ಅದ್ವೈತ ತಾತ್ವಿಕ ಚಿಂತನೆ - ಒಂದು ಅಧ್ಯಯನ
ಅಧ್ಯಾಯ 1 ಪೀಠಿಕೆ
ವಿಷಯದ ಪ್ರಾಮುಖ್ಯತೆ
ನಮ್ಮ ಜೀವನಕ್ಕೆ ಅಥ೯ವಿದೆಯೇ? ನಾವಿರುವ ಈ ಪ್ರಪಂಚವು ಸತ್ಯವೋ ಅಥವಾ ಮಿಥ್ಯವೋ? ಸತ್ಯವಾದರೆ ಅದರ ಮೂಲಕಾರಣವೇನು?ಆ ಕಾರಣದ ಸ್ವರೂಪವೇನು?ಅದು ಏಕವೋ ಅನೇಕವೋ?ಅದು ಜಡವೋ ಚೇತನವೋ?ಸಗುಣವೋ ನಿಗು೯ಣವೋ?ಅದಕ್ಕೂ ನಮಗೂ ಇರುವ ಸಂಬಂಧವೇನು?ನಾವಿಬ್ಬರೂ ಏಕವೋ ಭಿನ್ನವೋ?ಈ ಜೀವನದ ಹೋರಾಟಕ್ಕೆ ಕೊನೆ ಎಂಬುದಿದೆಯೇ?ಈ ಕೊನೆಯನ್ನು ತಲುಪುವ ಸಾಧನವೇನು? ಕಮ೯ವೋ, ಭಕ್ತಿಯೋ, ಜ್ಞಾನವೋ?
ಬದುಕನ್ನು ಗಂಭೀರವಾಗಿ ಎಣಿಸುವ ಯಾವುದೇ ವ್ಯಕ್ತಿಗೆ ಎದುರಾಗುವ ಪ್ರಶ್ನೆಗಳಿವು. ವಿಶ್ವದ ತಾತ್ವಿಕ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಈ ಪ್ರಶ್ನೆಗಳ ಬಗ್ಗೆ ತಲೆ ಕೆಡಿಸಿಕೊಂಡವರು ಉಪನಿಷತ್ಕಾರರು.ಇವರು ಜೀವನದ ರಹಸ್ಯವನ್ನು ಭೇದಿಸಲು ಪ್ರಯತ್ನಿಸಿದರು.ವಾಸ್ತವವಾಗಿ ಉಪನಿಷತ್ ಎಂಬ ಪದದ ಅಥ೯ವೇ ರಹಸ್ಯೆಂದು. ಗುರುವು ತನ್ನ ಬಳಿ ನಿಷ್ಠೆಯಿಂದ ಕುಳಿತು ಆಲಿಸುವ ಶಿಷ್ಯನಿಗೆ ನೀಡುವ ಬೋಧನೆಯೇ ಉಪನಿಷತ್ತು.
ಉಪನಿಷತ್ತುಗಳನ್ನು ಎರಡು ಅಥ೯ಗಳಲ್ಲಿ ವೇದಾಂತವೆಂದು ಕರೆಯುತ್ತಾರೆ.
1) ಒಂದು ಅವು ವೇದದ ಅಂತಿಮಭಾಗವೆಂಬ ಅಥ೯ದಲ್ಲಿ.ಮಂತ್ರ ಮತ್ತು ಬ್ರಾಹ್ಮಣಗಳು ಉಳಿದೆರಡು ಭಾಗಗಳು.
2) ಅವು ವೇದದ ಅಂತಿಮ ತಾತ್ಪಯ೯ವನ್ನು ಒಳಗೊಂಡಿವೆ ಎಂಬ ಅಥ೯ದಲ್ಲೂ ಅವು ವೇದಾಂತ. ಹೀಗೆ ಭೌತಿಕ ಓರಣ (ವ್ಯವಸ್ಥೆ) ಮತ್ತು ತಾತ್ವಿಕ ಈ ಎರಡು ದೃಷ್ಟಿಕೋನದಿಂದಲೂ ಈ ಎರಡೂ ಅಥ೯ಗಳಲ್ಲಿ ಉಪನಿಷತ್ತುಗಳು ವೇದಾಂತವೆನಿಸಿವೆ.
ಉಪನಿಷತ್ಕಾರರು ವಿಶ್ವರಹಸ್ಯವನ್ನು ಭೇದಿಸಲು ಎಷ್ಟೇ ಯಶಸ್ವಿಯಾದರೂ ಕಾಲಕ್ರಮದಲ್ಲಿ ಅವರ ಬೋಧನೆಗಳು ಗೊಂದಲಕ್ಕೆ ಎಡೆಮಾಡಿಕೊಟ್ಟವು.ಈ ಗೊಂದಲಕ್ಕೆ ಕಾರಣವಿಲ್ಲದಿರಲಿಲ್ಲ. ಮೂಲತಃ ಉಪನಿಷತ್ತುಗಳ ಬೋಧನೆಯು ಅದ್ವೈತವಾದರೂ ದ್ವೈತದ ಅಂಶಗಳಿಗೆ ಕೊರತೆ ಇರಲಿಲ್ಲ. ಈ ವೈದಿಕ ಹಿನ್ನೆಲೆಯಲ್ಲಿ ಸಾಂಖ್ಯರು ತಮ್ಮ ದ್ವೈತ ಸಿದ್ಧಾಂತªನ್ನು ಸಮಥಿ೯ಸಿಕೊಂಡರು. ಅಲ್ಲದೆ ಅವುಗಳಲ್ಲಿ ಸಗುಣ ಮತ್ತು ನಿಗು೯ಣ ಕಲ್ಪನೆಗಳೆರಡೂ ಇವೆ. ಅವು ಜೀವ ಬ್ರಹ್ಮರು ಒಂದೇ ಎಂದು ಹೇಳುತ್ತವೆ ಮತ್ತು ಬೇರೆ ಬೇರೆ ಎಂದೂ ಹೇಳುತ್ತವೆ. ಜೊತೆಗೆ ಅವುಗಳಲ್ಲಿ ಸಪ್ರಪಂಚವಾದವೂ ಇದೆ ನಿಷ್ಪ್ರಪಂಚವಾದವೂ ಇದೆ.ಹಾಗೆಯೇ ಅವುಗಳಲ್ಲಿ ಮುಕ್ತಿಯ ಸಾಧನಗಳಾದ ಕಮ೯,ಭಕ್ತಿ,ಜ್ಞಾನಗಳ ಪ್ರಸ್ತಾಪವಿದೆ.ಉದಾಹರಣೆಗೆ ಈಶೋಪನಿಷತ್ತು ಕಮ೯ ಯೋಗದ ಬಗ್ಗೆಯೂ ಮತ್ತುಶ್ವೇತಾಶ್ವತರ ಉಪನಿಷತ್ತು ಭಕ್ತಿಯೋಗದ ಬಗ್ಗೆಯೂ ಪ್ರಸ್ತಾಪಿಸುತ್ತದೆ.ಇನ್ನು ಜ್ಞಾನಯೋಗದ ಬಗ್ಗೆ ಹೇಳಬೇಕಾಗಿಲ್ಲ.ಉಪನಿಷತ್ತುಗಳಲ್ಲಿ ಅನೇಕ ಕಡೆಗಳಲ್ಲಿ ಜ್ಞಾನಯೋಗದ ಪ್ರಸ್ತಾಪವು ಬರುತ್ತದೆ.
ಆದರೆ ಕಾಲಕ್ರಮದಲ್ಲಿ ಉಪನಿಷತ್ತುಗಳ ಅಸ್ಪಷ್ಟತೆಯು ಬ್ರಹ್ಮಸೂತ್ರದಲ್ಲೂ ಕಂಡುಬಂದಿತು.ಇದಕ್ಕೆ ಕಾರಣ ಬ್ರಹ್ಮಸೂತ್ರಗಳ ಅತಿ ಸಂಕ್ಷಿಪ್ತತೆ.ಬ್ರಹ್ಮಸೂತ್ರದಲ್ಲಿ ಒಂದೇ ಶಬ್ದವಿರುವ ಸೂತ್ರವೂ ಉಂಟು.ಇದರಿಂದ ಸೂತ್ರಗಳ ನಿಜವಾದ ಇಂಗಿತವೇನು ಎಂಬ ಪ್ರಶ್ನೆ ಪುನಃ ಉಂಟಾಯಿತು.ಇದರಿಂದ ಬ್ರಹ್ಮಸೂತ್ರವು ಅನೇಕ ವಿಂಗಡಣೆಗಳಿಗೆ ಎಡೆಮಾಡಿ ಕೊಟ್ಟಿತು.ಪ್ರತಿ ಶಬ್ದದ ವ್ಯಾಖ್ಯಾನ ಅಥವಾ ಭಾಷ್ಯಗಳೆಂದು ಹೆಸರು.ಇವುಗಳಲ್ಲಿ ಮುಖ್ಯವಾದ ವ್ಯಾಖ್ಯಾನಗಳು ಶ್ರೀ ಶಂಕರರು ಶ್ರೀರಾಮಾನುಜಾಚಾಯ೯ರು ಮತ್ತು ಶ್ರೀ ಮಧ್ವಾಚಾಯ೯ರಿಂದ ರಚಿತವಾಗಿದೆ.ಇವರ ಸಿದ್ಧಾಂತಗಳನ್ನು ಕ್ರಮವಾಗಿ ಅದ್ವೈತ,ದ್ವೈತ,ವಿಶಿಷ್ಟಾದ್ವೈತ ಎಂದು ಕರೆಯುತ್ತಾರೆ.ಶ್ರೀ ಶಂಕರರಿಗೂ ಮೊದಲು ಬ್ರಹ್ಮಸೂತ್ರ ಕುರಿತಂತೆ ಕೆಲವು ವ್ಯಾಖ್ಯಾನಗಳಿದ್ದವು. ಅವು ಈಗ ಉಪಲಬ್ಧವಿಲ್ಲ. ಶ್ರೀ ಶಂಕರರು ನಿಗು೯ಣ,ನಿರೀಶ್ವರ,ನಿಷ್ಪ್ರಪಂಚ ವಾದವನ್ನು ಸಮಥಿ೯ಸಿದರೆ ರಾಮಾನುಜ ಮತ್ತು ಮಧ್ವರು ಸಗುಣ,ಸೇಶ್ವರ ಮತ್ತು ಸಪ್ರಪಂಚವಾದವನ್ನು ಪ್ರತಿಪಾದಿಸುತ್ತಾರೆ.
ತಾತ್ವಿಕವಾಗಿ ಏನೇ ಭಿನ್ನಾಭಿಪ್ರಾಯಗಳಿದ್ದರೂ ಈ ಮೂವರಲ್ಲಿ ಕೆಳಕಂಡ ಸಾಮ್ಯಗಳಿವೆ.
1) ಈ ಮೂವರೂ ತಮ್ಮ ಸಿದ್ಧಾಂತಗಳಿಗೆ ಮೂಲಸಾಮಗ್ರಿಯನ್ನು ಉಪನಿಷತ್ತುಗಳು, ಬ್ರಹ್ಮಸೂತ್ರ ಹಾಗೂ ಭಗವದ್ಗೀತೆಗಳಿಂದ ಪಡೆದುಕೊಂಡಿದ್ದಾರೆ. ಇವುಗಳಿಗೆ "ಪ್ರಸ್ಥಾನತ್ರಯ"ಗಳೆಂದು ಹೆಸರು. ಇವು ವೇದಾಂತ ದಶ೯ನಕ್ಕೆ ಮೂ¯ ಆಧಾರಗಳು.
2) ಈ ಮೂವರಲ್ಲಿ ಯಾರೂ ತಮ್ಮನ್ನು ಮತ ಸ್ಥಾಪಕರೆಂದು ಕರೆದುಕೊಂಡಿಲ್ಲ.ಶ್ರುತಿಯಲ್ಲಿ ಈಗಾಗಲೇ ಇರುವ ತಾತ್ಪಯ೯ವನ್ನು ವಿವರಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಮೂವರೂ ಪ್ರಪಂಚಕ್ಕೆ ಆಶ್ರಯಭೂತವಾದ ಬ್ರಹ್ಮವೆಂಬ ಅಂತಿಮ ಸತ್ಯವನ್ನು ಅಂಗೀಕರಿಸುತ್ತಾರೆ,
3) ಎಲ್ಲರೂ ಆತ್ಮವು ಶಾಶ್ವತ ಹಾಗೂ ಚಿತ್ ಸ್ವರೂಪವೆಂದು ಸಾರುತ್ತಾರೆ.
4) ಎಲ್ಲರ ದೃಷ್ಟಿಯಲ್ಲೂ ಮೋಕ್ಷಕ್ಕೆ ಜ್ಞಾನವು ನೇರ ಸಾಧನವಾಗಿದೆ.
ಉಪನಿಷತ್ತುಗಳೆಂದರೆ ಯಾವುದೋ ಸಿದ್ಧಾಂತವಲ್ಲ.ಹಲವು ಸಿದ್ಧಾಂತಗಳ ಸಂಗಮ.ಹಲವು ಮಹಿಮೋನ್ನತರ ಭಾವನೆಯ ಗೊಂಚಲುಗಳು ಇವೆ.ಇಲ್ಲಿ ಎಲ್ಲಿಯೂ ಅಲ್ಪತನವಿಲ್ಲ.ಭೂಮದ ಭಾವನೆಯಲ್ಲಿಯೇ ಇರುವರು.ಇವರು ತಾವು ಅನುಭವಿಸಿದ ಸತ್ಯವನ್ನು ಮುಂದೆ ಬರುವವರ ಅನುಭವಕ್ಕಾಗಿ ,ಉದ್ಧಾರಕ್ಕಾಗಿ ಹೇಳಿಹೋಗಿರುವರು.ಅದು ದೇವಗಂಗೆಯಂತೆ ಉಪನಿಷತ್ತುಗಳಲ್ಲಿಇಂದಿಗೂ ಹರಿಯುತ್ತಿದೆ.ಯಾರು ಬೇಕಾದರೂ ಅದರಲ್ಲಿ ಮಿಂದು ಪಾವನರಾಗಬಹುದು.
ಬ್ರಹ್ಮವು ಅಸ್ಥೂಲ, ಅನಣು, ಅಹೃಸ್ವ, ಅದೀಘ೯, ಅಲೋಹಿತ, ಅಸ್ನೇಹ, ಅತಮಸ್ಸು, ಅನಾಕಾಶ, ಅಸಂಗ,ಅರಸ,ಅಗಂಧ,ಅಚಕ್ಷಸ್ಸು,ಅಶ್ರೋತೃ, ಅನಣು, ಅವಾಕ್ಕು, ಅಮನಸ್ಸು, ಅತೇಜಸ್ಸು, ಅಪ್ರಾಣ, ಅಮುಖ, ಅಮಾತ್ರ, ಅಭ್ಯಂತರ,ಅಬಾಹ್ಯ. ಅದು ಯಾವುದನ್ನೂ ತಿನ್ನುವುದಿಲ್ಲ. ಅದನ್ನು ಯಾವುದೂ ತಿನ್ನುವುದಿಲ್ಲ. ಇದು ಯಾಜ್ಞವಲ್ಕ್ಯರ ಬೋಧನೆ ಪರಮಾಮೃತ.
ಅದ್ವೈತ ತತ್ವವು ಸನಾತನವಾದುದು. ಶ್ರೀಶಂಕರರಿಗಿಂತಲೂ ಮುಂಚೆಯೇ ಅಸ್ತಿತ್ವದಲ್ಲಿತ್ತು. ಶ್ರೀ ಗೌಡಪಾದರು ಶಂಕರರ ಗುರುಗಳಾದ ಗೋವಿಂದ ಭಗವತ್ಪಾದರ ಗುರುಗಳು. ಅದ್ವೈತವು ವೇದಾಂತದ ಉತ್ತುಂಗ ಶಿಖರಗಳಲ್ಲಿ ಒಂದು. ಇದರಲ್ಲಿ ಕೆಲವು ಶ್ರುತಿ ಪ್ರಧಾನ, ಇನ್ನು ಕೆಲವು ಯುಕ್ತಿ ಪ್ರಧಾನ, ಇನ್ನೂ ಕೆಲವು ಅನುಭವ ಪ್ರಧಾನ, ಅದ್ವೈತವು ತೋರಿಕೆಯ ಜಗತ್ತನ್ನು ತೊರೆದು ಪರಮ ಸತ್ಯವನ್ನು ನಿಸ್ಸಂಕೋಚವಾಗಿ ಸ್ವೀಕರಿಸುವುದು.ಆತ್ಮನನ್ನು ಪರಮ ಪದವಿಗೆ ಏರಿಸುವುದು. ಅದನ್ನು ಪಡೆಯಬೇಕಾದರೆ ಪ್ರಾತಿಭಾಸಿಕ ಜಗತ್ತನ್ನು ಬಿಟ್ಟು ಪೂಣ೯ವನ್ನು ಹಿಡಿಯಬೇಕು.ಅದ್ವೈತ ಭಾವನೆಯು ನಮ್ಮೆದೆಗೆ ಇಳಿದು ಎಲ್ಲದರಲ್ಲಿಯೂ ಗಗನದಂತೆ ಇರುವ ಸಮರಸ ತತ್ವವನ್ನು ದಶ೯ನ ಮಾಡಿಸುತ್ತದೆ.
ವಿಷಯ ನಿರೂಪಣೆ
"ಬ್ರಹ್ಮ ಸತ್ಯಂ ಜಗನ್ಮಿಥ್ಯಾ ಜೀವೋ ಬ್ರಹ್ಮೈವ ನಾಪರಃ".ಎಂದರೆ ಬ್ರಹ್ಮ ಒಂದೇ ಸತ್ಯ ಜಗತ್ತು ಮಿಥ್ಯೆ, ಜೀವವು ಬ್ರಹ್ಮವೇ ಬೇರೆ ಅಲ್ಲ. ಇರುವುದೊಂದೇ. ಎರಡಾಗಿ ಕಾಣುವುದು ಮಿಥ್ಯೆ. ಎರಡನೆಯದಿಲ್ಲದಿರುವುದೇ ಜ್ಞಾನ. ಅದ್ವೈತವು ವೇದ ಕಾಲದಷ್ಟೇ ಹಳೆಯದಾಗಿದೆ. ಋಗ್ವೇದದ ನಾಸದೀಯ ಸೂಕ್ತವು ಅಂತಿಮ ಸತ್ಯವನ್ನು ಯಾವ ಹೆಸರಿನಿಂದಲೂ ಕರೆಯದೆ"ಅದು ಒಂದೇ"(ತದೇಕಂ) ಎಂದು ಸಾರುತ್ತದೆ.ಸತ್ಯದಲ್ಲಿ ನಾಮ ರೂಪಗಳ ಭೇದವಿಲ್ಲ ಎಂದು ಇದರ ಅಥ೯.ಅನಂತರ ಈ ಉಪನಿಷತ್ತುಗಳು ಅದ್ವೈತ ಸಿದ್ಧಾಂತಕ್ಕೆ ಪೂಣ೯ರೂಪ ನೀಡಿದವು.ಆದರೆ ಅದ್ವೈತವು ಒಂದು ವ್ಯವಸ್ಥಿತ ರೂಪ ತಳೆದಿದ್ದು ಶ್ರೀ ಶಂಕರರ ಕಾಲದಲ್ಲಿ (ಕ್ರಿ.ಶ.6 ಅಥವಾ 7ನೆಯ ಶತಮಾನದಲ್ಲಿ).
ಅದ್ವೈತ ಸಿದ್ಧಾಂತದ ಮುಖ್ಯ ಲಕ್ಷಣಗಳು ಹೀಗಿವೆ:
1) ಅದರ ಪ್ರಕಾರ ಬ್ರಹ್ಮ ಅಥವಾ ಅಂತಿಮ ಸತ್ಯವು ನಿಗು೯ಣವೇ ಹೊರತು ಸಗುಣವಲ್ಲ.
2) ಈ ವೈವಿಧ್ಯಮಯ ಜಗತ್ತು ಮಾಯೆ ಅಥವಾ ಮಿಥ್ಯೆಯೇ ಹೊರತು ಸತ್ಯವಲ್ಲ.
3) ಈ ಪ್ರಪಂಚವು ಮಿಥ್ಯವಾದರೂ ಅದರಲ್ಲಿರುವ ಜೀವವು ಮಿಥ್ಯವಲ್ಲ.ಮೂಲತಃ ಜೀವಬ್ರಹ್ಮರು ಒಂದೇ.ಅವು ಬೇರೆ ಅಲ್ಲ.
4) ಈ ಜೀವ ಬ್ರಹ್ಮರ ಏಕತೆಯ ಸಾಕ್ಷಾತ್ಕಾರವೇ ಮುಕ್ತಿ.
5) ಮುಕ್ತಿಗೆ ಸಾಧನವು ಜ್ಞಾನವೇ ಹೊರತು ಕಮ೯ವಲ್ಲ.ಅದ್ವೈತವು ಕಮ೯ ಸನ್ಯಾಸವನ್ನು ಎತ್ತಿ ಹಿಡಿಯುತ್ತದೆ.
ಅದ್ವೈತ ಗ್ರಂಥರಾಶಿಯನ್ನು 1)ಭಾಷ್ಯಗಳು 2)ಪ್ರಕರಣU,Àಳು 3)ಸ್ತೋತ್ರಗಳು ಎಂದು ಮೂರು ಗುಂಪುಗಳಾಗಿ ವಿಂಗಡಿಸಬಹುದು.
1) ಭಾಷ್ಯಗಳು: ಉಪನಿಷತ್ ಭಾಷ್ಯಗಳು,ವಿಷ್ಣು ಸಹಸ್ರನಾಮ ಭಾಷ್ಯ.
2)ಪ್ರಕರಣ ಗ್ರಂಥಗಳು: ಯಾವುದಾದರೊಂದು ತಾತ್ವಿಕ ದಶ೯ನವನ್ನು ಸಂಗ್ರಹವಾಗಿ,ಸರಳವಾಗಿ ತಿಳಿಸಿಕೊಡುವ ಉಪೋದ್ಘಾತರೂಪವಾದ ಗ್ರಂಥಕ್ಕೆ ಪ್ರಕರಣ ಎಂದು ಹೆಸರು.ಉರ್ದಹರಣೆಗೆ ಆತ್ಮಬೋಧ,ಉಪದೇಶ ಸಾಹಸ್ರಿ,ವಿವೇಕ ಚೂಡಾಮಣಿ.
3) ಸ್ತೋತ್ರಗಳು: ದಕ್ಷಿಣಾ ಮೂತಿ೯ ಸ್ತೋತ್ರ,ಮೋಹ ಮುದ್ಗರ.
ಭಾರತೀಯ ಸನಾತನ ಸಂಸ್ಕøತಿಯು ಪುರಾತನವಾದುದು2=.ಅದು ಶ್ರೇಷ್ಠವೂ ಪ್ರಸಿದ್ಧವೂ ಆಗಿದೆ.ಸನಾತನ ಧಮ೯ಕ್ಕೆ ಹದಿಮೂರು ಶಕ್ತಿಗಳು.1 ಶ್ರದ್ಧಾ, ಮೈತ್ರಿ, ದಯೆ, ಶಾಂತಿ, ತುಷ್ಟಿ, ಪುಷ್ಟಿ, ಕ್ರಿಯಾ, ಉನ್ನತಿ, ಬುದ್ಧಿ, ಮೇಧಾ, ಹ್ರೀಃ, ಮೂತಿ೯"ದೃಷ್ಯತೇ ಅನೇನ" ಎಂಬ ವ್ಯುತ್ಪತ್ತಿಯಿಂದ ದಶ೯ನವೆಂದರೆ ನೋಡುವ ಸಾಧನ ಎಂದಥ೯.ಈ ದಶ೯ನವನ್ನು "ತತ್ವಶಾಸ್ತ್ರ"ಎಂದು ಕರೆಯುತ್ತಾರೆ.ಪರಮಾತ್ಮನ ನಿಖರವಾದ ಅರಿವಿನ ವಿಷಯಗಳನ್ನು ತಿಳಿಸುವ ಶಾಸ್ತ್ರಗಳಿಗೆ "ದಶ೯ನ"ಗಳೆಂದು ಹೆಸರು.ಎಲ್ಲಾದಶ೯ನಗಳೂ "ಸವ೯ದಶ೯ನ ಸಂಗ್ರಹ"ದಲ್ಲಿ ಸೇರಿಸಲ್ಪಟ್ಟಿವೆ 2.
ಭಾರತೀಯ ದಶ೯ನಗಳಲ್ಲಿ ಮುಖ್ಯವಾಗಿ ಆರು ಆಸ್ತಿಕ ದಶ೯ನಗಳೆಂದೂ (ಸಾಂಖ್ಯ, ಯೋಗ, ನ್ಯಾಯ, ವೈಶೇಷಿಕ, ಪೂವ೯ ಮೀಮಾಂಸೆ, (ಕಮ೯ಕಾಂಡ), ವೇದಾಂತ (ಉತ್ತರ ಮೀಮಾಂಸೆ,ಜ್ಞಾನಕಾಂಡ) ಹಾಗೂ ಮೂರು ನಾಸ್ತಿಕದಶ೯ನಗಳೆಂದೂ (ಚಾವಾ೯ಕ,ಬೌದ್ಧ,ಜೈನ) ವಿಂಗಡಿಸಲ್ಪಟ್ಟಿವೆ 3.
ಈ ಎಲ್ಲಾ ದಶ೯ನಗಳಲ್ಲಿಯೂ ಜೀವ ಜಗತ್ತು ಮತ್ತು ಜಗತ್ತಿಗೆ ಇರಬಹುದಾದ ಕಾರಣ ಈಶ್ವರ,ಈ ಮೂರು ತತ್ವಗಳನ್ನು ಕುರಿತಾದ ವಿವರಣೆ ಇರುತ್ತದೆ."ಪ್ರಸ್ಥಾನ"ಎಂದರೆ ಪರಮಪದವನ್ನು ತಲುಪಲು ಇರುವ ಮಾಗ೯ಗಳು.
ಅದ್ವೈತ ದಶ೯ನದ ಪ್ರಸ್ಥಾನತ್ರಯಗಳೆಂದರೆ 1) ಉಪನಿಷತ್ತುಗಳು 2)ಬ್ರಹ್ಮಸೂತ್ರಗಳು 3)ಭಗವದ್ಗೀತೆ. ಅದ್ವೈತ ತಾತ್ವಿಕ ಚಿಂತನೆಯು ಈ ಮೂರು ಗ್ರಂಥಗಳ ಅಧ್ಯಯನವನ್ನೊಳಗೊಂಡಿದೆ.
ಭಾರತೀಯ ತತ್ವಶಾಸ್ತ್ರದಲ್ಲಿ ನಾಲ್ಕು ಪ್ರಮುಖ ವೇದಗಳಿವೆ. ಅವುಗಳೆಂದರೆ ಋಗ್ವೇದ, ಯಜುವೇ೯ದ, ಸಾಮವೇದ, ಅಥವ೯ಣವೇದ. ಪ್ರತಿಯೊಂದು ವೇದವೂ ನಾಲ್ಕು ಭಾಗಗಳನ್ನೊಳಗೊಂಡಿದೆ. ಸಂಹಿತಾ (ಸ್ತೋತ್ರಗಳು),ಬ್ರಾಹ್ಮಣಗಳು,ಅರಣ್ಯಕಗಳು ಉಪನಿಷತ್ತುಗಳು. ವೇದಗಳ ಕಡೆಯ ಭಾಗಕ್ಕೆ ವೇದಾಂತವೆಂದು ಹೆಸರು. ಅವುಗಳನ್ನು "ಉಪನಿಷತ್ತು"ಗಳೆಂದು ಕರೆಯುತ್ತಾರೆ.
ಉಪನಿಷತ್ತುಗಳ ಸ್ಥೂಲ ಪರಿಚಯ:
ಈಶಾವಾಸ್ಯೋಪನಿಷತ್ತು:ಈಶಾವಾಸ್ಯ ಎಂಬ ಪದದಿಂದಲೇ ಆರಂಭವಾಗುವುದರಿಂದ ಈ ಹೆಸರನ್ನು ಪಡೆದಿದೆ.ಸಮಸ್ತವೂ ಈಶ್ವರನಲ್ಲಿ ಅಂತಗ೯ತವೆಂಬ ತತ್ವವನ್ನು ಸಾರುತ್ತದೆ 4.
ಕೇನೋಪನಿಷತ್ತು:ಆತ್ಮನ ಸ್ವರೂಪವನ್ನು ಪ್ರತಿಪಾದಿಸಿ ಪರತತ್ವದ ಒಂದು ಕಲ್ಪನೆಯನ್ನು ಮೂಡಿಸುತ್ತದೆ.ಜ್ಞಾನಸ್ವರೂಪವನ್ನು ತಿಳಿಸುತ್ತದೆ.
ಕಠೋಪನಿಷತ್ತು:ಅಧ್ಯಾತ್ಮದ ಸಮ್ಮಿಶ್ರ ವ್ಯಾಖ್ಯಾನರೂಪವಾದುದು.ಆಳವಾದ ತತ್ವಗಳನ್ನು ಸರಳ ಹಾಗೂ ಸುಂದರವಾಗಿ ರೂಪಿಸಿದೆ.ಗುರು ಶಿಷ್ಯರ ಸಂಭಾಷಣೆಯನ್ನೊಳಗೊಂಡಿದೆ.
ಪ್ರಶ್ನೋಪನಿಷತ್ತು:ಇದು ಜಿಜ್ಞಾಸುಗಳಾದ ಆರುಜನ ಶಿಷ್ಯರು ಕೇಳುವ ಪ್ರಶ್ನರೂಪವಾದ ವೇದಾಂತ ಪ್ರಶ್ನೆಗಳಿಗೆ "ಪಿಪ್ಪಿಲಾದ" ಎಂಬ ಗುರುವುಉತ್ತರಿಸುತ್ತಾನೆ.
ಮುಂಡಕೋಪನಿಷತ್ತು;ಸಮಸ್ತ ವಿದ್ಯೆಯನ್ನು ಪರ ಮತ್ತು ಅಪರ ಎಂದುವಿಭಾಗಿಸಿದೆ. ಬ್ರಹ್ಮತತ್ವವನ್ನು ತಿಳಿಸುವ ವಿದ್ಯೆಗಳು ಪರಾವಿದ್ಯೆ.ಇತರ ಎಲ್ಲಾ ವಿದ್ಯೆಗಳೂ ಅಪರ ವಿದ್ಯೆಗಳು.
ಮಾಂಡೂಕ್ಯ ಉಪನಿಷತ್ತು: ಜಾಗ್ರತ, ಸ್ವಪ್ನ, ಸುಷುಪ್ತಿ ಹಾಗೂ ತುರೀಯಾವಸ್ಥೆಗಳನ್ನು ವಿವರಿಸುತ್ತದೆ. ತುರೀಯವೇ ಶಾಶ್ವತ ಮತ್ತು ಅದ್ವಯವೆಂದು ಸಾರುತ್ತದೆ.ಅಯಮಾತ್ಮಾ ಬ್ರಹ್ಮ ಎಂಬ ಮಹಾವಾಕ್ಯವು ಇದರಲ್ಲಿಯೇ ಬರುತ್ತದೆ.
ತೈತ್ತಿರೀಯೋಪನಿಷತ್ತು:ಬ್ರಹ್ಮವನ್ನು ಆವರಿಸಿ ಮುಚ್ಚಿರುವ ಪಂಚಕೋಶಗಳನ್ನು ವಿವರಿಸುತ್ತದೆ. ಈ ಪಂಚಕೋಶವನ್ನು ಭೇದಿಸುವ ವಿಧಾನವನ್ನು ಬ್ರಹ್ಮವನ್ನು ಸೇರುವ ಬಗೆಯನ್ನು ವಿವರಿಸುತ್ತದೆ.
ಐತರೇಯ ಉಪನಿಷತ್ತು: ಆತ್ಮದ ಲಕ್ಷಣಗಳನ್ನು ವಿವರಿಸುವ ಮೂಲಕ ಪರತತ್ವದ ಸ್ವರೂಪವನ್ನು ತಿಳಿಸುತ್ತದೆ. ಬ್ರಹ್ಮವೇ ಪರತತ್ವವೆಂದು ಸಾರಿದೆ."ಪ್ರಜ್ಞಾನಂ ಬ್ರಹ್ಮ"ಎಂಬ ಮಹಾವಾಕ್ಯವು ಈ ಉಪನಿಷತ್ತಿನಲ್ಲಿಯೇ ಬರುತ್ತದೆ.
ಛಾಂದೋಗ್ಯ ಉಪನಿಷತ್ತು:ಅನೇಕ ಗುರು ಶಿಷ್ಯರ ಸಂವಾದದ ಮೂಲಕ ಪರತತ್ವದ ಸತ್ ಚಿತ್ ಆನಂದ ರೂಪವನ್ನು ಪ್ರತಿಪಾದಿಸಿದೆ. ಸೃಷ್ಟಿಗೂ(ಕೇವಲ ತೋರಿಕೆಗೂ) ಸತ್ಯಕ್ಕೂ ಇರುವ ಅಂತರವನ್ನು ತಿಳಿಸಿಕೊಡುತ್ತದೆ.
ಬೃಹದಾರಣ್ಯಕ: ಹೆಸರಿಗೆ ತಕ್ಕಂತೆ ಬೃಹತ್ತಾಗಿದೆ.ಅನೇಕ ಶ್ರೇಷ್ಠವ್ಯಕ್ತಿಗಳ ಸಂವಾದದ ಮೂಲಕ ಎಲ್ಲವೂ ಬ್ರಹ್ಮವೆ ಎಂದು ಹೇಳುತ್ತಾ ಜೀವ ಮತ್ತು ಬೇರೆ ಅಲ್ಲ ಎಂಬುದನ್ನು ತಿಳಿಸುತ್ತದೆ. "ಅಹಂ ಬ್ರಹ್ಮಾಸ್ಮಿ" ಎಂಬ ಮಹಾವಾಕ್ಯವು ಇದರಲ್ಲಿ ಬರುತ್ತದೆ.
ಶ್ರೀಶಂಕರರು ಹತ್ತು ಉಪನಿಷತ್ತುಗಳಿಗೆ ಮಾತ್ರ ಭಾಷ್ಯಗಳನ್ನು ಬರೆದಿರುತ್ತಾರೆ.ಆದರೆ ತಮ್ಮ ಭಾಷ್ಯಗಳಲ್ಲಿ ಇನ್ನಿತರ ನಾಲ್ಕು ಉಪನಿಷತ್ತುಗಳಿಂದಲೂ ಉದ್ಧರಿಸಿ ವಾಕ್ಯಗಳನ್ನು ಪ್ರಮಾಣವಾಗಿ ಉದಾಹರಿಸಿರುತ್ತಾರೆ.
11) ಶ್ವೇತಾಶ್ವತರ ಉಪನಿಷತ್: ಇದು ಕೃಷ್ಣಯಜುವೇದಕ್ಕೆ ಸೇರಿದೆ.ಇದರಲ್ಲಿ ಒಟ್ಟು ಆರು ಅಧ್ಯಾಯಗಳಿವೆ.ಒಟ್ಟು ಒಂದು ನೂರಾ ಹದಿಮೂರು ಮಂತ್ರಗಳಿವೆ. ಅತ್ಯಂತ ಸರಳವಾದ ಹಾಗೂ ಸುಂದರವಾದ ಭಾಷೆಯಿಂದ ಸೂಕ್ಷ್ಮವಿಚಾರಗಳನ್ನು ಪ್ರತಿಪಾದಿಸುವ ಉಪನಿಷತ್ತು ಇದು. ಓಂಕಾರೋಪಾಸನೆ, ಧ್ಯಾನ,ಪ್ರಾಣಾಯಾಮ,ಇತ್ಯಾದಿಗಳ ವಿಚಾರಗಳನ್ನು ಸಂಕ್ಷಿಪ್ತವಾಗಿ ತಿಳಿಸಿ,ಅನಂತರ ಮೋಕ್ಷಕ್ಕೆ ಬೇಕಾದ ಆತ್ಮವಿಚಾರವನ್ನೂ ಪರಬ್ರಹ್ಮದ ವಿಚಾರವನ್ನೂ ತಿಳಿಸಿದೆ.ಸದ್ಗುರು ಕೃಪೆಯಿಂದ ಆತ್ಮಜ್ಞಾನವನ್ನು ಹೊಂದಬೇಕೆಂದು ತಿಳಿಸುತ್ತಾಈ ಉಪನಿಷತ್ತು ಮಂಗಳಗೊಳ್ಳುತ್ತದೆ.
12) ಕೌಷೀತಕೀ ಉಪನಿಷತ್: ಇದು ಋಗ್ವೇದದ ಬ್ರಾಹ್ಮಣ ಭಾಗಕ್ಕೆ ಸೇರುತ್ತದೆ.ಇದಕ್ಕೆ"ಕೌಷೀತಕೀ ಬ್ರಾಹ್ಮಣೋಪನಿಷತ್"ಎಂದು ಹೆಸರಿದೆ. ಇದರಲ್ಲಿ ನಾಲ್ಕು ಅಧ್ಯಾಯಗಳಿವೆ.ಇದರಲ್ಲಿ ದೇವಯಾನಗಳ ವಿಚಾರವನ್ನೂ,ಪ್ರಾಣೋಪಾಸನೆಯನ್ನೂ ತಿಳಿಸಿದೆ.ವಿಶೇಷವಾಗಿ ಮೂರನೆಯ ಅಧ್ಯಾಯದಲ್ಲಿ ಇಂದ್ರ ಪ್ರತದ೯ನ ಸಂವಾದದಲ್ಲಿ ಪರತತ್ವದ ಸ್ವರೂಪವನ್ನು ತಿಳಿಸಿದೆ.ನಾಲ್ಕನೆಯ ಅಧ್ಯಾಯದಲ್ಲಿ ದೃಪ್ತಬಾಲಾಕಿ ಹಾಗೂ ಅಜಾತ ಶತ್ರುಗಳ ಸಂವಾದದ ಮೂಲಕಆತ್ಮನ ನಿರುಪಾಧಿಕ ಸ್ವರೂಪವನ್ನು ಇದು ರಮಣೀಯವಾಗಿ ತಿಳಿಸುತ್ತದೆ.
13) ಜಾಬಾಲೋಪನಿಷತ್ತು:ಅಥವ೯ವೇದಕ್ಕೆ ಸೇರಿದ ಈ ಉಪನಿಷತ್ತಿನಲ್ಲಿ ಕೇವಲ ಆರು ಮಂತ್ರಗಳಿವೆ.ಅತ್ರಿ_ಯಾಜ್ಞವಲ್ಕ್ಯ ಸಂವಾದ ರೂ.ಪದಲ್ಲಿ ಪ್ರಾಣೋಪಾಸನೆಯ ವಿಷಯವನ್ನು ತಿಳಿಸಿದೆ.ಇದರಲ್ಲಿ ಜನಕ ಯಾಜ್ಞವಲ್ಕ್ಯರ ಸಂವಾದವೂ ಇರುತ್ತದೆ.ಸನ್ಯಾಸದ ಮಹಿಮೆಯನ್ನೂ ಪರಮ
ಹಂಸರ ಲಕ್ಷಣಗಳನ್ನೂ ತಿಳಿಸಿರುತ್ತದೆ.
14) ಕೈವಲ್ಯೋಪನಿಷತ್:ಅಥವ೯ವೇದಕ್ಕೆ ಸೇರಿರುವ ಈ ಉಪನಿಷತ್ತಿನಲ್ಲಿ ಕೇವಲ ಇಪ್ಪತ್ನಾಲ್ಕು ಮಂತ್ರಗಳಿರುತ್ತವೆ.ಶ್ರದ್ಧಾ,ಭಕ್ತಿ,ಧ್ಯಾನಗಳನ್ನು ಇಲ್ಲಿ ಸಾಧನವನ್ನಾಗಿ ಇಲ್ಲಿ ತಿಳಿಸಿದೆ.ಆತ್ಮನ ಪರಮಾಥ೯ ಸ್ವರೂಪವನ್ನೂ ಆತ್ಮಜ್ಞಾನ ಪ್ರಾಪ್ತಿಗೆ ಸಾಧನಗಳನ್ನೂ ಇಲ್ಲಿ ಹೇಳಿದೆ. ಸವ೯ಗುಹಾಶಯನಾದ ಪರಮಾತ್ಮನನ್ನು ತಿಳಿದರೆ ಕೈವಲ್ಯವನ್ನು ಹೊಂದುತ್ತಾನೆಂದು ತಿಳಿಸುತ್ತದೆ.
ನಾಲ್ಕು ಮಹಾವಾಕ್ಯಗಳು:
1)ಅಹಂ ಬ್ರಹ್ಮಾಸ್ಮಿ (ಬೃಹದಾರಣ್ಯಕ)
2)ತತ್ವಮಸಿ(ಛಾಂದೋಗ್ಯ)
3)ಅಯಮಾತ್ಮಾ ಬ್ರಹ್ಮ(ಮಾಂಡೂಕ್ಯ)
4) ಪ್ರಜ್ಞಾನಂ ಬ್ರಹ್ಮ.(ಐತರೇಯ)
ಉಪನಿಷತ್ತುಗಳಲ್ಲಿ ಪ್ರತಿಪಾದಿತ ವಿಷಯಗಳು:
ಬ್ರಹ್ಮ, ಜೀವ, ಜಗತ್ತು, ಬ್ರಹ್ಮ ಜೀವಗಳ ಸಂಬಂಧ, ಬ್ರಹ್ಮ ಜಗತ್ತುಗಳ ಸಂಬಂಧ, ಕಮ೯ಜ್ಞಾನಗಳು, ಬಂಧನ, ಮೋಕ್ಷ ಇವು ಉಪನಿಷತ್ ಪ್ರತಿಪಾದಿತ ವಿಷಯಗಳು5.
1)ಬ್ರಹ್ಮ:ಬ್ರಹ್ಮವು ಸಗುಣ ಮತ್ತು ನಿಗು೯ಣ ಎಂದು ಎರಡುವಿಧ.ನಿಗು೯ಣ ಬ್ರಹ್ಮವು ನಿತ್ಯ,ಶುದ್ಧ,ಬುದ್ಧ ಹಾಗೂ ಮುಕ್ತ ಸ್ವಭಾವವುಳ್ಳದ್ದು.ಅಲ್ಲದೆ ಸವ೯ವ್ಯಾಪಕ, ಅಕ್ಷರ, ನಿವಿ೯ಕಾರ,ಪುರುಷ ಎಂದು ಪರಿಚಯಿಸಲಾಗಿದೆ. ಇದು ಮಾಯೆಯನ್ನೂ ಮೀರಿದೆ. ಇಂದ್ರಿಯಗೋಚರವಲ್ಲದ್ದು.
ಸಗುಣಬ್ರಹ್ಮವು ಮಾಯೆ ಎಂಬ ಉಪಾಧಿಯ ಸಂಬಂಧವುಳ್ಳದ್ದು. ಇದಕ್ಕೆ ಮಾಯೆಯ ಸಂಬಂಧ ಇರುವುದಾದರೂ ಮಾಯೆಯ ಅಧೀನವಲ್ಲ.ಸಗುಣ ಬ್ರಹ್ಮವನ್ನು ಅದ್ವೈತದಲ್ಲಿ ಈಶ್ವರನೆಂದು ಕರೆಯುತ್ತಾರೆ.
ಮಾಯೆ:ಮಾಯೆಗೆ ಪ್ರಕೃತಿ,ಅವಿದ್ಯೆ,ಅಜ್ಞಾನ ಎಂಬ ಹೆಸರಿದೆ.ಬ್ರಹ್ಮಜ್ಞಾನದ ಹೊರತುಬೇರೆ ಯಾವುದರಿಂದಲೂ ಇದಕ್ಕೆ ನಾಶವಿಲ್ಲ.ಶುದ್ಧ ಬ್ರಹ್ಮದ ನಿಜಸ್ವರೂಪವನ್ನು ಮರೆಮಾಡಿ ಪ್ರಪಂಚ ರೂಪದಲ್ಲಿ ಕಾಣುವಂತೆ ಮಾಡಿದ್ದರಿಂದ ಇದು ಮಾಯೆ ಎನಿಸಿದೆ.ಯಾವುದು ನಿಜವಾಗಿಯೂ ಇಲ್ಲವೋ ಆದರೆ ಇದ್ದಂತೆ ತೋರುತ್ತದೆಯೋ ಅದೇ ಮಾಯೆ.ಶುದ್ಧಬ್ರಹ್ಮದಲ್ಲಿಯೂ ಈಶ್ವರ ಜೀವಗಳೆಂಬ ಕಲ್ಪನೆಗೂ ಈ ಮಾಯೆಯೇ ಕಾರಣವಾಗಿದೆ.ನಿಜ ಸ್ವರೂಪವನ್ನು ಮರೆಮಾಡಿ ಸಮಸ್ತ ಭೂತಗಳೂ ಎಲ್ಲಾ ಇಂದ್ರಿಯಗಲೂ ಪ್ರಾಣ,ಮನಸ್ಸು,ದೇಹ, ಇವೆಲ್ಲವೂ ನೇರವಾಗಿ ಅಥವಾ ಪರಂಪರೆಯಿಂದ ಇದರ ಪರಿಣಾಮಗಳು ಎಂದು ಹೇಳಲಾಗಿದೆ.
ಜೀವ:ಜೀವನಿಗೆ "ಕ್ಷೇತ್ರ" ಎಂದು ಹೇಳುತ್ತಾರೆ.ಇವನು ಬ್ರಹ್ಮದ ಅಂಶವೇ ಆಗಿದ್ದಾನೆ.ಇವನು ಅನಾದಿ.ಧಮ೯-ಅಧಮ೯ ಮುಂತಾದ ಸಮಸ್ತ ಕಾಯ೯ಗಳನ್ನೂ ಮಾಡುವುದರಿಂದ ಇವನು "ಕತಾ೯".ಅವುಗಳ ಫಲವನ್ನು ಭೋಗಿಸುವುದರಿಂದ ಭೋಕ್ತø.ಪಂಚ ಪ್ರಾಣಗಳೂ, ಪಂಚ ಕಮೇ೯ಂದ್ರಿಯಗಳೂ, ಪಂಚ ಜ್ಞಾನೇಂದ್ರಿಯಗಳೂ ಶರೀರದಲ್ಲಿ ನಿಲ್ಲುವಂತೆ ಮಾಡಿರುವುದರಿಂದ ಇವನಿಗೆ "ಜೀವ"ನೆಂದು ಹೆಸರು. ಶರೀರವು ಸ್ಥೂಲ ಶರೀರ,ಸೂಕ್ಷ್ಮ ಶರೀರ,ಕಾರಣ ಶರೀರ ಎಂದು ಮೂರು ವಿಧ.ಅವಿದ್ಯೆಯೇ ಕಾರಣ ಶರೀರ.ಸಮಸ್ತ ಇಂದ್ರಿಯಗಳು,ಪ್ರಾಣಗಳು,ಮನಸ್ಸು,ಬುದ್ದಿ ಇವುಗಳ ಸಮೂಹವೇ"ಸೂಕ್ಷ್ಮ ಶರೀರ".ರಕ್ತ ಮಾಂಸಾದಿಗಳ ಈ ದೇಹವೇ 'ಸ್ಥೂಲ ಶರೀರ".ಇವು ಬ್ರಹ್ಮಸಾಕ್ಷಾತ್ಕಾರದಿಂದ ಮುಕ್ತಿ ದೊರೆಯುವವರೆಗೂ ಇರುತ್ತವೆ.
ಜಗತ್ತು: ಜಗತ್ತನ್ನು ಚೇತನ ಹಾಗೂ ಅಚೇತನ(ಜಡ)ಎಂದು ವಿಭಾಗಿಸಿದ್ದಾರೆ. ಅವ್ಯಕ್ತ, ಮಹತ್, ಅಹಂಕಾರ, ಪಂಚ ತನ್ಮಾತ್ರಗಳು ಅಚೇತನ ಪ್ರಪಂಚ. ಮಾಯೆ ಎಂದರೆ ಸೃಷ್ಟಿಗೆ ಕಾರಣವಾದ ಈಶ್ವರನ ಸಂಕಲ್ಪ. ಪಂಚಭೂತಗಳ ಸೂಕ್ಷ್ಮಾವಸ್ಥೆಯೇ ಪಂಚ ತನ್ಮಾತ್ರಗಳು.ಆಕಾಶಾದಿ ಸೂಕ್ಷ್ಮಭೂತಗಳು ಪಂಚೀಕೃತವಾಗಿ ಸ್ಥೂಲವಾದ ಪಂಚಭೂತಗಳು ಆಗುವವು.ಈ ಸ್ಥೂಲವಾದ ಪಂಚಭೂತಗಳಿಂದ ಲೋಕಗಳೂ ಶರೀರಗಳೂ ಉಂಟಾಗುವವು.
ಜೀವ ಬ್ರಹ್ಮಗಳ ಸಂಬಂಧ: ಜೀವನು ಸೇವಕ ಈಶ್ವರನು ಸೇವ್ಯ.ಜೀವನು ಮಾಡಿದ ಶುಭ ಅಶುಭಗಳಿಗೆ ತಕ್ಕ ಫಲವನ್ನು ಕೊಡುವವನು ಈಶ್ವರ.ಜೀವನು ಬ್ರಹ್ಮದ ಅಂಶ.ಮಾಯೆ ಮತ್ತು ಶರೀರ ಎಂಬ ಉಪಾಧಿಯ ಸಂಬಂಧವಿರುವಾಗ ಜೀವ ಬ್ರಹ್ಮದ ವೈಲಕ್ಷಣ್ಯವು ಇರುವುದು. ಇದೇ ಜೀವ ಬ್ರಹ್ಮದ ಸಂಬಂಧ.
ಜೀವ ಜಗತ್ತುಗಳ ಸಂಬಂಧ:ಸಮಸ್ತ ಜಗತ್ತು ಈಶ್ವರನ ಆಜ್ಞೆಗೆ ಒಳಪಟ್ಟುಒಂದು ವ್ಯವಸ್ಥೆಯಲ್ಲಿರುವುದು.ಇಲ್ಲಿ ಸೃಷ್ಟಿಸಲ್ಪಟ್ಟ ಯಾವ ವಸ್ತುವೂ ಬ್ರಹ್ಮಕ್ಕಿಂತ ಭಿನ್ನವಲ್ಲ.ಸಮಸ್ತವೂ ಬ್ರಹ್ಮವೇ ಆಗಿದೆ.ಇದೇ ಜೀವ ಬ್ರಹ್ಮದ ಸಂಬಂಧ.
ಕಮ೯ ಮತ್ತು ಜ್ಞಾನ: ಕಮ೯ಗಳು ವಿಹಿತ ಮತ್ತು ನಿಷಿದ್ಧ ಎಂದು ಎರಡು ವಿಧ.ಶ್ರುತಿ, ಸ್ಮøತಿ,ಪುರಾಣಗಳಲ್ಲಿ ಅಂಗೀಕರಿಸಿದ ಕಮ೯ಗಳು ವಿಹಿತ.ಅವುಗಳಿಗೆ ವಿರುದ್ಧವಾದುದು ನಿಷಿದ್ಧ.ವಿಹಿತ ಕಮ೯ಗಳೇ ಧಮ೯. ನಿಷಿದ್ಧ ಕಮ೯ಗಳೇ ಅಧಮ೯.
ಕಮ೯ವು ನಿತ್ಯ,ನೈಮಿತ್ತಿಕ,ಕಾಮ್ಯ ಎಂದುಮೂರು ವಿಧ.
ನಿತ್ಯ ಕಮ೯: ಅಗತ್ಯವಾಗಿ ಪ್ರತಿದಿನ ಮಾಡಲೇಬೇಕಾದ ಕಮ೯.
ಕಾಮ್ಯ ಕಮ೯: ಯಾವುದಾದರೂ ಆಸೆಗಳನ್ನು ಈಡೇರಿಸಿಕೊಳ್ಳಲು ಮಾಡುವ ಕಮ೯.
ನೈಮಿತ್ತಿಕ ಕಮ೯: ಯಾವುದಾದರೊಂದು ನಿಮಿತ್ತದಿಂದ ಮಾಡುವ ಕಮ೯.
ಕಮ೯ಗಳೇ ಸಂಸಾರಬಂಧನಕ್ಕೆ ಕಾರಣ. ನಿಷ್ಕಾಮ ಕಮ೯ಗಳು ಬಂಧನಕ್ಕೆ ಕಾರಣವಾಗುವುದಿಲ್ಲ.ಜ್ಞಾನ ಎಂದರೆ ಸತ್ ಚಿತ್ ಆನಂದ ಸ್ವರೂಪನಾದ ಬ್ರಹ್ಮವನ್ನು ಅರಿತುಕೊಳ್ಳುವುದು. ಈ ಅವಸ್ಥೆಯಲ್ಲಿ ತ್ರಿಗುಣÁತ್ಮಕ ಮಾಯೆಯು ನಾಶವಾಗುವುದು.ಇದನ್ನೇ ಮುಕ್ತಿ ಎಂದು ಕರೆಯುತ್ತಾರೆ.ಮುಕ್ತನಿಗೆ (ಜ್ಞಾನಿಗೆ) ಪುನಃ ಸಂಸಾರ ಬಂಧನವಿಲ್ಲ. ಆಗ ಪರಮಾನಂದದ ಅನುಭವವಾಗುವುದು.
ಪ್ರಸ್ಥಾನತ್ರಯಗಳು: ಜ್ಞಾನದಿಂದಲೇ ಮೋಕ್ಷ. ಮೋಕ್ಷವೇ ಪರಮ ಪುರುಷಾಥ೯.ಇದೇ ಎಲ್ಲರ ಪರಮಗುರಿ.ಆದ್ದರಿಂದ ಎಲ್ಲರೂ ಅಧ್ಯಾತ್ಮಿಕ ಜ್ಞಾನವನ್ನು ಸಂಪಾದಿಸಬೇಕು.ಈ ಜ್ಞಾನವನ್ನು ಸಂಪಾದಿಸುವ ವಿಧಿ ವಿಧಾನಗಳನ್ನು ತಿಳಿಸಿಕೊಡುವ ಗ್ರಂಥಗಳಿಗೆ "ಪ್ರಸ್ಥಾನ ತ್ರಯ"ಗಳೆಂದು ಹೆಸರು6.
ಇವು ಮುಖ್ಯವಾಗಿ 1) ಉಪನಿಷತ್ತುಗಳು2) ಭಗವದ್ಗೀತೆ 3) ಬ್ರಹ್ಮಸೂತ್ರಗಳು. ಈ ಮೂರು ಗ್ರಂಥಗಳಲ್ಲಿ ಉಪನಿಷತ್ತುಗಳು ಬಹು ಮುಖ್ಯವಾದ ಪ್ರಸ್ಥಾನ.ಏಕೆಂದರೆ ಬ್ರಹ್ಮಸೂತ್ರ ಹಾಗೂ ಭಗವದ್ಗೀತೆಗಳಿಗೆ ಉಪನಿಷತ್ತುಗಳೇ ಆಧಾರ.ಇವು ಭಾರತೀಯ ಅದ್ಯಾತ್ಮ ಶಾಸ್ತ್ರಕ್ಕೆ ತಳಹದಿ.
ಪ್ರಾಚೀನ ಋಷಿಮುನಿಗಳು ಸತ್ಯಾನ್ವೇಷಣೆಗಾಗಿ ನಡೆಸಿದ ಜಿಜ್ಞಾಸೆಗಳು ಇವುಗಳಲ್ಲಿ ಕಂಡು ಬರುತ್ತವೆ.ಅದರಲ್ಲಿಯ ವೈಚಾರಿಕ ದೃಷ್ಟಿ ಅತ್ಯುತ್ತಮವಾದದ್ದು ಹಾಗೂ ವಿಶಾಲವಾದದ್ದು.ಇಡೀ ಜಗತ್ತಿನ ಆಗುಹೋಗುಗಳಿಗೆ ಕಾರಣವನ್ನು ಹುಡುಕುವ ಅನಾದಿ, ಅನಂತ ಶಕ್ತಿಯ ಸ್ವರೂಪವನ್ನು ತಿಳಿಸುವುದರ ಜೊತೆಗೆ ತತ್ಸಂಬಂಧವಾದ ಅನೇಕ ಕಥೆಗಳು ಸಂಭಾಷಣೆಗಳು ಇವುಗಳಲ್ಲಿ ಕಂಡುಬರುತ್ತವೆ.
ಸತ್ಯಶೋಧನೆಯು ಉಪನಿಷತ್ತುಗಳ ಮುಖ್ಯಗುರಿ. ಬ್ರಹ್ಮಸೂತ್ರ ಭಗವದ್ಗೀತೆಗಳಿಗೆ ಉಪನಿಷತ್ತುಗಳೇ ಆಧಾರ. ಬ್ರಹ್ಮಸೂತ್ರಗಳನ್ನು ವೇದಾಂತ ಸೂತ್ರಗಳೆಂದೂ ಶಾರೀರಕ ಸೂತ್ರಗಳೆಂದೂ ಕರೆಯುತ್ತಾರೆ.ಈ ಸೂತ್ರಗಳು ವೇದಾಂತದಶ೯ನದ ಕೈಪಿಡಿಯಾದ್ದರಿಂದ ವೇದಾಂತ ಸೂತ್ರಗಳೆಂದೂ ಶರೀರದಲ್ಲಿರುವ ಬ್ರಹ್ಮತತ್ವವನ್ನು ಕುರಿತು ವಿಚಾರ ಮಾಡುವುದರಿಂದ ಸಾರೀರಕ ಸೂತ್ರಗಳೆಂದೂ ಹೆಸರು.
ಇದರಲ್ಲಿ ನಾಲ್ಕು ಅಧ್ಯಾಯಗಳಿವೆ.ಒಂದೊಂದು ಅಧ್ಯಾಯದಲ್ಲಿಯೂ ನಾಲ್ಕು ನಾಲ್ಕು ಪಾದಗಳು.ಒಂದೊಂದು ಪಾದಕ್ಕೂ ಅಥ೯ಗಳಿದ್ದು ಅವು ಸೂತ್ರಗಳನ್ನು ಒಳಗೊಂಡಿವೆ.ಬ್ರಹ್ಮಸೂತ್ರವು ಉಪನಿಷತ್ತಿನ ಮೇಲೆ ಜೀವಿಸುವ ಉಪಜೀವಿ.
ವೇದವು ಕಮ೯ಕಾಂಡ ಹಾಗೂ ಜ್ಞಾನಕಾಂಡ ಎಂದು ಮುಖ್ಯವಾಗಿ ಎರಡು ವಿಧ.ಕಮ೯ಕಾಂಡಕ್ಕೆ ಜೈಮಿನಿಗಳು ರಚಿಸಿದ ಪೂವ೯ ಮೀಮಾಂಸಾ ಸೂತ್ರಗಳಿವೆ.ಅದರಂತೆ ವೇದದ ಜ್ಞಾನಕಾಂಡಕ್ಕೆ ಉಪನಿಷತ್ತುಗಳಿಗೆ ವ್ಯಾಸ ಮಹಷಿ೯ಗಳ (ಬಾದರಾಯಣ) ವೇದಾಂತ ಸೂತ್ರ ಗಳಿವೆ.(ಉತ್ತರ ಮೀಮಾಂಸೆ)ಭಾಷ್ಯ ಅಥವಾ ವ್ಯಾಖ್ಯಾನಗಳಿಲ್ಲದೆ ಈ ಸೂತ್ರಗಳನ್ನು ಅಷ್ಟು ಸುಲಭವಾಗಿ ಅಥ೯ ಮಾಡಿಕೊಳ್ಳಲು ಸಾದ್ಯವಿಲ್ಲ.
ಭಗವದ್ಗೀತೆಯಲ್ಲಿ ಬರುವ ವಿಷಯಗಳನ್ನೆಲ್ಲ ಶ್ರೀ ಕೃಷ್ಣನು ಉಪನಿಷತ್ತಿನಿಂದ ತೆಗೆದುಕೊಂಡು ಅದನ್ನು ಮತ್ತೂ ಸುಲಭಮಾಡಿ ಎಲ್ಲರಿಗೂ ಅಥ೯ವಾಗುವ ರೀತಿಯಲ್ಲಿ ಹೇಳಿದ್ದಾನೆ.
ಪಂಚಮವೇದವೆಂದು ಪ್ರಸಿದ್ಧವಾದ ಮಹಾಭಾರತದ ಬೀಷ್ಮ ಪವ೯ದಲ್ಲಿ ಭಗವದ್ಗೀತೆಯು ನಿರೂಪಿತವಾಗಿರುವುದು. ಇದು ಹದಿನೆಂಟು ಅಧ್ಯಾಯಗಳಲ್ಲಿ ಏಳುನೂರು ಶ್ಲೋಕಗಳನ್ನು ಒಳಗೊಂಡಿದೆ.
ಮೊದಲ ಆರು ಅಧ್ಯಾಯಗಳು _ಕಮ೯ಯೋಗ
ಎರಡನೇ ಆರು ಅಧ್ಯಾಯಗಳು_ಭಕ್ತಿ ಮಾಗ೯
ಕೊನೆಯ ಆರು ಅಧ್ಯಾಯಗಳು _ಜ್ಞಾನಮಾಗ೯
ಭಗವದ್ಗೀತೆಯು ಅತ್ಯಂತ ಜನಾದರಣೀಯವಾದ ಗ್ರಂಥ. ಇದು ಸುಲಭವೂ ಮನೋಹರವೂ ಸುಲಲಿತವೂ ಹೃದಯಸ್ಪಶಿ೯ಯೂ ಆದ ಗ್ರಂಥ. ನಾಡಿನ ಗಣ್ಯ ವ್ಯಕ್ತಿಗಳಾದ ಅರವಿಂದರು, ಬಾಲಗಂಗಾಧರ ತಿಲಕ್, ಗಾಂಧೀಜಿ, ಡಿ.ವಿ.ಗುಂಡಪ್ಪನವರು ಮೊದಲಾದವರು ಭಗವದ್ಗೀತೆ ಕೇವಲ ಅಧ್ಯಾತ್ಮ ಶಾಸ್ತ್ರವಷ್ಟೇ ಅಲ್ಲ, ಅದು ಜೀವನ ದಶ೯ನ ಶಾಸ್ತ್ರವೂ ಹೌದು ಎಂದು ಪ್ರತಿಪಾದಿಸಿದ್ದಾg.É.
ಭಗವದ್ಗೀತೆ: ಭಗವದ್ಗೀತೆಯು ಭಾರತೀಯರ ಶ್ರೇಷ್ಠವಾದ ಧಾಮಿ೯ಕ ಹಾಗೂ ಅಧ್ಯಾತ್ಮಿಕ ಗ್ರಂಥವಾಗಿದೆ.ಮಹಾಭಾರತ ಯುದ್ಧದ ಆರಂಭದಲ್ಲಿ ಧಮ೯ಯುದ್ಧದ ಗೆಲುವಿಗೋಸ್ಕರ ಕೃಷ್ಣಾಜು೯ನರ ಸಂವಾದ ರೂಪದಲ್ಲಿರುವ ಈ ಗೀತೆ ಭಗವಂತನಾದ ಶ್ರೀ ಕೃಷ್ಣನ ಮುಖದಿಂದ ಹೊರಹೊಮ್ಮಿದ ಕಾರಣ "ಭಗವದ್ಗೀತೆ"ಎನಿಸಿದೆ. ಈ ಗೀತೆಯು ಸಾಕ್ಷಾತ್ ಭಗವ0ತನ ದಿವ್ಯವಾಣಿಯಾಗಿದೆ7.ಇದರ ಮಹಿಮೆ ಅ¥.Áರ. ಭಗವದ್ಗೀತೆ ಅತ್ಯಂತ ಜನಪ್ರಿಯವೂ ಗೌರವಾದರಗಳಿಗೆ ಪಾತ್ರವಾದದ್ದೂ ಆಗಿದೆ.ಜನೋಪಯೋಗಿ ಉಪದೇಶ ಧಾರೆಯನ್ನು ಗೀತೆಯ ಮೂಲಕ ಪರಮಾತ್ಮನು ಅಮೃತಧಾರೆಯನ್ನು ಹರಿಸಿರುವನು.ಪರಿಮಿತ ಶಬ್ದಗಳಲ್ಲಿ ಇಡೀ ಜೀವನ ಶಾಸ್ತ್ರವನ್ನು ತಿಳಿಸಲಾಗಿದೆ.ಇಲ್ಲಿ ವೇದಗಳ ಸಾರವನ್ನು ಸಂಗ್ರಹಿಸಲಾಗಿದೆ.
ಭಗವಂತನ ಗುಣ, ಪ್ರಭಾವ, ಸ್ವರೂಪ, ತತ್ವ ರಹಸ್ಯ, ಕಮ೯, ಉಪಾಸನೆ ಹಾಗೂ ಜ್ಞಾನದ ವಣ೯ನೆಯನ್ನು ಮಾಡಲಾಗಿದೆ.
"ನಾನು ಗೀತೆಯ ಆಶ್ರಯದಲ್ಲಿ ಇರುತ್ತೇನೆ. ಗೀತೆಯು ನನ್ನ ಶ್ರೇಷ್ಠಮನೆಯಾಗಿದೆ.ಗೀತೆಯ ಜ್ಞಾನದ ಆಸರೆ ಪಡೆದೇ ನಾನು ನೂರು ಲೋಕಗಳನ್ನು ಪಾಲಿಸುತ್ತೇನೆ" ಎಂದು ಸ್ವಯಂ ಭಗವಂತನೇ ಹೇಳಿದ್ದಾನೆ.ವಾಸ್ತವವಾಗಿ ಜಗತ್ತಿನಲ್ಲಿ ಗೀತೆಗೆ ಸಮನಾದ ತಪಸ್ಸು, ತೀಥ೯, ವ್ರತ, ಉಪಾಸನೆ ಯಜ್ಞ, ದಾನ ಯಾವುದೂ ಇಲ್ಲ.
1) ನಮಗೆ ತಿಳಿದಿರುವ ಎಲ್ಲಾ ಸಾಹಿತ್ಯದಲ್ಲಿ ವಿಶ್ವದಲ್ಲೇ ಅತ್ಯಂತ ಸುಂದರವಾದ ಏಕ ಮಾತ್ರ ನಿಜ ಸ್ವರೂಪದ ದಾಶ೯ನಿಕ ಭಗವದ್ಗೀತೆ.
2) ಗೀತೆ ಕೇವಲ ಸೂತ್ರಾತ್ಮಕವಾದ (ಉಪದೇಶಾತ್ಮಕವಾದ) ಗ್ರಂಥವಲ್ಲ.ಅದು ಒಂದು ಮಹಾನ್ ಧಾಮಿ೯ಕ ಕಾವ್ಯ.ಅದರೊಳಗೆ ಹೆಚ್ಚು ಹೆಚ್ಚು ಆಳಕ್ಕಿಳಿದಷ್ಟೂಹೆಚ್ಚು ಅಥ೯ವತ್ತಾದ ವಿಚಾರಗಳನ್ನು ಕಾಣಬಹುದು.ಪ್ರತಿಯುಗದಲ್ಲೂ ಅಲ್ಲಿನ ಮುಖ್ಯ ಘಟ್ಟಗಳು ಹೊಸ ಹೊಸ ಹಾಗೂ ವಿಸ್ತಾರವಾದ ಅಥ೯ಗಳನ್ನು ಪಡೆಯುತ್ತದೆ.
3) ಭಾರತೀಯ ದಶ೯ನ ಪ್ರಪಂಚದಲ್ಲಿ ಜನಪ್ರಿಯತೆಯಲ್ಲಿ ಉಳಿದ ಯಾವ ಗ್ರಂಥಕ್ಕೂ ಕಡಿಮೆಯಿಲ್ಲ.ಯಾವಾಗಲು ಅದು ಹೆಚ್ಚಿನ ಗೌರವಕ್ಕೆ ಪಾತ್ರವಾಗಿದೆ.ಮತ್ತು ಅದರ ಜನಪ್ರಿಯತೆ ಹೆಚ್ಚುತ್ತಲೇ ಇದೆ.
ಭಗವದ್ಗೀತೆಯ ಅನೇಕ ಗ್ರಂಥಗಳಿವೆ
ಅಭಿನವ_ಗೀತಾಥ೯ಸಂಗ್ರಹ, ಆನಂದ_ವ್ಯಾಖ್ಯಾ, ಆನಂದ ವಧ೯ನ_ಜ್ಞಾನಕಮ೯ ಸಮುಚ್ಚಯ, ನೀಲಕಂಠ_ಭಾವದೀಪ, ಮಧುಸೂದನ_ಗೂಡಾಥ೯ ದೀಪಿಕಾ, ಪುರುಷೋತ್ತಮ_ ಅಮೃತತರಂಗಿಣಿ, ರಾಘವೇಂದ್ರ ಸ್ವಾಮಿಗಳು_ಅಥ೯ಸಂಗ್ರಹ, ಕಾಮಕಂಠ - ಸವ೯ತೋ ಭದ್ರ, ಸದಾನಂದ_ಭಾವಪ್ರಕಾಶ, ಶಂಕರಾನಂದ_ತಾತ್ಪಯ೯ಬೋಧಿನೀ, ಶ್ರೀಧರ_ಸುಬೋಧಿನೀ.
ಇವೆಲ್ಲವೂ ಸಂಸ್ಕøತದಲ್ಲಿರುವ ಗ್ರಂಥಗಳು8.
ಉಪನಿಷತ್ತುಗಳಿಗೂ ಭಗವದ್ಗೀತೆಗೂ ಸಂಬಂಧವಿದೆ. ಉಪನಿಷತ್ತುಗಳೇ ಗೋವುಗಳು. ಗೋಪಾಲಕೃಷ್ಣನೇ ಹಾಲುಕರೆಯುವವನು, ಗೀತೆಯೇ ಹಾಲು,ಉಪನಿಷತ್ತಿನ ಸಾರವಾಗಿ ಶ್ರೀ ಕೃಷ್ಣನು ಗೀತಾಮೃತವನ್ನು ನೀಡಿದ್ದಾನೆ.ಪ್ರಪಂಚದ ಸಕಲ ಸಜ್ಜನರಿಗಾಗಿ ಶ್ರೀ ಕೃಷ್ಣನು ಈ ಅಮೃತ ಧಾರೆಯನ್ನು ಹರಿಸಿರುವನು.ಉಪನಿಷತ್ತುಗಳ ಭಾಷೆಗಿಂತ ಗೀತೆಯ ಭಾಷೆಲಲಿತ ಹಾಗೂ ಸ್ಪಷ್ಟ.ಗೀತೆಯೂ ಕೂಡ ಒಂದು ಉಪನಿಷತ್ತೇ ಆಗಿದೆ.
ಭಾರತೀಯ ದಶ೯ನದಲ್ಲಿ ಭಗವದ್ಗೀತೆಯ ಸ್ಥಾನ:
"ಪಂಚಮವೇದ"ಎಂದೇ ಪ್ರಸಿದ್ಧವಾಗಿರುವ ವ್ಯಾಸಮುನಿ ಪ್ರಣೀತವಾದ ಮಹಾಬಾರತದ "ಭೀಷ್ಮಪವ೯"ದಲ್ಲಿ ಭಗವದ್ಗೀತೆಯು ನಿರೂಪಿತವಾಗಿದೆ.ವೇದಾಂತ ಪ್ರತಿಪಾದಕರಾದ ಎಲ್ಲಾ ಆಚಾಯ೯ರೂ ಇದನ್ನು ಕುರಿತು ಭಾಷ್ಯಹಾಗೂ ವ್ಯಾಖÁ್ಯನಗಳನ್ನು ಬರೆದಿರುತ್ತಾರೆ.ಈ ಆಚಾಯ೯ರುಗಳು ಸ್ವಯಂ ಪ್ರತಿಭಾನ್ವಿತರಾಗಿದ್ದರೂ ತಮ್ಮ ತಮ್ಮ ಮತಗಳನ್ನು ಪ್ರತಿಪಾದಿಸಿ ಸಮಥಿ೯ಸಲು ಅವರು ಗೀತೆಯನ್ನು ಅನುಸರಿಸಿದರು.ಏಕೆಂದರೆ ಗೀತೆಯ ಪ್ರಭಾವ ಜನಾಂಗದ ಮೇಲೆ ಆಳವಾಗಿ ಬೇರೂರಿತ್ತು.ಗೀತೆಯ ಆಧಾರದ ಮೇಲೆ ನಿಂತ ಸಂಪ್ರದಾಯಕ್ಕೆ ಪುರಸ್ಕಾರ ದೊರೆಯುತ್ತಿತ್ತು೯.
ಇದು ಪರಮ ಪವಿತ್ರ ದಶ೯ನ ಗ್ರಂಥ “ಜ್ಞಾನಾ ದೇವಹಿ ಕೈವಲ್ಯಂ” ಎಂದು ಹೇಳಿರುವಂತೆ ಜ್ಞಾನವು ಲಭ್ಯವಾಗುವ ಬಗೆಯನ್ನು ತಿಳಿಸಿಕೊಡುವ ಗ್ರಂಥಕ್ಕೆ "ಪ್ರಸ್ಥಾನ"ವೆಂದು ಹೆಸರು. ಉಪನಿಷತ್ತುಗಳು,ಭಗವದ್ಗೀತೆ,ಹಾಗೂ ಬ್ರಹ್ಮಸೂತ್ರಗಳು ಪ್ರಸ್ಥಾನತ್ರಯಗಳು.್ರ ಇವುಗಳಲ್ಲಿ ಅತ್ಯಂತ ಜನಾದರಣೀಯ ಗ್ರಂಥವೆಂದರೆ ಭಗವದ್ಗೀತೆ.ಉಪನಿಷತ್ತುಗಳು ಹಾಗೂ ಬ್ರಹ್ಮಸೂತ್ರಗಳು ಅತ್ಯಂತ ಕಠಿಣವೂ ತಕ೯ಮಯವೂ ಆಗಿದ್ದು ಜನಸಾಮಾನ್ಯರಿಗೆ ಅಥೈ೯ಸಿಕೊಳ್ಳುವುದು ಕಷ್ಟವಾದ್ದರಿಂದ ಅವು ಭಗವದ್ಗೀತೆಯಷ್ಟು ಪ್ರಚಾರದಲ್ಲಿಲ್ಲ.
ಭಗವದ್ಗೀತೆಯು ಸುಲಭವೂ ಮನೋಹರವೂ ಲಲಿತವೂ ಹೃದಯ ಸ್ಪಶಿ೯ಯೂ ಆದ ದಶ೯ನವಾಗಿದೆ.ಉಪನಿಷತ್ತುಗಳ ಸಾರಸಂಗ್ರಹವೇ ಭಗವದ್ಗೀತೆ.ಇದು ಕೇವಲ ಮೋಕ್ಷಶಾಸ್ತ್ರವಷ್ಟೇ ಅಲ್ಲ ಜೀವನ ಶಾಸ್ತ್ರವೂ ಹೌದು.ಕಮ೯ದ ಮೂಲಕ ನೈಷ್ಕಮ್ಯ೯ವನ್ನು ಪಡೆಯಬೇಕೆಂಬುದೇ ಗೀತೆಯ ಮುಖ್ಯ ಉದ್ದೇಶ.
ಪೂವ೯ಮೀಮಾಂಸಾ ದಶ೯ನದಲ್ಲಿ ಮುಖ್ಯವಾಗಿ ಯೋಗ,_ಯಾಗ-ದಾನ- ತಪಸ್ಸುಗಳ ವಿಚಾರವು ನಿರೂಪಿತವಾಗಿದೆ. ಇವುಗಳೇ ಆದಶ೯ನಕ್ಕೆ ಒಪ್ಪಿಗೆಯಾದ ಮುಖ್ಯ ಕಮ೯ಗಳು. ಇವುಗಳನ್ನು ಆಚರಿಸಿದರೆ ಮನುಷ್ಯನು ಪರಿಶುದ್ಧನಾಗುತ್ತಾನೆ.ಕಾಮ್ಯ ಕಮ೯ಗಳನ್ನು ಬಿಟ್ಟು ನಿಷ್ಕಾಮ ಕಮ೯ಗಳನ್ನು ಮಾಡುವವರಿಗೆ ಚಿತ್ತಶುದ್ಧಿಯಾಗಿ ಜ್ಞಾನವು ಪ್ರಾಪ್ತವಾಗುತ್ತದೆ.
ಉಪಾಸನೆ ಎಂಬುದು ಸತತವಾಗಿ ಭಾವನಾರೂಪವಾಗಿರುತ್ತದೆ.ಉಪನಿಷತ್ತಿನ "ಅಕ್ಷರ" ಎಂಬ ಹೆಸರಿನಿಂದ ಕರೆದಿರುವ ನಿಗು೯ಣ ಹಾಗೂ ಸಗುಣಾಕಾರ ಬ್ರಹ್ಮವನ್ನು "ಓಂ"ಕಾರವೆಂಬ ಪ್ರತೀಕದ ಮೂಲಕ ಉಪಾಸಿಸುವ ಬಗೆಯನ್ನು ಗೀತೆಯು ತಿಳಿಸುತ್ತದೆ. ಧ್ಯಾನ-ಯೋಗ ರೂಪವಾದ ಸಾಧನೆಯು ಅವಶ್ಯಕವೆಂಬುದನ್ನು ಗೀತೆಯಲ್ಲಿ ಹೇಳಿದೆ.
ದುಷ್ಕøತ್ಯವನ್ನು ಆಚರಿಸುವವರಿಗೆ ಭಗವದ್ಗೀತೆ ಹಾಗೂ ಸುಕೃತಿಗಳು ಲಭಿಸಲಾರವು. ಇದು ಸಾತ್ವಿಕರಿಗೆ ಮಾತ್ರ ಲಭ್ಯ. ಭಕ್ತರಲ್ಲಿ ನಾಲ್ಕು ಬಗೆ.1) ಆತ೯ 2) ಅಥಾ೯ಥಿ೯ 3) ಜಿಜ್ಞಾಸು 4) ಜ್ಞಾನಿ ಕಮ೯ ಜ್ಞಾನ ಇವುಗಳ ಅನ್ಯೋನ್ಯ ಶ್ರೇಷ್ಠತೆಯನ್ನು ಕುರಿತು ಜಿಜ್ಞಾಸೆ ಮಾಡುವುದು ಮಾತ್ರ ಗೀತೆಯ ಉದ್ದೇಶವಲ್ಲ. ಜೊತೆಯಲ್ಲಿ ಇವುಗಳ ಸಾಮರಸ್ಯವನ್ನೂ ಪ್ರತಿಪಾದಿಸುತ್ತದೆ.ಈ ಮೂರು ವಿಧ (ಕಮ೯,ಭಕ್ತಿ,ಜ್ಞಾನ) ಮೋಕ್ಷ ಮಾಗ೯ಗಳು ಬೇರೆ ಆದರೂಅವುಗಳ ಗುರಿ ಒಂದೇ.
ಐಚ್ಚಿಕ ವಸ್ತುವಿನ ಕಡೆಗೆ ಅಂತರಂಗವು ಹೃದಯದ ಮೂಲಕ ಹರಿದರೆ ಅದು ಭಕ್ತಿ ಎನಿಸುತ್ತದೆ.ಅದು ಬುದ್ಧಿಯಮೂಲಕ ಹರಿದರೆ “ಜ್ಞಾನ"ವಾಗುತ್ತದೆ.ಅದು ಇಂದ್ರಿಯಗಳ ಮೂಲಕ ವ್ಯಕ್ತವಾದರೆ ಕಮ೯ ಎನಿಸುತ್ತದೆ.ಪೂವ೯ ಉತ್ತರ ಮೀಮಾಂಸೆಗಳ, ಸಾಂಖ್ಯ_ಯೋಗ ಮುಂತಾದ ಎಲ್ಲಾ ಆಸ್ತಿಕ ದಶ೯ನಗಳ ವಿಷಯಗಳನ್ನು "ಸಮನ್ವಯ"ಗೊಳಿಸುವ ಜನಪ್ರಿಯ ಉದ್ಗ್ರಂಥವೇ ಭಗವದ್ಗೀತೆ.ಮಂದಮತಿಗಳಿಗೂ ಧಮ೯ದ ಸಾರವನ್ನು ತಿಳಿಸುವ ಧಮ೯ಗ್ರಂಥ. ಕಮ೯, ಭಕ್ತಿ, ಜ್ಞಾನ ಮುಂತಾದ ಮೋಕ್ಷ ಸಾಧನಗಳು ಉಕ್ತವಾಗಿವೆ. ಸಾಮಾಜಿಕ ಹಿತವನ್ನು ಬಯಸಿ ತಮ್ಮ ಆತ್ಮಾವಲೋಕನಕ್ಕೆ ಸಹಕಾರಿಯಾಗಿ ಭಾರತೀಯ ದಶ೯ನಗಳಲ್ಲಿ ಭಗವದ್ಗೀತೆಯು ಅತ್ಯಂತ ಮಹತ್ವದ ಗ್ರಂಥವಾಗಿದೆ.
ಗೀತೆ ಆತ್ಮದ ವಿಕಸನಕ್ಕೆ ಸಂಬಂಧಿಸಿದ ನಿತ್ಯಶಾಸ್ತ್ರ.ಕೃಷ್ಣನ ಪವಿತ್ರ ವದನದಿಂದ ಭಾವಜೀವಿಗಳ ಆತ್ಮವಿಮೋಚನೆಗೆಂದು ಧರೆಗಿಳಿದ ಗಂಗೆ ಭಗವದ್ಗೀತಾ. ಭಗವದ್ಗೀತೆಯಲ್ಲಿ "ಚಾತುವ೯ಣ್ಯ"ದ ಪ್ರಸ್ತಾಪವೂ ಇದೆ. ಗುಣ,ಕಮ೯ಗಳಿಗೆ ತಕ್ಕಂತೆ ಚಾತುವ೯ಣ್ಯವು ತನ್ನಿಂದ ಸೃಷ್ಟಿಸಲ್ಪಟ್ಟಿದೆ ಎಂದು ಕೃಷ್ಣನು ಹೇಳಿದ್ದಾನೆ.
"ಸವ೯ ಧಮಾ೯ನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ
ಅಹಂ ತ್ವಾಂ ಸವ೯ ಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾಶುಚಃ||"
"ಎಲ್ಲಾ ಧಮ೯ಗಳನ್ನೂ ಬಿಟ್ಟು ನನ್ನನ್ನು ಶರಣು ಹೊಂದು. ನಾನು ನಿನ್ನನ್ನು ಎಲ್ಲಾ ಪಾಪಗಳಿಂದಲೂ ಮುಕ್ತನನ್ನಾಗಿ ಮಾಡುತ್ತೇನೆ" ಎಂದು ಭಗವಾನ್ ಶ್ರೀ ಕೃಷ್ಣನು ಹೇಳಿದ್ದಾನೆ.
ಗೀತೆಯು ನಿಷ್ಕಾಮಕಮ೯ವನ್ನು ಬೋಧಿಸುತ್ತದೆ.
"ನ ಹಿ ಜ್ಞಾನೇನ ಸದೃಶಂ" .ಜ್ಞಾನಕ್ಕೆ ಸಮಾನ ವಾದುದು ಯಾವುದೂ ಇಲ್ಲ.
ಬ್ರಹ್ಮಸೂತ್ರಗಳು ವೇದಾಂತ ದಶ೯ನದ ಕೈಪಿಡಿ. ಬ್ರಹ್ಮಸೂತ್ರಗಳನ್ನು ವೇದಾಂತ ಸೂತ್ರಗಳೆಂದೂ ಶಾರೀರಕ ಸೂತ್ರಗಳೆಂದೂ ಕರೆಯುತ್ತಾರೆ. ವೇದಗಳ ಅಂತವೆನಿಸುವ ಉಪನಿಷತ್ತುಗಳಲ್ಲಿ ಪ್ರತಿಪಾದಿತವಾಗಿರುವ ತತ್ವಗಳಿಗೆ ವೇದಾಂತಗಳೆಂದು ಹೆಸರು.
ಬ್ರಹ್ಮಸೂತ್ರಗಳು:
"ಬ್ರಹ್ಮಸೂತ್ರಗಳು ವೇದಾಂತ ವಾಕ್ಯಗಳನ್ನು ಕುಸುಮ ಮಾಲೆಯಾಗಿ ಕಟ್ಟಲುಬಂದಿರುತ್ತವೆ"ಎಂದು
ಶ್ರೀ ಶಂಕರಾಚಾಯ೯ರು ತಮ್ಮ ಸೂತ್ರ ಭಾಷ್ಯದಲ್ಲಿ ಹೇಳಿರುತ್ತಾರೆ10. ಬ್ರಹ್ಮ ಸೂತ್ರಗಳು ಸಾಂಖ್ಯ ವೈಶೇಷಿಕ, ಪಾಶುಪತಗಳಲ್ಲಿವೆ. ಬೌದ್ಧ್ರರ ಹಾಗೂ ಜೈನರ ಅಭಿಪ್ರಾಯಗಳನ್ನು ಸೂಚಿಸಿವೆ.
ಬ್ರಹ್ಮಸೂತ್ರಗಳಿಗೆ ನಾಲ್ಕು ಪಾದಗಳಿದ್ದು, ಒಂದೊಂದು ಅಧ್ಯಾಯಕ್ಕೂ ನಾಲ್ಕು ನಾಲ್ಕು ಪಾದಗಳಿವೆ.ಒಂದೊಂದು ಪಾದಕ್ಕೂ ಅಧಿಕರಣಗಳಿದ್ದು, ಅಧಿಕರಣಗಳು ಸೂತ್ರಗಳನ್ನು ಒಳಗೊಂಡಿವೆ.ಅಧಿಕರಣದಲ್ಲಿ ವಿಷಯಕ್ಕೆ ಅನುಗುಣವಾಗಿ ಸೂತ್ರಗಳ ಸಂಖ್ಯೆ ಇದೆ. ಭಾಷ್ಯಕಾರರ ಅಭಿಪ್ರಾಯದಲ್ಲಿ ಪ್ರತಿಯೊಂದು ಅಧಿಕರಣವೂ ಒಂದೊಂದು ವಿಷಯಗಳನ್ನು ಒಳಗೊಂಡು ಅದಕ್ಕೆ ವಿರೋಧಗಳನ್ನು ನಿರಾಕರಿಸುತ್ತದೆ.
ಇವು ಹಿಂದಿನ ಯುಗಕ್ಕೆ ಸೇರಿದ್ದರೂ ನವಯುಗದ ಮೇಲೆ ತಮ್ಮ ಪ್ರಭಾವವನ್ನು ಬೀರಿವೆ.ಇಲ್ಲಿ ಮಾನವನ ಹೊರಗಿನ ಅವಸ್ಥೆಗಳು ಭಿನ್ನವಾದರೂ ಒಳಗಿನ ವಾತಾವರಣ ಬದಲಾಗಿಲ್ಲ.ಅಧ್ಯಾತ್ಮಿಕ ದೃಷ್ಟಿಯಿಂದ ನಾವು ಹಿಂದಿನವರಿಗಿಂತ ಶ್ರೇಷ್ಠರಾಗಿದ್ದೇವೆಂದು ಹೇಳಲು ಸಾಧ್ಯವಿಲ್ಲ. ಜನ್ಮ, ಮರಣ, ಕಮ೯, ದುಃಖ, ಸುಖ, ಇವೆಲ್ಲವೂ ಹಿಂದಿನಂತೆಯೆ ಸಮಸ್ಯಾತ್ಮಕವಾಗಿಯೇ ಇವೆ. ರಾಗ, ದ್ವೇಶ, ಅಸೂಯೆಗಳು ನಮ್ಮ ಮೇಲೆ ಧಾಳಿಯನ್ನು ಇನ್ನೂ ಹೆಚ್ಚಾಗಿ ಮಾಡುತ್ತಿವೆ.ಪರಮಾಥ೯ ಸ್ವರೂಪ, ಜಗತ್ತಿನ ಮಿತಿ, ಜೀವಾತ್ಮನ ಗುರಿ ಪಟ್ಟಿಗೆ ಸಾಧನಗಳು ಜಿಜ್ಞಾಸೆಗಳು ಇನ್ನೂ ಕೊನೆಗೊಂಡಿಲ್ಲ.ಬ್ರಹ್ಮಸೂತ್ರಗಳು ಪ್ರತಿಯೊಬ್ಬ ಮನುಷ್ಯನ ಅಜ್ಞಾನವನ್ನು ನಿವಾರಿಸಲು ಅವನನ್ನು ಪೂಣ೯ತ್ವಕ್ಕೆ ಒಯ್ಯಲು ಭಾಷ್ಯವು ಸಮಥ೯ವಾಗಿದೆ.ಇದು ಅತ್ಯಂತ ಪ್ರಮಾಣ ಪರವಾದ ಪ್ರಸ್ಥಾನ.
ಬ್ರಹ್ಮಸೂತ್ರಗಳು ಒಂದು ಅಸದೃಶ ಸಾಹಿತ್ಯವಾಗಿದೆ.ಅಅತ್ಯಂತ ಪ್ರಾಚೀನವಾದ ಶ್ರೌತ_ ಗೃಹ್ಯ_ಧಮ೯ ಸೂತ್ರಗಳಲ್ಲಿದೆ. ನ್ಯಾಯ, ವೈಶೇಷಿಕ, ಸಾಂಖ್ಯ, ಯೋಗ, ಪೂವ೯ ಮೀಮಾಂಸೆ, ಉತ್ತರ ಮೀಮಾಂಸೆ ಎಂಬ ಆರು ಪ್ರಸಿದ್ಧವಾದ ದಶ೯ನಗಳಿಗೂ ಸೂತ್ರಗಳಿವೆ. ಸೂತ್ರಗಳು ಸಂಕ್ಷಿಪ್ತವಾಗಿದ್ದು ಅಥ೯ವನ್ನು ಸೂಚಿಸಬೇಕು. ಮಿತವಾದ ಅಕ್ಷರಗಳಿಂದಲೂ ಪದಗಳಿಂದಲೂ ರಚಿಸಲ್ಪಟ್ಟು ಸಾರಭೂತವಾಗಿರಬೇಕು.ಆದರೆ ಈ ಸೂತ್ರಗಳು ಅತ್ಯಂತ ಹೃಸ್ವವಾಗಿ ಭಾಷ್ಯದ ಸಹಾಯವಿಲ್ಲದೆ ಅವುಗಳನ್ನು ಅಥ೯ಮಾಡಿಕೊಳ್ಳಲು ಸಾಧ್ಯವಿಲ್ಲ. ಹಿಂದಿನ ಕಾಲದಲ್ಲಿ ಶಿಷ್ಯನು ಸೂತ್ರಗಳನ್ನು ಅಥ೯ದೊಂದಿಗೆ ಗುರುಮುಖದಿಂದಲೇ ಕಲಿಯುತ್ತಿದ್ದನು.
ಭಾಷ್ಯಕಾರರು ಸೂತ್ರಗಳ ತಾತ್ಪಯ೯ವನ್ನು ನಿಣ೯ಯಿಸುವಾಗ
1) ಉಪಕ್ರಮ 2) ಉಪಸ0ಹಾರ 3)ಅಭ್ಯಾಸ 4) ಅಪೂವ೯ತೆ 5)ಫಲ 6)ಅಥ೯ವಾದ
7) ಉಪಪತ್ತಿ ಎಂಬ ವಿಧಗಳನ್ನು ಸ್ವೀಕರಿಸುತ್ತಾರೆ.
ಬ್ರಹ್ಮಸೂತ್ರಗಳು ಸನ್ಯಾಸಿಗಳಿಗೆ ಬೇಕಾದ ಗ್ರಂಥವಾಗಿರುವುದರಿಂದ ಇದನ್ನು "ಭಾಷ್ಯಸೂತ್ರ"ಗಳೆಂದು ಕರೆಯುತ್ತಾರೆ. ವ್ಯಾಸರು ಭಾಷ್ಯಸೂತ್ರಗಳ ಕತೃ೯ವೆಂದು ತಿಳಿಯಲಾಗಿದೆ. ಪೂವ೯ ಮೀಮಾಂಸೆಯು ಕಮ೯ವನ್ನು ಕುರಿತು ಜಿಜ್ಞಾಸೆ ಮಾಡಿದರೆ ಉತ್ತರ ಮೀಮಾಂಸೆಯು ಬ್ರಹ್ಮವನ್ನು ಕುರಿತು ಜಿಜ್ಞಾಸೆ ಮಾಡುತ್ತದೆ.
ಸೂತ್ರದ ಲಕ್ಷಣಗಳು ಈ ರೀತಿ ಇವೆ:
1) ಅದರಲ್ಲಿ ಶಬ್ದಗಳ ಸಂಖ್ಯೆ ಕಡಿಮೆ ಇರಬೇಕು. ಎಂದರೆ ಸಂಕ್ಷಿಪ್ತವಾಗಿರಬೇಕು.
2) ಅದರಲ್ಲಿ ಸಂದಿಗ್ಧತೆಗೆ ಅವಕಾಶವಿರಬಾರದು.
3) ಅದರಲ್ಲಿ ವಿಷಯದ ಇಡೀ ಸಾರವಿರಬೇಕು.
4) ಅದು ವಿಷಯದ ಎಲ್ಲಾ ಮುಖಗಳನ್ನು ಗಣನೆಗೆ ತಂದುಕೊಳ್ಳಬೇಕು.
5) ಅದರಲ್ಲಿ ಪುನರುಕ್ತಿ ಇರಬಾರದು.
6) ವಿಷಯದ ಪ್ರತಿಪಾದನೆಯಲ್ಲಿ ದೋಷವಿರಬಾರದು.
ಬ್ರಹ್ಮಸೂತ್ರಗಳನ್ನು ರಚಿಸಿದವರು ಬಾದರಾಯಣರು.ನಮ್ಮ ಋಷಿಗಳುರಿಗೂ ವ್ಯಾಸರಿಗೂ ÀಮÁಯಣರ ದೇವತೆಗಳಂತೆ ಪರೋಕ್ಷ ಪ್ರಿಯರೂ ಪ್ರತ್ಯಕ್ಷ ದ್ವೇಶಿಗಳೂ ಆಗಿದ್ದರು.ಬಾದರಾಯಣರಿಗೂ ವ್ಯಾಸರಿಗೂ ಯಾವ ವ್ಯತ್ಯಾಸವೂ ಇಲ್ಲವೆಂದು ಅನೇಕ ವ್ಯಾಖ್ಯಾನಕಾರರು ಅಂಗೀಕರಿಸಿರುತ್ತಾರೆ. ಪ್ರಸ್ಥಾನತ್ರಯಗಳೆನಿಸಿದ ಉಪನಿಷತ್ತುಗಳು, ಭಗವದ್ಗೀತೆ, ಮತ್ತು ಬ್ರಹ್ಮಸೂತ್ರಗಳು, ಈ ಮೂರು ವೇದಾಂತದ ತಳಹದಿಯಾಗಿವೆ.ಮೊದಲನೆಯ 28 ಅಧಿಕರಣಗಳಲ್ಲಿ ಉಪನಿಷತ್ ವಾಕ್ಯಗಳ ಪ್ರಕಾರಬ್ರಹ್ಮದ ವಿಷಯದಲ್ಲಿ ಉಪದೇಶವನ್ನುಮಾಡಿದೆ.ಈ ಅಧಿಕರಣಗಳಲ್ಲಿ ಉದಾಹರಿಸಿರುವ 28 ವಾಕ್ಯಗಳಲ್ಲಿ ಛಾಂದೋಗ್ಯ_12,ಬೃಹದಾರಣ್ಯಕ_4, ಕಠ-4, ತೈತ್ತಿರೀಯ_2 ಇತ್ಯಾದಿ ವಾಕ್ಯಗಳನ್ನು ತೆಗೆದುಕೊಂಡಿದೆ.ಹೆಚ್ಚಿನ ವಾಕ್ಯಗಳನ್ನು ಛಾಂದೋಗ್ಯದಿಂದ ಆರಿಸಿರುವುದು ಗಮನಾಹ೯ವಾಗಿದೆ.ಅಲ್ಲದೆ ಶ್ವೇತಾಶ್ವತರ, ಐತರೇಯ, ಜಾಬಾಲ ಉಪನಿಷತ್ತುಗಳನ್ನೂ ಆಯ್ದುಕೊಂಡಿದ್ದಾರೆ.
ಉಪನಿಷತ್ ವಾಕ್ಯಗಳನ್ನು ಸಮನ್ವಯ ಗೊಳಿಸುವಾಗ ಬಾದರಾಯಣರು ಅನೇಕ ಆಚಾಯ೯ರ ಅಭಿಪ್ರಾಯಗಳನ್ನು ಪರಿಚಯಿಸಿರುತ್ತಾರೆ. ಮೋಕ್ಷ ಸನ್ಯಾಸ, ಜೀವ ಬ್ರಹ್ಮರ ಸಂಬಂಧ ಇವೇ ಮೊದಲಾದ ಅನೇಕ ವಿಷಯಗಳಲ್ಲಿ ಈ ಆಚಚಾಯ೯ರುಗಳೆಲ್ಲ ಬಿನ್ನಾಭಿಪ್ರಾಯಗಳನ್ನು ಹೊಂದಿದಂತೆ ಕಂಡುಬರುತ್ತದೆ.
ಬ್ರಹ್ಮಸೂತ್ರಗಳಲ್ಲಿರುವ ವಿಷಯಗಳು:
ಬ್ರಹ್ಮಸೂತ್ರಗಳಿಗೆ ನಾಲ್ಕು ಅಧ್ಯಾಯಗಳಿದ್ದು ಒಂದೊಂದು ಅಧ್ಯಾಯಕ್ಕೂ ನಾಲ್ಕು ಪಾದಗಳಿವೆ.ಒಂದೊಂದು ಪಾದಕ್ಕೂ ಅಧಿಕರಣಗಳಿದ್ದು ಅಧಿಕರಣಗಳು ಸೂತ್ರಗಳನ್ನೊಳಗೊಂಡಿದೆ. ಭಾಷ್ಯಕಾರರ ಅಭಿಪ್ರಾಯದಲ್ಲಿ ಪ್ರತಿಯೊಂದು ಅಧಿಕರಣವು ಒಂದೊಂದು ವಿಷಯಗಳನ್ನು ಒಳಗೊಂಡು ಅದಕ್ಕೆ ವಿರೋಧವಾಗಿರುವುದನ್ನು ನಿರಾಕರಿಸುತ್ತದೆ.
ಪೂವ೯ ಮೀಮಾಂಸೆಯ ಪ್ರಕಾರ ಅಧಿಕರಣದಲ್ಲಿ ಐದು ಅಂಶಗಳಿರಬೇಕು.
1)ವಿಷಯ 2)ಸಂಶಯ 3)ಪೂವ೯ಪಕ್ಷ_ ಎಂದರೆ ವಿರೋಧಿಯ ಮತ.4)ಸಿದ್ಧಾಂತ 5)ಸಂಗತಿ(ಎಂದರೆ ಅಧಿಕರಣಗಳಿಗಿರುವ ಸಂಬಂಧ)11.
1)ಸಮನ್ವಯಾಧ್ಯಾಯ:ವಿರುದ್ಧವಾಗಿ ಕಂಡುಬರುವ ಶ್ರುತಿ ವಾಕ್ಯಗಳಿಗೆಲ್ಲ ಸುಸಂಗತವಾದ ತಾತ್ಪಯ೯ವನ್ನು ಕೊಡುವುದೇ ಈ ಅಧ್ಯಾಯದ ಉದ್ದೇಶ.
2)ಅವಿರೋಧಾಧ್ಯಾಯ:ಮೊದಲನೆಯ ಅಧ್ಯಾಯದಲ್ಲಿ ಪ್ರತಿಪಾದಿಸಿದ ವಿಷಯಗಳು ಇತರ ಪಕ್ಷಗಳಿಗೆ ವಿರುದ್ಧವಲ್ಲವೆಂಬುದನ್ನು ಇಲ್ಲಿ ತಿಳಿಸಿದೆ.
3)ಸಾಧನಾಧ್ಯಾಯ:ಬ್ರಹ್ಮ ದಶ೯ನಕ್ಕೆ ಅವಶ್ಯಕವಾದ ಸಾಧನೆಗಳನ್ನು ಪ್ರತಿಪಾದಿಸುತ್ತದೆ.
4)ಫಲಾಧ್ಯಾಯ:ಬ್ರಹ್ಮವಿದ್ಯೆಯ ಫಲವನ್ನು ಕುರಿತು ಹೇಳುತ್ತದೆ
ಉಪನಿಷತ್ತುಗಳ ತತ್ವಗಳನ್ನು ವಿಷದಪಡಿಸಲು ಬಂದಿರುವ ಬ್ರಹ್ಮಸೂತ್ರಗಳು ಉಪನಿಷತ್ತುಗಳಿಗಿಂತಲೂ ರಹಸ್ಯಮಯ ವಾಗಿವೆ.
1) ಪ್ರಮಾಣಗಳಿಗೆ ಬ್ರಹ್ಮದ ಸ್ವರೂಪವನ್ನು ಅರಿಯಲು ಶಾಸ್ತ್ರವೇ ಪ್ರಮಾಣವು.ಆಗಮ ಗಮ್ಯವಾದ ಬ್ರಹ್ಮ ವಿಚಾರದಲ್ಲಿ ತಕ೯ವನ್ನು ಆಶ್ರಯಿಸಕೂಡದು.ಶ್ರುತಿಅಲ್ಲದೆ ಪ್ರತ್ಯಕ್ಷ ಅನುಮಾನವನ್ನೂ ಪ್ರಮಾಣವಾಗಿ ಒಪ್ಪಿಕೊಂಡಿರುತ್ತಾರೆ. ಪ್ರಾಮಾಣಕ್ಕ್ಕೆ ಬೇರೆ ಪ್ರಮಾಣವು ಬೇಕಾಗುವುದಿಲ್ಲ.ಶ್ರುತಿ ಎಂದರೆ ಉಪನಿಷತ್ ವಾಕ್ಯಗಳು.ಅನುಮಾನವೆಂದರೆ ಸ್ಮøತಿ.ಏಕೆಂದರೆ ಪ್ರಾಮಾಣ್ಯಕ್ಕೆ ಶ್ರುತಿಯುಬೇಕಾಗುತ್ತದೆ.ಸ್ಮøತಿಗೆ ಉದಾಹರಣೆಗಳೆಂದರೆ ಮನುಸ್ಮøತಿ, ಭಗವದ್ಗೀತೆ, ಮಹಾಭಾರತ, ಇತ್ಯಾದಿ.
ಪರಬ್ರಹ್ಮ:ಜಗತ್ತಿನ ಸೃಷ್ಟಿ_ಸ್ಥಿತಿ_ಲಯಗಳಿಗೆ ಬ್ರಹ್ಮವೇ ಕಾರಣ.ಅವನೇ ನಿಮಿತ್ತಕಾರಣನೂ, ಉಪಾದಾನ ಕಾರಣನೂ ಆಗಿದ್ದಾನೆ,ಸೃಷ್ಟಿ ಮಡಲು ಬ್ರಹ್ಮನಿಗೆ ಬಾಹ್ಯಸಾಧನಗಳು ಬೇಕಾಗಿಲ್ಲ.ಹಾಲಿನಂತೆ ಪರಿಣಾಮ ಹೊಂದಲು ಶಕ್ತನಾಗಿದ್ದಾನೆ. ಸುಷುಪ್ತಿಯಲ್ಲಿ ಜೀವನು ಸದ್ವಸ್ತುವಾದ ಬ್ರಹ್ಮದಲ್ಲಿ ಲಯವಾಗುತ್ತಾನೆ.ಇದರಿಂದ ಬ್ರಹ್ಮದ ಅಸ್ತಿತ್ವವು ಸಿದ್ಧಿಸುತ್ತದೆ. ಬ್ರಹ್ಮನ ಅಚೇತನವಾದ ಪ್ರಧಾನವೂ ಅಲ್ಲ.ಚೇತನವಾದ ಜೀವನೂ ಅಲ್ಲ.ಸೃಷ್ಟಿಗೆ ಅವಶ್ಯಕವಾದ ಧಮ೯ಗಳೆಲ್ಲವೂ ಅವನಲ್ಲಿ ಹೊಂದುತ್ತವೆ.
ಬ್ರಹ್ಮವು ಸವ೯ ಶಕ್ತಿಗಳಿಂದ ಕೂಡಿರುವುದೆಂದು ಶ್ರುತಿಗಳಿಂದಲೇ ತಿಳಿದು ಬಂದಿದೆ.ಅವನು ಜ್ಯೋತಿಮ೯ಯನು . ಆಕಾಶ ಪ್ರಾಣಿಗಳೆಲ್ಲ ಬ್ರಹ್ಮವೇ.ಅವನೇ ಪುರುಷ ಶರೀರದಲ್ಲಿರುವ ಜ್ಯೋತಿಯು. ಅವನು ಸವ೯ಶಕ್ತನಾಗಿದ್ದರೂ ಅವನನ್ನು ಹೃದಯದಲ್ಲಿ ಧ್ಯಾನಿಸಲು ಸಾಧ್ಯವಾಗುತ್ತದೆ. ಪರಬ್ರಹ್ಮದಲ್ಲಿ ನಿಷ್ಠೆಯುಳ್ಳವನಿಗೆ ಮೋಕ್ಷವಾಗುತ್ತದೆ. ಪರಬ್ರಹ್ಮನು ಉತ್ಪತ್ತಿರಹಿತನಾಗಿದ್ದರೂ ಜಗತ್ಕಾರಣನಾಗಿರುತ್ತಾನೆ.ಅವನೇ ಆಕಾಶ ರೂಪದಲ್ಲಿದ್ದುಕೊಂಡು ಆಯಾ ಕಾಯ೯ವನ್ನು ಸೃಷ್ಟಿಸುತ್ತಾನೆ.ಕಾಯ೯ವು ಉತ್ಪತ್ತಿಗೆ ತನ್ನ ಕಾರಣದಲ್ಲಿರುತ್ತದೆ. ಕಾಯ೯ಕಾರಣಗಳು ಒಂದೇ ಆಗಿದ್ದರೂ ಅವುಗಳ ಗುಣಗಳು ಬೇರೆ ಆಗಿರುತ್ತವೆ. ಕಾರಣಾವಸ್ಥೆಯಲ್ಲಿ ಅವ್ಯಕ್ತವಾದ ವ್ಯಾಪಾರವು ಕಾಯಾ೯ವಸ್ಥೆಯಲ್ಲಿ ವ್ಯಕ್ತವಾಗುತ್ತದೆ.ಬ್ರಹ್ಮದ ಕಾಯ೯ವಾದ ಜಗತ್ತು ಬ್ರಹ್ಮಕ್ಕಿಂತ ಬೇರೆ ಅಲ್ಲ.ಕಾಯ೯ ಕಾರಣಗಳಲ್ಲಿ ಭೇದವು ಕಂಡುಬರುವುದು ಅವಸ್ಥೆಯಿಂದ.ಬ್ರಹ್ಮದ ಸೃಷ್ಟಿಯು ಲೀಲೆಯ ಹಾಗೆ.,ಅವನಿಗೆ ವೈಷಮ್ಯ ಕ್ರೂರತ್ವಗಳಿಲ್ಲ. ಮನುಷ್ಯನು ಪುಣ್ಯಕಮ೯ದಿಂದ ಪುಣ್ಯವಂತನಾಗುತ್ತಾನೆ.ಪಾಪಕಮ೯ದಿಂದ ಪಾಪವಂತನಾಗುತ್ತಾನೆ.
ಜೀವ: ಜೀ ವಾತ್ಮನು "ಜ್ಞ" ಎಂದು ಬಾದರಾಯಣರು ಹೇಳುತ್ತಾರೆ.ಶ್ರೀ ಶಂಕರಾಚಾಯ೯ರು "ಜ್ಞ" ಶಬ್ದಕ್ಕೆ "ನಿತ್ಯ ಚೈತನ್ಯ ಸ್ವರೂಪನು" ಎಂಬ ಅಥ೯ವನ್ನು ಕೊಟ್ಟಿರುತ್ತಾರೆ.ಜೀವಾತ್ಮನು ಕತೃ೯ವೂ ಆಗಿರುತ್ತಾನೆ. ಇವನಿಗೆ ಜನನ ಮರಣಗಳಿಲ್ಲ.ಜನನ ಮರಣಗಳು ಶರೀರಕ್ಕೆ ಉಂಟಾಗುತ್ತವೆ.ಇವನು ನಿತ್ಯನು.ಜೀವನು ಬಹ್ಮವೇ ಆಗಿರುತ್ತಾನೆ.ಶಂಕರಾಚಾಯ೯ರು ಜೀವ ಬ್ರಹ್ಮದ ಅಭೇದವನ್ನು ಹೇಳಿರುತ್ತಾರೆ.
ಉಪಾಸನಾ ರೂಪವಾದ ಜ್ಞಾನದಿಂದ ಜೀವನಿಗೆ ಪುರುಷಾಥ೯ವು ಸಿದ್ಧಿಸುತ್ತವೆ.ಕಮಾ೯ನುಷ್ಠಾನ ಮತ್ತು ಕಮ೯ತÁ್ಯಗ ಇವೆರಡಕ್ಕೂ ಸಮಾನ ಬೆಂಬಲವು ಶ್ರುತಿಯಿಂದ ದೊರಕುತ್ತದೆ.ಆಶ್ರಮ ಕಮ೯ಗಳಿವೆ. ಏಕೆಂದರೆ ಕಮ೯ಗಳು ಉಪಾಸನೆಗೆ ಸಹಾಯವಾಗುತ್ತವೆ. ಜೀವನಿಗೆ ಉಪಾಸನೆಯ ಫಲವು ಈಶ್ವರನಿಂದ ಉಂಟಾಗುತ್ತದೆ. ಜೀವನು ಉಪಾಸನೆಯನ್ನು ಪುನಃ ಪುನಃ ಮಾಡಬೇಕು.ಉಪಾಸಕನು ಪ್ರತೀಕವನ್ನು ಆತ್ಮನೆಂದು ತಿಳಿಯಬಾರದು.ಬ್ರಹ್ಮಜ್ಞಾನದಿಂದ ಹಿಂದಿನ ಪಾಪವು ನಾಶವಾಗುತ್ತದೆ.ಮತ್ತು ಮುಂದಿನ ಪಾಪವು ಅಂಟಿಕೊಳ್ಳುವುದಿಲ್ಲ.ಜೀವನು ಪ್ರಾರಬ್ಧ ಕಮ೯ವನ್ನು ಭೋಗದ(ಅನುಭವಿಸುವ) ಮೂಲಕ ನಾಶಗೊಳಿಸಿ ಬ್ರಹ್ಮವನ್ನು ಪಡೆಯುತ್ತಾನೆ.
ಉತ್ಕ್ರಾಂತಿ:ಶ್ರೀ ಶಂಕರಾಚಾಯ೯ರ ಭಾಷ್ಯದ ಪ್ರಕಾರ ನಿಗು೯ಣ ಬ್ರಹ್ಮೋಪಾಸಕರಿಗೆ ಗತಿಯಾಗಲೀ ಅಗತಿಯಾಗಲೀ ಇರುವುದಿಲ್ಲ ಶ್ರೀ ರಾಮಾನುಜ ಮತ್ತು ಶ್ರೀ ಮಧ್ವಾಚಾಯ೯ ಇವೇ ಮೊದಲಾದ ವೇದಾಂತಿಗಳ ಪ್ರಕಾರ ಮುಕ್ತರಿಗೂ ಗತಿ ಇರುತ್ತದೆ.ಮುಕ್ತನು ತನ್ನ ಸಂಕಲ್ಪಾನುಸಾರ ಶರೀರಿಯಾಗಿಯೂ ಇರಬಹುದು ಅಶರೀರಿಯಾಗಿಯೂ ಇರಬಹುದು.ಬ್ರಹ್ಮವನ್ನು ಹೊಂದಿದವರು ಸಂಸಾರಕ್ಕೆ ಹಿಂದಿರುಗುವುದಿಲ್ಲ.
ಭಾಷ್ಯಕಾರರು ಹಾಗೂ ಭಾಷ್ಯಗಳು: ಶ್ರೀಶಂಕರಾಚಾಯ೯ರಿಗೂ ಬ್ರಹ್ಮಸೂತ್ರಗಳಿಗೆ ಅನೇಕ ಭಾಷ್ಯಗಳಿದ್ದವು. ಭಾಸ್ಕರರು,ಯಾದವ ಪ್ರಕಾಶ,ರಾಮಾನುಜ,ಮಧ್ವ,ನಂತರ ಶ್ರೀಕಂಠ, ಶ್ರೀಪತಿ, ನಿಂಬಾಕ೯, ವಲ್ಲಭ, ಶುಕ, ಬಲದೇವ ಇವರೆಲ್ಲರೂ ಭಾಷ್ಯಗಳನ್ನು ಬರೆದಿರುತ್ತಾರೆ12.ಇವುಗಳಲ್ಲಿ ಶಂಕರ, ರಾಮಾನುಜ, ಮಧ್ವ,,ವಲ್ಲಭ ಇವರ ಅದ್ವೈತ, ವಿಶಿಷ್ಠಾದ್ವೈತ, ದ್ವೈತ, ದ್ವೈತಾದ್ವ್ಯತ, ಪರಗಳಾದ ಭಾಷ್ಯಗಳೇ ಮುಖ್ಯವೆಂದು ಹೇಳಬಹುದು.
ಬ್ರಹ್ಮಸೂತ್ರಗಳ ಮೊದಲ ನಾಲ್ಕು ವಾಕ್ಯಗಳು:
1)ಅಥಾತೋ ಬ್ರಹ್ಮ ಜಿಜ್ಞಾಸಾ| ಸಾಧನ ಚತುಷ್ಟಯಗಳನ್ನು ಪಡೆದುಕೊಂಡು ನಂತರ ಬ್ರಹ್ಮ ಜಿಜ್ಞಾಸೆ ಮಾಡಬೇಕು. (ಬ್ರಹ್ಮಜ್ಞಾನದಿಂದಲೇ ಮೋಕ್ಷಸಿದ್ಧಿ)
2) ಜನ್ಮಾದ್ಯಸ್ಯ ಯತಃ| ಯಾವುದರಿಂದ ಈಜಗತ್ತಿನ ಹುಟ್ಟು ಆಗುವುದೋ ಅದೇ ಬ್ರಹ್ಮವು.
3) ಶಾಸ್ತ್ರ ಯೋನಿತ್ವಾತ್| ಶಾಸ್ತ್ರಗಳಿಗೆ ಬ್ರಹ್ಮವೇ ಯೋನಿಯು(ಕಾರಣ).(4)ಬ್ರಹ್ಮವು ಸವ೯ಜ್ಞವು.
4) ತತ್ತು ಸಮನ್ವಯಾತ್| ಜಗತ್ತಿನ ಸೃಷ್ಟಿ,ಸ್ಥಿತಿ,ಲಯಗಳಿಗೆ ಕಾರಣವಾದ ಬ್ರಹ್ಮವು ವೇದಾಂತ ಶಾಸ್ತ್ರದಿಂದಲೇ ತಿಳಿಯತಕ್ಕದ್ದು. ಏಕೆಂದರೆ ಇಲ್ಲಿ ಸಮನ್ವಯವಿದೆ.
ಶಂಕರರು ದಶೋಪನಿಷತ್ತುಗಳಿಗೆ,ಬ್ರಹ್ಮಸೂತ್ರಗಳಿಗೂ ಅದ್ವೈತ ಪರವಾದ ಭಾಷ್ಯಗಳನ್ನು ರಚಿಸಿರುತ್ತಾರೆ.:ಬ್ರಹ್ಮಸತ್ಯಂ ಜಗನ್ಮಿಥ್ಯಾ ಜೀವೋಬ್ರಹ್ಮೈವ ನ ಪರಃ"ಇದು ಅದ್ವೆತ ಸಿದ್ಧಾಂತದ ಸಾರ. ಬ್ರಹ್ಮವೊಂದೇ ಸತ್ಯ ,ಜಗತ್ತು ಮಿಥ್ಯೆ ಜೀವವು ಬಹ್ಮಕ್ಕಿಂತ ಬೇರೆ ಅಲ್ಲ.(ಜೀವ ಬ್ರಹ್ಮೈಕ್ಯ).
ಅವಿದ್ಯಾಕೃತವಾದ ನಾಮರೂಪಗಳನ್ನು ನಿಷೇಧಿಸಿ ಬ್ರಹ್ಮವು ಉಪದೇಶಿಸಲ್ಪಟ್ಟಿದೆ.ಅದು ನಿರುಪಾಧಿಕವೂ ನಿವಿ೯ಶೇಷವೂ ಆದ ಪರಬ್ರಹ್ಮ. ಎಲ್ಲಿ ಅದೇ ಬ್ರಹ್ಮವು ನಾಮರೂಪಾದಿ ವಿಶೇಷದಿಂದ ವಿಶಿಷ್ಟವಾಗಿ ಉಪದೇಶಿಸಿದೆಯೋ ಅದು ಅಪರ ಬ್ರಹ್ಮ.ಅಪರ ಬ್ರಹ್ಮವು ಜಗತ್ತಿನ ಜನ್ಮಾದಿಗಳಿಗೆ ಕಾರಣವಾಗಿರುತ್ತದೆ.ಬ್ರಹ್ಮವು ನಾಶವಾಗಿ ಪರಿಣಮಿಸುವುದಿಲ್ಲ.ಅವಿದ್ಯೆಯಿಂದ ನಾಮರೂಪಾದಿ ವೈವಿಧ್ಯಗಳು ಕಂಡುಬರುತ್ತದೆ. ಇದಕ್ಕೆ ವಿವತ೯ ಎಂದು ಹೆಸರು. ಆತ್ಮ ಅನಾತ್ಮ ಎಂಬ ವಿವೇಕವಿಲ್ಲದಿದ್ದರೆ ಇದು ಹಾವಿನಂತೆ ತೋರುವ ಹಗ್ಗದ ಹಾಗೆ.ಆತ್ಮವು ಅನಾತ್ಮವಾಗಿಯೂ ಅನಾತ್ಮವು ಆತ್ಮವಾಗಿಯೂ ತೋರುತ್ತದೆ. ಇದಕ್ಕೆ ಅಧ್ಯಾಸ ಎಂದು ಹೆಸರು.ಈ ಅಧ್ಯಾಸವನ್ನು ಅವಿದ್ಯೆ ಎಂದದು ಕರೆಯುತ್ತಾರೆ.ಅಂತಃಕರಣದಿಂದ ಅವಿಚ್ಛಿನ್ನವಾದ ಚೈತನ್ಯವೇ ಜೀವಾತ್ಮ. ನಿತ್ಯ, ಶುದ್ಧ, ಬುದ್ಧ, ಮುಕ್ತ ಚೈತನ್ಯವು ಕತೃ೯ತ್ವ,ಭೋಕ್ತøತ್ವ,ಇವೇ ಮೊದಲಾದ ಧಮ೯ಗಳಿಂದ ಕೂಡಿದಂತೆ ಕಂಡುಬರುತ್ತದೆ.ಇಂಥ ಜೀವನಿಗೂ ಬ್ರಹ್ಮಕ್ಕೂ ಐಕ್ಯವನ್ನು ತತ್ವಮಸ್ಯಾದಿ ವಾಕ್ಯಗಳು ಬೋಧಿಸುತ್ತವೆ.
ನಿಗು೯ಣ ಬ್ರಹ್ಮೋಪಾಸಕರಿಗೆ ಸಮ್ಯಕ್ ಜ್ಞಾನದಿಂದಲೇ ಬ್ರಹ್ಮಪ್ರಾಪ್ತಿಯಾಗುತ್ತದೆ.ಅವರಿಗೆ ಅಚಿ೯ರಾದಿ ಗತಿ ಇರುವುದಿಲ್ಲ.ಆದರೆ ಸಗುಣೋಪಾಸಕರು ಅಚಿ೯ರಾದಿ ಗತಿಯಮೂಲಕ ಬ್ರಹ್ಮಲೋಕವನ್ನು ಸೇರಿ ಅನಂತರ ಅತ್ಯಂತಿಕ ಮೋಕ್ಷವನ್ನು ಪಡೆಯುತ್ತಾರೆ. ಅನೇಕ ಸೂತ್ರಗಳು ಜೀವ ಈಶ್ವರ ಉಪಾಸನೆ ಉತ್ಕ್ರಾಂತಿ ಇವುಗಳನ್ನು ಕುರಿತು ಹೇಳುತ್ತವೆ. ಶಂಕರ ಭಾಷ್ಯದ ಪ್ರಕಾರ ಬ್ರಹ್ಮಸೂತ್ರಗಳು555 ಮತ್ತು1೯1 ಅಧಿಕರಣಗಳು. ಬ್ರಹ್ಮಾತ್ಮ ಜ್ಞಾನದಿಂದ ಅಧ್ಯಾಸ ರೂಪವಾದ ಅವಿದ್ಯೆಯನ್ನು ಕಳೆಯುವುದೇ ವೇದಾಂತದ ಉಪದೇಶ.
ಸಂಶೋಧನೆಯ ಉದ್ದೇಶಗಳು ಮತ್ತು ವ್ಯಾಪ್ತಿ
ಸಂಶೋಧನೆಯ ಪ್ರಾಥಮಿಕ ಉದ್ದೇಶಗಳು ಈರೀತಿ ಇವೆ.
1)ಅತ್ಯಂತ ಮುಖ್ಯವಾದದ್ದು ಸಾಮಾಜಿಕ ಸಮಸ್ಯೆಗಳ (ಪಿಡುಗುಗಳ) ಪರಿಹಾರ
2)ಶಂಕರರ ಅದ್ವೈತ ದಶ೯ನವನ್ನು ಕುರಿತು ವಿವರವಾದ ಅಧ್ಯಯನ ನಡೆಸುವುದು
3)ವಿವಿಧ ದಶ೯ನಗಳೊಂದಿಗೆ ತುಲನಾತ್ಮಕ ಅಧ್ಯಯನ ನಡೆಸುವುದು. ಅದ್ವೈತವೊಂದೇ ಅದ್ವೈತ. ಉಳಿದೆಲ್ಲಾ ಮತಗಳೂ ದ್ವೈತ.
4)ಪ್ರಸ್ಥಾನತ್ರಯಗಳಸಾರವನ್ನು ಅರಿಯುವುದು
ಇತರ ಉದ್ದೇಶಗಳು ಈ ರೀತಿ ಇವೆ.
ದ್ವಿತೀಯ ಉದ್ದೇಶಗಳು:
1) ಇಹಲೋಕದ ಸುಖ ಶಾಂತಿ(ಅಭ್ಯುದಯ)
2)ನಿಶ್ರೇಯಸ(ಅಧ್ಯಾತ್ಮಿಕ ಸುಖ ಮತ್ತು ಮುಕ್ತಿ)
3)ರಾಷ್ಟ್ರೀಯ ಭಾವೈಕ್ಯತೆ
4) ಸತ್ಯದ ಅನ್ವೇಷಣೆ ಮತ್ತು ಆನಂದ
5)ಸಾಮಾಜಿಕ ಸ್ವಾಸ್ಥ್ಯ
6) ಮಾನಸಿಕ ನೆಮ್ಮದಿ
7) ಸವ೯ಮತ ಸಾಮರಸ್ಯ
8) ರಾಷ್ಟ್ರೀಯತಾ ಧೃಡೀಕರಣ
೯)ಜ್ಞಾನ,ಭಕ್ತಿ,ಕಮ೯ ಮತ್ತು ಯೋಗಗಳಿಗೆ ಸಮಂಜಸ ಸ್ಥಾನವನ್ನು ದೊರಕಿಸಿಕೊಡುವುದು.
10) ವಿಶ್ವಕುಟುಂಬ.
11)ಈ ವಿಶ್ವವನ್ನು ನಡೆಸುತ್ತಿರುವ ಮೂಲ ಪರತತ್ವ ಯಾವುದೆಂಬುದನ್ನು ಯುಕ್ತಿಯುಕ್ತವಾಗಿ ತಿಳಿಸುವುದು.
12) ಇಡೀ ಸಮಾಜವನ್ನು ಒಂದು ಅಧ್ಯಾತ್ಮಿಕ ಆದಶ೯ದ ಕಡೆ ಒಲಿಯುವಂತೆ ಮಾಡುವುದು.ನಿರಂತರ ಶಾಂತಿ ಆನಂದಗಳಿಗೆ ಮೂಲ ಕಾರಣವಾದ ಸವ೯ರಲ್ಲಿಯೂ ಆತ್ಮ ಸ್ವರೂಪಿಯಾದ ಉಪನಿಷತ್ತಿನ ಸವ೯ ತಂತ್ರ ಸ್ವತಂತ್ರ ಪರಬ್ರಹ್ಮವನ್ನು ಸ್ಥಾಪಿಸುವುದು.
13 )ಸಾಮಾನ್ಯವಾಗಿ ಜನರು ಅಥ೯ ಮಾಡಿಕೊಂಡು ಅನುಸರಿಸಲು ಸಾಧ್ಯವಾಗುವ ದ್ವೈತ ಸ್ವಭಾವದ ದಶ೯ನದೊಂದಿಗೆ ಹಾಗೂ ಈಶ್ವರಾಸ್ತಿಕ್ಯ ದಶ೯ನಗಳೊಂದಿಗೆ ಸುಸಂಗತಗೊಳಿಸುವುದು.
ಸಂಶೋಧನಾ ವಿಧಾನಗಳು:
ಮುಖ್ಯವಾದ ನಾಲ್ಕು ಸಂಶೋಧನಾ ವಿಧಾನಗಳು ಈ ರೀತಿ ಇವೆ:
1) ವಿವರಣಾತ್ಮಕ ವಿಧಾನ: ಸಮಸ್ಯೆಯ ಅಥವಾ ವಿಷಯದ ವಿವರಗಳನ್ನು ಎಳೆ ಎಳೆಯಾಗಿ ವಿವರಿಸುವುದು.
2)ವಿಶ್ಲೇಷಣಾತ್ಮದ ವಿಧಾನ: ವಿಶ್ಲೇಷಣೆಯು ಉಳಿದ ಎಲ್ಲಾ ವಿಧವಾದ ಸಂಶೋಧನೆಗಳ ಅವಿಭಾಜ್ಯ ಹಾಗೂ ಅನಿವಾಯ೯ ಅಂಗವಾಗಿದೆ.
3) ಚಾರಿತ್ರಿಕ ವಿಧಾನ: ಸಮಸ್ಯೆಯ ಸಂಪೂಣ೯ ಚಾರಿತ್ರಿಕ ಅಂಶಗಳನ್ನು ಕೂಲಂಕುಶವಾಗಿ ಅಧ್ಯಯನ ನಡೆಸುವುದು.
4) ತುಲನಾತ್ಮಕ ಅಧ್ಯಯನ: ಸಂಬಂಧಿಸಿದ ಅನೇಕ ವಿಷಯಗಳ ತುಲನಾತ್ಮಕ ಅಧ್ಯಯನ ನಡೆಸಿ ಸಾಮ್ಯತೆ ಮತ್ತು ಹೋಲಿಕೆ ವ್ಯತ್ಯಾಸಗಳನ್ನು ಅವಲೋಕಿಸಿ ಒಂದು ನಿಶ್ಚಯಕ್ಕೆ ಬರುವುದು.
ನಾನು ಪ್ರಸ್ಥಾನತ್ರಯಗಳಲ್ಲಿ ಮುಖ್ಯವಾಗಿ ಉಪನಿಷತ್ತುಗಳನ್ನು ಸಂಶೋಧನೆಗಾಗಿ ಆರಿಸಿಕೊಂಡಿದ್ದೇನೆ.ಅದ್ವೈತ ಸಾಹಿತ್ಯವು ವಿಸ್ತಾರವಾಗಿರುವುದರಿಂದ ನಾನು ಅಧ್ಯಯನ ಹಾಗೂ ಸಂಶೋಧನೆಯನ್ನು ಉಪನಿಷತ್ತುಗಳಿಗೆ ಸೀಮಿತಗೊಳಿಸಿದ್ದೇನೆ
ಅದ್ವೈತ ಸಂಶೋಧನೆಯು ಮುಖ್ಯವಾಗಿ ಪ್ರಸ್ಥಾನತ್ರಯಗಳನ್ನೊಳಗೊಂಡಿದೆ.
ಸಂಶೋಧನಾ ವಿಧಾನಗಳು ಈ ರೀತಿ ಇವೆ.
1) ಶ್ರುತಿ(ಶಬ್ದ) ಪ್ರಮಾಣ
2) ಯುಕ್ತಿ(ತಕ೯) ಪ್ರಮಾಣ(ವಿಚಾರ)
3) ಸ್ವಾನುಭವ (ಅತ್ಯಂತ ಕೊನೆಯ ಪ್ರಮಾಣ)
ಶಾಸ್ತ್ರ ಪ್ರಮಾಣ: ಪ್ರಸ್ಥಾನತ್ರಯಗಳು ಈ ರೀತಿ ಇವೆ.
1 ಉಪನಿಷತ್ತುಗಳು: ಈಶ ,ಕೇನ,ಕಠ, ಪ್ರಶ್ನ ಮುಂಡಕ,ಮಾಂಡೂಕ್ಯ , ತೈತ್ತಿರೀಯ, ಐತರೇಯ, ಬೃಹದಾರಣ್ಯಕ, ಛಾಂದೋಗ್ಯ. ಇವು ದಶೋಪನಿಷತ್ತುಗಳು.
2) ಬ್ರಹ್ಮಸೂತ್ರಗಳು: 555 ಬ್ರಹ್ಮಸೂತ್ರಗಳು 1೯1 ಅಧಿಕರಣಗಳು
3)ಭಗವದ್ಗೀತೆ: ಹದಿಮೂರನೆಯ ಅಧ್ಯಾಯದಿಂದ ಹದಿನೆಂಟನೆಯ ಅಧ್ಯಾಯದವರೆಗೆ ಜ್ಞಾನಮಾಗ೯ವು ಪ್ರಮುಖವಾಗಿ ಬೋಧಿಸಲ್ಪಟ್ಟಿದೆ.
1) ಕ್ಷೇತ್ರ ಕ್ಷೇತ್ರಜ್ಞ ವಿಭಾಗಯೋಗ
2) ಗುಣತ್ರಯ ವಿಭಾಗಯೋಗ
3) ಪುರುಷೋತ್ತಮ ವಿಭಾಗಯೋಗ
4) ದೈವಾಸುರ ಸಂಪದ್ವಿಭಾಗಯೋಗ
5) ಶ್ರದ್ಧಾತ್ರಯ ವಿಭಾಗಯೋಗ
6) ಮೋಕ್ಷ ಸನ್ಯಾಸಯೋಗ
ಕೇವಲ ಶ್ರುತಿಯೊಂದೇ ಇಂದ್ರಿಯಾತೀತವೂ ವಿಷಯಾತೀತವೂ ಆದ ಅಧ್ಯಾತ್ಮಿಕ ಜ್ಞಾನದಬಗ್ಗೆ ಯುಕ್ತಿಪೂವ೯ಕವಾಗಿ ಪ್ರಮಾಣೀಕರಿಸಲು ರುಜುವಾತು ಪಡಿಸಲು ಸಾಧ್ಯವಾಗುವ ಊಹಾ ಪ್ರತಿಜ್ಞೆಗಳ ಮೂಲಕ ನೇರವಾದ ತಿಳುವಳಿಕೆಯನ್ನು ಒದಗಿಸಬಲ್ಲದು.
2) ಯುಕ್ತಿ ಪ್ರಮಾಣ: ವಿಚಾರವಿಲ್ಲದೆ ಅದ್ವೈತವು ಧೃಡವಾಗುವುದಿಲ್ಲ. ಯುಕ್ತಿ ಅಥವಾ ತಕ೯ವು ವೇದಾನುಕೂಲವಾಗಿರಬೇಕೇ ಹೊರತು ವೇದ ವಿರುದ್ಧವಾಗಿರಬಾರದು. ವಿಚಾರ ಮಾಗ೯ಕ್ಕೆ ಉಪನಿಷತ್ತಿನ ಅವಸ್ಥಾತ್ರಯ ವಿವೇಚನೆಯು ಒಂದು ಒಳ್ಳೆಯ ಉದಾಹರಣೆಯಾಗಿದೆ. ಯುಕ್ತಿಯು ಒಳ್ಳೆಯ ಉಪಕರಣವೇ ಆದರೂ ಇತರರ ಜೊತೆಯಲ್ಲಿ ವಿಚಾರ ವಿನಿಮಯ ಮಾಡಿಕೊಳ್ಳುವಾಗ ತಪ್ಪದೆ ಅದನ್ನು ಆಶ್ರಯಿಸಬೇಕಾದರೂ ಅದು ಕೇವಲ ತನ್ನಷ್ಟಕ್ಕೆ ತಾನೇ ಸತ್ಯವನ್ನಾಗಲೀ, ವಾಸ್ತವಿಕ ವಿಷಯವನ್ನಾಗಲೀ ಒದಗಿಸಲಾರದು. ವಸ್ತು ಸ್ವಭಾವವೇನಿದ್ದರೂ ವಸ್ತುವನ್ನು ಆಶ್ರಯಿಸಿರುವುದೆ ಹೊರತು ಯುಕ್ತಿ ಅಥವಾ ತಕ೯ವನ್ನಲ್ಲ. ತಕ೯ವು ಶುಷ್ಕವಾಗಿರಬಾರದು.
ಶ್ರೀ ಶಂಕರರ ಮೂರು(ತ್ರಿಗುಣ) ವೈಜ್ಞಾನಿಕ ಸಂಶೋಧನಾ ವಿಧಾನಗಳು:
1) ಉಪನಿಷತ್ತುಗಳು: ಎಲ್ಲಿ ವೈದಿಕ ವಿಚಾರ ಧಾರೆಯು ಪರಮ ಸತ್ಯದ ಅನ್ವೇಷಣೆಯ ಅತ್ಯುನ್ನತ ಸ್ಥಿತಿಯನು.್ನ ತಲುಪಿರುತ್ತದೆಯೋ ಅಂತಹ ಉಪನಿಷತ್ತುಗಳು.
2) ಬಹ್ಮ ಸೂತ್ರಗಳು: ಎಲ್ಲಿ ಉಪನಿಷತ್ತುಗಳಲ್ಲಿ ನಾನಾ ವಿಧವಾದ ಅಂತಜ್ಞಾ೯ನ,ದಿವ್ಯ ದಶ೯ನಗಳನ್ನು ಯುಕ್ತಿಯುಕ್ತವಾಗಿ ವ್ಯವಸ್ಥಿತಗೊಳಿಸಲು ಕ್ರಮಬದ್ಧವಾಗಿ ಮೂಡಿದೆಯೋ ಮತ್ತು ಎಲ್ಲಿ ಅವುಗಳನ್ನು ಪರಬ್ರಹ್ಮ ತತ್ವದ ಸಾಕ್ಷಾತ್ಕಾರಕ್ಕಾಗಿ ಕ್ರಮಬದ್ಧವಾಗಿ ಸುಂದರವಾಗಿ,ಸಮಂಜಸವಾಗಿ ಸರಿಗಟ್ಟಲಾಗಿದೆಯೋ ಅಂಥ ಬ್ರಹ್ಮಸೂತ್ರಗಳು.
3) ಭಗವದ್ಗೀತೆ: ಎಲ್ಲಿ ಪರಸತ್ಯ ಅಥವಾ ಪರಬ್ರಹ್ಮದ ಸಾಕ್ಷಾತ್ಕಾರದ ಮಾಗ೯ವನ್ನು ತೋರಿಸುವಲ್ಲಿ ಪ್ರಾಯೋಗಿಕ ವಿವರಣೆಗಳನ್ನು ಕೊಟ್ಟು ನಮ್ಮ ದೈನಂದಿನ ಜೀವನವನ್ನು ದಾಶ೯ನಿಕ ಸತ್ಯದೊಡನೆ ಸಮರಸಗೊಳಿಸಿಕೊಳ್ಳುವ ರೀತಿ ನೀತಿಗಳನ್ನು ವಿವರಿಸಲಾಗಿದೆಯೋ ಅಂತಹ ಭಗವದ್ಗೀತೆ.
ಅದ್ವೈತ ಸಾಹಿತ್ಯ ಚರಿತ್ರೆ: ಅದ್ವೈತ ತತ್ವವು ಸನಾತನವಾದುದು.ಶ್ರೀಶಂಕರರಿಗಿಂತಲೂ ಮುಂಚೆಯೇ ಅದು ಅಸ್ತಿತ್ವದಲ್ಲಿತ್ತು.ಶ್ರೀ ಗೌಡಪಾದರು ಶಂಕರರ ಗುರುಗಳಾದ ಶ್ರೀ ಗೋವಿಂದ ಭಗವತ್ಪಾದರ ಗುರುಗಳು.
ಗೌಡಪಾದರು ಬರೆದ "ಮಾಂಡೂಕ್ಯ ಕಾರಿಕಾ"ಎಂಬ ಮಾಂಡೂಕ್ಯ ಉಪನಿಷತ್ತನ್ನು ಕುರಿತು ಬರೆದ ಕೃತಿಯು ಲಭ್ಯವಿರುವ ಮೊಟ್ಟಮೊದಲ ಅದ್ವೈತ ಸಾಹಿತ್ಯ ಕೃತಿ.ಶಂಕರರ ಕಾಲ ಕ್ರಿ.ಶ.ಎಂಟನೇ ಶತಮಾನ.ಅವರು ಕೇವಲ ಮೂವತ್ತೆರಡು ವಷ೯ಗಳ ಕಾಲ ಜೀವಿಸಿದ್ದರು.
ಶಂಕರರು ನಾಲ್ಕು ಪೀಠಗಳನ್ನು ಸ್ಥಾಪಿಸಿದರು.ಅವರ ಪ್ರಧಾನವಾದ ನಾಲ್ಕುಜನ ಶಿಷ್ಯರೆಂದರೆ ಪದ್ಮಪಾದ,ಸುರೇಶ್ವರ,ಹಸ್ತಾಮಲಕ ಮತ್ತು ತೋಟಕ.ಪದ್ಮಪಾದರು "ಪಂಚಪಾದಿಕಾ" ಎಂಬ ಭಾಷ್ಯ ಗ್ರಂಥವನ್ನು ಬರೆದಿದ್ದಾರೆ.ಸುರೇಶ್ವರಾಚಾಯ೯ರು "ನ್ಯಷ್ಕಮ್ಯ೯ ಸಿದ್ಧಿ"ಎಂಬ ಗ್ರಂಥವನ್ನು ರಚಿಸಿದ್ದಾರೆ. ಮಂಡನಮಿಶ್ರರು "ಬ್ರಹ್ಮಸಿದ್ಧಿ" ಎಂಬ ಗ್ರಂಥವನ್ನು ಬರೆದಿದ್ದಾರೆ.
ವಾಚಸ್ಪತಿ ಮಿಶ್ರರು ಶಂಕರರ ಬ್ರಹ್ಮಸೂತ್ರ ಭಾಷ್ಯವನ್ನು ಕುರಿತು "ಭಾಮತಿ" ಎಂಬ ಗ್ರಂಥವನ್ನು ಬರೆದಿದ್ದಾರೆ.ಪ್ರಕಾಶಾತ್ಮರು(10ನೇ ಶತಮಾನ)ಪದ್ಮಪಾದರ"ಪಂಚಪಾದಿಕದಾ"ಎಂಬ ಗ್ರಂಥಕ್ಕೆ "ವಿವರಣ" ಎಂಬ ಭಾಷ್ಯವನ್ನು ಬರೆದಿದ್ದಾರೆ."ಪಂಚಪಾದಿಕಾ"ಗ್ರಂಥವು ಬ್ರಹ್ಮಸೂತ್ರ ಭಾಷ್ಯಗಳನ್ನು ಕುರಿತು ಬರೆದ ಭಾಷ್ಯ.
ಅದ್ವೈತ ಪ್ರಚಾರ ಪ್ರಮುಖರಲ್ಲಿ ಪ್ರಕಾಶಾತ್ಮನ್(10ನೇ ಶತಮಾನ),ವಿಮುಕ್ತಾತ್ಮನ್(10ನೇ ಶತಮಾನ)ಸವ೯ಜ್ಞಾತ್ಮನ್(10ನೇ ಶತಮಾನನ) ಶ್ರೀಹಷ೯(12 ನೇಶತಮಾನ) ಚಿತ್ಸುಖ(12ನೇಶತಮಾನ) ಆನಂದಗಿರಿ(13ನೇಶತಮಾನ)ಅಮಲಾನಮದ(14ನೇಶತಮಾನ) ಶಂಕರಾನಂzತಿ (14ನೇಶತಮಾನ) ಸದಾನಂದ (15ನೇಶತಮಾನ) ಪ್ರಕಾಶಾನಂದ(16ನೇಶತಮಾನ) ಮಧುಸೂಧನ ಸರಸ್ವತಿಗಳು (17ನೇಶತಮಾನ) ಧಮ೯ರಾಜ ಅಧ್ವರೀಂದ್ರ (17ನೇ ±ತ£ಮಾನ) ಅಪ್ಪಯ್ಯದೀಕ್ಷಿತರು (17ನೇಶತಮಾನ) ಸದಾಶಿವಬ್ರಹ್ಮೇಂದ್ರರು (18ನೇಶತಮಾನ) ಚಂದ್ರಶೇಖರಭಾರತಿಗಳು(20ನೇಶತಮಾನ) ಹಾಗೂ ಸಚ್ಚಿದಾನಂದೇಂದ್ರ ಸರಸ್ವತಿಗಳು (20ನೇಶತಮಾನ)
ಪದ್ಮಪಾದರ "ಪಂಚಪಾದಿಕಾ" ಗ್ರಂಥದ "ವಿವರಣ" ಭಾಷ್ಯವು ಅದ್ವೈತ ಸಾಹಿತ್ಯದಲ್ಲಿ ಒಂದು ಮೈಲಿಗಲ್ಲಾಗಿದೆ. (ವಾಚಸ್ಪತಿ ಮಿಶ್ರ)ಖಂಡಖಂಡನ ಖಾದ್ಯ (ಶ್ರೀಹಷ೯ ತತ್ವಪ್ರದೀಪಿಕಾ೯ಚಿತ್ಸುಖ) ಪಂಚದಶಿ (ವಿದ್ಯಾರಣ್ಯ ವೇದಾಂತಸಾರ್(ಸದಾನಂದ) ಅದ್ವೈತ ಸಿದ್ಧಿ (ಮಧುಸೂದನ ಸರಸ್ವತಿ)ವೇದಾಂತ ಪರಿಭಾಷಾ(ಧಮ೯ರಾಜ ಅಧ್ವರೀಂದ್ರ)ಇವು ಪ್ರಮುಖ ಅದ್ವೈತ ಗ್ರಂಥಗಳು.
ಹದಿನೆಂಟನೇ ಶತಮಾನದಿಂದ ಇಪ್ಪತ್ತೊಂದನೇ ಶತಮಾನದವರೆಗೂ ಅನೇಕ ಸಾಧುಸಂತರೂ ತತ್ವಜ್ಞಾನಿಗಳು ಆಗಿಹೋಗಿದ್ದಾರೆ. ಅವರಲ್ಲಿ ಮುಖ್ಯವಾದವರೆಂದರೆ ಭಗವಾನ್ ರಮಣ ಮಹಷಿ೯ಗಳು ಸ್ವಾಮಿ ವಿವೇಕಾನಂದ ಸ್ವಾಮಿ ತಪೋವನಂ, ಸ್ವಾಮಿ ಚಿನ್ಮಯಾನಂದ ಹಾಗೂ ಸ್ವಾಮಿ ಬೋಧಾನಂದ. ತತ್ವ ಜ್ಞಾನಿಗಳಲ್ಲಿ ಕೆ.ಸಿ.ಭಟ್ಟಾಚಾಯ೯ ಹಾಗೂ ಟಿ ಎಮ್ ಪಿ ಮಹದೇವನ್ ರವರು ಮುಖ್ಯ.
ಅದ್ವೈತ ದಶ೯ನವನ್ನು ಕುರಿತ ಅತ್ಯಂತ ಪ್ರಾಚಿನ ಗ್ರಂಥವೆಂದರೆ ಗೌಡಪಾದರ "ಮಾಂಡೂಕ್ಯ ಕಾರಿಕಾ".ಇದು ಮಾಂಡೂಕ್ಯ ಉಪನಿಷತ್ತಿನ ಸಾರವಷ್ಟೆ.ಅದ್ವೈತದ ಮೂಲತತ್ವಗಳೆಲ್ಲವೂ ಈ ಗ್ರಂಥದಲ್ಲಿ ಅಡಗಿದೆ.ಪ್ರಪಂಚವು ಮಿಥ್ಯೆ ಮತ್ತು ಬ್ರಹ್ಮವು ಕಾರಣಾತೀತ ಎಂಬ ತತ್ವಗಳು ಈ ಗ್ರಂಥದಲ್ಲಿ ಇವೆ.
ಶ್ರೀಶಂಕರರ ಅದ್ಭುತ ಕೃತಿಯೆಂದರೆ ಅವರ "ಬ್ರಹ್ಮಸೂತ್ರ ಭಾಷ್ಯ".ಇದು ಆಕಷ೯ಕವಾದ ಶೈಲಿ ಮತ್ತು ವಿಷಯದ ತಕ೯ಬದ್ಧ ಪ್ರತಿಪಾದನೆ_ ಇವೆರಡಕ್ಕೂ ಪ್ರಸಿದ್ಧ. ಶ್ರೀ ಶಂಕರರ ಶೈಲಿಯನ್ನು "ಪ್ರಸನ್ನ ಗಂಬೀüರ"ಎಂದು ವಣಿ೯ಸಲಾಗಿದೆ. ಈ ಭಾಷ್ಯದಲ್ಲಿ ಶಂಕರರ ಉದ್ದೇಶಗಳು ಎರಡು.
1) ವಿವತ೯ವಾದ ಅಥವಾ ಮಾಯಾವಾದವನ್ನು ಮಂಡಿಸುವುದು.ಇಲ್ಲಿ ಸಾಂಖ್ಯರ ಪ್ರಕೃತಿ ಪರಿಣಾಮಕ್ಕಿಂತಲೂ ಹೆಚ್ಚಾಗಿ ಬ್ರಹ್ಮಪರಿಣಾಮ ವಾದವನ್ನು “ಬೃಹದಾರಣ್ಯಕ” ತಿರಸ್ಕರಿಸುತ್ತಾರೆ. ಪ್ರಪಂಚವು ಬ್ರಹ್ಮದ ತೋರಿಕೆಯ ಪರಿಣಾಮವೇ ಹೊರತು ನಿಜವಾದ ಪರಿಣಾಮವಲ್ಲವೆಂದು ಅವರು ಸಾರುತ್ತಾರೆ.
2) ಅದ್ವೈತವು ಬೌದ್ಧರಶೂನ್ಯವಾದಕ್ಕಿಂತಲೂ ಭಿನ್ನವೆಂದು ತೋರಿಸುವುದು ಶಂಕರರ ಎರಡನೇ ಉದ್ದೇಶ. ಶಂಕರರ ನಿಗು೯ಣವಾದವು ಶೂನ್ಯವಾದಕ್ಕೆ ಸಮೀಪವಿದೆ ಎಂದು ಕೆಲವರ ಟೀಕೆ.ಈ ಟೀಕೆಗೆ ಉತ್ತರಿಸುವುದು ಶಂಕರರ ಎರಡನೇ ಉದ್ದೇಶ.
ಸೂತ್ರ ಭಾಷ್ಯವಲ್ಲದೆ ಶ್ರೀ ಶಂಕರರು ಎಲ್ಲ ಮುಖ್ಯ ಉಪನಿಷತ್ತುಗಳಿಗೂ ಮತ್ತು ಭಗವದ್ಗೀತೆಗೂ ಭಾಷ್ಯವನ್ನು ಬರೆದರು.ಎಲ್ಲ ಪ್ರಸ್ಥಾನಗಳಿಗೂ ದೀಘ೯ ವ್ಯಾಖ್ಯಾನಗಳನ್ನು ಬರೆದ ಖ್ಯಾತಿ ಸಲ್ಲುವುದು ಶಂಕರರಿಗೆ ಮಾತ್ರ.ಇವುಗಳಲ್ಲಿ ಅವರ “ಬೃಹದಾರಣ್ಯಕ" ಮತ್ತು "ಛಾಂದೋಗ್ಯ"ಗಳು ಬಹಳ ಮುಖ್ಯ.ಅದ್ವೈತವನ್ನು ಅಥ೯ಮಾಡಿಕೊಳ್ಳುವಲ್ಲಿ ಇವುಗಳ ಪಾತ್ರ ಬಹಳ ಮುಖ್ಯ.ಅಲ್ಲದೇ ತೈತ್ತಿರೀಯೋಪನಿಷತ್ತಿನ ಭಾಷ್ಯದಲ್ಲಿ ಅವರು ತಮ್ಮ ಪ್ರತಿಭೆಯೆಲ್ಲವನ್ನೂ ಧಾರೆ ಎರೆದಿದ್ದಾರೆ ಎಂಬುದು ವಿದ್ವಾಂಸರ ಅಭಿಪ್ರಾಯ.
ಶ್ರೀ ಶಂಕರರು ತಮ್ಮ ಸಿದ್ಧಾಂವನ್ನು ಕೆಲವು ಸ್ತೋತ್ರಗಳ ಮೂಲಕ ಮಧ್ಯಮಾಧಿಕಾರಿಗಳಿಗೆ ಪ್ರತಿಪಾದಿಸಿದರು.ಅವರ ಸೈದ್ಧಾಂತಿಕ ಸ್ತೋತ್ರಗಳಿಗೆ ಪ್ರಕರಣಗಳೆಂದು ಹೆಸರು.ಉದಾಹರಣೆಗೆ ಆತ್ಮಬೋಧ ಮತ್ತು ಅಪರೋಕ್ಷಾನುಭೂತಿಗಳಲ್ಲಿ ಶಂಕರರು ತಾತ್ವಿಕ ನಿಲುವನ್ನು ನೂರು ಶ್ಲೋಕಗಳಲ್ಲಿ ಅದ್ಭುತವಾಗಿ ಉಪಮೆ ದೃಷ್ಟಾಂತಗಳ ಮೂಲಕ ಜನರಿಗೆ ತಿಳಿಸುತ್ತಾರೆ.
ಶ್ರೀಶಂಕರರ ಸಿದ್ಧಾಂತವನ್ನು ಅನಂತರ ಅನೇಕ ಚಿಂತಕರು ಸಮಥಿ೯ಸಿ ವಿಸ್ತರಿಸಿದರು.ಇದರ ಪರಿನಾಮವಾಗಿ ಅವರ ಅನುಚರರಲ್ಲಿ ಅಬಿಪ್ರಾಯ ಬೇದ ಉಂಟಾಯಿತು. ವಿವಿಧ ಶಾಖೆಗಳು ಹುಟ್ಟಿಕೊಂಡವು. ಇವುಗಳಲ್ಲಿ ಮುಖ್ಯವಾದವು ಎರಡು.ಯಾವುವೆಂದರೆ "ವಿವರಣ ಶಾಖೆ" ಮತ್ತು ಭಾಮತಿ ಶಾಖೆ. ವಿವರಣದ ಪ್ರವತ೯ಕರು ಶಂಕರರ ನೇರ ಶಿಷ್ಯರಾದ "ಪದ್ಮಪಾದರು". ಇವರು ಶಂಕರರ ಸೂತ್ರ ಭಾಷ್ಯದ ಬಗ್ಗೆ ವ್ಯಾಖ್ಯಾನವನ್ನು ರಚಿಸಿದ್ದಾರೆ. ಈ ವ್ಯಾಖ್ಯಾನಕ್ಕೆ ಪಂಚಪಾದಿಕಾ ಎಂಬ ಹೆಸರಿದೆ. ಇದೊಂದು ಅಪೂಣ೯ ಗ್ರಂಥ. ಇದಕ್ಕೆ ವಿವರಣ ಎಂಬ ಮತ್ತೊಂದು ವ್ಯಾಕ್ಯಾನವಿದೆ.ಇದನ್ನು ಬರೆದವರು ಪ್ರಕಾಶಾತ್ಮನ್.(ಕ್ರಿ.ಶ.1000)ವಾಸ್ತವವಾಗಿ ಈ ಗ್ರಂಥದ ಹೆಸರಿನಿಂದಲೇ ಈ ಶಾಖೆಗೆ ವಿವರಣ ಎಂಬ ಹೆಸರು ಬಂದಿದೆ.
"ಭಾಮತಿ" ಶಾಖೆಯ ಪ್ರವತ೯ಕರು ವಾಚಸ್ಪತಿ ಮಿಶ್ರ.(ಕ್ರಿ.ಶ.841)ಇದಕ್ಕೆ ಅಮಲಾನಂದರ "ಕಲ್ಪತರು'ಎಂಬ ವ್ಯಾಖ್ಯಾನವಿದೆ.ಅದ್ವೈತವನ್ನು ಕುರಿತ ಉಳಿದ ಕೈಪಿಡಿಗಳೆಂದರೆ ಸುರೇಶ್ವರರ "ನೈಷ್ಕಮ್ಯ೯ಸಿದ್ಧಿ".ಇವರ ಶಿಷ್ಯರಾದ ಸವ೯ಜ್ಞಾತ್ಮರು"ಸಂಕ್ಷೇಪ ಶಾರೀರಕ"ವೆಂಬ ಗ್ರಂಥ ರಚಿಸಿದ್ದಾರೆ. ವಿಮುಕ್ತಾತ್ಮರು "ಇಷ್ಟಸಿದ್ಧಿ" ಎಂಬ ಗ್ರಂಥದಲ್ಲಿ ಮಾಯಾವಾದದ ಬಗ್ಗೆ ವಿಶೇಷವಾಗಿ ಪ್ರಸ್ತಾಪಿಸಿದ್ದಾರೆ. ವಿದ್ಯಾರಣ್ಯರ "ಪಂಚದಶಿ" ಮತ್ತು ಅಪ್ಪಯ್ಯ ದೀಕ್ಷಿತರ "ಸಿದ್ಧಾಂತಲೇಶ ಸಂಗ್ರಹ"ಗಳು ಮುಖ್ಯವಾದವು. ಧಮ೯ರಾಜ ಅಧ್ವರಿ ತಮ್ಮ ವೇದಾಂತ ಪರಿಭಾಷಾ ಎಂಬ ಗ್ರಂಥದಲ್ಲಿ ಅದ್ವೈತದ ಪ್ರಮಾಣಶಾಸ್ತ್ರವನ್ನು ಕುರಿತು ಚಚಿ೯ಸುತ್ತಾರೆ. ಸದಾನಂದರ "ವೇದಾಂತಸಾರ" ಅದ್ವೈತವನ್ನು ಕುರಿತ ಒಂದು ಪರಿಚಯ ಗ್ರಂಥ. ಶ್ರೀ ಹಷ೯ರ "ಖಂಡನಖಂಡಖಾದ್ಯ" ಮತ್ತು ಮಧುಸೂದನ ಸರಸ್ವತಿಗಳ"ಅದ್ವೈತ ಸಿದ್ಧಿ" ಅದ್ವೈತದಲ್ಲಿನ ಪಾಂಡಿತ್ಯಕ್ಕೆ ಅಗತ್ಯವೆಂದು ಪರಿಣಿಸಲಾಗಿದೆ.
ಸಂಕ್ಷಿಪ್ತ ಅದ್ವೈತ ಸಾರ:
ಬ್ರಹ್ಮಸತ್ಯ,ಜಗತ್ತು ಮಿಥ್ಯೆ,ಜೀವವು ಬ್ರಹ್ಮವೇ ಆಗಿದೆ.ಅದಕ್ಕಿಂತ ಬೇರೆಯಲ್ಲ.ಎಂಬುದು ಅದ್ವೈತದ ಮೂಲಗ್ರಹಿಕೆ.ಆತ್ಮನಿಗೆ ಎರಡನೆಯದು ಅನಾತ್ಮ ಯಾವುದೂ ಇಲ್ಲ.ಬ್ರಹ್ಮ,ಜಗತ್ತು, ಮಾಯೆ,ಈಶ್ವರ,ಜೀವ ಸೃಷ್ಟಿ,ಸಂಸಾರ ಬಂಧನ,ಮೋಕ್ಷ.ಈ ಅಂಶಗಳನ್ನು ಕುರಿತ ಅದ್ವೈತ ಗ್ರಹಿಕೆ ಹೀಗಿದೆ. ಬ್ರಹ್ಮವೆಂದರೆ ದೊಡ್ಡದು.ನಾಶವಿಲ್ಲದ್ದು.ಅದು ಏಕ,ನಿತ್ಯ,ಶಾಶ್ವತ,ಪರವಸ್ತು.ಬ್ರಹ್ಮವು ಜಗತ್ತಾಗಿ ಕಾಣುವುದು.ಜಗತ್ತು ಮತ್ತು ಬ್ರಹ್ಮ ಬೇರೆ ಅಲ್ಲ.ಜ್ಞಾನದ ಮೂಲಕ ಸಾಕ್ಷಾತ್ಕಾರವಾದರೆ ಜಗತ್ತು ಇಲ್ಲದಂತಾಗಿ ಎಲ್ಲವೂ ಬ್ರಹ್ಮವಾಗುತ್ತದೆ.ಬ್ರಹ್ಮವು ಜಗತ್ತಾಗಿ ಕಾಣುವುದು ವಿವತ೯ನ.(ರೂಪಾಂತರ).ಅದ್ವೈತ ಇದನ್ನು "ಅಧ್ಯಾಸ"(ಆರೋಪಿಸುವುದು) ಎನ್ನುತ್ತದೆ13.ಹೀಗೆ ಕಾಣುವುದಕ್ಕೆ ಕಾರಣ ಮಾಯೆ.ಈ ಮಾಯೆಯನ್ನು ಅನಿವ೯ಚನೀಯ ಎನ್ನುತ್ತಾರೆ.ಮಾಯೆಯು ಆವರಣ ಮತ್ತು ವಿಕ್ಷೇಪ ಎಂಬ ಎರಡು ರೀತಿಯಲ್ಲಿ ಪ್ರಕಾಶಗೊಳ್ಳಬಹುದು.ವಸ್ತು ಹಾಗೂ ವಿಷಯಗಳ ನಿಜವಾದ ಸ್ವರೂಪವನ್ನು ಅಡಗಿಸುವುದು ಆವರಣ.(ಮುಚ್ಚುವಿಕೆ)ಈ ಆವರಣದಿಂದ ವಸ್ತುಸ್ಥಿತಿ ಮರೆಯಾಗುತ್ತದೆ.ನಿಜವಾಗಿ ಇರುವ ವಸ್ತುಗಳನ್ನು ಕಾಣಿಸದಂತೆ ಮಾಡಿ ಬದಲಿಗೆ ಬೇರೆಯ ವಸ್ತುಗಳನ್ನು ಕಾಣಿಸುವುದು ವಿಕ್ಷೇಪ.ಈಶ್ವರನ ಸ್ಥಿತಿ ವಿಶೇಷಗಳೆ ಜಗತ್ತಿನ ಸೃಷ್ಟಿ, ಸ್ಥಿತಿ, ಲಯಗಳು. ಮಾಯೆಯ ಅಧೀನಕ್ಕೆ ಒಳಗಾದ ಜೀವವು ನಾನು ನನ್ನದು ಎನ್ನುವ ಪ್ರತ್ಯೇಕ ಭಾವನೆಯನ್ನು ತಾಳಿರುತ್ತದೆ.ಜೀವವು ಬ್ರಹ್ಮವನ್ನು ಸೇರಿದಾಗ ಬ್ರಹ್ಮವೇ ಆಗುತ್ತದೆ.ಜೀವಿಯ ದೃಷ್ಟಿಯಿಂದ ಸತ್ಯ(ಬ್ರಹ್ಮವೊಂದೇ ಸತ್ಯ ಎನ್ನುವ ಅರಿವು)ಜೀವ ಜಗತ್ತಿನ ಸೃಷ್ಟಿಗೆ ಕಾರಣ ಬ್ರಹ್ಮ ಲೀಲೆ.ಈ ಸೃಷ್ಟಿ ಪಂಚಭೂತಗಳ (ಅಗ್ನಿ,ಜಲ,ಪೃಥ್ವಿ,ಆಕಾಶ,ವಾಯು) ಮಿಶ್ರಣದಿಂದ ಹೊಸವಸ್ತುವಾಗುತ್ತೆ.ಇದನ್ನು ಪಂಚೀಕರಣ ಎನ್ನುತ್ತಾರೆ.ಸ್ಥೂಲ,ಸೂಕ್ಷ್ಮ, ಕಾರಣವೆಂಬ ಮೂರು ವಿಧದ ಶರೀರಗಳಿರುತ್ತವೆ.ಜೀವವಿದ್ದು ಸುಖ ದುಃಖಗಳನ್ನು ಅನುಭವಿಸುವುದು ಸ್ಥೂಲ ಶರೀರವಾದರೆ, ಭೋಗದ ಅನುಭವಕ್ಕೆ ಸಾಧನವಾಗಿ ಇಂದ್ರಿಯಗಳಿಗೆ ಕಾರಣ ಸೂಕ್ಷ್ಮ ಶರೀರವು ಮುಕ್ತಿಯವರೆಗೆ ಇರುತ್ತದೆ.ಸ್ಥೂಲ ಸೂಕ್ಷ್ಮಗಳೆರಡಕ್ಕೂ ಕಾರಣವಾದ ಅಜ್ಞಾನ ಅಥವಾ ಅವಿದ್ಯೆಯನ್ನು ಕಾರಣ ಶರೀರ ಎನ್ನಲಾಗಿದೆ.ಜೀವವು ಈ ಮೂರು ಶರೀರದಿಂದಲೂ ಪಂಚಕೋಶಗಳಿಂದಲೂ ಕೂಡಿರುತ್ತದೆ.ಮುಕ್ತಿ ಪಡೆಯುವವರೆಗೆ ಜೀವಿಯು ಕಮಾ೯ನುಸಾರ ಪುನಜ೯ನ್ಮವನ್ನು ಪಡೆಯುತ್ತಾನೆ.ಜೀವವಿದ್ದಾಗಲೇ ಪಡೆಯುವ ಮುಕ್ತಿಯನ್ನು ಜೀವನ್ಮುಕ್ತಿಯೆಂದೂ ಶ್ಥೂಲಶರೀರದ ನಾಶದ ನಂತರ ಪಡೆಯುವ ಮುಕ್ತಿಯನ್ನು ವಿದೇಹ ಮುಕ್ತಿಯೆಂದೂ ಕರೆಯುತ್ತಾರೆ.ಮೋಕ್ಷಗಳಿಗೆ ಈಶ್ವರನ ಆರಾಧನೆ ಅಗತ್ಯ.ಶಾಶ್ವತ ಅಶಾಶ್ವತದ ವಿವೇಚನೆ (ನಿತ್ಯಾನಿತ್ಯ) ವಿವೇಕ, ಅದರಿಂದ ಉಂಟಾಗುವ ವೈರಾಗ್ಯ, ಶಮದಮ ಮೊದಲಾದ ಆರು ಗುಣಗಳು (ಶಮಾದಿಷತ್ಕಸಂಪತ್ತಿ),ಮುಕ್ತಿಯ ಪ್ರಬಲ ಅಪೇಕ್ಷೆ(ಮುಮುಕ್ಷತ್ವ) ಈ ನಾಲ್ಕು ಅಂಶಗಳನ್ನು ಸಾಧನ ಚತುಷ್ಟಯ ಎನ್ನಲಾಗಿದೆ. ಶ್ರವಣ, ಮನನ, ನಿಧಿದ್ಯಾಸನ,(ಆತ್ಮಸಂಬಂಧಿ ವಿಚಾರಗಳನ್ನು ಅನುಭವಕ್ಕೆ ತಂದುಕೊಳ್ಳುವುದು)ಗಳು ಮುಖ್ಯ.ಪ್ರಜ್ಞಾನಂ ಬ್ರಹ್ಮ(ಪ್ರಜ್ಞೆಯು ಬ್ರಹ್ಮ) ಅಹಂ ಬ್ರಹ್ಮಾಸ್ಮಿ(ನಾನು ಬ್ರಹ್ಮ) ತತ್ವಮಸಿ(ನೀನು ಅದಾಗಿದ್ದೀಯೆ)ಅಯಮಾತ್ಮಾ ಬ್ರಹ್ಮ (ಈ ಆತ್ಮವು ಬ್ರಹ್ಮ) ಈ ಮೊದಲಾದ ವೇದವಾಕ್ಯಗಳನ್ನು ಮಹಾವಾಕ್ಯಗಳೆನ್ನಲಾಗಿದೆ.
ಅಧ್ಯಾಯ 1 ಪೀಠಿಕೆ: ಅಡಿ ಟಿಪ್ಪಣಿಗಳು
1) ಡಾ. ಬಿ. ಎಂ.ಹೆಗಡೆ,ಶ್ರೀ ಶಂಕರಾಚಾಯ೯ರ ಅದ್ವೈತ ದಶ೯ನ,ಶ್ರೀಭಗವತ್ಪಾದ ಪ್ರಕಾಶನ,ಶ್ರೀ ಸ್ವಣ೯ವಲ್ಲಿ ಮಹಾ ಸಂಸ್ಥಾನ ಸೋಂದಾ.ಮೊದಲನೇ ಮುದ್ರಣ 2001 ಪುಟ 74.
2) ವ್ಯಾಕರಣ ಮತ್ತು ಭಾರತೀಯ ತತ್ವಶಾಸ್ತ್ರ,ಪ್ರಥಮ ವಷ೯ದ ಪಠ್ಯ ಪುಸ್ತಕ,ಕುವೆಂಪು ವಿಶ್ವವಿದ್ಯಾಲಯ.ದೂರ ಶಿಕ್ಷಣನಿದೇ೯ಶನಾಲಯ,ಶಂಕರಘಟ್ಟ ಶಿವಮೊಗ್ಗ.2005,ಪುಟ ೯5
3) ಅದೇ ಪುಟ ೯6
4) ನಾಗೇಶ್ ಎಸ್.ಡೋಂಗರೆ, ವೇದ ಉಪನಿಷತ್ ಗೀತ ಮತ್ತುವೇದಿಕ್ ಲಿಟರೇಚರ್.ಎಂ,ಎ.(ಸಂಸ್ಕøತ)ಅಂತಿಮ ವಷ೯ದಪಠ್ಯಪುಸ್ತಕ,ಕುವೆಂಪು ವಿಶ್ವವಿದ್ಯಾಲಯ,ಶಂಕರಘಟ್ಟ ಶಿವಮೊಗ್ಗ 2005 ಪುಟ68.
5) ಅದೇ ಪುಟ 70
6) ಅದೇ ಪುಟ72
7) ಅದೇ ಪುಟ122
8) ಅದೇ ಪುಟ128
೯) ಅದೇ ಪುಟ130
10) ಸ್ವಾಮಿ ಆದಿದೇವಾನಂದ, ಬ್ರಹ್ಮಸೂತ್ರಗಳು ಶ್ರೀರಾಮಕೃಷ್ಣಾಶ್ರಮ,ಮೈಸೂರು,ನಾಲ್ಕನೇ ಮುದ್ರಣ,1೯೯3 ಪುಟ 5
11) ಅದೇ ಪುಟ ೯
12) ಅದೇ ಪುಟ 14
13) ಕನ್ನಡ ಸಾಹಿತ್ಯದ ಹಿನ್ನೆಲೆ,ಪ್ರೇರಣೆ,ಪ್ರಭಾವ ಎಂ.ಎ(ಕನ್ನಡ)ಪ್ರಥಮ ವಷ೯,ಪಠ್ಯಪುಸ್ತಕ,ಲೇಖನ"ಕನ್ನಡ ಸಾಹಿತ್ಯ ಮತ್ತು ವೈದಿಕ ಧಮ೯,”ಅದ್ವೈತಮತ"ಪುಟ 4೯
ಅಧ್ಯಾಯ 2: ಅಧ್ಯಯನದ ಉದ್ದೇಶ ಮತ್ತು ವ್ಯಾಪ್ತಿ
ಅಧ್ಯಯನದ ಉದ್ದೇಶಗಳು:
1) ಇಹಲೋಕದ ಸುಖ ಶಾಂತಿ(ಅಭ್ಯುದಯ)
2) ನಿಶ್ರೇಯಸ(ಅದ್ಯಾತ್ಮಿಕ ಸುಖ ಮತ್ತು ಮುಕ್ತಿ)
3) ರಾಷ್ಟ್ರೀಯ ಭಾವೈಕ್ಯತೆ
4) ಸತ್ಯದ ಅನ್ವೇಷಣೆ ಮತ್ತು ಆನಂದ
5) ಸಾಮಾಜಿಕ ಸ್ವಾಸ್ಥ್ಯ
6) ಮಾನಸಿಕ ನೆಮ್ಮದಿ
7) ಸವ೯ಮತ ಸಾಮರಸ್ಯ
8) ರಾಷ್ಟ್ರೀಯತಾ ದೃಢೀಕರಣ
೯)ಜ್ಞಾನ,ಭಕ್ತಿ,ಕಮ೯ ಮತ್ತು ಯೋಗಗಳಿಗೆ ಸಮಂಜಸ ಸ್ಥಾನವನ್ನು ದೊರಕಿಸಿಕೊಡುವುದು.
10) ವಿಶ್ವಕುಟುಂಬ.
11) ಈ ವಿಶ್ವವನ್ನು ನಡೆಸುತ್ತಿರುವ ಮೂಲ ಪರತತ್ವ ಯಾವುದೆಂಬುದನ್ನು ಯುಕ್ತಿಯುಕ್ತವಾಗಿ ತಿಳಿಸುವುದು.
12) ಇಡೀ ಸಮಾಜವನ್ನು ಒಂದು ಅಧ್ಯಾತ್ಮಿಕ ಆದಶ೯ದ ಕಡ ಒಲಿಯುವಂತೆ ಮಾಡುವುದು.ನಿರಂತರ ಶಾಂತಿ ಆನಂದಗಳಿಗೆ ಮೂಲ ಕಾರಣವಾದ ಸವ೯ರಲ್ಲಿಯೂ ಆತ್ಮ ಸ್ವರೂಪಿಯಾದ ಉಪನಿಷತ್ತಿನ ಸವ೯ ತಂತ್ರ ಸ್ವತಂತ್ರ ಪರಬ್ರಹ್ಮವನ್ನು ಸ್ಥಾಪಿಸುವುದು.
13 )ಸಾಮಾನ್ಯವಾಗಿ ಜನರು ಅಥ೯ ಮಾಡಿಕೊಂಡು ಅನುಸರಿಸಲು ಸಾಧ್ಯವಾಗುವ ದ್ವೈತ ಸ್ವಭಾವದ ದಶ೯ನದೊಂದಿಗೆ ಹಾಗೂ ಈಶ್ವರಾಸ್ತಿಕ್ಯ ದಶ೯ನಗಳೊಂದಿಗೆ ಸುಸಂಗತಗೊಳಿಸುವುದು.
14)ಆತ್ಮ ಸಾಕ್ಷಾತ್ಕಾರ(ಜೀವನ್ಮುಕ್ತಿ,ಸದ್ಯೋಮುಕ್ತಿ)
ಅದ್ವೈತ ದೃಷ್ಟಿಯ ಪ್ರಯೋಜನಗಳು:
1) ಅದ್ವೈತ ಸಿದ್ಧಾಂತವು ವ್ಯಕ್ತಿತ್ವಾತೀತವಾದ ಮಾತು ಮತ್ತು ಅಲೋಚನೆಗಳಿಗೆ ನಿಲುಕದ ಮತ್ತು ಸವ೯ದಲ್ಲು ಸಮಭಾವದ ಪರಬ್ರಹ್ಮ ಯಾವುದುಂಟೋ ಅದರ ಸಾಕ್ಷಾತ್ಕಾರದ ಬಗ್ಗೆ ಉಪನಿಷತ್ತುಗಳ ಹೇಳಿಕೆಯನ್ನು ಕ್ರಮಬದ್ದಗೊಳಿಸಿ ಊಜಿ೯ತಗೊಳಿಸಿರುವ ದೃಷ್ಟಿ ಅಥವಾ ಸಿದ್ಧಾಂತ 1.
2) ಅನಂತವೂ ಏಕಮೇವಾದ್ವಿತೀಯವೂ ಸವ೯ಸಮವೂ ಆಗಿರುವ ಪಾರಮಾಥಿ೯ಕ ಸತ್ಯವಾದ ಬ್ರಹ್ಮವು ವ್ಯಾವಹಾರಿಕವಾಗಿ "ಬ್ರಹ್ಮ"ವಾಯಿತು ಎಂಬುದನ್ನು ವ್ಯಾಖ್ಯಾನಿಸುವ ಬಗ್ಗೆ ಅದ್ವೈತವೂ ಸಹ ಸಹಜವಾದ ಲೌಕಿಕ ಕ್ಲೇಶಗಳನ್ನು ಎದುರಿಸಬೇಕು.
3) ಅದು ವ್ಯಾವಹಾರಿಕ ಹಾಗೂ ಸಾಪೇಕ್ಷ ಹಂತದಲ್ಲಿ ದ್ವೈತಾತ್ಮಕ ಹಾಗೂ ಆದಶ೯ಭಾವನಾತ್ಮಕ ಸಿದ್ಧಾಂತಗಳ ನೀತಿಗಳನ್ನು ಸ್ಥೂಲವಾಗಿ ಅಂಗೀಕರಿಸುತ್ತದೆ.
4) ಒಂದು ಹಂತದಲ್ಲಿ ವ್ಯಕ್ತಿತ್ವಾತೀತ ಸಮರೂಪ ಏಕಮೇವಾದ್ವಿತೀಯ ಪರಬ್ರಹ್ಮವನ್ನು ಇನ್ನೊಂದು ಹಂತದಲ್ಲಿ ನಮ್ಮ ವ್ಯಾವಹಾರಿಕ ಲೋಕದ ಅನಂತ ಇಂದ್ರಿಯ ಗೋಚರ ಪ್ರಭಾವದ ಈಶ್ವರನನ್ನು ನಾನಾ ರೂಪಗಳಲ್ಲಿ ನಾನಾ ನಾಮಗಳಲ್ಲಿ ಪುರಷ ಹಾಗೂ ಸ್ತ್ರೀಯಾಗಿ ಅಂದರೆ ಸಗುಣವಾಗಿ ನಿಗು೯ಣವಾಗಿ ,ಅಧ೯ನಾರೀಶ್ವರನಾಗಿ ಭಾವಿಸಿಕೊಳ್ಳಲು,ಪೂಜಿಸಲು,ಪ್ರೀತಿಸಲು ಧ್ಯಾನಿಸಲು ಅನುಕೂಲ.
5)ಇದು ಎಲ್ಲಾ ಮತ ಧಮ೯ಗಳ ಸಾಮರಸ್ಯ ಸಾಧಿಸಲು ಅನುಕೂಲವಾಗಿದೆ.
6)ಬ್ರಹ್ಮವು/ಆತ್ಮವು ಅಸ್ತಿತ್ವದಲ್ಲಿರುವ ವೈಯಕ್ತಿಕ ವ್ಯಕ್ತಿತ್ವವನ್ನು ದಾಟಿದ ಸತ್ಯವಾಗಿದ್ದು, ಅದನ್ನು ಗುರಿಯಾಗಿಟ್ಟುಕೊಂಡು ಯಾರು ಬೇಕಾದರೂ ಅನ್ವೇಶಿಸಬಹುದು.
7)ಅದ್ವೈತ ಸಿದ್ಧಾಂತವು ಭಕ್ತಿಯ ಮನೋಭಾವಕ್ಕೆ ಅಡಚಣೆಯನ್ನುಂಟು ಮಾಡುವುದಿಲ್ಲ.
8) ಎಲ್ಲಾ ಜೀವಿಗಳಲ್ಲಿ ಅಂತಗ೯ತವಾಗಿರುವ ಆತ್ಮತತ್ವ ಏಕಮೇವಾದ್ವಿತೀಯವೆಂದು ಘೋಷಿಸಿ ಎಲ್ಲಾ ಜೀವಿಗಳ ಅನನ್ಯತೆಯನ್ನು ಮತ್ತು ಐಕ್ಯತೆಯನ್ನು ಬೋಧನೆಯ ಮೂಲಕ ಅದ್ವೈತ ಸಿದ್ಧಾಂತವು ಸದ್ವತ೯ನೆಗಳಿಗೆ ಪ್ರಬಲವಾದ ಬೆಂಬಲವು ಆಗಿರುತ್ತದೆ.
೯) ಸದ್ಯೋ ಮುಕ್ತಿ: ಸಮ್ಯಕ್ ಜ್ಞಾನದಿಂದ ದೊರಕುವ ಪರಮಶಾಂತಿ.
ಪರತತ್ವ ಅನ್ವೇಷಣೆಯ ಸಂಶೋಧಕನಿಗೆ ಇರಬೇಕಾದ ಪ್ರಮುಖ ಲಕ್ಷಣಗಳು:
ಪರತತ್ವ ಅಥವಾ ಪರಬ್ರಹ್ಮದ ಅನ್ವೇಷಣೆಯೇ ದಾಶ೯ನಿಕವಾದವನ ಅಥವಾ ತತ್ವಜ್ಞಾನಿಯ ಮುಖ್ಯ ಧ್ಯೇಯವಾಗಿರಬೇಕು.ಶಂಕರರ ಪ್ರಕಾರ ಉತ್ತಮಾಥಿ೯ಯಾದವನು ಇವುಗಳನ್ನು ಸಾಧಿಸಿಕೊಂಡಿರ ಬೇಕು.
1) ಪರಬ್ರಹ್ಮದ ಬಗ್ಗೆ ಹಾಗೂ ಅಧ್ಯಾತ್ಮಿಕ ಮುಕ್ತಿಯ ಬಗ್ಗೆ ತೀವ್ರ ಅನುರಕ್ತಿ ಬೆಳೆಸಿಕೊಂಡಿರಬೇಕು.
2) ಸತ್ಯದಿಂದ ವಿಚಲಿತನಾಗಲು ಅವಕಾಶವಿಲ್ಲದಿರುವಂತೆ ಶ್ರೇಷ್ಠ ಅಧ್ಯಾತ್ಮಿಕ ಹಾಗೂ ನ್ಯತಿಕ ಶಿಕ್ಷಣ ಹೊಂದಿರಬೇಕು2.
3) ಇಹಮುತ್ರಾಥ೯ ಫಲಭೋಗವಿರಾU: ಈ ಲೋಕದ ಹಾಗೂ ಪರಲೋಕದ ಸುಖದ ಬಗ್ಗೆ ವಿರಕ್ತನಾಗಿರಬೇಕು.
4)ಶಾಸ್ತ್ರಗಳ ಮತ್ತು ಆಚಾಯ೯ರ ಬೋಧಗಳ ಆಚರಣೆಯಿಂದ ಸಂಸ್ಕಾರವನ್ನು ಪಡೆದಿರುವ ಮತ್ತು ಆತ್ಮಸಂಯಮ,ನಿರುದ್ವೇಗ,ಇತ್ಯಾದಿ ವಿಶಿಷ್ಟ ಗುಣಗಳಿಂದ ಶಾಂತವಾಗಿರುವ ಮನಸ್ಸು ಆತ್ಮಸಾಕ್ಷಾತ್ಕಾರದ ವಿಶೇಷ ಉಪಕರಣವೆಂದು ಶ್ರೀ ಶಂಕರರು ಸ್ಪಷ್ಟಪಡಿಸಿರುತ್ತಾರೆ.
ಶ್ರೀ ಶಂಕರರ ಅದ್ವೈತದ ಪರಮೋದ್ದೇಶಗಳು:
ಸುಮಾರು ಒಂದು ಸಹಸ್ರ ವಷ೯ಗಳ ಕಾಲ ಬೌದ್ಧ ಧಮ೯ವು ಉಚ್ಛ್ರಾಯ ಸ್ಥಿತಿಯಲ್ಲಿದ್ದಿತು. ಬುದ್ಧನನ್ನೇ ಪರದೇವತೆ ಎಂದು ಪೂಜಿಸತೊಡಗಿದರು. ನಮಗೆ ತಿಳಿದಿರುವಂತೆ ಕೇವಲ ಪ್ರಯೋಗದ ಉಕ್ತಿಗಳಾಗಲಿ,ಅನುಭವೈಕ ವಾದಗಳಾಗಲೀ,ಇಂದ್ರಿಯಾತೀತ ಸತ್ಯವನ್ನು ಒದಗಿಸಿಕೊಡಲಾರದು3.ಆಳ್ವಾರರು ಹಾಗೂ ನಯನಾರರ ಚಳುವಳಿಗಳು ಬೌದ್ಧರನ್ನು ಮತ್ತು ಬೇರೆಯವರನ್ನು ಪರಿಶುದ್ಧ ವೈದಿಕ ಮಾಗ೯ಕ್ಕೆ ಮತ್ತೆ ಕರೆತರಲು ಶ್ರಮಿಸಿದವು.
ಜನಗಳನ್ನು ಮತ್ತೆ ವೈದಿಕಮಾಗ೯ಕ್ಕೆ ಕರೆತರಲು ಮುಖ್ಯವಾದ ಕೆಲವು ಅಗತ್ಯಗಳನ್ನು ಪೂರೈಸಬೇಕೆಂಬುದನ್ನು ಮೊದಲು ಸಿದ್ಧಪಡಿಸಿಕೊಂಡರು ಅವು ಯಾವುವೆಂದರೆ
1) ನರಬಲಿಯೇ ಮೊದಲಾದ ವೈಪರೀತ್ಯಗಳಿಂದ ಕೂಡಿದ್ದ ಯಜ್ಞ ಯಾಗಾದಿಗಳ ಚಯೆ೯ಯನ್ನು ಮಿತಿಗೊಳಿಸಬೇಕು.ಮತ್ತು ಮತ ಪ್ರಕ್ರಿಯೆಗಳನ್ನು ಅಧ್ಯಾತ್ಮಿಕವಾಗುವಂತೆ ಪರಿಷ್ಕರಿಸಬೇಕು.
2) ಕರುಣೆ ವಾತ್ಸಲ್ಯದಿಂದ ಕೂಡಿದ ದೇವತೆಗೆ ಒಂದು ಸ್ಥಾನವನ್ನು ಒದಗಿಸಿಕೊಡುವುದು.
3) ಜ್ಞಾನ,ಭಕ್ತಿ,ಕಮ೯ ಯೋಗಗಗಳಿಂದ ಕೂಡಿದ ದೇವತೆಗೆ ಒಂದು ಸ್ಥಾನವನ್ನು ಒದಗಿಸಿಕೊಡುವುದು.
4) ಸುಮಾರು ಒಂದು ಸಹಸ್ರ ವಷ೯ಗಳಿಂದ ನಡೆದುಬಂದಿದ್ದ ಬೌದ್ಧ ಆಚಾರ ವಿಚಾರಗಳನ್ನು ಸುಲಭವಾಗಿ ತೊಡೆದು ಹಾಕುವಂತಿರಲಿಲ್ಲ. ವೈದಿಕ ಸಿದ್ಧಾಂತಗಳಿಗೆ ಪರಸ್ಪರ ವಿರೋಧವಿಲ್ಲದಂತಹ ಅಲ್ಲಿನ ಅಂಶಗಳನ್ನು ಸ್ವೀಕರಿಸಿ ಎರಡನ್ನೂ ಒಂದುಗೂಡಿಸಬೇಕು.
5) ಇಡೀ ಸಮಾಜವನ್ನು ಒಂದು ಅಧ್ಯಾತ್ಮಕ ಆದಶ೯ದ ಕಡೆಗೆ ಒಲಿಯುವಂತೆ ಮಾಡುವುದು.
6) ಬೌದ್ಧ ಮತದ ನಕಾರಾತ್ಮಕವೂ, ಶೂನ್ಯವೂ, ಆದ ಸಿದ್ಧಾಂತವನ್ನು ತೊಡೆದುಹಾಕಿ ಅದರ ಸ್ಥಾನದಲ್ಲಿ ಶಾಶ್ವತ ಶಾಂತಿ ಹಾಗೂ ನಿರಂತರ ಶಾಂತಿ ಆನಂದಗಳಿಗೆ ಮೂಲಕಾರಣವಾದ,ಸವ೯ರಲ್ಲೂ ಆತ್ಮ ಸ್ವರೂಪಿಯಾದ ಉಪನಿಷತ್ತಿನ ಸವ೯ತಂತ್ರ ಸ್ವತಂತ್ರ ಪರಬ್ರಹ್ಮವನ್ನು ಸ್ಥಾಪಿಸಬೇಕು.ಅದನ್ನು ವೇದಗಳ ಆಧಾರದಮೇಲೆ ರೂಪಿಸಿಕೊಂಡ,ಸಾಧಾರಣ ಜನರು ಸುಲಭವಾಗಿ ಅಥ೯ ಮಾಡಿಕೊಂಡು ಅನುಸರಿಸಲು ಸಾಧ್ಯವಾಗುವ ದ್ವೈತ ಸ್ವಭಾವದ ಹಾಗೂ ಈಶ್ವರಾಸ್ತಿಕ್ಯ ಸ್ವಭಾವದ ದಶ೯ನಗಳೊಂದಿಗೆ ಸಮನ್ವಯಗೊಳಿಸಬೇಕು.
ಭಾರತೀಯ ವಿಚಾರಧಾರೆಯ ಮೂಲತತ್ವವಾದ "ವೈವಿಧ್ಯತೆಯಲ್ಲಿ ಏಕತೆ"ಎಂಬ ತತ್ವಕ್ಕೆ ದಾಶ೯ನಿಕ ಆಧಾರವನ್ನು ಒದಗಿಸಿದ ಹಿರಿಮೆ ಶ್ರೀ ಶಂಕರರದ್ದಾಗಿದೆ.ಶ್ರೀ ಶಂಕರರು ನಾನಾ ವಿಧವಾದ ಧಾಮಿ೯ಕ ಪಂಥಗಳಿಗೆ ಅವರು ವಿಷ್ಣು,ಗಣಪತಿ,ಸೂಯ೯,ಕುಮಾರ ಅಥವಾ ಬೇರೆ ಯಾವದೇವತೆಯನ್ನೇ ಪೂಜಿಸುತ್ತಿರಲಿ ಆ ಮತಗಳಿಗೆ ಬೆಂಬಲವಿತ್ತರು.ಆದ್ದರಿಂದಲೇ ಅವರನ್ನು"ಷಣ್ಮತ ಸ್ಥಾಪನಾಚಾಯ೯"ಎಂದು ಕರೆಯುತ್ತಾರೆ.ಈ ಪ್ರಾಚೀನ ತತ್ವವನ್ನು "ಏಕಂ ಸತ್ ವಿಪ್ರಾಃ ಬಹುಧಾ ವದಂತಿ"ಎಂದು ಋಗವವೇದವೂ ಹೇಳಿದೆ.
ಈ ರೀತಿಯಾಗಿ ಶಂಕರರು ತಮ್ಮ ಸಾವ೯ತ್ರಿಕ,ಸವ೯ಕಾಲಿಕ,ಮತ್ತು ವಿಶ್ವ ವಿಸ್ತಾರವೆನಿಸಿದ ದಾಶ೯ನಿಕ ಸಿದ್ಧಾಂತದ ಮೂಲಕ,ನಮ್ಮ ಲೌಕಿಕಥವಾ ಪಾರಲೌಕಿಕವೆನಿಸುವ ಎಲ್ಲಾ ವಿಚಾರ ಧಾರೆಗೂ ಒಂದು ವಿಶಾಲವಾದ ಹಾಗೂ ಬಲವಾದ ಆಧಾರವನ್ನು ಒದಗಿಸಿದರು.ಶ್ರೀ ಶಂಕರರೂ ಕೂಡ ಮಠಗಳೆಂಬ ಶ್ರೇಷ್ಠ ಅಧ್ಯಾತ್ಮಿಕ ಕೇಂದ್ರಗಳನ್ನು,ತಮ್ಮ ಉದಾತ್ತ ವಿಶ್ವವ್ಯಾಪಿ ತತ್ವಗಳನ್ನು ಆದಶ೯ಗಳನ್ನು ಪ್ರಸಾರ ಮಾಡಲು ನಾಲ್ಕು ದಿಕ್ಕುಗಳಲ್ಲಿಯೂ ಸ್ಥಾಪಿಸಿದರು.
ಪೂವ೯ ದಿಕ್ಕಿನಲ್ಲಿ ಪುರಿಯಲ್ಲಿ,ಪಶ್ಚಿಮ ದಿಕ್ಕಿನಲ್ಲಿ ದ್ವಾರಕೆಯಲ್ಲಿಯೂ,ಮೂರನೆಯದಾಗಿ ಉತ್ತರದಲ್ಲಿ ಬದರೀನಾಥದಲ್ಲಿಯೂ ನಾಲ್ಕನೆಯದಾಗಿ ದಕ್ಷಿಣದಲ್ಲಿ ಶೃಂಗೇರಿಯಲ್ಲಿಯೂ ಸ್ಥಾಪಿಸಿದರು.ಅವುಗಳ ಅಧಿಕಾರ ವ್ಯಾಪ್ತಿಯಲ್ಲಿ ಸಮಗ್ರ ರಾಷ್ಟ್ರವನ್ನು ಒಂದುಗೂಡಿಸಿದರು.
ಅವರು ವೇದಗಳಲ್ಲಿ ಬೋಧಿಸಿರುವ 1.ಅಭ್ಯುದಯ(ಇಹಲೋಕದ ಸುಖ ಶಾಂತಿಯ ಮುಂದುವರಿಕೆ)2.ನಿಶ್ರೇಯಸ(ಅಧ್ಯಾತ್ಮಿಕ ಉನ್ನತಿ) ಎಂಬ ಎರಡು ತತ್ವಗಳನ್ನು ಪ್ರಸಾರ ಮಾಡಲು ಆದೇಶಿಸಿದರು.ರಾಷ್ಟ್ರೋದ್ಧಾರವೂ ಅವರ ಪರಮ ಧ್ಯೇಯವಾಗಿತ್ತು. ಸಮಾಜವನ್ನು ಹೊಲಸುಗೆಡಿಸಿದ್ದ ನೈತಿಕ ಭ್ರಷ್ಟಾಚಾರ ಮತ್ತು ಅಧೋಗತಿಗಳನ್ನು ಹೋಗಲಾಡಿಸಲು ಪ್ರಯತ್ನಿಸಿದರು.
ಅವರು ದಶೋಪನಿಷತ್ತುಗಳಿಗೆ,ಬ್ರಹ್ಮಸೂತ್ರಗಳಿಗೆ, ಮತ್ತು ಭಗವದ್ಗೀತೆಗೆ (ಪ್ರಸ್ಥಾನತ್ರಯಗಳಿಗೆ) ಅದ್ವೈತ ಭಾಷ್ಯಗಳನ್ನು ಬರೆದರು.ಆ ಗ್ರಂಥಗಳು ಗದ್ಯ ಪದ್ಯಾತ್ಮಿಕವಾಗಿದ್ದು ಅದ್ವೈತ ಸಿದ್ಧಾಂತಕ್ಕೆ ಸಂಬಂಧಿಸಿದ ಹಲವಾರು ಅಂಶಗಳನ್ನು ,ತತ್ವಗಳನ್ನು, ಮತ್ತು ದೈನಂದಿನ ಜೀವನದಲ್ಲಿ ಅವುಗಳ ಪ್ರಯೋಗವನ್ನು ಪಾರಿಭಾಷಿಕ ಶಬ್ದಗಳ ಗೊಂದಲವಿಲ್ಲದೆ ಸರಳ ಸಮಂಜಸ ಭಾಷೆಯಲ್ಲಿ ವಿವರಿಸುತ್ತವೆ.
ಶ್ರೀ ಶಂಕರರು ಆತ್ಮವನ್ನು ಸಾಕ್ಷಾತ್ಕರಿಸಿಕೊಂಡ ಒಬ್ಬ ಶ್ರೇಷ್ಠ ಜ್ಞಾನಿಗಳು. ಋಷಿಗಳು, ಪಂಡಿತರು, ವಿದ್ವತ್ಕವಿಗಳು, ನೈತಿಕ ಅಧ್ಯಾತ್ಮಿಕ ಮೌಲ್ಯಗಳನ್ನು ಪುನರುಜ್ಜೀವನಗೊಳಿಸಿದ ಕಾಯ೯ಕತ೯ರು, ಸುಧಾರಕರು, ವ್ಯವಸ್ಥಾಪಕರು, ಹಾಗೂ ಸಮಾಜವನ್ನು ಭದ್ರಗೊಳಿಸಿದ ಮಹಾಮಹಿಮರು, ಇಂದಿಗೂ ಉಜ್ವಲ ಪ್ರಕಾಶ ತುಂಬಿ ಭಾರತ ಹಾಗೂ ಇಡೀ ವಿಶ್ವದ ಜೀವನದಲ್ಲಿ ದಾರಿದೀಪವಾಗಿ, ಪ್ರಯೋಜನಕಾರಿಯಾಗಿರುವ ಭಾರತದ ಹೆಮ್ಮೆಯ ಪುತ್ರರು. ಅವರದು ಭವ್ಯ ತೇಜೋಪುಂಜ ವ್ಯಕ್ತಿತ್ವ.
ಅಧ್ಯಯನದ ಉದ್ದೇಶ ಮತ್ತು ವ್ಯಾಪ್ತಿಗಳ ವಿವರಣೆ:
1) ಸವ೯ಮತ ಸಾಮರಸ್ಯ:ಶ್ರೀ ಶಂಕರರು ಬೋಧಿಸಿದ ಸಿದ್ಧಾಂತವು ಪಾರಮಾಥಿ೯ಕವಾಗಿ ಯಾವ ದ್ವೈತ ದಶ೯ನಕ್ಕೂ,ಬೌದ್ಧ, ಜೈನಾದಿ ಅವೈದಿಕ ಮತಗಳಿಗೂ ವಿರುದ್ಧವಲ್ಲ.ಜಗತ್ತಿನಲ್ಲಿ ಯಾವಯಾವ ಮತಗಳಿವೆಯೋ ಅವೆಲ್ಲವನ್ನು ಅದ್ವೈತ ದಶ೯ನವು ತನ್ನ ಉದಾರವೂ ವಿಶಾಲವೂ ಆದ ತೆಕ್ಕೆಯಲ್ಲಿ ಸೇರಿಸಿಕೊಂಡು ಬಿಡುತ್ತದೆ4.
ಅದ್ವೈತವು ಸವ೯ಮತ ದಶ೯ನ ಸವ೯ವೂ ಬ್ರಹ್ಮವೆಂದು, ಬ್ರಹ್ಮವು ನಿಗು೯ಣ,ನಿರಂಜನ ಸ್ವರೂಪವೆಂದೂ ಈ ದಶ೯ನವು ಪರಮಾಥ೯ವನ್ನು ಸರಿಯಾಗಿ ತಿಳಿಸಿಕೊಟ್ಟಿದೆ.ದ್ವೈತವೆಲ್ಲವೂ ಅದ್ವೈತ ವಸ್ತುವಿನಿಂದಲೇ ಹೊರಬಂದಿದೆ.ಅದ್ವೈತದಲ್ಲಿ ಸವ೯ಮತ ಸಮನ್ವಯ ಉಂಟು.ದ್ವೈತದಲ್ಲಿ ಈ ಸಮನ್ವಯ ಸಾಧ್ಯವಿಲ್ಲ.ಹೀಗಿರುವುದರಿಂದ ಅಹಿಂಸೆ, ಸತ್ಯ, ತ್ಯಾಗ, ಶಾಂತಿ, ಇವುಗಳು ಅದ್ವೈತದಿಂದಲೇ ಸಾಧ್ಯ.
ವೇದಾಂತವು ಬ್ರಹ್ಮ_ಆತ್ಮ ಎಂಬ ಶಬ್ದಗಳಿಂದ ವ್ಯವಹರಿಸುತ್ತದೆ.ಸಾಂಖ್ಯಾದಿ ದಶ೯ನಗಳು ಈಶ್ವರ ಶಬ್ದವನ್ನು ಬಳಸುತ್ತವೆ. ಶಿವ ಸವೋ೯ತ್ತಮ, ವಿಷ್ಣು ಸವೋ೯ತ್ತಮ ಎಂಬ ವಾದಗಳು ಹುಟ್ಟಿದವು. ಉಪಾಸನಾ ಭೇದಗಳು ತಲೆದೋರಿದವು. ವೇದೋಕ್ತವಾದ ಏಕೇಶ್ವರ ವಾದವು ಉಂಟಾಯಿತು.ಮತೀಯ ಅನಾಯಕತ್ವ ತೋರಿ ಅಂತಃಕಲಹಗಳು ಬೆಳೆದವು.
ಶ್ರೀ ಶಂಕರರು ಜನತೆಯಲ್ಲಿ ಪ್ರಸಿದ್ಧವಾಗಿದ್ದ ಪಂಚದೇವತೆಗಳನ್ನು ಆರಿಸಿಕೊಂಡು ಪಂಚಾಯತನ ಹೊಸ ಪದ್ದತಿಯನ್ನು ತಂದರು.ಈ ದೇವತೆಗಳೆಲ್ಲರೂ ಸಮಾನರೇ.ಯಾರನ್ನು ಪೂಜಿಸಿದರೂ ಜಗದೀಶ್ವರನಿಗೆ ಸಲ್ಲುವುದು.ಯಾರು ಮತಾಂತರಕ್ಕೆ ಒಳಗಾಗದೆ ಸನಾತನವಾದ ವೈದಿಕ ಸಂಪ್ರದಾಯದಲ್ಲಿಯೇ ಉಳಿದುಕೊಂಡರೋ ಅವರನ್ನು ಗುರುತಿಸುವುದಕ್ಕಾಗಿ ಪರಿಶೇಷಾತ್ ಸ್ಮಾತ೯ರೆಂಬ ಹೆಸರು ಬೆಳಕಿಗೆ ಬಂದಿದೆ.ಸ್ಮಾತ೯ರೆಂದರೆ ಸ್ಮøತ್ಯುಕ್ತವಾದುದನ್ನು ಪಾಲಿಸುವವರೆಂದು ಅಥ೯.
2) ವಿಶ್ವ ಕುಟುಂಬ:ಈ ಪೃಥ್ವಿಯಲ್ಲಿರುವ ಸಕಲ ಮಾನವರೂ ಅಣ್ಣ ತಮ್ಮಂದಿರೇ.ನೀವೆಲ್ಲರೂ ಪರಮಾತ್ಮನ ಮಕ್ಕಳೇ.ವಾಸ್ತವವಾಗಿ ಪರಮಾತ್ಮ ಸ್ವರೂಪರೇ ಆಗಿದ್ದೀರಿ.ಪ್ರಪಂಚದಲ್ಲಿರುವ ಸಕಲ ವಸ್ತುಗಳಿಗಿಂತಲೂ ತನಗೆ ತಾನು (ತನ್ನ ಆತ್ಮನು)ಪ್ರಿಯತಮನಾಗಿರುತ್ತಾನೆ ಎಂದು ಬೋಧಿಸುತ್ತದೆ.ವಿಶ್ವವೇ ನಮ್ಮಕುಟುಂಬವೆಂಬುದು ದೃಢವಾಗುತ್ತದೆ5.
3).ವೈದಿಕ ಸಂಪ್ರದಾಯದ ದೃಢೀಕರಣ:ಕಮ೯,ಉಪಾಸನೆ,ಆತ್ಮಜ್ಞಾನ ಈ ಮೂರನ್ನು ಅಧಿಕಾರಕ್ಕೆ ತಕ್ಕಂತೆ ಸಮಸ್ತ ಭಾರತೀಯರಿಗೂ ತಿಳಿಸಿಕೊಟ್ಟರು.
4) ರಾಷ್ಟ್ರೈಕ್ಯತಾ ದೃಢೀಕರಣ:ಭಾರತವು ಒಂದು ರಾಷ್ಟ್ರ ಎಂಬ ಏಕತಾ ಭಾವನೆಯನ್ನುಬೆಳೆಸಿದರು. ಭಾರತೀಯರನ್ನು ಒಟ್ಟುಗೂಡಿಸಿದ ಏಕಸೂತ್ರವೇ ಸಂಸ್ಕøತ ಭಾಷೆ. ಕೇರಳದಿಂದ ಕಾಶ್ಮೀರದವರೆಗೆ ಸಂಚರಿಸಿ ಭಾರತದ ಏಕ ರಾಷ್ಟ್ರತೆಯನ್ನು ಬೆಳೆಸಿದರು. ಲೋಕದಲ್ಲಿ ಸುಖ ಶಾಂತಿ, ಸಂತೃಪ್ತಿಗಳು ನೆಲೆಸ ಬೇಕಾದರೆ ಧಮ೯ ಪರಿಪಾಲನೆ ಅತ್ಯಗತ್ಯ.ಧಮ೯ದಲ್ಲಿ ಶ್ರದ್ಧೆಯೂ, ಭಗವಂತನಲ್ಲಿ ಭಕ್ತಿಯೂ,ಮೂಡಿತೆಂದರೆ ಸಾಕು ಅವನು ಸನ್ಮಾಗ೯ವನ್ನು ಹಿಡಿದಂತೆ.ಮೊದಲು ಸನ್ಮಾಗ೯ ನಂತರ ವೇದಾಂತ.ಧಮ೯ಪರಿಪಾಲನೆ ಬಹಳ ಮುಖ್ಯ6.
ನಾನಕರ ಉಪದೇಶವಿದು."ಜೀವಾತ್ಮ ಪರಮಾತ್ಮರಲ್ಲಿ ಭೇದವಿದೆಯೆಂದು ತಿಳಿಯಬೇಡ.ಸಜ್ಜನ _ಕಳ್ಳ_ಎಲ್ಲರೂ ಬ್ರಹ್ಮವೇ ಎಂದು ಅರಿತುಕೊ. ವಸುದೇವನನ್ನು ಬಿಟ್ಟು ಇಲ್ಲಿ ಇನ್ನೊಬ್ಬ ಯಾವನೂ ಇಲ್ಲ.ಓಂ ಎಂಬುದೇ ಸತ್ಯ. ಸೋಹಂ.ಸೋಹಂ.ಅವನೇ ನಾನು ನಾನೇ ಅವನು.!"
"ನಾವೆಲ್ಲರೂ ಒಂದೇ ಸಂಸ್ಕøತಿಯವರು.ಒಂದೇ ರಾಷ್ಟ್ರದವರು,ಒಂದೇ ಭಾಷೆಯವರು " ಎಂಬ ಭಾವನೆಯನ್ನು ಬೇರೂರಿಸಿ ಭಾರತದ ಏಕರಾಷ್ಟ್ರತೆಯನ್ನು ದೃಢಗೊಳಿಸಿದ ಮಹಾಮಹಿಮರು ಇತಿಹಾಸದಲ್ಲಿ ಶಂಕರರೊಬ್ಬರೇ.
ಅಧ್ಯಯನದ ವ್ಯಾಪ್ತಿ: ಲೋಕದಲ್ಲಿಸೌಖ್ಯ,ಶಾಂತಿ,ಸಂತೃಪ್ತಿಗಳು ನೆಲೆಸಬೇಕಾದರೆ ಧಮ೯ ಪರಿಪಾಲನೆ ಅತ್ಯಾವಶ್ಯಕವಾದದ್ದು.ಧಮ೯ಕ್ಕೆ ಅಧ್ಯಾತ್ಮಿಕ ಜ್ಞಾನದ ಬಲ ಇಲ್ಲದಾಗ ದು ನಿಸ್ಸತ್ವವಾ ಗುತ್ತದೆ. ಆಚಾಯ೯ರು ಅವರವರ ಅಧಿಕಾರಕ್ಕೆ ತಕ್ಕ0ತೆ ಪ್ರವೃತ್ತಿ ನಿವೃತ್ತಿ ಲಕ್ಷಣ ಧಮ೯ಗಳೆರಡನ್ನೂ ಎತ್ತಿಹಿಡಿದಿದ್ದಾರೆ. ಪ್ರವೃತ್ತಿ ಧಮ೯ವು ಸಾವ೯ತ್ರಿಕವಾದದ್ದು. ನಿವೃತ್ತಿ ಧಮ೯ವು ಎಲ್ಲರಿಗೂ ಅಲ್ಲ.
ಶ್ರೀ ಶಂಕರರ ಗಂಥ್ರಗಳನ್ನು ಓದಿದವರೆಲ್ಲರೂ ಆತ್ಮಜ್ಞಾನಿಗಳಾಗಿ ಬಿಡುವುದಿಲ್ಲ.ಆತ್ಮಜ್ಞಾನದ ಮೌಲ್ಯವು ಗೊತ್ತಾಗುತ್ತದೆ.ಶ್ರೀ ಕೃಷ್ಣನು ಅಜು೯ನನಿಗೆ ಬೋಧಿüಸಿದ್ದು ಅಧ್ಯಾತ್ಮಿಕ ಬೆಂಬಲವನ್ನು ಪಡೆದ ರಾಜಧಮ೯.ಧಮ೯ದಲ್ಲಿ ಶ್ರದ್ಧೆಯೂ,ಭಗವಂತನಲ್ಲಿ ಭಕ್ತಿಯೂ ಮೂಡಿತೆಂದರೆ ಸಾಕು ಅವನು ಸನ್ಮಾಗ೯ವನ್ನು ಹಿಡಿದನೆಂದೇ ಅಥ೯.ಅವನು ದಿನದಿನವೂ ತನ್ನ ದೈವೀ ಸಂಪತ್ತನ್ನು ಬೆಳೆಸಿಕೊಳ್ಳಲು ಯತ್ನಿಸುತ್ತಾನೆ.
ಅವನ ಪ್ರವೃತ್ತಿಗಳೆಲ್ಲವೂ ದೈವೀ ಮಾಗ೯ದಲ್ಲಿ ಧಮ೯ ಚಿಂತನೆಯ ಮಾಗ೯ದಲ್ಲಿ ಸಾಗುತ್ತವೆ.ಮನಸ್ಸಿಗೆ ಶಾಂತಿಯೂ ಸಂತೃಪ್ತಿಯೂ ತಲೆದೋರುತ್ತವೆ.ಅಧ್ಯಾತ್ಮ ಜ್ಞಾನದ ಹಿನ್ನೆಲೆಯಲ್ಲಾದ ಈ ಪರಿವತ೯ನೆ ಸ್ಥಿರವಾದದ್ದು.ಈ ಪರಿವತ೯ನೆಯನ್ನು ರಾಜಕೀಯ ಶಾಸನಗಳಾಗಲೀ,"ಇಸಮ್"ಗಳಾಗಲೀ, ವಿಜ್ಞಾನದ ಅವಿಷ್ಕಾರಗಳಾಗಲೀ ಮಾಡಲಾರದು. ಅವೆಲ್ಲವೂ ಸೋತು ಹೋಗಿರುವುದು ಇಂದು ರುಜುವಾತಾಗಿದೆ.
ಅಧ್ಯಯನದ ವ್ಯಾಪ್ತಿ:
ಅದ್ವೈತ ಸಾಹಿತ್ಯವು ವಿಸ್ತಾರವಾಗಿರುವುದರಿಂದ ಸಂಶೋಧನೆಗಾಗಿ ಪ್ರಸ್ಥಾನತ್ರಯಗಳಲ್ಲಿ ಉಪನಿಷತ್ತುಗಳನ್ನು ಪ್ರಧಾನವಾಗಿ ಉಪಯೋಗಿಸಿಕೊಂಡಿರುತ್ತೇನೆ.
ಲೋಕದಲ್ಲಿ ಸುಖ ಶಾಂತಿ ಸಂತೃಪ್ತಿಗಳು ನೆಲೆಸಬೇಕಾದರೆ ಧಮ೯ದ ಪರಿಪಾಲನೆ ಅತ್ಯಗತ್ಯ. ಧಮ೯ಕ್ಕೆ ಆಧ್ಯಾತ್ಮ ಜ್ಞಾನದ ಬಲವಿಲ್ಲದಾಗ ಅದು ನಿಸ್ಸತ್ವ ವಾಗುತ್ತದೆ.ಅವರವರ ಅಧಿಕಾರಕ್ಕೆ ತಕ್ಕಂತೆ ಪ್ರವೃತ್ತಿ ನಿವೃತ್ತಿ ಧಮ೯ಗಳೆರಡೂ ಇವೆ.
ಉದ್ದೇಶ ಮತ್ತುವ್ಯಾಪ್ತಿ: ಜನರಲ್ಲಿ ಅಧ್ಯಾತ್ಮದ ಜಾಗೃತಿಯನ್ನು ಉಂಟುಮಾಡುವುದು.ಅದ್ವೈತ ಸಾರವನ್ನು ಜನಮನದಲ್ಲಿ ಬಿತ್ತುವುದು,ಅದ್ವೈತ ದಶ೯ನಗಳ ಸಾರವನ್ನು ಜನರಲ್ಲಿ ಪ್ರಚಾರ ಮಾಡುವುದು.ಅಸುರ ಪ್ರವೃತ್ತಿಯನ್ನು ನಿಮೂ೯ಲನೆ ಮಾಡಿ ದೈವೀ ಪ್ರವೃತ್ತಿಯನ್ನು ಬಿತ್ತಿಬೆಳೆಸುವುದು(ಸಾತ್ವಿಕತೆ).
ಉಪನಿಷತ್ತುಗಳು ಹಾಗೂ ಅದ್ವೈತ:ಉಪನಿಷತ್ತು ಎಂದರೆ ಆಚಾಯ೯ರ ಹತ್ತಿರ ಕುಳಿತುಕೊಂಡು ರಹಸ್ಯ ವಿದ್ಯೆಯನ್ನು ಕಲಿಯುವುದು.
ದಶೋಪನಿಷತ್ತುಗಳು ಈರೀತಿ ಇವೆ.
1 ಈಶ2 ಕೇನ 3ಕಠ 4ಪ್ರಶ್ನ5 ಮುಂಡಕ 6 ಮಾಂಡೂಕ್ಯ 7 ತೈತ್ತಿರೀಯ8 ಐತರೇಯ ೯ ಬೃಹದಾರಣ್ಯಕ 10 ಛಾಂದೋಗ್ಯ ಉಪನಿಷತ್ತುಗಳಲ್ಲಿ ಪ್ರತಿಪಾದಿತವಾಗಿರುವ ವಿಷಯಗಳು1 ಬ್ರಹ್ಮ 2 ಮಾಯೆ 3 ಜೀವ 4 ಜಗತ್ತು 5 ಬ್ರಹ್ಮ ಜೀವಗಳ ಸಂಬಂಧ6 ಬ್ರಹ್ಮ ಜಗತ್ತುಗಳ ಸಂಬಂಧ7 ಕಮ೯ ಹಾಗೂ ಜ್ಞಾನ8 ಬಂಧನ ಅದಕ್ಕೆ ಕಾರಣ ೯ ಮೋಕ್ಷ ಇವು ಉಪನಿಷತ್ತಿನಲ್ಲಿ ಪ್ರತಿಪಾದಿತವಾಗಿರುವ ಪ್ರಧಾನ ತತ್ವಗಳು.
ಅದ್ವೈತ ಸಾರ:"ಬ್ರಹ್ಮ ಸತ್ಯಂ ಜಗನ್ಮಿಥ್ಯಾ ಜೀವೋ ಬ್ರಹ್ಮೈವ ನಾಪರಃ''. ಬ್ರಹ್ನವೊಂದೇ ಸತ್ಯ ಜಗತ್ತು ಮಿಥ್ಯೆ.ಜೀವವು ಬ್ರಹ್ಮವೇ ಬೇರೆ ಅಲ್ಲ.ಇವು ಜೀವ ಬ್ರಹ್ಮೈಕ್ಯವನ್ನು ಸಾರುತ್ತವೆ. ಕೇವಲ ಶ್ರುತಿಯೊಂದೇ ಇಂದ್ರಿಯಾತೀತವೂ ಮತ್ತು ವಿಷಯಾತೀತವೂ ಆದ ಅಧ್ಯಾತ್ಮಿಕ ಜ್ಞಾನದಬಗ್ಗೆ ಯುಕ್ತಿಪೂವ೯ಕ ಪ್ರಮಾಣವನ್ನು ರುಜುವಾತುಪಡಿಸಬಲ್ಲವು.ಋಷಿಗಳು ತಾವು ಅನುಭವಿಸಿದ ಸತ್ಯವನ್ನು ಮುಂದೆ ಬರುವವರ ಉದ್ಧಾರಕ್ಕಾಗಿ ಹೇಳಿದ್ದಾರೆ.ಅದು ಇಂದಿಗೂ ಉಪನಿಷತ್ತುಗಳಲ್ಲಿ ಹರಿಯುತ್ತಿದೆ.ಇಲ್ಲಿಯೂ ಅಲ್ಪತನವಿಲ್ಲ.ಭೂಮದ ಛಾಯೆಯಲ್ಲಿಯೇ ಇರುವುದು.
ಬ್ರಹ್ಮತತ್ವ,ಜೀವಾತ್ಮ,ಜಗತ್ತು:ಬ್ರಹ್ಮವು ಸಗುಣ ಮತ್ತು ನಿಗು೯ಣ ಎಂದು ಎರಡು ವಿಧ.ನಿಗು೯ಣ ಬ್ರಹ್ಮವು ನಿತ್ಯ,ಶುದ್ಧ,ಬುದ್ಧ,ಹಾಗೂ ಮುಕ್ತ ಸ್ವಭಾವವುಳ್ಳದ್ದು.ಅದು ಸವ೯ಜ್ಞ, ಸವ೯ವ್ಯಾಪ್ತ, ಸವ೯ಶಕ್ತ ಇದು ಮಾಯೆಯನ್ನು ಮೀರಿದೆ. ಇದು ಇಂದ್ರಿಯಗಳಿಗ್ರೆ ನಿಲುಕದ್ದು. ಅವಿವ೯ಚನೀಯ (ಅವಣ೯ನೀಯ).
"ಸಗುಣ ಬ್ರಹ್ಮ"ವು ಮಾಯೆ ಎಂಬ ಉಪಾಧಿಯ ಸಂಬಂಧವುಳ್ಳದ್ದು.ಜೀವನಿಗೆ "ಕ್ಷೇತ್ರ" ಎಂದು ಹೆಸರು.ಇವನು ಬ್ರಹ್ಮದ ಅಂಶವೇ ಆಗಿದ್ದಾನೆ. ಪಂಚಪ್ರಾಣಗಳು, ಪಂಚಕಮೇ೯ಂದ್ರಿಯಗಳು, ಪಂಚ ಜ್ಞಾನೇಂದ್ರಿಯಗಳು ಶರೀರದಲ್ಲಿ ನಿಲ್ಲುವಂತೆ ಮಾಡಿರುವುದರಿಂದ ಇವನಿಗೆ "ಜೀವ" ಎಂದು ಹೆಸರು.ಬ್ರಹ್ಮ ಸಾಕ್ಷಾತ್ಕಾರದಿಂದ ಜೀವನು ಮುಕ್ತಿಯನ್ನು ಹೊಂದುತ್ತಾನೆ.
ಅಧ್ಯಾಸ: ಅದಲ್ಲದ್ದನ್ನು ಅದು ಎಂದು ಭಾವಿಸುವುದೇ"ಅಧ್ಯಾಸ"."ಸ್ಮøತಿರೂಪ ಪರತ್ರ ಪೂವ೯ ದೃಷ್ಟ್ವಾಭಾಸಃ".ಇದು ಅಧ್ಯಾಸದ ವ್ಯಾಖ್ಯೆ.ಒಂದು ವಸ್ತುವಿನ ಬದಲಾಗಿ ಇನ್ನೊಂದು ವಸ್ತುವನ್ನು ಕಾಣುವುದೇ ಅಧ್ಯಾಸ.ಉದಾಹರಣೆಗೆ ಹಾವು ಮತ್ತು ಹಗ್ಗ,ಕಪ್ಪೆಚಿಪ್ಪು ಮತ್ತು ಬೆಳ್ಳಿ ,ಹಾಗೂ ದ್ವಿಚಂದ್ರದಶ೯ನ.ಬಹುಮುಖ್ಯ ಸಾಮಾನ್ಯ ಅಧ್ಯಾಸವೆಂದರೆ ಆತ್ಮ_ಅನಾತ್ಮಗಳ ಅನ್ನ್ಯೋನ್ಯಾಧ್ಯಾಸ.ದೇಹವನ್ನೇ ನಾನೆಂದು ಭಾವಿಸುವುದು.ನಾನು ಕತೃ೯ ಮತ್ತು ಭೋಕ್ತø ಎಂದು ತಿಳಿಯುವುದು ಒಂದು ಅಧ್ಯಾಸವೆ.
ಅಧ್ಯಾಸವು ಐದು ವಿಧ. 1 ಆತ್ಮಖ್ಯಾತಿ 2 ಅಸತ್ ಖ್ಯಾತಿ 3 ಅಖ್ಯಾತಿ 4ಅನ್ಯಥಾ ಖ್ಯಾತಿ.
5 ಅನಿವ೯ಚನೀಯ ಖ್ಯಾತಿ.(ಖ್ಯಾತಿ ಎಂದರೆ ಭ್ರಮೆ.)
ಮಾಯೆಯ ಪರಿಕಲ್ಪನೆ:ಯಾವುದು ನಿಜವಾಗಿಯೂ ಇಲ್ಲವೊ,ಆದರೆ ಇದ್ದಂತೆ ತೋರುತ್ತದೆಯೊ ಅದೇ ಮಾಯೆ.ಅವಿದ್ಯೆಯಿಂದ ಕಲ್ಪಿತವಾಗಿರುವ ನಾಮ ರೂಪ ಬೀಜವೇ ಮಾಯೆ.ಯಾಸ್ಕರು ತಮ್ಮ ನಿಘಂಟಿನಲ್ಲಿ ಮಾಯಾ ಶಬ್ದವನ್ನು ಜ್ಞಾನ ಪಯಾ೯ಯ ವಾಗಿಯೇ ಬರೆದಿರುತ್ತಾರೆ."ಇಂದ್ರೋ ಮಾಯಾಭಿಃ ಪುರುರೂಪ ಈಯತೇ",ಇಂದ್ರನು (ಪರಮೇಶ್ವರನು) ಮಾಯೆಯಿಂದ ಬಹುರೂಪನಾಗಿ ಕಾಣುತ್ತಾನೆ.
ಮಾಯೆಯು 1 ಅನಾದಿ 2 ಈಶ್ವರನ ಶಕ್ತಿ 3 ಜಡ (ಅಚಿತ್) 4.ಜ್ಞಾನದಿಂದ ಮಾಯೆಯನ್ನು ಹೋಗಲಾಡಿಸಬಹುದು. 5 ಅನಿವ೯ಚನೀಯ 6 ಮಾಯೆಯು ಅವಿದ್ಯೆಯ ಪರಿಣಾಮವಾಗಿದೆ.
ಉಪಸಂಹಾರ:ಯಾರಿಗೆ ಆದಿ ಅಂತ್ಯಗಳು ಇಲ್ಲವೋ,ಹಸ್ತ ಪಾದಗಳು ಇಲ್ಲವೋ,(ನಿರವಯವ) ನಾಮ,ಗೋತ್ರ,ಸೂತ್ರಗಳು,(ಸೂತ್ರ ಎಂದರೆ ವ್ಯಕ್ತವಾದ ಜಗತ್ತು)ಜಾತಿ,ವಣ೯ ಲಿಂಗ(ಪುಲ್ಲಿಂಗ ಸ್ರ್ತೀಲಿಂಗ) ಗಳಿಲ್ಲವೋ,ಆಕಾರ ವಿಕಾರಗಳಿಲ್ಲದ ಜನನ ಮರಣಗಳಿಲ್ಲದ ಪುಣ್ಯ ಪಾಪಗಳಿಲ್ಲದ ಏಕತತ್ವವಾದ (ಅದ್ವೈತ)ಸಹಜಸಮರಸನಾದ (ಚರಾಚರಗಳಲ್ಲಿ ಸಮಾನವಾಗಿ ಹರಡಿರುವ) ಸದ್ಗುರುವಿಗೆ (ಪರಬ್ರಹ್ಮಕ್ಕೆ)
ನಮಸ್ಕಾರ.
ಅಧ್ಯಾಯ 2 ಅಧ್ಯಯನದ ಉದ್ದೇಶ ಮತ್ತು ವ್ಯಾಪ್ತಿ: ಅಡಿ ಟಿಪ್ಪಣಿಗಳು
1)ಸ್ವಾಮಿ ಮುಖ್ಯಾನಂದಜಿ,ಕನ್ನಡ ಅನುವಾದ:ಡಾ.ಬಿ.ಎಸ್.ಕೃಷ್ಣಮೂತಿ೯.ಶಂಕರಾಚಾಯ೯ರು ಮತ್ತು ಭಾರತೀಯ ಅಧ್ಯಾತ್ಮ
ಶಾಸ್ತ್ರದ ಪುನರುನ್ನತಿ,ಅದ್ವೈತ ವಿದ್ಯಾ ಪ್ರತಿಷ್ಠಾನ,ಮೊದಲನೇ ಮುದ್ರಣ 2000ಪುಟ 46
2)ಅದೇ ಪುಟ 177
3)ಅದೇ ಪುಟ27
4)ಶ್ರೀ ವಿದ್ಯಾರಣ್ಯ ಪ್ರಣೀತ ಶ್ರೀಮಚ್ಛಂಕರ ವಿಜಯ,ಕನ್ನಡ ಅನುವಾದ:ವಿದ್ವಾನ್ ಎನ್.ರಂಗನಾಥ ಶಮ೯,ಶ್ರೀಜಗದ್ಗುರು ಶಂಕರಾಚಾಯ೯ಮಹಾ ಸಂಸ್ಥಾನಂ,ದಕ್ಷಿಣಾಮ್ನಾಯ ಪೀಠ,ಶೃಂಗೇರಿ.ಮೊದಲನೇ ಮುದ್ರಣ.1೯೯7,ಮುನ್ನುಡಿ 36
5)ಅದೇ ಪುಟ ಮುನ್ನುಡಿ.3೯
6) ಅದೇ ಪುಟ 41
ಅಧ್ಯಾಯ 3 ಸಂಶೋಧನಾ ವಿಧಾನಗಳು
ಸಂಶೋಧನಾ ವಿಧಾನಗಳು:
ಮುಖ್ಯವಾದ ನಾಲ್ಕು ಸಂಶೋಧನಾ ವಿಧಾನಗಳು ಈ ರೀತಿ ಇವೆ1:
1) ವಿವರಣಾತ್ಮಕ ವಿಧಾನ: ಸಮಸ್ಯೆಯ ಅಥವಾ ವಿಷಯದ ವಿವರಗಳನ್ನು ಎಳೆ ಎಳೆಯಾಗಿ ವಿವರಿಸುವುದು.
2)ವಿಶ್ಲೇಷಣಾತ್ಮದ ವಿಧಾನ: ವಿಶ್ಲೇಷಣೆಯು ಉಳಿದ ಎಲ್ಲಾ ವಿಧವಾದ ಸಂಶೋಧನೆಗಳ ಅವಿಭಾಜ್ಯ ಹಾಗೂ ಅನಿವಾಯ೯ಅಂಗವಾಗಿದೆ.
3) ಚಾರಿತ್ರಿಕ ವಿಧಾನ: ಸಮಸ್ಯೆಯ ಸಂಪೂಣ೯ ಚಾರಿತ್ರಿಕ ಅಂಶಗಳನ್ನು ಕೂಲಂಕುಶವಾಗಿ ಅಧ್ಯಯನ ನಡೆಸುವುದು.
4) ತುಲನಾತ್ಮಕ ಅಧ್ಯಯನ: ಸಂಬಂಧಿಸಿದ ಅನೇಕ ವಿಷಯಗಳ ತುಲನಾತ್ಮಕ ಅಧ್ಯಯನ ನಡೆಸಿ ಸಾಮ್ಯತೆ ಮತ್ತು ವ್ಯತ್ಯಾಸಗಳನ್ನು ಅವಲೋಕಿಸಿ ಒಂದು ನಿಶ್ಚಯಕ್ಕೆ ಬರುವುದು.
ನಾನು ಪ್ರಸ್ಥಾನತ್ರಯಗಳಲ್ಲಿ ಮುಖ್ಯವಾಗಿ ಉಪನಿಷತ್ತುಗಳನ್ನು ಸಂಶೋಧನೆಗಾಗಿ ಆರಿಸಿಕೊಂಡಿದ್ದೇನೆ.ಅದ್ವೈತ ಸಾಹಿತ್ಯವು ವಿಸ್ತಾರವಾಗಿರುವುದರಿಂದ ನಾನು ಅಧ್ಯಯನ ಹಾಗೂ ಸಂಶೋಧನೆಯನ್ನು ಉಪನಿಷತ್ತುಗಳಿಗೆ ಸೀಮಿತಗೊಳಿಸಿದ್ದೇನೆ.
ಅದ್ವೈತ ಸಂಶೋಧನೆಯು ಮುಖ್ಯವಾಗಿ ಪ್ರಸ್ಥಾನತ್ರಯಗಳನ್ನೊಳಗೊಂಡಿದೆ.
ಸಂಶೋಧನಾ ವಿಧಾನಗಳು ಈ ರೀತಿ ಇವೆ.
1) ಶ್ರುತಿ ಪ್ರಮಾಣ
2) ಯುಕ್ತಿ (ತಕ೯) ಪ್ರಮಾಣ (ವಿಚಾರ)
3) ಸ್ವಾನುಭವ (ಅತ್ಯಂತ ಕೊನೆಯ ಪ್ರಮಾಣ)
ಹಾಗೆ ವೇದಾಂತವು ತನ್ನಕ್ರಮಬದ್ಧ ಸಂಶೋಧನಾ ವಿಧಾನ ಪ್ರಕ್ರಿಯೆಯಲ್ಲಿ ಎಲ್ಲಾ ಮೂರು ಅಂಶಗಳನ್ನೊಳಗೊಂಡಿದೆ.ದೃಷ್ಟಾರರಾದ ಮಹಷಿ೯ಗಳು ದಿವ್ಯದಶ೯ನದಿಂದ ಸಾಕ್ಷಾತ್ಕರಿಸಿಕೊಂಡ ಅಂತಜ್ಞಾ೯ನವನ್ನೊಳಗೊಂಡಿರುವ ಶ್ರುತಿ ಪರಂಪರೆ, ದಿವ್ಯ ದಶ೯ನದಿಂದ ಪ್ರಾಪ್ತವಾದ ಅಂತಜ್ಞಾ೯ನವನ್ನು ವೈಚಾರಿಕವಾಗಿ ಕ್ರಮಬದ್ಧಗೊಳಿಸಿರುವ ಯುಕ್ತಿ ಸಾಧನೆ ಹಾಗೂ ಅಧ್ಯಾತ್ಮಿಕ ಆಚರಣೆಗಳ ಮೂಲಕ ಅವುಗಳನ್ನು ವ್ಯಕ್ತಿಯು ಪರೀಕ್ಷಿಸಿ ರುಜುವಾತು ಪಡಿಸಿರುವ ಮತ್ತು ಅನುಭವವೇದ್ಯವಾದ ಸ್ವಾನುಭವ (ಸ್ವಾನುಭೂತಿ)ಇದು ವೇದಾಂತವನ್ನು ವೈಚಾರಿಕ ಅಥವಾ ಯುಕ್ತಿಪರ ತನಿಖೆಗಳಿಗೆ ತೆರೆದಿಟ್ಟ ಮತ್ತು ಸವ೯ತ್ರ ಹಾಗೂ ಸವ೯ರ ಅನುಭೂತಿಗೆ ಸಾಧ್ಯವಾಗಬಲ್ಲ ಒಂದು ಪೂಣ೯ ಅಧ್ಯಾತ್ಮಿಕ ವಿಜ್ಞಾನವನ್ನಾಗಿ ಮಾಡಿದೆ.
ಪ್ರಪಂಚದ ದಾಶ೯ನಿಕ ಮತ್ತು ಧಾಮಿ೯ಕ ಇತಿಹಾಸದಲ್ಲಿಯೇ ಪ್ರಪ್ರಥಮವಾಗಿ ವೈಜ್ಞಾನಿಕವಾದ ಈ ತ್ರಿವಿಧ ಪರೀಕ್ಷಾ ವಿಧಾನಗಳನ್ನು ಒದಗಿಸಿದ ಕೀತಿ೯ಯು ಶ್ರೀ ಶಂಕರರಿಗೆ ಸಲ್ಲುತ್ತದೆ.ಶಂಕರರು ತಮ್ಮ ಸಿದ್ಧಾಂತವನ್ನು ಪ್ರಸ್ತಾಪಿಸುವಾಗ ಈ ಮೂರನ್ನೂ ಆಶ್ರಯಿಸುತ್ತಾರೆ. ಆದರೂ ಇಂದ್ರಿಯಗೋಚರವಾದ ಅಧ್ಯಾತ್ಮ ಜ್ಞಾನದ ವಿಷಯದಲ್ಲಿ ಶ್ರುತಿಯನ್ನೇ ಮೂಲ ಹಾಗೂ ಪ್ರಮಾಣವೆಂದುಘೋಷಿಸುತ್ತಾರೆ.
ಶ್ರೀ ಶಂಕರರ ಮೂರು(ತ್ರಿಗುಣ) ವೈಜ್ಞಾನಿಕ ಸಂಶೋಧನಾ ವಿಧಾನಗಳು:
1) ಉಪನಿಷತ್ತುಗಳು: ಎಲ್ಲಿ ವೈದಿಕ ವಿಚಾರಧಾರೆಯು ಪರಮ ಸತ್ಯದ ಅನ್ವೇಷಣೆಯ ಅತ್ಯುನ್ನತ ಸ್ಥಿತಿಯನು.್ನ ತಲುಪಿರುತ್ತದೆಯೋ ಅಂತಹ ಉಪನಿಷತ್ತುಗಳು2.
2) ಬಹ್ಮ ಸೂತ್ರಗಳು: ಎಲ್ಲಿ ಉಪನಿಷತ್ತುಗಳಲ್ಲಿ ನಾನಾ ವಿಧವಾದ ಅಂತಜ್ಞಾ೯ನ,ದಿವ್ಯ ದಶ೯ನಗಳನ್ನು ಯುಕ್ತಿಯುಕ್ತವಾಗಿ ವ್ಯವಸ್ಥಿತಗೊಳಿಸಲು ಕ್ರಮಬದ್ಧವಾಗಿ ಮೂಡಿದೆಯೋ ಮತ್ತು ಎಲ್ಲಿ ಅವುಗಳನ್ನು ಪರಬ್ರಹ್ಮ ತತ್ವದ ಸಾಕ್ಷಾತ್ಕಾರಕ್ಕಾಗಿ ಕ್ರಮಬದ್ಧವಾಗಿ ಸುಂದರವಾಗಿ,ಸಮಂಜಸವಾಗಿ ಸರಿಗಟ್ಟಲಾಗಿದೆಯೋ ಅಂಥ ಬ್ರಹ್ಮಸೂತ್ರಗಳು.
3) ಭಗವದ್ಗೀತೆ: ಎಲ್ಲಿ ಪರಸತ್ಯಅಥವಾ ಪರಬ್ರಹ್ಮದ ಸಾಕ್ಷಾತ್ಕಾರದ ಮಾಗ೯ವನ್ನು ತೋರಿಸುವಲ್ಲಿ ಪ್ರಾಯೋಗಿಕ ವಿವರಣೆಗಳನ್ನು ಕೊಟ್ಟು ನಮ್ಮ ದೈನಂದಿನ ಜೀವನವನ್ನು ದಾಶ೯ನಿಕ ಸತ್ಯದೊಡನೆ ಸಮರಸಗೊಳಿಸಿಕೊಳ್ಳುವ ರೀತಿ ನೀತಿಗಳನ್ನು ವಿವರಿಸಲಾಗಿದೆಯೋ ಅಂತಹ ಭಗವದ್ಗೀತೆ.
1 ಅಭ್ಯುದಯ (ಐಹಿಕ ಸುಖ ಶಾಂತಿ) 2 ನಿಶ್ರೇಯಸ (ಅಧ್ಯಾತ್ಮಿಕ ಸುಖ ಹಾಗೂ ಮುಕ್ತಿ) ಎಂಬ ಎರಡು ಉದ್ದೇಶಗಳಿಗಾಗಿ ಶಂಕರರು ಎಲ್ಲಾ ಸಿದ್ಧಾಂತಗಳನ್ನು ಒಗ್ಗೂಡಿಸುವ ಮೂಲ ದಶ೯ನವನ್ನಾಗಿಯೂ ಸಮಾಜದ ಪುನರುಜ್ಜೀವನದ ಪ್ರಧಾನ ಸಾಧನವನ್ನಾಗಿಯೂ ಅದ್ವೈತ ಸಿದ್ಧಾಂತ ತತ್ವಗಳನ್ನು ಪ್ರತಿಪಾದಿಸುವ ಮೂಲಕ ತಮ್ಮ ಘನ ಜೀವಿತದ ಅಧ್ಯಾತ್ಮಿಕ ಧಮ೯ ಪ್ರಚಾರ ಕಾಯ೯ವನ್ನು ಪ್ರಾರಂಭಿಸಿದರು.
ಅವು ವೇದಾಂತ ದಶ೯ನಕ್ಕೆ ವಿಸ್ತಾರ ಆಧಾರ ಗ್ರಂಥಗಳಿಂದ ಪ್ರಸ್ಥಾನತ್ರಯಕ್ಕೆ ಸುಂದರವಾದ ಸ್ಪಷ್ಟವಾದ ಸರಳವಾದ ಉತ್ಕಷ೯ ಪೂಣ೯ವಾದ ಸಂಸ್ಕøತದಲ್ಲಿ ರಚಿಸಿದ್ದಾರೆ.ಏಕೆಂದರೆ ಕೇವಲ ಶ್ರುತಿಯೊಂದೇ ಇಂದ್ರಿಯಾತೀತವೂ ಮನೋ ವಿಷಯಾತೀತವೂ ಆದ ಅದ್ಯಾತ್ಮಿಕ ಜ್ಞಾನದಬಗ್ಗೆ ಮುಂದೆ ಯುಕ್ತಿ ಪೂವ೯ಕವಾಗಿ ಪ್ರಮಾಣೀಕರಿಸಲು ರುಜುವಾತು ಮಾಡಲು ಸಾಧ್ಯವಾಗುವ ಊಹಾ ಪ್ರತಿಜ್ಞೆಗಳ(ಹೈಪೊಥಿಸಿಸ್) ಸತ್ಯತೆಗೆ ನೇರವಾದ (ಸಾಕ್ಷಾತ್ತಾದ) ತಿಳುವಳಿಕೆಯನ್ನು ಒದಗಿಸಬಲ್ಲದು. ಅನುಭವಾತ್ಮಕ ಊಹಾ ಪ್ರತಿಜ್ಞೆಗಳೇ ಇಲ್ಲದಿದ್ದರೆ ಯುಕ್ತಿ ತಕ೯ಗಳಾಗಲೀ ಸತ್ಯವನ್ನು ರುಜುವಾತು ಮಾಡಲು ಸಾಧ್ಯವಿಲ್ಲ
ಯುಕ್ತಿ(ತಕ೯,ವಿಚಾರ) ಹಾಗೂ ಸ್ವಾನುಭವ:
ಯುಕ್ತಿ ಅಥವಾ ತಕ೯ವು ಬಹು ಒಳ್ಳೆಯ ಉಪಕರಣವೇ ಆದರೂ ಇತರರ ಜೊತೆಯಲ್ಲಿ ವಿಚಾರ ವಿನಿಮಯ ಮಾಡಿಕೊಳ್ಳುವಾಗ ತಪ್ಪದೆ ಅದನ್ನು ಆಶ್ರಯಿಸ ಬೇಕಾದರೂ ಅದು ಕೇವಲ ತನ್ನಷ್ಟಕ್ಕೆ ತಾನೇ ಸತ್ಯವನ್ನಾಗಲೀ ವಾಸ್ತವಿಕ ವಿಷಯಗಳನ್ನಾಗಲೀ ಒದಗಿಸಲಾರದು.ಅದು ವಸ್ತು ವಿಷಯಗಳನ್ನು ಸೃಷ್ಟಿಸಲಾಗಲೀ ಅಥವಾ ಅವುಗಳ ವಿಷಯಗಳನ್ನು ನಿದಿ೯ಷ್ಟಗೊಳಿಸಲಾಗಲೀ ಎಂದಿಗೂ ಸಮಥ೯ವಾಗಲಾರದು3.
ವಸ್ತು ಸ್ವಭಾವವೇನಿದ್ದರೂ ವಸ್ತುವನ್ನು ಆಶ್ರಯಿಸಿರುತ್ತದೆಯೇ ಹೊರತು ಯುಕ್ತಿ ಅಥವಾ ತಕ೯ವನ್ನಲ್ಲ. ಅದು ಗುಣ ಅವಗುಣಗಳ ಬೆಲೆಯನ್ನು ಗೊತ್ತು ಮಾಡ ಬಹುದು.ಆದನ್ನು ಗ್ರಹಿಸಿ ಬಿಡಿಸಿ ವಿವರಿಸಬಹುದು. ಅನ್ಯೋನ್ಯ ಸಂಬಂಧಗಳ ಬಗ್ಗೆ ಸರಿ ಹೊಂದಿಸಬಹುದು.ಕೊನೆಗೆ ಚಚಿ೯ಸಿ ಊಹಿಸಲೂ ಬಹುದು. ಆದರೆ ಅದರ ಕಾಯಾ೯ಚರಣೆಗೆ ಪ್ರತ್ಯಕ್ಷೀಕರಿಸಲ್ಪಟ್ಟ ಹಿಂದಿನ ಅನುಭವ ಅಥವಾ ಜ್ಞಾನದ ಆಧಾರವನ್ನೇ ಅವಲಂಬಿಸಿರುತ್ತದೆ.
ವಾಸ್ತವವಾಗಿ ಮೊದಲೇ ಇರುವ ವಸ್ತುವನ್ನು ಮಾತ್ರ ತೋರಿಸಬಲ್ಲ ಆದರೆ ತಾನೇ ವಸ್ತುವನ್ನು ಸೃಷ್ಟಿಸಲಾರದ ಬೆಳಕಿಗೆ ಇದನ್ನು ಹೋಲಿಸಬಹುದು.ಇದಕ್ಕೆ ಇಂದ್ರಿಯಗಳಿಂದ ದೊರೆತ ಜ್ಞಾನ ಅಥವಾ ಅನುಭವವೇ ಸಾಕ್ಷಿ.
ವಸ್ತು ಜ್ಞಾನವು ಇಂದ್ರಿಯಗಳ ಮೂಲಕ ಪಡೆದ ಅರಿವನ್ನು ಅಥವಾ ಅನುಭವವನ್ನು ಅವಲಂಬಿಸಿರುತ್ತದೆ. ಆದರೆ ವಸ್ತುಗಳೇ ಜ್ಞಾನವನ್ನು ಅವಲಂಬಿಸಿರುವುದಿಲ್ಲ.ಕೆಲವು ಸಂದಭ೯ಗಳಲ್ಲಿ ಇಂದ್ರಿಯಗಳಲ್ಲೇ ಏನೋ ಲೋಪದೋಷಗಳಿರುವುದು ಸಾಧ್ಯ. ಆ ಸಂದಭ೯ದಲ್ಲಿ ನಮ್ಮ ಹಿಂದಿನ ಅಥವಾ ಬೇರೆಯವರ ಅನುಭವದೊಂದಿಗೆ ಪರಿಶೀಲಿಸಿ ನಮ್ಮ ಅನುಭವ ಅಥವಾ ಜ್ಞಾನದಲ್ಲಿನ ಲೋಪದೋಷಗಳನ್ನು ತಿದ್ದಿಕೊಳ್ಳಲು ಯುಕ್ತಿ ಅಥವಾ ತಕ೯ ನೆರವಾಗುತ್ತದೆ4.
ಬಾಹ್ಯ ವಸ್ತು ಘಟನೆಗಳ ಬಗ್ಗೆ ಹಾಗೂ ಬಾಹ್ಯ ಪ್ರಪಂಚದ ಬಗ್ಗೆ ಯಾವ ರೀತಿ ಇಂದ್ರಿಯಗಳು ನಮ್ಮ ಜ್ಞಾನಕ್ಕೆ ಉಪಕರಣಗಳೋ ಅದೇ ರೀತಿಯಲ್ಲಿ ಇಂದ್ರಿಯಗಳಿಗೆ ಅಥವಾ ಮನಸ್ಸಿಗೆ ಸಿಕ್ಕಿದ ಪಾರಮಾಥಿ೯ಕ ವಸ್ತುವಿನ ಬಗ್ಗೆ ಅಂತದೃ೯ಷ್ಟಿ ಅಥವಾ ಅತೀಂದ್ರಿಯ ಅನುಭವವು ನಮಗೆ ನಿಣಾ೯ಯಕ ಪ್ರಮಾಣವಾಗಿರುತ್ತದೆ.ನಾವು ಸತ್ಯವನ್ನು ನೇರವಾಗಿ ಪ್ರತ್ಯಕ್ಷೀಕರಿಸಿಕೊಳ್ಳುತ್ತೇವೆ.
ನಾವು ಯುಕ್ತಿಗಳನ್ನೂ ತಕ೯ಗಳನ್ನೂ ಹೂಡುವುದಿಲ್ಲ.ಏಕೆಂದರೆ ಯುಕ್ತಿಯು ಸತ್ಯವೆನ್ನುವುದು ಯಾವುದುಂಟೋ ಅದರ ಅನುಭವ ವಾಗುವುದು ನೇರವಾಗಿ ಬೇರೆ ಯುಕ್ತಿಯಿಂದಲ್ಲ.
ಎಷ್ಟೇ ಪುಷ್ಕಲವಾದ ತಕ೯ವನ್ನು ನಾವು ಶೂನ್ಯತೆಯಲ್ಲಿ ಮಾಡಿದಾಗ್ಯೂ ಸತ್ಯದ ಸುಳಿವೂ ನಮಗೆ ಸಿಗಲಾರದು ಅಥವಾ ಕೇವಲ ತಕ೯ದ ಮೂಲಕವೇ ನಾವು ಅದನ್ನು ಸಂಪಾದಿಸಲಾರೆವು.ಅದನ್ನೇ ನಾವು ಹಿಂದೆ ಅನುಭವ ಪಡೆದ ವಿಷಯಗಳ ಭರವಸೆಯ ಮೇಲೆ ಸ್ಥಾಪಿಸಿಕೊಳ್ಳಬಹುದು.ಕಟ್ಟಕಡೆಗೆ ತಾಕಿ೯ಕ ಸತ್ಯಾನುಭವವೂ ಅಂತಬೋ೯ಧೆಯಿಂದಲೇ ಆಗತಕ್ಕವು.
ಆದುದರಿಂದ ಬಾಹ್ಯೇಂದ್ರಿಯ ಗ್ರಾಹ್ಯವಾದ ವಾಸ್ತವಾಂಶ ಮತ್ತು ಇಂದ್ರಿಯ ಗೋಚರವಾದ ಸತ್ಯ ಇವೆರಡಕ್ಕೂ ಸಹ ನೇರವಾದ ಅಂತಬೋ೯ಧೆ ಅಥವಾ ಅಪರೋಕ್ಷ ಅನುಭೂತಿಯು ಅತ್ಯಂತ ಪ್ರಧಾನವಾದ ನಿಣಾ೯ಯಕ ಪ್ರಮಾಣವಾತ್ತದೆ ಅಥವಾ ಅಪರೋಕ್ಷ ಅನುಭವಗಳ ದಾಖಲೆಗಳೇ ಶ್ರುತಿಗಳು. ಈ ಶ್ರುತಿಗಳು ಸತ್ಯಗಳಿಗೆ ಊಹಾ ಪ್ರತಿಜ್ಞೆಯನ್ನು ಒದಗಿಸುತ್ತವೆ.ಅವುಗಳ ಯಥಾಥ೯ತೆಯನ್ನು, ಸಂಭವನೀಯತೆಯನ್ನು ಪರೀಕ್ಷಿಸಿ ಗೊತ್ತು ಮಾಡಿಕೊಳ್ಳಲು, ನಿಜಸ್ಥಿತಿಯನ್ನು ಅನುಭವಿಸಲು ನಿಶ್ಚಿತ ಅಭಿಪ್ರಾಯಗಳನ್ನು ಮನವರಿಕೆ ಮಾಡಿಕೊಳ್ಳಲು ಯುಕ್ತಿ ಅಥವಾ ತಕ೯ವನ್ನು ಬಳಸಬೇಕಾಗುತ್ತದೆ.
ಆ ಕಾರಣಕ್ಕಾಗಿಯೇ ಶ್ರೀ ಶಂಕರರು ಪವಿತ್ರ ಶ್ರುತಿಗಳಿಗೆ ಅಗ್ರಗಣ್ಯ ಸ್ಥಾನವನ್ನು ಕೊಡುವಾಗ ಉಳಿದ ಎರಡು ಪ್ರಮಾಣಗಳಾದ ಯುಕ್ತಿ ಮತ್ತು ಸ್ವಾನುಭೂತಿ (ಸ್ವಾನುಭವ)ಗಳ ಅನಿವಾಯ೯ತೆಯನ್ನು ಒತ್ತಿ ಹೇಳುತ್ತಾರೆ. ಯುಕ್ತಿಯು ಎಂದೂ ನೇರವಾಗಿ ಸತ್ಯವನ್ನು ತಿಳಿಸಲಾರದು ಎಂದು ಹೇಳುತ್ತಾರೆ.ಸತ್ಯವು ಯುಕ್ತಿಗೆ ವಿರುದ್ಧವಾಗಿರುವುದಾಗಲೀ ಯುಕ್ತಿಗೆ ಹೊಂದಿಕೊಳ್ಳದೇ ಅಸಂಗತವಾಗಿರುವುದಾಗಲೀ ಆಗಬಾರದು. ಸತ್ಯಾನ್ವೇಷಣೆಯ ಈ ತ್ರಿವಿಧ ನಿಣಾ೯ಯಕಗಳನ್ನು ಎತ್ತಿ ಹಿಡಿದು ಗೌರವಿಸುತ್ತಿರುವುದು, ಉಪನಿಷತ್ತುಗಳ ಒಂದು ವಿಶಿಷ್ಟ ರಮಣೀಯತೆ.
ಒಟ್ಟಿನಲ್ಲಿ ಹೇಳುವುದಾದರೆ ಆತ್ಮಾನುಭೂತಿ(ಸ್ವಾನುಭವ)ಕಟ್ಟಕಡೆಯ ಹಾಗೂ ಕೊನೆಯ ಪ್ರಮಾಣವೆನಿಸುತ್ತದೆ.ಅಂದರೆ ಆತ್ಮನ ಏಕಮೇವಾದ್ವಿತೀಯತೆಯನ್ನು ಶಾಶ್ವತತೆಯನ್ನೂ ಶ್ರುತಿ,ಯುಕ್ತಿ ಮತ್ತು ಸ್ವಾನುಭೂತಿಯಿಂದ ಕಂಡುಕೊಳ್ಳಬೇಕು ಎಂದು ಹೇಳಿದೆ.ನಮಗೆ ಅಧ್ಯಾತ್ಮಕ ಸತ್ಯಗಳನ್ನು ಕೇವಲ ಶ್ರುತಿಯು ತಿಳಿಸುತ್ತದೆ.ಏಕೆಂದರೆ ಇವು ಅತೀಂದ್ರಿಯ ವಸ್ತುಗಳಿಗೆ ಸಂಬಂಧಿಸಿದಂತೆ ಶ್ರುತಿಯೊಂದೇ ನಮಗೆ ಪ್ರಮಾಣ5.
ಎಲ್ಲಿ ಶ್ರುತಿಯು ಪ್ರತ್ಯಕ್ಷ ಜ್ಞಾನವನ್ನು ಅನುಭವವನ್ನು ವಿರೋಧಿಸುವುದೋ ಅದು ಅಲ್ಲಿ ಊಜಿ೯ತವಾಗಲಾರದು ಎಂದು ಶಂಕರರು ಸ್ಪಷ್ಟವಾಗಿ ಹೇಳಿರುತ್ತಾರೆ.ಒಂದು ಪಕ್ಷ ಶ್ರುತಿಯು ಇಂದ್ರಿಯಗಳೇ ಸಪ್ರಮಾಣವಾಗುವ ಪ್ರಾಪಂಚಿಕ ಹಂತಕ್ಕೆ ಬಂದು ನಮ್ಮ ಇಂದ್ರಿಯಗೋಚರವಾದ ಅನುಭವಕ್ಕೆ ಬೆಂಕಿಯು ತಣ್ಣಗಿದೆ ಕಪ್ಪಾಗಿದೆ ಎಂದು ಹೇಳಿದರೆ ಅಂತಹ ನೂರಾರು ಶ್ರುತಿವಾಕ್ಯಗಳಿದ್ದರೂ ಅವುಗಳನ್ನು ಅಸಂಗತ,ಅನೂಜಿ೯ತ ಎಂದು ತಿರಸ್ಕರಿಸ ಬೇಕು.ಇಂದ್ರಿಯಾನುಭವವು ಅಧ್ಯಾತ್ಮಿಕ ಕ್ಷೇತ್ರದಲ್ಲಿ ಸಪ್ರಮಾಣವೆನಿಸುವುದಿಲ್ಲ. ಭೂಮಿಯ ದೃಷ್ಟಿಯಿಂದ ನೋಡಿದಾಗ ಹಗಲು ರಾತ್ರಿಗಳುಂಟು.ಸೂಯ೯ನ ದೃಷ್ಟಿಯಿಂದ ನೋಡಿದಾಗ ಹಗಲು ರಾತ್ರಿಗಳು ಇರಲಾರವು.
ಶ್ರೀ ಶಂಕರರ ವಿಶಿಷ್ಟ ಹಿರಿಮೆಯೆಂದರೆ ಮಾನವನ ಎಲ್ಲಾ ಹಂತಗಳ ಅಂದರೆ ಪ್ರಾಪಂಚಿಕ ಮತ್ತು ಪಾರಮಾಥಿ೯ಕ ಅನುಭವಗಳನ್ನು ಅನ್ಯೋನ್ಯ ಸಂಬಂಧವಿರುವಂತೆ ಕೂಡಿಸಿ, ಅವುಗಳನ್ನು ಉಚಿತ ರೀತಿಯಲ್ಲಿ ವಗೀ೯ಕರಿಸಿ, ಆಯಾ ನಿದಿ೯ಷ್ಟ ಕ್ಷೇತ್ರದಲ್ಲಿ ಅವಕ್ಕೇ ಅಹ೯ವೆನಿಸುವ ಸಪ್ರಮಾಣತೆಯನ್ನು, ಊಜಿ೯ತತ್ವವನ್ನು ದೊರಕಿಸಿಕೊಡಲು ಯತ್ನಿಸಿರುವುದು. ಅನುಭವಕ್ಕೆ ಗೋಚರವಾಗುವ ಮೂರು ವಿಧವಾದ ವಾಸ್ತವತೆಗಳಿವೆ.
1) ಮೊದಲನೆಯದು ಭೂತ,ವತ೯ಮಾನ,ಮತ್ತು ಭವಿಷ್ಯಗಳೆಂಬ ಕಾಲತ್ರಯಗಳಿಂದ ಅಭಾದಿತವಾಗಿಯೂ , ಸವ೯ಕಾಲಿಕವಾಗಿಯೂ, ಶಾಶ್ವತವಾಗಿಯೂ ಏಕಮೇವಾದ್ವಿತೀಯವಾಗಿ ಒಂದೇ ವಿಧದಲ್ಲಿ ಇರುವುದು (ನಿರಪೇಕ್ಷ ಸತ್ಯವಾಗಿ)ಯಾವುದೇ ವಸ್ತು ಬದಲಾವಣೆಗೊಳಗಾಗುವುದಿಲ್ಲ.
ಕೇವಲ ಒಂದು ನಿದಿ೯ಷ್ಟ ಸ್ತರದಲ್ಲಿ ಮಾತ್ರ ಅಸ್ತಿತ್ವ ಪಡೆದಿದ್ದರೆ ,ಅದನ್ನು ಉಪಾಧಿ ರಹಿತ ನಿರಪೇಕ್ಷ ಸವ೯ಸ್ವತಂತ್ರ ಸತ್ಯವೆಂದು ಕರೆಯಲಾಗುವುದಿಲ್ಲ.ಹಾಗಾದರೆ ಅದನ್ನು ಬದಲಾವಣೆಗೆ ಒಳಪಡಿಸುವುದು ಯಾವುದು?ಎಲ್ಲಾ ವಿಧವಾದ ಬದಲಾವಣೆಗಳ ಮಧ್ಯೆ ಎಂದೆಂದಿಗೂ ಬದಲಾಗದ ಸವ೯ತಂತ್ರ ಸ್ವತಂತ್ರವಾದ ಸತ್ಯ ಯಾವುದುಂಟೋ ಅದು.ಅದನ್ನು "ಪಾರಮಾಥಿ೯ಕ ಸತ್ತಾ(ಸತ್ಯ)" ಎಂದು ಕರೆಯಲಾಗಿದೆ.ಅದನ್ನು ಅದಿರುವಂತೆಯೇ ಅನುಭೂತಿ ಮಾಡಿಕೊಳ್ಳಬೇಕು.ಈ ನಿರಪೇಕ್ಷ ವಿಶುದ್ಧ ಸತ್ತೆಯನ್ನು ಉಪನಿಷತ್ತುಗಳು "ಸತ್" ಅಥವಾ "ಬ್ರಹ್ಮ" ಎಂದು ನಿದೇ೯ಶಿಸಿರುವುದು.ಪ್ರತಿಯೊಬ್ಬರ ಅಂತಃಕರಣದಲ್ಲಿಯೂ "ವಿಶುದ್ಧಾತ್ಮ"ನಾಗಿರುವ ಇವನನ್ನು ಅನುಭೂತಿ(ಅನುಭವ) ಮಾಡಿಕೊಳ್ಳಬೇಕು. ಇದು ಎಂದೆಂದಿಗೂ ಬದಲಾಗದ ಅಂದರೆ ಎಲ್ಲಾ ಬದಲಾವಣೆಗಳಿಗೂ ಸಾಕ್ಷಿಯಾದ ಆತ್ಮ.
2) ಇದಾದ ನಂತರ ನಿರಂತರವಾಗಿ ಬದಲಾಗುತ್ತಿರುವ ಹಾಗೂ ಸದಾ ಇಂದ್ರಿಯಗೋಚರವಾದ ಕ್ಷೇತ್ರದಲ್ಲಿ ನಮ್ಮ ಮುಂದೆ ಸತತ ಸಕ್ರಿಯವಾಗಿರುವ ಅನುಭವ ಕಾರಕವಾದ ಈ ಜಗತ್ತು ಇದೆ.ನೀರಿನಲ್ಲಿ ಕಾಣುವ ಪ್ರತಿಬಿಂಬದಂತೆ ಜೀವಿಗಳು ಇಲ್ಲಿವೆ.ಭೂಮಿಯಮೇಲೆ ಹಗಲು ರಾತ್ರಿಗಳಂತೆ ಇದರಲ್ಲಿ"ವ್ಯಾವಹಾರಿಕ ಸತ್ತಾ"ಎಂದರೆ ಸಾಪೇಕ್ಷ ಅಥವಾ ಪ್ರಾಪಂಚಿಕ ಸತ್ಯವಿದೆ.
ನಂತರ ಯಾವರೀತಿ ಕೇವಲ ನೀರಿನ ಅನುಭವವನ್ನು ಕೊಡುತ್ತಾ ಅದು ನೀರು ಎಂಬ ತಪ್ಪು ತಿಳುವಳಿಕೆಗೆ (ಭ್ರಾಂತಿಗೆ) ಕಾರಣವಾಗುತ್ತಾ ಆದರೆ ನೀರಿನ ಕ್ರಿಯೆ ಯಾವುದೂ ಇಲ್ಲದ ಮರೀಚಿಕೆ ಇರುತ್ತದೆಯೋ ಹಾಗೆಯೇ ಮೇಲ್ನೋಟಕ್ಕೆ ಸತ್ಯವೆಂದು ಭಾಸವಾಗುವ "ಪ್ರಾತಿಭಾಸಿಕ ಸತ್ತಾ"ಇರುತ್ತದೆ.ಅಂಥ ತೋರಿಕೆಯ ವಸ್ತುಗಳು ಅನುಭವಾತ್ಮಕ ವಾಸ್ತವತೆಯನ್ನೂ ಕೂಡಾ ಪಡೆದಿರುವುದಿಲ್ಲ.ಆದರೆ ಅವು ಭ್ರಾಂತಿ ಕಾರಕವಾಗಿಯೆ, ಇಲ್ಲವೇ ತಪ್ಪು ಭಾವನೆಗಳಿಂದಲೋ ನಮಗೆ ಭಯ ಅಥವಾ ತೊಂದರೆ ಯನ್ನುಂಟು ಮಾಡಬಹುದು.
ಅದು ನಿರಂತರ ಚಲನೆಯಲ್ಲಿರುವುದರಿಂದಲೇ "ಜಗತ್"ಎನಿಸಿದೆ. ಬ್ರಹ್ಮವು ಕಾಲ ದೇಶ ಕಾರಣಗಳನ್ನು ಮೀರಿರುತ್ತದೆ.ಅದು ಸವ೯ತಂತ್ರ ಸ್ವತಂತ್ರ ಸತ್ಯ."ಸತ್ಯಂ ಜ್ಞಾನಂ ಅನಂತಂ ಬ್ರಹ್ಮ"ಬ್ರಹ್ಮವು ಅನಂತವಾಗಿರುವುದರಿಂದ ಆನಂದವೂ ಆಗಿದೆ.ಆದ್ದರಿಂದಲೇ ಅದನ್ನು ಸತ್_ಚಿತ್_ಆನಂದ ಎಂದು ನಿದೇ೯ಶಿಸಿರುವುದು.ಜಗತ್ತು ಕಾಲ ದೇಶ ಕಾರಣಗಳಿಗೆ ಒಳಪಟ್ಟಿರುತ್ತದೆ.ಆದ್ದರಿಂದಲೇ ಜಗತ್ತು ಬ್ರಹ್ಮಕ್ಕೆ ವಿರುದ್ಧವಾಗಿದೆ ಎಂದು ಹೇಳುವುದು.
ಈ ಅಥ೯ದಲ್ಲಿ ಜಗತ್ತುಮಿಥ್ಯೆ ಎನಿಸಿದೆ.ಅಂದರೆ ಜಗತ್ತು ಕೇವಲ ಇಂದ್ರಿಯಗೋಚರ ಅಥವಾ ಅವಲಂಬಿP ಅಸ್ತಿತ್ವ ಪಡದು ಸತ್ಯ ಬ್ರಹ್ಮಕ್ಕೆ ಹೋಲಿಸಿದರೆ ಅದು ಅಸತ್ಯ.(ಅಸತ್)(ಅಸ್ತಿತ್ವ ರಹಿತ ಅಥವಾ ಅವಾಸ್ತವಿಕ),ಅಜ್ಞಾ£, ಸಾಂತ(ಅಂತ್ಯವುಳ್ಳದ್ದು)ನಿರಾನಂದ(ಆನಂದ ರಹಿತ)ಜಗತ್ತು ಬ್ರಹ್ಮದ ಲಕ್ಷಣಗಳಾದ ಕಾಲ_ದೇಶ__ಕಾರಣ ವಿಧಾನಗಳನ್ನು ಸತ್_ಅಸತ್,ಜ್ಞಾನ_ಅಜ್ಞಾನ,ಸ್ಥೂಲ_ಸೂಕ್ಷ್ಮ,ಸುಖ ದುಃಖ ಇತ್ಯಾದಿ ದ್ವಂದ್ವ ವಗೀ೯ಕರಣ ರೀತಿಯಲ್ಲಿ ವ್ಯಕ್ತಗೊಳಿಸುತ್ತದೆ.
ಬ್ರಹ್ಮವು ಮಾಯೆಯ ಅಂಶವಾದ ಕಾಲ,ದೇಶ,ಕಾರಣಗಳ ವಿಧಾನವನ್ನು ಮೀರಿರುತ್ತದೆ.ಒಟ್ಟಿನಲ್ಲಿ ಮೂರುವಿಧವಾದ ಸತ್ತಾ ಅಥವಾ ಅಸ್ತಿತ್ವಗಳಿವೆ.ಶ್ರೀಶಂಕರರು ಅದ್ವಿತೀಯ ಮತ್ತು ಅಖಂಡ (ಅಖಂಡಂ ಅದ್ವಿತೀಯಂ ಬ್ರಹ್ಮ)ಎಂದೂ ನಿಗೂಢ ಶಕ್ತಿಯಾದ ಮಾಯಾ ತತ್ವದಿಂದ ಈ ಜಗತ್ತು ಹೊರಹೊಮ್ಮಿದೆ ಎಂದೂ ಮತ್ತು ಬಾಹ್ಯದಲ್ಲಿ ವಾಸ್ತವಿಕ ಅಸ್ತಿತ್ವವುಳ್ಳಂತೆ ತೋರುವ "ಕಲ್ಪನಾ ತತ್ವ"ದಿಂದ ಈ ಜಗತ್ತು ಹೊರಹೊಮ್ಮಿದೆ ಎಂದು ಶ್ರುತಿಗಳು ನಿರೂಪಿಸಿವೆಯೆಂದು ವ್ಯಕ್ತಪಡಿಸಿದ್ದಾರೆ.
ನಮ್ಮ ಅಂತಬೋ೯ಧೆ ಅಥವಾ ಅಂತದೃ೯ಷ್ಟಿಯಿಂದ ಶ್ರುತಿಯು ಬೋಧಿಸಿರುವ ಪರಬ್ರಹ್ಮವನ್ನು ನಮ್ಮ ಸತ್ಯಾತ್ಮನೆಂದು ನಾವು ಗ್ರಹಿಸಿ ಸಾಕ್ಷಾತ್ಕರಿಸಿಕೊಳ್ಳಬಹುದು. ನಾವು ಇಂದ್ರಿಯಗೋಚರವಾದ ಕಾಲ_ದೇಶ_ ಕಾರಣ ವಿಧಾನಗಳಲ್ಲಿನ ಪ್ರಾಪಂಚಿಕ ಇಂದ್ರಿಯ ಅನುಭವಗಳಿಗೆ ಮರಳಿದಾಗ ಯುಕ್ತಿ ಅಥವಾ ತಕ೯ವು ಪರಿಣಾಮಕಾರಿಯಾಗುತ್ತದೆ.
ಆದುದರಿಂದ ನಮ್ಮ ವಾಸ್ತವಿಕ ಸಾಂಗತ್ಯನ್ನು ಅಥ೯ಮಾಡಿಕೊಳ್ಳಲು ಪರಸ್ಪರ ಸಂಬಂಧಗಳನ್ನು ಪರಿಣಾಮಕಾರಿಯನ್ನಾಗಿಸಲು ಯುಕ್ತಾಯುಕ್ತ ವಿವೇಚನೆಯಿಂದ ಕೂಡಿದ ವೈಚಾರಿಕವಾದ ಒಂದು ಪ್ರಕ್ರಿಯೆ ಇರಲೇಬೇಕು.
ಶ್ರೀ ಶಂಕರರು ಶ್ರುತಿ ಪ್ರಮಾಣವನ್ನೇ ಆಧಾರವಾಗಿಟ್ಟುಕೊಂಡು "ಬ್ರಹ್ಮ"ದಿಂದ ಮಾಯೆಯ ಮೂಲಕ ಜಗತ್ತು ಪರಿಣಾಮಗೊಳ್ಳುವ ಜಗತ್ ಸೃಷ್ಟಿ ಶಾಸ್ತ್ರವನ್ನು ಸಮಂಜಸವಾಗಿಯೂ,ಸುಸಂಗತವಾಗಿಯೂ ವಿವರಣಾತ್ಮಕವಾಗಿಯೂ ನಿರೂಪಿಸುತ್ತದೆ.
ಮನುಷ್ಯನು ಈ ಜಗತ್ತಿನ ಪರಿಧಿಯಲ್ಲಿ ವಿಜ್ಞಾನ ಯಂತ್ರಜ್ಞಾನ ಮೊದಲಾದವುಗಳಿಗೆ ಸಂಬಂಧಿಸಿದಂತೆ ತನ್ನ ಪ್ರಾಪಂಚಿಕ ಸಂಶೋಧನೆಗಳನ್ನು (ವ್ಯಾವಹಾರಿಕ ಸತ್ತೆಯಲ್ಲಿ)ಪರಿಣಾಮಕಾರಿಯಾಗಿ ನಡೆಸಿಕೊಂಡು ಹೋಗಬಹುದು.ಆದರೆ ಅಷ್ಟು ಮಾತ್ರಕ್ಕೇ ತನ್ನ ಚಟುವಟಿಕೆಗಳನ್ನು ಪರಿಮಿತಿಗೊಳಿಸಿಕೊಂಡಿದ್ದೇ ಆದರೆ ಅವನು ಕೇವಲ ಮಿಥ್ಯೆಗಳಿಗೆ ಅಂಟಿಕೊಂಡು ಆತ್ಮ ಸಾಕ್ಷಾತ್ಕಾರದ ಗುರಿಯಿಂದ ದೂರಸರಿದು ವಂಚಿತನಾಗುತ್ತಾನೆ.
ಈಶ್ವರ:ಜಗತ್ತು ಮತ್ತು ಜೀವಿಗಳಿಗೆ ಸಂಬಂಧಿಸಿದಂತೆ ಮಾಯಾಶಕ್ತಿಯಿಂದ ಕೂಡಿದ ಬ್ರಹ್ಮವೇ ಸೃಷ್ಟಿಕತ೯ನೂ ನಿಯಾಮಕನೂ,ಜಗದೊಡೆಯನೂ ಈಶ್ವರನೆಂದು ಕರೆಸಿಕೊಳ್ಳುತ್ತಾನೆ,ನಾವು ಅವನನ್ನು ಸ್ತುತಿಸಬಹುದು.ಪೂಜಿಸಬಹುದು ಹಾಗೂ ಅವನಲ್ಲಿ ಪ್ರೇಮ ತೋರಲೂ ಬಹುದು.
ಹೀಗೆ ಪ್ರಾಪಂಚಿಕ ದೃಷ್ಟಿಯಿಂದ ಬ್ರಹ್ಮವು ಜೀವ ಜಗತ್ತು ಈಶ್ವರ ಎಂದು ತ್ರಿಮೂತಿ೯ ಸ್ವರೂಪವಾಗಿ ಕಾಣಬಹುದು.ಈ ಲೀಲೆ ಎಂದೆಂದಿಗೂ ನಡೆಯುತ್ತಲೆ ಇರುತ್ತದೆ.ಶ್ರೀ ಶಂಕರರು ವೇದಗಳಲ್ಲಿ ಬೋಧಿಸಲ್ಪಟ್ಟಿರುವ ಧಮ೯ವು "ಅಭ್ಯುದಯ"(ಲೌಕಿಕಕ್ಷೇಮ)"ನಿಶ್ರೇಯಸ"ಎಂದರೆ ಅಧ್ಯಾತ್ಮಿಕ ಗುರಿಯನ್ನು ಪಡೆಯಲು ದಾರಿತೋರಿಸುತ್ತದೆ.ಮೋಡವು ಸೂಯ೯ನನ್ನು ಮರೆಮಾಡುವಂತೆ ಮಾಯೆಯು ಆತ್ಮನನ್ನು (ಬ್ರಹ್ಮ) ಮರೆಗೊಳಿಸುವಂತೆ ಭಾಸವಾಗುತ್ತದೆ.ಅದು ಈಶ್ವರನ ಸೃಷ್ಟಿ ಶಕ್ತಿಯಾಗಿ ಕಾಯ೯ನಿವ೯ಹಿಸುತ್ತದೆ.
ವಿಶ್ವವ್ಯಾಪ್ತ ಅಧ್ಯಾತ್ಮಿಕ ಧಮ೯: ಈ ಮಾಯೆಯನ್ನು ಮೀರಲು ಸಾಧ್ಯವೇ?ಹಾಗೂ ಜೀವನಿಂದ ಬ್ರಹ್ಮದೊಡನೆ ಐಕ್ಯವನ್ನು(ಅನ್ಯೋನ್ಯತೆಯನ್ನು) ಸಾದಿಸುವುದು ಸಾಧ್ಯವೇ?ಎಂಬ ಪ್ರಶ್ನೆಗೆ ಸಾಧ್ಯ ಎನ್ನುತ್ತಾರೆ ಶ್ರೀ ಶಂಕರರು.
1) ಮಾಯೆಗೆ ಒಡೆಯನಾಗಿರುವ ಈಶ್ವರನ ಅನುಗ್ರಹದಿಂದ ಭಕ್ತಿಮಾಗ೯ದಿಂದ ಇದು ಸಾಧ್ಯ.
2) ಶ್ರುತಿಬೋಧಿತವಾದ ಶ್ರೋತ್ರೀಯ ಬ್ರಹ್ಮನಿಷ್ಠ ಗುರುಗಳ ನೆರವಿನಿಂದ ದಾಟಬಹುದಾದ ಐಹಿಕ,ಆಮುಷ್ಮಿಕ ಎಲ್ಲಾ ಆಸೆಗಳನ್ನು ತೊರೆದ ಜೀವಬ್ರಹ್ಮೈಕ್ಯತೆಯ ಸಾರಗಳಾದ ಮಹಾವಾಕ್ಯಗಳ ಮೇಲಿನ ನಿರಂತರ ಚಿಂತನೆಯಿಂದ ಕೂಡಿದ ಜ್ಞಾನಮಾಗ೯ದಿಂದ ಇದು ಸಾಧ್ಯ.
ಬ್ರಹ್ಮವೇ ಈಶ್ವರನಾಗಿ ಜಗತ್ತಿನೆ ಎಲ್ಲೆಡೆಯೂ ಮತ್ತು ಎಲ್ಲಾ ಜೀವಿಗಳಲ್ಲಿಯೂ ಇರುವ ಅಂತಯಾ೯ಮಿ.ಅದು ಎಲ್ಲಾ ಜೀವಿಗಳ ಹೃದಯದಲ್ಲೂ ವ್ಯಕ್ತಿಗತ ಜೀವಿತಾತ್ಮ ರೂಪದಿಂದ ಬುದ್ಧಿಯಲ್ಲಿ ಪ್ರತಿಬಿಂಬಿಸುತ್ತದೆ.ಬ್ರಹ್ಮವು ನಿರಪೇಕ್ಷವೂ (ಸವ೯ತಂತ್ರ ಸ್ವತಂತ್ರ) ಹೌದು. ಸಾಪೇಕ್ಷವೂ ಹೌದು.ಇದನ್ನೇ ಪರ ಮತ್ತು ಅಪರ ಎಂದು ಕರೆಯುತ್ತಾರೆ.ಯಾರ ಮನಸ್ಸು ಸಾಮ್ಯದಲ್ಲಿ (ಬ್ರಹ್ಮದಲ್ಲಿ) ನಿಂತಿರುವುದೋ ಅವರು ಇಲ್ಲಿಯೇ (ಅಂದರೆ ಬದುಕಿರುವಾಗಲೇ ಸಂಸಾರವನ್ನು ಜಯಿಸುತ್ತಾರೆ. ಏಕೆಂದರೆ ಬಹ್ಮವು ದೋಷರಹಿತ ವಾಗಿಯೂ (ಅಂದರೆ ಬೇಧವನ್ನುಂಟುಮಾಡುವ ಯಾವ ಅಂತ್ಯ ವಿಶೇಷಗಳೂ ಇಲ್ಲದೇ ಇರುತ್ತದೆ) ಇರುತ್ತದೆ.ಆದುದರಿಂದ ಅವರು ಬ್ರಹ್ಮದಲ್ಲಿಯೇ ನೆಲೆಸುತ್ತಾರೆ.
ಆತ್ಮಸ್ವರೂಪವನ್ನು ನಿಧ೯ರಿಸಲು ಆಗಮ ಸಂಪ್ರದಾಯಗಳ ಬೆಂಬಲವಿರಬೇಕು. ಬರಿಯ ತಕ೯ವು ಎಂದಿಗೂ ಶಾಶ್ವತವಾಗಿ ನಿಲ್ಲಲಾರದು.ಆಗಮ ಎಂದರೆ ಅನುಭವಿಯಾದ ಗುರುವು ಯೋಗ್ಯನಾದ ಶಿಷ್ಯನಿಗೆ ಮಾಡುವ ಉಪದೇಶ ಕ್ರಮವಾಗಿರುತ್ತದೆ.ಈ ಉಪದೇಶವು ಅನುಭವಗಮ್ಯ ವಾಗಿರುತ್ತದೆ.ಅನುಭವವು ಸಾವ೯ತ್ರಿಕ ಅನುಭವವಾದ್ದರಿಂದ ಯಾವ ವಾದಿಯೂ ಅದನ್ನು ಖಂಡಿಸಲಾರನು.
ಉದಾಹರಣೆಗಾಗಿ ಕಣ್ಣಿನಿಂದ ರೂಪವನ್ನು ನೋಡುತ್ತಾನೆಂದರೆ ಅವನು ವೇದಾಂತಿಯಾಗಲೀ, ತಾಕಿ೯ಕನಾಗಲೀ, ನಾಸ್ತಿಕನಾಗಲೀ ಎಲ್ಲರೂ ರೂಪವನ್ನು ನೋಡಲು ಕಣ್ಣೇ ಸಾಧನವಾಗಿರುತ್ತದೆಆದ್ದರಿಂದ ಈ ತೀಮಾ೯ನವನ್ನು ಯಾರೂ ಬದಲಾಯಿಸುವಂತಿಲ್ಲ.
ಇದನ್ನೇ ವೇದಾಂತದಲ್ಲಿ "ವಸ್ತುತಂತ್ರ" ಎನ್ನುತ್ತಾರೆ. ಪರಬ್ರಹ್ಮವು ವಸ್ತುತಂತ್ರ ಜ್ಞಾನದಿಂದಲೇ ಲಭ್ಯವಾಗುತ್ತದೆ. ಆದ್ದರಿಂದಲೇ ವೇದಾಂತ ಮಾಗ೯ವು ತಿಳಿಸುವ ಮಾಗ೯ದಿಂದಲೇ ವಿಚಾರ ಮಾಡಿ ಬ್ರಹ್ಮವನ್ನು ಅರಿಯಬೇಕು.ಆದ್ದರಿಂದ ಆತ್ಮತತ್ವವನ್ನು ಅರಿಯಲು ಇಚ್ಛಿಸುವವನು ಕೇವಲ ಬುದ್ಧಿಗಮ್ಯವಾದ ತಕ೯ವನ್ನು ಬಿಟ್ಟು ಅನುಭವ ಮತ್ತು ಶ್ರುತಿ ಸಮ್ಮತವಾದ ತಕ೯ವನ್ನು ಗುರೂಪದೇಶವನ್ನು ಆಶ್ರಯಿಸಿ ವಿಚಾರ ಮಾಡಬೇಕು.
ಆತ್ಮತತ್ವವು ಪ್ರಮೇಯವಲ್ಲದ್ದರಿಂದ ಯಾವ ಪ್ರಮಾಣವೂ ನೇರವಾಗಿ ಅದನ್ನು ಸಿದ್ಧಪಡಿಸುವುದು ಸಾಧ್ಯವಿಲ್ಲ. ಸ್ವತಃಸಿದ್ಧವಾಗಿರುವುದರಿಂದ ಅದನ್ನು ಪ್ರಮಾಣದಿಂದ ಸಾಧಿಸಬೇಕಾದ ಅವಶ್ಯಕತೆಯೂ ಇರುವುದಿಲ್ಲ. ಹೀಗಿದ್ದರೂ ಬಹಿಮು೯ಖವಾದ ದೃಷ್ಟಿಯುಳ್ಳ ಮಂದ ಅಧಿಕಾರಿಗಳಿಗೆ ಸಹಾಯಕವಾಗಿ ಶ್ರ್ಯತಿಯು "ಅಧ್ಯಾರೋಪ ಅಪವಾದ ನ್ಯಾಯ"ದಿಂದ ಅದರಲ್ಲಿ ಇಲ್ಲದ ಧಮ೯ವನ್ನೂ ಅಧ್ಯಾರೋಪ ಮಾಡಿಕೊಂಡು ಮಿಕ್ಕಧಮ೯ಗಳು ಅದರಲ್ಲಿಲ್ಲವೆಂದು ತೋರಿಸುತ್ತವೆ. ಹೀಗೆ ಅದ್ವೈತ ತತ್ವವು ಸ್ವತಃ ಸಿದ್ಧವಾಗಿಯೇ ಇರುವುದರಿಂದ ಅದು ಯಾವ ಅಡ್ಡಿಯೂ ಇಲ್ಲದೆ ತಾವೇ ಅಧಿಕಾರಿಗಳಿಗೆ ತೋರಿಕೊಳ್ಳುತ್ತದೆ.
ಆತ್ಮಜ್ಞಾನಕ್ಕೆ ಸಹಾಯಕವಾದ ತಕ೯:
ಸ್ವತಂತ್ರವಾದ ತಕ೯ವು ಮತ್ತೊಂದು ಪ್ರಬಲ ತಕ೯ದಿಂದ ಬಾಧಿತವಾಗಬಹುದು.ಅದರೆ ಶ್ರುತ್ಯುಕ್ತ ತಕ೯ವು ಅನುಭವ ಸಾರಿಯಾಗಿರುವುದರಿಂದ ಅಬಾಧ್ಯವಾಗಿರುತ್ತದೆ.ಆಗಮ-ಉಪನಿಷತ್ತುಗಳಿಂದ ತಿಳಿದ ಅಥ೯ವು ಅಂಗೈನಲ್ಲಿರುವಂತೆ ಸಂಪೂಣ೯ವಾಗಿ ಅನುಭವಕ್ಕೆ ಬರುತ್ತದೆ.
ಅಧ್ಯಾತ್ಮವು ಎಂದೆಂದಿಗೂ ಪ್ರಸ್ತುತ.ಲೌಕಿಕ ಜೀವನವು ಅಶಾಶ್ವತವೂ ದುಃಖಮಯವೂ ಆಗಿರುವುದರಿಂದ ಅಧ್ಯಾತ್ಮಿಕ ಅನ್ವೇಷಣೆ ಅವಶ್ಯಕವೂ ಅನಿವಾಯ೯ವೂ ಆಗಿದೆ.ಅಧ್ಯಾತ್ಮವು ಎಂದಿಗೂ ಅಪ್ರಸ್ತುತ ವಾಗುವುದಿಲ್ಲ.ಅದು ನಿತ್ಯ ಮತ್ತು ನಿರಂತರ ಸುಖದ ಅನ್ವೇಷಣೆ.ಅಶಾಂತ ಆಧುನಿಕ ಜೀವನದಲ್ಲಿ ನೆಮ್ಮದಿ ಕಂಡುಕೊಳ್ಳಲು ಅಧ್ಯಾತ್ಮದ ಅವಶ್ಯಕತೆ ಇನ್ನೂ ಹೆಚ್ಚಾಗಿದೆ.ಅದ್ವೈತ ತತ್ವವು ಎಂದಿಗೂ ಪ್ರಸ್ತುತ.ಅದು ಎಲ್ಲಾ ಲೌಕಿಕ ಹಾಗೂ ಅಧ್ಯಾತ್ಮಿಕ ಸಮಸ್ಯೆಗಳಿಗೂ ಪರಿಹಾರವನ್ನು ಒದಗಿಸಬಲ್ಲದು.
ಶ್ರೀಶಂಕರಾಚಾಯ೯ರು ಪ್ರತಿಪಾದಿಸುವ ಅದ್ವೈತ ವೇದಾಂತದ ವಿಷಯವು ಕಾಲ,ದೇಶಗಳ ಎಲ್ಲೆ ಕಟ್ಟನ್ನು ಮೀರಿರುವ ಇಡೀ ಜಗತಿನ್ತ ತಿರುಳಾಗಿರುವ ಪರಬ್ರಹ್ಮವಾಗಿರುತ್ತದೆ.ಆ ಬ್ರಹ್ಮವು ಎಲ್ಲಾ ಕಾಲದ ,ಎಲ್ಲಾ ದೇಶದ ಮನುಷ್ಯರಿಗೂ ಇತರೆ ಜೀವಿಗಳಿಗೂ ಆತ್ಮನಾಗಿರುತ್ತದೆ. ಈ ಪರಮಾಥ೯ ತತ್ವವನ್ನು ದೇಶ ಕಾಲಗಳಿಂದ ಮಾಪಾ೯ಡಾದ ಸಾವ೯ತ್ರಿಕ ಅನುಭವದ ಆಧಾರದಿಂದಲೇ ತಿಳಿಯ ಹೇಳಿರುವುದು ಆಚಾಯ೯ರ ಉಪದೇಶ ಕ್ರಮದ ಒಂದು ವಿಶೇಷ ಅಸಾಧಾರಣ ಧಮ೯ವಾಗಿರುತ್ತದೆ.
ಮನುಷ್ಯನು ವೇದಾಂತ ಜ್ಞಾನದಿಂದ ಬದುಕಿರುವ ಕಾಲದಲ್ಲಿಯೇ ಸಂಸಾರದ ಎಲ್ಲಾ ದುಃಖ ಗಳಿಂದ ಬಿಡುಗಡೆ ಹೊಂದಿರುವನೆಂಬ ಜೀವನ್ಮುಕ್ತಿ ಉಪದೇಶವು ಬಗೆಬಗೆಯ ಕ್ಲೇಶಗಳಿಂದ ವ್ಯಥೆಪಡುತ್ತಿರುವ ಈಗಿನ ಸಮಾಜಕ್ಕೆ ಪರಮೋತ್ಕøಷ್ಟವಾದ ಆಶಾವಾದ ಹಾಗೂ ಪರಿಹಾರವನ್ನೊದಗಿಸುತ್ತದೆ.
ಜೀವನ್ಮುಕ್ತನನ್ನು ಸ್ಥಿತಪ್ರಜ್ಞ, ಯುಕ್ತ, ಅತಿವಣಾ೯ಶ್ರಮಿ, ಪರಭಕ್ತ, ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. ಜಪ. ತಪ, ಧ್ಯಾನ, ಸದಾಚಾರ, ಸತ್ಸಂಗ, ದಾನ, ಹೋಮ-ಹವನ, ಶಮಾದಿ ಷಟ್ಕ, ಸತ್ಕಮ೯, ಸಮಾಜಸೇವೆ ಇತ್ಯಾದಿಗಳನ್ನು ನಿಷ್ಕಾಮವಾಗಿ ಮಾಡುವುದರಿಂದ ಜ್ಞಾನವನ್ನು ಸಂಪಾದಿಸುವುದಕ್ಕೆ ಸಾಧ್ಯವಾಗುತ್ತದೆ.
ಅಡಿಟಿಪ್ಪಣಿಗಳು: ಅಧ್ಯಾಯ 3 ಸಂಶೋಧನಾ ವಿಧಾನಗಳು
1) ಡಾ.ಬಿ.ವಿ.ಶಿರೂರ, ಸಂಶೋಧನ ಸ್ವರೂಪ,ಅನ್ನಪೂಣ೯ ಪ್ರಕಾಶನ,ಹುಬ್ಬಳ್ಳಿ, ಆರನೇ ಮುದ್ರಣ,2014,ಪುಟ,152
2)ಇಂಗ್ಲಿಷ್ ಮೂಲ:ಸ್ವಾಮಿ ಮುಖ್ಯಾನಂದ ಶ್ರೀಶಂಕರಾಚಾಯ೯ರು ಮತ್ತು ಭಾರತೀಯ ಅಧ್ಯಾತ್ಮ ಶಾಸ್ತ್ರದ ಪುನರುನ್ನತಿ,ಕನ್ನಡ ಅನುವಾದ ಡಾ.ಬಿ.ಎಸ್.ಕೃಷ್ಣಮೂತಿ೯,ಪ್ರಕಾಶಕರು ಅದ್ವೈತ ವಿದ್ಯಾ ಪ್ರತಿಷ್ಠಾನ,ಹೆಬ್ಬೂರು,ತುಮಕೂರು ಜಿಲ್ಲೆ,ಪ್ರಥಮ ಮುದ್ರಣ,2000,ಪುಟ 34
3) ಅದೇ ಪುಟ36
4) ಅದೇ ಪುಟ 37
5) ಅದೇ ಪುಟ 40
ಅಧ್ಯಾಯ 4 ಉಪನಿಷತ್ತುಗಳು ಹಾಗೂ ಅದ್ವೆತ:
ಈಶಾವಾಸ್ಯ ಉಪನಿಷತ್ತು ಹಾಗೂ ಅದ್ವೈತ:
ಈ ಉಪನಿಷತ್ತಿನ ಮೊದಲನೆಯ ಮಂತ್ರವು 'ಈಶಾವಾಸ್ಯಮ್' ಎಂದು ಆರಂಭವಾಗಿರುವುದರಿಂದ ಇದಕ್ಕೆ "ಈಶೋವಾಸ್ಯೋಪನಿಷತ್'ಎಂದು ಹೆಸರು.
ಪುರುಷಾಥ೯ ಪ್ರಾಪ್ತಿಗೆ ಯಾವುದು ಉತ್ಕøಷ್ಟ ಸಾಧನ?ಕಮ೯ವೋ,ಜ್ಞಾನವೊ,ಜ್ಞಾನ _ಕಮ೯ ಇವುಗಳ ಸಮುಚ್ಚಯವೊ?ಸ್ವಗ೯ಪ್ರಾಪ್ತಿ ರೂಪವಾದ ಕಮ೯ಫಲವು ಅನಿತ್ಯವಾದುದರಿಂದ ಕೇವಲ ಶುದ್ಧಜ್ಞಾನವೇ ಮೋಕ್ಷಕ್ಕೆ ಸಾಧನವೆಂದು ಉಪನಿಷತ್ತುಗಳು ಹೇಳುತ್ತವೆ.
ಜ್ಞಾನರಹಿತವಾದ ಕಮ೯ದಿಂದ ಏನೂ ಪ್ರಯೋಜನವಿಲ್ಲ.ಕಮ೯ವು ಜ್ಞಾನಕ್ಕೆ ಅಂಶವಾಗಿದ್ದರೆ ಅಥವಾ ಸಹಕಾರಿಯಾಗಿದ್ದರೆ ಜ್ಞಾನಕ್ಕೆ ಕಾರಣವಾಗುವುದು.ಸಾಧಕನು ಫಲಾಸಕ್ತಿಯನ್ನು ಬಿಟ್ಟು ಕಮ೯ವನ್ನು ಅನುಷ್ಠಿಸಿದರೆ ಕಮ೯ದ ಮೂಲಕ ಚಿತ್ತಶುದ್ಧಿಯನ್ನು ಹೊಂದಿ ಅನಂತರ ಜ್ಞಾನದ ಮೂಲಕ ಮೋಕ್ಷವನ್ನು ಹೊಂದುತ್ತಾನೆ. ಕಮ೯ ಜ್ಞಾನಗಳಲ್ಲಿ ಯಾವ ವಿರೋಧವೂ ಇಲ್ಲ.
ನಿತ್ಯಕಮ೯_ ಬ್ರಹ್ಮವಿದ್ಯೆಗಳಲ್ಲಿ ಯಾವ ವಿಧವಾದ ಭೇದವನ್ನು ಕಲ್ಪಿಸದೆ ಸಮನಾಗಿ ಅನುಷ್ಠಾನ ಮಾಡುವುದೇ ಈ ಉಪನಿಷತ್ತಿನ ವಿಶೇಷ ಉಪದೇಶ.ಕಾಮ್ಯ ಕಮ೯ಗಳನ್ನು ತ್ಯಜಿಸಿ ಈಶ್ವರ ಸೇವೆಗಾಗಿ ಮತ್ತು ಲೋಕ ಸಂಗ್ರಹಕ್ಕಾಗಿ ನಿತ್ಯಕಮ೯ಗಳನ್ನು ಮಾಡುತ್ತಾ ನೂರು ವಷ೯ ಬಾಳಲು ಇಚ್ಚಿಸಬೇಕು.
ಉಪಾಸಕನು ಜ್ಞಾನಕ್ಕೆ ಸಹಾಯವಾಗುವ ಕಮ೯ಗಳನ್ನೇ ಮಾಡುವುದರಿಂದ ಕಮ೯ದ ಸ್ವಾಭಾವಿಕ ದೋಷಗಳು ಅವನಿಗೆ ಅಂಟುವುದಿಲ್ಲ. ಎಲ್ಲವೂ ಈಶನಿಗೆ ಸೇರಿದೆ ಎಂಬ ಜ್ಞಾನದಿಂದ ನಿಮ೯ಮತ್ವವು ಸಿದ್ಧಿಸಿದರೆ ಶೋಕವೆಲ್ಲಿ? ಮೋಹವೆಲ್ಲಿ? ಇದು ಈ ಉಪನಿಷತ್ತಿನ ಸಾರಾಂಶ 1.
ವಿಶರಣ,ಗತಿ,ಅವಸಾದನ,_ಎಂಬ ಅಥ೯ಗಳುಳ್ಳ'ಸದ್' ಧಾತುವಿನ ಹಿಂದೆ "ಉಪ" ಹಾಗೂ "ನಿ"ಎಂಬ ಉಪಸಗ೯ಗಳೂ "ಕ್ವಿಪ್' ಎಂಬ ಪ್ರತ್ಯಯವೂ ಬಂದು "ಉಪನಿಷತ್"ಎಂಬ ರೂಪವು ಆಗಿರುತ್ತದೆ.ಉಪನಿಷತ್ ಎಂಬ ಶಬ್ದಕ್ಕೆ ಬ್ರಹ್ಮವಿಷಯವಾದ ವಿದ್ಯೆ ಎಂದಥ೯.
ಶಂಕರಾಚಾಯ೯ರು ದಶೋಪನಿಷತ್ತುಗಳಿಗೆ ಅದ್ವೈತ ಭಾಷ್ಯವನ್ನು ಬರೆದಿದ್ದಾರೆ. ಇದು ಶುಕ್ಲ ಯಜುವೇ೯ದದ ವಾಜಸನೇಯ ಸಂಹಿತೆಗೆ ಸೇರಿರುವುದರಿಂದ "ವಾಜಸನೇಯ ಸಂಹಿತೋಪನಿಷತ್" ಎಂದು ಹೆಸರಿದೆ.
ಸ್ವಗ೯ಪ್ರಾಪ್ತಿರೂಪವಾದ ಕಮ೯ಫಲವು ಅನಿತ್ಯವಾದುದರಿಂದ ಶುದ್ಧಜÁ್ಞನವೇ ಶಾಶ್ವತಮೋಕ್ಷಕ್ಕೆ ಸಾಧನವೆಂದು ಉಪನಿಷತ್ತುಗಳೇ ಒಪ್ಪಿವೆ. ಕಮ೯ವು ಶ್ರೇಯಸ್ಸೆಂದು ಯಾವ ಮೂಢರು ತಿಳಿಯುವರೊ ಅವರು ಜರಾಮೃತ್ಯುಗಳನ್ನು ದಾಟುವುದಿಲ್ಲ.ಕಮ೯ದಿಂದ ಆಗುವ ಲೋಕಗಳನ್ನು ಪರಿಶೀಲಿಸಿ "ಅಕೃತವಾದದ್ದು ಕಮ೯ದಿಂದ ಆಗುವುದಿಲ್ಲ"ಎಂದು ವೈರಾಗ್ಯವನ್ನು ಹೊಂದಬೇಕು.
ಜ್ಞಾನರಹಿತವಾದ ಬರಿಯ ಕಮ೯ದಿಂದ ಏನೂ ಪ್ರಯೋಜನವಿಲ್ಲ.ಕಮ೯ವು ಜ್ಞಾನಕ್ಕೆ ಅಂಗವಾಗಿದ್ದರೆ ಅಥವಾ ಸಹಕಾರಿಯಾಗಿದ್ದರೆ ಜ್ಞಾನೋತ್ಪತ್ತಿಗೆ ಕಾರಣವಾಗುತ್ತದೆ.ಎಲ್ಲವೂ ಈಶನಿಗೆ ಸೇರಿದೆ ಎಂಬ ಜ್ಞಾನದಿಂದ ನಿಮ೯ಮತ್ವವು ಸಿದ್ಧಿಸಿದರೆ ಶೋಕವೆಲ್ಲಿ?ಇದು ಈ ಉಪನಿಷತ್ತಿನ ಸಾರಾಂಶ 2.
ಅದು(ಪರಬ್ರಹ್ಮವು)ಪೂಣ೯ವು.ಇದು(ವ್ಯಕ್ತವಾದಜಗತ್ತು) ಪೂಣ೯ವು. ಪರಬ್ರಹ್ಮದಿಂದ ಪೂಣ೯ವು (ಜಗತ್ತು)ಹೊರಟುಬಂದಿದೆ. ಪೂಣ೯ದ(ಜಗತ್ತಿನ) ಪೂಣ೯ತ್ವವನ್ನು (ಬ್ರಹ್ಮತ್ವವನ್ನು) ತೆಗೆದಮೇಲೆ ಪೂಣ೯ವೇ (ಪರಬ್ರಹ್ಮವೇ) ಉಳಿಯುತ್ತದೆ.ಈ ವ್ಯಾಖ್ಯಾನದ ಪ್ರಕಾರ ಈಶೋಪನಿಷತ್ತಿನ ಏಳು ಮಂತ್ರಗಳು ಮಾತ್ರ(1 ಮತ್ತು 2 ರಿಂದ 8) ಮಾತ್ರ ಪರಬ್ರಹ್ಮದ ಸ್ವರೂಪವನ್ನು ನಿರೂಪಿಸುತ್ತವೆ.ಉಳಿದವು ಆತ್ಮನನ್ನು ಅರಿಯದ ಅಜ್ಞಾನಿಗಳಿಗೆ ಅನ್ವಯಿಸುತ್ತದೆ.
ಈಶಾವಾಸ್ಯಮಿದಂ ಸವ೯ಂ
ಯತ್ಕಿಂಚ ಜಗತ್ಯಾಂ ಜಗತ್|
ತೇನ ತ್ಯಕ್ತೇನ ಭುಂಜೀಥಾ
ಮಾಗೃಧಃ ಕಸ್ಯಸ್ವಿದ್ಧನಮ್|
ಈ ಜಗತ್ತೆಲ್ಲವೂ ಈಶ್ವರನ ಆವಾಸ ಸ್ಥಾನವಾಗಿದೆ.ಎಲ್ಲವೂ (ಚರ ಮತ್ತು ಅಚರ) ಈಶನಿಗೇ ಸೇರಿದೆ. ಅದರ ತ್ಯಾಗದಿಂದ ನಿನ್ನನ್ನು ಕಾಪಾಡಿಕೊ. ಪರಧನವನ್ನು ಬಯಸಬೇಡ. ಈ ಸಮಸ್ತ ಜಗತ್ತು ಈಶನಿಗೇ ಸೇರಿದೆ.ಚರ ಎಂದರೆ ಚಲಿಸುವ ಅಚರ ಎಂದರೆ ಚಲಿಸದ (ಜಡ) ವಸ್ತುಗಳು.ಇವೆರಡರಲ್ಲಿಯೂ ಸಮಾನವಾಗಿ ಈಶ್ವರನು ವ್ಯಾಪಿಸಿದ್ದಾನೆ.ಏಕೆಂದರ ಅವನು ಸಹಜ ಸಮರಸನು.ಚರಾಚರಗಳಲ್ಲಿ ಭೇದವಿಲ್ಲದೆ ಸಮಾನವಾಗಿ ವ್ಯಾಪಿಸಿರುವವನು.ಈ ವಿಶ್ವವೆಲ್ಲವೂ ಅವನಿಗೇ ಸೇರಿದೆ.ಅದರಲ್ಲಿ ನನ್ನದೆಂಬುದು ಏನೂ ಇಲ್ಲವಾದ್ದರಿಂದ ಇದೆಲ್ಲವನ್ನೂ ತ್ಯಜಿಸಬೇಕು.ತ್ಯಾಗೇನೈಕೇ ಅಮೃತತ್ವ ಮಾನಶುಃ.ತ್ಯಾಗದಿಂದಲೇ ಮೋಕ್ಷ.ಆದ್ದರಿಂದ ಬೇರೆಯವರ ಧನವನ್ನು ಬಯಸಬೇಡ.
ಈ ಲೋಕದಲ್ಲಿ ಶಾಸ್ತ್ರವಿಹಿತವಾದ ಕಮ೯ಗಳನ್ನು ಮಾಡುತ್ತಲೇ ನೂರು ವಷ೯ ಜೀವಿಸಲು ಇಚ್ಛಿಸಬೇಕು.ಹೀಗಿದ್ದರೆ ಮನುಷ್ಯನಿಗೆ ಯಾವ ಕಮ೯ಗಳೂ ಬಂಧನಕ್ಕೆ ಕಾರಣವಾಗುವುದಿಲ್ಲ. ಈ ಮಂತ್ರವು ಕಮ೯ನಿಷ್ಠೆಯನ್ನು ಉಪದೇಶಿಸಿದೆ.ಈ ಆತ್ಮ ತತ್ವವು ಅಚಲವು.ಸವ೯ ಪ್ರಾಣಿಗಳಲ್ಲಿvಯೂ ಒಂದೇ.ಅದು ಮನಸ್ಸಿಗಿಂತ ವೇಗವಾದದ್ದು.ಈ ಆತ್ಮನನ್ನು ಇಂದ್ರಿಯಗಳು ಪಡಯಲಾರವು.ಅದು ನಿಂತುಕೊಂಡೇ ಓಡುತ್ತಿರುವ ಇತರ ವಸ್ತುಗಳನ್ನು ದಾಟುತ್ತದೆ.ಅದು ಇರುವಾಗ ವಾಯುವು ಪ್ರಾಣಿಗಳ ಕಾಯ೯ಗಳನ್ನು ನಡೆಸುತ್ತದೆ.
ಅದು ಚಲಿಸುತ್ತದೆ.ಚಲಿಸುವುದಿಲ್ಲ.ಅದು ದೂರದಲ್ಲಿದೆ.ಹತ್ತಿರದಲ್ಲಿದೆ.ಅದು ಇದೆಲ್ಲದರ ಹೊರಗೂ ಇದೆ.ಒಳಗೂ ಇದೆ. ಯಾವನು ಸವ೯ ಪ್ರಾಣಿಗಳನ್ನು ತನ್ನ ಆತ್ಮದಲ್ಲಿಯೇ ನೋಡುವನೊ ಮತ್ತು ತನ್ನ ಆತ್ಮವನ್ನು ಸವ೯ ಪ್ರಾಣಿಗಳಲ್ಲಿ ನೋಡುವನೊ,ಅವನು ಅದರಿಂದ ಜಿಗುಪ್ಸೆಯನ್ನು ಹೊಂದುವುದಿಲ.್ಲ"ಸವೂೀ೯ಹಂ" ಎಂಬ ಏಕತ್ವಭಾವವನ್ನು ಹೊಂದಿದಾಗ(ಸಮ್ಯಕ್ ದಶ೯ನ,ಅಭೇದ ದಶ೯ನ,ಏಕತ್ವದಶ೯ನ)ಜಿಗುಪ್ಸೆಯುಂಟಾಗುವುದಿಲ್ಲ3. ಮಂದಾದಿಕಾರಿಗಳಿಗೆ ಕೇವಲಕಮ೯, ಮಧ್ಯಮಾಧಿಕಾರಿಗಳಿಗೆ ಉಪಾಸನೆ,ಉತ್ತಮಾಧಿಕಾರಿಗಳಿಗೆ ಜ್ಞಾನ ಎಂಬುದು ಸಾಮಾನ್ಯವಾಗಿ ವೇದಾಂತ ಶಾಸ್ತ್ರದಲ್ಲಿ ಬರುವ ಸಾಧನ ತ್ರಯಗಳೆನಿಸಿವೆ.
ಯಾವಾಗ ತಿಳಿದವನಿಗೆ ಎಲ್ಲಾ ಪ್ರಾಣಿಗಳ ಆತ್ಮವೇ ಆಗಿದೆಯೊ ಅಲ್ಲಿ ಏಕತ್ವವನ್ನು ನೋಡುವವನಿಗೆ ಮೋಹವೆಲ್ಲಿ?ಶೋಕವೆಲ್ಲಿ?ಶೋಕ ಮೋಹಗಳು ಅಜ್ಞಾನಿಗಳಿಗೇ ಹೊರತು ಜ್ಞಾನಿಗಳಿಗಲ್ಲ.ಅವನು ಸವ೯ವ್ಯಾಪ್ತ,ಜ್ಯೋತಿಮ೯ಯನು,ಶರೀರವಿಲ್ಲದವನು, ಪಾಪ ಪುಣ್ಯಗಳಿಲ್ಲದವನು, ಕವಿಯು .ಮನೀಷಿಯು, ಸವೋ೯ತ್ತಮನು, ಸ್ವಯಂಭು.ಅವನು ಶಾಶ್ವತವಾದ ಅವರವರ ಕತ೯ವ್ಯವನ್ನು ಯಥಾನುರೂಪವಾಗಿ ಹಂಚಿಕೊಟ್ಟನು4.
ಕೇನೂಪನಿಷತ್ತು ಹಾಗೂ ಅದ್ವೈತ
‘ಕೇನೋಪನಿಷತ್' ಎಂಬ ಹೆಸರಿನಿಂದ ಪ್ರಸಿದ್ಧವಾದ ತಲವಕಾರೋಪನಿಷತ್ತು ಸಾಮವೇದದ ತಲವಕಾರ ಬ್ರಾಹ್ಮಣಕ್ಕೆ ಸೇರಿದೆ.ಈ ಉಪನಿಷತ್ತಿನ ಮೊದಲನೆಯ ಮಂತ್ರವು "ಕೇನ" ಎಂಬ ಪದದಿಂದ ಪ್ರಾರಂಭವಾಗಿರುವುದರಿಂದ ಇದಕ್ಕೆ "ಕೇನೋಪನಿಷತ್"ಎಂಬ ಹೆಸರು ಬಂದಿದೆ.ಈ ಉಪನಿಷತ್ತಿಗೆ ಶಂಕರಾಚಾಯ೯ರದೆಂದು ಪ್ರಸಿದ್ಧವಾದ ಎರಡು ಭಾಷ್ಯಗಳಿರುತ್ತದೆ.1) ಪದ ಭಾಷ್ಯ 2)ವಾಕ್ಯ ಭಾಷ್ಯ..
ಈ ಉಪನಿಷತ್ತಿನಲ್ಲಿ ನಾಲ್ಕು ಖಂಡಗಳಿವೆ.
ಮೊದಲನೆಯ ಖಂಡದಲ್ಲಿ ಪರಬ್ರಹ್ಮವು ಅತೀಂದ್ರಿಯ ವಸ್ತುವೆಂದೂ,ಜಡವಾದ ಇಂದ್ರಿಯಗಳ ಚೇತನತ್ವವು ಅದರಿಂದಲೇ ಉಂಟಾಗಿದೆಯೆಂದೂ, ಅದರ ಸ್ವರೂಪವನ್ನು ಇತರರಿಗೆ ಪ್ರಮಾಣಗಳಿಂದ ಉಪದೇಶಿಸುವುದು ಅಸಾಧ್ಯವೆಂದೂ ತಿಳಿಸುತ್ತದೆ.
ಎರಡನೆಯ ಖಂಡದಲ್ಲಿ ಹೀಗೆ ಹೇಳಿದೆ.ತಿಳಿದುಕೊಂಡಿಲ್ಲವೆಂದೂ ಎಣಿಸಿರುದಿಲ್ಲ.ತಿಳಿದೂ ಇರುತ್ತೇನೆ ಎಂಬ ಜ್ಞಾನವು ಯಾರಿಗೆ ಇರುತ್ತದೆಯೊ ಅವನೇ ತಿಳಿದಿರುತ್ತಾನೆ. ಬ್ರಹ್ಮವು ಇಂದ್ರಿಯಗಳಿಗೆ ವಿಷಯವಾಗದಿದ್ದರೂ ಪ್ರತ್ಯಗಾತ್ಮವೆಂದು ಅರಿಯಬಹುದು.ಆದರೆ ಚೆನ್ನಾಗಿ ಅರಿತಿದ್ದೇನೆಂದು ಹೇಳಲಾಗುವುದಿಲ್ಲ.
ಮೂರನೆಯ ಖಂಡದಲ್ಲಿ ಒಂದು ಆಖ್ಯಾಯಿಕೆಯು ಬರುತ್ತದೆ.ದೇವತೆಗಳ ಗವ೯ಭಂಗಕ್ಕಾಗಿ ಬ್ರಹ್ಮವು ಯಕ್ಷರೂಪದಿಂದ ಅಗ್ನಿ ವಾಯುಗಳಿಗೆ ಕಾಣಿಸಿಕೊಂಡಿತು.ಅವರಿಗೆ ಅದೇನೆಂದು ತಿಳಿಯಲಿಲ್ಲ.ಇಂದ್ರನಿಗೆ ಮಾತ್ರ ಉಮಾ_ಹೈಮವತಿಯ ದಶ೯ನವಾದ ಮೇಲೆ ಅದು ಬ್ರಹ್ಮವೆಂದು ತಿಳಿಯಿತು.
ನಾಲ್ಕನೆಯ ಖಂಡದಲ್ಲಿ ಉಮಾ_ಹೈಮವತಿಯು ಉಪಮಾನಗಳ ಮೂಲಕ ಬ್ರಹ್ಮವಿದ್ಯೆಯನ್ನು ಇಂದ್ರನಿಗೆ ಉಪದೇಶಿಸುತ್ತಾಳೆ.ಕೊನೆಗೆ ಬ್ರಹ್ಮವನ್ನು "ತದ್ವನ"ಎಂದು ಉಪದೇಶಿಸ ಬೇಕೆಂದು ಹೇಳಿದೆ.ಎಲ್ಲರೂ ಪ್ರತ್ಯಗಾತ್ಮ ಬ್ರಹ್ಮವನ್ನು ಪ್ರೀತಿಸುವುದರಿಂದ, ಬಯಸುವುದರಿಂದ ಅದಕ್ಕೆ ಈ ಹೆಸರು ಬಂದಿದೆ.ಈ ಉಪಾಸನೆಯೇ ಕೇನೋಪನಿಷತ್ತಿನ ಪರಮ ರಹಸ್ಯ.
ಕೆಲವು ಮುಖ್ಯ ಉಪನಿಷತ್ ವಾಕ್ಯಗಳು:
ಅದು ಕಿವಿಗೆ ಕಿವಿ,ಮನಸ್ಸಿಗೆ ಮನಸ್ಸು,ವಾಕ್ಕಿಗೆ ವಾಕ್ಕು,ಪ್ರಾಣಕ್ಕೆ ಪ್ರಾಣ,ಕಣ್ಣಿಗೆ ಕಣ್ಣು,ಆದ್ದರಿಂದ ಇಂದ್ರಿಯಗಳಲ್ಲಿ ಆತ್ಮಭಾವವನ್ನು ಬಿಟ್ಟು ಈ ಲೋಕದಿಂದ ಹೋಗಿ ಅಮೃತರಾಗುತ್ತಾರೆ1.ಕಣ್ಣು ನೋಡುವಾಗಲೂ ,ಕಿವಿಯು ಕೇಳುವಾಗಲೂ, ಮೂಗು ಮೂಸುವಾಗಲೂ, ನಾಲಗೆಯು ಸವಿಯುವಾಗಲೂ ಆ ನೋಟ, ಕೇಳುವಿಕೆ,ಯೋಚಿಸುವ ಶಕ್ತಿ,ಸವಿಯುವವನು ಇವೆಲ್ಲವೂ ಇಂದ್ರಿಯಗಳಿಗಿಂತ ಬೇರೆಯಾಗಿರುವ ಆತ್ಮಚೈತನ್ಯದಲ್ಲಿಯೇ ಇರುವುದು.
ಅಲ್ಲಿಗೆ ಕಣ್ಣು ಹೋಗುವುದಿಲ್ಲ,ಮಾತು ಹೋಗುವುದಿಲ್ಲ,ಮನಸ್ಸು ಹೋಗುವುದಿಲ್ಲ. ಬ್ರಹ್ಮವು ಹೇಗಿರುವುದೆಂಬುದನ್ನು ನಾವು ಅರಿಯೆವು.ಬ್ರಹ್ಮವು ತಿಳಿದಿರುವುದಕ್ಕಿಂತ ಬೇರೆ ತಿಳಿಯದಿರುವುದಕ್ಕಿಂತ ಬೇರೆ.ಬ್ರಹ್ಮವನ್ನು ತಕ೯ದಿಂದಾಗಲೀ, ಅಧ್ಯಯನದಿಂದಾಗಲೀ, ತಪೋ ಯಜ್ಞಾದಿಗಳಿಂದಾಗಲೀ ಅರಿಯಲು ಸಾಧ್ಯವಿಲ್ಲ.
ಯಾವುದು ವಾಕ್ಕಿನಿಂದ ವ್ಯಕ್ತವಾಗುವುದಿಲ್ಲವೋ, ಯಾವುದರಿಂದ ವಾಕ್ಕು ವ್ಯಕ್ತವಾಗುತ್ತದೆಯೋ, ಅದು ಬ್ರಹ್ಮವೆಂದು ತಿಳಿ.ಯಾವುದನ್ನು ಮನಸ್ಸಿನಿಂದ ಮನನ ಮಾಡಲು ಆಗುವುದಿಲ್ಲವೋ ಯಾವುದರಿಂದ ಮನಸ್ಸು ಮನನ ಮಾಡಲ್ಪಟ್ಟಿದೆಯೋ ಅದೇ ಬ್ರಹ್ಮವೆಂದು ತಿಳಿ.ಇದನ್ನೇ ಕಣ್ಣು,ಕಿವಿ,ಪ್ರಾಣಕ್ಕೆ ಅನ್ವಯಿಸಿಕೊಳ್ಳಬೇಕು.
ತಿಳಿಯುವವನಿಗಿಂತ ಬ್ರಹ್ಮವು ಬೇರೆ ಅಲ್ಲ.ತಿಳಿದವರಿಗೆ ತಿಳಿಯದೆ ಇರುತ್ತದೆ.ತಿಳಿಯದವರಿಗೆ ತಿಳಿದಿರುತ್ತದೆ2. ಬ್ರಹ್ಮವು ಜ್ಞಾನಕ್ಕೆ ವಿಷಯವಲ್ಲ.ಯಾವಾಗ ಬ್ರಹ್ಮವು ಬೋಧನೆಯಿಂದ ತಿಳಿಯಲ್ಪಡುತ್ತದೆಯೋ ಆಗ ತಿಳಿದಂತಾಗುತ್ತದೆ.ಇದರಿಂದ ಅಮೃತವನ್ನು ಹೊಂದುತ್ತಾನೆ.
ಅಗತ್ಯಗಳಾದ ಧನ, ಮಂತ್ರ,ಔಷಧ,ತಪಸ್ಸು,ಯೋಗ,ಇವುಗಳಿಂದ ಉತ್ಪನ್ನವಾದ ವೀಯ೯ವು ಮೃತ್ಯುವನ್ನು ಜಯಿಸಲಾರದು. ಆತ್ಮವಿದ್ಯೆಯಿಂದ ಉಂಟಾದ ವೀಯ೯ವು ಮಾತ್ರ ಮೃತ್ಯುವನ್ನು ಜಯಿಸಬಲ್ಲದು. ಇದನ್ನು ಆತ್ಮನಿಂದಲೇ ಪಡದುಕೊಳ್ಳಬೇಕು. ವಿವೇಕಿಗಳು ಸವ೯ಪ್ರಾಣಿಗಳಲ್ಲಿಯೂ ಆತ್ಮತತ್ವವನ್ನು ಅರಿತುಕೊಂಡು ಈ ಲೋಕದಿಂದ ಹೋಗಿ ಅಮೃತರಾಗುತ್ತಾರೆ.
ಬ್ರಹ್ಮವು ಅವಿಜ್ಞಾತವಾದುದರಿಂದ ಅದು ಇಲ್ಲವೇ ಇಲ್ಲವೆಂಬ ಭ್ರಾಂತಿ ಬರದಿರಲೆಂದು ಬ್ರಹ್ಮವಿದ್ಯೆಯನ್ನು ಈ ಆಖ್ಯಾಯಿಕೆಯಲ್ಲಿ ಹೇಳಲಾಗಿದೆ.ದೇವತೆಗಳ ಗವ೯ಭಂಗಕ್ಕಾಗಿ ಬ್ರಹ್ಮವು ಯಕ್ಷ ರೂಪದಿಂದ ಅಗ್ನಿವಾಯುಗಳಿಗೆ ಕಾಣಿಸಿಕೊಳ್ಳಲು ಅವರಿಗೆ ಅದೇನೆಂದು ತಿಳಿಯಲಿಲ್ಲ. ಇಂದ್ರನಿಗೆ ಮಾತ್ರ ಉಮಾ _ಹೈಮವತಿಯ ದಶ೯ನವಾದಮೇಲೆ ಅದು ಬ್ರಹ್ಮವೆಂದು ತಿಳಿಯಿತು.ಬ್ರಹ್ಮವಿದ್ಯೆಯ ಸ್ತುತಿಗಾಗಿಯೂ ಬ್ರಹ್ಮದ ಅಸ್ತಿತ್ವವನ್ನು ಪ್ರತಿಪಾದಿಸುವುದಕ್ಕಾಗಿಯೂ ಈ ಅಖ್ಯಾಯಿಕೆಯನ್ನು ಹೇಳಿದೆ.
ಬ್ರಹ್ಮಕ್ಕ ತದ್ವನ ಎಂದು ಹೆಸರು.ಬ್ರಹ್ಮವನ್ನು ತದ್ವನ ಎಂದು ಉಪಾಸಿಸಬೇಕು3.ತದ್ವನ ಎಂದರೆ ಅದರವನ.ಬ್ರಹ್ಮವು ಎಲ್ಲಾ ಪ್ರಾಣಿಗಳ ಆತ್ಮವಾಗಿರುವುದರಿಂದ ವನವು ಎಂದರೆ ವನನೀಯವಾದುದು, ಭಜಿಸಲ್ಪಡತಕ್ಕದ್ದು. ತಪಸ್ಸು, ಧಮ೯, ಕಮ೯ ಇವು ಬ್ರಹ್ಮಕ್ಕೆ ಪ್ರರ್ತಿಷ್ಠೆ. ಸತ್ಯವು ಅದರ ಆಶ್ರಯ.4. ಬ್ರಹ್ಮವನ್ನು ಪಡೆಯುವುದಕ್ಕೆ ತಪಸ್ಸು, ದಯೆ, ಕಮ೯ಗಳು ಸಾಧನಗಳು.ಸಂಸ್ಕಾರ ಪಡೆದವನಿಗೆ ಸತ್ವ ಶುದ್ಧಿಯಮೂಲಕ (ಚಿತ್ತಶುದ್ಧಿಯಮೂಲಕ) ತತ್ವಜ್ಞಾನವುಂಟಾಗುತ್ತದೆ. ಯಾರು ಇದನ್ನು ಹೀಗೆ ತಿಳಿಯುತ್ತಾರೆಯೊ ಅವನು ಪಾಪವನ್ನು ಕಳೆದುಕೊಂಡು ಅನಂತವೂ ಮಹತ್ತಮವೂ ಆದ ಬ್ರಹ್ಮದಲ್ಲಿ ಪ್ರತಿಷ್ಠಿತನಾಗುತ್ತಾನೆ.
ಕಠೋಪನಿಷತ್ತು ಹಾಗೂ ಅದ್ವೈತ:
ಉಪನಿಷತ್ತುಗಳಲ್ಲಿ ಕಠೋಪನಿಷತ್ತು ಅತ್ಯಂತ ಪ್ರಸಿದ್ಧವೂ ಆದರಣೀಯವೂ ಆಗಿದೆ.ಪಾಶ್ಚಾತ್ಯ ಪಂಡಿತರು ಭಾರತೀಯ ಅಧ್ಯಾತ್ಮ ರಹಸ್ಯವನ್ನು ವಿವರಿಸುವಾಗ ಇದನ್ನೇ ಪರಮಾದಶ೯ವಾಗಿ ಬಳಸುತ್ತಾರೆ.ಇದಕ್ಕೆ "ಕಾಠಕೋಪನಿಷತ್"ಎಂಬ ಹೆಸರೂ ಇದೆ.ಇದು ಕೃಷ್ಣಯಜುವೇ೯ದ ಶಾಖೆಗೆ ಸೇರಿದೆ.
ನಚೀಕೇತನು ಯಮಲೋಕಕ್ಕೆ ಹೋಗಿ ಯಮನಿಂದ ಆತ್ಮಜ್ಞಾನವನ್ನು ಹೊಂದಿದ ಅಖ್ಯಾಯಿಕೆಯು ಅತ್ಯಂತ ಪುರಾತನವಾದದ್ದು.ಈ ಉಪನಿಷತ್ತಿನಲ್ಲಿ ಮೂರು ವಲ್ಲಿಗಳಿವೆ. ಪ್ರತಿ ವಲ್ಲಿಯಲ್ಲಿಯೂ ಎರಡು ಅಧ್ಯಾಯಗಳಿವೆ.
ಮೊದಲನೆಯ ಅಧ್ಯಾಯ:
ನಚೀಕೇತನು ತಂದೆಯ ಆಜ್ಞೆಯ ಪ್ರಕಾರ ಯಮನ ಹತ್ತಿರ ಹೋದನು. ಯಮನು ಎಲ್ಲಿಗೋ ಹೋಗಿದ್ದರಿಂದ ನಚೀಕೇತನು ಯಮನು ಬರುವವರೆಗೆ ಉಪವಾಸವಿದ್ದು ಎರಡು ದಿನಗಳನ್ನು ಕಳೆದನು.ನಮಸ್ಕಾರಾಹ೯ವಾದ ಅಥಿತಿಯು ಮೂರುದಿನಗಳು ಊಟಮಾಡದೆ ಇದ್ದುದರಿಂದ ದೋಷಪರಿಹಾರಕ್ಕಾಗಿ ಯಮನು ನಚೀಕೇತನಿಗೆ ಮೂರು ವರಗಳನ್ನು ಅನುಗ್ರಹಿಸಿದನು.
1)ಮೊದಲನೆಯದಾಗಿ ತನ್ನ ತಂದೆಯು ತನ್ನ ವಿಷಯದಲ್ಲಿ ಪ್ರಸನ್ನನಾಗಿರಬೇಕು.
2)ಸ್ವಗ೯ಕ್ಕೆ ಸಾಧನವಾದ ಅಗ್ನಿವಿದ್ಯೆಯನ್ನು ಬೋಧಿಸಬೇಕು.
3)ಮೂರನೆಯ ವರವು ಆತ್ಮಜ್ಞಾನಕ್ಕೆ ಸಂಬಂಧಪಟ್ಟಿದ್ದು,ದೇಹಾವಸಾನವಾದ ಮೇಲೆ ಆತ್ಮನು ಇದ್ದಾನೆಯೊ ಇಲ್ಲವೊ ಎಂಬ ಪ್ರಶ್ನೆ.
ನಚೀಕೇತನು ಆತ್ಮತತ್ವವನ್ನು ಅರಿಯಲು ತಕ್ಕವನೋ ಅಲ್ಲವೊ ಎಂಬುದನ್ನು ಪರೀಕ್ಷಿಸಲು ಯಮನು ಅವನನ್ನು ನಾನಾ ವಿಧವಾದ ಪ್ರಲೋಭನೆಗೊಳಿಸಲು ಪ್ರಯತ್ನಿಸಿದನು.ಆದರೆ ನಚೀಕೇತನು ಯಾವ ಲೌಕಿಕ ಸುಖಗಳನ್ನು ಬಯಸಲಿಲ್ಲ.
ಯಮನು ನಚೀಕೇತನಿಗೆ ಈರೀತಿ ಉಪದೇಶಿಸಿದನು.ಶೇಯಸ್ಸು ಬೇರೆ,ಪ್ರೇಯಸ್ಸು ಬೇರೆ.ಅವಿವೇಕಿಯು ಯೋಗಕ್ಷೇಮವನ್ನು ಬಯಸುತ್ತಾ ಪ್ರೇಯಸ್ಸನ್ನು ಆರಿಸಿಕೊಂಡು ಪುರುಷಾಥ೯ದಿಂದ ಚ್ಯುತರಾಗುತ್ತಾನೆ.ಧೀಮಂತನು ಶೇಯಸ್ಸನ್ನು ಆರಿಸಿಕೊಳ್ಳುತ್ತಾನೆ. ಆತ್ಮತತ್ವವನ್ನು ಶ್ರವಣ ಮಾಡಿದರೂ ತಿಳಿದುಕೊಳ್ಳುವುದು ಕಷ್ಟ.ಇದನ್ನು ಉಪದೇಶ ಮಾಡುವ ಗುರುವೂ ತಿಳಿದುಕೊಳ್ಳುವ ಶಿಷ್ಯನೂ ಅದ್ಭುತ ವ್ಯಕ್ತಿಗಳು.ಸೂಕ್ಷ್ಮವಾಗಿರುವ ಆತ್ಮತತ್ವವನ್ನು ಸಾಮಾನ್ಯರಿಂದ ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲ.ಉತ್ತಮನಾದ ಆಚಾಯ೯ನಿಂದಲೇ ತಿಳಿದುಕೊಳ್ಳಬೇಕು1.ನಿಷ್ಕಾಮವಾಗಿ ಆತ್ಮನನ್ನು ಬಯಸುವವರಿಗೆ ಆತ್ಮನಿಂದಲೇ ಆತ್ಮನು ಲಭಿಸುತ್ತಾನೆ.ಸದಾಚಾರ ಮತ್ತು ಇಂದ್ರಿಯ ನಿಗ್ರಹವು ಆತ್ಮಪ್ರಾಪ್ತಿಗೆ ಅತ್ಯಂತ ಅವಶ್ಯಕ.
ಮೂರನೆಯ ವಲ್ಲಿಯಲ್ಲಿಯ ಮುಖ್ಯವಿಷಯ ರಥರೂಪಕ ಕಲ್ಪನೆ.ಶರೀರವು ರಥ,ಆತ್ಮನೇ ರಥದ ಒಡೆಯ.ಬುದ್ಧಿಯು ಸಾರಥಿ.ಮನಸ್ಸು ಕಡಿವಾಣ,ಇಂದ್ರಿಯಗಳು ಕುದುರೆಗಳು,ಶಬ್ದಾದಿ ವಿಷಯಗಳು ಆ ಕುದುರೆಗಳು ಹೋಗುವ ಮಾಗ೯ಗಳು.ಯಾವನು ವಿವೇಕಿಯೋ ಅವನ ಇಂದ್ರಿಯಗಳು ಒಳ್ಳೆಯ ಕುದುರೆಗಳಂತೆ ವಶವಾಗಿ ಇರುವುವು.ಅವನು ಪರಮ ಪದವನ್ನು ಹೊಂದುತ್ತಾನೆ.
ಎರಡನೆಯ ಅಧ್ಯಾಯ:ಇಂದ್ರಿಯಗಳು ಸ್ವಬಾವತಃ ಹೊರಗೇ ಹೋಗುತ್ತವೆ.ಆದುದರಿಂದ ಮನುಷ್ಯನು ಹೊರಗೆ ನೋಡುತ್ತಾನೆಯೇ ಹೊರತು ಅಂತರಾತ್ಮವನ್ನು ನೋಡುವುದಿಲ್ಲ. ಅಮೃತತ್ವವನ್ನು ಬಯಸುವ ಯಾನನೋ ಒಬ್ಬಧೀರನು ಇಂದ್ರಿಯಗಳನ್ನು ಹಿಂದಿರುಗಿಸಿ ಪ್ರತ್ಯಗಾತ್ಮನನ್ನು ನೋಡುತ್ತಾನೆ.ಪರಮಾತ್ಮನು ಅಂಗುಷ್ಠಮಾತ್ರ ಪರಿಣಾಮವುಳ್ಳವನು.ಇವನೇ ಭೂತ ಭವಿಷ್ಯಗಳ ಒಡೆಯನು.ಇವನಲ್ಲಿ ಭೇದವನ್ನು ಕಾಣಬಾರದು.
ಈ ಶರೀರವೆಂಬ ಪುರದಲ್ಲಿರುವ ಆತ್ಮನನ್ನು ಸರಿಯಾಗಿ ಅರಿತುಕೊಂಡರೆ ಶೋಕವನ್ನು ದಾಟಿ ಮುಕ್ತನಾಗಬಹುದು. ಅವನು ಸವ೯ಜ್ಞ, ಸವ೯ಶಕ್ತ, ಸವ೯ವ್ಯಾಪ್ತಇಂದ್ರಿಯ,ಪ್ರಾಣಗಳ ಕಾಯ೯ಗಳು ಆತ್ಮನಿಗಾಗಿ ನಡೆಯುತ್ತಿರುವುವು.
ಸಂಸಾರ ಸ್ವರೂಪವನ್ನು ನಿಶ್ಚಯಿಸುವುದರ ಮೂಲಕ ಬ್ರಹ್ಮಸ್ವರೂಪವನ್ನು ನಿಧ೯ರಿಸಲು ಆರನೆಯ ವಲ್ಲಿಯು ಆರಂಭವಾಗಿದೆ.ಬ್ರಹ್ಮದ ನಿಯಾಮಕ ಶಕ್ತಿಯಿಂದ ಸೂಯ೯ಚಂದ್ರಾದಿಗಳು ತಮ್ಮ ತಮ್ಮ ಕಾಯ೯ವನ್ನು ಮಾಡುತ್ತಿರುವುವು.ಬ್ರಹ್ಮರೂಪವನ್ನು ಕಣ್ಣಿನಿಂದ ನೋಡಲು ಆಗುವುದಿಲ್ಲ.ಮನಸ್ಸನ್ನು ನಿಯಮಿಸುವ ಬುದ್ಧಿಯಿಂದ,ಮನನ ರೂಪವಾದ "ಸಮ್ಯಕ್ದಶ೯ನ"ದಿಂದ ಬ್ರಹ್ಮವು ಪ್ರಕಾಶಿತವಾಗುವುದು.ಇಂದ್ರಿಯಗಳು ಮನಸ್ಸಿನೊಂದಿಗೆ ಶಾಂತವಾಗಿ ಬುದ್ಧಿಯೂ ಅಲ್ಲಾಡದಿದ್ದರೆ ಅದನ್ನು "ಪರಮಗತಿ"ಎಂದು ಕರೆಯುತ್ತಾರೆ.ಸ್ಥಿರವಾದ ಇಂದ್ರಿಯ ಧಾರಣೆ ಎಂಬ ಅವಸ್ಥೆಯೇ ಯೋಗವು2. ಬ್ರಹ್ಮವು ಅತೀಂದ್ರಿಯವಾದ್ದರಿಂದ ಆಗಮಾಥಾ೯ನುಸಾರಿಯಾದ ಶ್ರದ್ಧೆಯುಳ್ಳ ಗುರುವಿನಿಂದ ತಿಳಿಯಬಹುದು. ಹೃದಯದಲ್ಲಿ ಅಡಗಿರುವ ಕಾಮಗಳ ನಾಶವಾದರೆ ಇಲ್ಲಿಯೇ ಬ್ರಹ್ಮವನ್ನು ಪಡೆದುಕೊಳ್ಳಬಹುದು.
ಹೃದಯಕ್ಕೆ ನೂರೊಂದು ನಾಡಿಗಳಿವೆ.ಅವುಗಳಲ್ಲಿ ಒಂದು ನೆತ್ತಿಯವರೆಗೆ ಹೊರಟಿದೆ.ಅದರ ಮೂಲಕ ಮೇಲಕ್ಕೆ ಹೋಗುವವನು ಅಮೃತತ್ವವನ್ನು ಪಡೆಯುತ್ತಾನೆ.ಇತರ ನಾಡಿಗಳು ಸಂಸಾರಕ್ಕೆ ಕಾರಣವಾಗುತ್ತವೆ.ಜನರ ಹೃದಯದಲ್ಲಿ ಇರುವ ಅಂಗುಷ್ಠಮಾತ್ರ ಪರಿಣಾಮವುಳ್ಳ ಪುರುಷನನ್ನು ತನ್ನ ಶರೀರದಿಂದ ಬೇಪ೯ಡಿಸಿ ಅವನು ಶುದ್ಧನೆಂದೂ ಅಮೃತನೆಂದೂ ತಿಳಿಯಬೇಕು.ಅದರಂತೆ ಯಾವನು ಅಧ್ಯಾತ್ಮವನ್ನು ತಿಳಿದರೂ ಅವನೂ ಮುಕ್ತನಾಗುವನು. ಇದೇ ಕಠೋಪನಿಷತ್ತಿನ ಸಂದೇಶ.
ಶಾಂತಿಪಾಠ
ಹರಿಃಓಂ
"ಸಹನಾ ಭವತು ಸಹನೌ ಭುನಕ್ತು
ಸಹವೀಯ೯ಂ ಕರವಾವಹೈ
ತೇಜಸ್ವಿನಾವಧೀತಮಸ್ತು ಮಾವಿದ್ವಿಷಾವಹೈ"
ಓಂ ಶಾಂತಿ ಶಾಂತಿ ಶಾಂತಿಃ.
ಪರಮೇಶ್ವರನು ಗುರುಶಿಷ್ಯರಾದ ನಮ್ಮನ್ನು ಕಾಪಾಡಲಿ.ನಮ್ಮಿಬ್ಬರನ್ನೂ ಜೊತೆಯಲ್ಲಿ ಪೋಷಿಸಲಿ.ನಾವು ಜೊತೆಯಲ್ಲಿ ಸಾಮಥ್ಯ೯ವನ್ನುಂಟು ಮಾಡುವಂತಾಗಲಿ.ನಮ್ಮಿಬ್ಬರ ಅಧ್ಯಯನವು ತೇಜಸ್ವಿಯಾಗಲಿ.ನಾವು ಪರಸ್ಪರ ದ್ವೇಷಮಾಡದೇ ಇರುವಂತಾಗಲಿ.
ಓಂ ಶಾಂತಿ ಶಾಂತಿ ಶಾಂತಿಃ
ಮನುಷ್ಯನು ಧನದಿಂದ ತೃಪ್ತಿಪಡುವವನಲ್ಲ3.ನಿನ್ನನ್ನು ನೋಡಿದೆವಾದರೆ ಧನವನ್ನು ಹೊಂದುತ್ತೇವೆ.ನೀನು ಯಮಪದವಿಯಲ್ಲಿ ಆಳುವವರೆಗೂ ಬದುಕುವೆವು.ಆದರೆ ನನಗೆ ಆ ವರವೇ ಬೇಕು.
ಶ್ರೇಯಸ್ಸು ಬೇರೆ ಪ್ರೇಯಸ್ಸು ಬೇರೆ.ಅವೆರಡೂ ಬಿನ್ನ ಪ್ರಯೋಜನಗಳುಳ್ಳವುಗಳಾಗಿ ಪುರುಷನನ್ನು ಬಂಧಿಸುವುವು.ಅವೆರಡರಲ್ಲಿ ಶ್ರೇಯಸ್ಸನ್ನು ತೆಗೆದುಕೊಳ್ಳುವವನಿಗೆ ಒಳ್ಳೆಯದಾಗುವುದು.ಯಾವನು ಪ್ರೇಯಸ್ಸನ್ನೇ ಆರಿಸಿಕೊಳ್ಳುವನೋ ಅವನು ಪುರುಷಾಥ೯ದಿಂದ ವಂಚಿತನಾಗುವನು.ಶ್ರೇಯಸ್ಸು ಮತ್ತು ಪ್ರೇಯಸ್ಸು ಮನುಷ್ಯನ ಸಮೀಪಕ್ಕೆ ಬರುತ್ತವೆ.ಧೀಮಂತನು ಅವುಗಳನ್ನು ಚೆನ್ನಾಗಿ ಪರೀಕ್ಷಿಸಿ ವಿವೇಚಿಸುತ್ತಾನೆ.ಅವಿವೇಕಿಯು ಯೋಗಕ್ಷೇಮಕ್ಕಾಗಿ ಪ್ರೇಯಸ್ಸನ್ನೇ ಆರಿಸಿಕೊಳ್ಳುತ್ತಾನೆ.ನಚೀಕೇತನೆ,
ನೀನು ಪ್ರಿಯವಾದ ಮತ್ತು ಮತ್ತು ಪ್ರಿಯರೂಪವಾz ಕಾಮಗಳನ್ನು ವಿವೇಚಿಸಿ ತ್ಯಾಗಮಾಡಿರುತ್ತೀಯೆ. ಯಾವುದರಲ್ಲಿ ಬಹು ಮನುಷ್ಯರು ಮುಳುಗುತ್ತಾರೋ ಅಂಥ ವಿತ್ತಮಯವಾದ ಈ ಮಾಗ೯ವನ್ನು ನೀನು ಹೊಂದಲಿಲ್ಲ.
'ಅಂಧೇನೈವ ನೀಯಮಾನಾ ಯಥಾಂದಾಃ"ಎನ್ನುವಂತೆ ಅವಿದ್ಯೆಯ ಮಧ್ಯದಲ್ಲಿ ಇರುವವರಾಗಿ ತಾವೇ ಧೀರರು ಪಂಡಿತರು ಎಂದು ತಿಳಿದುಕೊಂಡು ವಕ್ರಗತಿಯಲ್ಲಿ ನಡೆಯುತ್ತಾ ಕುರುಡನು ಕರೆದುಕೊಂಡು ಹೋಗುತ್ತಿರುವ ಕುರುಡರು ಅನಥ೯ವನ್ನು ಹೊಂದುವಂತೆ ಮೂಢರು ಸುತ್ತುತ್ತಿರುವರು4.
ಈ ಆತ್ಮನು ಬಹುಜನರ ಶ್ರವಣಕ್ಕೂ ಲಭ್ಯನಲ್ಲ.ಶ್ರವಣ ಮಾಡಿದಮೇಲೂ ಬಹು ಜನು ಇವನನ್ನು ಅರಿಯರು.ಇವನನ್ನು ಹೇಳುವವನು ಆಶ್ಚಯ೯ನು.ಪಡೆಯುವವನು ಕುಶಲನು.ಕುಶಲನಿಂದ ಅನುಶಿಷ್ಟನಾಗಿ ತಿಳಿದುಕೊಳ್ಳುವವನು ಆಶ್ಚಯ೯ನು.
ಈ ಆತ್ಮಜ್ಞಾನವು ತಕ೯ದಿಂದ ಪಡೆಯತಕ್ಕದ್ದಲ್ಲ.ಬೇರೆಯವರಿಂದಲೇ ಹೇಳಲ್ಪಟ್ಟರೆ ಸುಜ್ಞಾನವನ್ನುಂಟು ಮಾಡುವುದು.ಇದನ್ನು ನೀನು ಹೊಂದಿರುತ್ತೀಯ. ನೀನು ಸತ್ಯವಾದ ಧೃತಿಯುಳ್ಳವನು.ನಿನ್ನಂಥ ಕೇಳತಕ್ಕವನು ನಮಗೆ ಉಂಟಾಗಲಿ.
ಅನಿತ್ಯ ವಸ್ತುಗಳಿಂದ ನಿತ್ಯವು ಪಡೆಯತಕ್ಕದ್ದಲ್ಲ.ಆ ದುದ೯ಶ೯ನೂ,ಗೂಢವನ್ನು ಪ್ರವೇಶಿಸಿರುವವನೂ, ಗುಹೆಯಲ್ಲಿರುವವನೂ, ಗಹ್ವರದಲ್ಲಿರುವವನೂ, ಪುರಾಣನೂ ಆದ ದೇವನನ್ನು ಅಧ್ಯಾತ್ಮ ಯೋಗದಿಂದ ತಿಳಿದುಕೊಂಡು ಧೀರನು ಹಷ೯ ಶೋಕಗಳನ್ನು ಬಿಡು ತ್ತಾನೆ.
ಮನಸ್ಸನ್ನು ವಿಷಯಗಳಿಂದ ಎಳೆದುಕೊಂಡು ಆತ್ಮನಲ್ಲಿಯೇ ನಿಲ್ಲಿಸುವುದಕ್ಕೆ 'ಅಧ್ಯಾತ್ಮಯೋಗ'ವೆಂದು ಹೆಸರು.ಎಲ್ಲಾ ವೇದಗಳೂ ಯಾವ ಪದವನ್ನು ಪ್ರತಿಪಾದಿಸುತ್ತವೆಯೊ,ಎಲ್ಲಾ ತಪಸ್ಸುಗಳು ಯಾವುದನ್ನು ಹೇಳುತ್ತವೆಯೊ, ಯಾವುದನ್ನು ಇಚ್ಛಿಸುತ್ತ ಬ್ರಹ್ಮಚಯ೯ವನ್ನು ಆಚರಿಸುತ್ತಾರೆಯೊ, ಆ ಪದವನ್ನು ನಿನಗೆ ಸಂಗ್ರಹವಾಗಿ ಹೇಳುತ್ತೇನೆ,ಇದು "ಓಂ" ಎಂಬುದು.ಈ ಅಕ್ಷರವೇ ಬ್ರಹ್ಮ.ಈ ಅಕ್ಷರವನ್ನು ತಿಳಿದುಕೊಂಡು ಬ್ರಹ್ಮಲೋಕದಲ್ಲಿ ಮಹಿಮೆಯನ್ನು ಹೊಂದುತ್ತಾನೆ.
ಈ ಆಧಾರವು ಶ್ರೇಷ್ಠವಾದುದು.ಈ ಆಧಾರವು ಪರವಾದುದು.ಈ ಆಧಾರವನ್ನು ತಿಳಿದುಕೊಂಡು ಬ್ರಹ್ಮಲೋಕದಲ್ಲಿ ಮಹಿಮೆಯನ್ನು ಹೊಂದುತ್ತಾನೆ.
"ನ ಜಾಯತೇ ಮ್ರಿಯತೇ ವಾ ವಿಪಶ್ಚಿತ್"
ಜ್ಞಾನಿಯು ಹುಟ್ಟುವುದೂ ಇಲ್ಲ.ಸಾಯುವುದೂ ಇಲ್ಲ. ಇವನು ಯಾವುದರಿಂದಲೂ ಹುಟ್ಟುವುದಿಲ್ಲ. ಇವನಿಂದ ಯಾರೂ ಹುಟ್ಟಿಲ್ಲ.ಈತನು ಜನ್ಮರಹಿತನೂ ನಿತ್ಯನೂ ಶಾಶ್ವತನು,ಪುರಾಣನು,ಶರೀರವು ನಾಶವಾಗುತ್ತಿದ್ದರೂ ನಾಶವಾಗುವುದಿಲ್ಲ.
"ಅಣೋರಣೀಯಾನ್ ಮಹತೋ ಮಹೀಯಾನ್"
ಅಣುವಿಗಿಂತ ಅಣುವೂ ಮಹತ್ತಿಗಿಂತ ಮಹತ್ತೂ ಆದ ಈ ಆತ್ಮನು ಪ್ರಾಣಿಗಳ ಹೃದಯದಲ್ಲಿ ಸ್ಥಿತನಾಗಿರುವನು.ಕಾಮವಿಲ್ಲದವನು ಆತ್ಮನನ್ನು ನೋಡುತ್ತಾನೆ. ಧಾತುಗಳ ಪ್ರಸನ್ನತೆಯಿಂದ ಆತ್ಮನ ಮಹಿಮೆಯನ್ನು ನೋಡುತ್ತಾನೆ.ಆದುದರಿಂದ ಶೋಕವಿಲ್ಲದವನಾಗುವನು.
ಈ ಆತ್ಮನು ಕುಳಿತುಕೊಂಡು ದೂರಹೋಗುತ್ತಾನೆ.ಮಲಗಿಕೊಂಡು ಎಲ್ಲೆಲ್ಲಿಯೂ ಹೋಗುತ್ತಾನೆ. ಮದಾಮದ ರೂಪನಾದ ಆ ದೇವನನ್ನು ನನಗಿಂತ ಯಾವನು ತಿಳಿಯಬಲ್ಲನು?ಅನಿತ್ಯವಾದ ಶರೀರಗಳಲ್ಲಿ ನಿತ್ಯನಾದ,ಅಶರೀರನಾದ,ಮಹತ್ತಮನಾದ ಸವ೯ವ್ಯಾಪ್ತನಾದ ಆತ್ಮನನ್ನು ತಿಳಿದುಕೊಂಡು ಧೀರನು ಶೋಕಿಸುವುದಿಲ್ಲ.
ನ ಅಯಮಾತ್ಮಾ ಪ್ರವಚನೇನ ಲಬ್ಯೋ
ನ ಮೇಧಯಾ ನ ಬಹುನಾ ಶ್ರುತೇನ|
ಈ ಆತ್ಮನು ಪ್ರವಚನದಿಂದ ಲಭ್ಯನಲ್ಲ,ಮೇಧಾ ಶಕ್ತಿಯಿಂದಲೂ, ಬಹು ಶ್ರವಣದಿಂದಲೂ ಲಭ್ಯನಲ್ಲ.ಯಾವನನ್ನೇ ಈ ಸಾಧಕನು ಬೇಡುತ್ತಾನೆಯೊ ಅವನಿಂದ ಲಭ್ಯನು.ಅವನಿಗೆ ಈ ಆತ್ಮನು ತನ್ನ ತನುವನ್ನು ತೋರಿಸುತ್ತಾನೆ.
ದುರಾಚಾರದಿಂದ ನಿವೃತ್ತನಾಗದವನೂ, ಶಾಂತನಲ್ಲದವನೂ, ಸಮಾಹಿತನಲ್ಲದವನೂ,ಮನಃಶಾಂತಿ ಇಲ್ಲದವನೂ ಪ್ರಜ್ಞಾನದಿಂದ ಇವನನ್ನು ಪಡೆಯಲಾರನು.ಯಾವನಿಗೆ ಬ್ರಾಹ್ಮಣ ಕ್ಷತ್ರಿಯರಿಬ್ಬರೂ ಅನ್ನವಾಗಿರುವರೊ ಯಾವನಿಗೆ ಮೃತ್ಯುವು ಉಪಸೇಚನವಾಗಿರುವುದೊ ಅವನು ಎಲ್ಲಿರುವನೆಂಬುದನ್ನು ಹೀಗೆ ಯಾವನು ಅರಿಯುವನು?
.ಇಬ್ಬರು ಪ್ರವೇಶಿಸಿರುತ್ತಾರೆ.ಇವರನ್ನು ನೆರಳು ಬಿಸಿಲುಗಳೆಂದು ಬ್ರಹ್ಮಜ್ಞಾನಿಗಳೂ,ಮೂರುಸಲ ನಚೀಕೇತಾಗ್ನಿಯನ್ನು ಚಯನಮಾಡಿರುವ ಪಂಚಾಗ್ನಿಗಳೂ ಹೇಳುತ್ತಾರೆ.
ಆತ್ಮನನ್ನು ರಥಿಯೆಂದೂ, ಇಂದ್ರಿಯವನ್ನು ರಥವೆಂದೂ, ಬುದ್ಧಿಯನ್ನು ಸಾರಥಿ ಎಂದೂ,ಮನಸ್ಸನ್ನು ಕಡಿವಾಣವೆಂದೂ ತಿಳಿ. ಇಂದ್ರಿಯಗಳನ್ನು ಕುದುರೆಗಳೆಂದು ಹೇಳುತ್ತಾರೆ.ವಿಷಯಗಳನ್ನು ಅವುಗಳ ಮಾಗ೯ಗಳೆಂದೂ.ಶರೀರ,ಇಂದ್ರಿಯ.ಮನಸ್ಸು ಇವುಗಳಿಂದ ಕೂಡಿದ ಆತ್ಮನನ್ನು ಸಂಸಾರಿ ಎಂದು ಹೇಳುತ್ತಾರೆ.
ಕೇವಲ ಆತ್ಮನಿಗೆ ಭೋಕ್ತøತ್ವವು ಇರುವುದಿಲ್ಲ.ಬುದ್ಧಿಯೇ ಮೊದಲಾದ ಉಪಾಧಿಗಳಿಂದಲೇ ಬೋಕ್ತøತ್ವವು ಉಂಟಾಗಿದೆ.ಭೋಕ್ತøತ್ವದಿಂದ ಸಂಸಾರ ಉಂಟಾಗಿದೆ.ಯಾವನು ಯಾವಾಗಲೂ ಅಯುಕ್ತವಾದ ಮನಸ್ಸಿನಿಂದ ಕೂಡಿದವನಾಗಿ ಅನಿಪುಣನಾಗಿರುವನೋ ಅವನ ಇಂದ್ರಿಯಗಳು ಸಾರಥಿಯ ತುಂಟ ಕುದುರೆಗಳಂತೆ ವಶವಾಗದೆ ಇರುವುವು.
ಯಾವನು ಯಾವಾಗಲೂ ಯುಕ್ತವಾದ ಮನಸ್ಸಿನಿಂದ ಕೂಡಿದವನಾಗಿ ನಿಪುಣನಾಗಿರುವನೋ ಅವನ ಇಂದ್ರಿಯಗಳು ಸಾರಥಿಯ ಒಳ್ಳೆಯ ಕುದುರೆಗಳಂತೆ ವಶವಾಗಿ ಇರುವುವು.
ಯಾವನು ಯಾವಾಗಲೂ ಜ್ಞಾನವಿಲ್ಲದವನಾಗಿ ನಿಗ್ರಹಿಸದ ಮನಸ್ಸುಳ್ಳವನಾಗಿ ಅಶುಚಿಯಾಗಿರುವನೋ ಅವನು ಆ ಪದವನ್ನು ಹೊಂದುವುದಿಲ್ಲ.ಸಂಸಾರವನ್ನು ಹೊಂದುತ್ತಾನೆ. ಯಾವನು ಯಾವಾಗಲೂ ಜ್ಞಾನವುಳ್ಳವನಾಗಿ ನಿಗ್ರಹಿಸಿದ ಮನಸ್ಸುಳ್ಳವನಾಗಿ ಶುಚಿಯಾಗಿರುವನೋ ಅವನು ಪರಮಪದವನ್ನು ಹೊಂದುತ್ತಾನೆ.ಅದರಿಂದ ಪುನಃ ಹುಟ್ಟುವುದಿಲ್ಲ.
ಯಾವ ಮನುಷ್ಯನು ವಿಜ್ಞಾನವೆಂಬ ಸಾರಥಿಯುಳ್ಳವನೋ, ಮನಸ್ಸೆಂಬ ಕಡಿವಾಣವನ್ನು ಹಿಡಿದಿರುವನೋ ಅವನು ಸಂಸಾರಗತಿಯ ಕೊನೆಯನ್ನೆ ಕಾಣುತ್ತಾನೆ.ಅದೇ ವಿಷ್ಣುವಿನ ಪರಮಪದ.
ಇಂದ್ರಿಯಗಳಿಗಿಂತ ವಿಷಯಗಳು ಶ್ರೇಷ್ಠ.ವಿಷಯಗಳಿಗಿಂತ ಮನಸ್ಸು ಶ್ರೇಷ್ಠ.ಮನಸ್ಸಿಗಿಂತ ಬುದ್ಧಿಯು ಶ್ರೇಷ್ಠ.ಬುದ್ಧಿಗಿಂತ ಮಹತ್ ಎಂಬ ಆತ್ಮನು ಶ್ರೇಷ್ಠ.ಮಹತ್ತಿಗಿಂತ ಅವ್ಯಕ್ತವು ಶ್ರೇಷ್ಠ.ಅವ್ಯಕ್ತಕ್ಕಿಂತ ಪುರುಷನು ಶ್ರೇಷ್ಠ.ಪುರುಷನಿಗಿಂತ ಶ್ರೇಷ್ಠವಾದುದು ಯಾವುದೂ ಇಲ್ಲ.ಅದೇ ಕೊನೆ.ಅದಕ್ಕಿಂತ ಶ್ರೇಷ್ಠವಾದ ಗತಿ.ಎಲ್ಲಾ ಪ್ರಾಣಿಗಳಲ್ಲೂ ಗೂಢವಾಗಿರುವ ಈ ಆತ್ಮನು ಪ್ರಕಾಶಿಸುವುದಿಲ್ಲ.ಆದರೆ ಸೂಕ್ಷ್ಮದಶಿ೯ಗಳು ಏಕಾಗ್ರವಾದ ಸೂಕ್ಷ್ಮವಾದ ಬುದ್ಧಿಯಿಂದ ಆತ್ಮನನ್ನು ನೋಡುತ್ತಾರೆ.
ವಿವೇಕಿಯು ವಾಕ್ಕನ್ನು ಮನಸ್ಸಿನಲ್ಲಿ ಲಯಮಾಡಿಕೊಳ್ಳಬೇಕು. ಮನಸ್ಸನ್ನು ಪ್ರಕಾಶ ಸ್ವರೂಪವಾದ ಬುದ್ಧಿಯಲ್ಲಿ ಲಯಮಾಡಿಕೊಳ್ಳಬೇಕು.ಬುದ್ಧಿಯನ್ನು ಮಹತ್ ಆತ್ಮನಲ್ಲಿ ಲಯಮಾಡಿಕೊಳ್ಳಬೇಕು.ಮಹತ್ ಆತ್ಮನನ್ನು ಶಾಂತನಾದ ಆತ್ಮನಲ್ಲಿ ಲಯ ಮಾಡಿಕೊಳ್ಳಬೇಕು.
ಉತ್ತಿಷ್ಠತ ಜಾಗ್ರತ ಪ್ರಾಪ್ಯ ವರಾನ್ ನಿಬೋಧತ
ಕ್ಷುರಸ್ಯ ಧಾರಾ ನಿಶಿತಾ ದ್ಯುರತ್ಯಯಾ
ದುಗ೯ಂ ಪಥಸ್ತತ್ ಕವಯೋ ವದಂತಿ|
ಏಳಿರಿ, ಎಚ್ಚರಗೊಳ್ಳಿರಿ,ಶ್ರೇಷ್ಠರಾದ ಆಚಾಯ೯ರನ್ನು ಹೊಂದಿ ತಿಳಿದುಕೊಳ್ಳಿರಿ.ಹರಿತವಾದ ಕತ್ತಿಯ ಅಲಗು ದಾಟಲು ಕಷ್ಟವಾಗಿರುವಂತೆ ಆ ಪಥವು ದುಗ೯ಮವೆಂದು ಜ್ಞಾನಿಗಳು ಹೇಳುತ್ತಾರೆ5.
ಶಬ್ದ, ಸ್ಪಶ೯,ರೂಪ,ರಸ,ಗಂಧ,ಇವುಗಳಿಲ್ಲದ ಅವ್ಯಯವೂ ನಿತ್ಯವೂ, ಅನಾದಿಯೂ, ಅನಂತವೂ ಆದ ಮಹತ್ತತ್ವಕ್ಕಿಂತ ವಿಲಕ್ಷಣವಾದ ಧ್ರುವನಾದ ಬಹ್ಮತತ್ವವನ್ನು ಅರಿತುಕೊಂಡು ಮೃತ್ಯುಮುಖದಿಂದ ವಿಮುಕ್ತನಾಗುತ್ತಾನೆ.ಮೃತ್ಯುವಿನಿಂದ ಹೇಳಲ್ಪಟ್ಟ ಸನಾತನವಾದ ನಚೀಕೇತೋಪಾಖ್ಯಾನವನ್ನು ಕೇಳಿ ಮತ್ತು ಹೇಳಿ ಮೇಧಾವಿಯು ಬ್ರಹ್ಮಲೋಕದಲ್ಲಿ ಪೂಜ್ಯನಾಗುತ್ತಾನೆ.
ಎರಡನೆಯ ಅಧ್ಯಾಯ:
ನಾಲ್ಕನೆಯ ವಲ್ಲಿ:
ಸ್ವಯಂಭುವು ಬಹಿಮು೯ಖವಾದ ಇಂದ್ರಿಯಗಳನ್ನು ಹಿಂಸೆ ಮಾಡಿರುತ್ತಾನೆ.ಆದುದರಿಂದ ಮನುಷ್ಯನು ಹೊರಗಡೆ ನೋಡುತ್ತಾನೆ.ಅಂತರಾತ್ಮನನ್ನು ನೋಡುವುದಿಲ್ಲ.ಯಾವನೊ ಒಬ್ಬ ವಿವೇಕಿಯು ಆತ್ಮತತ್ವವನ್ನು ಬಯಸುತ್ತ ಚಕ್ಷುಸ್ಸನ್ನು ಹಿಂದಿರುಗಿಸಿ ಪ್ರತ್ಯಗಾತ್ಮನನ್ನು ನೋಡುತ್ತಾನೆ. ಅಲ್ಪಬುದ್ಧಿಯುಳ್ಳವರು ಹೊರಗಿರುವ ಕಾಮಗಳನ್ನು ಬಯಸುತ್ತಾರೆ.ಅವರು ಸವ೯ವ್ಯಾಪಿಯಾದ ಮೃತ್ಯುವಿನ ಪಾಶವನ್ನು ಹೊಂದುತ್ತಾರೆ.ಆದುದರಿಂದ ವಿವೇಕಿಗಳು ಅನಿತ್ಯವಸ್ತುಗಳಲ್ಲಿ ಕೂಟಸ್ಥನಾದ ಅಮೃತತ್ವವನ್ನು ತಿಳಿದುಕೊಂಡು ಇಲ್ಲಿ ಏನನ್ನೂ ಬಯಸುವುದಿಲ್ಲ.
ಯಾವ ಆತ್ಮನಿಂದಲೇ ರೂಪವನ್ನೂ ರಸವನ್ನೂ ಗಂzsಗಳನ್ನೂ ಶಬ್ದಗಳನ್ನೂ ಸ್ಪಶ೯ಗಳನ್ನೂ ಮೈಥುನಗಳನ್ನೂ ಅರಿಯುತ್ತಾನೆಯೊ ಆ ಆತ್ಮನಿಗೆ ಇಲ್ಲಿ ಏನು ಉಳಿಯುತ್ತದೆ.?ಇದೇ ಅದು. ಯಾವನಿಂದ ಮನುಷ್ಯನು ಸ್ವಪ್ನದಲ್ಲಿರುವುದು ಜಾಗ್ರದವಸ್ಥೆ ಯಲ್ಲಿರುವುದು ಎಂಬ ಎರಡನ್ನೂ ನೋಡುತ್ತಾನೆಯೊ ಆ ವಿಭುವಾದ ಮಹಾನ್ ಆತ್ಮನನ್ನು ತಿಳಿದುಕೊಂಡು ಧೀರನು ಶೋಕಿಸುವುದಿಲ್ಲ.
ಯಾವನು ಮಧುವನ್ನು ಸೇವಿಸುವ ಜೀವನನ್ನು ಭೂತ ಭವಿಷ್ಯಗಳ ಒಡೆಯನೂ,ಅತ್ಯಂತ ಸಮೀಪದಲ್ಲಿರುವವನೂ ಆದ ಆತ್ಮನೆಂದು ತಿಳಿದುಕೊಂಡಿರುತ್ತಾನೆಯೊ ಅವನು ಅನಂತರ ತನ್ನನ್ನು ಕಾಪಾಡಿಕೊಳ್ಳಲು ಇಚ್ಛಿಸುವುದಿಲ್ಲ.ಇದೇ ಅದು. ನೀರಿಗಿಂತ ಮೊದಲು ತಪಸ್ಸಿನಿಂದ ಹುಟ್ಟಿರುವ ಮತ್ತು ಹೃದಯವನ್ನು ಪ್ರವೇಶಿಸಿ ಭೂತಗಳೊಂದಿಗೆ ಇರುವ ಹಿರಣ್ಯಗಭ೯ನನ್ನು ಯಾವನು ನೋಡುತ್ತಾನೆಯೋ ಅವನು ಪೂವೊ೯ಕ್ತವಾದ ಬ್ರಹ್ಮವನ್ನೇ ನೋಡುತ್ತಾನೆ.
ಗಭಿ೯ಣಿಯಿಂದ ಹೇಗೆ ಗಭ೯ವು ಧರಿಸಲ್ಪಡುವದೋ, ಹಾಗೇ ಎರಡು ಅರಣಿಗಳಲ್ಲಿಯೂ ಇಡಲ್ಪಟ್ಟು ಧರಿಸಲ್ಪಟ್ಟಿರುವ ಜಾತವೇದನೆಂಬ ಅಗ್ನಿಯು ಅಪ್ರಮತ್ತರೂ ಹವಿಷ್ಮಂತರೂ ಆದ ಮನುಷ್ಯರಿಂದ ಪ್ರತಿದಿನವೂ ಸ್ತುತ್ಯನಾಗಿರುತ್ತಾನೆ.ಈ ಅಗ್ನಿಯೇ ಪ್ರಕೃತವಾದ ಬ್ರಹ್ಮ.ಅಗ್ನಿಯನ್ನು ಯಜ್ಞದಲ್ಲಿ ಆರಾಧಿಸುವ ಕಮಿ೯ಗಳೂ ಹೃದಯದಲ್ಲಿ ಆರಾಧಿಸುವ ಯೋಗಿಗಳೂ ನಿಜವಾಗಿ ಬ್ರಹ್ಮವನ್ನೇ ಉಪಾಸಿಸುತ್ತಾರೆ ಎಂದಥ೯.
ಯಾವನಿಂದ ಸೂಯ೯ನು ಉದಯಿಸುತ್ತಾನೋ ಮತ್ತು ಯಾವನಲ್ಲಿ ಅಸ್ತಮಿಸುತ್ತದೆಯೋ ಅವನನ್ನು ಎಲ್ಲಾ ದೇವತೆಗಳೂ ಪ್ರವೇಶಿಸುವರು.ಅವನನ್ನು ಯಾವನೂ ಮೀರಲಾರನು.ಇದೇ ಅದು.ಯಾವುದು ಇಲ್ಲಿರುವುದೋ ಅದೇ ಅಲ್ಲಿರುವುದು.ಯಾವುದು ಅಲ್ಲಿರುವುದೋ ಅದೇ ಇಲ್ಲಿಯೂ ಇರುವುದು.ಯಾವನು ಇಲ್ಲಿ ಭಿನ್ನವಾಗಿರುವಂತೆ ನೋಡುತ್ತಾನೆಯೋ ಅವನು ಮೃತ್ಯುವಿನಿಂದ ಮೃತ್ಯುವನ್ನು ಹೊಂದುತ್ತಾನೆ.
"ನೇಹ ನಾನಾಸ್ತಿ ಕಿಂಚನ" ಇಲ್ಲಿ ಏನೂ ಭೇದವಿಲ್ಲ.ಯಾವನು ಇಲ್ಲಿ ಭೇದವಿರುವಂತೆ ನೋಡುತ್ತಾನೆಯೋ ಅವನು ಮ್ರತ್ಯುವಿನಿಂದ ಮೃತ್ಯುವನ್ನು ಹೊಂದುತ್ತಾನೆ6.
ಅಂಗುಷ್ಠ ಪರಿಣಾಮವುಳ್ಳ ಪುರುಷನು ಶರೀರ ಮಧ್ಯದಲ್ಲಿ ಇರುತ್ತಾನೆ.ಅವನು ಭೂತ ಭವಿಷ್ಯಗಳಿಗೆ ಒಡೆಯನು.ಆಮೇಲೆ ತನ್ನನ್ನು ಕಾಪಾಡಿಕೊಳ್ಳಲು ಇಚ್ಛಿಸುವುದಿಲ್ಲ.ಇದೇ ಅದು.ಅಂಗುಷ್ಠ ಪರಿಣಾಮವುಳ್ಳ ಪುರುಷನು ಹೊಗೆಯಿಲ್ಲದ ಜ್ಯೋತಿಯಂತೆ ಇರುತ್ತಾನೆ.ಅವನು ಭೂತ ಭವಿಷ್ಯಗಳಿಗೆ ಒಡೆಯನು.ಇಂದೂ ಅವನೇ ನಾಳೆಯೂ ಅವನೇ.ಇದೇ ಅದು.
ಎತ್ತರವಾದ ಸ್ಥಳದಲ್ಲಿ ಸುರಿದ ನೀರು (ಮಳೆಯ) ತಗ್ಗಾದ ಗುಡ್ಡಗಳಲ್ಲಿ ಹೇಗೆ ಹರಿದು ಹೋಗುತ್ತದೆಯೊ, ಅದೇ ರೀತಿಯಲ್ಲಿ ಆತ್ಮರನ್ನು ಭಿನ್ನರೆಂದು ನೋಡುವವನು ಅವರನ್ನೇ ಅನುಸರಿಸುತ್ತಾನೆ.ಹೇಗೆ ಶುದ್ಧವಾದ ನೀರಿನಲ್ಲಿ ಹಾಕಿದ ಶುದ್ಧವಾದ ನೀರು ಅದರಂತೆಯೇ ಆಗುವುದೊ ಹಾಗೆಯೇ ಅರಿತುಕೊಂಡ ಮುನಿಯು ಆತ್ಮನಾಗುವನು.
ಐದನೆಯ ವಲ್ಲಿ:
ಅಜನೂ ಅವ್ಯಕ್ತನಾದ ಚೇತಸ್ಸುಳ್ಳವನೂ ಆದ ಆತ್ಮನಿಗೆ ಹನ್ನೊಂದು ದ್ವಾರಗಳಿರುವ ಪುರವು ಇದೆ.ಅ ಪುರಸ್ವಾಮಿಯಾದ ಪರಮೇಶ್ವರನನ್ನು ಧ್ಯಾನಮಾಡಿ ಶೋಕಿಸುವುದಿಲ್ಲ.ಎಲ್ಲ ಆಸೆಗಳಿಂದ ಬಿಡಲ್ಪಟ್ಟು ಮುಕ್ತನಾಗುತ್ತಾನೆ .ಇದೇ ಅದು.ಅವನು ಎಲೆಲ್ಲಿಯೂ ಹೋಗುವನು.ಆಕಾಶದಲ್ಲಿಆದಿತ್ಯರೂಪದಂತೆ ಇರುವನು.ಅಂತರಿಕ್ಷದಲ್ಲಿ ವಾಯು,ವೇದಿಕೆಯ ಮೇಲೆ ಹೋತೃ,ಅತಿಥಿಯಾಗಿ ಕಲಶದಲ್ಲಿರುವನು. ಮನುಷ್ಯರಲ್ಲಿರುವನು, ದೇವತೆಗಳಲ್ಲಿರುವನು.ಯಜ್ಞಾಂಗಗಳ ರೂಪದಲ್ಲಿ ಇರುವನು.ಪವ೯ತಗಳಲ್ಲಿರುವನು.ಅವನು ಸತ್ಯ ಸ್ವರೂಪನು ಬೃಹತ್ತಾದವನು7.
ಆ ಆತ್ಮನು ಪ್ರಾಣವನ್ನು ಮೇಲಕ್ಕೆ ಎತ್ತುತ್ತಾನೆ.ಅಪಾನವಾಯುವನ್ನು ಕೆಳಕ್ಕೆ ಎಸೆಯುತ್ತಾನೆ. ಮಧ್ಯದಲ್ಲಿ ಕುಳಿತಿರುವ ವಾಮನನನ್ನು ಎಲ್ಲಾ ದೇವತೆಗಳೂ ಉಪಾಸಿಸುತ್ತಾರೆ. ಶರೀರದಲ್ಲಿರುವ ಈ ದೇಹಿಯು ಸಡಿಲವಾಗುವಾಗ ಎಂದರೆ ದೇಹದಿಂದ ಮುಕ್ತನಾಗುವಾಗ ಇಲ್ಲಿ ಏನು ಉಳಿಯುತ್ತದೆ.? ಇದೇ ಅದು. ಯಾವ ಮತ್ಯ೯ನೂ ಪ್ರಾಣದಿಂದಾಗಲೀ ಅಪಾನದಿಂದಾಗಲೀ ಜೀವಿಸುವುದಿಲ್ಲ. ಯಾವನಲ್ಲಿ ಇವೆರಡೂ ಜೀವಿಸಿಕೊಂಡಿರುವುವೊ ಅಂಥ ಇನ್ನೊಬ್ಬನಿಂದ ಜೀವಿಸುತ್ತಾನೆ.ಹೇಗೆ ಅಗ್ನಿಯು ಈ ಲೋಕಗಳನ್ನು ಪ್ರವೇಶಿಸಿ ಎಲ್ಲಾರೂಪಗಳಿಗೂ ಪ್ರತಿರೂಪವಾಗಿರುವನು ಮತ್ತು ಹೊರಗೂ ಇರುವನು.ಇದೇ ರೀತಿಯಲ್ಲಿ ವಾಯು ಮತ್ತು ಸೂಯ೯ನಿಗೂ ಅನ್ವಯಿಸುತ್ತದೆ.
ಆತ್ಮನು ಅದ್ವಿತೀಯನು.ವಶಿ(ಎಲ್ಲವನ್ನೂ ತನ್ನ ವಶದಲ್ಲಿಟ್ಟುಕೊಂಡಿರುವುದರಿಂದ ವಶಿ),ಸವ೯ ಪ್ರಾಣಿಗಳ ಅಂತೆರÁತ್ಮ.ಒಂದು ರೂಪವನ್ನು ಬಹುವಿಧವಾಗಿ ಮಾಡಿಕೊಂಡಿರುತ್ತಾನೆ.ಆತ್ಮದಲ್ಲಿ ಚೈತನ್ಯ ರೂಪದಿಂದ ಇರುವ ಅವನನ್ನು ಯಾವ ವಿವೇಕಿಗಳು ನೋಡುತ್ತಾರೆಯೋ ಅವರಿಗೆ ಶಾಶ್ವತವಾದ ಸುಖವು.ಇತರರಿಗಲ್ಲ.ಅವನು ಅನಿತ್ಯ ವಸ್ತುಗಳಲ್ಲಿ ನಿತ್ಯ.ಚೇತನರಿಗೆ ಚೈತನ್ಯ.ಒಬ್ಬನೇ ಆಗಿದ್ದರೂ ಬಹುಜೀವರಿಗೆ ಕಮ೯ಫಲವನ್ನು ಕೊಡುತ್ತಾನೆ.ಆತ್ಮದಲ್ಲಿರುವ ಅವನನ್ನು ಯಾವ ವಿವೇಕಿಗಳು ನೋಡುತ್ತಾರೋ ಅವರಿಗೇ ಶಾಶ್ವತವಾದ ಶಾಂತಿ.ಇತರರಿಗಲ್ಲ8.
"ನ ತತ್ರ ಸೂಯೋ೯ಭಾತಿ ನ ಚಂದ್ರ ತಾರಕಂ"
ಅಲ್ಲಿ ಸೂಯ೯ನಾಗಲಿ,ಚಂದ್ರನಾಗಲಿ,ನಕ್ಷತ್ರಗಳಾಗಲಿ ಪ್ರಕಾಶಿಸುವುದಿಲ್ಲ.ಆ ಮಿಂಚುಗಳೂ ಪ್ರಕಾಶಿಸುವುದಿಲ್ಲ.ಈ ಅಗ್ನಿಯು ಪ್ರಕಾಶಿಸುವುದೆಲ್ಲಿ? ಪ್ರಕಾಶಿಸುತ್ತಿರುವ ಅವನನ್ನೇ ಅನುಸರಿಸಿ ಎಲ್ಲವೂ ಪ್ರಕಾಶಿಸುತ್ತವೆ.ಅವನ ಪ್ರಕಾಶದಿಂದಲೇ ಇದೆಲ್ಲವೂ ಪ್ರಕಾಶಿಸುತ್ತಿರುವುದು.
ಆರನೆಯ ವಲ್ಲಿ:
ಮೇಲೆ ಬುಡವಿರುವ ಕೆಳಗೆ ಶಾಖೆಗಳಿರುವ ಈ ಅಶ್ವತ್ಥವು ಸನಾತನವಾದುದು.ಅದೇ ಶುದ್ಧವಾದುದು.ಅದೇ ಅಮೃತ ಅದೇ ಬ್ರಹ್ಮ ಎಂದು ಹೇಳಲ್ಪಡುತ್ತದೆ.ಎಲ್ಲಾ ಲೋಕಗಳೂ ಅದರಲ್ಲಿ ಆಶ್ರಯವನ್ನು ಹೊಂದಿವೆ.ಅದನ್ನು ಯಾವನೂ ಮೀರಲಾರನು.ಇದೇ ಅದು.
ಇದರ ಭಯದಿಂದ ಅಗ್ನಿಯು ಸುಡುತ್ತಾನೆ.ಸೂಯ೯ನು ಪ್ರಕಾಶಿಸುತ್ತಾನೆ.ಇಂದ್ರ ಮತ್ತು ವಾಯುವು ತಮ್ಮ ತಮ್ಮ ಕೆಲಸಗಳನ್ನು ಮಾಡುತ್ತಾರೆ.ಐದನೆಯವನಾದ ಯಮನೂ ಸಹ ಓಡುತ್ತಾನೆ.ಪರಮೇಶ್ವರನ ಭಯದಿಂದಲೇ ಲೋಕಪಾಲಕರೆಲ್ಲರೂ ತಮ್ಮ ತಮ್ಮ ಕತ೯ವ್ಯಗಳಲ್ಲಿ ತೊಡಗಿರುವರು.
ಶರೀರಪಾತಕ್ಕೆ ಮೊದಲು ಇಲ್ಲಿಯೇ ಬ್ರಹ್ಮವನ್ನು ತಿಳಿದುಕೊಳ್ಳಲು ಶಕ್ತನಾದರೆ ಸಂಸಾರ ಬಂಧನದಿಂದ ಮುಕ್ತನಾಗುತ್ತಾನೆ.ಹಾಗೆ ತಿಳಿದುಕೊಳ್ಳಲು ಶಕ್ತನಾಗದಿದ್ದರೆ ಅದರಿಂದ ಸ್ವಗ೯ಲೋಕಗಳಲ್ಲಿ (ಪ್ರಾಣಿಗಳು ಸೃಷ್ಟಿಯಾಗುವ ಲೋಕಗಳಲ್ಲಿ)ಶರೀರವನ್ನು ಹೊಂದಲು ಶಕ್ತನಾಗುವನು. ಕನ್ನಡಿಯಲ್ಲಿ (ತನ್ನ ಮುಖವೇ ಮೊದಲಾದವು ಸ್ಪಷ್ಟವಾಗಿ ಕಾಣುವಂತೆ) ಆತ್ಮದಶ೯ನವು ಸ್ಪಷ್ಟವಾಗಿರುತ್ತದೆ.ಸ್ವಪ್ನದಲ್ಲಿ (ವಸ್ತುಗಳು ಅಸ್ಪಷ್ಟವಾಗಿ ಕಾಣುವಂತೆ)ಪಿತೃಲೋಕದಲ್ಲಿ ಆತ್ಮದಶ೯ನವು ಅಸ್ಪಷ್ಟವಾಗಿರುತ್ತದೆ.ನೀರಿನಲ್ಲಿ(ಪ್ರತಿಬಿಂಬವು ಅಸ್ಪಷ್ಟವಾಗಿಕಾಣುವಂತೆ)ಗಂಧವ೯ಲೋಕದಲ್ಲಿ ಆತ್ಮದಶ೯ನವು ಅಸ್ಪಷ್ಟವಾಗಿರುತ್ತದೆ. ಬ್ರಹ್ಮಲೋಕದಲ್ಲಿ ನೆರಳು ಬಿಸಿಲುಗಳಂತೆ ಆತ್ಮದಶ೯ನವು ಸ್ಪಷ್ಟವಾಗಿರುತ್ತದೆ.
ಇಂದ್ರಿಯಗಳಿಗಿಂತ ಮನಸ್ಸು ಶÉ್ರೀಷ್ಠ.ಮನಸ್ಸಿಗಿಂತ ಬುದ್ಧಿಯು ಶ್ರೇಷ್ಠ. ಬುದ್ಧಿಗಿಂತ ಮಹತ್ ಎಂಬ ಆತ್ಮನು ಅಧಿಕನು.ಮಹತ್ತಿಗಿಂತ ಅವ್ಯಕ್ತವು ಉತ್ತಮವು. ಅವ್ಯಕ್ತಕ್ಕಿಂತ ಪುರುಷನು ಶ್ರೇಷ್ಠನು.ಅವನನ್ನು ಅರಿತುಕೊಂಡು ಜೀವಿಯು ಮುಕಕ್ತನಾಗುತ್ತಾನೆ. ಇವನ ರೂಪವು ದೃಗ್ಗೋಚರವಾಗುವುದಿಲ್ಲ.ಇವನನ್ನು ಯಾವನೂ ಕಣ್ಣಿನಿಂದ ನೋಡಲಾರನು.ಮನಸ್ಸನ್ನು ನಿಯಮಿಸುವ ಬುದ್ಧಿಯಿಂದ.ಮನನ ರೂಪವಾದ ಸಮ್ಯಕ್ ದಶ೯ನದಿಂದ ಆತ್ಮನು ಪ್ರಕಾಶಿತನಾದರೆ ಅವನನ್ನು ಆಗ ಅರಿಯುತ್ತಾನೆ.ಯಾರು ಇದನ್ನು ತಿಳಿದುಕೊಳ್ಳುತ್ತಾರೆಯೋ ಅವರು ಅಮೃತರಾಗುತ್ತಾರೆ.
ಯಾವಾಗ ಪಂಚ ಜ್ಞಾನೇಂದ್ರಿಯಗಳು ಮನಸ್ಸಿನೊಂದಿಗೆ ಶಾಂವಾಗುವವೋ ಬುದ್ಧಿಯು ಅಲ್ಲಾಡುವುದಿಲ್ಲವೋ ಅದನ್ನು 'ಪರಮಗತಿ' ಎಂದು ಹೇಳುತ್ತಾರ.ಸ್ಥಿರವಾದ ಇಂದ್ರಿಯಧಾರಣೆ ಎಂಬ ಅವಸ್ಥೆಯನ್ನೇ ಯೋಗವೆಂದು ಹೇಳುತ್ತಾರೆ.ಆಗ ಪ್ರಮಾದವಿಲ್ಲದವನಾಗಿ ಇರುತ್ತಾನೆ. ಏಕೆಂದರೆ ಯೋಗಕ್ಕೆ ಉತ್ಪತ್ತಿನಾಶಗಳುಂಟು.
ಬ್ರಹ್ಮವು ಮಾತಿನಿಂದಾಗಲೀ ಮನಸ್ಸಿನಿಂದಾಗಲೀ ಕಣ್ಣಿನಿಂದಾಗಲೀ ಹೊಂದಲು ಶಕ್ಯವಲ್ಲ.ಇದ್ದಾನೆ ಎಂದು ಹೇಳುವವನನ್ನು ಬಿಟ್ಟುಇತರರಲ್ಲಿ ಅದು ಹೇಗೆ ಲಭ್ಯವಾಗುವುದು.'ಇದ್ದಾನೆ' ಎಂದೇ ತಿಳಿಯತಕ್ಕದ್ದು.ತತ್ವ ಭಾವದಿಂದಲೂ ತಿಳಿಯತಕ್ಕದ್ದು. ಈತನ ಬುದ್ಧಿಯನ್ನು ಆಶ್ರಯಿಸಿಕೊಂಡಿರುವ ಕಾಮಗಳೆಲ್ಲ ಯಾವಾಗ ನಾಶವಾಗುವವೊ ಆಗ ಮತ್ಯ೯ನು ಅಮೃತನಾಗುತ್ತಾನೆ.ಇಲ್ಲಿಯೇ ಬ್ರಹ್ಮವನ್ನು ಹೊಂದುತ್ತಾನೆ.ಕಾಮದಿಂದಲೇ ಮನುಷ್ಯನಿಗೆ ಜನ್ಮಾಂತರಗಳು ಉಂಟಾಗುತ್ತವೆ೯.
"ಯದಾ ಸವೇ೯ಪ್ರಭಿದ್ಯಂತೇ ಹೃದಯಸ್ಯೇವ ಗ್ರಂಥಯಃ"
ಯಾವಾಗ ಬುದ್ಧಿಯ ಗ್ರಂಥಿಗಳೆಲ್ಲ ಇಲ್ಲಿಯೇ ನಾಶವಾಗುವವೊ ಆಗ ಮತ್ಯ೯ನು ಅಮೃತನಾಗುವನು.ಇಷ್ಟೇ ಉಪದೇಶವು.ಬ್ರಹ್ಮವನ್ನು ಅರಿತವನು ಬ್ರಹ್ಮವೇ ಆಗುತ್ತಾನೆ10. (ಚಿತ್+ಜಡ= ಚಿಜ್ಜಡಗ್ರಂಥಿ)."ಈ ಶರೀರ ನಾನು" "ನಾನು ಸುಖಿ" ಮೊದಲಾದ ಅವಿದ್ಯೆಯ ಪ್ರತ್ಯಯಗಳು.
ಹೃದಯಕ್ಕೆ ನೂರೊಂದು ನಾಡಿಗಳಿವೆ.ಅವುಗಳಲ್ಲಿ ಒಂದು ನೆತ್ತಿಯನ್ನು ಭೇದಿಸಿಕೊಂಡು ಹೊರಟಿರುವುದು. ಅದರ ಮೂಲಕ ಮೇಲಕ್ಕೆ ಹೋಗುವವನು ಅಮೃತತ್ವವನ್ನು ಪಡೆಯುತ್ತಾನೆ. ಎಲ್ಲ ಕಡೆಯಲ್ಲಿಯೂ ಹರಡಿರುವ ಇತರ ನಾಡಿಗಳು ಸಂಸಾರಕ್ಕೆ ಕಾರಣವಾಗುತ್ತವೆ.
ಅಂಗುಷ್ಠಮಾತ್ರ ಪರಿಣಾಮವುಳ್ಳವನೂ ಅಂತರಾತ್ಮನೂ ಆದ ಪುರುಷನು ಜನರ ಹೃದಯದಲ್ಲಿ ಯಾವಾಗಲೂ ಇರುತ್ತಾನೆ. ಮುಂಜವೆಂಬ ಹುಲ್ಲಿನಿಂದ ದಂಟನ್ನು ತೆಗೆಯುವಂತೆ ಅವನನ್ನು ತನ್ನ ಶರೀರ ಬೇಪ೯ಡಿಸಿ, ಅವನನ್ನು ಶುದ್ಧನೆಂದೂ ಅಮೃತನೆಂದೂ ತಿಳಿದುಕೊಳ್ಳಬೇಕು.
ಅನಂತರ ನಚೀಕೇತನು ಮೃತ್ಯುವಿನಿಂದ (ಯಮನಿಂದ) ಹೇಳಲ್ಪಟ್ಟ ಈ ಬ್ರಹ್ಮವಿದ್ಯೆಯನ್ನು ಸಂಪೂಣ೯ವಾದ ಯೋಗವಿಧಿಯನ್ನು ಹೊಂದಿ ವಿಗತರಜನಾಗಿ(ವಿರಕ್ತನಾಗಿ) ಬ್ರಹ್ಮವನ್ನು ಪಡೆದುಕೊಂಡನು.ಮತ್ತೊಬ್ಬ ಯಾವನು ಅಧ್ಯಾತ್ಮವನ್ನು ಹೀಗೆ ತಿಳಿದುಕೊಳ್ಳುತ್ತಾನೆಯೊ ಅವನು ಮುಕ್ತನಾಗುವನು.
ಪ್ರಶ್ನೋಪನಿಷತ್ತು ಹಾಗೂ ಅದ್ವೈತ:
ಪ್ರಶ್ನೋಪನಿಷತ್ತು ಅಥವ೯ ವೇದಕ್ಕೆ ಸೇರಿದೆ.ಶ್ರೀಶಂಕರಾಚಾಯ೯ರು ಈ ಉಪನಿಷತ್ತಿನ ಭಾಷ್ಯದಲ್ಲಿ ಮುಂಡಕವನ್ನು ಮಂತ್ರವೆಂದೂ ,ಪ್ರಶ್ನವನ್ನು ಬ್ರಾಹ್ಮಣವೆಂದೂ ಕರೆದಿದ್ದಾರೆ.ಇದು ಆರು ಪ್ರಶ್ನೆಗಳನ್ನು ಒಳಗೊಂಡಿದೆ.ಈ ಉಪನಿಷತ್ತು ಪ್ರಶ್ನೋತ್ತರ ರೂಪವಾಗಿರುವುದರಿಂದ ಇದಕ್ಕೆ ಪ್ರಶ್ನೋಪನಿಷತ್ ಎಂದು ಹೆಸರು ಬಂದಿದೆ.ಪಿಪ್ಪಿಲಾದನು ಶಿಷ್ಯರಿಗೆ ಉಪದೇಶ ಮಾಡುವ ಆಚಾಯ೯.
ಕಬಂಧೀಕಾತ್ಯಾಯನನ ಪ್ರಶ್ನೆಯು ಹೀಗಿದೆ.ಈ ಜಗತ್ತಿಗೆ ಮೂಲವು ಯಾವುದು?
ಪ್ರಜಾಪತಿಯೇ ಸೃಷ್ಟಿಗೆ ಮೂಲಕಾರಣನು.ಅವನು ಮೊದಲು ರಯಿ-ಪ್ರಾಣ ಎಂಬ ಎರಡು ಮಿಥುನಗಳನ್ನು ಸೃಷ್ಟಿಸಿದನು.ರಯಿ ಎಂದರೆ ಚಂದ್ರ(ಸೋಮ)ಮೂತಾ೯ಮೂತ೯ದಲ್ಲಿರುವ ಭೌತದ್ರವ್ಯ.ಪ್ರಾಣ ಎಂದರೆ ಅಗ್ನಿ ಅಥವಾ ಸೂಯ೯.ಮ್ಯಾಕ್ಸ ಮುಲ್ಲರ್ ಮುಂತಾದವರು ಇವೆರಡನ್ನು ಇಂಗ್ಲಿಷ್ ನಲ್ಲಿ 'ಮ್ಯಾಟರ್' ಮತ್ತು 'ಸ್ಪಿರಿಟ್' ಎಂದು ಕರದರು.ಇವೆರಡರ ಸಂಯೋಗದಿಂದ ಜಗತ್ತಿನ ವಿವಿಧ ವಸ್ತುಗಳು ಉತ್ಪತ್ತಿಯಾದವು.ಈ ಮಿಥುನ ಕಾರಣದಿಂದ ಪ್ರಜಾಪತಿಯು ಹಿರಣ್ಯಗಭ೯ನೆಂದು ಶಂಕರರು ಹೇಳುತ್ತಾರೆ.
ಎರಡನೆಯ ಪ್ರಶ್ನೆ ಭಾಗ೯ವ ವೈದಭ೯ನದು.ದೇಹದಲ್ಲಿರುವ ಇಂದ್ರಿಯಗಳಿಗೂ ಮುಖ್ಯ ಪ್ರಾಣನಿಗೂ ಇರುವ ಸಂಬಂಧವನ್ನು ತೋರಿಸಲು ಬಂದಿದೆ.ಮುಖ್ಯ ಪ್ರಾಣನಿಗೆ ಧಾರಕತ್ವ,ಪ್ರಕಾಶತ್ವ,ಶ್ರೇಷ್ಠತ್ವವೇ ಮೊದಲಾದ ಗುಣಗಳಿವೆಯೆಂದು ತೋರಿಸಲು ಒಂದು ಆಖ್ಯಾಯಿಕೆಯನ್ನು ಹೇಳಿದೆ.
ಒಂದುಸಲ ಶರೀರದ ಆಕಾರವನ್ನು ಹೊಂದಿರುವ ಪಂಚಭೂತಗಳಿಗೂ ಮತ್ತು ಇಂದ್ರಿಯಗಳಿಗೂ ತಮ್ಮ ಆಧಾರದಿಂದಲೇ ಶರೀರವು ನಿಂತಿದೆಯೆಂದು ಅಹಂಕಾರ ಉಂಟಾಯಿತು.ಆಗ ಮುಖ್ಯಪ್ರಾಣನು ತಾನು ಸ್ವಲ್ಪ ಶರೀರವನ್ನು ಬಿಟ್ಟು ಹೊರಗೆ ಬಂದಂತೆ ಮಾಡಿದನು.ಪ್ರಾಣನು ನಿಲ್ಲಲು ತಾವೂ ನಿಲ್ಲಬೇಕಾಯಿತು.ಪ್ರಾಣನೆ ತಮ್ಮೆಲ್ಲರಿಗಿಂತ ಶ್ರೇಷ್ಠನೆಂದು ತಿಳಿದುಕೊಂಡು ಪ್ರಾಣನನ್ನು ಸ್ತುತಿಸಿದರು.ಈ ಪ್ರಾಣವೇ ಪ್ರಜಾಪತಿ.
ಮೂರನೆಯ ಪ್ರಶ್ನೆ ಕೌಸಲ್ಯ ಆಶ್ವಲಾಯನನದು.ಪ್ರಾಣನ ಉತ್ಪತ್ತಿ ಸ್ವರೂಪಗಳನ್ನು ನಿಣ೯ಯಿಸಲು ಈ ಪ್ರಶ್ನೆಯು ಬಂದಿದೆ.ಈ ಪ್ರಶ್ನೆಯಲ್ಲಿ ಆರು ಭಾಗಗಳಿವೆ.
1) ಪ್ರಾಣನು ಯಾವುದರಿಂದ ಹುಟ್ಟುವನು?
2)ಈ ಶರೀರಕ್ಕೆ ಹೇಗೆ ಬರುವನು?
3) ತನ್ನನ್ನು ವಿಭಾಗಿಸಿಕೊಂಡು ಯಾವಪ್ರಕಾರದಲ್ಲಿ ಇರುವನು?
4)ಮರಣ ಕಾಲದಲ್ಲಿ ಯಾವುದರಿಂದ ಉತ್ಕ್ರಮಿಸುವನು?
5)ಅವನು ಹೊರಗೆ ಹೇಗಿರುವನು?
6)ಅವನು ಒಳಗೆ ಹೇಗಿರುವನು?
1) ಪ್ರಾಣನು ಪರಮಪುರಷ ನಿಂದಲೇ ಹುಟ್ಟುತ್ತಾನೆ.
2) ನೆರಳು ಮನುಷ್ಯನನ್ನು ಅನುಸರಿಸುವಂತೆ ಅವನ ಸಂಕಲ್ಪ,ಇಚ್ಛೆ ಮೊದಲಾದವುಗಳಿಂದ ಉಂಟಾಗುವ ಕಮ೯ವೆಂಬ ನಿಮಿತ್ತದಿಂದ ಶರೀರವನ್ನೇ ಪ್ರವೇಶಿಸುತ್ತಾನೆ.
3)ರಾಜನು ತನ್ನ ಅಧಿಕಾರಿಗಳನ್ನು ಬೇರೆ ಬೇರೆ ಪ್ರದೇಶಗಳಲ್ಲಿ ತನ್ನ ಪರವಾಗಿ ಆಳಲು ನೇಮಿಸುವಂತೆ ಮುಖ್ಯ ಪ್ರಾಣನು ಅಪಾನ_ವ್ಯಾನಾದಿಗಳ ಮೂಲಕ ಶರೀರದ ಕ್ರಿಯೆಯನ್ನು ನಡೆಸುತ್ತಾನೆ.ಪ್ರಾಣಿಗಳನ್ನು ಕುರಿತು ಶರೀರ ವಿಜ್ಞಾನವು ಪ್ರಾಚೀನ ಋಷಿಗಳಿಗೆ ತಿಳಿದಿತ್ತೆಂದು ಇದರಿಂದ ಸ್ಪಷ್ಟವಾಗುತ್ತದೆ.
4)ಹೃದಯದಲ್ಲಿ ನಾಡಿಗಳಿವೆ.ಇವುಗಳಲ್ಲಿ ಒಂದು ನಾಡಿಯಿಂದ ಉದಾನ ವಾಯುವು ಜೀವವನ್ನು ಒಯ್ಯುತ್ತದೆ.ಪುಣ್ಯ ಮಾಡಿದ್ದರೆ ಪುಣ್ಯಲೋಕಕ್ಕೆ ಹೋಗುವನು.ಪಾಪ ಮಾಡಿದ್ದರೆ ನರಕಕ್ಕೆ ಹೋಗುವನು.ಪುಣ್ಯ ಪಾಪಗಳೆರಡನ್ನೂ ಮಾಡಿದ್ದರೆ ಮನುಷ್ಯ ಲೋಕದಲ್ಲಿ ಹುಟ್ಟುವನು.
5)ಪ್ರಾಣನು ಹೊರಗೆ ಆದಿತ್ಯ ರೂಪದಿಂದ ಇದ್ದುಕೊಂಡು ಚಕ್ಷುವೇ ಮೊದಲಾದ ಇಂದ್ರಿಯಗಳಿಗೆ ಬೆಳಕನ್ನು ಒದಗಿಸುತ್ತಾನೆ.ಪ್ರಾಣನೇ ಆದಿತ್ಯನು.
6)ಪ್ರಾಣನು ಒಳಗೆ ಪಂಚಪ್ರಾಣಗಳ ರೂಪದಲ್ಲಿ ಎಂದರೆ ಪ್ರಾಣ,ಅಪಾನ,ವ್ಯಾನ,ಉದಾನ,ಸಮಾನ ರೂಪದಲ್ಲಿ ಇರುವನು.
ನಾಲ್ಕನೆಯ ಪ್ರಶ್ನೆಯನ್ನು ಸೌಯಾ೯ಯಣೀ ಗಾಗ್ಯ೯ನು ಪುರುಷನ ಸ್ವಪ್ನ ಪ್ರಪಂಚವನ್ನು ಕುರಿತು ಕೇಳುತ್ತಾನೆ.ವಿಷಯೇಂದ್ರಿಯ ಸಮೂಹವೆಲ್ಲವೂ ತಮ್ಮತಮ್ಮ ವ್ಯಾಪಾರಗಳನ್ನು ತ್ಯಜಿಸಿ ಮನಸ್ಸಿನಲ್ಲಿ ಲಯವಾದಾಗ ಮನುಷ್ಯನು ನಿದ್ರಿಸುತ್ತಾನೆ ಎಂದು ಜನರು ಹೇಳುವರು.
ಆಗಲೂ ಕೂಡ ಪ್ರಾಣಗಳು ಎಚ್ಚೆತ್ತಿರುವುವು (ಕೆಲಸ ಮಾಡುತ್ತಿರುವವು.)ಕನಸನ್ನು ನೋಡುವವನು ಜೀವಾತ್ಮ ಅಥವಾ ಕ್ಷೇತ್ರಜ್ಞ.ಸಮಸ್ತ ಕಾಯ೯ಕಾರಣಗಳು ಪರಮಾತ್ಮನಲ್ಲಿ ಸೇರಿದಾಗ ಜೀವನು ಕನಸುಗಳನ್ನು ನೋಡುವುದಿಲ್ಲ.ಪಕ್ಷಿಗಳು ಗೂಡನ್ನು ಸೇರುವಂತೆ ಜೀವನೂ ಕೂಡ ಪರಮಾತ್ಮನನ್ನು ಸೇರಿಕೊಳ್ಳುತ್ತಾನೆ.ಸಮಸ್ತ ನಾಮ_ರೂಪ_ರಸಗಳೆಂಬ ಉಪಾಧಿಗಳಿಂದ ಮುಕ್ತನಾದ ಅಕ್ಷರವನ್ನು ಅರಿತುಕೊಂಡು ಸವ೯ಜ್ಞನೂ ಸವ೯ವೂ ಆಗುತ್ತಾನೆ.
ಮರಣಕಾಲದವರೆಗೂ ಓಂಕಾರವನ್ನು ಧ್ಯಾನಿಸುವವನಿಗೆ ಯಾವ ಲೋಕವು ಲಭಿಸುತ್ತದೆ.? ಇದು ಶೈಬ್ಯ ಸತ್ಯಕಾಮನ ಪ್ರಶ್ನೆ.ಓಂಕಾರದ ಉಪಾಸನೆಯು ಮೋಕ್ಷದ ಒಂದು ಪ್ರಧಾನ ಸಾಧನ.ಓಂಕಾರವೇ ಪರಬ್ರಹ್ಮವೂ ಅಪರ ಬ್ರಹ್ಮವೂ ಆಗಿದೆ.ಯಾರು ಯಾವ ಜ್ಞಾನದಿಂದ ಉಪಾಸನೆ ಮಾಡುವರೋ ಅವರು ಆಯಾ ಫಲವನ್ನು ಪಡೆಯುತ್ತಾರೆ.ಓಂಕಾರಕ್ಕೆ ಮೂರುಮಾತ್ರೆಗಳು.ಮೂರು ಮಾತ್ರೆಗಳಿಂದ ಮಾಡಿದ ಓಂಕಾರವನ್ನು ಉಪಾಸನೆ ಮಾಡುವವನು ಬ್ರಹ್ಮಲೋಕವನ್ನೇ ಪಡೆಯುತ್ತಾನೆ.
ಸುಕೇಶ ಭರದ್ವಾಜನ ಪ್ರಶ್ನೆ ಇದು.ಹದಿನಾರು ಕಲೆಗಳಿಂದ ಕೂಡಿದ ಪುರುಷನು ಯಾರು? ಈ ಪುರುಷನು ಹೃದಯದಲ್ಲಿಯೆ ಇದ್ದಾನೆ.ಪ್ರಾಣ,ಶ್ರದ್ಧೆ,ಆಕಾಶ,ವಾಯು,ಜ್ಯೋತಿ, ನೀರು, ಪೃಥ್ವಿ,ಇಂದ್ರಿಯ,ಮನಸ್ಸು ಅನ್ನ,ವೀಯ೯,ತಪಸ್ಸು,ಮಂತ್ರಗಳು,ಕಮ೯,ಲೋಕಗಳು ಮತ್ತು ನಾಮ ಇವೇ ಪುರುಷನ ಹದಿನಾರು ಕಲೆಗಳು.ನದಿಗಳು ಸಮುದ್ರವನ್ನು ಸೇರಿದ ಮೇಲೆ ತಮ್ಮ ನಾಮ ರೂಪಗಳನ್ನು ಬಿಟ್ಟು ಸಮುದ್ರವೆಂದು ಹೇಳಲ್ಪಡುವಂತೆ ,ಈ ಕಲೆಗಳು ಪುರುಷನನ್ನು ಹೊಂದಿದ ಮೇಲೆ ನಾಮ ರೂಪಗಳನ್ನು ಬಿಡುವವು.ಸಕಲನಾದ ಪುರುಷನು ನಿಷ್ಕಲನೂ ಅಮೃತನೂ ಆಗುವನು.ಇವನೆ ಪರಬ್ರಹ್ಮ ಅಥವಾ ಪರಮಪುರುಷ.ಕಲಾಕಲಾಪವು ತೋರುತ್ತಾ ಇರುವಾಗಲೂ ಅವುಗಳು ನಿಜವಾಗಿ ಇಲ್ಲವೆಂದು ತೋರಿದ ಬಳಿಕವೂ ಎಂದೆಂದಿಗೂ ಅಪ್ಪಟ ನಿಷ್ಕಲ ಎಂದು ನಿಶ್ಚಯಿಸಬೇಕು.ಸೃಷ್ಟಿ ಎಂದರೆ ಸ್ಥೂಲದಿಂದ ಸೂಕ್ಷ್ಮಕ್ಕೆ ಇಳಿಯುವುದು.
ಹೇ ದೇವತೆಗಳೆ,ಮಂಗಳವಾದುದನ್ನೇ ಕಿವಿಗಳಿಂದ ಕೇಳುವ; ಹೇ ಪೂಜಾಹ೯ರೆ, ಕಣ್ಣುಗಳಿಂದ ಪವಿತ್ರವಾದುದನ್ನು ನೋಡುವ;ಧೃಡವಾದ ಅವಯವಗಳಿಂದಲೂ ಮತ್ತು ಶರೀರಗಳಿಂದಲೂ ಕೂಡಿ,(ನಿಮ್ಮನ್ನು)ಸ್ತುತಿಸುವವರಾಗಿ ದೇವನಿಂದ ವಿಧಿಸಲ್ಪಟ್ಟ ಪೂಣ೯ವಾದ ಆಯುಸ್ಸನ್ನು ಹೊಂದುವ.
ಓಂ ಶಾಂತಿಃ ಓಂಶಾತಿಃ ಓಂ ಶಾಂತಿಃ
ಆದಿತ್ಯನೇ ಪ್ರಾಣ,ಚಂದ್ರನೇ ರಯಿ ಅಥವಾ ಮೂತ೯ ಮತ್ತು ಅಮೂತ೯,ಇವೆಲ್ಲವೂ ರಯಿ.ಅಮೂತ೯ಕ್ಕಿಂತ ಭಿನ್ನವಾದ ಮೂತ೯ವೆ ರಯಿ.ಇಂದ್ರಿಯಗಳಿಂದಲೂ,ಬ್ರಹ್ಮಚಯ೯ದಿಂದಲೂ ಶ್ರದ್ಧೆಯಿಂದಲೂ,ವಿದ್ಯೆಯಿಂದಲೂ ಆತ್ಮನನ್ನು ಅನ್ವೇಶಿಸಿ ಉತ್ತರ ಮಾಗ೯ದಿಂದ ಆದಿತ್ಯ ಲೋಕವನ್ನು ಹೊಂದುತ್ತಾರೆ.ಇದೇ ಪ್ರಾಣಿಗಳಿಗೆ ಆಶ್ರಯವು.ಇದು ಅಮೃತವು,ಅಭಯವು,ಇದು ಪರಮಗತಿ.ಇದರಿಂದ ಹಿಂದಿರುಗುವುದಿಲ್ಲ.ಏಕೆಂದರೆ ಇದು ಅಜ್ಞಾನಿಗಳಿಗೆ ತಡೆ.ಅನ್ನವೇ ಪ್ರಜಾಪತಿಯು.ಅದರಿಂದಲೇ ರೇತಸ್ಸು ಉತ್ಪನ್ನವಾಗುತ್ತದೆ.ಅದರಿಂದಲೇ ಪ್ರಜೆಗಳು ಹುಟ್ಟುತ್ತಾರೆ.
ಯಾರಲ್ಲಿ ಕುಟಿಲತೆಯಾಗಲೀ ಅನೃತವಾಗಲೀ,ಇಲ್ಲವೊ ಅಂಥವರಿಗೇ ಈ ತಮಸ್ಸಿಲ್ಲದ ಬ್ರಹ್ಮಲೋಕ.
"ಅರಾ ಇವ ರಥನಾಭೌ ಪ್ರಾಣೇ ಸವ೯ಂ ಪ್ರತಿಷ್ಠಿತಂ"
ರಥಚಕ್ರದ ಗುಂಬದಲ್ಲಿ ಅರೆಕಾಲುಗಳು ಸೇರಿಕೊಂಡಿರುವಂತೆ ಎಲ್ಲವೂ ಪ್ರಾಣದಲ್ಲಿ ಪ್ರತಿಷ್ಠಿತವಾಗಿದೆ1.ಋಕ್ಕುಗಳು,ಯಜಿಸ್ಸುಗಳು,ಸಾಮಗಳು,ಇವುಗಳಿಂದ ಆಗುವ ಯಜ್ಞ,ಎಲ್ಲರನ್ನೂ ಕಾಪಾಡುವ ಕ್ಷತ್ರಿಯ ಜಾತಿ,ಯಜ್ಞಾದಿಕಮ೯ಗಳಿಗೆ ಅಧಿಕಾರಿಯಾದ ಬ್ರಾಹ್ಮಣ ಜಾತಿ ಇವೆಲ್ಲವೂ ಪ್ರಾಣದಲ್ಲಿ ಪ್ರತಿಷ್ಠಿತವಾಗಿವೆ.
ಇದೆಲ್ಲವೂ ಪ್ರಾಣನ ವಶದಲ್ಲಿಯೇ ಇರುವುದು.ಯಾವುದು ದ್ಯುಲೋಕದಲ್ಲಿ ಪ್ರತಿಷ್ಠಿತವಾಗಿದೆಯೊ ಅದೂ ಪ್ರಾಣನ ವಶದಲ್ಲಿಯೇ ಇರುವುದು.ತಾಯಿಯು ಮಕ್ಕಳನ್ನು ರಕ್ಷಿಸುವಂತೆ ನಮ್ಮನ್ನು ರಕ್ಷಿಸು.ಶ್ರೀಗಳನ್ನೂ ಪ್ರಜೆಗಳನ್ನೂ ನಮಗೆಕೊಡು.
ಆದಿತ್ಯನೇ ಅಧಿದೈವತವಾದ ಹೊರಗಿನ ಪ್ರಾಣನು.ಏಕೆಂದರೆ ಇವನು ಈ ಕಣ್ಣಿನಲ್ಲಿರುವ ಪ್ರಾಣವನ್ನು ಅನುಗ್ರಹಿಸುತ್ತ ಉದಯಿಸುತ್ತಾನೆ.ಮಧ್ಯದಲ್ಲಿರುವ ಆಕಾಶವೆ ಸಮಾನವು.ಸಾಮಾನ್ಯವಾಗಿ ಹೊರಗಿರುವ ವಾಯುವೇ ವ್ಯಾನವು.ತೇಜಸ್ಸೇ ಉದಾನವು. ಪ್ರಾಣನ ಉತ್ಪತ್ತಿ,ಶರೀರಕ್ಕೆ ಅವನ ಆಗಮನ,ಪಾಯೋಪಸ್ಥಗಳಲ್ಲಿ ಅವನ ಸ್ಥಾನ,ಅವನ ಐದು ಬಗೆಯ ವಿಭುತ್ವ ಮತ್ತು ಅಧ್ಯಾತ್ಮ ಇವುಗಳನ್ನು ಅರಿತುಕೊಂಡು ಅಮೃತವನ್ನು ಹೊಂದುತ್ತಾನೆ.
ಪಿಪ್ಪಿಲಾದನು ಹೇಳಿದನು.ಅಸ್ತವಾಗುತ್ತಿರುವ ಸೂಯ೯ನ ಕಿರಣಗಳೆಲ್ಲ ಈ ತೇಜೋ ಮಂಡಲದಲ್ಲಿ ಹೇಗೆ ಒಂದಾಗುತ್ತವೆಯೋ, ಉದಯಿಸುತ್ತಿರುವ ಸೂಯ೯ನ ಕಿರಣಗಳು ಹೇಗೆ ಪ್ರಸರಿಸುತ್ತವೆಯೊ, ಹಾಗೆಯೇ ಈ ವಿಷಯೇಂದ್ರಿಯ ಸಮೂಹವೆಲ್ಲವೂ ಪರಮ ದೇವನಾದ ಮನಸ್ಸಿನಲ್ಲಿ ಒಂದಾಗುತ್ತದೆ. ಆದುದರಿಂದ ಈ ಪುರುಷನು ಕೇಳುವುದಿಲ್ಲ, ನೋಡುವುದಿಲ್ಲ, ಮೂಸುವುದಿಲ್ಲ, ರುಚಿನೋಡುವುಗಿಲ್ಲ, ಸ್ಪಶಿ೯ಸುವುದಿಲ್ಲ, ಮಾತನಾಡುವುದಿಲ್ಲ, ತೆಗೆದುಕೊಳ್ಳುವುದಿಲ್ಲ, ಆನಂದಪಡುವುದಿಲ್ಲ, ಬಿಡುವುದಿಲ್ಲ, ಹೋಗುವುದಿಲ್ಲ, ನಿದ್ರಿಸುತ್ತಿದ್ದಾನೆ ಎಂದು ಜನರು ಹೇಳುತ್ತಾರೆ.
ಈ ಪುರದಲ್ಲಿ ಪ್ರಾಣಾಗ್ನಿಗಳೇ ಎಚ್ಚತ್ತಿರುವುವು.ಈ ಅಪಾನವೇ -ಗಾಹ೯ಪತ್ಯಾಗ್ನಿ, ವ್ಯಾನವೇ -ದಕ್ಷಿಣಾಗ್ನಿ,ಪ್ರಾಣವು ಅವಹನೀಯಗಳು.
ಸ್ವಪ್ನದಲ್ಲಿ ಈ ದೇವನು ಮಹಿಮೆಯನ್ನು ಅನುಭವಿಸುತ್ತಾನೆ.ಯಾವುದು ನೋಡಲ್ಪಟ್ಟಿದೆಯೊ ಅದನ್ನೇ ನೋಡುತ್ತಾನೆ.ಯಾವ ವಿಷಯವು ಕೇಳಲ್ಪಟ್ಟಿದೆಯೋ ಅದನ್ನೇ ಕೇಳುತ್ತಾನೆ.ನೋಡಿದ್ದು ನೋಡದಿರುವುದು,ಕೇಳಿದ್ದು ಕೇಳದಿರುವುದು,ಅನುಭವಿಸಿದ್ದು ಅನುಭವಿಸದಿರುವುದು,ಇರುವುದು ಇಲ್ಲದಿರುವುದು,ಇವೆಲ್ಲವನ್ನೂ ನೋಡುತ್ತಾನೆ.ಸವ೯ವೂ ಆಗಿ ನೋಡುತ್ತಾನೆ.
ಇವನೇ ನೋಡುವವನೂ ಮುಟ್ಟುವವನೂ, ಕೇಳುವವನು, ಮಾಡುವವನು, ಆಸ್ವಾದಿಸುವವನು, ಮನನ ಮಾಡುವವನು, ನಿಶ್ಚಯಿಸುವವನು,ಕತೃ೯ವೂ ವಿಜ್ಞಾತೃವೂ, ಪುರುಷನೂ ಆಗಿರುತ್ತಾನೆ.ಇವನು ಪರಮವೂ ಅಕ್ಷಯವೂ ಆದ ಆತ್ಮನಲ್ಲಿ ನೆಲೆಸುತ್ತಾನೆ2.
ಓಂಕಾರವೇ ಪರಬ್ರಹ್ಮವೂ ಅಪರ ಬ್ರಹ್ಮವೂ ಆಗಿದೆ.ಆದುದರಿಂದ ತಿಳಿದವನು ಈ ಅವಲಂಬನೆಯಿಂದಲೇ ಇವೆರಡರಲ್ಲಿಒಂದನ್ನು ಆಲೋಚಿಸುತ್ತಾನೆ.ಯಾವನು ಮೂರುಮಾತ್ರೆಗಳುಳ್ಳ ಓ0 ಎ0ಬ ಈ ಅಕ್ಷರದಿ0ದಲೇ ಈ ಪರಮಪುರುಷನನ್ನು ಅಭಿಧ್ಯಾನಿಸುವನೋ ಅವನು ಜ್ಯೋತಿಮ೯ಯನಾದ ಸೂಯ೯ನಲ್ಲಿ ಒಂದಾಗುತ್ತಾನೆ.ಸಪ೯ವು ಹೇಗೆ ತನ್ನ ಪರೆಯಿಂದ ಹೊರಗೆ ಬರುತ್ತದೆಯೋ ಹಾಗೆಯೇ ಪಾಪದಿಂದ ಮುಕ್ತನಾಗುತ್ತಾನೆ.ಅವನು ಸಾಮಗಳಿಂದ ಬ್ರಹ್ಮಲೋಕಕ್ಕೆ ಒಯ್ಯಲ್ಪಡುತ್ತಾನೆ.ಅವನು ಶೇಷ್ಠನಾದ ಹಿರಣ್ಯಗಭ೯ನಿಗಿಂತಲೂ ಶ್ರೇಷ್ಠನಾದ ಮತ್ತು ಎಲ್ಲಾ ಶರೀರಗಳಲ್ಲಿಯೂ ಪ್ರವೇಶಿಸಿರುವ ಪುರುಷನನ್ನು ಸಾಕ್ಷಾತ್ಕರಿಸುತ್ತಾನೆ3.
ಋಕ್ಕುಗಳಿಂದ ಈ ಲೋಕವನ್ನೂ, ಯಜುಸ್ಸುಗಳಿಂದ ಅಂತರಿಕ್ಷವನ್ನೂ, ಸಾಮವನ್ನು ಯಾವುದರಿಂದ ಕವಿಗಳು ತಿಳಿದಿರುವರೊ ಅದನ್ನು ವಿದ್ವಾಂಸರು ಓಂಕಾರವೆಂಬ ಆಲಂಬನದಿಂದಲೇ ಹೊಂದುತ್ತಾರೆ.ಅವನು ಶಾಂತವಾದ, ಜರೆಯಿಲ್ಲದ, ಅಮೃತವಾದ ಪರಬ್ರಹ್ಮವನ್ನು ಓ0ಕಾರದಿ0ದಲೇ ಹೊ0ದುತ್ತಾನೆ.
ಆ ಪುರುಷನು ಪ್ರಾಣವನ್ನು ಸೃಷ್ಟಿಸಿದನು.ಪ್ರಾಣನಿಂದ ಶ್ರದ್ಧೆ, ಆಕಾಶ, ವಾಯು, ಜ್ಯೋತಿ, ನೀರು, ಪೃಥ್ವಿ,ಇಂದ್ರಿಯ,ಮನಸ್ಸು,ಅನ್ನ,ಅನ್ನದಿಂದ ವೀಯ೯, ತಪಸ್ಸು, ಮಂತ್ರಗಳು, ಕಮ೯, ಲೋಕಗಳು ಮತ್ತು ನ್ರಾಮಗಳನ್ನು ಸೃಷ್ಟಿಸಿದನು.ಪಿಂಡಾಂಡದಲ್ಲಿ ಯಾವುದು ಸತ್ಯವೋ ಅದೇ ಬ್ರಹ್ಮಾಂಡದಲ್ಲಿಯೂ ಸತ್ಯವಾಗಿದೆ4.
ರಥಚಕ್ರದ ಗುಂಬದಲ್ಲಿ ಸೇರಿರುವ ಅರೆಯಕಾಲುಗಳಂತೆ ಯಾವನಲ್ಲಿ ಕಲೆಗಳು ಪ್ರತಿಷ್ಟಿತವಾಗಿರುವವೋ ಆ ಪುರುಷನನ್ನು ತಿಳಿದುಕೊಳ್ಳಬೇಕು.ಹಾಗೆ ತಿಳಿದುಕೊಂಡರೆ ಮೃತ್ಯುವು ನಿಮ್ಮನ್ನು ವ್ಯಥೆಗೊಳಿಸುವುದಿಲ್ಲ.ಸೃಷ್ಟಿ ಎಂದರೆ ಸ್ಥೂಲದಿಂದ ಸೂಕ್ಷ್ಮಕ್ಕೆ ಇಳಿಯುವುದು5.
ಮುಂಡಕೋಪನಿಷತ್ತು ಹಾಗೂ ಅದ್ವೈತ:
ಈ ಉಪನಿಷತ್ತು ಅಥವ೯ಣ ವೇದಕ್ಕೆ ಸೇರಿದೆ.ರಮಣೀಯವಾದ ಶೈಲಿ,ಶಬ್ದ ಗಾಂಭೀಯ೯, ಲಲಿತವಾದ ಛಂದಸ್ಸುಗಳು, ಅತ್ಯುನ್ನತವಾದ ಭಾವಗಳು ಇವೇ ಮೊದಲಾದ ಗುಣಗಳ ಹೊಂದಿಕೆಯಿಂದ ಈ ಉಪನಿಷತ್ತಿನ ಪ್ರತಿಯೊಂದು ಮಂತ್ರವೂ ಓದಲು ಮನೋಹರವಾಗಿದೆ."ಮುಂಡ" ಎಂಬ ಪದದಿಂದ ಮುಂಡಕೋಪನಿಷತ್ ಎಂಬ ಹೆಸರು ಬಂದಿದೆ,ಕ್ಷೌರಕ್ಕೆ ಮುಂಡ ಎಂದು ಹೆಸರು.
ಈ ಉಪನಿಷತ್ತಿನಲ್ಲಿ ಪ್ರತಿಪಾದಿಸಿರುವ ತತ್ವವನ್ನು ತಿಳಿದುಕೊಂಡರೆ ಅವಿದ್ಯೆಯಿಂದ ಉಂಟಾದ ಭ್ರಮೆಗಳೆಲ್ಲವೂ ಮುಂಡನ ಕ್ರಿಯೆಯಂತೆ ಕತ್ತರಿಸಲ್ಪಡುತ್ತವೆ.ಇದೇ "ಮುಂಡನ" ಪದದ ಅಥ೯.ಇದರಲ್ಲಿ ಮೂರು ಅಧ್ಯಾಯಗಳಿವೆ. ಇದರ ಮೂರು ಅಧ್ಯಾಯಗಳಿಗೆ ಮುಂಡಕಗಳೆಂದು ಹೆಸರು. ಒಂದೊಂದು ಅಧ್ಯಾಯದಲ್ಲಿಯೂ ಎರಡೆರಡು ಖಂಡಗಳಿದ್ದು,ಒಟ್ಟು ಅರವತ್ನಾಲ್ಕು ಮಂತ್ರಗಳಿವೆ.ಇಲ್ಲಿ ಆಚಾಯ೯ನಾದ ಅಂಗಿರಸ್ಸು ಮಹಾ ಗೃಹಸ್ಥನಾದ ಶೌನಕನಿಗೆ ಉಪದೇಶ ಮಾಡುತ್ತಾನೆ.ಎಲ್ಲಾ ವಿದ್ಯೆಗಳನ್ನೂ ಎರಡು ಭಾಗಗಳನ್ನಾಗಿ ವಿಂಗಡಿಸಿದೆ.1) ಪರಾವಿದ್ಯೆ2)ಅಪರಾ ವಿದ್ಯೆ.
ಪರಾವಿದ್ಯೆ ಎಂದರೆ ಬ್ರಹ್ಮವಿದ್ಯೆ. ಅಪರಾ ವಿದ್ಯೆ ಎಂದರೆ ಲೌಕಿಕಜ್ಞಾನ.
ಪರಾವಿದ್ಯೆಯು ಭಿನ್ನ ಭಿನ್ನ ವಸ್ತುಗಳ ವಿಶೇಷರೂಪವನ್ನು ತಿಳಿಸಿದ್ದರೂ ಸವ೯ವಸ್ತುಗಳಿಗೆ ಆಧಾರವಾದ ಮೂಲತತ್ವವನ್ನು ತಿಳಿಸುತ್ತದೆ. ಚಿನ್ನದ ಸ್ವರೂಪವನ್ನು ತಿಳಿಸಿದರೆ ಅದರಿಂದ ಮಾಡಿದ ಆಭರಣವೇ ಮುಂತಾದ ಸಮಸ್ತ ವಸ್ತುಗಳನ್ನು ತಿಳಿದುಕೊಳ್ಳಬಹುದು.
ಎರಡನೆಯ ಮುಖ್ಯಾಂಶವೆಂದರೆ ಸವ೯ ಕಮ೯ ಸನ್ಯಾಸದ ಪ್ರಶಂಸೆ.ಸಾಧಕನು ಅಷ್ಟಾಂಗ ಯೋಗದಲ್ಲಿ ಸಿದ್ಧಿ ಪಡೆದಿರಬಹುದು. ಇಷ್ಟ ಪೂತ೯ಗಳಲ್ಲಿ ದಕ್ಷನಾಗಿರಬಹುದು. ಇವುಗಳಿಂದ ಅವಿದ್ಯೆಯು ತೊಲಗುವುದಿಲ್ಲ.ಅತ್ಯಂತಿಕ ಮೋಕ್ಷವಾಗ ಬೇಕಾದರೆ ಬ್ರಹ್ಮಜ್ಞಾನವು ಅವಶ್ಯಕ.ಬರಿಯ ಬ್ರಹ್ಮ ಜ್ಞಾನಕ್ಕೆ ಎಲ್ಲ ಆಶ್ರಮಿಗಳು ಅಧಿಕಾರಿಗಳಾದರೂ ಸನ್ಯಾಸ ನಿಷ್ಠೆಯುಳ್ಳ ಬ್ರಹ್ಮನಿಷ್ಠೆಯು ಸರಿಯಾದ ಸಾಧನ.ಶ್ರೀ ಶಂಕರಾಚಾಯ೯ರು "ಲಿಂಗ ಸನ್ಯಾಸ"ಎಂದು ಹೇಳಿದ್ದಾರೆ.ಸನ್ಯಾಸವಿಲ್ಲದ ಜ್ಞಾನದಿಂದ ಆತ್ಮನು ಲಭ್ಯನಲ್ಲ ಎಂದು ಅಥ೯.ಕಾಮಗಳೇ ಜೀವನ ಸಂಸಾರಕ್ಕೆ ಕಾರಣ.ಪಯಾ೯ಪ್ತ ಕಾಮನಿಗೆ ಕಮ೯ಗಳು ಇಲ್ಲಿಯೇ ಲಯವಾಗುತ್ತವೆ.
ಮೂರನೆಯ ಮುಖ್ಯಾಂಶವೆಂದರೆ ಈ ಉಪನಿಷತ್ತಿನಲ್ಲಿ ಪ್ರತಿಪಾದಿತವಾಗಿರುವ ಯೋಗ, ಉಪನಿಷತ್ತುಗಳಲ್ಲಿ ಪ್ರತಿಪಾದಿತವಾಗಿರುವ ಧನಸ್ಸೇ ಪ್ರಣವ. ಉಪಾಸನೆಯಿಂದ ಹರಿತವಾದ ಬಾಣವೇ ಜೀವಾತ್ಮ.ಬ್ರಹ್ಮವೇ ಲಕ್ಷ್ಯ ಅಥವಾ ಗುರಿ.ಇಂದ್ರಿಯಗಳನ್ನು ವಿಷಯಗಳಿಂದ ಹಿಂದಿರುಗಿಸಿ ಚಿತ್ತದಿಂದ ಅಪ್ರಮತ್ತನಾಗಿ ಲಕ್ಷ್ಯವನ್ನು ಹೊಡೆದು ಅದರಲ್ಲಿ ತನ್ಮಯನಾಗಬೇಕು.
ಇನ್ನೊಂದು ಮುಖ್ಯ ಅಂಶವೆಂದರೆ ಯುಕ್ತಾತ್ಮರು ಬ್ರಹ್ಮವನ್ನು ಪ್ರವೇಶಿಸುವ ಕ್ರಮ ಮತ್ತು ಮುಕ್ತಿಯ ಲಕ್ಷಣ.ಅವರು ಎಲ್ಲವನ್ನು ಪ್ರವೇಶಿಸುವರು.(ಸವ೯ಮೇವ ಅವಿಶಂತಿ) (3_2_5).ಘಟಾಕಾಶವು ಚಿದಾಕಾಶದಲ್ಲಿ ಲೀನವಾಗುವಂತೆ ಎಂದರೆ ಭೇದಕ್ಕೆ ಕಾರಣವಾದ ಉಪಾಧಿಯು ನಾಶವಾಗುತ್ತದೆ.ಮೋಕ್ಷ ಕಾಲದಲ್ಲಿ ಶರೀರಕ್ಕೆ ಕಾರಣವಾದ ಹದಿನೈದು ಕಲೆಗಳು ತಮ್ಮ ತಮ್ಮ ಕಾರಣಗಳನ್ನು ಸೇರುತ್ತವೆ. ಜೀವಾತ್ಮನೂ ಕೂಡಾ ಅವ್ಯಯವಾದ ಬ್ರಹ್ಮದಲ್ಲಿ ಒಂದಾಗುವನು.
ನದಿಗಳು ಸಮುದ್ರವನ್ನು ಸೇರಿ ನಾಮರೂಪಗಳನ್ನು ಬಿಡುವಂತೆ ಜ್ಞಾನಿಯೂ ಕೂಡಾ ಪರಾತ್ಪರನಾದ ಪುರುಷನನ್ನು ಹೊಂದಿ ಅವಿದ್ಯೆಯಿಂದಾಗಿರುವ ನಾಮರೂಪಗಳನ್ನು ತ್ಯಾಗ ಮಾಡುವನು.ಬ್ರಹ್ಮವನ್ನು ಅರಿತವನು ಬ್ರಹ್ಮವೇ ಆಗುತ್ತಾನೆ.ಇವನು ಶೋಕಗಳನ್ನು ದಾಟುತ್ತಾನೆ.ಹೃದಯ ಗ್ರಂಥಿಗಳಿಂದ ಬಿಡುಗಡೆಹೊಂದಿ ಅಮೃತನಾಗುವನು.ಇದು ಈ ಉಪನಿಷತ್ತಿನ ಆದೇಶ ಉಪದೇಶ1
ಶಾಂತಿ ಪಾಠ.
ಓಂ ಭದ್ರಂ ಕಣೇ೯ಭಿಃ ಶೃಣುಯಾಮದೇವಾ
ಭದ್ರಂ ಪಶ್ಯೇಮಾ ಕ್ಷಭಿಯ೯ಜತ್ರಾಃ|
ಸ್ಥಿರೈರಂಗೈಸ್ತುಷ್ಟುವಾಂ ಸಸ್ತನೂಭಿಃ
ವ್ಯಶೇಮ ದೇವಹಿತಂ ಯದಾಯುಃ||
ಹೇ ದೇವತೆಗಳೆ, ಮಂಗಳವಾದುದನ್ನು ಕಿವಿಗಳಿಂದ ಕೇಳುವ; ಹೇ ಪೂಜಾಹ೯ರೆ, ಪವಿತ್ರವಾದುದನ್ನು ಕಿವಿಗಳಿಂದ ಕೇಳುವ; ದೃಢವಾದ ಅವಯವಗಳಿಂದಲೂ ಮತ್ತು ಶರೀರಗಳಿಂದಲೂ ಕೂಡಿ ನಿಮ್ಮನ್ನು ಸ್ತುತಿಸುವವರಾಗಿ ದೇವನಿಂದ ವಿಧಿಸಲ್ಪಟ್ಟ ಪೂಣ೯ವಾದ ಆಯುಸ್ಸನ್ನು ಹೊಂದುವ.
ಓಂಶಾಂತಿ ಶಾಂತಿ ಶಾಂತಿಃ
ಮೊದಲನೆಯ ಮುಂಡಕ
ಮೊದಲನೆಯ ಖಂಡ
ವಿಶ್ವದ ಕತೃ೯ವೂ ಪಾಲಕನೂ ಆದ ಬ್ರಹ್ಮನು ದೇವತೆಗಳಿಗೆಲ್ಲ ಮೊದಲನೆಯವನಾಗಿ ಅಭಿವ್ಯಕ್ತನಾದನು.ಅವನು ಸವ೯ ವಿದ್ಯೆಗಳಿಗೂ ಆಶ್ರಯವಾಗಿರುವ ಬ್ರಹ್ಮವಿದ್ಯೆಯನ್ನು ಜ್ಯೇಷ್ಠ ಪುತ್ರನಾದ ಅಥವ೯ನಿಗೆ ಉಪದೇಶಿಸಿದನು.ಮಹಾಗೃಹಸ್ಥನಾದ ಶೌನಕನು ಅಂಗಿರಸ್ಸನ್ನು ವಿಧಿ ಪ್ರಕಾರ ಸಮೀಪಿಸಿ ಹೇ ಭಗವಾನ್ ಯಾವುದನ್ನು ತಿಳಿದುಕೊಂಡರೆ ಇದೆಲ್ಲವನ್ನು ಅರಿತಂತಾಗುವುದು?ಎಂದು ಪ್ರಶ್ನಿಸಿದನು.
ಎರಡು ವಿದ್ಯೆಗಳನ್ನು ತಿಳಿದುಕೊಳ್ಳಬೇಕು.ಪರಾವಿದ್ಯೆ,ಅಪರಾವಿದ್ಯೆ. ಅಪರಾವಿದ್ಯೆಯೆಂದರೆ ಋಗ್ವೇದ, ಯಜುವೇ೯ದ, ಸಾಮವೇದ, ಅಥವ೯ವೇದ, ಶಿಕ್ಷಾ, ಕಲ್ಪ, ವ್ಯಾಕರಣ, ನಿರುಕ್ತ, ಛಂದಸ್ಸು, ಜ್ಯೋತಿಷ್ಯ, ಇವು ಅಪರಾವಿದ್ಯೆಗಳು.ಯಾವುದರಿಂದ ಈ ಅಕ್ಷರವು (ಬ್ರಹ್ಮವು) ಹೊಂದಲ್ಪಡುವುದೋ ಅದು ಪರಾವಿದ್ಯೆ.ಅದು ಅದೃಶ್ಯವಾದುದು, ಅಗ್ರಾಹ್ಯವಾದುದು, ಗೋತ್ರವಿಲ್ಲದ್ದು, ವಣ೯ವಿಲ್ಲದ್ದು, ಚಕ್ಷು ಶ್ರೋತ್ರಗಳಿಲ್ಲದ್ದು,ಹಸ್ತಪಾದ ವಿಹೀನವಾದುದು,ಅದು ನಿತ್ಯ, ವಿಭು, ಸವ೯ಗತ, ಅತ್ಯಂತ ಸೂಕ್ಷ್ಮಮತ್ತು ಅವ್ಯಯ. ಇಂತಹ ಭೂತ ಯೋನಿಯನ್ನು ಧೀರರು ಎಲ್ಲೆಲ್ಲಿಯೂ ನೋಡುತ್ತಾರೆ.
ಹೇಗೆ ಜೇಡರಹುಳು ನೂಲುಗಳನ್ನು ಹೊರಕ್ಕೆ ತಂದು ಪುನಃ ಒಳಕ್ಕೆ ಎಳೆದುಕೊಳ್ಳುವುದೋ, ಹೇಗೆ ಈ ಭೂಮಿಯಲ್ಲಿ ಸಸ್ಯಗಳು ಹುಟ್ಟುತ್ತವೆಯೋ ಹೇಗೆ ಜೀವಂತನಾದ ಮನುಷ್ಯನಿಂದ ಕೇಶಲೋಮಗಳು ಬೆಳೆಯುತ್ತವೆಯೊ, ಹಾಗೆಯೇ ಅಕ್ಷರದಿಂದ ಇಲ್ಲಿ ಸಮಸ್ತ ವಸ್ತುಗಳೂ (ಜಗತ್ತೂ) ಉಂಟಾಗುತ್ತವೆ2.ಬ್ರಹ್ಮವಿದ್ಯೆಯು ಎಲ್ಲಾವಿದ್ಯೆಗಳಿಗೂ ಕೊನೆ.ಅಕ್ಷರವು ತಪಸ್ಸಿನಿಂದ ದೊಡ್ಡದಾಗುತ್ತದೆ.ಆದುದರಿಂದ ಅನ್ನವು ಉಂಟಾಗುತ್ತದೆ.ಅನ್ನದಿಂದ ಪ್ರಾಣ, ಮನಸ್ಸು, ಸತ್ಯ, ಲೋಕಗಳು, ಕಮ೯ಗಳಲ್ಲಿ ಅಮೃತ ಇವು ಉಂಟಾಗುತ್ತದೆ. ಯಾವನು ಸವ೯ಜ್ಞನೊ,ಸವ೯ವಿದನೊ,ಯಾವನ ತಪಸ್ಸು ಜ್ಞಾನಮಯವಾಗಿರುವುದೊ, ಅವನಿಂದ ಈ ಬ್ರಹ್ಮವೂ ನಾಮವೂ ರೂಪವೂ ಅನ್ನವೂ ಉಂಟಾಗುತ್ತದೆ.
ಎರಡನೆಯ ಖಂಡ:
"ಅಂಧೇನೈವ ನೀಯಮಾನಾ ಯಥಾಂಧಾಃ"
ಅವಿದ್ಯೆಯ ಮಧ್ಯದಲ್ಲಿ ಇರುವವರಾಗಿ ,ತಾವೇ ಧೀರರು ಎಂದು ಪಂಡಿತರು ತಿಳಿದುಕೊಂಡು, ಪೀಡಿಸಲ್ಪಡುತ್ತ, (ಜರಾಮರಣ ಮೊದಲಾದ ಅನಥ೯ಗಳ ಸಮೂಹದಿಂದ )ಕುರುಡನು ಕರೆದುಕೊಂಡು ಹೋಗುತ್ತಿರುವ ಕುರುಡರಂತೆ ಈ ಮೂಢರು ಸುತ್ತುತ್ತಿರುವರು3.
ಅವಿದ್ಯೆಯಲ್ಲಿ ಬಹುಪ್ರಕಾರರಾಗಿ ಇರುವವರಾಗಿ "ತಾವು ಕೃತಾಥ೯ರು" ಎಂದು ಈ ಅಜ್ಞಾನಿಗಳು ಅಭಿಮಾನ ಪಡುತ್ತಾರೆ.ಕಮಿ೯ಗಳೂ ಕಮ೯ಫಲದ ಆಸಕ್ತಿಯಿಂದ ಇದನ್ನು ತಿಳಿಯುವುದಿಲ್ಲ.ಆ ಕಾರಣದಿಂದ ದುಃಖಾತ೯ರಾಗಿ ಕಮ೯ಫಲವನ್ನು ಕ್ಷೀಣ ಮಾಡಿಕೊಂಡವರಾಗಿ (ಸ್ವಗ೯ಲೋಕದಿಂದ) ಬೀಳುವರು.
ಯಾರು ಅರಣ್ಯದಲ್ಲಿ ತಪಃಶ್ರದ್ಧೆಗಳನ್ನು ಸೇವಿಸುತ್ತ ಭಿಕ್ಷಾವೃತ್ತಿಗಳನ್ನು ಮಾಡುವರೊ, ಯಾರು ಶಾಂತರಾದ ವಿದ್ವಾಂಸರೊ, ಅವರು ಪಾಪ ಪುಣ್ಯಗಳನ್ನು ಕಳೆದುಕೊಂಡು ಸೂಯ೯ದ್ವಾರದ ಮೂಲಕ ಎಲ್ಲಿ ಅಮೃತನೂ ಅವ್ಯಯಾತ್ಮನೂ ಆದ ಆ ಪುರುಷನೆಲ್ಲಿರುವನೊ ಅಲ್ಲಿಗೆ ಹೋಗುತ್ತಾರೆ.
ಬ್ರಾಹ್ಮಣನು ಕಮ೯ಕೃತವಾದ ಲೋಕಗಳನ್ನು ಪರೀಕ್ಷಿಸಿ "ಅಕೃತವು ಕೃತದಿಂದ ಆಗುವುದಿಲ್ಲ" ಎಂದು ವೈರಾಗ್ಯವನ್ನು ಹೊಂದಬೇಕು.ಅದನ್ನೇ ತಿಳಿಯುವುದಕ್ಕಾಗಿ ಅವನು ಸಮಿತ್ತುಗಳ ಕಂತೆಯನ್ನು ಕೈಯಲ್ಲಿ ಹಿಡಿದುಕೊಂಡು ಶ್ರೋತ್ರೀಯನೂ ಬ್ರಹ್ಮನಿಷ್ಠನೂ ಆದ ಗುರುವನ್ನು ಹೊಂದಬೇಕು.ಹೀಗೆ ಸರಿಯಾಗಿ ಬಂದಿರುವ ಪ್ರಶಾಂತ ಚಿತ್ತನಾದ ಶಮೆಯಿಂದ ಕೂಡಿದ ಅವನಿಗೆ ಆ ವಿದ್ವಾಂಸನು(ಗುರುವು)ಯಾವುದರಿಂದ ಪರಮಾಥ೯ ಸ್ವರೂಪವುಳ್ಳ ಅಕ್ಷಯನಾದ ಪುರುಷನನ್ನೇ ತಿಳಿಯುವನೋ ಆ ಬ್ರಹ್ಮವಿದ್ಯೆಯನ್ನು ಯಥಾಥ೯ವಾಗಿ ಉಪದೇಶಿಸಬೇಕು.
ಯಾವುದಕ್ಕೆ ಸೂಯ೯ನು ಸಮಿತ್ತೊ,ಆ ದ್ಯುಲೋಕವು ಪುರುಷನಿಂದಲೇ ಹುಟ್ಟುತ್ತವೆ.ದ್ಯುಲೋಕವೆಂಬ ಅಗ್ನಿಯಿಂದ ಹುಟ್ಟಿದ ಸೋಮನಿಂದ ಪೃಥ್ವಿಯಲ್ಲಿ ಸಸ್ಯಗಳು ಹುಟ್ಟುತ್ತವೆ.ಸಸ್ಯ ಪರಿಣಾಮವಾದ ರೇತಸ್ಸನ್ನು ಪುರುಷನು ಸ್ತ್ರೀಯಲ್ಲಿ ಸಿಂಚಿಸುತ್ತಾನೆ. ಹೀಗೆ ಅನೇಕ ಪ್ರಜೆಗಳು ಪರಮ ಪುರುಷನಿಂದ ಹುಟ್ಟುತ್ತಾರೆ. ಹೀಗೆ ದ್ಯುಲೋಕ,ಪಜ೯ನ್ಯ, ಪೃಥ್ವಿ,ಪುರುಷ,ಸ್ತ್ರೀ ಇವು ಪಂಚಾಗ್ನಿಗಳು.ಈ ಪುರುಷನಿಂದಲೇ ಋಕ್ಕುಗಳು, ಯಜಸ್ಸುಗಳು,ಸಾಮಗಳು,ದೀಕ್ಷೆಗಳು,ಎಲ್ಲ ಯಜ್ಞಗಳ ಕ್ರತುಗಳು,ದಕ್ಷಿಣೆಗಳು,ಸಂವತ್ಸರಗಳು,ಎಲ್ಲಿ ಸೋಮನು ಪವಿತ್ರಗೊಳಿಸುವನೊ ಎಲ್ಲಿ ಸೂಯ೯ನು ತಪಿಸುವನೋ ಆ ಲೋಕಗಳು ಉಂಟಾಗುತ್ತವೆ.
ಆ ಪುರುಷನಿಂದ ದೇವತೆಗಳು ಹುಟ್ಟುತ್ತಾರೆ. ಸಾಧ್ಯರು, ಮನುಷ್ಯರು, ಪ್ರಾಣಿಗಳು, ಪಕ್ಷಿಗಳು, ಪ್ರಾಣಾಪಾನಗಳು, ವ್ರೀಹಿಯವಗಳು, ತಪಸ್ಸು, ಶ್ರದ್ಧೆ, ಸತ್ಯ, ಬ್ರಹ್ಮಚಯ೯ ಮತ್ತು ವಿಧಿ ಹುಟ್ಟಿರುತ್ತವೆ. ಏಳು ಪ್ರಾಣಗಳು, ಏಳು ಅಚಿ೯ಗಳು,ಏಳು ಸಮಿತ್ತುಗಳು,ಏಳು ಹೋಮಗಳು,ಯಾವುಗಳಲ್ಲಿ ಏಳೇಳಾಗಿ ಹೃದಯದಲ್ಲಿರುವ ಪ್ರಾಣಗಳು ಸಂಚರಿಸುವವೊ, ಆ ಈ ಏಳು ಲೋಕಗಳು ಆ ಪುರುಷನಿಂದಲೇ ಉಂಟಾಗುತ್ತವೆ.
ಈ ಪುರುಷನಿಂದಲೇ ಎಲ್ಲ ಪವ೯ತಗಳು,ಸಮುದ್ರಗಳು,ಉಂಟಾಗುವುವು.ಇವನಿಂದಲೇ ಬಹುರೂಪವಾದ ನದಿಗಳು ಹರಿಯುವುವು ಮತ್ತು ಇವನಿಂದಲೇ ವ್ರೀಹಿಯವಾದಿಗಳೂ ರಸವೂ ಆಗಿರುವುದು. ಈ ರಸದಿಂದಲೇ ಈ ಅಂತರಾತ್ಮನು ಪಂಚ ಸ್ಥೂಲಭೂತಗಳೊಡನೆ ನಿಂತಿರುವನು. ಬ್ರಹ್ಮವಿದ್ಯೆಯು ಎಲ್ಲಾ ವಿದ್ಯೆಗಳಿಗೂ ಕೊನೆ4.
ಕಮ೯,ತಪಸ್ಸು ಇವೆಲ್ಲವೂ ಪುರುಷನೇ.ಎಲ್ಲವೂ ಪರಮಾಮೃತವಾದ ಬ್ರಹ್ಮ. ಹೃದಯದಲ್ಲಿರುವ ಇದನ್ನು ಹೇ ಸೋಮ್ಯ, ಇದನ್ನು ಯಾರು ಅರಿತುಕೊಳ್ಳುತ್ತಾರೊ ಅವನು ಅವಿದ್ಯೆ ಗ್ರಂಥಿಯನ್ನು ಇಲ್ಲಿಯೇ ನಾಶಮಾಡುತ್ತಾನೆ."ಅವಿದ್ಯಾ ಗ್ರಂಥಿ" ಎಂದರೆ ದೃಢವಾಗುವ ಅವಿದ್ಯಾ ವಾಸನೆ.ಚಿತ್+ಜಡ =ಚಿಜ್ಜಡ ಗ್ರಂಥಿ.(ಅವಿದ್ಯೆಯ ಗಂಟು)
ಎರಡನೆಯಖಂಡ:
ಯಾವುದು ದೀಪ್ತಿಯುಳ್ಳದ್ದೋ,ಯಾವುದು ಅಣುಗಳಿಗಿಂತ ಸೂಕ್ಷ್ಮವಾಗಿದೆಯೊ, ಯಾವುದರಲ್ಲಿ ಲೋಕಗಳು ಲೋಕದಲ್ಲಿರುವವರು ಸಮಪಿ೯ತರಾಗಿರುವರೊ, ಅದೇ ಅಕ್ಷರ ಬ್ರಹ್ಮ.ಅದೇ ಪ್ರಾಣ,ಅದೇ ವಾಕ್, ಮನಸ್ಸುಗಳು ಆ ಇದು ಸತ್ಯ,ಅದೇ ಅಮೃತ,ಅದೇ ಹೊಡೆಯಲ್ಪಡತಕ್ಕದ್ದು.ಅದನ್ನು ಹೊಡೆ.
ಓಂಕಾರವು ಧನುಸ್ಸು, ಆತ್ಮನೆ ಪ್ರಾಣ, ಬಹ್ಮವು ಅದರ ಲಕ್ಷ್ಯ. ಪ್ರಮತ್ತನಾಗದೆ ಹೊಡೆಯಬೇಕು. ಬಾಣದಂತೆ ತನ್ಮಯನಾಗಬೇಕು.ದೇಹಾದಿಗಳು ತಾನೆಂಬ ಬುದ್ಧಿಯನ್ನು ಬಿಟ್ಟು ಅಕ್ಷರೈಕಾತ್ಮವೆಂಬ ಫಲವನ್ನು ಹೊಂದಬೇಕು.
"ಅನ್ಯವಾಚೋ ವಿಮುಂಚಥಾ".ದ್ಯುಲೋಕ, ಪೃಥ್ವಿ, ಅಂತರಿಕ್ಷ ಎಲ್ಲ ಪ್ರಾಣಿಗಳ ಸಹಿತ ಮನಸ್ಸು ಇವೆಲ್ಲವೂ ಯಾವನಲ್ಲಿ ಸಮಪಿ೯ತವಾಗಿರುವುವೊ ಆ ಆತ್ಮನೊಬ್ಬನನ್ನೇ ತಿಳಿದುಕೊಳ್ಳಿರಿ.ಬೇರೆ ಮಾತುಗಳನ್ನು ಬಿಡಿರಿ.ಇದು ಅಮೃತತ್ವಕ್ಕೆ ಸೇತು.ಕಮ೯ ಮಾತ್ರದಿಂದ ಸಿಗದೇ ಇರುವ ಮಹಾ ಫಲವು ಬ್ರಹ್ಮವಿದ್ಯೆಯಿಂದ ಉಂಟಾಗುತ್ತದೆ5.
"ಅರಾ ಇವ ರಥ ನಾಭೌ".ರಥಚಕ್ರದ ಗುಂಬದಲ್ಲಿ ಅರೆಕಾಲುಗಳು ಸೇರಿಕೊಂಡಿರುವಂತೆ ಎಲ್ಲಿ ನದಿಗಳು ಬಂದು ಸೇರಿರುವವೊ ಅಲ್ಲಿ ಆ ಈ ಆತ್ಮನು ಬಹುವಿಧವಾಗಿ ಹುಟ್ಟುತ್ತಾ ಸಂಚರಿಸುತ್ತಿರುವನು. ಓಂ ಎಂದು ಹೀಗೆ ಆತ್ಮನನ್ನು ಧ್ಯಾನಿಸಿ.ತಮಸ್ಸಿನ ಆಚೆ ಇರುವ ದಡಕ್ಕೆ ದಾಟಲು ನಿಮಗೆ ಮಂಗಳವಾಗಲಿ.
ಯಾವನು ಸವ೯ಜ್ಞನೊ,ಸವ೯ವಿದನೊ,ಯಾವನಿಗೆ ಭೂಮಿಯಲ್ಲಿ ಇದು ವಿಭೂತಿಯೊ, ಆ ಆತ್ಮನು ದಿವ್ಯವಾದ ಬ್ರಹ್ಮಪುರದ ಆಕಾಶದಲ್ಲಿ ಪ್ರತಿಷ್ಠಿತನಾಗಿರುತ್ತಾನೆ.ಈ ಆತ್ಮನು ಮನೋಮಯನು. ಪ್ರಾಣವೆಂಬ ಶರೀರದ ನೇತೃ.ಬುದ್ಧಿಯನ್ನು ಸರಿಯಾಗಿ ಇಟ್ಟು ಅನ್ನದಲ್ಲಿ ಪ್ರತಿಷ್ಠಿತನಾಗಿರುತ್ತಾನೆ. ಯಾವ ಆನಂದರೂಪವಾದ ಅಮೃತವು ಪ್ರಕಾಶಿಸುತ್ತಿರುವುದೊ,ಅದನ್ನು ವಿಜ್ಞಾನದ ಮೂಲಕ ಧೀರರುಸವ೯ತಃ ನೋಡುತ್ತಾರೆ.ಹೃದಯದಲ್ಲಿಯೇ ಇದ್ದುಕೊಂಡು ಮನೋವೃತ್ತಿಗಳಿಂದಲೆ ತೋರುವುದರಿಂದ ಮನೋಮಯನು.ಮನಸ್ಸೇ ಅವನಿಗೆ ಉಪಾಧಿ. ಆತ್ಮನು ಪ್ರಾಣಶರೀರವನ್ನು ಒಂದು ಸ್ಥೂಲಶರೀರದಿಂದ ಇನ್ನೊಂದಕ್ಕೆ ಒಯ್ಯುವುದರಿಂದ ನೇತೃಎಂದು ಹೇಳಿದೆ.
"ಕ್ಷೀಯಂತೇ ಚಾಸ್ಯ ಕಮಾ೯ಣಿ ತಸ್ಮಿನ್ ದೃಷ್ಟ್ವಾ ಪರಾವರೇ"
ಆ ಪರಾವರನು ಸಾಕ್ಷಾತ್ಕರಿಸಲ್ಪಟ್ಟರೆ ಇವನ ಹೃದಯ ಗ್ರಂಥಿಯು ನಾಶವಾಗುತ್ತದೆ.ಸವ೯ ಸಂಶಯಗಳು ವಿಚ್ಛೇದವಾಗುವುವು.ಕಮ೯ಗಳು ಕ್ಷೀಣವಾಗುವುವು. (ಕಾರಣ ರೂಪದಿಂದ ಪರ ಕಾಯ೯ರೂಪದಿಂದ ಅಪರನೂ ಆದ ಬ್ರಹ್ಮ). ಹಿರಣ್ಮಯವೂ, ಶ್ರೇಷ್ಠವೂ ಆದ ಕೋಶದಲ್ಲಿ ರಜಸ್ಸಿಲ್ಲದ ಕಲೆಯಿಲ್ಲದ ಬ್ರಹ್ಮವು ಇರುವುದು.ಅದು ಶುದ್ಧವು.ಜ್ಯೋತಿಗಳಿಗೆಲ್ಲಾ ಜ್ಯೋತಿಯು.ಆ ಬ್ರಹ್ಮವನ್ನು ಆತ್ಮವಿದರು ತಿಳಿದಿರುತ್ತಾರೆ.
"ತಸ್ಯ ಭಾಸಾ ಸವ೯ಮಿದಂ ವಿಭಾತಿ"
ಅಲ್ಲಿ ಸೂಯ೯ನಾಗಲೀ,ಚಂದ್ರನಾಗಲೀ, ನಕ್ಷತ್ರಗಳಾಗಲೀ ಪ್ರಕಾಶಿಸುವುದಿಲ್ಲ.ಈ ಅಗ್ನಿಯು ಪ್ರಕಾಶಿಸುವುದೆಲ್ಲಿ?ಪ್ರಕಾಶಿಸುತ್ತಿರುವ ಅವನನ್ನೇ ಅನುಸರಿಸಿ ಎಲ್ಲವೂಪ್ರಕಾಶಿಸುತ್ತಿರುವುವು.ಅವನ ಪ್ರಕಾಶದದಿಂದಲೆ ಇವೆಲ್ಲವೂ ಪ್ರಕಾಶಿಸುತ್ತಿರುವುದು. ಮುಂದಿರುವ ಇದು ಅಮೃತವಾದ ಬ್ರಹ್ಮವೇ. ಹಿಂದೆಯೂ, ದಕ್ಷಿಣಕ್ಕೂ, ಉತ್ತರಕ್ಕೂ ಇರುವುದು ಬ್ರಹ್ಮವೇ. ಕೆಳಗೂ ಮೇಲೂ ಪ್ರಸರಿಸಿರುವುದು ಬ್ರಹ್ಮವೇ.ಈ ಜಗತ್ತೆಲ್ಲವೂ ಶ್ರೇಷ್ಠತಮವಾದ ಬ್ರಹ್ಮವೇ.(ಬ್ರಹ್ಮೈವೇದಂ ಸವ೯ಮಿದಂ ಪ್ರತಿಷ್ಠಂ)
ಮೂರನೆಯ ಮುಂಡಕ:
ಮೊದಲನೆಯ ಖಂಡ:
"ದ್ವಾಸುಪಣಾ೯ ಸಯುಜಾ ಸಖಾಯಾ"
ಸವ೯ದಾ ಜೊತೆಯಲ್ಲಿರುವ ಸಖರಾದ ಎರಡು ಹಕ್ಕಿಗಳು ಒಂದೇ ವೃಕ್ಷವನ್ನು ಆಲಿಂಗಿಸಿಕೊಂಡಿವೆ. ಅವೆರಡರಲ್ಲಿ ಒಂದು ಸವಿಯಾದ ಹಣ್ಣನ್ನು ತಿನ್ನುತ್ತಿದೆ.ಇನ್ನೊಂದು ತಿನ್ನದೆ ನೋಡುತ್ತಿದೆ.
ಪುರುಷನು ಆ ಒಂದೇ ವೃಕ್ಷದಲ್ಲಿ ಮಗ್ನವಾಗಿ ಮೋಹಗೊಂಡು ದೈನ್ಯದಿಂದ ಶೋಕಿಸುತ್ತಿರುವನು. ಸೇವಿಸಲ್ಪಟ್ಟವನೂ, ತನಗಿಂತ ವಿಲಕ್ಷಣನೂ ಆದ ಈಶನನ್ನು ಮತ್ತು ಇವನ ಮಹಿಮೆಯನ್ನು ಹೀಗೆಂದು ಯಾವಾಗ ನೋಡುತ್ತಾನೆಯೋ ಆಗ ಅವನು ಶೋಕವಿಲ್ಲದವನಾಗುವನು. ಗುಹೆಯಲ್ಲಿ ಇರುವ ಇವನನ್ನು ಯಾವನು ತಿಳಿದುಕೊಳ್ಳುತ್ತಾನೆಯೋ ಅವನು ಅವಿದ್ಯಾ ಗ್ರಂಥಿಯನ್ನು ಇಲ್ಲಿಯೇ ಕಳಚಿಕೊಳು¼ತ್ತಾನೆ6.
ಯಾವಾಗ ಸಾಧಕನು ಹಿರಣ್ಯ ವಣ೯ದವನೂ ,ಕತೃ೯ವೂ,ಈಶನೂ ಬ್ರಹ್ಮಯೋನಿಯೂ,ಆದ ಪುರುಷನನ್ನು ನೋಡುತ್ತಾನೆಯೋ ಆಗ ಆ ವಿದ್ವಾಂಸನು ಪಾಪ ಪುಣ್ಯಗಳನ್ನು ತೊಲಗಿಸಿಕೊಂಡು ನಿರಂಜನನಾಗಿ ಪರಮಸಾಮ್ಯವನ್ನು ಹೊಂದುತ್ತಾನೆ.ಈ ಪ್ರಾಣವೇ ಸವ೯ಭೂತಗಳಾಗಿ ಪ್ರಕಾಶಿಸುತ್ತಿರುವುದು.ಇವನನ್ನು ಹೀಗೆ ಅರಿತುಕೊಂಡ ವಿದ್ವಾಂಸನು ಅತಿವಾದಿಯಾಗುವುದಿಲ್ಲ.ಆತ್ಮಕ್ರೀಡನೂ ಆತ್ಮರತನೂ,ಕ್ರಿಯಾವಂತನೂ ಆದ ಆತ್ಮನು ಬ್ರಹ್ಮವಿದರಲ್ಲಿ ಅತ್ಯಂತ ಶ್ರೇಷ್ಠನಾಗಿರುವನು.(ಎಲ್ಲವನ್ನೂ ಮೀರಿ ನುಡಿಯುವವನು ಅತಿವಾದಿ. ಆತ್ಮನೇ ಪ್ರಾಣವೆಂದು ತಿಳಿದುಕೊಂಡವನು ಅತಿವಾದಿಯಾಗುವುದಿಲ್ಲ.)
ಈ ಆತ್ಮನು ನಿತ್ಯವೂ ಸತ್ಯದಿಂದಲೂ,ನಿತ್ಯವೂ ತಪಸ್ಸಿನಿಂದಲೂ,ನಿತ್ಯವೂ ಸಮ್ಯಕ್ ಜ್ಞಾನದಿಂದಲೂ, ನಿತ್ಯವೂ ಬ್ರಹ್ಮಚಯ೯ದಿಂದಲೂ, ಲಭ್ಯನು.ಇವನು ಹೃದಯಾಕಾಶದಲ್ಲಿ ಶುದ್ಧನೂ ಜ್ಯೋತಿಮ೯ಯನೂ ಆಗಿ ಇರುವನು.ಈ ಆತ್ಮನನ್ನು ದೋಷರಹಿತವಾದ ಯತಿಗಳು ನೋಡುತ್ತಾರೆ.
"ಸತ್ಯಮೇವ ಜಯತೇ ನಾನೃತಂ"
ಸತ್ಯವೇ ಜಯಿಸುತ್ತದೆ.ಅನೃತವಲ್ಲ(ಸುಳ್ಳಲ್ಲ) .ಸತ್ಯದ ಆ ಪರಮ ನಿಧಾನವು ಇರುವಲ್ಲಿಗೆ ಆಪ್ತಕಾಮರಾದ ಋಷಿಗಳು ಯಾವ ಪಥದಿಂದ ಹೋಗುತ್ತಾರೆಯೋ ಅಂತಹ ದೇವಯಾನವೆಂಬ ಪಥವು ಸತ್ಯದಿಂದ ಹರಡಿರುತ್ತದೆ.
ಅದು ಬೃಹತ್ತಾಗಿಯೂ,ದಿವ್ಯವಾಗಿಯೂ,ಅಚಿಂತ್ಯ ರೂಪವುಳ್ಳದ್ದಾಗಿಯೂ ಇದೆ.ಅದು ಸೂಕ್ಷ್ಮವಾದುದಕ್ಕಿಂತಲೂ ಸೂಕ್ಷ್ಮತರವಾಗಿ ಪ್ರಕಾಶಿಸುತ್ತಿರುವುದು.ಅದು ದೂರವಾಗಿರುವುದಕ್ಕಿಂತಲೂ ಅತ್ಯಂತ ದೂರವಾಗಿಯೂ, ಇಲ್ಲಿಯೇ ಸಮೀಪದಲ್ಲಿಯೂ ಇರುವುದು. ಅದು ಇಲ್ಲಿ ನೋಡುವವರಿಗೆ ಗುಹೆಯಲ್ಲಿಯೇ(ಬುದ್ಧಿಯಲ್ಲಿಯೇ) ಇಡಲ್ಪಟ್ಟಿರುವುದು.
ಅವನನ್ನು ಕಣ್ಣಿನಿಂದಾಗಲೀ,ಮಾತಿನಿಂದಾಗಲಿ,ಇತರ ಇಂದ್ರಿಯಗಳಿಂದಾಗಲೀ ಗ್ರಹಿಸಲು ಆಗುವುದಿಲ್ಲ. ತಪಸ್ಸಿನಿಂದಾಗಲೀ ಅಥವಾ ಕಮ೯ದಿಂದಾಗಲಿ ಗ್ರಹಿಸಲಾಗುವುದಿಲ್ಲ. ಆದರೆ ಜ್ಞಾನಪ್ರಸಾದದಿಂದ ಶುದ್ಧವಾದ ಅಂತಃಕರಣವುಳ್ಳವನಾಗಿ ಧ್ಯಾನಮಾಡುವವನು ಅದರಿಂದ ನಿಷ್ಕಲನಾದ ಆತ್ಮನನ್ನು ನೋಡುತ್ತಾನೆ.ಚಿತ್ತವು ಶುದ್ಧಿಯಾದರೆ ಆತ್ಮನು ಪ್ರಕಾಶಿಸುವನು.ವಿಭೂತಿಯನ್ನು ಬಯಸುವವನು ಆತ್ಮಜ್ಞನನ್ನು ಪೂಜಿಸಬೇಕು.ಯಾವನು ಸವಾ೯ತ್ಮನನ್ನೇ ತನ್ನ ಆತ್ಮನೆಂದು ತಿಳಿದುಕೊಳ್ಳ್ಲುವನೊ ಅವನು ಸವಾ೯ತ್ಮನಾಗುವನು.('ಸವೋ೯ಹಂ' ಎಂಬ ಭಾವ) ಆದ್ದರಿಂದಲೇ ಸವ೯ಪ್ರಾಪ್ತಿರೂಪವಾದ ಫಲವು ಅವನಿಗೆ ಉಂಟಾಗುತ್ತದೆ.
ಎರಡನೇ ಖಂಡ:
ಯಾವುದರಲ್ಲಿ ಸಮಸ್ತ ಜಗತ್ತೂ ಸಮಪಿ೯ತವಾಗಿದೆಯೋ,ಯಾವುದು ಶುದ್ಧವಾಗಿ ಪ್ರಕಾಶಿಸುತ್ತಿರುವುದೋ,ಈ ಪರಮವಾದ ಬ್ರಹ್ಮವೆಂಬ ಸ್ಥಾನವನ್ನು ಅವನು ತಿಳಿದಿರುವನು.ನಿಷ್ಕಾಮರಾದ ಯಾರು ಈ ಆತ್ಮಜ್ಞನನ್ನು ಉಪಾಸಿಸುವರೊ ಆ ಧೀರರು ಈ ಶುಕ್ರವನ್ನು ಅತಿಕ್ರಮಿಸುತ್ತಾರೆ.ಯಾವನು ಕಾಮಗಳನ್ನು ಯೋಚಿಸುತ್ತ ಕಾಮಿಸುವನೋ ಅವನು ಕಾಮಗಳೊಂದಿಗೆ ಅಲ್ಲಿ ಹುಟ್ಟುತ್ತಾನೆ.ಪೂಣ೯ಕಾಮನಾದ ಕೃತಾತ್ಮನಿಗೆ ಎಲ್ಲಾ ಕಾಮಗಳೂ ಇಲ್ಲಿಯೇ ನಾಶವಾಗುವುವು.
"ನಾಯಮಾತ್ಮಾ ಪ್ರವಚನೇನ ಲಭ್ಯೋ
ನ ಮೇಧಯಾ ನ ಬಹುನಾ ಶ್ರುತೇನ"
ಈ ಆತ್ಮನು ಪ್ರವಚನದಿಂದ ಲಭ್ಯನಲ್ಲ.ಮೇಧಾ ಶಕ್ತಿಯಿಂದಲೂ ,ಬಹು ಶ್ರವಣದಿಂದಲೂ ಲಭ್ಯನಲ್ಲ.ಯಾವ ಪರಮಾತ್ಮನನ್ನು ಇವನು ಪಡೆಯಲು ಇಚ್ಛಿಸುತ್ತಾನೆಯೋ ಆ ಇಚ್ಛೆಯಿಂದಲೇ ಅವನು ಲಭ್ಯನು. ಅವನಿಗೆ ಈ ಆತ್ಮನು ತನ್ನ ಶರೀರವನ್ನು ಪ್ರಕಾಶಪಡಿಸುತ್ತಾನೆ7.
ಈ ಆತ್ಮನು ಬಲಹೀನನಿಗೆ ಲಭ್ಯನಲ್ಲ.ಪ್ರಮಾದದಿಂದಾಗಲೀ,ಸನ್ಯಾಸವಿಲ್ಲದ ತಪಸ್ಸಿನಿಂದಾಗಲೀ ಲಭ್ಯನಲ್ಲ.ಅವನ ಸಾಧನೆಗಳಿಂದ ಯಾವ ವಿದ್ವಾಂಸನು ಪ್ರಯತ್ನಿಸುತ್ತಾನೋ ಅವನು ಬ್ರಹ್ಮಧಾಮವನ್ನು ಪ್ರವೇಶಿಸುವನು.
ಈ ಆತ್ಮನನ್ನು ತಿಳಿದುಕೊಂಡು ಋಷಿಗಳು ಜ್ಞಾನತೃಪ್ತರೂ ,ಕೃತಾತ್ಮರೂ,ರಾಗ ದೋಷಾದಿ ರಹಿತರೂ, ಪ್ರಶಾಂತರೂ ಆಗುವರು. ವಿವೇಕಿಗಳು ನಿತ್ಯವೂ ಸಮಾಹಿತ ಸ್ವಬಾವವುಳ್ಳವರಾಗಿ ಸವ೯ವ್ಯಾಪ್ತನಾದ ಬ್ರಹ್ಮವನ್ನು ಸವ೯ತ್ರ ಪಡೆದುಕೊಂಡು ಸವ೯ವನ್ನೂ ಪ್ರವೇಶಿಸುವರು. (ಘಟಾಕಾಶವು ಚಿದಾಕಾಶದಲ್ಲಿ ಲೀನವಾಗುವಂತೆ)
ಈ ಉಪನಿಷತ್ತಿನ ಒಂದು ಪ್ರಸಿದ್ಧವಾದ ವಾಕ್ಯವು ಹೀಗಿದೆ
ವೇದಾಂತ ವಿಜ್ಞಾನ ಸುನಿಶ್ಚಿತಾಥಾ೯ಃ
ಸನ್ಯಾಸಯೋಗಾದ್ಯತಯಃ ಶುದ್ಧಸತ್ವಾಃ
ತೇ ಬ್ರಹ್ಹಲೋಕೇಶು ಪರಾಂತಕಾಲೇ
ಪರಾಮೃತಾಃ ಪರಿಮುಚ್ಯ0ತಿ ಸವೇ೯|
ವೇದಾಂತ ವಿಜ್ಞಾನದ ಅಥ೯ವನ್ನು ಚೆನ್ನಾಗಿ ನಿಧಾ೯ರಮಾಡಿರುವವರಾಗಿ ಸನ್ಯಾಸಯೋಗದಿಂದ ಶುದ್ಧಸತ್ವವುಳ್ಳವರಾಗಿ ಆ ಎಲ್ಲಾ ಯತಿಗಳು ಬ್ರಹ್ಮಲೋಕಗಳಲ್ಲಿ ಚರಮಕಾಲದಲ್ಲಿ ಬ್ರಹ್ಮೀಭೂತರಾಗಿ ಮುಕ್ತರಾಗುವರು.
ಮೋಕ್ಷಕಾಲದಲ್ಲಿಹದಿನೈದು ಕಲೆಗಳು ತಮ್ಮಕಾರಣಗಳನ್ನು ಸೇರುತ್ತವೆ.ದೇವತೆಗಳೆಲ್ಲರೂ ಪ್ರತಿದೇವತೆಗಳನ್ನು ಸೇರುತ್ತಾರೆ.ಅವರ ಕಮ೯ಗಳು,ವಿಜ್ಞಾನಮಯವಾದ ಆತ್ಮನು,ಎಲ್ಲವೂ ಅವ್ಯಯವಾದ ಪರಬ್ರಹ್ಮದಲ್ಲಿ ಒಂದಾಗುವವು.ಹೇಗೆ ಹರಿಯುತ್ತಿರುವ ನದಿಗಳು ನಾಮರೂಪಗಳನ್ನು ಬಿಟ್ಟು ಸಮುದ್ರದಲ್ಲಿ ಲೀನವಾಗುವವೊ ಹಾಗೆಯೇ ವಿದ್ವಾಂಸನು ನಾಮರೂಪಗಳಿಂದ ಬಿಡುಗಡೆಯನ್ನು ಹೊಂದಿ ಪರಮಾತ್ಮನೂ ದಿವ್ಯನೂ ಆದ ಪುರುಷನನ್ನು ಹೊಂದುವನು.
"ಬ್ರಹ್ಮವೇದ ಬ್ರಹ್ಮೈವ ಭವತಿ"
ಯಾವನು ಆ ಪರಬ್ರಹ್ಮವನ್ನು ತಿಳಿದುಕೊಳ್ಳುವನೊ ಅವನು ಬ್ರಹ್ಮವೇ ಆಗುವನು.ಇವನ ಕುಲದಲ್ಲಿ ಬ್ರಹ್ಮವನ್ನು ಅರಿಯದವರು ಹುಟ್ಟುವುದಿಲ್ಲ.ಇವನು ಶೋಕವನ್ನು ದಾಟುತ್ತಾನೆ. ಪಾಪವನ್ನು ದಾಟುತ್ತಾನೆ. ಹೃದಯಗ್ರಂಥಿಗಳಿಂದ ಬಿಡುಗಡೆಯನ್ನು ಹೊಂದಿ ಅಮೃತರಾಗುವರು8.
ಆ ಇದು ಋಕ್ಕಿನಿಂದ ಹೇಳಲ್ಪಟ್ಟಿದೆ.ಯಾರು ಕ್ರಿಯಾವಂತರೊ, ಶ್ರೋತ್ರೀಯರೊ, ಬ್ರಹ್ಮನಿಷ್ಠರೂ, ಶ್ರದ್ಧೆಯುಳ್ಳವರಾಗಿ ತಾವೇ ಏಕಶಿ೯ ಎಂಬ ಅಗ್ನಿಯಲ್ಲಿ ಹೋಮಮಾಡುವರೋ, ಯಾರಿಂದ ಶಿರೋವ್ರತವು ವಿಧಿವತ್ತಾಗಿ ಆಚರಿಸಲ್ಪಡುವುದೋ ಅವರಿಗೆ ಈ ಬ್ರಹ್ಮವಿದ್ಯೆಯನ್ನು ಉಪದೇಶಿಸಬೇಕು.(ಶಿರೋವ್ರತ ಎಂಬ ವ್ರತದಲ್ಲಿ ಅಗ್ನಿಯನ್ನು ತಲೆಯಮೇಲೆ ಧರಿಸಬೇಕು)
ಆ ಈ ಸತ್ಯವನ್ನು ಅಂಗಿರಸ ಎಂಬ ಋಷಿಯು ಪೂವ೯ದಲ್ಲಿ ಶೌನಕನಿಗೆ ಹೇಳಿದನು.ವ್ರತವನ್ನು ಆಚರಿಸದೆ ಇರುವವನು ಇದನ್ನು ಅಧ್ಯಯನ ಮಾಡಕೂಡದು.ಪರಮ ಋಷಿಗಳಿಗೆ ನಮಸ್ಕಾರ.ಪರಮ ಋಷಿಗಳಿಗೆ ನಮಸ್ಕಾರ.
ಮಾಂಡೂಕ್ಯ ಉಪನಿಷತ್ತು ಹಾಗೂ ಅದ್ವೈತ:
ಮಾಂಡೂಕ್ಯ ಉಪನಿಷತ್ ಅಥವ೯ ವೇದಕ್ಕೆ ಸೇರಿದೆ.ಇದೊಂದು ಅತ್ಯಂತ ಚಿಕ್ಕ ಉಪನಿಷತ್.ಇದರಲ್ಲಿ ಕೇವಲ ಹನ್ನೆರಡೇ ಮಂತ್ರಗಳಿವೆ.ತಾತ್ವಿಕ ದೃಷ್ಟಿಯಿಂದ ಇದು ಅತಿ ಮುಖ್ಯವಾಗಿರುವ ಉಪನಿಷತ್ತು.ಮುಮುಕ್ಷುಗಳಿಗೆ ಮಾಂಡೂಕ್ಯ ಉಪನಿಷತ್ ಒಂದೇ ಸಾಕು ಎನ್ನುತ್ತದೆ ಮುಕ್ತಿಕೋಪನಿಷತ್ತು.
ಇದನ್ನು ಕುರಿತು ಭಾಷ್ಯ ಬರೆಯುವಾಗ ಶ್ರೀ ಶಂಕರಾಚಾಯ೯ರು "ವೇದಾಂತ ಸಾರ ಸಂಗ್ರಹ"ಎಂದು ಕರೆಯುತ್ತಾರೆ.ಶ್ರೀ ಶಂಕರಾಚಾಯ೯ರ ಗುರುಗಳ(ಶ್ರೀಗೋವಿಂದ ಭವತ್ಪಾದರು) ಗುರುಗಳಾದ ಗೌಡಪಾದಾಚಾಯ೯ರು ಇದರ ಮೇಲೆ ಒಂದು ಕಾರಿಕೆಯನ್ನು ಬರೆದಿದ್ದಾರೆ.ಇದು ಅವಸ್ಥಾತ್ರಯ ವಿಭಜನೆಯ ಮೂಲಕ ಬ್ರಹ್ಮವನ್ನು ತಿಳಿಸುತ್ತದೆ.ಜಾಗ್ರತ,ಸ್ವಪ್ನ,ಸುಷುಪ್ತಿಗಳು ಎಲ್ಲರ ಅನುಭವದಲ್ಲೂ ಸಾಮಾನ್ಯವಾಗಿದೆ.
ಯಾರು ಅವಸ್ಥಾತ್ರಯಕ್ಕೆ ಸಾಕ್ಷಿಯಾಗಿರುವರೋ ಅವನೇ ಮುಖ್ಯ.ಅದೇ ಪರಮಸತ್ಯ.ಇದನ್ನು ಪಡೆಯುವುದು ಹೇಗೆ ಎಂಬುದಕ್ಕೆ ಓಂಕಾರೋಪಾಸನೆಯನ್ನು ಹೇಳುವರು.ಇಲ್ಲಿ ಒಬ್ಬನು ಶಾಸ್ತ್ರಾದಿಗಳನ್ನು ನಂಬಬೇಕಾಗಿಲ್ಲ.ಸುಮ್ಮನೆ ವಿಭಜನಾತ್ಮಕ ವಿಧಾನವನ್ನು ಅನುಸರಿಸಬೇಕು.ಇದು ಕೇವಲ ಯುಕ್ತಿಪ್ರಧಾನ ಮಾಗ೯.ಈ ಉಪನಿಷತ್ತನ್ನು "ಮಾಂಡೂಕ್ಯ" ಎಂಬ ಋಷಿಯು ಬರೆದಿದ್ದಾನೆ.
ಮಾಂಡೂಕ್ಯ ಉಪನಿಷತ್
1) ಇದೆಲ್ಲವೂ ಓಂ ಎಂಬ ಈ ಅಕ್ಷರವು.ಅದರ ಉಪವ್ಯಾಖ್ಯಾನವು ಹೀಗಿದೆ.ಹಿಂದೆ ಆಗಿಹೋದದ್ದು,ಈಗ ಇರುವುದು,ಮುಂದಿನದು ಇದೆಲ್ಲವೂ ಓಂಕಾರವೇ.ತ್ರಿಕಾಲಾತೀತವಾದುದು ಇನ್ನೂ ಯಾವುದಿದೆಯೊ ಅದೂ ಓಂಕಾರವೆ.
2) ಇದೆಲ್ಲವೂ ಬ್ರಹ್ಮವು.ಈ ಆತ್ಮನು ಬ್ರಹ್ಮ.ಆ ಈ ಆತ್ಮನು ನಾಲ್ಕು ಪಾದಗಳುಳ್ಳವನು.
3) ಜಾಗರಿತವೆಂಬ ಸ್ಥಾನವುಳ್ಳವನೂ ಬಹಿಃಪ್ರಜ್ಞನೂ ಸಪ್ತಾಂಗನೂ ಹತ್ತೊಂಬತ್ತು ಮುಖವುಳ್ಳವನೂ, ಸ್ಥೂಲಭೋಗವುಳ್ಳವನೂ,ಆದ ವೈಶ್ವಾನರನು ಒಂದನೆಯ ಪಾದ.
ಜಾಗ್ರತಾವಸ್ಥೆಯಲ್ಲಿ ಆತ್ಮನು ಬಹಿಃ ಪ್ರಜ್ಞನಾಗಿರುತ್ತಾನೆ.ಎಂದರೆ ಹೊರಗಿನ ವಿಷಯಗಳನ್ನು ಅರಿಯುತ್ತಾನೆ1.ಈ ಅವಸ್ಥೆಯಲ್ಲಿ ಆತ್ಮನಿಗೆ ಹತ್ತೊಂಬತ್ತು ದ್ವಾರಗಳು ಇರುತ್ತವೆ.ಇವು ಐದು ಜ್ಞಾನೇಂದ್ರಿಯಗಳು,ಐದು ಕಮೇ೯ಂದ್ರಿಯಗಳು, ಪಂಚಪ್ರ್ರಾಣಗಳು ಹಾಗೂ ಅಂತಃಕರಣ ಚತುಷ್ಟಯಗಳಾದ ಮನಸ್ಸು(ಸಂಶಯಾತ್ಮಕ), ಬುದ್ಧಿ(ನಿಶ್ಚಯಾತ್ಮಕ),ಚಿತ್ತ,ಅಹಂಕಾರ.ಒಟ್ಟು ಹತ್ತೊಂಬತ್ತು ಮುಖಗಳು. (ಇಪ್ಪತ್ತಕ್ಕೆ ಒಂದು ಕಡಿಮೆ)
ಸಪ್ತಾಂಗನು:ದ್ಯುಲೋಕವು ನಡುನೆತ್ತಿ,ಆದಿತ್ಯನು ಚಕ್ಷುಸ್ಸು,ವಾಯುವು ಪ್ರಾಣವು,ಆಕಾಶವು ಶರೀರವು,ಅಪ್ಪು(ನೀರು)ಮೂತ್ರಸಂಗ್ರಹ ಸ್ಥಾನ.ಪೃಥ್ವಿಯು ಪಾದಗಳು,ಅಹವನೀಯಾಗ್ನಿಯೇ ಮುಖ.ಯಾವನು ಹೀಗೆ ಸಪ್ತಾಂಗಗಳಿಂದ ಕೂಡಿದ ವೈಶ್ವಾನರನನ್ನು ತನ್ನ ಆತ್ಮನೆಂದು ಉಪಾಸನೆ ಮಾಡುವರೋ ಅವರಿಗೆ ಸವ೯ ಲೋಕಗಳಲ್ಲಿಯೂ ಸ್ವತಂತ್ರವಾದ ವ್ಯಾಪ್ತಿ ಇರುವುದು.(ಸ್ವರಾಜ್ಯ ಸಾಮ್ರಾಜ್ಯ).ಅವನು ಎಲ್ಲರ ಆತ್ಮನಾಗುವನು.ಎಲ್ಲರ ಭೋಗವೂ ಅವನದೇ ಆಗಿರುವುದು.ಸ್ಥೂಲಭುಕ್ ಎಂದರೆ ಹೊರಗಿನ ಸ್ಥೂಲ ವಿಷಯಗಳನ್ನು ಅರಿಯುವವನು.ಇದು ಆತ್ಮನ ಮೊದಲನೇ ಪಾದ.
ಸ್ವಪ್ನವೆಂಬ ಸ್ಥಾನವುಳ್ಳವನೂ ,ಅಂತಃ ಪ್ರಜ್ಞನೂ ಸಪ್ತಾಂಗನೂ, ಹತ್ತೊಂಬತ್ತು ಮುಖಗಳುಳ್ಳವನೂ , ಸೂಕ್ಷ್ಮ ಭೋಗವುಳ್ಳವನೂ, ಆದ ತೈಜಸನು ಎರಡನೇ ಪಾದ2.ಸ್ವಪ್ನಾವಸ್ಥೆಯಲ್ಲಿ ಆತ್ಮನು ಅಂತಃ ಪ್ರಜ್ಞನಾಗಿರುತ್ತಾನೆ.ಎಂದರೆ ಒಳಗಿನದನ್ನು(ಸ್ವಪ್ನದಲ್ಲಿರುವಂತೆ) ಕಾಣುತ್ತಾನೆ. ಆಗ ನಮಗೂ ಹೊರಗಿನ ಪ್ರಪಂಚಕ್ಕೂ ಸಂಬಂಧವಿರುವುದಿಲ್ಲ.
ಅವನು ನಿದ್ರಿಸುವಾಗ ಈ ಲೋಕದ ಸವ೯ ಸಾಧನ ಸಂಪತ್ತುಳ್ಳ ವಾಸನಾಂಶವನ್ನು ತೆಗೆದುಕೊಂಡು ಈ ದೇಹವನ್ನು ತಾನೇ ಮತ್ತೊಂದು ದೇಹವನ್ನು ನಿಮಿ೯ಸಿಕೊಂಡು ವಾಸನಾತ್ಮಕವಾದ ಹೊಳಪನ್ನು ತನ್ನ ಜ್ಯೋತಿಯಿಂದ ನೋಡುತ್ತಾ ನಿದ್ರಿಸುತ್ತಾನೆ.(ಬೃ4_3_2) ಇಂದ್ರಿಯಗಳ ವ್ಯಾಪಾರಗಳೆಲ್ಲವೂ ಮನಸ್ಸೊಂದರಲ್ಲಿಯೇ ಸೇರಿಬಿಡುತ್ತವೆ.
ಎಚ್ಚರದ ಇಂದ್ರಿಯ ವ್ಯಾಪಾರವೆಲ್ಲವೂ ನಿಂತುಹೋಗಿ ಮನಸ್ಸೊಂದೇ ತಾನೇ ಎಲ್ಲಾ ಬಗೆಯವಿಷಯಗಳಾಗಿ ಕಾಣುತ್ತಿರುತ್ತದೆ.ಆತ್ಮನು ಇಲ್ಲಿ ಸೂಕ್ಷ್ಮ ಭುಕ್.ಸ್ವಪ್ನದಲ್ಲಿ ನಿಜವಾದ ಇಂದ್ರಿಯಗಳಿಲ್ಲದಿರುವುದರಿಂದ ಬರಿಯ ಮನಸ್ಸಿನ ವಾಸನಾತ್ಮಕ ಭೋಗವು ಮಾತ್ರ ಇರುತ್ತದೆ.ಆದ್ದರಿಂದ ಅವನು ಇಲ್ಲಿ "ಸೂಕ್ಷ್ಮ ಭುಕ್".ಸ್ವಪ್ನದಲ್ಲಿ ಆತ್ಮನು ತೇಜಸ್ಸಿನಿಂದ ಆದವನು.
ಎಲ್ಲಿ ನಿದ್ರಿಸಿದವನು ಯಾವಕಾಮವನ್ನು ಬಯಸುವುದಿಲ್ಲವೋ ರiÀiÁವ ಕನಸನ್ನು ಕಾಣುವುದಿಲ್ಲವೋ ,ಅದು ಸುಷುಪ್ತವು. ಸುಷುಪ್ತ ಸ್ಥಾನದಲ್ಲಿರುವವನಾಗಿ ಏಕೀಭೂತನಾಗಿ ಪ್ರಜ್ಞಾನಘನನೇ ಆಗಿ ಆನಂದಮಯನಾಗಿ ಆನಂದ ಭೋಗವುಳ್ಳವನಾಗಿ ಚೇತೋಮುಖನಾಗಿರುವ ಪ್ರಾಜ್ಞನು ಮೂರನೆಯ ಪಾದವು3.
ಜೀವವು ಏನೇನು ಮಾಡುತ್ತಿರುವನೂ ಅದೆಲ್ಲವೂ ಕಾಮದ ವ್ಯಾಪಾರವೇ.ಇದೇ ಎಚ್ಚರದ ಅಸಾಧಾರಣ ಧಮ೯.ಈ ಸ್ವಭಾವವು ಸುಷುಪ್ತಿಯಲ್ಲಿರುವುದಿಲ್ಲ.ಅಲ್ಲಿ ಯಾವ ಕಾಮದ ಬಯಕೆಯೂ ಇರುವುದಿಲ್ಲ.ಎಚ್ಚರ ಕನಸುಗಳಂತೆ ಇಲ್ಲಿ ಯಾವ ಉಪಾಧಿಯೂ ಆತ್ಮನಿಗೆ ಇರುವುದಿಲ್ಲ. ಎಚ್ಚರದಲ್ಲಿಯೂ ಕನಸಿನಲ್ಲಿಯೂ ಆತ್ಮನು ಸಪ್ತಾಂಗನು.ಏಕೋನ ವಿಂಶತಿ ಮುಖನು ಎಂದು ವಣಿ೯ಸಲಾಗಿತ್ತು. ಆದರೆ ಸುಷುಪ್ತಿಯಲ್ಲಿ ಅಂಥ ಪ್ರಪಂಚವು ಯಾವುದೂ ಇರುವುದಿಲ್ಲ.ಇಲ್ಲಿ ಇರುವುದೆಲ್ಲಾ ಆತ್ಮನೊಬ್ಬನೇ.ಅವನಲ್ಲಿ ಪ್ರಪಂಚವು ಒಂದಾಗಿರುತ್ತದೆ.ಆದ್ದರಿಂದ ಅವನನ್ನು"ಏಕೀಭೂತ"ನು ಎಂದು ಮಂತ್ರದಲ್ಲಿ ಕರೆದಿದೆ.
ಸುಷುಪ್ತಿಯಲ್ಲಿ ನಾವು ಆನಂದವನ್ನು ಭೋಗಿಸುತ್ತೇವೆ.ಆದ್ದರಿಂದ ಅವನು ಆನಂದ ಭುಕ್.(ಆನಂದವನ್ನು ಭೋಗಿಸುವವನು).ಸುಷುಪ್ತಿಯಲ್ಲಿ ಆತ್ಮನು ಪ್ರಜ್ಞಾನ ಸ್ವರೂಪನಾಗಿರುವುದರಿಂದ "ಪ್ರಜ್ಞೆ".
ಈತನೇ ಸವೇ೯ಶ್ವರನು.ಈತನೇ ಸವ೯ಜ್ಞನು.ಈತನೇ ಅಂತಯಾ೯ಮಿಯು.ಈತನೇ ಎಲ್ಲಕ್ಕೂ ಯೋನಿಯು. (ಕಾರಣನು) ಭೂತಗಳ ಪ್ರಭವಾಪ್ಯಯವು.ಅಂತಯಾ೯ಮಿ ಎಂದರೆ ಪ್ರಾಣಿಗಳ ಒಳಹೊಕ್ಕು ಅವುಗಳನ್ನೇ ನಿಯಮಿಸುವವನು.
ಅಂತಪ್ರಜ್ಞನಲ್ಲ.ಬಹಿಃಪ್ರಜ್ಞನಲ್ಲ. ಉಭಯತ ಪ್ರಜ್ಞನಲ್ಲ. ಪ್ರಜ್ಞಾನ ಘನನಲ್ಲ. ಪ್ರಜ್ಞವಲ್ಲ. ಅಪ್ರಜ್ಞನಲ್ಲ. ಅದೃಶ್ಯವು, ಅವ್ಯವಹಾಯ೯ವು, ಅಗ್ರಾಹ್ಯವು, ಅಲಕ್ಷಣವು, ಅಚಿಂತ್ಯವು, ಅವ್ಯಪದೇಶ್ಯವು, ಏಕಾತ್ಮ ಪ್ರತ್ಯಯಸಾರವು,ಪ್ರಪಂಚೋಪಶಮವು,ಶಾಂತವು,ಶಿವವು,ಅದ್ವೈತವು ಇದು ನಾಲ್ಕನೆಯ ಪಾದವೆನ್ನುವರು. ಇವನೇ ಆತ್ಮನು. ಇವನನ್ನು ಅರಿತುಕೊಳ್ಳಬೇಕು4.
ಈ ಶ್ಲೋಕದಲ್ಲಿ ತುರೀಯದ ಸ್ಥಿತಿಯನ್ನು ಹೇಳಿದರೂ ನಿಜವಾಗಿ ನಾಲ್ಕನೆಯ ಸ್ಥಿತಿಯಲ್ಲ.ಇದು ಮೂರು ಅವಸ್ಥೆಗಳಿಗೂ ಹಿನ್ನೆಲೆ.ಸಾಕ್ಷಿ.ಇದಿಲ್ಲದೆ ಬೇರೆ ಯಾವ ಅವಸ್ಥೆಯೂ ಬರಲಾರದು. ವಾಚ್ಯ ದೃಷ್ಟಿಯಿಂದ ಆತ್ಮವು ಬ್ರಹ್ಮವು.ವಾಚಕ ದೃಷ್ಟಿಯಿಂದ ನೋಡಿದರೆ ಆತ್ಮನು ಓಂಕಾರವು5.
ಇವನು ಈ ಆತ್ಮನು ಅಂತಪ್ರಜ್ಞನಲ್ಲ,ಬಹಿಃಪ್ರಜ್ಞನಲ್ಲ.ಉಭಯತ ಪ್ರಜ್ಞನಲ್ಲ,ಪ್ರಜ್ಞನಲ್ಲ.ಎಂದರೆ ಅವನಲ್ಲಿ ಯಾವ ವಿಷಯದ ಜ್ಞಾತೃತ್ವಭಾವವಿಲ್ಲ.ನಾನು ಇದನ್ನು ನೋಡಿದೆ ಅದು ಹಾಗಿದೆ ಹೀಗಿದೆ ಎಂದು ಹೇಳುವುದಿಲ್ಲ.ಅಪ್ರಜ್ಞನಲ್ಲ_ಎಂದರೆ ಇದು ಅಜ್ಞಾನವಲ್ಲ. ಅದೃಶ್ಯನು_ಇವನನ್ನು ನೋಡುವುದಕ್ಕೆ ಆಗುವುದಿಲ್ಲ.ಅವ್ಯವಹಾಯ೯_ವ್ಯವಹಾರಕ್ಕೆ ಸಿಗುವವನಲ್ಲ,ಹಿಡಿಯುವುದಕ್ಕೆ ಆಗುವುದಿಲ್ಲ(ಅಗ್ರಾಹ್ಯ) ಲಕ್ಷಣರಹಿತ, ಅಚಿಂತ್ಯ, ಅವ್ಯಪದೇಶ್ಯ _ಶಬ್ದದಿಂದ ಪ್ರವೇಶಿಸುವುದಕ್ಕೆ ಆಗುವುದಿಲ್ಲ. ಏಕಾತ್ಮ ಪ್ರತ್ಯಯಸಾರನು.ಪ್ರಪಂಚ ಉಪಶಮನನು, ತುರೀಯದಲ್ಲಿ ಯಾವ ಪ್ರಪಂಚವೂ ಇಲ್ಲ.ತುರೀಯ ಸ್ಥಿತಿಯು ಶಾಂತ. ಅವನು ಅದ್ವೈತನು. ಅವನು ಆತ್ಮನು. ಅವನು ಅರಿಯಲ್ಪಡಬೇಕು. ತುರೀಯನು ಪಾದವೂ ಅಲ್ಲ ಮಾತ್ರೆಯೂ ಅಲ್ಲ6.
ಈ ಆತ್ಮನು ಅಕ್ಷರದ ದೃಷ್ಟಿಯಿಂದ ಓಂಕಾರವು. ಮೋಕ್ಷರೂಪದಲ್ಲಿರುವವನು,ಪಾದಗಳು ಮಾತ್ರೆಗಳು ಮಾತ್ರೆಗಳೇ ಪಾದಗಳು.ಅವೇ ಅಕಾರ ,ಉಕಾರ,ಮಕಾರ. ವ್ಯಾಪ್ತಿಯಿಂದಾಗಲೀ ಅಥವಾ ಆದಿಯುಳ್ಳದ್ದ ರಿಂದಲೇ ಆಗಲಿ ಜಾಗರಿತಾವಸ್ಥೆಯಲ್ಲಿರುವ ವೈಶ್ವಾನರನು ಅಕಾರವೆಂಬ ಮೊದಲನೆ ಮಾತ್ರೆ.ಯಾರು ಹಿಗೆ ಅರಿತುಕೊಳ್ಳುತ್ತಾರೆಯೊ ಅವನು ಎಲ್ಲಾ ಕಾಮಗಳನ್ನೂ ಹೊಂದುತ್ತಾನೆ. ಕನಸಿನ ತೋರಿಕೆಯಂತೆ ಎಚ್ಚರದ ತೋರಿಕೆಯೂ ಹುಸಿ ಎನ್ನಲು ಯಾವ ಅಡ್ಡಿಯೂ ಇಲ್ಲ7.
ಉತ್ಕಷ೯ದಿಂದಾಗಲೀ ಅಥವಾ ಎರಡರ ಮಧ್ಯದಲ್ಲಿರುವುದರಿಂದಾಗಲೀ ಸ್ವಪ್ನಾವಸ್ಥೆಯಲ್ಲಿರುವ ತೈಜಸನು ಉಕಾರವೆಂಬ ಎರಡನೆಯ ಮಾತ್ರೆ. ಯಾವನು ಹೀಗೆ ತಿಳಿದುಕೊಳ್ಳುತ್ತಾನೆಯೋ ಅವನು ಜ್ಞಾನ ಸಂತತಿಯನ್ನು ಹೆಚ್ಚಿಸಿಕೊಳ್ಳುತ್ತಾನೆ.ಇವನ ಕುಲದಲ್ಲಿ ಬ್ರಹ್ಮನನ್ನು ಅರಿಯದವರು ಹುಟ್ಟುವುದಿಲ್ಲ. ಅಳೆಯುವುದರಿಂದಾಗಲೀ ಅಥವಾ ಒಂದಾಗುವುದರಿಂದಾಗಲೀ ಸುಷುಪ್ತಿ ಸ್ಥಾನದಲ್ಲಿರುವ ಪ್ರಾಜ್ಞನು ಮಕಾರವೆಂಬ ಮೂರನೆಯ ಮಾತ್ರೆ.ಯಾವನು ಹೀಗೆ ತಿಳಿಯುತ್ತಾನೋ ಅವನು ಇದೆಲ್ಲವನ್ನೂ ಅಳೆಯುತ್ತಾನೆ ಮತ್ತು ಒಂದಾಗುತ್ತಾನೆ8.
ಮಾತ್ರೆ ಇಲ್ಲದ ತುರೀಯವು ವ್ಯವಹಾರಕ್ಕೆ ಅತೀತವಾಗಿದೆ.ಪ್ರಪಂಚ ಉಪಶಮವೂ, ಮಂಗಳವೂ, ಅದ್ವೈತವೂ, ಆಗಿದೆ.ಯಾವನು ಹೀಗೆ ತಿಳಿದುಕೊಳ್ಳುತ್ತಾನೆಯೋ ಅವನು ತನ್ನಿಂದ ತನ್ನನ್ನು ಸೇರುವನು.
ತೈತ್ತಿರೀಯ ಉಪನಿಷತ್ತು ಹಾಗೂ ಅದ್ವೈತ
ಯಜ್ಞ ಯಾಗಾದಿ ಕಮ೯ಗಳಿಗೋಸ್ಕರವೇ ಪ್ರವೃತ್ತವಾದ ಯಜುವೇ೯ದವು ಶುಕ್ಲ ಯಜುವೇ೯ದವೆಂದೂ ಕೃಷ್ಣಯಜುವೇ೯ದವೆಂದೂ ಎರಡು ಭಾಗಗಳಾಗಿವೆ.ಶುಕ್ಲ ಯಜುವೇ೯ದಕ್ಕೆ ವಾಜಸನೇಯ ಸಂಹಿತೆಯೂ ಕೃಷ್ಣ ಯಜುವೇ೯ದಕ್ಕೆ ತ್ಯತ್ತಿರೀಯ ಸಂಹಿತೆಯೂ ಮುಖ್ಯ ಶಾಖೆಗಳಾಗಿವೆ.
ಕೃಷ್ಣದ್ವೈಪಾಯನ ವೇದವ್ಯಾಸರು ವೇದಸಮೂಹವನ್ನು ಋಗ್ವೇದ,ಯಜುವೇ೯ದ ಸಾಮವೇದ, ಅಥವ೯ಣ ವೇದ ಎಂದು ನಾಲ್ಕು ಭಾಗಗಳನ್ನಾಗಿ ವಿಂಗಡಿಸಿದರು.ಅವುಗಳನ್ನು ಶಿಷ್ಯರಾದ ಪೈಲ, ವೈಶಂಪಾಯನ, ಜೈಮಿನಿ ಮತ್ತು ಸುಮಂತು ಇವರಿಗೆ ಬೋಧಿಸಿದರು.ವೈಶಂಪಾಯನರು ತಮಗೆ ಬಂದ ಯಜುವೇ೯ದವನ್ನು ಯಾಜ್ಞವಲ್ಕ್ಯರೇ ಮೊದಲಾದ ಶಿಷ್ಯರಿಗೆ ಉಪದೇಶಿಸಿದರು.
ಯಾವುದೊ ಒಂದು ಸಂದಭ೯ದಲ್ಲಿ ವೈಶಂಪಾಯನರಿಗೆ ಯಾಜ್ಞವಲ್ಕ್ಯರ ಮೇಲೆ ಕೋಪವುಂಟಾಗಿ ಅವರು ಕಲಿತಿರುವ ವೇದವನ್ನು ಹಿಂದಕ್ಕೆ ಕೊಟ್ಟು ಬಿಡುವಂತೆ ಆಜ್ಞಾಪಿಸಿದರು. ಯಾಜ್ಞವಲ್ಕ್ಯರು ತಮ್ಮ ತಪೋಬಲದಿಂದ ವೇದವನ್ನು ವಮನ ಮಾಡಿದರು .
ಆಚಾಯ೯ರ ಆಜ್ಞೆಯ ಪ್ರಕಾರ ಅವರ ಇತರ ಶಿಷ್ಯರು ತಿತ್ತಿರಿ ಪಕ್ಷಿಗಳ ರೂಪವನ್ನು ತಾಳಿ ವಮನ ಮಾಡಿದ ಆ ವೇದವನ್ನೇ ಸ್ವೀಕರಿಸಿದರು. ಆದುದರಿಂದ ಕೃಷ್ಣ ಯಜುವೇ೯ದವು ತೈತ್ತಿರೀಯ ಸಂಹಿತೆಯೆಂದು ಪ್ರಸಿದ್ಧವಾಯಿತು.ಅನಂತರ ಯಾಜ್ಞವಲ್ಕ್ಯರು ಸೂಯ೯ನನ್ನು ಕುರಿತು ತಪಸ್ಸು ಮಾಡಿ ಅವನ ಅನುಗ್ರಹವನ್ನು ಹೊಂದಿದರು.ಸೂಯ೯ನು ವಾಜಿ (ಕುದುರೆ) ರೂಪದಿಂದ ಬಂದು ಯಜುವೇ೯ದವನ್ನು ಪುನಃ ಉಪದೇಶ ಮಾಡಿದನು.ಸೂಯ೯ನಿಂದ ಉಪದಿಷ್ಟವಾದ್ದರಿಂದ ಶುಕ್ಲ ಯಜುವೇ೯ದವೆಂದೂ ವಾಜಿರೂಪದಿಂದ ಉಪದೇಶ¸್ಟಲ್ಪಟ್ಟಿದ್ದರಿಂದ ವಾಜಸನೇಯ ಸಂಹಿತೆಯೆಂದೂ ಪ್ರಸಿದ್ಧವಾಗಿದೆ.
ಕೃಷ್ಣ ಯಜುವೇ೯ದ ತೈತ್ತಿರೀಯ ಶಾಖೆಯು ಸಂಹಿತೆ,ಬ್ರಾಹ್ಮಣ,ಅರಣ್ಯಕ ಇವುಗಳಿಂದ ಕೂಡಿದೆ. ತ್ಯತ್ತಿರೀಯ ಅರಣ್ಯಕದ ಏಳನೆಯ,ಎಂಟನೆಯ ಹಾಗೂ ಒಂಬತ್ತನೆಯ ಪ್ರಪಾಠಗಳೇ ಶೀಕ್ಷಾವಲ್ಲಿ, ಆನಂದವಲ್ಲಿ, ಭೃಗುವಲ್ಲಿ ಎಂಬ ವಲ್ಲೀತ್ರಯಗಳನ್ನು ಹೊಂದಿರುವ ತೈತ್ತಿರೀಯೋಪನಿಷತ್ತು.ಹತ್ತನೆಯ ಪ್ರಪಾಠವೇ ಯಾಜ್ಞಿಕೀ ಅಥವಾ ಮಹಾನಾರಾಯಣೋಪನಿಷತ್ತು ಎಂದು ಪ್ರಸಿದ್ಧವಾಗಿದೆ.
ಅಧ್ಯಯನದ ಸೌಕಯ೯ಕ್ಕಾಗಿ ಪ್ರತಿಯೊಂದು ವಲ್ಲಿಯಲ್ಲಿಯೂ ಸಣ್ಣ ಸಣ್ಣ ಅನುವಾಕಗಳಿವೆ.
ಶೀಕ್ಷಾವಲ್ಲೀ:
ಶಾಂತಿ ಪಾಠದಿಂದಲೇ ಮೊದಲನೆಯ ಅನುವಾಕವು ಪ್ರಾರಂಭವಾಗಿದೆ.ಎರಡನೆಯ ಅನುವಾಕದಲ್ಲಿ ವಣಾದಿಗಳ ಉಚ್ಛಾರವನ್ನು ನಿರೂಪಿಸಲಾಗಿದೆ.ಉಪನಿಷತ್ ವಾಕ್ಯಗಳಿಗೆ ಅಥ೯ ಜ್ಞಾನವೇ ಮುಖ್ಯವಾಗಿದ್ದರೂ ಗ್ರಂಥಪಾಠದಲ್ಲಿ ಉದಾಸೀನತೆ ಇರಬಾರದು.
ವಣ೯,ಸ್ವರ,ಮಾತ್ರೆಗಳ ಮೇಲೆ ಲಕ್ಷ್ಯವಿದ್ದರೆ ಅಥ೯ವು ಪಾಠಕನಿಗೆ ಹೊಳೆಯುವುದು.ಮೂರನೆಯ ಅನುವಾಕದಲ್ಲಿ ಸಂಹಿತಾ ವಿಷಯವಾದ ಉಪಾಸನೆಯನ್ನು ಹೇಳಿದೆ.ನಾಲ್ಕನೆಯ ಅನುವಾಕದಲ್ಲಿ, ಶ್ರೀಕಾಮ, ಮೇಧಾಕಾಮ ಮೊದಲಾದವರಿಗೆ ವಿವಿಧ ಜಪ, ತಪ,ಹೋಮಗಳನ್ನು ವಿವರಿಸಿದೆ.
ಈ ಅನುವಾಕದ ಕೊನೆಯಲ್ಲಿ ಆಚಾಯ೯ನು"ನೀರು ತಗ್ಗಿನ ಪ್ರದೇಶಕ್ಕೆ ಹರಿಯುವಂತೆ,ತಿಂಗಳುಗಳು ಸಂವತ್ಟರವನ್ನು ಸೇರುವಂತೆ ಬ್ರಹ್ಮಚಾರಿಗಳು ಎಲ್ಲಾ ಕಡೆಯಿಂದಲೂ ಬಂದು ನನ್ನನ್ನು ಸೇರಲಿ"ಎಂದು ಪ್ರಾಥ೯ಸುತ್ತಾನೆ.ಐದನೆಯ ವiತ್ತುಆರನೆಯ ಅನುವಾಕಗಳಲ್ಲಿ ವ್ಯಾಹೃತಿ ರೂಪವಾದ ಬ್ರಹ್ಮದ ಅಂತರುಪಾಸನೆಯನ್ನು ಹೇಳಿದೆ. ಭೂಭು೯ವಃ ಮೊದಲಾದ ವ್ಯಾಹೃತಿಗಳಲ್ಲಿ ನಾಲ್ಕನೆಯ ವ್ಯಾಹೃತಿಯಾದ "ಮಹಃ" ಎಂಬುದನ್ನು ಕಂಡುಹಿಡಿದವನು ಮಹಾಚಮಸ್ಯ ಎಂಬ ಋಷಿ."ಮಹಃ" ಎಂಬುದೆ ಬ್ರಹ್ಮ. ಬ್ರಹ್ಮೋಪಾಸನೆಗೆ ಮತ್ತು ಸಾಕ್ಷಾತ್ಕಾರಕ್ಕೆ ಹೃದಯಾಕಾಶವೇ ವಿಶಿಷ್ಟ ಸ್ಥಾನವೆಂದು ಹೇಳಿದೆ.ವ್ಯಾಹೃತಿ ರೂಪವಾದ ಆ ಬ್ರಹ್ಮವನ್ನು ಪೃಥಿವ್ಯಾದಿ ಪಾಂಕ್ತರೂಪದಿಂದ ಉಪಾಸಿಸ ಬೇಕೆಂದು ಏಳನೆಯ ಅನುವಾಕದಲ್ಲಿ ಹೇಳಿದೆ.
ಎಂಟನೆಯ ಅನುವಾಕದಲ್ಲಿ ಸವೋ೯ಪಾಸನೆಗೂ ಅಂಗವಾಗಿರುವ ಪ್ರಣವದ ಉಪಾಸನೆಯನ್ನು ವಿಧಿಸಿದೆ.ಒಂಬತ್ತನೆಯ ಮತ್ತು ಹನ್ನೊಂದನೆಯ ಅನುವಾಕದಲ್ಲಿ ಸಮಸ್ತ ಶ್ರೌತ ಸ್ಮಾತ೯ ಕಮ೯ಗಳನ್ನು ನಿಯಮದಿಂದ ಮಾಡಬೇಕೆಂದು ಹೇಳಿದೆ.
ಬ್ರಹ್ಮಾನಂದವಲ್ಲಿ:
"ಬ್ರಹ್ಮವಿದಾಪ್ನೋತಿ ಪರಮ್"ಬ್ರಹ್ಮವಿದನು ಪರವನ್ನು ಹೊಂದುತ್ತಾನೆ ಎಂಬ ವಾಕ್ಯವು ಈ ವಲ್ಲಿಯ ಅಥ೯ಕ್ಕೆಲ್ಲ ಸೂತ್ರವಾಗಿರುತ್ತದೆ.
"ಸತ್ಯಂಜ್ಞಾನಂ ಅನಂತಂ ಬ್ರಹ್ಮ"ಎಂಬುದು ಬ್ರಹ್ಮದ ಲಕ್ಷಣ.ಇಂತಹ ಬ್ರಹ್ಮದಿಂದ ಆಕಾಶವೇ ಮೊದಲಾಗಿ ಅನ್ನರಸಮಯವಾದ ಮನುಷ್ಯನವರೆಗೆ ಜಗತ್ತೆಲ್ಲ ಸೃಷ್ಟಿಯಾಗುತ್ತದೆ.ಎರಡನೆಯ ಅನುವಾಕದಿಂದ ಐದನೆಯ ಅನುವಾಕದವರೆಗೆ ಅನ್ನಮಯ,ಪ್ರಾಣಮಯ,ಮನೋನಯ,ವಿಜ್ಞಾನಮಯ,ಆನಂದಮಯ ಎಂಬ ಐದು ಬಗೆಯ ಆತ್ಮರು ಒಬ್ಬರ ಒಳಗೆ ಒಬ್ಬರು ಇದ್ದಾರೆಂದು ವಿವರಿಸಿದೆ.
ಮುಖ್ಯವಾಗಿ ಬ್ರಹ್ಮದ ಅಸ್ತಿತ್ವವನ್ನು ಪ್ರತಿಪಾದಿಸಿದೆ.ಆನಂದದ ಮೀಮಾಂಸೆ ಎಂಟನೆಯ ಅನುವಾಕದ ವಿಷಯ.ಕಾಮರಹಿತವಾದ ಶ್ರೋತ್ರೀಯ ವೇದ್ಯವಾದ ಆನಂದವು, ಅವಿದ್ಯಾ ಕಾಮಕಮ೯ಗಳು ನಶಿಸಿದಂತೆ ನೂರುಮಡಿಯಾಗಿ ಹೆಚ್ಚಿ ಮನುಷ್ಯ ಗಂಧವ೯ನ ಆನಂದದಿಂದ ಪ್ರಾರಂಬಿಸಿ ಅವನು ಯಾವುದಕ್ಕೂ ಹೆದರುವುದಿಲ್ಲ.ವಿಜ್ಞಾನಮಯನಾದ ಆತ್ಮನಿಗಿಂಲೂ ಬೇರೆಯವನಾದ ಒಳಗಿರುವ ಮತ್ತು ಆನಂದಮಯನಾದ ಆತ್ಮನಿರುವನು.
ಭೃಗುವಲ್ಲಿ
ಈ ಕೊನೆಯ ವಲ್ಲಿಯಲ್ಲಿ ಬ್ರಹ್ಮವಿದ್ಯೆಗೆ ಸಾಧನವಾದ ತಪಸ್ಸನ್ನೂ ಅನ್ನಾದಿಗಳ ಉಪಾಸನೆಯನ್ನೂ ಹೇಳಿದೆ.ವರುಣನು ತನ್ನ ಮಗನಾದ ಭೃಗುವಿಗೆ ಶರೀರ,ಪ್ರಾಣ,ಚಕ್ಷುಸ್ಸು,ಶ್ರೋತ್ರ,ವಾಕ್ಕು ಎಂಬ ಜ್ಞಾನದ್ವಾರಗಳನ್ನು ಉಪದೇಶಿಸಿ ಅನಂತರ ಎಲ್ಲಾ ಪ್ರಾಣಿಗಳ ಉತ್ಪತ್ತಿ,ಸ್ಥಿತಿ, ಲಯಗಳಿಗೆ ಯಾವ ವಸ್ತುವು ಕಾರಣವೋ ಅದೇ ಬ್ರಹ್ಮವೆಂದು ಬ್ರಹ್ಮದ ಸಾಮಾನ್ಯ ಲಕ್ಷಣವನ್ನು ವಿವರಿಸುತ್ತಾನೆ.
ಭೃಗುವು ತಪಸ್ಸನ್ನು ಮಾಡಿ ಅನ್ನ,ಪ್ರಾಣ,ಮನಸ್ಸು,ವಿಜ್ಞಾನ ಇವುಗಳನ್ನು ಬ್ರಹ್ಮವೆಂದು ತಿಳಿದುಕೊಂಡನು. ಕೊನೆಗೆ ಅಂತರತಮವಾದ ಆನಂದವನ್ನೇ ಬ್ರಹ್ಮವೆಂದು ನಿಧ೯ರಿಸಿದನು.ಇದು ಮೊದಲನೆಯ ಆರು ಅನುವಾಕಗಳ ಸಾರಾಂಶ.ಒಂದು ದೃಷ್ಟಿಯಿಂದ ಪ್ರಾಣವು ಅನ್ನ ಶರೀರವು ಅನ್ನಾದ.ಅನ್ನೋಪಾಸಕನು ಅನ್ನವನ್ನು ನಿಂದಿಸಬಾರದು.ಹೀಗೆಯೇ ನೀರು,ಜ್ಯೋತಿಸ್ಸು,ಪೃಥ್ವಿ ಆಕಾಶ ಇವು ಪರಸ್ಪರ ಅನ್ನ_ಅನ್ನಾದಗಳು(ಅನ್ನವನ್ನು ತಿನ್ನುವವನು) ಎಂದು ಉಪಾಸಿಸಬೇಕು.ಇದು ಒಂಬತ್ತನೆಯ ಮತ್ತು ಹತ್ತನೆಯ ಅನುವಾಕಗಳ ವಿಷಯ.ಹತ್ತನೆಯ ಅನುವಾಕವು ಅನ್ನದಾನದ ಮಹಾತ್ಮ್ಯದಿಂದ ಪ್ರಾರಂಭವಾಗುತ್ತದೆ.ಯಾರು ಅನ್ನದಾನ ಮಾಡುವರೋ ಅವರಿಗೆ ಫಲವು ಸಿದ್ಧಿಸುವುದು.ಒಂದೇ ಬ್ರಹ್ಮವಸ್ತುವು ಪುರುಷನಲ್ಲಿಯೂ,ಆದಿತ್ಯನಲ್ಲಿಯೂ ಅಂತಯಾ೯ಮಿಯಾಗಿ ಇರುವುದು.ಯಾರು ಹೀಗೆ ಅರಿತುಕೊಳ್ಳುವರೊ ಅವರು ಅನ್ನಮಯದಿಂದ ಹಿಡಿದು ಆನಂದಮಯದವರೆಗೆ ಎಲ್ಲಾ ಆತ್ಮರನ್ನು ಹೊಂದಿ ಬ್ರಹ್ಮಾನಂದದಲ್ಲಿ ಮುಳುಗಿ ಮುಕ್ತಿಯನ್ನು ಹೊಂದುತ್ತಾರೆ.
ತೈತ್ತಿರೀಯೋಪನಿಷತ್ತಿನ ಕೆಲವು ಮುಖ್ಯ ವಾಕ್ಯಗಳು:
ಹನ್ನೊಂದನೆಯ ಅನುವಾಕದಲ್ಲಿ ಹೀಗೆ ಹೇಳಿದೆ.
ವೇದವನ್ನು ಅಧ್ಯಾಪನಮಾಡಿ ಆಚಾಯ೯ನು ಶಿಷ್ಯನಿಗೆ ಹೀಗೆ ಅನುಶಾಸನ ಮಾಡುತ್ತಾನೆ."ಸತ್ಯವನ್ನು ಹೇಳು; ಧಮ೯ವನ್ನು ಆಚರಿಸು.ಅಧ್ಯಯನದಲ್ಲಿ ಪ್ರಮಾದ ಮಾಡಬೇಡ.ಆಚಾಯ೯ನಿಗೆ ಇಷ್ಟವಾದ ಧನವನ್ನು ತಂದುಕೊಟ್ಟು ಸಂತತಿಯನ್ನು ವಿಚ್ಛಿನ್ನಗೊಳಿಸದಿರು. ಸತ್ಯದಿಂದ ಕದಲಕೂಡದು.ಧಮ೯ದಿಂದ ಕದಲ ಕೂಡದು.ಕುಶಲದಿಂದ ಕದಲ ಕೂಡದು.ಮಂಗಳಯುಕ್ತವಾದ ಕಮ೯ದಿಂದ ಕದಲಕೂಡದು.ಸ್ವಾಧ್ಯಾಯ ಪ್ರವಚನಗಳಿಂದ ಕದಲಕೂಡದು. ದೇವಪಿತೃಗಳ ಕಾಯ೯ದಿಂದ ಕದಲಕೂಡದು.ತಾಯಿಯೇ ನಿನಗೆ ದೇವರಾಗಿರಲಿ. ತಂದೆಯೇ ನಿನಗೆ ದೇವರಾಗಿರಲಿ. ಅತಿಥಿಯೇ ನಿನಗೆ ದೇವರಾಗಿರಲಿ. ಯಾವ ಕಮ೯ಗಳು ಅನಿಂದಿತವೊ ಅವುಗಳನ್ನು ಸೇವಿಸಬೇಕು.ಉಳಿದವುಗಳನ್ನು ಸೇವಿಸಕೂಡದು.ನಮ್ಮಲ್ಲಿ ಯಾವ ಒಳ್ಳೆಯ ನಡತೆಗಳಿವೆಯೊ ಅವುಗಳನ್ನೇ ಸೇವಿಸಬೇಕು.ಉಳಿದವುಗಳನ್ನು ಸೇವಿಸಕೂಡದು.ನಮಗಿಂತ ಉತ್ತಮರಾದ ಯಾವ ಯಾವ ಬ್ರಾಹ್ಮಣರಿರುವರೊ ಅವರನ್ನು ಆಸನಾದಿ ಪೂವ೯ಕ ನೀನು ಸೇವಿಸಬೇಕು. ಪುರುಷ ಸಂಸ್ಕಾರವೇ ಈ ಅನುಶಾಸನ ಶ್ರುತಿಯ ಉದ್ದೇಶ.ಏಕೆಂದರೆ ವಿಶುದ್ಧ ಸತ್ವನಾದವನಿಗೆ ಆತ್ಮಜ್ಞಾನವು ಕೂಡಲೇ ಉಂಟಾಗುವುದು1.
ಶ್ರದ್ಧೆಯಿಂದ ಕೊಡಬೇಕು.ಅಶ್ರದ್ಧೆಯಿಂದ ಕೊಡಬಾರದು.ತನ್ನ ಐಶ್ವಯ೯ಕ್ಕೆ ತಕ್ಕಂತೆ ಕೊಡಬೇಕು. ವಿನಯದಿಂದ ಕೊಡಬೇಕು. ಭಯದಿಂದ ಕೊಡಬೇಕು. ಮಿತ್ರಭಾವದಿಂದ ಕೊಡಬೇಕು. ಇನ್ನು ನಿನಗೆ ಶ್ರೌತ ಸ್ಮಾತ೯ಕಮ೯ ವಿಷಯದಲ್ಲಾಗಲೀ ಆಚಾರ ವಿಷಯದಲ್ಲಾಗಲೀ ಸಂಶಯವುಂಟಾದರೆ ಅಲ್ಲಿ ವಿಚಾರಕ್ಷಮರೂ ಕಮ೯ದಲ್ಲಿ ಸಮಥ೯ರೂ ,ಅಕ್ರೂರರೂ,ಅಕಾಮಹತರೂ ಆದ ಬ್ರಾಹ್ಮಣರು ಹೇಗೆ ವತಿ೯ಸುವರೊ ಹಾಗೆ ವತಿ೯ಸು.ಇದು ವಿಧಿ ಇದು ಉಪದೇಶ.ಇದು ವೇದರಹಸ್ಯ.ಇದು ಈಶ್ವರಾಜ್ಞೆ.ಹೀಗೆ ಉಪಾಸಿಸಬೇಕು. ಹೀಗೆ ಇದು ಅನುಷ್ಠೇಯ2.
ಮಿತ್ರನು ನಿನಗೆ ಸುಖವನ್ನುಂಟು ಮಾಡಲಿ.ವರುಣನು ನಿನಗೆ ಸುಖವನ್ನುಂಟು ಮಾಡಲಿ.ಆಯ೯ಮನು ನಿನಗೆ ಸುಖವನ್ನುಂಟು ಮಾಡಲಿ. ಇಂದ್ರನೂ ಬೃಹಸ್ಪತಿಯೂ ನಮಗೆ ಸುಖವನ್ನುಂಟುಮಾಡಲಿ.ಬ್ರಹ್ಮಕ್ಕೆ ನಮಸ್ಕಾರ. ಹೇ ವಾಯುವೇ ನಿನಗೆ ನಮಸ್ಕಾರ. ನೀನು ಪ್ರತ್ಯಕ್ಷ ಬ್ರಹ್ಮವಾಗಿರುತ್ತೀಯೆ. ನೀನೇ ಪ್ರತ್ಯಕ್ಷ ಬ್ರಹ್ಮವೆಂದು ಹೇಳಿದ್ದೇನೆ.ಋತವೆಂದು ಹೇಳಿದ್ದೇನೆ.ಸತ್ಯವೆಂದು ಹೇಳಿದ್ದೇನೆ.ಅದು ನಮ್ಮನ್ನು ಕಾಪಾಡಿತು. ಅದು ಆಚಾಯ೯ನನ್ನು ಕಾಪಾಡಿತು. ನನ್ನನ್ನು ಕಾಪಾಡಿತು.ಆಚಾಯ೯ನನ್ನು ಕಾಪಾಡಿತು.
ಪರಮೇಶ್ವರನು ನಮ್ಮಿಬ್ಬರನ್ನು ಜೊತೆಯಲ್ಲಿ ಕಾಪಾಡಲಿ.ನಮ್ಮಿಬ್ಬರನ್ನೂ ಜೊತೆಯಲ್ಲಿ ಪೋಷಿಸಲಿ.ನಾವು ಜೊತೆಯಲ್ಲಿ ಸಾಮಥ್ಯ೯ವನ್ನುಂಟು ಮಾಡುವಂತಾಗಲಿ.ನಮ್ಮಿಬ್ಬರ ಅಧ್ಯಯನವು ತೇಜಸ್ವಿಯಾಗಲಿ.ನಾವು ಪರಸ್ಪರ ದ್ವೇಷ ಮಾಡದೆ ಇರುವಂತಾಗಲಿ.
"ಬ್ರಹ್ಮವಿದಾಪ್ನೋತಿ ಪರಂ".ಬ್ರಹ್ಮವನ್ನು ತಿಳಿದವನು ಬ್ರಹ್ಮವನ್ನು ಹೊಂದುತ್ತಾನೆ3.ಈ ವಿಷಯದಲ್ಲಿ ಈ ವಾಕ್ಕು ಹೇಳಲ್ಪಟ್ಟಿದೆ.ಬ್ರಹ್ಮವು ಸತ್ಯ ಜ್ಞಾನ ಅನಂತ.ಯಾವನು ಪರಮ ವ್ಯೋಮದಲ್ಲಿರುವ ಗುಹೆಯಲ್ಲಿ ಬ್ರಹ್ಮವನ್ನು ಅರಿತುಕೊಳ್ಳುತ್ತಾನೋ ಅವನು ಸವ೯ಜ್ಞ ಸ್ವರೂಪನಾದ ಬ್ರಹ್ಮವಾಗಿ ಎಲ್ಲ ಕಾಮಗಳನ್ನು ಒಟ್ಟಿಗೆ ಹೊಂದುತ್ತಾನೆ.
ಆತ್ಮನಿಂದ ಆಕಾಶವು ಉತ್ಪನ್ನವಾಯಿತು.ಆಕಾಶದಿಂದ ವಾಯು.ವಾಯುವಿನಿಂದ ಅಗ್ನಿ. ಅಗ್ನಿಯಿಂದ ನೀರು. ನೀರಿನಿಂದ ಪೃಥ್ವಿ. ಪೃಥ್ವಿಯಿಂದ ಸಸ್ಯಗಳು. ಸಸ್ಯಗಳಿಂದ ಅನ್ನ.ಅನ್ನದಿಂದ ಪುರುಷ. ಹೀಗೆ ಉತ್ಪತ್ತಿಯ ಕ್ರಮ. ಆ ಈ ಪುರುಷನು ಅನ್ನರಸಮಯನು4.
ಯಾವ ಯಾವ ಪ್ರಾಣಿಗಳು ಭೂಮಿಯನ್ನು ಆಶ್ರಯಿಸಿರುವುವೊ ಅವೆಲ್ಲವೂ ಅನ್ನದಿಂದಲೇ ಹುಟ್ಟುತ್ತವೆ. ಹಾಗೆಯೇ ಅನ್ನದಿಂದಲೇ ಜೀವಿಸುತ್ತವೆ.ಕೊನೆಯಲ್ಲಿ ಇದನ್ನೇ ಪ್ರವೇಶಿಸುತ್ತವೆ5. ಅನ್ನವೇ ಪ್ರಾಣಿಗಳಲ್ಲಿ ಜ್ಯೇಷ್ಠ.ಆದುದರಿಂದ ಅನ್ನವು ಸವೌ೯ಷಧವೆಂದು ಹೇಳಲ್ಪಡುತ್ತದೆ.ಅನ್ನದಿಂದ ಪ್ರಾಣಿಗಳು ಹುಟ್ಟುತ್ತವೆ. ಹುಟ್ಟಿದವು ಅನ್ನದಿಂದ ವಧಿ೯ಸಲ್ಪಡುತ್ತವೆ.ತಿನ್ನಲ್ಪಡುತ್ತದೆ ಮತ್ತು ಪ್ರಾಣಿಗಳನ್ನು ತಿನ್ನುತ್ತದೆ.ಆದುದರಿಂದ ಅದು ಅನ್ನವೆಂದು ಕರೆಯಲ್ಪಡುತ್ತದೆ.
ಪ್ರಾಣವನ್ನು ಅನುಸರಿಸಿ ದೇವತೆಗಳು ಜೀವಿಸಿರುವರು.ಹಾಗೆಯೇ ಎಲ್ಲಾ ಮನುಷ್ಯರು ಪಶುಗಳೂ ಜೀವಿಸಿರುವುವು.ಯಾರು ಪ್ರಾಣವನ್ನು ಬ್ರಹ್ಮವೆಂದು ಉಪಾಸಿಸುವರೊ ಅವರು ಪೂಣಾ೯ಯಸ್ಸನ್ನು ಹೊಂದುತ್ತಾರೆ.ಯಾವುದರಿಂದ ವಾಕ್ಕುಗಳು ಮನಸ್ಸಿನೊಂದಿಗೆ ಹಿಂದಿರುಗುವವೊ ಆ ಬ್ರಹ್ಮದ ಆನಂದವನ್ನು ತಿಳಿದುಕೊಂಡವನು ಎಂದಿಗೂ ಹೆದರುವುದಿಲ್ಲ.
ವಿಜ್ಞಾನವು ಯಜ್ಞವನ್ನು ಮಾಡುತ್ತದೆ.ಕಮ೯ಗಳನ್ನೂ ಮಾಡುತ್ತದೆ.ಎಲ್ಲ ದೇವತೆಗಳು ವಿಜ್ಞಾನವನ್ನು ಜ್ಯೇಷ್ಠವಾದ ಬ್ರಹ್ಮವೆಂದು ಉಪಾಸನೆ ಮಾಡುತ್ತಾರೆ. ಈ ವಿಜ್ಞಾನಮಯ ಆತ್ಮನಿಗಿಂತಬೇರೆಯವನೂ ಒಳಗಿರುವವನೂ ಆನಂದಮಯನೂ ಆದ ಆತ್ಮನಿರುವನು.
"ನಾನು ಬಹುವಾಗುವೆನು ಹುಟ್ಟುವೆನು" ಎಂದು ಆ ಆತ್ಮನು ಸಂಕಲ್ಪಿಸಿದನು.ಅವನು ತಪಸ್ಸನ್ನು ಮಾಡಿದನು.ನಂತರ ಇದೆಲ್ಲವನ್ನೂ ಏನೇನಿದೆಯೊ ಸೃಷ್ಟಿಸಿದನು.ಅದನ್ನು ಸೃಷ್ಟಿಸಿ ಅದನ್ನೇ ಪ್ರವೇಶಿಸಿದನು.ನಾಮ ರೂಪಗಳಿಂದ ವಿಭಕ್ತವಾದ ಈ ಜಗತ್ತು ಜೀವನ ಕಮ೯ ಫಲಕ್ಕಾಗಿ ಉಂಟಾಗಿದೆಯೇ ವಿನಾ ಪೂಣ೯ಕಾಮವಾದ ಬ್ರಹ್ಮದ ಪ್ರಯೋಜನಕ್ಕಲ್ಲ.
ಈ ಅವಿಕಾರವೂ ಅಶರೀರವೂ ಅನಿವಾ೯ಚ್ಯವೂ ಆಧಾರರಹಿತವೂ ಆದ ಬ್ರಹ್ಮದಲ್ಲಿ ಭಯವಿಲ್ಲದೆ ಆತ್ಮಭಾವವನ್ನು ಹೊಂದುತ್ತಾನೆಯೊ ಆಗ ಅವನು ಅಭಯವನ್ನು ಪಡೆದವನಾಗುತ್ತಾನೆ.ಯಾವಾಗ ಈ ಬ್ರಹ್ಮದಲ್ಲಿ ಸ್ವಲ್ಪವಾದರೂ ಭೇದದಶ೯ನ ಮಾಡುತ್ತಾನೋ ಅದರಿಂದ ಅವನಿಗೆ ಭಯವಾಗುತ್ತದೆ.ಬ್ರಹ್ಮವೇ ತೃಪ್ತಿಗೆ ಕಾರಣವಾದ ರಸ.
ಇವನ ಭಯದಿಂದ ವಾಯುವು ಬೀಸುತ್ತಾನೆ. ಸೂಯನು ಉದಯಿಸುತ್ತಾನೆ.ಇವನ ಭಯದಿಂದ ವಾಯುವೂ ಅಗ್ನಿಯೂ ಇಂದ್ರನೂ ತಮ್ಮ ತಮ್ಮ ಕೆಲಸಗಳಲ್ಲಿ ತೊಡಗುತ್ತಾರೆ.ಐದನೆಯವನಾದ ಮೃತ್ಯುವು ಓಡುತ್ತಾನೆ.
ಆನಂದವಲ್ಲಿ:
ಇದು ಆನಂದದ ವಿಚಾರವಾಗಿರುತ್ತದೆ;ವೇದಾಧ್ಯಯನ ಸಂಪನ್ನನೂ,ಅತ್ಯಂತವಾಗಿ ಆಸೆಯುಳ್ಳವನೂ, ದೃಢತಮನೂ,ಬಲಿಷ್ಠನೂ,ಐಶ್ವಯ೯ದಿಂದ ಪೂಣ೯ವಾದ ಪೃಥ್ವಿಯೆಲ್ಲವನ್ನು ಹೊಂದಿದವನೂ ಆದ ಒಬ್ಬ ಒಳ್ಳೆಯ ಯುವಕನಿರಲಿ. ಅವನ ಆನಂದವು ಮನುಷ್ಯರ ಒಂದು ಆನಂದ.ಆ ನೂರು ಮಾನುಷ ಆನಂದಗಳು ಮನುಷ್ಯ ಗಂಧವ೯ರ ಒಂದು ಅನಂದ ಮತ್ತು ಅಕಾಮಹತನಾದ ಶ್ರೋತ್ರೀಯನ ಒಂದು ಆನಂದ.
ಮನುಷ್ಯ ಗಂಧವ೯ರ ಆ ನೂರು ಆನಂದಗಳು ದೇವ ಗಂಧವ೯ರ ಒಂದು ಆನಂದ ಮತ್ತು ಅಕಾಮಹತನಾದ ಶ್ರೋತ್ರೀಯನ ಆನಂದ.ದೇವ ಗಂಧವ೯ರ ಆ ನೂರು ಆನಂದಗಳು ಚಿರಲೋಕವುಳ್ಳ ಪಿತೃಗಳ ಒಂದು ಆನಂದ ಮತ್ತು ಅಕಾಮಹತನಾದ ಶ್ರೋತ್ರೀಯನ ಆನಂದ.ಚಿರಲೋಕವುಳ್ಳ ಪಿತೃಗಳ ಆ ನೂರು ಆನಂದಗಳು ಅಜಾನಜ ದೇವತೆಗಳ ಒಂದು ಆನಂದಮತ್ತು ಅಕಾಮಹತಗಳ ಆನಂದ ಮತ್ತು ಅಕಾಮಹತನಾದ ಶ್ರೋತ್ರೀಯನ ಆನಂದ.ಅಜಾನಜ ದೇವತೆಗಳ ನೂರು ಆನಂದಗಳು ಕಮ೯ದೇವತೆಗಳಾದ ದೇವತೆಗಳ ಒಂದು ಆನಂದ.ಅವರು ವೈದಿಕ ಕಮ೯ದಿಂದ ದೇವತ್ವವನ್ನು ಹೊಂದಿರುತ್ತಾರೆ ಮತ್ತು ಅದು ಅಕಾಮಹತನಾದ ಶ್ರೋತ್ರೀಯನ ಆನಂದ. ಕಮ೯ದೇವತೆಗಳಾದ ದೇವತೆಗಳ ಆ ನೂರು ಆನಂದಗಳು ದೇವತೆಗಳ ಒಂದು ಆನಂದ ಮತ್ತು ಅಕಾಮಹತನಾದ ಶ್ರೋತ್ರೀಯನ ಆನಂದ.ದೇವತೆಗಳ ಆ ನೂರು ಆನಂದಗಳು ಇಂದ್ರನ ಒಂದು ಆನಂದ ಮತ್ತು ಅಕಾಮಹತನಾದ ಶ್ರೋತ್ರೀಯನ ಆನಂದ.ಇಂದ್ರನ ಆ ನೂರು ಆನಂದಗಳು ಬೃಹಸ್ಪತಿಯ ಒಂದು ಆನಂದ ಮತ್ತು ಅಕಾಮಹತನಾದ ಶ್ರೋತ್ರೀಯನ ಆನಂದ.ಬೃಹಸ್ಪತಿಯ ಆ ನೂರು ಆನಂದಗಳು ಪ್ರಜಾಪತಿಯ ಒಂದು ಆನಂದ ಮತ್ತು ಅಕಾಮಹತನಾದ ಶ್ರೋತ್ರೀಯನ ಆನಂದ.ಪ್ರಜಾಪತಿಯ ಆ ನೂರು ಆನಂದಗಳು ಬ್ರಹ್ಮನ ಒಂದು ಆನಂದ ಮತ್ತು ಅಕಾಮಹತನಾದ ಶ್ರೋತ್ರೀಯನ ಆನಂದ.
ಆತ್ಮನನ್ನು ಬ್ರಹ್ಮಾನಂದದ ಅನುಭವಕ್ಕಾಗಿ ಲೌಕಿಕ ಆನಂದವು ಇಲ್ಲಿ ನಿದೇ೯ಶಿಸಲ್ಪಟ್ಟಿದೆ.ಧನವೇ ಮೊದಲಾದ ಬಾಹ್ಯ ಸಾಧನಗಳಿಂದಲೂ ಜ್ಞಾನವೇ ಮುದಲಾದ ಅಂತರಿಕ ಸಾಧನ ಗಳಿಂದಲೂ ಉತ್ಕøಷ್ಟವಾದ ಲೌಕಿಕ ಆನಂದವು ಮನುಷ್ಯನಿಗೆ ಉಂಟಾಗುತ್ತದೆ.ನಮ್ಮ ಅನುಭವಕ್ಕೆ ಆನಂದದ ಮೂಲಕವಾಗಿಯೇ ವಿಷಯಾತೀತವಾದ ಬ್ರಹ್ಮಾನಂದವನ್ನು ಅರಿತುಕೊಳ್ಳಲು ಸಾಧ್ಯ.ನಿಜವಾಗಿ ನೋಡಿದರೆ ಬ್ರಹ್ಮಾನಂದವೂ ಲೌಕಿಕ ಆನಂದದ ಒಂದು ಭಾಗವೇ. ಅವಿದ್ಯಾ ಕಲ್ಪಿತವಾದ ವಿಷಯ_ವಿಷಯಿ ಎಂಬ ಭಾವವು ಅವಿದ್ಯೆಯಿಂದ ತೊಲಗಿಸಲ್ಪಟ್ಟರೆ ಸ್ವಾಭಾವಿಕವೂ ಪರಿಪೂಣ೯ವೂ ಏಕವೂ ಆದ ಆ ಅದ್ವೈತಾನಂದವು ಮಾತ್ರ ಉಳಿಯುತ್ತದೆ.
ಆತ್ಮನನ್ನು ಅರಿತುಕೊಳ್ಳುವುದೇ "ಸಂಕ್ರಮಣ"ದ ನಿಜವಾದ ಅಥ೯.ಅವಿದ್ಯೆಯಿಂದ ಹೊಂದದೇ ಇದ್ದ ಆತ್ಮನು ವಿದ್ಯೆಯಿಂದ ಹೊಂದಲ್ಪಡುತ್ತಾನೆ.ಸಂಕ್ರಮಣ ಶಬ್ದವನ್ನು ಉಪಚಾರದಿಂದ ಪ್ರಯೋಗಿಸಿದೆ. ಸವ೯ಗತನಾದ ಆತ್ಮನಿಗೆ ಬೇರೆ ಯಾವ ವಿಧದಿಂದಲೂ ಸಂಕ್ರಮಣವು ಸಾಧ್ಯವಿಲ್ಲ.
ಯಾವುದರಿಂದ ವಾಕ್ಕುಗಳು ಮನಸ್ಸಿನೊಂದಿಗೆ ಅದನ್ನು ಹೊಂದದೆ ಹಿಂತಿರುಗುವವೊ ಆ ಬ್ರಹ್ಮದ ಆನಂದವನ್ನು ತಿಳಿದವನು ಯಾವುದಕ್ಕೂ ಹಿಂದಿರುಗುವುದಿಲ್ಲ."ನಾನು ಒಳ್ಳೆಯದನ್ನು ಏಕೆ ಮಾಡಲಿಲ್ಲ? ನಾನು ಪಾಪವನ್ನು ಏಕೆ ಮಾಡಿದೆನು? "ಎಂಬ ಪಶ್ಚಾತ್ತಾಪವು ಅವನನ್ನು ತಪಿಸುವುದಿಲ್ಲ. ಯಾವನು ಹೀಗೆ ಅರಿತುಕೊಂಡಿರುವನೊ ಅವನು ಈ ಎರಡನ್ನೂ ಆತ್ಮನನ್ನಾಗಿ ಮಾಡಿಕೊಂಡಿರುತ್ತಾನೆ.ಏಕೆಂದರೆ ಯಾವನು ಹೀಗೆ ತಿಳಿಯುವನೊ ಅವನು ಈ ಎರಡನ್ನೂ ಆತ್ಮನನ್ನಾಗಿ ಮಾಡಿಕೊಂಡಿರುತ್ತಾನೆ.
ಭೃಗುವಲ್ಲೀ:
"ಯಾವುದರಿಂದ ಈ ಪ್ರಾಣಿಗಳು ಹುಟ್ಟುವುವೊ ,ಹಾಗೆಯೇ ಹುಟ್ಟಿರುವುವು ಯಾವುದರಿಂದ ಜೀವಿಸುತ್ತವೆಯೊ ಮತ್ತು ಯಾವುದನ್ನು ಕುರಿತು ಹೋಗಿ ಪ್ರವೇಶಿಸುವವೊ ಅದನ್ನು ತಿಳಿದುಕೊ".
ಇಂದ್ರಿಯಗಳ ಏಕಾಗ್ರತೆಯೇ ಪರಮ ತಪಸ್ಸು.ಅನ್ನವು ಬ್ರಹ್ಮ ಎಂದು ತಿಳಿದುಕೊಂಡನು. ಏಕೆಂದರೆ ಅನ್ನದಿಂದಲೇ ಈಪ್ರಾಣಿಗಳು ಹುಟ್ಟುತ್ತವೆ. ಹುಟ್ಟಿದವುಗಳು ಅನ್ನದಿಂದ ಜೀವಿಸುತ್ತವೆ ಮತ್ತು ಅನ್ನವನ್ನು ಕುರಿತು ಹೋಗಿ ಪ್ರವೇಶಿಸುತ್ತವೆ. ತಂದೆಯಾದ ವರುಣನು ಭೃಗುವನ್ನು ಕುರಿತು ಹೇಳಿದನು "ತಪಸ್ಸಿನಿಂದ ಬ್ರಹ್ಮವನ್ನು ಅರಿತುಕೊ"ತಪಸ್ಸು ಬ್ರಹ್ಮವು. ಎಲ್ಲಿಯ ವರೆಗೆ ಬ್ರಹ್ಮದ ಲಕ್ಷಣವು ನಿರತಿಶಯವಾಗುವುದಿಲ್ಲವೊ ಅಲ್ಲಿಯವರೆಗೆ ತಪಸ್ಸೇ ಸಾಧನ6.
ಪ್ರಾಣವು ಬ್ರಹ್ಮ.ಮನಸ್ಸು ಬ್ರಹ್ಮ.ಏಕೆಂದರೆ ಮನಸ್ಸಿನಿಂದಲೇ ಈ ಪ್ರಾಣಿಗಳು ಹುಟ್ಟುತ್ತವೆ.ವಿಜ್ಞಾನವು ಬ್ರಹ್ಮ ಎಂದು ತಿಳಿಯಬೇಕು.ಆನಂದವು ಬ್ರಹ್ಮ ಎಂದು ತಿಳಿಯ ಬೇಕು.(ಆನಂದೋ ಬ್ರಹ್ಮೇತಿ ವ್ಯಜಾನಾತ್)7. ಆದುದರಿಂದ ಜಿಜ್ಞಾಸುವು ಬಾಹ್ಯ ಅಂತಃಕರಣ ರೂಪವಾದ ತಪಸ್ಸೆಂಬ ಸಾಧನವನ್ನು ಅನುಷ್ಠಿಸಬೇಕು.ಅನ್ನವನ್ನು ನಿಂದಿಸಕೂಡದು.ಅದು ವ್ರತ.ಪ್ರಾಣವೇ ಅನ್ನವು. ಶರೀರವೇ ಅನ್ನಾದವು. ಅನ್ನವನ್ನು ನಿರಾಕರಿಸ ಕೂಡದು.ಅನ್ನವನ್ನು ಬಹುವಾಗಿ ಮಾಡಬೇಕು.ಯಾರು ಹೇಗೆ ಅನ್ನದಾನವನ್ನು ಮಾಡುತ್ತಾರೆಯೊ ಅವರಿಗೆ ಫಲವು ಹಾಗೆಯೇ ಉಂಟಾಗುತ್ತದೆ.
ವಾಕ್ಕಿನಲ್ಲಿ ಕ್ಷೇಮರೂಪದಿಂದ ಬ್ರಹ್ಮವನ್ನು ಉಪಾಸಿಸಬೇಕು."ನಾನು ಅನ್ನ ನಾನು ಅನ್ನಾದ".ಅನ್ನಾದ ಎಂದರೆ ಅನ್ನವನ್ನು ತಿನ್ನುವವನು. ಅನ್ನರೂಪಿಯದ ನಾನು ಇತರರಿಗೆ ಅನ್ನವನ್ನು ಕೊಡದೆ ತಿನ್ನುವವನನ್ನು ತಿನ್ನುತ್ತೇನೆ
ಐತರೇಯ ಉಪನಿಷತ್ತು:
ಮೊದಲನೆಯ ಅಧ್ಯಾಯ:
ಹರಿ ಓಂ.ಮೊದಲು ಇದು ಆತ್ಮನೇ ಆಗಿತ್ತು.ಅದಲ್ಲದೆ ಇನ್ನು ಯಾವುದೂ ಬೇರೆ ಇರಲಿಲ್ಲ.ಲೋಕಗಳನ್ನು ಸೃಷ್ಟಿಸುವೆನು ಎಂದು ಆಲೋಚಿಸಿದನು.ಅವನು ಈ ಲೋಕಗಳನ್ನು ಸೃಷ್ಟಿಸಿದನು1. ಅವೇ ಅಂಭೋಲೋಕ,ಮರೀಚಿಲೋಕ,ಮರಲೋಕ,ಆಪೋಲೋಕ, ಅಂಭೋಲೋಕವು ದ್ಯುಲೋಕದ ಆಚೆಗೆ ಇರುವುದು.ದ್ಯುಲೋಕವು ಅದರ ಆಶ್ರಯ.ಅಂತರಿಕ್ಷವು ಮರೀಚಿ ಲೋಕಗಳು.ಪೃಥ್ವಿಯು ಮರಲೋಕ (ಅಮರವಲ್ಲದ್ದು).ಪೃಥ್ವಿಯ ಕೆಳಗೆ ಇರುವುದು ಆಪೋಲೋಕ.
ಅವನು ಯೋಚಿಸಿದನು.ಇವೇ ನಾನು ಸೃಷ್ಟಿಸಿದ ಲೋಕಗಳು.ಈಗ ಲೋಕಪಾಲನನ್ನು ಸೃಷ್ಟಿಸಿದನು. ಅವನು ನೀರಿನಿಂದಲೂ ಪುರುಷಾಕಾರವನ್ನು ಎತ್ತಿ ನಿಲ್ಲಿಸಿದನು.ಅವನನ್ನು ಕುರಿತು ಧ್ಯಾನಮಾಡಿದನು.ಧ್ಯಾನಿಸಲ್ಪಟ್ಟ ಅವನಿಗೆ ಅಂಡದಂತೆ ಬಾಯಿ ಉಂಟಾಯಿತು.ಬಾಯಿಂದ ವಾಕ್ ಇಂದ್ರಿಯ, ಅಗ್ನಿ ಉತ್ಪನ್ನವಾಯಿತು.ಮೂಗಿನ ಹೊಳ್ಳೆಗಳು ಉತ್ಪನ್ನವಾದವು.ಮೂಗಿನ ಹೊಳ್ಳೆಗಳಗಿಂದ ಘ್ರಾಣೇಂದ್ರಿಯ,ಘ್ರಾಣೇಂದ್ರಿಯದಿಂದ ವಾಯುವು ಉತ್ಪನ್ನವಾಯಿತು.ಕಣ್ಣುಗಳು ಉತ್ಪನ್ನವಾದವು.ಕಣ್ಣುಗಳಿಂದ ನೋಡುವ ಇಂದ್ರಿಯವು ಉತ್ಪನ್ನವಾಯಿತು.ಅದರಿಂದ ಅದರ ದೇವತೆಯಾದ ಸೂಯ೯ನು ಉತ್ಪನ್ನನಾದನು.ಕಿವಿಗಳು ಉತ್ಪನ್ನವಾದವು.ಕಿವಿಗಳಿಂದ ಕೇಳುವ ಇಂದ್ರಿಯಗಳು.ಇದರಿಂದ ದಿಗ್ದೇವತೆಗಳು
ಉತ್ಪನ್ನವಾದವು.ಚಮ೯ ಉತ್ಪನ್ನವಾಯಿತು.ಚಮ೯ದಿಂದ ಕೂದಲುಗಳು,ಕೂದಲುಗಳಿಂದ ಔಷಧಿ ವನಸ್ಪತಿಗಳು ಉತ್ಪನ್ನವಾದವು.ಹೃದಯ ಉತ್ಪನ್ನವಾಯಿತು.ಹೃದಯದಿಂದ ಮನಸ್ಸು,ಮನಸ್ಸಿನಿಂದ ಚಂದ್ರ ಉತ್ಪನ್ನನಾದನು.ನಾಭಿಯು ಉತ್ಪನ್ನವಾಯಿತು.ನಾಭಿಯಿಂದ ಅಪಾನವಾಯುವೂಅಪಾನದಿಂದ ಮೃತ್ಯುವೂ ಉತ್ಪನ್ನವಾದವು.ಶಿಶ್ನ ಉತ್ಪನ್ನವಾಯಿತು.ಶಿಶ್ನದಿಂದ ರೇತಸ್ಸು,ರೇತಸ್ಸಿನಿಂದ ನೀರು ಉತ್ಪನ್ನವಾಯಿತು.
ಮೂರನೆಯ ಖಂಡ; ಈಶ್ವರನು ಆಲೋಚಿಸಿದನು.ಇವೇ ಲೋಕಗಳು ಮತ್ತು ಲೋಕಪಾಲಕರು. ಇವರಿಗೆ ಅನ್ನವನ್ನು ಸೃಷ್ಟಿಸಿದನು.ಈಶ್ವರನು ಪಂಚಭೂತಗಳನ್ನು ಕುರಿತು ಧ್ಯಾನಿಸಿದನು.ಅವುಗಳಿಂದ ಒಂದು ಮೂತಿ೯ಯು ಉತ್ಪನ್ನವಾಯಿತು.ಯಾವಮೂತಿ೯ಯು ಉತ್ಪನ್ನವಾಯಿತೋ ಅದೇ ಅನ್ನ. ಸೃಷ್ಟಿಸಲ್ಪಟ್ಟ ಅನ್ನವು ಹಿಂದಿರುಗಿ ಓಡಲು ಪ್ರಯತ್ನಿಸಿತು.ಅದನ್ನು ವಾಕ್ಕಿನಿಂದ ಹಿಡಿಯಲು ಪ್ರಯತ್ನಿಸಿದನು.ಅದನ್ನು ವಾಕ್ಕಿನಿಂದ ಹಿಡಿಯಲು ಸಾಧ್ಯವಾಗಿದ್ದರೆ,ಕೇವಲ ಅನ್ನವನ್ನು ಉಚ್ಛಾರ ಮಾಡಿದರೆ ಮಾತ್ರ ತೃಪ್ತನಾಗಬಹುದಿತ್ತು.ಇದೇ ತತ್ವವು ವಾಸನೆ,ನೋಟ,ಸ್ಪಶ೯,ಯೋಚನೆ(ಮನಸ್ಸು)ಶಿಶ್ನ ಇವುಗಳಿಗೂ ಅನ್ವಯವಾಗುತ್ತದೆ.
ಅವನು ಅದನ್ನು ಅಪಾನವಾಯುವಿನ ಮೂಲಕ ಹಿಡಿಯಲು ಯತ್ನಿಸಿದನು.ಅದನ್ನು ಹಿಡಿದುಕೊಂಡನು.ಈ ಅಪಾನವಾಯುವೇ ಅನ್ನವನ್ನು ತಿನ್ನುವುದು. ವಾಯು ಅನ್ನದಿಂದಲೇ ಬದುಕಿರುವುದು.ಎಲ್ಲಾ ಪ್ರಾಣಕ್ರಿಯೆಗಳಿಗೂ ಶಕ್ತಿಯನ್ನು ಒದಗಿಸುವುದೇ ಅನ್ನ.ಆತ್ಮನು ತಲೆ ಬುರುಡೆಯನ್ನು ಸೀಳಿಕೊಂಡು ಬ್ರಹ್ಮರಂದ್ರದ ಮೂಲಕ ಪ್ರವೇಶಿಸಿದನು.ಈ ದ್ವಾರವು "ವಿಧೃತಿ" ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ2.ಇದು ನಂದನವು.ಅವನಿಗೆ ಮೂರು ವಾಸಸ್ಥಾನಗಳು,ಮೂರು ಸ್ವಪ್ನಗಳು,ಮೂರು ವಾಸಸ್ಥಾನಗಳು ಬಲಕಣ್ಣು,ಮನಸ್ಸು ,ಹೃದಯ.ಇವನ ಹೆಸರು ಇದಂದ್ರ. ಇವನನ್ನು ಇಂದ್ರನೆಂದು ಪರೋಕ್ಷವಾಗಿ ಕರೆಯುತ್ತಾರೆ.ಯಾರು ಎಲ್ಲದಕ್ಕೂ ಒಡೆಯನೋ ಅವನೇ ಇಂದ್ರ3. ಇಂದ್ರನಾದ ಅವನನ್ನು ಪರೋಕ್ಷವಾಗಿ ಇಂದ್ರನೆಂದು ಕರೆಯುತ್ತಾರೆ.ಎಕೆಂದರೆ ದೇವತೆಗಳು ಪರೋಕ್ಷಪ್ರಿಯರು.
ಎರಡನೆಯ ಅಧ್ಯಾಯ:
ಈ ಜೀವಾತ್ಮನು ಮೊದಲು ಪುರುಷನಲ್ಲಿ ರೇತೋರೂಪವಾದ ಗಭ೯ವಾಗುತ್ತಾನೆ.ಅದನ್ನು ಯಾವಾಗ ಸ್ತ್ರೀಯಲ್ಲಿ ಸೇಚನ ಮಾಡುತ್ತಾನೋ ಆಗ ಇದನ್ನು ಉತ್ಪತ್ತಿ ಮಾಡುವನು.ಅದು ಇವನ ಮೊದಲನೇ ಜನ್ಮ.ತನ್ನ ಗಭ೯ವಾಗಿರುವ ಪತಿಯ ಆತ್ಮವನ್ನು ರಕ್ಷಿಸುತ್ತಾಳೆ.ಮಗುವಿನ ಜನನವೇ ಎರಡನೇಜನ್ಮ.
ತಂದೆಯ ಪುತ್ರ ರೂಪನಾದ ಈ ಆತ್ಮನು ಪುಣ್ಯಕಮ೯ಗಳಿಗೋಸ್ಕರ ಪ್ರತಿನಿಧಿಯಾಗಿ ಮಾಡಲ್ಪಡುತ್ತಾನೆ.ಅವನು ಬೆಳೆದು ಕೊನೆಗೆ ಜೀಣ೯ನಾಗಿ ಮರಣದ ನಂತರ ಪುನಃ ಹುಟ್ಟುತ್ತಾನೆ.ಇದು ಅವನ ಮೂರನೆಯ ಜನ್ಮ4.
ವಾಮದೇವ ಮುನಿಯು ಗಭ೯ದಲ್ಲಿರುವಾಗಲೇ ಹೀಗೆ ಹೇಳಿದನು" ಈ ದೇವತೆಗಳನ್ನಲ್ಲ ಅರಿತುಕೊಂಡೆನು.ನೂರಾರು ಪುರಗಳು ನನ್ನನ್ನು ಅಧೊಲೋಕದಲ್ಲಿ ರಕ್ಷಿಸಿಕೊಂಡಿದ್ದವು.ಅನಂತರ ಗಿಡುಗನಂತೆ ವೇಗದಿಂದ ಹೊರಕ್ಕೆ ಬಂದಿದ್ದೇನೆ."ವಾಮದೇವನು ಹೀಗೆ ಆತ್ಮನನ್ನು ಅರಿತುಕೊಂಡು ಈ ಶರೀರ ನಾಶವಾದ ಮೇಲೆಸ್ವಗ೯ಲೋಕದಲ್ಲಿ ಸವ೯ ಕಾಮಗಳನ್ನು ಹೊಂದಿ ಅಮೃತನಾದನು.
ಮೂರನೆಯ ಅಧ್ಯಾಯ: ನಾವು "ಇವನು ಆತ್ಮ" ಎಂದು ಯಾವುದನ್ನು ಉಪಾಸಿಸುತ್ತೇವೆಯೊ ಅವನು ಯಾರು?ಇವರಿಬ್ಬರಲ್ಲಿ ಆತ್ಮನು ಯಾರು?ಯಾವುದರಿಂದ ನೋಡುತ್ತಾನೆಯೋ ಯಾವುದರಿಂದ ಕೇಳುತ್ತಾನೆಯೊ, ಯಾವುದರಿಂದ ವಾಸನೆಗಳನ್ನು ಮೂಸುತ್ತಾನೆಯೋ,ಯಾವುದರಿಂದ ಮಾತನಾಡುತ್ತಾನೆಯೋ, ಯಾವುದರಿಂದ ಒಳ್ಳೆಯದು ಕೆಟ್ಟದ್ದು ಇವುಗಳನ್ನು ಅರಿಯುತ್ತಾನೆಯೋ, ಹಿಂದೆಯಾವುದು ಹೇಳಲ್ಪಟ್ಟಿದೆಯೋ ಅದೇ ಈ ಹೃದಯ ಮತ್ತು ಮನಸ್ಸು. ಸಂಜ್ಞಾನ, ಅಜ್ಞಾನ, ವಿಜ್ಞಾನ, ಪ್ರಜ್ಞಾನ, ಮೇಧಸ್ಸು, ದೃಷ್ಟಿ, ಧೃತಿ, ಮನನ, ಮನನ ವಿಷಯದಲ್ಲಿ ಸ್ವಾತಂತ್ರ, ಜೂತಿ, ಸ್ಮರಣೆ, ಸಂಕಲ್ಪ, ಅಧ್ಯವಸಾಯ,ಅನಾತೃಷ್ಣೆ,ವಶ _ಹೀಗೆ ಇವೆಲ್ಲವೂ ಪ್ರಜ್ಞಾನದ ಹೆಸರುಗಳಾಗಿರುತ್ತವೆ.
ಇವನು ಬ್ರಹ್ಮ,ಇವನು ಇಂದ್ರ,ಇವನು ಪ್ರಜಾಪತಿ,ಇವನೇ ಎಲ್ಲಾ ದೇವತೆಗಳು,ಇವನು ಪೃಥ್ವಿ,ವಾಯು,ಆಕಾಶ,ನೀರು,ಅಗ್ನಿ ಎಂಬ ಪಂಚ ಮಹಾಭೂತಗಳು ಮತ್ತು ಕ್ಷುದ್ರ ಮಿಶ್ರವಾದ ಬೇರೆ ಬೇರೆ ಕಾರಣಗಳು.ಅಂಡಜ,ಸ್ವೇದಜ,ಜರಾಯುಜ,ವೃಕ್ಷಾದಿಗಳು,ಕುದುರೆಗಳು,ಗೋವುಗಳು,ಮನುಷ್ಯರು,ಆನೆ ಮತ್ತು ಕಾಲಿನಿಂದ ನಡೆಯುವುದು,ಹಾರಾಡುವುದು,ಮತ್ತು ಇತರ ಪ್ರಾಣಿವಗ೯ಗಳು,ಯಾವುದು ಸ್ಥಾವರವೊ ಅದೆಲ್ಲವೂ ಪ್ರಜ್ಞಾ ನೇತ್ರವು.ಪ್ರಜ್ಞಾನದಲ್ಲಿ ಪ್ರತಿಷ್ಠಿತವಾಗಿರುವುದು.ಲೋಕವು ಪ್ರಜ್ಞಾ ನೇತ್ರವು.ಪ್ರಜ್ಞೆಯು ಲೋಕಕ್ಕೆ ಪ್ರತಿಷ್ಠೆ.ಪ್ರಜ್ಞಾನ ಬ್ರಹ್ಮ5.
ನಾಲ್ಕನೆಯ ಅಧ್ಯಾಯ:
ಶಾಂತಿಮಂತ್ರ
ನನ್ನಮಾತು ಮನಸ್ಸಿನಲ್ಲಿ ಪ್ರತಿಷ್ಠಿತವಾಗಿರಲಿ.ನನ್ನ ಮನಸ್ಸು ಮಾತಿನಲ್ಲಿ ಪ್ರತಿಷ್ಠಿತವಾಗಿರಲಿ,ಹೇ ಸ್ವಪ್ರಕಾಶನಾದ ಬ್ರಹ್ಮವೇ,ನನಗೆ ಪ್ರತ್ಯಕ್ಷನಾಗು.ವಾಕ್ ಮನಸ್ಸುಗಳೇ ನನಗೆ ವೇದಾಥ೯ಗಳನ್ನು ತರಲು ಸಮಥ೯ರಾಗಿ,ನಾನು ಕಲಿತ ವೇದ ನನ್ನನ್ನು ಬಿಡದಿರಲಿ,ಈ ಅಧ್ಯಯನದಿಂದ ಅಹೋರಾತ್ರಿಗಳನ್ನು ಸೇರಿಸುತ್ತಾನೆ.ಋತವನ್ನು ಹೇಳುತ್ತೇನೆ.ಸತ್ಯವನ್ನು ಹೇಳುತ್ತೇನೆ.ಬ್ರಹ್ಮ ನನ್ನನ್ನು ಕಾಪಾಡಲಿ.ಅದು ಆಚಾಯ೯ನನ್ನು ಕಾಪಾಡಲಿ.
ಛಾಂದೋಗ್ಯ ಉಪನಿಷತ್ತು ಹಾಗೂ ಅದ್ವೈತ:
ಇದು ಸಾಮವೇದಕ್ಕೆ ಸೇರಿದೆ.ಬೃಹದಾರಣ್ಯಕದೊಂದಿಗೆ ವೇದಾಂತ ದಶ೯ನಕ್ಕೆ ಅನೇಕ ಮೂಲ ವಿಷಯಗಳನ್ನು ಒದಗಿಸಿರುವ ಅತ್ಯಂತ ಪ್ರಾಚೀನ ಗ್ರಂಥವಾಗಿದೆ.ಈ ಉಪನಿಷತ್ತು ತಾಂಡಿಗಳ ಶಾಖೆಗೆ ಸೇರಿರಬಹುದೆಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ.ಛಾಂದೋಗ್ಯವು ಬಹು ಮುಖ್ಯವಾದ ದಹರ ವಿದ್ಯೆ,ಶಾಂಡಿಲ್ಯ ವಿದ್ಯೆ ಮೊದಲಾದ ಉಪಾಸನೆಗಳನ್ನು ಒಳಗೊಂಡಿದೆ.ಈ ಉಪಾಸನೆಗಳು ಛಾಂದೋಗ್ಯ ಉಪನಿಷತ್ತಿನ ಒಂದು ವೈಶಿಷ್ಟ್ಯ.
ಈಗ ನಮಗೆ ಸಿಕ್ಕಿರುವ ಛಾಂದೋಗ್ಯ ಉಪನಿಷತ್ ಭಾಷ್ಯಗಳಲ್ಲಿ ಶ್ರೀ ಶಂಕರಾಚಯ೯ರ ಭಾಷ್ಯವು ಅತ್ಯಂತ ಪ್ರಾಚೀನವಾಗಿದೆ. ದ್ರವಿಡಾಚಾಯ೯ರು ಈ ಉಪನಿಷತ್ತಿಗೆ ಒಂದು ಭಾಷ್ಯವನ್ನು ಬರೆದಿದ್ದಾರೆ.
ಮೊದಲನೆಯ ಅಧ್ಯಾಯ:
ಶಾಸ್ತ್ರವು ತಿಳಿಸಿರುವಂತೆ ಒಂದು ಆಲಂಬನವನ್ನು ತೆಗೆದುಕೊಂಡು ಅದರಲ್ಲಿ ಸಮಾನ ಚಿತ್ತವೃತ್ತಿಯನ್ನುಂಟು ಮಾಡುವುದು ಉಪಾಸನೆ.ಉಪಾಸನೆಯು ಚಿತ್ತಶುದ್ಧಿಯನ್ನುಂಟು ಮಾಡಿ ತತ್ವವನ್ನು ಪ್ರಕಾಶಿಸುವುದರಿಂದ ಅದ್ವೈತ ಜ್ಞಾನಕ್ಕೆ ಉಪಕಾರವಾಗುತ್ತದೆ.ಮೊದಲನೆಯ ಅಧ್ಯಾಯದಲ್ಲಿ ಹದಿನೈದು ಖಂಡಗಳಿವೆ.
ಉದ್ಗೀಥ ಅವಯವವಾದ ಓಂಕಾರದ ಉಪಾಸನೆಯು ಮೊದಲನೆಯ ಖಂಡದ ವಿಷಯವಾಗಿದೆ. ಓಂಕಾರವು ಪರಮಾತ್ಮನಿಗೆ ಅತ್ಯಂತ ಸಮೀಪವಾದ ಹೆಸರು.ಈ ಪ್ರಿಯವಾದ ಪ್ರಯೋಗದಿಂದ ಪರಮಾತ್ಮನು ಪ್ರಸನ್ನನಾಗುತ್ತಾನೆ.ವಿಗ್ರಹವು ಪರಮಾತ್ಮನ ಪ್ರತೀಕವಾಗಿರುವಂತೆ ಓಂಕಾರವು ಬ್ರಹ್ಮದ ಪ್ರತೀಕವಾಗಿದೆ.ಹೀಗೆ ಓಂಕಾರವು ನಾಮವೂ ಪ್ರತೀಕವೂ ಆಗಿ ಪರಮಾತ್ಮನ ಉಪಾಸನೆಗೆ ಶ್ರೇಷ್ಠವಾದ ಸಾಧನವಾಗಿರುತ್ತದೆ.
ಸಾಮದ ಭಾಗಗಳಿಗೆ ಭಕ್ತಿಗಳೆಂದು ಹೆಸರು.ಉದ್ಗಾತೃವು ಹಾಡುವ ಭಾಗವು ಉದ್ಗೀಥವೆನಿಸಿದೆ.ಓಂಕಾರವು ಉದ್ಗೀಥವಾಗಿದೆ.ಓಂಕಾರವು ಇಲ್ಲಿ ಸ್ವತಂತ್ರವಾದ ಉಪಾಸನೆಯಾಗಿದೆ.
ಎರಡನೆಯ ಖಂಡದಲ್ಲಿ ಉದ್ಗೀಥವನ್ನು ಪ್ರಾಣವೆಂದೇ ಉಪಾಸಿಸ ಬೇಕು ಎಂದು ಹೇಳಿದೆ.ಇಲ್ಲಿ ಪ್ರಾಣೋಪಾಸನೆಯ ಮಹತ್ವವನ್ನು ಹೇಳಿದೆ.ಮೂರನೆಯ ಖಂಡದಲ್ಲಿ ಆದಿತ್ಯ ದೃಷ್ಟಿಯಿಂದ ಉದ್ಗೀಥೋಪಾಸನೆಯನ್ನು ಹೇಳಿದೆ.ಉದ್ಗೀಥವನ್ನು ಪ್ರಾಣನೆಂದೂ ಆದಿತ್ಯನೆಂದೂ ಉಪಾಸಿಸಬೇಕು.
ನಾಲ್ಕನೆಯ ಖಂಡದಲ್ಲಿ ಓಂಕಾರೋಪಾಸನೆಯು ಮುಂದುವರೆಯುತ್ತದೆ.ಈ ಓಂಕಾರವು ಅಮೃತವೂ ,ಅಭಯವೂ ಆಗಿದೆ.ಅಕ್ಷರವು ಅಮೃತ,ಅಭಯ ಎಂಬ ಶಬ್ದಗಳಿಂದ ಕೂಡಿರುವುದೆಂದು ಯಾವನು ಉಪಾಸಿಸುತ್ತಾನೆಯೋ ಅವನು ಅಮೃತನೂ ಅಭಯನೂ ಆಗುತ್ತಾನೆ.ಐದನೆಯ ಖಂಡದಲ್ಲಿ ವಾಗಾದಿ ಪ್ರಾಣಗಳನ್ನೂ ರಶ್ಮಿಗಳನ್ನೂ ವಿಂಗಡಿಸಿಕೊಂಡು ಉಪಾಸಿಸಬೇಕೆಂದು ಹೇಳಿದೆ.ಆರನೆಯ ಖಂಡದಲ್ಲಿಸವ೯ಫಲ ಸಂಪತ್ತಿಗಾಗಿ ಉದ್ಗೀಥದ ಇನ್ನೊಂದು ಉಪಾಸನೆಯನ್ನು ಹೇಳಿದೆ.
ಎಂಟು ಮತ್ತು ಒಂಬತ್ತನೆಯ ಖಂಡಗಳಲ್ಲಿ ಪರೋಪಕಾರಿಯು ಸತ್ವಗುಣವೆಂಬ ಫಲವುಳ್ಳ (ಎಂದರೆ ಉತ್ತರೋತ್ತರ ಗುಣವಿಶಿಷ್ಟವಾದ ಫಲವುಳ್ಳ)ಉದ್ಗೀಥದ ಬೇರೊಂದು ಉಪಾಸನೆಯನ್ನು ಹೇಳಿದೆ.ಹತ್ತನೆಯ ಖಂಡದೊಂದಿಗೆ ಹನ್ನೊಂದನೆಯ ಖಂಡ
ದಲ್ಲಿಮುಂದುವರಿದಿದೆ.ದೇವತೆಗಳ ಭಾವವನ್ನು ಪಡೆದಿರುವುದು ಅಥವಾ ಕಮ೯ ಸಮೃದ್ಧಿ ಈ ಉಪಾಸನೆಯ ಫಲ.ಹನ್ನೆರಡನೆಯ ಖಂಡದಲ್ಲಿ ದೇವತೆಗಳ ರೂಪದಲ್ಲಿರುವ ನಾಯಿಗಳಿಗೆ ಗೋಚರವಾದ ಶ್ವಾನ ಉದ್ಗೀಥವನ್ನು ಅನ್ನ ಲಾಭಕ್ಕಾಗಿ ಹೇಳಿದೆ.ಹದಿಮೂರನೆಯ ಖಂಡದಲ್ಲಿ ಸ್ತೋಭಾಕ್ಷರ ವಿಷಯವಾದ ಬೇರೆ ಬೇರೆ ಉಪಾಸನೆಗಳನ್ನು ಹೇಳಿದೆ.
ಎರಡನೆಯ ಅಧ್ಯಾಯ:
ಎರಡನೆಯ ಅಧ್ಯಾಯದಲ್ಲಿ ಇಪ್ಪತ್ನಾಲ್ಕು ಖಂಡಗಳಿವೆ.ಮೊದಲನೇ ಖಂಡದಲ್ಲಿ ಸಮಸ್ತ ಅವಯವಗಳಿಂದ ಕೂಡಿದ ಸಾಮದಲ್ಲಿಸಾಧುದೃಷ್ಟಿಯನ್ನು ಹೇಳಿದೆ.ಎರಡರಿಂದ ಏಳನೇ ಖಂಡಗಳಲ್ಲಿ ಉದ್ಗಾತೃವೇ ಮೊದಲಾದವರು ಪಠಿಸುವ ಸಾಮದ ಅವಯವಗಳಾದ ಭಕ್ತಿಗಳನ್ನು ಕುರಿತು ಹೇಳಿದೆ.ಹಿಂಕಾರ,ಪ್ರಸ್ತಾವ,ಉದ್ಗೀಥ,ಪ್ರತಿಹಾರ,ನಿಧನ_ಇವು ಸಾಮದ ಪಂಚ ಅವಯವಗಳು.
ಈ ಪಂಚವಿಧ ಸಾಮವನ್ನು
1) ಪೃಥಿವ್ಯಾದಿ ಲೋಕದ ದೃಷ್ಟಿಯಿಂದಲೂ
2)ಪುರೋವಾತಾದಿ ವ್ಯಷ್ಟಿ ದೃಷ್ಟಿಯಿಂದಲೂ
3)ಮೇಘವೇ ಮುಂತಾದ ನೀರಿನ ದೃಷ್ಟಿಯಿಂದಲೂ
4)ವಸಂತಾದಿ ಋತು ದೃಷ್ಟಿಯಿಂದಲೂ
5)ಆಡು ಕುರಿ ಮುಂತಾದ ಪಶು ದೃಷ್ಟಿಯಿಂದಲೂ
6)ಪ್ರಾಣ ದೃಷ್ಟಿಯಿಂದಲೂ
ಉಪಾಸಿಸಬೇಕು.ಪ್ರತಿಯೊಂದು ಉಪಾಸನೆಗೂ ಒಂದು ವಿಶಿಷ್ಟ ಫಲವಿದೆ.
ಎಂಟನೆಯ ಖಂಡದಲ್ಲಿ ಪಂಚವಿಧ ಸಾಮಕ್ಕೆ ಆದಿ ಉಪದ್ರವಗಳನ್ನು ಸೇರಿಸಿದರೆ ಸಪ್ತವಿಧ ಸಾಮವಾಗುತ್ತದೆ.ಸಪ್ತವಿಧ ಸಾಮವನ್ನು ವಾಕ್ ದೃಷ್ಟಿಯಿಂದ ಉಪಾಸಿಸಬೇಕು.ಅನ್ನಾದನು ಅನ್ನವಂತನೂ ಆಗುವುದು ಈ ಉಪಾಸನೆಯ ಫಲ.ಒಂಬತ್ತನೆಯ ಖಂಡದಲ್ಲಿ ಆದಿತ್ಯನನ್ನು ಸಪ್ತ ವಿಧ ಸಾಮದಲ್ಲಿ ಅವಯವ ವಿಬಾಗಶಃ ಮಾಡಿಕೊಂಡು ಅಭ್ಯಾಸ ಮಾಡಿಕೊಂಡು ಉಪಾಸಿಸಬೇಕೆಂದು ಇಲ್ಲಿ ಹೇಳಿದೆ.ಇಂಥ ಉಪಾಸಕನು ಆದಿತ್ಯ ರೂಪವನ್ನು ಪಡೆಯುತ್ತಾನೆ.
ಹತ್ತನೆಯ ಖಂಡದಲ್ಲಿ ಉದ್ಗೀಥ ಭಕ್ತಿಯ ನಾಮಾಕ್ಷರಗಳನ್ನು ಉತ್_ಗೀ_ಥ ಎಂದು ಉಪಾಸಿಸಬೇಕೆಂದು ಹೇಳಿದೆ.ಹನ್ನೊಂದನೆಯ ಖಂಡದಲ್ಲಿ ಮನಸ್ಸು,ವಾಕ್ಕು,ಚಕ್ಷುಸ್ಸು,ಶ್ರೋತ್ರ,ಪ್ರಾಣ,ಇವುಗಳ ದೃಷ್ಟಿಯಿಂದ ಗಾಯತ್ರಿ ಸಾಮವನ್ನು ಉಪಾಸಿಸಬೇಕೆಂದು ಹೇಳಿದೆ.ಹನ್ನೆರಡನೆಯ ಖಂಡದಲ್ಲಿ ಮಂಥನ, ಹೋಮ, ಜ್ವಾಲೆ, ಅಂಗಾರ, ಉಪಶಾಂತಿ, ಸಂಶಾಂತಿ ಇವುಗಳ ದೃಷ್ಟಿಯಿಂದ ರಥಂತರ ಸಾಮವನ್ನು ಉಪಾಸಿಸಲು ಹೇಳಿದೆ.ಹದಿಮೂರನೆಯ ಖಂಡದಲ್ಲಿ ಉಪಮಂತ್ರಾದಿಗಳ ದೃಷ್ಟಿಯಿಂದ ವಾಮದೇವ ಸಾಮವನ್ನು ಉಪಾಸಿಸಬೇಕೆಂದು ಹೇಳಿದೆ.
ಹದಿನಾಲ್ಕರಿಂದ ಇಪ್ಪತ್ತೊಂದನೆಯ ಖಂಡದಲ್ಲಿ
1)ಉದಯಿಸುತ್ತಿರುವ ಆದಿತ್ಯ ಮೊದಲಾದ ದೃಷ್ಟಿಯಿಂದ ಬೃಹತ್ಸಾಮ ಉಪಾಸನೆಯನ್ನು
2)ಅಭ್ರಾದಿ ದೃಷ್ಟಿಯಿಂದ ವೈರೂಪ ಸಾಮೋಪಾಸನೆಯನ್ನು
3)ವಸಂತಾದಿ ಋತುಗಳ ದೃಷ್ಟಿಯಿಂದ ವೈರಾಜ ಸಾಮೋಪಾಸನೆಯನ್ನು
4) ಪೃಥಿವ್ಯಾದಿ ದೃಷ್ಟಿಯಿಂದ ಶಕ್ವರೀ ಸಾಮೋಪಾಸನೆಯನ್ನು
5)ಲೋಮಾದಿ ದೃಷ್ಟಿಯಿಂದ ಯಜ್ಞಾ_ಯಜ್ಞೇಯ ಸಾಮೋಪಾಸನೆಯನ್ನು
6)ಅಗ್ನ್ಯಾದಿ ದೃಷ್ಟಿಯಿಂದ ರಾಜನ ಸಾಮೋಪಾಸನೆಯನ್ನು
7)ತ್ರಯೀ ವಿದ್ಯಾ ದೃಷ್ಟಿಯಿಂದ ಸಾಮ ಸಾಮುದಾಯೋಪಾಸನೆಯನ್ನೂ ವಿಧಿಸಿದೆ.
ಇಪ್ಪತ್ತೆರಡನೆಯ ಖಂಡದಲ್ಲಿ ಸಾಮೋಪಾಸನೆಯ ಪ್ರಸಂಗದಿಂದ ಉದ್ಗಾತೃವಿಗೆ ಗಾನವಿಶೇಷಾದಿ ಸಂಪತ್ತಿಯನ್ನು ಉಪದೇಶಿಸಿದೆ.ಇಪ್ಪತ್ಮೂರನೆಯ ಖಂಡದಲ್ಲಿ ಓಂಕಾರೋಪಾಸನೆಯನ್ನು ವಿಧಿಸಿದೆ. ಓಂಕಾರೋಪಾಸಕನಿಗೆ ಅಮೃತತ್ವ ಎಂಬ ವಿಶಿಷ್ಟ ಫಲವು ಪ್ರಾಪ್ತವಾಗುತ್ತದೆ.ಇಪ್ಪತ್ನಾಲ್ಕನೆಯ ಖಂಡದಲ್ಲಿಪುನಃ ಯಜ್ಞಾಂಗವಾದ ಸಾಮ,ಹೋಮ,ಮಂತ್ರ,ಉತ್ಥಾನ ಇವುಗಳನ್ನು ಉಪದೇಶಿಸಿದೆ.
ಮೂರನೆಯ ಅಧ್ಯಾಯ: ಈ ಅಧ್ಯಾಯದಲ್ಲಿ ಹತ್ತೊಂಬತ್ತು ಖಂಡಗಳಿವೆ.
ಮೊದಲನೆಯ ಹನ್ನೊಂದು ಖಂಡಗಳು:
ಇಲ್ಲಿ ಮಧುವಿದ್ಯೆಯನ್ನು ಹೇಳಿದೆ. ಆದಿತ್ಯನು ದೇವತೆಗಳಿಗೆ ಮಧು,ಎಂದರೆ ಜೇನುತುಪ್ಪದಂತೆ ಮೋದವನ್ನುಂಟು ಮಾಡುತ್ತಾನೆ.ಈ ಮಧುವಿಗೆ ದ್ಯುಲೋಕವು ಅಡ್ಡತಲೆ.ಅಂತರಿಕ್ಷವು ಜೇನುಗೂಡು ಮತ್ತು ರಶ್ಮಿಯಲ್ಲಿರುವ ಜಲಬಿಂದುಗಳು ಮೊಟ್ಟೆಗಳು.ಋಗ್ವೇದದಲ್ಲಿ ವಿಹಿತವಾದ ಕಮ೯ವು ಪುಷ್ಪ.ಈ ಕಮ೯ದಿಂದಲೇ ಯಶಸ್ಸು ಮೊದಲಾದ "ರಸ"ವು ಉತ್ಪನ್ನವಾಗುತ್ತದೆ.ಉಪಾಸಕನು ತನ್ನ ಕಮ೯ದ ಫಲವಾದ ಬ್ರಹ್ಮಲೋಕಕ್ಕೆ ಹೋಗಿ ಸೇರುವವರೆಗೆ ವಸ್ವಾದಿ ಲೋಕಗಳಲ್ಲಿ ಭೋಗವನ್ನನುಭವಿಸುವರು.
ಹನ್ನೆರಡು ಮತ್ತು ಹದಿಮೂರನೆಯ ಖಂಡಗಳು ಗಾಯತ್ರಿ ಬ್ರಹ್ಮೋಪಾಸನೆಯನ್ನು ಒಳಗೊಂಡಿವೆ.ಶಬ್ದ ರೂಪವಾದ ವಾಕ್ಕು ಗಾಯತ್ರಿ.ಏಕೆಂದರೆ ವಾಕ್ಕೇ ಪ್ರಾಣಿಗಳನ್ನೆಲ್ಲಾ ಹೆಸರಿಸುತ್ತದೆ(ಗಾಯತಿ)ಮತ್ತು ಕಾಪಾಡುತ್ತದೆ(ತ್ರಾಯತೇ).ಆದುದರಿಂದ ಸ್ಥಾವರ ಜಂಗಮ ರೂಪದಲ್ಲಿರುವುದೆಲ್ಲಾ ಗಾಯತ್ರಿಯೇ. ಹೀಗೆಯೇ ಭೂತಗಳು, ಪೃಥ್ವಿ, ಶರೀರ,ಹೃದಯ,ಪ್ರಾಣ ಇವೂ ಕೂಡ ಗಾಯತ್ರಿಯೇ.
ಗಾಯತ್ರೀ ಬ್ರಹ್ಮಕ್ಕಿಂತಲೂ ಪುರುಷನು ಹೆಚ್ಚಿನವನು.ಈ ಜಗತ್ತೆಲ್ಲ ಇವನ ಒಂದು ಪಾದ.ಉಳಿದ ಮೂರು ಪಾದಗಳು ದ್ಯುಲೋಕದಲ್ಲಿ(ಎಂದರೆ ತನ್ನ ಸ್ವರೂಪದಲ್ಲಿ) ಇವೆ.ಹೊರಗಿನ ಆಕಾಶವೇ ನಮ್ಮ ಒಳಗಿನ ಆಕಾಶವಾಗಿದೆ.ಒಳಗಿರುವ ಅಂಶವೇ ನಮ್ಮ ಹೃದಯಾಕಾಶವಾಗಿದೆ.ಹೃದಯಾಕಾಶದಲ್ಲಿ ಧ್ಯಾನಿಸಲ್ಪಡುವ ಬ್ರಹ್ಮವು ಪೂವ೯ವು ಅವಿನಾಶಿ ಎಂದು ಉಪಾಸಿಸಬೇಕು.
ಹದಿನಾಲ್ಕನೆಯ ಖಂಡದಲ್ಲಿ ಪ್ರಸಿದ್ದವಾದ ಶಾಂಡಿಲ್ಯವಿದ್ಯೆಯನ್ನು ಹೇಳಿದೆ.ಬ್ರಹ್ಮದಿಂದಲೇ ತೇಜಸ್ಸು,ನೀರು,ಅನ್ನ ಮೊದಲಾದ ಎಲ್ಲವೂ ಹುಟ್ಟಿವೆ.ಆದ್ದರಿಂದ ಅದು ತಜ್ಜಮ್.ಹೀಗೆಯೇ ಪ್ರತಿಲೋಮದಿಂದ ಬ್ರಹ್ಮದಲ್ಲಿಯೇ ಲಯವಾಗುತ್ತದೆ.ಆದ್ದರಿಂದ ಅದು ತಲ್ಲಮ್.ಸ್ಥಿತಿಕಾಲದಲ್ಲಿ ಎಲ್ಲವೂ ಎಲ್ಲವೂ ಜೀವಿಸಿಕೊಂಡು ಇರುತ್ತವೆ.ಆದ್ದರಿಂದ ಅದು ತದನಮ್.ಹೀಗೆ ಜಗತ್ತು ಪ್ರತಿಕಾಲದಲ್ಲಿಯೂ ಬ್ರಹ್ಮ ಸ್ವರೂಪದಲ್ಲಿಯೇ ಇರುವುದರಿಂದ ಅದು ಬ್ರಹ್ಮವೇ.
ಶಾಂಡಿಲ್ಯ ವಿದ್ಯೆ:ಹೃದಯ ಪುಂಡರೀಕದಲ್ಲಿರುವವನೇ ನನ್ನ ಆತ್ಮನು.ಇವನು ಅಣು ಪರಿಮಾಣದವನೂ ವಿಭುವೂ ಆಗಿದ್ದಾನೆ.ನನ್ನ ಆತ್ಮನೇ ಬ್ರಹ್ಮ.ದೇಹಾಪಿ೯ತವಾದ ಮೇಲೆ ಇವನನ್ನೇ ಸೇರುತ್ತೇನೆ.ಯಾವನಿಗೆ ಇಂಥ ನಿಶ್ಚಯವು(ಕ್ರತು) ಇರುವುದೋ ಅವನು ಈಶ್ವರ ಭಾವವನ್ನು ಹೊಂದುತ್ತಾನೆ.ಇದು ಶಾಂಡಿಲ್ಯನ ಉಪದೇಶ.
ಹದಿನಾರನೆಯ ಖಂಡದಲ್ಲಿ ಪುರುಷ ವಿದ್ಯೆಯನ್ನು ಹೇಳಿದೆ.ಹದಿನೇಳನೆಯ ಖಂಡದಲ್ಲಿ ಪುರುಷವಿದ್ಯೆಯು ಮುಂದುವರಿಯುತ್ತದೆ.ಹದಿನೆಂಟನೆಯ ಖಂಡದಲ್ಲಿ ಮನ_ಆಕಾಶಗಳಲ್ಲಿ ಸಮಸ್ತ ಬ್ರಹ್ಮದೃಷ್ಟಿಯನ್ನು ವಿಧಿಸಿದೆ.ಇದನ್ನು ಮನೋಬ್ರಹ್ಮ ಎನ್ನುತ್ತಾರೆ.ಆಕಾಶ ಮನಸ್ಸುಗಳು ಸೂಕ್ಷ್ಮವಾಗಿರುವುದರಿಂದ ಅವುಗಳಲ್ಲಿ ಬ್ರಹ್ಮದೃಷ್ಟಿಯನ್ನು ಹೇಳಿದೆ.ಹತ್ತೊಂಬತ್ತನೆಯ ಖಂಡದಲ್ಲಿ ಆದಿತ್ಯನಲ್ಲಿ ಸಕಲ ಬ್ರಹ್ಮದೃಷ್ಟಿಯನ್ನು ವಿಧಿಸಿದೆ.ಆದಿತ್ಯನು ಬ್ರಹ್ಮ ಎಂಬುದು ಆದೇಶ. ಆದಿತ್ಯನನ್ನು ಬ್ರಹ್ಮವೆಂದು ಉಪಾಸಿಸುವವನ ಬಳಿಗೆ ಮಂಗಳ ಘೋಷಗಳು ಬಂದು ಸುಖವನ್ನುಂಟು ಮಾಡುವುವು.
ನಾಲ್ಕನೆಯ ಅಧ್ಯಾಯ:
ಈ ಅಧ್ಯಾಯದಲ್ಲಿ ಹದಿನೇಳು ಖಂಡಗಳಿವೆ.ವಾಯು ಪ್ರಾಣಗಳು ಬ್ರಹ್ಮದ ಪಾದಗಳೆಂದು ಹೇಳಿದೆ.ಈಗ ಅವುಗಳನ್ನು ಸಾಕ್ಷಾತ್ ಬ್ರಹ್ಮವೆಂದೇ ಉಪಾಸಿಸ ಬೇಕೆಂದು ಶ್ರುತಿಯು ಹೇಳುತ್ತದೆ.ಶ್ರದ್ಧೆ,ಅನ್ನದಾನ,ವಿನಯ ಇವು ವಿದ್ಯಾಪ್ರಾಪ್ತಿಗೆ ಸಾಧನಗಳೆಂದು ಇಲ್ಲಿ ಹೇಳಿದೆ. ರೈಕ್ವನು ಜಾನಶ್ರುತಿ ರಾಜನಿಗೆ 'ಸಂವಗ೯'ವಿದ್ಯೆಯನ್ನು ಉಪದೇಶಿಸಿದನು.ಯಾವುದು ತನ್ನಲ್ಲಿ ಎಳೆದುಕೊಂಡು ಲಯಮಾಡಿಕೊಳ್ಳುವುದೊ ಅದು 'ಸಂವಗ೯'.ದೇವತೆಗಳಲ್ಲಿ ವಾಯು, ಇಂದ್ರಿಯಗಳಲ್ಲಿ ಪ್ರಾಣ ಇವುಗಳನ್ನು ಸಂವಗ೯ವೆಂದು ಉಪಾಸಿಸಬೇಕು.
ನಾಲ್ಕನೆಯ ಖಂಡದಲ್ಲಿ 'ಷೋಡಶಕಲ ವಿದ್ಯೆ'ಯನ್ನು ವಿವರಿಸಲಾಗಿದೆ.ಜಗತ್ತನ್ನು ಕಾಯ೯ರೂಪದಿಂದ ಏಕವೆಂದು ಭಾವಿಸಿ ಹದಿನಾರು ಪ್ರಕಾರವಾಗಿ ವಿಂಗಡಿಸಿ ಇದರಲ್ಲಿ ಬ್ರಹ್ಮದೃಷ್ಟಿಯನ್ನು ಇಡಬೇಕೆಂದು ಹೇಳಿದೆ. ಐದರಿಂದ ಒಂಬತ್ತನೆಯ ಖಂಡದಲ್ಲಿ ಶ್ರದ್ಧಾ ತಪಸ್ಸುಗಳು ಬ್ರಹ್ಮೋಪಾಸಕನಿಗೆ ಅಂಗವೆಂಬುದನ್ನು ತಿಳಿಸಲು ಸತ್ಯಕಾಮನ ಕತೆಯು ಬಂದಿದೆ. ವಾಯು (ಋಷಭ), ಅಗ್ನಿ, ಸೂಯ೯ (ಹಂಸ) ಪ್ರಾಣ (ನೀರುಕೋಳಿ) ಇವು ಸತ್ಯಕಾಮನಿಗೆ ಬ್ರಹ್ಮದ ನಾಲ್ಕು ಪಾದಗಳನ್ನು ತಿಳಿಸಿಕೊಡುತ್ತವೆ.
1)ನಾಲ್ಕು ದಿಕ್ಕುಗಳು_ಬ್ರಹ್ಮದ ಮೊದಲನೆಯ ಪಾದ_ 'ಪ್ರಕಾಶವಾನ್'
2)ಪೃಥ್ವಿ,ಅಂತರಿಕ್ಷ,ದ್ಯುಲೋಕ,ಸಮುದ್ರ _ಇವುಬ್ರಹ್ಮದ ಎರಡನೆಯ ಪಾದ_ 'ಅನಂತವಾನ್'
3)ಅಗ್ನಿ,ಸೂಯ೯,ಚಂದ್ರ,ಮಿಂಚು_ಇವು ಬ್ರಹ್ಮದ ಮೂರನೆಯ ಪಾದ_'ಜ್ಯೋತಿಷ್ಮಾನ್'
4)ಪ್ರಾಣ,ಕಿವಿ,ಕಣ್ಣು,ಮನಸ್ಸು_ಇವು ಬ್ರಹ್ಮದ ನಾಲ್ಕನೆಯ ಪಾದ._ 'ಆಯತನವಾನ್'
ಸತ್ಯಕಾಮನು ದೇವತೆಗಳಿಂದ ಷೋಡಶಕಲ ವಿದ್ಯೆಯನ್ನು ಪಡೆದಿದ್ದರೂ ತನ್ನ ಆಚಾಯ೯ನಾದ ಹಾರಿದ್ರುಮನಿಂದ ಇದೇ ವಿದ್ಯೆಯನ್ನು ಪುನಃ ಪಡೆಯುತ್ತಾನೆ.ಹತ್ತನೆಯ ಖಂಡದಲ್ಲಿ ಬ್ರಹ್ಮವಿದ್ಯೆಯನ್ನು, ಬ್ರಹ್ಮಜ್ಞಾನಿಯ ಗತಿಯನ್ನು, ಅಗ್ನಿವಿದ್ಯೆಯನ್ನೂ ತಿಳಿಸಲು ಹತ್ತನೆಯ ಖಂಡವನ್ನು ಪ್ರಾರಂಭಿಸಿದೆ.
ಐದನೆಯ ಅಧ್ಯಾಯ:
ಈ ಅಧ್ಯಾಯದಲ್ಲಿ ಇಪ್ಪತ್ನಾಲ್ಕು ಖಂಡಗಳಿವೆ.
ಮೊದಲ ಹಾಗೂ ಎರಡನೆಯ ಖಂಡದಲ್ಲಿಪ್ರಾಣೋಪಾಸನೆ ಹಾಗೂ ಪ್ರಾಣೂೀಪಾಸಕನಿಗೆ ಶ್ರೀಮಂಥ ಕಮ೯ವನ್ನು ಹೇಳಿದೆ.ಪ್ರಾಣವೇ ಜ್ಯೇಷ್ಟ ಮತ್ತು ಪ್ರಾಣವೇ ಶ್ರೇಷ್ಠ ಎನ್ನುವುದನ್ನು ಹೇಳಿದೆ.ಹನ್ನೊಂದನೆಯ ಖಂಡದಲ್ಲಿ ವೈಶ್ವಾನರ ವಿದ್ಯೆಪ್ರಾರಂ¨sವಾಗುತ್ತದೆ.ರಾಜ ಅಶ್ವಪತಿ ಕೈಕೇಯನು ಈ ರೀತಿ ಬೋಧಿಸಿದನು.ವೈಶ್ವಾನರ ಉಪಾಸಕನುತನ್ನ ಭೋಜನ ಕ್ರಿಯೆಯನ್ನೇ ಪ್ರಾಣಾಗ್ನಿಹೋತ್ರವೆಂದು ಕಲ್ಪಿಸಿಕೊಳ್ಳಬೇಕು.
ಪ್ರಾಣಾಯ ಸ್ವಾಃ_ಮೊದಲನೆಯ ತುತ್ತು.
ವ್ಯಾನಾಯ ಸ್ವಾಃ._ಎರಡನೆಯ ತುತ್ತು
ಅಪಾನಾಯಸ್ವಾಃ _ಮೂರನೆಯ ತುತ್ತು
ಸಮಾನಾಯ ಸ್ವಾಹಾಃ_ನಾಲ್ಕನೆಯ ತುತ್ತು
ಉದಾನಾಯ ಸ್ವಾಹಾಃ_ಐದನೆಯ (ಕೊನೆಯ)ತುತ್ತು.
ಎಂದು ಹೇಳಿದೆ.ಪ್ರತಿಯೊಂದು ಆಹುತಿಗೂ ನಿದಿ೯ಷ್ಟವಾದ ಫಲವಿದೆ.ಇದನ್ನು ಅರಿತುಕೊಂಡು ಪ್ರಾಣಾಗ್ನಿಹೋತ್ರವನ್ನು ಮಾಡುವವನ ಆಹುತಿಯು ಸವ೯ ಲೋಕಗಳಲ್ಲಿಯೂ ಸವ೯ ಪ್ರಾಣಿಗಳಲ್ಲಿಯೂ ಸವಾತ್ಮರಲ್ಲಿಯೂ ಹುತವಾಗುತ್ತದೆ.
ಆರನೆಯ ಅಧ್ಯಾಯ:
ಮೊದಲ ಐದು ಅಧ್ಯಾಯಗಳು ಉಪಾಸನಾ ಪ್ರಧಾನವಾಗಿದ್ದರೆ ಇಲ್ಲಿ ತತ್ವೋಪದೇಶ ಪ್ರಧಾನವಾಗಿದೆ.ಈ ಅಧ್ಯಾಯವು ಛಾಂದೋಗ್ಯ ಉಪನಿಷತ್ತಿನ ಮುಖ್ಯ ಭಾಗವಾಗಿದೆ.ಈ ಅಧ್ಯಾಯಕ್ಕೆ ಆರು ಖಂಡಗಳಿವೆ.
ಶ್ವೇತಕೇತುವು ಹನ್ನೆರಡು ವಷ೯ಗಳವರೆಗೆ ವೇದಗಳನ್ನು ಅಧ್ಯಯನ ಮಾಡಿದನು.ಆದರೆ ನಿರಹಂಕಾರಿಯೂ ವಿವೇಕ ಸ್ವಭಾವದವನೂ ಆಗಲಿಲ್ಲ.ಇದನ್ನು ಅರಿತುಕೊಂಡ ಅವನ ತಂದೆಯು ಅವನನ್ನು ಹೀಗೆ ಪ್ರಶ್ನಿಸಿದನು.
1)ಮತವು ಅಮತವಾಗುವುದೋ
2)ಅವಿಜ್ಞಾತವು ವಿಜ್ಞಾತವಾಗುವುದೋ(ಎಂದರೆ ಅರಿಯಲ್ಪಡದಿರುವುದು ಅರಿಯಲ್ಪಡುವುದೋ)
ಈ ಆದೇಶವನ್ನು ಕೇಳಿದೆಯೋ?ಶ್ವೇತಕೇತುವಿಗೆ ಈ ಆದೇಶವು ತಿಳಿದಿರಲಿಲ್ಲ.ವೇದಗಳನ್ನೆಲ್ಲ ಅಧ್ಯಯನ ಮಾಡಿದ್ದರೂ ಅಮೃತತ್ವವನ್ನು ತಿಳಿದುಕೊಳ್ಳದ್ದರಿಂದ ಅವನು ಅಕೃತಾಥ೯ನಾಗಿಯೇ ಇದ್ದನು.
1)ಮಣ್ಣಿನ ಮುದ್ದೆ 2)ಚಿನ್ನದ ಗಟ್ಟಿ3) ಕಬ್ಬಿಣದ ಉಗುರು ಕತ್ತರಿ ಈ ಮೂರು ಮುಖ್ಯ ದೃಷ್ಟಾಂತಗಳಿಂದ ಕಾಯ೯ಕಾರಣಗಳ ಅಭೇದವನ್ನು ತಿಳಿಸುತ್ತಾನೆ.
ಗಡಿಗೆ ಮುಂತಾದವಕ್ಕೆ ಮಣ್ಣಿನ ಮುದ್ದೆ ಕಾರಣವಾಗಿದೆ.ಕಾಯ೯ ಕಾರಣವು ಅನನ್ಯವಾದ್ದರಿಂದ (ಬೇರೆ ಬೇರೆ ಅಲ್ಲದ್ದರಿಂದ) ಒಂದನ್ನು ಅರಿತುಕೊಂಡರೆ ಇನ್ನೊಂದನ್ನು ಅರಿತಂತೆ ಆಗುತ್ತದೆ.ಏಕೆಂದರೆ ವಸ್ತುವಿನ ಪರಿಣಾಮವು ವಾಕ್ಕನ್ನು ಅವಲಂಬಿಸಿರುವ ಹೆಸರೇ 1.
ಸೃಷ್ಟಿಗೆ ಮೊದಲು ಈ ಜಗತ್ತು ಏಕವಾದ ಸತ್‍ಸ್ವರೂಪವೇ ಆಗಿತ್ತು.ಸದ್ವಸ್ತುವು ತಾನೂ ಬಹುವಾಗುವೆನೆಂದು ಸಂಕಲ್ಪಿಸಿ ತೇಜಸ್ಸನ್ನು ಸೃಷ್ಟಿಸಿತು. ತೇಜಸ್ಸು_ನೀರು_ ಪೃಥ್ವಿಯು ಸೃಷ್ಟಿಸಲ್ಪಟ್ಟಿತು.ಈ ಭೂತಗಳಲ್ಲಿ(ಪಂಚ) ಮೂಲಕಾರಣವಾದ ಸದ್ವಸ್ತುವು ಜೀವರೂಪದಿಂದ ಪ್ರವೇಶಿಸಿ ನಾಮರೂಪಗಳನ್ನು ವಿಂಗಡಿಸಿತು.
ತ್ರಿವೃತ್ಕರಣದಲ್ಲಿ ಒಂದು ಭೂತದ ಅಂಶವು ಹೆಚ್ಚಾಗಿಯೂ ಉಳಿದ ಎರಡು ಭೂತಗಳ ಅಂಶವು ಕಡಿಮೆಯಾಗಿಯೂ ಇರುತ್ತದೆ.ಎಲ್ಲವೂ ಸದ್ವಸ್ತುವಿನ ವಿಕಾರವಾದ್ದರಿಂದ ಸದ್ವಸ್ತುವನ್ನು ಅರಿತುಕೊಂಡರೆ ಎಲ್ಲವನ್ನೂ ಅರಿತಂತೆ ಆಗುವುದು.ಸದ್ವಸ್ತುವೇ ಸತ್ಯ.ಪ್ರತಿಯೊಂದು ವಸ್ತುವೂ ತ್ರಿವೃತ್ಕøತವಾಗಿದೆ.ಮನುಷ್ಯನು ಹೇಗೆ ಹದಿನಾರು ಕಲೆಗಳುಳ್ಳವನು ಎಂದು ಹೇಳಿದೆ.ಮನುಷ್ಯನು ತನ್ನ ಪ್ರತಿಬಿಂಬದಿಂದ ಕನ್ನಡಿಯನ್ನು ಪ್ರವೇಶಿಸುವಂತೆ ಪರದೇವತೆಯು ಜೀವಾತ್ಮವೇಷದಿಂದ (ಬ್ರಹ್ಮವು ಜೀವನಾಗಿ)ಶರೀರವನ್ನು ಪ್ರವೇಶಿಸುತ್ತದೆ.
ಜೀವನು ಮನೋಮಯನಾದುದರಿಂದ ಶ್ರವಣ -ಮನನಗಳು ಸಾಧ್ಯ.ಮನಸ್ಸು ಸುಷುಪ್ತಿಯಲ್ಲಿ ಉಪರತಿಯನ್ನು ಹೊಂದಿದಾಗ ಜೀವವು ಪರಮಾತ್ಮ ಸ್ವರೂಪವನ್ನು ಪಡೆದು ಕೊಳ್ಳುತ್ತಾನೆ ಎಂದು ಎಂಟನೆಯ ಖಂಡದಲ್ಲಿ ಹೇಳಿದೆ.ಮನುಷ್ಯನು ಯಾವಾಗ ನಿದ್ರಿಸುತ್ತಾನೋ ಆಗ ಪರದೇವತೆಯೊಂದಿಗೆ ಏಕೀಭೂತ ನಾಗುತ್ತಾನೆ.ಸ್ವರೂಪವನ್ನು ಹೊಂದಿರುತ್ತಾನೆ.ಆದ್ದರಿಂದ ಇವನನ್ನು 'ಸ್ವಪಿತಿ' ಎಂದು ಹೇಳುತ್ತಾರೆ.ದಾರದಿಂದ ಕಟ್ಟಲ್ಪಟ್ಟಿರುವ ಹಕ್ಕಿಯು ದಿಕ್ಕು ದಿಕ್ಕಿಗೆ ಹಾರಾಡಿ ಮತ್ತೆಲ್ಲಿಯೂ ಆಶ್ರಯವನ್ನು ಪಡೆಯದೆ ತನ್ನನ್ನು ಬಂಧಿಸಿರುವ ಸ್ಥಳಕ್ಕೆ ಹೇಗೆ ಬರುವುದೋ ಅದೊಂದೆ ಮನಸ್ಸೆಂಬ ಉಪಾಧಿಯನ್ನು ಪಡೆದು ಜೀವನು ಸುಷುಪ್ತಿಯಲ್ಲಿ ಪರದೇವತೆಯನ್ನು ಸೇರುತ್ತಾನೆ.
ಮನುಷ್ಯನು ಸಾಯುತ್ತಿರುವಾಗ ವಾಕ್ಕು ಮನಸ್ಸಿನಲ್ಲಿಯೂ ,ಮನಸ್ಸು ಪ್ರಾಣದಲ್ಲಿಯೂ,ಪ್ರಾಣವು ತೇಜಸ್ಸಿನಲ್ಲಿಯೂ,ತೇಜಸ್ಸು ಪರದೇವತೆಯಲ್ಲಿಯೂ ಲೀನವಾಗುತ್ತದೆ.ಮುಕ್ತನಾದವನು ಹಿಂದಿರುಗುವುದಿಲ್ಲ. ಆದರೆ ಅಜ್ಞಾನಿಯು _ನಿದ್ರೆಯಿಂದ ಎಚ್ಚರಗೊಂಡವನಂತೆ_ತನ್ನ ಮೂಲವಾದ ಸದ್ವಸ್ತುವಿನಿಂದ ಪುನಃ ದೇಹವನ್ನು ಪಡೆಯುತ್ತಾನೆ.
ಯಾವುದು ಸೂಕ್ಷ್ಮತಮವಾದ ಜಗನ್ಮೂಲವೊ,ಅದರಿಂದಲೇ ಈ ಜಗತ್ತೆಲ್ಲವೂ ಆತ್ಮವಂತವಾಗಿªದೆ. ಅದೇ ಸತ್ಯವು.ಅದೇ ಆತ್ಮನು. 'ಓ ಶ್ವೇತಕೇತು ಅದೇ ನೀನಾಗಿರುವೆ'(ತತ್ವಮಸಿ)ಎಂದು ಉದ್ಧಾಲಕನು ಮಗನಿಗೆ ಹೇಳಿದನು.
ಪ್ರತಿದಿನವೂ ಎಲ್ಲವೂ ಸುಷುಪ್ತಿಯಲ್ಲಿ ಸದ್ವಸ್ತುವನ್ನು ಸೇರುವುದೆಂಬುದಕ್ಕೆ ದೃಷ್ಟಾಂತವಾಗಿ
1)ಜೇನುಹುಳು:ಜೇನುಹುಳುಗಳು ನಾನಾ ವೃಕ್ಷಗಳ ರಸಗಳನ್ನು ಸಂಗ್ರಹಿಸುತ್ತವೆ.ಆದರೆ "ನಾನು ಈಮರದ ರಸ ಆ ಮರದ ರಸ ಎಂದು"ಅರಿಯುವುದಿಲ್ಲ.
2) ಅದೇರೀತಿಯಲ್ಲಿ ಅನೇಕ ನದಿಗಳು ಹರಿದು ಸಮುದ್ರವನ್ನು ಸೇರುತ್ತವೆ.ಆದರೆ "ನಾನು ಆ ನದಿಯ ನೀರು ಈ ನದಿಯನೀರು" ಎನ್ನುವ ಭೇದ ಭಾವ ಇರುವುದಿಲ್ಲ.
ಜೀವನು ಶರೀರವನ್ನು ಬಿಟ್ಟರೆ ಅದು ಒಣಗಿ ಸಾಯುತ್ತದೆ.ಜೀವವು ಸಾಯುವುದಿಲ್ಲ. ಅನಂತರ ಶ್ವೇತಕೇತುವು ಅತ್ಯಂತ ಸೂಕ್ಷ್ಮವಾದ ಸದ್ವಸ್ತುವಿನಿಂದ ಅತ್ಯಂತ ಸ್ಥೂಲವಾದ ಪೃಥ್ವಿ ಮುಂತಾದ ನಾಮ ರೂಪಗಳನ್ನುಳ್ಳ ಈ ಜಗತ್ತು ಹೇಗೆ ಉಂಟಾಯಿತು ಎಂದು ಪ್ರಶ್ನಿಸುತ್ತಾನೆ.
ಒಂದನೇ ದೃಷ್ಟಾಂತ:ಶ್ವೇತಕೇತುವಿಗೆ ಉದ್ಧಾಲಕನು ಆಲದಮರದ ಬೀಜವನ್ನು ಒಡೆದು ನೋಡಲು ಹೇಳುತ್ತಾನೆ.ಅದರಲ್ಲಿ ಸಣ್ಣ ಬೀಜಗಳು ಮಾತ್ರ ಕಾಣುತ್ತವೆಯೆಂದು ಶ್ವೀತಕೇತುವು ಹೆಳುತ್ತಾನೆ. ಬೀಜದಲ್ಲಿರುವ ಯಾವ ಸೂಕ್ಷ್ಮಾಂಶವು ಹೀಗೆ ಒಂದು ದೊಡ್ಡ ಆಲದಮರ ವಾಗುತ್ತದೆಯೊ ಅದೇ ರೀತಿ ಈ ಜಗತ್ತು ಹುಟ್ಟಿದೆ ಎಂದು ವಿವರಿಸುತ್ತಾನೆ.
ಎರಡನೇ ದೃಷ್ಟಾಂತ:(ಉದಕಲೀನ ಲವಣ ದೃಷ್ಟಾಂತ)
ಉಪ್ಪನ್ನು ನೀರಿಗೆ ಹಾಕಿದರೆ ಕರಗಿ ಹೋಗುತ್ತದೆ.ಅದನ್ನು ನೀರಿನಿಂದ ತೆಗೆಯಲು ಆಗುವುದಿಲ್ಲ.ಆದರೆ ಆ ನೀರನ್ನು ಯಾವ ಭಾಗದಿಂದ ಸವಿದು ನೋಡಿದರೂ ಎಲ್ಲೆಲ್ಲಿಯೂ ಉಪ್ಪೇ ಆಗಿರುತ್ತದೆ.ಹಾಗೆಯೇ ಜಗನ್ಮೂಲವಾದ ಸದ್ವಸ್ತುವು ನಮ್ಮಲ್ಲಿದೆ. ಇಂದ್ರಿಯಗಳಿಗೆ ಗೋಚರವಾಗುವುದಿಲ್ಲ. ಆದರೆ ಬೇರೊಂದು ಉಪಾಯದಿಂದ ಕಂಡುಹಿಡಿಯಬಹುದು.
3) ಗಂಧಾರ ದೇಶದ ಕಥೆ:
ದರೋಡೆಕೋರರು ಗಾಂಧಾರ ದೇಶದಿಂದ ಒಬ್ಬ ಮನುಷ್ಯನನ್ನು ಕಣ್ಣು ಕಟ್ಟಿ ಕರೆತಂದು ಅವನನ್ನು ಒಂದು ನಿಜ೯ನ ಪ್ರದೇಶದಲ್ಲಿ ಬಿಟ್ಟರು.ಅವನು ದಾರಿಕಾಣದೆ ಪರಿತಪಿಸುತ್ತಿದ್ದನು.ಆಗ ಪರಮ ಕಾರುಣಿಕನಾದ ದಾರಿಹೋಕನೊಬ್ಬನು ಅವನ ಕಣ್ಣು ಕಟ್ಟನ್ನು ಬಿಚ್ಚಿ "ಗಾಂಧಾರ ದೇಶವು ಈ ದಿಕ್ಕಿನಲ್ಲಿದೆ.ಅಲ್ಲಿಗೆ ಹೋಗು" ಎಂದು ಹೇಳಿದನು.ಅವನು ದಾರಿಯನ್ನು ಕೇಳುತ್ತಾ ಹೋಗುತ್ತಾ ಹೇಗೋ ಗಾಂಧಾರ ದೇಶವನ್ನು ಬಂದು ಸೇರಿದನು.
ಹಾಗೆಯೇ ಈ ಸಂಸಾರದಲ್ಲಿ ಅಜ್ಞಾನಿಯಾದವನು ಗುರೂಪದೇಶದ ಸಹಾಯದಿಂದ ಸದ್ವಸ್ತುವನ್ನು ಅರಿತುಕೊಂಡು ಅದನ್ನು ಸೇರಬಹುದು.ಪ್ರಾರಬ್ಧ ಕಮ೯ವು ನಾಶವಾದ ಮೇಲೆ ಅವನು ಸದ್ವಸ್ತುವಿನಲ್ಲೇ ಸೇರಿಕೊಂಡು ಮುಕ್ತನಾಗುತ್ತಾನೆ.ಅಜ್ಞಾನಿಯು ಪುನಃ ಹುಟ್ಟುತ್ತಾನೆ.ಆದರೆ ಜ್ಞಾನಿಯು ಶಾಸ್ತ್ರಾಚಾಯ೯ರ ಉಪದೇಶದಿಂದ ಸದ್ವಸ್ತುವನ್ನು ಹೊಂದಿ ಸಂಸಾರಕ್ಕೆ ಹೋಗುವುದಿಲ್ಲ.ಶ್ವೇೀತಕೇತುವು ಉದ್ಧಾಲಕನಿಂದ ದೃಷ್ಟಾಂತಗಳಿಂದಲೂ "ಅದೇ ನೀನಾಗಿರುವೆ"(ತತ್ವಮಸಿ) ಎಂದು ಉಪದೇಶ ಹೊಂದಿದನು.
ಏಳನೆಯ ಅಧ್ಯಾಯ:
ಪರಮಾಥ೯ ತತ್ವವೇ ಪ್ರಧಾನವಾಗಿದ್ದ ಆರನೆಯ ಅಧ್ಯಾಯದಲ್ಲಿಜೀವಬ್ರಹ್ಮರ ಏಕತ್ವವು ನಿಣ೯ಯಿಸಲ್ಪಟ್ಟಿತು.ಇಲ್ಲಿ ಭೂಮತತ್ವವನ್ನು ಉಪದೇಶಿಸಿದೆ.ನಾರದ ಸನತ್ಕುಮಾರರ ಆಖ್ಯಾಯಿಕೆಯು ಪರವಿದ್ಯೆಯ ಸ್ತುತಿಗಾಗಿ ಬಂದಿದೆ. ನಾರದರು ಸವ೯ವಿದ್ಯಾ ಪಾರಂಗತರಾಗಿದ್ದರೂ ಆತ್ಮತತ್ವವನ್ನರಿತುಕೊಳ್ಳದೆ ಇದ್ದುದರಿಂದ ಆನಂದವನ್ನು ಹೊಂದದೆ ಶೋಕಿಸುತ್ತಿದ್ದನು. ನಾರದನು ಸನತ್ಕುಮಾರನ ಬಳಿಗೆ ಬ್ರಹ್ಮೋಪದೇಶಕ್ಕಾಗಿ ಬಂದಿದ್ದನು.ಅವನು ಕಲಿತಿದ್ದೆಲ್ಲಾ ಕೇವಲ ನಾಮವೆಂದೂ, ನಾಮವನ್ನು ಬ್ರಹ್ಮವೆಂದು ಉಪಾಸಿಸಬೇಕೆಂದು ಸನತ್ಕುಮಾರನು ಹೇಳುತ್ತಾನೆ.
"ನಾಮಕ್ಕಿಂತ ಅಧಿಕವಾದುದು ಇದೆಯೇ?" ಎಂದು ನಾರದನು ಕೇಳಲು ಆಚಾಯ೯ನು ಅದಕ್ಕಿಂತ ವಾಕ್ಕು ಅಧಿಕವಾದುದು ಎಂದು ಹೆಳುತ್ತಾನೆ.ಹೀಗೆಯೇ 1 ನಾಮ 2 ವಾಕ್ಕು 3 ಮನಸ್ಸು 4 ಸಂಕಲ್ಪ 5 ಚಿತ್ತ 6ಧ್ಯಾನ 7 ವಿಜ್ಞಾನ 8 ಅನ್ನ ೯ ನೀರು 10 ತೇಜಸ್ಸು 11 ಆಕಾಶ12 ಸ್ಮøತಿ 13 ಆಸೆ 14 ಪ್ರಾಣ ಇವು ಒಂದಕ್ಕಿಂತ ಒಂದು ಅಧಿಕವಾದುದೆಂದು ಪ್ರತಿಯೊಂದನ್ನೂ ಬ್ರಹ್ಮವೆಂದು ಉಪಾಸಿಸಬೇಕೆಂದು ಸನತ್ಕುಮಾರನು ಹೆಳುತ್ತಾನೆ.ವಿಜ್ಞಾನವು ಧ್ಯಾನಕ್ಕಿಂತ ಅಧಿಕವಾದುದು2.
ಪ್ರಾಣಾತ್ಮವಾದಿಯು ನಿಜವಾದ ಅತಿವಾದಿಯಲ್ಲ.ಯಾವನು "ಭೂಮ' ವೆಂಬ ಹೆಸರಿನ ಎಲ್ಲವನ್ನು ಅತಿಕ್ರಮಿಸಿರುವ ಪರಮಾಥ೯ ತತ್ವವನ್ನು ಅರಿತಿರುತ್ತಾನೋ ಅವನೇ ನಿಜವಾದ ಅತಿವಾದಿ.ಪರಮಾಥ೯ ಸತ್ಯವನ್ನು ಅರಿತುಕೊಳ್ಳುವುದೇ ವಿಜ್ಞಾನವು.ವಿಜ್ಞಾನಕ್ಕೆ ಮನನವೂ, ಮನನಕ್ಕೆ ಶ್ರದ್ಧೆಯೂ, ಶ್ರದ್ಧೆಗೆ ನಿಷ್ಠೆಯೂ,ನಿಷ್ಠೆಗೆ ಇಂದ್ರಿಯ ಸಂಯಮವೂ,ಇಂದ್ರಿಯ ಸಂಯಮಕ್ಕೆ ಸುಖವೂ ಆಶ್ರಯವಾಗಿರುತ್ತದೆ.ಆ ಸುಖವು ಭೂಮವು.ಅಲ್ಪವಲ್ಲ.ಏಕೆಂದರ ಅಲ್ಪದಲ್ಲಿ ಸುಖವಿಲ.್ಲಭೂಮವನ್ನೇ ಅರಿತುಕೊಳ್ಳಲು ಬಯಸಬೇಕು.
ಎಲ್ಲಿ ಬೇರೊಂದನ್ನು ನೋಡುವುದಿಲ್ಲವೋ,ಬೇರೊಂದನ್ನು ಕೇಳುವುದಿಲ್ಲವೋ,ಬೇರೊಂದನ್ನು ಅರಿಯುವುದಿಲ್ಲವೋ,ಅದು 'ಭೂಮ'ವು3.ಅದು ತನ್ನ ಮಹಿಮೆಯಲ್ಲಿ ಪ್ರತಿಷ್ಠಿತವಾಗಿದೆ.ಆದರೆ ಅವನು ಪರಮಾಥ೯ವನ್ನು ಕೇಳಲು ಬಯಸಿದರೆ ಭೂಮವು ತನ್ನ ಮಹಿಮೆಯಲ್ಲಿಯೂ ಪ್ರತಿಷ್ಠಿತವಾಗಿಲ್ಲ.ಭೂಮಕ್ಕೆ ನಿಜವಾಗಿ ಯಾವ ಪ್ರತಿಷ್ಠೆಯೂ ಇಲ್ಲ. ಆ ಭೂಮವೇ ಮೇಲೆ ಕೆಳಗೆ ಎಲ್ಲೆಲ್ಲಿಯೂ ಇದೆ. ಅದೇ ಎಲ್ಲರಲ್ಲಿಯೂ 'ನಾನು'ಎಂದು ಕರೆಸಿಕೊಳ್ಳತಕ್ಕದ್ದು.ಅವಿವೇಕಿಗಳು 'ನಾನು' ಎಂಬ ದೇಹಾದಿ ಸಂಘಾತವಲ್ಲ.ಕೇವಲ ಸದ್ರೂಪ ಆತ್ಮನೇ ಬ್ರಹ್ಮವು.ಹೀಗೆ ಅರಿತುಕೊಂಡವನು 'ಸ್ವರಾಟ್' ಆಗುತ್ತಾನೆ.ಅವನಿಗೆ ಸವ೯ಲೋಕಗಳಲ್ಲಿಯೂ ಸ್ವಚ್ಛಂದವಾದ ಗತಿಯಿರುತ್ತದೆ.ಇದಕ್ಕಿಂತ ಬೇರೆಯಾಗಿ ಅರಿತುಕೊಂಡಿರುವವರು ಕ್ಷರವಾದ ಲೋಕಗಳಲ್ಲಿ ವಾಸಿಸುತ್ತಾರೆ.
ಪ್ರಾಣದಿಂದ ಆರಂಭಿಸಿ ನಾಮದವರೆಗೆ ಇರುವ ವಸ್ತುಗಳೆಲ್ಲವುಗಳ ಉತ್ಪತ್ತಿ, ಪ್ರಳಯಗಳು ಆತ್ಮನಿಂದಲೇ ಆಗುತ್ತವೆ.ಇಂಥ ತತ್ವವಿದನಿಗೆ ಮೃತ್ಯು,ರೋಗ,ದುಃಖ ಮೊದಲಾದ ಅನಥ೯ಗಳೂ ಇರುವುದಿಲ್ಲ.ಅವನು ಎಲ್ಲವೂ ಆಗಿ ಎಲ್ಲವನ್ನೂ ಪಡೆದುಕೊಳ್ಳುತ್ತಾನೆ.ಭೂಮವು ಅಹಂಕಾರದ ಮೂಲಕ ಉಪದೇಶಿಸಲ್ಪಡುತ್ತದೆ.ನಾನೇ ಕೆಳಗಿರುವವನು,ನಾನೇ ಮೇಲಿರುವವನು, ಹಿಂದಿರುವೆನು, ಮುಂದಿರುವೆನು, ಬಲಕ್ಕಿರುವೆನು, ಎಡಕ್ಕಿರುವೆನು, ನಾನು ಇದೆಲ್ಲವೂ ಆಗಿರುವೆನು4.
ಭೂತಗಳ ಉತ್ಪತ್ತಿ, ಪ್ರಳಯ,ಗತಿ,ಅಗತಿ,ವಿದ್ಯೆ,ಅವಿದ್ಯೆ ಇವುಗಳನ್ನು ಯಾವನು ಅರಿತುಕೊಂಡಿರುವನೋ ಅವನನ್ನು ಭಗವಂತನೆಂದು ಕರೆಯುತ್ತಾರೆ5.
ಹೀಗೆ ನೋಡಿ ಮನನ ಮಾಡಿಕೊಂಡು, ಅರಿತುಕೊಂಡು, ಆತ್ಮರತಿಯೂ, ಆತ್ಮಕ್ರೀಡನೂ, ಆತ್ಮ ಮಿಥುನನೂ,ಆತ್ಮಾನಂದನೂ,ಆಗಿ ಅವನು 'ಸ್ವರಾಟ್' ಆಗುತ್ತಾನೆ.ಅವನಿಗೆ ಸವ೯ಲೋಕಗಳಲ್ಲಿಯೂ ಸ್ವಚ್ಛಂದ ಗತಿಯಿರುತ್ತದೆ.ಇನ್ನು ಯಾರು ಇದಕ್ಕಿಂತ ಬೇರೆಯಾಗಿ ಅರಿತುಕೊಂಡಿರುವರೊ ಅವರು ಅನ್ಯ ರಾಜನ ಅಧೀನಕ್ಕೆ ಒಳಪಟ್ಟು ಕ್ಷಯವುಳ್ಳ ಲೋಕಗಳಲ್ಲಿ ವಾಸಿಸುತ್ತಾರೆ.ಅವರಿಗೆ ಯಾವಲೋಕಗಳಲ್ಲಿಯೂ ಸ್ವಚ್ಛಂದ ಗತಿ ಇರುವುದಿಲ್ಲ.
ಜ್ಞಾನಿಯು ಬದುಕಿರುವಾಗಲೇ ಸ್ವಾರಾಜ್ಯದಲ್ಲಿ ಅಭಿಷಿಕ್ತನಾಗಿದ್ದು ದೇಹವು ಹೋದಮೇಲೂ ಸ್ವರಾಟ್ ಆಗುತ್ತಾನೆ.ಎಂದರೆ ಅವನ ಸ್ಥಿತಿಯು ಯಾವ ವಿಧದಿಂದಲೂ ಬದಲಾವಣೆಯನ್ನು ಹೊಂದುವುದಿಲ್ಲ.ಯಾವನು ಹೀಗೆ ನೋಡುತ್ತಾನೆಯೋ,ಮನನ ಮಾಡುತ್ತಾನೆಯೋ, ಅರಿಯುತ್ತಾನೆಯೋ, ಅವನಿಗೆ ಆತ್ಮನಿಂದಲೇ ಆಸೆ ಉಂಟಾಗುತ್ತದೆ. ಆತ್ಮನಿಂದಲೇ ಸ್ಮøತಿ ಉಂಟಾಗುತ್ತದೆ.ಹೀಗೆ ಆಕಾಶ, ತೇಜಸ್ಸು, ನೀರು, ಅವಿಭಾ೯ವ, ತಿರೋಭಾವಗಳು, ಅನ್ನ,ಬಲ, ವಿಜ್ಞಾನ, ಧ್ಯಾನ, ಚಿತ್ತ, ಸಂಕಲ್ಪ, ಮನಸ್ಸು, ವಾಕ್ಕು,ನಾಮ,ಮಂತ್ರಗಳು,ಕಮ೯ಗಳು ಎಲ್ಲವೂ ಆತ್ಮನಿಂದಲೇ ಉಂಟಾಗುತ್ತವೆ.
ಹೀಗೆ ಸಮಸ್ತ ವ್ಯವಹಾರವೂ ಸ್ವಾರಾಜ್ಯವನ್ನು ಹೊಂದಿದ ಜ್ಞಾನಿಗೆ ತನ್ನ ಆತ್ಮನಿಂದಲೇ ಉಂಟಾಗುತ್ತಿರುವುದು. ವಿದ್ಯಾಫಲದ ವಿಷಯದಲ್ಲಿ ಈ ಶ್ಲೋಕವಿದೆ.ತತ್ವವಿದನು ಮೃತ್ಯುವನ್ನು ನೋಡುವುದಿಲ್ಲ. ರೋಗವನ್ನಾಗಲೀ ದುಃವನ್ನಾಗಲೀ ನೋಡುವುದಿಲ್ಲ.ತತ್ವವಿದನು ಅದ್ವಯನಾಗಿ ನೋಡುತ್ತಾನೆ.ಸವ೯ಪ್ರಕಾರದಿಂದಲೂ ಎಲ್ಲವನ್ನೂ ಪಡೆಯುತ್ತಾನೆ.ಸೃಷ್ಟಿಗೆ ಮೊದಲು ತತ್ವವಿದನು ಅದ್ವಯನಾಗಿರುತ್ತಾನೆ. ಅನಂತರ ಸೃಷ್ಟಿಕಾಲದಲ್ಲಿ ಮೂರುಬಗೆಯಾಗುತ್ತಾನೆ. ಐದು, ಏಳು, ಒಂಬತ್ತು, ಹನ್ನೊಂದು,ನೂರಾಹತ್ತು,ಹತ್ತುಸಾವಿರದ ಇಪ್ಪತ್ತು ಬಗೆಯಾಗುತ್ತನೆ.
ಆಹಾರವು ಶುದ್ಧವಾದಾಗ ಅಂತಃಕರಣವು ಶುದ್ಧವಾಗುತ್ತದೆ.ಅಂತಃಕರಣವು ಶುದ್ಧಿಯಾದಾಗ ಸ್ಮøತಿಯು ಅವಿಚ್ಛಿನ್ನವಾಗಿರುತ್ತದೆ.ಸ್ಮøತಿಯನ್ನು ಪಡೆದಾಗ ಎಲ್ಲ ಗ್ರಂಥಿಗಳ ವಿನಾಶವು ಆಗುತ್ತದೆ.ರಾಗ ದ್ವೇಷಾದಿಗಳಿಂದ ವಿಮುಕ್ತನಾದ ನಾರದನಿಗೆ ಭಗವಂತನಾದ ಸನತ್ಕುಮಾರನು ತಮಸ್ಸಿನ ಆಚೆ ದಡವನ್ನು ತೋರಿಸಿದನು.ಅವನನ್ನು ಸ್ಕಂದನೆಂದು ಕರೆಯುತ್ತಾರೆ.ಅವನನ್ನು ಸ್ಕಂದನೆಂದು ಕರೆಯುತ್ತಾರೆ.
ಎಂಟನೆಯ ಅಧ್ಯಾಯ:
ಬ್ರಹ್ಮವು ಕಾಯ೯ಕಾರಣಗಳನ್ನು ದೇಶ,ಕಾಲ,ದಿಕ್ಕುಗಳಿಲ್ಲದ ಏಕವೂ ಅದ್ವಿತೀಯವೂ ಆದ ಸದ್ವಸ್ತು.ಈ ಅಧ್ಯಾಯದಲ್ಲಿ ಒಟ್ಟು ಹದಿನೈದು ಖಂಡಗಳಿವೆ.'ದಹರ'ವಿದ್ಯೆಯು ಮೊದಲನೆಯ ಖಂಡದಿಂದ ಆರಂಭವಾಗುತ್ತದೆ.ಬ್ರಹ್ಮಪುರವಾದ ನಮ್ಮ ಶರೀರದಲ್ಲಿ 'ದಹರ'ವಾದ ಎಂದರೆ ಸಣ್ಣದಾದ ಹೃದಯಪದ್ಮವೆಂಬ ಮನೆಯಿದೆ.ಅದರಲ್ಲಿರುವ ದಹರಾಕಾಶದಲ್ಲಿ ಯಾವುದಿದೆಯೊ ಅದನ್ನು ಅನ್ವೇಶಿಸಬೇಕು. ಅದನ್ನು ಅರಿತುಕೊಳ್ಳಲು ಬಯಸಬೇಕು.ಈ ದಹರಾಕಾಶವೇ ಬ್ರಹ್ಮ.ಬ್ರಹ್ಮಕ್ಕೆ ಆಕಾಶವೆಂಬುದು ಪ್ರಸಿದ್ಧವಾದ ಹೆಸರು.ಆಕಾಶದಂತೆ ಅಶರೀರವೂ ಸೂಕ್ಷ್ಮವೂ,ಸವ೯ಗತವೂ ಆಗಿರುವುದರಿಂದ ಬ್ರಹ್ಮವು ಆಕಾಶವೆನಿಸಿದೆ.
ಹೃದಯದಲ್ಲಿರುವ ಆಕಾಶವನ್ನು ಬ್ರಹ್ಮವೆಂದು ಹೇಳಿರುವುದರಿಂದ ಅದುಹೃದಯಾಕಾಶದಷ್ಟೇ ಸಣ್ಣದಲ್ಲ.ಇಲ್ಲಿ ದ್ಯುಲೋಕ,ಪೃಥ್ವಿ,ಅಗ್ನಿ,ವಾಯು,ಸೂಯ೯ಚಂದ್ರರು,ಮತ್ತು ಏನೇನಿದೆಯೋ, ಏನೇನಿಲ್ಲವೋ, ಅವೆಲ್ಲವೂ ಅಂತಗ೯ತವಾಗಿದೆ.
ಮೊದಲನೆಯ ಖಂಡ:ದೇಹವು ನಾಶವಾದರೂ ಹೃದಯಾಕಾಶವು ನಾಶವಾಗುವುದಿಲ್ಲ.ಶರೀರದ ಮುಪ್ಪಿನಿಂದ ಆಕಾಶವೆಂಬ ಬ್ರಹ್ಮಕ್ಕೆ ಮುಪ್ಪಿಲ್ಲ, ಯಾರು ಈ ಲೋಕದಲ್ಲಿ ಬ್ರಹ್ಮವನ್ನು ಉಪಾಸಿಸಿ ದೇಹತ್ಯಾಗ ಮಾಡುವರೋ ಅವರು ಸವ೯ಲೋಕಗಳಲ್ಲಿಯೂ ಸ್ವತಂತ್ರ ಗತಿಯನ್ನು ಪಡೆಯುತ್ತಾರೆ.
ಎರಡನೆಯ ಖಂಡ:ಇದರಲ್ಲಿ ಉಪಾಸಕರು ಭೂಮಿಯಲ್ಲಿ ಅಡಗಿರುವ ನಿಧಿಯಮೇಲೆ ನಡೆಯುತ್ತಿದ್ದರೂ ಅದನ್ನು ಅರಿಯದೆ ಅಜ್ಞಾನಿಗಳಂತೆ ಬ್ರಹ್ಮಲೋಕವನ್ನು ಪ್ರತಿದಿನವೂ ಸುಷುಪ್ತಿಕಾಲದಲ್ಲಿ ಸೇರುತ್ತಿದ್ದರೂ ಅದನ್ನು ಪಡೆಯದೆ ಇರುವರು.
ಮೂರನೆಯ ಖ0ಡ:ಅಪಹತ ಪಾಪತ್ವವೇ ಮೊದಲಾದ ಗುಣಗಳಿಂದ ಕೂಡಿದ ಆತ್ಮನು ಹೃದಯ ಲೋಕದಲ್ಲಿರುತ್ತಾನೆ ಎಂದು ಅರಿತುಕೊಂಡವನು ಪ್ರತಿದಿನವೂ ಸುಷುಪ್ತಿಕಾಲದಲ್ಲಿ ದಹರಾಕಾಶವೆಂಬ ಸ್ವಗ೯ಲೋಕಕ್ಕೆ ಹೋಗುತ್ತಾನೆ.ಪರಮಾತ್ಮನ ಲಕ್ಷಣವಾದ ಜ್ಯೋತಿಯನ್ನು ಸೇರಿ ತನ್ನ ಸ್ವರೂಪದಲ್ಲಿಯೇ ನಿಲ್ಲುತ್ತಾನೆ.ಇವನೇ ಆತ್ಮನು ಅಮೃತನು ಅಭಯನು.ಈ ಬ್ರಹ್ಮಕ್ಕೆ ಸತ್ಯವೆಂದು ಹೆಸರು.
ನಾಲ್ಕನೆಯ ಖಂಡ: ಈ ಲೋಕಗಳು ನಾಶವಾಗದಿರಲು ಆತ್ಮನು ಸೇತುವಾಗಿದ್ದಾನೆ.ಈ ಸೇತುವನ್ನು (ಬ್ರಹ್ಮವನ್ನು) ಹಗಲು ರಾತ್ರಿಗಳು ಮುಟ್ಟುವುದಿಲ್ಲ.ಜರಾ ಮೃತ್ಯುವಾಗಲೀ, ಶೋಕವಾಗಲೀ, ಸುಕೃತ್ಯ_ದುಷ್ಕೃತ್ಯಗಳಾಗಲೀ ಮುಟ್ಟುವುದಿಲ್ಲ. ಈ ಬ್ರಹ್ಮಲೋಕವನ್ನು ಬ್ರಹ್ಮಚಯ೯ದಿಂದಲೇ ಪಡೆದುಕೊಳ್ಳಬೇಕು.
ಐದನೆಯ ಖಂಡ:ಇಲ್ಲಿ ಜ್ಞಾನಕ್ಕೆ ಸಹಕಾರಿಂiÀÁದ ಬ್ರಹ್ಮಚಯ೯ವೆಂಬ ಸಾಧನವನ್ನು ಹೇಳಲಾಗಿದೆ.ಯಜ್ಞವೇ ಬ್ರಹ್ಮಚಯ೯ವು.ಏಕೆಂದರೆ ಜ್ಞಾತೃವಾದವನು ಯಜ್ಞಫಲವನ್ನು ಬ್ರಹ್ಮಚಯ೯ದಿಂದಲೇ ಹೊಂದುತ್ತಾನೆ. ಸತ್ತ್ರಾಯಣ,ಮೌನ,ಉಪವಾಸ,ಅರಣ್ಯವಾಸ ಇವೂ ಬ್ರಹ್ಮಚಯ೯ವೇ. ಏಕೆಂದರೆ ಇವೆಲ್ಲವೂ ಬ್ರಹ್ಮಚಯ೯ಕ್ಕೆ ಸಹಕಾರೀ ಸಾಧನಗಳು.ಬ್ರಹ್ಮಚಯ೯ ಉಪಾಸಕರಿಗೆ ಬ್ರಹ್ಮಲೋಕವೂ ಸ್ವತಂತ್ರಗತಿಯೂ ಇರುತ್ತದೆ.
ಆರನೆಯ ಖಂಡ(ನಾಡೀ ಖಂಡ):ಹೃದಯ ಪುಂಡಲೀಕದಲ್ಲಿರುವ ಬ್ರಹ್ಮವನ್ನು ಉಪಾಸಿಸುವವನಿಗೆ ನೆತ್ತಿಯ ಮೂಲಕ ಹೋಗುವ ನಾಡಿಯಿಂದ ಗತಿಯನ್ನು ಹೇಳಬೇಕಾಗಿದೆ.ಹೃದಯದಿಂದ ನೂರೊ0ದು ನಾಡಿಗಳು ಹೊರಟಿವೆ.ಒಂದು ಮಹಾಪಥವು ಎರಡು ಗ್ರಾಮಗಳನ್ನು ಕೂಡಿಸುವಂತೆ ಆದಿತ್ಯನ ರಶ್ಮಿಗಳು ಹೃದಯವನ್ನು ಆದಿತ್ಯಮಂಡಲವನ್ನು ಕೂಡಿಸುತ್ತವೆ.ಅಲ್ಲಿ ಯಾವ ಪಾಪವೂ ಅವನನ್ನು ಸೋಂಕುವುದಿಲ್ಲ.ಏಕೆಂದರೆ ದೇಹೇಂದ್ರಿಯಗಳಿಂದ ಕೂಡಿರುವವನನ್ನೇ ಪಾಪವು ಸೋಂಕುತ್ತದೆ. ಈ ಉಪಾಸಕನು ಓಂಕಾರದಿಂದ ಆತ್ಮವನ್ನು ಧ್ಯಾನಿಸುತ್ತಾ ಸುಷುಮ್ನಾನಾಡಿಯ ಮೂಲಕ ನೆತ್ತಿಯನ್ನು ಭೇದಿಸಿಕೊಂಡು ಆದಿತ್ಯನ ಮೂಲಕ ಬ್ರಹ್ಮಲೋಕಕ್ಕೆ ಹೋಗುತ್ತಾನೆ.
ಏಳನೆಯ ಖಂಡ:ಈ ಸಂಪ್ರಸಾದನು ಶರೀರದಿಂದ ಎದ್ದು ಪರಂಜ್ಯೋತಿಯನ್ನು ಸೇರಿ ತನ್ನ ಸ್ವರೂಪದಲ್ಲಿ ಸ್ಥಿತಿಯನ್ನು ಪಡೆಯುತ್ತಾನೆ.ಇವನೇ ಆತ್ಮನು ಎಂದು ಹೇಳಿದೆ.ಈ ಸಂಪ್ರಸಾದನು ಯಾರು?ಅವನನ್ನು ಅರಿತುಕೊಳ್ಳುವುದು ಹೇಗೆ?ಅವನ ನಿವಿ೯ಶೇಷ ರೂಪವು ಹೇಗಿರುತ್ತದೆ? ಇವುಗಳನ್ನು ಉಪದೇಶಿಸಲು ಏಳನೆಯ ಖಂಡವು ಆರಂಭವಾಗಿದೆ.
"ಯಾವ ಆತ್ಮನು ಪಾಪರಹಿತನೊ,ಸತ್ಯಕಾಮನೊ,ಸತ್ಯಸಂಕಲ್ಪನೂ ಆಗಿರುವನೊ ಅವನನ್ನು ಅನ್ವೇಶಿಸಬೇಕು.ಅವನನ್ನು ಅರಿತುಕೊಳ್ಳಲು ಬಯಸಬೇಕು.ಯಾವನು ಈ ಆತ್ಮನನ್ನು ಕಂಡುಹಿಡಿದು ಅರಿತುಕೊಳ್ಳುವನೊ ಅವನು ಸವ೯ಲೋಕಗಳನ್ನೂ ಸವ೯ಕಾಮಗಳನ್ನೂ ಪಡೆದುಕೊಳ್ಳುತ್ತಾನೆ" ಎಂಬ ಪ್ರಜಾಪತಿಯ ಮಾತನ್ನು ದೇವಾಸುರರು ಕೇಳಿದರು.ಇಂದ್ರ-ವಿರೋಚನ- ಪ್ರಜಾಪತಿ ಸಂವಾದವು ಈ ಅಧ್ಯಾಯದಲ್ಲಿ ಬರುತ್ತದೆ.ಇಂದ್ರನು ಒಟ್ಟು ನೂರಾ ಒಂದು ವಷ೯ದವರೆಗೆ ಬ್ರಹ್ಮಚಯ೯ ಮಾಡಿದನು. ಇದರಿಂದ ಜ್ಞಾನವು ಇಂದ್ರತ್ವಕ್ಕಿಂತಲೂ ಗುರುತರವಾದುದು ಎಂದು ತಿಳಿಯುತ್ತದೆ.
ಆತ್ಮನ ಸ್ವರೂಪವನ್ನು ಪ್ರಜಾಪತಿಯು ಇಂದ್ರನಿಗೆ ಈ ರೀತಿ ಉಪದೇಶಿಸುತ್ತಾನೆ."ಈ ಶರೀರವು ಮತ್ಯ೯ವೇ.ಮೃತ್ಯುವಿನಿಂದ ಗ್ರಸ್ತವಾಗಿರುತ್ತದೆ. ಇದು ಅಶರೀರನೂ ಅಮೃತನೂ ಆದ ಆತ್ಮನಿಗೆ ಅದಿಷ್ಠಾನ. ಶರೀರವಿಲ್ಲದವನಿಗೆ ಪಾಪ ಪುಣ್ಯಗಳು ಸೋಂಕುವುದೇ ಇಲ್ಲ.ನಾನೇ ಶರೀರವು ಶರೀರವು ನಾನೇ ಎಂಬ ಅವಿವೇಕದಿಂದ ತಾದಾತ್ಮ್ಯವನ್ನು ಪಡೆದಿರುವವನು ಶರೀರವುಳ್ಳವನು.ದೇಹಾಭಿಮಾನದಿಂದ ಭಿನ್ನತೆಯನ್ನು ಹೊಂದಿ ಅಶರೀರ ಸ್ವರೂಪ ವಿಜ್ಞಾನದಿಂದ ಅವಿವೇಕ ಜ್ಞಾನವನ್ನು ತೊಲಗಿಸಿಕೊಂಡಿರುವವನು"ಶರೀರವಿಲ್ಲದವನು".
ಹನ್ನೆರಡನೆಯ ಖಂಡ: ಅಶರೀರನೂ ಸಂಪ್ರಸಾದ ಗುಣವುಳ್ಳವನೂ ಆದ ಆತ್ಮನು ತನ್ನ ಶರೀರತ್ವವನ್ನು ಬಿಟ್ಟು ತನ್ನ ಪರಮಾತ್ಮ ಜ್ಯೋತಿಯನ್ನು ಸೇರಿಕೊಂಡು ತನ್ನ ರೂಪದಿಂದ ಕಾಣಿಸಿಕೊಳ್ಳುತ್ತಾನೆ.ಇವನೇ ಉತ್ತಮ ಪುರುಷನು ಮುಕ್ತನು.ಸವಾ೯ತ್ಮ ಭಾವವನ್ನು ಹೊಂದಿ ಸವ೯ಕಾಮಗಳನ್ನೂ ಪಡೆಯುತ್ತಾನೆ.ದೇವತೆಗಳು ಆತ್ಮನನ್ನು ಉಪಾಸಿಸುತ್ತಾರೆ.
ಹದಿಮೂರನೆಯ ಖಂಡ:"ಶ್ಯಾಮಾಚ್ಛ ಬಲಂ ಪ್ರಪದ್ಯೇ" ಎಂಬ ಪವಿತ್ರ ಮಂತ್ರವನ್ನು ಧ್ಯಾನಕ್ಕಾಗಿ ಹೇಳಿದೆ.ಆಕಾಶವೆಂಬ ಹೆಸರಿನಿಂದ ಪ್ರಸಿದ್ಧವಾದ ಬ್ರಹ್ಮವು ನಾಮರೂಪಗಳನ್ನು ವಿಂಗಡಿಸುತ್ತದೆ.
ಹದಿನಾಲ್ಕನೆಯ ಖಂಡ:ನಾಮರೂಪಗಳು ಯಾವುದರಲ್ಲಿ ಇವೆಯೋ ಅದು ಬ್ರಹ್ಮವು6.ಅಮೃತವೂ ಎಂದು ಈ ಖಂಡದಲ್ಲಿ ಹೇಳಿದೆ.
ಹದಿನೈದನೆಯಖಂಡ:ಈ ಆತ್ಮಜ್ಞಾನವನ್ನು ಬ್ರಹ್ಮನು ಪ್ರಜಾಪತಿಗೆ ಹೇಳಿದನೆಂದೂ,ಅವನು ಮನುವಿಗೆ,ಮನುವು ಮಾನವನಿಗೆ ಉಪದೇಶಿಸಿದನೆಂದೂ ಕೊನೆಯ ಖಂಡದಲ್ಲಿ ಹೇಳಿದೆ.ಕೊನೆಯ ಮೂರು ಅಧ್ಯಾಯಗಳಲ್ಲಿ ಬ್ರಹ್ಮವಿದ್ಯೆಯು ಚೆನ್ನಾಗಿ ನಿರೂಪಿಸಲ್ಪಟ್ಟಿದೆ.
b.Áಂದೋಗ್ಯ ಉಪನಿಷತ್ತಿನ ಕೆಲವು ಮುಖ್ಯ ವಾಕ್ಯಗಳು:
ಒಂದು ಮಣ್ಣಿನ ಮುದ್ದೆಯನ್ನು ತಿಳಿಯುವುದರಿಂದ ಮಣ್ಣಿನಿಂದ ಮಾಡಿದ ಎಲ್ಲಾ ವಸ್ತುಗಳನ್ನು ಅರಿತಂತಾಗುತ್ತದೆಯೊ ,ಹಾಗೆಯೇ ಒಂದು ಚಿನ್ನದ ಗಟ್ಟಿಯನ್ನು ತಿಳಿದುಕೊಂಡಿದ್ದರಿಂದ ಚಿನ್ನದಿಂದ ಮಾಡಿದುದೆಲ್ಲಾ ತಿಳಿಯಲ್ಪಡುವುದೊ,ಹಾಗೆಯೇ ಬ್ರಹ್ಮವನ್ನು ಅರಿತರೆ ಎಲ್ಲವನ್ನೂ ಅರಿತಂತಾಗುತ್ತದೆ.ಯಾವುದು ಅಗ್ನಿಯ ಕೆಂಪು ಬಣ್ಣವೊ,ಅದು ತೇಜಸ್ಸಿನ ಬಣ್ಣ.ಯಾವುದು ಬಿಳಿಯ ಬಣ್ಣವೊ ಅದು ನೀೀರಿನ ಬಣ್ಣ.ಯಾವುದು ಅಗ್ನಿಯ ಕಪ್ಪು ಬಣ್ಣವೊ ಅದು ಪೃಥ್ವಿಯ ಬಣ್ಣ.ಹೀಗೆ ಅಗ್ನಿಯಿಂದ ಅಗ್ನಿತ್ವವು ಹೋಯಿತು.ತ್ರಿವೃತ್ಕರಣ ಪ್ರಕ್ರಿಯೆಯಿಂದ ತೇಜಸ್ಸು,ನೀರು, ಅಗ್ನಿಗಳು ಬ್ರಹ್ಮಕ್ಕಿಂತ ಬೇರೆ ಅಲ್ಲ ಎಂಬುದನ್ನು ತಿಳಿಸಿರುತ್ತದೆ 7.
ಪರಿಣಾಮವೆಂಬುದು ವಾಕ್ಕನ್ನು ಅವಲಂಬಿಸಿರುವ ಹೆಸರೇ.ಮೂರು ಬಣ್ಣಗಳೆಂಬುದೇ ಸತ್ಯ.ಅದೇ ರೀತಿ ಆದಿತ್ಯ,ಚಂದ್ರ,ವಿದ್ಯುತ್ ಗಳಿಗೂ ಅನ್ವಯಿಸುತ್ತದೆ.ಕೆಂಪು_ತೇಜಸ್ಸಿನ ಬಣ್ಣ,ಬಿಳಿ_ನೀರಿನ ಬಣ್ಣ,ಕಪ್ಪು _ಪೃಥ್ವಿಯ ಬಣ್ಣ.
ಯಾವಾಗ ಮನುಷ್ಯನು ನಿದ್ರಿಸುತ್ತ್ರಾನೆಯೊ ಆಗ ಸದ್ವಸ್ತುವಿನೊಂದಿಗೆ ಏಕೀಭೂತನಾಗುತ್ತಾನೆ.ಸ್ವರೂಪವನ್ನು ಹೊಂದಿರುತ್ತಾನೆ.ಆದುದರಿಂದ ಇವನನ್ನು 'ಸ್ವಪಿತಿ' ಎಂದು ಕರೆಯುತ್ತಾರೆ8.ಏಕೆಂದರೆ ಸ್ವರೂಪವನ್ನು ಹೊಂದಿರುತ್ತಾನೆ.ಈ ಅವಸ್ಥೆಯನ್ನು ಬಿಟ್ಟರೆ ಮತ್ತೆಲ್ಲಿಯೂ ಶ್ರಮ ಪರಿಹಾರವಾಗುವುದಿಲ್ಲ. ಅನ್ನವೆಂಬ ಅಂಕುರದಿಂದ ನೀರೆಂಬ ಬೇರನ್ನು ಹುಡುಕು.ಸ್ಥಾವರ ಜಂಗಮರೂಪವಾದ ಈ ಪ್ರಾಣಿಗಳೆಲ್ಲ ಸದ್ವಸ್ತುವನ್ನು ಸದ್ವಸ್ತುವನ್ನೇ ಆಶ್ರಯವಾಗಿ ಪಡೆದಿವೆ.ಸದ್ವಸ್ತುವಿನಲ್ಲೇ ಲಯವಾಗುತ್ತವೆ.ಸಾಯುತ್ತಿರುವ ಮನುಷ್ಯನ ವಾಕ್ಕು ಮನಸ್ಸಿನಲ್ಲಿಯೂ,ಮನಸ್ಸು ಪ್ರಾಣದಲ್ಲಿಯೂ ,ಪ್ರಾಣವು ತೇಜಸ್ಸಿನಲ್ಲಿಯೂ ,ತೇಜಸ್ಸು ಪರದೇವತೆಯಲ್ಲಿಯೂ ಲೀನವಾಗುತ್ತದೆ.
ಇದ್ದದ್ದು ಮಾತ್ರವೇ ಹುಟ್ಟುತ್ತದೆ.ಎಳ್ಳಿನಲ್ಲಿ ಎಣ್ಣೆಯಿರುವುದರಿಂದಲೇ ಎಳ್ಳನ್ನು ಹಿಂಡಿದಾಗ ಎಣ್ಣೆಯು ಬರುತ್ತದೆ.ಹಾಗಿಲ್ಲವಾದರೆ ಮರಳಿನಿಂದಲೂ ಎಣ್ಣೆಯನ್ನುತೆಗೆಯಬಹುದಾಗಿತ್ತು.ಅದು ಸಾಧ್ಯವಿಲ್ಲ.ಏಕೆಂದರೆ ಎಣ್ಣೆಯು ಮರಳಿನಲ್ಲಿಲ್ಲ.ಆದ್ದರಿಂದ ಅದು ಮರಳಿನಿಂದ ಹುಟ್ಟುವಂತಿಲ್ಲ.ಇದೇ ಸತ್ಕಾಯ೯ವಾದವು೯.ಬ್ರಹ್ಮ ವಿದ್ಯೆಯೊಂದನ್ನು ಬಿಟ್ಟರೆ ಉಳಿದೆಲ್ಲಾ ವಿದ್ಯೆಗಳೂ 'ಅವಿದ್ಯೆ' ಎಂದೇ ಪರಿಗಣಿತವಾಗಿವೆ.ಯೋಗ ಸಮಾಧಿಯನ್ನಾಗಲೀ ಸಿದ್ಧಿ_ಮಹಿಮೆಗಳನ್ನಾಗಲೀ ಹೊಂದಬೇಕಾಗಿಲ್ಲ. ಎಲ್ಲಿ ಬೇರೊಂದನ್ನು ನೋಡುವುದಿಲ್ಲವೋ, ಬೇರೊಂದನ್ನು ಕೇಳುವುದಿಲ್ಲವೋ, ಬೇರೊಂದನ್ನು ಅರಿಯುವುದಿಲ್ಲವೋ ಅದು ಭೂಮವು. ಯಾವುದು ಭೂಮವೊ ಅದು ಅಮೃತವು10.ಭೂಮವಿದ್ಯೆಯನ್ನು ತಿಳಿದವನು 'ಸ್ವರಾಜ'ನಾಗುತ್ತಾನೆ. ಸ್ವರಾಜನೆಂದರೆ ಇವನನ್ನು ಆಳುವ ಮತ್ತೊಬ್ಬ ಪ್ರಭು ಇರುವುದಿಲ್ಲ.ಇವನೇ ಪ್ರಭುಗಳೆಲ್ಲರಿಗೂ ಪ್ರಭುವಾಗಿರುವನು.
ಬ್ರಹ್ಮವು ನಿವಿ೯ಶೇಷವು.ನಿವಿ೯ಶೇಷವೆಂದರೆ ಆಕಾರ,ಸ್ಥಾನ,ಕಾಲ,ಲೋಕ,ಜಾತಿ,ಗುಣ,ಕ್ರಿಯೆ,ಮುಂತಾದ ಯಾವ ಉಪಾಧಿಗಳೂ ಇಲ್ಲದಿರುವುದು.ಯಾವನು ಏನನ್ನು ಚಿಂತಿಸುವನೋ ಅವನು ಅದೇ ಆಗಿಬಿಡುವನು ಎಂಬ ನ್ಯಾಯದಂತೆ ಬ್ರಹ್ಮೋಪಾಸಕನೂ ಕಡೆಯಲ್ಲಿ ಬ್ರಹ್ಮವೇ ಆಗುತ್ತಾನೆ.ಇದನ್ನೇ 'ಬ್ರಹ್ಮವಿದಃ ಬ್ರಹ್ಮೈವ ಭವತಿ' ಎಂದು ಹೇಳಿದೆ.
ಹೀಗಿರುವಾಗ ಯಾರು ಇಲ್ಲಿ ಆತ್ಮನನ್ನು,ಸತ್ಯವಾದ ಕಾಮಗಳನ್ನು ಅರಿಯದೆ ಹೋಗುವರೋ ಅವರಿಗೆ ಸವ೯ಲೋಕಗಳಲ್ಲಿಯೂ ಸ್ವತಂತ್ರ ಗತಿ ಇರುವುದಿಲ್ಲ.ಆದರೆ ಯಾರು ಇಲ್ಲಿ ಆತ್ಮವನ್ನು,ಈ ಸತ್ಯವಾದ ಕಾಮಗಳನ್ನು ತಿಳಿದುಕೊಂಡು ಹೋಗುವರೋ ಅವರಿಗೆ ಸವ೯ಲೋಕಗಳಲ್ಲಿ ಸ್ವತಂತ್ರ ಗತಿ ಇರುತ್ತದೆ.ಅವನು ಯಾವ ಲೋಕಗಳನ್ನು ಬಯಸುತ್ತಾನೋಅವನ್ನೆಲ್ಲಾ ಪಡೆಯುತ್ತಾನೆ.ಉದಾಹರಣೆಗೆ ಪಿತೃಲೋಕ,ಮಾತೃಲೋಕ,ಭ್ರಾತೃಲೋಕ,ಸ್ನೇಹಿತ ಲೋಕ , ಗಂಧವ೯ಲೋಕ, ಸೋದರಿಯರಲೋಕ, ಅನ್ನಪಾನಗಳ ಲೋಕ, ಗೀತವಾದ್ಯಗಳಲೋಕ, ಸ್ರ್ತೀಲೋಕ.
ಯಾವಯಾª ಅರಿತುಕೊಂಡವನು ದೇಶವನ್ನು ಬಯಸುತ್ತಾನೋ,ಯಾವ ಕಾಯ೯ವನ್ನು ಬಯಸುವನೊ ಅವನ ಸಂಕಲ್ಪದಿಂದಲೆ ಅದು ಏಳುತ್ತದೆ.ಅದರ ಭೋಗದಿಂದ ಸಂಪನ್ನನಾಗಿ ಮಹಿಮೆಯನ್ನು ಅನುಭವಿಸುತ್ತಾನೆ.ಆ ಈ ಆತ್ಮದಲ್ಲಿ ಇರುವನು.ಹೃದಿ+ಅಯಂ=ಹೃದಯ.ಇದೇ ಶಬ್ದ ನಿಷ್ಪತ್ತಿಯ ವಿವರಣೆ.ಆದುದರಿಂದ ಆತ್ಮನೇ ಹೃದಯವು.ಹೀಗೆ ಅರಿತುಕೊಂಡವನು ಹೃದಯ ಬ್ರಹ್ಮವನ್ನು ಪ್ರತಿದಿನವೂ ಸೇರುತ್ತಾನೆ.ಇನ್ನು ಈ ಸಂಪ್ರಸಾದ ಗರಿವುಳ್ಳ ಆತ್ಮನು ಶರೀರದಿಂದ ಎದ್ದು ಪರಮಜ್ಯೋತಿಯನ್ನು ಸೇರಿ ತನ್ನಸ್ವರೂಪದಲ್ಲಿ ಸ್ಥಿತಿಯನ್ನು ಪಡೆಯುತ್ತಾನೆ.ಇವನೇ ಆತ್ಮನು ಇದೇ ಅಮೃತವು ಇದೇ ಅಭಯವು ಇದೇ ಬ್ರಹ್ಮವು.ಈ ಬ್ರಹ್ಮಕ್ಕೆ ಸತ್ಯವೆಂದು ಹೆಸರು.
ಬ್ರಹ್ಮದ ಸತ್ಯವೆಂಬ ಹೆಸರು 'ಸ' 'ತೀ' ಮತ್ತು 'ಯಂ'ಎಂಬ ಮೂರು' ಅಕ್ಷರಗಳನ್ನು ಹೊಂದಿದೆ.'ಸತ್' ಎಂಬುದು ಅಮೃತವು.'ತೀ'ಎಂಬುದು ಮತ್ಯ೯ವು.'ಯಮ್' ಇದರಿಂದೆ ಎರಡನ್ನೂ ವಶದಲಿಟ್ಟಿರÀುತ್ತಾನೆ.ಈ ಲೋಕಗಳು ನಾಶವಾಗದಿರಲು ಆತ್ಮನು ಸೇತುವೂ ವಿಧೃತಿಯೂ ಆಗಿದ್ದಾನೆ.ಅಹೋರಾತ್ರಿಗಳು ಈ ಸೇತುವನ್ನು ದಾಡುವುದಿಲ್ಲ.ಎಲ್ಲ ಪಾಪಗಳು ಇದರಿಂದ ಹಿಂತಿರುಗುವುವು.ಏಕೆಂದರೆ ಬ್ರಹ್ಮಲೋಕವು ಪಾಪರಹಿತವಾಗಿದೆ.
ಯಾರು ಇಲ್ಲಿ ಬ್ರಹ್ಮಲೋಕವನ್ನು ಬ್ರಹ್ಮಚಯ೯ದಿಂದ ತಿಳಿದುಕೊಳ್ಳುವರೊ ಅವರಿಗೇ ಈ ಬ್ರಹ್ಮಲೋಕವು ಇರುತ್ತದೆ.ಅವರಿಗೆ ಸವ೯ಲೋಕಗಳಲ್ಲಿಯೂ ಸ್ವತಂತ್ರ ಗತಿಯಿರುಉತ್ತದೆ.ಆಕಾಶವೆಂಬ ಹೆಸರಿನಿಂದ ಪ್ರಸಿದ್ಧವಾದ ಬ್ರಹ್ಮವು ನಾನಾ ರೂಪಗಳನ್ನು ವಿಂಗಡಿಸುತ್ತದೆ.ನಾಮರೂಪಗಳು ಯಾವುದರಲ್ಲಿ ಇವೆಯೊ ಅದು ಬ್ರಹ್ಮವು.ಅದು ಅಮೃತವು. ಅದು ಆತ್ಮನು.
ಗುರುವಿನ ಶುಶ್ರೂಷಾದಿಗಳನ್ನು ಮಾಡಿ ಉಳಿದಕಾಲದಲ್ಲಿ ನಿಯಮಾನುಸಾರವಾಗಿ ವೇದವನ್ನು ಅಧ್ಯಯನ ಮುಗಿಸಿಕೊಂಡು ಗುರುಗೃಹದಿಂದ ಸಮಾವತ೯ನ ಮಾಡಿ ಕುಟುಂಬದಲ್ಲಿ ನಿಂತು ಪವಿತ್ರಸ್ಥಳದಲ್ಲಿ ಸ್ವಾಧ್ಯಾಯ ಮಾಡುತ್ತಾ ಶಿಷ್ಯರನ್ನು ಪುತ್ರರನ್ನು ಧಾರ್ಮಿಕರನ್ನಾಗಿ ಮಾಡುತ್ತಾ,ಆತ್ಮನಲ್ಲಿ ಸವೇ೯ಂದ್ರಿಯಗಳನ್ನು ಉಪಸಂಹರಿಸಿಕೊಂಡು ಬದುಕಿರುವವರೆಗೂ ಹೀಗೆ ಆಚರಿಸುತ್ತಿದ್ದರ ಅವನು ಬ್ರಹ್ಮ ಲೋಕವನ್ನು ಹೊಂದುತ್ತಾನೆ.ಹಿಂತಿರುಗುವುದಿಲ್ಲ. ಖಂಡಿತವಾಗಿ ಹಿಂತಿರುಗುವದಿಲ್ಲ.
ಉಪಾಸನೆಗಳು ಚಿತ್ತಶುದ್ಧಿಯನ್ನುಂಟು ಮಾಡಿ ವಸ್ತುತತ್ವವನ್ನು ತೋರಿಸಿಕೊಡುವುದರಿಂದ ಅದ್ವೈತ ಜ್ಞಾನಕ್ಕೆ ಅನುಕೂಲವಾಗುತ್ತದೆ11. ನಾಮ, ವಾಕ್ಕು, ಮನಸ್ಸು, ಸಂಕಲ್ಪ, ಚಿತ್ತ, ಧ್ಯಾನ, ವಿಜ್ಞಾನ, ಅನ್ನ, ಅಪ್ಪು, ತೇಜಸ್ಸು,ಆಕಾಶ,ಸ್ಮøತಿ,ಆಶೆ,ಪ್ರಾಣತತ್ವಗಳನ್ನು ಬ್ರಹ್ಮವೆಂದು ಉಪಾಸಿಸಬೇಕು.ಭೂಮವನ್ನೇ ಅರಿತುಕೊಳ್ಳಬೇಕು12.
ಛಾಂದೋಗ್ಯ ಉಪನಿಷತ್ತಿನಲ್ಲಿ ಬರುವ ಮುಖ್ಯ ಉಪಾಸನೆಗಳು:
ಮೊದಲನೇ ಅಧ್ಯಾಯ
1)ಉದ್ಗೀಥ ಉಪಾಸನೆ
2)ಪ್ರಸ್ತಾವ_ಉದ್ಗೀಥ_ಪ್ರತೀಹಾರಗಳ ಉಪಾಸನೆ.
3)ಶೌವ ಉದ್ಗೀಥ
4)ಸ್ತೋಭಾಕ್ಷರಗಳ ಉಪಾಸನೆ
ಎರಡನೇ ಅಧ್ಯಾಯ:ಸಾಮೋಪಾಸನೆ
ಪಂಚವಿಧಸಾಮ
1) ಲೋಕದೃಷ್ಟಿ
2)ದೃಷ್ಟಿದೃಷ್ಟಿ
3)ಜಲದೃಷ್ಟಿ
4)ಋತದೃಷ್ಟಿ
5)ಪಶುದೃಷ್ಟಿ
6)ಪ್ರಾಣದೃಷ್ಟಿ
7)ವಾಕ್ ದೃಷ್ಟಿ
ಸಪ್ತವಿಧಸಾಮ:
0)ವಾಕ್ದøಷ್ಟಿ,ಆದಿತ್ಯದೃಷ್ಟಿ,ಆತ್ಮಸವಿತತ್ವ_ಅತಿಮೃತ್ಯುದ್ರೃಷ್ಟಿ.
2)ಗಾಯತ್ರಿ ಸಾಮದ ಉಪಾಸನೆ
3)ರಥಂತರ ಸಾಮದ ಉಪಾಸನೆ
4)ವಾಮದೇವ ಸಾಮದ ಉಪಾಸನೆ
5)ಬೃಹತ್ ಸಾಮದ ಉಪಾಸನೆ
6) ವೈರೂಪಸಾಮ
7)ವೈರಾಜ ಸಾಮ
8)ಶಕ್ವರೀ ಸಾಮ
೯)ರೇವತೀಸಾಮ
10)ಯಜ್ಞಾ ಯಜ್ಞೀಯಸಾಮ
11)ರಾಜನ ಸಾಮ
12)ಸವ೯ವಿಷಯಸಾಮ
13 ಷೋಡಶಕಲ ವಿದ್ಯೆಗಾನ ಪ್ರಭೇದದ ಉಪದೇಶ
14)ಆಶ್ರಮತ್ರಯ ಮತ್ತು ಓಂಕಾರೋಪಾಸನೆ
15)ಪ್ರಾತಃ ಸವನಾದಿಗಳುಮತ್ತು ಅವುಗಳ ಫಲ.
ಮೂರನೆಯ ಅದ್ಯಾಯ:
1)ಮಧುವಿದ್ಯೆ
2)ಗಾಯತ್ರಿ ಬ್ರಹ್ಮೋಪಾಸನೆ.
3)ಶಾಂಡಿಲ್ಯ ವಿದ್ಯೆ
4)ಕೋಶೋಪಾಸನೆ
5)ಪುರುಷವಿದ್ಯೆ
6)ಮನ ಆಕಾಶಾದಿಗಳಲ್ಲಿ ಬ್ರಹ್ಮ ದೃಷ್ಟಿ
7)ಆದಿತ್ಯನಲ್ಲಿ ಬ್ರಹ್ಮದೃಷ್ಟಿ
ನಾಲ್ಕನೆಯ ಅಧ್ಯಾಯ:
1)ಸಂವಗ೯ವಿದ್ಯೆ(ಜಾನಶ್ರುತಿ ರೈಕ್ವರ ಉಪಾಖ್ಯಾನ)
2)ಷೋಡಶಕಲ ವಿದ್ಯೆ
3)ಉಪಕೋಸಲ ವಿದ್ಯೆ
4)ಅಕ್ಷಿ ಪುರುಷ ವಿದ್ಯೆ
ಐದನೆಯ ಅಧ್ಯಾಯ:
1) ಪ್ರಾಣ ವಿದ್ಯೆ(ಪ್ರಾಣವೇ ಜ್ಯೇಷ್ಠಮತ್ತು ಶ್ರೇಷ್ಠ)
2)ಪಂಚಾಗ್ನಿ ವಿದ್ಯೆ_ದ್ಯುಲೋಕ,ಪಜ೯ನ್ಯ,ಪೃಥ್ವಿ,ಪುರುಷ,ಸ್ರ್ತೀ ಇವುಗಳಲ್ಲಿ ಅಗ್ನಿ ದೃಷ್ಟಿ
3)ವೈಶ್ವಾನರ ವಿದ್ಯೆ:ದ್ಯುಲೋಕವು ತಲೆ,ಆದಿತ್ಯ ಕಣ್ಣು,ವಾಯು ಪ್ರಾಣ,ಆಕಾಶ ನಡುಮೈ
ನೀರು ಮೂತ್ರಾಶಯ,ಪೃಥ್ವಿಯು ಪಾದ
4) ಸಮಸ್ತ ವೈಶ್ವಾನರ ಉಪಾಸನೆ.
5)ಪ್ರಾಣಾಗ್ನಿಹೋತ್ರ_ಐದು ಆಹುತಿಗಳು:ಪ್ರಾಣಾಯ ಸ್ವಾಃ
ಅಪಾನಾಯ ಸ್ವಾಃ
ವ್ಯಾನಾಯ ಸ್ವಾಃ
ಉದಾನಾಯ ಸ್ವಾಃ
ಸಮಾನಾಯ ಸ್ವಾಃ
ಬ್ರಹ್ಮಣೇಸ್ವಾಃ
ಸತ್ ಕಮ೯ಗಳು ಚಿತ್ತಶುದ್ಧಿಯನ್ನುಂಟು ಮಾಡಿ ಬ್ರಹ್ಮಜ್ಞಾನಕ್ಕೆ ಅನುಕೂಲವನ್ನುಂಟು ಮಾಡುಂiÀತ್ತವೆ.
ಆರು ಏಳು, ಎಂಟನೆಯ ಅಧ್ಯಾಯಗಳಲ್ಲಿ ಬ್ರಹ್ಮಜ್ಞಾನವನ್ನು ಹೇಳಿದೆ.ಯಜ್ಞಾದಿ ಕಮ೯ಗಳಿಂದ ಯಾವಪ್ರಯೋಜನವೂ ಇಲ್ಲವೆಂದು ಸಂದೇಹಪಡಬಾರದು. ನಿಷ್ಕಾಮ ಕಮ೯ಗಳು ವಿಶಿಷ್ಟ ಫಲಗಳನ್ನು ಕೊಡುತ್ತವೆ.
ಆರನೆಯ ಅಧ್ಯಾಯ:
ಮೊದಲನೆಯ ಬ್ರಾಹ್ಮಣದಲ್ಲಿ ಪ್ರಾಣಸಂವಾದವನ್ನು ಹೇಳಿದೆ.ಪ್ರಾಣವೇ ಜ್ಯೇಷ್ಠ ಮತ್ತು ಶ್ರೇಷ್ಠ.
ಎರಡನೆಯ ಬ್ರಾಹ್ಮಣದಲ್ಲಿ ಪಂಚಾಗ್ನಿ ವಿದ್ಯೆ ಮತ್ತು ದೇವಯಾನವನ್ನು ಹೇಳಿದೆ.ಪಂಚಾಗ್ನಿಗಳು1)ದ್ಯುಲೋಕ2)ಪಜ೯ನ್ಯ(ಸೋಮ)3)ಈ ಲೋಕ (ಮಳೆ) 4)ಪುರುಷ (ಅನ್ನ)
5) ಸ್ರ್ತೀ (ರೇತಸ್ಸು). ಈ ಅಗ್ನಿಯಲ್ಲಿ ದೇವತೆಗಳು ಹೋಮಮಾಡುತ್ತಾರೆ ಐದನೆಯ ಆಹುತಿಯಲ್ಲಿ ನೀರೇ ಪುರುಷ ವಾಕ್ಕಾಗಿ ಎದ್ದು ನಿಲ್ಲುತ್ತದೆ.ಮೂರನೆಯ ಬ್ರ್ರ್ರಾಹ್ಮಣದಲ್ಲಿ ಜ್ಞಾನವು ಮತ್ತೊಂದು ಸಾಮಗ್ರಿಯನ್ನು ಬಯಸದೆಸ್ವತಂತ್ರವಾಗಿರುತ್ತದೆ.ಆದರೆ ಕಮ೯ವು ದೈವ,ಮನುಷ್ಯ ವಿತ್ತಗಳನ್ನು ಅವಲಂಬಿಸಿರುತ್ತದೆ. ಈ ಅಧ್ಯಾಯದಲ್ಲಿ ಬ್ರಹ್ಮವಿದ್ಯೆಗೆ ಸಂಬಂಧಪಟ್ಟ ನೇರವಾದ ವಿಷಯಗಳಿಲ್ಲ.ನಾಲ್ಕನೆಯ ಬ್ರಾಹ್ಮಣದಲ್ಲಿ ಶ್ರೀಮಂಥ ಕಮ೯ವನ್ನು ಹೇಳಿದೆ.ಐದನೆಯ ಬ್ರಾಹ್ಮಣದಲ್ಲಿ ಆಚಾಯ೯ ಪರಂಪರೆಯನ್ನುಹೇಳಿದೆ.
ಬೃಹದಾರಣ್ಯಕ ಉಪನಿಷತ್ತು ಹಾಗೂ ಅದ್ವೈತ
ಶಾಂತಿ ಪಾಠ
ಹರಿಃ ಓಂ
ಪೂಣ೯ಮದಃ ಪೂಣ೯ಮಿದಂ
ಪೂಣಾ೯ತ್ ಪೂಣ೯ಮುದಚ್ಯತೇ|
ಪೂಣ೯ಸ್ಯ ಪೂಣ೯ಮಾದಾಯ
ಪೂಣ೯ಮೇವಾವಶಿಷ್ಯತೇ|
ಓ ಶಾಂತಿಃ ಶಾಂತಿಃ
ಹರಿಃ ಓಂ
ಅದು (ಪರಬ್ರಹ್ಮವು) ಪೂಣ೯ವು.ಇದು (ವ್ಯಕ್ತವಾದ ಜಗತ್ತು) ಪೂಣ೯ವು; ಪೂಣ೯ದಿಂದ(ಪರಬ್ರಹ್ಮವು) ಪೂಣ೯ವು (ಜಗತ್ತು)ಹೊರಟು ಬಂದಿದೆ;ಪೂಣ೯ದ(ಜಗತ್ತಿನ) ಪೂಣ೯ತ್ವ (ಬ್ರಹ್ಮತ್ವ)ವನ್ನು ತೆಗೆದಮೇಲೆ(ಗ್ರಹಿಸಿದ ಮೇಲೆ) ಪೂಣ೯ವೇ ಉಳಿಯುತ್ತದೆ.
ಓಂ ಶಾಂತಿಃ ಶಾಂತಿಃ ಶಾಂತಿಃ
ಪೀಠಿಕೆ:
ಬೃಹದಾರಣ್ಯಕೋಪನಿಷತ್ತು ಗಾತ್ರದಿಂದಲೂ ವಿಷಯ ಸಮೃದ್ಧಿಯಿಂದಲೂ ಅತ್ಯಂತ ಬೃಹತ್ತಾಗಿದೆ. ಈ ಉಪನಿಷತ್ತು ಶುಕ್ಲ ಯಜುವೇ೯ದದ ಶತಪಥಬ್ರಾಹ್ಮಣಕ್ಕೆ ಸೇರಿದೆ. ಶತಪಥಬ್ರಾಹ್ಮಣವು ಕಾಣ್ವ, ಮಾಧ್ಯಂದಿನ, ಎಂಬ ಎರಡು ಶಾಖೆಗಳಾಗಿ ಒಡೆದಿವೆ.ಶ್ರೀ ಶಂಕರರು ಕಾಣ್ವ ಶಾಖೆಯನ್ನು ಅನುಸರಿಸಿ ತಮ್ಮ ಬೃಹತ್ ಭಾಷ್ಯವನ್ನು ರಚಿಸಿರುತ್ತಾರೆ. ಸೂತ್ರ ಭಾಷ್ಯಾದಿಗಳಲ್ಲಿ ಮಾಧ್ಯಂದಿನ ಶಾಖೆಯನ್ನು ಅನುಸರಿಸಿರುತ್ತಾರೆ. ಇಲ್ಲಿ ಕಾಣ್ವ ಪಾಠವನ್ನೇ ಅನುಸರಿಸಲಾಗಿದೆ. ಬೃಹದಾರಣ್ಯಕೋಪನಿಷತ್ತಿನ ಅಧ್ಯಾಯಗಳು ನಲವತ್ತೇಳು (47) ಖಂಡಗಳಾಗಿ ವಿಭಜಿಸಲ್ಪಟ್ಟಿವೆ.ಇವುಗಳನ್ನು ಬ್ರಾಹ್ಮಣಗಳೆಂದು ಕರೆಯುತ್ತಾರೆ.
ಈ ಉಪನಿಷತ್ತುಗಳನ್ನು ಇನ್ನೊಂದು ಬಗೆಯಾಗಿಯೂ ವಿಭಜಿಸಬಹುದು. ಮಧುಕಾಂಡ, ಯಾಜ್ಞವಲ್ಕೀಯಕಾಂಡ (ಮುನಿಕಾಂಡ) ಮತ್ತು ಖಿಲಕಾಂಡ. ಈ ಮೂರು ಕಾಂಡಗಳು ಉಪದೇಶ, ಉಪಪತ್ತಿ. ಉಪಾಸನೆಗಳನ್ನು ನಿರೂಪಿಸುತ್ತವೆ. ಮೊದಲನೆಯ ಎರಡು ಅಧ್ಯಾಯಗಳು ಬಹುದೇವತೋಪಾಸನೆಯನ್ನು ಮೀರಿದ ಆತ್ಮತತ್ವವನ್ನು ಪ್ರತಿಪಾದಿಸುತ್ತವೆ. ಮೂರನೆಯ ಮತ್ತು ನಾಲ್ಕನೆಯ ಅಧ್ಯಾಯಗಳು ಈ ಉಪನಿಷತ್ತಿನ ಸಾರವನ್ನು ಒಳಗೊಂಡಿವೆ. ಯಾಜ್ಞವಲ್ಕ್ಯನು ಈ ಅಧ್ಯಾಯಗಳಲ್ಲಿ ಆತ್ಮ_ಬ್ರಹ್ಮತತ್ವವನ್ನು ಅತ್ಯಂತ ವಿಸ್ತಾರವಾಗಿಯೂ ಸೂಕ್ಷ್ಮವಾಗಿಯೂ ವಿವರಿಸುತ್ತಾನೆ.ಕೊನೆಯ ಎರಡು ಅಧ್ಯಾಯಗಳಲ್ಲಿ ಕೆಲವು ಉಪಾಸನೆಗಳನ್ನೂ ಉತ್ಕ್ರಾಂತಿಯ ಕ್ರಮವನ್ನೂ ಹೇಳಿದೆ.
ಮೊದಲನೆಯ ಅಧ್ಯಾಯ:
ಮೊದಲನೆಯ ಅಧ್ಯಾಯಕ್ಕೆ ಅಶ್ವಬ್ರಾಹ್ಮಣವೆಂದು ಹೆಸರು.ಇದು ಯಜ್ಞಕ್ಕೆ ಅಹ೯ವಾದ ಕುದುರೆಯ ಶರೀರವನ್ನು ಅಶ್ವಮೇಧ ಯಜ್ಞದ ಪ್ರಜಾಪತಿಯ ವಿರಾಡ್ರೂಪವಾಗಿ ವಣಿ೯ಸುತ್ತದೆ. ಎರಡನೆಯ ಅಧ್ಯಾಯಕ್ಕೆ ಅಗ್ನಿಬ್ರಾಹ್ಮಣವೆಂದು ಹೆಸರು.ಮೃತ್ಯುವೇ ಹಿರಣ್ಯಗಭ೯ ಅಥವಾ ಪ್ರಜಾಪತಿ. ಅಶ್ವದಂತೆ ಈ ಅಗ್ನಿಯನ್ನು ಪ್ರಜಾಪತಿಯಾಗಿ ಅಥವಾ ಪ್ರಥಮ ಶರೀರಿಯಾದ ವಿರಾಟ್ ಪುರುಷನಾಗಿ ಉಪಾಸಿಸಬೇಕು. ಪುನಮ೯ರಣವನ್ನು ಹೊಂದದಿರುವುದೇ ಈ ಉಪಾಸನೆಯ ಫಲ.ಮೂರನೆಯ ಖಂಡಕ್ಕೆ ಉದ್ಗೀಥ ಬ್ರಾಹ್ಮಣವೆಂದು ಹೆಸರು. ವೇದೋಕ್ತವಾದ ಉಪಾಸನಾ ಕಮ೯ಗಳ ಫಲವೆಲ್ಲ ಸಂಸಾರ ವಿಷಯವೆಂಬುದು, ಕೇವಲ ಬ್ರಹ್ಮವಿದ್ಯೆಯು ಮೋಕ್ಷಕ್ಕೆ ಕಾರಣ ಎಂಬುದು ಸಿದ್ಧಾಂತ. ಪ್ರಾಣವೇ ವಿರಾಟ್ ರೂಪದಲ್ಲಿ ಪ್ರಜಾಪತಿಯಾಗಿದೆ. ನಾಲ್ಕನೆಯದು ಪುರುಷವಿಧ ಬ್ರಾಹ್ಮಣ.ಪುರುಷಾಧ೯ಕ್ಕೆ ಮನುವೆಂದೂ ಸ್ತ್ರೀ ಅಧ೯ಕ್ಕೆ ಶತರೂಪೆಯೆಂದೂ ಹೆಸರು.ಇವರ ಸಂಯೋಗದಿಂದ ಮನುಷ್ಯರು ಹುಟ್ಟಿದರು.ಇವರಿಬ್ಬರೂ ಬೇರೆ ಬೇರೆ ವಗ೯ದ ಸ್ತ್ರೀ ಪುರುಷರಾಗಿ ಇರುವುವೆಂದು ಸಮಸ್ತಪಾಣಿಗಳನ್ನು ಸೃಷ್ಟಿಸಿದರು.
ಆತ್ಮನನ್ನೇ ಉಪಾಸಿಸಬೇಕು. ಆತ್ಮನನ್ನೇ ಪ್ರಿಯವೆಂದು ಅರಿಯುವವನ ಪ್ರಿಯವಸ್ತುವು ನಾಶವಾಗುವುದಿಲ್ಲ1. ಸೃಷ್ಟಿಗೆ ಮೊದಲು ಅವ್ಯಾಕೃತವಾಗಿದ್ದ ಜಗತ್ತು ನಾಮರೂಪಗಳಿಂದ ವ್ಯಾಕೃತವಾಯಿತು. ಅನಂತರ ಆತ್ಮನು ಕತ್ತಿಯು ಕೋಶದಲ್ಲಿರುವಂತೆ ಸಮಸ್ತ ಶರೀರಗಳನ್ನು ಪ್ರವೇಶಿಸಿಇರುತ್ತಾನೆ. ಅವನು ಪ್ರಾಣನ ಕ್ರಿಯೆಯನ್ನು ಮಾಡುವಾಗ ಪ್ರಾಣನೆಂದೂ, ಮಾತಾಡುವಾಗ ವಾಕ್ಕೆಂದೂ, ನೋಡುವಾಗ ಕಣ್ಣೆಂದೂ, ಕೇಳುವಾಗ ಶ್ರೋತ್ರವೆಂದೂ , ಮನನ ಮಾಡುವಾಗ ಮನಸ್ಸೆಂದೂ ಕರೆಯಲ್ಪಡುತ್ತಾನೆ. ಇವೆಲ್ಲವೂ ಕಮ೯ ವಿಶೇಷದಿಂದ ಬಂದಿರುವ ಹೆಸರುಗಳು.ಆತ್ಮನು ಉಪಾಧಿಗಳಿಂದ ಕತೃ೯ವಾಗಿ ಭೋಕ್ತøವಾಗಿ ಕಾಣುತ್ತಾನೆ.ಅವಿದ್ಯಾ ನಾಶವೇ ಮುಕ್ತಿ.
ಆದರೆ ಆತ್ಮಜ್ಞಾನವು ಹೊಸದಾಗಿ ಉಂಟಾಗತಕ್ಕ ಕ್ರಿಯೆಯಲ್ಲ.ಅದು ಸಾಕ್ಷಾದಪರೋಕ್ಷವಾಗಿರುವ ಅರಿವು.ಕಾಲವೂ ಕೂಡ ಅವಿದ್ಯೆಯ ಒಂದು ಕಾಯ೯ವಾಗಿದೆ.ಋಷಿ ವಾಮದೇವನು ಜೀವಾತ್ಮವನ್ನು ಪರಮಾತ್ಮನೆಂದು ಅರಿತುಕೊಂಡು'ನಾನು ಮನು ಮತ್ತು ಸೂಯ೯'ಎಂದು ಸಾರಿ ಹೇಳಿದನು.
ದೇವತೆಗಳ ವಗೀ೯ಕರಣ:
1) ಅಗ್ನಿ_ಬ್ರಾಹ್ಮಣ
2) ಇಂದ್ರ,ವರುಣ,ಯಮ,ಈಶಾನ,ಇವರು ಕ್ಷತ್ರಿಯರು.
3) ವಸುಗಳು,ರುದ್ರರು,ಆದಿತ್ಯರು,_ವೈಶ್ಯರು.
4) ಪೂಷನ್_ಶೂದ್ರನು.
ಈ ನಾಲ್ಕು ದೇವಜಾತಿಗಳಿಂದ ನಾಲ್ಕು ಮನುಷ್ಯ ಜಾತಿಗಳು ಹುಟ್ಟಿದವು.ಅಜ್ಞಾನಿಯು ಯಾವ ಜಾತಿಯಲ್ಲಾದರೂ ಹುಟ್ಟಿರಲಿ ದೇವತೆಗಳಿಂದ ಆರಂಭಿಸಿ ಇರುವೆಯವರೆಗೆ ಎಲ್ಲರಿಗೂ ಭೋಗ್ಯನಾಗುತ್ತಾನೆ.ಆತ್ಮೋಪಾಸನೆಯೊಂದೇ ಮನುಷ್ಯನನ್ನು ಕಾಪಾಡಬಲ್ಲದು2.ಯಾವನು ಆತ್ಮನೆಂಬ ಸ್ವರೂಪವನ್ನು ಅರಿತುಕೊಳ್ಳದೆ ಈ ಲೋಕವನ್ನು ಬಿಡುವನೋ ಅವನಿಗೂ ಮಹಾನಷ್ಟವಾಗುವುದು.
ಐದನೆಯ ಖಂಡಕ್ಕೆಸಪ್ತಾನ್ನ ಬ್ರಾಹ್ಮಣವೆಂದು ಹೆಸರು.ಅನ್ನವನ್ನು ಏಳು ಭಾಗಗಳಾಗಿ ವಿಂಗಡಿಸಲಾಗಿದೆ.
1)ಸಾಮಾನ್ಯ ಅನ್ನ
2)ಹುತ_ಪ್ರಹುತ ದೇವತೆಗಳ ಅನ್ನ
3)ಹಾಲು ಪಶುಗಳ ಅನ್ನ
4) ವಾಕ್ ,ಪ್ರಾಣ,ಮನಸ್ಸು_ಪ್ರಜಾಪತಿಯ ಅನ್ನ ವಾಕ್, ಪ್ರಾಣ ಮನಸ್ಸು ಇಡೀ ಜಗತ್ತನ್ನು ವ್ಯಾಪಿಸಿಕೊಂಡಿವೆ. ಪುರುಷನು"ಸವ೯ಪ್ರಾಣಿಗಳಲ್ಲಿರುವ ವಾಕ್ಕೇ ಮೊದಲಾದವು ನನ್ನ ಸ್ವರೂಪವೇ ಆಗಿರುತ್ತದೆ. ನಾನು ಎಲ್ಲವನ್ನೂ ಪರಿಸ್ಪಂದಿಸುವ ಪ್ರಾಣಾತ್ಮನು"ಎಂದು ಪ್ರಾಣೋಪಾಸನೆಯನ್ನು ಮಾಡಬೇಕು.
ವ್ಯಾಕೃತ_ಅವ್ಯಾಕೃತ ಜಗತ್ತೆಲ್ಲವೂ ನಾಮ, ರೂಪ, ಕಮ೯ಎಂಬ ಮೂರೇ ಆಗಿದೆ.ನಾಮ,ರೂಪ,ಕಮ೯ಗಳೆಂಬ ಅನಾತ್ಮದಿಂದ ಯಾರ ಮನಸ್ಸು ಹಿಂದಿರುಗದಿರುವುದೋ ಅವನಿಗೆ ಆತ್ಮಲೋಕದಲ್ಲಿ ಆಸಕ್ತಿ ಇರುವುದಿಲ್ಲ. ಬಾಹ್ಯ ಪ್ರವೃತ್ತಿಗೂ ಪ್ರತ್ಯಗಾತ್ಮ ಪ್ರವೃತ್ತಿಗೂ ಅತ್ಯಂತ ವಿರೋಧವಿದೆ.
ಎರಡನೇ ಅಧ್ಯಾಯದಲ್ಲಿ ಆರು ಬ್ರಾಹ್ಮಣಗಳಿವೆ:
ಮೊದಲನೆಯ ಬ್ರಾಹ್ಮಣವು ಗಾಗ್ಯ೯_ಅಜಾತಶತ್ರುಗಳ ಸಂವಾದ ರೂಪದಲ್ಲಿದೆ.ಗಾಗ್ಯ೯ನು ಅವಿದ್ಯಾ ವಿಷಯಕವಾದ ಸೋಪಾಧಿಕ ಬ್ರಹ್ಮವನ್ನು ಮಾತ್ರ ಅರಿತಿದ್ದನು. ಎಂದರೆ ಆದಿತ್ಯ,ಚಂದ್ರ ವಿದ್ಯುತ್ತು, ಆಕಾಶ, ವಾಯು, ಅಗ್ನಿ, ನೀರು ಕನ್ನಡಿ, ಹೆಜ್ಜೆಯ ಶಬ್ದ, ದಿಕ್ಕುಗಳು,ಕತ್ತಲೆಯ ಗಭ೯,ಇವುಗಳಲ್ಲಿರುವ ಪುರಷನನ್ನೇ ಬ್ರಹ್ಮವೆಂದು ಅರಿತಿದ್ದನು. ಆದರೆ ನಿರುಪಾಧಿಕವಾದ ಆತ್ಮತತ್ವವನ್ನು ಅಜಾತ ಶತ್ರುವು ಒಪ್ಪಿಕೊಂಡಿದ್ದನು.ಅಗ್ನಿಯಿಂದ ಸಣ್ಣ ಕಿಡಿಗಳು ಹಾರುವಂತೆ ಪರಮಾತ್ಮನಿಂದ ಎಲ್ಲಾ ಪ್ರಾಣಿಗಳೂ,ಎಲ್ಲಾ ಲೋಕಗಳೂ,ಎಲ್ಲಾ ದೇವತೆಗಳೂ ಬರುತ್ತವೆ. ಜೀವನು ತನ್ನ ಪರಮಾತ್ಮ ಸ್ವರೂಪವನ್ನು ,"ನೀನು ಈ ಸ್ವರೂಪದವನಲ್ಲ,ಅಸಂಸಾರಿಯಾದ ಪರಬ್ರಹ್ಮನಾಗಿರುವೆ" ಎಂದು ಆಚಾಯ೯ನಿಂದ ಬೋಧಿತನಾಗಿ ಏಷಣಾತ್ರಯದ ಅನುವೃತ್ತಿಯನ್ನು ಬಿಟ್ಟು'ಬ್ರಹ್ಮೈವಾಸ್ಮಿ'ಎಂದು ಅರಿತುಕೊಳ್ಳುತ್ತಾನೆ.
ಎರಡನೆಯ ಬ್ರಾಹ್ಮಣದಲ್ಲಿ ಪ್ರಾಣಗಳು ಸತ್ಯ.ಪರಮಾತ್ಮನು ಅವುಗಳ ಸತ್ಯ ಎಂದು ಹೇಳಿದೆ.'ಸತ್ಯದ ಸತ್ಯ'ಎಂಬುದು ಪರಮಾತ್ಮನ ರಹಸ್ಯನಾಮ. ಈ ಬ್ರಾಹ್ಮಣದಲ್ಲಿ ಆ ಪ್ರಾಣಗಳು ಯಾವುವು ಎಂಬುದನ್ನೂ, ಅವುಗಳ ರಹಸ್ಯ ನಾಮಗಳು ಯಾವುವೆಂಬುದನ್ನೂ ತಿಳಿಸಿದೆ.
ಮೂರನೆಯ ಬ್ರಾಹ್ಮಣದಲ್ಲಿ ಬ್ರಹ್ಮದ ಎರಡು ರೂಪಗಳನ್ನು ಹೇಳಿದೆ.ಒಂದು ರೂಪವು ಮೂತ೯, ಮತ್ಯ೯,ಪರಿಚ್ಛಿನ್ನರೂಪವುಳ್ಳದ್ದು.ಇನ್ನೊಂದು ರೂಪವು ಅಮೂತ೯,ಅಮೃತ,ಅಪರಿಚ್ಛಿನ್ನವೂ ಆಗಿದೆ.ಪೃಥ್ವಿ ಅಗ್ನಿ,ನೀರು ಮೂತ೯ರೂಪ.'ನೇತಿ ನೇತಿ' ಎಂಬ ಪದಗಳು ಮೂತಾ೯ಮೂತ೯ಗಳಲ್ಲದೆ ಸಮಸ್ತ ವಿಶೇಷಗಳನ್ನೂ ನಿಷೇಧಿಸಿ ಬ್ರಹ್ಮದ ಸ್ವರೂಪವನ್ನು ನಿರೂಪಿಸುತ್ತದೆ.
ನಾಲ್ಕನೆಯ ಬ್ರಾಹ್ಮಣವು ಆತ್ಮಜ್ಞಾನಕ್ಕೆ ಅಂಗವಾಗಿ ಸನ್ಯಾಸವನ್ನು ವಿಧಿಸಲು ಒಂದು ಆಖ್ಯಾಯಿಕೆಯನ್ನು ಹೇಳುತ್ತದೆ. ಇದೇ ಯಾಜ್ಞವಲ್ಕ್ಯ_ಮೈತ್ರೇಯೀ ಸಂವಾದ. ಯಾಜ್ಞವಲ್ಕ್ಯನು ಧನಸಾಧ್ಯವಾದ ಅಗ್ನಿಹೋತ್ರಾದಿ ಕಮ೯ಗಳಿಂದ ಅಮೃತತ್ವದ ಆಸೆಯೇ ಇಲ್ಲವೆಂದು ಹೇಳುತ್ತಾನೆ. ಅಮೃತತ್ವಕ್ಕೆ ಆತ್ಮಜ್ಞಾನವೊಂದೇ ಮುಖ್ಯ ಸಾಧನವೆಂದು ಉಪದೇಶಿಸಿ ಆತ್ಮನ ವೈಭವವನ್ನು ವಿವರಿಸುತ್ತಾನೆ.ಪತಿ,ಪತ್ನಿ,ಮಕ್ಕಳು,ಬ್ರಾಹ್ಮಣ,ಕ್ಷತ್ರಿಯ,ಲೋಕಗಳು.ದೇವತೆಗಳು,ಪ್ರಾಣಿಗಳು ಎಲ್ಲವೂ ತಮ್ಮಪ್ರಯೋಜನಕ್ಕಾಗಿ ತಾವು ಪ್ರಿಯವಾಗಿಲ್ಲ. ಆತ್ಮನ ಪ್ರಯೋಜನಕ್ಕಾಗಿ ಪ್ರಿಯವಾಗಿರುತ್ತವೆ. ಆತ್ಮನನ್ನೇ ಶ್ರವಣ,ಮನನ,ನಿಧಿದ್ಯಾಸನಗಳಿಂದ ಸಾಕ್ಷಾತ್ಕರಿಸಬೇಕು3.
ದುಂದುಭಿ,ಶಂಖ,ವೀಣೆ ಇವುಗಳ ವಿಶೇಷ ಶಬ್ದಗಳನ್ನು ಶಬ್ದ ಸಾಮಾನ್ಯದಿಂದ ಭಿನ್ನವಾಗಿ ಗ್ರಹಿಸಲಾಗದಂತೆ ಯಾವ ವಿಶೇಷವನ್ನೂ ಪ್ರಜ್ಞಾನ ಘನವಾದ ಬ್ರಹ್ಮದಿಂದ ಭಿನ್ನವಾಗಿ ಅರಿತುಕೊಳ್ಳಲು ಸಾಧ್ಯವಿಲ್ಲ. ಪರಮಾಥ೯ದಲ್ಲಿ ವಿಶೇಷ ಜ್ಞಾನವಿರುವಂತೆ ಕಂಡುಬಂದರೆ ಅದಕ್ಕೆ ಉಪಾಧಿಯ ಸಂಬಂಧವೇ ಕಾರಣ. ಎಲ್ಲಿ ದ್ವೈತವಿರುವಂತೆ ತೋರುವುದೋ ಅಲ್ಲಿ ಮನುಷ್ಯನು ನೋಡುತ್ತಾನೆ,ಕೇಳುತ್ತಾನೆ,ಮಾತನಾಡುತ್ತಾನೆ. ಆದರೆ ಆತ್ಮಜ್ಞಾನಿಗೆ ಕರಣ ಕ್ರಿಯಾ ಕಾರಕಗಳಾಗಲೀ, ಜ್ಞಾನ, ಜ್ಞಾತೃ,ಜ್ಞೇಯಗಳಾಗಲಿ ಇರುವುದಿಲ್ಲ.
ಐದನೆಯ ಬ್ರಾಹ್ಮಣದಲ್ಲಿ ಮೊದಲನೆಯ ಮತ್ತು ಎರಡನೆಯ ಅಧ್ಯಾಯಗಳ ಅಥ೯ವನ್ನು ಸಂಗ್ರಹಿಸಿ ಹೇಳಿದೆ. ಜಗತ್ತು ಆತ್ಮನಿಂದಲೇ ಹುಟ್ಟಿ ,ಆತ್ಮನನ್ನೇ ಹೊಂದಿ ಆತ್ಮನಲ್ಲಿಯೇ ಲಯವಾಗುತ್ತದೆ.ಹೇಗೆ ಅರೆಕಾಲುಗಳು ಚಕ್ರನಾಭಿಯಲ್ಲಿಮತ್ತು ಹೊರವಲಯದಲ್ಲಿ ನಿಲ್ಲಿಸಲ್ಪಟ್ಟಿವೆಯೋ ಹಾಗೆಯೇ ಪರಮಾತ್ಮನಲ್ಲಿ ಎಲ್ಲಾ ಪ್ರಾಣಿಗಳೂ,ಎಲ್ಲಾ ದೇವತೆಗಳೂ ಎಲ್ಲಾ ಲೋಕಗಳೂ ಎಲ್ಲಾ ಜೀವಾತ್ಮಗಳೂ ಸಮಪಿ೯ತರಾಗಿರುವರು.ಪರಮಾತ್ಮನು ಅದ್ವಯನಾಗಿದ್ದರೂ ಮಾಯೆಯಿಂದ ಬಹುರೂಪನಾಗಿ ಕಾಣುತ್ತಾನೆ.ಜೀವತತ್ವವೇ ಅಪವ೯ವೂ , ಅನಪರವೂ ಅನಂತರವೂ,ಅಬಾಹ್ಯವೂ,ಆದ ಬ್ರಹ್ಮವು ಎಂಬುದು ಈ ಪ್ರಕರಣದ ಮತ್ತು ಎಲ್ಲಾ ಉಪನಿಷತ್ತುಗಳ ತಾತ್ಪಯ೯.
ಆರನೆಯ ಬ್ರಾಹ್ಮಣದಲ್ಲಿ ಆಚಾಯ೯ ವಂಶವು ಹಿರಣ್ಯಗಭ೯ನಿಂದಲೇ ಆರಂಭವಾಗುತ್ತದೆ.ಇದಕ್ಕೆ ವಂಶ ಬ್ರಾಹ್ಮಣವೆಂದು ಹೆಸರು.
ಮೂರನೆಯ ಅಧ್ಯಾಯ
ಮಧುಕಾಂಡವು ಆಗಮ ಪ್ರಧಾನ.ಯಾಜ್ಞವಲ್ಕೀಯ ಕಾಂಡವು ಯುಕ್ತಿ ಪ್ರಧಾನ.ಮೂರನೆಯ ಅಧ್ಯಾಯಕ್ಕೆ ಒಂಬತ್ತು ಬ್ರಾಹ್ಮಣಗಳಿವೆ.ಮೊದಲನೆಯ ಬ್ರಾಹ್ಮಣದಲ್ಲಿ ತಿಳಿದವರೊಂದಿಗೆ ವಾದಿಸುವುದು ಹಾಗೂ ಚಚಿ೯ಸುವುದು ಬ್ರಹ್ಮ ಪ್ರಾಪ್ತಿಗೆ ಉಪಾಯ ಎಂದು ಹೇಳುತ್ತದೆ. ಜನಕ ವೈದೇಹನು 'ಬಹುದಕ್ಷಿಣಾ' ಎಂಬ ಯಜ್ಞವನ್ನು ಮಾಡಿದನು. ಅಲ್ಲಿಗೆ ಕುರು ಪಾಂಚಾಲ ದೇಶಗಳ ಅನೇಕ ಬ್ರಾಹ್ಮಣರು ಬಂದಿದ್ದರು. ಅವರಲ್ಲಿ ಬ್ರಹ್ಮಿಷ್ಠನು ಯಾರೆಂದು ತಿಳಿಯುವ ಇಚ್ಛೆ ಜನಕನಿಗೆ ಉಂಟಾಯಿತು.ಅವನು ಒಂದು ಸಾವಿರ ಗೋವುಗಳನ್ನು ದೊಡ್ಡಿಯಲ್ಲಿ ನಿಲ್ಲಿಸಿ ಪ್ರತಿಯೊಂದು ಗೋವಿನ ಕೊಂಬುಗಳಿಗೂ ಹತ್ತು ಹತ್ತು ಚಿನ್ನದ ನಾಣ್ಯಗಳನ್ನು ಕಟ್ಟಿಸಿದನು.ಅವುಗಳನ್ನೆಲ್ಲಾ ಬ್ರಹ್ಮಿಷ್ಠನಾದವನು ತೆಗೆದುಕೊಂಡು ಹೋಗಬಹುದೆಂದು ಹೇಳಿದನು. ಅಲ್ಲಿದ್ದ ಯಾಜ್ಞವಲ್ಕ್ಯನು ಗೋವುಗಳನ್ನು ಮನೆಗೆ ತೆಗೆದುಕೊಂಡು ಹೋಗಲು ಶಿಷ್ಯನಾದ ಸಾಮಶ್ರವನಿಗೆ ಹೇಳಿದನು.ಇದನ್ನು ನೋಡಿದ ಬ್ರಾಹ್ಮಣರೆಲ್ಲರೂ ಕೋಪಗೊಂಡು ಯಾಜ್ಞವಲ್ಕ್ಯನಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಸುರಿದರು.
ಮೊದಲನೆಯ ಬ್ರಾಹ್ಮಣದಲ್ಲಿ ಅಶ್ವಲನು ಯಾಜ್ಞವಲ್ಕ್ಯನಿಗೆ ಎರಡು ಪ್ರಶ್ನೆಗಳನ್ನು ಹಾಕಿದನು. ಅವುಗಳಿಗೆ ಯಾಜ್ಞವಲ್ಕ್ಯನು ಸಮಪ೯ಕವಾದ ಉತ್ತರಗಳನ್ನು ಕೊಟ್ಟನು .
ಎರಡನೆಯ ಬ್ರಾಹ್ಮಣದಲ್ಲಿ ಜಾರತ್ಕಾರವ ಆತ೯ಭಾಗನು ಯಾಜ್ಞವಲ್ಕ್ಯನಿಗೆ ಆರು ಪ್ರಶ್ನೆಗಳನ್ನು ಹಾಕಿದನು.ಆರನೆಯ ಪ್ರಶ್ನೆಯು ಸ್ವಾರಸ್ಯಕರವಾಗಿದೆ.ಸಮ್ಯಗ್ದಶಿ೯ಯಲ್ಲದ ಮನುಷ್ಯನು ಮೃತನಾದಮೇಲೆ ಎಲ್ಲಿಗೆ ಹೋಗುತ್ತಾನೆ?ಅನಂತರ ಅವರು ಚಚಿ೯ಸಿ 'ಕಮ೯'ವೊಂದೇ ಮನುಷ್ಯನ ಪುನಜ೯ನ್ಮಕ್ಕೆ ಮುಖ್ಯ ಕಾರಣವೆಂದು ತೀಮಾ೯ನಿಸುತ್ತಾರೆ4.ಮೂರನೆಯ ಬ್ರಾಹ್ಮಣದಲ್ಲಿ ಉಪಾಸನಾ ಸಹಿತವಾದ ಕಮ೯ವು ಮೋಕ್ಷಪ್ರದವಲ್ಲ ಎಂಬುದನ್ನು ತಿಳಿಸಿದೆ.ಈ ಬ್ರಾಹ್ಮಣಕ್ಕೆ ಭುಜ್ಯು ಬ್ರಾಹ್ಮಣ ಎಂದು ಹೆಸರು.
ನಾಲ್ಕನೆಯ ಬ್ರಾಹ್ಮಣಕ್ಕೆ 'ಉಷಸ್ತ'ಬ್ರಾಹ್ಮಣವೆಂದು ಹೆಸರು.ಸಾಕ್ಷಾತ್ ಅಪರೋಕ್ಷ ವಾಗಿರುವ ಬ್ರಹ್ಮವನ್ನು ಸರಿಯಾಗಿ ತಿಳಿಸಬೇಕೆಂದು ಉಷಸ್ತ ಚಾಕ್ರಾಯಣನು ಪ್ರಶ್ನಿಸುತ್ತಾನೆ.
ಯಾಜ್ಞವಲ್ಕ್ಯನು ಹೀಗೆ ಉvರಿಸುತ್ತಾನೆ."ಅದು ಪ್ರಾಣ ವ್ಯಾನಗಳ ಮೂಲಕ ಶರೀರದಲ್ಲಿ ಕೆಲಸ ಮಾಡುತ್ತದೆ.ಅದು ದ್ರಷ್ಟ್ರುವೂ ಮಂತೃವೂ,ಶ್ರೋತ್ರವೂ ಜ್ಞಾತೃವೂ ಆಗಿರುವುದರಿಂದ ಅದನ್ನು ವಿಷಯ ವಸ್ತುವಿನಂತೆ ಸಾಕ್ಷಾತ್ತಾಗಿ ನೋಡಲು,ಕೇಳಲು,ಭಾವಿಸಲು ಅಥವಾ ಅರಿತು ಕೊಳ್ಳಲು ಸಾಧ್ಯವಿಲ್ಲ.
ಐದನೆಯದು ಕಹೋಲ ಬ್ರಾಹ್ಮಣ. ಬಂಧನದಿಂದ ಮೋಕ್ಷ ಹೊಂದುವುದಕ್ಕೆ ಸಾಧನವಾದ ಆತ್ಮಜ್ಞಾನವನ್ನು ಇಲ್ಲಿ ಹೇಳಿದೆ. ಆತ್ಮನು ಹಸಿವು ಬಾಯಾರಿಕೆಗಳನ್ನು,ಶೋಕಮೋಹಗಳನ್ನು ಮುಪ್ಪು ಮರಣಗಳನ್ನು ದಾಟಿರುತ್ತಾನೆ. ಇಂಥ ಆತ್ಮನನ್ನು ಅರಿತುಕೊಳ್ಳಲು ಬ್ರಾಹ್ಮಣರು ಪುತ್ರ, ವಿತ್ತ, ಲೋಕಗಳಲ್ಲಿರುವ ಆಸೆಗಳನ್ನು ಬಿಟ್ಟು ಭಿಕ್ಷಾಚಯೆ೯ಯನ್ನು ಮಾಡುತ್ತಾರೆ. ಬ್ರಹ್ಮಜ್ಞಾನಿಯು ಹೇಗೆ ಆಚರಿಸಿದರೂ ಬ್ರಹ್ಮಜ್ಞಾನಿಯೇ. ಬ್ರಹ್ಮನಿಷ್ಠೆಗೆ ನಾಶವಿಲ್ಲ.ಇದು ಯಾಜ್ಞವಲ್ಕ್ಯನ ಸಿದ್ಧಾಂತ.
ಆರನೆಯ ಬ್ರಾಹ್ಮಣವು 'ಗಾಗೀ೯ ಬ್ರಾಹ್ಮಣ'.ಪಂಚಭೂತಗಳು ಮತ್ತು ವಿವಿಧ ಲೋಕಗಳ ಸೂಕ್ಷ್ಮ ಸೂಕ್ಷ್ಮತರ ತಾರತಮ್ಯವನ್ನು ಗಾಗಿ೯ಯು ಪ್ರಶ್ನಿಸುತ್ತಾಳೆ. ಕೊನೆಗೆ ಬ್ರಹ್ಮಲೋಕವು ಯಾವುದರಿಂದ ವ್ಯಾಪ್ತವಾಗಿದೆ ಎಂದು ಕೇಳಲು, ಪ್ರಶ್ನೆಯ ವಿಷಯವನ್ನು ಮೀರಿದ ದೇವತೆಯನ್ನು ಕುರಿತು ಪ್ರಶ್ನೆಮಾಡಬಾರದೆಂದು ಯಾಜ್ಞವಲ್ಕ್ಯನು ಹೇಳುತ್ತಾನೆ. ಬ್ರಹ್ಮಸ್ವರೂಪವನ್ನು ಅನುಮಾನ ಪ್ರತ್ಯಕ್ಷದಿಂದ ಅರಿಯಲಾಗುವುದಿಲ್ಲ.ಶಾಸ್ತ್ರಾಚಾಯ೯ರಿಂದಲೇ ಅರಿತುಕೊಳ್ಳಬೇಕು.
ಏಳನೆಯದು ಅಂತಯಾ೯ಮೀ ಬ್ರಾಹ್ಮಣ.ಯಾವುದರಿಂದ ಇಹಪರಗಳು ಪೋಣಿಸಲ್ಪಟ್ಟಿವೆಯೊ ಆ ಸೂತ್ರವು ಯಾವುದು?ಯಾವನು ಒಳಗಿದ್ದುಕೊಂಡು ಇಹಪರಲೋಕಗಳನ್ನೂ ಸವ೯ಪ್ರಾಣಿಗಳನ್ನೂ ನಿಯಮಿಸುವನೊ ಆ ಅಂತಯಾ೯ಮಿಯು ಯಾರು? ಇದು ಉದ್ಧಾಲಕ ಅರುಣಿಯ ಪ್ರಶ್ನೆ.ಯಾಜ್ಞವಲ್ಕ್ಯನ ಉತ್ತರ ಈರೀತಿ ಇದೆ.ವಾಯುವೇ ಆ ಸೂತ್ರವು.ಯಾವನು ಪೃಥ್ವಿ,ನೀರು,ಅಗ್ನಿ,ಅಂತರಿಕ್ಷ, ವಾಯು, ದ್ಯುಲೋಕ, ಆದಿತ್ಯ, ದಿಕ್ಕುಗಳು, ಚಂದ್ರ _ನಕ್ಷತ್ರಗಳು,ಆಕಾಶ,ತಮಸ್ಸು,ತೇಜಸ್ಸು,ಸವ೯ಪ್ರಾಣಿಗಳು, ವಾಗಾದಿ ಇಂದ್ರಿಯಗಳು, ಮನಸ್ಸು ಬುದ್ಧಿ, ರೇತಸ್ಸು ಇವುಗಳ ಒಳಗಿದ್ದುಕೊಂಡು ನಿಯಮಿಸುವನೊ ಅವನೇ ಅಂತಯಾ೯ಮಿಯು. ಈ ಭೂತ ಭೌತಿಕ ವಸ್ತುಗಳ ಒಳಗಿದ್ದುಕೊಂಡು ಒಳಗಿನಿಂದ ನಿಯಮಿಸುತ್ತಿದ್ದರೂ, ಅವುಗಳ ಆತ್ಮನಾಗಿದ್ದರೂ ಇವನ ಶರೀರವಾದ ಈ ವಸ್ತುಗಳು ಇವನನ್ನು ಅರಿಯವು.
ಇವನು ಸಾಕ್ಷಿ ಆದರೆ ಇವನನ್ನು ನೋಡಲಾಗುವುದಿಲ್ಲ.ಇವನು ಶ್ರೋತೃ ಆದರೆ ಇವನನ್ನು ಕೇಳಲಾಗುವುದಿಲ್ಲ.ಇವನು ಜ್ಞಾತೃ ಇವನನ್ನು ಅರಿಯಲಾಗುವುದಿಲ್ಲ.ಇವನು ಮಂತೃ ಆದರೆ ಇವನು ಮನಸ್ಸಿಗೆ ವಿಷಯನಲ್ಲ.ಇವನಿಗಿಂತ ಬೇರೆಯಾದ ಸಾಕ್ಷಿಯಾಗಲೀ, ಶ್ರೋತೃವಾಗಲೀ, ಮಂತೃವಾಗಲೀ, ಜ್ಞಾತೃವಾಗಲೀ ಇಲ್ಲ.ಇವನೇ ಎಲ್ಲರ ಅಮೃತನಾದ ಆತ್ಮನು.ಇವನಿಗಿಂತ ಭಿನ್ನವಾದುದೆಲ್ಲ ನಶ್ವರವು.
ಎಂಟನೆಯ ಬ್ರಾಹ್ಮಣ: ಅಶನಾಯಾದಿಗಳಿಂದ ನಿಮು೯ಕ್ತವೂ,ಸಾಕ್ಷಾದಪರೋಕ್ಷವೂ,ಸವಾ೯ಂತರವೂ ಆದ ಆತ್ಮನನ್ನು ಉಪದೇಶಿಸಲು ಎಂಟನೆಯ ಬ್ರಾಹ್ಮಣವು ಬಂದಿದೆ.ವ್ಯಕ್ತವಾದ ಜಗತ್ತಿಗೆ ಸೂತ್ರವೆಂದು ಹೆಸರು.ಇದು ಅವ್ಯಕ್ತವಾದ ಆಕಾಶದಿಂದ ವ್ಯಾಪ್ತವಾಗಿದೆಯೆಂದು ಯಾಜ್ಞವಲ್ಕ್ಯನು ಹೇಳುತ್ತಾನೆ. ಅದನ್ನು ಅಕ್ಷರವೆಂದು ಹೇಳುತ್ತಾರೆ. ಅದು ಅಸ್ಥೂಲ, ಅನಣು, ಅಹೃಸ್ವ, ಅದೀಘ೯. ಅದಕ್ಕೆ ಇಂದ್ರಿಯಗಳಾಗಳೀ ಪ್ರಾಣಗಳಾಗಲೀ ಇಲ್ಲ. ಅದಕ್ಕೆ ಒಳಗಿಲ್ಲ,ಹೊರಗಿಲ್ಲ.ಅದು ಯಾವುದನ್ನೂ ತಿನ್ನುವುದಿಲ್ಲ.ಅದನ್ನು ಯಾವುದೂ ತಿನ್ನುವುದಿಲ್ಲ.ಈ ಅಕ್ಷರದ ಶಾಸನದಿಂದಲೇ ಸೂಯ೯ ಚಂದ್ರರು ತಮ್ಮ ತಮ್ಮ ಸ್ಥಾನಗಳಲ್ಲಿ
ನಿಲ್ಲಿಸಲ್ಪಟ್ಟಿರುತ್ತಾರೆ. ದ್ಯುಲೋಕ ಪೃಥ್ವಿಗಳೂ ನಿಮಿಷ ಮುಹೂತಾ೯ದಿ ಕಾಲದ ಅವಯವಗಳೂ ತಮ್ಮ ತಮ್ಮ ಸ್ಥಾನಗಳಲ್ಲಿ ನಿಲ್ಲಸಲ್ಪಟ್ಟಿರುತ್ತವೆ. ಈ ಅಕ್ಷರವನ್ನು ತಿಳಿದುಕೊಳ್ಳದೆ ಅನೇಕ ಸಹಸ್ರ ವಷ೯ಗಳವರೆಗೆ ಹೋಮ ಯಾಗ ತಪಸ್ಸು ಮಾಡಿದರೂ ಅವುಗಳೆಲ್ಲ ನಶ್ವರವೇ ಆಗುವುದು. ಈ ಅಕ್ಷರವನ್ನು ತಿಳಿದುಕೊಳ್ಳದೆ ಈ ಲೋಕವನ್ನು ಬಿಡುವವನು ಕೃಪಣನು. ಆದರೆ ಈ ಅಕ್ಷರವನ್ನು ತಿಳಿದುಕೊಂಡು ಈ ಲೋಕವನ್ನು ಬಿಡುವವನು ಬ್ರಹ್ಮವಿದನು ಎಂದು ಯಾಜ್ಷವಲ್ಕ್ಯನು ಉಪದೇಶ ಮಾಡುತ್ತಾನೆ.
ಒಂಬತ್ತನೆಯದು ಶಾಕಲ್ಯ ಬ್ರಾಹ್ಮಣ.ದೇವತೆಗಳು ಅಸಂಖ್ಯಾತರಾಗಿದ್ದರೂ ಅವರೆಲ್ಲಾ ಒಂದೇ ದೇವತೆಯ ಎಂದರೆ ಹಿರಣ್ಯಗಭ೯ನ ಅಥವಾ ಪ್ರಾಣನ ವಿಭೂತಿಗಳು. ಹಿರಣ್ಯಗಭ೯ನು ಏಕನೂ ಅನಂತನೂ ಆಗಿದ್ದಾನೆ. ಇವನೇ ಒಂದೇ ದೇವತೆಯಾಗುತ್ತಾನೆ.ಅನಂತ ಸಂಖ್ಯಾತನಾಗಿ ವಿಸ್ತರಿಸುತ್ತಾನೆ. ಒಂದೇ ದೇವತೆಯಲ್ಲಿ ಉಂಟಾಗಿರುವ ನಾಮ ರೂಪ ಭೇದಕ್ಕೆ ಉಪಾಸಕರ ಭೇದವೇ ಕಾರಣ. ಯಾಜ್ಞವಲ್ಕ್ಯನು ಅಲ್ಲಿದ್ದ ಬ್ರಾಹ್ಮಣರನ್ನು ಹೀಗೆ ಪ್ರಶ್ನಿಸಿದನು. ಒಂದು ವೃಕ್ಷವನ್ನು ಬೇರುಸಹಿತ ಕಿತ್ತು ಹಾಕಿದರೆ ಅದು ಪುನಃ ಹುಟ್ಟುವುದಿಲ್ಲ. ಮನುಷ್ಯನು ಮೃತ್ಯುವಿನಿಂದ ಕತ್ತರಿಸಲ್ಪಟ್ಟಮೇಲೆ ಯಾವ ಬೇರಿನಿಂದ ಹುಟ್ಟುತ್ತಾನೆ.?ಕಮ೯ವೊಂದೇ ಮನುಷ್ಯನ ಪುನಜ೯ನ್ಮಕ್ಕೆ ಕಾರಣ ಎಂದು ತೀಮಾ೯ನಿಸುತ್ತಾರೆ.4 ಮೃತನಾದವನು ಯಾವುದರಿಂದ ಹುಟ್ಟುತ್ತಾನೆಯೋ ಆ ಜಗನ್ಮೂಲವು ಬ್ರಾಹ್ಮಣರಿಗೆ ತಿಳಿದಿರಲಿಲ್ಲ. ಯಾಜ್ಞವಲ್ಕ್ಯನೇ ಬ್ರಾಹ್ಮಣನೆಂದೂ ಇತರರೆಲ್ಲ ಸೋತರೆಂದೂ ತಿಳಿದು ಬರುತ್ತದೆ. ವಿಜ್ಞಾನವೂ ಆನಂದವೂ ಆದ ಮೂಲದಿಂದಲೇ ಮೃತನಾದ ಮನುಷ್ಯನು ಹುಟ್ಟುತ್ತಾನೆ.
ನಾಲ್ಕನೆಯ ಅಧ್ಯಾಯದಲ್ಲಿ ಆರು ಬ್ರಾಹ್ಮಣಗಳಿವೆ. ಮೊದಲನೆಯ ಬ್ರಾಹ್ಮಣದಲ್ಲಿ ಜನಕ ವೈದೇಹನು ಸಭೆಯಲ್ಲಿ ಕುಳಿತಿರುವಾಗ ಯಾಜ್ಞವಲ್ಕ್ಯನು ಬಂದು ಹಲವು ಪ್ರಶ್ನೆಗಳನ್ನು ಹಾಕುತ್ತಾನೆ.ಈ ಪ್ರಶ್ನೆಗಳಿಗೆ ಉತ್ತರವಾಗಿ ಜನಕನು ಹಿಂದೆ ಆರುಜನ ಆಚಾಯ೯ರಿಂದ ಅರಿತುಕೊಂಡ ಬ್ರಹ್ಮದ ಕೆಲವು ಲಕ್ಷಣಗಳನ್ನು ಹೇಳುತ್ತಾನೆ.ವಾಕ್ಕು, ಪ್ರಾಣ,ಮನಸ್ಸು,ಬುದ್ಧಿ,ಇವುಗಳ ಅಧಿಷ್ಠಾತೃ ದೇವತೆಗಳಾದ ಅಗ್ನಿ, ವಾಯು. ಆದಿತ್ಯ, ದಿಗ್ದೇವತೆ, ಚಂದ್ರ, ಪ್ರಜಾಪತಿ(ಹಿರಣ್ಯಗಭ೯) ಇವರನ್ನು ಒಬ್ಬೊಬ್ಬರನ್ನಾಗಿ ಬ್ರಹ್ಮವೆಂದು ಹೇಳುತ್ತಾನೆ.ಈ ಬ್ರಹ್ಮಗಳಿಗೆಲ್ಲ ಒಂದೇ ಕಾಲಿದೆ ಎಂದು ಯಾಜ್ಞವಲ್ಕ್ಯನು ತಿಳಿಸುತ್ತಾನೆ.
ಎರಡನೆಯ ಬ್ರಾಹ್ಮಣದಲ್ಲಿ ಅವಸ್ಠಾತ್ರಯ ವಿವೇಚನೆ ಮಾಡಲಾಗಿದೆ.
ಜಾಗ್ರತ_ವಿಶ್ವ_ _ಅಕಾರ
ಸ್ವಪ್ನ_ತೈಜಸ__ಉಕಾರ
ಸುಷುಪ್ತಿ_ಪ್ರಾಜ್ಞ__ಮಕಾರ
ಸವಾ೯ತ್ಮನಾದ ಪ್ರಾಜ್ಞನಲ್ಲಿ ಎಲ್ಲವನ್ನೂಲಯಗೊಳಿಸಿದ ಮೇಲೆ ಯಾವ ವಿಶೇಷವೂ ಉಳಿಯುವುದಿಲ್ಲ.ಇವನು ಅಗೃಹ್ಯನು,ಅಕ್ಷಯನು,ಅಸಂಗನು ಮತ್ತು ಬಂಧರಹಿತನು.
ಮೂರನೆಯ ಬ್ರಾಹ್ಮಣವು ಜ್ಯೋತಿ ಬ್ರಾಹ್ಮಣ.ಇದು ಅತ್ಯಂತ ದೊಡ್ಡದಾಗಿದೆ.ಸುರೇಶ್ವರಾಚಾಯ೯ರು ಇದರ ಮೇಲೆ 1೯75 ಶ್ಲೋಕಗಳನ್ನು ತಮ್ಮ ವಾತಿ೯ಕದಲ್ಲಿ ಬರೆದಿರುತ್ತಾರೆ.ಶರೀರೇಂದ್ರಿಯಗಳಿಂದ ಕೂಡಿದ ಮನುಷ್ಯನಿಗೆ ಜ್ಯೋತಿ ಯಾವುದೆಂದು ಜನಕನು ಯಾಜ್ಞವಲ್ಕ್ಯನನ್ನು ಪ್ರಶ್ನಿಸುತ್ತಾನೆ.ಆಗ ಯಾಜ್ಷವಲ್ಕ್ಯನು ಆದಿತ್ಯ, ಚಂದ್ರ, ಅಗ್ನಿ, ವಾಕ್ಕು,ಆತ್ಮ ಇವೇ ಜ್ಯೋೀತಿಗಳೆಂದು ಹೇಳುತ್ತಾನೆ. ಸತ್ವಗುಣವುಳ್ಳ ಬುದ್ಧಿಯು ಆತ್ಮನಿಗೆ ಅತ್ಯಂತ ಸಮೀಪದಲ್ಲಿರುವುದರಿಂದ ಆತ್ಮಚೈತನ್ಯವನ್ನು ಪ್ರತಿಬಿಂಬಿಸುತ್ತದೆ.ಜಡವಾಗಿರುವ ಬುದ್ಧಿಯು ಆತ್ಮನಿಂದ ಪ್ರಕಾಶಿಸುವಂತೆ ತೋರುತ್ತದೆ.ಪರಮಾಥ೯ತಃ ಆತ್ಮನು ಸ್ವಯಂಜ್ಯೋತಿಯು.ಇವನ ಜ್ಯೋತಿಯಿಂದಲೇ ಸೂಯ೯ ಚಂದ್ರರು ಪ್ರಕಾಶಿಸುತ್ತಾರೆ5.
ಸ್ವಪ್ನದಲ್ಲಿ ಆತ್ಮನು ತನ್ನ ಶರೀರವನ್ನು ಅಚೇತನಗೊಳಿಸಿ ಜಾಗ್ರತ ಅವಸ್ಥೆಯ ವಾಸನೆಗಳಿಂದ ಸ್ವಪ್ನ ಶರೀರವನ್ನು ನಿಮಿ೯ಸಿ ಕೊಳ್ಳುತ್ತಾನೆ.ಸಾಮಾನ್ಯವಾಗಿ ಸ್ವಪ್ನವು ಒಂದು ಹೊಸ ಅನುಭವವಲ್ಲ.ಅದು ಜಾಗ್ರತ ಅವಸ್ಥೆಯ ಅನುಭವವನ್ನು ಅವಲಂಬಿಸಿರುತ್ತದೆ.ಸ್ವಪ್ನದಲ್ಲಿ ನೋಡುವ ವಿಷಯಗಳೆಲ್ಲ ಅಲ್ಲೇ ನಿಮಿ೯ತವಾದವು. ಸ್ವಪ್ನದಲ್ಲಿ ಆತ್ಮನು ಪುಣ್ಯ ಪಾಪಗಳ ಫಲವನ್ನು ಸುಮ್ಮನೆ ನೋಡುತ್ತಾನೆಯೇ ಹೊರತು ಸಾಕ್ಷಾತ್ತಾಗಿ ಅನುಭವಿಸುವುದಿಲ್ಲ.ಏಕೆಂದರೆ ಅವನು ಅಸಂಗನು.ಸುಷುಪ್ತಿಯಲ್ಲಿಪೂಣ೯ವಾಗಿ ಪ್ರಸನ್ನನಾಗಿರುತ್ತಾನೆ. ಆದುದರಿಂದ ಸುಷುಪ್ತಿಗೆ 'ಸಂಪ್ರಸಾದ'ವೆಂದು ಹೆಸರು. ಈ ಅವಸ್ಥೆಯಲ್ಲಿ ಎಲ್ಲಾ ಶೋಕಗಳನ್ನು ದಾಟಿರುತ್ತಾನೆ.ಎಂದು ಹೇಳಿದೆ.ಸುಷುಪ್ತಿಯಲ್ಲಿ ಅನುಭವಿಸಲ್ಪಟ್ಟ ಆನಂದವು ಮನುಷ್ಯರು, ಪಿತೃಗಳ, ಗಂಧವ೯ರ, ಕಮ೯ದೇವತೆಗಳ,ಅಜಾನದೇವತೆಗಳ,ಅಥವಾ ಹಿರಣ್ಯಗಭ೯ನ,ಆನಂದಗಳಿಗಿಂತ ಅತಿಶಯವಾಗಿರುತ್ತದೆ. ಇದೇ ಪರಮಾನಂದ,ಬ್ರಾಹ್ಮೀಸ್ಥಿತಿ.ಸುಷುಪ್ತಿಯಲ್ಲಿ ಅರಿವು ಇರುವುದಿಲ್ಲ.ಆಗ ಬುದ್ಧಿಯು ತನ್ನ ಕಾರಣಾವಸ್ಥೆಯಲ್ಲಿ(ಎಂದರೆ ಅವಿದ್ಯೆಯಲ್ಲಿ ) ಇರುತ್ತದೆ. 'ನನಗೇನೂ ತಿಳಿಯಲಿಲ್ಲ'ಎಂಬ ಎಚ್ಚರಗೊಂಡವನ ನೆನಪಿನಿಂದ ಇದು ಸಿದ್ಧವಾಗಿದೆ. ಜೀವನು ದೇಹಾಂತರ ಹೊಂದುವುದನ್ನು ಈ ಬ್ರಾಹ್ಮಣವು ಹೇಳುತ್ತದೆ.
ನಾಲ್ಕನೆಯದು ಶಾರೀರಕ ಬ್ರಾಹ್ಮಣ.ಮುಂದಿನ ಜನ್ಮದ ವಾಸನೆಗಳನ್ನು ಅರಿತುಕೊಂಡು ಜೀವನ ಯಾವುದಾದರೊಂದು ಅಂಗದ ಮೂಲಕ ನಿಷ್ಕ್ರಮಿಸುತ್ತಾನೆ. ಉಪಾಸನೆ,ಕಮ೯ ಮತ್ತು ಹಿಂದಿನ ಕಮ೯ ಪಲಾನುಭವದ ವಾಸನೆ ಇವು ಇವನನ್ನು ಅನುಸರಿಸುತ್ತವೆ. ಅಕಾಮಿಯೂ, ನಿಷ್ಕಾಮಿಯೂ, _ಅಪ್ತಕಾಮಿಯೂ _ಆತ್ಮಕಾಮಿಯೂ ಆದವನ ಇಂದ್ರಿಯಗಳು ಉತ್ಕ್ರಮಿಸುವುದಿಲ್ಲ. ಬ್ರಹ್ಮವೇ ಆಗಿ ಬ್ರಹ್ಮದಲ್ಲಿ ಲೀನವಾಗುತ್ತಾನೆ.ಸಂಸಾರದಲ್ಲಿರುವಾಗಲೇ ಬ್ರಹ್ಮವನ್ನು ಅರಿತುಕೊಳ್ಳಬೇಕು.ಇಲ್ಲದಿದ್ದರೆ ಬಹಳ ನಷ್ಟವಾಗುತ್ತದೆ. ಬ್ರಹ್ಮದಲ್ಲಿ ಸ್ವಲ್ಪವೂ ನಾನಾತ್ವವಿಲ್ಲ.ಅದರಲ್ಲಿ ನಾನಾತ್ವವನ್ನು ನೋಡುವವನು ಮೃತ್ಯುವಿನಿಂದ ಮೃತ್ಯುವಿಗೆ ಹೋಗುತ್ತಾನೆ. ಸಾಧಕನಾದವನು ಆತ್ಮತತ್ವವನ್ನು ತಿಳಿಸದ ಶಬ್ದಗಳನ್ನು ಚಿಂತಿಸ ಕೂಡದು.'ಬೇರೆ ಮಾತುಗಳನ್ನು ಬಿಡಿರಿ'ಎಂದು ಶೃತಿಯು ಹೇಳುತ್ತದೆ.ಆತ್ಮನು ಶಾಸ್ತ್ರವಿಹಿತವಾದ ಕಮ೯ದಿಂದ ವೃದ್ಧಿಸುವುದಿಲ್ಲ.ಇವನನ್ನೇ ಅರಿತುಕೊಂಡು ಮನುಷ್ಯನು ಮುನಿಯಾಗುತ್ತಾನೆ.
ಈ ಆತ್ಮಲೋಕವನ್ನೇ ಬಯಸುತ್ತ ಮನುಷ್ಯ_ಪಿತೃ_ದೇವಲೋಕವನ್ನು ಬಯಸದೆ ಮುಮುಕ್ಷುಗಳು ಪ್ರವ್ರಜನ ಮಾಡುತ್ತಾರೆ. ಆತ್ಮ ಹೀಗೆ ಎಂದು ಹೇಳಲಾಗುವುದಿಲ್ಲ."ಹೀಗಲ್ಲ ಹೀಗಲ್ಲ" ಎಂದೇ ಹೇಳಬೇಕು. ಅವನು ಅವ್ಯಯನು,ಅಸ್ಪøಹ್ಯನು,ಅಕ್ಷಯನು ಮತ್ತು ಅಸಂಗನು.ಇವನು ಪಾಪರಹಿತನೂ, ವಿರಜನೂ,ಸಂಶಯ ರಹಿತನೂ,ಆಗಿ ಅಭಯವಾದ ಬ್ರಹ್ಮವೇ ಆಗುತ್ತಾನೆ.
ಎರಡನೆಯ ಬ್ರಾಹ್ಮಣದಲ್ಲಿಮಧು ಹಾಗೂ ಮುನಿಕಾಂಡಗಳಲ್ಲಿ ಆಗಮ ಯುಕ್ತಿಗಳಿಂದ ಪ್ರತಿಪಾದಿತವಾದ ಬ್ರಹ್ಮತತ್ವವನ್ನು ಉಪಸಂಹಾರ ಮಾಡಿರುತ್ತದೆ.ಎರಡನೇ ಅಧ್ಯಾಯದ ನಾಲ್ಕನೆಯ ಬ್ರಾಹ್ಮಣವೇ (ಮೈತ್ರೇಯ) ಇಲ್ಲಿ ಮತ್ತೊಮ್ಮೆ ಬಂದಿದೆ.
ಕೊನೆಯದಾದ ಖಿಲಕಾಂಡವು ಐದನೆಯ ಮತ್ತು ಆರನೆಯ ಅಧ್ಯಾಯವನ್ನೊಳಗೊಂಡಿದೆ.'ಖಿಲ" ಎಂದರೆ ಪರಿಶಿಷ್ಟ ಅಥವಾ ಅನುಬಂಧ. ನಿರುಪಾಧಿಕ ಬ್ರಹ್ಮವನ್ನು ಹಿಂದಿನ ನಾಲ್ಕು ಅಧ್ಯಾಯಗಳಲ್ಲಿ ನಿರೂಪಿಸಲಾಗಿದೆ. ಈಗ ಸೋಪಾಧಿಕವೂ ಶಬ್ದಾಥ೯ ವ್ಯವಹಾರಕ್ಕೆ ವಿಷಯವೂ ಅದೇ ಬ್ರಹ್ಮದ ಕೆಲವು ಉಪಾಸನೆಗಳನ್ನು ತಿಳಿಸಲು ಐದನೆಯ ಅಧ್ಯಾಯವು ಬಂದಿದೆ.ಈ ಉಪಾಸನೆಗಳು ಕಮ೯ಗಳಿಗೆ ಅವಿರುದ್ಧವಾಗಿಯೂ, ಅಭ್ಯುದಯಕ್ಕೆ ಸಾಧನಗಳಾಗಿಯೂ, ಕ್ರಮಮುಕ್ತಿಗೆ ಕಾರಣಗಳಾಗಿಯೂ ಇವೆ. ಮೊದಲನೆಯ ಬ್ರಾಹ್ಮಣವು ಪ್ರಸಿದ್ಧವಾದ ಶಾಂತಿ ಪಾಠದಿಂದ ಆರಂಭವಾಗುತ್ತದೆ.ಪೂಣ೯ವಾದ ಜಗತ್ತು ಪೂಣ೯ವಾದ ಬ್ರಹ್ಮದಿಂದ ಹೊರಬಂದಿದೆ.ಬ್ರಹ್ಮವೇ ಜಗತ್ತೆಂದು ಗ್ರಹಿಸಿದ ಮೇಲೆ ಬ್ರಹ್ಮವೊಂದೇ ಉಳಿಯುತ್ತದೆ.ಜಗತ್ತು ಬ್ರಹ್ಮದಿಂದ ಹೊರಬಂದರೂ ಬ್ರಹ್ಮದಲ್ಲಿ ಯಾವ ಪರಿಣಾಮವೂ ಉಂಟಾಗುವುದಿಲ್ಲ. ಓಂಕಾರವು ಬ್ರಹ್ಮಕ್ಕೆ ನಿಕಟವತಿ೯ಯಾದ ಹೆಸರು. ಆ ಬ್ರಹ್ಮಪ್ರಾಪ್ತಿಗೆ ಇದು ಶ್ರೇಷ್ಠವಾದ ಸಾಧನವಾಗಿರುತ್ತದೆ. ಓಂಕಾರವು ¨್ರಹ್ಮದ ಪತೀಕವೂ ನಾಮವೂ ಆಗಿದೆ. 'ಓಂ'ಎಂದು ಆತ್ಮನನ್ನು ಧ್ಯಾನಿಸಬೇಕೆಂದು ಮುಂಡಕ ಶ್ರುತಿಯು ಹೇಳುತ್ತದೆ.
ಎರಡನೆಯ ಬ್ರಾಹ್ಮಣದಲ್ಲಿಧಮ೯,ದಾನ, ದಯೆ ಇವುಗಳನ್ನು ಉಪಾಸನೆಗೆ ಅಂಗವಾಗಿ ಹೇಳಿದೆ.ಮೂರನೆಯ ಬ್ರಾಹ್ಮಣವು ಹೃದಯದಲ್ಲಿರುವ ಬುದ್ಧಿಯನ್ನು ಸ್ತುತಿಸುತ್ತದ.ಬುದ್ಧಿಯು ನಾಮ,ರೂಪ,ಕಮ೯ಗಳ ಪ್ರತಿಷ್ಠೆಯೆಂದು ಸವ೯ಪ್ರಾಣಿಗಳ ಆತ್ಮವೆಂದು ಹೇಳಲ್ಪಟ್ಟಿದೆ.ನಾಲ್ಕನೆಯ ಬ್ರಾಹ್ಮಣವು ಹೃದಯ ಬ್ರಹ್ಮವು ಸತ್ಯವು ಎಂಬ ಉಪಾಸನೆಯನ್ನು ವಿಧಿಸುತ್ತದೆ.
ಐದನೆಯ ಬ್ರಾಹ್ಮಣವು ಸತ್ಯ ಬ್ರಹ್ಮವನ್ನು ಸ್ತುತಿಸುತ್ತದೆ ಮತ್ತು ಅದರ ಶರೀರ ಭಾಗಗಳಲ್ಲಿ ಉಪಾಸನೆಯನ್ನು ಹೇಳುತ್ತದೆ
ಆರನೆಯ ಬ್ರಾಹ್ಮಣವು ಬ್ರಹ್ಮಕ್ಕೆ ಅನೇಕ ವಿಶೇಷಣಗಳೂ ಇರುವುದರಿಂದ ಅದು ಮನಸ್ಸೆಂಬ ಉಪಾಧಿಯಿಂದ ವಿಶಿಷ್ಟವಾಗಿರುವಂತೆ ಉಪಾಸನೆಯನ್ನು ವಿಧಿಸುತ್ತದೆ.ಮೃತ್ಯು,ವಾಗ್ಧೇನು,ಜಾಠರಾಗ್ನಿ ಇವೆಲ್ಲ ಬ್ರಹ್ಮವು ಎಂಬ ಉಪಾಸನೆಗಳನ್ನು ವಿಧಿಸುವುದಕ್ಕೆಏಳು,ಎಂಟು,ಒಂಬತ್ತನೆಯ ಬ್ರಾಹ್ಮಣಗಳು ಬಂದಿವೆ.ಹಿಂದೆ ವಿವರಿಸಿದ ಉಪಾಸನೆಗಳನ್ನು ಅರಿತುಕೊಂಡವನು ಹೋಗುವ ದಾರಿಯನ್ನು ಮತ್ತು ಹೊಂದುವ ಫಲವನ್ನು ಹತ್ತನೆಯ ಬ್ರಾಹ್ಮಣದಲ್ಲಿ ಹೇಳಿದೆ.ಇವರು ಬ್ರಹ್ಮಲೋಕದಲ್ಲಿ ಪ್ರಜಾಪತಿಯ ಜೀವಮಾನದವರೆಗೂ ಇರುತ್ತಾರೆ.
ಜ್ವರವೇ ಮೊದಲಾದವನ್ನು ಅಥವಾ ತನ್ನ ಶರೀರವನ್ನು ದಹನ ಕ್ರಿಯೆಗಾಗಿ ಒಯ್ಯುವುದನ್ನು ಮನುಷ್ಯನು ತಪಸ್ಸೆಂದು ಭಾವಿಸಬೇಕು ಎಂದು ಹನ್ನೊಂದನೆಯ ಬ್ರಾಹ್ಮಣವು ಉಪದೇಶಿಸುತ್ತದೆ. ಪ್ರಾಣಗಳನ್ನು ಬ್ರಹ್ಮವೆಂದು ಉಪಾಸಿಸಬೇಕೆಂದು ಹನ್ನೆರಡನೆಯ ಬ್ರಾಹ್ಮಣದಲ್ಲಿ ಹೇಳಿದೆ. ಪ್ರಾಣವನ್ನು ಉಕ್ಥ, ಯಜಸ್ಸು, ಸಾಮ, ಕ್ಷತ್ರ ಎಂದು ಉಪಾಸಿಸಬೇಕೆಂದು ಹದಿಮೂರನೆಯ ಬ್ರಾಹ್ಮಣವು ತಿಳಿಸುತ್ತದೆ.
ಬ್ರಹ್ಮವು ಗಾಯತ್ರಿ ಎಂಬ ಉಪಾಧಿಯಿಂದ ವಿಶಿಷ್ಟವಾಗುವಂತೆ ಉಪಾಸನೆಯನ್ನು ವಿಧಿಸಲು ಹದಿನಾಲ್ಕನೆಯ ಬ್ರಾಹ್ಮಣವು ಬಂದಿದೆ.ಗಾಯತ್ರಿಗೆ ನಾಲ್ಕು ಪಾದಗಳು.
1)ಭೂಮಿ,ಅಂತರಿಕ್ಷ,ದ್ಯುಲೋಕಗಳು _ಮೊದಲನೇ ಪಾದ
2)ಋಕ್,ಯಜುಸ್ಸು,ಸಾಮ_ಎರಡನೇ ಪಾದ
3)ಪ್ರಾಣಾಪಾನ,ವ್ಯಾನಗಳು _ಮೂರನೆಯಪಾದ
ಈ ಮೂರು ಪಾದಗಳು ದೃಶ್ಯವಾಗಿವೆ.
ಗಾಯತ್ರಿಯ ತುರೀಯವಾದ ಕಾಣುವಂತಿರುವ ರಜೋತೀತವಾದ ಪಾದವೇ ಆದಿತ್ಯನು.ಕೊನೆಯದಾದ ಹದಿನೈದನೆಯ ಬ್ರಾಹ್ಮಣವು ಜ್ಞಾನ ಕಮ೯ ಸಮುಚ್ಛಯವನ್ನು ಮಾಡಿರುವವನು ಮರಣ ಕಾಲದಲ್ಲಿ ಆದಿತ್ಯನಿಗೆ ಮಾಡುವ ಪ್ರಾಥ೯ನೆಯಿದೆ.
ಆರನೆಯ ಅಧ್ಯಾಯದಲ್ಲಿ ಐದು ಬ್ರಾಹ್ಮಣಗಳಿವೆ.ಮೊದಲನೆಯ ಬ್ರಾಹ್ಮಣದಲ್ಲಿ ಪ್ರಾಣವೇ ಜ್ಯೇಷ್ಠವು ಮತ್ತು ಶ್ರೇಷ್ಠವು ಎಂಬುದನ್ನು ರೂಪಕದ ಮೂಲಕ ಹೇಳಿದೆ.ಒಮ್ಮೆ ವಾಗಾದಿ ಕರಣಗಳು ತಮ್ಮ ಪ್ರಾಧಾನ್ಯವನ್ನು ಸ್ಥಾಪಿಸಲು ಕಲಹ ಮಾಡುತ್ತಾ ಬ್ರಹ್ಮನ ಬಳಿಗೆ ಹೋಗಿ "ನಮ್ಮಲ್ಲಿ ಶ್ರೇಷ್ಠವು ಯಾವುದು?"ಎಂದು ಪ್ರಶ್ನಿಸಿದವು.ನಿಮ್ಮಲ್ಲಿ ಯಾರು ಉತ್ಕ್ರಮಿಸಿದರೆ ಈ ಶರೀರವು ಎಂದು ಜನರು ಎಣಿಸುತ್ತಾರೆಯೋ ಅದೇ ನಿಮ್ಮಲ್ಲಿ ಶ್ರೇಷ್ಠವು ಎಂದು ಬ್ರಹ್ಮನು ಹೇಳಿದನು.ಆಗ ವಾಕ್ಕೇ ಮೊದಲಾದ ಇಂದ್ರಿಯಗಳು ತಮ್ಮ ಶ್ರೇಷ್ಠತ್ವವನ್ನು ಸ್ಥಾಪಿಸಲು ಶರೀರದಿಂದ ಒಂದೊಂದಾಗಿ ಹೊರಟವು.ಆದರೆ ಶರೀರವು ಮೊದಲಿಗಿಂತ ಹೆಚ್ಚಾಗಿ ಕೆಡಲಿಲ್ಲ.ಕೊನೆಗೆ ಮುಖ್ಯ ಪ್ರಾಣವು ಉತ್ಕ್ರಮಿಸಲು ಸಿದ್ಧವಾದಾಗ ಇಂದ್ರಿಯಗಳೆಲ್ಲ ತಮ್ಮ ತಮ್ಮ ಸ್ಥಾನದಿಂದ ಕಿತ್ತುಹಾಕಲ್ಪಟ್ಟವು. ಆಗ ಇಂದ್ರಿಯಗಳು ಪ್ರಾಣವನ್ನು ಶರೀರದಿಂದ ಉತ್ಕ್ರಮಿಸಕೂಡದೆಂದು ಬೇಡಿಕೊಂಡು ಅದಕ್ಕೆ ಕಾಣಿಕೆಯನ್ನು ಒಪ್ಪಿಸಿದವು.
ಎರಡನೆಯ ಬ್ರಾಹ್ಮಣದಲ್ಲಿ ಪಂಚಾಗ್ನಿವಿದ್ಯೆಯನ್ನು ಸಂಸಾರ ಗತಿಗಳನ್ನೂ ಹೇಳಿದೆ.ಉತ್ತರ ಮಾಗ೯ದಲ್ಲಿ (ಅಚಿ೯ರಾದಿ ಮಾಗ೯ಗಳಲ್ಲಿ)ಹೋಗಲು ಸಾಧನವಾದ ಪಂಚಾಗ್ನಿವಿದ್ಯೆಯನ್ನು ಉಪದೇಶಿಸಲು ಈ ಆಖ್ಯಾಯಿಕೆಯು ಬಂದಿದೆ.ಶ್ವೇತಕೇತುವು ತನ್ನ ಪಾಂಡಿತ್ಯವನ್ನು ಪ್ರದಶಿ೯ಸಲು ಪ್ರವಾಹಣ ರಾಜನ ಸಭೆಗೆ ಹೋಗುತ್ತಾನೆ.ರಾಜನು ಇವನಿಗೆ ಐದು ಪ್ರಶ್ನೆಗಳನ್ನು ಹಾಕುತ್ತಾನೆ.
1)ಮೃತರಾದ ಮೇಲೆ ಮನುಷ್ಯರು ಬೇರೆ ಬೇರೆ ಮಾಗ೯ಗಳಲ್ಲಿ ಹೇಗೆ ಹೋಗುತ್ತಾರೆ.
2)ಅವರು ಈ ಲೋಕಕ್ಕೆ ಹೇಗೆ ಹಿಂದಿರುಗುವರು.
3)ಇಲ್ಲಿ ಬಹುಜನರು ಪುನಃ ಪುನಃ ಸಾಯುತ್ತಿದ್ದರೂ ಪರಲೋಕವು ಏಕೆ ಪೂಣ೯ವಾಗುವುದಿಲ್ಲ.
4)ಎಷ್ಟನೆಯ ಆಹುತಿಯಲ್ಲಿ ಹೋಮ ಮಾಡಿದ ಮೇಲೆ ನೀರು ಪುರುಷ ವಾಕ್ಕಾಗಿ ಎದ್ದು ನಿಲ್ಲುತ್ತದೆ.
5)ದೇವಯಾನ_ ಪಿತೃಯಾನ ಗಳನ್ನು ಹೇಗೆ ಪಡೆಯಬಹುದು?
ಶ್ವೇತಕೇತುವಿಗೆ ಒಂದು ಪ್ರಶ್ನೆಗೂ ಉತ್ತರಗೊತ್ತಿರಲಿಲ್ಲ. ಆಗ ರಾಜನು ಶ್ವೇತಕೇತುವನ್ನು ಅಲ್ಲಿ ವಾಸಮಾಡಲು ಆಹ್ವಾನಿಸಿದನು.ಆದರೆ ಶ್ವೇತಕೇತುವು ಅದಕ್ಕೊಪ್ಪದೆ ತನ್ನ ತಂದೆಯಾದ ಗೌತಮನು ಇದ್ದಲ್ಲಿಗೆ ಬಂದು ರಾಜನು ಪ್ರಶ್ನಿಸಿದ ವಿಷಯಗಳನ್ನೆಲ್ಲ ತನಗೇಕೆ ಹೇಳಿಕೊಡಲಿಲ್ಲವೆಂದು ತಂದೆಯನ್ನು ಆಕ್ಷೇಪಿಸಿದನು.ನನಗೂ ಕೂಡ ಇದು ತಿಳಿದಿರಲಿಲ್ಲವೆಂದು ಗೌತಮನು ಹೇಳಿದನು. ಗೌತಮನೊಬ್ಬನೇ ಹೋಗಿ ಈ ವಿದ್ಯೆಯನ್ನು ಉಪದೇಶಿಸಬೇಕೆಂದು ರಾಜನನ್ನು ಕೇಳಿಕೊಂಡನು. ರಾಜನು ಗೌತಮನ ವಿನಯವನ್ನು ಮೆಚ್ಚಿ ಪಂಚಾಗ್ನಿ ವಿದ್ಯೆಯನ್ನು ಉಪದೇಶಿಸಿದನು.ದ್ಯುಲೋಕ, ಪಜ೯ನ್ಯ, ಈ ಲೋಕ. ಪುರುಷ ಮತ್ತು ಸ್ತ್ರೀ.ವಿದ್ಯೆಯನ್ನು ಅರಿತುಕೊಂಡು ಗೃಹಸ್ಥರೂ, ಶ್ರದ್ಧೆಯಿಂದ ಹಿರಣ್ಯಗಭ೯ನನ್ನು ಉಪಾಸಿಸುವ ವಾನಪ್ರಸ್ಥರೂ ಮತ್ತು ಪರಿವ್ರಾಜಕರೂ ಬ್ರಹ್ಮಲೋಕಕ್ಕೆ ಹೋಗುತ್ತಾರೆ. ಅವರಿಗೆ ಪುನರಾವೃತ್ತಿಯಿಲ್ಲ. ಇದು ದೇವಯಾನ ಅಥವಾ ಉತ್ತರಮಾಗ೯. ಆದರೆ ಯಜ್ಞ, ದಾನ,ತಪಸ್ಸುಗಳನ್ನು ಮಾಡುವವರು ಪಿತೃಯಾನದ ಮೂಲಕ ಚಂದ್ರನನ್ನು ಸೇರುತ್ತಾರೆ. ಇವರು ಉತ್ತರಮಾಗ೯ಕ್ಕೆ ಹೋಗುವವರೆಗೆ ಅಥವಾ ಸದ್ಯೋ ಮುಕ್ತಿಯನ್ನು ಹೊಂದುವವರೆಗೆ ಸಂಸಾರದಲ್ಲಿ ಚಕ್ರದಂತೆ ತಿರುಗುತ್ತಾರೆ. ಈ ಎರಡೂ ಮಾಗ೯ಗಳನ್ನು ಅರಿಯದವರು ಕೀಟ,ಪತಂಗಗಳಾಗಿ ಹುಟ್ಟುತ್ತಾರೆ.
ಮೂರನೆಯ ಬ್ರಾಹ್ಮಣವು ಶ್ರೀಮಂಥ ಕಮ೯ವನ್ನು ಹೇಳುತ್ತದೆ. ಹಿಂದೆ ಉಪದೇಶಿಸಿರುವ ಪ್ರಾಣೋಪಾಸನೆಯನ್ನು ಬಲ್ಲವರಿಗೆ ಮಾತ್ರ ಇದರಲ್ಲಿ ಅಧಿಕಾರ.ನಾಲ್ಕನೆಯ ಬ್ರಾಹ್ಮಣದಲ್ಲಿ ಪುತ್ರಮಂಥ ಕಮ೯ವನ್ನು ಹೇಳಿದೆ.
ಐದನೆಯದಾದ ವಂಶ ಬ್ರಾಹ್ಮಣವು ಇಡೀ ಉಪನಿಷತ್ತಿನ ಆಚಾಯ೯ವಂಶವನ್ನು -ಹಿರಣ್ಯಗಭ೯ನಿಂದ ಹಿಡಿದು ಪೌತಿಮಾಷೀ ಪುತ್ರನವರೆಗೆ ವಿವರಿಸಿದೆ.
ಕೆಲವು ಮುಖ್ಯ ವಾಕ್ಯಗಳ ವಿವರಣೆ:
ಮೊದಲು ಈಜಗತ್ತು ಪುರುಷಾಕಾರನಾದ ಆತ್ಮನೇ ಆಗಿತ್ತು.ಅವನು ತನಗಿಂತ ಬೇರೆ ಯಾವುದನ್ನೂ ನೋಡಲಿಲ್ಲ.'ನಾನು ಅವನಾಗಿದ್ದೇನೆ'ಎಂದು ಮೊದಲು ಹೇಳಿದನು.ಆದ್ದರಿಂದ ಈಗಲೂ ಯಾರಾದರೂ ಕರದು ಮಾತನಾಡಿಸಿದಾಗ 'ನಾನು'ಎಂದು ಮೊದಲು ಹೇಳಿ ನಂತರ ಹೆಸರನ್ನು ಹೇಳುತ್ತೇವೆ.ಎರಡನೆಯದರಿಂದಲೂ ಭಯ ಉಂಟಾಗುತ್ತದೆ. ಬೇರೆ ಯಾರೂ ಇಲ್ಲದಿರುವಾಗ ಯಾರಿಂದ ತಾನೇ ಭಯ ಉಂಟಾದೀತು. ಇರುವುದೊಂದೇ ಎರಡಾಗಿ ಕಾಣುವುದು ಮಿಥ್ಯೆ. ಅದು ಇದ್ದಂತೆ ತೋರುತ್ತದೆ. ನಿಜವಾಗಿಯೂ ಇರುವುದಿಲ್ಲ. ಇದು ಮೊದಲು ಬ್ರಹ್ಮವೊಂದೇ ಆಗಿತ್ತು.ಅದು ಒಂದೇ ಆದ್ದರಿಂದ ಕಮ೯ವನ್ನು ಮಾಡಲು ಸಮಥ೯ವಾಗಲಿಲ್ಲ. ಅದು ಕ್ಷತ್ರಿಯನನ್ನು ಸೃಷ್ಟಿಸಿತು.
ಈ ಜಗತ್ತೆಲ್ಲಾ ನಾಮ,ರೂಪ,ಕಮ೯ಗಳೆಂದು ಮೂರೇ ಆಗಿದೆ.ಈ ನಾಮಗಳಿಗೆ ವಾಕ್ಕು ಕಾರಣವು.ಏಕೆಂದರ ಎಲ್ಲಾ ನಾಮಗಳೂ ಅದರಿಂದ ಉತ್ಪನ್ನವಾಗಿವೆ ಹಾಗೂ ವಾಕ್ಕು ಎಲ್ಲಾ ನಾಮಗಳಿಗೂ ಸಾಮಾನ್ಯವಾಗಿದೆ . ಈ ಆತ್ಮನಿಂದ ಎಲ್ಲಾ ಪ್ರಾಣಿಗಳೂ, ಎಲ್ಲಾ ಲೋಕಗಳೂ ಎಲ್ಲಾ ದೇವತೆಗಳೂ ಉಂಟಾಗುತ್ತವೆ.
ಧನದ ಮೂಲಕ ಅಮೃತತ್ವದ ಆಸೆ ಇಲ್ಲ.ಕೇವಲ ಧನದಿಂದಲೇ ಅಮೃತತ್ವವನ್ನು ಯಾರೂ ಪಡೆುiÀುಲಾರರು. ಉಪಕರಣವುಳ್ಳವರ ಜೀವಿತವು ಹೇಗೋ ಹಾಗೆಯೇ ನಮ್ಮಜೀವನವೂ ಆಗುವುದು. ಆತ್ಮನನ್ನೇ ನೋಡಬೇಕು, ಶ್ರವಣಮಾಡಬೇಕು.ಮನನ ಮಾಡಬೇಕು.ನಿದಿಧ್ಯಾಸನ ಮಾಡಬೇಕು. ಶ್ರವಣ, ಮನನ, ನಿದಿಧ್ಯಾಸನದಿಂದ ಇವೆಲ್ಲವೂ ತಿಳಿಯಲ್ಪಡುತ್ತವೆ. ಈ ಬ್ರಾಹ್ಮಣ,ಕ್ಷತ್ರಿಯ,ಈ ಲೋಕಗಳು, ಈದೇವತೆಗಳು, ಈ ಪ್ರಾಣಿಗಳು ಸವ೯ವೂ ಆತ್ಮನೆ.ಆತ್ಮನಿಗಿಂತ ಭಿನ್ನವಾದ ವಸ್ತುವು ಯಾವುದೂ ಇರುವುದಿಲ್ಲ. ಎಲ್ಲವೂ ಆತ್ಮನೆ. ಆತ್ಮನನ್ನು ಅರಿತುಕೊಂಡರೆ ಎಲ್ಲವನ್ನೂ ಅರಿತಂತಾಗುತ್ತದೆ.ಸಮುದ್ರವು ಎಲ್ಲಾ ನೀರುಗಳಿಗೂ ಏಕಮಾತ್ರಗತಿ.ಚಮ೯ವು ಎಲ್ಲಾ ಸ್ಪಶ೯ಗಳಿಗೆ, ಮೂಗು ಎಲ್ಲಾ ಗಂಧಗಳಿಗೆ, ನಾಲಗೆಯು ಎಲ್ಲಾ ರಸಗಳಿಗೆ, ಕಣ್ಣು ಎಲ್ಲಾ ರೂಪಗಳಿಗೆ,ಕಿವಿಯು ಎಲ್ಲಾ ಶಬ್ದಗಳಿಗೆ,ಮನಸ್ಸು ಎಲ್ಲಾ ವಿದ್ಯೆಗಳಿಗೆ,ಬುದ್ಧಿಯು ಎಲ್ಲಾ ವಿದ್ಯೆಗಳಿಗೂ ಏಕಮಾತ್ರ ಗತಿ. ಎಲ್ಲಾ ಕಮ೯ಗಳಿಗೂ ಕೈಗಳು,ಉಪಸ್ಥವು ಎಲ್ಲಾ ಆನಂದಗಳಿಗೂ,ಪಾಯುವು ಎಲ್ಲಾ ವಿಸಗ೯ಗಳಿಗೂ , ಪಾದಗಳು ಎಲ್ಲಾ ನಡೆಗಳಿಗೂ,ವಾಕ್ಕು ಎಲ್ಲಾ ವೇದಗಳಿಗೂ ಏಕಮಾತ್ರಗತಿ.
ಎಲ್ಲಿ ದ್ವೈತವಿರುವಂತೆ ತೋರುವುದೋ ಅಲ್ಲಿ ಒಬ್ಬನು ಇನ್ನೊಂದನ್ನು ನೋಡುತ್ತಾನೆ, ಕೇಳುತ್ತಾನೆ, ಮಾತನಾಡುತ್ತಾನೆ, ಯೋಚಿಸುತ್ತಾನೆ, ತಿಳಿದು ಕೊಳ್ಳುತ್ತಾನೆ. ಎಲ್ಲಿ ಇವನಿಗೆ ಎಲ್ಲವೂ ಆತ್ಮನೇ ಆಗಿರುವುದೊ ಅಲ್ಲಿ ಯಾವುದರಿಂದ ಯಾವುದನ್ನು ಮೂಸಿಯಾನು ಯಾವುದನ್ನು ನೋಡಿಯಾನು,ಕೇಳಿಯಾನು. ಮಾತಾಡಿಯಾನು,ಯೋಚಿಸಿಯಾನು ಅರಿತುಕೊಂಡಾನು?ಯಾವುದರಿಂದ ಇದೆಲ್ಲವನ್ನು ತಿಳಿದುಕೊಳ್ಳುತ್ತಾನೆಯೊ ಅವನನ್ನು ಯಾವುದರಿಂದ ತಿಳಿದುಕೊಂಡಾನು?ವಿಜ್ಞಾತೃವನ್ನು ಯಾವುದರಿಂದ ತಿಳಿದುಕೊಂಡಾನು?
ಈಪೃಥ್ವಿಯು ಎಲ್ಲಾ ಪ್ರಾಣಿಗಳಿಗೂ ಮಧು.ಎಲ್ಲಾಪ್ರಾಣಿಗಳೂ ಪೃಥ್ವಿಗೆ ಮಧು.ಈ ಪೃಥಿವ್ಯಾದಿ ಚತುಷ್ಟಯವು ಆ ಆತ್ಮನೇ.ಈ ಅಮೃತತ್ವವು ಆತ್ಮಜ್ಞಾನಕ್ಕೆ ಕಾರಣವು.
ಇದು ಬ್ರಹ್ಮ; ಇದು ಎಲ್ಲವೂ. ವಾಯ್ವಾದಿ ಚತುಷ್ಟಯ,ಆದಿತ್ಯಾದಿ ಚತುಷ್ಟಯ,ದಿಗಾದಿ ಚತುಷ್ಟಯ, ಚಂದ್ರಾದಿ ಷತುಷ್ಟಯ, ಮೇಘಗಳ ಘಜ೯ನಾದಿ ಚತುಷ್ಟಯ, ಆಕಾಶಾದಿ ಚತುಷ್ಟಯ,ಧಮಾ೯ದಿ ಚತುಷ್ಟಯ, ಸತ್ಯಾದಿ ಚತುಷ್ಟಯ, ಮನುಷ್ಯಾದಿ ಚತುಷ್ಟಯ,ಶರೀರಾದಿ ಚತುಷ್ಟಯ.
ಹೇಗೆ ಅರೆ ಕಾಲುಗಳು ಚಕ್ರದ ನಾಭಿಯಲ್ಲಿ ಮತ್ತು ಹೊರವಲಯದಲ್ಲಿ ನಿಲ್ಲಿಸಲ್ಪಟ್ಟಿವೆಯೊ, ಹಾಗೆಯೇ ಈ ಆತ್ಮನಲ್ಲಿ ಎಲ್ಲ ಪ್ರಾಣಿಗಳು ಎಲ್ಲದೇವತೆಗಳು ಎಲ್ಲ ಲೋಕಗಳು, ಎಲ್ಲ ಇಂದ್ರಿಯಗಳು, ಎಲ್ಲ ಜೀವಾತ್ಮರು ನಿಲ್ಲಿಸಲ್ಪಟ್ಟಿರುವರು.
ಮೂರನೆಯ ಅಧ್ಯಾಯದಲ್ಲಿ ಗ್ರಹ-ಅತಿಗ್ರಹಗಳ ಬಗ್ಗೆ ಹೇಳಿದೆ.ಅವು ಈ ರೀತಿ ಇವೆ.ಪ್ರಾಣ-ಅಪಾನ,
ವಾಕ್ಕು-ನಾಮ,ನಾಲಗೆ-ರಸ,ಚಕ್ಷು-ರೂಪ,ಶ್ರೋತೃ-ಶಬ್ದ,ಮನಸ್ಸು-ಬಯಕೆ,ಕೈಗಳು-ಕಮ೯,ಚಮ೯-ಸ್ಪಶ೯. ಗ್ರಹ -ಅತಿಗ್ರಹ ಲಕ್ಷಣವಾದ ಬಂಧನದಿಂದ ಬಿಡುಗಡೆಯನ್ನು ಹೊಂದಿದರೆ ಅಮೃತತ್ವವನ್ನು ಪಡೆಯಬಹುದು.
ಕಮ೯ಗಳು ಎಷ್ಟೇ ಒಳ್ಳೆಯವಾಗಿದ್ದರೂ ಸಂಸಾರದಲ್ಲಿಯೇ ಅಂತಗ೯ತವಾಗಿವೆ.ಉಪಾಸನಾ ಸಹಿತವಾದ ಕಮ೯ವು ಮೋಕ್ಷಪ್ರದವಲ್ಲ.ಆರನೆಯದಾದ 'ಅಂತಯಾ೯ಮೀ'ಬ್ರಾಹ್ಮಣದಲ್ಲಿ 'ಅಂತಯಾ೯ಮಿ' ಎಂದರೆ ಒಳಗಿದ್ದು ನಿಯಮಿಸುವವನು' ಎಂದು ಹೇಳಿದೆ. 'ಯಾವನು ಪೃಥ್ವಿಯಲ್ಲಿರುವವನಾಗಿ ಪೃಥ್ವಿಯ ಒಳಗಿರುವನೊ,ಯಾವನನ್ನು ಪೃಥ್ವಿಯು ತಿಳಿಯದೊ,ಯಾವನಿಗೆ ಪೃಥ್ವಿಯು ಶರೀರವೊ,ಯಾವನು ಒಳಗಿದ್ದುಕೊಂಡು ಪೃಥ್ವಿಯನ್ನು ನಿಯಮಿಸುವನೊ,ಅವನೇ ಅಂತಯಾ೯ಮಿಯು.ನಿನ್ನ ಅಮೃತನಾದ ಆತ್ಮನು.ಇದೇ ರೀತಿ ನೀರು,ಅಗ್ನಿ,ಅಂತರಿಕ್ಷ,ವಾಯು,ದ್ಯುಲೋಕ,ಆದಿತ್ಯ,ದಿಕ್ಕು,ಚಂದ್ರ,ನಕ್ಷತ್ರ, ಆಕಾಶ, ತಮಸ್ಸು ತೇಜಸ್ಸು, ಸವ೯ಪ್ರಾಣಿಗಳು, ಘ್ರಾಣ, ವಾಕ್ಕು, ಕಣ್ಣು, ಶ್ರೋತ್ರ, ಮನಸ್ಸು ಚಮ೯, ಬುದ್ಧಿ, ರೇತಸ್ಸು ಇವುಗಳಿಗೂ ಅನ್ವಯಿಸುತ್ತದೆ.
ನಾಲ್ಕನೆಯ ಅಧ್ಯಾಯದ ಮೂರನೆಯ ಬ್ರಾಹ್ಮಣದಲ್ಲಿ ಅವಸ್ಥಾತ್ರಯದ ಮೂಲಕ ತಕ೯ದಿಂದ ವಿಸ್ತಾರವಾಗಿ ಆತ್ಮಸ್ವರೂಪವನ್ನು ಉಪದೇಶಿಸಿದೆ."ಧ್ಯಾಯತೀವ ಲೀಲಾಯತೀವ"ಎಂದರೆ,ಆತ್ಮನು ಅಚಲನು.ಆದರೆ ಬುದ್ಧಿಯ ಚಲನೆಯಿಂದ ಆತ್ಮನು ಚಲಿಸುವಂತೆ ತೋರುತ್ತಾನೆ ಎಂದಥ೯.ವಿಜ್ಞಾನಮಯನೂ,ಇಂದ್ರಿಯಗಳ ಮಧ್ಯದಲ್ಲಿರುವವನೂ, ಬುದ್ಧಿಯಲ್ಲಿರುವ ಸ್ವಯಂಜ್ಯೋತಿಯು ಆದ ಈ ಪುರುಷನು ಅವನು ಬುದ್ಧಿಗೆ ಸಮಾನವಾದ ಆಕಾರವನ್ನು ಪಡೆದು ಇಹಲೋಕ ಪರಲೋಕಗಳ ಮಧ್ಯೆ ಸಂಚರಿಸುತ್ತಾನೆ,ಅವನು ಧ್ಯಾನಿಸುವಂತೆ ಚಲಿಸುವಂತೆ ಇರುತ್ತಾನೆ.
ಬೃಹದಾರಣ್ಯಕದಲ್ಲಿ ಸುಷುಪ್ತಿಯನ್ನು ಹೀಗೆ ವಣಿ೯ಸಿರುತ್ತದೆ. 'ಸುಷುಪ್ತಿಯಲ್ಲಿ ತಂದೆಯು ತಂದೆಯಲ್ಲ,ತಾಯಿಯು ತಾಯಿಯಲ್ಲ,ಲೋಕಗಳು ಲೋಕಗಳಲ್ಲ,ದೇವತೆಗಳು ದೇವತೆಗಳಲ್ಲ,ವೇದಗಳು ವೇದಗಳಲ್ಲ.ಈ ಅವಸ್ಥೆಯಲ್ಲಿ ಕಳ್ಳನು ಕಳ್ಳನಲ್ಲ,ಭ್ರೂಣಹತ್ಯೆಯನ್ನು ಮಾಡಿದವನು ಭ್ರೂಣಘ್ನನಲ್ಲ, ಚಾಂಡಾಲನು ಚಾಂಡಾಲನಲ್ಲ, ಪೌಲ್ಕಸನು ಪೌಲ್ಕಸನಲ್ಲ, ಶ್ರಮಣನು ಶ್ರಮಣನಲ್ಲ, ತಾಪಸನು ತಾಪಸನಲ್ಲ,ಈ ರೂಪವು ಪುಣ್ಯದಿಂದ ಸ್ಪøಷ್ಟವಾಗಿಲ್ಲ, ಏಕೆಂದರೆ ಆಗ ಅವನು ಬುದ್ಧಿಯ ಶೋಕಗಳನ್ನೆಲ್ಲ ದಾಟಿರುತ್ತಾನೆ'
ಅವನು ಸುಷುಪ್ತಿಯಲ್ಲಿ ನೋಡದಿರುವುದಕ್ಕೆ ಕಾರಣವೇನೆಂದರೆ ಆಗ ಅವನು ನಿಜವಾಗಿ ನೋಡುತ್ತಿದ್ದರÀೂ ನೋಡುವುದಿಲ್ಲ. ಏಕೆಂದರೆ ದ್ರಷ್ಟ್ರುವು ಅವಿನಾಶಿ ಯಾಗಿರುವುದರಿಂದ ದ್ರಷ್ಟ್ರುವಿನ ದೃಷ್ಟಿಗೆ ನಾಶವಿಲ್ಲ.ಆದರೆ ನೋಡಬಹುದಾದ ಆ ಎರಡನೆಯ ವಸ್ತುವು ತನಗಿಂತ ಬೇರೆಯಾಗಿ ವಿಂಗಡವಾಗಿರುವುದಿಲ್ಲ. ಇದೇ ರೀತಿ ಘ್ರಾಣಿಸದಿರುವುದಕ್ಕೆ, ಸವಿಯದಿರುವುದಕ್ಕೆ, ಮಾತಾಡದಿರುವುದಕ್ಕೆ, ಕೇಳದಿರುವುದಕ್ಕೆ ಮನನ ಮಾಡದಿರುವುದಕ್ಕೆ, ಸ್ಪಶಿ೯ಸದಿರುವುದಕ್ಕೆ ಅನ್ವಯಿಸುತ್ತದೆ. ಆದರೆ ನಿಜವಾಗಿ ಆತ್ಮನಿಗಿಂತ ಭಿನ್ನವಾದ ಯಾವವಸ್ತುವೂ ಇಲ್ಲ.
ಆತ್ಮನು ಸುಷುಪ್ತಿಯಲ್ಲಿ ನೀರಿನಂತೆ ಏಕನೂ,ದ್ರಷ್ಟøವೂ, ದ್ವೈತರಹಿತನೂ ಆಗಿರುತ್ತಾನೆ.ಇದು ಬ್ರಾಹ್ಮೀಸ್ಥಿತಿ. ಇದು ಇವನ ಪರಮಗತಿ, ಇದು ಇವನ ಪರಮ ಸಂಪತ್ತು, ಇದು ಇವನ ಪರಮಲೋಕ, ಇದು ಇವನ ಪರಮಾನಂದ. ಈ ಆನಂದದ ಒಂದು ಕಲೆಯನ್ನೇ ಅವಲಂಬಿಸಿ ಇತರ ಪ್ರಾಣಿಗಳು ಜೀವಿಸುತ್ತವೆ. ಯಾಜ್ಞವಲ್ಕ್ಯನು ಜನಕರಾಜನಿಗೆ ಹೇಳಿದನು. ಯಾವನು ಮನುಷ್ಯರಲ್ಲಿ ಸಮಗ್ರವಾದ ಅವಯವ ಗಳುಳ್ಳವನೊ ಸಮೃದ್ಧನೊ, ಇತರರಿಗೆ ಅಧಿಪತಿಯೊ, ಎಲ್ಲಾ ಮನುಷ್ಯ ಭೋಗಗಳಿಂದ ಸಂಪನ್ನತಮನೊ, ಅವನು ಮನುಷ್ಯರ ಪರಮಾನಂದವು. ಆ ನೂರು ಮಾನುಷ ಆನಂದಗಳು ಲೋಕಗಳನ್ನು ಜಯಿಸಿರುವ ಪಿತೃಗಳ ಒಂದು ಆನಂದ.ಲೋಕಗಳನ್ನು ಜಯಿಸಿರುವ ಪಿತೃಗಳ ಒಂದು ಆನಂದ ಮತ್ತು ಲೋಕಗಳನ್ನು ಜಯಿಸಿರುವ ಪಿತೃಗಳ ಆ ನೂರು ಆನಂದಗಳು ಗಂಧವ೯ಲೋಕದ ಒಂದು ಆನಂದ. ಗಂಧವ೯ಲೋಕದ ನೂರು ಆನಂದಗಳು ಕಮ೯ದೇವತೆಗಳ ಒಂದು ಆನಂದ.ಅವರು ವೈದಿಕ ಕಮ೯ದಿಂದ ದೇವತ್ವವನ್ನು ಪಡದೆದುಕೊಂಡಿರುತ್ತಾರೆ. ಕಮ೯ದೇವತಗಳ ಆ ನೂರು ಆನಂದಗಳು ಅಜಾನದೇವತೆಗಳ ಒಂದು ಆನಂದ.ಮತ್ತುಅದು ಅಕಾಮಹತನಾದ ಪಾಪರಹಿತನಾದ ಶ್ರೋತ್ರೀಯನ ಒಂದು ಆನಂದ. ಅಜಾನದೇವತೆಗಳ ಆ ನೂರು ಆನಂದಗಳು ಪ್ರಜಾಪತಿ ಲೋಕದ ಒಂದು ಆನಂದ, ಅದು ಅಕಾಮಹತನಾದ ಪಾಪರಹಿತನಾದ ಶ್ರೋತ್ರೀಯನ ಆನಂದ.ಪ್ರಜಾಪತಿ ಲೋಕದ ಆ ನೂರು ಆನಂದಗಳು ಬ್ರಹ್ಮಲೋಕದ ಒಂದು ಆನಂದ ಮತ್ತು ಅದು ಅಕಾಮಹತನಾದ ಪಾಪರಹಿತನಾದ ಶ್ರೋತೀಯನ ಒಂದು ಆನಂದ.ಅನಂತರ ಇದೇ ಪರಮಾನಂದ.ಇದೇ ಬ್ರಾಹ್ಮೀ ಸ್ಥಿತಿ.
ನಾಲ್ಕನೆಯ ಅಧ್ಯಾಯದಲ್ಲಿ "ಅಯಮಾತ್ಮಾ ಬ್ರಹ್ಮ" ಎಂಬ ಮಹಾವಾಕ್ಯವು ಬರುತ್ತದೆ.ಇದು ಅದ್ವೈತ ವೇದಾಂತದ ಮಹಾವಾಕ್ಯಗಳಲ್ಲಿ ಒಂದು.'ಈ ಆತ್ಮನೇ ಬ್ರಹ್ಮ'ಎಂಬುದು ಈ ವಾಕ್ಯದ ಅಥ೯.ಜೀವ ಬ್ರಹ್ಮೈಕ್ಯವನ್ನು ತಿಳಿಸುವ ವಾಕ್ಯಗಳಿಗೆ ಮಹಾವಾಕ್ಯಗಳೆಂದು ಹೆಸರು.ಇವನು ವಿಜ್ಞಾನಮಯನು, ಮನೋಮಯನು,ಪ್ರಾಣಮಯನು,ಚಕ್ಷುಮ೯ಯನು,ಶ್ರೋತ್ರಮಯನು,ಪೃಥ್ವೀಮಯನು,ಆಪೋಮಯನು, ವಾಯುಮಯನು, ಆಕಾಶಮಯನು, ತೇಜೋಮಯನು, ಅತೇಜೋಮಯನು, ಕಾಮಮಯನು, ಆಕಾಮಮಯನು, ಕ್ರೋಧಮಯನು, ಅಕ್ರೋಧಮಯನು, ಧಮ೯ಮಯನು, ಅಧಮ೯ಮಯನು, ಸವ೯ಮಯನು, ಇವನು ಇದಂ ಮಯನು ಅಧೋಮಯನು, ಎಂಬುದು ಸಿದ್ಧವಾಗಿದೆ.ಇವನು ಹೇಗೆ ಮಾಡುವನೊ ಹೇಗೆ ಆಚರಿಸುವನೊ ಹಾಗೆ ಆಗುವನು.ಸಾಧುಕಾರಿಯಾದವನು ಸಾಧುವಾಗುತ್ತಾನೆ. ಪಾಪಕಾರಿಯಾದವನು ಪಾಪಿಯಾಗುತ್ತಾನೆ.ಪುಣ್ಯಕಮ೯ದಿಂದ ಪುಣ್ಯವಂತನಾಗುವನು.ಪಾಪಕಮ೯ದಿಂದ ಪಾಪಿಯಾಗುವನು. ಇನ್ನು ಕೆಲವರು ಹೀಗೆ ಹೇಳುತ್ತಾರೆ."ಈ ಪುರುಷನು ಕಾಮಮಯನೇ;ಅವನು ಎಂಥ ಕಾಮದವನೊ ಅಂಥ ಕೃತಸಂಕಲ್ಪನಾಗುವನು.ಎಂಥ ಕೃತ ಸಂಕಲ್ಪನೊ ಅಂಥ ಕಮ೯ವನ್ನು ಮಾಡುವನು. ಎಂಥ ಕಮ೯ವನ್ನು ಮಾಡುವನೊ ಅಂಥಕಮ೯ವನ್ನು ಪಡೆಯುತ್ತಾನೆ. ಕಾಮವೇ ಸಂಸ್ಕಾರಕ್ಕೆ ಕಾರಣ.
ಯಾವನು ಅಕಾಮನೊ ನಿಷ್ಕಾಮನೊ ಅಪ್ತಕಾಮನೊ ಆತ್ಮಕಾಮನೊ ಅವನ ಇಂದ್ರಿಯಗಳು ಉತ್ಕ್ರಮಿಸುವುದಿಲ್ಲ.ಬ್ರಹ್ಮವೇ ಆಗಿ ಬ್ರಹ್ಮದಲ್ಲಿ ಲೀನವಾಗುತ್ತಾನೆ. ಬ್ರಹ್ಮಜ್ಞಾನಿಗೆ ಗಮನಾಗಮನವಾಗಲೀ ಶರೀರ ಗ್ರಹಣವಾಗಲೀ ಇಲ್ಲ. ಇವನ ಹೃದಯದಲ್ಲಿರುವ ಕಾಮನೆಗಳು ಯಾವಾಗ ಬಿಟ್ಟುಹೋಗುವುವವೋ ಆಗ ಮನುಷ್ಯನು ಅಮೃತನಾಗುತ್ತಾನೆ ಮತ್ತು ಈ ಶರೀರzಲ್ಲಿಯೇ ಬ್ರಹ್ಮವನ್ನು ಹೊಂದುತ್ತಾನೆ. ಕಮ೯ಗಳು ಸಮೂಲವಾಗಿ ಹೊರಟುಹೋದರೆ ಅಮೃತತ್ವವು ಉಂಟಾಗುತ್ತದೆ.ವಾಕ್ಯವು ಮತ್ತೊಂದರ ಸಹಾಯವನ್ನು ಬಯಸದೆ ಮೋಕ್ಷವನ್ನುಂಟು ಮಾಡುತ್ತದೆ6. ವಣಾ೯ಶ್ರಮ ಧಮ೯ವೆಲ್ಲವೂ ಅವಿದ್ಯೆಯಲ್ಲಿಯೇ ಅಡಕವಾಗಿರುತ್ತದೆ.ಮತ ಜಾತಿ, ಸ್ತ್ರೀ, ಪುರುಷ, ಬಾಲಕ, ವೃದ್ಧ, ಬಡವ_ಬಲ್ಲಿದ, ಗುರು_ಶಿಷ್ಯ, ಸನ್ಯಾಸಿ_ಗೃಹಸ್ಠ, ಯಾವಭೇದವೂ ಇರುವುದಿಲ್ಲ. ಬ್ರಹ್ಮವಿದ್ಯೆಯ ಫಲವು ಕಾಲಾಂತರದಲ್ಲಿ ಆಗತಕ್ಕದ್ದಲ್ಲ. ಜ್ಞಾನ ಸಮಕಾಲದಲ್ಲಿಯೇ ಉಂಟಾಗುತ್ತದೆ7.ಉಪನಿಷತ್ತುಗಳಲ್ಲಿ ಕಮ೯ವನ್ನು ಅವಿದ್ಯೆಯೆಂದೂ ಬ್ರಹ್ಮಜ್ಞಾನವನ್ನು ವಿದ್ಯೆಯೆಂದೂ ಕರೆಯುತ್ತಾರೆ.ಇಂದ್ರಿಯಗಳ ತಿಳುವಳಿಕೆಯು ಯಾವಾಗಲೂ ಮಾಯೆಯೇ ಆಗಿರುತ್ತದೆ.ಮಾಯೆ ಎಂದರೆ ಇಲ್ಲದ ವಸ್ತುವನ್ನು ಇದ್ದಂತೆ
ಕಾಣುವುದು 8.
ಯಾರಿಗೆ ಜ್ಞಾನವು ಒಮ್ಮೆಗೇ ಅಳವಡುವುದಿಲ್ಲವೋ ಅವರಿಗೆ ಉಪಾಸನೆಯೇ ಗತಿ. ಉಪಾಸನೆಗಳಲ್ಲಿ ಮುಖ್ಯವಾಗಿ ನಿಗು೯ಣ ಬ್ರಹ್ಮವನ್ನು ಮನಸ್ಸಿಗೆ ತಂದುಕೊಳ್ಳುವ ಸಹಾಯಕವಾಗಿ _ಹೊಸದಾಗಿ ಈಜುವವನಿಗೆ ಬುರುಡೆಯನ್ನು ಕಟ್ಟುವಂತೆ ಒಂದಾನೊಂದು ಆಲಂಬನವನ್ನು ಮೊದಲು ಕಟ್ಟಿರುತ್ತದೆ.ಆಲಂಬನ ಪ್ರತೀಕ ಇವು ಪಯಾ೯ಯ ಪದಗಳು.ಈ ಶರೀರವನ್ನು ಪ್ರವೇಶಿಸಿರುವ ಪರಮಾತ್ಮನನ್ನು ಯಾವನು ಪಡೆದುಕೊಂಡಿರುವನೋ ಮತ್ತು ಸಾಕ್ಷಾತ್ಕರಿಸಿರುವನೋ ಅವನು ವಿಶ್ವದ ಕತೃ೯ವಾಗಿರುತ್ತಾನೆ.ಅವನು ಎಲ್ಲದರ ಕತೃ೯ವು.ಸವ೯ವೂ ಅವನ ಆತ್ಮವಾಗಿದೆ ಮತ್ತು ಅವನು ಎಲ್ಲದರ ಆತ್ಮನಾಗಿರುತ್ತಾನೆ.ಯಾವಾಗ ಪುರುಷನು ಆಚಾಯ೯ನಿಂದ ಅನುಗ್ರಹೀತನಾಗಿ ಪ್ರಕಾಶಮಾನವಾದ ಆತ್ಮನನ್ನು ಸಾಕ್ಷಾತ್ತಾಗಿ ನೋಡುತ್ತಾನೆಯೋ ಆಗ ಅವನಿಂದ ಕಾಪಾಡಿಕೊಳ್ಳಲು ಇಚ್ಛಿಸುವುದಿಲ್ಲ. ಇವನು ಸವ೯ವನ್ನೂ ಆತ್ಮನನ್ನಾಗಿ ನೋಡುವನು.ಇವನು ಯಾರನ್ನೂ ನಿಂದಿಸುವುದಿಲ್ಲ.
ಇಲ್ಲಿ ನಾನಾತ್ವವು ಸ್ವಲ್ಪವೂ ಇಲ್ಲ.ಯಾವನು ಇಲ್ಲಿ ನಾನಾತ್ವವಿರುವಂತೆ ನೋಡುತ್ತಾನೆಯೋ ಅವನು ಮೃತ್ಯುವಿನಮೇಲೆ ಮೃತ್ಯುವನ್ನು ಹೊಂದುತ್ತಾನೆ.ನಾನಾತ್ವವಿಲ್ಲದಿದ್ದರೂ ಅಜ್ಞಾನದಿಂದ ಮಾಯೆಯಿಂದ ನಾನಾತ್ವವು ತೋರಿಕೊಳ್ಳುತ್ತದೆ.ಇರುವುದೊಂದೇ .ಎರಡಾಗಿ ಕಾಣುವುದು ಮಿಥ್ಯೆ. ಎರಡನೆಯದಿಲ್ಲದಿರುದೇ ಜ್ಞಾನ.ಯಾರಿಗೆ ಜ್ಞಾನವು ಒಮ್ಮೆಗೇ ಅಳವಡುವುದಿಲ್ಲವೋ ಅವರಿಗೆ ಉಪಾಸನೆಯೇ ಗತಿ ೯.
ಧೀಮಂತನಾದ ಬ್ರಾಹ್ಮಣನು ಆತ್ಮನನ್ನೇ ತಿಳಿದುಕೊಂಡು ಪ್ರಜ್ಞೆಯನ್ನು ಅವಲಂಬಿಸಬೇಕು.ಬಹು ಶಬ್ದಗಳನ್ನು ಚಿಂತಿಸಕೂಡದು. ಏಕೆಂದರೆ ಅದು ವಾಗಿಂದ್ರಿಯಕ್ಕೆ ಶ್ರಮವನ್ನುಂಟು ಮಾಡುತ್ತದೆ. ವಿಜ್ಞಾನಮಯನೂ, ಜನ್ಮರಹಿತನೂ, ಇಂದ್ರಿಯಗಳ ಮಧ್ಯದಲ್ಲಿರುವವನೂ, ಆದ ಈ ಆತ್ಮನು ಹೃದಯಾಕಾಶದಲ್ಲಿ ಇರುತ್ತಾನೆ.ಅವನು ಸವ೯ನಿಯಾಮಕನು ಎಲ್ಲರ ಪ್ರಭುವು.ಅಧಿಪತಿಯು,ಅವನು ಶಾಸ್ತ್ರವಿಹಿತವಾದ ಕಮ೯ದಿಂದ ವಧಿ೯ಸುವುದಿಲ್ಲ. ಶಾಸ್ತ್ರ ಪ್ರತಿಶಿದ್ಧ ಕಮ೯ದಿಂದ ಅಲ್ಪನಾಗುವುದಿಲ್ಲ.ಇವನು ಸವೇ೯ಶ್ವರನು. ಸವ೯ಪ್ರಾಣಿಗಳ ಅಧಿಪತಿಯು. ಸವ೯ಪ್ರಾಣಿಗಳ ಪಾಲಕನು. ಈ ಲೋಕಗಳ ಪರಸ್ಪರ ಮಿಶ್ರಣವಾಗದಿರುವುದಕ್ಕೆ ಇವನು ವಿಧಾರಕನಾದ ಸೇತು.ಈ ಆತ್ಮಲೋಕವನ್ನು ಅರಿತುಕೊಂಡವನಿಗೆ ಅಕ್ಷಯವಾದ ಸವಾ೯ತ್ಮಭಾವವೆಂಬ ಫಲ ಉಂಟಾಗುತ್ತದೆ10.
ಇವನನ್ನು ಅರಿತುಕೊಂಡವನು ಮುನಿಯಾಗುತ್ತಾನೆ.ಸನ್ಯಾಸಿಗಳು ಈ ಆತ್ಮಲೋಕವನ್ನೇ ಬಯಸುತ್ತಾ ಪ್ರವ್ರಜನ ಮಾಡುತ್ತಾರೆ.ಈ ಆತ್ಮನನ್ನೇ ಈ ಲೋಕವನ್ನೇ ಹೊಂದಿರುವ ನಾವು ಸಂತತಿಯಿಂದ ಏನನ್ನು ಮಾಡಿಕೊಳ್ಳೋಣ ಎಂದು ಯೋಚಿಸಿ ಹಿಂದಿನ ಬ್ರಹ್ಮಜ್ಞಾನಿಗಳೂ ಸಂತತಿಯನ್ನು ಬಯಸಲಿಲ್ಲ.ಅವರು ಪುತ್ರರಲ್ಲಿ ವಿತ್ತದಲ್ಲಿ ಲೋಕಗಳಲ್ಲಿ ಇರುವ ಕಾಮನೆಯನ್ನು ಬಿಟ್ಟು ಭಿಕ್ಷಾಚಯೆ೯ಯನ್ನು ಮಾಡುತ್ತಾರೆ.ಯಾವುದು ಪುತ್ರ ಕಾಮನೆಯೋ ಅದು ವಿತ್ತಕಾಮನೆ,ಅದೇ ಲೋಕಕಾಮನೆ,ಏಕೆಂದರೆ ಇವೆಲ್ಲವೂ ಕಾಮನೆಗಳೇ ಆಗಿರುತ್ತವೆ.
'ಹೀಗಲ್ಲ ಹೀಗಲ್ಲ'(ನೇತಿ ನೇತಿ)ಎಂದು ಹೇಳಲ್ಪಟ್ಟಿರುವ ಅವನೇ ಈ ಆತ್ಮನು.ಅವನು ಅಗ್ರಹ್ಯನು ಏಕೆಂದರೆ ಅವನನ್ನು ಹಿಡಿಯಲಾಗುವುದಿಲ್ಲ.ಅವನು ಅಕ್ಷಯನು ಏಕೆಂದರೆ ಕ್ಷೀಣನಾಗುವುದಿಲ್ಲ.ಅವನು ಅಸಂಗನು ಏಕೆಂದರೆ ಆಸಕ್ತನಾಗುವುದಿಲ್ಲ. ಅವನು ಬಂಧರಹಿತನು ಆದುದರಿಂದ ವ್ಯಥೆಪಡುವುದಿಲ್ಲ.ಪಾಪ ಪುಣ್ಯಗಳು ಇವನನ್ನು ವ್ಯಾಕುಲ ಗೊಳಿಸುವುದಿಲ್ಲ.ಇವನು ಇವೆರಡನ್ನೂ ದಾಟಿರುತ್ತಾನೆ.ಮಾಡದ್ದು ಮಾಡದಿರುವುದು ಇವನನ್ನು ತಪಿಸುವುದಿಲ್ಲ.ವೇದಾನುವಚನ,ಯಜ್ಞ,ದಾನ,ತಪಸ್ಸು ಇವು ಸತ್ವಶುದ್ಧಿಯ ದ್ವಾರಾ ಆತ್ಮಜ್ಞಾನಕ್ಕೆ ಕಾರಣಗಳಾಗಿವೆ.ಜ್ಞಾನವು ಇಲ್ಲದ್ದನ್ನು ಉಂಟು ಮಾಡುವುದಿಲ್ಲ.ಇರುವುದನ್ನು
ಇದ್ದಂತೆ ತಿಳಿಸುತ್ತದೆ11.
ಅವನು ಕನಸುಕಾಣುವಾಗ ಸವ೯ಪಾಲಕವಾದ ಈ ಶರೀರದ ಒಂದು ಅಂಶವನ್ನು ತೆಗೆದುಕೊಂಡು ತನ್ನ ಶರೀರವನ್ನು ಅಚೇತನಗೊಳಿಸಿ ಸ್ವಪ್ನಶರೀರವನ್ನು ನಿಮಿ೯ಸಿಕೊಂಡು ತನ್ನ ಜ್ಯೋತಿಯಿಂದ ತನ್ನ ಪ್ರಕಾಶವನ್ನು ವ್ಯಕ್ತಗೊಳಿಸಿ ಕನಸುಕಾಣುತ್ತಾನೆ.ಈ ಅವಸ್ಥೆಯಲ್ಲಿ ಪುರುಷನು ಸ್ವಯಂ ಜ್ಯೋತಿಯಾಗಿರುತ್ತಾನೆ.ಸ್ವಪ್ನದಲ್ಲಿ ರಥಗಳಾಗಲೀ ಅವುಗಳಿಗೆ ಕಟ್ಟಲ್ಪಡುವ ಕುದುರೆಯೇ ಮುಂತಾದ ಪ್ರಾಣಿಗಳಾಗಲೀ ಇರುವುದಿಲ್ಲ.ಅವನು ರಥಗಳನ್ನು ಪ್ರಾಣಿಗಳನ್ನು ಸೃಷ್ಟಿಸಿಕೊಳ್ಳುತ್ತಾನೆ.ಅಲ್ಲಿ ಆನಂದಗಳಾಗಲೀ ಹಷ೯ಗಳಾಗಲೀ ಪ್ರಮೋದಗಳಾಗಲೀ ಇರುವುದಿಲ್ಲ. ಆದರೆ ಅವನು ಆನಂದಗಳನ್ನೂ ಹಷ೯ಗಳನ್ನೂ ಪ್ರಮೋದಗಳನ್ನೂ ಸೃಷ್ಟಿಸಿಕೊಳ್ಳುತ್ತಾನೆ.ಏಕೆಂದರೆ ಅವನು ಕತೃ೯ವು.
ಜಾಗ್ರದವಸ್ಥೆಯೂ ಕೂಡಾ ಒಂದು ಸ್ವಪ್ನವೇ.ಸುಷುಪ್ತಿಯಲ್ಲಿ ಅವಿದ್ಯೆಯು ನಾಶವಾಗಿರುದಿಲ್ಲ.ಅದರ ಅಭಿವ್ಯಕ್ತತೆ ಮಾತ್ರ ಇರುವುದಿಲ್ಲ. ಸುಷುಪ್ತಿಯಲ್ಲಿ ಅವನು ನೋಡದಿರುವುದಕ್ಕೆ ಕಾರಣವೇನೆಂದರೆ ಆಗ ಅವನು ನಿಜವಾಗಿ ನೋಡುತ್ತಿದ್ದರೂ ನೋಡುವುದಿಲ್ಲ.ಏಕೆಂದರೆ ದೃಷ್ಟøವು ಅವಿನಾಶಿಯಾಗಿರುವುದರಿಂದ ದ್ರಷ್ಟøವಿನ ದೃಷ್ಟಿಗೆನಾಶವಿಲ್ಲ.ಆದರೆ ನೋಡಬೇಕಾದ ಆ ಎರಡನೇ ವಸ್ತುವು ತನಗಿಂತ ಬೇರೆಯಾಗಿ ವಿಂಗಡವಾಗಿರುವುದಿಲ್ಲ.
ಈ ಆತ್ಮವನ್ನು ಅರಿತುಕೊಂಡವನಾಗಿ ವಾಮದೇವ ಋಷಿಯು "ನಾನೇ ಮನುವಾಗಿದ್ದೇನೆ ಸೂಯ೯ನೂ ಆಗಿದ್ದೇನೆ"ಎಂದು ಅನುಭವದಿಂದ ಕಂಡುಕೊಂಡನು. ಆದರೆ ಎಲ್ಲಿ ಭಿನ್ನವಾಗಿ ಮತ್ತೊಂದರಂತೆ ತೋರುವುದೋ ಅಲ್ಲಿ ಒಬ್ಬನು ಮತ್ತೊಂದರಂತೆ ಇರುವುದೋ ಅಲ್ಲಿಒಬ್ಬನು ಇನ್ನೊಂದನ್ನು ಕಾಣಬಲ್ಲನು.ಸೃಷ್ಟಿಗಿಂತ ಮುಂಚೆ ಇಲ್ಲಿ ಏನೊಂದೂ ಇರಲಿಲ್ಲ.ಅವನು ಉಸಿರಾಡುವಾಗ ಮಾತ್ರವೇ ಪ್ರಾಣವು ಎಂದಾಗುತ್ತಾನೆ.ಮಾತನಾಡುವಾಗ ವಾಕ್ ಆಗಿರುತ್ತಾನೆ.ನೋಡುವಾಗ ಕಣ್ಣು ಎಂದೆನಿಸುತ್ತಾನೆ. ಕೇಳುವಾಗ ಶ್ರೋತೃವೆನಿಸುತ್ತಾನೆ. ಮನನ ಮಾಡುವಾಗ ಮನಸ್ಸು ಎನಿಸುತ್ತಾನೆ.ಹೀಗೆ ಇವೆಲ್ಲವೂ ಅವನಿಗೆ ಆಯಾ ಕ್ರಿಯೆಗಳಿಂದ ಹುಟ್ಟಿರುವ ಹೆಸರುಗಳೇ ಆಗಿರುತ್ತವೆ.
ಪ್ರಮಾತೃವಾಗಿರುತ್ತಾನೆ.ಯಾರು ಆಗಮಗಳಿಂದ ನೇರವಾಗಿ ಅನುಭವವನ್ನು ಪಡೆದುಕೊಳ್ಳುವಷ್ಟು ಬುದ್ಧಿಯಿರುವುದಿಲ್ಲವೋ ಅವರಿಗಾಗಿ ಅದೇ ಅನುಭವವನ್ನು ತಂದುಕೊಳ್ಳುವುದಕ್ಕಾಗಿ ಉಪಯೋಗಿಸುವ ಅವಾಂತರ ಅನುಭವಗಳ ಯೋಜನೆಯೇ ಉಪನಿಷತ್ತು.ಬ್ರಹ್ಮವನ್ನು ತಿಳಿದವನು ಇಲ್ಲಿಯೇ ಬ್ರಹ್ಮವಾಗಿದ್ದುಕೊಂಡು ಬ್ರಹ್ಮದಲ್ಲಿ ಸೇರಿ ಹೋಗುತ್ತಾನೆ12.ತಾನು ಕೃತ ಕೃತ್ಯನೆಂಬ ಅನುಭವವು ಜ್ಞಾನಿಗೆ ಇಲ್ಲಿಯೇ ಆಗುತ್ತದೆ.ಈ ಸಂಸಾರದಲ್ಲಿಯೇ ಬ್ರಹ್ಮವನ್ನು ಅರಿಯಬೇಕು.13.
ಬ್ರಹ್ಮವು ವಿಜ್ಞಾನಮಯನು,ಮನೋಮಯನು, ಪ್ರಾಣಮಯನು, ಚಕ್ಷುಮ೯ಯನು, ಶ್ರೋತ್ರಮಯನು, ಪೃಥ್ವೀಮಯನು ತೇಜೋಮಯನು,ಅತೇಜೋಮಯನು,ಕಾಮಮಯನು,ಅಕಾಮಮಯನು.ಕ್ರೋಧಮಯನು ಅಕ್ರೋಧಮಯನು, ಧಮ೯ಮಯನು, ಅಧಮ೯ಮಯನು, ಸವ೯ಮಯನು, ಇವನು ಇಹಮಯನು , ಅಧೋಮಯನು . ಸಾಧುಶಾಲಿಯಾದವನು ಸಾಧುವಾಗುತ್ತಾನೆ.
ಪಾಪಕಾರಿಯಾದವನು ಪಾಪಿಯಾಗುತ್ತಾನೆ. ಪುಣ್ಯಕಮ೯ದಿಂದ ಪುಣ್ಯವಂತನಾಗುವನು. ಈ ಪುರುಷನು ಪಾಮಮಯನು.ಅವನು ಎಂಥಾ ಕಾಮದವನೋ ಅಂಥ ಕಮ೯ವನ್ನು ಪಡೆಯುತ್ತಾನೆ.ಆದುದರಿಂದ ಕಾಮವೇ ಸಂಸಾರಕ್ಕೆ ಕಾರಣ.ಜ್ಞಾನಿಯಾದವನು ಸಂಧಿಯಿಲ್ಲದೆ ಕೆಲಸವನ್ನು ಮಾಡಿದರೆ ಪುನಜ೯ನ್ಮವನ್ನುಂಟು ಮಾಡುವುದಿಲ್ಲ.ಪಾಪ ಪುಣ್ಯಗಳೂ ಉದಯಿಸುವುದಿಲ್ಲ.
ಯಾವನಿಂದ ಇದೆಲ್ಲವನ್ನೂ ತಿಳಿದುಕೊಳ್ಳುತ್ತಾನೆಯೋ ಅವನನ್ನು ಯಾವುದರಿಂದ ತಿಳಿದುಕೊಂಡಾನು?'ಹೀಗಲ್ಲ ಹೀಗಲ್ಲ'(ನೇತಿ ನೇತಿ) ಎಂದು ಹೇಳಲ್ಪಟ್ಟಿರುವ ಅವನೇ ಈ ಆತ್ಮನು.ಅವನು ಅಗ್ರಹ್ಯನು_ಏಕೆಂದರೆ ಅವನನ್ನು ಹಿಡಿಯಲಾಗುವುದಿಲ್ಲ.ಅವನು ಅಕ್ಷಯನು_ಏಕೆಂದರೆ ಕ್ಷೀಣನಾಗುವುದಿಲ್ಲ.ಅವನು ಅಸಂಗನು _ಏಕೆಂದರೆ ಅವನು ಬಂಧರಹಿತನು.ಆದುದರಿಂದ ವ್ಯಥೆಪಡುವುದಿಲ್ಲ.ಮೈತ್ರೇಯಿ,ಹೀಗೆ ನೀನು ಅನುಶಾಸಿತಳಾಗಿರುವೆ.ಇಷ್ಟೇ ಅಮೃತತ್ವಕ್ಕೆ ಸಾಧನವು. ಸನ್ಯಾಸದಲ್ಲಿ ಪಯ೯ವಸಾನವಾಗುವ ಬ್ರಹ್ಮವಿದ್ಯೆಯು ಮುಗಿಯಿತು. ಇಷ್ಟೇಉಪದೇಶ. ಇದೇ ವೇದಾನುಶಾಸನ. ಇದೇ ಪರಮ ನಿಷ್ಠೆ. ಇದೇ ಪುರುಷಾಥ೯ ಕತ೯ವ್ಯದ ಕೊನೆ.
ಐದನೆಯ ಅಧ್ಯಾಯದ ಮೊದಲನೆಯ ಬ್ರಾಹ್ಮಣದಲ್ಲಿ ದಾಂತರಾಗಿರಿ,ದಾನವಂತರಾಗಿರಿ,ದಯÁವಂತರಾಗಿರಿ ಎಂದು ಹೇಳಿದೆ.ಮೂರನೆಯ ಬ್ರಾಹ್ಮಣವು ಈ ಹೃದಯವು ನಾಮ ರೂಪ ಕಮ೯ಗಳ ಪ್ರತಿಷ್ಠೆಯೆಂದೂ ಸವ೯ ಪÁ್ರಣಿಗಳ ಆತ್ಮನೆಂದೂ ಹೇಳಿದೆ. ಈ ಹೃದಯವು ಬುದ್ಧಿಯು.ಅದು ಬ್ರಹ್ಮ.ಅದು ಎಲ್ಲವೂ.ನಾಲ್ಕನೆಯ ಬ್ರಾಹ್ಮಣದಲ್ಲಿಪ್ರಥಮಜನೆಂದರೆ ಬ್ರಹ್ಮವೆಂದು ಹೇಳಿದೆ.ಮೂತ೯ ಮತ್ತು ಅಮೂತ೯ವಸ್ತುಗಳಿಗಿಂತ ,ಎಲ್ಲಾ ಸಂಸಾರಿಗಳಿಗಿಂತ ಬ್ರಹ್ಮನು ಮೊದಲೇ ಹುಟ್ಟಿದನು.ಐದನೆಯ ಬ್ರಾಹ್ಮಣದಲ್ಲಿ ನೀರು_ಸತ್ಯ_ಹಿರಣ್ಯಗಭ೯_ಪ್ರಜಾಪತಿ _ದೇವತೆಗಳುಸತ್ಯವನ್ನೇ ಉಪಾಸಿಸುತ್ತಾರೆ.'ಸ' ಮತ್ತು 'ಯ'ಅಕ್ಷರಗಳು ಸತ್ಯವು.'ತಿ'ಅಕ್ಷರವು ಅನೃತವು.ಆರನೆಯ ಬ್ರಾಹ್ಮಣದಲ್ಲಿಈ ಪುರುಷನು ಮನೋಮಯನು, ಭಾಸ್ವರನು,ಬತ್ತದ ಕಾಳಿನಂತೆ ಅಥವಾ ಯವೆಯ ಕಾಳಿನಂತೆ ಅಂತಹೃ೯ದಯದಲ್ಲಿ ಕಾಣುತ್ತಾನೆ.ಇವನು ಎಲ್ಲರ ಈಶ, ಅಧಿಪತಿ ಮತ್ತು ಇರುವುದನ್ನೆಲ್ಲ ಶಾಸನಮಾಡುತ್ತಾನೆ.ಏಳನೆಯ ಬ್ರಾಹ್ಮಣದಲ್ಲಿ ವಿದ್ಯುತ್ತು ಬ್ರಹ್ಮವೆಂದು ಹೇಳಿದೆ.ಎಂಟನೆಯ ಬ್ರಾಹ್ಮಣದಲ್ಲಿ ವೇದವನ್ನು ಧೇನು ಎಂದು ಉಪಾಸಿಸಬೇಕು.ಸ್ವಾಹಾ,ವಷಟ್,ಹಂತ,ಸ್ವಧಾ.ಇವು ಅದರ ಕೆಚ್ಚಲುಗಳು ಎಂದು ಹೇಳಿದೆ.
ಒಂಬತ್ತನೆಯ ಬ್ರಾಹ್ಮಣದಲ್ಲಿ ಪುರುಷನಲ್ಲಿರುವ ಮತ್ತು ತಿನ್ನಲ್ಪಟ್ಟ ಆಹಾರವನ್ನು ಪಚನಮಾಡುವ ಈ ಅಗ್ನಿಯು ವೈಶ್ವಾನರನೆಂದು ಹೇಳಿದೆ.ಹತ್ತನೆಯ ಬ್ರಾಹ್ಮಣದಲ್ಲಿ ಹಿಂದಿನವರಿಂದ ಉಪಾಸನೆಗಳನ್ನು ಅರಿತವನು ಹೋಗುವ ಮಾಗ೯ವನ್ನು ಹೊಂದುವ ಫಲವನ್ನು ಹೇಳಿದೆ.ಹನ್ನೊಂದನೆಯ ಬ್ರಾಹ್ಮಣದಲ್ಲಿಅನ್ನವೇ 'ವಿ'ಪ್ರಾಣವೇ 'ರಂ' ಎಂದು ಹೇಳಿದೆ.ಏಕೆಂದರೆ ಪ್ರಾಣಿಗಳೆಲ್ಲಾ ಪ್ರಾಣವಿದ್ದರೆ ರಮಿಸುತ್ತವೆ.ಹದಿಮೂರನೆಯ ಬ್ರಾಹ್ಮಣವು ಪ್ರಾಣವೇ ಉಕ್ಥವು, ಏಕೆಂದರೆ ಅದು ಇವೆಲ್ಲವನ್ನೂ ಎತ್ತಿ ಹಿಡಿದಿರುತ್ತದೆ.ಪ್ರಾಣವನ್ನು ಯಜುಸ್ಸು,ಸಾಮ,ಕ್ಷತ್ತ್ರವೆಂದು ಉಪಾಸಿಸಬೇಕು .ಯಾವುದು ಕ್ಷತಿ ಅಥವಾ ಗಾಯದಿಂದ ಕಾಪಾಡುತ್ತದೆಯೋ ಅದೇ ಕ್ಷತ್ರ.
ಹದಿನಾಲ್ಕನೆಯ ಬ್ರಾಹ್ಮಣದಲ್ಲಿ ಬ್ರಹ್ಮವನ್ನು ಗಾಯತ್ರಿ ಸ್ವರೂಪದಲ್ಲ್ರಿ ಉಪಾಸಿಸಲು ಹೇಳಿದೆ.
ಗಾಯತ್ರಿಯ ಮೊದಲನೇ ಪಾದ_ಭೂಮಿ,ಅಂತರಿಕ್ಷ,ದ್ಯುಲೋಕ.
ಎರಡನೇ ಪಾದ_ಋಕ್,ಯಜುಸ್ಸು,ಸಾಮ (ತ್ರಯೀವಿದ್ಯೆಗಳು)
ಮೂರನೆಯ ಪಾದ_ಪ್ರಾಣ,ಅಪಾನ,ವ್ಯಾನ.
ನಾಲ್ಕನೆಯ ಪಾದ_ತುರೀಯ.
ಹದಿನೈದನೆಯ ಬ್ರಾಹ್ಮಣವು ಹೀಗೆ ಹೇಳುತ್ತದೆ.ಸೂಯ೯ನು ಜಗತ್ತನ್ನು ಪೋಷಿಸುವುದರಿಂದ ಪೂಷನ್. ಒಬ್ಬನೇ ಋಷಿಯಾದುದರಿಂದ ಏಕಷಿ೯.ಸೂಯ೯ನು ಏಕಾಂಗಿಯಾಗಿ ಸಂಚರಿಸುತ್ತಾನೆ.
ಆರನೆಯ ಅಧ್ಯಾಯದ ಮೊದಲನೆಯ ಬ್ರಾಹ್ಮಣವು ಪ್ರಾಣವೇ ಜ್ಯೇಷ್ಠ ಮತ್ತು ಶ್ರೇಷ್ಠ ಎಂಬುದನ್ನು ಪ್ರಾಣ ಸಂವಾದದ ಮೂಲಕ ತಿಳಿಸುತ್ತದೆ.ಎರಡನೆಯ ಬ್ರಾಹ್ಮಣವು ಪಂಚಾಗ್ನಿವಿದ್ಯೆ ಮತ್ತು ದೇವಯಾನವನ್ನು ಕುರಿತು ಹೇಳುತ್ತದೆ. ದ್ಯುಲೋಕ(ಶ್ರದ್ಧೆ), ಪಜ೯ನ್ಯ(ಸೋಮ), ಈಲೋಕ(ಮಳೆ), ಪುರುಷ(ಅನ್ನ) ಸ್ರ್ತೀ(ರೇತಸ್ಸು)ಇವೇ ಪಂಚಾಗ್ನಿಗಳು. ಈ ಅಗ್ನಿಯಲ್ಲಿ ದೇವತೆಗಳು ಹೋಮ ಮಾಡುತ್ತಾರೆ.ಐದನೇ ಆಹುತಿಯಲ್ಲಿ ನೀರೇ ಪುರುಷ ವಾಕ್ಕಾಗಿ ಎದ್ದು ನಿಲ್ಲುತ್ತದೆ.ಮೂರನೆಯ ಬ್ರಾಹ್ಮಣವು 'ಜ್ಞಾನವು ಮತ್ತೊಂದು ಸಾಮಗ್ರಿಯನ್ನು ಅಪೇಕ್ಷಿಸದೆ ಸ್ವತಂತ್ರವಾಗಿರುತ್ತದೆ.ಆದರೆ ಕಮ೯ವು ದೈವ,ಮನುಷ್ಯ,ವಿತ್ತಗಳನ್ನು ಅವಲಂಬಿಸಿರುತ್ತದೆ'ಎಂದು ಹೇಳುತ್ತದೆ. ಈ ಅಧ್ಯಾಯದಲ್ಲಿ ಬ್ರಹ್ಮವಿದ್ಯೆಗೆ ಸಂಬಂಧಪಟ್ಟನೇರವಾದ ವಿಷಯಗಳಿಲ್ಲ.ನಾಲ್ಕನೆಯ ಬ್ರಾಹ್ಮಣವು ಶ್ರೀಮಂಥ ಕಮ೯ವನ್ನು ಕುರಿತು ಹೇಳುತ್ತದೆ.ಐದನೆಯ ಬ್ರಾಹ್ಮಣದಲ್ಲಿಆಚಾಯ೯ ಪರಂಪರೆಯನ್ನು ಹೇಳಿದೆ.
ಈ ಶರೀರವನ್ನು ಪ್ರವೇಶಿಸಿರುವ ಪರಮಾತ್ಮನನ್ನು ಯಾವನು ಪಡೆದುಕೊಂಡಿರುವನೋ ಮತ್ತು ಸಾಕ್ಷಾತ್ಕರಿಸಿರುವನೋ ಅವನು ವಿಶ್ವದ ಕತೃ೯ವಾಗಿರುತ್ತಾನೆ.ಅವನು ಎಲ್ಲದರ ಕತೃ೯ವು.ಸವ೯ವೂ ಅವನ ಆತ್ಮವಾಗಿದೆ ಮತ್ತು ಅವನು ಎಲ್ಲದರ ಆತ್ಮನಾಗಿರುತ್ತಾನೆ.ಯಾವಾಗ ಪುರುಷನು ಆಚಾಯ೯ನಿಂದ ಅನುಗ್ರಹೀತನಾಗಿ ಪ್ರಕಾಶಮಾನವಾದ ಆತ್ಮನನ್ನು ಸಾಕ್ಷಾತ್ತಾಗಿ ನೋಡುತ್ತಾನೆಯೋ ಆಗ ಅವನಿಂದ ಕಾಪಾಡಿಕೊಳ್ಳಲು ಇಚ್ಛಿಸುವುದಿಲ್ಲ.ಇವನು ಸವ೯ವನ್ನೂ ಆತ್ಮನನ್ನಾಗಿ ನೋಡುವನು.ಇವನು ಯಾರನ್ನೂ ನಿಂದಿಸುವುದಿಲ್ಲ.
ಇಲ್ಲಿ ನಾನಾತ್ವವು ಸ್ವಲ್ಪವೂ ಇಲ್ಲ.ಯಾವನು ಇಲ್ಲಿ ನಾನಾತ್ವವಿರುವಂತೆ ನೋಡುತ್ತಾನೆಯೋ ಅವನು ಮೃತ್ಯುವಿನಮೇಲೆ ಮೃತ್ಯುವನ್ನು ಹೊಂದುತ್ತಾನೆ.ನಾನಾತ್ವವಿಲ್ಲದಿದ್ದರೂ ಅಜ್ಞಾನದಿಂದ ಮಾಯೆಯಿಂದ ನಾನಾತ್ವವು ತೋರಿಕೊಳ್ಳುತ್ತದೆ.ಇರುವುದೊಂದೇ. ಎರಡಾಗಿ ಕಾಣುವುದು ಮಿಥ್ಯೆ.ಎರಡಾಗಿ ಕಾಣುವುದು ಮಿಥ್ಯೆ.ಎರಡನೆಯದಿಲ್ಲದಿರುದೇ ಜ್ಞಾನ.
ಪತಿಯ ಪ್ರಯೋಜನಕ್ಕಾಗಿ ಪತಿಯು ಪತ್ನಿಗೆಪ್ರಿಯನಾಗಿರುವುದಿಲ್ಲ.ತನ್ನ (ಪತ್ನಿಯ)ಪ್ರಯೋಜನಕ್ಕಾಗಿ ಪತಿಯು ಪ್ರಿಯನಾಗಿರುತ್ತಾನೆ.ಪತ್ನಿಯ ಪ್ರಯೋಜನಕ್ಕಾಗಿ ಪತ್ನಿಯು (ಪತಿಗೆ)ಪ್ರಿಯಳಾಗಿರುದಿಲ್ಲ.ತನ್ನ(ಪತಿಯ) ಪ್ರಯೋಜನಕ್ಕಾಗಿ ಪತ್ನಿಯು ಪ್ರಿಯಳಾಗಿರುತ್ತಾಳೆ.ಮಕ್ಕಳ ಪ್ರಯೋಜನಕ್ಕಾಗಿ ಮಕ್ಕಳು (ತಂದೆ ತಾಯಿಗಳಿಗೆ ಪ್ರಿಯರಾಗಿರುವುದಿಲ್ಲ.ತನ್ನ(ತಂದೆ ತಾಯಿಗಳ)ಪ್ರಯೋಜನಕ್ಕಾಗಿ ಮಕ್ಕಳು ಪ್ರಿಯರಾಗಿರುತ್ತಾರೆ.ಧನದ ಪ್ರಯೋಜನಕ್ಕಾಗಿ ಧನವು ಪ್ರಿಯವಾಗಿರುವುದಿಲ್ಲ.ತನ್ನ (ಮನುಷ್ಯನ) ಪ್ರಯೋಜನಕ್ಕಾಗಿ ಧನವು ಮನುಷ್ಯರಿಗೆ ಪ್ರಿಯವೆ,ಗಿರುತ್ತದೆ.ಪಶುಗಳ ಪ್ರಯೋಜನಕ್ಕಾಗಿ ಪಶುಗಳು ಪ್ರಿಯವಾಗಿರುವುದಿಲ್ಲ.ತನ್ನಪ್ರಯೋಜನಕ್ಕಾಗಿಯೇ ಪಶುಗಳು ಪ್ರಿಯವಾಗಿರುತ್ತವೆ.ಬ್ರಾಹ್ಮಣನ ಪ್ರಯೋಜನಕ್ಕಾಗಿ ಬ್ರಾಹ್ಮಣನು ಪ್ರಿಯವಾಗಿರುವುದಿಲ್ಲ.ತನ್ನ(ಇತರರ) ಪ್ರಯೋಜನಕ್ಕಾಗಿಬ್ರಾಹ್ಮಣನು ಇತರರಿಗೆ ಪ್ರಿಯವಾಗಿರುತ್ತಾನೆ.ಇದೇ ರೀತಿಯಲ್ಲಿ,ಲೋಕಗಳು, ಕ್ಷತ್ರಿಯ,ದೇವತೆಗಳಿಗೂ ವೇದಗಳಿಗೂ ಅನ್ವಯಿಸಿಕೊಳ್ಳಬೇಕು.ಎಲ್ಲದರ ಪ್ರಯೋಜನಕ್ಕಾಗಿ ಎಲ್ಲವೂ ಪ್ರಿಯವಾಗಿರುವುದಿಲ್ಲ. ತನ್ನಪ್ರಯೋಜನಕ್ಕಾಗಿ ಎಲ್ಲವೂ ಪ್ರಿಯವಾಗಿರುತ್ತವೆ. ಆತ್ಮನನ್ನು ನೋಡಬೇಕು_ಶ್ರವಣಮಾಡಬ್‍ಏಕು, ಮನನ ಮಾಡಬೇಕು, ನ್ದÁ್ದ್ಧ್ಯಸನ ಮಾಡಬೇಕು. ಆತ್ಮನನ್ನು ನೋಡಿದರೆ, ಕೇಳಿದರೆ, ಮನನ ಮಾಡಿದರೆ, ತಿಳಿದುಕೊಂಡರೆ ಇವೆಲ್ಲವೂ ತಿಳಿಯಲ್ಪಡುತ್ತವೆ.
ಹೇಗೆ ಸಮುದ್ರವು ಎಲ್ಲಾ ನೀರುಗಳಿಗೂ ಏಕಮಾತ್ರಗತಿಯೊ ಹಾಗೆಯೇ ಚಮ೯ವು ಎಲ್ಲಾ ಸ್ಪಶ೯ಗಳಿಗೂ ಏಕಮಾತ್ರಗತಿ. ಹಾಗೆಯೇ ಮೂಗು ಎಲ್ಲಾ ಗಂಧಗಳಿಗೂ ಏಕಮಾತ್ರಗತಿ.ನಾಲಗೆಯು ಎಲ್ಲ ರಸಗಳಿಗೂ ಏಕಮಾತ್ರಗತಿ.ಕಣ್ಣು ಎಲ್ಲಾ ರೂಪಗಳಿಗೂ,ಕಿವಿಯು ಎಲ್ಲಾ ಶಬ್ದಗಳಿಗೂ ಮನಸ್ಸು ಎಲ್ಲಾ ಸಂಕಲ್ಪಗಳಿಗೂ, ಬುದ್ಧಿಯು ಎಲ್ಲಾ ವಿದ್ಯೆಗಳಿಗೂ ,ಕೈಗಳು ಎಲ್ಲಾ ಕಮ೯ಗಳಿಗೂ ಉಪಸ್ಥವು ಎಲ್ಲಾ ಆನಂದಗಳಿಗೂ,ಪಾಯುವು ಎಲ್ಲಾ ವಿಸಗ೯ಗಳಿಗೂ ,ಪಾದಗಳು ಎಲ್ಲಾ ನಡೆಗಳಿಗೂ,ವಾಕ್ಕು ಎಲ್ಲಾ ವೇದಗಳಿಗೂ ಏಕಮಾತ್ರಗತಿ.
ಧೀಮಂತನಾದ ಬ್ರಾಹ್ಮಣನು ಆತ್ಮನನ್ನೇ ತಿಳಿದುಕೊಂಡು ಪ್ರಜ್ಞೆಯನ್ನು ಅವಲಂಬಿಸಬೇಕು.ಬಹುಶಬ್ದಗಳನ್ನು ಚಿಂತಿಸಕೂಡದು. ಏಕೆಂದರೆ ಅದು ವಾಗಿಂದ್ರಿಯಕ್ಕೆ ಶ್ರಮವನ್ನುಂಟು ಮಾಡುತ್ತದೆ. ವಿಜ್ಞಾನಮಯನೂ, ಜನ್ಮರಹಿತನೂ, ಇಂದ್ರಿಯಗಳ ಮಧ್ಯದಲ್ಲಿರುವವನೂ, ಆದ ಈ ಆತ್ಮನು ಹೃದಯಾಕಾಶದಲ್ಲಿ ಇರುತ್ತಾನೆ.ಅವನು ಸವ೯ನಿಯಾಮಕನು ಎಲ್ಲರ ಪ್ರಭುವು.ಅಧಿಪತಿಯು,ಅವನು ಶಾಸ್ತ್ರವಿಹಿತವಾದ ಕಮ೯ದಿಂದ ವಧಿ೯ಸುವುದಿಲ್ಲ.ಶಾಸ್ತ್ರ ಪ್ರತಿಶಿದ್ಧ ಕಮ೯ದಿಂದ ಅಲ್ಪನಾಗುವುದಿಲ್ಲಿವನು ಸವೇ೯ಶ್ವರನು.ಸವ೯ಪ್ರಾಣಿಗಳ ಅಧಿಪತಿಯು. ಸವ೯ಪ್ರಾಣಿಗಳ ಪಾಲಕನು.ಈ ಲೋಕಗಳ ಪರಸ್ಪರ ಮಿಶ್ರಣವಾಗದಿರುವುದಕ್ಕೆಇವನು ವಿಧಾರಕನಾದ ಸೇತು.
ಈಶಾವಾಸ್ಯ ಉಪನಿಷತ್ತು ಅಡಿ ಟಿಪ್ಪಣಿಗಳು:
1)ಸ್ವಾಮಿ ಆದಿದೇವಾನಂದ,ಈಶಾವಾಸ್ಯ ಉಪನಿಷತ್,ಶ್ರೀರಾಮಕೃಷ್ಣಾಶ್ರಮ, ಯಾದವಗಿರಿ, ಮೈಸೂರು 20.ಐದನೇ ಮುದ್ರಣ 1೯88.ಪುಟ ೯
2)ಶ್ರೀಸಚ್ಚಿದಾನಂದೇಂದ್ರ ಸರಸ್ಚತಿ ಸ್ವಾಮಿಗಳು, ಈಶಾವಾಸ್ಯೋಪನಿಷತ್ ಮಂಜರಿ, ಅಧ್ಯಾತ್ಮ ಪ್ರಕಾಶ ಕಾಯಾ೯ಲಯ,ಹೊಳೆನರಸಿಪುರ,ಹಾಸನಜಿಲ್ಲೆ.ಎರಡನೇ ಮುದ್ರಣ 2001 ಪುಟ2೯.
3) ಅದೇ ಪುಟ 33
4)ಶ್ರೀ ಸಚ್ಚಿದಾನಂದೇದ್ರ ಸರಸ್ವತೀ ಸ್ವಾಮಿಗಳು,ದಶೋಪನಿಷತ್ತುಗಳಸಾರ ಅಧ್ಯಾತ್ಮ ಪ್ರಕಾಶ ಕಾಯಾಲಯ,ಹೊಳೆನರಸಿಪುರ.ಮೊದಲನೇ ಮುದ್ರಣ2002 ಪುಟ3.
ಕೇನೂಪನಿಷತ್ತು ಅಡಿಟಿಪ್ಪಣಿಗಳು:
1) ಶ್ರೀ ಸಚ್ಚಿದಾನಂದೇಂದ್ರ ಸರಸ್ವತಿ ಸ್ವಾಮಿಗಳು, ಕೇನೋಪನ್ಯಾಸ ಮಂಜರಿ,ಅಧ್ಯಾತ್ಮ ಪ್ರಕಾಶ ಕಾಯಾ೯ಲಯ,ಹೊಳೆನರಸಿಪುರ,ನಾಲ್ಕನೆಯ ಮುದ್ರಣ, 2005, ಪುಟ 5
2)ಶ್ರೀ ಸ್ವಾಮಿ ಆದಿದೇವಾನಂದ,ಕೇನೋಪನಿಷತ್,ರಾಮಕೃಷ್ಣಾಶ್ರಮ,ಮೈಸೂರು,ಆರನೆಯ ಮುದ್ರಣ,1೯೯3 ಪುಟ ೯.
3)ಶ್ರೀ ಸಚ್ಚಿದಾನಂದೇಂದ್ರ ಸರಸ್ವತಿ ಸ್ವಾಮಿಗಳು,ದಶೋಪನಿಷತ್ತುಗಳಸಾರ,ಅಧ್ಯಾತ್ಮ ಪ್ರಕಾಶ ಕಾಯಾ೯ಲಯ,ಹೊಳೆನರಸಿಪುರ,ಮೊದಲನೇ ಮುದ್ರಣ,2002 ಪುಟ13
4)ಸ್ವಾಮಿ ಆದಿದೇವಾನಂದ,ಕೇನೋಪನಿಷತ್,ಪೂವೊ೯ಕ್ತ,ಪುಟ21.
ಕಠೋಪನಿಷತ್ತು ಅಡಿಟಿಪ್ಪಣಿಗಳು:
1)ಸ್ವಾಮಿ ಆದಿದೇವಾನಂದ,ಕಠೋಪನಿಷತ್,ಶ್ರೀರಾಮಕೃಷ್ಣಾಶ್ರಮ,ಯಾದವಗಿರಿ, ಮೈಸೂರು.ಐದನೇ ಮುದ್ರಣ,1೯87,ಪುಟ 3
2) ಅದೇ ಪುಟ7
3)ಅದೇ ಪುಟ 27
4)ಅದೇ ಪುಟ 33
5) ಅದೇ ಪುಟ 53
6) ಅದೇ ಪುಟ 61
7)ಸ್ವಾಮಿ ಸೋಮನಾಥಾನಂದ,ಉಪನಿಷತ್ ಭಾವಧಾರೆ, ಶ್ರೀ ರಾಮಕೃಷ್ಣಾಶ್ರಮ,ಯಾದವಗಿರಿ, ಮೈಸೂರು 20 ನಾಲ್ಕನೆಯ ಮುದ್ರಣ1೯8೯
ಪುಟ 154
8) ಅದೇ ಪುಟ 165
೯) ಶ್ರೀ ಸಚ್ಚಿದಾನಂದೇಂದ್ರ ಸರಸ್ವತಿ ಸ್ವಾಮಿಗಳು,ದಶೋಪನಿಷತ್ತುಗಳ ಸಾರ,ಅಧ್ಯಾತ್ಮ ಪ್ರಕಾಶ ಕಾಯಾ೯ಲಯ.ಹೊಳೆನರಸಿಪುರ,ಹಾಸನ
ಜಿಲ್ಲೆ.ಮೊದಲನೇ ಮುದ್ರಣ2002 ಪುಟ 47
10) ಅದೇ ಪುಟ 48.
ಪ್ರಶ್ನೋಪನಿಷತ್ತು ಅಡಿಟಿಪ್ಪಣಿಗಳು:
1) ಸ್ವಾಮಿ ಆದಿದೇವಾನಂದ,ಪ್ರಶ್ನೋಪನಿಷತ್,ರಾಮಕೃಷ್ಣಾಶ್ರಮ, ಯಾದವಗಿರಿ,ಮೈಸೂರು,É,೯೯3 ಪುಟ28
2) ಅದೇ ಪುಟ 48
3) ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮಿಗಳು,್ರಪ್ರಶ್ನೋಪನ್ಯಾಸ ಮಂಜರಿ,ಅಧ್ಯಾತ್ಮ ಪ್ರಕಾಶ ಕಾಯಾ೯ಲಯ,ಹೊಳೆನರಸೀಪುರ,ಎರಡನೇ ಮುದ್ರಣ,1೯೯7 ಪುಟ86
4)ಅದೇ ಪುಟ30೯
5)ಸ್ವಾಮಿ ಸೋಮನಾಥಾನಂದ,ಉಪನಿಷತ್ ಭಾವಧಾರೆ,ಶ್ರೀ ರಾಮಕೃಷ್ಣಾಶ್ರಮ,ಮೈಸೂರು.ನಾಲ್ಕನೆಯ ಮುದ್ರಣ,1೯8೯ ಪುಟ287
ಮುಂಡಕೋಪನಿಷತ್ತು ಅಡಿಟಿಪ್ಪಣಗಳು:
1) ಸ್ವಾಮಿ ಆದಿದೇವಾನಂದ,ಮುಂಡಕೋಪನಿಷತ್.ಶ್ರೀರಾಮಕೃಷ್ಣಾಶ್ರಮ,ಮೈಸೂರು.ಐದನೇ ಮುದ್ರಣ,1೯೯3 ಪುಟ 4
2)ಅದೇ ಪುಟ 10
3)ಅದೇ ಪುಟ23
4)ಶ್ರೀ ಸಚ್ಚಿದಾನಂದ ಸರಸ್ವತೀ ಸ್ವಾಮಿಗಳು ಮುಂಡಕೋಪನ್ಯಾಸ ಮಂಜರಿ, ಅಧ್ಯಾತ್ಮ ಪ್ರಕಾಶ ಕಾಯಾ೯ಲಯ,ಹೊಳೆನರಸೀಪುರ ಎರಡನೇ ಮುದ್ರಣ200೯ ಪುಟ2
5)ಅದೇ ಪುಟ3
6)ಅದೇ ಪುಟ43
7) ಸ್ವಾಮಿ ಸೋಮನಾಥಾನಂದ,ಉಪನಿಷತ್ ಭಾವಧಾರೆ,ಶ್ರೀರಾಮಕೃಷ್ಣಾಶ್ರಮ,ಮೈಸೂರುನಾಲ್ಕನೆಯ ಮುದ್ರಣ,1೯8೯,ಪುಟ452
8) ಶ್ರೀ ಸಚ್ಚಿದಾನಂದೆಂದ್ರ ಸರಸ್ವತೀ ಸ್ವಾಮಿಗಳು,ದಶೋಪನಿಷತ್ತುಗಳಸಾರ,ಅಧ್ಯಾತ್ಮ ಪ್ರಕಾಶ ಕಾಯಾ೯ಲಯ,ಹೊಳೆನರಸೀಪುರ,ಮೊದಲನೇ ಮುದ್ರಣ 2002 ಪುಟ 48.
ಮಾಂಡೂಕ್ಯ ಉಪನಿಷತ್ ಅಡಿಟಿಪ್ಪಣಿಗಳು:
1) ಸ್ವಾಮಿ ಸಚ್ಚಿದಾನಂದೇಂದ್ರ ಸರಸ್ವತಿ. ಮಾಂಡೂಕ್ಯ ಉಪನಿಷತ್ ಮಂಜರಿ, ಅಧ್ಯಾತ್ಮ ಪ್ರಕಾಶ ಕಾಯಾ೯ಲಯ,ಹೊಳೆನರಸೀಪುರ.ಮೂರನೆಯ ಮುದ್ರಣ 2005 ಪುಟ28
2)ಅದೇಪುಟ37
3)ಅದೇ ಪುಟ46
5) ಶ್ರೀ ಸಚ್ಚಿದಾನಂದೇಂದ್ರ ಸರಸ್ವತೀ ಸ್ವಾಮಿಗಳು,ದಶೋಪನಿಷತ್ತುಗಳ ಸಾರ,ಅಧ್ಯಾತ್ಮ ಪ್ರಕಾಶ ಕಾಯಾ೯ಲಯ,ಹೊಳೆನರಸೀಪುರ ಮೊದಲನೇ ಮುದ್ರಣ 2002 ಪಪುಟ 10೯.
6)ಅದೇ ಪುಟ 10೯
7)ಅದೇ ಪುಟ 10೯
8)ಸ್ವಾಮಿ ಸೋಮನಾಥಾನಂದ,ಉಪನಿಷತ್ ಭಾವಧಾರೆ.ಶ್ರೀ ರಾಮಕೃಷ್ಣಾಶ್ರಮ,ಮೈಸೂರು ನಾಲ್ಕನೆಯ ಮುದ್ರಣ1೯8೯.ಪುಟ482
ತೈತ್ತಿರೀಯ ಉಪನಿಷತ್ತು ಅಡಿಟಿಪ್ಪಣಿಗಳು:
1) ಸ್ವಾಮಿ ಆದಿದೇವಾನಂದ,ತೈತ್ತಿರೀಯ ಉಪನಿಷತ್, ಶ್ರೀರಾಮಕೃಷ್ಣಾಶ್ರಮ, ಮೈಸೂರು, ಐದನೆಯ ಮುದ್ರಣ 1೯೯3 ಪುಟ 3೯
2) ಅದೇ ಪುಟ43
3)ಅದೇ ಪುಟ45
4)ಅದೇ ಪುಟ 72
5) ಅದೇ ಪುಟ 73
6)ಸೋಮನಾಥಾನಂದ,ಉಪನಿಷತ್ ಭಾವಧಾರೆ, ಶ್ರೀರಾಮಕೃಷ್ಣಾಶ್ರಮ, ಯಾದವಗಿರಿ,ಮೈಸೂರು,ನಾಲ್ಕನೆಯ ಮುದ್ರಣ,1೯8೯,ಪುಟ134
7) ಅದೇ ಪುಟ 135
ಐತರೇಯ ಉಪನಿಷತ್ತು ಅಡಿಟಿಪ್ಪಣಿಗಳು:
1) ಸೋಮನಾಥಾನಂದ,ಉಪನಿಷತ್ ಭಾವಧಾರೆ,ಶ್ರೀ ರಾಮಕೃಷ್ಣಾಶ್ರಮ, ಯಾದವಗಿರಿ,ಮೈಸೂರು 20,ನಾಲ್ಕನೆಯ ಮುದ್ರಣ,1೯8೯
ಪುಟ563
2) ಅದೇ ಪುಟ 573
3) ಅದೇ ಪುಟ 576
4) ಸ್ವಾಮಿ ಸಚ್ಚಿದಾನಂದೇಂದ್ರ ಸರಸ್ವತಿಗಳು,ದಶೋಪನಿಷತ್ತುಗಳ ಸಾರ,ಅದ್ಯಾತ್ಮ ಪ್ರಕಾಶ ಕಾಯಾ೯ಲಯ,ಹೊಳೆನರಸೀಪುರ,ಹಾಸನ ಜಿಲ್ಲೆ
ಪುಟ 134
5) ಅದೇ ಪುಟ 135
ಛಾಂದೋಗ್ಯ ಉಪನಿಷತ್ ಅಡಿಟಿ¥್ಪಣಿಗಳು:
1)ಸ್ವಾಮಿ ಆದಿದೇವಾನಂದ ಛಾಂದೋಗ್ಯ ಉಪನಿಷತ್,ರಾಮಕೃಷ್ಣಾಶ್ರಮ, ಯಾದವಗಿರಿ ಮೈಸೂರು 20. ಐದನೆಯ ಮುದ್ರಣ 1೯೯5 ಪುಟ27೯
3)ಅದೇ ಪುಟ 364
4)ಅದೇ ಪುಟ371
5)ಅದೇ ಪುಟ366
6) ಅದೇ ಪುಟ422
7)ಹೆಚ್. ಎಸ್.ಲಕ್ಷ್ಮಿ ನರಸಿಂಹಮೂತಿ೯. ಛಾಂದೋಗ್ಯ ಉಪನಿಷತ್ ಮಂಜರಿ ಅಧ್ಯಾತ್ಮ ಪ್ರಕಾಶ ಕಾಯಾ೯ಲಯ,ಹೊಳೆನರಸಿಪುರ.ಹಾಸನ ಜಿಲ್ಲೆ. ಎರಡನೇಮುದ್ರಣ. 2010 ಪುಟ180
8)ಅದೇ ಪುಟ 1೯1
೯)ಅದೇ ಪುಟ210
10)ಅದೇಪುಟ265
11) ಶ್ರೀ ಸಚ್ಚಿದಾನಂದೇಂದ್ರ ಸರಸ್ವತಿ ಸ್ವಾಮಿಗಳು, ದಶೋಪನಿಷತ್ತುಗಳ ಸಾರ,ಅಧ್ಯಾತ್ಮ ಪ್ರಕಾಶ ಕಾಯಾ೯ಲಯ, ಹೊಳೆನರಸಿಪುರ ಮೊದಲನೇ ಮುದ್ರಣ2007 ಪುಟ165
12)ಅದೇ ಪುಟ238.
ಬೃಹದಾರಣ್ಯಕ ಉಪನಿಷತ್ ಅಡಿಟಿಪ್ಪಣಿಗಳು:
1) ಸ್ವಾಮಿ ಆದಿದೇವಾನಂದ, ಬೃಹದಾರಣ್ಯಕ ಉಪನಿಷತ್,ಶ್ರೀರಾಮಕೃಷ್ಣಾಶ್ರಮ,ಮೈಸೂರು20, ನಾಲ್ಕನೆಯ ಮುದ್ರಣ,1೯೯0,ಪುಟ 6
2)ಅದೇ ಪುಟ 8
3)ಅದೇ ಪುಟ12
4)ಅದೇ ಪುಟ14
5) ಅದೇ ಪುಟ1೯
6)ಶ್ರೀಹೆಚ್.ಎಸ್.ಲಕ್ಷ್ಮೀನರಸಿಂಹಮೂತಿ೯.ಬೃಹದಾರಣ್ಯಕ ಉಪನ್ಯಾಸ ಮಂಜರಿ,ಅಧ್ಯಾತ್ಮ ಪ್ರಕಾಶ ಕಾಯಾ೯ಲಯ,ಹೊಳೆನರಸೀಪುರ,ಹಾಸನ ಜಿಲ್ಲೆ. ಎರಡನೇ ಮುದ್ರಣ 2010 ಪುಟ 14.
7) ಅದೇ ಪುಟ16
8) ಅದೇ ಪುಟ116
೯)ಅದೇಪುಟ 312
10)ಶ್ರೀಸಚ್ಚಿದಾನಂದೇಂದ್ರ ಸರಸ್ವತೀ ಸ್ವಾಮಿಗಳು. ದಶೋಪನಿಷತ್ತುಗಳ ಸಾರ, ಅಧ್ಯಾತ್ಮ ಪ್ರಕಾಶ ಕಾಯ೯ಲಯ,ಹೊಳೆನರಸೀಪುರ. ್ರಮೊದಲನೇ ಮುದ್ರಣ2002 ಪುಟ273
11)ಅದೇ ಪುಟ 300
12)ಅದೇ ಪುಟ300
13) ಅದೇ ಪುಟ 346
ಜ
5. ಅದ್ವೈತದ ಪರಿಕಲ್ಪನೆಗಳು
ಅದ್ವೈತದ ಪರಿಕಲ್ಪನೆಗಳು:
ಅದ್ವೈತವು ವೇದಾಂತದ ಶಿಖರಗಳಲ್ಲೊಂದು. ಇದರಲ್ಲಿ ಕೆಲವು ಶ್ರುತಿ ಪ್ರಧಾನ ಕೆಲವು ಯುಕ್ತಿ ಪ್ರಧಾನ.ಶಂಕರರು"ಬ್ರಹ್ಮಸತ್ಯಂ ಜಗನ್ಮಿಥ್ಯಾ ಜೀವೋ ಬ್ರಹ್ಮೈವ ನಾ ಪರ:" ಎಂದು ಅದ್ವೈತ ದ ಸಾರವನ್ನು ಹೇಳಿದ್ದಾರೆ. ಬ್ರಹ್ಮವೊಂದೇ ಸತ್ಯ. ಜಗತ್ತು ಮಿಥ್ಯ. ಜೀವವು ಬ್ರಹ್ಮವೇ ಬೇರೆ ಅಲ್ಲ.ಇರುವುದೊಂದೇ ಎರಡಾಗಿಕಾಣುವುದು ಮಿಥ್ಯೆ.ಎರಡನೆಯದಿಲ್ಲದಿರುವುದೇ ಜ್ಞಾನ.
ಅದ್ವೈತದ ಪರಿಕಲ್ಪನೆಗಳು:
(1)ಪ್ರಮಾಣ:
(1)ಪ್ರಮಾಣ,ಪ್ರಮೇಯ, ವ್ಯವಹಾರ
(2)ತಕ೯ (ಯುಕ್ತಿ,ವಿಚಾರ)
(3)ಸಾಕ್ಷಿ
(2)ಪ್ರಮೇಯ:
(1)ಪರಬ್ರಹ್ಮ(2) ಸತ್ಕಾಯ೯ವಾದ
(3)ಮಾಯೆ (4)ಜೀವೇಶ್ವರ ವಿಭಾಗ
(5)ಪಂಚಕೋಶ ವಿವೇಕ
(6)ಅವಸ್ಥಾತ್ರಯ ವಿವೇಕ
(3)ಸಾಧನ ಮೋಕ್ಷ:
(1)ಅಧ್ಯಾಸ (2)ಬಂಧಮೋಕ್ಷ
(3)ಉಪಾಸನೆ(4)ಸಾಧನ ಮೋಕ್ಷ
ಪ್ರಮಾಣ ಪ್ರಮೇಯ ವ್ಯವಹಾರ:
ಪ್ರಮಾಣವು ಎರಡು ವಿಧ.(1)ಶ್ರುತಿ ಪ್ರಾಮಾಣ್ಯ (2)ತಕ೯ ಪ್ರಾಮಾಣ್ಯ(ಯುಕ್ತಿ)
ಪ್ರಮಾಣ ಪ್ರಮೇಯ ವ್ಯವಹಾರವೆಲ್ಲವೂ ಅಧ್ಯಾ¸ ರೂಪವಾದ ಅವಿದ್ಯೆಯೇ.ಕಮ೯ದಲ್ಲಿ ತೊಡಗುವುದಕ್ಕೆ ನಾನು ಕತೃ೯ ನಾನು ಭೋಕ್ತø ಎಂಬ ಭಾವನೆ ಅವಶ್ಯಕ. ಆತ್ಮಜ್ಞಾನವು ಕಮ೯ದಲ್ಲಿ ತೊಡಗುವುದಕ್ಕೆ ವಿರುದ್ಧವಾಗಿರುತ್ತದೆ.ಕಮ೯ಗಳನ್ನು ಮಾಡಿ ಪಡೆದುಕೊಳ್ಳಬೇಕಾದ ಯಾವ ಕಮ೯ವೂ ಇಲ್ಲದವನು ನಾನು ಎಂಬ ಜ್ಞಾನನÅ ಅವಶ್ಯಕ.ಕತೃ೯ತ್ವ, ಭೋಕ್ತøತ್ವ, ಗಮನ ಆಗಮನ ಗಳಿಲ್ಲದವನು ನಾನು ಎಂಬುದು ಆತ್ಮಜ್ಞಾನ. ಶಾಸ್ತ್ರ,ಶಿಷ್ಯ, ಗುರು ಎಂಬ ಭೇದವನ್ನು ಅಧ್ಯಾರೋಪ ಅಪವಾದ ನ್ಯಾಯದಿಂದ ವೇದಾಂತದಲ್ಲಿ ಅಂಗೀಕರಿಸಿದೆ.
ಶ್ರುತಿಯು ವೈದಿಕರು ಮಾತ್ರ ಒಪ್ಪಿರುವ ಪ್ರಮಾಣ.ಧಮ೯ವನ್ನು ತಿಳಿಸುವ ಶಾಸ್ತ್ರಕ್ಕೂ ಯಾವ ವಿರೋಧವೂ ಇಲ್ಲ.ಪ್ರಮಾಣ ಪ್ರಮೇಯಕ್ಕೆ ಮೂಲವು ಪ್ರಮಾತೃತ್ವವು.ಪ್ರಮಾತೃತ್ವವನ್ನು ಅಲ್ಲಗಳೆದು ಆತ್ಮನ ನಿಜವಾದ ಅದ್ವೈತ ಸ್ವರೂಪವನ್ನು ತಿಳಿಸಿಕೊಡುವುದೇ ಶ್ರುತಿಯ ಕೆಲಸವು.ವೇದಾಂತ ಜ್ಞಾನವು ಪ್ರಮಾಣಗಳ ಪ್ರಮಾತೃತ್ವªನ್ನು ಅತ್ಯಂತಿಕವಾಗಿ ಬಾಧಿಸುವುದರಿಂದ ಇದಕ್ಕೆ 'ಅಂತ್ಯಪ್ರಮಾಣ'ವೆಂದು ಹೆಸರು1.
ಆತ್ಮನು ಶಾಸ್ತ್ರ ಪ್ರಮಾಣದಿಂದಲೇ ತಿಳಿಯ ಬರುವನೆಂದು ವೇದಾಂತಿಗಳು ಹೇಳಿದರೂ ಅವನು ಘಟಾದಿಗಳಂತೆ ಪ್ರಮೇiÀುನೆಂದು ತಿಳಿಯಬಾರದು. ಆತ್ಮನು ಅಪ್ರಮೇಯ. ಪ್ರಮಾಣವು ಪ್ರಮೇಯದ ವಿಷಯದಲ್ಲಿ ತೊಡಗುತ್ತದೆ. ಪ್ರಮಾತೃವಿನ ವಿಷಯದಲ್ಲಲ್ಲ.ಆತ್ಮನ ಧಮ೯ವಲ್ಲದ್ದನ್ನು ತೆಗೆದುಹಾಕಿ ಆತ್ಮಸ್ವರೂಪವನ್ನು ತಿಳಿಸುವುದರಿಂದ ಮಾತ್ರವೇ ಶ್ರುತಿಯು ಪ್ರಮಾಣವು.ಅದಲ್ಲದರ ಧವi೯ವನ್ನು ಕಳೆಯುವುದರಿಂದ ಪ್ರಾಮಾಣ್ಯವು ಸಿದ್ಧವಾಗುತ್ತದೆ2.ಸ್ವತ: ಸಿದ್ಧವಾಗಿರುವ ತನ್ನ ಸ್ವರೂಪವೇ ಆಗಿರುವ ಆತ್ಮವನ್ನು ನಿರಾಕರಿಸಲು ಯಾರಿಂದಲೂ ಸಾಧ್ಯವಿಲ್ಲ.ಶ್ರುತಿಯು ಅದ್ವೈತವನ್ನು ನೇರವಾಗಿ ತಿಳಿಸುವುದಿಲ.್ಲಈ ಎಲ್ಲಾ ವ್ಯವಹಾರವೂ ಅಧ್ಯಾರೋಪ ದೃಷ್ಟಿಯಿಂದ ಉಂಟು.ಅಪವಾದ ದೃಷ್ಟಿಯಿಂದ ಇಲ.್ಲ
ತಕ೯:ಬ್ರಹ್ಮದ ಅನುಭವವು ಪ್ರತ್ಯಕ್ಷಾದಿ ಗಳಿಂದ ಆಗುವುದಿಲ್ಲ.ಇದ್ದು ಕೊಂಡಿರುವ ವಸ್ತುವನ್ನುಭೂತವಸ್ತು, ಪರಿನಿಷ್ಟಿತ ವಸ್ತು ಮುಂತಾದ ಪಯಾ೯ಯ ಪದಗಳಿಂದ ಕರೆಯುತ್ತಾರೆ. ತಕ೯ವು ದೃಷ್ಟವಾದ ವಸ್ತುವಿನ ಹೋಲಿಕೆಯಿಂದ ಅದೃಷ್ಟವಾದುದನ್ನು ಸಮಥಿ೯ಸುವುದಕ್ಕೆ ಉಪಯೋಗವಾಗುತ್ತದೆ3. ಆತ್ಮವು ಶಾಸ್ತ್ರದೃಷ್ಟವಾದದ್ದೇ ಹೊರತು ಪ್ರತ್ಯಕ್ಷ ದೃಷ್ಟವಲ್ಲ. ಬ್ರಹ್ಮವು ಅಚಿಂತ್ಯವಾಗಿರುತ್ತದೆ. ಆದ್ದರಿಂದಲೇ ಇದನ್ನು ಕೇವಲ ತಕ೯ದಿಂದ ತಿಳಿಯುವುದು ಸಾಧ್ಯವಿಲ್ಲ.
ಶ್ರುತಿಯು ಒಂದಾನೊಂದು ವಿಲಕ್ಷಣ ರೀತಿಯಿಂದ ಅನಾತ್ಮವನ್ನೆಲ್ಲಾ ಬಿಡಿಸಿ ಆತ್ಮನಲ್ಲಿಯೇ ಮನಸ್ಸು ವಿಶ್ರಾಂತವಾಗುವಂತೆ ಬೋಧಿüಸುತ್ತದೆ. ಈ ಕ್ರಮಕ್ಕೆ ಆಗಮವೆಂದು ಹೆಸರು.ಸಾಧಕನು ಆಚಾಯ೯ನ ಉಕ್ತಿಯಿಂದಲೂ, ತನ್ನ ಬುದ್ಧಿಯಿಂದಲೂ ಆತ್ಮ ಜ್ಞಾನವನ್ನು ಮಾಡಿಕೊಳ್ಳಬೇಕು ಎಂದು ದೃಷ್ಟಾಂತ ಪೂವ೯ಕವಾಗಿ ತಕ೯ದ ಅವಶ್ಯಕತೆಯನ್ನು ತಿಳಿಸುತ್ತದೆ. ತಕ೯, ಉಪಪತ್ತಿ, ಯುಕ್ತಿ ಇವೆಲ್ಲವೂ ಪಯಾ೯ಯ ಪದಗಳು.ತಾಕಿ೯ಕರು ದೃಷ್ಟಾಂತ ಬಲದಿಂದಲೇ ಕಾಯ೯ ಕಾರಣ ಮುಂತಾದವುಗಳ ಸ್ವರೂಪವನ್ನುನಿಣ೯ಯಿಸುವುದಕ್ಕೆ ಹೊರಟಿರುತ್ತಾರೆ.
ವೇದಾಂತಿಗಳು ಶ್ರುತಿ ಪ್ರಮಾಣದಿಂದಾಗುವ ಅನುಭವವನ್ನು ಪ್ರಧಾನವಾಗಿಟ್ಟು ಕೊಂಡಿರುತ್ತಾರೆ.ಬೆಂಕಿಯು ತಣ್ಣಗಿದೆ ಎಂದಾಗಲೀ ಸೂಯ೯ನು ಚಂದ್ರನಂತೆ ತಂಪಾಗಿರುವನೆಂದಾಗಲೀ ತೋರಿಸಲು ಸಾಧ್ಯವಾಗಲೀ ಯಾವ ದೃಷ್ಟಾಂತವೂ ಇರುವುದಿಲ್ಲ.
ಸಾಕ್ಷಿ: ಸೂಯ೯ನು ಎಲ್ಲವನ್ನೂ ನೇರವಾಗಿ ಬೆಳಗುವಂತೆ ಸಾಕ್ಷಿಯಾದ ಆತ್ಮನು ಎಲ್ಲವನ್ನೂ ಅರಿಯುತ್ತಾನೆ.ಸಾಕ್ಷಿಯು ಕೂಟಸ್ಥನಿತ್ಯ.ಸ್ವಯಂಸಿದ್ಧ.ಸಾಕ್ಷಿಯನ್ನು ಪ್ರಮಾಣದಿಂದಾಗಲೀ,ತಕ೯ದಿಂದಾಗÀಲೀ ಸಾಧಿಸುವುದಕ್ಕೆ ಅಥವಾ ನಿರಾಕರಿಸುವುದಕ್ಕಾಗಲೀ ಹೊರಡುವವನೇ ಪ್ರಮಾಣ ತಕ೯ಗಳಿಗೂ ಸಾಕ್ಷಿಯಾಗಿರುವುದರಿಂದ ಅವನನ್ನೇ ಇಲ್ಲವೆನ್ನುವುದು ಯಾರಿಂದಲೂ ಆಗಲಾರದೆಂಬುದೇ ಸರಿಯಾದ ಸಿದ್ಧಾಂತ4.
ಪ್ರಮೇಯ: ಬ್ರಹ್ಮವು ಜಗತ್ಕಾರಣವಾಗಿದೆ.ಮಣ್ಣಿನಿಂದ ಹುಟ್ಟಿ,ಮಣ್ಣಿನಲ್ಲಿಯೇ ಇದ್ದು ,ಮಣ್ಣಿನಲ್ಲಿಯೇ ಲಯವಾಗುವ ಗಡಿಗೆ,ಕುಡಿಕೆ,ಮಡಕೆ ಮುಂತಾದವುಗಳು ಮಣ್ಣಿಗಿಂತ ಬೇರೆ ಅಲ್ಲ.ಅದರಂತೆ ಬ್ರಹ್ಮದಿಂದಲೇ ಹುಟ್ಟಿ ಬ್ರಹ್ಮದಿಂದಲೇ ಬೆಳೆದು ,ಬ್ರಹ್ಮದಲ್ಲಿಯೇ ಲಯವಾಗುವ ಜಗತ್ತು ಬ್ರಹ್ಮಕ್ಕಿಂತ ಬೇರೆ ಅಲ್ಲ.ಅಚೇತನವಾದದ್ದು ಯಾವುದೇ ಕಾರಣವಲ್ಲವೆಂದು ತಿಳಿಯಪಡಿಸುವುದಕ್ಕೆ ಜಗತ್ಕಾರಣವನ್ನು ಉಪದೇಶಿಸಿದೆಯೇ ಹೊರತು ಬ್ರಹ್ಮವು ನಿಜವಾಗಿ ಕಾಯ೯ ಕಾರಣ ಭಾವವುಳ್ಳದ್ದು ಎಂಬ ಅಭಿಪ್ರಾಯವಲ್ಲ.ಎಲ್ಲವೂ ಬ್ರಹ್ಮದಿಂದಲೇ ಹುಟ್ಟಿದೆ ಎಂಬುದೇ ವೇದಾಂತಿಗಳ ಮತವು.
ಸತ್ಕಾಯ೯ವಾದ: ಬ್ರಹ್ಮಕ್ಕೂ ಜಗತ್ತಿಗೂ ಕಾಯ೯ಕಾರಣ ಭಾವವನ್ನು ಒಪ್ಪಿರುವದು ಸದ್ರೂಪವಾದ ಬ್ರಹ್ಮವೊಂದೇ ಸತ್ಯವೆಂದೂ ಅದರಲ್ಲಿ ಕಾಯ೯ವಾದ ಜಗತ್ತು ಇಲ್ಲವೇ ಇಲ್ಲವೆಂದು ತಿಳಿಸುವುದಕ್ಕೆ. ವೇದಾಂತಿಗಳು ಹೇಳುವ ಬ್ರಹ್ಮಕಾರಣವಾದವು ಕಾಯ೯ ಕಾರಣವಾದವನ್ನು ಗಟ್ಟಿಗೊಳಿಸುವುದಕ್ಕಲ್ಲ.ಇತರ ವಾದಿಗಳು ಹೇಳುವ ಸತ್ಕಾಯ೯ವಾದ ಅಸತ್ಕಾಯ೯ವಾದವನ್ನು ತಳ್ಳಿಹಾಕುವುದಕ್ಕೆ.ಸದ್ರೂಪವಾದ ಬ್ರಹ್ಮವೊಂದೇ ಮಾಯಿಕವಾಗಿ ಉತ್ಪತ್ಯಾದಿಗಳನ್ನು ಪಡೆಯುವಂತೆ ಕಾಣುತ್ತದೆ ಎಂಬ ವಾದವೇ ನಿಜವಾದ ಸತ್ಕಾಯ೯ವಾದ. ಪರಮಾಥ೯ ತತ್ವವು ಹುಟ್ಟುವುದಿಲ್ಲ. ಅದು ಅದ್ವಿತೀಯ ಎಂಬುದು ವೇದಾಂತಿಗಳ ಮತ. ಅವರ ವಾz.Àದಿಂದಲೂ ಸಿದ್ಧವಾಗುತ್ತದೆ. ಆತ್ಮಭಿನ್ನವಾದದ್ದೆಲ್ಲವೂ ತನ್ನ ರೂಪದಿಂದ ಅನೃತವು.ಆತ್ಮ ರೂಪದಿಂದ ಸತ್ ಎಂಬುದು ವೇದಾಂತ ಸಿದ್ಧಾಂತವು.
ಅಜಾತಿವಾದ: ಎಂದರೆ ಬ್ರಹ್ಮವೊಂದೇ ಪರಮಾಥ೯ ಸತ್ಯವಾಗಿರುತ್ತದೆ.ಅದರಲ್ಲಿ ಕಾಯ೯ ಕಾರಣ ಭಾವವಿಲ್ಲಎಂಬ ವಾದವನ್ನು ಮಂದ ಮಧ್ಯಮಾಧಿಕಾರಿಗಳಿಗೆ ತಿಳಿಸುವುದಕ್ಕಾಗಿ ಒಪ್ಪಿರುವ ಕಾರಣಕ್ಕೂ ಸತ್ಕಾಯ೯ ವಾದ ಎಂದೇ ಹೆಸರು.ಸಾಂಖ್ಯರು ಒಪ್ಪಿರುವ ಸತ್ಕಾಯ೯ ವಾದವನ್ನೂ ವೈಶೇಷಿಕರು ಒಪ್ಪಿರುವ ಅಸತ್ಕಾಯ೯ವಾದವನ್ನು ತಳ್ಳಿ ಹಾಕುವುದಕ್ಕಾಗಿ ಈ ಸತ್ಕಾಯ೯ವನ್ನು ವೇದಾಂತಿಗಳು ಒಪ್ಪಿರುತ್ತಾರೆ.
ಮಾಯೆ: ಬ್ರಹ್ಮವೊಂದೇ ಪರÀಮಾಥ೯ ಸತ್ಯವೆಂಬುದನ್ನು ತಿಳಿಸುವುzಕ್ಕೋಸ್ಕರ ಜಗತ್ತು ಬ್ರಹ್ಮದಿಂದ ಮಾಯಿಕವಾಗಿ ಹುಟ್ಟುತ್ತದೆ ಎಂಬ ಸತ್ಕಾಯ೯ವಾದವನ್ನು ವೇದಾಂತವು ಅಂಗೀಕರಿಸಿದೆ.ಬ್ರಹ್ಮವನ್ನು ಜಗತ್ತಿನ ಅಪೇಕ್ಷೆಯಿಂದ ಈಶ್ವರನೆಂದು ಕರೆಯುತ್ತಾರೆ. ಅವ್ಯಾಕೃತ ನಾಮರೂಪಗಳು ತಮ್ಮ ಆತ್ಮಸ್ವರೂಪವನ್ನು ಇಟ್ಟುಕೊಂಡೇ ವ್ಯಾಕೃತವಾಗುತ್ತವೆ.ನಾಮ ರೂಪಗಳಿಗೆ ಬ್ರಹ್ಮವೇ ಸ್ವರೂಪ.ಬ್ರಹ್ಮಕ್ಕೆ ನಾಮರೂಪಗಳು ಸ್ವರೂಪವಲ್ಲ.ಈಗಲೂ ಎಲ್ಲಾಕಡೆಯಲ್ಲಿಯೂ ಆv್ಮನೇ ಇರುತ್ತಾನೆಂದು ಶ್ರುತಿಯು ಹೇಳಲು ಕಾರಣ.ಆತ್ಮನಿಗಿಂತ ಬೇರೆಯಾದ ಅನಾತ್ಮವೆಂಬುದು ಎಲ್ಲಿಯೂ ಎಂದಿಗೂ ಇರುವುದಿಲ್ಲ.ಕಾಯ೯ವಾದ ಜಗತ್ತು ಈಶ್ವರನ ಶಕ್ತಿಗಿಂತ ಬೇರೆ ಅಲ್ಲ.
'ಇಂದ್ರೋ ಮಾಯಾಭಿಃ ಪುರುರೂಪ ಈಯತೇ'. ಮಾಯೆ ಎಂದರೆ ಇಂದ್ರಿಯಗ ಳಿಂದಾದ ಅರಿವು ಎಂದಥ೯.ಮಾಯೆಯಿಂದ ಇಂದ್ರನು (ಪರಮೇಶ್ವರನು)ಅನೇಕವಾಗಿ ಕಾಣಿಸುತ್ತಾನೆ.ಸರಿಯಾದ ದೃಷ್ಟಿಯಿಂದ ನೋಡಿದರೆ ಒಬ್ಬನೇ ಆಗಿ ಕಾಣಿಸುತ್ತಾನೆ. ಯಾವುದು ನಿಜವಾಗಿಯೂ ಇಲ್ಲವೋ ಆದರೆ ಇದ್ದಂತೆ ತೋರುತ್ತದೆಯೋ ಅದೇ ಮಾಯೆ.
ಜೀವೇಶ್ವರ ವಿಭಾಗ:
ಆತ್ಮನು ಏಕನೂ ಅದ್ವಿತೀಯನೂ ಆಗಿದ್ದರೂ ಅವನಲ್ಲಿ ಜೀವೇಶ್ವರ ವಿಭಾಗವನ್ನು ಕಲ್ಪಿಸಿರುವುದು ಏಕೆಂದರೆ ಲೋಕಪ್ರಸಿದ್ಧನಾದ ಜೀವನನ್ನು ಅನುವಾದ ಮಾಡಿಕೊಂಡು ಜೀವನ ಪರಮಾಥ೯ ಸ್ವರೂಪವಾದ ಈಶ್ವರನನ್ನು ತಿಳಿಸುವುದಕ್ಕೆ5.ಜೀವನು ಪರಮಾತ್ಮನಿಗಿಂತ ಬೇರೆಯಾಗಿ ಇರುತ್ತಾನೆಂದು ಶ್ರುತಿಗಳಲ್ಲಾಗಲೀ ಎಲ್ಲಿಂiÀೂ ಹೇಳಿಲ್ಲ.
ಶ್ರುತಿಯಲ್ಲಿ ಜೀವ ಪರಮೇಶ್ವರರ ಭೇದವನ್ನು ನಂಬುವುದು ಸರಿಯಲ್ಲವೆಂದು ಹೇಳಿರುತ್ತದೆ. ಆತ್ಮತತ್ವವನ್ನು ಹೇಳಿರುತ್ತದೆ.ಭೇದಜ್ಞಾನದಿಂದ ಸಂಸಾರವೂ ಅಭೇದ ಜ್ಞಾನದಿಂದ ಮೋಕ್ಷವೂ ಆಗುವುದೆಂದು ಹೇಳಿರುತ್ತದೆ.ಪರಮಾತ್ಮನನ್ನು ನನ್ನ ಆತ್ಮವೇ ಎಂದು ತಿಳಿಯಬೇಕು ಎಂದು ಸ್ಪಷ್ಟವಾಗಿ ಹೇಳಿರುತ್ತದೆ.ಆದ್ದರಿಂದ ಶ್ರುತಿ, ಸೂತ್ರಗಳಿಗೆ ಭೇದವು ಸಮ್ಮತವಲ್ಲ.ಐಕ್ಯದಲ್ಲಿಯೇ ತಾತ್ಪಯ೯ವಿದೆ.ಶಾಸ್ತ್ರವು ಜ್ಞಾಪಕವೇ ಹೊರತು ಕಾರಕವಲ್ಲ.ಅದುಇರುವುದನ್ನು ಇದ್ದಂತೆಯೇ ತಿಳಿಸುತ್ತದೆ(ಯಥಾಥ೯ ಜ್ಞಾನ).ಇಲ್ಲದ್ದನ್ನು ಉಂಟು ಮಾಡುವುದಿಲ್ಲ.ಪರಮಾತ್ಮನು ಅದ್ವಿತೀಯ ನಾಗಿದ್ದರೂ ಅವನಲ್ಲಿ ಜೀವೇಶ್ವರ ಭೇದವನ್ನು ಕಲ್ಪಿಸಿರುವುದಕ್ಕೆ ಅವಿದ್ಯಾ ಕಲ್ಪಿತ ನಾಮ ರೂಪಗಳಿಂದಾಗಿರುವ ಕಾಯ೯ ಕಾರಣ ಸಂಘಾತಗಳೆಂಬ ಉಪಾಧಿಗಳ ಸಂಬಂಧವೇ ಕಾರಣ.
ಆತ್ಮತತ್ವವನ್ನು ತಿಳಿದಾಗ ನಿರುಪಾಧಿಕ ವಾದದಲ್ಲಿ ಯಾವಜೀವೇಶ್ವರ ವಿಭಾಗವೂ ಇರುದಿಲ್ಲ.ಅಂತ:ಕರಣವೆಂಬ ಉಪಾಧಿಯಿಂದ ಜೀವರೂಪವು ಪರಿಕಲ್ಪಿತ ವಾಗಿರುತ್ತದೆಯೇ ಹೊರತು ಸ್ವತಂತ್ರವಾಗಿ ಜೀವತ್ವವು ಯಾರಿಗೂ ತೋರುವುದಿಲ್ಲ.
ಜೀವನಿಗೆ ಜನನಮರಣಗಳು ಪ್ರತ್ಯಕ್ಷವಾಗಿಲ್ಲ.ಶರೀರ ಸಂಬಂಧದಿಂದ ಹುಟ್ಟುತ್ತಾನೆ,ಸಾಯುತ್ತಾನೆ ಎಂಬ ವ್ಯವಹಾರವಿದೆ ಸಾಧನ ಫಲಗಳು ಸತ್ಯವೆಂದು ನಂಬಿರುª ಅವಿದ್ಯಾವಂತರಿಗಾಗಿಯೇ ಶಾಸ್ತ್ರವು ಕಮೋ೯ಪದೇಶವನ್ನು ಮಾಡತ್ತದೆ. ಆಕಾಶವು ಒಂದೇ ಆದರೂ ಘಟಾಕಾಶಗಳು ಹಲವು ಇರುವಂತೆ ಸೂಯ೯ನು ಒಬ್ಬನೇ ಆದರೂ ಜಲಸೂಯ೯ಕವಾದ ಪ್ರತಿಬಿಂಬಗಳು ಹಲವು ಇರುವಂತೆ ಪರಮಾತ್ಮನು ಒಬ್ಬನೇ ಆದರೂ ಜೀವರು ಹಲವು ಇರಬಹುದು. ಪರಮೇಶ್ವರನೇ ಜಗತ್ತನ್ನು ಸೃಷ್ಟಿಸಿ ಶರೀರವನ್ನು ಪಡೆದುಕೊಂಡು ಸಂಸಾರಿಯಾಗಿರುವನೆಂದು ಹೇಳಿದೆ.
ಪಂಚಕೋಶ ವಿವೇಕ:
ಸಾಕ್ಷಿ ಎಂದರೆ ಪ್ರಮಾತೃವನ್ನೂ ಕೂಡ ಬೆಳಗುತ್ತಿರುವ ಆತ್ಮ ಚೈತನ್ಯವು. ದೇಹಾದಿಗಳಲ್ಲಿ ಆತ್ಮಬುದ್ಧಿಯನ್ನು ಕಳೆಯುವುದಕ್ಕಾಗಿ ತೈತ್ತಿರೀಯ ಉಪನಿಷತ್ತಿನಲ್ಲಿ ಉಪಯೋಗಿಸಿರುವ ಅಧ್ಯಾರೋಪ ಅಪವಾದ ನ್ಯಾಯಕ್ಕೆ 'ಪಂಚಕೋಶವಿವೇಕ'ವೆಂದು ಹೆಸರು. ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ, ಆನಂದಮಯ ಇವೇ ಪಂಚಕೋಶಗಳು.
ಅನ್ನಮಯಕೋಶ: ಈ ಶರೀರವೇ ಅನ್ನಮಯ ಕೋಶ.
ಪ್ರಾಣಮಯಕೋಶ: ಕ್ರಿಯಾತ್ಮಕವಾದ ಸಮಷ್ಟಿ ವಾಯುವಿನ ಒಂದು ಭಾಗವು.ಈ ಉಪಾಧಿಯಿಂದ ನಾವು ಪ್ರಾಣಿಗಳೆನಿಸಿರುವೆವು.
ಮನೋಮಯಕೋಶ: ಇದರಿಂದ ನಾವು ಮಂತೃ (ಮನನ ಮಾಡುವವರು) ಎನಿಸಿದ್ದೇವೆ.
ವಿಜ್ಞಾನಮಯ ಕೋಶ: ವೇದಾಥ೯ವನ್ನು ನಿಶ್ಚಯಿಸಿಕೊಂಡು ಕಮ೯ವನ್ನು ಮಾಡುವ ಸಮಷ್ಟಿ ಬುದ್ಧಿಯ ಒಂದು ಭಾಗವು.ಈ ವಿಜ್ಞಾನದಿಂದಲೇ ನಾವು ಕತೃ೯,ಜ್ಞಾತೃ ಎನಿಕೊಂಡಿರುವುದು.
ಆನಂದಮಯ ಕೋಶ: ಸರ್ವಾಂತರನೂ ಸವ೯ಸಾಕ್ಷಿಯೂ ಆಗಿರುª ನಿವಿ೯ಶೇಷನಾದ ಆತ್ಮನನ್ನು ಅರಿತು ಕೊಂಡರೆ ಆಗ ಯಾವ ದೇಹವಾಗಲೀ ಪಂಚಭೂತಗಳ ಸಂಬಂಧವಾಗಲಿ ಇಲ್ಲವೆಂದು ಅರಿತುಕೊಂಡು ಸಂಸಾರ ಭಯವಿಲ್ಲದೇ ತನ್ನ ಸ್ವರೂಪದಲ್ಲಿಯೇ ತಾನು ನೆಲೆ ನಿಲ್ಲುವುದುದೆಂದು ತೈತ್ತಿರೀಯ ಉಪನಿಷತ್ತಿನಲ್ಲಿ ಹೇಳಿದೆ6 .
ಅವಸ್ಥಾತ್ರಯ ವಿವೇಕ
ಎಚ್ಚರ...............ವಿಶ್ವ.............ಅಕಾರ............ಸ್ಥೂಲಭುಕ್
ಕನಸು .............ತೈಜಸ........ಉಕಾರ...........ಸೂಕ್ಷ್ಮಭುಕ್
ನಿದ್ರೆ..............ಪ್ರಾಜ್ಞ.............ಮಕಾರ.............ಆನಂದಭುಕ್
ಎಚ್ಚರ, ಕನಸು, ನಿದ್ರೆ ಈಮೂರನ್ನೂ ನೋಡುವವನು ನಾನೇ ಎಂಬುದನ್ನು ಅರಿತುಕೊಳ್ಳಬೇಕು.ಎಚ್ಚರದ ಸಮಷ್ಟಿ ಪ್ರಪಂಚವನ್ನು ಬೆಳಗುತ್ತಿರುವ ಆತ್ಮರೂಪಕ್ಕೆ ವೈಶ್ವಾನರ ಎಂದು ಹೆಸರು.
ಮಾಂಡೂಕ್ಯ ಉಪನಿಷತ್ತಿನಲ್ಲಿ ವೈಶ್ವಾನರನನ್ನು ಹೀಗೆಂದು ವಣಿ೯ಸಿದೆ.
(1) ಹೊರಅರಿವು
(2)ಇಂದ್ರಿಯ,ಪ್ರಾಣ, ಅಂತ:ಕರಣ ರೂಪವಾದ ಹತ್ತ್ತೊಂಬತ್ತು ಅರಿವಿನ ದ್ವಾರಗಳು
(3)ಸ್ಥೂಲವಿಷಯ ಭೋಗ
(4) ಇದು ಆತ್ಮನ ಒಂದು ಪಾದ ಮಾತ್ರ.
ತೈಜಸ: ಕನಸಿನ ಪ್ರಪಂಚವನ್ನು ನೋಡುವ ಆತ್ಮನಿಗೆ ತೈಜಸನೆಂದು ಹೆಸರು.
ಮಾಂಡೂಕ್ಯದಲ್ಲಿ ತೈಜಸನ ವಣ೯ನೆ ಹೀಗಿದೆ.
(1)ಈ ಆತ್ಮನಿಗೆ ಒಳಅರಿವು
(2)ದ್ಯುಲೋಕವೇ ಮೊದಲಾದ ಏಳು ಅಂಗಗಳು
(3)ಹತ್ತೊಂಬತ್ತು ಅರಿವಿನ ದ್ವಾರಗಳು
(4)ಸೂಕ್ಷ್ಮ ವಿಷಯದಭೋಗ
(5)ಆತ್ಮನ ಎರಡನೆಯ ಪಾದ
ಎಚ್ಚರಕ್ಕೂ ಕನಸಿಗೂ ಯಾವ ವ್ಯತ್ಯಾಸವೂ ಇರುವುದಿಲ್ಲ.ಅದ್ವೈತ ಜ್ಞಾನವಾದಾಗ ಇವೆರಡೂ ಮಿಥ್ಯೆಯೆಂದು ನಿಶ್ಚಯವಾಗುತ್ತದೆ. ಆತ್ಮನಲ್ಲಿಯೇ ಜಾಗ್ರತ ಸ್ವಪ್ನಗಳೆರಡೂ ಕಲ್ಪಿತವಾಗಿರುತ್ತವೆ.
ಸುಷುಪ್ತಿ:ಛಾಂದೋಗ್ಯದಲ್ಲಿ ಜೀವನು ಈ ಅವಸ್ಥೆಯಲ್ಲಿ ಸದ್ರೂಪವಾದ ಬ್ರಹ್ಮದಲ್ಲಿ ಒಂದಾಗಿರುವನೆಂದು ಹೇಳಿದೆ. ಬೃಹದಾರಣ್ಯಕದಲ್ಲಿ ಪ್ರಾಜ್ಞನೊಡನೆ ಆಲಂಗಿತನಾಗಿರುತ್ತಾನೆಂದು ಹೇಳಿದೆ.ಮಾಂಡೂಕ್ಯದಲ್ಲಿ ಆತ್ಮನು ಏಕೀಭೂತನೂ,ಪ್ರಜ್ಞಾನ ಘನನೂ ಆನಂದಮಯನೂ ಆಗಿರುತ್ತಾನೆಂದು ಹೇಳಿದೆ.ಕೇವಲ ಚಿನ್ಮಾತ್ರವಾಗಿರುವ ಈ ರೂಪಕ್ಕೆ ಪ್ರಾಜ್ಞನೆಂದು ಹೆಸರು.ಇದು ಆತ್ಮನ ಮೂರನೆಯ ಪಾದ.ಇದು ಆತ್ಮನ ಪರಮಾಥ೯ ಸ್ವರೂಪವಲ್ಲ. ಸುಷುಪ್ತಿಯಲ್ಲಿ ಆತ್ಮನಿಗೆ ಯಾವ ವಿಶೇಷ ಅರಿವೂ ಇರುದಿಲ್ಲ.ಆತ್ಮನ ಸ್ವರೂಪವಾದ ಚೈತನ್ಯವು ಇರುತ್ತದೆ.ಏಕೆಂದರೆ ಅಲ್ಲಿ ದ್ವಿತೀಯ ವಸ್ತುವನ್ನು ತಾನು ಅರಿಯಲಿಲ್ಲವೆಂಬ ಅನುಭವವಿರುವುದೇ ಹೊರತು ತಾನೂ ಇರಲಿಲ್ಲ ವೆಂಬ ಅನುಭವವೇನೂ ಇರುವುದಿಲ್ಲ.ಅಲ್ಲಿ ನಾನು,ಇವನು,ಇದು ಅವನು ಎಂಬ ವಿಶೇಷ ರೂಪವಾದ ಅರಿವಿಲ್ಲದಿರುವುದು ನಿಜ.ಅವಸ್ಥಾತ್ರಯೆಂಬುದು ಆತ್ಮನಲ್ಲಿ ಅಧ್ಯಾರೋಪಿತವಾಗಿರುವುದೇ ಹೊರತು ಪರಮಾಥ೯ವಲ್ಲ.ಆದ್ದರಿಂದಲೇ ಶ್ರುತಿಯು ಇವು ಮೂರೂ ಸ್ವಪ್ನಗಳು ಎಂದು ಹೇಳುತ್ತಿದೆ.
ಈ ಆತ್ಮನಿಗೆ ಯಾವ ಅವಸ್ಥೆಯೂ ಇಲ್ಲದ್ದರಿಂದ ಅವನು ವೈಶ್ವಾನರ,ತೈಜಸ, ಪ್ರಾಜ್ಞ ಎಂಬ ಅಧ್ಯಾರೋಪಿತ ರೂಪಗಳಿಗಿಂತ ವಿಲಕ್ಷಣನಾದ ತುರೀಯನು.ಈ ಮೂರಕ್ಕೆ ಹೋಲಿಸಿದಾಗ ನಾಲ್ಕನೆಯವನು.ಮಾಂಡೂಕ್ಯ ಉಪನಿಷತ್ತಿನಲ್ಲಿ ಓಂಕಾರ ನಿಣ೯ಯವನ್ನು ಮಾಡಿರುತ್ತದೆ.ಓಂಕಾರ,ಬ್ರಹ್ಮ, ಆತ್ಮ ಇವು ಮೂರೂ ಒಂದೇ ತತ್ವಕ್ಕೆ ಹೆಸರುಗಳು.ಪರಮಾಥ೯ದಲ್ಲಿ ನಾಮರೂಪಗಳಿಲ್ಲ. ಓಂಕಾರಕ್ಕೆ ಲಕ್ಷ್ಯವಾದ ಬ್ರಹ್ಮವು ನಮ್ಮ ಆತ್ಮನೇ ಆಗಿದ್ದು ಪಾದತ್ರಯ ವಿಲಕ್ಷಣವೂ ಮಾತ್ರಾತ್ರಯಾತೀತವೂ ಆಗಿರುತ್ತದೆ7.
ಸಾಧನಮೋಕ್ಷ:
ಮೋಕ್ಷವು ಹೊಸದಾಗಿ ಪಡೆಯುವುದಲ್ಲ. ನಿತ್ಯಪ್ರಾಪ್ತವಾದದ್ದು. ಇಲ್ಲದ್ದು ಹೊಸದಾಗಿ ಹುಟ್ಟಲಾರದು.ಇದ್ದದ್ದು ನಾಶವಾಗಲಾರದು.ಆದ್ದರಿಂದ ಬಂಧ ಮೋಕ್ಷಗಳು ಪರಮಾಥ೯ವಲ್ಲ8. ಅವಿದ್ಯೆಯಿಂದ ಬಂಧವಾಗಿರುವುದರಿಂದ ಅವಿದ್ಯೆಯನ್ನು ಹೋಗಲಾಡಿಸುವುದಕ್ಕೆ ವಿದ್ಯೆಯು ಅಗತ್ಯ. ಅಜ್ಞರಿಗೆ ತಾವು ಯಾವಾಗಲೂ ನಿತ್ಯ,ಶುದ್ಧ,ಬುದ್ಧ,ಮುಕ್ತ ಸ್ವರೂಪರೇ ಆಗಿದ್ದರೂ ಅದರ ತಿಳುವಳಿಕೆ ಇಲ್ಲದಿರುವುದರಿಂದ ಅವರು ನಿತ್ಯಮುಕ್ತರಾದರೂ ಬದ್ಧರೇ ಆಗಿರುತ್ತಾರೆ.
ನಾಲ್ಕು ಮಹಾವಾಕ್ಯಗಳು ಹೀಗಿವೆ.
(1)ಅಹಂ ಬ್ರಹ್ಮಾಸ್ಮಿ(ನಾನು ಬ್ರಹ್ಮ ವಾಗಿದ್ದೇನೆ)
(2)ತತ್ವಮಸಿ(ನೀನು ಬ್ರಹ್ಮ ವಾಗಿದ್ದೀಯೆ)
(3)ಅಯಮಾತ್ಮಾ ಬ್ರಹ್ಮ(ಈಆತ್ಮವು ಬ್ರಹ್ಮವೇ)
(4)ಪ್ರಜ್ಞಾನಂ ಬ್ರಹ್ಮ(ಪ್ರಜ್ಞಾನವು ಬ್ರಹ್ಮ)
ವiಹಾವಾಕ್ಯಗಳು ಜೀವಬ್ರಹ್ಮೈಕ್ಯವನ್ನು ಬೋಧಿಸುತ್ತವೆ.
ನೀನು ಬ್ರಹ್ಮ ವಾಗಿರುವೆ ಎನ್ನುವ ವಾಕ್ಯವನ್ನು,ನೀನು ಸತ್ತನಂತರ ಅದಾಗುವೆ ಎಂದು ಹೇಳಲಾಗುವುದಿಲ್ಲ.ಜ್ಞಾನ ಉಂಟಾದ ಕೂಡಲೇಆಗುವ ಆಗುವ ಸದ್ಯೋಮುಕ್ತಿಯು ಒಂದೇ.ಮುಕ್ತಿಯಲ್ಲಿ ಎರಡೆಂಬುದಿಲ್ಲ.ಆತ್ಮನಿಗೆ ಶರೀg ವಿರುವುದು ಮಿಥ್ಯಾಭಿಮಾನದಿಂದಲೇ ಹೊರತು ಪರಮಾಥ೯ವಲ್ಲ .ಬದುಕಿರುವಾಗಲೇ ಈಗಲೇ ಮುಕ್ತಿಯಾಗುತ್ತದೆ.ಸತ್ತನಂತರವಲ್ಲ ಎಂದು ಶಂಕರರು ಮತ್ತೆ ಮತ್ತೆ ಹೇಳಿದ್ದಾರೆ.
ಉಪಾಸನೆ:
ಉಪಾಸನೆಗಳಲ್ಲಿ
(1)ಕಮಾ೯ಂಗವಾದ ಉಪಾಸನೆಗಳು : ಆಯಾ ಕಾಯ೯ದ ಸಮೃದ್ಧಿ
(2)ಪ್ರತೀಕೋಪಾಸನೆಗಳು : ಮುಮುಕ್ಷುಗಳಿಗೆ ಜ್ಞಾನೋತ್ಪತ್ತಿ.
(3)ಪ್ರಾಣೋಪಾಸನೆಗಳು
4)ಸಗುಣ ಬ್ರಹ್ಮೋಪಾಸನೆಗಳು:ಬ್ರಹ್ಮ ಪ್ರಾಪ್ತಿ ಕ್ರಮಮುಕ್ತಿಯೂ ಫಲಗಳು ಆಗುವುವು ಎಂದು ಅನೇಕ ವಿಧಗಳಿವೆ.
ಸಗುಣ ಬ್ರಹ್ಮೋಪಾಸಕರಿಗೆ ಬ್ರಹ್ಮಪ್ರಾಪ್ತಿಯೂ ಕ್ರಮಮುಕ್ತಿಯೂ ಫಲವು. ಜ್ಞಾನಕ್ಕಾದರೆ ಯಾವಾಗಲೂ ಜ್ಞಾನಸಮ ಕಾಲದಲ್ಲಿಯೇ ಮುಕ್ತಿ ಎಂಬ ಒಂದೇ ವಿಧವಾದ ಫಲವುಂಟಾಗುತ್ತದೆ.
ಉಪಾಸನೆ:
1.ಉಪಾಸ್ಯ ಉಪಾಸಕ ಎಂಬ ಭೇಧಗಳುಳ್ಳ ಜ್ಞಾನ(ಪುರುಷ ತಂತ್ರ,ವ್ಯಕ್ತಿತಂತ್ರ)
2.ವಸ್ತು ತಂತ್ರ
ಆತ್ಮ ವಿಜ್ಞಾನಕ್ಕೆ ಸಾಧನಗಳು:
ಜ್ಞಾನವು ವಸ್ತು ತಂತ್ರ. ಉಪಾಸನೆ ಎಂದರೆ ಭಾವನಾ ರೂಪವಾದ ಧ್ಯಾನ.ಆತ್ಮ ದಶ೯ನವೆಂದರೆ ಅವನೇ ತಾನೆಂಬ ಅರಿವಿನಲ್ಲಿ ನೆಲೆ ನಿಲ್ಲುವುದು.
ಅಧ್ಯಾತ್ಮಿಕ ಸಾಧನೆಗೆ ಮೂರು ವಿಧಾನಗಳಿವೆ .
1.ಶ್ರವಣ ಎಂದರೆ ಶಾಸ್ತ್ರವಾಕ್ಯಗಳನ್ನೂ ಆಚಾಯ೯ರ ವಾಕ್ಯಗಳನ್ನೂ ಕೇಳಿ ಅಥ೯ವನ್ನು ತಿಳಿದುಕೊಳ್ಳುವುದು.
2.ಮನನ ಎಂದರೆ ಶ್ರವಣ ಮಾಡಿದ್ದನ್ನು ಯುಕ್ತಿಗೆ ಹೊಂದಿಸಿ ಆಲೋಚಿಸುವುದು.
3. ನಿದಿಧ್ಯಾಸನ ಎಂದರೆ ಅರಿವು ಮನಸ್ಸಿಗೆ ನಾಟಿ ನಿಶ್ಚಯ ವಾಗುವಂತೆ ವಸ್ತುವನ್ನುಲಕ್ಷ್ಯವಿಟ್ಟು ಚಿಂತಿಸುವುದು. ಜ್ಞಾನವು ಪ್ರಮಾಣಕ್ಕೂ ವಸ್ತುವಿಗೂ ಅನುಗುಣವಾಗಿ ಆಗತಕ್ಕದ್ದೇ ಹೊರತು ಮನುಷ್ಯ ಪ್ರಯತ್ನದಿಂದ ಆಗತಕ್ಕದ್ದಲ್ಲ.
ಶ್ರವಣ ಮಾಡಬೇಕು,ಮನನ ಮಾಡಬೇಕು,ನಿಧಿಧ್ಯಾಸನ ಮಾಡಬೇಕು ಎಂದು ಅನೇಕಸಲ ಹೇಳಿದೆ.ಇದರಿಂದಲೇ ಸಾಧನೆಯನ್ನು ಆವೃತ್ತಿ ಮಾಡಬೇಕೆಂದು ಸಿದ್ಧವಾಗುತ್ತದೆ.ಜ್ಞಾನವು ವಸ್ತುತಂತ್ರವಾಗಿ ಪ್ರಮಾಣ ಜನ್ಯ ವಾಗಿರುವುದರಿಂದ ನೂರಾರು ನಿಯೋಗ ಗಳಿಂದಲೂ ಆಗತಕ್ಕದ್ದಲ್ಲ.ಬ್ರಹ್ಮಜ್ಞಾನ ಉಂಟಾದ ನಂತರ ಸಾಧಕನಿಗೆ ಯಾವ ಕತ೯ವ್ಯವೂ ಇರುವುದಿಲ್ಲ ನಿದಿಧ್ಯಾಸನದಿಂದ ಇಲ್ಲಿಯೇ ಜ್ಞಾನಪ್ರಾಪ್ತಿಯಾಗಿ ಬ್ರಹ್ಮಸ್ವರೂಪದಲ್ಲಿ ನೆಲೆ ನಿಲ್ಲುವ ಕೈವಲ್ಯವೂ ದೊರಕುತ್ತದೆ.ಜ್ಞಾನದ್ವಾರಾ ಮುಕ್ತನಾದವನು ಅಶರೀರಿಯಾಗಿರುತ್ತಾನೆ.ಏಕೆಂದರೆ ಸಶರೀರತ್ವವು ಮಿಥ್ಯಾ ಜ್ಞಾನ ವಾಗಿರುತ್ತದೆ. ಅವನು ಜ್ಞಾನದಿಂದ ಅಮನಸ್ತೆಯನ್ನು ಪಡೆದಿರುತ್ತಾನೆ. ಯಾವುದಾದರೂ ಒಂದು ಉಪಾಸನೆಯನ್ನು ಆರಿಸಿಕೊಂಡು ಅದೇ ಉಪಾಸನೆಗೆ ಶ್ರುತಿಗಳಲ್ಲಿ ಹೇಳಿರುವ ಧಮ೯ಗಳನ್ನೆಲ್ಲ ಸೇರಿಸಿಕೊಂಡು ಸಾಕ್ಷಾತ್ಕಾರ ವಾಗುವವರೆಗೂ ಉಪಾಸನೆ ಮಾಡಬೇಕು.
ಬ್ರಹ್ಮಜ್ಞಾನಿಗೆ ಜ್ಞಾನಸಮ ಕಾಲದಲ್ಲಿಯೇ ಬ್ರಹ್ಮಪ್ರಾಪ್ತಿಯಾಗಿ ಬಿಡುವುದರಿಂದ ಅದಕ್ಕಾಗಿ ಗತಿ ಉತ್ಕ್ರಾಂತಿಗಳು ಆಗುವುದಿಲ್ಲ.ಆದರೆ ಉಪಾಸಕನಿಗೆ ದೇಶ ವಿಶೇಷ ದಲ್ಲಿರುವ ಕಾಯ೯ ಬ್ರಹ್ಮ ಪ್ರಾಪ್ತಿಯೇ ಫಲವಾಗಿರುವುದರಿಂದ ಅವನಿಗೆ ಗತಿ,ಉತ್ಕ್ರಾಂತಿಗಳು ಆಗುತ್ತವೆ.ಕಮ೯ವೇ ಮೋಕ್ಷಕ್ಕೆ ಕಾರಣವೆಂದು ಕೆಲವರು ಭಾವಿಸಿದ್ದರು.ಇದು ಶ್ರುತಿಗೂ ಯುಕ್ತಿಗೂ ವಿರುದ್ಧವಾದವು.
ಕಮ೯ಫಲವು ಕೊನೆಯಾಗಲು ಈ ಲೋಕದಲ್ಲಿ ಕಮ೯ ಮಾಡಲು ಮತ್ತೆ ಬರುತ್ತಾನೆ.(ಮುಂಡಕ, ಬೃಹದಾರಣ್ಯಕ)ಎಂದು ಹೇಳಿದೆ.ಕಮ೯ಗಳಿಂದ ನಿತ್ಯ ಮುಕ್ತಿಯು ದೊರಕುವುದಿಲ್ಲ.
ಕಮ೯ದ ಕಾಯ೯ವು (1) ಉತ್ಪಾದ್ಯ (2)ವಿಕಾಯ೯(3)ಸಂಸ್ಕಾಯ೯(4)ಆಪ್ಯ ಎಂದು ನಾಲ್ಕು ವಿಧ.ಮೋಕ್ಷವು ಈ ಕಮ೯ದಲ್ಲಿ ಒಂದೂ ಅಲ್ಲ.ಜ್ಞಾನಕ್ಕಿಂತಲೂ ಲೋಕದಲ್ಲಿ ಕಾಮಿಗಳೇ ಹೆಚ್ಚು.ಮುಮುಕ್ಷುಗಳು ಕಡಿಮೆ.ಮೋಕ್ಷವು ನಿತ್ಯಸಿದ್ಧವಾದ್ದರಿಂದ ಕಮ೯ದಿಂದ ಪಡೆಯುವ ಫಲವಲ್ಲ.
ಕಮ೯ವು ತಾನೇ ಅವಿದ್ಯಾನಿಮಿತ್ತವಾದ ಕಾಮದಿಂದ ಆಗಿರುವುದರಿಂದ ಎಂದಿಗೂ ಅಜ್ಞಾನವನ್ನು ಕಳೆಯಲಾರದು.ಆತ್ಮಜ್ಞಾನವಿಲ್ಲದೆ ಎಂದಿಗೂ ಕಮ೯ಕೃತವಾದ ಸಂಸಾರದ ಅಂತವು ಆಗಲಾರದು.ಈಶ್ಠೆರಾಪ೯ಣ ಬುದ್ಧಿಯಿಂದ ಮಾಡಿದ ಕಮ೯ಗಳಿಂದ ಚಿತ್ತಶುದ್ಧಿಯ ಮೂಲಕ ಜ್ಞಾನನಿಷ್ಠೆಗೆ ಯೋಗ್ಯತೆಯೂ, ಜ್ಞಾನವೂ ಉಂಟಾಗುತ್ತದೆ.ಜ್ಞಾನೋತ್ಪತ್ತಿಗೆ ಕಮ೯ವು ಕಾರಣವೆಂಬುದನ್ನು ಶ್ರುತಿ ಸ್ಮøತಿಗಳಲ್ಲಿ ಹೇಳಿದೆ.ಯಾವುದು ಕಾಯ೯ವೋ ಅದು ಅನಿತ್ಯವು. ಇನ್ನು ವಸ್ತುತಂತ್ರ ಜ್ಞಾನವೇ ಜ್ಞಾನವೆಂದರೆ ಅದರೊಡನೆ ಕ್ರಿಯಾಕಾರಕ ಫಲ ಬುದ್ಧಿಯು ಇರಲಾರದಾದ್ದರಿಂದ ಜ್ಞಾನ ಕಮ೯ ಸಮುಚ್ಛಯವು ಹೊಂದುವುದಿಲ್ಲ.ಸಮುಚ್ಛಯವಾದವು ಸರಿಅಲ್ಲ.
ಬಂಧನ ಮತ್ತು ಮೋಕ್ಷ:
ಅಧ್ಯಾಸದ ಹಿನ್ನೆಲೆಯಲ್ಲಿ ಅವಿದ್ಯೆಂiುು ಕೆಲಸ ಮಾಡುತ್ತದೆ.ಮನುಷ್ಯನ ಎಲ್ಲಾ ದು:ಖಗಳಿಗೂ ಈ ಅವಿದ್ಯೆಯೇ ಮೂಲ.ಈ ಅವಿದ್ಯೆಯಿಂದಲೇ ದ್ವೈತವಿರುವುದು. ದ್ವೈತದ ಅರಿವಿನಿಂದಲೇ ಮನುಷÀ್ಯನಿಗೆ ದು:S..ಎರಡನೆಯ ವಸ್ತುವಿನ ಅರಿವಿಂದಲೇ ಮನುಷ್ಯನಿಗೆ ಭಯ ದು:ಖಗಳಿರುತ್ತವೆ.ಆದ್ದರಿಂದ ಮನುಷ್ಯನ ಗುರಿ ಈ ದು:ಖಕ್ಕೆ ಕಾರಣವಾದ ಅವಿದ್ಯೆಯನ್ನು ನಾಶಪಡಿಸುವುದು.ಶಂಕರರ ಪ್ರಕಾರ ಕಮ೯ವು ಅವಿದ್ಯೆಯನ್ನು ನಾಶಪಡಿಸಲಾರದು.ಉಪನಿಷತ್ತು ಹೀಗೆ ಹೇಳುತ್ತದೆ."ಅಕೃತವಾದುದನ್ನು ಕೃತವು ಉಂಟುಮಾಡಲಾರಡು."ಹೇಗೆ ಬೆಳಕು ಮಾತ್ರ ಕತ್ತಲೆಯನ್ನು ನಾಶಪಡಿಸುತ್ತದೋ ಹಾಗೆ ಜ್ಞಾನವು ಮಾತ್ರ ಅವಿದ್ಯೆಯನ್ನು ನಾಶಪಡಿಸುವುದು.
ಕಮ೯ದ ಕಾಯ೯ವು ನಾಲ್ಕು ವಿಧ.ಅದು ವಸ್ತುವನ್ನು ಹೊಸದಾಗಿ ಸೃಷ್ಟಿಸಬಹುದು(ಉತ್ಪಾದ್ಯ)ಅಥವಾ ಆವಸ್ತುವು ಈಗಾಗಲೇ ಇದ್ದರೂ ಹೊಸದಾಗಿ ದೊರಕಿಸಿಕೊಡಬಲ್ಲದು.(ಪ್ರಾಪ್ಯ)ಅದು ವಸ್ತುವನ್ನು ಸಂಸ್ಕರಣ ಅಥವಾ ಶುದ್ಧಿಗೆ ಒಳಪಡಿಸಬಲ್ಲದು.(ಸಂಸ್ಕಾಯ೯)ಇಲ್ಲವೇ ಅದು ವಸ್ತುವನ್ನು ವಿಕಾರಗೊಳಿಸಬಲ್ಲದು.(ವಿಕಾಯ೯)ಶಂಕರರ ಪ್ರಕಾರ ಈ ಯಾವ ಅಥ೯ದಲ್ಲೂ ಕಮ೯ವು ಮೋಕ್ಷಕ್ಕೆ ಸಾಧನವಲ್ಲ.ಅದು ಮೋಕ್ಷವನ್ನು ಸೃಷ್ಟಿಸಲಾರದು. ಏಕೆಂದರೆ ಮೋಕ್ಷವು ಹಿಂದೆ ಇಲ್ಲದ ಹಾಗೂ ಹೊಸದಾಗಿ ಅಸ್ತಿತ್ವಕ್ಕೆ ಬರುವ ಸ್ಥಿತಿಯಲ್ಲ.ಮೋಕ್ಷದ ವಸ್ತುವಾದ ಬ್ರಹ್ಮವು ಶಾಶ್ವತ.ಹಾಗೆಯೇ ಕಮ೯ವು ಮೋಕ್ಷವನ್ನು ಹೊಸದಾಗಿ ದೊರಕಿಸಿಕೊಡಲು ಸಾಧ್ಯವಿಲ್ಲ.ಏಕೆಂದರೆ ಮೋಕ್ಷದ ವಸ್ತುವಾದ ಬಹ್ಮವು ನಮ್ಮಬಳಿಯಲ್ಲಿಯೇ ಇರುವ ನಾವೇ ಆಗಿರುವ ತತ್ವ.ನಾವು ಈಗಾಗಲೇ ಆಗಿರುವ ತತ್ವವನ್ನು ಹೊಸದಾಗಿ ಪಡೆಯುತ್ತೇವೆ ಎನ್ನುವುದು ಮೂಖ೯ತನ. ಆದ್ದರಿಂದ ಮೋಕ್ಷವು ಪ್ರಾಪ್ಯವಲ್ಲ.ಹಾಗೆಯೇ ಕಮ೯ವು ಮೋಕ್ಷವನ್ನು ಸಂಸ್ಕಾರ ಗೊಳಿಸಲೂ ಸಾಧ್ಯವಿಲ್ಲ.ಏಕೆಂದರೆ ಮೋಕ್ಷವಸ್ತುವಾದ ಬ್ರಹ್ಮವು ನಿತ್ಯ ಶುದ್ಧ ಬುದ್ಧ ಮುಕ್ತಸ್ವರೂಪ.ಇದೇಕಾರಣದಿಂದ ಕಮ೯ವು ಮೋಕ್ಷವನ್ನು ವಿಕಾರಗೊಳಿಸಲೂ ಅಶುದ್ಧಗೊಳಿಸಲೂ ಸಾಧ್ಯವಿಲ್ಲ. ಒಟ್ಟಾರೆ ಕಮ೯ದ ಫಲವು ಅಶಾಶ್ವತ.ಆದ್ದರಿಂದ ಅದು ಶಾಶ್ವತ ಮುಕ್ತಿಗೆ ಸಾಧನವಾಗಲಾರದು.
ವೇದಾಂತಿಗಳು ಶ್ರುತಿ ಪ್ರಮಾಣದಿಂದಾಗುವ ಅನುಭವವನ್ನು ಪ್ರಧಾನವಾಗಿಟ್ಟು ಕೊಂಡಿರುತ್ತಾರೆ.ಬೆಂಕಿಯು ತಣ್ಣಗಿದೆ ಎಂದಾಗಲೀ ಸೂಯ೯ನು ಚಂದ್ರನಂತೆ ತಂಪಾಗಿರುವನೆಂದಾಗಲೀ ತೋರಿಸಲು ಸಾಧ್ಯವಾಗಲೀ ಯಾವ ದೃಷ್ಟಾಂತವೂ ಇರುವುದಿಲ್ಲ.
ಸಾಕ್ಷಿ: ಸೂಯ೯ನು ಎಲ್ಲವನ್ನೂ ನಿರಂತರವಾಗಿ ಬೆಳಗುವಂತೆ ಸಾಕ್ಷಿಯಾದ ಆತ್ಮನು ಎಲ್ಲವನ್ನೂ ಅರಿಯುತ್ತಾನೆ.ಸಾಕ್ಷಿಯು ಕೂಟಸ್ಥನಿತ್ಯ.ಸ್ವಯಂಸಿದ್ಧ.ಸಾಕ್ಷಿಯನ್ನು ಪ್ರಮಾಣದಿಂದಾಗಲೀ,ತಕ೯ದಿಂದಾಗÀಲೀ ಸಾಧಿಸುವುದಕ್ಕೆ ಅxವಾ ನಿರಾಕರಿಸುವುದಕ್ಕಾಗಲೀ ಹೊರಡುವವನೇ ಪ್ರಮಾಣ ತಕ೯ಗಳಿಗೂ ಸಾಕ್ಷಿಯಾಗಿರುವುದರಿಂದ ಅವನನ್ನೇ ಇಲ್ಲವೆನ್ನುವುದು ಯಾರಿಂದಲೂ ಆಗಲಾರದೆಂಬುದೇ ಸರಿಯಾದ ಸಿದ್ಧಾಂತ.
ಪ್ರಮೇಯ: ಬ್ರಹ್ಮವು ಜಗತ್ಕಾರಣವಾಗಿದೆ.ಮಣ್ಣಿನಿಂದ ಹುಟ್ಟಿ,ಮಣ್ಣಿನಲ್ಲಿಯೇ ಇದ್ದು ,ಮಣ್ಣಿನಲ್ಲಿಯೇ ಲಯವಾಗುವ ಗಡಿಗೆ,ಕುಡಿಕೆ,ಮಡಕೆ ಮುಂತಾದವುಗಳು ಮಣ್ಣಿಗಿಂತ ಬೇರೆ ಅಲ್ಲ.ಅದರಂತೆ ಬ್ರಹ್ಮದಿಂದಲೇ ಹುಟ್ಟಿ ಬ್ರಹ್ಮದಿಂದಲೇ ಬೆಳೆದು ,ಬ್ರಹ್ಮದಲ್ಲಿಯೇ ಲಯವಾಗುವ ಜಗತ್ತು ಬ್ರಹ್ಮಕ್ಕಿಂತ ಬೇರೆ ಅಲ್ಲ.ಅಚೇತನವಾದದ್ದು ಯಾವುದೇ ಕಾರಣವಲ್ಲವೆಂದು ತಿಳಿಯಪಡಿಸುವುದಕ್ಕೆ ಜಗತ್ಕಾರಣವನ್ನು ಉಪದೇಶಿಸಿದೆಯೇ ಹೊರತು ಬ್ರಹ್ಮವು ನಿಜವಾಗಿ ಕಾಯ೯ ಕಾರಣ ಭಾವವುಳ್ಳದ್ದು ಎಂಬ ಅಭಿಪ್ರಾಯವಲ್ಲ.ಎಲ್ಲವೂ ಬ್ರಹ್ಮದಿಂದಲೇ ಹುಟ್ಟಿದೆ ಎಂಬುದೇ ವೇದಾಂತಿಗಳ ಮತವು.
ಜೀವ ಬ್ರಹ್ಮರ ಜ್ಞಾನವೊಂದೇ ಮುಕ್ತಿಗೆ ಸಾಧನ.ಮುಕ್ತಿಯಲ್ಲಿ ಸತ್ಯದ ಜ್ಞಾನಕ್ಕೆ ಅಡಚಣೆ ಯಾಗಿರುವ ಅವಿದ್ಯೆಯು ನಾಶವಾಗುವುದೇ ಹೊರತು ಸತ್ಯವು ಹೊಸದಾಗಿ ಅಸ್ತಿತ್ವಕ್ಕೆ ಬರುವುದಿಲ್ಲ.ಮೋಕ್ಷ ಸಿತ್ಥಿಗೆ ಒಂದು ಉಪಮೆಯನ್ನು ನೀಡಲಾಗಿದೆ.ಒಬ್ಬನು ಚಿನ್ನದ ಸರವನ್ನು ಬೇರೆಲ್ಲೋ ಹುಡುಕುತ್ತಿದ್ದು ಅದನ್ನು ಮತ್ತೊಬ್ಬನ ನೆರವಿನಿಂದ ತನ್ನ ಕೊರಳಿ£ಲ್ಲೇ ಕಾಣುತ್ತಾನೆ.
ಮೋಕ್ಷವೂ ಕೂಡ ಅದೇರೀತಿ. ಆ ಸ್ಥಿತಿಯಲ್ಲಿ ಸತ್ಯವು ಹೊಸದಾಗಿ ಅಸ್ತಿತ್ವಕ್ಕೆ ಬರುವುದಿಲ್ಲ.ಇರುವ ಸತ್ಯವು ಹೊಸದಾಗಿ ನಮ್ಮ ಅರಿವಿಗೆ ಬರುತ್ತದೆ. ಹೊಸತನವೆಂಬುದು ವಸ್ತುವಿನಲ್ಲಿಲ್ಲ.ಜ್ಞಾನದಲ್ಲಿ ಮಾತ್ರ.ಜ್ಞಾನಕ್ಕೂ ಮುಕ್ತಿಗೂ ಕಾಲಾಂತರವಿಲ್ಲ.ಜ್ಞಾನ ಬಂದ ತಕ್ಷಣವೇ ಮನುಷ್ಯನು ಮುಕ್ತನಾಗುತ್ತಾನೆ. ಜ್ಞಾನ,ಅವಿದ್ಯಾನಾಶ,ಮುಕ್ತಿ ಇವೆಲ್ಲವೂ ಪಯಾ೯ಯ ಪದಗಳು.ಶಂಕರರ ಪ್ರಕಾರ ಒಬ್ಬನು ಈಸ್ಥಿತಿಯನ್ನು ಬದುಕಿರುವಾಗಲೇ ಪಡೆದುಕೊಳ್ಳಬಹುದು. ಇದಕ್ಕೆ ಜೀವನ್ಮುಕ್ತಿ ಎಂದು ಹೆಸರು.ಆತ್ಮಜ್ಞಾನಿಗೆ ದೇಹವಿರಬಹುದು.ಆದರೆ ಈ ದೇಹದಿಂದ ಅವನ ಜ್ಞಾನಿತ್ವಕ್ಕೆ ಯಾವಭಂಗವೂ ಬರುವುದಿಲ್ಲ.
ಜೀವನ್ಮುಕ್ತನ ವ್ಯವಹಾರವನ್ನು ಹುರಿದ ಬೀಜಕ್ಕೆ ಹೋಲಿಸುತ್ತಾರೆ.ಹುರಿದ ಬೀಜದಿಂದ ಮೊಳಕೆಯು ಸಾಧ್ಯವಿಲ್ಲದಿರುವಂತೆ ಜೀವನ್ಮುಕ್ತನ ಕಮ೯ವು ಅವನ ಪುನಜ೯ನ್ಮಕ್ಕೆ ಕಾರಣವಾಗಲಾರದು.
ಸಾಧನೆ:ಸಾಧನೆಯಲ್ಲಿ ಎರಡು ಹಂತಗಳಿವೆ.ಯಾವುವೆಂದರೆ ವೈರಾಗ್ಯ, ಮತ್ತು ಜ್ಞಾನಯೋಗ. ವೈರಾಗ್ಯದಲ್ಲಿ ಪುನ: ಎರಡು ಹಂತಗಳುಂಟು.
ಮೊದಲನೆಯದು ನಿಷ್ಕಾಮ ಕಮ೯ಯೋಗ.ಶಂಕರರ ಪ್ರಕಾರ ಕಮ೯ವು ಮೋಕ್ಷಕ್ಕೆ ನೇರ ಸಾಧನವಲ್ಲದಿದ್ದರೂ ಅದು ಪರೋಕ್ಷ ಸಾಧನವಾಗಿದೆ. ಅದು ಮುಕ್ತಿಗೆ ಪರೋಕ್ಷ ಸಾಧನವಾಗಿದೆ. ಮನುಷ್ಯನು ಮುಕ್ತಿಯನ್ನು ಒಮ್ಮೆಲೇ ಸಾಷ್ಕಾತ್ಕರಿಸಿಕೊಳ್ಳಲು ಸಾಧ್ಯವಿಲ್ಲ.ಅದನ್ನು ಹಂತಹಂತವಾಗಿ ಚಿತ್ತಶುದ್ಧಿಯ ಮೂಲಕ ಸಾಧಿಸ ಬೇಕಾಗುತ್ತದೆ.ಒಟ್ಟಾರೆ ಮುಕ್ತಿಗೆ ಚಿತ್ತಶುದ್ಧಿಯು ಅವಶ್ಯಕ.ಈಚಿತ್ತಶುದ್ಧಿಯನ್ನು ಕಮ೯ವು ದೊರಕಿಸಿಕೊಡುತ್ತದೆ. ಫಲಾಪೇಕ್ಷೆಯಿಲ್ಲದೆ ಕತ೯ವ್ಯಗಳನ್ನು ಅವುಗಳಿಗೋಸ್ಕರ ಮಾಡುವುದೇ ಕಮ೯ಯೋಗ.
ವೈರಾಗ್ಯದ ಎರಡನೆಯ ಹಂತವೆಂದರೆ ಸಾಧನ ಚತುಷ್ಟಯ.ಇಲ್ಲಿ ಸಾಧಕನು ನಾಲ್ಕು ಸಾಧನಗಳನ್ನು ಅಳವಡಿಸಿಕೊಳ್ಳುತ್ತಾನೆ.ಈ ಸಾಧನಗಳಿಲ್ಲದೆ ಒಬ್ಬನು ಮುಕ್ತಿಯಿರಲಿ ಬ್ರಹ್ಮ ಜಿಜ್ಞಾಸೆಯನ್ನು ಮಾಡಲೂ ಅಹ೯ನಲ್ಲ.ಇದನ್ನೇ ಶಂಕರರು ಮೊದಲ ಸೂತ್ರದಲ್ಲಿ ವ್ಯಕ್ತಪಡಿಸಿರುತ್ತಾರೆ."ಅಥ ಅತ: ಬ್ರಹ್ಮ ಜಿಜ್ಞಾಸಾ"
ಎಂಬುದು ಮೊದಲ ಸೂತ್ರ.ಇಲ್ಲಿ ಅಥ ಎಂದರೆ "ಅನಂತರ" ಎಂದಥ೯.ಶಂಕರರು ಈ ಶಬ್ದಕ್ಕೆ "ಸಾಧನ ಚತುಷ್ಟಯಗಳನ್ನು ಸಂಪಾದಿಸಿಕೊಂಡ ನಂತರ" ಎಂದು ಅಥೈ೯ಸುತ್ತಾರೆ.
ಸಾಧನಚತುಷ್ಟಯವು ಈಕೆಳಕಂಡಂತಿವೆ.
1) ನಿತ್ಯಾನಿತ್ಯ ವಸ್ತು ವಿವೇP: ಇಲ್ಲಿ ಸಾಧಕನು ನಿಜ ಮತ್ತು ನಶ್ವರಗಳನ್ನು ವಿವೇಚಿಸುತ್ತಾನೆ.
2) ಇಹ ಅಮುತ್ರ ಫಲ ಭೋಗ ವಿರಾಗ: ಇಲ್ಲಿ ಸಾಧಕನು ಇಹಲೋಕದ ಮತ್ತು ಪರಲೋಕದ ಸುಖದ ಆಸೆಯನ್ನು ಬಿಡುತ್ತಾನೆ.
3) ಶಮಾದಿ ಷಟ್ಕ: ಸಾಧಕನು ಶಮ, ದಮ,ತಿತಿಕ್ಷೆ, ಶ್ರದ್ಧೆ,ಉಪರತಿ, ಸಮಾಧಾನಗಳನ್ನು ಅಳವಡಿಸಿ ಕೊಳ್ಳುತ್ತಾನೆ.
4) ಮುಮುಕ್ಷತ್ವ: ಮೋಕ್ಷವು ಬೇಕೆಂಬ ತೀವ್ರವಾದ ಹಂಬಲವೇ ಮುಮುಕ್ಷತ್ವ.
ಜ್ಞಾನಯೋಗದಲ್ಲಿ ಪುನ: ಶ್ರವಣ,ಮನನ,ನಿದಿಧ್ಯಾಸನ ಎಂಬ ಮೂರುಹಂತಗಳು.
ಶ್ರವಣ: ಗುರುವಿನ ಬೋಧನೆಯನ್ನು ಏಕಾಗ್ರತೆಯಿಂದ ಆಲಿಸುವುದೇ ಶ್ರವಣ.
ಮನನ: ಆ ಬೋಧನೆಯನ್ನು ಶ್ರುತಿಗೆ ವಿರುದ್ಧವಲ್ಲದ ತಕ೯ದಿಂದ ವಿಚಾರ ಮಾಡುವುದೇ ಮನನ.
ನಿದಿಧ್ಯಾಸನ: ಖಚಿತವಾದ ಈ ಬೋಧನೆಯನ್ನು ಕುರಿತು ಧ್ಯಾನಿಸುವುದೇ ನಿದಿಧ್ಯಾಸ.ಇದರಲ್ಲಿ ಸಫಲವಾದಾಗ ಸಾಧಕನಿಗೆ ಜೀವಬ್ರಹ್ಮೈಕ್ಯಾನುಭವವು ಆಗುತ್ತದೆ.ಇದು ಮಾತು ಮನಸ್ಸುಗಳನ್ನು ಮೀರಿದಸ್ಥಿತಿ.
ಮುಕ್ತಿಯು ಒಂದು ವಿಧಿ ನಿಷೇಧಗಳನ್ನು ಮೀರಿÀದ ಸ್ಥಿತಿ ಎಂದ ಮಾತ್ರಕ್ಕೆ ಮುಕ್ತನು ಸ್ವಚ್ಛಂದ ಜೀವ£ವನ್ನು ನಡೆಸುವನೆಂದು ಅಥ೯ವಲ್ಲ. ಮುಕ್ತಿಗೆ ಮೊದಲು ಅವನಿಗೆ ಒಳ್ಳೆಯದನ್ನು ಮಾಡುವ ಮತ್ತು ಕೆಟ್ಟದ್ದನ್ನು ತಡೆಯುವ ಪ್ರಯತ್ನವು ಇರುತ್ತದೆ.ಮುಕ್ತಿಯಲ್ಲಾದರೋ ಈ ಪ್ರಯಾಸವು ಸಂಪೂಣ೯ವಾಗಿ ನಾಶವಾಗಿರುತ್ತದೆ. ಮುಕ್ತಿ ಪೂವ೯ದ ಸ್ಥಿತಿಯೂ ಸಂಘಷ೯ದ ಸ್ಥಿತಿಯಾಗಿರುತ್ತದೆ.ಮುಕ್ತಿ ಸ್ಥಿತಿ ಯಾದರೋ ಸಂಘµ೯ರಹಿವಾಗಿರುತ್ತದೆ. ಇಲ್ಲಿ ಮುಕ್ತನು ಯಾವ ಕೆಲಸವನ್ನೂ ಮಾಡುವುದಿಲ್ಲ.ಇಲ್ಲಿ ಅವನು ಒಳ್ಳೆಯದನ್ನು ಮಾಡುತ್ತಾನೆಂಬುದಕ್ಕಿಂತಲೂ ಅವನು ಮಾಡುವ ಕೆಲಸವೆಲ್ಲವೂ ಒಳ್ಳಯದಾಗಿರುತ್ತದೆಎನ್ನುವುದು ಸೂಕ್ತ.
ಅದ್ವೈತ ಸಾರ ಕೆಲವು ಮುಖ್ಯ ಸಂಗತಿಗಳು:
1) ಸೋಹಂ ಭಾವೇನ ಪೂಜಯೇತ್ ಅವನೇ ನಾನು ನಾನೇ ಅವನು ಎಂಬ ಭಾವದಿಂದ ಪೂಜಿಸಬೇಕು.
2) ತತ್ವಶಾಸ್ತ್ರದ ಲಕ್ಷ್ಯ ಅಂತಿಮ ಸತ್ಯದ ಅನ್ವೇಷಣೆ.
3) 'ಭಾವಾದ್ವೈತಂ ಸದಾ ಕುಯಾ೯ತ್ ಕ್ರಿಯಾದ್ವೈತಂ ಕದಾಪಿನ' ಅದ್ವೈತವು ಸತ್ಯವೆಂದು ಮನಸ್ಸಿನಲ್ಲಿ ವಿಶ್ವಾಸವಿರಬೇಕೇ ಹೊರತು ವ್ಯವಹಾರದಲ್ಲಿ ಅದನ್ನೆಂದಿಗೂ ತರಬಾರದು. ಇದನ್ನೇ ನಿಜಗುಣ ಶಿವಯೋಗಿಗಳು"ಬಳಸದಿರದ್ವೈತವನು ಬಾಹ್ಯದಲಿ"ಎಂದು ಎಚ್ಚರಿಕೆಹೇಳಿದ್ದಾರೆ.ಭಾವಾದ್ವೈತವನ್ನು ಮಾಡಬೇಕೇ ಹೊರತು ಕ್ರಿಯಾದ್ವೈತವನ್ನು ಮಾಡಬಾರದು.
4) ಅದ್ವೈತ ಸ್ಥಿತಿಯಲ್ಲಿವ್ಯವಹಾಹವೇ ಇರುವುದಿಲ್ಲ. ಅದು ಸವ೯ ವ್ಯವಹಾರಾತೀತ ವಾದುದು.
5) ಒಂದು ಜನಪ್ರಿಯ ಸ್ತೋತ್ರವು ಈ ರೀತಿ ಹೇಳುತ್ತದೆ
'ಸವ೯ ಭೂತಂಗಳೊಳು ಸವೇ೯ಷಾ ನೀನಿರುತೆ
ಸವ೯ವ ಗೈಸುವನೆಂಬ ಮಮ೯ವ ನಾನರಿವಂಥ'
ಅವನು ಎಲ್ಲಾ ಪಂಚಭೂತಗಳಲ್ಲಿಯೂ, ಯಾವಾಗಲೂ ಇರುತ್ತಾನೆ ಮತ್ತು ಅವನು ಎಲ್ಲವನ್ನೂ ಮಾಡಿಸುತ್ತಾನೆ. ಈ ಮಮ೯ವನ್ನು ಅರಿತವನೇ ಜ್ಞಾನಿ. ನಾನು ಕತೃ೯ವಾಗಲೀ ಭೋಕ್ತøವಾಗಲೀ ಅಲ್ಲ. ಅವನೇ ಎಲ್ಲಕ್ಕೂ ಕಾರಣ ಎಂದು ಅರಿತವನೇ ಜ್ಞಾನಿ. ಇದನ್ನು ಅರಿತಾಗ ಸಂಚಿತ ಹಾಗೂ ಆಗಾಮೀ ಕಮ೯ಗಳು ತಾವಾಗಿಯೇ ನಾಶವಾಗುತ್ತವೆ ಪ್ರಾರಬ್ಧಕಮ೯ವನ್ನು ಅನುಭವಿಸಿಯೇ ತೀರಬೇಕು
5) ಅಸ್ಪಶ೯ಯೋಗ: ಸದ್ವಸ್ತುವಿಗೆ ಬೇರೆ ಯಾವುದರ ಸ್ಪಶ೯ವೂ ಇಲ್ಲದಿರುದರಿಂದ ಅದನ್ನು ಅಸ್ಪಶ೯ ಯೋಗವೆಂದು ಕರೆಯುತ್ತಾರೆ.
6)ಚಿಜ್ಜಡ ಗ್ರಂಥಿ: ಚಿತ್ ಹಾಗೂ ಜಡ ಇವುಗಳಿಗಿರುವ ಗಂಟನ್ನು ಚಿಜ್ಜಡ ಗ್ರಂಥಿ ಎನ್ನುತ್ತಾರೆ.ಜ್ಞಾನ ದಿಂದ ಅವಿದ್ಯೆಯು ನಾಶವಾದಾಗ ಅಜ್ಞಾನದ ಗಂಟು ಹರಿಯುತ್ತದೆ.ಇದನ್ನು ಗ್ರಂಥಿಬೇಧ ಎನ್ನುತ್ತಾರೆ.
7)ತತ್ವ ವಿಚಾರ ಮಾಡದೆ ಯಾವಾಗಲೂ ಕಮ೯ದಲ್ಲಿ ನಿರತರಾದವರಿಗೆ ಕಮ೯ಜಡರು ಎನ್ನುತ್ತಾರೆ.
8) ಇರುವುದೊಂದೇ. ಎರಡಾಗಿ ಕಾಣುವುದು ಮಿಥ್ಯೆ.ಎರಡನೆಯ ದಿಲ್ಲದಿರುವುದೇ ಜ್ಞಾನ ಇದು ಅದ್ವೈತದ ವ್ಯಾಖ್ಯೆ.
೯)ನಾಲ್ಕು ಮಹಾವಾಕ್ಯಗಳು:
1)ಅಹಂ ಬ್ರಹ್ಮಾಸ್ಮಿ (ನಾನು ಬ್ರಹ್ಮ ವಾಗಿದ್ದೇನೆ)(ಬೃಹದಾರಣ್ಯಕ1_4_10)
2)ತತ್ವಮಸಿ (ನೀನು ಅದೇ ಆಗಿದ್ದೀಯೆ)(ಛಾಂದೋಗ್ಯ2_8_7)
3)ಅಯಮಾತ್ಮಾ ಬ್ರಹ್ಮ (ಈ ಆತ್ಮವು ಬ್ರಹ್ಮವೇ )ಮಾಂಡೂಕ್ಯ2)
4)ಪ್ರಜ್ಞಾನಂ ಬ್ರಹ್ಮ (ಪ್ರಜ್ಞಾನವು ಬ್ರಹ್ಮ)(ಐತರೇಯ2_0_2)
ಅದ್ವೈತ ವಿವರಣೆಯ ಶ್ಲೋಕಗಳು ಹೀಗಿವೆ:
||ಯಸ್ಯಂತನಾ೯ದಿ ಮಧ್ಯಂ ನಹಿಕgಚರಣÀ0 ನಾಮ ಗೋತ್ರಂನ ಸೂತ್ರಂ
ನೋಜಾತಿನೈ೯ವ ವಣೋ೯ನ ಭವತಿ ಪುರುಷೋ ನೋ ನಪುಂಸ್ಕಂ ನಚಸ್ತ್ರೀ
ನಾಕಾರಂ ನೋವಿಕಾರಂ ನಹಿಜನಿಮರಣಂ ನಾಸ್ತಿ 3ಪುಣ್ಯಂ ನಪಾಪಂ
ನೋತತ್ವಂ ತತ್ವಮೇಕಂ ಸಹಜ ಸಮರಸಂ ಸದ್ಗುರುಂ ತಂ ನಮಾಮಿ||
ಯಾರಿಗೆ ಆದಿ ಅಂತ್ಯ ಮಧ್ಯಗಳು ಇಲ್ಲವೋ ಹಸ್ತ ಪಾದಗÀಳು ಇಲ್ಲವೋ(ಅವಯವರಹಿತ) ನಾಮ, ಗೋತ್ರ,ಸೂತ್ರಗಳಿಲ್ಲವೋ ಯಾರಿಗೆ ಜಾತಿ ವಣ೯ಗಳಿಲ್ಲವೋ,ಪುರುಷನಾಗಲೀ ಸ್ತ್ರೀಯಾಗಲೀ ಅಲ್ಲವೋ ಆಕಾರ ವಿಕಾರಗಳಿಲ್ಲದವನೋ ಯಾರಿಗೆ ಹುಟ್ಟು ಸಾವುಗಳಿಲ್ಲವೋ ಪಾಪವಾಗಲೀ ಪುಣ್ಯವಾಗಲೀ ಇಲ್ಲವೋ ಅತತ್ವವಲ್ಲದ ಒಂದೇತತ್ವವಿರುª ಎಲ್ಲದರಲ್ಲಿಯೂ ಸಮಾನವಾಗಿ ವ್ಯಾಪಿಸಿರುವ ಸದ್ಗುರುವಿಗೆ ನಮಸ್ಕರಿಸುತ್ತೇನೆ.
ತ್ವದ್ಯಾತಯ್ರಾವ್ಯಾಪಕತಾ ಹತಾತೇ ಧ್ಯಾನೇನ ಚೇತಃ ಪರತಾಹತಾತೇ|
ಸ್ತುತ್ಯಾಮಯಾ ವಾಕ್ಪರತಾ ಹತಾತೇ ಕ್ಷಮಸ್ವ ನಿತ್ಯಂ ತ್ರಿವಿಧಾಪರಾಧಾನ್|
ನೀನು ಸವ೯ವ್ಯಾಪ್ತನೆಂದು ತಿಳಿದಿದ್ದರೂ ನಿನ್ನನ್ನು ನೋಡಲು ತೀಥ೯ಯಾತ್ರಗೆ ಹೋಗುತ್ತೇವೆ. ನೀನು ಅಚಿಂತ್ಯನು ಆದರೂ ಕೂಡ ನಿನ್ನನ್ನುಕುರಿತು ಧ್ಯಾನಿಸುತ್ತೇನೆ.ನೀನು ವಾಕ್ ಮನಸ್ಸುಗಳನ್ನು ಮೀರಿzವನು ಆದÀರೂ ನಿನ್ನನ್ನು ಸ್ತೋತ್ರಗಳಂದ ಸ್ತುತಿಸುತ್ತೇನೆ. ಈ ನಿತ್ಯವೂ ಮಾಡುವ ಮೂರು ವಿಧವಾದ ಅಪರಾಧಗಳನ್ನು ಕ್ಷಮಿಸು.
ನಾನು ದೇಹಬುದ್ಧಿಯಿಂದ ನಿನ್ನದಾಸನೂ ಜೀವ ಬುದ್ಧಿಯಿಂದ ಅಂಶನೂ ಆತ್ಮ ಬುದ್ಧಿಯಿಂದ ನಾನು ನೀನೇ ಆಗಿರುತ್ತೇನೆ. ಇದು ನನ್ನ ನಿಶ್ಚಿತವಾದ ಮತಿಯು. ಜ್ಞಾನಿಗಳಿಗೆ ಕತ೯ವ್ಯವಿಲ್ಲ. ಕತ೯ವ್ಯವೇ ಇದ್ದಪಕ್ಷದಲ್ಲಿ ಅವನು ಜ್ಞಾನಿಯಲ್ಲ. ಜ್ಞಾನಿಗಳಿಗೆ ಗಮನಾಗಮನವಾಗಲೀ ಶರೀರ ಗ್ರಹಣವಾಗಲೀಇಲ್ಲ.
ಮೋಕ್ಷವು ಮನಸ್ಸಿನ ಸ್ಥಿತಿಯೇ ಹೊರತು ವ್ರತವಲ್ಲ.ಈ ವಿಶ್ವಕ್ಕೆ ಒಂದು ಒಳ್ಳೆಯ ಹೆಸರನ್ನು ಕೊಡಬಹುದಾದರೆ ಬ್ರಹ್ಮಸಮುದ್ರ (ಶಿವನಸಮುದ್ರ) ಎಂದು ಕೊಡಬಹುದು.ನೀರಿನ ಒಂದು ಸುಂದರವಾದ ಉದಾಹರಣೆ.ಮೀನು, ಮೊಸಳೆ, ತಿಮಿಂಗಲಗಳು ಒಂದೇÀ ನೀರಿನಲ್ಲಿ ಹುಟ್ಟುತ್ತವೆ, ಬೆ¼ಯುತ್ತವೆ ಮತ್ತು ಸಾಯುತ್ತವೆ. ತಿಮಿಂಗಲದ ಅಂಡಾಣುವನ್ನಾಗಲೀ ವೀಯಾ೯ಣುವನ್ನಾಗಲೀ ಯಾರೂ ಹೊರಗಿನಿಂದ ತಂದು ಹಾಕಿರುವುದಿಲ್ಲ. ಎಂದರ ಜಲರಾಶಿಯಲ್ಲಿನ ಎಲ್ಲಾ ಪ್ರಾಣಿಗಳಿಗೂ ಬೇಕಾದ ಜನನ, ಸ್ಥಿತಿ,ಮರಣಗಳಿಗಬೇಕಾದ ಅಂಶಗಳು ನೀರಿನಲ್ಲಿಯೇ ಇವೆ ಎಂದಾಯಿತು.ಅದೇ ರೀತಿಯಲ್ಲಿಯೇ ಬ್ರಹ್ಮದಲ್ಲಿ ಈ ವಿಶ್ವದ ರಚನೆ ಮತ್ತು ಕ್ರಿಯೆಗೆ ಬೇಕಾದ ಸಾಮಗ್ರಿಗಳು ಇವೆ ಎಂದಾಯಿತು.ಇದು ಅದ್ವೈತಕ್ಕೆ ಒಳ್ಳೆಯ ಉದಾಹರಣೆಯಾಗಿದೆ.
ಬ್ರಹ್ಮವುಂದೇ ಸತ್ಯ.ಈಜಗತ್ತು ಹುಟ್ಟಿಯೂಇಲ್ಲ,ಇರುವುದೂ ಇಲ್ಲ, ನಾಶವೂಇಲ್ಲ ಎಂದು ಅಜಾತಿ ವಾÀದವು ಹೇಳುತ್ತದೆ.
ಪ್ರತಿಬಿಂಬವಾದ:ಜೀವವು ಅವಿದ್ಯೆಯೆಂಬ ಕನ್ನಡಿಯಲ್ಲಿ ಕಾಣುವ ಬ್ರಹ್ಮದ ಪ್ರತಿಬಿಂಬ ಎಂದು ಹೇಳಲ್ಪಟ್ಟಿದೆ. ಆದರೆ ಕನ್ನಡಿಯು ನಾಶವಾದಾಗ ಬಿಂಬವೂ (ಜೀವವು) ನಾಶವಾಗಬೇಕಾಗಿತ್ತು. ಆದರೆ ಇದು ಸತ್ಯಕ್ಕೆ ದೂರವಾಗಿದೆ.ಆದ್ದರಿಂದ ಪತಿಬಿಂಬ ವಾದವು ನಿರಾಕರಿಸಲ್ಪಟ್ಟಿದೆ.
ಅವಾಚ್ಛೇದವಾದ: ಜೀವವು ಎಂದಿಗೂ ಬ್ರಹ್ಮದಿಂದ ಬೇರೆಯಾಗಿಯೇ ಇಲ್ಲ.ಘಟಾಕಾಶವು ಚಿದಾಕಾಶದಲ್ಲಿ ಲೀನವಾಗುವಂತೆ ಎಂಬ ಸುಂದರ ಹೋಲಿಕೆಯನ್ನು ಕೊಟ್ಟಿದೆ.ಇದನ್ನು ಅವಾಚ್ಛೇದವಾದ ಎಂದು ಕರೆಯುತ್ತಾರೆ.
ಬ್ರಹ್ಮವು ಜ್ಞಾನಕ್ಕೆ ಆಶ್ರಯಭೂತವೇ ಹೊರತು ಅದು ಮಾತ್ರ ಯಾವ ಜ್ಞಾನಕ್ಕೂ ವಿಷಯವಲ್ಲ.ಬ್ರಹ್ಮವು ತಿಳಿಯುವ ವಸ್ತುವಾಗಲೀ ತಿಳಿಯಲ್ಪಡುವ ವಸ್ತು ವಾಗಲೀ ಅಲ್ಲ.ಅದು ಜ್ಞಾತೃ ಜ್ಞೇಯ ಗಳ ಭೇದವನ್ನು ಮೀರಿದುದು.ಆದರೂ ಅದು ಎಲ್ಲಾ ತಿಳಿವಿಗೂ ಆಶ್ರಯವಾಗಿದೆ.
ಅನಂತ ಎಂಬ ಶಬ್ದವು ಬ್ರಹ್ಮವು ಯಾವುದೇ ನಿದಿ೯ಷ್ಟ ದೇಶಕ್ಕೆ ಸೀಮಿತವಲ್ಲವೆಂಬುದನ್ನು ಸೂಚಿಸುತ್ತದೆ.ಎಂದರೆ ಅದು ಎಲ್ಲೆಲ್ಲಿಯೂ ಇರುವ ಸಾವ೯ತ್ರಿಕ ಸತ್ಯ.ಹಾಗೆಯೇ ಬ್ರಹ್ಮದ ಸ್ವರೂಪವು ದು:ಖ ಮಿಶ್ರಿತವಲ್ಲದ ಆನಂದವಾಗಿದೆ.ಪ್ರಪಂಚದ ಎಲ್ಲಾ ಆನಂದಗಳೂ ಈ ಮೂಲ ಆನಂದದ ಅಂಶವಾಗಿದೆ.
ಪ್ರಪಂಚದ ಎಲ್ಲಾ ವಸ್ತುಗಳಿಗಿಂತಲೂ ಉಳಿದ ಎಲ್ಲಾಸಂಬಂಧಗಳಿಗಿಂತಲೂ ಅತ್ಯಂತ ನಿಕಟವಾದುದು ಆತ್ಮ.ಆತ್ಮ ಪ್ರೀತಿಯೇ ಎಲ್ಲಾ ಪ್ರೀತಿಗಳಿಗಿಂತಲೂ ಪ್ರಬಲ.ಆತ್ಮವನ್ನು ನಾವು ಅದಕ್ಕೋಸ್ಕರ ಪ್ರೀತಿಸುತ್ತೇವೆಯೇ ಹೊರತು ಇನ್ನಾವುದೋ ವಸ್ತುವಿಗೋಸ್ಕರವಲ್ಲ. ಒಂದು ಕಾಲದಲ್ಲಿ ಸುಖವನ್ನು ನೀಡಿದ ವಸ್ತುವು ದು:ಖವನ್ನೇ ನೀಡಬಹುದು.ಒಂದು ಕಾಲದಲ್ಲಿ ನಾವು ಪ್ರೀತಿಸುತ್ತಿದ್ದ ವಸ್ತುವನ್ನು ದ್ವೇಶಿಸಲು ಸಾಧ್ಯವಿದೆ.ಆತ್ಮವಸ್ತುವು ಮಾತ್ರ ಎಲ್ಲಾಕಾಲದಲ್ಲಿಯೂ ನಮಗೆ ಅತ್ಯಂತ ನಿಕಟ ವಸ್ತುವಾಗಿದೆ.ಆತ್ಮವು ಸುಖದ ನೆಲೆಯಾಗಿದೆ.ಈ ಆತ್ಮವು ಬ್ರಹ್ಮವೇ ಆಗಿರುವುದರಿಂದ ಬ್ರಹ್ಮವು ಸುಖದ ನೆಲೆಯಾಗಿದೆ.
ಕಾಯ೯ ಕಾರಣ ಸಂಬಂಧ:
ಭಾರತೀಯ ತತ್ವ ಶಾಸ್ತ್ರದಲ್ಲಿಕಾಯ೯ಕಾರಣವನ್ನು ಕುರಿತಂತೆ ದೀಘ೯ ಜಿಜ್ಞಾಸೆಯು ನಡದಿದೆ.ಕಾಯ೯ಕಾರಣ ಸಂಬಂಧವು ನಿಜವೋ ಸುಳ್ಳೋ? ನಿಜವಾದರೆ ಕಾರಣವೆಂದರೇನು? ಕಾಯ೯ವು ತಾನು ಅಸ್ತಿತ್ವಕ್ಕೆ ಬರುವ ಮುನ್ನ ಕಾರಣದೊಂದಿಗೆ ಇತ್ತೇ ಅಥವಾ ಇರಲಿಲ್ಲವೇ?ಈ ಎಲ್ಲಾ ವಿಷಯಗಳ ಬಗ್ಗೆ ಭಾರತೀಯ ದಶ೯ನಗಳಲ್ಲಿ ದೀಘ೯ ಚಚೆ೯ಯು ನಡೆದಿದೆ.ಸಾಮಾನ್ಯವಾಗಿ ಯಾವುದು ಒಂದು ಘಟನೆಗೆ ನೇರವಾದ ಪೂವ೯ಗಾಮಿಯಾಗಿದೆಯೋ ಅದನ್ನು ಕಾರಣವೆನ್ನುತ್ತಾರೆ.
ಉದಾಹರಣೆಗೆ ಅ ಎಂಬ ಘಟನೆಯು ಜರುಗಿದ ತಕ್ಷಣವೇ ಅನೇಕಬಾರಿ ಬ ಎಂಬ ಘಟನೆಂÀುು ಜರುಗಿದರೆ ಇಲ್ಲಿ ಅ ಕಾರಣವಾಗಿ ಬ ಕಾಯ೯ವಾಗುತ್ತದೆ.
ಭಾರತೀಯ ತತ್ವಶಾಸ್ತ್ರದಲ್ಲಿ ಕಾಯ೯ಕಾರಣ ಸಂಬಂಧವನ್ನು ಕುರಿತಂತೆ ಮುಖ್ಯವಾಗಿ ನಾಲ್ಕು ವಾದಗಳಿವೆ.
1)ಬೌದ್ಧರ ಪ್ರಕಾರ ಸೃಷ್ಟಿಪೂವ೯ದಲ್ಲಿ ಕಾಯ೯ವೂ ಇರಲಿಲ್ಲ ಕಾರಣವೂ ಇರಲಿಲ್ಲ.ಕಾಯ೯ವು ಅಸ್ತಿತ್ವಕ್ಕೆ ಬರುವುದು ಮಣ್ಣು ತನ್ನ ಸ್ವರೂಪವನ್ನು ಕಳೆದುಕೊಂಡ ಮೇಲೆಮಾತ್ರ. ಬೀಜವು ಒಡೆದನಂತರವೇ ಮೊಳಕೆಯು ಮೂಡುವುದು.ಆದ್ದರಿಂದ ಸೃಷ್ಟಿಗೆ ಮೊದಲು ಕಾಯ೯ವೂ ಇರಲಿಲ್ಲ. ಕಾರಣವೂ ಇರಲಿಲ್ಲ.
2) ಆದರೆ ನ್ಯಾಯ ವೈಶೇಷಿಕರ ಪ್ರಕಾರ ಸೃಷ್ಟಿಗೆ ಮೊದಲು ಕಾಯ೯ವು ಇರಲಿಲ್ಲವಾದರೂ ಕಾರಣವು ಇತ್ತು.ಈ ವಾದವನ್ನು ಅಸತ್ಕಾಯ೯ವಾದವೆಂದು ಕರೆಯುತ್ತಾರೆ. ಕಾಯ೯ವು ಕಾರಣದಿಂದ ಹೊಸದಾಗಿ ಬರುವುದರಿಂದ ಈ ವಾದಕ್ಕೆ ಆರಂಭವಾದ ಎಂದು ಹೆಸರು.ಕಾಯ೯ವು ಕಾರಣದಲ್ಲಿ ಇದ್ದಿದ್ದರೆ ಅದು ಸೃಷ್ಟಿಯಾಯಿತು ಎಂದು ಹೇಳುವುದರಲ್ಲಿ ಯಾವ ಅಥ೯ವೂ ಇರುತ್ತಿರಲಿಲ್ಲ.ಅದನ್ನು ನಿಮಿತ್ತ ಕಾರಣದ ಅUತ್ಯವಿರಲಿಲ್ಲ.ಮಡಿಕೆಯನ್ನು ಸೃಷ್ಟಿಸಲು ಕುಂಬಾರನ ಅಗತ್ಯ ವಿರುತ್ತಿರಲಿಲ್ಲ.ಅಲ್ಲದೇಕಾಯ೯ವು ಕಾರಣದಲ್ಲಿ ಇದ್ದರೆ ಕಾಯ೯ದಿಂದ ಆಗಬೇಕಾದ ಪ್ರÀಯೋಜನವೆಲ್ಲವೂ ಕಾರಣದಿಂದಲೂ ಆಗಬೇಕಿತ್ತು. ಮಡಕೆಯಿಂದ ತರಬಹುದಾದ ನೀರನ್ನು ಮಣ್ಣಿನಿಂದಲೂ ತರಬಹುದಿತ್ತು.ಆದ್ದರಿಂದ ಕಾಯ೯ವು ಕಾರಣದಲ್ಲಿ ಇಲ್ಲ.ಅದು ಕಾರಣದಲ್ಲಿ ಅಸತ್ ಆಗಿತ್ತು. ಬೌದ್ಧರಿಗೂ ನ್ಯಾಯ ವೈಶೇಷಿಕರಿಗೂ ಇರುವ ವ್ಯತ್ಯಾಸವೆಂದರೆ ಬೌದ್ಧರು ಸೃಷ್ಟಿಪೂವ೯ದಲ್ಲಿ ಕಾಯ೯ ಕಾರಣ ಗಳೆರಡನ್ನೂ ನಿಷೇಧಿಸುತ್ತಾರೆÀ.ಆದರೆ ನ್ಯಾಯವೈಶೇಷಿಕರು ಕಾರಣದ ಅಸ್ತಿತ್ವವನ್ನು ಒಪ್ಪಿಕೊಂಡು ಕಾಯ೯ದ ಅಸ್ತಿತ್ವವನ್ನು ನಿರಾಕರಿಸುತ್ತಾರೆ.
ಬೌದ್ಧರು ಪೂಣ೯ ಶೂನ್ಯವಾದಿಗಳಾದರೆ ನ್ಯಾಯ_ವೈಶೇಷಿಕರು ಭಾಗಶ: ಶೂನ್ಯವಾದಿಗಳು.
3)ಸಾಂಖ್ಯರಾದರೋ ಮೇಲಿನ ವಾದವನ್ನು ಖಂಡಿಸಿದರು.ಅವರ ಪ್ರಕಾರ ಸೃಷ್ಟಿ ಪೂವ೯ದಲ್ಲಿ ಕಾಯ೯ ಕಾರಣಗಳೆರಡೂ ಇರುತ್ತವೆ.ಕಾಯ೯ವು ಕಾರಣದಲ್ಲಿ ಇಲ್ಲದಿದ್ದರೆ ಅದನ್ನು ಅಸ್ತಿತ್ವಕ್ಕೆ ತರಲು ಸಾಧ್ಯವೇ ಇರುತ್ತಿರಲ್ಲಿಲ್ಲ.ಅಭಾವದಿಂದ ಅಸ್ತಿತ್ವವು ಸಾಧ್ಯವಿಲ್ಲ.ಎರಡನೆಯದಾಗಿ ಇಲ್ಲದಿರುವುದರಿಂದ ಇರುವಿಕೆಯನ್ನು ಉಂಟು ಮಾಡಲು ಸಾಧ್ಯವೇ ಇಲ್ಲ.ಅಲ್ಲದೆಕಾಯ೯ ಕಾರಣಸಂಬಂಧ ಏಕರೂಪವಾಗಿದೆ.ಒಂದೇ ಕಾರಣವು ಒಂದೇ ಕಾಯ೯ವನ್ನು ಮಾತ್ರ ಸೃಷ್ಟಿಸುತ್ತದೆ. ನಿದಿ೯ಷ್ಟ ಕಾಯ೯ಕ್ಕೆ ಇರುವುದು ನಿದಿ೯ಷ್ಟ ಕಾರಣವು ಮಾತ್ರ.ಇಲ್ಲದಿದ್ದರೆ ಎಲ್ಲಾ ಕಾರಣಗಳಿಂದಲೂ ಎಲ್ಲಾ ಕಾಯ೯ವೂ ಹುಟ್ಟಬಹುದಿತ್ತು.ಮಣ್ಣಿನಿಂದ ವಸ್ತ್ರವು ಮತ್ತು ವಸ್ತ್ರದಿಂದ ಮಡಿಕೆಯು ಹುಟ್ಟಬಹುದಿತ್ತು.ಮರಳಿನಿಂದ ಎಣ್ಣೆಯನ್ನು ತೆಗೆಯಬಹುದಿತ್ತು.ಆದರೆ ಒಂದು ಕಾರಣವು ಒಂದೇ ಕಾಯ೯ಕ್ಕೆ ಮಾತ್ರ ಅಸ್ತಿತ್ವವನ್ನು ನೀಡಬಲ್ಲದು.ಆದ್ದರಿಂದ ಕಾಯ೯ವು ಸೂಕ್ಷ್ಮ ರೂಪದಲ್ಲಿ ಕಾರಣದಲ್ಲಿ ಇದ್ದಿರಬೇಕು.
ಸೂಕ್ಷ್ಮವಾದುದನ್ನು ಸ್ಥೂಲಗೊಳಿಸುವಿಕೆಯೇ ಸೃಷ್ಟಿ.ಸೃಷ್ಟಿಯಲ್ಲಿ ನಿಮಿತ್ತ ಕಾರಣದ ಪಾತ್ರ ನಿಷೇಧಾತ್ಮಕ ವಾದುದು.ಎಂದರೆ ಅದು ಕಾಯ೯ದ ಅಭಿವ್ಯಕ್ತಿಗೆ ಅಡಚಣೆಯಾಗಿರುವ ಅಂಶಗಳನ್ನು ತೆಗೆದು ಹಾಕುವುದೇ ಹೊರತು ಕಾಯ೯ವನ್ನು ಹೊಸದಾಗಿ ಸೃಷ್ಟಿಸುವುದಿಲ್ಲ.ಕುಂಬಾರನು ಮಡಿಕೆಯ ಅಭಿವ್ಯಕ್ತಿಗೆ ಅದ್ದಿಯಾಗಿರುವ ನಿಷ್ಪ್ರಯೋಜಕ ಅಂಶಗಳನ್ನು ಮಣ್ಣಿನಿಂದ ತೆಗೆಯುವನೇ ಹೊರತುಮಡಿಕೆಯನ್ನು ಮಣ್ಣಿನಿಂz ಹೊಸದಾಗಿ ಸೃಷ್ಟಿಸಲಾರ.ಸಾಂಖ್ಯರ ಪ್ರಕಾರ ಶೂನ್ಯದಿಂದ ಸೃಷ್ಟಿಯೂ ಸಾಧ್ಯವಿಲ್ಲ.ಸಾಂಖ್ಯರ ಈವಾದಕ್ಕೆ ಸತ್ಕಾಯ೯ವಾದವೆಂದು ಹೆಸರು.
ಆದರೆ ಅದ್ವೈತ ವೇದಾಂತಿಗಳ ಸಿದ್ಧಾಂತವೇ ಬೇರೆ ರೀತಿಯದು.ಅವರು ಬೌದ್ಧರ ಶೂನ್ಯವಾದವನ್ನಾಗಲೀ ನ್ಯಾಯವೈಶೇಷಿಕರ ಅಸತ್ಕಾಯ೯ವಾದ ಕಾಯ೯ಕಾರಣ ವಾದವನ್ನಾಗಲೀ ಮತ್ತು ಸಾಂಖ್ಯರ ಸತ್ಕಾಯ೯ವಾದವನ್ನಾಗಲೀ ಅಂಗೀಕರಿಸುವುದಿಲ್ಲ.ಬೌದ್ಧರ ಶೂನ್ಯವಾದವು ಸಮ್ಮತವಲ್ಲ.ಏಕೆಂದರೆ ಅಭಾವವು ಅಸ್ತಿತ್ವವಾಗಲು ಸಾಧ್ಯವಿಲ್ಲ.ಹಾಗೆಯೇ ನ್ಯಾಯ ವೈಶೇಷಿಕರ ಅಸತ್ಕಾಯ೯ವಾದವೂ ಸಮ್ಮತವಲ್ಲ.ಏಕೆಂದರೆ ಕಾರಣವು ತನಗೆ ಸಂಬಂಧವಿಲ್ಲದ ಯಾವುದೋ ಒಂದು ಕಾಯ೯ವನ್ನು ಹೊಸದಾಗಿ ಸೃಷ್ಟಿಸಲು ಸಾಧ್ಯವಿಲ್ಲ.ಕಾಯ೯ಕ್ಕೂ ಕಾರಣಕ್ಕೂ ಅವಿನಾ ಸಂಬಂಧವಿದೆ.ಅದೇರೀತಿ ಸತ್ಕಾಯ೯ವಾದವೂ ಸ್ವೀಕೃತವಲ್ಲ.
ಸತ್ಕಾಯ೯ವಾದದ ಪ್ರಕಾರ ಪ್ರಕೃತಿಯು ತನ್ನೊಳಗೆ ಸೂಕ್ಷ್ಮವಾಗಿ ಅಡಗಿರುವ ಜಗತ್ತನ್ನು ಸ್ಥೂಲಗೊಳಿಸುತ್ತದೆ.ಅದ್ವೈತ ವೇದಾಂತಿಗಳ ಪ್ರಕಾರವಾದರೋ ಪ್ರಕೃತಿಗೆ ಯಾವ ತಾತ್ವಿಕ ಸ್ಥಾನವೂಇಲ್ಲ.ಜಡಕ್ಕೆ ಸ್ಥಾನವಿಲ್ಲ.ಇರುವುದೆಲಾ ್ಲಚೇತನವೇ.ಈ ಚೇತನ ತತ್ವವೇ ಬ್ರಹ್ಮ.ಬ್ರಹ್ಮವು ಜಗತ್ತನ್ನು ಸೃಷ್ಟಿಸಿತು ಎನ್ನುವುದರಲ್ಲಿ ಯಾವ ಅಥ೯ವೂಇಲ್ಲ.ಬ್ರಹ್ಮಕ್ಕೂ ಜಗತ್ತಿಗೂ ಕಾಯ೯ಕಾರಣ ಸಂಬಂಧವಿಲ್ಲ.ಏಕೆಂದರೆ ಎರಡೂ ವಿರೋಧ ಲಕ್ಷಣಗಳಿಂದ ಕೂಡಿದೆ.ಬ್ರಹ್ಮದ ಸ್ವರೂಪವು ಅದ್ವೈತವಾದರೆ ಪ್ರಪಂಚದ ಸ್ವರೂಪವು ದ್ವೈತ.ಬ್ರಹ್ಮವು ಚೇತನ ಸ್ವರೂಪವಾದರೆ ಈ ದೃಶ್ಯ ಪ್ರಪಂಚವು ಜಡ.ಬ್ರಹ್ಮವು ನಿವಿ೯ಕಾರಿಯಾದರೆ ಈ ಜಗತ್ತು ಸತತ ವಿಕಾರಿ.ಹೀಗೆ ವಿರೋಧ ಲಕ್ಷಣಗಳಿಂದ ಕೂಡಿರುವ ಎರಡು ತತ್ವಗಳಿಗೆ ಕಾಯ೯ಕಾರಣ ಸಂಬಂಧವಿರಲು ಸಾಧ್ಯವಿಲ್ಲ.ಕಾರಣವು ಬದಲಾವಣೆಯನ್ನು ಸೂಚಿಸುತ್ತದೆ.ಈ ಬದಲಾವಣೆಯನ್ನು ಪಾರಿಭಾಷಿಕವಾಗಿ ಪರಿಣಾಮ ಎನ್ನುತ್ತಾರೆ.
ಅದ್ವೈತಿಗಳ ಈ ಕಾಯ೯ಕಾರಣವಾದಕ್ಕೆ "ಬ್ರಹ್ಮವಿವತ೯"ವಾದವೆಂದುಹೆಸರು.ಇದು ವಿಶಿಷ್ಟಾದ್ವೈತಿಗಳ "ಬ್ರಹ್ಮಪರಿಣಾಮವಾದ" ಕ್ಕಿಂತಲೂ ಭಿನ್ನವಾದುದು.ಬ್ರಹ್ಮವು ಯಾವತತ್ವಕ್ಕೂ ಕಾರಣವೂ ಅಲ್ಲ ಮತ್ತು ಮತ್ತೊಂದು ವಸ್ತುವಿನ ಕಾಯ೯ವೂ ಅಲ್ಲ.ಅದು ಕಾಯ೯ಕಾರಣ ದ್ವಂದ್ವವನ್ನು ಮೀರಿದ ತತ್ವ.ಪಾರಮಾಥಿ೯ಕವಾಗಿ ಸೃಷ್ಟಿ,ಸ್ಥಿತಿ ಲಯಗಳು ಇಲ್ಲ.
ಇದನ್ನೇ ಗೌಡಪಾದರು ತಮ್ಮ ಮಾಡೂಕ್ಯಕಾರಿಕೆಯಲ್ಲಿ "ನ ನಿರೋಧ: ನಚೋತ್ಪತ್ತಿ:"ಎಂದು ಹೇಳಿದ್ದಾರೆ.ವೇದವು ಒಂದು ಪಕ್ಷ ಬ್ರಹ್ಮವನ್ನು ಕಾರಣವೆಂದು ಸಾರಿದಲ್ಲಿ ಅದರ ಅಥ೯ ಬ್ರಹ್ಮವು ಈ ತೋಪ೯ಡಿಕೆಯ ಆಧಾರ ಅಥವಾ ಅಧಿಷ್ಠಾನವೆಂದು ಮಾತ್ರ.ಅದ್ವೈತದ ಪ್ರಕಾರ ಬ್ರಹ್ಮವು ನಿಜವಾಗಿಯೂ ಪ್ರಪಂಚದ ಕಾರಣವಲ್ಲ.
ಸಗುಣಬ್ರಹ್ಮ:
ವೇದಾಂದಲ್ಲಿ ಸಗುಣ ಬ್ರಹ್ಮವನ್ನು ಈಶ್ವರನೆಂದು ಕರೆಯುತ್ತಾರೆ.ಬ್ರಹ್ಮವನ್ನು ಮಾಯಾ ಸಂಬಂಧದಲ್ಲಿ ಕಂಡಾಗ ಅದು ಸಗುಣ ಬ್ರಹ್ಮವಾಗುತ್ತದೆ.ಎಂದರೆ ಮಾಯಾಶಕ್ತಿಯಿಂದ ಕೂಡಿದ ಬ್ರಹ್ಮವೇ ಸಗುಣ ಬ್ರಹ್ಮ.ಸಗುಣಬ್ರಹ್ಮವು ಜಗತ್ತಿಗೆ ಕಾರಣವಾಗಿರುವ ತತ್ವ.ಅದು ಜಗತ್ತಿಗೆ ಉಪಾದಾನ ಕಾರಣವೂ ಹೌದು ಮತ್ತು ನಿಮಿತ್ತ ಕಾರಣವೂ ಹೌದು.ಎಂದರೆ ಅದು ಜಗತ್ತಿನ ಅಭಿನ್ನನಿಮಿತ್ತೋಪಾದಾನಕಾರಣ.
"ಅದು ಇಚ್ಛಿಸಿತ್ತು"ಎಂಬ ಉಪನಿಷತ್ ವಾಕ್ಯವು ಈಶ್ವರನು ನಿಮಿತ್ತ ಕಾರಣವೆಂಬುದನ್ನು ಸೂಚಿಸುತ್ತದೆ.ಏಕೆಂದರೆ ಇಚ್ಛೆಯು ಚೇತನಾತ್ಮಕ ವಸ್ತುವಿನಲಕ್ಷಣ.ಈ ಚೈತನ್ಯವೇ ನಿಮಿತ್ತ ಕಾರಣ.ಹಾಗೆಯೇ "ನಾನು ಅನೇಕವಾಗುತ್ತೇನೆ"ಎಂಬ ಶ್ರುತಿಯ ವಾಕ್ಯವು ಈಶ್ವರನು ಉಪಾದಾನ ಕಾರಣ ವೆಂಬುದನ್ನು ಸೂಚಿಸುತ್ತದೆ.
ಒಂದು ವಸ್ತುವನ್ನು ನಿಮಿ೯ಸಲು ಅಗತ್ಯ ವಾದ ಸಾಮಗ್ರಿಯೇ ಉಪಾದಾನ ಕಾರಣ.ಉದಾಹರಣೆಗೆ ಮಣ್ಣು ಮಡಿಕೆಗೆ ಉಪಾದಾನ ಕಾರಣ.ಮಡಿಕೆಗೆ ಉಪಾದಾನ ಮತ್ತು ನಿಮಿತ್ತ ಕಾರಣಗಳು ಬೇರೆ ಬೇರೆ ಯಾದರೆ ಜಗತ್ತಿಗೆ ಇವೆರಡೂ ಒಂದೇ.ನ್ಯಾಯ ವೈಶೇಷಿಕರ ಪ್ರಕಾರ ಈಶ್ವರನು ಜಗತ್ತಿನ ನಿಮಿತ್ತ ಕಾರಣನು ಮಾತ್ರ.ಪರಮಾಣುಗಳು ಜಗತ್ತಿನ ಉಪಾದಾನ ಕಾರಣಗಳಾಗಿವೆ.ಆದರೆ ಸಗುಣ ಬ್ರಹ್ಮದಲ್ಲಿ ಈ ಎರಡೂ ಕಾರಣಗಳು ಮೇಳೈಸಿವೆ.ಇಲ್ಲಿ ಉಪಾದಾನ ಮತ್ತು ನಿಮಿತ್ತ ಕಾರಣಗಳು ಬೇರೆಅಲ್ಲ.ಈಶ್ವರನೇ ಜಗತ್ತನ್ನು ಸೃಷ್ಟಿಸಲು ಇಚ್ಛಿಸುವ ಮತ್ತು ಆ ಇಚ್ಛೆಯನ್ನು ಯಾವ ಬಾಹ್ಯಸಾಮಗ್ರಿಯ ನೆರವೂ ಇಲ್ಲದೆ ಕಾಯ೯ರೂಪಕ್ಕೆ ತರಬಲ್ಲ ಸಾಮಥ್ಯ೯ವನ್ನು ಹೊಂದಿದ್ದಾನೆ.
ಮೇಲಿನ ನಿಲುವು ಸಮಂಜಸವೂ ಹೌದು.ಈಶ್ವರನು ಕೇವಲ ನಿಮಿತ್ತ ಕಾರಣನಾಗಿದ್ದಲ್ಲಿ ಜಗತ್ತನ್ನು ಸೃಷ್ಟಿಸಲು ಮತ್ತೊಂದು ಸಾಮಗ್ರಿಯನ್ನು ಅವಲಂಬಿಸ ಬೇಕಾಗಿ ಬರುತ್ತದೆ.ಇಂತಹ ಪರಾವಲಂಬನೆಯು ಆತನ ಅನಂತತೆಗೆ ಮತ್ತು ಸವ೯ಶಕ್ತಿತ್ವಕ್ಕೆ ಧಕ್ಕೆ ತರುತ್ತದೆ.ಅವಲಂಬನೆಯು ಪರಿಮಿತಿಯ ಸಂಕೇತ.ಅಲ್ಲದೇ ಅಭಿನ್ನ ನಿಮಿತ್ತೋಪಾದಾನ ಕಾರಣತ್ವವು ಅನುಭವಕ್ಕೆ ವಿರುದ್ಧವೇನೂ ಅಲ್ಲ.ನಿಜ ಜೀವನದಲ್ಲಿ ಇದಕ್ಕೆ ನಿದಶ೯ನವಿದೆ.ಉದಾಹರಣೆಗೆ ಜೇಡರಹುಳವು(ಊಣ೯ನಾಭಿ) ಬಲೆಯನ್ನು ತನಗೆ ಬಾಹ್ಯವಾದ ಸಾಮಗ್ರಿಯಿಂದ ನಿಮಿ೯ಸುವುದಿಲ್ಲ.ಅದು ಬಲೆಯನ್ನು ತನ್ನ ಜೊಲ್ಲಿನಿಂದಲೇ ಹೊರಹೊಮ್ಮಿಸುತ್ತದೆ.
ಈ ಜಗತ್ತಿನಲ್ಲಿ ಒಂದು ವ್ಯವಸ್ಥೆಯಿದೆ. ಈ ವ್ಯಸ್ಥೆಯು ಒಬ್ಬ ಒಬ್ಬ ವ್ಯವಸಾಪಕನನ್ನು ಸೂಚಿಸುತ್ತದೆ. ಜಗತ್ತಿನ ವ್ಯವಸ್ಥೆಯು ಅದ್ಭುತವಾದ್ದರಿಂದ ಅದರ ವ್ಯವಸಾಪಕನೂ ಅದ್ಭುತವಾಗಿರಬೇಕು.
ಈ ಅದ್ಭುತ ವ್ಯವಸ್ಥಾಪಕನೇ ವೇದಾಂತಿಗಳ ಪ್ರಕಾರ ಈಶ್ವರ.ಈ ಜಗತ್ತಿನ ಪ್ರತಿಯೊಂದು ಘಟನೆಗೂ ಒಂದು ಕಾರಣವಿದೆ.ಕಾರಣರಹಿತ ಘಟನೆಯು ಕಲ್ಪನೆಗೆ ನಿಲುಕದ ಸಂಗತಿ. ಹಾಗೆಯೇ ಈ ಜಗತ್ತಿಗೂ ಒಂದು ಅಸಾಧಾರಣವಾದ ಕಾರಣವಿರಬೇಕು.ಈ ಕಾರಣವೇ ಈಶ್ವರ.ವೇದಾಂತಿಗಳು ಈ ಕಾರಣ ನಿಯಮವನ್ನು ವ್ಯಕ್ತಿಯ ಜೀವನಕ್ಕೂ ಅನ್ವಯಿಸುತ್ತಾರೆ.ಪ್ರತಿಯೊಬ್ಬನೂ ತಾನು ಮಾಡುವ ಕಮ೯ದ ಪರಿಣಾಮವನ್ನು ಎದುರಿಸಲೇಬೇಕು.ಈ ಉದ್ದೇಕ್ಕಾಗಿ ಅವನಿಗೆ ಒಂದು ವೇದಿಕೆಯ ಅಗತ್ಯವಿದೆ. ಈ ವೇದಿಕೆಯೇ ಜಗತ್ತು.ಈಶ್ವರನು ಜೀವಗಳು ಕಮ೯ಗಳನ್ನು ಮಾಡಿ ಅವುಗಳ ಫಲಗಳನ್ನು ಅನುಭವಿಸಲೆಂದು ಈ ಜಗತ್ತನ್ನು ಸೃಷ್ಟಿಸುತ್ತಾನೆ.
ಜಗತ್ತಿನ ವ್ಯವಸ್ಥೆಯು ವ್ಯವಸ್ಥಾಪಕನಾದ ಈಶ್ವರನಷ್ಟೇಅಲ್ಲ, ಆ ವ್ಯವಸ್ಥೆಯಿಂದ ಪ್ರಯೋಜನ ಪಡೆಯುವ ಜೀವನನ್ನೂ ಸೂಚಿಸುತ್ತದೆ.ಮನೆಯನ್ನು ಕಟ್ಟುವ ಹಿನ್ನೆಲೆಯಲ್ಲಿರುವ ಉದ್ದೇಶವೂ ಕೂಡ ಮನೆಯ ಕಾರಣಗಳಲ್ಲಿ ಒಂದು.ಅರಿಸ್ಟಾಟಲ್ ಈ ಕಾರಣವನ್ನು ಅತ್ಯಂತಿಕ ಕಾರಣವೆಂದು ಕರೆಯುತ್ತಾನೆ.ಈ ಅಥ೯ದಲ್ಲಿ ಜೀವವು ಜಗತ್ತಿನ ಅತ್ಯಂತಿಕಕಾರಣ.ಈ ಜಗತ್ತು "ಈಶ್ವರಸೃಷ್ಟ ಮತ್ತು ಜೀವಭೋಗ್ಯ" ಎಂದರೆ ಜೀವಗಳು ತಮ್ಮ ಕಮ೯ದ ಫಲವನ್ನು ಭೋಗಿಸಲೆಂದು ಈಜಗತ್ತು ಈಶ್ವರನಿಂದ ಸೃಷ್ಟಿಯಾಯಿತು.
ಸೃಷ್ಟಿಯು ಮೂರು ಹಂತಗಳಲ್ಲಿ ಜರುಗುತ್ತದೆ.
1.ಮೊದಲನೆಯದಾದ ಅವ್ಯಕ್ತ ಹಂತದಲ್ಲಿ ಇಡೀಜಗತ್ತು ಈಶ್ವರನಲ್ಲಿ ಸೂಕ್ಷ್ಮವಾಗಿ ಅಡಗಿರುತ್ತದೆ.
2. ಎರಡನೆಯ ಹಂತದಲ್ಲಿ ಜಗತ್ತು ಭಾಗಶಃ ವ್ಯಕ್ತವಾಗುತ್ತದೆ.ಇಲ್ಲಿ ಈಶ್ವರನನ್ನು ಹಿರಣ್ಯಗಭ೯ ಅಥವಾ ಸೂತ್ರಾತ್ಮನೆಂದು ಕರೆಯುತ್ತಾರೆ.
3.ಮೂರನೆಯ ಹಂತದಲ್ಲಿ ಪ್ರಪಂಚವು ಪೂಣ೯ವಾಗಿ ಸ್ಥೂಲರೂಪಕ್ಕೆ ಬರುತ್ತದೆ.ಇಲ್ಲಿ ಈಶ್ವರನನ್ನು 'ವಿರಾಟ್' ಎಂದು ಕರೆಯುತ್ತಾರೆ.
ಈಶ್ವರನು ಜಗತ್ತಿನ ಸೃಷ್ಟಿಕತ೯ನಷ್ಟೇ ಅಲ್ಲ ಲಯಕಾರಕನೂ ಹೌದು.ಮಡಿಕೆಯು ಮಣ್ಣಿನಿಂದ ಹೊರಹೊಮ್ಮಿ ಕೊನೆಗೆ ಮಣ್ಣಿನಲ್ಲಿ ಹೇಗೆ ಸೇರುವುದೋ ಹಾಗೆಯೇ ಈಜಗತ್ತು ಈಶ್ವರನ ಮಾಯಾಶಕ್ತಿಯ ಮೂಲಕ ಹೊರಹೊಮ್ಮಿ ಕೊನೆಗೆ ಅವನಲ್ಲೇ ಲೀನವಾಗುತ್ತದೆÀ.
ಸಗುಣ ಬ್ರಹ್ಮಕ್ಕೂ ನಿಗು೯ಣ ಬ್ರಹ್ಮಕ್ಕೂ ಇರುವ ವ್ಯತ್ಯಾಸವೇನು? ಅವು ಒಂದೇ ಆಗಿವೆಯೋ ಅಥವಾ ಬೇರೆ ಬೇರೆಯಾಗಿವೆಯೋ?ಇದು ಅದ್ವೈv ವೇದಾಂತದಲ್ಲಿ ಗಹನವಾದ ಪ್ರಶ್ನೆ.
ನಿಗು೯ಣ ಬ್ರಹ್ಮವು ಹೆಸರೇ ಸೂಚಿಸುವಂತೆ ಗುಣರಹಿತ.ಈಶ್ವರನಾದರೋ ಸಗುಣ.ನಿಗು೯ಣ ಬ್ರಹ್ಮವು ಕಾಯ೯ ಕಾರಣ ಸಂಬಂಧವನ್ನು ಮೀರಿದತತ್ವ.ಅದು ಯಾವ ವಸ್ತುವಿನ ಕಾರಣವೂ ಅಲ್ಲ ಕಾಯ೯ವೂ ಅಲ್ಲ.ಈಶ್ವರನಾದರೋ ಈಜಗತ್ತಿಗೆ ಕಾರಣವಾಗಿದ್ದಾನೆ.ಆತನು ತನ್ನ ಮಾಯಾಶಕ್ತಿಯ ಮೂಲಕ ಜಗತ್ತನ್ನು ಸೃಷ್ಟಿಸಿಕೊನೆಗೆ ಅದನ್ನು ತನ್ನೊಳಗೆ ಲೀನವಾಗಿಸಿ ಕೊಳ್ಳುತ್ತಾನೆ.ನಿಗು೯ಣ ಬ್ರಹ್ಮವು ಸಜಾತೀಯ,ವಿಜಾತೀಯ ಮತ್ತು ಸ್ವಗತಭೇಧರಹಿತವಾದುದು.ಸಗುಣಬ್ರಹ್ಮದಲ್ಲಾದರೋ ಮೊದಲೆರಡು ಭೇದಗಳು ಇಲ್ಲದಿದ್ದರೂ ಸ್ವಗತಭೇದವಿದೆ.ಅದು ಪ್ರಕೃತಿ ಪುರುಷೆಂಬ ಭಿನ್ನತತ್ವಗಳನ್ನು ಒಳಗೊಂಡಿದೆ.
ಹೀಗಿದ್ದರೂ ನಿಗು೯ಣ ಮತ್ತು ಸಗುಣಬ್ರಹ್ಮದಲ್ಲಿ ಇರುವ ವ್ಯತ್ಯಾಸಕ್ಕೆ ನಾವು ಅನುಚಿತ ಪ್ರಾಧಾನ್ಯ ನೀಡಬಾರದು.ಏಕೆಂದರೆ ಅದ್ವೈತವು ನಿಗು೯ಣಬ್ರಹ್ಮ ಮತ್ತು ಸಗುಣಬ್ರಹ್ಮ ಎಂಬ ಎರಡು ಅಂತಿಮ ಸತ್ಯಗಳನ್ನು ಅಂಗೀಕರಿಸುವ ಸಿದ್ಧಾಂತವಲ್ಲ.ಅದರ ಪ್ರಕಾರ ಅಂತಿಮ ಸತ್ಯವು ದ್ವೈತರಹಿತ.ನಿಗು೯ಣ ಹಾಗೂ ಸಗುಣ ಪರಿಕಲ್ಪನೆಗಳು ಒಂದೇ ಸತ್ಯವನ್ನು ನೋಡುವ ಎರಡು ದೃಷ್ಟಿಕೋನಗಳನ್ನು ಪ್ರತಿನಿಧಿಸುತ್ತವೆಯೇ ಹೊರತು ಅವು ಭಿನ್ನ ತತ್ವಗಳಲ್ಲ.ಪಾರಮಾಥಿ೯ಕ ದೃಷ್ಟಿಕೋನದಿಂದ ಸತ್ಯವು ನಿಗು೯ಣವೇ ಸರಿ.ಇಲ್ಲಿ ಸತ್ಯವು ಬುದ್ಧಿ ಮತ್ತು ಇಂದ್ರಿಯಗಳನ್ನು ಮೀರಿರುತ್ತದೆ.ಆದರೆ ಈ ಸತ್ಯವನ್ನು ಅರಿಯಲು ನಾವು ಅದಕ್ಕೆ ಕೆಲವು ತಾತ್ಕಾಲಿಕ, ಆನುಷಂಗಿಕ ಅಥವಾ ಆಗಂತುಕ ಗುಣಗಳನ್ನು ಆರೋಪಿಸುತ್ತೇವೆ. ಎಂದರೆ ಸತ್ಯವನ್ನು ನಾವು ಗುಣಗಳನ್ನು ಈ ತಾತ್ಕಾಲಿಕ ಗುಣಗಳಮೂಲಕ ಅರಿತುಕೊಳ್ಳಲು ಯತ್ನಿಸುತ್ತೇವೆ. ವಾಸ್ತವವಾಗಿ ಸತ್ಯಕ್ಕೂ ಮತ್ತು ಈ ಗುಣಗಳಿಗೂ ಯಾವ ಸಂಬಂಧವೂ ಇಲ್ಲ.ಈಗುಣಗಳು ಸತ್ಯದ ಅಂತಿಮ ಸ್ವರೂಪವಲ್ಲ.ಆದರೂ ಅದಕ್ಕೆ ಸೃಷ್ಟಿ ಸ್ಥಿತಿ ಲಯಕಾರಕತ್ವಗಳನ್ನುಆರೋಪಿಸಿ ಅದನ್ನು ಅಥ೯ಮಾಡಿಕೊಳ್ಳುತ್ತೇವೆ.ಈಗುಣಗಳಿಗೆ ತಟಸ್ಥ ಲಕ್ಷಣಗಳೆಂದು ಹೆಸರು.ಇವೇನೂ ಬ್ರಹ್ಮದ ಸ್ವರೂಪ ಲಕ್ಷಣಗಳಲ್ಲ.
ಉದಾಹರಣೆಗೆ ಕಟ್ಟಡವೊಂದನ್ನು ಅದರಮೇಲೆ ತಾತ್ಕಾಲಿಕವಾಗಿ ಕುಳಿತಿರುವ ಪಕ್ಷಿಯೊಂದರ ಮೂಲಕ ನಾವು ಗುರುತಿಸುತ್ತೇವೆ. ವಾಸ್ತವವಾಗಿ ಕಟ್ಟಡಕ್ಕೂ ಪಕ್ಷಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ಪಕ್ಷಿಯು ಕಟ್ಟಡದಮೇಲೆ ಕುಳಿತು ಅನಂತರ ಹಾರಿಹೋಗುವಂತಹುದು.ಹಾಗೆಯೇ ನಾವು ನಿಗು೯ಣಬ್ರಹ್ಮವನ್ನು ಜಗತ್ತಿನ ಮೂಲಕ ಅರಿಯಲೆತ್ನಿಸುತ್ತೇವೆ.ನಿಗು೯ಣ ಸ್ಥಿತಿಯಲ್ಲಿ ಈ ಜಗತ್ತು ಇರುವುದಿಲ್ಲ.ಅಲ್ಲಿ ಉಳಿಯುವುದು ಅದ್ವೈತ ಸತ್ಯವೊಂದೇ. ಸಗುಣವು ವ್ಯಾವಹಾರಿಕ ದೃಷ್ಟಿಕೋನವಾದರೆ ನಿಗು೯ಣವು ಪಾರವiಥಿ೯ಕ ದೃಷ್ಟಿಕೋನ.ಸಗುಣದಲ್ಲಿ ನಾವು ಸತ್ಯವನ್ನು ಬುದ್ಧಿ ಮತ್ತು ಇಂದ್ರಿಯಗಳ ಮೂಲಕ ಅರಿಯಲು ಯತ್ನಿಸಿದರೆ ನಿಗು೯ಣದಲ್ಲಿ ನಾವು ಬುದ್ಧಿ ಇಂದ್ರಿಯಗಳನ್ನು ಮೀರುತ್ತೇವೆ.ಶಂಕರರ ದೃಷ್ಟಿಯಲ್ಲಿ ಇದೇ ಪರಮಾಥ೯.
ಅಧ್ಯಾಯ 5 ಅದ್ವೈತದ ಪರಿಕಲ್ಪನೆಗಳು ಅಡಿಟಿಪ್ಪಣಿಗಳು
1)ಶ್ರೀಶ್ರೀ ಸಚ್ಚಿದಾನಂದೇದ್ರ ಸರಸ್ವತೀ ಸ್ವಾಮಿಗಳು,ಶಾಂಕರ ವೇದಾಂತಸಾರ,ಅಧ್ಯಾತ್ಮ ಪ್ರಕಾಶ ಕಾಯಾ೯ಲಯ,ಹೊಳೆನರಸೀ ಪುರ 573211,ಮೂರನೆಯ ಮುದ್ರಣ,2000,ಪುಟ53
2)ಅದೇ ಪುಟ55
3)ಅದೇ ಪುಟ61.
4)ಅದೇ ಪುಟ 107
5)ಅದೇ ಪುಟ 168
6)ಸ್ವಾಮಿ ಆದಿದೇವಾನಂದ,ಶ್ರೀ ಶಂಕರ ಭಗವತ್ಪಾದ ಪ್ರಣೀತ ವಿವೇಕ ಚೂಡಾಮಣಿ,ರಾಮಕೃಷ್ಣಾಶ್ರಮ2,ಮೈಸೂರು 20.ಪುಟ 137
7)ಅದೇ ಪುಟ167
ಅಧ್ಯಾಯ 6 ಬ್ರಹ್ಮತತ್ವ,ಜೀವ,ಜಗತ್ತು
ಬ್ರಹ್ಮತತ್ವ:
ಬ್ರಹ್ಮವುಸದ್ವಸ್ತು,ಅದ್ವಯ,ವಿಶುದ್ಧ,ಪ್ರಜ್ಞಾನಘನ,ನಿರಂಜನವೂ,ಪ್ರಶಾಂತವೂ,ಆದ್ಯಂತgಹಿತವೂ,ಕ್ರಿಯಾಶೂನ್ಯವೂ,ಆನಂದರಸ ಸ್ವರೂಪವುಳ್ಳದ್ದೂ, ಮಾಯಾಕೃತವಾದ ಯಾವಭೇದಗಳೂ ಇಲ್ಲದ್ದು ನಿತ್ಯವೂ ಸುಖಸ್ವರೂಪವೂ,ಅವಯವಗಳಿಲ್ಲದ್ದೂ,ಪ್ರಮಾಣಾತೀತವಾದದ್ದು,(ಅಪ್ರಮೇಯ),ರೂಪವಿಲ್ಲದ್ದು,ಅವ್ಯಕ್ತ,ನಾಶgಹಿತ,(ಅವಿನಾಶಿ) ಸ್ವಯಂಜ್ಯೋತಿಯು,ತನ್ನಿಂದತಾನೇ ಪ್ರಕಾಶಿಸುತ್ತಿರುವುದು.
ಜ್ಞಾನ ಜ್ಞಾತೃ ಜ್ಞೇಯ ಎಂಬ ತ್ರಿಪುಟೀ ರಹಿತವಾದ ಅನಂತವಾದ ನಿವಿ೯ಶೇಷನಾದ,ಅಖಂಡ ಚಿನ್ಮಾತ್ರನಾದ ಪರತತ್ವವು.ಬ್ರಹ್ಮವನ್ನು ಬಿಡುವುದಕ್ಕೆ ಆಗುವುದಿಲ್ಲ.(ಅಹೇಯಂ)ಗ್ರಹಿಸುವುದಕ್ಕೂ ಆಗುವುದಿಲ್ಲ. (ಅಗ್ರಾಹ್ಯ) ವಾಕ್ಮನಸ್ಸುಗಳಿಗೆ ಅಗೋಚರನು, ಅಳತೆಗೆ ಮೀರಿದವನು, ಆದಿಅಂತ್ಯಗಳಿಲ್ಲದವನು, (ಅನಾದಿ) ಪೂಣ೯ನು ತೇಜೋರೂಪವಾದದ್ದು ಮತ್ತು ಪ್ರತ್ಯಗಾತ್ಮನಿಗಿಂತ ಭಿನ್ನವಲ್ಲ.ಸ್ಥೂಲವಾದುದಲ್ಲ ಎಂದು ಈ ಅಸತ್ತನ್ನು ತಿರಸ್ಕರಿಸಿ ಸಿದ್ಧವಾಗಿರುವ ಆಕಾಶದಂತೆ ಅಸಂಗನಾದ ಊಹಿಸಲು ಅಸಾಧ್ಯನಾದ (ಅನೂಹ್ಯ) ಬ್ರಹ್ಮವನ್ನು ಸಾಕ್ಷಾತ್ಕರಿಸಿಕೊಳ್ಳಬೇಕು.
ಆದುದರಿಂದ ತೋರಿಬರುತ್ತಿರುವ ಮಿಥ್ಯಾ ಸ್ವರೂಪವಾದ ಆತ್ಮಭಾವದಿಂದ ಗ್ರಹಿಸಲ್ಪಟ್ಟಿರುವ ಈ ಶರೀರವನ್ನು ತೊರೆಯಬೇಕು.ನಾನು ಬ್ರಹ್ಮವೇ ಎಂಬ ಶುದ್ಧ ಬುದ್ದಿಯಿಂದ ಅಖಂಡ ಜ್ಞಾನಸ್ವರೂಪನಾದ ನಮ್ಮ ಆತ್ಮನನ್ನು ತಿಳಿದುಕೊಳ್ಳಬೇಕು..ಮಣ್ಣಿನ ಕಾಯ೯ವಾದ ಗಡಿಗೆಯೇ ಮೊದಲಾದ ಸಮಸ್ತವೂ ಯಾವಾಗಲೂ ಮಣ್ಣೇ ಆಗಿರುತ್ತದೆ,ಹಾಗೆಯೇ ಸದ್ವಸ್ತುವಿನಿಂದ ಉತ್ಪನ್ನವಾದ ಇದೆಲ್ಲವೂ ಸನ್ಮಾತ್ರವೇ ಆಗಿರುತ್ತದೆ.ಸದ್ವಸ್ತುವಿಗಿಂತ ಬೇರೆಯಾಗಿ ಬೇರೆ ಯಾವ ವಸ್ತುವೂ ಇಲ್ಲದಿರುವುದರಿಂದ ಅದೇ ಸತ್ಯವು.ಆದುದರಿಂದ ಯಾವುದು ಶ್ರೇಷ್ಠವೂ ಪ್ರಶಾಂತವೂ ಶುದ್ಧವೂ ಅದ್ವಯವೂ ಆದ ಪರಬ್ರಹ್ಮವಾಗಿರುವುದೊ ಅದೇ ನೀನಾಗಿರುವೆ.
ಕನಸಿನಂತೆ ಜಾಗ್ರತವೂ ಮಿಥ್ಯೆಯೇ.ಈ ಶರೀರ,ಇಂದ್ರಿಯಗಳು.ಪ್ರಾಣ,ಅಹಂಕಾರ ಇವೇ ಮೊದಲಾದುವೆಲ್ಲವೂ ಅಸತ್ಯವಾಗಿರುದರಿಂದ ಯಾವುದು ಶ್ರೇಷ್ಠವೂ ಪ್ರಶಾಂತವೂ ಶುದ್ಧವೂ ಅದ್ವಯವೂ ಆದ ಪರಬ್ರಹ್ಮವಾಗಿದೆಯೋ ಅದೇ ನೀನಾಗಿರುವೆ.ಜಾತಿ,ಕುಲಗೋತ್ರಗಳಿಗೆ ದೂರವೂ ನಾಮರೂಪ ಗುಣ ದೋಷವಜಿ೯ತವೂ ದೇಶಕಾಲ ವಿಷಯಗಳನ್ನು ಮೀರಿರುವುದೋ ಆ ಯಾವ ಬ್ರಹ್ಮವಿರುವುದೋ ಅದೇ ನೀನಾಗಿರುವೆ.ಪರಬ್ರಹ್ಮ ವಸ್ತುವು ಇಂದ್ರಿಯಗಳಿಗೆ ವಿಷಯವಲ್ಲ.ಬದ್ಧವಾದ ಜ್ಞಾನ ದೃಷ್ಟಿಗೆ ವಿಷಯ ವಾಗಿರುವುದು, ಶುದ್ಧ ಪ್ರಜ್ಞಾನ ಘನವಾಗಿರುವುದು ಅನಾದಿಯೂ ಆದುದು.
ಜನ್ಮ,ವೃದ್ಧಿ,ಪರಿಣಾಮ,ಕ್ಷಯ,ರೋಗ,ವಿನಾಶ ಇವುಗಳಿಲ್ಲದ ಅವ್ಯಯವಾದ ವಿಶ್ವದ ಸೃಷಿ ್ಟಸ್ಥಿತಿ ಲಯಗಳಿಗೆ ಕಾರಣವಾದ ಆ ಬ್ರಹ್ಮವೇ ನೀನಾಗಿರುವೆ.ಸಮಸ್ತಭೇದರಹಿತವಾದ ನಾಶವಾಗದ ಸ್ವರೂಪವುಳ್ಳ ಅಲೆಗಳಿಲ್ಲದ ಸಮುದ್ರದಂತೆ ನಿಶ್ಚಲವಾಗಿರುವ ಯಾವಾಗಲೂ ಮುಕ್ತವಾದ ಅಖಂಡವಾದ ಯಾವ
ಬಹ್ಮವಿದಯೋ ಅದೇ ನೀನು. ಅದು ವಿಭಾಗಗಳಿಲ್ಲದೆ ಇರುವುದು.ಪ್ರಾಣಿಗಳಲ್ಲಿ ವಿಭಾಗವಾಗಿರುವಂತೆ ಕಾಣುತ್ತಿರುವುದು.ಅದು ಒಂದೇ ಆಗಿದ್ದರೂ ಅನೇಕ ವಸ್ತುಗಳಿಗೆ ಕಾರಣವಾಗಿದೆ.ಅದು ಎಲ್ಲಾ ಕಾರಣಗಳನ್ನೂ ನಿರಾಕರಿಸುತ್ತದೆ.ಅದು ಮಾಯೆ ಮತ್ತು ಅದರ ಕಾಯ೯ ಇವುಗಳಿಗಿಂತ ಭಿನ್ನವಾಗಿದೆ. ಸ್ವತಃಸಿದ್ಧವಾಗಿದೆ.ವಿಕಲ್ಪ ಶೂನ್ಯವೂ,ಅಪರಿಚ್ಛಿನ್ನವೂ ಅವಿನಾಶಿಯೂ,ಕಾಯ೯ ಸಮುದಾಯ ಮತ್ತು ಮಾಯೆ ಇವುಗಳಿಗಿಂತ ಭಿನ್ನವಾದುದೂ ಸವೋ೯ತ್ಕøಷ್ಟವೂ, ನಿತ್ಯವೂ,ಅಖಂಡ ಸುಖರೂಪವೂ ತಮಃ ಶೂನ್ಯವೂ ಆಬ್ರಹ್ಮವೇ ನೀನಾಗಿರುವೆ.ಯಾವುದು ಭೂಮವೋ ಅದು ಸುಖ. ಅಲ್ಪದಲ್ಲಿ ಸುಖವಿಲ್ಲ.(ಛಾಂ ಉ 7. 2.23)ಸದ್ವಸ್ತುವು ಒಂದೇ ಆಗಿದ್ದರೂ ಭ್ರಾಂತಿಯ ಮೂಲಕ ನಾಮರೂಪ,ಗುಣ,ಕ್ರಿಯೆ ಇವುಗಳ ರೂಪದಿಂದ ಬಹುವಾಗಿ ಕಾಣುತ್ತದೆಯೋ ಆದರೂ ಬಳೆ ಕುಂಡಲ ಮೊದಲಾದವುಗಳ ರೂಪವಾಗಿ ಕಾಣುತ್ತಿರುವ ಚಿನ್ನದಂತೆ ತಾನು ಮಾತ್ರ ವಿಕಾರ ರಹಿತವಾದುದು.
ಬ್ರಹ್ಮದಲ್ಲಿ ವಿಶ್ವವನ್ನೆಲ್ಲಾ ಲಯಗೊಳಿಸಬೇಕು.ನೀರಿನಲ್ಲಿ ಪೃಥ್ವಿಯನ್ನೂ ಅಗ್ನಿಯಲ್ಲಿ ನೀರನ್ನೂ ವಾಯುವಿನಲ್ಲಿ ಅಗ್ನಿಯನ್ನೂ ಆಕಾಶದಲ್ಲಿ ವಾಯುವನ್ನೂ ಅವ್ಯಾಕೃತದಲ್ಲಿ ಆಕಾಶವನ್ನೂ,ಬ್ರಹ್ಮದಲ್ಲಿ ಅವ್ಯಾಕೃತವನ್ನೂ, ಲಯಗೊಳಿಸಿ ಆ ಬ್ರಹ್ಮವೇ ತಾನೆಂದು ಅನುಸಂಧಾನ ಮಾಡಬೇಕು.ಬುದ್ಧಿಯೆಂಬ ಗುಹೆಯಲ್ಲಿ ಸ್ಥೂಲ ಸೂಕ್ಷ್ಮಗಳಿಗಿಂತ ಭಿನ್ನವೂ ಸತ್ಸ್ವರೂಪವೂ,ಅದ್ವಯವೂ ಆದ ಪರಬ್ರಹ್ಮವಿರುತ್ತದೆ.ಈ ಬುದ್ಧಿಗುಹೆಯಲ್ಲಿ ಯಾವನು ಬ್ರಹ್ಮಸ್ವರೂಪದಲ್ಲಿಯೇ ವಾ¸ ಮಾಡುತ್ತಾನೋ ಅವನಿಗೆ ಪುನಃ ಶರೀರವೆಂಬ ಗುಹೆಯಲ್ಲಿ ಪ್ರವೇಶವಿರುವುದಿಲ್ಲ.ಬುದ್ಧಿಯನ್ನು ಬಿಟ್ಟು ಆತ್ಮನನ್ನು ಅರಿತುಕೊಳ್ಳುವುದು ಅಶಕ್ಯ.
ಬ್ರಹ್ಮವುಸತ್ಯ.ಜಗತ್ತುಮಿಥ್ಯೆ. ಜೀವವು ಬ್ರಹ್ಮವೇ.ಬೇರೆ ಅಲ್ಲ.ಇದು ಅದ್ವೈತ ವೇದಾಂತ ಸಾರ.ಬ್ರಹ್ಮವು ಪಾರಮಾಥಿ೯ಕ ಸತ್ಯ.ಅದು ಪೂಣ೯,ಸತ್,ಚಿತ್, ಆನಂದ(ಸಚ್ಚಿದಾನಂದ)ಅನಾದಿ ಅಚಲ ನಿತ್ಯ.ಅದು ಪ್ರಜ್ಞಾನಘನ,ಬ್ರಹ್ಮಜ್ಞಾನದಿಂದ ಅಜ್ಞಾ£ವು ನಾಶವಾಗಿ ಪರಮಾನಂದ ಉಂಟಾಗುತ್ತದೆ.
ಬ್ರಹ್ಮವು ಅಜ್ಞಾನದಿಂದ ಜೀವ, ಜಗತ್ತು ಹಾಗೂ ಈಶ್ವರನಾಗಿ ತೋರುತ್ತದೆ.ಬ್ರಹ್ಮದಲ್ಲಿ ಯಾವ ವಿಭಾಗವು ನಿಜವಾಗಿ ಇರುವುದಿಲ್ಲ.ಭಕ್ತ ಹಾಗೂ ಭಗವಂತನ ನಡುವಿನ ಭೇದವು ಕೇವಲ ವ್ಯಾವಹಾರಿಕ ಸತ್ಯ. ಪಾರಮಾಥಿ೯ಕ ಸತ್ಯವಲ್ಲ.
ಜೀವವು ಬ್ರಹ್ಮ:ಜೀವ ಹಾಗೂ ಬ್ರಹ್ಮದ ನಡುವೆ ಯಾವ ಭೇದವೂ ಇಲ್ಲ.ಎರಡೂ ಕೂಡ
ಇಂದ್ರಿಯ,ಮನಸ್ಸು ಬುದ್ಧಿ ಇವುಗಳ ಆಚೆಗಿದೆ.ಶಂಕರರು "ಜೀವವು ಬ್ರಹ್ಮವೇ ಬೇರೆ ಅಲ್ಲ" ಎಂದು ನಿಶ್ಚಯಿಸಿ ಜಗತ್ತಿಗೆ ತಿಳಿಸಿದ್ದಾರೆ.ಬ್ರಹ್ಮವು ಸವ೯ಜ್ಞ,ಸವ೯ವ್ಯಾಪ್ತ, ಸವ೯ಶಕ್ತ. ಬ್ರಹ್ಮವೊಂದೇ ಪಾರಮಾಥಿ೯ಕ ಸತ್ಯವೆಂದು ಹೇಳಿರುತ್ತಾರೆ.
ಸತ್,ಚಿತ್,ಆನಂದ ಸ್ವರೂಪ:
ಸತ್ ಎಂದರೆ ಇರುವಿಕೆ, ಚಿತ್ ಎಂದರೆ ಅರಿವು ಮತ್ತು ಆನಂದ ಸ್ವರೂಪವಾಗಿದೆ.ಬ್ರಹ್ಮದಲ್ಲಿ ಯಾವಭೇದವೂ ಇರುವುದಿಲ್ಲ.ಅದು ತ್ರಿಪುಟಿ ರಹಿತ(ಜ್ಞಾತೃ,ಜ್ಞೇಯ ಜ್ಞಾನ.)
ಅದು ಕಾಲ,ದೇಶ,ಕಾರಣಗಳನ್ನು ಮೀರಿದೆ.ಬ್ರಹ್ಮವು ನಾಮ ರೂಪಗಳನ್ನು ಮೀರಿದೆ.ಬ್ರಹ್ಮವನ್ನು "ತಕ್ಷಣ" ಅನುಭವದಿಂದಲೂ ಅರಿಯಬಹುದು. ಎಲ್ಲಾ ಪ್ರಾಣಿಗಳೂ ಬ್ರಹ್ಮದಿಂದಲೇ ಹುಟ್ಟುತ್ತವೆ.ಬ್ರಹ್ಮದಲ್ಲಿಯೇ ಜೀವಿಸುತ್ತವೆ ಮತ್ತು ಬ್ರಹ್ಮದಲ್ಲಿಯೇ ಲಯವಾಗುತ್ತವೆ.
ಅದು ಸತ್ಯ, ಜ್ಞಾನ, ಅನಂತ.ಜಗತ್ತು ಬ್ರಹ್ಮದ ಪ್ರತಿಬಿಂಬ.ಅಜ್ಞಾನದಿಂದ ಬ್ರಹ್ಮವೇ ನಾಮ ರೂಪಗಳಾಗಿ ಗೋಚರಿಸುತ್ತದೆ.ಬ್ರಹ್ಮವು ಅವಿನಾಶೀ ಸತ್ಯ. ಅನಿವ೯ಚನೀಯ.ಬ್ರಹ್ಮವು ಅನಿವ೯ಚನೀಯ ಮತ್ತು ಅವಣ೯ನೀಯ.ಉಪನಿಷತ್ತುಗಳು ಅದನ್ನು 'ನೇತಿನೇತಿ' ಎಂದು ವಣಿ೯ಸುತ್ತವೆ.ಅದು ವಾಕ್,ಮನಸ್ಸು,ಬುದ್ಧಿ,ಇಂದ್ರಿಯಗಳನ್ನು ಮೀರಿದೆ.ಅವನು ಅರಿಯುವವನು.ಜ್ಞಾನ ಸ್ವರೂಪನು ಜ್ಯೋತಿಗಳ ಜ್ಯೋತಿ,ಎಲ್ಲರ ಆತ್ಮ,ಸ್ವಪ್ರಕಾಶ.ಬ್ರಹ್ಮದಲ್ಲಿ ಯಾವಭೇದವೂ ಇಲ್ಲ.ಅವನು ಕತೃ೯ವೂ ಅಲ್ಲ.ಭೋಕ್ತøವೂ ಅಲ್ಲ.ಕೇವಲ ಜ್ಞಾನಸ್ವರೂಪನು.ನಿತ್ಯ,ಶುದ್ಧ,ಬುದ್ಧ.ಮುಕ್ತ.ಜ್ಞಾನವು ಬ್ರಹ್ಮದ ಕ್ರಿಯೆ ಅಲ್ಲ ಸ್ವಭಾವ.ಅವನು ಸಾಕ್ಷಿ,ಅಪ್ರಮೇಯ,ಅಚಲ,ಅವಿನಾಶಿ.
ಜೀವಾತ್ಮ(ಜೀವ):ಜೀವಾತ್ಮನು ತನ್ನ ಕಮ೯ಗಳಿಗನುಸಾರವಾಗಿ ಫಲಗಳನ್ನು (ಒಳ್ಳೆಯ ಮತ್ತು ಕೆಟ್ಟ)ಅನುಭವಿಸುತ್ತಾ ನೋವು ನಲಿವು, ಸುಖ ದುಃಖಗಳಿಗೆ ಭಾಗಿಯಾಗುತ್ತಾನೆ.ಪರಮಾತ್ಮನು ಸುಖ ದುಃಖಗಳಾಚೆ ಇದ್ದು ಅವುಗಳಿಗೆ ಒಳಪಡದ ಕೇವಲ ಸಾಕ್ಷಿ ಯಾಗಿರುತ್ತಾನೆ.ಜೀವಿಗಳು ಕಮ೯ಫಲವನ್ನು ಅನುಭವಿಸುತ್ತವೆ. ಜೀವಬ್ರಹ್ಮೈಕ್ಯ ಜ್ಞಾನದಿಂದ ನೋವುಗಳು ಇಲ್ಲದಂತಾಗಿ ಪರಮಾನಂದವನ್ನು ಅನುಭವಿಸುತ್ತಾನೆ. ಅದ್ವೈತವು ಜೀವ ಬ್ರಹ್ಮೈಕ್ಯವನ್ನು ಸಾರುತ್ತವೆ. ಬ್ರಹ್ಮವು ಅನನ್ಯ.ಜೀವನು ದೇಹ ಇಂದ್ರಿಯ,ಮನಸ್ಸು ಬುದ್ಧಿ ಇವುಗಳಿಗಿಂತ ಬೇರೆ.ಜೀವನು ಇವುಗಳ ಆಚೆ ಇದ್ದಾನೆ.ಜೀವನು ತಿಳಿಯುವವನು(ಜ್ಞಾತೃ) ಕತೃ೯,ಭೋಕ್ತø,ಅನಂತ,ಜ್ಞಸ್ವರೂಪ (ಪ್ರಜ್ಞೆ) ಅನಂತ.ಜೀವನಿಗೆ ಹುಟ್ಟಾಗಲೀ ಸಾವಾಗಲೀ ಶರೀರಕ್ಕೇ ಹೊರತು ಆತ್ಮನಿಗಲ್ಲ.(ಜೀವನಿಗಲ್ಲ.) ಜೀವನಿಗೆ ಮನೋ ಸ್ವಾತಂತ್ಯ್ರವಿದೆ.ಅದು ಕಮ೯ಗಳಿಂದ ಬಂಧಿತವಾಗಿದೆ. (ಅಜ್ಞಾನದ ಹಂತದಲ್ಲಿ)ಜೀವನು ಕಮ೯ಗಳನ್ನು ಅನುಭವಿಸುತ್ತಾನೆ.ಜೀವನಿಗೆ ಪುನಜ೯ನ್ಮವಿದೆ.ಅದು ಕಮಾ೯ನುಸಾರವಾಗಿರುತ್ತದೆ.
ಜೀವನ ನಾಲ್ಕುಅವಸ್ಥೆಗಳು:
1) ಜಾಗ್ರತ(ಎಚ್ಚರ): ಈ ಅವಸ್ಥೆಯಲ್ಲಿ ಜೀವನು ವಿಶ್ವನೆಂದು ಕರೆಯಲ್ಪಡುತ್ತಾನೆ.ಹೊರಗಿನ ಪ್ರ್ರಾಪಂಚಿಕ ವಸ್ತುಗಳನ್ನು ಅನುಭವಿಸುತ್ತಾನೆ.
2) ಕನಸು (ಸ್ವಪ್ನ): ಈ ಅವಸ್ಥೆಯಲ್ಲಿ ಜೀವನು ತೈಜಸ ನೆಂದು ಕರೆಯಲ್ಪಡುತ್ತಾನೆ.ಒಳಗಿನ ದೃಷ್ಟಿಯನ್ನು ಉಳ್ಳವನಾಗಿರುತ್ತಾನೆ.
3) ನಿದ್ರೆ(ಸುಷುಪ್ತಿ): ಈ ಅವಸ್ಥೆಯಲ್ಲಿ ಜೀವನು ಪ್ರಾಜ್ಞ ನೆಂದು ಕರೆಯಲ್ಪಡುತ್ತಾನೆ.ಇಲ್ಲಿ ಜೀವನು ಆನಂದ ಸ್ವರೂಪನಾಗಿರುತ್ತಾನೆ.
4) ತುರೀಯ: ಈ ಅವಸ್ಥೆಯಲ್ಲಿ (ಸಹಜಾವಸ್ಥೆ) ಜೀವನು ಆತ್ಮನೆಂದು ಕರೆಯಲ್ಪಡುತ್ತಾನೆ.ಇಲ್ಲಿ ಜೀವನು ಬ್ರಹ್ಮ ಸ್ವರೂಪನಾಗಿರುತ್ತಾನೆ.
ಪಂಚಕೋಶಗಳು:
ಜೀವನು ಪಂಚಕೋಶಗಳ ಒಳಗೆ ಇರುತ್ತಾನೆ.
1)ಅನ್ನಮಯ ಕೋಶ:ಈ ದೇಹವೇ ಅನ್ನಮಯಕೋಶ
2)ಪ್ರಾಣಮಯಕೋಶ:ಇದು ಅನ್ನಮಯ ಕೋಶದ ಒಳಗೆಇರುತ್ತದೆ.ಪ್ರಾಣ,ಅಪಾನ,ವ್ಯಾನ,ಉದಾನ,ಸಮಾ£ನ ಎಂಬ ಐದು ವಿಧವಾದ ಕ್ರಿಯೆಗಳನ್ನು ಮಾಡುತ್ತದೆ.
3)ಮನೋಮಯ ಕೋಶ:ಇದು ಪ್ರಾಣಮಯ ಕೋಶದ ಒಳಗಿದೆ.ಮನಸ್ಸೇ ಮನೋಮಯ ಕೋಶ.
4)ವಿಜ್ಞಾನಮಯ ಕೋಶ:ಇದು ಮನೋಮಯ ಕೋಶದ ಒಳಗಿದೆ.ಇದು ಬುದ್ಧಿ ಮತ್ತು ಅದರ ಚಟುವಟಿಕೆಗಳನ್ನು ಒಳಗೊಂಡಿದೆ.
5)ಆನಂದಮಯಕೋಶ:ಈ ಕೋಶವು ವಿಜ್ಞಾನಮಯ ಕೋಶದ ಒಳಗಿದೆ.ಇದು ಆನಂದ ರೂಪವಾಗಿದೆ.ಇಲ್ಲಿ ವ್ಯಕ್ತಿ ಮತ್ತು ವಸ್ತುವಿನ ನಡುವೆ ಯಾವಭೇದವೂ ಇರುವುದಿಲ್ಲ.ಅದು ಅನಂತ ಪಾರಮಾಥಿ೯ಕ ಮತ್ತು ಪೂಣ೯.ಇಲ್ಲಿ ಜ್ಞಾನವು ನೇರವಾಗಿ ಅನುಭವ ವಾಗುತ್ತದೆ.ಕಠೋಪನಿಷತ್ತಿನಲ್ಲಿ ಜೀವನು(ಆತ್ಮನು) ಭೂಮ, ಅಜರಾಮರ, ಸ್ವಯಂಸಿದ್ಧ ಮತ್ತು ಸ್ವಪ್ರಕಾಶನೆಂದು ಹೇಳಿದೆ.
ಯಾಜ್ಞವಲ್ಕ್ಯರ ಪ್ರಕಾರ ಎಲ್ಲವನ್ನೂ ಅರಿಯುವವನು (ಸವ೯ಜ್ಞ)ಆದರೆ ಇವನನ್ನು ವಿಷಯೀಕರಿಸಿ ಅರಿಯಲಾಗುವುದಿಲ್ಲ.ಸೂಯ೯ ,ಚಂದ್ರ ಮತ್ತು ಅಗ್ನಿಯ ಬೆಳಕಿಲ್ಲದಿರುವಾಗಲೂ ಆತ್ಮನು ಸ್ವಪ್ರಕಾಶದಿಂದ ಬೆಳಗುತ್ತಾನೆ.ಕಠೋಪನಿಷತ್ತಿನಲ್ಲಿ ಅವನ ಬೆಳಕಿನಿಂದಲೇ ಎಲ್ಲವೂ ಬೆಳಗುತ್ತವೆ ಎಂದು ಹೇಳಿದೆ.ಮುಂಡಕೋಪನಿಷತ್ತಿನಲ್ಲಿ "ಸ್ವತಃಅಗ್ನಿಯೇ ತಲೆ,ಸೂಯ೯ ಚಂದ್ರರು ಕಣ್ಣುಗಳು.ನಾಲ್ಕು ದಿಕ್ಕುಗಳು ಕಿವಿಗಳು ವೇದಗಳೇ ಅದರ ಮಾತುಗಳು ಅದು ಎಲ್ಲಾ ಜೀವಿಗಳ ಅಂತಯಾ೯ಮಿ "ಎಂದು ಹೇಳಿದೆ.
ಸ್ವತಃಸಿದ್ಧನೂ, ನಾನು ಎಂಬ ಪ್ರತ್ಯಯಕ್ಕೆ ಆಶ್ರಯನೂ ,ಅವಸ್ಥಾತ್ರಯಕ್ಕೆ ಸಾಕ್ಷಿಯೂ, ಪಂಚಕೋಶಗಳಿಗಿಂತ ಭಿನ್ನನೂ,ಆದ ಆತ್ಮನೊಬ್ಬನು ಯಾವಾಗಲೂ ಇರುತ್ತಾನೆ. ಯಾವನು ಜಾಗ್ರತ,ಸ್ವಪ್ನ, ಸುಷುಪ್ತಿಯಲ್ಲಿ ತೋರುವುದೆಲ್ಲವನ್ನೂ ಅರಿತುಕೊಳ್ಳುತ್ತಾನೆಯೋ,ಮನಸ್ಸಿನ ಮತ್ತು ಅದರ ವೃತ್ತಿಗಳ ಇರುವಿಕೆ ಅಥವಾ ಇಲ್ಲದಿರುವಿಕೆ ಇವುಗಳನ್ನು ಮತ್ತು ನಾನು ಎಂಬುದಕ್ಕೆ ಆಶ್ರಯನಾಗಿರುನೋ ಅವನೇ ಈ ಆತ್ಮನು. ಮನಸ್ಸು ಸುಷುಪ್ತಿಯಲ್ಲಿ ಲಯವಾಗುತ್ತದೆ.ಇದರ ಅಭಾವವು ಎಚ್ಚರಗೊಂಡ ಮೇಲೆಯೇ ಗೊತ್ತಾಗುತ್ತದೆ.ಆತ್ಮನು ಸಾಕ್ಷಿಯಾಗಿರುವುದರಿಂದಲೇ ಇದು ಸಾಧ್ಯವಾಗಿದೆ.
ಯಾವನು ತಾನಾಗಿಯೇ ಎಲ್ಲವನ್ನೂ ನೋಡುತ್ತಾನೆಯೋ ಯಾವನನ್ನು ಯಾವನೊಬ್ಬನೂ ನೋಡಲಾರನೋ ಈ ಯಾವನು ಬುದ್ಧಿ ಮೊದಲಾದವನ್ನು ಚೇತನಗೊಳಿಸುತ್ತಾನೆಯೋ ಯಾವನನ್ನು ಅವು ಚೇತನಗೊಳಿಸಲಾರವೋ ಅವನೇ ಈ ಆತ್ಮನು. ಯಾವನಿಂದ ಈ ವಿಶ್ವವೆಲ್ಲವೂ ವ್ಯಾಪ್ತವಾಗಿದೆಯೋ ಯಾವನನ್ನು ಯಾವುದೂ ವ್ಯಾಪಿಸಲಾರದೋ ಪ್ರಕಾಶಮಾನವಾದ ಯಾವನನ್ನು ಅನುಸರಿಸಿ ಪ್ರಕಾಶರೂಪವಾದ ಇದೆಲ್ಲವೂ ಬೆಳಗುತ್ತಿರುದೋ ಅವನೇ ಈ ಆತ್ಮನು.
ಅವನು ಸಾನ್ನಿಧ್ಯ ಮಾತ್ರದಿಂದ ದೇಹ,ಇಂದ್ರಿಯ, ಮನಸ್ಸು,ಬುದ್ಧಿ ಇವು ತಮ್ಮ ತಮ್ಮ ವಿಷಯಗಳಲ್ಲಿ ಪ್ರವತಿ೯ಸುವಂತೆ ಮಾಡುತ್ತವೆ.ಇವನು ಅವಿನಾಶಿಯಾಗಿರುವುದರಿಂದ ದೃಷ್ಟøವಿನ ದೃದೃಷ್ಟಿಗೆ ನಾಶವಿಲ್ಲ.
ಇವನು ಅಂತರಾತ್ಮನು.ಯಾವಾಗಲೂ ಬದಲಾಯಿಸದ ಒಂದೇ ಸ್ವರೂಪವುಳ್ಳವನು. ಜ್ಞಾನಮಾತ್ರ ಸ್ವರೂಪನು. ಇವನ ಪ್ರೇರಣೆಯಿಂದ ವಾಕ್ ಪ್ರಾಣಗಳು ಚಲಿಸುತ್ತವೆ.ಈ ಶರೀರದಲ್ಲಿಯೇ ಸತ್ವಗುಣ ಪ್ರಧಾನವಾದ ಮನಸ್ಸಿದೆ.ಅದರಲ್ಲಿ ಬುದ್ಧಿಯೆಂಬ ಗುಹೆಇದೆ.ಅದರಲ್ಲಿರುವ ಅವ್ಯಾಕೃತವೆಂಬ ಆಕಾಶದಲ್ಲಿ ಪ್ರಕಾಶನಾದ ಆತ್ಮನು ಆಕಾಶದಲ್ಲಿರುವ ಸೂಯ೯ನಂತೆ ತನ್ನ ತೇಜಸ್ಸಿನಿಂದ ಈ ವಿಶ್ವವನ್ನೆಲ್ಲ ಬೆಳಗುತ್ತ ಪ್ರಕಾಶಿಸುತ್ತಾನೆ.ಇಲ್ಲಿ ಆತ್ಮನನ್ನು ಎಲ್ಲಿ ಹುಡುಕ ಬೇಕೆಂದು ಹೇಳಿದೆ.ಮೊದಲು ಸ್ಥೂಲವಾದ ಶರೀರವಿದೆ.ಅದರಲ್ಲಿಅಂತಃಕರಣವಿದೆ.ಬುದ್ಧಿಯು ಅಂತಃಕರಣದ ನಿಶ್ಚಯಾತ್ಮಕ ರೂಪ. ಬುದ್ಧಿಯಲ್ಲಿ ಅವ್ಯಾಕೃತ ಎಂಬ ಅಥವಾ ಕಾರಣ ಶರೀರವೆಂಬ ಆಕಾಶವಿದೆ.ಈ ಆಕಾಶದಲ್ಲಿ ಆತ್ಮನನ್ನು ಧ್ಯಾನಿಸಬೇಕು.ಆತ್ಮನು ಸ್ಥೂಲ,ಸೂಕ್ಷ್ಮ,ಕಾರಣ ಶರೀರಗಳಿಗಿಂತ ಭಿನ್ನನು.
ಈ ಆತ್ಮನು ಹುಟ್ಟುವುದಿಲ್ಲ.ಸಾಯುವುದಿಲ್ಲ. ಬೆಳೆಯುವುದಿಲ್ಲ. ಕ್ಷಯಿಸುವುದಿಲ್ಲ. ಪರಿಣಮಿಸುವುದಿಲ್ಲ. ಏಕೆಂದರೆ ಶಾಶ್ವತನಾಗಿರುತ್ತಾನೆ. ಈ ಶರೀರವು ನಾಶವಾದರೂ ಗಡಿಗೆಯಲ್ಲಿರುವ ಆಕಾಶದಂತೆ ತಾನುಮಾತ್ರ ನಾಶವಾಗುದಿಲ್ಲ.(ಘಟಾಕಾಶವು ಚಿದಾಕಾಶದಲ್ಲಿ ಲೀನವಾಗುವಂತೆ) ಪರಮಾತ್ಮನು ಕಾಯ೯ ಕಾರಣಗಳಿಗಿಂತ ವಿಲಕ್ಷಣನಾಗಿ,ನಿಮ೯ಲ ಚಿತ್ ಸ್ವರೂಪನಾಗಿ ನಿವಿ೯ಶೇಷನಾಗಿ ಸ್ಥೂಲ,ಸೂಕ್ಷ್ಮವಾದ ಈ ಜಗತ್ತೆಲ್ಲವನ್ನೂ ಬೆಳಗುತ್ತಾ,ಜಾಗ್ರÀತ್ತು ಮೊದಲಾದ ಅವಸ್ಥೆಗಳಲ್ಲಿ "ನಾನು ನಾನು"ಎಂದು ಬುದ್ಧಿಗೆ ಸಾಕ್ಷಿಯಾಗಿ ಪ್ರಕಾಶಿಸುತ್ತಾನೆ.ನಾವು ಮಾಡುವಂತೆ ಕಾಣುವ ಕ್ರಿಯೆಗಳೆಲ್ಲಾ ಬುದ್ಧಿಯಿಂದಲೇ ಆಗುವುದೇ ವಿನಃ ನಿಕ್ಷ್ರಿಯನಾದ ಸಾಕ್ಷಿಯಿಂದಲ್ಲ. ಯಮ ನಿಯಮಾದಿಗಳಿಂದ ಮನಸ್ಸನ್ನು ವಶಪಡಿಕೊಂಡು ಪ್ರಸನ್ನ ಚಿತ್ತದಿಂದ ನಿನ್ನ ಆತ್ಮನನ್ನು ನಿನ್ನಲ್ಲಿಯೇ "ಇವನೇ ನಾನು" ಎಂದು ಸಾಕ್ಷಾತ್ಕರಿಸಿಕೊಳ್ಳಬೇಕು. ್ರಹುಟ್ಟು ಸಾವುಗಳೆಂಬ ಅಲೆಗಳಿಂದ ಕೂಡಿ ಅಪಾರವಾಗಿರುವ ಸಂಸಾರ ಸಮುದ್ರವನ್ನು ದಾಟಬೇಕು.ಅಸಂಭಾವನೆ,ಸಂಶಯ, ವಿಪರೀತಭಾವನೆ ಇವುಗಳಿಲ್ಲದೆ ಸೂಕ್ಷ್ಮದಶಿ೯ಗಳು ಏಕಾಗ್ರವಾದ ಸೂಕ್ಷ್ಮವಾದ ಬುದ್ಧಿಯಿಂದ ನೋಡುತ್ತಾರೆ. ಸ್ಥೂಲ ಸೂಕ್ಷ್ಮ ಕಾರಣ ಶರೀರಗಳೊಂದಿಗೆ ತಾದಾತ್ಮ್ಯವನ್ನು ಪಡೆಯದೆ ತತ್ವಮಸಿ ಎಂಬ ಶ್ರುತಿ ವಾಕ್ಯದಂತೆ ಈ ಆತ್ಮನೇ ನಾನು ಎಂಬುದನ್ನು ಸಾಕ್ಷಾತ್ಕರಿಸಿ ಕೊಳ್ಳಬೇಕು. ಬ್ರಹ್ಮವು ಜಗತ್ತಿಗೆ ಕಾರಣ.ಜೀವಾತ್ಮ ಮತ್ತು ಪರಮಾತ್ಮರ ಐಕ್ಯಜ್ಞಾನವೇ ಸಂಸಾರ ಸಾಗರದಿಂದ ಬಿಡುಗಡೆ ಹೊಂದಲು ಕಾರಣವಾಗಿರುತ್ತದೆ. ಬ್ರಹ್ಮ ಜ್ಞಾನಿಗಳು ಪುನಃ ಸಂಸಾರಕ್ಕೆ ಬರುವುದಿಲ್ಲ. ಆದುದರಿಂದ ತಾನು ಬ್ರಹ್ಮಕ್ಕಿಂತ ಬೇರೆಯಲ್ಲ ಎಂಬುದನ್ನು ತಿಳಿದುಕೊಳ್ಳಬೇಕು. ವಿಶುದ್ಧವೂ ಮಾಯಾತೀತವೂ ಸ್ವತಃಸಿದದವೂ ನಿತ್ಯಾನಂದಕ ರಸವೂ,ಪ್ರತ್ಯಗಾತ್ಮನಿಗಿಂತ ಅಭಿನ್ನವೂ ಅಂತರ ಶೂನ್ಯವೂ ಸತ್ಯ, ಜ್ಞಾನಾನಂದ ಸ್ವರೂಪವೂ ಆದ ಬಹ್ಮವು ಸವೋ೯ತ್ಕøಷ್ಟವಾಗಿರುತ್ತದೆ. ಅಜ್ಞಾನದಿಂದ ಕಂಡು ಬರುವ ಈ ಸಮಸ್ತ ಜಗತ್ತೂ, ಕಲ್ಪನಾದೋಷ ವಜಿ೯ತವಾದ ಬ್ರಹ್ಮವೇ.
ಗಡಿಗೆಯು ಮಣ್ಣಿನ ಕಾಯ೯ವಾಗಿದ್ದರೂ ಎಲ್ಲೆಲ್ಲಿಯೂ ಮಣ್ಣಿನ ರೂಪವೇ ಆಗಿರುವುದರಿಂದ ಮಣ್ಣಿಗಿಂತ ಬೇರೆಯಾಗಿ ಇರುವುದಿಲ್ಲ.ಹೀಗಿರುವಾಗ ಗಡಿಗೆಯು ಎಲ್ಲಿಂದ ಬಂದಿತು?ಅದು ಮಿಥ್ಯೆಯೇ. ವಸ್ತುವಿನ ಪರಿಣಾಮವು ವಾಕ್ಕನ್ನು ಅವಲಂಬಿಸಿರುವ ಕೇವಲ ಹೆಸರೇ.ಮಣ್ಣೆಂಬುದೇ ಸತ್ಯವು.ಅದೇರೀತಿ ಬ್ರಹ್ಮದ ಕಾಯ೯ವಾದ ಈ ಸಮಸ್ತ ಜಗತ್ತೂ ಸದ್ವಸ್ತುವೇ.ಅದಕ್ಕಿಂತ ಬೇರೆಯಾದ ವಸ್ತುವು ಇರುವುದಿಲ್ಲ.ಈ ಜಗತ್ತೆಲ್ಲವೂ ಬ್ರಹ್ಮವೇ ಎಂದು ಅಥವ೯ ಶಿರಸ್ಸಿನಲಿ ಹೇಳಿದೆ. ಆದ್ದರಿಂದಲೇ ಈ ವಿಶ್ವವು ಕೇವಲ ಬ್ರಹ್ಮವೇ.ಏಕೆಂದರೆ ಆರೋಪಿತವಾದ ವಸ್ತುವಿಗೆ ತನ್ನ ಆಶ್ರಯಕ್ಕಿಂತಲೂ ಭಿನ್ನವಾದ ಅಸ್ತಿತ್ವವು ಇರುವುದಿಲ್ಲ.
ಹಗ್ಗದಲ್ಲಿ ಆರೋಪಿಸಲ್ಪಟ್ಟ ಹಾವು ತನಗೆ ಆಶ್ರಯವಾಗಿರುವ ಹಗ್ಗಕ್ಕಿಂತ ಬೇರೆಯಾಗಿರಲಾರದು.ಹಾಗೆಯೇ ಬ್ರಹ್ಮದಲ್ಲಿ ಆರೋಪಿತವಾದ ಪ್ರಪಂಚಕ್ಕೆ ಬ್ರಹ್ಮಕ್ಕಿಂತಲೂ ಬೇರೆ ಇರುವುದಿಲ್ಲ.ಈ ಜಗತ್ತು ಸತ್ಯವಾದರೆ ಆತ್ಮನ ಅನಂತತ್ವಕ್ಕೆ ಹಾನಿಯಾಗುತ್ತದೆ.ಶಾಸ್ತ್ರವು ಅಪ್ರಮಾಣವಾಗುತ್ತದೆ.ಈಶ್ವರನು ಅಸತ್ಯವನ್ನು ಹೇಳಿದವನಾಗುತ್ತಾನೆ.ಈಮಾತು ಮಹಾತ್ಮರಿಗೆ ಸಾಧುವೂ ಅಲ್ಲ.ವಿಶ್ವವು ಸತ್ಯವೇ ಆಗಿದ್ದರೆ ಸುಷುಪ್ತಿಯಲ್ಲಿ ಗೋಚರವಾಗಲಿ.ಅಲ್ಲಿ ಸ್ವಲ್ಪವೂ ಗೋಚರವಾಗುದಿಲ್ಲ.ಆದ್ದರಿಂದ ಅದು ಅಸದ್ವಸ್ತುವೇ.ಸ್ವಪ್ನದಂತೆ ಸುಳ್ಳು.ಆದ್ದರಿಂದ ಜಗತ್ತು ಪರಮಾತ್ಮನಿಗಿಂತ ಬೇರೆ ಅಲ್ಲ.ಜೊತೆಯಾಗಿರುವಂತೆ ತೋರುವುದು.ಅಧಿಷ್ಠಾನವನ್ನು ಬಿಟ್ಟರೆ ಆರೋಪಿತವಾಗಿರುವ ವಸ್ತುವಿಗೆ ಯಾವ ಪ್ರಯೋಜನವಿದೆ. ಅಧಿಷ್ಠಾನವೇ ಭ್ರಾಂತಿಯಿಂದ ಹಾಗೆ ತೋರುತ್ತದೆ. ಅಧಿಷ್ಠಾನವಾದ ಹಗ್ಗವೇ ಹಾವಾಗಿ ತೋರುತ್ತದೆ. ಭ್ರಾಂತಿಗೊಂಡವನಿಗೆ ಯಾವುದು ಭ್ರಮೆಯಾಗಿ ತೋರುತ್ತದೆಯೋ ಅದೆಲ್ಲವೂ ಬ್ರಹ್ಮವಸ್ತುವೇ.ಬೆಳ್ಳಿಯಂತೆ ತೋರುವ ಕಪ್ಪೆಚಿಪ್ಪೇ."ಇದು"ಎಂಬ ಭಾವದಿಂದ ಬ್ರಹ್ಮವು ಯಾವಾಗಲೂ ತೋರುತ್ತಿರುವುದು.ಬ್ರಹ್ಮದಲ್ಲಿ ಆರೋಪಿಸಲ್ಪಟ್ಟ ವಸ್ತು ಕೇವಲ ಹೆಸರೇ.
ಜೀವ,ಜಗತ್ತು ಈಶ್ವರ:
ಬ್ರಹ್ಮವು ತನ್ನ ಶಕ್ತಿಯಾಗಿ ಮಾಯೆಯನ್ನು ಬಳಸಿಕೊಂಡು ಜಗತ್ತಿನ ಸೃಸ್ಟಿಕತ೯ನೆಂದೂ ಕತೃ೯ ಮತ್ತು ಭೋಕ್ತøವಾದ"ಜೀವ"ನೆಂದೂ ಪರಿಗಣಿಸಲ್ಪಡುತ್ತದೆ1.ಈ ಹಂತದಲ್ಲಿ ಈಶ್ವರನನ್ನು ಅಂತಯಾ೯ಮಿ ಎಂದೂ ಜಗನ್ನಿಯಾಮಕನೆಂದೂ ಜೀವಾತ್ಮಗಳನ್ನು ಅಂಶಗಳನ್ನಾಗಿ ಒಳಗೊಂಡಿರುವ ಪರಮಾತ್ಮನೆಂದು ಭಾವಿಸಲಾಗುತ್ತದೆ.
ಬ್ರಹ್ಮ ಹಾಗೂ ಈಶ್ವರ ಎರಡೂ ಒಂದೇ ಸತ್ಯ.ಪ್ರಾಪಂಚಿಕ ದೃಷ್ಟಿಯಿಂದ ನೋಡಿದಾಗ ಮಾಯಾಶಕ್ತಿಯಿಂದ ಕೂಡಿರುವ ಬ್ರಹ್ಮವನ್ನೇ ಈಶ್ವರನೆಂದು ಕರೆಯುತ್ತಾರೆ2.ಬ್ರಹ್ಮವು ಜಗತ್ತಿನ ಉಪಾದಾನ ಹಾಗೂ ನಿಮಿತ್ತ ಕಾರಣ.ಬ್ರಹ್ಮವನ್ನು ನಿಗು೯ಣ ಅಥವಾ ನಿರುಪಾಧಿಕ ಎಂದು ಕರೆಯುತ್ತಾರೆ.ಈಶ್ವರನನ್ನು ಸೋಪಾಧಿಕ ಅಥವಾ ಸಗುಣವೆಂದೂ ಎಂದು ಕರೆಯುತ್ತಾರೆ.ಇದನ್ನು ಪರ ಮತ್ತು ಅಪರ ಬ್ರಹ್ಮವೆಂದೂ ಕರೆಯುತ್ತಾರೆ.ಪರಬ್ರಹ್ಮವು ಎಲ್ಲಾ ವೈಚಾರಿಕತೆಗಳಿಗೂ ಮನೋಕಲ್ಪನೆಗಳಿಗೂ ಅತೀತವಾದ್ದರಿಂದ ಅದರ ಬಗ್ಗೆ ಉತ್ತಮೋತ್ತಮ ಕಲ್ಪನೆಯೇ ಈಶ್ವರನೆಂದಾಗುತ್ತದೆ.
ಸಾಪೇಕ್ಷ ದೃಷ್ಟಿಕೋನದಿಂದ ಬ್ರಹ್ಮವು ವೈಯಕ್ತಿಕ ಈಶ್ವರನೆಂದು ಕರೆಯಲ್ಪಡುತ್ತದೆ.ಅವನು ಮಾಯೆಯನ್ನು ತನ್ನ ಕಾಯ೯ಶೀಲ ಶಕ್ತಿಯನ್ನಾಗಿ ತನ್ನ ಅಧೀನದಲ್ಲಿ ಇಟ್ಟುಕೊಂಡಿರುತ್ತಾನೆ.ಅದರ ತ್ರಿಗುಣಗಳ ಮೂಲಕ ಜಗತ್ತನ್ನು ಹೊರಹೊಮ್ಮಿಸುತ್ತಾನೆ.ಎಲ್ಲಿಯವರೆಗೆ ನಮಗೆ ನಮ್ಮ ವೈಯಕ್ತಿಕ ವ್ಯಕ್ತಿತ್ವದಲ್ಲಿ ನಂಬಿಕೆ ಇರುತ್ತದೆಯೋ ಅಲ್ಲಿಯವರೆಗೆ ನಿರಪೇಕ್ಷಬ್ರಹ್ಮ ಸತ್ಯಕ್ಕಿಂತ ಸಾಪೇಕ್ಷ ಸತ್ಯ ಸ್ವರೂಪನಾದ ಈಶ್ವರನೇ ನಮಗೆ ಮುಖ್ಯನಾಗುತ್ತಾನೆ.ನಾವು ಸುಲಭವಾಗಿ ಈಶ್ವರನ ಬಳಿಗೆ ಸಾರಬಹುದು ಮತ್ತು ಅವನಲ್ಲಿನ ಪ್ರೇಮ, ಭಕ್ತಿ ಗಳಿಂದ ಅವನ ಅನುಗ್ರಹವನ್ನು ಪಡೆಯಬಹುದು.
ಪರಬ್ರಹ್ಮ ಸಾಕ್ಷಾತ್ಕಾರ ಅಭಿಲಾಶಿಗಳಿಗೂ ಈಶ್ವರನಲ್ಲಿ ಸಹ ಭಕ್ತಿಯನ್ನು ಸಮಥಿ೯ಸಲಾಗಿದೆ.ಇದರಿಂದ ಮುಕ್ತಿಮಾಗ೯ವು ಸ್ವಲ್ಪ ಸುಲಭವಾಗುತ್ತದೆ.ಅದ್ವೈತ ದಾಶ೯ನಿಕ ಪಂಥಗಳು ಸಾಪೇಕ್ಷ ಹಂತದಲ್ಲಿ ತನ್ನ ಮಾಯೆಯಿಂದಲೇ ಹೊರಹೊಮ್ಮುವ ಅಸಂಖ್ಯಾತ ವೈವಿಧ್ಯ ಮಯವಾದ ಜಗತ್ತನ್ನು ಉಪಾಧಿಯಾಗಿಸಿಕೊಂಡಿರುವ ಬ್ರಹ್ಮವನ್ನು ಈಶ್ವರನೆಂದೂ,ಹಾಗೆಯೇ ಮನೋಭೌತಿಕ ಶರೀರದಿಂದ
ಸೋಪಾಧಿಕವಾದ ಬ್ರಹ್ಮವನ್ನು ಜೀವಾತ್ಮನೆಂದೂ ಕರೆಯುತ್ತಾರೆ.ಹೀಗೆ ಸಮಸ್ತ ಜಗತ್ತನ್ನೂ ಉಪಾಧಿಯನ್ನಾಗಿ ಪಡೆದಿರುವ ಬ್ರಹ್ಮವೇ ಈಶ್ವರನೋ ಬೇರೆಯಲ್ಲವೋ ಅದೇ ರೀತಿಯಲ್ಲಿ ವ್ಯಕ್ತಿಗಳೆಂಬ ಉಪಾಧಿಗಳಿಂದ ಕೂಡಿ ಜಗತ್ತಿನ ಅಂಶಗಳೇ ಆಗಿರುವ ಜೀವಗಳೂ ಬ್ರಹ್ಮವೇ ಬೇರೆ ಅಲ್ಲ.
ಅವಿದ್ಯೆಯಿಂದ ಬ್ರಹ್ಮದಲ್ಲಿ ಜೀವೇಶ್ವರ ವಿಭಾಗ ಉಂಟಾಗಿದೆ.ಶುದ್ಧಬ್ರಹ್ಮವು ಅಂತಃಸತ್ವದಲ್ಲಿ ನಿರುಪಾಧಿಕವಾಗಿದ್ದು ಇಂದ್ರಿಯ ಗೋಚರಸ್ಥಿತಿಯಲ್ಲಿ ಈಶ್ವರ,ಜೀವ,ಜಗತ್ತು ಎಂಬ ತ್ರಿವಿಧ ರೂಪಗಳಲ್ಲಿ ಭಾಸವಾಗುತ್ತದೆ.ಈಶ್ವರ,ಜೀವ, ಜಗತ್ತು ಎಂಬ ತ್ರಿಕೋಣವು ಸಾಪೇಕ್ಷವಾಗಿ ಶಾಶ್ವತ ಹಾಗೂ ನಿರಂತರ.ಅದನ್ನು ದಾಟಿ ಹೋಗಬಹುದೇ ವಿನಃ ತೆಗೆದುಬಿಡಲು ಸಾಧ್ಯವಿಲ್ಲ.ಪರಬ್ರಹ್ಮ ತತ್ವವೇ ನಮಗೆ ಈಶ್ವರ,ಜೀವ,ಜಗತ್ತು ಆಗಿ ಗೋಚರಿಸುತ್ತದೆ.ಅವು ಅನುಭವಾತ್ಮಕ ಪ್ರಪಂಚದ ಜೀವನ ತ್ರಿಕೋನದ ತ್ರಿಭುಜಗಳು.
ಸ್ವಾಭಾವಿಕವಾಗಿ ಅವು ಮಾಯೆಯ ಜೊತೆಗೂಡಿಯೇ ಇರುತ್ತವೆ.ಆತ್ಮ ಸಾಕ್ಷಾತ್ಕಾರದ ಮೂಲಕ ವ್ಯಕ್ತಿಯು ತನ್ನ ವೈಯಕ್ತಿಕ ವ್ಯಕ್ತಿತ್ವವನ್ನು ಕಳಚಿಹಾಕಿ ಇವುಗಳ ವ್ಯಾಪ್ತಿಯನ್ನು(ಜೀವ,ಜಗತ್ತು, ಈಶ್ವರ) ದಾಟಿ ಹೋಗಬಹುದು.ಈಶ್ವರನು ದೃಗ್ಗೋಚರವಾದ ಜಗತ್ತಿನಲ್ಲಿ ಎಂದಿಗೂ ತನ್ನ ಅಸ್ತಿತ್ವವನ್ನು ಕಳೆದು ಕೊಳ್ಳುವುದಿಲ್ಲ.ಅದರ ಅಸ್ತಿತ್ವ ಸತ್ಯ ಮತ್ತುಶಾಶ್ವತ.ಈಶ್ವರ,ಜೀವ,ಜಗತ್ತು ಇವುಗಳ ಕೇವಲ ಇಂದ್ರಿಯ ಗೋಚರ ಸ್ವಭಾವದ ಬಾಂಧವ್ಯವನ್ನು ಈ ಮೂರಕ್ಕೂ ಮೂಲಭೂತ ಕಾರಣವಾದ ಜೀವಾತ್ಮ ಪರಮಾತ್ಮಗಳ ಅನನ್ಯತೆಯನ್ನು ಸಾಕ್ಷಾತ್ಕರಿಸಿಕೊಂಡ ಜ್ಞಾನಿಯು ಮಾತ್ರ ದಾಟಿ ಹೋಗಬಹುದು.
ಜೀವವು ಕಾಲ, ದೇಶ, ಕಾರಣಗಳು ಅಥವಾ ಮಾಯೆಯನ್ನು ದಾಟಿ ಆತ್ಮ ಅಥವಾ ಪರಬ್ರಹ್ಮದೊಂದಿಗೆ ಅನನ್ಯತೆಯನ್ನು ಸಾಕ್ಷಾತ್ಕರಿಸಿ ಕೊಂಡಾಗ ಭೌತಿಕ ಅಥವಾ ಅನುಭವಾತ್ಮಕ ಜೀವವು ತನ್ನ ಅಸ್ತಿತ್ವವನ್ನು ಕಳಚಿ ಕೊಳ್ಳುತ್ತದೆ
ಎಲ್ಲಿಯವರೆಗೆ ಒಬ್ಬ ವ್ಯಕ್ತಿಯು ತನ್ನ ಜೀವತ್ವವನ್ನು ಉಳಿಸಿಕೊಂಡಿರುತ್ತಾನೆಯೋ ಅಲ್ಲಿಯವರೆಗೂ ಅವನ ಪಾಲಿಗೆ ಈಶ್ವರ ಮತ್ತು ಜಗತ್ತು ಕೂಡ ಇರಬೇಕಾಗುತ್ತದೆ3. ಈಶ್ವರ ಜೀವತ್ವ, ಜಗತ್ತು ಪರಸ್ಪರ ಸಂಬಂಧವುಳ್ಳ ಅನ್ಯೋನಾಂಗಗಳು. ಈಶ್ವರನು ಬ್ರಹ್ಮವೇ ಆಗಿದ್ದು ವಾಸ್ತವಿಕತೆಯನ್ನು ಪಡೆದಿದ್ದಾನೆ. ಜೀವ, ಜಗತ್ತುಗಳು ಅಷ್ಟೇ ವಾಸ್ತವಿಕತೆಯನ್ನು ಪಡೆದಿರುತ್ತವೆ. ಇದೆಲ್ಲವೂ ಅದ್ವೈತವೇ. ಏಕಮೇವಾದ್ವಿತೀಯವೇ ಅನೇಕವಾಗಿ ತೋರುತ್ತಿರುವುದು.
ಬ್ರಹ್ಮವೇ ಈಶ್ವರ ಬೇರೆ ಅಲ್ಲ.ಅನುಭವಾತ್ಮಕ ದೃಷ್ಟಿಯಿಂದ ನೋಡಿದಾಗ ಬ್ರಹ್ಮವೇ ಈಶ್ವರ.ಸತ್ ಚಿತ್ ಆನಂದ, ಮಾಯೀ ಮತ್ತು ಮಾಯಾಧೀಶ.ಅವನನ್ನು(ಈಶ್ವರ)ಜಗತ್ತಿನ ಸೃಷ್ಟಿಕತ೯ನೆಂದೂ ಭಾವಿಸಹುದು.ಆದ್ದರಿಂದ ಶರೀರವನ್ನು ಹೊಂದಿದ ಜೀವಿಗಳು ಈಶ್ವರನನ್ನು ಪರಮಪ್ರೇಮದಿಂದ ಕಂಡು ಅವನನ್ನೇ ಪೂಜಿಸಿ ಮಾಯೆಯನ್ನು ನಿಗ್ರಹಿಸಲು ಅವನ ಅನುಗ್ರಹವನ್ನು ಪಡೆಯಬಹುದು. ಈಶ್ವರನೇ ಅಂತಂiÁ೯ಮಿಯಾಗಿ"ಬೃಹತ್ ಋತ"ಎಂದು ಪ್ರಸಿದ್ಧವಾಗಿರುವ ನಿಯಮದ ಮೂಲಕ ತನ್ನ ಪ್ರಭುತ್ವವನ್ನು ನಿವ೯ಹಿಸುತ್ತಾನೆ.ಅದು ವಿಶ್ವ ಹಂತದಲ್ಲಿ ಋತವೆಂದೂ, ವೈಯಕ್ತಿಕ ಹಂತದಲ್ಲಿ ಧಮ೯ವೆಂದೂ, ನೈತಿಕ ಹಂತದಲ್ಲಿ ಕಮ೯ವೆಂದೂ ತೋರುತ್ತದೆ.ಈ ಜಗತ್ತಿನಲ್ಲಿ ವ್ಯಕ್ತಿಯ ಬದುಕು ಋತ, ಧಮ೯ ಕಮ೯ಗಳಿಂದ
ನಿಯಮಿತಗೊಳು¼ತ್ತದೆ. ವ್ಯಕ್ತಿಯು ತನ್ನಕಮ೯ದ ಫಲವನ್ನು ಜನ್ಮಾಂತರಗಳಲ್ಲಿ ವಿಭಿನ್ನ ಶರೀರಗಳಲ್ಲಿ ಅನುಭವವನ್ನು,ಜ್ಞಾನವನ್ನೂ ಸಂಗ್ರಹಿಸುತ್ತಾನೆ.
ಆರಂಭದ ಈ ಭಕ್ತಿಮಾಗ೯ದಲ್ಲಿ ಈಶ್ವರನನ್ನು ಸವ೯ಶಕ್ತ,ಪ್ರಭು,ಪಿತಾ ಇತ್ಯಾದಿಯಾಗಿ ಅಥವಾ ಮಾತೆಯಾಗಿ ಕಲ್ಪಿಸಿಕೊಳ್ಳಬಹುದು.ಆತ್ಮ ಬ್ರಹ್ಮದ ಅನನ್ಯತೆಯ ಸಾಕ್ಷಾತ್ಕಾರವೇ ಅಂತಿಮ ಮುಕ್ತಿ.ಯಾರು ತಮ್ಮ ವೈಯಕ್ತಿಕ ವ್ಯಕ್ತಿತ್ವವನ್ನು ಉಳಿಸಿಕೊಂಡೇ ಈಶ್ವರನೊಂದಿಗೆ ಉಳಿದ ವಿಧಗಳಾದ ಸಾಲೋಕ್ಯ, ಸಾಮೀಪ್ಯ,ಸಾರೂಪ್ಯ ಮತ್ತು ಸಾಯುಜ್ಯ ಮುಕ್ತಿಗಳನ್ನು ಬಯಸುತ್ತಾರೆಯೋ ಅವರಿಗೆ ಹಾಗೆ ಬಳಸಲು ಸ್ವಾತಂತ್ರ್ಯವಿದ್ದೇ ಇದೆ.
ಬ್ರಹ್ಮವನ್ನು ಜಗತ್ತಿನ ಅಪೇಕ್ಷೆಯಿಂದ ಈಶ್ವರನೆಂದು ಕರೆಯುತ್ತಾರೆ4.ಅವಿದ್ಯೆಯಿಂದ ಕಲ್ಪಿತವಾಗಿರುವ ನಾಮ ರೂಪ ಬೀಜವೇ ಮಾಯೆ.
ಜಗತ್ತು ಈಗ ನಾಮ ರೂಪಗಳಿಂದ ಬಿಡಿಬಿಡಿಯಾಗಿ ತೋರುತ್ತದೆ.ಇದು ವ್ಯಾಕೃತ ಜಗತ್ತು.ಇದು ಸೃಷ್ಟಿಗಿಂತಲೂ ಮೊದಲು"ಅವ್ಯಾಕೃತ"ವಾಗಿತ್ತು.ಪರಮಾತ್ಮನು ಜಗದ್ರೂಪ ವಾಗುವಾಗ ಪರಮಾತ್ಮನ ಸ್ವರೂಪದಲ್ಲಿಯಾವ ಮಾಪಾ೯ಡೂ ಆಗುವುದಿಲ್ಲ.ನಾಮರೂಪಗಳೇ ಅವ್ಯಾಕೃತವಾದ ಬೀಜ ರೂಪದಿಂದ ವ್ಯಾಕೃತವಾದ ಪ್ರಪಂಚ ರೂಪವನ್ನು ತೆಗೆದುಕೊಳ್ಳುತ್ತವೆ.ಇವುಗಳ ಮೂಲಕ ಆತ್ಮನು ಜಗದ್ರೂಪವಾಗಿ ಪರಿಣಮಿಸುವನೆಂದು ಹೇಳಿದ್ದರೂ ಅವನು ಪರಮಾಥ೯ವಾಗಿ ಕೂಟಸ್ಥನೇ ಆಗಿರುತ್ತಾನೆ.ಮೊದಲು ನೀರೇ ಆಗಿದ್ದು ನಂತರ ನೀರು ನೊರೆ ಎಂಬ ಎರಡು ರೂಪವನ್ನು ಪಡೆದುಕೊಂಡರೆ ಆಗಲೂ ನೊರೆಯು ನೀರೇ ಆಗಿರುವಂತೆ,ಮೊದಲು ಆತ್ಮನಾಗಿದ್ದು ಸೃಷ್ಟಿಯಾದ ಬಳಿಕ ಆತ್ಮವು ನಾನಾ ಶಬ್ದ ಪ್ರತ್ಯಯ ಗಳಿಗೆ ಗೋಚರವಾಗಿರುವ ಪ್ರಪಂಚ ಎಂಬ ಎರಡು ರೂಪಗಳನ್ನು ತಳೆದಾಗಲೂ ಎಲ್ಲವೂ ಆಗಿರುತ್ತದೆ.
ಅವ್ಯಾಕೃತ ನಾಮರೂಪಗಳು ತಮ್ಮ ಆತ್ಮ ಸ್ವರೂಪವನ್ನಿಟ್ಟುಕೊಂಡೇ ವ್ಯಾಕೃತವಾಗುತ್ತವೆ.ನಾಮ ರೂಪಗಳಿಗೆ ಬ್ರಹ್ಮವೇ ಸ್ವರೂಪವು.ಬ್ರಹ್ಮಕ್ಕೆ ನಾಮ ರೂಪಗಳು ಸ್ವರೂಪವಲ್ಲ.ಈಗಲೂ ಎಲ್ಲಾ ಕಡೆಯಲ್ಲಿಯೂ ಆತ್ಮನೇ ಇರುತ್ತಾನೆಂದು ಶ್ರುತಿಯು ಹೇಳಿರುವುದಕ್ಕೆ ಇದೇ ಕಾರಣ.ಆತ್ಮನಿಗಿಂv ಬೇರೆಯಾದ ಅನಾತ್ಮ ವೆಂಬುದು ಎಲ್ಲಿಯೂ ಇರುವುದಿಲ್ಲ5.
ಆದ್ದರಿಂದ ದ್ವೈತಪ್ರಪಂಚವು ನಿಜವಾಗಿದ್ದುಕೊಂಡು ಅದ್ವೈತ ಜ್ಞಾನವು ಉಂಟಾದ ಬಳಿಕ ನಿವೃತ್ತವಾಗುವುದಿಲ್ಲ.ಹಗ್ಗದಲ್ಲಿ ಹಾವು ಎಂದಿಗೂ ಇರುವುದಿಲ್ಲ.ಯಾಸ್ಕರು ತಮ್ಮ ನಿಘಂಟಿನಲ್ಲಿ ಮಾಯಾ ಶಬ್ದವನ್ನು ಜ್ಞಾನ ಪಯಾ೯ಯವಾಗಿಯೇ ಬಳಸಿರುತ್ತಾರೆ."ಇಂದ್ರೋ ಮಾಯಾಭಿಃ ಪುರುರೂಪ ಈಯತೇ"Àಎಂದರೆ ಇಂದ್ರನು(ಪರಮೇಶ್ವರನು)ಮಾಯೆಗಳಿಂದ ಬಹುರೂಪನಾಗಿ ಕಾಣುತ್ತಾನೆ ಎಂದಥ೯.ಇಂದ್ರಿಯಗಳ ಅರಿವು ಅವಿದ್ಯಾ ರೂಪವಾಗಿರುವುದರಿಂದ ಮಾಯೆಗಳಿಂದ ಇಂದ್ರನು ಅನೇಕವಾಗಿ ಕಾಣಿಸುತ್ತಾನೆ ಎಂದಥ೯.ಸರಿಯಾದ ದೃಷ್ಟಿಯಿಂದ ನೋಡಿದರೆ ಒಬ್ಬನೇ ಆಗಿರುತ್ತಾನೆ.
ಜೀವೇಶ್ವg ವಿಭಾಗ:
ಆತ್ಮ ಸ್ವರೂಪವನ್ನು ತಿಳಿಸಲು ಬಂದಿರುವ ಶ್ರುತಿಗಳಲ್ಲಿ ಜೀವ ಈಶ್ವರ ಸ್ವರೂಪವನ್ನು ಹೇಳಿರುವುದೇಕೆ? ಬಾದರಾಯಣರು ಬ್ರಹ್ಮಸೂತ್ರದಲ್ಲಿ ಈಶ್ವರನು ವಿವಕ್ಷಿತನಾಗಿರುತ್ತಾನೆ.ಅವನಿಗಿಂತ ಬೇರೆಯಾದ ಜೀವನು ವಿವಕ್ಷಿತನಲ್ಲ ಎಂದು ಹೇಳಿರುತ್ತಾರೆ.ಇಬ್ಬರು ಆತ್ಮರೇ ಇಲ್ಲದಿರುವಾಗ ಈ ವಿಭಾಗವನ್ನೇಕೆ ಅವರು ಮಾಡಿಕೊಂಡಿರುತ್ತಾರೆ? ಎಂಬ ಸಂದೇಹ ಉಂಟಾಗುತ್ತದೆ.ಆತ್ಮನು ಏಕನೂ ಅದ್ವಿತೀಯನೂ ಆಗಿದ್ದರೂ ಅವನಲ್ಲಿ ಜೀವೇಶ್ವರ ವಿಭಾಗವನ್ನು ಕಲ್ಪಿಸಿರುವುದು ಏಕೆಂದರೆ ಲೋಕಪ್ರಸಿದ್ಧವಾದ ಜೀವನನ್ನು ಅನುವಾದ ಮಾಡಿಕೊಂಡು ಜೀವನ ಪರಮಾಥ೯ ಸ್ವರೂಪವಾದ ಈಶ್ವರನನ್ನು ತಿಳಿಸುವುದಕ್ಕೆ6.
ಜೀವ ಹಾಗೂ ಈಶ್ವರ ಎರಡೂ ಕಲ್ಪಿತವೇ.ಶ್ರುತಿಯಲ್ಲಿ ಜೀವ ಈಶ್ವರರ ಅಭೇದವನ್ನು ಹೇಳಿದೆ.ಭೇದ ಜ್ಞಾನದಿಂದ ಸಂಸಾರವೂ ಅಭೇದ ಜ್ಞಾನದಿಂದ ಮೋಕ್ಷವೂ ಆಗುವುದೆಂದು ಹೇಳಿರುತ್ತದೆ.ಜೀವ ಈಶ್ವರ ಐಕ್ಯವನ್ನು ಶ್ರುತಿಯಲ್ಲಿ ಹೇಳಿರುತ್ತದೆ.ಶಾಸ್ತ್ರವು ಜ್ಞಾಪಕವೇ ಹೊರತು ಕಾರಕವಲ್ಲ.ಅದು ಇರುವುದನ್ನು ತಿಳಿಸುತ್ತದೆ.ಇಲ್ಲದ್ದನ್ನು ಉಂಟು ಮಾಡುವುದಿಲ್ಲ.
ಪರಮಾತ್ಮನು ಅದ್ವಿತೀಯನೇ ಆಗಿದ್ದರೂ ಅವನಲ್ಲಿ ಜೀವೇಶ್ವರ ವಿಭಾಗವನ್ನು ಕಲ್ಪಿಸಿರುವುದಕ್ಕೆ ಕಾರಣ ಅವಿದ್ಯಾಕಲ್ಪಿತವಾದ ನಾಮ ರೂಪಗಳಿಂದಾಗಿರುವ ಕಾಯ೯ ಕರಣ ಸಂಘಾತಗಳೆಂಬ ಉಪಾಧಿಗಳೇ ಕಾರಣ.ಈಶ್ವರನು ಆಳುವವನು ಜೀವನು ಆಳು ಎಂಬ ವ್ಯವಹಾರವೂ ಜೀವನು ಈಶ್ವರನನ್ನು ಉಪಾಸನೆ ಮಾಡಿ ಅಥವಾ ಅರಿತುಕೊಂಡು ಮುಕ್ತನಾಗುವವನು ಎಂಬ ವ್ಯವಹಾರವೂ ಈ ಉಪಾಸನೆಯಿಂದಲೇ.ಆಕಾಶವು ಒಂದೇ ಆದರೂ ಗಡಿಗೆ, ಕುಡಿಕೆ ಮುಂತಾದ ಉಪಾಧಿಗಳ ಸಂಬಂಧದಿಂದ ಆಗುವ ಭೇದವನ್ನು ಈ ಜೀವೇಶ್ವರ ಭೇದಕ್ಕೆ ಹೋಲಿಸಬಹುದು.ಆತ್ಮೈಕ್ಯತ್ವವನ್ನು ತಿಳಿದಾಗ ನಿರುಪಾಧಿಕವಾದ ಆತ್ಮಸ್ವರೂಪದಲ್ಲಿ ಯಾವ ಜೀವೇಶ್ವರ ಭೇದವೂ ಇರುವುದಿಲ್ಲ. ಮಾಯಾವಿಯೊಬ್ಬನೇ ಮಾಯೆಯಿಂದ ಅನೇಕರಾಗಿ ಕಾಣಿಸುವಂತೆ ಅದ್ವಿತೀಯ ಆತ್ಮನೊಬ್ಬನೇ ಅವಿದ್ಯೆಯಿಂದ ನಾನಾ ರೂಪವಾಗಿ ಕಾಣಿಸುತ್ತಾನೆ.ಜೀವನ ಜನನ ಮರಣಗಳು ಪ್ರತ್ಯಕ್ಷವಾಗಿಲ್ಲ.ಶರೀರ ಸಂಬಂಧದಿಂದ ಹುಟ್ಟುತ್ತಾನೆ ಸಾಯುತ್ತಾನೆ ಎಂಬ ವ್ಯವಹಾರವಿದೆ.
ಶರೀರವು ಪ್ರತ್ಯಕ್ಷವಾಗಿದ್ದರೂ ಆತ್ಮನು ಪ್ರತ್ಯಕ್ಷನಲ್ಲವಾದ್ದರಿಂದ ಆತ್ಮಶರೀರಗಳ ಸಂಬಂಧವೂ ಪ್ರತ್ಯಕ್ಷವಲ್ಲ.ಆಕಾಶವು ಒಂದೇ ಆದರೂ ಘಟಾಕಾಶಗಳು ಹಲವು ಇರುವಂತೆ ಸೂಯ೯ನು ಒಬ್ಬನೇ ಆzರೂ ಒಂದೇ ಇರುª ಜಲಸೂಯ೯ಕವಾದ ಪ್ರತಿಬಿಂಬಗಳು ಹಲವು ಇರುವಂತೆ ಪರಮಾತ್ಮನು ಒಬ್ಬನೇ ಆದರೂ ಹಲವರು ಇರುತ್ತಾರೆ.ಸೃಷ್ಟಿಸಲ್ಪಟ್ಟ ಶರೀರಗಳಲ್ಲಿ ಪರಮೇಶ್ವರನೇ ಜೀವನಾಗಿ ಒಳಹೊಕ್ಕಿರುವನೆಂದು ಶ್ರುತಿಯು ಹೇಳುತ್ತದೆ.ಈಎಲ್ಲಾ ಕಾರಣದಿಂದಲೂ"ನೀನು ಪರಮೇಶ್ವರನೇ".
ಮಾಯಾವಾದ: ಅವಿದ್ಯೆ ಹಾಗೂ ಮಾಯೆ ಒಂದೇ ನಾಣ್ಯದ ಎರಡು ಮುಖಗಳು.ಅವಿದ್ಯೆಯು ಜೀವನಲ್ಲಿ ಇರುತ್ತದೆ.ಮಾಯೆ ಎಂದರೆ ಜಗತ್ತಿನ ನಾಮ ರೂಪಗಳನ್ನು ಸೃಷ್ಟಿಸುವ ಶಕ್ತಿ.ಜ್ಞಾನವು ಉದಿಸಿದಂತೆ ಅವಿದ್ಯೆಯು ನಾಶವಾಗುತ್ತದೆ.ಆದರೆ ಮಾಯೆಯು ಅನಾದಿ.(ಆದಿ ಅಂತ್ಯಗಳಿಲ್ಲದ್ದು) ಮಾಯೆಯು ಈಶ್ವರನ(ಸಗುಣಬ್ರಹ್ಮ) ಶಕ್ತಿ.ಜೀವ ಬ್ರಹ್ಮರು ಒಂದೇ ಆಗಿರುವಂತೆ(ಜೀವಬ್ರಹ್ಮೈಕ್ಯ) ಮಾಯೆ ಮತ್ತು ಅವಿದ್ಯೆಗಳು ಒಂದೇ ಆಗಿವೆ.ಇವೆರಡೂ ಕೂಡ ವೈಯಕ್ತಿಕ ಮತ್ತು ಸಾವ೯ತ್ರಿಕವೂ ಆಗಿವೆ.ಮಾಯೆ ,ಅವಿದ್ಯೆ,ಅಜ್ಞಾನ,ಅಧ್ಯಾರೋಪ, ವಿವತ೯,ಭ್ರಾಂತಿ, ಮೂಲ ಪ್ರಕೃತಿ ಈ ಪದಗಳೆಲ್ಲವೂ ಸಮಾನಾಥ೯ಕ ಪದಗಳಾಗಿ ಬಳಸಲ್ಪಟ್ಟಿವೆ.ಕೆಲವು ವಿದ್ವಾಂಸರು ಅವಿದ್ಯೆ ಹಾಗೂ ಮಾಯೆಗೆ ಭೇದವನ್ನು ಹೇಳುತ್ತಾರೆ.ಅವಿದ್ಯೆಯು ನಕಾರಾತ್ಮಕ ಹಾಗೂ ವೈಯಕ್ತಿಕ.ಮಾಯೆಯು ಧನಾತ್ಮಕ ಹಾಗೂ ಸಾವ೯ತ್ರಿಕ.
ಮಾಯೆಯಿಂದ ಕೂಡಿದ ಬ್ರಹ್ಮವೇ ಈಶ್ವರ.ಮಾಯೆಯು ಬ್ರಹ್ಮದ ಶಕ್ತಿ.ಅದು ಜಗತ್ತಿನ ನಾಮರೂಪಗಳ ಮೂಲ.ನಾಮರೂಪಗಳು ಈಶ್ವರನ ಪ್ರಕೃತಿಯ ಅಂಶಗಳು.ಈಶ್ವರನು ಸವ೯ಶಕ್ತ,ಸವ೯ಜ್ಞ ,ಸವ೯ವ್ಯಾಪಿ.ಜಗತ್ತು ಈಶ್ವರನ ಲೀಲೆಯಾಗಿದೆ.ಈ ಮಾಯೆಯಿಂದ ಜಡ ಈಶ್ವರನು ಕ್ರಿಯಾಶೀಲನಾಗುತ್ತಾನೆ.ಮಾಯೆಯನ್ನು " ಮಹಾಮಾ" ಎಂದು ಕರೆಯುತ್ತಾರೆ.ಈಶ್ವರನನ್ನು "ಮಹಾಮಾಯಿ"ಎಂದು ಕರೆಯುತ್ತಾರೆ. ಮಾಯೆಯು ಸಾಂಖ್ಯರ ಪ್ರಕೃತಿಯಂತೆ ಸ್ವತಂತ್ರವಾದುದಲ್ಲ.ಆದರೆ ಈಶ್ವರ ಶಕ್ತಿಯನ್ನು ಅವಲಂಬಿಸಿದೆ.ಈಅವಿದ್ಯೆ ಅಥವಾ ಮಾಯೆಯಿಂದಲೇ ಒಬ್ಬನೇ ಆದ ಈಶ್ವರನು ಅನೇಕವಾಗಿ ಕಾಣುತ್ತಾನೆ.
ಮಾಯೆ ಅಥವಾ ಅವಿದ್ಯೆಯ ಲಕ್ಷಣಗಳು:
1)ಮಾಯೆಯು ಈಶ್ವರನ ಶಕ್ತಿ. ಈ ಶಕ್ತಿಯಿಂದಲೇ ಈಶ್ವರನು ಜಗತ್ತನ್ನು ಸೃಷ್ಟಿಸುತ್ತಾನೆ.ಈಶ್ವರನಂತೆ ಮಾಯೆಯೂ ಅನಾದಿ.
2)ಈಶ್ವರನ ಶಕ್ತಿ:ಮಾಯೆಯು ಈಶ್ವರನ ಶಕ್ತಿ.ಮಾಯೆಯು ಈಶ್ವರನ ಮೇಲೆ ಪೂಣ೯ ಅವಲಂಬಿತವಾಗಿದೆ.ಅದು ಈಶ್ವರನನ್ನು ಬಿಟ್ಟು ಸ್ವತಂತ್ರವಾÀಗಿ ಇರಲಾರದು.
3) ಜಡ ಮತ್ತು ಅಚಿತ್:ಸಾಂಖ್ಯರ ಪ್ರಕೃತಿಯಂತೆ ಮಾಯೆಯು ಜಡ ಹಾಗೂ ಅಚಿತ್ ಆಗಿದೆ.ಈ ರೀತಿಯಲ್ಲಿ ಮಾಯೆಯು ಬ್ರಹ್ಮದ ಚಿತ್ ಸ್ವರೂಪಕ್ಕೆ ವಿರುದ್ಧವಾಗಿದೆ.
4) ಸತ್ ಸ್ವರೂಪ(ಭಾವರೂಪ):ಮಾಯೆಯು ಭಾವರೂಪವಾಗಿದೆ.ಮಾಯೆಗೆ ಎರಡು ಶಕ್ತಿಗಳಿವೆ.1)ಆವರಣ 2) ವಿಕ್ಷೇಪ. ಮಾಯೆಯು ಅವಿದ್ಯೆ ಹಾಗೂ ಮಿಥ್ಯಾಜ್ಞಾನವಾಗಿದೆ.
5) ಅವಿದ್ಯೆಯನ್ನು ವಿದ್ಯೆ(ಜ್ಞಾನ)ಯಿಂದ ನಾಶಪಡಿಸಬಹುದು.ಜ್ಞಾನವು ಉದಿಸುತ್ತಲೇ ಅವಿದ್ಯೆಯು ನಾಶವಾಗುತ್ತದೆ.ಮುಕ್ತನು ಮಾಯೆಯನ್ನು ದಾಟಿರುತ್ತಾನೆ. ಹಗ್ಗವನ್ನು ಅರಿತ ಮೇಲೆ ಹಾವು ನಾಶವಾಗುವಂತೆ ಜ್ಞಾನದಿಂದ ಮಾಯೆಯು ನಾಶವಾಗುತ್ತದೆ.
6) ವ್ಯಾವಹಾರಿಕ:ಮಾಯೆಯು ಕೇವಲ ವ್ಯಾವಹಾರಿಕ ಸತ್ಯ.ಬ್ರಹ್ಮವೊಂದೇ ಪಾರಮಾಥಿ೯ಕ ಸತ್ಯ.
7)ಅನಿವ೯ಚನೀಯ:ಮಾಯೆಯು ಇದೆ ಅಥವಾ ಇಲ್ಲ. ಈಶ್ವರನಿಲ್ಲದೆ ಮಾಯೆಗೆ ಅಸ್ತಿತ್ವವಿಲ್ಲ.ಮಾಯೆಯು ನಿಜ ಏಕೆಂದರೆ ಅದು ಅಜ್ಞಾನದಲ್ಲಿ ಇರುತ್ತದೆ.ಮಾಯೆಯು ನಿಜವಲ್ಲ. ಏಕೆಂದರೆ ಅದು ಜ್ಞಾನೋದಯವಾದೊಡನೆ ನಾಶವಾಗುತ್ತದೆ.ಅದು ಸದ್ -ಅಸದ್. ಮಾಯೆಯು ಅನಿವ೯ಚನೀಯ. ಆಕಾಶದಲ್ಲಿ ನೀಲಿಯ ಬಣ್ಣವನ್ನು ಆರೋಪಿಸಿದಂತೆ ಮಾಯಾವಿಯು ತನ್ನ ಮಾಯೆಯಿಂದ ಮೋಡಿಗೊಳಗಾದಂತೆ.ಬ್ರಹ್ಮವು ಮಾಯೆಯನ್ನು ದಾಟಿರುತ್ತದೆ.ಮಾಯೆಗೆ ಒಳಪಡುವುದಿಲ್ಲ.
8)ಅವಿದ್ಯ;ಎಲ್ಲಾಭೇದಗಳೂ ಅವಿದ್ಯೆ ಯಿಂದ ಉಂಟಾಗಿದೆ.ಅವಿದ್ಯೆಯು ಸಮ್ಯಕ್ ಜ್ಞಾನವನ್ನು ಕಾಣದಂತೆ ಮಾಡುತ್ತದೆ.1)ಮಿಥ್ಯಾಜ್ಞಾನ,2)ಸಂದೇಹ3)ವಿಪರೀತ ಭಾವನೆ4) ಅಭಾವನೆ.ಬ್ರಹ್ಮವು ಅವಿದ್ಯೆಯನ್ನು ದಾಟಿದೆ.ಬ್ರಹ್ಮವು ಮಾಯೆಯ ಪರಿಣಾಮಗಳಿಗೆ ಒಳಗಾಗುವುದಿಲ್ಲ. ಬಂಜೆಯ ಮಗನು ಹೇಗೆ ಇರುವುದಕ್ಕೆ ಸಾಧ್ಯವಿಲ್ಲವೋ ಅದೇರೀತಿ ಅವಿದ್ಯೆ, ಅಸತ್ ಅವಿದ್ಯೆಯ ಇರುವಿಕೆ ಅನುಭವದಲ್ಲಿದೆ.
ಅದು ತಕ್ಷಣ ಅನುಭವದಿಂದ ನಾಶ ಹೊಂದುತ್ತದೆ.ಮಾÉಯೆಯಂತೆ ಅವಿದ್ಯೆಯು ಸದ್ ಅಸದ್ ಹಾಗೂ ಅನಿವ೯ಚನೀಯವಾಗಿದೆ.ಜಗತ್ತು ಅವಿದ್ಯೆಯೆಂಬ ಕನ್ನಡಿಯಲ್ಲಿ ಕಾಣುವ ಬ್ರಹ್ಮz ಪ್ರತಿಬಿಂಬವಾಗಿದೆ.
ಶ್ರೀ ಶಂಕರರು ಗೌಡಪಾದರ"ಅಜಾತಿವಾದ"ವನ್ನು ಒಪ್ಪಿಕೊಂಡಿದ್ದಾರÉ. ಮಾಯಾ ಎಂಬ ಪದವು ಮನುಷ್ಯನ ಜ್ಞಾನದ ಮಿತಿಯನ್ನು ಸೂಚಿಸುತ್ತದೆ.ಮನುಷ್ಯ ಜ್ಞಾನವು ಈ ಜಗತ್ತನ್ನು ಮಾತ್ರ ಅರಿಯಬಲ್ಲದು.ಬ್ರಹ್ಮವು "ತಕ್ಷಣ ಅನುಭವ"ಕ್ಕೆ ವಸ್ತುವಾಗಿದೆ.
ಜಗತ್ತು ಬ್ರಹ್ಮದ ಪರಿಣಾಮವಲ್ಲ.ಆದರೆ ವಿವತ೯.ಪರಿಣಾಮದಲ್ಲಿ ಕಾಯ೯ ಮತ್ತು ಕಾರಣಗಳು ಒಂದೇ ಸ್ವಭಾವದವಾಗಿರುತ್ತವೆ.ಆದರೆ ವಿವತ೯ದಲ್ಲಿ ಅವೆರಡೂ ಬೇರೆ ಬೇರೆ.ಮಾಯೆಯು ಒಂದು ವಸ್ತುವಲ್ಲ.ಆದ್ದರಿಂದ ಜಗತ್ತಿನ ಉಪಾದಾನ ಕಾರಣವಾಗಲಾರದು.ಅದು ಕೇವಲ ನಿಮಿತ್ತ ಕಾರಣ.ಜಗತ್ತಿನ ಸ್ವಭಾವವನ್ನು ವಿವರಿಸಲು ಶ್ರೀ ಶಂಕರರು ವಿವಿಧ ಹೋಲಿಕೆಗಳನ್ನು ಕೊಟ್ಟಿದ್ದಾರೆ.
ಉದಾಹರಣೆಗೆ ಹಾವು ಮತ್ತು ಹಗ್ಗ,ಕಪ್ಪೆಚಿಪ್ಪು ಮತ್ತು ಬೆಳ್ಳಿ(ಶುಕ್ರ ರಜತನ್ಯಾಯ),ದ್ವಿ ಚಂದ್ರದಶ೯ನ.ಬ್ರಹ್ಮವೊಂದೇ ಸತ್ಯ.ಉಳಿದದ್ದೆಲ್ಲವೂ ಮಿಥ್ಯೆ.ಮಾಯೆಯನ್ನು ಸರಿಯಾಗಿ ಅಥ೯ ಮಾಡಿಕೊಳ್ಳಬೇಕಾದರೆ ವಿವತ೯ವಾದವನ್ನು ಸರಿಯಾಗಿ ಅಥ೯ ಮಾಡಿಕೊಳ್ಳಬೇಕು.
ಸತ್ಯದ ಮೂರು ಹಂತಗಳು:
1) ಪ್ರಾತಿಭಾಸಿಕ ಸತ್ಯ: ಉದಾಹರಣೆಗೆ ಹಗ್ಗ ಮತ್ತು ಹಾವು, ಕಪ್ಪೆಚಿಪ್ಪು ಮತ್ತುಬೆಳ್ಳಿ,ಮರೀಚಿಕೆ,ದ್ವಿಚಂದ್ರದಶ೯ನ,ಕನಸು.
2) ವ್ಯಾವಹಾರಿಕ ಸತ್ಯ: ಎಚ್ಚರದ ಸ್ಥಿತಿಯಲ್ಲಿ ಕಾಣುವ ವಸ್ತುಗಳ ವ್ಯಾವಹಾರಿಕ ಸತ್ಯ.
3) ಪಾರಮಾಥಿ೯ಕ ಸತ್ಯ: ಎಚ್ಚರ,ಕನಸು, ನಿದ್ರೆ ಮೂರೂ ಅವಸ್ಥೆಗಳಿಗೆ ಸಾಕ್ಷಿಯಾಗಿರುವ ತತ್ವ. ಜಗತ್ತಿಗೆ ಬ್ರ್ಕಹ್ಮವೇ ಕಾರಣ,ಕಾಯ೯ವು ಕಾರಣಕ್ಕಿಂತ ಬೇರೆ ಅಲ್ಲ.ಆದ್ದರಿಂದ ಜಗತ್ತು ಬ್ರಹ್ಮವೇ. ಒಂದು ವಸ್ತುವಿನ ನಿಜವಾದ ಬದಲಾವಣೆಯನ್ನು"ಪರಿಣಾಮ" ಎನ್ನುತ್ತಾರೆ.ಉದಾಹರಣೆಗೆ ಹಾಲು ಮೊಸರಾಗುವುದು.ಒಂದು ವಸ್ತುವು ನಿಜವಾಗಿ ಬದಲಾವಣೆಯನ್ನು ಹೊಂದದೆ ಬದಲಾದಂತೆ ತೋರುವುದಕ್ಕೆ "ವಿವತ೯" ಎಂದು ಹೆಸರು.ಇಲ್ಲಿ ಬದಲಾವಣೆಯು ಸತ್ಯವಲ್ಲ.ಕೇವಲ ಹುಸಿ ತೋರಿಕೆ.ಇದಕ್ಕೆ ವಿವತ೯ವಾದ ಎಂದು ಹೆಸರು.(ಶ್ರೀಶಂಕರರು)
ಕಾಯ೯ವು ಕಾರಣಕ್ಕಿಂತ ಬೇರೆ ಅಲ್ಲ.ಗಡಿಗೆಯು ಮಣ್ಣೇ.ಬಂಗಾರದ ವಿವಿಧ ಒಡವೆಗಳು ಬಂಗಾರವೇ.ಕಾಯ೯ವು ಕಾರಣವಿಲ್ಲದೆ ಇರಲಾರದು.ಗಡಿಗೆಯನ್ನು ಮಣ್ಣಿನಿಂದ ಬೇಪ೯ಡಿಸಲಾಗದು. ಕಾಯ೯ವು ಕಾರಣದ ಇನ್ನೊಂದು ರೂಪ.ಬದಲಾಗುತ್ತಿರುವ ವಸ್ತು ಕೇವಲ ಪ್ರತಿಬಿಂಬ.ಈ ಪ್ರತಿಬಿಂಬವು ಅಧ್ಯಾಸದಿಂದ ಉಂಟಾಗಿದೆ. ಅವಿದ್ಯೆಯೇ ಅಧ್ಯಾಸಕ್ಕೆ ಕಾರಣ.ಅವಿದ್ಯೆ ಮತ್ತು ಅಧ್ಯಾಸಗಳೆರಡೂ ಅನಾದಿ.(ಆದ್ಯಂತರಹಿತ)ಕೇವಲ ವಸ್ತುವಿನ ರೂಪದ ಬದಲಾವಣೆಯಿಂದ ವಸ್ತುವು ಬದಲಾಗುವುದಿಲ್ಲ.ಉದಾಹರಣೆಗೆ ನೀರು, ವiಂಜುಗಡ್ಡೆ,ಆವಿ.ಒಂದೇ ವಸ್ತುವು ಬೇರೆ ರೂಪಗಳಲ್ಲಿ ಇರಬಹುದು.ಬದಲಾದ ರೂಪವು ಮೂಲವಸ್ತುವಿಗಿಂತ ಬೇರೆ ಅಲ್ಲ.ಬದಲಾದ ರೂಪವು ಕೇವಲ ಪ್ರತಿಬಿಂಬವಷ್ಟೇ.ಚಿತ್ಸುಖಿ, ಖಂಡನ ಖಂಡಖಾದ್ಯ,ಅದ್ವೈತಸಿದ್ಧಿ, ಈ ಗ್ರಂಥಗಳು ವಿವಥ೯ವಾದವನ್ನು ಅಮಥಿ೯ಸುತ್ತವೆ.
ಪ್ರತಿಬಿಂಬವಾದ:
ಜೀವವು ಅವಿದ್ಯೆ ಎಂಬ ಕನ್ನಡಿಯಲ್ಲಿ ಬ್ರಹ್ಮದ ಪ್ರತಿಬಿಂಬ.ಬ್ರಹ್ಮವು ಅಖಂಡ ಮತ್ತು ಏಕವಾದರೂ ಅನೇಕರೂಪವಾಗಿ ತೋರುತ್ತದೆ. ಒಂದೇ ಚಂದ್ರನು ಬೇರೆ ಬೇರೆ ನೀರಿನಲ್ಲಿ ಅನೇಕವಾಗಿ ಕಾಣುವಂತೆ ಒಂದೇ ಬ್ರಹ್ಮವು ಅವಿದ್ಯೆಯಿಂದ ಬೇರೆ ಬೇರೆ ಅಂತಃಕರಣಗಳಲ್ಲಿ ವಿಧ ವಿಧವಾಗಿ ತೋರಿಕೊಳ್ಳುತ್ತದೆ. ಪ್ರತಿಬಿಂಬದ ಸ್ಫುಟತೆಯು ಅಂತಃಕರಣದ ಸ್ಫುಟತೆಯನ್ನು ಅನುಸರಿಸುತ್ತದೆ.ಆದರೆ ಪ್ರತಿಬಿಂಬ ವಾದದಲ್ಲಿ ಒಂದು ದೊಡ್ಡ ದೋಷವಿದೆ.ಅದೇನೆಂದರೆ ಅವಿದ್ಯೆಯ ಕನ್ನಡಿಯು ಒಡೆದರೆ ಪ್ರತಿಬಿಂಬವಾದ ಜೀವವೂ ನಾಶವಾಗಬೇಕು.ಆದರೆ ಅದು ಹಾಗಾಗುವುದಿಲ್ಲ.ಜೀವನಿಗೆ ಸಾವಿಲ್ಲ.ಈ ಸಮಸ್ಯೆಯನ್ನು ಬಗೆಹರಿಸಲು ಅದ್ವೈತಿಗಳು ಇನ್ನೊಂದು ವಾದವನ್ನು ಮಂಡಿಸುತ್ತಾರೆ.ಅದೇ "ಅವಾಚ್ಛೇದವಾದ".
ಅವಾಚ್ಛೇದವಾದ:
ಈ ವಾದದಲ್ಲಿ ಘಟಾಕಾಶ ಹಾಗೂ ಚಿದಾಕಾಶವನ್ನು ಬಳಸಲಾಗಿದೆ.ಘಟಾಕಾಶವು ಚಿದಾಕಾಶದಲ್ಲಿ ಲೀನವಾಗುವಂತೆ ಎಂಬ ಹೋಲಿಕೆ ಸಮಪ೯ಕವಾಗಿದೆ.ಗಡಿಗೆಯು ಒಡೆದಾಗ ಘಟಾಕಾಶವು ಚಿದಾಕಾಶದಲ್ಲಿ ಲೀನವಾಗುತ್ತದೆ.ಆದರೆ ಜೀವನು ನಾಶವಾಗುವುದಿಲ್ಲ. ಜೀವವು ಬ್ರಹ್ಮವೇ.ಬೇರೆ ಅಲ್ಲ.ಜೀವನು ಎಲ್ಲಾ ಬಂಧನಗಳನ್ನು ಕಳೆದುಕೊಂಡು ಬ್ರಹ್ಮದೊಂದಿಗೆ ಲೀನವಾಗುವುದನ್ನೇ "ಅವಾಚ್ಛೇದವಾದ" ಎಂದು ಕರೆಯುತ್ತಾರೆ.
ಕಾರಣವಾದ:
ಯಾವುದೆ ವಸ್ತುವಿನ ನಿಜವಾದ ಬದಲಾವಣೆಯನ್ನು "ಪರಿಣಾಮ" ಎನ್ನುತ್ತೇವೆ.ಬದಲಾವಣೆಯು ಕೇವಲ ತೋರಿಕೆಯಾಗಿ ನಿಜವಲ್ಲದಿರದ್ದರೆ "ವಿವತ೯"ಎನ್ನುತ್ತಾರೆ.ಉದಾಹರಣೆಗೆ ಹಗ್ಗ ಮತ್ತು ಹಾವು.
ಹಗ್ಗವೇ ಹಾವಾಗಿ ತೋರುವುದು.ಈ ಎರಡನ್ನೂ 1) ಪರಿಣಾಮವಾದ2)ವಿವತ೯ವಾದ ಎನ್ನುತ್ತಾರೆ.ಸತ್ಕಾಯ೯ವಾದದಲ್ಲಿ ಕಾಯ೯ವು ಕಾರಣದಲ್ಲಿ ಇರುತ್ತದೆ.ಸಾಂಖ್ಯರು ಪರಿಣಾಮವಾದಿಗಳು. ಅದ್ವೈತವು ವಿವತ೯ವಾದವನ್ನು ಒಪ್ಪುತ್ತದೆ.ಶ್ರೀ ಶಂಕರರ ಪ್ರಕಾರ ಕಾಯ೯ವು ಕಾರಣಕ್ಕಿಂತ ಬೇರೆ ಅಲ್ಲ. ಗಡಿಗೆಯು ಮಣ್ಣೇ ಆಗಿದೆ. ಬಂಗಾರದ ಎಲ್ಲಾ ಆಭರಣಗಳೂ ಬಂಗಾರವೇ ಆಗಿದೆ.ಕಾರಣವಿಲ್ಲದೆ ಕಾಯ೯ವಿಲ್ಲ. ಗಡಿಗೆಯು ಮಣ್ಣಿಗಿಂತ ಬೇರೆ ಅಲ್ಲ.ವಿವಿಧ ಆಭರಣಗಳು ಬಂಗಾರಕ್ಕಿಂತ ಬೇರೆ ಅಲ್ಲ.
ಕಾಯ೯ವು ಕಾರಣಕ್ಕಿಂತ ಬೇರೆ ಅಲ್ಲ.ಅಸತ್ತಿನಿಂದ ಸತ್ ಹುಟ್ಟಲಾರರದು.ಒಂದು ವಸ್ತುವು ಒಂದು ರೂಪದಿಂದ ಇನ್ನೊಂದಕ್ಕೆ ಬದಲಾಯಿಸುತ್ತದೆ.ನಿಮಿತ್ತ ಕಾರಣ ಹೊಸ ವಸ್ತುವು ಹುಟ್ಟುವುದಿಲ್ಲ.ಗುಪ್ತರೂಪವು ವ್ಯಕ್ತವಾಗುತ್ತದೆ.ಆದ್ದರಿಂದ ಕಾಯ೯ವು ಕಾರಣಕ್ಕಿಂತ ಬೇರೆ ಅಲ್ಲ.ಕಾಯ೯ವು ಕಾರಣದಲ್ಲಿಯೇ ಇರುತ್ತದೆ.ಕಾಯ೯ವೂ ಕಾರಣದ ಇನ್ನೊಂದು ರೂಪವಷ್ಟೆ.ಈ ಬದಲಾಗುತ್ತಿರುವ ಜಗತ್ತು ಬ್ರಹ್ಮದ ಪ್ರತಿಬಿಂಬವೇ. ಈ ಪ್ರತಿಬಿಂಬಕ್ಕೆ ಅಧ್ಯಾಸವೇ ಕಾರಣ.ಅಧ್ಯಾಸ ಹಾಗೂ ಅವಿದ್ಯೆ ಎರಡೂ ಕೂಡ ಅನಾದಿ.ಆದ್ದರಿಂದ ಜಗತ್ತೂ ಕೂಡ ಅನಾದಿಯಾಗಿ ಕಾಣುತ್ತದೆ.
ವಿವತ೯ವಾದ:
ಶ್ರೀ ಶಂಕರರ ಅಭಿಪ್ರಾಯದಂತೆ ಸಾಂಖ್ಯರು ಸತ್ಕಾಯ೯ವಾದವನ್ನು ಅಥೈ೯ಸುವುದರಲ್ಲಿ ವಿಫಲರಾಗಿದ್ದಾರೆ.ಸಾಂಖ್ಯರು ಪರಿಣಾಮವಾದವನ್ನು ನಂಬುತ್ತಾರೆ. ಕಾಯ೯ವು ಕಾರಣದ ನಿಜವಾದ ಬದಲಾವಣೆ ಎಂದು.ಶ್ರೀ ಶಂಕರರ ಪ್ರಕಾರ ಪರಿಣಾಮವಾದ ಎಂದರೆ ಅಸತ್ಯದಿಂದ ಸತ್ಯವು ಉಂಟಾಗಿದೆ ಎಂದಥ೯.ಇದು ಸತ್ಕಾಯ೯ವಾದದ ವಿರುದ್ಧವಾಗಿದೆ.ರೂಪದ ಬದಲಾವಣೆಯು ನಿಜವಾದ ಬದಲಾವಣೆ ಅಲ್ಲಯು.ಒಂದು ವಸ್ತುವಿನ ರೂಪವು ಒಂದು ವಿಧವಾದ ರೂಪದ ಬದಲಾವಣೆ ಅಷ್ಟೆ.ಉದಾಹರಣೆಗೆ ನೀರು, ಮಂಜುಗಡ್ಡೆ,ನೀರಿನ ಆವಿ. ರೂಪವನ್ನು ವಸ್ತುವಿನಿಂದ ಬೇಪ೯ಡಿಸಲು ಸಾಧ್ಯವಿಲ್ಲ. ರೂಪವು ಬದಲಾವಣೆಯಾದರೂ ವಸ್ತು ಅದೇ ಆಗಿರುತ್ತದೆ.ರೂಪವು ವಸ್ತುವಿಗಿಂತ ಬೇರೆ ಅಲ್ಲ.
ಉದಾಹರಣೆಗೆ ಗಡಿಗೆ ಮತ್ತು ಮಣ್ಣು.ವಿವಿಧ ಬಂಗಾರದ ಆಭರಣಗಳು ಮತ್ತು ಬಂಗಾರ. ಎಚ್ಚರ, ಕನಸು, ನಿದ್ರೆ. ದೇವದತ್ತನು ದೇವದತ್ತನೇ.ವಸ್ತುವಿನ ರೂಪ ಮತ್ತು ವಸ್ತುವು ಬೇರೆ ಬೇರೆ ಅಲ್ಲ.ರೂಪದ ಬದಲಾವಣೆಯು ವಸ್ತುವಿಗಿಂತ ಬೇರೆ ಅಲ್ಲ.ಅದೇ ರೀತಿಯಲ್ಲಿ ಜಗತ್ತು ಅದರ ಕಾರಣವಾದ ಬ್ರಹ್ಮಕ್ಕಿಂತ ಬೇರೆಅಲ್ಲ. ರೂಪದ ಬದಲಾವಣೆಯು ಕೇವಲ ಪ್ರತಿಬಿಂಬವಷ್ಟೇ.
ಪ್ರತಿಬಿಂಬವಾದ ಹಾಗೂ ಅವಾಚ್ಛೇದವಾದ ಈ ಹಿಂದೆ ವಿವರವಾಗಿ ಪ್ರಸ್ತಾಪಿಸಲಾಗಿದೆ.
ಅಧ್ಯಾಯ6 ಬ್ರಹ್ಮತತ್ವ,ಜೀವ,ಜಗತ್ತು ಅಡಿಟಿಪ್ಪಣಿಗಳು
1) ಶ್ರೀ ಶ್ರೀ ಸರಸ್ವತೀ ಸಚ್ಚಿದಾನಂದೇಂದ್ರ ಸ್ವಾಮಿಗಳು,ಶಾಂಕರ ವೇದಾಂತಸಾರ, ಹೊಳೆನರಸೀಪುರ. ಮೊದಲನೆಯ ಮುದ್ರಣ 2000 ಪುಟ೯4
2)ಸ್ವಾಮಿ ಮುಖ್ಯಾನಂದರು,ಕನ್ನಡ ಅನುವಾದ ಡಾ.ಟಿ.ಎಸ್‍ಕೃಷ್ಣಮೂತಿ೯'ಶಂಕರಾಚಾಯ೯ರು ಮತ್ತು ಭಾರತೀಯ ಅಧ್ಯಾತ್ಮ ಶಾಸ್ತ್ರದ ಪುನರುನ್ನತಿ,ಅದ್ವೈತ ವಿದ್ಯಾಪ್ರತಿಷ್ಠಾನ. ಹೆಬ್ಬೂರು, ತುಮಕೂರು ಜಿಲ್ಲೆ. ಪುಟ೯4
3)ಅದೇ ಪುಟ ೯5
4) ಶ್ರೀ ಸಚ್ಚಿದಾನಂದೇಂದ್ರ ಸರಸ್ವತೀ ಸ್ವಾಮಿಗಳು,ಶಾಂಕರ ವೇದಾಂತಸಾರ. ಅದೇ ಪುಟ 134
5)ಅದೇ ಪುಟ136
6)ಅದೇ ಪುಟ168
ಅಧ್ಯಾಯ7: ಮಾಯೆಯ ಪರಿಕಲ್ಪನೆ ಹಾಗೂ ಲಕ್ಷ್ಯಾಥ೯
ಬ್ರಹ್ಮವೊಂದೇ ಪರಮಾಥ೯ ತತ್ವ ಎಂಬುದನ್ನು ಮಧ್ಯಮಾಧಿಕಾರಿಗಳಿಗೆ ತಿಳಿಸಲು ಜಗತ್ತು ಬ್ರಹ್ಮದಿಂದ ಮಾಯಿಕವಾಗಿ ಹುಟ್ಟುತ್ತದೆಂಬ ಸತ್ಕಾಯ೯ವಾದವನ್ನು ವೇದಾಂತದಲ್ಲಿ ಅಂಗೀಕರಿಸಿದೆ. ಮಾಯೆಯು ಬ್ರಹ್ಮಕ್ಕಿಂತ ಬೇರೆಯೇ? ಹುಟ್ಟುವುದೆಂಬುದಿಲ್ಲವೇ?ಬೇರೆಯಾಗಿದ್ದರೆ ಅದ್ವೈತಕ್ಕೆ ಹಾನಿ.ಬ್ರಹ್ಮವೇ ಆದರೆ ಕೂಟಸ್ಥವಾದ ಬ್ರಹ್ಮದಿಂದ ಜಗತ್ತು ಹುಟ್ಟುತ್ತದೆ ಎಂಬುದು ಹೊಂದುವುದಿಲ್ಲ.ಅವಿದ್ಯೆಯಿಂದ ಕಲ್ಪಿತವಾಗಿರುವ ನಾಮರೂಪ ಬೀಜವೇ ಮಾಯೆಯು. ಜಗತ್ತು ನಾಮ ರೂಪ ಗಳಿಂದ ಬಿಡಿ ಬಿಡಿಯಾಗಿ ತೋರುತ್ತಿರುವುದಷ್ಟೇ.ಇದನ್ನು ವ್ಯಾಕೃತ ಜಗತ್ತು ಎನ್ನುತ್ತಾರೆ.ಇದು ಸೃಷ್ಟಿಯಾಗುವುದಕ್ಕೆ ಮುಂಚೆ ಅವ್ಯಾಕೃತವಾಗಿರುತ್ತದೆ.
ಅವ್ಯಾಕೃತ ನಾಮರೂಪಗಳು ತಮ್ಮ ಆತ್ಮ ಸ್ವರೂಪವನ್ನಿಟ್ಟುಕೊಂಡೇ ವ್ಯಾಕೃತವಾಗುತ್ತವೆ.ನಾಮರೂಪಗಳಿಗೆ ಬ್ರಹ್ಮವೇ ಸ್ವರೂಪವು.ಬ್ರಹ್ಮಕ್ಕೆ ನಾಮರೂಪಗಳು ಸ್ವರೂಪವಲ್ಲ1. ಈಗಲೂ ಎಲ್ಲಾಕಡೆಯಲ್ಲಿ ಆತ್ಮನೇ ಇರುತ್ತಾನೆಂದು ಶ್ರುತಿಯು ಹೇಳಲು ಇದೇಕಾರಣ.ಆತ್ಮನಿಗಿಂತ ಬೇರೆಯಾದ ಅನಾತ್ಮೆವೆಂಬುದು ಎಲ್ಲಿಯೂ ಇರುವುದಿಲ್ಲ.ಕಾಯ೯ವಾದ ಜಗತ್ತು ಈಶ್ವರನ ಶಕ್ತಿಗಿಂತ ಬೇರೆಅಲ್ಲ.ವ್ಯಾಕೃತವಾಗಿರುವ ಜಗತ್ತೆಂಬ ಕಾಯ೯ವೂ ಅದಕ್ಕೆ ಕಾರಣವಾದ ಮಾಯೆಯೂ ಅವಿದ್ಯಾಕಲ್ಪಿತವಾಗಿವೆ.ಮಾಯೆ ಅವಿದ್ಯೆ ಇವೆರಡೂ ಅಧ್ಯಾರೋಪ ಅಪವಾದ ನ್ಯಾಯದಿಂದ ಕಲ್ಪಿಸಿರುವ ಪದಾಥ೯ಗಳೇ ಹೊರತು ಪರಮಾಥ೯ವಲ್ಲ.
ದ್ವೈತಪ್ರಪಂಚವು ನಿಜವಾಗಿ ಇದ್ದುಕೊಂಡು ಅದ್ವೈತÀ ಜ್ಞಾನವು ಉಂಟಾದ ಬಳಿಕ ನಿವೃತ್ತವಾಗುದಿಲ್ಲ2. ಹಗ್ಗದಲ್ಲಿ ಹಾವು ಎಂದಿಗೂ ಇರವುದಿಲ್ಲವಾದರೂ ಅದು ಜ್ಞಾನದಿಂದ ಹೋಗುತ್ತದೆ. ಯಾವುದು ನಿಜವಾಗಿಯೂ ಇಲ್ಲವೋ ಆದರೆ ಇದ್ದಂತೆ ತೋರುತ್ತದೆಯೋ ಅದೇ ಮಾಯೆ. ಯಾಸ್ಕರು ತಮ್ಮ ನಿಘಂಟಿನಲ್ಲಿ ಮಾಯಾ ಶಬ್ದವನ್ನು ಜ್ಞಾನಪಯಾ೯ಯವಾಗಿಯೇ ಬಳಸಿರುತ್ತಾರೆ
"ಇಂದ್ರೋ ಮಾಯಾಭಿಃ ಪುರುರೂಪ ಈಯತೇ."ಇಂದ್ರನು (ಪರಮೇಶವರನು) ಮಾಯೆಗಳಿಂದ ಬಹುರೂಪವಾಗಿ ಕಾಣುತ್ತಾನೆ3.ಇಂದ್ರಿಯಗಳ ಅರಿವು ಅವಿದ್ಯಾ ರೂಪವಾಗಿರುದರಿಂದ ಮಾಯೆಗಳಿಂದ ಇಂದ್ರನು (ಪರಮೇಶ್ವರನು) ಅನೇಕವಾಗಿ ಕಾಣುತ್ತಾನೆ. ಸರಿಯಾಗಿ ನೋಡಿದರೆ ಒಬ್ಬನೇ ಆಗಿರುತ್ತಾನೆ.ಆದ್ದರಿಂದ ಮಾಯೆ ಎಂಬ ಶಬ್ದಕ್ಕೆ ಜ್ಞಾನವೆಂಬ ಅಥ೯ವನ್ನು ಒಪ್ಪಿದಾಗಲೂ ಮಿಥ್ಯಾಜ್ಞಾನವೇ ಆಗಿರುತ್ತದೆ.ಆದ್ದರಿಂದ ಪ್ರಪಂಚವು ಹುಸಿತೋರಿಕೆ ಮಾಯಿಕ,ಕನಸು,ಇಂದ್ರಜಾಲ ಎಂದೇ ಹೇಳಬೇಕಾಗುತ್ತದೆ.
ಅವಿದ್ಯೆಗೆ ಅಥವಾ ಮಾಯೆಗೆ ಅವ್ಯಕ್ತ ಎಂಬ ಹೆಸರಿದೆ.ಇದೇ ಅನಾದಿ ಪರಮೇಶ್ವರನ ಶಕ್ತಿ.ಸತ್ವ ರಜೋ ತಮಗುಣಗಳನ್ನುಗೊಂಡಿದೆ.ಇದನ್ನು ಪ್ರತ್ಯಕ್ಷವಾಗಿ ಅರಿತುಕೊಳ್ಳಲು ಆಗುವುದಿಲ್ಲ.ತನ್ನಕಾಯ೯ವಗ೯ಕ್ಕಿಂತ ಶ್ರೇಷ್ಠವಾದದ್ದು.ಇದನ್ನು ಧೀಮಂತನಾದವನು ಕಾಯ೯ರೂಪದಿಂದ ಅನುಮಾನಿಸಬೇಕು. ಇದರಿಂದ ಈ ಜಗತ್ತೆಲ್ಲ ಉತ್ಪನ್ನವಾಗಿದೆ. ಮಹತ್ತಿಗಿಂತ ಅವ್ಯಕ್ತವು ಶ್ರೇಷವಾದುದು.್ಠ
ಪ್ರಕೃತಿಯನ್ನು ಮಾಯೆ ಎಂದು ಅರಿತುಕೊಳ್ಳಬೇಕು.ಮಹೇಶ್ವರನು ಮಾಯೆಯ ಈಶನÉ.ಅವ್ಯಕ್ತದಿಂದ ಎಲ್ಲಾಚರಾಚರ ವಸ್ತುಗಳೂ ಹುಟ್ಟುತ್ತವೆ.ಪರಮೇಶ್ವರನ ಶಕ್ತಿಯಾದ ಮಾಯೆಯು ಸದ್ರೂಪವಲ್ಲ. ಅಸದ್ರೂಪವಲ್ಲ. ಸತ್ ಅಸದ್ರೂಪವೂ ಅಲ್ಲ.ಪರಮೇಶ್ವರನಿಗಿಂತ ಭಿನ್ನವೂ ಅಲ್ಲ. ಅಭಿನ್ನವೂ ಅಲ್ಲ.ಅದು ಸಾವಯವವೂ ಅಲ್ಲ. ನಿರವಯವವೂ ಅಲ್ಲ.ಅದು ಅತ್ಯಂತ ಅದ್ಭುvವಾಗಿದೆ. ಅÀದು ಅನಿವ೯ಚನೀಯವಾಗಿದೆ.
1)ಸದ್ರೂಪವಲ್ಲ:ಸದ್ರೂಪವಾಗಿದ್ದರೆ ಜ್ಞಾನವು ಅದನ್ನು ನಾಶಮಾಡಲು ಶಕ್ತವಾಗುತ್ತಿರಲಿಲ್ಲ.
2)ಅಸದ್ರ್ರೂಪವಲ್ಲ. ಅಸದ್ರ್ರೂಪವಾಗಿದ್ದರೆ ಅದರಿಂದ ಯಾವಕಾಯ೯ವೂ ಉಂಟಾಗುತ್ತಿರಲಿಲ್ಲ.
3)ಸತ್ ಅಸತ್‍ರೂಪವಲ್ಲ: ಒಂದೇ ವಸ್ತುವಿಗೆ ಎರಡು ವಿರುದ್ಧ ಧಮ೯ಗಳಿರುವುದಿಲ್ಲ
4)ಭಿನ್ನವೂ ಅಲ್ಲ. ಭಿನ್ನವಾಗಿದ್ದರೆ ಅದ್ವೈತಕ್ಕೆ ಹಾನಿಯಾಗೆುತ್ತದೆ.
5) ಅಗ್ನಿ ಹಾಗೂ ಅದರ ದಾಹಕ ಶಕ್ತಿ ಒಂದೇ ಆಗಿರಲಾರದು.ಹಾಗೆಯೇ ಪರಮೇಶ್ವರನಿಗಿಂತ ಭಿನ್ನವಾಗಿದೆ.
6) ಸಾವಯವವೂ ಅಲ್ಲ.ಏಕೆಂದರೆ ಸಾವಯವವಾಗಿದ್ದರೆ ಇದರಲ್ಲಿ ಯಾವ ಅವಯವವೂ ಕಂಡು ಬರುತ್ತಿರಲಿಲ್ಲ ಮತ್ತು ಅವಯವವುಳ್ಳದ್ದಕ್ಕೆ ಜನ್ಮವಿರುತ್ತದೆ.
7)ನಿರವಯವವೂ ಅಲ್ಲ.ತ್ರಿಗುಣಗಳಿರುವುದರಿಂದ ನಿರವಯವವಾಗಿದ್ದರೆ ಪರಿಣಾಮವು ಸಂಭವಿಸುತ್ತಿರಲಿಲ್ಲ.
8)ಅನಿವ೯ಚನೀಯ ರೂಪವಾಗಿದೆ:ಯಾವಲಕ್ಷಣಗಳನ್ನೂ ಹೇಳಲು ಅಸಾಧ್ಯವಾದುದರಿಂದ ಅನಿವ೯ಚನೀಯ.
ಇದು ಹಾವು ಎಂಬ ಭ್ರಾಂತಿಯು ಇದು ಹಗ್ಗ ಎಂಬ ವಿವೇಕದಿಂದ ಹೇಗೆ ನಾಶವಾಗುವುದೋ ಹಾಗೆಯೇ ಶುದ್ಧವೂ,ಅದ್ವಿತೀಯವೂ ಆದ ಪರಬ್ರಹ್ಮದ ಜ್ಞಾನದಿಂದ ಈ ಮಾಯೆಯು ನಾಶವಾಗುವುದು.ಸತ್ವ ರಜಸ್ಸು,ತಮಸ್ಸು ಎಂಬ ಆಮಾಯೆಯ ಸಂಬಂಧಿಗಳಾದ ಗುಣಗಳು ವ್ಯಕ್ತವಾಗಿರುವ ತಮ್ಮ ಕಾಯ೯ಗಳಿಂದಲೇ ಪ್ರಸಿದ್ಧವಾಗಿವೆ.ಗುಣಗಳು ನಮಗೆ ಪ್ರತ್ಯಕ್ಷವಲ್ಲವಾದುದರಿಂದÀ ವ್ಯಕ್ತವಾಗಿರುವ ಕಾಯ೯ಗಳ ಮೂಲಕವೇ ಅವುಗಳನ್ನು ಅರಿತುಕೊಳ್ಳಬೇಕು.
ರಜೋಗುಣ: ವಿಕ್ಷೇಪಶಕ್ತಿ:
ಕ್ರಿಯಾತ್ಮಕವಾದ ವಿಕ್ಷೇಪಶಕ್ತಿಯು ರಜೋಗುಣಕ್ಕೆ ಸೇರಿದ್ದು. ಮನಸ್ಸಿಗೆ ಸೇರಿದ ರಾಗವೇ ಮೊದಲಾದವೂ ದುಃಖವೇ ಮುಂತಾದವೂ ಈ ವಿಕ್ಷೇಪ ಶಕ್ತಿಯಿಂದ ಯಾವಾಗಲೂ ಉಂಟಾಗುತ್ತಿರುವುವು. ಆವರಣ ಶಕ್ತಿಯು ವಸ್ತುವಿನ ಸ್ವರೂಪವನ್ನು ಮುಚ್ಚಿದಾಗ ವಿಕ್ಷೇಪ ಶಕ್ತಿಯು ಒಂದು ಹೊಸರೂಪವನ್ನು ಸೃಷ್ಟಿಸುತ್ತದೆ.ಕಾಮ ಕ್ರೋಧ,ಮದ, ಮಾತ್ಸಯ೯, ಅಹಂಕಾರ, ಈಷ್ಯೆ೯, ಇವೇ ಮೊದಲಾದ ಘೋರ ಧಮ೯ಗಳು ಯಾವುದರಿಂದ ಈ ಪುರುಷ ಪ್ರವೃತ್ತಿಗಳು ಉಂಟಾಗುವುದೋ ಅವು ರಜೋಗುಣಕ್ಕೆ ಸಂಬಂಧಪಟ್ಟವು. ಆದ್ದರಿಂದ ರಜೋಗುಣವು ಬಂಧಕ್ಕೆ ಕಾರಣವಾಗಿದೆ4.
ಆವರಣ ಶಕ್ತಿ:ತಮೋಗುಣ: ಯಾವುದರಿಂದ ವಸ್ತುವು ಬೇರೊಂದು ಬಗೆಯಾಗಿ ತೋರುತ್ತದೆಯೋ ಅದೇ ಆವರಣವೆಂಬ ಶಕ್ತಿಯು. ಇದೇ ಮನುಷ್ಯನ ಸಂಸಾರಕ್ಕೂ ವಿಕ್ಷೇಪ ಶಕ್ತಿಯ ಕಾಯೋ೯ನ್ಮುಖತ್ವಕ್ಕೂ ಕಾರಣ ವಾಗಿದೆ5. ಮನುಷ್ಯನು ಮೇಧಾವಿಯಾಗಿದ್ದರೂ,ಶಾಸ್ತ್ರಜ್ಞನಾಗಿದ್ದರೂ,ಲೌಕಿಕ ವ್ಯವಹಾರÀzಲ್ಲಿ ಚತುರನಾಗಿದ್ದರೂ, ತಮಸ್ಸಿನಿಂದ ಮುಚ್ಚಲ್ಪಟ್ಟರೆ ಅನೇಕ ವಿಧವಾಗಿ ಸ್ಪುಟವಾಗಿ ಭೋಧಿಸಲ್ಪಟ್ಟರೂ ತತ್ವವನ್ನು ಅರಿಯಲಾರರು. ಭ್ರಾಂತಿಯಿಂದ ತಾನು ಆರೋಪಿಸಿರುವುದನ್ನೇ ಸರಿಯೆಂದು ಎಣಿಸುತ್ತಾನೆ. ಅದರ ಕಾಯ೯ಗಳನ್ನೇ ಆಶ್ರಯಿಸುತ್ತಾನೆ. ಅಭಾವನೆ, ವಿಪರೀತ ಭಾವನೆ,ಸಂದೇಹ ಇವು ಆವರಣ ಶಕ್ತಿಯ
ಸಂಬಂಧದಿಂದ ಕೂಡಿರುವ ಮನುಷ್ಯನನ್ನು ಖಂಡಿತವಾಗಿ ಬಿಡುವುದಿಲ್ಲ. ಅವನನ್ನು ವಿಕ್ಷೇಪ ಶಕ್ತಿಯು ಯಾವಾಗಲೂ ಭಾಧಿಸುತ್ತದೆ.
ಅಭಾವನೆ; ವಸ್ತುವಿನ ಸ್ವರೂಪವನ್ನು ತಿಳಿಯದಿರುವುದು.
ವಿಪರೀತ ಭಾವನೆ:ವಸ್ತುವು ಒಂದು ವಿÀಧವಾಗಿದ್ದರೆ ಇನ್ನೊಂದು ವಿಧವಾಗಿ ತೋರುವುದು.
ಅಸಂಭಾವನೆ:ವಸ್ತುವು ಆವಿಧವಾಗಿ ಇಲ್ಲವೆಂಬ ಭಾವನೆ.
ಸಂದೇಹ:ವಸ್ತುವು ಆ ರೀತಿ ಇದೆಯೋ ಇಲ್ಲವೋ ಎಂಬ ಅನುಮಾನ. ಅಜ್ಞಾನ, ಆಲಸ್ಯ, ನಿದ್ರೆ, ಜಡತ್ವ, ಪ್ರಮಾದ, ಮೂಢತ್ವ ಮೊದಲಾದವು ತಮಸ್ಸಿನ ಗುಣಗಳು.ಇವುಗಳಿಂದ ಕೂಡಿರುವವನು ನಿದ್ರಿಸುವವನಂತೆ ಏನನ್ನೂ ಅರಿಯುವುದಿಲ್ಲ.
ಸತ್ವಗುಣವು ನೀರಿನಂತೆ ನಿಮ೯ಲವಾದುದು.ಆದರೂ ರಜೋ ತಮಗಳೊಂದಿಗೆ ಬೆರೆತು ಸಂಸಾರಕ್ಕೆ ಕಾರಣವಾಗುತ್ತದೆ6.ಸತ್ವಗುಣದಲ್ಲಿ ಆತ್ಮಸ್ವರೂಪವು ಪ್ರತಿಬಿಂಬಿಸಿ ಸೂಯ೯ನಂತೆ ಜಡಜಗತೆಲ್ಲವನ್ನೂ ಪ್ರಕಾಶಿಸುತ್ತದೆ. ಇವು ಮಿಶ್ರಸತ್ವದ ಧಮ೯ಗಳು. ಅಮಾನಿತ್ವ, ಯಮನಿಯಮಗಳು ಶ್ರದ್ಧೆ, ಭಕ್ತಿ, ಮುಮುಕ್ಷತ್ವ, ದೈವೀಸಂಪತ್ತು, ಅಸುರ ಸಂಪತ್ತಿಯನ್ನು ಬಿಡುವುದು.ಇವು ವಿಶುದ್ಧ ಸತ್ವದ ಗುಣಗಳು. ಮನಸಿನ ಪ್ರಸನ್ನತೆ, ಆತ್ಮಾನುಭವ ಪರಮ ಶಾಂತಿ.ತೃಪ್ತಿ, ಂುiÁವಾಗಲೂ ಆನಂದರಸ ಸ್ವರೂಪವನ್ನೆಹೊಂದಿರುವುದು.
ಬ್ರಹ್ಮದ ಅನಿವ೯ಚನೀಯ ಶಕ್ತಿಯಾದ ಮಾಯೆಯೇ ಈ ಸಮಸ್ತ ಜಗತ್ತಿನ ಸೃಷ್ಟಿಗೆ ಕಾರಣ.ಮಾಯೆಯ ಸಾಪೇಕ್ಷತ್ವವೆಂದರೆ ಪ್ರಾಪಂಚಿP ಅಥವಾ ಲೌಕಿಕವಾಗಿ ಅಸ್ತಿತ್ವ ಪಡೆದಿದೆ. ಆದರೆ ಅದು ಅಂತಸ್ಸತ್ವ ಅಥವಾ ಪಾರಮಾಥಿ೯ಕ ವಿಷಯವಾಗಿ ಎಂದೂ ಗ್ರಹಿಸಲ್ಪಡುವುದಿಲ್ಲ.ಆದುದರಿಂದ ಈ ಮಾಯೆಯು ಬ್ರಹ್ಮದ ಒಂದು ಸ್ವಾಭಾವಿಕವಾದ ಎಂದೆಂದಿಗೂ ಅಗಲಿಸಲಾಗದ ಹಾಗೂ ವೈವಿಧ್ಯಮಯವಾಗಿ ಹೊರಹೊಮ್ಮುವ ಮತ್ತು ಜೀವಿಗಳೊಡನೆ ಕೂಡಿದ ಈ ಜಗತ್ತಾಗಿ ಕಾಣುವ ಒಂದು ಶಕ್ತಿ ಎಂದು ಹೇಳಬಹುದು.ಮಾಯೆಯ ಈ ಅಸ್ತಿತ್ವವನ್ನು ಅದರ ಪರಿಣಾಮದಿಂದ ಮಾತ್ರ, ಎಂದರೆ ಅನುಭವ ಗೋಚರವಾದ ಈ ಜಗತ್ತಿನಿಂದ ಮಾತ್ರ ಊಹಿಸಬಹುದು. ನಾವು ಮಾಯೆಯನ್ನು ಅದರ ಕಾಯ೯ವಾದ ಹಲವಾರು ಕಾಯ೯ಗಳಿಂದ ತಂದು ಕೊಂಡರೂ ಸಹ, ಅದು ಯಾವರೀತಿ ಸಮುದ್ರದ ಅಲೆಗಳು ಸಮುದ್ರದಿಂದ ಭಿನ್ನವಾಗಲು ಸಾಧ್ಯವಿಲ್ಲವೊ,ಅದೇರೀತಿಯಲ್ಲಿ ಬ್ರಹ್ಮದಿಂದ ಭಿನ್ನವಾಗಿ ಸ್ವತಂತ್ರವಾಗಿರುವ ತನ್ನದೇ ಆದ ಅಸ್ತಿತ್ವ ಪಡೆದಿರಲು ಸಾಧ್ಯವಿಲ್ಲ.ಪರಬ್ರಹ್ಮವು ಹೇಗೆ ಸತ್,ಚಿತ್,ಆನಂದವೊ ಹಾಗೆಯೇ ಮಾಯೆಯನ್ನು ಪ್ರಾಪಂಚಿಕ ವ್ಯವಹಾರ ಸೃಷ್ಟಿಯಿಂದ ಸತ್ವ,ರಜ, ತಮೋಗುಣ ಸ್ವಭಾವದ್ದು (ತ್ರಿಗುಣಾತ್ಮಕ) ಎಂದು ಹೇಳಬಹುದು7.ಯಾರೇ ಆಗಲಿ ಯಾವ ಅವಸ್ಥೆಯಲ್ಲೇ ಆಗಲಿ ಆತ್ಮ ಸ್ವರೂಪಿಯಾದ ಬ್ರಹ್ಮವನ್ನು
ನಿರಾಕರಿಸಲು ಸಾಧ್ಯವಿಲ್ಲ.ಏಕೆಂದರೆ ಅದೇ ವೈಯಕ್ತಿಕ ಜೀವಾತ್ಮ.ಎಲ್ಲಾ ಅನುಭವಗಳ ಆಧಾರ.
ಅನುಭವೈಕ (ಪ್ರಾಯೋಗಿಕ) ಜ್ಞಾನ ಮತ್ತು ಅಧ್ಯಾರೋಪ ಕುರಿತು ಮಾಯೆಯನ್ನು ವಣಿ೯ಸುವಾಗ ಅದು ಆವರಣ(ಮುಸುಕು ಹಾಕುವ)ಶಕ್ತಿ ಮತ್ತು ವಿಕ್ಷೇಪ(ಹೊರಹೊಮ್ಮಿಸುವ)ಶಕ್ತಿಗಳಿಂದ ಕೂಡಿದೆಯೆಂದೂ, ಅದು ತ್ರಿಗುಣಾತ್ಮಕವೆಂದೂ, ಅದು ಜಗತ್ತನ್ನೂ ಅದರಲ್ಲಿರುವ ಜೀವಿಗಳನ್ನೂ ಯಾವೊಂದು ಬಾಹ್ಯ ಕಾರಣವಿಲ್ಲದೆ ಅಯತ್ನ ಪೂವ೯ಕವಾಗಿ ತಾನೇ ತಾನಾಗಿ ಹೊರಹೊಮ್ಮಿಸುತ್ತದೆ. ಆದರೆ ಅಂತಿಮವಾಗಿ ಯಾವುದೇ ಜ್ಞಾನವಾಗಲೀ,ನಿಧಾ೯ರಗಳಾಗಲೀ ಅನುಭವಕ್ಕೆ ಸಮಂಜಸವಾಗಿರಬೇಕು.ಅದು ಕೇವಲ ಒಬ್ಬ ದೈವಜ್ಞ ಅಥವಾ ಪ್ರವಾದಿಯ ಊಹೆ ಅಥವಾ ದಿವ್ಯದಶ೯ನವೋ ಅಥವಾ ಅಂತಜ್ಞಾ೯ನವಾಗಿದ್ದರೆ ಸಾಲದು.ಬ್ರಹ್ಮವು ತನ್ನ ಮಾಯಾಶಕ್ತಿಯ ಮೂಲಕ ಯಾವ ಆಯಾಸವೂ ಇಲ್ಲದೆ ತಾನೇತಾನಾಗಿ ಹೊರಹೊಮ್ಮಿಸುತ್ತದೆ.ಅನ್ಯೋನ್ಯ ಸಂಬಂಧವಾಗಿ ಬ್ರಹ್ಮವು ಪರವಸ್ತುವೂ ಪರಸತ್ಯವೂ ಆಗಿದ್ದು ಅದರಿಂದ ಹೊರಹೊಮ್ಮುವ ಯಾವುದೂ ಅಸ್ತ ವ್ಯಸ್ತ,ಅಸಂಬದ್ಧವಾಗಿರಲು ಸಾಧ್ಯವಿಲ್ಲ. ಬೆಂಕಿಯು ತನ್ನ ಶಾಖದಿಂದ ಬದಲಾಗದಿರುವಂತೆ ಮಾಯೆಯಿಂದ ಎಂದೆಂದಿಗೂ ಬದಲಾಗದ ಅದು ನಮ್ಮ ಸಾಕ್ಷಿ.(ಆತ್ಮ).ಏಕೆಂದರೆ ಮಾಯೆಯು ಅದರ (ಬ್ರಹ್ಮದ) ಹೊರಸೂಸುವಿಕೆ ಅಥವಾ ಹೊರಪಡಿಸುವಿಕೆ.
ಮಾಯೆಯ ಪ್ರಭಾವಗಳನ್ನು ದಾಟಿಹೋದಾಗ ಮಾತ್ರ ಆತ್ಮನ ನೈಜಸ್ವರೂಪದ ಅರಿವು ನಮಗೆ ಆಗುತ್ತದೆ.ಅಧ್ಯಾತ್ಮಿಕಶಿಸ್ತು ಶಿಕ್ಷಣಗಳಿಂದ ಪರಸ್ಪರ ವಿರುದ್ಧವಾದ ದ್ವಂದ್ವಗಳೂ ದೂರ ಸರಿಯುತ್ತವೆ.À
ಮಸುಕು ಕತ್ತಲೆಯಲ್ಲಿ ಸ್ಪಷ್ಟವಾಗಿ ಕಾಣಿಸದ ಹಗ್ಗದ ಮೇಲೆ ಸಪ೯ದ ಭಾವನೆಯನ್ನು ಅಧ್ಯಾರೋಪಿಸುವ ಸಾಮಾನ್ಯವಾದ ಅನುಭವವನ್ನುಇದಕ್ಕೆ ದೃಷ್ಟಾಂತವಾಗಿ ಹೇಳಿದೆ.ನಾವು ದೀಪದ ಬೆಳಕನ್ನು ಸ್ಪಷ್ಟ ವಾಗಿ ಹಿಡಿದು ನೋಡಿದಾಗ ಹಗ್ಗವನ್ನೇ ಮಾತ್ರ ಕಾಣುತ್ತೇವೆ.ಹಗ್ಗದ ಬಗ್ಗೆ ನಮ್ಮಲ್ಲಿದ್ದ ಸಪ೯ದ ಕಲ್ಪನೆ ಅಳಿದು ಹೋಗುತ್ತದೆ.ಇದೇ ರೀತಿಯಲ್ಲಿ ಇಂದ್ರಿಯಾತೀತ ಅಂತಸ್ಸತ್ವದ ಹಂತzಲ್ಲಿ ಯಾರೇ ಆಗಲಿ ತನ್ನ ಸ್ವರೂಪವೇ ಬ್ರಹ್ಮ ಅಥವಾ ಆತ್ಮವೆಂದು ಗುರುತಿಸಿಕೊಂಡಾಗ ಬ್ರಹ್ಮದಲ್ಲಿ ಜಗತ್ತನ್ನು ಕಾಣುವುದಿಲ್ಲ. ಹಾಗೆಯೇ ಆತನಲ್ಲಿ ತನ್ನ ವ್ಯಕ್ತಿತ್ವವನ್ನು ಗುರುತಿಸಿಕೊಳ್ಳುವುದಿಲ್ಲ. ಅಲ್ಲಿರುವುದು ಶುದ್ಧ ಜ್ಞಾನಮಾತ್ರ. ಅಲ್ಲಿರುವುದು ಶುದ್ಧ ಜ್ಞಾನಮಾತ್ರ.
ವ್ಯಕ್ತಿಯು ತನ್ನ ಅನುಭವಾತ್ಮಕ(ಪ್ರಾಪಂಚಿಕ) ವ್ಯಕ್ತಿತ್ವವನ್ನುದಾಟಿ ಆತ್ಮಸಾಕ್ಷಾತ್ಕಾರ ಮಾಡಿಕೊಂಡು ಆತ್ಮನ ಅನನ್ಯತೆಯನ್ನು ಕಂಡುಕೊಂಡಾಗ ಮಾಯೆಯ ಪ್ರಭಾವವನ್ನು ದಾಟಿ ನಿಲ್ಲುತ್ತಾನೆ. ಮಾಯೆಯು ಬ್ರಹ್ಮದ ಶಾಶ್ವತವಾದ ಹಾಗೂ ಪ್ರತ್ಯೇಕಿಸಲಾರದ ಶಕ್ತಿಯಾಗಿರುತ್ತದೆ.ಆದರೆ ಯಾವರೀತಿಯಾಗಿ ಬೆಳಕಿನ ಪ್ರಕಾಶವನ್ನು ಕೇವಲ ಕಣ್ಣಿನಿಂದ ಮಾತ್ರ ನೋಡಬಹುದೋ ಹಾಗೆಯೇ ಜಗತ್ತನ್ನು ಸಹ ಅದರಲ್ಲಿ ಇರುವ ಅನುಭವಾತ್ಮಕ ಜೀವಿಗಳು ಮಾತ್ರ ನೋಡಬಹುದು.ಅವ್ಯಕ್ತವೆಂದೂ ಅವಿದ್ಯೆಯೆಂದೂ ಹೇಳಲ್ಪಡುಉತ್ತಿರುವ ಮಾಯೆಯು ಒಂದು ಪರಮೇಶ್ವರನ ಶಕ್ತಿ.
ಅದು ಅನಾದಿ ಮತ್ತು ರಜ ಸತ್ವ ತಮೋಗುಣಗಳಿಂದ ಕೂಡಿ ತ್ರಿಗುಣಾತ್ಮಕವಾಗಿದೆ.ಮಾಯೆಯೇ ಇಡೀ ವಿಶ್ವವನ್ನು ಹೊರಹೊಮ್ಮಿಸಿರುವುದು.ಆವರಣ ಮತ್ತು ವಿಕ್ಷೇಪಗಳು ಮಾಯೆಯ ವಿವಿಧರೂಪಗಳು. ಮಾಯೆ (ನಿರೆುಕ್ತಿ ಅಥವಾ ಶಬ್ದ ನಿಷ್ಪತ್ತಿಯಂತೆ) ಎಂದರೆ ಎಲ್ಲವನ್ನೂ ಅಳತೆ ಮಾಡುವುದು8.(ಮೀಯತೇ ಅನಯಾ ಇತಿ ಮಾಯಾ) ಎಂದರೆ ತನ್ನ ತ್ರಿಗುಣಾತ್ಮಕ ಶಕ್ತಿಯಿಂz ಏಕಮೇವಾ ದ್ವಿತೀಯ ಬ್ರಹ್ಮವನ್ನು ತೋರಿಕೆಯಲ್ಲಿ ಕಾಲ ದೇಶ ಕಾರಣಗಳ ಪರಿಧಿಯಲ್ಲಿರಿಸಿದಂತೆ ಮಾಡುತ್ತಾ ಅದನ್ನು ಸಾಂತವೂ ನಾನಾಬಗೆಯ ನಾಮರೂಪಗಳುಳ್ಳನ್ನದ್ದಾಗಿಯೂ ಮಾಡಿ ನಮ್ಮ ಇಂದ್ರಿಯಗಳ ಹಾಗೂ ಮನಸ್ಸಿನ ಅಳತೆಗೆ ಸಿಕ್ಕುವಂತೆ ಮಾಡಬಲ್ಲ ಶಕ್ತಿ.
ಪ್ರಕೃತಿ:ವಿಶ್ವವನ್ನು ಹೊರಹೊಮ್ಮಿಸುವ ಸೃಷ್ಟಿಕಾರಕ ಸ್ಥಿತಿಯಲ್ಲಿ(ವಿಕ್ಷೇಪ ಶಕ್ತಿ) ಮಾಯೆಯು ತನ್ನ ಅಂಶಗಳಾದ ತ್ರಿಗುಣಗಳಿಂದ ಮೂಲಭೂತ ಭೌತ ಸಾಮಗ್ರಿಯಾಗಿ ನಿಮಿತ್ತ ಕಾರಣವಾಗಿರುವುದು.
ಅಧ್ಯಾತ್ಮಿಕವಾಗಿ ಪ್ರಕೃತಿಯನ್ನು ಈಶ್ವರನ ಶರೀರವೆಂದು ಭಾವಿಸಲಾಗುತ್ತದೆ.ಮಾಯೆಯನ್ನು ಸೃಷ್ಟಿನೆಲೆಯಲ್ಲಿ ಪ್ರಕೃತಿ ಎಂದು ತಿಳಿಯಬೇಕು.ಪರಮೇಶ್ವರನನ್ನು ಮಾಯಾಧೀಶನೆಂದು ತಿಳಿಯಿರಿ. ಸಮಗ್ರ ವಿಶ್ವವೂ ಅವನ ಶರೀರದ ಅಂಗಗಳಂತೆ ಅವನ ವಿಕಸನಾ ಪರಿಣಾಮ ಅಂಶಗಳಿಂದಲೇ ಆವೃತವಾಗಿದೆ.ಶಬ್ದನಿಷ್ಪತ್ತಿಯಂತೆ "ಪಕೃತಿ" ಎಂದರೆ ಎಲ್ಲವನ್ನೂ ಸಾಧಿಸುವುದು ಎಂದು ಅಥ೯. ಪ್ರ ಎಂದರೆ ಪ್ರಕಶ೯ ಅಥವಾ ಪೂಣ೯.ಕೃತಿ ಎಂದರೆ ಕಾಯ೯ಸಾಧಕ, ಸೃಷ್ಟ್ಯಾತ್ಮಕಮಾಡು ಎಂಬ ಅಥ೯ವನ್ನು ಕೊಡುತ್ತದೆ.
ಅವ್ಯಕ್ತ:ಅವಿಕಸಿತ ಅಥವಾ ಅಸ್ಪುಟೀಕೃತ ಸ್ಥಿತಿಯಲ್ಲಿನ ಪೃಕೃತಿ(ಅವ್ಯಾಕೃತ). ಅದು ಇನ್ನೂ ಶಕ್ತಿ ಸ್ಥಿತಿಯಲ್ಲಿದ್ದು ಭೌತವಸ್ತುವಾಗಿ ಇನ್ನೂ ಮಾಪಾ೯ಡಾಗದ ಸ್ಥಿತಿ.
ಅಜ್ಞಾನ (ಅವಿದ್ಯೆ):
ಮಾಯೆಯು ತನ್ನ ಆವರಣ ಶಕ್ತಿಯ ರೂಪದಲ್ಲಿ ಅಜ್ಞಾನ ಅಥವಾ ಅವಿದ್ಯೆಯಾಗಿ ಕಾಯ೯ ಮಾಡುತ್ತದೆ.ಅದರ ಪರಿಣಾಮವಾಗಿ ಅದು ಸತ್ಯವನ್ನು ಮುಚ್ಚಿಹಾಕಿತನ್ನ ವಿಕ್ಷೇಪ ಶಕ್ತಿಯ ಮೂಲಕ ಸತ್ಯವÀಲ್ಲದ ಯಾವುದಾದರೂ ಒಂದನ್ನು ಹೊರಹೊಮ್ಮಿಸಲು ಅವಕಾಶ ಕಲ್ಪಿಸಿ ಕೊಡುತ್ತದೆ.ಸತ್ಯದ ಅರಿವನ್ನು ಮಸುಕುಗೊಳಿಸುತ್ತದೆ.
ಅಧ್ಯಾಸ:(ಮಿಥ್ಯಾಜ್ಞಾನ, ಭ್ರಾಂತಿ) ಅಜ್ಞಾನದ ಪರಿಣಾಮವಾಗಿ ಯಾವಾಗ ನಾವು ಬ್ರಹ್ಮದ ಮೇಲೆ ವಿಕ್ಷೇಪ ಶಕ್ತಿಯ ಹೊರಹೊಮ್ಮಿಕೆಯ ನಮ್ಮದೇ ಆದ ಅನುಭವಾತ್ಮಕ ಭಾವನೆಗಳನ್ನು ಹೊರಿಸುತ್ತೇವೆಯೋ ಆಗ ಈ ಹೊರಿಸುವಿಕೆಯನ್ನು ಅಧ್ಯಾಸವೆಂದೂ ಅಧ್ಯಾರೋಪವೆಂದೂ ಹೇಳುತ್ತೇವೆ.ಎಂದರೆ ಅದಲ್ಲದ್ದನ್ನು ಅದು ಎಂದು ಭಾವಿಸುವುದು೯.
ಮಿಥ್ಯೆ: ಅಧ್ಯಾಸದ ಪರಿಣಾಮವಾಗಿ ಉಂಟಾದ ತಪ್ಪು ತಿಳುವಳಿಕೆಯೇ ಮಿಥ್ಯಾಜ್ಞಾನ.ಮಾಯೆಯು ಒಂದು ಶಕ್ತಿ.ಮಿಥ್ಯೆಯು ಮಾಯೆಯ ಪರಿಣಾಮವಾಗಿ ಅಜ್ಞಾನದಿಂದ ಉಂಟಾದ ಅಧ್ಯಾಸದಿಂದ ಉಂಟಾದ ತಪ್ಪು ತಿಳುವಳಿಕೆ.ಪಾರಮಾಥಿ೯ಕ ದೃಷ್ಟಿಯಿಂದ ನೋಡಿದಾಗ ಆತ್ಮ ಸಾಕ್ಷಾತ್ಕಾರವನ್ನು ಸಿದ್ಧಿಸಿಕೊಂಡವರಿಗೆ ಮಾಯೆಯು ನಶಿಸಿ ಹೋಗುತ್ತದೆ.ಪ್ರಾಪಂಚಿಕ ದೃಷ್ಟಿಯಿಂದ ನೋಡಿದಾಗ ಮಾಯೆಯು ಅವರ ಅನುಭವಕ್ಕೆ ಬರುತ್ತದೆ.ನಿರಂತರವಾಗಿ ಸಾಗುತ್ತಿರುವ ಈ ಎಲ್ಲಾ ಬದಲಾವಣೆಗಳ ಮಧ್ಯೆಯೂ ಒಂದು ಶಾಶ್ವತ ವಾಸ್ತವಿಕತೆಯ ಅನುಭವ ನಮಗೆ ಇರುತ್ತದೆ. ಅನುಭವಾತ್ಮಕವಾದ ದೃಷ್ಟಿಯ ಹಂತದಲ್ಲಿ
ಬ್ರಹ್ಮವೇ ದೇವರೆನಿಸುತ್ತದೆ. ಅದ್ವೈತದಲ್ಲಿ ಮಾಯೆಯ ಪರಿಕಲ್ಪನೆ ಬಹಳ ಮುಖ್ಯವಾದುದು.ಇದು ಅದ್ವೈತಸಿದ್ಧಾಂತಕ್ಕೆ ಬುನಾದಿ ಪ್ರಾಯವಾದ ಪರಿಕಲ್ಪನೆ.ಮಾಯಾ ಶಬ್ದವು ಉಪನಿಷತ್ತುಗಳಲ್ಲೇ ಬಳಸಲ್ಪಟ್ಟಿದೆ.ಅದು ಬ್ರಹ್ಮನ ಶಕ್ತಿ ಎಂಬ ಅಥ೯ದಲ್ಲಿ ಬಳಸಲ್ಪಟ್ಟಿದೆ.ಉದಾಹರಣೆಗೆ ಬೃಹದಾರಣ್ಯಕ ಉಪನಿಷತ್ತು ಋಗ್ವೇದದ ಮಂತ್ರವೊಂದನ್ನು ಹೀಗೆ ಉಲ್ಲೇಖಿಸುತ್ತದೆ."ಬ್ರಹ್ಮನು ಮಾಯಾಶಕ್ತಿಯ ಮೂಲಕ ಅನೇಕ ರೂಪಗಳನ್ನು ತಳೆದನು. ಆದ್ದರಿಂದ ಮಾಯಾಕಲ್ಪನೆಯು ಅದ್ವೈತ ಸಿದ್ಧಾಂತಕ್ಕೆ ಹೊಸದಲ್ಲ.ಅದ್ವೈತಿಗಳು ಅದನ್ನು ಬೌದ್ಧರಿಂದ ಪಡೆದಿಲ್ಲ.ಅದು ವೇದಗಳಷ್ಟೇ ಪ್ರಾಚೀನವಾದ ಪರಿಕಲ್ಪನೆ
ಅದ್ವೈತದ ಪ್ರಕಾÀರ ಬ್ರಹ್ಮವನ್ನು ದ್ವೈತರಹಿತವೆಂದು ನಾವು ಅಂಗೀಕರಿಸಿದಲ್ಲಿ ಈ ಬಹುತ್ವ ಪ್ರಪಂಚವನ್ನು ನಾವು ಮಿಥ್ಯೆಯೆಂದು ನಿರಾಕರಿಸಲೇ ಬೇಕಾಗುತ್ತದೆ. ಏಕೆಂದರೆ ದ್ವೈತಾದ್ವೈತಗಳು ಏಕಕಾಲದಲ್ಲಿ ಸತ್ಯವಾಗಿರಲು ಸಾಧ್ಯವೇ ಇಲ್ಲ. ಈ ಪ್ರಪಂಚದ ತೋರಿಕೆಯನ್ನು ಮಾಯೆಯ ಪರಿಕಲ್ಪನೆಯಿಲ್ಲದೆ ವಿವರಿಸಲು ಸಾಧ್ಯವೇ ಇಲ್ಲ.
ಸಾಮಾನ್ಯವಾಗಿ ಮಾಯೆ ಮತ್ತು ಅವಿದ್ಯೆ ಎಂದು ಅದ್ವೈತzಲ್ಲಿ ಸಾರುತ್ತಾರೆ.ಆದರೆ ಕೆಲವು ನಂತರದ ಚಿಂತಕರು ಇವೆರಡರಲ್ಲೂ ವ್ಯತ್ಯಾಸವನ್ನುÀ ಗುರುತಿಸುತ್ತಾರೆ.ಅವರ ಪ್ರಕಾರ ಮಾಯೆಯು ಈಶ್ವರನ ಉಪಾಧಿಯಾದರೆ ಅವಿದ್ಯೆಯು ಈಶ್ವರನ ಉಪಾಧಿ/ಮಾಯೆಯು ಶುದ್ಧ ಸತ್ವದಿಂದ ಕೂಡಿದ ಪ್ರಕೃತಿಯಾದರೆ ಅವಿದ್ಯೆಯಲ್ಲಿ ಸತ್ವಗುಣವಲ್ಲದೆ ರಜಸ್ತಮೋ ಗುಣಗಳು ಇರುತ್ತವೆ.ಮಾಯೆಗೆ ವಿಕ್ಷೇಪಶಕ್ತಿಯು ಮಾತ್ರ ಇರುತ್ತದೆ.ಆವರಣ ಶಕ್ತಿ ಇರುವುದಿಲ್ಲ.ಎಂದರೆ ಈಶ್ವರನು ಮಾಯೆಯ ಮೂಲಕ ಪ್ರಪಂಚವಾಗಿ ತೋಪ೯ಡಿಸಿಕೊಳ್ಳುತ್ತಾನೆ.ಹಾಗೆ ತೋರುವಾಗ ಅವನ ಜ್ಞಾನಕ್ಕೆ ಯಾವಧಕ್ಕೆಯೂ ಒದಗುವುದಿಲ್ಲ. ಆತ್ಮನು ತನ್ನ ಸ್ವರೂಪ ಜ್ಞಾನಕ್ಕೆ ಭಂಗ ತಂದುಕೊಳ್ಳದೇ ಪ್ರಪಂಚವಾಗಿ ತೋಪ೯ಡಿಸಿಕೊಳ್ಳುತ್ತಾನೆ.ಅವಿದ್ಯೆಯಲ್ಲಾದರೋ ಆವರಣ ಮತ್ತು ವಿಕ್ಷೇಪ ಶಕ್ತಿಗಳೆರಡೂ ಕಾಯ೯ಶೀಲವಾಗಿವೆ.ಎಂದರೆ ಇಲ್ಲಿ ಜೀವನು ಅದ್ವೈತವನ್ನು ತಿಳಿಯದಿರುವುದಷ್ಟೇ ಅಲ್ಲ ದ್ವೈತವನ್ನು ಕಾಣುತ್ತಾನೆ.ಆದರೆ ಈ ವ್ಯತ್ಯಾಸಗಳಿಗೆ ನಾವು ಅತಿಯಾದ ಪ್ರಾಧಾನ್ಯವನ್ನು ಕೊಡಬಾರದು. ಸಾಮಾನ್ಯವಾಗಿ ಮಾಯೆ ಮತ್ತು ಅವಿದ್ಯೆ ಎಂದು ಅದ್ವೈತದಲ್ಲಿ ಸಾರುತ್ತಾರೆ.ಆದರೆ ಕೆಲವು ನಂತರದ ಚಿಂತಕರು ಇವೆರಡರಲ್ಲೂ ವ್ಯತ್ಯಾಸವನ್ನು ಗುರುತಿಸುತ್ತಾರೆ.ಅವರ ಪ್ರಕಾರ ಮಾಯೆಯು ಈಶ್ವರನ ಉಪಾಧಿಯಾದರೆ ಅವಿದ್ಯೆಯು ಈಶ್ವರನ ಉಪಾಧಿ/ಮಾಯೆಯು ಶುದ್ಧ ಸತ್ವದಿಂದ ಕೂಡಿದ ಪ್ರಕೃತಿಯಾದರೆ ಅವಿದ್ಯೆಯಲ್ಲಿ ಸತ್ವಗುಣವಲ್ಲದೆ ರಜಸ್ತಮೋ ಗುಣಗಳು ಇರುತ್ತವೆ.ಮಾಯೆಗೆ ವಿಕ್ಷೇಪಶಕ್ತಿಯು ಮಾತ್ರ ಇರುತ್ತದೆ.ಆವರಣ ಶಕ್ತಿ ಇರುವುದಿಲ್ಲ.ಎಂದರೆ ಈಶ್ವರನು ಮಾಯೆಯ ಮೂಲಕ ಪ್ರಪಂಚವಾಗಿ ತೋಪ೯ಡಿಸಿಕೊಳ್ಳುತ್ತಾನೆ.
ವಿದ್ಯಾರಣ್ಯರ ಪ್ರಕಾರ ಮಾಯೆ ಮತ್ತು ಅವಿದ್ಯೆಗಳೆರಡೂ ಹೆಚ್ಚು ಕಡಿಮೆ ಒಂದೇ.ಮಾಯೆ ಅಥವಾ ಅವಿದ್ಯೆಯು ಸತ್ಯವನ್ನು ಮರೆಮಾಚುವುದಷ್ಟೇ ಅಲ್ಲ, ಅಸತ್ಯÀವನ್ನು ತೋರಿಸುತ್ತದೆ. ಅದು ಅನಿವ೯ಚನೀಯ. ಎಂದರೆ ಅದನ್ನು ಸತ್ ಎಂದಾಗಲೀ ಅಸತ್ ಎಂದಾಗಲೀ ವಿವರಿಸಲು ಸಾಧ್ಯವಿಲ್ಲ.ಆದರೆ ಅತ್ಯಂತಿಕವಾಗಿ ಮಾಯೆಯು ಅಸತ್ಯವೇ. ಯಾವುದು ಇಲ್ಲವೋ ಆದರೆ ಇದ್ದಂತೆ ತೋರುತ್ತದೆಯೋ ಅದೇ ಮಾಯೆ. ಮಾಯೆಯ ಈ ಅಸತ್ಯತೆಯನ್ನು ವಿದ್ಯಾರಣ್ಯರು ಬಹಳ ಸ್ವಾರಸ್ಯವಾಗಿ ಕೆಳಕಂಡಂತೆ ವಿವರಿಸುತ್ತಾರೆ."ಒಂದಾನೊಂದು ಕಡೆ ಮೂವರು ರಾಜರಿದ್ದರು. ಅವರಲ್ಲಿ ಇಬ್ಬರು ಹುಟ್ಟೇ ಇರಲಿಲ್ಲ.ಮೂರನೆಯವನು ಗಭ೯ದಲ್ಲೂ ಇರಲಿಲ್ಲ. ಸದ್ಗುಣಗಳಿಂದ ಕೂಡಿದವರಾಗಿ ಅವರು ಅಸ್ತಿತ್ವದಲ್ಲೇ ಇರದ ಒಂದು ಊರಿನಲ್ಲಿ ವಾಸಿಸುತ್ತಿದ್ದರು."
ಮಾಯೆ ಎಂಬುದು ಜ್ಞಾನಾಭಾವವಲ್ಲ.ಎಂದರೆ ನಿಷೇಧಾತ್ಮಕ ಪರಿಕಲ್ಪನೆಯಲ್ಲ.ಅದೊಂದು ಭಾವಾತ್ಮಕ ಪರಿಕಲ್ಪನೆ.ಏಕೆಂದರೆ ಪ್ರತಿಯೊಬ್ಬ ವ್ಯಕ್ತಿಗೂ ಒಂದಲ್ಲ ಒಂದು ಹಂತದಲ್ಲಿ ತಾನು ಅಜ್ಞಾನಿ ಎಂಬ ಭಾವವಿರುತ್ತದೆ. ಇದೊಂದು ಅನುಭವವಾದ್ದರಿಂದ ಇದಕ್ಕೆ ಒಂದು ಭಾವಾತ್ಮಕ ಲಕ್ಷಣವಿರಬೇಕು. ಯಾವುದು ಭಾವಾತ್ಮಕವಾಗಿದೆಯೋ ಅಥವಾ ಅಸ್ತಿತ್ವದಲ್ಲಿದೆಯೋ ಅದು ಮಾತ್ರ ಅನುಭವ ಗ್ರಾಹ್ಯ. ನಿಷೇಧಾತ್ಮಕವು ಅನುಭವ ಗ್ರಾಹ್ಯವಲ್ಲ. ಮನಸ್ಸು ಮತ್ತು ಇಂದ್ರಿಯಗಳು ನಿಷೇಧಾತ್ಮಕವಾದುದನ್ನು ಗ್ರಹಿಸಲಾರದು.ಆದ್ದರಿಂದ ಮಾಯಾ ಅಥವಾ ಅವಿದ್ಯೆಯು ಜ್ಞಾನದ ಅಭಾವವನ್ನು ಸೂಚಿಸುವುದಿಲ್ಲ. ಅದು ಭಾವರೂಪವಾದುದು.
ಈ ಅಜ್ಞಾನದ ಆಶ್ರಯವೇನು? ಎಂಬುದು ಮತ್ತೊಂದು ಪ್ರಶ್ನೆ.ಎಂದರೆ ಅಜ್ಞಾನವು ಯಾವ ನೆಲೆಯಿಂದ ಕಾಯ೯ಶೀಲವಾಗುತ್ತದೆ ಎಂಬುದು ಪ್ರಶ್ನೆ.ಈ ಪ್ರಶ್ನೆಗೆ ನಂತರದ ಅದ್ವೈತದಲ್ಲಿ ಎರಡು ಉತ್ತರಗಳು ಇವೆ. ವಾಚಸ್ಪತಿ ಮಿಶ್ರರ ಪ್ರಕಾರ ಜೀವವೇ ಅವಿದ್ಯೆಯ ಆಶ್ರಯ.ಈ ವಿಷಯದಲ್ಲಿ ಅವರು ಮಂಡನಮಿಶ್ರರನ್ನು ಹೋಲುತ್ತಾರೆ.
ಜ್ಞಾನದಿಂದ ಅಜ್ಞಾನವು ನಾಶವಾಗುತ್ತದೆ.ಅಜ್ಞಾನವು ಬ್ರಹ್ಮದಲ್ಲಿ ಇದ್ದಿದ್ದರೆ ಅದನ್ನು ಜೀವಾತ್ಮನ ಜ್ಞಾನವು ನಾಶಮಾಡಲು ಆಗುತ್ತಿರಲಿಲ್ಲ.ಒಬ್ಬನ ಅಜ್ಞಾನವನ್ನು ಇನ್ನೊಬ್ಬನ ಜ್ಞಾನವು ನಾಶಮಾಡಲು ಸಾಧ್ಯವಿಲ್ಲ. ಜ್ಞಾನವನ್ನು ಪಡೆದುಕೊಳ್ಳುವ ವ್ಯಕ್ತಿಗೆ ಅಜ್ಞಾನವು ಸೇರದೆ ಈ ಅಜ್ಞಾನªನ್ನು ನಾಶಮಾಡಲು ಸಾಧ್ಯವಿಲ್ಲ.ಆದ್ದರಿಂದ ಜೀವವೇ ಅವಿದ್ಯೆ ಅಥವಾ ಅಜ್ಞಾನದ ಆಶ್ರಯವಾಗಿದೆ.ತತ್ಪರಿಣಾಮವಾಗಿ ವಾಚಸ್ಪತಿಗಳ ಪ್ರಕಾರ ಅನೇಕ ಅವಿದ್ಯೆಗಳನ್ನು ಅಂಗೀಕರಿಸಬೇಕಾಗುತ್ತದೆ.
ವಿವರಣ ಶಾಖೆಯಪ್ರಕಾರ ಅವಿದ್ಯೆಯ ನೆಲೆ ಜೀವವಲ್ಲ.ಬ್ರಹ್ಮವೊಂದೇ ಅಂತಿಮ ಸತ್ಯವಾದ್ದರಿಂದ ಬ್ರಹ್ಮವೇ ಅವಿದ್ಯೆಯ ನೆಲೆ.ಈ ವಾದವನ್ನು ಸುರೇಶ್ವರರು ಅಂಗೀಕರಿಸುತ್ತಾರೆ.ಆದರೆ ಇಲ್ಲಿ ಬ್ರಹ್ಮವು ಅವಿದ್ಯೆಯಿಂದ ಬದ್ಧವಾದಂತೆ ತೋರುವುದೇ ಹೊರತು ನಿಜವಾಗಿಯೂ ಬದ್ಧವಾಗಿರುವುದಿಲ್ಲ.ಇದೇನೇ ಇರಲಿ ನಾವು ಮಾಯಾವಾದವನ್ನು ಮೂರು ದೃಷ್ಟಿಕೋನಗಳಿಂದ ನೋಡಬಹುದು. ಜನ ಸಾಮಾನ್ಯರಿಗೆ ಈ ಪ್ರಪಂಚವು ನಿಜ. ಪ್ರಪಂಚವು ನಿಜವೋ ಅಥವಾ ಮಾಯೆಯೋ ಎಂದು ಅವರು ತಲೆಕೆಡಿಸಿಕೊಳ್ಳುವುದಿಲ್ಲ.ಆದ್ದರಿಂದ ಅವರಿಗೆ ಮಾಯೆ ಒಂದು ಸಮಸ್ಯೆಯೇ ಅಲ್ಲ.ಇನ್ನು ಶಾಸ್ತ್ರವನ್ನು ಓದಿದವನಿಗೆ ಮಾಯೆಯು ವಸ್ತುತಃ ಇಲ್ಲವೇ ಇಲ್ಲ.ಅದು ಒಂದು ಕಪೋಲ ಕಲ್ಪಿತವಷ್ಟೆ.ಬೌದ್ಧಿಕರಿಗೆ ಮಾತ್ರ ಮಾಯೆಯು ಒಂದು ಸಮಸ್ಯೆ.
ಇಲ್ಲಿ ವ್ಯಕ್ತಿಯು ಮಾಯೆಯ ಸಮಸ್ಯೆಯನ್ನು ಬುದ್ಧಿಯ ಮೂಲP ಪರರಿಹರಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಅವನಿಗೆ ಅದನ್ನು ನಿಜವೆಂದು ಒಪ್ಪಿಕೊಳ್ಳುವುದೂ ಕಷ್ಟ.ಸುಳ್ಳೆಂದು ಒಪ್ಪಿ ಕೊಳ್ಳುವುದೂ ಕಷ್ಟ. ಆದ್ದರಿಂದ ಅದನ್ನು ಅವನು ಅನಿವ೯ಚನೀಯ ಮತ್ತು ಸದಸದ್ ವಿಲಕ್ಷಣ ಎಂದು ಕರೆಯುತ್ತಾನೆ.ಮಾಯೆಯ ಆಶ್ರಯವೇನೇ ಇರಲಿ ಒಂದು ಅಂಶವಂತೂ ನಿಜ. ಅದು ಸತ್ಯವನ್ನು ಪೂಣ೯ವಾಗಿ ಮರೆಮಾಚಲಾರದು. ಹಾಗೆ ಮರೆಮಾಚುವಂತಿದ್ದರೆ ಗೋಚರವಾಗುತ್ತಲೇ ಇರಲಿಲ್ಲ.ಜಡವಾದ್ದರಿಂದ ಮಾಯೆಗೆ ತನ್ನನ್ನು ತಾನು ಪ್ರಕಟಿಸಿಕೊಳ್ಳಲು ಸಾಧ್ಯವಿಲ್ಲ.ಅದನ್ನು ನಾವು ತಿಳಿದಿದ್ದಲ್ಲಿ ಅದಕ್ಕೆ ಕಾರಣ ಬಹ್ಮನ ಬೆಳಕು ಮಾತ್ರ.
ಮೋಡವು ಸೂಯ೯ನನ್ನು ಮರೆಮಾಚಲು ಯತ್ನಿಸುತ್ತದೆ.ಆದರೆತನ್ನ ಈ ಯತ್ನದಲ್ಲಿ ಅದು ಸಫಲವಾಗುವುದೇ? ಇದಕ್ಕೆ ಇಲ್ಲ ಎಂಬುದೇ ಉತ್ತರ.ಬದಲಾಗಿ ಮೋಡವೇ ತನ್ನ ಅಸ್ತಿತ್ವ ಮತ್ತು ಅರಿವಿಗೆ ಸೂಯ೯ನನ್ನು ಅವಲಂಬಿಸುತ್ತದೆ.ಸೂಯ೯ನ ಬೆಳಕಿರುವುದರಿಂದಲೇ ಮೋಡದ ಅಸ್ತಿತ್ವವು ನಮಗೆ ತಿಳಿಯುತ್ತದೆ.ಮಾಯೆಯು ಬ್ರಹ್ಮವನ್ನು ಭಾಗಶಃ ಮರೆಮಾಡುತ್ತದೆಯೇ ಹೊರತು ಪೂಣ೯ವಾಗಿ ಅಲ್ಲ.ಈ ಮರೆಮಾಚುವಿಕೆಯೂ ಕೂಡ ತೋರಿಕೆಗೆ ಮಾತ್ರ.
ಲಕ್ಷ್ಯಾಥ೯:
ಈ "ತತ್ವಮಸಿ"( ತತ್ ತ್ವಂ ಅಸಿ) ಅದು ನೀನಾಗಿರುವೆ ಎಂಬ ವಾಕ್ಯವು ಮೂರು ವಿಧದ ಸಂಬಂಧಗಳ ಮೂಲಕ ಅಖಂಡವಾದ ಅಥ೯ವನ್ನು ತಿಳಿಸಿಕೊಡುತ್ತದೆ.ವಿವಿಧ ಪದಗಳು ಸಂಬಂಧವನ್ನು ಹೊಂದಿ ಏಕಾಥ೯ವನ್ನು ಕೊಡುವಂತೆ ಪ್ರಯೋಗಿಸಲ್ಪಟ್ಟಾಗ ವಾಕ್ಯವೆನಿಸುತ್ತದೆ.ಪದಗಳ ಸಂಬಂಧವನ್ನು ಸಂಸಗ೯ವೆಂದು ಕರೆಯುತ್ತಾರೆ.ವಾಕ್ಯವು ಒಟ್ಟಿನಲ್ಲಿ ಏಕಾಥ೯ವನ್ನು ಸೂಚಿಸುತ್ತಿದ್ದಾಗ್ಯೂ ಪದಗಳು ತಮ್ಮಪ್ರತ್ಯೇಕಾಥ೯ವನ್ನು ಸೂಚಿಸುತ್ತಿರಬಹುದು. ಈ ವಿಧದ ವಾಕ್ಯಾಥ೯ವನ್ನು ಭೇದ ಸಂಸಗ೯ ಎಂದು ಕರೆಯುತ್ತಾರೆ.
ಉದಾಹರಣೆಗೆ "ದಂಡೇನ ಗಾಂ ನಯ" ಕೋಲಿನಿಂದ ಹೊಡೆದು ಹಸುವನ್ನು ಕರೆದುಕೊಂಡು ಹೋಗು. ಈ ವಾಕ್ಯದಲ್ಲಿ ಮೂರು ಪದಗಳು ಒಂದೇ ಅಥ೯ವನ್ನು ಸೂಚಿಸುತ್ತಿದ್ದರೂ ಜೊತೆ ಜೊತೆಯಲ್ಲಿಯೇ ಕೋಲಿನಿಂದ ಹಸುವನ್ನು ಹೊಡೆಯುವ ಮತ್ತು ಕರೆದುಕೊಂಡು ಹೋಗುವ ಕ್ರಿಯೆಯ ಅಥ೯ಗಳೂ ಭಾಸವಾಗುತ್ತಲೇ ಇರುತ್ತವೆ.ಆದುದರಿಂದಲೇ ದಂಡೇನ ಎಂಬಲ್ಲಿ ತೃತೀಯಾ ವಿಭಕ್ತಿಯನ್ನೂ ಗಾಂ ಎಂಬಲ್ಲಿ ದ್ವಿತೀಯಾ ವಿಭಕ್ತಿ ಯನ್ನೂ ಪ್ರಯೋಗಿಸಿದೆ.
ಈಗ ಮತ್ತೊಂದು ವಾಕ್ಯ. ‘ಏತತ್ ನೀಲಂ ಉತ್ಪಲಂ’ ಇದು ನೀಲಿಯ ಕಮಲ.ಇಲ್ಲಿ ನೀಲಿ ಎಂಬ ಪದವು ಬಿಳಿ ಕೆಂಪು ಮೊದಲಾದ ಬಣ್ಣಗಳಿಗಿಂತ ಭಿನ್ನವಾದ ನೀಲಿಯ ಬಣ್ಣವನ್ನು ಸೂಚಿಸುತ್ತಿದ್ದರೂ ಇಲ್ಲಿ ಅವೆರಡೂ ಸೇರಿ ನೀಲಕಮಲವೆಂದೇ ವಸ್ತುವನ್ನು ನಿದೇ೯ಶಿಸುತ್ತದೆ.ಆದುದರಿಂದ ಇಲ್ಲಿ ವಾಕ್ಯಾಥ೯ವು ಅಸಂಸೃಷ್ಟಾಥ೯ ಅಖಂಡಾಥ೯ ಅಥವಾ ಅಭೇದ ಸಂಸಗ೯.
ಇದನ್ನು ವ್ಯಾಕರಣವು ಸಮಾನ ವಿಭಕ್ತಿಮೂಲಕ ತೋರಿಸಿದೆ.
ತತ್ ತ್ವಮ್ ಅಸಿ ಎಂಬ ವಾಕ್ಯವು ಈ ಎರಡನೆಯ ಗುಂಪಿಗೆ ಸೇರಿದ್ದು. ಮೂರು ವಿಧದ ಸಂಬಂಧಗಳು ಯಾವುವೆಂದರೆ -ಎರಡು ಪದಗಳಿಗಿರುವ ಸಾಮಾನಾಧಿಕರಣ್ಯ,ಪದ-ಅಥ೯ಗಳ ನಡುವೆ ಇರುವ ವಿಶೇಷಣ-ವಿಶೇಷ್ಯ ಭಾವ ಮತ್ತು ಪ್ರತ್ಯಗಾತ್ಮದ ಮತ್ತು (ತತ್ವಮಸಿ ವಾಕ್ಯದ)ಲಕ್ಷಣಾಥ೯ದ ಮಧ್ಯೆ ಇರುವ ಲಕ್ಷ್ಯ-ಲಕ್ಷಣ ಭಾವ10 .
ಪದಾಥ೯ ಪ್ರತ್ಯಗಾತ್ಮರ ನಡುವೆ ಸಾಮಾನಾಧಿಕರಣ್ಯ, ವಿಶೇಷಣ ವಿಶೇಷ್ಯ ಭಾವವವಿರುತ್ತದೆ ಮತ್ತು ಲಕ್ಷ್ಯ_ಲಕ್ಷಣ ಸಂಬಂಧ ಇರುತ್ತದೆ.ಮೊದಲನೆಯದಾದ ಸಾಮಾನಾಧಿಕರಣ್ಯ ಸಂಬಂಧವು ಹೇಗಿರುತ್ತದೆಂದರೆ "ಅವನೇ ಈ ದೇವದತ್ತನು " ಎಂಬ ವಾಕ್ಯದಲ್ಲಿ ಆ ಕಾಲವೆಂಬ ವಿಶೇಷಣವನ್ನು ಹೊಂದಿರುವ ದೇವದತ್ತನನ್ನು ಹೇಳುವ ಈ ಅಥವಾ ಇವನು ಎಂಬ ಶಬ್ದಕ್ಕೂ ಒಂದೇ ವ್ಯಕ್ತಿಯಲ್ಲಿ ತಾತ್ಪಯ೯ವಿರುವ ಸಂಬಂಧ. ಹೀಗಿರಲಾಗಿ ತತ್ (ಅದು) ತ್ವಂ (ನೀನು) ಅಸಿ(ಆಗಿರುವೆ)ಎಂಬ ವಾಕ್ಯದಲ್ಲಿ ಕೂಡ ಪರೋಕ್ಷತ್ವವೇ ಮೊದಲಾದ ವಿಶೇಷಣಗಳುಳ್ಳ 'ತ್ವಂ' ಪದಕ್ಕೂ ಒಂದೇ ಚ್ಯತನ್ಯ ವಸ್ತುವಿನಲ್ಲಿ ತಾತ್ಪಯ೯ದಿಂದ ಸಂಬಂಧವಿರುತ್ತದೆ.
ನಿನ್ನೆ ಪೇಟೆಯಲ್ಲಿ ಕಂಡಿದ್ದ ದೇವದತ್ತನು ಇಂದು ನಮ್ಮ ಮನೆಯ ಮುಂದೆ ಬಂದು ನಿಂತಾಗ "ಇವನೇ ಆ ದೇವದತ್ತನು" ಎಂದು ಗುರುತಿಸುತ್ತೇವೆ.ಇವನು ಅವನು ಎಂಬ ಶಬ್ದವು ಬೇರೊಂದು ಕಾಲಕ್ಕೆ ಬೇರೊಂದು ಸ್ಥಳಕ್ಕೆ ಸಂಬಂಧಿಸಿದ್ದಾದರೂ ವ್ಯಕ್ತಿ ಮಾತ್ರ ಒಬ್ಬನೇ .ಇದನ್ನು ಸೂಚಿಸುವುದಕ್ಕಾಗಿಯೇ ಸಃ ಅವನು ಮತ್ತು ಅಯಂ ಇವನು ಎಂಬ ಲಾಗಿದೆ.ಎರಡೂ ಪದಗಳನ್ನು ಒಂದೇ ವಿಭಕ್ತಿಯಲ್ಲಿ (ಇಲ್ಲಿ ಪ್ರಥಮಾ ವಿಭಕ್ತಿಯಲ್ಲಿ )ಪ್ರಯೋಗಿಸಲಾಗಿದೆ.ಆದ್ದರಿಂದಲೇ ಅವೆರಡಕ್ಕೂ ಸಮಾನವಾದ ಅಧಿಕರಣ ಪದವೆಂದು ತಿಳಿದು ಬರುತ್ತದೆ.ಉದ್ಧಾಲಕ ಅರುಣಿಯು ತನ್ನ ಮಗನಾದ ಶ್ವೇತಕೇತುವಿಗೆ ಬ್ರಹ್ಮವಿದ್ಯೆಯನ್ನು ಉಪದೇಶಿಸುವಾಗ ಆ ಬ್ರಹ್ಮವನ್ನು ಸದ್ ವಸ್ತುವೆಂದು ಕರೆದು "ತತ್ ತ್ವಂ ಅಸಿ" ಎಂದು ಘೋಷಿಸುತ್ತಾನೆ.
ಇಲ್ಲಿ ತತ್ ಎನ್ನುವ ಶಬ್ದವು ನಮಗೆ ಗೋಚರವಾಗದ (ಪರೋಕ್ಷವಾದ)ಕೇವಲ ಅನುಮಾನ, ಸ್ಮøತಿ ಇವುಗಳಿಂದ ತಿಳಿದುಬರುವ ಸವ೯ಜ್ಞತ್ವ,ಸವ೯ವ್ಯಾಪ್ತಿತ್ವ, ನಿಮಾತೃತ್ವ ಮೊದಲಾದ ಗುಣಗಳುಳ್ಳ ಬ್ರಹ್ಮವನ್ನು ಸೂಚಿಸುತ್ತದೆ.'ತ್ವಮ್' ನೀನು ಎಂಬ ಪದವು ನೇರವಾಗಿ ಅನುಭವಕ್ಕೆ ಬರುತ್ತಿರುವ (ಅಪರೋಕ್ಷವಾದ)ಆದರೆ ಅಲ್ಪಶಕ್ತಿತ್ವ ಮೊದಲಾದ ಗುಣಗಳನ್ನುಳ್ಳ ಜೀವನನ್ನು ಸೂಚಿಸುತ್ತದೆ.ಎರಡೂ ಶಬ್ದಗಳು ಸಮಾನ ವಿಭಕ್ತಿಯನ್ನು ಹೊಂದಿರುವುದರಿಂದ ಒಂದೇ ವ್ಯಕ್ತಿಯಲ್ಲಿ ತಾತ್ಪಯ೯ವನ್ನು ಹೊಂದಿರಬೇಕಷ್ಟೇ. ಎರಡರಲ್ಲೂ ಉಪಾಧಿಗಳನ್ನು ಬಿಟ್ಟು ಚೈತನ್ಯಾಂಶವನ್ನು ಗ್ರಹಿಸಿದರೆ ಮಾತ್ರ ಸಾಧ್ಯ 11.
ವಿಶೇಷಣ -ವಿಶೇಷ್ಯ ಭಾವ ಸಂಬಂಧವು ಹೇಗೆಂದರೆ ಅದೇ ವಾಕ್ಯದಲ್ಲಿ 'ಅವನು' ಎಂಬ ಶಬ್ದದ ಅಥ೯ವಾದ 'ಆ' ಕಾಲಕ್ಕೆ ಸಂಬಂಧಿಸಿದೆ.ದೇವದತ್ತನಿಗೂ ಮತ್ತು ಇವನು (ಅಥವಾ ಈ) ಎಂಬ ಶಬ್ದದ ಅಥ೯ವಾದ 'ಈ' ಕಾಲಕ್ಕೆ ಸಂಬಂಧಿಸಿದ ದೇವದತ್ತನಿಗೂ ಪರಸ್ಪರ ಬೋಧವನ್ನೇ ನಿರಾಕರಿಸುವುದರ ಮೂಲಕ ಒದಗುವ ವಿಶೇಷಣ_ವಿಶೇಷ್ಯ ಭಾವ.ಹಾಗೆಯೇ ಈ ವಾಕ್ಯದಲ್ಲಿ ಕೂಡ ತತ್ ಎಂಬ ಪದದ ಅಥ೯ವಾದ ಪರೋಕ್ಷತ್ವವೇ ಮೊದಲಾದ ವಿಶೇಷಣಗಳನ್ನುಳ್ಳ ಚೈತನ್ಯಕ್ಕೂ ಪರಸ್ಪರ ಭೇದವನ್ನು ನಿರಾಕರಿಸುವುದರ ಮೂಲಕ ಒದಗುವ ವಿಶೇಷಣ_ವಿಶೇಷ್ಯ ಭಾವ.
ಲಕ್ಷ್ಯ_ಲಕ್ಷಣ ಸಂಬಂಧವು ಹೇಗೆಂದರೆ ಅಲ್ಲಿಯೇ "ಅವನು'ಮತ್ತು 'ಇವನು' ಎಂಬ ಶಬ್ದಗಳಲ್ಲಿರುವ ಅಥವಾ ಅವೆರಡರ ಅಥ೯ಗಳಲ್ಲಿರುವ ಪರಸ್ಪರ ವಿರುದ್ಧವಾದ 'ಆ' ಕಾಲ (ಮತ್ತು) 'ಈ' ಕಾಲ ಎಂಬ ವಿಶೇಷ ಭಾವವನ್ನು ಬಿಡುವುದರ ಮೂಲಕ ವಿರುದ್ಧವಲ್ಲದ ದೇವದತ್ತನೊಡನೆ (ಉಂಟಾಗುವ ಸಂಬಂಧವು)ಲಕ್ಷ್ಯ _ಲಕ್ಷಣ ಸಂಬಂಧ.ಹಾಗೆಯೇ ಈ ವಾಕ್ಯದಲ್ಲಿ ಕೂಡ 'ಅದು' ಮತ್ತು'ನೀನು'ಎಂಬ ಶಬ್ದಗಳಲ್ಲಿರುವ ಅಥವಾ ಅವೆರಡರ ಅಥ೯ಗಳಲ್ಲಿರುವ (ಪರಸ್ಪರ) ವಿರುದ್ಧವಾದ ಪರೋಕ್ಷತ್ವ ಅಪರೋಕ್ಷತ್ವ ಮೊದಲಾದ ವಿಶೇಷ ಭಾವವನ್ನು ಬಿಡುವುದರ ಮೂಲಕ ವಿರುದ್ಧವಲ್ಲದ ಚೈತನ್ಯದೊಡನೆ (ಉಂಟಾಗುವ ಸಂಬಂಧವು)ಲಕ್ಷ್ಯ_ ಲಕ್ಷಣ ಸಂಬಂಧ.
ಪದಗಳಿಗೆ ವಾಚ್ಯಾಥ೯, ಲಕ್ಷ್ಯಾಥ೯, ಮತ್ತು ವ್ಯಂಗ್ಯಾಥ೯ ಎಂಬ ಮೂರು ವಿದಧ ಅಥ೯ಗಳಿರುತ್ತವೆ.ಇಲ್ಲಿ ಲಕ್ಷ್ಯಾಥ೯ವನ್ನು ವಿವರಿಸಲಾಗಿದೆ.ಲಕ್ಷ್ಯಾಥ೯ವನ್ನು ಸೂಚಿಸುವ ಲಕ್ಷಣಿಯು 1)ಕೇವಲ ಲಕ್ಷಣ 2) ಲಕ್ಷಿತ ಲಕ್ಷಣ ಎಂದು ಎರಡು ವಿಧ."ಗಂಗಾಯಾಂ ಘೋಷಃ" ಗಂಗೆಯಲ್ಲಿ ಗೊಲ್ಲರ ಹಳ್ಳಿಯಿದೆ ಎಂಬಲ್ಲಿ ಗಂಗಾ ಪ್ರವಾಹದಲ್ಲಿ ಗೊಲ್ಲರ ಹಳ್ಳಿಯಿರಲು ಸಾಧ್ಯವಿಲ್ಲದ್ದರಿಂದ ಆ ಪ್ರವಾಹಕ್ಕೆ ನೇರವಾಗಿ ಸಂಬಂಧವನ್ನು ಹೊಂದಿರುª ತೀರದಲ್ಲಿ ಇದೆಯೆಂದು ಅಥ೯ಮಾಡಬೇಕು.ಇದು ಕೇವಲ ಲಕ್ಷಣೆಯಿಂದ ಬರುವ ಅಥ೯.
ದ್ವಿರೇಫ ಎಂಬ ಪದಕ್ಕೆ ಎರಡು ರಕಾರಗಳುಳ್ಳ ಪದ ಎಂಬುದು ಸಾಕ್ಷಾತ್ತಾದ ಅಥ೯. ಭ್ರಮರ, ರಾತ್ರಿ, ರಂದ್ರ ಇತ್ಯಾದಿ.ಆದರೆ ಅದು ರೂಢಿಯಲ್ಲಿ ದುಂಬಿಯನ್ನೇ ಸೂಚಿಸುತ್ತದೆ.ಭ್ರಮರ ಶಬ್ದವು ದುಂಬಿಯನ್ನು, ದ್ವಿರೇಫ ಶಬ್ದವು ಭ್ರಮರ ಪದವನ್ನುಸೂಚಿಸುವುದರಿಂದ ಲಕ್ಷಿತ_ಲಕ್ಷಣೆಯಿಂದ ದ್ವಿರೇಫವೆಂದರೆ ದುಂಬಿಯೆಂದು ಅಥ೯ವಾಗುತ್ತದೆ. ಲಕ್ಷಿತ ಲಕ್ಷಣೆಯಲ್ಲಿ ಲಕ್ಷ್ಯಾಥ೯ವನ್ನು ಸೂಚಿಸುವ ಲಕ್ಷಣೆಯನ್ನು ಮತ್ತೊಂದು ಲಕ್ಷಣವು ಸೂಚಿಸುತ್ತದೆ. À
ಇನ್ನೊಂದು ಪ್ರಕಾರದಿಂದ ಲಕ್ಷಣೆಯು ಮೂರು ವಿಧ.1)ಜಹಲ್ಲಕ್ಷಣೆ 2)ಅಜಹಲ್ಲಕ್ಷಣೆ 3) ಜಹದ್_ಅಜಹದ್ ಲಕ್ಷಣೆ 12. ವಾಚ್ಯಾಥ೯ವನ್ನು ಪೂರಾ ಬಿಟ್ಟು ಲಕ್ಷ್ಯಾಥ೯ವನ್ನು ಮಾತ್ರ ಗ್ರಹಿಸಿದಾಗ ಅದು 'ಜಹಲ್ಲಕ್ಷಣೆ ಎನಿಸುತ್ತದೆ.(ಜಹತ್=ಬಿಡುವುದು)'ಗಂಗೆಯಲ್ಲಿ ಗೊಲ್ಲರ0ಹಳ್ಳಿಯಿದೆ' ಎಂಬ ವಾಕ್ಯದಲ್ಲಿ ಗಂಗೆಯಲ್ಲಿ ಎಂಬ ವಾಚ್ಯಾಥ೯ವನ್ನು ಪೂತಿ೯ಯಾಗಿ ಕೈಬಿಟ್ಟು 'ಗಂಗೆಯ ದಡದ ಮೇಲೆ'ಎಂಬ ಅಥ೯ವನ್ನು ಗ್ರಹಿಸಿದೆ.'ಶೋಣಃ ಧಾವತಿ' (ಕೆಂಪು ಬಣ್ಣ ಓಡುತ್ತಿದೆ) ಎಂಬ ವಾಕ್ಯದಲ್ಲಿ ಕೆಂಪು ಬಣ್ಣವು ಓಡಲು ಸಾಧ್ಯ ವಿಲ್ಲದ್ದರಿಂದ ಕೆಂಪು ಬಣ್ಣ ಹೊಂದಿರುವ ಕುದುರೆಯಂಥ ಪ್ರಾಣಿ ಓಡುತ್ತದೆ ಎಂದು ಅಥ೯ ಮಾಡಬೇಕು.ಇಲ್ಲಿ ಮೂಲವಾಕ್ಯದಲ್ಲಿರುವ 'ಕೆಂಪು' ಎನ್ನುವುದನ್ನು ಬಿಡದೆ (ಅಜಹತ್ =ಬಿಡದೆ )ಅದರ ಅಥ೯ವನ್ನು ವಿಸ್ತರಿಸಿದೆ.ಆದ್ದರಿಂದ ಈ ಲಕ್ಷಣೆಯನ್ನು ಅಜಹಲ್ಲಕ್ಷಣವೆಂದು ಕರೆದಿದೆ. ‘ಸೋಯಂ ದೇವದತ್ತಃ' (ಅವನೇ ಈ ದೇವದತ್ತನು) ಎಂಬ ವಾಕ್ಯದಲ್ಲಿ ಕಾಲ ದೇಶಗಳು ಬೇರೆಯಾದರೂ ವ್ಯಕ್ತಿಯೊಬ್ಬನೇ ಆದುದರಿಂದ 'ಆ' ಮತ್ತು 'ಈ' ಎಂಬುದಕ್ಕೆ ಸಂಬಂಧಿಸಿದೆ.ದೇಶ ಕಾಲಗಳನ್ನು ಬಿಟ್ಟು (ಜಹತ್) ದೇವದತ್ತ ಎಂಬ ವ್ಯಕ್ತಿಯ ಅಂಶವನ್ನು ಬಿಡದೆ (ಅಜಹತ್)ಅಥ೯ವನ್ನು ಗ್ರಹಿಸುತ್ತದೆ.ಇದು ಜಹತ್ ಅಜಹತ್ ಲಕ್ಷಣ.
"ತತ್ವಮಸಿ" ಎಂಬ ವಾಕ್ಯವನ್ನು ಈ ಲಕ್ಷಣಿಗನುಸಾರವಾಗಿ ವ್ಯಾಖ್ಯಾನ ಮಾಡಬೇಕು.
ಭಾಗಲಕ್ಷಣ:ವಾಚ್ಯಾಥ೯ದಲ್ಲಿ ಒಂದು ಭಾಗವನ್ನು ಪರಿಗ್ರಹಿಸಿ ಮತ್ತೊಂದನ್ನು ಬಿಡುವುದರಿಂದ ಇದನ್ನು ಭಾಗಲಕ್ಷಣ ಎಂದು ಕರೆದಿದೆ.ಇದನ್ನು ಭಾಗ್ಯತಾಲಕ್ಷಣವೆಂದೂ ಹೇಳುವುದುಂಟು.ಈ ವಾಕ್ಯದಲ್ಲಿ 'ನೀಲಿಯ ಕಮಲ' ಎಂಬ ವಾಕ್ಯದಂತೆ ವಾಕ್ಯಾಥ೯ವು ಹೊಂದುವುದಿಲ್ಲ.ಅಲ್ಲಾದರೂ 'ನೀಲಿ'ಎಂಬ ಪದದ ಅಥ೯ವಾದ ನೀಲಿ ಎಂಬ ಗುಣಕ್ಕೂ ಕಮಲ ಎಂಬ ಪದದ ಅಥ೯ವಾದ ಕಮಲ ಎಂಬ ವಸ್ತುವಿಗೂ ಬಟ್ಟೆ ಮೊದಲಾದ ಭಿನ್ನ(ಗುಣದಿಂದ ಅಥವಾ ವಸ್ತುವಿನಿಂದ)ಪ್ರತ್ಯೇಕಿಸುವುದರ ಮೂಲP ತೋರುತ್ತಿರುವ ಪರಸ್ಪರ ವಿಶೇಷಣ_ವಿಶೇಷ್ಯ ರೂಪದ ಸಂಬಂಧವನ್ನು (ಅಥವಾ)ಒಂದು ವಿಶಿಷ್ಟವಾದ ಮತ್ತೊಂದನ್ನು ಅಥವಾ ಅವುಗಳ ಐಕ್ಯವನ್ನು ವಾಕ್ಯಾಥ೯ವೆಂದು ಅಂಗೀಕರಿಸಿದರೆ ಆ ವಾಕ್ಯಾಥ೯ವು ಇತರ ಪ್ರಮಾಣಗಳಿಗೆ ವಿರುದ್ಧವಲ್ಲದ್ದರಿಂದ ಸರಿಹೊಂದುತ್ತದೆ13.
ಇಲ್ಲಾದರೂ 'ಅದು' (ತತ್)ಎಂಬ ಪದದ ಅಥ೯ವಾದ ಪರೋಕ್ಷತ್ವವೇ ಮೊದಲಾzವುಗಳಿಂದ ವಿಶಿಷ್ಟವಾದ ಚೈತನ್ಯಕ್ಕೂ ನೀನು (ತ್ವಮ್) ಎಂಬ ಪದದ ಅಥ೯ವಾದ ಅಪರೋಕ್ಷತ್ವವೇ ಮೊದಲಾದವುಗಳಿಂದ ವಿಶಿಷ್ಟವಾದ ಚೈತನ್ಯಕ್ಕೂ ನೀನು (ತ್ವಮ್)ಎಂಬ ಪದದ ಅಥ೯ವಾದ ಅಪರೋಕ್ಷತ್ವವೇ ಮೊದಲಾದವುಗಳಿಂದ ವಿಶಿಷ್ಟವಾದ ಚೈತನ್ಯಕ್ಕ್ಕೂ ಪರಸ್ಪರ ಭೇದವನ್ನೇ ಹೋಗಲಾಡಿಸುವುದರ ಮೂಲಕ ವಿಶೇಷ ಭಾವವನ್ನಾಗಲೀ ಒಂದರಿಂದ ಮತ್ತೊಂದು ವಿಶಿಷ್ಟವಾಗಿರುವುದು ಎಂಬುದನ್ನಾಗಲೀ ಅಥವಾ ಅವೆರಡರ ಐಕ್ಯವನ್ನಾಗಲೀ ವಾಕ್ಯಾಥ೯ವೆಂದು ಅಂಗೀಕರಿಸಿದರೆ ಪ್ರತ್ಯಕ್ಷಾದಿ ಪ್ರಮಾಣಗಳಿಗೆ ವಿರೋzs ಒದಗುವುದರಿಂದ ವಾಕ್ಯಾಥ೯ವು ಸರಿ ಹೊಂದುವುದಿಲ್ಲ.
ಈ ಮಹಾವಾಕ್ಯದ ವಾಕ್ಯಾಥ೯ವು ಸಂಸಗ೯ ರೂಪದಿಂದಾಗಲೀ ವಿಶಿಷ್ಟ ರೂಪದಿಂದಾಗಲೀ ಸಂಮತವಲ್ಲ.ಅಖಂಡವೂ ಏಕರಸವೂ ಆದ ಬ್ರಹ್ಮವೇ ಎಂಬುದು ಜ್ಞಾನಿಗಳ ಮತ."ಗಂಗೆಯಲ್ಲಿ ಗೊಲ್ಲರಹಳ್ಳಿ ಇದೆ" ಎಂಬಂತೆ ಜಹಲ್ಲಕ್ಷಣೆಯೂ ಹೊಂದುವುದಿಲ್ಲ.ಅಲ್ಲಾದರೋ ಗಂಗೆಗೂ ಗೊಲ್ಲರಹಳ್ಳಿಗೂ ಆಧಾರ ಆಧೇಯ ರೂಪದ ವಾಕ್ಯಾಥ೯ವು ಸಂಪೂಣ೯ವಾಗಿ ವಿರುದ್ಧ ವಾಗಿರುದರಿಂದ ವಾಕ್ಯಾಥ೯ವನ್ನು ಸಂಪೂಣ೯ವಾಗಿ ಕೈಬಿಟ್ಟು ಅದಕ್ಕೆ ಸಂಬಂಧಿಸಿದ ತೀರವೆಂಬ ಲಕ್ಷಣೆಯು ಯುಕ್ತವಾಗಿರುದರಿಂದ ಜಹಲ್ಲಕ್ಷಣೆಯು ಸರಿಹೊಂದುತ್ತದೆ.
ಜಹದ್ ಅಜಹಲ್ಲಕ್ಷಣೆಯನ್ನು ಅಥವಾ ಭಾಗಲಕ್ಷಣೆಯನ್ನು ಬಿಟ್ಟು ಮತ್ತಾವ ರೀತಿಯಿಂದಲೂ "ತತ್ವಮಸಿ" ವಾಕ್ಯಕ್ಕೆ ಅಥ೯ಮಾಡಲಾಗುವುದಿಲ್ಲವೆಂಬುದನ್ನು ಸಾಧಿಸಲಾಗುತ್ತದೆ.ಇಲ್ಲಾದರೋ ಪರೋಕ್ಷತ್ವ_ ವಿಶಿಷ್ಟ ಚೈತನ್ಯಕ್ಕೂ ಐಕ್ಯವನ್ನು ಹೇಳುತ್ತಿರುವ ವಾಕ್ಯಾಥ೯ದಲ್ಲಿ ಒಂದುಭಾಗಮಾತ್ರ ವಿರುದ್ಧವಾಗಿರುವುದರಿಂದ ಮತ್ತೊಂದು ಭಾಗವನ್ನು ಕೈಬಿಟ್ಟು ಬೇರೊಂದು ಲಕ್ಷಣೆಯಿಂದ ಅಥ೯ಮಾಡುವುದು ಯುಕ್ತವಲ್ಲದ್ದರಿಂದ ಜಹಲ್ಲಕ್ಷಣೆಯು ಸರಿಹೊಂದುವುದಿಲ್ಲ.
ತತ್ವಮಸಿ ವಾಕ್ಯದಲ್ಲಿ ಪರೋಕ್ಷತ್ವ,ಸವ೯ಜ್ಞತ್ವ, ಸವ೯ಶಕ್ತಿತ್ವ ಇತ್ಯಾದಿಗಳನ್ನು ಸೂಚಿಸುವ ಭಾಗಕ್ಕೂ ಅಪರೋಕ್ಷತ್ವ, ಕಿಂಚಿಜ್ಞತ್ವ,ಅಲ್ಪಶಕ್ತಿತ್ವ ಇತ್ಯಾದಿಗಳನ್ನು ಸೂಚಿಸುವ ಭಾಗಕ್ಕೂ ವಿರೋಧವಿದ್ದರೂ ಚೈತನ್ಯದಲ್ಲಿ ಐಕ್ಯವಿರುತ್ತದೆ.ಆದ್ದರಿಂದ ಒಂದು ಭಾಗದಲ್ಲಿ ವಿರೋಧವಿದೆ ಎಂದು ಎಲ್ಲವನ್ನೂ ಕೈ ಬಿಡುವುದು ಸರಿಯಲ್ಲ. ಆದ್ದರಿಂದಲೇ ಜಹಲ್ಲಕ್ಷಣೆಯಿಂದ ಅಥ೯ಮಾಡುವುದು ಇಲ್ಲಿ ಸರಿಹೊಂದುವುದಿಲ್ಲ.
ಮತ್ತು ಗಂಗಾ ಎಂಬಪದವು ತನ್ನ ಅಥ೯ವನ್ನು ಬಿಟ್ಟು 'ತೀರ' ಎಂಬಪದದ ಅಥ೯ವನ್ನೂ ಲಕ್ಷಣೆಯಿಂದ ಸೂಚಿಸುವಂತೆ ತತ್ ಎಂಬ ಪದವಾಗಲೀ ಅಥವಾ ತ್ವಮ್ ಎಂಬ ಪದವಾಗಲೀ ತನ್ನ ಅಥ೯ವನ್ನು ಬಿಟ್ಟು ತ್ವಮ್ ಎಂಬ ಪದದ ಅಥ೯ವನ್ನಾಗಲೀ ಸೂಚಿಸಲಿ. ಆದುದರಿಂದ ಜಹಲ್ಲಕ್ಷಣೆಯು ಸರಿ ಹೊಂದುವುದಿಲ್ಲ.
ಅಲ್ಲಿ ತೀರ ಎಂಬ ಪದವು ಕೇಳಿ ಬರದಿದ್ದರಿಂದ ಅದರ ಅಥ೯ವು ತೋರಿ ಬರದಿದ್ದರೂ ಲಕ್ಷಣೆಯಿಂದ ಅದರ ಜ್ಞಾನವನ್ನು ಪಡೆಯುವುದು ಅಪೇಕ್ಷಿತವಾದರೂ ಇಲ್ಲಿ ತತ್ ಮತ್ತು ತ್ವಮ್ ಎಂಬ ಪದಗಳು ಕೇಳಿಬರುವುತ್ತಿರುವುದರಿಂದಲೂ,ಅವುಗಳ ಅಥ೯ವು ನೇರವಾಗಿಯೇ ಗೋಚರವಾಗುತ್ತಿರುವುದರಿಂದಲೂ ಮತ್ತು ಲಕ್ಷಣೆಯಿಂದ ಒಂದು ಪದವು ಮತ್ತೊಂದರ ಅಥ೯ವನ್ನು ಸೂಚಿಸುವ ಅಪೇಕ್ಷೆಯಿಲ್ಲದಿರುವುದರಿಂದಲೂ ಹಾಗೆ ಹೇಳಬಾರದು.ಇಲ್ಲಿ 'ಕೆಂಪು ಓಡುತ್ತಿದೆ'ಎಂಬ ವಾಕ್ಯದಲ್ಲಿರುವಂತೆ ಅಜಹಲ್ಲಕ್ಷಣೆಯೂ ಕೂಡ ಸಂಭವಿಸುವುದಿಲ್ಲ.
ಅಲ್ಲಿಕೆಂಪು ಎಂಬ ಗುಣಕ್ಕೆ ಗಮನವನ್ನು ಹೇಳುವ ರೂಪದ ವಾಕ್ಯಾಥ೯ವು ಅನುಭವ ವಿರುದ್ಧವಾದುದರಿಂದ ಅದನ್ನು ತ್ಯಜಿಸದೆಯೇ ಅದಕ್ಕೆ ಆಶ್ರಯವಾಗಿರುವ ಕುದುರೆ ಮೊದಲಾದ (ಪ್ರಾಣಿಯನ್ನು ಸೂಚಿಸುವ )ಲಕ್ಷಣಾವೃತ್ತಿಯಿಂದ ಆ ವಿರೋಧವನ್ನು ಪರಿಹರಿಸುವ ಸಂಭವವಿರುವುದರಿಂದ ಅಜಹಲ್ಲಕ್ಷಣೆಯು ಸರಿ ಹೊಂದುತ್ತದೆ.ಇಲ್ಲಾದರೋ ಪರೋಕ್ಷತ್ವ ಅಪರೋಕ್ಷತ್ವ ಮೊದಲಾದ ವಿಶೇಷಣಗಳುಳ್ಳ ಚೈತನ್ಯಗಳ ಏಕತತ್ವವೆಂಬ ವಾಕ್ಯಾಥ೯ವು ವಿರುದ್ಧವಾಗಿರುವುದರಿಂದ ಅದನ್ನು ಬಿಡದೆಯೇ ಅವುಗಳಿಗೆ ಸಂಬಂಧಿಸಿದಂತೆ ಮತ್ತಾವುದಾದರೂ ಅಥ೯ವನ್ನು ಲಕ್ಷಣೆಯಿಂದ ಕಲ್ಪಿಸಿದರೂ ಆ ವಿರುದ್ಧ ¥ರಿಹಾರವು ಅಸಂಭವ ವಾದುದರಿಂದ ಅಜಹಲ್ಲಕ್ಷಣೆಯು ಹೊಂದುವುದೇ ಇಲ್ಲ.
ಒಂದೇ ಪದದಿಂದ ತನ್ನ ಅಥ೯ದ ಒಂದಂಶ ಮತ್ತು ಇನ್ನೊಂದು ಪದದ ಅಥ೯ ಇವೆರಡೂ ಲಕ್ಷಣೆಯಿಂದ ತೋರುವುದು ಅಸಂಭವವಾದುದರಿಂದಲೂ ಮತ್ತು ಮತ್ತೊಂದು ಪದದಿಂದ ಆ ಅಥ೯ವು ನೇರವಾಗಿಯೇ ತೋರುತ್ತಿರುವಾಗ ಲಕ್ಷಣಾ ವೃತ್ತಿಯಿಂದ ಪುನಃ ಅದರ ಜ್ಞಾನದ ಅಪೇಕ್ಷೆ ಇಲ್ಲದಿರುವುದರಿಂದಲೂ ಹಾಗೆ ಹೇಳುವಂತಿಲ್ಲ.ಆದುದರಿಂದ 'ಅವನೇ ಈ ದೇವದತ್ತನು' ಎಂಬ ವಾಕ್ಯವು ಅಥವಾ ಅದರ ಅಥ೯ವು 'ಆ ಕಾಲ' 'ಈ ಕಾಲ' ಎಂಬ ವಿಶೇಷಣಗಳನ್ನು ಹೊಂದಿರುವ ದೇವದತ್ತನ ರೂಪವಾದ ವಾಕ್ಯಾಥ೯ದ ವಿಷಯದಲ್ಲಿ ವಿರೋಧವಿರುವುದರಿಂದ ವಿರೋಧವಾಗಿರುವ 'ಆ ಕಾಲ' 'ಈ ಕಾಲ' ಎಂಬ ವಿಶೇಷಾಂಶಗಳನ್ನು ಬಿಟ್ಟು ಅವಿರುದ್ಧವಾದ ದೇವದತ್ತನು ಎಂಬ ಭಾಗವನ್ನು ಮಾತ್ರ ಲಕ್ಷಿಸುತ್ತದೆಯೋ ಹಾಗೆಯೇ "ತತ್ ತ್ವಮ್ ಅಸಿ" ಎಂಬ ವಾಕ್ಯವು ಅಥವಾ ಅದರ ಅಥ೯ವು ಪರೋಕ್ಷತ್ವ,ಅಪರೋಕ್ಷತ್ವ ಮೊದಲಾದ ವಿಶೇಷಣಗಳನ್ನು ಹೊಂದಿರುವ ಚೈತನ್ಯಗಳ ಐಕ್ಯವೆಂಬ ವಾಕ್ಯಾಥ೯ದ ಅಂಶದಲ್ಲಿ ವಿರೋಧವಿರುದರಿಂದ ಹೀಗೆ ವಿರುದ್ಧವಾದ ಪರೋಕ್ಷತ್ವ, ಅಪರೋಕ್ಷತ್ವ ಎಂಬ ವಿಶಿಷ್ಟಾಂಶಗಳನ್ನು ಕೈಬಿಟ್ಟು ಅವಿರುದ್ಧವಾದ ಅಖಂಡ ಚೈತನ್ಯವನ್ನು ಮಾತ್ರ ಸೂಚಿಸುತ್ತದೆ 13=.
'ತತ್ವಮಸಿ' ಮಹಾವಾಕ್ಯದಲ್ಲಿಯೂ ಕೂq ಜೀವೇಶ್ವರರಿಗೆ ಸಮಾನವಾದ ಚೈತನ್ಯವನ್ನು ಮಾತ್ರ ಗ್ರಹಿಸಿ ಉಪಾಧಿಯ ದೆಸೆಯಿಂದ ಆಗಂತುಕವಾಗಿ ಉಂಟಾಗಿರುವ ಸವ೯ಜ್ಞತ್ವ,ಅಲ್ಪಜ್ಞತ್ವ, ಮೊzಲಾದ ವಿಶೇಷಣಗಳನ್ನು ಬಿಡಬೇಕು.ಆಗ ಅವರಿಬ್ಬರಲ್ಲಿನ ಐಕ್ಯವು ಸಿದ್ಧಿಸುತ್ತದೆ 14=.
ಅಧ್ಯಾಯ 7 ಮಾಯೆಯ ಪರಿಕಲ್ಪನೆ ಹಾಗೂ ಲಕ್ಷ್ಯಾಥ೯ ಅಡಿಟಿಪ್ಪಣಿಗಳು
1)ಶ್ರೀಶ್ರೀಸಚ್ಚಿದಾನಂದ ಸರಸ್ವತೀಸ್ವಾಮಿಗಳು,ಶಾಂಕರ ವೇದಾಂತ ಸಾರ ಅಧ್ಯಾತ್ಮ ಪ್ರಕಾಶ ಕಾಯಾ೯ಲಯ, ಹೊಳೆ
ನರಸೀಪುರ.ಮೂರನೆಯ ಮುದ್ರಣ 2000 ಪುಟ 136
2)ಅದೇ ಪುಟ140
3)ಅದೇ ಪುಟ141
4) ಸ್ವಾಮಿ ಆದಿದೇವಾನಂದ, ವಿವೇಕ ಚೂಡಾಮಣಿ,ಶ್ರೀರಾಮಕೃಷ್ಣಾಶ್ರಮ,ಮೈಸೂರು-20. ಆರನೆಯ ಮುದ್ರಣ 1೯87 ಪುಟ61
2) ಅದೇ ಪುಟ 63
3) ಅದೇ ಪುಟ 65
7) ಇಂಗ್ಲಿಷ್ ಮೂಲ: ಸ್ವಾಮಿ ಮುಖ್ಯಾನಂದಜಿ,ಕನ್ನಡ ಅನುವಾದ ಟಿ ಎಸ್ ಕೃಷ್ಣಮೂತಿ೯ ಶಂಕರಾಚಾಯ೯ರು ಮತ್ತು
ಭಾರತೀಯ ಅಧ್ಯಾತ್ಮ ಶಾಸ್ತ್ರದ ಪುನರುನ್ನತಿ,ಅಧ್ಯಾತ್ಮ ವಿದ್ಯಾ ಪ್ರತಿಷ್ಠಾನ,ಹೆಬ್ಬೂರು,ತುಮಕೂರು ಜಿಲ್ಲೆ,ಮೊದಲನೇ ಮುದ್ರಣ
2000 ಪುಟ73
8)ಅದೇ ಪುಟ 184
೯) ಅದೇ ಪುಟ 186
ಲಕ್ಷ್ಯಾಥ೯
10)ಶ್ರೀಮತ್ ಪರಮಹಂಸ ಪರಿವ್ರಾಜಕಾಚಾಯ೯ವಯ೯ ಸದಾನಂದರ 'ವೇದಾಂತಸಾರ' ಅನುವಾದಸ್ವಾಮಿ ಹಷಾ೯ನಂದ
ರಾಮಕೃಷ್ಣಾಶ್ರಮ,ಮೈಸೂರು 20ಎರಡನೆಯ ಮುದ್ರಣ 1೯83 ಪುಟ 103
11)ಅದೇ ಪುಟ 107
12)ಅದೇ ಪುಟ10೯
13) ಸ್ವಾಮಿ ಹಷಾ೯ನಂದ 'ಆತ್ಮಭೋಧ,ಅಪರೋಕ್ಷಾನುಭೂತಿ,ವಾಕ್ಯವೃತ್ತಿ,ಲಘುವಾಕ್ಯವೃತ್ತಿ'ರಾಮಕೃಷ್ಣಾಶ್ರಮ,ಮೈಸೂರು 20
ನಾಲ್ಕನೆಯ ಮುದ್ರಣ1೯೯7 ಪುಟ125
14)ಶ್ರೀ ಶಂಕರ ಭಗವತ್ಪಾದ ವಿರಚಿತ ವಿವೇಕ ಚೂಡಾಮಣಿಸ್ವಾಮಿ ಆದಿದೇವಾನಂದ,ಶ್ರೀರಾಮಕೃಷ್ಣಾಶ್ರಮ,ಮೈಸೂರು 20 13೯
ಆರನೆಯ ಮುದ್ರಣ1೯87 ಪುಟ 13೯
ಅಧ್ಯಾಯ 8 ಅಧ್ಯಾಸದ ಪರಿಕಲ್ಪನೆಗಳು
ಅದಲ್ಲದ್ದನ್ನು ಅದು ಎಂದು ತಿಳಿಯುವುದೇ ಅಧ್ಯಾಸ. ನಾನು ಕತೃ೯ ಹಾಗೂ ಭೋಕ್ತø ಎಂದು ತಿಳಿಯುವುದು ಒಂದು ಅಧ್ಯಾಸವೇ.ಕೆಲವೊಮ್ಮೆ ಯಾವುದೇ ವಸ್ತು ಇಲ್ಲದೆಯೂ ಅಸತ್ಯವನ್ನು ಆರೋಪಿಸಬಹುದು.ಉದಾಹರಣೆಗೆ ಆಕಾಶದ ನೀಲವಣ೯.ನಿಜವಾಗಿಯೂ ಆಕಾಶಕ್ಕೆ ಯಾವಬಣ್ಣವೂ ಇರುವುದಿಲ್ಲ.ಆದರೂ ಅದರಲ್ಲಿ ನೀಲವಣ೯ವು ಆರೋಪಿತವಾಗಿದೆ.ಅಧ್ಯಾಸವೇ ಮಾಯೆಗೆ ಕಾರಣವಾಗಿದೆ.ಅವಿದ್ಯೆಯೇ ಅಧ್ಯಾಸಕ್ಕೆ ಕಾರಣ.ಪ್ರಪಂಚವು ತೋರುತ್ತಿರುವುದು ಅವಿದ್ಯೆಯಿಂದಲೇ. ಅವಿದ್ಯೆಯು ಜ್ಞಾನದಿಂದ ನಾಶವಾಗುತ್ತದೆ.ಅವಿದ್ಯೆ ಎಂದರೆ ತಪ್ಪು ತಿಳುವಳಿಕೆ.ತತ್ವಜ್ಞಾನದಿಂದ ಅದು ನಾಶವಾಗುತ್ತದೆ.ಅಜ್ಞಾನದಿಂದಲೇ ಜೀವಿಯು ತನ್ನ ಬ್ರಹ್ಮತ್ವವನ್ನು ಮರೆತಿರುತ್ತದೆ.ಅಧ್ಯಾಸವು ಅವಿದ್ಯೆ ಅಲ್ಲ.ಆದರೆ ಅದರ ಪರಿಣಾಮ.ಅವಿದ್ಯಾ ನಾಶವೇ ಮುಕ್ತಿ.
ಅಧ್ಯಾಸವೆಂದರೆ ನಮ್ಮ ಸ್ವರೂಪನಾದ ಆತ್ಮ ನಮ್ಮ ಸ್ವರೂಪವಲ್ಲದ ಅನಾತ್ಮ ಈ ಎರಡನ್ನೂ ಒಂದು ಇನ್ನೊಂದೆಂದು ತಪ್ಪಾಗಿ ತಿಳಿಯುವುದು.ಇದು ಮಿಥ್ಯಾ ಪ್ರತ್ಯಯ. ಶರೀರಗಳಲ್ಲಿರುವ ನಾನೆಂಬ ಬುದ್ಧಿಯು ಮಿಥ್ಯಾಜ್ಞಾನವೇ.
ಅಧ್ಯಾಸದ ಪ್ರಕಾರಗಳು:
ಅಧ್ಯಾಸವೆಂದರೆ ಅದಲ್ಲದ್ದರಲ್ಲಿ ಅದೆಂಬ ಬುದ್ಧಿ1. ಇದನ್ನು ಅಧ್ಯಾರೋಪ,ಭ್ರಾಂತಿ, ವಿಕಲ್ಪ ಎಂಬ ಹೆಸರುಗಳಿಂದಲೂ ಕರೆಯುತ್ತಾರೆ.ಯಾವುದರಲ್ಲಿ ಯಾವುದರ ಅಧ್ಯಾಸವಾಗಿದೆಯೋ ಅದರಿಂದಾದ ದೋಷದಿಂದಾಗಲೀ ಗುಣದಿಂದಾಗಲೀ ಅದು ಸ್ವಲ್ಪವೂ ಸಂಬಂಧಿಸಿರುವುದಿಲ್ಲ. ಅಧ್ಯಾಸವು ಅನುಭವಸಿದ್ಧ ವಾಗಿದೆ.
1) ಆತ್ಮನು ಅನುಭವ ಪ್ರಸಿದ್ಧನಾಗಿರುತ್ತಾನೆ ಹಾಗೂ ಅಪರೋಕ್ಷನಾಗಿರುತ್ತಾನೆ.
2) ಪ್ರಮಾಣಗಳೇ ಆತ್ಮಚೈತನ್ಯ ರೂಪವಾದ ಅನುಭವದಿಂದ ಸಿದ್ಧವಾಗಿವೆ.
3)ಅಧ್ಯಾಸವು ಆತ್ಮ ಅನಾತ್ಮರ ಅವಿವೇಕವೂ ಅನ್ಯೋನ್ಯಾಧ್ಯಾಸ ರೂಪವಾದ ಮಿಥ್ಯಾ ಜ್ಞಾನವೂ ಅನುಭವ ಸಿದ್ಧವಾಗಿದೆ.
4)ಆತ್ಮನು ಒಬ್ಬನೇ.ಯಾವ ಅನಾತ್ಮ ಸಂಬಂಧವೂ ಇರುವುದಿಲ್ಲ ಎಂಬ ಆತ್ಮೈಕತ್ವ ವಿದ್ಯೆಯೂ ಆತ್ಮರೂಪವಾದ ಅನುಭವದಿಂದಲೇ ಗೊತ್ತಾಗಬೇಕಾಗಿದೆ.
ಪ್ರಮಾತೃತ್ವವು ಆತ್ಮನಲ್ಲಿ ದೇಹೇಂದ್ರಿಯಾದಿಗಳ ಅಧ್ಯಾಸವೆಂಬ ಅವಿದ್ಯೆಯಿಂದ ಆಗಿರುತ್ತದೆ2.ಆದ್ದರಿಂದ ಪ್ರಮಾತೃತ್ವ ಪೂವ೯ಕವಾಗಿ ಆಗುವ ಪ್ರಮಾಣ ವ್ಯವಹಾರವೂ ಅವಿದ್ಯಾ ಪೂವ೯ಕವಾಗಿದೆ ಎಂದಾಯಿತು.ಶಾಸ್ತ್ರ ಪ್ರವೃತ್ತಿಯು ಅವಿದ್ಯಾ ಪುರಸ್ಸರವೇ.ಯಾವ ವ್ಯವಹಾರವೇ ಆಗಲಿ ಅವಿದ್ಯೆಯ ಕ್ಷೇತದಲ್ಲಿಯೇ ಹೊರತು ಪರಮಾಥ೯ದಲ್ಲಿಲ್ಲ. ಉಪನಿಷತ್ತುಗಳಲ್ಲಿ ಹೇಳಿರುವ ಬ್ರಹ್ಮಾತ್ಮ ಜ್ಞಾನವು ಉಂಟಾದಮೇಲೆ ಪ್ರಮಾತೃತ್ವವಾಗಲೀ, ಕತೃ೯ತ್ವವಾಗಲೀ,ಕ್ರಿಯಾಕಾರಕ ಫಲಗಳು ಸತ್ಯವೆಂಬ ತಿಳುವಳಿಕೆಯಾಗಲೀ ಉಳಿದಿರುವುದಿಲ್ಲ.
ಇದೆಲ್ಲವೂ ಆತ್ಮನೇ ಎಂಬ ಆತ್ಮೈಕತ್ವ ಜ್ಞಾನವುಂಟಾಗಿರುವುದರಿಂದ ಅವನು ಕೃತಕೃತ್ಯನಾಗಿರುತ್ತಾನೆ.ಅಧ್ಯಾಸವೆಂದರೆ"ಸ್ಮøತಿರೂಪ ಪರತ್ರಪೂವ೯ ದೃಷ್ಟ್ವಾಭಾಸಃ."ಎಂದರೆ ಹಿಂದೆ (ಒಂದು ವಸ್ತು)ಮತ್ತೊಂದರಲ್ಲಿಸ್ಮøತಿ ರೂಪವಾಗಿ ತೋರುವುದೇ ಅಧ್ಯಾಸವು.ಅಧ್ಯಾಸವನ್ನು ವೇದಾಂತಿಗಳು ಅವಿದ್ಯಾ ದೃಷ್ಟಿ,ತಪ್ಪು ತಿಳುವಳಿಕೆ,ವ್ಯಾವಹಾರಿಕ ದೃಷ್ಟಿ,ಸ್ವಾಭಾವಿಕದೃಷ್ಟಿ,ಎಂದು ಕರೆಯುತ್ತಾರೆ.ಯಾವನು ಆತ್ಮನಲ್ಲಿ ಇಲ್ಲದೇ ಇರುವ ನಾನಾತ್ವವನ್ನುಕಾಣುವ ಅವಿದ್ಯಾ ದೃಷ್ಟಿಯನ್ನು ಇಟ್ಟುಕೊಂಡಿರುತ್ತಾನೆಯೋ ಅವನು ಸಾವಿನಮೇಲೆ ಸಾವನ್ನು ಪಡೆಯುತ್ತಾನೆ. ಎಂದು ಶ್ರುತಿಯು ಅವಿದ್ಯಾ ದೃಷ್ಟಿಯನ್ನು ನಿಂದಿಸುತ್ತದೆ.ಈ ತಪ್ಪು ತಿಳುವಳಿಕೆಯು ಒಂದು ಪದಾಥ೯ದಲ್ಲಿಲ್ಲದ ಸ್ವಭಾವವನ್ನು ಅದರಲ್ಲಿ ಕಲ್ಪಿಸುವುದರಿಂದ ಆಗಿತ್ತದೆ.ಉದಾಹರಣೆಗೆ ಹಾವನ್ನು ಹಗ್ಗವೆಂದೂ,ಕಪ್ಪೆಚಿಪ್ಪನ್ನು ಬೆಳ್ಳಿಯೆಂದೂ ಒಬ್ಬ ಚಂದ್ರನ್ನು ಇಬ್ಬರೆಂದು ತಿಳಿಯುವುದು. ಆತ್ಮನಲ್ಲಿ ಪ್ರಮಾತೃ,ಪ್ರಮಾಣ,ಪ್ರಮೇಯ ವಿಭಾಗವು ಕಲ್ಪಿತವಾಗಿರುತ್ತದೆ.ಆದುದರಿಂದಲೇ ಕತೃ೯ತ್ವ ಭೋಕ್ತøತ್ವ ರೂಪವಾದ ಅನಥ೯ವು ಕಲ್ಪಿತವಾಗಿದೆ.ಈ ಅವಿದ್ಯೆಯನ್ನು ತೊಲಗಿಸುವುದರ ಮೂಲಕ ಆತ್ಮೈಕತ್ವ ವಿದ್ಯೆಯನ್ನು ಉ¥ದೇಶಿಸಲು ಎಲ್ಲಾ ಉಪನಿಷತ್ತುಗಳೂ ಹೊರಡುತ್ತವೆ3.
ಪ್ರತ್ಯಕ್ಷವಾದ ವಿಷಯದಲ್ಲಿಯೇ ಅಧ್ಯಾಸ ಉಂಟಾಗುತ್ತದೆಂಬ ನಿಯಮವೇನೂ ಇಲ್ಲ.ಅಪ್ರತ್ಯಕ್ಷವಾದ ಆಕಾಶವನ್ನೇ ಇದರ ತಳವು ಮಲಿನವಾಗಿದೆ ಎಂದು ಅವಿವೇಕಿಗಳು ಅಧ್ಯಾಸ ಮಾಡುತ್ತಾರೆ. ಯಾವ ಪ್ರಮೇಯವೇ ಆಗಲಿ ಪ್ರಮಾತೃತ್ವವನ್ನು ಆಶ್ರಯಿಸದೆ ತನ್ನ ಪ್ರಮೇಯದಲ್ಲಿ ಪ್ರವತಿ೯ಸಲಾರದು.ಆದರೆ ಈ ಶರೀರವು ತಾನೆಂದೂ ಇಂದ್ರಿಯಗಳು ತನ್ನವೆಂದೂ ಅಧ್ಯಾಸಮಾಡಿಕೊಂಡ ಹೊರತು ಯಾರೂ ಪ್ರಮಾತೃ ವಾಗಲಾರರು.ಆದ್ದರಿಂದ ಪ್ರಮಾತೃತ್ವವು ಅಧ್ಯಾಸ ಪೂವ೯ಕವಾದುದು.
ಶಾಂಕರ ವೇದಾಂತದಲ್ಲಿ ಆತ್ಮ ಅನಾತ್ಮರ ಅನ್ಯೋನ್ಯಾಧ್ಯಾಸಕ್ಕಿಂತ ಬೇರೆ ಅವಿದ್ಯೆ ಇಲ್ಲ.ಈ ಅಧ್ಯಾಸವನ್ನು ಕಳೆಯುವುದಕ್ಕೆ ಆತ್ಮ ಅನಾತ್ಮವನ್ನು ವಿಂಗಡಿಸಿಕೊಳ್ಳಬೇಕು. ಆತ್ಮಸ್ವರೂಪವು ನಿವಿ೯ಶೇಷವಾದ ಬ್ರಹ್ಮವೂ ಅನಾತ್ಮವು ಮಾಯೆಯಿಂದ ಸೃಷ್ಟಿಯಾಗಿದೆಯೆಂದು ತಿಳಿಯಬೇಕು. ಹೀಗೆ ವಸ್ತು ಸ್ವರೂಪವನ್ನು ತಿಳಿಸಿಕೊಡುವುದೇ ವಿದ್ಯೆ.ಆತ್ಮನನ್ನು ಕ್ಷೇತ್ರಜ್ಞನೆಂದೂ ಅನಾತ್ಮವನ್ನು ಕ್ಷೇತ್ರವೆಂದೂ ಕರೆಯುತ್ತಾರೆ. ಅವಿದ್ಯೆ,ಅಜ್ಞಾನ,ಅನ್ಯಥಾಜ್ಞಾನ, ವಿಪರೀತಜ್ಞಾನ, ಮಿಥ್ಯಾಪ್ರತ್ಯಯ, ಅನವಬೋಧ,ಅಪ್ರತಿಬೋಧ,ಅನವಗಮ ಮುಂತಾದ ಪಯಾ೯ಯ ಪದಗಳೆಲ್ಲವೂ ಅಧ್ಯಾಸಕ್ಕೇ ಹೆಸರುಗಳು.ಆತ್ಮೈಕತ್ವ ವಿದ್ಯೆsಯನ್ನು ತಿಳಿಸಿಕೊಡುವುದಕ್ಕಾಗಿಯೇ ಉಪನಿಷತ್ತುಗಳು ಹೊರಟಿವೆ.
ಅಧ್ಯಾಸವು ಎರಡು ವಿಧ.ಅಥಾ೯ಧ್ಯಾಸ ಮತ್ತು ಜ್ಞಾನಾಧ್ಯಾಸ.ಅಲ್ಲದೆ ಅಧ್ಯಾಸವು ಇನ್ನೂ ಎರಡು ವಿಧವಾಗಿದೆ.1) ನಿರುಪಾಧಿಕ 2)ಸೋಪಾಧಿಕ.
ದೋಷ ಅಥವಾ ಕಮ೯ದಿಂದ ಉಂಟಾದಕ್ಷೋಭಿತವಾದ ಅವಿದ್ಯೆಯಿಂದ ಉಂಟಾದ ಮತ್ತು ತತ್ವಜ್ಞಾನ ವಿರೋಧಿಯಾದ ಭ್ರಮವೇ ನಿರುಪಾಧಿಕ ಅಧ್ಯಾಸ.ಉಪಾಧಿಯ ಸಾನ್ನಿಧ್ಯ ದಿಂದ ಕ್ಷೋಭೆಗೊಂಡ ಅವಿದ್ಯೆಯಿಂದ ವಿಜೃಂಭಿಸುವ ಮತ್ತು ಉಪಾಧಿಯ ನಿವೃತ್ತಿ ಹೊಂದುವ ಭ್ರಮೆಯೇ ಸೋಪಾಧಿಕವಾದ ಅಧ್ಯಾಸೆವೆಂದು ಹೇಳಿದೆ.ಅವುಗಳ ಪೈಕಿ ಬ್ರಹ್ಮನಲ್ಲಿ ಕಲ್ಪಿತವಾದ ಅಹಂಕಾರ ಭ್ರಮೆಯೇ ನಿರುಪಾಧಿಕಾಧ್ಯಾಸ.ಅದÀು ಕೂಡ ಆಕಾಶದಲ್ಲಿ ನೀಲಿ ಬಣ್ಣದಂತೆ ಬ್ರಹ್ಮದಲ್ಲಿ ಈ ಸಂಸಾರವು ಭ್ರಾಂತಿಯಿಂದ ಉಂಟಾಗಿರುವುದು. ಘಟಾಕಾಶ ಎಂಬಂತೆ ಆತ್ಮನು ಭೋಕ್ತø ಎಂಬುದು ಭೇದ ಭ್ರಾಂತಿಯಿಂದಲೇ ಹೊರತು ಸ್ವರೂಪದಿಂದಲ್ಲ ಎಂದು ಹೇಳಲ್ಪಟ್ಟಿದೆ.ಆದುದರಿಂದಲೇ ಶಂಕರಚಾಯ೯ರು ಎರಡು ಉದಾಹರಣೆಗಳನ್ನು ಕೊಟ್ಟಿದ್ದಾರೆ. ಕಪ್ಪೆಚಿಪ್ಪು ಬೆಳ್ಳಿಯಂತೆ ಕಾಣುತ್ತದೆ.ಒಬ್ಬನೇಚಂದ್ರನು ಇಬ್ಬರಂತೆ ಕಾಣುತ್ತಾನೆ. ಈರೀತಿಯಾಗಿ ದೃಕ್ ಮತ್ತು ದೃಶ್ಯ ಎಂಬುದಾಗಿ ಎರಡೇ ಪದಾಥ೯ಗಳು ಎಂದು ಹೇಳಲ್ಪಟ್ಟಿದೆ. ಇದು ವೇದಾಂತಿಗಳ ಸಿದ್ಧಾಂತ.
ಖ್ಯಾತಿ ಎಂದರೆ ಭ್ರಮೆ.ಇದನ್ನೇ ಪ್ರತೀತಿ,ಅವಭಾಸ,ಆಭಾಸ,ಅಧ್ಯಾಸ,ಮುಂತಾದ ಹೆಸರಿನಿಂದ ಕರೆಯುತ್ತಾರೆ.ಖ್ಯಾತಿಯಲ್ಲಿ ಐದು ವಿಧಗಳಿವೆ4.
1)ಆತ್ಮಖ್ಯಾತಿ:ಇದು ಕ್ಷಣಿಕ ವಿಜ್ಞಾನವೆಂದು ಹೇಳುವ ಯೋಗಾಚಾg ಭೌದ್ಧರ ಮತ.ಅಂತರಿಕ ವಿಜ್ಞಾನರೂಪವಾದ ಆತ್ಮವೇ ಬಾಹ್ಯವಾದ ಶುಕ್ತಿಯಲ್ಲಿ ರಜತವಾಗಿ ತೋರುತ್ತದೆ.ಇವರ ಮತದಲ್ಲಿ ಎಲ್ಲವೂ ವಿಜ್ಞಾನ ರೂಪವೇ.ಆದ್ದರಿಂದ ರಜತವೂ ಅಂತರಿಕ ರೂಪವಾದುದೇ.ಆದ್ದರಿಂದ ಅಂತಹ ವಿಜ್ಞಾನರೂಪವಾದ ಆತ್ಮವೇ ಬಾಹ್ಯವಾಗಿರುವಂತೆ ತೋರುವುದರಿಂದ ಆತÀ್ಮಖ್ಯಾತಿ ಎಂದು ಹೆಸರು.
2)ಅಸತ್ ಖ್ಯಾತಿ:ಇದು ಶೂನ್ಯವಾದಿಗಳಾದ ಮಾಧ್ಯಮಿಕ ಬೌದ್ಧರ ಮತ.ಶುಕ್ತಿಯು ಅಸತ್ ಆದ ರಜತ ರೂಪದಿಂದ ತೋರುವುದೇ ಭ್ರಮೆ.ಅಸತ್ ಆದ ರಜತವು ತೋರುತ್ತದೆ ಎಂದು ಹೇಳುವುದರಿಂದ ಇದು ಅಸತ್ ಖ್ಯಾತಿ.
3)ಅಖ್ಯಾತಿ:ಇದು ಪ್ರಾಭಾಕರ ಮೀಮಾಂಸಕರಮತ.ಖ್ಯಾತಿ ಎಂದರೆ ಭ್ರಮೆ.ಇವರು ಭ್ರಮೆಯನ್ನು ಅಂಗೀಕರಿಸುವುದಿಲ್ಲ.ಖ್ಯಾತಿ ಎನ್ನುವುದು ಇಲ್ಲವಾದ್ದರಿಂದ ಇದನ್ನು ಅಖ್ಯಾತಿವಾದ ಎಂದು ಹೇಳುತ್ತಾರೆ.
4)ಅನ್ಯತಾ ಖ್ಯಾತಿ:ಇದು ತಾಕಿ೯ಕರಮತ.ಅನ್ಯಥಾಖ್ಯಾತಿ ಎಂದರೆ ಒಂದು ವಸ್ತುವು ಮತ್ತೊಂದು ವಸ್ತುವಿನ ರೂಪದಿಂದ ತೋರುವುದು.ಮತ್ತೊಂದು ರೂಪದಿಂದ ತೋರಬೇಕಾದರೆ ಆ ಮತ್ತೊಂದು ವಸ್ತುವು
ಎಲ್ಲಿಯಾದರೂ ಪ್ರಸಿದ್ಧವಾಗಿರಲೇಬೇಕು. ಏಕೆಂದರೆ ಎಲ್ಲಿಯೂ ಇಲ್ಲದಿರುವ ಅಂದರೆ ಅಸತ್ ಆದುದು ತೋರಲಾರದು. ಆದುದರಿಂದ ಅಂಗಡಿ ಮುಂತಾದ ಬೇರೆಡೆಯಲ್ಲಿ ಪ್ರಸಿದ್ಧವಾದ ರಜತ ರೂಪದಿಂದ ತೋರುತ್ತದೆ ಎಂದು ಇವರು ಹೇಳುತ್ತಾರೆ.
5)ಅನಿವ೯ಚನೀಯ ಖ್ಯಾತಿ:ಇದು ಅದ್ವೈತ ವೇದಾಂತಿಗಳ ಮತ.ಶುಕ್ತಿಯಲ್ಲಿ ಇದು ರಜತ ಎಂದು ತೋರುವ ರಜತವು "ಸತ್" ಆದುದೂ ಅಲ್ಲ ಅಸತ್ ಆದುದೂ ಅಲ್ಲ.ಆದ್ದರಿಂದಲೇ ಸದಸತ್ ರೂಪವೂ ಅಲ್ಲ.ಆದಕಾರಣ ಅನಿವ೯ಚನೀಯ ರಜತವು ತೋರುತ್ತದೆ.ಇದನ್ನೇ ರಜತವೆ ಶುಕ್ತಿಯ ವಿವತ೯ ಎಂಬುದಾಗಿಯೂ ಹೇಳುತ್ತಾರೆ.ಆದುದರಿಂದ ಇದನ್ನು ಅನಿವ೯ಚನೀಯ ಖ್ಯಾತಿ ಎಂದು ಹೆಸರು.
ವಿವೇಕವಿಲ್ಲದಿರವುದರಿಂದಲೇ ಹಗ್ಗದಲ್ಲಿ ಹಾವೆಂಬ ಬುದ್ಧಿಯು ಹೊಳೆಯುತ್ತದೆ.ಅಸದ್ವಸ್ತುವನ್ನು ಸದ್ವಸ್ತು ವೆಂದು ಗ್ರಹಿಸುವುದೇ ಬಂಧವಾಗುತ್ತದೆ.ಅನಾತ್ಮವನ್ನು ಆತ್ಮವೆಂದು ತಿಳಿಯುವುದೇ ಅಧ್ಯಾಸ.ಅಖಂಡವೂ ನಿತ್ಯವೂ,ಅದ್ವಯವೂ ಆದ ಜ್ಞಾನಶಕ್ತಿಯಿಂದ ಹೊಳೆಯುತ್ತಿರುವ ಆತ್ಮನನ್ನು ತಮೋಮಯವಾದ ಈ ಆವರಣ ಶಕ್ತಿಯು ಆವರಿಸುತ್ತದೆ.ಮನುಷ್ಯನು ಈ ಅನಾತ್ಮವಾದ ದೇಹವನ್ನೇ "ನಾನು" ಎಂದು ಭಾವಿಸುತ್ತಾನೆ.ಅನಂತರ ವಿಕ್ಷೇಪವೆಂಬ ಹೆಸರುಳ್ಳ ರಜೋಗುಣದ ಪ್ರಬಲ ಶಕ್ತಿಯು ಕಾಮಕ್ರೋಧಗಳೇ ಮೊದಲಾದ ಬಂಧಕ ಗುಣಗಳಿಂದ ಇವನನ್ನು ವಿಷೇಷವಾಗಿ ವ್ಯಥೆಗೊಳಿಸುತ್ತವೆ.ಮಹಾಮೋಹವೆಂಬ ಮೊಸಳೆಯು ನುಂಗಿದ್ದರಿಂದ ಆತ್ಮಜ್ಞಾನ ವಿಹೀನನಾಗಿ ಬುದ್ಧಿಯ ಭಿನ್ನ ಭಿನ್ನ ಅವಸ್ಥೆಗಳನ್ನು ಆಯಾ ಗುಣದ ಅಭಿಮಾನದಿಂದ ತಾನೇ ಅನುಕರಿಸುತ್ತ ವಿಷಯ ವಿಷದಿಂದ ತುಂಬಿರುವ ಅಪಾರವಾದ ಸಂಸಾರ ಸಮುದ್ರದಲ್ಲಿ ಮುಳುಗುತ್ತ ಏಳುತ್ತ ದುಮಾ೯ಗಿ೯ಯೂ ಕುಮತಿಯೂ ಆದ ಜೀವನು ಅಲೆಯುತ್ತಾನೆ.
ಸೂಯ೯ನ ಕಿರಣಗಳಿಂz ಉಂಟಾದ ಮೇಘವು ಸೂಯ೯ನನ್ನೇ ಮರೆಮಾಡಿ ಹೇಗೆ ಮೆರೆಯುದೋ ಹಾಗೆಯೇ ಆತ್ಮನಿಂದಲೇ ಉತ್ಪನ್ನವಾದ ಅಹಂಕಾರವೂ ಕೂಡ ಆತ್ಮ ಸ್ವರೂಪವನ್ನುಮರೆಮಾಡಿ ತಾನೇ ಮೆರೆಯುತ್ತದೆ.
ಆವರಣ ಶಕ್ತಿ ಮತ್ತು ವಿಕ್ಷೇಪ ಶಕ್ತಿ:ನಿಬಿಡವಾದ ಮೇಘಗಳಿಂದ ಸೂಯ೯ನು ಮರೆಯಾದ ದುದಿ೯ನ
ದಲಿ ್ಲ ಉಗ್ರವೂ ಶೀತಲವೂ ಆದ ಬಿರುಗಾಳಿಯು ಹೇಗೆ ಈ ಲೋಕದ ಜನರನ್ನು ವ್ಯಥೆಗೊಳಿಸುವುದೋ ಹಾಗೆಯೇ ನಿಬಿಡವಾದ ಅಜ್ಞಾನಾಂಧಕಾರವು ಆತ್ಮನನ್ನು ಆವರಿಸಿದಾಗ ತೀವ್ರವಾದ ವಿಕ್ಷೇಪ ಶಕ್ತಿಯು ಮೂಢಬುದ್ಧಿಯನ್ನು ಅನೇಕ ವ್ಯಸನಗಳಿಂದ ವ್ಯಥೆಗೊಳಿಸುತ್ತದೆ5.
ಅವಿದ್ಯೆಗೆ ಅಥವಾ ಮಾಯೆಗೆ ಅವ್ಯಕ್ತವೆಂಬ ಹೆಸರಿದೆ.ಇದು ಅನಾದಿ ಪರಮೇಶ್ವರನ ಶಕ್ತಿ.ಸತ್ವ ರಜೋ ತಮಗಳನ್ನೊಳಗೊಂಡಿದೆ.ತನ್ನಕಾಯ೯ವಗ೯ಕ್ಕಿಂತ ಶ್ರೇಷ್ಠವಾದದ್ದು.ಇದನ್ನು ಧೀಮಂತನಾದವನು ಕಾಯ೯ದಿಂದ ಅನುಮಾನಿಸಬೇಕು ಪರಮೇಶ್ವರನ ಶಕ್ತಿಯಾದ ಮಾಯೆಯು ಸದ್ರೂಪವಲ್ಲ. ಅಸದ್ರೂಪವಲ್ಲ. ಸತ್_ ಅಸತ್ ರೂಪವೂ ಅಲ್ಲ. ಪರಮೇಶ್ವರನಿಗಿಂತ ಭಿನ್ನವೂ ಅಲ್ಲ. ಅಭಿನ್ನವೂ ಅಲ್ಲ. ಅದು ಸಾವಯವವೂ ಅಲ್ಲ.ನಿರವಯವವೂ ಅಲ್ಲ.ಅದು ಅನಿವ೯ಚನೀಯ ರೂಪವಾಗಿದೆ.
'ಇದು ಹಾವು' ಎಂಬ ಭ್ರಾಂತಿಯು 'ಇದು ಹಗ್ಗ"ಎಂಬ ವಿವೇಕದಿಂದ ಹೇಗೆ ನಾಶವಾಗುವುದೊ ಹಾಗೆ ಶುದ್ಧವೂ ಅದ್ವಿತೀಯವೂ ಆದ ಪರಬ್ರಹ್ಮದ ಜ್ಞಾನದಿಂದ ಈ ಮಾಯೆಯು ನಾಶವಾಗುವುದು.ಸತ್ವರಜಸ್ಸು,ತಮಸ್ಸು ಎಂಬ ಆ ಮಾಯೆಯ ಸಂಬಂಧಿಗಳಾದ ಗುಣಗಳು ವ್ಯಕ್ತವಾಗಿರುವ ತಮ್ಮ ಕಾಯ೯ಗಳಿಂದಲೇ ಪ್ರಸಿದ್ಧವಾಗಿವೆ.
'ತತ್ವಮಸಿ'ಮಹಾವಾಕ್ಯದಲ್ಲಿಂiÀiುೂ ಕೂಡ ಜೀವೇಶ್ವರರಿಗೆ ಸಮಾನವಾದ ಚೈತನ್ಯವನ್ನು ಮಾತ್ರ ಗ್ರಹಿಸಿ ಉಪಾಧಿಯ ದೆಸೆಯಿಂದ ಆಗಂತುಕವಾಗಿ ಉಂಟಾಗಿರುವ ಸವ೯ಜ್ಞತ್ವ,ಅಲ್ಪಜ್ಞತ್ವ,ಮೊದಲಾದ ವಿಶೇಷಣಗಳನ್ನು ಬಿಡಬೇಕು.ಆಗ ಅವರಿಬ್ಬರಲ್ಲಿನ ಐಕ್ಯವು ಸಿದ್ಧಿಸುಉತ್ತದೆ.ಹೀಗೆ ನೂರಾರು ಉಪನಿಷತ್ ವಾಕ್ಯಗಳು ಜೀವ ಪರಮಾತ್ಮರ ಐಕ್ಯವನ್ನೂ ಅಖಂಡಬಾವವನ್ನೂ ಹೇಳುತ್ತವೆ.
Àಂದ,ಶ್ರೀ ವಿದ್ಯಾರಣ್ಯಮುನಿ ಪ್ರಣೀತ'ಪಂಚದಶೀ',ಶ್ರೀ ರಾಮಕೃಷ್ಣಾಶ್ರಮ,
ಯಾದವಗಿರಿ,ಮೈಸೂರು 20,ಮೂರನೆಯ ಮುದ್ರಣ,1೯೯5.
ಅಧ್ಯಾಯ 8 ಅಧ್ಯಾಸದ ಪರಿಕಲ್ಪನೆ ಅಡಿಟಿಪ್ಪಣಿಗಳು
1)ಶ್ರೀಮತ್ ಭಗವತ್ಪಾದ ಪ್ರಣೀತ ವಿವೇಕ ಚೂಡಾಮಣಿ, ಸ್ವಾಮಿ ಆದಿದೇವಾನಂದ ಶ್ರೀರಾಮ
ಕೃಷ್ಣಾಶ್ರಮ,ಮೈಸೂರು 20 ಆರನೆಯ ಮುದ್ರಣ 1೯87 ಪುಟ78
2)ಶ್ರೀಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮಿಗಳು,ಶಾಂಕರ ವೇದಾಂತ ಸಾರ,ಅಧ್ಯಾತ್ನ ಪ್ರಕಾಶ ಕಾಯಾ೯ಲಯ,ಹೊಳೆನರಸೀಪುರ,ಹಾಸನ ಜಿಲ್ಲೆ,ಮೂರನೆಯ ಮುದ್ರಣ2000 ಪುಟ21
3)ಅದೇ ಪುಟ28
4)ಸಾಯಣ ಮಾಧವ ವಿರಚಿತ'ಶಾಂಕರ ದಶ೯ನ',ಅನುವಾದಕರು ಶೇಷಾಚಲ ಶಮ೯,ಸಂಪಾದಕರು
ಹಾ.ಮಾ.ನಾಯಕ ಮತ್ತುಕೆ.ಬಿ ರಾಮಕೃಷ್ಣರಾವ್,ಕನ್ನಡ ಅಧ್ಯಯನ ಸಂಸ್ಥೆ,ಮೈಸೂರು ವಿಶ್ವ ವಿದ್ಯಾಲಯ,ಮಾನಸ ಗಂಗೋತ್ರಿ,ಮೈಸೂರು. ಮೊದಲನೇ ಮುದ್ರಣ,1೯7೯
5)ಸ್ವಾಮಿ ಆದಿದೇವಾನಂದ,ವಿವೇಕ ಚೂಡಾಮಣಿ, ಆರನೆಯ ಮುದ್ರಣ1೯87, ಪುಟ81
ಅದ್ಯಾಯ ೯: ಜ್ಞಾನ ಮೀಮಾಂಸೆ
ತತ್ವಜಿಜ್ಞಾಸುಗಳು ಅನಾದಿಕಾಲದಿಂದಲೂ ತಮ್ಮ ದಶ೯ನಗಳ ಪ್ರತಿಪಾದನೆಯಲ್ಲಿಕೆಲವು ಸಂಪ್ರದಾಯಗಳನ್ನು ಬೆಳೆಸಿಕೊಂಡು ಬಂದಿದ್ದಾರೆ.ತತ್ವಜಿಜ್ಞಾಸೆಗೆ ವಿಷಯಗಳಾಗಿರುವ ತತ್ವಗಳು ಮೂರು.1)ಚಿತ್ ಅಥವಾ ಚೈತನ್ಯರೂಪಿಯಾದ ಆತ್ಮನು2)ಅಚಿತ್ ಅಥವಾ ಅಚೇತನವೂ ಜಡವೂ ಆದ ಪ್ರಪಂಚ3)ಇವಕ್ಕೆ ಕಾರಣವಾದ ತತ್ವ ಈಶ್ವರ.
ಪ್ರತಿಯೊಬ್ಬ ಮನುಷ್ಯನ ಮನಸ್ಸಿನಲ್ಲಿಯೂ ಒಂದಲ್ಲ ಒಂದುಸಲ ಜೀವನಕ್ಕೆ ಸಂಬಂಧಪಟ್ಟ ಕೆಲವು ಮೂಲಭೂತವಾದ ಪ್ರಶ್ನೆಗಳು ಹುಟ್ಟುತ್ತವೆ.ಹುಟ್ಟು ಸಾವುಗಳೆಂದರೇನು?ಈ ಪ್ರಪಂಚದಲ್ಲಿರುವ ಎಲ್ಲಾ ಭೂತಗಳೂ ಎಲ್ಲಿಂದ ಬಂದವು/ಹೇಗೆ ಬಂದವು?ಅವು ಹೇಗೆ ಜೀವಿಸುತ್ತವೆ?ಕೊನೆಗೆ ಅವುಗಳ ಗತಿ ಏನು?ದೇಹ ಬೇರೆ ಆತ್ಮಬೇರೆಯೇ?ಆತ್ಮವೆಂದರೇನು?ಮರಣಾನಂತರ ಮನುಷ್ಯನ ಗತಿ ಏನಾಗುತ್ತದೆ?ಇತ್ಯಾದಿ ಪ್ರಶ್ನೆಗಳು ಮತ್ತೆಮತ್ತೆ ಬರುತ್ತಲೇ ಇರುತ್ತವೆ.
ಇತ್ಯಾದಿ ಪ್ರಶ್ನೆಗಳಿಗೆ ಮಾನವನ ಸಂಸ್ಕøತಿಯ ಇತಿಹಾಸದಲ್ಲಿದೇಶ,ಕಾಲ, ಸಂಸ್ಕøತಿಯ ಮಟ್ಟವನ್ನು ಅನುಸರಿಸಿ ತಾತ್ವಿಕರಿಂದ ಬೇರೆಬೇರೆ ಉತ್ತರಗಳು ಬರುತ್ತಲೇ ಇವೆ.ಉತ್ತರಗಳು ಬದಲಾಯಿಸುತ್ತಿದ್ದರೂ ಪ್ರಶ್ನೆಗಳು ಮಾತ್ರ ಶಾಶ್ವತವಾಗಿ ಹಾಗೆಯೇ ಉಳಿದಿವೆ.ಬಾಳಿನ ಬಗೆಗೆ ನಮಗೆ ತಿಳಿದಿರುವುದು ಅತ್ಯಲ್ಪ.ಜೀವನ ರಹಸ್ಯವನ್ನು ಭೇದಿಸುವ ಸಾಹಸ ಸತತವಾಗಿ ನಡೆಯುತ್ತಲೇ ಇದೆ.ಆದರೂ ಜೀವನದ ಆದಿ ಅಂತ್ಯಗಳ ರಹಸ್ಯ ಗೂಢವಾಗಿಯೇ ಇವೆ.ಆದರೂ ಜಿಜ್ಞಾಸುಗಳು ,ಚಿಂತನಾಪರರು ಈ ರಹಸ್ಯಗಳನ್ನು ವಿಮಶಿ೯ಸಿಅವನ್ನು ಮೂರು ಪ್ರಧಾನ ತತ್ವಗಳಿಗೆ ಇಳಿಸಿದ್ದಾರೆ.ಇವೇ ಚಿತ್,ಅಚಿತ್ ಮತ್ತು ಈಶ್ವರ1.
ಈ ಮೂರೂ ತತ್ವಗಳು ಜಿಜ್ಞಾಸೆಗೆ ವಿಷಯಗಳು.ಇವನ್ನು ಪ್ರಮೇಯಗಳೆಂದು ಕರೆಯುತ್ತಾರೆ.ಈ ಪ್ರಮೇಯಗಳ ಸತ್ಯಾಸತ್ಯಗಳು,ಸ್ವಭಾವ, ಪರಸ್ಪರ ಸಂಬಂಧಗಳನ್ನು ಯುಕ್ತಿಯುಕ್ತವಾಗಿ ವಿಚಾರಮಾಡಿ,ವಿಮಶಿ೯ಸಿ ಸಿದ್ಧಾಂತಗಳನ್ನು ಮಾಡುವುದೇ 'ದಶ೯ನ"ಗಳ ಗುರಿ.ಇಂತಹ ಸಿದ್ಧಾಂತಗಳನ್ನು ಸ್ಥಾಪಿಸಬೇಕಾದರೆ ಕೆಲವು ವಿಶ್ವಸನೀಯವಾದ ಸಾಧನಗಳು ಬೇಕು.ಈ ಸಾಧನಗಳಿಗೆ ಪ್ರಮಾಣಗಳೆಂದು ಹೆಸರು.ಈ ಪ್ರಮಾಣಗಳ ಆಧಾರದ ಮೇಲೆ ಪ್ರಮೇಯಗಳ ಸ್ವರೂಪ ಸ್ವಭಾವ ಮೊದಲಾದವನ್ನು ನಿಣ೯ಯಿಸುತ್ತಾರೆ.ಪ್ರಮಾಣಗಳಿಂದವಸ್ತುಗಳ ಯಥಾಥ೯ ಜ್ಞಾನವನ್ನು ಪಡೆಯುತ್ತೇವೆ.ಈ ಯಥಾಥ೯ ಜ್ಞಾನಕ್ಕೆ ಪ್ರಮೆ ಎಂದು ಹೆಸರು.ಒಂದು ವಸ್ತುವನ್ನು ಅದು ಇದ್ದಂತೆಯೇ ತಿಳಿಯುವುದಕ್ಕೆ ಯಥಾಥ೯ ಜ್ಞಾನ ಅಥವಾ ಪ್ರಮೆ ಎಂದು ಹೆಸರು2.
ಹಾಗಲ್ಲದೆ ತಪ್ಪು ತಿಳಿದರೆ "ಭ್ರಮೆ" ಎಂದು ಹೆಸರು.ಹಗ್ಗವನ್ನು ನೋಡಿ ಹಾವೆಂದು ತಿಳಿದರೆ ಅದು ಭ್ರಮೆ. ಹೀಗೆ ಪ್ರಮೆಗೆ ಸಾಧನ ಪ್ರಮಾಣ.ಪ್ರಮಾಣಗಳ ಮೂಲಕ ಪ್ರಮೇಯಗಳ ಪ್ರಮೆಯನ್ನು ನಾವು ಅರಿಯುತ್ತೇವೆ.
ಪ್ರಮೆ ಎಂದರೇನು? ಅದು ಯಥಾಥ೯ಜ್ಞಾನ ಎಂದು ಹೇಳಲ್ಪಟ್ಟಿದೆ.ಆದರೆ ಯಥಾಥ೯ ಜ್ಞಾನವೆಂದರೇನು?ಎಂಬುದು ಪ್ರಶ್ನೆ. ಈ ಪ್ರಶ್ನೆಗೆ ಭಾರತೀಯ ದಾಶ೯ನಿಕರಿಂದಲೂ (ಪಾಶ್ಚಾತ್ಯರ ಅನುಭವಗಳೂ ಕೂಡ ) ನಾನಾ ಬಗೆಯ ಉತ್ತರಗಳು ಬಂದಿವೆ. ಚಾವಾ೯ಕರಿಗೆ ಇಂದ್ರಿಯ ಗೋಚರವಾಗುವ ಎಲ್ಲಾ ಅನುಭವಗಳೂ ಪ್ರಮೆಯೇ.ಆದ್ದರಿಂದ ಅವರಿಗೆ ಪ್ರತ್ಯಕ್ಷವೇ ಪ್ರಮಾಣ.
ಬೌದ್ಧರು,ನ್ಯಯಾಯಿಕರು ಮೊದಲಾದವರಿಗೆ ಅನುಮಾನ ಅಥವಾ ಯುಕ್ತಿಯುಕ್ತ ವಿವೇಚನೆಯೂ ಪ್ರಮಾಣವೇ.ಹೀಗಾಗಿ ಯಥಾಥ೯ಜ್ಞಾನದ ಸ್ವಭಾವದ ನಿರೂಪಣೆಯಲ್ಲಿ ದಾಶ೯ನಿಕರಲ್ಲಿ ನಾನಾ ಬಗೆಯ ವಿವರಣೆಗಳಿವೆ.ಆಸ್ತಿಕ ದಶ೯ನಗಳಿಗೆಲ್ಲಾ ಶಬ್ದ ಅಥವಾ ವೇದಗಳೂ ಪ್ರಮಾಣವೇ.
ತ್ರಿಪುಟೀ ಪ್ರತ್ಯಕ್ಷ:
ನಮಗೆ ಅನುಭವಕ್ಕೆ ಬರುವ ಪ್ರತಿಯೊಂದು ಪದಾಥ೯ದ ಜ್ಞಾನ ಉಂಟಾಗುವಾಗಲೂ ಮೂರು ಅಂಶಗಳು ಇರುತ್ತವೆ.ಜ್ಞಾತೃ(ತಿಳಿಯುವವನು),ಜ್ಞೇಯ(ತಿಳಿಯಬೇಕಾದ ವಿಷಯ ಅಥವಾ ವಸ್ತು),ಜ್ಞಾನ ಜ್ಞಾತೃ ಜ್ಞೇಯಗಳ ಸಂಪಕ೯ದಿಂದ ಸಂಭವಿಸುವ ತಿಳುವಳಿಕೆ ಈ ಮೂರೂ ಅಂಶಗಳು ಸೇರಿದ ಅನುಭವಕ್ಕೆ "ತ್ರಿಪುಟೀ ಪ್ರತ್ಯಕ್ಷ"ವೆಂದು ಹೆಸರು3.
ನೈಯಾಯಿಕರು ಒಂದು ವಸ್ತುವನ್ನು ಅದು ಇದ್ದಂತೆಯೇ ಗ್ರಹಿಸುವ ಅನುಭವಕ್ಕೆ ಪ್ರಮೆ ಎಂದು ಹೇಳುತ್ತಾರೆ.ಇವರು ಪರತಃ ಪ್ರಮಾಣವಾದಿಗಳು.ಅನುಭವದ ಪ್ರಾಮಾಣ್ಯವನ್ನು ತಿಳಿದು ಕೊಳ್ಳಬೇಕಾದರೆ ಅದು "ಸಫಲ ಪ್ರವೃತ್ತಿ ಜನಕ"ವಾಗಿರಬೇಕು4.ಎಂದರೆ ವುವಹಾರದಲ್ಲಿ ನಿರೀಕ್ಷಿಸಿದ ಫಲ ಪ್ರವೃತ್ತಿಯುಂಟಾಗಬೇಕು.ಯಾವುದು ಸಫಲ ಪ್ರವೃತ್ತಿಯನ್ನು ಉಂಟು ಮಾಡುತ್ತದೆಯೋ ಅದೇ ಪ್ರಮೆ.
ಬೌದ್ಧರೂ ಒಂದುಬಗೆಯಲ್ಲಿ ಪ್ರಮೆಗೆ ಇದೇ ಲಕ್ಷಣವನ್ನೇ ಹೇಳುತ್ತಾರೆ.ಅವರಿಗೆ "ಅಥ೯ಕ್ರಿಯಾಕಾರಿತ್ವ" ಅಥವಾ "ಪವೃತ್ತ್ಯನುಕೂಲ"ವೇ ಅಂದರೆ ಕಾಯ೯ದಲ್ಲಿ ನಿರೀಕ್ಷಿಸಿದ ಫಲವನ್ನುಂಟು ಮಾಡುವುದೆ ಪ್ರಮೆ5.ಆದರೆ ನೈಯಾಯಿಕರಿಗೆ "ಸಫಲ ಪ್ರವೃತ್ತಿ ಜನಕತ್ವ" ಪ್ರಮೆಯ ಲಕ್ಷಣವಲ್ಲ.ಅದು ಪ್ರಾಮಾಣ್ಯವನ್ನು ನಿಧ೯ರಿಸುವ ಮಾಗ೯.ಬೌದ್ಧರಿಗೆ ಅಥ೯ಕ್ರಿಯಾಕಾರಿತ್ವವೇ ಪ್ರಮೆಯ ಲಕ್ಷಣ.
ಜೈನರು ಸ್ಯಾದ್ವಾದಿಗಳು ಅಥವಾ ನಯವಾದಿಗಳು.ಅಂದರೆ ಜಗತ್ತಿನಲ್ಲಿ ವಸ್ತುಗಳ ವಿಚಾರದಲ್ಲಿ ಯಾವುದನ್ನೂ ನಿಧಾ೯ರವಾಗಿ ನಿಶ್ಚಿತವಾಗಿ ಹೇಳಲಾಗುವುದಿಲ್ಲ.ಪ್ರಮೆಯನ್ನು ನಾನಾ ಬಗೆಯಲ್ಲಿ ನಿದೇ೯ಶಿಸಬಹುದು.ಈ ಬಗೆಗಳು ಏಳು.ಅವು ಯಾವುವೆಂದರೆ
1)ಸ್ಯಾತ್ ಅಸ್ತಿ(ಇರಬಹುದು)ಇದೆ.
2)ಸ್ಯಾತ್ ನಾಸ್ತಿಇಲ್ಲ
3)ಸ್ಯಾತ್ ಅಸ್ತಿನಾಸ್ತಿ(ಇದೆ ಮತ್ತು ಇಲ್ಲ)
4)ಸ್ಯಾತ್ ಅವಕ್ತವ್ಯ(ನಿಧ೯ರಿಸಿ ಹೇಳಲಾಗದು)
5)ಸ್ಯಾತ್ ಅಸ್ತಿ ಅವಕ್ತವ್ಯ+ಇದೆ
6)ಸ್ಯಾತ್ ನಾಸ್ತಿ ಅವಕ್ತವ್ಯ+ಇಲ್ಲ
7)ಸ್ಯಾತ್ ಅಸ್ತಿನಾಸ್ತಿ ಇದೆ ಮತ್ತು ಇಲ್ಲ+ಅವಕ್ತವ್ಯ
ಈ ಏಳು ರೀತಿಗಳಿಗೆ ಸಪ್ತಭಂಗಿ ಎಂದು ಹೆಸರು.ಹೀಗೆ ಪ್ರಮೆಯನ್ನು ನಾನಾರೀತಿಯಲ್ಲಿನಿದೇ೯ಶನ ಮಾಡಿರುವುದರಿಂದದಕ್ಕೆ ಅನೇಕಾಂತವಾದ ಎಂದೂ ಹೆಸರಿದೆ6.ಇದಲ್ಲದೆ ಜೈನಮತದಲ್ಲಿ ಕೇವಲ ಜ್ಞಾನವೆಂಬ ಒಂದು ಜ್ಞಾನದ ಪರಿಪೂಣಾ೯ವಸ್ಥೆಯೂ ಇದೆ.ಆದರೆ ಇದು ವ್ಯವಹಾರಕ್ಕೆ ಮೀರಿದುದು.
ಪ್ರಾಭಾಕರ ಮೀಮಾಂಸಕರು ಅನುಭವವೇ ಪ್ರಮೆ ಎಂದು ವಾದಿಸುವರು.ನಮ್ಮ ಅನುಭವಕ್ಕೆ ಗೋಚರವಾಗುವ ಪ್ರತಿಯೊಂದುಜ್ಞಾನವೂ ಪ್ರಮೆಯೇ.ವಿವಾದಕ್ಕೆ ಆಸ್ಪದವನ್ನು ಕೊಡುವ ಅನುಭವವದರೂಕೂಡ ಅದು ಅನುಭವಕ್ಕೆ ವಿಷಯವಾದ ಮಾತ್ರದಿಂದಲೇ ಪ್ರಮೆ ಎನಿಸುತ್ತದೆ.
ಅದ್ವೈತದಲ್ಲಿಯಾದರೊ"ಅವಿರೋಧಿತತ್ವ"ಅಥವಾ "ಅಬಾಧಿತತ್ವ" ಪ್ರಮೇಯದ ಮುಖ್ಯ ಲಕ್ಷಣ7. ನಮಗಾದ ಅನುಭವವು ಸುಳ್ಳೆಂದು ತೋರಿಸುವ ಬೇರೊಂದು ಜ್ಞಾನದ ಅಭಾವವೇ “ಅಬಾಧಿತತ್ವ ". ಇದಲ್ಲದೆ ಜ್ಞಾನವು ಹೊಸದಾಗಿರಬೇಕು. ಮೊದಲೇ ತಿಳಿದದ್ದಾಗಿರದೆ ಹೊಸದಾಗಿ ಅನುಭವಕ್ಕೆ ವಿಷಯವಾಗಿರಬೇಕು.ಆದ್ದರಿಂದ ಅದ್ವೈತದಲ್ಲಿ "ಅನಧಿಗತತ್ವ" ಮತ್ತು "ಅಬಾದಿತತ್ವ" ಇವೇ ಪ್ರಮೆಯ ಪ್ರಧಾನ ಲಕ್ಷಣಗಳು.ಅದ್ವೈತವು ಸ್ವತಃ ಪ್ರಾಮಾಣ್ಯವಾದವನ್ನು ಅಂಗೀಕರಿಸುತ್ತದೆ8=.
ನೈಯಾಯಿಕರು ಜ್ಞಾನವು "ಉತ್ಪತ್ತಿ"ಯಲ್ಲಿಯೂ "ಜ್ಞಪ್ತಿ"ಯಲ್ಲಿಂiÀೂ
ಪರತಃಪ್ರಾಮಾಣ್ಯವೆಂದು ವಾದಿಸುತ್ತಾರೆ. ಅಂದರೆ ಮನಸ್ಸು ಒಂದು ಬಾಹ್ಯ ವಸ್ತುವಿನೊಡನೆ ಸಂಪಕ೯
ಪಡೆದಾಗ ಜ್ಞಾನದ ಉತ್ಪತ್ತಿಯಾಗುತ್ತದೆ.ಹಾಗೆಯೇ ಅದರ ಪ್ರಾಮಾಣ್ಯವನ್ನು ನಿಧ೯ರಿಸುವುದಕ್ಕೂ "ಸಫಲಪ್ರವೃತ್ತಿಜನಕವೆಂಬ ಒಂದು ಬಾಹ್ಯ ಲಕ್ಷಣವನ್ನೇ ಆಶ್ರಯಿಸಿದೆ.ಆದುದರಿಂದ ಉತ್ಪತ್ತಿಯಲ್ಲಿಯೂ ಜ್ಞಪ್ತಿಯಲ್ಲಿಯೂ ಜ್ಞಾನವು ಪರತಃಪ್ರಮಾಣ.ಆದರೆ ಅದ್ವೈತದಲ್ಲಿಜ್ಞಾನವು ಉತ್ಪತ್ತಿಯಲ್ಲಿ ಸ್ವತಃಪ್ರಮಾಣ ಜ್ಞಾನವು ಸ್ವಪ್ರಕಾಶ.ಜ್ಞಾನವು ಸ್ವಭಾವತಃ 'ಬೋಧಕ'ವೇಹೊರತು "ಬಾಧಕ"ವಲ್ಲ.ಅಂದರೆ ಜ್ಞಾನವು ಒಂದು ವಸ್ತುವನ್ನು ತೋರಿಸಬಲ್ಲದೇ ಹೊರತು ನೇರವಾಗಿ ಇನ್ನೊಂದು ಜ್ಞಾನವನ್ನು ಸುಳ್ಳೆಂದು ತೋರಿಸಲಾರದು.
ಆದರೂ ಅಪರೋಕ್ಷವಾಗಿ ಒಂದು ಜ್ಞಾನವು ಮತ್ತೊಂದು ಜ್ಞಾನಕ್ಕೆ ವಿರೋಧವಾಗಿರುವುದರಿಂದ ಬಾಧಕವಾಗಬಹುದು.ಹೀಗೆ ಒಂದು ಅನುಭವದಿಂದ ಇನ್ನೊಂದು ಅನುಭವಕ್ಕೆ ಬಾಧೆಯುಂಟಾದಾಗ ಅದು ಸುಳ್ಳಾಗುತ್ತದೆ.ಹೊರಗಿನ ಒಂದು ಅನುಭವದಿಂದ ಇನ್ನೊಂದು ಅನುಭವಕ್ಕೆ ಬಾಧೆಯಾಗುವುದರಿಂದ ಜ್ಞಾನಕ್ಕೆ ಅಪ್ರಾಮಾಣ್ಯ ಪರತಃ ಆದರೆ ಪ್ರಾಮಾಣ್ಯ ಸ್ವತಃ ಎಂದಮೇಲೆ ಅದ್ವೈತದಲ್ಲಿ ಜ್ಞಾನವುಸ್ವತಃ ಪ್ರಾಮಾಣ್ಯ;ಪರತಃ ಅಪ್ರಾಮಾಣ್ಯ೯.
ಭ್ರಮೆ:
ಭ್ರಮೆ ಎಂದರೆ ಅಯಥಾಥ೯ ಜ್ಞಾನ.ನೈಯಾಯಿಕರು ಭ್ರಮೆಯನ್ನು"ಅನ್ಯಥಾ ಖ್ಯಾತಿ' ಎಂದು ಕರೆಯುತ್ತಾರೆ10.ಒಂದು ವಸ್ತುವನ್ನು ಮತ್ತೊಂದು ವಸ್ತುವೆಂದು ತಿಳಿಯುವುದೇ ಭ್ರಮೆ. ಅನ್ಯಥಾ ಖ್ಯಾತಿ ಎಂದರೆ ವಸ್ತುವು ಇರುವುದಕ್ಕಿಂತ ಬೇರೆಯಾದ ಜ್ಞಾನ.ಇಂತಹ ಜ್ಞಾನದಲ್ಲಿ ಅನುಭವಕ್ಕೆ ಗೋಚರವಾದ ಧಮ೯ವಿಲ್ಲ.ಅದರಲ್ಲಿ ಧಮಿ೯ಯಲ್ಲಿ ಇಲ್ಲದ ಧಮ೯ವನ್ನು ಕಾಣುವುದು ಅಥವಾ ಬೇರೊಂದು ಧಮಿ೯ಯಲ್ಲಿರುವ ಧಮ೯ವನ್ನು ಈ ಧಮಿ೯ಯಲ್ಲಿರುವಂತೆ ತಿಳಿಯುವುದು.
ಕಪ್ಪೆಯ ಚಿಪ್ಪನ್ನು ನೋಡಿ ಬೆಳ್ಳಿಯೆಂದು ಭ್ರಮೆಗೊಂಡರೆ ಬೇರೊಂದು ಕಡೆ ಇರುವ ಬೆಳಿ¼ಯ ಧಮ೯ವನ್ನು ಎದುರಿಗಿರುವ ಧಮಿ೯ಯಾದ ಕಪ್ಪೆಯ ಚಿಪ್ಪಿನಲ್ಲಿ ಕಾಣುತ್ತೇವೆ.ದಮಿ೯ ಅದೇ ಉಳಿದರೂ ಮೊದಲು ಕಂಡ ಧಮ೯ ಅದರಲ್ಲಿ ಇಲ್ಲದೆ ಹೋಗುತ್ತದೆ. ಅನ್ಯಥಾಖ್ಯಾತಿಯಲ್ಲಿ ಧಮಿ೯ಯ ಅರಿವು "ಲೌಕಿಕ ಸನ್ನಿಕಷ೯"ದಿಂದ ಆಗುತ್ತದೆ.ಆದರೆ ಧಮ೯ದ ಅರಿವು "ಅಲೌಕಿಕ ಸನ್ನಿಕಷ೯"ದಿಂದ ಆಗುತ್ತದೆ11=.
ಬೌದ್ಧರಲ್ಲಿ ಮಾಧ್ಯಮಿಕರು ಭ್ರಮೆಯನ್ನು ಅಸತ್ ಖ್ಯಾತಿ ಎಂದು ಕರೆಯುತ್ತಾರೆ.ಅಸತ್‍ಖ್ಯಾತಿ ಎಂದರೆ ಇಲ್ಲದುದನ್ನು ಇದೆಯೆಂದು ಭಾವಿಸುವ ಬ್ರಾಂತಿ ಎಂದಥ೯.ಹಗ್ಗದಲ್ಲಿ ಹಾವಿಲ್ಲದೇ ಹೋದರೂ ಅದು ಅಲ್ಲಿ ಇದೆ ಎಂದು ಭಾವಿಸಿ ಮೋಸಹೋಗುವುದರಿಂದ ಇಲ್ಲದುದನ್ನು ಇದೆ ಎಂದು ತಿಳಿದಂತಾಗುತ್ತದೆ.ಇದೇ ಅಸತ್ ಖ್ಯಾತಿ .ಬೌದ್ಧರಲ್ಲಿ ಯೋಗಾಚಾರ ಮತದವರು ಜ್ಞಾನವನ್ನುಳಿದು ಯಾವ ವಸ್ತುವೂ ಸ್ವಂತ್ರವಾಗಿರಲಾರದು ಎಂದು ಹೇಳುತ್ತಾರೆ.ವಸ್ತುವಿವ ಜ್ಞಾನವೇ ವಸ್ತುವಲ್ಲದೆ ಬೇರೆ ವಸ್ತುವೆಂಬುದಿಲ್ಲ.ಆದುದರಿಂದ ಜ್ಞೇಯವೆನ್ನಬಹುದಾದ ಬೇರೆ ವಸ್ತುವಿಲ್ಲ.ಜ್ಞಾನವೇ ಜ್ಞಾತ್ರವೂ ಜ್ಞೇಯವೂ ಕೂಡ12.
ಇದಲ್ಲದೆ ಸತ್ ಖ್ಯಾತಿ ಎಂಬ ವಿವರಣೆಯೂ ಭ್ರಮೆಯ ವಿಷಯದಲ್ಲಿದೆ.ಇದಕ್ಕನುಸಾರ ನಾವು ಭ್ರಮೆಯಲ್ಲಿ ಇರತಕ್ಕ ವಸ್ತುವನ್ನೇ ನೋಡುತ್ತೇವೆ.ಇಲ್ಲದೇ ಇರುವ ವಸ್ತುವನ್ನಲ್ಲ.ಹಾಗಿರದೇ ಹೋದರೆ ಅದರ ಅರಿವು ನಮಗೆ ಆಗುವುದಕ್ಕೆ ಸಾಧ್ಯವೇ ಇಲ್ಲ.ಎದುರಿಗಲ್ಲದೇ ಹೋದರೂ ಬೇರೊಂದು ಕಡೆಯಾದರೂ ಅದುಇರಲೇ ಬೇಕು ಎ0ಬುದೇ ಇದರ ಭಾವ.ಅದ್ವೈತವು ಇಂತಹ ನಾನಾ ಬಗೆಯ ವಾದಗಳನ್ನು ಖಂಡಿಸಿ ಭ್ರಮೆಯನ್ನು ಅನಿವ೯ಚನೀಯ ಖ್ಯಾತಿ ಎಂದು ನಿದೇ೯ಶಿಸಿದೆ13.
ಅದ್ವೈತ ಸಿದ್ಧಾಂತದ ಅನುಸಾರ ಒಂದು ಅನುಭವವನ್ನು ಭ್ರಮೆ ಎಂದು ಹೇಳಬೇಕಾದರೆ ಅದು ಬಾಧಿತವಾಬೇಕು.ಎಂದರೆ ಬೇರೊಂದು ಅನುಭವದ ಮೂಲ ಸುಳ್ಳೆಂದು ಸಿದ್ಧವಾಗಬೇಕು.ಇಂತಹ ಭ್ರಮೆ ಸತ್ಯವೇ ಅಸತ್ಯವೇ?ಅದು ಬಾಧಿತವಾಗಿ ಸುಳ್ಳೆನಿಸಿ ಹೋಗುವುದರಿಂದ ಅದನ್ನು ಸತ್ಯವೆಂದು ಹೇಳಲಾಗುವುದಿಲ್ಲ.ಆದರೆ ಅದು ಎಲ್ಲಿಯವರೆಗೆ ಬಾಧಿತವಾಗುವುದಿಲ್ಲವೋ ಅದುವರೆಗೆ ಇದ್ದೇ ಇರುವುದರಿಂದ ಸತ್ಯವೇ.ಹೀಗೆ ಭ್ರಮೆ ಒಂದು ವಿಧದಲ್ಲಿ ಸತ್ಯ ಇನ್ನೊಂದು ವಿಧದಲ್ಲಿ ಅಸತ್ಯ.
ಆದರೆ ಭ್ರಮೆಯನ್ನು ಏಕಕಾಲದಲ್ಲಿ ಸತ್ಯ ಹಾಗೂ ಅಸತ್ಯ ಎಂದು ನಿದೇ೯ಶಿಸಿದರೆ ವಿರೋಧಾಭಾಸವಾಗುತ್ತದೆ.ಆದುದರಿಂದ "ಪರಿಶಿಷ್ಟಾನುಮಾನ" ಕ್ರಮವನ್ನನುಸರಿಸಿ ಇನ್ನು ಉಳಿದ ಒಂದೇ ವಿವರಣೆಯೆಂದರೆ ಅದು ಸತ್ಯವೂ ಅಲ್ಲ ಅಸತ್ಯವೂ ಅಲ್ಲ.ಇವೆರಡಕ್ಕೂ ಬೇರೆಯಾದುದು ಅಥವಾ "ಸದಸದ್ ವಿಲಕ್ಷಣ"14.ಇದಕ್ಕೇ ಅನಿವ೯ಚನೀಯ ಖ್ಯಾತಿ ಎಂದು ಹೆಸರು.ಭ್ರಮೆಯಲ್ಲಿನ ಅನುಭವವು ಬಾಧಿತವಾಗುವುದರಿಂದ ಅದನ್ನು ಸತ್ಯವೆಂದು ಹೇಳಲಿಕ್ಕಾಗುವುದಿಲ್ಲ.ಆದರೂ ಅಂತಹ ಒಂದು ವಸ್ತುವಿಲ್ಲದೆ ಅದರ ಅನುಭವ ಸಾಧ್ಯವಿಲ್ಲ.ಆದ್ದರಿಂದ ಭ್ರಮೆಯಲ್ಲಿ ಆಗುವ ಅನುಭವ ಅನಂತರ ಬರುವ ಅದರ ಬಾಧಕ ಜ್ಞಾನವೆರಡೂ ಒಂದೇ ಬಗೆಯ ಸತ್ತೆಯನ್ನು ಸೂಚಿಸುವುದಿಲ್ಲ.
ಸತ್ತಾತ್ರಯ:ಅದ್ವೈತದಲ್ಲಿ ಮೂರುಬಗೆಯ ಸತ್ತಾ ಅಥವಾ ಸತ್ಯತೆಗಳುಇವೆ:
1)ಪ್ರಾತಿಭಾಸಿಕ ಸತ್ಯ:ಕನಸು,ರಜ್ಜು ಸಪ೯ ನ್ಯಾಯ ಇತ್ಯಾದಿ
2)ವ್ಯಾವಹಾರಿಕ ಸತ್ತಾ:ನಿತ್ಯ ಜೀವನದ ಅನುಭವಗಳು
3)ಪಾರಮಾಥಿ೯ಕ ಸತ್ತಾ:ಅಧ್ಯಾತ್ಮಿಕ ಅನುಭವಗಳು.
ಶ್ರೀಶಂಕರರು ಉಪನಿಷತ್ತುಗಳನ್ನೂ ವೇದಾಂತ ಸೂತ್ರಗಳನ್ನೂ ಭಗವದ್ಗೀತೆಯನ್ನೂ, ಸಮನ್ವಯ ಮಾಡಿ ಅವುಗಳಿಂದ ಒಂದು ಸಮಂಜಸವಾದ ,ಸಮಗ್ರವಾದ ಸಿದ್ಧಾಂತವನ್ನು ಪ್ರತಿಪಾದಿಸಲು ಯತ್ನಿಸಿದ್ದಾರೆ.ಯಾವುದೇ ಪ್ರಮಾಣಗ್ರಂಥವನ್ನು ವಿವೇಚಿಸಬೇಕಾದರೂ ಅದಕ್ಕೆ ಸಾಂಪ್ರದಾಯಿಕವಾಗಿ ವಿಧಿಸಲ್ಪಟ್ಟ ಒಂದು ವಿಧಿ ಇದೆ.ಈ ವಿಧಿ ಆರು ಕ್ರಮಗಳುಳ್ಳವು.ಅವು ಯಾವುವೆಂದರೆ 1)ಉಪಕ್ರಮ 2)ಉಪಸಂಹಾರ 3)ಅಭ್ಯಾಸ 4)ಅಪೂವ೯ತಾ 5)ಫಲ 6)ಅಥ೯ವಾದ. ಈ ಕ್ರಮಗಳನ್ನು ಅನುಸರಿಸಿ ಬಾದರಾಯಣ ಸೂತ್ರಗಳಿಗೆ ಅಥ೯ವಿವರಣೆ ಮಾಡಿದರೆ ಅದ್ವೈತ ತತ್ವವು ತಾನಾಗಿಯೇ ಸಿದ್ಧವಾಗುವುದೆಂದು ಶ್ರೀ ಶಂಕರರ ದೃಢವಾದ ಮತ. ಇವೇ ಮಾತುಗಳು ಉಪನಿಷತ್ತುಗಳಿಗೂ ಅನ್ವಯಿಸುತ್ತದೆ.
ಅನೇಕವೇಳೆ ಪರಸ್ಪರ ವಿರೋದಾಥ೯ಗಳನ್ನು ಸೂಚಿಸುವ ಉಪನಿಷತ್ ವಾಕ್ಯಗಳನ್ನು ಸಮನ್ವಯಗೊಳಿಸಿ ಅವುಗಳಿಂದ ಒಂದು ಸಮಗ್ರವಾದ,ಸಮಂಜಸವಾದ ಹಾಗೂ ಯುಕ್ತಿಯುಕ್ತವಾದ ಸಿದ್ಧಾಂತವನ್ನು ಸಾಧಿಸುವುದೆಂದರೆ ಅದು ಒಂದು ಅಸಾಧ್ಯವಾದ ಸಾಹಸವೇ ಸರಿ.
ಹಾಗೆ ಒಂದು ವೇಳೆ ಪ್ರಯತ್ನಿಸಿದರೆ ಆಗ ಅನಿವಾಯ೯ವಾಗಿ ಶಂಕರರ ಅದ್ವೈತ ತತ್ವವೊಂದೇ ಸಿದ್ದವಾಗತಕ್ಕದ್ದು ಎ0ದು ಅನೇಕ ಪಾಶ್ಚಾತ್ಯರ ಅಭಿಪ್ರಾಯ.(ಕಲೊನೆಲ್ ಜಾಕೊಬ್).
ಗೌಡಪಾದರೆ ಅದ್ವೈತ ವೇದಾಂತ ಪ್ರವತ೯ಕರಲ್ಲಿ ಮೊದಲನೆಯವರೆನ್ನ ಬಹುದು.ಇವರು ತಮ್ಮ ಮಾಂಡೂಕ್ಯಕಾರಿಕೆಯಲ್ಲಿಸಮಗ್ರವಾಗಿ ಸಪ್ರಮಾಣವಾಗಿ ಸಿದ್ದಾಂತ ಮಾಡಿದ್ದಾರೆ.ಈ ಕಾರಿಕೆಯಲ್ಲಿ ನಾಲ್ಕು ಅಧ್ಯಾಯಗಳಿವೆ.
1)ಆಗಮ ಅಧ್ಯಾಯ:ಇದರಲ್ಲಿ ಮಾದೂಕ್ಯೋಪನಿಷತ್ತಿನ ವಾಕ್ಯಗಳಿಗೆ ವ್ಯಾಖ್ಯಾ ವಿವರಗಳಿವೆ.ಇಲ್ಲಿ ತಮ್ಮ ಸಿದ್ಧಾಂತವುಅನುಮಾನ ಮತ್ತು ಶಬ್ದ ಪ್ರಮಾಣಗಳಿಂದ ಸಿದ್ಧವಾಗುವುದೆಂದು ತೋರಿಸಿದ್ದಾರೆ.
2)ವೈತಥ್ಯ ಅಧ್ಯಾಯ:ಪ್ರಪಂಚದ ಮಿಥ್ಯಾತ್ವವನ್ನು ಸಾಧಿಸಿದ್ದಾರೆ.
3)ಅದ್ವೈತ ಅಧ್ಯಾಯ:ಪಾರಮಾಥಿ೯ಕವಾಗಿ ಅದ್ವೈತವೇ ಸತ್ಯವೆಂಬುದನ್ನು ಸಿದ್ದಾಂತ ಮಾಡಿದ್ದಾರೆ
4)ಅಲಾತಶಾಂತಿ ಅಧ್ಯಾಯ:ಒಂದು ದೀವಟಿಗೆಯನ್ನು ಕ್ಥಯಲ್ಲಿ ಹಿಡಿದು ಸುತ್ತುತ್ತಾ ಇದ್ದರೆ ಅದು ಚಕ್ರಾಕಾರವಾಗಿ ಉರಿಯುತ್ತಿರುವಂತೆ ತೋರುತ್ತದೆ.ಈ ಭ್ರಾಂತಿಯನ್ನು ಅಲಾತಚಕ್ರವೆಂದು ನಿದೇ೯ಶಿಸಿದ್ದಾರೆ.ಈ ದೀವಟಿಗೆ ಸುತ್ತುವುದನ್ನೂ ನಿಲ್ಲಿಸಿದರೆ ಅದು ಕೇವಲ ಒಂದಾಗಿ ಕಾನುತ್ತದೆ.
ಪರಿಭ್ರಮಣದಲ್ಲಿರುವ ದೀವಟಿಗೆ ನಾನತ್ವದಿಂದ ತೋರಿ ಚಕ್ರಾಕಾರದ ಬ್ರಾಂತಿುiÀುನ್ನುಂಟು ಮಾಡಿದರೂ ಅಲಾತ ಶಾಂತಿಯಾದ ಮೇಲೆ ಕಾಣುವುದು ಒಂದೇ ದೀವಟಿಗೆ.ಹಾಗೆಯೇ ಮಾಯಾವರಣದಿಂದ ಕೂಡಿದ ನಾಮರೂಪಾತ್ಮಕವಾದ ಪ್ರಪಂಚವು ನಾನತ್ವವನ್ನು ಹೊಂದಿರುವಂತೆ ಕಂಡರೂ,ಆ ಭ್ರಾಂತಿಯ ನಿರಸನವಾದಮೇಲೆ ಅದ್ವೈತ ತತ್ವವೊಂದೇ ಕಾಣುತ್ತದೆ ಎಂಬುದು ಇದರ ಅಭಿಪ್ರಾಯ.ಈ ಅಲಾತ
ಚಕ್ರದ ಉಪಮಾನವು ಬೌದ್ಧಮತದ ಮಾಧ್ಯಮಿಕರಲ್ಲಿ ಸಾಧಾರಣವಾಗಿ ಇರುವ ನಿದಶ೯ನ.
ಅವಿದ್ಯೆ:
ಭ್ರಮೆಯೆಂದು ಕರೆಯಬಹುದಾದ ಎಲ್ಲ ಅನುಭವಗಳಲ್ಲಿಯೂ ತಪ್ಪು ತಿಳುವಳಿಕೆಗೆ ಆಧಾರವಾಗಿಒಂದು ವಸ್ತು ಇದ್ದೇ ಇರಬೇಕು. ಹಾವೆಂಬ ಭ್ರಾಂತಿಯುಂಟಾಗಲು ಹಗ್ಗವಿದ್ದೇ ಇರಬೇಕು. ಭ್ರಾಂತಿಯು ನಿರಸನವಾದರೂ ಈ ಆಧಾರವಾದ ವಸ್ತು ಇದ್ದೇ ಇರುತ್ತದೆ.
ಹಾವೆಂಬ ತಪ್ಪು ತಿಳುವಳಿಕೆ ಹೋದರೂ ಕೂಡಾ ಹಗ್ಗವಿದ್ದೇ ಇರುತ್ತದೆ.ಹೀಗೆ ಭ್ರಮೆಯೆಂದರೆ ಒಂದು ವಸ್ತುವಿನ ಮೇಲೆ ಇನ್ನೊಂದನ್ನು ಆರೋಪಿಸುವುದು. ಇಂತಹ ಭ್ರಮೆಗೆ ಅವಿದ್ಯೆಯೇ ಕಾರಣ15.ಬೇರೆ ಬೆರೆ ಸತ್ತಾ ಕ್ರಮಗಳಿಗೆಸೇರಿದ ವಸ್ತುಗಳನ್ನು ಬೆರೆಸಿದಾಗ ಭ್ರಾಂತಿ ಅಥವಾ ಭ್ರಮೆ ಉಂಟಾಗುತ್ತದೆ.
ಭ್ರಮೆಯನ್ನುಂಟು ಮಾಡಬಹುದಾದ ಎಲ್ಲ ಅನುಭವಗಳಲ್ಲಿಯೂ ಎರಡು ಬಗೆಯಾದ ಆಭಾಸಗಳು ತೋರುತ್ತವೆ.ಮೊದಲನೆಯದು ಭ್ರಮೆಗೆ ಆಧಾರವಾದ ನಿಜವಾದ ವಸ್ತುವನ್ನು ಮರೆಮಾಡುವುದು.ಎರಡನೆಯದು ಅದಕ್ಕೆ ಬದಲಾಗಿ ಅದರ ಮೇಲೆ ಬೇರೊಂದು ವಸ್ತುವನ್ನು ಆರೋಪ ಮಾಡುವುದು.ಹಗ್ಗವನ್ನು ಮರೆಮಾಡಿ ಅದರ ಮೇಲೆ ಹಾವನ್ನು ಆರೋಪ ಮಾಡುವುದು.ಅದ್ವೈತ ಮತಾನುಸಾರ ಅವಿದ್ಯೆಗೆಈ ಎರಡು ಬಗೆಯ ಶಕ್ತಿಗಳೂ ಇವೆ.ಇವಕ್ಕೆ 'ಆವರಣ"ಶಕ್ತಿ ಮತ್ತು "ವಿಕ್ಷೇಪ"ಶಕ್ತಿ ಎಂದು ಹೆಸರು.
1) ಆವರಣ ಶಕ್ತಿ:ಇರುವುದನ್ನು ಮುಸುಕಿನಿಂದ ಮುಚ್ಚುವುದು.ಇದು ಅಭಾವ ಸೂಚಕ.
2)ವಿಕ್ಷೇಪ ಶಕ್ತಿ:ಇಲ್ಲದ್ದನ್ನು ಅದರ ಮೇಲೆ ಆರೋಪಿಸುವುದು.ಇದು ಭಾವ ಸೂಚಕ16.
ಪ್ರಾಭಾಕರ ಮೀಮಾಂಸಕರು ಭ್ರಮೆಯನ್ನು ಅಖ್ಯಾತಿ ಎಂದು ಭಾವಿಸಿ ಕೇವಲ ಅಭಾವವನ್ನು ಮಾತ್ರ ಗ್ರಹಿಸಿದ್ದಾರೆ.ಇಲ್ಲದ್ದನ್ನು ಇರುವಂತೆ ತೋರುವ ಭಾವಾತ್ಮಕ ಆರೋಪವನ್ನು ಅವರು ಗಮನಿಸುವುದಿಲ್ಲ.ಆದರೆ ಭ್ರಮೆಯಲ್ಲಿ ಒಂದು ವಸ್ತುವಿನ ಅಭಾವಕ್ಕಿಂತಲೂ ಆರೋಪಿತ ವಸ್ತುವಿನ ಭಾವವೇ ಚೆನ್ನಾಗಿ ವ್ಯಕ್ತವಾಗುತ್ತದೆ.ಇದು ಎಲ್ಲರ ಅನುಭವಕ್ಕೂ ಗೋಚರವಾದ ವಿಷಯ.ಸಪ೯ರಜ್ಜು ಭ್ರಾಂತಿಯಲ್ಲಿಹಗ್ಗದ ಅಭಾವಕ್ಕಿಂತಲೂ ಹಾವಿನ ಭಾವವೇ ಅತ್ಯಧಿಕವಾಗಿರುತ್ತದೆ.ಆದುದರಿಂದ ಅವಿದ್ಯೆ ಅಥವಾ ಅಜ್ಞಾನವನ್ನು ಭಾವರೂಪವೆಂದು ಹೇಳಿದ್ದಾರೆ."ಚಿತ್ಸುಖಿ" ಗ್ರಂಥದಲ್ಲಿ ಅಜ್ಞಾನವನ್ನುಈ ರೀತಿ ವಿವರಿಸಲಾಗಿದೆ.
ಈ ಅಜ್ಞಾನ ಅಥವ ಅವಿದ್ಯೆಯೇ ಎಲ್ಲ ಬಗೆಯಾದ ಭ್ರಾಂತಿಗೂ ಮೂಲ.ಯಾವುದು ವ್ಯಕ್ತಿಗತ ಉಪಾಧಿಯಾಗಿ ಅವಿದ್ಯೆ ಎನಿಸುವುದೋ ಅದೇ ಬ್ರಹ್ಮದ ಉಪಾಧಿಯಾಗಿ ಮಾಯೆಯೆನಿಸುತ್ತದೆ17.
ಜ್ಞಾನಕ್ಕೂ ಕ್ರಿಯೆಗೂ ಬಹಳ ವ್ಯತ್ಯಾಸವಿದೆ.ಕ್ರಿಯೆ ವಸ್ತುವಿನ ಸ್ವರೂಪವನ್ನು ಗಮನಿಸದೆ ಪ್ರವತಿ೯ಸುತ್ತದೆ.ಅಲ್ಲದೆ ಅದು ಪುರುಷನ ಮನೋವ್ಯಾಪಾರಕ್ಕೆ ಅಧೀನವಾದುದು.ದ್ಯಾನವನ್ನು ಜ್ಞಾನವೆಂದು ಭಾವಿಸುವುದರಿಂದ ಇಂತಹ ತಪ್ಪು ಅಭಿಪ್ರಾಯಕ್ಕೆ ಎಡೆಗೊಟ್ಟಿದೆ.ಧ್ಯಾನವೆಂದರೆ ಚಿಂತನೆ ಮಾಡುವುದು. ಇದು ಮನಸ್ಸಿನ ಪ್ರವೃತ್ತಿಯೇ ಆದರೂ ಮಾಡಿದರೆ ಮಾಡಬಹುದು ಬಿಟ್ಟರೆ ಬಿಡಬಹುದು ಅಥವ ಬೇರೆ ಇನ್ನಾವ ರೀತಿಯಲ್ಲಾದರೂ ಮಾಡಬಹುದು.ಈ ಕರಣಗಳಿಂದ ಅದು ಮಾಡುವ ಪುರುಷನನ್ನು ಅವಲಂಬಿಸಿರುತ್ತದೆ.ಜ್ಞಾನವು ಹಾಗಲ್ಲ.ಅದು ಪ್ರಮಾಣದಿಂದ ಸಂಭವಿಸತಕ್ಕದ್ದು.ಅಲ್ಲದೆ ಪ್ರಮಾಣವು ವಸ್ತುವನ್ನು ಯಥಾಥ೯ವಾಗಿ(ಅದು ಇರುವಂತೆಯೇ)ಗ್ರಹಿಸುತ್ತದೆ.ಆದುದರಿಂದ ಜ್ಞಾನಕ್ಕೆ ಮಾಡುವುದು ಬಿಡುವುದು ಇಲ್ಲವೇ ಬೇರೊಂದು ರೀತಿಯಲ್ಲಿ ಮಾಡುವುದು ಮೊದಲಾದವು ಅನ್ವಯಿಸುವುದಿಲ್ಲ.ಅದು ಧ್ಯಾನದಂತೆ ಪುರ್ರುಷ ತಂತ್ರವಲ್ಲ ವಸ್ತುತಂತ್ರ.ಅದು ಪುರುಷನನ್ನು ಅವಲಂಬಿಸಿಲ್ಲ,ವಸ್ತುವನ್ನು ಅವಲಂಬಿಸಿರುತ್ತದೆ.ಹೀಗಿರುವಾಗ ಜ್ಞಾನವು ಮನಸ್ಸಿಗೆ ಸಂಬಂಧಪಟ್ಟ ವಿಷಯವಾದರೂ ಅದು ಕ್ರಿಯೆಯಲ್ಲ.
ಬ್ರಹ್ಮವು ಯಾವಕ್ರಿಯೆಗೂ ವಿಷಯವಲ್ಲ.ಅದು ನಿತ್ಯಸಿದ್ಧವಾದ ಅತ್ಮಸ್ವರೂಪವಾದ ಸ್ವತಂತ್ರ ವಸ್ತು. ಹೀಗಿರುವಾಗ ಬ್ರಹ್ಮಜ್ಞಾನ ರೂಪವಾದ ಮೋಕ್ಷಕ್ಕೆ ಯಾವ ಕ್ರಿಯೆಯೂ ಅವಶ್ಯಕವಿಲ್ಲ.ಜ್ಞಾನ ಕ್ರಿಯೆಯಲ್ಲ.ಏಕೆಂದರೆ ಶಾಸ್ತ್ರದಲ್ಲಿ ಹೇಳಿರುವ ಕ್ರಿಯೆಯು ಪುರುಷನಿಗೆ ಅಧೀನ.ಬ್ರಹ್ಮಜ್ಞಾನವಾದರೊ ವಸ್ತುವಿಗೆ ಅಧೀನ.
ಮೋಕ್ಷವೆಂದರೆ ಹೊಸದಾಗಿ ಪಡೆಯುವ ಒಂದು ಸ್ಥಿತಿ ಎಂದು ಹೇಳುವ ತಾಕಿ೯ಕರು,ಯೋಗಿಗಳು,ಈಶ್ವರನಿರುವನೆಂದು ಹೇಳುವ ಮೀಮಾಂಸಕರು ದೇಹ,ಮನಸ್ಸು ಮಾತು ಮೊದಲಾದವುಗಳಿಂದ ಕಮ೯ವನ್ನು ಮಾಡಬೇಕು ಎಂದು ಹೇಳುವುದು ಉಚಿತವೇ.ಅವರ ಪ್ರಕಾರ ಮೋಕ್ಷವು ವಿಕಾಯ೯ ಎಂದರೆ ಇರುವುದನ್ನು ಬದಲಾಯಿಸಿ ಹೊಸದಾಗಿ ಮತ್ತೊಂದನ್ನಾಗಿ ಮಾಪ೯ಡಿಸುದು18.
ಮೋಕ್ಷವು ಸಂಸ್ಕಾರದಿಂದ ಪಡೆಯಬೇಕಾದುದೂ ಅಲ್ಲ.ಹಾಗೆ ಸಂಸ್ಕಾರ ಮಾಡಬೇಕಾಗಿದ್ದರೆ ಅದಕ್ಕೆ ಕ್ರಿಯೆ ಅತ್ಯಾವಶ್ಯಕ.ಈ ಕ್ರಿಯೆ ಎರಡು ಬಗೆಯಾದುದು.ಒ0ದು ಇರುವುದಕ್ಕೆ ಇನ್ನೊಂದು ಗುಣವನ್ನು ಸೇರಿಸುವುದು.,ಇಲ್ಲವೇ ಇರುವ ಒಂದು ದೋಷವನ್ನು ತೆಗೆದು ಹಾಕುವುದು. ಇವೆರಡೆ ಬಗೆಗಳು.ಬ್ರಹ್ಮಕ್ಕೆ ಈಬಗೆಯ ಸಂಸ್ಕಾರ ಸಾಧ್ಯವಿಲ್ಲ.ನಿತ್ಯ ಶುದ್ಧ ಬುದ್ದವಾದ ಬ್ರಹ್ಮವೆ ಮೋಕ್ಷವಾದುದರಿಂದ ಅದರಲ್ಲಿ ತೆಗೆದುಹಾಕಬೇಕಾದ ದೋಷ ಯಾವುದೂ ಇರುವುದಿಲ್ಲ.ಆದ್ದರಿಂದ ಬ್ರಹ್ಮವು ಈಎರಡು ಬಗೆಯ ಸಂಸ್ಕಾರಗಳಿಗೂ ಮೀರಿದುದು.
ಯಾವುದೇ ದಶ೯ನದ ತತ್ವ ಮೀಮಾಂಸೆಯು ಅದರ ಜ್ಞಾನ ಮೀಮಾಂಯನ್ನು ಅವಲಂಬಿಸುರುತ್ತದೆ.ತಿಳಿಯಲು ಸಾಧ್ಯವಾಗದ ಅಂತಿಮ ಸತ್ಯವನ್ನು ಕುರಿತ ಚಚೆ೯ಯು ಶುಷ್ಕವಾಗುವುದಷ್ಟೇ ಅಲ್ಲ. ಅದು ಅಜ್ಞೇಯತಾ ವಾದದಲ್ಲಿ ಕೊನೆಗೊಳ್ಳುತ್ತದೆ.ಅಜ್ಞೇಯತಾ ವಾದಿಯ ಪ್ರಕಾರ ಸತ್ಯವೆಂಬುದು ಇದೆಯಾದರೂ ಅದರ ಜ್ಞಾನವು ಸಾಧ್ಯವಿಲ್ಲ.ಆದ್ದರಿಂದ ತತ್ವ ಮತ್ತು ಜ್ಞಾನಗಳನ್ನು ಕುರಿತ ಚಚೆ೯ಗಳು ಜೊತೆಯಾಗಿಯೇ ಹೋಗುತ್ತವೆ.ಈ ಜ್ಞಾನದ ಸ್ವರೂಪ,ಅದನ್ನು ಹೊಂದುವ ವಿವಿಧ ಸಾಧನಗಳು _ಇವುಗಳನ್ನು ಚಚಿ೯ಸುವ ಶಾಸ್ತ್ರವೇ ಜ್ಞಾನ ಮೀಮಾಂಸೆ.
ಆದರೆ ಅದ್ವೈತದಲಿ ್ಲಈ ಅಥ೯ದಲ್ಲಿ ಜ್ಞಾನವು ಸಾಧ್ಯವೇ ಎಂಬುದು ಪ್ರಶ್ನೆ.ಇದಕ್ಕೆ ಇಲ್ಲವೆಂದೇ ಉತ್ತರ.ಏಕೆಂದರೆ ಅದ್ವೈತದ ಪ್ರಕಾರ ಪಾರಮಾಥಿ೯ಕವಾಗಿ (ಅಂತಿಮವಾಗಿ) ಸತ್ಯವೆಂಬುದು ಜ್ಞಾನ ಜ್ಞಾತೃ ಜ್ಞೇಯ ಇವುಗಳನ್ನು ಮೀರಿರುವುದು.ಅದು ತಿಳಿಯುವ ವಸ್ತುವಾಗಲೀ ತಿಳಿಯಲ್ಪಡುವ ವಸ್ತುವಾಗಲೀ ಅಲ್ಲ.ಹಾಗೆಯೇ ಅದು ವಸ್ತುವನ್ನು ತಿಳಿಯುವ ಸಾಧನವೂ ಅಲ್ಲ.ಹೀಗೆ ಜ್ಞಾನ ಮೀಮಾಂಸೆಯನ್ನು ಕುರಿತ ನಮ್ಮೆಲ್ಲಾ ಚಚೆ೯ಗಳೂ ಅಥ೯ಪೂಣ೯ವಾಗುವುದು ವ್ಯಾವಹಾರಿಕ ಹಂತವಾದ ಅವಿದ್ಯೆಯ ಚೌಕಟ್ಟಿನಲ್ಲೇ ಹೊರತು ಪಾರಮಾಥಿ೯ಕ ಹಂತದಲ್ಲಿ ಅಲ್ಲ.ಅವಿದ್ಯೆಯಿಂದ ಪಾರಮಾಥಿ೯ಕ ಅದ್ವೈತ ಸತ್ಯವು ಜ್ಞಾತೃ ಮತ್ತು ಜ್ಞೇಯಗಳಾಗಿ ತೋರುತ್ತವೆ.
ಜ್ಞಾನವೆಂಬುದು ಪ್ರಮಾತೃ,ಪ್ರಮೇಯ, ಪ್ರಮಾಣ ಎಂಬ ಮೂಉ ಅಂಶಗಳನ್ನು ಒಳಗೊಂಡಿದೆ. ವಸ್ತುವನ್ನು ತಿಳಿಯುವವನು ಪ್ರಮಾತೃ ಅಥವಾ ಜ್ಞಾತೃ.ತಿಳಿಯಲ್ಪಡುವ ವಸ್ತು ಪ್ರಮೇಯ ಅಥವಾ ಜ್ಞೇಯ. ವಸ್ತುವನ್ನು ತಿಳಿಯುವ ಸಾಧನ ಪ್ರಮಾಣ.ಈ ಮೂರು ಅಂಶಗಳಿಲ್ಲದೆ ಜ್ಞಾನವು ಸಾಧ್ಯವಿಲ್ಲ.ಆದ್ದರಿಂದಲೇ ಭಾರತೀಯ ತತ್ವಶಾಸ್ತ್ರದಲ್ಲಿ ಜ್ಞಾನವನ್ನು ತ್ರಿಪುಟಿ ಎಂದು ಕರೆಯುತ್ತಾರೆ.
ಜ್ಞಾನ ಮೀಮಾಂಸೆಯ ಬಗ್ಗೆ ಒಂದು ಸುದೀಘ೯ ಚಚೆ೯ಯು ನಡೆದಿದ್ದು ಶ್ರೀಶಂಕರರ ಅನಂತರದ ಕಾಲದಲ್ಲಿ ಮಾತ್ರ.ಶಂಕರರು ಶಬ್ದ ಪ್ರಮಾಣದ ಹೊರತಾಗಿ ಹೊರತಾಗಿ ಜ್ಞಾನ ಮೀಮಾಂಸೆಯ ಬಗ್ಗೆ ವ್ಯವಸ್ಥಿತವಾದ ನಿರೂಪಣೆಯನ್ನು ನೀಡುವುದಿಲ್ಲ.ಕಾರಣ ಜ್ಞಾನಕ್ಕಿಂತಲೂ ಅವರಿಗೆ ತತ್ವವನ್ನು ಕುರಿತ ಜಿಜ್ಞಾಸೆ ಮುಖ್ಯವಾಗಿತ್ತು.ಇಂತಹ ವ್ಯವಸ್ಥಿತ ನಿರೂಪಣೆಯು ನಮಗೆ ದೊರೆಯುವುದು ವಿಮುಕ್ತಾತ್ಮರ ಇಷ್ಟಸಿದ್ಧಿ ಮತ್ತು ಧಮ೯ರಾಜ ಅಧ್ವರಿಯವರ ವೇದಾಂತ ಪರಿಭಾಷೆಯಲ್ಲಿ.
ವಸ್ತುವಿನ ಅರಿವಿಗೆ ಬೆಳಕು ಅಥವಾ ಪ್ರಜ್ಞೆಯು ಅಗತ್ಯ.ಈ ಬೆಳಕು ಅದ್ವೈತದ ಪ್ರಕಾರ ನೈಯಾಯಿಕರು ಹೇಳುವಂತೆ ಆತ್ಮದ ಗುಣವಲ್ಲ.ನೈಯಾಯಿಕರ ಪ್ರಕಾರ ಪ್ರಜ್ಞೆ ಯೆಂಬುದು ಆತ್ಮದಲ್ಲಿ ಸ್ವಲ್ಪಹೊತ್ತು ಇದ್ದು ವ್ಯಕ್ತವಾಗಿ ಅನಂತರ ಮರೆಯಾಗುವ ಅನುಷಂಗಿಕ ಗುಣ.ಹಾಗೆಯೇ ಅದು ಮೀಮಾಂಸಕರು ಹೇಳುವಂತೆ ಆತ್ಮದ ಕ್ರಿಯೆಯೂ ಅಲ್ಲ.ಕ್ರಿಯೆ ಎಂಬುದು ಚಲನೆ ಅಥವಾ ಬದಲಾವಣೆಯನ್ನು ಸೂಚಿಸುತ್ತದೆ.
ಆತ್ಮವಾದರೋ ಅವಿಕಾರಿ.ಆದ್ದರಿಂದ ಪ್ರ ಜ್ಞೆಯೆಂಬುದು ಆತ್ಮದ ಸ್ವರೂಪವೇ ಹೊರತುಅದರ ಗುಣವಾಗಲೀ ಕ್ರಿಯೆಯಾಗಲೀ ಅಲ.್ಲಆತ್ಮದಲ್ಲಿ ಪ್ರಜ್ಞೆಯಿಲ್ಲz ಸ್ಥಿತಿಯುಇಲ್ಲ.ಮೂಲತಃ ಆತ್ಮವೇ ಬೆಳಕು ಬೆಳಕೇ ಆತ್ಮ. ಉಪನಿಷತ್ತುಗಳು ಸಾರುವಂತೆ ಆತ್ಮವು ಪ್ರಜ್ಞಾನಘನ ಎಂದರೆ ಅದು ಘನೀಭೂತ ಪ್ರಜ್ಞೆ.
ಜ್ಞಾತೃವಿನ ಸ್ವರೂಪ:
ಆತ್ಮನು ಚಿತ್ ಸ್ವರೂಪವಾದರೂ ಮನಸ್ಸು ಎಂಬ ಉಪಕರಣವಿಲ್ಲದೆ ಬಾಹ್ಯವಸ್ತುವನ್ನು ಅರಿಯಲು ಸಾಧ್ಯವಿಲ್ಲ.ಜ್ಞಾನದ ಇತರ ಉಪಾಧಿಗಳೇನೋ ಇರಬಹುದು.ಉದಾಹರಣೆಗೆ ನಮ್ಮ ಇಂದ್ರಿಯಗಳು ಸರಿಯಾಗಿ ಕಾಯ೯ಶೀಲವಾಗಿರಬಹುದು.ನಮ್ಮ ಕಣ್ಣು ಕಿವಿಗಳು ಸಾಕಷ್ಟು ತೆರೆದಿರಬಹುದು.ವಸ್ತುಗಳು ನಮ್ಮ ಇಂದ್ರಿಯಗಳಿಗೆ ದತ್ತವಾಗಿರಬಹುದು.ಅವುಗಳನ್ನು ಕಾಣಲು ಸಾಕಷ್ಟು ಬೆಳಕೂ ಇರಬಹುದು.ಆದರೂ ನಮ್ಮ ಮನಸ್ಸು ಬೇರೆಲ್ಲೋ ಇದ್ದರೆನಾವು ರೂಪವನ್ನು ನೋಡಲಾರೆವು ಮತ್ತು ಶಬ್ದವನ್ನು ಕೇಳಲಾರೆವು.ಎಂದರೆ ಮನಸ್ಸಿನ ಸಹಾಯವಿಲ್ಲದೆ ವಸ್ತುಗಳ ಜ್ಞಾನವು ಸಾಧ್ಯವಿಲ್ಲವೆಂದಥ೯.ಆದ್ದರಿಂದಲೇ ಮೈತ್ರಿ ಉಪನಿಷತ್ತು (1_5_3) ಮನಸ್ಸಿನಿಂದಲೇ ಮನ್ಯಷ್ಯನು ನೋಡುವುದು ಮತ್ತು ಕೇಳುವುದು ಎಂದು ಹೇಳುತ್ತಾರೆ.ಯಾವುದರ ಅಸ್ತಿತ್ವದಲ್ಲಿ ಜ್ಞಾನವು ಸಾಧ್ಯವೋ ಯಾವುದು ಇಲ್ಲದೆ ಜ್ಞಾನವು ಸಾಧ್ಯವಿಲ್ಲವೋ ಅದೇ ಮನಸ್ಸು.ಈ ಮನಸ್ಸನ್ನೇ ಶ್ರೀ ಶಂಕರರು "ಅಂತಃಕರಣ" ಎನ್ನುವುದು.
ಈ ಅಂತಃಕರಣವು ಐದು ಭೂತಗಳಿಂದ ಕೂಡಿದ ಒಂದು ಜಡವಸ್ತು.ಇದರಲ್ಲಿ ಪಂಚಭೂತಗಳಿದ್ದರೂ ತೇಜಸ್ಸಿವ ಅಂಶವು ಅಧಿಕವಾಗಿರುತ್ತದೆ.ಆದ್ದರಿಂದಲೇ ಕೆಲವುಸಲ ಇದನ್ನು 'ತೈಜಸ'Àಎನ್ನುವುದು. ಇದಕ್ಕೆ ಸ್ಥಿರವಾದ ಆಕಾರವಿಲ್ಲ. ಅದು ನಿರಂತರ ಚಲನೆ ಅಥವಾ ಬದಲಾವಣೆಗೆ ಒಳಗಾಗುತ್ತಿರುತ್ತದೆ.ಅದ್ವೈತಿಯ ಪ್ರಕಾರ ಮನಸ್ಸು ಕ್ರಿಯಾಶೀಲವಾದುದು.ಅದರ ಕ್ರಿಯಾಶೀಲತೆಯನ್ನು ಅದ್ವೈತಿಯು ದೃಷ್ಟಾಂತದಮೂಲಕ ಹೀಗೆ ವಿವರಿಸುತ್ತಾನೆ.ಹೇಗೆ ನೀರು ತೂಬಿನ ಮೂಲಕ ಹೊರಹರಿದು ಹೊಲವನ್ನು ಸೇರಿ ಅದರ ಆಕಾರವನ್ನು ಪಡೆಯುವುದೋಹಾಗೆಯೇ ಅಂತಃಕರಣವೂಕೂಡ ಶೋಧನ ದೀಪದಂತೆ (ಸಚ್೯ಲೈಟ್À)ಇಂದ್ರಿಯಗಳ ಮೂಲಕ ಹೊರಬಂದು ವಸ್ತುವಿನ ಆಕಾರವನ್ನು ಪಡೆಯುತ್ತದೆ.ಹೀಗೆ ಅದು ತಳೆಯುವ ಆಕಾರಕ್ಕೆ 'ವೃತ್ತಿ' ಎಂದು ಹೆಸರು.
ಆದರೆ ಜ್ಞಾನದ ಉತ್ಪತ್ತಿಗೆ ಅಂತಃಕರಣವೊಂದೇ ಸಾಲದು.ಅದರ ವೃತ್ತಿಗಳನ್ನು ತಟಸ್ಥವಾಗಿ ಅವಲೋಕಿಸುವ ಒಂದು ಚೈತನ್ಯವೂ ಬೇಕು.ಈ ಚ್ಯತನ್ಯವನ್ನು 'ಸಾಕ್ಷಿ' ಎಂದು ಕರೆಯುವರು.ಅಂತಃಕರಣವಿಲ್ಲದೆ ಸಾಕ್ಷಿಯು ಮತ್ತು ಸಾಕ್ಷಿಯಿಲ್ಲದೆ ಅಂತಃಕರಣವು ಜ್ಞಾತೃವಾಗಲು ಸಾಧ್ಯವಿಲ್ಲ.ಏಕೆಂದರೆ ಅದು ಜಡ.ಜಡವು ವಸ್ತುವನ್ನು ತಿಳಿಯಲಾರದು.ಹಾಗೆಯೇ ಬರಿಯ ಸಾಕ್ಷಿಯು ಜ್ಞಾತೃವಾಗಲು ಸಾಧ್ಯವಿಲ್ಲ.
ಏಕೆಂದರೆ ಅದು ಚೇತ£ ವಾಗಿದ್ದರೂ ನಿಷ್ಕ್ರಿಯ.ಅಲ್ಲದೇ ಜ್ಞಾತೃ ಮತ್ತು ಜ್ಞೇಯ ಎಂಬ ಭೇದವನ್ನು ಮೀರಿನಿಂತಿದೆ. ಹೀಗೆ ನಿಷ್ಕ್ರಿಯವಾದ ಸಾಕ್ಷಿ ಮತ್ತು ಸಕ್ರಿಯವಾದ ಅಂತಃಕರಣಗಳ ಸಂಕೀಣ೯ ಜೋಡಿಯೇ ಎಲ್ಲ ವ್ಯಾವಹಾರಿಕ ದೃಷ್ಟಿಯಿಂದಲೂ ಜ್ಞಾತೃ ಎನಿಸಿಕೊಳ್ಳುವುದು.ಇದನ್ನು ಜೀವವೆಂದೂ ಕರೆಯುತ್ತಾರೆ.ಜ್ಞಾತೃವು ನಾವು ತಿಳಿದಿರುವಂತೆ ಸರಳವಲ್ಲ.ಅದು ಸಂಕೀಣ೯ವಾದುದು.ಅದರಲ್ಲಿ ಚೇತನವಾದುದೂಇದೆ.ಜಡದ ಅಂಶವೂ ಇದೆ.ಚೇತನದ ಅಂಶವು ಸಾಕ್ಷಿ ಎನಿಸಿದರೆ ಜಡದ ಅಂಶವು ಅಂತಃಕರಣ ಎನಿಸುತ್ತದೆ.ಈ ಸಂಕೀಣ೯ತೆಯಿಂದಲೇಅದು ವಸ್ತುವನ್ನು ತಿಳಿಯುವ ಜ್ಞಾತೃವೂ ಆಗಬಲ್ಲದು ಮತ್ತು ತನ್ನ ಅರಿವಿನ ವಸ್ತುವೂ ಆಗಬಲ್ಲದು. ಎಂದರೆ ಅದು ತಿಳಿಯುವ ಹಾಗೂ ತಿಳಿಯಲ್ಪಡುವ ವಸ್ತುಗಳೆರಡೂ ಆಗಬಲ್ಲದು.ಅಂತಃಕರಣವೆಂಬ ಈ ವಸ್ತುನಿಷ್ಠ ಅಂಶದ ಅಭಾವದಲ್ಲಿ ಅದಕ್ಕೆ ತನ್ನ ಅರಿವು ಎಂದರೆ ಸ್ವಯಂಪ್ರಜ್ಞೆಯು ಇರುತ್ತಿರಲಿಲ್ಲ.ಈ ವಿಷಯದಲ್ಲಿ ಸ್ವಯಂಪ್ರಜ್ಞೆಯನ್ನು ಅದ್ವೈತಿಯೇ ಕುಮಾರಿಲರಿಗಿಂತಲೂ ಚೆನ್ನಾಗಿ ವಿವರಿಸುವುದು.ಏಕೆಂದರೆ ಕುಮಾರಿಲರ ಪ್ರಕಾರ ಜ್ಞಾತೃವಿಗೆ ಜ್ಞಾತೃ ಮತ್ತು ಜ್ಞೇಯ ಎಂಬ ಎರಡು ಎಂಬ ಲಕ್ಷಣಗಳಿದ್ದರೂ ಅದು ಸರಳ.ಸರಳವಾದದ್ದು ಹೇಗೆ ವಿರುದ್ಧ ಲಕ್ಷಣಗಳಿಂದ ಕೂಡಿರಬಲ್ಲದು ಎಂಬುದು ಪ್ರಶ್ನೆ.ಸಂಕೀಣ೯ದಲ್ಲಿ ಮಾತ್ರ ದ್ವಂದ್ವ ವಿರಬಲ್ಲದು.ಸರಳದಲ್ಲಲ್ಲ.
ಒಟ್ಟಾರೆ ಸಾಕ್ಷಿ ಮತ್ತು ಅಂತಃಕರಣಗಳ ಜೋಡಿಯೇ ಜ್ಞಾತೃ.ಜ್ಞಾತೃವಿಗೂ ಸಾಕ್ಷಿಗೂ ಇರುವ ವ್ಯತ್ಯಾಸವೆಂದರೆ ಜ್ಞಾತೃವಿಗೆ ಸ್ವಯಂಪ್ರಜ್ಞೆಯಿದೆ.ಏಕೆಂದರೆ ಅದರಲ್ಲಿ ಅಂತಃಕೆರಣವೆಂಬ ವಸ್ತುನಿಷ್ಠ ಅಂಶವಿದೆ.ಆದರೆ ಸಾಕ್ಷಿಗೆ ಸ್ವಯಂಪ್ರಜ್ಞೆಯಿಲ್ಲ.ಅದು ತನ್ನ ಅರಿವಿನ ವಿಷಯವಲ್ಲ.ಅದು ಅರಿವಿನ ವಿಷಯವಾದಲ್ಲಿ ಅದಕ್ಕೆ ಮತ್ತೊಂದು ಜ್ಞಾತೃವು ಅಗತ್ಯವಾಗಿ ಇದು ಅನವಸ್ಥೆಯಲ್ಲಿ ಕೊನೆಗೊಳ್ಳುತ್ತದೆ.ವಾಸ್ತವವಾಗಿ ಅದನ್ನು ತಿಳಿಯುವ ಮತ್ತೊಂದು ವಸ್ತುವು ಇಲ್ಲವೇ ಇಲ್ಲ.ಏಕೆಂದರೆ ಮೂಲತಃ ಅದು ಸ್ವಯಂಪ್ರಕಾಶ.ಒಟ್ಟಿನಲ್ಲಿ ಅಂತಃಕರಣದಲ್ಲಿ ಅಂತಸ್ಥವಾಗಿರುವ ಚೈತನ್ಯವು ಜ್ಞಾತೃವಾದರೆ ಅಂತಃಕರಣಕ್ಕೆ ಅತೀತವಾಗಿರುವ ಚೈತನ್ಯವು ಸಾಕ್ಷಿಯಾಗುತ್ತದೆ. ಜ್ಞಾನವು ನೇರ ಮತ್ತು ಪರೋಕ್ಷ_ಇವೆರಡೂ ಆಗಿರಬಹುದು.ನೇರಜ್ಞಾನದಲ್ಲಿ ಇಂದ್ರಿಯಗಳ ಪಾತ್ರ ಇರಬಹುದು ಇಲ್ಲದಿರಬಹುದು.ಇದು ಏನೇ ಇರಲಿ ಅದು ಕೆಳಕಂಡ ಉಪಾಧಿಗಳನ್ನು ಅವಲಂಬಿಸಿದೆ.
1) ವಸ್ತುವು ನೇರವಾಗಿ ತಿಳಿಯುವಂತಿರಬೇಕು.ತಿಳಿಯಲ್ಪಡಲು ಸಾಧ್ಯವಾಗದಿರುವ ವಸ್ತುವನ್ನು ನಾವು ನೇರವಾಗಿರಲಿ ಪರೋಕ್ಷವಾಗಿಯೂ ತಿಳಿಯಲು ಸಾಧ್ಯವಿಲ್ಲ.ಈ ಅಥ೯ದಲ್ಲಿ ಅದ್ವೈತಿಗಳು ಅಪ್ಪಟ ವಾಸ್ತವಿಕ ವಾದಿಗಳಾಗಿರುತ್ತಾರೆ.
2) ವಸ್ತುವು ಆ ಕಾಲಕ್ಕೆ ನಮಗೆ ದತ್ತವಾಗಿರಬೇಕು.ವಸ್ತುವು ಅಸ್ತಿತ್ವದಲ್ಲಿದ್ದು ಅದು ನಮ್ಮಮುಂದೆ ಇರದಿದ್ದರೆ ಜ್ಞಾನವು ಸಾಧ್ಯವಿಲ್ಲ.ಈ ಸಂದಭ೯ದಲ್ಲೇ ಜ್ಞಾನಕ್ಕೂ ಮತ್ತು ಸ್ಮøತಿಗೂ ವ್ಯತ್ಯಾಸವು ಸ್ಪಷ್ಟವಾಗುವುದು.ಜ್ಞಾನದಲ್ಲಿ ವಸ್ತುವು ನಮ್ಮಮುಂದೆ ಇರುತ್ತದೆ.ಸ್ಮøತಿಯಲ್ಲಾದರೋ ಅದು ನಮ್ಮಮುಂದೆ ಇರುವುದಿಲ್ಲ.ಈಗ ಪ್ರಸ್ತುತ ನಮ್ಮಮುಂದೆ ಇಲ್ಲವೇ ಇಲ್ಲದ ವಸ್ತುವೊಂದರ ನೆನಪು ಜ್ಞಾನವಾಗುದಿಲ್ಲ.
3)ಜ್ಞಾತೃ ಮತ್ತು ಜ್ಞೇಯಗಳ ನಡುವೆ ಸಂಪಕ೯ವಿರಬೇಕು.ಈ ಸಂಬಂಧವು ವೃತ್ತಿಯ ಮೂಲಕ ಸಾಧ್ಯವಾಗುತ್ತದೆ.ವಸ್ತು ಬಾಹ್ಯವಾದಲ್ಲಿ ಅಂತಃಕರಣವು ಇಂದ್ರಿಯಗಳ ಮೂಲಕ ಹೊರಚಲಿಸಿ ಇಂದ್ರಿಯಗಳ ಮೂಲಕ ಹೊರಚಲಿಸಿ ವಸ್ತುವಿನ ಆಕಾರವನ್ನು ತಳೆಯುತ್ತದೆ.ಹಾಗಿಲ್ಲದೆ ವಸ್ತುವು ಅಂತರಿಕವಾದಲ್ಲಿ ಅಂತಃಕರಣವು ಒಳಗೆ ಇರುತ್ತದೆ. ಸುಖ ದುಃಖಗಳೇ ಅಂತರಿಕ ವಸ್ತುಗಳು.ಅಂತರಿಕ ಪ್ರತ್ಯಕ್ಷದಲ್ಲಿ ಮೊದಲೆರಡು ಉಪಾಧಿಗಳಿದ್ದರೆ ಸಾಕು.ಕೊನೆಯ ಉಪಾಧಿಯು ತಾನಾಗಿಯೇ ಸಿಧ್ಧಿಸುತ್ತದೆ.ಇಲ್ಲಿ ವಸ್ತುವು ಅಂತರಿಕವಾದ್ದರಿಂದ ಅಂತಃಕರಣವು ಹೊರಚಲಿಸುವ ಅಗತ್ಯವು ಇರುವುದಿಲ್ಲ.ಇವು ಅಂತಃಕರಣದ ಸ್ಥಿತಿ ಅಥವಾ ರೂಪಗಳಷ್ಟೇ. ಬಾಹ್ಯ ಮತ್ತು ಅಂತರಿಕ ವಸ್ತುಗಳ ಜೊತೆಗೆ ಇನ್ನೂ ಒಂದು ವಸ್ತುವಿದೆ.ಇದು ನೇರವಾಗಿ ಅಷ್ಟೇ ಅಲ್ಲ"ಸದಾ" ನೇರವಾಗಿಯೇ ತಿಳಿಯಲ್ಪಡುತ್ತದೆ.ಅದೇ "ಜೀವ".ಇದನ್ನು "ಅಹಂಪದಾಥ೯" ಎನ್ನುವರು.ಜ್ಞಾನದಲ್ಲಿ ಜ್ಞೇಯವಷ್ಟೆ ಅಲ್ಲಜ್ಞಾತೃವೂ ಪ್ರಕಾಶಿಸಲ್ಪಡುತ್ತದೆ.
ಜ್ಞಾನವು ಕೇವಲ ಅಂತಃಕರಣ ವೃತ್ತಿಯೂ ಅಲ್ಲ.ಕೇವಲ ಸಾಕ್ಷಿಯೂ ಅಲ್ಲ.ಸಾಕ್ಷಿಯಿಂದ ಪ್ರಕಾಶಿತವಾದ ವೃತ್ತಿಯೇ ಜ್ಞಾನ.ಇಲ್ಲಿ ವೃತ್ತಿಯು ತಾತ್ಕಾಲಿಕ.ಹೊಸ ವಸ್ತುಗಳು ಎದುರಾಗುತ್ತಿದ್ದಂತೆ ಅಂತಃಕರಣವು (ಮನಸ್ಸು) ಹೊಸ ಹೊಸ ವೃತ್ತಿಗಳನ್ನು ತಳೆಯುತ್ತಿರುತ್ತದೆ.ಎಂದರೆ ವೃತ್ತಿಗಳು ಬಂದು ಹೋಗುತ್ತಿರುತ್ತವೆ,ಆದರೆ ಅವುಗಳನ್ನು ಪ್ರಕಾಶಿಸುವ ಸಾಕ್ಷಿಯು ಮಾತ್ರ ಸ್ಥಿರವಾಗಿರುತ್ತದೆ.ಈ ಸಾಕ್ಷಿಯು ಇಲ್ಲದ ಸ್ಥಿತ್ತಿಯೇ ಇಲ್ಲ.ಇದು ಗಾಢನಿದ್ರೆಯಲ್ಲೂ ಇರುತ್ತದೆ.ಮೂಲತಃ ಇದು ಬ್ರಹ್ಮವಲ್ಲದೆ ಬೇರೇನೂ ಅಲ್ಲ. ವೃತ್ತಿಗಳಲ್ಲಿ ಆಗುವ ಬದಲಾವಣೆಯು ಅದರಮೇಲೆ ಯಾವ ಪರಿಣಾವiವನ್ನೂ ಬೀರಲಾರದು. ಏಕೆಂದರೆ ಅದು ಅವಿಕಾರಿ(ಬದಲಾವಣೆ ಹೊಂದದಿರುವದು).ಕೆಲವುಸಲ ಇದನ್ನು ಸಾಕ್ಷಿಜ್ಞಾನವೆಂದೂ ಕರೆಯುತ್ತಾರೆ.ಇದು ವೃತ್ತಿ ಜ್ಞಾನಕ್ಕಿಂತಲೂ ಭಿನ್ನವಾದದ್ದು.ಸಾಕ್ಷಿ ಜ್ಞಾನದಲ್ಲಿ ಜ್ಞಾತೃ ಮತ್ತು ಜ್ಞೇಯವೆಂಬ ಭೇದವಿಲ್ಲ.ಅದು ಎಲ್ಲಾರೀತಿಯ ಭೇದಜ್ಞಾನವನ್ನು ಮೀರಿದುದು.ವೃತ್ತಿ ಜ್ಞಾನದಲ್ಲಾದರೋ ಈ ರೀತಿಯ ಭೇದವಿದೆ.
ಪ್ರಮಾಣಗಳು:ಮೀಮಾಂಸಕರಂತೆ ಅದ್ವೈತಿಗಳೂಆರು ಪ್ರಮಾಣಾದಿಗಳನ್ನು ಅಂಗೀಕರಿಸುತ್ತಾರೆ. ಯಾವುವೆಂದರೆ: 1)ಪ್ರತ್ಯಕ್ಷ2)ಅನುಮಾನ3)ಶಬ್ದ(ಶಾಸ್ತ್ರ)4)ಉಪಮಾನ5)ಅಥಾ೯ಪತ್ತಿ6)ಅನುಪಲಬ್ಧಿ.
ಇವುಗಳಲ್ಲಿ ಪ್ರಸ್ತುತ ನಮಗೆ ಬೇಕಾದುದು ಮೊದಲ ಮೂರು ಪ್ರಮಾಣಗಳಷ್ಟೆ.ಪ್ರತ್ಯಕ್ಷವು ಇಂದ್ರಿಯಗಳು ಮತ್ತು ಅವುಗಳ ವಿಷಯ ಸಂಪಕ೯ದಿಂದ ಉಂಟಾಗುತ್ತದೆ.ನೈಯಾಯಿಕರ ಪ್ರಕಾರ ಜ್ಞಾತೃವೂ ಜ್ಞೇಯವನ್ನು ನೇರವಾಗಿ ತಿಳಿಯಬಲ್ಲದು.ಇದು ಹೆಚ್ಚು ಕಡಿಮೆ ಪಾಶ್ಚಾತ್ಯರ ಸರಳ ವಾಸ್ತವಿಕವಾದವನ್ನು ಹೊಲುತ್ತದೆ.ಆದರೆ ಸಾಂಖ್ಯರು ಈ ವಾದವನ್ನು ಒಪ್ಪುವುದಿಲ್ಲ.ಏಕೆಂದರೆ ಒಬ್ಬನು ವಸ್ತುವನ್ನು ನೇರವಾಗಿ ತಿಳಿಯಬಲ್ಲನಾದರೆ ಭ್ರಮೆಗೆ ಆಸ್ಪದವೇ ಇರುವುದಿಲ್ಲ.ಆದ್ದರಿಂದ ಜ್ಞಾತೃವು ಜ್ಞೇಯವನ್ನು ವೃತ್ತಿಯ ಮೂಲಕ ಪರೋಕ್ಷವಾಗಿ ತಿಳಿಯಬಲ್ಲನು.ಅದ್ವೈತಿಗಳೂ ಕೂಡ ಈ ನಿಲುವನ್ನೇ ಅಂಗೀಕರಿಸುತ್ತಾರೆ.
ಇಂದ್ರಿಯಗಳು ಸಂಖ್ಯೆಯಲ್ಲಿ ಐದು. ಇವುಯಾವುವೆಂದರೆ ಶ್ರವಣ(ಕಿವಿ), ತ್ವಕ್(ಚಮ೯), ಚಕ್ಷು(ಕಣ್ಣು), ರಸನ(ನಾಲಿಗೆ) ಮತ್ತು ಘ್ರಾಣ (ಮೂಗು). ನಮ್ಮಕಣ್ಣಿಗೆ ಕಾಣುವ ಸ್ಥೂಲಾಂಗಗಳೇ ಇಂದ್ರಿಯಗಳಲ್ಲ.ಈ ಅಂಗಗಳಲ್ಲಿ ನೆಲೆಸಿರುವ ಸೊಕ್ಷ್ಮ ಶಕ್ತಿಗಳೇ ಇಂದ್ರಿಯಗಳು.ನಿಜಹೇಳಬೇಕೆಂದರೆ ಇಂದ್ರಿಯಗಳು ಈ ಸ್ಥೂಲವಾದ ಸಾಧನಗಳ ಮೂಲಕವಾಗಿ ಕ್ರಿಯಾಶೀಲವಾಗುತ್ತವೆ.ಆದರೆ ಈ ಸ್ಥೂಲ ಸಾzನಗಳೇ ಇಂsದ್ರಿಯಗಳಾಗುವುದಿಲ್ಲ.ಹೀಗಾಗಿ ಇಂದ್ರಿಯಗಳು ಬಾಹ್ಯವಸ್ತುಗಳನ್ನು ಗ್ರಹಿಸಬಲ್ಲವಾದರೂ ಅವೇ ಪ್ರತ್ಯಕ್ಷ ಗ್ರಾಹ್ಯವಲ್ಲ. ಅವುಗಳ ಅಸ್ತಿತ್ವವನ್ನು ಅನುಮಾನದಿಂದ ತಕಿ೯ಸಬಹುದು. ಶಬ್ದ,ಸ್ಪಶ೯,ರೂಪ,ರಸ,ಗಂಧ(ವಾಸನೆ) ಇವು ಕ್ರಮವಾಗಿ ಪಂಚೇಂದ್ರಿಯಗಳ ವಿಷಯಗಳಾಗಿವೆ.
ಮನಸ್ಸು ಅಥವಾ ಅಂತಃಕರಣವು ಒಂದು ಇಂದ್ರಿಯವೋ ಅಲ್ಲವೋ ಎಂಬುದರಬಗ್ಗೆ ಅನಂತರದ ಅದ್ವೈತದಲ್ಲಿ ಜಿಜ್ಞಾಸೆ ನಡೆದಿದೆ.ವಾಚಸ್ಪತಿಮಿಶ್ರರ ಪ್ರಕಾರ ಮನಸ್ಸು ಒಂದು ಇಂದ್ರಿಯ.ಆದರೆ ಅದು ಹೊರಗಿನ ಇಂದ್ರಿಯವಾಗಿರದೆ ಒಳಗಿನ ಇಂದ್ರಿಯವಾಗಿದೆ.ಪಂಚೇಂದ್ರಿಯಗಳು ಹೊರಗಿನ ಇಂದ್ರಿಯಗಳಾಗಿದ್ದರೆ ಮನಸ್ಸು ಒಂದು ಆಂತರಿಕ ಇಂದ್ರಿಯವಾಗಿದೆ.ವಾಚಸ್ಪತಿಮಿಶ್ರರು ಇದನ್ನು 'ಆರನೆಯ ಇಂದ್ರಿಯ'ವೆಂದು ಕರೆಯುತ್ತಾರೆ.ಈ ಆರನೆಯ ಇಂದ್ರಿಯದ ಮೂಲಕ ನಾವು ಸುಖದುಃಖಗಳೇ ಮುಂತಾದ
ಭಾವನೆಗಳನ್ನು ನೇರವಾಗಿ ತಿಳಿಯಬಲ್ಲೆವು.ಬಾಹ್ಯೇಂದ್ರಿಯಗಳ ಮೂಲಕ ನಾವು ಹೇಗೆ ಬಾಹ್ಯವಸ್ತುಗಳನ್ನು ತಿಳಿಯಬಲ್ಲೆವೋಹಾಗೆಯೇ ಅಂತರಿಂದ್ರಿಯದ ಮೂಲಕ ನಾವು ಸುಖ ದುಃಖಗಳೆಂಬ ಆಂತರಿಕ ವಸ್ತುಗಳನ್ನು ನೇರವಾಗಿ ತಿಳಿಯಬಲ್ಲೆವು.ಆದರೆ ವಿವರಣಕಾರರು ವಾಚಸ್ಪತಿಮಿಶ್ರರ ಅಭಿಪ್ರಾಯವನ್ನು ಒಪ್ಪುವುದಿಲ್ಲ.ಅವರ ಪ್ರಕಾರ ಮನಸ್ಸು ಒಂದು ಇಂದ್ರಿಯವಲ್ಲ.ಸುಖ ದುಃಖಗಳು ಸಾಕ್ಷಿಗೆ ಮಾತ್ರ ದತ್ತವೇ ಹೊರತು ಮನಸ್ಸಿಗಲ್ಲ.ಅವು ಮನಸ್ಸಿನ ರೂಪಗಳಾಗಿವೆ.ವಿವರಣಕಾರರ ಭಾಷೆಯಲ್ಲೇ ಹೇಳಬೇಕೆಂದರೆ ಅವು ಕೇವಲ ಸಾಕ್ಷಿಭಾಷ್ಯಗಳಾಗಿವೆ.ಎಂದರೆ ಸುಖ ದುಃಖಗಳು ಸಾಕ್ಷಿಯಿಂದ ಪ್ರಕಾಶಿಸಲ್ಪಟ್ಟ ಅಂತಃಕರಣದ ರೂಪಗಳು.
ಜ್ಞಾನವು ವಸ್ತುತಂತ್ರ:ಅದ್ವೈತಿಗಳ ಪ್ರಕಾರ ಯಾವುದು ಸತ್ಯಕ್ಕೆ ಹೊಂದಿಕೊಂಡಿರುತ್ತದೆಯೋ ಆ ಜ್ಞಾನವೇ ಸತ್ಯ.ಎಂದರೆ ವಸ್ತುವನ್ನು ಅದು ಇದ್ದಂತೆ ತಿಳಿಯುವುದೇ ಸತ್ಯ. ಜ್ಞಾನವೆಂಬುದು ವಸ್ತುವಿನ ಸ್ವರೂಪದಿಂದ ನಿಧ೯ರವಾಗಿದೆಯೇ ಹೊರತು ಬೇರೆ ಅಂಶಗಳಿಂದಲ್ಲ.ಒಂದು ವಸ್ತು ಸತ್ಯವಾಗುವುದು ನಮ್ಮ ಇಚ್ಛೆಯಿಂದಾಗಲೀ ಅಥವಾ ವೇದಗಳ ಆದೇಶದಿಂದಾಗಲೀ ಅಲ್ಲ.ವೇದವೂ ಕೂಡ ವಸ್ತುವಿನ ಸ್ವರೂಪವನ್ನು ಬದಲಾಯಿಸಲಾರದು.ವೇದವು ನೂರು ಬಾರಿ ಹೇಳಿದರೂ ಬೆಂಕಿಯು ತನ್ನ ಉಷ್ಣತೆಯನ್ನು ಕಳೆದುಕೊಳ್ಳುವುದಿಲ್ಲ. ಏಕೆಂದರೆ ವೇದದ ಈ ಹೇಳಿಕೆಯು ವಸ್ತು ಸ್ಥಿತಿಗೆ ವಿರುದ್ಧ.ಆದ್ದರಿಂದ ಜ್ಞಾನವು ವಸ್ತುವಿನ ಸ್ವರೂಪದಿಂದ ನಿಧಾ೯ರಿತವಾಗುತ್ತದೆಯೇ ಹೊರತು ನಮ್ಮ ಇಚ್ಛೆಯಿಂದಾಗಲೀ ಅಥವಾ ಧಮ೯ಗ್ರಂಥಗಳ ಹೇಳಿಕೆಯಿಂದಾಗಲೀ ಅಲ್ಲ.ಇದನ್ನೇ ಶಂಕರರು ವಸ್ತುತಂತ್ರ ಎನ್ನುವುದು.ಜ್ಞಾನವು ವಸ್ತು ತಂತ್ರವೇ ಹೊರತು ಬುದ್ಧಿತಂತ್ರವಾಗಲೀ ಚೋದನಾ ತಂತ್ರವಾಗಲೀ(ಆದೇಶ) ಅಲ್ಲ.
ಸತ್ಯದ ಅಳತೆಗೋಲು:ನಮ್ಮ ಜ್ಞಾನ ಅಥವಾ ಅನುಭವಗಳಲ್ಲಿ ಕೆಲವನ್ನು ನಾವು ಸತ್ಯವೆಂದೂ ಇನ್ನೂ ಕೆಲವನ್ನು ಅಸತ್ಯವೆಂದೂ ಹೇಳುತ್ತೇವೆ.ನಮ್ಮ ಅನುಭವವು ಎಷ್ಟು ವೈವಿಧ್ಯಮಯವೆಂದರೆ ಸತ್ಯಾಸತ್ಯತೆಗಳೆರಡೂ ಇರುತ್ತವೆ.ಆದ್ದರಿಂದ ನಾವು ಈ ಅನುಭವ ಅಥವಾ ಜ್ಞಾನದ ಸತ್ಯಾಸತ್ಯತೆಗಳನ್ನು ನಿಧ೯ರಿಸಬೇಕಾಗುತ್ತದೆ.ಇದನ್ನು ಹೇಗೆ ಮಾಡುವುದು?ಜ್ಞಾನದ ಸತ್ಯಾಸತ್ಯತೆಗಳನ್ನು ನಿಧ೯ರಿಸುವ ಮಾನದಂಡ ಯಾವುದು?ಇದು ಜ್ಞಾನ ಮೀಮಾಂಸೆಯಲ್ಲಿ ಬಹಳ ಮುಖ್ಯವಾದ ಪ್ರಶ್ನೆ.ಕೆಲವರು ಇದಕ್ಕೆ ಉತ್ತರವಾಗಿ ಸಾಂಗತ್ಯವಾದವನ್ನು ಮುಂದಿಡುತ್ತಾರೆ. ಇವರ ಪ್ರಕಾರ ಜ್ಞಾನವು ವಸ್ತುಸ್ಥಿತಿ ಮತ್ತು ಅನುಭವಗಳಿಗಿರುವ ಸಾಂಗತ್ಯ.ಇವೆರಡರಲ್ಲೂ ಹೊಂದಾಣಿಕೆ ಇದ್ದರೆ ನಮ್ಮ ಅನುಭವವು ಸತ್ಯ.ಇಲ್ಲದಿದ್ದರೆ ಅದು ಅಸತ್ಯ.(ಅನುಭವ, ಆಲೋಚನೆ,ಜ್ಞಾನ ಈ ಮೂರೂ ಶಬ್ದಗಳು ಒಂದೇ ಆದರೆ ನಮ್ಮ ಅನುಭವದ ವಸ್ತುಗಳು ಯಾವಾಗಲೂ ದೇಶಕಾಲಗಳಲ್ಲಿರುತ್ತವೆ.ಯಾವುದು ದೇಶಕಾಲಗಳಲ್ಲಿರುತ್ತದೆಯೋ ಅದು ಸತತ ವಿಕಾರಕ್ಕೆ ಒಳಗಾಗುvತ್ತಿರುತ್ತದೆ.ಸಾಂಗತ್ಯವಾದವನ್ನು ನಾವು ಒಪ್ಪಿಕೊಂಡಲ್ಲಿನಾವು ವಸ್ತುಸ್ಥಿತಿಯನ್ನು ದೇಶಕಾಲ ಪ್ರಪಂಚಕ್ಕೆ ಸೀಮಿತಗೊಳಿಸಿದಂತಾಗುತ್ತದೆ. ಇದರ ಪರಿಣಾಮವಾಗಿ ನಮ್ಮ ದಾಶ೯ನಿಕ ಕಟ್ಟಡವು ಕೇವಲ ಭೌತಿಕ ಬುನಾದಿಯ ಮೇಲೆ ನಿಂತಂತಾಗುತ್ತದೆ.ಅಥಾ೯ತ್ ನಮ್ಮ ದಶ೯ನವು ಒಣ ಭೌತವಾದವಾಗುತ್ತದೆ. ದೇಶಕಾಲಗಳ ಆಲೋಚನೆ ಒಳಗಿದ್ದು ಮನಸ್ಸಿನ ಹೊರಗೆ ಇರುತ್ತವೆ.ಇವುಗಳ ನಡುವಿನ ಸಾಂಗತ್ಯವನ್ನು ಕಂಡುಕೊಳ್ಳಲು ಸಾಧ್ಯವೇ ಆಗುವುದಿಲ್ಲ.ಏಕೆಂದರೆ ಸಾಂಗತ್ಯವಾದದ ಪ್ರಕಾರ ನಾವು ವಸ್ತುವನ್ನು ಮನಸ್ಸಿನ ಆಲೋಚನೆಯ ಮೂಲಕ ಮಾತ್ರ ತಿಳಿಯಬಲ್ಲೆವು.ಅದನ್ನು ನೇರವಾಗಿ ತಿಳಿಯಲು ಸಾಧ್ಯವಿಲ್ಲ.ವಸ್ತು ಮತ್ತು ಆಲೋಚನೆಗಳ ನಡುವೆ ಸಾಂಗತ್ಯವು ಸಾಧ್ಯವಾಗಬೇಕಿದ್ದರೆ ಇವೆರಡೂ ನಮಗೆ ದತ್ತವಾಗಿಬೇಕು.ಆದರೆ ನಮಗೆ ನೇರವಾಗಿ ದತ್ತವಾಗಿರುವುದು ಆಲೋಚನೆಯೇ ಹೊರತು ವಸ್ತುವಲ್ಲ.ಆದ್ದರಿಂದ ಸಾಂಗತ್ಯವಾದವನ್ನು ಒಪ್ಪಲು ಸಾಧ್ಯವೇ ಇಲ್ಲ.
ಇನ್ನು ಕೆಲವರ ಪ್ರಕಾರ ಜ್ಞಾನದ ಸತ್ಯಾಸತ್ಯತೆಗಳನ್ನು ಸಾಮಂಜಸ್ಯವಾದದ ಮೂಲಕ ನಿಧ೯ರಿಸಬಹುದು.ಸಾಮಂಜಸ್ಯವಾದದ ಪ್ರಕಾರ ಒಂದು ಜ್ಞಾನವು ಇನ್ನೊಂದು ಜ್ಞಾನಕ್ಕೆ ತಾಕಿ೯ಕವಾಗಿ ಸಮಂಜಸವಾಗಿದ್ದರೆಅದು ಸತ್ಯ. ಹಾಗಿಲ್ಲದೆ ಅದು ವಿರುದ್ಧವಾಗಿದ್ದರೆ ಅದು ಅಸತ್ಯ.ಸಾಂಗತ್ಯವಾದವು ವಸ್ತುಸ್ಥಿತಿ ಮತ್ತು ಜ್ಞಾನದ ನಡುವೆ ಹೊಂದಾಣಿಕೆಯನ್ನು ನಿರೀಕ್ಷಿಸಿದ್ದರೆ ಸಾಮಂಜಸ್ಯವಾದವು ಈ ಹೊಂದಾಣಿಕೆಯನ್ನು ಜ್ಞಾನ ಮತ್ತು ಜ್ಞಾನಗಳ ನಡುವೆ ನಿರೀಕ್ಷಿಸುತ್ತದೆ.ಆದರೆ ಈ ಹೇಳಿಕೆಗಳು ವಸ್ತು ಸ್ಥಿತಿಗೆ ದೂರವಾಗಿರಬಹುದು. ಎಂದರೆ ಅಸತ್ಯವಾಗಿರುವ ಹೇಳಿಕೆಗಳ ನಡುವೆಯೂ ಸುಸಂಬದ್ಧತೆಯು ಸಾಧ್ಯ.ಉದಾಹರಣೆಗೆ ಒಂದು ಕಾದಂಬರಿಯ ನಿರೂಪಣೆಯಲ್ಲಿ ಕಂಡು ಬರುವ ತಕ೯ಬದ್ಧತೆ.ಆದರೆ ಇಲ್ಲಿ ಬರುವ ಘಟನೆಗಳೆಲ್ಲವೂ ನಿಜವಾಗಿರದೆ ಕಾಲ್ಪನಿಕವಾಗಿರುತ್ತದೆ.ಆದ್ದರಿಂದ ತಕ೯ ಸಾಮಂಜಸ್ಯವು ಸತ್ಯದ ಅಳತೆ ಗೋಲಾಗಿರಲು ಸಾಧ್ಯವಿಲ್ಲ.
ಇನ್ನು ಕೆಲವರ ಪ್ರಕಾರ ಉಪಯುಕ್ತತೆಯೇ ಜ್ಞಾ£.ದ ಸತ್ಯಾಸತ್ಯತೆಯನ್ನು ನಿಧ೯ರಿಸುತ್ತದೆ. ಇವರನ್ನು 'ಫಲವಾದಿ'ಗಳೆಂದು ಕರೆಯುತ್ತಾರೆ.ಯಾವ ಜ್ಞಾನಕ್ಕೆ ಉಪಯುಕ್ತತೆ ಇದೆಯೋ ಅಥವಾ ಪ್ರಾಯೋಗಿಕ ಮೌಲ್ಯವಿದೆಯೋ ಅದು ಸತ್ಯ.ಇಲ್ಲದಿದ್ದರೆ ಅದು ಅಸತ್ಯ.
ಭಾರತೀಯ ತತ್ವಶಾಸ್ತ್ರದಲ್ಲಿ ಇದನ್ನು 'ಅಥ೯ಕ್ರಿಯಾಕಾರಿತ್ವ' ಎಂದು ಕರೆಯುತ್ತಾರೆ.ಎಂದರೆ ಕ್ರಿಯಾಶೀಲವಾಗಿರುವ ಜ್ಞಾನವೇ ಸತ್ಯ.ಬೌದ್ಧನೈಯಾಯಿಕರು ಈ ವಾದವನ್ನು ಅಂಗೀಕರಿಸುತ್ತಾರೆ.ಆದರೆ ಕೇವಲ ಉಪಯುಕ್ತತೆಯ ಆಧಾರದ ಮೇಲೆ ಜ್ಞಾನದ ಯಥಾಥ೯ತೆಯನ್ನು ನಿಧ೯ರಿಸಲು ಸಾಧ್ಯವಿಲ್ಲ.ಜ್ಞಾನವು ಉಪಯುಕ್ತವಾಗಿರಬಹುದು ಆದರೆ ಅದು ಸತÀ್ಯವಾಗಲಾರದು.ಅಲ್ಲದೇ ಒಂದೇ ಜ್ಞಾನವು ವಿವಿಧ ವ್ಯಕ್ತಿಗಳಿಗೆ ವಿವಿಧ ಮೌಲ್ಯವುಳ್ಳದ್ದಾಗಿರಬಹುದು.ಆದರೆ ಅದ್ವೈತಿಯ ಗುರಿಯು ಸಾವ೯ಕಾಲಿಕ ಮೌಲ್ಯವುಳ್ಳ ಜ್ಞಾನವನ್ನು ಕಂಡುಕೊಳ್ಳುವುದು.ಜ್ಞಾನವೆಂಬುದು ಆತನ ಪ್ರಕಾರ ಯಾವಾಗಲೂ ಒಂದೇ ರೀತಿ ಇರಬೇಕು.ಅದರಲ್ಲಿ ಬದಲಾವಣೆಗೆ ಆಸ್ಪದ ಇರಬಾರದು.
ಅದ್ವೈತಿಯ ಪ್ರಕಾರ ಸತ್ಯದ ಅಳತೆಗೋಲು ಅಬಾಧಿತತ್ವ. ಯಾವಜ್ಞಾನವು ಮತ್ತೊಂದು ಜ್ಞಾನದಿಂದ ಬಾಧವಾಗುವುದಿಲ್ಲವೋ ಅಥವಾ ವಿರೋಧಿಸಲ್ಪಡುವುದಿಲ್ಲವೋ ಅದು ಸತ್ಯ.ಹಾವಿನ ಜ್ಞಾನವು ಅಸತ್ಯ.ಏಕೆಂದರೆ ಅದು ಹಗ್ಗದ ಜ್ಞಾನದಿಂದ ಬಾಧವಾಗುತ್ತದೆ.ಮೊದಲು ಒಂದು ವಸ್ತುವನ್ನು ಹಾವು ಎಂದು ತಿಳಿಯುತ್ತೇವೆ. ಅನಂತರ ಹತ್ತಿರದಿಂದ ನೋಡಿದಾಗ ಅದು ಹಗ್ಗ ಹಾವಲ್ಲ ಎಂಬುದು ನಮಗೆ ಸ್ಪಷ್ಟವಾಗುತ್ತದೆ.ಹೀಗೆ ಹಾವನ್ನು ಕುರಿತ ನಮ್ಮ ತಿಳಿವು ಹಗ್ಗವನ್ನು ಕುರಿತ ನಮ್ಮ ತಿಳಿವಿನಿಂದ ನಾಶ ವಾಗುತ್ತದೆ. ಹಾಗೆಯೇ ಸ್ವಪ್ನವೂ ಅಸತ್ಯವಾಗುತ್ತದೆ.ಏಕೆಂದರೆ ಅದು ಎಚ್ಚರದಜ್ಞಾನದಿಂದ ಬಾಧವಾಗುತ್ತದೆ.ಪಾರಮಾಥಿ೯ಕವಾಗಿ ಎಚ್ಚರದ ಸ್ಥಿತಿಯು ಅಸತ್ಯವಾಗುತ್ತದೆ.ಏಕೆಂದರೆ ಅದು ಆತ್ಮವನ್ನು ಕುರಿತ ಜ್ಞಾನದಿಂದ ಬಾಧವಾಗುತ್ತದೆ.ಈ ಜಗತ್ತಿನಲ್ಲಿ ನಾವು ಯಾವುದೇ ವಸ್ತುವನ್ನು ಸಂದೇಹಿಸಬಹುದು.ಆದರೆ ನಮ್ಮ ಆತ್ಮವನ್ನು ಮಾತ್ರ ನಾವು ಸಂದೇಹಿಸಲು ಸಾಧ್ಯವಿಲ್ಲ.ನಾವು ಇಲ್ಲವೆನ್ನಲು ಸಾಧ್ಯವಿಲ್ಲ.ಒಂದು ಪಕ್ಷಹಾಗೆ ಮಾಡುವ ಸಾಹಸವನ್ನು ನಾವು ಮಾಡಿದರೂ ನಾವು ಅಸ್ಥಿತ್ವದಲ್ಲಿ ಇರಲೇ ಬೇಕಾಗುತ್ತದೆ.ಹೀಗೆ ಆತ್ಮ ನಿರಾಕರಣೆಯು ಆತ್ಮಾನುಮೋದನೆಯಲ್ಲಿ ಪರ್ಯವಸಾನ ವಾಗುತ್ತದೆ. ಆತ್ಮನನು ಕುರಿತ ನಮ್ಮ ಅರಿವು ಬದಲಿಸುವುದಿಲ್ಲವಾದ್ದರಿಂದಲೇ ಆತ್ಮವು ಸತ್ಯ. ಅದು ಇನ್ನಾವುದೇ ಜ್ಞಾನದಿಂದ ಬಾಧವಾಗುವುದಿಲ್ಲ.ಹೀಗೆ ಅದ್ವೈತಿಗಳ ಪ್ರಕಾರ ಅಬಾಧಿತತ್ವವೇ ಸತ್ಯದ ಅಳತೆಗೋಲು.
s
ಶಬ್ದ ಪ್ರಮಾಣ:ಅದ್ವೈತಿಗಳು ಅಂಗೀಕರಿಸುವ ಆರು ಪ್ರಮಾಣಗಳಲ್ಲಿ ಶಬ್ದ ಅಥವಾ ಶೃತಿ ಪ್ರಮಾಣವು ಬಹಳ ಮುಖ್ಯ.ಏಕೆಂದರೆ ಅವರು ಈ ಪ್ರಮಾಣದ ಆಧಾರದ ಮೇಲೆ ತಮ್ಮ ಸಿದ್ಧಾಂತವನ್ನು ಮಂಡಿಸುತ್ತಾರೆ.ಅಂತಿಮ ಸತ್ಯವು ಮಾತು ಮನಸ್ಸುಗಳಿಗೆ ನಿಲುಕದ ವಸ್ತು.ಆದರೆ ಈ ಕಾರಣಕ್ಕಾಗಿ ಬ್ರಹ್ಮವನ್ನು ಇಲ್ಲವೇ ಇಲ್ಲವೆಂದು ಹೇಳಲು ಸಾಧ್ಯವಿಲ್ಲ.ಏಕೆಂದರೆ ಬುದ್ಧಿಗೆ ತನ್ನದೇ ಆದ ಮಿತಿಯುಂಟು.ಅದು ಜ್ಞಾತೃ ಜ್ಞೇಯವೆಂಬ ಭೇದ ಚೌಕಟ್ಟಿನಲ್ಲಿ ಮಾತ್ರ ಕ್ರಿಯಾಶೀಲವಾದುದು.ಆದುದರಿಂದ ಬ್ರಹ್ಮವನ್ನು ಕುರಿತ ಮಾಹಿತಿಯು ನಮಗೆ ಶ್ರುತಿಯಿಂದ ಮಾತ್ರವೇ ದೊರೆಯುವುದು.ಬುದ್ಧಿ ಇಂದ್ರಿಯಗಳಿಗೆ ಮೀರಿದ ವಿಷಯದ ಬಗ್ಗೆ ಶ್ರುತಿಯೇ ನಮಗೆ ಪ್ರಮಾಣವೆಂದು ಶಂಕರರು ಸಾರುತ್ತಾರೆ.ಶ್ರುತಿಯಲ್ಲಿ ಋಷಿಗಳ ಅನುಭವ ಪ್ರಮಾಣಗಳು ದಾಖಲೆಗೊಂಡಿವೆ.ಋಷಿಗಳ ಅಭೇದಾನುಭವದ ಭಾಷಾ ಅಭಿವ್ಯಕ್ತಿಯೇ ಶ್ರುತಿ.ಋಷಿಗಳು ಸತ್ಯವನ್ನು ತಮ್ಮ ಒಳಗಣ್ಣಿನಿಂದ ನೋಡಿ ತಮ್ಮೀ ಅನುಭವಕ್ಕೆ ಭಾಷೆಯ ಅಭಿವ್ಯಕ್ತಿಯನ್ನು ನೀಡಿದರು.ಆದ್ದರಿಂದಲೇ ಅವರನ್ನು 'ಮಂತ್ರ ದೃಷ್ಟಾರರು' ಎನ್ನುವುದು.
ಅದ್ವೈತಿಗಳ ಪ್ರಕಾರ ಅಪೌರುಷೇಯ. ಎಂದರೆ ಅದು ಯಾವ ಕಾಲದಲ್ಲೂ ಮತ್ತು ಯಾವ ನಿದಿ೯ಷ್ಟ ವ್ಯಕ್ತಿಯಿಂದಲೂ ರಚಿತವಾದುದಲ್ಲ.ಅಂತಿಮ ಸತ್ಯವೆಂಬುದು ವ್ಯಕ್ತಿನಿಮಿ೯ತವಲ್ಲ. ಋಷಿಗಳು ಈ ಸಾವ೯ಕಾಲಿಕ ಸತ್ಯವನ್ನು ಅನುಭವಿಸಿದರೇ ಹೊರತು ಅದನ್ನು ಸೃಷ್ಟಿಸಿದವರಲ.್ಲ ಅದ್ವೈತಿಯಂತೆ ಮೀಮಾಂಸಕನೂ ಕೂಡ ಶ್ರುತಿಗೆಪ್ರಾಧಾನ್ಯವನ್ನು ನೀಡುವನಾದರೂ ಶ್ರುತಿಯನ್ನು ಕುರಿತಂತೆ ಇಬ್ಬರಲ್ಲೂ ಒಂದು ಪ್ರಮುಖ ವ್ಯತ್ಯಾಸವಿದೆ.ಮೀಮಾಂಸಕನ ಪ್ರಕಾರ ವೇದದಲ್ಲಿ ಕಮ೯ವನ್ನು ವಿಧಿಸುವ ವಾಕ್ಯಗಳು ಮಾತ್ರ ಪ್ರಮಾಣ."ಸ್ವಗ೯ದ ಬಯಕೆ ಇರುವವನು ರಾಜಸೂಯಾಗವನ್ನು ಮಾಡಬೇಕು"ಎಂಬುದುಒಂದು ವಾಕ್ಯ.ಇದು ಯಜ್ಞಾಚರಣೆಯನ್ನು ವಿಧಿಸುತ್ತದೆ.ಇಂತಹ ವಿಧ್ಯಥ೯ಕ (ವಿಧಿ+ಅಥ೯ಕ) ಮಾತ್ರ ಮೀಮಾಂಸಕನಿಗೆ ಮಾತ್ರ ಪ್ರಮಾಣ.ಉಳಿದ ವಾಕ್ಯಗಳು ಅಥ೯ಹೀನ.
ಆದರೆ ಅದ್ವೈತಿಗಳಿಗೆ ಇದು ಸಮ್ಮತವಲ್ಲ.ಆತನ ಪ್ರಕಾರ ವಿಧ್ಯಥ೯ಕ ವಾಕ್ಯಗಳಿಗೆ ಸ್ವಲ್ಪಮಟ್ಟಿಗೆ ಮೌಲ್ಯವೇನೋ ಇದೆ.ಆದರೆ ಅವುಗಳಮೌಲ್ಯವು ಗೌಣವಾದುದು.ಆತನ ಪ್ರಕಾರ ವಸ್ತುಸ್ಥಿತಿಯನ್ನು ಕುರಿತ ವಾಕ್ಯಗಳಿಗೆ ಎಂದರೆ ವಣ೯ನಾತ್ಮಕ ವಾಕ್ಯಗಳಿಗೆ ಮಾತ್ರನಿಜವಾದ ಮೌಲ್ಯ ಬರುವುದು."ಅದು ನೀನಾಗಿರುವೆ " "ನಾನು ಬ್ರಹ್ಮವಾಗಿರುವೆ"ಈ ಆತ್ಮವು ಬ್ರಹ್ಮವೇ"ಮತ್ತು "ಪ್ರಜ್ಞೆಯು ಬ್ರಹ್ಮವಾಗಿದೆ"ಎಂಬುವು ವಣ೯ನಾತ್ಮಕ ವಾಕ್ಯಗಳು.ಇವು ಆತ್ಮವೇ ಬ್ರಹ್ಮವೆಂಬ ವಸ್ತು ಸ್ಥಿತಿಯ ಬಗ್ಗೆ ವಿವರಿಸುತ್ತದೆ.ಇವು ಯಾವ ಕಮ೯ವನ್ನೂ ವಿಧಿಸುವುದಿಲ್ಲ.ವೇದದ ನಿಜವಾದ ಅಥ೯ವು ಇಂತಹ ವಾಕ್ಯಗಳಲ್ಲಿ ಅಡಗಿರುದರಿಂದ ಇವುಗಳಿಗೆ "ಮಹಾವಾಕ್ಯಗಳು" ಎಂದು ಹೆಸರು.
ಅದ್ವೈತಿಗಳ ಪ್ರಕಾರ ಮಹಾವಾಕ್ಯಗಳನ್ನು ಆರು ಪರೀಕ್ಷೆಗಳಿಗೆ ಒಳಪಡಿಉವ ಮೂಲಕ ಕಂಡು ಹಿಡಿಯಬಹುದು1೯.
1) ಉಪಕ್ರಮ ಮತ್ತು ಉಪಸಂಹಾರಗಳು ಒಂದೇ ಆಗಿರಬೇಕು.ಬೇರೆ ರೀತಿಯಲ್ಲಿ ಹೇಳಬೇಕೆಂದರೆ ನಿದಿ೯ಷ್ಟ ವಿಷಯದಿಂದ ವೇದವು ಪ್ರಾರಂಭವಾದರೆ ಆ ಭಾಗದ ಚಚ೯ಯು ಅದೇ ವಿಷಯದಲ್ಲಿ ಕೊನೆಗೊಳ್ಳ ಬೇಕು. ಉಪಕ್ರಮ ಮತ್ತು ಉಪಸಂಹಾರಗಳು ಬೇರೆಯಾಗಿದ್ದಲ್ಲಿ ವಿಷಯದಲ್ಲಿ ಏನೋ ಅಸಂಬದ್ಧತೆ ಇದೆ ಎಂದು ಅಥ೯.
2) ಪ್ರಸ್ತುತ ಭಾಗವು ವಿಷಯವನ್ನು ಪುನಃ ಪುನಃ ಜ್ಞಾಪಿಸಬೇಕು.ಇದನ್ನು 'ಅಭ್ಯಾಸ' ಎಂದು ಕರೆಯುತ್ತಾರೆ.
3) ಇತರ ಪ್ರಮಾಣಗಳು ನೀಡz ಮಾಹಿತಿಯನ್ನು ಅದು ನಮಗೆ ನೀಡಬೇಕು.ಇದನ್ನು 'ಅಪೂವ೯ತಾ' ಎ0ದು ಕರೆಯುತ್ತಾರೆ.ಇತರ ಪ್ರಮಾಣಗಳು ನೀಡಿದ ಮಾಹಿತಿಯನ್ನೇ ಅದು ನೀಡಿದಲ್ಲಿ ಶ್ರುತಿ ವಾಕ್ಯಗಳು ವ್ಯಥ೯ವಾಗುತ್ತವೆ.ಪ್ರಮಾಣದಲ್ಲಿ ಹೊಸತನವೆಂಬುದು ಇರಬೇಕೆಂದು ಇದರ ಅಥ೯.ಈ ಹೊಸತನವು ಇತರ ಪ್ರಮಾಣಗಳಿಗೆ ದತ್ತವಿರಬಾರದು.
4) ಅದು ವಿಷಯವನ್ನು ತಿಳಿಯುವುದರಿಂದ ಆಗುವಪ್ರಯೋಜನವನ್ನು ಪ್ರಸ್ತಾಪಿಸಬೇಕು.ಇದನ್ನು'ಫಲ' ಎನ್ನತ್ತಾರೆ.
5) ಅದು ವಿಷಯವನ್ನು ವೈಭವೀಕರಿಸಬೇಕು.ಎಂದರೆ ವಿಷಯದ ಮಹತ್ವವನ್ನು ಶ್ಲಾಘಿಸಬೇಕು.ಇದಕ್ಕೆ 'ಅಥ೯ವಾದ" ಎಂದು ಹೆಸರು.
6) ಅದು ವಿಷಯವನ್ನು ಮಂಡಿಸಲು ವೈಚಾರಿಕ ಸಮಥ೯ನೆಯನ್ನು ನೀಡಬೇಕು. ಇದಕ್ಕೆ'ಉಪಪತ್ತಿ' ಎಂದು ಹೆಸರು.ಈ ಆರು ಪರೀಕ್ಷೆಗಳಲ್ಲಿ ಯಾವುದಾದರೂ ಒಂದು ಪರೀಕ್ಷೆಯಲಿ ಅಹ೯ವಾಗದಿದ್ದಲ್ಲಿ ವೇದದ ನಿಜವಾದ ತಿರುಳನ್ನು ನಾವು ನಿಧ೯ರಿಸಲು ಸಾಧ್ಯವಿಲ್ಲ.
ವಾಕ್ಯದ ಅಥ೯ಪೂಣ೯ತೆಯು ನಾಲ್ಕು ಉಪಾಧಿಗಳನ್ನು ಅವಲಂಬಿಸಿರುತ್ತದೆ.
1) ಪದವೊಂದು ಉಚ್ಛರಿಸಲ್ಪಟ್ಟಾಗ ಅದು ಕೇಳುಗನ ಮನಸ್ಸಿನಲ್ಲಿಕುತೂಹಲವನ್ನು ಕೆರಳಿಸಬೇಕು.ಅವನು ಇನ್ನೂ ಹೆಚ್ಚಿನ ಜ್ಞಾನವನ್ನು ನಿರೀಕ್ಷಿಸುವಂತೆ ಮಾಡಬೇಕು.ಈ ಉಪಾಧಿಗೆ 'ಆಕಾಂಕ್ಷ' ಎಂದು ಹೆಸರು.
2) ಮುಂದಿನ ಪದವು ಈ ಕುತೂಹಲವನ್ನು ತೃಪ್ತಿಪಡಿಸಬೇಕು.ಅದು ಈಗಾಗಲೇ ಉಚ್ಚರಿಸಲ್ಪಟ್ಟ ಪದಕ್ಕೆ ಸಮಂಜಸವಾಗಿರಬೇಕು.ಈ ಉಪಾಧಿಗೆ 'ಯೋಗ್ಯತಾ' ಎಂದು ಹೆಸರು.
3) ಮೂರನೆಯ ಉಪಾಧಿಯನ್ನು 'ಸನ್ನಿಧಿ' ಎಂದು ಕರೆಯುತ್ತಾರೆ.ಇದು ಎರಡನೆಯ ಉಪಾಧಿಯನ್ನು ಅನುಸರಿಸುತ್ತದೆ.ಎರಡನೇ ಪದವನ್ನು ನಾವು ಮೊದಲ ಪದವನ್ನು ಉಚ್ಛರಿಸಬೇಕು.ಎರಡು ಪದಗಳ ಉಚ್ಛಾರಣೆಯ ನಡುವೆ ದೀಘ೯ ಕಾಲಾಂತರ ಇರಬಾರದು.ಎಂದರೆ ಪದಗಳನ್ನು ಅತಿ ವಿಳಂಬ ವಾಗಿಯೂ ಉಚ್ಛರಿಸಬಾರದು.ಅತಿ ಶೀಘ್ರವಾಗಿಯೂ ಉಚ್ಛರಿಸಬಾರದು.
4) ಕಡೆಯ ಉಪಾಧಿಯನ್ನು 'ತಾತ್ಪಯ೯ ಜ್ಞಾನ' ಎಂದು ಕರೆಯುತ್ತಾರೆ.ಈ ಉಪಾಧಿಯ ಬಗ್ಗೆ ಒಂದು ವಿವಾದವಿದೆ. ವಾಕ್ಯದ ತಾತ್ಪಯ೯ವನ್ನು ನಿಧ೯ರಿಸುದು ಹೇಗೆ? ಅದರ ಬಿಡಿ ಪದಗಳ ಅಥ೯ವನ್ನು ಗ್ರಹಿಸಿದತಕ್ಷಣವೇ ಅದರ ಪೂಣ೯ ಅಥ೯ ವ್ಯಕ್ತವಾಗುವುದೇ? ಅಥವಾ ಪದಗಳ ಅಥ೯ವನ್ನು ಪ್ರತ್ಯೇಕವಾಗಿ ಗ್ರಹಿಸಿ ಅನಂತರ ಈ ಅಥ೯ಗಳನ್ನು ಒಗ್ಗೂಡಿಸಿ ವಾಕ್ಯದ ಅಥ೯ವನ್ನು ಗ್ರಹಿಸುತ್ತೇವೋ?
ಈಬಗ್ಗೆ ಮೀಮಾಂಸಕರಲ್ಲಿ ಭಿನ್ನಾಭಿಪ್ರಾಯವಿದೆ.ಪ್ರಭಾಕರರ ಪ್ರಕಾರ ವಾಕ್ಯದ ಒಟ್ಟು ಅಥ೯ವನ್ನು ಅದರ ಬಿಡಿ ಪದಗಳನ್ನು ಅಥ೯ಮಾಡಿಕೊಳ್ಳುವ ಜೊತೆಗೇ ನಾವು ಗ್ರಹಿಸಬಹುದು.ಎಂದರೆ ಪದಗಳ ಮತ್ತು ಇಡೀ ವಾಕ್ಯದ ಅಥ೯ಗಳನ್ನು ನಾವು ಏಕಕಾಲದಲ್ಲಿ ಗ್ರಹಿಸಲು ಸಾಧ್ಯ.ಇಡೀ ವಾಕ್ಯವನ್ನು ಅಥ೯ ಮಾಡಿಕೊಳ್ಳಲು ಯಾವ ವಿಶೇಷ ಅಥ೯ವೂ ಬೇಕಿಲ್ಲ.ಈ ವಾದಕ್ಕೆ 'ಅನ್ವಿತಾಭಿದಾನವಾದ' ಎಂದು ಹೆಸರು.
ಕುಮಾರಿಲರ ಪ್ರಕಾರ ಪದಗಳನ್ನು ಪ್ರತ್ಯೇಕವಾಗಿ ಅಥ೯ ಮಾಡಿಕೊಂಡ ನಂತರ ಇಡೀ ವಾಕ್ಯದ ತಾತ್ಪಯ೯ವನ್ನು ಗ್ರಹಿಸಲು ಮತ್ತೊಂದು ಪ್ರಯತ್ನವು ಅಗತ್ಯ.ಪದಗಳ ಅಥ೯ವನ್ನು ಪುನಃ ನೆನಪಿಸಿಕೊಂಡು ಅವುಗಳನ್ನು ನಾವು ಒಗ್ಗೂಡಿಸ ಬೇಕಾಗುತ್ತದೆ.ಈ ವಾದಕ್ಕೆ 'ಅಭಿಹಿತಾನ್ವಯವಾದ' ಎಂದು ಹೆಸರು.ಈ ಎರಡು ವಾದಗಳಲ್ಲಿ ಅದ್ವೈತಿಗಳು 2ನೇ ವಾದವನ್ನು ಅಂಗೀಕರಿಸುತ್ತಾರೆ.
ಮಹಾವಾಕ್ಯದ ಶ್ರವಣ:
ಮಹಾವಾಕ್ಯದ ಅಥ೯ವನ್ನು ಹಾಗೂ ತಾತ್ಪಯ೯ವನ್ನೂ ಯೋಗ್ಯ ಗುರುವಿನಿಂದಲೇ ಶ್ರವಣ ಮಾಡುವುದರ ಮೂಲಕ ತಿಳಿಯಬೇಕು.ಶ್ರವಣದ ನಂತರ ಮನನವು ಬರತ್ತದೆ. ಮನನವೆಂದರೆ ವಿಚಾರವೆಂದಥ೯.ಶಂಕರರ ಪ್ರಕಾರ ಈ ವಿಚಾರವಿಲ್ಲದೇ ಮತ್ತಾವ ಸಾಧನದಿಂದಲೂ ಉಂಟಾಗುವುದಿಲ್ಲ.ಸರಿಯಾದ ಆಲೋಚನೆ ಮತ್ತು ವಿಶ್ಲೇಷಣೆಗಳ ಮೂಲಕ ಗುರು ಭೋಧನೆಯಲ್ಲಿ ಕಾಣಬರುವ ಸಂಶಯವನ್ನು ನಿವಾರಿಸಿಕೊಳ್ಳಬೇಕು.ಸ್ಪಷ್ಟ ಆಲೋಚನೆಗಳಿಗೆ ಅಡ್ಡಿಯಾಗಿರುವ ವಿಕೃತ ಕಲ್ಪನೆಗಳನ್ನು ತಕ೯ದಿಂದ ಮಾತ್ರ ಹೋಗಲಾಡಿಸಬಹುದು.ತಕ೯ ವಿಧಾನದಲ್ಲಿ ನಾವು ಮೊದಲು ವಿರುದ್ಧ ನಿಲುವನ್ನು ಅಂಗೀಕರಿಸುತ್ತೇವೆ.ಅನಂತರ ಅದರ ತಾಕಿ೯ಕ ಪರಿಣಾಮಗಳನ್ನು ಹೊರಗೆಳೆದು ಕೊನೆಗೆ ಅದು ಮೌಢ್ಯವೆಂಬ ತೀಮಾ೯ನಕ್ಕೆ ಬರುತ್ತೇವೆ.ವಿರುದ್ಧ ಮೌಢ್ಯವನ್ನು ತೋರಿಸುವುದೇ ತಕ೯ದ ವಿಧಾನ.
ಒಂದು ವಾಕ್ಯದ ಶ್ರವಣವು ನಮ್ಮನ್ನು ನೇರವಾಗಿ ಅಪರೋಕ್ಷ ಜ್ಞಾನಕ್ಕೆ ಒiಯ್ಯುವುದೋ ಅಥವಾ ಪರೋಕ್ಷ ಜ್ಞಾನಕ್ಕ ಒಯ್ಯುವುದೋ ?ಈ ಬಗ್ಗೆ ವಿವಾದವಿದೆ.ನೈಯಾಯಿಕರ ಪ್ರಕಾರ ವಾಕ್ಯವು ಕೇವಲ ಪರೋಕ್ಷ ಜ್ಞಾನವನ್ನು ನೀಡುತ್ತz .ಗುಲಾಬಿಯು ಕೆಂಪಗಿದೆ ಎಂಬ ವಾಕ್ಯ.ಈ ವಾಕ್ಯವು ಗುಲಾಬಿಯನ್ನು ಕುರಿತಂತೆ ನಮಗೆ ಒಂದು ಕಲ್ಪನೆಯನ್ನು ನೀಡುವುದೇ ಹೊರತು ಗುಲಾಬಿಯ ಅನುಭವವನ್ನು ನಮಗೆ ನೇರವಾಗಿ ನೀಡಲಾರದು.ಆದರೆ ವೇದಾಂತಿಗಳ ಪ್ರಕಾರ ಎಲ್ಲ ವಾಕ್ಯಗಳು ಈ ರೀತಿಯಲ್ಲಿ ಕೆಲವು ವಾಕ್ಯಗಳು ನೇರಜ್ಞಾನ ನೀಡುವಂತವು.ಉದಾ " ನೀನು ಹತ್ತನೆಯವನು" ಎಂಬ ವಾಕ್ಯ.ಅದ್ವೈತಿಯ ಪ್ರಕಾರ ಈ ವಾಕ್ಯವು ನಮ್ಮನ್ನು ನೇರವಾದ ಜ್ಞಾನಕ್ಕೆ ಒಯ್ಯುತ್ತದೆ.ಗುಲಾಬಿಯು ನಮ್ಮಿಂದ ದೂರವಾಗಿ ಎಲ್ಲೋ ಇರುವಂಥ ವಸ್ತು.ಆದ್ದರಿಂದ ಅದನ್ನು ಕುರಿತ ಹೇಳಿಕೆಯೂ ನಮ್ಮನ್ನು ನೇರ ಜ್ಞಾನಕ್ಕೆ ಒಯ್ಯಲಾರದು.ಆದರೆ ಮೇಲೆ ಹೇಳಿದ ವಾಕ್ಯವು ಹಾಗಲ್ಲ.ಅದು ನೇರವಾಗಿ ಅಪರೋಕ್ಷ ಜ್ಞಾನಕ್ಕೆ ಒಯ್ಯುತ್ತದೆ.ಮಹಾವಾಕ್ಯವು ನಮ್ಮ ಆತ್ಮಕ್ಕೆ ಸಂಬಂಧಿಸಿದ್ದು.ಅದರಿಂದ ಅದರ ಶ್ರವಣವು ನಮ್ಮನ್ನು ನೇರಜ್ಞಾನಕ್ಕೆ ಒಯ್ಯಲು ಸಾಧ್ಯವುಂಟು.
ಶಬ್ದ ಪ್ರಮಾಣವು ನಿಜವೋ ಸುಳ್ಳೋ ಎಂಬ ಜಿಜ್ಞಾಸೆಯು ಇದೆ.ಈ ಪ್ರಶ್ನೆಯನ್ನು ನೈಯಾಯಿಕನೇ ಕೇಳುತ್ತಾನೆ.ಆತನ ಪ್ರಕಾರ ಶಬ್ದ ಅಥವಾ ವೇದಾಂತವು ನಿಜವಾದರೆ ಆಗ ಬ್ರಹ್ಮ್ರವು ಅದ್ವೈತವಾಗಲಾರದು.ಎಕೆಂದರೆ ಬ್ರಹ್ಮದ ಜೊತೆಗೆ ಶಬ್ದವೆಂಬ ಮತ್ತೊಂದು ಸತ್ಯವನ್ನು ಅಂಗೀಕರಿಸಿದಂತಾಗುತ್ತದೆ.ಹಾಗಿಲ್ಲದೇ ಶಬ್ದವೂ ಸುಳ್ಳಾದರೆ ಸುಳ್ಳು ಪ್ರಮಾಣದಿಂದ ಉಂಟಾಗುವ ಜ್ಞಾನವು ಹೇಗೆ ನಿಜವಾಗಬಲ್ಲದು ಎಂಬುದು ಪ್ರಶ್ನೆ.ಅದ್ವ್ಯತಿಯ ಪ್ರಕಾರ ಪಾರಮಾಥಿ೯ಕವಾಗಿ ಎಲ್ಲಾ ಪ್ರಮಾಣಗಳೂ ಸುಳ್ಳೇನೋ ಸರಿ.ಆದರೆ ಇದರ ಅಥ೯ ಅಪರಾವಿದ್ಯೆಯೂ (ಕೆಳಹಂತದ ವಿದ್ಯೆ)ಪರಾವಿದ್ಯೆಯನ್ನು (ಉನ್ನತ ವಿದ್ಯೆ)ನೀಡುವುದಿಲ್ಲವೆಂದಲ್ಲ.ಸ್ವಪ್ನವು ಸುಳ್ಳೇನೋ ಸರಿ.ಆದರೆ ನಾವು ಕಂಡ ಹುಲಿ ನಮ್ಮನ್ನು ಎಚ್ಚರದ ಸ್ಥಿತಿಗೆ ಒಯ್ಯುತ್ತದೆ.ಹೀಗೆ ಸತ್ಯದ ಜ್ಞಾನವು ಅಸತ್ಯದಿಂದಲೂ ಸಂಭವಿಸಲು ಸಾಧ್ಯವುಂಟು.
ಕೆಲವು ಸಲ ಶ್ರವಣ,ಮನನ, ನಿದಿಧ್ಯಾಸನದ ನಂತರವೂ ಕೂಡ ಮಹಾವಾಕ್ಯವು ಪರೋಕ್ಷ ಜ್ಞಾನವನ್ನೇ ನೀಡಬಹುದು.ಈ ಜ್ಞಾನವು ನೇರ ಅನುಭವವಾಗಿ ಪರಿಣಮಿಸ ಬೇಕಿದ್ದರೆ ಒಂದು ವಿಶೇಷ ರೀತಿಯ ಧ್ಯಾನದ ಅಭ್ಯಾಸವು ಅಗತ್ಯ.ಈ ಧ್ಯಾನಕ್ಕೆ ಪ್ರಸಂಖ್ಯಾನ ಎಂದು ಹೆಸರು.ಇದು ವಾಚಸ್ಪತಿ ಮಿಶ್ರರ ಅಭಿಪ್ರಾಯ.ಈ ವಿಷಯದಲ್ಲಿ ಅವರು ಮಂಡನಮಿಶ್ರರೆಂಬ ಮತ್ತೊಬ್ಬ ಅದ್ವೈತಿಯನ್ನು ಅನುಸರಿಸುತ್ತಾರೆ.ಆದರೆ ವಿವರಣಕಾರರು ಇದನ್ನು ಒಪ್ಪುವುದಿಲ್ಲ.ಸುರೇಶ್ವರರದೂ ಇದೇ ಅಭಿಪ್ರಾಯ.ಅವರ ಪ್ರಕಾರ ಮಹಾವಾಕ್ಯವನ್ನು ಒಮ್ಮೆ ಸರಿಯಾಗಿ ಶ್ರವಣಮಾಡಿ ಅಥ೯ಮಾಡಿ ಕೊಂಡಲ್ಲಿ ಅದು ನೇರ ಅನುಭವಕ್ಕೆ ಒಯ್ಯಬಲ್ಲದು.ಇದಕ್ಕೆ ಪ್ರಸಂಖ್ಯಾನ ಎಂಬುವ ಪ್ರತ್ಯೇಕವಾದ ಧ್ಯಾನವಿಧಾನದ ಅಗತ್ಯವಿಲ್ಲ.ವಿದ್ಯಾರಣ್ಯರದೂ ಇದೇ ದೃಷ್ಟಿ.ಹೀಗೆ ವಾಕ್ಯವು ಕೇವಲ ಅಪರೋಕ್ಷ ಜ್ಞಾನಕ್ಕೆ ಒಯ್ಯಬಲ್ಲದೆಂಬ ವಾದಕ್ಕೆ ಶಬ್ದಾಪರೋಕ್ಷ ಎಂದು ಹೆಸರು.
ಶ್ರುತಿ ಮತ್ತು ವಿಚಾರ:
ಅದ್ವೈತದಲ್ಲಿ ತಕ೯ ಅಥವಾ ವಿಚಾರದ ಸ್ಥಾನವೇನು?ಈ ಶ್ರುತಿಗೂ ವಿಚಾರಕ್ಕೂ ಇರುವ ಸಂಬಂಧವೇನು.ಇವುಗಳಲ್ಲಿ ಯಾವುದು ಮುಖ್ಯ.ಈ ಪ್ರಶ್ನೆಯು ಜಿಜ್ಞಾಸೆಯ ವಿಷಯವಾಗಿದೆ.ಒಂದು ಪ್ರಮಾಣವು ಇನ್ನೊಂದು ಪ್ರಮಾಣದ ಜ್ಞಾನವನ್ನೇ ನೀಡಿದಲ್ಲಿ ಅದನ್ನು ನಾವು ತಿರಸ್ಕರಿಸಬಹುದು.ಆದರೆ ಶ್ರುತಿಯ ಜ್ಞಾನವು ಇರುವ ಪ್ರಮಾಣಗಳ ಪುನರುಕ್ತಿಯಲ್ಲ.ಆದರೆ ಹೊಸ ಜ್ಞಾನವನ್ನು ನೀಡುತ್ತದೆ.ಅಲ್ಲದೆ ಅದು ಯಾವ ಇತರ ಜ್ಞಾನದಿಂದಲೂ ಬಾಧವಾಗುವುದಿಲ್ಲ.ಅದ್ವೈತದ ಪ್ರಕಾರ ಯಾವ ಜ್ಞಾನದಲ್ಲಿ ಹೊಸತನವಿದೆಯೋ ಯಾವುದು ಇತರ ಪ್ರಮಾಣಗಳ ಪುನರುಕ್ತಿಯಲ್ಲವೋ ಮತ್ತು ಯಾವುದು ಇತರ ಜ್ಞಾನದಿಂದ ಬಾಧವಾಗುವುದಿಲ್ಲವೋ ಅದೇ ಯಥಾಥ೯.ಈ ಅಥ೯ದಲ್ಲಿ ಶ್ರುತಿಯೂ ಯಥಾಥ೯ವಾಗಿದೆ.ಸುರೇಶ್ವರರ ಪ್ರಕಾರ ಒಂದು ಪ್ರಮಾಣವನ್ನು ಮುಖ್ಯವಾಗಿ ಎರಡು ಕಾರಣಗಳಿಗಾಗಿ ತಿರಸ್ಕರಿಸಬಹುದು.
1)ಅದು ಮತ್ತೊಂದು ಪ್ರಮಾಣದ ಸತ್ಯವನ್ನೇ ಸ್ಥಾಪಿಸಿದರೆ
2)ಅದು ಮತ್ತೊಂದು ಪ್ರಮಾಣದ ಸತ್ಯವನ್ನು ವಿರೋಧಿಸ ಹೊರಟಲ್ಲಿ.
ವೇದವನ್ನು ಮೊದಲ ಕಾರಣಕ್ಕಾಗಿ ತಿರಸ್ಕರಿಸುವಂತಿಲ್ಲ.ಏಕೆಂದರೆ ಅದು ಪ್ರತ್ಯಕ್ಷ ಮತ್ತು ಅನುಮಾನಗಳಿಂದ ಪಡೆಯಲಾಗದ ಜ್ಞಾನವನ್ನು ನಮಗೆ ನೀಡುತ್ತದೆ.
ಬ್ರಹ್ಮವನ್ನು ಕುರಿತ ಮಾಹಿತಿಯು ನಮಗೆ ದೊರೆಯುತ್ತದೆ.ವೇದ ಅಥವಾ ಶ್ರುತಿಯಿಂದಲೇ ಈ ಬಗ್ಗೆ ಪ್ರತ್ಯಕ್ಷವಾಗಲೀ ಅನುಮಾನವಾಗಲೀ ನಮಗೆ ಮಾಹಿತಿಯನ್ನು ನೀಡಲಾಗದು.ಪ್ರತ್ಯಕ್ಷದಿಂದ ನಾವು ಬ್ರಹ್ಮವನ್ನು ತಿಳಿಯುವಂತಿಲ್ಲ.ಏಕೆಂದರೆ ಅದಕ್ಕೆ ಬಣ್ಣವಾಗಲೀ ರೂಪವಾಗಲೀ ಇಲ್ಲ.ನಮ್ಮ ಇಂದ್ರಿಯಗಳು ಗ್ರಹಿಸುವುದು ಶಬ್ದ,ಸ್ಪಶ೯,ರೂಪ, ರಸ ಮತ್ತು ಗಂಧವಿರುವ ವಸ್ತುಗಳನ್ನು ಮಾತ್ರ.ಆದರೆ ಬ್ರಹ್ಮಕ್ಕೆ ಈ ಯಾವ ಗುಣವೂ ಇಲ್ಲ.ಅದು ನಿಗು೯ಣವಾದ್ದರಿಂದ ಅದು ಪ್ರತ್ಯಕ್ಷ ಗ್ರಾಹ್ಯವಲ್ಲ.
ಬ್ರಹ್ಮವನ್ನು ಅನುಮಾನದಿಂದಲೂ ತಿಳಿಯಲು ಸಾಧ್ಯವಿಲ್ಲ. ಅದಕ್ಕೆ ಲಿಂಗವೆಂಬ ಚಿನ್ಹೆಯಿಲ್ಲ.ಅನುಮಾನದಲ್ಲಿ ಲಿಂಗ ಸಾಧ್ಯಗಳಿಗೆ ಇರುವ ವ್ಯಾಪ್ತಿ ಸಂಬಂಧದ ಆಧಾರದ ಮೇಲೆ ಬೇರೊಂದು ಸಂದಭ೯ದಲ್ಲಿ ಹೊಗೆಯನ್ನು ಮಾತ್ರಕಂಡು ಬೆಟ್ಟದಲ್ಲಿ ಬೆಂಕಿಯ ಅಸ್ತಿತ್ವವನ್ನು ತಕಿ೯ಸುತ್ತೇವೆ.ಇಲ್ಲಿ ಹೊಗೆಯು ಲಿಂಗವಾದರೆ ಬೆಂಕಿಯು ಸಾಧ್ಯ.ಹಾಗೆಯೇ ಬೆಟ್ಟವು ಪಕ್ಷ ವಾಗುತ್ತದೆ.ಹೊಗೆ ಬೆಂಕಿಗಳಿಗಿರುವ ಅನಿವಾಯ೯ ಸಂಬಂಧವನ್ನು ವ್ಯಾಪ್ತಿ ಎನ್ನುತ್ತಾರೆ.ಆದರೆ ಬ್ರಹ್ಮವನ್ನು ಈ ಪ್ರಕ್ರಿಯೆಯಿಂದ ತಿಳಿಯಲು ಸಾಧ್ಯವಿಲ್ಲ.ಏಕೆಂದರೆ ಅದಕ್ಕೆ ಲಿಂಗವೆಂಬ ಚಿನ್ಹೆಯಿಲ್ಲ.ಬ್ರಹ್ಮದಲ್ಲಿ ವ್ಯಾಪ್ತಿಸಂಬಂಧವಿರದೆ ಅದು ಎಲ್ಲ ಸಂಬಂಧವನ್ನೂ ಮೀರಿದತತ್ವ. ಬ್ರಹ್ಮದೊಡನೆ ವ್ಯಾಪ್ತಿ ಸಂಬಂಧವನ್ನು ಹೊಂದಿರುವ ಮತ್ತೊಂದು ಸಂಬಂಧಿಯೇ ಇಲ್ಲ.ಅದೊಂದು ನಿರುಪಾಧಿಕವಾದ ತತ್ವ.ಈ ಜಗತ್ತನ್ನು ಲಿಂಗವೆಂದು ಮತ್ತು ಬ್ರಹ್ಮವನ್ನು ಸಾಧ್ಯವೆಂದು ನಾವು ಪರಿಗಣಿಸಲು ಸಾಧ್ಯವಿಲ್ಲ.ಏಕೆಂದರೆ ಈಜಗತ್ತು ಮತ್ತು ಬ್ರಹ್ಮಗಳು ಒಟ್ಟಾಗಿರುವ ಸಂದಭ೯ವನ್ನು ನಾವು ಈ ಹಿಂದೆ ನೋಡಿಲ್ಲ.ಈ ಜಗತ್ತನ್ನೇನೋ ನಾವು ಇಂದ್ರಿಯಗಳ ಮೂಲಕ ನೋಡಬಹುದು.ಆದರೆ ಅದರ ಜೊತೆಗೆ ನಾವು ಬ್ರಹ್ಮವನ್ನೇ ಕಂಡಿಲ್ಲ.ಈ ಹಿಂದೆಯೂ ಕಂಡಿಲ್ಲ.ಆದ್ದರಿಂದ ಬ್ರಹ್ಮವನ್ನು ಅನುಮಾನದ ಮೂಲಕ ತಕಿ೯ಸಲು ಸಾಧ್ಯವಿಲ್ಲ.
ಅನುಮಾನದಲ್ಲಿ ಸಾಮಾನ್ಯತೋ ದೃಷ್ಟ ಎಂಬ ವಿಧವಿದೆ.ಇದರ ಪ್ರಕಾರ ಪ್ರಪಂಚದ ಪ್ರತಿಯೊಂದು ವಸ್ತುವಿಗೂ ಸೃಷ್ಟಿಕತ೯ನಿರುವಂತೆ ಈ ಪ್ರಪಂಚಕ್ಕೂ ಒಬ್ಬಸೃಷ್ಟಿಕತ೯ನಿದ್ದಾನೆ.ಈ ಸೃಷ್ಟಿಕತ೯ನೇ ಬ್ರಹ್ಮ ಅಥವಾ ದೇವರು.ಈ ವಾದವನ್ನು ಅದ್ವೈತವು ಎರಡು ರೀತಿಯಲ್ಲಿ ಟೀಕಿಸುತ್ತದೆ.
1)ಇದು ದೃಶ್ಯ ಪ್ರಪಂಚದ ಪರಿಧಿಯೊಳಗೆ ಮಾತ್ರ ಅನ್ವಯವಾಗುದು.ಕಾರ್ಯ ಕಾರಣ ಸಂಬಂಧವು ಪ್ರಪಂಚಕ್ಕೆ ಮಾತ್ರ ಸೀಮಿತ.ಅದನ್ನು ಪ್ರಪಂಚದ ಆಚೆ ಅನ್ವಯಿಸಲು ಸಾಧ್ಯವಿಲ್ಲ.
2)ಒಂದು ಪಕ್ಷ ಪ್ರಪಂಚಕ್ಕೆ ಕಾರಣವಿದ್ದರೂ ಅದು ದೇವರೇ ಏಕೆ ಆಗಿರಬೇಕು.? ಜಡ ಪ್ರಕೃತಿಯು ಏಕೆ ಆಗಬಾರದು.?ಹಾಗೆಯೇ ಒಂದು ಪಕ್ಷ ದೇವರೇ ಪ್ರಪಂಚದ ಕಾರಣವಾಗಿದ್ದಲ್ಲಿ ಆ ಕಾರಣವು ಒಬ್ಬನೇ ಏಕಾಗಿರಬೇಕು.?ಮನೆಯೊಂದನ್ನು ಅನೇಕ ಮಂದಿ ಸೇರಿ ನಿಮಿ೯ಸುವಂತೆ ಈ ಜಗತ್ತನ್ನು ಅನೇಕಮಂದಿ ಸೇರಿ ಏಕೆ ನಿಮಿ೯ಸಿರಬಾರದು?
ಅಲ್ಲದೇ ತಕ೯ದ ತೀಮಾ೯ನಗಳೆಂದಿಗೂ ಒಂದೇ ರೀತಿ ಇರುವುದಿಲ್ಲ.ಮನುಷ್ಯನ ಗ್ರಹಣ ಶಕ್ತಿ ಭಿನ್ನವಾಗಿರುತ್ತದೆ.ಉದಾಹರಣೆಗೆ ಸಾಂಖ್ಯರು ತಕ೯ದ ಮೂಲಕ ಪ್ರಕೃತಿಯೇ ಜಗತ್ತಿನ ಮೂಲಕಾರಣವೆಂದು ಸಾರಿದರು.ಆದರೆ ನೈಯಾಯಿಕರು ಅದೇ ತಕ೯ದ ಮೂಲಕ ಪರಮಾಣುಗಳು ಜಗತ್ತಿಗೆ ಮೂಲಕಾರಣವೆಂದರು.ಆದ್ದರಿಂದ ನಾವೆಷ್ಟು ಗಾಢವಾಗಿ ಆಲೋಚಿಸಿದರೂ ತಕ೯ದ ಮೂಲಕ ತಳೆದ ತೀಮಾ೯ನವು ವಿಭಿನ್ನವಾಗಿತ್ತದೆ.ಇದು ಬುದ್ಧಿ ಅಥವಾ ಪರಿಮಿತಿವಲ್ಲ..ಬರಿಯ ತಕ೯ದಿಂದ ಅಥವಾ ಶುಷ್ಕ ತಕ೯ದಿಂದ ಸತ್ಯದ ಸ್ಥಾಪನೆಯು ಸಾಧ್ಯವಿಲ್ಲ.ಅದರಿಂದ ಬಂದ ತೀಮಾ೯ನವು ಸಂಭಾವ್ಯವೇ ಹೊರತು ಖಚಿತವಲ್ಲ.
ವೇದವನ್ನು ಎರಡನೇ ಕಾರಣಕ್ಕಾಗಿಯೂ ತಿರಸ್ಕರಿಸುಂತಿಲ್ಲ.ಏಕೆಂದರೆ ಅದು ಮತ್ತೊಂದು ಪ್ರಮಾಣದ ಸತ್ಯವನ್ನು ವಿರೋಧಿಸುತ್ತಿಲ್ಲ ಅಥವಾ ಅದರ ಸತ್ಯವು ಮತ್ತೊಂದು ಪ್ರಮಾಣದ ಸತ್ಯಕ್ಕೆ ವಿರುದ್ಧವಾಗಿಲ್ಲ.ಶ್ರುತಿಗೂ ಮತ್ತು ತಕ೯ಕ್ಕೂ ಯಾವ ವಿರೋಧವೂ ಇಲ್ಲ.ಎರಡೂ ತಮ್ಮತಮ್ಮ ಕ್ಷೇತ್ರಗಳಲ್ಲಿ ಪ್ರಾಮಾಣ್ಯವನ್ನು ಹೊಂದಿವೆ.ತಕ೯ವು ಲೌಕಿಕ ಕ್ಷೇತ್ರದಲ್ಲೂ ಶ್ರುತಿಯು ಅಲೌಕಿಕ ಕ್ಷೇತ್ರದಲ್ಲೂ ಪ್ರಾಮಾಣ್ಯವನ್ನು ಹೊಂದಿವೆ.ಏಕೆಂದರೆ ಎರಡು ಪ್ರಮಾಣಗಳ ವಿಷಯವು ಒಂದೇ ಆದಾಗ ಮಾತ್ರ ಅವುಗಳ ನಡುವೆ ವಿರೋಧ ಬರುವ ಸಂದಭ೯ ಉಂಟು.ಆದರೆ ಈ ಎರಡು ಪ್ರಮಾಣಗಳ ವಿಷಯಗಳು ಬೇರೆಯಾಗಿರುವಾಗ ಅವುಗಳ ನಡುವೆ ವಿರೋಧವೆಲ್ಲಿಯದು?.ಪ್ರತಿಯೊಂದು ಪ್ರಮಾಣಕ್ಕೂ ತನ್ನದೇ ಆದ ಒಂದು ಪರಿಮಿತಿ ಇದೆ.ಈ ಪರಿಧಿಯೊಳಗೆ ಮಾತ್ರ ಅದಕ್ಕೆ ಮೌಲ್ಯವಿದೆ.ಇದು ಪ್ರತ್ಯಕ್ಷ ಪ್ರಮಾಣಕ್ಕೆ ಅನ್ವಯಿಸುತ್ತದೆ.ಪಂಚೇದ್ರಿಯಗಳಿಗ ತನ್ನದೇ ಆದ ಮಿತಿಇದೆ.
ಕಣ್ಣು ಶಬ್ದವನ್ನು ಕೇಳಲಾರದು ಮತ್ತು ಕಿವಿಯು ರೂಪವನ್ನು ನೋಡಲಾರದು.ಕಣ್ಣುಗಳು ಆಕಾರಗಳ ಕ್ಷೇತ್ರದಲ್ಲಿ ಮಾತ್ರ ಪ್ರಾಮಾಣ್ಯವನ್ನು ಹೊಂದಿದೆ.ಹಾಗೆಯೇ ಕಿವಿಗಳು ಶಬ್ದಗಳ ಕ್ಷೇತ್ರದಲ್ಲಿ ಮಾತ್ರಪ್ರಾಮಾಣ್ಯವನ್ನುಹೊಂದಿವೆ.ಹಾಗ್ರಯೇಶ್ರುತಿಯೂ ಕೂಡಬುದ್ಧಿ ಇಂದ್ರಿಯಗಳನ್ನು ಮೀರಿದ ಕ್ಷೇತ್ರದಲ್ಲಿ ಮಾತ್ರ ಮೌಲ್ಯವನ್ನು ಪಡೆದಿವೆ.ಶ್ರುತಿಯ ಉದ್ದೇಶ ಲೌಕಿಕ ಉದ್ದೇಶವನ್ನು ಸಮಥಿ೯ಸುವುದಾಗಲೀ ವಿರೋಧಿಸುವುದಾಗಲೀ ಅಲ್ಲ.ಒಂದು ಪಕ್ಷ ಶ್ರುತಿಯು ಇತರ ಪ್ರಮಾಣಗಳಿಗೆ ದತ್ತವಿರುವ ವಿಷಯಗಳನ್ನು ತಿರಸ್ಕರಿಸಿದಲ್ಲಿ ಅದು ತನ್ನ ಪ್ರಾಮಾಣ್ಯವನ್ನು ಕಳೆದುಕೊಳ್ಳುತ್ತದೆ.ಸಾವಿರ ವೇದವಾಕ್ಯಗಳು ಮಡಕೆಯನ್ನು ವಸ್ತ್ರವೆಂದು ಹೇಳಿದರೂ ಅವುಗಳನ್ನು ನಾವು ಒಪ್ಪುವಂತಿಲ್ಲ.ಏಕೆಂದರೆ ಇಲ್ಲಿ ವೇದವು ಪ್ರತ್ಯಕ್ಷ ಪ್ರಮಾಣಕ್ಕೆ ದತ್ತವಿರುವ ವಿಷಯಗಳನ್ನು ವಿರೋಧಿಸುತ್ತದೆ.ಆದ್ದರಿಂದ ಬುದ್ಧಿ ಇಂದ್ರಿಯಗಳಿಗೆ ಮೀರಿದ ವಿಷಯದಲ್ಲಿಮಾತ್ರ ಶ್ರುತಿಯು ಅಥ೯ಪೂಣ೯ವಾಗುವುದು.
ಅಂದ ಮಾತ್ರಕ್ಕೆ ಶ್ರುತಿಯಲ್ಲಿ ವಿಚಾರದ ಅಂಶವೇ ಇಲ್ಲವೆಂದಥ೯ವಲ್ಲ.ಅದು ತನ್ನ ತತ್ವಗಳನ್ನು ಸಮಥಿ೯ಸಲು ಅನೇಕಕಡೆ ತಕ೯ವನ್ನು ಮೊರೆಹೋಗುತ್ತದೆ.ಉದಾಹರಣೆಗೆ ಛಾಂದೋಗ್ಯ ಉಪನಿಷತ್ತು'ತತ್ವಮಸಿ' (ಅದು ನೀನಾಗಿರುವೆ) ಎಂಬ ವಾಕ್ಯವನ್ನು ಸಮಥಿ೯ಸಲು ವಿಚಾರದ ಮೊರೆ ಹೋಗುತ್ತದೆ.ಈ ವೈಚಾರಿಕ ಕಾರಣಗಳಿಗೆ 'ಉಪಪತ್ತಿ' (ಕಾರಣ) ಎಂದು ಕರೆಯುತ್ತಾರೆ.ಒಟ್ಟಿನಲ್ಲಿ ಅದ್ವೈತದ ಪ್ರಕಾರ ತಕ೯ವು ಸ್ವತಂತ್ರವಾಗಿ ಸತ್ಯವನ್ನು ಸ್ಥಾಪಿಸಲಾರದು.ಶ್ರುತಿಯೊಂದೇ ಬ್ರಹ್ಮವನ್ನು ಕುರಿತು ಅಧಿಕಾರ ಯುಕ್ತವಾಗಿ ಮಾತನಾಡಬಲ್ಲದು.ಆದರೂ ಶ್ರುತಿಯು ತಕ೯ದ ಅಂಶನನ್ನು ಅಲಕ್ಷಿಸಿಲ್ಲ.ಅದ್ವೈತವು ಶ್ರುತಿಗೆ ಅಧೀನವಾದ ತಕ೯ಕ್ಕೆ ಪ್ರಾಧಾನ್ಯ ನೀಡುವುದೇ ಹೊರತು ಶುಷ್ಕ ತಕ೯ಕ್ಕಲ್ಲ.
ಭ್ರಮೆ (ಎರರ್):
ಜ್ಞಾನವನ್ನು ಕುರಿತಂತೆ ಭಾರತೀಯ ತತ್ವಶಾಸ್ತ್ರದಲ್ಲಿ ಎರಡು ವಾದಗಳುಂಟು.
1)ಜ್ಞಾನವು ಬಾಹ್ಯವಸ್ತುವನ್ನು ಸೂಚಿಸುವುದಿಲ್ಲವೆಂಬುದು ಮೊದಲವಾದ.ಇದನ್ನು ಯೋಗಾಚಾರ ಬೌದ್ಧರು (ವಿಜ್ಞಾನವಾದಿಗಳು) ಅಂಗೀಕರಿಸುತ್ತಾರೆ.ಇವರ ಪ್ರಕಾರ ಜ್ಞಾನಕ್ಕೆ ವಸ್ತುವೆಂಬುದೇನೋ ಇದೆ.ಆದರೆ ಅದು ಮನಸ್ಸಿಗೆ ಬಾಹ್ಯವಲ್ಲ.ಅದು ಮನಸ್ಸಿನೊಳಗೆ ಇರುತ್ತದೆ.
2) ಇನ್ನು ಜ್ಞಾನವು ಯಾವಾಗಲೂ ಬಾಹ್ಯವಸ್ತುವಿನ ಅಸ್ತಿತ್ವವನ್ನು ಸೂಚಿಸುತ್ತದೆ ಎಂಬುದು ಎರಡನೆಯವಾದ.ಇದನ್ನು ವ್ಯಾವಹಾರಿಕ ಹಂತದಲ್ಲಿಅದ್ವೈತಿಗಳು ಅಂಗೀಕರಿಸುತ್ತಾರೆ.ಇವರ ಪ್ರಕಾರ ಜ್ಞಾನವು ಜ್ಞಾತೃವನ್ನು ಹೇಗೋ ಹಾಗೆಯೇ ಜ್ಞೇಯವನ್ನು ಸೂಚಿಸುತ್ತದೆ.ಬಾಹ್ಯ ವಸ್ತುವಿಲ್ಲದೇ ಜ್ಞಾನವು ಸಾಧ್ಯವಿಲ್ಲ.
ಎಲ್ಲ ಜ್ಞಾನಕ್ಕೂ ವಸ್ತುವಿದ್ದಲ್ಲಿ ನಿಜವಾದ ಜ್ಞಾನಕ್ಕೂ ನಿಜವಲ್ಲದ ಜ್ಞಾನಕ್ಕೂ ವ್ಯತ್ಯಾಸವೇನು?ಎಂದರೆ ಜ್ಞಾನಕ್ಕೆ ವಸ್ತುವಿದ್ದಲ್ಲಿ ಭ್ರಮೆಯು ಹೇಗೆ ಉಂಟಾಗುತ್ತದೆ?.ಈಗಾಗಲೇ ಸ್ಥಾಪಿತವಾಗಿರುವ ಸಿದ್ಧಾಂತಕ್ಕೆ ವಿರುದ್ಧವಾದ ಸಂಗತಿಯೊಂದು ನಮಗೆ ಎದುರಾದಾಗ ನಾವು ಒಮ್ಮೆಲೇ ಆ ಸಿದ್ಧಾಂತವನ್ನು ಕೈಬಿಡುವುದಿಲ್ಲ.ಬದಲಾಗಿ ಅದನ್ನು ವಿರುದ್ಧ ಸಂಗತಿಯೊಂದಿಗೆ ಅದನ್ನು ಸಮನ್ವಯಿಸಲು ಪ್ರಯತ್ನಿಸುತ್ತೇವೆ.ಈ ಸಂದಭ೯ದಲ್ಲೂ ನಾವು ಹೀಗೆಯೇ ಮಾಡುವುದು.ವಸ್ತುವಿಲ್ಲದ ಜ್ಞಾನವು ಅಸಂಭವ.ಆದರೂ ಭ್ರಮೆಯಿದೆ.ಭ್ರಮೆಯೂ ಒಂದು ರೀತಿಯ ಜ್ಞಾನವಾದ್ದರಿಂದ ಅದಕ್ಕೆ ಒಂದು ವಸ್ತುವಿರಬೇಕೆಂದು ನಾವು ತಕಿ೯ಸುತ್ತೇವೆ.ಏಕೆಂದರೆ ಜ್ಞಾನವು ಸರಿಯಿದ್ದಾಗ ವಸ್ತುವನ್ನು ಅಂಗೀಕರಿಸಿ ಅದರಲ್ಲಿ ಭ್ರಮೆ ಉಂಟಾದಾಗ ವಸ್ತುವನ್ನು ನಿರಾಕರಿಸುವುದು ವಿರೋದಾಭಾಸವೇ ಸರಿ.ಆದ್ದರಿಂದ ಪ್ರಮೆಗೆ (ಸರಿಯಾದ ಜ್ಞಾನ)ಹೇಗೋ ಹಾಗೇ ಭ್ರಮೆಗೂ (ತಪ್ಪುಜ್ಞಾನ) ಒಂದು ವಸ್ತುವಿರಬೇಕು.
ಪ್ರಮೆ ಹಾಗೂ ಭ್ರಮೆಗಳೆರಡಕ್ಕೂ ವಸ್ತುಗಳಿದ್ದಲ್ಲಿ ಈ ವಸ್ತುಗಳ ನಡುವಣ ಇರುವ ವ್ಯತ್ಯಾಸವೇನು?ಅದ್ವೈತಿಯ ಪ್ರಕಾರ ಭ್ರಮೆ ಮತ್ತು ಪ್ರಮೆಗಳಿಗಿರುವ ವ್ಯತ್ಯಾಸಕ್ಕೆ ಕಾರಣ ಕ್ರಮವಾಗಿ ವಸ್ತುವಿನ ಅಭಾವ ಮತ್ತು ಅಸ್ತಿತ್ವವಲ್ಲ.ಎಂದರೆ ಪ್ರಮೆಯಲ್ಲಿ ವಸ್ತುವಿದೆ.ಭ್ರಮೆಯಲ್ಲಿ ವಸ್ತುವಿಲ್ಲ ಎಂದು ಅಥ೯ವಲ್ಲ.ಎರಡಕ್ಕೂ ವಸ್ತುಗಳಿವೆ.ಆದರೆ ಆವಸ್ತುಗಳ ಸ್ವರೂಪದಲ್ಲಿ ವ್ಯತ್ಯಾಸವಿದೆಯಷ್ಟೆ.ಈ ವ್ಯತ್ಯಾಸವು ಮುಖ್ಯವಾಗಿ ಎರಡು ರೀತಿಯದು.ಮೊದಲನೆಯದಾಗಿ ಭ್ರಮೆಯ ವಸ್ತು (ಹಗ್ಗದಲ್ಲಿ ಹಾವು) ಎಲ್ಲರಿಗೂ ಗೋಚರವಲ್ಲ.ಅದು ಭ್ರಮೆಯಲ್ಲಿರುವವನಿಗೆ ಮಾತ್ರ ಗೋಚರ.ಎಂದರೆ ಅದು ಭ್ರಮೆಯಲ್ಲಿರುವ ವ್ಯಕ್ತಿಗೆ ಮಾತ್ರ ಸೀಮಿತ.ಆದ್ದರಿಂದ ಅದು ಖಾಸಗಿಯಾಗಿರುತ್ತದೆ.(ಪ್ರೈವೇಟ್).ಆದರೆ ಪ್ರಮೆಯ ವಸ್ತುವು ಎಲ್ಲರಿಗೂ ಸಮನಾಗಿರುತ್ತದೆ. ಆದ್ದರಿಂದ ಅದು ಸಾವ೯ತ್ರಿಕವಾಗಿರುತ್ತದೆ.(ಪಬ್ಲಿಕ್).ಎರಡನೆಯದಾಗಿ ಭ್ರಮೆಯ ವಸ್ತುವು ಭ್ರಮೆಯ ಅವಧಿಗಿಂತಲೂ ಹೆಚ್ಚು ಕಾಲವಾಗಲೀ ಕಡಿಮೆ ಕಾಲವಾಗಲೀ ಇರಲಾರದು. ನಮ್ಮ ಭ್ರಮೆಯು ಕಳೆಯಿತೆಂದರೆ ಆ ಕ್ಷಣವೇ ಅದರ ವಸ್ತುವೂ ಇಲ್ಲವಾಗುತ್ತದೆ.ಆದರೆ ಪ್ರಮೆಯ ವಸ್ತುವು ಹೆಚ್ಚುಕಾಲವಿರುತ್ತದೆ.ಶಂಕರರು ಭ್ರಮೆಯ ವಸ್ತುವನ್ನು 'ಪ್ರಾತಿಭಾಸಿಕ ಸತ್ಯ'ವೆಂದೂ ಪ್ರಮೆಯ ವಸ್ತುವನ್ನು 'ವ್ಯಾವಹಾರಿಕ ಸತ್ಯ'ವೆಂದೂ ಕರೆಯುತ್ತಾರೆ.ಕನಸು ಪ್ರಾತಿಭಾಸಿಕ ಸತ್ಯಕ್ಕೆ ಮತ್ತೊಂದು ಉದಾಹರಣೆ.ಲೌಕಿಕ ವಸ್ತುಗಳ ಅನುಭವವು ವ್ಯಾವಹಾರಿಕ ಸತ್ಯಕ್ಕೆ ಉದಾಹರಣೆ.
ಭ್ರಮೆಯು ಖಾಸಗಿ ಎಂದ ಮಾತ್ರಕ್ಕೆ ಅದು ವ್ಯಕ್ತಿನಿಷ್ಠವೆಂದು ಅಥ೯ವಲ್ಲ.ಎಂದರೆ ಯಾವುದನ್ನು ನಾವು ಪ್ರಾತಿಭಾಸಿಕ ಸತ್ಯವೆನ್ನುತ್ತೇವೆಯೋ ಅದು ಕೇವಲ ಮನಸ್ಸಿನ ರೂಪಗಳಲ್ಲ.ಹಾಗಿದ್ದಲ್ಲಿ ಅದ್ವೈತಕ್ಕೂ ಯೋಗಾಚಾರ ಬೌದ್ಧರಿಗೂ ಯಾವ ವ್ಯತ್ಯಾಸವೂ ಇರುವುದಿಲ್ಲ.ಯೋಗಾಚಾರರ ಪ್ರಕಾರ ಜ್ಞಾನಕ್ಕೆ ಬಾಹ್ಯವಾದ ಯಾವ ವಸ್ತುವೂ ಇಲ್ಲ.ಜ್ಞಾನ ಮತ್ತು ಜ್ಞಾನದ ವಸ್ತುಗಳೆರಡೂ ಒಂದೆ.ಇವುಗಳಲ್ಲಿ ಯಾವ ವ್ಯತ್ಯಾಸವೂ ಇಲ್ಲ.ಆದರೆ ಶಂಕರರೆ ತಮ್ಮ ಸೂತ್ರ ಭಾಷ್ಯದಲ್ಲಿಯೋಗಾಚಾರವನ್ನು ಟೀಕಿಸುತ್ತಾರೆ.ಅವರ ಪ್ರಕಾರ ಭ್ರಮೆಯ ವಸ್ತುವು ಮನಸ್ಸಿನ ರೂಪವಲ್ಲ.ಅದು ಮನಸ್ಸು ಗ್ರಹಿಸುವ ವಸ್ತು.
ಈ ಸಂದಭ೯ದಲ್ಲಿ ಪಾಶ್ಚಾತ್ಯ ಅನುಭವವಾದಿಯಾದ ಬಾಕ್ಲೆ೯ಯ ಹೇಳಿಕೆಯನ್ನು ಉಲ್ಲೇಖಿಸುವುದು ಅಗತ್ಯ.ಬಾಕ್ಲೆ೯ ಪ್ರಕಾರ ಒಂದು ವಸ್ತುವು ಇದೆಯೆಂದರೆ ಅದು ಪ್ರತ್ಯಕ್ಷ ಗ್ರಾಹ್ಯವಾಗಿರಬೇಕು.(ಎಸ್ಸೆ ಇಸ್ ಪರ್ಸಿಪೈ). ವಸ್ತುವು ಇದ್ದು ಅದು ಪ್ರತ್ಯಕ್ಷಕ್ಕೆ ಅಗ್ರಾಹ್ಯವೆನ್ನಲು ಸಾಧ್ಯವಿಲ್ಲ.ಹಾಗೆ ಹೇಳಿದಲ್ಲಿ ಅದು ಅಜ್ಞೇಯತಾವಾದವಾಗುತ್ತದೆ.
ಶಂಕರರು ಇದನ್ನೇ ಬೇರೆ ರೀತಿಯಾಗಿ ಮಂಡಿಸುತ್ತಾರೆ.ಅವರ ಪ್ರಕಾರ ಯಾವುದು ಪ್ರತ್ಯಕ್ಷ ಗ್ರಾಹ್ಯವೋ ಅದಕ್ಕೆ ಅಸ್ತಿತ್ವವಿದೆ.ಬಾಕ್ಲೆ೯ ಅಸ್ತಿತ್ವದಿಂದ ಅರಿವಿನೆಡೆಗೆ ಚಲಿಸಿದರೆ ಶಂಕರರು ಭ್ರಮೆಯ ನಿರೂಪಣೆಯಲ್ಲಿ ಅರಿವಿನಿಂದ ಅಸ್ತಿತ್ವದೆಡೆಗ ಚಲಿಸುತ್ತಾರೆ.ಭ್ರಮೆಯಲ್ಲಿ ಅರಿವಿರುವುದರಿಂದ ಅದಕ್ಕೆ ಒಂದು ವಸ್ತುವಿದ್ದು ಆವಸ್ತುವು ಸ್ವಲ್ಪಮಟ್ಟಿಗೆ ನಿಜವಿರಬೇಕು.
ಹೀಗೆ ಪ್ರಮೆ ಮತ್ತು ಭ್ರಮೆ ಗಳೆರಡಕ್ಕೂ ವಸ್ತುಗಳಿದ್ದು ಎರಡೂ ವಿಭಿನ್ನ ವಗ೯ಗಳಿಗೆ ಸೇರಿದವು.ಆದರೂ ಅವುಗಳಿಗೆ ನಾವು ಹೇಗೋ ಸಂಬಂಧವನ್ನು ಕಲ್ಪಿಸುತ್ತೇವೆ.ಕಪ್ಪೆಚಿಪ್ಪು (ಶುಕ್ತಿ) ಮತ್ತು ಬೆಳ್ಳಿ(ರಜತ)ಬೇರೆ ಯಾದರೂ ಅವುಗಳಿಗೆ ಸಂಬಂಧವನ್ನು"ಇದುಬೆಳ್ಳಿ'ಎಂದು ಕಲ್ಪಿಸುತ್ತೇವೆ.ಇಲ್ಲಿ ನಿಜವಿರುವುದು "ಇದು" ಎಂಬುದಷ್ಟೆ.ಆದರೂ ಎರಡು ವಸ್ತುಗಳಿಗೆ ಸಂಬಂಧವನ್ನು ಕಲ್ಪಿಸುತ್ತೇವೆ.
ಈ ಸಂಬಂಧವು ಯಾವ ರೀತಿಯದು ಎಂಬುದು ಮುಂದಿನ ಪ್ರಶ್ನೆ.ಇದು ಭೇದವೋ ಅಭೇದವೋ ಭೇದಾಭೇದಾವೋ ಎಂಬುದು ಪ್ರಶ್ನೆ.ಈ ಎರಡು ವಸ್ತುಗಳಿಗೆ ಅಭೇದ ಸಂಬಂಧವಿರಲು ಸಾಧ್ಯವಿಲ್ಲ.ಏಕೆಂದರೆ ಈಗಾಗಲೇ ನಾವು ತಿಳಿದಿರುವಂತೆ ಎರಡೂ ವಿಭಿನ್ನ ಹಂತಗಳಿಗೆ ಸೇರಿದವು."ಇದು" ಎಂಬುದು ವ್ಯಾವಹಾರಿಕ ಹಂತಕ್ಕೆ ಸೇರಿದರೆ ಬೆಳ್ಳಿಎಂಬುದು "ಪ್ರಾತಿಭಾಸಿಕ" ಹಂತಕ್ಕೆ ಸೇರಿದೆ.ಹಾಗೆಯೇ ಈಎರಡೂ ಪೂಣ೯ವಾಗಿ ವಿಭಿನ್ನವೂ ಅಲ್ಲ.ಏಕೆಂದರೆ ಬೇರೆಯಾಗಿದ್ದಲ್ಲಿ ಅವುಒಂದೇ ಅನುಭವದಲ್ಲಿ ದತ್ತವಾಗುತ್ತಿರಲಿಲ್ಲ.ಅದೇರೀತಿ ಅವುಗಳಿಗೆ ಭೇದಾಭೇದ ಸಂಬಂಧವಿರಲೂ ಸಾಧ್ಯವಿಲ್ಲ.ಏಕೆಂದರೆ ಎರದು ವಸ್ತುಗಳು ಏಕಕಾಲದಲ್ಲಿ ಏಕ ಹಾಗೂ ಭಿನ್ನವಿರಲು ಸಾಧ್ಯವಿಲ್ಲ.ಆದ್ದರಿಂದ ಈ ಎರಡೂ ವಸ್ತುಗಳಿಗೆ ಸಂಬಂಧವಿದೆಯಾದರೂ ಈ ಸಂಬಂಧವು ಅದ್ವೈತಿಗಳ ಪ್ರಕಾರ ವಿಶಿಷ್ಟ ರೀತಿಯದಾಗಿರಬೇಕು.ಅದ್ವೈತಿಗಳು ಇದನ್ನು ತಾದಾತ್ಮ್ಯ ಸಂಬಂಧವೆಂದು ಕರೆಯುತ್ತಾರೆ.
ಈ ತಾದಾತ್ಮ್ಯ ಸಂಬಂಧವು ಸತ್ಯವಾಗಲು ಸಾಧ್ಯವಿಲ್ಲ.ಏಕೆಂದರೆ ಇಲ್ಲಿನ ವಸ್ತುಗಳ ನಡುವಿನ ವ್ಯತ್ಯಾಸವು ತಿಳಿದನಂತರ ಅದು ಸುಳ್ಳಾಗುತ್ತದೆ.ಹಾಗೆಯೇ ಈ ಸಂಬಂಧವು ಅಸತ್ಯವೂ ಅಲ್ಲ.ಏಕೆಂದರೆ ಅದು ಅನುಭವಗ್ರಾಹ್ಯವಾದುದು.ಅನುಭವ ಗ್ರಾಹ್ಯವಾದುದನ್ನು ಅಸತ್ಯವೆಂದು ಅಷ್ಟು ಸುಲಭವಾಗಿ ತಳ್ಳಿಹಾಕಲು ಸಾಧ್ಯವಿಲ್ಲ.ಹೀಗೆ ಸತ್ಯವೆಂದಾಗಲೀ ಅಸತ್ಯವೆಂದಾಗಲೀ ವಿವರಿಸಲು ಸಾಧ್ಯವಿಲ್ಲದಿರುವುದರಿಂದಲೇ ಭ್ರಮೆಯನ್ನು ಅದ್ವೈತಿಗಳು "ಅನಿವ೯ಚನೀಯ"ವೆಂದು ಕರೆಯುವುದು.ಭ್ರಮೆಯನ್ನು ಅನಿವ೯ಚನೀಯವೆನ್ನುವುದರಿಂದ ಭ್ರಮೆಯನ್ನು ಕುರಿತ ಅದರ ಸಿದ್ಧಾಂತಕ್ಕೆ "ಅನಿವ೯ಚನೀಯ ಖ್ಯಾತಿ" ಎಂದು ಹೆಸರು.ಅದ್ವೈತಿಗಳ ಪ್ರಕಾರ ಭ್ರಮೆಯೂ ಸತ್ಯ.ಆದರೆ ಅದು ತಾತ್ಕಾಲಿಕವಾಗಿ ಮಾತ್ರ. ಯಾವುದು ತಾತ್ಕಾಲಿಕವೋ ಅದನ್ನು "ಮಿಥ್ಯೆ" ಅಥವಾ ತೋರಿಕೆ ಎನ್ನುತ್ತಾರೆ.ಮಿಥ್ಯೆಯು ಸಂಪೂಣ೯ವಾಗಿ ಅಸತ್ಯವಲ್ಲ.ಅದು ಸುಳ್ಳಾಗುವುದು ನಿಜ ಮತ್ತು ತೋರಿಕೆಯ ನಡುವೆ ನಮಗೆ ವ್ಯತ್ಯಾಸವು ತಿಳಿದಾಗ ಮಾತ್ರ.ಕಪ್ಪೆಚಿಪ್ಪಿನಲ್ಲಿಬೆಳ್ಳಿಯು ಕಾಣುತ್ತಿರುವವರೆಗೆ ಬೆಳ್ಳಿಯು ನಿಜ.ಕಾರಣ ಅದು ನಮ್ಮ ಅನುಭವಕ್ಕೆ ದತ್ತವಾಗಿರುತ್ತದೆ.ಆದರೆ ಅವುಗಳ ನಡುವೆ ಅಂತರವು ತಿಳಿಯುವುದೋ ಮತ್ತು ಯಾವಾಗ ಕಪ್ಪೆಚಿಪ್ಪು ಬೆಳ್ಳಿಯಷ್ಟು ತೂಕವಲ್ಲವೆಂಬುದನ್ನು ತಿಳಿಯುಉಯುವುದೋ ಆಗ ಬೆಳ್ಳಿಯು ಸುಳ್ಳಾಗುತ್ತದೆ.ಇನ್ನೂ ಒಂದು ವಿಶೇಷ.ಈ ಎರಡು ವಸ್ತುಗಳಲ್ಲಿ ಪ್ರಮೆಯ ವಸ್ತುವಿನ ಆಧಾರವಿಲ್ಲದೇ (ಕಪ್ಪೆಚಿಪ್ಪು)ಭ್ರಮೆಯ ವಸ್ತುವು (ಬೆಳ್ಳಿ) ಇರಲಾರದು.ಆದರೆ ಭ್ರಮೆಯ ವಸ್ತುವು ತಿರಸ್ಕøತವಾದರೂ ಪ್ರಮೆಯ ವಸ್ತುವು ಇರಬಲ್ಲದು.ಕಪ್ಪೆಚಿಪ್ಪಿನ ಆಧಾರ ವಿಲ್ಲದೇ ಬೆಳ್ಳಿಯು ಇರಲಾರದು.ಆದರೆ ಬೆಳ್ಳಿ ಇಲ್ಲದೆಯೂ ಕಪ್ಪೆಚಿಪ್ಪು ಇರಬಲ್ಲದು.
ಒಟ್ಟಾರೆ ಕಪ್ಪೆಚಿಪ್ಪಿನ ಮೇಲೆ ನಾವು ಬೆಳ್ಳಿಯನ್ನು ಆರೋಪಿಸುತ್ತೇವೆ.ಭ್ರಮೆಯಲ್ಲಿ ಕಾಣಬರುವ ಈ ಮಿಥ್ಯಾರೋಪಕ್ಕೆ "ಅಧ್ಯಾಸ" ಎಂದು ಹೆಸರು.ಈ ಅಧ್ಯಾಸಕ್ಕೆ ಮೂಲಭೂತವಾದ ಕಾರಣ ಅಜ್ಞಾನ ಅಥವಾ ಅವಿದ್ಯೆ.ಈ ಕಾರಣದಿಂದಲೇ ನಾವು ಒಂದು ವಸ್ತುವಿನ ಮೇಲೆ ಮತ್ತೊಂದು ವಸ್ತುವನ್ನು ಆರೋಪಿಸುವುದು.ಕಪ್ಪೆಚಿಪ್ಪನ್ನು ಕುರಿತ ಅಜ್ಞಾನದಿಂದಲೇ ನಾವು ಅದರ ಸ್ಥಳದಲ್ಲಿ ಬೆಳ್ಳಿಯನ್ನು ಕಾಣುವುದು.
ಜ್ಞಾನವು ಜ್ಞಾತೃ ಜ್ಞೇಯವನ್ನು ಹೇಗೋ ಹಾಗೆಯೇ ಅಜ್ಞಾನವೂ ಕೂಡ ಅದು ಯಾರಿಗೆ ಸೇರಿದೆಯೋ ಆವ್ಯಕ್ತಿಯನ್ನು ಮತ್ತು ಅದಕ್ಕೆ ಸಂಬಂಧಿಸಿದ ವಸ್ತುವನ್ನು ಸೂಚಿಸುತ್ತದೆ.ಬೇರೆ ರೀತಿ ಹೇಳಬೇಕೆಂದರೆ ಅಜ್ಞಾನಕ್ಕೆ ಒಂದು 'ಆಶ್ರಯ' ಮತ್ತು ಒಂದು 'ವಿಷಯ'ವಿದೆ.ಮೇಲಿನ ಉದಾಹರಣೆಯಲ್ಲಿ ಕಪ್ಪೆಚಿಪ್ಪನ್ನು ಬೆಳ್ಳಿಯೆಂದು ತಿಳಿಯುವವನು ಅಜ್ಞಾನದ ಆಶ್ರಯ.ಹಾಗೆಯೇ ಬೆಳ್ಳಿಯು ಅಜ್ಞಾನದ ವಿಷಯ.ಇಲ್ಲಿ ಅಜ್ಞಾನವು ಎರಡು ರೀತಿ ಕಾಯ೯ಶೀಲ ವಾಗುತ್ತದೆ.1) ಅದು ಕಪ್ಪೆಚಿಪ್ಪೆಂಬ ವಸ್ತುಸ್ಥಿತಿಯನ್ನು ಮರೆಮಾಚುತ್ತದೆ.2)ಕಪ್ಪೆಚಿಪ್ಪಿನ ಸ್ಥಳದಲ್ಲಿ ಬೆಳ್ಳಿಯನ್ನು ತೋರಿಸುತ್ತದೆ.ಅವಿದ್ಯೆಯ ಈ ಎರಡು ಕಾಯ೯ಗಳಿಗೆ 'ಆವರಣ' ಮತ್ತು 'ವಿಕ್ಷೇಪ' ಎಂದು ಹೆಸರು.ಹೀಗೆ ಅವಿದ್ಯೆಯು ನಿಷೇಧಾತ್ಮಕವಷ್ಟೇ ಅಲ್ಲ ಅದು ಭಾವರೂಪವೂ ಹೌದು.ಏಕೆಂದರೆ ಇಲ್ಲಿ ನಾವು ಇರುವುದನ್ನು ಕಾಣದಿರುವಷ್ಟೇ ಅಲ್ಲ ಅದರ ಸ್ಥಳದಲ್ಲಿಇಲ್ಲದಿರುವುದನ್ನು ಕಾಣುತ್ತೇವೆ.
ಜ್ಠಾನ ಮೀಮಾಂಸೆ:
1)ವೆಲ್ಲಾಲ ನಾಗರಾಜ ಶಾಸ್ತ್ರಿ,ಅದ್ವೈತ ವೇದಾಂತ,ಅದ್ವೈತ ವಿದ್ಯಾ ಪ್ರತಿಷ್ಠಾನ,ಶ್ರೀ ಕೋದಂಡಾಶ್ರಮ ಮಠ,ಹೆಬ್ಬೂರು,ತುಮಕೂರು ಜಿಲ್ಲೆ,
ಮೊದಲನೇ ಮರು ಮುದ್ರಣ 2002 ಪುಟ 5
2)ಅದೇ ಪುಟ 6
3) ಅದೇ ಪುಟ 7
4) ಅದೇ ಪುಟ 7
5)ಅದೇ ಪುಟ 7
6) ಅದೇ ಪುಟ 8
7) ಅದೇ ಪುಟ8
8)ಅದೇ ಪುಟ ೯
೯) ಅದೇಪುಟ ೯
10)ಅದೇ ಪುಟ ೯
11)ಅದೇ ಪುಟ 10
12)ಅದೇ ಪುಟ 10
13) ಅದೇ ಪುಟ 10
14)ಅದೇ ಪುಟ 4
15)ಅದೇ ಪುಟ 1
16) ಅದೇ ಪುಟ 12
17) ಅದೇ ಪುಟ 13
18) ಅದೇ ಪುಟ 124
1೯)ಸ್ವಾಮಿ ಹಷಾ೯ನಂದ,ಸದಾನಂದ ಪ್ರಣೀತ ವೇದಾಂತ ಸಾರ,ಶ್ರೀರಾಮಕೃಷ್ಣಾಶ್ರಮ,ಮೈಸೂರು,ಮೊದಲನೇ ಮುದ್ರಣ,1೯83 ಪುಟ 125.
ಆಧಾರಗ್ರಂಥಗಳು:
1)ವೇದಾಂತ ಪರಿಚಯ_ಪ್ರೊ ಜಿ ಶ್ರೀನಿವಾಸನ್.
2)ಭಾರತೀಯ ತತ್ವ ಶಾಸ್ತ್ರದ ರೂಪರೇಖೆಗಳು_ಪ್ರಭುಶಂಕರ
3)ಭಾರತೀಯ ದಶ೯ನಗಳು_ ಬಲದೇವ ಉಪಾಧ್ಯಾಯ
4)ಭಾಮತಿ_ಶೃಂಗಗಿರಿ ನರಸಿಂಹ ಶಮ೯
5)ದ್ವೈತ ಸಿದ್ಧಾಂತ_ಶ್ರೀಮತಿ ಸೇತುಬಾಯಿ.
6)ವಿಶಿಷ್ಟಾದ್ವೈತ _ಅನಂತ ರಂಗಾಚಾಯ೯
7) ರಾಮಾನುಜರ ಗೀತಾಭಾಷ್ಯ_ರಾಘವಾಚಾಯ೯
8)ಬ್ರಹ್ಮಸೂತ್ರ ಭಾಷ್ಯ _ ಸ್ವಾಮಿ ಗಂಭೀರಾನನಂದ
೯)ಅದ್ವೈತವೇದಾಂತ_ ಎಂ ಕೆ ವೆಂಕಟರಾಮ ಐಯರ್.
10) ಭಾರತೀಯ ತತ್ವಶಾಸ್ರ್ತದ ಮೂಲಾಂಶಗಳು _ಪ್ರಭುಶಂಕರ
ಅಧ್ಯಾಯ 10: ಉಪಸಂಹಾರ
ಅದ್ವೈತವು ವೇದಾಂತದ ಉತ್ತುಂಗ ಶಿಖರಗಳಲ್ಲೊಂದು.ಇದರಲ್ಲಿ ಕೆಲವು ಶ್ರುತಿ ಪ್ರಧಾನ.ಕೆಲವುಯುಕ್ತಿಪ್ರಧಾನ.ಕೆಲವು ಅನುಭವ ಪ್ರಧಾನ.
ಇದು ನಾಮ,ರೂಪ,ದೇಶ, ಕಾಲ, ಕಾಯ೯ಕಾರಣ ಇವುಗಳನ್ನು ಮೀರಿದೆ.ಈ ಸ್ಥಿತಿಯನ್ನೇ"ಸಹಜ ಸಮರಸ" ಎನ್ನುವರು.ಅದ್ವೈತವು ತೋರಿಕೆಯ ಜಗತ್ತನ್ನು ತೊರೆದು ಪರಮ ಸತ್ಯವನ್ನು ನಿಸ್ಸಂಕೋಚವಾಗಿ ಸ್ವೀಕರಿಸುವುದು.ಎಲ್ಲಾದೇವತೆಗಳನ್ನು ಮೀರುವಂತೆ ಮಾಡಿ ಸೂಯ೯, ಚಂದ್ರ, ನಕ್ಷತ್ರ ಇವುಗಳೆಲ್ಲಕ್ಕಿಂತ ಮಿಗಿಲಾದ ಆತ್ಮವನ್ನೇ ಪರಮ ಪದವಿಗೆ ಏರಿಸುವುದು. ಪರಮ ತತ್ವವು ಪ್ರತಿಯೊಂದು ವಸ್ತುವಿನಲ್ಲೂ ರಾರಾಜಿಸುತ್ತಿದೆ.ಅದನ್ನು ಪಡೆಯಬೇಕಾದರೆ ಪ್ರಾತಿಭಾಸಿಕ ಜಗತ್ತನ್ನು ಬಿಟ್ಟು ಪೂಣ೯ವನ್ನುಹಿಡಿಯಬೇಕು1.
ಅತೀಂದ್ರಿಯ ಸತ್ಯವನ್ನು ವಿವರಿಸುವಾಗ ದೇಶ ಕಾಲಕ್ಕೆ ಸಂಬಂಧಪಟ್ಟ ಭಾಷೆಯಲ್ಲಿ ವಿವರಿಸುತ್ತೇವೆ.ಆದರೆ ತನ್ನ ಮೇರೆಗೆ ಮೀರಿರುವುದನ್ನು ವಿವರಿಸಲಾರದು.ಆದರೂ ಒಂದು ಸೂಚನೆಯನ್ನು ಕೊಡಬಲ್ಲದು ಅಷ್ಟೆ.ಸಾಧನ ಚತುಷ್ಟಯದ ಗರಡಿಯಲ್ಲಿ ಪಳಗಿ ಏಕಾಗ್ರವೂ ಸೂಕ್ಷ್ಮವೂ ಆದ ಬುದ್ಧಿಯಿಂದ ಮಾತ್ರ ಇದನ್ನು ತಿಳಿದುಕೊಳ್ಳಲು ಸಾಧ್ಯ.ಅದ್ವೈತ ಭಾವನೆಯ ಸತ್ಯ ನಮ್ಮೆದೆಗೆ ಇಳಿದು ಎಲ್ಲರಲ್ಲಿಯೂ ಗಗನದಂತೆ ಇರುವ ಸಮರಸತತ್ವವನ್ನು ದಶ೯ನಮಾಡಿಸಿ ಜಾತಿಮತ ಕುಲ ಇವುಗಳ ಕಿರಿಯ ಬಿಲದಿಂದ ಹೊರಗೆ ಬರುವಂತೆ ಮಾಡುತ್ತದೆ.
ವೇದಾಂತ ದಶ೯ನದ ಪೀಠಿಕೆ:ನಮ್ಮ ಜೀವನಕ್ಕೆ ಅಥ೯ವಿದೆಯೇ?ನಾವಿರುವ ಈಪ್ರಪಂಚವು ಸತ್ಯವೋ ಅಥವಾ ಮಿಥ್ಯವೋ?ಸತ್ಯವಾದರೆ ಅದರ ಮೂಲಕಾರಣವೇನು.?ಆ ಕಾರಣದ ಸ್ವರೂಪವೇನು?ಅದು ಏಕವೋ ಅನೇಕವೋ?ಅದು ಜಡವೋ ಚೇತನವೋ?ಸಗುಣವೋ ನಿಗು೯ಣವೋ ಅದಕ್ಕೂ ನಮಗೂ ಇರುವ ಸಂಬಂಧವೇನು?ನಾವಿಬ್ಬರೂ ಏಕವೋ ಭಿನ್ನವೋ?ಈ ಜೀವನದ ಹೋರಾಟಕ್ಕೆ ಕೊನೆ ಎಂಬುದಿದೆಯೇ?ಈ ಕೊನೆಯನ್ನು ತಲುಪುವ ಸಾಧನವೇನು?ಕಮ೯ವೋ ಭಕ್ತಿಯೋ ಅಥವಾ ಜ್ಞಾನವೋ?
ಬದುಕನ್ನು ಗಂಭೀರವಾಗಿ ಎಣಿಸುವ ಯಾವುದೇ ವ್ಯಕ್ತಿಗೆ ಎದುರಾಗುವ ಪ್ರಶ್ನೆಗಳಿವು.ವಿಶ್ವದ ತಾತ್ವಿಕ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಈ ಪ್ರಶ್ನೆಗಳಬಗ್ಗೆ ತಲೆಕೆಡಿಸಿಕೊಂಡವರು ಉಪನಿಷತ್ಕಾರರು.ಇವರು ಜೀವನದ ರಹಸ್ಯವನ್ನು ಭೇದಿಸಲು ಪ್ರಯತ್ನಿಸಿದರು.ವಾಸ್ತವವಾಗಿ ಉಪನಿಷತ್ ಎಂಬ ಶಬ್ದದ ಅಥ೯ವೇ ರಹಸ್ಯ ಎಂದು.ಗುರುವು ತನ್ನ ಬಳಿ ನಿಷ್ಠೆಯಿಂದ ಕುಳಿತು ಆಲಿಸುವ ಶಿಷ್ಯನಿಗೆ ನೀಡುವ ಬೋಧನೆಯೇ ಉಪನಿಷತ್ತು.ಉಪನಿಷತ್ತುಗಳನ್ನು ಎರಡು ಅಥ೯ಗಳಲ್ಲಿ ವೇದಾಂತವೆಂದು ಕರೆಯುತ್ತಾರೆ.
1)ಅವು ವೇದದ ಅಂತಿಮಭಾಗ ಎಂಬ ಅಥ೯ದಲ್ಲಿ.ಮಂತ್ರ ಮತ್ತು ಬ್ರಾಹ್ಮಣಗಳು ಉಳಿದೆರಡು ಭಾಗಗಳು.
2)ಅವು ವೇದದ ಅಂತಿಮ ತಾತ್ಪಯ೯ವನ್ನು ಒಳಗೊಂಡಿವೆ ಎಂಬ ಅಥ೯ದಲ್ಲೂ ಅವು ವೇದಾಂತ. ಹೀಗೆ ಭೌತಿಕ ಓರಣ(ವ್ಯವಸ್ಥೆ) ಮತ್ತು ತಾತ್ವಿಕ ದೃಷ್ಟಿಕೋನ ಈ ಎರಡೂ ಅಥ೯ಗಳಲ್ಲಿ ಉಪನಿಷತ್ತುಗಳು ವೇದಾಂತವೆನಿಸಿವೆ.
ಉಪನಿಷತ್ಕಾರರು ವಿಶ್ವರಹಸ್ಯವನ್ನು ಭೇದಿಸಲು ಎಷ್ಟೇ ಯಶಸ್ವಿಯಾದರೂ ಕಾಲಕ್ರಮದಲ್ಲಿ ಅವರ ಬೋಧನೆಗಳು ಗೊಂದಲಕ್ಕೆ ಎಡೆಮಾಡಿಕೊಟ್ಟವು. ಈ ಗೊಂದಲಕ್ಕೆ ಕಾರಣವಿಲ್ಲದಿರಲಿಲ್ಲ. ಮೂಲತಃ ಉಪನಿಷತ್ತುಗಳ ಬೋಧನೆಯು ಅದ್ವೈತವಾದರೂ ದ್ವೈತದ ಅಂಶಗಳಿಗೆ ಕೊರತೆ ಇರಲಿಲ್ಲ.ಈ ವೈದಿಕ ಹಿನ್ನೆಲೆಯಲ್ಲಿಯೇ ಸಾಖ್ಯರು ತಮ್ಮ ದ್ವೈತಸಿದ್ಧಾಂತವನ್ನು ಸಮಥಿ೯ಸಿಕೊಂಡರು.ಅಲ್ಲದೆ ಅವುಗಳಲ್ಲಿ ಸಗುಣ ಮತ್ತು ನಿಗು೯ಣ ಪರಿಕಲ್ಪನೆಗಳೆರಡೂ ಇವೆ.ಅವು ಜೀವಬ್ರಹ್ಮರು ಒಂದೇ ಎಂದು ಹೇಳುತ್ತವೆ ಮತ್ತು ಬೇರೆ ಬೇರೆ ಎಂದೂ ಹೇಳುತ್ತವೆ.ಜೊತೆಗೆ ಅವುಗಳಲ್ಲಿ ಸಪ್ರಪಂಚವಾದವೂ ಇದೆ. ನಿಷ್ಪ್ರಪಂಚವಾದವೂ ಇದೆ.ಹಾಗೆಯೇ ಅವುಗಳಲ್ಲಿಮುಕ್ತಿಯ ಸಾಧನಗಳಾದ ಕಮ೯, ಭಕ್ತಿ, ಜ್ಞಾನಗಳ ಪ್ರಸ್ತಾಪವಿದೆ. ಉದಾಹರಣೆಗೆ ಈಶೋಪನಿಷತ್ತು ಕಮ೯ಯೋಗದ ಬಗ್ಗೆಯೂ ಮತ್ತು ಶ್ವೇತಾಶ್ವತರೋಪನಿಷತ್ತು ಭಕ್ತಿಯೋಗದ ಬಗ್ಗೆಯೂ ಪ್ರಸ್ತಾಪಿಸುತ್ತವೆ.ಇನ್ನು ಜ್ಞಾನಯೋಗದ ಬಗ್ಗೆ ಹೇಳಬೇಕಾಗಿಲ್ಲ.ಉಪನಿಷತ್ತುಗಳಲ್ಲಿ ಅನೇಕಕಡೆಗಳಲ್ಲಿ ಜ್ಞಾನಯೋಗದ ಪ್ರಸ್ತಾಪವು ಬರುತ್ತದೆ.
ಆದರೆ ಕಾಲಕ್ರಮದಲ್ಲಿ ಉಪನಿಷತ್ತುಗಳ ಅಸ್ಪಷ್ಟತೆಯು ಬ್ರಹ್ನಸೂತ್ರದಲ್ಲೂ ಕಂಡುಬಂದಿತು.ಇದಕ್ಕೆ ಕಾರಣ ಬ್ರಹ್ಮಸೂತ್ರಗಳ ಅತಿ ಸಂಕ್ಷಿಪ್ತತೆ.ಬ್ರಹ್ಮಸೂತ್ರದಲ್ಲಿ ಒಂದೇ ಶಬ್ದವಿರುವ ಸೂತ್ರವು ಉಂಟು.ಇದರಿಂದ ಸೂತ್ರಗಳ ನಿಜವಾದ ಇಂಗಿತವೇನು ಎಂಬ ಪ್ರಶ್ನೆ ಪುನಃ ಉಂಟಾಯಿತು.ಇದರಿಂದ ಬ್ರಹ್ಮಸೂತ್ರವು ಅನೇಕ ವಿಂಗಡಣೆಗಳಿಗೆ ಎಡೆಮಾಡಿಕೊಟ್ಟಿತು. ಪ್ರತಿಶಬ್ದದ ಅಥ೯ವಿವರಣೆಗೆ ವ್ಯಾಖ್ಯಾನ ಅಥವಾ ಭಾಷ್ಯಗಳೆಂದು ಹೆಸರು.ಇವುಗಳಲ್ಲಿ ಮುಖ್ಯವಾದ ವ್ಯಾಖ್ಯಾನಗಳು ಶ್ರೀ ಶಂಕರರು ಶ್ರೀ ರಾಮಾನುಜರು ಮತ್ತು ಶ್ರೀ ಮಧ್ವರಿಂದ ರಚಿತವಾಗಿದೆ.ಇವರ ಸಿದ್ಧಾಂತಗಳನ್ನು ಕ್ರಮವಾಗಿ ಅದ್ವೈತ,ವಿಶಿಷ್ಟಾದ್ವೈತ, ಮತ್ತು ದ್ವೈತ ಎಂದು ಕರೆಯುತ್ತಾರೆ.ಶ್ರೀ ಶಂಕರರಿಗೂ ಮೊದಲು ಬ್ರಹ್ಮಸೂತ್ರ ಕುರಿತಂತೆ ಕೆಲವು ವ್ಯಾಖ್ಯಾನಗಳಿದ್ದವು.ಅವು ಈಗ ಉಪಲಬ್ಧವಿಲ್ಲ.ಶ್ರೀ ಶಂಕರರು ನಿಗು೯ಣ ನಿರೀಶ್ವರ ನಿಷ್ಪ್ರಪಂಚವಾದವನ್ನು ಪ್ರತಿಪಾದಿಸಿದರೆ ರಾಮಾನುಜ ಮತ್ತು ಮಧ್ವರು ಸಗುಣ,ಸೇಶ್ವರ ಮತ್ತು ಸಪ್ರಪಂಚವಾದವನ್ನು ಪ್ರತಿಪಾದಿಸುತ್ತಾರೆ.
ತಾತ್ವಿಕವಾಗಿ ಏನೇ ಭಿನ್ನಾಭಿಪ್ರಾಯ ಇದ್ದರೂ ಈ ಮೂವರಲ್ಲಿ ಕೆಳಕಂಡ ಸಾಮ್ಯಗಳಿವೆ.
1)ಈ ಮೂವರೂ ತಮ್ಮ ಸಿದ್ಧಾಂತಗಳಿಗೆ ಮೂಲಸಾಮಗ್ರಿಯನ್ನು ಉಪನಿಷತ್ತುಗಳು,ಬ್ರಹ್ಮಸೂತ್ರ ಮತ್ತು ಭಗವದ್ಗೀತೆಗಳಿಂದ ಪಡೆದುಕೊಂಡಿದ್ದಾರೆ.ಇವುಗಳಿಗೆ
"ಪ್ರಸ್ಥಾನತ್ರಯ"ಗಳೆಂದು ಹೆಸರು.ಇವು ವೇದಾಂತ ದಶ೯ನಕ್ಕೆ ಮೂಲ ಆಧಾರಗಳು.
2)ಈ ಮೂವರಲ್ಲಿ ಯಾರೂ ತಮ್ಮನ್ನು ಮತ ಸ್ಥಾಪಕರೆಂದು ಕರೆದುಕೊಳ್ಳಲಿಲ್ಲ.ಶ್ರುತಿಯಲ್ಲಿ ಈಗಾಗಲೇ ಇರುವ ತಾತ್ಪಯ೯ವನ್ನು ವಿವರಿಸಲು ಪ್ರಯತ್ನಿಸುತ್ತಿದ್ದೇವೆ ಎಂದು
3)ಮೂವರೂ ಪಪಂಚಕ್ಕೆ ಆಶ್ರಯಭೂತವಾದ ಬ್ರಹ್ಮವೆಂಬ ಅಂತಿಮ ಸತ್ಯವನ್ನು ಅಂಗೀಕರಿಸುತ್ತಾರೆ.
್ರ4)ಎಲ್ಲರೂ ಆತ್ಮವು ಶಾಶ್ವತ ಮತ್ತು ಚಿತ್ ಸ್ವರೂಪವೆಂದು ಸಾರುತ್ತಾರೆ.
5)ಎಲ್ಲರ ದೃಷ್ಟಿಯಲ್ಲೂ ಜ್ಞಾ£ವೇ ಮೋಕ್ಷ ನೇರಸಾಧನ ನೇರಸಾಧನವಾಗಿದೆ.
ಅದ್ವೈತ ವೇದಾಂತದ ಹತ್ತು ಪ್ರಧಾನ ಸಂದೇಶಗಳು:2
1)ಪರಮಾತ್ಮನೊಬ್ಬನೇ ಪರಮಾಥ೯,ಇವನೊಬ್ಬನೇ ಸತ್ಯ.ಇವನಿಗೇ ಪರಬ್ರಹ್ಮವೆಂದೂ ಹೆಸರು.
2)ಪರಬ್ರಹ್ಮವು ಸಕಲ ಪ್ರಾಣಿಗಳಿಗೂ ಸಮವಾದ ಆತ್ಮಸ್ವರೂಪವಾಗಿರುತ್ತದೆ.ಪರಬ್ರಹ್ಮವು ಪರಿಪೂಣ೯ವಾಗಿರುತ್ತದೆ.
3)ದೇವತೆಗಳು ಉಪಾಧಿ ಪರಿಚ್ಛಿನ್ನರಾಗಿರುವ ಸಂಸಾರಿಗಳೇ.ದೇವಲೋಕವನ್ನು ಪಡೆದ ಮಾತ್ರಕ್ಕೆ ಅವನು ಮುಕ್ತನಾದಂತೆ ಅಲ್ಲ.
4)ಕಮೋ೯ಪಾಸನೆಗಳನ್ನು ಮಾಡಿ ಮರಣಾನಂತರ ಸ್ವಗ೯ಲೋಕಕ್ಕೆ ಹೋದರೂ ಕಮ೯ಫಲ ಸವೆದಕೂಡಲೇ ಅಲ್ಲಿಂದ ವಾಪಾಸ್ಸಾಗಲೇ ಬೇಕು.ಇದು ಪ್ರೇಯಸ್ಸೇ ಹೊರತು ಶ್ರೇಯಸ್ಸಲ್ಲ.
5)ಪರಬ್ರಹ್ಮವು ಅಸಂಸಾರಿಯೂ ನಿತ್ಯ ಶುದ್ಧ ನಿತ್ಯಬುದ್ಧ ನಿತ್ಯಮುಕ್ತ ಸ್ವರೂಪವೂ ಆಗಿದೆ.ಬ್ರಹ್ಮವನ್ನು ನಿಗು೯ಣ,ನಿವಿ೯ಶೇಷ ನಿರುಪಾಧಿಕ,ನಿರವಯವ ಎಂದು ಮುಂತಾಗಿ ಕರೆಯುತ್ತಾರೆ.
6)ಪ್ರತಿಯೊಂದು ಪ್ರಾಣಿಯೂ ನಿಜವಾಗಿ ಪರಿಪೂಣ೯ ಪರಬ್ರಹ್ಮ ಸ್ವರೂಪವೇ ಆಗಿದ್ದರೂ ಅವಿದ್ಯೆಯಿಂದ ಈ ರಹಸ್ಯವನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತಿಲ್ಲ.
7)ಮಾನವ ಜನ್ಮದ ಗುರಿಯೇ ಬ್ರಹ್ಮಪ್ರಾಪ್ತಿ.ಇದೇ ಕೈವಲ್ಯವು.ಇದೇ ಮುಕ್ತಿಯು.ಜನ್ಮಾಂತರ ರಾಹಿತ್ಯವೇ ಮೋಕ್ಷ.
8)ವಿವೇಕಿಯಾದ ಮಾನವನು ವಿಷಯಭೋಗಗಳ ಅಸಾರತೆಯನ್ನು ಕಂಡುಕೊಂಡು ಇವುಗಳಲ್ಲಿ ಮುಳುಗದೆ ಮುಮುಕ್ಷುವಾಗಬೇಕು.
೯)ಶ್ರೋತ್ರಿಯ ಬ್ರಹ್ಮನಿಷ್ಠರಾದ ಸದ್ಗುರುಗಳನ್ನು ಆಶ್ರಯಿಸಿ ಅವರಿಂದ ವೇದಾಂತ ಸಂದೇಶಗಳನ್ನು ಶ್ರದ್ಧೆಯಿಂದ ಶ್ರವಣ ಮಾಡಬೇಕು.
10)ಶುದ್ಧಾಂತಕರಣದಲ್ಲಿ ವೇದಾಂತ ವಾಕ್ಯಾಥ೯ ವಿಚಾರದಿಂದ ಆತ್ಮಜ್ಞಾನ ಉಂಟಾದರೆ ಅವಿದ್ಯೆಯು ತೊಲಗುತ್ತದೆ.ಅದರಿಂದ ಅಂಥವನು ಜೀವನ್ಮುಕ್ತನಾಗಿಬಿಡುತ್ತಾನೆ ಜ್ಞಾನದಿಂದಲೇ ಮೋಕ್ಷ.
ಉಪನಿಷತ್ತುಗಳಲ್ಲಿ ಯಾವುದೋ ಸಿದ್ಧಾಂತವಲ್ಲ ಇರುವುದು.ಹಲವು ಸಿದ್ಧಾಂತಗಳ ಸಂಗಮ ಇದು.ಹಲವು ಮಹಿಮೋನ್ನತರ ಶ್ರೇಷ್ಠತಮ ಭಾವನೆಯ ಗೊಂಚಲುಗಳು ಇವೆ.ಇಲ್ಲಿ ಒಂದು ಸತ್ಯವನ್ನು ಹಲವು ದೃಷ್ಟಿಕೋನಗಳಿಂದ ನೋಡುತ್ತಾರೆ.ಇಲ್ಲಿ ಎಲ್ಲಿಯೂ ಅಲ್ಪತ£ವಿಲ್ಲ.ಭೂಮದ ಛಾಯೆಯಲ್ಲಿಯೇ ಇರುವರು.ಇವರು ತಾವು ಅನುಭವಿಸಿದ ತತ್ವವನ್ನು ಮುಂದೆ ಬಬರುವವರ ಅನುಭವಕ್ಕಾಗಿ,ಉದ್ಧಾರಕ್ಕಾಗಿ ಹೇಳಿಹೋಗಿರುವರು.ಅದು ದೇವಗಂಗೆಯಂತೆ ಉಪನಿಷತ್ತುಗಳಲ್ಲಿ ಇಂದಿಗೂ ಹರಿಯುತ್ತಿದೆ.ಆರು ಬೇಕಾದರೂ ಅದರಲ್ಲಿ ಮಿಂದು ಪಾವನರಾಗಬಹುದು.
ಬ್ರಹ್ಮವು ಅಸ್ಥೂಲ,ಅನಣು,ಅಹೃಸ್ವ,ಅದೀಘ೯,ಅಲೋಹಿತ ಅಸ್ನೇಹ,ಅತಮಸ್ಸು, ಅಪಾಯ, ಅನಾಕಾಶ, ಅಸಂಗ,ಅರಸ,ಅಗಂಧ,ಅಚಕ್ಷಸ್ಸು,ಅಶ್ರೋತೃ ಅನಣು, ಅವಾಕ್ಕು, ಅಮನಸ್ಸು, ಅತೇಜಸ್ಸು, ಅಪ್ರಾಣ, ಅಮುಖ,ಅಮಾತ್ರ,ಅಭ್ಯಂತರ,ಅಬಾಹ್ಯ, ಅದು ಯಾವುದನ್ನೂ ತಿನ್ನುವುದಿಲ್ಲ. ಅದನ್ನು ಯಾವುದೂ ತಿನ್ನುವುದಿಲ್ಲ.ಇದು ಯಾಜ್ಞವಲ್ಕ್ಯನ ಬೋಧನೆ ಪರಮಾಮೃತ.
ಉಪನಿಷತ್ತುಗಳ ಸಂದೇಶ:
ಈಶಾವಾಸ್ಯ ಉಪನಿಷತ್ತು ಹೀಗೆ ಹೇಳುತ್ತದೆ.ಈ ಪ್ರಪಂಚದಲ್ಲಿ ಏನಿರುವುದೊ ಅದೆಲ್ಲವನ್ನೂ ಭಗವಂತನಿಂದ ತುಂಬಿರಿ.ಅವನು ಸಹಜಸಮರಸ.ಎಲ್ಲೆಲ್ಲಿಯೂ ಸಮಾನವಾಗಿ ಹರಡಿರುವವನು. ಸವ೯ವ್ಯಾಪ್ತ.ಅವನು ಈಜಗತ್ತನ್ನು ಸೃಷ್ಟಿಸಿ ಅದರಲ್ಲಿ ಪ್ರವೇಶಿಸಿದ್ದಾನೆ.ಎಲ್ಲವೂ ಸಮಾನವಾದ್ದರಿಂಸ ಸಾಮ. ಸಾಮ ಎಂದರೆ ಸಮ,ಬ್ರಹ್ಮ. ಈಶಾವಾಸ್ಯದ ಮತ್ತೊಂದು ಉಪದೇಶವೆಂದರೆ"ತ್ಯಾಗದಿಂದ ಅನುಭವಿಸು"ಎಂಬುದು3.
ಕೇನೋಪನಿಷತ್:ಇಲ್ಲಿಯೇ ಅರಿತುಕೊಂಡರೆ ಸತ್ಯವುಂಟು.ಇಲ್ಲಿ ಅರಿತುಕೊಳ್ಳದೆ ಇದ್ದರೆ ವಿನಾಶವಾಗುವುದು.ವಿವೇಕಿಗಳು ಸರ್ವಪ್ರಾಣಿಗಳಲ್ಲಿಯೂ ಇರುವ ಆತ್ಮತತ್ವವನ್ನು ಅರಿತುಕೊಂಡು ಈ ಲೋಕದಿಂದ ಹೋಗಿಅಮೃತರಾಗುತ್ತಾರೆ.ಯಾವಾಗ ಬ್ರಹ್ಮ ಪ್ರತಿಬೋಧದಲ್ಲಿಯೂ ತಿಳಿಯಲ್ಪಡುವುದೊ ಆಗ ತಿಳಿದಂತಾಗುವುದು.ಬ್ರಹ್ಮವನ್ನು ಇಂದ್ರಿಯಗಳ ಮೂಲಕ ಹಿಡಿಯುವುದಕ್ಕೆ ಆಗುವುದಿಲ್ಲ.ಯಾವುದು ವಾಕ್ಕಿನಿಂದ ವ್ಯಕ್ತವಾಗುದಿಲ್ಲವೋ,ಯಾವುದರಿಂದ ವಾಕ್ಕು ವ್ಯಕ್ತವಾಗುವುದೋ ಅದೇ ಬ್ರಹ್ಮವೆಂದು ತಿಳಿ.ಯಾವುದನ್ನು ಮನಸ್ಸಿನಿಂದ ಮನನ ಮಾಡಲು ಸಾಧ್ಯವಿಲ್ಲವೋ ಯಾವುದರಿಂದ ಮನಸ್ಸು ಮನನ ಮಾಡಲ್ಪಟ್ಟಿದೆ ಎಂದು ಹೇಳಲ್ಪಡುವುದೊ ಅದನ್ನು ನೀನು ಬ್ರಹ್ಮವೆಂದು ತಿಳಿ. ಅದೇ ರೀತಿ ಯಾವುದನ್ನು ಕಣ್ಣಿನಿಂದ ನೋಡಲಾಗುವುದಿಲ್ಲವೊ ಯಾವುದರಿಂದ ಕಣ್ಣುಗಳು ನೋಡುತ್ತವೆಯೊ ಅದನ್ನು ನೀನು ಬ್ರಹ್ಮವೆಂದುತಿಳಿ. ಇದೇ ವಿಷಯವು ಕಿವಿ ಮತ್ತು ಪೃಆಣಗಳಿಗೂ ಅನ್ವಯವಾಗುತ್ತದೆ.
ಕಠೋಪನಿಷತ್ತು ಹೀಗೆ ಹೇಳುತ್ತದೆ.ಬ್ರಹ್ಮವು "ಅಣುವಿಗಿಂತಲೂ ಅಣು. ಮಹತ್ತಿಗಿಂತ ಮಹತ್ತು.ಅವನು ಪ್ರಾಣಿಗಳ ಹೃದಯದಲ್ಲಿ ಸ್ಥಿತನಾಗಿರುತ್ತಾನೆ."ಅನಿತ್ಯವಾದ ಶರೀರದಲ್ಲಿ ನಿತ್ಯನಾದ ಅಶರೀರನಾದ ಮಹತ್ತಮನಾದ ಸವ೯ವ್ಯಾಪಿಯಾದ ಆತ್ಮನನ್ನು ತಿಳಿದುಕೊಂಡ ಧೀರನು ಶೋಕಿಸುವುದಿಲ್ಲ." "ಹೇಗೆ ಒಂದೇ ಅಗ್ನಿ ಲೋಕವನ್ನೂ ಪ್ರವೇಶಿಸಿ ಎಲ್ಲಾರೂಪಗಳಿಗೂ ಪ್ರತಿರೂಪವಾಗಿರುವುದೊ,ಹಾಗೆಯೇ ಒಬ್ಬನೇ ಪರರಾತ್ಮನಲ್ಲಿರುವ ಎಲ್ಲಾ ರೂಪಗಳಿಗೂ ಪ್ರತಿರೂಪವಾಗಿರುವನು ಮತ್ತು ಹೊರಗೂ ಇರುವನು." "ಅಲ್ಲಿ ಸೂಯ೯ನಾಗಲಿ ಚಂದ್ರನಾಗಲಿ ನಕ್ಷತ್ರಗಳಾಗಲಿ ಪ್ರವೇಶಿಸುವುದಿಲ್ಲ. ಈ ಅಗ್ನಿಯು ಪಕಾಶಿಸುವುದೆಲ್ಲಿ?ಪ್ರಕಾಶಿಸುತ್ತಿರುವ ಅವನನ್ನು ಅನುಸರಿಸಿ ಎಲ್ಲವೂ ಪ್ರಕಾಶಿತ್ತಿರುವುವು." ಶ್ವೀತಾಶ್ವತರ ಉಪನಿಷತ್ತು ಬ್ರಹ್ಮವು ಈ ಪ್ರಪಂಚದಲ್ಲಿ ಹೇಗೆ ಹುದುಗಿದ್ದಾನೆ ಎನ್ನುವುದನ್ನು ತಿಳಿಸುತ್ತದೆ. "ಎಳ್ಳಿನಲ್ಲಿರುವಎಣ್ಣೆಯಂತೆ,ಮೊಸರಿನಲ್ಲಿರುವ ತುಪ್ಪದಂತೆ,ನದೀತಳದಲ್ಲಿರುವ ನೀರಿನಂತೆ,ಅರಣಿಗಳಲ್ಲಿರುವ ಅಗ್ನಿಯಂತೆ".
ಮುಂಡಕೋಪನಿಷತ್ತಿನಲ್ಲಿ ಬ್ರಹ್ಮವು ಹೇಗೆ ಸೃಷ್ಟಿಸಿತು ಎಂಬುದನ್ನು ಹೇಳಿದೆ."ಹೇಗೆ ಜೇಡರಹುಳು ತಂತುವನ್ನು ಹೊರಗೆ ತಂದು ಪುನಃಒಳಗಿ ಎಳೆದುಕೊಳ್ಳುವುದೊ,ಹೇಗೆ ಭೂಮಿಯಲ್ಲಿ ಸಸ್ಯಗಳು ಉಂಟಾಗುತ್ತವೆಯೊ,ಹೇಗೆ ಮನುಷ್ಯರಿಂದ ಕೇಶ ರೋಮಗಳು ಬೆಳೆಯುತ್ತವೆಯೊ ಹಾಗೆಯೇ ಅಕ್ಷರದಿಂದ ಇಲ್ಲಿ ಸಮಸ್ತ ಜಗತ್ತು ಉಂಟಾಗುವುದು.(1_1_7).ಈ ಪುರುಷನಿಂದಲೇ ಸಮಸ್ತಪವ೯ತಗಳು ಸಮುದ್ರಗಳು ಆಗಿವೆ.ಇವನಿಂದಲೇ ಬಹುರೂಪವಾದ ನದಿಗಳು ಹರಿಯುವುವು.ಇವನಿಂದಲೇ ಎಲ್ಲಾ ದವಸ ಧಾನ್ಯಗಳೂ ರಸಗಳೂ ಉಂಟಾಗಿರುದು."(2_1_8)
ನಮ್ಮ ಅಧ್ಯಾತ್ಮಿಕ ಸಾಧನೆ ಎಂದರೆ ಸುಪ್ತಾವಸ್ಥೆಯಲ್ಲಿರುವುದನ್ನು ವ್ಯಕ್ತಾವಸ್ಥೆಗೆ ತರುವುದಾಗಿದೆಯೇ ಹೊರತು ಹೊಸದಾಗಿ ಏನನ್ನೂ ಪಡೆಯುವುದಲ್ಲ.ನಾವು ಅವನನ್ನು ಪಡೆಯುವುದು ಎಂದರೆ ಅವನಲ್ಲಿ ಒಂದಾಗುವುದು.ನಮ್ಮ ವ್ಯಕ್ತಿತ್ವ ನದಿ ಹೇಗೆ ಸಾಗರವನ್ನು ಸೇರಿದಾಗ ತನ್ನ ನಾಮ ರೂಪಗಳನ್ನು ಕಳೆದು ಕೊಳ್ಳುವುದೊ,ಸಾಗರದಲ್ಲಿ ಒಂದಾಗಿ ಹೋಗುವುದೊ ಹಾಗೆ ಆಗುವುದು.
ಪ್ರಶ್ನೋಪನಿಷತ್ತು ಹೀಗೆ ಹೇಳುವುದು."ಹೇಗೆ ಹರಿಯುತ್ತಿರುವ ನದಿಗಳು ನಾಮರೂಪವನ್ನು ಬಿಟ್ಟು ಸಮುದ್ರದಲ್ಲಿ ಅದೃಶ್ಯವಾಗುವುವೊ ಹಾಗೆಯೇ ವಿದ್ವಾಂಸನು ನಾಮರೂಪಗಳಿಂದ ಬಿಡುಗಡೆಯನ್ನು ಹೊಂದಿ ಪರಾತ್ಪರನೂ ದಿವ್ಯನೂ ಆದ ಪುರುಷನನ್ನು ಹೊಂದುವನು."
ಬೃಹದಾರಣ್ಯಕವು "ಯಾವನು ಬ್ರಹ್ಮವನ್ನು ತಿಳಿದುಕೊಳ್ಳುವನೊ ಅವನು ಬ್ರಹ್ಮವೇ ಆಗುವನು." ಎಂದು ಹೇಳುತ್ತದೆ4=. ಅವನು ಈ ಬ್ರಹ್ಮಾಂಡದಲ್ಲಿ ಸವ೯ವ್ಯಾಪಿ ಆಗಿದ್ದಾನೆ ಎಂಬುದನ್ನು ಶ್ವೇತಾಶ್ವತರ ಉಪನಿಷತ್ತು ಹೀಗೆ ವಿವರಿಸುವುದು."ಎಲ್ಲಾಕಡೆಯಲ್ಲಿಯೂ ಕಣ್ಣುಗಳನ್ನು ಮುಖಗಳನ್ನು ಬಾಹುಗಳನ್ನು ಪಾದಗಳನ್ನು ಹೊಂದಿದ್ದಾನೆ.ಆ ಪುರುಷನಿಗೆ ಸಾವಿರಾರು ಕಣ್ಣುಗಳು,ಸಾವಿರಾರು ತಲೆಗಳು,ಸಾವಿರಾರು ಪಾದಗಳು.ಇವನು ಭುವನವನ್ನು ಎಲ್ಲಾಕಡೆಯಿಂದಲೂ ವ್ಯಾಪಿಸಿಕೊಂಡು ಅದನ್ನು ಹತ್ತು ಅಂಗುಲದಷ್ಟು ಮೀರಿನಿಂತಿದ್ದಾನೆ. ಯಾವುದು ಹಿಂದೆ ಇತ್ತೋ,ಯಾವುದು ಮುಂದೆ ಉಂಟಾಗುವುದೋ ಅದೆಲ್ಲವೂ ಪುರುಷನೇ.ಹಾಗೆಯೇ ಅವನು ಅಮೃತತ್ವಕ್ಕೆ ಒಡೆಯ.ಯಾವುದು ಅನ್ನದಿಂದ ವಧಿ೯ಸುವುದೊ ಅದಕ್ಕೂ ಒಡೆಯ."(13,14,15)
ಪ್ರಶ್ನೋಪನಿಷತ್ತು ಬ್ರಹ್ಮನು ಆದಿಯಲ್ಲಿಪ್ರಾಣ ಮತ್ತು ದ್ರವ್ಯ ಎರಡನ್ನೂ ಸೃಷ್ಟಿ ಮಾಡಿದ ಎಂದು ಹೇಐಜಿuತ್ತದೆ.ಬ್ರಹ್ಮವೇ ಸೃಷ್ಟಿಗೆ ಉಪಾದಾನ ಹಾಗೂ ನಿಮಿತ್ತಕಾರಣ ಎಂದು ಹೇಳುತ್ತದೆ.ತನ್ನಿಂದಲೇ ಪ್ರಪಂಚವನ್ನು ಸೃಷ್ಟಿ ಮಾಡಿದನು.ನಂತರ ಅದನ್ನುಪ್ರವೇಶಿಸಿದನು.ಅವನುಚರಾಚರ ಜಗತ್ತಿನಲ್ಲೆಲ್ಲಾ ಓತಪ್ರೋತನಾಗಿರುವನು. "ಹೇಗೆ ಹರಿಯುತ್ತಿರುವ ನದಿಗಳು ನಾಮರೂಪವನ್ನು ಬಿಟ್ಟು ಸಮುದ್ರದಲ್ಲಿ ಅದೃಶ್ಯವಾಗುವುದೋ ಹಾಗೆಯೇ ವಿದ್ವಾಂಸನು ನಾಮರೂಪಗಳಿಂದ ಬಿಡುಗಡೆಯನ್ನು ಹೊಂದಿ ಪರಾತ್ಪರನೂ ದಿವ್ಯನೂ ಆದ ಪುರುಷನನ್ನು ಹೊಂದುವನು." (6,5)
ವೇದಾಂತ ಬೋಧನೆಯಲ್ಲಿ ಸಾಮಾನ್ಯವಾಗಿ ಉಪಯೋಗಿಸುವ ಪ್ರಕ್ರಿಯೆಗಳು:5
ಮುಖ್ಯವಾದ ಎರಡು ಮುಖ್ಯ ಪ್ರಕ್ರಿಯೆಗಳೆಂದರೆ 1)ಅಧ್ಯಾರೋಪ ಅಪವಾದ ಪ್ರಕ್ರಿಯೆ 2) ಕಾಯ೯ಕಾರಣ ಪ್ರಕ್ರಿಯೆ. ಉಳಿದ ಪ್ರಕ್ರಿಯೆಗಳೆಂದರೆ 1)ಪಂಚಕೋಶ ವಿವೇಕ ಪ್ರಕ್ರಿಯೆ 2)ಅವಸ್ಥಾತ್ರಯ ಪ್ರಕ್ರಿಯೆ 3)ವಿದ್ಯಾವಿದ್ಯಾಪ್ರಕ್ರಿಯೆ 4)ಬಂಧಮೋಕ್ಷಪ್ರಕ್ರಿಯೆ 5)ಅವಿದ್ಯಾ ಮಾಯಾ ಪ್ರಕ್ರಿಯೆ 6)ಜೀವೇಶ್ವರ ಪ್ರಞಜಿಡಿಜಿiಯೆ 7)ಸ್ಥೂಲ ಸೂಕ್ಷ್ಮ ಪ್ರಕ್ರಿಯೆ 8) ಸಾಮಾನ್ಯ ವಿಶೇಷ ಪ್ರಕ್ರಿಯೆ ೯)ವ್ಯಷ್ಟಿ ಸಮಷ್ಟಿ ಪ್ರಕ್ರಿಯೆ ಇತ್ಯಾದಿ. ಈ ಎಲ್ಲಾ ಪ್ರಕ್ರಿಯೆಗಳೂ ಅಧ್ಯಾರೋಪ ಅಪವಾದ ಪ್ರಕ್ರಿಯೆಯೇ(ಮೆಥಡ್ ಆಪ್ ಇಂಪೊಸಿಸಿಷನ್ ಅಂಡ್ ರಿಸಿಷನ್) ಮೂಲಭೂತವಾಗಿಯೂ ಇರುವುದನ್ನು ಕಾಣಬಹುದು.ಅಧ್ಯಾರೋಪ ಅಪವಾದ ನ್ಯಾಯವನ್ನು ವಿಶದಗೊಳಿಸುವುದಕ್ಕಾಗಿಯೇ ಮಿಕ್ಕೆಲ್ಲಾ ನ್ಯಾಯಗಳೂ ಉಪಕಾರಕವಾಗಿ ಬಂದಿವೆ.ಅದ್ವೈತದಶ೯ನ,ಅಭೇದದಶ೯ನ, ಏಕತ್ವದಶ೯ನ,ಸಮ್ಯಕ್ ದಶ೯ನ ಇವು ಸಮಾನಾಥ೯ಕ ಪದಗಳು.ಆದ್ದರಿಂದ ಉಪನಿಷತ್ತುಗಳ ರಹಸ್ಯಾಥ೯ವನ್ನು ತಿಳಿಯಲು ಅಧ್ಯಾರೋಪ ಅಪವಾದ ನ್ಯಾಯವು ನಾಯಕ ಬೀಗದಕೈ(ಮಾಸ್ಟರ್ ಕಿ)ಆಗಿದೆ.
ಅಧ್ಯಯನದ ಉದ್ದೇಶಗಳು ಈ ರೀತಿ ಇವೆ.ಅತ್ಯಂತ ಮುಖ್ಯವಾದದ್ದು ಸಾಮಾಜಿಕ ಪಿಡುಗುಗಳ (ಸಮಸ್ಯೆಗಳ)ಪರಿಹಾರ.ಶಂಕರರ ಅದ್ವೈತ ದಶ೯ನವನ್ನು ಕುರಿತು ವಿವರವಾದ ಅಧ್ಯಯನ ನಡೆಸುವುದು,ವಿವಿಧ ದಶ೯ನಗಳೊಂದಿಗೆ ತುಲನಾತ್ಮಕ ಅಧ್ಯಯನ ನಡೆಸುವುದು,ಉಪನಿಷತ್ತುಗಳು,ಹಾಗೂ ಭಗವದ್ಗೀತೆಯ ಸಾರವನ್ನು ಅರಿಯುವುದು,ತರ ಉದ್ದೇಶಗಳು ಈರೀತಿ ಇವೆ ಆತ್ಮಸಾಕ್ಷಾತ್ಕಾರ(ಸದ್ಯೋಮುಕ್ತಿ,ಜೀವನ್ಮುಕ್ತಿ),ಅಭ್ಯುದಯ,(ಇಹಲೋಕದಸುಖಶಾಂತಿ)ನಿಶ್ರೇಯಸ (ಅಧ್ಯಾತ್ಮಿಕ ಸುಖ ಶಾಂತಿ), ರಾಷ್ಟ್ರೀಯ ಭಾವೈಕ್ಯತೆ, ಸತ್ಯದ ಆನ್ವೇಶಣೆ ಮತ್ತು ಆನಂದ, ಸಾಮಾಜಿಕ ಸ್ವಾಸ್ಥ್ಯ, ಮಾನಸಿಕ ನೆಮ್ಮದಿ,ಸವ೯ಮತ ಸಾಮರಸ್ಯ.
ಅದ್ವೈತ ಸಂಶೋಧನೆಯ ಉದ್ದೇಶಗಳು:
1)ಪಶುಬಲಿಯೇ ಮುಂತಾದ ವೈಪರೀತ್ಯಗಳಿಂದ ಕೂಡಿದ ಯಜ್ಞ ಯಾಗಾದಿಗಳ ಚಯೆ೯ಯನ್ನು ಮಿತಿಗೊಳಿಸಬೇಕು.
2)ಕರುಣೆ ವಾತ್ಸಲ್ಯಗಳಿಂದ ಕೂಡಿದ ದೇವತೆಗೆ ಒಂದು ಸ್ಥಾನವನ್ನು ದೊರಕಿಸಿ ಕೊqುವುದು.
3)ಜ್ಞಾನ,ಭಕ್ತಿ,ಕಮ೯ಯೋಗಗಳಿಂದ ಕೂಡಿದ ದೇವತೆಗೆ ಒಂದು ಸಮಂಜಸ ಸ್ಥಾನವನ್ನು ಒದಗಿಸಿಕೊಡುವುದು.
4)ಇಡೀ ಸಮಾಜವನ್ನು ಒಂದು ಅಧ್ಯಾತ್ಮಿಕ ಆದಶ೯ದ ಕಡೆಗೆ ಒಲಿಯುವಂತೆ ಮಾಡುವುದು.
5)ಬೌದ್ಧಮತದ £ಕಾರಾತ್ಮಕವೂ ಶೂನ್ಯವೂ ಆದ ಸಿದ್ಧಾಂತವನ್ನು ತೊqತಿÀುಹಾಕಿ ಅದರ ಸ್ಥಾನದಲ್ಲಿ ಶಾಶ್ವತ ಹಾಗೂ ನಿರಂತರ ಶಾಂತಿ ಆನಂದಗಳಿಗೆ ಮೂಲಕಾರಣವಾದ ಸವ೯ರಲ್ಲೂ ಆತ್ಮಸ್ವರೂಪಿಯಾದ ಉಪನಿಷತ್ತಿನ ಸವ೯ತಂತÀ್ರ ಸ್ವತಂತ್ರ ಬ್ರಹ್ಮವನ್ನು ಸ್ಥಾಪಿಸಬೇಕು.
ಉದ್ದೇಶಗಳು ಈರೀತಿ ಇವೆ.ಅತ್ಯಂತ ಮುಖ್ಯವಾದದ್ದು ಸಾಮಾಜಿಕ ಪಿಡುಗುಗಳ (ಸಮಸ್ಯೆಗಳ)ಪರಿಹಾರ.ಶಂಕರರಅದ್ವೈತ ದಶ೯ನವನ್ನು ಕುರಿತು ವಿವರವಾದ ಅಧ್ಯಯನ ನಡೆಸುವುದು, ವಿವಿಧ ದಶ೯ನಗಳೊಂದಿಗೆ ತುಲನಾತ್ಮಕ ಅಧ್ಯಯನ ನಡೆಸುವುದು, ಉಪನಿಷತ್ತುಗಳು ಹಾಗೂ ಭಗವದ್ಗೀತೆಯ ಸಾರವನ್ನು ಅರಿಯುವುದು,
ಇತರ ಉದ್ದೇಶಗಳು ಈರೀತಿ ಇವೆ. ಆತ್ಮಸಾಕ್ಷಾತ್ಕಾರ (ಸದ್ಯೋಮುಕ್ತಿ,ಜೀವನ್ಮುಕ್ತಿ), ಅಭ್ಯುದಯ, (ಇಹಲೋಕದ ಸುಖ ಶಾಂತಿ), ನಿಶ್ರೇಯಸ(ಅಧ್ಯಾತ್ಮಿಕ ಸುಖ ಶಾಂತಿ),ರಾಷ್ಟ್ರೀಯ ಭಾವೈಕ್ಯತೆ,ಸತ್ಯದ ಅನ್ವೇಷಣೆ ಮತ್ತು ಆನಂದ,ಸಾಮಾಜಿಕ ಸ್ವಾಸ್ಥ್ಯ,ಮಾನಸಿಕ ನೆಮ್ಮದಿ,ಸವ೯ಮತ ಸಾಮರಸ್ಯ. ರಾಷ್ಟೀಯ ಭಾವೈಕ್ಯತೆ,ಜ್ಞಾನ,ಭಕ್ತಿ,ಕಮ೯ ಮತ್ತುಯೋಗ ಇವುಗಳಿಗೆಸಮಂಜಸ ಸ್ಥಾನವನ್ನು ದೊರಕಿಸಿ ಕೊಡುವುದು.ವಿಶ್ವ ಕುಟುಂಬದ ಭಾವನೆ,ಈ ವಿಶ್ವವನ್ನು ನಡೆಸುತ್ತಿರುವಮೂಲಪರತತ್ವ ಯಾವುದು ಎಂಬುದನ್ನು ಯುಕ್ತಿ ಯುಕ್ತವಾಗಿ ದೊರಕಿಸಿ ಕೊಡುವುದು, ಇಡೀ ಸಮಾಜವನ್ನು ಒಂದು ಅಧ್ಯಾತ್ಮಿಕ ಆದಶ೯ದ ಕಡೆಗೆ ಒಲಿಯುವಂತೆ ಮಾಡುವುದು.
ಈ ಕಾರಣದಿಂದ ಉಪನಿಷತ್ತುಗಳ ನಿಜವಾದ ತಾತ್ಪಯ೯ವೇನು ಎಂಬ ಪ್ರಶ್ನೆ ಉದಯಿಸಿತು.ಇದನ್ನು ಮನಗಾಣಿಸಲು ಬಾದರಾಯಣರು ಬ್ರಹ್ಮವನ್ನು ಬರೆದರು.ಇದಕ್ಕೆಬ್ರಹ್ಮಸೂತ್ರ ಮತ್ತು ಶಾರೀರಕಸೂತ್ರವೆಂಬ ಹೆಸರೂ ಇದೆ.ಬಾದೆಆಯಣರಿಗೆ ಮೊದಲು ಹಲವಾರು ಮಂದಿ ಉಪನಿಷತ್ತುಗಳ ತಾತ್ಪಯ೯ವನ್ನು ಸ್ಪಷ್ಟಪಡಿಸುವ ಪ್ರಯತ್ನವನ್ನು ಮಾಡಿದರು.ಈ ಬಗ್ಗೆ ಬ್ರಹ್ಮಸೂತ್ರದಲ್ಲೇ ಮಾಹಿತಿಗಳಿವೆ.ಉದಾಹರಣೆಗೆ ಬ್ರಹ್ಮಸೂತ್ರವು ಜೈಮಿನಿ,ಬಾದರಿ, ಔಡುಲೋಮಿ, ಮುಂತಾದ ತಾತ್ವಿಕರ ಬಗ್ಗೆ ಉಲ್ಲೇಖಿಸುತ್ತದೆ.
ಇವರೆಲ್ಲರೂ ಉಪನಿಷತ್ತುಗಳ ತಾತ್ಪಯ೯ವನ್ನು ವ್ಯವಸ್ಥಿತ ಗೊಳಿಸುವ ಪ್ರಯತ್ನವನ್ನು ಮಾಡಿದರು.ಇವರು ಬಾದರಾಯಣರ ಪೂವ೯ಜರೋ ಸಮಕಾಲೀನರೋ ಎಂಬುದು ಸ್ಪಷ್ಟವಿಲ್ಲ.ಈಬಗ್ಗೆ ನಮ್ಮಲ್ಲಿ ಉಪಲಬ್ಧವಿರುವ ಏಕೈಕ ಗ್ರಂಥವೆಂದರೆ ಬ್ರಹ್ಮಸೂತ್ರವಷ್ಟೆ.
ಬ್ರಹ್ಮಸೂತ್ರವು ವೇದಾಂತದ ಒಂದು ಪ್ರಭಾವಶಾಲಿ ಕೈಪಿಡಿ.ಇದರಲ್ಲಿ ಶೃತಿಯ ತಾತ್ಪಯ೯ವು ಸೂತ್ರ ರೂಪದಲ್ಲಿ ಇವೆ.ಇದು ನಾಲ್ಕುಅಧ್ಯಾಯಗಳಲ್ಲಿ 555 ಸೂತ್ರಗಳನ್ನು ಒಳಗೊಂಡಿವೆ.ಪ್ರತಿ ಅಧ್ಯಾಯದಲ್ಲೂನಾಲ್ಕು ಪಾದ ಅಥವಾ ಭಾಗಗಳಿವೆ.ಸೂತ್ರದ ಲಕ್ಷ್ರಣಗಳನ್ನು ಶಾಸ್ತ್ರಕಾರರು ಕೆಳಕಂಡಂತೆ ವಿವರಿಸುತ್ತಾರೆ.
1)ಅದರಲ್ಲಿ ಶಬ್ದಗಳ ಸಂಖ್ಯೆ ಕಡಿಮೆ ಇರಬೇಕು.
2)ಅದರಲ್ಲಿ ಸಂದಿಗ್ಧತೆಗೆ ಆಸ್ಪದವಿರಬಾರದು.
3) ಅದರಲ್ಲಿ ವಿಷಯದ ಇಡೀಸಾರವಿರಬೇಕು.
4)ಅದು ವಿಷಯದ ಎಲ್ಲಾ ಮುಖಗಳನ್ನೂ ಗಣನೆಗೆ ತಂದುಕೊಳ್ಳಬೇಕು.
5)ಅದರಲ್ಲಿ ಪುನರುಕ್ತಿ ಇರಬಾರದು.
6)ವಿಷಯದ ಪ್ರತಿಪಾದನೆಯಲ್ಲಿ ದೋಷವಿರಬಾರದು.
ಬ್ರಹ್ಮಸೂತ್ರದ ಮುಖ್ಯ ಉದ್ದೇಶಗಳು ಎರಡು.
1)ದ್ವೈತದಶ೯ನವಾದ ಸಾಂಖ್ಯವನ್ನು ನಿರಾಕರಿಸಿ ಅದ್ವೈತವನ್ನು ಸ್ಥಾಪಿಸುವುದು.
ಸಾಂಖ್ಯರಪ್ರಕಾರದ್ವೈತವೇ ಸತ್ಯದ ಸ್ವರೂಪ.ಬ್ರಹ್ಮಸೂತ್ರವು ಇದನ್ನು ತಿರಸ್ಕರಿಸಿ ಅದ್ವೈತವನ್ನು ಸ್ಥಾಪಿಸುತ್ತದೆ.
2)ಮೀಮಾಂಸಕರನ್ನು ನಿರಾಕರಿಸುವುದು ಬ್ರಹ್ಮಸೂತ್ರದ ಇನ್ನೊಂದು ಉದ್ದೇಶ.ಮೀಮಾಂಸಕರ ಪ್ರಕಾರ ವೇದದ ತಿರುಳು ಯಜ್ಞವಿವರಣೆಯನ್ನು ಒಳಗೊಂಡ ಬ್ರಾಹ್ಮಣಗಳಲ್ಲಿದೆಯೇ ಹೊರತು ಉಪನಿಷತ್ತುಗಳಲ್ಲಿ ಅಲ್ಲ.ಇಲ್ಲಿ ಉಪನಿಷತ್ತುಗಳ ಮೌಲ್ಯ ಗೌಣವಷ್ಟೆ.ಅವುಗಳನ್ನು ನಾವು ಯಜ್ಞವಿಧಿಗೆ ಸಂಬಂಧಿಸಿದಂತೆ ಮಾತ್ರ ಅಥೈ೯ಸಬೇಕು. ಒಟ್ಟಾರೆ ಮೀಮಾಂಸಕರ ಪ್ರಕಾರ ವೇದದ ಸಾರವು ಕಮ೯ವೇ ಹೊರತು ಜ್ಞಾನವಲ್ಲ.ಈ ನಿಲುವನ್ನು ತಿರಸ್ಕರಿಸುವುದೇ ಬ್ರಹ್ಮಸೂತ್ರದ ಎರಡನೇ ಉದ್ದೇಶ.
ಸಂಶೋಧನಾ ವಿಧಾನಗಳು ಮುಖ್ಯವಾಗಿ ನಾಲ್ಕು ವಿಧ. ವಿವರಣಾತ್ಮಕ, ವಿಶ್ಲೇಷಣಾತ್ಮಕ, ಚಾರಿತ್ರಿಕ, ಮತ್ತು ತುಲನಾತ್ಮಕ.ನಾನು ವಿವರಣಾತ್ಮಕ ವಿಧಾನವನ್ನು ಸಂಶೋಧನೆಗಾಗಿ ಬಳಸಿರುತ್ತೇನೆ.ವಿಶ್ಲೇಷಣೆಯು ಎಲ್ಲಾ ಸಂಶೋಧನೆಗಳ ಅನಿವಾಯ೯ಅಂಗ.ಅದ್ವೈತವು ಮುಖ್ಯವಾಗಿ ಎರಡು ಪ್ರಮಾಣಗಳನ್ನು ಒಪ್ಪಿಕೊಂಡಿದೆ.
1)ಶಾಸ್ತ್ರ ಪ್ರಮಾಣ(ಶಬ್ದ) 2)ತಕ೯(ಯುಕ್ತಿ) ಪ್ರಮಾಣ.
ಉಪನಿಷತ್ತುಗಳಿಂದ ಪ್ರಧಾನವಾಗಿ ಅದ್ವೈತ ಪ್ರತಿಪಾದನೆಗಾಗಿ ವಾಕ್ಯಗಳನ್ನು ಬಳಸಿರುತ್ತೇನೆ.ಪ್ರಸ್ಥಾನತ್ರಯಗಳು 1)ಉಪನಿಷತ್ತುಗಳು 2)ಭಗವದ್ಗೀತೆ 3)ಬ್ರಹ್ಮಸೂತ್ರಗಳು. ಕೇವಲ ಶ್ರುತಿಯೊಂದೇ ಇಂದ್ರಿಯಾತೀತವೂ ಮನೋವಿಷಯಾತೀತವೂ ಆದ ಅಧ್ಯಾತ್ಮಿಕ ಜ್ಞಾನದಬಗ್ಗೆ ಪ್ರಮಾಣೀಕರಿಸಲು ರುಜುವಾತುಮಾಡಲು ಸಾಧ್ಯವಾಗುವ ಊಹಾಪ್ರತಿಜ್ಞೆಗಳ ಸತ್ಯತೆಗೆ ನೇರವಾದ (ಸಾಕ್ಷಾತ್ತಾದ)ತಿಳುವಳಿಕೆಯನ್ನು ಒದಗಿಸಬಲ್ಲದು. ಯುಕ್ತಿ(ತಕ೯,ವಿಚಾರ)ಹಾಗೂ ಸ್ವಾನುಭವ.
ತಕ೯ ಅಥವಾ ಯುಕ್ತಿಯು ಬಹು ಒಳ್ಳೆಯ ಉಪಕರಣವೇ ಆದರೂ,ಇತರರ ಜೊತೆಯಲ್ಲಿ ವಿನಿಮಯ ಮಾಡಿಕೊಳ್ಳುವಾಗ ತಪ್ಪದೆ ಅದನ್ನು ಆಶ್ರಯಿಸ ಬೇಕಾದರೂ,ಅದು ತನ್ನಷ್ಟಕ್ಕೆ ತಾನೇ ಸತ್ಯವನ್ನಾಗಲೀ ವಾಸ್ತವಿಕ ವಿಷಯಗಳನ್ನಾಗಲೀ ಒದಗಿಸಲಾರದು.ವಸ್ತು ಸ್ವಭಾವವೇನಿದ್ದರೂ ವಸ್ತುವನ್ನು ಆಶ್ರಯಿಸಿರುವುದೇ ಹೊರತು ಯುಕ್ತಿ ಅಥವಾ ತಕ೯ವನ್ನಲ್ಲ. ವಾಸ್ತವವಾಗಿ ಮೊದಲೇ ಇರುವ ವಸ್ತುವನ್ನು ಮಾತ್ರ ತೋರಿಸಬಲ್ಲ ಆದರೆ ತಾನೇ ವಸ್ತುವನ್ನು ಸೃಷ್ಟಿಸಲಾರದ ಬೆಳಕಿಗೆ ಇದನ್ನು ಹೋಲಿಸಬಹುದು.ಇದಕ್ಕೆ ಇಂದ್ರಿಯಗಳಿಂದ ದೊರೆತ ಜ್ಞಾನ ಅಥವಾ ಅನುಭವವೇ ಸಾಕ್ಷಿ.ತಕ೯ವು ವೇದಾನುಸಾರಿಯಾಗಿರಬೇಕೇ ಹೊರತುಶುಷ್ಕತಕ೯(ವೇದವಿರುದ್ಧ)ವಾಗಿರಬಾರದು. ವಿಚಾರವಿಲ್ಲದೆ ಅದ್ವೈತವು ಸಿದ್ಧಿಸುವುದಿಲ್ಲ.
ಉದ್ದೇಶ ಮತ್ತುವ್ಯಾಪ್ತಿ: ಜನರಲ್ಲಿ ಅಧ್ಯಾತ್ಮದ ಜಾಗೃತಿಯನ್ನು ಉಂಟುಮಾಡುವುದು.ಅದ್ವೈತ ಸಾರವನ್ನು ಜನಮನದಲ್ಲಿ ಬಿತ್ತುವುದು,ಅದ್ವೈತ ದಶ೯ನಗಳ ಸಾರವನ್ನು ಜನರಲ್ಲಿ ಪ್ರಚಾರ ಮಾಡುವುದು.ಅಸುರ ಪ್ರವೃತ್ತಿಯನ್ನು ನಿಮೂ೯ಲನೆ ಮಾಡಿ ದೈವೀ ಪ್ರವೃತ್ತಿಯನ್ನು ಬಿತ್ತಿಬೆಳೆಸುವುದು(ಸಾತ್ವಿಕತೆ).
ಉಪನಿಷತ್ತುಗಳು ಹಾಗೂ ಅದ್ವೈತ:ಉಪನಿಷತ್ತು ಎಂದರೆ ಆಚಾಯರ ಹತ್ತಿರ ಕುಳಿತುಕೊಂಡು ರಹಸ್ಯ ವಿದ್ಯೆಯನ್ನು ಕಲಿಯುವುದು.
ದಶೋಪನಿಷತ್ತುಗಳು ಈರೀತಿ ಇವೆ.
1 ಈಶ2 ಕೇನ 3ಕಠ 4ಪ್ರಶ್ನ5 ಮುಂಡಕ 6 ಮಾಂಡೂಕ್ಯ 7 ತೈತ್ತಿರೀಯ 8 ಐತರೇಯ ೯ ಬೃಹದಾರಣ್ಯಕ 10 ಛಾಂದೋಗ್ಯ ಉಪನಿಷತ್ತುಗಳಲ್ಲಿ ಪ್ರತಿಪಾದಿತವಾಗಿರುವ ವಿಷಯಗಳು1 ಬ್ರಹ್ಮ 2 ಮಾಯೆ 3 ಜೀವ 4 ಜಗತ್ತು 5 ಬ್ರಹಮ ಜೀವಗಳ ಸಂಬಂಧ6 ಬ್ರಹ್ಮ ಜಗತ್ತುಗಳ ಸಂಬಂಧ7 ಕಮ೯ ಹಾಗೂ ಜ್ಞಾನ8 ಬಂಧನ ಅದಕ್ಕೆ ಕಾರಣ ೯ ಮೋಕ್ಷ ಇವು ಉಪನಿಷತ್ತಿನಲ್ಲಿ ಪ್ರತಿಪಾದಿತವಾಗಿರುವ ಪ್ರಧಾನ ತತ್ವಗಳು.
ಅದ್ವೈತ ಸಾರ:"ಬ್ರಹ್ಮ ಸತ್ಯಂ ಜಗನ್ಮಿಥ್ಯಾ ಜೀವೋ ಬ್ರಹ್ಮೈವ ನಾಪರಃ''. ಬ್ರಹ್ನವೊಂದೇ ಸತ್ಯ ಜಗತ್ತು ಮಿಥ್ಯೆ.ಜೀವವು ಬ್ರಹ್ಮವೇ ಬೇರೆ ಅಲ್ಲ.ಇವು ಜೀವ ಬ್ರಹ್ಮೈಕ್ಯವನ್ನು ಸಾರುತ್ತವೆ. ಕೇವಲ ಶ್ರುತಿಯೊಂದೇ ಇಂದ್ರಿಯಾತೀತವೂ ಮತ್ತು ವಿಷಯಾತೀತವೂ ಆದ ಅಧ್ಯಾತ್ಮಿಕ ಜ್ಞಾನದಬಗ್ಗೆ ಯುಕ್ತಿಪೂವ೯ಕ ಪ್ರಮಾಣವನ್ನು ರುಜುವಾತುಪಡಿಸಬಲ್ಲವು.ಋಷಿಗಳು ತಾವು ಅನುಭವಿಸಿದ ಸತ್ಯವನ್ನು ಮುಂದೆ ಬರುವವರ ಉದ್ಧಾರಕ್ಕಾಗಿ ಹೇಳಿದ್ದಾರೆ.ಅದು ಇಂದಿಗೂ ಉಪನಿಷತ್ತುಗಳಲ್ಲಿ ಹರಿಯುತ್ತಿದೆ.ಇಲ್ಲಿಯೂ ಅಲ್ಪತನವಿಲ್ಲ.ಭೂಮದ ಛಾಯೆಯಲ್ಲಿಯೇ ಇರುವುದು.
ಬ್ರಹ್ಮತತ್ವ,ಜೀವಾತ್ಮ,ಜಗತ್ತು:ಬ್ರಹ್ಮವು ಸಗುಣ ಮತ್ತು ನಿಗು೯ಣ ಎಂದು ಎರಡು ವಿಧ.ನಿಗು೯ಣ ಬ್ರಹ್ಮವು ನಿತ್ಯ,ಶುದ್ಧ,ಬುದ್ಧ ಹಾಗೂ ಮುಕ್ತ ಸ್ವಭಾವವುಳ್ಳದ್ದು.ಅದು ಸವ೯ಜ್ಞ, ಸವ೯ವ್ಯಾಪ್ತ, ಸವ೯ಶಕ್ತ ಇದು ಮಾಯೆಯನ್ನು ಮೀರಿದೆ. ಇದು ಇಂದ್ರಿಯಗಳಿಗೆ ನಿಲುಕದ್ದು. ಅವಿವ೯ಚನೀಯ (ಅವಣ೯ನೀಯ).
"ಸಗುಣ ಬ್ರಹ್ಮ"ವು ಮಾಯೆ ಎಂಬ ಉಪಾಧಿಯ ಸಂಬಂಧವುಳ್ಳದ್ದು.ಜೀವನಿಗೆ "ಕ್ಷೇತ್ರ" ಎಂದು ಹೆಸರು.ಇವನು ಬ್ರಹ್ಮದ ಅಂಶವೇ ಆಗಿದ್ದಾನೆ. ಪಂಚಪ್ರಾಣಗಳು, ಪಂಚಕಮೇ೯ಂದ್ರಿಯಗಳು, ಪಂಚ ಜ್ಞಾನೇಂದ್ರಿಯಗಳು ಶರೀರದಲ್ಲಿ ನಿಲ್ಲುವಂತೆ ಮಾಡಿರುವುದರಿಂದ ಅವನಿಗೆ "ಜೀವ" ಎಂದು ಹೆಸರು.ಬ್ರಹ್ಮ ಸಾಕ್ಷಾತ್ಕಾರದಿಂದ ಜೀವನು ಮುಕ್ತಿಯನ್ನು ಹೊಂದುತ್ತಾನೆ.
ಅಧ್ಯಾಸ: ಅದಲ್ಲದ್ದನ್ನು ಅದು ಎಂದು ಭಾವಿಸುವುದೇ"ಅಧ್ಯಾಸ"."ಸ್ಮøತಿರೂಪ ಪರತ್ರ ಪೂವ೯ ದೃಷ್ಟ್ವಾಭಾಸಃ".ಇದು ಅಧ್ಯಾಸದ ವ್ಯಾಖ್ಯೆ.ಒಂದು ವಸ್ತುವಿನ ಬದಲಾಗಿ ಇನ್ನೊಂದು ವಸ್ತುವನ್ನು ಕಾಣುವುದೇ ಅಧ್ಯಾಸ.ಉದಾಹರಣೆಗೆ ಹಾವು ಮತ್ತು ಹಗ್ಗ,ಕಪ್ಪೆಚಿಪ್ಪು ಮತ್ತು ಬೆಳ್ಳಿ ,ಹಾಗೂ ದ್ವಿಚಂದ್ರದಶ೯ನ.ಬಹುಮುಖ್ಯ ಸಾಮಾನ್ಯ ಅಧ್ಯಾಸವೆಂದರೆ ಆತ್ಮ_ಅನಾತ್ಮಗಳ ಅನ್ಯೋನ್ಯಾಧ್ಯಾಸ.ದೇಹವನ್ನೇ ನಾನೆಂದು ಭಾವಿಸುವುದು.ನಾನು ಕತೃ೯ ಮತ್ತು ಭೋಕ್ತø ಎಂದು ತಿಳಿಯುವುದು ಒಂದು ಅಧ್ಯಾಸವೆ.
ಅಧ್ಯಾಸವು ಐದು ವಿಧ.1 ಆತ್ಮಖ್ಯಾತಿ 2 ಅಸತ್ ಖ್ಯಾತಿ 3 ಅಖ್ಯಾತಿ 4ಅನ್ಯಥಾ ಖ್ಯಾತಿ. 5 ಅನಿವ೯ಚನೀಯ ಖ್ಯಾತಿ. ಖ್ಯಾತಿ ಎಂದರೆ ಭ್ರಮೆ.
ಮಾಯೆಯ ಪರಿಕಲ್ಪನೆ:ಯಾವುದು ನಿಜವಾಗಿಯೂ ಇಲ್ಲವೊ,ಆದರೆ ಇದ್ದಂತೆ ತೋರುತ್ತದೆಯೊ ಅದೇ ಮಾಯೆ.ಅವಿದ್ಯೆಯಿಂದ ಕಲ್ಪಿತವಾಗಿರುವ ನಾಮ ರೂಪ ಬೀಜವೇ ಮಾಯೆ.ಯಾಸ್ಕರು ತಮ್ಮ ನಿಘಂಟಿನಲ್ಲಿ ಮಾಯಾ ಶಬ್ದವನ್ನು ಜ್ಞಾನ ಪಯಾ೯ಯ ವಾಗಿಯೇ ಬರೆದಿರುತ್ತಾರೆ."ಇಂದ್ರೋ ಮಾಯಾಭಿಃ ಪುರುರೂಪ ಈಯತೇ",ಇಂದ್ರನು (ಪರಮೇಶ್ವರನು) ಮಾಯೆಯಿಂದ ಬಹುರೂಪನಾಗಿ ಕಾಣುತ್ತಾನೆ.
ಮಾಯೆಯು 1 ಅನಾದಿ 2 ಈಶ್ವರನ ಶಕ್ತಿ 3 ಜಡ (ಅಚಿತ್) 4 . ಜ್ಞಾನದಿಂದ ಮಾಯೆಯನ್ನು ಹೋಗಲಾಡಿಸಬಹುದು. 5 ಅನಿವ೯ಚನೀಯ 6 ಮಾಯೆಯು ಅವಿದ್ಯೆಯ ಪರಿಣಾಮವಾಗಿದೆ.
ಅದ್ವೈತ ಸಾರ
ಜಟಿಲವಾದ ಅದ್ವೈತವನ್ನು ಸರಳಗೊಳಿಸುವುದಕ್ಕಾಗಿಕೆಲವು ಮುಖ್ಯ ವಿಚಾರಗಳನ್ನು ಸಾಮಾನ್ಯ ಭಕ್ತರ ಮುಂದೆ ಇಡಲು ಪ್ರಯತ್ನಿಸುತ್ತೇನೆ.ಶಂಕರರ ಮೂಲತತ್ವಗಳನ್ನು ವಿಕಾರಗೊಳಿಸದಂತೆ ಜನಸಾಮಾನ್ಯರ ಮುಂದೆ ಇಡುವುದೇ ನನ್ನ ಈ ಲೇಖನದ ಉದ್ದೇಶ.ನಾನು ಪೂಣ೯ ಅದ್ವೈತ ವಿದ್ವಾಂಸನಲ್ಲ.ಒಬ್ಬ ಸಾಮಾನ್ಯ ಭಕ್ತನಾಗಿ ಅದ್ವೈತದ ಕೆಲವು ವಿಚಾರಗಳನ್ನು ತಮ್ಮೆಲ್ಲರ ಮುಂದೆ ಇಡಲು ಪ್ರಯತ್ನಿಸುತ್ತೇನೆ.
ಅದರ ಮುಖ್ಯ ಶೀಷಿ೯ಕೆಗಳು ಈರೀತಿ ಇವೆ.
1)ನಾಲ್ಕು ಮಹಾವಾಕ್ಯಗಳ ಸ್ಥೂಲ ವಿವರಣೆ.
2)ಯಸ್ಯಂತನಾ೯ದಿ ಮಧ್ಯಂ ಎಂಬ ಸುಂದರವಾದ ಶ್ಲೋಕದ ಅಥ೯ವಿವರಣೆ
3)ಅದ್ವೈತ ವಿವರಣೆಗೆ ಉಪಯೋಗವಾಗುವ ಕೆಲವು ಉದಾಹರಣೆಗಳು
4) ಅದ್ವೈತ ವೇದಾಂತದ ಕೆಲವು ಮುಖ್ಯ ಸಂಗತಿಗಳು
1) ಅಹಂ ಬ್ರಹ್ಮಾಸ್ಮಿ(ನಾನು ಬ್ರಹ್ಮವಾಗಿದ್ದೇನೆ)
ನಾನು ಈ ಶರೀರವಲ್ಲ.ಏಕೆಂದರೆ ಈ ಶರೀರವು 40 ವಷ೯ಗಳ ಕೆಳಗೆ ಇರಲಿಲ್ಲ.ಇನ್ನು ಕೆಲವು ವಷ೯ಗಳಲ್ಲಿ ಇರುವುದಿಲ್ಲ.ಈ ಅನಿತ್ಯವಾದ ಶರೀರವನ್ನು ನಾನು ಎಂದು ತಿಳಿದುಕೊಳ್ಳ ಬಾರದು.ನಾನು ಅಖಂಡ ಏಕರಸವಾದ ಚಿದಾಕಾಶವೇ ಹೊರತು ನಶ್ವರವಾದ ಈ ಶರೀರವಲ್ಲ.ಈ ಶರೀರವೇ ನಾನು ಎಂಬ ತಪ್ಪು ತಿಳುವಳಿಕೆಯನ್ನು ಬಿಡುವ ತನಕ ಮುಕ್ತಿಯಿಲ್ಲ.
2) ತತ್ವಮಸಿ
ನೀನು ಬ್ರಹ್ಮವಾಗಿದ್ದೀಯೆ(ಅದಾಗಿದ್ದೀಯೆ).ನೀನು ಈ ಶರೀರವಲ್ಲ.ನೀನು ಅಖಂಡ ಮತ್ತು ಏಕರಸವಾದ ಚಿದಾಕಾಶ. (ಚಿತ್ ಎಂದರೆ ಅರಿವು. ಎಂದರೆ ಜ್ಞಾನಸ್ವರೂಪನಾದ ಪರಮಾತ್ಮನೇ). ನಶ್ವರವಾದ ಈಶರೀರವಲ್ಲ.
3)ಅಯಮಾತ್ಮಾ ಬ್ರಹ್ಮ ಈ ಆತ್ಮನು ಬ್ರಹ್ಮವೇ ಬೇರೆಅಲ್ಲ.
ಜೀವಾತ್ಮ ಹಾಗೂ ಪರಮಾತ್ಮರ ನಡುವೆ ಬೇಧವಿಲ್ಲ.ನೀನು ಹೊಸದಾಗಿ ಸಾಧನೆಯಿಂದ ಬ್ರಹ್ಮವಾಗಬೇಕಾಗಿಲ್ಲ.ನೀನು ಮೊದಲಿನಿಂದಲೂ ಬ್ರಹ್ಮವೇ. ಇಂದೂ ಮುಂದೂ ಎದೆಂದಿಗೂ ಬ್ರಹ್ಮವೇ ಎಂಬುದನ್ನು ಅರಿಯಬೇಕಾಗಿದೆ.ಇದನ್ನು ಅರಿಯುವುದೇ ಅಧ್ಯಾತ್ಮಿಕ ಸಾಧನೆ.ಇದನ್ನೇ ಜೀವಬ್ರಹ್ಮೈಕ್ಯ ಏಕತ್ವ ದಶ೯ನ, ಅಭೇದ ದಶ೯ನ,ಸಮ್ಯಕ್ ದಶ೯ನ ಎನ್ನುತ್ತಾರೆ. ಇದನ್ನು ಶ್ರವಣ,ಮನನ,ನಿಧಿದ್ಯಾಸನಗಳ ಅಭ್ಯಾಸದಿಂದ ಮಾಡಬೇಕು .ಶಾಸ್ತ್ರಗಳ ಸತತ ಅಧ್ಯಯನ ಹಾಗೂ ನಿಜಗುರುವಿನ ಬೋಧನೆಯ ಮೂಲಕ ಅರಿಯಬೇಕು.ಶಮಾದಿ ಷಟ್ಕಗಳನ್ನು ಅಳವಡಿಸಿ ಕೊಳ್ಳಬೇಕು .ಜ್ಞಾನವುಂಟಾಗಲು ಸದ್ಗುರುವಿನ ಕೃಪೆ ಅವಶ್ಯಕ.
4) ಪ್ರಜ್ಞಾನಂ ಬ್ರಹ್ಮ. ಬ್ರಹ್ಮವು ಜ್ಞಾನಸ್ವರೂಪವಾಗಿದೆ.ಅದು ಘನೀಕೃತ ಜ್ಞಾನ.
ಬ್ರಹ್ಮದ ಲಕ್ಷಣಗಳು: ನಿತ್ಯ(ಎಂದೆಂದಿಗೂ ಇರುವವನು) ಅವ್ಯಯ,(ಕಡಿಮೆಯಾಗದವನು)ಸವ೯ಗತ (ಎಲ್ಲವನ್ನೂ ಹೊಕ್ಕಿರುವವನು),ಸನಾತನ(ಪುರಾತನ),ಅಚಲ(ಚಲನೆ ಇಲ್ಲದವನು),ಅವ್ಯಕ್ತ (ಇನ್ನೂ ವ್ಯಕ್ತವಾಗದವನು),ಅಚಿಂತ್ಯ (ಚಿಂತನೆಯನ್ನು ಮೀರಿದವನು),ಅವಿಕಾಯ೯(ವಿಕಾರವಿಲ್ಲದವನು),ಅವಿನಾಶಿ (ನಾಶವಿಲ್ಲದವನು),ಅಜ (ಹುಟ್ಟಿಲ್ಲದವನು) ನಿಗು೯ಣ (ಗುಣಗಳಿಲ್ಲದವನು) ನಿರಾಕಾರ (ಆಕಾರವಿಲ್ಲದವನು), ವಿದೇಹಿ (ದೇಹವಿಲ್ಲದವನು),ಅನುಪಮ(ಹೋಲಿಕೆ ಇಲ್ಲದವನು),ನಿರಾಶ್ರಯ(ಯಾವ ಆಶ್ರಯವೂ ಇಲ್ಲದವನು ಆದರೆ ಎಲ್ಲದಕ್ಕೂ ಆಶ್ರಯನಾಗಿಇರುವವನು),ಅಶರೀರಿ (ಶರೀರವಿಲ್ಲದವನು), ನಿರಾಕಾರ (ಯಾವ ಆಕಾರವೂ ಇಲ್ಲದವನು),ಇತ್ಯಾದಿ.
ಬ್ರಹ್ಮದ ಲಕ್ಷಣಗಳನ್ನು ವಣಿ೯ಸುವ ವಿಷಯದಲ್ಲಿಯೇ ಸುಂದರವಾದ ಪ್ರಸಿದ್ಧವಾದ ಶ್ಲೋಕವೊಂದು ಹೀಗಿದೆ.
ಯಸ್ಯಂತನಾ೯ದಿ ಮಧ್ಯಂ ಯಾರಿಗೆ ಆದಿ ಮಧ್ಯ ಅಂತ್ಯಗಳು ಇಲ್ಲವೋ, ನಹಿಕರ ಚರಣಂ ಕೈಗಳು ಮತ್ತು ಪಾದಗಳು ಇಲ್ಲವೋ (ನಿರವಯವ) ನಾಮ ಗೋತ್ರಂ ನ ಸೂತ್ರಂ,ನಾಮ ಗೋತ್ರಗಳಿಲ್ಲದವನು,ನೋ ಜಾತಿನೈ೯ವ ವಣೋ೯ನ ಭವತಿ ಯಾರಿಗೆ ಜಾತಿ ಕುಲ ಗೋತ್ರಗಳು ವಣ೯ಗಳು ಇಲ್ಲವೋ, ಪುರುಷೋ ನೋ ನಪುಸಂ ನಚಸ್ತ್ರೀ ಪುರುಷನಾಗಲೀ ಸ್ತ್ರೀಯಾಗಲೀ ಅಲ್ಲದ , ನಾಕಾರಂ ನೋವಿಕಾರಂ ಆಕಾರವಾಗಲೀ ವಿಕಾರವಾಗಲೀ ಇಲ್ಲದ, ನ ಹಿ ಜನಿ ಮರಣಂ ಹುಟ್ಟು ಸಾವುಗಳಿಲ್ಲದ, ನಾಸ್ತಿ ಪುಣ್ಯಂ ನಪಾಪಂ, ಪಾವಾಗಲೀ ಪುಣ್ಯವಾಗಲೀ ಇಲ್ಲದ, ನೋತತ್ವಂ ತತ್ವಮೇಕಂ ಒಂದೇ ತತ್ವವಿರುವ ಸಹಜ ಸಮರಸಂ ಎಲ್ಲಾ ಚರಾಚರ ವಸ್ತುಗಳಲ್ಲಿಯೂ ಸವiವಾಗಿರುವ ಸದ್ಗುರುಂ ತಂ ನಮಾಮಿ ಅಂಥ ಸದ್ಗುರುವಿಗೆ ನಮಸ್ಕಾರ.6
ಈ ಅದೃಶ್ಯವಾದ ಬ್ರಹ್ಮದಿಂದ ದೃಶ್ಯ ಪ್ರಪಂಚವು ಹೇಗೆ ಉಂಟಾಯಿತು ಎಂಬುದು ಪ್ರಶ್ನೆ.
1)ಛಾಂದೋಗ್ಯ ಉಪನಿಷತ್ತಿನಲ್ಲಿಬರುವ ಆಲದ ಬೀಜದ ಉದಾಹರಣೆ
2)ಉಪ್ಪು ನೀರಿನ ಉದಾಹರಣೆ. ಇವೆರಡೂ ಛಾಂದೋಗ್ಯ ಉಪನಿಷತ್ತಿನ ಉದ್ಧಾಲಕ ಅರುಣಿಯ ಹಾಗೂ ಶ್ವೇತಕೇತುವಿನ ಸಂವಾದ.
3) ನೀರಿನ ಉದಾಹರಣೆ(ಸ್ವಂತ ನಿರೂಪಣೆ):ಒಂದೇ ನೀರಿನಲ್ಲಿಮೀನು, ಮೊಸಳೆ, ತಿಮಿಂಗಲ ಮುಂತಾದ ಕೋಟ್ಯಾಂತರ ಜೀವಿಗಳು ಹುಟ್ಟುತ್ತವೆ.ಅಲ್ಲೇ ಬೆಳೆದು ಅಲ್ಲೇ ಸಾಯುತ್ತವೆ.ಎಂದರೆ ಒಂದು ಉದ್ಧರಣೆ ನೀರಿಗೂ(ಸಮುದ್ರದಲ್ಲಿ ತಾತ್ವಿಕವಾಗಿ ಎರಡು ನೀರುಗಳೂ ಒಂದೇ, ಪ್ರಮಾಣದಲ್ಲಿ ವ್ಯತ್ಯಾಸವಿದ್ದರೂ)ಸಮುದ್ರದ ನೀರಿಗೂಯಾವ ವ್ಯತ್ಯಾಸವೂ ಇಲ್ಲ. ಸಮುದ್ರದ ನೀರಿನಲ್ಲಿ ಯಾರೂ ತಿಮಿಂಗಲದ ಅಂದಾಣುವನ್ನಾಗಲೀ ವೀಯಾ೯ಣುವನ್ನಾಗಲೀ ನಾವು ನೀವು ತಂದು ಆಚೆ ಮತ್ತು ಈಚೆ ದಡದಮೇಲೆ ಹಾಕಿಲ್ಲ. ಎಂದರೆ ಈ ನೀರಿನಲ್ಲಿ ಜೀವಿಗಳಹುಟ್ಟು ಬೆಳವಣಿಗೆ ಮತ್ತು ಸಾವುಗಳಿಗೆ ಬೇಕಾದ ಅಂಶವು ಉದ್ಧರಣೆ ನೀರಿನಲ್ಲಿದೆ ಎಂದಾಯಿತು,(ಉತ್ಪ್ರೇಷೆ ಎನಿಸಬಹುದಾದರೂ) ಅದೇ ರೀತಿಯಲ್ಲಿ ಈ ಪ್ರಪಂಚಕ್ಕೆ ಒಂದು ಒಳ್ಳೆಯ ಹೆಸರನ್ನು ಕೊಡಬಹುದಾದರೆ ಅದು "ಬ್ರಹ್ಮ ಸಮುದ್ರ"ಎಂದು. ನಾವೆಲ್ಲರೂ ಜಲಚರಗಳಂತೆ ಈ ಸಮುದ್ರದಲ್ಲಿಯೇ ಹುಟ್ಟಿದ್ದೇವೆ ಬದುಕಿದ್ದೇವೆ ಮತ್ತು ಸಾಯುತ್ತೇವೆ.(ತಜ್ಜಂ,ತದನಂ, ತಲ್ಲಂ). ನೀರು ಬ್ರಹ್ಮದ ಒಂದು ಅಂಶ.ಇಲ್ಲಿ ಭಾರತದೇಶವನ್ನು ತೋರಿಸಲು ನಕ್ಷೆ ಮತ್ತು ಕಡ್ಡಿಯನ್ನು ಬಳಸಿದಂತೆ ಇಲ್ಲಿ ನೀರು ಹಾಗೂ ಬ್ರಹ್ಮದ ಉದಾಹರಣೆಯನ್ನು ತೆಗೆದುಕೊಳ್ಳಲಾಗಿದೆ.(ಪಾಟ್೯ ಆಪ್ ದಿ ವೋಲ್ ಎನ್ನುವಂತೆ) ಇದು ವೈಜ್ಞಾನಿಕ ಮನೋಭಾವವುಳ್ಳವರಿಗೆ ಮನದಟ್ಟು ಮಾಡಲು ಒಳ್ಳೆಯ ಉದಾಹರಣೆ ಯಾಗಿದೆ.
ಅದ್ವೈತದ ಕೆಲವು ಮುಖ್ಯ ಸಂಗತಿಗಳು: (ವಿಶೇಷ ಸೂಚನೆ:ಇಲ್ಲಿರುವ ವಿಚಾರಗಳನ್ನು ಸರಿಯಾಗಿ ವಿಚಾರ ಮಾಡಿ ತಿಳಿದು ಕೊಳ್ಳದೆ ಸರಿಯಾದ ಮಾಗ೯ದಶ೯ನವಿಲ್ಲದೆ ಭಕ್ತರು ತಪ್ಪಾಗಿ ತಿಳಿದು ತಪ್ಪು ಮಾಗ೯ಕ್ಕೆ ಹೋಗಬಾರದು.ನಿಣ೯ಯಿಸುವಾಗ ಎಚ್ಚರವಿರಲಿ.ಸಾಮಾನ್ಯ ಭಕ್ತರು ಇದನ್ನು ಕೇಳಿ ತಿಳಿದುಕೊಳ್ಳಬೇಕೇ ವಿನಃ ಈಗಲೇ ಅಕ್ಷರಷಃ ಅನುಸರಿಸಬಾರದು.ಗುರು ಸಂಪ್ರದಾಯದಂತೆ ನಡೆದುಕೊಳ್ಳಬೇಕು.ಅದ್ವೈತ ಜ್ಞಾನವಾದ ನಂತರ ಅನುಸರಿಸಬಹುದು.ಈ ವಾಕ್ಯಗಳನ್ನು ಸರಿಯಾಗಿ ಅಥೈ೯ಸದಿದ್ದರೆ ಅನಥ೯ಉಂಟಾಗುತ್ತದೆ.)
1) ಜ್ಞಾನಿಗಳಿಗೆ ಕತ೯ವ್ಯವಿಲ್ಲ. ಕತ೯ವ್ಯವೇ ಇದ್ದ ಪಕ್ಷದಲ್ಲಿ ಅವನು ಜ್ಞಾನಿಯಲ್ಲ7.ಏಕೆಂದರೆ ಎಲ್ಲವನ್ನೂ ಪರಮಾತ್ಮನೇ ಮಾಡುತ್ತಾನೆ.ಇದುವರೆಗೂ ಆಗಿರುವುದು ಮುಂದೆಆಗಬೇಕಾಗಿರುದು ಎಲ್ಲವೂ ಅವನ ನಿಧ೯ರದಂತೆ ನಡೆಯುತ್ತದೆ.ಇದನ್ನೇ ಒಂದು ಶ್ಲೋಕದಲ್ಲಿ ಈರೀತಿ ಹೇಳುತ್ತಾರೆ.
ಸವ೯ ಭೂತಂಗಳೊಳು ಸವೇ೯ಷಾ ನೀನಿರುತೆ
ಸವ೯ವ ಗೈಸುವನೆಂಬಾ ಮಮ೯ವ ನಾನರಿವಂಥ||
ಇಲ್ಲಿ ಸವ೯ವ ಗೈಸುವನೆಂಬ ಎನ್ನುವ ಮೂರನೆ ಪಾದವು ಬಹಳ ಮುಖ್ಯವಾದುದು.ಎಂದರೆ ಎಲ್ಲವನ್ನೂ ಅವನೇ ಮಾಡಿಸುತ್ತಾನೆ ಎಂದಥ೯." ತೇನವಿನಾ ತೃಣಮಪಿ ನಚಲತಿ"ಎನ್ನುವಂತೆ " ದೈವಾಧೀನಂ ಜಗತ್ಸವ೯ಂ " ಎನ್ನುವಂತೆ ಈ ಜಗತ್ತು ದೇವರ ಪೂವ೯ ನಿಧ೯ರ ದಂತೆ ನಡುಯುತ್ತದೆ.ಆಗಬೇಕಾದ್ದು ಆಗಿಯೇ ತೀರುತ್ತದೆ.ಆಗಬಾರದ್ದು ಎಂದೂ ನಡೆಯುವುದಿಲ್ಲ.ಆದ್ದರಿಂದ ಈ ವಾಕ್ಯವನ್ನು ಹೇಳಿದ್ದಾರೆ.ಈ ಮಮ೯ವನ್ನು ತಿಳಿದವನೇ ಜ್ಞಾನಿ.ಈ ಮಮ೯ವನ್ನು ತಿಳಿಯದೇ ಏನೇ ತಿಳಿದು ಕೊಂಡರೂ ಅವನು ಜ್ಞಾನಿಯಲ್ಲ. ಇದು ವಿಚಿತ್ರ ಆದರೂ ನಿಜ.
2) ಯಸ್ಯಂತನಾ೯ದಿ ಮಧ್ಯಂ ಯಾರಿಗೆ ಆದಿ ಮಧ್ಯ ಹಾಗೂ ಅಂತ್ಯಗಳು ಇಲ್ಲವೋ ,ನಹಿಕರ ಚರಣಂ ಹಸ್ತ ಪಾದಗಳಿಲ್ಲವೋ ( ನಿರಾಕಾರ,ನಿರವಯವ) ನಾಮಗೋತ್ರಂ ನ ಸೂತ್ರಂ, ಹೆಸರಾಗಲೀ ಗೋತ್ರವಾಗಲೀ ಸೂತ್ರವಾಗಲೀ ಇಲ್ಲ.ನೋ ಜಾತಿಃ ನೈವ ವಣೋ೯ನಭವತಿ ,ಜಾತಿಯಾಗಲೀ ,ವಣ೯ವಾಗಲೀ ಇಲ್ಲದ ಪುರುಷೋ ನೋ ನಪುಂಸ್ಕಂ ನಚಸ್ತೀ ಅವನು ಪುರುಷನಾಗಲೀ ಸ್ತ್ರೀಯಾಗಲೀ ಅಲ್ಲ. ನಾಕಾರಂ ನೋವಿಕಾರಂ ಆಕಾರವಾಗಲೀ ವಿಕಾರವಾಗಲೀ ಇಲ್ಲ. ನ ಹಿ ಜನಿಮರಣಂ ಅವನಿಗೆ ಜನನವಾಗಲೀ ಮರಣವಾಗಲೀ ಇಲ್ಲ. ನಾಸ್ತಿ ಪುಣ್ಯಂ ನಪಾಪಂ ಪಾಪವಾಗಲೀ ಪುಣ್ಯವಾಗಲೀ ಇಲ್ಲ. ನೋ ತತ್ವಂತತ್ವಮೇಕಂ ಅವನು ತತ್ವವಿಲ್ಲದೇ ಇಲ್ಲ.ಒಂದೇ ತತ್ವ. ಸಹಜ ಸಮರಸಂ ಎಲ್ಲದರಲ್ಲೂ ಸಮಾನವಾಗಿ ಹರಡಿರುವವನು ಸದ್ಗುರುಂ ತಂ ನಮಾಮಿ ಆ ಸದ್ಗುರುವಿಗೆ ನಮಸ್ಕಾರ 6
ವಿವರಣೆ: ಅವನಿಗೆ ಪಾಪ ಪುಣ್ಯಗಳಿಲ್ಲ.ಪರಮಾತ್ಮನೇ ಎಲ್ಲವನ್ನೂ ಮಾಡಿಸುತ್ತಾನೆ. ನಾನು ಕತೃ೯, ನಾನು ಭೋಕ್ತø ಎಂದು ತಿಳಿದುಕೊಂಡಾಗ ಮನುಷ್ಯನಿಗೆ ಪಾಪ ಪುಣ್ಯಗಳು ಅಂಟುತ್ತವೆ,ನಾನು ಕತೃ೯ವೂ ಅಲ್ಲ ಭೋಕ್ತøವೂ ಅಲ್ಲ ಎಂದು ತಿಳಿದುಕೊಂಡಾಗ ಪಾಪ ಪುಣ್ಯಗಳು ಅಂಟುವುದಿಲ್ಲ.ಅವನೇ ಎಲ್ಲವನ್ನೂ ಮಾಡಿಸುತ್ತಾನೆ ಎಂದು ತಿಳಿದುಕೊಂಡಾಗ ಪಾಪ ಪುಣ್ಯಗಳು ಅಂಟುವುದಿಲ್ಲ.
ಸಹಜ ಸಮರಸ: ಎಲ್ಲಾವಸ್ತುಗಳಲ್ಲಿಯೂ ಸಮಾನವಾಗಿ ಹರಡಿರುವವನು.ನದಿ ಬೆಟ್ಟ ಕಣಿವೆ ಸಮುದ್ರ ನದಿ, ಸಮುದ್ರ,ನಾನು ನೀನು ಎಲ್ಲೆಲ್ಲಿಯೂ ಯಾವಾಗಲೂ ಸಮಾನ ವಾಗಿ ಹರಡಿರುವವನು. ಎಲ್ಲವೂ ಸಮಾನವಾದ್ದರಿಂದ ಸಾಮ. ಸಮ ಎಂದರೆ ಬ್ರಹ್ಮ,ಅದನ್ನು ಹಾಡುವುದೇ ಸಾಮವೇದ.
ದೇಹ ಬುಧ್ಯಾಸ್ಮಿ ದಾಸೋಹಂ ಜೀವ ಬುದ್ಧ್ಯಾತ್ವದಂಶಕಃ|
ಆತ್ಮ ಬುದ್ಧ್ಯಾತ್ ತ್ವಮೇವಾಹಂ ಇತಿಮೇ ನಿಶ್ಚಿತಾಮತಿಃ|
ದೇಹಬುದ್ಧಿಯಿಂದ ನಾನು ದಾಸ. ಜೀವಬುದ್ಧಿಯಿಂದ ನಾನು ನಿನ್ನ ಅಂಶ. ಆತ್ಮಬುದ್ಧಿಯಿಂದ ನಾನು ನೀನೇ ಆಗಿದ್ದೇನೆ ಇದು ನನ್ನ ನಿಶ್ಚಿತವಾದ ಮತಿ.
ತ್ವದ್ಯತ್ರಯಾ ವ್ಯಾಪಕತಾಹತಾತೇ ಧ್ಯಾನೇನ ಚೇತಃಪರತಾ ಹತಾತೇ|
ಸ್ತುತ್ಯಾಮಯಾವಾಕ್ಪರತಾ ಹತಾತೇ ಕ್ಷನಸ್ವ ನಿತ್ಯಂ ತ್ರಿವಿಧಾಪರಾಧಾನ್|
ನೀನು ಸವ೯ವ್ಯಾಪಿ ಆದರೂ ನಿನ್ನನ್ನು ನೋಡಲು ಯಾತ್ರೆ ಹೋಗುತ್ತೇವೆ.ನೀನು ವಾಕ್ ಮನಸ್ಸುಗಳನ್ನು ಮೀರಿದವನು ಆದರೂ ನಿನ್ನನ್ನು ಕುರಿತು ಧ್ಯಾನಿಸುತ್ತೇನೆ.ನೀನು ವಾಕ್ಕನ್ನು ಮೀರಿದವನು ಆದರೂ ನಿನ್ನನ್ನು ಕುರಿತು ಸ್ತುತಿಸುತ್ತೇನೆ.ನಿತ್ಯವೂ ಮಾಡುವ ಈಮೂರು ಅಪರಾಧಗಳನ್ನು ಕ್ಷಮಿಸು.
ನಿಜಗುಣ ಶಿವಯೋಗಿಗಳು ಅದ್ವೈತಿಗಳಿಗೆ ಒಂದು ಮುಖ್ಯವಾದ ಎಚ್ಚರಿಕೆಯನ್ನು ಕೊಡುತ್ತಾರೆ. ಅದೇನೆಂದರೆ ಅದ್ವೈತವನ್ನು ಹೊರಗೆ ಬಾಹ್ಯದಲ್ಲಿ,ವ್ಯವಹಾರದಲ್ಲಿ ಬಳಸಬಾರದು ಎಂದು.
"ಬಳಸದಿರದ್ವೈತವನು ಬಾಹ್ಯದಲಿ "ಎಂದು.ಅದ್ವೈತವು ಅಂತರಂಗದ ಶೋಧನೆಗೆ ಹಾಗೂ ಮನಸ್ಸಿನ ಪ್ರಶಾಂತತೆಗೇ ಹೊರತು ವ್ಯವಹಾರದಲ್ಲಿ ಬಳಸಲು ಅಲ್ಲ.ಮೋಕ್ಷವು ಮನಸ್ಸಿನ ಸಂಸ್ಥಿತಿಯೇ ಹೊರತು ವ್ರತವಲ್ಲ.
ನ ನಿರೋಧೋ ನಚೋತ್ಪತ್ತಿಃ ನ ಬದ್ಧೋ ನಚ ಸಾಧಕಃ.|
ನ ಮುಮುಕ್ಷುನ೯ ವೈ ಮುಕ್ತ ಇತ್ಯೇಷಾ ಪರಮಾಥ೯ತಾ||
ಪ್ರಳಯವೂ ಇಲ್ಲ.ಉತ್ಪತ್ತಿಯೂ ಇಲ್ಲ.ಬದ್ಧನೂ ಇಲ್ಲ. ಸಾಧಕನೂ ಇಲ್ಲ.ಮುಮುಕ್ಷುವೂ ಇಲ್ಲ.ಮುಕ್ತನೂ ಇಲ್ಲ.ಹೀಗೆ ಇದು ಪರಮಾಥ೯ವು.ಇದರ ಮೂಲವನ್ನು ಅಮೃತ ಬಿಂದೂಪನಿಷತ್ತಿನಲ್ಲಿಯೂ(10) ಮಾಂಡೂಕ್ಯ ಕಾರಿಕೆಗಳಲ್ಲಿಯೂ(2.32) ನೋಡಬಹುದು.
ತಕ್ಷಣ ಅನುಭವ:ದೀಪವನ್ನು ತಂದಾಗ ಹೇಗೆ ಸಾವಿರಾರು ವಷ೯ದ ಕತ್ತಲು ಕ್ಷಣಮಾತ್ರದಲ್ಲಿಯೇ ಸಮೂಲವಾಗಿ ನಾಶವಾಗುತ್ತದೆಯೋ ಹಾಗೆ ಜ್ಞಾನವು ಉಂಟಾದಾಗ ಕ್ಷಣ ಮಾತ್ರದಲ್ಲಿಯೇ ಅಜ್ಞಾನವು ನಾಶವಾಗುತ್ತದೆ.ಎಲ್ಲಾ ಉಪಾಧಿಗಳೂ ಕ್ಷಣಮಾತ್ರದಲ್ಲಿಯೇ ನಾಶವಾಗಿ ಬ್ರಹ್ಮವೊಂದೇ ಪ್ರಕಾಶಿಸುತ್ತದೆ.ಇದನ್ನು ತಕ್ಷಣ ಅನುಭವ ಎನ್ನುತ್ತಾರೆ.
ಸತ್ಯಗಳು ಮೂರುವಿಧ.1) ಪ್ರಾತಿಭಾಸಿಕ ಸತ್ಯ. ಉದಾಹರಣೆ ರಜ್ಜು ಸಪ೯ನ್ಯಾಯ ಮತ್ತು ಕನಸುಕೂಡ ಪ್ರಾತಿಭಾಸಿಕ ಸತ್ಯಕ್ಕೆ ಒಂದು ಒಳ್ಳೆಯ ಉದಾಹರಣೆ.
2) ವ್ಯಾವಹಾರಿಕ ಸತ್ಯ:ನಾವು ಜೀವನದಲ್ಲಿ ಮಾಡುವ ಎಲ್ಲಾ ವ್ಯವಹಾರಗಳೂ ವ್ಯಾವಹಾರಿಕ ಸತ್ಯ. ವ್ಯವಹಾರಗಳೆಲ್ಲವೂ ದ್ವೈತದಲ್ಲಿಯೇ ಸ್ಥಿತವಾಗಿದೆ.ವ್ಯವಹಾರದಲ್ಲಿ ದ್ವೈತವು ನಮಗೂ ಬೇಕಾಗಿದೆ ಎಂದು ಎಂದು ವಿದ್ಯಾರಣ್ಯರು ಹೇಳುತ್ತಾರೆ.
3) ಪಾರಮಾರ್ಥಿಕ ಸತ್ಯ: ಇದು ಪೂಣ೯ ಅದ್ವೈತದಲ್ಲಿ ಸ್ಥಿತವಾಗಿದೆ.ಅದ್ವೈತವೆಲ್ಲವೂ ಪಾರಮಾಥಿ೯ಕ ಸತ್ಯ.ಇಲ್ಲಿ ಯಾವ ವಿಭಾಗಗಲೂ ಇರುವುದಿಲ್ಲ.ತ್ರಿಪುಟಿರಹಿತ.
ಇಲ್ಲಿ ಯಾವ ಜ್ಞಾನ ಜ್ಞಾತೃ ಜ್ಞೇಯಗಳ ವಿಭಾಗವು ಇರುವುದಿಲ್ಲ.ಜೀವ ಬ್ರಹ್ಮೈಕ್ಯವು ಪಾರಮಾಥಿ೯ಕ ಸತ್ಯ.
ನೀರಿನ ಉದಾಹರಣೆ: ಒಂದೇ ವಸ್ತುವು ಏಕಕಾಲದಲ್ಲಿ ಸಗುಣವೂ ನಿಗು೯ಣವೂ ಆಗಿರಲು ಹೇಗೆ ಸಾಧ್ಯ? ಎಂಬುದು ಪ್ರಶ್ನೆ.ಅದಕ್ಕೆ ಒಂದು ಸುಂದರ ಉದಾಹರಣೆಯನ್ನು ಹೇಳಿದ್ದಾರೆ.ನೀರನ್ನು ದೂರದಿಂದ ಸಮುದ್ರದಲ್ಲಿ ನೋಡಿದಾಗ ನೀಲಿ ಬಣ್ಣವು ಕಾಣುತ್ತದೆ.ಅದನ್ನೇ ಹತ್ತಿರಹೋಗಿ ಕೈಬೊಗಸೆಯಲ್ಲಿ ತೆಗೆದುಕೊಂಡು ನೋಡಿದಾಗ ವಣ೯ರಹಿತವಾಗಿ ಕಾನುತ್ತದೆ.ಹೀಗೆ ಒಂದು ವಸ್ತುವು ಏಕಕಾಲದಲ್ಲಿನೀರು ಸಗುಣವೂ ಹೌದು ನಿಗು೯ಣವೂ ಹೌದು.ಹಾಗೆಯೇ ಬ್ರಹ್ಮವು ಸಗುಣವೂ ಹೌದು.ನಿಗು೯ಣವೂ ಹೌದು.
"ಭಾವಾದ್ವೈತಂ ಸದಾ ಕುಯಾ೯ತ್ ಕ್ರಿಯಾದ್ವೈತಂ ಕದಾಪಿನ"
ಅದ್ವೈತವು ಸತ್ಯವೆಂದು ಮನಸ್ಸಿನಲ್ಲಿ ವಿಶ್ವಾಸವಿರಬೇಕೇ ಹೊರತು ವ್ಯವಹಾರದಲ್ಲಿ ಅದನ್ನೆಂದಿಗೂ ತರಬಾರದು.ಕ್ರಿಯಾದ್ವೈತವನ್ನು ಮಾಡಬಾರದು.ಭಾವನೆಯಲ್ಲಿ ಮಾತ್ರ ಅದ್ವೈತ ಭಾವವಿರಬೇಕು.
ಅದ್ವೈತ ಸ್ಥಿತಿಯಲ್ಲಿ ವ್ಯವಹಾರವೇ ಇರುವುದಿಲ್ಲ."ಸೋಹಂ ಭಾವೇನ ಪೂಜಯೇತ್" ನಾನೇ ನೀನು ನೀನೇ ನಾನು ಎಂಬ ಭಾವನೆಯಿಂದ ಪೂಜಿಸಬೇಕು"ಎಂದುವೇದಾಂತವು ಹೇಳುತ್ತದೆ. ಶಂಕರರ ನಂತರ ವಿದ್ಯಾರಣ್ಯರು ಅದ್ವೈತ ವಿವರಣೆ ಹಾಗೂ ಪ್ರತಿಪಾದನೆಯಲ್ಲಿಎರಡನೆಯ ಸ್ಥಾನವನ್ನು ಪಡೆಯುತ್ತಾರೆ.ಅವರ ಆಪ್ತವಾಕ್ಯಗಳು ಮತ್ತು ವೇದಾಂತದ ಸರಳೀಕರಣ ನನಗೆ ಬಹಳ ಆಪ್ಯಾಯಮಾನವಾಗಿವೆ (ವೈಯಕ್ತಿಕವಾಗಿ).
ಈ ಕೆಳಗಿನ ಉದಾಹರಣೆಗಳನ್ನು ನೋಡಿರಿ.
1)ನಾನು ಬ್ರಹ್ಮವೆಂದು(ಪರಮಾತ್ಮನೆಂದು) ದೃಢವಾಗಿ ತಿಳಿಯುವುದೇ ವೇದಾಂತದ(ಜ್ಞಾನದ ) ಕೊನೆ.8
2)ಸ್ತೋತ್ರಗಳನ್ನು "ವ್ಯಥಾ೯ಲಾಪ" ವೆಂದು ಅವರು ಹೇಳುತ್ತಾರೆ.ಇರುವವನು ಒಬ್ಬನೇ ಆದಾಗ ಸ್ತೋತ್ರಗಳನ್ನು ಹೇಳುವವನಾರು? ಕೇಳುವವನಾರೂ?ಇರುವವನು ಒಬ್ಬನೇ ಅಲ್ಲವೇ ಎಂಬುದು ಅವರ ನೇರ ದಿಟ್ಟ ಅಭಿಪ್ರಾಯ.
3) ನನಗೆ ಧ್ಯಾನದ ಅವಶ್ಯಕತೆ ಇಲ್ಲ. ಧ್ಯಾನಮಾಡುವುದು ವ್ಯವಹಾರವನ್ನು ಕಡಿಮೆ ಮಾಡಿಕೊಳ್ಳುವುದಕ್ಕಾಗಿ. ಅದನ್ನು ಬೇಕಾದವರು ಮಾಡಿಕೊಳ್ಳಲಿ.ವ್ಯವಹಾರದಿಂದ ನನ್ನ ಜ್ಞಾನವು ಬಾಧಿತವಾಗುವುದಿಲ್ಲ ಎಂದು ನೇರವಾಗಿಯೇ ಹೇಳುತ್ತಾರೆ.
ಅವಧೂತಗೀತೆಯ ಮೊದಲನೆಯ ಅಧ್ಯಾಯದ 26 ನೆಯ ಶ್ಲೋಕವು ಈರೀತಿಹೇಳುತ್ತದೆ.(ಸೂಚನೆ:ಇದು ಅವಧೂತ ಸ್ಥಿತಿಯಲ್ಲಿರುವವರಿಗೆ ಅನ್ವಯವಾಗುತ್ತದೆಯೇ ಹೊರತು ನಮ್ಮಂತಹ ಜನಸಾಮಾನ್ಯರಿಗಲ್ಲ. "ಎಲ್ಲವೂ ನಿನ್ನಿಂದ ತುಂಬಿ ತುಳುಕುತ್ತಿದೆ.ಆತ್ಮ ಆತ್ಮನಲ್ಲಿದೆ.ನೀನು ಧ್ಯಾತೃವೂ ಅಲ್ಲ. ಧ್ಯಾನವೂ ಅಲ್ಲ. ನೀನು ಹೇಗೆ ನಿಲ೯ಜ್ಜನಾಗಿ ಧ್ಯಾನಮಾಡುತ್ತಿರುವೆ."ಇದನ್ನೇ ವಿದ್ಯಾರಣ್ಯರು ಹೇಳುವುದು. ಅದರ ಬದಲಾಗಿ ಅವರು "ಬ್ರಹ್ಮಾಭ್ಯಾಸ"ಮಾಡಲು ಹೇಳುತ್ತಾರೆ. ಎಂದರೆ ಎಲ್ಲಾವಸ್ತುಗಳಲ್ಲಿಯೂ ಬ್ರಹ್ಮವನ್ನು ಕಾಣುವ ಅಭ್ಯಾಸವನ್ನು ಬೆಳೆಸಿಕೊಳ್ಳಲು ಹೇಳುತ್ತಾರೆ. ವಿದ್ಯಾರಣ್ಯರ ಈ ಮಾತುಗಳು ನನಗೆ ವೈಯಕ್ತಿಕವಾಗಿ ಬಹಳ ಆಪ್ಯಾಯಮಾನವಾಗಿವೆ. ಪ್ರಾಥಮಿಕ ಹಂತದಲ್ಲಿ ನಾವು ಮೊದಲು ನಮ್ಮೊಳಗೇ ಇರುವ ಪರಮಾತ್ಮನನ್ನು ಕುರಿತು ಧ್ಯಾನಿಸಬೇಕು.ನಂತರ ಎರಡನೇ ಹಂತದಲ್ಲಿ ಎಲ್ಲೆಲ್ಲಿಯೂ ಇರುವ ಪರಮಾತ್ಮನನ್ನು ಕಾಣಬೇಕು ಎಂಬುದು ನನ್ನ ಅಭಿಪ್ರಾಯ.
ವೇದಾಂತವೆಂದರೆ ಕೇವಲ ಕಲ್ಪನೆಯಾಗಲೀ ಕನಸಾಗಲೀ ಅಲ್ಲ.ಅದು ಬರೀ ಭಾವನೆಯೂ ಅಲ್ಲ.ಅದು ಸತ್ಯ.ಸತ್ಯದಸತ್ಯ.ನಾವು ತಿಳಿದುಕೊಂಡಿರುವ ಸಾಮಾನ್ಯ ವಿಚಾರಗಳು ಅಸತ್ಯ ಅಧ೯ಸತ್ಯ."ವೇದಾಂತ ವಿಜ್ಞಾನ ಸುನಿಶ್ಚಿತಾಥಾ೯" ಎಂದು ಮಂತ್ರವನ್ನು ಸನ್ಯಾಸಿಗಳಿಗೆ ಪಾದಪೂಜೆ ಮಾಡುವಾಗ ಹೇಳುತ್ತಾರೆ.ಎಂದರೆ ಅದರ ಅಥ೯"ಬ್ರಹ್ಮನಿ±್ಚಯ"ಮಾಡಿರುವವರು. ವೇದಾಂವನ್ನು ಕೂಲಂಕುಶವಾಗಿ ಪರಿಶೀಲಿಸಿ ನಿಶ್ಚಯ ಜ್ಞಾನವನ್ನು ಹೊಂದಿರುವವರು.ಬ್ರಹ್ಮವೊಂದೇ ಸತ್ಯ .ಉಳಿದೆಲ್ಲವೂ ಅಸತ್ಯ.ಜೀವಬ್ರಹ್ನೈಕ್ಯ ಜಾನವನ್ನು ಹೊಂದಿರುವವರು.ಆನಂದವು ನಮ್ಮಸ್ವರೂಪ.ಆನಂದವನ್ನೂ ಅಭ್ಯಸಿಸಬೇಕು.ನೀನುಹೊಸದಾಗಿ ಬ್ರಹ್ಮವಾಗಬೇಕಾಗಿಲ್ಲ.ಮೊದಲಿನಿಂದಲೇ ಬ್ರಹ್ಮವೇ.ಅದನ್ನು ದೃಢವಾಗಿ ಅರಿಯುವುದೇ ಸಾಧನೆ.
ಜ್ಞಾನವು ಜ್ಞಾಪಕವೇ ಹೊರತು ಕಾರಕವಲ್ಲ.ಅದು ಇದ್ದುದನ್ನು ಇದ್ದಂತೆ ತಿಳಿಸುತ್ತದೆಯೇ ಹೊರತು ಇಲ್ಲದ್ದನ್ನು ಹೊಸದಾಗಿ ಉಂಟು ಮಾಡುವುದಿಲ್ಲ.
ಇರುವುದೊಂದೇ.ಎರಡಾಗಿಕಾಣುವುದು ಮಿಥ್ಯೆ.ಎರಡನೆಯದಿಲ್ಲದಿರುವುದೇ ಜ್ಞಾನ.ನಾವು ಸಂಭಾಷಣೆನಡೆಸುವುದÀು ಇಬ್ಬರ ಮಧ್ಯೆ ಅಲ್ಲ.ಒಂದೇ ಚೀತನವು ಎರಡು ಶರೀರಗಳಮೂಲಕ ಮಾತನಾಡುತ್ತದೆ.ನೀನು ಹೊಸದಾಗಿ ಬ್ರಹ್ಮವಾಗಬೇಕಿಲ್ಲ.ನೀನು ಮೊದಲಿನಿಂದಲೇ ಬ್ರಹ್ಮವಾಗಿದ್ದೀಯೆ. ನೀನು ಬ್ರಹ್ಮವೆಂದು ಅರಿಯುವುದೇ ಸಾಧನೆ ಮತ್ತು ಜ್ಞಾನ.
ಕಮ೯ಗಳಿಂದ ಚಿತ್ತಶುದ್ಧಿ ಉಂಟಾಗುತ್ತದೆ.ಕಮ೯ಗಳೆಂದರೆ ಜಪ, ತಪ, ಧ್ಯಾನ, ಸಮಾಧಿ, ಸತ್ಕಮ೯ಗಳು, ಹೋಮ, ಹವನ, ಅನುಷ್ಠಾನಗಳು, ರಥೋತ್ಸವ, ಹರಿಕಥೆ ಮುಂತಾದ ಧಾಮಿ೯ಕ ಕಾಯ೯ಕ್ರಮಗಳು. ಚಿತ್ತಶುಧ್ಧಿಯಾದಾಗ ಮನಸ್ಸು ಜ್ಞಾನದಲ್ಲಿ ಆಸಕ್ತಿಯನ್ನು ಹೊಂದುತ್ತದೆ. ಬುಧ್ಧಿಯು ಬ್ರಹ್ಮವಿಚಾರವನ್ನು ಗ್ರಹಿಸುತ್ತದೆ.ಬ್ರಹ್ಮವಿದನು ಬ್ರಹ್ಮವೇ ಆಗುತ್ತಾನೆ. ಜ್ಞಾನವು ಜ್ಞಾಪಕವೇ ಹೊರತು ಕಾರಕವಲ್ಲ.ಅದು ಇದ್ದುದನ್ನು ಇದ್ದಂತೆ ತಿಳಿಸುತ್ತದೆ.ಅದನ್ನು "ಯಥಾಥ೯" ಜ್ಞಾನವೆನ್ನುತ್ತಾರೆ.ಇಲ್ಲದ್ದನ್ನು ಕಲ್ಪಿಸುವುದಿಲ್ಲ.
ವಿದ್ಯಾರಣ್ಯರು ಮನಸ್ಸಿನ ಶೀತಲತೆಯನ್ನೇ "ಸಮಾಧಿ"ಎನ್ನುತ್ತಾರೆ.ಉಳಿದೆಲ್ಲವೂ ಕೇವಲ ಗ್ರಂಥ ವಿಸ್ತಾರ.ಗುಹೆಯೊಳಗಿದ್ದುಕೊಂಡು ತರಗೆಲೆಗಳನ್ನು ತಿನ್ನುವುದಾಗಲೀ ಹಿಮಾಲಯದಲ್ಲಿ ಒಂಟಿಕಾಲಲ್ಲಿ ನಿಂತು ತಪಸ್ಸು ಮಾಡುವುದಾಗಲೀ ತಪಸ್ಸು ಎನಿಸುತ್ತದೆ .ಮನಸ್ಸಿನ ಸಮಾಧಾನವನ್ನೇ ಸಮಾಧಿ ಎನ್ನುವುದು.ಬದುಕಿನ ಏರುಪೇರುಗಳಿಂದ ವಿಚಲಿತರಾಗದೆ ಸಮಾಧಾನವಾಗಿರುವುದನ್ನೇ ಸಮಾಧಿ ಎನ್ನುವುದು.ಪರಮಾತ್ಮನು "ಅಪ್ರಮೇಯ".ಅವನಿಗೆ ಯಾವಸಾಕ್ಷಿಯೂ ಇಲ್ಲ.ಆದರೆ ಅವನು ಎಲ್ಲದರ ಸಾಕ್ಷಿಯೂ ಆಗಿದ್ದಾನೆ.ಅವನು ಸವ೯ಸಾಕ್ಷಿ.ಸಾಕ್ಷಿಗಳ ಸಾಕ್ಷಿ.
ಮೂರು ಅವಸ್ಥೆಗಳು:1) ಕನಸು ಒಂದು ಕನಸು.ಇದನ್ನು ಎಲ್ಲರೂ ಸುಲಭವಾಗಿಒಪ್ಪುತ್ತಾರೆ.
2)ಎಚ್ಚರವೂ ಒಂದು ಕನಸು ಎಂದು ಅದ್ವೈತವು ಹೇಳುತ್ತದೆ.ಇದನ್ನು ನಂಬುವುದು ಕಷ್ಟ.ಇದೊಂದು ದೀಘ೯ ಕನಸು.
3)ಪ್ರಪಂಚವು ನಿಜವೇ ಆಗಿದ್ದಲ್ಲಿ ನಿದ್ರೆಯಲ್ಲಿ ಅದನ್ನು ತೋರಿಸು ಎಂದು ಶಂಕರರು ಕೇಳುತ್ತಾರೆ. ಸುಷುಪ್ತಿಯಲ್ಲಿಮನಸ್ಸು ಸಂಪೂಣ೯ವಾಗಿ ಸುಪ್ತವಾಗಿರುತ್ತದೆ (ಸಂಪೂಣ೯ ಲಯವಲ್ಲ). ನಿದ್ರೆಯಿಂದ ಎಚ್ಚೆತ್ತಾಗ ಮತ್ತೆ ಉದಯಿಸುತ್ತದೆ. ಜಗತ್ತು ಮನಸ್ಸಿನ ಕಲ್ಪನೆ.ಅದು ಅವಿದ್ಯೆಯಿಂದ ಉಂಟಾಗಿದೆ. ಜ್ಞಾನುಂಟಾದಾಗ ಜಗತ್ತು ಲಯವಾಗುತ್ತದೆ. ಬ್ರಹ್ಮವೊಂದೇ ಇರುತ್ತದೆ. ಸವ೯ವ್ಯಾಪಿಯಾದವನನ್ನು ಕುರಿತು ಏಕೆ ಧ್ಯಾನಿಸುತ್ತೀಯೆ? ಎಂದು ವಿದ್ಯಾರಣ್ಯರು ಕೇಳುತ್ತಾರೆ.ಕಣ್ತೆರೆದು ನೋಡು ಅದರ ಬದಲು "ಬ್ರಹ್ಮಾಭ್ಯಾಸ"ವನ್ನು ಮಾಡಲು ಹೇಳುತ್ತಾರೆ.
ಎಲ್ಲವೂ ಬ್ರಹ್ಮವೇ.ನದಿ, ಬೆಟ್ಟ, ಕಣಿವೆ, ಸಮುದ್ರ, ಪಶು, ಪಕ್ಷಿ, ಕೀಟ, ಪ್ರಾಣಿಗಳು ನಾನು ನೀನು ಎಲ್ಲವೂ ಎಲ್ಲೆಲ್ಲಿಯೂ ಯಾವಾಗಲೂ ಬ್ರಹ್ಮವೇ.ಅದನ್ನು ಅರಿತುಕೊ.ಮನನಮಾಡು.ನಿದಿಧ್ಯಾಸಿಸು ಎಂದು ಅವರು ಹೇಳುತ್ತಾರೆ.
ಬ್ರಹ್ಮವು ದಶೇಂದ್ರಿಯಗಳ ಮೂಲಕ ಕೆಲಸ ಮಾಡುತ್ತದೆ.ಶರೀರವನ್ನು ತನ್ನ ಸಾಧನವನ್ನಾಗಿ ಬಳಸಿಕೊಳ್ಳುತ್ತದೆ.ತತ್ವಜ್ಞಾನ, ವಾಸನಾಕ್ಷಯ, ಮನೋನಾಶ ಇವು ಮೂರು ಜೀವನ್ಮುಕ್ತಿಯ ಸಾಧನಗಳು.
ಚಿಜ್ಜಡಗ್ರಂಥಿ: ಚಿತ್ ಹಾಗೂ ಜಡಗಳ ನಡುವಿನ ಗಂಟನ್ನು ಚಿಜ್ಜಡ ಗ್ರಂಥಿ ಎನ್ನತ್ತಾರೆ.ಜ್ಞಾನದಿಂದ ಅಜ್ಞಾನದ ಗಂಟು ಹರಿದಾಗ "ಗ್ರಂಥಿಬೇಧ" ಎನ್ನುತ್ತಾರೆ.ಹಾಗೆ ನೋಡಿದರೆ ಅದ್ವೈತದಲ್ಲಿ ಚಿತ್ ಹಾಗೂ ಜಡ ಎಂಬ ಬೇಧವೇ ಇಲ್ಲ.ಅಧ್ಯಾರೋಪ ಅಪವಾದ ನ್ಯಾಯದಿಂದ ಇದನ್ನು ಹೇಳಲಾಗಿದೆ.ಅವನು ಸಹಜ ಸಮರಸ. ಜಡ ಮತ್ತು ಚೇತನಗಳಲ್ಲಿ ಸಮಾನವಾಗಿ ಹರಡಿದ್ದಾನೆ.
ದಶೋಪನಿಷತ್ತುಗಳಲ್ಲಿ ಎಲ್ಲಿಯೂ ಸ್ವಗ೯ ಹಾಗೂ ನರಕಗಳ ನೇರ(ಯಮ_ನಚೀಕೇತ ಸಂವಾದವನ್ನುಳಿದು) ಪ್ರಸ್ತಾಪವಿಲ್ಲ.ವೇದಾಂತವು ಭೌತಶಾಸ್ತ್ರವನ್ನು ದಾಟಿರುವ ವಸ್ತುಗಳನ್ನು ತಿಳಿಸುವುದರಿಂದ ಅದನ್ನು 'ಮೆಟ ಪಿಸಿಕ್ಸ್' ಎಂದು ಕರೆಯುತ್ತಾರೆ.ಭೌತಶಾಸ್ತ್ರವು ಹೀಟ್(ಶಾಖ), ಎಲೆಕ್ಟ್ರಿಸಿಟಿ(ವಿದ್ಯುಚ್ಛಕ್ತಿ),ಮ್ಯಾಗ್ನೆಟಿಸ್ಮ್(ಅಯಸ್ಕಾಂತ ಶಕ್ತಿ)ಚಲನ ಶಾಸ್ತ್ರ(ಡೈನಮಿಕ್ಸ್), ಅಣು ಬೌತಶಾಸ್ತ್ರಇತ್ಯಾದಿಗಳನ್ನು ಬೋಧಿಸಿದರೆ ಅದ್ವೈತವು ಅವೆಲ್ಲವನ್ನೂ ಒಳಗೊಂಡ ಮತ್ತು ದಾಟಿದ ಬ್ರಹ್ಮವನ್ನು ವಿವರಿಸಿ ಪ್ರತಿಪಾದಿಸುತ್ತದೆ.ವೇದಾಂತವು ಕಮ೯ಫಲತ್ಯಾಗವನ್ನು ಹೇಳುತ್ತದೆಯೇ ಹೊರತು ಸಂಪೂಣ೯ ಕಮ೯ತ್ಯಾಗವನ್ನಲ್ಲ.
ಸತ್ಯವು ಮೂರು ವಿಧ.
1) ಪ್ರಾತಿಭಾಸಿಕ ಸತ್ಯ:ಉದಾಹರಣೆಗೆ ಹಗ್ಗ ಮgತ್ತು ಹಾವಿನ ಉದಾಹರಣೆ. ಕನಸೂ ಕೂಡ ಪ್ರಾತಿಭಾಸಿಕ ಸತ್ಯಕ್ಕೆ ಒಂದು ಒಳ್ಳೆಯ ಉದಾಹರಣೆ.ಇಲ್ಲಿ ಬದಲಾವಣೆಯು ನಿಜವಲ್ಲ.ಆದಂತೆ ತೋರುಉತ್ತದೆ.
2)ವ್ಯಾವಹಾರಿಕ ಸತ್ಯ:ದ್ವೈತವು ವ್ಯಾವಹಾರಿಕ ಸತ್ಯ.ಜಗತ್ತಿನ ಎಲ್ಲಾವ್ಯವಹಾರಗಳೂ ದ್ವೈತ
ದಲ್ಲಿಯೇ ನಡೆಯುತ್ತವೆ."ವ್ಯವಹಾರದಲ್ಲಿ ದ್ವೈತವು ನಮಗೂ ಬೇಕಾಗಿದೆ"
ಎಂದು ವಿದ್ಯಾರಣ್ಯರು ಹೇಳುತ್ತಾರೆ.
3)ಪಾರಮಾಥಿ೯ಕ ಸತ್ಯ:ಅದ್ವೈತವು ಪಾರಮಾಥಿ೯ಕ ಸತ್ಯ.ಅಜಾತವಾದವು ಈಜಗತ್ತು ಹುಟ್ಟಿಯೂಇಲ್ಲ. ನಾಶವಾಗುವುದೂ ಇಲ್ಲ. ಬ್ರಹ್ಮವೊಂದೇ ಸತ್ಯವೆಂದು ಅಜಾತಿವಾದವು ಹೇಳುತ್ತದೆ.
ಅನುಷ್ಠಾನದ ತಳಹದಿಯ ಮೇಲೆ ಜ್ಞಾನದ ಸೌಧವನ್ನು ಕಟ್ಟಬೇಕು.ಅದ್ವೈತವೊಂದೇ ಅದ್ವೈತವನ್ನು ಹೇಳುತ್ತದೆ.ಉಳಿದೆಲ್ಲಾ ಮತಗಳೂ ದ್ವೈತವನ್ನೇ ಬೋಧಿಸುತ್ತವೆ.
ಗುರು ಈಶ್ವರ ಮತ್ತು ಆತ್ಮ ಇವುಗಳಲ್ಲಿ ಬೇಧವನ್ನು ವಿವಜಿ೯ಸ ಬೇಕು.ಅದ್ವೈತದಲ್ಲಿ ಗುರುವನ್ನು ಅಧ್ಯಾರೋಪ ಅಪವಾದ ನ್ಯಾಯದಿಂದ ಒಪ್ಪಿಕೊಳ್ಳಲಾಗಿದೆ.
ಬ್ರಹ್ಮಲೋಕವು ಅಲ್ಲೋ ಇಲ್ಲೋ ಎಲ್ಲಿಯೋ ಇರುವುದಲ್ಲ.ಇದೇ ನಾವಿರುವುದೇ ಬ್ರಹ್ಮಲೋಕ.ಎಲ್ಲಿಯೂ ಎಲ್ಲೆಲ್ಲಿಯೂ ಬ್ರಹ್ಮಲೋಕವೇ.ಇರುವುದೊಂದೇ ಲೋಕ .ಇದೇ ಬ್ರಹ್ಮಲೋಕ.ಮೊದಲು ಸನ್ಮಾಗ೯ ನಂತರ ವೇದಾಂತ.ಜೀವ ಬ್ರಹ್ಮೈಕ್ಯವೇ ನಿಜವಾದ ಯೋಗ.ಜ್ಞಾನಿಗಳಿಗೆ ಯೋಗಶಕ್ತಿ ಇರಬಹುದು ಅಥವಾ ಇಲ್ಲದೆಯೂ ಇರಬಹುದು.ಬ್ರಹ್ಮಜ್ಞಾನವಿಲ್ಲದೆ ಭಕ್ತಿಯಿಂದಲೂ ಮಂತ್ರ ಇತ್ಯಾದಿ ಗಳಿಂದಲೂ ಯೋಗಶಕ್ತಿಯನ್ನು ಪಡೆಯಬಹುದು.ಅದ್ವೈತ ಸ್ಥಿತಿಯಲ್ಲಿ ಯಾವ ವ್ಯವಹಾರವೂ ಇರುವುದಿಲ್ಲ.ಅದ್ವೈತವೊಂದೇ ಅದ್ವೈತ.ಉಳಿದೆಲ್ಲಾ ಮತಗಳೂ ದ್ವೈತವನ್ನು ಸಾರುತ್ತವೆ.
ಜ್ಞಾನಿಗಳಿಗೆ ಗಮನಾಗಮನವಾಗಲೀ ಶರೀರ ಗ್ರಹಣವಾಗಲೀ ಇಲ್ಲ.ನೀನು ಯಾವುದನ್ನು ಕುರಿತು ಧ್ಯಾನಿಸುತ್ತಿರುವೆಯೋ ಅದೇ ನೀನು.ಧ್ಯಾತೃ(ಧ್ಯಾನಿ) ಹಾಗೂ ಧ್ಯಾನವಸ್ತು(ಧ್ಯೇಯವಸ್ತು) ಎರಡೂ ಒಂದೇ.ವೇದಾಂತವು ಎಂದೂ ಬದಲಾಗುವುದಿಲ್ಲ.ಬದಲಾವಣೆಯಾದರೆ ಅದು ತತ್ವವಲ್ಲ.ಬ್ರಹ್ಮವು ನಿರುಪಾಧಿ ಅದು ಯಾವ ಉಪಾಧಿಗಳೂ ಇಲ್ಲದ್ದು.ಅವನೊಬ್ಬನೇ ಸತ್ಯ. ಅದ್ವೈತಭಾವನೆಯ ಸತ್ಯ ನಮ್ಮೆದೆಗೆ ಇಳಿದು ಎಲ್ಲರಲ್ಲಿಯೂ ಗಗನದಂತೆ ಇರುವ ಸಮರಸ ತತ್ವವನ್ನು ನಮಗೆ ದಶ೯ನ ಮಾಡಿಸಿ ಜಾತಿ,ಮತ, ಕುಲ ಗೋತ್ರಗಳ ಬಿಲದಿಂದ ಹೊರಗೆ ಬರುವಂತೆ ಮಾಡುತ್ತದೆ.ಅದ್ವೈತವು ವೇದಗಳ ಕಾಲದಷ್ಟೆ ಹಳೆದಾಗಿದೆ.ಋಗ್ ವೇದದ ನಾಸದೀಯ ಸೂಕ್ತವು ಅಂತಿಮ ¸ಸತ್ಯವನ್ನು ಯಾವಹೆಸರಿನಿಂದಲೂ ಕರೆಯದೆ "ಅದು ಒಂದೇ"(ತದೇಕಂ) ಎಂದು ಸಾರುತ್ತದೆ.ಸತ್ಯದಲ್ಲಿ ನಾಮರೂಪಗಳ ಭೇದವಿಲ್ಲ ಎಂದು ಇದರ ಅಥ೯.ಅನಂತರ ಉಪನಿಷತ್ತುಗಳು ಈ ಅದ್ವೈತ ಸಿದ್ಧಾಂತಕ್ಕೆಒಂದು ಪೂಣ೯ರೂಪ ನೀಡಿದವು.ಅದ್ವೈತ ಸಿದ್ಧಾಂತದ ಮುಖ್ಯ ಲಕ್ಷಣಗಳು ಈ ರೀತಿ ಇವೆ.
1) ಅದರ ಪ್ರಕಾರ ಬ್ರಹ್ಮ ಅಥವಾ ಅಂತಿಮ ಸತ್ಯವು ನಿಗು೯ಣವೇ ಹೊರತು ಸಗುಣವಲ್ಲ.
2)ಈ ವೈವಿಧ್ಯಮಯ ಜಗತ್ತು ಮಾಯೆ ಅಥವಾ ಮಿಥ್ಯಯೇ ಹೊರತು ಸತ್ಯವಲ್ಲ.
3)ಈ ಪ್ರಪಂಚವು ಮಿಥ್ಯೆಯಾದರೂ ಅದರಲ್ಲಿರುವ ಜೀವವು ಮಿಥ್ಯೆಯಲ್ಲ.ಮೂಲತಃ ಜೀವ ಬ್ರಹ್ಮರು ಒಂದೇ.ಅವು ಬೇರೆಯಲ್ಲ.
4)ಈ ಜೀವ ಬ್ರಹ್ಮರ ಏಕತೆಯ ಸಾಕ್ಷಾತ್ಕಾರವೇ ಮುಕ್ತಿ.
5)ಮುಕ್ತಿಗೆ ಸಾಧನವು ಜ್ಞಾನವೇ ಹೊರತು ಕಮ೯ವಲ್ಲ.ಅದ್ವೈತವು ಕಮ೯ ಸನ್ಯಾಸವನ್ನು ಎತ್ತಿ ಹಿಡಿಯುತ್ತದೆ.
ಅದ್ವೈತದಲ್ಲಿ ಉಪಯೋಗಿಸುವ ವಿಭಾಗೀಕರಣಗಳೆಲ್ಲವೂ ಪೂಣ೯ ಬ್ರಹ್ಮವನ್ನು (ಏಕತ್ವವನ್ನು) ಅರಿಯುವುದಕ್ಕೆ. ಅದ್ವೈತವು ಅಜಾತಿವಾದದ ವಿವರಣೆ ಹಾಗೂ ಅಜಾತಿವಾದವು ಅದ್ವೈತದ ಸಾರಾಂಶವಾಗಿದೆ. ಪರಬ್ರಹ್ಮಕ್ಕೆ ನಮಸ್ಕಾರ.
ಅಧ್ಯಾಯ 10. ಉಪಸಂಹಾರ
1)ಸ್ವಾಮಿ ಸೋಮನಾಥಾನಂದ,'ಅವಧೂತಗೀತಾ'ಶ್ರೀರಾಮಕೃಷ್ಣಾಶ್ರಮ,ಯಾದವಗಿರಿ,ಮೈಸೂರು.ಐದನೆಯ ಮುದ್ರಣ1೯೯೯ ಪುಟ3
2) ಕೆ.ಜಿ ಸುಬ್ರಾಯಶಮ೯,'ವೇದಾಂತ ಸಂವತ್ಸರ',ನಿತ್ಯಾನಂದ ಪ್ರಿಂಟರ್ಸ್,ಅಶೋಕನಗರ
ಬೆಂಗಳೂರುಮೊದಲನೇ ಮುದ್ರಣ,2004,ಪುಟ 368
3)ಸ್ವಾಮಿ ಸೋಮನಾಥಾನಂದ,'ಉಪನಿಷತ್ ಭಾವಧಾರೆ',ಶ್ರೀ ರಾಮಕೃಷ್ಣಾಶ್ರಮ,
ಯಾದವಗಿರಿ,ಮೈಸೂರು 20.ಪುಟ27
4)ಅದೇ ಪುಟ28
5)ನುಲೇನೂರು ಶ್ರೀಮೂತಿ೯ಗಳು,ರೇಡಿಯೊ ಭಾಷಣ ಮುದ್ರಿತ,ಅಧ್ಯಾತ್ಮ ಪ್ರಕಾಶ ಕಾಯಾ೯ಲಯ,ತ್ಯಾಗರಾಜನಗರ,ಬೆಂಗಳೂರು28 ಪುಟ15
6)ನಿತ್ಯ ಗುರು ಭಜನ ಪದ್ಧತಿ, ರಂಗನಾಥಾಶ್ರಮ,ಕೊಮಾರನಹಳ್ಳಿ, ಮಲೇಬೆನ್ನೂರು
ತಾಲ್ಲೋಕು ಪುಟ 1
7)ಸ್ವಾಮಿ ಹಷಾ೯ನಂದ,ವಿದ್ಯಾರಣ್ಯ ಮುನಿಪ್ರಣೀತ 'ಜೀವನ್ಮುಕ್ತಿ ವಿವೇಕ',ಶ್ರೀರಾಮಕೃಷ್ಣಾಶ್ರಮ
ಮೈಸೂರು 20 ಮೊದಲನೆಯ ಮುದ್ರಣ1೯೯0.
8)ಸ್ವಾಮಿ ಆದಿದೇವಾನಂದ,ವಿವೇಕ ಚೂಡಾಮಣಿ, ಆರನೆಯ ಮುದ್ರಣ1೯87, ಪುಟ81
……………………………………………………………………………………………………………………………………………………………………………
ಅಧ್ಯಾಯ 11 ಗ್ರಂಥಋಣ
1) ಸ್ವಾಮಿ ಹಷಾ೯ನಂದ,'ಜೀವನ್ಮುಕ್ತಿ ವಿವೇಕ', ಶ್ರೀವಿದ್ಯಾರಣ್ಯ ಮುನಿಪಣೀತ್ರ ಶ್ರೀರಾಮಕೃಷ್ಣಾಶ್ರಮ,ಮೈಸೂರು,ಮೂರನೆಯ ಮುದ್ರಣ,1೯೯0
2)ಸ್ವಾಮಿ ಮುಖ್ಯಾನಂದಜಿ,ಶಂಕರಾಚಾಯ೯ರು ಮತ್ತು ಭಾರತೀಯ ಅಧ್ಯಾತ್ಮಶಾಸ್ತ್ರದ ಪುನರುನ್ನತಿ, ಅನುವಾದಕರು ಡಾ.ಟಎಸ್.ಕೃಷ್ಣಮೂತಿ೯,ಅದ್ವೈತ ವಿದ್ಯಾ ಪ್ರತಿಷ್ಠಾನ,ಮೊದಲನೇ ಮುದ್ರಣ,2000
3) ಶ್ರೀ ಸಚ್ಚಿದಾನಂದೇ0ದ್ರ ಸರಸ್ವತಿ ಸ್ವಾಮಿಗಳು 'ಶಾಂಕರ ವೇದಾಂತ ಸಾರ',ಅಧ್ಯಾತ್ಮ ಪ್ರಕಾಶ ಕಾಯಾ೯ಲಯ,ಹೊಳೆನರಸೀಪುರ.ಹಾಸನ ಜಿಲ್ಲೆ,ಮೂರನೆಯ ಮುದ್ರಣ,2000.
4)ಸ್ವಾಮಿ ಆದಿದೇವಾನಂದ ಶ್ರೀ ಶಂಕರ ಭಗವತ್ಪಾದ 'ವಿವೇಕ ಚೂಡಾಮಣಿ',ಶ್ರೀರಾಮಕೃಷ್ಣಾಶ್ರಮ ,ಮೈಸೂರು.ಆರನೆಯ ಮುದ್ರಣ,1೯87
5) ಸ್ವಾಮಿ ಹಷಾ೯ನಂದ,ಶ್ರೀ ಶಂಕರಾಚಾಯ೯ರ 'ಆತ್ಮಬೋಧ, ಅಪರೋಕ್ಷಾನುಭೂತಿ, ವಾಕ್ಯವೃತ್ತಿ ಲಘುವಾಕ್ಯವೃತ್ತಿ',ಶ್ರೀರಾಮಕೃಷ್ಣಾಶ್ರಮ,ಮೈಸೂರು.ನಾಲ್ಕನೆಯ ಮುದ್ರಣ,1೯೯7.
6) ಡಾ.ಆರ್.ಎನ್.ಶಮ೯, ಸುರ್ಜೀತ್ ಪಬ್ಲಿಕೇಷನ್ಸ್,'ಇಂಡಿಯನ್ ಫಿಲಾಸಫಿ', ಕೊಲ್ಲಾಪುರ ರಸ್ತೆ,ಕಮಲಾನಗರ5ನೇ ಮರುಮುದ್ರಣ,200೯,,ದೆಹಲಿ110007,ಇಂಡಿಯಾ.
7) ಸ್ವಾಮಿ ಹಷಾ೯ನಂದ, ಶ್ರೀಮತ್ ಪರಮಹಂಸ ಪರಿವ್ರಾಜಕಾಚಾಯ೯ವಯ೯ ಸದಾನಂದ ಪ್ರಣೀತ 'ವೇದಾಂತಸಾರ',ಶ್ರೀರಾಮಕೃಷ್ಣಾಶ್ರಮ,,ಮೈಸೂರು,ಪರಿಷ್ಕøತ ಮೂರನೇ ಮುದ್ರಣ,1೯83
8)ವೆಲ್ಲಾಲ ನಾಗರಾಜ ಶಾಸ್ತ್ರಿ, 'ಅದ್ವೈತ ಸಿದ್ಧಾಂತ,' ಅದ್ವೈತ ವಿದ್ಯಾಪ್ರತಿಷ್ಠಾನ, ಶ್ರೀಕೋದಂಡರಾಮಾಶ್ರಮ, ಹೆಬ್ಬೂರು, ತುಮಕೂರು ಜಿಲ್ಲೆ.
೯)ಸ್ವಾಮಿ ಆದಿದೇವಾನಂದ, ಶ್ರೀವಿದ್ಯಾರಣ್ಯ ಮುನಿಪ್ರಣೀತ 'ಪಂಚದಶೀ' ಶ್ರೀ ರಾಮಕೃಷ್ಣಾಶ್ರಮ, ಮೈಸೂರು, ಮೂರನೆಯ ಮುದ್ರಣ, 1೯೯5
10) ಸ್ವಾಮಿ ಆದಿದೇವಾನಂದ, ಬ್ರಹ್ಮಸೂತ್ರಗಳು, ಶ್ರೀರಾಮಕೃಷ್ಣಾಶ್ರಮ, ಯಾದವಗಿರಿ, ಮೈಸೂರು 20.
ಉಪನಿಷತ್ತುಗಳ ಪಠ್ಯ ಪುಸ್ತಕಗಳು,(ಬಿಡಿ)ಶ್ರೀರಾಮಕೃಷ್ಣಾಶ್ರಮ,ಮೈಸೂರು.ಇಲ್ಲಿ ಪ್ರಕಟಣೆಗೊಂಡಿವೆ.
11)ಈಶಾವಾಸ್ಯ ಉಪನಿಷತ್,ಐದನೇ ಮುದ್ರಣ,1೯88
12)ಕೇನೋಪನಿಷತ್ ಆರನೆಯ ಮುದ್ರಣ1೯೯3
13)ಕಠ ಉಪನಿಷತ್ ಐದನೇ ಮುದ್ರಣ1೯87
14)ಪ್ರಶ್ನೋಪನಿಷತ್ ಐದನೆಯ ಮುದ್ರಣ1೯೯3
15)ಮುಂಡಕೋಪನಿಷತ್ ಐದನೆಯ ಮುದ್ರಣ 1೯೯3
16)ಮಾಂಡೂಕ್ಯ ಉಪನಿಷತ್‍ನಾಲ್ಕನೆಯ ಮುದ್ರಣ1೯84
17)ತೈತ್ತಿರೀಯ ಉಪನಿಷತ್ ಐದನೆಯ ಮುದ್ರಣ 1೯೯3
18)ಐತರೇಯ ಉಪನಿಷತ್
1೯) ಸ್ವಾಮಿ ಆದಿದೇವಾನಂದ,'ಬೃಹದಾರಣ್ಯಕ ಉಪನಿಷತ್ತು', ಶ್ರೀ ರಾಮಕೃಷ್ಣಾಶ್ರಮ,ಮೈಸೂರು,ನಾಲ್ಕನೆಯ ಮುದ್ರಣ1೯೯0.
20) ಸ್ವಾಮಿ ಆದಿದೇವಾನಂದ, 'ಛಾಂದೋಗ್ಯ ಉಪನಿಷತ್ತು,' ಶ್ರೀರಾಮಕೃಷ್ಣಾಶ್ರಮ, ಮೈಸೂರು,ಐದನೆಯ ಮುದ್ರಣ,1೯೯5
21)ಸ್ವಾಮಿ ಸೋಮನಾಥಾನಂದ, 'ಅವಧೂತಗೀತಾ' ಶ್ರೀರಾಮಕೃಷ್ಣಾಶ್ರಮ, ಯಾದವಗಿರಿ, ಮೈಸೂರು. ಐದನೆಯ ಮುದ್ರಣ1೯೯೯
22) ಕೆ.ಜಿ ಸುಬ್ರಾಯಶಮ೯,'ವೇದಾಂತ ಸಂವತ್ಸರ',ನಿತ್ಯಾನಂದ ಪ್ರಿಂಟರ್ಸ್,ಅಶೋಕನಗರ
ಬೆಂಗಳೂರು ಮೊದಲನೇ ಮುದ್ರಣ,2004,
23)ಸ್ವಾಮಿ ಸೋಮನಾಥಾನಂದ, 'ಉಪನಿಷತ್ ಭಾವಧಾರೆ' ,ಶ್ರೀ ರಾಮಕೃಷ್ಣಾಶ್ರಮ,
ಯಾದವಗಿರಿ, ಮೈಸೂರು 20.1೯8೯.
24)ನುಲೇನೂರು ಶ್ರೀಮೂತಿ೯ಗಳು,ರೇಡಿಯೊ ಭಾಷಣ ಮುದ್ರಿತ,ಅಧ್ಯಾತ್ಮ ಪ್ರಕಾಶ ಕಾಯಾ೯ಲಯ, ತ್ಯಾಗರಾಜನಗರ, ಬೆಂಗಳೂರು28
25)ನಿತ್ಯ ಗುರು ಭಜನ ಪದ್ಧತಿ, ರಂಗನಾಥಾಶ್ರಮ,ಕೊಮಾರನಹಳ್ಳಿ, ಮಲೇಬೆನ್ನೂರು
ತಾಲ್ಲೋಕು ಪುಟ 1
26)ಸ್ವಾಮಿ ಹಷಾ೯ನಂದ,ವಿದ್ಯಾರಣ್ಯ ಮುನಿಪ್ರಣೀತ 'ಜೀವನ್ಮುಕ್ತಿ ವಿವೇಕ',ಶ್ರೀರಾಮಕೃಷ್ಣಾಶ್ರಮ ಮೈಸೂರು 20 ಮೊದಲನೆಯ ಮುದ್ರಣ1೯೯0
27)ಸ್ವಾಮಿ ಆದಿದೇವಾನಂದ,ಶ್ರೀ ವಿದ್ಯಾರಣ್ಯಮುನಿ ಪ್ರಣೀತ'ಪಂಚದಶೀ',ಶ್ರೀ ರಾಮಕೃಷ್ಣಾಶ್ರಮ, ಯಾದವಗಿರಿ,ಮೈಸೂರು 20,ಮೂರನೆಯ ಮುದ್ರಣ,1೯೯5
ಉಪನಿಷತ್ತಿನ ಉಪನ್ಯಾಸ ಮಂಜರಿಗಳು: ಶ್ರೀಶ್ರೀ ಸಚ್ಚಿದಾನಂದ ಸರಸ್ವತಿಸ್ವಾಮಿಗಳು,ಅಧ್ಯಾತ್ಮ ಪ್ರಕಾಶ ಕಾಯಾ೯ಲಯ, ಹೊಳೆನರಸಿಪುರ,ಹಾಸನ ಜಿಲ್ಲೆ,ಇಲ್ಲಿ ಪ್ರಕಟಗೊಂಡಿವೆ.
28)ಈಶ ಉಪನಿಷತ್ ಮಂಜರಿ, ಎರಡನೆಯ ಮುದ್ರಣ 2001
2೯)ಕೇನ ಉಪನಿಷತ್ ಮ<ಜರಿ, ನಾಲ್ಕನೆಯ ಮುದ್ರಣ 2005
30)ಕಠ ಉಪನಿಷತ್ ಮಂಜರಿ 2015
31)ಪ್ರಶ್ನ ಉಪನಿಷತ್ ಮಂಜರಿ, ಎರಡನೆಯ ಮುದ್ರಣ 2000
32)ಮುಂಡಕ ಉಪನಿಷತ್ ಮಂಜರಿ,ನಾಲ್ಕನೆಯ ಮುದ್ರಣ 2000
33)ಮಾಂಡೂಕ್ಯ ಉಪನಿಷತ್ ಮಂಜರಿ,ಮೂರನೆಯ ಮುದ್ರಣ2005
34)ತೈತ್ತಿರೀಯ ಮೊದಲನೇ ಮುದ್ರಣ 2000
35)ಐತರೇಯ ಉಪನಿಷತ್ ಉಪನಿಷತ್ ಮಂಜರಿ.(ವಿಮಶೆ೯ ಹಾಗೂ ವ್ಯಾಖ್ಯಾನ)
36) ಹೆಚ್.ಎಸ್.ಲಕ್ಚ್ಮೀನರಸಿಂಹಮೂತಿ೯,ಬೃಹದಾರಣ್ಯಕ ಉಪನ್ಯಾಸ ಮಂಜರಿ,ಅಧ್ಯಾತ್ಮ ಪ್ರಕಾಶ ಕಾಯಾ೯ಲಯ, ಹೊಳೆನರಸೀಪುರ,573211 ಹಾಸನ ಜಿಲ್ಲೆ,ಅದ್ಯಾತ್ಮ ಪ್ರಕಾರಿ ಕಾಯಾ೯ಲಯ,ಎರಡನೇ ಮುದ್ರಣ,200೯.
37)ಹೆ.ಎಸ್,ಲಕ್ಷ್ಮೀನರಸಿಂಹಮೂತಿ೯,ಛಾಂದೋಗ್ಯ ಉಪನ್ಯಾಸ ಮಂಜರಿ, ಅಧ್ಯಾತ್ಮ ಪ್ರಕಾಶ ಕಾಯಾ೯ಲಯ,ಹೊಳೆನರಸೀಪುರ' ಎರಡನೇ ಮುದ್ರಣ,2010
38)ಶ್ರೀಸಚ್ಚಿದಾನಂದ ಸರಸ್ವತಿ ಸ್ವಾಮಿಗಳು, ದಶೋಪನಿಷತ್ತುಗಳಸಾರ,ಅಧ್ಯಾತ್ಮ ಪ್ರಕಾಶ ಕಾಯಾ೯ಲಯ,ಹೊಳೆನರಸೀಪುರ ಮೊದಲನೆಯ ಮುದ್ರಣ,2002.
3೯)ಡಾ. ಜಿ.ಎಂ.ಹೆಗಡೆ,ಶ್ರೀ ಶಂಕರಾಚಾಯ೯ರ ಅದ್ವೈತ ದಶ೯ನ,ಶ್ರೀ ಭಗವತ್ಪಾದ ಪ್ರಕಾಶನ,ಶ್ರೀ ಸ್ವಣ೯ವಲ್ಲೀಮಹಾಸಂಸ್ಥಾನ,ಮಠದೇವಳ ಸೋಂದಾ,ಸಿಶಿ೯ ತಾಲ್ಲೋಕು,ಉತ್ತರ ಕನ್ನಡ ಜಿಲ್ಲೆ.
ಮೊದಲನೆಯ ಮುದ್ರಣ,2001.
40) ಶ್ರೀ ಸಚ್ಚಿದಾನಂದೇಂದ್ರ ಸರಸ್ವತೀ ಸ್ವಾಮಿಗಳು, ಶ್ರೀ ಶಂಕರಾಚಾಯ೯ವಿರಚಿತ ಉಪದೇಶ ಸಾಹಸ್ರಿ,ಅಧ್ಯಾತ್ಮ ಪ್ರಕಾಶ ಕಾಯಾ೯ಲಯ ಹೊಳೆನರಸೀಪುರ,ಮೂರನೆಯ ಮುದ್ರಣ,2001
41)ವೇದಾಂತ ಪರಿಚಯ_ಪ್ರೊ ಜಿ ಶ್ರೀನಿವಾಸನ್.
42)ಭಾರತೀಯ ತತ್ವ ಶಾಸ್ತ್ರದ ರೂಪರೇಖೆಗಳು_ಪ್ರಭುಶಂಕರ
43)ಭಾರತೀಯ ದಶ೯ನಗಳು_ ಬಲದೇವ ಉಪಾಧ್ಯಾಯ
44)ಭಾಮತಿ_ಶೃಂಗಗಿರಿ ನರಸಿಂಹ ಶಮ೯
45)ದ್ವೈತ ಸಿದ್ಧಾಂತ_ಶ್ರೀಮತಿ ಸೇತುಬಾಯಿ.
46)ವಿಶಿಷ್ಟಾದ್ವೈತ _ಅನಂತ ರಂಗಾಚಾಯ೯
47) ರಾಮಾನುಜರ ಗೀತಾಭಾಷ್ಯ_ರಾಘವಾಚಾಯ೯
48)ಬ್ರಹ್ಮಸೂತ್ರ ಭಾಷ್ಯ _ ಸ್ವಾಮಿ ಗಂಭೀರಾನನಂದ
4೯)ಅದ್ವೈತವೇದಾಂತ_ ಎಂ ಕೆ ವೆಂಕಟರಾಮ ಐಯರ್.
50) ಭಾರತೀಯ ತತ್ವಶಾಸ್ರ್ತದ ಮೂಲಾಂಶಗಳು _ಪ್ರಭುಶಂಕರ
51)ಡಾ. ಸುಬ್ರಾಯ ಶಮಾ೯, 'ಶಾಂಕರ ಸಂವತ್ಸರ' ,ಅಧ್ಯಾತ್ಮ ಪ್ರಕಾಶಕಾಯಾ೯ಲಯ,ಹೊಳೆನರಸೀಪುರ ಮೂರನೇ ಮುದ್ರಣ,2016
52)ಡಾ.ಕೆ.ಜಿ. ಸುಬ್ರಾಯ ಶಮ೯,'ಗೀತಾ ಸಂವತ್ಸರ' ಶ್ರೀ ನಿತ್ಯಾನಂದ ಪ್ರಕಾಶನ, ಅಶೋಕನಗರ,ಬೆಂಗಳೂರು,ಎರಡನೇ ಮುದ್ರಣ,2015.
53)ಶ್ರೀ ಸಚ್ಚಿದಾನಂದೇಂದ್ರ ಸರಸ್ವತೀ ಸ್ವಾಮಿಗಳು ,'ಗೌಡಪಾದ ಹೃದಯ' ಅಧ್ಯಾತ್ಮ ಪ್ರಕಾಶ ಕಾಯಾ೯ಲಯ, ಹೊಳೆನರಸೀಪುರ
ಎರಡನೇ ಮುದ್ರಣ,1೯೯6.
54)ಶ್ರೀ ಸಚ್ಚಿದಾನಂದೇಂದ್ರ ಸರಸ್ವತೀ ಸ್ವಾ ಮಿಗಳು,'ಶಂಕರಭಗವತ್ಪಾದ ಸಾರ ವೃತ್ತಾಂತ ',ಅಧ್ಯಾತ್ಮ ಪ್ರಕಾಶ ಕಾಯಾ೯ಲಯ,
ಹೊಳೆನರಸೀಪುರ,ನಾಲ್ಕನೇ ಮುದ್ರಣ,2013.
55)ಶ್ರೀಮೂತಿ೯,'ಶಾಂಕರ ಸಮ್ಯಕ್ ದಶ೯ನ',ಅಧ್ಯಾತ್ಮ ಪ್ರಕಾಶ ಕಾಯಾ೯ಲಯ, ಮೊದಲನೇ ಮುದ್ರಣ,1೯80.
56)ಶ್ರೀ ಸಚ್ಚಿದಾನಂದೇಂದ್ರ ಸರಸ್ವತೀ ಸ್ವಾಮಿಗಳು, 'ವೇದಾಂತ ಡಿಂಡಿಮ' ಅಧ್ಯಾತ್ಮ ಪ್ರಕಾಶ ಕಾಯಾಲಯ,ಹೊಳೆನರಸೀ ಪುರ,ಐದನೇ ಮುದ್ರಣ,2004,
57)ಡಾ.ಕೆ.ಜಿ. ಸುಬ್ರಾಯಶಮ೯,'ಸುರೇಶ್ವರ ಸಂವತ್ಸರ' ನಿತ್ಯಾನಮದ ಪ್ರಿಂಟರ್ಸ್, ಅಶೋಕನಗರ,ಬೆಂಗಳೂರು, ಮೊದಲನೇ ಮುದ್ರಣ,2017
58)ಶ್ರೀ ಸಚ್ಚಿದಾನಂದೇಂದ್ರ ಸರಸ್ವತೀ ಸ್ವಾಮಿಗಳು, 'ಅವಸ್ಥಾತ್ರಯ ಚಂದ್ರಿಕೆ' ಅಧ್ಯಾತ್ಮ ಪ್ರಕಾಶ ಕಾಯಾ೯ಲಯ, ಎರಡನೇ ಮುದ್ರಣ,200೯
5೯) ಅನುವಾದಕರು: ಎಂ.ಇ. ರಂಗಾಚಾರ್, 'ಶ್ರೀ ರಮಣ ಚತ್ವಾರಿಂಶತ್',ಪ್ರಕಾಶಕರು,ಟಿ.ಎನ್.ವೆಂಕಟರಾಂ, ರಮಣಾಶ್ರಮ,ತಿರುವಣ್ಣಾಮಲೈ
ಮೊದಲನೇ ಮುದ್ರಣ,1೯88.
60)ಹೆಚ್.ಎಸ್. ಲಕ್ಷ್ಮೀ ನರಸಿಂಹ ಮೂತಿ೯,'ಮಹಾನಾರಾಯಣೋಪನಿಷತ್' ಅದ್ಯಾತ್ಮ ಪ್ರಕಾಶ ಕಾಯಾ೯ಲಯ,ಹೊಳೆನರಸೀಪುರ
ಮೂರನೆಯ ಮುದ್ರಣ,2012.
61)ಶ್ರೀ ಸದಾಶಿವೇಂದ್ರ ಸರಸ್ವತೀ ವಿರಚಿತ'ಆತ್ಮವಿದ್ಯಾವಿಲಾಸ'.ಅನುವಾದಕರು:ಶ್ರೀ ಸಚ್ಚಿದಾನಂದೇಂದ್ರ ಸರಸ್ವತೀ ಸ್ವಾಮಿಗಳು,ಅಧ್ಯಾತ್ಮ ಪ್ರಕಾಶ ಕಾಯಾ೯ಲಯ, ಹೊಳೆನರಸೀಪುರ.ನಾಲ್ಕನೇ ಮುದ್ರಣ 2005.
62)ಶ್ರೀ ಸಚ್ಚಿದಾನಂದೇಂದ್ರ ಸರಸ್ವತೀ ಸ್ವಾಮಿಗಳು,'ಅಧ್ಯಾತ್ಮ ವಿದ್ಯೆ',ಅದ್ಯಾತ್ಮ ಪ್ರಕಾಶ ಕಾಯಾ೯ಲಯ, ಹೊಳೆನರಸೀಪುರ.ಮೂರನೆಯ ಮುದ್ರಣ,2005.
63) ಮೂಲ ಸ್ವಾಮಿಚಿನ್ಮಯಾನಂದ,ಅನುವಾದಕರು:ಬಿ ಎಸ್.ಸತ್ಯನಾರಾಯಣ,'ಐತರೇಯ ಉಪನಿಷತ್'ಸೆಂಟ್ರಲ್ ಚಿನ್ಮಯ ಟ್ರಸ್ಟ್, ಬೆಂಗಳೂರು.ಮೊದಲನೇ ಮುದ್ರಣ
1೯83.
64)ಸ್ವಾಮಿ ಚಿನ್ಮಯಾನಂದ, 'ಮಾಂಡೂಕ್ಯ ಉಪನಿಷತ್',ಸೆಂಟ್ರಲ್ ಚಿನ್ಮಯ ಟ್ರಸ್ಟ್, ಬೆಂಗಳೂರು,ಮೊದಲನೇ ಮುದ್ರಣ,1೯84.
65)ಸ್ವಾಮಿ ಚಿನ್ಮಯಾನಂದ,'ಮಾಂಡೂಕ್ಯ ಉಪನಿಷತ್'- ವೈತಥ್ಯ ಪ್ರಕರಣ, ಸೆಂಟ್ರಲ್ ಚಿನ್ಮಯ ಟ್ರಸ್ಟ್,ಬೆಂಗಳೂರು,ಮೊದಲನೇ ಮುದ್ರಣ
1೯85
66)ಹೆಚ್.ಎಸ್,ಲಕ್ಷ್ಮಿ ನರಸಿಂಹಮೂತಿ೯,'ಶ್ವೇತಾಶ್ವತರ ಉಪನ್ಯಾಸ ಮಂಜರಿ', ಅಧ್ಯಾತ್ಮ ಪ್ರಕಾಶ ಕಾಯಾಲಯ,ಹೊಳೆನರಸೀಪುರ, ಎರಡನೆಯ ಮುದ್ರಣ,2012
67)ಡಾ.ಸುಬ್ರಾಯಶಮ೯ ಕೆ ಜಿ.'ಗುರುಸ್ತುತಿ ಸಂವತ್ಸರ' ನಿತ್ಯಾನಂದ ಪ್ರಿಂಟರ್ಸ, ಅಶೋಕನಗರ,ಬೆಂಗಳೂರು,ಮೊದಲನೇ ಮುದ್ರಣ,2018
68)ಸ್ವಾಮಿ ಆದಿದೇವಾನಂದ,'ಪತಂಜಲ ಯೋಗದಶ೯ನ', ರಾಮಕೃಷ್ಣಾಶ್ರಮ,ಯಾದವಗಿರಿ,ಮೈಸೂರು,ಎರಡನೇ ಮುದ್ರಣ,1೯81
65)ಸ್ವಾಮಿ ಆದಿದೇವಾನಂದ,'ಶ್ವೇತಾಶ್ವತರ ಉಪನಿಷತ್', ರಾಮಕೃಷ್ಣಾಶ್ರಮ,ಐದನೇ ಮುದ್ರಣ,2000.
66)ಅನುವಾದಕರು: ದಿ| ನಾಗೇಶ ರಂಗೋ ಕುಲಕಣಿ೯, 'ಯೋಗವಾಸಿಷ್ಠ' ಪ್ರತಿಭಾ ಗ್ರಂಥಮಾಲೆ,ಮೂರನೇ ಮುದ್ರಣ,1೯೯0
67)ಹೆಚ್.ಎಸ್. ಲಕ್ಷ್ಮಿ ನರಸಿಂಹಮೂತಿ೯, 'ಗುರು ಚರಿತಾಮೃತ,ಅಧ್ಯಾತ್ಮ ಪ್ರಕಾಶ ಕಾಯಾ೯ಲಯ,'ಹೊಳೆನರಸೀಪುರ,ಎರಡನೆ ಮುದ್ರಣ
1೯೯7'
68)ಶ್ರೀ ಸಚ್ಚಿದಾನಂದೇಂದ್ರ ಸರಸ್ವತೀ ಸ್ವಾಮಿಗಳು,'ಪಂಚಪಾದಿಕಾ'ಅಧ್ಯಾತ್ಮ ಪ್ರಕಾಶ ಕಾಯಾ೯ಲಯ,ಹೊಲೆನರಸೀಪುರ,ಮೊದಲನೇ ಮುದ್ರಣ,1೯62
6೯)ಚಂದ್ರಧರ ಶಮಾ೯, ಸವೆ೯ಆಫ್ ಇಂಡಿಯನ್ ಫಿಲಾಸಫಿ' ರಿಪ್ರಿಂಟ್ ಇನ 200೯,ಮೋತಿಲಾಲ್ ಬನಾರಸಿದಾಸ್ ಪಬ್ಲಿಶರ್ಸ್,
ದೆಹಲಿ.
70)ಸ್ವಾಮಿಸೋಮನಾಥಾನಂದ 'ಅಷ್ಟಾವಕ್ರ ಗೀತಾ', ಶ್ರೀರಾಮಕೃಷ್ಣಾಶ್ರಮ, ಐದನೆಯ ಮುದ್ರಣ,1೯೯೯
71)ಸ್ವಾಮಿ ಸೋಮನಾಥಾನಂದ, 'ಅವಧೂತ ಗೀತಾ'ಶ್ರೀ ರಾಮಕೃಷ್ಣಾಶ್ರಮ ಮೈಸೂರು,ಐದನೆಯ ಮುದ್ರಣ1೯೯೯
72)’ಇಂಡಿಯನ್ ಪಿಲಾಸಫಿ' ಸಂಪುಟ ಒಂದು ಮತ್ತು ಎರಡು.ಡಾ.ಎಸ್.ರಾಧಾಕೃಷ್ಣನ್
No comments:
Post a Comment