ಶಾ0ಕರ ಸಮ್ಯಕ್ ದಶ೯ನ:
(ಮೈತ್ರೇಯೀ-ಯಾಜ್ಞವಲ್ಕ್ಯ ಸಂವಾದ)
ಲೇಖಕರು:ಶ್ರೀಮೂತಿ೯
ಶ್ರೀದತ್ತಾಶ್ರಮ,ನೂಲೇನೂರು
ಹೊಳಲ್ಕೆರೆ ತಾಲ್ಲೂಕು,ಚಿತ್ರದುಗ೯ ಜಿಲ್ಲೆ.
ಪ್ರಕಾಶಕರು :ಅಧ್ಯಾತ್ಮ ಪ್ರಕಾಶ ಕಾಯಾ೯ಲಯ,ಬೆಂಗಳೂರು.
ಸಂಗ್ರಹ:ಡಾ| ಎಂ.ಎ.ರವೀಂದ್ರಹೊಸದುಗ೯.
1)ಪಾರಮಹಂಸ್ಯ ವಿಷಯಕ್ಕೆ ಶ್ರುತಿಪ್ರಮಾಣಗಳು:
1)ಶಹಾಂತರಾದ ವಿದ್ವಾಂಸರು ಬಿಕ್ಷಾಚಯೆ೯ಯನ್ನು ಮಾಡುತ್ತಾ ಅರಣ್ಯಗಳಲ್ಲಿ ವಾಸಮಾಡುತ್ತಾರೆ.-ಮುಂಡಕ
2)ವೇದಾಂತ ವಿಜ್ಞಾನದಿಂದ ಸಿನಿಶ್ಚಿತಾಥ೯ರಾದವರಾಗಿ ಸನ್ಯಾಸಯೋಗದ ಮೂಲಕ ಶುದ್ಧಸತ್ವರಾಗಿ ಬ್ರಹ್ಮಲೋಕದಲ್ಲಿದ್ದು
ಪರಾಂತಕಾಲದಲ್ಲಿ ಅಮೃತರಾಗುವರು.-ಮುಂಡಕ
3)ಕಮ೯ದಿಂದಾಗಲೀ,ಪ್ರಜೆಯಿಂದಾಗಲೀ,ಧನದಿಂದಾಗಲೀ ಅಲ್ಲ;ತ್ಯಾಗದಿಂದಲೇ ಅಮೃತತ್ವವನ್ನು ಪಡೆದರು.¸-ತೈತ್ತಿರೀಯ
4) ಪುತ್ರೈಷಣೆ,ವಿತ್ತೈಷಣೆ,ಲೋಕೈಷಣೆಗಳನ್ನು ಬಿಟ್ಟೆದ್ದು ಭಿಕ್ಷಾಚಯೆ೯ಯನ್ನು ಮಾಡುವರು,-ಬೃಹದಾರಣ್ಯಕ
5) ಅತ್ಯಾಶ್ರಮಿಗಳಾದವರಿಗೆ ಪರಮಪವಿತ್ರವಾದ ಜ್ಞಾನವನ್ನು ಹೇಳಿದನು.-ಶ್ವೇತಾಶ್ವತರಉಪನಿಷತ್ತುಗಳಲ್ಲಿ ಪರಮಹಂಸ್ಯ ವಿಚಾರವು ಅನೇಕಕಡೆಗಳಲ್ಲಿ ಪ್ರಸ್ತಾಪಿಸಲ್ಪಟ್ಟಿದೆ.ಜಾಬಾಲೋಪನಿಷತ್ತಿನಲ್ಲಿಯೂ ಪರಮ¸ಹಂಸಾಶ್ರಮದ ವಿಚಾರವಿದೆ.
(ಪುಟ 2)
2)ಅಂತೂ ಎಲ್ಲಾ ಉಪನಿಷತ್ತುಗಳೂ ತಿಳಿಸುವುದೇನೆಂದರೆ :ಪರಮಹಂಸ ಸನ್ಯಾಸವು ಜ್ಞಾನಪರಿಪಾಕದಿಂದ ತಾನಾಗಿಯೇ ದೊರೆಯತಕ್ಕದ್ದು.ಅದು ಆಶಮವಲ್ಲ.ಆದ್ದರಿಣದಲೇ ಆ ಆಶ್ರಮದಲ್ಲಿ ಯಾವ ಕಮಾ೯ನುಷ್ಠಾನಗಳೂ ಇರುವುದಿಲ್ಲ.ಇದನ್ನು ವಿದ್ವತೆ ಸನ್ಯಾಸವೆಂದೂ ಕರೆಯುತ್ತಾರೆ.(ಪುಟ 2)
3)ಸನ್ಯಾಸವು ಕೇವಲ ಕುಂಟಕುರುಡರ ವಿಷಯವಲ್ಲ.ಮತ್ತೇನೆಂದರೆ:ವಿರಕ್ತನಾದವನಿಗೆ ಅದು ಹೇಳಲ್ಪಟ್ಟಿದೆ.ಶ್ರುತಿಗಳಲ್ಲಿಸ್ಪಷ್ಟವಾಗಿ ಸನ್ಯಾಸಧಮ೯ವನ್ನು ಪ್ರತಿಪಾದಿಸಿದೆ.ಯಜ್ಞೋಪವೀತಾದಿಗಳನ್ನೂ ಪರಿತ್ಯಾಗ ಮಾಡಬೇಕೆಂದೇ ಹೇಳಿದೆ.ಶ್ರುತ್ಯಾನುಸಾರಿಯಾದ ಸ್ಮøತಿಗಳೂ ಈ ಅಭಿಪ್ರಾಯವನ್ನು ಪುಷ್ಟೀಕರಿಸುತ್ತವೆ.ಜ್ಞಾನಾಂಗವಾಗಿ ಸ್ವೀಕರಿಸುವ ಸನ್ಯಾಸದಲ್ಲಿಶಮದಮಾದಿಗಳೂ,ಕತ೯ವ್ಯವಾಗಿ ಹೇಳಲ್ಪಟ್ಟಿವೆ.ಆದರೆದೇವತಾ-ಪಿತೃ-ಅಥಿತಿ -ಪೂಜಾದಿಗಳನ್ನಾಗಲೀ,ವೇದಾಧ್ಯಯನವನ್ನಾಗಲೀ ಸನ್ಯಾಸಿಗೆ ವಿಧಿಸಿರುವುದಿಲ್ಲ.ಇನ್ನು ಜ್ಞಾನವುಂಟಾದ ಬಳಿಕ ಪ್ರಾಪ್ತವಾಗು¸ವ ಸನ್ಯಾಸವು ವಿದ್ವತ್ ಸನ್ಯಾಸವು.ಜದು ತೆಗೆದುಕೊಳ್ಳತಕ್ಕದ್ದಲ್ಲ.ತಾನೇ ಆಗತಕ್ಕದ್ದು.ಅಂತೂ ವಿವಿದಿಷಾ-ವಿದ್ವತ್ ಎಂಬ ಎರಡು ಸನ್ಯಾಸಗಳೂ ಜ್ಞಾನಾಂಗವಾಗಿಯೂ ಜ್ಞಾನಪರಿಪಾಕಕ್ಕೆ ಅವಶ್ಯವಾಗಿಯೂ ಇದ್ದು ಮುಕ್ತಿಗೆ ಅವಕಾಶವನ್ನೊದಗಿಸುವವು.ಆದ್ದರಿಂದ ಇವು ಆಶ್ರಮಗಳಲ್ಲ.ಏಷಣಾತ್ಯಾಗರೂಪವಾಗಿರುವ ಇವು ಬ್ರಹ್ಮಜ್ಞಾನಕ್ಕೆ ಮೆಟ್ಟಿಲುಗಳಂತೆ ಇರುವವು.(ಪುಟ3)
4) ಹೀಗೆ ಶ್ರುತಿಗಳ ಮತ್ತು ಶಂಕರಭಾಷ್ಯಗಳ ಮಥನದಿಂದ ದೊರಕುವ ಸ್ಪಷ್ಟವಾದ ಅಭಿಪ್ರಯದಂತೆ
1)ಆಶ್ರಮರೂಪವಾದ ಪಾರಿವ್ರಾಜ್ಯವಾಗಲೀ 2)ಆಶ್ರಮಧಮ೯ಗಳ ಸಂಪಕ೯ವಿಲ್ಲದೆ ಕೇವಲ ಜ್ಞಾನಸಾಧನವಾದ ವಿವಿದಿಷಾ ಸನ್ಯಾಸವಾಗಲೀ3) ಜ್ಞಾನವು ಉಂಟಾದ ಬಳಿಕ ಅದರ ಪರಿಪಾಕಕ್ಕಾಗಿ ತ್ಗನಾಗಿಯೇ ಒದಗುವ ವಿದ್ವತ್ ಸನ್ಯಾಸವಾಗಲೀ,ಈ ಮೂರೂ ಶಾಸ್ತಹರ ¸ಸಮ್ಮತವಾದವು.(ಪುಟ4)
5)ಪ್ರಸ್ಥಾನತ್ರಯಗಳ ಭಾಷ್ಯಗಳಲ್ಲೆಲ್ಲಾ ಎಷ್ಟೇಶೋಧಿಸಿದರೂ, ಪರಮಹಂಸನಿಗೆ ಕತ೯ವ್ಯಗಳನ್ನು ವಿಧಿಸಿರುವುದು ಎಲ್ಲಿಯೂ ಕಂಡುಬರುವುದಿಲ್ಲ.ಒಂದು ವೇಳೆ ಕಮ೯ಗಳಿದ್ದರೆ ಅದು ಪರಮಹಂಸ ಪರಿವ್ರಾಜ್ಯವೇ ಅಲ್ಲ.ಏಕೆಂದರೆ ಜ್ಞಾನ-ಕಮ೯ಗಳಿಗೆ ಪರಸ್ಪರ ವಿರೋಧವಿರುವುದರಿಂದಜ್ಞಾನಿಗೆ ಕಮ೯ವು ಎಂದೂ ಇದ್ದುಕೊಂಡಿರಲು ಸಾಧ್ಯವಿಲ್ಲ.ಆದ್ದರಿಂದ ಪರಮಹಂಸನೆಂಬುವನು ಎಂದೆಂದೂ ಕಮಾ೯ತೀತನೇ ಆಗಿರಬೇಕು.-ಎಂಬಿದು ಶಂಕರ ಸಿದ್ಧಾಂತವು.(ಪುಟ 4)
6)ಭಗವದ್ಗೀತೆಯಲ್ಲಿ ಸನ್ಯಾಸ ವಿಚಾರ:
6)ಅಲ್ಲಿಯೂ ಪರಮಾಥ೯ ಸನ್ಯಾಸ ಅಥವಾ ವಿದ್ವತ್ ಸನ್ಯಾಸವನ್ನು, ನಿಷ್ಕ್ರಿಯನಾದ ಆತ್ಮನಲ್ಲಿ ನೆಲೆಗೊಳ್ಳುವುದು ಮಾತ್ರವೇ-ಎಂದು ವಣಿ೯ಸಲಾಗಿದೆ.ಸವ೯ಕಮ೯ ಸನ್ಯಾಸವೆಂದೂ ,ಸವ೯ಧಮ೯ ಪರಿತ್ಯಾಗವೆಂದೂ ,ನೈಷ್ಕಮ್ಯ೯ ಸಿದ್ಧಿ ಎಂದೂ ಅಲ್ಲಲ್ಲಿ ಸ್ತುತಿಸಿದೆ.(ಪುಟ 4)
7)ಜ್ಞಾನಿಗೆ ಏನೂ ಕತ೯ವ್ಯವಿಲ್ಲವೆಂಬುದನ್ನು 'ನೈವಕುಯ೯ನ್ ನಕಾರಯವನ್' 'ನೈವಕಿಂಚಿತ್ ಕರೋತಿಸಃ' ಎಂಬಿವೇ ಮೊಂತಾದ ವಾಕ್ಯಗಳಲ್ಲಿ ಸ್ಪುಟಗೊಳಿಸಲಾಗಿದೆ.ಆದ್ದರಿಂದ ಪರಮಹಂಸ ಸನ್ಯಾಸಿಗೆ ಯಾವಕತ೯ವ್ಯವೂ ಇರುವುದಿಲ್ಲ.ಇದು ಗೀತೆಗೂ ಸಮ್ಮತವಾಗಿದೆ.(ಪುಟ 4)
8)ಪರಮಾಥ೯ ಸನ್ಯಾಸ,ವಿದ್ವತ್ ಸನ್ಯಾಸ,ನೈಷ್ಕಮ್ಯ೯ ಸಿದ್ಧಿ,ಸಾಂಖ್ಯಬುದ್ಧಿ,ಜ್ಞಾನನಿಷ್ಠೆ-ಇವೆಲ್ಲ ಒಂದೇ ಅಥ೯ದ ಶಬ್ದಗಳೆಂದು ತಿಳಿಯಬೇಕು.(ಪುಟ 5)
೯)ಸನ್ಯಾಸ ಗ್ರಹಣವಿಧಿಯಂತೆ1) ಪ್ರೈಶೋಚ್ಛಾರ 2) ಅಭಯಪ್ರಧಾನ 3)ಕಾಷಾಯ ವಸ್ತ್ರದಂಡಾದಿ ಗ್ರಹಣ
4)ಗುರುಮುಖದಿಂದ ಪ್ರಣವೋಪದೇಶ 5)ಮಹಾವಾಕ್ಯೋಪದೇಶ ಇವೇ ಮುಂತಾದವುಗಳು.(ಪುಟ 5)
10) 'ಬ್ರಹ್ಮಸಂಸ್ಥ' ಎಂಬ ಶಬ್ದಕ್ಕೆ ವ್ಯಾಖ್ಯಾನ ಮಾಡುವಾಗ ಭಾಷ್ಯಕಾರರು'ಬ್ರಹ್ಮದಲ್ಲಿಯೇ ಪರಿಸಮಾಪ್ತಿಯನ್ನು ಹೊಂದುವಿಕೆ' ಎಂದರೆ 'ಬ್ರಹ್ಮಚಿಂತಬೆಯೊಂದನ್ನು ಹೊರತು ಬೇರೆಯ ಕತ೯ವ್ಯ ಇಲ್ಲದಿರುವಿಕೆ ಎಂದು ಬರೆದಿದ್ದಾರೆ.(ಪುಟ 5)
11)ಕತೃ೯ತ್ವಾದಿಗಳನ್ನು ಪೂಣ೯ವಾಗಿ ಸನ್ಯಾಸ ಮಾಡಿರುವ ಪರಮಹಂಸನಿಗೆ ಯಾವ ವಿಧಿನಿಷೇಧಗಳೂ ಅನ್ವಯಿಸುವುದಿಲ್ಲ ಎಂದೇ ಬರೆದಿರುತ್ತಾರೆ.(ಪುಟ 5)
12)ಆದ್ದರಿಂದಬ್ರಹ್ಮಸಂಸ್ಥನಾಗಿರುವುದು,ಓಂಕಾರವನ್ನು ಜಪಿಸುವುದು,ಯಮನಿಯಮಾದಿ ಸಂಪನ್ನನಾಗಿರುವುದು,ಬ್ರಹ್ಮಚಯ೯ನಿಷ್ಠನಾಗಿರುವುದು-ಇವುಗಳನ್ನು ಬಿಟ್ಟರೆ ದಂಡಧಾರಣಾದಿಗಳು ಯಾವುವನ್ನೂ, ವಿವಿದಿಷಾ ಸನ್ಯಾಸಿಗೂ ಕೂಡ ವಿಧಿಸಿರುವುದರ ಪರಾಮಶ೯ವು ಕಂಡುಬರುವುದಿಲ್ಲ..ಪರಮಹಂಸನಿಗಂತೂ ಇರುವುದೇ ಇಲ್ಲ ಎಂದು ತಿಳಿದುಬಂದಿದೆ.(ಪುಟ 6)
ಸನ್ಯಾಸದ ವಿಷಯದಲ್ಲಿ ಸೃತಿವಾಕ್ಯಗಳು:
13)ಈಗ ಸ್ಮøತಿಗಳಲ್ಲಿ ಸನ್ಯಾಸ ಧಮ೯ದ ವಿಷಯಕ್ಕೆ ದೊರಕಬಹುದಾದ ವಿಚಾರಗಳನ್ನು ನೋಡಬಹುದು.ಅರುಣಿಕೋಪನಿಷತ್ತು,ಪರಮಹಂಸೋಪನಿಷತತು,ನಾರದ ಪರಿವ್ರಾಜಕೋಪನಿಷತ್ತು,ಮುಂತಾದ ಕೆಲವು ಉಪನಿಷತ್ತುಗಳಲ್ಲಿ ತುರೀಯಾಶ್ರಮದ ಪರಾಮಶ೯ವೂ,ದಂಡಧಾರಣದ ವಿಷಯವೂ ಕಂಡುಬಂದಿದೆ.(ಪುಟ 6)
14)ಸ್ಮøತಿಗಳಲ್ಲಿ ವಸಿಷ್ಠಸ್ಮøತಿ,ದಕ್ಷಸ್ಮøತಿ,ಲಘು ವಿಷ್ಣುಸ್ಮøತಿ,ಶಂಖಸ್ಮøತಿ,ಬೋಧಾಯನ ಧಮ೯ಸೂತ್ರ-ಮುಂತಾದವುಗಳಲ್ಲಿ ದಂಡಧಾರಣೆಯ ವಿಷಯಕ್ಕೆ ಪ್ರಮಾಣವಾಕ್ಯಗಳು ಸಿಗುತ್ತವೆ.(ಪುಟ 6)
15)ಸನ್ಯಾಸಿಯನ್ನು ದಂಡಧಾರಣೆ ಮಾಡಿಕೊಂಡೇ ಲೋಕೋಪಕಾರ ಮಾಡಬೇಕೆಂದು ನಿಯಮಿಸಲು ಬರುವುದಿಲ್ಲ.(ಪುಟ 7)
16)ಗುರೂಪದೇಶ ವಿಚಾರ:ಈವಿಷಯದಲ್ಲಿ ಯಾವ ಮತಭೇದವೂ ಇರುವುದಿಲ್ಲ..ಇದು ಎಲ್ಲರಿಗೂ ಒಪ್ಪಿತ.(ಪುಟ7)
17)ಮಹಾವಾಕ್ಯ ವಿಚರ:ಮಹಾವಾಕ್ಯಗಳು ಜೀವ ಪರಬ್ರಹ್ಮರ ಐಕ್ಯವನ್ನು ಹೇಳುತ್ತವೆ.ಅವುಗಳನ್ನು ಜಪಕ್ಕಾಗಿ ಉಪಯೋಗಿಸುವುದು ಎಂದಿಗೂ ಸರಿಯಲ್ಲ.ಇದು ಉಪನಿಷತ್ ಸಿದ್ಧಾಂತಕ್ಕೆ ವಿರುದ್ಧವಾಗುತ್ತದೆ.ಪುಟ 8)
18)ಆದ್ದರಿಂದ ಪರಮಹಂಸನಿಗೆ ಮಹಾವಾಕ್ಯ ಜಪವು ಕತ೯ವ್ಯವೆಂದು ಹೇಳುವುದು ಯಾವರೀತಿಯಿಂದಲೂ ಸಮಂಜಸವಾಗಿ ಕಾಣುತ್ತಿಲ್ಲ.(ಪುಟ 8)
ಹೆಸರಿಡುವಿಕೆ(ಯೋಗಪಟ್ಟ):
1೯)1೯)ಮಹಾವಾಕ್ಯೋಪದೇಶದ ನಂತರ ಸನ್ಯಾಸಿಗಳಿಗೆ ಹೊಸ ಹೆಸರನ್ನಿಟ್ಟು ಗಿರಿ-ತೀಥ೯-ಅರಣ್ಯಮುಂತಾಸ ದಶನಾಮಗಳೊಂದನ್ನು ಜೋಡಿಸಿ ವ್ಯವಹರಿಸುವ ಪದ್ಧತಿಯಿದೆ.ಇದನ್ನು ಯೋಗಪಟ್ಟವೆಂದು ಕರೆಯುತ್ತಾರೆ.ಒಂಕಾರೋಪದೇಶವನ್ನು ಕಮ೯ಶೇಷವಾಗಿ ಮಾಡುವುದು, ಜೀವೇಶ್ವರೈಕ್ಯ ವಾಕ್ಯಗಳನ್ನು ಮಹಾವಾಕ್ಯಗಳೆಂದು ಕರೆಯುವುದು,ಮತ್ತು ಅವುಗಳನ್ನು ಜಪ¸ದಲ್ಲಿ ತೊಡಗಿಸುವುದು,ಸನ್ಯಾಸಿಗೆ ದಂಡ,ಕಮಂಡಲು,ನಾಮ ನಿದೇ೯ಶಗಳ ಬಗ್ಗೆ ಅಗ್ರಹ ಪಡಿಸುವುದು ಇವುಗಳು ಸಲ್ಲದೆಂದು ಹೇಳಬೇಕಾಗಿದೆ.(ಪುಟ8)
ಪಾರಿವ್ರಾಜ್ಯ ದ್ವಯ:
20)ಏಕೆಂದರೆ ವಿದ್ವಾಂಸನು ಕೃತಕೃತ್ಯನೂ ಜ್ಞಾನಿಯೂ ಆಗಿರುವುದರಿಂದ, ಅವನಿಗೆ ಮನೋನಾಶಾದಿ ಕತ೯ವ್ಯಗಳಿರುವವು -ಎಂಬುದು ಹೊಂದುವುದಿಲ್ಲ.ವಿದ್ವಾಂಸನಾದರೆ ಕತ೯ವ್ಯ ಶೇಷವೇ ಇರುವುದಿಲ್ಲ.ಕತ೯ವ್ಯ ಶೇಷವು ಉಳಿದಿದ್ದರೆ ಅವನು ಜ್ಞಾನಿಯೇ ಅಲ್ಲ.-ಎಂದೇ ಶಂಕರಾಚಾಯ೯ರು ತಮ್ಮ ಭಾಷ್ಯಗಳಲ್ಲಿ ಸ್ಪಷ್ಟಗೊಳಿಸಿರುತ್ತಾರೆ.ವಿವಿದಿಷಾ ಸನ್ಯಾಸಿಯಾದರೆ ಅವನ ಹೆಸರೇ ತಿಳಿಸುವಂತೆ ಬ್ರಹ್ಮಜಿಜ್ಞಾಸೆಯಲ್ಲಿ ಅವನು ಅಧಿಕೃತನೇ ಆಗಿರುತ್ತಾನೆ.ಅವನು ಸಾಧನ ಚತುಷ್ಟಯ ಸಂಪನ್ನನೂ ಆಗಿರಲೇ ಬೇಕು -ಎಂದು ಭಾಷ್ಯಕಾರರು ತಿಳಿಸಿದ್ದಾರೆ.ಆದ್ದರಿಂದ ವಿವಿದಿಷಾ ಸನ್ಯಾಸಿಗೆ ಕತ೯ವವೆಂದರೆ
ಬ್ರಹ್ಮಜಿಜ್ಞಾಸೆ,,ತದ್ವಿಚಾರಾನು ಸಂಧಾನಗಳನ್ನು ಮಾತ್ರ ಹೇಳಬಹುದು.(ಪುಟ ೯)
21)ಬ್ರಹ್ಮನಿಷ್ಠನಾಗಿರುವುದೊಂದೇ ವಿದ್ವತ್ ಸನ್ಯಾಸಿಯ ಲಕ್ಷಣವು.(ಪುಟ ೯)
ಸನ್ಯಾಸ ಧಮ೯ ವಿಚಾರ:
22)ಯತಿಯಾದವನು ಶಾಸ್ತನಿಷಿದ್ಧವಾದ ಆಚಾರಗಳನ್ನು ಕೈಬಿಟ್ಟು ಜ್ಞಾನಸಾಧನವಾಗಿರುವ ಪ್ರಶಸ್ತವಾದ ಸಮಾಚಾರಗಳನ್ನು ಮಾತ್ರ ಅನುಷ್ಠಾನ ಮಾಡಬೇಕೆಂಬುದು ಸಾಮಾನು ನಿಯಮವಾಗಿದೆ.
23) ಗುರುವನ್ನು ಬಳಿಸಾರಿ ನಿರಂತರವಾಗಿ ಅವನನ್ನು ಸೇವಿಸುತ್ತಾ ಅವನ ಲಕ್ಷಣಗಳನ್ನು ಅನುಕರಣೆ ಮಾಡುತ್ತಾ,ಅವನನ್ನೇ ಆರಾಧಿಸುತ್ತಾ,ಜ್ಞಾನಸಾಧನಾನುಷ್ಠಾನಗಳನ್ನು ನಡೆಸಬೇಕು.ಶ್ರವಣ,ಮನನ,ನಿದಿ ಧ್ಯಾಸನಗಳು ಬಹು ಮುಖ್ಯವಾದ್ದರಿಂದ ಅವುಗಳನ್ನು ಅವಶ್ಯವಾಗಿ ಕೈಗೊಳ್ಳಲೇಬೇಕು.(ಪುಟ೯)
ದೈನಂದಿನ ಕತ೯ವ್ಯ ವಿಚಾರ:
24)ಪರಮಹಂಸ ಸನ್ಯಾಸದಲ್ಲಿ ವಿದ್ವತ್ ಸನ್ಯಾಸಿಯು ವಿಧಿನಿಷೇಧಗಳನ್ನು ಮೀರಿದವನಾದ್ದರಿಂದ, ಅವನನ್ನು ಯಾವಶಾಸ್ತ್ರವೂ ಕಟ್ಟುಪಾಡಿಗೆ ಒಳಪಡಿಸಲಾರದು.ಆದರೆ ಅವನೇನೂ ಸ್ವೇಚ್ಛೇಚಾರ ಪ್ರವೃತ್ತಿಯವನಾಗಿರುವುದಿಲ್ಲ.(ಪುಟ 10)
25)ವಿವಿದಿಷಾ ಸನ್ಯಾಸಿಯ ಕತ೯ವ್ಯಗಳು:
ಭಿಕ್ಷಾಟನಂ ತಪೋಧ್ಯಾನಂ ಸ್ನಾನಂ,ಶೌಚಂ ಸುರಾಚ೯ನಂ|
ಕತ೯ವ್ಯಾನಿ ಷಡೇತಾನಿ ಯತೀನಾಂ ನೃಪದಂಡವತ್||
ಎಂದು ನಾರದ ವಚನವೊಂದು ಹೇಳಿದೆ.
26)ಮಹಾ ಮಂತ್ರಗಳನ್ನು ಮಾತ್ರ ಜಪ ಮಾಡತಕ್ಕದ್ದಲ್ಲ.ದೇವತಾಚ೯ನೆಯೂ ಸನ್ಯಾಸಿಗೆ ಹೊಂದುವುದಿಲ್ಲ.ಏಕೆಂದರೆ ಪೂಜಾಸಾಮಗ್ರಿಗಳನ್ನು ಹೊಂದಿಸಿಕೊಳ್ಳುವುದೇ ಮುಂತಾದವು ಚಿತ್ತವಿಕ್ಷೇಪಕ್ಕೆ ಕಾರಣವಾಗಿದ್ದುಅದ್ವೈತಾನು ಸಂಧಾನಕ್ಕೆ ಕಾರಣವಾಗುವುದು.ಸಂಕಲ್ಪಾದಿಗಳು,ಅದೃಷ್ಟಫಲ ನಿರೀಕ್ಷೆ-ಇವು ಸನ್ಯಾಸಿಗೆ ತ್ಯಾಜ್ಯಗಳಾಗಿವೆ. (ಪುಟ 10)
27)ಆದ್ದರಿಂದ ಸ್ನಾ£,ಶೌಚ,ಪ್ರಾತಃಸ್ಮರಣ,ಗುರುವಂದನೆ,ಜಪ,ಪ್ರಣವಾನುಸಂಧಾನ,ಧ್ಯಾನ,ವಿಚಾರ-ಇವುಗಳು ಕತ೯ವ್ಯಗಳೆಂದು ಹೇಳಬಹುದಾಗಿದೆ.(ಪುಟ 10)
28) ಭಿಕ್ಷೆ ಎಂದರೆ ಮಾಧೂಕರ(ಮಧುಕರಿ ಇರಲಾರದು?),ಪ್ರಾಕ್ಪ್ರಣೀತ(ಪ್ರಾಕ್ ಪ್ರಣೀತ),,ಅಯಾಚಿತ,ತಾತ್ಕಾಲಿಕ,ಉಪಪನ್ನ-ಎಂಬ ಐದು ವಿಧಗಳಲ್ಲಿ ಯಾವುದನ್ನಾದರೂ ಮಧ್ಯಾನ್ಹದ ವೇಳೆಯಲ್ಲಿ ಮಾತ್ರ ಮಾಡಬೇಕು.(ಪುಟ 10)
2೯)ಚಾತುವ೯ಣ್ಯಗಳಲ್ಲಿಯೂ ಬಿಕ್ಷೆ ಬೇಡುವುದು,ಸಂಜೆಯೂ ಭಿಕ್ಷೆ ಬೇಡುವುದು-ಇವು ಆಪದ್ಧಮ೯ಗಳಾಗಿ ಮಾತ್ರ ಹೇಳಲ್ಪಟ್ಟಿವೆ.(ಪುಟ 10)
30)ಮಣ್ಣು ಅಥವಾ ಮರದ ಪಾತ್ರೆಗಳನ್ನು ಮಾತ್ರ ಉಪಯೋಗಿಸಬೇಕು.ಇದು ಸನ್ಯಾಸಿಗೆ ತಕ್ಕದ್ದಾಗಿರುವುದು.ಆದರೆ ಈಗ ಆಚರಣೆಯಲ್ಲಿರುವಂತೆ ಗೃಹಸ್ಥನಾದವನು ಬೆಳಿಗ್ಗೆಯೇ ಬಂದು ನಮಸ್ಕರಿಸಿ ಭಿಕ್ಷಾವಂದನೆ ಮಾಡಿ ಸನ್ಯಾಸಿಗಳನ್ನು ಊಟಕ್ಕೆ ಕರೆಯುವ ಪದ್ಧತಿಯು ಶಾಸ್ತ್ರಾಧಾರವಿಲ್ಲದ್ದಾಗಿದೆ.(ಪುಟ11)
31)ಗುರು ಶುಶ್ರೂಷೆಯು ಕತ೯ವ್ಯವೇ ಆಗಿರುವುದು.ಭಿಕ್ಷೆಯ ನಂತರ ಸ್ಮøತಿ ಪುರಾಣಗಳ ಅವಲೋಕನ,ಶ್ರದ್ಧಾಲುವಾದ ಗೃಹಸ್ಥರು ಕೇಳಬಹುದಾದ ಪ್ರಶ್ನೆಗಳಿಗೆ ಉತ್ತರಿಸುವುದು-ಇವುಗಳಿಂದ ಕಾಲಯಾಪನೆ ಮಾಡಬೇಕು.ಸಾvಂಕಾಲ ಮತ್ತೆ ಸ್ನಾನ,ಜಪ,ಪ್ರಣವಾದಿಗಳನ್ನು ಮಾಡಿ ಗುರುವು ಮಲಗಿದಮೇಲೆ ತಾನೂ ಮಲಗಬೇಕು.(ಪುಟ 11)
ದೇಶ ಸಂಚಾರ:
32)ಗುರುವಿನ ಸಮೀಪದಲ್ಲಿರುವಾಗ ಶ್ರವಣಾದಿಗಳನ್ನು ಮಾಡಿ ಆತ್ಮಜ್ಞಾನ ಪಾಂಡಿತ್ಯವನ್ನು ಸಂಪಾದಿಸಿಕೊಂಡ ಮೇಲೆ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಸಂಚಾರಮಾಡುತ್ತಿರುವುದೂ ಯತಿಧಮ೯ ವಾಗಿದೆ.(ಪುಟ11)
33)ಒಂದೇ ಜಾಗದಲ್ಲಿ ಬಹಳದಿನಗಳು ಇರಬಾರದು.ಮಳೆಗಾಲದಲ್ಲಿ ಮಾತ್ರ ಒಂದೇ ಕಡೆ ನೆಲೆಸಬೇಕು.ಆಪತ್ಕಾಲದಲ್ಲಿ ಒಂದೇ ಕಡೆ ನೆಲಸಬಹುದು.ತನ್ನನಾಮಗೋತ್ರಗಳನ್ನಾಗಲೀ ದೇಶವನ್ನಾಗಲೀ ಯಾರಿಗೂ ತಿಳಿಸಬಾರದು.ಮೂಕಾಂಧ ಬಧಿರರಂತೆ
-ಎಂದರೆ ಸಾಧ್ಯವಾದಷ್ಟೂ ಜನಗಳಲ್ಲಿ ಬೆರೆಯದೆ,ವ್ಯವಹಾರವನ್ನು ಅಂಟಿಸಿಕೊಳ್ಳದೆಇದ್ದು ಕೊಂಡಿರಬೇಕು.(ಪುಟ 11)
34)ಎಲ್ಲರಿಗೂ ಹಿತವನ್ನು ಕೋರುತ್ತಾ ಎಲ್ಲೆಲ್ಲಿಯೂ ಮೈತ್ರಿಯುಳ್ಳವನಾಗಿರಬೇಕು.(ಪುಟ 11)
ವ್ಯಾಸಪೂಜಾನುಷ್ಟಾನ:
35)ಗೌತಮಧಮ೯ಸೂತ್ರದಲ್ಲಿ ಹೇಳಿರುವಂತೆ ಮಳೆಗಾಲಲ್ಲಿ ಸಂಚಾರಿಯು ಸಂಚಾರಮಾಡದೆ ಒಂದೇಕಡೆಯಲ್ಲಿ ವಾಸಿಸಬೇಕು.ಆಗ ವ್ಯಾಸಪೂಜೆಯನ್ನೂ ಮಾಡಬೇಕು.ಆಷಾಢ ಶುಕ್ಲಹುಣ್ಣಿಮೆಯದಿನ ವ್ಯಾಸರೂಪನಾದ ನಾರಾಯಣನನ್ನು ಪೂಜಿಸಬೇಕು.(ಪುಟ 11)
36) ಬ್ರಹ್ಮನಿಷ್ಠೆಯ ಸಿದ್ಧಿಗಾಗಿಯೇ ಪರಮಹಂಸಪಾರಿವ್ರಾಜ್ಯವನ್ನು ಸ್ವೀಕರಿಸುವವನಿಗೆ ವೇದಾಂತಚಿಂತನೆಯ ಹೊರತು ಮತ್ತೆ ಯಾವ ಬಹಿರಂಗ ಸಾಧನಗಳೂ ಹೊಂದಲಾರವು.(ಪುಟ12)
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
(ಈ ಮೇಲ್ಕಂಡ ವಿಷಯಗಳನ್ನು ಈ ಉದ್ಗ್ರಂಥದ ಶ್ರೀ ಹೆಚ್,ಎಸ್.ಲಕ್ಮೀನರಸಿಂಹಮೂತಿ೯ ಯವರಮುನ್ನುಡಿಯಿಂದತೆಗೆದುಕೊಳ್ಳಲಾಗಿದೆ)
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
ಹಿನ್ನುಡಿ:(ಶ್ರೀ ದೇವರಾಯಕುಲಕಣಿ೯ಯವರಿಂದ):
1)ಶ್ರೀಗೌಡಪಾದಕಾರಿಕೆಗಳು ಶ್ರೀ ಶಂಕರಾಚಾಯ೯ರ ಪ್ರಸ್ಥಾನತ್ರಯ ಭಾಷ್ಯಗಳು,ಉಪದೇಶಸಾಹಸ್ರಿ,ಸುರೇಶ್ವರಾಚಾಯ೯ರ ಬೃಹದಾರಣ್ಯಕ ,ತೈತ್ತಿರೀಯವಾತಿ೯ಕ ಮತ್ತು ನೈಷ್ಕಮ್ಯ೯ ಸಿದ್ಧಿ-ಈ ಸಾಪ್ರದಾಯಿಕ ಗ್ರಂಥಗಳಲ್ಲಿ ಏಕಕಂಠದಿಂದ ನಿರೂಪಿಸಿರುವ ಅದ್ವೈತ ತತ್ವವೇ "ಪರಿಶುದ್ಧ ಶಂಕರಾದ್ವೈತ ವೇದಾಂತವು.
2)ವೇದಾಂತದ ಅಧ೯ಭಾಗವು ತಕ೯ಕ್ಕೂ ಇನ್ನಧ೯ವು ಪಾತಂಜಲ ಯೋಗಕ್ಕೂ ಹಂಚಿಹೋದ ಬಳಿಕ ವೇದಾಂತವು ಸತ್ತೇಹೋಯಿತೆನ್ನುವ ಪರಿಸ್ಥಿತಿ ಈಗ ಉಂಟಾಗಿದೆ.(ಪುಟ14)
3)ಬೃಹದಾರಣ್ಯಕವುಈರೀತಿ ಹೇಳುತ್ತದೆ."ಎಲ್ಲಿ ಇದೆಲ್ಲವೂ ಆತ್ಮನೇ ಆಗಿರುವುದೋ ಅಲ್ಲಿ ಯಾವನು ಏತರಿಂದ ಏನನ್ನು ನೋಡಿಯಾನು?ಕೇಳಿಯಾನು?ಇತ್ಯಾದಿ."ಎಲ್ಲಿದ್ವೈತವಿರುವಂತೆ ತೋರುವುದೋಅಲ್ಲಿ ಯಾವನು ಏತರಿಂದ ಏನನ್ನುತಾನೇ ನೋಡಿಯಾನು?""ಎಲ್ಲಿ ದ್ವೈತವಿರುವಂತೆ ತೋರುವುದೋ ಅಲ್ಲಿ ಇನ್ನೊಂದನ್ನು ಇನ್ನೊಂದರಿಂದ ನೋಡುತ್ತಾನೆ."ಕೇಳುತ್ತಾನೆ ಮುಟ್ಟುತ್ತಾನೆ ಇತ್ಯಾದಿ.ಇದರಿಂದ ದ್ವೈತ ವ್ಯವಹಾರವು ಇರುವುದೇ ಅಜ್ಞಾನಾವಸ್ಥೆಯೆಂದೂ ದೈತವ್ಯವಹಾರವು ಇರುವುದೇ ಅಜ್ಞಾನಾªಸ್ಥೆಯೆಂದೂ ದ್ವೈತವ್ಯವಹಾರವು ಇಲ್ಲವಾಗುವುದೇ ಜ್ಞಾನದ ಫಲವೆಂದೂ ಗೊತ್ತಾಗುತ್ತದೆ.ಸಾಮಾನ್ಯನಿಗೆ ಗಾಢನಿದ್ರೆಯಲ್ಲಿ ದ್ವೈತಪ್ರಪಂಚವು ಕಾಣುವುದಿಲ್ಲ.ಎಚ್ಚೆತ್ತಾಗ ಪ್ರಪಂಚವು ಕಾಣುತ್ತದೆ.(ಪುಟ 17)
4)ಜ್ಞಾನಾನ ವ್ಯವಹಾರಕ್ಕೆ ಅತೀತವಾದ ಕೇವಲ ಚಿನ್ಮಾತ್ರನೇ ಎಂದೆಂದಿಗೂ ತಾನಾಗಿದ್ದೇನೆ ಎಂಬ ಅನುಭವವು ಬರುವುದು.(ಪುಟ 1೯)
5)ಆತ್ಮವಿಜ್ಞಾನದಿಂದ ದ್ವೈತವೆಲ್ಲವೂ ಬಾಧಿತವಾದಾಗ ಕೇಚಲಾತ್ಮನೇ ಉಳಿದಿರುವ ಅನುಭವ ವಿಶೇಷವನ್ನೇ ಈ ಶೃತಿಯು ವಣಿ೯ಸುತ್ತದೆ.(ಪುಟ 1೯)
6)ಶ್ರೀ ಶಂಕರರ ಭಾಷ್ಯದ ಪ್ರಕಾರ ಜೀವನ್ಮುಕ್ತಿಯೇ ಮುಖ್ಯಮುಕ್ತಿ.ವಿದೇಹ ಮುಕ್ತಿಯು ಗೌಣ.(ಪುಟ 1೯)
7)ಬ್ರಹ್ಮ ವಿಜ್ಞಾನದಿಂದ ದ್ವೈತವು ಬಾಧಿತವಾಗುವುದನ್ನೇ ಅತ್ಯಂತಿಕ ಪ್ರಳಯ ಎಂದಿದೆ.(ಪುತ20)
8)ಆದ್ದರಿಂದ ಶಾಸ್ತ್ರಗಳಿಂದ ಉಪದೇಶಿಸಲ್ಪಟ್ಟ ಈ ಬ್ರಹ್ಮವೇ ತಾನಾಗಿರುವೆನೆಂದು ಅರಿವು ಮೂಡಿದೊಡನೆಯೇ ಈ ಮೊದಲು ಅವಿದ್ಯಾ ಸ್ವಭಾವದಲ್ಲಿರುವಾಗ ಇದ್ದ 'ನಾನು ಶರೀರವುಳ್ಳವನು' ಎಂಬ ರೂಪದ ತಪ್ಪು ತಿಳುವಳಿಕೆಯು ಹಗ್ಗವನ್ನರಿತ ಬಳಿಕ ಹಿಂದೆ ಇದ್ದ ಹಾವು ಎಂಬ ಬುದ್ಧಿಯು ಬಾಧಿತವಾಗುವಂತೆಬಾಧಿತವಾºಗಿ ಬಿಡುತ್ತದೆ.ಹೀಗೆ ನಾನು ಶರೀರವುಳ್ಳವನು (ಜೀವನೂ ಎಂಬ ಬುದ್ದ್ಯು ಬಾಧಿತವದೊಡನೆಯೇ ಅದರ ಆಧಾರದ ಮೇಲೆ ನಡೆದಿದ್ದ ಎಲ್ಲ ಅವಿದ್ಯಾ ಸ್ವಭಾವದ ವ್ಯವಹಾರವೂ ಬಾಧಿತವಾಗಿಯೇ ಬಿಡುತ್ತದೆ.(ಪುಟ 21)
೯)
ಮೋಕ್ಷಕ್ಕೆ ನಿದ್ರೆಯು ದೃಷ್ಟಾಂತಾತ್ಮಜ್ಞಾನವು ದಾಷ್ಟಾ೯ತಿಕೆ. ಎಂಬುದೂ ಹೊಂದುತ್ತದೆ.(ಪುಟ 22)
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
ಪ್ರವೇಶಿಕೆ:
1) ಭಗವಾನ್ ದತ್ತಾತ್ರೇಯರು ತಮ್ಮ ಅವಧೂತ ಗೀತೆಯಲ್ಲಿ ಈರೀತಿ ಹೇಳಿರುತ್ತಾರೆ.
ತ್ವದಾತ್ರಯಾ ವ್ಯಾಪಕತಾ ಹತಾತೇ
ಧ್ಯಾನೇನ ಚೇತಃಪರತಾ ಹತಾತೇ|
ಸ್ತುತ್ಯಾ ಮಯಾ ವಾಪ್ಪರತಾ ಹತಾತೇ
ಕ್ಷಮಸ್ವ ನಿತ್ಯಂ ತ್ರಿವಿಧಾಪರಾಧಾನ್||
ಹೇ,ಭಗವಂತನೆ ನಿನ್ನ ಕ್ಷೇತ್ರಗಳಿಗೆ ಯಾತ್ರೆ ಮಾಡುವುದರಿಂದ ನಿನ್ನ ಸವ೯ವ್ಯಾಪಕತೆಗೆ ಹಾನಿಯಾಯಿತು.ನಿನ್ನ ಧ್ಯಾನದಿಂದ,ನೀನು ಮನಸ್ಸಿಗೆ ನಿಲುಕದವನೆಂಬ ಜ್ಞಾನಕ್ಕೆ ಬಾಧೆಯಾಯಿತು.
ನಿನ್ನನ್ನು ಸ್ತ್ರೋತ್ರ ಮಾಡುವುದರಿಂದ ನೀನು ವಾಕ್ಕನ್ನು ಮೀರಿದವನೆಂಬ ಅರಿವಿಗೆ ಅಡ್ಡಿಯಾಯಿತು.
ಈ ಮೂರು ಅಪರಾಧಗಳನ್ನು ಮನ್ನಿಸು.(ಪುಟ25)
2)ಆತ್ಮನ್ನು ವಿವೇಕದಿಂದ (ವಸ್ತು ತಂತ್ರವಾಗಿ ,ಅನುಭವದಲ್ಲಿ) ಕಂಡುಕೊಳ್ಳಬೇಕು.(ಪುಟ 26)
3)ಈ ವಿಜ್ಞಾನವು ನಾವು ಆತ್ಮವಸ್ತುವುಹೇಗಿದೆಯೋ ಹಾಗೆಯೇ, ಚೈತನ್ಯ ಮಾತ್ರ ಸ್ವರೂಪವೆಂದುವಸ್ತುವಿಗಣುಗುಣವಾಗಿ(ವಸ್ತುತಂತ್ರವಾಗಿ)ಕಂಡುಕೊಳ್ಳಬೇಕಾದ ವಿವೇಕದ ಫಲವೇ ಹೊರತು ಉಪಾಸನೆಯಂತೆ ಶಾಸ್ತ್ರವಿಧಿಯನ್ನನುಸರಿಸಿ ವಸ್ತುತಂತ್ರವಾಗಿ ಮಾಡಿಕೊಳ್ಳಬೇಕಾದ ಭಾವನೆಯ ಫಲವಲ್ಲ .
4)ಸಂಜೆಗತ್ತಲೆಯ ಮಂದವಾದ ಬೆಳಕಿನಲ್ಲಿ ಹಗ್ಗವನ್ನು ಹಾವೆಂದು ಭ್ರಮಿಸಿ ಭಯದಿಂದ ದೂರ ಓಡುತ್ತೇವೆ.ಅದು ಹಗ್ಗವೇ ಹೊರತು ಹಾವಲ್ಲ ಎಂಬ ನಿಶ್ಚಯ ಜ್ಞಾನವುಳ್ಳ ಆಪ್ತರು ಬೆಳಕನ್ನು ತಂದು ಹಗ್ಗವನ್ನು ತೋರಿಸಿದಾಗ ನಮ್ಮ ಭಯವು ತೊಲಗಿ ಸ್ವಸ್ಥರಾಗುತ್ತೇವೆ.ಇದು ಲೋಕದಲ್ಲಿ ಎಲ್ಲರ ಅನುಭವವಾಗಿದೆ.ಈ ದೃಷ್ಟಾಂತದಲ್ಲಿ -ನಿಜವಾಗಿರುವುದು ಹಗ್ಗ.ಇಲ್ಲದಿದ್ದರೂ ಇದ್ದಂತೆ ತೋರುವುದು ಹಾವು.ಈ ಹುಸಿತೋರಿಕೆಯೇ ಮಾಯೆ.ಇದಕ್ಕೆ ಕಾರಣ ನಾವು ಹಗ್ಗವನ್ನು ಅರಿಯದಿರುವುದೇ.ಆದ್ದರಿಂದ ಅರಿಯದ ಹಗ್ಗವನ್ನು ನಾವು ಹಾವೆಂದು ತಪ್ಪಾಗಿ ತಿಳಿಯುತ್ತಿದ್ದೇವೆ.ಈ ಅರಿಯದಿರುವುದೆಂಬುದೇ ಅಜ್ಞಾನ ಅಥವಾ ಅವಿದ್ಯೆ ಅಥವಾ ಅಗ್ರಹಣ.(ಜ್ಞಾನಾಭಾವ).ಇದರಿಂದ ಉಂಟಾಗುವ ತಪ್ಪು ತಿಳುವಳಿಕೆಯೇ ಅಧ್ಯಾಸ ಅಥವಾ ವಿಪರೀತ ಪ್ರತ್ಯಯ.(ವಿಪರೀತ ಜ್ಞಾನ,ಅನ್ಯಥಾ ಜ್ಞಾನ)ಸ
ಪುಡ 27)
5) ಈ ಅಗ್ರಹಣ ಮತ್ತು ಅಧ್ಯಾಸ (ಸಂಶಯವೂ ಸಹ) ಜ್ಞಾನಪಕ್ಷದಲ್ಲಿ (ಸುಬಜೆಚತಿವೆ) ತೋರಿಕೊಳ್ಳು ಮನೋವೃತ್ತಿಗಳು.ನಾಮರೂಪವಾದ ಹುಸಿತೋರಿಕೆಯು ಮಾತ್ರ ಜ್ಞೇಯಪಕ್ಷದಲ್ಲಿ (ಒಬಜೆಚತಿವೆ) ತೋರಿಕೊಳ್ಳುವ ವಾಕೃತ(ಎಷಪರೆಸಸೆದ,ಮನಿಸತ) ಮಯೆ(ಪುಟ27).
6) ಈ ಸರಿಯಾದ ತಿಳುವಳಿಕೆಯು (ಸಮ್ಯಗ್ಞಾನದ) ಹೊರತು ,ಬೇರೆ ಜಪತಪಾದಿ ಸಾಧನಗಳಾಗಲೀ ,ಭಾವನಾಮಯವಾದ ಉಪಾಸನೆಯಾಗಲಿ, ನಿಜವಾದ ಸಾಧನೆ ಯಾಗಲಾರದೆಂಬುದು ಸ್ಪಷ್ಟವಾಹಿದೆ.(ಪುಟ 27)
8)ಹಗ್ಗದ ಸ್ಥಾನದಲ್ಲಿ ಆತ್ಮವಸ್ತುವಿದೆ.ಸಪ೯ದ ಸ್ಥಾನದಲ್ಲಿ ನಾನು ಮತ್ತು ಈ ಪ್ರಪಂವಿದೆ.(ಪುಟ 27)
೯)ಮರೀಚಿಕೆಯಂತೆ (ಮಿರೇಜ್) ನಾನು ಎಂಬುದೂ ಪ್ರಪಂಚವೂ ತೋರುತ್ತಿದ್ದರೂ ಇವು ಸತ್ಯವೆಂದು ಮತ್ತೆಂದೂ ಸತ್ಯವೆಂದು ಭ್ರಮಿಸದೆ,ಚಿದಾನಂದ ಸ್ವರೂಪ ಆತ್ಮವೊಂದೇ ಸತ್ಯವೆಂಬ ಅರಿವಿನಲ್ಲಿ ನೆಲೆಯಾಗಿ ನಿಂತಿರುವುದೇ ಜ್ಞಾನನಿಷ್ಠೆ.(ಪುಟ 28)
10)ಸಾಧನ ನಿರಪೇಕ್ಷವಾಗಿಯೇ ಬ್ರಹ್ಮವಿದ್ಯೆಯು ಮೋಕಗಷವೆಂಬ ಪುರುಷಾಥ೯ಕ್ಕೆ ಸಾಧನವಾಗಿರುತ್ತದೆ.ಆದ್ದರಿಂದ ಎಲ್ಲಾ ಸಾಧನೆಗಳನ್ನೂ ಬಿಡುವುದೆಂಬ ಪಾರಿವ್ರಾಜ್ಯ(ಸನ್ಯಾಸ)ವನ್ನು ಬ್ರಹ್ಮವಿದ್ಯೆಗೆ ಅಂಗವಾಗುಇ ವಿಧಿಸಬೇಕೆಂದು ಈ ಉಪನಿಷದ್ ಬ್ರಾಹ್ಮಣವು ಹೊರಟಿರುತ್ತದೆ.ಸನ್ಯಾಸ ಸಹಿತವಾದ ಜ್ಞಾನನಿಷ್ಠೆಯೇ ಮೋಕ್ಷಕ್ಕೆ ಸಾಧನವೆಂದು ಇದರಿಂದ ಸಿದ್ಧವಾಗುತ್ತದೆ.(ಪುಟ 2೯)
11)ಜ್ಞಾನಕ್ಕೂ ಅದರ ಫಲವಾದ ಮೋಕ್ಷಕ್ಕೂ ಪುರುಷರಿಗೆ ಅಧಿಕಾರವಿರುವಂತೆ ಸ್ತೀಯರಿಗೂ
ಅಧಿಕಾರವಿರುವುದರಿಂದಲೂ ಜ್ಞಾನಕ್ಕೆ ಸನ್ಯಾಸವು ಸಾಧನವಾದ್ದರಿಂದ,ಜ್ಞಾನಾಪೇಕ್ಷೆಯುಳ್ಳ ಮುಮುಕ್ಷುಗಳಾದ ಸ್ತೀಯರಿಗೂ (ಪರಮಾಥ೯)ಸನ್ಯಾಸದ ಅಗತ್ಯ ಸಿದ್ಧವಾಗುತ್ತದೆ.(ಪುಟ2೯)
12)ಆದ್ದರಿಂದ ಆತ್ಮಜ್ಞಾನಕ್ಕೆ ಅಂಗವಾಗಿ ಸನ್ಯಾಸವನ್ನು ವಿಧಿಸಬೇಕೆಂದೇ ಈ ಮೈತ್ರೇಯೀ ಬ್ರಾಹ್ಮಣವು ಕಥೆಯುನ್ನು ಆರಂಭಿಸಿರುತ್ತದೆ.(ಬೃ.ಭಾ2-4-1ಅವತರಣಿಕಾ)(ಪುಟ30)
13)ಆತ್ಮಜ್ಞಾನದಿಂದ ಲಭಿಸುವ ಅಮೃತತ್ವಕ್ಕೆ ತ್ಯಾಗರೂಪವಾದ ಸನ್ಯಾಸವೇ ಮುಖ್ಯಸಾಧನವೆಂದು ಬೇರೆ ಉಪನಿಷತ್ತುಗಳಲ್ಲಿಯೂ ಭಗವದ್ಗೀತೆಯಲ್ಲಿಯೂ ಅನೇಕ ಸಂದಭ೯ಗಳಲ್ಲಿ ನ್ಶಿತವಾಗಿ ಹೇಳಿದೆ.ತೈತ್ತಿರೀಯದ ಮಹಾನಾರಾಯಣೋಪನಿಷತ್ತಿನಲ್ಲಿ ಈ ರೀತಿ ಹೇಳಿದೆ.
ನ ಕಮ೯ಣಾನಪ್ರಜಯಾ ಧನೇನ ತ್ಯಾಗೇನೈಕೇ ಅಮೃತತ್ವ ಮಾನಶುಃ|....ವೇದಾಂತ ವಿಜ್ಞಾನ ಸುನಿಶ್ಚಿತಾಥಾ೯ಃ ಸನ್ಯಾಸ ಯೋಗಾದ್ಯತಯಃ ಶುದ್ಧಸತ್ವಾಃ|ತೇ ಬ್ರಹ್ಮಲೋಕೇ ತು ಪರಾಂತಕಾಲೇ
ಪರಾಮೃತಾತ್ ಪರಿಮುಚ್ಯಂತಿ ಸವೇ೯||(ತೈ.ಮತ್ತುಮುಂ.ಭಾ 3-2-7)
ಕಮ೯ದಿಂದಾಗಲೀ ಪುತ್ರರಿಂದಾಗಲೀ ಧನದಿಂದಾಗಲೀ ಅಮೃತತ್ವವುಂಟಾಗುವುದಿಲ್ಲ.ಮತ್ತೇನೆಂದರೆ ಜ್ಞಾನಿಗಳಾದ ಕೆಲವರು ತ್ಯಾಗದಿಂದಲೇ ಅಮೃತತ್ವವನ್ನು ಪಡೆದರು.
ವೇದಾಂತ ವಾಕ್ಯಾಥ೯ವಿಚಾರದಿಂದ ಉಂಟಾಗುವ ವಿಶೇಷ ಅನುಭವದಿಂದ ಪರಮಾತ್ಮಸ್ವರೂಪದ ನಿಶ್ಚಯ ಜ್ಞಾನವುಳ್ಳವರೂ ಕಮ೯ಸನ್ಯಾಸಪೂವ೯ಕವಾದ ಕೇವಲ ಬ್ರಹ್ಮನಿಷ್ಠಾರೂಪಯೋಗದಿಂದ ಪರಿಶುದ್ಧ ಮನಸ್ಸುಳ್ಳವರೂ ಆದ ಯತಿಗಳು
ಬದುಕಿರುವಾಗಲೇ ಹೆಚ್ಚಿನ ಅಮೃತರೂಪವಾದ ಬ್ರಹ್ಮಸ್ವರೂಪರಾಗಿ,ಇತರ ಲೋಕಗಳ ಫಲಗಳೆಲ್ಲ ಅಡಕವಾಗಿರುವ ಬ್ರಹ್ಮವೆಂಬ ಲೋಕದಲ್ಲಿ ದೊಡ್ಡ ದೀಪವು ಆರಿಹೋಗುವಂತೆಯೂ ಒಡೆದ ಗಡುಗೆಯ ಆಕಕಾಶವು ಹೊರಗಿನ ಆಕಾಶದಲ್ಲಿ ಅಡಗುವಂತೆಯೂ -ಎಲ್ಲಾ ವಿಧವಾದ ಬಂಧಗಳಿಂದಲೂ ದೇಹವನ್ನು ಬಿಡುವ ಕಾಲದಲ್ಲಿ (ಎಲ್ಲ ಜೀವನ್ಮಮುಕ್ತರೂ ಬಿಡುಗಡೆಯನ್ನು ಹೊಂದುವರು.(ಮುಂ.ಭಾ.3-2-6)(ಪುಟ 31)
ಓಕಾಮೋ ನಿಷ್ಕಾಮ ಆಪ್ತಕಾಮ ಆತ್ಮಕಾಮೋ ನ ತಸ್ಯ ಪ್ರಾಣಾ ಉತ್ಕ್ರಾಮಂತಿ ಬ್ರಹಮೈವ ಸನ್ ಬ್ರಹ್ಮಾಪ್ಯೇತಿ||
ಆತ್ಮೈವ ಅನಂತರೋ ಬಾಹ್ಯಃ ಕೃತ್ಸ್ನಃ ಪ್ರಜ್ಞಾನ ಘನ ಏಕರಸಃ(ಬೃ.ಭಾ.4-4-6)
ಯಾವನಿಗೆ ಒಳಗಿಲ್ಲದೆ,ಹೊರಗಿಲ್ಲದೆ,ಸಂಪೂಣ೯ವಾಗಿ ,ಪ್ರಜ್ಞಾನಘನನಾಗಿ,ಏಕರಸನಾಗಿರುವ ಆತ್ಮನೊಬ್ಬನೇ ಸತ್ಯವೋ,ಆದ್ದರಿಂದ ಕಾಮಿಸುವುದಕ್ಕೆ ಆತ್ಮನಹೊರತು ಬೇರೆ ಯಾವುದೊಂದು ಪದಾಥ೯ವೂ ಇರುವುದಿಲ್ಲವೋಅವನು ಆತ್ಮಕಾಮನು;ಆತ್ಮಕಾಮನಿಗೆ ಸಕಲಕಾಮಗಳೂ ಒಮ್ಮೆಗೇ ಆತ್ಮರೂಪದಿಂದ ದೊರಕಿರುವುದರಿಂದ ಅವನು ಆಪ್ತಕಾಮನು.ಆಪ್ತಕಾಮನನ್ನು ಕಾಮಗಳೆಲ್ಲಾ ತಾವಾಗಿಯೇ ಬಿಟ್ಟು ಹೋಗಿರುವುದರಿಂದ ಅವನೇ ನಿಷ್ಕಾಮನು.;ನಿಕ್ಕಾಮನು ಯಾವುದನ್ನೂ ಕಾಮಿಸದಿರುವುದರಿಂದ ಅವನು ಅಕಾಮನೂ ಆಗಿದ್ದಾನೆ.(ಪುಟ 31)
ಹೀಗೆಅಕಾಮನೂ ನಿಷ್ಕಾಮನೂ ಆಪ್ತಕಾಮನೂ ಆದ ಬ್ರಹ್ಮಜ್ಞಾನಿಗೆ ಕಮ೯ವೂ ಇಲ್ಲದ್ದರಿಂದ ಸ್ಥಳಾಂತರ ಗಮನಕ್ಕೆ ಕಾರಣವೂ ಇರುವುದಿಲ್ಲ.ಆದ್ದರಿಂದಲೇ ಅವನ ವಾಗಾದಿಪ್ರಾಣಗಳು (ಅಜ್ಞಾನಿಗೆ ಪ್ರಾಣಗಳು ಈ ದೇಹವನ್ನು ಬಿಟ್ಟು ಬೇರೆ ದೇಹವನ್ನು ಪಡೆಯುವುದಕ್ಕಾಗಿ ಹೊರಗೆ ಹೋಗುವಂತೆ)
ಈಗಿರುವ ದೇಹವನ್ನು ಬಿಟ್ಟು ಮೇಲಕ್ಕೆ ಹೋಗುವುದಿಲ್ಲ.(ಪುಟ 31)
14)ಪರಮಾತ್ಮನಿಗಿಂತ ಬೇರೆಯಾದ ಆತ್ಮನು ಮತ್ತೊಬ್ಬನಿಲ್ಲವೆಂದು (ಪುಟ 32)
15)ಅವಿದ್ಯೆಯ ನಿವೃತ್ತಿಯನ್ನೇ ಮೋಕ್ಷವೆಂದು ಕರೆಯುತ್ತಾರೆ.(ಪುಟ 32)
16)ಅವಿದ್ಯಾ ನಿವೃತ್ತಿಯೇ ಬ್ರಹ್ಮಪ್ರಾಪ್ತಿ.(ಪುಟ 32)
17)ಸಂಸಾರ ಬಂಧವು ನಿಜವಾಗಿ ತೊಲಗಬೇಕಾದ್ದೇನೂ ಇಲ್ಲ ,ಅಜ್ಞಾನವೊಂದೇ ತೊಲಗ ಬೇಕಾಗಿದೆ.(ಪುಟ 32)
18)ಕಾಯ೯ವು ಕಾರಣದಿಂದ ಬೇರೆಅಲ್ಲ -ಎಂಬ ನ್ಯಾಯದಿಂದ ನ್ರಹ್ಮದ ಕಾಯ೯ವಾದ ಪ್ರಪಂಚವು ಬ್ರಹ್ಮಕ್ಕಿಂತ ಬೇರೆಯಾಗಿಲ್ಲ.(ಪುಟ 33)
1೯)'ತಕಾ೯ ಪ್ರತಿಷ್ಠಾನಾತ್' ತಕ೯ಕ್ಕೆ ನಿಲುಗಡೆಯಿಲ್ಲವಾದ್ದರಿಂದ ತಕ೯ವು ಮೋಸಮಾಡುತ್ತದೆ.(ಪುಟ 33)
20)ಆತ್ಮನಿಗಿಂತ ಅನನ್ಯವಾದ ಬ್ರಹ್ಮನಿಷ್ಠ ಆಚಾಯ೯ನು "ನೀನು ಬ್ರಹ್ಮನಿಗಿಂತ ಅನನ್ಯನು"ಎಂದು ಉಪದೇಶಿಸುವ ಆಗಮಪ್ರತಿಪಾದ್ಯವಾದ ಆತ್ಮಜ್ಞಾನವು ತನ್ನ ಬುದ್ಧಿಯ ಬರಿಯ ಊಹೆಯ ಸ್ವತಂತ್ರ ತಕ೯ದಿಂದ ಶಿಷ್ಯನಿಗೆ ಬರುವುದಿಲ್ಲ. ಆಗಮದಿಂದ ಉಂಟಾಗುವ ಈಜ್ಞಾನವು ಬರಿಯ ತಾಕಿ೯ಕನಲ್ಲದ ಆಗಮವನ್ನು ಬಲ್ಲ ಆಚಾಯ೯ಬಿಂದಲೇ ಹೇಳಲ್ಪಟ್ಟರೆ ಸರಿಯಾದ ಜ್ಞಾನವಾಗುವುದು.(ಪುಟ 33)
21)ನಿಃಶ್ರೇಯಸವೆಂದರೆ ಅವಿದ್ಯಾ ಕಾರಣಸಹಿತವಾಗಿ ಸಂಸಾರವು ಅತ್ಯಂತ ಇಲ್ಲವಾಗಿ ಬಿಡುವುದು(ಪುಟ 34)
22) ಇದು ಸವ೯ ಕಮ೯ಗಳನ್ನೂ ಸನ್ಯಾಸ ಮಾಡಿ ಆತ್ಮಜ್ಞಾನದಲ್ಲಿಯೇ ನಿಂತು ಬಿಡುವುದೆಂಬ ಧಮ೯ದಿಂದ ಆಗುತ್ತದೆ.(ಪುಟ 34)
23)ಸಮ್ಯಕ್ ದಶ೯ನವೆಂದರೆ ಸವ೯ಕಮ೯ಸನ್ಯಾಸವೆಂದೂ ಸದ್ಯೋಮುಕ್ತಿಯೆಂದೂ ಶಂಕರರು ಗೀತಾಭಾಷ್ಯದಲ್ಲಿ ಹೇಳಿದ್ದಾರೆ.(ಪುಟ 34)
24)"ನಿಷ್ಕಿಯವಾದ ಆತ್ಮ ಸ್ವರೂಪದಿಂದ ನೆಲೆನಿಲ್ಲುವುದು" ಎನ್ನುವುದರಿಂದ ವಸ್ತುತಂತ್ರಜ್ಞಾನವನ್ನೇ ನಿಶ್ಚಿತವಾಗಿ ಹೇಳಿರುತ್ತದೆ.(ಪುಟ 35)
25)ಜ್ಞಾನವು ಹುಟ್ಟುವುದಕ್ಕೂ ಅದು ಪರಿಪಕ್ವವಾಗುವುದಕ್ಕೂ ಚಿತ್ತಶುದ್ಧಿಯೇ ಮುಂತಾದ ಅಮಾನಿತ್ವವೇ ಮುಂತಾದ ಸಹಕಾರಿ ಸಾಧನಗಳು ಬೇಕು.(ಪುಟ 35)
26)ಏಕತ್ವಜ್ಞಾನವು ಅಭೇದ ಬುದ್ಧಿರೂಪವಾದುದರಿಂದ"ನಾನು ಕತೃ೯,,ಈ ಕಾರಕಗಳ ಸಹಾಯದಿಂದ ಈ ಕಮ೯ವನ್ನು ಇಂಥಾ ಫಲಕ್ಕಾಗಿ ಮಾಡುತ್ತೇನೆ" ಎಂಬೀ ರೂಪದ ಭೇದಬುದ್ಧಿಯು ಹುಟ್ಟುವುದಕ್ಕೆ ಕಾರಣವಾದ ಕಮ೯ಗಳೆಲ್ಲವನ್ನೂ ಸನ್ಯಾಸ ಮಾಡಿಯೇ ಈ ಸಾಧನಗಳನ್ನು ಕೈಗೊಡಿರಬೇಕು.(ಪುಟ 35)
27)ಆಚಾಯ೯ರು ಈ ಜ್ಞಾನನಿಷ್ಠೆಯೇ ಆತಾ೯ದಿ ಗೌಣಭಕ್ತಿಗಳಿಗಿಂತ ಬೇರೆಆಗಿ ನಾಲ್ಕನೆಯದಾದ ಪರಭಕ್ತಿಯೆಂದೂ ಈ ಭಕ್ತಿಯಿಂದಲೇ ಕ್ಷೇತ್ರಜ್ಞ ಪರಮಾತ್ಮರು ಬೇರೆ ಎಂಬ ಬುದ್ಧಿಯೂ ನಿಶ್ಯೇಷವಾಗಿ ತೊಲಗಿ ಹೋಗುವುದೆಂದೂ ನಿಧ೯ರಿಸಿದ್ದಾರೆ.(ಪುಟ36)
28)ಈ ಅಭೇದರೂಪವಾದ ಜ್ಞಾನನಿಷ್ಠೆಯೇ"ಸಮ್ಯಗ್ದಶ೯ನ".ಸಾವ೯ತ್ರಿಕ ಪೂಣಾ೯ನುಭವವನ್ನು ಆಧರಿಸಿರುವ ಶ್ರುತಿವಾಕ್ಯಗಳ ಶ್ರವಣ-ಮನನ-ನಿದಿಧ್ಯಾಸನಗಳಿಂದ ಉದಿಸುವ ವಸ್ತುತಂತ್ರವಾದ ಜ್ಞಾನನಿಷ್ಠೆಯೇ ಸಮ್ಯzಗ್ದಶ೯ನ.ತಮಗಿಂತಲೂ ಜೈಬರು ತಮ್ಮ ಸ್ಯಾದ್-ವಾದದಲ್ಲಿ ಹೇಳುತ್ತಿದ್ದ ಸಮ್ಯಕ್ದಶ೯ನವು ನಿಜವಾದ ಸಮ್ಯಕ್ ದಶ೯ನವಲ್ಲ.ಎಂದು ಆಚಾಯ೯ರು ಸೂತ್ರಭಾಷ್ಯದಲ್ಲಿ ಹೇಳಿದ್ದಾರೆ.
2೯) ಪರಿವ್ರಾಜಕನಿಗಾದರೋ ಸವ೯ಕಮ೯ಗಳನ್ನೂ ಸನ್ಯಾಸ ಮಾಡಿರುವುದರಿಂದ ಅನುಷ್ಠಾನ ಮಾಡಲಿಲ್ಲವೆಂಬ ನಿಮಿತ್ತದಿಂದ ಯಾವ ಪ್ರತ್ಯವಾಯವೂ ಸಂಭವಿಸುವುದಿಲ್ಲ.ಶಮದಮಾದಿಗಳೆಂಬ ಅವನ ಧಮ೯ವು ಬ್ರಹ್ಮಸ್ಥಿತಿಗೆ ಉಪೋದ್ಬಲಕ(ಸಹಾಯಕ)ವೇ ಹೊರತು ವಿರೋಧಿಯಲ್ಲ.ಶಮದಮಾದಿಗಳಿಂದ ಬೆಳೆದ ಬ್ರಹ್ಮನಿಷ್ಠತ್ವವೇ ಅಲ್ಲವೇ ಅವನ ಆಶ್ರಮಕ್ಕೆ ವಿಹಿತವಾಗುವ ಕಮ೯ವು.ಯಜ್ಞಾದಿಗಳು ಇತರರಿಗೆ ಕಮ೯ವು.ಆ ಬ್ರಹ್ಮನಿಷ್ಠತ್ವವನ್ನು ಮೀರಿದರೆ ಮಾತ್ರ ಅವರಿಗೆ ಪ್ರತ್ಯವಾಯವು.ಇದು ಸಾಧಕನಾದ ಪರಿವ್ರಾಜಕನಿಗೆ ಹೇಳಿದ್ದು. ಜ್ಞಾನಿಗಲ್ಲ.ಬ್ರಹ್ಮನಿಷ್ಠತ್ವವೇ ಅವನ ಲಕ್ಷಣವಾದುದರಿಂದ ಅವನು ಆ ಸ್ವರೂಪ ಲಕ್ಷಣವನ್ನು ಸೇರುವಂತೆಯೇ ಇಲ್ಲ.(ಪುಟ 37)
30)ಬ್ರಹ್ಮನಿಷ್ಠೆಯೇ ಪರಿವ್ರಾಜ್ಯವು. ಅದು ಬರಿಯ ಆಶ್ರಮ ಅಲ್ಲವೇ ಅಲ್ಲ.(ಪುಟ 37)
31) ಬ್ರಹ್ಮಚಯ೯ವನ್ನು ಮುಗಿಸಿ ಗೃಹಿvಯಾಗಬೇಕು.ಗೃಹಿಯಾದ ಬಳಿಕ ವನಿ(ವಾನಪ್ರಸ್ಥ)ವಾನಪ್ರಸ್ಥವಾದ ಬಳಿಕ ಪ್ರವ್ರಜನ ಮಾಡಬೇಕು.ಅಥವಾ ಅನ್ಯ ಪ್ರಕಾರದಿಂದಲೇ ಪ್ರವ್ರಜನ ಮಾಡಬೇಕು.(ಪುಟ38)
32)"ಬ್ರಹ್ಮಚಯ೯ದಿಂದಲೇ ಅಥವಾ ಗೃಹಸ್ಥಾಶ್ರಮದಿಂದ ಅಥವಾ ವನದಿಂದ ಪ್ರವ್ರಜನ ಮಡಬೇಕು ಎಂಬುದು ಆ ವಿಧಿಯುಪಾರುವ್ರಾಜ್ಯವು ಬ್ರಹ್ಮಜ್ಞಾನದ ಪರಿಪಾಕಕ್ಕೆ ಅದು ಅನಧಿಕೃತರ ವಿಷಯವಲ್ಲ.ಅದನ್ನು ಶ್ರುತಿಯು "ಇನ್ನು ಪರಿವ್ರಾಜಕನು,ವಿವಣ೯ದ ಬಟ್ಟೆಯನ್ನುಟ್ಟು,ಬೋಳಿಸಿದ ತಲೆಯುಳ್ಳವನಾಗಿ,ಪರಿಗ್ರಹವಿಲ್ಲದವನಾಗಿ,ಶುಚಿಭೂ೯ತನೂ ,ಅದ್ರೋಹಿಯೂ ,ಭಿಕ್ಷಾªಚಯ೯ವನ್ನು ಮಾಡುವವನೂ, ಆಗಿರುವವನು ಬ್ರಹ್ಮಭೂಯಕ್ಕೆ ಯೋಗ್ಯನಾಗುತ್ತಾನೆ"ಎಂದು ಹೇಳಿದೆ.
33) ಬ್ರಹ್ಮಸಂಸ್ಥನೆಂದರೆಬ್ರಹ್ಮನಿಷ್ಠ.ಇವನೇ ಪರಿವ್ರಾಜಕನು.ಮಿಕ್ಕ ಮೂರು ಆಶ್ರಮದವರಿಗೆ ಅವರವರಿಗೆ ವಿದಿಸಿರುವ ಕಮ೯ಗಳಿವೆ.ಪರಿವ್ರಾಜಕನಿಗಾದರೋ ಬ್ರಹ್ಮನಿಷ್ಠೆಯೇ ಕಮ೯ವು.ಅವರಿಗೆ ಜ್ಞಾನದಿಂದಲೇ ಮೋಕ್ಷವಾಗುವುದು.(ಪುಟ 38)
34) ಯಾಜ್ಞವಲ್ಕ್ಯನು ಹೀಗೆ ಹೇಳಿದನು:ಇವನೇ ನಿನ್ನ ಆತ್ಮನು.ಇವನೇ ನಿನ್ನ ಸವಾ೯ಂತಯಾ೯ಮಿಯಾದ ಆತ್ಮನು.ಯಾವನು ಹಸಿವು ಬಾಯಾರಿಕೆಗಳನ್ನೂ ಶೋಕಮೋಹಗಳನ್ನೂ ,ಜರೆಯನ್ನೂ ಮೃತ್ಯುವನ್ನೂ
ಅತಿಕ್ರಮಿಸಿರುವನೊ ಅವನೇ ಈ ಆತ್ಮನು.ಆ ಈ ಆತ್ಮನನ್ನದೇ ಅರಿತುಕೊಂಡು ಬ್ರಾಹ್ಮಣರು ಪುತ್ರೈಷಣೆಯಿಂದಲೂ ವಿತ್ತೈಷಣೆಯಿಂದಲೂ ಲೋಕೈಷಣೆಯಿಂದಲೂ ಬಿಟ್ಟೆದ್ದು ಭಿಕ್ಷಾಟನೆಯನ್ನು ಮಾಡುತ್ತಾರೆ.ಯಾವುದು ಪುತ್ರೈಷಣೆಯೋ ಅದೇ ವುತ್ರೈಷಣೆ,ಯಾವುದು ವಿತ್ತೈಷಣೆಯೋ ಅದೇ ಲೋಕೈಷಣೆ;ಇವೆರಡೂ ಏಷಣೆಗಳೇ ಆಗಿರುತ್ತವೆ.ಆದ್ದರಿಂದ ಬ್ರಾಹ್ಮಣನು ಸಾಧ್ಯ ಸಾಧನಗಳನ್ನೆಲ್ಲಾ ಬಿಟ್ಟು ಆತ್ಮಜ್ಞಾನವೆಂಬ ಪಾಂಡುತ್ಯವನ್ನೂ ,ಅನಾತ್ಮ ಪ್ರತ್ಯಯ ನಿರಾಸವೆಂಬ ಬಾಲ್ಯವನ್ನೂ ಪೂರಾ ತಿಳಿದು ಪರಮಾಥ೯ಚಿಂತನವೆಂಬ ಮೌನವನ್ನೂ ಪೂಣ೯ವಾಗಿ ತಿಳಿದು ಅಳವಡಿಸಿಕೊಂಡರೆ, ಕೃತಕೃತ್ಯನಗಿ ಮುಖ್ಯಾಥ೯ದಲ್ಲಿ ಬ್ರಾಹ್ಮಣನೆನಿಸುವನು.ಅವನು ಯವುದಾದರೊಂದು ಕಮಾ೯ಚರಣೆ ನಿಮಿತ್ತದಿಂದ ಬ್ರಾಹ್ಮಣನೆನಿಸಿರುವುದಿಲ್ಲ.ಈ ಬ್ರಹ್ಮನಿಷ್ಠೆಯಿಂದಲೇ ಬ್ರಾಹ್ಮಣನೆನಿಸಿರುತ್ತಾನೆ.ಈ ಬ್ರಹ್ಮನಿಷ್ಠೆಗಿಂತ ಮ್ಕ್ಕದ್ದಲ್ಲವೂ ಅನಿತ್ಯವು.,ಹುಸಿ, ಇದೊಂದೇ ನಿತ್ಯವಾದ ಪರಮಾಥ೯ವು.(ಪುಟ 3೯)
s40) ಯಾವನನ್ನು ಸತ್ಪುರುಷನೆ0ದಾಗಲೀ,ಅಸತ್ಪುರುಷನೆಂದಾಗಲೀ ತಿಳಿಯದವನೆಂದಾಗಲೀ ತಿಳಿದವನೆಂದಾಗಲೀ ,ಯಾವುಬ್ಬನೂ ಅರಿತುಕೊಳ್ಳಲಾರದೆ ಇರುವನೋ ಅವನು ಬ್ರಾಹ್ಮಣನು.(ಪುಟ 3೯)
41)ಗೂಢವಾದ ಧಮ೯ವನ್ನಾಶ್ರಯಿಸಿ ಜ್ಞಾನಿಯು ಯಾರಿಗೂ ತಿಳಿಯದ ನಡತೆಯಿಂದ ನಡೆಯಬೇಕು.ಕುರುಡನಂತೆಯೂ ಅಜ್ಞನಂತೆಯೂ ಮೂಕನಂತೆಯೂ ಭೂಮಿಯಲ್ಲಿ ಸಂಚರಿಸುತ್ತಿರಬೇಕು.ಇದು ವಿದ್ವತ್ ಸನ್ಯಾಸದ ವಿಷಯ.(ಪುಟ 3೯)
42)ಪ್ರಾಣಿಗಳಲ್ಲಿರುವ ಈ ವಿಜ್ಞಾನಮಯನೇ (ಇವನ ಪರಮಾಥ೯ ಸ್ವರೂಪವೇ ಮಹಾಂತನಾದ ಅಜನಾದ ಆತ್ಮನು.ಹೃದಯಾಕಾಶದಲ್ಲಿರುವ ಈ ಸ್ವಯಂಜ್ಯೋತಿಯಾದತ್ಮನನ್ನು ಬ್ರಾಹ್ಮಣರು ವೇದಾನುವಚನದಿಂದಲೂ ಯಜ್ಞ ದಾನ ತಪಸ್ಸುಗಳಿಂದಲೂ ತಿಳಿಯಲು ಇಚ್ಛಿಸುತ್ತಾನೆ.ಈ ಆತ್ಮನೆಂಬ ಲೋಕವನ್ನೇ ಇಚ್ಛಿಸುವ ಪ್ರವ್ರಾಜಿಗಳು ಪ್ರವ್ರಜನ ಮಾಡುತ್ತಾರೆ. ಅವರು ಪುತ್ರೈಷಣದಿಂದಲೂ ವಿತ್ತೈಷಣದಿಂದಲೂ
ಲೋಕೈಷಣದಿಂದಲೂ ಎದ್ದು ಇನ್ನು ಭಿಕ್ಷಾಚಯ೯ವನ್ನು ಆಚರಿಸುತ್ತಾರೆ.ಆ ಇವನೇ ನೇತಿ ನೇತಿ ಎಂಬ ಆತ್ಮನು.
ಇತಿ ಗ್ರಂಥಕತ೯
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
ಸಮ್ಯಗ್ದಶ೯ನ:
1) ಭಗವಾನ್ ಸೂಯ೯ನಾರಾಯಣ ದೇವನ ಅನುಗ್ರಹದಿಂದ ಯಾಜ್ಞವಲ್ಕ್ಯರ ಅವತಾರವಾದುದು.ಅವರು ಬಾಲ್ಯದಲ್ಲಿ ವೈಶಂಪಾಯನ ಮಹಷಿ೯ಗಳ ಗುರುಕುಲದಲದಲದಿ ಅಭ್ಯಾಸ ಮಾಡಿದರು.(ಪುಟ 1)
2) ಈ ಕಥೆಯಯ ಉಗಮವೂ ಅಧ್ಯಾತ್ಮಿಕ ಮೌಲ್ಯವೂ ಬೃಹದಾರಣ್ಯಕ ಉಪನಿಷತ್ತಿನಲ್ಲಿದೆ.(ಪುಟ 1)
3)ಉಪನಿಷತ್ತು ಎಂದರೆ ಬ್ರಹ್ಮವಿದ್ಯೆ .ಬ್ರಹ್ಮವಿದ್ಯೆ ಎಂದರೆ ಬ್ರಹ್ಮನನ್ನು(ಪರಮಾತ್ಮನನ್ನು) ತಿಳಿಸುವವಿದ್ಯೆ.(ಪುಟ1)
4)ಬೃಹದಾರಣ್ಯಕ ಉಪನಿಷತ್ತು 1) ಮಧುಕಾಂಡ 2) ಮುನಿಕಾಂಡ ಅಥವಾ ಯಾಜ್ಞವಲ್ಕೀಯ ಕಾಂಡ 3)ಖಿಲಕಾಂಡ ಎಂಬ ಮೂರು ಭಾಗಗಳನ್ನು ಹೊಂದಿದೆ.(ಪುಟ2)
5) ಈ ಪುಸ್ತಕದ ವಿಚಾರವು ಬೃಹದಾರಣಕ ಉಪನಿಷತ್ತಿನ ಎರಡನೆಯ ಅಧ್ಯಾಯದ ನಾಲ್ಕನೆಯ ಬರಾಹ್ಮಣಕ್ಕೆ ಸಂಬಂಧಿಸಿದೆ.(ಪುಟ2)
6)ಇದರಲ್ಲಿ ಮೋಕ್ಷಾಥಿ೯ನಿಯಾದ ಪತ್ನಿ ಮೈತ್ರೇಯಿಗೆ ಯಾಜ್ಞವಲ್ಕ್ಯ ಮಹಷಿ೯ಗಳು ಸಾಧನ ಚತುಷ್ಟಯ ಸಂಪನ್ನನಾದ ಉತ್ತಮಾಧಿಕಾರಿಗೆ ಬೋಧಿಸಬೇಕಾದ ಪರಿಶುದ್ದವಾದ ಆತ್ಮಜ್ಞಾನವನ್ನೇ ಉಪದೇಶಿಸುತ್ತಾರೆ.(ಪುಟ 2)
7)ಇದರಲ್ಲಿ ವಿಶೇಷವೇನೆಂದರೆ ಏಷಣಾತ್ರಯ ತ್ಯಾಗರೂಪವಾದ ಸವ೯ಕಮ೯ಸನ್ಯಾಸ ಸಹಿತವಾದ ಆತ್ಮಜ್ಞಾನವೇ ಅಮೃತತ್ವವೆಂಬ ಮೋಕ್ಷಕ್ಕೆ ಸಾಧನವೆಂದು ಅವರು ತಿಳಿಸಿದ್ದಾರೆ.(ಪುಟ 2)
8)ಮಧುಕಾಂಡ-ಆಗಮ-ಉಪದೇಶ
ಮುನಿಕಾಂಡದಲ್ಲಿ -ಯುಕ್ತಿ-ಉಪಪತ್ತಿ
ಈ ಉಪನಿಷತ್ತಿನ ಎರಡನೇ ಮತ್ತು ಹಾಗೂ ನಾಲ್ಕನೇ ಅಧ್ಯಾಯ ದಲ್ಲಿಯೂ ಮೈತ್ರೇಯೀ ಬ್ರಾಹ್ಮಣವಿದೆ.(ಪುಟ 2)
೯)ವಿಜ್ಞಾತಾರಮರೇ ಕೇನವಿಜಾನೀಯಾದಿತ್ಯುಕ್ತಾನುಶಾಸನಾಸಿ
ಹೋಕ್ತ್ವಾ ಯಾಜ್ಞವಲ್ಕ್ಯೋ ವಿಜಹಾರ|(ಬೃ 4-5-15|
"ಎಲೆ,ಸಕಲವನ್ನೂ ಅರಿಯುವ ವಿಜ್ಞಾತೃವನ್ನು ಏತರಿಂದ ಅರಿತಾನ
10)ಉಪನಿಷತ್ತುಗಳಲ್ಲಿರುವ ಬ್ರಹ್ಮವಿದ್ಯೆಯು ಎರಡು ರೂಪಗಳಾಗಿವೆ.1) ಪರವಿದ್ಯೆ 2) ಅಪರವಿದ್ಯೆ.
ಬ್ರಹ್ಮದ ಸ್ವರೂಪವನ್ನು ಹೇಗಿದೆಯೋ ಹಾಗೆ ಏತರಿಂದ ಅರಿತುಕೊಳ್ಳಬಹುದೋ ಅದು ಪರವಿದ್ಯೆ
ವೇದೋಕ್ತವಾದ ಕಮ೯,ಅದರ ಫಲವಾದ ಸ್ವಗ೯ ಮತ್ತು ಉಪಾಸನೆ,ಕಮೋ೯ಪಾಸನೆಗಳಿಂದ ಪಡೆಯಬಹುದಾದ ದೇವಲೋಕ -ಬ್ರಹ್ಮಲೋಕ ಇವೆರಡೂ ಅಪರವಿದ್ಯೆ.(ಪುಟ 3)
11)ಹೀಗೆ ಸಗುಣೋಪಾಸನೆಯಿಂದ ಬ್ರಹ್ಮಲೋಕಕ್ಕೆ ಹೋಗಿ ಅಲ್ಲಿ ಜ್ಞಾನವನ್ನು ಪಡೆದು ಮುಕ್ತಿಹೊಂದುವುದನ್ನು ಶಂಕರಾಚಾಯ೯ರು 'ಕ್ರಮಮುಕ್ತಿ'ಎಂದು ಕರೆದಿರುತ್ತಾರೆ.(ಪುಟ3)
12)ನಿತ್ಯಮುಕ್ತರಾದ ನಾವು ,ಸ್ವರೂಪದಿಂದ ಎಂದೂ ಬದ್ಧರಾಗಿಯೇ ಇಲ್ಲ -ಎಂಬ ನಿಶ್ಚಯವಾದರೆ ಇದನ್ನು ಸದ್ಯೋ ಮುಕ್ತಿ ಎಂದ್ದು ಶಕರರು ಕರೆದಿರುತ್ತಾರೆ.(ಪುಟ3)
.13)ಸ್ವಭಾವದಿಂದ ಇದ್ದುಕೊಂಡಿರುವ ಯಾವವಿಕಾರವೂ ಇಲ್ಲದ ಆತ್ಮನಲ್ಲಿ ಅಧ್ಯಾರೋಪಿತವಾಗಿರುವ ಕತಾ೯ದಿಕಾರಕಗಳು ,ಕ್ರಿಯೆ,ಫಲ-ಎಂಬ ಭೇದದತೊಲಗಿಸುವುದು ಅದ್ವೈತ ವಿಜ್ಞಾನವು.ಹಗ್ಗವೇ ಮೊಂತಾದದ್ದರಲ್ಲಿ ಅಧ್ಯಾರೋಪಿಸುವ ರೂಪದ ಅರಿವನ್ನು ಬೆಳಕಿನ ನಿಮಿತ್ತದಿಂದಾದ ºಗ್ಗವೇ ಮೊದಲಾದುದರ ಸ್ವರೂಪದ ನಿಶ್ಚಯವು ತೊಲಗಿಸುವಂತೆಯೇ ಇದು ಭೇದ ವಿಜ್ಞಾನವನ್ನು ತೊಲಗಿಸುತ್ತದೆ..ಉಪಾಸನೆಯಾದರೋ ಶಾಸ್ತ್ರವು ತಿಳಿಸಿಕೊಟ್ಟಿರುವ ಯಾವುದಾದರೊಂದು ಆಲಂಬನವನ್ನು ತೆಗೆದುಕೊಂಡು ಅದರಲ್ಲಿ ಒಂದೇ ಬಗೆಯ ಚಿತ್ತವೃತ್ತಿಯನ್ನು ಅದಕ್ಕಿಂತ ವಿಲಕ್ಷಣವಾದ ಪ್ರತ್ಯಯವು ನಡುವೆ ಬಾರದಂತೆ,ಸಂತತವಾಗಿ ನಡೆಸಿಕೊಂಡು ಬರುವುದು.(ಛಾಂ.ಉ. ಅವತರಣಿಕೆ) ಪುಟ4)
14)'ರಹಸ್ಯ' ಎಂದರೆ ಉಪನಿಷತ್ತು -ಎಂಬ ಹೆಸರು ಅದ್ವೈತ ಜ್ಞಾನಕ್ಕೂ ಉಪಾಸನೆಗೂ ಸಮಾನವಾಗಿರುತ್ತದೆ.(ಪುಟ 4)
15)ಭೇದವನ್ನು ತಿಳಿಸುವ ಅವಿದ್ಯೆಯು ಸ್ವಭಾವದಿಂದಲೇ ಇರುತ್ತದೆ.ವಿದ್ಯೆಯಾದರೋ ಉಪದೇಶದಿಂದ ಹೊಸದಾಗಿ ಉಂಟಾಗತಕ್ಕದ್ದು.(ಪುಟ 5)
15)ಅದ್ವೈತ ಜ್ಞಾನಕ್ಕೆ ನಿರಾºಕಾರ ಬ್ರಹ್ಮವು ವಿಷಯವಾದ್ದರಿಂದ ಅದು ನಿರಾಲಂಬವು.(ಯಾವುದೇ ರೀತಿಯ ಆಲಂಬನವಿಲ್ಲದ).ಉಪಾಸನೆಗೆ ಸಾಕಾರ ಬ್ರಹ್ಮವು ವಿಷಯವಾದ್ದರಿಂದ ಅದು ಸಾಲಂಬನವು.ಆದ್ದರಿಂದ ಜ್ಞಾನಕ್ಕಿಂತಲೂ ಸುಲಭ ಸಾಧ್ಯ.(ಪುಟ 5)
16)ಉಪಾಸನೆಯು ಆವೃತ್ತಿಯನ್ನು ಅಪೇಕ್ಷಿಸುತ್ತದೆ.ಆದರೆ ಜ್ಞಾನವು ಒಂದು ಸಲುಂಟಾದರೆ ಸಾಕು ,ಅಜ್ಞಾನವನ್ನು ಕಳೆಯುತ್ತದೆ.(ಪುಟ5)
17)ಶಂಕರರ ಹೊರತು ಮಿಕ್ಕೆಲ್ಲಾ ಆಚಾಯ೯ರೂ ತತ್ವವೇತ್ತರೂ ಉಪಾಸನಾ ರೂಪವಾದ ಧ್ಯಾನವನ್ನೇ ಮಮೋಕ್ಷಸಾಧನವೆಂದು ಹೇಳಿರುವುದರಿಂದಲೂ ಮತ್ತು ಅವರ ಮತಗಳಲ್ಲಿ ಧ್ಯಾನಕ್ಕಿಂತ ಬೇರೆಯಾದ ಮೋಕ್ಷಕಾರಣವಾದ ಜ್ಞಾನವು ಇಲ್ಲವಾದ್ದರಿಂದಲೂ ಧ್ಯಾನ ಮತ್ತು ಜ್ಞನಗಳ ವೈಲಕ್ಷಣ್ಯವನ್ನು ಸ್ಪಷ್ಟಪಡಿಸಬೇಕಾಗಿದೆ.(ಪುಟ5)
18)ಧ್ಯಾನವೆಂದರೆ ಚಿಂತಿಸುವ್ದು.ಅದು ಮನಸ್ಸಿಗೆ ಸಂಬಂಧಪಟ್ಟಿದ್ದೇ ಆದರೂ ಮನುಷ್ಯನು ಮಾಡುವುದಕ್ಕೂ ಬಿಡುವುದಕ್ಕೂ ಬರುತ್ತದೆ.ಏಕೆಂದರೆ ಅದು ಪುರುಷತಂತ್ರವಾಗಿರುತ್ತದೆ.(ಪುಟ 6)
1೯)ಜ್ಞಾನವಾದರೋ- ಪ್ರತ್ಯಕ್ಷ ಅನುಮಾನ ಆಗಮ ಮೊಂತಾದ ಪ್ರಮಾಣಗಳಿಂದ ಉಂಟಾಗತಕ್ಕದ್ದು.
ಆದ್ದರಿಂದ ಜ್ಞಾನವು ಮಾಡುವುದಕ್ಕಾಗಲೀ ಬಿಡುವುದಕ್ಕಾಗಲೀ ಅಥವಾ ಬೇರೊಂದು ಬಗೆಯಲ್ಲಿ ಮಾಡುವುದಕ್ಕಾಗಲೀ ಬರುವುದಿಲ್ಲ.ಅದು ಕೇವಲ ವಸ್ತುತತ್ರವಾಗಿಯೇ ಇರುತ್ತದೆ.ಅದು ಚೋದನಾ ತಂತ್ರವೂ(ಶಾಸ್ತ್ರ ವಿಧಿಗೆ)ಅಧೀನವೂ ಅಲ್ಲ, ಪುರುಷತಂತ್ರವೂ ಅಲ್ಲ.(ಪುಟ 6)
20)ಬ್ರಹ್ಮಜ್ಞಾನವು ವೇದಾಂತ ವಾಕ್ಯಗಳ ಅಥ೯ವನ್ನು ಅನುಭವಾನುಸಾರಿಯಾಗಿ ಶ್ರುತ್ಯುಕ್ತಿಗಳಿಂದ ವಿಚಾರ ಮಾಡಿ ಆತ್ಮಸ್ವರೂಪವನ್ನು ನಿಶ್ಚಯಿಸಿಕೊಳ್ಳುವುದರಿಂದ ಆಗುವುದೇ ಹೊರತು ಅನುಮಾನವೇ ಮುಂತಾದ ಬೇರೆಯ ಪ್ರಮಾಣಗಳಿಂದ ಉಂಟಾಗತಕ್ಕದ್ದಲ್ಲ.(ಪುಟ 6)
21)ಬ್ರಹ್ಮವಾಗಲೀ ಬ್ರಹ್ಮಜ್ಞಾನವಾಗಲೀ ಸ್ವಗ೯ದಂತೆ ಕ್ರಿಯೆಯಿಂದ ಸಾಧಿಸಿಕೊಳ್ಳತಕ್ಕದ್ದಲ್ಲ.ಬ್ರಹ್ಮವು ಅರಿಯುವುದೆಂಬ ಕ್ರಿಯೆಗೆ ವಿಷಯವಾಗಿರುವುದರಿಂದ ಕಾಯ೯ದಲ್ಲಿ ಸೇರಿರುವುದೆಂದು ಹೇಳಲಿಕ್ಕೂ ಆಗುವುದಿಲ್ಲ. (ಪುಟ 8)
22)ಅದು ಅರಿತದ್ದಕ್ಕಿಂತಲೂ ಬೇರೆಯೇ ಅರಿಯಲ್ಪಡದ್ದಕ್ಕಿಂತಲೂ ಬೇರೆಯೇ.(ಕೇ.1-3)(ಪುಟ 8)
23) ಯಾವುದರಿಂದ ಇದೆಲ್ಲವನ್ನೂ ಅರಿತುಕೊಳ್ಳುತ್ತಾನೆಯೋ ಅದನ್ನು ಏತರಿಂದ ಅರಿತುಕೊಂಡಾನು.(ಪುಟ 8)
24)"ಯಾವುದನ್ನು ವಾಕ್ಕಿನಿಂದ ಹೇಳುವುದಾಗುವುದಿಲ್ಲವೋ ,ಯಾವುದರಿಂದ ವಾಕ್ಕು ಹೇಳಲ್ಪಡುತ್ತದೆಯೋ" ಎಂದು ಬ್ರಹ್ಮವು ವಾಗಾದಿಗಳಿಗೆ ವಿಷಯವಲ್ಲವೆಂದು ಹೇಳಿ,'ಅದೇ' ಬ್ರಹ್ನವೆಂದು ನೀನು ಅರಿತುಕೊ;'ಇದು' ಎಂದು ಯಾವುದನ್ನು ಉಪಾಸನೆ ಮಾಡುವರೋ ಅದು ಬ್ರಹ್ಮವಲ್ಲ."(ಕೇ.1-4)ಎಂದು ಹೇಳಿದೆ.(ಪುಟ 8)ಸ
25)ಅದುನಮ್ಮೊಳಗಿನ ಆತ್ಮನೇ ಆಗಿರುವುದರಿಂದ ವಿಷಯವಲ್ಲವೆಂದು ತಿಳಿಸಿ ಅವಿದ್ಯಾ ಕಲ್ಪಿತವಾದ
ವೇದ್ಯ(ಅರಿಯಲ್ಪಡತಕ್ಕದ್ದು),ವೇದಿತೃ(ಅರಿಯುವವನು),ವೇದನ (ಅರಿವು)-ಮುಂತಾದ ಭೇದವನ್ನು ಕಳೆಯುತ್ತದೆ. ಆದ್ದರಿಂದಲೇ "ಯಾವನಿಗೆ ಅದು ತಿಳಿದಿರುವುದೋ ಅವನು ತಿಳಿಯನು.ತಿಳಿಯುವವರಿಗೆ ತಿಳಿದಿಲ್ಲ;ತಿಳಿಯದವರಿಗೆ ಅದು ತಿಳಿದಿದೆ.(ಕೇ.2-3)(ಪುಟ 8)
26) ನೋಟವನ್ನು ನೋಡುವಾತನನ್ನು ನೀನು ನೋಡಲಾರೆ.ಅರಿವನ್ನು ಅರಿಯುವಾತನನ್ನು ನೀನು ಅರಿತುಕೊಳ್ಳಲಾರೆ.(ಬೃ.3-4-2_)(ಪುಟ ೯)
27) ಏಕೆಂದರೆ ಮೋಕ್ಷವು ನಿತ್ಯಪ್ರಾಪ್ತವಾಗಿರುವ ಆತ್ಮಸ್ವರೂಪವೇ ಆಗಿರುತ್ತದೆ.(ಪುಟ ೯)
28)ಶ್ರೀ ಶಂಕರಾಚಾಯ೯ರು,ಪರಮಗುರುಗಳಾದ ಶ್ರೀ ಗೌಡಪಾದರು,,ಶಂಕರರ ಶಿಷ್ಯರಾದ ಶ್ರೀ ಸುರೇಶ್ವರಾಚಾ೯ರು- ಈ ಮೂವರು ಆಚಾಯ೯ರುಗಳನ್ನು ಬಿಟ್ಟರೆ,,ಲೋಕದ;ಲಿರುವ ಮಿಕ್ಕವೇದಾಂತಿಗಳೆಲ್ಲರೂ ಮರಣಾನಂತರ ಆಗುವ ವಿದೇಹಮುಕ್ತಿಯನ್ನೇ ಮುಖ್ಯಮುಕ್ತಿ ಎಂದು ಹೇಳಿದ್ದಾರೆ.(ಪುಟ ೯)
2೯)ಜ್ಞಾನದ ಫಲವು ಪ್ರತ್ಯಕ್ಷ ವಾಗಿರುವುದರಿಂದ ಅದಕ್ಕೆ ಫಲವಾಗುವುದಿಲ್ಲವೆಂಬ ಶಂಕೆಯು ಹೋಂದ್ವುದಿಲ್ಲ.(ಪುಟ 10)
30)ಜ್ಞನದ ಫಲವು ಈಗಲೇ ಇಲ್ಲಿಯೇ ಅನುಭವಕ್ಕೆ ಬರುವುದು."ಯವುದು ನೇರಾದ ಅಪರೋಕ್ಷವಾದ ಬ್ರಹ್ಮವೋ ಯಾವನು ಸವಾ೯ಂತರನಾದ ಆತ್ಮನೊ"....(ಬೃ.3-4-1) ಎಂಬ ಶ್ರುತಿಯು ಇದಕ್ಕೆ ಪ್ರಮಾಣವು.(ಪುಟ 10)
31)"ಅದೇ ನೀನಾಗಿರುವೆ'(ಛಾಂ6-8-7)ಎಂಬ ಶ್ರುತಿಯು ಇದಕ್ಕೆ ಪ್ರಮಾಣವು.ಈ ವಾಕ್ಯದ ಅಥ೯ವನ್ನ್ಯ 'ನೀನು ಸತ್ತ ಮೇಲೆ ಅದಾಗುವೆ'ಎಂದೇನೂ ತಿರುಗಿಸುವುದಕ್ಕೆ ಆಗಲಾರದಷ್ಟೆ.ಅದನ್ನು ಕಂಡುಕೊಂಡ ವಾಮದೇವನು'ನಾನು ಮನುವಾದೆನು' 'ನಾನು ಸೂಯ೯ನಾದೆನು'ಎಂದು ತಿಳಿದುಕೊಂಡನು.(ಬೃ.1-4-10)ಎಂದು 'ಸಮ್ಯಕ್ ದಶ೯ನ'ಕಾಲದಲ್ಲಿಯೇ ಅದರ ಫಲವಾದ ಸಬಾ೯ತ್ಮತ್ವವನ್ನು ಶ್ರುತಿಯು ತಿಳಿಸುತ್ತದೆ.ಆದ್ದರಿಂದ ಮೋಕ್ಷವು ಸಂಶಯಗ್ರಸ್ತವೂ ಅಲ್ಲ.ಕೇವಲ ಆಪ್ತವಾಕ್ಯದಿಂದ ನಂಬತಕ್ಕದ್ದೂ ಅಲ್ಲ.
31)ಆದ್ದರಿಂದ ಜ್ಞಾನಿಗೆ ಕೈವಲ್ಯ ಸಿದ್ಧಿಯು ತಪ್ಪದೆ ನಿಯಮದಿಂದ ಆಗುತ್ತದೆ-ಎಂದು ಸಿದ್ಧವಾಯಿತು".(ಪುಟ 10)
32)ಒಟ್ಟಿನಲ್ಲಿ ಅನುಭವಕ್ಕಾಗಲಿ,ಯುಕ್ತಿಗಾಗಲೀ,,ಅನುಭವಾನುಸಾರ ಯುಕ್ತಿಗಾಗಲಿ ಹೊಂದಿಕೆಯಾಗುವ ತಿಳುವಳಿಕೆಯನ್ನು ದಶ೯ನವೆನ್ನಬಹುದು.(ಪುಟ 11)
33)'ದಶ೯ನ'ವೆಂದರೆ ಬ್ರಹ್ಮಾತ್ಮೈಕ್ಯಜ್ಞಾನವೆಂದೇ ಹೇಳಿರುವುದನ್ನು ಲಕ್ಷಿಸಬೇಕು.(ಪುಟ 11)
34)ಸಮ್ಯಕ್ ಜ್ಞಾನವು ಒಂದೇ ರೂಪವಾಗಿರಬೇಕು.ಏಕೆಂದರೆ ಅದು ವಸ್ತು ತಂತ್ರವಾಗಿರುತ್ತದೆ.(ಪುಟ 11)
35)ಒಂದೇ ರೂಪದಿಂದ ಇರುವ ಅಥ೯ವು ಪರಮಾಥ೯ವು.(ಪುಟ 12)
36)ಈ ಔಪನಿಷದಾಥ೯ವೇ ಸಮ್ಯಕ್ ಜ್ಞಾನವೆಂದು ಸಿದ್ಧವಾಯಿತು.(ಪುಟ 12)
37)ಭಾವನಾಮಯವೂ ಕತೃ೯ತ0ತ್ರವೂ ಕಾಲಾಂತರದಲ್ಲಿಯೂ ಲೋಕಾಂತರದಲ್ಲಿಯೂ ಫಲವನ್ನು ಕೊಟತಕ್ಕದ್ದೂ ಫಲವನ್ನು ಕೊಡತಕ್ಕದ್ದೂ ಕೇವಲ ಶ್ರದ್ಧೆಯನ್ನೂ ನಂಬಿಕೆಯನ್ನೂ ಅವಲಂಬಿಸಿಕೊಂಡಿರುವುದೂ ಆದ ಉಪಾಸನೆಗೂ ,ಕೇವಲ ವಸ್ತುತಂತ್ರವೂ ವಿವೇಕಗಮ್ಯವೂ ,ವಿಚಾರಸಮಕಾಲದಲ್ಲಿಯೇ ಅನುಭವವನ್ನು ಕೊಡತಕ್ಕದ್ದೂ ,ಅನಂತರ ಯಾವ ಕತ೯ವ್ಯವಿಶೇಷವೂ ಉಳಿಯದಂತೆ ಪೂಣ೯ಕೃತಕೃತ್ಯತೆಯನ್ನು ನೀಡತಕ್ಕದ್ದೂ ತಕ್ಕದ್ದೂ ಆದ ಪರಿಶುದ್ಧ ತತ್ವಜ್ಞಾನಕ್ಕೂ ಇರು ಅತಿಸೂಕ್ಮವಾದ ವ್ಯತ್ಯಾಸವನ್ನು ಜಗತ್ತಿನಲ್ಲಿ ಶಂಕರರ ಹೊರತು ಬೇರೆ ಯಾವ ತತ್ವಜ್ಞಾನಿಯೂ ಯೋಚಿಸಿಲ್ಲವೆನ್ನಬಹುದು.(ಪುಟ 13)
38)ಶಂಕರರು ಭಾಷ್ಯದಲ್ಲಿ ಔಪನಿಷದಂ ದಶ೯ನಂ(ಸೂ.ಭಾ2-1037), ,ಪರಮಾಥ೯ದಶ೯ನಮ್(ಬೃ.ಭಾ2-4-120,ಆತ್ಮೈಕತ್ವ ದಶ೯ನಾತ್ಮಿಕಾಂ ಬ್ರಹ್ಮವಿದ್ಯಾಂ(ಬೃ.ಭಾ.5-1-1),ಅನನ್ಯ ದಶ೯ನ(ಬೃ,ಭಾ.3-2-12) ಬ್ರಹ್ಮದಶ೯ನ(ಬೃ.ಭಾ.4-4-1೯),ಬ್ರಹ್ಮಾತ್ಮೈತ್ವದಶ೯ನಂ(ಮುಂ,ಅವತರಣಿಕೆ)ಇತ್ಯಾದಿ ಬೇರೆ ಬೇರೆ ರೂಪಗಳಿಂದ ದಶ೯ನ ಶಬ್ದವನ್ನು ಬಳಸಿದ್ದಾರೆ.(ಪುಟ 13)
3೯) ಆತ್ಮವಿಷಯದ ಸಮ್ಯ್ಕ್ಜ್ಞಾನವು ವಸ್ತುತಂತ್ರವಾದ ಸಮ್ಯಕ್ ಜ್ಞಾನವೇ ಹೊರತು ಭಾವನಾರೂಪವಾದ ಉಪಾಸನೆಯಲ್ಲ.(ಪುಟ 14)
40) ಶಾಸ್ತ್ರಪ್ರಮಾಣ ಮತ್ತು ಯುಕ್ತಿ ಈ ಎರಡರಿಂದಲೂ ನಿಧ೯ರಿಸಿರುವುದರಿಂದ ಅದ್ವಯಾತ್ಮ ದಶ೯ನವೇ ಸಮ್ಯಗ್ದಶ೯ನ ಎಂದರೆ ಸರಿಯಾದ ದಶ೯ನವು-ಆ ಎರಡಕ್ಕೂ ಹೊರಚ್ಚಾಗಿರುವುದರಿಂದ ಮಿಕ್ಕದ್ದು ತಪ್ಪು ದಶ೯ನವು.ದ್ವೈತಿಗಳದ್ದು ತಪ್ಪು ದಶ೯ನವೆಂದು ಈ ಕಾರಣದಿಂದಲೂ ಸಿದ್ಧವಾಗುತ್ತದೆ.
ಅದೇಕೆಂದರೆ ,ಅದು ರಾಗ ದ್ವೇಷ-ಮುಂತಾದ ದೋಷಗಳಿಗೆ ಅವಕಾಶವುಳ್ಳದ್ದಾಗಿರುತ್ತದೆ.(ಪುಟ 15)
41)ಹೀಗೆ ರಾಗದ್ವೇಷಗಳಿಂದ ಕೂಡಿದ (ದ್ವೈತಿಗಳು) ತಮ್ಮ ತಮ್ಮ ಸಿದ್ಧಾಂತವಾಗಿರುವ ದಶ೯ನದ ಕಾರಣದಿಂದಲೇ ಒಬ್ಬರಿಗಿಬ್ಬರು ವಿರೋಧಿಗಳಾಗಿರುತ್ತಾರೆ.ಹಾಗೆ ಒಬ್ಬರಿಗೊಬ್ಬರು ವಿರೋಧಗಳಾಗಿರುವ ಅವರಿಗೆ ಈ ವ್ಯದಿಕವಾದ ಆತ್ಮೈಕತ್ವ ದಶ೯ನವೆಂಬ ನಮ್ಮ ಪಕ್ಷವು,ಯಾವುದಕ್ಕೂ ಬೇರೆಯಲ್ಲವಾದ್ದರಿಂದ ವಿರುದ್ಧವಾಗಿರುದಿಲ್ಲ.ಹೇಗೆ ತನ್ನ ಕೈಕಾಲುಮುಂತಾದವುಗಳಿಗೆ ತಾನು ವಿರೋಧಿಯಲ್ಲವೋ ಹಾಗೆಯೇ ಇದು.ಹೀಗೆ ರಾಗ ದ್ವೇಷ-ಮುಂತಾದ ದೋಷಗಳಿಗೆ ಅವಕಾಶವಿಲ್ಲದೆ ಇರುವುದರಿಂದ ಆತ್ಮೈಕತ್ಯ ಬುದ್ಧಿಯೇ ಸಮ್ಯಗ್ದಶ೯ನ-ಸರಿಯಾದ ತಿಳುವಳಿಕೆ ಎಂದು ಅಭಿಪ್ರಾಯ.(ಮಾಂ.ಗೌ.ಕಾ.ಭಾ2-17)
ಆತ್ಮದಶ೯ನಕ್ಕೆ ಸಾಧನಗಳು:
1)ಮನಸ್ಸಿನ ಮತ್ತು ಇಂದ್ರಿಯಗಳ ಏಕಾಗ್ರತೆಯೇ ಹೆಚ್ಚಿನ ತಪಸ್ಸು.(ಪುಟ 17) 0)
2) ಸ್ರೀಸಂಭೋಗವಿಲ್ಲದಿರುವುದರಿಂದಲೂ (ಸ್ಮರಣಂ,ಕೀತ೯ನಂ, ಕೇಳಿಃ ಪ್ರೇಕ್ಷಣಂ,ಗುಹ್ಯಭಾಷಣಮ್,|
ಸಂಕಲ್ಪೋಧ್ಯವಸಾಯಶ್ಚಕ್ರಿಯಾನಿ ವೃ೯ತಿರೇವ ಚ||.)ಹೀಗೆ ಮೈಥುನವು ಎಂqಟು ಬಗೆ.ಇವುಗಳಲ್ಲಿ ಯಾವುದೊಂದೂ ಇಲ್ಲದಿರುವುದು ಬ್ರಹ್ಮಚಯ೯ವು)ಅಂತಶ್ಯರೀರದಲ್ಲಿ, ಎಂದರೆ ಹೃದಯಪುಂಡರೀಕದ ಆಕಾಶದಲ್ಲಿ ಜ್ಯೋತಿಮ೯ಯ ನಾಗಿರ್ಯವ-ಬಂಗಾರದ ಬಣ್ಣವುಳ್ಳವನಾಗಿ ,ಪರಿಶುದ್ಧವಾಗಿರುವ ಈ ಆತ್ಮನನ್ನು ರಾಗದ್ವೇಷಾದಿ ಚಿತ್ತಮಲಗಳನ್ನು ಕಳೆದೊಕೊಂಡಿರುವ ಪ್ರಯತ್ನಶೀಲರಾದ ಸನ್ಯಾಸಿಗಳು ಕಂಡುಕೊಳ್ಳುವರು.(ಮುಂ.ಭಾ 3-1-5)(ಪುಟ16)
3)ಇಲ್ಲಿ ಮಾತ್ರ ಕನ್ನಡಿಯಲ್ಲಿ ಮುಖವನ್ನು ಕಾಣುವಂತೆ ಆತ್ಮವನ್ನು ಸ್ಪಷ್ಟವಾಗಿ ಕಾಣಬಹುದೇ ಹೊರತು ,ಮಿಕ್ಕಲೋಕಗಳಲ್ಲಿ -ಬ್ರಹ್ಮಲೋಕವೊಂದನ್ನು ಬಿಟ್ಟರೆ ಎಲ್ಲಿಯೂ ಕಾಣುವುದಿಲ್ಲ.ಬ್ರಹ್ಮಲೋಕವನ್ನು ಪಡೆಯುವುದು ಕಷ್ಟವಾಗಿರುತ್ತದೆ.(ಪುಟ 17)
4)ಆದ್ದರಿಂದ ಬ್ರಹ್ಮದಶ೯ನಕ್ಕಾಗಿ (ಆತ್ಮದಶ೯ನಕ್ಕಾಗಿ,ಸಮ್ಯಗ್ದಶ೯ನ) ಇಲ್ಲಿಯೇ ಯತ್ನವನ್ನು ಮಾಡಬೇಕು.(ಪುಟ17)
.....................................
5) ಮಿಥ್ಯಾಜ್ಞಾನದಿಂದ ಹಬ್ಬಿರುವ ಕ್ರಿಯೆ,ಕಾರಕ,ಫಲ-ಇವುಗಳ ರೂಪವಾದ ನಾಮ ರೂಪ ಕಮ೯ಗಳೆಂಬ ಮೂರಾಗಿರುವುದೆಲ್ಲವನ್ನೂ -ಬಿಸಿಲು ಕುದುರೆಯ ನೀರು,ಹಗ್ಗದ ಹಾವು,ಆಕಾಶದ
ಕಶ್ಮಲ,ಇವುಳನ್ನು ಬಿಸಿಲು,ಹಗ್ಗ,ಆಕಾಶ ಇವುಗಳ ಸ್ವರೂಪವನ್ನು ಕಂಡುಕೊಳ್ಳುವುದರ ಮಾತ್ರದಿಂದಲೇ ಲಯಮಾಡುವಂತೆ -ತನ್ನ ಆತ್ಮನ ನಿಜ ಸ್ವರೂಪವನ್ನು ಕಂಡು ಕೊಳ್ಳುವುದರಿಂದಲೇ ಪುರುಷನೆಂಬ ಆತ್ಮನಲ್ಲಿ ಲಯಮಾಡಿಕೊಂಡು ತನ್ನಲ್ಲಿ ತಾನು ನಿಂತು,ಅಂತಃಕರಣದಲ್ಲಿ ಹೆಚ್ಚಿನ ಶಾಂತಿಯನ್ನು ಹೊಂದಿ ಕೃತಕೃತ್ಯನಾಗುತ್ತಾನಲ್ಲವೇ?(ಪುಟ 17)
6)ವೇದದಲ್ಲಿ ಸಮ್ಯಗ್ದಶ೯ನಕ್ಕೆ ಉಪಾಯವಾಗಿ ಯೋಗ(ನಿಧಿದ್ಯಾಸನ)ವನ್ನು ವಿಧಿಸಿರುತ್ತದೆ.ಯೋಗಶಾಸ್ತ್ರದಲ್ಲಿಯೂ "ಇನ್ನು ತತ್ವದಶ೯ನಕ್ಕೆ ಉಪಾಯವಾದ ಯೋಗವನ್ನು ಹೇಳುತ್ತೇವೆ. ಎಂದು ಹೇಳಿದೆ.(ಪುಟ 1೯)
7) ಸಮ್ಯಕ್ ದಶ೯ನವು ವ್ಯಥ೯ವೆಂದು ಹೇಳಲಾಗುವುದಿಲ್ಲ.(ಪುಟ 20)
8)ದೇªಹವೇ ಮೊಂತಾದ ಈ ಸಂಘಾತವು ನಾನೇ ಎಂದು ತನ್ನಲ್ಲಿ ವಿಪರೀತ ಪ್ರತ್ವಯ ಉಂಟಾಗುವುದೇ ಉಂಟಾಗುವುದೇ ಆ ಸಂಬಂಧವು.ಸಮ್ಯಗ್ದಶ೯ನವನ್ನು ಬಿಟ್ಟರೆ ಮತ್ತು ಯಾವುದೂ ಇದನ್ನು ಕಳೆಯಲೇ ಆರದು.ಸಮಗ್ದಶ೯ನದ ಮೊಂಚೆ ಈ ಭ್ರಾಂತಿಯು ಎಲ್ಲಾ ಪ್ರಾಣಿಗಳಲ್ಲಿಯೂ ಸತತವಾಗಿ ಇರುತ್ತದೆ.(ಪುಟ 21)
೯)ಸಮ್ಯಗ್ದಶಿ೯ಗೆ ಅಭಿಮಾನವಿರುವುದಿಲ್ಲ.(ಪುಟ 21)
10) ಜ್ಞಾನಿಗೆ ಕೈವಲ ಸಿದ್ಧಿಯು ನಿಯಮದಿಂದ ಆಗುತ್ತದೆ.(ಪುಟ 21)
12)ನಿತ್ಯಪ್ರಾಪ್ತವಾಗಿರುವ ಮುಕ್ತಿಯನ್ನು ಜ್ಞಾನದಿಂದ ಪಡೆದುಕೊಂಡವರಿಗೆ ಪುನರಾವೃತ್ತಿಯ ಶ0ಕೆಯೇ ಇಲ್ಲ.(ಪುಟ22)
13)ಶ್ರವಣ ಮನನ ನಿದಿಧ್ಯಾಸನಗಳು ಒಂದಾಗುವುದು-ಎಂದರೆ ಶ್ರುತಿ, ಯುಕ್ತಿ,ಅನುಭವಗಳು ಹೊಂದಿಕೊಳ್ಳುವುದು-ಇದರಿಂದೇ ಸಮ್ಯಗ್ದಶ೯ನ,ಆತ್ಮದಶ೯ನವು.(ಪುಟ 23)
14)ಆದರೆ ಉತ್ತಮಾಧಿಕಾರಿಗಳಿಗೆ ಶ್ರವಣಮಾತ್ರದಿಂದಲೇ ಜ್ಞಾನ ಉಂಟಾಗಬಹುದು.(ಸೂ.ಭಾ
4.1-2) (ಪುಟ 23)
15) ನಿದಿಯ್ಸನವೆಂದರೆ ನಿಶ್ಚಯದಿಂದ ಧ್ಯಾನಮಾಡಿ -ವಸ್ತುವನ್ನು ಸೂಕ್ಷ್ಮ ಬುದ್ಧಿಯಿಂದ ಚೆನ್ನಾಗಿ ನೋಡಿ ಅದು ಹೇಗಿದೆಯೋ ಹಾಗೆ (ವಸ್ತುತಂತ್ರವಾಗಿ) ಅರಿತುಕೊಳ್ಳುವುದು.ಇದೇ ಸಮ್ಯಗ್ದಶ೯ನ,ಸಮ್ಯಕ್ ಜ್ಞಾನಿಲ್ಲಿ ಧ್ಯಾಸವೆಂದರೆ ಉಪಾಸನೆಯಂತೆ ಬರಿಯ ಬಾವನೆಯಲ್ಲ.(ಪುಟ 23)
16)ಹೀಗೆ ಪರಮಾಥ೯ವಾದ ಆತ್ಮನನ್ನು ಕಂಡುಕೊಂಡ ಜ್ಞಾನಿಗೆ ಅವಿದ್ಯಾ,ಕಾಮ,ಕಮ೯-ಎಂಬ ಮೃತ್ಯುವು ನಾಶವಾದ್ದರಿಂದ ಇವನು ಅಮೃತನಾಗುವನು.(ಪುಟ 22)
17)ಆತ್ಮದಶ್೯ಯಲ್ಲದವನಿಗೆ ಆ ಸ್ವರೂಪಕ್ಕಿಂತ ಬೇರೆಯಾಗಿರುವ ವಸ್ತುವನ್ನು ಅವನು ಪಡೆಯಬೇಕೆನ್ನುತ್ತಿರುವುದರಿಂದ ಅದು-ದಹುಃಖವು ಸಂಭವಿಸುತ್ತದೆ!'ಇದು ನನಗೆ ಆಗಬೇಕು' 'ಮಗಗನಿಗೆ ಇದು" 'ಹೆಂಡತಿಗೆ ಇದು' ಎಂದು ಪ್ರಯತ್ನಿಸುತ್ತಿರುವವನು ಮತ್ತೆ ಮತ್ತೆ ಜನನ ಮರಣಗಳ ಸಾಲನ್ನು ಏರಿ,ಶರೀರದ ರೋಗವನ್ನು ಅನುಸರಿಸಿ ನರಳುತ್ತಾನೆ.ಆದರೆ ಸವಾ೯ತ್ಮದಶಿ೯ಗೆ ಇದು ಸಂಭವಿಸುವುದಿಲ್ಲ.-ಎಂಬುದನ್ನು ಇಲ್ಲಿ ಹೇಳಿರುತ್ತಾನೆ.(ಪುಟ 24)
18)ಆತ್ಮಜ್ಞಾನಿಗೆ ಆತ್ಮಕ್ಕಿಂತ ಬೇರೆಯಾದ ಶರೀರವಾಗಲೀ ,ಕಾಮವಾಗಲಿ,ತಾಪವಾಗಲಿ ಸಂಭವಿಸುವುದಿಲ್ಲ.ಇದರಿಂದ ಸವಾ೯ತ್ಮ ದಶ೯ನವೇ ಸಮ್ಯ್ಗ್ದಶ೯ನವೆಂಬುದು ಸಿದದಹವಾಗುತ್ತದೆ(ಪುಟ 24)
1೯)ಅದು ಅದ್ವೈತವಾಗಿರುವುದರಿಂದ ನೇತಿ ನೇತಿ (ಹೀಗಲ್ಲ ಹೀಗಲ್ಲ;ಇದಲ್ಲ ಇದಲ್ಲ) ಎಂದು ಅದನ್ನು ತಿಳ್ಸಲಾಗುತ್ತದೆ(ಪುಟ 24).
20)ಆ ಬಳಿಕ ಗೊತ್ತಾಗಿರುವ ಕ್ರಿಯ ಕಾರಕ ಫಲ ಸ್ವರೂಪದಲ್ಲಿರುವ ದೋಷವನ್ನು ಕಂಡುಕೊಂಡು
,ಅದಕ್ಕೆ ವಿಪರೀತವಾದ ಉದಾಸೀನ)ಪ್ರವೃತ್ತಿ ನಿವೃತ್ತಿ ಎರಡೂ ಇಲ್ಲದ ನೈಷ್ಕಮ೯) ಸ್ವರೂಪದಿಂದ ಇದ್ದುಕೊಂಡಿದುವ ಫಲವನ್ನು ಬಯಸುವವನಿಗೆ,ಅದಕ್ಕೆ ಉಪಾಯವಾಗಿ ಆತ್ಮೈಕತ್ವ ದಶ೯ನ ರೂಪವಾದ ಬ್ರಹ್ಮವಿದ್ಯೆಯನ್ನು ತಿಳಿಸಿಕೊಡುತ್ತದೆ-ಎಂದರಿಯಬೇಕು.(ಪುಟ 24)
21).ಆ ಆತ್ಮತತ್ವವನ್ನು ವಿಜ್ಞಾನದಿಂದ ಎಂದರೆ ಶಾಸ್ತ್ರ,ಆಚಾಯ೯-ಇವರ ಉಪದೇಶದಿಂದ ಉಂಅಆಗುವುದಾಗಿಯೂ ,ಶಮ,ದಮ,ಧ್ಯಾನ,ಸವ೯ತ್ಯಾಗ,ವೈರಾಗ್ಯ-ಇವ್ಗಳಿಂದ ತೋರಿಕೊಳ್ಳ್ವರಾಗಿಯೂ ಇರುವ ವಿಶಿಷ್ಟವಾದ ಜ್ಞಾನದಿಂದ ಧೀರರು ಎಂದರೆ ವಿವೇಕಿಗಳು 'ಪರಿಪಶ್ಯಂತಿ' ಎಂದರೆ ಎಲ್ಲೆಯೂ ಪೂಣ೯ವಾಗಿ ಕಂಡುಕೊಳ್ಳುವರು,ಅರಿತುಕೊಳ್ಳುವರು.(ಪುಟ 25)
26)ವ್ಯಾಕೃತ ಅವ್ಯಾಕೃತ ಜಗತ್ತಿನ ಒಳಹೊರಗೆಲ್ಲ ಬಿಸಿಲು ಕುದುರೆಯಲ್ಲಿ (ಮರೀಚಿಕೆಯಲ್ಲಿ) ಬಿಸಿಲನ್ನು ಕಂಡಂತೆ ಚಿನ್ಮಾತ್ರ ಸ್ವರೂಪನಾದ ನಮ್ಮ ಆತ್ಮನೇ ಪೂರಾ ತುಂಬಿರುವುದನ್ನು ಕಾಣುವುದೇ ಪರಿಪೂಣ೯ ದಶ೯ನ. ಪರಿಪೂಣ೯ದಶ೯ನವೇ ಸಮ್ಯಕ್ ದಶ೯ನ.(ಪುಟ 26)
27)ಎರಡನೆಯದಾದ ಬೇರೊಂದು ವಸ್ತುವಿನಂದಲ್ಲವೆ ಭಯವಾಗುವುದು.ಆ ಎರಡನೆಯ ವಸ್ತುವಿನ ಅರಿವು ಏಕತ್ವಜ್ಞಾನದಿಂದ ತೊಲಗಿದ್ದರಿಂದ ಭಯವಿಲ್ಲ.(ಪುಟ 26)
28)"ಆ ಜಗತ್ಪತಿಗೆ ಅಪ್ರತಿಹತವಾದ ಜ್ಞಾನವೂ ವೈರಾಗ್ಯವೂ ಐಶ್ವಯ೯ವೂ ಧಮ೯ವೂ ಈ ನಾಲ್ಕೂ ಸಹ ಸಿದ್ಧವಾಗಿರುತ್ತವೆ.(ಪುಟ 26)
2೯) ಈ ಆತ್ಮವಿಜ್ಞಾನ ಸ್ಮøತಿಯು ಶೋಕ,ಮೋಹ,ಭಯ, ಆಯಾಸ ಮುಂತಾದ ದುಃಖಗಳನ್ನು ತೊಲಗಿಸುವುದರಿಂದಲೂ ಅದನ್ನು ತೊಲಗಿಸಬೇಕಾಗಿಲ್ಲ.(ಪುಟ27)
30)ಚಿತ್ತವೃತ್ತಿಯ ನಿರೋಧವು ಮೋಕ್ಷಸಾಧನವೆಂದು ನಿಶ್ಚಿತವಾಗಿರುವುದಿಲ್ಲ.ವೇದಾಂತಗಳಲ್ಲಿ (ಉಪನಿಷತ್ತುಗಳಲ್ಲಿ) ಬ್ರಹ್ಮ ವಿಜ್ಞಾನಕ್ಕಿಂತ ಬೇರೆಯಾದುದು ಪರಮಪುರುಷಾಥ೯ಕ್ಕೆ ಸಾಧನವೆಂದು ನಿಶ್ಚಿತವಾಗಿರುವುದೇ ಇಲ್ಲ.(ಪುಟ 28)
31) ಶ್ರುತಿಗಳೆಲ್ಲ ಬ್ರಹ್ಮಾತ್ಮ ಜ್ಞಾನವೇ ಮೋಕ್ಷಸಾಧನವೆಂದು ಹೇಳುತ್ತವೆ..ಆತ್ಮಜ್ಞಾನವು ಉಂಟಾದರೆ ಚಿತ್ತವೃತ್ತಿ ನಿರೋಧವು ತಾನೇ ಆಗುತ್ತದೆ.(ಪುಟ 28)
32)ಗೀತಾಶಾಸ್ತ್ರಕ್ಕೆ ನಿಃಶ್ರೇಯಸವೇ ಹೆಚ್ಚಿನ ಪ್ರಯೋಜನವು.ನಿಃಶ್ರೇಯಸವೆಂದರೆ ಕಾರಣಸಹಿತವಾಗಿ (ಅವಿದ್ಯಾ ಸಹಿತವಾಗಿ) ಸಂಸಾರಚು ಅತ್ಯಂತವಾಗಿ ಇಲ್ಲವಾಗುವುದು.ಇದು ಸವ೯ಕಮ೯ಗಳನ್ನೂ ಸನ್ಯಾಸಮಾಡಿ ಆತ್ಮಜ್ಞಾನದಲ್ಲಿಯೇ ನಿಂತು ಬಿಡುವುದೆಂಬ ಧಮ೯ದಿಂದ ಆಗುತ್ತದೆ.(ಪುಟ 2೯)
33)ತತ್ವದಶ೯ಗಳಿಂದ ದೃಷ್ಟವಾಗಿರ್ತತ್ತದೆ.,ಅರಿಯಲ್ಪಟ್ಟಿರುತ್ತದೆ. ತತ್ ಎಂಬುದು ಸವ೯ನಾಮವು.ಸವ೯ವೂ ಬ್ರಹ್ಮವಾದ್ದರಿಂದ ಅದಕ್ಕೆ ತತ್ ಎಂದು ಹೆಸರು. ಆ ಬ್ರಹ್ಮ ಸ್ವರೂಪವು ತತ್ವವು ಎಂದರೆ ಎಂದರೆ ಬ್ರಹ್ಮನ ನಿಜವಾದ ಸ್ವರೂಪವು. ಅದನ್ನು ತಿಳಿಯುವ ಸ್ವಭಾವವುಳ್ಳವರು ಯಾರೋ ಅವರು ತತ್ವದಶಿ೯ಗಳು.(ಪುಟ 2೯)
34)ಆದ್ದರಿಂದ ಮೇಲೆ ಹೇಳಿದಂತೆ ವಿಕಾರವಿಲ್ಲದ ಆತ್ಮನನ್ನು ಅರಿತುಕೊಂಡಿರುವ ಜ್ಞಾನಿಗೆ ಸವ೯ಕಮ೯ಸನ್ಯಾಸದಲ್ಲಿಯೇ ಅಧಿಕಾರವು.(ಪುಟ 2೯)
35) ಮನಸ್ಸಿನಿಂದಲೇ ಕಂಡುಕೊಳ್ಳಬೇಕು.(ಬೃ.4-4-1೯)ಎಂದು ಶ್ರುತಿಯಲ್ಲಿ ಹೇಳಿರುತ್ತದೆ.(ಪುಟ 2೯)
36) ಯಾವನಿಗೆ ಆತ್ಮ ಅನಾತ್ಮಗಳ ಉಂಟಾದ ಪ್ರಜಞÉಯು ನಿಂತಿರುವುದೋ ಅಂಥವನು ಸ್ಥಿತಪ್ರಜ್ಞ-ಜ್ಞಾನಿ ಎನಿಸಿಕೊಳ್ಳುತ್ತಾನೆ. ಮತ್ತು ಪುತ್ರ, ವಿತ್ತ,ಲೋಕ-ಎಂಬ ಏಷಣಾತ್ರಯಗಳನ್ನು ತ್ಯಜಿಸಿ ,ಸನ್ಯಾಸಿಯಾಗಿ, ಆತ್ಮಾರಾಮನಾಗಿ ಯಾವನು ಆತ್ಮಕ್ರೀಡನಾಗಿರುವನೋ ಅವನೇ ಸ್ಥಿತಪ್ರಜ್ಞನು.ಯಾಜ್ಞವಲ್ಕ್ಯನು ಮೈತ್ರೇಯಿಗೆ ಹೇಳಿದ ವಿಷಯವೇ ಇದು.(ಗೀ.ಭಾ 2-55)ಪುಟ 30
37)ಸಮ್ಯಗ್ದಶ೯ನವು ಉಂಟಾಗದಿದ್ದರೆ ರಸವು(ರಾಗವು) ನಾಶವಾಗದು.ಆದ್ದರಿಂದ ಸಮ್ಯಗ್ದಶ೯ನ ರೂಪವಾದ ಪ್ರಜ್ಞೆಯನ್ನು ಸ್ಥಿರಗೊಳಿಸಿಕೊಳ್ಳಬೇಕು.(ಪುಟ 30)
38)ಏಷಣೆಗಳನ್ನು ಬಿಟ್ಟಿರುವ ಜ್ಞಾನಿಯಾಗಿರುವ ಸ್ಥಿತಪ್ರಜ್ಞನಾಗಿರುವ ತ್ಹಿಗೇ ಮೋಕ್ಷವು ಸಿಕ್ಕುವುದೇ ಹೊರತು,ಸನ್ಯಾಸಿಯಲ್ಲದೆ ಕಾಮಗಳನ್ನು (ಭೋಗಗಳನ್ನು) ಬಯಸುತ್ತಿರುವವನಿಗೆ ಸಿಕ್ಕುವುದಿಲ್ಲ.(ಪುಟ31)
3೯)ವೇದೋಕ್ತ ಕಮ೯ದ ಫಲವು ಅಪೂಣ೯ವಾದುದು.ಅಂದರೆ ಅಲ್ಪವಾದುದು.ಪರಮಾಥ೯ ತತ್ವವನ್ನು ಬಲ್ಲ ಸನ್ಯಾಸಿಯ ಸಮ್ಯಗ್ದಶ೯ನವೆಂಬ ಬ್ರಹ್ಮಾತ್ಮ ವಿಜ್ಞಾನದ ಫಲವು ಪೂಣಾ೯ನಂದವೆಂಬ ಅಮೃತತ್ವವು ಸವ೯ತ್ರ ಜಲಪರಿಪೂಣ೯ವಾದ ಮಹಾಜಲಾಶಯದ ಪ್ರಯೋಜನವಿರುವಂತೆ ಇದೆ.(ಪುಟ 31)
40)ನಮ್ಮ ಸ್ವರೂಪವನ್ನೇ ಅಜ್ಞಾನದಿಂದ ಎಚ್ಚರವೆಂದೂ ಕನಸೆಂದೂ ನಿದ್ರೆಯೆಂದೂ
ವಿಕಲ್ಪಿಸಿಕೊಳ್ಳುತ್ತಿರುವೆವು.ಅಜವೂ ಅಜರವೂ ಅಮರವೂ ಅಮೃತವೂ ಅಭಯವೂ ಅದ್ವಿತೀಯವೂ
ಆದ ನಮ್ಮ ಸಚ್ಚಿದಾನಂದ ಸ್ವರೂಪ ಒಂದೇ ಪರಮಸತ್ಯವೆಂಬ ನಿಶ್ಚಯವೇ ವಿವೇಕವಿಜ್ಞಾನ.ಇದೇ ಪರಮಾಥ೯ ದೃಷ್ಟಿಯ ಪರಿಪೂಣ೯ ದಶ೯ನ.ಇದೇ ಸಮ್ಯಕ್ ದಶ೯ನ.(ಪುಟ 32)
41)ಅವ್ಯಯವಾದ ಯೋಗದ ಫಲವು ಅವ್ಯಯವಾಗಿರುತ್ತದೆ.ಏಕೆಂದರೆ ಸಮ್ಯಕ್ ದಶ೯ನದಲ್ಲಿ ನಿಲುಗಡೆಯನ್ನು ಪಡೆಯುವುದೆಂಬ ಈ ಯೋಗದ ಮೋಕ್ಷವೆಂಬ ಫಲವು ನೇಶವಾಗುವುದೇ ಇಲ್ಲ.(ಪುಟ 32)
42) ಮೇಲೆ ಹೇಳಿರುವಂತೆ ಕಮ೯ದಲ್ಲಿ ಅಕಮ೯ವನ್ನು ಕಾಣುವುದೇ ಮುಂತಾದ ತಿಳುವಳಿಕೆಯೇ ಜ್ಞಾನವು.(ಪುಟ 32)
43) ಯಾವನಾದರೆ ಕಮ೯ದಲ್ಲಿ ಅಕಮ೯ವನ್ನು ನೋಡುವ್ದೇ ಮುಂತಾದ ಜ್ಞಾನವುಳ್ಳವನೋ ಆತನುಹೀಗೆ ಅಕಮ೯ವೇ ಮುಂತಾದವನ್ನು ಕಾಣುವುದರಿಂದಲೇ ನಿಷ್ಕಮ೯ನಾಗಿ,ಸನ್ಯಾಸಿಯಾಗಿ,ಬದುಕಿರುವ ಮಟ್ಟಿಗೆ ಬೇಕಾದ ಕೆಲಸವನ್ನು ಮಾಡುತ್ತಿರುವನು.ಈ ವ್ವೇಕವು ಉಂಟಾಗುವ ಮೊದಲು ಕಮ೯ದಲ್ಲಿ ತೊಡಗಿದ್ದನಾದರೂ ಇನ್ನು ಮುಂದೆ ಕಮ೯ದಲ್ಲಿ ತೊಡಗುವುದಿಲ್ಲ.ಆದರೆ ಕಮ೯ವನ್ನು ಪ್ರಾರಂಭಿಸಿದವನಾದ ಬಳಿಕ ಯಾವನಿಗೆ ಆತ್ಮನವಿಷಯವಾದ ಸಮ್ಯಕ್ ದಶ೯ನವು *ಸರಿಯಾದ ಜ್ಞಾನವು) ಉಂಟಾಗುವುದೋ ಅವನಿಗೆ ಯಾವಕಮ೯ದಲ್ಲಿಯೂ ಯಾವ ಪ್ರಯೋಜನವೂ ತೋರುವುದಿಲ್ಲವಾದ್ದರಿಂದ ಕಮ೯ವನ್ನೂ ಅದರ ಸಾಧಬಗಳನ್ನೂ ಬಿಟ್ಟೇ ಬಿಡುತ್ತಾನೆ.(ಪುಟ 33)
44)ಉಪಾಧಿಯಿಂದೊಡಗೂಡಿದ ಆತ್ಮನ್ನು ಯಾವ ಉಪಾಧಿಯೂ ಇಲ್ಲದ ಪರಬ್ರಹ್ಮ ರೂಪದಿಂದ
ಕಾಣುವುದೆಂಬುದಿದೆಯಲ್ಲ ,ಅದೇ ಆ ಬ್ರಹ್ಮಾಗ್ನಿಯಲ್ಲಿ ಮಾಡುವ ಹೋಮವು. ಬ್ರಹ್ಮಾತ್ಮೈಕತ್ವ ದಶ೯ನದಲ್ಲಿಯೇ ನೆಲೆನಿಂತಿರುವ ಸನ್ಯಾಸಿಗಳು ಅದನ್ನು ಮಾಡುವರು.(ಪುಟ 33)
45) ಆ ಈ ಸಮ್ಯಕ್ದಶ೯ನವೆಂಬ(ಸರಿಯಾದ ದಶ೯ನ,ಅಭೇದ ದಶ೯ನ,ಏಕತ್ವ ದಶ೯ನ) ಯಜ್ಞವು.(ಪುಟ 33)
46)"ಇವು ನನ್ನ ಕೆಲಸಗಳಲ್ಲ,ನಾನು ಯಾವ ವ್ಯಾಪಾರವೂ ಇಲ್ಲದೆ ಸುಮ್ಮನೆ ಇರುತ್ತೇನೆ" ಎಂದೀಪರಿಯಲ್ಲಿ ತಿಳಿದುಕೊಳ್ಳುವುದಾದರೆ ಈ ಸ£ಮ್ಯಗ್ದಶ೯ನದ ಫಲವಾಗಿ (ಈ ಸರಿಯಾದ ತಿಳುವಳಿಕೆಯಿಂದ) ಸಂಸಾರದ ಬಂಧನಗಳಿಂದ ಬಿಡುಗಡೆಯನ್ನು ಹೊಂದುವೆ.(ಪುಟ 34)
47)ಯಾರು ಸಮ್ಯಗ್ದಶಿ೯ಗಳೋ(ಸರಿಯಾಗಿ ತತ್ವವನ್ನು ಮನಗಂಡಿರುವರೋ)ಅವರು ಉಪದೇಶ ಮಾಡಿದ ಜ್ಞಾನವೇ ಕಾಯ೯ಕಾರಿಯಾಗುವುದೇ ಹೊರತು ಮಿಕ್ಕದ್ದು ಆಗಲಾರದು.(ಪುಟ34)
48)ಆದ್ದರಿಂದ ಸಮ್ಯಗ್ದಶ೯ನವು (ಸರಿಯಾದ ಆತ್ಮಜ್ಞಾನವು) ಕಮ೯ಗಳೆಲ್ಲವೂ ನಿಬೀ೯ಜವಾಗುವಂತೆ
ಮಾಡುವುದಕ್ಕೆ ಕಾರಣವಾಗುವುದೆಂದೇ ಅಭಿಪ್ರಾಯವು.(ಪುಟ 34)
4೯)ಸಮ್ಯಗ್ದಶ೯ನದಿಂಧ (ಸರಿಯಾದ ಆತ್ಮಜ್ಞಾನದಿಂದ) ಮೋಕ್ಷವುಂಟಾಗುವುದೆಂಬುದು ಸಕಲ ಶಾಸ್ತ್ರಗಳಿಂದಲೂ ಯುಕ್ತಿಯಿಂದಲೂ ಸಿದ್ಧವಾಗಿ ಅತ್ಯಂತವಾಗಿ ನಿಶಿತವಾಗಿರು ವಿಷಯವು.(ಪುಟ 34)
50)ಯೋಗ ಸನ್ಯಸ್ತಕಮ೯ನು ಎಂದರೆ ಪರಮಾಥ೯ದಶ೯ನವೆಂಬ ಯೋಗದಿಂದ (ಆತ್ಮಜ್ಞಾನದಿಂದ) ಧಮ೯ ಅಧಮ೯ ಎಂಬ ಹೆಸರಿನ ಕಮ೯ಗಳನ್ನು ಆವನು ಸನ್ಯಾಸ ಮಾಡಿರುವನೋ ಅವನು.(ಪುಟ 34)
51)ಶೋಕ ಮೋಹ ಮುಂತಾದ ದೋಷಗಳನ್ನು ತೂಲಗಿಸುವ ಸಮ್ಯಗ್ದಶ೯ನವೇ ಜ್ಞಾನವು.ಆಜ್ಞಾನವೆಂಬುದೇ ಖಡ್ಗವು.ಸಂಶಯವನ್ನು ಕತ್ತರಿಸಿ ಹಾಕಿಕೊಂಡು ಯೋಗವನ್ನು ಸಮ್ಯಗ್ದಶ೯ನಕ್ಕೆ ಉಪಾಯವಾಗಿರುವ ಕಮಾ೯ನುಷ್ಠಾನವನ್ನು ಸ್ವೀಕರಿಸು,ಮಾಡು.(ಪುಟ 35)
52)ಜನ್ಮವೇ ಮೊದಲಾದ ಯಾವವಿಕಾರವೂ ಇಲ್ಲದ್ದರಿಂದ ನಿಷ್ಕ್ರಿಯನಾದ ಆತ್ಮನು ತಾನೆಂದು ಯಾವನು ಅರಿತುಕೊಂಡಿರುವನೋ ಆ ಆತ್ಮಜಾನಿಗೆ ಸಮ್ಯಗ್ದಶ೯ನದಿಂದ ತಪೊಉ ತಿಳುವಳಿಕೆಯು ಹೋಗಿಬಿಟ್ಟಿರುವುದರಿಂದ ನಿಷ್ಕ್ರಿಯ ಸಮ್ಯಗ್ದಶ೯ನದಿಂದ ತಪ್ಪು ತಿಳುವಳಿಕೆಯು ಹೋಗಿಬಿಟ್ಟಿರುವುದರಿಂದ ನಿಷ್ಕ್ರಿಯವಾದ ಆತ್ಮರೂಪದಲ್ಲಿದ್ದುಬಿಡುವುದೆಂಬ ಸವ೯ಕಮ೯ ಸನ್ಯಾಸವನ್ನು ಹೇಳಿದೆ.(ಪುಟ 35)
53) ಸಮ್ಯಗ್ದಶ೯ನಕ್ಕೆ ವಿರುದ್ದವಾದ ತಪ್ಪು ತಿಳುವಳಿಕೆ ಎಂಬ ಕಾರಣವುಳ್ಳ ಕಮ೯ಯೋಗವು ಆತ್ಮತತ್ವವನ್ನು ಬಲ್ಲಾತನಿಗೆ ಇರಬಹುದೆಂದು ಕನಸಿನಲ್ಲಿಯೂಕೂಡ ಕಲ್ಪಿಸುವುದಕ್ಕೆ ಆಗಲಾರದು.
(ಪುಟ 35)
54)ಹೀಗೆ ತತ್ವವನ್ನರಿತುಕೊಂಡಿರುವ ಸಕಲವಿಧವಾದ ದೇಹೇಂದ್ರಿಯಗಳ ವ್ಯಾಪಾರರೂಪವಾದ
ಕಮ೯ಗಳಲ್ಲಿ ಅಕಮ೯ವನ್ನೇ ಕಾಣುತ್ತಿರುವ ಆ ಸ್ಮ್ಯಗ್ದಶಿ೯ಗೆ (ಸರಿಯಾದ ಆತ್ಮಜ್ಞಾನವುಳ್ಳ ಆತನಿಗೆ ಸವ೯ಕಮ೯ಸನ್ಯಾಸದಲ್ಲಿಯೇ ಅಧಿಕಾರವು.ಏಕೆಂದರೆ ಅವನು ತನಗೆ ಕಮ೯ವೇ ಇಲ್ಲವೆಂದುಕೊಂಡಿರುತ್ತಾನೆ.(ಪುಟ 36)
55)ಸಮ್ಯಕ್ ದಶ೯ನವೆಂದರೆ ಸಮ್ಯಕ್ ಜ್ಞಾನವು.(ಪುಟ 36)
56)ಯೋಗಸಿಧ್ಧಿಯನ್ನು ಎಂದರೆ ಯೋಗದ ಫಲವಾದ ಸಮುಗ್ದಶ೯ನವನ್ನು ಪಡೆಯದೆ ಇರುವುದರಿಂದ ಯಾವಗತಿಯನ್ನು ಹೊಂದುತ್ತಾನೆ.(ಪುಟ 37)
57)ಏಕೆಂದರೆ ಸದ್ಯದೋಮುಕ್ತಿಯನ್ನು ಹೊಂದಿದವರಾದ ಸಮ್ಯಗ್ದಶ೯ನ ನಿಷ್ಠರಿಗೆ ಎಲ್ಲಿಗಾದರೂ ಹೋಗುವುದಾಗಲೀ ಬರುವುದಾಗಲೀ ಇರುವುದಿಲ್ಲ."ಆತನ ಪ್ರಾಣಗಳು ದೇಹವನ್ನು ಬಿಟ್ಟು ಮೇಲಕ್ಕೆ ಹೋಗುವುದಿಲ್ಲ."(ಬೃ.4-4-6) ಎಂಬ ಶ್ರುತಿಯು ಇದಕ್ಕೆ ಪ್ರಮಾಣವು.ಅವರು ಬ್ರಹ್ಮದಲ್ಲಿಯೇ ಅಡಗಿಹೋಗುವ ಪ್ರಾಣವುಳ್ಳವರು ಬ್ರಹ್ಮಮಯರಾಗಿ ಬ್ರಹ್ಮವೇ ಆಗಿರುತ್ತಾರೆ ಅಲ್ಲವೇ?(ಪುಟ 36)
58)ಜ್ಞಾನವೆಂಬುದು ಏಕತ್ವದಿಂದ 'ಪರಬ್ರಹ್ಮವು ಒಂದೇ'ಎಂಬ ಪರಮಾಥ೯ದಶ೯ನದಿಂದ.ಅದರಿಂದ ಉಪಾಸನೆ ಮಾಡುತ್ತಾರೆ.(ಪುಟ37)
5೯)ನನ್ನಿಂದ ಬೇರೆಯಾಗದವರಾಗಿಮನಾರಾತಣನಾದ ನನ್ನನ್ನು ಆತ್ಮನನ್ನಾಗಿ ಮಾಡಿಕೊಂಡವರಾಗಿ ಧ್ಯಾನಿಸುತ್ತ ನನ್ನನ್ನು ಯಾವ ಸನ್ಯಾಸಗಿಗಳು ಉಪಾಸನೆ ಮಾಡುತ್ತಲಿರುವರೊ ಪರಮಾಥ೯ದಶ್೯ಗಳಾದ ಅವರ ಯೋಗµಕ್ಷೇಮವನ್ನು ನಾನು ವಹಿಸುವೆನು.(ಪುಟ 38)
60)ಅವರಿಗೆ ಬುದ್ಧಿಯೋಗವನ್ನು ,ಎಂದರೆ ನನ್ನ ತತ್ವದ ವಿಷಯವಾದ ಸಮ್ಯಗ್ದಶ೯ನವು;ಆ
ಬುದ್ಧಿಯೋಗವನ್ನು ಕೊಡುವೆನು.ಆ ಸಮ್ಯಗ್ದಶ೯ನಯೋಗದಿಂದ ತಮ್ಮ ಆತ್ಮನಾಗಿರುವ ಪರಮೇಶ್ವರನಾದ ನನ್ನನ್ನು ತಮ್ಮ ಆತ್ಮನೆಂದು ಅರಿತುಕೊಳ್ಳುವರು.ಅವರು ಮಚ್ಚಿತ್ತರು,ಮದ್ಗತಪ್ರಾಣರು.(ಪುಟ 38)
61)ಆದ್ದರಿಂದ ಸಮ್ಯಗ್ದಶ೯ನದಲ್ಲೇ ನೆಲೆನಿಂತಿರುವ ಹಾಗೂ ಏಷಣೆಗಳನ್ನೆಲ್ಲಾ ತೊರೆದಿರುವ ಸನ್ಯಾಸಿಗ
ಳಾದ ಅಕ್ಷರೋಪಾಸಕರಿಗೆ(ಜ್ಞಾನೀ ಭಕ್ತರಿಗೆ),ನೇರಾಗಿ ವಿಶ್ವರೂಪದ ಉಪಾಸಕರಿಗೆ ಆಗುವಂತೆ ಕಾಲಾಂತರದಲ್ಲಿ (ಮರಣಾನಂತರ ಫಲವಲ್ಲ)ಈಗಲೇ ಮೋಕ್ಷಕ್ಕೆ (ಸದ್ಯೋಮುಕ್ತಿಗೆ) ಸಾಧನವಾಗಿರುವ "ಅದ್ವೇಷ್ಟಾ ಸವ೯ಭೂತಾನಾಂ"ಯಾವ ಪ್ರಾಣಿಗಳನ್ನೂ ದ್ವೇಷಮಾಡದೆ ಇರುವುದು-ಮುಂತಾದ ಧಮ೯ಸಮೂಹವನ್ನು ಹೇಳುತ್ತೇನೆಂದು ಭಗವಂತನು ಹೊರಟಿರುತ್ತಾನೆ.(ಪುಟ 3೯)
62)ಆದ್ದರಿಂದ ಜ್ಞೇಯರೂಪವಾಗಿರುವ ಕ್ಷೇತ್ರ ಕ್ಷೇತ್ರಜ್ಞರ ಯಾಚ ಜ್ಞಾನವುಂಟೋ ,ಕ್ಷೇತ್ರ ಕ್ಷೇತ್ರಜ್ಷರು ಯಾವ ಜ್ಞಾನದಿಂದ ವಿಷಯೀಕರಿಸಲ್ಪಡುತ್ತಾರೋ ,ಅದು ಜ್ಞಾನವು.ಸಮ್ಯಕ್ ಜ್ಞಾನವು(ಸರಿಯಾದ ಜ್ಞಾನವು) ಎಂದು ನನ್ನ ಈಶ್ವರನಾದ ವಿಷ್ಣುವಿನ ಮತವು,ಅಭಿಪ್ರಾವವು.(ಪುಟ 40)
63)ಈ ಸಮ್ಗ್ದಶ೯ನಕ್ಕೆ ಯಾವನು ಅಧಿಕಾರಿಆಗಿರುವನು?ಎಂದರೆ ಭಗವಂತನು ಹೇಳುತ್ತಾನೆ:ಈಶ್ವರನೂ ಸವ೯ಜ್ಞನೂ ಪರಮಗುರುವೂ ಶದ ವಾಸುದೇವನೆಂಬ ನನ್ನಲ್ಲಿ ಸವಾ೯ತ್ಮಭಾವವನ್ನು ಸಮಪಿ೯ಸಿದವನಾಗಿ ಯಾವ ಯಾವದನ್ನು ಕಾಣುತ್ತಾನೋ,ಕೇಳುತ್ತಾನೋ ಅಥವಾ ಮುಟ್ಟುತ್ತಾನೋ ಅದೆಲ್ಲವೂ ಭಗವಂತನಾದ ವಾಸುದೇವನೇ ಎಂಬೀ ತಿಳುವಳಿಕೆಯು ತುಂಬಿರುವ ಬುದ್ಧಿಯುಳ್ಳ ನನ್ನ ನಿಜವಾದ ಭಕ್ತನೇ ಈ ಸಮ್ಯಗ್ದಶ೯ನಕ್ಕೆ ಅಧಿಕಾರಿಯು.ಅವನು ಈಹಿಂದೆ ಹಿಂದೆ ಹೇಳಿರು ಸಮ್ಯಗ್ದಶ೯ನವನ್ನು ಅರಿತುಕೊಂಡು ಮದ್ಭಾವವನ್ನು ಹೊಂದಿ -ಪರಮಾತ್ಮನನ್ನು ಪಡೆಯಲು ಯೋಗ್ಯನಾಗಿ ಮೋಕ್ಷವನ್ನು ಹೊಂದುತ್ತಾನೆ.ಇಲ್ಲಿ 'ವಿಜ್ಞಾಯ'-ಅರಿತುಕೊಂಡಮೇಲೆ ಮದ್ಭಾವಾಯ ಎಂದಿರುವುದರಿಂದ ಇದು ಭಾವನಾ ಯುಕ್ತ ಉಪಾಸನೆಯಲ್ಲ.ಇದು µವಸ್ತುತಂತ್ರವಾದ ಸ್ವರೂಪ ಜ್ಞಾನವೇ.ಮದಭಾಯ ಎಂದರೆ ನನ್ನ ಸ್ವರೂ¥ (ಪುಟ 41)
64)ಅಂತೂ ಇದುವರೆಗೂ ಇಷ್ಟನ್ನು ಹೇಳಿದಂತಾಯಿತು. ಪ್ರಕೃತಿಯಲ್ಲಿರುವ ಅವಿದ್ಯೆಯೂ ಗುಣಗಳಲ್ಲಿರುವ ಸಂಗವೆಂಬ ಕಾಮವೂ ಸಂಸಾರಕ್ಕೆ ಕಾರಣವು. ಈ ಕಾರಣಗಳನ್ನು (ಅವಿದ್ಯಾ ಕಾಮಗಳನ್ನು)
ಬಿಡುವುದಕ್ಕಾಗಿ ಹೇಳಿದೆ. ಇದನ್ನು ತೊಲಗಿಸುವುದಕ್ಕೆ ವೈರಾಗ್ಯದಿಂದ ಸವ೯ಕಮ೯ವನ್ನು ಮಾಡಿಕೊಂಡ
ಜ್ಞಾನವೇ ಕಾರಣವೆಂದು ಗೀತಾಶಾಸ್ತ್ರದಲ್ಲಿ ಪ್ರಸಿದ್ಧವಾಗಿರುತ್ತದೆ(ಪುಟ 41)
65)ಮುಂದಿನ ಮುಖ್ಯವಾದ ಗ್ರಂಥಭಾಗದಲ್ಲಿ ಬರುವ ಯಾಜ್ಞವಲ್ಯರ ಉಪದೇಶದಲ್ಲಿ ಈ ಕ್ರಮವೇ ಅಡಗಿದೆ.(ಪುಟ 41)
66)'ಅದುಸತ್ತೆನಿಸುವುದಿಲ್ಲ ಅಸತ್ತೆನಿಸುವುದಿಲ್ಲ' ಎಂಬೀ ಶ್ಲೋಕದ ರೀತಿಯಿಂದ ಯಾವುದೊಂದು ಉಪಾಧಿಯೂ ಇಲ್ಲದ ,ಜ್ಞೇಯವಾದ ಬ್ರಹ್ಮವನ್ನು ತನ್ನಸ್ವರೂಪವಾಗಿ ಯಾವನು ಕಂಡುಕೊಳ್ಳುವನೊ ಮತ್ತು ಕ್ಷೇತ್ರವನ್ನು ಮಯೆಯಿಂದ ನಿಮಿ೯ತವಾದ ಆನೆ,ಕನಸಿನಲ್ಲಿ ಕಂಡ ವಸ್ತು,ಗಂಧವ೯ನಗರ-ಮುಂತಾದವುಗಳಂತೆ ಅಸತ್ತಾಗಿಯೇ ಇದ್ದರೂ ಅಸತ್ತಿನಂತೆ ಕಾಣುತ್ತದೆ-ಎಂಬೀ ಬಗೆಯಿಂದ ನಿಶ್ಚ್ಗಿತವಾದ ಅರಿವು ಉಂಟಾಗುವುದೋ ಅವನ ನಿಶ್ಚಿತವಾದ ಜ್ಞಾನವೇ ಸಮ್ಯಗ್ದಶ೯ನವು.(ಪ್ರಕೃತಿ ಪುರುಷರ ಸಂಯೋಗವೇ ಅನ್ಯೋನ್ಯಾಧ್ಯಾಸವೇ ಮಿಥ್ಯಾಜ್ಞಾನವು.(ಪುಟ 41)
67)'ಅವನು ಮತ್ತೆ ಹುಟ್ಟುವುದಿಲ್ಲ'ಎಂಬ ಶ್ಲೋಕದಲ್ಲಿ ಸಮ್ಯಗ್ದಶ೯ನಕ್ಕೆ ಫಲವು,ಅವಿದ್ಯೆಯೇ ಮುಂತಾದ ಸಂಸಾರ ಬೀಜವನ್ನು ಹೋಗಲಾಡಿಸುವುದರ ಮೂಲಕ ಜನ್ಮವಿಲ್ಲದಂತೆ ಆಗುವ್ದೇ ಆಗಿದೆ.-ಎಂದು ಹೇಳಿರುತ್ತದೆ.(ಪುಟ 42)
68)ಆತ್ಮನು ಕ್ಷೇತ್ರಜ್ಞನು.ಕತೃ೯ವಲ್ಲವೆಂದು ಯಾವನು ಅರಿತುಕೊಳ್ಳುತ್ತಾನೆಯೋ ಅವನೇ(ಸಮ್ಯಗ್ದಶಿ೯ಯು)ನಿಜವನ್ನು ಕಂಡಿರುತ್ತಾನೆ ಅವನೇ ಪರಮಾಥ೯ದಶಿ೯ಯು-ಪರಮಾಥ೯ವನ್ನು ಕಂಡಿರುವಾತನು.(ಪುಟ 42)
6೯) ಆದ್ದರಿಂದ ಪರಮಾಥ೯ದಶಿ೯ಯು ಪರಮಾಥ೯ವನ್ನು ಕಂಡುಕೊಂಡಿರುವವನು ಮಾತ್ರವೇ ದೇಹಧಾರಿಯಲ್ಲವಾದ್ದರಿಂದ -ದೇಹವೇ ನಾನೆಂಬ ಅಭಿಮಾನವಿಲ್ಲದ್ದರಿಂದ -ಒಂದಿಷ್ಟೂ ಉಳಿಯದಂತೆ ಕಮ೯ಗಳನ್ನು ಸನ್ಯಾಸ ಮಾಡPಲು ಶಕ್ತನಾದವನು.(ಪುಟ 43)
70)ಬೇರೆ ಬೇರೆಯ ದೇಹಗಳು ವಿಂಗಡವಾಗಿರುತಿದ್ದರೂ ಆ ಆತ್ಮವಸ್ತುವು ವಿಭಕ್ತ ವಾಗಿಲ್ಲವೆಂದೂ (ಕಡಿವಡೆಯದೆ ಸವ೯ವ್ಯಾಪಕವೆಂದೂ) ಯಾವಜ್ಞಾನದಿಂದ ಕಾಣುತ್ತಾನೋ ಆ ಜ್ಞಾವನ್ನು ಅದ್ವೈತಾತ್ಮ ವಿಷಯವಾಗಿರುವ,ಸಾಕ್ಷಾತ್ತಾಗಿ ಸಮ್ಯಗ್ದಶ೯ನವೇ ಆಗಿರುವ ಜ್ಞಾನವನ್ನು ಸಾತ್ವಿಕವೆಂದು ತಿಳಿ.(ಪುಟ 44)
71)ಅಂಥ ನೈಷ್ಕಮ್ಯ೯ ಸಿದ್ಧಿಯನ್ನು -ಅದು ಪರಮವಾದದ್ದು,ಕಮ೯ಸಿದ್ಧಿಗಿಂತ ಬೇರೆಯಾದ ತಪಸ್ಸು
ಈಗಲೇ ಮುಕ್ತಿಯನ್ನು ಪಡೆದು ನಿಲ್ಲುವ ರೂಪವಾದುದು.ಇದನ್ನು ಸನ್ಯಾಸದಿಂದ,ಸಮ್ಯಗ್ದಶ೯ನದಿಂದ
-ಅಥವಾ ಆ ದಶ೯ನಪೂವ೯ಕವಾದ ಸಮ್ಯಗ್ದಶ೯ನದಿಂದ ಪಡೆದುಕೊಳ್ಳುತ್ತಾನೆ.(ಪುಟ 44)
72)ಈ ಭಾಷ್ಯಭಾಗದಲ್ಲಿ ಶಂಕರರು ಸದ್ಯೋಮುಕ್ತಿಗೆ ,ಸವ೯ಕಮ೯ಸನ್ಯಾಸದ ಮೂಲಕ ಸಮ್ಯಗ್ದಶ೯ನವೇ ಸಾಧನವಾಗಿದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ .ಇದನ್ನು ನಾವು ಮುಖ್ಯವಾಗಿ ಗಮನಿಸಬೇಕು.(ಪುಟ 45)
73)"ಮೈತ್ರೇಯೀ ಯಾಜ್ಞವಲ್ಕ್ಯಸಂವಾದ"ಎಂಬ ಮೂಲಗ್ರಂಥದಲ್ಲಿ -ಮೈತ್ರೇಯಿಯು(ಕೇಳುತ್ತಾಳೆ)(ಪುಟ 45)
74)ಭಗವಂತನೆ ಈ ಪೃಥ್ವಿಯೆಲ್ಲವೂ ವಿತ್ತದಿಂದ ತುಂಬಿರುವುದಾದರೆ ,ಅದರಿಂದ ನಾನು ಅಮೃತಳಾಗುವೆನೋ ಹೇಗೆ?"ಎಂದು ಕೇಳಿದಳು.ಇದಕ್ಕೆ ಯಾಜ್ಞವಲ್ಕ್ಯನು 'ನೇತಿ''ಇಲ್ಲ'ಎಂದು ಹೇಳಿದನು.ಅದಕ್ಕೆ ಮೈತ್ರೇಯಿಯು "ಯಾವುದರಿಂದ ನಾನು ಅಮೃತಳಾಗಲಾರೆನೋ,ಅದರಿಂದ ನಾನು ಏನುಮಾಡಿಕೊಳ್ಳಲಿ?"ಭಗವಂತನೆ ನೀನು ಯಾವುದನ್ನು ಅಮೃತತ್ವಕ್ಕೆ ಸಾಧನವೆಂದು ತಿಳಿದುಕೊಂಡು
ಅಮೃತತ್ವವನ್ನು ಪಡೆದಿರುವೆಯೋ ಅದನ್ನೇ ನನಗೆ ಹೇಳು ಎಂದು ಕೇಳಿದಳು".(ಪುಟ 45)
75)ಯಾಜ್ಞವಲ್ಕ್ಯನು ಹೀಗೆ ವ್ಯಾಖ್ಯಾನ ಮಾಡಿದನು.ಇಲ್ಲಿ ಅಮೃತತ್ವವೆಂದರೆ ಜನನ ಮರಣ ರಹಿತವಾದ ಮುಕ್ತಿಯೇ.ಅದೂ ಬ್ರಹ್ಮೋಪಾಸಕರಿಗೆ ಮರಣಾನಂತರ ಬ್ರಹ್ಮಲೋಕ ಪ್ರಾಪ್ತಿರೂಪವಾದ ಕ್ರಮಮುಕ್ತಿ ಇದಲ್ಲ.ವಿವೇಕ ವೈರಾಗ್ಯ ಸಂಪನ್ನೆಯಾದ ಮೈತ್ರೇಯಿಯು ಉತ್ತಮಾಧಿಕಾರಿಯಾಗಿರುವುದರಿಂದ ಆ ತೀವ್ರ ಮುಮುಕ್ಷುವಿಗೆ ಯಾಜ್ಞವಲ್ಕ್ಯರು ಶ್ರವಣ,ಮನನ,ನಿದಿಧ್ಯಾಸನಗಳೆಂಬ ನೇರಾದ ಸಾಧನೆಯಿಂದ ಈಗಲೇ ಇಲ್ಲಿಯೇ ಪಡೆದುಕೊಳ್ಳಬಹುದಾದ ಸದ್ಯೋಮುಕ್ತಿಗೆ ಕಾರಣವಾದ ಆತ್ಮಜ್ಞಾನವನ್ನೇ ಬೋಧಿಸಿದರು.ಶ್ರವಣ ಮನನ ನಿದಿಧ್ಯಾಸನಗಳು ಒಟ್ಟುಗೂಡುವುದರಿಂದ ಉಂಟಾಗುವ ಸಮ್ಯಗ್ದಶ೯ನವೇ ಬ್ರಹ್ಮಾತ್ಮ ವಿಜ್ಞಾನಕ್ಕೆ ಸಾಧನವೆಂದೂ (ಬೃ.ಭಾ.2-4-5)ಯಾಜ್ಞವಲ್ಕ್ಯರು ಹೇಳಿದ್ಧಾರೆ.(ಪುಟ 46)
76) ಆದ್ದರಿಂದ ಸವ೯ಕಮ೯ಸನ್ಯಾಸದೊಡನೆಯೇ ಆಜ್ಞಾನನಿಷ್ಠೆಯನ್ನು ಮಾಡಿಕೊಳ್ಳಬೇಕು ಎಂಬುದು ಸಿದ್ಧವಾಯಿತು.(ಪುಟ 46)
77)ಆದ್ದರಿಂದ ಜ್ಞಾನವು ಅತ್ಯಂತ ಪ್ರಸಿದ್ಧವಾಗಿರುತ್ತದೆ.ಆದ್ದರಿಂದ ಜ್ಞಾನಕ್ಕಾಗಿ ಯತ್ನವನ್ನು ಮಾಡಬೇಕಾಗಿಲ್ಲ.ಮತ್ತೇನೆಂದರೆ ಅನಾತ್ಮದಲ್ಲಿರುವ ಆತ್ಮಬುಧ್ಧಿಯನ್ನು ತೊಲಗಿಸಿಕೊಳ್ಳುವುದಕ್ಕಾಗಿಯೇ
ಪ್ರಯತ್ನವನ್ನು ಮಾಡಬೇಕಾಗಿರುತ್ತದೆ.ಆದ್ದರಿಂದ ಜ್ಞಾನನಿಷ್ಠೆಯನ್ನು ಸುಲಭವಾಗಿ ಪಡೆದುಕೊಳ್ಳಬಹುದು.(ಪುಟ46)
78) ಆದ್ದರಿಂದ ಸವ೯ಕಮ೯ಸನ್ಯಾಸಸಹಿತವಾದ ಜ್ಞಾನನಿಷ್ಠೆಯಿಂದ ಸಂಸಾರವು ಅತ್ಯಂತವಾಗಿ ನಾಶವಾಗುತ್ತದೆ.-ದೇಹಾಭಿಮಾನವು ಅವಿದ್ಯಾತ್ಮಕವಾಗಿರುವುದರಿಂದಲೂ (ತಪ್ಪು ತಿಳುವಳಿಕೆಯಿಂದ ದೇಹವೇ ತಾನೆಂದು ತೋರುತ್ತಿದೆ.ಆದೆ ಶರೀರವೇ ಇಲ್ಲವೆಂದು ಶ್ರುತಿಯು ಹೇಳುತ್ತಿದೆ.)ವಿದ್ಯೆಯಿಂದ ಅವಿದ್ಯೆಯು ತೊಲಗಿದರೆ ದೇಹವೇ ಇಲ್ಲವಾಗುವುದರಿಂದಲೂ ಸಂಸಾರವು ಮುಂದೆ ಉಂಟಾಗಲಾರದು.
ದೇಹಾದಿ ಸಂಘಾತದಲ್ಲಿ ತಾನೆಂಬ ಅಭಿಮಾನವು (ಭ್ರಮೆಯು) ಅವಿದ್ಯಾತ್ಮಕವಾಗಿರುತ್ತದೆ.(ಪುಟ 47)
7೯)ಕಮ೯ಯೋಗ ನಿಷ್ಠೆಯ ಪರಮರಹಸ್ಯವಾದ 'ಈಶ್ವರಶರನಾಗತಿ'ಯನ್ನು (ಪ್ರಪತ್ತಿಯೋಗ)ಉಪಸಂಹಾರ ಮಾಡಿಇನ್ನು ಈ ಯೋಗಕಮ೯ನಿಷ್ಠೆಯ ಫಲವಾದ ಸವ೯ವೇದಾಂತಗಳಲ್ಲಿಯೂ (ಸಾರಸವ೯ವಾಗಿ) ಹೇಳಿರುವ ಸಮ್ಯಗ್ದಶ೯ನವನ್ನು ಹೇಳಬೇಕೆಂದು ಪರಮಾತ್ಮನು ಈ ಮುಂದಿನ ವಾಕ್ಯವನ್ನು ಹೇಳಿದ್ದಾನೆ.(ಪುಟ 47)
80)ಸವ೯ಧಮ೯ಗಳನ್ನೂ ಬಿಟ್ಟು ಎಂದ್ರ ಸವ೯ಕಮ೯ಗಳನ್ನೂ ಸನ್ಯಾಸ ಮಾಡಿ ಎಂದು ಅಭಿಪ್ರಾಯ.
ಏಕೆಂದರೆ "ತ್ಯಜ ಧಮ೯ಧಮ೯ಂಚ'(ಮೋಕ್ಷಧಮ೯,32೯-40)"ಧಮ೯ವನ್ನೂ ಬಿಡು ಅಧಮ೯ವನ್ನೂ ಬ್ರಿಡು" ಸತ್ಯಾನೃತಗಳನ್ನು ಬಿಡು,ಯಾವ ಅಹಂಕಾರದಿಂದ ಬಿಟ್ಟೆನೆಂದು ತಿಳಿಯುತ್ತೀಯೋ ಆ ಅಹಂಕಾರವನ್ನು ಬಿಡು" ಎಂದು ಶ್ರುತಿಸ್ಮøತಿಗಳಲ್ಲಿ ಹೇಳಿದೆ.ಸವ೯ರ ಆತ್ಮನೂ ಸವ೯ರಲ್ಲಿಯೂ ಸಮನೂ ಸವ೯ಭೂತಗಳಲ್ಲಿಯೂ ಇರುವವನೂ ಈಶ್ವರನೂ -ಅಚಹ್ಯುತನೂ ಗಭ೯,ಜನ್ಮ,ಮುಪ್ಪು ಸಾವುಗಳಿಲ್ಲದವನೂ ಆಗಿರುವ ನನ್ನೊಬ್ಬನನ್ನೇ 'ನಾನೇ ಆತನು 'ಎಂದು ಶರಣುಹೊಂದು..ನನಗಿಂತ ಬೇರೆಯಾವುದೂ ಇಲ್ಲ ಎಂದು ನಿಶ್ಚಯಿಸಿಕೊ-ಎಂದಥ೯.(ನಿಜವಾದ ಉಪಾಸನೆಯಲ್ಲಿ ಉಪಾಸ್ಯ-ಉಪಾಸಕರ ಭೇದವು ಅಳಿಯುವುದರಿಂದಲೂ ಜದರಿಂದ ತಾನು ಜ್ಞಾತೃವೂ ಅಲ್ಲ ಧ್ಯಾತೃವೂ ಅಲ್ಲ,ಕತೃ೯ವೂ ಅಲ್ಲ ಭೋಕ್ತøವೂ ಅಲ್ಲ ಪರನಾತ್ಮನೊಬ್ಬನೇ ಸತ್ಯ-ಎಂಬ ನಿಶ್ಚಯಜ್ಞಾನವುಉಂಟಾಗುವುದರಿಂದಲೂ (ಶರಣಂವ್ರಜ ಎನ್ನುವುದಕ್ಕೆ ಇದೇ ಸರಿಯಾದ ಅಥ೯)ಹೀಗೆ ಬುದ್ಧಿಯಲ್ಲಿ ನಿಶ್ಚಯಿಸಿಕೊಂಡಿರುವ ನಿನ್ನನ್ನು ನಾನು ಧಮ೯ ಅಧಮ೯ಗಳ ಬಂಧನರೂಪವಾದ ಎಲ್ಲಾ ಪಾಪಗಳಿಂದಲೂ ನಿನ್ನ ಆತ್ಮಸ್ವರೂಪವನ್ನು ಬೆಳಗಿಸಿಕೊಡುವುದರಿಂದ ಬಿಡುಗಡೆ ಮಾಡುವೆನು.ಆದ್ದರಿಂದ ಶೋಕಿಸಬೇಡ".ಇದು ಭಗವಂತನ ಆಶ್ವಾಸನೆ.(ಪುಟ 48)
81)ದೇಹಾದಿಗಳೇ ತಾನೆಂಬ ಅರಿವಿನ ಭ್ರಾಂತಿ ಸಂತತಿಯು ಕಡಿದು ಹೋಗಿರುವ ಸುಷುಪ್ತಿ,ಸಮಾಧಿ(ಮದ,ಮೂಛೆ೯)-ಮುಂತಾದ ಅವಸ್ಥೆಗಳಲ್ಲಿ ಕತೃ೯ತ್ವ ಭೋಕ್ತøತ್ವವೇ ಮುಂತಾದ ಅನಥ೯ವು ಕಂಡುಬರುವುದೂ ಇಲ್ಲ.ಆದ್ದರಿಂದ ಈ ಸಂಸಾರ ಭ್ರಮೆಯು ಭ್ರಾಂತಿ ಪ್ರತ್ಯಯದ ನಿಮಿತ್ತದಿಂದಲೇ ಉಂಟಾಗುತ್ತದೆಯೇ ಹೊರತು ಪರಮಾಥ೯ವಲ್ಲ.ಆದ್ದರಿಂದ ಇದು ಸರಿಯಾದ ತಿಳುವಳಿಕೆಯಿಂದ
ಸಮುಗ್ದಶ೯ನದಿಂದ ಅತ್ಯಂತವಾಗಿ ನಾಶವಾಗುತ್ತದೆ.(ಪುಟ ಅತ್ಯಂತವಾಗಿ ನಾಶವಾಗುತ್ತದೆ.(ಪುಟ 48)
82) ಅನುರಾಗ ಭಯ,ಸಿಟ್ಟು ಮುಂತಾದ ಯಾವ ದೋಷವೂ ಇಲ್ಲದವರೂ ಯಾವಾಗಲೂ ತತ್ವವನ್ನು ಮನನ ಮಾಡುವ ಸ್ವಭಾವದವರಾದ ಮುನಿಗಳೂ,ವೇದಾಥ೯ವನ್ನು ಮನಗಂಡವರೂ, ಆಗಿರುವ ಜ್ಞಾನಿಗಳು ಸವ೯ವಿಕಲ್ಪ ಶೂನ್ಯನೂ(ಯಾವ ಹುಟ್ಟುಗಟ್ಟಿದ ಪದಾಥ೯ವೂ ಇಲ್ಲದವನೂ )ವಿಸ್ತøತವಾದ ದ್ವೈತಭೇದರೂಪವಾದ ಪ್ರಪಂಚವಿಲ್ಲದಿರುವವನೂ ಆದ್ದರಿಂದಲೇ ಅದ್ವಯನೂ ಆದ ಆತ್ಮನನ್ನು ಅರಿತುಕೊಂಡುತ್ತಾರೆ.ಯಾವ ದೋಷಗಳೂ ಇಲ್ಲದ,ವೇದಾಂತಾಥ೯ದಲ್ಲಿಯೇ ತತ್ಪರರಾದ ಸನ್ಯಸಿಗಳಿಗೇ ಈ ಆತ್ಮನ ಸಮ್ಯಗ್ದಶ೯ನವು ಸಾಧ್ಯವೇ ಹೊರತು ,ರಾಗವೇ ಮೊದಲಾದ ದೋಷಳಿಂದ ಚಿತ್ತವು ಕದಡಿರುವ ,ತಮಗೆ ಇಷ್ಟವಾದ ದಶ೯ನಗಳನ್ನೇ ಇಟ್ಟುಕೊಂಡಿರು ತಾಕಿ೯ಕರಿಗೆ ಆಗಲಾರದು.(ಪುಟ48)
83)ರಾಗಾದಿ ದೋಷಗಳಿಗೆ ಅವಕಾಶವಿಲ್ಲದ ಸ್ವಭಾವದಿಂದಲೇ ಶಾಂತವಾಗಿರುವ ಅದ್ವೈತ ದಶ೯ನವೇ ಸಮ್ಯಗ್ದಶ೯ನವು ಎಂದು ಉಪಸಂಹಾರವಾಯಿತು.(ಪುಟ 47)
84)ಆದರೆ ಯಾವನು ಸತ್ವಶುದ್ಧಿಯನ್ನು (ಕಮೋ೯ಪಾಸನೆಗಳಿಂದ ಅಂತಃಕರಣ ಶುದ್ಧಿಯನ್ನು)
ಪಡೆದುಕೊಂಡಿರುವನೋ ,ಅದರಿಂದ ನಿಷ್ಕಾಮವಾಗಿರುವನೋ ,ಹೊರಗಿನ ಅನಿತ್ಯವಾದ ಸಾಧನಗಳ (ಪುತ್ರ,ಕಮ೯,ಉಪಾಸನೆ -ಇವು ಸಾಧನಗಳು,ಮನುಷ್ಯಲೋಕ, ಪಿತೃದೇವಲೋಕಗಳು, ಇವು ಸಾಧ್ಯಗಳು) ಸಂಬಂಧವಿಷಯಕ್ಕೂ ,ವಿರಕ್ತನಾಗಿರುವನೋ ಅವನಿಗೇ ಪ್ರತ್ಯಗಾತ್ಮ ವಿಷಯದ ಜ್ಞಾನವನ್ನು ಹೊಂದಬೇಕೆಂಬ ಇಚ್ಛೆಯುಂಟಾಗುತ್ತದೆ.(ಪ್ಟ 4೯)
85)ಈ ಪ್ರತ್ಯಗಾತ್ಮ ಬ್ರಹ್ಮದ (ನಮ್ಮ ಒಳಗಿರುವ ಆತ್ಮರೂಪವಾದ ಬ್ರಹ್ಮ) ವಿಞನದಿಂದ ಸಂಸಾರಕ್ಕೆ ಬೀಜವಾದ ಕಾಮಕಮ೯ಗಳು ಮುಂಬರಿಯುವುದಕ್ಕೆ ಕಾರಣವಾದ ಅಜ್ಞಾನವು (ಅಧ್ಯಾಸವು) ಸ್ವಲ್ಪವೂ ಉಳಿಯದಂತೆ ತೊಲಗುವುದು.(ಪುಟ 50)
86)ಈ ಲೋಕವು ಪುತ್ರನಿಂದ ಗೆಲ್ಲಬಹುದಾದುದೇ ಹೊರತು ಬೇರೆಯ ಕಮ೯ದಿಂದ ಗೆಲ್ಲಬಹುದಾದುದಲ್ಲ.ಪಿತೃ ಲೋಕವು ಕಮ೯ದಿಂದ ಗೆಲ್ಲಬಹುದಾದುದು.ದೇವಲೋಕವು ವಿದ್ಯೆಯಿಂದ.(ಬೃ.1-5-16)ನಮಗೆ ಅನಿತ್ಯವಾದ ಸಾಧನಗಳಿಂದ ಪಡೆಯತಕ್ಕದ್ದಾಗಿರುವ ಲೋಕತ್ರಯವಂತೂ ಬೇಕಾಗಿಲ್ಲ.ಈ ನಮಗೆ ಸ್ವಾಭಾವಿಕವಾಗಿಯೂ (ಮತ್ತೊಂದರಿಂದ ಆಗದೆ ಸ್ವರೂಪವೇ ಆಗಿರುವ) ಜನ್ಮರಹಿತವಾಗಿಯೂ ಕಮ೯ದಿಂದ ಹೆಚ್ಚದೆ ಕುಂದದೆ ಇರುವುದಾಗಿಯೂ ಇರುವ ನಿತ್ಯವಾದ ಆತ್ಮಲೋಕವೇ ಬೇಕಾಗಿರುತ್ತದೆ. (ಪುಟ 50)
87)ಸನ್ಯಾಸವು ಜ್ಞಾನಕ್ಕೆ ರ್ಸಧನವಾಗಿದೆ. ಅಲ್ಲದೆ ಜ್ಞಾನದ ಫಲವೂ ಹೌದು(ಪುಟ 50).
88)ಕಮ೯ದಿಂದಲ್ಲ,ಪ್ರಜೆಯಿಂದಲ್ಲ,ಧನದಿಂದಲ್ಲ,ತ್ಯಾಗದಿಂದಲೇ ಕೆಲವರು ಅಮೃತತ್ವವನ್ನು ಪಡೆಯುತ್ತಾರೆ.(ಪುಟ51)
8೯)ಸಮ್ಯಗ್ದಶಿಗೆ -ನಿಜವನ್ನರಿತವನಿಗೆ ಬ್ರಹ್ಮವು ಎಂದಿಗೂ ವಿಷಯವಾಗುವುದಿಲ್ಲ.ಆದ್ದರಿಂದ ಅವನ ಮತವೇ ಸರಿಯಾದ ಮತವು.(ಪುಟ 51)
೯0)ಪ್ರತ್ಯಯಗಳ ಒಳ ಆತ್ಮನೆಂದು ಯಾವಾಗ ಬ್ರಹ್ಮವನ್ನು ಅರಿಯುತ್ತೇವೆಯೋ ಆಗ ಅದನ್ನು ಅರಿತಂತಾಗುವುದು.ಸನ್ಯಗ್ದಶ೯ನವೆಂದರೆ ಸರಿಯಾದ ದಶ೯ನವೆಂದಥ೯(ಪುಟ 52)
೯2) ಯಾವ ಪ್ರಯತ್ನವೂ ತನ್ನನ್ನು ತಾನು ನೋಡಲಾರದು.(ಪುಟ 52)
೯3)ಈ ಎರಡು ಹಾದಿಗಳು ಹೊರಟು ಬಂದಿದೆ.ಕಮ೯ದ ಹಾದಿಯೇ ಮೊದಲು.ಬಳಿಕ ಸನ್ಯಾಸ ಮಾಗ೯ವು ,ಎಂದರೆ ನಿವೃತ್ತಿಮಗ೯ದಿಂದ ಏಷಣಾ ತ್ರಯವನ್ನು ಬಿಡುವುದು..ಇವೆರಡರಲ್ಲಿ ಸನ್ಯಾಸವೇ ಹೆಚ್ಚಿನದು.ಸನ್ಯಾಸವೇ ಹೆಚ್ಚಿನದು (ಪುಟ 52)
೯4)ಉಪನಿಷತ್ತುಗಳಲ್ಲಿರುವ ವಿಷಯದ ತತ್ವವು ಏಕತ್ವ ದಶ೯ನ.ಈ ಏಕತ್ವ ದಶ೯ನವೇ ಸಮ್ಯಗ್ದಶ೯ನ.(ಪ್ರಶ್ನ.ಉ.ಭಾ.6-3)
೯5)ಶಿಷ್ಯನಿಗೆ ಅವನ ತಿಳುವಳಿಕೆ ಗಟ್ಟಿಯಾಗುವತನಕ ಮತ್ತೆ ಮತ್ತೆ ವೇದಾಂತಾಥ೯ವನ್ನು ಬೋಧಿಸಬೇಕು(ಪು 53)
೯6)ಅಂಥ ಈ ಪರಮಥ೯ದಶ೯ನವನ್ನು ಪಡೆದುಕೊಳ್ಳ ಬೇಕೆಂದು ಬಯಸುವಾತನು ವಣ0,ಆಶ್ರಮ-ಮುಂತಾದವುಗಳ ಅಭಿ£ಮಾನದಿಂದಾಗಿರುವ ಪಾಂಕ್ತ ರೂಪವಾದ ತಾನು,ಹೆಂಡತಿ, ಪುತ್ರ ಮಾನುಷವಿತ್ತ,ದೈವವಿತ್ತ)ಮಕ್ಕಳು.ವಿತ್ತ,ಲೋಕ-ಎಂಬ ಮೂರು ಏಷಣೆಗಳೇ (ಕಾಮಗಳೇ) ಮುಂತಾದವುಗಳನ್ನುಬಿಟ್ಟು ಮೇಲೇಳಬೇಕು.ಏಕೆಂದರೆ ಈ ಅಭಿಮನವು ಸರಿಯಾದ ಜ್ಞಾನಕ್ಕೆ ವಿರುದ್ಧವಾಗಿರುತ್ತದೆ.ಆದ್ದರಿಂದ ಎಲ್ಲಾ ಬಗೆಯ ಕಮ೯ಗಳನ್ನೂ ಕೂಡ ಸನ್ಯಾಸ ಮಾಡಬೇಕು(ನಿತ್ಯಕಮ೯ಗಳನ್ನೂ ಕೂಡ)ಅವುಗಳ ಸಾಧನವಾಗಿರುವ ಯಜ್ಞೋಪವೀತಾದಿಗಳೂ ಅವಿದ್ಯೆಯ ಕಯ೯ವಾಗಿರುವುದರಿಂದ ಸನ್ಯಗ್ದಶ೯ನದಲ್ಲಿ ನಿಷ್ಠನಾದವನು ಅವುಗಳನ್ನು ಬಿಟ್ಟುಬಿಡಬೇಕು. (ಪುಟ54)
೯7)"ಆಚಾಯ೯ನೇ ದಾಟಿಸತಕ್ಕವನು.ಸಮ್ಯಕ್ ಜ್ಞಾನವೇ ಇಲ್ಲಿ ದೋಣಿ ಎನಿಸುತ್ತದೆ.(ಪುಟ 53)
೯8)ಆತ್ಮನಿಗಿಂತ ಬೇರೆಯಾಗಿ ಕೂದಲೆಳೆಯಷ್ಟು ಕೂಡ ಮತ್ತೊಂದು ಇಲ್ಲವೆಂದೊ ಕಂಡುಕೊಂಡಿರುತ್ತಾನೆ.ಎಚ್ಚರ,ಕನಸು, ನಿದ್ರೆ ಎಂಬ ಅವಸ್ತಾತ್ರಯವನ್ನು ಬಿಟ್ಟು ಆತ್ಮನನ್ನು ಅರಿತುಕೊಳ್ಳುವುದರಿಂದ ಮುನಿಯಾಗುತ್ತಾನೆ.(ಪುಟ54)
೯೯)ಅಜ್ಞಾನವನ್ನು ಕಳೆಯಲು ಸಮ್ಯಕ್ ಜ್ಞಾನವು ಮಾತ್ರ ಕಾರಣವಾದ್ದರಿಂದ ಅದನ್ನು ಸ್ವೀಕರಿಸಬೇಕು.ಎಲ್ಲಾ ಅನಥ೯ಗಳಿಗೂ ಕಾರಣವಾದ ಅಜ್ಞಾನಕ್ಕೆ ವಿಷಯನಾದ ಆತ್ಮನು ಆಗಮಿಕವಲ್ಲದ ಪತ್ಯಕ್ಷಾದಿ ಲೌಕಿಕ ಪ್ರಮಾಣಗಳಿಂದ ಗೋಚರನಲ್ಲವಾದ್ದರಿಂದ ವೇದಾಂತಾಗಮ ವಾಕ್ಯಗಳಿಂದಲೇ ಸಮ್ಯಕ್ ಜ್ಞಾನವಾಗುತ್ತದೆ.(ಪುಟ 55)
100)ವೇದಾಂತ ವಾಕ್ಯದಿಂದ ಉಂಟಾದ ಸಮ್ಯ್ಕ್ ಜ್ಞಾನವೆಂಬ ಬೆಂಕಿಯು ಆತ್ಮನ ಅಜ್ಞಾನವನ್ನು ಸುಟ್ಟುಹಾಕಿ ಬಿಡುತ್ತದೆ. ಕಮ೯ವು ಮಾಡಲಾರದು. ಏಕೆಂದರೆ ಕಮ೯ವು ಅಜ್ಞಾನಕ್ಕೆ ಪ್ರತಿಕೂಲವಲ್ಲ.(ಪುಟ 55)
101)ಪ್ರಮಾಣದಿಂದ ಉಂಟಾಗಿ ಪ್ರಬಲವಾಗಿರುವುದರಿಂದಸಮ್ಯಕ್ ಜ್ಞಾನವು ಬಾಧಿತವಾಗುವುದಿಲ್.ಅಜ್ಞಾನವನ್ನು ಬಾಧಿಸುವುದಕ್ಕೆ ಮತ್ತೊಂದು ಸಾಧವನ್ನೂ ಅದು ಬಯಸುವುದಿಲ್ಲ.
(ಪುಟ 101)
102)ಅದರಿಣದ ವೈರಾಗ್ಯವು ,ಅದರಿಂದ ಮುಮುಕ್ಷುತ್ವವು.ಆ ಬಳಿಕ ಆ ಮೋಕ್ಷದ ಉಪಾಯವನ್ನು ಹುಡುಕುವುದು. ಆಮೇಲೆ ಸವ೯ಕಮ೯ಗಳನ್ನೂ ಅವುಗಳ ಸಾಧನಗಳನ್ನೂ (ಯಜ್ಞೋಪವೀತಾದಿಗಳನ್ನು) ಸನ್ಯಾಸ ಮಾಡುವುದು.ಆ ಮೇಲೆ ಯೋಗಾಭ್ಯಾಸವು.ಆ ಮೇಲೆ ಪ್ರತ್ಯಕ್ಪ್ರವಣತೆ ಉಂಟಾಗುವುದು.ಆಮೇಲೆ ತತ್ವಮಸಿ ಮುಂತಾದ ವಾಕ್ಯಾಥ೯ವನ್ನು ಸರಿಯಾಗಿ ತಿಳಿದುಕೊಳ್ಳುವುದು.ಸ್ವಾತ್ಮನ್ಯೇವಾವಸ್ಥಾನಮ್.(ಪುಟ 56)
103)ಸಂಸಾರದಲ್ಲಿ ವಿರಕ್ತನಾಗದವನಿಗೂ ಏಷಣೆಯನ್ನು ಬಿಡದೆ ಇರುವವನಿಗೂ ,ಯಮವಿಲ್ಲದವನಿಗೂ (ಮನಃಪ್ರಧಾನವಾದ ಅಹಿಂಸಾದಿ ಸಾಧನಗಳನ್ನು ಅಳವಡಿಸಿಕೊಳ್ಳದವನಿಗೂ)
ವೇದಾಂತಾಥ೯ದಲ್ಲಿ ಪ್ರವೇಶವನ್ನು ಕೊಡಬಾರದು.(ಪುಟ 56)
104)ವಸ್ತುತಂತ್ರವಾದ ಸಮ್ಯಕ್ಜ್ಞಾನದಿಂದ ಬಾಧಿತವಾದ(ಸಂಸಾರಕ್ಕೆ ಕಾರಣವಾದ) ಅಜ್ಞಾನವುಳ್ಳ ಜ್ಞಾನಿಯು ಜನನ ಮರಣ ರೂಪವಾದ ಸಂಸಾರವನ್ನು ಕಳೆದುಕೊಂಡು ,ಸ್ವಭಾವದಿಂದಲೇ ವಿಮುಕ್ತನಾದವನು ಜೀವನ್ಮುಕ್ತನಾಗುತ್ತಾನೆ.(ಪುಟ 57)
105)'ಕ್ಷತ್ರ' ಎಂಬ ಪದದ ಸನ್ನಿಧಾನದಿಂದ ಇಲ್ಲಿ ಬ್ರಹ್ಮ ಎಂಬ ಶಬ್ದಕ್ಕೆ ಬ್ರಾಹ್ಮಣಜಾತಿ ಎಂದು ಅಥ೯ವನ್ನು ಮಾಡಿಕೊಳ್ಳಬೇಕು.ಸಮ್ಯಗ್ದಶಿ೯ಯಲ್ಲದ ಮನುಷ್ಯನನ್ನು ಬ್ರಾಹ್ಮಣ್ಯವು ತಿರಸ್ಕರಿಸುತ್ತದೆ.ಬ್ರಹ್ಮ ಸ್ವರೂಪದ ಸರಿಯಾದ ಜ್ಞಾನವನ್ನು ಪಡೆದಿರುವ ಸಮ್ಯಗ್ದಶಿ೯ಯೇ ನಿಜವಾದ ಬ್ರಾಹ್ಮಣ-ಎಂದು ಇದರಿಂದ ಅಥ೯ವಾಗುತ್ತದೆ.(ಪುಟ 57)
106)ತಪ್ಪು ತಿಳುವಳಿಕೆಯಿಂದ ಸಂಸಾರದಲ್ಲಿ ಸಿಕ್ಕಿಕೊಳ್ಳುತ್ತಾನೆ. ಸರಿಯಾದ ತಿಳುವಳಿಕೆಯಿಂದ ಮುಕ್ತನಾಗುತ್ತಾನೆ.(ಪುಟ 57)
107)ಕಾಲಾಂತರದಲ್ಲಿ ತಾನಾಗಿಯೇ ಆಗುವ ಪ್ರಪಂಚ ಪ್ರಳಯವನ್ನು ಪೌರಾಣಿಕರು ಪ್ರಾಕೃತ (ಸ್ವಾಭಾವಿಕ)ಪ್ರಳಯ ಎನ್ನುತ್ತಾರೆ.ಹೀಗೆ ಪ್ರಳಯವಾದ ಮೇಲೂ ಕಾಲಾಂತರದಲ್ಲಿ ಪ್ರಪಂಚವು ಪುನಃ ಸೃಷ್ಟಿಯಾಗುವುದಕ್ಕೆ ಅವಕಾಶವಿರುತ್ತದೆ.ಆದರೆ ಸಮ್ಯ್ಕ್ ಜ್ಞಾನವೊಂದರಿಂದಲೇ ಜಗತ್ತಿಗೆ ಬುದ್ಧಿಪೂವ೯ಕವಾದ ಅತ್ಯಂತ ಪ್ರಳಯವಾಗುತ್ತದೆ.(ಪುಟ 58)
108)ಸಮ್ಯಕ್ ಜ್ಞಾನದಿಂದ ಅಜ್ಞಾನವು ಪೂಣ೯ವಾಗಿ ನಾಶವಾಗಿ ಆತ್ಮ ಸ್ವರೂಪದ ಲಾಭವಾಗುವುದರಿಂದ,ಜ್ಞಾನದ ಸ್ವಭಾವವನ್ನು ಅದು ಅಪೇಕ್ಷಿಸುವುದಿಲ್ಲ.ಈ ಅಭಿಪ್ರಾಯವು ಪ್ರಸಂಖ್ಯಾನವಾದಕ್ಕೆ ವಿರೋಧವಾಗಿದೆ ಎಂಬುದು ಸ್ಪಷ್ಟ.(ಪುಟ 58)
10೯)ಸಕಲವೂ ಚಿನ್ಮಾತ್ರ ಸ್ವರೂಪವಾದ ಆಯ್ಮನೇ ಆಗಿದೆ ಎಂಬ ಸಮ್ಯಕ್ ಜ್ಞಾನದಿಂದ ಸಮಸ್ತ ತಮಸ್ಸೂ ನಾಶವಾಗುವುದರಿಂದ ಅವಿದ್ಯಾ ಜನ್ಯವಾದ ವಿಶೇಷ ಜ್ಞಾನವು ಉಳಿಯುವುದಿಲ್ಲ.(ಪುಟ 58)
110)ಸಮ್ಯಕ್ ಜ್ಞಾನದಿಂದ ನಷ್ಟವಾದ ಮೋಹವುಳ್ಳವನಿಗೆ ನಾನು ವಿಜ್ಞಾನಾತ್ಮನೆಂದು (ಜೀವನೆಂದು) ಅವನು ಹಿಂದೆ ಹೊಂದಿದ್ದ ತಪ್ಪು ತಿಳುವಳಿಕೆಯು ಬಾಧಿತವಾಗಿ ಬಿಡುತ್ತದೆ.(ಪುಟ 58)
111)ಸಮ್ಯಕ್ ಜ್ಞಾನವು ಉದಿಸಿದ ಕೂಡಲೇ ,ಆತ್ಮ ವಿಷಯಕ್ಕಿದ್ದ ಅಜ್ಞಾನವು ನಾಶವಾಗಲಾಗಿ ,ಕಾಯ೯ಕಾರಣವಾದ ಜಗತ್ತು ,ಅನುಪಲಬ್ಧಿ ಎಂಬ ಆರನೆಯ ಪ್ರಮಾಣಕ್ಕೆ ಗೋಚರವಾದ ವಸ್ತುವಿನಂತೆ ಅಭಾವವಾಗುತ್ತದೆ.(ಪುಟ 58)
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
ಇಲ್ಲಿಗೆ 'ಸಮ್ಯಗ್ದಶ೯ನ 'ವೆಂಬ ಅಧ್ಯಾಯವು ಮುಕ್ತಾಯವಾಯಿತು.
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
(ಕಾಪಿ):
ಮೈತ್ರೇಯೀ- ಯಾಜ್ಞವಲ್ಕ್ಯ ಸಂವಾದ:
1)ಪ್ರಸಿದ್ಧ ದೇವರಾತ ಮಹಷಿ೯ಗಳ ವರಪುತ್ರರಾದ ಯಾಜ್ಞವಲ್ಕ್ಯರು ಉಪವೀತರಾದ ಮೇಲೆ,ಬಾಲ್ಯದಲ್ಲಿ ,ತಮ್ಮ ತಂದೆಯವರಲ್ಲಿ ಸಂಹಿತಾಧ್ಯಯನವನ್ನು ಪೂಣ೯ಗೊಳಿಸಿದರು.ಅನಂತ್ರ ವೈಶಂಪಾಯನ ಮಹಷಿ೯ಗಳ ಗುರುಕುಲ ವಾಸದಲ್ಲಿ ಅಧ್ಯಯನ ಮಾಡಿದರು.(ಪುಟ 61)
2)ಅವರು ಸೂಯ೯ನಾರಾಯಣನ ಅನುಗ್ರಹವನ್ನು ಪಡೆದರು.ಶುಕ್ಲಯಜುವೇ೯ದವನ್ನೂ ಶಥಪಥಬ್ರಾಹ್ಮಣವನ್ನೂ ಮತ್ತು ಈಶಾವಾಸ್ಯವೆಂಬ ಉಪನಿಷತ್ತನ್ನೂ ಬರೆದರು.(ಪುಟ 61)
3)ಯಾಜ್ಞವಲ್ಕ್ಯನಿಗೆ ಕಾತ್ಯಾಯನೀ ಮತ್ತು ಮೈತ್ರೇಯೀ ಎಂಬ ಇಬ್ಬರು ಪತ್ನಿಯರಿದ್ದರು.(ಪುಟ 62)
4)ಮಿಥಿಲಾ ನಗರದ ಜನಕಮಹಾರಾಜನಿಂದ ವ್ಯವಸ್ಥಿತವಾಗಿದ್ದ ಮಹಾ ವಿದ್ವತ್ಸಭೆಯಲ್ಲಿ ವಿಖ್ಯಾತ ಬ್ರಹ್ಮಜ್ಞರೊಡನೆ ನಡೆದ ವಾದದ ಫಲವಾಗಿ ಭಗವಾನ್ ಯಾಜ್ಞವಲ್ಕ್ಯರೇ ಸವ೯ಶ್ರೇಷ್ಠ ಬ್ರಹ್ಮವೇತ್ತರೆಂದು ನಿಣ೯ಯವಾಯಿತು.ಜನಕರಾಜನು ಯಾಜ್ಞವಲ್ಕ್ಯರಿಗೆ ಸಾವಿರ ಗೋವುಗಳನ್ನು ಉತ್ಕ್ರಷ್ಟವಾದ ಸಾಲಂಕೃತ ಸಹಸ್ರ ಗೋವುಗಳನ್ನು ದಾನಮಾಡಿ,ಸವ೯ಜ್ಞ ಪೀಠದಲ್ಲಿ ಕುಳ್ಳಿರಿಸಿ
ಪmಟ್ಟಾಭಿಷೇಕ ಮಾಡಿ ತನ್ನ ಗುರುಗಳನ್ನಾಗಿ ಸ್ವೀಕರಿಸಿದನು.(ಪುಟ 62)
5) ಯಾಜ್ಞವಲ್ಕ್ಯರು ವಿದ್ವತ್ ಸನ್ಯಾಸವನ್ನು ಪರಿಗ್ರಹಿಸುವುದಕ್ಕೋಸ್ಕರ ಅವರು ತಮ್ಮ ಪತ್ನಿಯರ ಸುಖಜೀವನಕ್ಕಾಗಿ ತನ್ನ ಲೌಕಿಕ ಸಂಪತ್ತೆಲ್ಲವನೂ ಎರಡು ಸಮಭಾಗಮಾಡಿ ಹಂಚಿಕೆ
ಕೊಟ್ಟು ನಿಸ್ಸಂಗವಾಗಲು ಅವರ ಅನುಮತಿಯನ್ನು ಕೇಳಿದರು.(ಪುಟ 62)
6)ನೀವಿಬ್ಬರೂ ನನಗೆ ಅತ್ಯಂತ ಪ್ರಿಯರಾರಿದ್ದೀರಿ ಹಾಗೂ ಬ್ರಹ್ಮವಿದ್ಯೆಯ ಉಪದೇಶಕ್ಕೆ ಸತ್ಪಾತ್ರರಾಗಿದ್ದೀರಿ.ಕಮೋ೯ಪಾಸನೆಗಳಿಂದ ಸಾಧನೆಗಳನ್ನು ಮಾಡಿ ಹೊಸದಾಗಿ ಪಡೆಯಬಹುದಾದ ಬ್ರಹ್ಮಲೋಕದವರೆಗಿನ ಭೂಗಗಳೆಲ್ಲವೂ ಅನಿತ್ಯಗಳೆಂದೂ,ಅಸತ್ಯಗಳೆಂದೂ ಅಲ್ಪವಾದವುಗಳೆಂದೂ
ತಿಳಿದು ನಿತ್ಯವೂ ಸತ್ಯವೂ ಮಹತ್ತೂ ಆದ ಬ್ರಹ್ಮಜ್ಞಾನವನ್ನೇ ನೀಡಬೇಕೆಂದು ನೀವು ಅಪೇಕ್ಷಿಸಿದ್ದೀರಿ.
7) ತತ್ವನಿಷ್ಠ ಸದ್ಗುರುವಿನ ಬಳಿ ಸಾರುವುದೇ ಪರಮಶ್ರೇಯಸ್ಸಿಗೆ ಸಾಧನ(ಪುಟ 65)
8) ಜಿಜ್ಞಾಸುವಿನ ಮನಸ್ಸು ಹೆಚ್ಚು ಹೆಚ್ಚು ನಿಮ೯ಲವೂ ಸೂಕ್ಷ್ಮವೂ ಆದಂತೆ ಪುನಃ ಪುನಃ ಶ್ರವಣಮಾಡುತ್ತಿರುವ ತತ್ವ ಬೋಧೆಯೇ ಆಳವಾಗಿ ಅಥ೯ವಾಗುತ್ತಾ ಅನುಭವದಲ್ಲಿ ಅಳವಡುತ್ತಾ ಬೆಳಗುತ್ತದೆ.(ಪುಟ 65)

ನನ್ನ 'ಬೃಹದಾರಣ್ಯಕ ಉಪನಿಷತ್ ಸಾರಸಂಗ್ರಹ'ಎಂಬ ಗ್ರಂಥಕ್ಕೆ ಬರೆದ ಯಾಜ್ಞವಲ್ಕ್ಯ-ಮೈತ್ರೇಯೀ ಸಂವಾದದಿಂದ ಆರಿಸಿದ ಭಾಗವನ್ನು ಓದುಗರ ಅನುಕೂಲಕ್ಕಾಗಿ ಕೆಳಗೆ ಕೊಟ್ಟಿದ್ದೇನೆ.
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
1) ಯಾಜ್ಞವಲ್ಕ್ಯ:ಎಲೈ ಮ್ಯತ್ರೇಯಿ .ನಾನು ಗ್ರಹಸ್ಥ್ಯಾಶ್ರಮವನ್ನು ಬಿಡುತೆನೆ.ನಿನಗೂ ಕಾತ್ಯಾಯಿನಿಗೂ ಇರುವ ಸಂಬಂಧವನ್ನು ಅಂತ್ಯಗೊಳಿಸುತ್ತೇನೆ.(ಪುಟ 131)
2)ಆತ್ಮಜ್ಞಾನಕ್ಕೆ ಅಂಗವಾಗಿ ಸನ್ಯಾಸವನ್ನು ವಿಧಿಸಲು ಈ ಆಖ್ಯಾಯಿಕೆಯು ಬಂದಿರುತ್ತದೆ. (ಸನ್ಯಾಸದ ಉದ್ದೇಶ -ಆತ್ಮಜ್ಞಾನ.)(ಪುಟ131)
3)ಧನದ ಮೂಲಕ ಅಮೃತತ್ವದ ಆಶೆಯಿಲ್ಲ.(ಪುಟ 132)
4)ಮೈತ್ರೇಯಿ:ಹೇ ಭಗವನ್.ಧನಪರಿಪೂಣ೯ವಾದ ಈ ಪೃಥ್ವಿಯೆಲ್ಲ ನನಗಿದ್ದರೆ ನಾನು ಅದರ ಮೂಲಕ ಅಮೃತಳಾಗುವೆನೆ?'
ಯಾಜ್ಞವಲ್ಕ್ಯ:ಇಲ್ಲ.ಉಪಕರಣವುಳ್ಳವರ(ಅನುಕೂಲಸ್ಥರ) ಜೀವಿತವು ಹೇಗಿರುವುದೊ ಹಾಗೆಯೆ ನಿನ್ನ ಜೀವಿತವೂ ಆಗುವುದು.ಆದರೆ ಧನದ ಮೂಲಕ ಅಮೃತತ್ವದ ಆಶೆಇಲ್ಲ.(ಪುಟ 132)
5) ಮೈತ್ರೇಯಿ:ಯಾವುದರಿಂದ ನಾನು ಅಮೃತಳಾಗುವುದಿಲ್ಲವೊ ಅದರಿಂದ ಏನು ಮಾಡಲಿ?ನೀನು ಯವುದನ್ನು ಅರಿತುಕೊಂಡಿರುವೆಯೋ ಅದನ್ನೇ ನನಗೆ ಹೇಳು'(ಅಮೃತತ್ವ ಸಾಧನವನ್ನು) .(ಪುಟ 133)
6) ಯಾಜ್ಞವಲ್ಕ್ಯ:ಎಲೈ ಮೈತ್ರೇಯಿ(ಹಿಂದೆಯೂ ಕೂಡ) ನೀನು ನನಗೆ ಪ್ರಿಯಳಾಗಿದ್ದೆ. ಈಗ ಈ ಪ್ರಿಯವನ್ನು ಹೇಳುತ್ತಿದ್ದೀಯೆ. ಬಾ,ಕುಳಿತುಕೊ ನಿನಗೆ ವ್ಯಾಖ್ಯಾನ ಮಾಡುತ್ತೇನೆ.ನಾನು ವ್ಯಾಖ್ಯಾನ ಮಾಡುವಾಗ ಏಕಾಗ್ರವಾಗಿ ಅದರ ಅಥ೯ವನ್ನು ಧ್ಯಾನಿಸು.(ಪುಟ 133)
7) ಅನೃತ್ವ ಕ್ಕೆ ಸಾಧನವಾದುದು ಅತ್ಮಜ್ಞಾನ.(ಪುಟ 133)
8)ದ್ರವ್ಯಸಾಧ್ಯವಾದ ಕಮ೯ವು ಅಮೃತತ್ವಕ್ಕೆ ಸಾಧನವೆಂಬುದನ್ನು ಮೈತ್ರೇಯಿಯು ತಿರಸ್ಕರಿಸಲು ಯಾಜ್ಞವಲ್ಕ್ಯನಿಗೆ ಸಂತೋಷವಾಯಿತು.(ಪುಟ 133)
೯) ಯಾಜ್ಞವಲ್ಕ್ಯ:ಪತಿಯ ಪ್ರಯೋಜನಕ್ಕಾಗಿ ಪತಿಯು ಪತ್ನಿಗೆ ಪರಿಯವಗಿರುವುದಿಲ್ಲ.ತನ್ನ ಎಂದರೆ ಪತ್ನಿಯ ಪ್ರಯೋಜನಕ್ಕಾಗಿ ಪತಿಯು ಪ್ರಿಯನಾಗಿರುತ್ತನೆ.ಪತ್ನಿಯ ಪ್ರಯೋಜನಕ್ಕಾಗಿ ಪತ್ನಿಯು ಪತಿಗೆ ಪ್ರಿಯಳಾಗಿರುವುದಿಲ್ಲ.ತನ್ನ (ಪತಿಯ) ಪ್ರಯೋಜಮಕ್ಕಾಗಿ ಪತ್ನಿಯು ಪ್ರಿಯಳಾಗಿರುತ್ತಾಳೆ.ಮಕ್ಕಳ ಪ್ರಯೋಜನಕ್ಕಾಗಿ ಮಕ್ಕಳು (ತಂದೆ ತಾಯಿಗಳಿಗೆ) ಪ್ರಿಯರಾಗಿvರುವುದಿಲ್ಲ.ತನ್ನ ತಂದೆ ತಾಯಿಗಳ ಪ್ರಯೋಜನಕ್ಕಗಿ ಮಕ್ಕಳು ಪ್ರಿಯರಾಗಿರುತ್ತಾರೆ.ಧನದ ಪ್ರಯೋಜನಕ್ಕಗಿ ಧನವು ಪ್ರಿಯವಾಗಿರುವುದಿಲ್ಲ. ತನ್ನ(ಮನುಷ್ಯನ) ಪ್ರಯೋಜನಕ್ಕಾಗಿ ಧನವು ಪ್ರಿಯವಾಗಿರುತ್ತದೆ.ಬ್ರಾಹ್ಮಣನ ಪ್ರಯೋಜನಕ್ಕಾಗಿ ಬ್ರಾಹ್ಮಣನು ಪ್ರಿಯವಾಗಿರುವುದಿಲ್ಲ.ಇತರರ ಪ್ರಯೋಜನಕ್ಕಾಗಿ ಬ್ರಾಹ್ಮಣನು ಇತರರಿಗೆ ಪ್ರಿಯನಾಗಿರುತ್ತಾನೆ.ಕ್ಷತ್ರಿಯನ ಪ್ರಯೋಜನಕ್ಕಾಗಿ ಕ್ಷತ್ರಿಯನು ಪ್ರಿಯನಾಗಿರುದಿಲ್ಲ.ತನ್ನ(ಇತರರ) ಪ್ರಯೋಜನಕ್ಕಾಗಿ ಕ್ಷತ್ರಿಯನು ಇತರರಿಗೆ ಪ್ರಿಯನಾಗಿರುತ್ತಾನೆ.ಲೋಕಗಳ ಪ್ರಯೋಜನಕ್ಕಾಗಿ ಲೋಕಗಳು ಪ್ರಿಯವಾಗಿರುವುದಿಲ್ಲ.ತನ್ನ(ಜೀವರ) ಪ್ರಯೋಜನಕ್ಕಾಗಿ ಲೋಕಗಳು ಜೀವರಿಗೆ ಪ್ರಿಯವಾಗಿರುತ್ತವೆ. ದೇವತೆಗಳ ಪ್ರಯೋಜನಕ್ಕಾಗಿ ದೇವತೆಗಳು ಪ್ರಿಯರಾಗಿರುವುದಿಲ್ಲ.ತನ್ನ(ಯಾಜ್ಞಿಕರ) ಪ್ರಯೋಜನಕ್ಕಾಗಿ ದೇವತೆಗಳು ಯಾಜ್ಷಿಕರಿಗೆ ಪ್ರಿಯವಗಿರುತ್ತಾರೆ.ಪ್ರಾಣಿಗಳ ಪ್ರಯೋಜನಕ್ಕಾಗಿ ಪ್ರಾಣಿಗಳು ಪ್ರಿಯವಾಗಿರುವುದಿಲ್ಲ.ತನ್ನ ಪ್ರಯೋಜನಕ್ಕಾಗಿ ಪ್ರಾಣಿಗಳು ಪ್ರಿಯವಾಗಿರುತ್ತವೆ.ಎಲೆ ಮೈತ್ರೇಯಿ,ಆತ್ಮನನ್ನು ನೋಡಬೇಕು ಶ್ರವಣ ಮಾಡಬೇಕು
ಮನನಮಡಬೇಕು.ನಿದಿಧ್ಯಾಸನ ಮಾಡಬೇಕು. ಎಲೈ ಮೈತ್ರೇಯಿ, ಆತ್ಮನ ದಶ೯ನದಿಂದ,ಶ್ರವಣದಿಂದ, ಮನನದಿಂದ,ನಿದಿಧ್ಯಾಸನದಿಂದ ಇದೆಲ್ಲವೂ ತಿಳಿಯಲ್ಪಡುತ್ತದೆ.(ಪುಟ135)
10)ಅಮೃತತ್ವಕ್ಕೆ ಸಾಧನವಾದ ವೈರಾಗ್ಯವನ್ನು ಉಪದೇಶಿಸಲು ಯಾಜ್ಞವಲ್ಕ್ಯನು ಹೆಂಡತಿ ಗಂಡ ಮಕ್ಕಳು ಮೊದಲಾದವರಲ್ಲಿ -ಅವುಗಳ ತ್ಯಾಗಕ್ಕಾಗಿ- ವಿರಕ್ತಿಯನ್ನುಂಟು ರ್ಮಡುತ್ತಾನೆಜಗತ್ತಿನಲ್ಲಿ ಪ್ರತಿಯೊಂದು ವಸ್ತುವು ಆತ್ಮನ ಪ್ರಯೋಜನಕ್ಕಾಗಿ ಪ್ರಿಯವಾಗಿರುತ್ತದೆ.(ಪುಟ 135)
11) ಆತ್ಮಪ್ರೀತಿಯು ಮುಖ್ಯವೆಂದು ಆತ್ಮಪ್ರೀತಿಗೆ ಸಾಧನವಾಗಿರುವ ಇತರ ವಸ್ತುಗಳಲ್ಲಿರುವ ಪ್ರೀತಿಯು ಗೌಣವೆಣದೂ ತಿಳಿಯಬೇಕು.ಇಡೀ ಭಾಗವು ಬದಲಾವಣೆಯೊಂದಿಗೆ ಪುನಃ (4,4) ರಲ್ಲಿ ಬರುತ್ತದೆ.
(ಪುಟ 135).
12) ಇಲ್ಲಿ ಹೇಳಿರುವ ಪತಿ-ಪತ್ನಿ-ಪುತ್ರ-ವಿತ್ತಾದಿಗಳ ಕ್ರಮವು ನಮಗೆ ಅವುಗಳಲ್ಲಿರುವ ಪ್ರೀತಿಯ ಪ್ರಮಾಣವನ್ನು ಸೂಚಿಸುತ್ತದೆ. ಮೊದಲು ಮೊದಲು ಹೇಳಿರುವುದನ್ನು ಕ್ರಮವಾಗಿ ತ್ಯಜಿಸಬೇಕು ಎಂದಥ೯.(ಪುಟ 135)
13)ಕೇವಲ ಶ್ರವಣದಿಂದ ಆತ್ಮದಶ೯ನವಾಗುವುದಿಲ್ಲ. ಶ್ರವಣ-ಮನನ-ನಿದಿಧ್ಯಾಸನಗಳು ಒಂದಾದಾಗ ಬ್ರಹ್ಮೈಕತ್ವ ವಿಷಯದ ಸಮ್ಯಗ್ದಶ೯ನವು ಪ್ರಸನ್ನವಾಗುತ್ತದೆ.(ಪುಟ 136)
14) ಈ ಬ್ರಾಹ್ಮಣ,ಈ ಕ್ಷತ್ರಿಯ, ಈ ಲೋಕಗಳು,ಈ ದೇವತೆಗಳು, ಈ ಪ್ರಾಣಗಳು,ಈ ಸವ೯ವು-ಈ ಆತ್ಮನೇ(ಪುಟ 137)
15)ಆತ್ಮನಿಗಿಂತ ಭಿನ್ನವಾದ ವಸ್ತುವು ಯವುದೂ ಇಲ್ಲ:ಎಲ್ಲವೂ ಆತ್ಮನೇ.ಆದುದರಿಂದ ಆತ್ಮನನ್ನು ಅರಿತುಕೊಂಡರೆ ಎಲ್ಲವನ್ನೂ ಅರಿತಂತೆ ಆಗುವುದು.ಈ ಆತ್ಮನೇ ಹೇಗೆ ಎಲ್ಲವೂ ಆಗಿದ್ದಾನೆ ಎಂಬುದನ್ನು ಶ್ರುತಿಯು ಇಲ್ಲಿ ತಿಳಿಸುತ್ತದೆ.(ಪುಟ 137)
16)ಎಲ್ಲವೂ ಆತ್ಮನಲ್ಲಿಯೇ ಹುಟ್ಟಿ,ಆತ್ಮನಲ್ಲಿಯೆ ಇದ್ದು ಆತ್ಮನಲ್ಲಿಯೇ ಲಯವಗುತ್ತದೆ.ಸ್ಥಿತಿಕಲದಲ್ಲಿ ಆತ್ಮಮಯವಗಿರುವುದರಿಂದ ಆತ್ಮನಿಗಿಂತ ಭಿನ್ನವಾಗಿ ಯಾವುದನ್ನೂ ಗ್ರಹಿಸುವುದಕ್ಕೂ ಸಾಧ್ಯವಿಲ್ಲ.
(ಆತ್ಮೈವ ಸವ೯ಂ)(ಪುಟ 137)
17)
ದುಂದುಭಿಯನ್ನು ಹೊಡೆಯುತ್ತಿರುವಾಗ(ಅದರಿಂದ ಉಂಟಾಗುವ) ಹೇಗೆ ವಿಶೇಷ ಶಬ್ದಗಳನ್ನು ಬೇರೆ ಬೇರೆಯಾಗಿ ಗ್ರಹಿಸುವುದಕ್ಕೆ ಆಗುವುದಿಲ್ಲವೊ,ಆದರೆ ದುಂದುಭಿಯ ಶಬ್ದ ಸಾಮಾನ್ಯವನ್ನು ಗ್ರಹಿಸುವುದರಿಂದ ಅಥವಾ ದುಂದುಭಿಯ ಶಬ್ದಸಾಮಾನ್ಯವನ್ನು (ಗ್ರಹಿಸುವುದರಿಂದ) ಶಬ್ದವು ಗ್ರಹಿಸಲ್ಪಡುತ್ತದೆ.(ಪುಟ137)
18)ಚಿನ್ಮಾತ್ರವೇ ಸವ೯ತ್ರ ಅನುಭವವಾಗುವುದರಿಂದ ಎಲ್ಲವೂ ಚಿತ್ ಸ್ವರೂಪವೆಂದು ಅರಿತುಕೊಳ್ಳಬೇಕು.(ಪುಟ 137)
1೯)ಹೀಗೆಯೇ ಶಂಖ,ವೀಣೆ,ಇವುಗಳ ಉದಾಹರಣೆಯನ್ನೂ ತೆಗೆದುಕೊಳ್ಳಬಹುದು.(138)
20)ಹೇಗೆ ಉರಿಯುತ್ತಿರುವ ಹಸಿ ಸೌದೆಯ ಬೆಂಕಿಯಿಂದ ಬಗೆ ಬಗೆಯ ಹೊಗೆಯು ಹೊರ ಬರುತ್ತದೆಯೊ ಹಾಗೆಯೇ ಋಗ್ವೇದ,ಯಜುವೇ೯,ಸಾಮವೇದ,ಆಥವ೯ಣವೇದ,ಇತಿಹಾಸ,ಪುರಾಣ,
ಕಲೆಗಳು,ಉಪನಿಷತ್ತುಗಳು,ಶ್ಲೋಕಗಳು, ಸೂತ್ರಗಳು, ಮಂತ್ರ ವಿವರಣೆಗಳು,ಅಥ೯ವಾದಗಳು-ಇವೆಲ್ಲ ಈ ಮಹತ್ ಪರಮಾಥ೯ತ ನಿಶ್ವಾಸದಂತೆ.ಇವು ಅದರ ನಿಶ್ವಾಸದಂತೆ.(ಪುಟ 140)
21)ಬೆಂಕಿಯ ಕಿಡಿಗಳು,ಹೊಗೆ,ಕೆಂಡ,ಜ್ವಾಲೆ -ಇವೆಲ್ಲ ವಿಂಗಡವಾಗುವುದಕ್ಕೆ ಮೊದಲು ಅಗ್ನಿಯೇ ಆಗಿರುವಂತೆ,ನಾಮರೂಪಗಳಿಂದ ಆಗಿರುವ ಈ ಜಗತ್ತು ಉತ್ಪತ್ತಿಗೆ ಮೊದಲು ಪ್ರಜ್ಞಾನ ಘನವೇ ಆಗಿತ್ತು.ಇದನ್ನು ಅರಿತುಕೊಳ್ಳಬೇಕು.(ಪುಟ 140)
22)'ಇದು ಮೊದಲು ಅಸತ್ತೇ ಆಗಿತ್ತು' (ಅಸದ್ವಾ ಇದಮಗ್ರ ಆಸೀತ್ ಅಸದ್ವಾ(ತೈ.ಉ.2.7))ಪುಟ 140)
23) ಪುರುಷನ ನಿಶ್ವಾಸದಂತೆ ವೇದವು ಪರಮಾತ್ಮನಿಂದ ಅಭಿವ್ಯಕ್ತವಾಗಿರುವುದೇ ವಿನಾ ಪುರುಷ
ಬುದ್ಧಿಪೂವ೯ಕವಾಗಿ ಉತ್ಪನ್ನವಾಗಿಲ್ಲ.(ಪುಟ 140).
24) ಹೇಗೆ ಸಮುದ್ರವು ನೀರಿಗೆ ಏಕಮಾತ್ರಗತಿಯೊ ಹಾಗೆಯೇ ಚಮ೯ವು ಎಲ್ಲಸ್ಪಶ೯ಗಳಿಗೂ ಏಕಮಾತ್ರಗತಿ.ಹಾಗೆಯೇ ಮೂಗು ಎಲ್ಲಾ ಗಂಧಗಳಿಗೂ ಏಕಮಾತ್ರಗತಿ.ಹಾಗೆಯೇ ನಾಲಗೆಯು ಎಲ್ಲಾ ರಸಗಳಿಗೂ ಏಕಮಾತ್ರಗತಿ.ಹಾಗೆಯೇ ಕಣ್ಣು ಎಲ್ಲಾ ರೂಪಗಳಿಗೂ ಏಕಮಾತ್ರಗತಿಯು.ಕಿವಿಯು ಎಲ್ಲಾ ಶಬ್ದಗಳಿಗೂ ಏಕಮಾತ್ರಗತಿಯು.ಮನಸ್ಸು ಎಲ್ಲಾ ವಿದ್ಯೆಗಳಿಗೂ ಏಕಮಾತ್ರಗತಿಯು.ಬುಧ್ಧಿಯು ಎಲ್ಲಾ ವಿದ್ಯೆಗಳಿಗೂ ಏಕಮಾತ್ರಗತಿ.ಹಾಗೆಯೇ ಕೈಗಳು ಎಲ್ಲಾ ಕಮ೯ಗಳಿಗೂ ಏಕಮಾತ್ರಗತಿಯು.ಉಪಸ್ಥವು ಎಲ್ಲಾ ಆನಂದಗಳಿಗೂ ಏಕಮಾತ್ರಗತಿ;ಹಾಗೆಯೇ ಪಾಯುವು ಎಲ್ಲಾ ವಿಸಗ೯ಗಳಿಗೂ ಏಕಮಾತ್ರಗತಿಯು.ಹಾಗೆಯೇ ಪಾದಗಳು ಎಲ್ಲಾ ನಡೆಗಳಿಗೂ ಏಕಮಾತ್ರ ಗತಿಯು.ಹಾಗೆಯೇ ವಾಕ್ಕು ಎಲ್ಲಾ ವೇದಗಳಿಗೂ ಏಕಮಾತ್ರಗತಿ.(ಪುಟ 142)
25)ಬ್ರಹ್ಮವು ಪ್ರಜ್ಞಾನಘನವೂ ಏಕರಸವೂ ಆಗಿದೆ.(ಪುಟ 142)
26)ಹೇಗೆ ನೀರಿನಲ್ಲಿ ಹಾಕಲ್ಪಟ್ಟ ನೀರಿನ ಗಟ್ಟಿಯು ನೀರಿನಲ್ಲೇ ಲಯವಾಗುತ್ತದೆಯೋ ಮತ್ತು ನೀರಿನಹರಳನ್ನು ತೆಗೆದುಕೊಳ್ಳುವುದಕ್ಕೆ ಆಗುವುದಿಲ್ಲವೊ,,ಆದರೆ ನೀರು ಎಲ್ಲೆಲ್ಲಿಂದ ತೆಗೆದುಕೊಂಡರೂ ಉಪ್ಪೇ ಆಗಿರುವುದೊ,ಹಾಗೆಯೇ ಅನಂತರವೂ ಅಪಾರವೂ ಆದ ಈ ಮಹತ್ ಪರಮಾಥ೯ವು ವಿಜ್ಞಾನಘನವೇ ಆಗಿದೆ.ಆತ್ಮನ ಭಿನ್ನತೆಯು ಈ ಭೂತಗಳಿಂದ ಉಂಟಾಗಿ ಭೂತವಗ೯ದ ಲಯದೊಂದಿಗೆ ತಾನೂ ಲಯವಾಗುತ್ತದೆ.(ಪುಟ 143)
27)ದೇಹೇಂದ್ರಿಯಗಳಿಂದ ಮುಕ್ತಿ ಹೂಂದಿದ ಮೇಲೆ ವಿಶೇಷಜ್ಞಾನವಿರುವುದಿಲ್ಲ.(ಪುಟ 143)
28) ಬ್ರಹ್ಮವಿದ್ಯೆಯಿಂದ ಜ್ಞಾನಿಗಳಿಗೆ ಆಗುವ ಬುದ್ಧಿಪೂವ೯ಕವಾದ ಪ್ರಳಯ ಅತ್ಯಂತಿಕ ಪ್ರಳಯವೆನಿಸಿದೆ.ಇದು ಪೌರಾಣಿಕರು ಕರೆಯುವ ಸ್ವಾಭಾವಿಕ ಪ್ರಳಯವಲ್ಲ.ಜ್ಞಾನದಿಂದಾಗುವ ಅತ್ಯಂತಿಕ ಪ್ರಳಯ.
(ಪುಟ143)
2೯)ನಾನು ಇಂಥವನು,ಇಂಥವರ ಮಗನು,,ಇದು ನನ್ನ ಹೊಲ,ನಾನು ಸುಖಿ, ದುಃಖಿ,ಮೊದಲಾದ ಅವಿದ್ಯೆಯಿಂದ ಉಂಟಾಗುವ ವಿಶೇಷ ಜ್ಞಾನ.(ಪುಟ 143)
30)ದೇಹೇಂದ್ರಿಯಗಳಿಂದ ಮುಕ್ತಿ ಹೊಂದಿದಮೇಲೆ ವಿಶೇಷ ಜ್ಞಾನವಿರುವುದಿಲ್ಲ.(ಪುಟ 144)
31)ಚಂದ್ರನನ್ನು ಪ್ರತಿಬಿಂಬಿಸುತ್ತಿರುವ ಕನ್ನಡಿ,ನೀರು ಮೊದಲಾದ ಆಧಾರಗಳು ನಾಶವಾದರೆ ಪ್ರತಿಬಿಂಬಗಳು ನಾಶವಾಗುತ್ತವೆಯೇ ಹೊರತು ನಿಜವಾದ ಚಂದ್ರನು ನಾಶವಾಗುವುದಿಲ್ಲ.ಹಾಗೆಯೇ ಭೂತಗಳೆಲ್ಲ ನಾಶವಾದರೂ ವಿಜ್ಞಾನ ಘನನಾದ ಬ್ರಹ್ಮಸ್ವರೂಪಕ್ಕೆ ನಾಶವಿಲ್ಲ.(ಪುಟ 144)
32)ಎಲ್ಲಿ ದ್ವೈತವಿರುವಂತೆ ತೋರುವುದೊ ಅಲ್ಲಿ ಒಬ್ಬನು ಇನ್ನೊಂದನ್ನು ಮೂಸುತ್ತಾನೆ,ಇನ್ನೊಂದನ್ನು ನೋಡುತ್ತಾನೆ,ಇನ್ನೊಂದನ್ನು ಕೇಳುತ್ತಾನೆ.ಇನ್ನೊಂದನ್ನು ಮಾತನಾಡುತ್ತಾನೆ.ಇನ್ನೊಂದನ್ನು ಯೋಚಿಸುತ್ತಾನೆ.ಇನ್ನೊಂದನ್ನು ತಿಳಿದುಕೊಳ್ಳುತ್ತಾನೆ.ಎಲ್ಲಿ ಇವನಿಗೆ ಎಲ್ಲವೂ ಆತ್ಮನೇ ಆಗಿದೆಯೋ ಅಲ್ಲಿ ಯಾವುದರಿಂದ ಯಾವುದನ್ನು ಮೂಸಿಯಾನು,ಯಾವುದನ್ನು ನೋಡಿಯಾನು,ಯಾವುದನ್ನು ಕೇಳಿಯಾನುಯಾವುದನ್ನು ಮಾತಾಡಿಯನು,ಯಾವುದನ್ನು ಯೋಚಿಸಿಯಾನು,ಯಾವುದನ್ನು ಅರಿತುಕೊಂಡಾನು?ಯಾವನಿಂದ ಇದೆಲ್ಲವೂ ತಿಳಿಯಲ್ಪಡುತ್ತದೆಯೊ ಅವನನ್ನು ಯಾವುದರಿಂದ ತಿಳಿದುಕೊಂಡಾನು?
ವಿಜ್ಞಾತೃವನ್ನು ಯಾವುದರಿಂದ ತಿಳಿದುಕೊಂಡಾನು?(ಯೇನೇದಂ ಸವ೯ಂ ವಿಜಾನಾತಿ ತಂ ಕೇನ ವಿಜಾನೀಯಾತ್?)(ಪುಟ 145)
33) ಏಕಾತ್ಮ ಬಾವವನ್ನು ಪಡೆದಮೇಲೆ ವಿಶೇಷಜ್ಞಾನವಿಲ್ಲವೆಂಬುದಕ್ಕೆ ಉತ್ತರವನ್ನು ಇಲ್ಲಿ ಹೇಳಿದೆ:ಅವಿದ್ಯಾ ಕಲ್ಪಿತವಾದ ಕಾಯ೯-ಕರಣ-ಸಂಘಾತವೆಂಬ ಉಪಾಧಿಯಿಂದ ಜನಿತವಾದ ವಿಶೇಷಾತ್ಮನೆಂಬ ಖಿಲಭಾವವು ಉಂಟಾಗಿರುವಾಗ,ಪರಮಾಥ೯ತಃ ಅದ್ವೈತವಾದ ಬ್ರಹ್ಮದಲ್ಲಿ ದ್ವೈತವಿರುವಂತೆ ಎಂದರೆ ಆತ್ಮನಿಗಿಂತ ಬೇರೆ ವಸ್ತುವಿರುವಂತೆ ಕಂಡುಬರುತ್ತದೆ.(ಪುಟ146)
34) ಜ್ಞಾನಿಯು ಜ್ಞೇಯವನ್ನು ಅರಿತುಕೊಳ್ಳಲು ಬಯಸುತ್ತಾನೆಯೇ ವಿನಃ ತನ್ನನ್ನು ಅರಿತುಕೊಳ್ಳಲು ಇಚ್ಛಿಸುವುದಿಲ್ಲ.ಅಗ್ನಿಯು ಇತರ ವಸ್ತುಗಳನ್ನು ದಹಿಸುತ್ತದೆಯೇ ಹೊರತು ತನ್ನನ್ನು ದಹಿಸಿಕೊಳ್ಳಲಾರದು.ಹಾಗೆಯೇ ಜ್ಞಾತೃವು ತನಗೆ ವಿಷಯವಲ್ಲದ ಯವ ವಸ್ತುವನ್ನೂ ಗ್ರಹಿಸಲಾರನು.
(ಪುಟ146)
,,,,,,,,,,,,,,,,,,,,,,,,,,,,,,,,,,,ನಾಲ್ಕನೆಯ ಬ್ರಾಹ್ಮಣ ಸಂಪೂಣ೯ವಾಯಿತು,,,,,,,,,,,,,,,,,,,,,,,,,,,,,,,
೯)ಗೃಹಸ್ಥ ಧಮ೯ದಲ್ಲಿಯೇ ಇದ್ದರೂ ಈಶ್ವರಾನುಗ್ರಹದಿಂದಲೂ -ಗುರುಕೃಪೆಯಿಂದಲೂ ಲಭಿಸಿದ (ಬ್ರಹ್ಮನಿಷ್ಠೆಯಿಂದ) ಆತ್ಮಾನಂದದಲ್ಲಿಯೇ ನೆಲೆನಿಂತ ಬಲದಿಂದ ,ಸಮಮಸ್ತ ಅನಾತ್ಮಗಳ ಸತ್ಯತಾ ಭ್ರಮೆಯನ್ನು (ಮೋಹವನ್ನು) ತ್ಯಾಗಮಾಡಿರುವುದೇ ಪರಮಾಐ೯ದೃಷ್ಟಿಯಿಂದ ನಿಜವಾದ ಎಂಬುದೂ ಸತ್ಯವೇ!ಆದರೆ ಶಾಸ್ತ್ರೋಕ್ತವಾದ ಬೇರೆ ಬಗೆಯ ಸನ್ಯಾಸ ಪ್ರಕಾರಗಳ ಅಗತ್ಯವೂ ಇದೆ.(ಪುಟ 66)
10)ಸ್ಮøತಿಗಳಲ್ಲಿ ಯಜ್ಞೋಪವೀತವೇ ಮುಂತಾದ ಸಾಧನಗಳನ್ನು ವಿಧಿಸಿದೆ.ಲಿಂಚವನ್ನೂ (ತ್ರಿದಂಡ,ಕಮಂಡಲ-ಮುಂತಾದ ಸನ್ಯಾಸಿಯ ಚಿನ್ಹದ ವೇಷವನ್ನೂ) ವಿಧಿಸಿದೆ.ಇದು ಅಜ್ಞರಾದ ಸ್ಮಾತ೯ಸನ್ಯಾಸಿಗಳ ವಿಷಯ.(ಪುಟ 66)
11) ಬ್ರಹ್ಮಜ್ಞನಾದ ಬ್ರಾಆಹ್ಮಣನು ಅವಿದ್ಯಾ ವಿಷಯವಾದ ಈ ಮೂರು ಏಷಣೆಗಳನ್ನೂ ,ಸಾಧ್ಯ-ಸಾಧನೆಗಳನ್ನೂ ಪರಿತ್ಯಾಗಮಾಡಿಆತ್ಮಜ್ಞಾನವೆಂಬ ಪಾಂಡಿತ್ಯವನ್ನೂ ಆತ್ಮ ವಿಜ್ಞಾನ ಬಲದಿಂದ ಅನಾತ್ಮ ಭ್ರಮನಿರಾಕರಣವೆಂಬ ಬಾಲ್ಯವನ್ನೂ ಪರಮಾತ್ಮಚಿಂತನವೆಂಬ ಮೌನವನ್ನೂ ಪೂಣ೯ವಾಗಿ ಅಳವಡಿಸಿಕೊಂಡರೆ ಕೃತಕೃತ್ಯನಾಗಿ ಮುಖ್ಯಾಥ೯ದಲ್ಲಿ ಬ್ರಾಹ್ಮಣನಾಗುವನು.(ಪುಟ 68)
12)'ಬ್ರಹ್ಮೈವಸವ೯ಂ'ಎಂಬ ದೃಢಜ್ಞಾನವುಳ್ಳ ಬ್ರಾಹ್ಮಣನು ತನ್ನ ಸ್ಥಾನವನ್ನಾಗಲೀ ಪಾಂಡಿತ್ಯವನ್ನಾಗಲೀ ಧಾಮಿ೯ಕತೆಯನ್ನಾಗಲೀ ತೋರಿಸಿಕೊಳ್ಳದೆ ,ದಂಭದಪ೯ಗಳಿಲ್ಲದೆ,ಹಸುಗೂಸಿನಂತೆ ಸರಳತೆಯಿಂದಲೂ ಸಹಜತೆಯಿಂದಲೂ ಸಾಮಾನ್ಯರಂತೆ ಇರುವುದೇ ಬಾಲ್ಯಭಾವವು.ಪ್ರತಿಷ್ಠೆಗೂ ಗೌರವಕ್ಕೂ ಕಾರಣವಾದ ಯಾವ ಬಗೆಯ ವಿಶೇಷವನ್ನೂ ತೋರಿಸಿಕೊಳ್ಳದಿರುವುದೇ ನಿವಿ೯ಶೇಷವಾದ ಆತ್ಮನಲ್ಲಿ ಮನಸ್ಸು ನೆಲೆನಿಂತಿರುವುದಕ್ಕೆ ಗುರುತಾಗಿದೆ.(ಪುಟ68)
13)ಯಾವನ್ನು ಸತ್ಪುರುಷನೆಂದಾಗಲೀ ಅಸತ್ಪುರುಷನೆಂದಾಗಲೀ ,ತಿಳಿಯದವನೆಂದಾಗಲೀ ಬಹಳ ತಿಳಿದವನೆಂದಾಗಲೀ ಒಳ್ಳೆಯ ನಡತೆಯವನೆಂದಾಗಲೀ ಕೆಟ್ಟ ನಡತೆಯವನೆಂದಾಗಲೀ ಯಾವನೊಬ್ಬನೂ ಅರಿತುಕೊಳ್ಳಲಾರದೆ ಇರುವನೋ ಅವನು ಬ್ರಾಹ್ಮಣನು.(ಪುಟ6೯)
14)"ಗೂಢವಾದ ಧಮ೯ವನ್ನಾಶ್ರಯಿಸಿ ಜ್ಞಾನಿಯು ಯಾರಿಗೂ ತಿಳಿಯದ ನಡತೆಯಿಂದ ನಡೆಯಬೇಕು.
ಕುರುಡನಂತೆಯೂ ಜಡನಂತೆಯೂ ಮೂಕನಂತೆಯೂ ಭೂಮಿಯಲ್ಲಿ ಸಂಚರಿಸುತ್ತಿರಬೇಕು."(ಪುಟ6೯)
15) "ಯಾವ ಆಶ್ರಮದ ಚಿನ್ಹೆಯೂ ಗುರುತೂ ವೇಷವೂ ನಡತೆಯೂ ಇಲ್ಲದೆ ಇರಬೇಕು"(ಪುಟ 6೯)
16)ಇದೆಲ್ಲಾ ಬ್ರಹ್ಮಜ್ಞಾನವಾದ ಬಳಿಕ ಮಾಡುವ ವಿದ್ವತ್ ಸನ್ಯಾಸದ ವಿಷಯವು.(ಪುಟ 6೯)
17)ಆದ್ದರಿಂದ ಪೂವ೯ಕಾಇದ ಬ್ರಾಹ್ಮಣರು ,ಎಂದರೆ ಬ್ರಹ್ಮಜ್ಞಾನಿಗಳು ಕಮ೯ಗಳನ್ನೂ ಯಜ್ಞೋಪವೀತವೇ ಮುಂತಾದ ಕಮ೯ಸಾಧನಗಳನ್ನೂ ಬಿಟ್ಟು ಪರಮಹಂಸ ಪಾರಿವ್ರಾಜ್ಯವನ್ನು ಹೊಂದಿ ,ಭಿಕ್ಷಾಚಯೆ೯ಯನ್ನು ಮಾಡಿದರು.ಭಿಕ್ಷಾಥ೯ವಾಗಿ ಸಂಚರಿಸುವುದು ಭಿಕ್ಷಾಚಯ೯ವು.'ಜ್ಞಾನಿಯು ಲಿಂಗರಹಿತನು';'ಆದ್ದರಿಂದ ಅಲಿಂಗನಾದ ಧಮ೯ಜ್ಞನು'(ಅಶ್ವಮೇಧಪವ೯ 46-51)'ಅವ್ಯಕ್ತಾಚಾರನಾಗಿ ಅವ್ಯಕ್ತಾಲಿಂಗನಾಗಿ';'ಇನ್ನು ಪರಿವ್ರಾಜಕನು ವಿವಣ೯ವಾದ ವಸ್ತ್ರವನ್ನು ಧರಿಸಿ ,ತಲೆಯನ್ನು ಬೋಳಿಸಿಕೊಂಡವನಾಗಿ ,ಯಾವ ಸ್ವತ್ತೂ ಇಲ್ಲದವನಾಗಿ ;'ಶಿಖೆಯಿಂದ ಕೂಡಿದ ತಲೆಗೂ¸ದಲುಗಳನ್ನು ಕಿತ್ತು ಹಕಿ,ಯಜ್ಞೋಪವೀತವನ್ನು ಬಿಟ್ಟು.....'(ಪುಟ6೯)
18)ಪುತ್ರೈಷಣೆಯನ್ನು ಬಿಟ್ಟೆದ್ದು ಎಂದರೆ ಬ್ರಹ್ಮಚಯ೯ದಿಂದಲೇ ಸನ್ಯಾಸವನ್ನು ಮಾಡಬಹುದು;ಅಥವಾ ಗೃಹಸ್ಥನು ಪುತ್ರೋತ್ಪಾದನೆಯನ್ನು ಮಾಡದೆಯೂ ಸನ್ಯಾಸವನ್ನು ಮಾಡಬಹುದು.(ಪುಟ 70)
1೯)"ಆದ್ದರಿಂದ ಏಷಣೆಗಳನ್ನು ಬಿಟ್ಟೇಳುವ ಸ್ವರೂಪದ ಪರಮಹಂಸ ಪಾರಿವ್ರಾಜ್ಯವನ್ನೇ ,,ಸವ೯ಕಮ೯ಗಳನ್ನೂ ಸಾಧನಗಳನ್ನೂ ಪರಿತ್ಯಜಿಸುವ ಪಾರಿವ್ರಾಜ್ಯವನ್ನೇ ಆತ್ಮಜ್ಞಾನಿಯು ಸ್ವೀಕರಿಸಬೇಕು."
ಆತ್ಮಜ್ಞಾನಿಗೆ ಕಾಮನೆಯಿಲ್ಲವಾದ್ದರಿಂದಲೂ ವಿಧಿ ಬೇಕಿಲ್ಲವಾದ್ದರಿಂದಲೂ ಅವನು ಪರಮಹಂಸ ಪಾರಿವ್ರಾಜ್ಯವನ್ನೇ ಸ್ವೀಕರಿಸುತ್ತಾನೆ.ಆದ್ದರಿಂದ ಮುಮುಕ್ಷುವೂ ವಿರಕ್ತನೂ ಆದ ಸಾಧಕನು ಪಾರಿವ್ರಾಜ್ಯವನ್ನೇ (ಸನ್ಯಾಸವನ್ನೇ)ಸ್ವೀಕರಿಸಬೇಕೆಂದು ಸಿದ್ಧವಾಗುತ್ತದೆ.ಏಕೆಂgದರೆ ಕೃಆಥ೯ನಾದ ಜ್ಞಾನಿಯ
ಲಕ್ಷಣವೇ ಜಿಜ್ಞಾಸು ವಿರಕ್ತರಿಗೆ ಸಾಧನವಾಗಿರುತ್ತದೆ.ಹೀಗೆ ವಿರಕ್ತ ಸಾಧಕರು ಮಾಡುವ ಸನ್ನ್ಯಾಸವೇ ವಿವಿದಿಷಾ ಸನ್ಯಾಸವೆನಿಸುತ್ತದೆ.(ಪುಟ 70)
..................................................................................................................................................
(ಗಮನಿಸಿ:ಜ್ಞಾನಕ್ಕಾಗಿ ಸನ್ಯಾಸ -ವಿವಿದಿಷಾ ಸನ್ಯಾಸ
ವಿದ್ವತ್ ಸನ್ಯಾಸ=ಜ್ಞಾನದ ಫಲವಾದ ಸನ್ಯಾಸ)
.....................................................................................................................................
20)ತಸ್ಮಾತ್ ಸಿದ್ಧಂ ನಿವೃತ್ತಕಮಾ೯ ಭುಕ್ಷುಕ ಏವ ಬ್ರಹ್ಮಸಂಸ್ಥಃ ಇತಿ|(ಛಾಂ.ಭಾ.2-23-10)
"ಅದ್ದರಿಂದ ಕಮ೯ಗಳನ್ನೆಲ್ಲಾ ಬಿಟ್ಟ ಭಿಕ್ಷುಕನೇ ಬ್ರಹ್ಮಸಂಸ್ಥನು ಎಂದು ಸಿದ್ಧವಯಿತು."
21)"ಇದೆಲ್ಲವೂ ಆತ್ಮನೇ(7-26-2)'ಇದೆಲ್ಲವೂ ಬ್ರಹ್ಮವೇ' ಎಂಬ ಶಾಸ್ತ್ರದಿಂದ ಉಂಟಾಗುವ ವಿದ್ಯಾರೂಪವಾದ ಪ್ರತ್ಯಯವು ಸ್ವಾಭಾವಿಕವಾದ (ಅವಿದ್ಯೆ ಇರುವವರಿಗೆಲ್ಲಾ ಸ್ವಾಭಾವಿಕವಾಗಿಯೇ ಇದ್ದುಕೊಂಡಿರುವ)ಕ್ರಿಯಾ ಕಾರಕ ಫಲಗಳಭೇದದ ಪ್ರತ್ಯಯವೆಂಬ ಕಮ೯ವಿಧಿನಿಮಿತ್ತವನ್ನು ಅರೆದುಹಾಕದೆ(ನಾಶಮಾಡದೆ) ಹುಟ್ಟುವುದಿಲ್ಲ ಏಕೆಂದರೆ ಭೇದಪ್ರತ್ಯಯ ಮತ್ತು ಅಭೇದ ಪ್ರತ್ಯಯ ಇವುಗಳಿಗೆ ವಿರೋಧವಿರುತ್ತದೆ.(ಪುಟ 71)
22)ಭೇದಪ್ರತ್ಯಯವು ಯಾವನಿಗೆ 'ತನಗೆರಡನೆಯದಿಲ್ಲದ ಸತ್ತೊಂದೇ ಇತ್ತು'(6-2-1)'ಅದೇ ಸತ್ಯವು''ವಿಕಾರಭೇದವು ಅನೃತವು'(6-1-4) ಎಂಬೀ ವಾಕ್ಯಪ್ರಮಾಣಜನಿತವಾದ ಏಕತ್ವ ಪ್ರತ್ಯಯದಿಂದ ನಾಶವಾಗಿರುವುದೋ ,ಅವನು ಸವ೯ಕಮ೯ಗಳಿಂದಲೂ ನಿವೃತ್ತನಾಗಿರುತ್ತಾನೆ; ಏಕೆಂದರೆ ಆ ಕಮ೯ಗಳ ನಿಮಿತ್ತವು ತೊಲಗಿ ಹೋಗಿರುತ್ತದೆ.ಆ ನಿವೃತ್ತ ಕಮ೯ನೇ ಬ್ರಹ್ಮಸಂಸ್ಥವೆನಿಸುತ್ತಾನೆ.(ಪುಟ 71)
23)ಬ್ರಹ್ಮಸಂಸ್ಥನು ಎಂದರೆ ಅದವಿತೀಯ ಬ್ರಹ್ಮ ಸ್ವರೂಪದಲ್ಲಿ ನೆಲೆನಿಂಂತವನು .ಇವನೇ ಪಾರಿವ್ರಾಜಕನು.-¥ರಮಹಂಸನು. ಏಕೆಂರ್ದ ಮತ್ತೊಬ್ಬನಿಗೆ ಬ್ರಹ್ಮಸಂಸಸಥ್ವವು ಸಂಭವಿಸುವುದಿಲ್ಲ. ಆ ಮತ್ತೊಬ್ಬನಿಗೆ ಭೇದ ಪ್ರತ್ಯಯವುತೊಲಗದಿರುವುದರಿಂದ ,ಅ£ವನು ಮತ್ತೊಂದನ್ನು ಕಾಣುತ್ತಲೂ,ಕೇಳುತ್ತಲೂ, ಯೋಚಿಸ್ತ್ತಲೂ ಅರಿಯುತ್ತಲೂ ಇರುವ)ಅವನಿಗೆ ಬ್ರಹ್ಮಸಂಸ್ಥತ್ವವು
ಸಂಭವಿಸಲಾರದು.(ಪುಟ 72)
ಮ್ಯತ್ರೇಯಿ:
24)ಬರಿಯ ಏಷಣಾತ್ಯಾಗವೇ ಸನ್ಯಾಸವಲ್ಲದೆ,ಅದು ಅಶ್ರಮಮಾತ್ರವಲ್ಲ.ಅದ್ದರಿಂದ ಯವನಾದರೊಬ್ಬನಿಗೆ ಗೃಹಸ್ಥಾಶ್ರಮದಲ್ಲಿಯೇ ಬ್ರಹ್ಮಜ್ಞಾನವಾದರೆ ಅವನು ಗಾಹ೯ಸ್ಥದಲ್ಲಿಯೇ ಏಷಣೆಗಳನ್ನೂ ಕಾಮಗಳನ್ನೂ ಬಿಟ್ಟು ಇದ್ದುಕೊಂಡಿರಲಿ.ಅವನು ಹೆಂಡತಿ ಮಕ್ಕಳನ್ನು ಬಿಟ್ಟುಹೋಗಿ ಬೇರೆಯಾದ ಸನ್ಯಾಸವೆಂಬ ಆಶ್ರಮವನ್ನೇಕೆ ಸ್ವೀಕರಿಸಬೇಕು?(ಪುಟ72)
ಯಾಜ್ಞವಲ್ಕ್ಯ:
25)ಹಾಗಲ್ಲ:ಏಕೆಂದರೆ ಗಾಹ೯ಸ್ಥ್ಯವೆಂಬುದು ಕಾಮವೆಂಬ ನಿಮಿತ್ತದಿಂದ ಉಂಟಾಗಿರುತ್ತದೆ.'ಕಾಮವೆಂದರೆ ಇಷ್ಟೇ.ಹೆಂಡತಿ,ಮಗ,ಧನ,ಕಮ೯ಎಂಬ ಸಾಧನಾರೂಪವಾದ ಏಷಣೆ,ಮನುಷ್ಯಲೋಕ,ಪಿತೃಲೋಕ,ದೇವಲೋಕ-ಎಂದು ನೂರುಲೋಕಗಳಾಗಿ ಈ ಸಾಧನೈಷಣೆಗೆ ಫಲವಾಗಿರುವ ಏಷಣೆ-ಎಮಬ ಇಷ್ಟೇ ಅಲ್ಲವೆ ಕಾಮಿಸಬಹುದಾದ ವಿಷಯವು?ಆ ಫಲರೂಪವಾದ ಏಷಣೆಗಾಗಿ ಅಲ್ಲವೆ ಹೆಂಡತಿ,ಮಗ.ಧನ,ಕಮ೯-ಎಂಬ ಸಾಧನ್ಷಣೆ....(ಬೃ.ಉ.1-4-17)ಇವೆರಡೂ ಏಷಣೆಗಳೇ ಆಗಿರುತ್ತವೆ.(ಬೃ.3-5-1) ಎಂದು ಶ್ರುತಿಯಲ್ಲಿ ಒತ್ತಿ ಹೇಳಿರುತ್ತದೆ.ಕಾಮವೆಂಬ ನಿಮಿತ್ತದಿಂದ ಆಗುವ ಮಕ್ಕಳು ,ವಿತ್ತ,ಮುಂತಾದವುಗಳ ಸಂಬಂಧವು ನಿಯಮವಾಗಿ ಇರದೇ ಇರುವುದೇ ಸನ್ಯಾಸವು.(ಪುಟ 72)
26) ಏಷಣೆಯಿಲ್ಲದಿರುವವನಿಗೆ ಮನೆಯಲ್ಲಿಯೇ ಇರಬೇಕೆಂಬ ನಿಯಮವು ಹೊಂದುವುದಿಲ್ಲ.ಮತ್ತೊಂದು ಆಶ್ರಮಕ್ಕೆ ಹೋಗಬೇಕೆಂದು ನಿಯಮವು ಜ್ಞಾನಿಗೆ ಇಲ್ಲವಾದರೂ ಮನೆಯಲ್ಲಿಯೇ ಇರಬೇಕೆಂಬುದು ಕಾಮನಿಮಿತ್ತವಾಗಿರುತ್ತದೆ.ಆದ್ದರಿಂದ ಜ್ಞಾನಿಗೆ ಪರಮಹಂಸಾಶ್ರಮವೇ ಸಹಜವಾಗಿರುತ್ತದೆ.(ಪುಟ72)
27)ತನ್ನದಾದ ಒಂದು ಮನೆಯನ್ನು ಸ್ವೀಕರಿಸದೇ ಇದ್ದರೆ ಶರೀರವನ್ನು ಧರಿಸಿಕೊಂಡಿರುವುದಕ್ಕೆ ಬೇಕಾಗುವಷ್ಟುಮಟ್ಟಿಗೆ ಅನ್ನ ವಸ್ತ್ರಗಳನ್ನು ಇಚ್ಛಿಸುವವನಿಗೆ ತನ್ನದೆಂಬುದೊಂದು ಗೊತ್ತಾಗಿ ಯಾವುದೂ ಇಲ್ಲದ್ದರಿಂದ ಅವನು ಭಿಕ್ಷುಕನೇ ಆಗಬೇಕೆಂದಾಗುವುದು.ಯಾವುದಾದರೊಂದು ಕಾರಣದಿಂದ ಅವನು ಸನ್ಯಾಸಾಶ್ರಮವನ್ನು ಸ್ವೀಕರಿಸದೇ ಇದ್ದರೂ ಅವನು ಕಮಿ೯ಯಾದ ಗೃಹಸ್ಥನೆಂದು ಅವನನ್ನು ಭಾವಿಸಬಾರದು(ಪುಟ 73)
28)ಆದರೆ ಗೃಹಸ್ಥಜ್ಞಾನಿಯು ,ನಿಸ್ಸಂಗನಾದರೂ ಗೃಹಸ್ಥಾಶ್ರಮದಲ್ಲಿಯೇ ಉಳಿಯಬೇಕೆಂದು ಆಗ್ರಹಪಡಿಸುವುದಕ್ಕೆ ಯಾರಿಗೂ ಅಧಿಕಾರವಿಲ್ಲ.(ಪುಟ73)
2೯)ಏಕತ್ವ ಜ್ಞಾನದಿಂದ ಭೇದಜ್ಞಾನವು(ಪ್ರತ್ಯಯವು)ಬಾಧಿತವಾಗುವುದು ಸನ್ಯಾಸಕ್ಕೆ ಅಗತ್ಯವೇ ಹೊರತು,ಮುಖ್ಯವೇ ಹೊರತು -ಕೇವಲ ಕಮ೯ತ್ಯಾಗವಲ್ಲ.(ಪುಟ 73)
30)ಪ್ರಯತ್ನದಲ್ಲಿ ಅಹಂಕಾರವು (ಕತೃ೯ತ್ವ ಭಾವನೆಯು) ಗುಪ್ತವಾಗಿರುತ್ತದೆ.(ಪುಟ 73)
31)ಆದರೆ ವೇದಾಂತಿಯಾದ ಸನ್ಯಾಸಿಗೆ ಎಲ್ಲವೂ ಆತ್ಮವೇ ಆದುದರಿಂದ ಅದಕ್ಕಿಂತ ಬೇರೆಯಾಗಿ ಕತೃ೯,ಕಮ೯,ಕ್ರಿಯೆ, ಕಾರಕ,ಫಲ,ತ್ಯಾಗ, ಭೋಗ ಇತ್ಯಾದಿ ಯಾವುದೂ ಸತ್ಯವಾಗಿಲ್ಲ.(ಪುಟ.74)
32)ಆದ್ದರಿಂದ,ವೇದಾಂತ ಪ್ರಮಾಣದಿಂದ ಉಂಟಾದ ಏಕತ್ವ ಪ್ರತ್ಯಯವುಳ್ಳವನಿಗೆ ಮಾತ್ರವೇ ಕಮ೯ನಿವೃತ್ತಿರೂಪವಾದ ಪಾರಿವ್ರಾಜ್ಯವೂ ಬ್ರಹ್ಮಸಂಸ್ಥತ್ವಕ್ಕೆ ಹೊಂದುತ್ತದೆ.,ಎಂದು ಸಿದ್ಧವಾಯಿತು."(ಪುಟ 75
33)ಏಕತ್ವಪ್ರತ್ಯಯವುಳ್ಳವನಿಗೆ,ಹಿಂದೂ,ಇಂದೂ,ಮುಂದೂ .ಎಂದೆಂದೂ ನಾನು ಕತೃ೯ವಲ್ಲ ಎಂದು ನಿಶ್ಚಯವಾಗಿರುತ್ತದೆ.(ಪುಟ 75)
34)ಮೂರುಕಾಲಗಳಲ್ಲಿಯೂ ಕತೃತ್ವವಿಲ್ಲದ,ಭೋಕೃ೯ತ್ವವಿಲ್ಲದ,ಸ್ವರೂಪದ ಬ್ರಹ್ಮವೇ ನಾನಾಗಿರುವೆನು ,ಇದಕ್ಕೆ ಹಿಂದೆಯೂ ಕತೃ೯ವಾಗಿ,ಭೋಕ್ತø೯ವಾಗಿ ನಾನಿರಲಿಲ್ಲ,ಈಗಲೂ ಇಲ್ಲ,ಮುಂದೆಯೂ ಇರುವುದಿಲ್ಲ,ಎಂದು ಬ್ರಹ್ಮಜ್ಞಾನಿಯು ನಿಶ್ಚಯಿಸಿರುತ್ತಾನೆ. ಹೀಗೆಂದಾದರೇ ಮೋಕ್ಷವು (ಸಾಧ್ಯವೆಂನುದು) ಹೊಂದುತ್ತದೆ.(ಪುಟ 75)
35)ಮಿಥ್ಯಾಜ್ಞಾನವು ಸಮ್ಯಕ್ ಜ್ಞಾನದಿಂದ ನಾಶವಾಗಿರುವುದರಿಂದ ಜ್ಞಾನಿಗೆ ಜನ್ಮಾಂತರಕ್ಕೆ ಕಾರಣವೇ ಇರುವುದಿಲ್ಲ(ಪುಟ 76)
36)ಯಾವ ಪರಿಗ್ರಹವೂ ಇಲ್ಲದ ಆತ್ಮಜ್ಞಾನಿಯ ಸವ೯ಕಮ೯ ಸನ್ಯಾಸವೇ ವೇದೋಕ್ತವಾದ ಪಾರಿವ್ರಾಜ್ಯವೆಂದು ಸಿದ್ಧವಾಗುತ್ತದೆ.(ಪುಟ 77)
37)ಎಲ್ಲೆಲ್ಲಿಯೂ ಆಸಕ್ತಿಗೆ ಕಾರಣರಾದ ಮಕ್ಕಳು ಹೆಂಡತಿ ಮುಂತಾದವರಲ್ಲಿ ಸಂಗವಿಲ್ಲದ ಅಂತಃಕರಣ
ವಿಲ್ಲದವನು;ಅಂತಃಕರಣವನ್ನು ಗೆದ್ದು ವಶಕ್ಕೆ ತೆಗೆದುಕೊಂಡಿರುವವನು;ದೇಹದಲ್ಲಿಯೂ .ಬದುಕಿರುವಿಕೆಯಲ್ಲಿಯೂ ಭೋಗದಲ್ಲಿಯೂ ಬಯಕೆಯಿಲ್ಲದವನು .ನಿಷ್ಕ್ರಿಯನಾದ ಬ್ರಹ್ಮವನ್ನು ಅರಿತುಕೊಂಡಿದ್ದರಿಂದ ಕಮ೯ಗಳು ಯಾವನನ್ನು ಬಿಟ್ಟು ತೊಲಗುವವೋ ಅವನು ನಿಷ್ಕಮ೯ನು.ಅವನ ಭಾವವು ನೈಷ್ಕಮ್ಯ೯ವು;ಈಗಲೇ ಮುಕ್ತಿಯನ್ನು ಪಡೆದು ನಿಲ್ಲುವ ರೂಪವಾದ ನೈಷ್ಕಮ್ಯ೯ಸಿದ್ಧಿಯನ್ನು
38)ಸನ್ಯಾಸದಿಂದ ಎಂದರೆ ಸಮ್ಯಗ್ದಶ೯ನದಿಂದ ಅಥವಾ ಆದಶ೯ನಪೂವ೯ಕವಾದ ಸವ೯ಕಮ೯ಸನ್ಯಾಸದಿಂದ ಪಡೆದುಕೊಳ್ಳುತ್ತಾನೆ.ಆದ್ದರಿಂದಲೇ "ಸವ೯ಕಮ8ಗಳನ್ನೂ ಮನಸ್ಸಿನಿಂದ ಸನ್ಯಾಸಮಾಡಿ ಏನನ್ನೂ ಮಾಡದೆ ಮಾಡಿಸದಯೇ ಕುಳಿತಿರುತ್ತಾನೆ.(ಗೀತಾ 5-13) ಎಂದು ಹೇಳಿರುತ್ತದೆ.(ಪುಟ 77)
3೯)ಕಮ೯ವು ಗುಣಗಳ ಧಮ೯ವು.(ಪುಟ77)
40)ಅವಿದ್ಯೆಯಿಂದ ಕಲ್ಪಿತವಾದುದು ವಿದ್ಯಾವಸ್ಥೆಯಲ್ಲಿ ಉಳಿದುಕೊಳ್ಳಲಾರದು.(ಪುಟ 77)
41)ಮೋಕ್ಷಕ್ಕೆ ಆತ್ಮಜ್ಞಾನವು ಹೇಗೆ ನೇರಾದ ಸಾಧನವೋ ಹಾಗೆ ಸನ್ಯಾಸವು ನೇರಾದ ಸಾಧನವಲ್ಲ.ಸನ್ಯಾಸವು ಜ್ಞಾನಪರಿಪಾಕಕ್ಕೆ ಬೇಕಾದ(ಸಹಾಯಕವಾದ) ಅಂತರಂಗ ಸಾಧನ.ಆದ್ದರಿಂದ ವಿವಿದಿಷಾ ಸನ್ಯಾಸವು ಜ್ಞಾನಕ್ಕೆ ಸಾಧನವೇ ಹೊರತು ಮೋಕ್ಷಕ್ಕಲ್ಲ.ಜ್ಞಾನದಿಂದಲೇ ಮುಕ್ತಿಯಾಗುತ್ತದೆ.ಸನ್ಯಾಸವು ಜ್ಞಾನಕ್ಕೆ ಸಾಧನವಾದಂತೆ ಅದರ ಫಲವೂ ಆಗಬಹುದು.ವಿದ್ವತ್ ಸನ್ಯಾಸವು ಜ್ಞಾನದ ಫಲವೇ ಆಗಿದೆ.
(ಪುಟ 78)
42)ಜ್ಞಾನ ಮತ್ತು ಸನ್ಯಾಸ ಈ ಎರಡರಲ್ಲಿ ಆತ್ಮಜ್ಞಾನವು ಪ್ರಧಾನವಾಗಿಯೂ ಸನ್ಯಾಸವು ಗೌಣವಾಗಿಯೂ ಅಂಗವಾಗಿಯೂ ಇವೆ.(ಪುಟ 78)
43)ಜ್ಞಾನವುಂಟಾಗಿ ಅದು ಪರದಿಪಕ್ವವಾಗುವುದಕ್ಕೆ ಬೇಕಾದ ಕಾರಣದಿಂದೊಡಗೂಡಿ,ಪ್ರತಿಪಕ್ಷವಿಲ್ಲದೆ(ಅಜ್ಞಾನ ಅಥವಾ ಅದರ ಕಾಯ೯ದ ಅಡಚಣೆಯಿಲ್ಲದೆ) ಜ್ಞಾನವು ಆತ್ನಾನುಭವ ನಿಶ್ಚಯರೂಪವಾಗಿ ಕೊನೆಗಾಣುವುದನ್ನೇ ಇಲ್ಲಿ ನಿಷ್ಠೆ ಎಂಬ ಮಾತಿನಿಂದ ಕರೆದಿರುತ್ತದೆ.ಸವ೯ಕಮ೯ಸನ್ಯಾಸ ಸಹಿತವಾದ ಜ್ಞಾನವೇ ಫಲಕಾರಿ -ಎಂಬ ಭಾವ.(ಪುಟ 78)
44)ಸ್ವಾತ್ಮಾನುಭವ ನಿಶ್ಚಯರೂಪದಿಂದ ಕೊನೆಗಾಣುವುದಿದೆಯಲ್ಲ -ಇದನ್ನೇ ಹೆಚ್ಚ್ಚಿನ ಜ್ಞಾನನಿಷ್ಠೆ ಎಂದು ಕರೆದಿರುತ್ತದೆ.ಜ್ಞಾನವು ಯಾವ ಅಡ್ಡಿಯೂ ಇಲ್ಲದೆ ಸ್ಪುಟವಾಗಿ ಬೆಳಗುವುದೇ ಪರಿಪಾಕವು.(ಪುಟ 7೯)
45)ಶಾಸ್ತ್ರಾಚಾಯ೯ರ ಉಪದೇಶದಿಂದ ಉತ್ಪನ್ನವಾದ ಆತ್ಮಜ್ಞಾನವು ಪರಿಪಕ್ವವಾಗುವುದಕ್ಕೆ ಬುದ್ಧಿವಿಶುದ್ಧತ್ವಾದಿ,ಚತ್ತಶುದ್ಧಿ ಇತ್ಯಾದಿಗಳೂ ಅಮಾನುತ್ವಾದಿಗಳೂ ಸಹಕಾರಿ ಕಾರಣಗಳು.ಈ ಜ್ಞಾನವು ಕ್ಷೇತ್ರಜ್ಞ(ಜೀವಾತ್ಮ) ನಾದ ನನ್ನ ಸ್ವರೂಪವೇ ಎಂಬ ನಿಶ್ಚಯರೂಪವಾಗಿ ಇದೆ.(ಪುಟ78)
46)ದೇಹಾದಿ ಸಂಘಾತದಲ್ಲಿ ತಾನೆಂಬ ಅಭಿಮಾನವು ಅವಿದ್ಯಾತ್ಮಕವಾಗಿರುತ್ತದೆ.(ಪುಟ 7೯)
47)ಆದ್ದರಿಂದ ಶರೀರವೆಂಬುದು ಮಿಥ್ಯಾ ಪ್ರತ್ಯಯದ ರೂಪದಿಂದಾಗಿರುವುದರಿಂದ ಜ್ಞಾನಿಗೆ ಬದುಕಿರುವಾಗಲೂ ಶರೀರವಿಲ್ಲವೆಂದಾಯಿತು.(ಪುಟ 80)
48) ಮ್ಯತ್ರೇಯಿ!ಹೀಗೆ ಗೃಹಸ್ಥಾಶ್ರಮದಲ್ಲಿದ್ದರೂ ಬದುಕಿದ್ದಾಗಲೇ ಅಶರೀರಿಯಾಗಿರುವ ಬ್ರಹ್ಮಜ್ಞಾನಿಯಲ್ಲಿ ,ಅವಿದ್ಯಾಕಾಮಕಮ೯ಗಳ ಸಂಸಾರವು ನಾಶವಾಗಿರುವುದರಿಂದ ,ಅವನು ಕಾಮಕಮ೯ಗಳಗಿಗೆ ಕಾರಣವಾದ ಗೃಸಸ್ಥಾಶ್ರಮವನ್ನು ಪರಿತ್ಯಜಿಸಿ ಸನ್ಯಾಸವನ್ನು ಸ್ವೀಕರಿಸುವುದೇ ಸ್ವಾಭಾವಿಕವಾಗಿದೆ.(ಪುಟ81)
4೯)ಪ್ರೀತಿಗೆ ತನ್ನ ಸುಖ ಮುಖ್ಯವೇ ಹೊರತು ಇನ್ನೊಬ್ಬರ ಸುಖವಲ್ಲ.(ಪುಟ 82)
50)ಅಜ್ಞಾತನಾದ ಪರಮಾತ್ಮನೇ ಇಲ್ಲಿ ಪ್ರಪಂಚವಾಗಿ ತೋರುತ್ತಿದ್ದಾನೆ.(ಪುಟ 83)
51) ದ್ವತ ಪ್ರಪಂಚದ ಯಾವುದೇ ವಸ್ತುವಾಗಲೀ ಆತ್ಮನಿಗಿಂತ ಬೇರೆ ಅಲ್ಲ.ಆತ್ಮನ್ನು ಬಿಟ್ಟು ಬೇರೆ ಯಾವುದಕ್ಕೂ ಸ್ವತಂತ್ರವಾದ ಇರುವಿಕೆ(ಸತ್ತೆ)ಇಲ್ಲ.ಬ್ರಾಹ್ಮಣ ಜಾತಿಯಾಗಲೀ,ಕ್ಷತ್ರಿಯ ಜಾತಿಯಾಗಲೀ, ಲೇದಗಳಾಗಲೀ,ಭೂತಗಳಾಗೂೀಕಗಳಾಗಲೀ, ದೇವತೆಗಳಾಗಲೀ,ಭೂತಗಳಾಗಲೀ ಯಾವುದೇ ಆಗಲಿ ಆತ್ಮನಿಗಿಂತ ಬೇರೆ ಅಲ್ಲ.(ಪುಟ 84)
52)ಯಾವುದನ್ನೇ ಆಗಲೀ ಆನಂದ ಸ್ವರೂಪನಾದ ಆತ್ಮನಿಂದ ಬೇರೆಯಾದ ದುಃಖರೂಪವಾದ ಅನಾತ್ಮವೆಂದು ತಿಳಿದರೆ ಆ ತಪ್ಪಿಗಾಗಿ,ಹಾಗೆ ತಿಳಿದವನೇ ದುಃಖಿಯಾಗಿ ಕೈವಲ್ಯದಿಂದ ವಂಚಿತನಾಗುತ್ತಾನೆ.(ಪುಟ 84)
53)ಎಲ್ಲವೂ ಆತ್ಮನಿಂದ ಹುಟ್ಟುತ್ತವೆ.ಆತ್ಮನಲ್ಲಿಯೇ ಅಡಗುತ್ತವೆ.ಮತ್ತು ಸ್ಥಿತಿಕಾಲದಲ್ಲಿ ಆತ್ಮಮಯವಾಗಿಯೇ ಇರುತ್ತವೆ.ಯಾವುದೇ ಆಗಲೀ ಆತ್ಮನನ್ನು ಬಿಟ್ಟು ತಿಳಿಯಬರುವುದಿಲ್ಲವಾದ್ದರಿಂದ ಈ ಎಲ್ಲವೂ ಆತ್ಮನೇ ಆಗಿವೆ.'ಇದಂ ಸವ೯ಂ ಯದಯಮಾತ್ಮಾ'(2-4-6)ಆದ್ದರಿಂದ ಮೈತ್ರೇಯಿ ಈ ಆತ್ಮನನ್ನೇ ಶ್ರವಣ,ಮನನ,ನಿದಿಧ್ಯಾಸನಗಳಿಂದ ಕಂಡುಕೊಳ್ಳಬೇಕು.(ಪುಟ 85)
54)ಜ್ಞಾತೃತ್ವವು ನಮ್ಮ ಸ್ವರೂಪದಲ್ಲಿ ಅವಿದ್ಯೆಯಿಂದ ನಾವೇ ಕಲ್ಪಿಸಿಕೊಂಡ ಎಂಬ ಅರಿವು ಶಾಸ್ತಾಚಾಯ೯ರ ಅನುಗ್ರಹದಿಂದ ಮೂಡಿದೊಡನೆ ಜ್ಞಾತೃ-ಜ್ಞಾನ-ಜ್ಞೇಯಗಳೆಂಬ ವಿಶೇಷ ಮಾಯಾಜಾಲವು ಬಾಧಿತವಾಗಿ ,ಸ್ವಯಂಸಿದ್ಧ ಪ್ರಜ್ಞಾನಘನ ಸ್ವರೂಪವಾದ ಮಹಾ ಸಾಮಾನ್ಯವೇ ಬೆಳಗಲು ತೊಡಗುತ್ತದೆ.ಸರೋವರದಲ್ಲಿರುವ ನೀರೇ ತೆರೆಗಳಾಗಿಯೂ ನೊರೆಗಳಾಗಿಯೂ ಗುಳ್ಳೆಗಳಾಗಿಯೂ ತೋರುವಂತೆ ,ಆತ್ಮವೆಂಬ ಚಿನ್ಮಾತ್ರ ಸ್ವರೂಪವೇ ಜ್ಞಾತೃ ಜ್ಞಾನ ಜ್ಞೇಯಗಳೆಂಬ ಮಾಯಾ ಪ್ರಪಂಚದ ವಿಲಾಸವಾಗಿತೋರುತ್ತಿದೆ.(ಪುಟ 86)
55)ನಾಮರೂಪಾತ್ಮಕವಾದ ಮಾಯೆಯು ಎಚ್ಚರ ಕನಸುಗಳಲ್ಲಿ ಬಗೆ ಬಗೆಯಿಂದ ತೋರಿ,ಗಾಢನಿದ್ರೆಯಲ್ಲಿಯೂ ಮರಣದಲ್ಲಿಯೂ ಜಗತ್ತಿನ ಪ್ರಳಯದಲ್ಲಿಯೂ ಅಡಗುತ್ತದೆ.(ಪುಟ87)
56)ಒಂದು ಚಿನ್ಮಾತ ್ರ ಸ್ವರೂಪವೇ (ಬಚ್ಚಬರಿ ಅರಿವು)ಎಚ್ಚರದಲ್ಲಿ ಜ್ಞಾತೃ-ಜ್ಞೇಯ-ಜ್ಞಾನಗಳಾಗಿ ತೋರುತ್ತಿದೆ ಎಂಬುದಕ್ಕೆ ನಮ್ಮ ಕನಸಿನ ಅನುಭವವೇ ಸಾಕ್ಷಿಯಾಗಿದೆ.ನಿದ್ರೆ ಬಂದಾಗ ತೋರುವ ಕನಸಿನಲ್ಲಿ ಮನಸ್ಸಿನ ಹೊರತು ಬೇರೇನೂ ಇರುವುದಿಲ್ಲ.ಒಂದು ಮನಸ್ಸೇ ವಾಸನಾವಶದಿಂದ ಲ್ಞಾತೃ-ಜ್ಞಾನ-ಜ್ಞೇಯ ರೂಪವಾದ ಸಕಲ ಪ್ರಪಂಚವಾಗಿ ತೋರುತ್ತದೆ.(ಪುಟ 88)
57)ಇದೆಲ್ಲವೂ ಆತ್ಮನೇ ಎಂಬುದನ್ನು ತಿಳಿದುಕೊಳ್ಳಬೇಕಾದರೆ:ಚಿನ್ಮಾತ್ರವೇ ಎಲ್ಲೆಲ್ಲಿಯೂ ಹಾಸುಹೊಕ್ಕಾಗಿ ತುಂಬಿ ತುಳುಕುತ್ತಿರುವುದರಿಂದ ಎಲ್ಲವೂ ಚಿತ್ ಸ್ವರೂಪವೇ ಎಣದು ಗೊತ್ತು ಮಾಡಿಕೊಕೊಳ್ಳಬಹುದಾಗಿದೆ.(ಪುಟ 88)
58)ಕನಸು ಎಚ್ಚ್ರ ನಿದ್ರೆಗಳೇಂಬ ಅವಸ್ಥಾ ವಿಶೇಷಗಳೂ ಸಹ ಅವನ್ನು ಬೆಳಗುತ್ತಿರುವ ಮೂಲ ಸಾಮಾನ್ಯವಾದ ಪ್ರಜ್ಞಾನದಿಂದ ಬೇರೆಯಾಗಿಲ್ಲವೆಂದೇ ಸಿದ್ಧವಾಗುತ್ತದೆ.(ಪುಟ(ಪುಟ 88)
ಆತ್ಮಜತ್ವ ಪ್ರಕ್ರಿಯೆ:
5೯)ಹುಟ್ಟುವ ಮುಂಚೆ ಇದೆಲ್ಲವೂ ಬ್ರಹ್ಮವೇ ಆಗಿತ್ತು.'ಇಗು ಮೊದಲು ಅಸತ್ತೇ ಆಗಿತ್ತು'(ತೈ.2-7)'ಸೋಮ್ಯನೆ, ಇದು ಮೊದಲು ಎರಡನೆಯದಿಲ್ಲದ ಒಂದೇ ಆದ ಸತ್ತೇ ಆಗಿತ್ತು.ಸತ್ತು ಎಂದರೆ ಬರೀ ಇರುವಿಕೆಯಾಗಿರುವ ವಸ್ತು.ಇದು ಅತ್ಯಂತ ಸೂಕ್ಞ್ಮವೂ (ಅತೀಂದ್ರಿಯವೂ) ನಿವಿ೯ಶೇಷವೂ (ದ್ರವ್ಯ,ಗುಣ,ಕಮ೯ ಮುಂತಾದ ಯಾವ ವಿಶೇಷವೂ ಇಲ್ಲದ ಸವ೯ಗತವೂ, ಒಂದೇ ಒಂದು,ಮತ್ತೊಂದರ ಸೋಕು ಇಲ್ಲದ್ದು,ನಿರವಯವವೂ ಆದ ಆತ್ಮಚೈತನ್ಯವು.ನಾಮರೂಪಾತ್ಮಕವಾದ ಈ ವ್ಯಕ್ತ ಜಗತ್ತು ಸೃಷ್ಟಿಗೆ ಮೊದಲು(ವ್ಯÁ್ಯ್ಕ್ತವ್ಯಕ್ತಗಳಿಗೆ ಮೀರಿದ -ಅಸತ್-ಅವ್ಯಕ್ತವಾದ (ಬ್ರಹ್ಮವೇ)ಬೀಜವೇ ಆಗಿತ್ತು.(ಛಾಂ.6-2-1) (ಪುಟ 8೯)
60)ನಾಮರೂಪ ಜಗತ್ತಿನ ಸೃಷ್ಟಿಕಾಲದಲ್ಲಿ ಮೊದಲು ವನಾಮವೇ ಎಂದರೆ ಶಬ್ದಾತ್ಮತವಾದ ವೇದಮಂತ್ರಗಳೂ,ಇತಿಹಾಸ,ಪುರಾನ,ವಿದ್ಯಾ,ಉಪನಿಷತ್ತುಗಳೂ, ಶ್ಲೋಕಗಳು,,ಸೂತ್ರಗಳು,ಅನುವ್ಯಾಖ್ಯಾನಗಳೂ ,ವ್ಯಾಖ್ಯಾನಗಳು-ಎಂಬ ಎಂಟು ಬಗೆಯ ಬ್ರಾಹ್ಮಣಗಳು ಪ್ರಯತ್ನವಿಲ್ಲದೆ,ಸ್ವಾಭಾವಿಕವಾಗಿ ಉಸಿರಾಡಿದಂತೆ ಪರಮಾತ್ಮನಿಂದ ಹೊರಬಂದವು.ಹೀಗೆ ವೇದಾದಿಗಳು ಪುರುಷಬುದ್ಧಿಯಿಂದ,ಪ್ರಯತ್ನಪೂವ೯ಕವಾಗಿ ರಚಿತವಾಗಿಲ್ಲವಾದ್ದರಿಂದ ಅಪೌರುಷೇಯ ಎನಿಸುತ್ತವೆ.(ಪುಟ ೯0)
61) ಎಲ್ಲಾ ವ್ಯವಹಾರಗಳನ್ನೂ ನಾಶಗೊಳಿಸುವ ಮಹಾ ಪ್ರಲಯವು ಆದ ಬಳಿಕವೂ ಪರಮೇಶ್ವರನ ಅನುಗ್ರಹದಿಂದ ಈಶ್ವರರಾಗಿರುವ ಹಿರಣ್ಯ ಗಭ೯ನೇ ಮೊದಲಾದವರಿಗೆ ಕಲ್ಪಾಂತರದ ವ್ಯವಹಾರದ ನೆನಪು ಇರಬಹುದಾಗಿದೆ.ಆದ್ದರಿಂದಲೇ ಆ ನೆನಪಿನ ಬಲದಿಂದ ಮತ್ತೆ ಸೃಷ್ಟಿ ಮಾಡದುತ್ತಾರೆಂದು ಶ್ರುತಿಯಲ್ಲಿ ಹೇಳಿದೆ.(ಪುಟ ೯2)
62)ಹಿರಣ್ಯಗಭ೯ನಿಗೆ ಪರಮೇಶ್ವರನ ಅನುಗ್ರಹದಿಂದ ಈ ಕಲ್ಪದಲ್ಲಿ ಅಧ್ಯನವಿಲ್ಲದೆಯೇ ವೇದ ಸ್ಮರಣೆಯು ಉಂಟಾಗುತ್ತದೆ(ಪುಟ ೯3)
63)"ಯಾರು ಯಾರು ಯಾವ ಯಾವ ಗುಣಕಮ೯ಗಳನ್ನು ಹಿಂದಿನ ಸೃಷ್ಟಿಯಲ್ಲಿ ಹೊಂದಿಕೊಂಡಿದ್ದರೋ ಮತ್ತೆ ಮತ್ತೆ ಸೃಷ್ಟಿಯಾದಾಗಲೂ ಅವರವರು ಅವವುಗಳನ್ನೇ ಹೊಂದಿಕೊಳ್ಳುತ್ತಾರೆ.(ಪುಟ ೯3)
64)ಶಕ್ತಿರೂಪವಾಗಿ ಕಾರಣರೂಪದಿಂದುಳಿದುಕೊಳ್ಳುವುದೇ ಪ್ರಳಯವು.ಶಕ್ತಿಯಿಂದ ಕಾಯ೯ರೂಪವಾಗಿ ತೋರಿಕೊಳ್ಳುವುದೇ ಸೃಷ್ಟಿಯು.(ಪುಟ ೯3)
65)ಗೊತ್ತಾದ ರಚನೆಯುಳ್ಳದ್ದಾಗಿ ಮೊದಲೂ ಇದ್ದೇ ಇರು ವೇದಕ್ಕೆ ವೇದವು ಪುರುಷ ಬುಧ್ಧಿಪ್ರಯತ್ನಪೂವ೯ಕವಾಗಿ ಆದದ್ದಲ್ಲ.ಆದ್ದರಿಂದ ಅದು ನಿರಪೇಕ್ಷವಾಗಿಯೇ ತನ್ನ ಅಥ೯ದಲ್ಲಿ ಪ್ರಮಾಣವಾಗಿರುತ್ತದೆ.(ಪುಟ ೯4)
66)ಸತ್ತಮೇಲೆ ಅನುಭವಕ್ಕೆ ಬರುವ ಸ್ವಗಾ೯ದಿಫಲಗಳನ್ನು ಹೇಳುವ ಕಮ8ಕಾಂಡದ ವಿಧಿಪ್ರದಾನವಾದ ವೇದವಾಕ್ಯಗಳಂತಲ್ಲದೆ,ಉತ್ತಮಧಿಕಾರಿಗೆ ಇಲ್ಲಿಯೇ ಈಗಲೇ ಅನುಭವಕ್ಕೆ ಬರುವ ಮೋಕ್ಷಫಲವನ್ನು ಹೇಳುವ ಜ್ಞಾನಕಾಂಡದ ವಸ್ತುಬೋzsಕವಾಕ್ಯಗಳೂ ಇರುವುದರಿಂದ ವೇದಪ್ರಾಮಾಣ್ಯವನ್ನು ಶಂಕಿಸುವಂತಿಲ್ಲ.(ಪುಟ ೯4)
67)ಶಾಸ್ತ್ರವು ಸ್ವತಃ ಪ್ರಮಾಣವಾಗಿದೆ.ಏಕೆ ಹೇಗೆ ಪ್ರಮಾಣವೆಂಬುದನ್ನು ಮತ್ತೊಂದರ ಸಹಾಯದಿಂದ
ತೋರಿಸಿಕೊಡಬೇಕಾಗಿಲ್ಲ.ಆದ್ದರಿಂದ ಬ್ರಹ್ಮಜ್ಞಾನಕ್ಕೆ ಶಾಸ್ತ್ರವೇ ಪ್ರಮಾಣವು. ಎಂಬುದು ಸಿದ್ಧವಾಯಿತು.
ಹೀಗೆ ಈಗಲೇ ಇಲ್ಲಿಯೇ ಅನುಭವದಲ್ಲಿ ಕೊನೆಗೊಳ್ಳುವ ಆತ್ಮಾನುಭವವನ್ನು ಬೋಧಿಸುವುದರಿಂದಲೇ ವೇದವು ಸ್ವತಃ ಪ್ರಾಮಾಣ್ಯವೆನಿಸಿದೆ-ಎನ್ನುವುದರಿಂದ ವೇದಕ್ಕ್ದಕಿಂತಲೂ ಅನುಭವಕ್ಕೇ ಹೆಚ್ಚಿನ ಗೌರವವನ್ನು ತೋರಿಸಿದಂತೆ ಕಾಣುತ್ತದೆ.ಪುಟ (೯5)
68)ಅನುಭವದಲ್ಲಿ ಕೊನೆಗಾಣುವ ವಸ್ತುತಂತ್ರಜ್ಞಾನವನ್ನು ಬೋಧಿಸುವುದರಿಂದಲೇ ವೇದವು ಪ್ರಮಾಣವೆನಿಸುತ್ತದೆ.(ಪುಟ ೯5)
6೯)ಎಚ್ಚರದ ಅವಸ್ಥೆಗೇ ಹೆಚ್ಚು ಮಹತ್ವವನ್ನು ಕೊಡುವ ತಾಕಿ೯ಕರ ದೃಷ್ಟಿಯು ಪಕ್ಷಪಾತದಿಂದ ಕೂಡಿದೆ.(ಪುಟ ೯5)
70) ಆತ್ಮನಿಗೆ ಬಂಧ ಮೋಕ್ಷ ಮುಂತಾದ ಶಾಸ್ತ್ರವು ಹೇಳುವ ವ್ಯವಹಾರಕ್ಕಾಗಿ ,ಅವಿದ್ಯೆಯಿಂದಾಗಿರುವ ನಾಮರೂಪಗಳೆಂಬ ಉಪಾಧಿ ನಿಮಿತ್ತದಿಂದಾಗ ವಿಶೇಷವಿರುವುದೆಂದು ನಾವು ಒಪ್ಪಿರುತ್ತೇವೆ. ಆದರೆ ನಿಜವಾಗಿ ಯಾವ ಉಪಾಧಿಯೂ ಇಲ್ಲದ ,ತನಗೆರನೆಯದಿಲ್ಲದ ಒಂದೇ ಒಂದಾದ ,ಬಿಡುವುದಕ್ಕಾಗಲೀ ಬಿಡುವುದಕ್ಕಾಗಲೀ ಬಾರದ,ಹುಟ್ಟಿಲ್ಲದ,ಭಯವಿಲ್ಲದ, ಮಂಗಲಕರವಾದ ಆ ಬ್ರಹ್ಮಾತ್ಮ ತತ್ವವು ಯಾವ ತಾಕಿ೯ಕರ ಬುದ್ಧಿಗೂ ನಿಲುಕದ ವಸ್ತುವೆಂದು ಅಭಿಪ್ರಾಯ.(ಪುಟ ೯6)
71)ಬಂಧ, ಮೋಕ್ಷ,ವಿದ್ಯೆ,ಅವಿದ್ಯೆ ಮೊದಲಾದ ಕಲ್ಪನೆಗಳ ವ್ಯವಹಾರವನ್ನು ಶಾಸ್ತ್ರವು ಉಪದೇಶಕ್ಕಾಗಿ ಇಟ್ಟುಕೊಂಡಿದೆಯೇ ಹೊರತು ಅದು ಪರಮಾಥ೯ವೆಂದೇನೂ ಅದು ಹೇಳುವುದಿಲ್ಲ.(ಪುಟ೯6)
72)ಉಪಾಧಿರಹಿತವಾದ ಆತ್ಮನಲ್ಲಿ ಕತೃ೯ತ್ವವಾಗಲೀ ಭೋಕ್ತøತ್ವವಾಗಲೀ ಕ್ರಿಯಾಕಾರಕ ಫಲಗಳಾಗಲೀ ಇರುವುದಿಲ್ಲ(ಪುಟ೯6)
73)ಇದುವರೆಗೆ ಪ್ರಪಂಚದ ಸ್ಥಿತಿಕಾಲದಲ್ಲಿಯೂ ಉತ್ಪತ್ತಿಕಾಲದಲ್ಲಿಯೂ ಎಲ್ಲವೂ ಚಿನ್ಮಾತ್ರ ಸ್ವರೂಪವಾದ ಬ್ರಹ್ಮವೇ ಆಗಿದೆ.-ಎಂಬುದನ್ನು ನಿನಗೆ ದೃಷ್ಟಾಂತಗಳ ಮೂಲಕ ಸಯುಕ್ತಿಕವಾಗಿ ಹೇಗೆ ತೋರಿಸಿಕೊಟ್ಟೆನೋ ಹಾಗೆ ಈ ಜಗತ್ತಿನ ಪ್ರಳಯಕಾಲದಲ್ಲಿಯೂ ಎಲ್ಲವೂ ಪ್ರಜ್ಞಾನಘನವಾದ ಬ್ರಹ್ಮವೇ ಆಗಿದೆ ಎಂಬುದನ್ನು ತಿಳಿಸುತ್ತೇನೆ.(ಪುಟ ೯6)
ಏಕಾಯನ ಪ್ರಕ್ರಿಯೆ:
74)ನದೀನದ ಮೊದಲಾದ ಜಲಾಶಯಗಳಲ್ಲಿರುವ ಎಲ್ಲಾ ನೀರಿಗೂ ಸಮುದ್ರವು ಹೇಗೆ ಒಂದೇ ಸ್ಥಾನವೋ, ಹಾಗೆ ಸ್ಪಶಾ೯ದಿ ಸಕಲ ವಿಷಯಗಳಿಗೂ ಶ್ರೋತ್ರ,ತ್ವಕ್ಕು ಮೊದಲಾದ ಇಂದ್ರಿಯಗಳು ಆಶ್ರಯ ಸ್ಥಾನವು. ಅಂದರೆ ಮೃದು ಕಠಿಣ ಮೊದಲಾದ ಬಗೆ ಬಗೆಯ ಸ್ಪಶ೯ಗಳು ಸೊಶ೯ವೆಂಬ ಸಾಮಾನ್ಯವನ್ನು ಬಿಟ್ಟು ಬೇರೆ ಅಲ್ಲ.ಮನಸ್ಸು ಬುದ್ಧಿಗಿಂತ ಬೇರೆಯಲ್ಲ..ಬುದ್ಧಿಯೂ ತನ್ನನ್ನು ಬೆಳಗುತ್ತಿರುವ ಪ್ರಜ್ಞಾನ ಘನಕ್ಕಿಂತ ಬೇರೆಯಾಗಿಲ್ಲ.(ಪುಟ ೯7)
75)ಬುದ್ಧಿಯು ಬರಿಯ ಪ್ರಜ್ಞಾನ ಘನವೇ ಆಗಿ ಪ್ರಜ್ಞಾನ ಘನವಾದ ಪರಬ್ರಹ್ಮದಲ್ಲಿ -ನೀರುಗಳು ಸಮುದ್ರದಲ್ಲಿ ಅಡಗುವಂತೆ ಲಯವಾಗುತ್ತದೆ.(ಪುಟ ೯7)
76) ಬ್ರಹ್ಮಕ್ಕೆ ಅಧ್ಯಾತ್ಮಿಕವಾದ ಅಥವಾ ಅಧಿ ಭೌತಿಕವಾದ ಯಾವ ಉಪಾಧಿಯೂ ಇಲ್ಲವಾದ್ದರಿಂದ ಉಪ್ಪಿನ ಹರಳಿನಂತೆ ಪ್ರಜ್ಞಾನ ಘನವಾಗಿ ಏಕzರಸವೂ ಅನಂತವೂ ಅಪಾರವೂ ನಿರಂತ್ವೂ ಆದ ಬ್ರಹ್ಮವಾಗಿ ನಿಂತುಕೊಳ್ಳುವುದು. ಆದ್ದರಿಂದ ಆತ್ಮನೇ ತನಗೆರಡನೆಯದಿಲ್ಲದ ಏಕತತ್ವವೆಂದು ತಿಳಿvಯ ತಕ್ಕದ್ದು.(ಪುಟ ೯7)
77)ಬ್ರಹ್ಮವು ಸವ೯ಕಾರಣವಾದ್ದರಿಂದ ಮಿಕ್ಕಿದ್ದೆಲ್ಲವೂ ಅದರ ಕಾಯ೯ವೇ.(ಪುಟ ೯7)
78) ಕ್ರಿಯಾಶಕ್ತಿ,ಜ್ಞಾನಶಕ್ತಿ-ಈ ಎರಡೂ ಪರಮಾತಮನ ಉಪಾಧಿಗಳಾದುದರಿಂದ,ಕಮೇ೯ಂದ್ರಿಯ ಜ್ಞಾನೇಂದ್ರಿಯಗಳೆರಡೂ ಪ್ರಾಣದಲ್ಲಿಯೂ, ಪ್ರಾಣವು ಪರಮಾತ್ಮನಲ್ಲಿಯೂ ಲಯವಾಗುವವು.(ಪುಟ ೯7)
7೯)"ಯೋ ವ್ಯ ಪ್ರಣಃ ಸಾ ಪ್ರಜ್ಞಾ;ಯಾ ವಾ ಪ್ರಜ್ಞಾ ಸ ಪ್ರಾಣಃ"(ಕೌಶೀತಕೀ ಉಪನಿಷತ್3-3)
ಪ್ರಾಣವೆಂಬುದು ಯಾವುದೋ ಅದು ಪ್ರಜ್ಞೆಯೇ ಪ್ರಜ್ಞೆಯೆಂಬುದು ಎಂಬುದು ಯವುದೊ ಅದು ಪ್ರಾಣವೇ.೯ಪುಟ ೯8)
80)ಜಗತ್ತಿನ ನೀರುಗಳೆಲ್ಲಾ ಹೋಗಿ ಸೇರಲು ಸಮ್ದ್ರವು ಒಂದೇ ಹೇಗೆ ಕೊನೆಯ ಗತಿಯೋ ಏಕಾಯನವೋ ಹಾಗೆ,ನಾಮರೂಪಕಮ೯ಗಳ ಜಗತ್ತೆಲ್ಲವೂ ಲಯವಾಗಲು ಬ್ರಹ್ಮವೊಂದೇ ಕೊನೆಯ ಏಕಾಯನವು (ಒಂದೇ ಆದ ಆಶ್ರಯ-ಆಸ್ಪದ-ಸ್ಥಾನ) ಬ್ರಹ್ಮಾತ್ಮ ಜ್ಞಾನಕ್ಕೆ ಉಪಾಯವಾದ ಈ ಪ್ರಕ್ರಿಯೆಯೇ ಏಕಾಯನ ಪ್ರಕ್ರಿಯೆ ಎನಿಸುತ್ತದೆ.(ಪುಟ ೯8)
s
81)ಇದರಲ್ಲಿ ಹೊರಗಿನ ರೂಪವು ಕಣ್ಣಿನಲ್ಲಿ,ಕಣ್ಣು ಮನಸ್ಸಿನಲ್ಲಿ,ಮನಸ್ಸು ಬುದ್ಧಿಯಲ್ಲಿ,ಬುದ್ದಿಯು ಪ್ರಜ್ಞಾನಘನನಾದ ತನ್ನಲ್ಲಿ. ಸ್ವಾಭಾವಿಕವಗಿ ಲಯಹೊಂದುವುದನನು ವಿಚಾರದಿಂದ ಲಕ್ಷಿಸಿದರೆ, ಚಿನ್ಮಾತ್ರ ಸ್ವರೂಪನಾದ ತಾನೊಬ್ಬನೇ ಉಳಿಯುವುದು ಅನುಭವಕ್ಕೆ ಬರುತ್ತದೆ.(ಪುಟ ೯8)
82)ನೀರಿನಲ್ಲಿ ತೋರಿ ಅಡಗುತ್ತಿರುವ ,ಬೀರಿನ ಗುಳ್ಳೆ,ನೊರೆ,-ಮುಂತಾದವುಗಳು ಆನೇರನ್ನು ಬಿಟ್ಟು ಹೇಗೆ ಬೇರೆಯಾಗಿರುವುದಿಲ್ಲವೋ ಹಾಗೆ ಪ್ರಜ್ಞಾನದ ಕಾಯ೯ವಾದ ನಾಮರೂಪ ಕಮ೯ಗಳು ಪ್ರಳಯಕಾಲದಲ್ಲಿಯೂ ಪ್ರಜ್ಞಾನದಲ್ಲಿಯೇ ಲಯವಾಗುವುದರಿಂದ ಆ ಪ್ರಜ್ಞಾನ ಘನವನ್ನು ಬಿಟ್ಟು,ನಾಮರೂಪಕಮಾ೯ತ್ಮಕವಾದ ಜಗತ್ತು ಬೇರೆ ಸ್ವತಂತ್ರವಾಗಿರುವುದಿಲ್ಲ. ಆದ್ದರಿಂ ತನ್ನ ಸ್ವರೂಪವಾದ ಬ್ರಹ್ಮವು ಒಂದೇ,ಪ್ರಜ್ಞಾನಘನವು,ಏಕರಸವು ಎಂದು ತಿಳಿದುಕೊಳ್ಳಬೇಕು.(ಪುಟ೯8)
83)ಇಲ್ಲಿ ಇದೆಲ್ಲವೂ ಆತ್ಮನೆ ಆಗಿದೆ(2-4-6)ಎಂದು ಪ್ರತಿಜ್ಞೆ ಮಾಡಲಾಗಿತ್ತು.ಆ ಪ್ರತಿಕ್ಞೆಗೆ ಆತ್ಮನೇ ಜಗತ್ತಿಗೆಲ್ಲಾ (ಜಗತ್ತಿನ ಸಾಮಾನ್ಯವಿಶೇಷಗಳಿಗೆಲ್ಲಾ)ಸಾಮಾನ್ಯವಾಗಿರುವುದು.(ಪುಟ ೯೯)
84)ಬ್ರಹ್ಮಜ್ಞಾನಿಗಳಿಗೆ ಬ್ರಹ್ಮವಿದ್ಯೆಯ ನಿಮಿತ್ತದಿಂಗ ಆಗುವ ಬುದ್ಧಿಪೂವ೯ಕವಾದ ಪ್ರಲಯವಿದೆಯಲ್ಲ,ಇದನ್ನು ಅತ್ಯಂತಿಕ ಪ್ರಲಯ-ಎಂದು ಕರೆಯುತ್ತಾರೆ.ಅವಿದ್ಯಾ ನಾಶದ ಮೂಲಕ ಇದು ಆಗುತ್ತದೆ.(ಪುಟ ೯೯)
85)ಆತ್ಮಜ್ಞಾನದಿಣದ ಬ್ರಹ್ಮನಿಷ್ಠನಲ್ಲಿ ಜಗತ್ತಿನ ಭ್ರಮೆಯು ಒಮ್ಮೆ ನಾಶವಾಯಿತೆಂದರೆ (ಅದು ಪುನಃ ತೋರಿಕೊಳ್ಳುವುದಿಲ್ಲವಾದ್ದರಿಂದ)ಅದು ಅತ್ಯಂತಿಕ ನಾಶವೆನಿಸುತ್ತದೆ.(ಪುಟ೯೯)
86)ಸ್ವಾಭಾವಿಕ ಪ್ರಳಯದಲ್ಲಿ 1)ವೈಯಕ್ತಿಕ ಪ್ರಳಯ2) ಸಾವ೯ತ್ರಿಕ ಪ್ರಳಯ-ಎಂದು ಎರಡು ಬಗೆಗಳಿವೆ.ವ್ಯಕ್ತಿಜೀವನದಲ್ಲಿ ನಿತ್ಯವೂ ಆಗುವ ನಿದ್ರೆಯ ಅನುಭವವು ದೈನಂದಿನ ಪ್ರಳಯ.ಮೂಛಾ೯ದಿಗಳಲ್ಲಿ ಶೂನ್ಯದ ಅನುಭವವು ನೈಮಿತ್ತಿಕವೂ ತಾತ್ಕಾಲಿಕವೂ ಆದ ಪ್ರಳಯವೆನ್ನಬಹುದು.ಯೋಗಿಗೆ ನಿವಿ೯ಕಲ್ಪ ಸಮಾಧಿಯಲ್ಲಾಗುವ ಅನುಭವವು ಪ್ರಯತ್ನಸಾಧ್ಯವಾದ ಪ್ರಲಯವು.ಜೀವನದ ಕೊನೆಯಲ್ಲಿ ಪ್ರತಿಯೊಂದು ಜೀವಿಗೂ ತಪ್ಪದೇ ಬರುವ ಮರಣವು ಪರಾಂತ ಪ್ರಳಯವು.ಆದರೆ ಕಲ್ಪಾಂತದಲ್ಲಾಗುವ ಪ್ರಳಯವು ಸಾವ೯ತ್ರಿಕವಾದುದು.ನಿದ್ರೆಯಿಂದಲೂ ಮದಮೂಛಾ೯ದಿಗಳಿಂದಲೂ ಜೀವನು ಪುನಃ ಎಚ್ಚರವಾಗುತ್ತಾನೆ.ಸಮಾಧಿಯಿಂದಲೂ ಯೋಗಿಯು ವ್ಯುತ್ಥಾನವನ್ನು ಹೊಂದಿ ಬಾಹ್ಯ ಪ್ರಜ್ಞೆಯನ್ನು ಪಡೆಯುತ್ತಾನೆ.ಮರಣಾನಂತರವೂ ಜೀವನಿಗೆ ಪುನಃ ಜನ್ಮವಿದೆ.ಪ್ರಪಂಚವೆಲ್ಲಾ ಪ್ರಳಯವಾದ ಮೇಲೂ ಮುಂದಿನ ಕಲ್ಪದ ಆರಂಭದಲ್ಲಿ ಪ್ರಪಂಚವು ಪುನಃ ಸೃಷ್ಟಿಯಾಗುತ್ತದೆ.ಆದ್ದರಿಂದ ಪ್ರಳಯದ ಎಲ್ಲಾ ಬಗೆಗಳೂ ತಾತ್ಕಾಲಿಕವಾದವು.(ಪುಟ 100)
88)ಹೀಗೆ ತೋರುತ್ತಲೂ ಅಡಗುತ್ತಲೂ ಇರುವ ಈ ಮಾಯಾ ಪ್ರಪಂಚಕ್ಕೆ ವ್ಯಾಕೃತ(ವ್ಯಕ್ತ) ಮತ್ತು ಅವ್ಯಾಕೃತ(ಅವ್ಯಕ್ತ) ಎಂಬ ಎರಡು ರೂಪಗಳಿವೆ.ವ್ಯಾಕೃತ ಜಗತ್ತು ನಶ್ವರವಾದುದರಿಂದ ಕ್ಷರವೆನಿಸಿದೆ.ಇದರ ಬೀಜಶಕ್ತಿಯಾದ ಅವ್ಯಾಕೃತ ಮಾಯೆಯು -ಸಾಪೇಕ್ಷವಾಗಿ ಅವಿನಾಶಿಯಾಗಿರುವುದರಿಂದ ಅಕ್ಷರವೆನಿಸಿದೆ.ಮತ್ತು ಆತ್ಮಜ್ಞಾನದಿಂದ ಇದು ªಬಾಧಿತವಾಗುವವರೆಗೂ ನಾಶವಾಗುವುದಿಲ್ಲವಾದ್ದರಿಂದಲೂ ಇದು ಅಕ್ಷರವೆನಿಸಿದೆ.ಭೂತ ಭೌತಿಕ ರೂಪದಿಂದ ಹೊರಗೆ ತೋರುತ್ತಿರುವ (ವ್ಯಕ್ತವಾದ) ಕಾಯ೯ಪ್ರಪಂªಚವು ಕ್ಷರಪುರುಷನೆನಿಸುತ್ತದೆ.(ಪುಟ 100)
8೯)ವ್ಯಾಕೃತವು ತೋರುವುದಾದ್ದರಿಂದ ಅದನ್ನು ಸತ್ತೆನ್ನಬಹುದು.ಅವ್ಯಾಕೃತವು ಇಂದ್ರಿಯ ಗೋಚರವಲ್ಲವಾದ್ದರಿಂದ ಅದನ್ನು ಅಸತ್ತೆನ್ನಬಹುದು.ವ್ಯಾಕೃತವನ್ನು ತಿಳಿಯಬಹುದಾದ್ದರಿಂದ ಅದು ವಿದಿತವೆನಿಸುತ್ತದೆ.ವ್ಯಾಕೃತಕ್ಕೆ ಕಾರಣವಾಗಿ ,ಸೃಷ್ಟಿಗೆ ಮೊದಲಿತ್ತೆಂದು ನಾವು (ತಪ್ಪು ತಿಳಿಯುವಳಿಕೆಯಿಂದ)
ಕಲ್ಪಿಸುವ ಬೀಜಶಕ್ತಿಯು ಅವ್ಯಾಕೃತ ಮತ್ತು ಅವಿದಿತ.ಏಕೆಂದರೆ ಅದನ್ನು ತಿಳಿಯಲಾಗುವುದಿಲ್ಲ.ಬ್ರಹ್ಮವು ಇವೆರಡಕ್ಕಿಂತ ಬೇರೆಯಾಗಿದೆ(ಕೇ.ಉ.1-4)
೯0)ಹೀಗೆವ್ಯಾಕೃತ ಅವ್ಯಾಕೃತದ,ಕ್ಷರ-ಅಕ್ಷರ ಭಾವಗಳ,ಸದಸತ್ತಿನ ವಿದಿತಾವಿದಿತಗಳ ಅನಾದ್ಯನಂತವಾದ
ಭ್ರಮಾ ಚಕ್ರವೇ ಸೃಷ್ಟಿ-ಸ್ಥಿತಿ-ಲಯಗಳ ಕ್ಷಣಭಂಗುರವಾದ ಸಂಸಾರ ಚಕ್ರ.ಜೀವರು ಈ ಮಾಯಾ ಮೋಹದ ಸೆಳವಿನಲ್ಲಿಯೂ ಸುಳಿಯಲ್ಲಿಯೂ ಸಿಕ್ಕಿ ಪಾರುಗಾಣದಾಗಿರುತ್ತಾರೆ.(ಪುಟ 101)
೯1)ಶಾರೀರನಿಗೆ ತಾನೇ ಸಹಜವಾಗಿ ಸಿದ್ಧವಾಗಿರುವ ಈ ಬ್ರಹ್ಮಾತ್ಮ ತತ್ವವನ್ನು ಉಪದೇಶ ಮಾಡಿದೆಯೇ ಹೊರತು ಮತ್ತೊಂದು ಪ್ರಯತ್ನದಿಂದ ಸಾಧಿಸಿಕೊಳ್ಳಬೇಕಾದುದನ್ನು ಹೇಳಿಲ್ಲ.(ಪುಟ102)
೯2)ಒಂದು,ಎರಡು,ಮೂರು ಎಂದು ಪದಾಥ೯ಗಳನ್ನು ಬೇರೆ ಬೇರೆಯಾಗಿಎಂದು ಬಿಡಿ ಬಿದಿಯಾಗಿ ಪದಾಥ೯ಗಳನ್ನು ಎಣಿಸಬಾಕಾರದೆ ದೇಶಕಾಲಗಳುಬೇಕು.ನಮ್ಮ ಎಚ್ಚರದಲ್ಲಿ ನಮಗೆ ಕಾಣುವ ದೇಶ-ಕಾಲ-ವಸ್ತುಗಳೇ ಬೇರೆ.ನಮ್ಮ ಕನಸಿನಲ್ಲಿ ಕಾಣುವ ದೇಶಕಾಲ ವಸ್ತುಗಳೇ ಬೇರೆ,ಗಾಢನಿದ್ರೆಯಲ್ಲಿ ನಮಗೆ ದೇಶ ಕಾಲ ವಸ್ತುಗಳೇ ತೋರುವುದಿಲ್ಲ.ಅವು ಸತ್ಯವಾಗಿ ಇದ್ದಿದ್ದರೆ ನಮ್ಮ ಗಾಢ ನಿದ್ರೆಯಲ್ಲಿಯೂ ಅವು ನಮಗೆ ತೋರಬೇಕಾಗಿತ್ತು.ಒಂದು ಸಲ ತೋರಿ ಇನ್ನೊಂದು ಸಲ ಅಡಗುವುದನ್ನೇ ಮಿಥ್ಯ-ಅನೃತ ಎನ್ನುತ್ತೇವೆ.(ಪುಟ 102)
೯3)ಯಾವುದು ಸ್ವರೂಪದಲ್ಲಿ ಹೆಚ್ಚುಕಡಿಮೆಯಾಗದೆ ಯಾವಾಗಲೂ ಒಂದೇ ರೂಪದಲ್ಲಿರಬಲ್ಲದೋ ಅದೇ ಪರಮಾಥ೯ವು ಅಥವಾ ಸತ್ಯವುಅದರ ವಿಷಯದ ಜ್ಞಾನವೇ ಸಮ್ಯಕ್ ದಶ೯ನವು.(ಪುಟ102)
೯4)ಯವ ಭಾವವು ಬದಲಾಯಿಸುವುದಕ್ಕೆ ಬರುವುದಿಲ್ಲವೋ ಅದು ಸ್ವಭಾವ ಎನಿಸುತ್ತದೆ.ಆದ್ದರಿಂದ ಬಿಸಿಯೇ ಬೆಂಕಿಯ ಪರಮಾಥ೯;ಬಿಸಿಯೇ ಬೆಂಕಿಯ ಸತ್ಯ.(ಪುಟ 103)
೯5)ಗಾಢನಿದ್ರೆಯಲ್ಲಿ "ಏನೊಂದೂ ತೋರಲಿಲ್ಲ.ಆನಂದವಾಗಿತ್ತು"ಎನ್ನುವ ಅನುಭವವು ಎಲ್ಲರಿಗೂ ಸಮನಾದುದು.ಆಗ ನಾನು-ಎಂಬುದೂ ಇಲ್ಲ;ಇನ್ನೊಂದು ಎಂಬುದೂ ಇಲ್ಲ.ನಾನು ಮತ್ತು ನನ್ನ ಪ್ರಪಂಚ ತೋರುವುದಕ್ಕೆ ಕಾರಣವಾದ ಮನಸ್ಸೇ ಅಲ್ಲಿ ಇಲ್ಲ.ಆದ್ದರಿಂದ ಮನೋವ್ಯಾಪಾರವೂ ಇಲ್ಲ.ಮನಸ್ಸಿನ ಅಲುಗಾಟದಿಂದಾಗುವ ಆಯಾಸವೂ ಇಲ್ಲ.ಆದ್ದರಿಂದ ಗಾಢನಿದ್ರೆಯಲ್ಲಿ ಆನಂದವಾಗಿತ್ತು ಎನ್ನುತ್ತೇವೆ.ಎಚ್ಚರ ಕನಸುಗಳಲ್ಲಿ ಅನುಭವಿಸುವ ಭೋಕ್ತø-ಭೋಗ್ಯ-ಭೋಗ ಎಂಬ ತ್ರಿಪುತಿಯಿಲ್ಲದ.
ಆನಂದ -ಆನಂದಿ ಎಂಬ ವಿಭಾಗವಿಲ್ಲದ ಆನಂದವೇ ಗಾಢನಿದ್ರೆಯ ಅನುಭವದು ಆನಂದ -ಆನಂದಿ
ಎಂಬ ವಿಭಾಗವಿಲ್ಲದ ಆನಂದ.ಅದ್ದರಿಂದ ಅದು ಆನಂದದ ಇರುವಿಕೆ ಮಾತ್ರ;ಸನ್ಮಾತ್ರ.ಇದು ಎಲ್ಲರ ಅನುಭವ.ಸಾವ೯ತ್ರಿಕ ಅನುಭವ.ಈ ಅನುಭವದಲ್ಲಿ ದೇಶಕಾಲಗಳಿಲ್ಲವಾದ್ದರಿಂದ ಬಿಡಿ ಬಿಡಿಯಾದ ಅನುಭವವಿಲ್ಲ.ಇದು ಇಡಿಯಾದ ಅನುಭವ,ಪೂಣಾ೯ನುಭವ.ಗಾಢನಿದ್ರೆಯ ಸನ್ಮಾತ್ರ(ಇರುವಿಕೆ ಮಾತ್ರ) ಸ್ವರೂಪದ ಅನುಭವ.(ಸುಷುಪ್ತಸ್ಯ ಅನುಭೂಯಮಾನತ್ವಾತ್)(ಮಾಂ.ಭಾ.7)ನಮ್ಮ ಅರಿವಿಗೆ ವಿಷಯವಾದ್ದರಿಂದ ಅದು ಅರಿವೇ ಆದ್ದರಿಂದ ಚಿನ್ಮಾತ್ರವೂ ಆಗಿದೆ.ಆತ್ಮನು ಅನುಭವ ಸ್ವರೂಪನೇ ಆಗಿದ್ದಾನೆ.(ಪುಟ103)
೯6)'ಅಯಮಾತ್ಮಾ ಬ್ರಹ್ಮ ಸವಾ೯ನು ಭೂಃ"(ಬೃ.ಉ.2-5-1೯)
ದ್ರಷ್ಟøವೂ, ಶ್ರೋತೃವೂ,ಮನ್ತøವೂ ಭೋದ್ಧøವೂ ವಿಜ್ಞಾತೃವೂ ಆಗಿರುವ ಪ್ರತ್ಯಗಾತ್ಮನೇ ಸವ೯ರ ಆತ್ಮನಾಗಿ ಸವ೯ವೂ ಆದ ಬ್ರPಹ್ಮವಾಗಿ ಸವ೯ರ ಅನುಭವವೂ ಆಗಿದ್ದಾನೆ.ಇದು ಸವ೯ವೇದಾಂತಗಳ (ಉಪನಿಷತ್ತುಗಳ) ಉಪದೇಶವು.(ಪುಟ 104)
೯7)ದೇಶ-ಕಾಲ-ವಸ್ತು-ಕಾಯ೯ಕಾರಣಭಾವಗಳಿಂದ ಕೂಡಿದ ಜಗತ್ತಿನ ಸೃಷ್ಟಿ-ಸ್ಥಿತಿ-ಲಯಗಳೆಲ್ಲಾ ತೋರುವುದು ನಮ್ಮ ಎಚ್ಚರದಲ್ಲಿ.(ಪುಟ 104)
೯8)ನಮ್ಮ ಚೈತನ್ಯ ಸ್ವರೂಪವನ್ನೇ ಒಮ್ಮೆ ಎಚ್ಚರವಾಗಿಯೂ ಒಮ್ಮೆ ಕನಸೆಂದೂ ,ಮತ್ತೊಮ್ಮೆ ನಿದ್ರೆಯೆಂದೂ ಅಜ್ಞಾನದಿಣದ ತಪ್ಪಾಗಿ ತಿಳಿಯುತ್ತಿದ್ದೇವೆ.(ಪುಟ 104)
೯೯)ಬೆಳಕನ್ನು ತಂದು ನೋಡಿದಾಗ ಹಗ್ಗವೊಂದೇ ನಿಜವಾದುದು.ಎಂದು ಹೇಗೆ ನಿಶ್ಚಯವಾಗುವುದೋ ಹಾಗೆ ಶಾಸ್ತ್ರ ಹಾಗೂ ಗುರುಗಳ ಉಪದೇಶಕ್ಕನುಗುಣವಾಗಿ ವಿಚಾರಮಾಡಿದಾಗ ಪ್ರಜ್ಞಾನ ಘನೈಕರಸವಾದ ಆತ್ಮ ಒಂದೇ.
100)ಜಗತ್ತು ಸತ್ಯವೆಂಬ ಭ್ರಮೆಯು ಜ್ಞಾನಿಯಲ್ಲಿ ನಾಶವಾಗಿರುವುದರಿಂದ ಜ್ಞಾನಪೂವ೯ಕವಾದ ಅತ್ಯಂತಿಕ ಪ್ರಳಯವಾದ ಮೇಲೆ,ಪುನಃ ಸೃಷ್ಟಿಯಾಗಲೀ ಜನ್ಮವಾಗಲೀ ಇಲ್ಲ.(ಪುಟ 105)
101)ಮುಪ್ಪಿಲ್ಲದ ,ಸಾವಿಲ್ಲದ,ಭಯವಿಲ್ಲದ,ಶುದ್ಧನಾದ ,ಉಪ್ಪಿನ ಹರಳಿನಂತೆ ಏಕರಸನಾದ,ಪ್ರಜ್ಞಾನ ಘನನಾದ,ಅನಂತನಾದ,ಅಪಾರನಾದ,ನಿರಂತರನಾದ,,ತನಗೆ ಕಾರಣವಾದ ಮಹಾ ಸಮುದ್ರದಂತಿರುವ ಪರಮಾತ್ಮನಲ್ಲಿ ಉಪ್ಪಿನ ಹರಳಿನಂತೆ ಪರಿಚ್ಛಿನ್ನನಾದ ವಿಜ್ಞಾನಾತ್ಮನು ಪ್ರವೇಶಿಸಿ,ಬೆರೆತು ಒಂದಾಗುತ್ತಾನೆ.(ಪುಟ 105)
102)ವಿಷಯ ಪಯ೯ಂತವಾಗಿರುವ ಎಲ್ಲವನ್ನೂ ಪರಮಾಥ೯ವಿವೇಕ ಜ್ಞಾನದ ಮೂಲಕ ನದೀ-ಸಮುದ್ರ ನ್ಯಾಯದಿಂದ ಪ್ರಜ್ಞಾನಘನವಾದ ಬ್ರಹ್ಮನಲ್ಲಿ ಪ್ರವಿಲಯವನ್ನು ಮಾಡಿಕೊಳ್ಳಬೇಕು.(ಪುಟ 106)
103)ಶಾಸ್ತ್ರಾಚಾಯ೯ರ ಉಪದೇಶವನ್ನು ಕೇಳಿ ಮನನ-ನಿದಿದಹ್ಯಾಸನ ಮಾಡಿದಮೇಲೆ ಉಂಟಾದ ಆತ್ಮಜ್ಞಾನದಿಂದ ಅಜ್ಞಾನವು ನಾಶವಾದರೆ ತಾನೆಂದೂ ಜೀವನಾಗಿಯೇ ಇರಲಿಲ್ಲ,ಈಗ ¸ಹೊಸದಾಗಿ ಆತ್ಮನಾಗಲಿಲ್ಲ,ತಾನು ಎಂದೆಂದೂ ಜೀವನಾಗಿಯೇ ಇರಲಿಲ್ಲ,ಈಗ ಹೊಸದಾಗಿ ಆತ್ಮನಾಗಲಿಲ್ಲ,ತಾನು ಎಂದೆಂದೂ ನಿಜವಾಗಿ ಆತ್ಮನೇ ಆಗಿರುತ್ತೇನೆ.(ಪುಟ 106)
104)ಬ್ರಹ್ಮವಿದ್ಯೆಯಿಂದ ವಿಶೇಷ ಜ್ಞಾನವು ಹೋದ ಮಾತ್ರದಿಂದ ಆತ್ಮನೇ ನಾಶವಾಗುವನೆಂದು ತಿಳಿಯಬಾರದು.(ಪುಟ 104)
105) ಅದೇ ಆಕಾಶದಿಂದ ಗಡಿಗೆಯೇ ಮುಂತಾದ ಗುಂಪುಗಳು ಹೇಗೆ ಹುತ್ತುವುವೋ ಹಾಗೆ ಆಕಾಶದಂತಿರುವ ಪರಮಾತ್ಮನಿಂದ ಪೃಥ್ವಿಯೇ ಮುಂತಾದ ಭೂತಗಳ ಗುಂಪುಗಳೂ ಹಗ್ಗದ ಹಾವಿನಂತೆ ವಿಲ;ಪಇತವಾಗಿ ಹುಟ್ಟುವವು.ಮಂದ ಬುದ್ಧಿಯುಳ್ಳವರಿಗೆ ತvತ್ವವನ್ನು ತಿಳಿಸುವುದಕ್ಕಾಗಿ ಪರಮಾತ್ಮನಿಂದ ಜೀವಾದಿಗಳ ಉತ್ಪತ್ತಿಯನ್ನು ಶ್ರುತಿಯಲ್ಲಿ ಹೇಳಲಾಗಿದೆ.(ಪುಟ 108)
106)ಆತ್ಮನು ಆಕಾಶದಂತೆ ಸೂಕ್ಷ್ಮನೂ ,ನಿರವಯವನೂ,ಅಖಂಡನೂ,ಸವ೯ಗತನೂ, ಆಗಿರುವುದರಿಂದ
ಅವನು ನಿಜವಾಗಿ ಹುಟ್ಟುವುದಿಲ್ಲ.ಜೀವರಾಗಲೀ,ಶರೀರಾದಿಗಳಾಗಲೀ,ನಿಜವಾಗಿ ಹುಟ್ಟುವುದಿಲ್ಲ.(ಪುಟ 108)
107)"ಆ ಈ ಮಹಾನ್ ಅಜನಾದ ಆತ್ಮನೇ ಅಜರನು,ಅಮರನು, ಅಮೃತನು,ಅಭಯನು, ಬ್ರಹ್ಮವು," "ವಿವೇಕಿಯಾದ ಈ ಆತ್ಮನು ಹುಟ್ಟುವುದಿಲ್ಲ,ಸಾಯುವುದಿಲ್ಲ,." "ಇವನು ಹುಟ್ಟಿಲ್ಲದವನು ಶಾಶ್ವತನು ಪುರಾಣನು," "ಅದೇ ನೀ ನಾಗಿರುವೆ""ನಾನು ಬ್ರಹ್ಮವಾಗಿರುವೆನು" "ಈ ಆತ್ಮನು ಬ್ರಹ್ಮವು,,ಸವಾ೯ತ್ಮನಾಗಿ ಸವ೯ವನ್ನೂ ಅನುಭವಿಸುವವನು".ದೇಹವು ಹುಟ್ಟಿದರೆ ಜಗೀವನೂ ಹುಟ್ಟುತ್ತಾನೆ ಎಂಬುದು ಸ್ಥೂಲವಾದ ಉತ್ಪತ್ತಿ.ಜೀವವೇ ಬ್ರಹ್ಮದಿಂದ ಹುಟ್ಟುತ್ತಾನೆ ಎಂಬುದು ಸೂಕ್ಷ್ಮವದ ಉತ್ಪತ್ತಿ.ಪರಮಾತ್ಮನಾದ ಈ ಜೀವಾತ್ಮನಿಗೆ ಈ ಎರಡು ಬಗೆಯ ಹುಸಿತೋರಿಕೆಯೆ ಹುಟ್ಟುಗಳೂ ಇಲ್ಲವೆಂದೇ ಸಿದ್ಧಾಂತ.
108)ಆದ್ದರಿಂದ ಒಂದೇ ರೂಪವಾಗಿರುವ ಏಕತ್ವ ಜ್ಞಾನವು ಘಟ್ಟಿಯಾಗಲೆಂದೇ ಎಲ್ಲಾ ವೇದಾಂತಗಳಲ್ಲಿಯೂ ಉತ್ಪತ್ತಿ-ಸ್ಥಿತಿ-ಲಯಾದಿಗಳನ್ನು ಕಲ್ಪಿಸಿದೆಯೇ ಹೊರತು, ಅವುಗಳ ಜ್ಞಾನವನ್ನೇ ಉಂಟುಮಾಡಬೇಕೆಂದಿಕಲ್ಲ;ಅವು ಸತ್ಯವೆಂದೂ ಅಲ್ಲ.(ಪುಟ 10೯)
10೯)ಪ್ರಜ್ಞಾನ ಘನವೇ ಎಂದರೆ ಇಡಿಯಾದ ಅರಿವಿನ ಗಟ್ಟಿಯೇ ಆತ್ಮನ ಸ್ವಭಾವ. ದೇಹೇಂದ್ರಿಯಾದಿಗಳ ಅಭಿಮಾನದ ದೆಸೆಯಿಂದ ಆತ್ಮನೇ ಜೀವಾತ್ಮನೆನಿಸುತ್ತಾನೆ.(ಪುಟ 10೯)
107)ಆತ್ಮನ ಇಡಿಯಾದ ಅರಿವೇ ಅಂತಃಕರಣದ ಉಪಾಧಿಯಿಂದ ಜೀವಾತ್ಮನಲ್ಲಿ ಜ್ಞಾತೃ,-ಜ್ಞಾನ-ಜ್ಞೇಯ ರೂಪದಿಂದ ಒಡೆದು ಬಿಡಿಬಿಡಿಯಾಗಿ ತೋರುತ್ತದೆ.ಈ ಬಿಡಿ ಬಿಡಿಯಾದ ಅರಿವೇ ವಿಕ್ಞಾನ ಅಥವಾ ವಿಶೇಷ ಜ್ಞಾನ ಎನಿಸುತ್ತದೆ.ಆದರೆ ದೇಹ,ಇಂದ್ರಿಯ,ಮನಸ್ಸು,ಬುದ್ಧಿ,ಅಹಂಕಾರ-ಎಂಬೀ ನಾಮರೂಪಗಳ ತೋರಿಕೆಗೆ ಅಜ್ಞಾನವೇ ಕಾರಣ.ಆgತ್ಮಜ್ಞಾನದಿಂದ ಅಜ್ಞಾನವು ನಾಶವಾದರೆ ಅಜ್ಞಾನಕಲ್ಪಿತವಾಗಿದ್ದ ದೇಹೇಂದ್ರಿಯಾದಿಗಳೂ ಬಾಧಿತವಾಗಿ,ನಿಜವಲ್ಲ ಹುಸಿತೋರಿಕೆ ಮಾತ್ರ ಎನಿಸುತ್ತದೆ.(ಪುಟ 110)
108) ಣ್ಣನ್ನು ಬಿಟ್ಟು ಮಡಕೆ ಇರಲಾರದು.ಆದ್ದರಿಂದ ಮಣ್ಣು ಒಂದೇ ಸತ್ಯ.ಇದರಂತೆ ಪ್ರಜ್ಞಾನಘನನಾದ ಪರಮಾತ್ಮನೇ ಪ್ರಪಂಚವಾಗಿ ತೋರುತ್ತಿರುವುದರಿಂದ ಪ್ರಜ್ಞಾನವನ್ನು ಬಿಟ್ಟು ಪ್ರಪಂಚವು ಬೇರೆ ಸ್ವತಂತ್ರವಾಗಿರುವುದಿಲ್ಲ.ಪ್ರಪಂಚ ಸೃಷ್ಟಿ ಇಲ್ಲವಾದರೂ ಪ್ರಜ್ಞಾನವು ಇರಬಲ್ಲದು.ಆದ್ದರಿಂದ ಪ್ರಪಂಚಕ್ಕೆ ಉಪಾದಾನಕಾರಣವಾದ ಪ್ರಜ್ಞಾನ ಒಂದೇ ಸತ್ಯ.(ಪುಟ112)
10೯)ಜ್ಞಾನಿಗೆ ಅವನ ಪರಮಾಥ೯ ದೃಷ್ಟಿಯಿಂದ ಶರೀರವೇ ಇಲ್ಲವಾದ್ದರಿಂದ ಅವನು ಸತ್ತಮೇಲೆ ಹೇಗಿರುತ್ತಾನೆ ಎಂಬ ಪ್ರಶ್ನೆಯೇ ಹುಟ್ಟುವುದಿಲ್ಲ.(ಪುಟ112)
110)ನಾನು-ಇದು ಎಂಬ ದ್ವೈತವು ತೋರುವುದಕ್ಕೆ ಅವಿದ್ಯೆಯೇ ಕಾರಣ.(ಪುಟ 113)
111)ಎಲ್ಲಿ ದ್ವೈತವಿದ್ದೊಂತೆ ತೋರುವುದೊ ಅಲ್ಲಿ ಒಬ್ಬನು ಇನ್ನೊಂದನ್ನು ಮೂಸುತ್ತಾನೆ.ಅಲ್ಲಿ ಒಬ್ಬನು ಇನ್ನೊಂದನ್ನು ಕಾಣುತ್ತಾನೆ.ಅಲ್ಲಿ ಒಬ್ಬನು ಇನ್ನೊಂದನ್ನು ಕಾಣುತ್ತಾನೆ.ಅಲ್ಲಿ ಒಬ್ಬನು ಇನ್ನೊಂದನ್ನು ಆಲೋಚಿಸುತ್ತಾನೆ.ಅಲ್ಲಿ ಒಬ್ಬನು ಇನ್ನೊಂದನ್ನು ಅರಿತುಕೊಳ್ಳುತ್ತಾನೆ.ತಾನು ಮತ್ತೊಂದು,ಇನ್ನೊಂದು ಎಂಬ ದ್ವೈತವು ತೋರುವುದಕ್ಕೆ ಅವಿದ್ಯೆಯೇ ಕಾರಣ.ಅವಿದ್ಯೆಯಿಂ ಎಲ್ಲಿ ದ್ವೈತವಿರುವಂತೆ ತೋರುವುದೋ ಅಲ್ಲಿ ತಾನು ತನಗಿಂತ ಬೇರೆಯಾದ ಕಣ್ಣು ಮೊದಲಾದ ಕರಣಗಳಿಂದ ,ತನಗಿಂತ ಬೇರೆಯಾದ ರೂಪ ಮೊದಲಾದ ವಿಷಂiÀiಗಳನ್ನು ನೋಡುವುದು,ಕೇಳುವುದು,ಮಾತನಾಡುವುದು,ಮೂಸುವುದು,ಮುಟ್ಟುವುದು,ಆಲೋಚಿಸುವುದು, ಅರಿಯುವುದು ಇತ್ಯಾದಿ ವ್ಯವಹಾರಗಳನ್ನು ಮಾಡುತ್ತಿರುವನು.(ಪುಟ 113)
112)ಆದ್ದರಿಂದ ಆದ್ದರಿಂದ ಅವಿದ್ಯೆಯಿದ್ದರೆ ಕ್ರಿಯಾಕಾರಕ ಫಲವಿದ್ದೀತೇ ಹೊರತು ಬ್ರಹ್ಮಜ್ಞಾನಿಗೆ ಇರುವುದಿಲ್ಲ.ಎಲ್ಲವೂ ಅವನಿಗೆ ಆತ್ಮವಾಗಿಬಿಟ್ಟಿರುವುದರಿಂದಲೇ ಆತ್ಮನ್ನು ಬಿಟ್ಟು ಬೇರೆ ಕಾರಕವಾಗಲೀ ಕ್ರಿಯೆಯಾಗಲೀ ಫಲವಾಗಲೀ ಇರುವುದಿಲ್ಲ.ಆದರೆ ಯಾರಿಗೇ ಆಗಲಿ,ಎಲ್ಲವೂ ಮೊದಲು ಅನಾತ್ಮವಾಗಿದ್ದು ಆ ಬಳಿಕ ಆತ್ಮನೇ ಆಗಲಾರದು.ಆದ್ದರಿಂದ ಅವಿದ್ಯೆಯಿಂದಲೇ ಅನಾತ್ಮವೆಂದು
ಕಲ್ಪಿತವಾಗಿದೆಯೇ ಹೊರತು ,ಆತ್ಮನ್ನು ಬಿಟ್ಟು ನಿಜವಾಗಿ ಯಾವುದೊಂದೂ ಇರುವುದಿಲ್ಲ.ಆದ್ದರಿಂದ ಪರಮಾಥ೯ವಾಗಿರುವ ಆತ್ಮನು ಒಬ್ಬನೇ ಎಂಬ ಪ್ರತ್ಯಯವುಂಟಾದರೆ ಕ್ರಿಯೆ,ಕಾರಕ,ಫಲ-ಎಂಬ ಪ್ರತ್ಯಯವು ಇರುವಹಾಗಿಲ್ಲ.ಆದ್ದರಿಂದ ಹೀಗೆ ವಿರುದ್ಧವಾಗಿರುವುದರಿಂದಲೇ ಬ್ರಹ್ಮಜ್ಞಾನಿಗೆ ಕ್ರಿಯೆಗಳೂ ಅವುಗಳ ಸಾಧನಗಳೂ ಅತ್ಯಂತವಾಗಿ ಇಲ್ಲವಾಗುವವು.(ಪುಟ 114)
113)ಆತ್ಮನ್ನು ಅರಿಯುವುದೆಂದರೆ ತಾನು ಆತ್ಮನೇ ಆಗಿರುವುದು.(ಪುಟ 114)
114)ಆದ್ದರಿಂದ ಅಪ್ರಮೇಯನಾಗಿಯೂ ಅದ್ವಿತೀಯನಾಗಿಯೂ,ಅಚಿಂತ್ಯನಾಗಿಯೂ, ಅನಿವ೯ಚನೀಯನಾಗಿಯೂ ನಿವಿ೯ಶೇಷನಾಗಿಯೂ, ನಿಷ್ಪ್ರಪಂಚನಾಗಿಯೂ ಇರುವ ಆತ್ಮನನ್ನು ಯಾವ ಉಪಾಧಿಯಿಂದಲೂ ತಿಳಿಸಲು ಸಾಧ್ಯವಿಲ್ಲ. ಆದ್ದರಿಂದ ಆತ್ಮನಲ್ಲಿ ಅವಿದ್ಯೆಯಿಂದ ಕಲ್ಪಿತವಾಗಿ ತೋರುವ
ಮಿಕ್ಕ ಎಲ್ಲಾ ಅನಾತ್ಮಗಳ ಮತ್ತು ಅವುಗಳ ಧಮ೯ಗಳ ಹುಸಿತೋರಿಕೆಯನ್ನು ಅನುವಾದ ಮಾಡಿಕೊಂಡು ಅದನ್ನು ವಿಮಶಿ೯ಸುತ್ತಾ ಅಲ್ಲಗಳೆಯುವುದರಿಂದ ಮಾತ್ರವೆ ಸ್ವತಃಸ್ಸಿದ್ಧನಾದ ಆತ್ಮನ್ನು ಉಳಿಸಿತೋರಿಸುವ ಬೋಧಪದ್ಧತಿಯನ್ನು ಬಿಟ್ಟು ಬೇರೆ ಗತಿಯಿಲ್ಲ.ಇದಕ್ಕೇ ಅಧ್ಯಾರೋಪ ಅಪವಾದ ಪದ್ಧತಿ ಎಂದು ಹೆಸರು.(ಪುಟ 115)
115)ಬ್ರಹ್ಮವು ನಿವಿ೯ಶೇಷವಾಗಿರುವುದರಿಣದಲೇ ಶ್ರುತಿಯು'ಹೀಗಲ್ಲ'ಹೀಗಲ್ಲ'(ಇದಲ್ಲ ಇದಲ್ಲ)
ಎಂಬಿದೇ ನಿದೇ೯ಶವು.(ಬೃ.2-3-6)ಎಂದು,'ತಿಳಿದುದಕ್ಕಿಂತಲೂ ತಿಳಿಯದೆ ಇರುವುದಕ್ಕಿಂತಲೂ ಅದು ಬೇರೆಯೇ'(ಕೇ.1-3)ಎಂದು,'ವಾಕ್ಕುಗಳು ಮನಸ್ಸಿನೊಡನೆ ಅದನ್ನು ಪಡೆಯದೆ ಯಾವುದರಿಂದ ಹಿಂತಿರುಗುವವೋ(ತೈ.2-4)ಎಂದು ಮುಂತಾಗಿರುವ ಶ್ರುತಿಯುಮುಂತಾದ ವಸ್ತುವನ್ನು ಅಲ್ಲಗಳೆಯುವುದರಿಂದ ಬ್ರಹ್ಮವನ್ನು ತಿಳಿಸುತ್ತದೆ.'ಉಪಶಾಂತೋ ಅಯಮಾತ್ಮಾ' ಈ ಆತ್ಮನು ಉಪಶಾಂತನಾಗಿರುತ್ತಾನೆ'ಎಂದು ಶ್ರುತಿಯು ಹೇಳುತ್ತದೆ.(ಪುಟ 115)
116)ಯವುದು ಕ್ಷಯವಗುವುದಿಲ್ಲವೋ ಮತ್ತು ಮಾಪ೯ಡುವುದಿಲ್ಲವೋ ಅದು ಅಕ್ಷರವೆನಿಸುತ್ತದೆ.
117)ಬ್ರಹ್ಮಜ್ಞನಿಗಳು ಹೇಳುತ್ತಾರೆ.ಆ ಬ್ರಹ್ಮವು ಸ್ಥೂಲವಲ್ಲ,ಸೂಕ್ಷ್ಮವೂ ಅಲ್ಲ,;ಗಿಡ್ಡವಲ್ಲ ಉದ್ದವೂ ಅಲ್ಲ;
ದ್ರವ್ಯ ಧಮ೯ಗಳಾದ ಈ ನಾಲ್ಕು ಬಗೆಯ ಪರಿಮಾಣಗಳನ್ನು ಅಲ್ಲಗಳೆದಿರುವುದರಿಂದ ಆ ಅಕ್ಷರವು ದ್ರವ್ಯವಲ್ಲ ಎಂದಾಯಿತು.ಅಗ್ನಿಯ ಗುಣವೆಂಬ ಕೆಂಪಲ್ಲ,ಅದು ಜಲದ ಗುಣವೆಂಬ ಅಂಟೂ ಅಲ್ಲ;ಅದು ನೆರಳಲ್ಲ,,ತಮಸ್ಸಲ್ಲ, ವಾಯುವಲ್ಲ ಆಕಶವಲ್ಲ,ಅರಗಿನಂತೆ ಅಂಟಿಕೊಳ್ಳುವುದಿಲ್ಲ,ರಸವಲ್ಲ,ಗಂಧವಲ್ಲ, ಅದಕ್ಕೆ ಕಣ್ಣಿಲ್ಲ,ಕಿವಿಯಿಲ್ಲ,('ಪಶ್ಯತ್ಯಚಕ್ಷುಃ ,ಸ ಶ್ರುಣೋತ್ಯಕಣ೯ಃ' ಶ್ವೇ.3-1೯)ಅದಕ್ಕೆ ಮಾತಿಲ್ಲ ಮನಸ್ಸೂ ಇಲ್ಲ,ಅದಕ್ಕೆ ತೇಜಸ್ಸಿಲ್ಲ ಪ್ರಾಣವಿಲ್ಲ, ಮುಖವಿಲ್ಲ(ದ್ವಾರವಿಲ್ಲ),ಅಳತೆಯಿಲ್ಲ,ಒಳಗಿಲ್ಲ,ಹೊರಗಿಲ್ಲ,;ಅದು ಏನನ್ನೂ ತಿನ್ನುವುದಿಲ್ಲ,,ಅದು ಯಾವುದಕ್ಕೂ ಆಹಾರವಲ್ಲ,.ಹೀಗೆ ಅಕ್ಷರ ಬ್ರಹ್ಮವು ಯಾವ ವಿಶೇಷಣವೂ ಇಲ್ಲದ್ದು.ಅದು ತನಗೆರಡನೆಯದಿಲ್ಲದ ಒಂದೇ ಆಗಿರುವುದರಿಂದ ವಿಶೇಷ್ಯ ವಿಶೇಷಣಗಳಿಲ್ಲದ್ದು.(ಪುಟ 116)
118)ದ್ರವ್ಯ ಗುಣ ಕಮ೯ಗಳೆಂಬ ವಿಕಲ್ಪಗಳೆಲ್ಲ್ಗಾ ಅನತ್ಮಕ್ಕೆ ಸೇರಿದವುಗಳದ್ದರಿಂದ ,ನಿವಿ೯ಷಯವೂ ನಿವಿ೯ಶೇಷವೂ ಆದ ಆತ್ಮನನ್ನು ಶಾಸ್ತ್ರಾಚಾಯ೯ರ ಉಪದೇಶವಾದ ಅಧ್ಯಾರೋಪ ಅಪವಾದ ಕೌಶಲದಿಂದಲೇ ತಿಳಿಯಬೇಕು.(ಪುಟ 117)
11೯)ಈ ಕ್ರಮದಲ್ಲಿ ಉಪದೇಶಕ್ಕಾಗಿ ಬ್ರಹ್ಮದಲ್ಲಿರುವುದೆಂದು ಅಂಗೀಕರಿಸಿದ ವಿಕಲ್ಪವು ಅಧ್ಯಾರೋಪವು;ಅಲ್ಲಗಳೆದದ್ದು ಅಪವಾದವು.(ಪುಟ117)
120)ಸಾಮಾನ್ಯ ವಿಶೇಷ ಪ್ರಕ್ರಿಯೆ,ಸ್ಥೂಲ-ಸೂಕ್ಷ್ಮ ಪ್ರಕ್ರಿಯೆ,ಅವಿದ್ಯ -ಮಾಯಾ ಪ್ರಕ್ರಿಯೆ,ವಿದ್ಯಾವಿದ್ಯಗಳ ಪ್ರಕ್ರಿಯೆ,ಬಂಧಮೋಕ್ಷ ಪ್ರಕ್ರಿಯೆ, ಅವಸ್ಥಾ ತ್ರಯ ಪ್ರಕ್ರಿಯೆ,ಪಂಚಕೋಶ ಪ್ರಕ್ರಿಯೆ,ಪ್ರಕೃತಿ-ಪುರುಷ ವಿವೇಕ ಪ್ರಕ್ರಿಯೆ,ದೃಕ್-ದೃಷ್ಯ ವಿವೇಕ ಪ್ರಕ್ರಿಯೆ,ವ್ಯಞÂ್ಟ-ಸವಷಿÂ್ಟ ಪ್ರಕ್ರಿಯೆ,ಇತ್ಯಾದಿ ಪ್ರಕ್ರಿಯೆಗಳನ್ನೆಲ್ಲಾ ಶ್ರುತಿಯು ಕಾಯ೯-ಕಾರಣ ಪ್ರಕ್ರಿಯೆಯಂತೆಯೇ,ಅಪ್ರಮೇಯವೂ, ನಿವಿ೯ಶೇಷವೂ,ನಿಷ್ಪ್ರಪಂಚವೂ ಅದ್ವಿತೀಯವೂ ಆದ ಪರಮಾಥ೯ ಸತ್ಯವನ್ನು ತಿಳಿಸುವುದಕ್ಕಾಗಿಯೇ ಉಪಾಯವಾಗಿ ಉಪಯೋಗಿಸಿದೆ.(ಪುಟ 118)
121)ಅಧ್ಯಾರೋಪ-ಅಪವಾದ ನ್ಯಾಯವನ್ನು ವಿಶದಗೊಳಿಸುವುದಕ್ಕಾಗಿಯೇ ಮಿಕ್ಕೆಲ್ಲ ನ್ಯಾಯಗಳೂ ಪ್ರಕ್ರಿಯೆಗಳೂ ಉಪಕಾರಕವಾಗಿ ಬಂದಿವೆ.-ಎಂಬುದೇ ಗೂಢವೂ ಗಾಢವೂ ಆದ ಸತ್ಯ.(ಪುಟ 118)
122)ಉಪಾಯವನ್ನು ಸತವೆಂದು ತಿಳಿಯಬಾರದು.;ಆದ್ದರಿಂದ ಒಂದೊಂದು ಸತ್ಯವನ್ನು ಹೇಳಿದಬಳಿಕವೂ ನೇತಿ ನೇತಿ''ಇದಲ್ಲ ಇದಲ್ಲ' ಎಂದು ಆ ಉಪಾಯವನ್ನು ಅಲ್ಲಗಳೆದಿರುತ್ತದೆ.(ಪುಟ 120)
123)"ಸ ಏಷ ನೇತಿ ನೇತಿ" "ಈ ಆತ್ಮನು ಇದಲ್ಲ ಇದಲ್ಲ"ಎಂದು ಸವ೯ವಿಶೇಷಗಳನ್ನೂ (ಮೂತಾ೯ ಮೂತ೯ಗಳನ್ನೂ ಅದರ ವಸನೆಗಳನ್ನೂ) ಶ್ರುತ್ಹಿಯು ಅಲ್ಲಗಳೆಯುತ್ತದೆ.ನೇತಿ ನೇತಿ ಶ್ರುತಿಯು ಉಪಾಯವನ್ನು ಅಲ್ಲಗಳೆಯುವುದರಲ್ಲಿಯೇ ಮುಗಿಯುತ್ತದೆ.ಅದು ಆತ್ಮನನ್ನು ವಿಷಯೀಕರಿಸಿ ತಿಳಿಸುವುದಿಲ್ಲ.ಆತ್ಮನು ಸ್ವಯಂಪ್ರಕಾಶನೇ ಇರುವುದರಿಂದ ತಾನಾಗಿಯೇ ಸಹಜವಾಗಿ ತಿಳಿಯಬರುತ್ತಾನೆ.
(ಪುಟ 121)
124)ಆದರೆ ಯಾವಾಗ (ಯಾವಪಕ್ಷದಲ್ಲಿ) ಎಲ್ಲಾ ಉಪಾಧಿಗಳನ್ನೂ ತಳ್ಳಿಹಾಕುವ ಮೂಲಕ,ದಿಕ್ಕು-ಕಾಲ ಮುಂತಾದ ಎಲ್ಲಾ ವಿಷಯದ ಜಿಜ್ಞಾಸೆಯನ್ನು ತೊಲಗಿಸಿದಂತಾಗುವದೋ ಆಗ ಉಪ್ಪಿನ ಹರಳಿನಂತೆ ಏಕರಸವಾದ ಪ್ರಜ್ಞಾನಘನವೂ ಅನಂತರವೂ ಅಬಾಹ್ಯವೂ (ಒಳಗಿಲ್ಲದ,ಹೊರಗಿಲ್ಲದ) ಸತ್ಯದ ಸತ್ಯವೂ ಆಗಿರುವ ಬ್ರಹ್ಮವೇ ನನಾಗಿರುತ್ತೇನೆ"ಎಂದು ಎಲ್ಲಾ ಜಿಜ್ಞಾಸೆಯೂ ಹೋಗುತ್ತದೆ. ಪ್ರಜ್ಞೆಯು ಆತ್ಮ
ನಲ್ಲಿಯೇ ನೆಲೆ ನಿಲಲುತ್ತದೆ.ಆದ್ದರಿಂದ ನೇತಿ ನೇತಿ ಎಂಬ ನಕಾರದ್ವಯವನ್ನು ವೀಪ್ಸಾಥ೯ವಾಗಿಯೇ (ಸವ೯ವಿಷಯಗಳನ್ನೂ ವ್ಯಾಪಿಸುವುದಕ್ಕಾಗಿಯೇ :ವೀಪ್ಸಾಯಾಂ ದ್ವಿರುಕ್ತಿಃ)ಪ್ರಯೋಗಿಸಿದೆ ಎಂದು ನಿಶ್ಚಯವಾಯಿತು.(ಪುಟ 122)
125)
ಇತಿ ನ ಇತಿ ನ ಎಂದು ಬ್ರಹ್ಮದಲ್ಲಿ ಕಲ್ಪಿತವಾಗಿರುವ ವಿಶೇಷಗಳನ್ನು ನಿಷೇಧಮಾಡುವುದಕ್ಕಿಂತ
ಬೇರೆಯಾಗಿ ಬ್ರಹ್ಮಸ್ವರೂಪವನ್ನು ತಿಳಿಸುವುದಕ್ಕೆ ಉಪಾಯವಿಲ್ಲ..ಏಕೆಂದರೆ ಬ್ರಹ್ಮವು ಇಂಥಾ ಸ್ವರೂಪದ್ದೆಂದು ತಿಳಿಸುವುದಕ್ಕೆ ಅದರಲ್ಲಿ ಯಾವವಿಶೇಷವೂ ಇರುವುದಿಲ್ಲ.ಆದ್ದರಿಂದ ಇದೇ ಬ್ರಹ್ಮದ ನಿದೇ೯ಶ ಪ್ರಕಾರವು.(ಪುಟ 123)
126)
ನ ನಿರೋಧೋ ನ ಚೋತ್ಪತ್ತಿನ೯ ಬದ್ಧೋ ನ ಚ ಸಾಧಕಃ|
ನ ಮುಮುಕ್ಷುನ೯ ವೈ ಮುಕ್ತ ಇತ್ಯೇಷಾ ಪರಮಾಥ೯ತಾ||(ಗೌಡಪಾದ ಕಾರಿಕಾ 1-17)
ಪ್ರಳಯವೂ ಇಲ್ಲ;ಸೃಷ್ಟಿಯೂ ಇಲ್ಲ:ಸಂಸಾರಿಯಾದ ಜೀವನಿಲ್ಲ;ಮೋಕ್ಷಸಾಧಕನಿಲzಲ್ಲ;ಮೋಕ್ಷಾಪೇಕ್ಷಿಯೂ ಇಲ್ಲ;ಮುಕ್ತನೂ ಇಲ್ಲ;ಉತ್ಪತ್ತಿ ಪ್ರಳಯಗಳಿಲ್ಲವಾದ್ದರಿಂದ ಬದ್ಧಾದಿಗಳೂ ಇಲ್ಲ-ಎಂಬಿದೇ ಪರಮಾಥ೯ ಸತ್ಯವು.(ಪುಟ 123)
127)ಪ್ರಪಂಚವು ಇರುವುದಾದರೆ ಹೋದೀತು, ಸಂಶಯವಿಲ್ಲ;ಈ ಪ್ರಪಂಚವೆಂಬ ದ್ವೈತವು ಮಾಯಾಮತ್ರವಾದುದು. ಅದ್ವೈತವೇ ಪರಮಾಥ೯ವು;ಹಗ್ಗದಲ್ಲಿ ಭ್ರಾಂತಿಯಿಂದ ಕಲ್ಪಿತವಾಗುರುವ ಹಾವಿನಂತೆ,ಆತ್ಮನಲ್ಲಿ ಭ್ರಮೆಯಿಂದ ಕಲ್ಪಿತವಾದ ದ್ವೈತ ಪ್ರಪಂಚವು ಇರುವುದೇ ಇಲ್ಲ.ಆದ್ದರಿಂದ ವಿವೇಕದಿಂದ ಆ ಇಲ್ಲದ ಭ್ರಮೆಯನ್ನು ಕಳೆಯಬೇಕಾದ್ದೂ ಇಲ್ಲ.ಪುಟ 123)
128)ಈ ಪ್ರಪಂಚವು ಹೇಗೆ ಮಯೆಯಂತೆಯೂ ಹಗ್ಗದ ಹಾವಿನಂತೆಯೂ ಭ್ರಾಂತಿ ಯಾಗಿರುವುದೋ ಹಗೆಯೇ ಶಿಷ್ಯ,ಗ್ರು,ಶಾಸ್ತ್ರ-ಎಂಬ ಭೇದವೂ ಭ್ರಾಂತಿಯಾದರೂ ಉಪದೇಶಕ್ಕಾಗಿ ಅಗತ್ಯವಗಿದೆ.ಉಪದೇಶದ ಫಲವಾದ ಜ್ಞಾನವುಂಟಾದರೆ ,ಆತ್ಮಾನುಭವದಲ್ಲಿ ದ್ವೈತವು ಉಳಿಯುವುದಿಲ್ಲ(12೯)
12೯)ಆತ್ಮನಲ್ಲಿ ಅವಿದ್ಯೆಯಿಂದ ಆರೋಪಿತವಾಗಿರುವ ಪ್ರಮತೃತ್ವವನ್ನು ಅಲ್ಲಗಳೆಯುವುದರಿಂದಲೇ ಶಾಸ್ತ್ರವು ಪ್ರಮಾಣವೆನಿಸಿದೆ.ಅದರ ಪ್ರವೃತ್ತಿಯಾದ ಮೇಲೆ ಮತ್ತೆ ಪ್ರಮಾಣ ವ್ಯವಹಾರವಿಲ್ಲದಿರುವುದರಿಂದ ಅದು ಅಂತ್ಯ ಪ್ರಾಮಾಣವು.ಪ್ರಮಾತೃ ,ಪ್ರಮಾಣ,ಪ್ರಮೇಯ ವ್ಯವಹಾರವನ್ನು ಎಂಬ ವಿಭಾಗವನ್ನು ಕಳೆಯುವ ಬಧಿಸುವ ಆತ್ಮೈಕತ್ವವನ್ನು ತಿಳಿಸುವುದರಿಂದ ("ತತ್ವಮಸಿ"ಮುಂತಾದ ವಾಕ್ಯಜನ್ಯ ಜ್ಞಾನವೇ ಕೊನೆಯ ಜ್ಞಾನವು.ಅದ್ದರಿಂದ ಈ ಶಾಸ್ತ್ರವಾಕ್ಯವು ಅಂತ್ಯ ಪ್ರಮಾಣವು.(ಪುಟ 124)
130)ಅದು ನಮ್ಮೊಳಗಿನ ಆತ್ಮನೇ ಆಗಿರುವುದರಿಂದ ವಿಷಯವಲ್ಲವೆಂದು ತಿಳಿಸಿ ಅವಿದ್ಯಾ ಕಲ್ಪಿತವಾದ ಭೇದವನ್ನು ವೇದ್ಯ(ಅರಿಯಲ್ಪಡತಕ್ಕದ್ದು) ವೇದಿತೃ,(ಅರಿಯುವವನು),ವೇದನ(ಅರಿವು)-ಮುಂತಾದ ಭೇದವನ್ನು ಕಳೆಯುತ್ತದೆ.ಆದ್ದರಿಂದಲೇ ಯಾವನಿಗೆ ಅದು ತಿಳಿಯದಿರುವುದೋ ಅವನಿಗೆ ತಿಳಿದಿರುವುದು,ಯಾವನಿಗೆ ತಿಳಿಯದಿರುವುದೋ ಅವನಿಗೆ ತಿಳಿದಿರುವುದು..ಯಾವನಿಗೆ ತಿಳಿದಿರುವುದೋ
ಅವನು ಅರಿಯನು,ಅರಿತವರಿಗೆ ತಿಳಿದಿಲ್ಲ.ಅರಿಯದವರಿಗೆ ತಿಳಿದಿರುತ್ತದೆ."(ಕೇ.2-3)"ನೋತವನ್ನು ನೋಡುವಾತನ್ನು ನೀನು ನೋಡಲಾರೆ ಅರಿವನ್ನಿ ಅರಿಯುವಾತನನ್ನು ನೀನು ಅರಿತುಕೊಳ್ಳಲಾರೆ.(ಬೃ.3-4-2).ಮೋಕ್ಷವೆಂದರೆ ನಿತ್ಯಪ್ರಾಪ್ತವಾಗಿರುವ ಆತ್ಮಸ್ವರೂಪವೇ ಆಗಿರುತ್ತದೆ.(ಪುಟ 125)
131)ಆತ್ಮತತ್ವವನ್ನು ನೂರುಬಗೆಯಿಂದ ವಿಚಾರಮಾಡಿ ನೋಡಿದರೂ (ಮೂತಾ೯ಮೂತ8ರೂಪವಾದ ಸಕಲ ಅನಾತ್ಮಗಳನ್ನೂ ಶೂನ್ಯವನ್ನೂ ಅಲ್ಲಗಳೆದು ಉಳಿಯುವ) ನೇತಿ ನೇತಿ ಎಂಬ ಆತ್ಮನೇ ಕೊನೆಯೇ ಹೊರತು ,ತಕ೯ದಿಂದಾಗಲೀ ಆಗಮದಿಂದಾಗಲೀ ನೋಡಿದಾಗ ಮತ್ತೆ ಯಾವ ಕೊನೆಯೂ ಕಂಡು ಬರುವುದಿಲ್ಲ.ಆದ್ದರಿಂದ ಈ ನೇತಿ ನೆತಿ ಎಂಬ ಆತ್ಮನನ್ನು ಅರಿತುಕೊಳ್ಳುವುದು ಮತ್ತು ಸವ೯ಕಮ೯ ಸನ್ಯಸವು (ಏಷಣಾ ತ್ರಯದ ತ್ಯಗವು)-ಎಂಬಿವೇ ಅಮೃತತ್ವಕ್ಕೆ ಸಾಧನವು(ಪುಟ 126)
132)ಇಷ್ಟೇ ನೇತಿ ನೇತಿ ಎಂಬುವುದಿದೆಯಲ್ಲ,ಇಷ್ಟು ಮಾತ್ರವೇ ಅಮೃತತ್ವಕ್ಕೆ ಸಾಧನವು.ಇದು ಮತ್ತೊಂದು ಸಹಕಾರೀ ಗುಣವನ್ನು ಬಯಸುವುದಿಲ್ಲ.
133)ಅಮೃತತ್ವಕ್ಕೆ ಸಾಧನವಾದ ಆತ್ಮಜ್ಞಾನಕ್ಕೆ ಅತ್ಯಂತಿಕವಾದ ಏಷಣಾ ತ್ರಯ ತ್ಯಾಗವೇ ಫಲವಾದ್ದರಿಂದ ಆ ಆತ್ಮಜ್ಞಾನಕ್ಕೆ ಅತ್ಯಂತಿಕವಾದ ಏಷಣಾತ್ರಯ ತ್ಯಾಗವೇ ಫಲವಾದ್ದರಿಂದ ಸನ್ಯಾಸದಿಂದ ಪಡೆಯಬೇಕಾದುದು ಮತ್ತೇನೂ ಇರುವುದಿಲ್ಲ.ಜ್ಞನ ಪರಿಪಾಕಕ್ಕೆ ಸನ್ಯಾಸವು ಸಹಾಯವೂ ಆಗುವುದಾದ್ದರಿಂದ ಶ್ರುತಿಯಲ್ಲಿ ಸನ್ಯಾಸಸಹಿತವಾದ ಆತ್ಮಜ್ಞಾನವನ್ನೇ ಉಪದೇಶಿಸಿದೆ.(ಪುಟ 127)
134) ಸನ್ಯಾಸ,ಸಮ್ಯಕ್ ಜ್ಞಾನ ಮತ್ತು ಸಮ್ಯಗ್ದಶ೯ನ-ಈ ವಿಷಯಗಳ ವಿವರಣೆಯನ್ನು ಬೃಹದಾರಣ್ಯಕ ಭಾಷ್ಯ ವಾತಿ೯ಕದ ಎರಡನೆಯ ಅಧ್ಯಾಯದ ನಾಲ್ಕನೆಯ ಬ್ರಾಹ್ಮಣದಲ್ಲಿ,ಮೈತ್ರೇಯೀ ಯಾಜ್ಞವಲ್ಕ್ಯ ಸಂವಾದದಲ್ಲಿ ಶ್ರೀ ಶಂಕರರ ಸಾಕ್ಷಾತ್ ಶಿಷ್ಯರಾದ ಸುರೇಶ್ವರಾಚಾಯ೯ರು ಹೇಗೆ ಮಾಡಿದ್ದಾರೆಂಬುದನ್ನು ಸಂಕ್ಷೇಪವಾಗಿ ಈಗ ವಿಚಾರ ಮಾಡೋಣ(ಪುಟ 126)
135)ಮ್ಯತ್ರೇಯೀ:ಸ್ವಾಮಿ ಯಾವ ಐಶ್ವಯ೯ಕ್ಕೆ ಆದಿಯಾಗಲೀ ,ಮಧ್ಯವಾಗಲೀ,ಅಂತ್ಯವಾಗಲೀ ಇಲ್ಲವೋ ಯಾವುದನ್ನು ಎಷ್ಟು ಅನುಭವಿಸಿದರೂ ಕ್ಷಯವಾಗದೇ ಇರುವುದೋ ಅಂಥ ಶಾಶ್ವತವಾದ ಸಂಪತ್ತನ್ನೇ ನನಗೆ ಕೃಪೆಮಾಡಿರಿ.(ಪುಟ128)
136)ನರಕಲೋಕದಿಂದ ವಿರಕ್ತನಾಗುವಂತೆಯೇ ಬ್ರಹ್ಮಲೋಕದವರೆಗಿನ ಎಲ್ಲ ಭೋಗಗಳಿಂದಲೂ ವಿರಕ್ತನಾಗದವನಿಗೆ ಕೈವಲ್ಯ ಮಾಗ೯ದಲ್ಲಿ (ಬ್ರಹ್ಮವಿದ್ಯೆಯಲ್ಲಿ)ಅಧಿಕಾರವಿಲ್ಲ.(ಪುಟ 12೯)
137)ವಸ್ತುತಂತ್ರವಾದ ಆತ್ಮವಿಜ್ಞಾನದಿಂದ ಬಾಧಿತವಾದ ಅಜ್ಞಾನವುಳ್ಳ ಮನುಷ್ಯನು ಜನನಮರಣರೂಪವಾದ ಸಂಸಾರವನ್ನು ಕಳೆದುಕೊಂಡು ,ಸ್ವಭಾವದಿಂದಲೇ ಮುಕ್ತನಾದವನು ಜೀವನ್ಮುಕ್ತನಾಗುತ್ತಾನೆ.(ಪುಟ12೯)
138)ಪ್ರತ್ಯಗ್ಯಾಥಾತ್ಮ ವಿಜ್ಞಾನದಿಂದ (ಪ್ರತ್ಯಗಾತ್ಮನ ನಿಜವಾದ ವಿಜ್ಞಾನದಿಂದ ) ಮಾಡಬೇಕಾದ ಕಾಯ೯ವಾಗಲೀ ,ತಿಳಿಯಬೇಕಾದ ಜ್ಞೇಯವಾಗಲೀ ಉಳಿಯುವುದಿಲ್ಲ.(ಪುಟ 130)
13೯)ಆತ್ಮನು ನಿತ್ಯಮುಕ್ತನೆಂಬ ವಿಜ್ಷಾನವು ವೇದಾಂತ ವಾಕ್ಯದಿಂದಲೇ ನಿಶ್ಚಿತವಾಗಿ ಕೂಡಲೇ ಉಂಟಾಗುತ್ತದೆ.ವಾಕ್ಯಾಥ೯ಜ್ಞಾನವಾದರೋ ಪದಗಳ ಅಥ೯ವನ್ನು ತಿಳಿದುಕೊಳ್ಳುವುದರಿಂದ ಆಗುತ್ತದೆ.(ಪುಟ 130)
140)ಎರಡನೆಯದೇನಂದೂ ಇಲ್ಲದ ಅಖಂಡೈಕರಸನದಾದ ಆತ್ಮನು ಸ್ವತಃಸ್ಸಿದ್ಧನಾಗಿರುವುದರಿಂದ ಪ್ರಯತ್ನಪೂವ೯ಕವಾದ ಯಾವುದೊಂದು ಕ್ರಿಯೆಯಿಂದ ಅವನನ್ನು ಹೊಸದಾಗಿ ಸಾಧಿಸಬೇಕಾಗಿಲ್ಲ.ಆದ್ದರಿಂದಲೇ ಭಾವನೆಯ ಅಚಶ್ಯಕತೆಯೂ ಇಲ್ಲ.ಏಕೆಂದರೆ ಕಮ೯ಗಳನ್ನು ಆಶ್ರಯಿಸಿಕೊಂಡೇ ಭಾವನೆಯು ಬದುಕಿರುವುದು.(ಪುಟ 130)
141)'ತತ್ವಮಸಿ' ಮುಂತಾದ ವಾಕ್ಯಗಳನ್ನು ಶ್ರವಣ ಮಾಡಿದ ಕೂಡಲೇ 'ನಾನು ಬ್ರಹ್ಮವಾಗಿದ್ದೇನೆ ಎಂಬ ವಿಜ್ಞಾನವು (ಅಲೌಕಿಕ ಜ್ಞಾನವು) ಹುಟ್ಟುತ್ತದೆ.(ಪುಟ130)
142)ಸ್ವಗ೯ಪ್ರಾಪ್ತಿಗೆ ಯಾಗಾದಿಗಳು ಸಾಧನವಾಗಿರುವಂತೆ ಇಲ್ಲಿ(ಸಂಸಾರದ ಅನಥ೯ಕ್ಕೆ ಕಾರಣವಾಗಿರುವ) ಅವಿದ್ಯೆಯನ್ನು ಕಳೆದುಕೊಳ್ಳುವುದಕ್ಕೆ ಪ್ರತ್ಯಗಾತ್ಮನ ಯಥಾಥ೯ಜ್ಞಾನಕ್ಕಿಂತ ಬೇರೆ ಯಾವ ಸಾಧನವೂ ಬೇಕಿಲ್ಲ.(ಪುಟ 131)
143)ಜ್ಞಾನೋತ್ಪತ್ತಿಗಿಂತ ಬೇರೆಯಾಗಿ ಅವಿದ್ಯಾ ನಾಶವೆಂಬುದು ಮತ್ತೊಂದಿಲ್ಲ. ಹೀಗೆಯೇ ಅವಿದ್ಯಾ ನಾಶಕ್ಕಿಂತ ಬೇರೆಯಾಗಿ ಮತ್ತೊಂದು ಸಂಸಾರನಾಶವೆಂಬುದಿಲ್ಲ.(ಪುಟ 131)
144)ಎರಡನೆಯ ವಸ್ತುವಿವನ ತೋರಿಕೆಗೆ ಪ್ರತ್ಯಗಾತ್ಮನ ಅಜ್ಞಾನವೇ ಕಾರಣವಾಗಿದೆ.(ಪುಟ 131)
145)ಮೂಲಾವಿದ್ಯಾ -ತೂಲಾವಿದ್ಯಾ,ಎಂದು ಅವಿದ್ಯೆಯಲ್ಲಿಯೂ "ದ್ವೈವಿಧ್ಯ"ವನ್ನು (ಎರಡು ಬಗೆಗಳನ್ನು) ಕಲ್ಪಿಸಸತಕ್ಕಂಥ ವ್ಯಾಖ್ಯಾನ ಪ್ರಸ್ಥಾನಕಾರರಾದ ಮಹನೀಯರು ಮುಂದೆ ಅವತರಿಸಬಹುದೆಂದು ಭವಿಷ್ಯಜ್ಞಾನದ ನಿರೀಕ್ಷೆಯ ಸಾತ್ವಿಕ ಭಯದಿಂದಲೋ ಎಂಬಂತೆ ಸುರೇಶ್ವರರು ಯಾವ ಬಗೆಯ ಯುಕ್ತಿಯ ಬಲದಿಂದಲೋ ಎಂಬಂತೆ ಸುರೇಶ್ವರರು ಯಾವ ಬಗೆಯ ಯುಕ್ತಿಯ ಬಲದಿಂದಲೂ ಅವಿದ್ಯೆಯಲ್ಲಿ (ತಮಸ್ಸಿನಲ್ಲಿ) ಎರಡುಬಗೆಗಳನ್ನು ಹೇಳಲು ಸಾಧ್ಯವಿಲ್ಲ-ಎಂದು ಸ್ಪಷ್ಟವಾಗಿಯೂ ನಿಷ್ಕøಷ್ಟವಾಗಿಯೂ ಹೇಳಿದ್ದಾರೆ.ಅವರ ಶಂಕೆಯ ಭವಿಷ್ಯವಾಣಿಯೇನೋ ಆದರೆ ಅವರ ಸಮ್ಯಕ್ ಬೋಧವು ಅರಣ್ಯರೋದನವಾvಯಿತು(ಪುಟ132)
146)ಸ್ವಾಭಾವಿಕವದ ಈ ಅವಿದ್ಯೆಯೂ ಸಾಧನೆಯಿಂದ ಬರುವ ವಿದ್ಯೆಯೂ ಅಂತಃಕರಣ ವೃತ್ತಿಗಳೇ ಹೊರತು,ಇವು ಆತ್ಮನಿಗೆ ಸಂಬಂಧ ಪಟ್ಟವುಗಳಲ್ಲ. (ಪುಟ132)
147)ಆತ್ಮನು ಇಂಥ ಸ್ವರೂಪದವನೆಂದು ಒಂದು ಸಲ ಹುಟ್ಟಿತ ಸರಿಯಾದ ಜ್ಞಾನವು ಆತ್ಮನ ವಿಷಯದ ಅಜ್ಞಾನವನ್ನು ಕಳೆಯುವುದಿಲ್ಲವೆಂದಾದರೆ,ಆಗ ಅದು ಜ್ಞಾನವೇ ಆಗಲಾರದು.(ಪುಟ 133)
148)ಎಲ್ಲಿ ಮೋಹರೂಪವಾದ ಅಜ್ಞಾನವು ಇರುತ್ತದೆಯೋ ಅಲ್ಲಿಯೇ (ಆತ್ಮನಲ್ಲಿಯೇ) ಸಮ್ಯಗ್ನಾನವು (ಸರಿಯಾದ ಜ್ಞಾನವು) ಹುಟ್ಟುವುದರಿಂದ ಜ್ಞಾನವು ಉಂಟಾದಮೇಲೂ ಆ ಜ್ಞಾನಿಗೆ ಅಜ್ಞಾನವು
ಬಾಧಿüತವಾಗದೆ ಉಳಿದು ಕೊಂಡಿರುತ್ತದೆ -ಎನ್ನುವುದು ಮೂಖ೯ನ ಮಾತಾºಗುತ್ತದೆ.(0ಪುಟ 133)
14೯)ಮೊದಲು ಆಗಮದಲ್ಲಿ ಓದಿರುವುದನ್ನೂ ಅನಂತರ ಆಚಾಯ೯ರಿಂದ ಕೇಳಿದ ಬೋಧೆಯನ್ನೂ ತಾನು ಯುಕ್ತಿಯಿಂದ ವಿಚಾರಮಾಡಿ,ಸ್ವಂತ ಅನುಭವದಲ್ಲಿ ಅಳವಡಿಸಿಕೊಳ್ಳಬೇಕುಹೀ(ಗೆ ಶಾಸ್ತ್ರ,ಸದ್ಗುರು
ಮತ್ತು ಸ್ವಾನುಭವ,ಈ ಮೂರರ ಸಂಗಾನದಿಂದ'ಸಮುಗ್ದಶ೯ನ'ವು ಸ್ಥಿರವೂ ದೃಢವೂ ಆಗುತ್ತದೆ.(ಪುಟ 133)
150)ದೇಹವಿರುವವರೆಗೂ ಜ್ಞಾನಿಯಲ್ಲಿ ಆದರೂ ಅವಿದ್ಯಾ ಲೇಶವು ಉಳಿದಿರುತ್ತದೆ.ಆದ್ದರಿಂದ ಜ್ಞಾನಿಯು ದೇಹಪಾತಾನಂತರ ಪೂಣ೯ವಾಗಿ ಮುಕ್ತನಾಗುತ್ತಾನೆ-ಎಂಬ ಈಚಿನ ಅಪ್ರಬುದ್ಧ ವೇದಾಂತಿಗಳ ಮಿಥ್ಯಾವದಕ್ಕೆ ಸುರೇಶ್ವರರ ಈ ಮೇಲಿನ ವಾಕ್ಯವು ಆಟಂಬಾಂಬಿನಂತಿದೆ(ಉಟ 134)
151)ಇರುವ ವಸ್ತುವನ್ನು ಮಾತ್ರ ಪ್ರಮಾಣವು ತಿಳಿಸುತ್ತದೆ. ಇದು ಪ್ರಮಾಣದ ಸ್ವಭಾವವು.ಇಲ್ಲದಿರುವ ವಸ್ತುವನ್ನೇ -ಸುಳ್ಳು ಸುಳ್ಳಾಗಿ -ಇರುವಂತೆ ತೋರಿಸುವುದೇ ಅವಿದ್ಯೆಯ ಸ್ವಭಾವವು.(ಪುಟ 134)
152)ಹೀಗಿರುವುದರಿಂದ ಪ್ರತ್ಯಗಾತ್ಮನ ದಶ೯ನವು ಸಿದ್ಧವಾಯಿತು.ಇದಕ್ಕೆ ಶ್ರವಣಾದಿಗಳೇ ಸಾಕ್ಷಾತ್ ಸಾಧನವು.ಇದರಿಂದ ಸವ೯ವೂ ಆತ್ಮನೇ ಎಂಬ ಅನುಭವವುಂಟಾಗುತ್ತದೆ.(ಪುಟ 135)
153) ಈ ಆತ್ಮಜ್ಞಾನದ ಪರಿಪಾಕಕ್ಕೆ ಏಷಣಾತ್ರಯ ತ್ಯಾಗರೂಪವಾದ ಪಾರಿವ್ರಾಜ್ಯವೇ (ಸನ್ಯಾಸವೇ) ಮುಖ್ಯ ಸಾಧನವೆಂದೂ ಅದು ಜ್ಞಾನನಿಞÉ್ಠಯ ಸ್ವಾಭಾವಿಕ ಫಲವೂ ಆಗಬಹುದೆಂದೂ ಅವರು ಹೇಳಿದ್ದಾರೆ.(ಪುಟ 135)
154)ಪ್ರಜ್ಞಾನ ಘನನಾದ ಪರಮಾತ್ಮನೇ ವಿಜ್ಞಾನಾತ್ಮನಾದ ಜೀವನಾಗಿ ತೋರುತ್ತಿದ್ದಾನೆ -ಎಂದು ಪ್ರಸಿದ್ಧವಾದ ಅಧ್ಯಾರೋಪ ಅಪವಾದವೆಂಬ ವೇದಾಂತ ನ್ಯಾಯದಿಂದ ಬೋಧಿಸಿದ್ದಾರೆ.ಸಾಕ್ಷಿ ಚೈತನ್ಯ ಸ್ವರೂಪನಾದ ನಾನು ಎಂದೆಂದಿಗೂ ಅಮೃತ ಸ್ವರೂಪನಾಗಿಯೇ ಇದ್ದೇನೆ'ಎಂಬುದನ್ನು ಪರಮಾಥ೯ ದಷಿÂ್ಟಯ ಸಮ್ಯಕ್ ದಶ೯ನದಿಂದ ಈಗಲೇ ಇಲ್ಲಿಯೇ (ಅನುಭವದಲ್ಲಿ)ಕಂಡುಕೊಳ್ಳಬೇಕೇ ಹೊರತು ಅಮೃತತ್ವವನ್ನು ಹೊಸದಾಗಿ ಸಾಧನೆಯಿಂದ ಪಡೆಯುವುದಲ್ಲ.ಹೀಗೆ ತೀಳಿಯಬೇಕೆಂಬುದೇ ಯಾಜ್ಞವಲ್ಕ್ಯರ ಉಪದೇಶದ ಸಾರವಾಗಿದೆ. (ಪುಟ136)
ಈ ಗ್ರಂಥರಚನೆಯಲ್ಲಿ ಹೊಳೆನರಸೀಪುರದ ಪೂಜ್ಯ ಶ್ರೀ ಶ್ರೀ ಸಚ್ಚಿದಾನಂದೇಂ ಸರಸ್ವತೀ ಸ್ವಾಮಿಗಳ ಪ್ರಸ್ಥಾನತ್ರಯ ಭಾಷ್ಯಗ್ರಂಥಗಳನ್ನು ಉಪಯೋಗಿಸಿರುವುದರಿಂದ,ಆ ಪೂಜ್ಯರಿಗೆ ಅನಂತ ಪ್ರಣಾಮಗಳು.ಈ ಗ್ರಂಥದ ಲೇಖಕರಾದ ಶ್ರೀ ನುಲೇನೂರು ಶ್ರೀನಿವಾಸ ಮೂತಿ೯ಯವರಿಗೂ (ಶ್ರೀಮೂತಿ೯),ನನ್ನ ನಮಸ್ಕಾರಗಳು.
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
ಪರಿಶಿಷ್ಟ:(ಕೆಲವು ಮುಖ್ಯ ಸಂಗತಿಗಳು):
1) ವಿಷಯ 2)ಸಂಶಯ 3) ಪೂವ೯ಪಕ್ಷ (ಅಥವಾ ಆಕ್ಷೇಪ) 4)ಉತ್ತರಪಕ್ಷ ಅಥವಾ ಸಮಾಧಾನ 5)
ನಿಣ೯ಯರೂಪ ಸಿದ್ಧಾಂತ ಹೀಗೆ ಈ ಐದು ಅಂಶಗಳಿಂದ ಕೂಡಿರಬೇಕೆಂದು ಅಧಿಕರಣದ ಲಕ್ಷಣವನ್ನು ಮೀಮಾಸಾಶಾಸ್ತ್ರದಲ್ಲಿ ಹೇಳಿದೆ.(ಪುಟ137)
2) "ವಿಜ್ಞಾತಾರಮರೇ ಕೇನ ವಿಜಾನೀಯಾತ್"(ಬೃ2-4-14)
'ಎಲ್ಲವನ್ನೂ ಅರಿಯುವವನನ್ನು ಏತರಿಂದ ಅರಿಯಲು ಸಾಧ್ಯ' (ಪುಟ 138)
3)"ಆತ್ಮನೋ ವಾ ಅರೇ ದಶ೯ನೇನ....|ಇದಗಂ ಸವ೯ಂ ವಿದಿತಮ್"ಬ್ರ.ಉ2-4-5)
'ಆತ್ಮನನ್ನು ಅರಿತರೆ ಎಲ್ಲವನ್ನೂ ಅರಿತಂತಾಯಿತು'.(ಪುಟ 138)
4)ಬೆಂಕಿಯಿಂದ ಹೊಗೆ,ಕಿಡಿ, ಮುಂತಾದವು ಹೊರಕ್ಕೆ ಬರುವಂತೆ ವೇದಾದಿ ನಾಮರೂಪಾತ್ಮಕ ಜಗತ್ತೆಲ್ಲವೂ ಪರಮಾತ್ಮನಿಂದಲೇ ಉತ್ಪನ್ನವಾಗಿವೆ.(ಬೃ.ಉ.2-4-10)
5) ನದೀ ನದಗಳು ಸಮುದ್ರದಲ್ಲಿ ಲಯವಾಗುವಂತೆ ಜಗತ್ತೆಲ್ಲಾ ಕೊನೆಯ ಪ್ರಳಯದಲ್ಲಿ ಪರಮಾತ್ಮನಲ್ಲಿಯೇ ಲಯವಾಗುತ್ತದೆ.(ಬೃ.2-4-11)(ಪುಟ 13೯)
6)ದುಂದುಭಿ -ವೀಣಾ ಇತ್ಯಾದಿ ದೃಷ್ಟಾಂತಗಳಿಂದ ಸ್ಥಿತಿ ಕಾಲದಲ್ಲಿಯೂ ಚಿತ್ ಸ್ವರೂಪದ ಪರಮಾತ್ಮನನ್ನು ಬಿಟ್ಟು ಬೇರೇನೂ ಇಲ್ಲ ಎಂದು ಹೇಳಿದೆ(ಬೃ.ಉ.2-4-7,8).(ಪುಟ 13೯)
7) ಈ ವಿವೇಕ ಜ್ಞಾನವೇ ಅಮೃತತ್ವಕ್ಕೆ ಸಾಕು.(ಬ್ರ.ಉ.2-4-13)(ಪುಟ 13೯)
8)" ಎಲೆ ವಿಜ್ಞಾತೃವನ್ನು ಏತರಿಂದ ಅರಿಯಲು ಸಾಧ್ಯ"(ಬೃ.ಉ.2-4-14)
೯)"ಆತ್ಮನೋ ವಾ ಅರೇ ....ವಿಜ್ಞಾನೇನ ಇದಂ ಸವ೯ಂ ವಿದಿತಮ್"(ಬೃ.ಉ.2-4-5)(ಪುಟ 142)
'ಆತ್ಮನನ್ನು ಅರಿತರೆ ಸಕಲವನ್ನೂ ಅರಿತಂತ್ಗಾಗುತ್ತದೆ'.
10)ದುಂದುಭಿ ಶಂಖ,ವೀಣಾ ಮೊದಲಾದ ದೃಷ್ಟಾಂತಗಳಲ್ಲಿರುವ ಸಾಮಾನ್ಯ ವಿಶೇಷ ಪ್ರಕ್ರಿಯೆಯಿಂದ "ಇದಂ ಸವ೯ಂ ಯದಯಮಾತ್ಮಾ"(ಬೃ.2-4-6)ಜ್ಞಾತೃ-ಜ್ಞಾನ-ಜ್ಞೇಯ ಗಳೆಂಬ ವಿಶೇಷರೂಪವಾಗಿ
ತೋರುವ ಈ ಜಗತ್ತೆಲ್ಲವೂ ಇದರಲ್ಲಿ ಸಾಮಾನ್ಯವಾಗಿ ಸವ೯ವ್ಯಾಪಕನಾಗಿರುವ ಪ್ರಜ್ಞಾನಘನನಾದ (ಚಿನ್ಮಾತ್ರ ಸ್ವರೂಪ) ಆತ್ಮನೇ ಆಗಿದೆ.(ಪುಟ 143)
11) "ವಿಜ್ಞಾತಾರಮರೇ ಕೇನ ವಿಜಾನೀಯಾತ್"(ಬೃ.2-4-14)
ವಿಜ್ಞಾತೃವನ್ನು ಏತರಿಂದ ಅರಿತುಕೊಂಡಾನು(ಪುಟ145)
12)"ಶಾಸ್ತ್ರ ಯೋನಿತ್ವಾತ್"(ಸೂ,ಭಾ.1-1-2)
ಸವ೯ಜ್ಞವೂ ಸವ೯ಶಕ್ತವೂ ಆದ ಬ್ರಹ್ಮಕ್ಕೆ ವೇದಾಂತ ಶಾಸ್ತ್ರವೇ ಪ್ರಮಾಣವು.(ಪುಟ146)
13) 'ತತ್ವಮಸಿ'.(ಅದೇ ನೀನಾಗಿರುವೆ)(ಛಾಂ.6-8-7)
14)"ಈ ದೇವತೆ ಬೇರೆ ,ನಾನು ಬೇರೆಯಾಗಿರುವೆನು ಎಂದು ಉಪಾಸನೆ ಮಾಡುವನಲ್ಲ,ಅವನು ಪಶುವಿನಂತೆ ತತ್ವವನ್ನು ಅರಿvಯನು(ಪುಟ 14೯).
15)ಸುಷುಪ್ತಿಯಲ್ಲಿ ಮನಸ್ಸೇ ಇಲ್ಲ.ಮನಸ್ಸು ಬಂದೊಡನೆ(ಅಹಂ-ಇದಂ)ನಾನು -ಈಜಗತ್ತು ಎನ್ನು ಭಾವನೆ ಬಂದೇ ಬರುತ್ತದೆ.(ಪುಟ14೯)
16)ಸಂಶಯಗಳಿಗೂ ಭಯಕ್ಕೂ ಕಾರಣವಾದ ದೇಶಕಾಲಾದಿಗಳನ್ನು ಕಲ್ಪನೆ ಮಾಡುತ್ತಿರುವ ಮನಸ್ಸೇ
ಆತ್ಮನಲ್ಲಿ ಮುಳುಗಿ ಅಮನಸ್ಸಾಗಬೇಕು(ಪುಟ150)
17)"ಆತ್ಮನಿ ವಿದಿತೇ ಸವ೯ಂ ವಿದಿತಂ"
ಆತ್ಮನನ್ನು ಅರಿತರೆ ಎಲ್ಲವನ್ನೂ ಅರಿತುಕೊಂಡಂತೆ ಆಗುತ್ತದೆ.
18)ಜೀವಾತ್ಮ ಮತ್ತು ಪರಮಾತ್ಮ ಎಂಬ ಭೇದ ವ್ಯವಹಾರಕ್ಕೆ ಅವಿದ್ಯ ದೃಷ್ಟಿಯೇ ಕಾರಣವಾಗಿದೆ..ವಿದ್ಯಾ ದೃಷ್ಟಿಯಲ್ಲಿ ಪರಮಾತ್ಮನೊಬ್ಬನೇ ಸತ್ಯ,ಅವನೇ ಅಜ್ಞರಿಗೆ ಜೀವಾತ್ಮನಾಗು ಕಾಣುತ್ತಾನದೆ(ಪುಟ163)
1೯) "ನ ವಿದ್ಯತೇ ಇತಿ ಅವಿದ್ಯಾ"ಯಾವುದು ಎಷ್ಟುಮಾತ್ರಕ್ಕೂ ಇಲ್ಲವೇ ಇಲ್ಲವೋ ಆದರೂ ಇದ್ದಂತೆ ತೋರುತ್ತದೆಯೋ ಅದೇ ಅವಿದ್ಯಾ -ಎಂದು ಸುರೇಶ್ವರಾಚಾಯ೯ರು ಹೇಳಿದ್ದಾರೆ. ನಿಜವಾಗಿ ಇಲ್ಲದಿದ್ದರೂ ಇದ್ದಂತೆ ತೋರುವುದೇ ಮಾಯೆ.(ಪುಟ164)
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
(ಸಂಪೂಣ೯ವಾಯಿತು. ದಿನಾಂಕ11.3.2021 ಶಿವರಾತ್ರಿ.)
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,ಸ

No comments:
Post a Comment