Thursday, 1 July 2021

ಗೌಡಪಾದ ಹೃದಯ : ಮೂಲ ಲೇಖಕರು:ಶ್ರೀಶ್ರೀ ಸಚ್ಚಿದಾನಂದೇಂದ್ರ ಸರಸ್ವತೀ ಸ್ವಾಮಿಗಳು ಪ್ರಕಾಶಕರು:ಅಧ್ಯಾತ್ಮ ಪ್ರಕಾಶ ಕಾಯಾ೯ಲಯ ಹೊಳೆನರಸೀಪುರ-573211 ಹಾಸನ ಜಿಲ್ಲೆ.ಕನಾ೯ಟಕ ಸಂಪಾದಕರು:ಹೆಚ್.ಎಸ್.ಲಕ್ಮೀನರಸಿಂಹಮೂತಿ೯ ಗೌಡಪಾದ ಹೃದಯ ಸಾರಸಂಗ್ರಹ: ಸಂಗ್ರಹ:ಡಾ.ರವೀಂದ್ರ ಹೊಸದುಗ೯ ಮೂರನೆಯ ಮುದ್ರಣ:2018 ................................................. ಮೂಲ ಲೇಖಕರಿಗೂ, ಸಂಪಾದಕರಾದ ಹಚ್.ಎಸ್.ಲಕ್ಷ್ಮೀನರಸಿಂಹಮೂತಿ೯ಯವರಿಗೂ, ಪ್ರಕಾಶಕರಿಗೂ ,ಅಧ್ಯಾತ್ಮ ಪ್ರಕಾಶ ಕಾಯಾ೯ಲಯದ ಆಡಳಿತವಗ೯ ಮತ್ತು ಸಿಬ್ಬಂದಿವಗ೯ಕ್ಕೂ ನನ್ನ ನಮನಗಳು ಹಾಗೂ ಕೃತಜ್ಞತೆಗಳು. ..................................................................................................................................................... ಗೌಡಪಾದರೇ ಅದ್ವೈತ ವೇದಾಂತ ಪ್ರವತ೯ಕರಲ್ಲಿ ಮೊದಲನೆಯವರೆನ್ನಬಹುದು.ಇವರು ತಮ್ಮ ಮಾಂಡೂಕ್ಯಕಾರಿಕೆಯಲ್ಲಿ ಸಮಗ್ರವಾಗಿ ಸಪ್ರಮಾಣವಾಗಿ ಸಿದ್ದಾಂತ ಮಾಡಿದ್ದಾರೆ.ಈ ಕಾರಿಕೆಯಲ್ಲಿ ನಾಲ್ಕು ಅಧ್ಯಾಯ(ಪ್ರಕರಣ)ಗಳಿವೆ. 1)ಆಗಮ ಪ್ರಕರಣ:ಇದರಲ್ಲಿ ಮಾಂಡೂಕ್ಯೋಪನಿಷತ್ತಿನ ವಾಕ್ಯಗಳಿಗೆ ವ್ಯಾಖ್ಯಾ ವಿವರಗಳಿವೆ.ಇಲ್ಲಿ ತಮ್ಮ ಸಿದ್ಧಾಂತವು ಅನುಮಾನ ಮತ್ತು ಶಬ್ದ ಪ್ರಮಾಣಗಳಿಂದ ಸಿದ್ಧವಾಗುವುದೆಂದು ತೋರಿಸಿದ್ದಾರೆ. 2)ವೈತಥ್ಯ ಪ್ರಕರಣ :ಪ್ರಪಂಚದ ಮಿಥ್ಯಾತ್ವವನ್ನು ಸಾಧಿಸಿದ್ದಾರೆ. 3)ಅದ್ವೈತ ಪ್ರಕರಣ :ಪಾರಮಾಥಿ೯ಕವಾಗಿ ಅದ್ವೈತವೇ ಸತ್ಯವೆಂಬುದನ್ನು ಸಿದ್ದಾಂತ ಮಾಡಿದ್ದಾರೆ 4)ಅಲಾತಶಾಂತಿ ಪ್ರಕರಣ: ಒಂದು ದೀವಟಿಗೆಯನ್ನು ಕ್ಥಯಲ್ಲಿ ಹಿಡಿದು ಸುತ್ತುತ್ತಾ ಇದ್ದರೆ ಅದು ಚಕ್ರಾಕಾರವಾಗಿ ಉರಿಯುತ್ತಿರುವಂತೆ ತೋರುತ್ತದೆ.ಈ ಭ್ರಾಂತಿಯನ್ನು ಅಲಾತಚಕ್ರವೆಂದು ನಿದೇ೯ಶಿಸಿದ್ದಾರೆ.ಈ ದೀವಟಿಗೆ ಸುತ್ತುವುದನ್ನೂ ನಿಲ್ಲಿಸಿದರೆ ಅದು ಕೇವಲ ಒಂದಾಗಿ ಕಾಣುತ್ತದೆ. ಪರಿಭ್ರಮಣದಲ್ಲಿರುವ ದೀವಟಿಗೆ ನಾನಾತ್ವದಿಂದ ತೋರಿ ಚಕ್ರಾಕಾರದ ಬ್ರಾಂತಿುiÀುನ್ನುಂಟು ಮಾಡಿದರೂ ಅಲಾತ ಶಾಂತಿಯಾದ ಮೇಲೆ ಕಾಣುವುದು ಒಂದೇ ದೀವಟಿಗೆ.ಹಾಗೆಯೇ ಮಾಯಾವರಣದಿಂದ ಕೂಡಿದ ನಾಮರೂಪಾತ್ಮಕವಾದ ಪ್ರಪಂಚವು ನಾನತ್ವವನ್ನು ಹೊಂದಿರುವಂತೆ ಕಂಡರೂ,ಆ ಭ್ರಾಂತಿಯ ನಿರಸನವಾದಮೇಲೆ ಅದ್ವೈತ ತತ್ವವೊಂದೇ ಕಾಣುತ್ತದೆ ಎಂಬುದು ಇದರ ಅಭಿಪ್ರಾಯ.ಈ ಅಲಾತ ಚಕ್ರದ ಉಪಮಾನವು ಬೌದ್ಧಮತದ ಮಾಧ್ಯಮಿಕರಲ್ಲಿ ಸಾಧಾರಣವಾಗಿ ಇರುವ ನಿದಶ೯ನ. ಶ್ರೀಗೋವಿಂದ ಭಗವತ್ಪಾದರು ಶ್ರೀ ಶಂಕರಾಚಾಯ೯ರ ಗುರುಗಳು. ಶ್ರೀ ಗೌಡಪಾದರು ಶ್ರೀ ಗೋವಿಂದ ಭಗವತ್ಪಾದರ ಗುರುಗಳು. 1)ಆಗಮಪ್ರಕರಣ: ಶ್ರೀ ಗೌಡಪಾದಾಚಾಯ೯ರು ಬರೆದಿರುವ ಆಗಮಪ್ರಕರಣವು ಮಾಂಡೂಕ್ಯೋಪನಿಷತ್ತಿನ ಉಪದೇಶವನ್ನು ಪ್ರಧಾನವಾಗಿ ಒಳಗೊಂಡಿವೆ. 1)ಇದೆಲ್ಲವೂ ಓಂ ಎ0ಬೀ ಅಕ್ಷರವು.ಅದರ ಉಪವ್ಯಾಖ್ಯಾನವಿದು: ಆಗಿಹೋಗಿರುವುದು,ಇರುವುದು,ಆಗಲಿರುವುದು-ಎಂಬಿದೆಲ್ಲವೂಓಂಕಾರವೇ.ಇನ್ನು ತ್ರಿಕಾಲಾತೀತವಾಗಿ ಏನಿರುವುದೋ ಅದೂ ಓಂಕಾರವೇ.(ಪುಟ 5) 2)ಇದೆಲ್ಲವೂ ಬ್ರಹ್ಮವೇ.ಈ ಆತ್ಮನೇ ಬ್ರಹ್ಮವು.ಈ ಆತ್ಮನು ನಾಲ್ಕು ಪಾದಗಳುಳ್ಳವನು.(ಪುಟ 5) 3)ಜಾಗರಿತವೆಂಬ ಸ್ಥಾನವುಳ್ಳವನೂ ಬಹಿಃಪ್ರಜ್ಞನೂ ಸಪ್ತಾಂಗನೂ ಹತ್ತೊಂಬತ್ತು ಮುಖವುಳ್ಳವನೂ ಸ್ಥೂಲಭೋಗವುಳ್ಳವನೂ ಆದ ವೈಶ್ವಾನರನು ಒಂದನೆಯ ಪಾದವು.(ಪುಟ6) 4)ಸ್ವಪ್ನವೆಂಬ ಸ್ಥಾನವುಳ್ಳವನೂ ಅಂತಃಪ್ರಜ್ಞನೂ ಸಪ್ತಾಂಗನೂ ಹತ್ತೊಂಬತ್ತು ಮುಖವುಳ್ಳವನೂ ಸೂಕ್ಷ್ಮಭೋಗವುಳ್ಳವನೂ ಆದ ತೈಜಸನು ಎರಡನೆಯ ಪಾದವು.(ಪುಟ6) 5)ಎಲ್ಲಿ ನಿದ್ರಿಸಿದವನು ಯಾವ ಕಾಮವನ್ನೂ ಬಯಸುವುದಿಲ್ಲವೋ ಯಾವ ಕನಸನ್ನೂ ಕಾಣುವುದಿಲ್ಲವೋ ಅದು ಸುಷುಪ್ತವು.ಸುಷುಪ್ತ ಸ್ಥಾನದಲ್ಲಿರುವವನಾಗಿ ಏಕೀಭೂತನಾಗಿ ಪ್ರಜ್ಞಾನಘನವೇ ಆಗಿ ಆನಂದಮಯನಾಗಿ ಆನಂದ ಭೋಗವುಳ್ಳವನಾಗಿ ಚೇತೋಮುಖನಾಗಿರುವ ಪ್ರಾಜ್ಞನು ಮೂರನೆಯ ಪಾದವು.(ಪುಟ 6) 6)ಈತನೇ ಸವೇ೯ಶ್ವರನು,ಈತನೇ ಸವ೯ಜ್ಞನು, ಈತನೇ ಎಲ್ಲಕ್ಕೂ ಯೋನಿಯು,ಭೂತಗಳ ಪ್ರಭವಾಪ್ಯಯವು(ಪುಟ 6) 2)ಪಾದತ್ರಯ ಕಾರಿಕೆಗಳು: 1) ಇಲ್ಲಿ ಈ ಶ್ಲೋಕಗಳಿರುತ್ತವೆ.ಹೊರಗಿನ ಅರಿವುಳ್ಳ ವಿಭುವು ವಿಶ್ವನು;ಒಳಗಿನ ಅರಿವುಳ್ಳವನಾದರೊ,ತೈಜಸನು.ಹಾಗೂ ಘನಪ್ರಜ್ಞನಾದವನು ಪ್ರಾಜ್ಞನು.ಒಬ್ಬನೇ ಮೂರು ಬಗೆಯವನು ಎನಿಸಿಕೊಳ್ಳುತ್ತಾನೆ.(ಪುಟ 7) ವಿಶ್ವಾದಿಗಳ ಅನುಭವವು ಜಾಗ್ರದವಸ್ಥೆಯಲ್ಲಿಯೂ ಇದೆ. 2)ಬಲಗಣ್ಣಿನ ದ್ವಾರದಲ್ಲಿ ವಿಶ್ವನು,ಮನಸ್ಸಿನ ಒಳಗೋ ಎಂದರೆ ತೈಜಸನು,ಹೃದಯದ ಆಕಾಶದಲ್ಲಿ ಪ್ರಾಜ್ಞನು.ಹೀಗೆ ದೇಹದಲ್ಲಿ ಮೂರು ಬಗೆಯಾಗಿರುತ್ತಾನೆ.(ಪುಟ 18) 3-4)ವಿಶ್ವನು ನಿತ್ಯವಾಗಿ ಸ್ಥೂಲ ಭೋಕ್ತø;ತೈಜಸನು ಪ್ರವಿವಿಕ್ತ ಭೋಕ್ತø ಮತ್ತು ಪ್ರಾಜ್ಞನು ಅವಿಭಕ್ತ ಭೋಕ್ತø.ಹಿಗೆ ಭೋಗವು ಮೂರು ಬಗೆ ಎಂದು ತಿಳಿಯಿರಿ.ಸ್ಥೂಲವು ವಿಶ್ವನಿಗೆ ತೃಪ್ತಿಯನ್ನುಂಟು ಮಾಡುವುದು.ಪ್ರವಿವಿಕ್ತವಾದದ್ದು ತೈಜಸನಿಗೂ ಮತ್ತು ಆನಂದವು ಪ್ರಾಜ್ಞನಿಗೂ ತ್ರಪ್ತಿಯನ್ನುಂಟು ಮಾಡುವುದು.ಹೀಗೆ ತೃಪ್ತಿಯು ಮೂರು ಬಗೆ ಎಂದು ತಿಳಿಯಿರಿ.(ಪುಟ 27) 5)ಮೂರು ಸ್ಥಳಗಳಲ್ಲೂ ಯಾವುದು ಭೋಗ್ಯವೋ,ಯಾವನು ಭೋಕ್ತನೆಂದು ಹೇಳಲ್ಪಟ್ಟಿರುವನೋ ಇವೆರಡನ್ನೂ ಅರಿತುಕೊಂಡವನು ಉಂಡರೂ ಲೇಪವನ್ನು ಹೊಂದುವುದಿಲ್ಲ.(ಪುಟ28) 3) ಸೃಷ್ಟಿಕಾರಿಕೆಗಳು: 6)ಮೊದಲೇ ಇರುವ ಸವ೯ಭಾವಗಳಿಗೇ ಉತ್ಪತ್ತಿಯು ಎಂದು ನಿಶ್ಚಯವು.ಪ್ರಾಣವೆಂಬ ಪುರುಷನು ಎಲ್ಲವನ್ನೂ ,ಚೇತಸ್ಸಿನ ಕಿರಣಗಳನ್ನು ,ಬೇರೆ ಬೇರೆಯಾಗಿ ಹುಟ್ಟಿಸುತ್ತಾನೆ.(ಪುಟ30) 7-8-೯)ಕೆಲವರು ಸೃಷ್ಟಿಚಿಂತಕರು ಸೃಷ್ಟಿಯು ವಿಭೂತಿ ಎಂದು ಬಗೆಯುತ್ತಾರೆ;ಅದು ಸ್ವಪ್ಮಮಾಯೆಗಳ ಸರೂಪವಾಗಿದೆ ಎಂದು ಮತ್ತೆ ಕೆಲವರು ವಿಕಲ್ಪಿಸಿರುತ್ತಾರೆ;ಸೃಷ್ಟಿಯು ಪ್ರಭುವಿನ ಇಚ್ಛಾಮಾತ್ರವು ಎಂದು ಸೃಷ್ಟಿಯಲ್ಲಿ ನಿಶ್ಚಿತಬುದ್ಧಿಯುಳ್ಳವರೆನ್ನುತ್ತಾರೆ;ಕಾಲದಿಂದ ಸೃಷ್ಟಿ ಎಂದು ಕೆಲವರು ಕಾಲಚಿಂತಕರು ಬಗೆಯುತ್ತಿರುವರು;ಭೋಗಕ್ಕಾಗಿ ಸೃಷ್ಟಿ ಎಂದು ಕೆಲವರು.ಇದು ದೇವನ ಸ್ವಭಾವವೇ.ಆಪ್ತಕಾಮನಿಗೆ ಎಲ್ಲಿಯ ಇಚ್ಛೆ?(ಪುಟ 43) 4)ತುರೀರಕಾರಿಕೆಗಳು: 10) ಈ ಶ್ಲೋಕಗಳಿರುತ್ತವೆ:ತುಯ೯ನು ಸವ೯ದುಃಖಗಳ ನಿವೃತ್ತಿಗೂ ಈಶಾನನು,ಪ್ರಭುವು,ಅವ್ಯಯನು, ,ಸವ೯ಭಾಗಳೊಳಗೆ ಇರುವ ಅದ್ವೈತನು,ಜೀವನು,ವಿಭುವೆನಿಸಿರುವನು.(ಪುಟ 52) 11)ಆ ವಿಶ್ವತೈಜಸರು ಕಾಯ೯ಕಾರಣ ಬದ್ದರೆಂದು ಒಪ್ಪಲಾಗಿದೆ.ಆದರೆ ಪ್ರಾಜ್ಞನು ಕಾರಣ ಬದ್ಧನು.ಇವೆರಡೂ ತುಯ೯ನಲ್ಲಿ ಸಿದ್ಧಿಸುವುದಿಲ್ಲ.(ಪುಟ55) 12)ಪ್ರಾಜ್ಞನು ತನ್ನನ್ನಾಗಲೀ ಮತ್ತೊಬ್ಬರನ್ನಾಗಲೀ,ಸತ್ಯವನ್ನಾಗಲಿ,ಅನೃತವನ್ನಾಗಲಿ,ಸ್ವಲ್ಪವೂ ಅರಿಯನು.ತುಯ೯ವೊ ಎಂದರೆ ಅದು ಯಾವಾಗಲೂ ಸವ೯ದೃಕ್ಕೇ ಆಗಿರುತ್ತದೆ.(ಪುಟ 63) ಪ್ರಾಜ್ಞತುರೀಯರ ವೈಲಕ್ಷಣ್ಯ: 13)ದ್ವೈತವನ್ನು ಅರಿಯದಿರುವುದು ಪ್ರಾಜ್ಞ,ತುಯ೯-ಇಬ್ಬರಿಗೂ ಸಮಾನವಾಗಿರುತ್ತದೆ.ಪ್ರಾಜ್ಞನು ಬೀಜನಿದ್ರೆಯಿಂದ ಕೂಡಿರುತ್ತಾನೆ.ಆ ನಿದ್ರೆಯು ತುಯ೯ನಲ್ಲಿ ಇರುವುದಿಲ್ಲ.(ಪುಟ6೯) 14)ಮೊದಲನೆಯ ಇಬ್ಬರೂ ಕನಸು ನಿದ್ರೆಗಳಿಂದ ಕೂಡಿರುವರು.ಪ್ರಾಜ್ಞನಾದರೋ ಕನಸಿಲ್ಲದ ನಿದ್ರೆಯಿಂದ ಕೂಡಿರುತ್ತಾನೆ.ತತ್ವ ನಿಶ್ಚಯವುಳ್ಳವರಿಗೆ ತುಯ೯ನಲ್ಲಿ ನಿದ್ರೆಯು ಕಾಣಿಸುವುದಿಲ್ಲ.ಸ್ವಪ್ಮವೂ ಕಾಣಿಸುವುದೇ ಇಲ್ಲ. (ಪುಟ71) 15)ಬೇರೆಯಾಗಿ ತಿಳಿಯುವವನಿಗೆ ಸ್ವಪ್ನವು.ತತ್ವವನ್ನು ಅರಿಯದೆ ಇರುವವನಿಗೆ ನಿದ್ರೆ.ಇವೆರಡರ ತಪ್ಪು ಕಲ್ಪನೆಯು ಕ್ಷಯವಾದರೆ ತುರೀಯ(ನಾಲ್ಕನೆಯ) ಸ್ಥಾನವನ್ನು ಪಡೆದುಕೊಳ್ಳುತ್ತಾನೆ.(ಪುಟ74) 16)ಅನಾದಿ ಮಾಯೆಯಿಂದ ನಿದ್ರೆ ಮಾಡುತ್ತಿರುವ ಜೀವನು ಯಾವಾಗ ಎಚ್ಚರುವನೋ ಆಗ ಅಜನೂ ಅನಿದ್ರನೂ ಅಸ್ವಪ್ನನೂ ಅಗಿರುವ ಅದ್ವೈತವನ್ನು ಅರಿತುಕೊಳ್ಳುವನು.(ಪುಟ77) 17)ಪ್ರಪಂಚವು ಇರುವುದಾದರೆ ಹೋದೀತು,ಸಂಶಯವಿಲ್ಲ.ಈ ದ್ವೈತವು ಮಾಯಾಮಾತ್ರ.ಪರಮಾಥ೯ದಿಂದ ಅದ್ವೈತವೇ.(ಪುಟ80) 18)ವಿಕಲ್ಪವು ಯಾರಿಂದಲಾದರೂ ಕಲ್ಪಿತವಾಗಿದ್ದಿದ್ದರೆ ಹೋಗಬಹುದಾಗಿತ್ತು.ಈ ವಾದವು ಉಪದೇಶಕ್ಕಾಗಿ;ತಿಳಿದಮೇಲೆ ದ್ವೈತವಿಲ್ಲ.(ಪುಟ83) ಮಾತ್ರಾತ್ರಯಕಾರಿಕೆಗಳು: (ಉಪನಿಷತ್) 8)ಅ ಈ ಆತ್ಮನು ಅಧ್ಯಕ್ಷರವಾಗಿ ಓಂಕಾರವು.ಇವನು ಅಧಿಮಾತ್ರನಾಗಿರುವನು.ಪಾದಗಳೇ ಮಾತ್ರೆಗಳು,ಮಾತ್ರೆಗಳೇ ಪಾದಗಳು;ಅಕಾರ ,ಉಕಾರ,ಮಕಾರ-ಎಂಬಿವೇ ಮಾತ್ರೆಗಳು.(ಪುಟ86) ೯)ಜಾಗರಿಕವೆಂಬ ಸ್ಥಾನವುಳ್ಳ ವೈಶ್ವಾನರನು ಅಕಾರವೆಂಬ ಒಂದನೆಯ ಮಾತ್ರೆಯು,ಅಸ್ತಿ ಅಥವಾ ಆದಿಮತ್ತ್ವ-ಎಂಬ ಹೋಲಿಕೆಗಳು ಈ ಎರಡರಲ್ಲಿಯೂ ಇವೆ.ಯಾವನು ಹೀಗೆಂದು ಅರಿತುಕೊಲಳುವನೋ ಅವನು ಸವ೯ಕಾಮಗಳನ್ನೂ ಪಡೆದುಕೊಳ್ಳುವನು.(ಪುಟ86) 10)ಸಪ್ನವೆಂಬ ಸ್ಥಾನವುಳ್ಳ ತೈಜಸನು ಉಕಾರವೆಂಬ ಎರಡನೆಯ ಮಾತ್ರೆಯು.ಏಕೆಂದರೆ ಉಭಯತ್ವ ಅಥವಾ ಉತ್ಕಷ೯-ಎಂಬ ಹೋಲಿಕೆಗಳಿವೆ.ಯಾವನು ಹೀಗೆಂದು ಅರಿತುಕೊಳ್ಳುವನೋ ಅವನು ಜ್ಞಾನ ಸಂತಾನವನ್ನು ಉತ್ಲಷ೯ಗೊಳಿಸಿಕೊಳ್ಳುವನು.ಸಮಾನನೂ ಆಗುವನು.ಅವನ ಕುಲದಲ್ಲಿ ಯಾವನೂ ಬ್ರಹ್ಮವನ್ನು ಅರಿಯದವನು ಇರುವುದಿಲ್ಲ(ಪುಟ87) 11) ಆ ಈ ಆತ್ಮನು ಅಧ್ಯಕ್ಷರವಾಗಿ ಓಂಕಾರವು.ಇವನು ಅಧಿಮಾತ್ರನಾಗಿರುವನು.ಪಾದಗಳೇ ಮಾತ್ರೆಗಳು,ಮಾತ್ರೆಗಳೇ ಪಾದಗಳು.ಅಕಾರ,ಉಕಾರ,ಮಕಾರ-ಎಂಬಿವೇ ಮತ್ರೆಗಳು.(ಪುಟ87) 1೯)ಇಲ್ಲಿ ಈ ಶ್ಲೋಕಗಳಿರುತ್ತವೆ.ವಿಶ್ವನಿಗೆ ಅತ್ವವನ್ನು ಹೇಳುವ ಇಚ್ಛೆಯಿರುವಲ್ಲಿ,ಮಾತ್ರೆ ಎಂದು ಇಟ್ಟುಕೊಳ್ಳುವಗ,ಆದಿತ್ವ ಸಾಮಾನ್ಯವು ಉತ್ಕಟವಾಗಿರುತ್ತದೆ.ಆಪ್ತಿ ಸಾಮಾನ್ಯವೂ ಉತ್ಕಟವಾಗಿರುತ್ತದೆ.(ಪುಟ 87) 20)ತೈಜಸನನ್ನು ಉತ್ವವೆಂದು ಅರಿಯುವಲ್ಲಿ,ಉಕಾರ ರೂಪವಾದ ಮಾತ್ರೆಯೆಂದು ಇಟ್ಟುಕೊಳ್ಳುವಾಗ,ಉತ್ಕಷ೯ವು ಸ್ಫುಟವಾಗಿ ಕಾಣುತ್ತದೆ.ಉಭಯತ್ವವೂ ಹಾಗೆಯೇ(ಪುಟ8೯) 21) ಪ್ರಾಜ್ಞನು ಮಕಾರವಾಗುವಲ್ಲಿ ,(ಮಕಾರವೆಂಬ)ಮಾತ್ರೆಯೆಂದಿಟ್ಟುಕೊಳ್ಳುವುದರಲ್ಲಿಯಾದರೋ,ಮಾನ ಎಂಬ ಹೋಲಿಕೆಯೂ ಉತ್ಕಟವಾಗಿರುತ್ತದೆ.(ಪುಟ8೯) 2223)ಮೂರು ಸ್ಥಿತಿಗಳಲ್ಲಿಯೂ ಸಮಾನವಾಗಿರುವ ಹೋಲಿಕೆಯನ್ನು ಯಾವನು ನಿಶ್ಚಯಿಸಿ (ಅರಿತುಕೊಂಡಿರುವನೋ,ಅವನು ಸವ೯ಭೂತಗಳಿಗೂ ಪೂಜ್ಯನು).ಆ ಮಹಾಮುನಿಯೇ ವಂದ್ಯನೂ ಆಗಿರುತ್ತಾನೆ.ಅಕಾರವು ವಿಶ್ವನಲ್ಲಿಗೆ ಒಯ್ಯುವುದು;ಉಕಾರವು ತೈಜಸನಲ್ಲಿಗೆ ಒಯ್ಯುವುದು. ಮಕಾರವಾದರೊ ಪ್ರಾಜ್ಞನಲ್ಲಿಗೆ ಒಯ್ಯುವುದು.ಅಮಾತ್ರದಲ್ಲಿ ಗತಿಯಿರುವುದಿಲ್ಲ.(ಪುಟ೯0) 6)ಪ್ರಣವ ಕಾರಿಕೆಗಳು: 12)ಅಮಾತ್ರವಾಗಿರುವ ನಾಲ್ಕನೆಯದು ಅವ್ಯವಹಾಯಕವೂ ಪ್ರಪಂಚೋಪಶಮವೂ ಶಿವವೂ ಅದ್ವೈತವೂ ಆಗಿರುತ್ತದೆ.ಹೀಗಿರುವ ಓಂಕಾರವು ಆತ್ಮನೇ. ಯಾವನು ಹೀಗೆಂದು ಅರಿತುಕೊಳ್ಳುವನೋ ಅವನು ಆತ್ಮರೂಪದಿಂದ ಆತ್ಮರೂಪವನ್ನು ಒಳಹೊಗುವನು.(ಪುಟ೯1) 24)ಇಲ್ಲಿ ಈ ಶ್ಲೋಕಗಳು ಬಂದಿರುತ್ತವೆ.ಓಂಕಾರವನ್ನು ಪಾದ ಪಾದವಾಗಿಅರಿತುಕೊಳ್ಳಬೇಕು,ಪಾದಗಳೇ ಮಾತ್ರೆಗಳೆಂಬುದಕ್ಕೆ ಸಂಶಯವಿಲ್ಲ,ಓಂ ಕಾರವನ್ನು ಪಾದ ಪಾದವಾಗಿ ಅರಿತುಕೊಂಡವನು ಏನನ್ನೂ ಚಿಂತಿಸಲಾರನು.(ಪುಟ೯2) 25-26)ಪ್ರಣವದಲ್ಲಿ ಚಿತ್ತವನ್ನು ನೆಲೆನಿಲ್ಲಿಸಿಕೊಳ್ಳಬೇಕು.ಪ್ರಣವವೇ ನಿಭ೯ಯವಾದ ಬ್ರಹ್ಮವು.ಪ್ರಣವದಲ್ಲಿ ಯಾವಾಗಲೂ ಮನಸ್ಸನ್ನು ನಿಲ್ಲಿಸಿಕೊಂಡವನಿಗೆ ಎತ್ತಲೂ ಭಯವಿಲ್ಲ.ಪ್ರಣವವೇ ಕಡಿಮೆಯ ಬ್ರಹ್ಮವು. ಪ್ರಣವವೇ ಹೆಚ್ಚಿನ ಬ್ರಹ್ಮವು.ಪ್ರಣವವೇ ಹಿಂದಿಲ್ಲದ್ದು,ಮುಂದಿಲ್ಲದ್ದು ್ದ,ಒಳಗಿಲ್ಲದ್ದು,ಹೊರಗಿಲ್ಲದ್ದು,ಅವ್ಯಯವಾದದ್ದು.(ಪುಟ೯3) 27)ಎಲ್ಲಕ್ಕೂ ಪ್ರಣವವೇ ಮೊದಲು,ನಡುವೆ ಮತ್ತು ಕೊನೆ.ಹೀಗೆಂದೇ ಪ್ರಣವವನ್ನು ಅರಿತುಕೊಂಡರೆ ಅನಂತರವಾಗಿಯೇ ಅದನ್ನು ಒಳಹೊಗುತ್ತಾನೆ.(ಪುಟ೯4) 28)ಪ್ರಣವವನ್ನೇ ಪ್ರತಿಯೊಬ್ಬನ ಹೃದಯದಲ್ಲಿರುವ ಈಶ್ವರನೆಂದು ತಿಳಿಯಬೇಕು.ಓಂಕಾರವು ಸವ೯ವ್ಯಾಪಿಯೆಂದು ಅರಿತಿರುವ ಧೀರನು ಶೋಕಿಸುವುದಿಲ್ಲ.(ಪುಟ ೯4) 2೯)ಅಮಾತ್ರವಾದ ಆನಂತಮಾತ್ರವಾದ ದ್ವೈತದ ಉಪಶಮವಾಗಿರುವ ಮಂಗಳಕರವಾದ ಓಂಕಾರವು ಯಾವನಿಗೆ ವಿದಿತವಾಗಿರುವುದೋ ಅವನೇ ಮುನಿ.ಉಳಿದ ಜನರಲ್ಲ.(ಪುಟ ೯5) ,,,,,,,,,,,,,,,,,,,,,,,,,ಆಗಮ ಪ್ರಕರಣವು ಸಂಪೂಣ೯,,,,,,,,,,,,,,,,,,,,,,,,,,,,,,,,,,,,,,,,,,,,,,,,,,, 2) ವೈತಥ್ಯ ಪ್ರಕರಣ: ಸಪ್ತವ್ಯತಥ್ಯ ಕಾರಿಕೆಗಳು: 1)ಭಾವಗಳು ಒಳಗೆ ಸಂವ್ರೃತವಾಗಿರುವವೆಂಬ ಕಾರಣದಿಂದ ಪಂಡಿತರು ಕನಸಿನಲ್ಲಿರುವ ಎಲ್ಲಾ ಭಾವಗಳಿಗೂ ವೈತಥ್ಯವನ್ನು ಹೇಳುತ್ತಾರೆ.(ಪುಟ101) 2)ಕಾಲವು ತಕ್ಕಷ್ಟು ದೀಘ೯ವಾಗಿಲ್ಲವಾದ್ದರಿಂದ ಆಯಾ ದೇಶಗಳಿಗೆ ಹೋಗಿ ಪದಾಥ೯ಗಳನ್ನು ನೋಡುತ್ತಾನೆಂಬುದಿಲ್ಲ ಮತ್ತು ಎಚ್ಚೆತ್ತವನು ಯಾವನೂ ಆ ದೇಶದಲ್ಲಿ ಇರುವುದೂ ಇಲ್ಲ.(ಪುಟ102) 3)ಕನಸಿನಲ್ಲಿ ರಥಾದಿಗಳು ಇಲ್ಲವೆಂದೂ ನ್ಯಾಯಪೂವ೯ಕವಾಗಿ ಶ್ರುತಿಯಲ್ಲಿ ಹೇಳಿರುತ್ತದೆ.ಅದರಿಂದ ಸ್ವಪ್ನವಿಷಯದಲ್ಲಿ ತಿಳಿದಿರುವ ವೈತಥ್ಯವನ್ನೇ ಅಲ್ಲಿ ತಿಳಿಸಿರುತ್ತದೆ- ಎನ್ನುವರು.(ಪುಟ14) 4)ಆದ್ದರಿಂದ ಎಚ್ಚರದಲ್ಲಿರುವ ಭೇದಗಳಿಗೂ ಅಲ್ಲಿ ಹೇಗೋ ಹಾಗೆ ಇಲ್ಲಿಯೂ ವೈತಥ್ಯವನ್ನು ಹೇಳುತ್ತಾರೆ.ಆದರೆ ಸ್ವಪ್ನದಲ್ಲಿ ಅಂತಃಸ್ಥಾನವಾಗಿರುವುದರಿಂದಲೂ ಸಂವೃತವಾಗಿರುವುದರಿಂದಲೂ ಬೇರೆಯಾಗಿರುತ್ತದೆ.(ಪುಟ107) 5)ಕನಸು ಎಚ್ಚರ -ಎಂಬೀ ಎರಡು ಸ್ಥಾನಗಳೂ ಒಂದೇ. ಏಕೆಂದರೆಪ್ರಸಿದ್ಧವಾದ ಹೇತುವಿನಿಂದ (ಅವುಗಳೊಳಗಿರುವ) ಭೇದಗಳು ಸಮವಾಗಿರುತ್ತವೆ-ಎಂದು ವಿವೇಕಿಗಳು ಹೇಳುತ್ತಾರೆ.(ಪುಟ114) 6)ಮೊದಲಲ್ಲಿಯೂ ಕೊನೆಯಲ್ಲಿಯೂ ಯಾವುದು ಇರುವುದಿಲ್ಲವೋ ಅದು ಈಗಲೂ ಹಾಗೆಯೇ(ಇರುವುದಿಲ್ಲ).ಮಿಥ್ಯಾ ವಸ್ತುವಿಗೆ ಸಮಾನವಾಗಿದ್ದುಕೊಂಡೇ ಸತ್ಯವಾಗಿರುವಂತೆ ಕಾಣುತ್ತಿರುವುವು.(ಪುಟ 115) 7)ಅವುಗಳಿಗಿರುವ ಸಪ್ರಯೋಜನತ್ವವು ಕನಸಿನಲ್ಲಿ ವಿರುದ್ಧವಾದ ಅಭಿಪ್ರಾಯಕ್ಕೆಡೆಯಾಗಿರುತ್ತದೆ.ಆದ್ದರಿಂದ ಆದ್ಯಂತಗಳಿರುವುದರಿಂದ ಅವು ಮಿಥ್ಯೆಯೆಂದೇ ಎನಿಸಿಕೊಳ್ಳುತ್ತವೆ.(ಪುಟ117) 8)ಅಪೂವ೯ವಾದದ್ದು ಸ್ಥಾನಿರ ಧಮ೯ವೇ.ಸ್ವಗ೯ನಿವಾಸಿಗಳಿಗೆ ಹೇಗೆ (ಅಪೂವ೯ಧಮ೯ವಿರುತ್ತದೆಯೋ ಹಾಗೆಯೇ ಇದು).ಇಲ್ಲಿ ಸುಶಿಕ್ಷಿತನಾದವನು ಹೇಗೋ ಹಾಗೆಯೇ ಇವನು ಅವುಗಳನ್ನು (ಅಲ್ಲಿಗೆ) ಹೋಗಿ ಕಾಣುತ್ತಾನೆ.(ಪುಟ120) ೯-10)ಸ್ವಪ್ನವೃತ್ತಿಯಲ್ಲಿಯೂ ಒಳಗೆ ಚಿತ್ತದಿಂದ ಕಲ್ಪಿತವಾದರೆ ಅಸತ್ತು,ಹೊರಗೆ ಚಿತ್ತದಿಂದ ಗೃಹೀತವಾದದ್ದು ಸತ್ತು;ಇವೆರಡಕ್ಕು ವೈತಥ್ಯವು ಕಂಡಿದೆ.ಜಾಗ್ರದ್ವøತ್ತಿಯಲ್ಲಿಯೂ ಒಳಗೆ ಚಿತ್ತದಿಂದ ಕಲ್ಪಿತವಾದದ್ದು ಅಸತ್ತು.ಹೊರಗೆ ಚಿತ್ತದಿಂದ ಗೃಹೀತವಾದದ್ದು ಸತ್ತು.ಆದ್ದರಿಂದ ಇವೆರಡಕ್ಕೂ ವೈತಥ್ಯವು ಯುಕ್ತವು.(ಪುಟ122) 11)ಎರಡೂ ಸ್ಥಾನಗಳಲ್ಲಿರುವ ಭೇದಗಳು ಮಿಥ್ಯೆಯೆಂದೇ ಆದರೆ ಈ ಭೇದಗಳನ್ನು ಅರಿಯುವಾತನು ಯಾರು?ಇವುಗಳನ್ನು ವಿಕಲ್ಪಿಸುವವನು ಯಾರು?(ಪುಟ 126) 12)ದೇವನಾದ ಆತ್ಮನೇ ತನ್ನ ಮಾಯೆಯಿಂದ ತನ್ನನ್ನೇ ತಾನೇ ಕಲ್ಪಿಸುತ್ತಾನೆ.ಆತನೆ ಭೇದಗಳನ್ನು ಅರಿಯುತ್ತಾನೆ.ಹೀಗೆಂದು ವೇದಾಂತದ ನಿಶ್ಚಯವು.(ಪುಟ127) 13)ಒಳಗೆ ಚಿತ್ತದಲ್ಲಿದ್ದು ಕೊಂಡಿರುವ ಅಪರ ಭಾವಗಳನ್ನೂ ಮಾಪ೯ಡಿಸುತ್ತಾನೆ.ನಿಯತವಾದ ಭಾವಗಳನ್ನೂ ಬಹಿಶ್ಚಿತ್ತನಾಗಿ ಮಾಪ೯ಡಿಸುತ್ತಾನೆ.ಹೀಗೆ ಪ್ರಭುವು ಕಲ್ಪಿಸುತ್ತಾನೆ.(13೯) 14)ಒಳಗೆ ಯಾವುವು ಚಿತ್ತಕಾಲದ ಭಾವಗಳಾಗಿರುವವೋ ಮತ್ತೆ ಹೊರಗೆ ಯಾವವು ದ್ವಯಕಾಲವುಳ್ಳವರಾಗಿರುವವೋ ಅವೆಲ್ಲವೂ ಕಲ್ಪಿತವೇ,ಅವುಗಳ ವಿಶೇಷಕ್ಕೆ ಮತ್ತೆ ಬೇರೆ ಕಾರಣವಿರುವುದಿಲ್ಲ. 15)ಯಾವವು ಒಳಗೆ ಅವ್ಯಕ್ತವಾಗಿರುವವೋ ಮತ್ತು ಯಾವುವು ಹೊರಗೆ ಸ್ಫುಟವಾಗಿ ಇರುವವೋ,ಅವೆಲ್ಲವೂ ಕಲ್ಪಿತವೇ,ವಿಶೇಷವಾದರೂ ,ಇಂದ್ರಿಯಾಂತರದಲ್ಲಿ ಇರುತ್ತದೆ.(ಪುಟ142) 16)ಮೊದಲು ಜೀವನನ್ನು ಕಲ್ಪಿಸುತ್ತಾನೆ.ಆಮೇಲೆ ಬೇರೆ ಬೇರೆ ಪ್ರಕಾರದ ಹೊರಗಿನ ಮತ್ತು ಒಳಗಿನ ಭಾವಗಳನ್ನು ಕಲ್ಪಿಸುತ್ತಾನೆ.ಎಂತ ವಿದ್ಯೆಯುಳ್ಳವನೋ ಅಮಥ ಸ್ಮøತಿಯವನಾಗಿ ಕಲ್ಪಿಸುತ್ತಾನೆ. (ಪುಟ 143) 17-18) ಇದು ಇಂಥದೆಂದು ನಿಶ್ಚಿತವಾಗಿ ಗೊತ್ತಾಗಿಲ್ಲದ ಹಗ್ಗವು ಕತ್ತಲೆಯಲ್ಲಿ ಹಾವು,ನೀರಿನ ಕೋಡಿ-ಮುಂತಾದ ಭಾವಗಳೆಂದು ಹೇಗೆ ವಿಕಲ್ಪವಾಗುತ್ತಿರುವುದೋ ಅದರಂತೆ ಆತ್ಮನು ಬೇರೆ ಬೇರೆ ಪ್ರಕಾರಗಳಿಂದ ವಿಕಲ್ಪನಾಗಿರುತ್ತಾನೆ.ಹಗ್ಗವು ಎಂದು ವಿಕಲ್ಪವು ತೊಲಗುವುದೋ ,ಹಗ್ಗವೇ ಎಂದು ಒಂದೇ ವಸ್ತುವಾಗಿ ಬಿಡುವುದೋ ಅದರಂತೆ ಆತ್ಮನ ನಿಶ್ಚಯವು ಒಂದೇ ಎಂದಾಗಿ ಬಿಡುವುದು. (ಪುಟ146) 1೯)ಪ್ರಾಣನೇ ಮುಂತಾದ ಈ ಲೆಕ್ಖವಿಲ್ಲದಷ್ಟು ಭಾವಗಳಾಗಿ ಆತ್ಮನು ವಿಕಲ್ಪಿತನಾಗಿರುತ್ತಾನೆ.ಇದು ಆ ದೇವನ ಮಾಯೆ, ಅದರಿಂದ ತಾನೇ ಮೋಹಿತನಾಗಿರುತ್ತಾನೆ(ಪುಟ150) 20)ಪ್ರಾಣನೆಂದು ಪ್ರಾಣವನ್ನು ಬಲ್ಲವರು;ಭೂತಗಳೆಂದು ಅವನನ್ನು ಬಲ್ಲವರು;ಗುಣಗಳು ಎಂದು ಗುಣಗಳನ್ನು ಬಲ್ಲವರು;ತತ್ವಗಳು ಎಂದು ಅವನ್ನು ಬಲ್ಲವರು.(ಪುಟ353) 21)ಪಾದಗಳೆಂದು ಪಾದಗಳನ್ನು ಬಲ್ಲವರು;ವಿಷಯಗಳು ಎಂದು ವಿಷಯಗಳನ್ನು ಬಲ್ಲವರು,ಲೋಕಗಳು ಎಂದು ಲೋಕಗಳನ್ನು ಬಲ್ಲವರು ಮತ್ತು ದೇವತೆಗಳು ಎಂದು ದೇವತೆಗಳನ್ನು ಬಲ್ಲವರು.(ಪುಟ153) 22)ವೇದಗಳು ಎಂದು ವೇದಗಳನ್ನು ಬಲ್ಲವರು;ಯಜ್ಞಗಳು ಎಂದು ಯಜ್ಞಗಳನ್ನು ಬಲ್ಲವರು; ಭೋಕ್ತø ಎಂದು ಭೋಕ್ತøವನ್ನು ಬಲ್ಲವರು ,ಭೋಜ್ಯವು ಎಂದು ಅದನ್ನು ಬಲ್ಲವರು ಹೇಳುತ್ತಾರೆ.(ಪುಟ153) 23)ಸೂಕ್ಷ್ಮವೆಂದು ಸೂಕ್ಷ್ಮವನ್ನು ಬಲ್ಲವರು.ಸ್ಥೂಲವೆಂದು ಸ್ಥೂಲವನ್ನು ಬಲ್ಲವರು,ಮೂತ೯ವೆಂದು ಮೂತ೯ವನ್ನು ಬಲ್ಲವರು ಮತ್ತು ಅಮೂತ೯ವೆಂದು ಅದನ್ನು ಬಲ್ಲವರು.(ಪುಟ154) 24)ಕಾಲವೆಂದು ಕಾಲವನ್ನು ಬಲ್ಲವರು ,ದಿಕ್ಕುಗಳು ಎಂದು ಅವನ್ನು ಬಲ್ಲವರು,ವಾದಗಳು ಎಂದು ವಾದವನ್ನು ಬಲ್ಲವರು,ಭುವನಗಳು ಎಂದು ಅವುಗಳನ್ನು ಬಲ್ಲವರು.(ಪುಟ154) 25)ಮನಸ್ಸೆಂದು ಮನಸ್ಸನ್ನು ಬಲ್ಲವರು,ಬುದ್ಧಿ ಎಂದು ಅದನ್ನು ಬಲ್ಲವರು,ಚಿತ್ತವೆಂದು ಚಿತ್ತವನ್ನು ಬಲ್ಲವರು,ಧಮ೯ದಮ೯ಗಳು ಎಂದು ಅವುಗಳನ್ನು ಬಲ್ಲವರು.(ಪುಟ154) 26)ಇಪ್ಪತ್ತೈದನೆಯವನೆಂದು ಕೆಲವರು,ಇಪ್ಪತ್ತಾರನೆಯವನೆಂದು ಕೆಲವರು, ಮೂವತ್ತೊಂದನೆಯವನೆಂದು ಕೆಲವರು,ಅನಂತನು ಎಂದು ಮತ್ತೆ ಕೆಲವರು.(ಪುಟ 154) 27)ಜನರು ಎಂದು ಜನವನ್ನು ಬಲ್ಲವರು ಹೇಳುತ್ತಿದ್ದಾರೆ,ಆಶ್ರಮ ಎಂದು ಅವನ್ನು ಬಲ್ಲವರು ಹೇಳುತ್ತಿರುವರು,ಲಿಂಗವನ್ನು ಬಲ್ಲವರು ಗಂಡು,ಹೆಣ್ಣು ಅಥವಾ ನಪುಂಸಕ ಎನ್ನುತ್ತಿರುವರು.ಪರನೆಂದೂ ಅಪರನೆಂದೂ ಮತ್ತೆ ಕೆಲವರು ಹೇಳುತ್ತಿರುವರು.(154) 28)ಸೃಷ್ಟಿಯೆಂದು ಸೃಷ್ಟಿಯನ್ನು ಬಲ್ಲವರು,ಲಯವೆಂದು ಲಯವನ್ನು ಬಲ್ಲವರು,ಸ್ಥಿತಿ ಎಂದು ಸ್ಥಿತಿಯನ್ನು ಬಲ್ಲವರು ಹೆಳುತ್ತಿರುವರು,ಆದರೆ ಇವೆಲ್ಲವೂ ಯಾವಾಗಲೂ ಅಗಿರುತ್ತಾನೆ.(ಪುಟ155) 2೯-30)ಯಾವನಿಗೆ ಭಾವವನ್ನು ಗುರುವು ಗುರುವು ತೋರಿಸುತ್ತಾನೋ ಅ ಭಾವವೇ ಅವನಿಗೆ ಕಾಣಿಸುತ್ತದೆ.ಮತ್ತು ಅದು ಈ ಆತ್ಮನಗಿ ಅದನ್ನು ಕಾಪಾಡಿಕೊಳ್ಲುತ್ತದೆ.ಅದರ ಗ್ರಹಣೆಯೆ ಅವನನ್ನು ಬಂದು ಸೇರಿಕೊಳ್ಳುತ್ತದೆ.ಈ ಬೇರೆಯಲ್ಲದ ಭಾವಗಳ ರೂಪದಿಂದ ಈ ಆತ್ಮನು ಬೆರೆಯೆ ಎಂದು ಕಾಣುತ್ತಿರುವನು.ಹೀಗೆಂದು ಯಾವನು ಅರಿತುಕೊಳ್ಳುವನೋ ಅವನು ಯವ ಶಂಕೆಯೂ ಇಲ್ಲದೆ ಕಲ್ಪಿಸುವನು.(157) 31)ಸಪ್ತಮಾಯೆಗಳು ಹೇಗೆ ಕಾಣುತ್ತಿರುವವೋ, ಗಂಧವ೯ನಗರವು ಹೇಗೆ ಕಾಣುತ್ತದೆಯೋ,ಹಾಗೆಯೇ ಈ ವಿಶ್ವವು ವೇದಾಥ೯ಗಳಲ್ಲಿ ವಿಚಕ್ಷಣರಾದವರಿಗೆ ಕಂಡು ಬಂದಿರುವುದು.(15೯) 32)ನಿರೋಧವಿಲ್ಲ,ಉತ್ಪತ್ತಿಯೂ ಇಲ್ಲ,ಬದ್ಧನಿಲ್ಲ,ಸಾಧಕನೂ ಇಲ್ಲ;ಮುಕ್ತನೂ ಇಲ್ಲ.ಇಂತಿದು ಪರಮಾಥ೯ವು.(ಪುಟ160) 33)ಈ ಆತ್ಮನು ಅಸತ್ತೇ ಆಗಿರುವ ಭವಗಳ ರೂಪದಿಂದಲೂ ,ಅದ್ವಯರೂಪದಿಂದಲೂ, ಕಲ್ಪಿತನಾಗಿರುತ್ತಾನೆ.ಭವಗಳೂ ಅದ್ವಯ ರೂಪದಿಂದಲೇ ಕಲ್ಪಿತವಾಗಿರುವವು.ಆದ್ದರಿಂದ ಅದ್ವಯತ್ವವೇ ಶಿವವು. (ಪುಟ168) 34)ಇದು ಆತ್ಮರೂಪದಿಂದಲೂ ನಾನಾ ರೂಪವಾಗಿಲ್ಲ.ತನ್ನರೂಪದಿಂದಲೂ ಹೇಗೂ ಇರುವುದಿಲ್ಲ.ಯವುದೂ ಬೆರೆಯಲ್ಲ,ಬೇರೆಯಲ್ಲದೆಯು ಅಲ್ಲ.ಹೀಗೆಂದು ತತ್ವವಿದರು ತಿಳಿದಿರುತ್ತಾರೆ.(ಪುಟ 173) 35)ವೀತರಾಗ ಭಯ ಕ್ರೋಧರಾದ ,ವೇದ ಪಾರಂಗತರಾದ ಮುನಿಗಳು ನಿವಿ೯ಕಲ್ಪನೂ ಪ್ರಪಂಚೋಪಶಮನೂ ಅದ್ವಯನೂ ಆದ ಈ ಆತ್ಮನನ್ನು ಕಂಡಿರುವರು.(ಪುಟ175) 36)ಆದ್ದರಿಂದ ಹೀಗೆಂದು ಅರಿತುಕೊಂಡು ಅದ್ವೈತದಲ್ಲಿ ಸ್ಮøತಿಯನ್ನು ಯೋಜನೆ ಮಾಡಿಕೊಳ್ಳಬೇಕು. ಅದ್ವೈತವನ್ನು ಪಡೆದುಕೊಂಡು ಜಡನಂತೆ ಲೋಕವ್ಯವಹಾರವನ್ನು ಮಾಡಬೇಕು.(ಪುಟ 176) 37)ಯತಿಯಾದವನು ಸ್ತೋತ್ರಮಡುವುದಿಲ್ಲದೆ,ನಮಸ್ಕಾರಮಾಡುವುದಿಲ್ಲದೆ,ಸ್ವಧಾಕಾರವಿಲ್ಲದೆ ಚಲಾಚಲನಿಕೇತನೂ ಆಗಿ ಯಾದೃಚ್ಛಿಕನಾಗಿರಬೇಕು.(ಪುಟ180) 38)ಒಳಗಿರುವುದನ್ನು ತತ್ವವೆಂದರಿತುಕೊಂಡು,ಹೊರಗಿರುವುದನ್ನು ತತ್ವವೆಂದರಿತುಕೊಂಡು ,ತತ್ವವೇ ತಾನಾಗಿ ಅದರಲ್ಲಿ ಪೂಣ೯ರತನಾಗಿದ್ದುಕೊಂಡು ತತ್ವದಿಂದ ಜಾರಿಬೀಳದೇ ಇರಬೇಕು.(ಪುಟ38) .......................................................................................................................... 3)ಅದ್ವೈತ ಪ್ರಕರಣ: 1-2)ಉಪಾಸನೆಯನ್ನಾಶ್ರಯಿಸಿರುವ ಧಮ೯ನು ಉತ್ಪತ್ತಿಗೆ ಮೊದಲು ಎಲ್ಲವೂ ಅಜವು ಎಂಬ ಜಾತ ಬ್ರಹ್ಮದಲ್ಲಿ ಇದ್ದುಕೊಂಡಿರುತ್ತಾನೆ.ಅದರಿಂದ ಅವನು ಕೃಪಣನೆನಿಸುವನು.ಆದ್ದರಿಂದ ಅಕಾಪ೯ಣ್ಯವಾದ ,ಹುಟ್ಟಿಲ್ಲದ ಸಮತೆಯನ್ನು ಹೊಂದಿರುವ, ಬ್ರಹ್ಮವು ಎಲ್ಲೆಲ್ಲಿಯೂ ಹುಟ್ಟುತ್ತಿದ್ದರೂ ಸ್ಬಲ್ಪವೂ ಹುಟ್ಟುವುದಿಲ್ಲ ವೆಂಬುದು ಹೇಗೆಂಬುದನ್ನು ಹೇಳುವೆನು.(ಪುಟ 1೯೯) 3)ಆತ್ಮನು -ಆಕಾಶವು ಘಟಾಕಾಶಗಳ ರೂಪದಿಂದ ಹುಟ್ಟುವಹಾಗೆ-ಜೀವರುಗಳ ರೂಪದಿಂದಲೂ,ಆಕಾಶವು ಘಟಾದಿಗಳ ರೂಪದಿಂದ ಹುಟ್ಟುತ್ತಿರುವಂತೆ -ಸಂಘಾತಗಳ ರೂಪದಿಂದಲೂ ಹುಟ್ಟುತ್ತಿರುವನು.ಹುಟ್ಟಿಗೆ ಇದು ನಿದಶ೯ನವು.(ಪುಟ204) 4-5)ಗಡಿಗೆಯೇ ಮುಂತಾದವುಗಳು ನಾಶವಾದರೆ ಹೇಗೆ ಆಕಾಶದಲ್ಲಿ ಅಡಗುವವೋ ಅದರಂತೆ ಇಲ್ಲಿ ಜೀವರು ಆತ್ಮನಂತೆ ಅಡಗುವರು.ಹೇಗೆ ಒಂದು ಘಟಾಕಾಶವು ಧೂಳು ಮುಂತಾದವುಗಳಿಂದ ಕೂಡಿದ್ದರೆ ಎಲ್ಲಾ (ಘಟಾಕಾಶಗಳೂ ಅವುಗಳೊಡನೆ)ಸೇರುವುದಿಲ್ಲವೋ ಅದರಂತೆ ಜೀವರು ಸುಖಾದಿ ಗಳೊಡನೆ(ಎಲ್ಲವೂ ಸೇರುವುದಿಲ್ಲ).(ಪುಟ206) 6)ಮತ್ತು ರೂಪ,ಕಾಯ೯,ಹೆಸರು -ಇವುಗಳು ಹೇಗೆ ಅಲ್ಲಲ್ಲಿ ಬೇರೆಬೇರೆಯಾಗಿರುವವೋ ಆಕಾಶಕ್ಕೆ ಮಾತ್ರ ಹೇಗೆ ಭೇದವಿರುವುದಿಲ್ಲವೋ ಅದರಂತೆ ಜೀವರುಗಳ ವಿಷಯದಲ್ಲಿಯೂ ನಿಣ೯ಯವು.(ಪುಟ 211) 7)ಹೇಗೆ ಆಕಾಶಕ್ಕೆ ಘಟಾಕಾಶವು ವಿಕಾರವೂ ಅಲ್ಲವೋ ಹಾಗೆಯೇ ಅವಯವವೂ ಅಲ್ಲವೋ ಹಾಗೆಯೇ ಪರಮಾತ್ಮನಿಗೆ ಜೀವನು ವಿಕಾರವೂ ಅಲ್ಲ,ಅವಯವವೂ ಅಲ್ಲ.(ಪುಟ212) 8)ಹೇಗೆ ಆಕಾಶವು ಬಾಲರಿಗೆ ಮಲಗಳಿಂದ ಮಲಿನವಾಗಿರುವುದೋ ಹಾಗೆ ಅಬುದ್ಧರಿಗೆ ಆತ್ಮನೂ ಮಲಗಳಿಂದ ಮಲಿನನಾಗಿರುತ್ತಾನೆ.(ಪುಟ 214) ೯)ಸಾಯುವಲ್ಲಿಯೂ ಹುಟ್ಟುವಲ್ಲಿಯೂ ಹೋಗುವಿಕೆ ಬರುವಿಕೆಗಳಲ್ಲಿಯೂ ನಿಂತಿರುವುದರಲ್ಲಿಯೂ ಎಲ್ಲಾ ಶರೀರಗಳಲ್ಲಿಯೂ ಜೀವನು ಆಕಾಶಕ್ಕಿಂತ ವಿಲಕ್ಷಣನಲ್ಲದೆ ಇರುತ್ತಾನೆ.(ಪುಟ215) 10)ಸಂಘಾತಗಳು ಕನಸಿನಂತೆ ಆತ್ಮಮಾಯೆಯಿಂದ ಸೃಷ್ಟಿಯಾಗಿರುತ್ತವೆ.ಅವು ಕೆಲವು ಮಿಕ್ಕವುಗಳಿಗಿಂತ ಹೆಚ್ಚೆಂದಾಗಲೀ,ಎಲ್ಲವೂ ಒಂದಕ್ಕೊದು ಸಮವೆಂದಾಗಲೀ ಹೆಳುವುದಕ್ಕೆ ಯುಕ್ತಿಯಿರುವುದೇ ಇಲ್ಲ.(ಪುಟ 216) 11) ರಸವೇ ಮುಂತಾದ ಕೋಶಗಳನ್ನು ತೈತ್ತಿರೀಯದಲ್ಲಿ ವಿವರಿಸಿದೆಯಷ್ಟೇ?ಅವುಗಳಿಗೆ ಆತ್ಮನಾದ ಪರಜೀವನನ್ನೆ ಆಕಾಶದಂತೆ ಎಂದು ನಾವು ತೋರಿಸಿಕೊಟ್ಟಿರುವುದು.(ಪುಟ221) 12)ಆಕಾಶವನ್ನು ನಾವು ತಿಳಿಸಿರುವಂತೆಯೇ ಮಧುಜ್ಞಾನದಲ್ಲಿ ಪೃಥ್ವಿಯಲ್ಲಿಯೂ ಉದರದಲ್ಲಿಯೂ -ಎಂದು ಎರಡೆರಡಾಗಿ ಪರಬ್ರಹ್ಮವನ್ನುತಿಳಿಸಿರುತ್ತದೆ.(ಪುಟ225) 13)ಜೀವಾತ್ಮರುಗಳಿಗೆ ಅಭೇದವಿರುವುದರಿಂದ ಅವರು ಬೇರೆ ಬೇರೆ ಎಂಬುದನ್ನು ನಿಂದಿಸಿರುವುದು ಹೀಗಾದರೇ ಸಮಂಜಸವಾಗುತ್ತದೆ.(ಪುಟ 225) 14)ಉತ್ಪತ್ತಿಗಿಂತ ಮೊದಲು ಜೀವಾತ್ಮರುಗಳಿಗೆ ಪೃಥಕ್ತ್ವವನ್ನು ಹೇಳಿದೆಯಷ್ಟೆ?ಅದು ಭವಿಷದ್ವøತ್ತಿಯಿಂದ ಗೌಣವಾಗಿ ಹೇಳಿದ್ದು.ಏಕೆಂದರೆ ಮುಖ್ಯತ್ವವು ಯುಕ್ತವಾಗಿರುವುದಿಲ್ಲ.(ಪುಟ 227) 15)ಮಣ್ಣು,ಕಬ್ಬಿಣ,ಕಿಡಿ-ಮುಂತಾದ ದೃಷ್ಟಾಂತಗಳಿಂದ ಬೇರೆ ಬೇರೆ ಪ್ರಕಾರದ ಸೃಷ್ಟಿಯನ್ನು ಹೇಳಿದೆಯಷ್ಟೆ?ಅದು ತತ್ವಜ್ಞಾನಕ್ಕೆ ಬುದ್ಧಿಯನ್ನು ತಂದಿಳಿಸುವ ಉಪಾಯವೇ,ಹೇಗೂ ಭೇದವಿರುವುದಿಲ್ಲ.(ಪುಟ230) 16)ಹೀನ,ಮಧ್ಯಮ,ಉತ್ಕøಷ್ಟ-ಎಂದು ಬೇರೆ ಬೇರೆ ದೃಷ್ಟಿಯುಳ್ಳ ಆಶ್ರಮಿಗಳು ಮೂರು ಬಗೆ.ಈ ಉಪಾಸನೆಯು ಅವರಿಗೋಸ್ಕರ ಕನಿಕರದಿಂದ ಉಪದಿಷ್ಟವಾಗಿರುತ್ತದೆ.(ಪುಟ23೯) 17)ತಮ್ಮ ತಮ್ಮ ಸಿದ್ಧಾಂತಗಳ ವ್ಯವಸ್ಥೆಯಲ್ಲಿ ದ್ವೈತಿಗಳು ನಿಶ್ಚಯವನ್ನು ಮಾಡಿಕೊಂಡಿವುದುದರಿಂದ ಒಬ್ಬರಿಗೊಬ್ಬರು ವಿರುದ್ಧವಾಗಿರುತ್ತಾರೆ.ಇದು ಅವರಿಗೆ ವಿರುದ್ಧವಾಗಿರುವುದಿಲ್ಲ.(ಪುಟ245) 18)ಏಕೆಂದರೆ ಅದ್ವೈತವು ಪರಮಾಥ೯ವು;ದ್ವೈತವು ಅದರ ಭೇದವೆನಿಸಿರುತ್ತದೆ.ವರಿಗೆ ಎರಡು ಪ್ರಕಾರದಿಂದಲೂ ದ್ವೈತವೇ247) 1೯)ಇದು ಮಾಯೆಯಿಂದಲೇ ಭಿನ್ನವಾಗಿರುತ್ತದೆ. ಇನ್ನು ಬೇರೆ ಯಾವಪ್ರಕಾರದಿಂದಲೂ ಅಜವಾದದ್ದು ಭಿನ್ನವಾಗಲಾರದು.(ಪುಟ251) 20)ಅಜಾತವೇ ಆದ ವಸ್ತುವಿಗೆ ವಾದಿಗಳು ಜನ್ಮವನ್ನು ಒಪ್ಪಿರುತ್ತಾರೆ.ಅಜಾತವೂ ಅಮೃತವೂ ಆದ ವಸ್ತುವು ಹೇಗೆ ತಾನೇ ಮತೃ೯ತ್ವವನ್ನು ಹೊಂದೀತು?(ಪುಟ253) 21-22)ಅಮೃತವಾದದ್ದು ಮತ್ಯ೯ವಾಗಲಾರದು.ಮತ್ಯ೯ವಾದದ್ದು ಅಮೃತವೂ ಆಗಲಾರದು.ಏಕೆಂದರೆ ಸ್ವಭಾವವು ಬೇರೊಂದು ತೆರವಾಗುವುದೆಂಬುದು ಹೇಗೂ ಆಗಲಾರದು.ಸ್ವಭಾವದಿಂದಲೇ ಅಮೃತವಾಗಿರುವ ಭಾವವು ಮತ್ಯ೯ವಾಗುವುದೆಂದು ಯಾವ ವಾದಿಯ ಮತವಿರುವುದೋ ಆ ವಾದಿಯ ಮತದಲ್ಲಿ ಅಮೃತವಾಗಿರುವುದೆಂಬುದು ಕೃತಕವಾಗಿರುವುದರಿಂದ ಅದು ತಾನು ಇದ್ದಂತೆಯೇ ಇರುವುದೆಂಬುದು ಹೇಗೆ ಆದೀತು?(ಪುಟ 258) 23)ಸೃಷ್ಟಿಯು ನಿಜವಾಗಿರಲಿ,ಹುಸಿಯಾಗಿರಲಿ-ಶ್ರುತಿಯು ಎರಡಕ್ಕೂ ಸಮನಾಗಿರುತ್ತದೆ.ಆದ್ದರಿಂದ ಯಾವುದು ನಿಶ್ಚಿತವಾಗಿಯೂ ಯುಕ್ತಿಯುಕ್ತವಾಗಿಯೂ ಇರುವುದೋ ಅದೇ ಶ್ರುತ್ಯಥ೯ವಾದೀತೇ ಹೊರತು ಮತ್ತೊಂದಾಗದು.(ಪುಟ262) 24) ಇಲ್ಲಿ ನಾನಾತ್ವವಿಲ್ಲ' ಎಂದು ಶ್ರುತಿಯಿರುವುದರಿಂದಲೂ 'ಇಂದ್ರನು ಮಾಯೆಗಳಿಂದ'(ಬಹುವಿಧವಾಗಿ ತೋರುತ್ತಾನೆ) ಎಂದಿರುವುದರಿಂದಲೂ 'ಹುಟ್ಟದೆ ಇರುವವನಾದರೂ ಬಹು ಪ್ರಕಾರವಾಗಿ ಅವನು ಹುಟ್ಟುತ್ತಾನೆ(ಎಂದಿರುವುದರಿಂದಲೂ ಇದೇ ಶ್ರುತ್ಯಥ೯) 25)ಸಂಭೂತ್ಯುಪಾಸನೆಯನ್ನು ಶ್ರುತಿಯು ನಿಂದಿಸುತ್ತಿರುವುದರಿಂದ ಹುಟ್ಟುವಿಕೆಯನ್ನು ಅಲ್ಲಗಳೆದಂತಾಯಿತು.'ಇವನನ್ನು ಮತ್ತೆ ಯಾರು ಉಂಟುಮಾಡುವವನು'ಎಂಬುದರಿಂದ ಕಾರಣವನ್ನು ಅಲ್ಲಗಳೆದಂತಾಯಿತು.270) 26)"ಆ ಇವನು ನೇತಿ ನೇತಿ(ಎಂಬ ಆತ್ಮನು)" ಎಂದು ಮೊದಲು ಹೇಳಿದ್ದನ್ನೆಲ್ಲ ಅದು ಅಗ್ರಾಹ್ಯವೆಂಬ ಕಾರಣದಿಂದ ಅಲ್ಲಗಳೆಯುತ್ತದೆ. ಆಗ ಅಜತತ್ವವು ತಾನೇ ಬೆಳಗುತ್ತದೆ.(ಪುಟ375) 27) ಸತ್ತಿಗೆ(ಇರುವುದಕ್ಕೆ) ಮಾಯೆಯಿಂದ ಜನ್ಮವೆಂಬುದು ಯುಕ್ತವಾಗಿರುತ್ತದೆ.ಆದರೆ ನಿಜವಾಗಿಯೂ ಅದಕ್ಕೆ ಜನ್ಮ ಎಂಬುದು ಯುಕ್ತವಾಗಲಾರದು. ಯಾವನ ಮತದಲ್ಲಿ ನಿಜವಾಗಿಯೂ ಹುಟ್ಟುವುದೇ ಹುಟ್ಟುತ್ತದೆಯೋ ಅವನ ಮತದಲ್ಲಿ ಹುಟ್ಟಿದ್ದೇ ಹುಟ್ಟುವುದೆಂಬಂತೆ ಆಗುತ್ತದೆ.(ಪುಟ284) 28) ಅಸತ್ತಿಗೆ (ತಾನೇ ಇಲ್ಲದಿರುವುದಕ್ಕೆ) ಮಾಯೆಯಿಂದಲಾಗಲೀ ,ನಿಜವಾಗಿಯಾಗಲೀ ಹುಟ್ಟುವುದೆಂಬುದು ಸಲ್ಲುವುದಿಲ್ಲ.ಬಂಜೆಯಮಗನು ನಿಜವಾಗಿಯಾಗಲಿ,ಮಾಯೆಯಿಂದಲಾಗಲಿ ಹುಟ್ಟಬಾರದಷ್ಟೆ?(ಪುಟ288) 2೯-30)ಹೇಗೆ ಸ್ವಪ್ನದಲ್ಲಿ ದ್ವಯದ ಆಕಾರದಲ್ಲಿ ಮನಸ್ಸು ಮಾಯೆಯಿಂದ ಅಲುಗಾಡುವುದೋ,ಹಾಗೆಯೇ ಎಚ್ಚರದಲ್ಲಿಯೂ ಮಾಯೆಯಿಂದಲೇ ಮನಸ್ಸು ಅಲುಗಾಡುವುದು.ಸ್ವಪ್ನದಲ್ಲಿ ಮನಸ್ಸು ಅದ್ವಯವೇ ಆಗಿದ್ದು ದ್ವಯದಂತೆ ತೋರುವುದೆಂಬುದರಲ್ಲಿ ಸಂಶಯವಿಲ್ಲ; ಹಾಗೆಯೇ ಎಚ್ಚರದಲ್ಲಿಯೂ ಮನಸ್ಸು ಅದ್ವಯವೇ ಆಗಿದ್ದು ದ್ವಯದಂತೆ ತೋರುವುದು.ಇದರಲ್ಲಿ ಸಂಶಯವಿಲ್ಲ.(ಪುಟ2೯2) 31)ಈ ಚರಾಚರತ್ಮಕವಾದ ದ್ವೈತವೆಲ್ಲವೂ ಮನೋದೃಶ್ಯವಾಗಿರುತ್ತದೆ.ಏಕೆಂದರೆ ಮನಸ್ಸು ಅಮನೀಭಾವವನ್ನು ಹೊಂದಿದರೆ ದ್ವೈತವು ತೋರುವುದೇ ಇಲ್ಲ.(ಪುಟ 2೯3) (ದ್ವೈತವೆಂಬುದು ಹಗ್ಗದ ಹಾವಿನಂತೆ ತೋರುವ ಮನೋವಿಕಲ್ಪ ಮಾತ್ರವೇ ) 32)ಆತ್ಮ ಚಸತ್ಯಾನು ಬೋಧದಿಂದ ಯಾವಗ ಸಂಕಲ್ಪಿಸದಿರುವುದೋ ಆಗ ಮನಸ್ಸು ಅಮನಸ್ಸಾಗುವುದು.ಏಕೆಂದರೆ ಗ್ರಾಹ್ಯವಿಲ್ಲದ್ದರಿಂದ ಅದು ಏನನ್ನೂ ಗ್ರಹಿಸುವುದಿಲ್ಲ.(ಪುಟ2೯4) 33)ಅಕಲ್ಪಕವೂ ಅಜವೂ ಆದ್ದರಿಂದ ಆತ್ಮಜ್ಞಾನವು ಜ್ಞೇಯಕ್ಕಿಂತ ಬೇರೆಯಾಗಿರುತ್ತದೆ.ಅದಕ್ಕೆ ಬ್ರಹ್ಮವೇ ಜ್ಞೇಯವು.ಅದು ಅಜವು ನಿತ್ಯವು;ಅಜವಾದ ಜ್ಞಾನದಿಂದಲೇ ಅಜವಾದ ಜ್ಞಾನವನ್ನು ಅರಿತುಕೊಳ್ಳುತ್ತಾನೆ. (ಪುಟ2೯6) 34)ವಿವೇಕ ಜ್ಞಾನವುಳ್ಳಾತನ ನಿರುದ್ಧವಾದ ನಿವಿ೯ಕಲ್ಪವಾದ ಮನಸ್ಸಿನ ಪ್ರಚಾರವನ್ನು ಅರಿತುಕೊಳ್ಳಬೇಕು.ಸುಷುಪ್ತಿಯಲ್ಲಿರುವ ಪ್ರಚಾರವು ಬೇರೆ,ಅದಕ್ಕೆ ಸಮನಲ್ಲ.(ಪುಟ2೯8) 35)ಏಕೆಂದರೆ ಸುಷುಪ್ತಿಯಲ್ಲಿ ಮನಸ್ಸು ಲಯವಾಗುತ್ತದೆ.ಅದನ್ನೇ ಆತ್ಮಜ್ಞಾನದಿಂದ ನಿಗ್ರಹ ಮಾಡಿಕೊಂಡರೆ ಲಯವಾಗುವುದಿಲ್ಲ.ಅದೇ ನಿಭ೯ಯವಾದ ಬ್ರಹ್ಮವು.,ಎಲ್ಲೆಲ್ಲಿಯೂ ತೋರುವ ಜ್ಞಾನದ ಬೆಳಕು.(ಪುಟ302) 36)ಇದು ಅಜವು,ಅನಿದ್ರವು,ಅಸ್ವಪ್ನವು,ನಾಮರಹಿತವಾದದ್ದು,ರೂಪರಹಿತವಾದದ್ದು,ಎಂದೆಂದಿಗೂ ಬೆಳಗತಕ್ಕದ್ದು ಸವ೯ಜ್ಞವು,ಹೇಗೂ ಉಪಚಾರವೆಂಬುದೇ ಇಲ್ಲ.(ಪುಟ305) 37) ಯಾ ವಾಕ್ಕೂ ಇಲ್ಲದವನು,ಎಲ್ಲಾ ಚಿಂತೆಗಳನ್ನೂ ಬಿಟ್ಟೆದ್ದಿರುವವನು,ಸುಪ್ರಶಾಂತನು,ಸಕೃಜ್ಜ್ಯೋತಿಯು,ಸಮಾಧಿಯು,ಅಚಲನು,ಅಭಯನು(ಪುಟ308) 38)ಎಲ್ಲಿ ಚಿಂತೆಯೇ ಇರುವುದಿಲ್ಲವೋ, ಅಲ್ಲಿಗ್ರಹಣವಿರುವುದಿಲ್ಲ,ಉತ್ಸಗ೯ವೂ ಇರುವುದಿಲ್ಲ.ಆಗ ಜ್ಞಾನವು ಆತ್ಮನಲ್ಲಿ ನಿಂತು ಬಿಟ್ಟಿರುತ್ತದೆ. ಅಜಾತಿಯಾಗಿ ಸಮತೆಯನ್ನು ಹೊಂದಿರುತ್ತದೆ.(ಪುಟ310) 3೯)ಇದು ಅಸ್ಪಶ೯ಯೋಗವೆಂದು ಪ್ರಸಿದ್ಧವಾಗಿರುತ್ತದೆ.ಇದು ಯಾವ ಯೋಗಿಗಳಿಗೂ ಕಾಣತಕ್ಕದ್ದಲ್ಲ.ಇದು ಅಭಯವಾಗಿದ್ದರೂ ಯೋಗಿಗಳು ಭಯವನ್ನು ಕಾಣುತ್ತಾ ಇದಕ್ಕೆ ಅಂಜುತ್ತಾರೆ.(ಪುಟ312) 40)ಯೋಗಿಗಳಿಗೆಲ್ಲ ಮನಸ್ಸಿನ ನಿಗ್ರಹದಿಂದಲೇ ಅಭಯವೂ ದುಃಖಕ್ಷಯವೂ ಜ್ಞಾನವೂ ಅಕ್ಷಯವಾದ ಶಾಂತಿಯೂ ಉಂಟಾಗುವುದು.(ಪುಟ314) 41)ಸಮುದ್ರವನ್ನು ಕುಶಾಗ್ರದಿಂದ ಒಂದೊಂದು ತೊಟ್ಟಾಗಿ ಎತ್ತಿಹಾಕುವುದು ಹೇಗೋ ಅದರಂತೆ ಬೇಸರವಿಲ್ಲದೆ ಮನಸ್ಸಿನ ನಿಗ್ರಹವಾಗುವುದು(ಪುಟ 317) 42)ಕಾಮಭೋಗಗಳಲ್ಲಿ ಚದರಿರುವ ಚಿತ್ತವನ್ನು ಬಿಗಿ ಹಿಡಿದುಕೊಳ್ಳಬೇಕು.ಲಯವಾಗಿ ಸುಪ್ರಸನ್ನವಾದರೆ ಅದನ್ನು ನಿಗ್ರಹಿಸಿಕೊಳ್ಳಬೇಕು.ಕಾಮವು ಹೇಗೋ ಹಾಗೆಯೇ ಲಯವೂ ಅಡ್ಡಿ(ಪುಟ317) 43)ಎಲ್ಲವೂ ದುಃಖವೇ ಎಂಬುದನ್ನು ಮನದಂದುಕೊಂಡು ಕಾಮಭೋಗದಿಂದ ಹಿಂತಿರುಗಿಸಿಕೊಳ್ಳಬೇಕು.ಎಲ್ಲವೂ ಅಜನೇ ಎಂದು ಮನದಂದುಕೊಂಡರೆ ಹುಟ್ಟಿದ್ದೇ ಕಾಣುವುದಿಲ್ಲ.(ಪುಟ318) 44)ಲಯವಾದರೆ ಚಿತ್ತವನ್ನು ಎಚ್ಚರಗೊಳಿಸಿಕೊಳ್ಳಬೇಕು.ವಿಕ್ಷೇಪವಾದರೆ ಮತ್ತೆ ಚಿತ್ತವನ್ನು ವಶಪಡಿಸಿಕೊಳ್ಳಬೇಕು.ಕಷಾಯಯುಕ್ತವಾದದ್ದನ್ನು ಅರಿತುಕೊಳ್ಳಬೇಕು.ಸಮಪ್ರಾಪ್ತಿಯಾದರೆ ಅಲುಗಾಡಿಸಬಾರದು.(ಪುಟ31೯) 45)ಅಲ್ಲಿ ದೊರಕುವ ಸವಿಯನ್ನು ಸವಿಯಬಾರದು.ಅದರಲ್ಲಿ ಸಂಗವಿಲ್ಲದೆ ಪ್ರಜ್ಞೆಯಿಂದೊಡಗೂಡಿರಬೇಕು.ನಿಶ್ಚಲವಾದ ಚಿತ್ತವು ಹೊರಕ್ಕೆ ಹೊರಟರೆ ಪ್ರಯತ್ನಪೂವ೯ಕವಾಗಿ ಒಂದುಗೂಡಿಸಬೇಕು.(ಪುಟ 321) 46)ಯಾವಾಗ ಚಿತ್ತವು ಲಯವಾಗದೆ ಇರುವದೋ ಮತ್ತೆ ವಿಕ್ಷಿಪ್ತವಾಗದೆಯೇ ಇರುವುದೋ,ಅಲುಗಾಡದೆ,ಅಭಾಸವೂ ಇಲ್ಲದೆ ಇರುವುದೋ ಆಗ ಬ್ರಹ್ಮವಾಯಿತು.(ಪುಟ 322) 47)ಇದು ಸ್ವಸ್ಥವು,ಶಾಂತವು,ಸನಿವಾ೯ಣವು,ಹೀಗೆಂದು ನಿಶ್ಚಯಿಸಿ ಹೇಳಲಾಗದ ಉತ್ತಮ ಸುಖವು,ಅಜವು,ಅಜವಾದ ಜ್ಞೇಯಕ್ಕಿಂತ ಅಭಿನ್ನವಾದದ್ದು,ಸವ೯ಜ್ಞವು-ಎಂದು ಹೇಳಲ್ಪಡುತ್ತದೆ.(ಪುಟ324) 48)ಯಾವ ಜೀವವೂ ಹುಟ್ಟುವುದಿಲ್ಲ,ಅವನಿಗೆ ಸಂಭವವೆ ಇರುವುದಿಲ್ಲ,ಯಾವುದರಲ್ಲಿ ಒಂದಿಷ್ಟೂ ಹುಟ್ಟುವುದಿಲ್ಲವೋ,ಅದೇ ಉತ್ತಮ ಸತ್ಯವು.(ಪುಟ325) ,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,, 4)ಅಲಾತ ಶಾಂತಿ ಪ್ರಕರಣ: ಮಂಗಲಾಚರಣೆ: 1)ಆಕಾಶದಂತಿರುವ ಜ್ಞೇಯಾ ಬಿನ್ನವಾದ ಜ್ಞಾನದಿಂದ ಆಕಾಶದಂತಿರುವ ಧಮ೯ರುಗಳನ್ನು(ಎಂದರೆ ಪರಮತ್ಮನನು) ಯಾವನು ಅರಿತುಕೊಂಡಿರುವನೋ ಆ ಪುರುಷಶ್ರೇಷ್ಠನನ್ನು ವಂದಿಸುತ್ತೇನೆ. (ಪುಟ 332) 2)ಅಸ್ಪಶ೯ಯೋಗವೆಂಬ ಹೆಸರಿನ,ಸವ೯ಪ್ರಾಣಿಗಳಿಗೂ ಸುಖವಾಗಿಯೂ ಹಿತವಾಗಿಯೂ ಇರುವ,ವಿವಾದವಿಲ್ಲದ,ವಿರುದ್ಧವಲ್ಲದ-ಯಾವ ದಶ೯ನವು ಶಾಸ್ತ್ರದಲ್ಲಿ ಉಪದಿಷ್ಟವಾಗಿರುತ್ತದೆಯೋ ಅದನ್ನು ನಮಸ್ಕರಿಸುತ್ತೇನೆ.(ಪುಟ336) 3-4)ಇರುವುದಕ್ಕೆ ಜನ್ಮವುಂಟೆಂದುಕೆಲವರು ವದಿಗಳು ಮತ್ರವೇ ಒಪ್ಪುತ್ತಾರೆ.ಇಲ್ಲದ್ದಕ್ಕೆ ಜನ್ಮವುಂಟೆಂದು ಇನ್ನು ಕೆಲವು ಧೀರರು ಒಪ್ಪುತ್ತಾರೆ.ಇರುವ ವಸ್ತು ಯಾವುದೂ ಹುಟ್ಟುವುದಿಲ್ಲ,ಇಲ್ಲದೆ ಇರುವ ವಸ್ತುವು ಹುಟ್ಟುವುದೆ ಇಲ್ಲ.ಹೀಗೆ ಒಬ್ಬರೊಡನೊಬ್ಬರು ವಿವಾದ ಮಾಡುತ್ತಿರುವ ಆದ್ವೈತಿಗಳು ಅಜಾತಿಯನ್ನು ವ್ಯಾಖ್ಯಾನ ಮಾಡುತ್ತಿರುವರು.(ಪುತ 340) 5)ಅವರು ಹೊರಪಡಿಸುವ ಅಜಾತಿಯನ್ನು ನಾವೂ ಅನುಮೋದಿಸುತ್ತೇವೆಯೇ ಹೊರತು ಅವರೊಡನೆ ವಿವಾದವನ್ನೇನೂ ಮಾಡುತ್ತಿಲ್ಲ.ಹೀಗೆ ನಮ್ಮ ಪಕ್ಷದಲ್ಲಿ ಅವಿವಾದವಿದೆ ಎಂಬುದನ್ನು ತಿಳಿದುಕೊಳ್ಳಿರಿ.(ಪುಟ342) 6-7-8)ವಾದಿಗಳು ಅಜಾತವದ ವಸ್ತುವಿಗೇ ಜನ್ಮವನ್ನು ಒಪ್ಪುತ್ತಿರುತ್ತಾರೆ.ಅಜಾತವೂ ಅಮೃತವೂ ಆಗಿರುವ ಧಮ೯ವು ಹೇಗೆ ಮತ್ಯ೯ತ್ವವನ್ನು ಹೊಂದೀತು?ಅಮೃತವಾದದ್ದು ಮತ್ಯ೯ವಾಗಲಾರದು.ಹಾಗೆಯೇ ಮತ್ಯ೯ವಾದದ್ದು ಅಮೃತವಾಗಲರದು;ಸ್ವಭಾವವು ಬೇರೆಯಾಗುವುದೆಂಬುದು ಎಂದಿಗೂ ಆಗಲಾರದು.ಅಮೃತವಾದ ವಸ್ತುವು ಯಾವನ ಮತದಲ್ಲಿ ಮತ್ಯ೯ವಾಗುತ್ತದೆಯೋ ಅವನ ಮತದಲ್ಲಿ ಕೃತಕವಾಗಿ ಅಮೃತವಾಗಿರುವ ಅದು ಹೇಗೆ ತಾನೇ ನಿಶ್ಚಲವಾಗಿ ಉಳಿದುಕೊಂಡೀತು ?(ಪುಟ343) ೯)ಸಾಂಸಿದ್ಧಿಕ,ಸ್ವಾಭಾವಿಕ,ಸಹಜ,ಅಕೃತ-ಎಂಬುವು ಪ್ರಕೃತಿಯೆನಿಸುವುವು.ಆ ಪ್ರಕೃತಿಯು ಸ್ವಭಾವವನ್ನು ಎಂದಿಗೂ ಬಿಡುವುದಿಲ್ಲ.(ಪುಟ344) 10)ಎಲ್ಲ ಧಮ೯ರೂ ಸ್ವಭಾವದಿಂದಲೇ ಜರಾಮರಣ ರಹಿತರಾಗಿರುತ್ತಾರೆ.ಜರಮರಣವನ್ನು ಒಪ್ಪಿಕೊಂಡು ಅದೇ ಭಾವನೆಯಿಂದ ಚ್ಯುತರಾಗುತ್ತಿರುವರು.(ಪುಟ347) 11)ಯಾವನಮತದಲ್ಲಿ ಕಾರಣವೇ ಕಾಯ೯ವೋ,ಅವನ ಮತದಲ್ಲಿ ಕಾರಣವೇ ಹುಟ್ಟುತ್ತದೆ.ಹುಟ್ಟುವುದು ಹೇಗೆ ಅಜವಾದೀತು?ಭಿನ್ನವಾದರೆ ಅದು ನಿತ್ಯವಾದದ್ದೆಂದಾದರೂ ಹೇಗೆ? 12)ಕಾರಣಕ್ಕಿಂತ ಅನನ್ಯವಾಗಿರುವುದು ಅಜವು ಎನ್ನುವುದಾದರೆ ಹುಟ್ಟು ಕಾಯ೯ರೂಪದಿಂದ ಕಾರಣವು ಹೇಗೆತಾನೇ ದ್ರುವವಾದೀತು?(ಪುಟ351) 13)ಅಜದಿಂದ ಕಾಯ೯ವು ಯಾವನ ಮತದಲ್ಲಿ ಹುಟ್ಟುತ್ತದೆಯೋ ಅವನಿಗೆ ದೃಷ್ಟಾಂತವು ಇರುವುದಿಲ್ಲ.ಹುಟ್ಟುವದರಿಂದ ಅದು ಹುಟ್ಟುವುದಾದರೆ ವ್ಯವಸ್ಥೆಯಿಲ್ಲವೆಂದೇ ಆಗುತ್ತದೆ.(ಪುಟ353) 14)ಯಾವ ಹೇತುವಿಗೆ ಫಲವು ಆದಿಯೆಂದು ಒಪ್ಪಿರುವರೋ ಫಲಕ್ಕೂ ಹೇತುವು ಆದಿಯೆಂದು ಒಪ್ಪಿರುವರೋ ಅವರು ಹೇತುವಿಗೂ ಫಲಕ್ಕೂ ಅನಾದಿತ್ವವನ್ನು ಹೇಳುವುದು ಹೇಗೆ ಸರಿಯಾದೀತು?(ಪುಟ355) 15)ಹೇತುವಿಗೆ ಆದಿಯು ಫಲವೆಂದೂ ಹೇತುವು ಫಲಕ್ಕೆ ಆದಿಯೆಂದೂ ಯಾರಮತವಿರುವುದೋ ಅವರಿಗೆ ಪುತ್ರನಿಂದ ಪಿತೃವಿಗೆ ಜನ್ಮವೆಂಬುದು ಹೇಗೋ ಹಾಗೆ ಜನ್ಮವೆಂಬುದು ಯುಕ್ತವಾದೀತು.(ಪುಟ357) 16)ಹೇತು ಫಲಗಳಗಿಗೆ ಉತ್ಪತ್ತಿಯಾಗುವಲ್ಲಿ ನೀನು ಕ್ರಮವನ್ನು ಒಪ್ಪಬೇಕು.ಏಕೆಂದರೆ ಒಂದೇ ಕಾಲದಲ್ಲಿ ಹುಟ್ಟುವುದಾದರೆ ಕೋಡುಗಳಂತೆ ಪರಸ್ಪರ ಸಂಬಂಧವೇ ಇಲ್ಲದಂತೆ ಆಗುವುದು.(ಪುಟ357) 17)ನಿನ್ನ ಮನದಲ್ಲಿ ಫಲವೊಂದು ಹುಟ್ಟುವುದಾದರ್ರೆ ಹೇತುವು ಸಿದ್ದವಾಗುವುದಿಲ್ಲ.ತಾನೇ ಹುಟ್ಟದೆ ಇರುವ ಹೇತು ಹೇಗೆ ತಾನೇ ಫಲವನ್ನುಂಟು ಮಾಡೀತು?(ಪುಟ358) 18)ಹೇತುವಿಗೆ ಫಲದಿಂದ ಸಿದ್ಧಿ,ಫಲಕ್ಕೆ ಸಿದ್ಧಿಯೂ ಹೇತುವಿನಿಂದಲೇ-ಎನ್ನುವೆಯಾದರೆ ಇವೆರಡರಲ್ಲಿ ಯಾವುದು ಮೊದಲು ಹುಟ್ಟಿತು,ಮೊದಲು ಹುಟ್ಟಿದ್ದರಿಂದಲ್ಲವೆ ಇನ್ನೊದು ಸಿದ್ಧವಾಗಬೇಕು.(ಪುಟ358) 1೯)ಅಶಕ್ತಿ,ಅಪರಿಜ್ಞಾನ ಅಥವಾ ಕ್ರಮಕೋಪ ಇವುಗಳೊಳಗೆ ಒಂದು ಅಂಟುತ್ತದೆ. ಈ ರೀತಿತಲ್ಲಿ ಸವ೯ಪ್ರಕಾರದಲ್ಲಿಯೂ ಬುದ್ದರು ಅಜಾತಿಯನ್ನೇ ಬೆಳಕಿಗೆ ಹಿಡಿದಂತಾಗುವರು.(35೯) 20)ಬೀಜಾಂಕುರವೆಂಬ ಹೆಸರಿನ ದೃಷ್ಟಾಂತವುಯಾವಗಲೂ ಸಧ್ಯಕ್ಕೆ ಸಮವಾಗಿರುತ್ತದೆ.ಸಾದ್ಯಸಮವಾಗಿರುವ ಹೇತುವು ಸಾಧ್ಯವನ್ನು ಸಿದ್ಧಪಡಿಸುವುದಕ್ಕೆ ಸರಿಯಾಗಲಾರದಷ್ಟೆ?(ಪದುಟ360) 21) ಹಿಂದಿನದು ಯಾವುದು,ಆಮೇಲೆ ಉಂಟಾಗುವುದು ಯಾವುದು-ಎಂಬುದನ್ನು ಅರಿಯದಿರುವುದು ಅಜಾತಿಯನ್ನೇ ಬೆಳಕಿಗೆ ಹಿಡಿಯುತ್ತದೆ.ಒಂದು ಧಮ೯ವು ಹುಟ್ಟುತ್ತಿರುವಲ್ಲಿ ಅದರ ಹಿಂದಿನದು ತಿಳಿಯಬರಲಿಲ್ಲವೆಂಬುದು ಹೇಗೆ ಸರಿ?(ಪುಟ363) 22)ಯಾವುದೊಂದು ವಸ್ತುವು ತಾನೆ ಆಗಲಿ,ಮತ್ತೊಂದರಿಂದಾಗಲಿ ಹುಟ್ಟುವುದಿಲ್ಲ. ಸತ್ತು,ಅಸತ್ತು,ಸದಸತ್ತು-ಹೇಗಿದ್ದರೂ ಯಾವವಸ್ತುವೂ ಹುಟ್ಟುವುದಿಲ್ಲ.(ಪುಟ363) 23)ಅನಾದಿಯಾದಫಲದಿಂದ ಅಥವಾ ಅನಾದಿಯಾಗಿರುವುದರಿಂದ ಹೇತುವು ಹುಟ್ಟುವಂತಿಲ್ಲ.ಫಲವೂ ಸ್ವಭಾವದಿಂದ ಹುಟ್ಟುವಂತಿಲ್ಲ.ಯಾವುದಕ್ಕೆ ಆದಿಯಿಲ್ಲವೋ ಅದಕ್ಕೆ ಹುಟ್ಟುವುದೆಂಬುದು ಇರಲಾರದು.(ಪುಟ 371) 24)ಪ್ರಜ್ಞಪ್ತಿಯು ಸನಿಮಿತ್ತವಾಗಿರಬೇಕು.ಇಲ್ಲದಿದ್ದರೆ ದ್ವಯವು ಇಲ್ಲವಾಗುವುದು.ಸಂಕ್ಲೇಶವು ತೋರಿಬರುತ್ತಿರುವುದರಿಂದಲೂ ಪರತಂತ್ರವು ಇದೆ ಎಂಬುದು ನಮ್ಮ ಅಭಿಪ್ರಾಯ.(ಪುಟ373) 25)ಪ್ರಜ್ಞಪ್ತಿಗೆ ನ್ಮಿತ್ತವಿರಬೇಕೆಂಬುದನ್ನು ಯುಕ್ತಿಯನ್ನು ಕಂಡು ಒಪ್ಪಿರುತ್ತೀರಿ.ನಿಮಿತ್ತವು ನಿಮಿತ್ತವಲ್ಲವೆಂಬ್ಯದನ್ನು ನಾವು ಭೂತದಶ೯ನದಿಂದ ಒಪ್ಪಿರುತ್ತೇವೆ.(ಪುಟ376) 26)ಚಿತ್ತವು ಪದಾಥ೯ವನ್ನು ಮುಟ್ಟುವುದಿಲ್ಲ.ಅಂತೆಯೇ ಅಥಾ೯ಭಾಸವನ್ನೂ ಮುಟ್ಟುವುದಿಲ್ಲ.ಏಕೆಂದರೆ ಪದಾಥ೯ವು ಅಭೂತವೇ ಆಗಿರುತ್ತದೆ.ಆದ್ದರಿಂದ ಅದಕ್ಕಿಂತ ಬೇರೆಯಾಗಿ ಅಥಾ೯ಭಾಸವೂ ಇರುವುದಿಲ್ಲ.(ಪುಟ 26) 27)ಚಿತ್ತವು ಮೂರು ಹಾದಿಗಳಲ್ಲೂ ನಿಮಿತ್ತವನ್ನು ಯಾವಾಗಲೂ ಮುಟ್ಟುವುದೇ ಇಲ್ಲ.ಅದಕ್ಕೆ ನಿಮಿತ್ತವಿಲ್ಲದೆ ವಿಪಯಾ೯ಸವು ಹೇಗೆ ಆದೀತು?(ಪುಟ383) 28)ಆದ್ದರಿಂದ ಚಿತ್ತವು ಹುಟ್ಟುವುದಿಲ.ಚಿತ್ತದೃಶ್ಯವೂ ಹುಟ್ಟುವುದಿಲ್ಲ;ಅದರ ಹುಟ್ಟನ್ನು ಯಾರು ಕಾಣುವರೋ ಅವರು ಆಕಾಶದಲ್ಲಿಯೆ ಹೆಜ್ಜೆಯ ಗುರುತನ್ನು ಕಾಣುವರು.(ಪುಟ385) 2೯)ಹುಟ್ಟದೆ ಇದ್ದುಕೊಂಡಿರುವುದೇ ಹುಟ್ಟುತ್ತಿರುವುದಷ್ಟೆ?ಆದ್ದರಿಂದ ಅಜಾತಿಯು ಪ್ರಕೃತಿಯು.ಪ್ರಕೃತಿಯು ಬೇಪ೯ಡುವುದೆಂಬುದು ಹೇಗೂ ಆಗಲೇಆರದು.(ಪುಟ401) 30)ಅನಾದಿಯಾದ ಸಂಸಾರವು ಅಂತವುಳ್ಳದ್ದೆಂಬುದು ಸಿದ್ಧವಾಗಲಾರದು.ಆದಿಯುಳ್ಳ ಮೋಕ್ಷವು ಅನಂತವೆಂಬುದೂ ಆಗಲಾರದು.(ಪುಟ402) 31-32)ಮೊದಲಲ್ಲಿಯೂ ಕೊನೆಯಲ್ಲಿಯೂ ಯಾವುದು ಇರುವುದಿಲ್ಲವೋ ಅದು ಈಗಿನ ಕಾಲ ದಲ್ಲಿಯೂ ಹಾಗೆಯೇ ಇರುವುದಿಲ್ಲ.ಹುಸಿಯಾಗಿರುವುದಕ್ಕೆ ಸಮಾನವಾಗಿದ್ದುಕೊಂಡೇ ಪದಾಥ೯ಗಳು ಹುಸಿಯಲ್ಲವೆಂಬಂತೆ ಕಾಣುತ್ತಿರುವುವು.ಅದಕ್ಕೆ ಪ್ರಯೋಜನವಿದೆ ಎಂಬುದು ಸ್ವಪ್ನದಲ್ಲಿ ವಿರುದ್ಧಾಭಿಪ್ರಾಯಕ್ಕೆ ಎಡೆಯಾಗುತ್ತದೆ.ಅದ್ದರಿಂದ ಮೊದಲು ಕೊನೆಗಳಿರುವವಾದ್ದರಿಂದ ಅವು ಮಿಥ್ಯೆಯೇ ಎನಿಸುವವು.(ಪುಟ404) 33)ಕನಸಿನಲ್ಲಿ ಕಾಣುವ ಎಲ್ಲ ಧಮ೯ಗಳೂ ಸುಳ್ಳೇ.ಏಕೆಂದರೆ ಅವು ಶರೀರದ ಒಳಗೆ ಕಂಡುಬರುತ್ತವೆ.ಸಂಕುಚಿತವಾದ ಈ ಪ್ರದೇಶದಲ್ಲಿ ಭೂತಗಳನ್ನು ಕಾಣುವುದೆಲ್ಲಿ ಬಂತು?(ಪುಟ405) 34)ಹೋಗಿ ಪದಾಥ೯ಗಳನ್ನು ನೋಡುತ್ತಾರೆಂಬುದು ಯುಕ್ತವಲ್ಲ.ಏಕೆಂದರೆ ಅಲ್ಲಿ ಹೋಗುವುದಕ್ಕೆ ಬೇಕಾದಷ್ಟು ಕಾಲದ ನಿಯಮವಿರುವುದಿಲ್ಲ ಮತ್ತು ಎಚ್ಚೆತ್ತವನು ಯಾವನೂ ಆ ದೇಶದಲ್ಲಿರುವುದಿಲ್ಲ. 35)ಮಿತ್ರರೇ ಮುಂತಾದವರೊಡನೆ ಆಲೋಚನೆ ಮಾಡಿ ಎಚ್ಚೆತ್ತವನು ಅದನ್ನು ನಂಬುವುದಿಲ್ಲ ಮತ್ತು ಯಾವುದನ್ನಾದರೂ ತೆಗೆದುಕೊಂಡಿದ್ದರೆ ಅದನ್ನು ಎಚ್ಚೆತ್ತವನು ಕಾಣುವುದಿಲ್ಲ.(ಪುಟ406) 36)ಕನಸಿನಲ್ಲಿರುವ ಶರೀರವು ಅಸತ್ಯವೇ.ಏಕೆಂದರೆ ಅದಕ್ಕಿಂತ ಬೇರೆಯಾದ ಮತ್ತೊಂದು ದೇಹವು ಕಂಡು ಬರುತ್ತದೆ.ಶರೀರವು ಹೇಗೋ ಹಾಗೆ ಚಿತ್ತದೃಶ್ಯವಾದದ್ದೆಲ್ಲವೂ ಅಸತ್ಯವೇ.(ಪುಟ407) 37)ಜಾಗರಿತದಂತೆಯೇ ಕಾಣಬರುವುದರಿಂದ ಸ್ವಪ್ನವು ಅದನ್ನೇ ಹೇತುವಾಗಿ ಉಳ್ಳದ್ದು ಎನಿಸುವುದು.ಅದನ್ನೇ ಹೇತುವಾಗಿ ಉಳ್ಳದ್ದಾಗಿರುವುದರಿಂದ ಅವನಿಗೇ ಎಚ್ಚರವು ಇರತಕ್ಕದ್ದು ಎನಿಸುತ್ತದೆ.(ಪುಟ40೯) 38)ಹುಟ್ಟುವುದೇ ಅಪ್ರಸಿದ್ಧವಾಗಿರುವುದರಿಂದ ಎಲ್ಲವೂ ಅಜವೆಂದು ಹೇಳಲ್ಪಟ್ಟಿರುತ್ತದೆ.ನಿಜವಾಗಿರುವುದರಿಂದ ಇಲ್ಲದ್ದು ಹುಟ್ಟುವುದೆಂಬುದು ಹೇಗೂ ಆಗಲಾರದು.(ಪುಟ410) 3೯)ಎಚ್ಚರದಲ್ಲಿ ಅಸತ್ತಾಗಿರುವುದನ್ನು ಕಂಡು ತನ್ಮಯನಾಗಿ ಕನಸಿನಲ್ಲಿಯೂ ಅದನ್ನು ಕಾಣುತ್ತಾನೆ.ಕನಸಿನಲ್ಲಿಯೂ ಅಸತ್ತಾದುದನ್ನು ಕಂಡು ಎಚ್ಚೆತ್ತವನು ಅದನ್ನು ಕಾಣುವುದಿಲ್ಲ.(ಪುಟ412) 40)ಅಸತ್ತಾದ ಹೇತುವಿರುವ ಅಸತ್ತು ಇಲ್ಲ,ಅಸತ್ತಾದ ಹೇತುವುಳ್ಳ ಸತ್ತೂ ಇರುವುದಿಲ್ಲ.ಸತ್ತು ಹೇತುವಾಗಿರುವ ಸತ್ತೂ ಇರುವುದಿಲ್ಲ.ಸತ್ತು ಹೇತುವಾಗಿರುವ ಅಸತ್ತು ಎಲ್ಲಿಯದು?(413) 41)ಹೇಗೆ ಎಚ್ಚರದಲ್ಲಿ ವಿಪಯಾ೯ಸದಿಂದ ಅಚಿಂತ್ಯವಾದ ಧಮ೯ಗಳನ್ನು ನಿಜವಾಗಿರುವಂತೆ ಮುಟ್ಟುತ್ತಿರುವುನೋ ಹಾಗೆಯೇ ಸ್ವಪ್ನದಲ್ಲಿಯೂ ವಿಪಯಾ೯ಸದಿಂದ ದಮ೯ಗಳನ್ನು ಅಲ್ಲಿಯೇ ಕಾಣುತ್ತಿರುವನು. (ಪುಟ 415) 42)ತೋರುವುದರಿಂದಲೂ ಆಚರಣೆಯಿಂದಲೂ ವಸ್ತುವಿದೆ ಎನ್ನುತ್ತಿರುವವರಿಗಾಗಿ,ಯಾವಾಗಲೂ ಅಜಾತಿಗೆ ಹೆದರುತ್ತಿರುವವರಿಗಾಗಿ ಬುದ್ಧರಿಂದ ಜಾತಿಯು ಉಪದಿಷ್ಟವಾಗಿರುತ್ತದೆ.(ಪುಟ 416) 43)ವಸ್ತುವು ತೋರುತ್ತಿದೆ ಎನ್ನುವ ಕರಣದಿಂದ ಅಜಾತಿಗೆ ಅಂಜಿ ಯಾರು ಅದನ್ನು ಬಿಟ್ಟಿರುವರೋ,ಅವರಿಗೆ ಜನ್ಮವನ್ನೊಪ್ಪಿರುವ ದೋಷಗಳು ಸಿದ್ಧವಾಗುವುದಿಲ್ಲ.ದೋಷವೂ ಸ್ವಲ್ಪವೆ ಆಗುವುದು.(ಪುಟ41೯) 44)ತೋರುತ್ತಿರುವುದರಿಂದಲೂ ಹಾಗೆಯೇ ಆಚರಣೆಯಾಗುತ್ತಿರುವುದರಿಂದಲೂ ಮಾಯಾ ಹಸ್ತಿಯು ಹೇಗೆ ಆನೆ ಎನಿಸುವುದೋ ಹಾಗೆಯೇ ತೋರುತ್ತಿರುವುದರಿಂದಲೂ ಧಮಾಚರಣೆಯಿಂದಲೂ ಬಾಹ್ಯವಸ್ತುವು ಇದೆ ಎನಿಸುತ್ತದೆ.(ಪುಟ420) 45)ಜಾತ್ಯಾಭಾಸ,ಚಲಾಭಾಸ,ಹಾಗೂ ವಸ್ತ್ವಾಭಾಸವು ,ಆದರೂ ವಿಜ್ಞಾನವು,ಅಜವು,ಅಚಲವು,ಅವಸ್ತು, ಹಾಗೂ ಶಾಂತವು,ಅದ್ವಯವು.(ಪುಟ 421) 46)ಹೀಗೆ ಚಿತ್ತವು ಹುಟ್ಟಿರುವುದಿಲ್ಲ,ಹೀಗೆ ಧಮ೯ರುಗಳು ಅಜರೆನಿಸುವರು.ಹೀಗೆಂದೇ ಅರಿತುಕೊಂಡವರು ವಿಪರೀತ ಜ್ಞಾನಕ್ಕೆ ಬೀಳದೆ ಇರುವರು.(ಪುಟ 423) 47)ನೆಟ್ಟಗಿರುವುದು ,ಸೊಟ್ಟಗಿರುವುದು-ಮುಂತಾದ್ದರಂತೆ ತೋರಿಕೊಳ್ಳುವುದು ಹೇಗೆ ಕೊಳ್ಳಿಯ ತಿರುಗಿವಿಕೆಯೋ,ಅರಿಯುವಿಕೆ,ಅರಿಯುವವನು-ಎಂಬರೂಪದಲ್ಲಿ ತೋರುವುದೊ ಹಾಗೆಯೇ ವಿಜ್ಞಾನದ ಚಲನೆಯೇ (ಪುಟ 425) 48)ಅಲುಗಾಡದೆ ಇರುವ ಕೊಳ್ಳಿಯು ಹೇಗೆ ಬೇರೆಯ ರೂಪದಿಂದ ತೋರಿಕೊಳ್ಳದೆ ಅಜವಾಗಿರುವುದೋ,ಹಾಗೆಯೇ ಅಲುಗಾಡದೆ ಇರುವ ವಿಜ್ಞಾನವು ಬೇರೆಯ ರೂಪದಿಂದ ತೋರಿಕೊಳ್ಳದೆ ಅಜವಾಗಿರುವುದು.(ಪುಟ426) 4೯-50)ಕೊಳ್ಳಿಯು ಸುತ್ತುತ್ತಿರುವಾಗ ತೋರಿಕೆಗಳು ಮತ್ತೊಂದು ಕಡೆಯಿಂದೇನೂ ಬಂದಿರುವುದಿಲ್ಲ.ಸುತ್ತದೆ ಇರುವಾಗ ಅವು ಅದನ್ನು ಬಿಟ್ಟು ಮತ್ತೊಂದುಕಡೆಗೆ ಹೋಗುವುದೂ ಇಲ್ಲ. ಅಥವಾ ಕೊಳ್ಳಿಯನ್ನು ಪ್ರವೇಶಿಸುವುದೂ ಇಲ್ಲ.ಅವು ಕೊಳ್ಳಿಯಿಂದ ಹೊರಟು ಬಂದಿರುವುದೂ ಇಲ್ಲ.ಏಕೆಂದರೆ ಅವು ನಿಜವಾದ ವಸ್ತುಗಳಲ್ಲ.ವಿಜ್ಞಾನದ ವಿಷಯದಲ್ಲಿಯೂ ಆ ತೋರಿಕೆಗಳು ಹೀಗೆಯೇ ಇರಬೇಕು.ಏಕೆಂದರೆ ಅವು ತೋರಿಕೆಯೆಂಬುದು ಸಮಾನವಾಗಿರುತ್ತದೆ.(ಪುಟ427) 51-52)ವಿಜ್ಞಾನವು ಅಲುಗಾಡುತ್ತಿರುವಾಗ ತೋರಿಕೆಗಳು ಮತ್ತೊಂದರಿಂದ ಬಂದಿರುವುದಿಲ್ಲ.ಅಲುಗಾಡದೆ ಇರುವಾಗ ಅ ವಿಜ್ಞಾನದಿಂದ ಬೇರೊಂದು ಕಡೆಗೆ ಹೋಗುವುದೂ ಇಲ್ಲ,ಅವು ವಿಜ್ಞಾನವನ್ನು ಸೇರಿಕೊಳ್ಳುವುದೂ ಇಲ್ಲ.ಅವು ವಿಜ್ಞಾನದಿಂದ ಹೊರಟು ಬಂದಿರುವುದಿಲ್ಲ.ಏಕೆಂದರೆ ಅವಕ್ಕೆ ವಸ್ತು ಸ್ವಬಾವವೇ ಇಲ್ಲ.ಕಾಯ೯ಕಾರಣ ಭಾವವು ಇಲ್ಲದ್ದರಿಂದ ಅವು ಎಂದೆಂದಿಗೂ ಅಚಿಂತ್ಯಗಳಾಗಿಯೇ ಇರುತ್ತವೆ.(ವಿಜ್ಞಾನ ಎಂದರೆ ಆತ್ಮ)(427) 53)ದ್ರವ್ಯವು ದ್ರವ್ಯಕ್ಕೆ ಹೇತುವಾದೀತು.ಒಂದು ಮತ್ತೊಂದಕ್ಕೆ ಹೇತುವಾದೀತು.ಆದರೆ ಧಮ೯ರುಗಳು ದ್ರವ್ಯವೆಂಬುದಾಗಲಿ ಮತ್ತೊಂದಕ್ಕಿಂತ ಬೇರೆ ಎಂಬುದಾಗಲಿ ಹೊಂದುವುದಿಲ್ಲ.(ಪುಟ42೯) 54)ಹೀಗೆ ಧಮ೯ಗಳು ಚಿತ್ತದಿಂದ ಹುಟ್ಟಿರುವುವುದಿಲ್ಲ. ಚಿತ್ತವೂ ಧಮ೯ದಿಂದ ಹುಟ್ಟಿರುವುದಿಲ್ಲ.ಈ ರೀತಿಯಲ್ಲಿ ವಿವೇಕಿಗಳಾದವರು ಹೇತು ಫಲಗಳು ಹುಟ್ಟಿಯೇ ಇಲ್ಲವೆಂಬ ಮತವನ್ನು ಪ್ರವೇಶಿಸುವರು.(ಪುಟ431) 55)ಹೇತು ಫಲಗಳ ಆವೇಶವಿರುವವರೆಗೆ ಹೇತು ಫಲಗಳು ಹುಟ್ಟುತ್ತಿರುವುವು.ಹೇತುಫಲಗಳ ಆವೇಶವು ಕ್ಷಯವಾದರೆ ಹೇತು ಫಲಗಳು ಹುಟ್ಟುವುದಿಲ್ಲ.(ಪುಟ 55) 56)ಹೇತು ಫಲಾವೇಶವು ಇರುವವರೆಗೆ ಸಂಸಾರವು ಹರಡಿಕೊಂಡಿರುವುದು.ಹೇತು ಫಲಾವೇಶವು ಸವೆದ ಮೇಲೆಸಂಸಾರವನ್ನು ಪಡೆಯದೆ ಇರುತ್ತಾನೆ.ಏಕೆಂದರೆ ಆಗ ಸಂಸಾರಕ್ಕೆ ಕಾರಣವಾದ ಧಮಾ೯ಧಮ೯ಗಳೇ ಇರುವುದಿಲ್ಲ.(ಪುಟ433) 57)ಸಂವೃತಿಯ ದೃಷ್ಟಿಯಿಂದ ಎಲ್ಲವೂ ಹುಟ್ಟುತ್ತದೆ.ಆದ್ದರಿಂದ ಶಾಶ್ವತವೆಂಬುದೇ ಇಲ್ಲ.ಪರಮಾಥ೯ ದೃಷ್ಟಿಯಿಂದ ಎಲ್ಲವೂ ಅಜವೇ,ಅದರಿಂದ ಉಚ್ಛೇದವೆಂದುದೇ ಇಲ್ಲ.(ಪುಟ434) 58)ಯಾವ ಧಮ೯ಗಳು ಹೀಗೆ ಹುಟ್ಟುವವೋ ಅವು ನಿಜವಾಗಿ ಹುಟ್ಟುವುದಿಲ್ಲ.ಅವುಗಳ ಜನ್ಮವು ಮಾಯೋಪಮವು.ಆ ಮಾಯೆಯೂ ಇರುವುದಿಲ್ಲ.(438) 5೯)ಹೇಗೆ ಮಾಯಾಮಯವಾದ ಬೀಜದಿಂದ ಮಾಯಾಮಯವಾದ ಮೊಳಕೆಯು ಹುಟ್ಟುವುದೋ,ಅದು ಹೇಗೆ ನಿತ್ಯವೂ ಅಲ್ಲವೋ ನಾಶವಾಗತಕ್ಕದ್ದೂ ಅಲ್ಲವೊ ಹಾಗೆಯೇ ಧಮ೯ಗಳಿಗೂ ಹೊಂದಿಸಿ ತಿಳಿದುಕೊಳ್ಳಬೇಕು.(ಪುಟ438) 60)ಅಜರಾದ ಯಾವ ಧಮ೯ಗಳಲ್ಲಿಯೂ ಶಾಶ್ವತ ,ಅಶಾಶ್ವತ ಎಂಬ ಮಾತಿಲ್ಲ.ಎಲ್ಲಿ ವಣ೯ಗಳಿರುವುದಿಲ್ಲವೋ ಅಲ್ಲಿ ವಿವೇಕವನ್ನು ಹೇಳುವುದಿಲ್ಲ.(ಪುಟ43೯) 61-62)(ಗ್ರಂಥದಲ್ಲಿ ಅಥ೯ವನ್ನು ಕೊಟ್ಟಿರುವುದಿಲ್ಲ) 63-66)ಸ್ವಪ್ನವನ್ನು ಕಾಣುವಾತನು ಸ್ವಪ್ನದಲ್ಲಿ ಓಡಾಡುತ್ತಾ ಹತ್ತು ದಿಕ್ಕುಗಳಲ್ಲಿಯೂ ಇರುವ ಅಂಡಜವನ್ನಾಗಲೀ ಸ್ವೇದಜವನ್ನಾಗಲೀ ಯಾವ ಯಾವ ಜೀವರುಗಳನ್ನು ಯಾವಾಗಲೂ ಕಾಣುತ್ತಿರುವನೋ ಅವು ಕನಸು ಕಾಣುವವನ ಚಿತ್ತಕ್ಕೇ ದೃಶ್ಯವಾಗಿರುತ್ತದೆ.ಅದಕ್ಕಿಂತ ಬೇರೆಯಾಗಿ ಇರುವುದಿಲ್ಲ.ಈ ಸ್ವಪ್ನದಶಿ೯ಯ ಚಿತ್ತವೂ ಅವನಿಗೇ ದೃಶ್ಯವಾಗಿರುತ್ತದೆ. ಎಚ್ಚರದಲ್ಲಿ ಓಡಾಡುತ್ತಿರುವವನು ಎಚ್ಚರದಲ್ಲಿ ಹತ್ತು ದಿಕ್ಕುಗಳಲ್ಲಿಯೂ ಅಂಡಜಗಳನ್ನಾಗಲೀ ಸ್ವೇದಜಗಳನ್ನಾಗಲೀ ಯಾವ ಯಾವ ಜೀವರನ್ನು ಯಾವಾಗ ಕಾಣುತ್ತಿರುವನೋ ಅವು ಎಚ್ಚರವಾಗಿರುವ ಚಿತ್ತಕ್ಕೇ ದೃಶ್ಯವಾಗಿರುವವು.ಅದಕ್ಕಿಂತ ಬೇರೆಯಾಗಿರುವುದಿಲ್ಲ.ಹಾಗೆಯೇ ಈ ಎಚ್ಚೆತ್ತವನ ಚಿತ್ತವೂ ಅವನಿಗೆ ದೃಶ್ಯವಾಗಿರುವುದೆಂದು ಒಪ್ಪಬೇಕು.(ಪುಟ 442) 67)ಅವೆರಡೂ ಒಂದಕ್ಕೊಂದು ದೃಶ್ಯವಾಗಿವೆ. ಇರುವುದು ಯಾವುದು ಎಂಬಿದನ್ನು ನಾವು ಹೇಳುವುದಿಲ್ಲ. ಎರಡೂ ಲಕ್ಷಣಾ ಶೂನ್ಯ.ಆ ಬುದ್ಧಿಯಿಂದಲೇ ಅರಿಯಲ್ಪಡುತ್ತದೆ.(443) 68-70)ಕನಸಿನಿಂದಾಗಿರುವ ಜೀವನು ಹೇಗೆ ಹುಟ್ಟಿ ಸಾಯುವನೋ ಅದರಂತೆ ಈ ಜೀವರುಗಳೆಲ್ಲರೂ ಉಂಟಾಗಿ ಇಲ್ಲವಾಗುವರು.ಮಾಯಾಮಯನಾದ ಜೀವನು ಹೇಗೆ ಹುಟ್ಟಿ ಸಾಯುವನೋ ಹಾಗೆಯೇ ಈ ಜೀವರುಗಳೆಲ್ಲರೂ ಉಂಟಾಗಿ ಇಲ್ಲವಾಗುವರು.ಹೇಗೆ ನಿಮಿ೯ತಕ ಜೀವನು ಹುಟ್ಟಿ ಸಾಯುವನೋ ಹಾಗೆಯೇ ಜೀವರುಗಳೆಲ್ಲರೂ ಉಂಟಾಗಿ ಇಲ್ಲವಾಗುವರು.(ಪುಟ445) 71)ಯಾವಜೀವನೂ ಹುಟ್ಟಿರುವುದಿಲ್ಲ.ಇವನಿಗೆ ಹುಟ್ಟುವ ಕಾರಣವೂ ಇರುವುದಿಲ್ಲ.ಎಲ್ಲಿಯಾದರೂ ಒಂದಿಷ್ಟೂ ಹುಟ್ಟುವುದಿಲ್ಲವೋ ಅದೇ ಉತ್ತಮ ಸತ್ಯವು.(ಪುಟ445) 72)ಗ್ರಾಹ್ಯ ಗ್ರಾಹಕ ರೂಪವಾದ ಈ ದ್ವೈತವು ಚಿತ್ತದ ಸ್ಪಂದನೆಯೇ.ಚಿತ್ತವು ನಿವಿ೯ಷಯವಾಗಿದೆ.ಅದರಿಂದ ಅಸಂಗವೆಂದೇ ಹೇಳುತ್ತಾರೆ.(ಪುಟ447) 73) ಯಾವುದು ಕಲ್ಪಿತ ವೃತ್ತಿಯಿಂದ ಇರುತ್ತದೆಯೋ ಅದು ಪರಮಾಥ೯ವಾಗಿರುವುದಿಲ್ಲ.ಪರತಂತ್ರಾಭಿ ಸಂವೃತ್ತಿಯಿಂದ ಇದ್ದೀತು.ಪರಮಾಥವಾಗಿ ಇರುವುದೇ ಇಲ್ಲ.(448) 74)ಅಜನೆಂಬುದೂ ಕಲ್ಪಿತ ಸಂವೃತ್ತಿಯಿಂದಲೇ;ಪರಮಾಥ೯ ದೃಷ್ಟಿಯಿಂದ ಅಜನೂ ಅಲ್ಲ.ಪರತಂತ್ರದ ಅಭಿನಿಷ್ಪತ್ತಿಯಿಂದ ಅವನು ಸಂವೃತಿಯಿಂದಲೇ ಹುಟ್ಟುತ್ತಿರುತ್ತಾನೆ.(ಪುಟ44೯) 75)ಇಲ್ಲದ್ದರಲ್ಲಿ ಅಭಿನಿವೇಶವಿರುತ್ತದೆಯೇ ಹೊರತು ಅಲ್ಲಿ ದ್ವೈತವಿರುವುದಿಲ್ಲ.ದ್ವಯವಿಲ್ಲವೆಂಬುದನ್ನು ಅರಿತಕೂಂಡರೇ ನಿಮಿತ್ತವಿಲ್ಲದಿರುವುದರಿಂದ ಹುಟ್ಟುವುದಿಲ್ಲ.(ಪುಟ453) 76)ಯಾವಾಗ ಉತ್ತಮ,ಅಧಮ,ಮಧ್ಯಮ-ಎಂಬ ಹೇತುಗಳು ಇರುವುದಿಲ್ಲವೋ ಆಗ ಚಿತ್ತವು ಹುಟ್ಟುವುದಿಲ್ಲ. ಹೇತುವಿಲ್ಲದಿದ್ದಾ ಗ ಫಲವೆಲ್ಲಿಂದ ಬರಬೇಕು.(ಪುಟ454) 77)ಅನಿಮಿತ್ತವಾದ ಚಿತ್ತವು ಹುಟ್ಟುವುದೆಂಬುದಿದೆಯಲ್ಲ,ಅದು ಅಜಾತವಾಗಿಯೇ ಎಲ್ಲವೂ ಆಗಿರುವ ಚಿತ್ತದ ಸಮವಾದ ಅದ್ವಯವಾದ ಅನುತ್ಪತ್ತಿಯು.ಏಕೆಂದರೆ ಅದು ಚಿತ್ತದೃಶ್ಯವೇ(ಪುಟ455) 78) ನಿಮಿತ್ತವಿಲ್ಲದಿರುವುದೇ ಸತ್ಯವೆಂದರಿತುಕೊಂಡರೆ ಬೇರೆಯಾಗಿರುವ ಹೇತುವನ್ನು ಸ್ವೀಕರಿಸದೆ ಶೋಕವಿಲ್ಲದ ,ಕಾಮವಿಲ್ಲದ ಅಭಯವಾದ ಸ್ಥಾನವನ್ನು ಸೇರುತ್ತಾನೆ.(ಪುಟ456) 7೯)ಅಭೂತಾಭಿನಿವೇಶದಿಂದಲೇ ಅದಕ್ಕೆ ಸಮಾನವಾದದ್ದರಲ್ಲಿ ಪ್ರವತಿ೯ಸುತ್ತಾನೆ.ವಸ್ತುವಿಲ್ಲವೆಂದು ಅರಿತಕೂಡಲೆ ನಿಸ್ಸಂಗನಾಗಿ ಹಿಂಜರಿಯುತ್ತಾನೆ.(ಪುಟ 457) 80)ಹಿಂತಿರುಗಿ ಮತ್ತೆ ಮುಂದುವರಿಯದೆ ಇರುವ ಚಿತ್ತದ ಆಗಿನ ಸ್ಥಿತಿಯು ನಿಶ್ಚಲವಾಗಿಯೇ ಇರುವುದು.ಇದು ಜ್ಞಾನಿಗಳಿಗೆ ವಿಷಯವಾಗಿರುವುದು,ಸಾಮ್ಯವು,ಅಜವು,ಅದ್ವಯವು.(ಪುಟ458) 81)ಹುಟ್ಟಿಲ್ಲದ್ದು,ನಿದ್ರೆಯಿಲ್ಲದ್ದು,ಕನಸಿಲ್ಲದ್ದು,ತಾನೇ ಬೆಳಗುವಂಥದ್ದು,ಈ ಧಮ೯ವು ಧಾತು ಸ್ವಭಾವದಿಂದ ಒಂದೇ ಸಮನೆ ಬೆಳಗುತ್ತಿರುವುದು.(ಪುಟ45೯) 82)ಯಾವುದಾದರೊಂದು ಧಮ೯ವನ್ನು ಗ್ರಹಿಸುವುದರಿಂದ ಈ ಭಗವಂತನು ಯಾವಾಗಲೂ ಸುಲಭವಾಗಿ ಆವೃತನಾಗುತ್ತಾನೆ.ಯಾವಾಗಲೂ ಕಷ್ಟದಿಂದ ತೋರಿಕೊಳ್ಳುತ್ತಾನೆ.(ಪುಟ462) 83)ಇದ್ದಾನೆ,ಇಲ್ಲ,ಇದ್ದೂ ಇಲ್ಲ-ಎಂದೋ ;ಇಲ್ಲವೆ ಇಲ್ಲ ಎಂದೋ ಚಲ,ಸ್ಥಿರ,ಉಭಯ,ಅಭಾವ-ಇವುಗಳಿಂದ ಬಾಲಿಶನಾದವನು ಮುಚ್ಚುತ್ತಲೇ ಇರುವನು.(ಪುಟ464) 84)ಯಾವ ನಲ್ಕು ಕೋಟಿಗಳನ್ನು ಗ್ರಹಿಸುತ್ತಿರುವುದರಿಂದ ಭಗವಂತನು ಯಾವಗಲೂ ಆವೃತನಾಗಿರುವನೋ,ಇವುಗಳ ಸೋಂಕಿಲ್ಲದೆಯೇ ಇರುವ ಭಗವಂತನನ್ನು ಕಂಡಿರುವವನೆ ಸವ೯ದಶಿ೯ಯು.(ಪುಟ468) 85)ಪೂಣ೯ ಸವ೯ಜ್ಞತೆಯನ್ನೂ ಆದಿಮಧ್ಯಾಂತಗಳನ್ನೂ ಪಡೆಯದ ಅದ್ವಯ ಬ್ರಾಹ್ಮಣ್ಯವನ್ನೂ ಪಡೆದುಕೊಂಡಿರುವುದರಿಂದ ಇನ್ನು ಮುಂದೆ ಏತಕ್ಕೆ ಕಮ೯ಗಳನ್ನು ಮಾಡಿಯಾನು?(ಪುಟ470) 86)ವಿಪ್ರರಿಗೆ ವಿನಯವು ಇದೇ.ಇದೇ ಸ್ವಾಬಾವಿಕವಾದ ಶಮವೆನಿಸುತ್ತದೆ.ಸ್ವಭಾವದಿಂದ ದಾಂತವಾಗಿರುವುದರಿಂದ ಇದೇ ದಮ.ಹೀಗೆಂದು ತಿಳಿದವನು ಶಮವನ್ನು ಹೊಂದುವನು.(ಪುಟ471) 87-88)ವಸ್ತುವುಳ್ಲದ್ದೂ ಅರಿವಿನೊಡನಿರುವುದೂ ಆಗಿರುವ ದ್ವೈತವು ಲೌಕಿಕವೆನಿಸುವುದು.ವಸ್ತುರಹಿತವಾಗಿ ಉಪಲಂಭವುಳ್ಳದ್ದಾಗಿರುವುದನ್ನು ಶುದ್ಧ ಲೌಕಿಕವೆನ್ನುತ್ತಾರೆ.ವಸ್ತುವಿಲ್ಲದೆ,ಅರಿವೂ ಇಲ್ಲದೆ,ಇರುವುದು ಲೋಕೋತ್ತರವೆನಿಸುತ್ತದೆ.ಹೀಗೆ ಜ್ಞಾನ,ಜ್ಞೇಯ ಮತ್ತು ವಿಜ್ಞೇಯಿವನ್ನು ಬುದ್ದರು ಯಾವಾಗಲೂ ಹೇಳುತ್ತಿರುತ್ತಾರೆ.(ಪುಟ472) 8೯)ಜ್ಞಾನವನ್ನೂ ಮೂರುಬಗೆಯ ಜ್ಞೇಯವನ್ನೂ ಅರಿತುಕೊಂಡರೆ,ಅಂಥ ಮಹಾಬುದ್ದಿವಂತನಿಗೆ ಎಲ್ಲೆಲ್ಲಿಯೂ ಸವ೯ಜ್ಞತ್ವವು ತಾನೇ ಇಲ್ಲಿಯೇ ಉಂಟಾಗುವುದು.(478) ೯0)ಹೇಯ,ಜ್ಞೇಯ,ಆಪ್ಯ,ಪಾಕ್ಯ-ಇವುಗಳನ್ನು ಅಗ್ರಯಾಣವಾಗಿ ಚೆನ್ನಾಗಿ ಅರಿತುಕೊಳ್ಳಬೆಕು.ಅವುಗಳೊಳಗೆ ವಿಜ್ಞೇಯವನ್ನುಳಿದು ಮೂರರಲ್ಲಿ ಅರಿವು ಇರುತ್ತದೆ ಎನ್ನುವರು.(ಪುಟ481) ೯1)ಧಮ೯ರುಗಳೆಲ್ಲರೂ ಸ್ವಭಾವದಿಂದಲೇ ಆಕಾಶದಂತೆ ಅನದಿಯಾ ಗಿರುತ್ತಾರೆ ಎಮದು ತಿಳಿಯಬೇಕು.ಅವರಲ್ಲಿ ಎಲ್ಲಿಯೂ ನಾನಾತ್ವವೆಂಬುದು ಇರುವುದೇ ಇಲ್ಲ.(ಪುಟ484) ೯2)ಎಲ್ಲ ಧಮ೯ರುಗಳೂ ಪ್ರಕೃತಿಯಿಂದಲೇ ಆದಿಬುದ್ಧರೆಂದು ಸುನಿಶ್ಚಿತರಾಗಿರುತ್ತಾರೆ.ಯಾವನಿಗೆ ಹೀಗೆಂಬ ಕ್ಷಾಂತಿಯಿರ್ರುವುದೋ ಅವನು ಅಮೃತತ್ವಕ್ಕೆ ತಕ್ಕವನಾಗುವನು.(ಪುಟ486) ೯3)ಎಲ್ಲಾ ಧಮ೯ರುಗಳೂ ಆದಿಶಾಂತರು,ಹುಟ್ಟದೆ ಇರುವರು,ಸ್ವಭಾವದಿಂದಲೆ ಸುನಿವೃ೯ತರಾಗಿರುತ್ತಾರೆ.ಸಮವಾಗಿ ಅಭಿನ್ನರಾಗಿರುವರು.ಅಜವು,ಸಾಮ್ಯವು,ವಿಶಾರದವು.(ಪುಟ487) ೯4)ಯಾವಾಗಲೂ ಭೇದದಲ್ಲಿ ಸಂಚರಿಸುತ್ತಿರುವವರಿಗೆ ವೈಶಾರದ್ಯವೆಂಬುದು ಇರುವುದಿಲ್ಲ.ಬೇರೆ ಎಂಬ ವಾದಿಗಳು ಭೇದದ ಕಡೆಗೆ ವಾಲಿರುವರು.ಆದ್ದರಿಂದ ಅವರು ಕೃಪಣರೆನಿಸುವರು.(ಪುಟ4೯0) ೯5)ಅಜವೂ ಸಾಮ್ಯವೂ ಆಗಿರುವ ಪರಮಾಥ೯ ತತ್ವದಲ್ಲಿ ಸುನಿಶ್ಚಿತರಾಗಿರುವವರು ಯಾರೇ ಆಗಿರಲಿ,ಅವರೇ ಲೋಕದಲ್ಲಿ ಮಹಾಜ್ಞಾನಿಗಳು.ಅದನ್ನು ಲೋಕವು ಅರಿಯದು.(ಪುಟ4೯0) ೯6)ಅಜರಾದ ಧಮ೯ರುಗಳಲ್ಲಿ ಅಜಜ್ಞಾನವು ಸಂಕ್ರಾಂತವಾಗದೆ ಇರುತ್ತದೆ-ಎನ್ನುವರು.ಜ್ಞಾನವು ಮತ್ತೊಂದು ಕಡೆಗೆ ಹೋಗದೆ ಇರುವುದಷ್ಟೆ?ಅದರಿಂದ ಅದನ್ನು ಅಸಂಗವೆಂದು ಹೇಳುತ್ತಾರೆ.(ಪುಟ4೯1) ೯7)ಅರಿಯದವನಿಗೆ ವೈಧಮ್ಯ೯ವು ಒಂದಿಷ್ಟು ಆದರೂ ಅಸಂಗತ್ವವು ಎಂದಿಗೂ ಇರುವುದಿಲ್ಲ.ಇನ್ನು ಆವರಣಚ್ಯುತಿಯು ಇರುವುದಿಲ್ಲವೆಂದು ಹೇಳುವುದೇನು?(ಪುಟ4೯2) ೯8)ಎಲ್ಲ ಧಮ೯ರುಗಳೂ ಆವರಣವಿಲ್ಲದವರೇ,ಸ್ವಭಾವದಿಂದಲೇ ನಿಮ೯ಲರು.ಮೊದಲಿನಿಂದಲೂ ಬುದ್ಧರು,ಮುಕ್ತರು.ಸಮಥ೯ರಾಗಿರುವುದರಿಂದ ಅರಿಯುವವರು.(ಪುಟ4೯3) ೯೯)ತಾಯಿಯಾದ ಬುದ್ಧನ ಜ್ಞಾನವು ಧಮ೯ಗಳಲ್ಲಿ ಹೋಗಿ ಸೇರುವುದಿಲ್ಲ.ಅಲ್ಲ ಧಮ೯ರುಗಳೂ ಜ್ಞಾನವೂ ಹೀಗೆಯೇ.ಇದನ್ನು ಬುದ್ಧನು ಹೇಳಿರುವುದಿಲ್ಲ.(ಪುಟ4೯4) 100)ದುದ೯ಶ೯ವೂ ಅತಿಗಂಭೀರವೂ ಅಜವೂ ಸಾಮ್ಯವೂ ವಿಶಾರದವೂ ಆಗಿದ್ದು ನಾನಾತ್ವವಿಲ್ಲದ ಪದವನ್ನು ಅರಿತುಕೊಂಡು ಬಲವಿದ್ದಷ್ಟು ಮಟ್ಟಿಗೆ ನಮಸ್ಕರಿಸುವೆವು.(ಪುಟ500) ,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,ಸ,,,,,,,,,,,,,,,,,,,,,,,,,,,,,,,,,,,,,,,,,, ಭಾಷ್ಯಕಾರರು ರಚಿಸಿರುವ ಮಂಗಳಶ್ಲೋಕಗಳ ಸಂಗ್ರಹ: 1)ಈ ಶ್ಲೋಕದ ಅಭಿಪ್ರಾಯವೇನೆಂದರೆ :1)ವೇದಾಂತ ಪ್ರಸಿದ್ಧವಾದ ಬ್ರಹ್ಮವು ತಾನು ಅಜವೇ ಆಗಿರುತ್ತಿದ್ದರೂ ತನ್ನ ಐಶ್ವಯ೯ಯೋಗದಿಂದ ಎಂದರೆ ತನ್ನ ಅಧೀನದಲ್ಲಿರುವ ಮಾಯಾಶಕ್ತಿಯ ಸಂಬಂಧದಿಂದ ಜನ್ಮ ಸಂಬಂಧವನ್ನು ಪಡೆದಿರುತ್ತದೆ.ಎಂದರೆ ಸ್ಥಾವರ ಜಂಗಮಪ್ರಾಣಿಗಳ ರೂಪವಾಗಿಯೂ ಚೇತನಾಚೇತನಾ ರೂಪವಾಗಿಯೂ ಕಾಣಿಸಿಕೊಂಡಿರುತ್ತದೆ.ದೇವತೆಗಳು,ಋಷಿಗಳು-ಮೊದಲಾದವರು ಹೇಗೆ ತಮ್ಮ ಪ್ರಭಾವದಿಂದ ಮತ್ತೊಂದು ಸಾಧನ ಸಾಮಗ್ರಿಯನ್ನು ಬಯಸದೆ ಧ್ಯಾನ ಮಾತ್ರದಿಂದ ಬೇಕಾದ ರೂಪವನ್ನು ಪಡೆದುಕೊಳ್ಳುತ್ತಾರೋ ಹಾಗೆ ಬ್ರಹ್ಮವು ಸಾಧಕರುಗಳ ಅನುಗ್ರಹಾಥವಾಗಿ ತನ್ನ ಇಚ್ಚಾ ಮಾತ್ರದಿಂದ ಬೇರೆ ಬೇರೆಯ ರೂಪವನ್ನು ಹೊಂದಿ ಮಾಯಾಜನ್ಮವನ್ನು ಪಡೆದಿರುತ್ತದೆ. 2)ತಾನು ಅಗತಿಯಾಗಿದ್ದುಕೂಟಸ್ಥವೂ ಅಚಲವೂ ಆಗಿರುತ್ತಿದ್ದರೂ ಯಾವ ಕಾಯ೯ಕರಣಗಳೂ ಇಲ್ಲದೆಯೇ ಗತಿಮಂತವಾಗಿರುತ್ತದೆ.ಎಂದರೆಗಂತೃ(ಹೋಗುವವನು),ಗಂತವ್ಯ(ಹೋಗಿಸೇರತಕ್ಕದ್ದು) ಗತಿ(ಗಮನ,ಹೋಗುವುದು)ಎಂಬ ವಿಭಾಗವನ್ನು ದೇವಯಾನ,ಪಿತೃಯಾನ,ಕ್ಷುದ್ರಜನ್ಮ-ಎಂಬ ಗತಿತ್ರಯ ವಿಭಾಗವನ್ನು ಪಡೆದುಕೊಂಡಿರುತ್ತದೆ. 3) ತನಗೆರಡನೆಯದಿಲ್ಲದ ಏಕವೇ ಆಗಿರುತ್ತಿದ್ದರೂ ಅನೇಕತ್ವವನ್ನು ಎಂದರೆ ಜೀವರು,ಜಗತ್ತು,ಈಶ್ವರ-ಎಂಬ ರೂಪಗಳನ್ನು ಪಡೆದಿರುತ್ತದೆ.(ಪುಟ 503) ಪರಮಗುರುಗಳಿಗೆ ನಮಸ್ಕಾರ: ಈ ಶ್ಲೋಕದ ಅಭಿಪ್ರಾಯವೇನೆಂದರೆ ಅವಿರತ ಜನನ ಗ್ರಾಹಘೂೀರವಾದ,ಎಡೆಬಿಡದೆಶರೀರವನ್ನು ಧರಿಸುತ್ತಿರುವುದೆಂಬ,ದುಷ್ಟ ಮೊಸಳೆಗಳಿಂದ ಭಯಂಕರವಾಗಿರುವ ಈ ಸಂಸಾರ ಸಮುದ್ರದಲ್ಲಿ ಮುಳುಗುತ್ತಿರುವ ಪ್ರಾಣಿಗಳನ್ನು ಕಂಡು,ತಮ್ಮ ಪ್ರಜ್ಞೆಯೆಂಬ ಕಡಗೋಲಿನಿಂದ ಪೂವ೯ದಲ್ಲಿ ವೇದವೆಂಬ ಕ್ಷೀರಸಾಗರವನ್ನು ಕಡೆದು ಅದರೊಳಗಿನಿಂದ ನಾರಾಯಣನ ಅನುಗ್ರಹದಿಂದ ಕಷ್ಟಪಟ್ಟು ಸಂಪಾದಿಸಿದ -ಸಮುದ್ರ ಮಥನದಿಂದ ಅಮೃತವನ್ನು ಪಡೆದುಕೊಂಡ ದೇವತೆಗಳಿಗೂ ಸಿಕ್ಕಲಾರದ-ಈ ಬ್ರಹ್ಮಜ್ಞಾನವೆಂಬ ಅಮೃತವನ್ನು ಸಂಸಾರದಲ್ಲಿ ಮುಳುಗಿರುವ ಜೀವರ ಮೇಲಿನ ಕರುಣೆಯಿಂದ ತೆಗೆದುಕೊಟ್ಟರಲ್ಲ,ಆ ಗೌಡಪಾದಾಚಾಯ೯ರೆಂಬ,ಪೂಜ್ಯರಿಗೂ ಪೂಜ್ಯರೆನಿಸಿಕೊಂಡಿರುವ ಪರಮಗುರುಗಳನ್ನು ಅವರ ಪಾದಗಳಿಗೆರಗಿ ನಮಸ್ಕರಿಸುವೆನು.(ಪುಟ504) ಗುರು ನಮಸ್ಕಾರ: ಈ ಶ್ಲೋಕದಲ್ಲಿ ಅಡಗಿರುವ ಅಭಿಪ್ರಾಯವಿದು.ಮತ್ತೆ ಮತ್ತೆ ಹುಟ್ಟಿಬರುವುದೆಂಬ ಭಯಂಕರ ಸಮುದ್ರದಲ್ಲಿ ಮುಳುಗುವುದು,ತೇಲುವುದು-ಹೀಗೆ ಸಂಕಟಪಡುತ್ತಿದ್ದನನ್ನ ಹೃದಯದ ಅಂಧಕಾರವು ಯಾರ ಪಾದಗಳ ಬೆಳಕಿನ ಕಾಂತಿಯಿಂದ ಸಂಪೂಣ೯ವಾಗಿ ತೊಲಗಿತೋ,ಯಾರ ಅಡಿಗಳನ್ನು ಆಶ್ರಯಿಸಿದವರಿಗೆ ಎಲ್ಲಕ್ಕೂ ಹೆಚ್ಚಿನ ಅಮೂಲ್ಯವಾದ ತತ್ವ ಶ್ರವಣವೂ ಶಾಂತಿಯೂ ವಿನಯವೂ ದೊರಕಿದವೋ ಅಂಥ ಪವಿತ್ರವಾದ ಸಂಸಾರದ ಭಯವನ್ನು ಹೋಗಲಾಡಿಸುವ,ಆ ಗೋವಿಂದ ಭಗವತ್ಪಾದರ ಅಡಿಗಳನ್ನು ಸವ೯ಭಾವಗಳಿಂದಲೂ ನಮಸ್ಕರಿಸುತ್ತೇನೆ.(ಪುಟ505) ,,,,,,,,,,,,,,,,,,,,,,,,,,,,,,,,,,,,,ಗೌಡಪಾದ ಹೃದಯ ಗ್ರಂಥವು ಸಂಪೂಣ೯,,,,,,,,,,,,,,,,,,,,,,, ,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,, ಸಾರಾಂಶ: 1) ಆಗಮ ಪ್ರಕರಣ: 1-5)ಎಚ್ಚರದವಸ್ಥೆಯಲ್ಲಿರುವ ಹೊರ ಅರಿವಿನ ಅತ್ಮನಿಗೆ ವಿಶ್ವನೆಂದು ಹೆಸರು.ಕನಸಿನಲ್ಲಿರುವ ಒಳ ಅರಿವಿನ ಆತ್ಮನಿಗೆ ತೈಜಸನೆಂದು ಹೆಸರು.ತನಿನಿದ್ರೆ(ಸುಷುಪ್ತಿ) ಯಲ್ಲಿರುವ ಬರಿ ಅರಿವಿನ ಗಟ್ಟಿಯಾದ ಆತ್ಮನಿಗೆ ಪ್ರಾಜ್ಞನೆಂದು ಹೆಸರು.ಒಬ್ಬ ಆತ್ಮನೇ ಹೀಗೆ ಅವಸ್ಥೆಗಳ ಉಪಾಧಿಯಿಂದ ಮೂರು ಬಗೆಯಾಗಿ ತೋರುತ್ತಿರುವನು.ಇಂದ್ರಿಯಗಳ ಮೂಲಕ ಅರಿಯುವ ವಿಶ್ವನು ,ಮನಸ್ಸಿನ ಮೂಲಕ ನೆನಪಿಗೆ ತಂದುಕೊಳ್ಳುವತೈಜಸನು,ಈ ಎರಡು ಬಗೆಯ ಅನುಭವವೂ ಇಲ್ಲದ ಪ್ರಾಜ್ಞನು -ಎಂದು ಮೂರು ಬಗೆಯಲ್ಲಿಯೂ ಆತ್ಮನು ಎಚ್ಚರದಲ್ಲಿಯೇ ತೋರಿಬರುತ್ತಿರುವನು.ಸ್ಥೂಲವಾದ ವಿಷಯಗಳು ವಿಶ್ವನಿಗೆ,ಸೂಕ್ಷ್ಮವಾದ ವಿಷಯಗಳ ಭೋಗವು ತೈಜಸನಿಗೆ,ವಿಷಯಭೋಗದ ಆಯಾಸವಿಲ್ಲದ ಆನಂದ ಭೋಗವು ಪ್ರಾಜ್ಷನಿಗೆ-ಹೀಗೆ ಭೋಗಗಳ ಉಪಾಧಿಯಿಂದಲೂ ಅತ್ಮನು ಒಬ್ಬನೇ ಮೂರುವಿಧವಾಗಿ ತೋರುತ್ತಿರುವನು.(ಪುಟ ೯7) 6-೯)ಸುಷುಪ್ತಿಯ ಅತ್ಮನಾದ ಪ್ರಾಣನೇ ಜಗತ್ಸ್ರಷ್ಟøವಾದ ಪ್ರಾಣನು. ಆ ಪ್ರಾಣನಿಂದಲೇ ಚೇತನ ಅಚೇತನಾತ್ಮಕವಾದ ಜಗತ್ತೆಲ್ಲವೂ ಹುಟ್ಟುವುದು. ಪ್ರಾಣನು ಜಗದ್ರೂಪವಾಗುವ ಸೃಷ್ಟಿಯನ್ನು ವಾದಿಗಳು ಬಗೆ ಬಗೆಯಾಗಿ ವಿಕಲ್ಪಿಸಿರುತ್ತಾರೆ.ಆದರೆ ಅವಿದ್ಯೆಯೆಂಬ ಸ್ವಭಾವವೊಂದಲ್ಲದೆ ಈ ಸೃಷ್ಟಿಗೆ ಬೇರೆಯಾವ ಕಾರಣವೂ ಇರುವುದಿಲ್ಲ. 10-15)ನಿಜವಾಗಿ ನೋಡಿದರೆ ಆತ್ಮನಲ್ಲಿ ವಿಶ್ವ,ತೈಜಸ,ಪ್ರಾಜ್ಞ-ಎಂಬ ಮೂರು ರೂಪಗಳು ಇರುವುದಿಲ್ಲ. ಅವನು ಈ ಮೂರು ರೂಪಕ್ಕಿಂತಲೂ ಬೇರೆಯವನಾದ ತುರೀಯನು.ನಾಲ್ಕನೆಯವನು;ಅದ್ವಿತೀಯನು.ಪ್ರಾಜ್ಞ ರೂಪದಲ್ಲಿ ಏನನ್ನೂ ಅರಿಯದ್ದೆಂಬ ಕಾರಣ ಅಜ್ಞಾನವಿರುತ್ತದೆ;ವಿಶ್ವತೈಜಸರಲ್ಲಿ ಈ ಕಾರಣವೂ ಇದರಿಂದಾಗುವ ತಪ್ಪು ತಿಳುವಳಿಕೆಯೆಂಬ ಕಾಯಾ೯ಜ್ಞಾನವೂ ಇರುತ್ತದೆ.ಕಾರಣಾ ಅಜ್ಞಾನರೂಪವಾದ ನಿದ್ರೆಯಾಗಲೀ ಕಾಯ೯ ಅಜ್ಞಾನರೂಪವಾದ ಕನಸಾಗಲೀ ಇಲ್ಲದೆ ತನ್ನ ಚೈತನ್ಯರೂಪವಾದ ಎಚ್ಚರದಲ್ಲಿಯೇ ಇರುವವನು ತುರೀಯನು.ಅಜ್ಞಾನವೂ ಅನ್ಯಥಾ ಜ್ಞಾನವೂ ಆತ್ಮನಿಗೆ ನಿಜವಾಗಿಲ್ಲವೆಂದು ಯಾವನು ಅರಿತುಕೊಳ್ಳುವನೋ ಅವನೇ ನಿಜವಾಗಿ ಆತ್ಮಸ್ವರೂಪವನ್ನು ಪಡೆದುಕೊಂಡವನು.(ಪುಟ ೯7) 16-18)ಜೀವನಿಗೆ ಅನಾದಿ ಮಾಯೆಯಿಂದ ಅಜ್ಞಾನ ಅನ್ಯಥಾ ಜ್ಞಾನಗಳೆಂಬ ಕನಸು ಆಗಿರುತ್ತದೆಯೇ ಹೊರತು ಅವನಲ್ಲಿ ಇವು ಪರಮಾಥ೯ವಾಗಿರುವುದಿಲ್ಲ.ಈ ಕನಸಿನಿಂದ ಎಚ್ಚೆತ್ತಕೂಡಲೇ ಆತ್ಮತತ್ವವು ಹುಟ್ಟಿಲ್ಲದ್ದು,ಯಾವ ನಿದ್ರೆಯಾಗಲೀ ಕನಸಾಗಲೀ ಇಲ್ಲದ್ದು,ತನಗೆರಡನೆಯದಿಲ್ಲದ್ದು ಎಂಬ ಅರಿವು ಆಗುವುದು.ಈಗ ಅವಸ್ಥೆಗಳು ವಿಶ್ವತೈಜಸಾದಿರೂಪಗಳು ಎಂಬ ಪ್ರಪಂಚವಿದೆಯೆಂದೂ ಜ್ಞಾನದಿಂದ ಅದು ಹೋಗುವುದೆಂದೂ ಅಭಿಪ್ರಾಯವಲ್ಲ.ಅದು ಪರಮಾಥ೯ವಾಗಿಲ್ಲವೇ ಇಲ್ಲ.ಆತ್ಮನು ನಿಜವಾಗಿ ಯಾವಾಗಲೂ ಅದ್ವೈತನೇ ಆಗಿರುತ್ತಾನೆ.-ಎಂದು ಅರಿತುಕೊಳ್ಳುವುದೇ ಅದ್ವೈತ ಪ್ರಾಪ್ತಿಯು.ಈ ಜ್ಞಾನವನ್ನು ತಿಳಿಸುವ ಗುರು,ಅದನ್ನರಿಯುವ ಶಿಷ್ಯ -ಎಂಬ ಭೇದವೂ ಪರಮಾಥ೯ವಲ್ಲ.ಅವಿದ್ಯಾಕೃತವಾದ ಈ ಭೇದವು ಪರಮಾಥ೯ಜ್ಞಾನವಾಗುವವರೆಗೆ ನಿಜವೆಂದು ತೋರಿಬರುತ್ತದೆ.ಜ್ಞಾನವುಂಟಾದ ಬಳಿಕ ಈ ಭೇದವೂ ಮಾಯಾಮಾತ್ರವೇ ಎಂಬ ಅರಿವು ಉಂಟಾಗಿಬಿಡುತ್ತದೆ.(ಪುಟ ೯8) 1೯-23)ಆತ್ಮನಲ್ಲಿ ವಾಚ್ಯವಾಚಕರೂಪವಾದ ಭೇದವೂ ಇರುವುದಿಲ್ಲ.ವಾಚ್ಯ ದೃಷ್ಟಿಯಿಂದ ಆತ್ಮನು ಬ್ರಹ್ಮವು.ವಾಚಕ ದೃಷ್ಟಿಯಿಂದ ನೋಡಿದರೆ ಆತ್ಮನು ಓಂಕಾರವು.ವಾಚ್ಯವಾಚಕ ವಿಭಾಗ ರಹಿತನಾದ ತುರೀಯಾತ್ಮನನ್ನು ಓಂಕಾರವೆಂದಾಗಲೀ ಬ್ರಹ್ಮವೆಂದಾಗಲೀ ಕರೆಯುವುದಕ್ಕಿಲ್ಲ.ಬೆಹ್ಮರೂಪವಾದ ಆತ್ಮನಲ್ಲಿ ವಿಶ್ವ,ತೈಜಸ,ಪ್ರಾಜ್ಞ-ಎಂಬ ಪಾದಗಳು ಕಲ್ಪಿತವಾಗಿರುವಂತೆ ಓಂಕಾರರೂಪನಾದ ಆತ್ಮನಲ್ಲಿ ಅಕಾರ,ಉಕಾರ,ಮಕಾರ-ಎಂಬ ಪಾದವಾಚಕಗಳಾದ ಮಾತ್ರೆಗಳು ಕಲ್ಪಿತವಗಿರುವುವು.ಕಲ್ಪಿತ ಪಾದಗಳಿಗಿಂತ ವಿಲಕ್ಷಣನದ ತುರೀಯಾತ್ಮನೇ ಕಲ್ಪಿತಮಾತ್ರೆಗಳಿಗಿಂತ ವಿಲಕ್ಷಣವಾದ ಓಂಕಾರವು.ತುರೀ ಯ ತತ್ವವು ಪಾದವೂ ಅಲ್ಲ,ಮಾತ್ರೆಯೂ ಅಲ್ಲ.(ಪುಟ ೯8) 24-2೯)ಇಂಥ ವಾಚ್ಯವಾಚಕ ಭಾವ ವಿಲಕ್ಷಣವಾದ ಓಂಕಾರವೇ ಪ್ರಣವವು.ಇದನ್ನು ಪಾದಗಳು ಮಾತ್ರೆಗಳು ಎಂಬ ಕಲ್ಪಿತೋಪಾಯದಿಂದ ತಿಳಿದುಕೊಂಡು ಅದರಲ್ಲಿಯೇ ಚಿತ್ತವನ್ನು ಇಟ್ಟುಕೊಂಡವರಿಗೆ ಅಂಜಿಕೆಯಿಲ್ಲ.ಪರಬ್ರಹ್ಮವೆಂದೂ ಅಪರ ಬ್ರಹ್ಮವೆಂದೂ ಶ್ರುತಿಯು ಹೇಳುವುದು ಈ ಪ್ರಣವವನ್ನೇ.ಇದು ಆದಿಮಧ್ಯಾಂತ ರಹಿತವಾದದ್ದು.ಎಲ್ಲಕ್ಕೂ ಅದಿ ಮಧ್ಯಾಂತವು ಇದೇ.ಇದೇ ಜೀವರ ಹೃದಯದಲ್ಲಿರುವ ಈಶ್ವರನೆಂಬುದು.ಈ ಅಮಾತ್ರವಾದ ಅಪರಿಚ್ಛಿನ್ನವಾದ ಪ್ರಪಂಚೋಪಶಮವಾದ ಓಂಕಾರವನ್ನು ಯಾವನು ಅರಿತಿರುವನೋ ಅವನೇ ಮುನಿಯು.(ಪುಟ ೯8) 2) ವೈತಥ್ಯ ಪ್ರಕರಣ: ಆಗಮ ಪ್ರಕರಣಗಳಲ್ಲಿ ತೋರಿಸಿರುವಂತೆ ಅಭಿದಾನ ಅಭಿದೇಯಗಳಿಂದ ವಿಲಕ್ಷಣನಾಗಿರುವ ಆತ್ಮನು ನಿಷ್ಪ್ರಪಂಚನೂಊ ನಿವಿ೯ಕಲ್ಪನೂ ಆಗಿದ್ದರೂ ಎಚ್ಚರ ಕನಸುಗಳಲ್ಲಿ ತಪ್ಪು ತಿಳುವಳಿಕೆಯಿಂದ ಸಪ್ರಪಂಚನೂ ಸವಿಕಲ್ಪನೂ ಆಗಿ ತೋರುವುದರಿಂದ ಶ್ರುತ್ಯಥ೯ವು ಕೇವಲ ಉಪದೇಶ ಮಾತ್ರದಿಂದಲೇ ಮಂದಮಧ್ಯಮ ಬುದ್ಧಿಯುಳ್ಳವರಿಗೆ ನಿಶ್ಚಯವಾಗದೆ ಇರುತ್ತದೆ.ಆದ್ದರಿಂದ ದ್ವೈತವು ಮಿಥ್ಯೆಯೆಂಬುದನ್ನು ಯುಕ್ತಿಯಿಂದಲೂ ತೋರಿಸಿಕೊಡುವುದಕ್ಕಾಗಿ ಈ ಪ್ರಕರಣವನ್ನು ಪ್ರಾರಂಭಿಸಿರುತ್ತದೆ. 1-3)ಸ್ವಪ್ನದಲ್ಲಿ ಕಾಣುವ ದೃಶ್ಯಗಳು ಸಂಕುಚಿತವಾಗಿರುವ ದೇಹದೊಳಗಿನ ಭಾಗದಲ್ಲಿ ಕಂಡು ಬರುತ್ತಿರುವುದರಿಂದಲೂ ಅವಕ್ಕೆ ಬೇಕಾಗಿರುವಷ್ಟು ದೇಶಕಾಲ ನಿಮಿತ್ತಗಳು ಅಲ್ಲಿ ಇರುವುದಿಲ್ಲವದ್ದರಿಂದಲೂ ಎಚ್ಚೆತ್ತ ಕೂಡಲೇ ಅವು ಬಾಧಿತವಾಗುವುದರಿಂದಲೂ ಅವು ಹುಸಿ ಎಂಬ ವಿಷಯವು ಬಲುಮಟ್ಟಿಗೆ ಎಲ್ಲರಿಗೂ ಒಪ್ಪಾಗಿರುತ್ತದೆ.(ಪುಟ 1೯3) 4-10)ಇದರಂತೆಯೇ ಎಚ್ಚರದಲ್ಲಿರುವ ನಮ್ಮೊಳಗಿನ ಮತ್ತು ಹೊರಗಿನ ಪದಾಥ೯ಗಳು ಹುಸಿಯೆಂದೇ ಒಪ್ಪಬೇಕು.ಏಕೆಂದರೆ ಅವೂ ಸ್ವಪ್ನದ ಪದಾಥ೯ಗಳಂತೆ ದೃಶ್ಯವೇ ಆಗಿರುತ್ತವೆ.ಸ್ವಪ್ನ ಪದಾಥ೯ಗಳು ಒಳಗೆ ಸಂಕುಚಿತ ಪ್ರದೇಶದಲ್ಲಿದೆ ಎಂಬ ವಿಶೇಷವಿರುವುದು ನಿಜ.ಆದರೆ ಸರಿಯಾಗಿ ವಿಚಾರ ಮಾಡಿದರೆ ಈ ಎರಡವಸ್ಥೆಗಳಿಗೂ ಒಂದೇ ಬೆಲೆ ಇದೆ ಎಂದು ನಿಶ್ಚಯವಾಗುವುದು.ಹೇಗೆಂದರೆ ಈ ಎರಡವಸ್ಥೆಗಳಲ್ಲಿಯೂ ವಸ್ತುಗಳು ಗ್ರಾಹ್ಯ,ಗ್ರಾಹಕ ಎಂದು ವಿಭಕ್ತವಾಗಿಯೇ ತೋರುತ್ತಿರುವುವು.ಈ ಎರಡು ಅವಸ್ಥೆಗಳೂ ಆತ್ಮನಲ್ಲಿಯೇ ತೋರುತ್ತಿರುತ್ತವೆ.ತೋರುವ ಕಾಲಕ್ಕಿಂತ ಹಿಂದೆ ಇರಲಿಲ್ಲ,ಬಾಧಿತವಾದ ಮೇಲೆ ಇರುವುದಿಲ್ಲ-ಎಂಬುದು ಈ ಎರಡಕ್ಕೂ ಸಮಾನವಾಗಿರುತ್ತದೆ.ಅವು ಮತ್ತೊಂದು ಅವಸ್ಥೆಯಲ್ಲಿಲ್ಲ.ಆಯಾ ಅವಸ್ಥೆಯಲ್ಲಿಯೇ ಅವು ಆತ್ಮನಿಗೆ ಸೇರಿದಂತೆ ಕಾಣುತ್ತಿರುವುದು.ಆದ್ದರಿಂದ ಅವು ಪರಮಾಥ೯ವೆನಿಸಲಾರವು.ಒಳಗೆ ಮನಸ್ಸಿನಲ್ಲೇ ತೋರಿಕೊಂಡು ಮರೆಯಾಗುವ ಭಾವಗಳು,ಹೊರಗೆ ಒಂದರ ಜೊತೆಗೆ ಮತ್ತೊಂದು ಇರುವಂತೆ ತೋರುವ ಭಾವಗಳು.ಒಳಗೆ ಅವ್ಯಕ್ತವಾಗಿ ತೋರುವ ಮತ್ತು ಹೊರಗೆ ವ್ಯಕ್ತವಾಗಿ ಕಾಣಿಸುವ ಭಾವಗಳು-ಇವೆಲ್ಲವೂ ಕಲ್ಪಿತವಾಗಿಯೇ ಇರುತ್ತವೆ.ಅವುಗಳು ತೋರಿಕೊಳ್ಳುವ ಬಗೆಯಲ್ಲಿ ಯಾವ ವೈಲಕ್ಷಣ್ಯವೂ ಇರುವುದೇ ಇಲ್ಲ.ಸ್ವಪ್ನದೃಶ್ಯಗಳಿಗೆ ದೇಶಕಾಲಗಳು ತಕ್ಕಷ್ಟು ಇರುವುದಿಲ್ಲವೆನ್ನುವುದಾದರೂ ಎಚ್ಚರದ ದೃಷ್ಟಿಯಿಂದ ನೋಡಿದಾಗ ಸರಿ;ಆದರೆ ಅಷ್ಟುಮಾತ್ರದಿಂದ ಈ ಎರಡು ಒಂದಕ್ಕಿಂತ ಒಂದು ವಿಲಕ್ಷಣವೆಂದೇನೂ ಆಗುವ ಹಾಗಿಲ್ಲ.ಆದ್ದರಿಂದ ಈ ಎರಡೂ ಅವಸ್ಥೆಗಳೂ ಹುಸಿ ಎಂಬುದೇ ಸರಿ. 11-18)ಈ ಎರಡು ಅವಸ್ಥೆಗಳೂ ಹುಸಿಯೇ ಎಂದಾದ್ದರಿಂದ ಬೌದ್ಧರ ಸಿದ್ಧಾಯವೇ ಕೊನೆಯೆಂದು ಆಗುವುದಿಲ್ಲ.ಏಕೆಂದರೆ ಈ ಅವಸ್ಥೆಗಳಲ್ಲಿ ತೋರುವ ವಿಕಲ್ಪಗಳಿಗೆಲ್ಲ ಆಸ್ಪದವಾಗಿ ಒಬ್ಬ ಆತ್ಮನು ಇರುತ್ತಾನೆಂಬುದೇ ಈ ವಿಚಾರದಿಂದ ಏಪ೯ಡುತ್ತದೆ.ಆದ್ದರಿಂದ ಆತ್ಮನನ್ನೇ ಕತೃ೯,ಕಮ೯,ಕರಣ--ಎಂದು ವಿಕಲ್ಪಿಸಿಕೊಳ್ಳುತ್ತಾರೆ-ಎಂಬುದು ವೇದಾಂತ ಸಿದ್ಧಾಂತ.ಹೇಗೆಂದರೆ ಯಾವ ವಿಕಲ್ಪಗಳೀ ಇಲ್ಲದ ಆತ್ಮನಲ್ಲಿ ಜೀವತ್ವವೂ, ಆ ಜೀವನಿಗಾಗಿ ಕ್ರಿಯೆ,ಕಾರಕ,ಫಲ-ಎಂದು ವಿಂಗಡಿಸಿಕೊಂಡು ತೋರುವ ಬಗೆಬಗೆಯಭಾವಗಳೂ ವಿಕಲ್ಪಿತವಾಗಿರುತ್ತವೆ.ಹೀ ಗೆ ಅವಿದ್ಯೆಯಾದ ಅನಾದಿಯ ನಿಮಿತ್ತದಿಂದ ಆತ್ಮನಲ್ಲಿ ಧಮಾಧಮ೯ಗಳೆಂಬ ಹೇತು ದೇಹಾಂತರ ಪ್ರಾಪ್ತಿಯೆಂಬ ಫಲ-ಇವುಗಳೂ ಆತ್ಮನಲ್ಲಿ ವಿಜ್ಞಾನಗಳೂ ,ಸ್ಮøತಿಗಳೂ ಪರಸ್ಪರ ನೈಮಿತ್ತಿಕ ಭಾವದಿಂದ ಕಲ್ಪಿತವಾಗಿರುತ್ತವೆ. ಇದೇ ಸಂಸಾರವೆಂಬುದು.ಇದು ಹಗ್ಗ ಎಂದು ನಿಶ್ಚಯಿಸಿಕೊಳ್ಳದೆ ಇರುವಾಗ ಹಾವು,ನೀರುಕೋಡಿ-ಎಂದು ಮುಂತಾಗಿ ವಿಕಲ್ಪಿತವಾಗಿರುವಂತೆಯೇ ಇದನ್ನು ತಿಳಿಯಬೇಕು.ಹಗ್ಗವೆಂದು ನಿಶ್ಚಯಿಸಿಕೊಂಡ ಬಳಿಕ ಹೇಗೆ ಹಾವೇ ಮುಂತಾದ ವಿಕಲ್ಪಗಳೆಲ್ಲವೂ ತೊಲಗುವವೋ ಹಾಗೆಯೇ 'ಅದ್ವೈತಾತ್ಮನೊಬ್ಬನೇ ಪರಮಾಥ೯ವು,ಅವನೇ ನಾನು'ಎಂಬ ನಿಶ್ಚಯವಾಗುತ್ತಲೂ ಸಂಸಾರ ವಿಕಲ್ಪಗಳೆಲ್ಲವೂ ತೊಲಗುವವು 20-28)ಅದ್ವೈತಾತ್ಮನಲ್ಲಿ 'ಪ್ರಾಣ','ಭೂತಗಳು','ಗುಣಗಳು' 'ತತ್ವಗಳು''ವಾದಗಳು''ವಿಷಯಗಳು','ಲೋಕಗಳು','ದೇವತೆಗಳು','ವೇದಗಳು',ಯಜ್ಞಗಳು,'ಭೋಕ್ತø', 'ಭೋಗ್ಯ','ಸೂಕ್ಷ್ಮ','ಸ್ಥೂಲ','ಮೂತ೯','ಅಮೂತ8','ಕಾಲ','ದಿಕ್ಕುಗಳು','ಪಾದಗಳು','ಭುವನಗಳು','ಮನಸ್ಸು','ಬುದ್ಧಿ','ಚಿತ್','ಧಮಾಧಮ೯ಗಳು','ಇಪ್ಪತ್ತೈದನೆಯವನು','ಇಪ್ಪತ್ತಾರನೆಯವನು','ಮೂವತ್ತೊಂದನೆಯವನು','ಅಸಂಗನು','ಸ್ರೀ ಪುರುಷ ನಪುಂಸಕ','ಪರ,ಅಪರ',ಸೃಷ್ಟಿ,ಸ್ಥಿತಿ,ಲಯ'-ಎಂದು ಮುಂತಾಗಿರುವ ಎಲ್ಲಾ ವಿಕಲ್ಪಗಳೂ ಅಭಿನಿವೇಶಮಾತ್ರದಿಂದ ತೋರುತ್ತಿರುತ್ತದೆ.ಅದ್ದರಿಂದ ಗುರುವು ಹೆಗೆ ಉಪದೇಶಮಾಡುವನೋ ಹಾಗೇ ಸರಿ-ಎಂದು ಸಾಧಕನಿಗೆ ತೋರುತ್ತದೆ.ಅ ನಿಶ್ಚಯದಿಂದ ಮಿಕ್ಕ ಯಾವ ಭಾವನೆಗಳೂ ಅವನ ಮನಸ್ಸಿಗೆ ಒಗ್ಗದಂತೆ ಆಗುವುದು.ನಿಜವಾಗಿ ನೋಡಿದರೆ ಈ ಭಾವಗಳೆಲ್ಲದರ ತತ್ವವೇ ಅವನು.(ಪುಟ 1೯4) 2೯-32) ಆತ್ಮನಲ್ಲಿ ಕಲ್ಪಿತವಾಗಿರುವ ಪ್ರಾಣದಿ ಭಾವಗಳು ಆಯಾ ಅಭಿಮಾನದಿಂದಲೇ ತೋರುತ್ತಿರುತ್ತವೆ.ಆದ್ದರಿಂದ ಯಾವನ ಉಪದೇಶದಿಂದ ಯಾವನು ಅದೇ ತತ್ವವೆಂದು ತಿಳಿದುಕೊಳ್ಳುವನೋ ಅವನಿಗೆ ಅದೇ ಆತ್ಮನಲ್ಲಿ ಆ ಭಾವವನ್ನು ಕಂಡುಕೊಂಡದ್ದರಿಂದ ಮಿಕ್ಕ ಭಾವಗಳನ್ನೂ ಕಾಣದಂತೆ ಆಗುವುದು.ನಿಜವಾಗಿ ಈ ಭಾವಗಳಿಗೆಲ್ಲ ಅದ್ವೈತವೇ ತತ್ವವು ಎಂದು ಯಾವನು ಅರಿತುಕೊಳ್ಳುವನೋ ಅವನಿಗೇ ವೇದಾಥ೯ದ ವಿಜವು ಗೊತ್ತಾಗಿರುತ್ತದೆ.ಭೇದಗಳೆಲ್ಲ ನಮ್ಮ ನಮ್ಮ ಕನಸಿನಂತೆಯೂ ಮಾಯೆಯಂತೆಯೂ ಗಂಧವ೯ನಗರವೇ ಮುಂತಾದದ್ದರಂತೆಯೂ ಹುಸಿಯಾಗಿಯೇ ಇದ್ದುಕೊಂಡು ಸತ್ಯವಾಗಿರುವಂತೆ ಕಾಣಿಸಿಕೊಳ್ಲುತ್ತಿರುವವು.ಅದರೆ ನಿಜವೇನೆಂದರೆ ಸೃಷ್ಟಿ,ಪ್ರಳಯ-ಮುಂತಾದ ಯಾವ ವಿಕಲ್ಪವೂ ಆತ್ಮನಲ್ಲಿ ನಿಜವಾಗಿಯೂ ಇರುವುದಿಲ್ಲ.ಸಾಧ್ಯ,ಸಾಧನ-ಮುಂತಾದ ವಿಂಗಡವು ನಿಜವಾಗಿಲ್ಲವೇ ಇಲ್ಲ-ಎಂಬುದೇ ವೇದಾಂತೋಕ್ತವಾಗಿರುವ ಪರಮಾಥ೯ವು.(ಪುಟ1೯4) 33-38)ಆತ್ಮನು ಯಾವಾಗಲೂ ಅದ್ವೈತ ಸ್ವರೂಪನೇ ಆಗಿರುವುದರಿಂದ ಅವನಲ್ಲಿ ಯಾವ ದ್ವೈತವೂ ಇರುವುದೇ ಇಲ್ಲ.ಆದ್ದರಿಂದ ಅದ್ವೈತವೇ ಮಂಗಲಕರವಾದದ್ದು.ವಿಕಲ್ಪಗಳು ತಾವು ತೋರುವ ರೂಪದಿಂದ ಒಂದಕ್ಕಿಂತ ಒಂದು ಬೇರೆಯೂ ಇಲ್ಲ.ಒಂದೇ ತತ್ವವೂ ಅಲ್ಲ.ಇವೆಲ್ಲವೂ ಆತ್ಮನೆ ಎಂಬುದನ್ನು ಕಂಡುಕೊಂಡಾಗಲೂ ಇವು ಇರುವುದೇ ಇಲ್ಲ-ಎಂಬುದು ತತ್ವಜ್ಞಾನಿಗಳ ಅಭಿಪ್ರಾಯ.ಈ ಅದ್ವೈತಾತ್ಮತತ್ವವು ಸವ೯ಪ್ರಪಂಚಶೂನ್ಯವಾಗಿರುವ ಮಂಗಲಕರವಾದದ್ದು.ರಾಗ,ಭಯ,ಕ್ರೋಧ-ಮುಂತಾದ ಚಿತ್ತದೋಷಗಳು ಯಾವುವೂ ಇಲ್ಲದವರೂ ವೇದಾಂತದ ಮಮ೯ವನ್ನು ಬಲ್ಲವರೂ ಆದ ಮುನಿಗಳಿಗೆ ಮಾತ್ರ ಇದು ತಿಳಿಯುವುದು.ಅವರಿಗೆ ಅದ್ವೈತಾನುಸಂಧಾನವು ನಿತ್ಯಸಿದ್ಧವಾಗಿರುತ್ತದೆ.ಅಂತವರು ತಮ್ಮ ವಿದ್ಯೆ,ವಿನಯ-ಇವುಗಳನ್ನು ತೋರಿಸಿಕೊಳ್ಳದೆ ಪರಮಹಂಸ ಪರಿವ್ರಾಜಕರಾಗಿ ತಮಗೆ ಒದಗಿದಷ್ಟೂ ಜೀವನಸಾಧನದಿಂದ ಸಂತುಷ್ಟರಾಗಿ ವ್ಯವಹರಿಸುತ್ತಿರುವರು.ಅಂತೂ ಹೀಗೆ ಹೊರಗೆ ಕಾಣುವ ದ್ವೈತವನ್ನೂ ಒಳಗಿನ ದ್ವೈತವನ್ನೂ ಎಲ್ಲವೂ ಆತ್ಮನಲ್ಲಿ ಕಲ್ಪಿತವಾಗಿರುವ ಹುಸಿತೋರಿಕೆಯೆಂಬುದನ್ನು ಗೊತ್ತು ಮಾಡಿಕೊಂಡು ಸವ೯ಕ್ಕೂ ಆಧಾರವಾಗಿರುವ ತತ್ವವೇ ತಾನಾಗಿ ಯಾರು ತತ್ವದಿಂದ ಸ್ವಲ್ಪವೂ ಕದಲದೆ ತತ್ವನಿಷ್ಠರಾಗಿರುವರೋ ಅವರು ಕೃತಕೃತ್ಯರು.(ಪುಟ 1೯5) 3) ಅದ್ವೈತ ಪ್ರಕರಣದ ಸಾರ: ವೈತಥ್ಯ ಪ್ರಕರಣದಲ್ಲಿ ದ್ವೈತವೆಲ್ಲವೂ ತೋರುವ ರೂಪದಿಂದ ಮಿಥ್ಯೆಯೆಂದು ನಿಶ್ಚಯಿಸಿರಿವುದರಿಂದಲೇ ಅದ್ವೈತವೇ ಪರಮಾಥ೯ವೆಂದು ನಿಶ್ಚಿತವಾಗುತ್ತದೆಯಾದರೂ ದ್ವೈತದಂತೆ ಅದ್ವೈತವೂ ಏತಕ್ಕೆ ಮಿಥ್ಯೆಯಾಗಿರಬಾರದು ?-ಎಂದು ಮಂದ ಮತಿಗಳಾದವರು ಯಾರಾದರೂ ಶಂಕಿಸಬಹುದು.ಆ ಶಂಕೆಯನ್ನು ಪರಿಹರಿಸುವುದಕ್ಕಾಗಿ ತಕ೯ದಿಂದಲೂ ಅದ್ವೈತವನ್ನು ಸಾದಿಸುವುದಕ್ಕಾಗಿ ಈ ಪ್ರಕರಣವನ್ನು ಪ್ರಾರಂಭಿಸಿರುತ್ತದೆ. 1-2)ವೇದಾಂತಗಳೆಲ್ಲವೂ ಉಪಾಸನಾ ವಿಧಿಪರವೆಂದೂ ಬ್ರಹ್ಮವು ಜಗದ್ರೂಪವಾಗಿ ಪರಿಣಮಿಸಿರುವುದರಿಂದ ,ಜೀವನು ಬ್ರಹ್ಮೋಪಾಸನೆಯನ್ನು ಮಾಡಿಅಜಾದ್ವಯ ಬ್ರಹ್ಮಸ್ವರೂಪವನ್ನು ಪಡೆಯಬೇಕಾಗಿದೆಯೆಂದೂ ಹೇಳುವ ವಾದಿಗಳ ಮತವು ಮಿಥ್ಯಾಜ್ಞಾನ ನಿಮಿತ್ತವಾಗಿದೆ ಎಂಬುದನ್ನು ತೋರಿಸಿಕೊಡುವುದಕ್ಕಗಿ ಮೊಟ್ಟ ಮೊದಲು ಅಜಾದ್ವಯ ಬ್ರಹ್ಮ ವಾದವನ್ನು ಜಿಜ್ಞಾಸುಗಳಿಗೆ ಮನಗಾಣಿಸುವುದಕ್ಕಾಗಿ ಅಜಾತವಾದವನ್ನು ಪ್ರಾರಂಭಿಸಿದೆ.(ಪುಟ 327) 3-10)ಜೀವರುಗಳಾಗಲೀ ಅವರ ಉಪಾಧಿಗಳಾಗಿರುವ ಕಾಯ೯ಕರಣಸಂಘಾತಗಳಾಗಲಿ ನಿಜವಾಗಿ ಹುಟ್ಟುವಂತಿಲ್ಲ.ಸ್ರುತಿಗಳು ಕೆಲವು ಇವುಗಳ ಉತ್ಪತ್ತಿಯನ್ನು ಹೇಳುವಂತೆ ತೋರುತ್ತಿರುವುದುಂಟು. ಆಕಾಶವು ಘಟಾದಿಗಳ ರೂಪದಿಂದಲೂ ಘಟಾಕಾಶಾದಿಗಳ ರೂಪದಿಂದಲೂ ತೋರಿಕೊಳ್ಳುತ್ತಿರುವಂತೆಯೇ ಅಜಾದ್ವಿತೀಯವಾದ ಬ್ರಹ್ಮವೆ ಜೀವರ ಮತ್ತು ಜೀವರ ಉಪಾಧಿಗಳಾದ ಕಾಯ೯ಕರಣ ಸಂಘಾತಗಳ ರೂಪದಿಂದ ತೋರುತ್ತಿದೆ.ಇದೇ ಉತ್ಪತ್ತಿ ಎಂದು ತಿಳಿಸಿಕೊಡುವುದೇ ಶ್ರುತಿಗಳ ಉದ್ದೇಶ.ಜೀವರ ಉತ್ಪತ್ತಿಯು ಹೇಗೆ ಕೇವಲ ಬರಿಯ ತೋರಿಕೆಯೋ ಹಾಗೆಯೇ ಸ್ಥಿತಿ,ಗತ್ಯಾಗತಿ,ಮರಣ-ಇವೆಲ್ಲವೂ ಘಟಾಕಾಶದ ಸ್ಥಿತ್ಯಾದಿಗಳಂತೆ ಉಪಾಧಿ ನಿಮಿತ್ತವೆಂದು ತಿಳಿಯಬೇಕು; ಉಪಾಧಿಗಳಾದ ಸಂಘಾತಗಳು ವೈತಥ್ಯ ಪ್ರಕರಣದಲ್ಲಿ ಹೇಳಿರುವ ಯುಕ್ತಿಗನುಸಾರವಾಗಿ ಕನಸಿನಲ್ಲಿ ತೋರುವ ಕಾಯ೯ಕರಣ ಸಂಘಾತಗಳಂತೆಯೇ ಮಿಥ್ಯೆಯಾಗಿರುತ್ತದೆ. ಆದ್ದರಿಂದ ಆತ್ಮರು ಅನೇಕರು ಬೇರೆ ಬೇರೆ,ಒಬ್ಬರಿಗಿಂತ ಒಬ್ಬರು ವಿಲಕ್ಷಣ ಸ್ವಭಾವದವರು-ಎಂದು ಹೇಳುವುದು ನಿಯು೯ಕ್ತಿಕವಾಗಿದೆ.(ಪುಟ327) 11-15) ಇ ಅತ್ಮೈಕತ್ಯವನ್ನು ತೈತ್ತಿರೀಯೋಪನಿಷತ್ತಿನ ಬ್ರಹ್ಮಾನಂದವಲ್ಲಿಯಲ್ಲಿಯೂ ಬೃಹದಾರಣ್ಯಕದ ಮಧುಬ್ರಾಹ್ಮಣದಲ್ಲಿಯೂ ಹೆಳಿದೆ.ಜೀವ ಪರಮಾತ್ಮರು ಬೇರೆಯಲ್ಲವೆಂಬುದನ್ನೂ ಶ್ರುತಿಸ್ಮøತಿಗಳಲ್ಲಿ ಹೊಗಳಿರುತ್ತದೆ.ಅವರು ಬೇರೆ ಬೇರೆ ಎಂಬ ಅಭಿಪ್ರಾಯವನ್ನು ನಿಂದಿಸಿರುತ್ತದೆ.ಇವೆರಡೂ ಅಜಾದ್ವಯ ಬ್ರಹ್ಮವಾದಕ್ಕೆ ಹೊಂದುತ್ತವೆಯೇ ಹೊರತು ಜೀವರುಗಳು ನಿಜವಾಗಿಯೂ ಬೇರೆಬೇರೆಯಾಗಿ ಹುಟ್ಟಿರುತ್ತಾರೆ ಎಂಬುದರ ಮತಕ್ಕೆ ಹೊಂದುವುದಿಲ್ಲ.ಎಲ್ಲೆಲ್ಲಿ ಮಣ್ನು,ಲೋಹ,ಕಿಡಿಗಳು-ಮುಂತದ ದೃಷ್ಟಾಂತಗಳಿಂದ ಸೃಷ್ಟಿಯನ್ನು ಹೇಳಿರುವಂತೆ ಕಂಡು ಬರುತ್ತದೆಯೋ ಅಲ್ಲೆಲ್ಲ ಕಾಯ೯ವು ವಾಚಾರಂಭಣ-ಬರಿಯ ಮಾತಿನಿಂದ ತೋರುವ ಬರಿಯ ವಿಕಲ್ಪವೆಂದು ಶ್ರುತಿಯು ಸ್ಪಷ್ಟವಾಗಿ ಹೇಳಿದೆ.ಸೃಷ್ಟಿಶ್ರುತಿಗಳು ಅದ್ವೈತ ಜ್ಞಾನಕ್ಕೆ ಶ್ರೋತೃವಿನ ಚಿತ್ತವನ್ನು ಅಣಿಮಾಡುವುದಕ್ಕೆ ಉಪಾಯ ಮಾತ್ರವೆಂದು ಗೊತ್ತಾಗುತ್ತದೆ.(ಪುಟ328) 16)ಇದೇ ಸಿದ್ಧಾಂತವಾದರೆ ಶ್ರುತಿಗಳಲ್ಲಿ ಉಪಾಸನೆಯನ್ನೂ ಕಮ೯ವನ್ನೂ ಹೇಳಿರುವುದೇಕೆ?-ಎಂಬ ಶಂಕೆಗೆ ಪರಿಹಾರವೇನೆಂದರೆ ,ಅಧಿಕಾರಿಗಳು ಉತ್ತಮ,ಮಧ್ಯಮ ,ಅಧಮ-ಎಂದು ಮೂರು ತರಗತಿಯವರಾಗಿರುವುದರಿಂದ ಮಂದ ಮಧ್ಯಮಾಧಿಕಾರಿಗಳಿಗಾಗಿ ವೇದವು ಉಪಾಸನೆಯನ್ನೂ ಕಮ೯ವನ್ನೂ ವಿಧಿಸಿರುತ್ತದೆ.ಆ ಅಧಿಕಾರಿಗಳೂ ಕ್ರಮವಾಗಿ ಈ ಉತ್ತಮವಾದ ಆತ್ಮೈಕತ್ವದೃಷ್ಟಿಯನ್ನು ಸಂಪಾದಿಸಿಕೊಳ್ಳಲಿ ಎಂಬುದೇ ಹಾಗೆ ವಿಧಿಸಿರುವುದರ ಉದ್ದೇಶ.ಆದ್ದರಿಂದ ಶ್ರುತಿಯಲ್ಲಿ ಉಪಾಸನೆಯನ್ನೂ ಕಮ೯ವನ್ನು ಉಪದೇಶ ಮಾಡಿದೆ ಎಂಬುದೇನೂ ಅಜಾದ್ವರ ಬ್ರಹ್ಮವಾದಕ್ಕೆ ಅಡ್ಡಿಯಾಗಲಾರದು.(ಪುಟ 328) 17-18)ಅಜಾದ್ವಯ ದಶ೯ನವು ದ್ವೈತಿಗಳ ದಶ೯ನಕ್ಕೆ ವಿರುದ್ಧವೆಂಬ ಕಾರಣದಿಂದಲೂ ಪರಿತ್ಯಾಜ್ಯವಲ್ಲ.ಏಕೆಂದರೆ ದ್ವೈತಿಗಳ ದಶ೯ನಗಳು ಒಂದಕ್ಕೊಂದು ವಿರುದ್ಧವಾಗಿರುತ್ತವೆ.ಶಾಸ್ತ್ರವಿರುದ್ಧವೂ ಆಗಿದೆ.ಆದ್ದರಿಂದ ಅವು ಯಥಾಥ೯ದಶ೯ನಗಳಲ್ಲ.ಅದ್ವೈತವಾದರೋ ಶಾಸ್ತ್ರ ಯುಕ್ತಿಗಳೆರಡಕ್ಕೂ ಸಮ್ಮತವಾಗಿರುವುದರಿಂದ ಪರಮಾಥ೯ವಾಗಿವೆ.ದ್ವೈತವು ಅದ್ವೈತದಲ್ಲಿ ಹುಟ್ಟುಗಟ್ಟಿರುವ ವಿಕಲ್ಪವಾದ್ದರಿಂದ ಈ ಅದ್ವೈತವಾದವು ದ್ವೈತ ದಶ೯ನಗಳಿಗೆ ವಿರುದ್ಧವೆಂದು ಆಕ್ಷೇಪಿಸುವಂತಿಲ್ಲ.(ಪುಟ328) 1೯-27)ಅದ್ವೈತವೇ ಪರಮಾಥ೯ವಾಗಿದ್ದು ದ್ವೈತದಂತೆ ಕಾಣುತ್ತದೆ-ಎಂದು ಒಪ್ಪದಿದ್ದರೆ ಅಮೃತವಾದ ಬ್ರಹ್ಮವು ಮತ್ಯ೯ವಾದ ಜೀವರಾಗಿ ಮಾಪ೯ಡುವದೆಂದೂ ಈಗ ಮತ್ಯ೯ವಾಗಿರುವ ಜೀವರು ಮುಕ್ತಿಯಲ್ಲಿ ಅಮೃತರಾಗಿ ಮಾಪ೯ಡುವರೆಂದೂ ಹೇಳಬೇಕಾಗುವುದು.ಆದರೆ ವಸ್ತುಸ್ವಭಾವವು ಎಂದಿಗೂ ಮಾಪ೯ಡಲಾರದು.ಆದ್ದರಿಂದ ಈ ದೋಷವನ್ನು ಪರಿಹರಿಸಿಕೊಳ್ಳುವುದಕ್ಕಾಗಿ ಅಜಾತಿ(ಯಾವುದೂ ಹುಟ್ಟುವುದಿಲ್ಲ) ಎಂಬುದೇ ಪರಮಾಥ೯.ಜಾತಿ(ಹುಟ್ಟುವಿಕೆ)ಎಂಬುದು ಮಾಯಿಕ-ಎಂದು ಎಲ್ಲಾ ವಾದಿಗಳೂ ಒಪ್ಪಬೇಕು.ಆಗ ಸೃಷ್ಟಿ ಶ್ರುತಿಗಳು ಮಾಯಾ ಸೃಷ್ಟಿಯನ್ನು ಹೇಳುತ್ತವೆಯೆಂದು ಹೇಳಬಹುದಾಗುತ್ತದೆ.ಅಷ್ಟರಿಂದಲೇ ಸೃಷ್ಟಿವಾಕ್ಯಗಳೆಲ್ಲವೂ ಆತ್ಮೈಕತ್ವಜ್ಞಾನಕ್ಕೆ ಉಪಾಯ ಮಾತ್ರವೆಂದು ಹೇಳುವುದಕ್ಕೂ ಬರುತ್ತದೆ. ದೈತವನ್ನು ಶ್ರುತಿಯಲ್ಲಿ ಅಲ್ಲಗಳೆದಿರುವದೂ ಆತ್ಮೈಕತ್ವನ್ನು ತಿಳಿಸುವುದಕ್ಕೆ ಬಳಸಿದ್ದ ಉಪಾಯವನ್ನೆಲ್ಲಾ 'ಹೀಗಲ್ಲ,ಹೀಗಲ್ಲ' ಎಂದು ಅಲ್ಲಗಳೆದಿರುವುದೂ ಈ ಮತದಲ್ಲಿಯೇ ಸಮಂಜಸವಾಗುವುದು.ಆದ್ದರಿಂದ ಅದ್ವೈತವು ಮಾಯೆಯಿಂದ ಜನ್ಮವನ್ನು ಪಡೆದಂತೆ ತೋರಿಕೊಳ್ಳುತ್ತಿದೆ ಎಂಬುದೇ ಸರಿ.(ಪುಟ 32೯) 28-30)ಅಸತ್ಕಾಯ೯ವೂ ಸರಿಯೆಂದಾಗಲಿ!ಎಂದು ವಾದಿಸುವುದು ಸರಿಯಾಗಲಾರದು.ಏಕೆಂದರೆ ಅಸತ್ಪದಾಥ೯ಕ್ಕೆ ನಿಜವಾಗಿಯಾಗಲೀ ಮಾಯೆಯಿಂದಾಗಲೀ ಜನ್ಮವು ಉಂಟಾಗಲಾರದು.ಆದ್ದರಿಂದ ಸ್ವಪ್ನದಲ್ಲಿ ನಾನೊಬ್ಬನೇ ಇರುವ ಆತ್ಮನೇ ಮನಃಸ್ಪಂದನ ಮಾತ್ರದಿಂದ ದ್ವೈತ ಪ್ರಪಂಚವಾಗಿ ತೋರುತ್ತಿರುವಂತೆಯೇ ಎಚ್ಚರದಲ್ಲಿಯೂ ಅದ್ವಯಾತ್ಮನಲ್ಲಿ ಮನಃಸ್ಪಂದನದಿಂದಲೇ ದ್ವೈತವು ತೋರುತ್ತಿದೆ -ಎಂದು ಒಪ್ಪಬೇಕು.(ಪುಟ32೯) 31-47)ಈ ವಾದವು ಅನುಭವಸಾರಿಯಾಗೂ ಇರುತ್ತದೆ.ಹೇಗೆಂದರೆ ಮನಸ್ಸಿರುವಗ ದ್ವೈತವು ಕಾಣುತ್ತಿರುತ್ತದೆ.ನಸ್ಸು ಅಮನೀ ಭಾವವನ್ನು ಪಡೆದರೆ ದ್ವೈತವು ಕಾಣಿಸುವುದೇ ಇಲ್ಲ.ಅಮನೀ ಭಾವವು ಅಧಿಕಾರಿ ತಾರತಮ್ಯದಿಂದ ಎರಡು ಮಾಗ೯ಗಳಿಂದ ಪ್ರಾಪ್ತವಾಗಬಹುದಾಗಿರುತ್ತದೆ.ಶ್ರುತ್ಯಾಚಾಯ೯ರುಗಳ ಉಪದೇಶದಿಂದ ಆತ್ಮನೊಬ್ಬನೇ ಸತ್ಯವೆಂಬುದನ್ನು ಯಾರು ಕಂಡಿರುವರೋ ಅವರಿಗೆ ಆತ್ಮಸತ್ಯಾನುಭೋಧದಿಂದಲೇ ಮನಸ್ಸು ಅಮನಸ್ಸಾಗಿ ಬಿಡುತ್ತದೆ.ಎಂದರೆ ಅದು ಆತ್ಮಸ್ವರೂಪದಲ್ಲಿಯೇ ಅಡಕವಾಗಿ ಬಿಡುತ್ತದೆ. ಆಗ ಅದ್ವೈತವೇ ಪರಮಾಥ೯ವೆಂಬುದು ಮನದಟ್ಟಾಗಿ ಬಿಡುತ್ತದೆ.ಆದ್ದರಿಂದ ಅವರು ಮಾಡತಕ್ಕದ್ದೇನೂ ಉಳಿದಿರುವುದಿಲ್ಲ. ಆದರೆ ಇನ್ನೂ ಸಾಧನ ಮಾಗ೯ದಲ್ಲಿರುವ ಮಧ್ಯಮಾಧಿಕಾರಿಗಳಿಗೆ ಮನಸ್ಸು ಆತ್ಮನಿಗೆ ಸೇರಿರುತ್ತದೆ ಎಂಬ ಬುದ್ಧಿಯೇ ಇದ್ದುಕೊಂಡಿರುವುದರಿಂದ ಅವರಿಗೆ ಮನೋನಿಗ್ರಹ ಎಂಬ ಉಪಾಯದಿಂದ ಮನಸ್ಸಿಗೆ ಅಮನೀ ಭಾವವು ಪ್ರಾಪ್ತವಾಗಬೇಕಾಗಿರುತ್ತದೆ.ಮನಸ್ಸಿನ ಲಯ,ವಿಷೇಪ,ಸಕಷಾಯತ್ವ,ರಸಾಸ್ವಾದ-ಎಂಬ ವಿಘ್ನಗಳನ್ನು ಪರಿಹಾರ ಮಾಡಿಕೊಂಡಾಗ ಅಧಿಕಾರಿಗಳ ಮನಸ್ಸು ಅಜಾದ್ವಯ ಬ್ರಹ್ಮವೇ ಆಗಿಬಿಡುತ್ತದೆ.ಆಗ ಅಜವಾದ ಬ್ರಹ್ಮವು ಸ್ವಾನುಭವಗೋಚರವಾಗುತ್ತದೆ.(ಪುಟ 32೯) 48) ಈ ಪ್ರಕರಣದಲ್ಲಿ ಹೇಳಿರುವಂತೆ ಉಪಾಸನೆ,ಜಗತ್ಸøಷ್ಟಿ ಮನೋನಿಗ್ರಹ- ಎಂಬ ಉಪಾಯಗಳೂ ಶ್ರುತಿಯಲ್ಲಿ ಉಪದಿಷ್ಟವಾಗಿರುತ್ತವೆಯಾದರೂ ಅವೆಲ್ಲ ಸತ್ಯವೆಂದೇನೂ ಶ್ರುತಿಗೆ ತಾತ್ಪಯ೯ವಿರುವುದಿಲ್ಲ.ಪರಮಾಥ೯ ಸತ್ಯವೆಂದರೆ ಯಾವುದೊಂದೂ ಹೇಗೂ ಹುಟ್ಟಿಯೇ ಇರುವುದಿಲ್ಲ.ಅಜಾದ್ವಯ ಬ್ರಹ್ಮವೊಂದೇ ನಿಜವಾಗಿರತಕ್ಕದ್ದು.(ಪುಟ 32೯) 4) ಅಲಾತಶಾಂತಿ ಪ್ರಕರಣದಸಾರ: ಓಂಕಾರ ನಿಣ೯ಯದ್ವಾರದಿಂದ ಆತ್ಮನು ಅಜಾದ್ವೈತ ತತ್ವನಾಗಿರುತ್ತಾನೆ ಎಂದು ಹೇಳಿತ್ತು.ವೈತಥ್ಯ ಪ್ರಕರಣದಲ್ಲಿ ಹೊರಗಿನ ವಿಷಯಗಳೂ ಅಧ್ಯಾತ್ಮಿಕ ಪ್ರಪಂಚವು ಹುಸಿಯೇ ಎಂದು ಯುಕ್ತಿಪ್ರಧಾನವಾಗಿ ತೋರಿಸಿಕೊಡಲಾಗಿತ್ತು.ಅಜಾದ್ವೈತ ಆತ್ಮನೇ ಪರಮಾಥ೯ ತತ್ವವೆಂಬುದನ್ನು ಶಾಸ್ತ್ರಯುಕ್ತಿಗಳಿಂದ ಅದ್ವೈತ ಪ್ರಕರಣದಲ್ಲಿ ತೋರಿಸಿಕೊಡಲಾಗಿದೆ.(ಪುಟ 506) 1-2)ಉಪನಿಷತ್ತುಗಳಲ್ಲೆಲ್ಲ ಉಪದಿಷ್ಟವಾಗಿರುವ ಅಜಾದ್ವೈತ ದಶ೯ನವು ಅಸ್ಪಶ೯ಯೋಗವೆಂದು ಪ್ರಸಿದ್ಧವಾಗಿರುತ್ತದೆ.ಇಲ್ಲಿ ಜ್ಞಾತೃ,ಜ್ಞೇಯ,ಜ್ಞಾನ-ಈ ಮೂರೂ ವಿಭಕ್ತವಾಗಿಲ್ಲದೆ ಆಕಾಶದಂತೆ ಅಖಂಡವಾಗಿ ಮತ್ತೊಂದರ ಸಂಸ್ಪಶ೯ವಿಲ್ಲದೆ ಇರುತ್ತವೆ.ಇವನ್ನು ಅನುಭವಗಮ್ಯವೆಂದು ಅರಿತಿರುವ ನಾರಾಯಣಾಖ್ಯನಾದ ಪುರುಷೋತ್ತಮನೇ ಇದಕ್ಕೆ ಸಂಪ್ರದಾಯಕತ೯ನು.ಈ ಯೋಗವು ಅವಿವಾದವೂ ಅವಿರುದ್ಧವೂ ಆಗಿರುತ್ತದೆ.ಸವ೯ಪ್ರಾಣಿಗಳ ಸುಖವೂ ಹಿತವೂ ಆಗಿರುತ್ತದೆ.(ಪುಟ 506) 3-10)ದ್ವೈತಿಗಳ ದಶ೯ನಗಳು ಒಂದಕ್ಕೊಂದು ವಿರುದ್ಧವಾಗಿ ವಿವಾದಾಸ್ಪದವಾಗಿ ಇರುತ್ತದೆ. ಅವರಲ್ಲಿ ಕೆಲವರು ಇರುವುದೇ ಹುಟ್ಟುತ್ತದೆ ಎನ್ನುವರು.ಇನ್ನು ಕೆಲವರು ಮೊದಲು ಇಲ್ಲದ್ಧೇ ಹುಟ್ಟುತ್ತದೆ ಎನ್ನುವರು.ಹೀಗೆ ವಿವಾದವನ್ನು ಮಾಡುತ್ತಿರುವುದರಿಂದ ಅದ್ವೈತ ಸಮ್ಮತವಾದ ಅಜಾತಿಯೇ ಸತ್ಯವೆಂಬುದನ್ನು ಅವರು ಹೊರಪಡಿಸಿದಂತಾಗುತ್ತದೆ.ಅಜಾತವಾದದ್ದೇ ಜೀವಭಾವದಿಂದ ಹುಟ್ಟುವುದೆಂದೂ ಅದು ಮತ್ತೆ ಅಜಾತಬ್ರಹ್ಮವಾಗುವುದೆಂದೂ ಹೇಳುವವರು ಅದ್ವೈತಿಗಳಾಗಿದ್ದರೂ ಸ್ವಭಾವವು ಮಾಪ೯ಡಬಹುದೆಂದವರಾಗುತ್ತಾರೆ.ಆದ್ದರಿಂದ ಎಲ್ಲರೂ ಜರಾಮರಣ ರಹಿತರಾಗಿಯೇ ಇದ್ದು ಅವಿದ್ಯಾವಾಸನೆಯಿಂದಲೇ ಸಂಸಾರದಲ್ಲಿ ತೊಳಲುತ್ತಾರೆಂದು ತಿಳಿಯಬೇಕು.506) 11-41) 1) ಅಜವಾದದ್ದು ಹುಟ್ಟುವುದೆಂದರೆ ಹುಟ್ಟಿದ್ದು ಅಜವೆಂಬ ದೋಷಕ್ಕೆ ಪಾತ್ರವಗುವುದು.ಹುಟ್ಟಿದ್ದು ಹುಟ್ಟುತ್ತದೆ ಎಂಬುದೂ ಯುಕ್ತವಲ್ಲ.ಏಕೆಂದರೆ ಒಂದು ಮೊದಲು ಹುಟ್ಟಿದ ಇನ್ನೊಂದರಿಂದ ಹುಟ್ಟಿದೆ ಎಂದಂತಾಗಿ ಅನವಸ್ಥಾ ದೋಷವು ಗಂಟುಬೀಳುವುದು.ಆದ್ದರಿಂದ ಅಜಾತಿಯೇ ಪರಮಾಥ೯ವು. 2)ಧಮಾ೯ಧಮ೯ಗಳೆಂಬ ಹೇತುವಿನಿಂದ ಶರೀರರೂಪವಾದ ಫಲವು ಹುಟ್ಟುವುದೆಂಬುದಾಗಲೀ,ಶರೀರರೂಪವಾದ ಫಲದಿಂದ ಧಮಾ೯ಧಮ೯ಗಳು ಉಂಟಾಗುತ್ತವೆಂಬುದಾಗಲೀ ಸರಿಯಲ್ಲ.ಹೇತುವಿನಿಂದ ಫಲ,ಫಲದಿಂದ ಹೇತು -ಹೀಗೆ ಒಂದರಿಂದೊಂದು ಹುಟ್ಟುತ್ತವೆ -ಎನ್ನುವವರು ಇವೆರಡರೊಳಗೆ ಯಾವುದು ಮೊದಲು ಹುಟ್ಟುವದೆಂಬುದನ್ನು ಗೊತ್ತುಪಡಿಸಲಾರದಾದ್ದರಿಂದ ಅವರ ಮತವು ದೋಷಯುಕ್ತವಾದದ್ದು..ಬೀಜಾಂಕುರಗಳಂತೆ ಇವು ಅನಾದಿಯಾಗಿ ಹುಟ್ಟುತ್ತಿರುವವು-ಎಂಬುದೂ ಸರಿಯಲ್ಲ.ಏಕೆಂದರೆ ಬೀಜಮತ್ತು ಅಂಕುರ -ಈ ಎರಡನ್ನೂ ಬಿಟ್ಟರೆ ಸಂತತಿ ಎಂಬುದು ಅದಕ್ಕಿಂತ ಬೇರೆಯಾಗಿ ಇಲ್ಲವೇ ಇಲ್ಲ.ಅದ್ದರಿಂದ ಈ ಹೇತುಫಲಗಳು ಹುಟ್ಟಿಲ್ಲವೆಂಬುದೇ ಪರಮಾಥ೯ವೆಂದಾಯಿತು. 3)ಹೀಗೆಯೇ ಬಂಧಮೋಕ್ಷಗಳುಂಟೆಂಬುವರು ಬಂಧವು ಅನಾದಿ ಸಾಂತ ಎಂದು ಹೇಳಬೇಕಾಗುವುದು. ಮೋಕ್ಷವು ಆದಿಯುಳ್ಳದ್ದು ಅನಂತವೂ ಎಂದು ಒಪ್ಪಬೇಕಾಗುವುದು.ಇದು ದೃಷ್ಟವಿರುದ್ಧ.ಆದ್ದರಿಂದ ಬಂಧಮೋಕ್ಷಗಳ ಜನ್ಮವೂ ಇಲ್ಲವೆಂಬುದೇ ಯುಕ್ತ. 4)ಇದರಂತೆ ವೈತಥ್ಯ ಪ್ರಕರಣದಲ್ಲಿ ಸ್ವಪ್ನ ಜಾಗರಿತಗಳು ಆದ್ಯಂತವುಳ್ಳವುಗಳಾದ್ದರಿಂದಲೂ ಸವ೯ಸಮನಾಗಿ ಎರಡೂ ಕನಸಿನಂತೆಯೇ ಇರುವುದರಿಂದಲೂ ಸ್ವಪ್ನಜಾಗರಿತಗಳಂತೆ ನಿಜವಾದ ಕಾಯ೯ಕಾರಣಭಾವವು ಇಲ್ಲವೆಂದೂ ಅವೆರಡರಲ್ಲಿಯೂ ನಮಗೆ ಪರಮಾಥ೯ವಸ್ತುದಶ೯ನವಿಲ್ಲವೇ ಇಲ್ಲವೆಂದೂ ಅಜಾತಿಯೇ ಪರಮಾಥ೯ವೆಂದೂ ಒಪ್ಪಬೇಕಾಗುತ್ತದೆ.(ಪುಟ 507) 42-53)ವೇದಾಂತದಲ್ಲಿಯೀ ವಸ್ತುಗಳ ಜನ್ಮವುಂಟೆಂದು ಹೇಳುವುದೇಕೆಂದರೆ ,ಬಾಹ್ಯವಸ್ತುಗಳು ಕಾಣಬರುತ್ತಿರುವುದರಿಂದಲೂ ಕಮ೯ಕ್ಕೆ ಸಧನವಾಗಿರುವುದರಿಂದಲೂ ನಿಜವಗಿದೆ ಎಂದು ತಿಳಿದುಕೊಂಡಿರುವ ನಿಜವಾಗಿದೆ ಎಂದು ತಿಳಿದುಕೊಂಡಿರುವ ಸ್ಥೂಲಬುದ್ಧಿಗಳಾದ ಆಸ್ತಿಕರಿಗೆ ಕ್ರಮಕ್ರಮವಾಗಿ ಅಜಾತಿ ಸ್ವರೂಪವನ್ನು ತಿಳಿಯಿಸಿಕೊಡುವುದಕ್ಕೆ ಉಪಾಯವಾಗಿ ಸಾಮಾನ್ಯರಿಗೆ ಕಾಣುವ ಮಾಯಾಜನ್ಮವನ್ನು ಅಲ್ಲಿ ಉಪದೇಶಿಸಿರುತ್ತದೆ.ತೋರುವುದು,ಕ್ರಿಯಾಚರಣೆಗೆ ಅಂಗವಾಗಿರುವುದು -ಇವೆರಡು ಇದ್ದ ಮಾತ್ರದಿಂದ ವಸ್ತುವು ನಿಜವಾಗಿಯೂ ಇದೆಯೆಂದು ಹೇಳುವುದಕ್ಕೆ ಆದೀತೇ?ಸ್ವಪ್ನದಲ್ಲಿ ಕಾಣುವ ಪದಾಥ೯ಗಳಲ್ಲಿಯೂ ಮಾಯಾವಿಯು ನಿಮಿ೯ಸಿರುವ ಆನೆಯೇ ಮುಂತಾದವು ಗಳಲ್ಲಿಯೂ ಈ ಎರಡು ಧಮ೯ಗಳು ಇರುತ್ತವೆಯಾದರೂ ಅವು ಸತ್ಯವಾಗಿ ಇರುವುದಿಲ್ಲವೆಂಬುದು ನಮಗೆಲ್ಲ ತಿಳಿದೇ ಇರುತ್ತದೆ.ಅದ್ದರಿಂದ ನಿಜವಾಗಿರುವ ವಸ್ತುಗಳಿಗಿರಬೇಕಾದ ಜನ್ಮವೇ ಮುಂತಾದ ಧಮ೯ಗಳನ್ನುಳ್ಳಂತೆ ವಸ್ತುಗಳು ತೋರುತ್ತಿದ್ದರೂ ನಿಜವಾಗಿ ಅವೆಲ್ಲವೂ ನಿಜ,ಅಚಲ,ಅನಾಭಾಸ(ತೋರದಿರುವ ವಸ್ತು),ಅದ್ವಿತೀಯವಾಗಿರುವ ಚೈತನ್ಯ ಮಾತ್ರವೇ ಎಂದು ನಿಶ್ಚಯಿಸಬೇಕು.ಇದಕ್ಕೆ ಅಲಾತ ಸ್ಪಂದಿತ (ತಿರುಗಿಸಿದ ಕೊಳ್ಳಿಯಂತೆ) ಎಂಬ ದೃಷ್ಟಾಂತವನ್ನು ಕೊಡಬಹುದು. ಆ ದೃಷ್ಟಾಂತದಲ್ಲಿ ನೆಟ್ಟಗೆ ,ಡೊಂಕಾಗಿ ಅಥವಾ ಮತ್ತೊಂದಾಕಾರದಿಂದ ಕಾಣಿಸಿಕೊಳ್ಳುವ ದೃಶ್ಯಗಳು ನಿಜವಾಗಿ ಹುಟ್ಟಿರುವುದಿಲ್ಲ.ಎಲ್ಲಿಂದಲೂ ಬಂದಿರುವುದಿಲ್ಲ,ಮತ್ತೆಲ್ಲಿಗೂ ಹೋಗುವುದೂ ಇಲ್ಲ.ಅಲ್ಲವೆ?ಅದರಂತೆಯೇ ಕೂಟಸ್ಥ ವಿಜ್ಞಪ್ತಿಯ ರೂಪದಲ್ಲಿ ತೋರುವ ಚಿತ್ತ ಚೇತ್ಯಾದಿಗಳೂ ಅವಿದ್ಯೆಯಿಂದಲೇ ತೋರುತ್ತಿರುವವೇ ಹೊರತು,ನಿಜವಾಗಿ ಹುಟ್ಟುವುದಿಲ್ಲ.ಎಲ್ಲಿಂದಾದರೂ ಆ ವಿಜ್ಞಪ್ತಿಗೆ ಬಂದು ಸೇರಿಕೊಂಡಿರುವುದಿಲ್ಲ.ನಾಶವದಾಗ ಅದನ್ನು ಬಿಟ್ಟು ಮತ್ತೆಲ್ಲಿಗೂ ಹೋಗುವುದಿಲ್ಲ-ಎಂದು ತಿಳಿಯಬೇಕು.ಕಾಯ೯ಕಾರಣವಾದಿಗಳು ದ್ರವ್ಯಕ್ಕೆ ದ್ರವ್ಯವು ಕರಣ.,ಅದ್ರವ್ಯಕ್ಕೆ ಅದ್ರವ್ಯವೇ ಕಾರಣ ಎನ್ನುತ್ತಾರೆ.ಆತ್ಮನು ದ್ರವ್ಯವೂ ಅಲ್ಲ ಅದ್ರವ್ಯವೂ ಅಲ್ಲ;ಆದ್ದರಿಂದ ಅವನು ಕಾಯ೯ವೂ ಅಲ್ಲ ಕಾರಣವೂ ಅಲ.(ಪುಟ 508) 54-81)ಹೀಗೆ ಎಲ್ಲವೂ ಆತ್ಮತತ್ವವೆ ಅಗಿರುವುದರಿಂದ ಚಿತ್ತದಿಂದ ಬಾಹ್ಯವಸ್ತುಗಳಾಗಲೀ ,ಬಾಹ್ಯವಸ್ತುಗಳಿಂದ ಚಿತ್ತವಾಗಲೀ ಹುಟ್ಟುವುದಿಲ್ಲ.ಹೀಗೆ ಕಾಯ೯ಕಾರಣ ಭಾವವೇ ಇಲ್ಲವಾದರೂ ಕಮ೯,ಶರೀರಪ್ರಾಪ್ತಿ ಎಂಬ ಹೇತುಫಲಗಳೆಂಬ ಅಭಿನಿವೇಷದಿಂದ ಅಜ್ಞರು ಸಂಸಾರಕ್ಕೆ ಪಕ್ಕಾಗುವರು. ಅವಿದ್ಯೆಯಿಂದ ಎಲ್ಲವೂ ಹುಟ್ಟುತ್ತವೆ,ಪರಮಾಥ೯ ದೃಷ್ಟಿಯಿಂದ ಎಲ್ಲವೂ ಅಜಾತ್ಮತತ್ವವೇ ಆಗಿರುತ್ತದೆ. ಜೀವರುಗಳೆಲ್ಲರೂ ಅಜಸ್ವರೂಪರೇ.ಸ್ವಪ್ನಜಾಗ್ರತ್ತುಗಳಲ್ಲಿರುವ ದ್ವೈತವೆಲ್ಲವೂ ಅಜಾದ್ವೈತವೇ.ಚಿತ್ತಚೇತ್ಯಗಳೆರಡೂ-ಕನಸಿನಲ್ಲಿರುವಂತೆ ಜಗ್ರತ್ತಿನಲ್ಲಿಯೂ -ಆತ್ಮತತ್ವಮಾತ್ರವೇ.ಜೀವರು ಹುಟ್ಟುವುದೇ ಇಲ್ಲ.ಚಿತ್ತವೂ ನಿವಿ೯ಷಯವಾದ ಪರಮತ್ಮನೇ.ಇದೆ ಎಂಬುದು ಅವಿದ್ಯೆಯೇ.ಇಲ್ಲವೆಂಬುದು ವಾದಿಗಳು ಇದೆಯೆನ್ನುವುದನ್ನು ಅಲ್ಲಗಳೆದಿದ್ದೇ.ಅಜನು ಎಂಬುದು ಕಲ್ಪಿತ ಸಂವೃತಿಯೇ.ಎಂದರೆ ಹುಟ್ಟುವನೆಂಬ ವಾದವನ್ನು ಅಲ್ಲಗಳೆಯುವುದಕ್ಕೆ ಹೇಳಿದ್ದೇ.ಇಲ್ಲದ್ದರಲ್ಲಿ ಇದೆ ಎಂಬ ಅಭಿನಿವೇಷವಿದೆ. .ಹೀಗೆ ಚಿತ್ತವು ಹುಟ್ಟುವುದೇ ಇಲ್ಲ ಎಂಬುದನ್ನು ನಿಶ್ಚಯಿಸಿಕೊಂಡವರಿಗೆ ಪುನಜ೯ನ್ಮವಿಲ್ಲ.ಇದು ಜ್ಞಾನಿಗಳಿಗೆ ಮಾತ್ರವೇ ತಿಳಿದಿರುತ್ತದೆ.ಅಜಾನಿದ್ರಾ ಸ್ವಪ್ನನಾದ ಆತ್ಮನೊಬ್ಬನೇ ಪರಮಾಥ೯ವು.(50೯) 82-87)ಇದೆ,ಇಲ್ಲ,ಇದ್ದೂ ಇಲ್ಲ,ಇಲ್ಲವೇ ಇಲ್ಲ-ಎಂಬ ನಾಲ್ಕು ಕೋಟಿಗಳಿಂದ ಪಂಡಿತಮಾನಿಗಳಾದ ಅಜ್ಞವಾದಿಗಳು ತತ್ವಕ್ಕೆ ಆವರಣವನ್ನು ಹಾಕಿರುವರು.ಇವುಗಳ ಸೋಂಕೇ ಇಲ್ಲದ ಪರಮಾಥ೯ವನ್ನು ತಿಳಿದವನೇ ಸವ೯ಜ್ಞನು,ಬ್ರಾಹ್ಮಣನು,ಕೃತಕೃತ್ಯನು,ವಿನಯ,ಶಮ,ದಮ,ಇವುಗಳಿಗೆಲ್ಲ ಜ್ಞಾನಸ್ಥಿತಿಯೆಂಬುದೇ ನಿಜವಾದ ಅಥ೯.(ಪುಟ 50೯) 88-೯5)ಇದನ್ನು ಅರಿತುಕೊಳ್ಳುವುದಕ್ಕೆಂದೇ (ಲೌಕಿಕ,ಜಾಗರಿತ),ಶುದ್ಧ ಲೌಕಿಕ,(ಸ್ವಪ್ನ),ಲೋಕೋತ್ತರ(ಸುಷುಪ್ತ)-ಎಂಬ ಮೂ ರು ಅವಸ್ಥೆಗಳ ಆತ್ಮರನ್ನು ಒಂದರಲ್ಲೊಂದು ಪ್ರವಿಲಯವಾಗಿಸಿ ರಾಗದ್ವೇಷಾದಿ ಕಷಾಯಗಳನ್ನು ಪಕ್ವಗೊಳಿಸಿಕೊಂಡು,ಬಾಲ್ಯ,ಪಾಂಡಿತ್ಯ,ಮೌನಗಳೆಂಬ ಸಾಧನಗಳನ್ನು ಅಳವಡಿಸಿಕೊಂಡು ಸಜ್ಜಾಗಬೇಕು,ಅರಿತುಕೊಂಡ ಬಳಿಕ ಮಾಡಬೇಕಾದ್ದೇನೂ ಉಳಿದಿರುವುದಿಲ್ಲ.(ಪುಟ 50೯) ಜ್ಞಾನದಿಂದ ಅಜ್ಞಾನವು ನಾಶವಾಗುವುದೆಂದೂ ಕಲ್ಪಿತ ಸಂವೃತಿಯಿಂದ ಹೇಳಿದ್ದೇ.ಏಕೆಂದರೆ ಆತ್ಮರುಗಳೆಲ್ಲರೂ ಸ್ವಭಾವದಿಂದಲೇ ಆಕಾಶದಂತೆ ಕೂಟಸ್ಥಚೈತನ್ಯ ಸ್ವರೂಪರಾಗಿರುತ್ತಾರೆ.ಎಲ್ಲರೂ ನಿತ್ಯಶುದ್ಧಬುದ್ಧಮುಕ್ತ ಸ್ವಭಾವದವರಾಗಿರುತ್ತಾರೆ.ಇಂಥ ಅಜಸಾಮ್ಯತತ್ವದಲ್ಲಿ ನಿಂತಿರುವವರೇ ಮಹಾಜ್ಞಾನಿಗಳು.(50೯) ೯6-100)ಜ್ಞಾನತತ್ವವು ಮತ್ತೇನನ್ನೂ ಸೋಂಕದೆ ಇರುತ್ತದೆ.ಅದು ಅಸಂಗವು.ಆತ್ಮರು ನಿತ್ಯಶುದ್ಧಬುದ್ಧ ಮುಕ್ತಸ್ವಭಾವರೇ ಆಗಿರುವುದರಿಂದ ಅವರು ತತ್ವವನ್ನು ಅರಿಯುತ್ತಾರೆಂಬುದೂ ಗೌಣವೃತ್ತಿಯಿಂದ ಹೇಳಿದ್ದು.ಜ್ಞಾತೃ,ಜ್ಞಾನ,ಜ್ಞೇಯ-ಎಂಬ ವಿಭಾಗವಿಲ್ಲದ ಆಕಾಶಕಲ್ಪವಾದ ಅಖಂಡಚೈತನ್ಯವೇ ಪರಮಾಥ೯ವು.ಇದನ್ನು ಗೌತಮಬುದ್ಧನು ಹೇಳಿರುವುದಿಲ್ಲ.ಅಜವೂ ಪರಿಶುದ್ಧವೂ ಸಾಮ್ಯವೂ ಆಗಿರುವ ಈ ತತ್ವಕ್ಕೆ ನಮಸ್ಕಾರ.(ಪುಟ50೯) ,,,,,,,,,,,,,,,,,,,,,,,,,,,,,ಗೌಡಪಾದ ಹೃದಯ ಸಾರಸಂಗ್ರಹ ಗ್ರಂಥವು ಸಂಪೂಣ೯ವಾಯಿತು,,,,,,,,,,,,,, ,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,, d

No comments:

Post a Comment