Saturday, 1 May 2021

'naadabindu '(anahatha naada)by dr raveendra hosadurga

 

 

 

 

 

 

 

                                                                                                                              

 

 

ನಾದಬಿಂದು:

ಆಧಾರಗ್ರಂಥ:ಚಿದಾಕಾಶ ಗೀತಾ.

ಮೂಲ ಲೇಖಕರು ಪೂಜ್ಯ ಶ್ರೀ ಸ್ವಾಮಿ ನಿತ್ಯಾನಂದರು.

(ಗಣೇಶಪುರಿ,ಮುಂಬಯಿ.)

ಅನುವಾದಕರು: ಶ್ರೀಮೂತಿ೯,ದತ್ತಾಶ್ರಮ.

ನುಲೇನೂರು,ಹೊಳಲ್ಕೆರೆ ತಾಲ್ಲೋಕು,ಚಿತ್ರದುಗ೯ಜಿಲ್ಲೆ.

ಪ್ರಕಾಶಕರು :ಖೋಡ್ಡ ಲಕ್ಷ್ಮಣ ಸಾ ಅಂಡ್ ಸನ್ಸ

ಗಾಂಧೀ ನಗರ,ಬೆಂಗಳೂರು-

ಮೊದಲನೇ ಮುದ್ರಣ,172

ಸಂಗ್ರಹ:ಡಾ.ರವೀಂದ್ರ ಹೊಸದುಗ೯.

 

                     ನಾವು ಅನೇಕ ದಿನಗಳು ಯೋಗೇಭ್ಯಾಸ ಮಾಡುತ್ತಾ ಹೋದಂತೆ,ಬಿಂದು ನಾದ ತಲೆಯೊಳಗೆ ಕೇಳಿಸುತ್ತತದೆ. ಶಬ್ದವು ಅಖಂಡ.

 

ಇಡಾ ಸುಷುಮ್ನಾ ಮತ್ತು ಸುಷುಮ್ನಾ ಎಂಬ ಮೂರುನಾಡಿಗಳು ಸೇರುವ ಸ್ಥಳಕ್ಕೆ,'ಹೃದಯಾಕಾಶ'ವೆಂದು ಹೆಸರು.ಶರೀರದೊಳಗೆ ಯೋಗಸಂಬಂಧವಾದ ಷಟ್ಚಕ್ರಗಳಲ್ಲಿ ಆರನೆಯ ಆಜ್ಞಾ ಚಕ್ರದಲ್ಲಿಯೇ(ಭ್ರೂಮಧ್ಯ) ಹೃದಯಾಕಾಶವಿದೆ.

 

ಸುಷುಮ್ನಾ ನಾಡಿಯಿಂದ ಬೇರೆಯಾಗಿ  ಮೂಲಾಧಾರ ಚಕ್ರದಿಂದ ಹೊರಟು, ಇಡಾ -ಪಿಂಗಳ ನಾಡಿಗಳು  ಪುನಃ ಆಜ್ಞಾ ಚಕ್ರದಲ್ಲಿ ಒಂದಾಗುತ್ತವೆ.ಯೋಗಾಭ್ಯಾಸ ಕಾಲದಲ್ಲಿ  ಯೋಗಿಗೆ ತನ್ನೊಳಗೆ

ಕೇಳಿ ಬರುವ ನಾದಕ್ಕೆ 'ಬಿಂದು ನಾದ'(ಅನಾಹತ ನಾದ) ಎಂದು ಹೆಸರು.

 

ಅಭ್ಯಾಸ ಮಾಡುತ್ತಿರುವಾಗ ಮೊದಲು  ಮೊದಲು ಬಗೆ ಬಗೆಯ ಶಬ್ದಗಳು ಕೇಳಿಬರುತ್ತವೆ.ನಾದ ಬಿಂದು ಉಪನಿಷತ್  ಸಮುದ್ರ ಘೋಷ,ಮೇಘಗಜ೯ನೆ, ,ಭೇರೀನಾದ,ಮದ್ದಳೆ,ಘಂಟೆ,ಕಹಳೆ,ಹಾಮೋ೯ನಿಯಂ,ಪಿಟೀಲು,ಕೊಳಲು,,ವೀಣೆ,ದುಂಬಿಗಳ ಝೇಂಕಾರ,ಹೀಗೆ ನಾನಾ ವಿಧ ನಾದಗಳು  ಒಂದಾಗಿರುವ ಶಬ್ದವೇ ಪ್ರಧಾನವಾಗಿ ಹತ್ತು ಬಗೆಯಾಗಿ ಕೇಳುತ್ತದೆ.

 

ಇವುಗಳಲ್ಲಿ ಘನವಾದ ಶಬ್ದಗಳನ್ನು ಬಿಟ್ಟು ಮನಸ್ಸನ್ನು ಸೂಕ್ಷ್ಮವಾದ ನಾದದಲ್ಲಿಯೂ ,ಅದನ್ನೂ ಬಿಟ್ಟು ಸೂಕ್ಷ್ಮತರವಾದ ನಾದದಲ್ಲಿಯೂ ,ಮುಂದೆ ಮುಂದೆ ಅದನ್ನು ಗಮನಿಸದೆ  ಅತ್ಯಂತ ಸೂಕ್ಷ್ಮವಾದ ನಾದದಲ್ಲಿಯೂ  ನಿಲ್ಲಿಸಬೇಕು.

 

ವಿಸ್ಮøತ್ಯ ಸಕಲಂ ಬಾಹ್ಯಂ ನಾದೇ ದುಗ್ಧಾಂಬುವನ್ಮನಃ|

ಏಕೀ ಭೂಯಾಥ ಸಹಸಾ  ಚಿದಾಕಾಶೇ ವಿಲೀಯತೇ|

 

ಹೊರಗಿನ ಸಮಸ್ತವನ್ನೂ ಮರೆತು  ದೇಹಾದಿಗಳನ್ನೂ ಮರೆತು,ಮನಸ್ಸು ಹಾಲು ನೀರುಗಳಂತೆ  ನಾದದೊಡನೆ ಬೆರೆತು ಒಂದಾಗಿ ಕೂಡಲೇ ಚಿದಾಕಾಶದಲ್ಲಿ ವಿಲೀನವಾಗುತ್ತದೆ.

 

ಎರಡು ವಸ್ತುಗಳ ಸಂಘಷ೯ದಿಂದ ಉಂಟಾಗುವ ನಾದಕ್ಕೆ 'ಅರತ ನಾಧ'.ಎಲ್ಲಾ ಸಾಮಾನ್ಯ ಶಬ್ದಗಳೂ ಅಹತನಾದವೇ.ಎರಡು ವಸ್ತುಗಳ ಸಂಘಷ೯ವಿಲ್ಲದೆ ತಾನೇ ತಾನಾಗಿ  ಉಂಟಾಗುವ ನಾದಕ್ಕೆ 'ಅನಾಹತ'ನಾದವೆಂದು ಹೆಸರು.

 

ಶ್ರೀ ಶಂಕರಾಚಾಯ೯ರು ರಚಿಸಿರುವ 'ಗುರುಪಾದುಕಾ ಸ್ತೋತ'ದಲ್ಲಿ ಬಿಂದು ನಾದಕ್ಕೆ ಸಂಬಂಧಿಸಿದಂತೆ  ಈವಾಕ್ಯಗಳು ಬರುತ್ತವೆ.1)ನಾದಬಿಂದು ಕಲಾತ್ಮಕಂ ದಶನಾದ ಭೇದ ವಿಭೇದಕಂ 2) ಹಂಸನಾದ ಅಖಂಡನಾದ  ಮನೇಕ ವಣ೯ಮ ರೂಪಕಂ                                                ್ರ

'ಗುರುಪಾದುಕಾ ಸ್ತೋತ್ರ,'ನಿತ್ಯ ಗುರುಭಜನ ಪದ್ಧತಿ',ಸಂಗ್ರಹ:.ಆರ್.ಸತ್ಯನಾರಾಯಣರಾವ್.ಶ್ರೀ ರಂಗನಾಥಾಶ್ರಮ,ಕೊಮಾರನಹಳ್ಳಿ,ಹರಿಹರ ತಾಲೋಕು,ಚಿತ್ರದುಗ೯ ಜಿಲ್ಲೆ.

 

,,,,,,,,,,,,,,,,,,,,,,,,,,,,,,,,,,,,,,,ಮುಕ್ತಾಯವಾಯಿತು,,,,,,,,,,,,,,,,,,,,,,,,,,,,,,,,,,,,

 

No comments:

Post a Comment