ಶ್ರೀ ಶಂಕರ ಭಗವತ್ಪಾದರ ಆತ್ಮಬೋಧ,ಅಪರೋಕ್ಷಾನುಭೂತಿ,ವಾಕ್ಯವೃತ್ತಿ,ಲಘು ವಾಕ್ಯವೃತ್ತಿ:
ಮೂಲ ಲೇಖಕರು:ಸ್ವಾಮಿ ಹಷಾ೯ನಂದರು
ಶ್ರೀ ರಾಮಕೃಷ್ಣಾಶ್ರಮ ಮೈಸೂರು-20
ನಾಲ್ಕನೆಯ ಮುದ್ರಣ:1೯೯7
ಪ್ರಕಾಶಕರು:ಅಧ್ಯಕ್ಷರು,ರಾಮಕೃಷ್ಣಾಶ್ರಮ,ಮೈಸೂರು.
ಸಂಗ್ರಹ:ಡಾ.ರವೀಂದ್ರ ಹೊಸದುಗ೯
ಮೂಲ ಲೇಖಕರು,ರಾಮಕೃಷ್ಣಾಶ್ರಮ ಮೈಸೂರು,ಅಧ್ಯಕ್ಷರು, ಆಡಳಿತವಗ೯ ಹಾಗೂ ಸಿಬ್ಬಂದುವಗ೯ಕ್ಕೆಪ್ರಕಾಶಕರಿಗೆ ನನ್ನ ನಮನಗಳು ಹಾಗೂ ಕೃತಜ್ಞತೆಗಳು.
.........................................................................................................................
ಅದ್ವೈತ ವೇದಾಂತದ ಸಾರಸಂಗ್ರಹವನ್ನು ಸ್ವಯಂ ಆಚಾಯ೯ರೇ 'ಬ್ರಹ್ಮಸತ್ಯಂ ಜಗನ್ಮಿಥಾ ಜೀವೋ ಬ್ರಹ್ಮೈವ ನಾಪರಃ'(ಬ್ರಹ್ಮವೊಂದೇ ಸತ್ಯ ಜಗತ್ತು ಮಿಥ್ಯೆ ,ಜೀವನು ಬ್ರಹ್ಮವೇ,ಬೇರೆಯಲ್ಲ'ಎಂಬ ಶ್ಲೋಕಾಧ೯ದಲ್ಲಿ ಹೇಳಿಬಿಟ್ಟಿದ್ದಾರೆ.
1)ಮೊದಲನೆಯ ಗ್ರಂಥ:ಆತ್ಮಬೋಧ: 68 ಶ್ಲೋಕಗಳು
2)ಅಪರೋಕ್ಷಾನುಭೂತಿ: 144 ಶ್ಲೋಕಗಳು
3)ವಾಕ್ಯವೃತ್ತಿ:53 ಶ್ಲೋಕಗಳು
4)ಲಘು ವಾಕ್ಯವ್ರತ್ತಿ:18 ಶ್ಲೋಕಗಳು.
1) ಆತ್ಮಬೋಧ:
1) ತಪಸ್ಸಿನಿಂದ ಪಾಪವನ್ನು ನಾಶಮಾಡಿಕೊಂಡಿರುವ,ಮನಶ್ಯಾಂತಿಯನ್ನು ಪಡೆದಿರುವ,ರಾಗರಹಿತವಾದ
ಮುಮುಕ್ಷುಗಳಿಗೆ ಅಪೇಕ್ಷಣೀಯವಾದ
ಈ ಆತ್ಮಬೋಧವು ವಿಧಿಸಲ್ಪಡುತ್ತದೆ. (ಪುಟ 1)
2)ಜ್ಞಾನವು ಇತರ ಸಾಧನಗಳಿಗಿಂತ ನೇರವಾಗಿ ಮೋಕ್ಷವನ್ನು ದೊರಕಿಸಿಕೊಡಬಲ್ಲ ಏಕಮಾತ್ರ ಸಾಧನ.
ಬೆಂಕಿಯ ಸಹಾಯವಿಲ್ಲದೆ
ಅಡುಗೆಯಾಗದಂತೆ ಜ್ಞಾನದ ಸಹಾಯವಿಲ್ಲದೆ
ಮೋಕ್ಷವು ಸಿದ್ಧಿಸದು.
( ಕಮ೯,ಭಕ್ತಿ,ಯೋಗ ಮೊದಲಾದ ಇತರ ಸಾಧನಗಳು ಚಿತ್ತಶುದ್ಧಿಯನ್ನುಂಟು ಮಾಡಿ ತನ್ಮೂಲಕ ಸಾಧಕನನ್ನು
ಸಾಧಕನನ್ನು ಜ್ಞಾನಕ್ಕೆ ಅಧಿಕಾರಿಯನ್ನಗಿ ಮಾಡುತ್ತವೆಯೇ ಹೊರತು
ನೇರವಾಗಿ ಮೋಕ್ಷವನ್ನು ಕೊಡಲಾರವು. ಜ್ಞಾನವಾದರೊ
-ಅದು ಉಂಟಾದ ಕೂಡಲೇ ಮಾಡಬೇಕಾದ್ದು
ಯಾವುದೂ ಉಳಿದಿರುವುದಿಲ್ಲ.ತಕ್ಷಣವೇ ಮೋಕ್ಷವನ್ನು ಕೊಡುತ್ತದೆ.(ಪುಟ2)
3)ಕಮ೯ವು ಅವಿದ್ಯೆಗೆ ವಿರೋದಿಯಲ್ಲವಾದುದರಿಂದ
ಅವಿದ್ಯೆಯನ್ನು ಹೋಗಲಾಡಿಸಲಾರದು.ಬೆಳಕೇ ಕತ್ತಲೆಯನ್ನು ನಾಶಮಾಡುವಂತೆ
ವಿದ್ಯೆಯೇ ಅವಿದ್ಯೆಯನ್ನು ನಾಶಮಾಡುತ್ತದೆ.(ಪುಟ2)
4)ಅಜ್ಞಾನದಿಂದ ಆತ್ಮನು ಪರಿಚ್ಛಿನ್ನನಾಗಿರುವಂತೆ ಕಾಣುತ್ತಾನೆ.ಮೋಡವು ಚದುರಲಾಗಿ
ತಾನಾಗಿಯೇ ಪ್ರಕಾಶಿಸುವ ಸೂಯ೯ನಂತೆ ಅಜ್ಞಾನವು ನಾಶವಾಗಲಾಗಿ ಕೇವಲನಾದ ಆತ್ಮನು ತಾನಾಗಿಯೇ ಪ್ರಕಶಿಸುತ್ತಾನೆ.(ಪುಟ3)
5)ಅಜ್ಞಾನದಿಂದ ಕಲುಷಿತನಾದ ಜೀವನನ್ನು ಜ್ಞಾನಾಭ್ಯಾಸದಿಂದ
ಪರಿಶುದ್ಧನನ್ನಾಗಿ ಮಾಡಿ
ಜ್ಞಾನವು ನೀರನ್ನು ಶುದ್ಧಿಮಾಡುವ
ಚಿಲ್ಲದ ಬೀಜದ ಪುಡಿಯಂತೆ
ತಾನು ಸಹ ನಾಶವಾಗುತ್ತದೆ.
(ರಜಸ್ಸು-ತಮಸ್ಸುಗಳಿಂದ ಉಂಟಾದ ರಾಗ,ದ್ವೇಶ,ಭಯ,ಆಲಸ್ಯ,ನಿದ್ರೆ ಮೊದಲಾದ ಆತ್ಮನನ್ನು ಆವರಣ ಮಾಡುವ ಗುಣಗಳಿಂದ ಮಲಿನವಾದ)(ಪುಟ3)
2) ಸಂಸಾರದ ಮಿಥ್ಯಾತ್ವ:
6)ರಾಗದ್ವೇಷಾದಿಗಳಿಂದ ಕೂಡಿದ ಈ ಜಗತ್ತು ಕನಸಿಗೆ ಸಮನಾದದ್ದು.ಇನ್ನ ಕಾಲದಲ್ಲಿ
ಸತ್ಯದಂತೆ ತೋರಿ
ತಿಳಿವುಂಟಾದ ಕೂಡಲೇ ತನ್ನ ಸತ್ಯತ್ವವನ್ನು ಕಳೆದುಕೊಳ್ಳುತ್ತದೆ.
(ನಿದ್ರೆಯಿಂದ ಎಚ್ಚರಗೊಂಡಮೇಲೆ ಕನಸು ಹೇಗೆ ಸುಳ್ಳಾಗುವುದೊ
ಹಾಗೆಯೇ ಅವಿದ್ಯಾನಿದ್ರೆಯಿಂದ
ಎಚ್ಚರಗೊಂಡಮೇಲೆ ತನ್ನ ಸತ್ಯತ್ವವನ್ನು ಕಳೆದುಕೊಳ್ಳುತ್ತದೆ.)(ಪುಟ 4)
7)ಎಲ್ಲಿಯವರೆಗೆ ಸವಾ೯ಧಿಷ್ಠಾನವೂ
ಅದ್ವಯವೂ ಆದ
ಬ್ರಹ್ಮವು ಅರಿಯಲ್ಪಡುವುದಿಲ್ಲವೊ
ಅಲ್ಲಿಯವರೆಗೆ -ಕಪ್ಪೆಯ ಚಿಪ್ಪು ಬೆಳ್ಳಿಯಂತೆ ತೋರುವಹಾಗೆ-ಜಗತ್ತು ಸತ್ಯವಾಗಿ ತೋರುತ್ತದೆ.೯ಪುಟ 5)
8)ಉಪಾದಾನಕಾರಣವೂ ಸವಾ೯ಶ್ರಯವೂ ಆದ ಪರಮೇಶ್ವರನಲ್ಲಿ
ಜಗತ್ತುಗಳು ನೀರಿನ ಗುಳ್ಳೆಗಳಂತೆ
ಸೃಷ್ಟಿ-ಸ್ಥಿತಿ-ಲಯಗಳನ್ನು ಹೊಂದುತ್ತವೆ.
(ಜ್ಞಾನವಾಗುವವರೆಗೆ ತೋರುವ ಈ ಜಗತ್ತಿಗೆ ಬ್ರಹ್ಮವೇ ಅಭಿನ್ನನಿಮಿತ್ತೋಪಾದಾನ ಕಾರಣ ಎಂಬುದನ್ನು ದೃಷ್ಟಾಂತದ ಮೂಲಕ ಹೇಳಿದೆ.
ಮಡಕೆಯನ್ನು ಮಾಡಲು ಮಣ್ಣು,ಕುಂಬಾರ,ದೊಣ್ಣೆ,ಚಕ್ರ ಎಂಬ ಕಾರಣಗಳು ಬೇಕು.ಮಣ್ಣಿಗೆ ಉಪಾದಾನಕಾರಣವೆಂದೂ,ಉಳಿದವಕ್ಕೆ ನಿಮಿತ್ತಕಾರಣವೆಂದೂ ಹೆಸರು.
ನೀರಿನ ಗುಳ್ಳೆಗಳು ನೀರಿನಿಂದಲೆ ಹುಟ್ಟಿ,ನೀರಿನಲ್ಲೇ ಇದ್ದು ಪುನಃ ನೀರಿನಲ್ಲೇ ಸೇರಿ ಹೋಗುತ್ತವೆ.ಹಾಗೆಯೇ ಈ ಜಗತ್ತುಗಳು ಬ್ರಹ್ಮದಿಂದಲೆ ಉದ್ಭವಿಸಿ ಬ್ರಹ್ಮವನ್ನೇ ಆಶ್ರಯಿಸಿ ಪುನಃ ಬ್ರಹ್ಮದಲ್ಲೇ ಲೀನವಾಗುತ್ತವೆ.)(ಪುಟ6)
೯)ಸಚ್ಚಿದಾತ್ಮವೂ
ಸವಾ೯ಂತಗ೯ತವೂ
ನಿತ್ಯವೂ ಸವ೯ವ್ಯಾಪಿಯೂ ಆದ ಬ್ರಹ್ಮದಲ್ಲಿ -ಚಿನ್ನದಲ್ಲಿ ಕಡಗವೇ ಮೊದಲಾದ ನಾಮರೂಪಗಳು ಕಲ್ಪಿಸಲ್ಪಟ್ಟಿರುವಂತೆ -ವಿವಿಧ ವ್ಯಕ್ತಿಗಳೂ ಕಲ್ಪಿಸಲ್ಪಟ್ಟಿವೆ.(ಪುಟ 6)
10)ಆಕಾಶವು ಹೇಗೋ ಹಾಗೆ,ಹೃಷೀಕೇಶವೂ ನಾನಾ ಉಪಾಧಿಗಳನ್ನು ಹೊಕ್ಕಿರುವುದೊ
ಸವ೯ವ್ಯಪಿಯೂ ಆದ ಬ್ರಹ್ಮವು ಆ ಉಪಾಧಿಗಳ ಭೇದದಿಂದ
ಭಿನ್ನಭಿನ್ನವಾಗಿರುವಂತೆ ತೋರುತ್ತದೆ.ಅವು ನಾಶವಾದಾಗ
ಬ್ರಹ್ಮವು ಒಂದೇ ಆಗುತ್ತದೆ.(ಪುಟ7)
(ಹೃಷೀಕಾ+ಈಶಃ =ಹೃಷೀಕೇಶ,ಇಂದ್ರಿಯಗಳ ಒಡೆಯ.ಆತ್ಮ ಚೈತನ್ಯದಿಂದಲೇ ಕಣ್ಣು ಮೊದಲಾದ ಇಂದ್ರಿಯಗಳು ಕೆಲಸ ಮಡುವುದರಿಂದ ಆತ್ಮನು ಹೃಷೀಕೇಶ.'ಅದು ಕಿವಿಯ ಕಿವಿ,ಮನಸ್ಸಿನ ಮನಸ್ಸು,ವಾಕ್ಕಿನ ವಾಕ್ಕು,ಅದು ಪ್ರಾಣದ ಪ್ರಾಣ,ಕಣ್ಣಿನ ಕಣ್ಣು'(ಕೇನೋಪನಿಷತ್ತು.1-3).ಅದ್ವೈತ ಸಿದ್ಧಾಂತದ ಪ್ರಕಾರ ಬ್ರಹ್ನವೂ ಹೃಷೀಕೇಶ.
ಉಪಾಧಿ-ಒಂದು ವಸ್ತುವಿನ ಭಾಗವಲ್ಲದ ಮತ್ತು ಆ ವಸ್ತುವಿನ ನಿಜ ಸ್ವರೂಪವನ್ನು ಮರೆಮಾಚುವ
ಎರಡನೆಯ ವಸ್ತುವು
ಆ ಮೊದಲ ವಸ್ತುವಿಗೆ ಉಪಾಧಿಯೆಂದು ಹೇಳುತ್ತಾರೆ.
ಮಡಕೆಯು ಆಕಾಶಕ್ಕೆ ಉಪಾಧಿ.ಶರೀರಗಳು ಬ್ರಹ್ಮಕ್ಕೆ ಉಪಾಧಿ.)(ಪುಟ 7)
11)ನೀರಿನಲ್ಲಿ ರುಚಿ,ಬಣ್ಣಮೊದಲಾದ ಭೇದಗಳು ಆರೋಪಿಸಲ್ಪಡುವಂತೆ ಅತ್ಮನಲ್ಲಿ ಜಾತಿ,ವಣ೯,ಆಶ್ರಮ,ಮೊzಲಾದ ಭೇದಗಳು ನಾನಾ ಉಪಾಧಿಗಳ ದೆಸೆಯಿಂದಲೇ ಆರೋಪಿಸಲ್ಪಟ್ಟಿವೆ.
(ಪುಟ 8)
3) ಸೂಲ್ಥ-ಸೂಕ್ಷ್ಮ-ಕಾರಣ ಉಪಾಧಿಗಳು:
12)ಮಹಾಭೂತಗಳ ಪಂಚೀಕರಣದಿಂದುಂಟಾದ
ಮತ್ತು ಕಮ೯ದಿಂದ ಸಂಪಾದಿಸಲ್ಪಟ್ಟ
ಸ್ಥೂಲಶರೀರವು ಸುಖದುಃಖಗಳ ಅನುಭವಕ್ಕೆ
ಆಯತನವೆಂದು ಹೇಳಲ್ಪಡುತ್ತದೆ.
(ಆಕಾಶ, ವಾಯು, ಅಗ್ನಿ,ನೀರು ಮತ್ತು ಪೃಥ್ವಿಇವುಗಳಿಗೆ ಪಂಚತನ್ಮಾತ್ರೆಗಳೆಂದು ಹೆಸರು.
ಪರಿಶುದ್ಧ ಬ್ರಹ್ಮಕ್ಕೂ ಸೃಷ್ಟಿಗೂ ಯಾವ ಸಂಬಂಧವೂ ಇಲ್ಲ.ಏಕೆಂದರೆ ಸೃಷ್ಟಿ ಎಂಬುದೇ ಇಲ್ಲ.ಅದರೆ ಬ್ರಹ್ಮವು ಮಾಯೆಯಿಂದ
ಸೃಷ್ಟಿಗೆ ಕರಣವಾಗುವಂತೆ ತೋರುತ್ತದೆ.ಈ ಮಾಯೆಯು ಸತ್ವ,ರಜಸ್,ತಮಸ್ಎಂಬ ಮೂರು ಗುಣಗಳಿಂದ ಕೂಡಿರುತ್ತದೆ.
ಪಂಚ ಸೂಕ್ಷ್ಮಭೂತಗಳು ಸೇರಿ ಪಂಚ ಸ್ಥೂಲಭೂತಗಳನ್ನು ಉಂಟು ಮಡುವ ವಿಧಾನಕ್ಕೆ 'ಪಂಚೀಕರಣ'ಎಂದು ಹೆಸರು.
ಆಶ್ರಯ ಸ್ಥಾನ:ಸುಖದುಃಖಗಳ ಅನುಭವಗಳು ಶರೀರದಲ್ಲಿ ಆಗುವುದರಿಂದ ಅದೇ ಅವುಗಳಿಗೆ ಆಶ್ರಯಸ್ಥಾನ.)(ಪುಟ೯)
13)ಪಂಚ ಪ್ರಾಣಗಳು,ಮನಸ್ಸು,ಬುದ್ಧಿ,ಮತ್ತು ಹತ್ತು ಇಂದ್ರಿಯಗಳು ಇವುಗಳಿಂದ ಕೂಡಿದ ಅಪಂಚೀಕೃತ ಭೂತಗಳಿಂದ ಉತ್ಪನ್ನವಾದ ಸೂಕ್ಷ್ಮ ಶರೀರವು
ಭೋಗಸಾಧನವೆಂದು ಹೇಳಲ್ಪಡುತ್ತದೆ.(ಪುಟ 10)
(ಪ್ರಾಣ,ಪಾನ,ವ್ಯಾನ,ಉದಾನ, ಸಮಾನ ಇವು ಪಂಚಪ್ರಣಗಳು.
ಸಂಕಲ್ಪ ಎಂದರೆ ಭಾವನೆ ಆಸೆ,ಯೋಚನೆ.ವಿಕಲ್ಪ ಎಂದರೆ ಸಂಶಯ ಸಂದೇಹ.
ಹತ್ತು ಇಂದ್ರಿಯಗಳು:ಕಣ್ಣು,ಕಿವಿ ಮೂಗು ನಾಲಗೆ ಚಮ೯ಇವು ಪಂಚ ಜ್ಞಾನೇಂದ್ರಿಯಗಳು.
ಕೈ,ಕಾಲು,ವಾಕ್ಕು ಪಾಯು,ಉಪಸ್ಥ ಎಂಬ ಪಂಚ ಕಮೇ೯ಂದ್ರಿಯಗಳು.
ಸ್ವತಃ ಅವಿಕ್ರಿಯನಾದ ಆತ್ಮನು
ಬದ್ಧ ಜೀವನಾಗಲು ,ಸುಖದುಃಖಗಳನ್ನು ಅನುಭವಿಸಲು
ಸೂಕ್ಷ್ಮ ಶರೀರದೊಡನೆ ಸಂಪಕ೯ವೇ ಕಾರಣ.ಈ ಶರೀರದ ಮೂಲಕವೇ ಅವನು
ಸುಖದುಃಖಗಳೆಂಬ ಅನುಭವಗಳನ್ನು ಹೊಂದುವುದರಿಂದ ಇದಕ್ಕೆ ಭೋಗಸಾಧನವೆಂದು ಹೆಸರು.)
14) ಅನಿವಾಚ್ಯವೂ ಅನಾದಿಯೂ ಆದ ಅವಿದ್ಯೆಯು ಕಾರಣೋಪಾಧಿಯೆಂದು ಹೇಳಲ್ಪಡುತ್ತದೆ.ಆತ್ಮನು ಈ ಮೂರೂ ಉಪಾಧಿಗಳಿಗಿಂತ ಬೇರೆ ಎಂದು ನಿಶ್ಚಯಿಸಬೇಕು.(ಪುಟ10)
(ಅನಿವಾ೯ಚ್ಯ:ಸತ್ ಅಸತ್ ಸದಸತ್ ಎಂದು ನಿದೇ೯ಶಿಸಲು ಆಗದಿರುವುದರಿಂದ.
ಕಾರಣ ಶರೀರ:ಅವಿದ್ಯೆಯೇ ಕಾರಣ ಶರೀರ.)
4) ಪಂಚ ಕೋಶಗಳಿಂದ ಆತ್ಮನ ವಿವೇಕ ಪ್ರಕಾರ:
15)ನೀಲ ವಸ್ತ್ರವೇ ಮೊದಲಾದವುಗಳ ಸಂಬಂಧದಿಂದ ಸ್ಫಟಿಕದ ಹರಳು ಹೇಗೆ ತೋರುವುದೊ ಹಾಗೆಯೇ ಪಂಚಕೋಶಗಳ ಸಂಬಂಧದಿಂದ ಶುದ್ಧಾತ್ಮನೂ ಆಯಾ ಕೋಶದ ಸ್ವರೂಪವುಳ್ಳಂತೆ ತೋರುತ್ತಾನೆ.(ಪುಟ 11)
(ಸಂಕಲ್ಪ ವಿಕಲ್ಪಾತ್ಮಕವಾದ ಮನಸ್ಸು ಮನೋಮಯ ಕೋಶ,ನಿಶ್ಚಯಾತ್ಮಕವಾದ ಬುದ್ಧಿಯೇ ವಿಜ್ಞಾನಮಯಕೋಶ.
ಜಾಗ್ರದಾವಸ್ಥೆಯಲ್ಲಿ
ಇಷ್ಟವಾದ ವಸ್ತುಗಳ ಸಂಯೋಗದಿಂದಲೂ
ಸ್ವಪ್ನಾವಸ್ಥೆಯಲ್ಲಿ
ಒಳ್ಳೆಯ ಕನಸುಗಳಿಂದಲೂ
ಗಾಢನಿದ್ರಾವಸ್ಥೆಯಲ್ಲಿ ದೊರಕುವ ಆನಂದವೇ ಆನಂದಮಯ ಕೋಶ)
(ಸ್ಥೂಲ ಶರೀರ:ಅನ್ನಮಯಕೋಶ
ಸೂಕ್ಷ್ಮ ಶರೀರ:ಪ್ರಾಣಮಯ-ಮನೋಮಯ,ವಿಜ್ಞಾನಮಯಕೋಶಗಳನ್ನೂ
ಕಾರಣ ಶರೀರವು-ಆನಂದಮಯ ಕೋಶವನ್ನೂ ಒಳಗೊಂಡಿವೆ.)
16)ಹೊಟ್ಟಿನಂತಿರುವ ಶರೀರವೇ ಮೊದಲಾದ ಕೋಶಗಳಿಂದ ಯುಕ್ತನಾದ ಪರಿಶುದ್ಧನಾದ
ಅಂತರಾತ್ಮನನ್ನು -ಅಕ್ಕಿಯನ್ನು ಹೇಗೋ ಹಾಗೆ- ಯುಕ್ತಿಯ ಹೊಡೆತದಿಂದ ಬೇಪ೯ಡಿಸಬೇಕು(ಪುಟ 12)
(ಬತ್ತದ ಹೊಟ್ಟಿನೊಳಗೆ ಸೇರಿಕೊಂಡಿರುವ
ಅಕ್ಕಿಯ ಕಾಳನ್ನು ಒನಕೆ ಮುಂತಾದ ಸಾಧನಗಳಿಂದ ಕುಟ್ಟುವುದರ ಮೂಲಕ ಬೇಪ೯ಡಿಸುವರೊ ಹಾಗೆಯೇ ಪಂವಕೋಶಗಳ ಒಳಗೆ ಸೇರಿಕೊಂಡಿರುವ ಪರಿಶುದ್ಧನೂ ಚಿನ್ಮಯನೂ
ಆತ್ಮನನ್ನು ಗುರೂಪದಿಷ್ಟಶ್ರವಣ-ಮನನ-ನಿದಿಧ್ಯಾಸನಗಳೆಂಬ ಯುಕ್ತಿಯ ಅವಘಾತದ ಮೂಲಕ ಆ ಜಡವಾದ ಪಂಚಕೋಶಗಳಿಂದ ಬೇಪ೯ಡಿಸ ಬೇಕು ಎಂಬುದು ಅಭಿಪ್ರಾಯ)
12).
17)ಆತನು ಸದಾ ಸವ೯ವ್ಯಾಪಿಯಾಗಿದ್ದರೂ ಎಲ್ಲ ಕಡೆಯಲ್ಲೂ ಪ್ರಕಟವಾಗನು.ಸ್ವಚ್ಛವಾದ (ಪ್ರತಿಫಲಕದಲ್ಲಿ ಪ್ರಕಟವಾಗುವ)ಪ್ರತಿಬಿಂಬದಂತೆ
ಬುದ್ಧಿಯಲ್ಲಿಯೇ ಭಾಸವಾಗುತ್ತಾನೆ.(ಪುಟ 12)
(ಬುದ್ಧಿಯು ಜಡವಾದ ಉಪಾಧಿಯಾದರೂ ಚೈತನ್ಯ ಸ್ವರೂಪಿಯಾದ ಆತ್ಮನನ್ನು ಪ್ರತಿಫಲಿಸುವ ವಿಶೇಷ ಯೋಗ್ಯತೆಯನ್ನು ಹೊಂದಿರುವುದರಿಂದ
ಅದರಲ್ಲಿಯೇ ಪ್ರಕಟನಾಗುತ್ತಾನೆಂಬ ಭಾವ)
18)ಯಾವಾಗಲೂ ಆತ್ಮನನ್ನು ದೇಹ ಇಂದ್ರಿಯ ಮನಸ್ಸು ಬುದ್ಧಿ
ಪ್ರಕೃತಿ ಇವುಗಳಿಗಿಂತ ವಿಲಕ್ಷಣನೆಂದೂ-ರಾಜನಂತೆ-ಅವುಗಳ ಕಾಯ೯ಗಳ ಸಾಕ್ಷಿಯೆಂದೂ ತಿಳಿಯಬೇಕು.(ಪುಟ13)
5) ಆತ್ಮನ ಅವಿಕಾರಿತ್ವ:
1೯)ಧಾವಿಸುತ್ತಿರುವ ಮೋಡಗಳಹಿಂದೆ ಧಾವಿಸುವಂತೆ ಕಾಣುವ ಚಂದ್ರನ ಹಾಗೆ,ಇಂದ್ರಿಯಗಳು ಕ್ರಿಯೆಯಲ್ಲಿ ತೊಡಗಿರುವಾಗ
ಕ್ರಿಯಾವಂತನಂತೆ ಅವಿವೇಕಿಗಳಿಗೆ ತೋರುತ್ತಾನೆ.(ಪುಟ 13)
20)ಹೇಗೆ ಈ ಲೋಕದ ಜನರು ಸೂಯ೯ನ ಬೆಳಕನ್ನು (ಆಶ್ರಯಿಸಿ ತಮ್ಮ ಕಮ೯ಗಳಲ್ಲಿ ತೊಡಗುತ್ತಾರೆಯೋ ) ಹಾಗೆಯೇ ದೇಹ ಇಂದ್ರಿಯ ಮನಸ್ಸು ಬುದ್ಧಿ-ಆತ್ಮಚೈತನ್ಯವನ್ನಾಶ್ರಯಿಸಿ
ತಮ್ಮ ವಿಷಯಗಳಲ್ಲಿ ಪ್ರವತಿ೯ಸುತ್ತವೆ.(ಪುಟ 14)
21)ಆಕಾಶದಲ್ಲಿ ನೀಲಿಯೇ ಮೊದಲಾದ (ಬಣ್ಣಗಳನ್ನು ಆರೋಪಿಸುವಂತೆ)ದೇಹ ಇಂದ್ರಿಯ ಗುಣ ಕಮ೯-ಇವುಗಳನ್ನು ನಿಮ೯ಲನಾದ ಸಚ್ಚಿದಾತ್ಮನಲ್ಲಿ (ಅಜ್ಞಾನಿಗಳು) ಅವಿವೇಕದಿಂದ ಆರೋಪಿಸುತ್ತಾರೆ.(ಪುಟ 14)
22)ಹೇಗೆ ನೀರಿನ ಚಲವಾದಿ ಗುಣಗಳು ನೀರಿನಲ್ಲಿ ಪ್ರತಿಬಂಬಿತವಾದ ಚಂದ್ರನಲ್ಲಿ
ಅಜ್ಞಾನದಿಂದ
ಕಲ್ಪಿಸಲ್ಪಡುವವೊ
ಹಾಗೆಯೇ ಮನಸ್ಸೆಂಬ ಉಪಾಧಿಗೆ
ಸೇರಿದ ಕತೃ೯ತ್ವಾದಿ ಗುಣಗಳು ಆತ್ಮನಲ್ಲಿ ಕಲ್ಪಿಸಲ್ಪಡುವುವು.(ಪುಟ 15)
23)ರಾಗ,ಇಚ್ಛಾ,ಸುಖ,ದುಃಖ ಮೊದಲದವುಗಳು ಬುದ್ಧಿಯು ಇರುವಾಗ ಪ್ರವತಿ೯ಸುತ್ತವೆ.ಸುಷುಪ್ತಿಯಲ್ಲಿ ಅದು ನಾಶವಾಗಿ
ಇರುವುದಿಲ್ಲ.ಆದುದರಿಂದ ಅವು ಬುದ್ಧಿಗೆ ಸೇರಿದ್ದೇ ಹೊರತು ಆತ್ಮನಿಗೆ ಸೇರಿದ್ದಲ್ಲ.
(ಪುಟ 15)
6) ಆತ್ಮಸ್ವರೂಪೋಪದೇಶ:
24)ಹೇಗೆ ಬೆಳಕು ಸೂಯ೯ನ,ಶೈತ್ಯವು ನೀರಿನ,ಉಷ್ಣತೆಯು ಅಗ್ನಿಯ ಸ್ವಭಾವವೊ ಹಾಗೆಯೇ ಸತ್ ಚಿತ್ ಆನಂದ ನಿತ್ಯತ್ವಮತ್ತು ನಿಮ೯ಲತ್ವ -ಇವು ಆತ್ಮನ ಸ್ವಭಾವಗಳು.(ಪುಟ16)
25)ಆತ್ಮನ ಸಚ್ಚಿದಂಶ ಮತ್ತು ಬುದ್ಧಿಯ ವೃತ್ತಿ ಎಂಬಿವೆರಡನ್ನೂ ಸಂಯೋಜಿಸಿ ಅವಿವೇಕದಿಂದ
ಜೀವನು 'ನಾನು ತಿಳಿದಿದ್ದೇನೆ' ಎಂದು ಪ್ರವತಿ೯ಸುತ್ತಾನೆ.(ಪುಟ16)
26)ಆತ್ಮನಿಗೆ ವಿಕಾರವೂ ಬುದ್ಧಿಗೆ ಜ್ಞಾನವೂ
ಯಾವಾಗಲೂ ಇಲ್ಲ.ಜೀವನು ಎಲ್ಲವನ್ನೂ ತಿಳಿದಂತೆ
ನಾನು ಮಡುವವನು,ನಾನು ನೋಡುವವನು'ಎಂದು
ಬಹಳವಾಗಿ ಮೋಹಗೊಳ್ಳುತ್ತಾನೆ.(ಪುಟ 17)
27)ಹಗ್ಗವನ್ನು ಹಾವು ಎಂದು ತಿಳಿಯುವಹಾಗೆ ಅಜ್ಞಾನಿಯು ತನ್ನನ್ನು ಜೀವನೆಂದು
ತಿಳಿದುಕೊಂಡು
ಭಯಗೊಳ್ಳುತ್ತಾನೆ.'ನಾನು ಜೀವನಲ್ಲ ಪರಮಾತ್ಮನೇ 'ಎಂದು ತಿಳಿದುಕೊಂಡಿದ್ದೇ ಆದರೆ ನಿಭ೯ಯನಾಗುತ್ತಾನೆ(ಪುಟ17)
28ದೀಪವು ಘಟವೇ ಮೊದಲಾದ ವಸ್ತುಗಳನ್ನು ಬೆಳಗುವಂತೆ ಆತ್ಮನೊಬ್ಬನೆ ಬುದ್ಧಿ ಮೊದಲದುವನ್ನು
ಮತ್ತು ಇಂದ್ರಿಯಗಳನ್ನು ಬೆಳಗುತ್ತಾನೆ.ಜಡವಾದ ಅವು ತಮ್ಮ ಆತ್ಮನನ್ನು ಬೆಳಗುವುದಿಲ್ಲ.(ಪುಟ18)
2೯)ಹೇಗೆ ದೀಪಕ್ಕೆ ತನ್ನ ಪ್ರಕಾಶನದಲ್ಲಿ ಬೇರೊಂದು ದೀಪದ ಅವಶ್ಯಕತೆ ಇರುವುದಿಲ್ಲವೋ ಹಾಗೆಯೇ ಜ್ಞಾನಸ್ವರೂಪನಾಗಿರುವುದರಿಂದ
ಆತ್ಮನಿಗೆ ತನ್ನ ಜ್ಞಾನದಲ್ಲಿ ಬೇರೊಂದು ಜ್ಞಾನದ ಅಪೇಕ್ಷೆಯಿರುವುದಿಲ್ಲ.(ಪುಟ18)
30)ನೇತಿ ನೇತಿ ಎಂಬ ವಾಕ್ಯದಿಂದ ಎಲ್ಲಾ ಉಪಾಧಿಗಳನ್ನೂ
ನಿಷೇಧಿಸಿ
ಮಹಾವಾಕ್ಯಗಳ ಸಹಾಯದಿಂದ
ಜೀವಾತ್ಮ-ಪರಮಾತ್ಮರ
ಐಕ್ಯವನ್ನು ಅರಿಯಬೇಕು.(ಪುಟ1೯)
(1)'ಇದಲ್ಲ ಇದಲ್ಲ' 'ನೆತಿ ನೇತಿ'(ಬೃ.ಉ.2-3-6)
2) ನಾಲ್ಕು ಮಹಾವಾಕ್ಯಗಳು:
1) ಅಹಂ ಬ್ರಹ್ಮಾ ಸ್ಮಿ(ನಾನು ಬ್ರಹ್ಮವಾಗಿದ್ದೇನೆ.(ಬೃ.ಉ.1-4-10)
2) 'ಅಯಮಾತ್ಮಾ ಬ್ರಹ್ಮ' ಈ ಆತ್ಮನು ಬ್ರಹ್ಮ(ಮಾಂಡೂಕ್ಯ.ಉ.2)
3)ತತ್ವಮಸಿ'(ಅದು ನೀನಾಗಿದ್ದೀಯೆ)(ಛಾಂ.ಉ.6-8-7)
4)ಪ್ರಜ್ಞಾನಂ ಬ್ರಹ್ಮ(ಪ್ರಜ್ಞಾನವು ಬ್ರಹ್ಮ)(ಐ.ಉ.3-1-3)
31)ದೃಶ್ಯವಾದ ಮತ್ತು ನೀರಿನಗುಳ್ಳೆಯಂತೆ ನಶ್ವರವಾದ ಶರೀರಾದಿಗಳು ಅವಿದ್ಯಾ ಕಲ್ಪಿತವು.ಇದಕ್ಕಿಂತ ಬೇರೆಯಾದ ಮತ್ತು ನಿಮ೯ಲವಾದ
ಬ್ರಹ್ಮವೆ ನಾನು ಎಂದು ತಿಳಿಯಬೇಕು.(ಪುಟ 1೯)
(ನೋಡುವವನು 'ದೃಕ್'.ನೋಡಲ್ಪಡುವುದು. 'ದೃಶ್ಯ')
32)ದೇಹಕ್ಕಿಂತ ಭಿನ್ನನಾದುದರಿಂದ ನನಗೆ ಹುಟ್ಟು,ಮುಪ್ಪು,ಕೃಶತ್ವ ಸಾವು ಮೊದಲದವುಗಳಿಲ್ಲ.
ಇಂದ್ರಿಯರಹಿತನಾದುದರಿಂದ ಶಬ್ದ ಮೊದಲಾದ ವಿಷಯಗಳೊಡನೆ ಸಂಪಕ೯ವೂ ಇಲ್ಲ.(ಪುಟ20)
(ಹುಟ್ಟು,ಇರುವಿಕೆ,ಬೆಳೆಯುವುದು, ಬದಲಾಗುವುದು,ಮುಪ್ಪು,ಸಾವು ಇವು ಷಡ್ವಿಕಾರಗಳು)
ಪಂಚ ಜ್ಞಾನೇಂದ್ರಿಯಗಳ ವಿಷಯಗಳು:
ಶಬ್ದ,ಸ್ಪಶ೯,ರೂಪ,ರಸ,ಗಂಧ,
ಪಂಚ ಕಮೇ೯ಂದ್ರಿಯಗಳ
ಕಾಯ೯ಗಳು:ವಚನ,ಆದಾನ,ಗಮನ,ವಿಸಜ೯ನೆ,ಮತ್ತು ಆನಂದ.
33)ಆ ಪ್ರರುಷನು ಪ್ರಾಣ ಮನಸ್ಸುಗಳಿಲ್ಲದವನು. ಪರಿಶುದ್ಧನು, ಎಂಬ ಶ್ರುತಿಯ ಶಾಸನದಂತೆ ಮನೋರಹಿತವಾದ ಕಾರಣ ನನಗೆ ದುಃಖ,ರಾಗ ದ್ವೇಷ ಭಯ ಮೊದಲಾದುವು ಇಲ್ಲ.(ಪುಟ 20)
(ಮೂಲದಲ್ಲಿರುವ 'ಆದಿ'ಶಬ್ದವು ಲೋಭ, ಮೋಹ,ಮದ,ಮಾತ್ಸಯ೯, ಮೊದಲಾದುವನ್ನು ಸೂಚಿಸುತ್ತದೆ.ಕಾಮ,ಸಂಕಲ್ಪ,ಸಂದೇಹ,ಶ್ರದ್ಧೆ, ಅಶ್ರದ್ಧೆ,ಧೈಯ೯, ಅಧೈಯ೯.ಲಜ್ಜೆ,ಬುದ್ಧಿ,ಭಯ-ಇವೆಲ್ಲವೂ ಮನಸ್ಸೇ.ದುಃಖ,ರಾಗ ಮೊದಲಾದವು ಮನಸ್ಸಿನಲ್ಲಿಯೇ ಉಂಟಾಗುವುದರಿಂದ
ಮನಸ್ಸಿಲ್ಲದಿದ್ದರೆ ಅವು ಇರುವುದಿಲ್ಲ.ಗಾಢನಿದ್ರಾವಸ್ಥೆಯೇ ಇದಕ್ಕೆ ಉದಾಹರಣೆ.ಆತ್ಮನಲ್ಲಿ ಮನಸ್ಸೇ ಮೊದಲಾದ ಯಾವ ಉಪಾಧಿಗಳೂ ಇಲ್ಲದ್ದರಿಂದ ದುಃಖಾದಿಗಳು ಇರಲು ಸಾಧ್ಯವಿಲ್ಲ.(ಪುಟ 21)
34) ನಾನು ನಿಗು೯ಣನೂ ನಿಷ್ಕ್ರಿಯನೂ,ನಿತ್ಯನೂ,ನಿವಿ೯ಕಲ್ಪನೂ,ನಿರಂಜನನೂ,ನಿವಿ೯ಕಾರನೂ ನಿರಾಕಾರನೂ ,ನಿತ್ಯಮುಕ್ತನೂ ನಿಮ೯ಲನೂ ಆಗಿದ್ದೇನೆ.(ಪುಟ 21)
(ನಿರಂಜನನೆಂದರೆ ಅಂಜನ ಅಥವಾ ಲೇಪವಿಲ್ಲದವನು,ನಿತ್ಯಮುಕ್ತ ಎಂದರೆ ಮಾಯೆಗೂ ಅದರ ಕಾಯ೯ಗಳಿಗೂ ಯಾವ ಸಂಬಂಧವೂ ಇಲ್ಲದವನು.)
35)ನಾನು ಆಕಾಶದಂತೆ ಎಲ್ಲವನ್ನೂ ಒಳಗೂ ಹೊರಗೂ ವ್ಯಾಪಿಸಿದ್ದೇನೆ.ನಾನು ನಾಶರಹಿತನು,ಸದಾಕಾಲವೂ ಸವ೯ರಲ್ಲಿಯೂ ಸಮನು,ಸಿದ್ಧನು,ಸಂಗರಹಿತನು, ಪರಿಶುದ್ಧನು ಅಚಲನು.(ಪುಟ2)
(ಅದು ಎಲ್ಲ ಪ್ರಾಣಿಗಳ ಒಳಗೂ ಹೊರಗೂ ಇರುವುದು,ಚರಾಚರ ಸ್ವರೂಪವಾಗಿರುವುದು)(
ಪುಟ22)
36)ನಿತ್ಯ ಶುದ್ಧವೂ, ವಿಮುಕ್ತವೂ, ಏಕವೂ ಅಖಂಡಾನಂದವೂ ಅದ್ವಯವೂ ಸತ್ಯವೂ ಜ್ಞಾನವೂ ಅಂಯವೂ
ಆದ ಪರಬ್ರಹ್ಮವು ಯಾವುದೊ ಅದೇ ನಾನು.(ಪುಟ 22)
37)ಹೀಗೆ ನಿರಂತರವಾಗಿ ಅಭ್ಯಾಸ ಮಾಡಿದ 'ನಾನು ಬ್ರಹ್ಮವೇ ಆಗಿದ್ದೇನೆ'ಎಂಬ ಭಾವನೆಯು ಅವಿದ್ಯೆಯ ವಿಕ್ಷೇಪಗಳನ್ನು ರಸಾಯನವು ರೋಗಗಳನ್ನು ನಾಶಪಡಿಸುವಂತೆ-ನಾಶಪಡಿಸುತ್ತದೆ.(ಪುಟ23)
(ಅವಿದ್ಯೆಗೆ ಅಥವಾ ಅಜ್ಞಾನಕ್ಕೆ ಒಂದು ವಸ್ತುವಿನ ಸ್ವರೂಪವನ್ನು ಮರೆಮಾಡುವ ಮತ್ತು ಅದರಲ್ಲಿಲ್ಲದ
ಬೇರೊಂದು ವಸ್ತುವನ್ನು ಅದರಲ್ಲಿ ತೋಪ೯ಡಿಸುವ
ಎರಡು ಶಕ್ತಿಗಳುಂಟು.ಮೊದಲನೆಯದಕ್ಕೆ ಆವರಣವೆಂದೂ ಎರಡನೆಯದಕ್ಕೆ
ವಿಕ್ಷೇಪವೆಂದೂ ಹೆಸರು.ಉದಾಹರಣೆಗೆ,ಆವರಣದಿಂದ ಹಗ್ಗದ ನಿಜಸ್ವರೂಪವು ಮರೆಯಾಗಿ
ವಿಕ್ಷೇಪದಿಂದ ಅದರಲ್ಲಿ ಹಾವು ಕಾಣುತ್ತದೆ.)
10) ಆತ್ಮನ ನಿದಿಧ್ಯಾಸನ ಪ್ರಕಾರ:
38)ನಿಜ೯ನ ಪ್ರದೇಶದಲ್ಲಿ ಕುಳಿತು ರಾಗರಹಿತನೂ ಜಿತೇಂದ್ರಿಯನೂ
ಅನನ್ಯ ಮನಸ್ಕನೂ ಆಗಿ
ಅನಂತನೂ ಏಕನೂ ಆದ
ಆತ್ಮನನ್ನು ಧ್ಯಾನಿಸಬೇಕು.(ಪುಟ23)
3೯)ಜ್ಞಾನಿಯು ಬುದ್ಧಿಯ ಸಹಾಯದಿಂದ ಸಮಸ್ತ ಜಗತ್ತನ್ನೂ ಆತ್ಮನಲ್ಲಿಯೇ ಲಯಮಾಡಿ
ಕೇವಲವಾದ ಆತ್ಮನನ್ನು
ನಿಮ೯ಲವಾದ ಆಕಾಶದಂತೆ (ನಿಮ೯ಲನೆಂದು) ಸದಾ ಭಾವಿಸಬೇಕು.(ಪುಟ 23).
40)ಪರಮಾಥ೯ವನ್ನು ತಿಳಿದವನು ರೂಪ ವಣ೯ ಮೊದಲದಾದ ಎಲ್ಲವನ್ನೂ ಪರಿತ್ಯಜಿಸಿ ಪರಿಪೂಣ೯ ಚಿದಾನಂದ ಸ್ವರೂಪದಿಂದ ನೆಲೆಸಿರುತ್ತಾನೆ.(ಪುಟ 24)
41)ಪರಮಾತ್ಮನಲ್ಲಿ ಜ್ಞಾತೃ-ಜ್ಞಾನ-ಜ್ಞೇಯ ಭೇದವು ಇರುವುದಿಲ್ಲ. ಆ ಆತ್ಮನು ಚಿದಾನಂದನೂ ಏಕರೂಪನೂ ಆದ್ದುದರಿಂದ ತಾನಾಗಿಯೇ ಪ್ರಕಾಶಿಸುತ್ತಾನೆ.(ಪುಟ24)
ಜ್ಞಾತೃ-ತಿಳಿಯುವವನು
ಜ್ಞೇಯ-ತಿಳಿಯಬೇಕಾದ ವಸ್ತು
ಜ್ಞಾನ-ತಿಳಿಯುವ ಕ್ರಿಯೆ(ತಿಳಿವು)
ಇವುಗಳಿಗೆ ತ್ರಿಪುಟಿ ಯೆಂದು ಹೇಳುತ್ತಾರೆ.ಆತ್ಮನನ್ನು ಬಿಟ್ಟು ಎರಡನೆಯ ವಸ್ತುವೇ
ಸಾಧ್ಯವಿಲ್ಲದ್ದರಿಂದ
ಈ ತ್ರಿಪುಟಿಯು ಆತ್ಮನಲ್ಲಿಲ್ಲ.(ತ್ರಿಪುಟಿ ರಹಿತ).
42)ಹೀಗೆ ಆತ್ಮನೆಂಬ ಅರಣಿಯಲ್ಲಿ ಸತತವಾಗಿ ಧ್ಯಾನಮಥನವು ಮಾಡಲ್ಪಡಲಾಗಿ
ಅದರಲ್ಲಿ ಹುಟ್ಟಿದ ಜ್ಞಾನಾಗ್ನಿಯು ಅಜ್ಞಾನವೆಂಬ ಸೌದೆಯೆಲ್ಲವನ್ನೂ ಸುಡುತ್ತದೆ.(ಪುಟ25)
43)ಮೊದಲು ಅರುಣನಿಂದ ಕತ್ತಲೆಯು ಹೋಗಿಸಲ್ಪಡಲಾಗಿ ಸೂಯ೯ನು ತಾನಾಗಿಯೇ ಆಗ ಪ್ರಕಟವಾಗುವಂತೆ
ಜ್ಞಾನದಿಂದ ಅಜ್ಞಾನವು
ಹೋಗಲಾಡಿಸಲ್ಪಡಲಾಗಿ
ಆತ್ಮನು ತಾನಾಗಿಯೇ ಪ್ರಕಟವಾಗುತ್ತಾನೆ.(ಪುಟ 25)
44)ಆತ್ಮನಾದರೋ ತನ್ನ ಕೊರಳಿನಲ್ಲಿಯೇ ಇರುವ ಆಭರಣವು ಹೇಗೋ ಹಾಗೆ ಸದಾ ಪ್ರಾಪ್ತನಾಗಿದ್ದರೂ
ಅವಿದ್ಯೆಯಿಂದ ಅಪ್ರಾಪ್ತನಂತೆ ತೋರುತ್ತಾನೆ.ಅವಿದ್ಯೆಯು ನಾಶವಾಗಲಾಗಿ
ಪ್ರಾಪ್ತನಾದವನಂತೆ ತೋರುತ್ತಾನೆ.(ಪುಟ 26)
11)ಜೀವ-ಬ್ರಹ್ಮದ ಐಕ್ಯ:
45)ಸ್ಥಾಣುವಿನಲ್ಲಿ ಪುರುಷನು ಕಲ್ಪಿಸಲ್ಪಟ್ಟವನಂತೆ ಬ್ರಹ್ಮದಲ್ಲಿ ಜೀವತ್ವವು ಭ್ರಾಂತಿಯಿಂದ
ಕಲ್ಪಿಸಲ್ಪಟ್ಟಿದೆ.
ಜೀವದ ಆ ನಿಜವಾದ ರೂಪವನ್ನು
ನೋಡಿದಾಗ ಜೀವತ್ವವು
ನಿವತಿ೯ಸುತ್ತದೆ.(ಪುಟ26)
(ಸ್ಥಾಣುವಿನಲ್ಲಿ ಪುರುಷನು ಕಲ್ಪಿಸಲ್ಪಟ್ಟಿರುವಂತೆ ಎಂದರೆ ನಸು ಕತ್ತಲಿನಲ್ಲಿ ಮರದ ಟೊಂಗೆಯನ್ನು,ಕಂಬವನ್ನೂ
ಮನುಷ್ಯನೆಂದು ಭಾವಿಸುವುದು.
ಜೀವತ್ವವೆಂದರೆ -ಕತೃ೯ತ್ವ,ಭೋಕ್ತøತ್ವ, ಅಲ್ಪಜ್ಞಾನ ಮೊದಲಾದ ಲಕ್ಷಣಗಳುಳ್ಳ.)
46)ಸೂಯ೯ನು ದಿಗ್ಭ್ರಮೆಯನ್ನು ನಾಶ ಪಡಿಸುವ ಹಾಗೆ ತತ್ವಸ್ವರೂಪದ ಅನುಭವದಿಂದ
ಉತ್ಪನ್ನವಾದ ಜ್ಞಾನವು 'ನಾನು ನನ್ನದು'ಎಂಬ ಅಜ್ಞಾನವನ್ನು ಕೂಡಲೇ ಹೋಗಲಾಡಿಸುತ್ತದೆ.(ಪುಟ27)
47)ಉತ್ತಮ ಜ್ಞಾನವಂತನಾದ ಯೋಗಿಯು
ಜ್ಞಾನ ಚಕ್ಷುಸ್ಸಿನಿಂದ
ಸಮಸ್ತ ಜಗತ್ತನ್ನು ಆತ್ಮ
ನಲ್ಲಿಯೂ
ಮತ್ತು ಎಲ್ಲವನ್ನೂ ಒಂದೇ ಆತ್ಮನನ್ನಾಗಿಯೂ
ನೋಡುತ್ತಾನೆ.(ಪುಟ27)
(ಜೀವ ಬ್ರಹ್ಮರ ಐಕ್ಯಜ್ಞಾನವೇ ಸಮ್ಯಗ್ -ಜ್ಞಾನ.ಅದನ್ನುಳ್ಳವನೇ ಯೋಗಿ)
48)ಹೇಗೆ ಮಡಕೆಯೇ ಮೊದಲಾದವು ಮಣ್ಣಿನವೋ ಹಾಗೆಯೇ ಜಗತ್ತೆಲ್ಲವೂ ಆತ್ಮನೇ.ಆತ್ಮನಿಗಿಂತ ಬೇರೆಯಾದದ್ದಿಲ್ಲ.(ಬೇರೆ ಎಂಬುದಿಲ್ಲ).ಯೋಗಿಯು ಎಲ್ಲವನ್ನೂ ತನ್ನ ಆತ್ಮನನ್ನಾಗಿ ನೋಡುತ್ತಾನೆ.(ಪುಟ28)
12) ಜೀವನ್ಮುಕ್ತಿ:
4೯)ಅದನ್ನು ತಿಳಿದ ಜೀವನ್ಮುಕ್ತನಾದರೋ ಹಿಂದಿದ್ದ ಉಪಾಧಿಗಳನ್ನು
ಮತ್ತು ಗುಣಗಳನ್ನು
ತ್ಯಜಿಸುತ್ತಾನೆ.ಸಚ್ಚಿದಾನಂದ ರೂಪವಾಗಿರುವುದರಿಂದ
ಕೀಟವು ಭ್ರಮರವಾಗುವಂತೆ
ಬ್ರಹ್ಮವನ್ನು ಹೊಂದುತ್ತಾನೆ.(ಪುಟ 28)
50) ಆತ್ಮಾರಾಮನಾದ ಯೋಗಿಯು ಮೋಹಸಾಗರವನ್ನು ದಾಟಿ
ರಾಗದ್ವೇಷಾದಿ ರಾಕ್ಷಸರನ್ನು
ವಧಿಸಿ ಶಾಂತಿ ಸಮಾಯುಕ್ತನಾಗಿ
ವಿರಾಜಿಸುತ್ತಾನೆ.(ಪುಟ2೯)
51)ಯೋಗಿಯು ಅನಿತ್ಯ- ಬಾಹ್ಯಸುಖಗಳಲ್ಲಿ ಆಸಕ್ತಿಯನ್ನು ತೊರೆದು ಆತ್ಮಸುಖದಲ್ಲಿಯೇ ತೃಪ್ತನಾಗಿ
ಮಡಕೆಯಲ್ಲಿನ ದೀಪದಂತೆ ಒಳಗಡೆಯೇ ಪ್ರಕಾಶಿಸುತ್ತಾನೆ.(ಪುಟ2೯)
52) ಮುನಿಯು ಉಪಾಧಿಯ ನಡುವೆ ಇದ್ದರೂ ಅದರ ಧಮ೯ಗಳಿಂದ -ಆಕಾಶವು ಹೇಗೋ ಹಾಗೆ- ನಿಲಿ೯ಪ್ತನಾಗಿರುತ್ತಾನೆ.ಸವ೯ಜ್ಞನಾದರೂ ಮೂಢನಂತಿರುತ್ತಾನೆ. ವಾಯುವಿನಂತೆ ಅಸಕ್ತನಾಗಿ ಚಲಿಸುತ್ತಾನೆ.(ಪುಟ31)
(ಸವ೯ವೂ ಬ್ರಹ್ಮವೇ ಆದುದರಿಂದ ಬ್ರಹ್ಮವನ್ನರಿತವನು
ಸವ೯ಜ್ಞನಾಗುವನು)
(ಸದಾ ಬ್ರಹ್ಮವನ್ನೇ ಚಿಂತಿಸುವವನು ಮುನಿ,ಬ್ರಹ್ಮೈವ ಸದಾ ಮನುತ ಇತಿ ಮುನಿಃ)
53)ನೀರು ನೀರಿನಲ್ಲಿಯೂ ಆಕಾಶವು ಆಕಾಶದಲ್ಲಿಯೂ ಬೆಂಕಿಯು ಬೆಂಕಿಯಲ್ಲಿಯೂ ಪ್ರವೇಶಿಸುವಂತೆ
ಮುನಿಯು ಉಪಾಧಿಗಳ ನಾಶದಿಂದ
ವಿಷ್ಣುವಿನಲ್ಲಿಯೇ ವಿಶೇಷರಹಿತನಾಗಿ
ಪ್ರವೇಶಿಸುತ್ತಾನೆ.(ಪುಟ 30)
13) ಪರಬ್ರಹ್ಮದ ಲಕ್ಷಣ:
54)ಯಾವುದರ ಲಾಭಕ್ಕಿಂತ ಬೇರೆಯಾದ ಲಾಭವು,ಯಾವುದರ ಸುಖಕ್ಕಿಂತ ಬೇರೆಯಾದ ಸುಖವು ಯಾವುದರ ಜ್ಞಾನಕ್ಕಿಂತ ಬೇರೆಯಾದ ಜ್ಞಾನವು ಇಲ್ಲವೊ ಅದು ಬ್ರಹ್ಮವೆಂದು ನಿಶ್ಚಯಿಸನೇಕು.(ಪುಟ 31)
('ಇದೆಲ್ಲವೂ ಬ್ರಹ್ಮವೇ' ಸವ೯ಂಖಲ್ವಿದಂ ಬ್ರಹ್ಮ(ಛಾಂ.ಉ.3-14-1)
ಇದು ಅವನ ಪರಮಗತಿಯು,ಇದು ಅವನ ಪರಮ ಸಂಪತ್ತು,ಇದು ಅವನ ಪರಮಲೋಕವು,ಇದು ಅವನ ಪರಮ-ಆನಂದವು.ಏಷಾಸ್ಯ
ಪರಮಾ ಗತಿಃ ಏಷಾಸ್ಯ ಪರಮಾ ಸಂಪತ್,ಏಷೋಸ್ಯ ಪರಮಾಲೋಕಃಏಷೋಸ್ಯ ಪರಮಾನಂದಃ ಎಂದು (ಬ್ರೃ.ಉ.4-2-32) ಹೇಳುತ್ತದೆ.)
55)ಯಾವುದನ್ನು ನೋಡಿದಮೇಲೆ ಅದಕ್ಕಿಂತ ಬೇರೆಯಾಗಿ ನೋಡಬೇಕಾದುದು ಇರುವುದಿಲ್ಲವೊ ,ಯವುದು ಆದಾಗ ಪುನಜ೯ನ್ಮವಿರುವುದಿಲ್ಲವೊ,ಯಾವುದನ್ನು ತಿಳಿದಮೇಲೆ
ಅದಕ್ಕಿಂತ ಬೇರೆಯಾಗಿ ತಿಳಿಯಬೇಕಾದದ್ದು ಇರುವುದಿಲ್ಲವೊ ಅದು ಬ್ರಹ್ಮವೆಂದು ತಿಳಿಯಬೇಕು.(ಪುಟ 32)
56)ಯಾವುದು ಮಧ್ಯದಲ್ಲಿ ,ಮೇಲೆ ಮತ್ತು ಕೆಳಗೆ ಪೂಣ೯ವಾಗಿ ತುಂಬಿಕೊಂಡಿದೆಯೊ,ಸಚ್ಚಿದಾನಂದ ಸ್ವರೂಪಿಯೊ ಅದ್ವಯವೂ ಅನಂತವೂ
ನಿತ್ಯವೂ ಕೇವಲವೂ
ಆದುದೊ ಅದು ಬ್ರಹ್ಮವೆಂದು ಅರಿಯಬೇಕು. (ಪುಟ32)
57)ಯಾವುದು ಉಪನಿಷತ್ತುಗಳಿಂದ -ಅದಲ್ಲದಿರುವ ವಸ್ತುಗಳಿಂದ ಬೇಪ೯ಡಿಸುವುದರ ಮೂಲಕ-ತೋರಿಸಲ್ಪಟ್ಟಿದೆಯಯೊ ,ಯಾವುದುಅದ್ವಯವೂ ಅಖಂಡಾನಂದವೂ
ಏಕವೂ ಆದುದೊ
ಅದು ಬ್ರಹ್ಮವೆಂದು ತಿಳಿಯಬೇಕು.(ಪುಟ32)
58) ಅಖಂಡಾನಂದ ರೂಪವುಳ್ಳ ಅದರ ಲೇಶಭಾಗ ಆನಂದವನ್ನು ಆಶ್ರಯಿಸಿರುವ, ಬ್ರಹ್ಮಾದಿಗಳೆಲ್ಲರೂ(ಎಂದರೆ ಬ್ರಹ್ಮ-ವಿಷ್ಣು-ರುದ್ರರು), ಪ್ರಮಾಣಾನುಗುಣವಾಗಿ ಆನಂದವನ್ನು ಹೊಂದಿದವರಾಗಿದ್ದಾರೆ.(ಪುಟ33)
('ಇತರ ಜೀವಿಗಳು ಇದೇ ಆನಂದದ ಲೇಶಭಾಗವನ್ನು ಆಶ್ರಯಿಸಿ ಜೀವಿಸುತ್ತವೆ.ಏತಸ್ಯೈವ ಆನಂದಸ್ಯ ಅನ್ಯಾನಿ
ಭೂತಾನಿ ಮಾತ್ರಾಮುಪಜೀವಂತಿ ಎಂದು ಬೃಹದಾರಣ್ಯಕವು ಹೇಳುತ್ತದೆ.(ಬೃ.ಉ.4-3-32))
5೯)ಎಲ್ಲಾ ವಸ್ತುವೂ ಅದರಿಂದ ಯುಕ್ತವಗಿದೆ.ವ್ಯವಹಾರವು ಅದನ್ನನುಸರಿಸಿದೆ.ಆದುದರಿಂದ ಹಾಲಿನಲ್ಲಿ ಎಲ್ಲಾ ಕಡೆಯೂ ತುಪ್ಪವಿರುವಂತೆ ಬ್ರಹ್ಮವು ಎಲ್ಲವನ್ನೂ ಒಳಹೊಕ್ಕಿದೆ.(ಪುಟ33)
(ಎಳ್ಳಿನ ಬೀಜಗಳಲ್ಲಿ ಎಣ್ಣೆಯೂ ಮೊಸರಿನಲ್ಲಿ ತುಪ್ಪವೂ
ಭೂಗತ ಚಿಲುಮೆಗಳಲ್ಲಿ ನೀರೂ ಅರಣಿಗಳಲ್ಲಿ ಅಗ್ನಿಯೂ
ಗ್ರಹಿಸಲ್ಪಡುವಂತೆ ಪರಮಾತ್ಮನು ಆತ್ಮನಲ್ಲಿ ಗ್ರಹಿಸಲ್ಪಡುತ್ತಾನೆ.ಎಂದು ಶ್ವೇತಾಶ್ವತರೋಪನಿಷತ್ತು (1-15).ಹಾಲಿನಲ್ಲಿ ತುಪ್ಪವು ಅಡಗಿರುವಂತೆ ,ಪ್ರತಿಜೀವಿಯಲ್ಲೂ
ವಿಜ್ಞಾನವು ವಾಸಿಸುತ್ತಿರುವುದು.ಘ್ರತಮಿವ ಪಯಸಿ ನಿಗೂಢಂ ಭೂತೇ ಭೂತೇ ಚ ವಸತಿ
ವಿಜ್ಞಾನಂ.ಎಂದು ಬ್ರಹ್ಮಬಿಂದೂಪನಿಷತ್ತು ಹೇಳುತ್ತದೆ.)
60)ಅಣುವಲ್ಲದ್ದೂ ಸ್ಥೂಲವಲ್ಲದ್ದೂ ಹ್ರಸ್ವವಲ್ಲದ್ದೂ ದೀಘ೯ವಲ್ಲದ್ದೂ,ಜನ್ಮರಹಿತವಾದದ್ದೂ
ಅವ್ಯಯವಾದದ್ದೂ ರೂಪ-ಗುಣ-ವಣ೯-ನಾಮಗಳಿಲ್ಲದ್ದೂ ಆದುದು ಯಾವುದೊ ಅದು ಬ್ರಹ್ಮವೆಂದು ಅರಿಯಬೇಕು.(ಪುಟ 34)
61) ಯಾವುದರ ಪ್ರಕಾಶದಿಂದ ಸೂಯಾ೯ದಿಗಳು ಪ್ರಕಾಶಿಸಲ್ಪಡುವವೊ,ಪ್ರಕಾಶಿತವಾದ ಅವುಗಳಿಂದ ಯಾವುದು ಪ್ರಕಾಶಿಸಲ್ಪಡುವುದಿಲ್ಲವೊ,ಯಾವುದರಿಂದ ಇವೆಲ್ಲವೂ ಪ್ರಕಾಶಿಸುವುದೊ ಅದು ಬ್ರಹ್ಮವೆಂದು ತಿಳಿಯಬೇಕು.(ಪುಟ 34)
( 'ಅಲ್ಲಿ ಸೂಯ೯ನಾಗಲೀ,ಚಂದ್ರನಾಗಲೀ,ನಕ್ಷತ್ರಗಳಾಗಲೀ ಪ್ರಕಾಶಿಸುವುದಿಲ್ಲ.ಈ ಮಿಂಚುಗಳೂ ಪ್ರಕಾಶಿಸುವುದಿಲ್ಲ.,ಈ ಅಗ್ನಿಯು ಪ್ರಕಾಶಿಸುವುದೆಲ್ಲಿ?ಪ್ರಕಾಶಿಸುತ್ತಿರುವ ಅವನನ್ನೇ ಅನುಸರಿಸಿ
ಎಲ್ಲವೂ ಪ್ರಕಾಶಿಸುತ್ತಿರುವುವು.ಅವನ ಪ್ರಕಾಶದಿಂದಲೇ ಇದೆಲ್ಲವೂ ಪ್ರಕಾಶಿಸುತ್ತಿರುವುದು.'
ನ ತತ್ರ ಸೂಯೋ೯ಭಾತಿನ ಚಂದ್ರ ತಾರಕಂ|ನೇಮ ವಿದ್ಯುತೋ ಭಾಂತಿ ಕುತೋಯಮಗ್ನಿ| ತಮೇವ ಭಾಂತಿಮನುಭಾತಿ
ಸವ೯ಂ ತಸ್ಯಭಾಸಾ
ಸವ೯ಮಿದಂ ವಿಭಾತಿ.|(ಮುಂ.ಉ. 2-2-12)(ಕಠ.ಉ.5-15))
62)ಬೆಂಕಿಯಲ್ಲಿ ಕಾದ ಕಬ್ಬಿಣದ ಗುಂಡಿನಂತೆ ಬ್ರಹ್ಮವು ಸಮಸ್ತ ಜಗತ್ತನ್ನೂ ಒಳಗೂ ಹೊರಗೂ
ವ್ಯಾಪಿಸಿ ಬೆಳಗುತ್ತಾ
ತಾನಾಗಿಯೇ ಪ್ರಕಾಶಿಸುತ್ತದೆ.(ಪುಟ 35)
63)ಬ್ರಹ್ಮವು ಜಗತ್ತಿನಿಂದ ವಿಲಕ್ಷಣವಾದದ್ದು,ಬ್ರಹ್ಮಕ್ಕಿಂತ ಬೇರೆಯಾದದ್ದು ಯಾವುದೂ ಇಲ್ಲ.ಬ್ರಹ್ಮಕ್ಕಿಂತ ಬೇರೆಯಾದದ್ದು ತೋರುವುದಾದರೆ, ಅದು
ಮರುಭೂಮಿಯಲ್ಲಿನ
ಮರೀಚಿಕೆಯಂತೆ
ಮಿಥ್ಯ(ಪುಟ35)
64)ಯವಯಾವುದನ್ನು ಕೇಳುತ್ತೇವೆಯೋ ಅದು ಬ್ರಹ್ಮಕ್ಕಿಂತ ಭಿನ್ನವಲ್ಲ. ತತ್ವಜ್ಞಾನವಾದ ಮೇಲೆ ಅದು ಸಚ್ಚಿದಾನಂದವೂ ಅದ್ವಯವೂ ಆದ ಬ್ರಹ್ಮವೇ.(ಪುಟ 36)
(ಹೀಗೆಯೇ ಇತರ ಇಂದ್ರಿಯಗಳ ಕಾಯ೯ಗಳನ್ನೂ ಸೇರಿಸಿಕೊಳ್ಳಬೇಕು.ಈ ಜಗತ್ತಿನಲ್ಲಿ ದೃಷ್ಟವಾದ ಶ್ರುತವಾದ ಎಲ್ಲವನ್ನೂ ನಾರಾಯಣನು ಒಳಗೂ ಹೊರಗೂ ವ್ಯಾಪಿಸಿರುತ್ತಾನೆಂದು
ಮಹಾನಾರಾಯಣೋಪನಿಷತ್ತು(13-5)) ಹೇಳುತ್ತದೆ.
65)ಜ್ಞಾನಚಕ್ಷುವಾದವನು ಸವ೯ವ್ಯಾಪಿಯಾದ ಸಚ್ಚಿದಾತ್ಮನನ್ನು ನೋಡುತ್ತಾನೆ.ಬೆಳಗುತ್ತಿರುವ ಸೂಯ೯ನನ್ನು ನೋಡಲಾರದ ಕುರುಡನಂತೆ
ಅಜ್ಞಾನ ಚಕ್ಷುವಾದವನು
ಆ ಸಚ್ಚಿದಾತ್ಮನನ್ನು ನೋಡಲಾರನು.(ಪುಟ 36)
(ಆತ್ಮನು ಸದಾ ಸವ೯ವ್ಯಾಪಿಯಾದರೂ ಎಲ್ಲರಿಗೂ ಗೋಚರವಾಗನು.ಜ್ಞಾನಿಯಾದವನಿಗೇ ಲಭ್ಯನೇ ಹೊರತು ಅಜ್ಞಾನಿಗಲ್ಲ)
14) ಆತ್ಮಜ್ಞಾನದ ಫಲ:
66)ಶ್ರವಣಾದಿಗಳಿಂದ ದೀಪ್ತವಾದ ಜ್ಞಾನಾಗ್ನಿಯಲ್ಲಿ ಸುಡಲ್ಪಟ್ಟ ಅವನು ಸವ೯ ಕಶ್ಮಲಗಳಿಂದಲೂ
ಮುಕ್ತನಾಗಿ ಪುಟವಿಟ್ಟ ಚಿನ್ನದಂತೆ ತಾನಾಗಿಯೇ ಪ್ರಕಾಶಿಸುತ್ತಾನೆ.(ಪುಟ37)
67)ಸವ೯ವ್ಯಾಪಿಯೂ ಸವ೯ಧಾರಿಯೂ ತಮಸ್ಸನ್ನು ಅಪಹರಿಸುವ ಜ್ಞಾನಸೂಯ೯ನೂ ಆದ
ಆತ್ಮನು ಹೃದಯಾಕಾಶದಲ್ಲಿ ಉದಿಸಿ ಪ್ರಕಾಶಿಸುತ್ತಾನೆ.ಎಲ್ಲವನ್ನೂ ಪ್ರಕಾಶ ಪಡಿಸುತ್ತಾನೆ.(ಪುಟ 37)
(ರಜ್ಜುವು ಸಪ೯ವನ್ನೂ ಮರೀಚಿಕೆಯು ಜಲವನ್ನೂ ಶುಕ್ತಿಯು ರಜತವನ್ನೂ ಧರಿಸಿರುವಂತೆ
ಈ ಜಗತ್ತೆಲ್ಲವನ್ನೂ ತನ್ನಲ್ಲಿ ಧರಿಸಿರುವ.)
68)ಯಾವನು ದಿಕ್ಕು,ದೇಶ,ಕಾಲ ಮೊದಲಾದುವನ್ನು ಅಪೇಕ್ಷಿಸದೆ ಸವ೯ಕಮ೯ಸನ್ಯಾಸವನ್ನು ಮಾಡಿ
ಸವ೯ವ್ಯಾಪಿಯೂ ಶೀತಾದಿಗಳನ್ನು
ಅಪಹರಿಸಬಲ್ಲದೂ ನಿತ್ಯಸುಖಸ್ವರೂಪಿಯೂ
ನಿರಂಜನನೂ ಆದ ತನ್ನ ಆತ್ಮನೆಂಬ ತೀಥ೯ನ್ನು
ಸೇವಿಸುತ್ತಾನೋ ಅವನು
ಸವ೯ವಿದನೂ ಸವ೯ವ್ಯಾಪಿಯೂ
ಅಮೃತನೂ ಆಗುತ್ತಾನೆ(ಪುಟ37)
,,,,,,,,,,,,,,,,,,,,ಆತ್ಮಬೋಧ ಸಂಪೂಣ೯ವಾಯಿತು,,,,,,,,,,,,,,,,,,,,,,,,,,,,,,,,,,
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
ಎರಡನೆಯ ಗ್ರಂಥ:ಅಪರೋಕ್ಷಾನುಭೂತಿ:
1) ಮಂಗಲಾಚರಣೆ:
1)ಪರಮಾನಂದ ಸ್ವರೂಪನೂ ತತ್ವೋಪದೇಶಕನೂ ಸವ೯ಸಮಥ೯ನೂ
ಸವ೯ವ್ಯಾಪಿಯೂ
ಸವ೯ ಜಗತ್ಕಾರಣನೂ
ಆದ ಶ್ರೀ ಹರಿಯನ್ನು ನಾನು ನಮಸ್ಕರಿಸುತ್ತೇನೆ.(ಪುಟ 43)
2)ಅನುಬಂಧಗಳು:
2)ಮೋಕ್ಷಸಿದ್ಧಿಗೋಸ್ಕರ ಅಪರೋಕ್ಷಾನುಭೂತಿಯನ್ನು
ವಿಶೇಷವಾಗಿ ಹೇಳುತ್ತೇವೆ.ಇದನ್ನು ಸತ್ಪುರುಷರು ಪ್ರಯತ್ನಪೂವ೯ಕವಾಗಿ
ಪುನಃ ಪುನಃ ವಿಚಾರಿಸಿ ನೋಡಬೇಕು.೯ಪುಟ43)
(ಅಪರೋಕ್ಷಾನುಭೂತಿ ಎಂದರೆ ಇಂದ್ರಿಯಾದಿಗಳ ಸಹಾಯವಿಲ್ಲದೆ ನೇರವಾಗಿ ಸಿದ್ಧಿಸುವ
ಬ್ರಹ್ಮಸಾಕ್ಷಾತ್ಕಾರ.ಇದನ್ನು ಪಡೆಯುವ ಮಾಗ೯ವನ್ನು
ವಿವರಿಸುವುದರಿಂದ
ಈ ಗ್ರಂಥಕ್ಕೂ ಅದೇ ಹೆಸರು ಬಂದಿದೆ,)
(ಪ್ರತಿಯೊಂದು ಗ್ರಂಥಕ್ಕೂ ವಿಷಯ,ಪ್ರಯೋಜನ,ಅಧಿಕಾರಿ ಮತ್ತು ಸಂಬಂಧ ಎಂಬ
ನಾಲ್ಕು ಅನುಬಂಧಗಳನ್ನು ಹೇಳುವುದು ವಾಡಿಕೆ.ಇಲ್ಲಿ ಬ್ರಹ್ಮವು ಅಥವಾ ಆತ್ಮವುವಿಷಯ,ಸವ೯ ಅನಥ೯ಗಳನ್ನೂ ಹೋಗಲಾಡಿಸಿಕೊಂಡು ಪರಮಾನಂದವನ್ನು ಹೊಂದುವುದೆಂಬ
ಲಕ್ಷಣವುಳ್ಲ ಮೋಕ್ಷವೇ ಪ್ರಯೋಜನ.ಮುಂದೆ ಹೇಳುವ ಸಾಧನ ಚತುಷ್ಟಯವನ್ನು ಅಥವ ನಾಲ್ಕು ಸಾಧನಗಳನ್ನು
ಹೊಂದಿರು ಮುಮುಕ್ಷುವೇ ಅಧಿಕಾರಿ.ಹೊಂದಲಿಚ್ಛಿಸುವ ಮೋಕ್ಷಕ್ಕೆ ಈ ಗ್ರಂಥವು ಸಾಧಕವಾಗಿರುವುದು ಎಂಬುದೆ ಇವೆರಡರಲ್ಲಿ ಸಂಬಂದ.)
3) ಸಾಧನ ಚತುಷ್ಟಯಕಾರಣ:
3)ತಮ್ಮ ತಮ್ಮ ವಣಾ೯ಶ್ರಮಗಳ ಪಾಲನೆಯಿಂದಲೂ ತಪಸ್ಸಿನಿಂದಲೂ ಶ್ರೀ ಹರಿಯನ್ನು
ತೃಪ್ತಿಪಡಿಸುವುದರಿಂದಲೂ ವೈರಾಗ್ಯವೇ ಮೊದಲಾದ ನಾಲ್ಕು ಸಾಧನಗಳು ಮನುಷ್ಯರಿಗೆ ಸಿದ್ಧಿಸುತ್ತವೆ.(ಪುಟ 44)
(ಮೋಕ್ಷವು Pಜ್ಞಾನದಿಂದ ಸಿದ್ಧಿಸುತ್ತದೆ.ಆದರೆ ಜ್ಞಾನಮಾಗ೯ದಲ್ಲಿ ಅಧಿಕಾರವನ್ನು ಬಯಸುವವರು
ಸಾಧನ ಚತುಷ್ಟಯ ಸಂಪನ್ನರಾಗಿರಬೇಕು.1)ವಿವೇಕ 2) ವ್ಯರಾಗ್ಯ 3) ಶಮಾದಿ ಷಟ್ಕ, ಮತ್ತು 4)ಮುಮುಕ್ಷತ್ವ ಇವುಗಳಿಗೆ ಸಾಧನ ಚತುಷ್ಟಯಗಳೆಂದು ಹೆಸರು. ಇಂತಹ ಸಾಧನ ಚತುಷ್ಟಯವು ಯಾರಿಗೆ ಸಿದ್ಧಿಸುತ್ತದೆ ಎಂಬುದನ್ನು ಈ ಶ್ಲೋಕದಲ್ಲಿ ಹೇಳಿರುತ್ತದೆ.(ಪುಟ 44)
(ತಪಸ್ಸು ಕಾಯಕ ವಾಚಿಕ ಮತ್ತು ಮಾನಸಿಕ ಎಂದು
ಮೂರುವಿಧ.)
4)ವೈರಾಗ್ಯ:
4)ಬ್ರಹ್ಮಲೋಕದಿಂದ ಪ್ರಾರಂಭಿಸಿ ಗಿಡಮರಗಳವರೆಗೆ ಇರುವ ವಸ್ತುಗಳಲ್ಲಿಯೇ ಹಾಗೆಯೇ -ಕಾಗೆಯ ಮಲದಲ್ಲಿ ಅಸಹ್ಯವುಂಟಾಗುವಂತೆ-ಅಸಹ್ಯವುಂಟಾದಾಗ
ಅದು ನಿಮ೯ಲವಾದ ವೈರಾಗ್ಯವೆನಿಸುವುದು.(ಪುಟ 45)
(ಸ್ವಗಾ೯ದಿ ಲೋಕಗಳಲ್ಲಿ ದೊರಕುವ ಸುಖದ ಆಸೆಯಿಂದ
ಪ್ರೇರಿತನಾಗಿ
ಇಹಲೋಕವನ್ನು ತ್ಯಜಿಸುವುದು
ಅಶುದ್ಧ ವೈರಾಗ್ಯ.)
5)ವಿವೇಕ:
5)ಆತ್ಮಸ್ವರೂಪವು ನಿತ್ಯವಾದದ್ದು.ದೃಶ್ಯವದ ಅನಾತ್ಮವು ಇದಕ್ಕೆ ವಿರುದ್ಧವಾದದ್ದು.-ಈ ರೂಪದ ಸರಿಯಾದ ನಿಶ್ಚಯವು
ವಸ್ತುವಿನ ವಿವೇಕವೆನಿಸಿದೆ.(ಪುಟ45)
(ವಿವೇಕವೆಂದರೆ ವಿಂಗಡಿಸಿ ಅರಿಯುವುದು(ಸರಿ ತಪ್ಪು ಇತ್ಯಾದಿ).'ದೃಕ್'ಎಂದರೆ ನೋಡುವವನು.'ದೃಶ್ಯ'ಎಂದರೆ ನೋಡಲ್ಪಡುವ ವಸ್ತು.ಆತ್ಮನು ದೃಕ್ ಜಗತ್ತು ದೃಶ್ಯ.ದೃಶ್ಯವಾದ ಜಗತ್ತು ವಿನಾಶಿ ಮತ್ತು ಅನಿತ್ಯ.'ದೃಕ್' ಸ್ವರೂಪನಾದ ಆತ್ಮನು ಅವಿನಾಶಿ ಮತ್ತು ನಿತ್ಯ. ಹೀಗೆ ಶಾಸ್ತ್ರ ಜ್ಞಾನದಿಂದಲೂ
ಗುರುವಿನ ಉಪದೇಶದಿಂದಲೂ
ಅರಿತು ನಿಶ್ಚಯಿಸುವುದು ನಿತ್ಯ-ಅನಿತ್ಯ-ವಸ್ತು ವಿವೇಕ.ಇದು ಸಾಧನ ಚತುಷ್ಟಯದ ಎರಡನೆ ಅಂಗ.ವಿವೇಕವು ವೈರಾಗ್ಯಕ್ಕೆ ಕಾರಣವಾಗುತ್ತದೆ. )
6) ಶಮ ಮತ್ತುದಮ:
6)ಸಂಸ್ಕಾರಗಳನ್ನು ಎಲ್ಲ ಕಾಲದಲ್ಲಿಯೂ ತ್ಯಜಿಸುವುದು'ಶಮ' ಎನಿಸುತ್ತದೆ.ಇಂದ್ರಿಯಗಳ ಬಾಹ್ಯ ವೃತ್ತಿಗಳನ್ನು ತಡೆಯುವುದು 'ದಮ'ಎನಿಸುತ್ತದೆ.(ಪುಟ46)
(ಪುಣ್ಯಕಮ೯ ಪಾಪಕಮ೯ಗಳು ಮನಸ್ಸಿನ ಮೇಲೊತ್ತುವ
ಮುದ್ರೆಯೇ 'ಸಂಸ್ಕಾರ'.ಈ ಸಂಸ್ಕಾರಗಳು
ತಲೆ ಎತ್ತದತೆ ಮಾಡುವುದೇ
'ಶಮ'.
(ಕಣ್ಣು ಕಿವಿ ಮೊದಲದ ಇಂದ್ರಿಯಗಳು ಹೊರಮುಖವಾಗಿ ಹರಿಯುವುದು ಅವುಗಳ ಸ್ವಭಾವ.'ಪರಮೇಶ್ವರನು ಇಂದ್ರಿಯಗಳು ಹೊರಗೆ ಹರಿಯುವಂತೆ ಮಾಡಿರುತ್ತಾನೆ.'ಪರಾಂಚಿಖಾನಿ ವ್ಯತೃಣತ್ ಸ್ವಯಂಭೂಃ' ಎಂದು ಕಠೋಪನಿಷತ್ತು (2-4-1)ಹೇಳುತ್ತದೆ.ಇಂದ್ರಿಯಗಳ ಬಾಹ್ಯವೃತ್ತಿಯನ್ನು ತಡೆಯುವುದೇ 'ದಮೆ'.)
7) ಉಪರತಿ ಮತ್ತು ತಿತಿಕ್ಷೆ:
7)ವಿಷಯ ವಸ್ತುಗಳಿಂದ ನಿವೃತ್ತರಾಗುವುದೇ
ಪರಮೋತ್ಕøಷ್ಟವಾದ ಉಪರತಿ.ಎಲ್ಲಾ ದುಖಗಳನ್ನೂ ಸಹಿಸುವುದೇ ತಿತಿಕ್ಷೆ.(ಪುಟ6)
(ಉಪರತಿ ಎಂದರೆ ವಿಶ್ರಾಂತಿ ಎಂದಥ೯)
8)ಶ್ರದ್ಧೆ ಮತ್ತು ಸಮಾಧಾನ:
8)ವೇದವಾಕ್ಯದಲ್ಲಿ ಮತ್ತು
ಗುರುವಚನದಲ್ಲಿ
ಇಡುವ ಭಕ್ತಿಯೇ
ಶ್ರದ್ಧೆ.ಬ್ರಹ್ಮದಲ್ಲಿ ಮನಸ್ಸನ್ನು
ಏಕಾಗ್ರಗೊಳಿಸುವುದೇ ಸಮಾಧಾನ ಎನಿಸುತ್ತದೆ.(ಪುಟ 47)
(ನಿಗಮ ಎಂದರೆ ವೇದಭಾಗದ ಉಪನಿಷತ್ತು ಎಂದಥ೯
ಪರಮೆಶ್ವರನಲ್ಲಿ ಇಡುವಂಥ ಭಕ್ತಿಯನ್ನೇ ಗುರುವಿನಲ್ಲಿಯೂ ಇಡಬೇಕೆಂದೂ ಗುರುಭಕ್ತಿಯಿರುವವನಿಗೆ ಮಾತ್ರ ಕಲಿಸಿದ ವಿದ್ಯೆಯು
ಅನುಭವ ಗೋಚರವಾಗುತ್ತದೆಯೆಂದೂ
ಶ್ವೇತಾಶ್ವತರ ಉಪನಿಷತ್ತು
ಹೇಳುತ್ತದೆ.(6-23).
'ಸತ್' ಎಂದರೆ ಪರಬ್ರಹ್ಮ.(ಇರುವಿಕೆ).ಈ ಜಗತ್ತು ಸೃಷ್ಟಿಗಿಂತಲೂ ಮೊದಲು ಸತ್ ಸ್ವರೂಪವೇ ಆಗಿತ್ತು.(ಸದೇವ ಸೋಮ್ಯೇದಮಗ್ರ ಆಸೀತ್ ಎಂದು ಛಾಂದೋಗ್ಯ ಉಪನಿಷತ್ತು (6-2-1) ಹೇಳುತ್ತದೆ.)
೯) ಮುಮುಕ್ಷತ್ವ:ಮೋಕ್ಷವನ್ನು ಪಡೆಯಬೇಕೆಂಬ ಬಯಕೆಯೇ ಮುಮುಕ್ಷತ್ವ.(ಪುಟ48)
ಇಲ್ಲಿಗೆ ಸಾಧನ ಚತುಷ್ಟಯದ ನಿರೂಪಣೆ ಮುಗಿಯಿತು.)
10)ವಿಚಾರ:
10)ಇದುವರೆಗೂ ಹೇಳಿದ ಸಾಧನಗಳಿಂದ ಕೂಡಿರುವ ಮತ್ತು ಶುಭವನ್ನು ಬಯಸುವ ಪುರುಷನು ಜ್ಞಾನವನ್ನು ಪಡೆಯುವುದಕ್ಕೋಸ್ಕರ ವಿಚಾರವನ್ನು ಮಾಡಬೇಕು.(ಪುಟ48)
(ಜ್ಞಾನವೆಂದರೆ ಬ್ರಹ್ಮನೂ ಆತ್ಮನೂ ಒಂದೇ ಎಂಬ ಸಾಕ್ಷಾತ್ಕಾರ)
11)ಬೆಳಕಿಲ್ಲದಿದ್ದರೆ ಪದಾಥ೯ಗಳು ಎಲ್ಲಿಯೂ ಕಾಣುವುದಿಲ್ಲ.ಹಾಗೆಯೆ ವಿಚಾರದ ಹೊರತು
ಮತ್ತಾವ ಸಾಧನದಿಂದಲೂ ಜ್ಞಾನವುಂಟಾಗುವುದಿಲ್ಲ.(ಪುಟ48)
12)ಜ್ಞಾನಸಾಧನವಾದ ವಿಚಾರವು ಹೀಗಿರುತ್ತದೆ.'ನಾನು ಯಾರು?ಈ ಜಗತ್ತು ಹೇಗೆ ಉಂಟಾಯಿತು?ಇದರ ಕತೃ೯ವಾದರೂ ಯಾರು?ಇದಕ್ಕೆ ಉಪಾದಾನವು ಯಾವುದು?"(ಪುಟ4೯)
(ಸಾಮಾನ್ಯವಾಗಿ ತತ್ವಶಾಸ್ತ್ರವು ಮೂರು
ತತ್ವಗಳನ್ನು ಕುರಿತದ್ದಾಗಿರುತ್ತದೆ.ಜೀವ ಜಗತ್ತು ಈ ಶ್ವರ.
ನಾನು ಎಂಬುದು ಯಾವುದು?ಇದು ಮೊದಲನೆಯ ಪ್ರಶ್ನೆ.ಕಣ್ಣಿಗೆ ಕಾಣುವ ಈ ಜಗತ್ತು ಯಾವುದರಿಂದ ಉಂಟಾಯಿತು?ಮಡಕೆಗೆ ಮಣ್ಣು ಕಾರಣವಿರುವಂತೆ ಇದಕ್ಕೂ ಯಾವುದಾದರೂ ಕಾರಣವಿದೆಯೆ?ಇದು ಎರಡನೆಯ ಪ್ರಶ್ನೆ.ಹಾಗೆಯೇ ಮಡಕೆಗೆ ಕತೃ೯ವಾದ ಕುಂಬಾರನಿರುವಂತೆ ಈ ಜಗತ್ತಿನ ಸೃಷ್ಟಿಗೂ ಕತೃ೯ವೊಬ್ಬನಿರುವನೆ?ಇದ್ದರೆ ಅವನ ಸ್ವರೂಪವೆಂಥದ್ದು?ಇದು ಮೂರನೆಯ ಪ್ರಶ್ನೆ.)
13)ನಾನು ಪಂಚಭೂತಗಳ ಸಮೂಹವಾಗಿರುವ ದೇಹವಾಗಲಿ ಅಥವ ಕಣ್ಣೇ ಮೊದಲಾದ ಇಂದ್ರಿಯ ಸಮೂಹವಾಗಲೀ
ಅಲ್ಲ.ಇವುಗಳಿಗಿಂತ ಬೇರೆಯಾಗಿರುವ ಮತ್ತಾವನೋ ಆಗಿರುವೆನು.(ಪುಟ4೯)
(ಪಂಚೇಂದ್ರಿಯಗಳು ಮತ್ತು ಪಂಚಭೂತಗಳು ಜಡ.ನಾನು ಚೇತನ.ಆದ್ದರಿಂದಲೇ ನಾನು ಅವುಗಳಿಗಿಂತ ಬೃರೆಯಾಗಿರಬೇಕು.ವ್ಯವಹಾರದಲ್ಲಿ ಕೂಡ 'ಮಮ್ಮ ದೇಹ','ನನ್ನ ಕಣ್ಣು'ಎಂದು ಹೇಳುವುದರಿಂದ 'ನಾನು ಬೇರೆ' ಅವು ಬ್ಏರೆ ಎಂದಾಯಿತು.)
14)'ಈ ಜಗತ್ತೆಲ್ಲವೂ ಅಜ್ಞಾನದಿಂದ ಉಂಟಾಗಿದೆ.ಜ್ಞಾನದಿಂದ ಕರಗಿ ಹೋಗುತ್ತದೆ.ನಾನಾ ಪ್ರಕಾರವಾದ ಮನಸ್ಸಂಕಲ್ಪವೇ ಇದರ ಕತೃ೯.(ಪುಟ50)
(ಇಲ್ಲಿ ಹನ್ನೆರಡನೆಯ ಶ್ಲೋಕದಲ್ಲಿನ ಪ್ರಶ್ನೆಗೆ ಉತ್ತರ P'ೂಡಲಾಗಿದೆ.'ಇದು ಹೇಗೆ ಹುಟ್ಟಿತು?ಇದರ ಕತೃ೯ ಯಾರು? ಎಂಬು ಪ್ರಶ್ನೆಗೆ ಇಲ್ಲಿ ಉತ್ತರ ಕೊಡಲಾಗಿದೆ.
ಇದಂ ಸವ೯ಂ ಯದಯಮಾತ್ಮಾ,'ಇದೆಲ್ಲವೂ ಆತ್ಮವೇ'(ಬೃ.ಉ.2-4-6).ಸವ೯ಂ ಖಲು ಇದಂ ಬ್ರಹ್ಮ'.'ಇದೆಲ್ಲವೂ ಬ್ರಹ್ಮವೇ'(ಛಾಂ.ಉ.3-14-1)ಎಂದು ಶ್ರುತಿಯು ಹೇಳುವಂತೆ ನಮ್ಮ ಕಣ್ಣಿಗೆ ಕಾಣುತ್ತಿರುವ ಈ ಜಗತ್ತೆಲ್ಲವೂ
ಆತ್ಮವಸ್ತುವೇ ಅಥವ ಬ್ರಹ್ಮವೇ.ಆದರೆ ಹಗ್ಗದಲ್ಲಿ ಕಾಣುವ ಹಾವಿನಂತೆ,ಆತ್ಮವಸ್ತುವುವಿನ ಅಜ್ಞಾನದ ದೆಸೆಯಿಂದ
ಅದರಲ್ಲಿ ಈ ಜಗತ್ತು ಕಾಣುತ್ತಿದೆ.ಆದ್ದರಿಂದ ಜಗತ್ತಿನ ಸೃಷ್ಟಿಗೆ
ಅಜ್ಞಾನವೆ ಕಾರಣ.ಯಾವಾಗ ಜ್ಞಾನವುಂಟಾಗುವುದೋ
ಆಗ ಜಗತ್ತು ತನ್ನ ಕಾರಣವಾದ ಆತ್ಮವಸ್ತುವಿನಲ್ಲಿ -ಹಾವು ಹಗ್ಗದಲ್ಲಿ ಕರಗಿ ಹೋಗುವಂತೆ-ಕರಗಿ ಹೋಗುತ್ತದೆ.
ಸಂಕಲ್ಪವೆಂದರೆ 'ನಾನು ಇದನ್ನು ಮಾಡುವೆನು'ಇತ್ಯಾದಿ ರೂಪದ
ಮನಃ ಪರಿಣಾಮ.(ಮನೋ ನಿಶ್ಚಯ)
ಇದಕ್ಕೆ ಅನುಗುಣವಾಗಿ
ಪ್ರಪಂಚವು ತೋರಿಕೊಳ್ಳುತ್ತದೆ.ಉದಾಹರಣೆಗೆ ಅಸ್ಪಷ್ಟವಾದ ಮರದ ಕೊಂಬೆಯೊಂದು
ಕೆಲವರಿಗೆ ಪುರುಷನಂತೆಯು
ಕೆಲವರಿಗೆ ಸ್ತೀಯಂತೆಯೂ
ಕೆಲವರಿಗೆ ಭೂತದಂತೆಯೂ ಕಾಣಬಹುದು.ಆದುದರಿಂದ ಮನಸ್ಸಂಕಲ್ಪವೇ ಕತೃ೯ ನಾನಲ್ಲ ಎಂದು ವಿಚಾರ ಮಾಡಬೇಕು.)
15)ಮಡಕೆಗೆ ಮಣ್ಣು ಉಪಾದಾನ ಕಾರಣವಾಗಿರುವಂತೆ ಇವೆರಡರ ಉಪಾದಾನವು ಯವುದಿದೆಯೋ ಅದು ಏಕವೂ ಸೂಕ್ಷ್ಮವೂ ನಾಶ ರಹಿತವೂ ಆದ ಸದ್ವಸ್ತು.(ಪುಟ51)
(ಮಣ್ಣಿನಿಂದಾದ ಮಡಕೆಯು ಮಣ್ಣೇ.ಮಡಕೆಯ ಆಕಾರವಾಗಲೀ ಮಡಕೆ ಎಂಬ ಹೆಸರಾಗಲೀ
ಅಸತ್ಯ.ಮಣ್ಣೆಂಬುದೇ ಸತ್ಯ.ಹಾಗೆಯೆ ಬ್ರಹ್ಮದಿಂದಾದ ಜಗತ್ತು ಬ್ರಹ್ಮವೇ.ಹೀಗೆ
ಬ್ರಹ್ಮಕ್ಕಿಂತ ಬೇರೆಯಾದ ಯಾವವಸ್ತುವೂ ಇಲ್ಲದ್ದರಿಂದ ,ಅದು ಏಕ ಮತ್ತು ಅದ್ವಿತೀಯ.
'ಸತ್'ಎಂದರೆ ಎಲ್ಲ ಕಾಲದಲ್ಲಿಯೂ ಇರುವ ವಸ್ತು.ಬ್ರಹ್ಮವನ್ನುಳಿದು ಬೇರೆ ಯಾವುದೂ 'ಸತ್' ಆಗಲು ಸಾಧ್ಯವಿಲ್ಲ.ಏಕೆಂದರೆ ಉಳಿದೆಲ್ಲಾ ವಸ್ತುಗಳಿಗೂ ಹುಟ್ಟು ಸಾವುಗಳಿರುತ್ತವೆ.ಸದೇವ ಸೋನ್ಯೇದಮಗ್ರ ಆಸೀತ್.ಏಕಮೇವಾದ್ವಿತೀಯಮ್.ಪ್ರೀತಿಪಾತ್ರನೆ ಸೃಷ್ಟಿಗೆ ಮೊದಲು
ಇದು ಏಕವೂ ಅದ್ವಿತೀಯವೂ
ಆದ ಸದ್ವಸ್ತುವೇ ಆಗಿತ್ತು.(ಛಾಂ.ಉ.6-2-1)ಎಂದು ಶ್ರುತಿಯು ಹೇಳುತ್ತದೆ.)
16)ನಾನು ಏಕ ಮತ್ತುಸೂಕ್ಷ್ಮ.ನಾನೇ ಅರಿಯುವವನು.ಸಾಕ್ಷಿ,ಸದ್ರೂಪನು ಮತ್ತು ನಾಶರಹಿತನು.ಅದು (ಎಂದರೆ ಬ್ರಹ್ಮವು)ನಾನೇ.ಈ ವಿಷಯದಲ್ಲಿ ಸಂದೇಹವಿಲ್ಲ.(ಪುಟ51)
11) ಅಜ್ಞಾನ:
17)ನಾನು ಅವಯವರಹಿತನು ಮತ್ತು ಏಕನು.ದೇಹವಾದರೊ ಅನೇಕ ಅವಯವಗಳಿಂದ ಕೂಡಿದೆ.ಮೂಢರು ಇವೆರಡೂ ಒಂದೇ ಎಂದು ಭಾವಿಸುತ್ತಾರೆ.ಇನ್ನೂ ಇದಕ್ಕಿಂತ ಹೆಚ್ಚಿನ ಅಜ್ಞಾನವು ಯಾವುದಿದೆ?(ಪುಟ52)
18) ಆತ್ಮನು ಆಳುವವನು ಮತ್ತುಒಳಗಿರುವವನು.ದೇಹವಾದರೊ ಆಳಲ್ಪಡುವ ಮತ್ತು ಹೊರಗಿರುವ ವಸ್ತು.ಮೂಢರು ಇವೆರಡೂ ಒಂದೇ ಎಂದು ಭಾವಿಸುತ್ತಾರೆ.ಇನ್ನೂ ಇದಕ್ಕಿಂತ ಹೆಚ್ಚಿನ ಅಜ್ಞಾನವು ಯಾವುದಿದೆ?(ಪುಟ52)
(ಬೃಹದಾರಣ್ಯಕೋಪನಿಷತ್ತಿನ
ಅಂತಯಾ೯ಮಿ ಬ್ರಾಹ್ಮಣವುಹೀಗೆ ಹೇಳುತ್ತದೆ.'ಯಾವನು ಸವ೯ಪ್ರಾಣಿಗಳಲ್ಲಿರುವವನಾಗಿ ಸವ೯ ಪ್ರಾಣಿಗಳ ಒಳಗಿರುವನೊ,ಯಾವನನ್ನು ಸವ೯ಪ್ರಾಣಿಗಳು ಅರಿಯವೊ,ಯಾವನು ಒಳಗಿದ್ದುಕೊಂಡು ಸವ೯ಪ್ರಾಣಿಗಳನ್ನೂ ಆಳುವನೊ ಅವನೇ ಅಂತಯಾ೯ಮಿಯು.ನಿನ್ನ ಅಮೃತನಾದ ಆತ್ಮನು.'ಯಃ ಸವೇ೯ಷು ಭೂತೇಷು ತಿಷ್ಠನ್ ಸವೇ೯ಭ್ಯೋ ಭೂತೇಭ್ಯೋ$ಂತರಃ
ಯಂ ಸವಾ೯ಣಿ ಭೂತಾನಿ ನ ವಿಧುಃ ಯಸ್ಯ ಸವಾ೯ಣಿ ಭೂತಾನಿ ಶರೀರಂ,ಯಃ ಸವಾ೯ಣಿ ಭೂತಾನಿ ಅಂತರೋ ಯಮಯತಿ ಏಷ ತ ಆತ್ಮಾಅಂತಯಾ೯ಮ್ಯಮೃತಃ(3-7-15)
1೯)ಆತ್ಮನು ಜ್ಞಾನ ಸ್ವರೂಪನು ಮತ್ತು ಶುದ್ದನು.ದೇಹವಾದರೋ ಮಾಂಸಮಯ,ಆದುದರಿಂದಲೇ ಅಶುದ್ಧ,ಮೂಢರು ಇವೆರಡೂ ಒಂದೇ ಎಂದು ಭಾವಿಸುತ್ತಾರೆ.ಇನ್ನೂ ಇದಕ್ಕಿಂತ ಹೆಚ್ಚಿನ ಅಜ್ಞಾನವು ಯಾವುದಿದೆ?(ಪುಟ53)
20)ಆತ್ಮನು ಬೆಳಕನ್ನು ಕೊಡುವವನು;ದೇಹವಾದರೋ ಜಡವೆಂದು ಹೇಳಲ್ಪಡುತ್ತದೆ.ಮೂಢರು ಇವೆರಡೂ ಒಂದೇ ಎಂದು ಭಾವಿಸುತ್ತಾರೆ.ಇನ್ನೂ ಇದಕ್ಕಿಂತ ಹೆಚ್ಚಿನ ಅಜ್ಞಾನವು ಯಾವುದಿದೆ?(ಪುಟ53)
21)ಆತ್ಮನು ಸದ್ರೂಪನಾದುದರಿಂದ ನಿತ್ಯನು;ದೇಹವಾದರೋ ಅಸದ್ರೂಪವಾದುದರಿಂದ ಅನಿತ್ಯವು.
ಮೂಢರು ಇವೆರಡೂ ಒಂದೇ ಎಂದು ಭಾವಿಸುತ್ತಾರೆ.ಇನ್ನೂ ಇದಕ್ಕಿಂತ ಹೆಚ್ಚಿನ ಅಜ್ಞಾನವು ಯಾವುದಿದೆ?(ಪುಟ53)
('ಸತ್' ಎಂದರೆ ಇರುವುದು ಎಂದಥ೯.ಇರುವಿಕೆಯೆ ಆತ್ಮನ ಸ್ವರೂಪ.ಆದುದರಿಂದ ಅವನು ಸದಾ ಇರುತ್ತಾನೆ.(ನಿತ್ಯನು).ದೇಹವಾದರೋ ಹುಟ್ಟುವ ಮುನ್ನ ಇರಲಿಲ್ಲ.ಸತ್ತಮೇಲೆ ನಾಶವಾಗುತ್ತದೆ.ಆದುದರಿಂದ ಬದುಕಿರುವ ಕಾಲದಲ್ಲಿ ಅದು ಕಂಡು ಬರುತ್ತಿದ್ದರೂ ಅದು ಅಸತ್ತೇ.ಅಸತ್ ಆದದ್ದು ಅನಿತ್ಯವೂ ಆಗಿರುತ್ತದೆ.ಇದನ್ನು ಗೌಡಪಾದ ಕಾರಿಕೆಯಲ್ಲಿ ಹೀಗೆ ಸ್ಪಷ್ಟಪಡಿಸಿದೆ.'ಮೊದಲಿನಲ್ಲಿ
ಮತ್ತು ಕಡೆಯಲ್ಲಿ ಯಾವುದು ಇರುವುದಿಲ್ಲವೊ
ಅದು ಮಧ್ಯದಲ್ಲಿಯೂ ಇರುವುದಿಲ್ಲ.ಅವು ಅಸತ್ಯಗಳಿಗೆ ಸದೃಶವಾಗಿದ್ದು ಸತ್ಯವಾಗಿರುವಂತೆ ಕಾಣುತ್ತವೆ.'ಆದಾವಂತೇ ಚ ಯನ್ನಾಸ್ತಿ ವತ೯ಮಾನೇಪಿ ತತ್ತಥಾ|ವಿತಥಃ ಸದೃಶಾ ಸಂತೋ$ವಿತಥಾ ಇವ ಲಕ್ಷಿತಃ|(ಮಾಂಡೂಕ್ಯಕಾರಿಕಾ2,6)(ಪುಟ 54)
12) ಆತ್ಮ-ಅನತ್ಮರಲ್ಲಿರುವ ಭೇದ:
22)ಪದಾತ೯ಗಳನ್ನು ತೋರಿಸಿಕೊಡುವ ಶಕ್ತಿಯೇ ಆತ್ಮನ ಬೆಳಕು ಕೊಡುವ ಶಕ್ತಿ.ಅಷ್ಟೇ ಹೊರತು ಬೆಂಕಿ ಮೊದಲಾದವುಗಳ ಬೆಳಕಿನಂತೆ ಆತ್ಮನಿಗೂ ಬೆಳಕಿರುವುದೆಂದು ಭಾವಿಸಬರದು.ಏಕೆಂದರೆ ರಾತ್ರಿಯಲ್ಲಿ ಕತ್ತಲಾಗುತ್ತದೆ.(ಪುಟ54)
(ಹಿಂದೆ 20ನೆಯ ಶ್ಲೋಕದಲ್ಲಿ ಆತ್ಮನನ್ನು ಪ್ರಕಾಶಕ ಎಂದು ಕರೆಯಲಾಯಿತು.(ಕಠ.ಉ.2-5-15).ಮುಂಡಕೋಪನಿಷತ್ತು(2-2-10)ಮೊದಲದ ಕಡೆಗಳಲ್ಲಿ ಆತ್ಮನ
ಬೆಳಕಿನಿಂದಲೇ ಸೂಯ೯ಚಂದ್ರಾದಿಗಳು ಬೆಳಗುತ್ತಿರುವರು(ತಮೇವ ಭಾಂತಮನುಭಾತಿ ಸವ೯ಂ)ಎಂದು ಹೇಳಿದೆ.ಆದ್ದರಿಂದ ಆತ್ಮನ ಬೆಳಕು ಸಹ ಸೂಯ೯,ಚಂದ್ರ,ಅಗ್ನಿ-ಇವುಗಳ ಬೆಳಕಿನಂತೆಯೇ
ಇರಬಹುದು ಎಂಬ ಅಭಿಪ್ರಾಯವುಂಟಾಗಬಹುದು.ಅದನ್ನು ನಿರಾPರಿಸುವುದಕ್ಕಾಗಿ ಈ ಶ್ಲೋಕವು ಬಂದಿದೆ.
ಆತ್ಮನು ಬೆಳಕು ಕೊಡುತ್ತಾನೆ ಎಂದರೆ -ಬೆಳಕು ಮಡಕೆ ಮೊದಲದ ವಸ್ತುಗಳನ್ನು ತೋರಿಸಿಕೊಡುತ್ತಾನೆ ಎಂದಥ೯.ಆತ್ಮ ಚೈತನ್ಯವಿಲ್ಲದಿದ್ದರೆ ಇಂದ್ರಿಯಗಳು ಕೆಲಸ ಮಾಡಲಾರವು.ಸೂಯ೯ ಮೊದಲಾದವುಗಳ
ಬೆಳಕು ಸದಾ ಇರುವುದಿಲ್ಲ.ಜಗತ್ತಿನಲ್ಲಿ ಒಂದೆಡೆ ಬೆಳಕಿದ್ದರೂ
ಮತ್ತೆಲ್ಲಿಯಾದರೂ ಕತ್ತಲು ಇದ್ದೇ ಇರುತ್ತದೆ.ಆದ್ದರಿಂದ ಈ ಆತ್ಮನ ಬೆಳಕು ಈ ಭೌತಿಕ ಬೆಳಕುಗಳಿಗಿಂತ ವಿಲಕ್ಷಣವಾದದ್ದು.ಅದು ಸೂಯ೯ ಅಗ್ನಿ ಮೊದಲಾದ
ಬೆಳಕನ್ನು ತೋರಿಸಿಕೊಡುವುದಲ್ಲದೆ ಅವಿಲ್ಲದಾಗ ಉಂಟಾಗುವ ಕತ್ತಲೆಯನ್ನೂ ತೋರಿಸಿಕೊಡುತ್ತದೆ.)
ಬೃಹದಾರಣ್ಯಕೋಪನಿಷತ್ತು
ಆತ್ಮಜ್ಯೋತಿಯನ್ನು ಕುರಿತು
ಹೀಗೆ ಹೇಳಿರುತ್ತದೆ;
(ಜನಕ);'ಯಾಜ್ಞವಲ್ಕ್ಯ,ಸೂಯ೯ಚಂದ್ರರಿಬ್ಬರೂ ಮುಳುಗಿದಾಗ ಅಗ್ನಿಯು ಆರಿಹೋದಾಗ ,ಶಬ್ದವು ಅಡಗಿ ಹೋದಾಗ
ಮನುಷ್ಯನಿಗೆ ಯಾವುದು ಜ್ಯೋತಿಯು?'
ಯಾಜ್ಞವಲ್ಕ್ಯ:'ಆತ್ಮನೇ ಅವನ ಜ್ಯೋತಿಯಾಗುತ್ತಾನೆ.ಏಕೆಂದರೆ ಆತ್ಮಜ್ಯೋತಿಯಿಂದಲೆ ಇವನು ಕುಳಿತುಕೊಳ್ಳುತ್ತಾನೆ.ಹೊರಗೆ ಹೋಗುತ್ತಾನೆ,ಕೆಲಸ ಮಾಡುತ್ತಾನೆ ಮತ್ತು ಹಿಂತಿರುಗುತ್ತಾನೆ.')
23)ಮಡಕೆಯನ್ನು ನೋಡುವವನಂತೆ'ಈ ದೇಹವು ನನ್ನದು'ಎಂದು ಸದಾ ಅರಿತಿದ್ದರೂ -ಈ ಮೂಢಜನವು ದೇಹವೇ ತಾನೆಂದು ಭಾವಿಸಿ ಸುಮ್ಮನಿರುವುದಲ್ಲ!ಏನಾಶ್ಚಯ೯!(ಪುಟ55)
(ನಾನು ಮಡಕೆಯನ್ನು ನೋಡುವವನು 'ಈ ಮಡಕೆ ನನ್ನದು'ಎಂದು ಅರಿಯುತ್ತಾನೆಯೇ ಹೊರತು
'ನಾನೇ ಈ ಮಡಕೆ'ಎಂದು ಭಾವಿಸುವುದಿಲ್ಲವಷ್ಟೆ.!ಹಾಗೆಯೆ 'ಈ ದೇಹ ನನ್ನದು 'ಎಂಬ ಭಾವನೆಯ ಹಿಂದೆನಾನು ಬೇರೆ ದೇಹಬೇರೆ
ಎಂಬುದು ಸಾಮಾನ್ಯವಾಗಿ ಅನುಭವಸಿದ್ಧವಾಗಿದ್ದರೂ ಅದನ್ನು ಮರೆತು ಮೂಢನು ತಾನೇ ದೇಹವೆಂದು ಭಾವಿಸಿ ಅದರ ಬಂಧದಿಂದ ಬಿಡಿಸಿಕೊಳ್ಳಲು ಪ್ರಯತ್ನಿಸದೆ ಸುಮ್ಮನಿರುತ್ತಾನೆ.)
13) ಜ್ಞಾನ:
24) 'ನಾನು ಸಮನು,ಶಾಂತನು, ಮತ್ತು ಸಚ್ಚಿದಾನಂದ ಸ್ವರೂಪನು;ಆದುದರಿಂದ ನಾನೂ ಬ್ರಹ್ಮವೇ ಹೊರತು
ಅಸತ್ತಾದ ಈ ದೇಹವಲ್ಲ.'-ಎಂಬುದು ಜ್ಞಾನವೆಂದು ತಿಳಿದವರು ಹೇಳುತ್ತಾರೆ.(ಪುಟ55)
25)'ನಾನು ವಿಕಾರ -ಆಕಾರದಳಿಲ್ಲದವನೂ,ದೋಷರಹಿತನು ಮತ್ತು ನಾಶರಹಿತನು.(ಪುಟ56)
ಆದುದರಿಂದ
ನಾನೂ ಬ್ರಹ್ಮವೇ ಹೊರತು
ಅಸತ್ತಾದ ಈ ದೇಹವಲ್ಲ.'-ಎಂಬುದು ಜ್ಞಾನವೆಂದು ತಿಳಿದವರು ಹೇಳುತ್ತಾರೆ.(ಪುಟ 56)
26)'ನಾನು ರೋಗರಹಿತನು,ಮತ್ತೊಂದರಿಂದ ಬೆಳಗದವನು.ಯಾವ ಕಲ್ಪನೆಗೂ ಅವಕಾಶ ಕೊಡದವನು
ಮತ್ತು ಸವ೯ವ್ಯಾಪಿ ಆದುದರಿಂದ ನಾನೂ ಬ್ರಹ್ಮವೇ ಹೊರತು
ಅಸತ್ತಾದ ಈ ದೇಹವಲ್ಲ.'-ಎಂಬುದು ಜ್ಞಾನವೆಂದು ತಿಳಿದವರು ಹೇಳುತ್ತಾರೆ.(ಪುಟ56).
(ದೇಹಕ್ಕಿರುವ ಕಫಾದಿ ದೋಷಗಳು ಆತ್ಮನಿಗಲ್ಲದ್ದರಿಂದ
ಅವನು ರೋಗರಹಿತನು.
ಎಲ್ಲವನ್ನೂ ಬೆಳಗುವವನು ಆತ್ಮನು.ಅವನನ್ನು ಬೆಳಗಿಸಬಲ್ಲ ಮತ್ತೊಂದು ವಸ್ತುವಿಲ್ಲದ್ದರಿಂದ
ಅವನು ನಿರಾಭಾಸನು.)
27)ನಾನು ಸತ್ವ ಮೊದಲಾದ ಗುಣಗಳಿಲ್ಲದವನು.ಕ್ರಿಯೆಯಿಲ್ಲದವನು,ಸದಾ ಇರುವವನು,ಸದಾ ಬಂಧರಹಿತನು ಮತ್ತು ಚ್ಯುತಿಯಿಲ್ಲದವನು.ಆದುದರಿಂದ
ನಾನೂ ಬ್ರಹ್ಮವೇ ಹೊರತು
ಅಸತ್ತಾದ ಈ ದೇಹವಲ್ಲ.'-ಎಂಬುದು ಜ್ಞಾನವೆಂದು ತಿಳಿದವರು ಹೇಳುತ್ತಾರೆ.(ಪುಟ56)
28)ನಾನು ನಿಮ೯ಲನು,ಚಲನೆಯಿಲ್ಲದವನು,ಅನಂತನು,ಶುದ್ಧನು ಮತ್ತುಸಾವುಗಳಿಲ್ಲದವನು.ಆದುದರಿಂದ
ನಾನೂ ಬ್ರಹ್ಮವೇ ಹೊರತು
ಅಸತ್ತಾದ ಈ ದೇಹವಲ್ಲ.'-ಎಂಬುದು ಜ್ಞಾನವೆಂದು ತಿಳಿದವರು ಹೇಳುತ್ತಾರೆ.(ಪುಟ57)
14) ದೇಹಾತ್ಮವಾದದ ನಿರಾಕರಣೆ:
2೯)ಎಲೈ,ಮೂಖ೯!ನಿನ್ನ ದೇಹದಲ್ಲಿಯೇ ಮಂಗಳಕರನಾಗಿ ಇದ್ದು ಕೊಂಡಿರುವ ,ಪುರುಷನೆಂಬ ಹೆಸರಿನಿಂದ ಪ್ರಸಿದ್ಧನಾಗಿರುವ ,ದೇಹದ ಕಟ್ಟಿಗೆ ಒಳಪಟ್ಟಿಲ್ಲದ ಆತ್ಮನನ್ನು ಇಲ್ಲವೆಂದೇಕೆ ಹೇಳುತ್ತೀಯೆ?
(ಪುಟ58)
(ಮನುಷ್ಯನ ದೇಹದಲ್ಲಿ.ನಾನು'ಎಂಬ ರೂಪದಿಂದ ಅವನು ವಾಸಿಸುತ್ತಾನಾದ್ದರಿಂದ ಪುರುಷನೆನಿಸಿದ್ದಾನೆ.)
30)ಎಲೈ ಮೂಖ೯ನೆ,ದೇಹಕ್ಕಿಂತ ಬೇರೆಯವನೂ ಸತ್ಪುರುಷನೂ ನಿನ್ನಂಥವರಿಗೆ ನೋಡಲು ಬಹು ಕಷ್ಟವಾಗಿರುವವನೂ
ಪುರುಷನೆನ್ನಿಸಿಕೊಂಡಿರುವವನೂ ಆದ ನಿನ್ನ ಆತ್ಮನ ವಿಷಯವನ್ನುಸ್ರುತಿ,ಯುಕ್ತಿಗಳ ಸಹಾಯದಿಂದ ಹೇಳುತ್ತೇನೆ ಕೇಳು.(ಪುಟ58)
(ಜಾಗ್ರತ,ಸ್ವಪ್ನ,ಸುಷುಪ್ತಿಎಂಬ ಮೂರು ಅವಸ್ಥೆಗಳ ವಿವೇಚನೆ.ಸ್ವಪ್ನದಲ್ಲಿ ದೇಹದ ಜ್ಞಾನವಿರುವುದಿಲ್ಲ.ಗಾಢನಿದ್ರೆಯಲ್ಲಿ ಮನಸ್ಸು ಸಹ ಕೆಲಸ ಮಾಡುವುದಿಲ್ಲ.ಆದ್ದರಿಂದ ನಾವು ದೇಹವೂ ಅಲ್ಲ,ಮನಸ್ಸೂ ಅಲ್ಲ.ಇವೆರಡನ್ನೂ ಮೀರಿರುವ ಜ್ಞಾನ ಸ್ವರೂಪವಾದ ವಸ್ತು ಎಂಬುದು ಸಿದ್ಧವಾಗುವುದು)
31)'ನಾನು'ಎಂಬ ಶಬ್ದದಿಂದ ಪ್ರಸಿದ್ಧನಾಗಿರುವ (ದೇಹಕ್ಕಿಂತ ಬೇರೆಯಾದ) ಈ ಪರಮಪುರುಷನು ಒಬ್ಬನೇ ಆಗಿರುತ್ತಾನೆ.ಸ್ಥೂಲದೇಹವಾದರೋ
ಬಹುವಿಧವಾಗಿರುತ್ತದೆ.ಆದ್ದರಿಂದ ನಿಂದಾ ಯೋಗ್ಯವಾದ
ಈ ದೇಹವು ಹೇಗೆ ತಾನೇ ಪುರುಷನಾದೀತು?(ಪುಟ5೯)
(ದೇಹದಲ್ಲಿರುವ ಪುರುಷನು ಅಥವಾ ಆತ್ಮನು ದೇಹಕ್ಕಿಂಕ ಹೇಗೆ ಬೇರೆಯಾಗಿರುತ್ತಾನೆ ಎಂಬುದನ್ನು ಶ್ರುತಿಯುಕ್ತಿಗಳ ಮೂಲಕ ಇಲ್ಲಿಯ ಏಳು ಶ್ಲೋಕಗಳಲ್ಲಿ ಸಾಧಿಸಿರುತ್ತದೆ.)
32)ನಾನು ಎನ್ನಿಸಿಕೊಳ್ಳುವ ಪರಮಪುರುಷನು ನೋಡುವವನು ಎಂದು ಪ್ರಸಿದ್ಧನಾಗಿರುತ್ತಾನೆ.ದೇಹವಾದರೋ ನೋಡಲ್ಪಡುವ ವಸ್ತುವಾಗಿರುತ್ತದೆ.ಏಕೆಂದರೆ 'ಇದು ನನ್ನದು'ಎಂದು ವ್ಯವಹರಿಸುತ್ತಾರೆ. ಆದ್ದರಿಂದ ನಿಂದಾ ಯೋಗ್ಯವಾದ ಈ ದೇಹವು ಹೇಗೆ ತಾನೇ ಪುರುಷನಾದೀತು?(ಪುಟ5೯)
33)ನಾನು ವಿಕಾರಗಳಿಲ್ಲದವನು.ದೇಹವಾದರೋ ಸದಾ ಬದಲಾಗುತ್ತಿರುವುದು ಸಾಕ್ಷಾತ್ತಾಗಿಯೇ ಕಂಡುಬರುತ್ತದೆ. ಆದ್ದರಿಂದ ನಿಂದಾ ಯೋಗ್ಯವಾದ
ಈ ದೇಹವು ಹೇಗೆ ತಾನೇ ಪುರುಷನಾದೀತು?(ಪುಟ5೯)
(ಹುಟ್ಟುವುದು,ಇರುವುದು,ಬೆಳೆಯುವುದು,ಬದಲಾವಣೆ ಹೊಂದುವುದು,ಕ್ಷಯಿಸುವುದು ಮತ್ತು ನಾಶವಾಗುವುದು-ಇವನ್ನು ಷದ್ವಿಕಾರಗಳೆಂದು ಕರೆಯುತ್ತಾರೆ.ನಮ್ಮ ಶರೀರಕ್ಕಾಗುವ ಈ ವಿಕಾರಗಳನ್ನು ನಾವೇ ನೋಡುತ್ತಿರುವುದರಿಂದ,ನಾನು ಅವುಗಳಿಗಿಂತ ಬೇರೆಯಾದವನಾಗಿರಬೇಕು.ದೇಹಕ್ಕೆ ಎಂಥ ಅವಸ್ಥೆ ಬಂದರೂ 'ನಾನು'ಎಂಬ ಭಾವ ಮತ್ರ ಬದಲಾಗುವುದಿಲ್ಲ.ಆದ್ದರಿಂದ ನಾವು ಅವಿಕಾರಿ,ದೇಹವು ವಿಕಾರಿದೇಹ ಬೇರೆ ,ನಾವುಬೇರೆ.)
34)ವಿವೇಕಿಯಾದವನು ಯಸ್ಮಾತ್ ಪರಮ್.....'ಎಂಬ ಪ್ರಸಿದ್ಧ ಶ್ರುತಿಯ ಸಹಾಯದಿಂದ ಪುರುಷನ ಲಕ್ಷಣವನ್ನು ನಿಣ೯ಯಿಸಿರಿತ್ತಾನೆ.ಆದ್ದರಿಂದ ನಿಂದಾ ಯೋಗ್ಯವಾದ
ಈ ದೇಹವು ಹೇಗೆ ತಾನೇ ಪುರುಷನಾದೀತು?(ಪುಟ60)
35)ಪುರುಷ ಸೂಕ್ತವೆಂಬ ಹೆಸರಿನ ಶ್ರುತಿಯಲ್ಲಿ ಕೂಡ 'ಎಲ್ಲವೂ ಪುರುಷನೇ'ಎಂದು ಹೇಳಿರುವುದರಿಂದ ಈ ನಿಂದಾಯೋಗ್ಯವಾದ ದೇಹವು ಹೇಗೆ ತಾನೇ ಪುರುಷನಾದೀತು?(ಪುಟ 61)
36)ಬೃಹದಾರಣ್ಯಕದಲ್ಲಿ ಕೂಡ ಪುರುಷನು ಅಸಂಗನೆಂದು ಹೇಳಿದೆ.ಆದುರಿಂ ಕೊನೆಗಾಣದಷ್ಟು ಕೊಳೆಯಿಂದ ಕೂಡಿರುವ ನಿಂದಾಯೋಗ್ಯವಾದ ಈ ದೇಹವು ಹೇಗೆ ತಾನೇ ಪುರುಷನಾದೀತು?(ಪುಟ 61)
('ಏಕೆಂದರೆ ಈ ಪುರುಷನು ಅಸಂಗನು''ಅಸಂಗೋ ಹ್ಯಯಂ ಪುರುಷಃ'(4-3-15))
37)ಪುರುಷನು ಸ್ವಯಂಜ್ಯೋತಿಯೆಂದು ಅಲ್ಲಿಯೇ ಹೇಳಿರುತ್ತದೆ.ಜಡವೂ ಮತ್ತೊಂದರ ಸಹಾಯದಿಂದ ತಿಳಿದುಬರತಕ್ಕದ್ದೂ
ನಿಂದ್ಯವೂ ಆದ ಈ ದೇಹವು ಹೇಗೆ ತಾನೇ ಪುರುಷನಾದೀತು?(ಪುಟ61)
(ಈ ಅವಸ್ಥೆಯಲ್ಲಿ ಪುರುಷನು ಸ್ವಯಂಜ್ಯೋತಿಯಾಗಿರುತ್ತಾನೆ.'ಅತ್ರಾಯಂ ಪುರುಷಃಸ್ವಯಂಜ್ಯೋತಿಭ೯ವತಿ(ಬೃ.ಉ.4-3-೯).ಕನಸಿನಲ್ಲಿ ಕಾಣುವ ವಸ್ತುಗಳನ್ನು
ಪುರುಷನು ತನ್ನ ಜ್ಞಾನಜ್ಯೋತಿಯಿಂದಲೇ ಬೆಳಗುತ್ತಾನಾದ್ದರಿಂದ ಅವನನ್ನು ಸ್ವಯಂಜ್ಯೋತಿಎಂದು ಇಲ್ಲಿ ಕರೆದಿದೆ.)
38)'ಆತ್ಮನು ದೇಹಕ್ಕಿಂತ ಬೇರೆಯಾದವನು.ನಿತ್ಯನು,ಸತ್ತ ಮೇಲೆ ತನ್ನ ಕಮ೯ದ ಫಲವನ್ನು ಅನುಭವಿಸುವವನು ಎಂದು ಕಮ೯ಕಾಂಡದಲ್ಲಿ ಹೇಳಿರುತ್ತದೆ.(ಪುಟ62)
(ಕಮ೯ಕಾಂಡದಲ್ಲಿ (ಎಂದರೆ ಯಜ್ಞಯಾಗಾದಿಗಳನ್ನು ವಿವರಿಸುವ ವೇದ ಭಾಗ)ದೇಹವನ್ನು ಅಸತ್ ಎಂದು ಹೇಳದಿದ್ದರೂ ಆತ್ಮನು ದೇಹಕ್ಕಿಂತ ಬೇರೆಯಾದವನು ನಿತ್ಯನು ಎಂದು ಹೇಳಿರುತ್ತದೆ.)
3೯)ಲಿಂಗ ಶರೀರವೂ ಕೂಡ ಅನೇಕ ಅವಯವಗಳಿಂದ ಕೂಡಿರುತ್ತದೆ.ಅದು ದೃಶ್ಯ,ಚಂಚಲ ಮತ್ತು ವಿಕಾರಹೊಂದತಕ್ಕದ್ದು.ಅದು ವ್ಯಾಪಕವಲ್ಲ ಸದ್ರೂಪವಲ್ಲ.ಆದುದರಿಂದ ಅದು ಹೇಗೆ ತಾನೇ
ಈ ಪುರುಷನಾದೀತು?(ಪುಟ62)
(ಅದ್ವೈತ ವೇದಾಂತದ ಪ್ರಕಾರ ಆತ್ಮನು ಸ್ಥೂಲ,ಸೂಕ್ಷ್ಮ, ಮತ್ತು ಕಾರಣಶರೀರ ಎಂಬ ಹೆಸರಿನ ಮೂರು ಶರೀರಗಳಿಂದ ಮುಚ್ಚಲ್ಪಟ್ಟಿರುತ್ತಾನೆ.ಅನ್ನದಿಂದ ಪೋಷಿತವಾದ ಮಾಯಾಮಯದೇಹವೇ
ಸ್ಥೂಲ ಶರೀರ. ಐದು ಜ್ಞಾನೇಂದ್ರಿಯಗಳು,ಐದು ಕಮೆ೯ಂದ್ರಿಯಗಳು,ಪಂಚಪ್ರಾಣಗಳು,ಮನಸ್ಸು ಬುದ್ಧಿ-ಈ ಹದಿನೇಳರ ಗುಂಪನ್ನು
ಸೂಕ್ಷ್ಮ ಶರೀರ ಅಥವಾ ಲಿಂಗ ಶರೀರ ಎಂದು ಕರೆಯುತ್ತಾರೆ.ಸಂಸಾರ ಬಂಧನಕ್ಕೆ ಕಾರಣವಾದ ಅವಿದ್ಯೆಯೇ ಕಾರಣ ಶರೀರ)
(ಸೂಕ್ಷ್ಮಶರೀರವೂ ಆತ್ಮನಲ್ಲ).
40)ಹೀಗೆ ನಾನು ಈ ಎರಡು ದೇಹಗಳಿಗಿಂತಲೂ ಭಿನ್ನವಾದ ಆತ್ಮನು.ನಾನು ಹೃದಯದಲ್ಲಿರುವ ಪುರುಷನು.ಈಶ್ವರನು,ಎಲ್ಲರ ಆತ್ಮನು,ಎಲ್ಲ ರೂಪದಿಂದಿರುವವನು,ಎಲ್ಲವನ್ನೂ ಮೀರಿರುವವನು ಮತ್ತು ಪಾಪ ರಹಿತನು.(ಪುಟ63)
41)ಹೀಗೆ ಆತ್ಮನನ್ನೂ ದೇಹಗಳನ್ನೂ ಬೇರೆ ಮಾಡಿದ್ದರಿಂದ ತಕ೯ಶಾಸ್ತ್ರದಲ್ಲಿ ಹೇಳಿರುವಂತೆ
ಪ್ರಪಂಚವು ಸತ್ಯ ಎಂಬುದೇ ಒದಗಿತಲ್ಲ?ಇದರಿಂದ ಯಾವ ಪುರುಷಾಥ೯ವು ಸಿದ್ಧಿಸುತ್ತದೆ?(ಪುಟ63)
(ಇದು ಸಂಶಯ.ಆತ್ಮನು ಬೇರೆ ದೇಹಗಳು ಬೇರೆ ಎಂದು ಸಾಧಿಸಿದ್ದರಿಂದ 'ಆತ್ಮನು ದೇಹವೆ'ಎಂಬ ದೇಹಾತ್ಮವಾದಿಗಳನ್ನು ನಿರಾಕರಿಸಿದಂತಾಯಿತೇ ಹೊರತು ಪ್ರಕೃತಿಯಿಂದ ಉಂಟಾಗಿರುವ ದೇಹವೂ ಪ್ರಪಂಚವೂ
ಸತ್ಯ ಎಂಬ ಸಾಂಖ್ಯಾದಿಗಳ ವಾದವನ್ನು ನಿರಾಕರಿಸಿದಂತಾಗಿಲ್ಲ.ಪ್ರಪಂಚವು ಸತ್ಯ ಎಂದೊಪ್ಪಿಬಿಟ್ಟರೆ ಪರಮಪುರುಷಾಥ೯ವಾದ ಮೋಕ್ಷವು ಸಿದ್ಧಿಸಲಾರದು.ಏಕೆಂದರೆ ಆತ್ಮನು ಪ್ರಪಂಚೋಪಶಮನು(ಮಾಂಡೂಕ್ಯ.ಉ.12)ಎಂದರೆ
ಪ್ರಪಂಚವು ಲಯವಾದಾಗ ತೋರಿಕೊಳ್ಳುವವನು.ಈ ಸಂಶಯಕ್ಕೆ ಮುಂದಿನ ಶ್ಲೋಕಗಳಲ್ಲಿ ಪರಿಹಾರವೀಯುತ್ತಾರೆ.)
15) ವಿವಿಧ ದೇಹಗಳು ಅಸತ್ಯ:
42)ಹೀಗೆ ಆತ್ಮನಿಗೂ ದೇಹಗಳಿಗೂ ಇರುವ ಭೇದವನ್ನು ಹೇಳುವುದರ ಮೂಲಕ ದೇಹವೆ ಆತ್ಮ ಎಂಬ ವಾದವನ್ನು ನಿರಾಕರಿಸಲಾಯಿತು.ಈಗ ಆತ್ಮನಿಗಿಂತ ಬೇ ರೆ ದೇಹವೇ ಇಲ್ಲವೆಂದು ಸ್ಪಷ್ಟವಾಗಿ ಹೇಳಲಾಗುತ್ತದೆ.(ಪುಟ64)
(ಇದೆಲ್ಲವೂ ಆತ್ಮನೇ,ಇದಂ ಸವ೯ಂ ಯದಯಮಾತ್ಮಾ(ಬೃ.ಉ.2-4-6)ಎಂಬ ಶ್ರುತಿರ ಪ್ರಕಾರ ಎಲ್ಲವೂ ಆತ್ಮನೇ ಆಗಿರುವುದರಿಂದ ದೇಹಗಳಂತೆ ತೋರುತ್ತಿರುವುದು ಕೂಡ ನಿಜವಾಗಿ ಆತ್ಮವೇ.ಹ£ವಿನಂತೆ ತೋರುತ್ತಿರುವುದು ನಿಜವಾಗಿ ಹಗ್ಗವೇ ಆಗಿರುವಂತೆ.)
43)ಚೈತನ್ಯವು ಒಂದೇ ರೀತಿ ಇರುವುದರಿಂದ ಅದರಲ್ಲಿ ಭೇದವನ್ನು ಕಲ್ಪಿಸುವುದು ಎಂದಿಗೂ ಸರಿಯಲ್ಲ.ಹಗ್ಗದಲ್ಲಿ ಹಾವನ್ನು ಕಾಣುವಂತೆ ಆತ್ಮನಲ್ಲಿ ಜೀವತ್ವವನ್ನು ಕಾಣುತ್ತಿರುವುದು ಕೂಡ ಸುಳ್ಳೆಂದೆ ಅರಿಯಬೇಕು.(ಪುಟ64)
(ನಿಜವಾಗಿ ಆತ್ಮಚೈತನ್ಯವೇ ಈ ಜ್ಞಾನದಂತೆ ತೋರಿಕೊಳ್ಳುತ್ತದೆ.ಎಲ್ಲವೂ ಆತ್ಮನೇ ಆಗಿರುವುದರಿಂದಲೂ ,ಆತ್ಮನು ಚೈತನ್ಯ ಸ್ವರೂಪನಾಗಿರುವುದರಿಂದಲೂ
ಚೈತನ್ಯವು ಯಾವಗಲೂ ಒಂದೇ ರೀತಿ ಇರುವುದರಿಂದಲೂ
ಇದರಲ್ಲಿ ಭೇದವನ್ನು ಕಲ್ಪಿಸುವುದು (ಉದಾ:ನಾನು,ನೀನು ,ಗಿಡ,ಮನೆ ಇತ್ಯಾದಿ)ಯಾವಾಗಲೂ ಸರಿಯಲ್ಲ.ಹೀಗೆಯೇ ನಾನು ಸುಖದುಃಖಾದಿಗಳನ್ನು
ಅನುಭವಿಸುತ್ತಿರುವ
ಜೀವ ಎಂದು ಭಾವಿಸುವುದೂ ಕೂಡ ಒಂದು ಕಲ್ಪನೆಯೇ.ಆದುದರಿಂದ ಜೀವತ್ವವೂ ಸುಳ್ಳು.)
16) ಎಲ್ಲವೂ ಬ್ರಹ್ಮವೇ:
44)ಹಗ್ಗವನ್ನು ಅರಿತುಕೊಳ್ಳದ್ದರಿಂದ ಹೇಗೆ ಹಗ್ಗವೇ ಕ್ಷಣಮಾತ್ರದಲ್ಲಿಯೇ ಹಾವಾಗಿ
ಕಾಣುತ್ತದೆಯೋ ಹಾಗೆಯೇ ಕೇವಲ ಆತ್ಮಚೈತನ್ಯವೇ
ಪ್ರಪಂಚರೂಪದಿಂದ ಕಂಡುಬರುತ್ತಿದೆ.(ಪುಟ 65)
(ಪ್ರಪಂಚವು ಆತ್ಮನಲ್ಲಿ ಕಂಡುಬರುತ್ತಿರುವ ಒಂದು ತೋಕೆ೯ಯೇ ಹೊರತು ನಿಜವಾಗಿ ಆತ್ಮನು ಪ್ರಪಂಚ ರೂಪದಿಂದ
ಪರಿಣಾಮ ಹೊಂದಿಲ್ಲ ಎಂದಭಿಪ್ರಾಯ.)
45)ಈ ಪ್ರಪಂಚಕ್ಕೆ ಬ್ರಹ್ಮಕ್ಕಿಂತ ಬೇರೆಯಾದ
ಮತ್ತಾವ ಉಪಾದಾನ ಕಾರಣವೂ
ಇರುವುದಿಲ್ಲ.ಆದ್ದರಿಂದ ಈ ಪ್ರಪಂಚವೆಲ್ಲವೂ ಬ್ರಹ್ಮವೇ ಹೊರತು
ಮತ್ತಾವುದೂ ಅಲ್ಲ(ಪುಟ 65)
44)
(ಮಡಕೆಗೆ ಮಣ್ಣು ಉಪಾದಾನಕಾರಣ.ಕುಂಬಾರ,ದೊಣ್ಣೆ,ಚಕ್ರ-ಇವೆಲ್ಲವೂ ನಿಮಿತ್ತಕಾರಣ.ಅದ್ವೈತ ವೇದಾಂತದ ವೇದಾಂತದ ಪ್ರಕಾರ
ಈ ಪ್ರಪಂಚಕ್ಕೆ ಬ್ರಹ್ಮವೇ ಉಪಾದಾನ ಕಾರಣ ಮತ್ತು ನಿಮಿತ್ತ ಕರಣ ಎರಡೂ ಆಗಿರುತ್ತದೆ.ಹಗ್ಗದಲ್ಲಿ ಕಂಡುಬರುವ ಹಾವಿಗೆ ಹಗ್ಗವೇ ಎರಡೂ ಕಾರಣಗಳಾಗಿರುವಂತೆ.)
'ಆ ಈ ಆತ್ಮನಿಂದ ಆಕಾಶವುಂಟಾಯಿತು,'ತಸ್ಮಾದ್ವಾ ಏತಸ್ಮಾದಾತ್ಮನ ಆಕಾಶ ಸ್ಸಂಭೂತಃ(ತೈ.ಉ.2-1)
-ಇತ್ಯಾದಿ ಶ್ರುತಿಗಳಲ್ಲಿ ಆತ್ಮನಿಂದಲೇ ಪ್ರಪಂಚವೆಲ್ಲ ಉಂಟಾಯಿತೆಂದು ಸ್ಪಷ್ಟವಾಗಿ ಹೇಳಿರುತ್ತದೆ.
ಹೀಗೆ ಪ್ರಪಂಚಕ್ಕೆ ಆತ್ಮನೇ ಅಥವಾ ಬ್ರಹ್ಮವೇ ಉಪಾದಾನ ಕಾರಣವಾಗಿರುವುದರಿಂದಲೂ
ಕಾಯ೯ವು ಉಪಾದಾನಕ್ಕಿಂತ ಬೇರೆಯಲ್ಲವಾದುದರಿಂದಲೂ
(ಉದಾ:ಮಡಕೆ ಮಣ್ಣಿಗಿಣತ ಬೇರೆ ಅಲ್ಲ)ಈ ಪ್ರಪಂಚವೆಲ್ಲವೂ ಬ್ರಹ್ಮವೇ ಆಗಿರುತ್ತದೆ.)
46)ಜಗತ್ತು ಆತ್ಮನಿಂದ ವ್ಯ್ಯಾಪಿಸಲ್ಪಟ್ಟಿದೆ.ಆತ್ಮನು ಜಗತ್ತನ್ನು ವ್ಯಾಪಿಸಿರುವನು ಎಂಬ ಭಾವನೆಯು ಹುಸಿ ಏಕೆಂದರೆ ಎಲ್ಲವೂ ಆತ್ಮನೇ ಎಂದು ಶ್ರುತಿಯು ಶಾಸನ ಮಾಡಿರುತ್ತದೆ.ಪರತತ್ವವನ್ನು ಹೀಗೆ ತಿಳಿದ ಮೇಲೆ ಭೇದಕ್ಕೆ ಅವಕಾಶವೆಲ್ಲಿಯದು?(ಪುಟ 66)
( ಈ ಬ್ರಾಹ್ಮಣ,ಈ ಕ್ಷತ್ರಿಯ ದೇವತೆಗಳು, ಈ ವೇದಗಳು,ಈ ಪ್ರಾಣಿಗಳು- ಇದೆಲ್ಲವೂ ಆತ್ಮನೇ.
ಇದಂ ಬ್ರಹ್ಮ,ಇದಂ ಕ್ಷತ್ರಮ್,ಇಮೇ ಲೋಕಾಃ,ಇಮೇ ದೇವಾ,ಇಮೇ ವೇದಾ,ಇಮಾನಿ ಭೂತಾನಿ,ಇದಮ್ ಸವ೯ಂ ಯದಯಮಾತ್ಮಾ.(ಬೃ.ಉ.4-5-7)
47)ಶ್ರುತಿಯು ತನ್ನ ಬಾಯಿಂದಲೇ ನಾನಾತ್ವಹೇಳಿರುತ್ತದೆ.ಹೀಗೆ ಉಪಾದಾನ
ಮತ್ತು ನಿಮಿತ್ತ ಕಾರಣಗಳೆರಡೂ
ಒಂದೇ ಆಗಿದೆ.ತೋಕೆ೯ಯ ಈ ಜಗತ್ತು ಅದಕ್ಕಿಂತ ಹೇಗೆ ಬೇರೆಯಾದೀತು?(ಪುಟ66)
('ಇಲ್ಲಿ ನಾನಾತ್ವವು ಸ್ವಲ್ಪವೂ ಇರುವುದಿಲ್ಲ.ನೇಹ ನಾನಾಸ್ತಿ ಕಿಂಚನ ಎಂಬ ವಾಕ್ಯವು ಎರಡು ಉಪನಿಷತ್ತುಗಳಲ್ಲಿ ಕಂಡುಬರುತ್ತದೆ.(ಕಠ 4-11) ಮತ್ತು (ಬೃ.ಉ. 4-4-1೯))
(ಬ್ರಹ್ಮ ಸೂತ್ರಗಳ ಆರಂಭಾದಿಕರಣದಲ್ಲಿ (2-1-14-20)ಬ್ರಹ್ಮವು ಜಗತ್ತಿನ ಉಪಾದಾನ ಹಾಗೂ ನಿಮಿತ್ತಕಾರಣಗಳಾಗಿರುತ್ತವೆಂದು ಸಾಧಿಸಿರುತ್ತದೆ.)
48)ಮಾಯೆಯಿಂದ ವಂಚಿತನಾದ ಮನುಷ್ಯನು ಇಲ್ಲಿ ನಾನಾತ್ವವನ್ನು ನೋಡುತ್ತಾ ಮೃತ್ಯುವಿನಿಂದ ಮೃತ್ಯುವನ್ನು ಹೊಂದುತ್ತಾನೆ ಎಂಬ ದೋಷವನ್ನೂ ಕೂಡ ಶ್ರುತಿಯು ಅಲ್ಲೇ ಹೇಳಿರುತ್ತದೆ.(ಪುಟ66)
(ಪೂತಿ೯ಶ್ಲೋಕವು ಹೀಗಿರುತ್ತದೆ: ಬ್ರಹ್ಮವನ್ನು ಸುಸಂಸ್ಕøತ ಮನಸ್ಸಿನಿಂದಲೇ ಹೊಂದಬೇಕು.ಇಲ್ಲಿ ನಾನತ್ವವು ಸ್ವಲ್ಪವೂ ಇಲ್ಲ.ಯಾವನು ಇದರಲ್ಲಿ ನಾನಾತ್ವವನ್ನು ನೋಡುತ್ತಾನೆಯೋ
ಅವನು ಮೃತ್ಯುವಿನಿಂದ ಮೃತ್ಯುವನ್ನು ಹೊಂದುತ್ತಾನೆ.)
4೯)ಬ್ರಹ್ಮವಾದ ಪರಮಾತ್ಮನಿಂದ ಎಲ್ಲಾ ಪ್ರಾಣಿಗಳೂ ಹುಟ್ಟುತ್ತವೆ.ಆದುದರಿಂದ ಎಲ್ಲವೂ ಬ್ರಹ್ಮವೇ ಎಂದು ನಿಶ್ಚಯಿಸಬೇಕು.(ಪುಟ 67)
(ತೈತ್ತಿರೀಯ ಉಪನಿಷತ್ತು (3-1) ಹೀಗೆ ಹೇಳುತ್ತದೆ:'ಯಾವುದರಿಂದ ಈ ಪ್ರಾಣಿಗಳು ಹುಟ್ಟುತ್ತವೆಯೊ ,ಹಾಗೆಯೇ ಹುಟ್ಟಿದವುಗಳು ಯಾವುದರಿಂದ ಜೀವಿಸುತ್ತವೆಯೋ ಹಾಗೆಯೇ ಹುಟ್ಟಿರುವುವುಗಳು ಯಾವುದನ್ನು ಕುರಿತು ಹೋಗಿ ಪ್ರವೇಸಿಸುತ್ತವೆಯೋ ಅದನ್ನು ತಿಳಿದುಕೊ,ಅದು ಬ್ರಹ್ಮ.'ಯತೋ ವಾ ಇಮಾನಿ ಭೂತಾನಿ ಜಾಯಂತೇ ,ಯೇನ ಜಾತಾನಿ ಜೀವಂತಿ ಯತ್ಪ್ರಯಂತ್ಯಭಿ ಸಂವಿಶಂತಿ ತದ್ವ ಜಿಜ್ಞಾಸಸ್ವ,ತತ್ಬ್ರಹ್ಮೇತಿ|)
50)ಬ್ರಹ್ಮವೇ ಎಲ್ಲ ಹೆಸರುಗಳಿಗೂ
ವಿವಿಧ ರೂಪಗಳಿಗೂ
ಮತ್ತು ಕಮ೯ಗಳಿಗೂ
ಆಧಾರವಾಗಿರುತ್ತದೆ ಎಂದು ಶ್ರುತಿಯು ಹೇಳುತ್ತದೆ.(ಪುಟ67)
(ಇಲ್ಲಿ ಸೂಚಿಸಿರುವ ಬೃಹದಾರಣ್ಯಕವಾಕ್ಯವು ಹೀಗಿರುತ್ತದೆ(1-6-1):ಈ ಜಗತ್ತೆಲ್ಲ ನಾಮ ರೂಪ
ಮತ್ತು ಕಮ೯ಎಂಬ ಮೂರೇ ಆಗಿದೆ.ಆ ಈ ನಾಮಗಳಿಗೆ ವಾಕ್ಕು ಕಾರಣವು.ಏಕೆಂದರೆ ಎಲ್ಲಾ ನಾಮಗಳೂ
ಅದರಿಂದ ಉತ್ಪನ್ನವಾಗಿವೆ.ಇದು ಅವುಗಳ ಸಾಮವು.ಏಕೆಂದರೆ ಇದು ಎಲ್ಲಾ ನಾಮಗಳಿಗೂ
ಸಾಮಾನ್ಯವಾಗಿದೆ.ಇದು ಇವುಗಳ ಬ್ರಹ್ಮ(ಆತ್ಮ);ಏಕೆಂದರೆ ಇದು ಎಲ್ಲ ಹೆಸರುಗಳಿಗೂ ಆಧಾರವಾಗಿರುತ್ತದೆ.')
51)ಚಿನ್ನದಿಂದ ಮಾಡಿದ ವಸ್ತುವು ಯಾವಾಗಲೂ ಚಿನ್ನವೇ ಆಗಿರುತ್ತದೆ.ಹಾಗೆಯೇ ಬ್ರಹ್ಮದಿಂದ ಹುಟ್ಟಿದ್ದೂ ಕೂಡ ಬ್ರಹ್ಮವೆ ಆಗಿರಬೇಕು.(ಪುಟ 68)
52)ಆವ ಮೂಢಾತ್ಮನು ಜೀವಾತ್ಮ ಪರಮಾತ್ಮರಿಗೆ ಸ್ವಲ್ಪವಾದರೂ ಭೇದವನ್ನು ಮಾಡುವನೋ ವನಿಗೆ ಶ್ರುತಿಯಲ್ಲಿ ಭಯವನ್ನು ಹೇಳಿದೆ.(ಪುಟ68)
(ಇದು ತೈತ್ತಿರೀಯೋಪನಿಷತ್ತಿನ (2-7)ರ ಸೂಚನೆ:ಯಾವಾಗ ಇವನು ಈ ಬ್ರಹ್ಮದಲ್ಲಿ ಸ್ವಲ್ಪವಾದರೂ ಭೇದದಶ೯ನವನ್ನು ಮಾಡುವನೋ ವರಿಗೆ ಶ್ರುತಿಯಲ್ಲಿ ಭಯವನ್ನು ಹೇಳಿದೆ.)
53)ಅಜ್ಞಾನದಿಂದ ದ್ವೈತವು ನಾಶವಾದಾಗ (ಮತ್ತೊಬ್ಬನನ್ನೂ)ನೋಡುತ್ತಾನೆ.ಯಾವಾಗ ಎಲ್ಲವೂ ಆತ್ಮನೇ ಆಗಿ (ಕಂಡುಬರುವುದೋ)ಮತ್ತೊಂದು ವಸ್ತುವು ಅಣು ಮಾತ್ರವೂ ಇರುವುದಿಲ್ಲ.(ಪುಟ68)
(ಇಲ್ಲಿ ಬೃ.ಉ.4-5-15)ನ್ನು ಸೂಚಿಸಿರುತ್ತದೆ.:'ಏಕೆಂದರೆ ಎಲ್ಲಿ ದ್ವೈತವು ಇರುವಂತೆ ಕಂಡುಬರುವುದೋ ಅಲ್ಲಿ ಒಬ್ಬನು ಇನ್ನೊಂದನ್ನು ನೋಡುತ್ತಾನೆ.ಆದರೆ ಎಲ್ಲಿ ಎಲ್ಲವೂ ಆತ್ಮನೇ ಆಗಿದೆಯೋ ಅಲ್ಲಿ ಯಾವುದರಿಂದ ಯಾವುದನ್ನು ನೋಡಿಯಾನು?)'ಯತ್ರ ಹಿ ದ್ವೈತಮಿವ ಭವತಿ ತದಿತರ ಇತರಂ ಪಶ್ಯತಿ......ಯತ್ರತ್ವಸ್ಯ ಸವ೯ಮಾತ್ಮೈವಾ ಭೂತ್ ತತ್ಕೇನ ಕಂ ಪಶ್ಯೇತ್?)
.
54)ಯಾವ ಅವಸ್ಥೆಯಲ್ಲಿ ಎಲ್ಲ ಪ್ರಾಣಿಗಳೂ ತನ್ನ ಆತ್ಮನೆಂದು ಅರಿತುಕೊಳ್ಳುವನೋ (ಆ ಅವಸ್ಥೆ
ಯಲ್ಲಿ)ಅವನಿಗೆ ಮೋಹವಾಗಲೀ ಶೋಕವಾಗಲೀ ಇರುವುದಿಲ್ಲ.ಏಕೆಂದರೆ ಅಲ್ಲಿ ಎರಡನೆಯ ವಸ್ತುವೇ ಇರುವುದಿಲ್ಲ.(ಪುಟ6೯)
55)ಎಲ್ಲಾ ರೂಪದಿಂದಲೂ ಇರುವ ಈ ಆತ್ಮನೇ ಬ್ರಹ್ಮವು ಎಂದುಬೃಹದಾರಣ್ಯಕದಲ್ಲಿರುವ
ಶ್ರುತಿಯಿಂದ ನಿಧ೯ರಿಸಲ್ಪಟ್ಟಿದೆ..(ಪುಟ6೯)
(ಆ ಈ ಆತ್ಮನೇ ಬ್ರಹ್ಮ-ಇನೇ ವಿಜ್ಞಾನಮಯನು,ಮನೋಮಯನು,ಸವ೯ಮಯನು ಸ ವಾ ಅಯಮಾತ್ಮಾ ಬ್ರಹ್ಮ ವಿಜ್ಞಾನಮಯೋ ಮನೋಮಯಃ....ಸವ೯ಮಯಃ(ಬೃ.ಉ.4-4-5).
56)ಈ ಪ್ರಪಂಚವು ಅನುಭವಕ್ಕೆ ಬರುತ್ತಿದ್ದರೂ ,ವ್ಯವಹಾರಕ್ಕೆ ಆಸ್ಪದವಾಗಿದ್ದರೂ
ಅಸದರದೂಪವೆ ಸರಿ.ಏಕೆಂದರೆ ಸ್ವಪ್ಮದಂತೆ ಮುಂದಿನ ಕ್ಷಣವೇ ಇಲ್ಲವಾಗುವುದು.(ಪುಟ6೯)
57)ಕನಸು ಎಚ್ಚರದಲ್ಲಾಗಲೀ ಎಚ್ಚರವು ಕನಸಿನಲ್ಲಾಗಲೀ
ಇರುವುದಿಲ್ಲ.ಗಾಢನಿದ್ರೆಯಲ್ಲಿ ಇವೆರಡೂ ಇಲ್ಲ.ಇವೆರಡರಲ್ಲಿ ಗಾಢ ನಿದ್ರೆಯೂ ಇರುವುದಿಲ್ಲ.(ಪುಟ70)
(ಯಾವುದು ಸತ್ಯವೋ ಅದು ಎಲ್ಲಾ ಕಾಲದಲ್ಲಿಯೂ ಎಲ್ಲಾ ಅವಸ್ಥೆಗಳಲ್ಲಿಯೂ ಇರಬೇಕು.ಇಲ್ಲದಿದ್ದರೆ ಅದು ಸತ್ಯವಲ್ಲ ಎಂಬುದನ್ನು ಕನಸು-ಎಚ್ಚರ-ಗಾಢನಿದ್ರೆಗಳ ಷ್ಟಾಂತದಿಂದ ವಿವರಿಸುತ್ತಿದ್ದಾರೆ.ಜ್ಞಾನಕಾಲದಲ್ಲಿ ಜಗತ್ತು ಇಲ್ಲವಾಗುವುದರಿಂದ ಅದು ಸತ್ಯವಲ್ಲ ಎಂದು ಅಭಿಪ್ರಾಯ.)
58)ಹೀಗೆ ಸತ್ವಾದಿ ಮೂರುಗುಣಗಳಿಂದಾದ ಈ ಮೂರು ಅವಸ್ಥೆಗಳೂ ಮಿಥ್ಯೆಯೇ.ಆದರೆ ಇವನ್ನು ನೋಡುತ್ತಿರುವವನು ಈ ಗುಣಗಳನ್ನು ಮೀರಿದವನು ನಿತ್ಯನೂ
ಏಕನೂ ಚಿದ್ರೂಪನೂ ಆಗಿರುತ್ತಾನೆ.
(ಪುಟ70)
5೯)ಚೆನ್ನಾಗಿ ನೋಡಿದಾಗ ಮಣ್ಣಿನಲ್ಲಿ ಮಡಕೆಯೆಂಬ ಭ್ರಾಂತಿಯನ್ನಾಗಲೀ ,ಕಪ್ಪೆಯ ಚಿಪ್ಪಿನಲ್ಲಿ ಬೆಳ್ಳಿಯಂತೆ ಭ್ರಾಂತಿಯನ್ನಾಗಲೀ ಹೇಗೆ ನೋಡುವುದಿಲ್ಲವೋ
ಹಾಗೆಯೇ
ಜ್ಞಾನವುಂಟಾದಾಗ
ಬ್ರಹ್ಮದಲ್ಲಿ 'ಇವನು ಜೀವ'ಎಂಬ ಭ್ರಾಂತಿಯನ್ನೂ ಹೊಂದುವುದಿಲ್ಲ.(ಪುಟ70)
60)ಮಣ್ಣಿನಲ್ಲಿ ಮಡಕೆಯೆಂಬ ಹೆಸರೂ ಚಿನ್ನದಲ್ಲಿ ಕುಂಡಲವೆಂಬ ಹೆಸರೂ ಕಪ್ಪ್ಯ ಚಿಪ್ಪಿನಲ್ಲಿ
ಬೆಳ್ಳಿಯೆಂಬ ಹೆಸರೂ ಹೇಗೆ(ಪ್ರಯೋಗಿಸಲ್ಪಟ್ಟಿದೆಯೋ ) ಹಾಗೆ ಪರಬ್ರಹ್ಮದಲ್ಲಿ
ಜೀವ ಎಂಬ ಶಬ್ದವು ಪ್ರಯೋಗಿಸಲ್ಪಟ್ಟಿದೆ.(ಪುಟ71)
(ಒಂದು ಮಣ್ಣುಮುದ್ದೆಯನ್ನು ಅರಿಯುವುದರಿಂದ
ಮಣ್ಣಿನಿಂದಾದ ಎಲ್ಲವನ್ನೂ ಅರಿಯಬಹುದು.ವಸ್ತುವಿನ ಪರಿಣಾಮವು ವಾಕ್ಕನ್ನು ಅವಲಂಬಿಸಿರುವ ಕೇವಲ ಹೆಸರೇ.ಮಣ್ಣೆಂಬುದೇ ಸತ್ಯ).(ಛಾಂ.ಉ.6-1-4).
61)ಆಕಾಶದಲ್ಲಿ ನೀಲಿ ಬಣ್ಣವೂ ಮರುಭೂಮಿಯಲ್ಲಿ ನೀರೂ
ಮರದ ಕೊಂಬೆಯಲ್ಲಿ ಮನುಷ್ಯನೂ
ಕಲ್ಪಿಸಲ್ಪಟ್ಟಿರುವಂತೆ
ಚಿದ್ರೂಪನಾದ ಆತ್ಮನರ ಪ್ರಪಂಚವೂ ಸೃಷ್ಟಿಸಲ್ಪಟ್ಟಿದೆ.(ಪುಟ71)
62)ಏನೂ ಇಲ್ಲದ ಕಡೆ ಪಿಶಾಚಿಯನ್ನೂ (ಅಂತರಿಕ್ಷದ ಮೋಡಗಳಲ್ಲಿ)ಗಂಧವ೯ನಗರವನ್ನೂ ಆಕಾಶದಲ್ಲಿ ಎರಡು ಚಂದ್ರರನ್ನೂ
ಕಲ್ಪಿಸುವಂತೆ ಸತ್ಯದಲ್ಲಿ(ಎಂದರೆ ಪರಬ್ರಹ್ಮದಲ್ಲಿ)ಜಗತ್ತಿನ ಇರುವಿಕೆಯನ್ನೂ
ಕಲ್ಪಿಸಲಾಗಿದೆ.(ಪುಟ 71)
63)ಸಣ್ಣ ಮತ್ತು ದೊಡ್ಡ ಅಲೆಗಳ ರೂಪದಿಂದ ನೀರೂ ,ಪಾತ್ರೆಯ ರೂಪದಿಂದ ತಾಮ್ರವೂ ಹೇಗೆ ತೋರುತ್ತದೆಯೋ
ಹಾಗೆಯೆ ಆತ್ಮನೂ
ಬ್ರಹ್ಮಾಂಡಗಳ ಪ್ರವಾಹವಾಗಿ ತೋರುತ್ತಿರುವನು.(ಪುಟ72)
64)ಮಡಕೆಯೆಂಬ ಹೆಸರಿನಿಂದ ಮಣ್ಣೂ ಬಟ್ಟೆಯೆಂಬ ಹೆಸರಿನಿಂದ ನೂಲುಗಳೂ ತೋರುತ್ತಿರುವಂತೆ ಪ್ರಪಂಚವೆಂಬ ಹೆಸರಿನಿಂದ ಚಿದ್ವಸ್ತುವು ತೋರುತ್ತಿರುವುದು.ಆಯಾ ನಾಮ ರೂಪಗಳನ್ನು ಬಿಟ್ಟು
ಆ ಚಿದ್ವಸ್ತುವನ್ನೇ ಅರಿಯಬೇಕು.(ಪುಟ 72)
65)ಜನರು ಬ್ರಹ್ಮದಿಂದಲೆ ಎಲ್ಲ ವ್ಯವಹಾರವನ್ನೂ ಮಾಡುತ್ತಿರುವರು.ಆದರೂ ಅಜ್ಞಾನದಿಂದ ಅದನ್ನರಿಯರು.ಮಡಕೆಯು
ಎಷ್ಟೇ ಆದರೂ ಮಣ್ಣೇ ಅಲ್ಲವೇ.(ಪುಟ 65)
66)ಮಡಕೆಗೂ ಮಣ್ಣಿಗೂ ಸದಾ ಹೇಗೆ ಕಾಯ೯ ಕಾರಣ ಭಾವವು ಸದಾ ಇದ್ದುಕೊಂಡಿರುವುದೋ
ಹಾಗೆಯೇ ಪ್ರಪಂಚಕ್ಕೂ ಬ್ರಹ್ಮಕ್ಕೂ ಕಾಯ೯ ಕಾರಣ ಭಾವವಿರುವುದು ಶ್ರುತಿಯಿಂದಲೂ ಯುಕ್ತಿಯಿಂದಲೂ
ತಿಳಿದುಬರುವುದು.(ಪುಟ73)
67) ಮಡಕೆಯನ್ನು ಅರಿತಾಗ
ಮಣ್ಣೂ ಕೂಡ ಬಲಾತ್ಕಾರವಾಗಿ ನಮ್ಮ ಅರಿವಿಗೆ ಗೋಚರವಾಗುತ್ತದೆ.ಹಾಗೆಯೆ ಪ್ರಪಂಚವನ್ನು ನೋಡುತ್ತಿರುವಾಗಲೂ
ಪ್ರಕಾಶರೂಪವಾದ ಬ್ರಹ್ಮವೇ
ತೋರಿಬರುತ್ತಿರುವುದು.(ಪುಟ73)
68)ಹಗ್ಗವನ್ನು ಅರಿತವನಿಗೂ ಮತ್ತು ಅರಿಯದವನಿಗೂ ಅದು ಯಾವಾಗಲೂ
ಎರಡು ರೀತಿ ತೋರುತ್ತದೆ.ಹಾಗೆಯೇ ಆತ್ಮನು ಯಾವಾಗಲೂ ವಿಶುದ್ಧನಾಗಿದ್ದರೂ
ಅಜ್ಞಾನಿಗಳಿಗೆ
ಸದಾ ಅಶುದ್ಧನಂತೆಯೇ ಕಾಣುತ್ತಾನೆ.(ಪುಟ73)
6೯)ಮಡಕೆಯು ಮಣ್ಣಿನ ರೂಪವಾಗಿಯೇ ಇರುವಂತೆ ದೇಹವೂ ಕೂಡ ಚಿದ್ರೂಪವಾಗಿಯೇ ಇರುತ್ತದೆ.ಅಜ್ಞಾನಿಗಳು ಸುಮ್ಮನೆ ಈ ಆತ್ಮನಾತ್ಮ ವಿಭಾಗವನ್ನು ಮಾಡಿರುತ್ತಾರಷ್ಟೆ.(ಪುಟ 73)
17) ಆತ್ಮನನ್ನು ದೇಹವೆಂದು ತಿಳಿದಿರುತ್ತಾರೆಂಬುದಕ್ಕೆ ದೃಷ್ಟಾಂತಗಳು:
70)ಮೂಢನು ಹಗ್ಗವನ್ನು ಹಾವೆಂದೂ ,ಕಪ್ಪೆಯಚಿಪ್ಪನ್ನು ಬೆಳ್ಳಿಯೆಂದೂ
ಹೇಗೆ ನಿಶ್ಚಯಿಸುತ್ತಾನೋ
ಹಾಗೆಯೇ ಆತ್ಮನನ್ನು ದೇಹವೆಂದು ನಿಶ್ಚಯಿಸಿಕೊಂಡಿರುತ್ತಾನೆ. (ಪುಟ 74)
71)ಮೂಢನು
ಭೂಮಿಯನ್ನು ಮಡಕೆಯೆಂದೂ ದಾರಗಳನ್ನು ಬಟ್ಟೆಯೆಂದೂ
ಹೇಗೆ ನಿಶ್ಚಯಿಸುತ್ತಾನೆಯೋ ಹಾಗೆಯೇ ಆತ್ಮನನ್ನು ದೇಹವೆಂದು ನಿಶ್ಚಯಿಸಿಕೊಂಡಿರುತ್ತಾನೆ.(ಪುಟ74)
72)ಮೂಢನು ಚಿನ್ನವನ್ನು ಕುಂಡಲವೆಂದೂ ನೀರನ್ನು ಅಲೆಯೆಂದೂ ಹೇಗೆ ನಿಶ್ಚಯಿಸುತ್ತಾನೆಯೋ ಹಾಗೆಯೇ ಆತ್ಮನನ್ನು ದೇಹವೆಂದು ಭಾವಿಸಿರುತ್ತಾನೆ.(ಪುಟ75)
73)ಮೂಢನು ಮೋಟುಮರವನ್ನು ಕಳ್ಳನೆಂದೂ ಬಿಸಿಲ್ಗುದುರೆಯನ್ನು ನೀೀರೆಂದೂ ಹೇಗೆ ನಿಶ್ಚಯಿಸುತ್ತಾನೆಯೋ ಹಾಗೆಯೇ ಆತ್ಮನನ್ನು ದೇಹವೆಂದು ನಿಶ್ಚಯಿಸಿರುತ್ತಾನೆ.(ಪುಟ75)
74)ಮೂಢನು ಮರಮುಟ್ಟುಗಳನ್ನೇ ಮನೆಯೆಂದೂ
ಕಬ್ಬಿಣವನ್ನೇ ಕತ್ತಿಯೆಂದೂ
ಹೇಗೆ ನಿಶ್ಚಯಿಸುತ್ತಾನೆಯೋ ಹಾಗೆಯೇ ಆತ್ಮನನ್ನು ದೇಹವೆಂದು ನಿಶ್ಚಯಿಸಿಕೊಂಡಿರುತ್ತಾನೆ.(ಪುಟ75)
75)ಹೇಗೆ ನೀರಿನ ಸಂಭಂಧದಿಂದ ಮರವು ತಲೆಕೆಳಗಾಗಿರುವಂತೆ ಯಾವನಾದರೂ ಕಾಣುತ್ತಾನೆಯೋ
ಹಾಗೆಯೆ ಅಜ್ಞಾನದ ಸಂಬಂಧದಿಂದ ಆತ್ಮನಲ್ಲಿ ದೇಹತ್ವವನ್ನು ಕಾಣುತ್ತಾನೆ.(ಪುಟ 75)
76)ದೋಣಿಯಲ್ಲಿ ಹೋಗುತ್ತಿರುವವನಿಗೆ ಎಲ್ಲವೂ ಚಲಿಸುತ್ತಿರುವಂತೆ ಕಾಣುತ್ತದೆ.ಹಾಗೆಯೇ ಅಜ್ಞಾನದ ಸಂಬಂಧದಿಂದ ಆತ್ಮನಲ್ಲಿ ದೇಹತ್ವವನ್ನು ಕಾಣುತ್ತಾನೆ.(ಪುಟ 76)
77)ದೋಷದಿಂದ ಕೂಡಿದವನಿಗೆ ಶುಭ್ರವಾದ ವಸ್ತುವು ಹಳದಿಯಾಗಿ ಕಾಣಿಸುವಂತೆ ಅಜ್ಞಾನದ ಸಂಬಂಧದಿಂದ ಆತ್ಮನಲ್ಲಿ ದೇಹತ್ವವು ಕಾಣುತ್ತದೆ.(ಪುಟ76)
78)ಸುತ್ತುತ್ತಿರುವ ಕಣ್ಣುಗಳಿಂದ ಎಲ್ಲವೂ ಸುತ್ತುತ್ತಿರುವಂತೆ ತೋರುತ್ತದೆ.ಹಾಗೆಯೇ ಅಜ್ಞಾನದ ಸಂಬಂಧದಿಂದ ಆತ್ಮನಲ್ಲಿ ದೇಹತ್ವವನ್ನು ಕಾಣುತ್ತಾನೆ.(ಪುಟ76)
7೯)ತಿರುಗಿಸುವುದರಿಂದಲೇ ಕೊಳ್ಳಿಯು
ಸೂಯ೯ನಂತೆ ಕಾಣುತ್ತದೆ.ಹಾಗೆಯೇ ಅಜ್ಞಾನದ ಸಂಬಂಧದಿಂದ ಆತ್ಮನಲ್ಲಿ ದೇಹತ್ವವನ್ನು ಕಾಣುತ್ತಾನೆ.(ಪುಟ76)
80)ದೊಡ್ಡದಾದ ವಸ್ತುಗಳೆಲ್ಲವೂ ಕೂಡಾ ತುಂಬ ದೂರದಿಂದ
ನೋಡಿದಾಗ ಅತಿ ಸಣ್ಣದಾಗಿ ಕಾಣುತ್ತವೆ.ಹಾಗೆಯೇ ಅಜ್ಞಾನದ ಸಂಬಂಧದಿಂದ ಆತ್ಮನಲ್ಲಿ ದೇಹತ್ವವನ್ನು ಕಾಣುತ್ತಾನೆ.(ಪುಟ76)
81)ಸೂಕ್ಷ್ಮವಾಗಿರುವ ಎಲ್ಲಾ ವಸ್ತುಗಳೂ ಭೂತಕನ್ನಡಿಯಿಂದ ನೋಡಿದಾಗ ಸ್ಥೂಲವಾಗಿ ಕಾಣುತ್ತವೆ.ಹಾಗೆಯೇ ಅಜ್ಞಾನದ ಸಂಬಂಧದಿಂದ ಆತ್ಮನಲ್ಲಿ ದೇಹತ್ವವು ಕಾಣುತ್ತದೆ.(ಪುಟ 77)
82)ಗಾಜಿನ ಸ್ಥಳದಲ್ಲಿ ನೀರನ್ನೂ ನೀರಿನ ಸ್ಥಳದಲ್ಲಿ ಗಾಜನ್ನೂ ನೋಡುವಂತೆ
ಅಜ್ಞಾನದ ಸಂಬಂಧದಿಂದ
ಆತ್ಮನಲ್ಲಿ ದೇಹತ್ವವನ್ನು ನೋಡುತ್ತಾನೆ.(ಪುಟ 77)
83) ಬೆಂಕಿಯಲ್ಲಿ ಮಣಿಯನ್ನೂ ಮಣಿಯಲ್ಲಿ ಬೆಂಕಿಯನ್ನೂ ನೋಡುವಂತೆ ಪುರುಷನು ಅಜ್ಞಾನದ ಸಂಬಂಧದಿಂದ ಆತ್ಮನಲ್ಲಿ ದೇಹತ್ವವನ್ನು ನೋಡುತ್ತಾನೆ.(ಪುಟ 77)
84)ಮೋಡಗಳು ವೇಗವಾಗಿ ಹೋಗುವಾಗ ಚಂದ್ರನೂ ವೇಗವಾಗಿ ಚಲಿಸುವುದಿಲ್ಲವೇ?ಹಾಗೆಯೇ
ಅಜ್ಞಾನದ ಸಂಬಂಧದಿಂದ
ಆತ್ಮನಲ್ಲಿ ದೇಹತ್ವವನ್ನು ನೋಡುತ್ತಾನೆ.(ಪುಟ 77)
85)ಯಾವನಿಗಾದರೂ ಮೋಹದಿಂದ ದಿಗ್ಭ್ರಮೆ ಉಂಟಾಗಬಹುದು.ಹಾಗೆಯೇ ಅಜ್ಞಾನದ ಸಂಬಂಧದಿಂದ
ಆತ್ಮನಲ್ಲಿ ದೇಹತ್ವವನ್ನು ನೋಡುತ್ತಾನೆ.(ಪುಟ 77)
86)ಹೆಗೆ ಯಾವನಿಗಾದರೂ ಅಲುಗಾಡುತ್ತಿರುವ ನೀರಿಕಲ್ಲಿ ಚಂದ್ರನು ಅಲುಗಾಡುವಂತೆ ತೋರುವನೋ ಹಾಗೆಯೇ ಅಜ್ಞಾನದ ಸಂಬಂಧದಿಂದ
ಆತ್ಮನಲ್ಲಿ ದೇಹತ್ವವನ್ನು ನೋಡುತ್ತಾನೆ.(ಪುಟ 77)
87)ಹೀಗೆ ಈ ಆತ್ಮನನ್ನು ಅರಿಯದಿದ್ದರಿಂದ ದೇಹಾಧ್ಯಾಸವು ಹುಟ್ಟಿರುತ್ತದೆ.ಅದು ಆತ್ಮನನ್ನು ಅರಿತದ್ದರಿಂದ
ಪರಮಾತ್ಮನಲ್ಲಿ ಲಯ ಹೊಂದುತ್ತದೆ.(ಪುಟ 78)
88)ಸ್ಥಾವರ-ಜಂಗಮ-ರೂಪವಾದ ಜಗತ್ತೆಲ್ಲವೂ ಆತ್ಮನೆ ಎಂದು ಅರಿತದ್ದಾಯಿತು.ಮತ್ತಾವ ವಸ್ತುವೂ ಇಲ್ಲದ್ದರಿಂದ
ದೇಹಗಳಿಗೆ ಆತ್ಮತ್ವವು ಎಲ್ಲಿಂದ ಬಂದೀತು?(ಪುಟ 78)
(ಸ್ಥಾವರವೆಂದರೆ ಚಲನೆಯಿಲ್ಲದುದು.ಉದಾ;ಬೆಟ್ಟ;ಜಂಗಮವೆಂದರೆ ಚಲಿಸುತ್ತಿರುವುದು:ಮನುಷ್ಯರು ಪಕ್ಷಿಗಳು.)(ಪುಟ 78)
1೯) ಪ್ರಾರಬ್ಧ ಕಮ೯:
8೯)ಎಲೈ ಮಹಾ ಬುದ್ಧಿಶಾಲಿಯೆ,ಆತ್ಮನನ್ನು ಸದಾ ಅರಿಯುತ್ತ ಪ್ರಾರಬ್ಧಕಮ೯ವೆಲ್ಲವನ್ನೂ ಅನುಭವಿಸುತ್ತ ಕಾಲವನ್ನು ಕಳೆ.ತಳಮಳ ಹೊಂದಬೇಡ.(ಪುಟ 78)
(ಕಮ೯ಕ್ಕೆ ತಕ್ಕ ಫಲ ಅನುಭವಿಸಬೇಕು ಎಂಬುದು ಸವ೯ನಿಯಮ.ಹಿಂದಿನ ಜನ್ಮದಲ್ಲಿ ಮಾಡಿ ಕೂಡಿಟ್ಟುಕೊಂಡಿರುವ ಸಂಚಿತವೆಂತಲೂ,ಫಲವನ್ನು ಕೊಡಲು ಪ್ರಾರಂಭಿಸಿ
ಈ ಜನ್ಮವನ್ನುಂಟುಮಾಡಿರುವ ಕಮ೯ಕ್ಕೆ ಪ್ರಾರಬ್ಧವೆಂತಲೂ,ಈ ಜನ್ಮದಲ್ಲಿ ಎಸಗುತ್ತ ಮುಂದೆ ಫಲಕೊಡಲಿರುವ
ಕಮ೯ಕ್ಕೆ ಆಗಾಮಿಯೆಂತಲೂ
ಹೆಸರು.)
೯0)ಆತ್ಮಜ್ಞಾನವುಂಟದರೂ
ಪ್ರಾರಬ್ಧ ಕಮ೯ವು ಬಿಡುವುದಿಲ್ಲ ಎಂದು ಶಾಸ್ತ್ರದಲ್ಲಿ ಹೇಳಿರುವುದನ್ನು
ಈಗ ನಿರಾಕರಿಸಲಾಗುತ್ತದೆ.(ಪುಟ ೯1)
ವಿವರಣೆ:ಜ್ಞಾನಿಗೂ
ಪ್ರಾರಬ್ಧ ಕಮ೯ವಿರುತ್ತದೆ ಎಂಬುದಕ್ಕೆ ಆಧಾರವಾದ ಶ್ರುತಿವಾಕ್ಯವು
ಹೀಗಿರುತ್ತದೆ:ಅವನಿಗೆ ದೇಹಾಂತವಾಗುವವರೆಗೇ ವಿಳಂಬ;ಆಗಲೇ ಸದ್ವಸ್ತುವನ್ನು ಹೊಂದುತ್ತಾನೆ.ತಸ್ಯ ತಾವದೇವ ಚಿರಂ ಯಾವನ್ನ
ವಿಮೋಕ್ಷ್ಯೇ ಅಥ ಸಂಪತ್ಸ್ಯೇ(ಛಾಂ.ಉ.6-14-2).ಇದರಲ್ಲಿನ ಯಾವತ್ ಶಬ್ದಕ್ಕೆ ಶ್ರೀ ಶಂಕರಾಚಾಯ೯ರು ಹೀಗೆ ವ್ಯಾಖ್ಯಾನ ಮಡಿರುತ್ತಾರೆ;'ದೇಹಪಾತವಾಗುವವರೆಗೆ
ಎಂದಥ೯.ಏಕೆಂದರೆ ಯಾವ ಕಮ೯ದಿಂದ
ಶರೀರವು ಪ್ರಾರಂಭಿಸಲ್ಪಟ್ಟಿತೋ ಅದು ಅನುಭವಿಸುವುದರಿಂದ ಮಾತ್ರ ನಾಶವಾಗುತ್ತದೆ.(ಛಾದೋಗ್ಯ ಭಾಷ್ಯ).ಹಾಗೆಯೇ ಮುಂದುವರಿದು
ಈ ಶ್ಲೋಕದ ವ್ಯಾಖ್ಯಾನದ ಕೊನೆಯಲ್ಲಿ ಹೀಗೆಂದಿರುತ್ತಾರೆ. 'ಈಗಾಗಲೇ ಕಮ೯ವನ್ನು ಕೊಡಲು ಪ್ರಾರಂಭಿಸಿರುವ
ಬ್ರಹ್ಮ ಜ್ಞಾನಿಗೆ ಯಾವ
ಪ್ರಯೋಜನವೂ ಇಲ್ಲದಿದ್ದರೂ
ಅವುಗಳ ಫಲವನ್ನು ಅವಶ್ಯವಗಿ
ಅನುಭವಿಸಿಯೇ ತೀರಬೇಕು. ಉದಹರನೆಗೆ ಈಗಾಗಲೇ ಬಿಟ್ಟಿರುವ ಬಾಣವು ಗುರಿಯನ್ನು ಮುಟ್ಟಲೆಬೇಕಾದಂತೆ.ಅದುದರಿಂದ "ಅವನಿಗೆ ಅಷ್ಟು ಮಾತ್ರವೇ ವಿಳಂಬ"ಎಂದು ಹೇಳಿರುವುದು ಯೋಗ್ಯವಾಗಿಯೇ ಇದೆ.(ಛಾಂ.ಭಾ.6-14-2).
ಬ್ರಹ್ಮಸೂತ್ರಗಳ ಅನಾರಬ್ಧಾಧಿಕರಣ(4-1-15)ದಲ್ಲೂ ಇದೇ ಅಭಿಪ್ರಾಯವನ್ನು ಮಂಡಿಸಲಾಗಿದೆ;'ಫಲವನ್ನು ಕೊಡಲು ಪ್ರಾರಂಭಿಸಿಲ್ಲದ
ಪೂವ೯ ಕಮ೯ಗಳು ಮಾತ್ರ ನಾಶ ಹೊಂದುತ್ತವೆ.ಏಕೆಂದರೆ ಮುಕ್ತಿಗೆ
ಶರೀರಪಾತವನ್ನು ಎಲ್ಲೆಯಾಗಿಹೇಳಿದೆ.ಶಂಕರಾಚಾಯ೯ರು ಹೀಗೆ ಹೇಳಿರುತ್ತಾರೆ;'ಹಿಂದಿನಜನ್ಮಗಳಲ್ಲಿ ಕೂಡಿಹಾಕಿಕೊಂಡಿರುವ
ಮತ್ತು ಫಲವನ್ನು ಕೊಡಲು ಇನ್ನೂ ಪ್ರಾರಂಭಿಸಿಲ್ಲದ ,ಹಾಗೂ ಜ್ಞಾನವನ್ನು ಹೊಂದುವುದಕ್ಕೆ ಮುಂಚೆ
ಈ ಜನ್ಮದಲ್ಲಿಯೂ
ಮಾಡಿರುವ ಪಾಪ ಪುಣ್ಯಗಳು ಮಾತ್ರ ಜ್ಞಾನಪ್ರಾಪ್ತಿಯಿಂದ
ನಾಶಹೊಂದುತ್ತವೆಯೇ ಹೊರತು
ಬ್ರಹ್ಮಜ್ಞಾನಕ್ಕೆ ಆಶ್ರಯವಾದ
ಈ ಜನ್ಮವನ್ನು ನಿಮಿ೯ಸಿರುವ
ಪ್ರಾರಬ್ಧ ಕಮ೯ಗಳಾಗಲೀ ಅಧ೯ ಅನುಭವಿಸಿದ ಫಲವುಳ್ಳ ಕಮ೯ಗಳಾಲೀ ನಾಶಹೊಂದುವುದಿಲ್ಲ.(ಸೂತ್ರ ಭಾಷ್ಯ)(ಪುಟ 80)
ಭಗವದ್ಗೀತೆಯ ವ್ಯಾಖ್ಯಾನದಲ್ಲಿಯೂ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.'ಯಾವ ಕಮ೯ದಿಂದ ಈ ಶರೀರವು
ಪ್ರಾರಂಭವಾಗಿದೆಯೋ ಅದು ಈಗಾಗಲೇ ಫಲವನ್ನು ಕೊಡಲು ಆರಂಭಿಸಿರುವುದರಿಂದ ಅದು ಅನುಭವಿಸುವುದರಿಂದಲೇ
ನಾಶ ಹೊಂದುತ್ತದೆ ಎಂಬುದು ಅಥಾತ್ ಸಿದ್ಧವಾಗುತ್ತದೆ.(4-37)'
ಆದರೆ ಆಚಾಯ೯ಪಾದರು ಇಲ್ಲಿ ಮತ್ತು ವಿವೇಕಚೂಡಾಮಣಿಯಲ್ಲಿ (453 ರಿಂದ462ರವರೆಗೆ)ಅದ್ವೈತ ಪರಾಕಾಷ್ಠೆಯ ದೃಷ್ಟಿಯನ್ನು ಅವಲಂಬಿಸಿ ಜ್ಞಾನಿಗೆ ಪ್ರಾರಬ್ಧವೂ ಇಲ್ಲವೆಂದು ನಿಭ೯ಯವಾಗಿ ಸಾರಿ ಹೇಳಿರುತ್ತಾರೆ.ಏಕೆಂದರೆ
ಎರಡು ಶ್ಲೋಕಗಳಲ್ಲಿ ತಮ್ಮ ನಿಲುವನ್ನು ಸಮಥಿ೯ಸುತ್ತಾರೆ.
೯1)ಎಚ್ಚರಗೊಂಡಮೇಲೆ ಕನಸು ಇರುವುದಿಲ್ಲ,ಹಾಗೆಯೇ ತತ್ವಜ್ಞಾನವಾದ ಮೇಲೆ ಪ್ರಾರಬ್ಧವೂ ಇರುವುದಿಲ್ಲ.ಏಕೆಂದರೆ ದೇಹವೆ ಮೊದಲಾದವು ಅಸತ್ಯ.(ಪುಟ80)
೯2)ಹಿಂದಿನ ಜನ್ಮದ ಕಮ೯ವು ಪ್ರಾರಬ್ಧ ಎಂದು ಹೇಳಲ್ಪಟ್ಟಿದೆ.ಆದರೆ ಜ್ಞಾನಿಯಾದ ಪುರುಷನಿಗೆ ಬೇರೆ ಜನ್ಮಗಳೇ ಇಲ್ಲದ್ದರಿಂದ
ಪ್ರಾರಬ್ಧವು ಯಾವಾಗಲೂ ಇರುವುದೇ ಇಲ್ಲ.(ಪುಟ 80)
೯3)ಕನಸಿನ ದೇಹವು ಹೇಗೆ ಆರೋಪಿತವಾಗಿದೆಯೋ
ಹಾಗೆಯೇ ಎಚ್ಚರದÀ ಈ ದೇಹವೂ
ಆತ್ಮನಲ್ಲಿ ಆರೋಪಿತವಾಗಿರುತ್ತದೆ.ಆರೋಪಿತವಾದದ್ದಕ್ಕೆ ಜನ್ಮವೆಲ್ಲಿಯದು?ಜನ್ಮವೇ ಇಲ್ಲದಿದ್ದಮೇಲೆ ಪ್ರಾರಬ್ಧ
ವೆಲ್ಲಿಯದು?(ಪುಟ81)
೯4)ಪಾತ್ರೆಗೆ ಮಣ್ಣು ಉಪಾದಾನ ಕಾರಣವಿರುವಂತೆ ಪ್ರಪಂಚಕ್ಕೆ ಅಜ್ಞಾನವೇ ಉಪಾದಾನಕಾರಣ
ಎಂದು ವೇದಾಂತಗಳು ಹೇಳುತ್ತವೆ.ಆ ಅಜ್ಞಾನವು ನಷ್ಟವಾದಾಗ ಪ್ರಪಂಚವೆಲ್ಲಿ ಉಳಿದೀತು?(ಪುಟ81)
(ಮಾಯೆಯನ್ನು ಪ್ರಕೃತಿ ಎಂದೂ ಮಹೇಶ್ವರನನ್ನು
ಮಾಯಾವಿ ಎಂದೂ ಅರಿಯಬೇಕು.
ಮಾಯಾಂತು
ಪ್ರಕ್ರತಿಂ ವಿದ್ಯಾತ್ ಮಾಯಿನಂ ತು ಮಹೇಶ್ವರಮ್(ಶ್ವೇತಾಶ್ವತರ.ಉ.4-10)(ಪುಟ 81)
೯5)ಮೂಢನು ಭ್ರಮೆಯಿಂದ ಹಗ್ಗವನ್ನು ಬಿಟ್ಟು ಹಾವನ್ನು ಗ್ರಹಿಸುವಂತೆ ಸತ್ಯವನ್ನರಿಯದೆ ಜಗತ್ತನ್ನು ನೋಡುತ್ತಾನೆ.(ಪುಟ81)
೯6)ಹಗ್ಗದ ಸ್ವರೂಪವನ್ನರಿತಾಗ
ಹಾವಿನ ಅಂಶವು ನಿಲ್ಲದು.ಹಾಗೆಯೇ ಅಶ್ರಯವಾದ ಬ್ರಹ್ಮವನ್ನು ಅರಿತಾಗ
ಪ್ರಪಂಚವು ಇಲ್ಲವಾಗುವುದು.(ಪುಟ 81)
೯7)ದೇಹವೂ ಕೂಡ ಪ್ರಪಂಚವೇ ಆಗಿರುವುದರಿಂದ ಪ್ರಾರಬ್ಧವು ಹೇಗೆ ತಾನೇ ನಿಂತೀತು?ಶ್ರುತಿಯಾದರೋ ಅಜ್ಞಾನಿಗಳಿಗೆ ತಿಳುವಳಿಕೆಯನ್ನುಂಟು ಮಾಡಲು
ಪ್ರಾರಬ್ಧವನ್ನು
ಹೆಳುತ್ತಿದೆಯಷ್ಟೆ.
(ಪುಟ82)
( ದೇಹವಿರುವವರೆಗೂ ವ್ಯವಹಾರವು ಇರುತ್ತದೆ
ಎಂದು ಶ್ರುತಿಯು
ಒಂದು ರೀತಿಯ ಸಮಾಧಾನವೀಯುತ್ತದೆಯೇ ವಿನಾ ಪಾರಮಾಥ೯ವಾಗಿ ಪ್ರಾರಬ್ಧವನ್ನು ಒಪ್ಪಿಕೊಂಡಿರುವುದಿಲ್ಲ.)
೯8)ಆ ಪರಾವರನಾದ ಪುರುಷನನ್ನು ನೋಡಿದಾಗ ಇವನ ಕಮ೯ಗಳೆಲ್ಲವೂ ನಾಶವಾಗುತ್ತವೆ'ಎಂಬ ಶ್ರುತಿವಾಕ್ಯದಲ್ಲಿ
ಯಾವ ಬಹುವಚನವನ್ನು
ಸ್ಪಷ್ಟವಾಗಿ ಹೇಳಿದೆಯೋ
ಅದು ಆ ಪ್ರಾರಬ್ಧವನ್ನು
ಅಲ್ಲಗಳೆಯುವುದಕ್ಕಾಗಿ ಎಂದರಿಯಬೇಕು.(ಪುಟ82)
( ಪೂಣ೯ಶ್ಲೋಕವು ಹೀಗಿರುತ್ತದೆ:ಆ ಪರಾವರನಾದ ಪುರುಷನನ್ನು
ನೋಡಿದಾಗ ಇವನ ಹೃದಯದ ಗಂಟುಗಳೆಲ್ಲ
ಬಿಚ್ಚಿಹೋಗುತ್ತವೆ.ಸಂಶಯಗಳೆಲ್ಲ ಕತ್ತರಿಸಲ್ಪಡುತ್ತವೆ ಮತ್ತು ಕಮ೯ಗಳು ನಾಶವಾಗುತ್ತವೆ.ಭಿದ್ಯತೇ ಹೃದಯಗ್ರಂಥಿ ಶ್ಚಿದ್ಯಂತೇ
ಸವ೯ ಸಂಶಯಃ|ಕ್ಷೀಯಂತೇ ಚಾಸ್ಯ ಕಮಾ೯ಣಿ
ತಸ್ಮಿನ್ ದೃಷ್ಟೇ ಪರಾವರೇ.(ಮುಂ.ಉ.2-2-8)
೯೯)ಒಂದುವೇಳೆ ಅಜ್ಞಾನಿಗಳು ಬಲಾತ್ಕಾರದಿಂದ ಪ್ರಾರಬ್ಧವನ್ನು ಹೇಳುವುದೇ ಆದರೆ
ಆಗ ಎರಡು ರೀತಿಯ ಅನಥ೯ಗಳು ಉಂಟಾಗುತ್ತವೆ. ಮತ್ತು ವೇದಾಂತ ಮತವನ್ನು ಕೈಬಿಟ್ಟಂತೆ ಆಗುತ್ತದೆ.ಆದುದರಿಂದ ಯಾವುದರಿಂದ ಜ್ಞಾನವುಂಟಾಗುತ್ತದೆಯೋ
ಅಂತಃ ಶ್ರುತಿಯನ್ನೇ ಒಪ್ಪಿಕೊಳ್ಳಬೇಕು.(ಪುಟ83)
(ಪ್ರಾರಬ್ಧವೆಂಬ ಎರಡನೆಯ ವಸ್ತುವನ್ನೊಪ್ಪಿದ್ದರಿಂದ ಉಂಟಾದ ಅದ್ವೈತಹಾನಿಯೂ
ಅದರಿಂದ ಮೋಕ್ಷವಿಲ್ಲವೆಂಬ ಪ್ರಸಂಗವೂ
ಮೊದಲನೆಯ ಅನಥ೯.ಮೋಕ್ಷವೇ ಇಲ್ಲವೆಂದ ಮೇಲೆ
ಅದಕ್ಕೆ ಕಾರಣವಾದ ಜ್ಞಾನವೂ
,ಈ ಜ್ಞಾನವನ್ನು ಉಪದೇಶಿಸುವ ಶ್ರುತಿಯೂ
ವ್ಯಥ೯ವಾಗುತ್ತದೆ ಎಂಬುದು
ಎರಡನೆಯ ಅನಥ೯.ಶ್ರುತಿಯೇ ವ್ಯಥ೯ವೆಂದಮೇಲೆ ಅದರ ಆಧಾರದಿಂದಲೇ
ಪ್ರಾರಬ್ಧವುಂಟೆಂದು ವಾದಿಸುವವರ
ವಾದವೇ ಜೊಳ್ಳಾಗುತ್ತದೆ.(ಪುಟ 83)
'ಇಲ್ಲಿ ಹಲವು ಬಗೆಯು ಸ್ವಲ್ಪವೂ ಇಲ್ಲ' 'ನೇಹ ನಾನಾಸ್ತಿ ಕಿಂಚನ'(ಕಠ.ಉ.2-1-11)-ಇವಾ ಮೊದಲಾದ ವೇದಾಂತ ವಾಕ್ಯಗಳಲ್ಲಿ
ಪ್ರತಿಪಾದಿಸಿರುವ
ಅದ್ವೈತ ಮತವನ್ನು ಕೈಬಿಡಬೇಕಾಗುತ್ತದೆ;ಏಕೆಂದರೆ ಜ್ಞಾನವಾದ ಮೇಲೂ ಪ್ರಾರಬ್ಧವೆಂಬ
ಎರಡನೆಯ ವಸ್ತುವು ಉಳಿದುಕೊಂಡು ಬಿಟ್ಟಿರುತ್ತದೆ.'
ಅದ್ವೈತ ಜ್ಞಾನದಿಂದಲೇ ಮೋಕ್ಷವು ದೊರಕುವುದರಿಂದ
ಅದನ್ನು ಉಪದೇಶಿಸುವುದೇ ಶ್ರುತಿಗಳ
ಮುಖ್ಯಉದ್ದೇಶ.ಆದ್ದರಿಂದ ಅಂತಹ ಶ್ರುತಿಗಳನ್ನೇ
ಪ್ರಮಾಣವಾಗಿ ಸ್ವೀಕರಿಸಬೇಕೇ ವಿನಃ ಕಮ೯ಗಳನ್ನಾಗಲೀ,ಪ್ರಾರಬ್ಧವನ್ನಾಗಲೀ, ದ್ವೈತವನ್ನಾಗಲೀ
ಹೇಳುವ ಶ್ರುತಿಗಳನ್ನಲ್ಲ-ಎಂದು ತಾತ್ಪಯ೯).
20)ಹದಿನೈದು ಅಂಶಗಳುಳ್ಳ ಯೋಗ:
100)ಹಿಂದೆ ಹೇಳಿದ ಜ್ಞಾನವನ್ನು ಹೊಂದುವುದಕ್ಕಾಗಿ ಈಗ ಹದಿನೈದು ಅಂಗಗಳನ್ನು ಹೇಳುತ್ತೇನೆ.ಈ ಎಲ್ಲ ಅಂಗಗಳಿಂದ ಕೂಡಿದ ನಿದಿಧ್ಯಾಸನವನ್ನು ಯಾವಾಗಲೂ ಮಾಡುತ್ತಿರಬೇಕು.(ಪುಟ84)
(ಪಡೆದುಕೊಳ್ಳಬೇಕಾದ ಅದ್ವೈತಾತ್ಮ ಜ್ಞಾನವನ್ನು ಹೊಂದುವುದಕ್ಕಾಗಿ
ಹಿಂದೆ ವಿವರಿಸಿದ್ದಾಯಿತು.ಆದರೆ ಕೇವಲ ಗುರಿಯನ್ನು ಅರಿತರೆ ಸಾಲದು.ಅದನ್ನು ಹೊಂದುವ ಮಾಗ೯ವನ್ನೂ
ತಿಳಿದಿರಬೇಕು. ತಿಳಿದಿರಬೇಕು.ಆದುದರಿಂದ ಈಗ ಸಾಧನಗಳನ್ನು ಹೇಳುತ್ತಿದ್ದಾರೆ.)
101)ನಿತ್ಯವೂ ಸಾಧನೆ ಮಾಡದಿದ್ದಲ್ಲಿ ಸಚ್ಚಿದಾತ್ಮನನ್ನು ಪಡೆಯಲಾಗುವುದಿಲ್ಲ.ಆದ್ದರಿಂದ ಬ್ರಹ್ಮವನ್ನು ಅರಿಯಲುಇಚ್ಚಿಸುವವರು
ಪರಮ ಶೇಯಸ್ಸನ್ನು ಪಡೆಯುವುದಕ್ಕಾಗಿ
ಬ್ರಹ್ಮವನ್ನು ಕುರಿತು ಧ್ಯಾನ ಮಾಡುತ್ತಿರಬೇಕು.(ಪುಟ84)
ಅಭ್ಯಾಸದ ಬಗ್ಗೆ
ಪಾತಂಜಲಯೋಗ ಸೂತ್ರವು ಹೀಗೆನ್ನುತ್ತದೆ:'ಅದನ್ನು ಬಹುಕಾಲ ಎಡೆಬಿಡದೆ ಶ್ರದ್ಧೆಯಿಂದ ಮಾಡಿದರೆ
ಬಲವಾಗಿ ಬೇರೂರುತ್ತದೆ.'ಒಂದು ವಷ೯ ಮಳೆಬರಲಿಲ್ಲವೆಂದು
ರೈತರು ಉಳುಮೆ ಬಿತ್ತನೆ ಗಳನ್ನು
ಮುಂದಿನ ವಷ೯ ನಿಲ್ಲಿಸುವುದಿಲ್ಲ.ಫಸಲು ಬರುವವರೆಗೂ ದುಡಿಯುತ್ತಲೇ ಇರುವನು.ಹಾಗೆಯೇ ಅಧ್ಯಾತ್ಮಿಕ ಜೀವನದಲ್ಲಿಯೂ ಸಿದ್ಧಿಯಾಗುವವರೆಗೆ ಸಾಧನೆ ಅವಿರತವಾಗಿ ನಡೆಯುತ್ತಿರಬೇಕು.ಇಲ್ಲದಿದ್ದರೆ
ಮತ್ತೆ ಸಾಧನೆಯನ್ನು ಮುಂದುವರೆಸುವಾಗ
ಹಿಂದಿಗಿಂತ ಎರಡರಷ್ಟು
ಪ್ರಯತ್ನವನ್ನು ಮಾಡಬೇಕಾಗುವುದು.)
102-103) ಯಮ,ನಿಯಮ,ತ್ಯಾಗ,ಮೌನ,ದೇಶ,ಕಾಲ,ಆಸನ,ಮೂಲಬಂಧ,ದೇಹಸಾಮ್ಯ,ದೃಕ್ಸ್ಥಿತಿ,
ಪ್ರಾಣಾಯಾಮ,ಪ್ರತ್ಯಾಹಾರ,ಧಾರಣ,ಆತ್ಮಧ್ಯಾನ,ಸಮಾಧಿ.-ಇವು ಕ್ರಮವಾಗಿ ನಿದಿಧ್ಯಾಸನದ ಅಂಗಗಳೆಂದು ಹೇಳಲ್ಪಟ್ಟಿದೆ.(ಪುಟ 85)
(ಈ ಪಟ್ಟಿಯಲ್ಲಿ ಪಾತಂಜಲಯೋಗದ ಎಂಟು ಅಂಗಗಳನ್ನೂ ,ಹಠಯೋಗದ ಹಲವು ಪಾರಿಭಾಷಿಕ ಶಬ್ದಗಳನ್ನು ಸೇರಿಸಿದ್ದರೂ ಅವುಗಳ ಅಥ೯ವನ್ನು
ಮುಂದೆ ವೇದಾಂತದ ದೃಷ್ಟಿಯಿಂದ ವಿವರಿಸುತ್ತಾರೆ.)
21) ಯಮ:
104)ಎಲ್ಲವೂ ಬ್ರಹ್ಮವೇ ಎಂಬ ನಿಶ್ಚಯದಿಂದ ಕೂಡಿ ಇಂದ್ರಿಯ ಸಮೂಹವನ್ನು ಹತೋಟಿಯಲ್ಲಿಡುವುದು ಯಮವೆನಿಸಿರುತ್ತದೆ.ಇದನ್ನು ಮತ್ತೆ ಮತ್ತೆ ಅಭ್ಯಾಸ ಮಾಡಬೇಕು.(ಪುಟ 85)
(ಪಾತಂಜಲಯೋಗದಲ್ಲಿ ಅಹಿಂಸೆ,ಸತ್ಯ,ಅಸ್ತೇಯ(ಕದಿಯದಿರುವುದು),ಬ್ರಹ್ಮಚಯ೯,ಮತ್ತು ಅಪರಿಗ್ರಹ(ದಾನವನ್ನು ಸ್ವೀಕರಿಸದಿರುವುದು-ಇದನ್ನು ಯಮವೆಂದು ಕರೆದಿದೆ.)
22) ನಿಯಮ:
105)ಒಂದೇ ರೀತಿಯ ಮನಃ ಪ್ರವಾಹವನ್ನು ಹರಿಯಿಸುವುದು,ಇತರ ರೀತಿಯವುಗಳನ್ನು ಬಿಡುವುದು-ಇದು ಪರಮಾನಂದ ರೂಪವಾದ ನಿಯಮ.ಇದನ್ನು ಜ್ಞಾನಿಗಳು
ನಿಯಮದಿಂದ ಆಚರಿಸುತ್ತಾರೆ.(ಪುಟ87)
(ಪಾತಂಜಲಯೋಗದಲ್ಲಿ ಶೌಚ,ಸಂತೋಷ (ತೃಪ್ತಿ),ತಪಸ್ಸು,ಸ್ವಾಧ್ಯಾಯ(ಪ್ರವಚನ ಅಥವಾ ವೇದಪಾಠ),
ಈಶ್ವರಪ್ರಣಿದಾನ(ಈಶ್ವರನಲ್ಲಿ ಕಮ೯ಫಲ ಸಮಪ೯ಣೆ)ಇವುಗಳನ್ನು ಹೇಳಿದೆ)
23)ತ್ಯಾಗ:
106)ಇದು ಚಿದಾತ್ಮನೇ ಎಂಬುದನ್ನು ಕಂಡುಕೊಂಡು ಪ್ರಪಂಚವೆಂಬ ತೋಕೆ೯ಯನ್ನು ಬಿಟ್ಟು ಬಿಡುವುದೇ ತ್ಯಾಗ.ಇದು ಕೂಡಲೇ ಮೋಕ್ಷವನ್ನು ಕೊಡುವುದರಿಂದ
ಮಹಾ ಪುರುಷರಿಗೂ ಪೂಜ್ಯವಾಗಿದೆ.(ಪುಟ86)
(ಬ್ರಹ್ಮವು ಅಜ್ಞಾನದ ದೆಸೆಯಿಂದ ಅಜ್ಞಾನವಾಗಿ ತೋರುತ್ತಿದೆ. ಈ ತೋಕೆ೯ಯನ್ನು ತ್ಯಜಿಸಿ ಸೋಮಾರಿಯಾಗಿ ಕುಳಿತುಕೊಳ್ಳುವುದು ತ್ಯಾಗವಲ್ಲ.'ಏನೇನಿದೆಯೋ ಆ ಇದೆಲ್ಲವೂ ಈಶ್ವರನಿಂದ ಮುಚ್ಚಲ್ಪಟ್ಟಿದೆ.ಅದನ್ನು ತ್ಯಾಗಮಡುವುದರಿಂದ ಅನುಭವಿಸಿ' ಈಶಾವಾಸ್ಯಮಿದಂ ಸವ೯ಂ ಯತ್ಕಿಂಚ
ಜಗತ್ಯಾಂ ಜಗತ್,ತೇನತ್ಯಕ್ತೇನ ಭುಂಜೀತಾಃ -ಎನ್ನುತ್ತದೆ ಈಶಾವಾಸ್ಯೋಪನಿಷತ್ತು.(1))
24) ಮೌನ:
107)ಮನಸ್ಸು ಮತ್ತು ಮಾತುಗಳು ಯಾವುದನ್ನು ಪಡೆಯದೆ ಹಿಂತಿರುಗುವವೊ ಆದರೂ ಯಾವ ಮೌನವನ್ನು ಯೋಗಿಗಳು ಪಡೆಯಬಲ್ಲರೊ ಜ್ಞಾನಿಯು ಯಾವಾಗಲೂ ಆ ಮೌನಿಯೇ ಆಗಿರಬೇಕು.(ಪುಟ 87)
(ಇದುಯತೋ ವಾಚೋ ನಿವತ೯ಂತೇ ಅಪ್ರಾಪ್ಯ ಮನಸಾ ಸಹ ಎಂಬ ತೈತ್ತಿರೀಯ ಉಪನಿಷತ್ತಿನ (2,4) ಪ್ರತಿಧ್ವನಿ.ಇಲ್ಲಿ ಮೌನವೆಂದರೆ ಮಾತುಗಳಿಂದ ವಿವರಿಸಲು ಅಸಾಧ್ಯವಾದ ಬ್ರಹ್ಮ ಎಂದರಿಯಬೇಕು.ಅದು ಮಾತಿಗೂ ಮನಸ್ಸಿಗೂ ನಿಲುಕದಿದ್ದರೂ
ಯೋಗಿಗಳು ಅದನ್ನು ಪಡೆಯಬಲ್ಲರು;ಏಕೆಂದರೆ ಅದು ಅವರ ಆತ್ಮವೇ ಆಗಿರುತ್ತದೆ)
108-10೯)ಅಥವಾ ಸತ್ಪುರುಷರಿಗೆ ಸಹಜವೆನಿಸಿರುವ ಮೌನವು ಹೀಗಿರಬಹುದು.'ಯಾವುದರಿಂದ ಮಾತುಗಳು ಹಿಂದಿರುವುವವೊ
ಅದನ್ನು ಯಾರು ವಣಿ೯ಸಬಲ್ಲರು?(ಆದುದರಿಂದ ಸುಮ್ಮನಿರುವುದೇ ವಾಸಿ ಎಂದು ಭಾವಿಸುತ್ತಾರೆ.)ಮಾತಿಲ್ಲದೆ
ಸುಮ್ಮನಿರುವುದೆಂಬ ಮೌನವನ್ನು
ಬ್ರಹ್ಮವಾದಿಗಳು
ಕೇವಲ
ಬಾಲಕರಿಗಾಗಿ ವಿಧಿಸಿರುತ್ತಾರೆ.(ಪುಟ87)
(ಪ್ರಪಂಚವನ್ನು ಸತ್(ಯಾವಾಗಲೂ ಇರತಕ್ಕ ಸತ್ಯ)ಎಂದಾಗಲೀ ಅಸತ್ ಎಂದಾಗಲೀ ವಿವರಿಸಲು ಸಾಧ್ಯವಿಲ್ಲ.ಸತ್ ಎನ್ನೋಣವೆಂದರೆ ಅದು ಸದಾ ಬದಲಾವಣೆ ಹೊಂದುತ್ತಿರುತ್ತದೆ.ಅಸತ್ ಎನ್ನೋಣವೆಂದರೆ ಕಣ್ಣಿಗೆ ಕಾಣುತ್ತದೆ.ಆದುದರಿಂದ ಅದನ್ನು ಅನಿವ೯ಚನೀಯ (ವಿವರಿಸಲಾಗದ್ದು,ಮಾತಿಗೆ ನಿಲುಕದ್ದು) ಎನ್ನಬೇಕು.(ಪುಟ8೯).
25)ದೇಶ:
110)ಯಾವ ಪ್ರದೇಶದಲ್ಲಿ(ಎಂದರೆ ಬ್ರಹ್ಮದಲ್ಲಿ ಜನರು ಮೊದಲಿನಲ್ಲಾಗಲೀ
ಕಡೆಯಲ್ಲಾಗಲೀ
ಕಂಡು ಬರುವುದಿಲ್ಲವೋ ,ಯಾವುದರಿಂತ ಈ ಜಗತ್ತು
ಯಾವಾಗಲೂ ವ್ಯಾಪ್ತವಾಗಿದೆಯೋ, ಆ ದೇಶವನ್ನು ವಿಜನದೇಶ (ಜನರಿಲ್ಲದ ಜಾಗ) ಎನ್ನುತ್ತಾರೆ.(ಪುಟ88)
(ಬ್ರಹ್ಮಕ್ಕೆ ಎರಡನೆಯದಿಲ್ಲದಿರುವುದರಿಂದ
ಅದನ್ನು ನೋಡುತ್ತಿರುವವನು ಯಾವಜಾಗದಲ್ಲಿದ್ದರೂ ಜಾಗವು ಅವನ ಮಟ್ಟಿಗೆ ಏಕಾಂತ ಸ್ಥಳವಾಗಿಯೇ ಮಾಪ೯ಡುತ್ತದೆ ಎಂಬುದು ತಾತ್ಪಯ೯.)
26)ಕಾಲ:
111)ಚತುಮು೯ಖ ಬ್ರಹ್ಮವೇ ಮೊದಲಾದ ಎಲ್ಲ ಪ್ರಾಣಿಗಳನ್ನೂ ಕಣ್ಣು ಮಿಟುಕಿಸುವಷ್ಟರಲ್ಲಿಯೇ
ಸೃಷ್ಟಿಸುವುದರಿಂದ
ಅಖಂಡಾನಂದವೂ
ಅದ್ವಯವೂ ಆದ ಬ್ರಹ್ಮವನ್ನು 'ಕಾಲ'ಎಂಬ ಶಬ್ದದಿಂದ ನಿದೇ೯ಶಿಸುತ್ತಾರೆ.(ಪುಟ88)
(ಕಲನ ಎಂದರೆ ಅಳೆಯುವುದು ಎಂದಥ೯.ಸೃಷ್ಟಿಸುವುದು ಎಂಬುದು ಭಾವಾಥ೯.ಯಾವುದು ಅಳೆಯುತ್ತದೆಯೋ,ಸೃಷ್ಟಿಸುತ್ತದೆಯೋ ಅದು ಕಾಲ.ಕನಸಿನಲ್ಲಿ ನಮ್ಮ ಮನಸ್ಸು
ಕ್ಷಣಮಾತ್ರದಲ್ಲಿಯೇ ತನಗೆ ಬೇಕಾದುದನ್ನೆಲ್ಲಾ
ಸೃಷ್ಟಿಸುವಂತೆ ಪರಬ್ರಹ್ಮವೂ ಜಗತ್ತುಗಳನ್ನು ಸೃಷ್ಟಿಸಬಲ್ಲದು.ಆದುದರಿಂದ ಅದೂ ಕಾಲ)
27) ಆಸನ:
112) ಯಾವುದರಲ್ಲಿ ಬ್ರಹ್ಮಚಿಂತನೆಯು ಸುಖವಾಗಿ ಎಡೆಬಿಡದೆ ಸಾಗುವುದೋ ಅದನ್ನು ಆಸನವೆಂದು ಅರಿಯಬೇಕೆ ಹೊರತುಸುಖನಾಶಕವಾದ ಮತ್ತೊಂದನ್ನಲ್ಲ.(ಪುಟ8೯)
(ಹಠಯೋಗವು ವಿವರಿಸಿರುವ ಆಸನಗಳು ಕಷ್ಟವಾದುದರಿಂದಲೂ ಬ್ರಹ್ಮಚಿಂತನೆಗೆ ತೊಡಕಾಗುವುದರಿಂದಲೂ
ಅವು ನಿಜವಾದ ಅಥ೯ದಲ್ಲಿ
ಆಸನಗಳಲ್ಲ ಎಂದಭಿಪ್ರಯ)
113)ಯಾವುದು ಎಲ್ಲ ಪ್ಆ್ರಣಿಗಳಿಗೂ ಆದಿಕಾರಣವೆಂದೂ
ಪ್ರಪಂಚಕ್ಕೆ ಆಶ್ರಯವೆಂದೂ
ನಾಶರಹಿತವೆಂದೂ
ಸಿದ್ಧವಾಗಿರುವುದೋ ಮತ್ತು ಯಾವುದರಲ್ಲಿ ಸಿದ್ಧಪುರುಷರು ಪ್ರವೇಶಿಸಿರುವರೋ
ಅದನ್ನು ಸಿದ್ಧಾಸನ ಎನ್ನುತ್ತಾರೆ.(ಇಲ್ಲಿ ಮತ್ತು ಮುಂದಿನ ಶ್ಲೋಕಗಳಲ್ಲಿ ಹೇಳಿರುವ ಸಿದ್ಧಾಸನ ಮತ್ತು ಮೂಲಬಂಧ ಎಂಬ ಪದಗಳು ಹಠಯೋಗದ ಹೆಸರುಗಳ ಆಸನಗಳ ಹೆಸರುಗಳಾದರೂ
ಇಲ್ಲಿ ಮಾತ್ರ ಅವನ್ನು ಬ್ರಹ್ಮದ ಹೆಸರುಗಳೆಂದೇ ವಿವರಿಸಲಾಗಿದೆ.)
114)ಯಾವುದು ಎಲ್ಲ ಪ್ರಾಣಿಗಳಿಗೂ ಮೂಲಕಾರಣವೊ,ಯಾವುದು ಮನಸ್ಸನ್ನು ಕಟ್ಟಿಹಾಕುವುದಕ್ಕೆ ಕಾರಣವಾಗಿರುವುದೋ
ಆ ಮೂಲಬಂಧವನ್ನು(ಎಂದರೆ ಬ್ರಹ್ಮವನ್ನು)ಸದಾ ಕೈಕೊಳ್ಳಬೇಕು.ಇದು ರಾಜಯೋಗಿಗಳಿಗೆ ತಕ್ಕದ್ದು.(ಪುಟ 8೯)
28) ದೇಹಸಾಮ್ಯ:
115)ಸಮ ಎನಿಸಿದ ಬ್ರಹ್ಮದಲ್ಲಿ ಮನಸ್ಸು ಲೀನವಗುವುದೇ ಅಂಗಗಳ ಸಮತೆ(ದೇಹಸಾಮ್ಯ).ಹಾಗಿಲ್ಲದಿದ್ದರೆ ಅದು ಸಮನತ್ವವೆ ಅಲ್ಲ. ಒಣಗಿದ ಮರದಂತೆ ನೆಟ್ಟಗಿರುವುದಷ್ಟೆ.(ಪುಟ ೯0)
(ಇಲ್ಲಿ ದೇಹಸಾಮ್ಯವನ್ನು ವಿವರಿಸುತ್ತಿದ್ದಾರೆ.ಸುಮ್ಮನೆ ದೇಹವನ್ನು ನೆಟ್ಟಗೆ ನಿಲ್ಲಿಸಿದರೆ ಅದು ದೇಹಸಾಮ್ಯವಾಗುವುದಿಲ್ಲ.ಆದುದರಿಂದ ಸಮವೆನಿಸಿರುವ
ಬ್ರಹ್ಮದಲ್ಲಿ ಮನಸ್ಸನ್ನು ಲಯಗೊಳಿಸುವುದೇ
'ದೇಹಸಾಮ್ಯ'.ಹೊರಗಿನ ದೇಹದ ಸಮತ್ವವು ಅಷ್ಟೇನೂ ಮುಖ್ಯವಲ್ಲ).
2೯) ದೃಕ್ ಸ್ಥಿತಿ:
116)ದೃಷ್ಟಿಯನ್ನು ಜ್ಞಾನಮಯವಾಗಿ ಮಾಡಿ ಜಗತ್ತನ್ನು ಬ್ರಹ್ಮಮಯವೆಂದು ಕಾಣಬೇಕು. ಇದೇ ಅತ್ಯಂತ ಉದಾರವಾದ ದೃಷ್ಟಿಯೇ ಹೊರತು ಮೂಗಿನ ತುದಿಯನ್ನು ನೋಡುವುದಲ್ಲ.(ಪುಟ೯0)
(ಇಲ್ಲಿ ದೃಕ್ ಸ್ಥಿತಿಯನ್ನು ವಣಿ೯ಸಿರುತ್ತಾರೆ.ಸಾಮಾನ್ಯ ಧ್ಯಾನಕ್ರಮದಲ್ಲಿ
ಮೂಗಿನ ತುದಿಯನ್ನು ನೋಡುವುದೂ ಒಂದು ಅಂಗ)
117)ಅಥವಾ ನೋಡುವವನು,ನೋಟ ಮತ್ತು ನೋಡಲ್ಪಡುವ ವಸ್ತು -ಇವುಗಳ ಭೇದವುಎಲ್ಲಿ ಇಲ್ಲವಾಗುವುದೋ ಅಲ್ಲಿಯೇ ದೃಷ್ಟಿ'ಯನ್ನು ಮಾಡಬೇಕೇ ಹೊರತು ಮೂಗಿನ ತುದಿಯನ್ನು ನೋಡುವುದು ದೃಷ್ಟಿಯಲ್ಲ.(ಪುಟ೯1)
(ಇಲ್ಲಿ ಮೂರನ್ನೂ ಸೇರಿಸಿ ತ್ರಿಪುಟಿಯೆಂದು ಕರೆಯುತ್ತಾರೆ.ನೋಡುವವನು, ನೋಟ,ಮತ್ತು ನೋಡಲ್ಪಡುವ ವಸ್ತು)
30) ಪ್ರಾಣಾಯಾಮ:
118)ಚಿತ್ತವೇ ಮೊದಲಾದ ಮನೋಭಾವಗಳೆಲ್ಲದರಲ್ಲಿಯೂ
ಬ್ರಹ್ಮವೆಂಬ ಭಾವನೆಯನ್ನು ಮಾಡುವುದರಿಂದ ಉಂಟಾಗುವ ಎಲ್ಲ ವೃತ್ತಿಗಳ ನಿರೋಧವನ್ನೇ ಪ್ರಾಣಾಯಾಮವೆನ್ನುತಾರೆ.(ಪುಟ೯1)
( ಪತಂಜಲಿಯ ಪ್ರಕಾರ(2-4೯)ಆಸನ ಜಯವುಂಟಾದ ಮೇಲೆ ಉಚ್ಛ್ವಾಸ ನಿಶ್ವಾಸಗಳ ಗತಿಯನ್ನು
ನಿಲ್ಲಿಸುವುದೇ ಪ್ರಾಣಾಯಾಮ.ಮನಸ್ಸಿನ ಪ್ರಕ್ಷೋಭೆ ಶಾಂತಿಗಳಿಗೂ
ಉಸಿರಾಟದ ವಿಷಮ-ಸಮ -ಸ್ಥಿತಿಗಳಿಗೂ ನಿಕಟ ಸಂಬಂಧವಿರುವುದು
ನಮ್ಮ ಅನುಭವಕ್ಕೆ ಬಂದಿರುವ ವಿಷಯ.ಉಸಿರಿನ ನಿಯಂತ್ರಣದ ಮೂಲಕ
ಮನೋ ನಿಯಂತ್ರಣವು ಪ್ರಾಣಾಯಾಮದ ಹಿಂದಿರುವ ತತ್ವ.ಆದರೆ ಇಲ್ಲಿ ಅದಕ್ಕೆ ವಿರುದ್ಧವಾದ
ಕ್ರಮವನ್ನು ಹೇಳಿರುತ್ತದೆ.ನೇರವಾಗಿ ಮನಸ್ಸನ್ನು ಹಿಡಿತದಲ್ಲಿಡಲು ಪ್ರಯತ್ನಿಸುವುದರ ಮೂಲಕ ಪ್ರಾಣಯಾ£ಮವನ್ನೂ ಸಾಧಿಸಿಕೊಳ್ಳಬಹುದು ಎಂಬುದು ಇಲ್ಲಿ ಕೊಟ್ಟಿರುವ ಅಭಿಪ್ರಾಯ.)
ಅಂತಃಕರಣ,ಚಿತ್ತ,ಮನಸ್ಸು,ಬುದ್ಧಿ-ಇವು ಮನಸ್ಸಿನ
ನಾಲ್ಕು ರೂಪಗಳು.ಅಂತಃಕರಣವು ಉಳಿದ ಮೂರನ್ನೂ ಒಳಗೊಂಡಿರುತ್ತದೆ.ಚಿತ್ತವೆಂದರೆ ಮನಸ್ಸು ಯಾವುದರಿಂದ ನಿಮಿ೯ತವಾಗಿದೆಯೋ ಆ ವಸ್ತು.ಆದರೆ ಆಲೋಚನೆ ಮತ್ತು ಸಂಶಯಗಳಲ್ಲಿ ನಿರತವಾದಾಗ ಮನಸ್ಸು ಎಂದೆನಿಸಿಕೊಳ್ಳುತ್ತದೆ.ಯಾವುದಾದರೂ ಒಂದು ವಿಷಯದಲ್ಲಿ ನಿಧ೯ರವನ್ನು ಕೈಗೊಂಡಾಗ ಅದೇ ಬುದ್ಧಿ ಎನಿಸಿಕೊಳ್ಳುತ್ತದೆ.ಈ ಎಲ್ಲ ಅವಸ್ಥೆಗಳಲ್ಲಿಯೂ ಬ್ರಹ್ಮಭಾವವನ್ನು ಮಾಡುತ್ತಿರಬೇಕು
ಎಂಬುದು ಅಭಿಪ್ರಾಯ.
ನೀರಿನಲ್ಲಿ ಕಲ್ಲನ್ನು ಬಿಸಾಡಿದಾಗ ಅದರಲ್ಲಿ ಅಲೆಗಳು ಏಳುವಂತೆ ವಿಷಯ ಜ್ಞಾನ ಆಲೋಚನೆ ಭಾವನೆ-ಇವುಗಳುಂಟಾದಾಗ ಚಿತ್ತದಲ್ಲಿ ಏಳುವ ಅಲೆಗಳಿಗೆ
'ವೃತ್ತಿ'ಎಂದು ಹೆಸರು.
ವೃತ್ತಿಗಳನ್ನು ಪ್ರಯತ್ನಪೂವ೯ಕವಗಿ ತಡೆದಿಡುವುದಕ್ಕೆ ನಿರೋಧ ಎಂದು ಹೆಸರು.)
11೯)ಪ್ರಪಂಚವನ್ನು ಇಲ್ಲವೆನ್ನುವುದು ರೇಚಕ ಪ್ರಾಣಾಯಾಮವು.'ನಾನು ಬ್ರಹ್ಮವೇ ಆಗಿರುತ್ತೇನೆ' ಎಂಬ ಮನೋವೃತ್ತಿಯು ಪೂರಕವೆಂಬ ಪ್ರಾಣಾಯಾಮವು.(ಪುಟ೯2)
120)ಅನಂತರ ಆ ಮನೋವೃತ್ತಿ ನಿಶ್ಚಲವಾಗಿರಿಸಿಕೊಳ್ಳುವುದೇ ಕುಂಭಕವೆಂಬ ಪ್ರಾಣಾಯಾಮವು.ಇದಾದರೋ ಜ್ಞಾನಿಗಳಿಗೆ ಯೋಗ್ಯವಾದದ್ದು. ಅಜ್ಞಾನಿಗಳಿಗೆ ಮೂಗನ್ನು ಪೀಡಿಸುವುದೇ ಪ್ರಾಣಾಯಾಮವಾಗಿರುತ್ತದೆ.(ಪುಟ೯2)
31) ಪ್ರತ್ಯಾಹಾರ:
121)ವಿಷಯ ವಸ್ತುಗಳಲ್ಲಿ ಅವೂ ಆತ್ಮನೆಂಬ ಭಾವನೆಯನ್ನಿಟ್ಟು ಮನಸ್ಸನ್ನು ಚಿದ್ವಸ್ತುವಿನಲ್ಲಿ
ಮುಳುಗಿಸಿ ಬಿಡುವುದೇ
ಪ್ರತ್ಯಾಹಾರವೆಂದರಿಯಬೇಕು.ಮುಮುಕ್ಷುಗಳು ಇದನ್ನು ಅಭ್ಯಾಸ ಮಾಡಬೇಕು.(ಪುಟ೯3)
(ಪತಂಜಲಿಯ ಪ್ರಕಾರ ಪ್ರತ್ಯಾಹಾರವು ಹೀಗಿರುತ್ತದೆ. 'ತಮ್ಮ ವಿಷಯಗಳೊಡನೆ ಸಂಬಂಧವಿಲ್ಲದಿರುವಾಗ
ಇಂದ್ರಿಯಗಳು ಚಿತ್ತದ
ಸ್ವರೂಪವನ್ನು ಅನುಕರಿಸಿದಂತೆ ಇರುವ ಸ್ಥಿತಿಯೇ ಪ್ರತ್ಯಾಹಾರವು.(ಪುಟ೯3)
32)ಧಾರಣೆ:
122) ಮನಸ್ಸು ಹೋದಕಡೆಯೆಲ್ಲೆಲ್ಲ ಬ್ರಹ್ಮವನ್ನು ನೋಡುವುದರ ಮೂಲಕ ಮನಸ್ಸನ್ನು ನಿಲ್ಲಿಸುವುದೇ
ಅತ್ಯಂತ ಹೆಚ್ಚಿನ ಧಾರಣೆಯೆನಿಸುತ್ತದೆ.(ಪುಟ೯3)
(ಪತಂಜಲಿಯ ಪ್ರಕಾರ (3,0)ಧಾರಣೆಯೆಂದರೆ ನಾಭಿಚಕ್ರವೇ ಮೊದಲಾದ ಪ್ರದೇಶಗಳಲ್ಲಿ
ಚಿತ್ತವನ್ನು ಸ್ಥಿರವಾಗಿ ನಿಲ್ಲಿಸುವುದು.(ದೇಶಬಂಧಶ್ಚಿತ್ತಸ್ಯ ಧಾರಣಾ)
33)ಧ್ಯಾನ:
123) 'ನಾನು ಬ್ರಹ್ಮವೇ ಅಗಿರುತ್ತೇನೆ ಎಂಬ ಸದ್ವøತ್ತಿಇಂದ ಕೂಡಿ ಯಾವುದನ್ನೂ ಅಲಂಬನವಾಗಿ ಮಾಡಿಕೊಳ್ಳದೆ ಇರುವ ಸ್ಥಿತಿಯೇ ದ್ಯಾನ.ಅತ್ಯಂತ ಹೆಚ್ಚಿನ ಆನಂದವನ್ನು ಕೊಡಬಲ್ಲದು.(ಪುಟ೯4)
(ನಾಭಿಚಕ್ರಾದಿ ಪದಾಥ೯ಗಳಲ್ಲಿ
ಧ್ಯೇಯವಸ್ತುವಿನ ಬಗ್ಗೆಜ್ಞಾನದ ಏಕರೀತಿಯ ಪ್ರವಾಹವೇ ಧ್ಯಾನ.ಇದು ಪತಂಜಲಿಯು ಧ್ಯಾನ ಶಬ್ದಕ್ಕೆ ಕೊಟ್ಟಿರುವ ವಿವರಣೆ.ಆದರೆ ಈ ಧ್ಯಾನಕ್ಕೆ ಯವುದಾದರೂ ಒಂದು ಆಲಂಬನವು ಬೇಕು.ಈಧ್ಯಾನವು ಸ್ವಪ್ನಾವಸ್ಥೆಯಲ್ಲಿ ಇರುವುದಿಲ್ಲ.'ನಾನು ಬ್ರಹ್ಮವಾಗಿರುತ್ತೇನೆ'ಎಂಬೀರೂಪದ ಧ್ಯಾನವ್ಆದರೋ ಯಾವ ಅವಸ್ಥೆಯಲ್ಲಿಯೂ ಇಲ್ಲವಾಗುವುದಿಲ್ಲ.ಅದಕ್ಕೆ ಹೊರಗಿನ ಯಾವ ವಸ್ತುವೂ ಆಲಂಬನವಾಗಬೇಕಿಲ್ಲ.)
34) ಸಮಾಧಿ:
124)ವೃತ್ತಿಗಳನ್ನು ಮೊದಲು ವಿಕಾರರಹಿತವಾಗಿ ಮಾಡಿ ಅನಂತರ ಅವುಗಳಿಗೆ ಬ್ರಹ್ಮಾಕಾರವನ್ನಿತ್ತು
ಕಡೆಗೆ ಅವನ್ನು ಚೆನ್ನಾಗಿ ಮರೆತುಬಿಡುವುದೇ ಜ್ಞಾನವೆಂಬ ಹೆಸರುಳ್ಳ ಸಮಾಧಿ.(ಪುಟ೯4)
(ಪತಂಜಲಿಯ ಪ್ರಕಾರ (3-3)ಸಮಾಧಿಯ ವಿವರಣೆಗಳು ಹೀಗಿರುತ್ತದೆ.ಆ ಧ್ಯಾನವೇ ಕೇವಲ ಧ್ಯೇಯವಸ್ತುವು ತೋರುತ್ತಿರುವಾಗ
ಮತ್ತು ತನ್ನ ಸ್ವರೂಪವನ್ನು ಕಳೆದುಕೊಂಡಂತೆ ಇರುವಾಗ ,ಸಮಾಧಿ ಎನಿಸುವುದು.ಈ ಸಮಾಧಿಯಲ್ಲಿ ಚಿತ್ತವು ಧ್ಯೇಯವಸ್ತುವಿನ ಆಕಾರವನ್ನು ಪಡೆದಿರುತ್ತದೆ ಮತ್ತು ಧ್ಯಾನ ಮಡುತ್ತಿರುವ ಆ ಯೋಗಿಗೆ
ಧ್ಯೇಯವಸ್ತುವಿನ ಪರಿವೆಯೇ ಹೊರತು ತನ್ನ ಪರಿವೆಯೂ ಇರುವುದಿಲ್ಲ.)
(ಆದರೆ ಇಲ್ಲಿ ಹೇಳಿರುವ ಸಮಾಧಿಯು ಬೇರೆರೀತಿಯದು.ಇದರಲ್ಲಿ ಮೂರು ಹಂತಗಳಿವೆ.ವಿಷಯವಸ್ತುಗಳ ಚಿಂತನೆಯಿಂದ ವಿಕಾರವನ್ನು ಹೊಂದುತ್ತಿರುವ ಚಿತ್ತವನ್ನು ವಿಷಯವಸ್ತುಗಳಿಂದ ಹಿಂತಿರುಗಿಸಿ ನಿವಿ೯ಕಾರವಾಗಿ ಮಾಡುವುದು ಮೊದಲನೆಯಿದು.ಇದಾದ ಕೂಡಲೇ ನಾನು ಬ್ರಹ್ಮ ಎಂಬ ಭಾವನೆಯನ್ನು ಅದರಲ್ಲಿ ತುಂಬಿ ಅದನ್ನು 'ಬ್ರಹ್ಮಕಾರ'ವಾಗಿ ಮಾಡುವುದು ಎರಡನೆಯದು.ಈ ಅವಸ್ಥೆಯು ಪರಿಪಕ್ವವಾದಾಗ ನೇರವಾಗಿ ಬ್ರಹ್ಮದ ಸಾಕ್ಷಾತ್ಕಾರವಾಗುವುದರಿಂದ 'ನಾನು ಬ್ರಹ್ಮ'ಎಂಬೀ ರೂಪದ ಬ್ರಹ್ಮಾಕಾರ ವೃತ್ತಿಯೂ ಸಹ ಇಲ್ಲವಗುತ್ತದೆ.ಇದೇ ಮೂರನೆಯ ಮತ್ತು ಕಡೆಯ ಹೆಜ್ಜೆ.ಈ ಸಮಾಧಿಯೂ ಬ್ರಹ್ಮಜ್ಞಾನವೂ ಒಂದೇ.)
125) ಪ್ರಯೋಗ ಮಾತ್ರದಿಂದ ಕ್ಷಣದಲ್ಲಿತನಗೆ ತಾನೇ ತೋರಿಕೊಳ್ಳುವಷ್ಟು ಮಟ್ಟಿಗೆ ವಶವಾಗುವವರೆಗೂ
ಈ ಅಕೃತ್ರಿಮ- ಆನಂದ (ರೂಪವಾದ ಸಮಾಧಿಯನ್ನು ಸಾಧಕನು )ಚೆನ್ನಾಗಿ ಅಭ್ಯಾಸ ಮಾಡುತ್ತಿರಬೇಕು.(ಪುಟ೯5)
(ಸಾಧಕನು ಯಾವುದನ್ನು ಬಹುಪ್ರಯತ್ನದಿಂದ ಪಡೆದುಕೊಳ್ಳುತ್ತಾನೋ ಅದು ಸಿದ್ಧನಿಗೆ ಸಹಜವಾಗಿಯೇ ಕರಗತವಾಗಿ ಅವನ ಲಕ್ಷಣವೇ ಆಗಿರುತ್ತದೆ.ಆದ್ದರಿಂದ ಸಮಾಧಿಯ ಅವಸ್ಥೆಯು ಸಹಜವಾಗುವವರೆಗೂ
ಸಾಧಕನು ಪುನಃ ಪುನಃ ಬಹು ಪ್ರಯತ್ನದಿಂದ ಅದನ್ನು ಅಭ್ಯಾಸ ಮಾಡಬೇಕು.)
35) ಸಮಾಧಿಯ ಫಲ:
126)ಅನಂತರ ಈ ಯೋಗಿರಾಜನು ಸಾಧನೆಯಿಂದ ಬಿಡಲ್ಪಟ್ಟು ಸಿದ್ಧನಾಗುತ್ತಾನೆ.ಇವನ ಆ ಬ್ರಹ್ಮವೆಂಬ ಸ್ವರೂಪವು ಮನಸ್ಸಿಗಾಗಲೀ
ಮಾತುಗಳಿಗಾಗಲೀ ವಿಷಯವಾಗುವುದಿಲ್ಲ.(ಪುಟ೯6)
(ಕಾಲಿಗೆ ಚುಚ್ಚಿರುವ ಮುಳ್ಳನ್ನು ಮತ್ತೊಂದು ಮುಳ್ಳಿನಿಂದ ತೆಗೆದಮೇಲೆ ಎರಡನ್ನೂ ಬಿಸಾಡುವಂತೆ
ಅಥವಾ ಬಾವಿ ತೋಡಿದ ಮೇಲೆ ಗುದ್ದಲಿ ಹಾರೆಗಳನ್ನೂ ಬಿಸಾಡುವಂತೆ
ಸಿದ್ಧಿಯನ್ನು ಪಡೆದ ಮೇಲೆ ಸಾಧನೆಯ ಅವಶ್ಯಕತೆ ಇರುವುದಿಲ್ಲ ಎಂದು ಭಾವ)
36) ಸಮಾಧಿಯ ಅಭ್ಯಾಸಕ್ಕೆ ಒದಗುವ ವಿಘ್ನಗಳು:
127-128) ಸಮಾಧಿಯನ್ನು ಅಭ್ಯಾಸ ಮಾಡುತ್ತಿರುವಾಗ
ವಿಘ್ನಗಳು ಬಲಾತ್ಕಾರವಾಗಿ ಬರುತ್ತವೆ.ತತ್ವವನ್ನು ಧ್ಯಾನಿಸದಿರುವುದು,ಸೋಮಾರಿತನ,ವಿಷಯಭೋಗಗಳ ಇಚ್ಛೆ ಲಯ,ತಮಸ್ಸು,ವಿಕ್ಷೇಪ,ರಸಾಸ್ವಾದಮತ್ತು ಶೂನ್ಯತ್ವ.ಹೀಗೆ ಒದಗಿಬರುವ
ಅನೇಕ ವಿಘ್ನಗಳನ್ನು ಬ್ರಹ್ಮಜ್ಞಾನಿಯು ಮೆಲ್ಲಮೆಲ್ಲಗೆ ತ್ಯಜಿಸಬೇಕು.(ಪುಟ ೯6)
(ಲಯ ಎಂದರೆ ನಿದ್ರೆ,ತಮಸ್ಸು ಎಂದರೆ ಏನನ್ನು ಮಾಡಬೇಕು ಏನನ್ನು ಮಾಡಬಾರದು ಎಂಬ ವಿವೇಚನೆಯಿಲ್ಲದಿರುವುದು.ವಿಕ್ಷೇಪವೆಂದರೆ ಗುರಿಯನ್ನು ಬಿಟ್ಟು
ಮನಸ್ಸು ಅತ್ತಿತ್ತ ಹರಿಯುವುದು,ರಸಾಸ್ವಾದ ಎಂದರೆ ಕೊಂಚಕಾಲದ ಸಾಧನೆಯಿಂದ ದೊರಕುವ ಆನಂದವನ್ನು
ರುಚಿನೋಡುತ್ತಿರುವುದು,ಮನಸ್ಸು ಅದರಲ್ಲಿಯೇ ಆಸಕ್ತವಾದರೆ ಮುಂದೆ ಹೋಗದೆ ಅಲ್ಲಿಯೇ ನಿಂತು ಬಿಡುತ್ತದೆ.ಶೂನ್ಯತ್ವ(ಕಷಾಯ) ಎಂದರೆ ರಾಗ ದ್ವೇಷಗಳು.)
ಮಾಂಡೂಕ್ಯಕಾರಿಕೆಯಲ್ಲಿ(3,44-45) ಈ ರೀತಿ ಪ್ರಸ್ತಾಪಿಸಿದೆ.ಚಿತ್ತವು ಸುಷುಪ್ತಿಯಲ್ಲಿ ಲಯಹೊಂದಿದರೆ ಅದನ್ನು ಎಚ್ಚರಗೊಳಿಸಬೇಕು.ವಿಕ್ಷೇಪಹೊಂದಿದರೆ
ಪುನಃ ಶಾಂತಗೊಳಿಸಬೇಕು.ಈ ಎರಡು ಅವಸ್ಥೆಗಳ ನಡುವೆ ಮನಸ್ಸು ಕಷಾಯದಿಂದ ಕೂಡಿದೆಯೆಂದು ತಿಳಿಯಬೇಕು.ಮನಸ್ಸು ಸಮತೆಯನ್ನು ಹೊಂದಿದರೆ ಅದನ್ನು ಅಲುಗಾಡಿಸಬಾರದು.ಸಮಾಧಿಯಲ್ಲಿ ಸುಖವನ್ನು ಸವಿಯಕೂಡದು.ಪ್ರಜ್ಞೆಯಿಂದ ನಿಸ್ಸಂಗನಾಗಿರಬೇಕು.ನಿಶ್ಚಲವಾದ ಚಿತ್ತವನ್ನು ಅದು ಹೊರಬಂದೊಡನೆ -ಆತ್ಮನೊಂದಿಗೆ ಪ್ರಯತ್ನಪೂವ೯ಕವಾಗಿ
ಏಕೀಕರಿಸಬೇಕು.)
37) ಬ್ರಹ್ಮವೃತ್ತಿಯ ಹೊಗಳಿಕೆ:
12೯)ವಿಷಯವಸ್ತುವನ್ನು ಚಿಂತಿಸುವುದರಿಂದ
ಮನಸ್ಸಿಗೆ ವಿಷಯಾಕಾರವೂ ,ಶೂನ್ಯವನ್ನು ಚಿಂತಿಸುವುದರಿಂದ ಶೂನ್ಯತ್ವವೂ ,ಬ್ರಹ್ಮವನ್ನು ಚಿಂತಿಸುವುದರಿಂದ ಪೂಣ೯ತ್ವವೂ ಉಂಟಾಗುತ್ತದೆ.ಆದುದರಿಂದ ಪೂಣ೯ತ್ವವನ್ನೇ ಅಭ್ಯಾಸ ಮಾಡಬೇಕು.(ಪುಟ ೯೯7)
(ನಾವು ಯಾವುದನ್ನು ಕುರಿತು ಚಿಂತಿಸುತ್ತೇವೋ ಅದರ ಗುಣ ಸ್ವಭಾವಗಳನ್ನೇ ಕ್ರಮೇಣ ಹೊಂದುತ್ತೇವೆ.ಆದುದರಿಂದ ಬ್ರಹ್ಮವನ್ನು ಪಡೆಯ ಬಯಸುವವರು
ಯಾವಾಗಲೂ
ಬ್ರಹ್ಮವನ್ನೇ ಕುರಿತು ಚಿಂತಿಸಬೇಕು.ಮನಸ್ಸಿನ ವೃತ್ತಿಗಳು ಬ್ರಹ್ಮದ ಆಕಾರವನ್ನು ಪಡೆದು
ಕ್ರಮೇಣ ಬ್ರಹ್ಮ ಸಾಕ್ಷಾತ್ಕಾರಕ್ಕೆ ಒಯ್ಯುತ್ತವೆ.)
ಬೃಹದಾರಣ್ಯಕೋಪನಿಷತ್ತಿನಲ್ಲಿ ಬ್ರಹ್ಮವನ್ನು ಪೂಣ೯ವೆಂದು ಕರೆದಿದೆ.(5-1-1)
130)ಬ್ರಹ್ಮವೆಂಬ ಹೆಸರುಳ್ಳ ,ಅತ್ಯಂತ ಪವಿತ್ರವಾದ ಈ ಮನೋ ವೃತ್ತಿಯನ್ನು ರಾರು ಬಿಟ್ಟುಬಿಡುತ್ತಾರೋ ಆ ಮನುಷ್ಯರು ಪಶುಗಳಿಗೆಸಮರಾಗಿ ವ್ಯಥ೯ವಾಗಿ ಜೀವಿಸುತ್ತಾರೆ.(ಪುಟ೯8)
(ಬ್ರಹ್ಮ ಸಾಕ್ಷಾತ್ಕಾರವನ್ನು ಪಡೆಯುವ ಯೋಗ್ಯತೆ ಅವಕಶಗಳು ಮನುಷ್ಯನಿಗೆ ಇವೆ.ಆದ್ದರಿಂದ ಯಾರು ಅದಕ್ಕೆ ಉಪಾಯವಾದ ಬ್ರಹ್ಮಾಕಾರ ವೃತ್ತಿಯನ್ನು
ಅಭ್ಯಾಸ ಮಾಡದೆ ಇರುತ್ತಾರೋ
ಅವರಿಗೂ ಪಶುಗಳಿಗೂ ಭೇದವಿಲ್ಲ ಎಂದಭಿಪ್ರಾಯ)
131)ಆದರೆ ಯಾರು ಈ ವೃತ್ತಿಯನ್ನು ಅರಿತಿರುವರೋ,ಅರಿತು ಅದನ್ನು ಬೆಳೆಸುತ್ತಿರುವರೋ ,ಅವರೇ ಸತ್ಪುರುಷರು ಮತ್ತು ಧನ್ಯರು.ಅವರು ಮೂರು ಲೋಕಗಳಿಗೂ ಪೂಜ್ಯರು.(ಪುಟ೯8)
132)ಯಾರಲ್ಲಿ ಈ ಬ್ರಹ್ಮಾಕಾರ ವೃತ್ತಿಯು ಸಮನಾಗಿರುವುದೋ ಬೆಳೆಯುವರೋ ಮತ್ತು ಪರಿಪಕ್ವವಾಗುವರೋ
ಅವರೇ ಸದ್ಬ್ರಹ್ಮವನ್ನು ಪಡೆದವರೇ ಹೊರತು
ಸುಮ್ಮನೆ ಮಾತಾಡುವ ಇತರರಲ್ಲ.(ಪುಟ132)
133)ಅವರು ಬ್ರಹ್ಮವನ್ನು ಕುರಿತು ಮಾಎನಾಡುವುದರಲ್ಲಿ ಕುಶಲರು.ಆದರೆ ಬ್ರಹ್ಮಾಕಾರ ವೃತ್ತಿಯಿಲ್ಲದವರು
ಮತ್ತು ಪ್ರಾಪಂಚಿಕ ಸುಖಭೋಗಗಳಲ್ಲಿ ತುಂಬಾ ಆಸಕ್ತಿಯುಳ್ಳವರು .ಆದ್ದರಿಂದ ಅವರು ಖಂಡಿತವಾಗಿಯೂ
ಹೋಗುತ್ತಲೂ ಬರುತ್ತಲೂ ಇರುವರು.(ಪುಟ೯೯)
(ಜನನ ಮರಣಗಳನ್ನು ಪಡೆಯುವರು)
134)ಚತುಮು೯ಖ ಬ್ರಹ್ಮ ಸನಕ ಶುಕ ಮೊದಲಾದವರು ಇರುವಂತೆ ಸಾಧಕರು ಬ್ರಹ್ಮಮಯ ವೃತ್ತಿಯನ್ನು ಬಿಟ್ಟು
ಅಧ೯ನಿಮಿಷವಾದರೂ ಇರುವುದಿಲ್ಲ.(ಪುಟ ೯೯)
(ಬ್ರಹ್ಮಾಕಾರ ವೃತ್ತಿಯನ್ನು ಅಭ್ಯಾಸ ಮಾಡುತ್ತಿರುವರು ಎಂದಥ೯)
135)ಕಾಯ೯ದಲ್ಲಿ ಕಾರಣತ್ವವು ಅನುಗತವಾಗಿರುವುದೇ ಹೊರತು ಕಾರಣದಲ್ಲಿ ಕಾಯ೯ತ್ವವಿರುವುದಿಲ್ಲ.ವಿಚಾರ ಮಾಡಿದಾಗ
ಕಾರಣಕ್ಕಿಂತ ಬೇರೆಯಾದ
ಕಾಯ೯ವು ಇಲ್ಲದೆ ಹೋಗುವುದರಿಂದ
ಮೂಲವಸ್ತುವಿನಿಂದ
ಕಾರಣತ್ವವು ಸಹ ಹೋಗಿಬಿಡುತ್ತದೆ.(ಪುಟ100)
136)ಆಗ ಮಾತುಗಳಿಗೆ ನಿಲುಕದ ಬ್ರಹ್ಮವಸ್ತುವೇ ಉಳಿದು ಬಿಡುವುದು. ಮಣ್ಣು-ಮಡಕೆಗಳ ಉದಾಹರಣೆಯಿಂದ ಇದನ್ನು ಮತ್ತೆ ಮತ್ತೆ ನೋಡುತ್ತಿರಬೇಕು.(ಪುಟ100)
137)ಶುದ್ಧ ಮನಸ್ಸುಳ್ಳವರಿಗೆಈ ಪ್ರಕಾರದಿಂದಲೇ
ವೃತ್ತಿರೂಪವಾದ ಜ್ಞಾನವುಂಟಾಗುತ್ತದೆ.ಅನಂತರ ಆ ವೃತ್ತಿ ಜ್ಞಾನವು
ಬ್ರಹ್ಮಾಕಾರವನ್ನು ಪಡೆಯುತ್ತದೆ.(ಪುಟ 101)
138)ಮೊದಲು ಸಾಧಕನು ಕಾರಣವನ್ನು ವ್ಯತಿರೇಕದಿಂದ ಕಂಡುಹಿಡಿಯಬೇಕು. ಪುನಃ ಅದನ್ನೇ ಅನ್ವಯದಿಂದ
ಕಾಯ೯ದಲ್ಲಿ ಯಾವಾಗಲೂ
ನೋಡಬೇಕು.(ಪುಟ101)
(ಅನ್ವಯ ಮತ್ತು ವ್ಯತಿರೇಕ -ಇವು ತಕ೯ ಮಾಡುವ ಎರಡು ವಿಧಾನಗಳು.ಕಾರಣವಿದ್ದಲ್ಲಿ ಕಾಯ೯ವಿರಲೇ ಬೇಕು -ಇದು ಅನ್ವಯ.ಕಾರಣವಿಲ್ಲದಿದ್ದರೆ ಕಾಯ೯ವೂ ಇರಲಾರದು.-ಇದು ವ್ಯತಿರೇಕ.ಕಾರಣವಾದ ಬ್ರಹ್ಮವಿಲ್ಲದಿದ್ದಲ್ಲಿ
ಕಾಯ೯ವಾದ ಜಗತ್ತು ಇರುತ್ತಿರಲಿಲ್ಲ.ಆದರೆ ಜಗತ್ತು ಕಂಡು ಬರುತ್ತಿದೆ.ಆದುದರಿಂದ ಜಗತ್ಕಾರಣವಾದ ಬ್ರಹ್ಮವೂ
ಇರಲೇಬೇಕು.-ಎಂಬುದು ವ್ಯತಿರೇಕ ವಾದ ಸರಣಿ.
'ಜಗತ್ತು ಕಂಡುಬರುತ್ತಿರುವುದರಿಂದ ಇದೆ.ಆದ್ದರಿಂದ ಅದರ ಕಾರಣವಾದ ಬ್ರಹ್ಮವೂ ಇರಲೇಬೇಕು. ಈ ಕಾಯ೯ದಲ್ಲಿ ಆಕಾರಣವು ಅನುಗತವಾಗಿರುತ್ತದೆ-ಇದು ಅನ್ವಯದ ವಾದ ಸರಣಿ)
13೯)ಕಾಯ೯ದಲ್ಲಿ ಕಾರಣವನ್ನು ಕಾಣಬೇಕು.ಅನಂತರ ಕಾಯ೯ವನ್ನು ಬಿಟ್ಟು ಬಿಡಬೇಕು.ಆಗ ಕಾರಣತ್ವವೂ ಹೋಗಿ ಬಿಡುತ್ತದೆ.ಸಾಧಕನಾದ ಮುನಿಯು
ಹೀಗೆ ಉಳಿದುಕೊಂಡ ಬ್ರಹ್ಮವೇ ಆಗುತ್ತಾನೆ.(ಪುಟ101)
140)ನಿಶ್ಚಯ ಬುದ್ಧಿಯುಳ್ಳ ಪುರುಷನು ಯಾವವಸ್ತುವನ್ನು
ತೀವ್ರ ಭಾವನೆಯಿಂದ ಚಿಂತಿಸುತ್ತಾನೆಯೋ
ಅವನು ಶೀಘ್ರವಾಗಿ ಅದೇ ಆಗಿ ಬಿಡುತ್ತಾನೆ.ಇದನ್ನು ಕೀಟವು ಭ್ರಮರವಾಗುವಂತೆ ಎಂದರಿಯಬೇಕು.(ಪುಟ102)
(ಆದ್ದರಿಂದ ಯಾವನು ಬ್ರಹ್ಮವನ್ನು ಕುರಿತು ಸದಾ ತೀವ್ರವಾಗಿ ಚಿಂತಿಸುತ್ತಾನೋ ಅವನು ಬ್ರಹ್ಮವೇ ಆಗಿಬಿಡುತ್ತಾನೆ)
141)ಕಾಣದಿರುವ ಮತ್ತು ಕಂಡುಬರುತ್ತಿರುವ ಇದೆಲ್ಲವೂ ಚಿತ್ ಸ್ವರೂಪವಾದ ನನ್ನ ಆತ್ಮವೇ ಎಂದು ಜ್ಞಾನಿಯು ಯಾವಾಗಲೂ
ಎಚ್ಚರಿಕೆಯಿಂದ ಚಿಂತಿಸುತ್ತಿರಬೇಕು.(ಪುಟ102)
142)ಕಾಣುತ್ತಿರುವ ಪ್ರಪಂಚವನ್ನು ಕಾಣದಂತೆ ಮಾಡಿಕೊಂಡು ಬ್ರಹ್ಮಾಕಾರದಿಂದ ಅದನ್ನು ಚಿಂತಿಸಬೇಕು.ಜ್ಞಾನಿಯಾಗಿ ಚಿದ್ರಸಪೂಣ೯ವಾದ
ಬುದ್ಧಿಯಿಂದ ನಿತ್ಯಸುಖರೂಪವಾದ ಬ್ರಹ್ಮದಲ್ಲಿ
ನಿಲ್ಲಬೇಕು.(ಪುಟ 102)
3೯) ರಾಜಯೋಗಕ್ಕೆ ಅಧಿಕಾರಿಗಳು:
143)ಈ ಅಂಶಗಳಿಂದ ಕೂಡಿದ ರಾಜಯೋಗವನ್ನು ಹೇಳಿದ್ದಾಯಿತು.ಸ್ವಲ್ಪಮಟ್ಟಿಗೆ ರಾಗ ದ್ವೇಷಾದಿ ಕಷಾಯಗಳನ್ನು ಹೋಗಲಾಡಿಸಿಕೊಂಡು ಇದು ಹಠ ಯೋಗದಿಂದ ಕೂಡಿ ಸಿದ್ಧಿಸುತ್ತದೆ.(ಪುಟ102)
144)ಯಾರ ಮನಸ್ಸು ಚೆನ್ನಾಗಿ ಪಕ್ವವಾಗಿರುವುದೋ ಅವರಿಗೆ ಈ ರಾಜಯೋಗವು ಹಠvಯೋಗದ ಅವಶ್ಯಕತೆಯಿಲ್ಲದೆಯೇ ಸಿದ್ಧಿಯನ್ನು ಕೊಡುತ್ತದೆ.ಆದರೆ ಗುರುವಿನಲ್ಲಿ
ಮತ್ತು ದೇವರಲ್ಲಿ ಭಕ್ತಿಯುಳ್ಳವರೆಲ್ಲರಿಗೂ ಇದು ಸುಲಭವಾಗಿ ಶೀಘ್ರ ಫಲವನ್ನು ಕೊಡುತ್ತದೆ.(ಪುಟ103)
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,ಅಪರೋಕ್ಷಾನುಭೂತಿ ಸಂಪೂಣ೯ವಾಯಿತು,,,,,,,,,,,,,,,,,,,,,,,,,,
ಮೂರನೆಯ ಗ್ರಂಥ: ವಾಕ್ಯವೃತ್ತಿ:
1)ಮಂಗಲಾಚರಣೆ:
1)ಜಗತ್ತಿನ ಸೃಷ್ಟಿ,ಸ್ಥಿತಿ ಸಂಹಾರಗಳಿಗೆ ಕಾರಣನೂ,ಊಹಿಸಲೂ ಆಗದಂಥ ಶಕ್ತಿಯುಳ್ಳವನೂ ,ಪ್ರಪಂಚವನ್ನು ಆಳುವವನೂ,ಸವ೯ಜ್ಞನೂ,ಅನಂತಸ್ವರೂಪನೂ ,ಸವ೯ಬಂಧನರಹಿತನೂ,ಅಪಾರ ಸುಖಸಾಗರನೂ,ಪರಿಶುದ್ಧ ಜ್ಞಾನವೇ ಆಕಾರ ಪಡೆದಂತಿರುವವನೂ
ಆದ ಲಕ್ಷ್ಮೀಪತಿಯನ್ನು ನಮಸ್ಕರಿಸುತ್ತೇನೆ.(ಪುಟ10೯)
2)'ನಾನೆ ವಿಷ್ಣು,ಜಗತ್ತೆಲ್ಲವೂ ನನ್ನಲ್ಲಿಯೇ ಕಲ್ಪಿಸಲ್ಪಟ್ಟಿದೆ.ನಾನು ಯಾವಾಗಲೂ ಆತ್ಮಸ್ವರೂಪನು'-ಹೀಗೆಯಾರ ಅನುಗ್ರಹದಿಂದ
ನಾನು ಅರಿತುಕೊಂಡಿರುವೆನೋ
ಅಂತಹ ಶ್ರೀ ಗುರುವಿನ
ಪಾದಪದ್ಮವನ್ನು ಸದಾ ನಮಸ್ಕರಿಸುತ್ತೇನೆ.(ಪುಟ10೯)
(ವಿಷ್ಣುವೆಂದರೆ ಸವ೯ವ್ಯಾಪಿ ಎಂದಥ೯.ಅಜ್ಞಾನದಿಂದ ಹಗ್ಗದಲ್ಲಿ ಹಾವು ಕಲ್ಪಿಸಲ್ಪಟ್ಟಿದೆ.ಹಾಗೆಯೇ ಶುದ್ಧಚೈತನ್ಯ ಸ್ವರೂಪನಾದ ನನ್ನಲ್ಲಿ ಈ ಜಗತ್ತೂ ಕಲ್ಪಿಸಲ್ಪಟ್ಟಿದೆ.ಕಲ್ಪಿತವಾದ ಹಾವು ಅಸತ್ಯ.ಅದಕ್ಕೆ ಆಧಾರವಾದ ಹಗ್ಗವೇ ಸತ್ಯ.ಅದರಂತೆಯೇ ಜಗತ್ತು ಅಸತ್ಯ.ಅದಕ್ಕೆ ಆಧಾರವಾನ ಆತ್ಮವಸ್ತುವಾದ ನಾನು ಮಾತ್ರ ಸತ್ಯ.ನಾನೇ ಸವ೯ವ್ಯಾಪಿಯಾದ ವಿಷ್ಣು.ಇದನ್ನೆಲ್ಲ ಯಾವಗುರುವಿನ ಉಪದೇಶ ಅನುಗ್ರಹಗಳ ಬಲದಿಂದ
ಅರಿತಿರುವೆನೊ ಅಂತಹ ಶ್ರೀ ಗುರುವಿನ
ಪಾದ ಪದ್ಮಗಳಿಗೆ ನಮಸ್ಕಾರ-ಇದು ಶ್ಲೋಕದ ಒಟ್ಟಭಿಪ್ರಾಯ.)
2) ಶಿಷ್ಯನ ಪ್ರಶ್ನೆ:
3-4)ತಾಪತ್ರಯವೆಂಬ ಸೂಯ೯ನಿಂದ ಬೆಂದು ,ಅಶಾಂತವಾದ ಮನಸ್ಸಿನಿಂದ ಕೂಡಿ,ಆದರೆ ಶಮ ಮೊದಲಾದ ಸಾಧನಗಳನ್ನುಳ್ಳ ಯಾವುದೋ ಸದ್ಗುರು ಒಬ್ಬನನ್ನು ಬಳಿಸಾರಿ ಹೀಗೆ ಹೇಳುತ್ತಾನೆ:ಭಗವ
ಂತನೆ
ಅನಾಯಾಸವಾಗಿಯೇ
ಈ ಸಂಸಾರ ಬಂಧನದಿಂದ ನಾನು ಹೇಗೆ ತಪ್ಪಿಸಿಕೊಳ್ಳಬಲ್ಲೆ?ಅದನ್ನು ಕೇವಲ ಹೃಪೆಯೊಂದಲೇ ನನಗೆ ಸಂಕ್ಷೇಪವಾಗಿ
ಉಪದೇಶಿಸು.(ಪುಟ110)
(ರೋಗರುಜನದಿಗಳಿಂದಾಗುವ,ದುಷ್ಟಪ್ರಾಣಿಗಳಿಂದಾಗುವ, ಮತ್ತುನೈಸಗಿ೯ಕ ಅನಾಹುತಗಳಿಂದಾಗುವ
ಮೂರು ವಿಧದ ತಾಪಗಳೇ ತಾಪತ್ರಯ.)
(ವಿವೇಕ,ವೈರಾಗ್ಯ,ಶಮಾದಿಷಟ್ಕ, ಮತ್ತು ಮುಮುಕ್ಷತ್ವ -ಇವುಗಳನ್ನು ಸಾಧನ ಚತುಷ್ಟಯಗಳೆಂದು ಕರೆಯುತ್ತಾರೆ.ನಿತ್ಯವಾದ ಆತ್ಮವಸ್ತುವು ಬೇರೆ ಅನಿತ್ಯವಾದ
ಜಗತ್ತು ಬೇರೆ ಎಂದು ವಿವೇಚಿಸಿ ಅರಿಯುವುದು ವಿವೇಕ.ಅನಿತ್ಯ ಜಗತ್ತಿನಲ್ಲಿ ಆಸೆಯನ್ನು ಬಿಡುವುದು ,ಸ್ವಗಾ೯ದಿ ಲೋಕಗಳೂ ಅನಿತ್ಯವಾದುದರಿಂದ ಅವನ್ನೂ ಬಯಸದಿರುವುದು ವೈರಾಗ್ಯ.ಶಮೆ ದಮೆ ,ಉಪರತಿ,ತಿತಿಕ್ಷೆ,,ಶ್ರದ್ದೆ,ಸಮಾಧಾನ
ಇವು ಶಮಾದಿ ಷಟ್ಕ ,ಶಮವೆಂದರೆ ಮನೋನಿಗ್ರಹ.ದಮವೆಂದರೆ ಇಂದ್ರಿಯನಿಗ್ರಹ;ನಿಗ್ರಹಿಸಿದ
ಇಂದ್ರಿಯಗಳನ್ನು ಮತ್ತೆ ಬಿಡದಿರುವುದು
ಅಥವಾ ಕಮ೯ತ್ಯಾಗವು ಉಪರತಿ.ಕಷ್ಟಸಹಿಷ್ಣುತೆಯೇ ತಿತಿಕ್ಷೆ.ಶಾಸ್ತ್ರ ಆಚಾಯ೯ರ
ವಾಕ್ಯದಲ್ಲಿ ದೃಢವಿಶ್ವಾಸವೇ
ಶ್ರದ್ಧೆ.ಏಹಾಗ್ರತೆಯೇ ಸಮಾಧಾನ.ಮುಕ್ತಿಗಾಗಿ ತೀವ್ರ ಇಚ್ಛೆಯೇ ಮುಮುಕ್ಷತ್ವ.ಆತ್ಮಜ್ಞಾನವನ್ನು
ಪಡೆಯ ಬಯಸುವವನು
ಮೊದಲು ಈ ಸಾಧನ ಚತುಷ್ಟಯವನ್ನು ಹೊಂದಿರಬೇಕು.)
3)ಶ್ರೀ ಗುರುವಿನ ಉತ್ತರ:
5)ಶ್ರೀಗುರುವು ಹೇಳುತ್ತಾನೆ:'ನಿನ್ನ ಪ್ರಶ್ನೆಯು ಬಹು ಸಾಧುವಾದುದು ಎಂದು ನನಗೆ ತೋರುತ್ತದೆ.ಇದು ಹೀಗೆ ಎಂದು ಸ್ಪಷ್ಟವಾಗಿ ಹೇಳುತ್ತೇನೆ.ಎಚ್ಚರಿಕೆಯಿಂದ ಕೇಳು.'
(ಸಂಸಾರ ಬಂಧನದಿಂದ ಪಾರಾಗುವ ಮಾಗ೯ ಹೀಗಿರುತ್ತದೆ ಎಂದು)
6)"ತತ್ವಮಸಿ (ಅದು ನೀನಾಗಿರುವೆ)"ಇವೇ ಮೊದಲಾದ ವೇದಾಂತವಾಕ್ಯಗಳಿಂದ
ಜೀವ-ಪರಮಾತ್ಮರು ಒಂದೇ ಎಂಬ
ಜ್ಞಾನವೇ ಈ ಮುಕ್ತಿ ಸಾಧನವು.'
(ತತ್ವಮಸಿ-ಛಾಂದೋಗ್ಯ ಉಪನಿಷತ್(6-8-7)
ಅಹಂ ಬ್ರಹ್ಮಾಸ್ಮಿ 'ನಾನು ಬ್ರಹ್ಮವಾಗಿರುವೆನು)(ಬೃ.ಉ.1-4-10)
ಅಯಮಾತ್ಮಾ ಬ್ರಹ್ಮ 'ಈ ಆತ್ಮವು ಬಹ್ಮವು'(ಮಾಂ.ಉ. 2)
ಪ್ರಜ್ಞಾನಂ ಬ್ರಹ್ಮ 'ಪ್ರಜ್ಞಾನ ರೂಪವಾದ ಆತ್ಮನು ಬ್ರಹ್ಮ'(ಐತರೇಯೋಪನಿಷತ್.4-3)
ಇವು ನಾಲ್ಕು ಮಹಾವಾಕ್ಯಗಳು)
ವ್ಯಕ್ತಿಗೆ ಆಧಾರವಾದ ಚೈತನ್ಯವೇ ಜೀವ.ಜಗತ್ತಿಗೆ ಆಧಾರವಾದ ಚೈತನ್ಯವೇ
ಪರಮಾತ್ಮ.ಇಡೀ ಗ್ರಂಥವು ತತ್ವಮಸಿ ವಾಕ್ಯದ ವಿವರಣೆಯಾದುದರಿಂದ ಇದನ್ನು ವಾಕ್ಯವೃತ್ತಿ ಎಂದು ಕರೆದಿದೆ.)
4) ಪುನಃ ಶಿಷ್ಯನ ಪ್ರಶ್ನೆ:
7)ಶಿಷ್ಯನು ಹೇಳಿದನು:ಜೀವನಾರು?ಪರಮಾತ್ಮನಾರು?ಅವರಿಬ್ಬರಲ್ಲಿ ಏಕತ್ವವು ಹೇಗಿದ್ದೀತು?ತತ್ವಮಸಿ ಮೊದಲಾದ ವಾಕ್ಯವು ಅದನ್ನು ಹೇಗೆ ಸಾಧಿಸುತ್ತದೆ?(ಪುಟ112)
5) ಶ್ರೀ ಗುರುವಿನ ಉತ್ತರ:
8) ಗುರುವು ಹೇಳುತ್ತಾನೆ: ಈ ವಿಷಯದಲ್ಲಿ ಸಮಾಧಾನವನ್ನು ಹೇಳುತ್ತೇನೆ ಕೇಳು:ನನ್ನನ್ನು ಪ್ರಶ್ನಿಸುತ್ತಿರುವ
ನೀನೆ ಜೀವನಲ್ಲದೆ ಮತ್ಯಾರು?ನೀನು ಬ್ರಹ್ಮವೇ ಆಗಿರುವೆ ಎಂಬುದರಲ್ಲಿ ಸಂಶಯವಿಲ್ಲ.'(ಪುಟ112)
೯)ಶಿಷ್ಯನ ಸಂಶಯ:
೯)ಶಿಷ್ಯನು ಹೇಳಿದನು:ಪೂಜ್ಯನೆ,ಈಗಲೂ ಕೂಡ (ತತ್ ತ್ವಮ್ ಮೊದಲಾದ) ಪದಗಳ ಅಥ೯ವನ್ನೇ
ನಾನು ಸ್ಪಷ್ಟವಾಗಿ ಅರಿತಿಲ್ಲ.ಇನ್ನು 'ನಾನು ಬ್ರಹ್ಮ'ಎಂಬ ವಾಕ್ಯದ ಅಥ೯ವನ್ನು ಹೇಗೆ ಅರಿತೇನು ಎಂಬುದನ್ನುತಿಳಿಸು.(ಪುಟ112)
7)ಶ್ರೀ ಗುರುವಿನ ಉಪದೇಶದ ಪ್ರಾರಂಭ:(ತ್ವಂ ಪದದ ಅಥ೯)
10) ಶ್ರೀ ಗುರುವು ಹೇಳಿದನು:ಈ ವಿಷಯದಲ್ಲಿ ನೀನು ಹೇಳಿದ್ದು ಸರಿ.ವಾಕ್ಯದ ಅಥ೯ವನ್ನರಿಯಲು ಪದಗಳ ಅಥ೯ವು ಕಾರಣ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ.(ಪುಟ113)
(ಇಲ್ಲಿಂದ ಗುರುವು ಉಪದೇಶವನ್ನು ಪ್ರಾರಂಭಿಸಿ 27ನೆಯ ಶ್ಲೋಕದವರೆಗೆ ತ್ವಂ ಪದದ ಅಥ೯ವಾದ ಜೀವನ ಸ್ವರೂಪವನ್ನು ವಿವಿಧ ರೀತಿಗಳಲ್ಲಿ ವಿವರಿಸುತ್ತಾನೆ.)
11)ಮನಸ್ಸು ಅದರಲ್ಲಿ ಅಲೆಗಳಂತೆ ಏಳುತ್ತಿರುವ ಜ್ಞಾನ -ಇವುಗಳಿಗೆ ಸಾಕ್ಷಿಯಾಗಿದ್ದರೂ ,ಚೈತನ್ಯ ಸ್ವರೂಪನೂ ಆನಂದ ರೂಪನೂ ಸತ್ಯರೂಪನೂ ಆಗಿದ್ದರೂ ,ಆತ್ಮನನ್ನು (ಅಥವಾ ನಿನ್ನನ್ನು) ನೀನು ಅರಿಯುತ್ತಿಲ್ಲವಲ್ಲ?(ಪುಟ113)
12)ದೇಹವೆ ಮೊದಲಾದವುಗಳಲ್ಲಿ ('ಇವೇ ನಾನು')ಎಂಬ ಬುದ್ಧಿಯನ್ನು ಬಿಟ್ಟು ಸತ್ಯಾನಂದ ಸ್ವರೂಪನೂ ಬುದ್ಧಿಯ ಸಾಕ್ಷಿಯೂ ಚೈತನ್ಯ ಮೂತಿ೯ಯೂ ಆದ ಆತ್ಮವಸ್ತುವೇ ನಾನು ಎಂದು ಸದಾ ಚಿಂತಿಸು.(ಪುಟ113)
(ದೇಹ ಕಣ್ಣು ಕಿವಿ ಮಮೊದಲಾದ ಇಂದ್ರಿಯಗಳು ,ಮನಸ್ಸು,ಪಂಚಪ್ರಾಣಗಳು-ಇವುಗಳಲ್ಲಿ)
13)ಈ ಸ್ಥೂಲದೇಹವು ಆತ್ಮನಲ್ಲ.ಏಕೆಂದರೆ ಅದಕ್ಕೆ ಮಡಕೆಯೇ ಮೊದಲಾದುವಂತೆ(ನೋಡಲು ಯೋಗ್ಯವಾದ)ಆಕಾರವುಂಟು ಮತ್ತು ಮಡಕೆಯಂತೆಯೇ ಇದು ಕೂಡ ಆಕಾಶವೇ ಮೊದಲಾದ ಪಂಚಮಹಾಭೂತಗಳಿಂದ ನಿಮಿ೯ತವಾಗಿರುತ್ತದೆ.(ಪುಟ 113)
14)ಶಿಷ್ಯ:ಹಿಂದೆ ಹೇಳಿದ ಕಾರಣದ ಬಲದಿಂದ ಈ ಸ್ಥೂಲದೇವವು
ಆತ್ಮವಲ್ಲ ಎಂಬುದು ನಿನ್ನ ಅಭಿಪ್ರ್ರಾಯವಾದರೆ ಅಂಗೈಯಲ್ಲಿನ ನೆಲ್ಲಿಕಾಯಂತೆ ಸಕ್ಷಾತ್ತಾಗಿ ಆತ್ಮನನ್ನು ಪ್ರದಶಿ೯ಸು.(ಪುಟ114)
15) ಗುರು:ಮಡಕೆಯನ್ನು ನೋಡುತ್ತಿರುವವನು ಮಡಕೆಗಿಂತ ಬೇರೆ.ಅವನು ಯಾವರೀತಿಯಿಂದಲೂ ಮಡಕೆಯಲ್ಲ.ಹಾಗೆಯೇ ದೇಹವನ್ನು ನೋಡುತ್ತಿರುವ ನಾನು
ದೇಹವಲ್ಲ ಎಂದು ನಿಶ್ಚಯಿಸಿಕೊ.(ಪುಟ114)
16)ಹೀಗೆಯೇ ಇಂದ್ರಿಯಗಳನ್ನು ನೋಡುತ್ತಿರುವ ನಾನು
ಇಂದ್ರಿಯಗಳಲ್ಲ ಎಂದು ನಿಶ್ಚಯಿಸಿಕೊ.ಅದೇ ರೀತಿ ಮನಸ್ಸು ಬುದ್ಧಿ ಪ್ರಾಣ
ಇವಾವೂ ನಾನಲ್ಲ ಎಂದು ದೃಢಪಡಿಸಿಕೊ.(ಪುಟ 115)
17)ಹಾಗೆಯೇ ಸ್ಥೂಲ-ಸೂಕ್ಷ್ಮ-ದೇಹಗಳ ಸಂಘಾತವೂ ನಾನಲ್ಲ ಎಂದು ಅರಿತುಕೊ.ನೋಡಲ್ಪಡುತ್ತಿರುವ ಇವುಗಳಿಗಿಂತ ವಿಲಕ್ಷಣನೂ (ಸವುಗಳನ್ನು) ನೋಡುತ್ತಿರುವವನೂ ಆದ ಅತ್ಮನೆ ನಾನು ಎಂಬುದನ್ನು ಅನುಮಾನ ಪ್ರಮಾಣದ ಬಲದಿಂದ ಕೌಶಲಪೂಣ೯ವಾಗಿ ನಿಶ್ಚಯಿಸಿಕೊ. (ಪುಟ115)
18)ಕೇವಲ ಯಾರ ಸನ್ನಿಧಿಯಿಂದಲೇ ಅಚೇತನವಾದ ದೇಹೇಂದ್ರಿಯಾದಿಗಳು (ವಿಷಯವಸ್ತುಗಳನ್ನೂ0ಬಿಡುವುದು(ಸ್ವೀಕರಿಸುವುದು)ಮೊದಲದ (ಚೇತನರಿಗೆ ಯೋಗ್ಯವಾದ ಕ್ರಿಯೆಗಳಲ್ಲಿ )ಸಮಥ೯ವಗಿವೆಯೋ ಅಂಥ ಆತ್ಮವೇ ನಾನು ಎಂದು ನಿಶ್ಚಯಿಸಿಕೊ.(ಪುಟ115)
1೯)(ತಾನುನಾತ್ರ ಚಲಿಸದಿದ್ದರೂ ಕಬ್ಬಿಣವನ್ನು ಚಲಿಸುವಂತೆ ಮಾಡುವ)ಅಯಸ್ಕಾಂತದಂತೆ ಯಾರು ಸ್ವತಃ ವಿಕಾರವನ್ನೂ ಹೊಂದೆ ಬುದ್ಧಿ ಮೊದಲಾದವು ಕೆಲಸಮಾಡುವಂತೆ ಮಾಡುವನೋ
ಅಂಥ ಆತ್ಮನೇ ನಾನು ಎಂದು ನಿಶ್ಚಯಿಸಿಕೊ.(ಪುಟ115)
20)ಸ್ವತಃ ಜಡವಾಗಿದ್ದರೂ ಯಾವುದರ ಸಾನ್ನಿಧ್ಯದಿಂದ
ದೇಹ ಇಂದ್ರಿಯ ಮನಸ್ಸು ಪ್ರಾಣಗಳು ಚೈತನ್ಯರೂಪ ಆತ್ಮನಂತೆ ತೋರುತ್ತವೆಯೋ ಅಂಥ ಆತ್ಮನೆ ನಾನು ಎಂದು ನಿಶ್ಚಯಿಸಿಕೊ.(ಪುಟ 116)
(ಕೆಂಪಗೆ ಕಾದ ಕಬ್ಬಿಣದ ತುಂಡು ಶಾಖವನ್ನು ಕೊಡುವಂತೆ ಅಥವ ಕನ್ನಡಿಯು ಸೂಯ೯ನ ಬೆಳಕನ್ನು ಪ್ರತಿಫಲಿಸುವಂತೆ
ದೇಹೇಂದ್ರಿಯಾದಿಗಳು ಆತ್ಮ ಚೈತನ್ಯವನ್ನೆ ಪ್ರತಿಫಲಿಸುತ್ತವೆಯೇ ವಿನಃ
ತಮ್ಮ ಸ್ವಂತ ಶಕ್ತಿಯಿಂದ ಕೆಲಸ ಮಾಡುತ್ತಿಲ್ಲ ಎಂದಥ೯)
21)'ನನ್ನ ಮನಸ್ಸು ಬೇರೆ ಕಡೆ ಹೋಗಿತ್ತು.ಈಗ ಅದು ಸ್ಥಿರವಾಯಿತು.-ಎಂಬ ರೂಪದ ಧೀ ವೃತ್ತಿಯನ್ನು ಯಾರು ಅರಿಯುವನೋ ಅಂಥಾ ಆತ್ಮನೇ ನಾನು ಎಂದು ನಿಶ್ಚಯಿಸಿಕೊ.(ಪುಟ116)
22) ಸ್ಪಪ್ನ ಎಚ್ಚರ ಗಾಢನಿದ್ರೆ ಎಂಬ ಮೂರು ಅವಸ್ಥೆಗಳನ್ನೂ ಬುದ್ಧಿಯ ಗಮನಾಗಮನಗಳನ್ನೂ -ಸ್ವತಃ ಯಾವ ಬದಲಾವಣೆಯನ್ನೂ ಹೊಂದದೆ-ನೇರವಾಗಿ ಅರಿಯುವನೊ ಅಂಥ ಆತ್ಮನೇ ನಾನೆಂದು ನಿಶ್ಚಯಿಸಿಕೊ.(ಪುಟ116)
(ಎಚ್ಚರ ಕನಸುಗಳಲ್ಲಿ ಬುದ್ಧಿಯು ಕೆಲಸ ಮಾಡುತ್ತದೆ.ಗಾಢನಿದ್ರೆಯಲ್ಲಿ ಬುದ್ಧಿಯೂ ಕೆಲಸ ಮಾಡುವುದಿಲ್ಲ.ಸಾಕ್ಷಿ ಚೈತನ್ಯನು ಬುದ್ಧಿಯ ಈ ಎರಡು ಅವಸ್ಥೆಗಳನ್ನೂ ಅರಿಯುತ್ತಾನೆ)
23)ಮಡಕೆಯನ್ನು ಬೆಳಗುವ ದೀಪವು ಮಡಕೆಗಿಂತ ಬೇರೆ ಎಂಬುದನ್ನು ಎಲ್ಲರೂ ಒಪ್ಪುತ್ತಾರೆ.ಹಾಗೆಯೇ ಈ ದೇಹವನ್ನು ತೋರಿಸಿಕೊಡುತ್ತಿರುವ (ಆದುದರಿಂದ ದೇಹಕ್ಕಿಂತ ಬೇರೆಯಾದ)ಚೈತನ್ಯ ಸ್ವರೂಪನಾದ ಆತ್ಮನೇ ನಾನು(ಎಂದು ಅರಿತುಕೊ).(ಪುಟ 117)
24)ಯಾರಿಗೋಸ್ಕರ ಮಕ್ಕಳು ಐಶ್ವಯ೯ ಮೊದಲಾದ ವಸ್ತುಗಳು ಪ್ರಿಯವಾಗಿರುತ್ತವೆಯೊ
ಅಂಥ,ಎಲ್ಲಕ್ಕಿಂತಲೂ ಪ್ರಿಯತಮನೂ ಸಾಕ್ಷಿಯೂ
ಆದ ಆತ್ಮನೇ ನಾನು ಎಂದು ನಿಶ್ಚಯಿಸಿಕೊ.(ಪುಟ 117)
(ಈ ಲೋಕದಲ್ಲಿ ನಮಗೆ ಪ್ರಿಯವಾಗಿ ತೋರುವ ವಸ್ತುಗಳೆಲ್ಲವೂ
ನಮ್ಮ ಆತ್ಮನೇ ಅವುಗಳಲ್ಲೂ ಇರುವನೆಂಬ ಕಾರಣದಿಂದ ಪ್ರಿಯವಾಗಿ ತೋರುತ್ತವೆಯೇ ಹೊರತು
ಸ್ವತಃ ಅಲ್ಲ ಎಂದು ಬೃಹದಾರಣ್ಯಕೋಪನಿಷತ್ತು
ಹೇಳುತ್ತದೆ.(ಪುಟ(1-4-8)(2-4-5)
25)(ನಾನು') ಎಂಬುದು ಅತ್ಯಂತ ಪ್ರೇಮಕ್ಕೆ ಆಶ್ರಯವಾಗಿರುತ್ತದೆ.ಆದುದರಿಂದ 'ನಾನು'ಇರದಂತೆ ಎಂದಿಗೂ ಆಗದಿರಲಿ!ನಾನು ಸದಾ ಇರುವಂತೆಯೇ ಆಗಲಿ.!ಎಂಬ ಆಶಯವಿರುತ್ತದೆ.ಇಂತಹ ಸಾಕ್ಷಿಯಾದ ಆತ್ಮನೇ ನಾನು ಎಂದು ನಿಶ್ಚಯಿಸಿಕೊ.(ಪುಟ117)
26)ಯಾವನು ಸಾಕ್ಷಿರೂಪ ಚೈತನ್ಯನೋ ಅವನೇ ತ್ವಂ'ನೀನು'ಎಂಬ ಪದದ ಅಥ೯ವೆಂದು ಹೇಳಲ್ಪಡುತ್ತಾನೆ.ಸಾಕ್ಷಿಯಾಗಿರುವುದು ಎಂದರೇನೆ ಅರಿಯುವುದು ಎಂದಥ೯.ಏಕೆಂದರೆ ಅವನಿಗೆ ಯಾವ ವಿಕಾರಗಳೂ ಇರುವುದಿಲ್ಲ.(ಪುಟ118)
( ಆತ್ಮನು ದೇಹೇಂದ್ರಿಯಗಳು , ಮನಸ್ಸು ಬುದ್ಧಿ ಮೊದಲಾದವುಗಳಿಗೆ ಸಾಕ್ಷಿಯಾಗಿರುತ್ತಾನೆ).
27)'ತ್ವಂ'(ನೀನು) ಎಂಬ ಪದದಿಂದ ಕರೆಯಲ್ಪಡುವ (ಆತ್ಮನು) ದೇಹೇಂದ್ರಿಯಗಳು ಮನಸ್ಸು ಪ್ರಾಣ ಅಹಂಕಾರ -ಇವೆಲ್ಲಕ್ಕಿಂತಲೂ ಬೇರೆಯಾದವನು.ಅವನಲ್ಲಿ ಷಡ್ವಿಕಾರಗಳು ಸ್ವಲ್ಪವೂ ಇರುವುದಿಲ್ಲ..(ಪುಟ118)
(ಹುಟ್ಟುವುದು,ಇರುವುದು,ಬೆಳೆಯುವುದು,ಪರಿಣಾಮ ಹೊಂದುವುದು,ಕ್ಷಯವಾಗುವುದು,ಸಾಯುವುದು-ಇವುಗಳಿಗೆ ಷಡ್ವಿಕಾರಗಳೆಂದು ಹೆಸರು.ಈ ವಿಕಾರಗಳು ದೇಹಕ್ಕೇ ವಿನಃ ಆತ್ಮನಿಗಲ್ಲ)
(ಇಲ್ಲಿಗೆ 'ತ್ವಂ' ಪದದ ಅಥ೯ವಿವರಣೆ ಮುಗಿಯಿತು.)
8) ತತ್ ಪದದ ಅಥ೯:
28)ಹೀಗೆ 'ತ್ವಂ' ಎಂಬುದರ ಅಥ೯ವನ್ನು ನಿಶ್ಚಯಿಸಿಕೊಂಡಮೇಲೆ
ಪುನಃ -ಅದಲ್ಲದ್ದನ್ನು (ಎಂದರೆ ಬ್ರಹ್ಮವಲ್ಲದ್ದನ್ನು)ತಳ್ಳಿಹಾಕುವುದೆಂಬ ನಿಷೇಧದ ಮೂಲಕವೂ
ನೇರವಾದ ವಿಧಿಯ ಮೂಲಕವೂ 'ತತ್'('ಅದು'ಎಂದರೆ ಬ್ರಹ್ಮ)ಪದದ ಅಥ೯ವನ್ನು ಕುರಿತು ಚಿಂತಿಸಬೇಕು.(ಪುಟ118)
(ತತ್ವಮಸಿ(ತತ್ ತ್ವಮ್ ಅಸಿ)ಎಂಬ ವಾಕ್ಯದಲ್ಲಿ ಇದುವರೆಗೆ ತ್ವಮ್ ಪದದ ಅಥ೯ವನ್ನು ವಿವೇಚಿಸಿ ಈಗ 'ತತ್'('ಅದು' ಎಂದರೆ ಬ್ರಹ್ಮ)ಎಂಬ ಪದದ ಅಥ೯ವನ್ನು ವಿವೇಚಿಸಲು ಪ್ರಾರಂಭಿಸಿದೆ.ಈ ವಿವೇಚನೆಯನ್ನು ಎರಡು ರೀತಿಯಲ್ಲಿ ಮಾಡಬಹುದು.ನಿಷೇಧದ ಮೂಲಕ ಮತ್ತು ವಿಧಿಯಮೂಲಕ.ತತ್ ಎಂದರೆ ಅದು ಅತದ್ ಎಂದರೆ ಅದಲ್ಲದ್ದು.ವ್ಯಾಪ್ತಿ ಎಂದರೆ ಹೋಗಲಾಡಿಸುವುದು.ಅತದ್ವ್ಯಾವೃತ್ತಿ,ಎಂದರೆ ಅದಲ್ಲದ್ದನ್ನು ಅಲ್ಲಗಳೆಯುವುದು.ಬ್ರಹ್ಮವಲ್ಲದ್ದನ್ನು ತಳ್ಳಿಹಾಕುವುದು.ಇದೇ ನಿಷೇಧ ಮಾಗ೯.ಬ್ರಹ್ಮದ ಲಕ್ಷಣವನ್ನೇ
ನೇರವಾಗಿ ಚಿಂತಿಸುವುದು ವಿಧಿಮಾಗ೯.
ಇವೆರಡನ್ನೂ ಮುಂದಿನ ಎರಡು ಶ್ಲೋಕಗಳಲ್ಲಿ
ವಿವರಿಸಿದೆ.)
2೯-30)ಪರನಾತ್ಮನು (ಜನನಮರಣರೂಪದ) ಸಂಸಾರದ ಎಲ್ಲಾ ದೋಷಗಳಿಂದಲೂ ರಹಿತನಾದವನು.'ಸ್ಥೂಲವಲ್ಲ' ಇತ್ಯಾದಿ ಲಕ್ಷಣಗಳುಳ್ಳ ವನು'ದೃಷ್ಟಿಗೋಚರನಲ್ಲ-ಇತ್ಯಾದಿ ಗುಣಗಳುಳ್ಳವನು.ತಮಸ್ಸೆಂಬ ಕೊಳೆಯಿಲ್ಲದವನು.ಇವನಿಗಿಂತ ಹೆಚ್ಚಿನ ಅನಂದವಿಲ್ಲದವನು.ಸತ್ಯ-ಜ್ಞಾನಗಳನ್ನೇ ಶರೀರವಾಗಿ ಹೊಂದಿರುವವನು.ಇರುವಿಕೆಯೆಂಬ ಲಕ್ಷಣವುಳ್ಳವನು.ಸವ೯ವ್ಯಾಪಿ ಎಂದು ಹೇಳಲ್ಪಟ್ಟಿದ್ದಾನೆ.(ಪುಟ 11೯)
31)ಯಾರವಿಷಯವಾಗಿ ವೇದಗಳಲ್ಲಿ ಇವನು ಸವ೯ಜ್ಞನು ,ಎಲ್ಲಕ್ಕೂ ಒಡೆಯನು,ಸವ೯ಶಕ್ತನು,ಎಂದು ಸಮಥ೯ನೆ ಮಾಡಿದೆಯೋ ಅದೇ
ಬ್ರಹ್ಮವೆಂದು ನಿಶ್ಚಯಿಸಿಕೊ.(ಪುಟ120)
32)ಯಾವುದರ ಜ್ಞಾನದಿಂದ ಎಲ್ಲದರ ಜ್ಞಾನವೂ ಉಂಟಾಗುತ್ತದೆ ಎಂದು ಮಣ್ಣೇ ಮೊದಲಾದ ಅನೇಕ ಉದಾಹರಣೆಗಳಿಂದ ಶ್ರುತಿಗಳಲ್ಲಿ ಸಾಧಿಸಲಾಗಿದೆಯೋ ಅದನ್ನು
ಬ್ರಹ್ಮವೆಂದು ನಿಶ್ಚಯಿಸಿಕೊ.(ಪುಟ 120)
33)ಯಾವುದರ ವಿಷಯವಾಗಿ ಶ್ರುತಿಯು 'ಇದು ಅನಂತ'ಎಂದು ಪ್ರತಿಜ್ಞೆ ಮಾಡಿ ಅದನ್ನು ಸಾಧಿಸುವ ಸಲುವಾಗಿ
ಅದರ ಕಾಯ೯ವೆಂದು ಹೇಳಿರುವುದೊ ಅದನ್ನು ಬ್ರಹ್ಮವೆಂದು ನಿಶ್ಚಯಿಸಿಕೊ.(ಪುಟ120)
34)ಯಾವುದನ್ನು ಕುರಿತು
ಉಪನಿಷತ್ತುಗಳಲ್ಲಿ 'ಮೋಕ್ಷವನ್ನು ಬಯಸುವವರು ಇದನ್ನು ಅರಿಯಲು ಇಚ್ಛಿಸಬೇಕು ಎಂದು ಬಹು ಪ್ರಯತ್ನದಿಂದ ಸಮಥ೯ನೆ ಮಡಲಾಗಿದೆಯೋ ಅದೇ ಬ್ರಹ್ಮವೆಂದು ನಿಶ್ಚಯಿಸಿಕೊ.(ಪುಟ121)
35)ಇದು ಜೀವಾತ್ಮ ರೂಪದಿಂದ ಸೃಷ್ಟಿಯನ್ನು ಪ್ರವೇಶಿಸಿರುತ್ತದೆ ಮತ್ತು ಅವರನ್ನು ಅಂತಯಾ೯ಮಿ ರೂಪದಿಂದ
ನಿಯಮಿಸುತ್ತದೆ-ಎಂದು ಉಪನಿಷತ್ತುಗಳಲ್ಲಿ
ಯಾರ ವಿಷಯವಾಗಿ ಹೇಳಿದೆಯೋ
ಅದೇ ಬ್ರಹ್ಮವೆಂದು ನಿಶ್ಚಯಿಸಿಕೊ.(ಪುಟ121)
36)ಯಾರ ವಿಷಯದಲ್ಲಿ 'ಇವನು ಕಮ೯ಫಲಗಳನ್ನು ವಿತರಣೆ ಮಾಡುವವನು''ಜೀವಾತ್ಮರ ಕತೃ೯ತ್ವಕ್ಕೆ ಇವನು ಕಾರಣನು' ಎಂದು ಶ್ರುತಿಯಲ್ಲಿ ಹೇಳಿದೆಯೋ
ಅದು ಬ್ರಹ್ಮವೆಂದು ನಿಶ್ಚಯಿಸಿಕೊ.(ಪುಟ121)
(ಇಲ್ಲಿಗೆ ತತ್ -ಪದದ ಅಥ೯ವಿವರಣೆ ಮುಗಿಯಿತು.)
೯) 'ತತ್ವಮಸಿ'ವಾಕ್ಯದ ಅಥ೯:
37) ಇದುವರೆಗೆ ತತ್ ಮತ್ತು ತ್ವಂ ಪದದ ಅಥ೯ವನ್ನು ನಿಣ೯ಯಿಸಲಾಯಿತು.ಈಗ ತತ್ವಮಸಿ ಎಂಬ ವಾಕ್ಯದ ಅಥ೯ವನ್ನು ಚಿಂತಿಸಲಾಗುತ್ತದೆ.ಆ ಪದಗಳ ಅಥ೯ಗಳ ತಾದಾತ್ಮ್ಯವೇ ಇಲ್ಲಿ ವಾಕ್ಯಾಥ೯ ಎಂದರಿಯಬೇಕು.(ಪುಟ 122)
38)ಈ ವಾಕ್ಯಾಥ೯ದಲ್ಲಿ 'ಸಂಸಗ೯'ವನ್ನಾಗಲೀ 'ವಿಶಿಷ್ಟತ್ವ'ವನ್ನಾಗಲೀ ಒಪ್ಪಲಾಗದು.ಅಖಂಡ-ಆನಂದ-ಬ್ರಹ್ಮವೆ ವಾಕ್ಯಾಥ೯ವೆಂಬುದು ಜ್ಞಾನಿಗಳ ಅಭಿಪ್ರಾಯ.(ಪುಟ122)
('ಇದು ನೀಲಿಯ ಕಮಲ' ಎಂಬ ವಾಕ್ಯದಲ್ಲಿ ನೀಲಿಯ ಬಣ್ಣವೂ ಕಮಲವೂ ಪರಸ್ಪರ 'ಸಂಸಗ೯'ಅಥವ'ಸಂಬಂಧ' ವನ್ನು ಹೊಂದಿವೆ.'ನೀಲಿ'ಎಂಬ ಪದವು ಕಮಲವು ಬಿಳಿಯಲ್ಲ,ಹಳದಿಯಲ್ಲ,ಕೆಂಪಲ್ಲ ನೀಲಿಯೇ ಎಂಬುದನ್ನು ಸಮಥಿ೯ಸುತ್ತದೆ.'ಕಮಲ' ಎಂಬ ಪದವು ಆ ನೀಲಿಯ ಬಣ್ಣವನ್ನುಳ್ಳ ವಸ್ತುವು ಬಟ್ಟೆಯಲ್ಲ,ಗೋಡೆಯಲ್ಲ,ಕಮಲವೇ ಎಂಬುದನ್ನು ಸಮಥಿ೯ಸುತ್ತದೆ.ಹೀಗೆ ಇವು ಒಂದಕ್ಕೊಂದು ಸಂಬಂಧ ಹೊಂದಿರುವುದರಿಂದ ಂತಹ ವಾಕ್ಯಾಥ೯ಕ್ಕೆಸಂಸಗ೯ವೆಂದು ಹೆಸರು.
ನೀಲಿ ಎಂಬುದನ್ನು ಮಾತ್ರ ಕಮಲಕ್ಕೆ ವಿಶೇಷಣವಾಗಿ ತೆಗೆದುಕೊಂಡಾಗ ,ಕಮಲಕ್ಕೆ ನೀಲಿಯ ಸಂಬಂಧವನ್ನು ಹೇಳಲೇ ಬೇಕಾದ ಅವಶ್ಯಕತೆ ಇಲ್ಲದಾಗ ,ವಾಕ್ಯಾಥ೯ವು ವಿಶಿಷ್ಟ ಎನ್ನಿಸಿಕೊಳ್ಳುತ್ತದೆ.ಹಲವಾರು ಬಣ್ಣಗಳ ಕಮಲಗಳ ನಡುವೆ ಇರುವ ನೀಲಿಯ ಕಮಲವನ್ನು ನಿದೇ೯ಶಿಸುವಾಗ
ಇಂತಹ ಸಂದಭ೯ವೊದಗುತ್ತದೆ.
ತತ್ ತ್ವಮ್ ಅಸಿ ಎಂಬ ವಾಕ್ಯದಲ್ಲಿ
ಈ ಎರಡಥ೯ಗಳೂ ಹೊಂದುವುದಿಲ್ಲ.ಏಕೆಂದರೆ
ಅವೆರಡು ಪದಗಳು ಒಂದೇ ಬ್ರಹ್ಮವನ್ನು ಸೂಚಿಸುತ್ತವೆ.)
3೯)ಯಾವುದು ವ್ಯಕ್ತಿಯ ಒಳಗೆ ಚೈತನ್ಯವಾಗಿ ಬೆಳಗುತ್ತಿರುವುದೊ ಅದು ಅದ್ವಯ -ಆನಂದ ಲಕ್ಷಣವುಳ್ಳದ್ದು ಮತ್ತು ಯಾವುದು ಅದ್ವಯಾನಂದವೋ ಅದು ವ್ಯಕ್ತಿಯ ಒಳಗಿರುವ ಚೈತನ್ಯವೆಂಬ ಸ್ವರೂಪವನ್ನೇ
ಉಳ್ಳದ್ದು.(ಪುಟ 123)
40)ಹೀಗೆ ಅನ್ಯೋನ್ಯ ತಾದಾತ್ಮ್ಯದ ಜ್ಞಾನವು ಯಾವಾಗ ಉಂಟಾಗುತ್ತದೆಯೋ ಆಗ ತ್ವಮ್ ಎಂಬುದರಿಂದ ಸೂಚಿತವಾದದ್ದು ಬ್ರಹ್ಮವಲ್ಲ,ಮತ್ತೊಂದು ಎಂಬುದು ಕೂಡಲೇ ಹೋಗಿಬಿಡುತ್ತದೆ.
(ಪುಟ 123)
41)ಹಾಗೆಯೇ ತತ್ ಎಂಬುದು ಪರೋಕ್ಷವಾದ ವಸ್ತುವನ್ನು ಸೂಚಿಸುತ್ತದೆ.(ಎಂಬ ಅಜ್ಞಾನವೂ ಹೋಗಿಬಿಡುತ್ತದೆ).ಶಿಷ್ಯ:ಹೀಗಾದಲ್ಲಿ ಅದರಿಂದೇನಾಗುತ್ತದೆ?ಗುರು:ಕೇಳು ವ್ಯಕ್ತಿಯ ಒಳಗಿರುವ ಚೈತನ್ಯವು ಪೂಣ೯-ಆನಂದ-ಅದ್ವಯ ರೂಪದಿಂದ ಉಳಿದುಕೊಳ್ಳುತ್ತದೆ.(ಪುಟ123)
42)ತತ್ ಮತ್ತು ತ್ವಂ ಎಂಬ ಪದಗಳು ಯಾವ ಅಥ೯ವನ್ನು ಸೂಚಿಸುತ್ತವೆಯೋ ಅವೆರಡನ್ನೂ ಗ್ರಹಿಸಿ ತತ್ ತ್ವಮ್ ಅಸಿ ಮೊದಲಾದ
ವಾಕ್ಯವು ಅವುಗಳಿಗೆ ಏಕತ್ವವನ್ನು ಸಾಧಿಸುತ್ತದೆ.(ಪುಟ123)
43)ಪದಗಳ ನೇರವಾದ ಮತ್ತು ವಿಶೇಷವಾದ ಅಥ೯ಗಳನ್ನು ಬಿಟ್ಟಮೇಲೆ ವಾಕ್ಯವು ತನ್ನ ಅಥ೯ವನ್ನು ಯಾವರೀತಿ ತಿಳಿಸಿಕೊಡುವುದೋ ,ನಾವು ಆ ರೀತಿ ಎಚ್ಚರಿಕೆಯಿಂದ ವಿವರಿಸಿರುತ್ತೇವೆ.(ಪುಟ124)
44)ಯಾವ ಚೈತನ್ಯವು ಮನಸ್ಸಿಗೆ ಸಂಬಂಧಪಟ್ಟಿದ್ದು,'ನಾನು' ಎಂಬ ಶಬ್ದಕ್ಕೂ
ಅದರ ಅಥ೯ಕ್ಕೂ ಆಧಾರವಾಗಿ ತೋರುತ್ತಿದೆಯೋ ಅದು ತ್ವಮ್ ಎಂಬ ಪದದಿಂದ ನೇರವಾಗಿ ಹೇಳಲ್ಪಟ್ಟಿದೆ.(ಪುಟ124)
45)ಮಾಯೆಯನ್ನು ಜಗದ್ಬೀಜವಾಗಿ ಹೊಂದಿರುವ ಸವ೯ಜ್ಞತ್ವವೇ ಮೊದಲಾದ ಲಕ್ಷಣಗಳುಳ್ಳ
ಪರೋಕ್ಷದಂತೆ ತೋರಿಬರುವ
ಸತ್ಯ ಮೊದಲಾದ ಸ್ವರೂಪವುಳ್ಳ(ವಸ್ತುವೇ)ತತ್ ಎಂಬ ಪದದಿಂದ
ನೇರವಾಗಿ ಹೇಳಲ್ಪಟ್ಟಿದೆ.(ಪುಟ124)
(ಹೀಗೆ ತ್ವಮ್ ಪದದಿಂದ ನೇರವಾಗಿ ಜೀವ ಚೈತನ್ಯವೂ ,ತತ್ ಪದದಿಂದ ನೇರವಗಿ ಜಗತ್ಕಾರಣವೂ
ಮಾಯೆಯೆಂಬ ಉಪಾಧಿಯುಕ್ತವೂ
ಆದ ಬ್ರಹ್ಮವು ಹೇಳಲ್ಪಟ್ಟಿದೆ.ಇವೆರಡೂ ಒಂದೇ ಅಲ್ಲದ್ದರಿಂದ
ತತ್ವಮಸಿ ವಾಕ್ಯದಲ್ಲಿ ಪದದಲ್ಲಿ ಪದಗಳ ನೇರ ಅಥ೯ವನ್ನು ಗ್ರಹಿಸಬಾರದು.)
46) ಒಂದೇ ವಸ್ತುವಿಗೆ ಅದು ಪ್ರತ್ಯಕ್ಷ ,ಅದು ಪರೋಕ್ಷ,ಅದಕ್ಕೆ ಎರಡನೆಯ ವಸ್ತುವುಂಟು.ಅದು ಎರಡನೆಯದಿಲ್ಲದ ಪೂಣ೯ವಸ್ತು-ಎಂದು ಹೀಗೆ ಲಕ್ಷಣವನ್ನು ಹೇಳುವುದು ಪರಸ್ಪರ ವಿರುದ್ಧವಾಗುವುದರಿಂದ (ಅಂತಹ ಸಂದಭ೯ಗಳಲ್ಲಿ)ಲಕ್ಷಣೆಯನ್ನು ಅಥವಾ ಲಕ್ಷ್ಯಾಥ೯ವನ್ನು ಗ್ರಹಿಸಬೇಕು. (ಪುಟ125)
(ತ್ವಂ ಪದದಿಂದ ನೇರವಾಗಿ ಹೇಳಲ್ಪಟ್ಟಿರುವ ಜೀವನುಪ್ರತ್ಯಕ್ಷ,ಅನೇಕ.ತತ್ ಪದದಿಂದ ಹೇಳಲ್ಪಡುವ
ಬ್ರಹ್ಮವು ಪರೋಕ್ಷ ಮತ್ತು ಏಕ.ಇವೆರಡೂ ಒಂದೇ ಆಗಲು ಸಾಧ್ಯವಿಲ್ಲವಾದ್ದರಿಂದ
ನೇರವಾದ ಅಥ೯ವನ್ನು ಬಿಟ್ಟು
ಲಕ್ಷ್ಯಾಥ೯ವನ್ನು ಗ್ರಹಿಸಬೇಕು.)
47)ನೇರವಾದ ಅಥ೯ವನ್ನು ತೆಗೆದುಕೊಂಡಾಗ ಅದು ಇತರ ಪ್ರಮಾಣಗಳಿಗೆ ವಿರುದ್ಧವಾದರೆ ಆಗ
ನೇರವಾದ ಅಥ೯ವನ್ನು ಬಿಡದೆ ತೋರುವ ಮತ್ತೊಂದು ಅಥ೯ವನ್ನು
ಲಕ್ಷಣೆಯೆಂದು ಹೇಳುತ್ತಾರೆ.(ಪುಟ125)
48)ತತ್ ತ್ವಂ ಅಸಿ ಮೊದಲಾದ ವಾಕ್ಯಗಳಲ್ಲಿರುವ ಲಕ್ಷಣೆಯು ಭಾಗ ಲಕ್ಷಣೆ ಎನಿಸುತ್ತದೆ.'ಅವನೇಇವನು'- ಇದೇ ಮೊದಲಾದ ವಾಕ್ಯದ ಪದಗಳ(ಅಥ೯ವನ್ನು ವಿವರಿಸುವಾಗ ಗ್ರಹಿಸುವ ಲಕ್ಷಣೆಯಂತೆ)
ಬೇರೆ ಅಲ್ಲ.(ಪುಟ125)
(ಲಕ್ಷಣೆಯು ಮೂರು ವಿಧ:1)ಜಹಲ್ಲಕ್ಷಣೆ 2) ಅಜಹಲ್ಲಕ್ಷಣೆ 3)ಜಹದಜಹಲ್ಲಕ್ಷಣೆ ಅಥವಾ ಭಾಗ ಲಕ್ಷಣೆ.
'ಗಂಗೆಯಲ್ಲಿರುವ ಗೊಲ್ಲರಹಳ್ಳಿಎಂದಾಗ,ಗಂಗಾನದಿಯೊಳಗೆ ಹಳ್ಳಿಯು ಇರುವುದು ಅಸಾಧ್ಯವಾದುದರಿಂದ,ಗಂಗೆಯ ದಡದ ಹತ್ತಿರ ಇರುವ ಹಳ್ಳಿ ಯನ್ನು ಗ್ರಹಿಸಬೇಕಾಗುತ್ತದೆ.ಈ ಲಕ್ಷಣೆಗೆ ಜಹಲ್ಲಕ್ಷಣೆ ಎಂದು ಹೆಸರು.(ಜಹತ್=ಬಿಡುವುದು)
'ಕೆಂಪು ಬಣ್ಣ ಓಡುತ್ತಿದೆ'ಎಂದು ಹೇಳಿದಾಗ ಕೇವಲ ಬಣ್ಣವು ಓಡುವುದು ಅಸಂಭವವಾದ್ದರಿಂದ ಕೆಂಪು ಬಣ್ಣದ ಪ್ರಾಣಿಯು ಓಡುತ್ತಿದೆ ಎಂದು ಅರಿಯಬೇಕಾಗುತ್ತದೆ.ಇಲ್ಲಿ ಮೂಲವಾಕ್ಯದ ಕೆಂಪು ಎಂಬುದನ್ನು ಪೂಣ೯ವಾಗಿ ಕೈ ಬಿಟ್ಟಿಲ್ಲವಾದ್ದರಿಂದ ಇದು ಅಜಹಲ್ಲಕ್ಷಣೆಯೆನಿಸಿದೆ.
'ಇವನೇ ಆ ದೇವದತ್ತ' ಎಂಬ ವಾಕ್ಯವು ಮೊನ್ನೆ ಪೇಟೆಯಲ್ಲಿ ಕಂಡಿದ್ದ ವ್ಯಕ್ತಿ ಇಂದು ನಮ್ಮ ಮನೆಯ ಮುಂದೆ ಬಂದು ನಿಂತಾಗ ಹೇಳಿದ್ದು.ಹಿಂದೆ ನೋಡಿದ್ದ ವ್ಯಕ್ತಿ ಬೇರೆ ಜಾಗ ಕಾಲಗಳಿಗೆ ಸಂಬಂಧಿಸಿದವನು.ಈಗ ನೋಡುತ್ತಿರುವ ವ್ಯಕ್ತಿಯು ಇನ್ನೊಂದು ಜಾಗಕಾಲಗಳಿಗೆ ಸಂಬಂಧಿಸಿದವನು.ಹೀಗೆ ದೇಶ ಕಾಲಗಳು ಬೇರೆಯಾಗಿದ್ದರೂ ವ್ಯಕ್ತಿ ಮಾತ್ರ ಒಬ್ಬನೇ.ಆದ್ದರಿಂದ ಆ ವಾಕ್ಯಕ್ಕೆ ಅಥ೯ಮಾಡುವಾಗ
ವಿರುದ್ದ ದೇಶ ಕಾಲಗಳಿಗೆ ಸಂಬಂಧಿಸಿದ ಭಾಗವನ್ನು ತ್ಯಜಿಸಿ ಅವಿರುದ್ಧವಾದ ಭಾಗವನ್ನು ಮಾತ್ರ ಸ್ವೀಕರಿಸುತ್ತೇವೆ.ಹೀಗೆ ಅಧ೯ ಬಿಟ್ಟು ಅಧ೯ ಸ್ವೀಕರಿಸುವ ಲಕ್ಷಣೆಗೆಜಹದಜಹಲ್ಲಕ್ಷಣೆ ಅಥವ ಭಾಗಲಕ್ಷಣೆ ಎನ್ನುವರು.
ತತ್ವಮಸಿ ವಾಕ್ಯಕ್ಕೆ ಅಥ೯ಮಾಡುವಾಗ
ಈ ಲಕ್ಷಣೆಯನ್ನೇ ಗ್ರಹಿಸಬೇಕು.ಏಕೆಂದರೆ ಅಂತಃಕರಣದಲ್ಲಿ ಪ್ರತಿಬಿಂಬಿತವಾಗಿ ಜೀವಾತ್ಮನೆನಿಸಿದ ಚೈತನ್ಯನೂ ಮಾಯಾಧೀಶ್ವರನಾದ ಬ್ರಹ್ಮ ಚೈತನ್ಯವೂ ಬೇರೆ ಬೇರೆ ಉಪಾಧಿಗಳನ್ನು ಬಿಟ್ಟು ಶುದ್ಧ ಚೈತನ್ಯಾಂಶಗಳನ್ನು
ಗ್ರಹಿಸಿದರೆ ಮಾತ್ರ ಅವರಿಬ್ಬರಲ್ಲಿ ಐಕ್ಯವು ಸಾಧ್ಯ.)
4೯)'ನಾನು ಬ್ರಹ್ಮ'ಎಂಬ ವಾಕ್ಯದ ಅಥ೯ಜ್ಞಾನವು ತಡವಾಗಿ ನೆಲಸುವವರೆಗೆ ಶಮವೇ ಮೊದಲಾದ ಸಾಧನ ಸಹಿತನಾಗಿ ಶ್ರವಣಾದಿಗಳನ್ನು ಅಭ್ಯಾಸ ಮಾಡಬೇಕು(ಪುಟ126)
(ಶ್ರವಣ,ಮನನ,ನಿದಿಧ್ಯಾಸನ)
ಆತ್ಮನ ಬ್ರಹ್ಮದ ವಿಷಯವನ್ನು
ಶ್ರುತಿ ಆಚಾಯ೯ರಿಂದ ಕೇಳುವುದು ಶ್ರವಣ.
ಅದನ್ನು ಕುರಿತು ಚಿಂತಿಸಿ ಸಂಶಯಗಳನ್ನೆಲ್ಲ ಹೋಗಲಾಡಿಸಿಕೊಳ್ಳವುದು ಮನನ.
ಇದರಿಂದ ತತ್ವ ಯಾವುದೆಂದು ಮನಸ್ಸಿನಲ್ಲಿ ದೃಢವಾದ ಮೇಲೆ
ಅದನ್ನು ಕುರಿತು ಸತತವಾಗಿ ಧ್ಯಾನಿಸುವುದು ನಿದಿಧ್ಯಾಸನ.(ಬೃಹದಾರಣ್ಯಕ ಉಪನಿಷತ್ 4-1-1.ನೋಡಿ)
10) ಮುಕ್ತಿ:
50)ಶ್ರುತಿಯ ಮತ್ತು ಗುರುವಿನ ಅನುಗ್ರಹದಿಂದ ಐಕ್ಯಜ್ಞಾನವು ದೃಢವಾಗಿ ನೆಲೆಸಿದಾಗ ಪುರುಷನು ಸಂಸಾರದ ಕಾರಣವನ್ನು ಸಂಪೂಣ೯ವಾಗಿ ಹೋಗಲಾಡಿಸಿ ಕೊಳ್ಳುತ್ತಾನೆ. (ಅಜ್ಞಾನವನ್ನು).(ಪುಟ127)
51)ಇಂತಹ ಪುರುಷನು ಸ್ಥೂಲ ಸೂಕ್ಷ್ಮ ಶರೀರಗಳನ್ನು ಕರಗಿಸಿ
ಸೂಕ್ಷ್ಮ ಭೂತಗಳಿಂದ ಸುತ್ತುವರಿಯಲ್ಪಡದೆ,ಕಮ೯ ಸಂಕೋಲೆಗಳಿಂದ ಬಿಡಲ್ಪಟ್ಟವನಾಗಿ ಕೂಡಲೇ ಮುಕ್ತಿಯನ್ನು ಹೊಂದುತ್ತಾನೆ.(ಪುಟ127)
152-153) ಅನನಾರಬ್ಧ ಕಮ೯ದ ಬಂಧನವು ನಾಶವಾಗಲಾಗಿ ಪ್ರಾರಬ್ಧಕಮ೯-ವೇಗದಿಂದ ಸ್ವಲ್ಪಕಾಲ ಜೀವನ್ಮುಕ್ತನಾಗಿ
ಜೀವಿಸಿರುತ್ತಾನೆ.ಯಾವುದಕ್ಕಿಂತ ಹೆಚ್ಚಿನ ಆನಂದವಿಲ್ಲವೋ ಅಂಥ ಆನಂದವನ್ನು ಪುನಜ೯ನ್ಮವಿಲ್ಲದ (ಅವಸ್ಥೆಯನ್ನು),ವಿಷ್ಣುವಿನ ಪರಮಪದವನ್ನು ,ಕೈವಲ್ಯವನ್ನು ಹೊಂದುತ್ತಾನೆ.
(ಪುಅ127)
(ನಾವು ಮಾಡುವ ಕಮ೯ವು ಫಲವನ್ನು ಕೊಟ್ಟೇ ತೀರಬೇಕು.ಯಾವ ಕಮ೯ದ ಫಲವು ಇನ್ನೂ ಪ್ರಾರಂಭವಾಗಿಲ್ಲವೋ ಅದನ್ನು ಅನಾರಬ್ಧ ಕಮ೯ಅಥವಾ ಸಂಚಿತ ಕಮ೯ಎಂತಲೂ,ಯಾವುದು ಈಗಾಗಲೇ
ಫಲಿಸಲು ಪ್ರಾರಂಭಿಸಿ ಈ ಜನ್ಮಕ್ಕೆ ಕಾರಣವಾಗಿದೆಯೋ
ಅದನ್ನು ಪ್ರಾರಬ್ಧ ಕಮ೯ ಎನ್ನುತ್ತಾರೆ.ಜ್ಞಾನದಿಂದ ಅನಾರಬ್ಧ ಕಮ೯ವು ನಾಶವಾಗುತ್ತದೆ.ಪ್ರಾರಬ್ಧ ಕಮ೯ವು ಮಾತ್ರ ಅನುಭವಿಸುವುದರಿಂದಲೇ ಸವೆಸಬೇಕು.
ಇಲ್ಲಿಗೆ ಪರಮಹಂಸ ಪರಿವ್ರಾಜಕಾಚಾಯ೯ ಶರೀಮತ್ ಶಂಕರ ಭಗವತ್ಪಾದರಿಂದ ರಚಿತವಾದ 'ವಾಕ್ಯವೃತ್ತಿ'ಯು ಸಂಪೂಣ೯ವಾಗಿತು
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
ನಾಲ್ಕನೆಯ ಗ್ರಂಥ:'ಲಘುವಾಕ್ಯವೃತ್ತಿ':
(ವಾಕ್ಯವೆಂದರೆ 'ಅಹಂ ಬ್ರಹ್ಮಾಸ್ಮಿ'.ತತ್ವಮಸಿ ಮೊದಲಾದ ವೇದಾಂತ ಮಹಾವಾಕ್ಯಗಳು.ವೃತ್ತಿ ಎಂದರೆ ಟೀಕೆ.ವೇದಾಂತೋಕ್ತ ಮಹಾವಾಕ್ಯಗಳ ಮೇಲೆ ಇದೊಂದು
ಲಘು ಟೀಕೆಯಾಗಿರುವುದರಿಂದ ಲಘುವಾಕ್ಯವೃತ್ತಿ ಎನಿಸಿದೆ)
1) ಆತ್ಮನಿಗೆ ಮಾಂಸಮಯ ದೇಹವೇ ಸ್ಥೂಲೋಪಾಧಿಯು.ಜ್ಞಾನೇಂದ್ರಿಯಗಳು,ಕಮೇ೯ಂದ್ರಿಯಗಳು,
ಬುದ್ಧಿ,ಪ್ರಾಣ-ಇವುಗಳಿಂದ ಒಡಗೂಡಿದ
ವಾಸನಾಮಯದೇಹವೇ ಸೂಕ್ಷ್ಮ ಉಪಾಧಿಯು.(ಪುಟ133)
ಆತ್ಮನಿಗೆ ಸ್ಥುಲ ಸೂಕ್ಷ್ಮ ಮತ್ತು ಕಾರಣ ಎಂಬ ಮೂರು ಶರೀರಗಳು ಉಪಾಧಿಗಳಾಗಿವೆ.ಎಂದರೆ ಹಗ್ಗದಲ್ಲಿ ಕಾಣುತ್ತಿರುವ ಹಾವು ಹಗ್ಗದ ನಿಜ ಸ್ವರೂಪವನ್ನು ಮರೆಮಾಡುವಂತೆ ಇವು ನಿತ್ಯ-ಶುದ್ಧ-ಬುದ್ಧ-ಮುಕ್ತನಾದ ಆತ್ಮನ ನಿಜಸ್ವರೂಪವನ್ನು ಮರೆಮಾಡಿವೆ.)
2)ಕಾರಣ ಶರೀರ:
2)ಅಜ್ಞಾನವೇ ಕಾರಣೋಪಾಧಿಯು. ಈ ಮೂರು ಉಪಾಧಿಗಳನ್ನೂ ಬೆಳಗುವ ಬೋಧಸ್ವರೂಪನಾದ ಪ್ರತ್ಯಗಾತ್ಮನು ಅವುಗಳ ಸಾಕ್ಷಿ.ಬುದ್ಧಿಯನ್ನು ಒಳಹೊಕ್ಕಿರುವ
ಚಿದಾತ್ಮನ ಪ್ರತಿಬಿಂಬವಾದ ಜೀವನೇ ಪುಣ್ಯ-ಪಾಪಗಳೆರಡಕ್ಕೂ ಕತೃ೯ವಾಗಿದ್ದಾನೆ..(ಪುಟ134)
(ಅಜ್ಞಾನ ಎಂದರೆ ಅವಿದ್ಯೆ)
(ಸೂಯ೯ನು ನೀರನ್ನು ಹೊಕ್ಕಿರುವಂತೆ ಜಡವಾದ ಬುದ್ಧಿಯಲ್ಲಿ
ಪ್ರತ್ಯಗಾತ್ಮನು ಪ್ರತಿಬಿಂಬಿತನಗಿರುತ್ತಾನೆ.ಈ
ಪ್ರತಿಬಿಂಬವನ್ನೇ ಜೀವಾತ್ಮನೆಂದು ಕರೆದಿರುತ್ತಾರೆ.)
3)ಆ ಜೀವಾತ್ಮನೇ ಪ್ರಾರಬ್ಧಕಮ೯ಕ್ಕೆ ವಶನಾಗಿ ಇಹಲೋಕ-ಪರಲೋಕಗಳಲ್ಲಿ ಸಂಸರಿಸುತ್ತಿರುತ್ತಾನೆ.ಪರಿಶುದ್ಧ ಜ್ಞಾನಸ್ವರೂಪನಾದ ಆತ್ಮನನ್ನು ಜ್ಞಾನದ
ಆಭಾಸ ಮಾತ್ರವಾಗಿರುವ ಜೀವನಿಂದ ಬಹಳ ಪ್ರಯತ್ನಪೂವ೯ಕವಾಗಿ ಬೇಪ೯ಡಿಸಬೇಕು.(ಪುಟ134)
(ಈ ಜೀವಾತ್ಮನು ಕೇವಲ ಮಿಥ್ಯಾರೂಪನು)
4) ಅವಸ್ಥಾತ್ರಯ:
4) ಚಿದಾಭಾಸನಾದ ಜೀವಾತ್ಮನ ವ್ಯವಹಾರವೆಲ್ಲ
ಜಾಗ್ರತ್ ಮತ್ತು ಸ್ವಪ್ನೆಂಬ ಅವಸ್ಥಾದ್ವಯದಲ್ಲಿ
ಮಾತ್ರವೇ.ಸುಷುಪ್ತಿ ಕಾಲದಲ್ಲಿ ಈ ಚಿದಾಭಾಸನು ಲಯಹೊಂದಲಾಗಿ
ಶುದ್ಧ ಬೋಧಸ್ವರೂಪನಾದ ಆತ್ಮನು ಜಡವಾದ ಅಜ್ಞಾನವನ್ನು ಪ್ರಕಾಶಿಸುತ್ತಾನೆ.(ಪುಟ135)
(ಗಾಢನಿದ್ರಾ ಸಮಯದಲ್ಲಿ ಬುದ್ಧಿಯು ಲಯವಾಗಿರುವುದರಿಂದ ಅದರಲ್ಲಿ ಪ್ರತಿಬಿಂಬಿತನಾದ ಆತ್ಮನು ,ಎಂದರೆ ಜೀವಾತ್ಮನೂ ಕೂಡ ಲಯ ಹೊಂದಿರುತ್ತಾನೆ.ಆದರೆ ಸಾಕ್ಷಿಯೂ ಚೈತನ್ಯಸ್ವರೂಪನೂ
ಆದ ಆತ್ಮನು
ಮಾತ್ರ ನಿವಿ೯ಕಾರನಾಗಿಯೇ ನೆಲಸಿರುತ್ತಾನೆ.ಏಕೆಂದರೆ ನಿದ್ರಿಸಿದವನು ಎಚ್ಚೆತ್ತಮೇಲೆ "ನನಗೇನೂ ತಿಳಿಯಲಿಲ್ಲ ಬಹು ಚೆನ್ನಾಗಿ ನಿದ್ರಿಸಿದೆನು"ಎಂದು ಹೇಳುತ್ತಾನೆ.ಇದರಿಂದ ನಿದ್ರಾ ಕಾಲದಲ್ಲಿ ಅಜ್ಞಾನವೂ
ಸುಖವೂ ಇದ್ದಿತೆಂಬುದೂಅವುಗಳನ್ನು ಅನುಭವಿಸುವವನೊಬ್ಬ ಇದ್ದನೆಂಬುದೂ
ತಿಳಿದು ಬರುತ್ತದೆ.ಈ ಅಜ್ಞಾನವನ್ನೇ ಜಾಡ್ಯವೆಂದು ಕರೆದಿರುವುದು.'ದೃಷ್ಟøವಿನ ದೃಷ್ಟಿಗೆ ನಾಶವಿಲ್ಲ.ಏಕೆಂದರೆ ಅವನು ಅವಿನಾಶಿಯಾಗಿರುತ್ತಾನೆ'(ಬೃ.ಉ.(4-3-23))
5)ಜಾಗ್ರದವಸ್ಥೆಯಲ್ಲಿಯೂ
ನಿಶ್ಚಲ ಬುದ್ಧಿಯು
ಶುದ್ಧವಾದ ಆತ್ಮಚೈತನ್ಯದಿಂದಲೇ
ಪ್ರಕಾಶಿಸಲ್ಪಡುತ್ತದೆ.ಚಿದಾಭಾಸನಾದ ಜೀವಾತ್ಮನಿಂದ ಕೂಡಿದ ಬುದ್ಧಿವ್ಯಾಪಾರಗಳು
ಕೂಡ ಆ ಆತ್ಮಚೈತನ್ಯದಿಂದಲೇ
ಪ್ರಕಾಶಿಸಲ್ಪಡುತ್ತವೆ.(ಪುಟ134)
(ಜಾಗ್ರದವಸ್ಥೆಯಲ್ಲಿ ಕೂಡ
ಬುದ್ಧಿಯು ವೃತ್ತಿಗಳಿಂದ ಕೂಡಿರಬಹುದು ಅಥವಾ ವೃತ್ತಿರಹಿತವಾಗಿರಬಹುದು. ಹೇಗಿದ್ದರೂ ಅದು ಆತ್ಮಚೈತನ್ಯದಿಂದಲೇ ಪ್ರಕಾಶಿತವಾಗುತ್ತದೆ.)
5)ಚೈತನ್ಯವು ಬುದ್ಧಿಗಿಂತ ಬೇರೆ ಮತ್ತು ಅದರ ಸಾಕ್ಷಿ:
6)ಬೆಂಕಿಯಲ್ಲಿ ಕಾಯ್ದ ನೀರು ತಾನೂ ಬಿಸಿಯಾಗಿ ದೇಹವನ್ನು ಸುಡುವಂತೆ ಚಿದಾತ್ಮನಿಂದ ಪ್ರಕಾಶಿತವಾದ ಬುದ್ಧಿಯು
ಇತರ ವಸ್ತುಗಳನ್ನೂ ಪ್ರಕಾಶಿಸುತ್ತದೆ.(ಪುಟ135)
7)ರೂಪವೇ ಮೊದಲಾದವುಗಳ ವಿಷಯದಲ್ಲಿ ಉಂಟಾಗುವ ಗುಣದೋಷಾದಿ ಭಾವನೆಗಳು
ಕೇವಲ ಮನೋವ್ಯಾಪಾರ.ಈ ಮನಃಕ್ರಿಯೆಗಳನ್ನೂ
ವಿಷಯವಸ್ತುಗಳನ್ನೂ ಚೈತನ್ಯವು
ಬೆಳಗುತ್ತದೆಂದು ಹೇಳುತ್ತಾರೆ.(ಪುಟ136)
8)ನಿರುಪಾಧಿಕ ಚೈತನ್ಯವು (ರೂಪ) ಮೊದಲಾದವು ಮತ್ತು ಗುಣದೋಷಗಳ ಗ್ರಹಣದಲ್ಲಿ ಈ ಚೈತನ್ಯವೇ ಅನುಸರಿಸಿಕೊಂಡು ಬರುತ್ತದೆ.(ಪುಟ 136)
(ಅಂತಃಕರಣವೇ ಮುಂತಾದ ಉಪಾಧಿಗಳ ಮೂಲಕ;ಸ್ವತಃ ಅಲ್ಲ.ಯಾವುದರಿಂದ ಎಲೈ ರಾಘವನೇ ಶಬ್ದ-ರಸ-ರೂಪ-ಗಂಧಗಳನ್ನು ಅರಿಯುವೆಯೊ ಆ ಆತ್ಮನೇ ಪರಬ್ರಹ್ಮವೆಂದೂ ಪರಮೇಶ್ವರನೆಂದೂ ತಿಳಿ'
ಎಂದು ಯೋಗ ವಾಸ್ಷ್ಠದಲ್ಲಿ ಹೇಳಿದೆ.)
೯)ಬುದ್ಧಿ ವೃತ್ತಿಗಳು
ಪ್ರತಿಕ್ಷಣವೂ ಪರಿಣಾಮ ಹೊಂದುತ್ತಿರುವುವು.ಆದರೆ ಚೈತನ್ಯವು ಮಾತ್ರ ಪರಿಣಾಮ ಹೊಂದುತ್ತಿಲ್ಲ. ಮುಕ್ತಾಫಲಗಳಲ್ಲಿ ಅನುಸ್ಯೂತವಾಗಿರುವ
ದಾರದಂತೆ ಬುದ್ಧಿಯ ವೃತ್ತಿಗಳಲ್ಲಿ ಚೈತನ್ಯವು (ಅನುಸ್ಯೂತವಾಗಿ)ನೆಲೆಸಿರುತ್ತದೆ.(ಪುಟ136)
(ಆದುದರಿಂದ ಚೈತನ್ಯವು ಜಡವೂ ಪರಿಣಾಮಿಯೂ
ದೃಶ್ಯವೂ ಆಗಿರುವ ಬುದ್ಧಿವೃತ್ತಿಗಳಿಗಿಂತ
ಬೇರೆಯೆಂಬುದು ದೃಢವಾಯಿತು)
10)ಮುಕ್ತಾಫಲಗಳಿಂದ ಆವೃತವಾದ ದಾರವು
ಎರಡು ಮುಕ್ತಾಫಲಗಳ ನಡುವೆ ಹೇಗೆ ಕಾಣಿಸುತ್ತದೆಯೋ
ಹಾಗೆಯೇ ಬುದ್ಧಿ ವೃತ್ತಿಗಳಿಂದ
ಆವೃತವಾದ ಚೈತನ್ಯವು
ಎರಡು ವ್ಯಕ್ತಿಗಳ ನಡುವೆ ಸ್ಪಷ್ಟವಾಗಿ ಗೋಚರವಾಗುತ್ತದೆ.(ಪುಟ137)
11)ಹಿಂದಿನ ಬುದ್ಧಿವೃತ್ತಿಯು ನಷ್ಟವಾದ ಮೇಲೆ ಮುಂದಿನ ಬುದ್ಧಿವೃತ್ತಿಯು ಹುಟ್ಟುವುದಕ್ಕೆ ಮುಂಚೆ ನಿವಿ೯ಕಲ್ಪ ಚೈತನ್ಯವು
ಸ್ಪಷ್ಟವಾಗಿ ಗೋಚರವಾಗುತ್ತದೆ.(ಪುಟ137)
(ವೃತ್ತಿರಹಿತವಾದ ಅಂತಃಕರಣವು ಶುದ್ಧ ಚೈತನ್ಯ ಸ್ವರೂಪನಾದ ಆತ್ಮನಿಂದ ವೀಕ್ಷಿಸಲ್ಪಡುತ್ತದೆ ಎಂದು ಅಭಿಪ್ರಾಯ.)
6) ವೃತ್ತಿ ನಿರೋಧಾಭ್ಯಾಸ:
12) ಬ್ರಹ್ಮಾನುಭವವನ್ನು ಬಯಸುವ
ಮುಮುಕ್ಷುಗಳು
ಪ್ರಯತ್ನ ಪೂವ೯ಕವಾಗಿ
ಬುದ್ಧಿವೃತ್ತಿಗಳ ನಿರೋಧವನ್ನು -ಒಂದು ಎರಡು ಮೂರು ಕ್ಷಣಗಳಂತೆ ಕ್ರಮವಾಗಿ ಅಭ್ಯಾಸ ಮಾಡಬೇಕು.(ಪುಟ137).
(ಏಕೆಂದರೆ ಅಂತಃಕರಣವು ವೃತ್ತಿಹೀನವಾದಾಗ ಶುದ್ಧ ಚೈತನ್ಯವು ಅನುಭವವೇದ್ಯವಾಗುತ್ತದೆ.)
13)ಸವಿಕಲ್ಪನಾದ ಈ ಜೀವನು 'ನಾನು ಬ್ರಹ್ಮ'ಎಂಬ ಮಹಾವಾಕ್ಯದಿಂದ ನಿವಿ೯ಕಲ್ಪ ಬ್ರಹ್ಮವೇ ಆಗುತ್ತಾನೆ.ಈ ಅಥ೯ವನ್ನೇ ಇಲ್ಲಿಯೂ ಪ್ರತಿಪಾದಿಸಿದೆ.(ಪುಟ138)
(ಶಾಸ್ತ್ರಾಚಾಯ೯ರ ಉಪದೇಶಕ್ಕೆ ಮೊದಲು ಸವಿಕಲ್ಪ ಚೈತನ್ಯ ರೂಪನಾಗಿದ್ದ ಜೀವನು ಜ್ಞಾನೋದಯವಾದ ಮೇಲೆ 'ನಿವಿ೯ಕಲ್ಪ ಬ್ರಹ್ಮವೇ'ತಾನು ಎಂಬುದನ್ನು ಅನುಭವಕ್ಕೆ ತಂದುಕೊಳ್ಳುತ್ತಾನೆ.)
(ಹಗ್ಗದಲ್ಲಿ ಕಾಣುವ ಹಾವು ಹಗ್ಗಕ್ಕಿಂತ ಹೇಗೆ ಬೇರೆಯಲ್ಲವೋ ಹಾಗೆಯೇ ಬ್ರಹ್ಮದಲ್ಲಿ
ಕಲ್ಪಿತವಾಗಿರುವ
ಜೀವನು ಬ್ರಹ್ಮಕ್ಕಿಂತ ಬೇರೆಯಲ್ಲ-ಎಂದು ಎಲ್ಲ ಉಪನಿಷತ್ತುಗಳೂ
ಯಾವ ಅಭಿಪ್ರಾಯವನ್ನು ಪ್ರತಿಪಾದಿಸುತ್ತವೆಯೋ ಅದನ್ನೇ ಈ ಲಘುವಾಕ್ಯವೃತ್ತಿಯೆಂಬ
ಗ್ರಂಥದಲ್ಲಿಯೂ ಪ್ರತಿಪಾದಿಸಿದೆ ಎಂದಥ೯)
14)ನಾನು ಸವಿಕಲ್ಪ ಚೈತನ್ಯ ರೂಪನಾದ (ಜೀವಾತ್ಮನಾಗಿದ್ದರೂ)(ಅಂಥಃಕರಣವನ್ನು ವೃತ್ತಿರಹಿತವಾಗಿ ಮಾಡುವುದರ ಮೂಲಕ)ಅದ್ವಿತೀಯ ಬ್ರಹ್ಮವೇ ಆಗುತ್ತೇನೆ.ಆದ್ದರಿಂದ ಸ್ವತಃಸ್ಸಿದ್ಧವಾಗಿರುವ
ಅಂಥಃಕರಣ ವಿಕಲ್ಪಗಳನ್ನು ಪ್ರಯತ್ನಪೂವ೯ಕವಾಗಿ ನಿರೋಧಿಸಬೇಕು.(ಪುಟ138)
(ಅಂತಃಕರಣವೆಂಬ ಉಪಾಧಿಯ ದೆಸೆಯಿಂದ ತೋರಿಬರುತ್ತಿದ್ದರೂ-ಎಂದಥ೯)
.
15)ಎಲ್ಲ ಅಂತಃಕರಣ ವೃತ್ತಿಗಳನ್ನೂ ನಿರೋಧಿಸಲು ಸಾಧ್ಯವಾದರೆ (ವಸಿಷ್ಟನೇ ಮೊದಲಾದ) ಜ್ಞಾನಿಗಳಿಗೆ ಪ್ರಿಯವಾದ ಸಮಾಧಿಯೂ (ಸಿದ್ಧಿಸುತ್ತದೆ).ಅದು ಸಾಧ್ಯವಾಗದಿದ್ದಲ್ಲಿ
ಕ್ಷಣಕಾಲವಾದರೂ (ವೃತ್ತಿಗಳನ್ನೂ
ನಿರೋಧಿಸಿ
ಆತ್ಮನ ಬ್ರಹ್ಮತ್ವವನ್ನು ಅನುಸಂಧಾನ ಮಾಡಬೇಕು.(ಪುಟ13೯)
(ಯಾವಾಗ ಪಂಚ ಜ್ಞಾನೇಂದ್ರಿಯಗಳು ಮನಸ್ಸಿನೊಂದಿಗೆ
ಶಾಂತವಾಗುವವೊ,ಬುದ್ಧಿಯು ವಿಚಲಿತವಾಗುವುದಿಲ್ಲವೊ ,ಅದನ್ನು 'ಪರಮಗತಿ'ಯೆಂದು ಕರೆಯುತ್ತಾರೆ.ಸ್ಥಿರವಾದ ಇಂದ್ರಿಯ ಧಾರಣೆ -ಎಂಬ ಈ ಅವಸ್ಥೆಯನ್ನೇ
ಯೋಗವೆಂದು ತಿಳಿಯುತ್ತಾರೆ.(ಕಠ.ಉ.6-10-11)
7) ಬ್ರಹ್ಮಾಕಾರ ವೃತ್ತಿಯ ಅಭ್ಯಾಸ:
16)ಶ್ರದ್ಧಾಳುವಾದವನು ಬುದ್ಧಿವೃತ್ತಿಗಳ ಮೂಲಕ
ತನ್ನ ಬ್ರಹ್ಮತ್ವವನ್ನು ಕುರಿತು ಚಿಂತಿಸಬೇಕು.ವಾಕ್ಯವೃತ್ತಿಯ ಮೂಲಕ ತನ್ನ ಬುದ್ಧಿಶಕ್ತಿಯಿದ್ದಷ್ಟೂ
ತನ್ನ ಬ್ರಹ್ಮತ್ವವನ್ನರಿತುಕೊಂಡು
ಯಾವಾಗಲೂ ಅದನ್ನೇ ಅಭ್ಯಾಸ ಮಾಡಬೇಕು.(ಪುಟ13೯)
(ಸದಾ ಕಾಲವೂ ಬ್ರಹ್ಮವನ್ನು ಚಿಂತಿಸುವ ಅಂತಃಕರಣವು ಬ್ರಹ್ಮದ ಆಕರವನ್ನು ಪಡೆದು
ಬ್ರಹ್ಮಸುಖವನ್ನು ಅನುಭವಕ್ಕೆ ತಂದುಕೊಡುತ್ತದೆ ಎಂಬುದು ಅಭಿಪ್ರಾಯ)
(ಮಲಗುವವರೆಗೆ ,ಸಾಯುವವರೆಗೆ,ವೇದಾಂತಚಿಂತನದಿಂದ ಕಾಲವನ್ನು ಕಳೆಯಬೇಕು .ಕಾಮಾದಿಗಳಿಗೆ ಸ್ವಲ್ಪವೂ
ಅವಕಾಶವನ್ನು ಕೊಡಬಾರದು.(ಎಂದು ಸ್ಮøತಿವಚನ ವಿರುತ್ತದೆ).
17)ಆ ಬ್ರಹ್ಮನನ್ನೇ ಕುರಿತು ಸದಾ ಧ್ಯನಿಸುವುದು,ಅದರ ವಿಷಯವಾಗಿ ಮಾತನಡುವುದು,ಅದರ ಬಗ್ಗೆ ಪರಸ್ಪರ ಜ್ಞಾನವಿನಿಯೋಗ ಮಾಡಿಕೊಳ್ಳುವುದು,ಅದರಲ್ಲಿಯೇ ಲೀನವಾದ ಮನಸ್ಸನ್ನು ಹೊಂದಿರುವುದು-ಇವುಗಳನ್ನು ಜ್ಞಾನಿಗಳು ಬ್ರಹ್ಮಾಭ್ಯಾಸವೆಂದು ಕರೆಯುತ್ತಾರೆ.(ಪುಟ140)
('ಆ ಆತ್ಮನೊಬ್ಬನನ್ನೇ ತಿಳಿದುಕೊಳ್ಳಿರಿ.ಬೇರೆ ಮಾತುಗಳನ್ನು ಬಿಡಿರಿ.ಇದು ಅಮೃತತ್ವಕ್ಕೆ ಸೇತು
ತಮೇವೈಕಂಜಾನಥಾತ್ಮಾನಮನ್ಯಾ ವಾಚೋ ವಿಮುಂಚಥಮೃತಸ್ಯೈವ ಸೇತುಃ ಎಂದು ಮುಂಡಕೋಪನಿಷತ್ತು (2-3-5)ಹೇಳುತ್ತದೆ)
18)(ಸಾಮಾನ್ಯರಿಗೆ)ದೇಹವೇ ಆತ್ಮ ಎಂಬ ಬುದ್ಧಿಯು ಎಷ್ಟು ದೃಢವಾಗಿರುವುದೋ ಅಷ್ಟೇ ದೃಢವಾಗಿ 'ಬ್ರಹ್ಮವೇ ಆತ್ಮ'ಎಂಬ ದೃಢಬುದ್ಧಿಯುಂಟಾದಾಗ (ಅಂಥ ಮುಕ್ತಿಯನ್ನು ಪಡೆದವನು)ಕೃತಕೃತ್ಯನಾಗುತ್ತಾನೆ.ಇಂಥವನು ಯಾವಾಗ ಸತ್ತರೂ
ಮುಕ್ತನೇ ಆಗಿರುತ್ತಾನೆ.ಇದರಲ್ಲಿ ಸಂಶಯವಿಲ್ಲ.(ಪುಟ140)
(ಇಂಥವನು ತಾನು ಇಚ್ಛಿಸದಿದ್ದರೂ ಮುಕ್ತನಾಗಿಬಿಡುತ್ತಾನೆ ಎಂದು ಉಪದೇಶ ಸಾಹಸ್ರಿಯಲ್ಲಿ ಹೇಳಿದೆ)
(ಬದುಕಿರುವಾಗ ಜೀವನ್ಮುಕ್ತನಾಗಿ ,ಸತ್ತಮೇಲೆ ವಿದೇಹಮುಕ್ತಿಯನ್ನು ಪಡೆಯುತ್ತಾನೆ.)
,,,,,,,,,,,,,,,,,,,,,,,ಇಲ್ಲಿಗೆ ಲಘುವಾಕ್ಯವೃತ್ತಿಯು ಸಂ,,,,,,,,,,,,,,,,,,,,,,,,,,,,,,,,,,,,,,,,,,,,,,,,,,,ಪೂಣ೯ವಾಯಿತು,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
(ದಿನಾಂಕ 22.5.2021)
No comments:
Post a Comment