್ಟಿದಂತೆ ಕಟ್ಟುತ್ತದೆ. ಮನಸ್ಸೇ ಅನಂತರ ವಿಷಯಗಳಲ್ಲಿ ,ವಿಷದಲ್ಲಿ ಹೇಗೋ ಹಾಗೆ ,ವೈರಾಗ್ಯವನ್ನುಂಟು ಮಾಡಿ ಜೀವನನ್ನು ಬಂಧನದಿಂದ ಬಿಡಿಸುತ್ತದೆ.(ಪುಟ 8)

 

174)ಆದುದರಿಂದ  ಜೀವನಿಗೆ  ಬಂಧವನ್ನಾಗಲೀ ಮೋಕ್ಷವನ್ನಾಗಲೀ  ಉಂಟು ಮಾಡುವ ವಿಷಯದಲ್ಲಿ  ಮನಸ್ಸೇ ಕಾರಣವಾಗಿರುತ್ತದೆ.ರಜೋಗುಣಗಳಿಂದ ಮಲಿನವಾದ  ಮನಸ್ಸೇ ಬಂಧಕ್ಕೆ ಕಾರಣವು.ರಜಸ್ತಮೋ ಗುಣಗಳಿಂದ  ರಹಿತವಾದ ಶುದ್ಧವಾದ  ಮನಸ್ಸು ಮೋಕ್ಷಕ್ಕೆ ಕಾರಣವು.

(ಮನಸ್ಸೇ  ಮನುಷ್ಯರ ಬಂಧಮೋಕ್ಷಗಳಿಗೆ ಕಾರಣವಾಗಿರುತ್ತದೆ.'ಮನ ಏವ ಮನುಷ್ಯಾಣಾ  ಕಾರಣಂ ಬಂಧ ಮೋಕ್ಷಯೋಃ' ಎಂದು -ಅಮೃತಬಿಂದು ಉಪನಿಷತ್ತು ಹೇಳುತ್ತದೆ.(ಪುಟ೯೯)

 

175)ವಿವೇಕ-ವೈರಾಗ್ಯಗಳೆಂಬ  ಗುಣಗಳ ಅತಿಶಯದಿಂದ  ಮನಸ್ಸು ಶುದ್ಧವಾಗಿ  ಮುಕ್ತಿಗೋಸ್ಕರ  ಯೋಗ್ಯವಾಗುತ್ತದೆ.ಆದುದರಿಂದ ಬುದ್ದಿವಂತನಾದ ಮುಮುಕ್ಷುವು  ಮೊದಲು ಅವೆರಡನ್ನೂ ದೃಢಪಡಿಸಿಕೊಳ್ಳ ಬೇಕು.(ಪುಟ ೯೯)

 

176)ಮನಸ್ಸೆಂಬ ಪ್ರಸಿದ್ಧವಾದ ಒಂದು ಹುಲಿಯು  ವಿಷಯಗಳೆಂಬ ಅರಣ್ಯ ಪ್ರದೇಶದಲ್ಲಿ ಓಡಾಡುತ್ತಿದೆ.ಮುಮುಕ್ಷುಗಳಾದ  ಸತ್ಪುರುಷರು ಅಲ್ಲಿಗೆ ಹೋಗದಿರಲಿ.(ಪುಟ100)

 

177)ಮನಸ್ಸೇ ಸಂಸಾರಿಗೆ ಸ್ಥೂಲರೂಪದಿಂದಲೂ  ಸೂಕ್ಷ್ಮರೂಪದಿಂದಲೂ  ವಿಷಯಗಳೆಲ್ಲವನ್ನೂ ಉಂಟುಮಾಡುತ್ತದೆ.ಶರೀರ ವಣ೯ ಆಶ್ರಮ ಜಾತಿ ಇವುಗಳನ್ನೂ ,ಗುಣ ಕ್ರಿಯೆ ಹೇತು ಫಲ ಇವುಗಳನ್ನು ಯಾವಾಗಲೂ  ಉಂಟು ಮಾಡುತ್ತದೆ.(ಪುಟ101)

 

178)ಮನಸ್ಸೆ ಅಸಂಗನೂ  ಚಿದ್ರೂಪನೂ  ಆದ ಇವನನ್ನು  ದೇಹೇಂದ್ರಿಯ ಪ್ರಾಣಗಳೆಂಬ  ಹಗ್ಗಗಳಿಂದ ಕಟ್ಟಿ ಭ್ರಾಂತಿಗೊಳಿಸಿ ,ತಾನೇ ಮಾಡಿಕೊಂಡ ಸುಖವೇ ಮೊದಲಾದ  ಅನುಭವಗಳಲ್ಲಿ 'ನಾನು' 'ನನ್ನದು' ಎಂಬ ಭಾವನೆಗಳಿಂದ ಯಾವಾಗಲೂ ಸ್ತುತಿಸುತ್ತದೆ.(ಪುಟ101)

 

17)ಮನುಷ್ಯನಿಗೆ ಅಧ್ಯಾಸವೆಂಬ ದೋಷದಿಂದಲೇ  ಸಂಸಾರವು.ಆದರೆ ಅಧ್ಯಾಸವೆಂಬ ಬಂಧವು  ಮನಸ್ಸಿನಿಂದಲೇ ಕಲ್ಪಿತವಾಗಿರುತ್ತದೆ.ರಜಸ್ಸು ತಮಸ್ಸು ಎಂಬ ದೋಷಗಳುಳ್ಳ ಅವಿವೇಕಿಯ  ಜನ್ಮಾದಿ ದುಃಖಕ್ಕೆ ಇದೇ ಕಾರಣವಾಗಿರುತ್ತದೆ.

(ಅದಲ್ಲದ್ದನ್ನು ಅದು ಎಂದು ಭಾವಿಸುವುದೇ ಅಧ್ಯಾಸ.ವಸ್ತುವಿನಲ್ಲಿ ಅವಸ್ತುವನ್ನೂ ಅವಸ್ತುವಿನಲ್ಲಿ ವಸ್ತುವನ್ನೂ  ಆರೋಪಿಸುವುದೇ ಅಧ್ಯಾಸ)(ಪುಟ102)

 

180) ಆದುದರಿಂದ ತತ್ವದಶಿ೯ಗಳಾದ ಜ್ಞಾನಿಗಳು ಮನಸ್ಸನ್ನೇ ಅವಿದ್ಯೆಯೆಂದು ಹೇಳುತ್ತಾರೆ.ಗಾಳಿಯು ಮೇಘಮಂಡಲವನ್ನು ಸುತ್ತಿಸುವಂತೆ ಮನಸ್ಸು ವಿಶ್ವವೆಲ್ಲವನ್ನೂ ಸುತ್ತಿಸುತ್ತಿರುವುದು.(ಪುಟ102)

 

181)ಆದುದರಿಂದ ಮುಮುಕ್ಷುವು ಪ್ರಯತ್ನದಿಂದ ಚಿತ್ತಶುದ್ಧಿಯನ್ನು ಮಾಡ£ಬೇಕು.ಮನಸ್ಸು ಶುದ್ಧವಾದಾಗ  ಮುಕ್ತಿಯು ಅಂಗೈಯಲ್ಲಿರುವ ಹಣ್ಣಿನಂತೆ ಸಿದ್ಧವಾಗುವುದು.(ಮನಸ್ಸಿನಲ್ಲಿರುವ ರಜಸ್ತಮೋ ರೂಪವಾದ ದೋಷಗಳನ್ನು ಹೋಗಲಾಡಿಸಿಕೊಳ್ಳಬೇಕು.)(ಪುಟ102)

 

182)ಮೋಕ್ಷದಲ್ಲಿಯೇ ಆಸಕ್ತಿಯಿಟ್ಟು ,ವಿಷಯಗಳಲ್ಲಿರುವ  ಅಭಿಲಾಷೆಯನ್ನು ನಿಮೂ೯ಲ ಮಾಡಿ ,ಸಕಲ ಕಮ೯ಗಳನ್ನು ತ್ಯಜಿಸಿ ಉತ್ತಮವಾದ ಶ್ರದ್ಧೆಯಿಂದ  ಯಾವನು ಶ್ರವಣಾದಿಗಳಲ್ಲಿ ನೆಲೆಗೊಳ್ಳುತ್ತಾನೆಯೋಅವನು ಮನಸ್ಸಿನಲ್ಲಿರುವ ರಜಸ್ಸಿನ ಸ್ವಭಾವವನ್ನು ನಾಶಪಡಿಸಿಕೊಳ್ಳುತ್ತಾನೆ.(ಪುಟ 103)

 

183)ಮನೋಮಯಕೋಶವು ಪರಮಾತ್ಮನಲ್ಲ.ಏಕೆಂದರೆ ಅದಕ್ಕೆ  ಆದಿ-ಅಂತಗಳಿವೆ.ಇದು ಪರಿಣಾಮವನ್ನು ಹೊಂದುವ ಸ್ವಭಾವವುಳ್ಳದ್ದು.ದುಃಖಸ್ವರೂಪವಾದದ್ದು.ದ್ರಷ್ಟøವಾದ  ಆತ್ಮನು ದೃಶ್ಯಪದಾಥ೯ರೂಪದಿಂದ ಎಂದಿಗೂ ನೋಡಲ್ಪಟ್ಟಿಲ್ಲ.(ಪುಟ104)

 

184) ಜ್ಞಾನೇಂದ್ರಿಯಗಳಿಂದ ಕೂಡಿದ ಕೂಡಿದ ವೃತ್ತಿಸಹಿತವಾದ  ಬುದ್ಧಿಯು  ಕತೃ೯ವಿನ ಲಕ್ಷಣವುಳ್ಳ  ವಿಜ್ಞಾನಮಯ ಕೋಶವಾಗುತ್ತದೆ.ಗುತ್ತದೆ.ಇದು ಮನುಷ್ಯನ ಸಂಸಾರಕ್ಕೆ ಕಾರಣವು.

( ಆತ್ಮನಿಗಿಂತ ಬೇರೆಯಾದ  ಒಳಗಿರುವವನೂ  ವಿಜ್ಞಾನಮಯನೂ ಆದ  ಅತ್ಮನಿರುವನು.(ತೈತ್ತಿರೀಯ 2-4))(ಪುಟ 104)

 

185)ಚಿದಾತ್ಮನ ಪ್ರತಿಬಿಂಬ ಶಕ್ತಿಯಿಂದ  ಅನುಸರಿಸಲ್ಪಟ್ಟ  ವಿಜ್ಞಾನವೆಂಬ ಪ್ರಕೃತಿಯ ವಿಕಾರವು ಜ್ಞಾನಕ್ರಿಯೆಗಳುಳ್ಳದ್ದು.ಇದು ದೇಹ ಇಂದ್ರಿಯ ಇವೇ ಮೊದಲಾದವುಗಳಲ್ಲಿ 'ನಾನು'ಎಂಬ ಅಭಿಮಾನವನ್ನು ಪಡೆಯುತ್ತದೆ.(ವಿಜ್ಞಾನಮಯ ಕೋಶವು ನಿಜವಾಗಿಯೂ ಅಚೇತನವಾದುದು.ಚಿತ್ ಶಕ್ತಿಯ ಬಿಂಬದಿಂದ  ಚೇತನವಾಗಿರುವಂತೆ ಕಾಣುತ್ತದೆ.)(ಪುಟ 105)

 

186+187) ವಿಜ್ಞಾನಮಯನಿಗೆ ಆದಿಯಿಲ್ಲ.ಇವನು ದೇಹೇಂದ್ರಿಯದಿಗಳಲ್ಲಿ 'ನಾನು'ಎಂಬ

 ಬುದ್ಧಿಯುಳ್ಳವನು.ಜೀವನೆಂಬ ಹೆಸರುಳ್ಳವನು.ಸಮಸ್ತ ವ್ಯವಹಾರಗಳನ್ನು ನಿವ೯ಹಿಸುವವನು. ಇವನು ಪೂವ೯ವಾಸನೆಗಳಿಂದ ಸುಕೃತ-ದುಷ್ಕøತ್ಯಗಳನ್ನು ಮಾಡುತ್ತಾನೆ.ಅವುಗಳ ಫಲಗಳನ್ನು ಅನುಭವಿಸುತ್ತಾನೆ.ಬಗೆಬಗೆಯ ಯೋನಿಗಳಲ್ಲಿ  ಪ್ರವೇಶಿಸಿ ಕೆಳಕ್ಕೆ ಬರುತ್ತಾನೆ,ಮೇಲಕ್ಕೆ ಹೋಗುತ್ತಾನೆ.

(ವಿಜ್ಞಾನವು ಯಜ್ಞಗಳನ್ನು ಮಾಡುತ್ತದೆ.ಕಮ೯ಗಳನ್ನೂ ಮಾಡುತ್ತದೆ.)(ಪುಟ 106)

 

188)ಇದು ದೇಹಾದಿ -ಸಂಘಾತಗಳಲ್ಲಿ ಕಲ್ಪಿತವಾದ ವಣಾ೯ಶ್ರಮ ಧಮ೯ಗಳ   ಕಮ೯ಗಳು ಗುಣಗಳು -ಇವುಗಳಲ್ಲಿ ಯಾವಾಗಲೂ 'ನನ್ನವು' ಎಂಬ ಅಭಿಮಾನವನ್ನು ಮಾಡುತ್ತದೆ. ವಿಜ್ಞಾನಮಯ ಕೋಶವು ಪರಮಾತ್ಮನ  ಪ್ರಬಲ ಸಾಮೀಪ್ಯದಿಂದ ವಿಶೇಷ ಪ್ರಕಾಶವುಳ್ಳದ್ದಾಗಿರುತ್ತದೆ. ಉಪಾಧಿಯಲ್ಲಿ 'ನಾನು' ಎಂಬ ಬುದ್ದಿಯುಳ್ಳವನಾಗಿ ಆತ್ಮನು ಭ್ರಮೆಯಿಂದ  ಸಂಸಾರಬಂಧನಕ್ಕೆ ಸಿಕ್ಕಿಬೀಳುತ್ತಾನೆ.(ಪುಟ107)

 

18)ಯಾವ   ವಿಜ್ಞಾನಮಯನು ಜ್ಯೋತೀರೂಪನಾಗಿ ಇಂದ್ರಿಯಗಳಲ್ಲಿಯೂ ಬುದ್ಧಿಯಲ್ಲಿಯೂ ಪ್ರಕಾಶಿಸುತ್ತಾನೋ  ಆತ್ಮನು  ನಿವಿ೯ಕಾರನಾಗಿದ್ದರೂ  ಉಪಾಧಿವಶದಿಂದ  ಕತೃ೯ವೂ ಭೋಕ್ತøವೂ ಆಗುತ್ತಾನೆ.(ಪುಟ 107)

 

10)ಇವನು ಸವಾ೯ತ್ಮಕನಾಗಿದ್ದರೂ  ವಿಜ್ಞಾನಮಯದ ಅವಿಚ್ಛಿನ್ನ ಭಾವವನ್ನು ತಾನೇ ಹೊಂದಿ  ಮತ್ತು ಅಧಿಕವಾಗಿ ಮಿಥ್ಯಾ ಸ್ವರೂಪವಾದ  ದೇಹಾದಿ ಸಂಘಾತದಲ್ಲಿರುವ ತಾದಾತ್ಮ್ಯ ದೋಷದಿಂದ

-ಮಣ್ಣಿಗಿಂತ ಗಡಿಗೆಗಳು ಬೇರೆ ಎಂದು ಜನರು ಅರಿಯುವಂತೆ-ತನ್ನನ್ನೇ  ತನಗಿಂತ ಬೇರೆಯಾಗಿ ನೋಡುತ್ತಾನೆ.

(ಅಜ್ಞನು ಮಣ್ಣಿನಿಂದ  ಮಾಡಲ್ಪಟ್ಟ  ಗಡಿಗೆಗಳು ಮಣ್ಣಿಗಿಂತ ಬೇರೆ ಎಂದು ಅರಿಯುವಂತೆ  ಆತ್ಮನು ತನಗಿಂತ ಬೇರೆಯಾದ ಯಾವ ವಸ್ತುವು ಇಲ್ಲದಿದ್ದರೂ 'ನಾನು' 'ನೀನು'ಎಂಬ ಭೇದÀ ಬುದ್ಧಿಯನ್ನು ಪಡೆದಿರುತ್ತಾನೆ.)(ಪುಟ108).

 

43)ಶಿಷ್ಯನ ಪ್ರಶ್ನೆ:

 

12+13) ಶಿಷ್ಯನು ಪ್ರಶ್ನಿಸಿದನು:ಶ್ರೀ ಗುರುವೆ,ಪರಮಾತ್ಮ ಜೀವತ್ವವು  ಭ್ರಾಂತಿಯಿಂದಾಗಲಿ ಅಥವಾ ಬೇರೆ ಕಾರಣದಿಂದಾಗಲೀ  ಉಂಟಾಗಿರಲಿ ,ಉಪಾಧಿಯು ಅನಾದಿಯಾಗಿರುವುದರಿಂದ  ಅನಾದಿಯಾದ ಉಪಾಧಿಗೆನಾಶವನ್ನು ಅಪೇಕ್ಷಿಸಕೂಡದಷ್ಟೆ?ಆದುದರಿಂದ ಇವನ ಜೀವತ್ವವೂ  ನಿತ್ಯವಾಗುತ್ತದೆ.ಸಂಸಾರವು ಹೋಗುವುದೇ ಇಲ್ಲ.ಹೀಗಿರುವಾಗ ಇವನಿಗೆ ಮೋಕ್ಷವು ಹೇಗೆ ಸಂಭವಿಸುತ್ತದೆ?ಇದನ್ನು ನನಗೆ ಹೇಳಿ.

(ಪುಟ 10)

 

14)ಶ್ರೀ ಗುರುವು ಹೇಳಿದನು.-ಎಲೈ ಬುದ್ಧಿವಂತನೆ,ನೀನು ಚೆನ್ನಾಗಿ ಪ್ರಶ್ನಿಸಿರುವೆ.ಅದನ್ನು ಸಾವಧಾನವಾಗಿ ಕೇಳು.ಭ್ರಾಂತಿಯಿಂದ ಮೋಹಿತರಾದವರ ಕಲ್ಪನೆಯು ನಿಜವಾಗುವುದಿಲ್ಲ.(ಪುಟ110)

 

15)ಆದರೆ ಅಸಂಗನೂ ನಿಷ್ಕ್ರಿಯನೂ ನಿರಾಕಾರನೂ ಆದ ಆತ್ಮನಿಗೆ ಭ್ರಾಂತಿಯಿಂದಲ್ಲದೆ -ಆಕಾಶಕ್ಕೆ ನೀಲತ್ವವೇ ಮೊದಲಾದವುಗಳ  ಸಂಬಂಧದಂತೆ-ದೃಶ್ಯವಸ್ತುಗಳ ಸಂಬಂಧವು ಉಂಟಾಗಲಾರದು.

(ಅವಿವೇಕಿಗಳು ಆಕಾಶವು ನೀಲವು,ಕೆಂಪು ಬಣ್ಣವುಳ್ಳದ್ದು  ಎಂದು ಕಲ್ಪಿಸಿಕೊಂಡರೆ  ಗುಣಗಳು ನಿಜವಾಗುವುದಿಲ್ಲ.ಹಾಗೆಯೇ ಪರಮಾತ್ಮನಲ್ಲಿ ಜೀವಭಾವವೂ ಕೂಡ ಅಪ್ರಮಾಣಿಕವು)(ಪುಟ 111) 

 

16)ಸಾಕ್ಷಿರೂಪನೂ ನಿಗು೯ಣನೂ ಕ್ರಿಯಾಶೂನ್ಯನೂ  ಒಳಗೆ ಚಿದಾನಂದ ಸ್ವರೂಪನಾಗಿ ಹೊಳೆಯುವವನೂ  ಆದ ಆತ್ಮನಿಗೆ ಬುದ್ದಿಯ ಭ್ರಾಂತಿಯಿಂದ ಜೀವತ್ವವು ಉಂಟಾಗಿದೆ,ಸತ್ಯವಾಗಿ ಅಲ್ಲ.ಇದು ಸ್ವಭಾವದಿಂದಲೇ ಅಸತ್ಯವಾಗಿರುವುದರಿಂದ ಮೋಹವು ತೊಲಗಿದ ಮೆಲೆ ಇರುವುದೇ ಇಲ್ಲ.(ಪುಟ111)

 

17)ಹಗ್ಗದಲ್ಲಿ ಸಪ೯ವು ಭ್ರಾಂತಿಕಾಲದಲ್ಲಿ ಮಾgತ್ರ ತೋರುತ್ತದೆ.ಭ್ರಾಂತಿಯು ನಾಶವಾದಾಗ  ಸಪ೯ವೂ ಇರುವುದಿಲ್ಲ.ಹಾಗೆಯೇ ಪ್ರಮಾದದಿಂದ ಮಿಥ್ಯಾ ಜ್ಞಾನದ ಮೂಲಕ  ಮೆರೆಯುತ್ತಿರುವ ಜೀವತ್ವಕ್ಕೆ  ಎಲ್ಲಿಯವರೆಗೆ ಭ್ರಾಂತಿಯಿರುವುದೋ  ಅಲ್ಲಿಯವರೆಗೆ ಮಾತ್ರ ಅಸ್ತಿತ್ವದಲ್ಲಿರುವುದು.(ಪುಟ 102)

 

18-1೯೯)ಹೀಗೆಯೇ ಅವಿದ್ಯೆಯ ಕಾಯ೯ವೂ ಕೂಡ ಅನಾದಿ ಎಂಬುದು ಒಪ್ಪುತ್ತದೆ.ಜ್ಞಾನವು ಉತ್ಪನ್ನವಾದಾಗ  ಅವಿದ್ಯಾ ಕಾಯ೯ವೆಲ್ಲಾ ಅನಾದಿಯಾಗಿದ್ದರೂ - ಎಚ್ಚೆತ್ತಾಗ ಸ್ವಪ್ನವು ನಾಶವಾಗುವಂತೆ-ಸಮೂಲವಾಗಿ ನಾಶವಾಗುತ್ತದೆ.ಅವಿದ್ಯೆಯ ಕಾಯ೯ವೂ ಅನಾದಿಯಾಗಿದ್ದರೂ  ಪ್ರಾಗಭಾವದಂತೆ ನಿತ್ಯವಲ್ಲವೆಂಬುದು ಸ್ಫುಟವಾಗಿದೆ.(ಪುಟ 113)

(ಯಾವುದೊ ಒಂದು ಕಾಲದಲ್ಲಿ ಒಂದು ವಸ್ತುವು ಉತ್ಪನ್ನವಾದರೆ ವಸ್ತುವು ತನ್ನ ಉತ್ಪತ್ತಿಯ ಕಾಲಕ್ಕೆ ಮೊದಲು  ಇರಲಿಲ್ಲವೆಂಬುದು ಸ್ಫುಟವಾಗಿದೆ. ಪ್ರಾಕ್ -ಅಭಾವಕ್ಕೆ  ಆದಿಯಿಲ್ಲ.ಆದರೆ ವಸ್ತುವು ಉತ್ಪನ್ನವಾದ ಕೂಡಲೇ  ಪ್ರಾಕ್- ಅಭಾವವುನಾಶವಗುತ್ತದೆ.ಹೀಗೆಯೇ ಅವಿದ್ಯೆಗೆ ಅದಿಯಿಲ್ಲದಿದ್ದರೂ ಜ್ಞಾನವು ಉತ್ಪನ್ನವಾದ ಕೂಡಲೇ ಅದು ಮಾಯವಾಗುತ್ತದೆ.(ಪುಟ 114)

 

200_201)ಪ್ರಾಗಭಾವವು ಅನಾದಿಯಾಗಿದ್ದರೂ  ಅದಕ್ಕೆ ನಾಶವಿರುವುದು ಕಂಡುಬರುತ್ತದೆ.ಬುದ್ಧಿಯೆಂಬ ಉಪಾಧಿಯ ಸಂಬಂಧದಿಂದ  ಆತ್ಮನಲ್ಲಿ ಯಾವ ಜೀವತ್ವವು ಪರಿಕಲ್ಪಿತವಾಗಿರುವುದೊ  ಅದು ನಿಜವಲ್ಲ.ಆದರೆ ಉಪಾಧಿಗಿಂತ ಬೇರೆಯಾದ  ಆತ್ಮನು ಸ್ವರೂಪದಿಂದ ವಿಲಕ್ಷಣನು.ಬುದ್ದಿಯೊಡನೆ ಆತ್ಮನ ಸಂಬಂಧವು ಮಿಥ್ಯಾಜ್ಞಾನ ಪೂವ೯ಕವಾದದ್ದು.(ಪುಟ113)

 

202) ಉಪಾಧಿಯ ನಿವೃತ್ತಿಯು  ಸಮ್ಯಕ್ ಜ್ಞಾನದಿಂದ ಉಂಟಾಗಬೇಕೆ ವಿನಃ ಬೇರೆ ರೀತಿಯಿಂದಲ್ಲ.

ಜೀವಾತ್ಮ-ಪರಮಾತ್ಮ ಇವರ ಅಭೇದಜ್ಞಾನವೇ  ಸಮ್ಯಕ್-ಜ್ಞಾನವೆಂದು  ಶ್ರುತಿಯ ಅಭಿಪ್ರಾಯವಾಗಿರುತ್ತದೆ.(ಪುಟ114)

 

ಮಹಾವಾಕ್ಯಗಳ ವಿವರಣೆ:

1) ಅಹಂ ಬ್ರಹ್ಮಾಸ್ಮಿ-ನಾನು ಬ್ರಹ್ಮವಾಗಿರುತ್ತೇನೆ.(ಬೃ..1-4-10)

 

2) ತತ್ವಮಸಿ-ಅದು ನೀನಾಗಿರುವೆ-(ಛಾಂದೋಗ್ಯ .6-8-7)

 

3) ಅಯಮಾತ್ಮಾ ಬ್ರಹ್ಮ- ಆತ್ಮನು ಬ್ರಹ್ಮ(ಮಾಂಡೂಕ್ಯ .1-2)

 

4)ಪ್ರಜ್ಞಾನಂ ಬ್ರಹ್ಮ-ಪ್ರಜ್ಞಾನವು ಬ್ರಹ್ಮ(ಐತರೇಯ .3-13)(ಪುಟ 114)

 

203)ಜೀವಾತ್ಮ-ಪರಮಾತ್ಮರ ಅಭೇದ ಜ್ಞಾನವು  ಆತ್ಮ-ಅನಾತ್ಮ ವಸ್ತುವಿನ  ವಿವೇಚನೆಯಿಂದಲೇ

ಸಿದ್ಧಿಸುತ್ತದೆ. ಆದುದರಿಂದ ಪ್ರತ್ಯಗಾತ್ಮ ಮತ್ತು ಅನಾತ್ಮ -ಇವೆರಡರ ವಿವೇಚನವನ್ನು ಮಾಡಬೇಕು.(ಪುಟ 114)

 

204)ಬಹಳ ಕೆಸರಾಗಿರುವ ನೀರು ಕೆಸರು ಹೋದಮೇಲೆ ಹೇಗೆ  ಸ್ವಚ್ಛವಾಗಿ ತೋರುವುದೊ ಹಗೆಯೇ ಆತ್ಮನೂ ಕೂಡ  ದೋಷವಿಲ್ಲದಿರುವಾಗ ಸ್ಫುಟವಾಗಿ ಪ್ರಕಾಶಿಸುತ್ತಾನೆ.

( ಆತ್ಮನು ನೀರಿನಂತೆ ಸ್ವಚ್ಛವಾಗಿರುತ್ತಾನೆ. ಸಲಿಲ ಏಕಃ(ಬೃ..4-3-32)  (ಪುಟ 204)  

 

205)ಅಸದ್ವಸ್ತುವು ತೊಲಗಿದಾಗ  ಪ್ರತ್ಯಗಾತ್ಮನಿಗೆ ಸದ್ರೂಪದಿಂದ  ಸಾಕ್ಷಾತ್ಕಾರವು ಉಂಟಾಗುತ್ತದೆ.ಆದುದರಿಂದ ಅಸದ್ರೂಪವಾದ ಅಹಂಕರಾದಿ ವಸ್ತುಗಳ ನಿರಾಕರಣವನ್ನು ಮಾಡಲೇಬೇಕು.

(ಪುಟ 115)

 

206)ಆದುದರಿಂದ ವಿಜ್ಞಾನಮಯ ಕೋಶವು  ಪರಮಾತ್ಮನಾಗಲಾರದು.ಏಕೆಂದರೆ ಇದು ವಿಕಾರಗಳನ್ನು ಪಡೆಯುತ್ತದೆ.ಜಡವಾಗಿರುತ್ತದೆ.ದೃಶ್ಯವಸ್ತುವಾಗಿದೆ.ಯಾವಗಲೂ ತೋರುವಂಥಾದ್ದಲ್ಲ.ಅನಿತ್ಯವಸ್ತುವನ್ನು

ನಿತ್ಯವೆಂದು ಹೇಳಲಾಗುವುದಿಲ್ಲ.(ಪುಟ 116)

 

207)ಆನಂದದ ಪ್ರತಿಬಿಂಬದಿಂದ  ವ್ಯಾಪ್ತವಾದ  ಸ್ವರೂಪವುಳ್ಳ ಅವಿದ್ಯೆಯೆಂಬ  ತಮಸ್ಸಿನಿಂದ ಹುಟ್ಟಿದ ವೃತ್ತಿಯು  ಆನಂದಮಯಕೋಶವಾಗುತ್ತದೆ.ಇದು ಪ್ರಿಯವೇ ಮೊದಲಾದ ಗುಣಗಳನ್ನು ಪಡೆದಿದೆ.ಇಷ್ಟಾಥ೯ವು ಕೈಗೂಡಿದಾಗ  ಉದಯವಾಗುತ್ತದೆ. ಪುಣ್ಯವಂತರಿಗೆ ಪುಣ್ಯಕಮ೯ದ ಫಲದ ಅನುಭವವಾದಾಗ ತೋರಿಕೊಳ್ಳುತ್ತದೆ. ಆನಂದಮಯಕೋಶದಲ್ಲಿ  ಶರೀರವುಳ್ಳವನು  ಪ್ರಯತ್ನ ಮಾಡದೆಯೇ ಸ್ವಯಂ ಆನಂದರೂಪವಾಗಿ  ಚೆನ್ನಾಗಿ ಸಂತೋಷಿಸುತ್ತಾನೆ.(ಪುಟ 116)

( ವಿಜ್ಞಾನಮಯ ಆತ್ಮನಿಗಿಂತ ಅನ್ಯನೂ ಅಂತರನೂ ಆನಂದಮಯನೂ ಆದ ಆತ್ಮನಿರುವನು.)

 

208)ಸುಷುಪ್ತಿಯಲ್ಲಿ ಆನಂದಮಯ ಕೋಶದ  ಸ್ಫೂತಿ೯ಯು  ಪೂಣ೯ವಾಗಿರುತ್ತದೆ.ಕನಸು ಎಚ್ಚರ ಇವುಗಳಲ್ಲಿ  ಪ್ರಿಯ ವಸ್ತುಗಳ ದಶ೯ನವೇ ಮೊದಲಾದ ಕಾರಣದಿಂದ ಸ್ವಲ್ಪವಾಗಿ ತೋರುತ್ತದೆ.(ಪುಟ 117)

 

20) ಆನಂದಮಯ ಕೋಶವೂ ಪರಮಾತ್ಮನಲ್ಲ.ಏಕೆಂದರೆ ಇದು ಉಪಾಧಿಯಿಂದ ಕೂಡಿದೆ.ಪ್ರಕೃತಿಯ ವಿಕಾರವಾಗಿದೆ.ಪುಣ್ಯಕಮ೯ದ ಫಲವಾಗಿದೆ ಮತ್ತು ವಿಕಾರಗಳಾದ ಇತರ ಕೋಶಗಳಿಂದ ಆವರಿಸಲ್ಪಟ್ಟಿದೆ.(ಪುಟ118)

(ಇಲ್ಲಿ ಆನಂದಮಯ ಕೋಶದ ಅನಾತ್ಮತ್ವವನ್ನು ಹೇಳಿದೆ.)

 

210)ಸ್ರುತಿಯಿಂದಲೂ ಯುಕ್ತಿಯಿಂದಲೂ  ಐದು ಕೋಶಗಳನ್ನು ನಿರಾಕರಿಸಿದರೆ  ಅವುಗಳ ನಿಷೇಧವೇ ಎಲ್ಲೆಯಾಗಿ ಸಾಕ್ಷಿಯೂ ಜ್ಞಾನಸ್ವರೂಪನೂ  ಆದ ಪರಮಾತ್ಮನು  ಉಳಿದುಕೊಳ್ಳುತ್ತಾನೆ.

('ಇದಲ್ಲ ಇದಲ್ಲ'ನೇತಿ ನೇತಿ'(ಬೃ..2-3-6))(ಪುಟ 118)

 

46)ಆತ್ಮನು ಸಾಕ್ಷಿ:

 

211)ಸ್ವಯಂಪ್ರಕಾಶನೂ ಇತರ ಪಂಚ ಕೋಶಗಳಿಗಿಂತ ಭಿನ್ನನೂ ಅವಸ್ಥಾತ್ರಯ ಸಾಕ್ಷಿಯೂ ವಿಕಾರ ಶೂನ್ಯನೂ  ನಿಲಿ೯ಪ್ತನೂ ನಿತ್ಯಾನಂದ ಸ್ವರೂಪನೂ  ಆದ ಯಾವ ಆತ್ಮನಿರುವನೊ ಅವನೇ ತನ್ನ ಆತ್ಮನೆಂದು ವಿವೇಕ ಪುರುಷನು ಅರಿತುಕೊಳ್ಳಬೇಕು.(ಪುಟ 11)

 

212)ಶಿಷ್ಯನು ಪ್ರಶ್ನಿಸಿದನು:ಹೇ ಗುರುವೆ, ಪಂಚಕೋಶಗಳನ್ನು ಮಿಥ್ಯೆಯೆಂದು ನಿರಾಕರಿಸಿದ ಮೇಲೆ  ಇಲ್ಲಿ ಸವ೯ಶೂನ್ಯತೆಯೊಂದನ್ನು ಬಿಟ್ಟು  ನನಗೆ ಮತ್ತೆ ಯಾವುದೂ ತೋರುವುದಿಲ್ಲ!ಇಲ್ಲಿ ವಿವೇಕಿಯಾದವನು  ತನ್ನ ಆತ್ಮನೆಂದು  ಅರಿತುಕೊಳ್ಳತಕ್ಕ ವಸ್ತು ಯಾವುದಿರುವುದು?

(ಇಲ್ಲಿ ಶೂನ್ಯವಾದಿಗಳ  ಮತವನ್ನು  ಪೂವ೯ಪಕ್ಷವಾಗಿ ಹೇಳಿದೆ.ಇದಕ್ಕೆ ಉತ್ತರವನ್ನು  ಮುಂದಿನ ಕೆಲವು ಶ್ಲೋಕಗಳಲ್ಲಿ ಹೇಳಿದೆ.)(ಪುಟ11)

 

213-214)ಶ್ರೀ ಗುರುವು ಹೇಳಿದನು:ವಿವೇಕಿಯೆ  ನೀನು ಹೇಳಿದ್ದು ಸತ್ಯವೇ ,ನೀನು ವಿವೇಚನೆ ಮಡುವುದರಲ್ಲಿ ನಿಪುಣನಾಗಿರುವೆ.ಅಹಂಕಾರವೇ ಮೊದಲದ ವಿಕಾರಗಳು ಮತ್ತು ಅವುಗಳ ಅಭಾವವು -ಇವೆಲ್ಲವನ್ನೂ ಯಾವನು ಅನುಭವಿಸುತ್ತಾನೆಯೋ ,ಯಾವುದನ್ನು ಮತ್ರ ಅನುಭವಿಸಲು ಮತ್ತೆ ಯವುದರಿಂದಲೂ ಆಗುವುದಿಲ್ಲವೋ  ಸವ೯ಸಕ್ಷಿಯಾದ ಆತ್ಮನನ್ನು ಅತಿ ಸೂಕ್ಷ್ಮವಾದ ಬುದ್ದಿಯಿಂದ ಅರಿತುಕೊ.

('ಏಕಾಗ್ರವಾದ  ಸೂಕ್ಷ್ಮವಾದ ಬುದ್ಧಿಯಿಂದ  'ಅಗ್ರ್ಯಯಾ  ಬುದ್ಧ್ಯಾಸೂಕ್ಷ್ಮಯ'(ಕಠ..1-3-12)ಎಂಬುದರ ಛಾಯೆ.)(ಪುಟ120)

 

215)ಯಾವಯಾವನು ಯಾವಯಾವುದನ್ನು ಅನುಭವಿಸುತ್ತಾನೋ  ಅದದಕ್ಕೆ ಅವನೆ ಸಾಕ್ಷಿಯಾಗಿರುತ್ತನೆ.ವಿಷಯಗಳು ಅನುಭವಿಸಲ್ಪಡದಿದ್ದರೆ ಯಾವನಿಗೂ ಹಾಕ್ಷಿತ್ವವು ಸಂಭವಿಸುವುದಿಲ್ಲ.(ಪುಟ 121)

 

216) ಆತ್ಮನು ತನಗೆ ತಾನೇ ಸಾಕ್ಷಿಯಾಗಿರುತ್ತಾನೆ.ಏಕೆಂದರೆ ತನ್ನನ್ನು ತನೇ ಅನುಭವಿಸುತ್ತಾನೆ.

ಆದುದರಿಂದ ಪ್ರತ್ಯಗಾತ್ಮನು  ತಾನೇ ಸಾಕ್ಷತ್ತಾಗಿ ಬ್ರಹ್ಮವಾಗಿರುತ್ತಾನೆ.ಇನ್ನೊಬ್ಬನಲ್ಲ.(ಪುಟ121)

('ಯಾವುದು  ಸಾಕ್ಷಾತ್ತಾಗಿರುವ ಅಪರೋಕ್ಷವಾದ ಬ್ರಹ್ಮವೋ'.ಯತ್ ಸಕ್ಷಾದಪರೋಕ್ಷಾತ್ ಬ್ರಹ್ಮ

(ಬೃ 3-4-1)

 

217) ಯಾವ ಇವನು ಜಾಗ್ರತ್-ಸ್ವಪ್ನ-ಸುಷುಪ್ತಿಗಳಲ್ಲಿ ಸ್ಫುಟವಾಗಿ ವ್ಯಕ್ತನಾಗುತ್ತಾನೆಯೊ,ಯವಾಗಲೂ 'ನಾನು ನಾನು' ಎಂದು  ಒಂದೇ ವಿಧವಾಗಿ  ಪ್ರತ್ಯಗಾತ್ಮ ಸ್ವರೂಪದಿಂದ  ಒಳಗೆ ಪ್ರಕಾಶಿಸುತ್ತ,ನಾನ ವಿಧವಾದ ಆಕಾರಗಳನ್ನೂ ವಿಕಾರಗಳನ್ನೂ ಹೊಂದುತ್ತಿರುವ  ಅಹಂಕಾರ ಬುದ್ಧಿ ಇವುಗಳನ್ನು ನೋಡುತ್ತಾ ,ನಿತ್ಯಾನಂದ ಜ್ಞಾನರೂಪದಿಂದ  ಪ್ರಕಾಶಿಸುತ್ತಿರುವನೊ  ಅಂಥ  ಇವನನ್ನೇ ಹೃದಯ

ದಲ್ಲಿರುವ  ನಿನ್ನ ಆತ್ಮನೆಂದು ತಿಳಿದುಕೊ.(ಪುಟ 122)

 

218)ಮೂಢನು  ಗಡಿಗೆಯ ನೀರಿನಲ್ಲಿ ಪ್ರತಿಬಿಂಬಿಸಿರುವ ಪ್ರತಿಬಿಂಬವನ್ನು ನೋಡಿ  ಅದನ್ನು ಸೂಯ೯ನೆಂದೇ ಭಾವಿಸುತ್ತಾನೆ.ಹಾಗೆಯೇ ಅಜ್ಞಾನಿಯು(ಬುದ್ಧಿಯೇ ಮೊದಲಾದ) ಉಪಾಧಿಯಲ್ಲಿ ಪ್ರತಿಬಿಂಬಿಸಿರುವ  ಚಿತ್-ಪ್ರತಿಬಿಂಬವನ್ನು 'ನಾನು' ಎಂದು ತಿಳಿಯುತ್ತಾನೆ.(ಪುಟ 122)

 

21) ಗಡಿಗೆ,ನೀರು,ಅದರಲ್ಲಿ ತೋರುವ ಸೂಯ೯ನ ಪತಿಬಿಂಬ -ಇವೆಲ್ಲವನ್ನೂ ಬಿಟ್ಟು , ಮೂರಕ್ಕಿಂತ ಭಿನ್ನವಾದ , ಮೂರನ್ನೂ ಪ್ರಕಾಶಪಡಿಸುವ  ಮತ್ತು ಸ್ವಯಂಪ್ರಕಾಶನಾದ ಸೂಯ೯ನನ್ನು ವಿವೇಕಿಯು ಹೇಗೆ ನೋಡುವನೊ-

 

220-221-222):ಹಾಗೆಯೇ ಶರೀರವನ್ನೂ ,ಬುದ್ಧಿಯನ್ನೂ, ಚಿದಾಭಾಸವನ್ನೂ ಬಿಟ್ಟು  ಬುದ್ದಿಯೆಂಬ ಗುಹೆಯಲ್ಲಿ ನೆಲೆಗೊಂಡಿರುವ ಸವ೯ಸಾಕ್ಷಿಯೂ ಅಖಂಡ ಜ್ಞಾನಸ್ವರೂಪನೂ  ಸವ೯ಪ್ರಕಶಕನೂ ಸ್ಥೂಲ ಸೂಕ್ಷ್ಮಗಳಿಗಿಂತ ಭಿನ್ನನೂ ನಿತ್ಯನೂ ವಿಭುವೂ ಸವ೯ಗತನೂ ಅತ್ಯಂತ ಸೂಕ್ಷ್ಮನೂ ಒಳಗೆ ಹೊರಗೆ ಎಂಬುದಿಲ್ಲದವನೂ ತನಗಿಂಬೇರೆಯಲ್ಲದವನೂ ಆದ ನಿಜರೂಪನಾದ ಆತ್ಮನನ್ನು ಚೆನ್ನಾಗಿ ಅರಿತುಕೊಂಡು ಮನುಷ್ಯನು ಪಾಪರಹಿತನೂ  ರಜಸ್ಸಿಲ್ಲದವನೂಮ್ರೃತ್ಯುರಹಿತನೂ ಶೋಕರಹಿತನೂ  ಆನಂದ ಘನನೂ ಆದ ಜ್ಞಾನಿಯಾಗಿ ಯಾವುದಕ್ಕೂ ಹೆದರದೆ ಇರುತ್ತಾನೆ.ಮುಮುಕ್ಷುವಿಗೆ  ನಿಜಸ್ವರೂಪದ ತಿಳುವಳಿಕೆಯನ್ನು ಬಿಟ್ಟು ಸಂಸಾರ ಬಂಧನದ ಬಿಡುಗಡೆಗೆ  ಬೇರೆ ಯಾವ ದಾರಿಯೂ ಇರುವುದಿಲ್ಲ.

 

(1)ಚಿದಾಭಾಸ ಎಂದರೆ 'ನಾನು'ಎಂದು ತೋರಿಕೊಳ್ಳುವ ಆಭಾಸ

2)'ಎಲ್ಲಾ ಪ್ರಾಣಿಗಳಲ್ಲಿರುವ ಆತ್ಮನು ಪ್ರಕಾಶಿಸುವುದಿಲ್ಲ.ಏಷ ಸವ೯ ಭೂತೇಷು ಗೂಢೋ ಆತ್ಮಾ ಪ್ರಕಾಶತೇ. (ಕಠ..1-3-12)

3) ಅದು ಅನಂತರವು ಅಬಾಹ್ಯವು .4) ಆತ್ಮನಿಗೂ ಬ್ರಹ್ಮಕ್ಕೂ ಯಾವ ಭೇದವೂ ಇಲ್ಲ. ಅನಂತರಮಬಾಹ್ಯಮ್(ಬೃ..3-8-)

4) ಆತ್ಮನಿಗೂ ಬ್ರಹ್ಮಕ್ಕೂ ಯಾವ ಭೇದವೂ ಇಲ್ಲ." ಆತ್ಮನು ಬ್ರಹ್ಮ' ಅಯಮಾತ್ಮಾ ಬ್ರಹ್ಮ(ಮಾಂಡೂಕ್ಯ..1-2)

5) 'ಅವನು ಯಾವುದಕ್ಕೂ ಹೆದರುವುದಿಲ್ಲ.' ಬಿಭೇತಿಕುತಶ್ಚನೇತಿ'(ತೈ..2-))

 

4)ಜಗತ್ತು ಬ್ರಹ್ಮಕ್ಕಿಂತ ಬೇರೆಯಲ್ಲ:

 

223) ಜೀವಾತ್ಮ-ಪರಮಾತ್ಮ -ಇವುಗಳ ಐಕ್ಯಜ್ಞಾನವೇ  ಸಂಸಾರದಿಂದ ಬಿಡುಗಡೆಯನ್ನು ಹೊಂದಲು ಕಾರಣವಾಗಿರುತ್ತದೆ.ಜ್ಞಾನಿಗಳು ಐಕ್ಯ ಜ್ಞಾನದಿಂದಲೇ ಅದ್ವಯವೂ ಆನಂದ ಸ್ವರೂಪವೂ ಆದ ಬ್ರಹ್ಮವನ್ನು ಸಾಕ್ಷಾತ್ಕರಿಸುತ್ತಾರೆ.

( 'ನಾನೇ ಬ್ರಹ್ಮವಾಗಿದ್ದೇನೆ' 'ಅಹಂ ಬ್ರಹ್ಮಾಸಿ'್ಮ(ಬೃ..1-4-10)) 

 

224)ಆದರೆ ಬ್ರಹ್ಮಸ್ವರೂಪನಾದ  ಜ್ಞಾನಿಯು ಸಂಸಾರಕ್ಕೆ ಬರುವುದಿಲ್ಲ.ಆದುದರಿಂದ ತಾನು ಬ್ರಹ್ಮಕ್ಕಿಂತ ಬೇರೆಯವನಲ್ಲವೆಂದು ಚೆನ್ನಾಗಿ ತಿಳಿದುಕೊಳ್ಳಬೇಕು.

 'ಅವನು ಹಿಂತಿರುಗುವುದಿಲ್ಲ'' ಪುನರಾವತ೯ತೇ'(ಛಾಂ..8-15-1)(ಪುಟ126)

 

225)ವಿಶುದ್ಧವೂ ಮಯಾತೀತ ಸ್ವತಃಸ್ಸಿದ್ಧವೂ  ನಿತ್ಯ್ಯಾನಂದೈಕ ಸ್ವರೂಪವೂ  ಪ್ರತ್ಯಗಾತ್ಮನಿಗಿಂತ ಅಭಿನ್ನವೂ  ಅಂತರ ಶೂನ್ಯವೂ  ಸತ್ಯಜ್ಞಾನಾನಂತ ಸ್ವರೂಪವೂ  ಆದ ಬ್ರಹ್ಮವು ಸವೋ೯ತ್ಕøಷ್ಟವಾಗಿರುತ್ತದೆ.(ಪುಟ 126)

(ಸತ್ಯ ಜ್ಞಾನ ಮನಂತಂ ಬ್ರಹ್ಮ(ತೈತ್ತಿರೀಯ ..2-1))

 

226) ಪರಮಾದ್ವೈತವೇ ಸದ್ವಸ್ತುವು.ಏಕೆಂದರೆ ತನಗಿಂತ ಬೇರೊಂದಾದ  ವಸ್ತುವೇ ಇಲ್ಲ.ತತ್ವವನ್ನು ಚೆನ್ನಾಗಿ ಅರಿತುಕೊಂಡಾಗ ಬೇರೆ ಯಾವುದೂ ಇರುವುದಿಲ್ಲ.(ಪುಟ 126)

 

227)ಅಜ್ಞಾನದಿಂದ ಕಂಡುಬರುವ  ನಾನಾ ರೂಪವುಳ್ಳ  ಸಮಸ್ತ ವಿಶ್ವವೂ ಸಕಲ-ಕಲ್ಪನಾ-ದೋಷ-ವಜಿ೯ತವಾದ ಬ್ರಹ್ಮವೇ.(ಪುಟ 127)

 

228)ಗಡಿಗೆಯು ಮಣ್ಣಿನ ಕಾಯ೯ವಾಗಿದ್ದರೂ  ಎಲ್ಲೆಲ್ಲಿಯೂ ಮಣ್ಣಿನರೂಪವೇ ಆಗಿರುವುದರಿಂದ  ಮಣ್ಣಿಗಿಂತ ಬೇರೆಯಾಗಿ ಇರುವುದಿಲ್ಲ.ಗಡಿಗೆ ಎಂಬ ರೂಪವು ಬೇರೆಯಾಗಿ ಕಂಡು ಬರುವುದಿಲ್ಲ.ಹೀಗಿರುವಾಗ ಗಡಿಗೆಯು ಎಲ್ಲಿಂದ ಬಂತು?ಅದು ಮಿಥ್ಯೆಯೇ.ಕಲ್ಪಿತವಾದ ಕೇವಲ ಹೆಸರೇ.

(ವಸ್ತುವಿನ ಪರಿಣಾಮವು ವಾಕ್ಕನ್ನು ಅವಲಂಬಿಸಿರುವ ಕೇವಲ ಹೆಸರೇ.ಮಣ್ಣೆಂಬುದೇ ಸತ್ಯವು.ವಾಚಾರಂಭಣೋ ವಿಕಾರೋ ನಾಮಧೇಯಂ ಮೃತ್ತಿಕೇತ್ಯೇವ ಸತ್ಯಂ.(ಛಾಂ..6-1-4)(ಪುಟ 128)

 

22)ಗಡಿಗೆಯ ಸ್ವರೂಪವು ಮಣ್ಣಿಗಿಂತ ಬೇರೆಯೆಂದು ತೋರಿಸಿಕೊಡುವುದು ಯಾವನಿಂದಲೂ ಸಾಧ್ಯವಿಲ್ಲ.ಆದುದರಿಂದ ಗಡಿಗೆ ಎಂಬುದು ಅಜ್ಞಾನದಿಂದ ಕಲ್ಪಿತವಾದುದೇ,ಮಣ್ಣೆಂಬುದೇ ಪರಮಾಥ೯ವಾದ ಸತ್ಯವು.(ಪುಟ128)

 

230)ಹೀಗೆ  ಸದ್ಬ್ರಹ್ಮದ ಕಾಯ೯ವಾದ ಸಮಸ್ತ ಜಗತ್ತೂ ಸದ್ವಸ್ತುವೇ.ಅದಕ್ಕಿಂತಲೂ ಬೇರೆಯಾದ ವಸ್ತುವು ಇರುವುದಿಲ್ಲ.ಯಾವನು ಬ್ರಹ್ಮಕ್ಕಿಂತ ಬೇರೆಯಾದ ವಸ್ತು ಇದೆ ಎಂದು ಹೇಳುತ್ತಾನೆಯೋ ಅವನ ಅಜ್ಞಾನವು ಅವನನ್ನು ಬಿಟ್ಟು ಹೋಗಿರುವುದಿಲ್ಲ.ಅವನ ಮಾತುಗಳು ನಿದ್ರಿಸುತ್ತಿರುವವನ ಕನವರಿಕೆಯ ಮಾತಿನಂತೆ.(ಪುಟ128)

 

231)' ಜಗತ್ತೆಲ್ಲವೂ ಬ್ರಹ್ಮವೇ 'ಎಂದು ಅಥವ೯ ಸಿರಸ್ಸಿನಲ್ಲಿರುವ  ಶ್ರೇಷ್ಠವಾದ ಶ್ರುತಿವಾಣಿಯು ಹೇಳುತ್ತಿರುವುದು.ಆದುದರಿಂದ ವಿಶ್ವವು ಕೇವಲ ಬ್ರಹ್ಮವೆ.ಏಕೆಂದರೆ ಆರೋಪಿತವಾದ ವಸ್ತುವಿಗೆ  ತನ್ನ ಆಶ್ರಯಕ್ಕಿಂತಲೂ ಭಿನ್ನವಾದ  ಅಸ್ತಿತ್ವವು ಇರಲಾರದು.

(ಬ್ರಹ್ಮೈವೇದಂ  ವಿಶ್ವಮಿದಂ ವರಿಷ್ಠಂ(ಮುಂ..2-12)

ಹಗ್ಗದಲ್ಲಿ ಆರೋಪಿಸಲ್ಪಟ್ಟ  ಹಾವು ತನಗೆ  ಆಶ್ರಯವಾಗಿರುವ ಹಗ್ಗಕ್ಕಿಂತ  ಬೇರೆಯಾಗಲಾರದು.ಹಾಗೇ ಬ್ರಹ್ಮದಲ್ಲಿ ಆರೋಪಿತವಾಗಿರುವ ಪ್ರಪಂಚಕ್ಕೆ ಬ್ರPಹ್ಮಕ್ಕಿಂತಲೂ ಬೇರೆಯ ಸ್ಥಿತಿಯು ಇರುವುದಿಲ್ಲ.)(ಪುಟ 12)

 

232) ಜಗತ್ತು ಸತ್ಯವಾಗುವುದದರೆ ಆತ್ಮನ ಅನಂತತ್ವಕ್ಕೆ ಹಾನಿಯಾಗುತ್ತದೆ.ಶಾಸ್ತ್ರವು ಅಪ್ರಮಾಣವಾಗುತ್ತದೆ.ಈಶ್ವರನು ಅಸತ್ಯವನ್ನು ಹೇಳಿದಂತವನಾಗುತ್ತಾನೆ. ಮೂರೂ ಮಹಾತ್ಮರಿಗೆ ಸಾಧುವೂ ಅಲ್ಲ,ಹಿತವೂ ಅಲ್ಲ.(130)

(ಅನಂತತ್ವವು ಹೋದರೆ ಸತ್ಯಂ ಜ್ಞಾನಂ ಅನಂತಂ ಬ್ರಹ್ಮ (ತೈ.2-1)ಮೊದಲಾದ ವಾಕ್ಯಗಳು

ಬಾಧಿತವಾಗುತ್ತವೆ.)

 

233)ವಸ್ತುತತ್ವವನ್ನು ಬಲ್ಲ ಈಶ್ವರನು 'ನಾನು ಅವುಗಳಲ್ಲಿ ಇಲ್ಲ' 'ನನ್ನಲ್ಲಿ ಪ್ರಾಣಿಗಳು ಇರುವುದಿಲ್ಲ'

ಎಂದು ಹೀಗೆಯೇ ವ್ಯವಸ್ಥೆ ಮಾಡಿದ್ದಾನೆ.(ಪ್ರಪಂಚದ ಮಿಥ್ಯಾಥ್ವವನ್ನು  ¸ಸಾಧಿಸಲು  ಭಗವದ್ಗೀತೆಯನ್ನೂ ಉದಾಹರಿಸಿದೆ)(ಪುಟ 130)

 

234)ವಿಶ್ವವು ಸತ್ಯವಾಗಿರುವುದಾದರೆ ಸುಷುಪ್ತಿಯಲ್ಲಿ ಗೋಚರವಾಗಲಿ!ಅಲ್ಲಿ ಸ್ವಲ್ಪವೂ ಗೋಚರವಾಗುವುದಿಲ್ಲವಾದ್ದರಿಂದ ಅದು ಅಸದ್ವಸ್ತುವೇ.ಸ್ವಪ್ನದಂತೆ ಸುಳ್ಳೇ.(ಪುಟ 121)

 

235)ಆದುದರಿಂದ ಜಗತ್ತು ಪರಮಾತ್ಮನಿಗಿಂತ ಬೇರೆಯಾಗಿರುವುದಿಲ್ಲ.ಬೆರೆಯಗಿರುವಂತೆ ತೋರುವುದು -ಗುಣವೆ ಮೊದಲಾದವುಗಳು ಬೇರೆಯಾಗಿ ತೋರುವಂತೆ -ರ್ಮಿಥ್ಯೆಯಾಗಿರುತ್ತವೆ.(ಅಧಿಷ್ಠಾನವನ್ನು ಬಿಟ್ಟರೆ)ಆರೋಪಿತವಾಗಿರುವ ವಸ್ತುವಿಗೆ ಯವ ಪ್ರಯೋಜನವಿದೆ?ಅಧಿಷ್ಠಾನವೇ ಭ್ರಾಂತಿಯಿಂದ ಹಾಗೆ ತೋರುತ್ತದೆ.

(1)ಆಕಾಶದಲ್ಲಿ ನೀಲಿಬಣ್ಣವು ಕಾಣುವಂತೆ-ಗಗನಾದೌನೀಲಗುಣಾದಿ-ಪ್ರತೀ-ತಿವತ್ 15 ನೆಯ ಶ್ಲೋಕವನ್ನು ನೋಡಿರಿ)

2)ಅಧಿಷ್ಠಾನವಾದ ಹಗ್ಗವೇ ಹಾವಾಗಿತೋರುತ್ತದೆ.)(ಪುಟ 131)

 

236)ಭ್ರಾಂತಿಗೊಂಡವನಿಗೆ  ಯಾವು ಯಾವುದು ಭ್ರಮೆಯಿಂದ (ಬೆರೆಯಾಗಿ) ತೋರುವುದೊ ಅದೆಲ್ಲವೂ ಬ್ರಹ್ಮವಸ್ತುವೇ.ಬೆಳ್ಳಿಯಂತೆ ತೋರುವುದು ಕಪ್ಪೆಯ ಚಿಪ್ಪೇ.'ಇದು'ಎನ್ನುವ ಭಾವದಿಂದ  ಬ್ರಹ್ಮವು ಯಾವಾಗಲೂ ತೋರುತ್ತಿರುವುದು.ಬ್ರಹ್ಮದಲ್ಲಿ ಆರೋಪಿಸಲ್ಪಟ್ಟ ವಸ್ತುವು ಕೇವಲ ಹೆಸರೇ.(ಪುಟ132)

 

51) ಬ್ರಹ್ಮ ನಿರೂಪಣ:

 

237-238)ಆದುದರಿಂದ  ಪರಬ್ರಹ್ಮವು ಸದ್ವಸ್ತುವಾದದ್ದು,ಅದ್ವಯವಾದದ್ದು,ವಿಶುದ್ಧವಾದ ವಿಜ್ಞ ಘನವದದ್ದು,ನಿರಂಜನವೂ ಪ್ರಶಾಂತವೂ ಆದದ್ದು,ಆದ್ಯಂತರಹಿತವೂ ಕ್ರಿಯಾಶೂನ್ಯವೂ ಆದದ್ದು.ಯಾವಾಗಲೂ ಆನಂದ ರಸ ಸ್ವರೂಪವಾದದ್ದು.ಮಾಯಾಕೃತವಾದ ಯಾವಭೇದಗಳೂ ಇಲ್ಲದ್ದು,ನಿತ್ಯವೂ ಸುಖಸ್ವರೂಪವೂ ಆದದ್ದು,ಅವಯವಗಳಿಲ್ಲದ್ದು,ಪ್ರಮಾಣಾತೀತವಾದದ್ದು,ರೂಪವಿಲ್ಲದ್ದು,ಅವ್ಯಕ್ತವಾದದ್ದು,,ನಾಮರಹಿತವಾದದ್ದು,ನಶರಹಿತವಾದದ್ದು-ಇಂಥ ಯಾವುದೋ ಒಂದು ಸ್ವಯಂಜ್ಯೋತಿಯು ಪ್ರಕಾಶಿಸುತ್ತಿರುವುದು. 

(ಪುಟ133)

 

23)ಜ್ಞಾತೃ-ಜ್ಞೇಯ-ಜ್ಞಾನ ಎಂಬ ತ್ರಿಪುಟೀ ರಹಿತವಾದ ,ಅನಂತವಾದ,ನಿವಿ೯ಶೇಷಬಾದ,ಕೇವಲ ಅಖಂಡ ಚಿನ್ಮಾತ್ರವಾದ,ಪರತತ್ವವನ್ನು   ಜ್ಞನಿಗಳು ತಿಳಿಯುತ್ತಾರೆ.(ಪುಟ 133)

 

240)ಬ್ರಹ್ಮವನ್ನು ಬಿಡುವುದಕ್ಕೆ ಆಗುವುದಿಲ್ಲ,ಗ್ರಹಿಸುವುದಕ್ಕೂ ಆಗುವುದಿಲ್ಲ.ಅದು ವಾಕ್ ಮನಸ್ಸುಗಳಿಗೆ ಗೋಚರಿಸದು,ಅಳತೆಗೆ ಮೀರಿದುದು,ಆದಿ-ಅಂತಗಳಿಲ್ಲದ್ದು,,ಪೂಣ೯ವಾದದ್ದು,ತೇಜೋರೂಪವದದ್ದುಮತ್ತು ಪ್ರತ್ಯಗಾತ್ಮನಿಗಿಂತ ಭಿನ್ನವಲ್ಲ.(ಪುಟ 133)

 

241-242)ತತ್,ತ್ವಮ್ ಎಂಬ ಪದಗಳಿಂದ ಹೇಳಲ್ಪಡುತ್ತಿರುವ ,ಹೀಗೆ ಶೋಧಿತರಾದ ಬ್ರಹ್ಮ,ಆತ್ಮ-ಇವರಿಗೆ ಶ್ರುತಿಯು 'ಅದು ನೀನಾಗಿರುವೆ' ಎಂದು ಚೆನ್ನಾಗಿ ಪುನಃ ಪುನಃ ಚೆನ್ನಾಗಿ ಅಭೇದವನ್ನೇ ಪುನಃ ಪುನಃ-ಉಪದೇಶಿಸಿದರೆ ಅದು ಲಕ್ಷಣೆಯಿಂದ  ತೋರುವ  ಅಭೇದವನ್ನು ಸೂಚಿಸುತ್ತದೆಯೇ ಹೊರತು,

ತತ್ ತ್ವಂ ಎಂಬ ಪದಗಳಿಗೆ ವಾಚ್ಯವಾಗಿರುವ-ಸೂಯ೯ ಮತ್ತು ಮಿಂಚುಹುಳು,ರಾಜ ಮತ್ತು ಭೃತ್ಯ,ಸಮುದ್ರ ಮತ್ತು ಬಾವಿ,ಮೇರುಪವ೯ತ ಮತ್ತು ಪರಮಣು ಇವುಗಳಂತೆ ಪರಸ್ಪರ ವಿರುದ್ಧ ಧಮ೯ಗಳುಳ್ಳ -ಈಶ್ವರನಿಗೂ ,ಜೀವನಿಗೂ ಐಕ್ಯವನ್ನು ಹೆಳಿಲ್ಲ.(ಪುಟ135)

(ಛಾಂದೋಗ್ಯೋಪನಿಷತ್ತಿನ ಆರನೆಯ ಅಧ್ಯಾಯದಲ್ಲಿ  'ತತ್ವಮಸಿ'ವಾಕ್ಯವುಒಂಬತ್ತು ಸಲ ಬಂದಿದೆ)

(ಪುಟ135)

 

243)ಜೀವ-gಮಾತ್ಮರಿಗೆ ತೋರುವ ವಿರೋಧವು ಉಪಾಧಿಯಿಂದ ಕಲ್ಪಿತವಾಗಿರುತ್ತದೆ. ಯಾವ ಉಪಾಧಿಯೂ ವಾಸ್ತವವಾದುದಲ್ಲ.ಕೇಳು,ಈಶ್ವರನಿಗೆ ಮಹತ್ ಮೊದಲಾದವುಗಳಿಗೆ ಕಾರಣವಾದ ಮಾಯೆಯೂ ಜೀವನಿಗೆ  ಕಾಯ೯ವಾದ ಪಂಚಕೋಶವೂ ಉಪಾಧಿಯು.

(ಈಶ್ವರನಿಗೆ ಉಪಾಧಿ ಮಾಯೆ, ಜೀವನಿಗೆ ಉಪಾಧಿ ಪಂಚಕೋಶಗಳು) 

 

244)ಮಾಯೆ ಎಂಬ ಉಪಾಧಿಗಳನ್ನೂ ತಿರಸ್ಕರಿಸಿದರೆ ಈಶ್ವರನೂ ಇಲ್ಲ,ಜೀವನೂ ಇಲ್ಲ.ರಾಜನಿಗೆ ರಾಜ್ಯವೂ ಯೋಧನಿಗೆ  ಗುರಾಣಿಯೂ ಉಪಾಧಿಗಳು.ಅವೆರಡೂ ಇಲ್ಲದಿದ್ದರೆ ರಾಜನೂ ಅಲ್ಲ ,ಯೋಧನೂ ಅಲ್ಲ. (ಪುಟ 136)

 

245)'ಈಗ ಆದುದರಿಂದ (ಬ್ರಹ್ಮದ) ನಿದೇ೯ಶ'ಎಂಬ ಶ್ರುತಿಯು ಬ್ರಹ್ಮದಲ್ಲಿ ಕಲ್ಪಿತವಾದ   ಎರಡು  ಉಪಾಧಿಗಳನ್ನೂ ತಾನೇ ನಿಷೇಧಿಸುತ್ತದೆ.ಶ್ರುತಿ ಪ್ರಮಾಣದಿಂದ ಅನುಗ್ರಹೀತವಾದ ಜ್ಞಾನದಿಂದ  ಅವೆರಡನ್ನು ಹೀಗೆ ನಿರಾಸ ಮಾಡಬೇಕು.

('ಹೀಗಲ್ಲ ಹೀಗಲ್ಲ'ನೇತಿ ನೇತಿ(ಬೃ..2-3-6)

ಜೀವನ ಉಪಾಧಿಯಾದ  ಪಂಚಕೋಶಗಳು ,ಈಶ್ವರನ ಉಪಾಧಿಯಾದ  ಮಾಯೆ.-ಇವೆರಡನ್ನೂ)

(ಪುಟ 136)

 

2¸46)ಆತ್ಮನು ಮಾಯೆಯೂ ಅಲ್ಲ. ಪಂಚಕೋಶವೂ ಅಲ್ಲ.ಇವೆರಡೂ ಹಗ್ಗದಲ್ಲಿ ಕಂಡುಬರುವ ಹಾವಿನಂತೆಯೂ, ಕನಸಿನಂತೆಯೂ ಕಲ್ಪಿತವಾಗಿರುವುದರಿಂದ  ಸತ್ಯವಲ್ಲ.ಹೀಗೆ ದೃಶ್ಯವಾದ ಜಗತ್ತನ್ನು ಯುಕ್ತಿಯಿಂದ ನಿರಾಕರಿಸಿ ಅನಂತರ ಜೀವ-ಪರಮಾತ್ಮರಿಗೆ ಐಕ್ಯವನ್ನು ತಿಳಿದುಕೊಳ್ಳಬೇಕು.(ಪುಟ 137)                                                                                                                

 

247)ಆದುದರಿಂದ ಜೀವ-ಪರಮಾತ್ಮನ ಅಖಂಡೈಕ- ರಸತ್ವ- ಸಿದ್ಧಿಗಾಗಿ ಅವರಿಬ್ಬರನ್ನೂ ಲಕ್ಷಣೆಯಿಂದಲೆ ತಿಳಿದುಕೊಳ್ಳಬೇಕು.ಆದರೆ ಸಿದ್ಧಿಯು ಕೇವಲ ಜಹಲ್ಲಕ್ಷಣೆಯಿಂದಲೂ ಆಗುವುದಿಲ್ಲ.

ಅಜಹಲ್ಲಕ್ಷಣದಿಂದಲೂ ಆಗುವುದಿಲ್ಲ.ಜಹದಜಹದ್-ಉಭಯ ಸ್ವರೂಪವಾಗಿರುವ  ಲಕ್ಷಣೆಯಿಂದಲೇ ಆಗಬೇಕಾಗಿದೆ.

(ಪದದ ಅಥ೯ವು ಎರಡು ಬಗೆಯಾಗಿದೆ.1) ಶಕ್ಯ(ವಾಚ್ಯ) 2) ಲಕ್ಷ್ಯ.ಒಂದು ಪದಕ್ಕೆ ರೂಢಿಯಲ್ಲಿರುವ  ಅಥ೯ವು ಶಕ್ಯಾಥ೯ ಅಥವಾ ವಾಚ್ಯಾಥ೯ವೆನಿಸುತ್ತದೆ.'ಗಂಗೆಯ ಮೇಲೆ ಹಳ್ಳಿಯಿದೆ'ಎಂಬಲ್ಲಿ  ಗಂಗೆಯಮೇಲೆ ಹಳ್ಳಿಯಿರುವುದು  ಅಸಾಧ್ಯವಾದುದರಿಂದ ಗಂಗಾ ತೀರವೆಂಬ ಲಕ್ಯಾಥ೯ವನ್ನು  ಅರಿತುಕೊಳ್ಳಬೇಕು. ವಾಚ್ಯಾಥ೯ವು ಹೊಂದದಿದ್ದಾಗ ಲಕ್ಷ್ಯಾಥ೯ವನ್ನು ಗ್ರಹಿಸಬೇಕು.ಲಕ್ಷಣೆಯು ಮೂರುವಿಧವಾಗಿದೆ.1)ಜಹಲ್ಲಕ್ಷಣೆ2)ಅಜಹಲ್ಲಕ್ಷಣೆ,3)ಜಹದಜಹದ್ ಲಕ್ಷಣೆ.ವಾಕ್ಯಾಥ೯ವನ್ನು ಬಿಟ್ಟು ಪೂರಾ  ಬೇರೆ ಅಥ೯ವನ್ನು ಹೇಳುವುದು ಜಹಲ್ಲಕ್ಷಣೆ.'ವಿಷವನ್ನು ತಿನ್ನು'ಎಂಬ ಪ್ರಯೋಗವಿದೆ.ಎಂದರೆ ಶತ್ರುವಿನ ಮನೆಯಲ್ಲಿ ಊಟ ಮಾಡಬಾರದೆಂಬ ಅಥ೯ದಲ್ಲಿ 'ತಿನ್ನು'ಎನ್ನುವ ಪ್ರಯೋಗವಿದೆ.ವಾಚ್ಯಾಥ೯ವನ್ನು ಬಿಡದೆ ಬೇರೆ ಅಥ೯ವನ್ನು ಹೇಳುವುದು ಅಜಹಲ್ಲಕ್ಷಣೆ.'ಬಿಳಿಯ ಕುದುರೆ ಓಡುತ್ತಿದೆ' ಎಂಬಥ೯ದಲ್ಲಿ ಬಿಳಿಯ ಎಂಬ ಅಥ೯ವನ್ನು ಬಿಡದೆ ಅದಕ್ಕೆ ಸಂಬಂಧಪಟ್ಟ ಕುದುರೆಯನ್ನು ಹೇಳಿದೆ.ಮೂರನೆಯ ಲಕ್ಷಣದಲ್ಲಿ ಕೆಲವು ವಿರುದ್ಧ ಭಾಗಗಳನ್ನು ಬಿಟ್ಟು ಒಂದಂಶವನ್ನು ಉಳಿಸಿಕೊಳ್ಳಬೇಕು.)(ಪುಟ 138)

 

248-24) ' ದೇವದತ್ತನು ಇವನೇ' ಎಂಬ ವಾಕ್ಯದಲ್ಲಿ  ವಿರುದ್ಧ ಧಮ೯ಗಳ ಭಾಗಗಳನ್ನು ಬಿಟ್ಟು

(ಜೀವ -ಈಶ್ವರ  -ಇವರ ಸ್ವರೂಪವಾದ ಕೇವಲ ಚಿದ್ರೂಪವನ್ನೇ  ಗುರುತಿಸಿ  ಅವರ ಅಖಂಡಭಾವವನ್ನು  ಗ್ರಹಿಸುತ್ತಾರೆ. ಹೀಗೆ ನೂರಾರು ಉಪನಿಷತ್  ವಾಕ್ಯಗಳು ಜೀವ-ಪರಮಾತ್ಮರ ಐಕ್ಯವನ್ನೂ ಅಖಂಡಭಾವವನ್ನೂ ಹೇಳುತ್ತವೆ.(ಪುಟ 13)

 

52)  ಬ್ರಹ್ಮಭಾವನೆ:

 

250) 'ಸ್ಥೂಲವಾದುದಲ್ಲ ಎಂದು ಅಸತ್ತನ್ನು  ತಿರಸ್ಕರಿಸಿ,ಸ್ವತಃಸ್ಸಿದ್ಧವಾಗಿರುವ,ಅಕಾಶದಂತೆ (ಅಸಂಗನಾದ) ಊಹಿಸಲು ಅಶಕ್ಯವಾದ,(ಆತ್ಮವನ್ನು ಸಾಕ್ಷಾತ್ಕರಿಸಿಕೊಳ್ಳಬೇಕು.ಆದುದರಿಂದ ತೋರಿಬರುತ್ತಿರುವ ಮಿಥ್ಯಾ ಸ್ವರೂಪವಾದ ,ಆತ್ಮಭಾವದಿಂದ ಗ್ರಹಿಸಲ್ಪಟ್ಟಿರುವ , ಶರೀರವನ್ನು ತೊರೆ.'ನಾನು ಬ್ರಹ್ಮವು'ಎಂಬ ವಿಶುದ್ಧ ಬುದ್ಧಿಯಿಂದ ಅಖಂಡ ಜ್ಞಾನಸ್ವರೂಪನಾದನಿನ್ನ ಆತ್ಮನನ್ನು ತಿಳಿದುಕೊ.(ಪುಟ 140)

 

251)ಮಣ್ಣಿನ ಕಾಯ೯ವಾದ ಗಡಿಗೆಯೆ ಮೊದಲಾದ ಸಮಸ್ತವೂ ಯಾವಾಗಲೂ ಮಣ್ಣೇ ಆಗಿರುತ್ತದೆ.ಹಾಗೆಯೇ ಸದ್ವಸ್ತುವಿನಿಂದ ಉತ್ಪನ್ನವಾದುದೆಲ್ಲವೂ ಸದಾತ್ಮಕವೂ ಸನ್ಮಾತ್ರವೂ ಆಗಿರುತ್ತದೆ.ಸದ್ವಸ್ತುವಿಗಿಂತ ಬೇರೆಯಾಗಿ ಯಾವುದೂ  ಇಲ್ಲದಿರುವದರಿಂದ ಅದೇ ಸತ್ಯವು.ಅದೇ ಸ್ವತಃ ಆತ್ಮನು. ಆದುದರಿಂದ ಯಾವುದು ಶ್ರೇಷ್ಠವೂ ಪ್ರಶಾಂತವೂ ಶುದ್ಧವೂ ಅದ್ವಯವೂ ಆದ ಪರಬ್ರಹ್ಮವಾಗಿರುವುದೊ ಅದೇ ನೀನಾಗಿರುವೆ.(ಪುಟ 141)

 

252)ಕನಸಿನಲ್ಲಿ ಕಲ್ಪಿತವಾದ  ದೇಶ ಕಾಲ ವಿಷಯ ಜ್ಞಾತೃ  ಮೊದಲಾದವೆಲ್ಲವೂ  ಹೇಗೆ ಮಿಥ್ಯೆಯಾಗಿರುವವೋ ಜಾಗ್ರದವಸ್ಥೆಯಲ್ಲಿಯೂ ಜಗತ್ತು ತನ್ನ ಅಜ್ಞಾನದ ಕಾಯ೯ವಾಗಿರುವುದರಿಂದ ಮಿಥ್ಯೆಯೇ.ಹೀಗೆ  ಶರೀರ ಪ್ರಾಣ ಇಂದ್ರಿಯ ಅಹಂಕಾರ -ಇವೇ ಮೊದಲಾದವೆಲ್ಲವೂ ಅಸತ್ಯವಾಗಿರುವುದರಿಂದ  ಯಾವುದು ಶ್ರೇಷ್ಠವೂ  ಪ್ರಶಾಂತವೂ ಶುದ್ಧವೂ ಅದ್ವಯವೂ  ಅದ ಪರಬ್ರಹ್ಮವಾಗಿರುವುದೊ  ಅದೇ ನೀನಾಗಿರುವೆ.(ಪುಟ 141)

 

253)ಜಾತಿ- ನೀತಿ- ಕುಲ- ಗೋತ್ರಗಳಿಗೆ ದೂರವೂ ,ನಾಮರೂಪ ಗುಣ ದೋಷ ವಜಿ೯ತವೂ ,ದೇಶ-ಕಾಲ-ವಿಷಯಗಳನ್ನು ಮೀರಿರುವುದೊ ಆದ ಯಾವ ಬ್ರಹ್ಮವಿರುವುದೋ ಅದೇ ನೀನಾಗಿರುವೆ.ಇದನ್ನು ಮನಸ್ಸಿನಲ್ಲಿ ಅನುಸಂಧಾನ ಮಾಡು.(ಪುಟ142)

 

254)ಯಾವ ಪರಬ್ರಹ್ಮವು ಸಮಸ್ತ ಇಂದ್ರಿಯಗಳಿಗೆ ವಿಷಯವಲ್ಲವೊ ,ಯಾವುದು ಶುದ್ಧವಾದ ಜ್ಞಾನದೃಷ್ಟಿಗೆ  ವಿಷಯವಾಗಿರುವುದೊ  ಯಾವುದು ಶುದ್ದ ಜ್ಞಾನಘನವಾಗಿರುವುದೊ  ಮತ್ತು ಅನಾದಿಯೊ  ಅದೇ ನೀನಾಗಿರುವೆ.ಇದನ್ನು ಮನಸ್ಸಿನಲ್ಲಿ ಅನುಸಂಧಾನಮಾಡು.(ಪುಟ 142)

 

255) ಯಾವುದು ಆರು ಊಮಿ೯ಗಳಿಂದ ಅಸ್ಪøಷ್ಟವಾಗಿರುವುದೊ ಯೋಗಿಗಳ ಹೃದಯದಲ್ಲಿ ಭಾವಿಸಲ್ಪಡತಕ್ಕದ್ದೊ,ಬುದ್ಧಿ ಇಂದ್ರಿಯಗಳಿಗೆ ಅಗೋಚರವೂ ,ನಿದು೯ಷ್ಟವೊ ಬ್ರಹ್ಮವೇ ನೀನಾಗಿರುವೆ.ಇದನ್ನು ಮನಸ್ಸಿನಲ್ಲಿ ಅನುಸಂಧಾನ ಮಾಡು.

(ಆರು ಊಮಿ೯ಗಳು:ಹಸಿವು,ಬಾಯಾರಿಕೆ,ಮುಪ್ಪು,ಸಾವು,ಶೋಕ,ಮೋಹ)(ಪುಟ 143)

 

256)ಭ್ರಮೆಯಿಂದ ಕಲ್ಪಿತವಾದ ಪ್ರಪಂಚವೆಂಬ ಅಂಶಕ್ಕೆ ಆಶ್ರ್ರಯವಾಗಿತುವ ಆದರೆ ತನಗೆ ತಾನೇ ಬೇರೆ ಯಾವ ಆಶ್ರಯವೂ ಇಲ್ಲದಿರುವ,ಸತ್-ಅಸತ್ ಇವುಗಳಿಗಿಂತ ಬೇರೆಯಾಗಿರುವ ,ಅವಯವರಹಿತವಾದ ಯಾವುದೊಂದು ಉಪಮಾನವನ್ನೂ ಕೊಡುವುದಕ್ಕೆ ಆಗದಿರುವ ಬ್ರಹ್ಮವೆ ನೀನಾಗಿರುವೆ.ಇದನ್ನು ಮನಸ್ಸಿನಲ್ಲಿ ಅನುಸಂಧಾನ ಮಾಡು.(ಪುಟ 143)

 

257)ಜನ್ಮ ವೃದ್ಧಿ  ಪರಿಣಾಮ ಕ್ಷಯ ರೋಗ ವಿನಾಶ-ಇವುಗಳಿಲ್ಲದ  ಆದುದರಿಂದಲೆ ಅವ್ಯಯವಾದ,ವಿಶ್ವದ ಸೃಷಿÂ್ಟ ಸ್ಥಿತಿಗಳಿಗೆ ಕಾರಣನಾದ ಬ್ರಹ್ಮವೇ ನೀನಾಗಿರುವೆ. ಇದನ್ನು ಮನಸ್ಸಿನಲ್ಲಿ ಅನುಸಂಧಾನ ಮಾಡು.(ಪುಟ 144)

 

258)ಸಮಸ್ತ ಭೇದರಹಿತವಾದ ,ನಾಶವಾಗದಸ್ವರೂಪವುಳ್ಳ ಅಲೆಗಳಿಲ್ಲದ ಸಮುದ್ರದಂತೆ ನಿಶ್ಚಲವಾಗಿರುವ ,ಯಾವಾಗಲೂ ಮುಕ್ತವಾದ ,ಅಖಂಡರೂಪವುಳ್ಳ  ಯಾವ ಬ್ರಹ್ಮವಿದೆಯೊ ಅದೇ ನೀನಾಗಿರುವೆ.ಇದನ್ನು ಮನಸ್ಸಿನಲ್ಲಿ ಅನುಸಂಧಾನ ಮಾಡು.

(ಇದುವಿಭಾಗವಿಲ್ಲದೆ ಇರುವುದು,ಪ್ರಾಣಿಗಳಲ್ಲಿ ವಿಭಾಗವಾಗಿರುಂತೆ ಕಾಣುವುದು.ಅವಿಭಕ್ತಂಚ ಭೂತೇಷು ವಿಭಕ್ತಮಿವ ಸ್ಥಿತಮ್.(ಗೀತಾ 13-16)(ಪುಟ144)

 

25)ಅದು ಒಂದೇ ಆಗಿದ್ದರೂ ಅನೇಕ ವಸ್ತುಗಳಿಗೆ ಕಾರಣವಾಗಿದೆ.ಅದು ಎಲ್ಲಾ ಕಾರಣಗಳನ್ನೂ ನಿರಾಕರಿಸುತ್ತದೆ.ಆದರೆ ಸ್ವಕಾರಣ ರಹಿತವಾಗಿದೆ. ಅದು ಮಾಯೆ ಮತ್ತು ಅದರ ಕಾಯ೯- ಇವುಗಳಿಗಿಂತ ಭಿನ್ನವಾಗಿದೆ.ಸ್ವತಃಸ್ಸಿದ್ಧವಾಗಿದೆ. ಬ್ರಹ್ಮವೇ ನೀನಾಗಿರುವೆ.ಇದನ್ನು ಮನಸ್ಸಿನಲ್ಲಿ ಅನುಸಂಧಾನ ಮಾಡು.(ಪುಟ(ಪುಟ145)

('ಅಕ್ಷರದಿಂದ ವಿವಿಧವಾದ ಜೀವಗಳು ಹುಟ್ಟುತ್ತವೆ.'ತಥಾಅಕ್ಷರಾತ್ ವಿವಿಧಾಃ ಸೋಮ್ಯ ಭಾವಾಃ(ಮುಂ..2-1-10)

 

260)ಯಾವುದು ವಿಕಲ್ಪ ಶೂನ್ಯವೊ,ಅಪರಿಚ್ಛಿನ್ನವೊ,ಅವಿನಾಶಿಯೊ,ಕಾಯ೯ಸಮುದಾಯ ಮತ್ತು ಮಾಯೆ-ಇವುಗಳಿಗಿಂತ ಬೇರೆಯಾದುದೊ,ಸವೋ೯ತ್ಕøಷ್ಟವೊ ,ನಿತ್ಯವೊ,ಅಖಂಡ ಸುಖರೂಪವೊ .ತಮಃಶೂನ್ಯವೊ ಬ್ರಹ್ಮವೇ ನೀನಾಗಿರುವೆ.ಇದನ್ನು ಮನಸ್ಸಿನಲ್ಲಿ ಅನುಸಂಧಾನ ಮಾಡು.

(ಅನಿತ್ಯ ವಸ್ತುಗಳಲ್ಲಿ ನಿತ್ಯನೂ .ನಿತ್ಯೋ$ನಿತ್ಯಾಮ್.(ಕಠ..2-5-13)(ಪುಟ 146)

 'ಯಾವುದು ಭೂಮವೊ ಅದು ಸುಖವು.ಅಲ್ಪದಲ್ಲಿ ಸುಖವಿಲ್ಲ.'ಯೋ ವೈ ಭೂಮಾ ತತ್ಸುಖಂ,ನಾಲ್ಪೇ ಸುಖಮಸ್ತಿ(ಛಾಂ..7-23))

 

261)ಯಾವ ಸದ್ವಸ್ತುವು ಒಂದೇ ಆಗಿದ್ದರೂ ಭ್ರಾಂತಿಯ ಮೂಲಕ ನಾಮ-ರೂಪ-ಗುಣ-ಕ್ರಿಯೆಗಳ ರೂಪದಿಂದ ಬಹುವಿಧವಾಗಿ ಕಾಣುತ್ತಿದೆಯೊ(ಆದರೂ ಬಳೆ ಕುಂಡಲ ಮೊದಲಾದವುಗಳ ರೂಪದಲ್ಲಿ ಕಾಣುವ)ಚಿನ್ನದಂತೆ ತಾನು ಮಾತ್ರ ವಿಕಾರ ರಹಿತವಾದುದೊ  ಬ್ರಹ್ಮವೇ ನೀನಾಗಿರುವೆ.ಇದನ್ನು ಮನಸ್ಸಿನಲ್ಲಿ ಅನುಸಂಧಾನ ಮಾಡು'

(ದೇವ-ತಿಯ೯ಗಾದಿ ನಾನಾ ವಿಧ ನಾಮರೂಪಗಳಿಂದ)(ಪುಟ 146)

 

262)ಯಾವುದು ಹಿರಣ್ಯ ಗಭ೯ನಿಗಿಂತಲೂ ಶ್ರೇಷ್ಠವಾಗಿ,ತನಗಿಂತ ಸ್ರೇಷ್ಟವಾದುದಿಲ್ಲದೆ ಪ್ರಕಾಶಿಸುತ್ತಿರುವುದೊ ,ಸವಾ೯ಂತರವೂ,ಆತ್ಮಲಕ್ಷಣದಿಂದ ಕೂಡಿರುವುದೊ,ಸಚ್ಚಿದಾನಂದ ಸ್ವರೂಪವೊ,ಅನಂತವೊ, ಅವ್ಯಯವೊ  ಬ್ರಹ್ಮವೇ ನೀನಾಗಿರುವೆ.ಇದನ್ನು ಮನಸ್ಸಿನಲ್ಲಿ ಅನುಸಂಧಾನ ಮಾಡು.

 

263)ಇದುವರೆಗೆ ಹೇಳಿದ ತತ್ವವನ್ನು ಪ್ರಸಿದ್ಧ ಯುಕ್ತಿಗಳ ಮೂಲಕ ನಿನ್ನಲ್ಲಿಯೇ ಬುದ್ಧಿಯಿಂದ ಅನುಸಂಧಾನ ಮಾಡಬೇಕು.ಅಂಥ ಅನುಸಂಧಾನದಿಂದ  ಸಂಶಯವೇ ಮೊದಲಾದವುಗಳಿಲ್ಲದೆ ಅಂಗೈಯಲ್ಲಿರುವ ನೀರಿನಂತೆ ತತ್ವ ನಿಣ೯ಯವಾಗುವುದು.(ಹಿಂದಿನ ಹತ್ತು ಶ್ಲೋಕಗಳು 253 ರಿಂದ262 ವರೆಗೆ)(ಪುಟ 143)

 

264)ಸೈನ್ಯದಲ್ಲಿರುವ ರಾಜನನ್ನು ಕಂಡು ಹಿಡಿಯುವಂತೆ  ಕಾಯ೯-ಕರಣ-ಸಮೂಹದಲ್ಲಿ  ಪರಮಾತ್ಮ ಸ್ವರೂಪವನ್ನು ಕೇವಲ ಜ್ಞಾನಸ್ವರೂಪವೆಂದು ತಿಳಿದುಕೊಂಡು ಅದನ್ನೆ ಆಶ್ರಯಿಸಿದವನಾಗಿ  ಆತ್ಮನಲ್ಲಿಯೇ ಯಾವಾಗಲೂ ಇರುವವನಾಗಿ ,ಬ್ರಹ್ಮದಲ್ಲಿ ವಿಶ್ವಸಮೂಹವನ್ನೆಲ್ಲಾ ಲಯಗೊಳಿಸು.

(ನೀರಿನಲ್ಲಿ ಪೃಥ್ವಿಯನ್ನೂ ,ಅಗ್ನಿಯಲ್ಲಿ ನೀರನ್ನೂ,ವಾಯುವಿನಲ್ಲಿ ಅಗ್ನಿಯನ್ನೂ,

ಆಕಾಶದಲ್ಲಿ ವಾಯುವನ್ನೂ,ಅವ್ಯಾಕೃತದಲ್ಲಿ ಆಕಾಶವನ್ನೂ,ಬ್ರಹ್ಮದಲ್ಲಿ ಅವ್ಯಾಕೃತವನ್ನೂ ಲಯಗೊಳಿಸಿ ಬ್ರಹ್ಮವೇ ತಾನೆಂದು ಅನುಸಂಧಾನ ಮಾಡಬೇಕು.(ಪುಟ 264)

 

265)ಬುದ್ಧಿಯೆಂಬ ಗುಹೆಯಲ್ಲಿ ಸ್ಥೂಲ ಸೂಕ್ಷ್ಮಗಳಿಗಿಂತ ಭಿನ್ನವೂ,ಸತ್ವರೂಪವೂ,ಅದ್ವಯವೂ  ಆದ ಪರಬ್ರಹ್ಮವಿರುತ್ತದೆ. ಬುದ್ಧಿಗುಹೆಯಲ್ಲಿ ಬ್ರಹ್ಮ ಸ್ವರೂಪದಲ್ಲಿಯೇ ಯಾವನು ವಾಸ ಮಾಡುತ್ತಾನೆಯೊ 

ಹೇ ಶಿಷ್ಯನೆ,ಅವನಿಗೆ ಪುನಃ ಶರೀರವೆಂಬ ಗುಹೆಯಲ್ಲಿ ಪ್ರವೇಶವಿರುವುದಿಲ್ಲ.

('ವಿಜ್ಞಾನಮಯನೂ ಇಂದ್ರಿಯಗಳಲ್ಲಿರುವವನೂ,ಬುದ್ಧಿಯಲ್ಲಿರುವ ಸ್ವಯಂಜ್ಯೋತಿಯೂ ಆದ ಪುರುಷನು'.ಯೋ$ಯಂ ವಿಜ್ಞಾನಮಯಃ ಪ್ರಾಣೇಷು ಹೃದ್ಯಂತ-ಜ್ಯೋ೯ತಿಃ ಪುರುಷಃ(ಬೃ..4-3-7)

ಇವೇ ಮೊದಲಾದ ಶ್ರುತಿಗಳ ಪ್ರಕಾರ ಬುದ್ಧಿಯನ್ನು ಬಿಟ್ಟು ಆತ್ಮನನ್ನು ಅರಿತುಕೊಳ್ಳುವುದು  ಅಶಕ್ಯವೆಂದು ಹೇಳಿದೆ)

 

52) ವಾಸನಾತ್ಯಾಗ:

 

266)ಆತ್ಮನನ್ನು ಅರಿತುಕೊಂಡಮೇಲೂ 'ನಾನು ಕತೃ೯ ಮತ್ತು ಭೋಕ್ತø'ಎಂಬ ಅನಾದಿ ಸಂಸ್ಕಾರವು  ಪ್ರಬಲವೂ ಧೃಢವೂ ಆಗಿರುತ್ತದೆ.ಇದೇ ಮನುಷ್ಯಮ ಸಂಸಾರಕ್ಕೆ ಕಾರಣವಾಗಿರುತ್ತದೆ.

ಪ್ರತ್ಯಗಾತ್ಮನೇ ತಾನು ಎಂಬ ದೃಷ್ಟಿಯಿಂದ ಆತ್ಮನಲ್ಲಿಯೇ ನೆಲೆಸಿರುವ  ಬ್ರಹ್ಮನಿಷ್ಟನು ಸಂಸ್ಕಾರವನ್ನು  ಪ್ರಯತ್ನಪೂವ೯ಕವಾಗಿ ಪರಿಹರಿಸಿಕೊಳ್ಳಬೇಕು.ಇಂಥ ಸಂಸ್ಕಾರದ ಕ್ಷಯವನ್ನೇ  ಮುನಿಗಳು ಮುಕ್ತಿಯೆಂದು ಕರೆದಿರುತ್ತಾರೆ.(ಪುಟ 14)

 

267)ಅನಾತ್ಮವಾದ ದೇಹೇಂದ್ರಿಯಾದಿಗಳಲ್ಲಿಗಳಲ್ಲಿ'ನಾನು ನನ್ನದು'ಎಂಬ ಯಾವಭಾವನೆಯಿದೆಯೊ - ಅಧ್ಯಾಸವನ್ನು ಜ್ಞಾನಿಯು ಆತ್ಮನಿಷ್ಠೆಯಿಂದ ತೊಲಗಿಸಬೇಕು.(ಪುಟ 150)

 

268)ಬುದ್ದಿಗೂ  ಅದರ ವೃತ್ತಿಗಳಿಗೂ ಸಾಕ್ಷಿಯಾಗಿರುವ ತನ್ನ  ಅಂತರಾತ್ಮನನ್ನು 'ಅವನೇ ನಾನು'ಎಂಬ ಅಬಾಧಿತ -ಅಥ೯ವಿಷಯಕ-ಜ್ಞಾನದಿಂದ ಅರಿತುಕೊಂಡು ಅನಾತ್ಮದಲ್ಲಿ ನಾನೆಂಬ ಬುದ್ಧಿಯನ್ನು ಬಿಡು.

 

( ಇಲ್ಲಿ ಅಧ್ಯಾಸ ನಿವೃತ್ತಿಯ  ಪ್ರಕಾರವನ್ನು ಹೇಳಿದೆ)(ಪುಟ 150)

 

26)ಲೋಕ ವ್ಯವಹಾರದ ಅನುಸರಣೆಯನ್ನು ಬಿಟ್ಟು ,ಶರೀರವನ್ನು ಅನುಸರಿಸುವುದನ್ನು ಬಿಟ್ಟು,ಶಾಸ್ತ್ರಗಳನ್ನು ಅನುಸರಿಸುವುದನ್ನು ಬಿಟ್ಟು ನಿನಗೆ ಉಂಟಾಗಿರುವ ಅಧ್ಯಾಸವನ್ನು ತೊಲಗಿಸಬೇಕು.

(ಮೋಕ್ಷ ಪ್ರಯೋಜಕ -ಗ್ರಂಥಗಳನ್ನು ಬಿಟ್ಟು ಇತರ ಗ್ರಂಥಗಳನ್ನು ಓದುವುದನ್ನು ಬಿಟ್ಟು.)(ಪುಟ150)

 

270) ಲೋಕವಾಸನೆಯಿಂದಲೂ,ಶಾಸ್ತ್ರವಾಸನೆಯಿಂದಲೂ ,ದೇಹ ವಾಸನೆಯಿಂದಲೂ  ಜೀವನಿಗೆ ಯಥಾಥ೯ವಾದ ಜ್ಞಾನವು ಉಂಟಗುವುದೇ ಇಲ್ಲ.

(ವ್ಯವಹಾರದಲ್ಲಿ ಇತರರ  ಅಪೇಕ್ಷೆಗೆ ಅನುಗುಣವಾಗಿ ನಡೆಯುವುದು ಲೋಕವಾಸನೆ)

ಜೀವನ್ಮುಕ್ತಿ ವಿವೇಕದ  ವಾಸನಾಕ್ಷಯ ಪ್ರಕರಣದಲ್ಲಿ ವಿದ್ಯಾರಣ್ಯ ಮುನಿಗಳು  ಇದನ್ನು ವಿಸ್ತಾರವಾಗಿ ಹೇಳಿರುತ್ತಾರೆ. ಶಾಸ್ತ್ರ ವಾಸನೆಯು ಪಾಠವ್ಯಸನ, ಶಾಸ್ತ್ರವ್ಯಸನ,ಅನುಷ್ಠಾನ ವ್ಯಸನಎಂದು ಮೂರು ವಿಧವಾಗಿದೆ ಎಂದು ಅಲ್ಲಿಯೇ ಹೇಳಿದೆ.)

 

271)ಸಂಸಾರವೆಂಬ ಕಾರಾಗ್ರಹದಿಂದ ಬಿಡುಗಡೆಯನ್ನು  ಇಚ್ಛಿಸುವವವನಿಗೆ  ಬಲವಾದ ವಾಸನಾತ್ರಯವೇ ಕಾಲಿಗೆ ಕಟ್ಟಿರುವ ಕಬ್ಬಿಣದ ಸರಪಳಿ ಎಂದು ತಿಳಿದವರು ಹೇಳುತ್ತಾರೆ.ಯಾವನು ವಾಸನಾ ತ್ರಯದಿಂದ ಬಿಡುಗಡೆ ಹೊಂದುವನೋ  ಅವನೇ ಮುಕ್ತಿಯನ್ನು ಹೊಂದುತ್ತಾನೆ.(ಪುಟ161)

 

272) ನೀರೇ ಮೊದಲಾದವುಗಳ ಸಂಪಕ೯ದಿಂದ ಉಂಟಾದ ವಿಶೇಷ ದುಗ೯ಂಧದಿಂದ   ಮುಚ್ಚಲ್ಪಟ್ಟಿರುವ ಅಗರಿನ ದಿವ್ಯ ವಾಸನೆಯು  ಅದನ್ನು ತೇದು ಹೊರಗಿನ ದುವಾ೯ಸನೆಯು ಹೋದಮೇಲೆಯೇ  ಚೆನ್ನಾಗಿ ಪರಿಮಳವನ್ನು ಬೀರುತ್ತದೆ.(ಪುಟ 152)

 

273)ಹೀಗೆಯೇ ಅಂತಃಕರಣವನ್ನು ಆಶ್ರಯಿಸಿಕೊಂಡಿರುವ  ಒಂದು ವಿಧವೂ ದುಷ್ಫಲಪ್ರದವೂ ಆದ  ದುವಾ೯ಸನೆಗಳ ಧೂಳಿನಿಂದ ಮುಚ್ಚಲ್ಪಟ್ಟ  ಪರಮಾತ್ಮ ವಾಸನೆಯ ಪ್ರಜ್ಞೆಯನ್ನು  ಚೆನ್ನಾಗಿ ತೇಯುವುದರಿಂದ  ಪರಿಶುದ್ಧವಾಗಿ ಚಂದನದ ಗಂಧದಂತೆ ಪ್ರಕಾಶಿಸುತ್ತದೆ.

(ಧೀಮಂತನಾದ ಬ್ರಾಹ್ಮಣನು ಆತ್ಮನನ್ನೇ ತಿಳಿದುಕೊಂಡು ಪ್ರಜ್ಞೆಯನ್ನು ಅವಲಂಬಿಸಬೇಕು.'ತಮೇವ ಧೀರೋ ವಿಜ್ಞಾಯ ಪ್ರಜ್ಞಾಂ ಕುವೀ೯ತ ಬ್ರಾಹ್ಮಣಃ(ಬೃ..4-4-20)'ಜೀವಾತ್ಮ ಪರಮಾತ್ಮರನ್ನು ಶೋಧಿಸಿ ಒಂದೇ ಎಂದು ಅರಿಯುವ  ನಿವಿ೯ಕಲ್ಪವಾದ  ಚಿನ್ಮಾತ್ರ ವೃತ್ತಿಯು  ಪ್ರಜ್ಞೆ ಎನಿಸುವುದು.'ಎಂದು ಮುಂದೆ 426ರಲ್ಲಿ ಹೇಳಿದೆ.)(ಪುಟ153) 

 

274)ಅನಾತ್ಮವಾಸನೆಗಳ ಸಮೂಹದಿಂದ  ಮರೆಯಾಗಿರುವ  ಆತ್ಮವಾಸನೆಯು,ನಿತ್ಯವೂ ಆತ್ಮನಲ್ಲಿಯೇ ನೆಲೆಗೊಳ್ಳುವುದರಿಂದ ಅವುಗಳು ನಾಶಹೊಂದಿದಾಗ,ತಾನೇ ಸ್ಫುಟವಾಗಿ ತೋರಿಕೊಳ್ಳುವುದು.

(ದಂಭ,ದಪ೯,ಅಹಂಕಾರ,ಕ್ರೋಧ,ಕಠಿಣವಾದ ಮಾತು ಮತ್ತು ಅಜ್ಞಾನ  ಇವೇ ಮೊದಲಾದ ಅಸುರೀ ಸಂಪತ್ತಿಗೆ ಸೇರಿದ ಮಾನಸ ವಾಸನೆಗಳಿಂದ)(ಪುಟ153)

 

275)ಮನಸ್ಸು ಎಷ್ಟೆಷ್ಟು ಪ್ರತ್ಯಗಾತ್ಮನಲ್ಲಿ ನೆಲೆಗೊಳ್ಳುತ್ತದೆಯೊ ಅಷ್ಟಷ್ಟೂ ಹೊರಗಿನವಾಸನೆಗಳನ್ನು ಬಿಡುತ್ತದೆ. ವಾಸನೆಗಳು ಸಂಪೂಣ೯ವಾಗಿ ನಾಶವಾದಮೇಲೆ ಯಾವ ಪತ್ರಿಬಂಧವೂ ಇಲ್ಲದ ಆತ್ಮಾನುಭವವು ಉಂಟಾಗುತ್ತದೆ.

(ಪರಬ್ರಹ್ಮವನ್ನು ಸಾಕ್ಷಾತ್ಕಾರ ಮಾಡಿಕೊಂಡ ಮೇಲೆ ಇವನ ತೃಷ್ಣೆಯೂ ಕೂಡ ಹಿಂತಿರುಗುವುದು.   

ರಸೋ$ಪ್ಯಸ್ಯ ಪರಂದೃಷ್ಟ್ವಾ ನಿವತ೯ತೇ(ಗೀತಾ 2-5))(ಪುಟ 154)

 

54) ಅಧ್ಯಾಸದ ನಿರಾಸ:

 

276)ಯೋಗಿಯ ಮನಸ್ಸು ಯವಾಗಲೂ ಬ್ರಹ್ಮದಲ್ಲಿಯೇ ಇದ್ದುಕೊಂಡು ನಾಶವಾಗುತ್ತದೆ.ಅನಂತರ ಅನಾತ್ಮ ವಾಸನೆಗಳ ಕ್ಷಯವೂ ಉಂಟಾಗುತ್ತದೆ.ಆದುದರಿಂದ ನಿನ್ನಲ್ಲಿ ಉಂಟಾಗಿರುವ ಅಧ್ಯಾಸವನ್ನು ಹೋಗಲಾಡಿಸಿಕೊ.(ಎಂದರೆ ಚಿತ್ತದ ರಾಜಸೀ-ತಾಮಸೀ ವೃತ್ತಿಗಳು.)(ಪುಟ154)

 

277)ತಮೋಗುಣವು ಸತ್ವರಜಸ್ಸುಗಳಿಂದಲೂ ,ರಜೋಗುಣವು ಸತ್ವಗುಣದಿಂದಲೂ ನಾಶವಾಗುತ್ತದೆ.ಆದುದರಿಂದ ಶುದ್ಧ ಸತ್ವವನ್ನು ಅಳವಡಿಸಿಕೊಂಡು ನಿನ್ನಲ್ಲಿ ಉಂಟಾಗಿರುವ ಅಧ್ಯಾಸವನ್ನು ಹೋಗಲಾಡಿಸಿಕೊ.(ಅಧ್ಯಾಸವೆಂದರೆ ಅದಲ್ಲದ್ದನ್ನು ಅದು ಎಂದು ಭಾವಿಸುವುದು.)(ಪುಟ 155)

 

278)ಪ್ರಾರಬ್ಧಕಮ೯ವು ಶರೀರವನ್ನು ಪೋಷಿಸುತ್ತದೆ.ಎಂದು ನಿಶ್ಚಯಿಸಿ  ನಿವಿ೯ಕಾರ ಚಿತ್ತನಾಗಿ ಧೈಯ೯ವನ್ನು ಆಶ್ರಯಿಸಿಕೊಂಡು ,ನಿನ್ನಲ್ಲಿ ಉಂಟಾಗಿರುವ ಅಧ್ಯಾಸವನ್ನು ಹೋಗಲಾಡಿಸಿಕೊ.

(ಫಲವನ್ನು ಕೊಡಲು ಆರಂಭಿಸಿದ ಕಮ೯ವು ಪ್ರಾರಬ್ಧ ಕಮ೯,ಇದನ್ನು ಯಾವುದರಿಂದಲೂ ಪರಿಹರಿಸಲು ಸಾಧ್ಯವಿಲ್ಲ.ಅದನ್ನು ಅನುಭವಿಸಿಯೇ ಮುಗಿಸಬೇಕು.ಇದು  ನಾಶವಾದ ಮೇಲೆ ಶರೀರಪಾತವಾಗಿ ವಿದೇಹ ಮುಕ್ತಿಯು ಉಂಟಾಗುತ್ತದೆ.)(ಪುಟ 155)

 

27)'ನಾನು ಜೀವನಲ್ಲ ಪರಬ್ರಹ್ಮವೇ'ಎಂದು ಅನಾತ್ಮವಸ್ತುವನ್ನು ನಿರಾಕರಿಸುವುದರ ಮೂಲಕ ಅನಾತ್ಮವಾಸನೆಯು ಯೋಗದಿಂದ ವೇಗದಿಂದ ನಿನ್ನಲ್ಲಿ ಉಂಟಾಗಿರುವ ಅಧ್ಯಾಸವನ್ನು ಹೋಗಲಾಡಿಸಿಕೊ'

(ನಾನು ದೇಹವಲ್ಲ,ಇಂದ್ರಿಯಗಳಲ್ಲ,ಮನಸ್ಸಲ್ಲ,ಅಹಂಕಾರವಲ್ಲ,ಪ್ರಾಣವಗ೯ವಲ್ಲ,ಬುದ್ಧಿಯೂ ಅಲ್ಲ,ಪತ್ನಿ-ಪುತ್ರ-ಕ್ಷೇತ್ರ-ವಿತ್ತಾದಿಗಳಿಂದ ದೂರವಾದವನು ನಾನು.ನಿತ್ಯನೂ ,ಸಾಕ್ಷಿಯೂ,ಪ್ರತ್ಯಗಾತ್ಮನೂ  ಆದ ಸಾಕ್ಷಾತ್ ಶಿವನೇ ನಾನು '(ಆತ್ಮಪಂಚಕ 1)

 

280)ಉಪನಿಷದ್ವಾಕ್ಯದಿಂದಲೂ ಯುಕ್ತಿಯಿಂದಲೂ  ಸ್ವಾನುಭವದಿಂದಲೂ ಆತ್ಮನ ಸವಾ೯ತ್ಮಕತ್ವವನ್ನು ತಿಳಿದುಕೊಂಡು ಅಕಸ್ಮಾತ್ತಾಗಿ ತೋಕೆ೯ಯಿಂದ ನಿನ್ನಲ್ಲಿ ಉಂಟಾಗಬಹುದಾದ  ಅಧ್ಯಾಸವನ್ನು ಹೋಗಲಾಡಿಸಿಕೊ.(ಪುಟ156) 

 

281)ಮುನಿಗೆ ಸ್ವೀಕರಿಸತಕ್ಕದ್ದಾಗಲೀ ಬಿಡತಕ್ಕದ್ದಾಗಲೀ ಯಾವುದೂ ಇರುವುದಿಲ್ಲ.ಆದುದರಿಂದ ಪರಮಾತ್ಮನಲ್ಲಿ ಅನನ್ಯ ನಿಷ್ಠೆಯುಳ್ಳವನಾಗಿ ನಿನ್ನಲ್ಲಿ ಉಂಟಾಗಿರುವ ಅಧ್ಯಾಸವನ್ನು ಹೋಗಲಾಡಿಸಿಕೊ.

ಪುಟ 281)

 

282)'ತತ್ವಮಸಿ'ಮೊದಲಾದ ವಾಕ್ಯಗಳಿಂದ   ಉತ್ಪನ್ನವಾದ ಜೀವಾತ್ಮ ಪರಮಾತ್ಮರ ಮೂಲಕ ಏಕತ್ವ ಜ್ಞಾನದ ಮೂಲಕ ಆತ್ಮನೇ ಬ್ರಹ್ಮವೆಂದು ದೃಢಪಡಿಸಿಕೊಳ್ಳಲು  ನಿನ್ನಲ್ಲಿ ಉಂಟಾಗಿರುವ ಅಧ್ಯಾಸವನ್ನು ಹೋಗಲಾಡಿಸಿಕೊ.(ಪುಟ157)

 

283) ಶರೀರದಲ್ಲಿ ಸಂಪೂಣ೯ವಾಗಿ ನಾನು ಎನ್ನುವ ಭಾವನೆಯು ಲಯವಾಗುವವರೆಗೂ ಎಚ್ಚರಿಕೆಯಿಂದ ಅಪ್ರಮತ್ತನಾಗಿ  ನಿನ್ನಲ್ಲಿ ಉಂಟಾಗಿರುವ  ಅಧ್ಯಾಸವನ್ನು ಹೋಗಲಾಡಿಸಿಕೊ.(ಪುಟ 157)

 

284)ಜೀವ-ಜಗತ್ತುಗಳ ತೋಕೆ೯ಯು  ಕನಸಿನಂತೆ ಮಿಥ್ಯೆಯಾಗಿ  ತೋರುವವರೆಗೂ ,ಎಲೈ ವಿವೇಕಿಯೆ,ಅನವರತವೂ ನಿನ್ನಲ್ಲಿ ಉಂಟಾಗಿರುವ ಅಧ್ಯಾಸವನ್ನು ಹೋಗಲಾಡಿಸಿಕೊ.(ಪುಟ157)

 

285)ನಿದ್ರೆಯಿಂದಾಗಲೀ ಲೋಕದ ಸುದ್ದಿಯಿಂದಾಗಲೀ ,ಶಬ್ದಾದಿ ವಿಷಯಗಳಿಂದಾಗಲೀ  ಆತ್ಮ ವಿಸ್ಮøತಿಗೆ ಯಾವಾಗಲೂ ಅವಕಾಶವನ್ನು ಕೊಡದೆ ಬುದ್ಧಿಯಲ್ಲಿಯೇ ಆತ್ಮನನ್ನು ಕುರಿತು ಚಿಂತಿಸು.(ಪುಟ 158)

 

286)ತಂದೆ ತಾಯಿಗಳಿಂದ ಉತ್ಪನ್ನವಾಗಿ  ಮಲ ಮಾಂಸಮಯವಾದ ಶರೀರವನ್ನು-ಚಂಡಾಲನನ್ನು ಹೇಗೋ ಹಾಗೆ  ದೂರವಾಗಿ ತೊರೆದು  ಬ್ರಹ್ಮವಾಗಿ ಕೃತ ಕೃತ್ಯನಾಗು.(ಪುಟ 158)

 

187)ಗಡಿಗೆಯಿಂದ ಪರಿಚ್ಛಿನ್ನವಾದ  ಆಕಾಶವನ್ನು ಮಹಾಕಾಶದಲ್ಲಿ  ಲಯಗೊಳಿಸುವಂತೆ  ಜೀವಾತ್ಮನನ್ನು  ಪರಮಾತ್ಮನಲ್ಲಿ ಲಯಗೊಳಿಸಿ ಯಾವಾಗಲೂ ಅಖಂಡ ಭಾವದಿಂದ ಮೌನವಾಗಿರು.(ಪುಟ 158)

 

288)ಸತ್ಸ್ವರೂಪದಿಂದ  ಸವಾ೯ಶ್ರಯವೂ ಸ್ವಯಂಪ್ರಕಾಶವೂ  ಆದ ಬ್ರಹ್ಮವೇ ನೀನಾಗಿ ನ್ರಹ್ಮಾಂಡವನ್ನೂ ಪಿಂಡಾಂಡವನ್ನೂ -ಮಲದಿಂದ ತುಂಬಿದ ಪಾತ್ರೆಯನ್ನು ಬಿಡುವಂತೆ-ತ್ಯಜಿಸು.(ಪುಟ 15)

 

28)ದೇಹದಲ್ಲಿ ನೆಲೆಗೊಂಡಿರುವ ನಾನು ಎಂಬ ಬುದ್ಧಿಯನ್ನು ನಿತ್ಯಾನಂದ ಸ್ವರೂಪನಾದ  ಚಿದಾತ್ಮ

ನಲ್ಲಿ ನೆಲೆಗೊಳಿಸಿ,ಸೂಕ್ಷ್ಮ ಶರೀರವನ್ನು ಬಿಟ್ಟು ,ಯಾವಾಗಲೂ ಅಸಂಗನಾಗಿರು.(ಪುಟ 15)

 

20)ಕನ್ನಡಿಯಲ್ಲಿ ಕಾಣುವ ಪುರದಂತೆ  ಯಾವುದರಲ್ಲಿ  ಜಗತ್ತಿನ ತೋಕೆ೯ಯುಂಟಾಗಿದೆಯೊ ' ಬ್ರಹ್ಮವೇ ನಾನು' ಎಂದು ತಿಳಿದುಕೊಂಡು ಕೃತಕೃತ್ಯನಾಗು.(ಪುಟ 160)   

 

21) ತ್ರಿಕಾಲದಲ್ಲಿ ಸತ್-ಸ್ವರೂಪವಾಗಿರುವುದೂ  ಪುರಾತನವೂ ಜ್ಞಾನಸ್ವರೂಪವೂ  ಅಖಂಡಾನಂದವೂ  ರೂಪರಹಿತವೂ,ಕ್ರಿಯಾಶೂನ್ಯವೂ ಆದ ನಿಜ ಸ್ವರೂಪವನ್ನು ಹೊಂದಿ -ನಟನು ತಾನು ಹಾಕಿಕೊಂಡಿರುವ  ವೇಷವನ್ನು ತೆಗೆದು ಹಾಕುವಂತೆ -ಮಿಥ್ಯಾಭೂತವಾದ ಶರೀರವನ್ನು ಬಿಡಬೇಕು.(ಪುಟ160)

 

55) ಅಹಂ ಪದಾಥ೯ ನಿರೂಪಣ:

 

22) ದೃಶ್ಯ ಪ್ರಪಂಚವು ಸವ೯ಪ್ರಕಾರದಿಂದಲೂ ಮಿಥ್ಯೆಯೇ.'ನಾನು'ಎಂಬ ಪದಾಥ೯ವೇ ಇಲ್ಲ.ಏಕೆಂದರೆ ಇದು ಕ್ಷಣಿಕವಾಗಿರುವುದು ಕಂಡುಬರುತ್ತದೆ. 'ನಾನುಎಲ್ಲವನ್ನೂ ತಿಳಿಯುತ್ತೇನೆ'ಎಂಬ ಪ್ರತೀತಿಯು ಕ್ಷಣಿಕವಾದ ಅಹಂಕಾರವೇ  ಮೊದಲಾದವುಗಳಿಗೆ ಹೇಗೆ ಸಿದ್ಧಿಸೀತು?

(ಅಹಂಕಾರವೇ ಮೊದಲಾದವುಗಳಿಗೆ ಸವ೯ಜ್ಞತ್ವವು ಸಿದ್ಧಿಸುವುದಿಲ್ಲೆಂದಥ೯.)(ಪುಟ161)       

 

23)ಆದರೆ ನಿಜವಾದ ಅಹಂ ಪದಾಥ೯ವು  ಅಹಂಕಾರವೇ ಮೊದಲಾದವುಗಳಿಗೆ ಸಾಕ್ಷಿಯಾಗಿರುತ್ತದೆ.ಏಕೆಂದರೆ ಅದು ನಿತ್ಯವೂ ಸುಷುಪ್ತಿಯಲ್ಲಿಯೂ ಇರುವುದು ಕಂಡುಬರುತ್ತದೆ.'ಜನ್ಮರಹಿತನೂ ನಿತ್ಯನೂ'ಎಂದು ಶ್ರುತಿಯೇ ಹೇಳುತ್ತದೆ.ಆದುದರಿಂದ ಪ್ರತ್ಯಗಾತ್ಮನು  ಸ್ಥೂಲಸೂಕ್ಷ್ಮಗಳಿಗಿಂತ  ಭಿನ್ನವಾಗಿರುತ್ತಾನೆ.(ಪುಟ161)

 

24)ವಿಕಾರವುಳ್ಳ ವಸ್ತುಗಳ ಸವ೯ ವಿಕಾರಗಳನ್ನೂ  ಅರಿಯುತ್ತಿರುವ ಆತ್ಮನು ನಿತ್ಯನೂ ಅವಿಕಾರಿಯೂ ಆಗಿರಬೇಕು.ಮನೋರಥ ಸ್ವಪ್ನ ಉಷುಪ್ತಿ-ಇವುಗಳಲ್ಲಿ ದೇಹ-ಅಹಂಕಾರಗಳೆಂಬ ಇವೆರಡರ ಮಿಥ್ಯಾತ್ವವನ್ನು ಪುನಃ ಪುನಃ ನೋಡಬಹುದು.

(ಏಕೆಂದರೆ ಸುಷುಪ್ತಿಯಲ್ಲಿ ಅಹಂಕಾರವು ಕಂಡುಬರುವುದಿಲ್ಲ.ಸ್ವಪ್ನ ಸುಷುಪ್ತಿಗಳಲ್ಲಿ ಸ್ಥೂಲದೇಹವು ಕಂಡುಬರುವುದಿಲ್ಲ.)

 

25)ಆದುದರಿಂದ ಮಾಂಸಪಿಂಡವಾದ ದೇಹದಲ್ಲಿಯೂ ಮತ್ತು ಬುದ್ಧಿಯು ದೇಹದಲ್ಲಿ ಕಲ್ಪಿಸಿರುವ 'ನಾನು'ಎಂದು ಕಲ್ಪಿಸಿರುವ ಅಹಂಕಾರದಲ್ಲಿಯೂ  ಅಭಿಮಾನವನ್ನು ಬಿಡು.ತ್ರಿಕಾಲದಲ್ಲಿಯೂ ಬಾ

ಧಿüತವಾಗದ  ಅಖಂಡ ಜ್ಞಾನಸ್ವರೂಪನಾದ  ನಿನ್ನ ಆತ್ಮನನ್ನು ಅರಿತುಕೊಂಡು ಶಾಂತಿಯನ್ನು ಹೊಂದು.(ಪುಟ162)

 

26) ಬದುಕಿರುವ ಹೆಣವನ್ನು ಆಶ್ರಯಿಸಿಕೊಂಡಿರುವ ಕುಲ ಗೋತ್ರ ನಾಮ ರೂಪ ಆಶ್ರಮ ಇವುಗಳಲ್ಲಿ ಅಭಿಮಾನವನ್ನು ಬಿಡು.ಲಿಂಗ ಶರೀರಕ್ಕೆ ಸೇರಿದ ಕತೃ೯ತ್ವವೇ ಮೊದಲಾದ ಧಮ೯ಗಳನ್ನೂ ಬಿಟ್ಟು  ಅಖಂಡಾನಂದ ಸ್ವರೂಪನಾಗು.(ಪುಟ 26)

 

56) ಅಹಂಕಾರದ ನಿಂದೆ:

 

27)ಮನುಷ್ಯನ ಅಹಂಕಾರಕ್ಕೆ ಕಾರಣವಾದ   ಇನ್ನೂ ಕೆಲವು ಅಡಚಣೆಗಳು  ಕಂಡುಬರುತ್ತವೆ.ಅವುಗಳಲ್ಲಿ ಮೊದಲನೆಯ ವಿಕಾರವಾದ ಅಹಂಕಾರವೇ ಉಳಿದವುಗಳಿಗೆ ಮೂಲವಾಗಿರುತ್ತದೆ.(ಅಡಚಣೆಗಳು ಎಂದರೆ ರಾಗ ದ್ವೇಶ)(ಪುಟ163).

 

28)ದುಷ್ಟಸ್ವಭಾವದ ಅಹಂಕಾರದೊಂದಿಗೆ  ಎಲ್ಲಿಯವರೆಗೆ ನಿನಗೆ ಸಂಬಂಧವಿರುವುದೊ

ಅಲ್ಲಿಯವರೆಗೂ ವಿಲಕ್ಷಣವಾದ  ಮೋಕ್ಷದ ಸುದ್ಧಿಯು ಲೇಶ ಮಾತ್ರವೂ ಇರುವುದಿಲ್ಲ.(ಪುಟ 164)

 

2೯೯)ಅಹಂಕಾರವೆಂಬ ರಾಹುವಿನಿಂದ ಬಿಡಲ್ಪಟ್ಟವನು  ಚಂದ್ರನಂತೆ ವಿಮಲನೂ  ಪರಿಪೂಣ೯ನೂ ನಿತ್ಯಾನಂದನೂ  ಸ್ವಯಂಪ್ರಕಾಶನೂ ಆಗಿ ತನ್ನ ನಿಜಸ್ವರೂಪವನ್ನು ಹೊಂದುತ್ತಾನೆ.(ಪುಟ164)      

 

300) ಶರೀರದಲ್ಲಿ ಯಾವುದು 'ನಾನು ಇಂಥವನು'ಎಂದು ತೋರಿಕೊಳ್ಳುವುದೊ  ಮತ್ತು ಅಜ್ಞಾನದ ಮೂಲಕ  ಅತಿ ಮೂಢವಾದ ಬುದ್ಧಿಯಿಂದ  ಕಲ್ಪಿತವಾಗಿಯೊ  ಅಹಂಕಾರವನ್ನೇ ಸಂಪೂಣ೯ವಾಗಿ ನಾಶ ಮಾಡಿದಾಗ ಪ್ರತಿಬಂಧ ರಹಿತವಾದ  ಬ್ರಹ್ಮಾತ್ಮ ಸ್ವರೂಪವು ಉಂಟಾಗುತ್ತದೆ.(ಪುಟ165) 

 

301)ಮಹಾ ಬಲವುಳ್ಳ ಅಹಂಕಾರವೆಂಬ ಘೋರಸಪ೯ವು  ಬ್ರಹ್ಮಾನಂದವೆಂಬ ನಿಧಿಯನ್ನು  ಸತ್ವ-ರಜಸ್ತಮೋ ಗುಣಗಳೆಂಬ ರೋಷಗೊಂಡಿರುವ ಮೂರುಹೆಡೆಗಳಿಂದ ಸುತ್ತಿಕೊಂಡು   ತನ್ನಲ್ಲಿ ರಕ್ಷಿಸಿಕೊಂಡಿರುತ್ತದೆ.ಬ್ರಹ್ಮಜ್ಞಾನವೆಂಬ ಥಳಥಳಿಸುತ್ತಿರುವ ಕತ್ತಿಯಿಂದ  ಮೂರು ಹೆಡೆಗಳನ್ನೂ ಕತ್ತರಿಸಿ

ಸಪ೯ವನ್ನು ನಾಶಮಾಡಿ ,ಆನಂದಕರವಾದ  ನಿಧಿಯನ್ನು ಅನುಭವಿಸಲು ಧೀಮಂತನಾದವನೇ ಶಕ್ತನಾಗಿದ್ದಾನೆ.(ಪುಟ 165)

 

302)ಎಲ್ಲಿಯವರೆಗೆ ಶರೀರದಲ್ಲಿ ಸ್ವಲ್ಪವಾದರೂ ವಿಷದೋಷವಿರುವುದೊ ಅಲ್ಲಿಯವರೆಗೆ ಆರೋಗ್ಯವು ಹೇಗೆ ಲಭಿಸೀತು?ಹಾಗೆಯೆ ಅಹಂಕಾರವಿರುವವರೆಗೂ  ಯೋಗಿಗೆ ಮುಕತಿಯು ಹೇಗೆ ಲಭಿಸೀತು??(ಪುಟ166)

 

303)ಅಹಂಕಾರದ ಸಂಪೂಣ೯ವಿವೃತ್ತಿಯಿಂದಲೂ  ಅದರಿಂದಾದ ವಿವಿಧ ಕಲ್ಪನೆಗಳ ನಿರೋಧದಿಂದಲೂ  ಆತ್ಮ-ಯಾಥಾತ್ಮ್ಯದ ವಿವೇಚನೆಯಿಂದಲೂ 'ಇವನೇ ನಾನು'ಎಂದು ಪರಮಾತ್ಮ ತತ್ವವನ್ನು ಹೊಂದುತ್ತಾನೆ.(ಪುಟ166)

 

304) ಆತ್ಮಸ್ವರೂಪವನ್ನು ಮರೆಮಡುವುದೂ  ಆತ್ಮಪ್ರತಿಬಿಂಬವನ್ನು ಹೊಂದಿರುವುದೂ  ವಿಕಾರರೂಪಿಯೂ ಕತೃ೯ವೂ ಆದ ಅಹಂಕಾರದಲ್ಲಿ 'ನಾನು'ಎಂಬ ಬುದ್ಧಿಯನ್ನು ಕೂಡಲೇ ಬಿಡು. ಅಹಂಕಾರದ ಅಧ್ಯಾಸದಿಂದಲೇ  ಚಿನ್ಮೂತಿ೯ಯೂ ಆನಂದ ಘನನೂ ಪ್ರತ್ಯಗಾತ್ಮನೂ ಆದ ನಿನಗೆ ಹುಟ್ಟು ಸಾವು ಮುಪ್ಪು -ಇವುಗಳ ದುಃಖದಿಂದ ತುಂಬಿರುವ  ಸಂಸಾರವು ಉಂಟಾಗಿರುತ್ತದೆ.(ಪುಟ 167)

 

305)ನಿತ್ಯವೂ  ಏಕಸ್ವರೂಪನೂ  ಜ್ಞಾನಸ್ವರೂಪನೂ ವ್ಯಾಪಕನೂ  ಆನಂದ ವಿಗ್ರಹನು  ನಿಷ್ಕಲಂಕ ಕೀತಿ೯ಯುಳ್ಳವನೂ  ನಿವಿ೯ಕಾರನೂ  ಆದ ನಿನಗೆ ಅಹಂಕಾರದ ಅಧ್ಯಾಸವನ್ನು ಬಿಟ್ಟು ಬೇರೆ ವಿಧದಿಂದ ಎಲ್ಲಿಯೂ ಸಂಸಾರವೆಂಬುದು ಇಲ್ಲವೇ ಇಲ್ಲ.(ಪುಟ167)

 

306)ಆದುದರಿಂದ  ಊಟಮಾಡುವವನ ಗಂಟಲಲ್ಲಿ  ಮುಳ್ಳಿನಂತಿರುವ ಅಹಂಕರವೆಂಬ ನಿನ್ನ ಶತ್ರುವನ್ನು ವಿಜ್ಞಾನವೆಂಬ ದೊಡ್ಡ ಕತ್ತಿಯಿಂದ  ಚೆನ್ನಾಗಿ ಕತ್ತರಿಸಿ  ಆತ್ಮಸಾಮ್ರಾಜ್ಯದ ಸುಖವನ್ನು  ಯಥೇಷ್ಟವಾಗಿ ಅನುಭವಿಸು.(ಪುಟ168)

 

307) ಅನಂತರ ಅಹಂಕಾರವೆ ಮೊದಲಾದವುಗಳ ವೃತ್ತಿಯನ್ನು ತೊಲಗಿಸಿಕೊಂಡು ,ಪರಮಾಥ೯ ಪ್ರಾಪ್ತಿಯಿಂದ  ಅಭಿಲಾಷೆಯಿಲ್ಲದವನಾಗಿ,ಆತ್ಮ ಸುಖಾನುಭವದಿಂದ ವಿಕಲ್ಪಾದಿ ರಹಿತನಾಗಿ,ಪರಿಪೂಣ೯ ಸ್ವರೂಪದಿಂದ  ಬ್ರಹ್ಮದಲ್ಲಿಯೇ ಸುಮ್ಮನಿರು.(ಪುಟ 168)

 

308) ಬಲಿಷ್ಠವಾದ ಅಹಂಕಾರವು  ಬೇರು ಸಹಿತ  ಕಿತ್ತುಹಾಕಲ್ಪಟ್ಟರೂ  ಮನಸ್ಸಿನಿಂದ ಕ್ಷಣಕಾಲ  ಪುನಃ ಸ್ಮರಿಸಲ್ಪಟ್ಟರೆ ಮಳೆಗಾಲದಲ್ಲಿ  ಗಾಳಿಯಿಂದ ಚದುರಿಸಲ್ಪಟ್ಟ ಮೇಘದಂತೆ -ಜೀವಗೊಂಡು  ನೂರಾರು ವೃತ್ತಿಗಳನ್ನು  ಉಂಟು ಮಡುತ್ತದೆ.(ಪುಟ 16)

 

30)ಅಹಂಕಾರವನ್ನು ನಿಗ್ರಹಿಸಿದ ಮೇಲೂ ಮತ್ತೆ ಶತ್ರುವಿಗೆ ವಿಷಯವಸ್ತುಗಳ ನೆನಪಿನಿಂದ  ಸ್ವಲ್ಪ ಅವಕಾಶವನ್ನೂ ಕೊಡಕೂಡದು.ಹಾಗೆ ಕೊಟ್ಟರೆ ಒಣಗಿಹೋಗುತ್ತಿರುವ ನಿಂಬೆಯ ಗಿಡಕ್ಕೆ  ಎರೆದ ನೀರಿನಂತೆ  ಅದೇ ಅಹಂಕಾರವನ್ನು ಚಿಗುರಿಸಲು ಕಾರಣವಾಗುತ್ತದೆ.

( ಸ್ವಸ್ವರೂಪದ ವಿಸ್ಮರಣೆಗಿಂತ ಹೆಚ್ಚಿನ ಪ್ರಮಾದವಿಲ್ಲವೆಂದು  ಮುಂದೆ 321ನೆಯ ಶ್ಲೋಕದಲ್ಲಿ ಹೇಳಿದೆ.(ಪುಟ 16)

 

310)ದೇಹವೇ ತಾನೆಂದು ಅರಿತಿರುವವನೇ ಕಾಮಿಯು.ತಾನು ದೇಹಕ್ಕಿಂತ ಬೇರೆಯಾದವನೆಂದು ಅರಿತಿರುವವನು ಹೇಗೆ ಕಾಮಿಯಾದಾನು?ಆದುದರಿಂದ ವಿಷಯಗಳನ್ನು ಮನಸ್ಸಿನಲ್ಲಿ ಚಿಂತಿಸುವುದೇ  ಭೇದಕ್ಕೆ ಅವಕಾಶವನ್ನು ಕೊಡುವುದರ ಮೂಲಕ ಸಂಸಾರ ಬಂಧಕ್ಕೆ ಕಾರಣವಾಗುತ್ತದೆ.

 (ಪರಮಾತ್ಮನನ್ನು ಇವನೇ ನಾನು ಎಂದು ಅರಿತುಕೊಂಡರೆ ಯಾವುದನ್ನು ಬಯಸುತ್ತ ಯಾವಪ್ರಯೋಜನಕ್ಕಾಗಿ  ಶರೀರದ ಜ್ವರವನ್ನು ಅನುಸರಿಸಿ ದುಃಖ ಪಡುವನು?'ಆತ್ಮಾನಂ ಚೇದ್ವಿಜಾನೀಯಾದಯಮಸ್ಮೀತಿ  ಪೂರುಷಃ|ಕಿಮಿಚ್ಛನ್  ಕಸ್ಯ ಕಾಮಾಯ  ಶರೀರಮನು ಸಂಜ್ವರೇತ್ ಎಂದುಶ್ರುತಿಯು ಹೇಳುತ್ತದೆ.(ಬೃ..4-5-12)(ಪುಟ170)

 

311)ಕಾಮ್ಯ ಕಮ೯ವು ಪ್ರವಧಿ೯ಸಿದರೆ  ವಿಷಯವಾಸನೆಯೆಂಬ ಬೀಜಗಳ  ಪ್ರವೃದ್ಧಿಯೂ ಆಗುತ್ತದೆ.

ಕಮ೯ವು ಇಲ್ಲದಿದ್ದರೆ ಬೀಜವೂ ಇರುವುದಿಲ್ಲ.ಆದುದರಿಂದ ಕಮ೯ವನ್ನು ತಡೆಯೇಕು.(ಪುಟ 171)

 

312)ವಿಷಯವಾಸನೆಯು ವೃದ್ಧಿಯಾದರೆ ಕಮ೯ವೂ ವೃದ್ಧಿಯಾಗುವುದು.ಕಮ೯ವು ವೃದ್ಧಿಯಾದರೆ ವಿಷಯವಾಸನೆಯೂ  ವೃದ್ಧಿಯಾಗುವುದು.ಹೀಗೆ ಪರಸ್ಪರ ವೃದ್ಧಿಯಿಂದ  ಮನುಷ್ಯನಿಗೆ  ಸಂಸಾರವು  ಸವ೯ಪ್ರಕಾರದಿಂದಲೂ ಹೋಗುವುದೇ ಇಲ್ಲ.(ಪುಟ171)

 

313)ಪ್ರಯತ್ನಶೀಲನಾದ ಮುಮುಕ್ಷುವು  ಸಂಸಾರವೆಂಬ ಬಂಧದ ನಾಶಕ್ಕಾಗಿ ಇವೆರಡನ್ನೂ ನಾಶಗೊಳಿಸಬೇಕು.ಏಕೆಂದರೆ ವಿಷಯಚಿಂತನೆಯಿಂದಲೂ ಹೊರಗೆ ಮಾಡುವ ಕಾಮ್ಯ ಕಮ೯ದಿಂದಲೂ  ವಾಸನೆಯು ವೃದ್ಧಿಯಾಗುತ್ತದೆ.(ಪುಟ171)

 

314-315)ಅವೆರಡರಿಂದ ಪ್ರವಧಿ೯ಸಿದ ವಿಷಯವಾಸನೆಯು  ಆತ್ಮನಿಗೆ ಸಂಸಾರವನ್ನುಂಟು ಮಾಡುತ್ತದೆ. ಮೂರನ್ನೂ ನಾಶ ಮಾಡಬೇಕಾದರೆ ಸವಾ೯ವಸ್ಥೆಗಳಲ್ಲಿಯೂ ಸವ೯ಕಾಲಗಳಲ್ಲಿಯೂ  ಸವ೯ತ್ರ ಸವ೯ ಪ್ರಕಾರಗಳಿಂದಲೂ ಸವ೯ವನ್ನೂ  ಬ್ರಹ್ಮವಸ್ತುವೊಂದೇ ಎಂಬ ದೃಷ್ಟಿಯಿಂದ ನೋಡುವುದೇ  ಉಪಾಯವು.ಸದ್ಬ್ರಹ್ಮ ಭಾವನೆಯ ಸಂಸ್ಕಾರವು ದೃಢವಾದರೆ  ಮೂರೂ ನಾಶವಾಗುತ್ತವೆ.(ಪುಟ 172)

(ವಿಷಯವಾಸನೆ,ವಿಷಯ ಚಿಂತನೆ,ಕಾಮ್ಯಕಮ೯) (ಪುಟ 172)

 

316)ಕಮ೯ವು ನಾಶವಾದಾಗ ವಿಷಯ ಚಿಂತನೆಯು ನಾಶವಾಗುತ್ತದೆ.ಇದರಿಂದ ವಾಸನೆಯು ನಾಶವಾಗುತ್ತದೆ.ವಾಸನೆಯು ನಾಶವಾಗುವುದೇ ಮೋಕ್ಷವು.ಅದೇ ಜೀವನ್ಮುಕ್ತಿಯು.(ಪುಟ172)

 

217)ಅಂಧಕಾರವು ಎಷ್ಟೇ ನಿಬಿಡವಾಗಿದ್ದರೂ  ಅರುಣೋದಯವಾದಾಗ ಸಂಪೂಣ೯ವಾಗಿ ನಾಶವಾಗುವಂತೆ ಸದ್ಬ್ರಹ್ಮ ವಾಸನೆಯ ಪ್ರಕಾಶವು  ಹಬ್ಬಿಕೊಂಡರೆ  ಅಹಂಕಾರಾದಿ  ವಾಸನೆಯು ನಾಶವಾಗುತ್ತದೆ.(ಪುಟ 317)

 

318)ಸೂಯ೯ನು ಉದಯಿಸಿದರೆ  ಕತ್ತಲೆಯಾಗಲೀ ಅದರಿಂದಾಗುವ ಅನಥ೯ಗಳ ಸಮೂಹವಾಗಲೀ

 ಹೇಗೆ ಕಂಡು ಬರುವುದಿಲ್ಲವೊ  ಹಾಗೆಯೇ ಅದ್ವಯ-ಬ್ರಹ್ಮಾನಂದ--ರಸದ ಅನುಭವವಾಗುತ್ತಿರುವಾಗ

ಬಂಧವೂ ಇರುವುದಿಲ್ಲ.ದುಃಖದ ಗಂಧವೂ ಇರುವುದಿಲ್ಲ.(ಪುಟ 173)

(ಏಕತ್ವವನ್ನು ನೋಡುತ್ತಿರುವವನಿಗೆ ಮೋಹವೆಲ್ಲಿ?ಶೋಕವೆಲ್ಲಿ?.ತತ್ರ ಕೋ ಮೋಹಃಕಶ್ಯೋಕೇಕತ್ವಮನುಪಶ್ಯತಃ(ಈಶಾವಾಸ್ಯ..7)

 

58) ಪ್ರಮಾದದನಿಂದೆ:

 

31)ಕಾಣುತ್ತಿರುವ ದೃಶ್ಯಜಗತ್ತನ್ನು ಲಯಮಾಡಿಕೊಂಡು  ಸನ್ಮಾತ್ರವೂ ಆನಂದಘನವೂ  ಆದ ಬ್ರಹ್ಮವನ್ನೇ ಭಾವಿಸುತ್ತ ಒಳಗೂ ಹೊರಗೂ ಸಮಾಹಿತನಾಗಿ  ಕಮ೯ ಬಂಧವು ಇನ್ನೂ ಇದ್ದರೆ ಕಾಲವನ್ನು ಕಳೆ.

(ಒಂದುವೇಳೆ ಪ್ರಾರಬ್ಧ ವಶದಿಂದ  ಪ್ರಪಂªಚವುತೋರುತ್ತದ್ದರೆ, ಆಗ ಏನು ಮಾಡಬೇಕೆಂದು ಹೇಳಿದೆ)(ಪುಟ174)

 

320)ಬ್ರಹ್ಮನಿಷ್ಠೆಯಲ್ಲಿ ಎಂದಿಗೂ ಎಚ್ಚರ ತಪ್ಪ ಕೂಡದು.ಪ್ರಮಾದವೇ ಮೃತ್ಯುವು' ಎಂದು ಭಗವಂತನಾದ ಬ್ರಹ್ಮಕುಮಾರನು ಹೇಳಿದ್ದಾನೆ( ಇಲ್ಲಿ ಬ್ರಹ್ಮಕುನಾರರೆಂದು ಸೂಚಿಸಿರುವುದು ಸನತ್ಕುಮಾರನನ್ನು.ಇವನು ದೃತರಾಷ್ಟ್ರನಿಗೆ ಮಾಡಿದ ಉಪದೇಶದಲ್ಲಿ 'ಪ್ರಮಾದವನ್ನೇ ಮೃತ್ಯುವೆಂದು ನಾನು ಹೇಳುತ್ತೇನೆ'.

ಪ್ರಮಾದಂ ವೈ ಮೃತ್ಯುಮಹಂ ಬ್ರವೀಮಿ ಎಂಬ ಪ್ರಸಿದ್ಧವಾದ ವಾಕ್ಯವು  ಕಂಡು ಬರುತ್ತದೆ.ಮಹಾಭಾರತದ ಉದ್ಯೋಗಪವ೯ದ 40ರಿಂದ 45 ಅಧ್ಯಾಯಗಳನ್ನು  ಸನತ್ಸುಜಾತ ಸಂವಾದವು ಒಳಗೊಂಡಿದೆ.(ಪುಟ174)

 

321)ಜ್ಞಾನಿಯಾದವನಿಗೆ ತನ್ನ ಸ್ವರೂಪದಲ್ಲಿ ಎಚ್ಚರಿಕೆ ತಪ್ಪುವುದಕ್ಕಿಂತ  ಬೇರೆ ಕೇಡಿಲ್ಲ.ಅದರಿಂದಲೇ ಮೋಹವೂ ಅದರಿಂದಲೇ ಅಹಂಕಾರವೂ  ಅದರಿಂದಲೆ ಬಂಧವೂ ಅದರಿಂದಲೇ ವ್ಯಥೆಯೂ ಉಂಟಾಗುವುವು.(ಅದರಿಂದಲೇ ಎಂದರೆ ಪ್ರಮಾದದಿಂದಲೇ)(ಪುಟ175)

 

522)ವಿಷಯಾಭಿಲಾಷಿಯು ವಿದ್ವಾಂಸನಾಗಿದ್ದರೂ  ಆತ್ಮ ವಿಸ್ಮøತಿಯೆಂಬ ಪ್ರಮಾದವು  ಬುದ್ಧಿಯ ದೋಷಗಳಿಂದ-ಜಾರನಾದ ಪ್ರಿಯನನ್ನು ಕ್ಲೇಶಪಡಿಸುವ ಹೆಂಗಸಿನಂತೆ-ಅವನನ್ನು ಕ್ಲೇಶಗೊಳಿಸುತ್ತದೆ.(ಪುಟ175)

 

323)ಸರಿಸಲ್ಪಟ್ಟ  ಪಾಚಿಯು ಕ್ಷಣಮಾತ್ರವೂ ನಿಲ್ಲದೆ ಹೇಗೆ ನೀರನ್ನು ಮುಚ್ಚಿಕೊಳ್ಳುತ್ತದೆಯೊ ಹಾಗೆಯೇ  ಆತ್ಮನಿಷ್ಠೆಯಿಂದ ವಿಮುಖನಾದವನು ಪ್ರಾಜ್ಞನಾಗಿದ್ದರೂ  ಅವನನ್ನು ಮಾಯೆಯು ಮುಚ್ಚಿಕೊಳ್ಳುತ್ತದೆ.(ಪುಟ 176)

 

324)ಪ್ರಮಾದ ವಶದಿಂದ ಮೆಟ್ಟಿಲುಗಳ ಸಾಲಿನಮೇಲೆ ಜಾರಿದ ಆಟದ ಚೆಂಡು  ಹೇಗೆ ಕೆಳಕ್ಕೆ ಹರಿದುಹೋಗುವುದೋ  ಹಾಗೆಯೇ ಆತ್ಮನೆಂಬ  ಗುರಿಯಿಂದ ಜಾರಿದ ಚಿತ್ತವು  ಬಹಿಮು೯ಖವಾಗಿ ಅಲ್ಲಲ್ಲಿ ಕೆಳಕ್ಕೆ ಬಿದ್ದು ಓಡುತ್ತದೆ.(ಪುಟ (ಪುಟ176)

 

325)ವಿಷಯವಸ್ತುಗಳಲ್ಲಿ ಪ್ರವೇಶಿಸುತ್ತಿರುವ ಮನಸ್ಸು ಅವುಗಳ ಗುಣಗಳನ್ನು ಚಿಂತಿಸುತ್ತದೆ.ಅವುಗಳನ್ನು ಚೆನ್ನಾಗಿ ಚಿಂತಿಸುವುದರಿಂದ  ಅವುಗಳಲ್ಲಿ ಬಯಕೆಯು ಉಂಟಾಗುತ್ತದೆ.ಬಯಕೆಯಿಂದ ಮನುಷ್ಯನು ಕಮ೯ದಲ್ಲಿ ಪ್ರವತಿ೯ಸುತ್ತಾನೆ.(ಪುಟ176)

 

326)ಅದರಿಂದ ಸ್ವರೂಪ ಚ್ಯುತಿಯು ಉಂಟಾಗುತ್ತದೆ.ಸ್ವರೂಪದಿಂದ ಜಾರಿದವನು  ಕೆಳಕ್ಕೆ ಬೀಳುತ್ತಾನೆ.ಕೆಳಗೆ ಬಿದ್ದವನು ನಾಶವಾಗುತ್ತಾನೆಯೇ ಹೊರತು ಪುನಃ ಅಭಿವೃದ್ಧಿಯನ್ನು ಪಡೆಯುವುದಿಲ್ಲ.ಆದುದರಿಂದ ಎಲ್ಲಾ ಅನಥ೯ಗಳಿಗೂ ಕಾರಣವಾದ ವಿಷಯಚಿಂಂತನೆಯನ್ನು ಬಿಡಬೇಕು.(ಪುಟ 177)

 

327)ಆದುದರಿಂದ ವಿವೇಕಿಯಾದ ಬ್ರಹ್ಮಜ್ಞಾನಿಗೆ ಸಮಾಧಿಯಲ್ಲಿ ಎಚ್ಚರಿಕೆ ತಪ್ಪುವುದಕ್ಕಿಂತ  ಬೇರೊಂದು ಮೃತ್ಯುವಿರುವುದಿಲ್ಲ.ಚೆನ್ನಾಗಿ ಸಮಾಹಿತನಾದವನೇ ಸಿದ್ಧಿಯನ್ನು ಪಡೆಯುತ್ತಾನೆ.ಆದುದರಿಂದ ಎಚ್ಚರಿಕೆಯಿಂದ ಮನಸ್ಸನ್ನು ಸಮಾಧಿಯಲ್ಲಿಡು.(ಪುಟ178)

 

328) ಬದುಕಿರುವಾಗ ಯಾವನಿಗೆ ಕೈವಲ್ಯವುಂಟಾಗುವುದೊ ಅವನಿಗೇ ದೇಹಾಂತರದಲ್ಲಿಯೂ ಕೈವಲ್ಯವುಂಟಾಗುತ್ತದೆ.ಸ್ವಲ್ಪ ಭೇದವನ್ನು ನೋಡುವವನಿಗೂ ಭಯವಿದೆ.-ಎಂದು ಯಜುವೇ೯ದದ ಶ್ರುತಿಯು ಹೇಳುತ್ತದೆ.

(ಯಾವಾಗ ಇವನು ಬ್ರಹ್ಮದಲ್ಲಿ ಒಂದಿಷ್ಟು ಭೇದವನ್ನು ಮಾಡುತ್ತಾನೆಯೋ ಅದರಿಂದ ಅವನಿಗೆ ಭಯವಾಗುತ್ತದೆ.(ತೈ..2-7)(ಪುಟ178)

 

32) ಯಾವಾಗಲೇ ಆಗಲಿ ಜ್ಞಾನಿಯು ಅನಂತವಾದ  ಭೇದದಲ್ಲಿ ಸ್ವಲ್ಪವದರೂ ಭೇದವನ್ನು ನೋಡಿದರೆ,ಪ್ರಮಾದದಿಂದ ಭಿನ್ನವಾಗಿ ಕಂಡ ಅದು ಆಗಲೇ ಭೇದದಶಿ೯ಗೆ ಭಯವನ್ನುಂಟು ಮಾಡುತ್ತದೆ.(ಪುಟ17)

 

330)ಶ್ರುತಿ,ಸ್ಮøತಿ ಮತ್ತು ನೂರಾರು ಯುಕ್ತಿಗಳು ನಿಷೇಧಿಸಿರುವ  ದೃಶ್ಯಜಗತ್ತಿನಲ್ಲಿ ಯಾವನು 'ನಾನು'ಎಂಬ ಬುದ್ಧಿಯನ್ನು  ಮಾಡುತ್ತಾನೆಯೋ  ಅವನು-ಮಾಡಬಾರದ್ದನ್ನು ಮಾಡುವ ಕಳ್ಳನಂತೆ-ದುಃಖಗಳ ಮೇಲೆ ದುಃಖವನ್ನು ಹೊಂದುತ್ತಾನೆ.(ಪುಟ 17) 

   

331)ಯಾವನು ಸತ್ಯಬ್ರಹ್ಮವನ್ನೇ ಅನುಸಂಧಾನ ಮಾಡುತ್ತಿರುವವನೊ ಅವನು ಸಂಸಾರದಿಂದ ಬಿಡುಗಡೆಯನ್ನು ಹೊಂದಿದವನಾಗಿ ತನ್ನ ಶಾಶ್ವತವಾದ ಮಹಿಮೆಯನ್ನು ಹೊಂದುತ್ತಾನೆ.ಆದರೆ ಯಾವನು ಮಿಥ್ಯಾ ರೂಪವಾಗಿರುವ (ದೇಹಾದಿಗಳನ್ನೇ ಆತ್ಮವಸ್ತುವೆಂದು)ಅನುಸಂಧಾನ ಮಾಡುವನೋ ಅವನು ನಾಶವಾಗುತ್ತಾನೆ. ಇದು ಚೋರನು ಚೋರನಲ್ಲದವನು -ಇದರ ವಿಷಯದಲ್ಲಿ ನೋಡಲ್ಪಟ್ಟಿದೆ.

(ಹಿಂದಿನ ಕಾಲದಲ್ಲಿ ಒಂದು ಕೊಡಲಿಯನ್ನು ಕಾಯಿಸಿ  ಅದನ್ನು ಆಪಾದಿತನು ಮುಟ್ಟುವ ಹಾಗೆ ಮಾಡುತ್ತಿದ್ದರು.ಅವನ ಕೈ ಸುಡದಿದ್ದರೆ ಅವನು ನಿರಪರಾಧಿಯೆಂದೂ  ಸುಟ್ಟರೆ ಅಪರಾಧಿಯೆಂದೂ ನಿಧ೯ರಿಸುತ್ತಿದ್ದರು.ಇದು ಛಾಂದೋಗ್ಯ ಉಪನಿಷತ್ತಿನ  6-16 ರಲ್ಲಿ ಬರುವ  ಅಗ್ನಿ ಪರೀಕ್ಷೆಯನ್ನು ಸೂಚಿಸುತ್ತದೆ.)(ಪುಟ 180).

 

332)ಪ್ರಯತ್ನಶೀಲನಾದವನು  ಬಂಧಕ್ಕೆ ಕಾರಣವಾದ ಅಸದ್ವಸ್ತುವಿನ  ಅನುಸಂಧಾನವನ್ನು ತೊರೆದು 'ನಾನೇ ಇವನಾಗಿರುತ್ತೇನೆ'ಎಂಬ ಆತ್ಮದೃಷ್ಟಿಯಿಂದಲೇ ನಿಲ್ಲಬೇಕು.ಆತ್ಮಾನುಭವದಿಂದ ಬ್ರಹ್ಮದಲ್ಲಿಯೇ ನಿಷ್ಠೆಯನ್ನು ಹೊಂದುವುದು  ಸುಖಗೊಳಿಸುತ್ತದೆ. ಅವಿದ್ಯೆಯ ಕಾಯ೯ವಾಗಿ ತೋರಿಬರುತ್ತಿರುವ  ದುಃಖವನ್ನೂ ಅತ್ಯಂತಿಕವಾಗಿ ಹೋಗಲಾಡಿಸುತ್ತದೆ.(ಪುಟ180)

 

333)ವಿಷಯ ಚಿಂತನೆಯು ಪುನಃ ಪುನಃ ಹೆಚ್ಚಾಗುವ ಮಲಿನವಾಸನೆಯನ್ನೇ ಬೆಳೆಸುತ್ತದೆ.(ಯತಿಯು) ಇದನ್ನು ಅರಿತುಕೊಂಡು ವಿವೇಚನೆಯಿಂದ ವಿಷಯಚಿಂತನೆಯನ್ನು ತೊರೆದು  ಆತ್ಮಚಿಂತನೆಯನ್ನೇ ಯಾವಾಗಲೂ ಮಾಡಬೇಕು.

(ವಾಸನಾ ವೃದ್ಧಿಯಿಂದ ಕಮ೯ವೂ ಕಮ೯ವೃದ್ಧಿಯಿಂದ ವಾಸನೆಯೂ ಬೆಳೆಯುವುದು.)(ಪುಟ181)

 

334)ವಿಷಯ ಚಿಂತನೆಯ ನಿರೋಧದಿಂದ ಮನಸ್ಸಿನ ಪ್ರಸನ್ನತೆಯೂ ಮನಸ್ಸಿನ ಪ್ರಸನ್ನತೆಯಿಂದ ಪರಮಾತ್ಮನ ಸಾಕ್ಷಾತ್ಕಾರವೂ ಉಂಟಾಗುತ್ತದೆ. ಪರಮಾತ್ಮನನ್ನು ಚೆನ್ನಾಗಿ ಸಾಕ್ಷಾತ್ಕರಿಸಿದರೆ  ಸಂಸಾರಬಂಧವು ನಾಶವಾಗುತ್ತದೆ. ಆದುದರಿಂದ ವಿಷಯ ಚಿಂತನೆಯ ನಿರೋಧವೇ ಮುಕ್ತಿಗೆ ಮಾಗ೯ವು.

(ಚಿತ್ತದ ಪ್ರಸನ್ನತೆಯುಂಟಾದರೆ ಇವನ ಸಮಸ್ತ ದುಃಖಗಳೂ ನಾಶವಾಗುತ್ತವೆ.ಏಕೆಂದರೆ ಪ್ರಸನ್ನ ಚಿತ್ತವುಳ್ಳ  ಮನುಷ್ಯನ ಬುದ್ಧಿಯು ಶೀಘ್ರವಾಗಿ ಸ್ಥಿರವಾಗುವುದು.ಪ್ರಸಾದೇ ಸವ೯ದುಃಖಾನಾಂ ಹಾನಿರಸ್ಯೋಪಜಾಯತೇ|ಪ್ರಸನ್ನ ಚೆತಸೋ ಹ್ಯಾಶು  ಬುದ್ಧಿ ಪಯ೯ವತಿಷ್ಠತೇ|(ಗೀತಾ2-65)

 

335)ಪಂಡಿತನೂ ಸದ್ವಿವೇಕಿಯೂ  ಶ್ರುತಿ ಪ್ರಮಾಣವನ್ನು ನಂಬಿರುವವನೂ  ಪರಮಾಥ೯ದಶಿ೯ಯೂ  ಆದ ಯಾವ ಮುಮುಕ್ಷುವು ತಾನೇ  ತಿಳಿದೂ ತಿಳಿದೂ -ಮಗುವಿನಂತೆ-ತನ್ನ ಪತನಕ್ಕೆ ಕಾರಣವಾದ  ಅಸದ್ವಸ್ತುವನ್ನು ಆಶ್ರಯಿಸಿಯಾನು?(ಪುಟ182)

 

336) ಶರೀರಾದಿಗಳಲ್ಲಿ  ಅಭಿನ£ಮಾನವುಳ್ಳವನಿಗೆ ಮುಕ್ತಿಯಿಲ್ಲ.ಮುಕ್ತನಾದವನಿಗೆ  ಶರೀರಾದಿಗಳಲ್ಲಿ ಅಭಿಮಾನವಿರುವುದಿಲ್ಲ.ನಿದ್ರಿಸುತ್ತಿರುವವನಿಗೆ ಎಚ್ಚರವಿಲ್ಲ.ಎಚ್ಚರದಲ್ಲಿರುವವನಿಗೆ ನಿದ್ರೆಯಿಲ್ಲ.ಏಕೆಂದರೆ ಅವಸ್ಥೆಗಳು ಪರಸ್ಪರ ವಿರುದ್ಧ ಗುಣಗಳನ್ನು ಆಶ್ರಯಿಸಿರುತ್ತವೆ.(ಪುಟ 183)

 

337)ಸ್ಥಾವರ-ಜಂಗಮ ಗಳಲ್ಲೆಲ್ಲಾ  ಒಳಗೂ ಹೊರಗೂ  ತನ್ನ ಆತ್ಮನನ್ನೇ ತಿಳಿದುಕೊಂಡು ,ಆಮನನ್ನೇ ಅವುಗಳ ಆಧಾರವೆಂದು ಅರಿತುಕೊಂಡು ,ಸಮಸ್ತ ಉಪಾಧಿಗಳನ್ನೂ ಬಿಟ್ಟವನಾಗಿ ,ಪರಿಪೂಣ೯ ಸ್ವರೂಪನಾಗಿಯೂ  ಸವಾ೯ತ್ಮ ಸ್ವರೂಪದಿಂದಲೂ ,ಯಾವನು ಇರುವನೊ ಅವನೇ ಮುಕ್ತನು.(ಪುಟ 183)

 

338)ಸಂಸಾರ ಬಂಧದಿಂದ ಮುಕ್ತನಾಗುವುದಕ್ಕೆ ಸವಾ೯ತ್ಮ ಭಾವಕ್ಕಿಂತ  ಬೇರೆ ಯಾವ ಕಾರಣವೂ  ಸವ೯ಪ್ರಕಾರದಿಂದಲೂ ಇರುವುದಿಲ್ಲ.ಇವನಿಗೆ ಸವಾ೯ತ್ಮ ಭಾವವು ಸದಾ ಆತ್ಮನಿಷ್ಠೆಯ ಮೂಲಕ ದೃಶ್ಯಜಗತ್ತನ್ನು ಗ್ರಹಿಸದಿದ್ದಾಗ ಉಂಟಾಗುತ್ತದೆ.(ಪುಟ184)

 

33)ದೇಹಾತ್ಮ ಭಾವದಿಂದ ಕೂಡ ,ವಿಷಯಾನುಭವದಲ್ಲಿ ನೆಲೆಗೊಂಡ  ಮನಸ್ಸುಳ್ಳವನಾಗಿ,ಆಯಾ ಕಮ೯ಗಳನ್ನು ಮಾಡುತ್ತಿರುವವನಿಗೆ ದೃಶ್ಯಜಗತ್ತನ್ನು ಪರಿಗ್ರಹಿಸದಿರುವುದು ಹೇಗೆ ಸಾಧ್ಯವಾಗುತ್ತದೆ?ಸಮಸ್ತ ಧಮ೯ಗಳನ್ನೂ  ಕಮ೯ಗಳನ್ನೂ ವಿಷಯಗಳನ್ನೂ ತೊರೆದು ನಿತ್ಯಾತ್ಮ ನಿಷ್ಠೆಯಲ್ಲಿ ಆಸಕ್ತರಾಗಿ ತಮ್ಮಲ್ಲಿ ಸದಾನಂದವನ್ನು ಬಯಸುವ  ತತ್ವಜ್ಞರಿಂದಲೇ ( ದೃಶ್ಯಜಗತ್ತಿನ ಅಪರಿಗ್ರಹವು) ಪ್ರಯತ್ನಪೂವ೯ಕವಾಗಿ ಮಾಡತಕ್ಕದ್ದು.(ಪುಟ184)

 

340)ವೇದಾಂತವಾಕ್ಯದ  ಶ್ರವಣವನ್ನು ಮಾಡಿರುವ ಭಿಕ್ಷುವಿಗೆ  ಸವಾ೯ತ್ಮ ಭಾವದ ಸಿದ್ಧಿಗೋಸ್ಕರ 'ಶಾಂತನೂ ದಾಂತನೂ'ಎಂಬ ಈಶ್ರುತಿಯು  ಸಮಾಧಿಯನ್ನು ವಿಧಿಸುತ್ತದೆ.

( ಆದುದರಿಂದ ಹೀಗೆ ಅರಿತುಕೊಂಡವನು  ಶಾಂತನೂ ದಾಂತನೂ ಉಪರತನೂ  ತಿತಿಕ್ಷುವೂ ಸಮಾಹಿತನೂ ಆಗಿ ತನ್ನ ಶರೀರದಲ್ಲಿಯೇ  ಆತ್ಮನನ್ನು ನೋಡುತ್ತಾನೆ.(ಬೃ..4-4-23)(ಪುಟ185)

 

341)ಯಾರು ನಿವಿ೯ಕಲ್ಪ ವೆಂಬ ಸಮಾಧಿಯಲ್ಲಿ ನೆಲೆಗೊಂಡಿರುವರೊ ಅವರನ್ನು ಬಿಟ್ಟರೆ ಇತರರು ಜ್ಞಾನಿಗಳಾಗಿದ್ದರೂ  ಪ್ರಬಲವಾದ ಶಕ್ತಿಯುಳ್ಳಹಂಕಾರವನ್ನು ಕೂಡಲೇ ನಾಶಮಾಡಲು  ಅವರಿಂದ ಆಗುವುದಿಲ್ಲ.ಏಕೆಂದರೆ ಸಂಸ್ಕಾರಗಳು ಅನೇಕ ಜನ್ಮದಿಂದ ಸಂಪಾದಿಸಲ್ಪಟ್ಟು ಬಂದಿರುತ್ತವೆ.(ಪುಟ186)

 

342)ವಿಕ್ಷೇಪ ಶಕ್ತಿಯು ಆವರಣ ಬಲದ ಶಕ್ತಿಯ ಮೂಲಕ  ಮನುಷ್ಯನನ್ನು ಅಹಂಬುದ್ಧಿಯೆಂಬ  ಮೋಹಿನಿಯೊಂದಿಗೆ ಸೇರಿಸಿ ಅದರ ಗುಣಗಳಿಂದ ಅವನನ್ನು ವಿಕ್ಷೇಪಗೊಳಿಸುತ್ತದೆ.(ಕತೃ೯ತ್ವವೇ ಮೊದಲಾದ)(ಪುಟ 186)

 

343)ಆವರಣ ಶಕ್ತಿಯನ್ನು ನಿಶ್ಯೇಷವಾಗಿ ತೊಲಗಿಸಿಕೊಳ್ಳದಿದ್ದರೆ  ವಿಕ್ಷೇಪ ಶಕ್ತಿಯನ್ನು ಜಯಿಸಿಕೊಳ್ಳುವುದು ಕಷ್ಟ.ದೃಗ್ರೂಪನಾದ ಆತ್ಮ,ದೃಶ್ಯವಾದ ಜಗತ್ತು  ಇವೆರಡನ್ನೂ -ಹಂಸವು ಹಾಲು ನೀರುಗಳನ್ನು ಸ್ಫುಟವಾಗಿ ವಿಂಗಡಿಸುವಂತೆ-ವಿವೇಚನೆ ಮಾಡಿದಾಗ  ಆವರಣವು ಆತ್ಮನಲ್ಲಿ  ತಾನಾಗಿಯೇ ನಾಶವಾಗುವುದು.ಮಿಥ್ಯಾಭೂತವಾದ ಅನಾತ್ಮನಲ್ಲಿ  ಮನಸ್ಸು ವಿಕ್ಷೇಪ ಹೊಂದದಿದ್ದರೆ (ವಿಕ್ಷೇಪವನ್ನು ಗೆಲ್ಲುವುದು)ನಿಸ್ಸಂಶಯವಾಗಿ ಪ್ರತಿಬಂಧವಿಲ್ಲದೆ ಆಗುವುದು.(ಪುಟ 187)

 

344)ಸ್ಫುಟವಾದ ಜ್ಞಾನದಿಂದ  ಉತ್ಪನ್ನವಾದ ಸಮ್ಯಕ್ ವಿವೇಕವು ದೃಗ್ರೂಪನಾದ ಆತ್ಮ,ದೃಶ್ಯರೂಪವಾದ ಜಗತ್ತು (ಪ್ರಪಂಚ)-ಎಂಬ ಪದಾಥ೯ಗಳ ತತ್ವವನ್ನು ವಿಂಗಡಿಸಿ,ಮಾಯಾಕೃತವಾದ ಮೋಹವೆಂಬ  ಬಂಧವನ್ನು ಕತ್ತರಿಸುತ್ತದೆ.ಅದರಿಂದ ಮುಕ್ತನಾದವನಿಗೆ ಪುನಃ ಸಂಸಾರವಿಲ್ಲ.

(1)ಶಾಸ್ತ್ರಮತ್ತು ಆಚಾಯ೯ -ಇವರ ಪ್ರಸಾದದಿಂದಲೂ  ಮಹಾವಾಕ್ಯದ ಅನುಭವದಿಂದಲೂ ಉತ್ಪನ್ನವಾದ.

2) ಬ್ರಹ್ಮಸತ್ಯ ಮತ್ತು ಜಗತ್ತು ಮಿಥ್ಯೆ ಎಂಬರೂಪದ ಸರಿಯಾದ ವಿವೇಕ)(ಪುಟ 187)

 

345)ಜೀವ ಈಶ್ವರ ಇವರಿಬ್ಬರೂ ಒಂದೇ  ಎಂಬ ವಿವೇಕಾಗ್ನಿಯು  ಅವಿದ್ಯೆಯೆಂಬ ಕಾಡನ್ನು ವಿಶೇಷವಾಗಿ ಸುಡುತ್ತದೆ.ಅದ್ವೈತ ಭಾವವನ್ನೇ ಚೆನ್ನಾಗಿ ಪಡೆದಿರುವ ಜ್ಞಾನಿಗೆ ಪುನಃ ಸಂಸಾರಕ್ಕೆ ಬರಲು ಯಾವ ಕಾರಣವು ಇದ್ದೀತು?(ಪುಟ188)

 

346)ಪರಮಾಥ೯ವಸ್ತುವನ್ನು ಚೆನ್ನಾಗಿ ಸಾಕ್ಷಾತ್ಕರಿಸುವುದರಿಂದ  ಆವರಣವು ಹೋಗುತ್ತದೆ.ಮಿಥ್ಯಾಜ್ಞಾನವೂ ಹೋಗುತ್ತದೆ.ಹಾಗೆಯೇ ವಿಕ್ಷೇಪದಿಂದ ಉಂಟಾದ  ದುಃಖವೂ ಹೋಗುತ್ತದೆ.(ಪುಟ188)

 

347)ಹಗ್ಗದ ಸ್ವರೂಪವನ್ನು ಚೆನ್ನಾಗಿ ಅರಿತುಕೊಂಡಿದ್ದರಿಂದ  ಮೂರೂ ಕಂಡುಬರುತ್ತದೆ.ಆದುದರಿಂದ ಮುಮುಕ್ಷುವು  ಸಂಸಾರ ಬಂಧ ನಿವೃತ್ತಿಗಾಗಿ  ವಸ್ತುವಿನ ಯಾಥಾತ್ಮ್ಯವನ್ನು ಅರಿತುಕೊಳ್ಳಬೇಕು.(ಮೂರು ಎಂದರೆ ಆವರಣ,ಮಿಥ್ಯಾಜ್ಞಾನ,ದುಃಖ-ಇವುಗಳ ನಿವೃತ್ತಿ)(ಪುಟ 18).

 

60)ಸತ್-ಅಸತ್ ವಿವೇಕ:

 

348-34) ಅಗ್ನಿಯ ಸಂಬಂಧದಿಂದ  ಕಬ್ಬಿಣವು ಕಾದು ಕೆಂಪಗಾಗುವಂತೆ  ಸದ್ವಸ್ತುವಾದ ಆತ್ಮನ ಸಂಬಂಧದಿಂದ ಬುದ್ಧಿಯು ಪ್ರಮಾತೃ(ಪ್ರಮಾಣ,ಪ್ರಮೇಯ) ಮೊದಲಾದ ರೂಪದಿಂದ ತೋರಿಕೊಳುತ್ತದೆ.ಹೇಗೆ ಬುದ್ಧಿಯ ಕಾಯ೯ವಾದ  ಪ್ರಮಾತೃವೇ ಮೊದಲಾದ ತ್ರಿತಯವು  ಭ್ರಾಂತಿ ಸ್ವಪ್ನ ಮನೋರಥ -ಇವುಗಳಲ್ಲಿ ಹುಸಿಯಾಗಿರುತ್ತದೆಯೊ  ಹಾಗೆಯೇ ಅಹಂಕಾರದಿಂದ ಪ್ರಾರಂಭಿಸಿ  ದೇಹದವರೆಗಿನ ಪ್ರಕೃತಿಯ ವಿಕಾರಗಳೂ  ಸಮಸ್ತ ವಿಷಯಗಳೂ  ಪ್ರತಿಕ್ಷಣವೂ  ಬೇರೆಯಾಗಿ ಪರಿಣಮಿಸುತ್ತಿರುವುದರಿಂದ ಮಿಥ್ಯೆಯಾಗಿರುವುವು.ಆತ್ಮನಾದರೋ ಯಾವಾಗಲೂ ಪರಿಣಮಿಸುವುದಿಲ್ಲ.(ಪುಟ 10)

 

350)ಪರಮಾತ್ಮನು ನಿತ್ಯನೂ ಅದ್ವಯನೂ ಅಖಂಡನೂ  ಚಿದ್ರೂಪನೂ  ಬುದ್ಧ್ಯಾದಿಗಳಿಗೆ ಸಾಕ್ಷಿಯೂ  ಸ್ಥೂಲ -ಸೂಕ್ಷ್ಮಗಳಿಗಿಂತ ವಿಲಕ್ಷಣನೂ ಅಹಂ-ಪದ-ಪ್ರತ್ಯಯಗಳಿಂದ  ಲಕ್ಷಿತನಾದವನೂ  ಪ್ರತ್ಯಕ್ ಸ್ವರೂಪನೂ  ಸದಾನಂದ ಘನನೂ ಆಗಿರುತ್ತಾನೆ.(ಪುಟ 350)

 

ಸಮಾಧಿಯ ನಿರೂಪಣ:

 

351)ಜ್ಞಾನಿಯಾದ ಮುಮುಕ್ಷುವು  ಹೀಗೆ ಸದ್ವಸ್ತುವನ್ನೂ  ಅಸದ್ವಸ್ತುವನ್ನೂ ವಿಂಗಡಿಸಿ (ವಿಚಾರದಿಂದ ಉತ್ಪನ್ನವಾದ) ಸ್ವಾನುಭವ ದೃಷ್ಟಿಯಿಂದ  ವಸ್ತು ಯಥಾತ್ಮ್ಯವನ್ನು ಗೊತ್ತು ಮಾಡಿಕೊಂಡು ಅಖಂಡ ಸ್ವರೂಪನಾದ ತನ್ನ ಆತ್ಮನನ್ನೇ ಅರಿತುಕೊಂಡು  ಅನಾತ್ಮವಸ್ತುಗಳಿಂದ ಮುಕ್ತನಾಗಿ  ತಾನಾಗಿಯೇ ಶಾಂತವಾಗುತ್ತಾನೆ.(ಪುಟ 11)

 

61) ಸಮಾಧಿಯ ನಿರೂಪಣ:

 

352)ಯಾವಾಗ ನಿವಿ೯ಕಲ್ಪ ಸಮಾಧಿಯಿಂದ ಅದ್ವಯನಾದ ಪರಮಾತ್ಮನ  ಸಾಕ್ಷಾತ್ಕಾರವಾಗುವುದೋ  ಆಗಲೇ ಅಜ್ಞಾನವೆಂಬ ಹೃದಯ ಗ್ರಂಥಿಯು  ಸಂಪೂಣ೯ವಾಗಿ ನಾಶವಾಗುವುದು.(ಪುಟ 12)

 

353)ಅದ್ವಿತೀಯನೂ ವಿಶೇಷ ಶೂನ್ಯನೂ  ಆದ ಪರಮಾತ್ಮನಲ್ಲಿ 'ನೀನು' 'ನಾನು' 'ಇದು'-ಎಂಬ ಕಲ್ಪನೆಯು ಬುದ್ಧಿದೋಷದಿಂದ ಉಂಟಾಗುತ್ತದೆ.ಇವನಿಗೆ ಸಮಾಧಿಯಲ್ಲಿ (ಪರಮಾಥ೯ತತ್ವವು) ಪ್ರಕಾಶಿಸುತ್ತಿರುವಾಗ  ವಸ್ತು ಯಾಥಾತ್ಮ್ಯದ ಅವಧಾರಣೆಯ ಮೂಲಕ  ವಿಕಲ್ಪಗಳೆಲ್ಲವೂ ವಿನಾಶವನ್ನು ಹೊಂದುತ್ತವೆ.(ಪುಟ12)

 

354)ಶಾಂನೂ ದಾಂತನೂ  ಅತ್ಯಂತವಾಗಿ ಉಪರತನೂ  ದ್ವಂದ್ವ ಸಹಿಷ್ಣುವೂ  ಆದ ಯತಿಯು ಯಾವಾಗಲೂ  ಸಮಾಧಿಯನ್ನು ಮಾಡುತ್ತ,ತನ್ನ ಸವಾ೯ತ್ಮಭಾವವನ್ನು ಅನುಭವಿಸುತ್ತಾನೆ.ಅವಿದ್ಯೆಯೆಂಬ ಅಂಧಕಾರದಿಂದ  ಉಂಟಾದ ವಿಕಲ್ಪಗಳನ್ನು  ಸಮಾಧಿಯಿಂದ ಚೆನ್ನಾಗಿ ಸುಟ್ಟು  ನಿಷ್ಕ್ರಿಯನೂ ನಿವಿ೯ಕಲ್ಪನೂ ಆಗಿ ಬ್ರಹ್ಮಾಕಾರದಿಂದ ಸುಖವಾಗಿರುತ್ತಾನೆ.(ಪುಟ12)

 

355)ಯಾರು ತಮ್ಮ ಹೊರಗಿನ ಶ್ರೋತ್ರಾದಿ ಇಂದ್ರಿಯ ಸಮೂಹವನ್ನೂ  ಚಿತ್ತವನ್ನೂ ಅಹಂಕಾರವನ್ನೂ  ಚಿದಾತ್ಮನಲ್ಲಿ ಲಯಮಾಡಿಕೊಂಡು  ಸಮಾಹಿತರಾಗಿರುವರೊ  ಅವರೇ ಸಂಸಾರ ಪಾಶದ ಬಂಧಗಳಿಂದ

ಮುಕ್ತರಾಗಿರುವರು.-ಪರೋಕ್ಷವಾದ ಮಾತುಗಳನ್ನಾಡುವ ಇತರರಲ್ಲ.(ಪುಟ 13)

(ಸಮಾಧಿಯಿಲ್ಲದೆ  ಕೇವಲ ಶ್ರವಣದಿಂದ  ಬ್ರಹ್ಮಾನುಭವವು ಉಂಟಾಗುವುದಿಲ್ಲ ಎಂಬುದು ತಾತ್ಪಯ೯)

 

356)ಆತ್ಮನು ಒಬ್ಬನೇ ಆಗಿದ್ದರೂ ಉಪಾಧಿಗಳ ಭೇದ ಭಾವವನ್ನು ಹೊಂದುತ್ತಾನೆ.ಉಪಾಧಿಗಳನ್ನು ತೆಗೆದು ಹಾಕಿದಾಗ ಒಬ್ಬನೇ ಆಗುತ್ತಾನೆ.ಆದುದರಿಂದ ಉಪಾಧಿಯ ನಾಶಕ್ಕಾಗಿ  ಜ್ಞಾನಿಯು ಯಾವಾಗಲೂ  ನಿವಿ೯ಕಲ್ಪ ಸಮಾಧಿಯ   ನಿಷ್ಠೆಯಲ್ಲಿಯೇ ಇರಬೇಕು(ಸ್ಫಟಿಕದ ಕೆಳಗಿರುವ ಹೂವನ್ನು ತೆಗೆದಾಗ ಅದು ಸ್ವಚ್ಛವಾಗಿ ಕಾಣುವಂತೆ)(ಪುಟ 14)

 

357)ಸದ್ರೂಪವಾದ ಬ್ರಹ್ಮದಲ್ಲಿ ಆಸಕ್ತನಾಗಿರುವ  ಮನುಷ್ಯನು ತದೇಕ ನಿಷ್ಠೆಯಿಂದ ತಾನೆ ಬ್ರಹ್ಮವನ್ನು ಹೊಂದುತ್ತಾನೆ.ಕೀಟವು ಭ್ರಮರವನ್ನೇ ಚಿಂತಿಸುತ್ತ ತಾನೂ ಭ್ರಮರವಾಗುತ್ತದೆ.

(ಸಮಾಧಿನಿಷ್ಠನಾದವನಿಗೆ ಹೇಗೆ ಬ್ರಹ್ಮಾಕಾರವುಂಟಾಗುತ್ತದೆ ಎಂಬುದನ್ನು ದೃಷ್ಟಾಂತದ ಮೂಲಕ ಹೇಳಿದೆ.)(ಪುಟ 14)

 

358)ಹೇಗೆ ಕೀಟವು ಬೇರೆ ಕೆಲಸದಲ್ಲಿ ಆಸಕ್ತಿಯನ್ನು ಬಿಟ್ಟು ಭ್ರಮರವನ್ನೇ ಚಿಂತಿಸುತ್ತ  ಭ್ರಮರ ಭಾವವನ್ನೇ ಹೊಂದುತ್ತದೆಯೊ ಹಾಗೆಯೇ ಯೋಗಿಯು ಪರಮಾತ್ಮ -ತತ್ವವನ್ನು ತದೇಕ ನಿಷ್ಠೆಯಿಂದ 

ಧ್ಯಾನಿಸುತ್ತ ಅದೇ ರೂಪವನ್ನು ಹೊಂದುತ್ತಾನೆ.೯ಪುಟ15)

 

35)ಪರಮಾತ್ಮ -ತತ್ವವು ಅತ್ಯಂತ ಸೂಕ್ಷ್ಮವಾದದ್ದು.ಸ್ಥೂಲವಸ್ತುವನ್ನು ವಿಷಯೀಕರಿಸುವ ದೃಷ್ಟಿಯಿಂದ ಅದನ್ನು ತಿಳಿಯುವುದಕ್ಕೆ ಆಗುವುದಿಲ್ಲ.ಅತ್ಯಂತ ಸೂಕ್ಷ್ಮವಾದ ಬುದ್ಧಿಯುಳ್ಳ ಆಯ೯ರು  ಅತಿ ಸೂಕ್ಷ್ಮವಾದ ವೃತ್ತಿಯುಳ್ಳ ಸಮಾಧಿಯಿಂದ  ಅದನ್ನು ತಿಳಿಯತಕ್ಕದ್ದು.

(ಶ್ರುತಿ,ಸ್ಮøತಿ-ಇವುಗಳ ಮಾಗ೯ದಲ್ಲಿ ಹೋಗುವವರು ಆಯ೯ರು)(ಪುಟ15)

 

360)ಹೇಗೆ ಪುಟಪಾಕದಿಂದ ಶೋಧಿಸಲ್ಪಟ್ಟ ಚಿನ್ನವು ತನ್ನ ಕಶ್ಮಲವನ್ನು ಬಿಟ್ಟು  ನಿಜವಾದ ಗುಣವನ್ನು ಹೊಂದುತ್ತದೆಯೊ  ಹಾಗೆಯೇ ಮನಸ್ಸು ಸತ್ವರಜೋಸ್ತಮಗುಣಗಳ ಕಶ್ಮಲವನ್ನು ಧ್ಯಾನದಿಂದ ಬಿಟ್ಟು ಪರಮಾಥ೯ ತತ್ವವನ್ನೇ ಹೊಂದುತ್ತದೆ.(ಪುಟ (ಪುಟ 13)

 

361)ಹೀಗೆ ನಿರಂತರ ಧ್ಯಾನಾಭ್ಯಾಸದ ವಶದಿಂದ ಮನಸ್ಸು ಪಕ್ವವಾಗಿ ಯಾವಾಗ ಬ್ರಹ್ಮದಲ್ಲಿ ಲಯವಾಗುತ್ತದೆಯೊ ಆಗ ತಾನೇ ಬ್ರಹ್ಮಾನಂದ ರಸದ ಅನುಭವಕ್ಕೆ ಕಾರಣವಾದ ವಿವಿ೯ಕಲ್ಪ ಸಮಾಧಿಯಾಗುತ್ತದೆ.(ಪುಟ16)

 

362) ನಿವಿ೯ಕಲ್ಪ ಸಮಾಧಿಯಿಂದ  ಸಮಸ್ತ ವಾಸನಾ ಗ್ರಂಥಿಯ ನಾಶವೂ ಆಗಿ,ಒಳಗೂ ಹೊರಗೂ ಎಲ್ಲಾ ಕಡೆಗಳಲ್ಲಿಯೂ  ಯಾವಾಗಲೂ ಯಾವಪ್ರಯತ್ನವೂ ಇಲ್ಲದೆ ಆತ್ಮ ಸ್ವರೂಪದ ಪ್ರಕಾಶವು ಉಂಟಾಗುತ್ತದೆ.(ಪುಟ 157)

 

363)ಶ್ರವಣಕ್ಕಿಂತ ಮನನವು ನೂರುಪಾಲು ಅಧಿಕವೆಂದೂ ,ಮನನಕ್ಕಿಂತ ನಿದಿಧ್ಯಾಸವು  ಲಕ್ಷದಷ್ಟು ಹೆಚ್ಚೆಂದೂ ನಿದಿಧ್ಯಾಸಕ್ಕಿಂತ  ನಿವಿ೯ಕಲ್ಪ ಸಮಾಧಿಯು  ಅನಂತ ಗುಣಾಧಿಕವಾದುದೆಂದೂ  ತಿಳಿಯಬೇಕು.(ಪುಟ 17)

 

364)ನಿವಿ೯ಕಲ್ಪ ಸಮಾಧಿಯಿಂದ  ಬ್ರಹ್ಮತತ್ವವು ಸ್ಫುಟವಾಗಿ ಗೋಚರವಾಗುತ್ತದೆ.ಇದು ನಿಶ್ಚಯ.ಬೇರೆ ವಿಧದಿಂದ ಆಗುವುದಿಲ್ಲ.ಏಕೆಂದರೆ ಮನೋಗತಿಯು ಚಂಚಲವಾಗಿರುವುದರಿಂದ  ಬೇರೆ ಪ್ರತ್ಯಯಗಳೊಂದಿಗೆ ಮಿಶ್ರಿತವಾಗುತ್ತದೆ.(ಪುಟ18)

 

365)ಆದುದರಿಂದ ಯಾವಾಗಲೂ ಇಂದ್ರಿಯಗಳನ್ನು ನಿಯಮಿಸಿಕೊಂಡು ಶಾಂತಮನಸ್ಸುಳ್ಳವನಾಗಿ ಪ್ರತ್ಯಗಾತ್ಮನಲ್ಲಿ ಮನಸ್ಸನ್ನು ನಿಲ್ಲಿಸು.ಸದಾತ್ಮನು ಒಬ್ಬನೇ ಎಂದು ಸಾಕ್ಷಾತ್ಕರಿಸಿಕೊಂಡು ಅನಾದಿ ಸಿದ್ಧವಾದ ಅವಿದ್ಯೆಯಿಂದ  ಉಂಟಾದ ಮೋಹಾಂಧಕಾರವನ್ನು  ನಾಶಪಡಿಸಿಕೊ.(ಪುಟ 18)

 

366)ವಾಕ್ಸಂಯಮ, ಅಪರಿಗ್ರಹ,ಆಸೆಯಿಲ್ಲದಿರುವುದು, ಕಮ೯ವಿಲ್ಲದಿರುವುದು,ನಿತ್ಯವೂ ಏಕಾಂತದಲ್ಲಿರುವುದು-ಇವು ಯೋಗಕ್ಕೆ ಮೊದಲನೆಯ  ಬಾಗಿಲು.(ಪುಟ1೯೯)

 

367)ಏಕಾಂತವಾಸವು ಇಂದ್ರಿಯ ನಿಗ್ರಹಕ್ಕೆ ಕಾರಣವಾಗುವುದು;ಇಂದ್ರಿಯ ನಿಗ್ರಹವು ಚಿತ್ತದ ನಿರೋಧಕ್ಕೆ ಕಾರಣವಾಗಿರುವುದು.ಚಿತ್ತ ನಿರೋಧದಿಂದ  ಅಹಂವಾಸನೆಯು ಲಯವನ್ನು ಹೊಂದುತ್ತದೆ. ಅಹಂ ವಾಸನೆಯ ಲಯದಿಂದ  ಯೋಗಿಗೆ ಬ್ರಹ್ಮಾನಂರಸದ ಅನುಭವವು ಯಾವಾಗಲೂ ಆಗುತ್ತದೆ.ಆದುದರಿಂದ ಯಾವಾಗಲೂ ಮುನಿಯುಚಿತ್ತ ನಿರೋಧವನ್ನೇ ಪ್ರಯತ್ನದಿಂದ ಮಾಡಬೇಕು. (ಪುಟ 1೯೯)

 

368)ವಾಕ್ಕನ್ನು ಮನಸ್ಸಿನಲ್ಲಿ ನಿಯಮಿಸಿಕೊ.ಮನಸ್ಸನ್ನು ಬುದ್ಧಿಯಲ್ಲಿ ನಿಯಮಿಸಿಕೊ,ಬುದ್ಧಿಯನ್ನು

ಬುದ್ಧಿಸಾಕ್ಷಿಯಲ್ಲಿ ನಿಯಮಿಸಿಕೊ.ಬುದ್ಧಿಯನ್ನು ಮಹತ್  ಆತ್ಮನಲ್ಲಿ ಲಯಮಾಡಿಕೊಳ್ಳಬೇಕು.ಮಹತ್ ಆತ್ಮನನ್ನು  ಶಾಂತವಾದ ಆತ್ಮನಲ್ಲಿ ಲಯಮಾಡಿಕೊಳ್ಳಬೇಕು.

( ಈಶ್ಲೋಕದಲ್ಲಿ (ಕಠೋಪನಿಷತ್ತಿನ 1-3-13) ಭಾವವಿದೆ. ವಿವೇಕಿಯು  ವಾಕ್ಕನ್ನು ಮನಸ್ಸಿನಲ್ಲಿ ಲಯಮಾಡಿಕೊಳ್ಳಬೇಕು.ಮನಸ್ಸನ್ನು ಪ್ರಕಾಶರೂಪವಾದ ಬುದ್ಧಿಯಲ್ಲಿ  ಲಯಮಾಡಿಕೊಳ್ಳಬೇಕು.ಬುದ್ಧಿಯನ್ನು ಮಹತ್-ಆತ್ಮನಲ್ಲಿ ಲಯಮಾಡಿಕೊಳ್ಳಬೇಕು.ಮಹತ್-ಆತ್ಮನನ್ನು ಶಾಂತನಾದ ಆತ್ಮನಲ್ಲಿ ಲಯಮಾಡಿಕೊಳ್ಳಬೇಕು.'

ಇದು ಇತರ ಇಂದ್ರಿಯಗಳಿಗೆ ಉಪಲಕ್ಷಣವಾಗಿದೆ.

ಬುದ್ಧಿಯಿಂದ ಉಪಹಿತನಾದ  ಚೈತನ್ಯನಲ್ಲಿ ಎಂದರೆ ಜೀವಾತ್ಮನಲ್ಲಿ)(ಪುಟ200)

 

36) ಯೋಗಿಗೆ  ದೇಹ ಪ್ರಾಣ ಇಂದ್ರಿಯಗಳು  ಮನಸ್ಸು ಬುದ್ಧಿ ಮೊದಲಾದ  ಉಪಾಧಿಗಳಲ್ಲಿ ಯಾವು ಯಾವುದರೊಂದಿಗೆ ಅಂತಃಕರಣ ವೃತ್ತಿಯ ಸಂಬಂಧವಾಗುತ್ತದೆಯೊ  ಆಯಾ ಭಾವವುಂಟಾಗುತ್ತದೆ.

(ಯೋಗಿ ಮನಸ್ಸು ಸ್ಥೂಲ ಶರೀರದಲ್ಲಿ ನೆಲೆಗೊಂಡಿದ್ದರೆ  ಅವನು ದೇಹಾತ್ಮಭಾವವನ್ನು ಹೊಂದುತ್ತಾನೆ.ಹೀಗೆಯೇ ಆತ್ಮನಲ್ಲಿ ನೆಲೆಗೊಂಡರೆ ಆತ್ಮಭಾವವನ್ನು ಹೋಂದುತ್ತಾನೆ ಎಂದು ತಿಳಿದುಕೊಳ್ಳುತ್ತಾನೆ.(ಪುಟ 200)

 

370) ಅವುಗಳ ಪರಿಹಾರದಿಂದ  ಮುನಿಗೆ ಸವೇ೯ಂದ್ರಿಯಗಳ ಉಪರತಿ ರೂಪವುಳ್ಳ  ಸುಖವು ಚೆನ್ನಾಗಿ ಉಂಟಾಗುತ್ತತದೆ.ಸದಾನಂದ-ರಸಾನುಭವದ ಪರಿಪೂಣ೯ತೆಯು ಕಂಡುಬರುತ್ತದೆ.(ಪುಟ 201)  

 

62) ವೈರಾಗ್ಯದ ನಿರೂಪಣ:

 

371)ಒಳಗಿನ ತ್ಯಾಗ ಮತ್ತು ಹೊರಗಿನ ತ್ಯಾಗ-ಇವೆರಡೂ ವಿರಕ್ತನಾದವನಿಗೇ  ಯುಕ್ತವಾಗಿರುತ್ತವೆ.ವಿರಕ್ತನಾದವನೇ ಮೋಕ್ಷೇಚ್ಛೆಯಿಂದ  ಒಳಗಿನ ಮತ್ತು ಹೊರಗಿನ ಆಸಕ್ತಿಯನ್ನು ಬಿಡುತ್ತಾನೆ.(ಪುಟ201)

 

372)ಬ್ರಹ್ಮದಲ್ಲಿ ನೆಲೆಗೊಂಡಿರುವ ವಿರಕ್ತನಾದವನೇ  ಹೊರಗೆ ವಿಷಯಗಳ ಸಂಗವನ್ನೂ  ಒಳಗೆ ಅಹಂಕಾರಾದಿಗಳ ಸಂಗವನ್ನೂ ಬಿಡಲು ಸಮಥ೯ನಾಗುತ್ತಾನೆ.(ಪುಟ 201)

 

373)ಎಲೈ,ವಿವೇಕಿಯಾದ ಶಿಷ್ಯನೆ,ವೈರಾಗ್ಯವೂ ಜ್ಞಾನವೂ -ಪಕ್ಷಿಗೆ ಹೇಗೋ ಹಾಗೆ--ಮನುಷ್ಯನ ಎರಡು ರೆಕ್ಕೆಗಳೆಂದು ತಿಳಿ.ಇವೆರಡರಲ್ಲಿ ಒಂದಿಲ್ಲದಿದ್ದರೂ  ಮುಕ್ತಿ ಸೌಧದ ಮೇಲಕ್ಕೆ  ಹತ್ತುವುದು ಸಾಧ್ಯವಾಗುವುದಿಲ್ಲ.(ಪುಟ 202)

 

374)ಅತ್ಯಂತ ವೈರಾಗ್ಯವುಳ್ಳವನಿಗೇ ಸಮಾಧಿಯುಂಟಾಗುವುದು.ಸಮಾಧಿಯುಂಟಾದವನಿಗೇ  ದೃಢವಾದ ಜ್ಞಾನವುಂಟಾಗುತ್ತದೆ.ದೃಢವಾದ ಜ್ಞಾನವುಳ್ಳವನಿಗೇ ಸಂಸಾರ ಬಂಧನದಿಂದ ಬಿಡುಗಡೆಯಾಗುತ್ತದೆ.ಬಿಡುಗಡೆಯಾದವನಿಗೇ ನಿತ್ಯಾನಂದದ ಅನುಭವವಾಗುತ್ತದೆ.(ಪುಟ202)

 

375)ಚಿತ್ತವನ್ನು ಜಯಿಸಿಕೊಂಡವನಿಗೆ ವೈರಾಗ್ಯಕ್ಕಿಂತ ಉತ್ತಮವಾದ,ಸುಖವನ್ನುಂಟು ಮಾಡುವ  ವಸ್ತುವನ್ನು ನಾನು ಕಾಣೆನು.ಅದು ಅತ್ಯಂತ ಶುದ್ಧವಾದ ಜ್ಞಾನದಿಂದ ಕೂಡಿದ್ದರೆ ಸ್ವಾರಾಜ್ಯವನ್ನು ಕರೆಯುವ ಧೇನುವಾಗುವುದು.ಇದು ನಿತ್ಯಮುಕ್ತಿಯೆಂಬ ಯುವತಿಯ ಪ್ರಾಪ್ತಿಗೆ ದ್ವಾರವಾಗಿರುವುದರಿಂದ  ನೀನು ಎಲ್ಲಾ ವಿಷಯಗಳಲ್ಲಿಯೂ  ನಿಸ್ಪøಹನಾಗಿ ಶ್ರೇಯಸ್ಸಿಗೋಸ್ಕರ ಯಾವಾಗಲೂ ಸದ್ರೂಪನಾದ ಆತ್ಮನಲ್ಲಿ ಸಮಾಹಿತನಾಗು.(ಪುಟ 203)

 

376)ವಿµಸದೃಶಗಳಾದ  ವಿಷಯಗಳಲ್ಲಿ ಆಸೆಯನ್ನು ಕತ್ತರಿಸು. ಆಸೆಯೇ ಮೃತ್ಯುವಿಗೆ ದಾರಿಯು.ಜಾತಿ-ಕುಲ-ಆಶ್ರಮ-ಇವುಗಳಲ್ಲಿ ಅಭಿಮಾನವನ್ನು ಬಿಟ್ಟು ಕಾಮ್ಯಕಮ೯ಗಳನ್ನು ಅತಿದೂರದಿಂದಲೇ ತ್ಯಜಿಸು.ಮಿಥ್ಯಾರೂಪವಾದ ದೇಹಾದಿಗಳಲ್ಲಿ ಆತ್ಮಬುದ್ಧಿಯನ್ನು ತೊರೆದು ,ಆತ್ಮನಲ್ಲಿಯೇ ಸಮಾಹಿತಬಾಗು.ಏಕೆಂದರೆ ನೀನು ನಿಜವಾಗಿ ಸಾಕ್ಷಿಯಾಗಿರುವೆ,ಶುದ್ಧನಾಗಿರುವೆ.ಅದ್ವಿತೀಯನಾದ  ಪರಬ್ರಹ್ಮವಾಗಿರುವೆ.(ಪುಟ 204)

 

63) ಧ್ಯಾನದ ವಿಧಿ:

 

377) ಲಕ್ಷ್ಯವಾಗಿರುವ ಬ್ರಹ್ಮದಲ್ಲಿ  ಮನಸ್ಸನ್ನು ದೃಢವಾಗಿ ನೆಲೆಗೊಳಿಸಿ  ಬಾಹ್ಯೇಂದ್ರಿಯಗಳನ್ನು ತಮ್ಮ ತಮ್ಮ ಗೋಲಕದಲ್ಲಿಯೇ ನಿಲ್ಲಿಸಿ ಶರೀರವನ್ನು ನಿಶ್ಚಲವಾಗಿ ಮಾಡಿಕೊಂಡು ,ಶರೀರ-ರಕ್ಷಣೆಯನ್ನು ಉಪೇಕ್ಷಿಸಿ,ಬ್ರಹ್ಮಾತ್ಮೈಕ್ಯವನ್ನು ಹೊಂದಿ,ಬ್ರಹ್ಮ ಸ್ವರೂಪವೇ ಆಗಿರುವ ಅಖಂಡಾಕಾರ ವೃತ್ತಿಯಿಂದಯಾವಾಗಲೂ ನಿನ್ನಲ್ಲಿಯೇ ಬ್ರಹ್ಮಾನಂದರಸವನ್ನು  ಸಂತೋಷದಿಂದ ಕುಡಿ.ಶೂನ್ಯವಾದ ಇತರ ಭ್ರಮೆಗಳಿಂದ ಏನು ಪ್ರಯೋಜನ?(ಪುಟ205)

 

378)ಕಶ್ಮಲವೂ  ದುಃಖಕ್ಕೆ ಕಾರಣವೂ  ಆಗಿರುವ ಅನಾತ್ಮಚಿಂತನೆಯನ್ನು ತೊರೆದು  ಮುಕ್ತಿಗೆ ಕಾರಣನೂ ಆನಂದರೂಪನೂ  ಆದ ಆತ್ಮನನ್ನೇ ಧ್ಯಾನಿಸು.(ಪುಟ205)

 

37)ಸ್ವಯಂಜ್ಯೋತಿಯೂ ಸವ೯ಸಾಕ್ಷಿಯೂ  ಆದ ಆತ್ಮನು ಬುದ್ಧಿಯಲ್ಲಿ ಯಾವಾಗಲೂ ಪ್ರಕಾಶಿಸುತ್ತಾನೆ.ಅಸದ್ವಸ್ತುಗಳಿಗಿಂತ ಭಿನ್ನನಾಗಿರುವ ಇವನನ್ನು ಲಕ್ಷ್ಯವಾಗಿ ಮಾಡಿಕೊಂಡು  ಅಖಂಡಾಕಾರ ವೃತ್ತಿಯಿಂದ ಸ್ವಸ್ವರೂಪವೆಂದು ಭಾವಿಸು.(ಪುಟ306)

 

380)ವಿಚ್ಛೇದವಿಲ್ಲದ ಮತ್ತು ಬೇರೆ ಪ್ರತ್ಯಯವಿಲ್ಲದ  ವೃತ್ತಿಯಿಂದ ವಿಷಯೀಕರಿಸುತ್ತಾ  ಇವನೇ ಸ್ವಸ್ವರೂಪವೆಂದು  ಸ್ಫುಟವಾಗಿ ತಿಳಿದುಕೊಳ್ಳಬೇಕು(ಪುಟ206)

 

381) ಆತ್ಮನಲ್ಲಿ ಸ್ವಸ್ವರೂಪತ್ವವನ್ನು ದೃಢಪಡಿಸಿಕೊಳ್ಳುತ್ತ ,ಅಹಂಕಾರಾದಿಗಳಲ್ಲಿ ಆತ್ಮತ್ವವನ್ನು ಬಿಡುತ್ತ-ಒಡೆದುಹೋದ ಗಡಿಗೆಯೇ ಮೊದಲಾದವುಗಳಲ್ಲಿ ಹೇಗೋ ಹಾಗೆ-ಅವುಗಳಲ್ಲಿ ಉದಾಸೀನರಾಗಿರಬೇಕು.(ಪುಟ 206)

 

64)ಆತ್ಮದಶ೯ನ:

 

382)ಕೇವಲ ಜ್ಞಾನಸ್ವರೂಪನೂ  ಸಾಕ್ಷಿಯೂ ಆದ ಆತ್ಮನಲ್ಲಿಯೇ ವಿಶುದ್ಧವಾದ ಅಂತಃಕರಣವನ್ನು ನಿಲ್ಲಿಸಿ ,ಮೆಲ್ಲಮೆಲ್ಲಗೆ ಅದಕ್ಕೆ ನಿಶ್ಚಲತೆಯನ್ನು ಹೊಂದಿಸಿ ,ಅನಂತರ ಪೂಣ೯ವಾದ ಆತ್ಮನನ್ನೇ  ಸಾಕ್ಷಾತ್ಕರಿಸಬೇಕು.(ಪುಟ 207)

 

383)ತನ್ನ ಅಜ್ಞಾನದಿಂದ ಕಲ್ಪಿತವಾದ  ದೇಹ,ಇಂದ್ರಿಯ,ಮನಸ್ಸು,ಅಹಂಕಾರ ಮೊದಲಾದ ಯಾವ ಉಪಾಧಿಗಳೂ ಇಲ್ಲದ  ಅಖಂಡರೂಪನೂ  ಪೂಣ೯ನೂ ಆದ ಆತ್ಮನನ್ನು ಮಹಾಕಾಶzಂತೆ ಸಾಕ್ಷಾತ್ಕರಿಸಬೇಕು.(ಪುಟ207)

 

384) ಗಡಿಗೆ ಕಲಶ ಕಣಜ ಸೂಜಿ ಮೊದಲಾದ ಯಾವ ಉಪಾಧಿಗಳೂ ಇಲ್ಲದ  ಆಕಾಶವು ಒಂದೇ ಆಗಿರುವುದೇ ಹೊರತು ಬಗೆಬಗೆ ಯಾಗಿರುವುದಿಲ್ಲ.ಹಾಗೆಯೇ ಅಹಂಕಾರಾದಿಗಳಿಲ್ಲದ ಶುದ್ಧವಾದ ಪರಮಾಥ೯ವು ಒಂದೇ ಆಗಿರುತ್ತದೆ.(ಪುಟ208)

 

385)ಬ್ರಹ್ಮದಿಂದ ಹಿಡಿದು ಹುಲ್ಲುಕಡ್ಡಿಯ ವರೆಗಿರುವ ಉಪಾಧಿಗಳನ್ನೆಲ್ಲಾ ಕೇವಲ ಮಿಥ್ಯೆಯೇ ಆಗಿರುತ್ತದೆ.ಆದುದರಿಂದ ಒಂದೇ ರೂಪದಲ್ಲಿರುವ ಪೂಣ೯ವಾದ ತನ್ನ ಆತ್ಮವನ್ನು ಸಾಕ್ಷಾತ್ಕರಿಸಬೇಕು.(ಪುಟ 208)

 

386)ಯಾವುದು ಯಾವ ವಸ್ತುವಿನಲ್ಲಿ ಕಲ್ಪಿತವಾಗಿದೆಯೋ ಅದು ಅವೆರಡನ್ನೂ ವಿವೇಚಿಸಿದಾಗ ಅಧಿಷ್ಠಾನವಾಗಿರುವುದೇ ಹೊರತು ಅದಕ್ಕಿಂತ ಭಿನ್ನವಾಗಿರುವುದಿಲ್ಲ.ಭ್ರಾಂತಿಯು ನಾಶವಾದಾಗ ನೋಡಲ್ಪಟ್ಟ ಸಪ೯ದ ಯಥಾಥ೯ಸ್ಥಿತಿಯು ಹಗ್ಗವೇ ಆಗಿರುತ್ತದೆ.ಹಾಗೆಯೇ ಭ್ರಾಂತಿಯಿಂದ ಕಲ್ಪಿತವಾದ ವಿಶ್ವವು ಆತ್ಮಸ್ವರೂಪವೇ ಆಗಿರುತ್ತದೆ.(ಪುಟ20)

 

387)ತಾನೇ ಬ್ರಹ್ಮನು,ತಾನೇ ವಿಷ್ಣು,ತಾನೇ ಇಂದ್ರ,ತಾನೆ ಶಿವ,ತಾನೇ ವಿಶ್ವವೆಲ್ಲವೂ ಆಗಿರುತ್ತಾನೆ.ತನಗಿಂತ ಬೇರೇ ಯಾವುದೊಂದೂ ಇರುವುದಿಲ್ಲ.(ಪುಟ20)

(ಋಷಿ ವಾಮದೇವನು ಇದನ್ನು ಬ್ರಹ್ಮವೆಂದು ಸಾಕ್ಷಾತ್ಕರಿಸಿದಾಗ "ನಾನು ಮನು ಮತ್ತು ಸೂಯ೯"ಎಂದು ಅರಿತುಕೊಂಡನು.(ಬೃ..1-4-10))

 

288)ಒಳಗೂ ತಾನೇ, ಹೊರಗೂ ತಾನೇ, ಮುಂದೆಯೂ ತಾನೇ, ಹಿಂದೆಯೂ ತಾನೇ, ದಕ್ಷಿಣಕ್ಕೂ ತಾನೇ,ಉತ್ತರಕ್ಕೂ ತಾನೇ,ಹೀಗೆಯೇ ಮೇಲೆಯೂ ತಾನೇ, ಕೆಳಗೂ ತಾನೇ.

(ಮುಂದಿರು ಇದು ಅಮೃತವಾದ ಬ್ರಹ್ಮವೇ;ಹಿಂದೆಯೂ ದಕ್ಷಿಣಕ್ಕೂ ಉತ್ತರಕ್ಕೂ ಇರುವುದು ಬ್ರಹ್ಮವೇ.ಕೆಳಗೂ ಮೇಲೂ ಪಸರಿಸಿರುವುದು ಬ್ರಹ್ಮವೇ.(ಮುಂ..2-2-12)(ಪುಟ210)

 

28)ಹೇಗೆ ಅಲೆ ನೊರೆ ಸುಳಿ ಗುಳ್ಳೆ,ಮೊದಲಾದವೆಲ್ಲವೂ ನಿಜವಾದ ಸ್ಥಿತಿಯಿಂದ  ನೀರೇ ಆಗಿರುವುದೊ  ದೇಹವೇ ಮೊದಲಾಗಿ ಅಹಂಕಾರದವರೆಗಿನ ಇದೆಲ್ಲವೂ ಚಿತ್ ಸ್ವರೂಪವೇ.ಏಕರಸವಾದ ವಿಶುದ್ದ ಚಿನ್ಮಾತ್ರವೇ.(ಪುಟ210) 

 

30)ಪ್ರಕೃತಿಯ ಎಲ್ಲೆಯನ್ನು ಮೀರಿ ನಿಂತಿರುವವನಿಗೆ ವಾಕ್ ಮನಸ್ಸುಗಳಲ್ಲಿ ತೋರುತ್ತಿರುವ  

ಜಗತ್ತೆಲ್ಲವೂ ಸದ್ವಸ್ತುವೇ.ಸದ್ವಸ್ತುವಿಗಿಂತ ಬೇರೆಯಾದದ್ದು ಇಲ್ಲವೇ ಇಲ್ಲ.ಕಲಶ ಗಡಿಗೆ ಮಡಕೆ ಮೊದಲಾದವು ಮಣ್ಣಿಗಿಂತ ಬೇರೆಯಾಗಿ ತಿಳಿಯಲ್ಪಟ್ಟಿದೆಯೇನು?ಮಾಯೆಯೆಂಬ ಮದ್ಯದಿಂದ ಭ್ರಾಂತನಾದ ಮನುಷ್ಯನೇ 'ನೀನು' 'ನಾನು' ಎನ್ನುತ್ತಾನೆ.(ಪುಟ211)

 

31)'ಎಲ್ಲಿ ಬೆರೊಂದನ್ನು ನೋಡುವುದಿಲ್ಲವೊ'ಎಂಬ ಶ್ರುತಿಯು ಮಿಥ್ಯಾಭೂತವಾದ  ಅಧ್ಯಾಸವನ್ನು ಹೋಗಲಾಡಿಸುವುದಕ್ಕಾಗಿ ಕ್ರಿಯಾಪದಗಳನ್ನು ಒಟ್ಟುಗೂಡಿಸಿ (ಪುನಃ ಪುನಃ)ಅದ್ವೈತ ತತ್ವವನ್ನು ಹೇಳುತ್ತದೆ.

(ಎಲ್ಲಿ ಬೇರೊಂದನ್ನು ನೋಡುವುದಿಲ್ಲವೊ ಬೇರೊಂದನ್ನು ಕೇಳುವುದಿಲ್ಲವೊ,ಬೇರೊಂದನ್ನು ಅರಿಯುವುದಿಲ್ಲವೊ ಅದು ಭೂಮವು.ಯತ್ರ ನಾನ್ಯತ್ಪಶ್ಯತಿ ನಾನ್ಯಚ್ಛ್ರುಣೋತಿ ನಾನ್ಯದ್ವಿಜಾನಾತಿ ಭೂಮಾ(ಛಾಂ..7-24-1))(ಪುಟ 211)

 

32)ಆಕಾಶದಂತೆ ನಿಮ೯ಲವೂ  ನಿವಿ೯ಕಲ್ಪವೂ  ಪಾರವಿಲ್ಲದುದೂ ಸ್ಪಂದನವಿಲ್ಲದುದೂ  ನಿವಿ೯ಕಾರವೂ ಸ್ವಗತಭೇದರಹಿತವೂ ತನಗಿಂತ ಬ್ಏರೆಯಿಲ್ಲದುದೂ  ಅದ್ವಯವೂ ಆದ ಬ್ರಹ್ಮವು ತಾನೇ ಆಗಿರುತ್ತಾನೆ.ಇದಕ್ಕಿಂತ ಬೇರೆ ತಿಳಿಯಕಕ್ಕದ್ದು  ಯಾವುದುಂಟು?

(ಸವಾ೯ತ್ಮಕನಾದ  ಪರಮಾತ್ಮನನ್ನು ಅರಿತುಕೊಂಡಮೇಲೆ  ತಿಳಿಯತಕ್ಕದ್ದು ಏನೂ ಇರುವುದಿಲ್ಲ ಎಂಬುದು ಭಾವ)

 

33) ವಿಷಯದಲ್ಲಿ ಬಹುವಿಧವಾಗಿ ಹೇಳತಕ್ಕದ್ದೇನಿದೆ? ಜೀವನು ತಾನೇ ಬ್ರಹ್ಮವು.ವ್ಯಾಪಿಸಿರುವ ಜಗತ್ತೆಲ್ಲವೂ ಬ್ರಹ್ಮವೇ.ಬ್ರಹ್ಮವು ಅದ್ವಿತೀಯವು-ಎಂದು ಶ್ರುತಿಯು ಹೇಳುತ್ತದೆ.'ನಾನು ಬ್ರಹ್ಮವೇ'ಎಂದು ತಿಳಿದುಕೊಂಡಿರುವ  ಬುದ್ಧಿಯುಳ್ಳವರು  ಬಾಹ್ಯವಸ್ತುಗಳನ್ನು ಬಿಟ್ಟು ಸ್ಫುಟವಾಗಿ ಬ್ರಹ್ಮಸ್ವರೂಪವಾಗಿ ,ಸತತವೂ ಚಿದಾನಂದ ಸ್ವರೂಪದಿಂದಲೇ  ಇರುತ್ತಾರೆ.ಇದು ನಿಶ್ಚಯವು.(ಪುಟ 213)

 

34)ಮಲಮಯವಾದ  ಸ್ಥೂಲದೇಹದಲ್ಲಿ 'ನಾನು'ಎಂಬ ಬುದ್ಧಿಯಿಂದ  ಉತ್ಪನ್ನವಾದ ಆಸೆಯನ್ನು ತೊರೆ.ಅನಂತರ ವಾಯುವಿನಂತಿರುವ ಲಿಂಗ ಶರೀರದಲ್ಲಿಯೂ ಕೂಡ (ಆಶೆಯನ್ನು)ಬಲಾತ್ಕಾರದಿಂದ 

ತೊರೆ.ಶಾಸ್ತ್ರಗಳಿಂದ ಹೊಗಳಲ್ಪಟ್ಟ ಕೀತಿ೯ಯುಳ್ಳವನೂ  ನಿತ್ಯನೂ ಆನಂದ ಸ್ವರೂಪನೂ ಆದ ಪರಮಾತ್ಮನೇ ನಾನು ಎಂದು ನಿಶ್ಚಯಿಸಿಕೊಂಡು  ಬ್ರಹ್ಮರೂಪದಿಂದ ನಿಲ್ಲು.(ಪುಟ213)

 

35)ಮನುಷ್ಯನು ಎಲ್ಲಿಯವರೆಗೆ ಶವಾಕಾರವಾದ  ಶರೀರವನ್ನು ಸೇವಿಸುತ್ತಾನೆಯೊ ಅಲ್ಲಿಯವರೆಗೆ ಅಶುಚಿಯಾಗಿರುತ್ತಾನೆ.ಶತ್ರುಗಳಿಂದ ಕ್ಲೇಶವನ್ನು ಪಡೆಯುತ್ತಾನೆ ಮತ್ತು ಜನ್ಮ-ಮರಣ-ವ್ಯಾಧಿಗಳಿಗೆ  ಆಶ್ರಯನಾಗಿರುತ್ತಾನೆ.ಯಾವಾಗ ತನ್ನನ್ನು ಶುದ್ಧನೆಂದೂ ಅಚಲನೆಂದೂ ಶಿವಾಕಾರನೆಂದೂ  ತಿಳಿಯುತ್ತಾನೆಯೊ ಆಗ ಕ್ಲೇಶಗಳಿಂದ ಮುಕ್ತನಾಗುತ್ತಾನೆ.ಉಪನಿಷತ್ತೂ ಅದನ್ನೇ ಹೇಳುತ್ತದೆ.

('ಶರೀರವಿಲ್ಲದವನನ್ನು ಪ್ರಿಯಾಪ್ರಿಯಗಳು ಸೋಂಕುವುದೇ ಇಲ್ಲ'(ಛಾಂ..8-12-1)ಆಗ ಆತ್ಮನು ಅಶರೀರನೂ  ಅಮೃತನೂ ಪರಮಾತ್ಮನೂ  ಬ್ರಹ್ಮವೂ ತೇಜಸ್ಸೂ ಆಗುತ್ತಾನೆ.(ಬೃ..4-4-7)ಪುಟ214)

 

36)ತನ್ನಲ್ಲಿ ಆರೋಪಿಸಲ್ಪಟ್ಟ ಕಲ್ಪಿತ ವಸ್ತುಗಳೆಲ್ಲವನ್ನೂ ನಿರಾಕರಿಸುವುದರಿಂದ ತಾನೇ ಪೂಣ೯ವೂ ಅದ್ವಿತೀಯವೂ  ನಿಷ್ಕ್ರಿಯವೂ ಆದ ಪರಬ್ರಹ್ಮವಾಗುತ್ತಾನೆ.(ಪುಟ214)

 

37)ನಿವಿ೯ಕಲ್ಪವೂ ಬ್ರಹ್ಮವೂ ಆದ ಪರಮಾತ್ಮನಲ್ಲಿ ಚಿತ್ತವೃತ್ತಿಯು ಏಕಾಗ್ರತೆಯನ್ನು ಹೊಂದಿದಾಗ  ಯಾವುದೊಂದು ಭೇದವೂ  ಕಂಡುಬರುವುದಿಲ್ಲ.ಅನಂತರ ಅಥ೯ವಿಲ್ಲದ  ಬರಿಯ ಶಬ್ದವೇ ಉಳಿದುಕೊಳ್ಳುತ್ತದೆ.

(ಹೊರಗಡೆ ವಸ್ತುವಿಲ್ಲದಿರುವಾಗ ಅಥ೯ವನ್ನು ಅವಲಂಬಿಸಿರುವ ಶಬ್ದವು ವಿಕಲ್ಪವೆನಿಸುವುದು(ಪಾತಂಜಲ ಯೋಗ ಸೂತ್ರ1-)(ಪುಟ 215)

 

38) ಏಕವಸ್ತುವಿನಲ್ಲಿಯೇ   ಪ್ರಪಂಚವೆಂಬ ಭಾದವು ಅಸದ್ವಸ್ತುವಿನಂತೆ ಇರುವುದು.ನಿವಿ೯ಕಾರವೂ ನಿರಾಕಾರವೂ  ನಿವಿ೯ಶೇಷವೂ  ಆದ ವಸ್ತುವಿನಲ್ಲಿ ಭೇದವೆಲ್ಲಿಯದು?(ಪುಟ215)

 

3೯೯)ನಿವಿ೯ಕಾರವೂ ನಿರಾಕಾರವೂ ನಿವಿ೯ಶೇಷವೂ  ಆದ ದ್ರಷ್ಟø ದಶ೯ನ ದೃಶ್ಯ ಮೊದಲಾದ ಭಾವಗಳಿಲ್ಲದ  ಏಕವಸ್ತುವಿನಲ್ಲಿ ಭೇದವೆಲ್ಲಿಯದು?(ಪುಟ216)

 

400)ನಿವಿ೯ಕಾರವೂ  ನಿರಾಕಾರವೂ  ನಿವಿ೯ಶೇಷವೂ  ಆದ ಮತ್ತು ಪ್ರಳಯಕಾಲದ  ಸಮುದ್ರದಂತೆ ಅತ್ಯಂತ ಪರಿಪೂಣ೯ವಾಗಿರುವ ಏಕವಸ್ತುವಿನಲ್ಲಿ ಭೇದವೆಲ್ಲಿಯದು?(ಪುಟ216)

 

401)ಬೆಳಕಿನಲ್ಲಿ ಕತ್ತಲೆಯು ಅಡಗಿಹೋಗುವಂತೆ  ಭ್ರಾಂತಿಕಾರಣವು ಯಾವ ಪರಮಾತ್ಮನಲ್ಲಿ ಲಯವಾಗುವುದೊ  ಅದ್ವಿತೀಯವಾದ  ವಿವಿ೯ಶೇಷವಾದ  ಪರತತ್ವದಲ್ಲಿ ಭೇದವು ಎಲ್ಲಿಯದು?

 

402)ಅದ್ವಿತೀಯ ಸ್ವರೂಪನಾದ  ಪರತತ್ವದಲ್ಲಿ  ಭೇದದ ಸುದ್ಧಿಯು  ಹೇಗೆ ಉಂಟಾದೀತು?ಕೇವಲ ಆನಂದ ಸ್ವರೂಪವಗಿರುವ  ಸುಷುಪ್ತಿಯಲ್ಲಿ  ಭೇದವನ್ನು ಯಾರುನೋಡಿರುವರು?(ಪುಟ217)

 

403)ಪರತತ್ವವನ್ನು ಅರಿತುಕೊಳ್ಳವುದಕ್ಕೆ ಮೊದಲೇ ಸತ್-ಸ್ವರೂಪವೂ ನಿವಿ೯ಕಲ್ಪವೂ ಆದ ಬ್ರಹ್ಮದಲ್ಲಿ  ಪ್ರಪಂಚವು ಇರಲೇ ಇಲ್ಲ.ಹಗ್ಗದಲ್ಲಿ ಹಾವೂ ಬಿಸಿಲಕುದುರೆಯಲ್ಲಿ ನೀರಿನ ಹನಿಯೂ  ಮೂರು ಕಾಲದಲ್ಲಿಯೂ ಕಂಡುಬರುವುದಿಲ್ಲ.(ಪುಟ217)

 

404)' ದ್ವೈತವು ಮಾಯಾಮಾತ್ರವೇ,ಪರಮಾಥ೯ವಾಗಿ ಅದ್ವೈತವೇ'ಎಂದು ಶ್ರುತಿಯು ಹೇಳುತ್ತದೆ.ಸುಷುಪ್ತಿಯಲ್ಲಿ ಇದು ನೇರವಾಗಿಯೇ ಅನುಭವಕ್ಕೆ ಬರುತ್ತದೆ.(ಪುಟ218)

 

405)'ಆರೋಪಿತವಾದ ವಸ್ತುವು ತನ್ನ ಆಶ್ರಯಕ್ಕಿಂತ  ಬೇರೆಯಲ್ಲ' ಎಂಬುದನ್ನು ಪ್ರಾಜ್ಞರು  ಹಗ್ಗದಲ್ಲಿ ಕಂಡುಬರುವ ಹಾವೇ ಮೊದಲಾದ ಕಡೆಯಲ್ಲಿ ನೋಡಿರುತ್ತಾರೆ. ಭೇದಕ್ಕೆ ಭ್ರಾಂತಿಯೇ ಕಾರಣವು.(ಪುಟ218)

 

406) ಭೇದಕ್ಕೆ ಚಿತ್ತವೇ ಮೂಲ ಕಾರಣವಾಗಿದೆ.ಚಿತ್ತವಿಲ್ಲದಿದ್ದರೆ ಯಾವಭೇದವೂ ಇರುವುದಿಲ್ಲ.

ಆದುದರಿಂದ ನಿನ್ನ ಸ್ವರೂಪಭೂತನಾದ  ಪರಮಾತ್ಮನಲ್ಲಿ ಚಿತ್ತವನ್ನು ನೆಲೆಗೊಳಿಸು.(ಪುಟ218)

 (ಭ್ರಾಂತಿಯನ್ನು ತೊಲಗಿಸಿಕೊಳ್ಳುವುದಕ್ಕೆ  ಇಲ್ಲಿ ಉಪಾಯವನ್ನು ಹೇಳಿದೆ)

 

407)ನಿತ್ಯಜ್ಞಾನಸ್ವರೂಪವೂ ,ಕೇವಲಾನಂದ ಸ್ವರೂಪವೂ ನಿರುಪಮವೂ ವಿಶ್ವಾತೀತವೂ ನಿಷ್ಕ್ರಿಯವೂ ಅವಧಿಯಿಲ್ಲದ ಆಕಾಶದಂತಿರುವುದೂ  ನಿಷ್ಕಲವೂ ನಿವಿ೯ಕಲ್ಪವೂ  ಅನಿವಾ೯ಚ್ಯವೂ  ಆದ ಪೂಣ೯ಬ್ರಹ್ಮವನ್ನು  ಜ್ಞಾನಿಯು ಸಮಾಧಿಯ ಮೂಲಕ  ಹೃದಯಾಕಾಶದಲ್ಲಿ ಸಾಕ್ಷಾತ್ಕರಿಸುತ್ತಾನೆ.(ಪುಟ(ಪುಟ 21)

 

67) ಆತ್ಮಜ್ಞಾನದ ಫಲ:

 

408)ಕಾಯ೯ಕಾರಣ ಭಾವಗಳಿಲ್ಲದ ಕಲ್ಪನಾತೀತ ಸ್ವಭಾವವುಳ್ಳ,ಏಕರಸವಾದ,ಅನುಪಮವಾದ,ಪ್ರಮಾಣಕ್ಕೆ ಗೋಚರವಲ್ಲದ, ವೇದವಾಕ್ಯಗಳಿಂದ ಸಿದ್ಧವಾದ,ಯಾವಾಗಲೂ 'ನಾನು'ಎಂಬ ಜ್ಞಾನದಿಂದ ಪ್ರಸಿದ್ಧನಾದ

ಪೂಣ೯ಬ್ರಹ್ಮವನ್ನು ಜ್ಞಾನಿಯು  ಸಮಾಧಿಯ ಮೂಲಕ ಹೃದಯಾಕಾಶದಲ್ಲಿ  ಸಾಕ್ಷಾತ್ಕರಿಸುತ್ತಾನೆ.(ಪುಟ220)

 

40)ಮುಪ್ಪಿಲ್ಲದ,ಮರಣವಿಲ್ಲದ,ತೋಕೆ೯ಗಳು ಅಡಗಿಹೋಗಿರುವ  ವಸ್ತುವಿನ ಸ್ವರೂಪವಾಗಿರುವ,ಶಾಂತವಾದ ಸಮುದ್ರದಂತಿರುವ,ನಾಮರಹಿತವಾದ,ನಿಗು೯ಣವಾದ,ನಿವಿ೯ಕಾರವಾದ,ಶಾಶ್ವತವಾದ ಶಾಂತವಾದ,ಅದ್ವಿತೀಯವಾದ  ಪೂಣ೯ಬ್ರಹ್ಮವನ್ನು ಜ್ಞಾನಿಯು ಸಮಾಧಿಯ ಮೂಲಕ  ಹೃದಯಾಕಾಶದಲ್ಲಿ ಸಾಕ್ಷಾತ್ಕರಿಸುತ್ತಾನೆ.(ಪುಟ220)

 

410)ಸ್ವರೂಪದಲ್ಲಿ ಅಂತಃಕರಣವನ್ನು ನೆಲೆಗೊಳಿಸಿ ಅಖಂಡವಾದ ವೈಭವವುಳ್ಳಾತ್ಮನನ್ನು ಸಾಕ್ಷಾತ್ಕರಿಸು.ಸಂಸಾರವಾಸನೆಯಿಂದ ವಾಸಿತವಾಗಿರುವ  ಬಂಧನವನ್ನು ಕತ್ತರಿಸು.ಪ್ರಯತ್ನದಿಂದ ಪುರುಷತ್ವವನ್ನು ಸಾಥ೯ಕಗೊಳಿಸಿಕೊ.(ಪುಟ221)   

 

411)ಸಮಸ್ತ ಉಪಾಧಿಗಳಿಂದಲೂ ಮುಕ್ತನಾದ ,ಸಚ್ಚಿದಾನಂದ ಸ್ವರೂಪನೂ  ಅದ್ವಿತೀಯನೂ ಆಗಿರುವ,ನಿನ್ನಲ್ಲಿರುವ ಆತ್ಮನನ್ನು ಭಾವಿಸು.ಹಾಗಾದರೆ  ಪುನಃ ಸಂಸಾರಮಾಗ೯ದಲ್ಲಿ  ಪ್ರಯಾಣಮಾಡಲು  ನೀನು ಬರುವುದಿಲ್ಲ.

('ಅವನು ಹಿಂತಿರುಗುವುದಿಲ್ಲ' ಪುನರಾವತ೯ತೇ(ಛಾಂ..8-15-1)'ಆದರೆ ಅಜು೯ನ ,ನನ್ನನ್ನು ಹೊಂದಿದರೆ ಪುನಜ೯ನ್ಮವಿಲ್ಲ.ಮಾಮುಪೇತಷು ಕೌಂತೇಯ ಪುನಜ೯ನ್ಮ ವಿದ್ಯತೇ!(ಗೀತಾ 8-16)

ಎಂದು ಶ್ರುತಿ ಸ್ಮøತಿಗಳು ಹೇಳುತ್ತವೆ.(ಪುಟ221)

 

412)ಪ್ರಾರಬ್ಧ ಕಮ೯ವನ್ನು ಅನುಸರಿಸುತ್ತಿರುವುದರಿಂದ ಮನುಷ್ಯನು ನೆರಳಿನಂತೆ ಆಭಾಸರೂಪದಿಂದ 

ಕಂಡುಬರುತ್ತಿರುವ ಶವದಂತೆ ದೂರ ತ್ಯಜಿಸಿದಮೇಲೆ ,ಮಹಾತ್ಮನಾದವನು  ಪುನಃ ಅದನ್ನು ಸ್ವೀಕರಿಸುವುದಿಲ್ಲ.(ಪುಟ222)

 

413)ನಿತ್ಯ-ನಿಮ೯ಲ-ಜ್ಞಾನಾನಂದ ರೂಪನಾದ  ಸೂಲ್ಥದೇಹವನ್ನು ಬಹು ದೂರದಲ್ಲೇ ತೊರೆ.ಅನಂತರ ಪುನಃ ಇದನ್ನು ಸ್ಮರಿಸಬಾಡ.ಏಕೆಂದರೆ ವಾಂತಿ ಮಾಡಿದ  ವಸ್ತುವನ್ನು ಸ್ಮರಿಸಿದಾಗ ಅಸಹ್ಯವಾಗುತ್ತದೆ.

 

414)ಬ್ರಹ್ಮಜ್ಞಾನಿಗಳಲ್ಲಿ ಶ್ರೇಷ್ಠನಾದವನು  ಶರೀರವನ್ನು ಕಾರಣ ಸಹಿತವಾಗಿ ಸತ್ಸವರೂಪನಾದ ನಿವಿ೯ಕಲ್ಪ ಬ್ರಹ್ಮವೆಂಬ ಅಗ್ನಿಯಲ್ಲಿ ದಹಿಸಿ ಅನಂತರ ತಾನು ನಿತ್ಯಶುದ್ಧ ಜ್ಞಾನಾನಂದ ಸ್ವರೂಪದಿಂದ ಇರುತ್ತಾನೆ.(ಪುಟ223)

 

415)ಗೋವಿನ ಕೊರಳಲ್ಲಿರುವ ಮಾಲೆಯಂತೆ ಪ್ರಾರಬ್ಧವೆಂಬ ದಾರದಿಂದ ಪೋಣಿಸಲ್ಪಟ್ಟ ಶರೀರವು ಹೋಗಲಿ ಅಥವಾ ಇರಲಿ ಆನಂದ ಸ್ವರೂಪನಾದ  ಬ್ರಹ್ಮದಲ್ಲಿ ಮನೋವೃತ್ತಿಯನ್ನು ಲಯಮಾಡಿಕೊಂಡಿರುವ ತತ್ವ ಜ್ಞಾನಿಯು ಮತ್ತೆ ಅದನ್ನು ನೋಡುವುದಿಲ್ಲ.

(ಗೋವಿಕೊರಳಿಗೆ ಯಾರಾದರೂ ಮಾಲೆಯನ್ನು ಹಾಕಿದರೆ  ಅದು ತೀರಾ ಉದಾಸೀನವಾಗಿರುವಂತೆ  ಬ್ರಹ್ಮಜ್ಞಾನಿಯು ತನ್ನ ಶರೀರದ ವಿಷಯದಲ್ಲಿ ಉದಾಸೀನನಾಗಿರುತ್ತಾನೆ(ಪುಟ223)

 

416)ತತ್ವಜ್ಞಾನಿಯು ಅಖಂಡಾನಂದ -ಸ್ವರೂಪನಾದ ಆತ್ಮನನ್ನು ನನ್ನ ಸ್ವರೂಪವೆಂದೇ  ಅರಿತುಕೊಂಡ ಮೇಲೆ ಯಾವುದನ್ನು ಬಯಸುವವನಾಗಿ ಯಾರ ಪ್ರಯೋಜನಕ್ಕಾಗಿ ದೇಹವನ್ನು ಪೋಷಿಸಿಯಾನು?

(ಯಾವ ಪ್ರಯೋಜನಕ್ಕಾಗಿ ಶರೀರದ ರೋಗವನ್ನು ಅನುಸರಿಸಿ ದುಃಖ ಪಡುವನು?ಕಿಮಿಚ್ಛನ್ ಕಸ್ಯ ಕಾಮಾಯ  ಶರೀರಮನುಸಂಜ್ವರೇತ್(ಬೃ..4-8-12)(ಪುಟ 224)

 

417)ಆತ್ಮಜ್ಞಾನ ನಿಷ್ಠನಾದ  ಜೀವನ್ಮುಕ್ತನಾದ ಯೋಗಿಗೆ  ಇದು ಫಲವು;ಹೊರಗೂ ಒಳಗೂ ಯಾವಾಗಲೂ ಮನಸ್ಸಿನಲ್ಲಿ  ಆನಂದರಸವನ್ನು ಆಸ್ಆ್ವದಿಸುತ್ತಾನೆ.(ಪುಟ224)

 

418)ವೈರಾಗ್ಯಕ್ಕೆ ಜ್ಞಾನವೇ ಫಲವು.ಜ್ಞಾನಕ್ಕೆ ಉಪರತಿಯೇ ಫಲವು.ಆತ್ಮಾನಂದದ ಅನುಭವದಿಂದ  ಶಾಂತಿಯು ಉಂಟಾಗುತ್ತದೆ. ಈಶಾಂತಿಯೇ ಉಪರತಿಗೆ ಫಲವು.

(ಉಪರತಿ ಎಂದರೆ ಬಾಹ್ಯವಿಷಯಗಳಿಂದ  ಚಿತ್ತವೃತ್ತಿಗಳನ್ನು ಹಿಂತಿರುಗಿಸಿಕೊಳ್ಳುವಿಕೆ) (ಪುಟ 224)

 

41)ಇವುಗಳಲ್ಲಿ ಮುಂದು ಮುಂದಿನದು ಸಿದ್ಧಿಸದೆ ಹೋದರೆ ಹಿಂದುಹಿಂದಿನದು ನಿಷ್ಫಲವಾಗುವುದು.ಸಮಸ್ತಕಾಯ೯ಗಳಿಂದ ಹಿಂತಿರುಗುವುದು,ಪರಮ ತೃಪ್ತಿ,ಅಸದೃಶವಾದ ಆನಂದ-ಇವು ಸ್ವಾಭಾವಿಕವಾಗಿಯೇ ಉಂಟಾಗುತ್ತವೆ.

(ಜ್ಞಾನವು ಸಿದ್ದಿಸಿದರೆ ವೈರಾಗ್ಯವಿದ್ದರೂ ನಿಷ್ಫಲವಗುವುದು.ಉಪರತಿಯು ಸಿದ್ಧಿಸದಿದ್ದರೆ  ಜ್ಞಾನವಿದ್ದರೂ ನಿಷ್ಫಲವಾಗುವುದು.ಶಾಂತಿಯು ಸಿದ್ಧಿಸದಿದ್ದರೆ ಉಪರತಿಯಿದ್ದರೂ ನಿಷ್ಫಲವಾಗುವುದು)(ಪುಟ225) 

 

420) ದುಃಖಗಳು ಪ್ರಾಪ್ತವಾದಾಗ  ಉದ್ವೇಗಪಡದಿರುವುದೇ  ಜ್ಞಾನದ ಮಖ್ಯವಾದ ಫಲವು.ಮನುಷ್ಯನು ಭ್ರಾಂತಿಯ ಕಾಲದಲ್ಲಿ  ಯಾವ ಅಸಹ್ಯಕರವಾದ  ನಾನಾಕಮ೯ವನ್ನು ಮಾಡಿದ್ದನೊ ಅದನ್ನು ಅನಂತರ ವಿವೇಕವಿರುವಾಗಲೂ ಹೇಗೆ ತಾನೇ ಮಾಡಿಯಾನು?

 

421)ಅಸದ್ವಸ್ತುವಿನಿಂದ ಹಿಂತಿರುಗುವುದೇ ಜ್ಞಾನದ ಫಲವು.ಅಸದ್ವಸ್ತುವಿನ ಕಡೆಗೆ ನುಗ್ಗುವುದೇ ಅಜ್ಞಾನದ ಫಲವು.ಬಿಸಿಲ್ಗುದುರೆ ಮೊತಾದವುಗಳನ್ನು ಅರಿತವರಲ್ಲಿ ಅಥವಾ ಅರಿಯದವರಲ್ಲಿ ಇದು ಕಂಡು ಬರುತ್ತದೆ.                                         

ಹಾಗಿಲ್ಲದಿದ್ದರೆ ಜ್ಞಾನಿಗಳಿಗೆ ಇದಕ್ಕಿಂತಲೂ ದೃಷ್ಟಫಲವು ಯಾವುದಿರುವುದು?

(ಬಿಸಿಲ್ಗುದುರೆಯನ್ನು  ಅರಿತವನಿಗೆ ಯಾವ ಭ್ರಮೆಯೂ ಉಂಟಾಗುವುದಿಲ್ಲ.ಅದನ್ನು ಅರಿಯದವನು ಮಾತ್ರ ನೀರಿದೆಯೆಂದು ಭಾವಿಸಿಕೊಂಡು ನುಗ್ಗುತ್ತಾನೆ.ಹಾಗೆಯೇ ಜಗತ್ತು ಜ್ಞಾನಿಗೆ ಕಾಣಿಸಿಕೊಂಡರೂ  ಅವರು ಅದರ ವಿಲಾಸಗಳಿಂದ ಮೋಹಿತರಾಗುವುದಿಲ್ಲ.ಆದರೆ ಲೌಕಿಕನಿಗೆ ಹಾಗಾಗುವುದಿಲ್ಲ).(ಪುಟ226)

 

422) ಅಜ್ಞಾನವೆಂಬ ಹೃದಯಗ್ರಂಥಿಯು ಸಂಪೂಣ೯ವಾಗಿ ನಾಶವಾಗಿದ್ದರೆ ಯಾವುದನ್ನೂ ಇಚ್ಛಿಸದವನಿಗೆ ವಿಷಯವು ತಾನಾಗಿಯೇ ಪ್ರವೃತ್ತಿಗೆ ಕಾರಣವಾಗುತ್ತದೆಯೇ?(ಪುಟ226)

 

423)ಯಾವಾಗ ವಿಷಯ ಭೋಗದಲ್ಲಿ  ವಾಸನೆಯು ಉಂಟಾಗುವುದಿಲ್ಲವೋ  ಆಗ ವೈರಾಗ್ಯದ ಎಲ್ಲೆಯನ್ನು ಸೇರಿದಂತಾಗುವುದು.ಅಹಂಭಾವವು ಉಂಟಾಗದಿರುವುದೇ ಜ್ಞಾನದ ಕೊನೆಯ ಎಲ್ಲೆ.ಲಯವಾದ ಅಂತಃಕರಣವೃತ್ತಿಯು  ಪುನಃ ಉತ್ಪನ್ನವಾಗದಿರುವುದೇ  ಉಪರತಿಯ ಎಲ್ಲೆಯು.

(ಬ್ರಹ್ಮಲೋಕವನ್ನು ತೃಣವೆಂದು ಭಾವಿಸಿವುದು ವೈರಾಗ್ಯದ ಎಲ್ಲೆಯು. ದೇಹಾತ್ಮದ ಐಕ್ಯದಂತೆ ಜೀವ-ಪರಮಾತ್ಮರ ಐಕ್ಯವಾದಾಗ ಜ್ಞಾನವು ಸಮಾಪ್ತಿಯನ್ನು ಹೊಂದುತ್ತದೆ.ಸುಷುಪ್ತಿಯಲ್ಲಿರುವಹಾಗೆ ದ್ವೈತ ಪ್ರಪಂಚವು ಲಯವಾಗುವುದು ಉಪರತಿಯ ಎಲ್ಲೆಯು.(ಪಂಚದಶಿಯ ಚಿತ್ರದೀಪ ಪ್ರಕರಣ285-286)

(ಪುಟ227)

 

68)ಜೀವನ್ಮುಕ್ತನ ಲಕ್ಷಣ:

 

424) ಬ್ರಹ್ಮ ರೂಪದಿಂದಲೇ ಯಾವಾಗಲೂ  ಇರುವುದರಿಂದ ಬಾಹ್ಯ ವಿಷಯಗಳ ಜ್ಞಾªನವೇ ಇಲ್ಲದವನಾಗಿ ,ನಿದ್ರಿಸುತ್ತಿರುವವನಂತೆ,ಮಗುವಿನಂತೆ,ಇತರರಿಂದ ಕೊಡಲ್ಪಟ್ಟ ಭೋಗವಸ್ತುಗಳನ್ನು ಅನುಭವಿಸುತ್ತಾ, ಜಗತ್ತನ್ನು ಕನಸಿನಲ್ಲಿ ಕಾಣುವ ಲೋಕದಂತೆ ನೋಡುತ್ತಾ,ಯಾವಾಗಲೋ ಒಮ್ಮೆ ಬಹಿಮು೯ಖ ಜ್ಞಾನವುಳ್ಳವನಾಗಿ  ಅನಂತ-ಪುಣ್ಯ ಫಲವನ್ನು ಅನುಭವಿಸುವ  ಯಾವನೊ ಒಬ್ಬನು ಇರುತ್ತಾನೆ.ಭೂಲೋಕದಲ್ಲಿ ಅವನೇ ಧನ್ಯನು ಮತ್ತು ಮಾನ್ಯನು.(ಪುಟ228)

 

425)ಯಾವನು ಬ್ರಹ್ಮದಲ್ಲಿಯೇ ಅಂತಃಕರಣವನ್ನು ಲಯಮಾಡಿಕೊಂಡು ಸವ೯ವಿಕಾರ ರಹಿತನಾಗಿ  ಯಾವಾಗಲೂ ಆನಂದವನ್ನು ಹೊಂದಿರುವನೊ  ಯತಿಯು ಸ್ಥಿತಪ್ರಜ್ಞನು.(ಪುಟ228)

 

426) (ತತ್,ತ್ವಂ ಎಂಬ ಪದಗಳಿಗೆ ವಾಚ್ಯವಾಗಿರುವ ಪರಮಾತ್ಮ-ಜೀವಾತ್ಮ ಇವರನ್ನು ಶೋಧಿಸಿ  ಐಕ್ಯಭಾವವನ್ನು ಗ್ರಹಿಸುವ ,ನಿವಿ೯ಕಲ್ಪವೂ  ಚಿನ್ಮಾತ್ರವೂ ಆದ ಚಿತ್ತವೃತ್ತಿಯು ಪ್ರಜ್ಞೆ ಎಂದು ಹೇಳಲ್ಪಡುತ್ತದೆ.ಯಾವನಿಗೆ ಪ್ರಜ್ಞೆಯು ಸ್ಥಿರವಾಗಿರುವುದೊ  ಅವನು ಸ್ಥಿತ ಪ್ರಜ್ಞನು ಎನಿಸುತ್ತಾನೆ(ಪು22)

 

427)ಯಾವನ ಪ್ರಜ್ಞೆಯು ಸ್ಥಿತವಾಗಿರುವುದೊ  ಯಾವನ ಆನಂದವು ನಿರಂತರವಾಗಿರುವುದೊ  ಯಾವನಿಗೆ ಪ್ರಪಂಚವು ಮರೆತುಹೋದಂತೆ ಆಗಿರುವುದೊ ಅವನು ಜೀವನ್ಮುಕ್ತನು ಎನಿಸುತ್ತಾನೆ.(ಪುಟ 22)

 

428)ಯಾವನು ತನ್ನ ಬುದ್ಧಿವೃತ್ತಿಯನ್ನು  ಪರಮಾತ್ಮನಲ್ಲಿ ಲಯಗೊಳಿಸಿಕೊಂಡಿದ್ದರೂ ಜಾಗ್ರದವಸ್ಥೆಯ

ಧಮ೯ಗಳಿಂದ ಬಿಡಲ್ಪಟ್ಟು ಎಚ್ಚೆತ್ತಿರುವನೊ,ಯಾವನ ಜನ್ಮವು ವಿಷಯವಾಸನಾ ರಹಿತವಾಗಿರುವುದೊ  ಅವನು ಜೀವನ್ಮುಕ್ತನು ಎನಿಸುತ್ತಾನೆ.

(ಇಂದ್ರಿಯಗಳ ಮೂಲಕ ವಿಷಯಗಳನ್ನು ಗ್ರಹಿಸುವುದು ಜಾಗ್ರದವಸ್ಥೆಯ ಲಕ್ಷಣವು.)(ಪುಟ 230)

 

42)ಯಾವನು ಸಂಸಾರದ ಚಿಂತೆಯನ್ನೆಲ್ಲಾ ಕಳೆದುಕೊಂಡು,ಅವಯವಗಳುಳ್ಳವನಾಗಿದ್ದರೂ  ಅವಯವರಹಿತನಂತಿರುವನೊ,ಚಿತ್ತವುಳ್ಳವನಾಗಿದ್ದರೂ ಚಿತ್ತವಿಲ್ಲದವನಂತಿರುವನೊ, ಅವನು ಜೀವನ್ಮುಕ್ತನು ಎನಿಸುವನು.

(ಹೊರಗಿನ ಚಿತ್ತವೃತ್ತಿಗಳೆಲ್ಲವೂ ಲಯವಾಗಿರುವುದರಿಂದ  ಮುಗ್ಧನಂತೆ ಕಂಡುಬರುವನು ಅಥವಾ ರಾಗಾದಿ ಶೂನ್ಯನಾಗಿರುವನು)(ಪುಟ 230).

 

430)ನೆರಳಿನಂತೆ ದೇಹವು  ತನ್ನನ್ನು ಅನುಸರಿಸಿಕೊಂಡೇ ಇದ್ದರೂ 'ನಾನು ನನ್ನದು'ಎಂಬ ಭಾವವಿಲ್ಲದಿರುವುದೇ  ಜೀವನ್ಮುಕ್ತನ ಲಕ್ಷಣವು.

(ರಾಗದ್ವೇಷಗಳು,ಜರಾಮರಣಾದಿಗಳು, ಇವೇ ಮೊದಲಾದ ವಿಕಾರಗಳು  ಸ್ಥೂಲದೇಹದ ಅಭಿಮಾನದಿಂದ  ಉಂಟಾಗಿರುವುದರಿಂದ  ಅಂಥ ಅಭಿಮಾನವಿಲ್ಲದಿದ್ದರೆ  ನಿವಿ೯ಕಾರತ್ವವು ಸಿದ್ಧಿಸುವುದೆಂಬುದು

ಸ್ಪಷ್ಟವಾಗಿದೆ.)(ಪುಟ230) 

 

431)ಕಳೆದು ಹೋದದ್ದನ್ನು ಸ್ಮರಿಸಿಕೊಳ್ಳದಿರುವುದು,ಮುಂದೆ ಒದಗುವುದನ್ನು ಯೋಚಿಸದಿರುವುದು,ಈಗ ಒದಗಿರುವುದರಲ್ಲಿಯೂ ಉದಾಸೀನನಾಗಿರುವುದು-ಇವುಗಳೇ ಜೀವನ್ಮುಕ್ತನ ಲಕ್ಷಣಗಳು.(ಪುಟ231)

 

432)ಗುಣದೋಷಗಳಿಂದ ಕೂಡಿ  ಸ್ವಭಾವದಿಂದಲೇ ವಿಚಿತ್ರವಾಗಿರುವ  ಜಗತ್ತಿನಲ್ಲಿ ಎಲ್ಲೆಲ್ಲಿಯೂ ಸಮಾನದೃಷ್ಟಿಯಿಂದ ನೋಡುವುದು  ಜೀವನ್ಮುಕ್ತನ ಲಕ್ಷಣವು.

(ಎಲ್ಲವೂ ಅವಿದ್ಯಾತ್ಮಕವಾದುದರಿಂದ  ಜೀವನ್ಮುಕ್ತನು ಯಾವುದನ್ನೂ  ದೋಷದೃಷ್ಟಿಯಿಂದ ಖಂಡಿಸುವುದಿಲ್ಲ.ಗುಣದೃಷ್ಟಿಯಿಂದ ಸ್ವೇಕರಿಸುವುದಿಲ್ಲ)ಪುಟ231)

 

433)ಇಷ್ಟವಾದ ಅಥವ ಅನಿಷ್ಟವಾದ ವಿಷಯವು ಪ್ರಾಪ್ತವಾದಾಗ ಸಮದೃಷ್ಟಿಯಿಂದ ಎರಡರ ವಿಷಯವಾಗಿಯೂ ತನ್ನಲ್ಲಿ ವಿಕಾರವನ್ನು ಪಡೆಯದಿರುವುದು ಜೀವನ್ಮುಕ್ತನ ಲಕ್ಷಣವು.

(ಯಾವನು ಸವ೯ವಸ್ತುಗಳಲ್ಲಿಯೂ ಆಸಕ್ತಿರಹಿತನಾಗಿಮಾಯಾ ಪ್ರಿಯಾ ಪ್ರಿಯ ವಿಷಯಗಳನ್ನು ಪಡೆದಾಗ ಸಂತೋಷಿಸುವುದಿಲ್ಲವೋ ದ್ವೇಷಿಸುವುದಿಲ್ಲವೋ  ಅವನ ಪ್ರಜ್ಞೆಯು ಸ್ಥಿರವಾಗಿರುವುದು.(ಗೀತಾ

2-57)(ಪುಟ232)

 

434)ಬ್ರಹ್ಮಾನಂದರಸವನ್ನು ಸವಿಯುವುದರಲ್ಲಿ  ಚಿತ್ತವು ಆಸಕ್ತವಾಗಿರುವುದರಿಂದ  ಯತಿಗೆ ಒಳಗಿನ ಅಥವಾ ಹೊರಗಿನ ಅರಿವು ಇರುವುದಿಲ್ಲ.ಇದು ಜೀವನ್ಮುಕ್ತನ ಲಕ್ಷಣವು.(ಪುಟ232)

 

435)ದೇಹ-ಇಂದ್ರಿಯಗಳು ಇವೇ ಮೊದಲಾದವುಗಳಲ್ಲಿಯೂ  ಮಾಡತಕ್ಕ ಕೆಲಸದಲ್ಲಿಯೂ  'ನಾನು ನನ್ನದು'ಎಂಬ ಭಾವವಿಲ್ಲದ ಯಾವನು ಉದಾಸೀನನಾಗಿರುವನೊ  ಅವನು ಜೀವನ್ಮುಕ್ತನ ಲಕ್ಷಣವುಳ್ಳವನು.(ಪುಟ232)

 

436)ಯಾವನಿಗೆ ಶ್ರುತಿಯ ಬಲದಿಂದ ತನ್ನ ಬ್ರಹ್ಮಭಾವವು ತಿಳಿದುಬಂದಿರುವುದೊ  ಸಂಸಾರ ಬಂಧದಿಂದ ಮುಕ್ತನಾದ ಅವನು  ಜೀವನ್ಮುಕ್ತನ ಲಕ್ಷಣವುಳ್ಳವನು.(ಪುಟ 233)

 

437)ಯಾವನಿಗೆ ದೇಹೇಂದ್ರಿಯಗಳಲ್ಲಿ 'ನಾನು' ಎಂಬ ಭಾವವೂ ,ಅವುಗಳಿಗಿಂತ  ವ್ಯತಿರಿಕ್ತವಾದ ವಸ್ತುಗಳಲ್ಲಿ  'ಇದು'ಎಂಬ ಭಾವವೂ  ಎಂದಿಗೂ ಉಂಟಾಗುವುದಿಲ್ಲವೊ  ಅವನು ಜೀವನ್ಮುಕ್ತನು ಎನಿಸುವನು(ಪುಟ233)

 

438)ಯಾವನು ಜೀವ-ಬ್ರಹ್ಮ-ಇವರಲ್ಲಾಗಲೀ  ,ಬ್ರಹ್ಮ ಮತ್ತು ಜಗತ್ತುಇವುಗಳಲ್ಲಾಗಲೀ  ಯಥಾಥ೯ದೃಷ್ಟಿಯಿಂದ ಭೇದವನ್ನು ಕಾಲತ್ರಯದಲ್ಲಿಯೂ  ಅರಿಯುವುದಿಲ್ಲವೊ ಅವನು ಜೀವನ್ಮುಕ್ತನು ಎನಿಸುವನು.೯ಪುಟ233)

 

43)ಸಾಧುಗಳು ಶರೀರವನ್ನು ಗೌರವಿಸಲಿ ಅಥವಾ ದುಷ್ಟರು ಪೀಡಿಸಲಿ ಯಾವನಿಗೆ ಸಮಭಾವವಿರುವುದೊ ಅವನು ಜೀವನ್ಮುಕ್ತನು ಎನಿಸುತ್ತಾನೆ.(ಪುಟ 234)

 

440)ಇತರರಿಂದ ಪ್ರೇರಿತನಾಗಿ  ಬರುವ ವಿಷಯಗಳು ಪ್ರವೇಶಿಸಿ-ಸಮುದ್ರವನ್ನು ಪ್ರವೇಶಿಸಿದ ನದೀ ಪ್ರವಾಹಗಳಂತೆ -ಬ್ರಹ್ಮಾತ್ಮೈಕ್ಯ ಭಾವನೆಯಿಂದ ಯಾವ ಯತಿಯಲ್ಲಿ ಲಯವಗುವವೊ ಮತ್ತು ಯಾವವಿಕಾರವನ್ನೂ ಉಂಟುಮಾಡುವುದಿಲ್ಲವೊ  ಅವನೇ ಮುಕ್ತನು.

(ಜೀವನ್ಮುಕ್ತನು  ಸ್ವತಃ ಬಹಿಮು೯ಖನಾಗದಿದ್ದರೂ ,ಇತರರು ಮಾಡುವ ಸ್ತುತಿನಿಂದೆಗಳು-ಮತ್ತೊಬ್ಬರ ದೃಷ್ಟಿಯಿಂದ  ಒಳ್ಳೆಯದು ಕೆಟ್ಟದ್ದು ಎನಿಸಿದ್ದರೂ -ಇವನಲ್ಲಿ ಯಾವ ವಿಕಾರವನ್ನೂ  ಉಂಟುಮಾಡದೆ ಅಡಗಿಹೋಗುವುವು.ಗೀತಾ 2-20)(ಪುಟ234)

 

441)ಬ್ರಹ್ಮತತ್ವವನ್ನು ಅರಿತುಕೊಂಡವನಿಗೆ  ಮೊದಲಿನಂತೆಯೇ ಸಂಸಾರವಿರುವುದಿಲ್ಲ.ಮುನ್ನಿನಂತೆ ಸಂಸಾರವಸನೆಯಿದ್ದರೆ ಅವನು ಬ್ರಹ್ಮತತ್ವವನ್ನರಿತುಕೊಂಡವನಾಗುವುದಿಲ್ಲ.ಬಹಿಮು೯ಖನೇಆಗಿರುತ್ತಾನೆ.

(ಇಂದ್ರಿಯಗಳು ವಿಷಯಗಳಕಡೆಗೆ ಹೋಗುವ ಪ್ರವೃತ್ತಿಯುಳ್ಳವನು.)(ಪುಟ235)

 

442)ಇವನು ಹಿಂದಿನ ವಾಸನಾವೇಗದಿಂದ ಸಂಸರಿಸುತ್ತಾನೆಎಂದರೆ ಅದಕ್ಕೆ ಉತ್ತರವು 'ಇಲ'್ಲ.ಏಕೆಂದರೆ ಬ್ರಹ್ಮದ ಅಭೇದ ಜ್ಞಾನದಿಂದ ಸಂಸಾರವಾಸನೆಯು ಕೃಶಿಸಿಹೋಗುತ್ತದೆ.(ಪುಟ 235)

 

443)ಅತ್ಯಂತ ಕಾಮುಕನಿಗೂ  ತನ್ನ ತಾಯಿಯ ವಿಷಯದಲ್ಲಿ  ಕಾಮರೂಪವಾದ ಚಿತ್ತವೃತ್ತಿಯು

ಹಿಂಜರಿಯುತ್ತದೆ.ಪೂಣಾ೯ನಂದವಾದ ಬ್ರಹ್ಮವನ್ನು ಅರಿತುಕೊಂಡಾಗ ಜ್ಞಾನಿಗೂ ಹಾಗೆಯೇ (ಸಂಸಾರವೃತ್ತಿಯು ಹಿಂಜರಿಯುತ್ತದೆ).(ಪುಟ235)

 

6))ಪ್ರಾರಬ್ಧ ವಿಚಾರ:

 

444)ಸಮಾಧಿಶೀಲನಾದ ಜ್ಞಾನಿಗೆ ಬಾಹ್ಯವಿಷಯಗಳ ಅರಿವು ಕಂಡು ಬರುತ್ತದೆ.ಹೀಗೆ ಅವನಿಗೆ ಕಮ೯ಫಲದ ಅನುಭವವು ಕಂಡುಬರುತ್ತಿರುವುದರಿಂದಪ್ರಾರಬ್ಧ ಕಮ೯ವಿದೆಯೆಂದು ಶ್ರುತಿಯು ಹೇಳುತ್ತದೆ.

(ಅವನಿಗೆ ಎಲ್ಲಿಯವರೆಗೆ ಮೋಕ್ಷವಾಗುವುದಿಲ್ಲವೊ ಅಲ್ಲಿಯವರೆಗೇ ವಿಳಂಬ.ತಸ್ಮತಾವದೇವ ಚಿರಂ ಯಾವನ್ನವಿಮೋಕ್ಷ್ಯೇ(ಛಾಂ..4-14-2)

 

445)ಸುಖದುಃಖಾದಿಗಳ ಅನುಭವವು  ಎಲ್ಲಿಯವರೆಗೆ ಇರುವುದೊ ಅಲ್ಲಿಯವರೆಗೆ ಪ್ರಾರಬ್ಧ ಕಮ೯ವನ್ನು ಒಪ್ಪಿಕೊಳ್ಳಬೇಕು.ಏಕೆಂದರೆ ಫಲವುಂಟಾಗುವುದಕ್ಕೆ  ಮೊದಲು ಕಮ೯ವು ಕಾರಣವಾಗಿರಬೇಕು.

ಎಲ್ಲಿಯೂ ಕಮ೯ವಿಲ್ಲದೆ ಫಲವುಂಟಾಗಲಾರದು.(ಪುಟ236)

 

446)'ನಾನು ಬ್ರಹ್ಮವು'ಎಂಬ ಐಕ್ಯಜ್ಞಾನದಿಂದ ನೂರಾರು ಕೋಟಿಕಲ್ಪಗಳಿಂದ ಸಂಪಾದಿಸಿರುವ ಸಂಚಿತಕಮ೯ವೂಕೂಡ-ಎಚ್ಚರವಾದ ಮೇಲೆ ಸ್ವಪ್ನದಲ್ಲಿ ಮಾಡಿದ ಕಮ೯ವು ನಾಶವಾಗುವಂತೆ -ನಾಶವಾಗುತ್ತದೆ.

(ಸಂಚಿತ ಕಮ೯ವೆಂದರೆ ಫಲವನ್ನು ಕೊಡಲು ಪ್ರಾರಂಭವಾಗದಿರುವ ಪೂವ೯ಕಮ೯)(ಪುಟ237)

 

447)ಸ್ವಪ್ನದಲ್ಲಿ ಮಡಿದ್ದ ಪುಣ್ಯಕಮ೯ವಾಗಲಿ ಅಥವಾ ಭೀಕರವಾದ ಪಾಪವಾಗಲೀ ನಿದ್ರೆಯಿಂದ ಎಚ್ಚೆತ್ತವನಿಗೆ ಸ್ವಗ೯ಕ್ಕೆ ಅಥವಾ ನರಕಕ್ಕೆ ಕಾರಣವಾಗುವುದೇ?(ಪುಟ237)

 

448)ಆಕಾಶದಂತೆ ನನ್ನ ಆತ್ಮನು ಅಸಂಗನೆಂದೂ ಉದಾಸೀನನೆಂದೂ  ತಿಳಿದುಕೊಂಡ ಯತಿಯು ಆಗಾಮೀ ಕಮ೯ಗಳಿಂದ ಎಂದಿಗೂ ಸ್ವಲ್ಪವೂ ಲಿಪ್ತನಾಗುವುದಿಲ್ಲ.

(ಆತ್ಮಜ್ಞಾನವಾದ ಮೇಲೆ ಮುಂದೆ ಮಾಡತಕ್ಕ ಕಮ೯ಗಳಿಂದ)(ಪುಟ238)

 

44)ಹೇಗೆ ಆಕಾಶವು ಗಡಿಗೆಯ ಸಂಬಂಧದ ಮೂಲಕದರಲ್ಲಿರುವ ಮದ್ಯದ ವಾಸನೆಯಿಂದ ಲಿಪ್ತವಾಗುವುದಿಲ್ಲವೊ ಹಾಗೆಯೇ ಆತ್ಮನು ಉಪಾಧಿಯ ಸಂಬಂಧದ ಮೂಲಕ ಅದರ ಧಮ೯ಗಳಿಂದ ಲಿಪ್ತನಾಗುವುದಿಲ್ಲ.

(ಸ್ಥೂಲ-ಸೂಕ್ಷ್ಮ-ಶರೀರಗಳ ಸಂಬಂಧವಿದ್ದರೂ ಅವುಗಳ ಧಮ೯ಗಳಿಂದ ಆತ್ಮನು ಲಿಪ್ತನಾಗುವುದಿಲ್ಲ(ಪುಟ 238)

 

450)ಜ್ಞಾನೋದಯಕ್ಕೆ ಮೊದಲೇ  ಫಲವನ್ನು ಕೊಡಲು ಪ್ರಾರಂಭವಾಗಿರುವ ಕಮ೯ವು -ಗುರಿಯನ್ನು ಉದ್ದೇಶಿಸಿ ಬಿಟ್ಟ ಬಾಣವು(ಗುರಿಯನ್ನು ಹೊಡೆಯುವಂತೆ)-ತನ್ನ ಫಲವನ್ನು ಕೊಡದೆ  ಜ್ಞಾನದಿಂದ

ನಾಶವಾಗುವುದಿಲ್ಲ. (ಪುಟ238)

 

451)ಹುಲಿಯೆಂಬ ಬುದ್ಧಿಯಿಂದ ಬಿಡಲ್ಪಟ್ಟ ಬಾಣವು ಅನಂತ್ರ 'ಅದು ಹಸು' ಎಂಬ

ಬುದ್ಧಿಯುಂಟಾದರೂ ನಿಲ್ಲುವುದಿಲ್ಲ.ವೇಗದಿಂದ ತನ್ನ ಗುರಿಯನ್ನು  ಹೊಡೆದೇ ಬಿಡುತ್ತದೆ.(ಪುಟ23)

 

452)ಪ್ರಾರಬ್ಧ ಕಮ೯ವು ನಿಜವಾಗಿ ಅತ್ಯಂತ ಬಲವದದ್ದು .ಜ್ಞನಿಗಳು ಅದನ್ನು ಅನುಭವಿಸಿಯೇ ನಾಶಗೊಳಿಸಬೇಕು.ಸಮ್ಯಗ್ ಜ್ಞಾನವೆಂಬ  ಅಗ್ನಿಯಿಂದ ಹಿಂದೆ ಸಂಪಾದಿಸಿದ  ಮತ್ತು ಮುಂದೆ ಬರುವ ಕಮ೯ಗಳೆಲ್ಲಾ ನಶವಾಗುತ್ತವೆ.ಆದರೆ ಯಾರು ಜೀವಾತ್ಮ-ಪರಮಾತ್ಮರ ಐಕ್ಯವನ್ನು ತಿಳಿದುಕೊಂಡು ಯಾವಾಗಲೂ ತನ್ಮಯತೆಯಿಂದ ಇರುವರೊ ಅವರಿಗೆ ಮೂರು ಬಗೆಯ ಕಮ೯ಗಳು ಸ್ವಲ್ಪವಾದರೂ ಇರುವುದಿಲ್ಲ.ಏಕೆಂದರೆ ಅವರು ನಿಗು೯ಣವಾದ ಬ್ರಹ್ಮವೇ ಆಗಿರುತ್ತಾರೆ.(ಬ್ರಹ್ಮಾತ್ಮ ಭಾವದಿಂದಲೇ)ಪುಟ 240)

 

453)ಉಪಾಧಿಗಳೊಂದಿಗೆ ತಾದಾತ್ಮ್ಯವಿಲ್ಲದೆ ಕೇವಲ ಬ್ರಹ್ಮಭಾವದಿಂದಲೇ ಇರುತ್ತಿರುವ ಮುನಿಗೆ -ಎಚ್ಚತ್ತಿರುವವನಿಗೆ  ಸ್ವಪ್ನದಲ್ಲಿ ಕಂಡ  ವಿಷಯಗಳ ಸಂಬಂಧವಿದೆಯೆಂಬ  ಮಾತು ಹೇಗೆ ಯುಕ್ತವಲ್ಲವೊ  ಹಾಗೆ-ಪ್ರಾರಬ್ಧವಿದೆ ಎಂಬ ಮಾತು ಯುಕ್ತವಲ್ಲ.(ಪುಟ241)

 

454)ಸ್ವಪ್ನದಿಂದ ಎಚ್ಚತ್ತಿರುವವನು  ಸ್ವಪ್ನದಲ್ಲಿ ತೋರಿದ ದೇಹದಲ್ಲಾಗಲೀ  ಅದಕ್ಕೆ ಉಪಯುಕ್ತಕರವಾದ ವಿಷಯವಸ್ತುವಿನಲ್ಲಾಗಲೀ "ನಾನು' 'ನನ್ನದು' 'ಇದು'ಎಂಬ ಭಾವನೆಯನ್ನು ಮಾಡುವುದಿಲ್ಲ.ಮತ್ತೇನೆಂದರೆ ತನ್ನ ಸ್ವರೂಪದಲ್ಲಿಯೇ ಎಚ್ಚತ್ತಿರುತ್ತಾನೆ.(ಪುಟ241)

 

455)ಅವನಿಗೆ ಮಿಥ್ಯಾವಸ್ತುಗಳ ಸಮಥ೯ನದಲ್ಲಿ ಬಯಕೆಯು ಇರುವುದಿಲ್ಲ. ಸ್ವಪ್ನಜಗತ್ತಿನ ವಸ್ತುಗಳ ಸಂಗ್ರಹವೂ ಕೂಡ ಕಂಡುಬರುವುದಿಲ್ಲ. ಮಿಥ್ಯಾ ವಸ್ತುವಿನಲ್ಲಿ  ಮನಸ್ಸಿನ ಅನುವತ೯ನವಿದ್ದರೆ  ಅವನು ನಿದ್ರೆಯಿಂದ ಎಚ್ಚತ್ತಿಲ್ಲವೆಂದು  ತಿಳಿಯಲ್ಪಡುತ್ತದೆ.ಇದು ನಿಶ್ಚಯವು.(ಪುಟ241)

 

456)ಹಾಗೆಯೇ ಪರಬ್ರಹ್ಮದಲ್ಲಿ ಲೀನವಾದ ಮನಸ್ಸುಳ್ಳವನು  ಬ್ರಹ್ಮಭವದಿಂದಲೇ ಇರುತ್ತಾನೆ.ಬೇರೆ ಯಾವುದನ್ನೂ ನೋಡುವುದಿಲ್ಲ.ಸ್ವಪ್ನದಲ್ಲಿ ಕಂಡ ವಿಷಯದ ನೆನಪು ಹೇಗೋ ಹಾಗೆ  ಬ್ರಹ್ಮವಿದನಿಗೆ ಊಟಮಾಡುವುದು  ಬಿಡುವುದು ಮೊದಲಾದವುಗಳಲ್ಲಿ ನೆನಪು ಮಾತ್ರ ಇರುತ್ತದೆ.(ಪುಟ 242)

 

457)ದೇಹವು ಕಮ೯ದಿಂದ ನಿಮಿ೯ತವಾಗಿದೆ.ಅದಕ್ಕೆ ಪ್ರಾರಬ್ಧವನ್ನು ಕಲ್ಪಿಸಬಹುದು.ಆದರೆ ಅನಾದಿಯಾದ ಆತ್ಮನಿಗೆ ಅದನ್ನು ಕಲ್ಪಿಸುವುದು ಯುಕ್ತವಲ್ಲ.ಏಕೆಂದರೆ ಆತ್ಮನು ಕಮ೯ದಿಂದ ನಿಮಿ೯ತನೇ ಆಗಿಲ್ಲ.೯ಪುಟ 242)

 

458)ಆತ್ಮನು ಜನ್ಮರಹಿತನು ನಿತ್ಯನು ಶಾಶ್ವತನು -ಎಂದು ಸತ್ಯವಚನವುಳ್ಳ ಶ್ರುತಿಯು ಹೇಳುತ್ತದೆ. ಆತ್ಮಸ್ವರೂಪದಿಂದ ಇರುತ್ತಿರುವ ಯೋಗಿಗೆ  ಪ್ರಾರಬ್ಧದ ಸಂಬಂಧವು ಎಲ್ಲಿಂದ ಬರ್ಯವುದು?(ಅಜೋ ನಿತ್ಯಃಶಾಶ್ವತೋ$ಯಂ ಪುರಾಣಃ (ಕಠ..1-2-18)

 

45)ದೇಹವೇ ಆತ್ಮನು ಎಂದು ತಿಳಿದಿರುವವರೆಗೆ ಪ್ರಾರಬ್ಧವು ಸಿದ್ಧಿಸುವುದು.ಆದರೆ ಸ್ಥಿತಪ್ರಜ್ಞನಿಗೆ  ದೇಹಾತ್ಮ ಭಾವವಿರುವುದೆಂದು ಯಾರೂ ಒಪ್ಪುವುದಿಲ್ಲ.ಆದುದರಿಂದ ಆತ್ಮನಲ್ಲಿ ಪ್ರಾರಬ್ಧವನ್ನು

ಕಲ್ಪಿಸಕೂಡದು(243)

 

460)ಶರೀರಕ್ಕೂ ಕೂಡಾ ಪ್ರಾರಬ್ಧವನ್ನು ಕಲ್ಪಿಸುವುದು ಭ್ರಾಂತಿಯೇ ಸರಿ;ಏಕೆಂದರೆ ಆರೋಪಿತವಾಗಿರುವುದಕ್ಕೆ ಅಸ್ತಿತ್ವವು ಎಲ್ಲಿಂದ ಬರುವುದು?ಅಸ್ತಿತ್ವವಿಲ್ಲದಿರುವುದಕ್ಕೆ ಜನ್ಮವೆಲ್ಲಿಂದ ಬರುವುದು?ಜನ್ಮವಿಲ್ಲದಿರುವುದಕ್ಕೆ ನಾಶವು ಎಲ್ಲಿಂದ ಬರುವುದು?ಇಲ್ಲದೆ ಇರುವುದಕ್ಕೆ ಪ್ರಾರಬ್ಧವು

ಎಲ್ಲಿಂದ ಬರುವುದು?(ಪುಟ243)

 

461-462)ಮೂಲವಾದ ಅಜ್ಞಾನದೊಂದಿಗೆ ಅದರ ಕಾಯ೯ವು ಜ್ಞಾನದಿಂದ ನಶವಾಗುತ್ತದೆ.' ದೇಹವು ಹೇಗೆ ನಿಂತಿರುವುದು ಎಂದು ಸಂದೇಹಪಡುವ ಜಡರನ್ನು  ಸಮಾಧಾನಪಡಿಸಲು ಶ್ರುತಿಯು ಬಾಹ್ಯದೃಷ್ಟಿಂದ ಪ್ರಾರಬ್ಧವನ್ನು ಹೇಳುತ್ತದೆಯೇ ಹೊರತು ಜ್ಞಾನಿºಗಳಿಗೆ ದೇಹವೇ ಮೊದಲಾದ್ವು ನಿಜವಾಗಿvಯೂ ಇರುವುವೆಂದು  ಉಪದೇಶಿಸುವುದಕ್ಕಲ್ಲ.(ಪುಟ244)

 

463) ಬ್ರಹ್ಮವು ಪರಿಪೂಣ೯ವಾದದ್ದು ,ಆದಿ-ಅಂತಗಳಿಲ್ಲದ್ದು,ಪ್ರಮಾಣಗಳಿಗೆ ಗೋಚರವಲ್ಲದ್ದು,ವಿಕಾರವಿಲ್ಲದ್ದು,ಸಜಾತೀಯ ಭೇದವಿಲ್ಲದ್ದು,ವಿಜಾತೀಯ ಭೇದವಿಲ್ಲದ್ದು. ಬ್ರಹ್ಮದಲ್ಲಿ ನಾನಾತ್ವವು ಸ್ವಲ್ಪವೂ ಇಲ್ಲ.( ನೇಹ ನಾನಾಸ್ತಿ ಕಿಂಚನ ಎಂಬ ವಾಕ್ಯವು ಕಠ.ಉಪನಿಷತ್ತಿನ 2-4-11ರಲ್ಲೂ ಬೃ..4-4-1೯ರಲ್ಲೂ ಬಂದಿರುತ್ತದೆ.)

 

464)ಬ್ರಹ್ಮವು ಸಚ್ಛರೀರವು,ಚಿಚ್ಛರೀರವು ,ನಿತ್ಯವೂ ಆನಂದ ಶರೀರವು,ನಿಷ್ಕ್ರಿಯವು;ಏಕವೂ ಅದ್ವಯವೂ ಆಗಿರುವುದು; ಬ್ರಹ್ಮದಲ್ಲಿ ನಾನಾತ್ವವು ಸ್ವಲ್ಪವೂ ಇಲ್ಲ.(ಎಂದರೆ ಸಚ್ಚಿದಾನಂದ ಸ್ವರೂಪವು)ಪುಟ245)

 

465)ಬ್ರಹ್ಮವು ಎಲ್ಲರ ಒಳಗಿರತಕ್ಕದ್ದು;ಸಮರಸವಾದದ್ದು,ಪೂಣ೯ವು ,ಅನಂತವು,ಸವ೯ವ್ಯಾಪಿಯು ;ಅನಂತವು ಸವ೯ವ್ಯಾಪಿಯು.ಏಕವೂ ಅದ್ವಯವೂ ಆಗಿರುವುದು. ಬ್ರಹ್ಮದಲ್ಲಿ ನಾನಾತ್ವವು ಸ್ವಲ್ಪವೂ ಇಲ್ಲ.

 

466)ಬ್ರಹ್ಮವನ್ನು ಬಿಡುವುದಕ್ಕಾಗುವುದಿಲ್ಲ.ತೆಗೆದುಕೊಳ್ಳುವುದಕ್ಕಾಗುವುದಿಲ್ಲ.ಅದಕ್ಕೆ ಆದೇಯವಾಗಲೀ ಆಧಾರವಾಗಲೀ ಇಲ್ಲ.ಇದು ಏಕವೂ ಅದ್ವಯವೂ ಆಗಿರುವುದು. ಬ್ರಹ್ಮದಲ್ಲಿ ನಾನಾತ್ವವು ಸ್ವಲ್ಪವೂ ಇಲ್ಲ.(1)ಏಕೆಂದರೆ ಇದು ಎಲ್ಲರ ಆತ್ಮವಾಗಿರುವುದು.

2)ಬ್ರಹ್ಮವು ಯಾವ ವಸ್ತುವಿಗೂ ಆಧಾರವಲ್ಲ ಎಂದಥ೯.ಪ್ರಪಂಚವೇ ಇಲ್ಲದಿರುವುದರಿಂದ ಇದು ಯಾವುದಕ್ಕೂ ಆಧಾರವಾಗಲಾರದು.)(ಪುಟ245)

 

467)ಬ್ರಹ್ಮವು ನಿಗು೯ಣವೂ ನಿಷ್ಕಲವೂ ಸೂಕ್ಷ್ಮವೂ  ನಿವಿ೯ಕಲ್ಪವೂ  ನಿರಂಜನವೂ ಏಕವೂ  ಅದ್ವಯವೂ ಆಗಿರಿವುದು. ಬ್ರಹ್ಮದಲ್ಲಿ ನಾನಾತ್ವವು ಸ್ವಲ್ಪವೂ ಇಲ್ಲ.೯ಪ್ರಾಣವೇ ಮೊದಲಾದ ಹದಿನಾರು ಕಲೆಗಳುಳ್ಳದ್ದು.(ಪುಟ246)

 

468)ಬ್ರಹ್ಮವು ಇಂಥದ್ದೆಂದು ನಿರೂಪಿಸಲಾಗದ ಸ್ವರೂಪವುಳ್ಳದ್ದು.ಮನಸ್ಸಿಗೂ ವಾಕ್ಕುಗಳಿಗೂ ಅಗೋಚರವಾದದ್ದು.ಏಕವೂ ಅದ್ವಯವೂ ಆಗಿರುವುದು. ಬ್ರಹ್ಮದಲ್ಲಿ ನಾನಾತ್ವವು ಸ್ವಲ್ಪವೂ ಇಲ್ಲ.(246)

 

 46)ಬ್ರಹ್ಮವು ಸತ್ಸ್ವರೂಪವೂ  ಸಮೃದ್ಧವೂ  ಸ್ವತಸ್ಸಿದ್ಧವೂ ಶುದ್ಧವೂ ಜ್ಞಾನಸ್ವರೂಪವೂ

ಅಸದೃಶವೂ ಏಕವೂ  ಅದ್ವಯವೂ ಆದದ್ದು. ಬ್ರಹ್ಮದಲ್ಲಿ ನಾನಾತ್ವವು ಸ್ವಲ್ಪವೂ ಇಲ್ಲ.

 

71)ವೇದಾಂತ ಸಿದ್ಧಾಂತದ ಉಪಸಂಹಾರ:

 

470)ವಿಷಯೇಚ್ಛೆಗಳನ್ನು ತೊರೆದು ,ಭೋಗಗಳನ್ನು ತ್ಯಜಿಸಿ ಶಾಂತರಾಗಿ,ಇಂದ್ರಿಯಗಳನ್ನು ಪೂಣ೯ವಾಗಿ ನಿಗ್ರಹಿಸಿದ ಮಹನೀಯರಾದ ಯತಿಗಳು  ಪರತತ್ವವನ್ನು ತಿಳಿದುಕೊಂಡು,ಕಡೆಗೆ ಆತ್ಮಜ್ಞಾನದ ಪ್ರಸಾದದಿಂದ  ಪರಮಾನಂದವನ್ನೇ ಹೊಂದಿರುತ್ತಾರೆ.(ಪುಟ 247)

 

471)ನೀನೂ ಕೂಡ ಆತ್ಮನ ಸ್ವರೂಪವಾಗಿರುವ  ಆನಂದ ಘನವಾದ  ಪರತತ್ವವನ್ನು ವಿವೇಚಿಸಿ,ನಿನ್ನ ಮನಸ್ಸಿನಲ್ಲಿ ಕಲ್ಪಿತವಗಿರುವ  ಮೋಹವನ್ನು ಕೊಡವಿಕೊಂಡು,ಜ್ಞಾನಿಯೂ ಮುಕ್ತನೂ ಆಗಿ ಕೃತಾಥ೯ನಾಗು.(ಪುಟ 248)

 

472)ಚೆನ್ನಾಗಿ ನಿಶ್ಚಲವಾದ  ಮನಸ್ಸಿನಿಂದ ಕೂಡಿದ  ಸಮಾಧಿಯಿಂದ ಸ್ಫುಟವಾದ ಜ್ಞಾನದೃಷ್ಟಿಯಮೂಲಕ ಆತ್ಮತತ್ವವನ್ನು ಸಾಕ್ಷಾತ್ಕರಿಸು.ಗುರುವಿನಿಂದ ಉಪದೇಶಿಸಲ್ಪಟ್ಟಪದಗಳ ಅಥ೯ವನ್ನು ಚೆನ್ನಾಗಿ  ಕೇಳಿದರೆ ಪುನಃ ಸಂಶಯವುಟಾಗುವುದಿಲ್ಲ.(ಪುಟ248)

 

473)ತನಗೆ ಅವಿದ್ಯಾಬಂಧ-ಸಂಬಂಧದ ಬಿಡುಗಡೆಯಿಂದ ಸತ್ಯಜ್ಞಾನಾನಂದ ಸ್ವರೂಪನಾದ ಆತ್ಮನನ್ನು ಸಾಕ್ಷಾತ್ಕರಿಸುವುದಕ್ಕೆ  ಶಾಸ್ತ್ರವೂ ಯುಕ್ತಿಯೂ  ಆಚಾಯ೯ನ ಉಕ್ತಿಯೂ  ಪ್ರಮಾಣವು.ಒಳಗೆ ಉಂಟಾದ ತನ್ನ ಅನುಭವವೂ ಪ್ರಮಾಣವು.

(ಛಿದ್ಯತೇ ಹೃದಯಗ್ರಂಥಿಃ(ಮುಂಡಕ..2-2-)ತರತಿಶೋಕಮಾತ್ಮವಿತ್((ಛಾಂ..7-1-3)ಇವೇ ಮೊದಲಾದ ಶ್ರುತಿಗಳು.)

ಬ್ರಹ್ಮಜ್ಞಾನದಿಂದ ಬಂಧವು ಹೋಗುತ್ತದೆ.ಏಕೆಂದರೆ ಇದು ಕಲ್ಪಿತವಾದುದು.-ಎಂಬೀ ರೂಪದ ಯುಕ್ತಿ.

ಆತ್ಮವಿದನೂ  ನಿಃಸ್ಪøಹನೂ  ಕರುಣಾಮಯನೂ ಆದ ಆಚಾಯ೯ನ ಮಾತುಗಳು ಪ್ರಮಾಣವಾಗುತ್ತವೆ.

ತನ್ನಲ್ಲಿ ಸಮಾಧಿಯಿಂದ  ಸಿದ್ಧವಾಗುವ ಅನುಭವ.ಇದು ಕೊನೆಯ ಪ್ರಮಾಣ)

 

474)ಬಂದಮೋಕ್ಷ ತೃಪ್ತಿ ಚಿಂತೆ  ಆರೋಗ್ಯ ಹಸಿವು -ಇವೇ ಮೊದಲಾದುವನ್ನು  ಮನುಷ್ಯನು ತಾನೇ ತಿಳಿಯುತ್ತಾನೆ.ಅವನಿಗೆ ಇವುಗಳ ಜ್ಞಾನವಿರುವುದನ್ನು ಇತರರು ಅನುಮಾನದಿಂದಲೇ ತಿಳಿದುಕೊಳ್ಳಬೇಕು.(ಪುಟ24)

 

475)ಉಪನಿಷತ್ತುಗಳು ಮತ್ತು ಗುರುಗಳು ತಟಸ್ಥಿತರಾಗಿಯೇ ಬೋಧಿಸುತ್ತಾರೆ.ವಿದ್ವಾಂಸನಾದವನು  ಈಶ್ವರನಿಂದ ಅನುಗ್ರಹಿಸಲ್ಪಟ್ಟ ಜ್ಞಾನದಿಂದಲೇ ಸಂಸಾರಸಾಗರವನ್ನು ದಾಟಬೇಕು.

(ಉಪದೇಶವು ಯಾವಾಗಲೂ ಪರೋಕ್ಷವಾಗಿರುತ್ತದೆ.ಆದರೆ ಆತ್ಮಸಾಕ್ಷಾತ್ಕಾರವು  ಅಪರೋಕ್ಷವಾಗಿರುತ್ತದೆ.ಪರೋಕ್ಷವು ಅಪರೋಕ್ಷಕ್ಕೆ ಸಾಧನವಾಗಿರುತ್ತದೆ.)

 

476)ತನ್ನ ಅನುಭವದಿಂದಲೇ ತನ್ನ ಅಖಂಡಾತ್ಮನನ್ನು  ತಾನೇ ತಿಳಿದುಕೊಂಡು  ಸಂಸಿದ್ಧನಾಗಿ ನಿವಿ೯ಕಲ್ಪ ರೂಪದಿಂದ  ತನ್ನಲ್ಲಿಯೇ ಆತ್ಮಾಭಿಮುಖನಾಗಿ  ನಿಲ್ಲಬೇಕು.(ಪುಟ250)

 

477)ಜೀವನೂ ಸಮಸ್ತ ಜಗತ್ತೂ ಬ್ರಹ್ಮವೇ.ಬ್ರಹ್ಮಸ್ವರೂಪದಲ್ಲಿರುವುದೇ ಮೋಕ್ಷವು-ಇದು

ವೇದಾಂತ ಸಿದ್ಧಾಂತದ ಕೊನೆಯ ನಿಣ೯ಯ.ಬ್ರಹ್ಮವು ಅದ್ವಿತೀಯವು ಎಂಬುದಕ್ಕೆ ಉಪನಿಷತ್ತುಗಳೇ ಪ್ರಮಾಣವು.(ಪುಟ250)

 

72)ಶಿಷ್ಯನ ಆತ್ಮಾನುಭವ ವಣ೯ನೆ:

 

478) ಹೀಗೆ ಗುರೂಪದೇಶದಿಂದಲೂ  ಶ್ರುತಿ ಪ್ರಮಾಣದಿಂದಲೂ  ತನ್ನ ಯುಕ್ತಿಯಿಂದಲೂ, ಪರಮಾತ್ಮ-ತತ್ವವನ್ನು ತಿಳಿದುಕೊಂಡು,ಇಂದ್ರಿಯಗಳನ್ನೆಲ್ಲ ನಿಗ್ರಹಿಸಿ,ಚಿತ್ತವನ್ನು ಬಿರುದ್ಧಗೊಳಿಸಿ,ಒಂದು ಏಕಾಂತ ಪ್ರದೇಶದಲ್ಲಿ  ನಿಶ್ಚಲನಾಗಿ ಕುಳಿತು  ಬ್ರಹ್ಮನಿಷ್ಠನಾದನು.(ಪುಟ 251)

 

47)ಪರಬ್ರಹ್ಮದಲ್ಲಿ ಮನಸ್ಸನ್ನು ಸ್ವಲ್ಪಹೊತ್ತು ನಿಲ್ಲಿಸಿ  ಅನಂತರ ಬಹಿಮು೯ಖನಾಗಿ  ಪರಮಾನಂದದಿಂದ ಮಾತನ್ನು ಹೇಳಿದನು.೯ಪುಟ 251)

 

480)ಜೀವಾತ್ಮ ಮತ್ತು ಪರಮಾತ್ಮ ಇವುಗಳ ಐಕ್ಯಜ್ಞಾನದಿಂದ  ಮನಸ್ಸು ನಾಶವಾಯಿತು.ಹೊರಗಿನ ಪ್ರವೃತ್ತಿಯು ಶಿಥಿಲವಾಯಿತು.'ಇದು'ಎಂಬುದನ್ನು ಅರಿಯೆನು.'ಇದಲ್ಲ'ಎಂಬುದನ್ನೂ ಅರಿಯೆನು.ಅಪಾರವಾದ ಆನಂದವು ಯಾವುದೊ ಎಷ್ಟಿದೆಯೊ ಅರಿಯೆನು.(ಎಂದರೆ ಚಿತ್ತವೃತ್ತಿಗಳೆಲ್ಲ ನಾಶವಾಯಿತು ಎಂದಥ೯)(ಪುಟ 252)

 

481)ಸಮುದ್ರದಲ್ಲಿ ಸಿಡಿದುಬಿದ್ದ ಆಲಿಕಲ್ಲಿನಂತೆ  ನನ್ನ ಮನಸ್ಸು ಯಾವ ಸಮುದ್ರದ ಅಂಶಾಂಶದ ಅಲ್ಪಭಾಗದಲ್ಲಿ ಲಯವಾಗಿ,ಈಗ ಆನಂದ ಸ್ವರೂಪದಿಂದ  ಸುಖವನ್ನು ಪಡೆಯಿತೊ  ಅಂಥ ಆತ್ಮಾನಂದವೆಂಬ ಅಮೃತ ಪ್ರವಾಹದಿಂದ ತುಂಬಿರುವ  ಪರಬ್ರಹ್ಮವೆಂಬ ಸಮುದ್ರದ  ವೈಬವವನ್ನು ಮಾತಿನಿಂದ  ಹೇಳುವುದಕ್ಕೆ ಸಾಧ್ಯವೇ ಇಲ್ಲ.ಮನಸ್ಸಿನಿಂದ ತಿಳಿಯುವುದಕ್ಕೂ ಸಾಧ್ಯವಿಲ್ಲ.(ಪುಟ 252)

 

482) ಜಗತ್ತು ಎಲ್ಲಿ ಹೋಯಿತೋ ಯಾರಿಂದ  ಒಯ್ಯಲ್ಪಟ್ಟಿತೋ  ಎಲ್ಲಿ ಲಯವಾಯಿತೋ ನಾನು ಅರಿಯೆನು.ಈಗ ತಾನೇ ಅದನ್ನು ನೋಡಿದ್ದೆನು ಈಗ ಇಲ್ಲವಾಗಿದೆ.!ಎಂಥ ಮಹದಾಶ್ಚಯ೯!(ಪುಟ252)

 

483)ಅಖಂಡವಾದ ಆನಂದಾಮೃತದಿಂದ  ತುಂಬಿರುವ ಬ್ರಹ್ಮವೆಂಬ ಮಹಾಸಮುದ್ರದಲ್ಲಿ ಇಡತಕ್ಕದ್ದು ಯಾವುದು,ತೆಗೆದುಕೊಳ್ಳತಕ್ಕದ್ದು ಯಾವುದು (ಉಳಿದಿರುವ)ಬೇರಾವುದನ್ನು ಗ್ರಹಿಸಬೇಕು,ವಿಜಾತೀಯವಾದ ಯಾವುದನ್ನು ತ್ಯಜಿಸಬೇಕು?(ಪುಟ253)

 

484) ಬ್ರಾಹ್ಮೀ ಸ್ಥಿತಿಯಲ್ಲಿ ನನ್ನ ಮನಸ್ಸು ಏನನ್ನೂ ನೋಡುತ್ತಿಲ್ಲ,ಏನನ್ನೂ ಕೇಳುತ್ತಿಲ್ಲ,ಏನನ್ನೂ ಅರಿಯುತ್ತಿಲ್ಲ.ಸದಾನಂದ ಸ್ವರೂಪವಾದ ಆತ್ಮರೂಪದಿಂದಲೇ ವಿಲಕ್ಷಣನಗಿರುತ್ತೇನೆ.(ಪುಟ254)

 

485)ಮಹಾತ್ಮನೂ ಸಂಗರಹಿತನೂ  ಬ್ರಹ್ಮಜ್ಞಾನಿಗಳಲ್ಲಿ ಶ್ರೇಷ್ಠನೂ ನಿತ್ಯಾನಂದ ರಸ ಸ್ವರೂಪನೂ ಭೂಮನೂ ಸದಾ ಅಪಾರ -ದಯಾ ಸಮುದ್ರನೂ ಗುರುವೂ  ಆದ ನಿನಗೆ ಪುನಃ ಪುನಃ ನಮಸ್ಕಾರಗಳು.(ಪುಟ 254)

 

486)ಯಾವನ ಕಡೆಗಣ್ಣಿನ  ನೋಟವೆಂಬ ಚಂದ್ರನ  ದಟ್ಟವಾದ ಬೆಳದಿಂಗಳಿನ ಪ್ರಸರಣದ  ಮೂಲಕ ಸಂಸಾರ ಕ್ಲೇಶಗಳಿಂದ ಉಂಟಾದ ಶ್ರಮವನ್ನು ಹೋಗಲಾಡಿಸಿಕೊಂಡ ನಾನು ಅಕ್ಷಯವೂ ಅಖಂಡ ವೈಭವಾನಂದವೂ  ಆದ ಪರಮಪದವನ್ನು 'ಕ್ಷಣಮಾತ್ರದಲ್ಲಿ' ಹೊಂದಿದೆನೋ ಅಂಥ  ಗುರುವಿಗೆ ನಮಸ್ಕಾರ.(ಪುಟ255)

 

487) ನಿಮ್ಮ ಅನುಗ್ರಹದಿಂದ  ನಾನು ಧನ್ಯನೂ  ಕೃತಕೃತ್ಯನೂ  ಆದೆನು.ಸಂಸಾರ ಬಂಧದಿಂದ ವಿಮುಕ್ತನಾದೆನು.ನಾನು ನಿತ್ಯಾನಂದ ಸ್ವರೂಪನು.ಪರಿಪೂಣ೯ನು.(ಪುಟ255)

 

488)ನಾನು ಸಂಗರಹಿತನು,ಸ್ಥೂಲ-ಸೂಕ್ಷ್ಮ ಶರೀರ- ರಹಿತನು.ನಾಶರಹಿತನು,ಪ್ರಶಾಂತನು,ಅನಂತನು ಶುದ್ಧನು, ಸನಾತನನು.(ಪುಟ 286)

 

48)ನಾನು ಕತೃ೯ವಲ್ಲ,ಭೋಕ್ತøವಲ್ಲ;ನಾನು ನಿವಿ೯ಕಾರನು,ಕ್ರಿಯಾಶೂನ್ಯನು,ಶುದ್ಧಜ್ಞಾನಸ್ವರೂಪನು, ಕೇವಲನು,ನಿತ್ಯಮಂಗಳ-ಸ್ವರೂಪನು.((ಪುಟ256)

 

40)ನಾನು ನೋಡುವವನಿಗಿಂತ ಕೇಳುವವನಿಗಿಂತ ಮಾತನಾಡುವವನಿಗಿಂತ ಕತೃ೯ವಿಗಿಂತ,ಭೋಕ್ತøವಿಗಿಂತ ಬೇರೆಯಾದವನೇ.ನಾನು ನಿತ್ಯವೂ ನಿರಂತರವೂ ನಿಷ್ಕ್ರಿಯವೂ ಸೀಮೆಯಿಲ್ಲದುದೂ ಸಂಗರಹಿತವೂ ಆದ ಪೂಣ೯ಜ್ಞಾನದ ಸ್ವರೂಪವಾಗಿರುವೆನು.(ಪುಟ256)

 

41)ನಾನು ಇದೂ ಅಲ್ಲ ಅದೂ ಅಲ್ಲ;ಆದರೆ ಇವೆರಡನ್ನೂ ಪ್ರಕಾಶಿಸುವ ಶ್ರೇಷ್ಠನೂ ಶುದ್ಧನೂ ಆದ ಒಳಗು ಹೊರಗು ಎಂಬ ಭೇದವಿಲ್ಲದ ಪೂಣ೯ವಾದ ಅದ್ವಿತೀಯ ಬ್ರಹ್ಮವೇ ನಾನು.

(ಅಪರೋಕ್ಷಜ್ಞಾನಕ್ಕೆ ವಿಷಯವಾದುದು,ಪರೋಕ್ಷಜ್ಞಾನಕ್ಕೆ ವಿಷಯವಾದುದು.)(ಪುಟ257)

 

42)ಅಸದೃಶವಾದ,ನೀನು-ನಾನು,ಅದು-ಇದು,ಎಂಬ ಕಲ್ಪನೆಗಳಿಗೆ ದೂರವಾಗಿರುವ ,ನಿತ್ಯಾನಂದೈಕರಸವಾದ ಸತ್ಯವಾದ ಅದ್ವಿತೀಯವಾದಬ್ರಹ್ಮವೇ ನಾನು.(ಪುಟ257)

 

43)ನಾನಾ ನಾರಾಯಣನು,ನರಕಾಂತಕನು,ತ್ರಿಪುರಾಸುರ ಸಂಹಾರಿಯಾದ ಶಿವನು,ನನೇ ಹೃದಯಗುಹೆಯಲ್ಲಡಗಿರುವ ಅಂತಯಾ೯ಮಿಯು ಮತ್ತು ಈಶ್ವರನು.ನಾನೇ ಅಖಂಡಜ್ಞಾನಸ್ವರೂಪನು ಮತ್ತು ಸವ೯ಸಾಕ್ಷಿಯು;ನನಗೆ ಮತ್ತೊಬ್ಬ ಈಶ್ವರನಿಲ್ಲ.ನನಗೆ ಅಹಂಕಾರ-ಮಮಕಾರಗಳಿಲ್ಲ.(ಪುಟ258)

 

44)ನಾನೇ ಜ್ಞಾನಸ್ವರೂಪದಿಂದ ಒಳಗೂ ಹೊರಗೂ  ಆಶ್ರಯನಾಗಿ ಸವ೯ಭೂತಗಳಲ್ಲಿಯೂ ಇದ್ದೇನೆ.ಭೋಕ್ತø೯ವೂ ಭೋಗ್ಯವೂ ನಾನೇ.ಮೊದಲು ಯಾವಯಾವುದು 'ಇದು'ಎಂಬ ಭಾವನೆಯಿಂದ ಬೇರೆ ಬೇರೆಯಾಗಿ ಕಾಣುತ್ತಿತ್ತೊ ಅದೆಲ್ಲವೂ ನಾನೇ ಆಗಿದ್ದೇನೆ.(ಪುಟ258)

 

45)ಅಖಂಡಾನಂದ -ಸಮುದ್ರ-ಸ್ವರೂಪನಾಗಿರುವ ನನ್ನಲ್ಲಿ ವಿಶಯಗಳೆಂಬ ತರಂಗಗಳು  ಮಾಯೆಯೆಂಬ ಸುಂಟರಗಾಳಿಯಿಂದ ಅನೇಕ ವಿಧವಾಗಿ ಹುಟ್ಟುತ್ತವೆ,ನಾಶವಾಗುತ್ತವೆ.(ಪುಟ262)

 

46)ನಿರವಯವವೂ ನಿವಿ೯ಶೇಷವೂ  ಆದ ಕಾಲದಲ್ಲಿ ಕಲ್ಪ ಸಂವತ್ಸರ,ಅಯನ,ಋತು ಮೊದಲಾದವು ಹೇಗೆ ಕಲ್ಪಿತವಾಗಿವೆಯೋ ಹಾಗೆಯೇ ನನ್ನಲ್ಲಿ ಸ್ಥೂಲ-ಸೂಕ್ಷ್ಮಾದಿ ಭಾವಗಳನ್ನು -ಆರೋಪಿತವಾಗಿ ತೋರುತ್ತಿರುವ  ವಸ್ತುಗಳ ಮೂಲಕ-ಜನರು ಭ್ರಾಂತಿಯಿಂದ ಕಲ್ಪಿಸುತ್ತಾರೆ.(ಪುಟ25)

 

47)ಬುದ್ಧಿಯ ದೋಷದಿಂದ ಕಲುಷಿತರಾಗಿರುವ  ಮೂಢರಿಂದ ಆರೋಪಿತವಾದದ್ದು  ಅಧಿಷ್ಠಾನವಾದ  ವಸ್ತುವಿಗೆ ಎಂದಿಗೂ ದೋಷವನ್ನುಂಟು ಮಾಡುವುದಿಲ್ಲ.ಬಿಸಿಲ್ಗುದುರೆಯ ನೀರಿನ ಪ್ರವಾಹವು  ಮರುಭೂಮಿಯನ್ನು ಎಂದಿಗೂ ನೆನೆಯಿಸಲಾರದು.

(ಹೀಗಿರುವಾಗ ಯವುದರಲ್ಲಿ ಯಾವುದನ್ನು ಅಧ್ಯಾಸ ಮಾಡಿದೆಯೋ  ಅದರಿಂದ ಉಂಟಾದ ಗುಣವಾಗಲೀ ದೋಷವಾಗಲಿ ಅದಕ್ಕೆ ಎಂದರೆ ಆಶ್ರಯಕ್ಕೆ ಸ್ವಲ್ಪವೂ ಸಂಬಂಧಿಸಿರುವುದಿಲ್ಲ.(ಬ್ರಹ್ಮಸೂತ್ರ-ಅಧ್ಯಾಸ ಭಾಷ್ಯ)(ಪುಟ260)

 

48)ನಾನು ಆಕಾಶದಂತೆ ನಿಲಿ೯ಪ್ತನು. ನಾನು ಸೂಯ೯ನಂತೆ ಬೆಳಗಲ್ಪಡುವ ವಸ್ತುಗಳಿಗಿಂತ  ಅತ್ಯಂತ ಭಿನ್ನನು.ನಾನು ಪವ೯ತದಂತೆ ಯಾವಾಗಲೂ ಅಚಲನಾದವನು.ನಾನು ಸಮುದ್ರದಂತೆ ಪಾರವಿಲ್ಲದವನು.(ಪುಟ260)

 

4೯೯)ಆಕಾಶಕ್ಕೆ ಮೇಘದ ಸಂಬಂಧವಿಲ್ಲದಿರುವಂತೆ  ನನಗೆ ದೇಹದ ಸಂಬಂಧವಿರುವುದಿಲ್ಲ.ಆದುದರಿಂದ ಅದರ ಧಮ೯ಗಳಾದ ಜಾಗ್ರತ -ಸ್ವಪ್ನ-ಸುಷುಪ್ತಿಗಳುನನಗೆ ಎಲ್ಲಿಂದ ಬರುವುವು?

 

500)ದೇಹವೆಂಬ ಉಪಾಧಿಯು ಬರುತ್ತದೆ,ಅದೇ ಹೋಗುತ್ತದೆ.ಅದೇ ಕಮ೯ಗಳನ್ನು ಮಾಡುತ್ತದೆ.ಫಲವನ್ನು ಭೋಗಿಸುತ್ತದೆ. ಅದೇ ಮುಪ್ಪನ್ನು ಹೊಂದಿ ನಾಶವಾಗುತ್ತದೆ.ಆದರೆ ನಾನು ಯಾವಾಗಲೂ   ಕುಲಾಚಲದಂತೆ ನಿಶ್ಚಲನಾಗಿಯೇ ಇರುತ್ತೇನೆ.(ಪುಟ261)

 

501)ಯಾವಾಗಲೂ ಏಕರೂಪನಾದ  ನಿರವಯವನಾದ ನನಗೆ ಪ್ರವೃತ್ತಿಯೂ ಇಲ್ಲ,ನಿವೃತ್ತಿಯೂ ಇಲ್ಲ.ಯಾವನು ಏಕರೂಪದವನೊ ಸಾಂದ್ರನೊ ನಿರಾಕಾಶನೊ ಹೇಗೆ ತಾನೆ ಕೆಲಸವನ್ನು ಮಾಡಿಯಾನು?

 (ಸಾಂದ್ರ ಎಂದರೆ ಉಪ್ಪಿನ ಹರಳಿನಂತೆ ಘನವಾಗಿರುವವನು)(ಪುಟ262)

 

502)ಇಂದ್ರಿಯ ರಹಿತನೂ  ಚಿತ್ತವಿಲ್ಲದವನೂ ನಿವಿ೯ಕಾರನೂ ನಿರಾಕಾರನೂ ಅಖಂಡಾನಂದಾನುಭವ-

ಸ್ವರೂಪನೂ ಆದ ನನಗೆ ಪುಣ್ಯವಾಗಲೀ ಪಾಪವಾಗಲೀ ಎಲ್ಲಿಂದ ಬಂದಾವು?'ಸ್ಪøಷ್ಟವಾಗಿಲ್ಲ' ಎಂದೇ ಶ್ರುತಿಯು ಹೇಳುತ್ತದೆ.(ಪುಟ262)

( ರೂಪವು ಪುಣ್ಯದಿಂದ ಸ್ಪøಷ್ಟವಾಗಿಲ್ಲ.ಪಾಪದಿಂದ ಸ್ಪøಷ್ಟವಗಿಲ್ಲ,ಏಕೆಂದರೆ ಅವನು ಬುದ್ಧಿಯ ಶೋಕಗಳನ್ನೆಲ್ಲಾ ದಾಟಿರುತ್ತಾನೆ.(ಬೃ..4-3-22)

 

503)ನೆರಳಿನ ಮೂಲಕ ಮುಟ್ಟಿದ  ಉಷ್ಣವಾಗಲಿ ಶೀತವಾಗಲಿ ಒಳ್ಳೆಯದಾಗಲೀ ಕೆಟ್ಟದಾಗಲೀ ,ನೆರಳಿಗಿಂತ ಭಿನ್ನವಾದ ಪುರುಷನನ್ನು  ಸೋಂಕುವುದೇ ಇಲ್ಲ.(ಪುಟ 263)

 

504)ಮನೆಯ ಧಮ೯ಗಳು (ಅವುಗಳನ್ನು ಪ್ರಕಾಶಿಸುವ ) ಪ್ರದೀಪವನ್ನು ಮುಟ್ಟದಿರುವಂತೆ ನಿವಿ೯ಕಾರನೂ  ಉದಾಸೀನನೂ  ವಿಲಕ್ಷಣನೂ ಆದ ಸಾಕ್ಷಿಯನ್ನು  ದೃಶ್ಯವಸ್ತುಗಳ ಧಮ೯ಗಳು ಮುಟ್ಟುವುದಿಲ್ಲ.(ಪುಟ263)

 

505)(ಮನುಷ್ಯರು ಮಾಡುವ ಒಳ್ಳೆಯ ಮತ್ತು ಕೆಟ್ಟ)ಕಮ೯ಗಳಿಗೆ ಸೂಯ೯ನು ಹೇಗೆ ಸಾಕ್ಷಿಯೊ  ,ಅಗ್ನಿಯು ಎಲ್ಲವನ್ನೂ ಹೇಗೆದಹಿಸುವುದೊ ,ಹಗ್ಗವು ತನ್ನಲ್ಲಿ ಆರೋಪಿತವಾದ  ವಸ್ತುವಿನೊಂದಿಗೆ ಹೇಗೆ ಸಂಬಂಧವನ್ನು ಪಡೆದಿದೆಯೊ  ಹಾಗೆಯೇ ಕೂಟಸ್ಥ-ಚಿತ್ಸ್ವರೂಪನಾದ ನನಗೆ ಸಾಕ್ಷಿಭಾವವಿರುತ್ತದೆ.

(ಸೂಯ೯ನ ಬೆಳಕಿನಲ್ಲಿ  ಮನುಷ್ಯರು ಎಂಥ ಕೆಲಸವನ್ನು  ಮಾಡಿದರೂ ಅದರಿಂದ ಅವನು ಲಿಪ್ತನಾಗುವುದಿಲ್ಲ.

ದಹಿಸಲ್ಪಟ್ಟ ವಸ್ತುಗಳ  ಧಮ೯ಗಳಿಂದ ಅಗ್ನಿಯು ಲಿಪ್ತವಾಗುವುದಿಲ್ಲ.

 ಹಗ್ಗಕ್ಕೂ ಹಾವಿಗೂ ಇರುವ ಸಂಬಂಧವು  ಕೇವಲ ಕಲ್ಪನೆ.)   

 

506)ನಾನು ಮಾಡುವವನಾಗಲೀ ಮಾಡಿಸುವವನಾಗಲೀ ಅಲ್ಲ.ಅನುಭವಿಸುವವನಾಗಲೀ ಅನುಭವಿಸುವಂತೆ ಮಾಡುವವನಾಗಲೀ ಅಲ್ಲ.ನೋಡುವವನಗಲೀ ತೋರಿಸುವವನಾಗಲೀ  ಅಲ್ಲ. ನಾನು ಸ್ವಯಂಜ್ಯೋತಿಯು. ದೃಶ್ಯಜಗತ್ತಿಗಿಂತ ಭಿನ್ನಸ್ವರೂಪದವನು.(ಪುಟ264)

 

507)ಉಪಾಧಿಯು ಅಲುಗಾಡಿದಾಗ  ಅದರಲ್ಲಿ ಪ್ರತಿಬಿಂಬಿಸಿರುವುದೂ ಚಲಿಸುತ್ತದೆ.ಮೂಢಬುದ್ಧಿಯುಳ್ಳವನು ಚಾಂಚಲ್ಯವನ್ನು  ಸೂಯ೯ನಂತೆ ನಿಷ್ಕ್ರಿಯನಾದ ತಮ್ಮ ಬಿಂಬವಾದ ಆತ್ಮನಿಗೆ ಸೇರಿಸುತ್ತಾರೆ.ನಾನು ಕತೃ೯ವು ನಾನು ಭೋಕ್ತøವು,ಅಯ್ಯೊ ನಾನು ಸತ್ತೆನು!ಎಂದು ಭಾವಿಸುತ್ತಾರೆ.

(ಸೂಯ೯ನು ಪ್ರತಿಬಿಂಬಿಸುರುವ ನೀರೇ ಉಪಾಧಿಯು.ನೀರು ಅಲುಗಾಡಿದಾಗ ಪ್ರತಿಬಿಂಬವೂ ನೀರಿನೊಂದಿಗೆ  ಅಲುಗಾಡುತ್ತದೆ.ಆದರೆ ಸೂಯ೯ನಿಗೆ ಅಲುಗಾಟವಿಲ್ಲ.ಇದನ್ನು ಕಂಡ ಯಾವುದೋ ಮೂಢ

ಬುದ್ಧಿಯು ಸೂಯ೯ನೇ ಚಲಿಸುತ್ತಾನೆಂದು ಭಾವಿಸಿಕೊಳ್ಳಬಹುದು)(ಪುಟ265)

 

508) ಜಡಸ್ವರೂಪವಾದ ದೇಹವು  ನೀರಿನಲ್ಲಿಯಾದರೂ  ನೆಲದ ಮೇಲಾದರೂ ಬೀಳಲಿ!ಗಡಿಗೆಯ ಧಮ೯ಗಳು ಆಕಾಶಕ್ಕೆ ಅಂಟದಿರುವಂತೆ ಶರೀರ ಧಮ೯ಗಳು ನನಗೆ ಅಂಟುವುದಿಲ್ಲ.

(ಗಡಿಗೆಯಲ್ಲಿ ಅವಚ್ಛಿನ್ನವಾಗಿರುವಂತೆ ಕಾಣುವ ಆಕಾಶವುಬಾಹ್ಯಾಕಾಶದೊಂದಿಗೆ ಏಕವಾಗಿದೆ.ಗಡಿಗೆಯು ಒಡೆಯಲಿ ಒಡೆಯದಿರಲಿ  ಆಕಾಶಕ್ಕೆ ಯಾವಭೇದವೂ ಉಂಟಾಗುವುದಿಲ್ಲ.ಆತ್ಮನಿಗೆ ಶರೀರದೊಂದಿಗೆ  ಸಂಬಂಧವುಂಟಾದಂತೆ  ಕಂಡುಬಂದರೂ  ಅವನ ನಿರಂಜನತ್ವಕ್ಕೆ  ಯಾವ ಹಾನಿಯೂ ಆಗುವುದಿಲ್ಲ).(ಪುಟ 265)

 

50)ಕತೃ೯ತ್ವ,ಭೋಕ್ತøತ್ವ,ನೀಚತ್ವ,ಮತ್ತತ್ವ,ಜಡತ್ವ, ಬದ್ದತ್ವ,ಮುಕ್ತತ್ವ-ಇವೇ ಮೊದಲಾದವು ಬುದ್ಧಿಯ ಧಮ೯ಗಳೇ ಹೊರತು ಕೇವಲವೂ ಅದ್ವಯವೂ  ಆತ್ಮವೂ ಆದ ಪರಬ್ರಹ್ಮದಲ್ಲಿ ನಿಜವಾಗಿ ಇಲ್ಲವು.(ಪುಟ266)

 

510) ಪ್ರಕೃತಿಯ ವಿಕಾರಗಳು  ಹತ್ತು ಬಗೆಯಾಗಲೀ ನೂರು ಬಗೆಯಾಗಲೀ  ಅಥವ ಸಾವಿರಬಗೆಯಾಗಿರಲಿ;ಅಸಂಗ ಚಿದ್ರೂಪನಾದ ನನಗೆ ಅವುಗಳಿಂದ ಏನಾಗಬೇಕು?ಮೇಘವು ಎಲ್ಲಿಯೂ ಆಕಾಶವನ್ನು ಸೋಕುವುದಿಲ್ಲವಷ್ಟೆ?

 

511)ಯಾವುದರಲ್ಲಿ ಅವ್ಯಕ್ತವೇ ಮೊದಲಾಗಿ ಸ್ಥೂಲಶರೀರದವರೆಗಿರುವ  ವಿಶ್ವವು ಕೇವಲ ತೋಕೆ೯ಯಾಗಿ ಕಾಣುತ್ತಿರುವುದೊ ಯಾವುದು ಆಕಾಶದಂತೆ ಸೂಕ್ಷ್ಮವಾದ ಕೊನೆಮೊದಲಿಲ್ಲದ 

ಅದ್ವಿತೀಯ ಬ್ರಹ್ಮವೊ ಅದೇ ನಾನಾಗಿರುವೆನು.(ಪುಟ267)

 

512)ಯಾವುದು ಸವಾ೯ಶ್ರಯವೂ ವಸ್ತುಗಳನ್ನೆಲ್ಲ ಪ್ರಕಾಶಿಸುವುದೂ ಅಪರಿಚ್ಛಿನ್ನಾಕಾರವೂ   ಸವ೯ವ್ಯಾಪಿಯೂ ದ್ವೈತ ಶೂನ್ಯವೂ  ನಿತ್ಯವೂ ಶುದ್ಧವೂ  ನಿಶ್ಚಲವೂ ನಿವಿ೯ಕಲ್ಪವೂ  ಆದ ಅದ್ವಿತೀಯ ಬ್ರಹ್ಮವೊ ಅದೇ ನಾನಾಗಿರುವೆನು.(ಪುಟ267)

 

513)ಯಾವುದು ಮಾಯೆಯ ವಿಶೇಷಗಳನ್ನು ಸಂಪೂಣ೯ವಾಗಿ ಹೋಗಲಾಡಿಸಿಕೊಂಡಿರುವುದೊ ಸವಾ೯ಂತರವೂ ಮನಸ್ಸಿಗೆ ಅಗೋಚರವೊ ಸತ್ಯಜ್ಞಾನಾನಂತವೂ  ಆನಂದ ಸ್ವರೂಪವೊ ಅದ್ವಿತೀಯ ಬ್ರಹ್ಮವೊ ಅದೇ ನಾನಾಗಿರುವೆ.(ಪುಟ268)

 

514)ನನಗೆ ಕ್ರಿಯೆಯಿಲ್ಲ ವಿಕಾರವಿಲ್ಲ ಕಲೆಯಿಲ್ಲ ಆಕಾರವಿಲ್ಲ ವಿಕಲ್ಪವಿಲ್ಲ.ನಾನು ನಿತ್ಯನು ನಿರಾಶ್ರಯನು

 ಮತ್ತು ಅದ್ವಿತೀಯನು.(ಪುಟ268)

 

515)ನಾನು ಸವಾ೯ತ್ಮನೂ  ಸವ8ವೂ  ಎಲ್ಲಚನ್ನೂ ಮೀರಿದವನೂ ಅದ್ವಿತೀಯನೂ ಆಗಿರುತ್ತೇನೆ.ನಾನು ಕೇವಲ ಅಖಂಡ ಜ್ಞಾನಾನಂದ ಸ್ವರೂಪನು.ನಾನು ನಿರವಕಾಶನು.(ಪುಟ 268)

 

516)ನಿಮ್ಮ ಕೃಪೆಯೆಂಬ  ಲಕ್ಷ್ಮಿಯ ಮಹಿಮೆಯ ಪ್ರಸಾದದಿಂದ ಸ್ವಾರಾಜ್ಯ-ಸಾಮ್ರಾಜ್ಯದ  ವೈಭವವು ನನಗೆ ಪ್ರಾಪ್ತವಾಯಿತು.ಮಹತ್ಮನಾದ ಶ್ರೀ ಗುರುವೇ  ನಿನಗೆ ಪುನಃ ಪುನಃ ನಮಸ್ಕಾರಗಳು.

(ಪುಟ26)

 

517)ಹೇ ಗುರುವೆ,ಮಹಾ ಸ್ವಪ್ನದಂತಿರುವ  ಮಾಯಾಕೃತವಾದ  ಹುಟ್ಟು-ಮುಪ್ಪು-ಸಾವುಗಳೆಂಬ ಕಾಡಿನಲ್ಲಿ ಅಲೆಯುತ್ತಿರುವ ,ಬಗೆಬಗೆv ತಾಪಗಳಿಂದ ಪ್ರತಿದಿನವೂ ಕ್ಲೇಶಪಡುತ್ತಿರುವ, ಅಹಂಕಾರವೆಂಬ ಹುಲಿಯಿಂದ ವ್ಯಥೆಪಡುತ್ತಿರುವ  ನನ್ನನ್ನು ಅಪಾರಕೃಪೆಯಿಂದ  ಅವಿದ್ಯೆಯೆಂಬ ನಿದ್ರೆಯಿಂದ  ಎಚ್ಚರಗೊಳಿಸಿ ಸಂಪೂಣ೯ವಾಗಿ ಕಾಪಾಡಿರುವೆ!(ಪುಟ270)

 

518)ಹೇ ಗ್ರುರುರಾಜನೆ, ವಿಶ್ವರೂಪದಿಂದ ಪ್ರಕಾಶಿಸುತ್ತಿರುವ ತೇಜಸ್ಸ್ವರೂಪನಾದ ಸದೈಕರೂಪನಾದ  ಮನೋ ವಾಕ್ಕುಗಳಿಗೆ ಅಗೋಚರನಾದ  ನಿನಗೆ ಪುನಃ ಪುನಃ ನಮಸ್ಕಾರ.(ಪುಟ270)

 

51)ಹೀಗೆ ಆತ್ಮಾನಂದವನ್ನು ಸಾಕ್ಷಾತ್ಕರಿಸಿಕೊಂಡು  ತತ್ವವನ್ನರಿತುಕೊಂಡು  ನಮಸ್ಕರಿಸಿದ ಶಿಷ್ಯವಯ೯ನನ್ನು ನೋಡಿ ಸಂತೋಷಹೃದಯನೂ  ಶ್ರೇಷ್ಠ ಮಹಾತ್ಮನೂ  ಆದ ಆಚಾಯ೯ವಯ೯ನು  ಪುನಃ ಮಾತನ್ನು ಹೇಳುತ್ತಾನೆ.(ಪುಟ270)

 

73)ಉಪದೇಶದ ಉಪಸಂಹಾರ:

 

520) ಜಗತ್ತು ಬ್ರಹ್ಮ ಪ್ರತ್ಯಯದ ಪ್ರವಾಹವಾಗಿದೆ.ಆದುದರಿಂದ ಅದು ಎಲ್ಲಾ ಕಡೆಯಲ್ಲೂ ಬ್ರಹ್ಮವೇ.ಪ್ರಶಾಂತ ಮನಸ್ಸಿನಿಂದ ಮತ್ತು ಅಧ್ಯಾತ್ಮ ದೃಷ್ಟಿಯಿಂದ  ಎಲ್ಲಾ ಅವಸ್ಥೆಗಳಲ್ಲಿಯೂ ಬ್ರಹ್ಮನನ್ನೇ ನೋಡು.ಕಣ್ಣಿರುವವರಿಗೆ  ಸುತ್ತಲೂ ರೂಪಕ್ಕಿಂತ  ಬೇರೆಯಾದುದು ನೋಡಲು ಇರುವುದೇ?ಹೀಗೆಯೇ ಬ್ರಹ್ಮಜ್ಞಾನಿಗೆ ಸದ್ರೂಪವಾದ ಬ್ರಹ್ಮಕ್ಕಿಂತ  ಮತ್ತೇನು ಬುದ್ಧಿಯ ಸಂಚಾರಕ್ಕೆ ಆಸ್ರಯವಾದೀತು.                 ?(ಪುಟ271)

 

521) ಪರಾನಂದದ ಅನುಭವವನ್ನು ಬಿಟ್ಟು,ನೀರಸವಾದ ವಿಷಯಗಳಲ್ಲಿ ಯಾವ ವಿದ್ವಾಂಸನು ತಾನೇ ರಮಿಸಿಯಾನು.ಮಹಾಹ್ಲಾದವನ್ನುಂಟು ಮಾಡುವ ಚಂದ್ರನು ಪ್ರಕಾಶಿಸುತ್ತಿರುವಾಗ  ಯಾವನು ತಾನೇ ಚಿತ್ರದಲ್ಲಿರುವ ಚಂದ್ರನನ್ನು ನೋಡುವುದಕ್ಕೆ ಬಯಸುವನು?(ಪುಟ272)

 

522)ಮಿಥ್ಯಾವಸ್ತುಗಳ ಅನುಭವದಿಂದ  ಸ್ವಲ್ಪ ತೃಪ್ತಿಯೂ ಉಂಟಾಗುವುದಿಲ್ಲ. ದುಃಖ ನಿವೃತ್ತಿಯೂ ಆಗುವುದಿಲ್ಲ.ಆದುದರಿಂದ ಅದ್ವಯಾನಂದ ರಸದ  ಅನುಭವದಿಂದ ತೃಪ್ತನಾಗಿ ಸದ್ರೂಪಾತ್ಮನ ನಿಷ್ಠೆಯಿಂದಲೇ ಸುಖವಾಗಿರು.(ಪುಟ272)

 

523)ಎಲೈ ಮಹಾಮತಿಯೆ,ಎಲ್ಲಾ ಪ್ರಕಾರದಿಂದಲೂ ಸ್ವಾತ್ಮನನ್ನೇ ನೋಡುತ್ತಾ  ,ಅದ್ವಯವ್ಆದ ಆತ್ಮನನ್ನೇ ಮನನ ಮಾಡುತ್ತಾ, ಸ್ವಾತ್ಮಾನಂದವನ್ನೇ ಅನುಭವಿಸುತ್ತ,ಕಾಲವನ್ನು ಕಳೆ.(ಪುಟ272)

 

524)ವಿಕಲ್ಪ ಶೂನ್ಯನಾದ ಅಖಂಡ ಜ್ಞಾನಾತ್ಮನಲ್ಲಿ ವಿವಿಧ ಕಲ್ಪನೆಗಳನ್ನು ಮಾಡುವುದು ಆಕಾಶದಲ್ಲಿ ನಗರವನ್ನು ಕಲ್ಪಿಸಿದಂತೆ.ಆದುದರಿಂದ ಅದ್ವಯಾನಂದ ಸ್ವರೂಪದಿಂದ ಯಾವಾಗಲೂ ಪರಮಶಾಂತಿಯನ್ನು ಹೊಂದಿ ಮೌನವನ್ನು ಸೇವಿಸು.(ಪುಟ273)

 

525)ಮಿಥ್ಯಾ ವಿಷಯಗಳ ಕಾರಣವಾದ ಬುದ್ಧಿಗೆ  ಮಹಾತ್ಮನಾದ ಬ್ರಹ್ಮಜ್ಞಾನಿಯ  ಬ್ರಹ್ಮಭಾವದಿಂದ ಉಂಟಾಗುವ  ಮೌನವೇ ಪರಮೋಪ ಶಾಂತಿ.ಅಲ್ಲಿ ನಿರಂತರವೂ ಅದ್ವಯಾನಂದ ಸುಖವಾಗುತ್ತದೆ.(ಪುಟ278)

 

526)ಆತ್ಮ ಸ್ವರೂಪವನ್ನು ತಿಳಿದುಕೊಂಡು ಆತ್ಮಾನಂದರಸವನ್ನು ಕುಡಿಯುತ್ತಿರುವವನಿಗೆ ಸವ೯ವಾಸನಾ ರಹಿತವಾದ ಮೌನಕ್ಕಿಂತ ಶ್ರೇಷ್ಠ-ಸುಖಕರವಾದದ್ದು ಬೇರೊಂದಿಲ್ಲ.(ಪುಟ 274)

 

527)ವಿದ್ವಾಂಸನೂ ಆತ್ಮಾರಾಮನೂ  ಆದ ಮುನಿಯು ನಡೆಯುವಾಗಲೂ ನಿಲ್ಲುವಾಗಲೂ  ಕುಳಿತುಕೊಳ್ಳುವಾಗಲೂ  ಅಥವಾ ಬೇರೆ ಯಾವಸ್ಥಿತಿಯಲ್ಲಿರುವಾಗಲೂ ,ಸ್ವೇಚ್ಚೆಯಿಂದ  ಯಾವಾಗಲೂ ಇರಬೇಕು.(ಪರರಿಗಧೀನವಾಗದೆ)(ಪುಟ274)

 

528)ಯಾವ ಪ್ರತಿಬಂದವೂ ಇಲ್ಲದ  ಬುದ್ಧಿವೃತ್ತಿಯುಳ್ಳ ,ಆತ್ಮಸ್ವರೂಪವನ್ನು ನಿಶ್ಚಯಿಸಿಕೊಂಡಿರುವ  ಮಹಾತ್ಮನಿಗೆ ದೇಶ ಕಾಲ ಆಸನ ದಿಕ್ಕು  ಯಮನಿಯಮಾದಿಗಳು  ಲಕ್ಷ್ಯಾದಿಗಳು -ಇವುಗಳ ಅಪೇಕ್ಷೆಯಿರುವುದಿಲ್ಲ.ತನ್ನ ಆತ್ಮನನ್ನು ಸಾಕ್ಷಾತ್ಕರಿಸಿಕೊಳ್ಳುವುದಕ್ಕೆ ನಿಯಮಾದಿಗಳ ಅಪೇಕ್ಷೆ ಎಲ್ಲಿಯದು?

(ಧ್ಯಾನಕ್ಕೆ ಬೇಕಾದ ಲಕ್ಷ್ಯಗಳು)(ಪುಟ275)

 

52)'ಇದು ಗಡಿಗೆ' ಎಂದು ತಿಳಿದುಕೊಳ್ಳುವುದಕ್ಕೆ  ಪ್ರಮಾಣ ಸೌಷ್ಠವವನ್ನು ಬಿಟ್ಟು  ಯಾವ ನಿಯಮವು ಬೇಕಾಗಿರುತ್ತದೆ?ಅದಿದ್ದರೆ ಮಾತ್ರ ಪದಾಥ೯ ಜ್ಞಾನವು ಉಂಟಾಗುತ್ತದೆ.(ಪುಟ275)

 

530) ಆತ್ಮನು ನಿತ್ಯಸಿದ್ಧ-ಸ್ವರೂಪನು.ಪ್ರಮಾಣವಿರುವಾಗ ಪ್ರಕಾಶಿಸುತ್ತಾನೆ.ದೇಶವನ್ನಾಗಲೀ ಕಾಲವನ್ನಾಗಲೀ ಶುದ್ಧಿಯನ್ನಾಗಲೀ ಅಪೇಕ್ಷಿಸುವುದಿಲ್ಲ.(ಪುಟ275) 

 

531)'ನಾನು ದೇವದತ್ತನು'ಎಂಬ ಜ್ಞಾನವು  ಯಾವುದನ್ನೂ ಅಪೇಕ್ಷಿಸದೆ ಆಗುವುದು.ಹಾಗೆಯೇ  ಯಾವುದನ್ನೂ ಅಪೇಕ್ಷಿzಸದೆ ಆಗುವುದು.ಬ್ರಹ್ಮಜ್ಞಾನಿಗೂ 'ನಾನು ಬ್ರಹ್ಮವು'ಎಂಬ ಜ್ಞಾನವು ಯಾವುದನ್ನೂ ಅಪೇಕ್ಷಿಸದೆ ಆಗುವುದು.(ಕಾಲ ದೇಶಾದಿಗಳನ್ನು ಅಪೇಕ್ಷಿಸದೆ ನೇರವಾಗಿ)(ಪುಟ276)

 

532)ಸೂಯ೯ನಿಂದ ಸವ೯ಜಗತ್ತೂ ಬೆಳಗುವಹಾಗೆ  ಯಾವನ ತೇಜಸ್ಸಿನಿಂದ  ಮಿಥ್ಯಾರೂಪವೂ ತುಚ್ಛವೂ ಆದ ಅನಾತ್ಮವಸ್ತುವು ತೋರುತ್ತದೆಯೊ ಅವನ್ನು ಪ್ರಕಾಶಿಸುವುದು ಯಾವುದಿದ್ದೀತು?(ಪುಟ276)

 

533)ವೇದ ಶಾಸ್ತ್ರ ಪುರಾಣಗಳೂ  ಸಮಸ್ತ ಭೂತಗಳೂ  ಯಾವುದರಿಂದ ಅಥ೯ವತ್ತಾಗುವುವೊ ವಿಜ್ಞಾತ್ರೃವನ್ನು ಯಾವುದು ತಾನೇ ಪ್ರಕಾಶ ಪಡಿಸೀತು?

(ಯಾವುದರಿಂದ ಇದೆಲ್ಲವನ್ನೂ ತಿಳಿದುಕೊಳ್ಳುತ್ತಾನೆಯೋ  ಅವನನ್ನು ಯಾವುದರಿಂದ ತಿಳಿದುಕೊಂಡಾನು?ಎಲೈ ಮೈತ್ರೇಯಿ ವಿಜ್ಞಾತ್ರೃವನ್ನು ಯಾವುದರಿಂದ ತಿಳಿದುಕೊಂಡಾನು?ಯೇನೇದಂ ಸವ೯ಂ ವಿಜಾನಾತಿ

ತಂ ಕೇನ ವಿಜಾನೀಯಾತ್?ವಿಜ್ಞಾತಾರಮರೇ ಕೆನ ವಿಜಾನೀಯಾದಿತಿ(ಬೃ..2-4-14)(ಪುಟ 277)

 

534) ಆತ್ಮನು ಸ್ವಯಂ ಪ್ರಕಾಶನು,ಅನಂತ ಶಕ್ತಿಯುಳ್ಳವನು,ಅಪ್ರಮೇಯನಾಗಿದ್ದರೂ ಎಲ್ಲರ

ಅನುಭವಕ್ಕೆ ಗೋಚರನಾದವನು;ಅವನನ್ನೇ ಅರಿತುಕೊಂಡು  ಸಂಸಾರ ಬಂಧದಿಂದ ಮುಕ್ತನಾದ ಇವನು

ಬ್ರಹ್ಮವಿದರಲ್ಲಿ ಸವೋ೯ತ್ತಮನಾಗಿ  ಸವೋ೯ತ್ಕøಷ್ಟನಾಗಿರುತ್ತಾನೆ.(ಪುಟ277)

 

535)ಅವನು ವಿಷಯ-ವಿಯೋಗದಿಂದ ದುಃಖಿಸುವುದಿಲ್ಲ.ವಿಷಯಗಳಿಂದ ಸಂತೋಷಪಡುವುದಿಲ್ಲ.ಸುಖ-ಸಾಧನಗಳಲ್ಲಿ ಆಸಕ್ತನಾಗುವುದೂ ಇಲ್ಲ,ವಿರಕ್ತನಾಗುವುದೂ ಇಲ್ಲ.ನಿತ್ಯಾನಂದದಿಂದ ತೃಪ್ತನಾಗಿ ಯಾವಾಗಲೂ ತಾನೇ ತನ್ನಲ್ಲಿಯೇ ಕ್ರೀಡಿಸುತ್ತಾನೆ.,ಆನಂದಪಡುತ್ತಾನೆ.(ಪುಟ 278)

 

536)ಬಾಲಕನು  ಹಸಿವನ್ನೂ ದೇಹಾಯಾಸದ ವ್ಯಥೆಯನ್ನೂ ಮರೆತು  ತನ್ನ ಆಟದ ವಸ್ತುವಿನೊಂದಿಗೆ  ಆಡುವಂತೆ ಬ್ರಹ್ಮಜ್ಞಾನಿಯು ಅಹಂಕಾರ ಮಮಕಾರಗಳಿಲ್ಲದೆ ಸುಖಿಯಾಗಿ ತನ್ನ ಆತ್ಮನಲ್ಲಿ ರಮಿಸುತ್ತಾನೆ

(ಪುಟ278)

 

537)ಬ್ರಹ್ನಜ್ಞಾನಿಗಳು ಯಾವ ಚಿಂತೆಂಯಾಗಲೀ ದೈನ್ಯವಾಗಲೀ  ಇಲ್ಲದೆ ಭಿಕ್ಷೆಯಿಂದ ಊಟಮಡುತ್ತಾರೆ.ನದಿಯ ನೀರೆ ಅವರಿಗೆ ಪಾನವಾಗಿದೆ.ಸ್ವತಂತ್ರವಾಗಿಯೂ ನಿರಂಕುಶವಾಗಿಯೂ ಇದ್ದು,ಸ್ಮಸನದಲ್ಲಾಗಲೀ

ಕಾಡಿನಲ್ಲಾಗಲೀ ನಿಭ೯ಯವಾಗಿ ಮಲಗುತ್ತಾರೆ.ಅವರಿಗೆ ದಿಕ್ಕೇ ಒಗೆಯುವುದು ಒಣಗಿಸುವುದು  ಮೊದಲಾದುದಿಲ್ಲದ ವಸ್ತ್ರವಾಗಿದೆ.ನೆಲವೇ ಅವರಿಗೆ ಹಾಸುಗೆ;ಅವರು ವೇದಾಂತವೆಂಬ ಬೀದಿಗಳಲ್ಲಿ ಸಂಚರಿಸುತ್ತಾರೆ.ಅವರಿಗೆ ಕ್ರೀಡೆಯು ಪರಬ್ರಹ್ಮದಲ್ಲಿಯೇ.(ಪುಟ27)

 

538)ಯಾವ ವಣಾ೯ಶ್ರಮ ಚಿಹ್ನೆಗಳಿಲ್ಲದ ,ಬಾಹ್ಯವಿಷಯಗಳಲ್ಲಿ ಆಸಕ್ತನಾಗದ, ಆತ್ಮಜ್ಞಾನಿಯು  ಶರೀರವೆಂಬ  ವಿಮಾನವನ್ನು  ಆಶ್ರಯಿಸಿಕೊಂಡು  ಇತರರ ಅಪೇಕ್ಷೆಯಿಂದ  ಒದಗಿದ ವಿಷಯಗಳನ್ನೆಲ್ಲ ಹುಡುಗನಂತೆ ಅನುಭವಿಸುತ್ತಾನೆ.(ಪುಟ 27)

 

53)ಚಿದಾಕಾಶದಲ್ಲಿರುವವನು (ಎಂದರೆ ಬ್ರಹ್ಮಜ್ಞಾನಿಯು) ದಿಗಂಬರನಾಗಿ ಅಥವ ವಸ್ತ್ರವನ್ನುಟ್ಟುಕೊಂಡು  ಅಥವ ವಾರುಬಟ್ಟೆಯನ್ನುಟ್ಟುಕೊಂಡು,ಉನ್ಮತ್ತನಂತೆ ಬಾಲಕನಂತೆ ಅಥವಾ ಪಿಶಾಚದಂತೆ  ಭೂಮಿಯಲ್ಲಿ ಸಂಚರಿಸುತ್ತಾನೆ.(ಪುಟ280)

 

540)ಸ್ವಾತ್ಮನಿಂದಲೇ ಸದಾ ಸಂತುಷ್ಟನಾದ  ತಾನೆ ಸವಾ೯ತ್ಮನಾದ ಏಕಚಾರಿಯಾದ  ಮುನಿಯು ಯಥೇಚ್ಛವಾಗಿ ಅನ್ನಶಾಲಿಯೂ ರೂಪಶಾಲಿಯೂ ಆಗಿ ಸಂಚರಿಸುತ್ತಾನೆ.

(ಬ್ರಹ್ಮಜ್ಞಾನಿಯು ತಾನೇ ಎಲ್ಲವೂ ಆಗಿರುವುದರಿಂದ  ಬ್ರಹ್ಮಸ್ವರೂಪದಿಂದ ಎಲ್ಲರ ರೂಪವನ್ನೂ ಅನ್ನವನ್ನೂ  ಪಡೆದುಕೊಳ್ಳುತ್ತಾನೆ ಎಂದಥ೯.)(ಪುಟ280)

 

541)ಕೆಲವು ವೇಳೆ ಮೂಢನಂತೆ ,ಕೆಲವೊಮ್ಮೆ ವಿದ್ವಾಂಸನಂತೆ,ಮಹರಾಜ ವೈಭವದಿಂದ ಮೆರೆಯುವಂತೆ, ಇನ್ನೊಮ್ಮೆ ಭಾಂ್ರತನಂತೆ,ಮತ್ತೊಂದು ಸಲ ಶಾಂತನಂತೆ,ಕೆಲವು ಸಲ ಅಜಗರವೃತ್ತಿಯನ್ನು ಅವಲಂಬಿಸಿದವನಾಗಿ  ಮತ್ತೊಮ್ಮೆಸತ್ಪಾತ್ರನಾಗಿ,ಕೆಲವು ಸಲ ಅವಮಾನಿತನಾಗಿ,ಎಲ್ಲಿಯೊ ಯಾರಿಗೂ ತಿಳಿಯದಂತೆ ಇರುತ್ತ,ನಿರಂತರವೂ ಪರಮಾನಂದ ಸುಖವುಳ್ಳ ಬ್ರಹ್ಮವಿದನು ಹೀಗೆ ಸಂಚರಿಸುತ್ತಾನೆ.(ಜಗತ್ತಿನಲ್ಲಿ ಬ್ರಹ್ಮಜ್ಞಾನಿಯನ್ನು ಜನರು ನಾನಾ ಬಗೆಯಿಂದ ನೋಡುತ್ತಾರೆ.ಅವನ ವಿಷಯದಲ್ಲಿ ನಾನಾ ಬಗೆಯಾದ  ಅಭಿಪ್ರಾಯವನ್ನು ಕೊಡುತ್ತಾರೆ,ಅವರು ಏನೇ ಹೇಳಲಿ ಏನೇ ಮಾಡಲಿ-ಬ್ರಹ್ಮವಿದನು ಉದಾಸೀನನಾಗಿಯೇ ಇರುತ್ತಾನೆ.ಅಜಗರ ವೃತ್ತಿ ಎಂದರೆ ಹೆಬ್ಬಾವು ಹೆಚ್ಚು ಓಡಾಡದೆ ತನ್ನ ಸಮೀಪಕ್ಕೆ ಬಂದ ಆಹಾರವನ್ನೇ ತೆಗೆದುಕೊಳ್ಳುತ್ತದೆ.(ಪುಟ(281)

 

542)ಬ್ರಹ್ಮಜ್ಞಾನಿಯು ಧನರಹಿತನಾದರೂ  ಸದಾ ಸಂತುಷ್ಟನಾಗಿರುತ್ತಾನೆ.ಸಹಾಯವಿಲ್ಲದಿದ್ದರೂ ಮಹಾಬಲನಾಗಿರುತ್ತಾನೆ.ವಿಷಯ ಭೋಗಗಳನ್ನು ಅನುಸರಿಸದಿದ್ದರೂ  ನಿತ್ಯತೃಪ್ತನಾಗಿರುತ್ತಾನೆ.ಅಸದೃಶನಾಗಿದ್ದರೂ  ಸಮದೃಷ್ಟಿಯುಳ್ಳವನಾಗಿರುತ್ತಾನೆ.(ಆತ್ಮಜ್ಞಾನವೆಂಬ ಸಂಪತ್ತು ಇರುವುದರಿಂದ,ಆತ್ಮಾನಂದವನ್ನು ಅನುಭವಿಸುತ್ತಾ ಇರುತ್ತಾನೆ,ಸವ೯ತ್ರ ಶತ್ರುಗಳನ್ನಾಗಲೀ ಮಿತ್ರರನ್ನಾಗಲೀ ನೋಡುವುದಿಲ್ಲ.)(ಪುಟ282)

 

543)ಇವನು ಕೆಲಸ ಮಾಡುತ್ತಿದ್ದರೂ ಮಾಡುತ್ತಿಲ್ಲ;ಕಮ೯ಫಲವನ್ನನುಭವಿಸುತ್ತಿದ್ದರೂ  ಅನುಭವಿಸುತ್ತಿಲ್ಲ;ಶರೀರವುಳ್ಳವನಾಗಿದ್ದರೂ  ಶರೀರವಿಲ್ಲದವನು;ಪರಿಚ್ಛಿನ್ನನಾಗಿದ್ದರೂ ಸವ೯ವ್ಯಾಪಿಯು.(1)ಕತೃ೯ತ್ವವಿಲ್ಲದಿರುವುದರಿಂದ 2) ಭೋಕ್ತøತ್ವವಿಲ್ಲದಿರುವುದರಿಂದ 3)ಶರೀರದಲ್ಲಿ ಆತ್ಮಭಾವ ವಿಲ್ಲದಿರುವುದರಿಂದ)(ಪುಟ282)

 

544)ಯಾವಾಗಲೂ ಶರೀರಾಭಿಮಾನವಿಲ್ಲದೆ  ಇರುತ್ತಿರುವ  ಬ್ರಹ್ಮಜ್ಞಾನಿಯನ್ನು  ಸುಖದುಃಖಗಳಾದ  ಪುಣ್ಯಪಾಪಗಳಾಗಲೀ  ಎಂದಿಗೂ ಸೋಂಕುವುದಿಲ್ಲ.(ಪುಟ282)

 

545)ಸ್ಥೂಲದೇಹವೇ ಮೊದಲಾದವುಗಳೊಂದಿಗೆ  ಸಂಬಂಧವನ್ನು ಪಡೆದಿರುವ  ಅಭಿಮಾನಿಗೆ ಸುಖದುಃಖಗಳೂ ,ಶುಭಾಶುಭಗಳೂ ಉಂಟಾಗುತ್ತವೆ.ಬಂಧವನ್ನು ಧ್ವಂಸಪಡಿಸಿಕೊಂಡು  ಸತ್ಸ್ವರೂಪನಾಗಿರುವ ಮುನಿಗೆಶುಭವಾಗಲೀ ಅಶುಭವಾಗಲೀ  ಅವುಗಳ ಫಲವಾಗಲೀ ಎಲ್ಲಿಯದು?(ಪುಟ283)

 

546)ಸೂಯ೯ನು ರಾಹುವಿನಿಂದ ಗ್ರಸ್ತನಾಗದಿದ್ದರೂ ಗ್ರಸ್ತನಾದಂತೆ ತೋರುವುದರಿಂದ  ವಸ್ತುಸ್ವರೂಪವನ್ನರಿಯದ ಜನರು 'ಸೂಯ೯ನು ಗೆಸ್ತನಾಗಿರುವನು'ಎಂದು ಭ್ರಾಂತಿಯಿಂದ ಹೇಳುತ್ತಾರೆ.(ಪುಟ263)

 

547)ಹಾಗೆಯೇ ದೇಹಾದಿ ಬಂಧಗಳಾದ  ಮುಕ್ತನೂ ಶ್ರೇಷ್ಠನೂ  ಆದ ಬ್ರಹ್ಮಜ್ಞಾನಿಗೆ ಶರೀರವಿರುವಂತೆ ತೋರುವುದರಿಂದ  ಅಜ್ಞಾನಿಗಳು ಅವನಿಗೂ ದೇಹವಿದೆಯೆಂದು ತಿಳಿಯುತ್ತಾರೆ.(ಪುಟ284)

 

548)ಆದರೆ ಮುಕ್ತನ ದೇಹವು ಬಿಡಲ್ಪಟ್ಟ ಹಾವಿನ ಪೊರೆಯಂತೆ ಹೆಗೋ ಪ್ರಾಣವಾಯುವಿನಿಂದ ಅಲ್ಲಿ ಇಲ್ಲಿ ಚಲಿಸಲ್ಪಡುತ್ತ ಇರುತ್ತದೆ.(ಹೇಗೆ  ಒರಾಣರಹಿತವಾದ ಹಾವಿನ ಪೊರೆಯು  ಹುತ್ತದಲ್ಲಿ ಬಿಡಲ್ಪಟ್ಟು ಬಿದ್ದಿರುತ್ತದೆಯೋ  ಹಾಗೆಯೇ ಶರೀರವು ಬಿದ್ದಿರುತ್ತದೆ.)(ಪುಟ284)

 

54)ಹೇಗೆ ನೀರಿನ ಪ್ರವಾಹವು  ಮರದ ತುಂಡುಗಳನ್ನು ಹಳತಿಟ್ಟುಗಳಿಗೆ ಒಯ್ಯುತ್ತದೆಯೊ  ಹಾಗೆಯೆ ಪ್ರಾರಬ್ಧ ಕಮ೯ವು  ದೇಹವನ್ನು ಕಾಲೋಚಿತವಾದ  ಸುಖದುಃಖಾನುಭವದ ಕಡೆಗೆ ಒಯ್ಯುತ್ತದೆ.(ಪುಟ284)

 

550) ಬ್ರಹ್ಮಜ್ಞಾನಿಯು ಪ್ರಾರಬ್ಧ ಕಮ೯ಗಳಿಂದ ಕಲ್ಪಿತವಾಗಿರುವ  ಸಂಸ್ಕಾರಗಳಿಂದ ಸಂಸಾರಿಯಂತೆ ಭೋಗಗಳಲ್ಲಿ ಸಂಚರಿಸುತ್ತಾನೆ. ಚಕ್ರದ ಕೆಳಗಿರುವ ಅಚ್ಚಿನಂತೆ ಸಿದ್ಧನು ಸಂಕಲ್ಪ-ವಿಕಲ್ಪಗಳಿಲ್ಲದೆ ಸಾಕ್ಷಿಯಹಾಗೆ ಸಂಸಾರದಲ್ಲಿ ಸುಮ್ಮನಿರುತ್ತಾನೆ. (ಪುಟ285) 

 

551)ಬ್ರಹ್ಮಜ್ಞಾನಿಯು  ಇಂದ್ರಿಯಗಳನ್ನು ವಿಷಯಗಳಲ್ಲಿ ನಿಯೋಜಿಸುವುದೂ ಇಲ್ಲ.ಅವುಗಳಿಂದ ಹಿಂತೆಗೆಯುವುದೂ ಇಲ್ಲ.ಸಾಕ್ಷಿರೂಪದಿಂದ ಅವಿಕಾರಿಯಾಗಿರುತ್ತಾನೆ.ಕಮ೯ಫಲವನ್ನು ಸ್ವಲ್ಪವಾದರೂ  ಗಮನಿಸುವುದೇ ಇಲ್ಲ.ಅವನು ಸ್ವಾತ್ಮಾನಂದದ  ಸಾಂದ್ರರಸಪಾನದಿಂದ  ಮತ್ತನಾಗಿರುತ್ತಾನೆ.(ಪುಟ 285)

 

552)ಲಕ್ಷ್ಯ,ಅಲಕ್ಷ್ಯ ಎಂಬ ಭಾವನೆಗಳನ್ನು ಬಿಟ್ಟು  ಕೇವಲಾತ್ಮರೂಪದಿಂದಲೇ  ಇರುತ್ತಿರುವ ಇವನು ಸಾಕ್ಷಾತ್ ಶಿವನೂ  ಬ್ರಹ್ಮಜ್ಞಾನಿಗಳಲ್ಲಿ  ಶ್ರೇಷ್ಠನೂ ಆಗಿರುವನು.(ಪುಟ 286)

 

553)ಬ್ರಹ್ಮಜ್ಞಾನಿಗಳಲ್ಲಿ ಶ್ರೇಷ್ಠನಾದವನು  ಬದುಕಿರುವಾಗಲೇ ನಿತ್ಯಮುಕ್ತನೂ ಕೃತಾಥ೯ನೂ ಆಗಿರುತ್ತಾನೆ.ಮೊದಲೂ ಬ್ರಹ್ಮವೇ ಆಗಿದ್ದು  ಉಪಾಧಿಯು ನಾಶವಾಗಲು ,ಅದ್ವಯವಾದ ಬ್ರಹ್ಮವನ್ನು ಹೊಂದುತ್ತಾನೆ.(ಪುಟ286)

 

554)ನಟನು ವೇಷವನ್ನು ಧರಿಸಿರುವಾಗಲೂ  ವೇಷವಿಲ್ಲದಿರುವಾಗಲೂ  ಹೇಗೆ ಪುರುಷನೇ ಆಗಿರುವನೋ ಹಾಗೆಯೇ ಬ್ರಹ್ಮಜ್ಞಾನಿಗಳಲ್ಲಿ ಶ್ರೇಷ್ಠನಾಗಿರುವವನು  ಯಾವಾಗಲೂ ಬ್ರಹ್ಮನೇ ಆಗಿರುತ್ತಾನೆ.ಬೇರೆಯಾಗಿರುವುದಿಲ್ಲ.(287)

 

555)ಬ್ರಹ್ಮವೇ ಆದ ಯತಿಯ ಶರೀರವು  ಮರದಿಂದ ಉದುರಿ ಹೋದ ಎಲೆಯಂತೆ  ಎಲ್ಲಿಯಾದರೂ ಬೀಳಲಿ ,(ಅದರಿಂದ ಅವನಿಗೆ ಏನೂ ಆಗುವುದಿಲ್ಲ).ಏಕೆಂದರೆ ಅದು ಮೊದಲೇ ಜ್ಞಾನಾಗ್ನಿಯಿಂದ ಸುಟ್ಟುಹೋಗಿರುವುದು.(ಆದುದರಿಂದ ಅವನು ತನ್ನ ಶವ ಸಂಸ್ಕಾರದ ಬಗ್ಗೆ ಯೋಚಿಸಬೇಕಾಗಿರುವುದಿಲ್ಲ).(ಪುಟ 287)

 

556)ಸತ್ಸ್ವರೂಪವಾದ ಬ್ರಹ್ಮದಲ್ಲಿ  ಪೂಣ೯ದ್ವಯಾನಂದರೂಪದಿಂದ ಯಾವಾಗಲೂ ನಿಂತಿರುವ ಮುನಿಗೆ  ಚಮ೯ ಮಾಂಸ ಮಲಗಳ ಮುದ್ದೆಯಾಗಿರುವ  ಶರೀರವನ್ನು ತ್ಯಜಿಸುವುದಕ್ಕೆ ಉಚಿತವಾದ ದೇಶಕಾಲಾದಿಗಳ ಅಪೇಕ್ಷೆಯು ಇರುವುದಿಲ್ಲ.

(ಶರೀರವುತನ್ನ ಕಾಯ೯ವನ್ನು ಮುಗಿಸಿರುವುದರಿಂದ ಅವನು ಅದನ್ನು ಯಾವಾಗಲಾದರೂ ಬಿಡಬಹುದು)

(ಪುಟ 288)

 

557)ಅವಿದ್ಯೆ ಎಂಬ ಹೃದಯಗ್ರಂಥಿಯು ಕಳಚಿಹೋಗುವುದೇ  ಮೋಕ್ಷವೆನಿಸುವುದು.ಆದಕಾರಣ ದೇಹವನ್ನು ಬಿಡುವುದು ಮೋಕ್ಷವಲ್ಲ.ದಂಡವನ್ನಾಗಲೀ ಕಮಂಡಲವನ್ನಾಗಲೀ ಬಿಡುವುದು ಮೋಕ್ಷವಲ್ಲ.

(ಇವೆರಡೂ ಸನ್ಯಾಸಿಯ ಬಾಹ್ಯಚಿಹ್ನೆಗಳು.ಕೇವಲ ಬಾಹ್ಯತ್ಯಾಗದಿಂದ ಮೋಕ್ಷವು ಸಿದ್ಧಿಸುವುದಿಲ್ಲ.ಇವ್ಗಳು ಮನಸ್ಸಿನಲ್ಲಿಯೂ ಇರಬರದು)(ಪುಟ288)

 

558)ಮರದ ಎಲೆಯು  ಕಾಲುವೆಯಲ್ಲಾಗಲೀ ನದಿಯಲ್ಲಾಗಲಿ  ಶಿವ ಕ್ಷೇತ್ರದಲ್ಲಾಗಲೀ ,ಬೇದಿಗಳು ಸೇರುವ ಚೌಕದಲ್ಲಾಗಲೀ  ಬಿದ್ದರೆ ಅದರಿಂದ ಮರಕ್ಕೆ ಶುಭವಾಗಲೀ ಅಶುಭವಾಗಲೀ ಉಂಟಾದೀತೇ?

(ಪುಟ288)

 

55)ಮರದ ಎಲೆ ಹೂವು ಹಣ್ಣು ನಾಶವಾಗುವ ಹಾಗೆ ದೇಹೇಂದ್ರಿಯ -ಪ್ರಾಣ-ಬುದ್ಧಿಗಳೂ ನಾಶವಾಗುವವು.ಇದರಿಂದ ಸತ್ಯರೂಪನೂ ಆನಂದ ಸ್ವರೂಪನೂ  ಆತ್ಮನೂ ಆದ ತನಗೆ ಏನೂ ಆಗುವುದಿಲ್ಲ.ಇವನು ಮರದ ಹಾಗೆ ಅವಿನಾಶಿಯಾಗಿರುತ್ತಾನೆ.(ಪುಟ 28)

 

560)'ಪ್ರಜ್ಞಾನ ಘನನು'ಎಂಬ ಸತ್ಯವನ್ನು ಸೂಚಿಸುವ  ಆತ್ಮಸ್ವರೂಪವನ್ನು ಅನುವಾದ ಮಾಡಿಕೊಂಡು  ಉಪಾಧಿಸಂಬಂಧವಾದ ರೂಪವು  ನಾಶವಾಗುತ್ತದೆಂದು ಶ್ರುತಿಗಳು ಹೇಳುತ್ತವೆ.(ಪುಟ560)

 

561) ವಿಕಾರವುಳ್ಳ ವಸ್ತುಗಳು ನಾಶವಾಗುತ್ತಿದ್ದರೂ  ಆತ್ಮನು ನಾಶವಗುವುದಿಲ್ಲವೆಂದು ಶ್ರುತಿಯು ಹೇಳುತ್ತದೆ.:ಎಲೈ ಮ್ಯತ್ರೇಯಿ, ಆತ್ಮನು ಅವಿನಾಶಿಯೇ'. (ಬೃ.. 4-5-14)(ಪುಟ20)

 

562)ಕಲ್ಲು ಮರ ಹುಲ್ಲು ಧಾನ್ಯ ಹೊಟ್ಟುಮೊದಲಾದವು ದಗ್ಧವಾದರೆ ಮಣ್ಣೇ ಆಗುವಂತೆ ದೇಹೇಂದ್ರಿಯ ಮನಸ್ಸು ಪ್ರಾಣ  ಮೊದಲಾದ ದೃಶ್ಯವಸ್ತುವೆಲ್ಲವೂ  ಜ್ಞಾನಾಗ್ನಿಯಿಂದ ದಗ್ಧವಾಗಿ  ಪರಮಾತ್ಮ ಸ್ವರೂಪವನ್ನೇ ಹೊಂದುತ್ತವೆ.(ಪುಟ21)

 

563)ಸೂಯ೯ನಬೆಳಕಿನಲ್ಲಿ(ಅದಕ್ಕಿಂತ) ಭಿನ್ನವಾದ ಕತ್ತಲೆಯು ಹೇಗೆ ಲಯವಾಗಿ ಹೋಗುವುದೊ

 ಹಾಗೆಯೇ ದೃಶ್ಯವಸ್ತುವೆಲ್ಲವೂ  ಬ್ರಹ್ಮದಲ್ಲಿ ಲಯವಾಗುತ್ತದೆ.(ಪುಟ21)

 

564)ಗಡಿಗೆಯು ನಾಶವಾದಾಗ ಅದರಲ್ಲಿರುವ ಆಕಾಶವು ಹೇಗೆ ಸ್ಫುಟವಾಗಿ ಮಹಾಕಾಶವೆ ಆಗುತ್ತದೆಯೊ ಹಾಗೇ ಉಪಾಧಿಯು ನಾಶವಾದಾಗ ಬ್ರಹ್ಮಜ್ಞಾನಿಯು ತಾನೇ ಬ್ರಹ್ಮವಾಗುತ್ತಾನೆ.(ಪುಟ 21)

 

565)ಹಾಲಿನಲ್ಲಿ ಸುರಿದ ಹಾಲು, ಎಣ್ಣೆಯಲ್ಲಿ ಸುರಿದ ಎಣ್ಣೆ,ನೀರಿನಲ್ಲಿಸುರಿದನೀರು -ಇವು ಹೇಗೆ ಒಂದಾಗುತ್ತವೆಯೊ ಹಾಗೆಯೇ ಆತ್ಮಜ್ಞಾನಿಯಾದ ಮುನಿಯು  ಬ್ರಹ್ಮದಲ್ಲಿ ಐಕ್ಯವಾಗುತ್ತಾನೆ.(ಕಠ.4-15,ಮುಂಡಕ..3-2-8,ಇವುಗಳೊಂದಿಗೆ ಹೋಲಿಸಿ)(ಪುಟ22)

 

566)ಹೀಗೆ ವಿದೇಹಮುಕ್ತಿಯನ್ನು ಹೊಂದಿ ಅಖಂಡ-ಸತ್ಸ್ವರೂಪತ್ವವೆಂಬ ಬ್ರಹ್ಮಭಾವವನ್ನು ಪಡೆದು  ಯತಿಯು ಪುನಃ ಸಂಸಾರಕ್ಕೆ ಹಿಂದಿರುಗುವುದಿಲ್ಲ.(ಪುಟ22)

 

567)ಸತ್ಸ್ವರೂಪನಾದ ಪರಮಾತ್ಮನೂ ನಾನೂ ಒಂದೇ  ಎಂಬ ಜ್ಞಾನದಿಂದ ಅವಿದ್ಯಾದಿ ಶರೀರಗಳನ್ನು ಸುಟ್ಟುಕೊಂಡು ಇವನು ಬ್ರಹ್ಮವೇ ಆಗುತ್ತಾನೆ.ಬ್ರಹ್ಮಕ್ಕೆ ಪುನಜ೯ನ್ಮವು ಎಲ್ಲಿಯದು?(ಸ್ಥೂಲ,ಸೂಕ್ಷ್ಮ,ಕಾರಣ ಶರೀರ- ಇವುಗಳನ್ನು)(ಪುಟ22).

 

568)ನಿಷ್ಕ್ರಿಯವಾದ ಹಗ್ಗದಲ್ಲಿ ಹಾವು ತೋರಿಕೊಳ್ಳುವುದು  ಮತ್ತು ಹೋಗುವುದು -ಇವು ಹೇಗೆ ಅಸತ್ಯವೊ  ಹಾಗೆಯೇ ಬಂಧಮೋಕ್ಷಗಳು ಮಾಯಾಕಲ್ಪಿತವಾಗಿರುವುದರಿಂದ ಆತ್ಮನಲ್ಲಿ ನಿಜವಾಗಿ ಇರುವುದಿಲ್ಲ.(ಪುಟ 23)

 

56)ಮಾಯೆಯ ಆವರಣವಿದ್ದರೆ ಅಥವಾ ಇಲ್ಲದಿದ್ದರೆ  ಬಂಧಮೋಕ್ಷಗಳನ್ನು ಹೇಳಬಹುದು.ಆದರೆ ಬ್ರಹ್ಮಕ್ಕೆ ಯಾವ ಆವರಣವೂ ಇಲ್ಲ.ಏಕೆಂದರೆ ಎರಡನೆಯ ವಸ್ತುವೇ ಇಲ್ಲದಿರುವುದರಿಂದ  ಅದಕ್ಕೆ ಯಾವ ಆವರಣವೂ ಇಲ್ಲ.ಆವರಣವಿದ್ದರೆ ಅದ್ವೈತಕ್ಕೆ ಹಾನಿಯಾಗುತ್ತದೆ.,ಆದರೆ ಶ್ರುತಿಯು ದ್ವೈತವನ್ನು ಸಹಿಸುವುದಿಲ್ಲ. (ಯಾವನು ಇಲ್ಲಿ ಭೇದವಿರುವಂತೆ ನೋಡುವನೊ ಅವನು ಮೃತ್ಯುವಿನಿಂದ ಮೃತ್ಯುವನ್ನು ಹೊಂದುತ್ತಾನೆ.(ಕಠ..2-4-11)(ಪುಟ23)

 

570)ಮೇಘದಿಂದಾಗಿರುವ ದೃಷ್ಟಿಯ ಮರೆಯನ್ನು ಸೂಯ೯ನಲ್ಲಿ ಕಲ್ಪಿಸುವಂತೆ ಮೂಢರು ಬುದ್ಧಿಯ ಗುಣವಾದ ಬಂಧವನ್ನೂ ನೋಕ್ಷವನ್ನೂ  ನಿತ್ಯವಸ್ತುವಿನಲ್ಲಿ ಸುಳ್ಳಾಗಿಯೇ ಆರೋಪಿಸುತ್ತಾರೆ.ಏಕೆಂದರೆ   ನಿತ್ಯವಸ್ತುವು ಅದ್ವಯವೂ ಅಸಂಗವೂ ಜ್ಞಾನಸ್ವರೂಪನೂ ಆದ ಅಕ್ಷರವೇ.(ಪುಟ24)

 

 571)ನಿತ್ಯವಸ್ತುವಿನ ವಿಷಯದಲ್ಲಿ  ಬಂಧವಿದೆ ಎಂಬ ಜ್ಞಾನ,ಅದಿಲ್ಲವೆಂಬ ಜ್ಞಾನ-ಇವೆರಡೂ

ಬುದ್ಧಿಯ ಗುಣಗಳೇ ಹೊರತು ನಿತ್ಯವಸ್ತುವಿಗೆ ಸೇರಿದ್ದಲ್ಲ.(ಪುಟ24)

 

572)ಆದುದರಿಂದ ಬಂಧಮೋಕ್ಷಗಳು ಮಾಯೆಯಿಂದ ಕಲ್ಪಿತವಾಗಿವೆ.ಆತ್ಮನಲ್ಲಿಲ್ಲ.ಅಕಾಶದಂತಿರುವ  ಮತ್ತು ನಿಷ್ಕಲವೂ ನಿಷ್ಕ್ರಿಯವೂ ಶಾಂತವೂ ನಿಮ೯ಲವೂ ನಿರಂಜನವೂ ಅದ್ವಿತೀಯವೂ  ಆದ ಪರತತ್ವದಲ್ಲಿ ಕಲ್ಪನೆಯು ಎಲ್ಲಿಯದು?(ಪುಟ25)

 

573)

ನಿರೋಧೋ ನಚೋತ್ಪತ್ತಿನ೯ ಬದ್ಧೋ ಸಾಧಕಃ|

ಮುಮುಕ್ಷು ನ೯ ವೈ ಮುಕ್ತ ಇತ್ಯೇಷಾ ಪರಮಾಥ೯ತಾ|                                                                                        

 

ಪ್ರಲಯವೂ ಇಲ್ಲ,ಉತ್ಪತ್ತಿಯೂ ಇಲ್ಲ,ಬದ್ಧನೂ ಇಲ್ಲ,ಸಾಧಕನೂ ಇಲ್ಲ,ಮುಮುಕ್ಷುವೂ ಇಲ್ಲ,ಮುಕ್ತನೂ ಇಲ್ಲ,ಹೀಗೆ ಇದು ಪರಮಾಥ೯ವು

(ಇದರ ಮೂಲವನ್ನು ಅಮೃತ ಬಿಂದೂಪನಿಷತ್ತಿನಲ್ಲಿಯೂ (10)ಮಾಂಡೂಕ್ಯ ಕಾರಿಕೆಗಳಲ್ಲಿಯೂ (2-32)ನೋಡಬಹುದು.

ಯಾವಾಗ  ದ್ವೈತವು ಅಸತ್ಯವೆಂದೂ  ಆತ್ಮನೊಬ್ಬನೇ ಪರಮಾಥ೯ವೆಂದು  ನಿಷ್ಕಷಿ೯ಸಲ್ಪಟ್ಟಿತೊ ಆಗ ಸಮಸ್ತ ವ್ಯವಹಾರವೂ ಅವಿದ್ಯಾ ವಿಷಯವೆಂದು ಸಿದ್ಧವಾಗುತ್ತದೆ) (ಪುಟ25)

 

574)ಕಲಿದೋಷಗಳಿಲ್ಲದ ,ಕಾಮವಿಲ್ಲದ ಬುದ್ಧಿಯುಳ್ಳ,ಮುಮುಕ್ಷುವಾದ ನಿನ್ನನ್ನು ನನ್ನ ಮಗನೆಂದು ಭಾವಿಸಿಕೊಂಡು ಶ್ರುತಿಶಿರಸ್ಸಾದ ವೇದಾಂತದಲ್ಲಿರುವ ಸಿದ್ಧಾಂತರೂಪವೂ  ಶ್ರೇಷ್ಠವೂ ಆದ ರಹಸ್ಯವನ್ನು  ಇಂದು ನಿನಗೆ ಪುನಃ ಪುನಃ ಉಪದೇಶಿಸಿರುತ್ತೇನೆ.

(ಇಲ್ಲಿಗೆ ಆಚಾಯ೯ನ ಉಪದೇಶವು ಮುಗಿಯುತ್ತದೆ.

ಅಲ್ಪಮತಿಗಳು ಪ್ರಯತ್ನಪಟ್ಟರೂ ಲಭಿಸದ ಆತ್ಮಾನಾತ್ಮವಿವೇಕವೆಂಬ  ರಹಸ್ಯವನ್ನು .

ಇದೇ ವಿವೇಕ ಚೂಡಾಮಣಿ.)

 

74) ಗುರುಶಿಷ್ಯರ ನಿಗ೯ಮನ:

 

 

575) ಹಿಗೆ ಗುರುವಿನ ವಾಕ್ಯವನ್ನು ಕೇಳಿ  ಬಂಧದಿಂದ ಮುಕ್ತನಾದ  ಶಿಷ್ಯನು ನಮ್ರಭಾವದಿಂದ ನಮಸ್ಕರಿಸಿ ಗುರುವಿಂದ ಅನುಜ್ಞೆಯನ್ನು ಪಡೆದು  ಹೊರಟುಹೋದನು.(ಪುಟ26)

 

576)ಹೀಗೆ ಗುರುವು ಸದಾನಂದ ಸಾಗರದಲ್ಲಿ ಮುಳುಗಿದ ಮನಸ್ಸುಳ್ಳವನಾಗಿ  ಸಮಸ್ತ ಭೂಮಿಯನ್ನೂ ಪವಿತ್ರಗೊಳಿಸುತ್ತ ನಿರಂತರವೂ ಸಂಚರಿಸುತ್ತಿದ್ದನು.(ಪುಟ27)

 

577)ಹೀಗೆ ಆಚಾಯ೯ನ ಶಿಷ್ಯನ ಸಂವಾದದಿಂದ  ಮುಮುಕ್ಷುಗಳು  ಸುಗಮವಾಗಿ  ಜ್ಞಾನವನ್ನು ಹೊಂದಲು  ಆತ್ಮಸ್ವರೂಪವು  ನಿರೂಪಿಸಲ್ಪಟ್ಟಿತು.(ಪುಟ27)

 

578)ಸಾಧನದ ಅನುಷ್ಠಾನದಿಂದ  ಚಿತ್ತದ ಸಮಸ್ತ ದೋಷಗಳನ್ನೂ  ಕಳೆದುಕೊಂಡ,ಸಂಸಾರಸುಖದಲ್ಲಿ ವಿರಕ್ತರಾದ ,ಪ್ರಶಾಂತ ಚಿತ್ತರಾದ ಶ್ರುತಿಯಲ್ಲಿ ರಸಿಕರಾದ,ಮುಮುಕ್ಷುಗಳಾದ ಪ್ರಯತ್ನಶೀಲರು  ಹಿತವಾದ ಉಪದೇಶವನ್ನು ಆದರಿಸಲಿ.

(ಜ್ಞಾದಿ ಬಾಹ್ಯ ಸಾಧನಗಳಿಂದಲೂ  ಶಮಾದಿ ಅಂತರಂಗ ಸಾಧನದಿಂದಲೂ )(ಪುಟ 28)

 

57)ಸಂಸಾರಮಾಗ೯ದಲ್ಲಿ  ತಾಪತ್ರಯವೆಂಬ ಸೂಯ೯ಕಿರಣದಿಂದ ಉಂಟಾದ ನಾಯಾರಿಕೆಯಿಂದ ಬಳಲುತ್ತಿರುವ ,ಮರುಭೂಮಿಯಲ್ಲಿ ನೀರಿಗಾಗಿ  ಭ್ರಾಂತಿಯಿಂದ ಅಲೆಯುತ್ತಿರುವ (ಚೇತನರಿಗೆ) ಅತ್ಯಂತ ಸಮೀಪದಲ್ಲಿರುವ  ಅಮೃತಸಮುದ್ರದಂತಿರುವ  ಸುಖಕರವಾದ ಅದ್ವಿತೀಯ ಬ್ರಹ್ಮವನ್ನು ತೋರಿಸಿಕೊಡುತ್ತಿರುವ,ಮೋಕ್ಷದಾಯಕವಾದ  ಶಂಕರವಣಿಯು ಸವೋ೯ತ್ಕøಷ್ಟವಾಗಿರುತ್ತದೆ.(ಪುಟ28)

 

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

ವಿವೇಕ ಚೂಡಾಮಣಿ ಗ್ರಂಥವು ಇಲ್ಲಿಗೆ ಸಂಪೂಣ೯ವಾಯಿತು(ದಿನಾಂಕ.11.5.2021)

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,, 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 


No comments:

Post a Comment