Tuesday, 13 April 2021

chidakasha geetha source:writen by sri sri nithyananda swamiji,translated to kannada by sri srimurthy, selected by dr raveendra hosadurga

 

 

 

 

 

 

 

ಚಿದಾಕಾಶಗೀತಾ ಸಾರಸಂಗ್ರಹ:

ಮೂಲಲೇಖಕರು:ಪೂಜ್ಯ ಶ್ರೀ ನಿತ್ಯಾನಂದ ಸ್ವಾಮಿಯರರು.

ಗಣೇಶಪುರಿ-ಮುಂಬಯಿ

ಕನ್ನಡ ಅನುವಾದಕರು:ಶ್ರೀಮೂತಿ೯

(ನುಲೆನೂರು ಶ್ರೀನಿವಾಸ ಮೂತಿ೯ಯವರು)

ದತ್ತಾಶ್ರಮ,ಆರ್.ನುಲೇನೂರು.

ಹೊಳಲ್ಕೆರೆ ತಾಲ್ಲೋಕು,ಚಿತ್ರದುಗ೯ಜಿಲ್ಲೆ

ಕನಾ೯ಟಕ ರಾಜ್ಯ

ಸಂಗ್ರಹ:ಡಾ.ರವೀಂದ್ರ ಹೊಸದುಗ೯

ಮೂಲ ಲೇಖಕರಿಗೂ,ಅನುವಾದಕರಾದ ಶ್ರೀಮೂತಿ೯ಯವರಿಗೂ,ಅವರ ಪುತ್ರರಾದ ಆತ್ಮಾರಾಂಮತ್ತು ಕುಟುಂಬ ವಗ೯ದವರಿಗೆ ನನ್ನ ನಮಸ್ಕಾರಗಳು.

 

ಚಿದಾಕಾಶ ಗೀತಾ:

ಪ್ರಥಮಭಾಗ:ಆತ್ಮ ಪ್ರಭಾವ:

 

1)ಜ್ಞಾನಿಗಳಿಗೆ ಮನಸ್ಸಿಲ್ಲ.ಜ್ಞಾನಿಗಳಿಗೆ ಸಮಾತ್ಮ.ಅವರಿಗೆ ನಿದ್ರೆ,ಸ್ವಪ್ನ,ಸುಷುಪ್ತಿಇಲ್ಲ.ಅವರು ಸದಾನಿದ್ರೆಯಲ್ಲೇ ಇರುವರು.ಅವರಿಗೆ ಸೂಯ೯ ಚಂದ್ರ ಅಂತ ಪ್ರತ್ಯೇಕ ಇಲ್ಲ.ಅವರಿಗೆ ಯಾವಾಗಲೂ ಸೂಯೊ೯ದಯವೇ.(ಪುಟ 1)

 

2) ಹುಟ್ಟುಸಾವುಗಳಿಲ್ಲದ ಅದ್ವಿತೀಯ ಚೈತನ್ಯ ಸ್ವರೂಪನಾದ  ಆತ್ಮನನ್ನು ಅರಿತು ಆತ್ಮನಲ್ಲಿ ನೆಲೆನಿಂತವನೇ ಜ್ಞಾನಿಯು.(ಪುಟ 2)

 

3)ವೇದಾಂತÀ ಶಾಸ್ತ್ರದಲ್ಲಿಜಗತ್ತಿನ ಸೃಷ್ಟಿ,ಸ್ಥಿತಿ,ಲಯಗಳಿಗೆ  ಆತ್ಮನೇ ಕಾರಣನೆಂದೂ ಅದರ ಕಾಯ೯ರೂಪವಾದ ಜಗತ್ತೆಲ್ಲವೂ'ವಾಚಾರಂಭಣೋ ವಿಕಾರೋ ನಮಧೇಯಂ'(ಛಾಂ 6-1-4)ಬರಿಯ ಮಾತಿನಿಂದಾಗಿರುವ  ಹೆಸರು ಮಾತ್ರವಾದ್ದರಿಂದ,ತನ್ನ ಕಾರಣವಾದ ಆತ್ಮನನ್ನು ಬಿಟ್ಟು ಬೇರೆ ಇಲ್ಲವೆಂದೂ ಹೇಳಿರುತ್ತದೆ.(ಪುಟ 2)

 

4)ಮಡಕೆ ಎಂದರೆ ಮಣ್ಣೇ.ಹಾಗೆಯೇ ಜಗತ್ತು ಎಂದರೆ ಆತ್ಮವೇ(ಪುಟ 3)

 

5)ಆಗ 'ನಾನು' ಎಂಬುದೂ 'ಮನಸ್ಸು' ಎಂಬುದೂ  ಆತ್ಮನವಿಕಾರಗಳೇ,ಕಾಯ೯ಗಳೇ,ಎಂದರೆ ಆತ್ಮನಲ್ಲಿ ಕಲ್ಪಿತವಾಗಿರುವ  ತೋರಿಕೆಗಳೇ ಹೊರತು ಬೇರೆಯಲ್ಲ,ಆತ್ಮನೊಬ್ಬನೇ ಸತ್ಯ-ಎಂಬ ಶಾಸ್ತ್ರದೃಷ್ಟಿಯನ್ನೂ  ಆಚಾಯ೯ ದೃಷ್ಟಿಯನ್ನೂ  ಅನುಸರಿಸಿ  ಜ್ಞಾನವುಂಟಾದಾಗ  ಮನಸ್ಸು ಮನಸ್ಸಾಗಿ ಉಳಿಯುವುದಿಲ್ಲ.,ನಾನು ಎಂಬುದೂ ಉಳಿಯುವುದಿಲ್ಲ.(ಪುಟ3)

 

6)ಜ್ಞಾನಿಗಳು ಚೈತನ್ಯ ಸ್ವರೂಪವಾದ ಆತ್ಮನನ್ನೇ (ತನ್ನನ್ನೇ) ಎಲ್ಲರಲ್ಲಿಯೂ ಎಲ್ಲಾ ವಸ್ತುಗಳಲ್ಲಿಯೂ  ಕಾಣುವುದರಿಂದ  ಅವರಿಗೆ ವ್ಯಕ್ತಿಗತವೂ ವಸ್ತುಗತವೂ  ಆದ ಭೇದಗಳೇ  ಕಾಣುವುದಿಲ್ಲ.ಆದ್ದರಿಂದ ಅವರು ಎಲ್ಲಾ ಪ್ರಾಣಿಗಳನ್ನೂ  ಸಮವಾದ ಪ್ರೇಮದಿಂದ ಕಾಣುವರು.(ಪುಟ4)

 

7)ಜ್ಞಾನಿಗಳಿಗೆ ನಿದ್ರೆ,ಸ್ವಪ್ನ, ಸುಷುಪ್ತಿ ಇಲ್ಲ. ಅವರು ಸದಾ ನಿದ್ರೆಯಲ್ಲಿಯೇ ಇರುವರು.ಜ್ಞಾನಿಯು ನಿರಂತರ ಪರಮಾನಂದ ಸ್ಥಿತಿಯಲ್ಲಿ ಇರುವನು(ಪುಟ 5)

 

8)ಜ್ಞಾನಿಗೆ ಸೂಯ೯,ಚಂದ್ರ, ಎಂತ ಪ್ರತ್ಯೇಕವಿಲ್ಲ.ಎಲ್ಲಾ ಬಗೆಯ ದ್ವಂದ್ವಗಳಲ್ಲಿಯೂ  ಸಮನಾಗಿ ತುಂಬಿರುವ ಆತ್ಮಚೈತನ್ಯವನ್ನೇ  ಜ್ಞಾನಿಯು ಕಾಣುತ್ತಿರುವುದರಿಂದ ಅವನಿಗೆ ಯಾವಾಗಲೂ ಸೂಯೋ೯ದಯವೇ.(ಪುಟ 5)

 

)"ಒಂದು ಕುಪ್ಪಿಗೆ ಮಶಿ ಇರುವಾಗ  ಪ್ರಕಾಶ ಸರಿಯಾಗಿ ಇರುವುದಿಲ್ಲ. ಅದೇ ಪ್ರಕಾರ ಮನಸ್ಸಿನ ಮಶಿಯನ್ನು ತೆಗೆಯಬೇಕು.ಒಂದು ದೀಪದ ಸುತ್ತಲಿರುವ ಗಾಜಿನ ಚಿಮಣಿಗೆ  ಹೊಗೆ ಮಸಿ ಮೆತ್ತಿಕೊಂಡಿದ್ದರೆ ಒಳಗಿರುವ ದೀಪದ ಬೆಳಕು ಚೆನ್ನಾಗಿ ಕಾಣುವುದಿಲ್ಲ.(ಪುಟ 5)

 

10)ಶರೀರದಲ್ಲಿ ಮೂರು ಮುಖ್ಯ ನಾಡಿಗಳಿವೆ.ಸೂಯ೯ನಾಡಿ ಅಥವಾ ಸುಷುಮ್ನಾ ನಾಡಿ;ಚಂದ್ರನಾಡಿ ಅಥವಾ ಇಡಾ ನಾಡಿನಕ್ಷತ್ರನಾಡಿ ಅಥವಾ ಪಿಂಗಳಾ  ನಾಡಿ.(ಪುಟ 5)

 

11) ಮೂರುನಾಡಿಗಳು ಕೂಡಿದಲ್ಲಿ  ಹೃದಯಾಕಾಶ ಮಂಡಲವಿದೆ.ನಾವು ಹೆಚ್ಚು  ದಿನಗಳು  ಯೋಗಾಭ್ಯಾಸ ಮಾಡುತ್ತಾ ಹೋದರೆ ಬಿಂದುನಾದ (ನಾದಬಿಂದು) ತಲೆಯೊಳಗೆ ಕೇಳುತ್ತದೆ. ಶಬ್ದವು ಅಖಂಡ.ಯೋಗಾ ಭ್ಯಾಸ ಕಾಲದಲ್ಲಿ  ಯೋಗಿಗೆ ತನ್ನೊಳಗೆ  ಕೇಳುವ ನಾದಕ್ಕೆ  'ಬಿಂದುನಾದ'ಎಂದು ಹೆಸರು.(ಪುಟ 6)

 

12)ಸಮುದ್ರ ಘೋಷ,ಮೇಘ ಘಜ೯ನೆ, ಭೇರೀನಾದ,ಮದ್ದಲೆ,ಘಂಟೆ,ಕಹಳೆ,ಹಾಮೋ೯ನಿಯಂ,ಪಿಟೀಲು,ಕೊಳಲು, ವೀಣೆ,ದುಂಬಿ-ಹೀಗೆ ನಾನಾ ವಿಧವಾದ ನಾದಗಳು  ಕೇಳಿಬರುತ್ತವೆ.ಆದರೆ ಅಖಂಡವಾಗಿ ,ಇಡಿಯಾಗಿ ಒಂದಾಗಿರುವ ಶಬ್ದವೇ (ಪ್ರಧಾನವಾಗಿ ) ಹತ್ತು ಬಗೆಯಲ್ಲಿ ಕೇಳುತ್ತದೆ.(ಪುಟ6)

 

13)ವಿಸ್ಮøತ್ಯ ಸಕಲಂ ಬಾಹ್ಯಂ ನದೇ ದುಗ್ಥಾಂಬುವನ್ಮನಃ|

ಏಕೀ ¨sೂಯಾಥ ಸಹಸಾ ಚಿದಾಕಾಶೇ ವಿಲೀಯತೇ||(ನಾದಬಿಂದೂಪನಿಷತ್)

 

ಹೊರಗಿನ ಸಮಸ್ತವನ್ನೂ ದೇಹಾದಿಗಳನ್ನೂ ಮರೆತು ಮನಸ್ಸು ಹಾಲು ನೀರುಗಳಂತೆ ನಾದದೊಡನೆ ಬೆರೆತು  ಒಂದಾಗಉತ್ತದೆ.(ಪುಟ 7)

 

14)ಅಗ್ನಿಯಲ್ಲಿ ಕಪೂ೯ರ ಲಯವಾಗುವಂತೆ ಆತ್ಮನಲ್ಲಿ ಮನಸ್ಸು ಲಯವಾಗಬೇಕು.(ಪುಟ 7)

 

15)ತೆಂಗಿಕಾಯಿಯ  ಒಳಗಿನ ಕೊಬ್ಬರಿಯು  ಚೆನ್ನಾಗಿ ಒಣಗಿದ ಮೇಲೆ  ಕಾಯಿಯನ್ನು ಅಲ್ಲಾಡಿಸಿದರೆ  ಅದು ಗಡ ಗಡ ಎಂದು  ಮಂದವಾದ ಶಬ್ದವನ್ನು ಮಾಡುತ್ತದೆ.ಹೀಗೆ ದೇಹ ಮತ್ತು ಆತ್ಮ  ಇವುಗಳನ್ನು ಬೇರೆ ಬೇರೆ ಎಂದು ತಿಳಿಯಬೇಕು(ಪುಟ 7).

 

16)ಮನಸ್ಸೇ ಜೀವಾತ್ಮ;ಜೀವಾತ್ಮನೇ ಪರಮಾತ್ಮ

ಇದು ನನ್ನ ಮನಸ್ಸು ಎಂದು ಅರಿಯುವವನೇ ಹೇಳುವವನೇ ಜೀವಾತ್ಮ.ಎಚ್ಚರದಲ್ಲಿ ಜೀವಾತ್ಮನು  ಕಣ್ಣಿನಲ್ಲಿಯೂ ,ಕನಸಿನಲ್ಲಿ ಕಂಠದಲ್ಲಿಯೂ  ಗಾಢನಿದ್ರೆಯಲ್ಲಿ ಹೃದಯದಲ್ಲಿಯೂ -ಇರುತ್ತಾನೆ.ಆದರೆ ಪರಮಾತ್ಮನು ಪ್ರಪಂಚದ ಒಳಹೊರಗೆಲ್ಲಾ ತುಂಬಿದ್ದಾನೆ.(ಪುಟ 8)

 

17) ಹೆಣ್ಣಾಗಲೀ ಗಂಡಾಗಲೀ ವಿದ್ಯೆಯನ್ನು ಕಲಿಯಬೇಕು.ವಿದ್ಯೆ ಎಂದರೇನು?ತಾºನು ಪರಮಾತ್ಮನೇ ಎಂಬ ಗುಟ್ಟು  ಜೀವಾತ್ಮನಿಗೆ ತಿಳಿಯಬೇಕು.ಅಧ್ಯಾತ್ಮ ವಿದ್ಯೆಯೇ ನಿಜವಾದ ವಿದ್ಯೆ,ಶ್ರೇಷ್ಠ ವಿದ್ಯೆ.ಜೀವಾತ್ಮ ಪರಮಾತ್ಮ ಬೇರೆಯಲ್ಲ.ಸ್ತ್ರೀಯಾಗಲೀ ಪುರುಷರಾಗಲೀ  ಸದ್ಗುರುವಿನ ಉಪದೇಶದಿಂದ  ತಾನೇ ಪರಮಾತ್ಮ ಎಂಬ  ರಹಸ್ಯ ವಿದ್ಯೆಯನ್ನು  ಪಡೆದೇ ಧನ್ಯರಾಗಬೇಕು(ಪುಟ 8)

 

18)ಸ್ಥೂಲದಲ್ಲಿ ಸೂಕ್ಷ್ಷ್ಮವನ್ನು ಕಾಣುವುದೇ ಮುಕ್ತಿ.(ಪುಟ )

 

1)ಸ್ಥೂಲ ನಿದ್ರೆಯನ್ನು ಬಿಟ್ಟು ಸೂಕ್ಷ್ಮನಿದ್ರೆ ಮಾಡಬೇಕು.ಎರಡು ಬಗೆಯ ನಿದ್ರೆಗಳಿವೆ.ಎಲ್ಲರೂ ಮಾಡುವ ಸಾಮಾನ್ಯ ನಿದ್ರೆ.ಇನ್ನೊಂದು ಯೋಗಿಗಳು ಮಾಡುವ ಯೋಗನಿದ್ರೆ. ಮೊದಲನೆಯದು ಸ್ಥೂಲ ಎರಡನೆಯದು ಸೂಕ್ಷ್ಮ ನಿದ್ರೆ.ಒಂದು ಅಜ್ಞಾನ ನಿದ್ರೆ ಇನ್ನೊಂದು ಜ್ಞಾನ ನಿದ್ರೆ.ಯೋಗನಿದ್ರೆಯಾದ ಸಮಾಧಿಯನ್ನು ಅಭ್ಯಾಸ ಮಾಡಬೇಕು.(ಪುಟ )

 

20)ಭೂತಾಕಾಶ,ಚಿತ್ತಾಕಾಶ,ಚಿದಾಕಾಶ ಎಂದು ಆಕಾಶವು ಮೂರುಬಗೆಯಾಗಿದೆ.ಹೊರಗಿನ ಭೌತಿಕ ಆಕಾಶವೇ ಭೂತಾಕಾಶ.ಮನಸ್ಸಿನ ಒಳ£ಗಿನ ಆಕಾಶವೇ ಚಿತ್ತಾಕಾಶ(ಹೃದಯಾಕಾಶ).ಹೃದಯಾಕಾಶದಲ್ಲಿ ಅನುಭವಕ್ಕೆ ಬರುವ  ಬಯಲಿನಂತೆ ಅತ್ಯಂತ ಸೂಕ್ಷ್ಮವಾದ  ಅರಿವೇ ಚಿದಾಕಾಶ.(ಪುಟ 10)

 

21)ಚಿನ್ನದ ಪಾತ್ರೆಯಲ್ಲಿ ಅಡುಗೆ ಮಾಡಿದರೂ  ಅದನ್ನು ನಾಯಿಯು ತಿನ್ನುತ್ತದೆ.ಮಣ್ಣಿನ ಪಾತ್ರೆಯಲ್ಲಿ ಅಡುಗೆ ಮಾಡಿದರೂ ಅದನ್ನು ನಾಯಿ ತಿನ್ನುತ್ತದೆ.ಚಿನ್ನದ ಪಾತ್ರೆಯಲ್ಲಿ ಮಾಡಿದ ಅಡಿಗೆಗೂ ಮಣ್ಣಿನ ಪಾತ್ರೆಯಲ್ಲಿ ಮಾಡಿದ ಅಡುಗೆಗೂ ಹೇಗೆ ನಾಯಿಗೆ ವ್ಯತ್ಯಾಸವು ಕಾಣುವುದಿಲ್ಲವೋ  ಹಾಗೆ ಜ್ಞಾನಿಗೆ ವಸ್ತುಗಳಲ್ಲಿ  ಉತ್ತಮ ಅಧಮವೆಂಬ ವ್ಯತ್ಯಾಸವು ಕಾಣುವುದಿಲ್ಲ.ದ್ವೈತ ಭಾವವೂ ದ್ವಂದ್ವ ಭಾವವೂ

 ಅವನಲ್ಲಿ ಅಳಿದಿರುವುದರಿಂದ ಹೊನ್ನೂ ಮಣ್ಣೂ ಅವನಿಗೆ ಒಂದೇ.(ಪುಟ10)

 

22)ಉಪ್ಪು ನೀರು ತೀಳಿನೀರು ಎಂಬ  ವ್ಯತ್ಯಾಸವಿಲ್ಲದಂತೆ ಸೂಯ೯ನ ಬಿಂಬವು ಹೇಗೆ  ಎರಡ

ರಲ್ಲಿಯೂ ಸಮನಾಗಿ ಮೂಡುತ್ತದೆ.ಜ್ಞಾನಿಯು ತನ್ನ ಪ್ರೇಮ ಪ್ರಕಾಶವನ್ನು  ಚೆಲ್ಲುವುದರಲ್ಲಿ ವ್ಯಕ್ತಿ ಭೇದವನ್ನು ಎಣಿಸುವುದಿಲ್ಲ.ಅವನಿ£ಗೆ ಸಿರಿವಂತರು ,ಬಡವರು,ಶತ್ರು-ಮಿತ್ರರು ಎಂಬ ಭೇದವಿಲ್ಲ.ಅಭೇದ ಭಾವವು ಜ್ಞಾನಿಗೆ  ಅನುಭವದಲ್ಲೇ ಬಂದಿರುವುದರಿಂದ ಅದು ಅವನ ಭಾವನೆಯಲ್ಲಿ ಮಾತ್ರ,ಮಾತಿನಲ್ಲಿ ಮಾತ್ರ.(ಪುಟ 10)

 

23)ಒಂದು  ಮರದಲ್ಲಿ ಬಿಡುವ  ಹೂವುಗಳು ಬೇಗ  ನಾಶವಾಗುವಂತೆ, ಮರೆವು ನಾಶವಾಗುವುದಿಲ್ಲ.

ಅದಕ್ಕೆ ಕಾರಣವಾದ ಅದೃಶÀ್ಯವು  ಮರದಂತೆ ಶಾಶ್ವತ.ದೃಶ್ಯವೆಲ್ಲಾ ಹೂವಿವಂತೆ ನಶ್ವರ.(ಪುಟ 10)

 

24)ಪ್ರಪಂಚವು ನಶ್ವರವಾದುದು.ಇದಕ್ಕೆ ಕಾರಣನಾದ ಪರಮಾತ್ಮನು  ನಿತ್ಯ ಸತ್ಯನಾದವನು.(ಪುಟ 10)

 

25)ಬೆಂಕಿ ಪೆಟ್ಟಿಗೆಯಲ್ಲಿ ಕಡ್ಡಿಗಳಿದ್ದರೂ  ಪೆಟ್ಟಿಗೆಯ ಪಕ್ಕದಲ್ಲಿರುವ ಮದ್ದಿಗೆ  ಉಜ್ಜಿದಾಗ ಮಾತ್ರ ಬೆಂಕಿಯುಂಟಾಗುವುದು.ಈಗೆ ಮನಸ್ಸೆಂಬ  ಕಡ್ಡಿಯನ್ನು  ಬುದ್ಧಿಯೆಂಬ ಪೆಟ್ಟಿಗೆಯ ಮದ್ದಿಗೆ  ಉಜ್ಜಿದರೆ ಜೀವನ್ಮುಕ್ತಿಯೆಂಬ ಬೆಳಕು  ಉಂಟಾಗುತ್ತದೆ.(ಪುಟ 11)

 

26)ಮಾನಾಬಿಮಾನüಗಳನ್ನು ಬಿಡಬೇಕು.ದೇಹಾಭಿಮಾನವನ್ನು ಬಿಡಬೇಕು.ಹೀಗೆ ಬಿಟ್ಟವನಿಗೆ  ಪರವಸ್ತುವು ಎಲ್ಲಾ ವಸ್ತುಗಳ ಒಳಗೂ ಹೊರಗೂ  ತೋರುವುದು.(ಪುಟ 11)

 

27)ದೇಹವು ನಾನು ಎಂಬ ತಪ್ಪು ಕಲ್ಪನೆಯಿರುವವರೆಗೂ ಸಮ್ಮಾನದಿಂದ ಸಂತೋಷವೂ  ಅಪಮಾನದಿಂದ ಸಂಕಟವೂ  ಇರುತ್ತದೆ.ದೇಹ ನಾನಲ್ಲ.ದೇಹಾದಿಗಳಿಗೆ ಸಾಕ್ಷಿಯಾದ ಚೈತನ್ಯವೇ ನಾನು -ಎಂಬ ಸರಿಯಾದ ತಿಳುವಳಿಕೆ (ಸಮ್ಯಕ್ ಜ್ಞಾನ) ಬಂದೊಡನೆ ಅವನು ಮಾನಾಪಮಾನ,ಹಷ೯ಶೋಕಾದಿ ದ್ವಂದ್ವಗಳಿಗೆ  ವಶನಗುವುದಿಲ್ಲ.ಎಲ್ಲ ವಸ್ತುಗಳಲ್ಲಿಯೂ ಎಲ್ಲೆಲ್ಲಿಯೂ ಅವನು ಆತ್ಮನನ್ನೇ-ತನ್ನನ್ನೇ

ಕಾಣುತ್ತಾನೆ.ತಾನೇ ಎಲ್ಲವೂ ಎಲ್ಲವೂ ತಾನೇ ಆಗುತ್ತಾನೆ.(ಪುಟ 11)

 

28)ಜಗಜ್ಯೋತಿಯೂ ಪರಂಜ್ಯೋತಿಯೂ ಒಬ್ಬನೇ.ಯಾವ ಚೈತನುವನ್ನು ಸೂಯ೯,ಚಂದ್ರ,ಅಗ್ನಿ,ನಕ್ಷತ್ರಾದಿಗಳು  ಬೆಳಗಲಾರವೋ  ಆದರೆ ಯಾವನು ತಾನೇ  ಕೋಟಿ ಸೂಯಾ೯ದಿಗಳನ್ನಾದರೂ  ವಿಷಯೀಕರಿಸಿಕೊಂಡು ಬೆಳಗಬಲ್ಲದೂೀ  ಪರಂಜ್ಯೋತಿರೂಪವಾದ  ಆತ್ಮಚೈತನ್ಯವೇ  ವಿಶ್ವಜ್ಯೋತಿಯೂ ಆಗಿದೆ.(ಪುಟ 11)

 

2)ಒಂದು ಹಲಗೆಯಿಂದಲೇ  ಮೇಜು ಕುಚಿ೯ ಮೊದಲಾದ  ಪೀಠೋಪಕರಣಗಳೆಲ್ಲಾ  ತಯಾರಾಗುತ್ತವೆ.ಹೀಗೆ ಅನಂತ ಕೋಟಿ ಬ್ರಹ್ಮಾಂಡಗಳು ಸೃಷ್ಟಿಯಾಗುವ ಮೂಲತತ್ವವೇ  ಪರಮಾತ್ಮ.(ಪುಟ 11)

 

30)ಮನಸ್ಸು ಮತ್ತು ಆತ್ಮ  ಎಲ್ಲಾ ಜನರಿಗೂ ಒಂದೇ.ಪ್ರಪಂಚದ  ಪ್ರಳಯ ಸ್ಥಿತಿಯಲ್ಲಿಯೂ  ಎಲ್ಲಾ ಒಂದೇ.ಮಧ್ಯದ ಈಗಿನ ಸ್ಥಿತಿಯಲ್ಲಿ  ಎಲ್ಲರ ಉಸಿರಾಟವೂ  ಆಲೋಚನೆಗಳೂ ಪ್ರವೃತ್ತಿಗಳೂ  ಬೇರೆ ಬೇರೆಯಾಗಿವೆ.ಮನಸ್ಸು ಎನ್ನುವ ತತ್ವವೂ  ಆತ್ಮನೂ ಎಲ್ಲರಲ್ಲಿಯೂ ಒಂದೇ ಆಗಿವೆ.ಪ್ರಪಂಚವು  ತೋರಿಕೊಳ್ಳುವ ಮೊದಲೂ  ಅಡಗಿದ ಮೇಲೂ  ಎಲ್ಲವೂ ಅವ್ಯಕ್ತ ಸ್ಥಿತಿಯಲ್ಲಿರುತ್ತವೆ.ಉತ್ಪತ್ತಿ -ಲಯಗಳ ಮಧ್ಯದ ಈಗಿನ ಸ್ಥಿತಿಯಲ್ಲಿ ಮಾತ್ರ ಎಲ್ಲವೂ ನಾಮ ರೂಪಗಳಿಂದ  ಬೇರೆ ಬೇರೆಯಾಗಿ ತೋರಿಕೊಳ್ಳುತ್ತವೆ.(ಪುಟ 12)

 

31)ಅಗ್ನಿ ,ನೀರು,ವಾಯು,ಮಣ್ಣು-ಇವು ಎಲ್ಲಾ ಜನರಿಗೂ ಒಂದೇ.ಇವನ್ನು ಎಲ್ಲರೂ ಒಂದೇ ಸಮನಾಗಿ ಉಪಯೋಗಿಸುತ್ತಾರೆ.ಹೀಗೆಯೇ ಪಂಪ್ನಿಂದಲೂ ಪೈಪಿನಿಂದಲೂ  ಬರುವ ನೀರನ್ನು ಬಾಹ್ಮಣ,ಶೂದ್ರ,ವೈಶ್ಯ ಮಕ್ಕಳೂ ಒಂದೇ ಸಮನಾಗಿ ಬಳಸುತ್ತಾರೆ.(ಪುಟ 12)

 

32)ಮನಸ್ಸು ಎಂಬ ಎಳ್ಳನ್ನು ಬುದ್ಧಿ ಎಂಬ ಗಾಣಕ್ಕೆ ಕೊಟ್ಟರೆ  ಅಮೃತ ಎಂಬ ಎಣ್ಣೆ ಬರುತ್ತದೆ.(ಪುಟ 12)

 

33)ಬುದ್ಧಿ ಅರಸು. ಮನಸ್ಸು ಮಂತ್ರಿ.ಆದ್ದರಿಂದ ಬುದ್ಧಿಹೇಳಿದಂತೆ ಮನಸ್ಸು ಕೇಳಬೇಕು.(ಪುಟ12)

 

34)ಇಡೀ ಮುಳುಗಿದವನಿಗೆ ಛಳಿ ಇಲ್ಲ.ಅದೇ ಪ್ರಕಾರ  ಪೂಣ೯ತ್ವ ಪಡೆದವರಿಗೆ  ಸಿಟ್ಟಿಲ್ಲ.ಮನಸ್ಸು ಆತ್ಮನಲ್ಲಿಯೇ ನೆಲೆ ನಿಂತಿರುವುದರಿಂದ ಅದರ ಸಮಾಧಾನವು ಸ್ವಾಭಾವಿಕವಾದುದು.(ಪುಟ 13)

 

35)ಬೆಂಕಿಯಲ್ಲಿ ಸುಟ್ಟ ಬೀಜಕ್ಕೆ ಮೊಳಕೆ ಬರುವುದಿಲ್ಲ.ಎಣ್ಣೆ ಇಲ್ಲದ ದೀಪಕ್ಕೆ ದೀಪ ಎನ್ನುವುದಿಲ್ಲ.ಸೂಯ೯ಪ್ರಕಾಶ ಇರುವಾಗ ಗ್ಯಾಸ್ ಲೈಟ್ ಪ್ರಕಾಶವಿಲ್ಲ.ಇಡೀ ಸೂಯ೯ಪ್ರಕಾಶವೇ ಜಗತ್ತಿ ಶೋಭೆ.(ಪುಟ 13)

 

36)ಸಂಸಾರವೆಂಬ  ವೃಕ್ಷಕ್ಕೆ  ಆಸೆಯೇ ಬೀಜ.ಹಸಿಯಾದ ಬೀಜವನ್ನು ನೆಲದಲ್ಲಿ ನಾಟಿ ನೀರೆರೆದರೆ ಅದು ಮೊಳಕೆಯೊಡೆದು  ಗಿಡವಾಗಿ ಮರವಾಗುತ್ತದೆ.ಅದೇ ಚೆನ್ನಾಗಿ ಹುರಿದ ಬೀಜವನ್ನು  ಭೂಮಿಯಲ್ಲಿ ಬಿತ್ತಿ  ಗೊಬ್ಬರ ಹಾಕಿ ಮಳೆ ಹೊಯ್ದರೂ ಮೊಳಕೆಯೊಡೆಯುವುದಿಲ್ಲ.(ಪುಟ 13)

 

37)ಕಾರಣವಿಲ್ಲದೆ  ಕಾಯ೯ವಿಲ್ಲವಾದ್ದರಿಂದ  ಜಗತ್ ರೂಪವಾದ ಕಾಯ೯ಕ್ಕೆಕಾರಣವಾದ ಬ್ರಹ್ಮಚೈತನ್ಯವಿರಲೇ ಬೇಕು.ಇದು ಕೇವಲ ಊಹೆ ಅಲ್ಲ.ಇದಕ್ಕೆ ಗುರು-ಶ್ರುತಿ-ಸ್ವಾನುಭವವೇ ಪ್ರಮಾಣ.ಮತ್ತು ಮೋಕ್ಷಕ್ಕೆ ಕಾರಣವಾದ ಜ್ಞಾನ ಸಾಧನೆ ಇಲ್ಲದೆ ಸ್ವರೂಪ ಸಿದಧಿಯೂ ಇಲ್ಲ.ಜ್ಞಾನಕ್ಕೆ ಕಾರಣವಾದ ಗುರುವಿಲ್ಲದೆ  ಕಾಯ೯ವಾದ ಜ್ಞಾನ ಪ್ರಾಒತಿಯೂ ಇಲ್ಲ.(ಪುಟ 14)

 

38) ಕತ್ತಲೆಯನ್ನು ಬೆಳಕು ಕಳೆಯುವಂತೆ ಅಜ್ಞಾನವನ್ನು ಜ್ಞಾನವು ಕಳೆಯುತ್ತದೆ.(ಪುಟ 14)

 

3)ಜನರು ಸಾಮಾನ್ಯವಾಗಿ ಒಂದು ಮಹದ್ ವ್ಯಕ್ಕ್ತಿಯ  ದೇಹವನ್ನೇ ಗುರು ಎಂದು ಭಾವಿಸುತ್ತಾರೆ.ಕಾಲುಗಳಲ್ಲಿ ಪಾದುಕೆಗಳನ್ನು ಮೆಟ್ಟಿ, ಕೈಯಲ್ಲಿ ದಂಡವನ್ನು ಹಿಡಿದ ಮಾತ್ರಕ್ಕೆ  ಒಬ್ಬನು ಗುರುವಾಗುವುದಿಲ್ಲ.ನುಡಿದುದನ್ನು ಮಾಡಿ ತೋರಿಸುವವನೇ ಗುರು.ಮೊದಲು ತಾನು ಸಾಧನೆ ಮಾಡಿ,ಅನುಭವ ಸಿದ್ಧಿಯನ್ನು ಪಡೆದು  ಅನಂತರ ಇತರರಿಗೆ ಉಪದೇಶವನ್ನು ಮಾಡುವವನೇ ಗುರು.(ಪುಟ 15)

 

40)ಗುರುವೇ ದೇವರು.ದೇವರೇ ಗುರು.(ಪುಟ 15)

 

41)ಅಧ್ಯಾತ್ಮ ಸಾಧನೆಗಾಗಿ ಪಡುವ ಶ್ರಮ ಎಂದೂ ವ್ಯಥ೯ವಲ್ಲ.ಅದರಿಂದ ಸುಖವೇ ಉಂಟಾಗುತ್ತದೆ. ಏಕೆಂದರೆ ಆತ್ಮನು ಆನಂದ ಸ್ವರೂಪನು.(ಪುಟ 16)

 

42)ಬಾಗಿಲು ಇಲ್ಲದ್ದು ಮನೆಯಲ್ಲ. ಅಗ್ನಿ ಇಲ್ಲದೆ ನೀರು ಬಿಸಿಯಾಗುವುದಿಲ್ಲ. ವಾಯುವಿಲ್ಲದೆ  ಅಗ್ನಿ ಉರಿಯುವುದಿಲ್ಲ.ಊಟವಿಲ್ಲದೆ ಹೆಚ್ಚು ಕಾಲ ಬದುಕಲಾರೆವು.ಆದರೆ ಪ್ರಾಣವಾಯುವಿನ ಉಸಿರಾಟ ವಿಲ್ಲವಾದರೆ  ಕೆವಲು ಸೆಕೆಂಡುಗಳೂ ಬದುಕುವುದಿಲ್ಲ.(ಪುಟ 16)

 

43)ಅಕಾಶಾದಿಗಳ ಉತ್ಪತ್ತಿಗೆ ಕಾರಣವಾದ -ಆತ್ಮನಲ್ಲಿ ನೆಲೆ ನಿಂತರೆ -ಕಾರಣ ಕಾಯ೯ಗಳಿಗೆ ಭೇದವಿಲ್ಲದ್ದರಿಂದ -ಪ್ರಪಂಚವೆಲ್ಲಾ ಆತ್ಮನೇ ಆಗಿ ತೋರುತ್ತದೆ.(ಪುಟ 16)

 

44)ಅಖಂಡದಲ್ಲಿ ಖಂಡವಿಲ್ಲದಿರುವಂತೆ  ಜ್ಞಾನಿಗಳ ದೃಷ್ಟಿಯಲ್ಲಿ ಅಜ್ಞಾನಿಯೇ ಇಲ್ಲ.ಅಜ್ಞಾನಿಗಳ ದೃಷ್ಟಿಯಲ್ಲಿಯೂ ಜ್ಞಾನಿಗಳ ಕಲ್ಪನೆ ಇಲ್ಲ.ತಾಯಿಯು ಎಲ್ಲಾ ಮಕ್ಕಳನ್ನೂ ಸಮಾನವಾಗಿ ನೋಡುವಂತೆ  ಜ್ಞಾನಿಯು ದುಷ್ಟರನ್ನೂ ಆತ್ಮದ್ವರೂಪದದಲ್ಲಿಯೇ ನೋಡಿ,ಕ್ಷಮಾಶೀಲನಾಗಿ  ಸಹನೆ ಸಮಾಧಾನಗಳಿಂದ ಪ್ರೀತಿಸುತ್ತಾನೆ.(ಪುಟ 16)

 

45)ಸುತ್ತಲೂ ಎಲ್ಲೆ ಕಟ್ಟನ್ನು ಹಾಕಿ (ದಂಡೆಯನ್ನು ಹಾಕಿ)ಕೆರೆಯಲ್ಲಿ ನೀರನ್ನು ನಿಲ್ಲಿಸಿರುವಂತೆ  ಮನಸ್ಸನ್ನು ವಿವೇಕ ವಿಚಾರಗಳ  ಹಿಡಿತದಲ್ಲಿ ಇಟ್ಟು ಕೊಂಡಿರಬೇಕು.(ಪುಟ 17)

 

46)ಎಲ್ಲರಿಗೂ ದೇವರು ಕಣ್ಣು ,ಕಿವಿ,ಮೂಗು ,ನಾಲಗೆಯನ್ನು ಕೊಟ್ಟಿರುವಂತೆ  ವಿಚಾರ ಶಕ್ತಿಯುಳ್ಳ ಬುದ್ಧಿಯನ್ನೂ ಕೊಟ್ಟಿರುತ್ತಾನೆ.ಇದರಲ್ಲಿ ಪಕ್ಷಪಾತ ಮಾಡಿಲ್ಲ.(ಪುಟ 18)

 

47)ಯೋಗಿಗಳ ಸಹಸ್ರದಳಕಮಲದ ಸರಸ್ರಾರ ಚಕ್ರವಿರುವುದು ತಲೆಯಲ್ಲಿ.ನೆತ್ತಿಯಲ್ಲಿ.ಇದೇ ಆನಂದದ ಸ್ಥಾನ.ಯೋಗಸಾಧನೆಯ ಬಲದಿಂದ  ಮೂಲಾಧಾರ ಚಕ್ರದಿಂದ  ಎದ್ದ  ಕುಂಡಲಿನೀ ಶಕ್ತಿಯು ಸಹಸ್ರಾರ ಚಕ್ರವನ್ನು ಸೇರಿದಾಗ ಪರಮಾನಂದದ ಅನುಭವವಾಗುವುದರಿಂದತಲೆಯೇ ಆನಂದ ಸಮುದ್ರವಾಗಿದೆ.ಮುಕ್ತಿಯು ಪುಸ್ತಕ ಜ್ಞಾನದಿಂz ಬರುವುದಿಲ್ಲ.ಅದು ಬರುವುದು ಮಸ್ತಕ ಜ್ಞಾನದಿಂದ.ಪುಸ್ತಕವು ಅನೇಕ ಭಾಗಗಳಿಂದ ಕೂಡಿರುವುದರಿಂದ ಅದರ ಜ್ಞಾನವು ಖಂಡ ಖಂಡವಾದುದು.ಆದರೆ ಮಸ್ತಕದಲ್ಲಿ ಹೊಳೆಯುವ ಜ್ಞಾನವು ಅಖಂಡವಾದುದು.ಅದು ಅನುಭವದಿಂದಲೇ ಬರುವುದು.ಆತ್ಮಾನುಭವಿಗೆ ಇರುವ ಅಖಂಡ ವಸ್ತು ಒಂದೇ.ಅವನಿಗೆ ಸಕಲವೂ ಒಂದೆ,ಒಂದೇ ಸಕಲವೂ.ಮನುಷ್ಯನು ಜಗತ್ತಿನಲ್ಲಿ ಹುಟ್ಟಿ ಬಂದಾಗ ಪುಸ್ತಕವನ್ನು ತಂದಿರುವುದಿಲ್ಲ.ಇದನ್ನು ಬಿಟ್ಟು ಹೋಗುವಾಗ  ಪರಲೋಕಕ್ಕೆ ಹೋಗುವಾಗ  ಪುಸ್ತಕವನ್ನುಒಯ್ಯುವುದಿಲ್ಲ.(ಪುಟ 18) 

 

48)ಅನ್ನವನ್ನೂ ಹಣವನ್ನೂ ದಾನಮಾಡಿದ ಮಾತ್ರಕ್ಕೆ ಭಕ್ತಿ ಎನಿಸುವುದಿಲ್ಲ.ವಿಶ್ವಪ್ರೇಮವೇ ಭಕ್ತಿ.ಭೇದಭಾವನೆ ಇಲ್ಲದಂತೆ ಎಲ್ಲ ಜೀವರಲ್ಲಿಯೂ,  ಎಲ್ಲಾ ವಸ್ತುವಿನಲ್ಲಿಯೂ  ದೇವರನ್ನು ನೋಡುವುದೇ ಭಕ್ತಿ.ಸವ೯ದರಲ್ಲಿಯೂ ಸಮಭಾವನೆಯೇ ಭಕ್ತಿ.(ಪುಟ 1)

 

4)ಶ್ವಾಸಧಾರಣೆಯಿಂದ ಮನಸ್ಸನ್ನು ಸ್ವಾಧೀನಪಡಿಸಿಕೊಕೊಳ್ಳದವರು ಯೋಗಿಯೂ ಅಲ್ಲ.ಸನ್ಯಾಸಿಯೂ ಅಲ್ಲ.ಚುಕ್ಕಾಣಿಯಿಲ್ಲದೆ ಮನಸ್ಸನ್ನು ಇಷ್ಟಬಂದಕಡೆಗೆ ನಡೆಸಲಾಗುವುದಿಲ್ಲ.ಹಾಗೂ ವಶವತಿ೯ಯಾದ ಮನಸ್ಸಿಲ್ಲದೆ ಬುದ್ಧಿಯನ್ನು  ಪರಮಾತ್ಮನೆಡೆಗೆ ಒಯ್ಯಲಾಗುವುದಿಲ್ಲ.(ಪುಟ1)

 

50)ಕೆಂಪು ಕನ್ನಡಕದಿಂದ ನೋಡುವವನಿಗೆ ಜಗತ್ತೆಲ್ಲವೂ ಕೆಂಪಾಗಿಯೇ  ಕಾಣುತ್ತದೆ.ಕೆಟ್ಟ ಮನನಸ್ಸಿನಿಂದ ನೋಡುವವನಿಗೆಜಗತ್ತೇ ಕೆಟ್ಟದಾಗಿ ಕಾಣುತ್ತದೆ.ಒಳ್ಳೆಯ ಮನಸ್ಸಿನಿಂದ ನೋಡುವವನಿಗೆ ಜಗತ್ತು ಒಳ್ಳೆಯದಾಗಿ ಕಾಣುತ್ತದೆ.ತನ್ನ ಪ್ರಯತ್ನದಿಂದಲೇ ಮನಸ್ಸನ್ನು ಒಳ್ಳೆಯದಾಗಿಸಬಹುದು.(ಪುಟ 1)

 

51)ಹಳೆಯ ಮನೆಯನ್ನು ಬಿಟ್ಟು ಹೋಗುವಂತೆ ರಸವನ್ನು  ಕುಡಿದು ಅದಸ ಸಿಪ್ಪೆಯನ್ನು ಎಸೆಯುವಂತೆ  ಜೀವನದಲ್ಲಿ ಚೈತನ್ಯ ರಸವನ್ನು ಹೀರಿಕೊಂಡು  ಉಳಿದ ಚರಟದಂತಿರುವ  ಶರೀರವನ್ನು ಉದಾಸೀನವಾಗಿ  ಕಾಣಬೇಕು.ಹಳೆಯ ಮನೆಯನ್ನು ಬಿಟ್ಟು  ಹೊಸ ಮನೆಗೆ ಹೋಗುವಂತೆ  ಅವನು ತನ್ನ ಹಳೆಯ ದೇಹವನ್ನು ಬಿಟ್ಟು ಇನ್ನೊಂದು ಜನ್ಮದಲ್ಲಿ ಹೊಸದೇಹವನ್ನು ಪ್ರವೇಶಿಸುತ್ತಾನೆ,(ಪುಟ 1)

 

52)ಗೂಡು ನಾಶವಾದಂತೆ ಪಕ್ಷಿ ನಾಶವಾಗುವುದಿಲ್ಲ.ಹೀಗೆ ದೇಹ ನಾಶವಾಗುವಂತೆ  ಜೀವಾತ್ಮನು ಆಗುವುದಿಲ್ಲ.ಆತ್ಮನು ನಿತ್ಯ ಶಾಶ್ವತ, ದೇಹವನ್ನು ಒಂದು ದಿನ ತೊಳೆಯದಿದ್ದರೆ ಅದು ನಾರುತ್ತದೆ.ಇಂಥ ದೇಹವನ್ನು ನಂಬುವುದಕ್ಕಾಗುವುದಿಲ್ಲ,ಸತ್ಯನಾದ ಆತ್ಮನನ್ನು ಕಂಡುಕೊಳ್ಳಬೇಕು.(ಪುಟ 18)

 

53)ಭಾವನಾ ರೂಪವಾದುದು.ಸ್ಥೂಲವಸ್ತುಗಳ ಕಲ್ಪನೆ ಬಿಟ್ಟು  ಅತ್ಯಂತ ಸೂಕ್ಷ್ಮವಾದ ಆತ್ಮನ ವಿಚಾರದಲ್ಲಿ  ಅಥವಾ ಅರಿವಿನಲ್ಲಿ ಇರುವುದೇ ನಿವಿ೯ಕಲ್ಪ ಸಮಾಧಿ.ಒಂದು ಪಕ್ಷಿಯನ್ನು ಗೂಡಿನಲ್ಲಿಟ್ಟು  ಅದರ ಕಾಲು ಕಟ್ಟಿ ಮಾತನ್ನು ಕಲಿಸುವಂತೆ ,ಮನಸ್ಸನ್ನು ಬುದ್ಧಿ ವಿಚಾರದ  ವಶದಲ್ಲಿಟ್ಟು ಆತ್ಮನಲ್ಲಿಯೇ ನಿಲ್ಲುವ ಸಮಾಧಿಯನ್ನು ಅಭ್ಯಾಸ ಮಾಡಬೇಕು.(ಪುಟ 20)

 

54)ಪರಮಾತ್ಮನ ದಿವ್ಯವಾದ ಪ್ರಜ್ಞೆಯಲ್ಲಿ ಮನಸ್ಸು ನೆಲೆ ನಿಲ್ಲುವ್ದೇ  ಸಮಾಧಿಯೇ ಹೊರತು ,ಅದು ಮೂಗಿನ ತುದಿಯನ್ನು ಹಿಡಿದುಕೊಳ್ಳುವುದಾಗಲೀ ,ದೃಷ್ಟಿಯನ್ನು ಮೇಲಕ್ಕೆ ತಿರುಗಿಸಿ  ನೋಡುವುದಾಗಲೀ ,ದಮ್ಮನ್ನು ಬಿಗಿಹಿಡಿಯುವ ಕಸರತ್ತಾಗಲೀ ಅಲ್ಲ.ದ್ವೈತರೂಪವಾದ  ಪರಪಂಚವೆಲ್ಲಾ ಅಡಗಿ ದೇವರಲ್ಲಿ  ಒಂದಾಗುವ ಸ್ಥಿತಿಯೇ ಸಮಾಧಿ.(ಪುಟ 20)

 

55)ತನ್ನಂತೆಯೇ ಎಲ್ಲರನ್ನೂ ಪ್ರೇಮದಿಂದ ಕಾಣುವ ಸಮಭಾವವೇ  ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠವಾದುದು. 

 

56) ಒಬ್ಬೊಬ್ಬರಿಗೆ ಒಂದೊಂದು ಹುಚ್ಚು. ಮನೆ,ಹೊಲಲ,ಆಸ್ತಿ,ಐಶ್ವಯ೯,ಬೆಳ್ಳಿ,ಬಂಗಾರ,ರತ್ನಾಭರಣ ಇವುಗಳಲ್ಲಿ ನಾವು ಯಾವುದನ್ನೂ ಹುಟ್ಟುವಾಗ ತಂದಿರಲಿಲ್ಲ.ಸಾಯುವಾಗ ಒಯ್ಯುವುದಿಲ್ಲ.ನಶ್ವರವಾದ   ವಸ್ತುಗಳ ಹುಚ್ಚು ಅಭಿಮಾನವೇ  ಮುಕ್ತಿಗೆ ಅಡ್ಡಿಯಾಗಿದೆ.(ಪುಟ20)

 

57)ಇರುವುದೆಂಬ ಸನ್ಮಾತ್ರ ಸ್ವರೂಪವು  ಆತ್ಮನೊಬ್ಬನೇ. ಪರಮಾಥ೯ದೃಷ್ಟಿಯಿಂದ ಮಿಕ್ಕ ಎಲ್ಲಾ ಸುಳ್ಳಾಗಿವೆ.(ಪುಟ 20)

 

58)ಚಿತ್ ಸ್ವರೂಪವು ವೃತ್ತಿಯನ್ನು ಪಡೆದು ಚಿತ್ತವಾದರೆ  ಜೀವನು ದುಃಖಿಯಾಗುತ್ತಾನೆ(ಪುಟ 21)

 

5)ಜೀವಾತ್ಮ ಪರಮಾತ್ಮರ ಐಕ್ಯದಿಂದ  ಪರಮಾನಂದ ಉಂಟಾಗುತ್ತದೆ.ಶಿವಾನಂದವೂ ಇದೆ. ನಿತ್ಯಾನಂದವೇ ಜೀವನ್ಮುಕ್ತಿ.(ಪುಟ 21)

 

60)ವಿಷಯ ಸುಖವನ್ನು ತ್ಯಾಗ ಮಾಡಿ ಯೋಗಸಾಧನೆಯಿಂದ  ಆತ್ಮದಶ೯ನ ಪಡೆದವನೇ ಜ್ಞಾನಿಯು.(ಪುಟ 21)

 

61)ತನ್ನನ್ನು ಚೈತನ್ಯ ಸ್ವರೂಪ ಬ್ರಹ್ಮನೆಂದು ತಿಳಿದವನೇ ಜ್ಞಾನಿಯು.(ಪುಟ 21)

 

62)ಅವನು ವಿಶ್ವವನ್ನೆಲ್ಲಾ  ಪರಮಾತ್ಮ ಭಾವನೆಯಿಂದ ಅವನಿಗೆ ವಿಶ್ವವೇ ತಂದೆ,ತಾಯಿ,ಬಂಧು.(ಪುಟ (22)

 

63)ಪ್ರಾಣಾಯಾಮದಲ್ಲಿ  ಉಸಿರನ್ನು ಒಳಗೆ ಎಳೆದು ಕೊಳ್ಳುವುದೇ ಪೂರಕ.ಹೊರಗೆ ಬಿಡದಂತೆ ಒಳಗೇ ನಿಲ್ಲಿಸಿಕೊಳ್ಳುವುದು ಕುಂಭಕ.ಉಸಿರನ್ನು ಹೊರಗೆ ಬಿಡುವುದು ರೇಚಕ.ಇವು ಮೂರೂ ಸಾಧನೆಯೂ ಒಳಗೆ ನಡೆಯುವ ಪ್ರಯತ್ನ.ಇವು ಹೊರಗಿನ ಸಾಧನೆಯಲ್ಲ.ಕುಂಭಕದಲ್ಲಿ ಉಸಿರು ಒಳಗೇ ನಿಂತಾಗ ಅದು ಸುಷುಮ್ನಾನಾಡಿಯಲ್ಲಿ ಅಭ್ಯಾಸ ಬಲದಿಂದ  ಪ್ರವೇಸಿಸಿ ಮೇಲಕ್ಕೆ ಏರಿದಾಗ ,ಉಂಟಾಗುವ ಆನಂದಾನುಭವವು ಅವಣ೯ನೀಯ. ಬ್ರಹ್ಮಾನಂದದಲ್ಲಿ ಪ್ರಪಂಚವೆಲ್ಲಾ ಮರೆತು ಹೋಗುತ್ತದೆ.ದೇಹವೇ ಮರೆತು ಹೋಗುತ್ತದೆ.ಆಗ ನಾವು ಬೇರೆ ಬ್ರಹ್ಮಲೋಕದಲ್ಲಿ ಇರುತ್ತೇವೆ.(ಪುಟ 22)

 

64)ಜೀವಾತ್ಮನಿಂದಲೇ ಇಹ()ಲೋಕ.ಜೀವಾತ್ಮನು ಪರಮಾತ್ಮನಲ್ಲಿ ಬೆರೆತಾಗ  ಅದೇ ಅವನಿಗೆ ಪರಲೋಕ(ಪರಮಾತ್ಮಲೋಕ)(ಪುಟ 22)

 

65)ಎಲ್ಲಾ ನದಿಗಳೂ ಸಮುದ್ರದಲ್ಲಿ ಸೇರಿ  ಒಂದಾಗುವುದಕ್ಕಾಗಿ  ಹೇಗೆ ಧಾವಿಸಿತ್ತವೆಯೋ ಹಾಗೇ ಎಲ್ಲಾ ವೃತ್ತಿಗಳೂ  ಸವ೯ಸಾಕ್ಷಿಯಾದ  ಆತ್ಮನಲ್ಲಿ ಸೇರಿ  ಒಂದಾಗುವುದಕ್ಕಾಗಿ  ಪ್ರಜ್ಞೆಯ ಸ್ಥೂಲರೂಪವಾದ  Á್ರಣದಲ್ಲಿ -ಒಳಗಿನ ಶ್ವಾಸದಲ್ಲಿ ಲಕ್ಷ್ಯವಿರಿಸಿ ಏಕಾಗ್ರವಾಗಬೇಕು.(ಪುಟ23)

 

66)ಹೊರಗೆ ಕಾಣುವ ಪ್ರಪಂಚವೆಲ್ಲಾ ನಶ್ವರವಾದುದರಿಂದ ಸುಳ್ಳು.ಮನಸ್ಸು ಇಂದ್ರಿಯಗಳಿಂದ ನೋಡುವುದು ಬಾಹ್ಯದೃಷ್ಟಿ.ಮನಸ್ಸು ಹೊರಗೆ ಹರಿಯದೆ ,ನೋಡದೆ,ಒಳಗೇ ಸ್ವಲ್ಪಹೊತ್ತು ಒಂದು ಗುರಿಯಲ್ಲಿ ನಿಂತರೆ ದೃಷ್ಟಿಗೆ ಬೆಳಕಾದ ಬಿಂದುವು ಕಾಣಿಸುತ್ತದೆ.ಅಲ್ಲದೆ ಬಗೆ ಬಗೆಯಾದ ನಾದಗಳೂ ಒಳಗೇ ಕೇಳುತ್ತವೆ.ಸ್ಥೂಲವಾದ ಸಮುದ್ರಘೋಷ,ಮೇಘಗಳ ಘಜ೯ನೆ ಮೊದಲಾದ ನಾದಗಳಿಂದ ಸೂಕ್ಷ್ಮವಾದ ಮದ್ದಳೆ,ಘಂಟೆ ಮೊದಲಾದವುಗಳಲ್ಲಿಯೂ ಅಭ್ಯಾಸವು ಬೆಳೆದು , ಸೂಕ್ಷ್ಮನಾದಗಳನ್ನೂ ಬಿಟ್ಟು,ಸೂಕ್ಷ್ಮವಾದ ಕಿಂಕಿಣೀ ನಾದ,ಕೊಳಲು,ವೀಣಾ ಧ್ವನಿಗಳಲ್ಲಿಯೂ ,ಕೊನೆಯಲ್ಲಿ ಅತ್ಯಂತ ಸೂಕ್ಷ್ಮಾತಿ ಸೂಕ್ಷ್ಮವಾದ ಭ್ರಮರಗಳ-ದುಂಬಿಗಳ-ಗುಂಜಾರವದ  ಓಂಕಾರ ನಿನಾದದಲ್ಲಿಯೂ ಮನಸ್ಸನ್ನು ಕುತೂಹಲದಿಂದಲೂ ಶ್ರದ್ಧಾಸಕ್ತಿಯಿಂದಲೂ ,ನಿಲ್ಲಿಸುತ್ತಾ,ಲಯಗೊಳಿಸುತ್ತಾ ಹೋದರೆ,ಹೊರಗಿನ ಸಮಸ್ತ ಪ್ರಪಂಚವನ್ನೂ ,ದೇಹವನ್ನು ಮನಸ್ಸು ಮರೆತು,ಸವ೯ಚಿಂತೆಗಳನ್ನೂ ಸಮಸ್ತ,ಸಕಲ ಚೇಷ್ಟೆಗಳನ್ನೂ ಬಿಟ್ಟುನಾದಾನುಸಂಧಾನ ಒಂದರಲ್ಲಿಯೇ ಮನಸ್ಸು ಲಯವಾಗಿ ,ಹಾಲಿನಲ್ಲಿ ನೀರು ಸೇರುವಂತೆ  ಚಿದಾಕಾಶದಲ್ಲಿ ಬೆರೆತು, ಲೀನವಾಗುತ್ತದೆ.

ನಾದವು  ಕೇಳುತ್ತಿರ್ವವರೆಗೂ  ಮನಸ್ಸೂ ಇರುವುದೆಂದು  ತಿಳಿಯಬೇಕು.ನಾದವು ಕ್ಷೀಣವಾಗುತ್ತಾ  ಆಗುತ್ತಾ ,ಕೊನೆಯಲ್ಲಿ ಉನ್ಮನಿ ಅಥವಾ ಮನೋನ್ಮನಿಆಗುತ್ತದೆ.ಸಾಧನವು ನೆಳೆದು ಬೆಳೆದು ,ಬಲಿತು, ಅತ್ಯಂತ ಸೂಕ್ಷ್ಮನಾದವು ಕೂಡಾಕೇಳದಂತೆ ನಿಶ್ಯಬ್ದವಾದಾಗ ಮನಸ್ಸೇ ಇಲ್ಲದಂತೆ ಆಗುತ್ತದೆ.ಶಬ್ದವು ಆಕಾಶದ ಗುಣ.ಆದ್ದರಿಂದ ಅದನ್ನು ನಾದನುಸಂಧಾನದಲ್ಲಿರುತ್ತಿರುವಾಗ ಆಕಾಶದಷ್ಟು ಸೂಕ್ಷ್ಮವಾಗಿ ಬಿಡುತ್ತದೆ. ಸ್ವಚ್ಚವಾಗಿರುತ್ತದೆ..ಅಲ್ಲಿಯೇ ಏಕಾಗ್ರತೆ ಬೆಳೆದು ನಾದವೂ ಕ್ಷೀಣವಾಗುತ್ತಾ,ಆಗುತ್ತಾ  ಯಾವ ನಾದವೂ ಕೇಳದಾದಾಗಮನಸ್ಸು ಆಕಾಶಕ್ಕಿಂತಲೂ ಸೂಕ್ಷ್ಮವೂ  ಸ್ವಚ್ಛವೂ ಅದಕ್ಕೆ ಆಧಾರವೂ  ಸವ೯ಮೂಲವೂ  ಆದ ಚಿನ್ಮಾತ್ರ ಸ್ವರೂಪ.-ಚಿದಾಕಾಶ ರೂಪ ಆತ್ಮನಲ್ಲಿ ಲೀನವಾಗಿ  ಅತ್ಮನೇ ಆಗಿರುತ್ತದೆ.ತದ್ವಿಷ್ಣೋಃ ಪರಮಂ ಪದಂ-ಅದೇ ವಿಷ್ಣುವಿನ  ಸವ೯ವ್ಯಾಪಕ ಚೈತನ್ಯದ -ಪರಮಪದ.

 

ಯೋಗಿಯು  ಉನ್ಮನೀ ಅವಸ್ಥೆಯಲ್ಲಿರುವಾಗ  ಶೀತೋಷ್ಣಗಳನ್ನೂ ,ಸುಖ ದುಃಖಗಳನ್ನೂ ತಿಳಿಯದೆ ಸತ್ತವನಂತಿರ್ರುತ್ತಾನೆ. ಜೀವನ್ಮøತನೇ ಜೀವನ್ಮುಕ್ತನು.ಅವನ ದೃಷ್ಟಿvಯು  ಯಾವ ದೃಷ್ಯವನ್ನೂ ಕಾಣದೆಸ್ಥಿರವಾಗಿರುತ್ತದೆ.ಪ್ರಯತ್ನವಿಲ್ಲದೆ ಪ್ರಾಣವಾಯುವೂ  ನಿಶ್ಚಲವಾಗಿರುತ್ತದೆ.ಯಾವ ಆಲಂಬನವೂ ಇಲ್ಲದೆ ಅವನ ಚಿತ್ತವೂ ಸ್ಥಿರವಾಗಿರುತ್ತದೆ.ಜಾಗ್ರನ್ನಿದ್ರಾ ವಿನಿಮ್೯ಕ್ತವಾದ ಆತ್ಮಸ್ವರೂಪದಲ್ಲಿ ಅವನು  ಸ್ಥಿರವಾಗಿ ನೆಲೆಗೊಂಡಿರುತ್ತಾನೆ.ಇದೇ ನಿವಿ೯ಕಲ್ಪ ಸಮಾಧಿ.ಅವನ ಲಕ್ಷ್ಯವು ಪೂಣ೯ವಾಗಿ  ಪರಮಾನಂದ ರೂಪವಾದ  ಆತ್ಮ

ನಲ್ಲಿಯೇ ಇರುತ್ತಾನೆ.(ಪುಟ 24)

 

67) ಯೋಗಿಯು ಸಿದ್ಧಾಸನದಲ್ಲಿ ಕುಳಿತು  ಕಣ್ಣುಗಳನ್ನು ಮುಚ್ಚಿ,ಮನಸ್ಸನ್ನು ಹೊರಗೆ ಹರಿಯಗೊಡದಂತೆ ,ಒಳಗೇ ನಿಲ್ಲಿಸಿ ,ನಾಸಿಕಾಗ್ರದ ಭ್ರೂ ದೃಷ್ಟಿಯನ್ನು ಸ್ಥಿರಮಾಡಿ ನೋಡುತ್ತಿದ್ದರೆ,ಬೆಳಕೂ ,ನಕ್ಷತ್ರಗಳೂ,ಚಂದ್ರಸೂಯ೯ರೂ  ಕಾಣುವರಲ್ಲದೆ, ಆಲಿಸುತ್ತಿದ್ದರೆ ವಿಧ ವಿಧ ನಾದಗಳೂ ಕೇಳುವವು.ಪ್ರಕಾಶವಾದ ಸೂಕ್ಷ್ಮಬಿಂದುವಿನಲ್ಲಿ  ಆದರೂ ಮನzಸ್ಸನ್ನು ನಿಲ್ಲಿಸಬಹುದು.ಇದರಿಂದ ಪ್ರಜ್ಞಾ ಸ್ವರೂಪವಾದ ಕುಂಡಲಿನೀ ಶಕ್ತಿಯು ಮೇಲೆದ್ದುಸುಷುಮ್ನ ನಾಡಿಯ ಮೂಲಕಸ್ವಾಧಿಷ್ಠಾನ ಮೊದಲಾದ  ಒಂದೊಂದೇ ಚಕ್ರವನ್ನು ಭೇದಿಸುತ್ತಾತಲೆಯಲ್ಲಿರುವ ಗ್ರಹ್ಮರಂದ್ರದಲ್ಲಿ ಪ್ರವೇಶಿಸಿದಾಗ ನಿವಿ0ಕಲ್ಪ ಸಮಾಧಿ ಉಂಟಾಗುತ್ತದೆ.ಆಗ ಲಕ್ಷ್ಯವೂ ಭ್ರೂ ಮಧ್ಯದಿಂದ  ಕ್ರಮೇಣ ನಡುನೆತ್ತಿಗೆ  ಹೋಗುತ್ತದೆ.ತಲೆಯು ಚಿತ್ ಪ್ರಕಾಶದಿಂದಲೂ  ಆನಂದದಿಂದಲೂ ತುಂಬುತ್ತದೆ.(ಪುಟ 24)

 

68)ಮನುಷ್ಯನು ತನ್ನ  ಮನುಷ್ಯತ್ವವನ್ನು  ಉಳಿಸಿಕೊಂಡು  ದೇವತ್ವಕ್ಕೆ ಬೆಳೆಯ ಬೇಕಾದರೆ  ದೇವರ ಧ್ಯಾನ ಮಾಡಬೇಕು.ಇಲ್ಲದಿದ್ದರೆ ಅವನು ಪಶುವೇ ಸರಿ.(ಪುಟ 24)

 

6)ತತ್ವಚಿಂತನೇ ಮಾಡುವವನೇ ಸನ್ಯಾಸಿ.ಅವನೇ ಯೋಗಿ.(ಪುಟ 24)

 

70)ಹೊರಗಡೆ ಸ್ಥೂಲವಾದ  ಪ್ರಕೃತಿಯಲ್ಲಿ ಮನಸ್ಸನ್ನಿಟ್ಟವನು ಸ್ತ್ರೀ. ಒಳಗಿನ ಸೂಕ್ಷ್ಮವಾದ ಚೈತನ್ಯದಲ್ಲಿ  ಮನಸ್ಸಿಟ್ಟವನೇ ಪುರುಷ.ಸ್ಥಿರವಾದ ಬುದ್ಧುಯು ಗಂಡು. ಚಂಚಲ ಬುದ್ಧಿಯೇ ಸ್ತ್ರೀ.ಗಂಡು ಹೆಣ್ಣು ಎನ್ನುವುದೆಲ್ಲಾ ಹೊರಗಿಬ ಭೇದವೇ ಹೊರತು ಜ್ಞಾನೇಂದ್ರಿಯಗಳಲ್ಲಾಗಲೀ ,ಪ್ರಾಣದಲ್ಲಾಗಲೀ,ಇಂದ್ರಿಯಗಳಲ್ಲಾಗಲೀ  ಭೇದವಿಲ್ಲ.ಆತ್ಮನಲ್ಲಿ ಯಾವ ಭೇದವೂ ಇಲ್ಲದೆ ,ಎಲ್ಲರ ಆತ್ಮನೂ ಒಂದೇ ಆಗಿದೆ.ಕೇವಲ ದೇಹದಿಂದ ಸ್ರ್ತೀಯಾಗಿರುವವಳು  ಸಹ,ಮನಸ್ಸು ಆತ್ಮನಲ್ಲಿ  ನೆಲೆಯಾಗಿ ನಿಂತಿದ್ದರೆ ಸಧ್ಯಾತ್ಮಿಕವಾಗಿ ಪುರುಷನೆನಿಸುತ್ತಾಳೆ.ಏಕೆಂದರೆ ಮನಸ್ಸನ್ನು ಹೊರಗೆ ಹರಿಯುವುದನ್ನೂ ತಪ್ಪಿಸಿ-ಆತ್ಮನಲ್ಲಿಯೇ ನೆಲೆ ನಿಲ್ಲಿಸುವುದಕ್ಕೆ ಎಲ್ಲಕ್ಕು ಹೆಚ್ಚಿನ  ಅಸಾಧಾರಣ ಪೌರುಷವು ಅವಶ್ಯವಾಗಿದೆ.(ಪುಟ 25)

 

71) ಶರೀರವೆಂಬ ಗುಹೆಯೊಳಗೆ  ಆತ್ಮನು ವಾಸಮಾಡುತ್ತಾನೆ.ಸ್ಥೂಲ,ಸೂಕ್ಷ್ಮ,ಎಂಬ ಉಪಾಧಿಗಳ ಬಂಧನದಿಂದ  ಜೀವಾತ್ಮನು ಇಲ್ಲಿಯೇ ಬಿಡುಗಡೆ ಹೊಂದುವುದೇ  ಇವನು

ಸಾಧಿಸಬೇಕಾದ ಪರಮ ಪುರುಷಾಥ೯.ಒಂದು ಶರೀರದಲ್ಲಿರುವ ಅವಯವಗಳು ಬೇರೆಯಾದರೂ  ಒಳಗಿರುವ ಆತ್ಮನು ಅಖಂಡ -ಏಕ.ಓಂಕಾರವೇ ವಿಶ್ವದಲ್ಲೆಲ್ಲೂ  ತುಂಬಿರುವ ಮಹಾಪ್ರಾಣ.ಆದ್ದರಿಂದ ಇದು 'ಪ್ರಣವ'ಎನಿಸಿದೆ.ರೂಪರಹಿತವಾದ ಓಂಕಾರದಲ್ಲಿ  ಮನಸ್ಸು ನಿಂತರೆ  ದೇಹ ಭಾವನೆಯು ಸ್ವಾಭಾವಿಕವಾಗಿ ಹೋಗುತ್ತದೆ.(ಪುಟ 25)

 

72)ಭಕ್ತಿಯು ಪ್ರಾರಂಭದಲ್ಲಿ ಸ್ವಾಥ೯ಮಯವಾಗಿರುತ್ತದೆ. ಏನಾದರೊಂದು ಪ್ರಾಪಂಚಿಕ ಪಾರಮಾಥಿ೯ಕಫಲವನ್ನು ಪಡೆಯುವ ಬಯಕೆಯಿಂದ ಕೂಡಿರುತ್ತದೆ.ಭಗವದ್ಭಕ್ತಿ .ಸಾಧಕನ ಗೌಣಭಕ್ತಿಯು ಬೇಳೆದು  ಪರಮ ಭಕ್ತಿಯಾಗಿ  ಆತ್ಮಜ್ಞಾನದಲ್ಲಿ ಪಯ೯ವಸಾನವಾದಾಗ ಎಲ್ಲಾ ಆಸೆಗಳೂ ಆತ್ಮಸ್ವರೂಪವೇ ಆಗುತ್ತವೆ.ಆತ್ಮ ಸ್ವರೂಪದಲ್ಲಿ ನಿಂತ ಜ್ಞಾನೀ ಭಕ್ತನಿಗೆ  ಜಗತ್ತೆಲ್ಲಾ ಪರಮಾತ್ಮ ಸ್ವರೂಪವಾಗಿ  ಬೋಧೆಯಾಗುವುದಕ್ಕೆ  ಜಗತ್ತೇ ಗುರುವಾಗುತ್ತದೆ.(ಪುಟ 25)

 

73)ಹಠಯೋಗಿಯಲ್ಲಿ  ತಾನು ಉತ್ತಮನಾಗಬೇಕು,ಕೀತಿ೯ಸಂಪಾದನೆ ಮಾಡಬೇಕು,-ಎಂಬ ಸ್ವಾಥ೯ವಿರುತ್ತದೆ.ತಾನೇ ಸವ೯ಜ್ಞನೂ ಸವ೯ಶಕ್ತನೂ,ಆದ ಪರಮೇಶ್ವರನಾದುದರಿಂದ  ತನಗೆ ಅಸಾಧ್ಯ ಎನ್ನುವುದೇ ಇರಬಾರದು, ಆದ್ದರಿಂದ ನಾಳೆ ಸೂಯ೯ನೇ ಉದಯವಾಗದಂತೆಯೂ ಮಾಡಬಹುದು.ಒಂದು ಮಣ್ಣುಗುಡ್ಡವನ್ನು  ಬಂಗಾರದ ಗುಡ್ಡವನ್ನಾಗಿಯೂ ಮಾಡಬಹುದು."ಅನ್ಯಮಿಂದ್ರಂ ಕರಿಷ್ಯಾಮಿ"ಇನ್ನೊಂದು ಸ್ವಗ೯ವನ್ನೇ ಮತ್ತೊಬ್ಬ ಇಂದ್ರನನ್ನೂ ಸೃಷ್ಟಿಸಬಹುದು.-ಎಂಬೀ ಬಗೆಯಾದ  ಅಲೌಕಿಕ ಸಾಹಸದ ಕಲ್ಪನೆಗಳು ಹಠಯೋಗಿಯಲ್ಲಿರುತ್ತವೆ.ಇದರಿಂದ ಕ್ಷುದ್ರವಾದ ಅಹಂಕಾರ ಬೆಳೆಯುವುದಕ್ಕೆ  ಕಾರಣವಾಗುತ್ತದೆ.ಎಲ್ಲಾ ಅನಥ೯ಕ್ಕೂ ಅಹಂಕಾರವೇ ಮೂಲಕಾರಣವಾದುದರಿಂದ, ದುಃಖಕ್ಕೆ ಅವಕಾಶಕೊಡುವ "ಅಹಂ ಬ್ರಹ್ಮಾಸ್ಮಿ "ಎಂಬ ಭಾವನೆಯೇ ಸರಿಯಲ್ಲ."ಅಹಂ ಬ್ರಹ್ಮಾಸ್ಮಿ " ಎಂಬ ಉಪನಿಷತ್  ವಾಕ್ಯದ ನಿಜವಾದ ಅಥ೯ವನ್ನು ಹಠಯೋಗಿಯು ಗ್ರಹಿಸಲಾರ.ಆದ್ದರಿಂದ "ನೀನೇ ಜಗತ್ತೆಲ್ಲಾ ಆಗಿದ್ದಿದ್ದರಿಂದ ಕ್ಷುದ್ರವಾದ 'ನಾನು'ಎಂಬುದಕ್ಕೆ ಸ್ಥಳವೇ ಇಲ್ಲ.ನಿನ್ನ ಹೊರತು ಇಲ್ಲೀ ನಾನು ಕೂಡ ಸವಾ೯ತ್ಮನಾದ ನೀನೇ ಆಗಿದ್ದಿ.'ಎಂಬ ಜ್ಞಾನೀ ಭಕ್ತನ ಭಾವದಲ್ಲಿ  ಅಹಂಕಾರ ತಲೆ ಎತ್ತುವುದಕ್ಕೇ  ಅವಕಶವಿಲ್ಲ.ಆದರೆ ಜ್ಞಾನೀ -ಭಕ್ತನಾದ ಯೋಗಿಯು  ಎಲ್ಲದನ್ನೂ ಆತ್ಮಭಾವದಿಂದ  ಕಾಣುವುದರಿಂದ  ಎಲ್ಲರನ್ನೂ ಪರಮೇಶ್ವರ ಸ್ವರೂಪ ಯೋಗೀಶ್ವರರೆಂದೇ ತಿಳಿಯುತ್ತಾನೆ.(ಪುಟ26)

 

74)ಯಾವನಾದರೂ ಅರಣ್ಯಕ್ಕೆ ಹೋಗಿ  ಗುಹೆಯಲ್ಲಿ ಕುಳಿತ ಮಾತ್ರಕ್ಕೆ  ಯೋಗಿಯಾಗುವುದಿಲ್ಲ.(ಪುಟ 26).ಫಲಾಪೇಕ್ಷೆಯುಳ್ಳವರು ಕೃಪಣರು.ಫಲಾಪೇಕ್ಷೆ ಬಿಟ್ಟಾಗಲೇ ಶಾಂತಿ.ಆದ್ದರಿಂದ ಫಲಾಪೇಕ್ಷೆಯಿಂದ ಸಹಸ್ರ ತಪಸ್ಸನ್ನು ಮಾಡಿದರೂ  ಪ್ರಯೋಜನವಿಲ್ಲ.ಶಾಂತಿ ಲಾಭವಾಗಲೀ ಆತ್ಮಲಾಭವಾಗಲೀ ಅದರಿಂದ ಆಗುವುದಿಲ್ಲ.(ಪುಟ 27)

 

75)ಹಠಯೋಗದಲ್ಲಿ  ದ್ವೈತಭಾವನೆ ಹೋಗ್ಯವುದಿಲ್ಲ.ಅದ್ವೈತಾನುಭವದ  ರಾಜಯೋಗವೇ ಶ್ರೇಷ್ಠವಾದುದು.ಸಮುದ್ರದಿಂದ ಹುಟ್ಟಿದ ಉಪ್ಪು ,ನೀರಿನಲ್ಲಿ ಕರಗಿ ಐಕ್ಯವಾಗುವಂತೆ  ಪರಮಾತ್ಮನಿಂದ  ಜನಿಸಿದ  ಮಾಯೆ ಪರಮಾತ್ಮನಲ್ಲಿಯೇ ಐಕ್ಯವಾಗುತ್ತದೆ.(ಪುಟ 27)

 

76)ವೇದಾಂತವೆಂದರೆ ಪ್ರಜ್ಞಾ ಸ್ವರೂಪವಾದ ಪ್ರಾಣವನ್ನು ವಶಪಡಿಸಿಕೊಳ್ಳುವುದು. ಅದು ಅಖಂಡ ವಸ್ತುವಿನ ಜ್ಞಾನ.ವೇದ ಮಂತ್ರಗಳನ್ನು ಬರೀ ನಾಲಗೆಯಿಂದ ಉಚ್ಛಾರಣೆ ಮಾಡಬಾರದು.ಉಚ್ಛಾರಣೆ ಕಂಠದಿಂದ ಬರಬೇಕು.ಹೃದಯದಿಂದ ಬರಬೇಕು.ಓಂಕಾರ ಒಂದು ಶಬ್ದವೇ ವೇದ,ಜ್ಞಾನಾಗ್ನಿ,ಸ್ಫೂತಿ೯ಯ ಅಗ್ನಿ,ಆತ್ಮನಿಗೆ ಆಕಾರವಿಲ್ಲ,ವಿಕಾರವಿಲ್ಲ.ಅದು ಅಖಂಡ.ವೇದಾಂತ ಸಿದ್ಧಾಂತಕ್ಕೆ ಗಮ್ಯನಾದ ಆತ್ಮನು,ನಮ್ಮ ಮೂರನೆಯ ಕಣ್ಣಾದ ಅಂತಸ್ಫೂತಿ೯ಗೆ ಗೋಚರನಾಗುತ್ತಾನೆ.ಯೋಗದಲ್ಲಿರುವ ಧಾರಣೆಯು  ವೇದದಲ್ಲಿ ಉಚ್ಛಾರಣೆಯಾಗಿದೆ.ಉಚ್ಛಾರಣೆಯಿಂದಲೇ ವೇದವು ಪ್ರಕಾಶಿಸುತ್ತದೆ.(ಪುಟ28) 

 

77)ಸೈಕಲ್ ಟ್ಯೂಬಿನಲ್ಲಿ ಪಂಪಿನಿಂದ ವಾಯುವನ್ನು ತುಂಬುವಂತೆ  ದೇಹದ ನರನಾಡಿಗಳಲ್ಲೆಲ್ಲಾ ವೇದಾಂತವನ್ನೇ ತುಂಬಬೇಕು.ಮೊದಲು ನಾಡೀ ಶುದ್ಧೀಕರಣ ಮಾಡಿಕೊಂಡು, ಪ್ರಾಣದೊಡನೆ ಮನಸ್ಸೂ ಸೂಕ್ಷ್ಮವಾಗಿ ಮೆಲ್ಲ ಮೆಲ್ಲನೆ ಮೇಲೇರಿ ಬ್ರಹ್ನರಂದ್ರದೊಳಗೆ ಪ್ರವೇಶಿಸಿ ಪರಮಾತ್ಮನಲ್ಲಿ ಸೇರಬೇಕು.ಮನಸ್ಸು -ಬುದ್ದಿಗಳೆರಡೂ ಬೆರೆತು ಆಡುತ್ತಿರಬೇಕು.ಇದೇ ಸಾಧಿಸಬೇಕಾದ ಅತ್ಯುನ್ನತ ಸ್ಥಾನ.ಅಲ್ಲಿರುವ

ಸದಾನಂದವನ್ನೂ ಪರಮಾನಂದವನ್ನೂ ಅನುಭವಿಸಬೇಕು.(ಪುಟ 28)

 

78)ಬೆಂಕಿಕಡ್ಡಿಯನ್ನು ಅದರ ಪಕ್ಕದ ಮದ್ದಿನ ಪಟ್ಟಿಗೆ  ಉಜ್ಜುವುದರಿಂದ ದೀಪಹೊತ್ತಿಸುವಂತೆ  ನಿತ್ಯವೂ ಪ್ರಾಣಾಯಾಮವನ್ನು  ಅಭ್ಯಾಸ ಮಾಡುವುದರಿಂದ ಕುಂಡಲಿನೀ ಅಗ್ನಿಯನ್ನು ಉಜ್ವಲಗೊಳಿಸಬೇಕು.ತಾನು ಪರಿಪೂಣ೯ತೆಯನ್ನು ಪಡೆದು ಇತರರಿಗೆ ಉಪದೇಶಮಾಡಬೇಕು.ಸೂಕ್ಷ್ಮವಾದ ವಿವೇಚನಾ ಶಕ್ತಿಯುಳ್ಳ  ನಿಜವಾದ ಅಧಿಕಾರಿಗೇ ಉಪದೇಶ ಮಾಡಬೇಕು.(ಪುಟ 2).

 

7)ಹಸಿವಿಲ್ಲದವನಿಗೆ ಹೇಗೆ ಊಟವನ್ನು ಮಾಡಿದರೆ  ಅಜೀಣ೯ವುಂಟಾಗುತ್ತದೆಯೋ ಹಾಗೆ ವಿರಕ್ತನೂ ಮುಮುಕ್ಷುವೂ ಅಲ್ಲದ  ಸಂಸಾರಿಗೆ ಉಪದೇಶ ಮಾಡಿದರೆ  ಅಧ್ಯಾತ್ಮಿಕ ಅಜೀಣ೯ವಾಗುತ್ತದೆ.ಹೊಟ್ಟೆ ತುಂಬಿದವನಿಗೆ ಹೋಳಿಗೆಯೂ ಕಹಿ ಆಗುವಂತೆ ಭೋಗಜೀವಿಗೆ ಅಧ್ಯಾತ್ಮ ವಿಚಾರವು ಅಪ್ರಿಯವಾಗಿರುತ್ತದೆ.ಆದ್ದರಿಂದ ವಿರಕ್ತನಾದ  ಜಿಜ್ಞಾಸುವಿಗೇ ಅಧ್ಯಾತ್ಮ ವಿದ್ಯೆಯನ್ನು ಉಪದೇಶ ಮಾಡಬೇಕು.(ಪುಟ2)

 

80)ರೈಲಿನಲ್ಲಿ ಕುಳಿತು ಕಾಶಿಯನ್ನು ಸೇರುವಂತೆ ಜ್ಞಾನ ಸಾಧನದಿಂದ ಚಿದಾಕಾಶವನ್ನು ಸೇರಬೇಕು.ಹೃದಯಕಾಶದಲ್ಲಿರುವ ಚಿದಾಕಾಶವೇ  ಶಾಂತಿನಿಲಯವಾದ ಶಿವಾನಂದ ಪುರಿ.ಇದೇ ಬ್ರಹ್ಮಾನಂದ ಪುರಿ.(ಪುಟ 2)

 

81)ಮನುಷ್ಯನು ತನ್ನನ್ನು ತಾನು ಅರಿಯಬೇಕು.ತನ್ನ ಮನಸ್ಸನ್ನು ಜಯಿಸಿದವನೇ ನಿಜವಾದ ಮನುಷ್ಯ.ಮನೋವ್ಯಾಪಾರಗಳನ್ನೆಲ್ಲಾ  ಸಾಕ್ಷಿಯಾಗಿ ಅರಿಯಬಲ್ಲವನೇ ಮನಸ್ಸನ್ನು ಜಯಿಸಬಲ್ಲವನು.ಅವನು ಮನಸ್ಸು ಇಲ್ಲದವನಾಗುತ್ತಾನೆ.ಅವನೇ ಸನ್ಯಾಸಿ.ಅವನೇ ಯೋಗಿ.ಆತ್ಮದಶ೯ನವಾದವರಿಗೆ ಒಳಗೆ ಹೊರಗೆ ಎಲ್ಲಿ ನೋಡಿದರೂ  ಆತ್ಮನೇ ಕಾಣುತ್ತಾನೆ.(ಪುಟ 2) 

 

82)ಕಾಯಿಯು ಹಣ್ಣಾಗಲು ಕಾಲವೇ ಕಾರಣ.ಕಾಲವು ಅವಶ್ಯಕ.ಸಂಸಾರ ವಾಸನೆಯುಳ್ಳ ಜೀವನು  ಸಜ್ಜನ ಸಹವಾಸದಿಂದಲೂ, ವಿವೇಕ ವೈರಾಗ್ಯಾದಿ ಸತ್ ಸಾಧನಗಳಿಂದಲೂ  ಆತ್ಮಜ್ಞಾನವನ್ನೂ ಪಕ್ವಾವಸ್ಥೆಯನ್ನೂ ಪಡೆಯುವುದಕ್ಕೆ ಕಾಲವು ಅತ್ಯಾವಶ್ಯಕವಾದುದು.ಪ್ರತಿಯೊಬ್ಬ  ಜೀವನೂ ಅವನವನ ಪುರುಷ ಪ್ರಯತ್ನ ಶಕ್ತಿಗೆ ಅನುಗುಣವಾಗಿ  ಬೇರೆ ಬೇರೆ ಕಾಲದಲ್ಲಿ  ಆತ್ಮಜ್ಞಾನದಿಂದ ಮುಕ್ತಿಯನ್ನು ಪಡೆಯುತ್ತಾನೆ.ಯೋಗಿಯು ಆಶ್ರಿತ ಜನರ ಹಿತಕ್ಕಾಗಿ  ಶಿಕ್ಷಣ-ರಕ್ಷಣಗಳನ್ನು ಕೇವಲ ಮನಸ್ಸಿನಿಂದಲೇ ಮಾಡುತ್ತಾರೆ.(ಪುಟ 30)

 

83) ಬಂಧನಕ್ಕಾಗಲೀ ಮೋಕ್ಷಕ್ಕ್ಕಾಗಲೀ  ಮನಸ್ಸೇ ಕಾರಣ. ಒಳ್ಳೆಯದಕ್ಕಾಗಲೀ,ಕೆಟ್ಟದಕ್ಕಾಗಲೀ  ಪುಣ್ಯ ಪಾಪಗಳಿಗಗಲೀ  ಮನಸ್ಸೇ ಕಾರಣ.ಮನಸ್ಸಿನಿಂದಲೆ ಮಾತು, ಕೃತಿ,ರೀತಿ,ನೀತಿ,ಕೀತಿ೯,ಅಪಕೀತಿ೯ಸಕಲ ಸಾಧನೆಯೂ ಮನಸ್ಸಿನಿಂದಲೇ.ಮನಸ್ಸು ಇಲ್ಲವಾದರೆ ಯಾವುದೂ ಇಲ್ಲ.ಸಮಸ್ತಕ್ಕೂ ಮೂಲಕಾರಣ ಮನಸ್ಸೇ. ಸಕಲ ಸೃಷ್ಟಿಯೂ  £ಮನಸ್ಸಿನ ಭ್ರಮೆ,ಕಲ್ಪನೆ.ಮನಸ್ಸಿನ ಮಾಟ ನೋಟದಂತೆ ಜಗತ್ತು ತೋರುತ್ತದೆ.ಹಗೆಯೇ ಪರಮಾತ್ಮನ ಸ್ವರೂಪವನ್ನು  ಶಾಸ್ತ್ರಮಾತ್ರ ದಿಂದ ತಿಳಿದು ಅನುಭವದಿಂದ ಅರಿಯದಿದ್ದರೆ,ಅದರ ಪೂಣ೯ಜ್ಞಾನ ಪಡೆದಂತೆ ಅಲ್ಲ.(ಪುಟ (ಪುಟ 30)

 

84)ನಿಷ್ಕಾಮ ಭಕ್ತಿಯೇ ಅವನನ್ನು ಪಡೆಯುವುದಕ್ಕೆ ಸಾಧನ.ಸಮಸ್ತ ಪ್ರಾಣಿಗಳಿಗೂ  ಪದಾಥ೯ಗಳಿಗೂ  ಆತ್ಮನಾಗಿರುವ ಪರಮಾತ್ಮನು  ಪ್ರತಿಯೊಬ್ಬರ ಹೃದಯಾಕಾಶದಲ್ಲಿಯೇ ನೆಲೆಸಿ ಸಕಲ ಮನೋ ವೃತ್ತಿಗಳಿಗೂ ಸಾಕ್ಷಿಯಾಗಿದ್ದಾನೆ.(ಪುಟ 50)

 

85) ಗಾಢನಿದ್ರೆಯಲ್ಲಿ ಪ್ರತಿಯೊಬ್ಬನ ಅನುಭವಕ್ಕೆ ಬರುವುದು ಸನ್ಮಾತ್ರ ಸ್ವರೂಪ,'ಇರುವಿಕೆ'ಮಾತ್ರ. ಎಚ್ಚರ ಕನಸುಗಳು ಚಿತ್ತಿನ ವಿಲಾಸ,ಅರಿವಿನ ತೋರಿಕೆ.ತೋರಿಕೆಯು ಹುಸಿಯೆಂದು ನಿಶ್ಚಯಿಸಿ ಅರಿವನ್ನು ಇರವಿನಲ್ಲಿ ಕರಗಿಸಿಕೊಳ್ಳಬೇಕು.ಇರುವಿಕೆ ಮಾತ್ರದ (ಸನ್ಮಾತ್ರದ) ಅರಿವಿನಲ್ಲಿ ಪರಮಶಾಂತಿಯಿದೆ.ಇಂಥಾ ಶಾಂತಿಯನ್ನು ಪಡೆದವನೇ ಸ್ವಾಮಿ,ಸನ್ಯಾಸಿ,ಯೋಗಿ,ಗುರು.(ಪುಟ 31)

 

86)ಬ್ರಹ್ಮದಲ್ಲಿ ಯಾರಮನಸ್ಸು ಚಲಿಸುವುದೋ ಅವನು ಬ್ರಹ್ಮಚಾರಿ.ಅವನು ಯಾವಜಾತಿಯವನಾದರೂ  ಬ್ರಹ್ಮಜ್ಞನೇ.ಕಾವಿಯ ವಸ್ತ್ರವನ್ನು ಧರಿಸಿ,ಕೈಯಲ್ಲಿ ದಂಡ ಕಮಂಡಲಗಳನ್ನು ಹಿಡಿದು ವೇದಾಂತದ ಮಾತುಗಳನ್ನಾಡುತ್ತಾ ,ಕಂಡ ಕಂಡವರೊಡನೆ ತಕ೯ವನ್ನೂ ವಾದವನ್ನೂ ಮಾಡಿದ ಮಾತ್ರಕ್ಕೆ ಯಾರೂ ಸ್ವಾಮಿಯಾಗಲಾರರು.(ಪುಟ 31)

 

87)ಬಂಗಾರದಲ್ಲಿ ಬೆಂಕಿಯನ್ನು  ಕರಗಿಸಿ,ಪುಟವಿಟ್ಟರೆ, ಅದರಲ್ಲಿರುವ ಕೊಳೆಯೆಲ್ಲಾ ಸುಟ್ಟು ಹೇಗೆ ಕಳೆಯು ಬೆಳಗುವುದೋ ,ಹಾಗೆ ಒಳಗಿರುವ ಕಾಮಕ್ರೋಧಾದಿ ಮಾಲಿನ್ಯವನ್ನೆಲ್ಲಾ ಜ್ಞಾನಮಯ ತಪಸ್ಸಿನಿಂದ ದಹಿಸಿದರೆ ಅಂಥಾ ಸಾಧಕನಲ್ಲಿ  ಬ್ರಹ್ಮತೇಜಸ್ಸು ಪ್ರಕಾಶಿಸುತ್ತದೆ.(ಪುಟ 31)

 

88)ನಮ್ಮಲ್ಲಿರುವ  ನಿಜವಾದ ಆತ್ಮನನ್ನು  ಸೂಯ೯ನನ್ನು ಮೋಡಗಳು ಮುಸುಕುವಂತೆ ವಿಷಯವಾಸನೆಗಳು  ಮುಚ್ಚಿಕೊಂಡಿವೆ. ಮೋಡಗಳು ಸರಿದೊಡನೆ ಸೂಯ೯ನು ಬೆಳಗುವಂತೆ ವಾಸನೆಗಳು ಹರಿದೊಡನೆ ಆತ್ಮನು ಪ್ರಕಾಶಿಸುತ್ತಾನೆ. ಸಕಲ ಸದ್ಗುಣ ನಿಧಿಯಾದ  ಆತ್ಮನೊಬ್ಬನೇ ಸತ್ಯವಾದುದರಿಂದ,ಒಬ್ಬನು ಎಷ್ಟೇ ದುಷ್ಟನಿದ್ದರೂ  ಈಶ್ವರಾನುಗ್ರಹದಿಂದಲೂ  ಗುರುಕೃಪೆಯಿಂದಲೂ  ಅವನ ಸ್ವಂತ ಪ್ರಯತ್ನದಿಂದಲೂ  ಐದು ನಿಮಿಷಗಳಲ್ಲಿ ಸತ್ಪುರುಷನಾಗಬಹುದು.ಇದಕ್ಕೆ ಗುರೂಪದಿಷ್ಟವಾದ ಓಂಕಾರವೇ ಸಾಧನ.ಓಂಕಾರವೇ ಶಾಂತಿಪುರಿ!ಶಾಂತಿಸಾಗರ!ಶಾಂತಿ ಶಿಖರ!ಓಂಕಾರಾಯ ನಮೋನ್ನಮ!(ಪುಟ 31)

 

8) ಆಹಾರದ ವಿಷಯದಲ್ಲಿ ಕಠೋರ ನಿಯಮವು ಸರಿಯಲ್ಲ.ಸಾಧಕನು ಉಪವಾಸ ಮಾಡಬೇಕೆಂದೇನೂ ಶಾಸ್ತ್ರದಲ್ಲಿ ಹೇಳಿಲ್ಲ.ಆದರೆ ಆಹಾರದಲ್ಲಿ ಹಿತಮಿತವಾಗಿರಬೇಕು. ಹಿತವಾದ ಆಹಾರವನ್ನು ಮಿತವಾಗಿ  ತೆಗೆದುಕೊಳ್ಳಬೇಕೆಂಬುದೇ ನಿಯಮ.ಅದನ್ನಾದರೂ ಸಕಾಲದಲ್ಲಿ ತೆಗೆದುಕೊಳ್ಳಬೇಕೆಂಬ 'ಋತ'ವೂ ಒಂದು ನಿಯಮ.ಹೀಗೆ ಹಿತ-ಮಿತ-ಋತವೇ ಆಹಾರ ನಿಯಮ.ಹಾಗೆಯೇ ಅತಿಯಾಗಿ ನಿದ್ರಿಸ ಬಾರದು.ಉದರದ ಅಧ೯ಭಾಗವನ್ನು  ಗಟ್ಟಿಯಾದ ಆಹಾರದಿಂದ  ತುಂಬಿ,ಉಳಿದ ಅಧ೯ದಲ್ಲಿ ಅಧ೯ವನ್ನು ನೀರಿನಿಂದ ಪೂರೈಸಿ,ಮಿಕ್ಕ ಕಾಲು ಭಾಗವನ್ನು ಅನಿಲಗಳಿಗಾಗಿ ಖಾಲಿ ಬಿಡಬೇಕು.(ಪುಟ 32) 

 

0)ಸಾಧಕನು ಪ್ರಾಣಾಯಾಮ ಮಾಡುವುದು  ತನುಮನಗಳೆರಡರ ಆರೋಗ್ಯಕ್ಕೂ ಆನಂದಕ್ಕೂ  ಹಿತವಾದುದು.ಅಹಂಕಾರವೂ ಫಲಾಪೇಕ್ಷೆಯೂ ಇಲ್ಲದೆ  ಈಶ್ವರ ಪ್ರೀತ್ಯಥ೯ವಾಗಿ  ಯಾವ ಕಮ೯ವನ್ನು ಮಾಡಿದರೂ  ಅದು ಯಜ್ಞವೆನಿಸುವುದರಿಂದ ಅದರಿಂದ ಭಾಧಕವಿಲ್ಲ.(ಪುಟ32)

 

1)ಜಠರಾಗ್ನಿಯನ್ನು ಪ್ರದೀಪನ ಮಡಲು  ನೌಲಿಕ್ರಿಯೆಯೂ ಶೀಷಾ೯ಸನ ಮಯೂರಾಸನಾದಿಗಳೂ ,ಉಡ್ಡಿಯಾನ ಕ್ರಿಯೆಯೂ,ಭಸ್ತ್ರಿಕಾ ಪ್ರಾಣಾಯಾಮವೂ (ಕುಂಭಕರಹಿತವಾದ),ನೀಳವೂ ವೇಗವೂ ಆದ ರಭಸದ ಶ್ವಾಸ ಉಚ್ಛ್ವಾಸಗಳೂ ,ಉಡ್ಡಿಯಾನ ಬಂಧವೂ ,ಬಹೀ ಕುಂಭವೂ ಸಹಾಯವಾಗುತ್ತವೆ. ಸಾಧನೆ ಮಾಡುವವರಿಗೆ ಅಜೀಣ೯ವೆಂಬುದೇ ಇರುವುದಿಲ್ಲ.(ಪುಟ 33)

 

2)ಬಂಗಾರವೇ ಭಂಗಕಾರಿ ಭಯಕಾರಿ,ಮೈಮೇಲೆ ಬಂಗಾರದ ಸರ ಉಂಗುರ, ಮೊದಲಾದ ಆಭರಣಗಳಿರುವಾಗ ಕಳ್ಳರ ಭಯವಿರುತ್ತದೆ.ಅವಿಲ್ಲದಗ ಭಯವೇ ಇಲ್ಲ.ಹಣವೆ ಭಯಕ್ಕೆ ಕಾರಣ.(ಪುಟ 33)

 

3)ಭಯಕ್ಕೆ ಅಜ್ಞಾನ ಜನ್ಯವಾದ  ಮನಸ್ಸಿನ ಭ್ರಮೆಯೇ ಕಾರಣ.ಅಜ್ಞಾನದಿಂದ 'ನಾನು-ಇನ್ನೊಂದು' ತೋರುವವರೆಗೂ  ಭಯವು ಇದ್ದೇಇರುತ್ತದೆ.ಗುರೂಪದೇಶಕ್ಕೆ ಅನುಸಾರವಾದ  ಯೋಗಸಾಧನೆಯಿಂದ ಒಳಗಿನ ಜ್ಞಾನನೇತ್ರವು ತೆರೆದಾಗ  ದ್ವೈತವು (ಬಿಸಿನಿಂದ ಮಂಜಿನಂತೆ ಕರಗಿ)ಕರಗಿ ಎಲ್ಲೆಲ್ಲಿಯೂ ಪರಮಾತ್ಮನೇ ಕಾಣುವುದರಿಂದ ಭಯವು ನಿಮೂ೯ಲವಾಗುತ್ತದೆ. ಆದ್ದರಿಂದ ಗುವ೯ನುಗ್ರಹ ವಿಲ್ಲದಿದ್ದರೆ  ಜಗತ್ತಿನಲ್ಲಿ ಪೂಣ೯ ನಿಭ೯ಯವಾಗಿ  ಬದುಕುವುದು ಸಾಧ್ಯವಿಲ್ಲ,(ಪುಟ 33)

 

4) ಯೋಗಿಗೆ ಪ್ರಾಣವೇ ಅನ್ನ. ಅವನು ಪ್ರಾಣವಾಯುವಿನ ಕುಂಭಕದಿಂದಲೇ  ಹೊಟ್ಟೆಯನ್ನು ತುಂಬಿಸಿಕೊಳ್ಲಬಲ್ಲ."ಪ್ರಾಣಾಪಾನ ಸಮಾಯುಕ್ತಃ ಪಚಮ್ಯನ್ನಂ ಚತುವಿ೯ಧಂ" ಎಂಬ ಗೀತೋಕ್ತಿಯಂತೆ ಶ್ವಾಸ ಉಚ್ಛ್ವಾಸಗಳ ಗತಿಯಿಂದಲೇ  ಆಹಾರವು ಪಚನವಾಗುವುದು.ಆದ್ದರಿಂದಲೇ ಹಸಿವಾಗಿ ಪುನಃ ಆಹಾರವು ಬೇಕೆನಿಸುವುದು.ಉಸಿರಾಟವು ಹೆಚ್ಚಾಗುವುದರಿಂದಲೂ  ವೇಗವಾಗುವುದರಿಂದಲೂ ಹಸಿವು ಹೆಚ್ಚಾಗುತ್ತದೆ.ಆದ್ದರಿಂದ ಯೋಗಿಯು ಸಾಧನಬಲದಿಂದ ಉಸಿರಾಟವನ್ನು ನಿಲ್ಲಿಸಿ ಉದರದಲ್ಲಿ ವಾಯುವನ್ನು ತುಂಬಿ  ಕುಂಭಕ ಮಡುವುದರಿಂದ ಪಚನ ಕ್ರಿಯೆಯು ಮಂದವಾಗುತ್ತದೆ ಅಥವಾ ನಿಲ್ಲುತ್ತದೆ.ಆಗ ವಾಯುವೆ ಅನ್ನವಾಗಿರುವುದರಿಂದ  ಹೊರಗಿನ ಅಹಾರವು ಬೇಕಾಗುವುದಿಲ್ಲ.ಹಸಿವೇ ಆಗುವುದಿಲ್ಲ.ಯೋಗಿಯ ಜೀವಧಾರಣೆಗೂ  ಪ್ರಾಣವೇ ಸಾಕಾಗುತ್ತದೆ.(ಪುಟ 34).

 

5)ಒಂದೊಂದು ಪ್ರಾಣಿಯ ಕಮ೯ವನ್ನು ಆಧರಿಸಿ ಅದರ ಆಯುಮಾ೯ನವು ನಿಶ್ಚಿತವಾಗುವಂತೆ,ಅದರ ಉಸಿರಾಟದ ಶಕ್ತಿಯೂ  ಸಂಖ್ಯೆಯೂ ಇಷ್ಟೇ ಎಂದು ನಿಶ್ಚಿತವಾಗಿರುತ್ತದೆ.ಆದ್ದರಿಂದ ಒಂದು ಗೊತ್ತಾದ ಕಾಲದಲ್ಲಿ  ಸ್ವಾಭಾವಿಕವಾಗಿ ನಡೆಯಬೇಕಾದ  ಉಸಿರಾಟದ ಸಂಖ್ಯೆಯನ್ನು  ಪ್ರಯತ್ನಪೂವ೯ಕವಾಗಿ ಎಷ್ಟು ಕಡಿಮೆ ಮಾಡಿಕೊಳ್ಳುತ್ತೇವೆಯೋ  ಅಷ್ಟು ಪ್ರಾಣಶಕ್ತಿಯು ಉಳಿತಾಯವಾಗಿ ,ಆಯುಷ್ಯದಲ್ಲಿ ಅಷ್ಟೇ ಕಾಲವು ಹೆಚ್ಚಾಗುತ್ತದೆ.(ಪುಟ34)

 

6)ಪ್ರಾಣವನ್ನು ಕೇವಲ ಕುಂಭಕದಿಂದ  ಸುಷುಮ್ನೆಯ ಮೂಲಕ ಒಯ್ದು ಅದರ ಕೊನೆಯಲ್ಲಿ , ನೆತ್ತಿಯಲ್ಲಿರುವ ಬ್ರಹ್ಮರಂದ್ರದಲ್ಲಿ ಸೇರಿಸಿದಾಗ ,ಶಿವ ಶಕ್ತಿಗಳ ಐಕ್ಯವಾಗಿ .ಯೋಗ ಸಮಾಧಿಯಲ್ಲಿ  ಅಕ್ಷಯವಾದ ಆನಂದವು ಅನುಭವವಾಗುತ್ತದೆ.(ಪುಟ 35)

 

7) ರಾಮನಾಮದ ಅಖಂಡ ಸ್ಮರಣೆಯಿಂದ  ಅಂತರಂಗದಲ್ಲಿ ನಿವಿ೯ಷಯ ಆನಂದ ಉಂಟಾಗುತ್ತದೆ.ಇದೇ ನಿಜಾನಂದ,ನಿತ್ಯಾನಂದ,ಪರಮಾನಂದ.ರಾಮನಾಮ ಜಪ ಯೋಗದಿಂದ  ಕುಂಡಲಿನೀ ಶಕ್ತಿಯ ಉತ್ಪಾದನೆಯಾಗಿ ಆನಂದ ಪ್ರಭೆಯು ಪ್ರಸರಿಸುತ್ತದೆ.ರಾಮನೇ ಆತ್ಮ;ಸೀತೆಯೇ ಶುದ್ಧ ಮನಸ್ಸು,ಸೀತೆಯು ರಾಮನನ್ನು ಲಗ್ನವಾಗಿ  ಎಡಬಿಡದೆ ಇದ್ದಂತೆ ಮನಸ್ಸು ಆತ್ಮನಲ್ಲಿ ನಿರಂತರ ಲೀನವಾಗಬೇಕು.ಸೀತಾರಾಮನನ್ನು ಎಡೆಬಿಡದೆ ಅನುವತಿ೯ಸಿದ್ದ ಲಕ್ಷ್ಮಣನಂತೆ ಭಕ್ತನ ಲಕ್ಷ್ಯವು ಸಂತತವಾಗಿ ಆತ್ಮನಲ್ಲಿಯೇ ಇರಬೇಕು.ಕಾಮಕ್ರೋದಾದಿ ದುಷ್ಟಗುಣಗಳಿಂದ ಕೂಡಿದ  ದಶೇಂದ್ರಿಯಗಳೇ ರಾಮನ ಹತ್ತು ಮುಖಗಳು.ಆತ್ಮರಾಮನಲ್ಲಿ ನಿಲ್ಲದಂತೆ  ಮನಸ್ಸೆಂಬ ಸೀತೆಯನ್ನು ಕಾಮ ಕ್ರೋಧಾದಿಗಳಿಂದ ತುಂಬಿದ  ದಶೇಂದ್ರಿಗಳ ರಾವಣ ಶಕ್ತಿಯು ಅಪಹರಿಸುತ್ತದೆ.ಆತ್ಮ ಸಂಬಂಧವಾದ  ದೈವೀ ಸಂಪತ್ತಿನ

 ಶಕ್ತಿಯು ವಿಷಯ ಸಂಬಂಧವಾದ ರಾವಣನ ಅಸುರೀ ಶಕ್ತಿಯನ್ನು ನಿಗ್ರಹಿಸಿ ,ಮನಸ್ಸೆಂಬ ಸೀತೆಯನ್ನು ವಿಮೋಚನೆ ಮಾಡಿ  ವಶಪಡಿಸಿಕೊಳ್ಳುತ್ತದೆ.ತನ್ನಲ್ಲಿ ತಾನು ನಿತ್ಯನಿರಂತರವಾಗಿ  ರಮಿಸಿತ್ತಿರುವುದೇ  ನಿತ್ಯಾರಾಮ ತತ್ವ.(ಪುಟ 35)       

 

8)ಕ್ರಿಮಿ-ಕೀಟ-ಮೃಗ-ಪಕ್ಷಿ ಮೊದಲಾದ ಎಲ್ಲಾ ಪ್ರಾಣಿಗಳಿಗಿಂತಲೂ  ಬುದ್ಧಿಶಕ್ತಿ-ಭಾವನಾ ಶಕ್ತಿಗಳುಳ್ಳ ಮನುಷ್ಯನೇ ಶ್ರೇಷ್ಠನು.ಆದರೆ ಮನುಷ್ಯರಲ್ಲಿಯೂ  ಯಾರು ಪ್ರಪಂಚದ  ಹುಸಿತೋರಿಕೆಯಿಂದ ಮನಸ್ಸನ್ನು  ಹಿಂತಿರುಗಿಸಿ  ಆತ್ಮಚಿಂತನೆಯಲ್ಲಿಯೇ  ನೆಲೆಯಾಗಿ ನಿಲ್ಲಿಸುವರೋ  ಅವರೇ ನಿಜವಾಗಿ ಸವೋ೯ತ್ತಮರು.(ಪುಟ 35)

 

೯೯)ಏಕಾದಶಿ ಎಂದರೆ  ಎರಡನೆಯದಿಲ್ಲದೆ  ಒಂದೇ ಆಗಿರುವ ನಿಜಾತ್ಮನಲ್ಲಿ 

ದಶೇಂದ್ರಿಯಗಳ ಪ್ರಭುವಾಗಿ  ಹನ್ನೊಂದನೆಯ ತತ್ವವಾಗಿರುವ  ಮನಸ್ಸು ರಮಮಾಣವಾಗಿರುವುದು.ಇಂಥಾ ಏಕಾದಶಿಯನ್ನು ಯಾರು  ನಿತ್ಯವೂ ಆಚರಿಸುತ್ತಿರುವರೋ  ಅವರೇ ಮನುಷ್ಯರು.ಏಕಾದಶಿಯ ಉಪವಾಸವೆಂದರೆ  ಪರಮಾತ್ಮನ ಸನ್ನಿಧಿಯಲ್ಲಿ  ಮನಸ್ಸಿನ ವಾಸವೇ ಹೊರತು  ಆಹಾರವನ್ನು ಬಿಟ್ಟು ದೇಹವನ್ನು ದಂಡಿಸುವುದಲ್ಲ.ಹತ್ತು ಇಂದ್ರಿಯಗಳು ,ಒಂದು ಮನಸ್ಸು  ಹನ್ನೊಂದನ್ನೂ ಯಾವನು   ನಿತ್ಯವೂ ಪರಮಾತ್ಮ ಚಿಂತನೆಯಲ್ಲಿ  ತೊಡಗಿರುತ್ತಾರೋ  ಅವರೇ ನಿತ್ಯವೂ ಏಕಾದಶೀ ವ್ರತವನ್ನು ನಡೆಸುವ  ನಿಜವಾದ ಮನುಷ್ಯರು.(ಪುಟ 36)

 

100) ಜಗತ್ತಿನಲ್ಲಿ ಮೃತ್ಯುವೊಂದೇ ಸತ್ಯ.ಅದರ ಶಕ್ತಿಯನ್ನು ಜಯಿಸಿದವರು ಯಾರೂ ಇಲ್ಲ.ಆದ್ದರಿಂದ ಯಾವುದೂ ಸ್ಥಿರವಲ್ಲ,ಯಾವುದನ್ನೂ ನಂಬಬಾರದು.ಯಾವುದರಲ್ಲಿಯೂ ಅತಿಪ್ರೇಮವನ್ನು ಇಡಬಾರದು.ಆಸಕ್ತನಾಗಬಾರದು.ಅಭಿಮಾನಪಡಬಾರದು.(ಪುಟ 37) 

 

101)ಮುಕ್ತಿಗೆ ಭಕ್ತಿ ಬೇಕು.ಭಕ್ತಿಗೆ ವಿರಕ್ತಿ ಬೇಕು.ವಿರಕ್ತಿ ಬರಬೇಕಾದರೆ  ವಿಷಯಾಸಕ್ತಿ ಬಿಡಬೇಕು.ಗುರು, ಗುರೂಪದೇಶ,ಗುರು ಸೇವಾ ಇತ್ಯಾದಿಗಳೆಲ್ಲಾ ಹೊರಗಿನ ಸಾಧನ.ಅನಾಸಕ್ತಿ,ವಿರಕ್ತಿ,ಭಕ್ತಿ ಇವು ಒಳಗಿನ ಸಾಧನ.(ಪುಟ 37)

 

102) ಅಖಂಡ ಜೀವನ್ಮುಕ್ತಿಯನ್ನು ಪಡೆದಿರುವ ಸ್ವಾಭಾವಿಕವಾಗಿ ತೋರಿಕೊಳ್ಳುವ  ವೈರಾಗ್ಯವೇ ಅಖಂಡ ವೈರಾಗ್ಯ.ಯೋಗಾನಂದ ವೈರಾಗ್ಯ,ನೈಜ ವೈರಾಗ್ಯ,ಪರಮ ಪುರುಷಾಥ೯ವಾದ ಮೋಕ್ಷವನ್ನು ಸಂಪಾದಿಸಿರುವ  ಬ್ರಹ್ಮನಿಷ್ಠರಲ್ಲಿ ತೋರಿಕೊಳ್ಳುವ  ವೈರಾಗ್ಯವೇ ಪರ ವೈರಾಗ್ಯ.ಭಕ್ತಿಯೇ ಪರಾಭಕ್ತಿ.ಅದೇ ತತ್ವಜ್ಞಾನದ ಪರಾ ನಿಷ್ಠೆ.ಇದರಿಂದಲೇ ಪರಮಶಾಂತಿ.(ಪುಟ 37)

 

103) ಧಮ೯ವು ಮಹಾ ವಟ(ಬೋಧಿ) ವೃಕ್ಷ.ವೃಕ್ಷಕ್ಕೆ ಶ್ರದ್ದೆಯೇ ಬೀಜ.ಬೇರು ಮೂಲ,ಶುದ್ಧಬುದ್ದಿಯೇ  ವೃಕ್ಷದ ಮಹಾವಿಸ್ತಾರ.ಔನ್ನತ್ಯಗಳು ಸಮೃದ್ಧಿ.ಸಾಧನೆಯೇ ಅದರ

ವೃಧ್ಧಿ.ನಿವಾ೯ಣ ಶಾಂತಿ. ಮುಕ್ತಿಯೇ ಅದರಫಲಸಿದ್ಧಿ.ಶ್ರದ್ದೆ ಎಂದರೆ ವಿಶ್ವಾಸ.ಧಮ೯ಶ್ರದ್ಧೆ ಎಂದರೆ ತನ್ನಲ್ಲಿ ತನಗಿರುವ ವಿಶ್ವಾಸ.ಅನಂತರ ಶಾಸ್ತ್ರದಲ್ಲಿಯೂ ಗುರುವಿನಲ್ಲಿಯೂ ಇರುವ ದೃಢವಿಶ್ವಾಸ.ಪುಣ್ಯಪಾಪ ಕಮ೯ದಲ್ಲಿಯೂ ಕಮ೯ಫಲವಾದ ಲೋಕಾಂತರದಲ್ಲಿಯೂ ಜನ್ಮಾಂತರಗಳಲ್ಲಿಯೂ ಇರುವ ವಿಶ್ವಾಸ.ಶಾಸ್ತ್ರ,ಗುರು,ಕಮ೯,ಕಮ೯ಫಲ,ಈಶ್ವರ, ಬ್ರಹ್ಮಾತ್ಮತತ್ವ  ಇವುಗಳಲ್ಲಿ ವಿಶ್ವಾಸವಿದ್ದರೆ ಮಾತ್ರ ನಮಗೆ ಫಲ ಉಂಟಾಗುವುದು.

ಆದರೆ ಇವೆಲ್ಲವುಗಳ ಸತ್ಯಕ್ಕೆ ಕೇವಲ ವಿಶ್ವಾಸವೇ ಕಾರಣವಲ್ಲ.ವಿಶ್ವಾಸದಿಂದ ಪ್ರಾರಂಭವಾಗಿ,ವಿಚಾರದಿಂದ ಬೆಳೆದು ,ಜ್ಞಾನಸಧನೆಯ ಫಲವಾಗಿಪ್ರಾಪ್ತವಾಗುವ ಸ್ವಾನುಭವವೇ ಪ್ರಮಾಣ.ಆಳವಾದ ಶ್ರದ್ಧೆಯೂ  ಶುದ್ಧ ಬುದ್ದಿಯೂ  ಅನುಭವಕ್ಕೆ ಸಾಧಕವೂ  ಪೋಷಕವೂ ಆಗಿದೆ.(ಪುಟ 38)

 

104)ವಾಸನೆಗಳ ಮೂಟೆಯೇ ಮನಸ್ಸು. ವಾಸನೆಗಳ ಕೋಠಿಯೇ ಮನಸ್ಸು ಮನಸ್ಸಿಲ್ಲದವರಿಗೆ ವಾಸನೆಯೇ ಇಲ್ಲ.ಹಾಗೆಯೆ ವಿಶ್ವಾಸವಿಲ್ಲದವರಿಗೆ  ಯಾವ ಫಲವೂ ಇಲ್ಲ.(ಪುಟ 38)

 

105)ಪಂಚಭೂತಗಳೆಂದು ಪ್ರಸಿದ್ಧವಾಗಿವೆ.ಆದರೆ ನಿಜವಾಗಿ ಇರುವುದು ನಾಲ್ಕೇ ಭೂತಗಳು.ಚತುಭೂ೯ತಗಳು.ನೆಲ,ನೀರು,ಬೆಂಕಿ,ಮತ್ತು ಗಾಳಿ.ಆಕಾಶವು ಭೂತವಲ್ಲ.ಅದು ಏಕ-ಅಖಂಡ.ಹರಡಿರುವುದು ನೆಲ.ನೀರಿನಮೇಲಿರುವುದು ಗಾಳಿ.ಗಾಳಿಯ ಸುತ್ತಲೂ ಮೇಲೂ ಆಕಾಶ.ನೆಲದ ಗಡಿಯೇ ಸಮುದ್ರ.ನೆಲವೇ ಹಾಸಿಗೆ.ಆಕಾಶವೆ ಮನೆ.ಮೇಲೆಗಾಳಿ ಕೆಳಗೆ ನೆಲ.ಭೂಮಿ ಕೆಂಪು, ಗಾಳಿ ಬಿಳುಪು.ಭ್ರೂ ಮಧ್ಯದಲ್ಲಿರುವ ಆಜ್ಞಾ ಚಕ್ರವು  ತ್ರಿಕೋಣವಾಗಿದೆ. ಚಂದ್ರನಾಡಿಯಾದ ಇಡೆಗೂ ಸೂಯ೯ನಾಡಿಯಾದ ಪಿಂಗಳಿಗೂ  ನಡುವೆ ನಕ್ಷತ್ರನಾಡಿಯಾದ ಸುಷುಮ್ನೆ ಇದೆ.ಇದು ಅಖಂಡ.ಇದೇ ಬ್ರಹ್ಮಸ್ಥಾನ.(ಪುಟ 3) 

 

106)ವಾಯು ಅವಿನಾಶಿ.ಸವ೯ವ್ಯಾಪಿ.ಏಕ-ಅಖಂಡ.ಗಾಜಿನ ಬುರುಡೆಗೆ ಮಸಿ ಮುಸುಕಿದ್ದರೆ ಒಳಗಿನ ದೀಪವು ಹೊರಹೊಮ್ಮದಿರುವಂತೆ  ಮನಸ್ಸಿಗೆ  ವಿಷಯವಾಸನೆ ಮುಚ್ಚಿದ್ದರೆ  ಒಳಗಿನ ಚೈತನ್ಯ ಪ್ರಭೆಯು ಹೊರಗೆ ಬೆಳಗುವುದಿಲ್ಲ, ಜ್ಞಾನಿಗಳಿಗೆ ಹೊನ್ನಿಗೂ ಮಣ್ಣಿಗೂ ವ್ಯತ್ಯಾಸ ತೋರುವುದಿಲ್ಲ.ಅವರಲ್ಲಿ ದ್ವೈತ ಭಾವನೆ ಪೂರಾ ಅಳಿಸಿಹೋಗಿರುತ್ತದೆ.ಸಣ್ಣಮಕ್ಕಳಂತೆ ಅವರಿಗೆ ದೇಹಾಭಿಮಾನವಿರುವುದಿಲ್ಲ.ಅವರ ಪ್ರಾಣವು ಸುಷುಮ್ನೆಯಲ್ಲಿ ಸಂಚರಿಸುತ್ತಿರುವುದರಿಂದ  ಅವನು ಸವ೯ದಾ ಬ್ರಹ್ಮಾನಂದದಲ್ಲಿರುತ್ತಾನೆ.(ಪುಟ3)

 

107)ಎಳೆ ನೀರಿನ ತೆಂಗಿನಕಾಯಂತೆ  ನಮ್ಮ ತಲೆ ಇದೆ. ಅದರಲ್ಲಿರುವ ಮೆದುಳೇ ತೆಂಗಿನ ತಿರುಳು.ದ್ರವವೇ ಎಳನೀರು.ನಮ್ಮ ಮಸ್ತಕದಲ್ಲಿ ಚಿದಾಕಾಶವಿದೆ.ಅದೇ ಹೃದಯಾಕಶ.ಉಷುಮ್ನ ನಾಡಿಯ ಕೊನೆಯಲ್ಲಿ  ಬ್ರಹ್ಮರಂದ್ರದಲ್ಲಿ ಸಹಸ್ರದಳ ಕಮಲವಿದೆ.ಮೂಲಾಧಾರದಲ್ಲಿರುವ ಕುಂಡಲಿನೀ ಶಕ್ತಿಯು  ಸಾಧನೆಯ ಬಲದಿಂದ  ಸ್ವಾಧಿಷ್ಠಾನ ಮೊದಲಾದ ಎಲ್ಲ ಚಕ್ರಗಳನ್ನೂ ಭೇದಿಸಿಕೊಂಡು ಸಹಸ್ರಾರವನ್ನು ಸೇರಿದಾಗ  ಬ್ರಹ್ಮನಂದವನ್ನು ಅನುಭವಿಸುತ್ತೇವೆ.(ಪುಟ 40)

 

108)ಕೈಯಲ್ಲಿಯೇ ಇರುವ ವಸ್ತುವನ್ನು ಮರೆತು  ಬೇರೆಲ್ಲಿಯಾದರೂ ಹುಡುಕಿದರೆ  ಹೇಗೆ ಸಿಕ್ಕಲಾರದೋ  ಹಾಗೆ,ನಮ್ಮೊಳಗೇ  ಆತ್ಮನ್ನು ಮರೆತು ಹೊರಗಡೆ  ಹುಡುಕಿದರೆ ದೊರಕಲಾರ.ಅವನನ್ನು ನಮ್ಮೊಳಗೇ ಅರಸಬೇಕು ಅರಿಯಬೇಕು.(ಪುಟ 40)

 

10)ವ್ಯವಹಾರದಲ್ಲಿ ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ  ಸಿಕ್ಕುವುದು ಸ್ವಾಭಾವಿಕವಾಗಿರುವಂತೆ  ಪರಮಾಥ೯ದಲ್ಲಿಯೂ ನಮ್ಮ  ಸ್ವಭಾವಕ್ಕೂ ತೀವ್ರತೆಗೂ  ಅನುಗುಣವಾದ  ಬಗೆಯ ಮುಕ್ತಿಯೇ  ದೊರಕುತ್ತದೆ.(ಪುಟ 41)

 

 110)ತನಗೆ ಕಾರಣಪುರುಷರೂ  ಪೋಷಕರೂ ಆಗಿರುವ ತಂದೆ ತಾಯಿಗಳನ್ನು ಸಣ್ಣ ಮಕ್ಕಳು ಅರಿಯದಿರುವಂತೆ ,ಸವ೯ ಜಗತ್ತಿಗೆ ಕಾರಣನೂ ಪಾಲಕನೂ  ಆದ ವಿಶ್ವಮಾತಾ-ಪಿತ-ದೇವರನ್ನೇ ಅಜ್ಞಾನಿಗಳು ಅರಿಯರು.(ಪುಟ 41)

 

111)ಅಕ್ಕಿಯಿಂದ ಹಲ್ವ ಮೊದಲಾದ  ಮಧುರ ಭಕ್ಷ್ಯಗಳನ್ನು ಮಾಡಿದಮೇಲೆ ಭಕ್ಷ್ಯಗಳನ್ನು ಹೇಗೆ ಅಕ್ಕಿಯೆಂದು ಕರೆಯುವುದಿಲ್ಲವೋ   ಹಾಗೆ ಬ್ರಹ್ಮಚಿಂತನೆಯಿಂದ  ಪರಿಪೂಣ೯ ಪರಿವತ೯ನೆ ಹೊಂದಿದ  ಅಂತಃಕರಣವುಳ್ಳ  ಜ್ಞಾನಯೋಗಿಯಾದ ಅವಧೂತನನ್ನು  ಮನುಷ್ಯನೆಂದು ಕರೆಯುವುದಿಲ್ಲ.(ಪುಟ 41)

 

112) ನಾವು ಸಂಸಾರದಲ್ಲಿದ್ದರೂ ಗೇರುಹಣ್ಣಿನ ಬೀಜದಂತೆ ನಮ್ಮ ಮನಸ್ಸು ಅನಾಸಕ್ತವಾಗಿ ಸಂಸಾರದಿಂದ ಹೊರಗೇ ಇರಬೇಕು.ನಾವು ಅನುಭವಿಸುವ ಆನಂದವನ್ನು ಇತರರಿಗೆ ಹಂಚಬೇಕು.(ಪುಟ 42)

 

113)ರೈಲು ಒಂದು ಸ್ಠೇಷನ್ ಬಿಟ್ಟು  ಇನ್ನೊಂದು ಸ್ಟೇಷನ್ನಿಗೆ ಹೊರಟ ಕೂಡಲೇ ಮುಂದಿನ ಸ್ಟೇಷನ್ನಿಗೆ ತಂತಿಯ ಮೂಲಕ ವತ೯ಮಾನವೂ ಬರುತ್ತದೆ.ಅಲ್ಲಿ ಗಂಟೆಯೂ ಬಾರಿಸುತ್ತದೆ.ಹೀಗೆ ಚಿತ್ತವು ಏಕಗ್ರವಾಗಿ ,ಕುಂಡಲಿನೀ ಶಕ್ತಿಯು  ಕೆಳಗಿನ ಚಕ್ರಗಳನ್ನು ಬಿಟ್ಟು  ಮೇಲಿನ ಬ್ರಹ್ಮರಂದ್ರದಲ್ಲಿ  ಸೇರುವುದಕ್ಕೆ  ಮೊದಲು ಯೋಗಿಗೆ ಘಂಟಾನಾದ  ಬಿಂದುನಾದಗಳು ಉಂಟಾಗುತ್ತವೆ.(ಪುಟ 42)

 

114)ತಾನು ಓದುತ್ತಿರುವ ವಗ೯ದಿಂದ ಉತ್ತೀಣ೯ನಾದ ವಿದ್ಯಾಥಿ೯ಗೆ ಹಿಂದಿನ ವಗ೯ದಪುಸ್ತಕಗಳ ಅವಶ್ಯಕತೆ ಇಲ್ಲದಿರುವಂತೆ,ಪೂಣ೯ತೆಯನ್ನು ಪಡೆದ ಯೋಗಿಗೆ  ಯಾವ ಸಾಧನೆಯ ಅವಶ್ಯಕತೆಯೂ ಇಲ್ಲ.(ಪುಟ 42)

 

115)ದೇಹ ನಾನೆಂಬ  ಜಗತ್ತು ಸತ್ಯವೆಂಬ ಮನಸ್ಸಿನ ಭ್ರಮೆಯಾದರೂ ಸ್ಥಿರವಾದುದಲ್ಲ.ಶಾಶ್ವತ ಶಿವ ನಾನೆಂಬ ಅರಿವೇ ಶಾಶ್ವತಜ್ಞಾನ(ಪುv 42)

 

116)ಪ್ರಾಪಂಚಿಕ ಸುಖವನ್ನು ಕಡೆಗಣಿಸದ ಹೊರತು  ಪಾರಮಾಥಿ೯ಕ ಸುಖವನ್ನು ಅನುಭವಿಸಲಾರೆವು.(ಪುಟ 43)

 

117) ಪ್ರಪಂಚದಲ್ಲಿ ಹೇಗೆ ಕಾರಣವಿಲ್ಲದೆ ಕಾಯ೯ವಿಲ್ಲವೊ  ಹಾಗೇ ಗುವ೯ನುಗ್ರಹ ವಿಲ್ಲದೆ  ಆತ್ಮಜ್ಞಾನ ವಾಗುವುದಿಲ್ಲ. ಕತ್ತಲೆಯಲ್ಲಿ ಬೆಳಕನ್ನೂ,ಅಜ್ಞಾನದಲ್ಲಿ ಜ್ಞಾನವನ್ನೂ ಭೇದದಲ್ಲಿ ಅಭೇದವನ್ನೂ  ಅನೇಕದಲ್ಲಿ ಏಕವನ್ನೂ  ಖಂಡದಲ್ಲಿ ಅಖಂಡವನ್ನೂ  ದ್ವೈತದಲ್ಲಿ ಅದ್ವೈತವನ್ನೂ  ಕಂಡುಕೊಳ್ಳುವುದೇ ಜ್ಞಾನ.ಮನಸ್ಸಿನಲ್ಲಿ ವಂಚನೆಯನ್ನು ಬೆಳೆಸಿ  ಹೊರಗೆ ಕೀತಿ೯ಯನ್ನು ಗಳಿಸಿದರೆ  ಪ್ರಯೋಜನವಿಲ್ಲ.ಯೋಚಿಸಿದಂತೆ ಮನಸ್ಸಿನಲ್ಲ್ಯೂ  ಕೃತಿಯಲ್ಲಿಯೂ ಬರಬೇಕು(ಪುಟ 43)  

 

118) ಮಾತಿನಿಂದ ಆಡಿದಂತೆ ಮಾಡಬೇಕು. ಮಾಡಿದಂತೆ ಆಡಬೇಕು.(ಪುಟ 43)

 

11)ಆದ್ದರಿಂದ ಯೋಗಸಾಧನೆಯಿಂದ  ಪ್ರಾಣವೂ  ಪ್ರಜ್ಞೆಯೂ ಪರಿಶುದ್ಧವಾಗಿರುವಂತೆ  ಈಗಲೇ ಪ್ರಯತ್ನ ಮಾಡಬೇಕು.ಅಂದರೆ ಸಾಯುವುದರೊಳಗೆ  ಪ್ರಾಪಂಚಿಕ ಸುಖದ ರಾಜರಸ್ತೆಯನ್ನು ಬಿಟ್ಟು  ಪಾರಮಾಥಿ೯ಕ ಸುಖದ ರಾಜರಸ್ತೆಯನ್ನು ಸೇರಬೇಕು(ಪುಟ 43)

 

120)ಶ್ರೀಮಂತರ ಅಥವ ಅಧಿಕಾರಿಗಳ  ಅನುಗ್ರಹವನ್ನು ಪಡೆಯುವುದಕ್ಕಾಗಿ  ಪ್ರಾಪಂಚಿಕ ಭೋಗ ಭಾಗ್ಯಗಳನ್ನು ಬಯಸುವವರು  ಅನೇಕರು ಬಾಯಿ ಬಾಯಿ ಬಿಡುತ್ತಿರುತ್ತಾರೆ.ಆದರೆ ಆನಂದ ಸಾಮ್ರಾಜ್ಯವನ್ನೇ ನೀಡುವ  ಭಗವದನುಗ್ರಹಕ್ಕಾಗಿ ಕಾತರಿಸುವವರು ಯಾರೂ ಇಲ್ಲ.(ಪುಟ 43)

 

121)ಶಿವನು ಕೊಡುವ ಕಷ್ಟಕಾಪ೯ಣ್ಯಗಳಿಂದ  ನಮಗೆ ವಿವೇಕ ವೈರಾಗ್ಯಗಳು ಉಂಟಾಗುವುದರಿಂದ  ಅವು ನಮ್ಮ ಶ್ರೇಯಸ್ಸಿಗೆ ಕಾರಣವಾಗುತ್ತವೆ.ಅವಕ್ಕಾಗಿ ಭಯಪಡುವುದುನಮ್ಮ ಮನಸ್ಸಿನ ಭ್ರಾಂತಿ(ಪುಟ 43)

 

122)ವಿಶ್ವಪಾ ್ರಣವಾದ ಪ್ರಣವ-ಓಂಕಾರದಿಂದಲೇ ಜಗತ್ತಿನ ಸೃಷ್ಟಿ,ಸ್ಥಿತಿ,ಲಯಗಳು ನಡೆದಿವೆ.ಅದ್ದರಿಂದ ಓಂಕಾರವೇ ಪರಮಾತ್ಮ. ಸಮಸ್ತವೂ ಓಂಕಾರವೇ.ಮನೋಲಯವಾಗಿ ಮುಕ್ತಿಯಾಗುವುದಕ್ಕೂ  ಓಂಕಾರವೇ ಸಾಧನ,ಅದು ಅಖಂಡವಾದುದು.(ಪುಟ44)

 

123)ಆಸೆಯೇ ದುಃಖಕ್ಕೆ ಕಾರಣ.ಆಸೆಗೆ ಅಜ್ಞಾನತುಂಬಿದ ಮನಸ್ಸೇ ಕಾರಣ.ಮನಸ್ಸು ಓಂಕಾರ ಆತ್ಮನಲ್ಲಿ ಲೀನವಾದರೆ ಆಸೆಯೂ ಇಲ್ಲ.ದುಃಖವೂ ಇಲ್ಲ.ಓಂಕಾರವೇ ಜ್ಞಾನಜ್ಯೋತಿ,ಪರಂಜ್ಯೋತಿ, ಸ್ವಯಂಜ್ಯೋತಿ.(ಪುಟ44)

 

124)ದೇವರು ನಮ್ಮ ಹೃದಯಾಕಾಶದಲ್ಲಿಯೇ ಇದ್ದಾನೆ.(ಪುಟ44)

 

125)ಉಪನಯನವೆಂದರೆ ,ವೇದ ಶಾಸ್ತ್ರಗಳ ಅಧ್ಯಯನಕ್ಕಾಗಿಯೂ  ಯೋಗಾಭ್ಯಾಸಕ್ಕಾಗಿಯೂ  ಗುರುವಿನ ಸಮೀಪಕ್ಕೆ ಹೋಗಲು ಪಡೆಯಬೇಕಾದ  ಒಂದು ಮುಖ್ಯವಾದ ವೈದಿಕ ಸಂಸ್ಕಾರ.ಪ್ರಪಂಚದ ಅನೇಕ ದೃಷ್ಯಗಳಲ್ಲಿ  ಹೆಚ್ಚು ಕಡಿಮೆ ಇಲ್ಲದೆ ಸಮನಾಗಿ ವ್ಯಾಪಿಸಿಕೊಂಡಿರುವ  ಏಕೈಕವಾದ ಪರಮಾಥ೯ ತತ್ವವನ್ನು ಅಧ್ಯಾತ್ಮಿಕ ದೃಷ್ಟಿಯೇ ಉಪನಯನದ ನಿಜವಾದ ಅಥ೯.(ಪುಟ 45)

 

126)ಪರಮಾತ್ಮನೊಬ್ಬನೇ ಸತ್ಯ. ಮಿಕ್ಕ ಪ್ರಪಂಚವೆಲ್ಲಾ  ಮಿಥ್ಯ ಎನ್ನುವ ವಿಶ್ವಾಸ,ವಿಜ್ಞಾನ ನಮ್ಮಲ್ಲಿ ಸ್ಥಿರವಾಗಿ ಸ್ಥಾಪಿತವಾಗಬೇಕು.ಇದೇ ತಾರಕವಾದ ಬ್ರಹ್ಮವಿದ್ಯೆಯ ಉಪಾಧಿ(ಪುಟ 45)

 

127)ಸ್ತೀಯರಲ್ಲಾಗಲೀ  ಪುರುಷರಲ್ಲಾಗಲೀ  ಯಾವ ಪ್ರಾಣಿ ಪದಾಥ೯ಗಳಲ್ಲಾಗಲೀ  ಇರುವ ಆತ್ಮಚೈತನ್ಯವು ಒಂದೇ.ಆನಂದವೇ ಅದರ ಸ್ವರೂಪ.(ಪುಟ 45)

 

128)ಸಮವೆಂದರೆ ಬ್ರಹ್ಮ.ವಿಷಮವೆಂದರೆ ಜಗತ್ತು.ಸಮದೃಷ್ಟಿ ಎಂದರೆ ಬ್ರಹ್ಮದೃಷ್ಟಿ.ಬ್ರಹ್ಮದೃಷ್ಟಿಯು ಸ್ಥಿರವಾಗುವುದೇ ಮುಕ್ತಿ(ಪುಟ 47)

 

12)ಸಮಭಾವವೇ ಯೋಗ ಸಮದೃಷ್ಟಿಯೇ ಯೋಗ.ಯೋಗಫಲವೇ ಮುಕ್ತಿ.(ಪುಟ 47)

 

130)ಅಜ್ಞಾನನಿದ್ರೆ ಬರುವುದು  ಸಾಮಾನ್ಯ ನಾಡಿಯಲ್ಲಿ.ಜ್ಞಾನನಿದ್ರೆ ಇರುವುದು ಸುಷುಮ್ನಾ ನಾಡಿಯಲ್ಲಿ.(ಪುಟ 47)

 

131)ಪ್ರಾಣವನ್ನು ಒಳಗೆ ತುಂಬಿ ನಿಲ್ಲಿಸುವ ಕುಂಭಕದಿಂದಲೇ ಒಳಗಿರುವ ಸಪಿ೯ಣಿಯಾದ ಕುಂಡಲಿನೀ ಶಕ್ತಿಯು  ನಿದ್ರೆಯಿಂದೆಚ್ಚೆತ್ತು ,ಉರಿದೆದ್ದು ಸಹಸ್ರಾರಕ್ಕೆ ಸೇರಿ ಜ್ಞಾನನಿದ್ರೆಯಲ್ಲಿ ಶಾಂತವಾಗಬೇಕು.ಧ್ಯಾನಸಹಿತವಾದ ಪ್ರಾಣಾಯಾಮದಿಂದ ನಾಡಿಗಳು ಶುದ್ಧವಾಗುವವು.(ಪುಟ 48)

 

132)ಸವ೯ವ್ಯಾಪಿಯಾಗಿರುವ  ಮುಖ್ಯಪ್ರಾಣವುವಿಶ್ವಪ್ರಾಣವಗಿದೆ.ಅದು ಏಕ ಅಖಂಡ.ಎಲ್ಲ

ರಲ್ಲಿಯೂ ಒಂದೇ.ಚರ ಅಚರ ಎಂಬ ಭೇದವು ಸ್ಥೂಲದಲ್ಲಿ ಮಾತ್ರ.ಚರಾಚರ ಜಗತ್ತಿನಲ್ಲಿ ಸಮವಾಗಿ ತುಂಬಿರುವ ಸೂಕ್ಷ್ಮವಾದ ಪ್ರಾಣದಲ್ಲಿ ಆಭೇದವಿಲ್ಲ(ಪುಟ 48)

 

133) ಚಿತ್ತವನ್ನು ಆಶಾಪಾಶವಾಗಿ -ಹೊರಗೆ ಹರಿಯಲು ಬಿಡದೆ ಒಳ ತಿರುಗಿಸಿ ನೋಡಬಲ್ಲ  ಯೋಗಿಯು ತನ್ನೊಳಗೇ ಜಗತ್ತನ್ನೂ ಜಗತ್ತಿನ ತುಂಬಾ ತನ್ನನ್ನೂ ಕಾಣುತ್ತಾನೆ.ಓಂಕಾರವು ಸೋಪಾಧಿಕವಾದರೆ  ಪ್ರಣವವಾಗುತ್ತದೆ."ಓಂ ಇತಿ ಬ್ರಹ್ಮ,ಓಂ ಇದಂ ಸವ೯ಂ".(ತೈ.)(ಪುಟ 48)

 

134) ಓಂಕಾರರೂಪ ಸವೇ೯ಶ್ವರನ ಭಯದಿಂದಲೇ  ಎಂಬಂತೆ ಅತ್ಯಂತ ಪ್ರಬಲವಾದ ಪ್ರಳಯಕಾರಕ ವಾಯುದೇವನೂ ಕೂಡ ಪ್ರಕ್ಷುಬ್ಧನಾಗದೆ  ಲೋಕಗಳ ಸುಸ್ಥಿತಿಗೆ ಹಿತವಾಗಿಯೇ ತನ್ನ ಮಿತಿಯಲ್ಲಿ ಬೀಸುತ್ತಾನೆ.ಚರಾಚರ ಜಗತ್ತಿಗೆ  ಆತ್ಮನಾದ ಸೂಯ೯ದೇವನೂ  ಸಹ ಪ್ರಪಂಚ ಸ್ಥಿತಿಗೆ ಕಾರಣವಾಗಿ  ಸಕಾಲದಲ್ಲಿ ಉದಯಾಸ್ತಗಳನ್ನು  ಪಡೆಯುತ್ತಾನೆ.(ಪುಟ 4)

 

135)ವಿಶ್ವ ಪ್ರಕ್ರತಿಯ  ಕಠೋರ ಋತಧಮ೯ದ  ಶಾಸಕನಾದ ಪರಮೇಶ್ವರನ ದಪ೯ದಿಂದಲೇ ದೇವೇಂದ್ರನು ಅತಿವೃಷ್ಟಿ ಅನಾವೃಷ್ಟಿಗಳನ್ನುಂಟು ಮಾಡದೆ ಲೋಕನಾಶಕವಾಗದೆ ಪಾಲಕನಾಗಿಯೇ ಇದ್ದಾನೆ.(ಪುಟ 4)

 

136)ಆದ್ದರಿಂದ (ಸೃಷ್ಟಿ,ಸ್ಥಿತಿ,ಲಯಕತ೯ನಾದ)ಸವೇ೯ಶ್ವರನಿಗೆ ಪ್ರತೀಕವಾದ ಓಂಕಾರವು ಅತ್ಯಂತ ಸರಿ.ಇಂಥಾ ಸವ೯ ಸಮಥ೯ವಾದ ತತ್ವವನ್ನು  ತನ್ನ ಚಿದಾಕಾಶವಾದ  ಆತ್ಮರೂಪದಿಂದ ಅನುಭವಮಾಡಿ ಆನಂದ ಪಟ್ಟವನೇ ನಿಜವಾದ ಪುರುಷ ಎನಿಸುತ್ತಾನೆ.ಅದೇ ಮುಕ್ತಿ.(ಪುಟ 4)

 

137)ಭಗವಂತನಲ್ಲಿರುವ ನಿಷ್ಕಾಮ ಪ್ರೇಮವೇ ಭಕ್ತಿ.(ಪುಟ 4)

 

138) ನಿಜವಾದ  ಧ್ಯಾನವೇ ನಿಜವಾದ ಜಪ.ಆತ್ಮ ಭಾವನೆಯೇ,ಆತ್ಮ ಚಿಂತನೆಯೇ, ಆತ್ಮಾನುಸಂಧಾನವೇ ನಿಜವಾದ ಜಪ.(ಪುಟ4)

 

13)ಕತೃ೯ತ್ವ ಭಾವನೆಯಿಂದ ಮಾಡಿದ ಕಮ೯ವು ಬರೀ ಕಮ೯ವಾಗುತ್ತದೆ.ಕಮ೯ವು ಅಧ್ಯಾತ್ಮ ಸಾಧನೆಗೆ ಸಹಾಯಕವಾಗಬೇಕಾÀದರೆ ಕಮ೯ಯೋಗವಾಗಬೇಕು.ತಾನು ಮಾಡಿದೆನೆಂಬ ಅಭಿಮಾನ ವಿಲ್ಲದೆ , ಕಮ೯ಕ್ಕೆ ಇಂಥಾ ಫಲವಾಗಬೇಕೆಂಬ  ಆಸೆಯಿಲ್ಲದೆ ಶೀತೋಷ್ಣ,ನಿಂದಾ ಸ್ತುತಿ,ಮಾನಾಪಮಾನ,ಜಯಾಪಜಯ,ಸುಖದುಃಖ ಮೊದಲಾದ ದ್ವಂದ್ವಗಳನ್ನು ಲೆಕ್ಕಿಸದೆ ಈಶ್ವರ ಪ್ರೀತ್ಯಥ೯ವಾಗಿ ಮಾಡುವ ಸ್ವಾಥ೯ರಹಿತವೂ  ಲೋಕ ಹಿತಕಾರಿಯೂ  ಆದ ಕಮ೯ವು ಕಮ೯ಯೋಗವಾಗುತ್ತದೆ.ಕಮ೯ಯೋಗದಲ್ಲಿ ಹೊರಗಿನ ಕಮ೯ಕ್ಕಿಂತ ಅದನ್ನು ನಡೆಸುವ ಒಳಗಿನ ಮನೋಭಾವನೆ ಮುಖ್ಯವಾದುದು.ಏಕೆಂದರೆ  ಬಂಧಮೋಕ್ಷಗಳಿಗೂ  ಸುಖದುಃಖಗಳಿಗೂ ,ಶಾಂತಿ ಅಶಾಂತಿಗಳಿಗೂ  ಮನಸ್ಸೇ ಕಾರಣ.ಕಮ೯ಯೋಗದ  ಸಾಧನೆಯಿಂದ  ಮನಸ್ಸು ರಾಗದ್ವೇಷಾದಿ  ದೋಷಗಳನ್ನು ಕಳೆದುಕೊಂಡು ಭಕ್ತಿಯೋಗವನ್ನೂ ಧ್ಯಾ ನಯೋಗವನ್ನೂ  ಬೆಳೆಸುವುದಕ್ಕೆ ಸಹಾಯವಾಗುತ್ತದೆ.(ಪುಟ 50)

 

140)ಸೂಕ್ಷ್ಮವಾದ ವಿವೇಚನಾ ಶಕ್ತಿಯೇ ಶುದ್ಧವಾದ ಬುದ್ಧಿಶಕ್ತಿ.ಭಕ್ತಿಗೂ,ವಿರಕ್ತಿಗೂ, ಮುಕ್ತಿಗೂ ಆತ್ಮಅನಾತ್ಮ  ವಿವೇಕವೇ ಸಾಧನ.ವಿವೇಕದಿಂದ ಸಾಕ್ಷಿಸ್ವರೂಪದ ಅನುಭವವಾಗುತ್ತದೆ.ಶಾಂತಿಗೂ ,ತೃಪ್ತಿಗೂ ಸಾಕ್ಷಿಸ್ವರೂಪದ ಅಭ್ಯಾಸವೇ(ಜ್ಞಾನವೇ)ಸಾಧನ.ಮನಸ್ಸಿನಚಾಂಚಲ್ಯಕ್ಕೆ  ಅದರ ಸ್ವಾಥ೯ಪರತೆಯೇ ಕಾರಣ.ಸ್ವಾಥ೯ಪರತೆಗೆ ಅವಿವೇಕವೇ ಕಾರಣ.ಆದ್ದರಿಂದ  ನಿಶ್ಚಲವಾದ  ಮನಸ್ಸಿನ ಆತ್ಮಶಕ್ತಿಗೆ  ವಿವೇಕವೇ ಕಾರಣ.(ಪುಟ 50)                      

 

141)ಹೊರಗಣ್ಣಿಗೆ ಕಾಣುವುದೆಲ್ಲಾ ನಶ್ವರವಾದ ಜಗತ್ತು.ಒಳಗಣ್ಣಿಗೆ ಕಾಣುವುದೆಲ್ಲಾ ಶಾಶ್ವತವಾದ ಬ್ರಹ್ಮ.ಮಾಯೆಯು ಅಜ್ಞಾನದಿಂದ  ಕಲ್ಪಿತವಾಗಿತೋರುತ್ತಿದೆ.(ಪುಟ 50)

 

142)ಸ್ಥೂಲ ಬುದ್ಧಿಯೇ ಪಶುಬುದ್ಧಿ.ಅದು ಕಡಿವಾಣವಿಲ್ಲದ ಕುದುರೆಯಂತೆ ಸ್ವೇಚ್ಛಾ ಪ್ರವೃತ್ತಿ ಉಳ್ಳದ್ದು.ಪರಿಶುದ್ಧವಾಧ ಸೂಕ್ಷ್ಮ ಬುದ್ದಿಯು ಗುವ೯ನುಗ್ರಹವೇ ಸರಿ.ಕೊಟ್ಟವನಿಗೆ ಕೊಡದವನು ಮನುಷ್ಯನೇ ಅಲ್ಲ.ಆದ್ದರಿಂದ ಪರಮಾತ್ಮನಿಂದ ಅನುಗ್ರಹಿಸಲ್ಪಟ್ಟ ಅತ್ಯಂತ ಅಮೂಲ್ಯವೂ  ಅಮೋಘವೂ ಆದ  ನಮ್ಮ ಆತ್ಮನನ್ನು  ಪುನಃ ಅವನಲ್ಲಿಯೇ ಸಂಪೂಣ೯ವಾಗಿ ಸಮಪಿ೯ಸಬಲ್ಲವನೇ ನಿಜವಾದ ಮನುಷ್ಯನು.(ಪುಟ 51)

 

143)ಹೇಗೆ ಅಡಿಗೆ ಮಾಡದೆ ಊಟಮಾಡಲಾಗುವುದಿಲ್ಲವೋ ಹಾಗೆ ಪ್ರಯತ್ನವಿಲ್ಲದೆ ಫಲವು ದೊರೆಯುವುದಿಲ್ಲ.(ಪುಟ 51)

 

144) ಪುನಃ ಮನುಷ್ಯ ಜನ್ಮ ಬಂದೇ ಬರುವುದೆಂಬ  ಭರವಸೆಯಿಲ್ಲ.ಪ್ರಾರಬ್ಧಕಮ೯ದಿಂದ   ಮನುಷ್ಯೇತರ ಪ್ರಾಣಿಯ ದಾಹವು ಬಂದರೆ ,ಪರಮಾಥ೯ ಸಾಧನೆಯ ಮಾತೆಲ್ಲಿಯದು?(ಪುಟ 51)

 

145)ಜಗತ್ತಿನ ಸಮಸ್ತ ವ್ಯವಹಾರಕ್ಕೂ 'ನಾನು'"ನನ್ನದು' ಎಂಬುದೇ ಆಧಾರ.ಮುಖ್ಯಕೇಂದ್ರ.ಇದರ ಗುಟ್ಟನ್ನೇ ವಿಚಾರ ಮಡದೆ  ಯಾವ ಸಾಧನೆ ಮಾಡಿದರೂ,ಲೌಕಿಕವಾಗಿ ಎಷ್ಟು ಸಾಧನೆ ಮಾಡಿದರೂ ವ್ಯಥ೯ವೇ ಸರಿ.(ಪುಟ 52)

 

146) ಸಾವು ಮಾತ್ರ ಯಾಗಿಗೂ ತಪ್ಪಿದ್ದಲ್ಲ. ಸಾವಾದರೂ ಯಾವನಿಮಿಷ ಬರುವುದೆಂಬ ನಿಶ್ಚಿತಜ್ಞಾನ ಯಾರಿಗೂ ಇಲ್ಲ.(ಪುಟ 52)

 

147)ಓಂಕಾರಧ್ಯಾನದಿಂದ  ಮನಸ್ಸು ಲಯವಾಗುವುದರಿಂದ ನಮ್ಮ ದೃಷ್ಟಿಯಲ್ಲಿ ಪ್ರಪಂಚವು ತೋರದಂತಾಗುತ್ತದೆ.ಸಕಲವೂ ಆತ್ಮನೇ ಆಗಿ ಕಾಣುತ್ತದೆ.ಮಾನಾಭಿಗಳನ್ನು ಬಿಟ್ಟಾಗ ಎಲ್ಲವೂ ಅನಂದವೇ.(ಪುಟ 53)

 

148)ಹೃದಯಾಕಾಶವೇ ಪರಶಿವನ ಕಾಶಿ.ಚಿದಾಕಾಶವೇ ಕಾಶಿ.ನೆತ್ತಿಯಲ್ಲಿರುವ ಸಹಸ್ರಾರ ಕಮಲದಲ್ಲಿ ನಿವಿ೯ಕಲ್ಪ ಕಾಶಿ ಇದೆ.ನವದ್ವಾರಗಳಿರುವ ಶರೀರವೇ ಹರಿದ್ವಾರ. ಇದೇ ಕಾಶೀ ಕ್ಷೇತ್ರ.ಇದರಲ್ಲಿ ತ್ರಿಲೋಕ ಜನನಿಯೂ  ವ್ಯಾಪಿನಿಯೂ ಪಾವನಿಯೂ  ಆದ ಜ್ಞಾನ ಗಂಗೆ ಹರಿಯುತ್ತಿದ್ದಾಳೆ.ಶ್ರದ್ಧಾ ಭಕ್ತಿಗಳೇ  ಗಯೆಯಲ್ಲಿರುವ ವಿಷ್ಣುಪಾದ.,ಗುರುಚರಣ -ಓಂಕಾರವೇ ಪ್ರಯಾಗ.ಸಕಲ ಜನ ಮನೋ ವೃತ್ತಿಗಳಿಗೂ ಸಾಕ್ಷಿಯಾದ  (ತುರೀಯ) ಅಂತರಾತ್ಮನೇ  ವಿಶ್ವೇಶ್ವರ. ಎಲ್ಲವೂ ನಮ್ಮ ದೇಹದಲ್ಲಿಯೇ ಇರುವುದರಿಂದ ಇದಕ್ಕಿಂತಲೂ  ಶ್ರೇಷ್ಠವಾದ ತೀಥ೯ಕ್ಷೇತ್ರ ಬೇರೆ ಇಲ್ಲ.ಚಿದಾಕಾಶವೇ ಶಾಂತಿಧಾಮ. ಜ್ಞಾನವೇ ಶ್ರೇಷ್ಠ ಯಜ್ಞ.ಓಂಕಾರಧ್ಯಾನದಿಂದ ಶಿರಸ್ಸಿನಲ್ಲಿ ಕೇಳಿಬರುವ  ದಶನಾದಗಳೇ  ಪ್ರಣವ ಭಾನುವಿನ ಕಿರಣಗಳು.(ಪುಟ 53)

 

14)ಆತ್ಮದಶ೯ನಕ್ಕೆ ಬುದ್ಧಿಯ ಯುಕ್ತಿಗಿಂತಲು  ತಕ೯ಕ್ಕಿಂತಲೂ  ಹೃದಯದ ಪ್ರೇಮ ಶಕ್ತಿಯೆ ಹೆಚ್ಚು ಸಹಾಯವಾಗುತ್ತದೆ.ನಿಮ೯ಲ ಭಕ್ತಿಯೇ ಹೃದಯದ ಶಕ್ತಿ.(ಪುಟ 53)

 

150) ಹೊರಗೇ ನೋಡುವ ಸ್ವಭಾವದ ಇಂದ್ರಿಯಗಳನ್ನೂ ಮನಸ್ಸನ್ನೂ  ತನ್ನೊಳಗೆ ತಿರುಗಿಸಿ ಬ್ರಹ್ಮರಂದ್ರದಲ್ಲಿರುವ ಶಿವನನ್ನು ನೋಡಬೇಕು.ಅನ್ಯರಿಂದ ಬಂದುದು ನಿಜವದ ಜ್ಞಾನವಲ್ಲ.ತನ್ನ ಅನುಭವದಲ್ಲಿ ಬಂದುದೇ ನಿಜವಾದ ಜ್ಞಾನ.(ಪುಟ 53)

 

151)ಪಾತ್ರೆಯಲ್ಲಿರುವ ನೀರಿನಲ್ಲಿ ಸೂಯ೯ಪ್ರಕಶವು ಪ್ರತಿಫಲನವಾದಂತೆ ವಿಶ್ವವೆಲ್ಲ ನಮ್ಮ ಹೃದಯಾಕಾಶದೊಳಗೇ  ಹೊಳೆದು ತೋರುತ್ತದೆ(ಪುಟ54)

 

152)ಜೀವನದ ಸಕಲ ವ್ಯಾಪಾರಗಳಿಗೂ  ಪ್ರಾಣಶಕ್ತಿಯೇ  ಅತಿ ಮುಖ್ಯವಾದುದು.(ಪುಟ 54)

 

153)ಬಾವಿಯಲ್ಲಿರುವ ನೀರನ್ನು  ಕೊಡದಿಂದ ಮೇಲಕ್ಕೆ ಎಳೆಯಲು  ಹಗ್ಗ ಬೇಕು. ಹೀಗೆ ಹೃದಯದಲ್ಲಿರುವ  ಆನಂದಾಮೃತವನ್ನು ಕುಂಡಲಿನೀ ಶಕ್ತಿಯ ಮೂಲಕ ಅನುಭವದಲ್ಲಿ ತಂದುಕೊಳ್ಳಲು ನಿಯಮಶೀಲವಾದ  ಪ್ರಾಣಾಯಾಮ ಸಾಧನೆ ಬೇಕು.(ಪುಟ54)

 

154)ಹಲಗೆಗಳನ್ನು ಮಡುವುದಕ್ಕಾಗಿ  ಮರದ ತೊಲೆಯನ್ನು ಕೊಯ್ಯುವಾಗ  ಗರಗಸವನ್ನು ಮೇಲಕ್ಕೂ ಕೆಳಕ್ಕೂ ಕ್ರಮಬದ್ಧವಾಗಿ ಎಳೆಯುವಂತೆ ನಾವು ನಿಯಮವಾಗಿ ಸಮತಾಲನದಿಂದ (ಹಾಮೋ೯ನಿಯಸ್ಲಿ)ಉಸಿರಾಡಬೇಕು.ಉಸಿರಾಟದ ಶಿಸ್ತಿನ ಕ್ರಮವೇ ಪ್ರಾಣಾಯಾಮವೆನಿಸುತ್ತದೆ.ಇದರಿಂದ ಸವೇ೯ಣದ್ರಿಯಗಳನ್ನೂ ಸ್ವಾಧೀನ ಪಡಿಸಿಕೊಂಡು ,ಚಿತ್ತವೃತ್ತಿ ನಿರೋಧದಿಂದ ಯೋಗದ ಪರಮಸಿದ್ಧಿಯನ್ನು ಪಡೆಯಬಹುದು.ಪ್ರಾಣವನ್ನು ಕುಂಭಕದಲ್ಲಿ ತಡೆದು  ನಿಲ್ಲಿಸಿ  ಸುಷುಮ್ನಾ ನಾಡಿಯ ಮೂಲಕ ಬೆನ್ನುಹುರಿಯಲ್ಲಿ ಮೇಲೇರಿ ,ಮಸ್ತಕ

ದಲ್ಲಿರುವ  ಬುದ್ಧಿಯಲ್ಲಿ ಪ್ರವೇಶಿಸುವಂತೆ ಮಾಡಬೇಕು.(ಪುಟ 55)

 

155)ವಿಚಾರಶೀಲನಿಗೆ ಆತ್ಮಜ್ಞಾನದಲ್ಲಿಯೇ ಲಕ್ಷ್ಯವಿರಬೇಕು.(ಪುಟ55)

 

156) ಭಕ್ತಿಯು ಒಂದೇ ಬಗೆಯಾಗಿಲ್ಲ.ಹತ್ತು ಜನರಲ್ಲಿ ಅದು ಹತ್ತು ಬಗೆಯಾಗಿರಬಹುದು.ಸಾಮಾನ್ಯ ಭಕ್ತಿಯು ಸಾತ್ವಿಕ,ರಾಜಸ,ತಾಮಸ ಎಂದು ಮೂರುಬಗೆ.ಗೌಣಭಕ್ತಿ,ಪರಾಭಕ್ತಿ ಎಂದು ಎರಡು ಬಗೆ.ಕಾಮಕ್ರೋಧ ಮಿಕ್ಕ ಎಲ್ಲ ಭಾವೋದ್ವೇಗಗಳಂತೆ  ಭಕ್ತಿಯೂ ಸಾಂಸಗಿ೯ಕ,ಸಾಕ್ರಾಮಿಕ(ಇನ್ಪೆಕ್ಷಯಸ್)ಗುಣ ಶಕ್ತಿಯುಳ್ಳದ್ದು.ಭಕ್ತನ ತೀವ್ರಭಾವವು  ಸಮಾನ ಸಂಸ್ಕಾರವುಳ್ಳ ಬೇರೆಯವರಲ್ಲಿ, ಹರಡಿ ಅವರನ್ನು ಹುರಿದುಂಬಿಸುತ್ತದೆ.(ಪುಟ 55)

 

157)ಕೈಯಲ್ಲಿರುವ ಹೂವಿಗಿಂತಲೂ  ದೂರದ ಹೂವು ಹೆಚ್ಚು ಸುಗಂಧವಾಗಿ ತೋರುತ್ತದೆ.ಹಾಗೆ ನಮಗೆ ಸಮೀಪದಲ್ಲಿರುವ ನಮಗೆ ಹೆಚ್ಚು ಪರಿಚಿತರಾದ ಜ್ಞಾನಿಗಳಿಗಿಂತಲೂ  ದೂರದಲ್ಲಿರುವ ಬೇರೊಬ್ಬರು ಹೆಚ್ಚು ಮಹಿಮಾವಂತರಾಗಿ ತೋರುವುದು ಸ್ವಾಭಾವಿಕ.ದೂರವೇ ಒಂದು ಆಕಷ೯ಕ ಮೋಹಕ ಶಕ್ತಿಯಾಗಬಹುದು.ನಿಜವಾದ ಜ್ಞಾನಿಗಳು ಆರು ತಿಂಗಳ ಹಸುಳೆಗಳಂತೆ ಇರುತ್ತಾರೆ.ಅವರಲ್ಲಿ ಯಾವ ಭೇದವೂ ಇರುವುದಿಲ್ಲ.ಅವರಿಗೆ ಹೊನ್ನೂ ಮಣ್ಣೂಒಂದೇ.ಅವರಿಗೆ ಯಾವ ಆಸೆಯೂ ಇಲ್ಲ.(ಪುಟ 56)

 

158)ಆತ್ಮತತ್ವವನ್ನು ಸರಿಯಾಗಿ ಮನನ ಮಾಡುವವನೇ ನಿಜವಾದ ಮನುಷ್ಯ.ಪರಮಪುರುಷಾಥ೯ವಾದ ಮೋಕ್ಷಕ್ಕೆ ಮನನವೇ ಉತ್ತಮ ಸಾಧನ.ಅಭ್ಯಾಸಬಲದಿಂದ ಏನನಾದರೂ ಸಾಧಿಸಬಹುದು.(ಪುಟ56)

 

15)ಒಂದು ಬೀಜವನ್ನು ಸುಮ್ಮನೆ ಪೆಟ್ಟಿಗೆಯಲ್ಲಿ ಇಟ್ಟರೆ  ಪ್ರಯೋಜನವಿಲ್ಲ.ಅದನ್ನು  ಭೂಮಿಯಲ್ಲಿ ಬಿತ್ತಿ ನೀರನ್ನೂ ಗೊಬ್ಬರವನ್ನೂ ಹಾಕಿದರೆ ಒಂದಕ್ಕೆ ಸಾವಿರವಾಗಬಹುದು.ಹಾಗೆಯೇ ಜ್ಞಾನವನ್ನು ಉಪದೇಶದಿಂದ ಸಹಸ್ರ ಜನರಲ್ಲಿ  ಬೆಳೆಸಬಹುದು.ಒಂದು ದೀಪದಿಂದ ಅನಂತ ದೀಪಗಳನ್ನು ಹಚ್ಚುವ ಹಾಗೆ,ಬ್ರಹ್ಮವಿದ್ಯೆಯೂ ಅನಂತವಾಗಿ ಪ್ರಸಾರವಾಗಬಹುದು.ಅಧ್ಯಾತ್ಮ ಜ್ಞಾನವೊಂದೇ  ಮರದಂತೆ ಸ್ಥಿರವಾದುದು.ಮಿಕ್ಕ ಲೌಕಿಕ ಜ್ಞಾನಗಳು ಅದರ ಹೂವುಗಳಂತೆ ನಶ್ವರವಾದುವು.(ಪುಟ 56)

 

160)ಬಂಗಾರದ ನಾಣ್ಯವನ್ನು ಭೂಮಿಯಲ್ಲಿ ಬಿತ್ತಿದರೆ  ಮೊಳಕೆಯೊಡೆಯುವುದಿಲ್ಲ.ಇದರಂತೆ ಪೂಣ೯ತೆಯನ್ನು ಪಡೆದ ಜ್ಞಾನಿಯು ಆಶಾರಹಿತನಾಗಿರುವುದರಿಂದ  ಪ್ರಾಪಂಚಿಕ ಸುಖಕ್ಕೆ ಇಳಿಯುವುದಿಲ್ಲ.ಪುನಜ೯ನ್ಮವನ್ನೂ ಪಡೆಯುವುದಿಲ್ಲ.(ಪುಟ 56)

 

161) ನಿಜೀ೯ವ ವಸ್ತು ತಾನಾಗಿಯೇ ಶಬ್ದ ಮಾಡಲಾರದು.ಸಜೀವ ವಸ್ತುವಿನಲ್ಲಿ  ಚೈತನ್ಯ ವಿರುವುದರಿಂದ  ಶಬ್ದ ಮಾಡಬಲ್ಲದು.ವಿಶ್ವವೆಲ್ಲಾ  ಚೈತನ್ಯಮಯವಗಿರುವುದಾದರೂ ಅದು ಜಡ ವಸ್ತುವಿನಲ್ಲಿ ತೋರಿಕೊಳ್ಳುವುದಿಲ್ಲ.ಮನೆಯನ್ನು ಕಟ್ಟ ಬೇಕಾದರೆ  ಮೊದಲು ಅಸ್ತಿಭಾರಹಾಕಿ  ಅನಂತರ ಗೋಡೆಗಳನ್ನು ಎಬ್ಬಿಸಬೇಕು.ಹಾಗೇ ಯೋಗಸಾಧನೆಗೆ ಮೊದಲು ಗುರೂಪದೇಶ ಪಡೆಯಬೇಕು.(ಪುಟ 56)

 

162)ಕಣ್ಣಿಲ್ಲದವರಿಗೆ ಬೆಳಕಿನ ಪ್ರಯೋಜನವಿಲ್ಲವಾದ್ದರಿಂದ  ಅವರು ರೂಪವನ್ನೂ ನೋಡಲಾರರು.ಇದರಂತೆ ವಿವೇಕವಿಲ್ಲದವರಿಗೆ  ಜ್ಞಾನವಿಲ್ಲವದುದರಿಂದ ಅವರು ದೇವರನ್ನು ನೋಡಲಾರರು.ಮನೋಲಯವಾದವರಿಗೆ ಕಾಮಗಳಿಲ್ಲ.ಅವರಿಗೆ ಅಜ್ಞಾನ ನಿದ್ರೆಯಿಲ್ಲವಾದ್ದರಿಂದ  ಸ್ವಪ್ನ ಭ್ರಮೆಗಳೂ ಇಲ್ಲ.ಅವರು ಆತ್ಮಜ್ಞಾನದಲ್ಲಿ ಸದಾ ಎಚ್ಚರಾಗಿರುವರು.(ಪುಟ 56)

 

163)ಯೋಗಿಯ ಉಸಿರಾಟವು ಸೂಕ್ಷ್ಮವಾಗಿ ಒಳಗೇ ನಡೆಯುತ್ತದೆ.ಇಡಾ ಪಿಂಗಳಗಳ ಸಂಗಮಸ್ಥಾನವಾದ ಬ್ರಹ್ಮರಂಧ್ರದಲ್ಲಿಯೇ  ಅವರ ಲಕ್ಷ್ಯವೂ ಚಿಂತನವೂ ಇರುವುದರಿಂದ ಪ್ರಾಣವೂ ಅಲ್ಲಿಯೇ ಕೇಂದ್ರೀಕೃತವಾಗಿರುತ್ತದೆ.ಯೋಗಿಗೆ ಸಕಲೇಂದ್ರಿಯಗಳೂ  ಮನಸ್ಸೂ ಸ್ವಾಧೀನವಾಗಿ ಆತ್ಮಜ್ಞಾನವಾಗಿರುವುದರಿಂದ ನಿಜವಾದ ಸ್ವರಾಜ್ಯವು  ಪ್ರಾಪ್ತವಾಗಿರುತ್ತದೆ. ಸ್ವರಾಜ್ಯದಲ್ಲಿ ಅವರಿಗೆ ಸಕಲವೂ ಆತ್ಮವೇ.ಅದು ಆತ್ಮನ ನಿಜವಾದ ತೌರು.(ಪುಟ57)

 

164)ಪ್ರಾಣಶಕ್ತಿಯೇ ಜೀವನಜ್ಯೋತಿ. ಅದೇ ಸ್ವರಾಜ್ಯದ ರಾಜಧಾನಿ.ಆತ್ಮನೇ ಆನಂದ  ಸಾಮ್ರಜ್ಯದ ಸಾಮ್ರಾಟ.ಕಾಮಕ್ರೋಧಾದಿಗಳನ್ನು  ಪೂಣ೯ವಾಗಿ ತನ್ನ ವಶದಲ್ಲಿಟ್ಟುಕೊಳ್ಳುವುದೇ ಸ್ವರಾಜ್ಯ.(ಪುಟ 57)

 

165)ಬೆಳಕಿನಲ್ಲಿ ಕತ್ತಲೆ ಇಲ್ಲದಿರುವಂತೆ ಅದ್ವೈತದಲ್ಲಿ ಭಯವಿರುವುದಿಲ್ಲ.(ಪುಟ 57)

 

166)"ಅಭಯಂ ಹಿ ವೈ ಬ್ರಹ್ಮ".ಅಭಯವೇ ಬ್ರಹ್ಮ.(ಪುಟ 57)

 

167)ಎಲ್ಲಾ ಕಾಯಿಗಳೂ ಒಮ್ಮೆಗೇ ಹಣ್ಣಾಗುವುದಿಲ್ಲ. ಅವವುಗಳ ಬೆಳವಣಿಗೆಯಂತೆ ಬೇರೆ ಬೇರೆ ಕಾಲದಲ್ಲಿ ಹಣ್ಣಾಗುತ್ತವೆ.ಹಾಗೆಯೆ ಜನರೂ ಅವರವರ ಸಂಸ್ಕøತಿಯ ವಿಕಾಸಕ್ಕೆ  ಸಾಧನೆಗೆ ತಕ್ಕಂತೆ  ತಡವಾಗಿಯೂ ತೀವ್ರವಾಗಿಯೂ ಬೇರೆ ಬೇರೆ ಕಾಲದಲ್ಲಿ ಜ್ಞಾನದ ಸ್ಥಿತಿಗೆ ಬರುತ್ತಾರೆ.ಕೊಂಬೆಯಲ್ಲಿ ಎಲ್ಲಾ ಹಣ್ಣುಗಳೂ ಮಧುರವಾಗಿರುವಂತೆ  ಜ್ಞಾನನಿಷ್ಠೆಯಲ್ಲಿ ಎಲ್ಲರೂ ಆನಂದ ಪೂಣ೯ವಾಗಿರುತ್ತಾರೆ.ಅದೇ ಪರಮಶಾಂತ ಸ್ಥಿತಿ.ಮಾವಿನಹಣ್ಣಿನಂತೆ ಜ್ಞಾನಿಯು  ಲೋಕಕ್ಕೆ ಅಮೃತಪ್ರಾಯನಾಗಿರುತ್ತಾನೆ.(ಪುಟ57)

 

168) ರಾತ್ರಿಯಲ್ಲಿ  ದೀಫವಿಲ್ಲದ ಮನೆ ಹೇಗೆ ಶೋಭಿಸುವುದಿಲ್ಲವೋ ಹಾಗೆ ಜ್ಞಾನವಿಲ್ಲದ ನಮ್ಮದೇಹವೂ ಶೋಭಿಸುವುದಿಲ್ಲ.ಮನೆಯೂ ದೇಹವೂ ಎಷ್ಟೇ ಸುಂದರವಾಗಿದ್ದರೂ ಅವು ನಶ್ವರವೇ.(ಪುಟ 58)

 

16)ಪ್ರತಿಯೊಬ್ಬ ಪ್ರಾಣಿಯೂ ಮನುಷ್ಯನೂ  ತನ್ನ ನೈಜರೂಪವಾದ  ದೇವತ್ವವನ್ನು ಪಡೆಯುವ ದಿಸೆಯಲ್ಲಿ  ಪ್ರತಿಕ್ಷಣವೂ ಮುಂದುವರಿಯುತ್ತಿರಬೇಕೆಂಬುದೇ ಅಪರಿಹಾಯ೯ವಾದ ವಿಶ್ವನಿಯಮ.(ಪುಟ 58)

 

170)ಇಂದ್ರಿಯಗಳ ಮೂಲಕ ಹೊರಗೇ ಪ್ರಪಂಚವನ್ನು ನೋಡುವ ಮನಸ್ಸು  ದೈವಾನುಗ್ರಹದೀದಲೂ ಸಜ್ಜನ ಸಹವಾಸದಿಂದಲೂ  ಶಾಸ್ತ್ರಾಭ್ಯಾಸದಿಂದ ವಿವೇಕ ವೈರಾಗ್ಯಗಳನ್ನು ಪಡೆದು  ತನ್ನೊಳಗೆ ಆತ್ಮನಕಡೆ ತಿರುಗಿದರೆ  ಅದು 'ಅಂತಮು೯ಖತ್ವ'ವೆಂದೂ 'ಪ್ರತ್ಯಕ್ ಪ್ರವಣತೆ'ಎಂದೆನಿಸುತ್ತದೆ.(ಪುಟ 58)

 

171)ಜ್ಞಾನಿದೃಷ್ಟಿಯಿಂದ  ತಾನೇ ವಿಶ್ವ,ವಿಶ್ವವೇ ತಾನು,ವಿಶ್ವದೊಳಗೆಲ್ಲಾ ವ್ಯಾಪಿಸಿರುವ ಚೈತನ್ಯವೇ ತಾನು.(ಪುಟ 5)

 

172) ಪುರುಷನಲ್ಲಿ(ಪಿಂಡಾಂಡದಲ್ಲಿ)  ಇರುವವನೂ  ಆದಿತ್ಯನಲ್ಲಿ(ಬ್ರಹ್ಮಾಂಡದಲ್ಲಿ) ಇರುವವನೂ ಒಂದೇ.(ಪುಟ 5)

   

173)ಪರಂಜ್ಯೋತಿಯೇ ಜಗಜ್ಯೋತಿ;ಸೂಯ೯,ಚಂದ್ರ, ಅಗ್ನಿ,ನಕ್ಷತ್ರಾದಿಗಳಲ್ಲಿ ಬೆಳಗುವುದೆಲ್ಲಾ ಆತ್ಮಜ್ಯೋತಿಯೇ.ಇನ್ನೊಂದು ಸತ್ಯವೆಂಬ ಭ್ರಾಂತಿಯನ್ನು ಬಿಡು.(ಪುಟ5)

 

174)ಹುಟ್ಟುವಾಗ ತಂದುದು  ಉಸಿರನ್ನು.ಸಾಯುವಾಗ ಬಿಡುವುದು ಉಸಿರನ್ನು.ಪ್ರಾಣವು ದೇಹವನ್ನು  ಬಿಟ್ಟಕೂಡಲೇ ಕೂಡಲೇ ಮುಗಿಯುತ್ತದೆ. ಮಣ್ಣಿನದೇಹವನ್ನು ನಾವು ಮಾಡಿಕೊಂಡಿಲ್ಲ.ಇದನ್ನು ಮೇಲೆ ತೆಗೆದುಕೊಂಡು ಹೋಗುವಂತೆಯೂ ಇಲ್ಲ.ಇದನ್ನು ಇಲ್ಲೇ ಮಣ್ಣಿನಲ್ಲಿಯೇ ಬಿಡಬೇಕು. ಚರಾಚರ ಜಗತ್ತಿನೊಳಗೆಲ್ಲಾ ವ್ಯಾಪಿಸಿರುವ ಪ್ರಾಣವು  ಅದೃಶ್ಯವೂ,ಅವ್ಯಕ್ತವೂ,ನಿಶ್ಯಬ್ದವೂ  ಆದ ಚೈತನ್ಯವೇ ಪ್ರಾಣವಾಗಿಯೂ,ಕಾಲ,ಆಕಾಶಾದಿಜಗತ್ತಾಗಿಯೂ ತೋರುತ್ತದೆ.(ಪುಟ 60)  

 

175)ಎಲ್ಲವೂ ಮೂಲತಃ ಬಂದುದು  ದೇವರಿಂದಲೇ.ಕೊನೆಗೆ ಎಲ್ಲಾ ಹೋಗಿ ಸೇರುವುದು ದೇವರಲ್ಲಿಯೇ.ಈಗ ಜಗತ್ತೆಲ್ಲಾ ಬದುಕಿ ವ್ಯವಹರಿಸುತ್ತಿರುವುದೂ ದೇವರಿಂದಲೇ.ಆದ್ದರಿಂ ನಡುವೆ ತೋರುತ್ತಿರುವ ವ್ಯತ್ಯಾಸಗಳಿಗೆ  ಹೆಚ್ಚು ಗಮನ ಕೊಡಬಾರದು.(ಪುಟ 60)

 

176)ಒಂದೇ ಮರದಲ್ಲಿ ಹುಟ್ಟಿ ಒಂದೇ ಗೊನೆಯಲ್ಲಿ ಬಂದಿರುವ ಬಾಳೇ ಹಣ್ಣುಗಳಿಂದ ಹಲವು ಬಗೆಯ ಭಕ್ಷ್ಯಗಳನ್ನು ತಯಾರು ಮಾಡಬಹುದು.ಭಕ್ಷ್ಯಗಳು ಬೇರೆ ಬೇರೆಯೇ ಹೊರತು  ಮೂಲ ಸಾಮಗ್ರಿ ಒಂದೇ.ಆದ್ದರಿಂದ ಪ್ರಪಂಚದ ವೈವಿಧ್ಯತೆಯಲ್ಲಿ  ಸವಾ೯ನುಸ್ಯೂತವಾಗಿರುವ  ಏಕತ್ವವನ್ನು ವಿವೇಕದಿಂದ ನೋಡಬೇಕು.ಆಗಲೇ ಶಾಂತಿ.ವಿಶ್ವದಲ್ಲೆಲ್ಲಾ ತುಂಬಿರುವುದು ಓಂಕಾರರೂಪಿ ಚ್ಯತನ್ಯವೊಂದೇ.(ಪುಟ 60)

 

177)ಒಂದೇ ನಿಲ್ದಾಣದಿಂದ ಬೇರೆ ಬೇರೆ ಸ್ಥಳಗಳಿಗೆ ಹೋಗಿ ತಿರುಗಿ ಅಲ್ಲಿಗೇ ಸೇರುವ ರೈಲಿನಂತೆ ಮಾಯೆಯು  ನಮ್ಮಲ್ಲಿಯೇ(ಆತ್ಮನಲ್ಲಿಯೇ  ಜನಿಸಿ,ನಮ್ಮನ್ನು ಆಕ್ರಮಿಸಿ ಮೋಹಿಸಿ,ವಂಚಿಸಿ ನಮ್ಮಲ್ಲಿಯೇ ಲಯವಾಗುತ್ತದೆ.ಮಾಯೆಯು ಹಾಲಿನಲ್ಲಿರುವ ಬೆಣ್ಣೆಯಂತೆ,ಆತ್ಮನಲ್ಲಿ ಮೊದಲು ತೋರದೆಯೂ  ಅನಂತರ ತೋರುತ್ತಲೂ ಕೊನೆಗೆ ಅದರಲ್ಲಿಯೇ ಕರಗಿ  ಕಣ್ಮರೆಯಾಗುತ್ತಲೂ ಇರುತ್ತದೆ.ಇದಕ್ಕೆ ಅಜ್ಞಾನವೇ ಕಾರಣ.(ಪುಟ 60)

 

178)ಮಹಾತ್ಮರ ಸಂಕಲ್ಪವು ವ್ಯಥ೯ವಾಗುವುದಿಲ್ಲ.ಅವರು ಜೀವಂತರಾಗಿದ್ದಾಗ ಅವರ ಮಾತನ್ನು ಯಾರೂ ಕೇಳದಿದ್ದರೂ ಅವರ ಆಲೋಚನೆಗಳೂ ಭಾವನೆಗಳೂ, ಜೀವಂತ ಶಕ್ತಿಯಾದುದರಿಂದ ವಿಶ್ವಕಾಶದಲ್ಲಿ ಸ್ಪಂದನಾತ್ಮಕ ತರಂಗರೂಪದಿಂದಿದ್ದು ಸಮಥ೯ರಾದ ಅಥವಾ ಸಮಾನ ಮನಸ್ಕರಾದ,ಸಂವೇದನಾ ಶೀಲರಲ್ಲಿ ಆವಾಹನೆಯಾಗಿ,ಸಕಾಲದಲ್ಲಿ ಕಾಯ೯ಕಾರಿಯಾಗುತ್ತದೆ.(ಪುಟ 61)

 

17) ಜ್ಞಾನಿಗಳು ಜನರ ಮಧ್ಯದಲ್ಲಿದ್ದುತಮ್ಮ ಸ್ವಾಥ೯ವೆಳ್ಳಷ್ಟೂ ಇಲ್ಲದೆ, ಜನರಿಗೆ ಸಹಾಯ ಮಾಡುತ್ತಾರೆ.ಕತೃ೯ತ್ವ ಭಾವನೆಯಿಲ್ಲದೆ ಕಮ೯ದಲ್ಲಿ ಅಕಮ೯(ಬ್ರಹ್ಮ)ವನ್ನು ನೋಡಬಲ್ಲ. ಆಮಹಾತ್ಮರ ಲೋಕೋಪಕಾರ ಕಮ೯ದ ಮಮ೯ವನ್ನೂ ಬೆಲೆಯನ್ನೂ ಅಜ್ಞ ಜನರು ಅರಿಯರು.ಅವರಿಗೆ ಫಲಾಪೇಕ್ಷೆಯೂ ಇಲ್ಲ.ತಾವು ಮಾಡಲೇ ಬೇಕಾದ ಕಮ೯ವೂ ಕತ೯ವ್ಯವೂ  ಬಂಧವೂ ನಿಬ೯ಂಧವೂ ಇಲ್ಲ.ಬಿಟ್ಟರೆ ಪಾಪ ಬಂದೀತೆಂಬ ಭಯವೂ ಇಲ್ಲ.ತಾನೇ ಬ್ರಹ್ಮವೆಂಬ ಜ್ಞಾನವು ಮಹಾತ್ಮನಿಗೆಇರುವುದರಿಂದ  ಈಶ್ವರ ಪ್ರೀತ್ಯಥ೯ವಾಗಿ  ಮಾಡುವ ಕಮ೯ ಎಂಬುದೂ ಅವನಿಗಿಲ್ಲ.ತಾನೇ ವಿಶ್ವ, ವಿಶ್ವವೇ ತಾನು ಆಗಿರುವ ಜ್ಞಾನಿಯಲ್ಲಿ ಉಪಕಾರ ಎಂಬ ಭಾವನೆಯೂ ಇಲ್ಲ.ಆದರೂ ಶಿವ ಸ್ವರೂಪಿಯಾದ ಮಹಾತ್ಮನು

ಬದುಕಿರುವರೆಗೂ  ಲೋಕಕ್ಕೆ  ಶಿವರೂಪವಾದ (ಮಂಗಳಕರವಾದ)ಕಾಯ೯ಗಳಗು ಅವನಿಂದ ನಡೆಯುತ್ತಿರುವುದು,ಅವನು ಉಸಿರಾಡುವಷ್ಟು ಸ್ವಾಭಾವಿಕವು.ಕೃತಜ್ಞತೆಯೂ ಇಲ್ಲದೆ ಜನರು ಕ್ರಿಸ್ತನಿಗೆ ಮೈತುಂಬಾ ಮಳೆ ಹೊಡೆದು ಕೊಂದರು.ಸಾಕ್ರೆಟೀಸನಿಗೆ ವಿಷಹಾಕಿ ಸಾಯಿಸಿದರು.ಮಹಾತ್ಮಾ ಗಾಂಧೀಜಿಗೆ ಗುಂಡು ಹೊಡೆದು ಕೊಂದರು.(ಪುಟ61)

 

180) ಭೂಮಿಯಲ್ಲಿ  ಮುಕ್ಕಾಲು ಭಾಗ ಜಲ,ಕಾಲುಭಾಗ ನೆಲ ಎಂಬಂತೆ  ನೀರು ಅಪಾರವಾಗಿದೆ.ಪಂಚಭೂತಗಳ ಸೃಷ್ಟಿಕ್ರಮದಲ್ಲಿ  ಆಕಾಶದಿಂದ ವಾಯುವೂ,ವಾಯುವಿನಿಂದ ಅಗ್ನಿಯೂ, ಅಗ್ನಿಯಿಂದ ಜಲವೂ,ಜಲದಿಂದ ಭೂಮಿಯೂ ಉತ್ಪತ್ತಿಯಾಗಿದೆ.ಪ್ರಮಾಣದಲ್ಲಿ ಒಂದಕ್ಕಿಂತ ಮತ್ತೊಂದು  ಹತ್ತು ಪಟ್ಟು ಹೆಚ್ಚಾಗಿಯೂ ಇದೆ.ಕಾಯ೯ವಾದ ಜಗತ್ತಿಗೆ ಪಂಚಭೂತಗಳು ಕಾರಣ.(ಪುಟ62)

 

181)ಅಖಂಡವಾದ ಅದ್ವಿತೀಯ,ಏಕತ್ವದ ಜ್ಞಾನದಲ್ಲಿ ನೆಲೆನಿಂತವನಿಗೆ ಪುನಜ೯ನ್ಮವಿಲ್ಲ. ಜೀವನ್ಮುಕ್ತನು ಇಷ್ಟಪಟ್ಟರೆ ದೇಹವನ್ನು ಬಿಡಬಹುದು.ಅವನು ಇಚ್ಛಾ ಮರಣಿ.ಮ್ರತ್ಯುವಿಗೆ ಅವನ ಮೇಲೆ ಅಧಿಕಾರವಿಲ್ಲ.ಅವನ ಅಖಂಡ ದೃಷ್ಟಿಯೇ ಸಮದೃಷ್ಟಿ.(ಪುಟ 63)

 

182) ಸಮದಶಿ೯ಯಾದ ಯೋಗಿಯು  ತನ್ನನ್ನು ಎಲ್ಲಾ ಪ್ರಾಣಿಗಳಲ್ಲಿಯೂ,ಎಲ್ಲಾ ಪ್ರಾಣಿಗಳನ್ನು ತನ್ನಲ್ಲಿಯೂ ನೋಡುತ್ತಾನೆ..(ಪುಟ 64)

 

183)ಹೊರಗಿನ ಅಲಂಕಾರವು  ಅಹಂಕಾರವನ್ನು ಬೆಳೆಸುವುದರಿಂದ ಸಾತ್ವಿಕ ಸಂಸ್ಕಾರದಿಂದಲೂ ,ವಿನಯ ಸದ್ಗುಣಗಳಿಂದಲೂ ,ಶ್ರದ್ಧಾ ಭಕ್ತಿಗಳಿಂದಲೂ,ಹೃದಯವನ್ನು ಅಲಂಕರಿಸಿಕೊಳ್ಳಬೇಕು.

ಪರಿಶುದ್ಧಗೊಳಿಗೊಳಿಸ ಬೇಕು.ಅಹಂಕಾರವೂ ವಿಷಯವಾಸನೆಯೂ ಕ್ಷೀಣವಾದಷ್ಟೂ  ಆತ್ಮಾನಂದವು ಬೆಳೆಯುತ್ತದೆ.ಮನುಷ್ಯನಿಗೆ ಒಳಗಿನ ವಿಕಾಸವೇ ಅತಿಮುಖ್ಯ.(ಪುಟ 64)

 

184)ದೇವರು ಸವ೯ವ್ಯಾಪಿ.ಸವಾ೯ಂತಯಾ೯ಮಿ,ಓಂಕಾರ ಸ್ವರೂಪಿ,ನಂಬಿದವರಿಗೆ ರಕ್ಷಕ,ನಿಂದಿಸಿದವರಿಗೆ ಶಿಕ್ಷಕನೂ ಅವನೇ."ಅಧೋಗತಿಗೆ ಹೋಗದಂತೆಯೂ  ಉನ್ನತಗತಿಗೆ ಏರುವಂತೆಯೂ " ಪ್ರಾಥಿ೯ಸಬೇಕು.(ಪುಟ 64)

 

185)ಚರವೂ ಅಚರವೂ ಆದ ಜಗತ್ತಿನಲ್ಲಿ ನಿಜೀ೯ವವಾದ ಅಚರಕ್ಕಿಂತಲೂ,ಚರಿಸುವ ಪ್ರಾಣಿ ಶ್ರೇಷ್ಠ.ಪ್ರಾಣಿಲೋಕದಲ್ಲಿಯೂ  ವಿಚಾರ ಶಕ್ತಿಯುಳ್ಳ ಮನುಷ್ಯನು ಶ್ರೇಷ್ಠ.ಮನುಷ್ಯನಲ್ಲಿ ನ್ಯಾಯ-ಅನ್ಯಾಯ,ಧಮ೯-ಅಧಮ೯ಮೊದಲಾದ ವಿವೇಚನ ಶಕ್ತಿಯಿದೆ.(ಪುಟ 65)

 

186)ಸೂಕ್ಷ್ಮವಾದ ವಿವೇಚನೆಯಿಂದ ಆತ್ಮಾನುಭವವಾಗುತ್ತದೆ. ಸೂಕ್ಷ್ಮ ಉಪಾಧಿಯ ಸ್ಥಾನವೇ ಹೃದಯಾಕಾಶ.ಸೂಕ್ಷ್ಮವು ಸ್ಥೂಲದಲ್ಲಿ ಅಡಗಿದೆ.ತಲೆಯಲ್ಲಿರುವ  ಹೃದಯಾಕಾಶಕ್ಕೆ ಕುಂಡಲಿನಿಯು ಏರಿದಾಗ ಸುಷುಮ್ನೆಯಲ್ಲಿ  ಸೂಕ್ಷ್ಮವಾದ ಒಂದೇ ಸ್ಥಾನವಿರುತ್ತದೆ. ಅತ್ಯುನ್ನತ ಸ್ಥಿತಿಗೆ ಮುಟ್ಟಿದಾಗ ಸಮಸ್ತ ವಿಶ್ವದ ಸೃಷ್ಟಿ,ಸ್ಥಿತಿ,ಲಯಗಳೆಲ್ಲಾ ನಮ್ಮಲ್ಲಿಯೇ (ಆತ್ಮನಲ್ಲಿಯೇ) ತೋರಿಕೊಳ್ಳುತ್ತದೆ.(ಪುಟ 65)

 

187)ಏಕತ್ವಭಾವನೆಯೇ ಸ್ವಗ೯.ಅದೇ ಅಪವಗ೯-ಮುಕ್ತಿ.ಪರಾಭಕ್ತಿಯೇ ಮುಕ್ತಿ.ಭಕ್ತಿಯು  ಸಾಧನ ಮಾತ್ರವಲ್ಲ.ಫಲವೂ ಭಕ್ತಿಯೇ.ನಿಷ್ಕಾಮ ಪ್ರೇಮವೇ ಭಕ್ತಿ.ಪೂಣ೯ ಶಾಂತಿಯೇ ಮನುಷ್ಯ ಜನ್ಮದ ತುಟ್ಟತುದಿಯ ಗುರಿ.ಸಂಪೂಣ೯ ಶಾಂತಿಯೇ ಯೋಗಾನಂದ.ಪರಮಾನಂದ.(ಪುಟ 65)

     

188)ಸಮುದ್ರವನ್ನು ಅಳೆಯುವುದು ಹೇಗೆ ಸಾದ್ಯವಿಲ್ಲವೋ ದೇವರನ್ನು ಅಳೆಯುವುದು ಸಾಧ್ಯವಿಲ್ಲ.ಅವನು ಅಪ್ರಮೇಯ.ತಕ೯,ಅನುಮಾನ,ಊಹೆ ಎಲ್ಲವನ್ನೂ ಮೀರಿದವನು  ಪರಮಾತ್ಮ.ಸಂಸಾರದಲ್ಲಿದ್ದೇ ಭಕ್ತಿಯನ್ನೂ ಮುಕ್ತಿಯನ್ನೂ ಸಾಧಿಸಬೇಕು.ನೀರಿಗಿಳಿಯದೆ ಹೇಗೆ ಈಜಲಾಗುವುದಿಲ್ಲವೋ  ಹಾಗೆ ಸಂಸಾರ ಸಮುದ್ರದಲ್ಲಿ ಇಳಿಯದೆ ದಾಟಲಾಗುವುದಿಲ್ಲ.ಆಸೆಯೇ ಸಂಸಾರ,ನಿರಾಸೆಯೇ ಮುಕ್ತಿ.(ಪುಟ 65).

 

18)ಆನಂದವೇ ದೇವರು.ದೇವರೇ ಆನಂದ.ಅದೇ ಜ್ಞಾನಾಮೃತ.ಪರಾಜ್ಞಾನವೇ ಪರಮಾನಂದ.ಇದಕ್ಕಿಂತಲೂ ಹೆಚ್ಚಿನ ಆನಂದವಿಲ್ಲ.(ಪುಟ 66)

 

10)ಹೊರಗಿನ ದೃಷ್ಟಿಯನ್ನು ಒಳಗೆ ಒಯ್ದೊಡನೆ,ಅಲ್ಲಿ ನಿಶ್ಚಲವಾಗಿ ನಿಂತ  ಮನಸ್ಸಿಗೆ ಪರಮಾನಂದವಾಗುತ್ತದೆ.ಇದೇ ಉಪನಯನ.ಇದೇ ಮಾನವನ ಪರಮ ಧ್ಯೇಯ.ಗುಹೆಯಲ್ಲಿ ವಾಸಮಾಡುವುದೆಂದರೆ,ದೇಹದೊಳಗೆ ಹೃದಯ ಗುಹೆಯಲ್ಲಿ  ಚಿದಾಕಾಶವೇ ತಾನಾಗಿರುವುದು.(ಪುಟ 66) 

 

11)ಚಿದಾಕಾಶವೆಂಬ ಹೃದಯಾಕಾಶವು  ನಮ್ಮ ತಲೆಯಲ್ಲಿಯೇ ಇದೆ.ಅದೇ ತಾನೆಂದು ಎಡೆಬಿಡದೆ ಧ್ಯಾನ ಮಾಡಬೇಕು.(ಪುಟ 66)

 

12)ಭೋಗಿಯಲ್ಲಿ ಪ್ರಾಣವು  ಅಧೋಮುಖವಾಗಿ ಕೆಳಗಿನ ಚಕ್ರದಲ್ಲಿಯೇ ಇರುತ್ತದೆ.ಆದರೆ ವಿರಾಗಿಯಾದ ಯೋಗಿಯಲ್ಲಿ  ಪ್ರಾಣವು ಊಧ್ವ೯ಮುಖವಾಗುತ್ತದೆ.ಗಾಯತ್ರೀ ಜಪಧ್ಯಾನಗಳಿಂದ ಪ್ರಾಣವು ಊಧ್ವ೯ಗಾಮಿಯಾಗಿ  ಸಹಸ್ರಾರದಲ್ಲಿ ಸೇರುವುದರಿಂದ  ಆನಂದ ಉಂಟಾಗುತ್ತದೆ.(ಪುಟ 66)

 

13)ಪೂಣ೯ಮನೋಲಯವಾದವನೇ ಜಗದ್ಗುರು.ತೀರಾ ಆಸೆಯಿಲ್ಲದವನೇ ಲೋಕಗುರು.ಲೋಕಕ್ಕೆಲ್ಲಾ ಉಪದೇಶಮಾಡುವುದಕ್ಕೆ  ಪರಮ¸ಹಂಸನೊಬ್ಬನಿಗೇ ಅಹ೯ತೆ.ಅವನು ಆಸೆಯನ್ನೆಲ್ಲಾ ಸುಟ್ಟವನು.ಆಕಾಶದಂತೆ ಸೂಕ್ಷ್ಮವೂ ಸ್ವಚ್ಛವೂ  ಆದ ಜ್ಞಾನವುಳ್ಳವನೇ ಸನ್ಯಾಸಿ.ಅವನು ಜಗತ್ತಿಗೇ ದಿವ್ಯ-ಜ್ಯೋತಿ.ಅವನ ಒಳಹೊರಗೆಲ್ಲಾ ಜ್ಞಾನಾಗ್ನಿಯೇ ಧಗಧಗಿಸುತ್ತಿರಬೇಕು.(ಪುಟ67) 

 

14)ಪಂಚ ಭೂತಗಳಲ್ಲಿ ಕಣ್ಣಿಗೆ ಕಾಣದಿರುವ  ಆಕಾಶವಾಯುಗಳನ್ನು ಬಿಟ್ಟರೆ  ಸೃಷ್ಟಿಗೆ ಕಾರಣವಾದ  ಮೊಟ್ಟ ಮೊದಲನೆಯ  ಭೂತವೇ ಕಣ್ಣಿಗೆ ಕಾಣುವ ರೂಪವಿರುವ ಅಗ್ನಿ.ಸವ೯ಜಗತ್ತಿಗೆ  ಆಧಾರವೂ  ಸವ೯ವ್ಯಾಪಿಯೂ ಆಗಿರುವ ಜ್ಞಾನಾಗ್ನಿಯೇ.(ಪುಟ67)

 

15)ಆತ್ಮಾನುಭವಕ್ಕೆ  ಬೇಕಾದುದು  ಸಾಧನೆ,ಶ್ರದ್ಧೆ,ನಂಬಿಕೆ,ವಿಶ್ವಾಸ.ಎರಡನೆಯ ಸಾಧನೆಯೇ ಭಕ್ತಿ.ಶ್ರದ್ಧೆಯುಳ್ಳವರಿಗೇ ಭಕ್ತಿಯುಂಟಾಗುವುದು.(ಪುಟ67)

 

16)ಜೀವನ ಅಂತಯಾ೯ಮಿಯೇ ಶಿವ.ಶಿವನಲ್ಲಿ ಕಲ್ಪಿತವೇ ಜೀವ.ಶಿವನ ಶಕ್ತಿ ಎನಿಸಿದ ಮಾಯೆ ತ್ರಿಗುಣಾತ್ಮಕವಾದುದು.ವಿಶ್ವದ ಸೃಷ್ಟಿ,ಸ್ಥಿತಿ,ಲಯಗಳೆಲ್ಲಾ  ಮಯೆಯ ಕಾಯ೯.ಮಯೆಯು ನಿಜವಲ್ಲ.ಅವಿದ್ಯೆಯಿಂದ ಕಲ್ಪಿತವಾದುದು-ಎಂಬ ನಿಶ್ಚಯಜ್ಞಾನದಿಂದ  ಆತ್ಮನಲ್ಲಿ ನೆಲೆ ನಿಂತು ತ್ರಿಗುಣಗಳನ್ನು ಮೀರಿದವರು ,ಮಾಯೆಯನ್ನು ಮೀರುತ್ತಾರೆ.ಆತ್ಮಜ್ಞಾನದಿಂದ ತಾನು ದೇಹವಲ್ಲವೆಂಬ ನಿಶ್ಚಯ ಜ್ಞಾನವುಳ್ಳವನು ಆನಂದದ ಅವತಾರವೇ ಇರುತ್ತಾನೆ.(ಪುಟ 6)

 

17)ಪ್ರಪಂಚದಲ್ಲಿ ಯಾರಿಗೂ ತಪ್ಪದಿರುವ,ಶೀತ- ಉಷ್ಣ,ಸುಖ-ದುಃಖ,ಒಳಿತು-ಕೇಡು,ಸಂಪತ್ತು-ವಿಪತ್ತು,ಮಾನ-ಅಪಮನ,ಮೊದಲಾದ ದ್ವಂದ್ವಗಗಳನ್ನು ಲೆಕ್ಕಿಸದೆ ಇರುವವನೇ ಮನುಷ್ಯ ಜನ್ಮದ ಹೆಗ್ಗುರುತಾದ  ಶಾಂತಿಯನ್ನು ಪಡೆಯುತ್ತಾನೆ.(ಪುಟ 6)

 

18)ಬೆಳಕಿನಲ್ಲಿ ಹೇಗೆ ಕತ್ತಲೆ ಇಲ್ಲವೋ ಹಾಗೆ ಜ್ಞಾನದಲ್ಲಿ ಅಜ್ಞಾನವಗಲೀ,ಅಖಂಡದಲ್ಲಿ ಖಂಡವಾಗಲೀ,ಆತ್ಮನಲ್ಲಿ ಮಾಯೆಯಾಗಲೀ ಇಲ್ಲ.ಇದನ್ನು ಗುರುವಿನಿಂದಲೇ ಅರಿಯಬೇಕು.ಇಲ್ಲವದರೆ ಇಲ್ಲ.(ಪುಟ 6)

 

1೯೯)ಹರಿಹರೇಶ್ವರನೆಂದರೆ ಸಚ್ಚಿದಾನಂದ ಶಿವ.(ಪುಟ 70)

 

200)ಅಧ್ಯಾತ್ಮಿಕ ತೃಷೆಯಿಲ್ಲದೆ ಸಾಧನೆಯೂ ಇಲ್ಲ.ಅನುಭವವೂ ಇಲ್ಲ.(ಪುಟ71)

 

201)ಸಾಕರವೆಲ್ಲ ಓಂಕಾರವೇ.ನಿರಾಕಾರವೂ ಓಂಕಾರವೇ.ಒಳಹೊರಗೆಲ್ಲಾ ವ್ಯಾಪಿಸಿರುವ ಪ್ರಾಣಶಕ್ತಿಯೇ ಓಂಕಾರ.ಧ್ಯಾನಯೋಗಿಗೆ  ಭ್ರೂಮಧ್ಯದಲ್ಲಿ ಒಳಗಣ್ಣಿಗೆ ತೋರುವ ಚಿತ್ಬಿಂದುವೂ ಓಂಕಾರವೇ.

 

202)ನೀರಿನ ಅಲುಗಾಟದಿಂದ  ನೀರಿನಲ್ಲಿರುವ ಸೂಯ೯ನ ಪ್ರತಿಬಿಂಬವೂ ಅಲುಗಾಡುವಂತೆ  ತೋರುತ್ತದೆ.ಮನಸ್ಸಿನ ಈಸ್ಥಿತಿಯೇ ಮಾಯೆ.ಆದರೆ ವಿವೇಕದಿಂದ ಬುದ್ಧಿಯು ಆತ್ಮಸ್ವರೂಪದಲ್ಲಿಯೇ  ನಿಂತರೆ ಉನ್ಮನಿ ಅಥವ ಉನ್ಮಾದ ಉಂಟಾಗುತ್ತದೆ.ಇದೊಂದು ದಿವ್ಯ ಉನ್ಮಾದ(ಪುಟ 71)

 

203)ಒಂದು ಹಕ್ಕಿಯನ್ನು ಕಾಲುಕಟ್ಟಿ ಅಥವ ಗೂಡಿನಲ್ಲಿಟ್ಟು ಮಾತು ಕಲಿಸಿದಂತೆ ,ಬುದ್ಧಿಯನ್ನು ಆತ್ಮನಲ್ಲಿಟ್ಟು  ಜ್ಞಾನವನ್ನು ಅಭ್ಯಾಸ ಮಾಡಿಸಬೇಕು.(ಪುಟ72)

 

204)ಒಳ್ಳೆದಕ್ಕೂ ಕೆಟ್ಟದ್ದಕ್ಕೂ ನಮ್ಮ ಮನಸ್ಸೇ ಕಾರಣ.ಹೊರಗಿನವರು ಕಾರಣರಲ್ಲ.ಬೆಂಕಿಯಲ್ಲಿ ಯಾವ ವಸ್ತುವು ಬಿದ್ದರೂ ಅದು ಸುಟ್ಟು ಬೆಂಕಿಯೇ ಆಗುವಂತೆ  ಉಜ್ವಲ ತಪಸ್ವಿಗಳದ ಸಜ್ಜನರ ಜೊತೆಗೆ ದುಜ೯ನರು ಸೇರಿದರೂ  ಅವರು ಸಜ್ಜನರೇ ಆಗುತ್ತಾರೆ,(ಪುಟ 72)

 

205)ಯೋಗ ಸಧನೆಯ ಆರಂಭದಲ್ಲಿ  ಒಳಗಿರುವ ಮಾಯಾ ಭ್ರಮೆಯು ಹಲವು ಬಗೆಯಿಂದ ಕಾಣುತ್ತದೆ.ನೋಡಿದಲ್ಲೆಲ್ಲಾ ಸಪ೯ಗಳು ಕಾಣಬಹುದು.ದೇಹವು ಪವ೯ತ ಭಾರವೆನಿಸಬಹುದು.ಅಥವಾ ಒಣಗಿದೆಲೆಯಂತೆ ,ಗರಿಯಂತೆ ಹಗುರವಾಗಿ ಭೂಮಿಯನ್ನು ಬಿಟ್ಟು ಮೇಲೇರಿದಂತೆ ಭಾಸವಾಗಬಹುದು.ಕೆಲವು ಸಮಯ ತಣ್ಣಗೆ ಸಮುದ್ರದಲ್ಲಿ ಕೂತಿರುವಂತೆಯೂ,ಇನ್ನು ಕೆಲವು ಸಮಯ ಬಿಸಿ ನೀರನ್ನು  ಮೈಮೇಲೆ

ಚೆಲ್ಲಿದಂತೆಯೂ,ಒಮ್ಮೆ ಸೂಜಿಯಂತೆ ಸೂಕ್ಷ್ಮವಾಗಿಯೂ ಭವ್ಯವಾದ ಉಪ್ಪರಿಗೆಯ ಮೆಲೆ ಕೂತಿರುವಂತೆಯೂ,ದೇಹವು ವೃಕ್ಷದಂತೆ ಸ್ಥಿರವಾಗಿಯೂ ಕಾಣಬಹುದು.ಕೆಲವು ಸಮಯ ಓಡಾಡುತ್ತಿದ್ದೇವೋ,ಕೂತಿದ್ದೇವೋ,ಮಾತನಾಡುತ್ತಿದ್ದೇವೋ ತಿಳಿಯುವುದಿಲ್ಲ.ಇನ್ನೊಂದು ಸಮಯ ಎಲ್ಲಾ ಭಾವನೆಗಳೂ ಸಂವೇದನೆಗಳೂ ಸ್ತಬ್ಧವಾಗುತ್ತಾ ನಿಂತೇ ಹೋಗುತ್ತವೆ.ಜನರನ್ನು ನೋಡಿದರೆ  ನಾಟಕದಲ್ಲಿಯ ಪಾತ್ರಧಾರಿಗಳಂತೆಯೋ ನೆರಳುಗಳಂತೆಯೋ ತೋರುತ್ತಾರೆ.

ಇನ್ನ್ಪಮ್ಮೆ ಲೋಕವ್ಯಾಪಾರವೆಲ್ಲಾ  ಬಯಾಸ್ಕೋಪಿನ ಚಿತ್ರದಂತೆ ತೋರುತ್ತದೆ.ಸವ೯ವೂ ಮತ್ತೊಮ್ಮೆ ಸಚ್ಚಿದಾನಂದವಾಗಿಯೂ ಕಾಣುತ್ತದೆ.' ಪ್ರಪಂಚದಲ್ಲಿ ಜನರೇಕೆ ಬಂದಿದ್ದಾರೆ?ಇವರು ಹೋಗುವುದಾದರೂ ಎಲ್ಲಿಗೆ'?ಎಂಬಿವೇ ಮೊದಲಾದ ಪ್ರಶ್ನೆಗಳೂ ಏಳುತ್ತವೆ. (ಪುಟ73)

 

206)ಕತ್ತಲೆಯಲ್ಲಿ ಬೆಳಕನ್ನೂ ,ಮಿಥ್ಯೆಯಲ್ಲಿ ಸತ್ಯವನ್ನೂ ಭೇದದಲ್ಲಿ ಅಭೇದವನ್ನೂ  ನೋಡುವುದೇ ಆತ್ಮಜ್ಞಾನ.ಪರಮತ್ಮನೂ  ಪ್ರಪಂಚವೂ ,ಬೆಳಕೂ ಕತ್ತಲೆಯೂ  ಒಂದೇ ನಾಣ್ಯದ ಎರಡು ಮುಖಗಳು.ಅಧೋಗತಿಯಾದ ವಿಷಯಾಸಕ್ತಿ ಎಂದೂ ಶಾಶ್ವತವಲ್ಲ.ಊಧ್ವ೯ಗತಿಯಾದ ಜ್ಞಾನನಿಷ್ಠೆಯಿಂದ  ಆಗುವ ಆನಂದವೇ ಶಾ±್ವತವಾದುದು.ಮಾಯೆಯನ್ನು ದಾಟಿ ಮೇಲೇರಿರುವ ಜ್ಞಾನಿಗೆ ಪ್ರಪಂಚವೆಲ್ಲಾ ವಿಚಿತ್ರ ಮಾಯಾಜಾಲವೆಂದು ತೋರುತ್ತದೆ.ಅವರಿಗೆ ಪ್ರಪಂಚ ಸುಖದ  ಕ್ಷಣಿಕತೆಯೂ  ಕ್ಷುದ್ರತೆಯೂ  ಮನವರಿಕೆ ಯಾಗುತ್ತದೆ.(ಪುಟ 73)

 

207)ವಿಷಯ ಭೋಗ ಮಾಡಿದಷ್ಟೂ  ವಿಷಯೇಚ್ಛೆ ಬೆಳೆಯುತ್ತಲೇ ಇರುತ್ತದೆ.(ಪುಟ 74)

 

208)ನೀರಿನಲ್ಲಿ ಮುಳುಗಿರುವವನಿಗೆ ಛಳಿಯೇ ಕಾಣದಿರುವಂತೆ  ಪೂಣಾ೯ನಂದದಲ್ಲಿ ಮುಳುಗಿ  ಪ್ರೇಮಾವೇಶವುಳ್ಳವರಿಗೆ ಕ್ರೋಧ ಮೊದಲಾದ ಉದ್ವೇಗಗಳೇ ಉಂಟಾಗುವುದಿಲ್ಲ.(ಪುಟ 74)

 

20)ಹುರಿದ ಬೀಜವು ಮೊಳಕೆಯಾಗದಿರುವಂತೆ ವಿಷಯವಾಸನೆಯು ಸುಟ್ಟು ಹೋಗಿರುವ  ಜ್ಞಾನಿಗೆ ಪುನಃ ಪುನಜ೯ನ್ಮ ಪಡೆಯುವುದಿಲ್ಲ.ಬದುಕಿರುವಾಗ ವಿಷಯಾಸಕ್ತನೂ ಆಗುವುದಿಲ್ಲ.(ಪುಟ 74)

 

210)ಯೋಗಿಯು ತನ್ನೊಳಗೆ ಝೇಂಕರಿಸುವ  ಓಂಕಾರದಲ್ಲಿ  ಮನಸ್ಸನ್ನಿಟ್ಟು  ಲೋಕವನ್ನು ಮರೆಯಬೇಕು.(ಪುಟ 75)

 

211)ಆಕಳುತನ್ನ ಎಳೆಗರುವನ್ನು ಪ್ರೀತಿಸುವಂತೆ ಜ್ಞಾನಿಯು ಎಲ್ಲರನ್ನೂ ಪ್ರೀತಿಸುತ್ತಾನೆ.(ಪುಟ 75)

 

212) ಮೃಗ ಪಕ್ಷಿಗಳಿಗೆ ನಾಳೆಯ ಯೋಚನೆ ಇರುವುದಿಲ್ಲ.ಅವು ಅವತ್ತವತ್ತಿನ ಹಸಿವನ್ನು ಮಾತ್ರ ಕಳೆದುಕೊಳ್ಳುತ್ತವೆ.ಹೀಗೆಯೇ ಮನುಷ್ಯನು ನಾಳೆಯ ಚಿಂತೆಯಲ್ಲಿಯೇ ಶಕ್ತಿಯನ್ನೂ ಕಾಲವನ್ನೂ ಕಳೆಯದೆವತ೯ಮಾನದ ಕತ೯ವ್ಯವನ್ನು ನೆರವೇರಿಸಬೇಕು.ಇದೇ ನಿಜವಾದ ತ್ಯಾಗ.(ಪುಟ 75)

 

213)ಆಸೆಯಿಲ್ಲದವನೇ ಆಚಾಯ೯.ಅವನೇ ಸನ್ಯಾಸಿ.ಅವಧೂತ.ಅವಧೂತನೇ ಸವೋ೯ಚ್ಛ.ಸವೋ೯ತ್ತಮ.ಅದಕ್ಕಿಂತಲೂ ಹೆಚ್ಚಿನ ಸ್ಥಿತಿ ಇಲ್ಲ.ಪೂಣ೯ ನಿಷ್ಕಾಮನಾದ ಅವಧೂತನೇ ಜಗದ್ಗುರು.ಅವನೇ ಜೀವನ್ಮುಕ್ತ.ಪೂಣ೯ಪಾಪರಾಹಿತ್ಯ,ಸ್ವರಾಜ್ಯಸುಖ,ಬ್ರಹ್ಮಾನಂದ,ನಿಜಾನಂದ,ಯೋಗಾನಂದ.ಸಾವ೯ಭೌಮನಿಗೂ ಉಪದೇಶ ಮಾಡುವ ಸಾಮಥ್ಯ೯ ಇವೇ ಮೊದಲಾದವು ಅವಧೂತರ ಸ್ವತ್ತುಗಳು.ಅವನೇ ಸವೇ೯ಶ್ವರನಾದುದರಿಂದ ಸವ೯ಜ್ಞ,ಸವ೯ಶಕ್ತ.

 

214)ಸೃಷ್ಟಿಗೆ ಮೂಲಕಾರಣವಾದ ದೇವರನ್ನು ಅರಿಯದೆ ಮಾನವ ಜನ್ಮದ ಧ್ಯೇಯವನ್ನು ಸಾಧಿಸಿದಂತಾಗುವುದಿಲ್ಲ.ಪತಂಗಗಳುಬೆಳಕಿಗೆ ಮರುಳಾಗಿ,ದೀಪದ ಸುತ್ತಲೂ ಸುತ್ತಿ ಸುತ್ತಿ ,ಕೊನೆಗೆ ದೀಪದಲ್ಲಿಯೇ ಬಿದ್ದು,ಸುಟ್ಟುಹೋಗುವಂತೆ .ಅಜ್ಞರೂ  ವಿಷಯ ಸುಖವೆಂಬ ಮಾಯೆಯಿಂದ  ಮೋಹಿತರಾಗಿ ಅದರಲ್ಲಿಯೇ ಸಿಕ್ಕಿ  ತೊಳಲುತ್ತಾ ಕಷ್ಟದಿಂದ ಸಾಯುತಾರೆ.(ಪುಟ 75)

 

215)ಹಗ್ಗವಿಲ್ಲವಾದರೆ  ಬಾವಿಯಿಂದ ಹೇಗೆ ನೀರನ್ನು ಸೇದಿಕೊಳ್ಳಲು ಆಗುವುದಿಲ್ಲವೋ ,ಹಾಗೆ ಪ್ರಾಣಾಯಾಮದ ಅಭ್ಯಾಸವಿಲ್ಲವಾದರೆಮೂಲಾಧಾರದಿಂದ ಸಹಸ್ರಾರಕ್ಕೆ ಕುಂಡಲಿನಿಯನ್ನು ಒಯ್ಯಲು ಆಗುವುದಿಲ್ಲ.ಆದ್ದರಿಂದ ಅಂಥವರಿಗೆ ಯೋಗವೂ ಇಲ್ಲ.(ಪುಟ 75)

 

216)ತೆಂಗಿನ  ಮರದಲ್ಲಿ  ಫಲವು ಮೇಲೆ ತಲೆಯಲ್ಲಿ ಬಿಡುವಂತೆ ಜ್ಞಾನವೆಂಬ ಫಲವೂ ಮನುಷ್ಯನ ಮಸ್ತಕದಲ್ಲಿಇದೆ(ಪುಟ 75)

 

217)ನಾವು ಕೊಡೆಯನ್ನು ಹಿಡಿದಿರುತ್ತೇವೆಯೇ ಹೊರತು,ಕೊಡೆಯು ನಮ್ಮನ್ನು ಹಿಡಿದಿರುವುದಿಲ್ಲ.ಹಾಗೆ ನಾವು ಮಾಯೆಯನ್ನು ಹಿಡಿದು ಕೊಂಡಿದ್ದೇವೆ ಹೊರತು ಮಯೆಯು ನಮ್ಮನ್ನು ಹಿಡಿದಿಲ್ಲ.(ಪುಟ 76)

 

218)ಮನಸ್ಸು ಇರುವುದರಿಂದಲೇ  ಪ್ರಪಂಚವು ತೋರುತ್ತಿದೆ.ಮನಸ್ಸು ಇಲ್ಲವಾದರೆ ಪ್ರಪಂಚವೇತೋರುವುದಿಲ್ಲ.ಎಚ್ಚರವೂ ಎಚ್ಚ್ರರದ ಪ್ರಪಂಚದ ನಿದ್ರೆಯಲ್ಲಿಲ್ಲ.ನಿದ್ರೆಯೂ  ನಿದ್ರೆಯ ಅನುಭವವೂ ಎಚ್ಚರದಲ್ಲಿಲ್ಲ.ಆದ್ದರಿಂದ ಇವು ಹುಸಿ ಮಿಥ್ಯ.ಆದುದರಿಂದ ತಾನುಮಾತ್ರ ಎರಡರಲ್ಲಿಯೂ ಇದ್ದಾನೆ.ಆದ್ದರಿಂದ ಆದ್ದರಿಂದ ತಾನು  ಎಂದೂ ಎಲ್ಲಿಯೂ  ಇಲ್ಲವಾಗದೆ ಯಾವಾಗಲೂ ಇರತಕ್ಕವನಾದುದರಿಂದಲೇ ಸತ್ಯ.(ಪುಟ 76)

 

21) ಹಡಗಿನಲ್ಲಿ ಒಂದು ನಗರದ ಸಾಮಗ್ರಿಗಳು ಇರುವಂತೆ ನಮ್ಮಲ್ಲಿ ಇಡಿಯ ವಿಶ್ವವೇಇದೆ(ಪುಟ76)ಸೃಷ್ಟಿ ಎಲ್ಲಾ ಮನಸ್ಸಿನ ಕಲ್ಪನೆ.ಮನಸ್ಸು ಒಳಮುಖವಾದರೆ ಸೃಷ್ಟಿ ಇಲ್ಲ.ಎಚ್ಚರ ಕನಸುಗಳಲ್ಲಿ ಹುಟ್ಟುಸಾವು, ಬಾಳು ಎಲ್ಲಾ ತೋರುತ್ತವೆ.(ಪುಟ76)

 

220)ತುಂಬಾ ನೀರಿರುವ ಪಾತ್ರೆಗೆ  ನೀರನ್ನು ಹೊಯ್ದರೆ ,ನೀರು ಹೊರಗೆ ಚೆಲ್ಲುತ್ತದೆ.ಹಾಗೆಯೇ ಪೂಣ೯ಶಾಂತಿಯು ಲಭಿಸಿದಾಗ  ಅದು ಹೊರಗೆ ವ್ಯಕ್ತವಾಗುತ್ತದೆ.ಆಗ ಅವನಿಗೆ ಆಸೆ ಇರುವುದಿಲ್ಲ.ದೇಹವನ್ನು ಮೀರಿರುತ್ತಾನೆ.ನಿರಿಚ್ಛೆಯಾದ ಶಾಂತಿಯೇ ಪರಮ ಶಾಂತಿ.ಅದು ದೇವರಲ್ಲಿ ಒಂದಾಗುವುದು.ಅದಕ್ಕಿಂತಲೂ ಹೆಚ್ಚಿನದಿಲ್ಲ.(ಪುಟ 76)

 

221)ಶಾಂತಿಯು ಪರಮತ್ಮ ಸ್ವರೂಪ.ಅವನು 'ಶಾಂತಾಕಾರಂ'.ನಿರಾಕಾರನಾದವನಿಗೆ ಶಾಂತಿಯೂ ಓಂಕಾರವೂ ಎರಡು ರೂಪಗಳು.ನಿವಿ೯ಕಾರನಾದ ಆತ್ಮ ,ಪರಮಾನಂದ ಸ್ವರೂಪ.ಅವನು ವಿಚಾರ -ವಿವೇಕಗಳನ್ನು ಮೀರಿದವನು.(ಪುಟ76)

 

222)ಕಂಠದಿಂದ ಕೆಳಗಿನ ಚಕ್ರಗಳೆಲ್ಲಾ ಪ್ರಾಣಯಾಮದ ಹಠಯೋಗಕ್ಕೆ ಸಂಬಂಧಿಸಿದ ಚಕ್ರಗಳು.ಕಂಠದಿಂದ ಮೇಲಿನ ಲಕ್ಷ್ಯಾನುಸಂಧಾನಕ್ಕೆ  ಸಂಬಂಧಪಟ್ಟ ರಾಜಯೋಗಕ್ಕೆ ಸೇರಿದ ಸ್ಥಾನಗಳು.ಕುಂಡಲಿನಿಯು  ಕಂಠದ ವಿಶುದ್ಧ ಚಕ್ರದಿಂದ ಕೆಳಗಿರುವಾಗ ಹಠಯೋಗ.(ಬೆನ್ನು ಹುರಿಯಲ್ಲಿ) ಗುದ ಸ್ಥಾನಕ್ಕೆ  ಸಮನಾದ ಮೂಲಾಧಾರದಿಂದ  ಹಿಡಿದು ಸಹಸ್ರಾರದವರೆಗೆ ಪ್ರಸಿದ್ಧವಾದ ಏಳು ಚಕ್ರಗಳಿರುವಂತೆ,ರಾಜಯೋಗದಲ್ಲಿಯೂ  ಕುತ್ತಿಗೆಯಿಂದ ಮೇಲೆ  ಏಳು ಚಕ್ರಗಳಿವೆ.ರಾಜಯೋಗದ ಮೂಲಾಧಾರವು ಕಂಠದಲ್ಲಿದೆ.ಆದ್ದರಿಂದ ರಾಜಯೋಗದಲ್ಲಿ ಕುಂಡಲಿನಿಯು,ಕಂಠದ ಮೂಲಾಧಾರದಿಂದ ಮೇಲೇಳಬೇಕು.ಭ್ರೂ ಮಧ್ಯವೇ ಹೃದಯಾಕಾಶ.ಅದ

ರಲ್ಲಿರುವ ಆಜ್ಞಾಚಕ್ರವು  ತ್ರಿಕೋಣಾಕೃತಿಯುಳ್ಳದ್ದು.ಸ್ವಾಧಿಷ್ಠಾನವು ಮೆದುಳಿನಲ್ಲಿದೆ.ಆಜ್ಞಾ  ಚಕ್ರವೇ ಮುಕ್ತಿ ಸ್ಥಾನ.ಕುಂಡಲಿನಿಯು ಆಜ್ಞಾಚಕ್ರವನ್ನು ಸೇರಿದಾಗ ಯೋಗಿಗೆ ಸಮಾಧಿ ಸ್ಥಿತಿ ಬರುತ್ತದೆ.(ಪುಟ77)

 

223) ಇಹ ಎನ್ನುವುದೇ ಜೀವಾತ್ಮ.ಪರ ಎನ್ನುವುದೇ ಪರಮಾತ್ಮ.ಇವೆರಡರ ಸಮಾಗಮವೇ ಚಿದಾಕಾಶ.'ಚಿತ್' ಎನ್ನುವುದೇ ಆತ್ಮಪ್ರತ್ಯಯವೆಂಬ ಅತ್ಯಂತ ಸೂಕ್ಷ್ಮವೂ ಸ್ವಚ್ಛವೂ  ಆದ  ಅಂತಃಕರಣ ವೃತ್ತಿ.ಸನ್ಮಾತ್ರವೇ 'ಚಿತ್'ಗೆ ಆಧಾರವಾದ ಅಖಂಡ ತತ್ವ.ಬೆಂಕಿಯಲ್ಲಿ  ಬಿಸಿಯೂ ಬೆಳಕೂ ಎರಡೂ ಇರುವಂತೆ ಆತ್ಮನಲ್ಲಿ ಸತ್-ಚಿತ್ ಸ್ವಭಾವಗಳು ಒಂದಾಗಿವೆ.(ಪುಟ77)

 

224)ಪ್ರಾಣಾಯಾಮದಲ್ಲಿ  ಮೇಲಕ್ಕೆ ಉಸಿರನ್ನು ಎಳೆದುಕೊಳ್ಳುವುದೇ ಪೂರಕ.ಒಳಗೆ ತುಂಬಿ ನಿಲ್ಲಿಸಿಕೊಳ್ಳುವುದೇ ಕುಂಭಕ.ಉಸಿರನ್ನು ಸಾವಕಾಶವಾಗಿ ಬಿಡುವುದೇ  ರೇಚಕ.ಒಂದೇ ಅಕ್ಕಿಯಿಂದ ಹಲವು ಬಗೆಯ ದೋಸೆಗಳನ್ನು ಮಾಡುವಂತೆ,ಪ್ರಾಣಾಯಾಮದಿಂದಲೇ ಏನನ್ನಾದರೂ ಸಾಧಿಸಬಹುದು.ಪ್ರಾಣವನ್ನು ಕುಂಭಿಸಿ  ಸುಷುಮ್ನೆಯ ಮೂಲಕ  ಬ್ರಹ್ಮರಂದ್ರಕ್ಕೆ ಹರಿದು  ಅಲ್ಲಿರುವ ಆನಂದರೂಪ ಶಿವನಲ್ಲಿ ಐಕ್ಯವಾಗಬೇಕು.ಶಿವ-ಶಕ್ತಿಯು ಅಖಂಡ ಒಂದೇ.ಅದೇ ಪ್ರಣವ.ಇದರಿಂದಲೇ ಸಕಲ ಸೃಷ್ಟಿ.(ಪುಟ 77)

 

225) ಮನೋವ್ರೃತ್ತಿಗಳ ರೂಪವಾದ  ನದಿಗಳೆಲ್ಲಾ ಶಿವಶಕ್ತಿ ರೂಪವಾದ ಸಾಗರದಲ್ಲಿ ಸೇರಿ,ಒಂದಾಗುತ್ತವೆ.ಕಾಗದವು ಸುಟ್ಟು  ಬೆಂಕಿಯಾದಂತೆ  ಮನಸ್ಸು ಜ್ಞಾನಾಗ್ನಿಯಿಂದ  ನಿವಿ೯ಕಲ್ಪ ಜ್ಞಾನ ಸ್ವರೂಪವೇ ಆಗುತ್ತದೆ.(ಪುಟ 78)

 

226)ಊದ್ವ೯ಶ್ವಾಸದಿಂದಲೇ  ಸಮಾಧಿಯಗುತ್ತದೆ.ಸಮಾಧಿಯಲ್ಲಿ ಕುಂಡಲಿನೀ ಶಕ್ತಿಯು ಪೂಣ೯ ಸ್ವಾಧೀನವಾಗಿರುತ್ತದೆ.ಇದೇ ತಾರಕ ಬ್ರಹ್ಮ.ಅಖಂಡ ತತ್ವದ ಅನುಭವವುಳ್ಳವನೇ ರಾಜಯೋಗಿ.ಅವನು ಕೂತಾಗ ನಿಂತಾಗ ನಡೆಯುವಾಗ,ಮಾತಾಡುವಾಗ ಎಲ್ಲಾ ವ್ಯಾಪಾರಗಳ

ಲ್ಲಿಯೂ  ಆತ್ಮನೇ ಆಗಿರುತ್ತಾನೆ.ಭವ್ಯವಾದೊಂದು ಭವನದ ಏಳನೆಯ ಮಹಡಿಯ  ಮೇಲಿನಿಂದ ಕೆಳಗೆ ಸುತ್ತಲೂ  ನೋಡಿದಂತೆಯೂ ,ಎತ್ತರವಾದ ಪವ೯ತದಿಂದ ಕೆಳಗೆ  ಎಲ್ಲಾ ನೋಡಿದಂತೆಯೂ  ರಾಜಯೋಗಿಯ ದೃಷ್ಟಿ  ಇರುತ್ತದೆ.ಎಲ್ಲಾ ಯೋಗಗಳಲ್ಲಿಯೂ ಅದು ರಾಜನಂತಿರುವುದರಿಂದ  ರಾಜಯೋಗವೆನಿಸಿದೆ.ಪರಮಾತ್ಮನಲ್ಲಿ  ಮನಸ್ಸು ಒಂದಾಗಿರುವುದೇ ರಾಜಯೋಗ.ಅದರಿಂದ ಲಭಿಸುವ  ಅನುಭವ ನಿಗು೯ಣ ನಿರಾಕಾರವಾದ  ಪರಮಾನಂದ,ಪರಮಶಾಂತಿ.ಇದೇ ಜೀವನ್ಮುಕ್ತಿ.(ಪುಟ78)

 

227)ರಾಜಯೋಗದಲ್ಲಿ  ಯಾವ ಕಮ೯ವೂ ಇಲ್ಲ.ಶಿವಪೂಜೆ ಇಲ್ಲ. ಬೇರೊಂದು ಸ್ಥಾನದಲ್ಲಿ ಸಾಧನೆ ಇಲ್ಲ.ಒಳಗೆ ಮೇರುದಂಡದಲ್ಲಿ  ನಡೆಯುವ ಊಧ್ವ೯ಶ್ವಾಸದಲ್ಲಿ  ಎಲ್ಲಾ ಸಾಧನೆ ಇದೆ.ಸಹಸ್ರಾರದಲ್ಲಿ  ಮಾಡಿದ ನಮಸ್ಕಾರಾದಿಗಳು  ದೇವರಿಗೂ ಸಮಸ್ತ ವಿಶ್ವಕ್ಕೂ ಮುಟ್ಟುತ್ತವೆ.(ಪುಟ 78)

 

228)ಬ್ರಾಹ್ಮೀ ಸ್ಥಿತಿ ಎಂದರೆ ತನ್ನೊಳಗೇ ಏಕತ್ವದ ಅನುಭವ.ಆದ್ದರಿಂದ ಒಳಗೆ ತೋರುವುದೇ ಬ್ರಹ್ಮಾಂಡ.ಹೊರಗೆ ತೋರುವುದೇ ಪಿಂಡಾಡ.ಒಳಗಿನ ಬ್ರಹ್ಮಾಂಡಕ್ಕೆ -ಆತ್ಮಕ್ಕೆ ಸೃಷ್ಟಿ ಇಲ್ಲ. ಮನಸ್ಸಿಗೆ ಮಾತ್ರ ಸೃಷ್ಟಿ.ಶರೀರ ಭಾವನೆ ಬಂದೊಡನೆ  ಸೃಷ್ಟಿಯೂ ತೋರ ತೊಡಗುತ್ತದೆ.ಮನಸ್ಸು ಇರುವರೆಗೂ ಭೇದ,ಭಯ,ದುಃಖ ಎಲ್ಲ ಇರುತ್ತದೆ.ಮನಸ್ಸು ಸತ್ತರೆ

ಎಲ್ಲ ಸಾಯುತ್ತವೆ.ಫಲಭೋಗಕ್ಕೆ  ಕಮ೯ವೂ ಕಮ೯ಕ್ಕೆ ಕರಣವೂ,ನಿಷ್ಕಾಮವೇ ಜೀವನ್ಮುಕ್ತಿ.

ಅದೇ ಅವಧೂತ ವೃತ್ತಿ. (ಪುಟ 78)     

 

22)ಜ್ಞಾನಿಗಳು ಯಾವ  ಕೆಲಸ ಮಾಡುತ್ತಿದ್ದರೂ ಯವಾಗಲೂ ಯೋಗನಿದ್ರೆಯಲ್ಲಿರುವರು.ಜ್ಞಾನಿಗಳನ್ನು ಆಮೆಗೆ ಹೋಲಿಸಬಹುದು.ಅವಶ್ಯವಿದ್ದಾಗ ಮಾತ್ರ ಅವರು ತಲೆಯನ್ನೂ ಕೈಕಾಲುಗಳನ್ನೂ  ಹೊರಗೆ ಚಾಚಿ,ಇಲ್ಲದ ಕಾಲದಲ್ಲೆಲ್ಲಾ ಸುರಕ್ಷಿತವಾಗಿ ಒಳಗೇ ಇಟ್ಟುಕೊಂಡಿರುವರು.ಅತ್ಯವಶ್ಯವಾದಾಗ ಮಾತ್ರ ಹೊರಗೆ ಅನಿವಾಯ೯ವಾದಷ್ಟು ಕಾಲ  ವ್ಯವಹರಿಸಲು ಬಿಡುವರು.(ಪುಟ 7)

 

230)ಎಲ್ಲರೂ ಅವರವರ ಸಂಸ್ಕಾರಕ್ಕೂ ಸಾಧನೆಗೂ ಅನುಗುಣವಾಗಿ  ಎಂದಾದರೊಂದು ದಿನ ಮುಕ್ತಿಯನ್ನು ಪಡೆದೇ ಪಡೆಯುತ್ತಾರೆ.ಕಾಲದಲ್ಲಿ ಮಾತ್ರ ಹಿಂದು -ಮುಂದು. ಜನ್ಮದಲ್ಲಿಯೇ ಮುಕ್ತಿಯನ್ನು ಪಡೆಯುವ ಸನ್ಯಾಸಿಯು  ಮೇಲ್ ರೈಲಿನಂತೆ ಶೀಘ್ರಗಾಮಿ.ತನ್ನ ಲಕ್ಷ್ಯವನ್ನೂ  ಶಕ್ತಿಯನ್ನೂ ಹೊರಗೆ ಬಿಟ್ಟಿರುವ ಸಂಸಾರಿಯು ಲೋಕಲ್ ರೈಲಿನಂತೆ  ಅಥವಾ ಗೂಡ್ಸ್ಗಾಡಿಯಂತೆ ಸವಕಾಶವಾಗಿ ಎಂದಾದರೊಂದು ದಿನ ತನ್ನ ಗಮ್ಯ ಸ್ಥಾನವನ್ನು ಸೇರಬಹುದು.ಇಬ್ಬರಲ್ಲಿಯೂ ಶಕ್ತಿ ಒಂದೇ. ಅದರೆ ವಿನಿಯೋಗ ಬೇರೆ ಬೇರೆ.(ಪುಟ 7)

 

231)ನಾವು ಯಾವ ಕಮ೯ವನ್ನೇ ಮಾಡುತ್ತಿರಲಿ ನಮ್ಮ ಲಕ್ಷ್ಯವು ಚಿದಾಕಾಶದಲ್ಲಿರಬೇಕು.(ಪುಟ7)

 

232)ಮೌನದ ನಿಜವಾದ ಸಂಬಂಧ   ಮನಸ್ಸಿಗೆ ಹೊರತು ನಾಲಿಗೆಗಲ್ಲ.ಬುದ್ದಿ ವೃತ್ತಿಗಳೆಲ್ಲಾ ಅಡಗಿ ಆತ್ಮಜ್ಞಾನದಲ್ಲಿ ನೆಲೆನಿಲ್ಲುವ  ಸಮಾಧಿ ಸ್ಥಿತಿಯೇ ನಿಜವದ ಮೌನ.ಮೌನದಿಂದಲೇ ಯೋಗಸಾಧನ-ಸಿದ್ದಿ.ಇಡಾ-ಪಿಂಗಳಗಳ ಸಂಗಮ ಸ್ಥಾನವಾದ ಸುಷುಮ್ನೆಯಲ್ಲಿ ಮನಸ್ಸು ನಿಲ್ಲುವುದೇ ಮೌನವ್ರತ.(ಪುಟ7)

 

233)ಎಲ್ಲಾ ತತ್ವಗಳ ಮೂಲವೆ ಬ್ರಹ್ಮ.ಇದನ್ನು ಅರಿತಾಗಲೇ ಜೀವನ್ಮುಕ್ತಿನದಿಗಳು ಸಮುದ್ರವನ್ನು ಸೇರಿದಮೇಲೆ ಅವುಗಳನ್ನು ಗುರುತಿಸಲಾಗುವುದಿಲ್ಲ.ಅವುಗಳ ನಿಜರೂಪವನ್ನು  ಅವುಗಳ ಮೂಲ ಉಗಮದಲ್ಲಿಯೇ ತಿಳಿಯಬೇಕು ಹಾಗೂ ನಮ್ಮ ಸ್ವರೂಪವನ್ನು ಸವ೯ಮೂಲವಾದ ಪರಮಾತ್ಮನಲ್ಲಿಯೆ ಅರಿಯಬೇಕು.(ಪುಟ7)

 

234)ಸಕ್ಕರೆಯಮನ್ನು ಕೈಯಲ್ಲಿ ಹಿಡಿದುಕೊಂಡರೆ ಅದರ ಸಿಹಿ ಗೊತ್ತಾಗುವುದಿಲ್ಲ.ಅದನ್ನು ನಾಲಗೆಯ ನೇಲೆ ಇಟ್ಟುಕೊಂಢಾಗಲೇ ಆದರ ಸವಿ ತಿಳಿಯುವುದು.ಹಗೆ  ಪುಸ್ತಕ ಜ್ಞನವು µಚಚೆ೯ಗೂ ಸಣದೇಹಕ್ಕೂ  ಅವಕಶ ಕೊಡುವುದು.ಆದರೆ ಸಾಧನೆ ಮಾಡಿದಾಗಲೇ ಅದರ ಅನುಭವ ಬರುವುದು.(ಪುಟ80)

 

235)ಜೀವನ್ಮುಕ್ತಿಯೇ ಯೋಗಸಾಧನೆಯ ಗುರಿ.ಬುದ್ಧಿಯೇ ಗುಹೆ.ಯೋಗಿಯ ಮನಸ್ಸು ಯಾವಾಗಲೂ ಶುದ್ದಬುದ್ದಿಯಲ್ಲಿಯೇ ಅಡಗಿ ಗುಹಾವಾಸ ಮಾಡಬೇಕು.ಆತ್ಮನ ವಾಸಸ್ಥಾನವಾದ  ಹೃದಯಾಕಾಶವೇ ಶಿವನ ಮೂರನೆಯ ಕಣ್ಣಿನ ಸ್ಥಾನ.ಹೃದಯಾಕಾಶವೇ ಗುಹೆ.(ಪುಟ212)

 

236)ಸ್ತೀ ಪುರುಷರೆಂದು ವ್ಯವಹರಿಸುವುದು  ಕೇವಲ ಸ್ಥೂಲ ಶರೀರದ ದೃಷ್ಟಿಯಿಂದ.ಮನಸ್ಸಿನಲ್ಲಿಯೂಪ್ರಾಣದಲ್ಲಿಯೂ ವ್ಯತ್ಯಾಸಗಳಿಲ್ಲ.ಭಕ್ತಿಗೂ ಜ್ಞಾನಕ್ಕೂ ಸ್ತ್ರೀ ಪುರುಷರೆಂಬ ಭೇದವಿಲ್ಲ.ಜ್ಞಾನಿಗಳ ದೃಷ್ಟಿಯಿಂದ ಯಾವಭೇದವೂ ಇಲ್ಲ.(ಪುಟ80)

 

237)ಆಸ್ತಿ ಐಶ್ವಯ೯,ಅಂತಸ್ತುಗಳಿಂದ ಶ್ರೀಮಂತನಾಗಬಹುದೇ ಹೊರತು ಮಹಾಂತರಾಗುವುದಿಲ್ಲ.ಅತ್ಮಜ್ಞಾನಿಯು ಭಿಕ್ಷುಕನಾಗಿದ್ದರೂ ಶ್ರೇಷ್ಠನೆನಿಸುತ್ತಾನೆ.(ಪುಟ80)

 

238)ಎಲ್ಲಾ ವಿದ್ಯೆಗಳಲ್ಲಿ ಬ್ರಹ್ಮವಿದ್ಯೆಯೇ ಶ್ರೇಷ್ಠ.ಏಕೆಂದರೆ ಬ್ರಹ್ಮವಿದ್ಯೆಯನ್ನು ಬಿಟ್ಟು  ಮಿಕ್ಕ ಎಲ್ಲಾ ವಿದ್ಯೆಗಳೂ ನಶ್ವರವಾದ ಅನಾತ್ಮಗಳಿಗೆ  ಸಂಬಂಧಪಟ್ಟಿವೆ.(ಪುಟ80) 

 

23) ಪುಣ್ಯ ಪಾಪ ಕಮ೯ಗಳನ್ನೂ ಧಮ೯ಅಧಮ೯ಗಳನ್ನೂ ನಾವು ಮಾಡತಕ್ಕವರು(ಕತೃ೯)ಎಂದು ತಿಳಿದಿರುವುದರಿಂದ,ನಮ್ಮ ಕಮ೯ವೂ ಕಮ೯ಫಲವಾದ  ಸುಖದುಃಖಗಳೂ,ಜನ್ಮಾಂತರ ಲೋಕಾಂತರಗಳೆಂಬ ಸಂಸಾರವು ಗಂಟು ಬಿದ್ದಿದೆ.ಆದರೆ ಬ್ರಹ್ಮವಿದ್ಯೆಯಿಂದ 'ನಾನು ಕತೃ೯ವಲ್ಲ'ಏನನೂ ಮಾಡತಕ್ಕವನಲ್ಲ -ಕಮೇ೯ಂದ್ರಿಯಗಳನ್ನೂ ದೇಹವನ್ನೂ ನಾನು ಎಂದು ತಿಳಿದಿರುವುದರಿಂದ ಕತೃ೯ವಾಗಿದ್ದೇನೆ-ಎಂಬ ಮಮ೯ವು ತಿಳಿದಿರುವುದರಿಂದ ಕಮ೯ ಬಂಧನವು ಬಿಟ್ಟು ಹೋಗುತ್ತದೆ.(ಪುಟ 81)

 

240)ಹೂವಿನಿಂದ ಹೊರಬಂದ ಕಾಯಿಯು  ಹಣ್ಣಾದ ಮೇಲೆ  ಕಾರಣವಾದ ಹೂವು ತಾನಾಗಿಯೇ ಉದುರಿ ಹೋಗುವಂತೆ ಆತ್ಮಜ್ಞಾನವುಂಟಾದ ಮೇಲೆ  ಸಾಧನವಾದ ಕಮ೯ವು ತಾನಾಗಿಯೇ ಕಳಚಿಹೋಗುತ್ತದೆ(ಪುಟ81)

.

241)ಸುಖದ ಭಿಕ್ಷೆಗಾಗಿ  ವಿಷಯಗಳ ಮುಂದೆ ಇಂದ್ರಿಯಭೋಗವೆಂಬ ಜೋಳಿಗೆಯನ್ನು ಹಿಡಿದು ದೈನ್ಯದಿಂದ ಗೋಗರೆದು ನಿಂತಿರುವ ಭಿಕಾರಿ ಮನಸ್ಸೆ!ಯೋಗಾಗ್ನಿಯಲ್ಲಿ ನಿನ್ನ ಮನಸ್ಸನ್ನು ಸುಡು.ಬ್ರಹ್ಮವೊಂದೇ ಸತ್ಯವಾದುದರಿಂದ ಬ್ರಹ್ಮವನ್ನು ಅರಿಯದೆ  ಸತ್ಯವನ್ನು ಅರಿಯಲಾಗುವುದಿಲ್ಲ.ಅರಿವಿಲ್ಲದೆನಿಜಾನಂದವಿಲ್ಲ.ಅನಂದನುಭವವಾಗದೆ ನಾಶವಾಗುವುದಿಲ್ಲ.ಆದ್ದರಿಂದ ಆನಂದಾನುಭವವನ್ನು ಭದ್ರಗೊಳಿಸಿಕೊಂಡು ಆಸೆಗಳನ್ನೆಲ್ಲಾ ಆನಂದದಲ್ಲಿ ಕರಗಿಸಬೇಕು.ತೋರಿ ಅಡಗುವ ವಿಷಯಸುಖಕ್ಕಾಗಿ ಆಸೆಮಾಡದೆ,ನಿತ್ಯವಾದ ಆನಂದವನ್ನೇ ಆಸೆಮಾಡುವುದರಿಂದ ,ಆನಂದ ಸಾಧನವಾದ ಯೋಗಾಗ್ನಿ

ತಪಸ್ಸಿನಲ್ಲಿ  ಆಶೆಯು ಸುಟ್ಟು ಹೋಗುತ್ತದೆ.ಮುಖ್ಯವಾಗಿ ಅಸೆಯು ದುಃಖಕ್ಕೆ ಕಾರಣವಾದ್ದರಿಂದನಿರಥ೯ಕ ಎಂದು ತಿಳಿಯಬೇಕು.(ಪುಟ 81)

 

242)ಜೀವನು ತನ್ನಲ್ಲಿರುವ ಶಿವಶಕ್ತಿಯಾದ  ಕುಂಡಲಿನಿಯನ್ನು ಮೂಲಾಧಾರದಿಂದ  ಸಹಸ್ರಾರಕ್ಕೇರಿಸಿ,ಅಲ್ಲಿಂದ ಅನಂದರೂಪ ಶಿವನಲ್ಲಿ ಸೇರಿಸಬೇಕು.ಆಗ ಜೀವನು ಶಿವನೇ ಆಗುತ್ತಾನೆ.ಇದೇ ಮುಕ್ತಿ.ಇದೇ ಅಖಂಡವಾದ ಬ್ರಹ್ಮಾನಂದ.ಸೃಷ್ಟಿಗೆ  ಮೊದಲು  ಅದಿಯಲ್ಲಿದ್ದುದು ಶಿವನೊಬ್ಬನೇ.ಶಿವ -ಶಕ್ತಿ ಒಂದೇ.

ನಿತ್ಯಾನಂದವೇ ಮಹಾರಕ್ಷಕ.(ಪುಟ 80)

 

243)ಹಾಲಿನಲ್ಲಿ ಬೆಣ್ಣೆ ಕಣದಂತಿದೆ.ಹೆಪ್ಪುಹಾಕಿ ಮೊಸರನ್ನು ಕಡೆದು ಬೆಣ್ಣೆ ತೆಗೆಯಬೇಕು.ಹಾಗೆದೇವರನ್ನು ಪಡೆಯಬೇಕಾದರೆ ಭಕ್ತಿ ಎಂಬ ಹಾಲನ್ನು ವಿವೇಕವೆಂಬ ಅಗ್ನಿಯಿಂದ ಕಾಯಿಸಿ,ವಿಚಾರದಿಂದ ಮನನಾದಿಗಳನ್ನು ಮಡಿ(ಮಂಥನಮಾಡಿ) ಮನಸ್ಸಿನಲ್ಲಿ ಅಡಗಿರುವ ಆನಂದಾತ್ಮ- ನವನೀತವನ್ನು ಪಡೆಯಬೇಕು.ವಿವೇಕಕ್ಕೆ ಬುದ್ಧಿಯೇ ಪಾತ್ರೆ.ವಿವೇಕವೆಂಬ ಅಗ್ನಿಯೇ ಯೋಗಾಗ್ನಿ.ಕಾಮವೇ ಮೊದಲಾದ  ದೋಷಗಳನ್ನು  ಅಗ್ನಿಯಲ್ಲಿ ಸುಡಬೇಕು.(ಪುಟ82)

 

244)ಕಾಮಾದಿಗಳಿಗೆ ಆಶ್ರಯವಾದ ಮನಸ್ಸನ್ನು ನಾಶಮಾಡಿದರೆ  ಮಾಯೆಯು ನಾಶವಾಗುತ್ತದೆ.(ಪುಟ 82)

 

245)ಎಣ್ಣೆ ಇಲ್ಲದೆ ದೀಪ ಹೇಗೆ ಉರಿಯುವುದಿಲ್ಲವೋ ಹಗೆ ಪ್ರಾಣವಿಲ್ಲದೆ  ಶರೀರದ ಚಲನವಲನವಿಲ್ಲ.(ಪುಟ 82)

 

246)ಜ್ಞಾನ ಪ್ರಕಾಶವೇ ಆದ  ಗುರುವಿನ ಅನುಗ್ರಹವುಳ್ಳವರಿಗೆ  ಭಯವಿಲ್ಲ.(ಪುಟ 82)

 

247)ಮುಮುಕ್ಷುವಾದವನು ಸಾಧನ ಮಾಡುವುದರಿಂದಲೇ ಮುಕ್ತನಾಗುತ್ತಾನೆ.ಅಥವಾ ತಾನು ಯಾವಾಗಲೂ ಮುಕ್ತನೇ ,ಎಂದೂ ಯಾವಾಗಲೂ ಬದ್ಧನಾಗಿಯೇ ಇರಲಿಲ ಎಂಬುದನ್ನು ಕಂಡುಕೊಳ್ಳುತ್ತಾನೆ.(ಪುಟ 83)

 

248) ಯೋಗಾಭ್ಯಾಸದಿಂದ ಕುಂಡಲಿನೀ ಶಕ್ತಿಯು ಬ್ರಹ್ಮರಂದ್ರಕ್ಕೆ ಏರಿದಾಗ ತಲೆಯಲ್ಲಿ ಕಸ್ತೂರಿ,ಗಂಧ,ಕಪೂ೯ರ,ಪಚ್ಚ ಕಪೂ೯ರ ಮೊದಲಾದ ಎಲ್ಲಾ ಸುವಾಸನೆಗಳೂ ತೋರುತ್ತವೆ.(ಪುಟ 83)    .     

24)ಯಾರ ತಲೆಯಲ್ಲಿ ಓಂಕಾರ ನಾದವು  ನಿರಂತರವಾಗಿ ಕೇಳುತ್ತದೆಯೋ  ಅವರಲ್ಲಿ ಜ್ಞಾನವಿದೆ.ಜ್ಞಾನೇತ್ರಕ್ಕೆ ಕಂಡಿದ್ದೇ ನಿಜವಾದ ಹೃದಯ.ಚಮ೯ ಚಕ್ಷುವಿಗೆ ಕಾಣುವ ಹೃದಯ ನಿಜವಾದುದಲ್ಲ.(ಪುಟ 83)

 

250)ವಿವೇಕಿಯಾದ ಯೋಗಿಯ ಮನಸ್ಸು ಯಾವಾಗಲೂ ಹೃದಯಾಕಾಶದಲ್ಲಿರುವ  ಚಿದಾಕಾಶದಲ್ಲಿ ಒಂದಾಗಿರುತ್ತದೆ(ಪುತ 283)

 

251)ಆತ್ಮಜ್ಞಾನಕ್ಕೆ ಉಸಿರಾಟದ ಮೇಲೆ  ಮನಸ್ಸನ್ನು ನಿಲ್ಲಿಸುವುದು  ಬಹಳ ಮಹತ್ವದ ಸಾಧನೆ.(ಪುಟ 83)

 

252)ತನ್ನ ಉದ್ಧಾರಕ್ಕಾಗಿ ತಾನೇ ಸಾಧನೆ ಮಾಡಬೇಕು.(ಪುಟ 84)

 

253)ಶ್ರದ್ಧೆಗಿಂತಲೂ ಹೆಚ್ಚಿನ ಸಾಧನೆಯಿಲ್ಲ.ಶ್ರದ್ಧೆಯಲ್ಲಿ ಮಹತ್ತರವಾದ ಶಕ್ತಿ ಇದೆ.ಶ್ರದ್ಧೆಯೇ ಧಮ೯ಕ್ಕೆ ಮೂಲ.(ಪುಟ84)

 

254)ಯಾರಲ್ಲಿ ಮೂರನೆಯ ಕಣ್ಣಾದ ಜ್ಞಾನನೇತ್ರವು  ಅರಳಿದೆಯೋ  ಬ್ರಹ್ಮಜ್ಞಾನಿಯೇ ಬ್ರಾಹ್ಮಣ.

(ಪುಟ 84)

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

ಇಲ್ಲಿಗೆ 'ಚಿದಾಕಾಶ ಗೀತಾ ಸಾರ ಸಂಗ್ರಹ' ಗ್ರಂಥವು ಸಂಪೂಣ೯ವಾಯಿತು.10.4.2021

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

    .     

 

 

 

 

 

 


No comments:

Post a Comment