Wednesday, 17 November 2021

summary of ten upanishaths writen by dr raveendra hosadurga

 ಉಪನಿಷತ್ತುಗಳು ಹಾಗೂ  ಅದ್ವೈತ :             

( writen by dr.raveendra hosadurga.)

ಈಶಾವಾಸ್ಯ ಉಪನಿಷತ್ತು ಹಾಗೂ ಅದ್ವೈತ:

ಈ ಉಪನಿಷತ್ತಿನ ಮೊದಲನೆಯ ಮಂತ್ರವು 'ಈಶಾವಾಸ್ಯಮ್' ಎಂದು ಆರಂಭವಾಗಿರುವುದರಿಂದ ಇದಕ್ಕೆ "ಈಶೋವಾಸ್ಯೋಪನಿಷತ್'ಎಂದು ಹೆಸರು.

 ಪುರುಷಾಥ೯ ಪ್ರಾಪ್ತಿಗೆ ಯಾವುದು ಉತ್ಕøಷ್ಟ ಸಾಧನ?ಕಮ೯ವೋ,ಜ್ಞಾನವೊ,ಜ್ಞಾನ _ಕಮ೯  ಇವುಗಳ ಸಮುಚ್ಚಯವೊ?ಸ್ವಗ೯ಪ್ರಾಪ್ತಿ ರೂಪವಾದ ಕಮ೯ಫಲವು ಅನಿತ್ಯವಾದುದರಿಂದ ಕೇವಲ ಶುದ್ಧಜ್ಞಾನವೇ ಮೋಕ್ಷಕ್ಕೆ ಸಾಧನವೆಂದು ಉಪನಿಷತ್ತುಗಳು ಹೇಳುತ್ತವೆ.

          ಜ್ಞಾನರಹಿತವಾದ ಕಮ೯ದಿಂದ ಏನೂ ಪ್ರಯೋಜನವಿಲ್ಲ.ಕಮ೯ವು ಜ್ಞಾನಕ್ಕೆ ಅಂಶವಾಗಿದ್ದರೆ ಅಥವಾ ಸಹಕಾರಿಯಾಗಿದ್ದರೆ ಜ್ಞಾನಕ್ಕೆ ಕಾರಣವಾಗುವುದು.ಸಾಧಕನು ಫಲಾಸಕ್ತಿಯನ್ನು ಬಿಟ್ಟು ಕಮ೯ವನ್ನು ಅನುಷ್ಠಿಸಿದರೆ ಕಮ೯ದ ಮೂಲಕ ಚಿತ್ತಶುದ್ಧಿಯನ್ನು ಹೊಂದಿ ಅನಂತರ ಜ್ಞಾನದ ಮೂಲಕ ಮೋಕ್ಷವನ್ನು ಹೊಂದುತ್ತಾನೆ. ಕಮ೯ ಜ್ಞಾನಗಳಲ್ಲಿ ಯಾವ ವಿರೋಧವೂ ಇಲ್ಲ.

ನಿತ್ಯಕಮ೯_ ಬ್ರಹ್ಮವಿದ್ಯೆಗಳಲ್ಲಿ ಯಾವ ವಿಧವಾದ ಭೇದವನ್ನು ಕಲ್ಪಿಸದೆ ಸಮನಾಗಿ ಅನುಷ್ಠಾನ ಮಾಡುವುದೇ ಈ ಉಪನಿಷತ್ತಿನ ವಿಶೇಷ ಉಪದೇಶ.ಕಾಮ್ಯ ಕಮ೯ಗಳನ್ನು ತ್ಯಜಿಸಿ ಈಶ್ವರ ಸೇವೆಗಾಗಿ ಮತ್ತು ಲೋಕ ಸಂಗ್ರಹಕ್ಕಾಗಿ ನಿತ್ಯಕಮ೯ಗಳನ್ನು ಮಾಡುತ್ತಾ ನೂರು ವಷ೯ ಬಾಳಲು ಇಚ್ಚಿಸಬೇಕು.

ಉಪಾಸಕನು ಜ್ಞಾನಕ್ಕೆ ಸಹಾಯವಾಗುವ ಕಮ೯ಗಳನ್ನೇ ಮಾಡುವುದರಿಂದ ಕಮ೯ದ ಸ್ವಾಭಾವಿಕ ದೋಷಗಳು ಅವನಿಗೆ ಅಂಟುವುದಿಲ್ಲ. ಎಲ್ಲವೂ ಈಶನಿಗೆ ಸೇರಿದೆ ಎಂಬ ಜ್ಞಾನದಿಂದ ನಿಮ೯ಮತ್ವವು ಸಿದ್ಧಿಸಿದರೆ ಶೋಕವೆಲ್ಲಿ? ಮೋಹವೆಲ್ಲಿ? ಇದು ಈ ಉಪನಿಷತ್ತಿನ ಸಾರಾಂಶ 1.

       ವಿಶರಣ,ಗತಿ,ಅವಸಾದನ,_ಎಂಬ ಅಥ೯ಗಳುಳ್ಳ'ಸದ್' ಧಾತುವಿನ ಹಿಂದೆ "ಉಪ" ಹಾಗೂ "ನಿ"ಎಂಬ ಉಪಸಗ೯ಗಳೂ "ಕ್ವಿಪ್' ಎಂಬ ಪ್ರತ್ಯಯವೂ ಬಂದು "ಉಪನಿಷತ್"ಎಂಬ ರೂಪವು ಆಗಿರುತ್ತದೆ.ಉಪನಿಷತ್ ಎಂಬ ಶಬ್ದಕ್ಕೆ ಬ್ರಹ್ಮವಿಷಯವಾದ ವಿದ್ಯೆ ಎಂದಥ೯.

    ಶಂಕರಾಚಾಯ೯ರು ದಶೋಪನಿಷತ್ತುಗಳಿಗೆ ಅದ್ವೈತ ಭಾಷ್ಯವನ್ನು ಬರೆದಿದ್ದಾರೆ. ಇದು ಶುಕ್ಲ ಯಜುವೇ೯ದದ ವಾಜಸನೇಯ ಸಂಹಿತೆಗೆ ಸೇರಿರುವುದರಿಂದ "ವಾಜಸನೇಯ ಸಂಹಿತೋಪನಿಷತ್" ಎಂದು ಹೆಸರಿದೆ.

   ಸ್ವಗ೯ಪ್ರಾಪ್ತಿರೂಪವಾದ ಕಮ೯ಫಲವು ಅನಿತ್ಯವಾದುದರಿಂದ ಶುದ್ಧಜÁ್ಞನವೇ ಶಾಶ್ವತಮೋಕ್ಷಕ್ಕೆ ಸಾಧನವೆಂದು ಉಪನಿಷತ್ತುಗಳೇ ಒಪ್ಪಿವೆ. ಕಮ೯ವು ಶ್ರೇಯಸ್ಸೆಂದು ಯಾವ ಮೂಢರು ತಿಳಿಯುವರೊ ಅವರು ಜರಾಮೃತ್ಯುಗಳನ್ನು ದಾಟುವುದಿಲ್ಲ.ಕಮ೯ದಿಂದ ಆಗುವ ಲೋಕಗಳನ್ನು ಪರಿಶೀಲಿಸಿ "ಅಕೃತವಾದದ್ದು ಕಮ೯ದಿಂದ ಆಗುವುದಿಲ್ಲ"ಎಂದು ವೈರಾಗ್ಯವನ್ನು ಹೊಂದಬೇಕು.

ಜ್ಞಾನರಹಿತವಾದ ಬರಿಯ ಕಮ೯ದಿಂದ ಏನೂ ಪ್ರಯೋಜನವಿಲ್ಲ.ಕಮ೯ವು ಜ್ಞಾನಕ್ಕೆ ಅಂಗವಾಗಿದ್ದರೆ ಅಥವಾ ಸಹಕಾರಿಯಾಗಿದ್ದರೆ ಜ್ಞಾನೋತ್ಪತ್ತಿಗೆ ಕಾರಣವಾಗುತ್ತದೆ.ಎಲ್ಲವೂ ಈಶನಿಗೆ ಸೇರಿದೆ ಎಂಬ ಜ್ಞಾನದಿಂದ ನಿಮ೯ಮತ್ವವು ಸಿದ್ಧಿಸಿದರೆ ಶೋಕವೆಲ್ಲಿ?ಇದು ಈ ಉಪನಿಷತ್ತಿನ ಸಾರಾಂಶ 2.

ಅದು(ಪರಬ್ರಹ್ಮವು)ಪೂಣ೯ವು.ಇದು(ವ್ಯಕ್ತವಾದಜಗತ್ತು) ಪೂಣ೯ವು. ಪರಬ್ರಹ್ಮದಿಂದ ಪೂಣ೯ವು (ಜಗತ್ತು)ಹೊರಟುಬಂದಿದೆ. ಪೂಣ೯ದ(ಜಗತ್ತಿನ) ಪೂಣ೯ತ್ವವನ್ನು (ಬ್ರಹ್ಮತ್ವವನ್ನು) ತೆಗೆದಮೇಲೆ ಪೂಣ೯ವೇ (ಪರಬ್ರಹ್ಮವೇ) ಉಳಿಯುತ್ತದೆ.ಈ ವ್ಯಾಖ್ಯಾನದ ಪ್ರಕಾರ ಈಶೋಪನಿಷತ್ತಿನ ಏಳು ಮಂತ್ರಗಳು ಮಾತ್ರ(1 ಮತ್ತು 2 ರಿಂದ 8) ಮಾತ್ರ ಪರಬ್ರಹ್ಮದ ಸ್ವರೂಪವನ್ನು ನಿರೂಪಿಸುತ್ತವೆ.ಉಳಿದವು ಆತ್ಮನನ್ನು ಅರಿಯದ ಅಜ್ಞಾನಿಗಳಿಗೆ ಅನ್ವಯಿಸುತ್ತದೆ.

ಈಶಾವಾಸ್ಯಮಿದಂ ಸವ೯ಂ

ಯತ್ಕಿಂಚ ಜಗತ್ಯಾಂ ಜಗತ್|

ತೇನ ತ್ಯಕ್ತೇನ ಭುಂಜೀಥಾ

ಮಾಗೃಧಃ ಕಸ್ಯಸ್ವಿದ್ಧನಮ್|

ಈ ಜಗತ್ತೆಲ್ಲವೂ ಈಶ್ವರನ ಆವಾಸ ಸ್ಥಾನವಾಗಿದೆ.ಎಲ್ಲವೂ (ಚರ ಮತ್ತು ಅಚರ) ಈಶನಿಗೇ ಸೇರಿದೆ. ಅದರ ತ್ಯಾಗದಿಂದ ನಿನ್ನನ್ನು ಕಾಪಾಡಿಕೊ. ಪರಧನವನ್ನು ಬಯಸಬೇಡ. ಈ ಸಮಸ್ತ ಜಗತ್ತು ಈಶನಿಗೇ ಸೇರಿದೆ.ಚರ ಎಂದರೆ ಚಲಿಸುವ ಅಚರ ಎಂದರೆ ಚಲಿಸದ (ಜಡ) ವಸ್ತುಗಳು.ಇವೆರಡರಲ್ಲಿಯೂ ಸಮಾನವಾಗಿ ಈಶ್ವರನು ವ್ಯಾಪಿಸಿದ್ದಾನೆ.ಏಕೆಂದರ ಅವನು ಸಹಜ ಸಮರಸನು.ಚರಾಚರಗಳಲ್ಲಿ ಭೇದವಿಲ್ಲದೆ ಸಮಾನವಾಗಿ ವ್ಯಾಪಿಸಿರುವವನು.ಈ ವಿಶ್ವವೆಲ್ಲವೂ ಅವನಿಗೇ ಸೇರಿದೆ.ಅದರಲ್ಲಿ ನನ್ನದೆಂಬುದು ಏನೂ ಇಲ್ಲವಾದ್ದರಿಂದ ಇದೆಲ್ಲವನ್ನೂ ತ್ಯಜಿಸಬೇಕು.ತ್ಯಾಗೇನೈಕೇ ಅಮೃತತ್ವ ಮಾನಶುಃ.ತ್ಯಾಗದಿಂದಲೇ ಮೋಕ್ಷ.ಆದ್ದರಿಂದ ಬೇರೆಯವರ ಧನವನ್ನು ಬಯಸಬೇಡ.

ಈ ಲೋಕದಲ್ಲಿ ಶಾಸ್ತ್ರವಿಹಿತವಾದ ಕಮ೯ಗಳನ್ನು ಮಾಡುತ್ತಲೇ ನೂರು ವಷ೯ ಜೀವಿಸಲು ಇಚ್ಛಿಸಬೇಕು.ಹೀಗಿದ್ದರೆ ಮನುಷ್ಯನಿಗೆ ಯಾವ ಕಮ೯ಗಳೂ ಬಂಧನಕ್ಕೆ ಕಾರಣವಾಗುವುದಿಲ್ಲ. ಈ ಮಂತ್ರವು ಕಮ೯ನಿಷ್ಠೆಯನ್ನು ಉಪದೇಶಿಸಿದೆ.ಈ ಆತ್ಮ ತತ್ವವು ಅಚಲವು.ಸವ೯ ಪ್ರಾಣಿಗಳಲ್ಲಿvಯೂ ಒಂದೇ.ಅದು ಮನಸ್ಸಿಗಿಂತ ವೇಗವಾದದ್ದು.ಈ ಆತ್ಮನನ್ನು ಇಂದ್ರಿಯಗಳು ಪಡಯಲಾರವು.ಅದು ನಿಂತುಕೊಂಡೇ ಓಡುತ್ತಿರುವ ಇತರ ವಸ್ತುಗಳನ್ನು ದಾಟುತ್ತದೆ.ಅದು ಇರುವಾಗ ವಾಯುವು ಪ್ರಾಣಿಗಳ ಕಾಯ೯ಗಳನ್ನು ನಡೆಸುತ್ತದೆ.

     ಅದು ಚಲಿಸುತ್ತದೆ.ಚಲಿಸುವುದಿಲ್ಲ.ಅದು ದೂರದಲ್ಲಿದೆ.ಹತ್ತಿರದಲ್ಲಿದೆ.ಅದು ಇದೆಲ್ಲದರ ಹೊರಗೂ ಇದೆ.ಒಳಗೂ ಇದೆ. ಯಾವನು ಸವ೯ ಪ್ರಾಣಿಗಳನ್ನು ತನ್ನ ಆತ್ಮದಲ್ಲಿಯೇ ನೋಡುವನೊ ಮತ್ತು ತನ್ನ ಆತ್ಮವನ್ನು ಸವ೯ ಪ್ರಾಣಿಗಳಲ್ಲಿ ನೋಡುವನೊ,ಅವನು ಅದರಿಂದ ಜಿಗುಪ್ಸೆಯನ್ನು ಹೊಂದುವುದಿಲ.್ಲ"ಸವೂೀ೯ಹಂ" ಎಂಬ ಏಕತ್ವಭಾವವನ್ನು ಹೊಂದಿದಾಗ(ಸಮ್ಯಕ್ ದಶ೯ನ,ಅಭೇದ ದಶ೯ನ,ಏಕತ್ವದಶ೯ನ)ಜಿಗುಪ್ಸೆಯುಂಟಾಗುವುದಿಲ್ಲ3.  ಮಂದಾದಿಕಾರಿಗಳಿಗೆ ಕೇವಲಕಮ೯, ಮಧ್ಯಮಾಧಿಕಾರಿಗಳಿಗೆ ಉಪಾಸನೆ,ಉತ್ತಮಾಧಿಕಾರಿಗಳಿಗೆ ಜ್ಞಾನ ಎಂಬುದು ಸಾಮಾನ್ಯವಾಗಿ ವೇದಾಂತ ಶಾಸ್ತ್ರದಲ್ಲಿ  ಬರುವ ಸಾಧನ ತ್ರಯಗಳೆನಿಸಿವೆ.

 ಯಾವಾಗ ತಿಳಿದವನಿಗೆ  ಎಲ್ಲಾ ಪ್ರಾಣಿಗಳ ಆತ್ಮವೇ ಆಗಿದೆಯೊ ಅಲ್ಲಿ ಏಕತ್ವವನ್ನು ನೋಡುವವನಿಗೆ  ಮೋಹವೆಲ್ಲಿ?ಶೋಕವೆಲ್ಲಿ?ಶೋಕ ಮೋಹಗಳು ಅಜ್ಞಾನಿಗಳಿಗೇ ಹೊರತು ಜ್ಞಾನಿಗಳಿಗಲ್ಲ.ಅವನು ಸವ೯ವ್ಯಾಪ್ತ,ಜ್ಯೋತಿಮ೯ಯನು,ಶರೀರವಿಲ್ಲದವನು, ಪಾಪ ಪುಣ್ಯಗಳಿಲ್ಲದವನು, ಕವಿಯು .ಮನೀಷಿಯು, ಸವೋ೯ತ್ತಮನು, ಸ್ವಯಂಭು.ಅವನು ಶಾಶ್ವತವಾದ ಅವರವರ ಕತ೯ವ್ಯವನ್ನು ಯಥಾನುರೂಪವಾಗಿ ಹಂಚಿಕೊಟ್ಟನು4.

ಕೇನೂಪನಿಷತ್ತು ಹಾಗೂ ಅದ್ವೈತ

        ‘ಕೇನೋಪನಿಷತ್' ಎಂಬ ಹೆಸರಿನಿಂದ ಪ್ರಸಿದ್ಧವಾದ ತಲವಕಾರೋಪನಿಷತ್ತು ಸಾಮವೇದದ ತಲವಕಾರ ಬ್ರಾಹ್ಮಣಕ್ಕೆ ಸೇರಿದೆ.ಈ ಉಪನಿಷತ್ತಿನ ಮೊದಲನೆಯ ಮಂತ್ರವು "ಕೇನ" ಎಂಬ ಪದದಿಂದ ಪ್ರಾರಂಭವಾಗಿರುವುದರಿಂದ ಇದಕ್ಕೆ "ಕೇನೋಪನಿಷತ್"ಎಂಬ ಹೆಸರು ಬಂದಿದೆ.ಈ ಉಪನಿಷತ್ತಿಗೆ ಶಂಕರಾಚಾಯ೯ರದೆಂದು ಪ್ರಸಿದ್ಧವಾದ ಎರಡು ಭಾಷ್ಯಗಳಿರುತ್ತದೆ.1) ಪದ ಭಾಷ್ಯ 2)ವಾಕ್ಯ ಭಾಷ್ಯ..

ಈ ಉಪನಿಷತ್ತಿನಲ್ಲಿ ನಾಲ್ಕು ಖಂಡಗಳಿವೆ.

     ಮೊದಲನೆಯ ಖಂಡದಲ್ಲಿ ಪರಬ್ರಹ್ಮವು ಅತೀಂದ್ರಿಯ ವಸ್ತುವೆಂದೂ,ಜಡವಾದ ಇಂದ್ರಿಯಗಳ ಚೇತನತ್ವವು ಅದರಿಂದಲೇ ಉಂಟಾಗಿದೆಯೆಂದೂ, ಅದರ ಸ್ವರೂಪವನ್ನು ಇತರರಿಗೆ ಪ್ರಮಾಣಗಳಿಂದ ಉಪದೇಶಿಸುವುದು ಅಸಾಧ್ಯವೆಂದೂ ತಿಳಿಸುತ್ತದೆ.

ಎರಡನೆಯ ಖಂಡದಲ್ಲಿ ಹೀಗೆ ಹೇಳಿದೆ.ತಿಳಿದುಕೊಂಡಿಲ್ಲವೆಂದೂ ಎಣಿಸಿರುದಿಲ್ಲ.ತಿಳಿದೂ ಇರುತ್ತೇನೆ ಎಂಬ ಜ್ಞಾನವು ಯಾರಿಗೆ ಇರುತ್ತದೆಯೊ ಅವನೇ ತಿಳಿದಿರುತ್ತಾನೆ. ಬ್ರಹ್ಮವು ಇಂದ್ರಿಯಗಳಿಗೆ ವಿಷಯವಾಗದಿದ್ದರೂ ಪ್ರತ್ಯಗಾತ್ಮವೆಂದು ಅರಿಯಬಹುದು.ಆದರೆ ಚೆನ್ನಾಗಿ  ಅರಿತಿದ್ದೇನೆಂದು ಹೇಳಲಾಗುವುದಿಲ್ಲ.

ಮೂರನೆಯ ಖಂಡದಲ್ಲಿ ಒಂದು ಆಖ್ಯಾಯಿಕೆಯು ಬರುತ್ತದೆ.ದೇವತೆಗಳ ಗವ೯ಭಂಗಕ್ಕಾಗಿ ಬ್ರಹ್ಮವು ಯಕ್ಷರೂಪದಿಂದ ಅಗ್ನಿ ವಾಯುಗಳಿಗೆ ಕಾಣಿಸಿಕೊಂಡಿತು.ಅವರಿಗೆ ಅದೇನೆಂದು ತಿಳಿಯಲಿಲ್ಲ.ಇಂದ್ರನಿಗೆ ಮಾತ್ರ  ಉಮಾ_ಹೈಮವತಿಯ ದಶ೯ನವಾದ ಮೇಲೆ ಅದು ಬ್ರಹ್ಮವೆಂದು ತಿಳಿಯಿತು.

 ನಾಲ್ಕನೆಯ ಖಂಡದಲ್ಲಿ ಉಮಾ_ಹೈಮವತಿಯು ಉಪಮಾನಗಳ ಮೂಲಕ ಬ್ರಹ್ಮವಿದ್ಯೆಯನ್ನು ಇಂದ್ರನಿಗೆ ಉಪದೇಶಿಸುತ್ತಾಳೆ.ಕೊನೆಗೆ ಬ್ರಹ್ಮವನ್ನು "ತದ್ವನ"ಎಂದು ಉಪದೇಶಿಸ ಬೇಕೆಂದು ಹೇಳಿದೆ.ಎಲ್ಲರೂ ಪ್ರತ್ಯಗಾತ್ಮ ಬ್ರಹ್ಮವನ್ನು ಪ್ರೀತಿಸುವುದರಿಂದ, ಬಯಸುವುದರಿಂದ ಅದಕ್ಕೆ ಈ ಹೆಸರು ಬಂದಿದೆ.ಈ ಉಪಾಸನೆಯೇ ಕೇನೋಪನಿಷತ್ತಿನ ಪರಮ ರಹಸ್ಯ.

ಕೆಲವು ಮುಖ್ಯ ಉಪನಿಷತ್ ವಾಕ್ಯಗಳು:

    ಅದು ಕಿವಿಗೆ ಕಿವಿ,ಮನಸ್ಸಿಗೆ ಮನಸ್ಸು,ವಾಕ್ಕಿಗೆ ವಾಕ್ಕು,ಪ್ರಾಣಕ್ಕೆ ಪ್ರಾಣ,ಕಣ್ಣಿಗೆ ಕಣ್ಣು,ಆದ್ದರಿಂದ ಇಂದ್ರಿಯಗಳಲ್ಲಿ ಆತ್ಮಭಾವವನ್ನು ಬಿಟ್ಟು ಈ ಲೋಕದಿಂದ ಹೋಗಿ ಅಮೃತರಾಗುತ್ತಾರೆ1.ಕಣ್ಣು ನೋಡುವಾಗಲೂ ,ಕಿವಿಯು ಕೇಳುವಾಗಲೂ, ಮೂಗು ಮೂಸುವಾಗಲೂ, ನಾಲಗೆಯು ಸವಿಯುವಾಗಲೂ ಆ ನೋಟ, ಕೇಳುವಿಕೆ,ಯೋಚಿಸುವ ಶಕ್ತಿ,ಸವಿಯುವವನು ಇವೆಲ್ಲವೂ ಇಂದ್ರಿಯಗಳಿಗಿಂತ ಬೇರೆಯಾಗಿರುವ ಆತ್ಮಚೈತನ್ಯದಲ್ಲಿಯೇ ಇರುವುದು.

     ಅಲ್ಲಿಗೆ ಕಣ್ಣು ಹೋಗುವುದಿಲ್ಲ,ಮಾತು ಹೋಗುವುದಿಲ್ಲ,ಮನಸ್ಸು ಹೋಗುವುದಿಲ್ಲ. ಬ್ರಹ್ಮವು ಹೇಗಿರುವುದೆಂಬುದನ್ನು ನಾವು ಅರಿಯೆವು.ಬ್ರಹ್ಮವು ತಿಳಿದಿರುವುದಕ್ಕಿಂತ ಬೇರೆ ತಿಳಿಯದಿರುವುದಕ್ಕಿಂತ ಬೇರೆ.ಬ್ರಹ್ಮವನ್ನು ತಕ೯ದಿಂದಾಗಲೀ, ಅಧ್ಯಯನದಿಂದಾಗಲೀ, ತಪೋ  ಯಜ್ಞಾದಿಗಳಿಂದಾಗಲೀ ಅರಿಯಲು ಸಾಧ್ಯವಿಲ್ಲ.

      ಯಾವುದು ವಾಕ್ಕಿನಿಂದ ವ್ಯಕ್ತವಾಗುವುದಿಲ್ಲವೋ, ಯಾವುದರಿಂದ ವಾಕ್ಕು ವ್ಯಕ್ತವಾಗುತ್ತದೆಯೋ, ಅದು ಬ್ರಹ್ಮವೆಂದು ತಿಳಿ.ಯಾವುದನ್ನು ಮನಸ್ಸಿನಿಂದ ಮನನ ಮಾಡಲು ಆಗುವುದಿಲ್ಲವೋ ಯಾವುದರಿಂದ ಮನಸ್ಸು ಮನನ ಮಾಡಲ್ಪಟ್ಟಿದೆಯೋ ಅದೇ ಬ್ರಹ್ಮವೆಂದು ತಿಳಿ.ಇದನ್ನೇ ಕಣ್ಣು,ಕಿವಿ,ಪ್ರಾಣಕ್ಕೆ ಅನ್ವಯಿಸಿಕೊಳ್ಳಬೇಕು.

ತಿಳಿಯುವವನಿಗಿಂತ ಬ್ರಹ್ಮವು ಬೇರೆ ಅಲ್ಲ.ತಿಳಿದವರಿಗೆ ತಿಳಿಯದೆ ಇರುತ್ತದೆ.ತಿಳಿಯದವರಿಗೆ ತಿಳಿದಿರುತ್ತದೆ2. ಬ್ರಹ್ಮವು ಜ್ಞಾನಕ್ಕೆ ವಿಷಯವಲ್ಲ.ಯಾವಾಗ ಬ್ರಹ್ಮವು ಬೋಧನೆಯಿಂದ ತಿಳಿಯಲ್ಪಡುತ್ತದೆಯೋ ಆಗ ತಿಳಿದಂತಾಗುತ್ತದೆ.ಇದರಿಂದ ಅಮೃತವನ್ನು ಹೊಂದುತ್ತಾನೆ.

ಅಗತ್ಯಗಳಾದ ಧನ, ಮಂತ್ರ,ಔಷಧ,ತಪಸ್ಸು,ಯೋಗ,ಇವುಗಳಿಂದ ಉತ್ಪನ್ನವಾದ ವೀಯ೯ವು ಮೃತ್ಯುವನ್ನು ಜಯಿಸಲಾರದು. ಆತ್ಮವಿದ್ಯೆಯಿಂದ ಉಂಟಾದ ವೀಯ೯ವು ಮಾತ್ರ ಮೃತ್ಯುವನ್ನು ಜಯಿಸಬಲ್ಲದು. ಇದನ್ನು ಆತ್ಮನಿಂದಲೇ ಪಡದುಕೊಳ್ಳಬೇಕು. ವಿವೇಕಿಗಳು ಸವ೯ಪ್ರಾಣಿಗಳಲ್ಲಿಯೂ ಆತ್ಮತತ್ವವನ್ನು ಅರಿತುಕೊಂಡು ಈ ಲೋಕದಿಂದ ಹೋಗಿ ಅಮೃತರಾಗುತ್ತಾರೆ.

ಬ್ರಹ್ಮವು ಅವಿಜ್ಞಾತವಾದುದರಿಂದ ಅದು ಇಲ್ಲವೇ ಇಲ್ಲವೆಂಬ ಭ್ರಾಂತಿ ಬರದಿರಲೆಂದು ಬ್ರಹ್ಮವಿದ್ಯೆಯನ್ನು ಈ ಆಖ್ಯಾಯಿಕೆಯಲ್ಲಿ ಹೇಳಲಾಗಿದೆ.ದೇವತೆಗಳ ಗವ೯ಭಂಗಕ್ಕಾಗಿ ಬ್ರಹ್ಮವು ಯಕ್ಷ ರೂಪದಿಂದ ಅಗ್ನಿವಾಯುಗಳಿಗೆ ಕಾಣಿಸಿಕೊಳ್ಳಲು ಅವರಿಗೆ ಅದೇನೆಂದು ತಿಳಿಯಲಿಲ್ಲ. ಇಂದ್ರನಿಗೆ ಮಾತ್ರ ಉಮಾ _ಹೈಮವತಿಯ ದಶ೯ನವಾದಮೇಲೆ ಅದು ಬ್ರಹ್ಮವೆಂದು ತಿಳಿಯಿತು.ಬ್ರಹ್ಮವಿದ್ಯೆಯ ಸ್ತುತಿಗಾಗಿಯೂ ಬ್ರಹ್ಮದ ಅಸ್ತಿತ್ವವನ್ನು ಪ್ರತಿಪಾದಿಸುವುದಕ್ಕಾಗಿಯೂ ಈ ಅಖ್ಯಾಯಿಕೆಯನ್ನು ಹೇಳಿದೆ.

ಬ್ರಹ್ಮಕ್ಕ ತದ್ವನ ಎಂದು ಹೆಸರು.ಬ್ರಹ್ಮವನ್ನು ತದ್ವನ ಎಂದು ಉಪಾಸಿಸಬೇಕು3.ತದ್ವನ ಎಂದರೆ ಅದರವನ.ಬ್ರಹ್ಮವು ಎಲ್ಲಾ ಪ್ರಾಣಿಗಳ ಆತ್ಮವಾಗಿರುವುದರಿಂದ ವನವು ಎಂದರೆ ವನನೀಯವಾದುದು, ಭಜಿಸಲ್ಪಡತಕ್ಕದ್ದು. ತಪಸ್ಸು, ಧಮ೯, ಕಮ೯ ಇವು ಬ್ರಹ್ಮಕ್ಕೆ ಪ್ರರ್ತಿಷ್ಠೆ. ಸತ್ಯವು ಅದರ ಆಶ್ರಯ.4. ಬ್ರಹ್ಮವನ್ನು ಪಡೆಯುವುದಕ್ಕೆ ತಪಸ್ಸು, ದಯೆ, ಕಮ೯ಗಳು ಸಾಧನಗಳು.ಸಂಸ್ಕಾರ ಪಡೆದವನಿಗೆ ಸತ್ವ ಶುದ್ಧಿಯಮೂಲಕ (ಚಿತ್ತಶುದ್ಧಿಯಮೂಲಕ) ತತ್ವಜ್ಞಾನವುಂಟಾಗುತ್ತದೆ. ಯಾರು ಇದನ್ನು ಹೀಗೆ ತಿಳಿಯುತ್ತಾರೆಯೊ ಅವನು ಪಾಪವನ್ನು ಕಳೆದುಕೊಂಡು ಅನಂತವೂ ಮಹತ್ತಮವೂ ಆದ ಬ್ರಹ್ಮದಲ್ಲಿ ಪ್ರತಿಷ್ಠಿತನಾಗುತ್ತಾನೆ.

ಕಠೋಪನಿಷತ್ತು ಹಾಗೂ ಅದ್ವೈತ:

       ಉಪನಿಷತ್ತುಗಳಲ್ಲಿ ಕಠೋಪನಿಷತ್ತು ಅತ್ಯಂತ ಪ್ರಸಿದ್ಧವೂ ಆದರಣೀಯವೂ ಆಗಿದೆ.ಪಾಶ್ಚಾತ್ಯ ಪಂಡಿತರು ಭಾರತೀಯ ಅಧ್ಯಾತ್ಮ ರಹಸ್ಯವನ್ನು ವಿವರಿಸುವಾಗ ಇದನ್ನೇ ಪರಮಾದಶ೯ವಾಗಿ ಬಳಸುತ್ತಾರೆ.ಇದಕ್ಕೆ "ಕಾಠಕೋಪನಿಷತ್"ಎಂಬ ಹೆಸರೂ ಇದೆ.ಇದು ಕೃಷ್ಣಯಜುವೇ೯ದ ಶಾಖೆಗೆ ಸೇರಿದೆ.

ನಚೀಕೇತನು ಯಮಲೋಕಕ್ಕೆ ಹೋಗಿ ಯಮನಿಂದ ಆತ್ಮಜ್ಞಾನವನ್ನು ಹೊಂದಿದ ಅಖ್ಯಾಯಿಕೆಯು ಅತ್ಯಂತ ಪುರಾತನವಾದದ್ದು.ಈ ಉಪನಿಷತ್ತಿನಲ್ಲಿ ಮೂರು ವಲ್ಲಿಗಳಿವೆ. ಪ್ರತಿ ವಲ್ಲಿಯಲ್ಲಿಯೂ ಎರಡು ಅಧ್ಯಾಯಗಳಿವೆ.

  ಮೊದಲನೆಯ ಅಧ್ಯಾಯ:

ನಚೀಕೇತನು ತಂದೆಯ ಆಜ್ಞೆಯ ಪ್ರಕಾರ ಯಮನ ಹತ್ತಿರ ಹೋದನು. ಯಮನು ಎಲ್ಲಿಗೋ ಹೋಗಿದ್ದರಿಂದ ನಚೀಕೇತನು ಯಮನು ಬರುವವರೆಗೆ ಉಪವಾಸವಿದ್ದು ಎರಡು ದಿನಗಳನ್ನು ಕಳೆದನು.ನಮಸ್ಕಾರಾಹ೯ವಾದ ಅಥಿತಿಯು ಮೂರುದಿನಗಳು ಊಟಮಾಡದೆ ಇದ್ದುದರಿಂದ ದೋಷಪರಿಹಾರಕ್ಕಾಗಿ ಯಮನು ನಚೀಕೇತನಿಗೆ ಮೂರು ವರಗಳನ್ನು ಅನುಗ್ರಹಿಸಿದನು.

1)ಮೊದಲನೆಯದಾಗಿ ತನ್ನ ತಂದೆಯು ತನ್ನ ವಿಷಯದಲ್ಲಿ ಪ್ರಸನ್ನನಾಗಿರಬೇಕು.

2)ಸ್ವಗ೯ಕ್ಕೆ ಸಾಧನವಾದ ಅಗ್ನಿವಿದ್ಯೆಯನ್ನು ಬೋಧಿಸಬೇಕು.

3)ಮೂರನೆಯ ವರವು ಆತ್ಮಜ್ಞಾನಕ್ಕೆ ಸಂಬಂಧಪಟ್ಟಿದ್ದು,ದೇಹಾವಸಾನವಾದ ಮೇಲೆ ಆತ್ಮನು ಇದ್ದಾನೆಯೊ ಇಲ್ಲವೊ ಎಂಬ ಪ್ರಶ್ನೆ.

ನಚೀಕೇತನು ಆತ್ಮತತ್ವವನ್ನು ಅರಿಯಲು ತಕ್ಕವನೋ ಅಲ್ಲವೊ ಎಂಬುದನ್ನು ಪರೀಕ್ಷಿಸಲು ಯಮನು ಅವನನ್ನು ನಾನಾ ವಿಧವಾದ ಪ್ರಲೋಭನೆಗೊಳಿಸಲು ಪ್ರಯತ್ನಿಸಿದನು.ಆದರೆ ನಚೀಕೇತನು ಯಾವ ಲೌಕಿಕ ಸುಖಗಳನ್ನು ಬಯಸಲಿಲ್ಲ.

         ಯಮನು ನಚೀಕೇತನಿಗೆ ಈರೀತಿ ಉಪದೇಶಿಸಿದನು.ಶೇಯಸ್ಸು ಬೇರೆ,ಪ್ರೇಯಸ್ಸು ಬೇರೆ.ಅವಿವೇಕಿಯು ಯೋಗಕ್ಷೇಮವನ್ನು ಬಯಸುತ್ತಾ ಪ್ರೇಯಸ್ಸನ್ನು ಆರಿಸಿಕೊಂಡು ಪುರುಷಾಥ೯ದಿಂದ ಚ್ಯುತರಾಗುತ್ತಾನೆ.ಧೀಮಂತನು ಶೇಯಸ್ಸನ್ನು ಆರಿಸಿಕೊಳ್ಳುತ್ತಾನೆ. ಆತ್ಮತತ್ವವನ್ನು ಶ್ರವಣ ಮಾಡಿದರೂ ತಿಳಿದುಕೊಳ್ಳುವುದು ಕಷ್ಟ.ಇದನ್ನು ಉಪದೇಶ ಮಾಡುವ ಗುರುವೂ ತಿಳಿದುಕೊಳ್ಳುವ ಶಿಷ್ಯನೂ ಅದ್ಭುತ ವ್ಯಕ್ತಿಗಳು.ಸೂಕ್ಷ್ಮವಾಗಿರುವ ಆತ್ಮತತ್ವವನ್ನು ಸಾಮಾನ್ಯರಿಂದ ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲ.ಉತ್ತಮನಾದ ಆಚಾಯ೯ನಿಂದಲೇ ತಿಳಿದುಕೊಳ್ಳಬೇಕು1.ನಿಷ್ಕಾಮವಾಗಿ ಆತ್ಮನನ್ನು ಬಯಸುವವರಿಗೆ ಆತ್ಮನಿಂದಲೇ ಆತ್ಮನು ಲಭಿಸುತ್ತಾನೆ.ಸದಾಚಾರ ಮತ್ತು ಇಂದ್ರಿಯ ನಿಗ್ರಹವು ಆತ್ಮಪ್ರಾಪ್ತಿಗೆ ಅತ್ಯಂತ ಅವಶ್ಯಕ.

           ಮೂರನೆಯ ವಲ್ಲಿಯಲ್ಲಿಯ ಮುಖ್ಯವಿಷಯ ರಥರೂಪಕ ಕಲ್ಪನೆ.ಶರೀರವು ರಥ,ಆತ್ಮನೇ ರಥದ ಒಡೆಯ.ಬುದ್ಧಿಯು ಸಾರಥಿ.ಮನಸ್ಸು ಕಡಿವಾಣ,ಇಂದ್ರಿಯಗಳು ಕುದುರೆಗಳು,ಶಬ್ದಾದಿ ವಿಷಯಗಳು ಆ ಕುದುರೆಗಳು ಹೋಗುವ ಮಾಗ೯ಗಳು.ಯಾವನು ವಿವೇಕಿಯೋ ಅವನ ಇಂದ್ರಿಯಗಳು ಒಳ್ಳೆಯ ಕುದುರೆಗಳಂತೆ ವಶವಾಗಿ ಇರುವುವು.ಅವನು ಪರಮ ಪದವನ್ನು ಹೊಂದುತ್ತಾನೆ.

ಎರಡನೆಯ ಅಧ್ಯಾಯ:ಇಂದ್ರಿಯಗಳು ಸ್ವಬಾವತಃ ಹೊರಗೇ ಹೋಗುತ್ತವೆ.ಆದುದರಿಂದ ಮನುಷ್ಯನು ಹೊರಗೆ ನೋಡುತ್ತಾನೆಯೇ  ಹೊರತು ಅಂತರಾತ್ಮವನ್ನು ನೋಡುವುದಿಲ್ಲ. ಅಮೃತತ್ವವನ್ನು ಬಯಸುವ ಯಾನನೋ ಒಬ್ಬಧೀರನು ಇಂದ್ರಿಯಗಳನ್ನು ಹಿಂದಿರುಗಿಸಿ ಪ್ರತ್ಯಗಾತ್ಮನನ್ನು ನೋಡುತ್ತಾನೆ.ಪರಮಾತ್ಮನು ಅಂಗುಷ್ಠಮಾತ್ರ ಪರಿಣಾಮವುಳ್ಳವನು.ಇವನೇ ಭೂತ ಭವಿಷ್ಯಗಳ ಒಡೆಯನು.ಇವನಲ್ಲಿ ಭೇದವನ್ನು ಕಾಣಬಾರದು.

ಈ ಶರೀರವೆಂಬ ಪುರದಲ್ಲಿರುವ ಆತ್ಮನನ್ನು ಸರಿಯಾಗಿ ಅರಿತುಕೊಂಡರೆ ಶೋಕವನ್ನು ದಾಟಿ ಮುಕ್ತನಾಗಬಹುದು. ಅವನು ಸವ೯ಜ್ಞ, ಸವ೯ಶಕ್ತ, ಸವ೯ವ್ಯಾಪ್ತಇಂದ್ರಿಯ,ಪ್ರಾಣಗಳ ಕಾಯ೯ಗಳು ಆತ್ಮನಿಗಾಗಿ ನಡೆಯುತ್ತಿರುವುವು.

ಸಂಸಾರ ಸ್ವರೂಪವನ್ನು ನಿಶ್ಚಯಿಸುವುದರ ಮೂಲಕ ಬ್ರಹ್ಮಸ್ವರೂಪವನ್ನು ನಿಧ೯ರಿಸಲು ಆರನೆಯ ವಲ್ಲಿಯು ಆರಂಭವಾಗಿದೆ.ಬ್ರಹ್ಮದ ನಿಯಾಮಕ ಶಕ್ತಿಯಿಂದ ಸೂಯ೯ಚಂದ್ರಾದಿಗಳು ತಮ್ಮ ತಮ್ಮ ಕಾಯ೯ವನ್ನು ಮಾಡುತ್ತಿರುವುವು.ಬ್ರಹ್ಮರೂಪವನ್ನು ಕಣ್ಣಿನಿಂದ ನೋಡಲು ಆಗುವುದಿಲ್ಲ.ಮನಸ್ಸನ್ನು ನಿಯಮಿಸುವ ಬುದ್ಧಿಯಿಂದ,ಮನನ ರೂಪವಾದ "ಸಮ್ಯಕ್ದಶ೯ನ"ದಿಂದ ಬ್ರಹ್ಮವು ಪ್ರಕಾಶಿತವಾಗುವುದು.ಇಂದ್ರಿಯಗಳು ಮನಸ್ಸಿನೊಂದಿಗೆ ಶಾಂತವಾಗಿ ಬುದ್ಧಿಯೂ ಅಲ್ಲಾಡದಿದ್ದರೆ ಅದನ್ನು "ಪರಮಗತಿ"ಎಂದು ಕರೆಯುತ್ತಾರೆ.ಸ್ಥಿರವಾದ ಇಂದ್ರಿಯ ಧಾರಣೆ ಎಂಬ ಅವಸ್ಥೆಯೇ ಯೋಗವು2. ಬ್ರಹ್ಮವು ಅತೀಂದ್ರಿಯವಾದ್ದರಿಂದ ಆಗಮಾಥಾ೯ನುಸಾರಿಯಾದ ಶ್ರದ್ಧೆಯುಳ್ಳ ಗುರುವಿನಿಂದ ತಿಳಿಯಬಹುದು. ಹೃದಯದಲ್ಲಿ ಅಡಗಿರುವ ಕಾಮಗಳ ನಾಶವಾದರೆ ಇಲ್ಲಿಯೇ ಬ್ರಹ್ಮವನ್ನು ಪಡೆದುಕೊಳ್ಳಬಹುದು.

ಹೃದಯಕ್ಕೆ ನೂರೊಂದು ನಾಡಿಗಳಿವೆ.ಅವುಗಳಲ್ಲಿ ಒಂದು ನೆತ್ತಿಯವರೆಗೆ ಹೊರಟಿದೆ.ಅದರ ಮೂಲಕ ಮೇಲಕ್ಕೆ ಹೋಗುವವನು ಅಮೃತತ್ವವನ್ನು ಪಡೆಯುತ್ತಾನೆ.ಇತರ ನಾಡಿಗಳು ಸಂಸಾರಕ್ಕೆ ಕಾರಣವಾಗುತ್ತವೆ.ಜನರ ಹೃದಯದಲ್ಲಿ ಇರುವ ಅಂಗುಷ್ಠಮಾತ್ರ ಪರಿಣಾಮವುಳ್ಳ ಪುರುಷನನ್ನು ತನ್ನ ಶರೀರದಿಂದ ಬೇಪ೯ಡಿಸಿ ಅವನು ಶುದ್ಧನೆಂದೂ ಅಮೃತನೆಂದೂ ತಿಳಿಯಬೇಕು.ಅದರಂತೆ ಯಾವನು ಅಧ್ಯಾತ್ಮವನ್ನು ತಿಳಿದರೂ ಅವನೂ ಮುಕ್ತನಾಗುವನು. ಇದೇ ಕಠೋಪನಿಷತ್ತಿನ ಸಂದೇಶ.

ಶಾಂತಿಪಾಠ

ಹರಿಃಓಂ

"ಸಹನಾ ಭವತು ಸಹನೌ ಭುನಕ್ತು

ಸಹವೀಯ೯ಂ ಕರವಾವಹೈ

ತೇಜಸ್ವಿನಾವಧೀತಮಸ್ತು ಮಾವಿದ್ವಿಷಾವಹೈ"

ಓಂ ಶಾಂತಿ ಶಾಂತಿ ಶಾಂತಿಃ.

ಪರಮೇಶ್ವರನು ಗುರುಶಿಷ್ಯರಾದ ನಮ್ಮನ್ನು ಕಾಪಾಡಲಿ.ನಮ್ಮಿಬ್ಬರನ್ನೂ ಜೊತೆಯಲ್ಲಿ ಪೋಷಿಸಲಿ.ನಾವು ಜೊತೆಯಲ್ಲಿ ಸಾಮಥ್ಯ೯ವನ್ನುಂಟು ಮಾಡುವಂತಾಗಲಿ.ನಮ್ಮಿಬ್ಬರ ಅಧ್ಯಯನವು ತೇಜಸ್ವಿಯಾಗಲಿ.ನಾವು ಪರಸ್ಪರ ದ್ವೇಷಮಾಡದೇ ಇರುವಂತಾಗಲಿ.

ಓಂ ಶಾಂತಿ ಶಾಂತಿ ಶಾಂತಿಃ

ಮನುಷ್ಯನು ಧನದಿಂದ ತೃಪ್ತಿಪಡುವವನಲ್ಲ3.ನಿನ್ನನ್ನು ನೋಡಿದೆವಾದರೆ ಧನವನ್ನು ಹೊಂದುತ್ತೇವೆ.ನೀನು ಯಮಪದವಿಯಲ್ಲಿ ಆಳುವವರೆಗೂ ಬದುಕುವೆವು.ಆದರೆ ನನಗೆ ಆ ವರವೇ ಬೇಕು.

ಶ್ರೇಯಸ್ಸು ಬೇರೆ ಪ್ರೇಯಸ್ಸು ಬೇರೆ.ಅವೆರಡೂ ಬಿನ್ನ ಪ್ರಯೋಜನಗಳುಳ್ಳವುಗಳಾಗಿ ಪುರುಷನನ್ನು ಬಂಧಿಸುವುವು.ಅವೆರಡರಲ್ಲಿ ಶ್ರೇಯಸ್ಸನ್ನು ತೆಗೆದುಕೊಳ್ಳುವವನಿಗೆ ಒಳ್ಳೆಯದಾಗುವುದು.ಯಾವನು ಪ್ರೇಯಸ್ಸನ್ನೇ ಆರಿಸಿಕೊಳ್ಳುವನೋ ಅವನು ಪುರುಷಾಥ೯ದಿಂದ ವಂಚಿತನಾಗುವನು.ಶ್ರೇಯಸ್ಸು ಮತ್ತು ಪ್ರೇಯಸ್ಸು ಮನುಷ್ಯನ ಸಮೀಪಕ್ಕೆ ಬರುತ್ತವೆ.ಧೀಮಂತನು ಅವುಗಳನ್ನು ಚೆನ್ನಾಗಿ ಪರೀಕ್ಷಿಸಿ ವಿವೇಚಿಸುತ್ತಾನೆ.ಅವಿವೇಕಿಯು ಯೋಗಕ್ಷೇಮಕ್ಕಾಗಿ ಪ್ರೇಯಸ್ಸನ್ನೇ ಆರಿಸಿಕೊಳ್ಳುತ್ತಾನೆ.ನಚೀಕೇತನೆ,

ನೀನು ಪ್ರಿಯವಾದ ಮತ್ತು ಮತ್ತು ಪ್ರಿಯರೂಪವಾz ಕಾಮಗಳನ್ನು ವಿವೇಚಿಸಿ ತ್ಯಾಗಮಾಡಿರುತ್ತೀಯೆ. ಯಾವುದರಲ್ಲಿ ಬಹು ಮನುಷ್ಯರು ಮುಳುಗುತ್ತಾರೋ ಅಂಥ ವಿತ್ತಮಯವಾದ ಈ ಮಾಗ೯ವನ್ನು ನೀನು ಹೊಂದಲಿಲ್ಲ.

'ಅಂಧೇನೈವ ನೀಯಮಾನಾ ಯಥಾಂದಾಃ"ಎನ್ನುವಂತೆ ಅವಿದ್ಯೆಯ ಮಧ್ಯದಲ್ಲಿ ಇರುವವರಾಗಿ ತಾವೇ ಧೀರರು ಪಂಡಿತರು ಎಂದು ತಿಳಿದುಕೊಂಡು ವಕ್ರಗತಿಯಲ್ಲಿ ನಡೆಯುತ್ತಾ ಕುರುಡನು ಕರೆದುಕೊಂಡು ಹೋಗುತ್ತಿರುವ ಕುರುಡರು ಅನಥ೯ವನ್ನು ಹೊಂದುವಂತೆ ಮೂಢರು ಸುತ್ತುತ್ತಿರುವರು4.

          ಈ ಆತ್ಮನು ಬಹುಜನರ ಶ್ರವಣಕ್ಕೂ ಲಭ್ಯನಲ್ಲ.ಶ್ರವಣ ಮಾಡಿದಮೇಲೂ ಬಹು ಜನು ಇವನನ್ನು ಅರಿಯರು.ಇವನನ್ನು ಹೇಳುವವನು ಆಶ್ಚಯ೯ನು.ಪಡೆಯುವವನು ಕುಶಲನು.ಕುಶಲನಿಂದ ಅನುಶಿಷ್ಟನಾಗಿ ತಿಳಿದುಕೊಳ್ಳುವವನು ಆಶ್ಚಯ೯ನು.

ಈ ಆತ್ಮಜ್ಞಾನವು ತಕ೯ದಿಂದ ಪಡೆಯತಕ್ಕದ್ದಲ್ಲ.ಬೇರೆಯವರಿಂದಲೇ ಹೇಳಲ್ಪಟ್ಟರೆ ಸುಜ್ಞಾನವನ್ನುಂಟು ಮಾಡುವುದು.ಇದನ್ನು ನೀನು ಹೊಂದಿರುತ್ತೀಯ. ನೀನು ಸತ್ಯವಾದ ಧೃತಿಯುಳ್ಳವನು.ನಿನ್ನಂಥ ಕೇಳತಕ್ಕವನು ನಮಗೆ ಉಂಟಾಗಲಿ.

        ಅನಿತ್ಯ ವಸ್ತುಗಳಿಂದ ನಿತ್ಯವು ಪಡೆಯತಕ್ಕದ್ದಲ್ಲ.ಆ ದುದ೯ಶ೯ನೂ,ಗೂಢವನ್ನು ಪ್ರವೇಶಿಸಿರುವವನೂ, ಗುಹೆಯಲ್ಲಿರುವವನೂ, ಗಹ್ವರದಲ್ಲಿರುವವನೂ, ಪುರಾಣನೂ ಆದ ದೇವನನ್ನು ಅಧ್ಯಾತ್ಮ ಯೋಗದಿಂದ ತಿಳಿದುಕೊಂಡು ಧೀರನು ಹಷ೯ ಶೋಕಗಳನ್ನು ಬಿಡು                                                ತ್ತಾನೆ.

ಮನಸ್ಸನ್ನು ವಿಷಯಗಳಿಂದ ಎಳೆದುಕೊಂಡು ಆತ್ಮನಲ್ಲಿಯೇ ನಿಲ್ಲಿಸುವುದಕ್ಕೆ 'ಅಧ್ಯಾತ್ಮಯೋಗ'ವೆಂದು ಹೆಸರು.ಎಲ್ಲಾ ವೇದಗಳೂ ಯಾವ ಪದವನ್ನು ಪ್ರತಿಪಾದಿಸುತ್ತವೆಯೊ,ಎಲ್ಲಾ ತಪಸ್ಸುಗಳು ಯಾವುದನ್ನು ಹೇಳುತ್ತವೆಯೊ, ಯಾವುದನ್ನು ಇಚ್ಛಿಸುತ್ತ ಬ್ರಹ್ಮಚಯ೯ವನ್ನು ಆಚರಿಸುತ್ತಾರೆಯೊ, ಆ ಪದವನ್ನು ನಿನಗೆ ಸಂಗ್ರಹವಾಗಿ ಹೇಳುತ್ತೇನೆ,ಇದು "ಓಂ" ಎಂಬುದು.ಈ ಅಕ್ಷರವೇ ಬ್ರಹ್ಮ.ಈ ಅಕ್ಷರವನ್ನು ತಿಳಿದುಕೊಂಡು ಬ್ರಹ್ಮಲೋಕದಲ್ಲಿ ಮಹಿಮೆಯನ್ನು ಹೊಂದುತ್ತಾನೆ.

ಈ ಆಧಾರವು ಶ್ರೇಷ್ಠವಾದುದು.ಈ ಆಧಾರವು ಪರವಾದುದು.ಈ ಆಧಾರವನ್ನು ತಿಳಿದುಕೊಂಡು ಬ್ರಹ್ಮಲೋಕದಲ್ಲಿ ಮಹಿಮೆಯನ್ನು ಹೊಂದುತ್ತಾನೆ.

"ನ ಜಾಯತೇ ಮ್ರಿಯತೇ ವಾ ವಿಪಶ್ಚಿತ್"

ಜ್ಞಾನಿಯು ಹುಟ್ಟುವುದೂ ಇಲ್ಲ.ಸಾಯುವುದೂ ಇಲ್ಲ. ಇವನು ಯಾವುದರಿಂದಲೂ ಹುಟ್ಟುವುದಿಲ್ಲ. ಇವನಿಂದ ಯಾರೂ ಹುಟ್ಟಿಲ್ಲ.ಈತನು ಜನ್ಮರಹಿತನೂ ನಿತ್ಯನೂ ಶಾಶ್ವತನು,ಪುರಾಣನು,ಶರೀರವು ನಾಶವಾಗುತ್ತಿದ್ದರೂ ನಾಶವಾಗುವುದಿಲ್ಲ.

"ಅಣೋರಣೀಯಾನ್ ಮಹತೋ ಮಹೀಯಾನ್"

ಅಣುವಿಗಿಂತ ಅಣುವೂ ಮಹತ್ತಿಗಿಂತ ಮಹತ್ತೂ ಆದ ಈ ಆತ್ಮನು ಪ್ರಾಣಿಗಳ ಹೃದಯದಲ್ಲಿ ಸ್ಥಿತನಾಗಿರುವನು.ಕಾಮವಿಲ್ಲದವನು ಆತ್ಮನನ್ನು ನೋಡುತ್ತಾನೆ. ಧಾತುಗಳ ಪ್ರಸನ್ನತೆಯಿಂದ ಆತ್ಮನ ಮಹಿಮೆಯನ್ನು ನೋಡುತ್ತಾನೆ.ಆದುದರಿಂದ ಶೋಕವಿಲ್ಲದವನಾಗುವನು.

             ಈ ಆತ್ಮನು ಕುಳಿತುಕೊಂಡು ದೂರಹೋಗುತ್ತಾನೆ.ಮಲಗಿಕೊಂಡು ಎಲ್ಲೆಲ್ಲಿಯೂ ಹೋಗುತ್ತಾನೆ. ಮದಾಮದ ರೂಪನಾದ ಆ ದೇವನನ್ನು ನನಗಿಂತ ಯಾವನು ತಿಳಿಯಬಲ್ಲನು?ಅನಿತ್ಯವಾದ ಶರೀರಗಳಲ್ಲಿ ನಿತ್ಯನಾದ,ಅಶರೀರನಾದ,ಮಹತ್ತಮನಾದ ಸವ೯ವ್ಯಾಪ್ತನಾದ ಆತ್ಮನನ್ನು ತಿಳಿದುಕೊಂಡು ಧೀರನು ಶೋಕಿಸುವುದಿಲ್ಲ.

ನ ಅಯಮಾತ್ಮಾ ಪ್ರವಚನೇನ ಲಬ್ಯೋ

ನ ಮೇಧಯಾ ನ ಬಹುನಾ ಶ್ರುತೇನ|

ಈ ಆತ್ಮನು ಪ್ರವಚನದಿಂದ ಲಭ್ಯನಲ್ಲ,ಮೇಧಾ ಶಕ್ತಿಯಿಂದಲೂ, ಬಹು ಶ್ರವಣದಿಂದಲೂ ಲಭ್ಯನಲ್ಲ.ಯಾವನನ್ನೇ ಈ ಸಾಧಕನು ಬೇಡುತ್ತಾನೆಯೊ ಅವನಿಂದ ಲಭ್ಯನು.ಅವನಿಗೆ ಈ ಆತ್ಮನು ತನ್ನ ತನುವನ್ನು ತೋರಿಸುತ್ತಾನೆ.

                    ದುರಾಚಾರದಿಂದ ನಿವೃತ್ತನಾಗದವನೂ, ಶಾಂತನಲ್ಲದವನೂ, ಸಮಾಹಿತನಲ್ಲದವನೂ,ಮನಃಶಾಂತಿ ಇಲ್ಲದವನೂ ಪ್ರಜ್ಞಾನದಿಂದ ಇವನನ್ನು ಪಡೆಯಲಾರನು.ಯಾವನಿಗೆ ಬ್ರಾಹ್ಮಣ ಕ್ಷತ್ರಿಯರಿಬ್ಬರೂ ಅನ್ನವಾಗಿರುವರೊ ಯಾವನಿಗೆ ಮೃತ್ಯುವು ಉಪಸೇಚನವಾಗಿರುವುದೊ ಅವನು ಎಲ್ಲಿರುವನೆಂಬುದನ್ನು ಹೀಗೆ ಯಾವನು ಅರಿಯುವನು?

.ಇಬ್ಬರು ಪ್ರವೇಶಿಸಿರುತ್ತಾರೆ.ಇವರನ್ನು ನೆರಳು ಬಿಸಿಲುಗಳೆಂದು ಬ್ರಹ್ಮಜ್ಞಾನಿಗಳೂ,ಮೂರುಸಲ ನಚೀಕೇತಾಗ್ನಿಯನ್ನು ಚಯನಮಾಡಿರುವ ಪಂಚಾಗ್ನಿಗಳೂ ಹೇಳುತ್ತಾರೆ.

           ಆತ್ಮನನ್ನು ರಥಿಯೆಂದೂ, ಇಂದ್ರಿಯವನ್ನು ರಥವೆಂದೂ, ಬುದ್ಧಿಯನ್ನು ಸಾರಥಿ ಎಂದೂ,ಮನಸ್ಸನ್ನು ಕಡಿವಾಣವೆಂದೂ ತಿಳಿ. ಇಂದ್ರಿಯಗಳನ್ನು ಕುದುರೆಗಳೆಂದು ಹೇಳುತ್ತಾರೆ.ವಿಷಯಗಳನ್ನು ಅವುಗಳ ಮಾಗ೯ಗಳೆಂದೂ.ಶರೀರ,ಇಂದ್ರಿಯ.ಮನಸ್ಸು ಇವುಗಳಿಂದ ಕೂಡಿದ ಆತ್ಮನನ್ನು ಸಂಸಾರಿ ಎಂದು ಹೇಳುತ್ತಾರೆ.

ಕೇವಲ ಆತ್ಮನಿಗೆ ಭೋಕ್ತøತ್ವವು ಇರುವುದಿಲ್ಲ.ಬುದ್ಧಿಯೇ ಮೊದಲಾದ ಉಪಾಧಿಗಳಿಂದಲೇ ಬೋಕ್ತøತ್ವವು ಉಂಟಾಗಿದೆ.ಭೋಕ್ತøತ್ವದಿಂದ ಸಂಸಾರ ಉಂಟಾಗಿದೆ.ಯಾವನು ಯಾವಾಗಲೂ ಅಯುಕ್ತವಾದ ಮನಸ್ಸಿನಿಂದ ಕೂಡಿದವನಾಗಿ ಅನಿಪುಣನಾಗಿರುವನೋ ಅವನ ಇಂದ್ರಿಯಗಳು ಸಾರಥಿಯ ತುಂಟ ಕುದುರೆಗಳಂತೆ ವಶವಾಗದೆ ಇರುವುವು.

ಯಾವನು ಯಾವಾಗಲೂ ಯುಕ್ತವಾದ ಮನಸ್ಸಿನಿಂದ ಕೂಡಿದವನಾಗಿ ನಿಪುಣನಾಗಿರುವನೋ ಅವನ ಇಂದ್ರಿಯಗಳು ಸಾರಥಿಯ ಒಳ್ಳೆಯ ಕುದುರೆಗಳಂತೆ ವಶವಾಗಿ ಇರುವುವು.

       ಯಾವನು ಯಾವಾಗಲೂ ಜ್ಞಾನವಿಲ್ಲದವನಾಗಿ ನಿಗ್ರಹಿಸದ ಮನಸ್ಸುಳ್ಳವನಾಗಿ  ಅಶುಚಿಯಾಗಿರುವನೋ ಅವನು ಆ ಪದವನ್ನು  ಹೊಂದುವುದಿಲ್ಲ.ಸಂಸಾರವನ್ನು ಹೊಂದುತ್ತಾನೆ. ಯಾವನು ಯಾವಾಗಲೂ ಜ್ಞಾನವುಳ್ಳವನಾಗಿ ನಿಗ್ರಹಿಸಿದ ಮನಸ್ಸುಳ್ಳವನಾಗಿ ಶುಚಿಯಾಗಿರುವನೋ ಅವನು ಪರಮಪದವನ್ನು ಹೊಂದುತ್ತಾನೆ.ಅದರಿಂದ ಪುನಃ ಹುಟ್ಟುವುದಿಲ್ಲ.

   ಯಾವ ಮನುಷ್ಯನು ವಿಜ್ಞಾನವೆಂಬ ಸಾರಥಿಯುಳ್ಳವನೋ, ಮನಸ್ಸೆಂಬ ಕಡಿವಾಣವನ್ನು ಹಿಡಿದಿರುವನೋ ಅವನು ಸಂಸಾರಗತಿಯ ಕೊನೆಯನ್ನೆ ಕಾಣುತ್ತಾನೆ.ಅದೇ ವಿಷ್ಣುವಿನ ಪರಮಪದ.

ಇಂದ್ರಿಯಗಳಿಗಿಂತ ವಿಷಯಗಳು ಶ್ರೇಷ್ಠ.ವಿಷಯಗಳಿಗಿಂತ ಮನಸ್ಸು ಶ್ರೇಷ್ಠ.ಮನಸ್ಸಿಗಿಂತ ಬುದ್ಧಿಯು ಶ್ರೇಷ್ಠ.ಬುದ್ಧಿಗಿಂತ ಮಹತ್ ಎಂಬ ಆತ್ಮನು ಶ್ರೇಷ್ಠ.ಮಹತ್ತಿಗಿಂತ ಅವ್ಯಕ್ತವು ಶ್ರೇಷ್ಠ.ಅವ್ಯಕ್ತಕ್ಕಿಂತ ಪುರುಷನು ಶ್ರೇಷ್ಠ.ಪುರುಷನಿಗಿಂತ ಶ್ರೇಷ್ಠವಾದುದು ಯಾವುದೂ ಇಲ್ಲ.ಅದೇ ಕೊನೆ.ಅದಕ್ಕಿಂತ ಶ್ರೇಷ್ಠವಾದ ಗತಿ.ಎಲ್ಲಾ ಪ್ರಾಣಿಗಳಲ್ಲೂ ಗೂಢವಾಗಿರುವ ಈ ಆತ್ಮನು ಪ್ರಕಾಶಿಸುವುದಿಲ್ಲ.ಆದರೆ ಸೂಕ್ಷ್ಮದಶಿ೯ಗಳು ಏಕಾಗ್ರವಾದ ಸೂಕ್ಷ್ಮವಾದ ಬುದ್ಧಿಯಿಂದ ಆತ್ಮನನ್ನು ನೋಡುತ್ತಾರೆ.

 ವಿವೇಕಿಯು ವಾಕ್ಕನ್ನು ಮನಸ್ಸಿನಲ್ಲಿ ಲಯಮಾಡಿಕೊಳ್ಳಬೇಕು. ಮನಸ್ಸನ್ನು ಪ್ರಕಾಶ ಸ್ವರೂಪವಾದ ಬುದ್ಧಿಯಲ್ಲಿ ಲಯಮಾಡಿಕೊಳ್ಳಬೇಕು.ಬುದ್ಧಿಯನ್ನು ಮಹತ್ ಆತ್ಮನಲ್ಲಿ ಲಯಮಾಡಿಕೊಳ್ಳಬೇಕು.ಮಹತ್ ಆತ್ಮನನ್ನು ಶಾಂತನಾದ ಆತ್ಮನಲ್ಲಿ ಲಯ ಮಾಡಿಕೊಳ್ಳಬೇಕು.

ಉತ್ತಿಷ್ಠತ ಜಾಗ್ರತ ಪ್ರಾಪ್ಯ ವರಾನ್ ನಿಬೋಧತ

ಕ್ಷುರಸ್ಯ ಧಾರಾ ನಿಶಿತಾ ದ್ಯುರತ್ಯಯಾ

ದುಗ೯ಂ ಪಥಸ್ತತ್ ಕವಯೋ ವದಂತಿ|

ಏಳಿರಿ, ಎಚ್ಚರಗೊಳ್ಳಿರಿ,ಶ್ರೇಷ್ಠರಾದ ಆಚಾಯ೯ರನ್ನು ಹೊಂದಿ ತಿಳಿದುಕೊಳ್ಳಿರಿ.ಹರಿತವಾದ ಕತ್ತಿಯ ಅಲಗು ದಾಟಲು ಕಷ್ಟವಾಗಿರುವಂತೆ ಆ ಪಥವು ದುಗ೯ಮವೆಂದು ಜ್ಞಾನಿಗಳು ಹೇಳುತ್ತಾರೆ5.

           ಶಬ್ದ, ಸ್ಪಶ೯,ರೂಪ,ರಸ,ಗಂಧ,ಇವುಗಳಿಲ್ಲದ ಅವ್ಯಯವೂ ನಿತ್ಯವೂ, ಅನಾದಿಯೂ, ಅನಂತವೂ ಆದ ಮಹತ್ತತ್ವಕ್ಕಿಂತ ವಿಲಕ್ಷಣವಾದ ಧ್ರುವನಾದ ಬಹ್ಮತತ್ವವನ್ನು ಅರಿತುಕೊಂಡು ಮೃತ್ಯುಮುಖದಿಂದ ವಿಮುಕ್ತನಾಗುತ್ತಾನೆ.ಮೃತ್ಯುವಿನಿಂದ  ಹೇಳಲ್ಪಟ್ಟ ಸನಾತನವಾದ ನಚೀಕೇತೋಪಾಖ್ಯಾನವನ್ನು ಕೇಳಿ ಮತ್ತು ಹೇಳಿ ಮೇಧಾವಿಯು ಬ್ರಹ್ಮಲೋಕದಲ್ಲಿ ಪೂಜ್ಯನಾಗುತ್ತಾನೆ.

ಎರಡನೆಯ ಅಧ್ಯಾಯ:

ನಾಲ್ಕನೆಯ ವಲ್ಲಿ:

ಸ್ವಯಂಭುವು ಬಹಿಮು೯ಖವಾದ ಇಂದ್ರಿಯಗಳನ್ನು ಹಿಂಸೆ ಮಾಡಿರುತ್ತಾನೆ.ಆದುದರಿಂದ ಮನುಷ್ಯನು ಹೊರಗಡೆ ನೋಡುತ್ತಾನೆ.ಅಂತರಾತ್ಮನನ್ನು ನೋಡುವುದಿಲ್ಲ.ಯಾವನೊ ಒಬ್ಬ ವಿವೇಕಿಯು ಆತ್ಮತತ್ವವನ್ನು ಬಯಸುತ್ತ ಚಕ್ಷುಸ್ಸನ್ನು ಹಿಂದಿರುಗಿಸಿ ಪ್ರತ್ಯಗಾತ್ಮನನ್ನು ನೋಡುತ್ತಾನೆ. ಅಲ್ಪಬುದ್ಧಿಯುಳ್ಳವರು ಹೊರಗಿರುವ ಕಾಮಗಳನ್ನು ಬಯಸುತ್ತಾರೆ.ಅವರು ಸವ೯ವ್ಯಾಪಿಯಾದ ಮೃತ್ಯುವಿನ ಪಾಶವನ್ನು ಹೊಂದುತ್ತಾರೆ.ಆದುದರಿಂದ ವಿವೇಕಿಗಳು ಅನಿತ್ಯವಸ್ತುಗಳಲ್ಲಿ ಕೂಟಸ್ಥನಾದ ಅಮೃತತ್ವವನ್ನು ತಿಳಿದುಕೊಂಡು ಇಲ್ಲಿ ಏನನ್ನೂ ಬಯಸುವುದಿಲ್ಲ.  

ಯಾವ ಆತ್ಮನಿಂದಲೇ ರೂಪವನ್ನೂ ರಸವನ್ನೂ ಗಂzsಗಳನ್ನೂ ಶಬ್ದಗಳನ್ನೂ ಸ್ಪಶ೯ಗಳನ್ನೂ ಮೈಥುನಗಳನ್ನೂ ಅರಿಯುತ್ತಾನೆಯೊ ಆ ಆತ್ಮನಿಗೆ ಇಲ್ಲಿ ಏನು ಉಳಿಯುತ್ತದೆ.?ಇದೇ ಅದು. ಯಾವನಿಂದ ಮನುಷ್ಯನು ಸ್ವಪ್ನದಲ್ಲಿರುವುದು ಜಾಗ್ರದವಸ್ಥೆ ಯಲ್ಲಿರುವುದು ಎಂಬ ಎರಡನ್ನೂ ನೋಡುತ್ತಾನೆಯೊ ಆ ವಿಭುವಾದ ಮಹಾನ್ ಆತ್ಮನನ್ನು ತಿಳಿದುಕೊಂಡು ಧೀರನು ಶೋಕಿಸುವುದಿಲ್ಲ.

ಯಾವನು ಮಧುವನ್ನು ಸೇವಿಸುವ ಜೀವನನ್ನು ಭೂತ ಭವಿಷ್ಯಗಳ ಒಡೆಯನೂ,ಅತ್ಯಂತ ಸಮೀಪದಲ್ಲಿರುವವನೂ ಆದ ಆತ್ಮನೆಂದು ತಿಳಿದುಕೊಂಡಿರುತ್ತಾನೆಯೊ ಅವನು ಅನಂತರ ತನ್ನನ್ನು ಕಾಪಾಡಿಕೊಳ್ಳಲು ಇಚ್ಛಿಸುವುದಿಲ್ಲ.ಇದೇ ಅದು.  ನೀರಿಗಿಂತ ಮೊದಲು ತಪಸ್ಸಿನಿಂದ ಹುಟ್ಟಿರುವ ಮತ್ತು ಹೃದಯವನ್ನು ಪ್ರವೇಶಿಸಿ ಭೂತಗಳೊಂದಿಗೆ ಇರುವ ಹಿರಣ್ಯಗಭ೯ನನ್ನು ಯಾವನು ನೋಡುತ್ತಾನೆಯೋ ಅವನು ಪೂವೊ೯ಕ್ತವಾದ ಬ್ರಹ್ಮವನ್ನೇ ನೋಡುತ್ತಾನೆ.

 ಗಭಿ೯ಣಿಯಿಂದ ಹೇಗೆ ಗಭ೯ವು ಧರಿಸಲ್ಪಡುವದೋ, ಹಾಗೇ ಎರಡು ಅರಣಿಗಳಲ್ಲಿಯೂ ಇಡಲ್ಪಟ್ಟು ಧರಿಸಲ್ಪಟ್ಟಿರುವ ಜಾತವೇದನೆಂಬ ಅಗ್ನಿಯು ಅಪ್ರಮತ್ತರೂ ಹವಿಷ್ಮಂತರೂ ಆದ ಮನುಷ್ಯರಿಂದ ಪ್ರತಿದಿನವೂ ಸ್ತುತ್ಯನಾಗಿರುತ್ತಾನೆ.ಈ ಅಗ್ನಿಯೇ ಪ್ರಕೃತವಾದ ಬ್ರಹ್ಮ.ಅಗ್ನಿಯನ್ನು ಯಜ್ಞದಲ್ಲಿ ಆರಾಧಿಸುವ ಕಮಿ೯ಗಳೂ ಹೃದಯದಲ್ಲಿ ಆರಾಧಿಸುವ ಯೋಗಿಗಳೂ ನಿಜವಾಗಿ ಬ್ರಹ್ಮವನ್ನೇ ಉಪಾಸಿಸುತ್ತಾರೆ ಎಂದಥ೯.

ಯಾವನಿಂದ ಸೂಯ೯ನು ಉದಯಿಸುತ್ತಾನೋ ಮತ್ತು ಯಾವನಲ್ಲಿ ಅಸ್ತಮಿಸುತ್ತದೆಯೋ ಅವನನ್ನು ಎಲ್ಲಾ ದೇವತೆಗಳೂ ಪ್ರವೇಶಿಸುವರು.ಅವನನ್ನು ಯಾವನೂ ಮೀರಲಾರನು.ಇದೇ ಅದು.ಯಾವುದು ಇಲ್ಲಿರುವುದೋ ಅದೇ ಅಲ್ಲಿರುವುದು.ಯಾವುದು ಅಲ್ಲಿರುವುದೋ ಅದೇ ಇಲ್ಲಿಯೂ ಇರುವುದು.ಯಾವನು ಇಲ್ಲಿ ಭಿನ್ನವಾಗಿರುವಂತೆ ನೋಡುತ್ತಾನೆಯೋ ಅವನು ಮೃತ್ಯುವಿನಿಂದ ಮೃತ್ಯುವನ್ನು ಹೊಂದುತ್ತಾನೆ.

"ನೇಹ ನಾನಾಸ್ತಿ ಕಿಂಚನ" ಇಲ್ಲಿ ಏನೂ ಭೇದವಿಲ್ಲ.ಯಾವನು ಇಲ್ಲಿ ಭೇದವಿರುವಂತೆ ನೋಡುತ್ತಾನೆಯೋ ಅವನು ಮ್ರತ್ಯುವಿನಿಂದ ಮೃತ್ಯುವನ್ನು ಹೊಂದುತ್ತಾನೆ6.

ಅಂಗುಷ್ಠ ಪರಿಣಾಮವುಳ್ಳ ಪುರುಷನು ಶರೀರ ಮಧ್ಯದಲ್ಲಿ ಇರುತ್ತಾನೆ.ಅವನು ಭೂತ ಭವಿಷ್ಯಗಳಿಗೆ ಒಡೆಯನು.ಆಮೇಲೆ ತನ್ನನ್ನು ಕಾಪಾಡಿಕೊಳ್ಳಲು ಇಚ್ಛಿಸುವುದಿಲ್ಲ.ಇದೇ ಅದು.ಅಂಗುಷ್ಠ ಪರಿಣಾಮವುಳ್ಳ ಪುರುಷನು ಹೊಗೆಯಿಲ್ಲದ ಜ್ಯೋತಿಯಂತೆ ಇರುತ್ತಾನೆ.ಅವನು ಭೂತ ಭವಿಷ್ಯಗಳಿಗೆ ಒಡೆಯನು.ಇಂದೂ ಅವನೇ ನಾಳೆಯೂ ಅವನೇ.ಇದೇ ಅದು.

 ಎತ್ತರವಾದ ಸ್ಥಳದಲ್ಲಿ ಸುರಿದ ನೀರು (ಮಳೆಯ) ತಗ್ಗಾದ ಗುಡ್ಡಗಳಲ್ಲಿ ಹೇಗೆ  ಹರಿದು ಹೋಗುತ್ತದೆಯೊ, ಅದೇ ರೀತಿಯಲ್ಲಿ ಆತ್ಮರನ್ನು ಭಿನ್ನರೆಂದು ನೋಡುವವನು ಅವರನ್ನೇ ಅನುಸರಿಸುತ್ತಾನೆ.ಹೇಗೆ ಶುದ್ಧವಾದ ನೀರಿನಲ್ಲಿ ಹಾಕಿದ ಶುದ್ಧವಾದ ನೀರು ಅದರಂತೆಯೇ  ಆಗುವುದೊ ಹಾಗೆಯೇ ಅರಿತುಕೊಂಡ ಮುನಿಯು ಆತ್ಮನಾಗುವನು.

ಐದನೆಯ ವಲ್ಲಿ:

             ಅಜನೂ ಅವ್ಯಕ್ತನಾದ ಚೇತಸ್ಸುಳ್ಳವನೂ ಆದ ಆತ್ಮನಿಗೆ ಹನ್ನೊಂದು ದ್ವಾರಗಳಿರುವ ಪುರವು ಇದೆ.ಅ ಪುರಸ್ವಾಮಿಯಾದ ಪರಮೇಶ್ವರನನ್ನು ಧ್ಯಾನಮಾಡಿ ಶೋಕಿಸುವುದಿಲ್ಲ.ಎಲ್ಲ ಆಸೆಗಳಿಂದ ಬಿಡಲ್ಪಟ್ಟು ಮುಕ್ತನಾಗುತ್ತಾನೆ .ಇದೇ ಅದು.ಅವನು ಎಲೆಲ್ಲಿಯೂ ಹೋಗುವನು.ಆಕಾಶದಲ್ಲಿಆದಿತ್ಯರೂಪದಂತೆ ಇರುವನು.ಅಂತರಿಕ್ಷದಲ್ಲಿ ವಾಯು,ವೇದಿಕೆಯ ಮೇಲೆ ಹೋತೃ,ಅತಿಥಿಯಾಗಿ ಕಲಶದಲ್ಲಿರುವನು. ಮನುಷ್ಯರಲ್ಲಿರುವನು, ದೇವತೆಗಳಲ್ಲಿರುವನು.ಯಜ್ಞಾಂಗಗಳ ರೂಪದಲ್ಲಿ ಇರುವನು.ಪವ೯ತಗಳಲ್ಲಿರುವನು.ಅವನು ಸತ್ಯ ಸ್ವರೂಪನು ಬೃಹತ್ತಾದವನು7.

ಆ ಆತ್ಮನು ಪ್ರಾಣವನ್ನು ಮೇಲಕ್ಕೆ ಎತ್ತುತ್ತಾನೆ.ಅಪಾನವಾಯುವನ್ನು ಕೆಳಕ್ಕೆ ಎಸೆಯುತ್ತಾನೆ. ಮಧ್ಯದಲ್ಲಿ ಕುಳಿತಿರುವ ವಾಮನನನ್ನು ಎಲ್ಲಾ ದೇವತೆಗಳೂ ಉಪಾಸಿಸುತ್ತಾರೆ. ಶರೀರದಲ್ಲಿರುವ ಈ ದೇಹಿಯು ಸಡಿಲವಾಗುವಾಗ ಎಂದರೆ ದೇಹದಿಂದ ಮುಕ್ತನಾಗುವಾಗ ಇಲ್ಲಿ ಏನು ಉಳಿಯುತ್ತದೆ.? ಇದೇ ಅದು. ಯಾವ ಮತ್ಯ೯ನೂ ಪ್ರಾಣದಿಂದಾಗಲೀ ಅಪಾನದಿಂದಾಗಲೀ ಜೀವಿಸುವುದಿಲ್ಲ. ಯಾವನಲ್ಲಿ ಇವೆರಡೂ ಜೀವಿಸಿಕೊಂಡಿರುವುವೊ ಅಂಥ ಇನ್ನೊಬ್ಬನಿಂದ ಜೀವಿಸುತ್ತಾನೆ.ಹೇಗೆ ಅಗ್ನಿಯು ಈ ಲೋಕಗಳನ್ನು ಪ್ರವೇಶಿಸಿ ಎಲ್ಲಾರೂಪಗಳಿಗೂ ಪ್ರತಿರೂಪವಾಗಿರುವನು ಮತ್ತು ಹೊರಗೂ ಇರುವನು.ಇದೇ ರೀತಿಯಲ್ಲಿ ವಾಯು ಮತ್ತು ಸೂಯ೯ನಿಗೂ ಅನ್ವಯಿಸುತ್ತದೆ.

ಆತ್ಮನು ಅದ್ವಿತೀಯನು.ವಶಿ(ಎಲ್ಲವನ್ನೂ ತನ್ನ ವಶದಲ್ಲಿಟ್ಟುಕೊಂಡಿರುವುದರಿಂದ ವಶಿ),ಸವ೯ ಪ್ರಾಣಿಗಳ ಅಂತೆರÁತ್ಮ.ಒಂದು ರೂಪವನ್ನು ಬಹುವಿಧವಾಗಿ ಮಾಡಿಕೊಂಡಿರುತ್ತಾನೆ.ಆತ್ಮದಲ್ಲಿ ಚೈತನ್ಯ ರೂಪದಿಂದ ಇರುವ ಅವನನ್ನು ಯಾವ ವಿವೇಕಿಗಳು ನೋಡುತ್ತಾರೆಯೋ ಅವರಿಗೆ ಶಾಶ್ವತವಾದ ಸುಖವು.ಇತರರಿಗಲ್ಲ.ಅವನು ಅನಿತ್ಯ ವಸ್ತುಗಳಲ್ಲಿ ನಿತ್ಯ.ಚೇತನರಿಗೆ ಚೈತನ್ಯ.ಒಬ್ಬನೇ ಆಗಿದ್ದರೂ ಬಹುಜೀವರಿಗೆ ಕಮ೯ಫಲವನ್ನು ಕೊಡುತ್ತಾನೆ.ಆತ್ಮದಲ್ಲಿರುವ ಅವನನ್ನು ಯಾವ ವಿವೇಕಿಗಳು ನೋಡುತ್ತಾರೋ ಅವರಿಗೇ ಶಾಶ್ವತವಾದ ಶಾಂತಿ.ಇತರರಿಗಲ್ಲ8.

"ನ ತತ್ರ ಸೂಯೋ೯ಭಾತಿ ನ ಚಂದ್ರ ತಾರಕಂ"

 ಅಲ್ಲಿ ಸೂಯ೯ನಾಗಲಿ,ಚಂದ್ರನಾಗಲಿ,ನಕ್ಷತ್ರಗಳಾಗಲಿ ಪ್ರಕಾಶಿಸುವುದಿಲ್ಲ.ಆ ಮಿಂಚುಗಳೂ ಪ್ರಕಾಶಿಸುವುದಿಲ್ಲ.ಈ ಅಗ್ನಿಯು ಪ್ರಕಾಶಿಸುವುದೆಲ್ಲಿ? ಪ್ರಕಾಶಿಸುತ್ತಿರುವ ಅವನನ್ನೇ ಅನುಸರಿಸಿ  ಎಲ್ಲವೂ ಪ್ರಕಾಶಿಸುತ್ತವೆ.ಅವನ ಪ್ರಕಾಶದಿಂದಲೇ ಇದೆಲ್ಲವೂ ಪ್ರಕಾಶಿಸುತ್ತಿರುವುದು.

ಆರನೆಯ ವಲ್ಲಿ:

     ಮೇಲೆ ಬುಡವಿರುವ ಕೆಳಗೆ ಶಾಖೆಗಳಿರುವ ಈ ಅಶ್ವತ್ಥವು ಸನಾತನವಾದುದು.ಅದೇ ಶುದ್ಧವಾದುದು.ಅದೇ ಅಮೃತ ಅದೇ ಬ್ರಹ್ಮ ಎಂದು ಹೇಳಲ್ಪಡುತ್ತದೆ.ಎಲ್ಲಾ ಲೋಕಗಳೂ ಅದರಲ್ಲಿ ಆಶ್ರಯವನ್ನು ಹೊಂದಿವೆ.ಅದನ್ನು ಯಾವನೂ ಮೀರಲಾರನು.ಇದೇ ಅದು.

ಇದರ ಭಯದಿಂದ ಅಗ್ನಿಯು ಸುಡುತ್ತಾನೆ.ಸೂಯ೯ನು ಪ್ರಕಾಶಿಸುತ್ತಾನೆ.ಇಂದ್ರ ಮತ್ತು ವಾಯುವು ತಮ್ಮ ತಮ್ಮ ಕೆಲಸಗಳನ್ನು ಮಾಡುತ್ತಾರೆ.ಐದನೆಯವನಾದ ಯಮನೂ ಸಹ ಓಡುತ್ತಾನೆ.ಪರಮೇಶ್ವರನ ಭಯದಿಂದಲೇ ಲೋಕಪಾಲಕರೆಲ್ಲರೂ ತಮ್ಮ ತಮ್ಮ ಕತ೯ವ್ಯಗಳಲ್ಲಿ ತೊಡಗಿರುವರು.

    ಶರೀರಪಾತಕ್ಕೆ ಮೊದಲು ಇಲ್ಲಿಯೇ ಬ್ರಹ್ಮವನ್ನು ತಿಳಿದುಕೊಳ್ಳಲು ಶಕ್ತನಾದರೆ ಸಂಸಾರ ಬಂಧನದಿಂದ ಮುಕ್ತನಾಗುತ್ತಾನೆ.ಹಾಗೆ ತಿಳಿದುಕೊಳ್ಳಲು ಶಕ್ತನಾಗದಿದ್ದರೆ ಅದರಿಂದ ಸ್ವಗ೯ಲೋಕಗಳಲ್ಲಿ (ಪ್ರಾಣಿಗಳು ಸೃಷ್ಟಿಯಾಗುವ ಲೋಕಗಳಲ್ಲಿ)ಶರೀರವನ್ನು ಹೊಂದಲು ಶಕ್ತನಾಗುವನು. ಕನ್ನಡಿಯಲ್ಲಿ (ತನ್ನ ಮುಖವೇ ಮೊದಲಾದವು ಸ್ಪಷ್ಟವಾಗಿ ಕಾಣುವಂತೆ) ಆತ್ಮದಶ೯ನವು ಸ್ಪಷ್ಟವಾಗಿರುತ್ತದೆ.ಸ್ವಪ್ನದಲ್ಲಿ (ವಸ್ತುಗಳು ಅಸ್ಪಷ್ಟವಾಗಿ ಕಾಣುವಂತೆ)ಪಿತೃಲೋಕದಲ್ಲಿ ಆತ್ಮದಶ೯ನವು ಅಸ್ಪಷ್ಟವಾಗಿರುತ್ತದೆ.ನೀರಿನಲ್ಲಿ(ಪ್ರತಿಬಿಂಬವು ಅಸ್ಪಷ್ಟವಾಗಿಕಾಣುವಂತೆ)ಗಂಧವ೯ಲೋಕದಲ್ಲಿ ಆತ್ಮದಶ೯ನವು ಅಸ್ಪಷ್ಟವಾಗಿರುತ್ತದೆ. ಬ್ರಹ್ಮಲೋಕದಲ್ಲಿ ನೆರಳು ಬಿಸಿಲುಗಳಂತೆ ಆತ್ಮದಶ೯ನವು ಸ್ಪಷ್ಟವಾಗಿರುತ್ತದೆ.

ಇಂದ್ರಿಯಗಳಿಗಿಂತ ಮನಸ್ಸು ಶÉ್ರೀಷ್ಠ.ಮನಸ್ಸಿಗಿಂತ ಬುದ್ಧಿಯು ಶ್ರೇಷ್ಠ. ಬುದ್ಧಿಗಿಂತ  ಮಹತ್ ಎಂಬ ಆತ್ಮನು ಅಧಿಕನು.ಮಹತ್ತಿಗಿಂತ ಅವ್ಯಕ್ತವು ಉತ್ತಮವು. ಅವ್ಯಕ್ತಕ್ಕಿಂತ ಪುರುಷನು ಶ್ರೇಷ್ಠನು.ಅವನನ್ನು ಅರಿತುಕೊಂಡು ಜೀವಿಯು ಮುಕಕ್ತನಾಗುತ್ತಾನೆ. ಇವನ ರೂಪವು ದೃಗ್ಗೋಚರವಾಗುವುದಿಲ್ಲ.ಇವನನ್ನು ಯಾವನೂ ಕಣ್ಣಿನಿಂದ ನೋಡಲಾರನು.ಮನಸ್ಸನ್ನು ನಿಯಮಿಸುವ ಬುದ್ಧಿಯಿಂದ.ಮನನ ರೂಪವಾದ ಸಮ್ಯಕ್ ದಶ೯ನದಿಂದ ಆತ್ಮನು ಪ್ರಕಾಶಿತನಾದರೆ ಅವನನ್ನು ಆಗ ಅರಿಯುತ್ತಾನೆ.ಯಾರು ಇದನ್ನು ತಿಳಿದುಕೊಳ್ಳುತ್ತಾರೆಯೋ ಅವರು ಅಮೃತರಾಗುತ್ತಾರೆ.

    ಯಾವಾಗ ಪಂಚ ಜ್ಞಾನೇಂದ್ರಿಯಗಳು ಮನಸ್ಸಿನೊಂದಿಗೆ ಶಾಂವಾಗುವವೋ ಬುದ್ಧಿಯು ಅಲ್ಲಾಡುವುದಿಲ್ಲವೋ ಅದನ್ನು 'ಪರಮಗತಿ' ಎಂದು ಹೇಳುತ್ತಾರ.ಸ್ಥಿರವಾದ ಇಂದ್ರಿಯಧಾರಣೆ ಎಂಬ ಅವಸ್ಥೆಯನ್ನೇ ಯೋಗವೆಂದು ಹೇಳುತ್ತಾರೆ.ಆಗ ಪ್ರಮಾದವಿಲ್ಲದವನಾಗಿ ಇರುತ್ತಾನೆ. ಏಕೆಂದರೆ ಯೋಗಕ್ಕೆ ಉತ್ಪತ್ತಿನಾಶಗಳುಂಟು.

   ಬ್ರಹ್ಮವು ಮಾತಿನಿಂದಾಗಲೀ ಮನಸ್ಸಿನಿಂದಾಗಲೀ ಕಣ್ಣಿನಿಂದಾಗಲೀ ಹೊಂದಲು ಶಕ್ಯವಲ್ಲ.ಇದ್ದಾನೆ ಎಂದು ಹೇಳುವವನನ್ನು ಬಿಟ್ಟುಇತರರಲ್ಲಿ ಅದು ಹೇಗೆ ಲಭ್ಯವಾಗುವುದು.'ಇದ್ದಾನೆ' ಎಂದೇ ತಿಳಿಯತಕ್ಕದ್ದು.ತತ್ವ ಭಾವದಿಂದಲೂ ತಿಳಿಯತಕ್ಕದ್ದು. ಈತನ ಬುದ್ಧಿಯನ್ನು ಆಶ್ರಯಿಸಿಕೊಂಡಿರುವ ಕಾಮಗಳೆಲ್ಲ ಯಾವಾಗ ನಾಶವಾಗುವವೊ ಆಗ ಮತ್ಯ೯ನು ಅಮೃತನಾಗುತ್ತಾನೆ.ಇಲ್ಲಿಯೇ ಬ್ರಹ್ಮವನ್ನು ಹೊಂದುತ್ತಾನೆ.ಕಾಮದಿಂದಲೇ ಮನುಷ್ಯನಿಗೆ ಜನ್ಮಾಂತರಗಳು ಉಂಟಾಗುತ್ತವೆ೯.

           "ಯದಾ ಸವೇ೯ಪ್ರಭಿದ್ಯಂತೇ ಹೃದಯಸ್ಯೇವ ಗ್ರಂಥಯಃ"

ಯಾವಾಗ ಬುದ್ಧಿಯ ಗ್ರಂಥಿಗಳೆಲ್ಲ ಇಲ್ಲಿಯೇ ನಾಶವಾಗುವವೊ ಆಗ ಮತ್ಯ೯ನು ಅಮೃತನಾಗುವನು.ಇಷ್ಟೇ ಉಪದೇಶವು.ಬ್ರಹ್ಮವನ್ನು ಅರಿತವನು ಬ್ರಹ್ಮವೇ ಆಗುತ್ತಾನೆ10. (ಚಿತ್+ಜಡ= ಚಿಜ್ಜಡಗ್ರಂಥಿ)."ಈ ಶರೀರ ನಾನು" "ನಾನು ಸುಖಿ" ಮೊದಲಾದ ಅವಿದ್ಯೆಯ ಪ್ರತ್ಯಯಗಳು.

ಹೃದಯಕ್ಕೆ ನೂರೊಂದು ನಾಡಿಗಳಿವೆ.ಅವುಗಳಲ್ಲಿ ಒಂದು ನೆತ್ತಿಯನ್ನು ಭೇದಿಸಿಕೊಂಡು ಹೊರಟಿರುವುದು. ಅದರ ಮೂಲಕ ಮೇಲಕ್ಕೆ ಹೋಗುವವನು ಅಮೃತತ್ವವನ್ನು ಪಡೆಯುತ್ತಾನೆ. ಎಲ್ಲ ಕಡೆಯಲ್ಲಿಯೂ ಹರಡಿರುವ ಇತರ ನಾಡಿಗಳು ಸಂಸಾರಕ್ಕೆ ಕಾರಣವಾಗುತ್ತವೆ.

ಅಂಗುಷ್ಠಮಾತ್ರ ಪರಿಣಾಮವುಳ್ಳವನೂ ಅಂತರಾತ್ಮನೂ ಆದ ಪುರುಷನು ಜನರ ಹೃದಯದಲ್ಲಿ ಯಾವಾಗಲೂ ಇರುತ್ತಾನೆ. ಮುಂಜವೆಂಬ ಹುಲ್ಲಿನಿಂದ ದಂಟನ್ನು ತೆಗೆಯುವಂತೆ ಅವನನ್ನು ತನ್ನ ಶರೀರ ಬೇಪ೯ಡಿಸಿ, ಅವನನ್ನು ಶುದ್ಧನೆಂದೂ ಅಮೃತನೆಂದೂ ತಿಳಿದುಕೊಳ್ಳಬೇಕು.

 ಅನಂತರ ನಚೀಕೇತನು ಮೃತ್ಯುವಿನಿಂದ (ಯಮನಿಂದ) ಹೇಳಲ್ಪಟ್ಟ ಈ ಬ್ರಹ್ಮವಿದ್ಯೆಯನ್ನು ಸಂಪೂಣ೯ವಾದ ಯೋಗವಿಧಿಯನ್ನು ಹೊಂದಿ ವಿಗತರಜನಾಗಿ(ವಿರಕ್ತನಾಗಿ) ಬ್ರಹ್ಮವನ್ನು ಪಡೆದುಕೊಂಡನು.ಮತ್ತೊಬ್ಬ ಯಾವನು ಅಧ್ಯಾತ್ಮವನ್ನು ಹೀಗೆ ತಿಳಿದುಕೊಳ್ಳುತ್ತಾನೆಯೊ ಅವನು ಮುಕ್ತನಾಗುವನು.

ಪ್ರಶ್ನೋಪನಿಷತ್ತು ಹಾಗೂ ಅದ್ವೈತ:

ಪ್ರಶ್ನೋಪನಿಷತ್ತು ಅಥವ೯ ವೇದಕ್ಕೆ ಸೇರಿದೆ.ಶ್ರೀಶಂಕರಾಚಾಯ೯ರು ಈ ಉಪನಿಷತ್ತಿನ  ಭಾಷ್ಯದಲ್ಲಿ ಮುಂಡಕವನ್ನು ಮಂತ್ರವೆಂದೂ ,ಪ್ರಶ್ನವನ್ನು ಬ್ರಾಹ್ಮಣವೆಂದೂ ಕರೆದಿದ್ದಾರೆ.ಇದು ಆರು ಪ್ರಶ್ನೆಗಳನ್ನು ಒಳಗೊಂಡಿದೆ.ಈ ಉಪನಿಷತ್ತು ಪ್ರಶ್ನೋತ್ತರ ರೂಪವಾಗಿರುವುದರಿಂದ ಇದಕ್ಕೆ ಪ್ರಶ್ನೋಪನಿಷತ್ ಎಂದು ಹೆಸರು ಬಂದಿದೆ.ಪಿಪ್ಪಿಲಾದನು ಶಿಷ್ಯರಿಗೆ ಉಪದೇಶ ಮಾಡುವ ಆಚಾಯ೯.

      ಕಬಂಧೀಕಾತ್ಯಾಯನನ ಪ್ರಶ್ನೆಯು ಹೀಗಿದೆ.ಈ ಜಗತ್ತಿಗೆ ಮೂಲವು ಯಾವುದು?

ಪ್ರಜಾಪತಿಯೇ ಸೃಷ್ಟಿಗೆ ಮೂಲಕಾರಣನು.ಅವನು ಮೊದಲು ರಯಿ-ಪ್ರಾಣ ಎಂಬ ಎರಡು ಮಿಥುನಗಳನ್ನು ಸೃಷ್ಟಿಸಿದನು.ರಯಿ ಎಂದರೆ ಚಂದ್ರ(ಸೋಮ)ಮೂತಾ೯ಮೂತ೯ದಲ್ಲಿರುವ ಭೌತದ್ರವ್ಯ.ಪ್ರಾಣ ಎಂದರೆ ಅಗ್ನಿ ಅಥವಾ ಸೂಯ೯.ಮ್ಯಾಕ್ಸ ಮುಲ್ಲರ್ ಮುಂತಾದವರು ಇವೆರಡನ್ನು ಇಂಗ್ಲಿಷ್ ನಲ್ಲಿ 'ಮ್ಯಾಟರ್' ಮತ್ತು 'ಸ್ಪಿರಿಟ್' ಎಂದು ಕರದರು.ಇವೆರಡರ ಸಂಯೋಗದಿಂದ ಜಗತ್ತಿನ ವಿವಿಧ ವಸ್ತುಗಳು ಉತ್ಪತ್ತಿಯಾದವು.ಈ ಮಿಥುನ ಕಾರಣದಿಂದ ಪ್ರಜಾಪತಿಯು ಹಿರಣ್ಯಗಭ೯ನೆಂದು ಶಂಕರರು ಹೇಳುತ್ತಾರೆ.

ಎರಡನೆಯ ಪ್ರಶ್ನೆ ಭಾಗ೯ವ ವೈದಭ೯ನದು.ದೇಹದಲ್ಲಿರುವ ಇಂದ್ರಿಯಗಳಿಗೂ  ಮುಖ್ಯ ಪ್ರಾಣನಿಗೂ ಇರುವ ಸಂಬಂಧವನ್ನು ತೋರಿಸಲು ಬಂದಿದೆ.ಮುಖ್ಯ ಪ್ರಾಣನಿಗೆ ಧಾರಕತ್ವ,ಪ್ರಕಾಶತ್ವ,ಶ್ರೇಷ್ಠತ್ವವೇ ಮೊದಲಾದ ಗುಣಗಳಿವೆಯೆಂದು ತೋರಿಸಲು ಒಂದು ಆಖ್ಯಾಯಿಕೆಯನ್ನು ಹೇಳಿದೆ.

ಒಂದುಸಲ ಶರೀರದ ಆಕಾರವನ್ನು ಹೊಂದಿರುವ ಪಂಚಭೂತಗಳಿಗೂ ಮತ್ತು ಇಂದ್ರಿಯಗಳಿಗೂ ತಮ್ಮ ಆಧಾರದಿಂದಲೇ ಶರೀರವು ನಿಂತಿದೆಯೆಂದು ಅಹಂಕಾರ ಉಂಟಾಯಿತು.ಆಗ ಮುಖ್ಯಪ್ರಾಣನು ತಾನು ಸ್ವಲ್ಪ ಶರೀರವನ್ನು ಬಿಟ್ಟು ಹೊರಗೆ ಬಂದಂತೆ ಮಾಡಿದನು.ಪ್ರಾಣನು ನಿಲ್ಲಲು ತಾವೂ ನಿಲ್ಲಬೇಕಾಯಿತು.ಪ್ರಾಣನೆ ತಮ್ಮೆಲ್ಲರಿಗಿಂತ ಶ್ರೇಷ್ಠನೆಂದು ತಿಳಿದುಕೊಂಡು ಪ್ರಾಣನನ್ನು ಸ್ತುತಿಸಿದರು.ಈ ಪ್ರಾಣವೇ ಪ್ರಜಾಪತಿ.

ಮೂರನೆಯ ಪ್ರಶ್ನೆ ಕೌಸಲ್ಯ ಆಶ್ವಲಾಯನನದು.ಪ್ರಾಣನ ಉತ್ಪತ್ತಿ ಸ್ವರೂಪಗಳನ್ನು ನಿಣ೯ಯಿಸಲು ಈ ಪ್ರಶ್ನೆಯು ಬಂದಿದೆ.ಈ ಪ್ರಶ್ನೆಯಲ್ಲಿ ಆರು ಭಾಗಗಳಿವೆ.

1) ಪ್ರಾಣನು ಯಾವುದರಿಂದ ಹುಟ್ಟುವನು?

2)ಈ ಶರೀರಕ್ಕೆ ಹೇಗೆ ಬರುವನು?

3) ತನ್ನನ್ನು ವಿಭಾಗಿಸಿಕೊಂಡು ಯಾವಪ್ರಕಾರದಲ್ಲಿ ಇರುವನು?

4)ಮರಣ ಕಾಲದಲ್ಲಿ ಯಾವುದರಿಂದ ಉತ್ಕ್ರಮಿಸುವನು?

5)ಅವನು ಹೊರಗೆ ಹೇಗಿರುವನು?

6)ಅವನು ಒಳಗೆ ಹೇಗಿರುವನು?

1)   ಪ್ರಾಣನು ಪರಮಪುರಷ ನಿಂದಲೇ ಹುಟ್ಟುತ್ತಾನೆ.

2)  ನೆರಳು ಮನುಷ್ಯನನ್ನು ಅನುಸರಿಸುವಂತೆ ಅವನ ಸಂಕಲ್ಪ,ಇಚ್ಛೆ ಮೊದಲಾದವುಗಳಿಂದ ಉಂಟಾಗುವ ಕಮ೯ವೆಂಬ ನಿಮಿತ್ತದಿಂದ ಶರೀರವನ್ನೇ ಪ್ರವೇಶಿಸುತ್ತಾನೆ.

3)ರಾಜನು ತನ್ನ ಅಧಿಕಾರಿಗಳನ್ನು ಬೇರೆ ಬೇರೆ ಪ್ರದೇಶಗಳಲ್ಲಿ ತನ್ನ ಪರವಾಗಿ ಆಳಲು ನೇಮಿಸುವಂತೆ ಮುಖ್ಯ ಪ್ರಾಣನು ಅಪಾನ_ವ್ಯಾನಾದಿಗಳ ಮೂಲಕ ಶರೀರದ ಕ್ರಿಯೆಯನ್ನು ನಡೆಸುತ್ತಾನೆ.ಪ್ರಾಣಿಗಳನ್ನು ಕುರಿತು ಶರೀರ ವಿಜ್ಞಾನವು ಪ್ರಾಚೀನ ಋಷಿಗಳಿಗೆ ತಿಳಿದಿತ್ತೆಂದು ಇದರಿಂದ ಸ್ಪಷ್ಟವಾಗುತ್ತದೆ.

4)ಹೃದಯದಲ್ಲಿ ನಾಡಿಗಳಿವೆ.ಇವುಗಳಲ್ಲಿ ಒಂದು ನಾಡಿಯಿಂದ ಉದಾನ ವಾಯುವು ಜೀವವನ್ನು ಒಯ್ಯುತ್ತದೆ.ಪುಣ್ಯ ಮಾಡಿದ್ದರೆ ಪುಣ್ಯಲೋಕಕ್ಕೆ ಹೋಗುವನು.ಪಾಪ ಮಾಡಿದ್ದರೆ ನರಕಕ್ಕೆ ಹೋಗುವನು.ಪುಣ್ಯ ಪಾಪಗಳೆರಡನ್ನೂ ಮಾಡಿದ್ದರೆ  ಮನುಷ್ಯ ಲೋಕದಲ್ಲಿ ಹುಟ್ಟುವನು.

5)ಪ್ರಾಣನು ಹೊರಗೆ ಆದಿತ್ಯ ರೂಪದಿಂದ ಇದ್ದುಕೊಂಡು ಚಕ್ಷುವೇ ಮೊದಲಾದ ಇಂದ್ರಿಯಗಳಿಗೆ ಬೆಳಕನ್ನು ಒದಗಿಸುತ್ತಾನೆ.ಪ್ರಾಣನೇ ಆದಿತ್ಯನು.

6)ಪ್ರಾಣನು ಒಳಗೆ ಪಂಚಪ್ರಾಣಗಳ ರೂಪದಲ್ಲಿ ಎಂದರೆ ಪ್ರಾಣ,ಅಪಾನ,ವ್ಯಾನ,ಉದಾನ,ಸಮಾನ ರೂಪದಲ್ಲಿ ಇರುವನು.

ನಾಲ್ಕನೆಯ ಪ್ರಶ್ನೆಯನ್ನು ಸೌಯಾ೯ಯಣೀ ಗಾಗ್ಯ೯ನು  ಪುರುಷನ ಸ್ವಪ್ನ ಪ್ರಪಂಚವನ್ನು ಕುರಿತು ಕೇಳುತ್ತಾನೆ.ವಿಷಯೇಂದ್ರಿಯ ಸಮೂಹವೆಲ್ಲವೂ ತಮ್ಮತಮ್ಮ ವ್ಯಾಪಾರಗಳನ್ನು ತ್ಯಜಿಸಿ ಮನಸ್ಸಿನಲ್ಲಿ ಲಯವಾದಾಗ ಮನುಷ್ಯನು ನಿದ್ರಿಸುತ್ತಾನೆ ಎಂದು ಜನರು ಹೇಳುವರು.

ಆಗಲೂ ಕೂಡ ಪ್ರಾಣಗಳು ಎಚ್ಚೆತ್ತಿರುವುವು (ಕೆಲಸ ಮಾಡುತ್ತಿರುವವು.)ಕನಸನ್ನು ನೋಡುವವನು ಜೀವಾತ್ಮ ಅಥವಾ ಕ್ಷೇತ್ರಜ್ಞ.ಸಮಸ್ತ ಕಾಯ೯ಕಾರಣಗಳು ಪರಮಾತ್ಮನಲ್ಲಿ ಸೇರಿದಾಗ ಜೀವನು ಕನಸುಗಳನ್ನು ನೋಡುವುದಿಲ್ಲ.ಪಕ್ಷಿಗಳು ಗೂಡನ್ನು ಸೇರುವಂತೆ ಜೀವನೂ ಕೂಡ ಪರಮಾತ್ಮನನ್ನು ಸೇರಿಕೊಳ್ಳುತ್ತಾನೆ.ಸಮಸ್ತ ನಾಮ_ರೂಪ_ರಸಗಳೆಂಬ ಉಪಾಧಿಗಳಿಂದ ಮುಕ್ತನಾದ ಅಕ್ಷರವನ್ನು ಅರಿತುಕೊಂಡು ಸವ೯ಜ್ಞನೂ ಸವ೯ವೂ ಆಗುತ್ತಾನೆ.

ಮರಣಕಾಲದವರೆಗೂ ಓಂಕಾರವನ್ನು ಧ್ಯಾನಿಸುವವನಿಗೆ ಯಾವ ಲೋಕವು ಲಭಿಸುತ್ತದೆ.? ಇದು ಶೈಬ್ಯ ಸತ್ಯಕಾಮನ ಪ್ರಶ್ನೆ.ಓಂಕಾರದ ಉಪಾಸನೆಯು ಮೋಕ್ಷದ ಒಂದು ಪ್ರಧಾನ ಸಾಧನ.ಓಂಕಾರವೇ ಪರಬ್ರಹ್ಮವೂ ಅಪರ ಬ್ರಹ್ಮವೂ ಆಗಿದೆ.ಯಾರು ಯಾವ ಜ್ಞಾನದಿಂದ ಉಪಾಸನೆ ಮಾಡುವರೋ ಅವರು ಆಯಾ ಫಲವನ್ನು ಪಡೆಯುತ್ತಾರೆ.ಓಂಕಾರಕ್ಕೆ ಮೂರುಮಾತ್ರೆಗಳು.ಮೂರು ಮಾತ್ರೆಗಳಿಂದ ಮಾಡಿದ ಓಂಕಾರವನ್ನು ಉಪಾಸನೆ ಮಾಡುವವನು ಬ್ರಹ್ಮಲೋಕವನ್ನೇ ಪಡೆಯುತ್ತಾನೆ.

ಸುಕೇಶ ಭರದ್ವಾಜನ ಪ್ರಶ್ನೆ ಇದು.ಹದಿನಾರು ಕಲೆಗಳಿಂದ ಕೂಡಿದ ಪುರುಷನು ಯಾರು? ಈ ಪುರುಷನು ಹೃದಯದಲ್ಲಿಯೆ ಇದ್ದಾನೆ.ಪ್ರಾಣ,ಶ್ರದ್ಧೆ,ಆಕಾಶ,ವಾಯು,ಜ್ಯೋತಿ, ನೀರು, ಪೃಥ್ವಿ,ಇಂದ್ರಿಯ,ಮನಸ್ಸು ಅನ್ನ,ವೀಯ೯,ತಪಸ್ಸು,ಮಂತ್ರಗಳು,ಕಮ೯,ಲೋಕಗಳು ಮತ್ತು ನಾಮ ಇವೇ ಪುರುಷನ ಹದಿನಾರು ಕಲೆಗಳು.ನದಿಗಳು ಸಮುದ್ರವನ್ನು ಸೇರಿದ ಮೇಲೆ ತಮ್ಮ ನಾಮ ರೂಪಗಳನ್ನು ಬಿಟ್ಟು ಸಮುದ್ರವೆಂದು ಹೇಳಲ್ಪಡುವಂತೆ ,ಈ ಕಲೆಗಳು ಪುರುಷನನ್ನು ಹೊಂದಿದ ಮೇಲೆ ನಾಮ ರೂಪಗಳನ್ನು ಬಿಡುವವು.ಸಕಲನಾದ ಪುರುಷನು ನಿಷ್ಕಲನೂ ಅಮೃತನೂ ಆಗುವನು.ಇವನೆ ಪರಬ್ರಹ್ಮ ಅಥವಾ ಪರಮಪುರುಷ.ಕಲಾಕಲಾಪವು ತೋರುತ್ತಾ ಇರುವಾಗಲೂ ಅವುಗಳು ನಿಜವಾಗಿ ಇಲ್ಲವೆಂದು ತೋರಿದ ಬಳಿಕವೂ ಎಂದೆಂದಿಗೂ ಅಪ್ಪಟ ನಿಷ್ಕಲ ಎಂದು ನಿಶ್ಚಯಿಸಬೇಕು.ಸೃಷ್ಟಿ ಎಂದರೆ ಸ್ಥೂಲದಿಂದ ಸೂಕ್ಷ್ಮಕ್ಕೆ ಇಳಿಯುವುದು.

ಹೇ ದೇವತೆಗಳೆ,ಮಂಗಳವಾದುದನ್ನೇ ಕಿವಿಗಳಿಂದ ಕೇಳುವ; ಹೇ ಪೂಜಾಹ೯ರೆ, ಕಣ್ಣುಗಳಿಂದ ಪವಿತ್ರವಾದುದನ್ನು ನೋಡುವ;ಧೃಡವಾದ ಅವಯವಗಳಿಂದಲೂ ಮತ್ತು ಶರೀರಗಳಿಂದಲೂ ಕೂಡಿ,(ನಿಮ್ಮನ್ನು)ಸ್ತುತಿಸುವವರಾಗಿ ದೇವನಿಂದ ವಿಧಿಸಲ್ಪಟ್ಟ ಪೂಣ೯ವಾದ ಆಯುಸ್ಸನ್ನು ಹೊಂದುವ.

              ಓಂ ಶಾಂತಿಃ ಓಂಶಾತಿಃ ಓಂ ಶಾಂತಿಃ

   ಆದಿತ್ಯನೇ ಪ್ರಾಣ,ಚಂದ್ರನೇ ರಯಿ ಅಥವಾ ಮೂತ೯ ಮತ್ತು ಅಮೂತ೯,ಇವೆಲ್ಲವೂ ರಯಿ.ಅಮೂತ೯ಕ್ಕಿಂತ ಭಿನ್ನವಾದ ಮೂತ೯ವೆ ರಯಿ.ಇಂದ್ರಿಯಗಳಿಂದಲೂ,ಬ್ರಹ್ಮಚಯ೯ದಿಂದಲೂ ಶ್ರದ್ಧೆಯಿಂದಲೂ,ವಿದ್ಯೆಯಿಂದಲೂ ಆತ್ಮನನ್ನು ಅನ್ವೇಶಿಸಿ ಉತ್ತರ ಮಾಗ೯ದಿಂದ ಆದಿತ್ಯ ಲೋಕವನ್ನು ಹೊಂದುತ್ತಾರೆ.ಇದೇ ಪ್ರಾಣಿಗಳಿಗೆ ಆಶ್ರಯವು.ಇದು ಅಮೃತವು,ಅಭಯವು,ಇದು ಪರಮಗತಿ.ಇದರಿಂದ ಹಿಂದಿರುಗುವುದಿಲ್ಲ.ಏಕೆಂದರೆ ಇದು ಅಜ್ಞಾನಿಗಳಿಗೆ ತಡೆ.ಅನ್ನವೇ ಪ್ರಜಾಪತಿಯು.ಅದರಿಂದಲೇ ರೇತಸ್ಸು ಉತ್ಪನ್ನವಾಗುತ್ತದೆ.ಅದರಿಂದಲೇ ಪ್ರಜೆಗಳು ಹುಟ್ಟುತ್ತಾರೆ.

 ಯಾರಲ್ಲಿ ಕುಟಿಲತೆಯಾಗಲೀ ಅನೃತವಾಗಲೀ,ಇಲ್ಲವೊ ಅಂಥವರಿಗೇ ಈ ತಮಸ್ಸಿಲ್ಲದ ಬ್ರಹ್ಮಲೋಕ.

            "ಅರಾ ಇವ ರಥನಾಭೌ ಪ್ರಾಣೇ ಸವ೯ಂ ಪ್ರತಿಷ್ಠಿತಂ"

ರಥಚಕ್ರದ ಗುಂಬದಲ್ಲಿ ಅರೆಕಾಲುಗಳು ಸೇರಿಕೊಂಡಿರುವಂತೆ ಎಲ್ಲವೂ ಪ್ರಾಣದಲ್ಲಿ ಪ್ರತಿಷ್ಠಿತವಾಗಿದೆ1.ಋಕ್ಕುಗಳು,ಯಜಿಸ್ಸುಗಳು,ಸಾಮಗಳು,ಇವುಗಳಿಂದ ಆಗುವ ಯಜ್ಞ,ಎಲ್ಲರನ್ನೂ ಕಾಪಾಡುವ ಕ್ಷತ್ರಿಯ ಜಾತಿ,ಯಜ್ಞಾದಿಕಮ೯ಗಳಿಗೆ ಅಧಿಕಾರಿಯಾದ ಬ್ರಾಹ್ಮಣ ಜಾತಿ ಇವೆಲ್ಲವೂ ಪ್ರಾಣದಲ್ಲಿ ಪ್ರತಿಷ್ಠಿತವಾಗಿವೆ.

        ಇದೆಲ್ಲವೂ ಪ್ರಾಣನ ವಶದಲ್ಲಿಯೇ ಇರುವುದು.ಯಾವುದು ದ್ಯುಲೋಕದಲ್ಲಿ ಪ್ರತಿಷ್ಠಿತವಾಗಿದೆಯೊ  ಅದೂ ಪ್ರಾಣನ ವಶದಲ್ಲಿಯೇ ಇರುವುದು.ತಾಯಿಯು ಮಕ್ಕಳನ್ನು ರಕ್ಷಿಸುವಂತೆ ನಮ್ಮನ್ನು ರಕ್ಷಿಸು.ಶ್ರೀಗಳನ್ನೂ ಪ್ರಜೆಗಳನ್ನೂ ನಮಗೆಕೊಡು.

ಆದಿತ್ಯನೇ ಅಧಿದೈವತವಾದ ಹೊರಗಿನ ಪ್ರಾಣನು.ಏಕೆಂದರೆ ಇವನು ಈ ಕಣ್ಣಿನಲ್ಲಿರುವ ಪ್ರಾಣವನ್ನು ಅನುಗ್ರಹಿಸುತ್ತ ಉದಯಿಸುತ್ತಾನೆ.ಮಧ್ಯದಲ್ಲಿರುವ ಆಕಾಶವೆ ಸಮಾನವು.ಸಾಮಾನ್ಯವಾಗಿ ಹೊರಗಿರುವ ವಾಯುವೇ ವ್ಯಾನವು.ತೇಜಸ್ಸೇ ಉದಾನವು. ಪ್ರಾಣನ ಉತ್ಪತ್ತಿ,ಶರೀರಕ್ಕೆ ಅವನ ಆಗಮನ,ಪಾಯೋಪಸ್ಥಗಳಲ್ಲಿ ಅವನ ಸ್ಥಾನ,ಅವನ ಐದು ಬಗೆಯ ವಿಭುತ್ವ ಮತ್ತು ಅಧ್ಯಾತ್ಮ ಇವುಗಳನ್ನು ಅರಿತುಕೊಂಡು ಅಮೃತವನ್ನು ಹೊಂದುತ್ತಾನೆ.

    ಪಿಪ್ಪಿಲಾದನು ಹೇಳಿದನು.ಅಸ್ತವಾಗುತ್ತಿರುವ ಸೂಯ೯ನ ಕಿರಣಗಳೆಲ್ಲ ಈ ತೇಜೋ ಮಂಡಲದಲ್ಲಿ ಹೇಗೆ ಒಂದಾಗುತ್ತವೆಯೋ, ಉದಯಿಸುತ್ತಿರುವ ಸೂಯ೯ನ ಕಿರಣಗಳು ಹೇಗೆ ಪ್ರಸರಿಸುತ್ತವೆಯೊ, ಹಾಗೆಯೇ ಈ ವಿಷಯೇಂದ್ರಿಯ ಸಮೂಹವೆಲ್ಲವೂ ಪರಮ ದೇವನಾದ ಮನಸ್ಸಿನಲ್ಲಿ ಒಂದಾಗುತ್ತದೆ. ಆದುದರಿಂದ ಈ ಪುರುಷನು ಕೇಳುವುದಿಲ್ಲ, ನೋಡುವುದಿಲ್ಲ, ಮೂಸುವುದಿಲ್ಲ, ರುಚಿನೋಡುವುಗಿಲ್ಲ, ಸ್ಪಶಿ೯ಸುವುದಿಲ್ಲ, ಮಾತನಾಡುವುದಿಲ್ಲ, ತೆಗೆದುಕೊಳ್ಳುವುದಿಲ್ಲ, ಆನಂದಪಡುವುದಿಲ್ಲ, ಬಿಡುವುದಿಲ್ಲ, ಹೋಗುವುದಿಲ್ಲ, ನಿದ್ರಿಸುತ್ತಿದ್ದಾನೆ ಎಂದು ಜನರು ಹೇಳುತ್ತಾರೆ.

        ಈ ಪುರದಲ್ಲಿ ಪ್ರಾಣಾಗ್ನಿಗಳೇ ಎಚ್ಚತ್ತಿರುವುವು.ಈ ಅಪಾನವೇ -ಗಾಹ೯ಪತ್ಯಾಗ್ನಿ, ವ್ಯಾನವೇ -ದಕ್ಷಿಣಾಗ್ನಿ,ಪ್ರಾಣವು ಅವಹನೀಯಗಳು.

          ಸ್ವಪ್ನದಲ್ಲಿ ಈ ದೇವನು ಮಹಿಮೆಯನ್ನು ಅನುಭವಿಸುತ್ತಾನೆ.ಯಾವುದು ನೋಡಲ್ಪಟ್ಟಿದೆಯೊ ಅದನ್ನೇ ನೋಡುತ್ತಾನೆ.ಯಾವ ವಿಷಯವು ಕೇಳಲ್ಪಟ್ಟಿದೆಯೋ ಅದನ್ನೇ ಕೇಳುತ್ತಾನೆ.ನೋಡಿದ್ದು ನೋಡದಿರುವುದು,ಕೇಳಿದ್ದು ಕೇಳದಿರುವುದು,ಅನುಭವಿಸಿದ್ದು ಅನುಭವಿಸದಿರುವುದು,ಇರುವುದು ಇಲ್ಲದಿರುವುದು,ಇವೆಲ್ಲವನ್ನೂ ನೋಡುತ್ತಾನೆ.ಸವ೯ವೂ ಆಗಿ ನೋಡುತ್ತಾನೆ.

        ಇವನೇ ನೋಡುವವನೂ ಮುಟ್ಟುವವನೂ, ಕೇಳುವವನು, ಮಾಡುವವನು, ಆಸ್ವಾದಿಸುವವನು, ಮನನ ಮಾಡುವವನು, ನಿಶ್ಚಯಿಸುವವನು,ಕತೃ೯ವೂ ವಿಜ್ಞಾತೃವೂ, ಪುರುಷನೂ ಆಗಿರುತ್ತಾನೆ.ಇವನು ಪರಮವೂ ಅಕ್ಷಯವೂ ಆದ ಆತ್ಮನಲ್ಲಿ ನೆಲೆಸುತ್ತಾನೆ2.

        ಓಂಕಾರವೇ ಪರಬ್ರಹ್ಮವೂ ಅಪರ ಬ್ರಹ್ಮವೂ ಆಗಿದೆ.ಆದುದರಿಂದ ತಿಳಿದವನು ಈ ಅವಲಂಬನೆಯಿಂದಲೇ ಇವೆರಡರಲ್ಲಿಒಂದನ್ನು ಆಲೋಚಿಸುತ್ತಾನೆ.ಯಾವನು ಮೂರುಮಾತ್ರೆಗಳುಳ್ಳ ಓ0 ಎ0ಬ ಈ ಅಕ್ಷರದಿ0ದಲೇ ಈ ಪರಮಪುರುಷನನ್ನು ಅಭಿಧ್ಯಾನಿಸುವನೋ ಅವನು ಜ್ಯೋತಿಮ೯ಯನಾದ ಸೂಯ೯ನಲ್ಲಿ ಒಂದಾಗುತ್ತಾನೆ.ಸಪ೯ವು ಹೇಗೆ ತನ್ನ ಪರೆಯಿಂದ ಹೊರಗೆ ಬರುತ್ತದೆಯೋ ಹಾಗೆಯೇ ಪಾಪದಿಂದ ಮುಕ್ತನಾಗುತ್ತಾನೆ.ಅವನು ಸಾಮಗಳಿಂದ ಬ್ರಹ್ಮಲೋಕಕ್ಕೆ ಒಯ್ಯಲ್ಪಡುತ್ತಾನೆ.ಅವನು ಶೇಷ್ಠನಾದ ಹಿರಣ್ಯಗಭ೯ನಿಗಿಂತಲೂ ಶ್ರೇಷ್ಠನಾದ  ಮತ್ತು ಎಲ್ಲಾ ಶರೀರಗಳಲ್ಲಿಯೂ ಪ್ರವೇಶಿಸಿರುವ ಪುರುಷನನ್ನು ಸಾಕ್ಷಾತ್ಕರಿಸುತ್ತಾನೆ3.

 ಋಕ್ಕುಗಳಿಂದ ಈ ಲೋಕವನ್ನೂ, ಯಜುಸ್ಸುಗಳಿಂದ ಅಂತರಿಕ್ಷವನ್ನೂ, ಸಾಮವನ್ನು ಯಾವುದರಿಂದ ಕವಿಗಳು ತಿಳಿದಿರುವರೊ ಅದನ್ನು ವಿದ್ವಾಂಸರು ಓಂಕಾರವೆಂಬ ಆಲಂಬನದಿಂದಲೇ ಹೊಂದುತ್ತಾರೆ.ಅವನು ಶಾಂತವಾದ, ಜರೆಯಿಲ್ಲದ, ಅಮೃತವಾದ ಪರಬ್ರಹ್ಮವನ್ನು ಓ0ಕಾರದಿ0ದಲೇ ಹೊ0ದುತ್ತಾನೆ.

 ಆ ಪುರುಷನು ಪ್ರಾಣವನ್ನು ಸೃಷ್ಟಿಸಿದನು.ಪ್ರಾಣನಿಂದ ಶ್ರದ್ಧೆ, ಆಕಾಶ, ವಾಯು, ಜ್ಯೋತಿ, ನೀರು, ಪೃಥ್ವಿ,ಇಂದ್ರಿಯ,ಮನಸ್ಸು,ಅನ್ನ,ಅನ್ನದಿಂದ ವೀಯ೯, ತಪಸ್ಸು, ಮಂತ್ರಗಳು, ಕಮ೯, ಲೋಕಗಳು ಮತ್ತು ನ್ರಾಮಗಳನ್ನು ಸೃಷ್ಟಿಸಿದನು.ಪಿಂಡಾಂಡದಲ್ಲಿ ಯಾವುದು ಸತ್ಯವೋ ಅದೇ ಬ್ರಹ್ಮಾಂಡದಲ್ಲಿಯೂ ಸತ್ಯವಾಗಿದೆ4.

        ರಥಚಕ್ರದ ಗುಂಬದಲ್ಲಿ ಸೇರಿರುವ ಅರೆಯಕಾಲುಗಳಂತೆ ಯಾವನಲ್ಲಿ ಕಲೆಗಳು ಪ್ರತಿಷ್ಟಿತವಾಗಿರುವವೋ ಆ ಪುರುಷನನ್ನು ತಿಳಿದುಕೊಳ್ಳಬೇಕು.ಹಾಗೆ ತಿಳಿದುಕೊಂಡರೆ ಮೃತ್ಯುವು  ನಿಮ್ಮನ್ನು ವ್ಯಥೆಗೊಳಿಸುವುದಿಲ್ಲ.ಸೃಷ್ಟಿ ಎಂದರೆ ಸ್ಥೂಲದಿಂದ ಸೂಕ್ಷ್ಮಕ್ಕೆ ಇಳಿಯುವುದು5.

ಮುಂಡಕೋಪನಿಷತ್ತು ಹಾಗೂ ಅದ್ವೈತ:

ಈ ಉಪನಿಷತ್ತು ಅಥವ೯ಣ ವೇದಕ್ಕೆ ಸೇರಿದೆ.ರಮಣೀಯವಾದ ಶೈಲಿ,ಶಬ್ದ ಗಾಂಭೀಯ೯, ಲಲಿತವಾದ ಛಂದಸ್ಸುಗಳು, ಅತ್ಯುನ್ನತವಾದ ಭಾವಗಳು ಇವೇ ಮೊದಲಾದ ಗುಣಗಳ ಹೊಂದಿಕೆಯಿಂದ ಈ ಉಪನಿಷತ್ತಿನ ಪ್ರತಿಯೊಂದು ಮಂತ್ರವೂ ಓದಲು ಮನೋಹರವಾಗಿದೆ."ಮುಂಡ" ಎಂಬ ಪದದಿಂದ ಮುಂಡಕೋಪನಿಷತ್  ಎಂಬ ಹೆಸರು ಬಂದಿದೆ,ಕ್ಷೌರಕ್ಕೆ ಮುಂಡ ಎಂದು ಹೆಸರು.

ಈ ಉಪನಿಷತ್ತಿನಲ್ಲಿ ಪ್ರತಿಪಾದಿಸಿರುವ ತತ್ವವನ್ನು ತಿಳಿದುಕೊಂಡರೆ ಅವಿದ್ಯೆಯಿಂದ ಉಂಟಾದ ಭ್ರಮೆಗಳೆಲ್ಲವೂ ಮುಂಡನ ಕ್ರಿಯೆಯಂತೆ ಕತ್ತರಿಸಲ್ಪಡುತ್ತವೆ.ಇದೇ "ಮುಂಡನ" ಪದದ ಅಥ೯.ಇದರಲ್ಲಿ ಮೂರು ಅಧ್ಯಾಯಗಳಿವೆ. ಇದರ ಮೂರು ಅಧ್ಯಾಯಗಳಿಗೆ ಮುಂಡಕಗಳೆಂದು ಹೆಸರು. ಒಂದೊಂದು ಅಧ್ಯಾಯದಲ್ಲಿಯೂ ಎರಡೆರಡು ಖಂಡಗಳಿದ್ದು,ಒಟ್ಟು ಅರವತ್ನಾಲ್ಕು ಮಂತ್ರಗಳಿವೆ.ಇಲ್ಲಿ ಆಚಾಯ೯ನಾದ ಅಂಗಿರಸ್ಸು ಮಹಾ ಗೃಹಸ್ಥನಾದ ಶೌನಕನಿಗೆ ಉಪದೇಶ ಮಾಡುತ್ತಾನೆ.ಎಲ್ಲಾ ವಿದ್ಯೆಗಳನ್ನೂ ಎರಡು ಭಾಗಗಳನ್ನಾಗಿ ವಿಂಗಡಿಸಿದೆ.1) ಪರಾವಿದ್ಯೆ2)ಅಪರಾ ವಿದ್ಯೆ.

ಪರಾವಿದ್ಯೆ ಎಂದರೆ ಬ್ರಹ್ಮವಿದ್ಯೆ. ಅಪರಾ ವಿದ್ಯೆ ಎಂದರೆ ಲೌಕಿಕಜ್ಞಾನ.

           ಪರಾವಿದ್ಯೆಯು ಭಿನ್ನ ಭಿನ್ನ ವಸ್ತುಗಳ ವಿಶೇಷರೂಪವನ್ನು ತಿಳಿಸಿದ್ದರೂ ಸವ೯ವಸ್ತುಗಳಿಗೆ ಆಧಾರವಾದ ಮೂಲತತ್ವವನ್ನು ತಿಳಿಸುತ್ತದೆ. ಚಿನ್ನದ ಸ್ವರೂಪವನ್ನು ತಿಳಿಸಿದರೆ ಅದರಿಂದ ಮಾಡಿದ ಆಭರಣವೇ ಮುಂತಾದ ಸಮಸ್ತ ವಸ್ತುಗಳನ್ನು ತಿಳಿದುಕೊಳ್ಳಬಹುದು.

       ಎರಡನೆಯ ಮುಖ್ಯಾಂಶವೆಂದರೆ ಸವ೯ ಕಮ೯ ಸನ್ಯಾಸದ ಪ್ರಶಂಸೆ.ಸಾಧಕನು ಅಷ್ಟಾಂಗ ಯೋಗದಲ್ಲಿ ಸಿದ್ಧಿ ಪಡೆದಿರಬಹುದು. ಇಷ್ಟ ಪೂತ೯ಗಳಲ್ಲಿ ದಕ್ಷನಾಗಿರಬಹುದು. ಇವುಗಳಿಂದ ಅವಿದ್ಯೆಯು ತೊಲಗುವುದಿಲ್ಲ.ಅತ್ಯಂತಿಕ ಮೋಕ್ಷವಾಗ ಬೇಕಾದರೆ ಬ್ರಹ್ಮಜ್ಞಾನವು ಅವಶ್ಯಕ.ಬರಿಯ ಬ್ರಹ್ಮ ಜ್ಞಾನಕ್ಕೆ ಎಲ್ಲ ಆಶ್ರಮಿಗಳು ಅಧಿಕಾರಿಗಳಾದರೂ ಸನ್ಯಾಸ ನಿಷ್ಠೆಯುಳ್ಳ ಬ್ರಹ್ಮನಿಷ್ಠೆಯು ಸರಿಯಾದ ಸಾಧನ.ಶ್ರೀ ಶಂಕರಾಚಾಯ೯ರು "ಲಿಂಗ ಸನ್ಯಾಸ"ಎಂದು ಹೇಳಿದ್ದಾರೆ.ಸನ್ಯಾಸವಿಲ್ಲದ ಜ್ಞಾನದಿಂದ ಆತ್ಮನು ಲಭ್ಯನಲ್ಲ ಎಂದು ಅಥ೯.ಕಾಮಗಳೇ ಜೀವನ ಸಂಸಾರಕ್ಕೆ ಕಾರಣ.ಪಯಾ೯ಪ್ತ ಕಾಮನಿಗೆ ಕಮ೯ಗಳು ಇಲ್ಲಿಯೇ ಲಯವಾಗುತ್ತವೆ.

ಮೂರನೆಯ ಮುಖ್ಯಾಂಶವೆಂದರೆ ಈ ಉಪನಿಷತ್ತಿನಲ್ಲಿ ಪ್ರತಿಪಾದಿತವಾಗಿರುವ ಯೋಗ, ಉಪನಿಷತ್ತುಗಳಲ್ಲಿ ಪ್ರತಿಪಾದಿತವಾಗಿರುವ ಧನಸ್ಸೇ ಪ್ರಣವ. ಉಪಾಸನೆಯಿಂದ ಹರಿತವಾದ ಬಾಣವೇ ಜೀವಾತ್ಮ.ಬ್ರಹ್ಮವೇ ಲಕ್ಷ್ಯ ಅಥವಾ ಗುರಿ.ಇಂದ್ರಿಯಗಳನ್ನು ವಿಷಯಗಳಿಂದ ಹಿಂದಿರುಗಿಸಿ  ಚಿತ್ತದಿಂದ ಅಪ್ರಮತ್ತನಾಗಿ ಲಕ್ಷ್ಯವನ್ನು ಹೊಡೆದು ಅದರಲ್ಲಿ ತನ್ಮಯನಾಗಬೇಕು.

           ಇನ್ನೊಂದು ಮುಖ್ಯ ಅಂಶವೆಂದರೆ ಯುಕ್ತಾತ್ಮರು ಬ್ರಹ್ಮವನ್ನು ಪ್ರವೇಶಿಸುವ ಕ್ರಮ ಮತ್ತು ಮುಕ್ತಿಯ ಲಕ್ಷಣ.ಅವರು ಎಲ್ಲವನ್ನು ಪ್ರವೇಶಿಸುವರು.(ಸವ೯ಮೇವ ಅವಿಶಂತಿ) (3_2_5).ಘಟಾಕಾಶವು ಚಿದಾಕಾಶದಲ್ಲಿ ಲೀನವಾಗುವಂತೆ ಎಂದರೆ ಭೇದಕ್ಕೆ ಕಾರಣವಾದ ಉಪಾಧಿಯು ನಾಶವಾಗುತ್ತದೆ.ಮೋಕ್ಷ ಕಾಲದಲ್ಲಿ ಶರೀರಕ್ಕೆ ಕಾರಣವಾದ ಹದಿನೈದು ಕಲೆಗಳು ತಮ್ಮ ತಮ್ಮ ಕಾರಣಗಳನ್ನು ಸೇರುತ್ತವೆ. ಜೀವಾತ್ಮನೂ ಕೂಡಾ ಅವ್ಯಯವಾದ ಬ್ರಹ್ಮದಲ್ಲಿ ಒಂದಾಗುವನು.

      ನದಿಗಳು ಸಮುದ್ರವನ್ನು ಸೇರಿ ನಾಮರೂಪಗಳನ್ನು ಬಿಡುವಂತೆ ಜ್ಞಾನಿಯೂ ಕೂಡಾ ಪರಾತ್ಪರನಾದ ಪುರುಷನನ್ನು ಹೊಂದಿ ಅವಿದ್ಯೆಯಿಂದಾಗಿರುವ ನಾಮರೂಪಗಳನ್ನು ತ್ಯಾಗ ಮಾಡುವನು.ಬ್ರಹ್ಮವನ್ನು ಅರಿತವನು ಬ್ರಹ್ಮವೇ ಆಗುತ್ತಾನೆ.ಇವನು ಶೋಕಗಳನ್ನು ದಾಟುತ್ತಾನೆ.ಹೃದಯ ಗ್ರಂಥಿಗಳಿಂದ ಬಿಡುಗಡೆಹೊಂದಿ ಅಮೃತನಾಗುವನು.ಇದು ಈ ಉಪನಿಷತ್ತಿನ ಆದೇಶ ಉಪದೇಶ1

ಶಾಂತಿ ಪಾಠ.

ಓಂ ಭದ್ರಂ ಕಣೇ೯ಭಿಃ ಶೃಣುಯಾಮದೇವಾ

ಭದ್ರಂ ಪಶ್ಯೇಮಾ ಕ್ಷಭಿಯ೯ಜತ್ರಾಃ|

ಸ್ಥಿರೈರಂಗೈಸ್ತುಷ್ಟುವಾಂ ಸಸ್ತನೂಭಿಃ

ವ್ಯಶೇಮ ದೇವಹಿತಂ ಯದಾಯುಃ||

ಹೇ ದೇವತೆಗಳೆ, ಮಂಗಳವಾದುದನ್ನು ಕಿವಿಗಳಿಂದ ಕೇಳುವ; ಹೇ ಪೂಜಾಹ೯ರೆ, ಪವಿತ್ರವಾದುದನ್ನು ಕಿವಿಗಳಿಂದ ಕೇಳುವ; ದೃಢವಾದ ಅವಯವಗಳಿಂದಲೂ ಮತ್ತು ಶರೀರಗಳಿಂದಲೂ ಕೂಡಿ ನಿಮ್ಮನ್ನು ಸ್ತುತಿಸುವವರಾಗಿ ದೇವನಿಂದ ವಿಧಿಸಲ್ಪಟ್ಟ ಪೂಣ೯ವಾದ ಆಯುಸ್ಸನ್ನು ಹೊಂದುವ.

ಓಂಶಾಂತಿ ಶಾಂತಿ ಶಾಂತಿಃ

ಮೊದಲನೆಯ ಮುಂಡಕ

ಮೊದಲನೆಯ ಖಂಡ

     ವಿಶ್ವದ ಕತೃ೯ವೂ ಪಾಲಕನೂ ಆದ ಬ್ರಹ್ಮನು ದೇವತೆಗಳಿಗೆಲ್ಲ ಮೊದಲನೆಯವನಾಗಿ ಅಭಿವ್ಯಕ್ತನಾದನು.ಅವನು ಸವ೯ ವಿದ್ಯೆಗಳಿಗೂ ಆಶ್ರಯವಾಗಿರುವ ಬ್ರಹ್ಮವಿದ್ಯೆಯನ್ನು ಜ್ಯೇಷ್ಠ ಪುತ್ರನಾದ ಅಥವ೯ನಿಗೆ ಉಪದೇಶಿಸಿದನು.ಮಹಾಗೃಹಸ್ಥನಾದ ಶೌನಕನು ಅಂಗಿರಸ್ಸನ್ನು ವಿಧಿ ಪ್ರಕಾರ ಸಮೀಪಿಸಿ ಹೇ ಭಗವಾನ್ ಯಾವುದನ್ನು ತಿಳಿದುಕೊಂಡರೆ ಇದೆಲ್ಲವನ್ನು ಅರಿತಂತಾಗುವುದು?ಎಂದು ಪ್ರಶ್ನಿಸಿದನು.

           ಎರಡು ವಿದ್ಯೆಗಳನ್ನು ತಿಳಿದುಕೊಳ್ಳಬೇಕು.ಪರಾವಿದ್ಯೆ,ಅಪರಾವಿದ್ಯೆ. ಅಪರಾವಿದ್ಯೆಯೆಂದರೆ ಋಗ್ವೇದ, ಯಜುವೇ೯ದ, ಸಾಮವೇದ, ಅಥವ೯ವೇದ, ಶಿಕ್ಷಾ, ಕಲ್ಪ, ವ್ಯಾಕರಣ, ನಿರುಕ್ತ, ಛಂದಸ್ಸು, ಜ್ಯೋತಿಷ್ಯ, ಇವು ಅಪರಾವಿದ್ಯೆಗಳು.ಯಾವುದರಿಂದ ಈ ಅಕ್ಷರವು (ಬ್ರಹ್ಮವು) ಹೊಂದಲ್ಪಡುವುದೋ ಅದು ಪರಾವಿದ್ಯೆ.ಅದು ಅದೃಶ್ಯವಾದುದು, ಅಗ್ರಾಹ್ಯವಾದುದು, ಗೋತ್ರವಿಲ್ಲದ್ದು, ವಣ೯ವಿಲ್ಲದ್ದು, ಚಕ್ಷು ಶ್ರೋತ್ರಗಳಿಲ್ಲದ್ದು,ಹಸ್ತಪಾದ ವಿಹೀನವಾದುದು,ಅದು ನಿತ್ಯ, ವಿಭು, ಸವ೯ಗತ, ಅತ್ಯಂತ ಸೂಕ್ಷ್ಮಮತ್ತು ಅವ್ಯಯ. ಇಂತಹ ಭೂತ ಯೋನಿಯನ್ನು ಧೀರರು ಎಲ್ಲೆಲ್ಲಿಯೂ ನೋಡುತ್ತಾರೆ.

  ಹೇಗೆ ಜೇಡರಹುಳು ನೂಲುಗಳನ್ನು ಹೊರಕ್ಕೆ ತಂದು ಪುನಃ ಒಳಕ್ಕೆ ಎಳೆದುಕೊಳ್ಳುವುದೋ, ಹೇಗೆ ಈ ಭೂಮಿಯಲ್ಲಿ ಸಸ್ಯಗಳು ಹುಟ್ಟುತ್ತವೆಯೋ ಹೇಗೆ ಜೀವಂತನಾದ ಮನುಷ್ಯನಿಂದ ಕೇಶಲೋಮಗಳು ಬೆಳೆಯುತ್ತವೆಯೊ, ಹಾಗೆಯೇ ಅಕ್ಷರದಿಂದ ಇಲ್ಲಿ ಸಮಸ್ತ ವಸ್ತುಗಳೂ (ಜಗತ್ತೂ) ಉಂಟಾಗುತ್ತವೆ2.ಬ್ರಹ್ಮವಿದ್ಯೆಯು ಎಲ್ಲಾವಿದ್ಯೆಗಳಿಗೂ ಕೊನೆ.ಅಕ್ಷರವು ತಪಸ್ಸಿನಿಂದ ದೊಡ್ಡದಾಗುತ್ತದೆ.ಆದುದರಿಂದ ಅನ್ನವು ಉಂಟಾಗುತ್ತದೆ.ಅನ್ನದಿಂದ ಪ್ರಾಣ, ಮನಸ್ಸು, ಸತ್ಯ, ಲೋಕಗಳು, ಕಮ೯ಗಳಲ್ಲಿ ಅಮೃತ ಇವು ಉಂಟಾಗುತ್ತದೆ. ಯಾವನು ಸವ೯ಜ್ಞನೊ,ಸವ೯ವಿದನೊ,ಯಾವನ ತಪಸ್ಸು ಜ್ಞಾನಮಯವಾಗಿರುವುದೊ, ಅವನಿಂದ ಈ ಬ್ರಹ್ಮವೂ ನಾಮವೂ ರೂಪವೂ ಅನ್ನವೂ ಉಂಟಾಗುತ್ತದೆ.

ಎರಡನೆಯ ಖಂಡ:

"ಅಂಧೇನೈವ ನೀಯಮಾನಾ ಯಥಾಂಧಾಃ"

ಅವಿದ್ಯೆಯ ಮಧ್ಯದಲ್ಲಿ ಇರುವವರಾಗಿ ,ತಾವೇ ಧೀರರು ಎಂದು ಪಂಡಿತರು ತಿಳಿದುಕೊಂಡು, ಪೀಡಿಸಲ್ಪಡುತ್ತ, (ಜರಾಮರಣ ಮೊದಲಾದ ಅನಥ೯ಗಳ ಸಮೂಹದಿಂದ )ಕುರುಡನು ಕರೆದುಕೊಂಡು ಹೋಗುತ್ತಿರುವ ಕುರುಡರಂತೆ ಈ ಮೂಢರು ಸುತ್ತುತ್ತಿರುವರು3.

 ಅವಿದ್ಯೆಯಲ್ಲಿ ಬಹುಪ್ರಕಾರರಾಗಿ ಇರುವವರಾಗಿ "ತಾವು ಕೃತಾಥ೯ರು" ಎಂದು ಈ ಅಜ್ಞಾನಿಗಳು  ಅಭಿಮಾನ ಪಡುತ್ತಾರೆ.ಕಮಿ೯ಗಳೂ ಕಮ೯ಫಲದ ಆಸಕ್ತಿಯಿಂದ ಇದನ್ನು ತಿಳಿಯುವುದಿಲ್ಲ.ಆ ಕಾರಣದಿಂದ ದುಃಖಾತ೯ರಾಗಿ ಕಮ೯ಫಲವನ್ನು ಕ್ಷೀಣ ಮಾಡಿಕೊಂಡವರಾಗಿ (ಸ್ವಗ೯ಲೋಕದಿಂದ) ಬೀಳುವರು.

ಯಾರು  ಅರಣ್ಯದಲ್ಲಿ ತಪಃಶ್ರದ್ಧೆಗಳನ್ನು ಸೇವಿಸುತ್ತ ಭಿಕ್ಷಾವೃತ್ತಿಗಳನ್ನು ಮಾಡುವರೊ, ಯಾರು ಶಾಂತರಾದ ವಿದ್ವಾಂಸರೊ, ಅವರು ಪಾಪ ಪುಣ್ಯಗಳನ್ನು ಕಳೆದುಕೊಂಡು ಸೂಯ೯ದ್ವಾರದ ಮೂಲಕ ಎಲ್ಲಿ ಅಮೃತನೂ ಅವ್ಯಯಾತ್ಮನೂ ಆದ ಆ ಪುರುಷನೆಲ್ಲಿರುವನೊ ಅಲ್ಲಿಗೆ ಹೋಗುತ್ತಾರೆ.

ಬ್ರಾಹ್ಮಣನು ಕಮ೯ಕೃತವಾದ ಲೋಕಗಳನ್ನು ಪರೀಕ್ಷಿಸಿ "ಅಕೃತವು ಕೃತದಿಂದ ಆಗುವುದಿಲ್ಲ" ಎಂದು ವೈರಾಗ್ಯವನ್ನು ಹೊಂದಬೇಕು.ಅದನ್ನೇ ತಿಳಿಯುವುದಕ್ಕಾಗಿ ಅವನು ಸಮಿತ್ತುಗಳ ಕಂತೆಯನ್ನು ಕೈಯಲ್ಲಿ ಹಿಡಿದುಕೊಂಡು ಶ್ರೋತ್ರೀಯನೂ ಬ್ರಹ್ಮನಿಷ್ಠನೂ ಆದ ಗುರುವನ್ನು ಹೊಂದಬೇಕು.ಹೀಗೆ ಸರಿಯಾಗಿ ಬಂದಿರುವ ಪ್ರಶಾಂತ ಚಿತ್ತನಾದ ಶಮೆಯಿಂದ ಕೂಡಿದ ಅವನಿಗೆ ಆ ವಿದ್ವಾಂಸನು(ಗುರುವು)ಯಾವುದರಿಂದ ಪರಮಾಥ೯ ಸ್ವರೂಪವುಳ್ಳ ಅಕ್ಷಯನಾದ ಪುರುಷನನ್ನೇ ತಿಳಿಯುವನೋ ಆ ಬ್ರಹ್ಮವಿದ್ಯೆಯನ್ನು ಯಥಾಥ೯ವಾಗಿ  ಉಪದೇಶಿಸಬೇಕು.

                   ಯಾವುದಕ್ಕೆ ಸೂಯ೯ನು ಸಮಿತ್ತೊ,ಆ ದ್ಯುಲೋಕವು ಪುರುಷನಿಂದಲೇ ಹುಟ್ಟುತ್ತವೆ.ದ್ಯುಲೋಕವೆಂಬ ಅಗ್ನಿಯಿಂದ ಹುಟ್ಟಿದ ಸೋಮನಿಂದ ಪೃಥ್ವಿಯಲ್ಲಿ ಸಸ್ಯಗಳು ಹುಟ್ಟುತ್ತವೆ.ಸಸ್ಯ ಪರಿಣಾಮವಾದ ರೇತಸ್ಸನ್ನು ಪುರುಷನು ಸ್ತ್ರೀಯಲ್ಲಿ ಸಿಂಚಿಸುತ್ತಾನೆ. ಹೀಗೆ ಅನೇಕ ಪ್ರಜೆಗಳು ಪರಮ ಪುರುಷನಿಂದ ಹುಟ್ಟುತ್ತಾರೆ. ಹೀಗೆ ದ್ಯುಲೋಕ,ಪಜ೯ನ್ಯ, ಪೃಥ್ವಿ,ಪುರುಷ,ಸ್ತ್ರೀ ಇವು ಪಂಚಾಗ್ನಿಗಳು.ಈ ಪುರುಷನಿಂದಲೇ ಋಕ್ಕುಗಳು, ಯಜಸ್ಸುಗಳು,ಸಾಮಗಳು,ದೀಕ್ಷೆಗಳು,ಎಲ್ಲ ಯಜ್ಞಗಳ ಕ್ರತುಗಳು,ದಕ್ಷಿಣೆಗಳು,ಸಂವತ್ಸರಗಳು,ಎಲ್ಲಿ ಸೋಮನು ಪವಿತ್ರಗೊಳಿಸುವನೊ ಎಲ್ಲಿ ಸೂಯ೯ನು ತಪಿಸುವನೋ ಆ ಲೋಕಗಳು ಉಂಟಾಗುತ್ತವೆ.

 ಆ ಪುರುಷನಿಂದ ದೇವತೆಗಳು ಹುಟ್ಟುತ್ತಾರೆ. ಸಾಧ್ಯರು, ಮನುಷ್ಯರು, ಪ್ರಾಣಿಗಳು, ಪಕ್ಷಿಗಳು, ಪ್ರಾಣಾಪಾನಗಳು, ವ್ರೀಹಿಯವಗಳು, ತಪಸ್ಸು, ಶ್ರದ್ಧೆ, ಸತ್ಯ, ಬ್ರಹ್ಮಚಯ೯ ಮತ್ತು ವಿಧಿ ಹುಟ್ಟಿರುತ್ತವೆ. ಏಳು ಪ್ರಾಣಗಳು, ಏಳು ಅಚಿ೯ಗಳು,ಏಳು ಸಮಿತ್ತುಗಳು,ಏಳು ಹೋಮಗಳು,ಯಾವುಗಳಲ್ಲಿ ಏಳೇಳಾಗಿ ಹೃದಯದಲ್ಲಿರುವ ಪ್ರಾಣಗಳು ಸಂಚರಿಸುವವೊ, ಆ ಈ ಏಳು ಲೋಕಗಳು ಆ ಪುರುಷನಿಂದಲೇ ಉಂಟಾಗುತ್ತವೆ.

 ಈ ಪುರುಷನಿಂದಲೇ ಎಲ್ಲ ಪವ೯ತಗಳು,ಸಮುದ್ರಗಳು,ಉಂಟಾಗುವುವು.ಇವನಿಂದಲೇ ಬಹುರೂಪವಾದ ನದಿಗಳು ಹರಿಯುವುವು ಮತ್ತು ಇವನಿಂದಲೇ ವ್ರೀಹಿಯವಾದಿಗಳೂ ರಸವೂ ಆಗಿರುವುದು. ಈ ರಸದಿಂದಲೇ ಈ ಅಂತರಾತ್ಮನು ಪಂಚ ಸ್ಥೂಲಭೂತಗಳೊಡನೆ ನಿಂತಿರುವನು. ಬ್ರಹ್ಮವಿದ್ಯೆಯು ಎಲ್ಲಾ ವಿದ್ಯೆಗಳಿಗೂ ಕೊನೆ4.

 ಕಮ೯,ತಪಸ್ಸು ಇವೆಲ್ಲವೂ ಪುರುಷನೇ.ಎಲ್ಲವೂ ಪರಮಾಮೃತವಾದ ಬ್ರಹ್ಮ. ಹೃದಯದಲ್ಲಿರುವ ಇದನ್ನು ಹೇ ಸೋಮ್ಯ, ಇದನ್ನು ಯಾರು ಅರಿತುಕೊಳ್ಳುತ್ತಾರೊ ಅವನು ಅವಿದ್ಯೆ ಗ್ರಂಥಿಯನ್ನು ಇಲ್ಲಿಯೇ ನಾಶಮಾಡುತ್ತಾನೆ."ಅವಿದ್ಯಾ ಗ್ರಂಥಿ" ಎಂದರೆ ದೃಢವಾಗುವ ಅವಿದ್ಯಾ ವಾಸನೆ.ಚಿತ್+ಜಡ =ಚಿಜ್ಜಡ ಗ್ರಂಥಿ.(ಅವಿದ್ಯೆಯ ಗಂಟು)

ಎರಡನೆಯಖಂಡ:

ಯಾವುದು ದೀಪ್ತಿಯುಳ್ಳದ್ದೋ,ಯಾವುದು ಅಣುಗಳಿಗಿಂತ ಸೂಕ್ಷ್ಮವಾಗಿದೆಯೊ, ಯಾವುದರಲ್ಲಿ ಲೋಕಗಳು ಲೋಕದಲ್ಲಿರುವವರು ಸಮಪಿ೯ತರಾಗಿರುವರೊ, ಅದೇ ಅಕ್ಷರ ಬ್ರಹ್ಮ.ಅದೇ ಪ್ರಾಣ,ಅದೇ ವಾಕ್, ಮನಸ್ಸುಗಳು ಆ ಇದು ಸತ್ಯ,ಅದೇ ಅಮೃತ,ಅದೇ ಹೊಡೆಯಲ್ಪಡತಕ್ಕದ್ದು.ಅದನ್ನು ಹೊಡೆ.

 ಓಂಕಾರವು ಧನುಸ್ಸು, ಆತ್ಮನೆ ಪ್ರಾಣ, ಬಹ್ಮವು ಅದರ ಲಕ್ಷ್ಯ. ಪ್ರಮತ್ತನಾಗದೆ  ಹೊಡೆಯಬೇಕು. ಬಾಣದಂತೆ ತನ್ಮಯನಾಗಬೇಕು.ದೇಹಾದಿಗಳು ತಾನೆಂಬ ಬುದ್ಧಿಯನ್ನು ಬಿಟ್ಟು ಅಕ್ಷರೈಕಾತ್ಮವೆಂಬ ಫಲವನ್ನು ಹೊಂದಬೇಕು.

 "ಅನ್ಯವಾಚೋ ವಿಮುಂಚಥಾ".ದ್ಯುಲೋಕ, ಪೃಥ್ವಿ, ಅಂತರಿಕ್ಷ ಎಲ್ಲ ಪ್ರಾಣಿಗಳ ಸಹಿತ ಮನಸ್ಸು ಇವೆಲ್ಲವೂ ಯಾವನಲ್ಲಿ ಸಮಪಿ೯ತವಾಗಿರುವುವೊ ಆ ಆತ್ಮನೊಬ್ಬನನ್ನೇ ತಿಳಿದುಕೊಳ್ಳಿರಿ.ಬೇರೆ ಮಾತುಗಳನ್ನು ಬಿಡಿರಿ.ಇದು ಅಮೃತತ್ವಕ್ಕೆ ಸೇತು.ಕಮ೯ ಮಾತ್ರದಿಂದ ಸಿಗದೇ ಇರುವ ಮಹಾ ಫಲವು ಬ್ರಹ್ಮವಿದ್ಯೆಯಿಂದ ಉಂಟಾಗುತ್ತದೆ5.

"ಅರಾ ಇವ ರಥ ನಾಭೌ".ರಥಚಕ್ರದ ಗುಂಬದಲ್ಲಿ ಅರೆಕಾಲುಗಳು ಸೇರಿಕೊಂಡಿರುವಂತೆ ಎಲ್ಲಿ ನದಿಗಳು ಬಂದು ಸೇರಿರುವವೊ ಅಲ್ಲಿ ಆ ಈ ಆತ್ಮನು ಬಹುವಿಧವಾಗಿ ಹುಟ್ಟುತ್ತಾ ಸಂಚರಿಸುತ್ತಿರುವನು. ಓಂ ಎಂದು ಹೀಗೆ ಆತ್ಮನನ್ನು ಧ್ಯಾನಿಸಿ.ತಮಸ್ಸಿನ ಆಚೆ ಇರುವ ದಡಕ್ಕೆ ದಾಟಲು ನಿಮಗೆ ಮಂಗಳವಾಗಲಿ.

      ಯಾವನು ಸವ೯ಜ್ಞನೊ,ಸವ೯ವಿದನೊ,ಯಾವನಿಗೆ ಭೂಮಿಯಲ್ಲಿ ಇದು ವಿಭೂತಿಯೊ, ಆ ಆತ್ಮನು ದಿವ್ಯವಾದ ಬ್ರಹ್ಮಪುರದ ಆಕಾಶದಲ್ಲಿ ಪ್ರತಿಷ್ಠಿತನಾಗಿರುತ್ತಾನೆ.ಈ ಆತ್ಮನು ಮನೋಮಯನು. ಪ್ರಾಣವೆಂಬ ಶರೀರದ ನೇತೃ.ಬುದ್ಧಿಯನ್ನು ಸರಿಯಾಗಿ ಇಟ್ಟು ಅನ್ನದಲ್ಲಿ ಪ್ರತಿಷ್ಠಿತನಾಗಿರುತ್ತಾನೆ. ಯಾವ ಆನಂದರೂಪವಾದ ಅಮೃತವು ಪ್ರಕಾಶಿಸುತ್ತಿರುವುದೊ,ಅದನ್ನು ವಿಜ್ಞಾನದ ಮೂಲಕ ಧೀರರುಸವ೯ತಃ ನೋಡುತ್ತಾರೆ.ಹೃದಯದಲ್ಲಿಯೇ ಇದ್ದುಕೊಂಡು ಮನೋವೃತ್ತಿಗಳಿಂದಲೆ ತೋರುವುದರಿಂದ ಮನೋಮಯನು.ಮನಸ್ಸೇ ಅವನಿಗೆ ಉಪಾಧಿ. ಆತ್ಮನು ಪ್ರಾಣಶರೀರವನ್ನು  ಒಂದು ಸ್ಥೂಲಶರೀರದಿಂದ ಇನ್ನೊಂದಕ್ಕೆ ಒಯ್ಯುವುದರಿಂದ ನೇತೃಎಂದು ಹೇಳಿದೆ.

          "ಕ್ಷೀಯಂತೇ ಚಾಸ್ಯ ಕಮಾ೯ಣಿ ತಸ್ಮಿನ್ ದೃಷ್ಟ್ವಾ ಪರಾವರೇ"

ಆ ಪರಾವರನು ಸಾಕ್ಷಾತ್ಕರಿಸಲ್ಪಟ್ಟರೆ ಇವನ ಹೃದಯ ಗ್ರಂಥಿಯು ನಾಶವಾಗುತ್ತದೆ.ಸವ೯ ಸಂಶಯಗಳು ವಿಚ್ಛೇದವಾಗುವುವು.ಕಮ೯ಗಳು ಕ್ಷೀಣವಾಗುವುವು. (ಕಾರಣ ರೂಪದಿಂದ ಪರ ಕಾಯ೯ರೂಪದಿಂದ ಅಪರನೂ ಆದ ಬ್ರಹ್ಮ). ಹಿರಣ್ಮಯವೂ, ಶ್ರೇಷ್ಠವೂ ಆದ ಕೋಶದಲ್ಲಿ ರಜಸ್ಸಿಲ್ಲದ ಕಲೆಯಿಲ್ಲದ ಬ್ರಹ್ಮವು ಇರುವುದು.ಅದು ಶುದ್ಧವು.ಜ್ಯೋತಿಗಳಿಗೆಲ್ಲಾ ಜ್ಯೋತಿಯು.ಆ ಬ್ರಹ್ಮವನ್ನು ಆತ್ಮವಿದರು ತಿಳಿದಿರುತ್ತಾರೆ.

"ತಸ್ಯ ಭಾಸಾ ಸವ೯ಮಿದಂ ವಿಭಾತಿ"

   ಅಲ್ಲಿ ಸೂಯ೯ನಾಗಲೀ,ಚಂದ್ರನಾಗಲೀ, ನಕ್ಷತ್ರಗಳಾಗಲೀ ಪ್ರಕಾಶಿಸುವುದಿಲ್ಲ.ಈ ಅಗ್ನಿಯು ಪ್ರಕಾಶಿಸುವುದೆಲ್ಲಿ?ಪ್ರಕಾಶಿಸುತ್ತಿರುವ ಅವನನ್ನೇ ಅನುಸರಿಸಿ ಎಲ್ಲವೂಪ್ರಕಾಶಿಸುತ್ತಿರುವುವು.ಅವನ  ಪ್ರಕಾಶದದಿಂದಲೆ ಇವೆಲ್ಲವೂ ಪ್ರಕಾಶಿಸುತ್ತಿರುವುದು. ಮುಂದಿರುವ ಇದು ಅಮೃತವಾದ ಬ್ರಹ್ಮವೇ. ಹಿಂದೆಯೂ, ದಕ್ಷಿಣಕ್ಕೂ, ಉತ್ತರಕ್ಕೂ ಇರುವುದು ಬ್ರಹ್ಮವೇ. ಕೆಳಗೂ ಮೇಲೂ ಪ್ರಸರಿಸಿರುವುದು ಬ್ರಹ್ಮವೇ.ಈ ಜಗತ್ತೆಲ್ಲವೂ ಶ್ರೇಷ್ಠತಮವಾದ ಬ್ರಹ್ಮವೇ.(ಬ್ರಹ್ಮೈವೇದಂ ಸವ೯ಮಿದಂ ಪ್ರತಿಷ್ಠಂ)

ಮೂರನೆಯ ಮುಂಡಕ:

ಮೊದಲನೆಯ ಖಂಡ:

                      "ದ್ವಾಸುಪಣಾ೯ ಸಯುಜಾ ಸಖಾಯಾ"

     ಸವ೯ದಾ ಜೊತೆಯಲ್ಲಿರುವ ಸಖರಾದ ಎರಡು ಹಕ್ಕಿಗಳು ಒಂದೇ ವೃಕ್ಷವನ್ನು ಆಲಿಂಗಿಸಿಕೊಂಡಿವೆ. ಅವೆರಡರಲ್ಲಿ ಒಂದು ಸವಿಯಾದ ಹಣ್ಣನ್ನು ತಿನ್ನುತ್ತಿದೆ.ಇನ್ನೊಂದು ತಿನ್ನದೆ ನೋಡುತ್ತಿದೆ.

ಪುರುಷನು ಆ ಒಂದೇ ವೃಕ್ಷದಲ್ಲಿ ಮಗ್ನವಾಗಿ ಮೋಹಗೊಂಡು ದೈನ್ಯದಿಂದ ಶೋಕಿಸುತ್ತಿರುವನು. ಸೇವಿಸಲ್ಪಟ್ಟವನೂ, ತನಗಿಂತ ವಿಲಕ್ಷಣನೂ ಆದ ಈಶನನ್ನು ಮತ್ತು ಇವನ ಮಹಿಮೆಯನ್ನು ಹೀಗೆಂದು ಯಾವಾಗ ನೋಡುತ್ತಾನೆಯೋ ಆಗ ಅವನು ಶೋಕವಿಲ್ಲದವನಾಗುವನು. ಗುಹೆಯಲ್ಲಿ ಇರುವ ಇವನನ್ನು ಯಾವನು ತಿಳಿದುಕೊಳ್ಳುತ್ತಾನೆಯೋ ಅವನು ಅವಿದ್ಯಾ ಗ್ರಂಥಿಯನ್ನು ಇಲ್ಲಿಯೇ ಕಳಚಿಕೊಳು¼ತ್ತಾನೆ6.

 ಯಾವಾಗ ಸಾಧಕನು ಹಿರಣ್ಯ ವಣ೯ದವನೂ ,ಕತೃ೯ವೂ,ಈಶನೂ ಬ್ರಹ್ಮಯೋನಿಯೂ,ಆದ ಪುರುಷನನ್ನು ನೋಡುತ್ತಾನೆಯೋ ಆಗ ಆ ವಿದ್ವಾಂಸನು ಪಾಪ ಪುಣ್ಯಗಳನ್ನು ತೊಲಗಿಸಿಕೊಂಡು ನಿರಂಜನನಾಗಿ ಪರಮಸಾಮ್ಯವನ್ನು ಹೊಂದುತ್ತಾನೆ.ಈ ಪ್ರಾಣವೇ ಸವ೯ಭೂತಗಳಾಗಿ ಪ್ರಕಾಶಿಸುತ್ತಿರುವುದು.ಇವನನ್ನು ಹೀಗೆ ಅರಿತುಕೊಂಡ ವಿದ್ವಾಂಸನು ಅತಿವಾದಿಯಾಗುವುದಿಲ್ಲ.ಆತ್ಮಕ್ರೀಡನೂ ಆತ್ಮರತನೂ,ಕ್ರಿಯಾವಂತನೂ ಆದ ಆತ್ಮನು ಬ್ರಹ್ಮವಿದರಲ್ಲಿ ಅತ್ಯಂತ ಶ್ರೇಷ್ಠನಾಗಿರುವನು.(ಎಲ್ಲವನ್ನೂ ಮೀರಿ ನುಡಿಯುವವನು ಅತಿವಾದಿ.  ಆತ್ಮನೇ ಪ್ರಾಣವೆಂದು ತಿಳಿದುಕೊಂಡವನು ಅತಿವಾದಿಯಾಗುವುದಿಲ್ಲ.)

ಈ ಆತ್ಮನು ನಿತ್ಯವೂ ಸತ್ಯದಿಂದಲೂ,ನಿತ್ಯವೂ ತಪಸ್ಸಿನಿಂದಲೂ,ನಿತ್ಯವೂ ಸಮ್ಯಕ್ ಜ್ಞಾನದಿಂದಲೂ, ನಿತ್ಯವೂ ಬ್ರಹ್ಮಚಯ೯ದಿಂದಲೂ, ಲಭ್ಯನು.ಇವನು ಹೃದಯಾಕಾಶದಲ್ಲಿ ಶುದ್ಧನೂ ಜ್ಯೋತಿಮ೯ಯನೂ ಆಗಿ ಇರುವನು.ಈ ಆತ್ಮನನ್ನು ದೋಷರಹಿತವಾದ ಯತಿಗಳು ನೋಡುತ್ತಾರೆ.

"ಸತ್ಯಮೇವ ಜಯತೇ ನಾನೃತಂ"

ಸತ್ಯವೇ ಜಯಿಸುತ್ತದೆ.ಅನೃತವಲ್ಲ(ಸುಳ್ಳಲ್ಲ) .ಸತ್ಯದ  ಆ ಪರಮ ನಿಧಾನವು ಇರುವಲ್ಲಿಗೆ ಆಪ್ತಕಾಮರಾದ ಋಷಿಗಳು ಯಾವ ಪಥದಿಂದ ಹೋಗುತ್ತಾರೆಯೋ ಅಂತಹ ದೇವಯಾನವೆಂಬ ಪಥವು ಸತ್ಯದಿಂದ ಹರಡಿರುತ್ತದೆ.

ಅದು ಬೃಹತ್ತಾಗಿಯೂ,ದಿವ್ಯವಾಗಿಯೂ,ಅಚಿಂತ್ಯ ರೂಪವುಳ್ಳದ್ದಾಗಿಯೂ ಇದೆ.ಅದು ಸೂಕ್ಷ್ಮವಾದುದಕ್ಕಿಂತಲೂ ಸೂಕ್ಷ್ಮತರವಾಗಿ ಪ್ರಕಾಶಿಸುತ್ತಿರುವುದು.ಅದು ದೂರವಾಗಿರುವುದಕ್ಕಿಂತಲೂ ಅತ್ಯಂತ ದೂರವಾಗಿಯೂ, ಇಲ್ಲಿಯೇ ಸಮೀಪದಲ್ಲಿಯೂ ಇರುವುದು. ಅದು ಇಲ್ಲಿ ನೋಡುವವರಿಗೆ ಗುಹೆಯಲ್ಲಿಯೇ(ಬುದ್ಧಿಯಲ್ಲಿಯೇ) ಇಡಲ್ಪಟ್ಟಿರುವುದು.

  ಅವನನ್ನು ಕಣ್ಣಿನಿಂದಾಗಲೀ,ಮಾತಿನಿಂದಾಗಲಿ,ಇತರ ಇಂದ್ರಿಯಗಳಿಂದಾಗಲೀ ಗ್ರಹಿಸಲು ಆಗುವುದಿಲ್ಲ. ತಪಸ್ಸಿನಿಂದಾಗಲೀ ಅಥವಾ ಕಮ೯ದಿಂದಾಗಲಿ ಗ್ರಹಿಸಲಾಗುವುದಿಲ್ಲ. ಆದರೆ ಜ್ಞಾನಪ್ರಸಾದದಿಂದ ಶುದ್ಧವಾದ ಅಂತಃಕರಣವುಳ್ಳವನಾಗಿ ಧ್ಯಾನಮಾಡುವವನು ಅದರಿಂದ ನಿಷ್ಕಲನಾದ ಆತ್ಮನನ್ನು ನೋಡುತ್ತಾನೆ.ಚಿತ್ತವು ಶುದ್ಧಿಯಾದರೆ ಆತ್ಮನು ಪ್ರಕಾಶಿಸುವನು.ವಿಭೂತಿಯನ್ನು ಬಯಸುವವನು ಆತ್ಮಜ್ಞನನ್ನು  ಪೂಜಿಸಬೇಕು.ಯಾವನು ಸವಾ೯ತ್ಮನನ್ನೇ ತನ್ನ ಆತ್ಮನೆಂದು ತಿಳಿದುಕೊಳ್ಳ್ಲುವನೊ ಅವನು ಸವಾ೯ತ್ಮನಾಗುವನು.('ಸವೋ೯ಹಂ' ಎಂಬ ಭಾವ) ಆದ್ದರಿಂದಲೇ ಸವ೯ಪ್ರಾಪ್ತಿರೂಪವಾದ ಫಲವು ಅವನಿಗೆ ಉಂಟಾಗುತ್ತದೆ.

ಎರಡನೇ ಖಂಡ:

         ಯಾವುದರಲ್ಲಿ ಸಮಸ್ತ ಜಗತ್ತೂ ಸಮಪಿ೯ತವಾಗಿದೆಯೋ,ಯಾವುದು ಶುದ್ಧವಾಗಿ ಪ್ರಕಾಶಿಸುತ್ತಿರುವುದೋ,ಈ ಪರಮವಾದ ಬ್ರಹ್ಮವೆಂಬ ಸ್ಥಾನವನ್ನು ಅವನು ತಿಳಿದಿರುವನು.ನಿಷ್ಕಾಮರಾದ ಯಾರು ಈ ಆತ್ಮಜ್ಞನನ್ನು ಉಪಾಸಿಸುವರೊ ಆ ಧೀರರು ಈ ಶುಕ್ರವನ್ನು ಅತಿಕ್ರಮಿಸುತ್ತಾರೆ.ಯಾವನು ಕಾಮಗಳನ್ನು ಯೋಚಿಸುತ್ತ ಕಾಮಿಸುವನೋ ಅವನು ಕಾಮಗಳೊಂದಿಗೆ ಅಲ್ಲಿ ಹುಟ್ಟುತ್ತಾನೆ.ಪೂಣ೯ಕಾಮನಾದ ಕೃತಾತ್ಮನಿಗೆ ಎಲ್ಲಾ ಕಾಮಗಳೂ ಇಲ್ಲಿಯೇ ನಾಶವಾಗುವುವು.

"ನಾಯಮಾತ್ಮಾ ಪ್ರವಚನೇನ ಲಭ್ಯೋ

ನ ಮೇಧಯಾ ನ ಬಹುನಾ ಶ್ರುತೇನ"

       ಈ ಆತ್ಮನು ಪ್ರವಚನದಿಂದ ಲಭ್ಯನಲ್ಲ.ಮೇಧಾ ಶಕ್ತಿಯಿಂದಲೂ ,ಬಹು ಶ್ರವಣದಿಂದಲೂ ಲಭ್ಯನಲ್ಲ.ಯಾವ ಪರಮಾತ್ಮನನ್ನು ಇವನು ಪಡೆಯಲು ಇಚ್ಛಿಸುತ್ತಾನೆಯೋ ಆ ಇಚ್ಛೆಯಿಂದಲೇ ಅವನು ಲಭ್ಯನು. ಅವನಿಗೆ ಈ ಆತ್ಮನು ತನ್ನ ಶರೀರವನ್ನು ಪ್ರಕಾಶಪಡಿಸುತ್ತಾನೆ7.

ಈ ಆತ್ಮನು ಬಲಹೀನನಿಗೆ ಲಭ್ಯನಲ್ಲ.ಪ್ರಮಾದದಿಂದಾಗಲೀ,ಸನ್ಯಾಸವಿಲ್ಲದ ತಪಸ್ಸಿನಿಂದಾಗಲೀ ಲಭ್ಯನಲ್ಲ.ಅವನ ಸಾಧನೆಗಳಿಂದ ಯಾವ ವಿದ್ವಾಂಸನು ಪ್ರಯತ್ನಿಸುತ್ತಾನೋ ಅವನು ಬ್ರಹ್ಮಧಾಮವನ್ನು ಪ್ರವೇಶಿಸುವನು.

 ಈ ಆತ್ಮನನ್ನು ತಿಳಿದುಕೊಂಡು ಋಷಿಗಳು ಜ್ಞಾನತೃಪ್ತರೂ ,ಕೃತಾತ್ಮರೂ,ರಾಗ ದೋಷಾದಿ ರಹಿತರೂ,  ಪ್ರಶಾಂತರೂ ಆಗುವರು. ವಿವೇಕಿಗಳು ನಿತ್ಯವೂ ಸಮಾಹಿತ ಸ್ವಬಾವವುಳ್ಳವರಾಗಿ ಸವ೯ವ್ಯಾಪ್ತನಾದ ಬ್ರಹ್ಮವನ್ನು ಸವ೯ತ್ರ ಪಡೆದುಕೊಂಡು ಸವ೯ವನ್ನೂ ಪ್ರವೇಶಿಸುವರು. (ಘಟಾಕಾಶವು ಚಿದಾಕಾಶದಲ್ಲಿ ಲೀನವಾಗುವಂತೆ)

ಈ ಉಪನಿಷತ್ತಿನ ಒಂದು ಪ್ರಸಿದ್ಧವಾದ ವಾಕ್ಯವು ಹೀಗಿದೆ

ವೇದಾಂತ ವಿಜ್ಞಾನ ಸುನಿಶ್ಚಿತಾಥಾ೯ಃ

ಸನ್ಯಾಸಯೋಗಾದ್ಯತಯಃ ಶುದ್ಧಸತ್ವಾಃ

ತೇ ಬ್ರಹ್ಹಲೋಕೇಶು ಪರಾಂತಕಾಲೇ

ಪರಾಮೃತಾಃ ಪರಿಮುಚ್ಯ0ತಿ ಸವೇ೯|

ವೇದಾಂತ ವಿಜ್ಞಾನದ ಅಥ೯ವನ್ನು ಚೆನ್ನಾಗಿ ನಿಧಾ೯ರಮಾಡಿರುವವರಾಗಿ ಸನ್ಯಾಸಯೋಗದಿಂದ ಶುದ್ಧಸತ್ವವುಳ್ಳವರಾಗಿ ಆ ಎಲ್ಲಾ ಯತಿಗಳು ಬ್ರಹ್ಮಲೋಕಗಳಲ್ಲಿ ಚರಮಕಾಲದಲ್ಲಿ ಬ್ರಹ್ಮೀಭೂತರಾಗಿ ಮುಕ್ತರಾಗುವರು.

ಮೋಕ್ಷಕಾಲದಲ್ಲಿಹದಿನೈದು ಕಲೆಗಳು ತಮ್ಮಕಾರಣಗಳನ್ನು ಸೇರುತ್ತವೆ.ದೇವತೆಗಳೆಲ್ಲರೂ ಪ್ರತಿದೇವತೆಗಳನ್ನು ಸೇರುತ್ತಾರೆ.ಅವರ ಕಮ೯ಗಳು,ವಿಜ್ಞಾನಮಯವಾದ ಆತ್ಮನು,ಎಲ್ಲವೂ ಅವ್ಯಯವಾದ ಪರಬ್ರಹ್ಮದಲ್ಲಿ ಒಂದಾಗುವವು.ಹೇಗೆ ಹರಿಯುತ್ತಿರುವ ನದಿಗಳು ನಾಮರೂಪಗಳನ್ನು ಬಿಟ್ಟು ಸಮುದ್ರದಲ್ಲಿ ಲೀನವಾಗುವವೊ ಹಾಗೆಯೇ ವಿದ್ವಾಂಸನು ನಾಮರೂಪಗಳಿಂದ ಬಿಡುಗಡೆಯನ್ನು ಹೊಂದಿ ಪರಮಾತ್ಮನೂ ದಿವ್ಯನೂ ಆದ ಪುರುಷನನ್ನು ಹೊಂದುವನು.

"ಬ್ರಹ್ಮವೇದ ಬ್ರಹ್ಮೈವ ಭವತಿ"

ಯಾವನು ಆ ಪರಬ್ರಹ್ಮವನ್ನು ತಿಳಿದುಕೊಳ್ಳುವನೊ ಅವನು ಬ್ರಹ್ಮವೇ ಆಗುವನು.ಇವನ ಕುಲದಲ್ಲಿ ಬ್ರಹ್ಮವನ್ನು ಅರಿಯದವರು ಹುಟ್ಟುವುದಿಲ್ಲ.ಇವನು ಶೋಕವನ್ನು ದಾಟುತ್ತಾನೆ. ಪಾಪವನ್ನು ದಾಟುತ್ತಾನೆ. ಹೃದಯಗ್ರಂಥಿಗಳಿಂದ ಬಿಡುಗಡೆಯನ್ನು ಹೊಂದಿ ಅಮೃತರಾಗುವರು8.

ಆ ಇದು ಋಕ್ಕಿನಿಂದ ಹೇಳಲ್ಪಟ್ಟಿದೆ.ಯಾರು ಕ್ರಿಯಾವಂತರೊ, ಶ್ರೋತ್ರೀಯರೊ, ಬ್ರಹ್ಮನಿಷ್ಠರೂ, ಶ್ರದ್ಧೆಯುಳ್ಳವರಾಗಿ ತಾವೇ ಏಕಶಿ೯ ಎಂಬ ಅಗ್ನಿಯಲ್ಲಿ ಹೋಮಮಾಡುವರೋ, ಯಾರಿಂದ ಶಿರೋವ್ರತವು ವಿಧಿವತ್ತಾಗಿ ಆಚರಿಸಲ್ಪಡುವುದೋ ಅವರಿಗೆ ಈ ಬ್ರಹ್ಮವಿದ್ಯೆಯನ್ನು ಉಪದೇಶಿಸಬೇಕು.(ಶಿರೋವ್ರತ ಎಂಬ ವ್ರತದಲ್ಲಿ ಅಗ್ನಿಯನ್ನು ತಲೆಯಮೇಲೆ ಧರಿಸಬೇಕು)

ಆ ಈ ಸತ್ಯವನ್ನು ಅಂಗಿರಸ ಎಂಬ ಋಷಿಯು ಪೂವ೯ದಲ್ಲಿ ಶೌನಕನಿಗೆ ಹೇಳಿದನು.ವ್ರತವನ್ನು ಆಚರಿಸದೆ ಇರುವವನು ಇದನ್ನು ಅಧ್ಯಯನ ಮಾಡಕೂಡದು.ಪರಮ ಋಷಿಗಳಿಗೆ ನಮಸ್ಕಾರ.ಪರಮ ಋಷಿಗಳಿಗೆ ನಮಸ್ಕಾರ.

ಮಾಂಡೂಕ್ಯ ಉಪನಿಷತ್ತು ಹಾಗೂ ಅದ್ವೈತ:

     ಮಾಂಡೂಕ್ಯ ಉಪನಿಷತ್ ಅಥವ೯ ವೇದಕ್ಕೆ ಸೇರಿದೆ.ಇದೊಂದು ಅತ್ಯಂತ ಚಿಕ್ಕ ಉಪನಿಷತ್.ಇದರಲ್ಲಿ ಕೇವಲ ಹನ್ನೆರಡೇ ಮಂತ್ರಗಳಿವೆ.ತಾತ್ವಿಕ ದೃಷ್ಟಿಯಿಂದ ಇದು ಅತಿ ಮುಖ್ಯವಾಗಿರುವ ಉಪನಿಷತ್ತು.ಮುಮುಕ್ಷುಗಳಿಗೆ ಮಾಂಡೂಕ್ಯ ಉಪನಿಷತ್ ಒಂದೇ ಸಾಕು ಎನ್ನುತ್ತದೆ ಮುಕ್ತಿಕೋಪನಿಷತ್ತು.

ಇದನ್ನು ಕುರಿತು ಭಾಷ್ಯ ಬರೆಯುವಾಗ ಶ್ರೀ ಶಂಕರಾಚಾಯ೯ರು "ವೇದಾಂತ ಸಾರ ಸಂಗ್ರಹ"ಎಂದು ಕರೆಯುತ್ತಾರೆ.ಶ್ರೀ ಶಂಕರಾಚಾಯ೯ರ ಗುರುಗಳ(ಶ್ರೀಗೋವಿಂದ ಭವತ್ಪಾದರು) ಗುರುಗಳಾದ ಗೌಡಪಾದಾಚಾಯ೯ರು ಇದರ ಮೇಲೆ ಒಂದು ಕಾರಿಕೆಯನ್ನು ಬರೆದಿದ್ದಾರೆ.ಇದು ಅವಸ್ಥಾತ್ರಯ ವಿಭಜನೆಯ ಮೂಲಕ ಬ್ರಹ್ಮವನ್ನು ತಿಳಿಸುತ್ತದೆ.ಜಾಗ್ರತ,ಸ್ವಪ್ನ,ಸುಷುಪ್ತಿಗಳು ಎಲ್ಲರ ಅನುಭವದಲ್ಲೂ ಸಾಮಾನ್ಯವಾಗಿದೆ.

             ಯಾರು ಅವಸ್ಥಾತ್ರಯಕ್ಕೆ ಸಾಕ್ಷಿಯಾಗಿರುವರೋ ಅವನೇ ಮುಖ್ಯ.ಅದೇ ಪರಮಸತ್ಯ.ಇದನ್ನು ಪಡೆಯುವುದು ಹೇಗೆ ಎಂಬುದಕ್ಕೆ ಓಂಕಾರೋಪಾಸನೆಯನ್ನು ಹೇಳುವರು.ಇಲ್ಲಿ ಒಬ್ಬನು ಶಾಸ್ತ್ರಾದಿಗಳನ್ನು ನಂಬಬೇಕಾಗಿಲ್ಲ.ಸುಮ್ಮನೆ ವಿಭಜನಾತ್ಮಕ ವಿಧಾನವನ್ನು  ಅನುಸರಿಸಬೇಕು.ಇದು ಕೇವಲ ಯುಕ್ತಿಪ್ರಧಾನ ಮಾಗ೯.ಈ ಉಪನಿಷತ್ತನ್ನು "ಮಾಂಡೂಕ್ಯ" ಎಂಬ ಋಷಿಯು ಬರೆದಿದ್ದಾನೆ.

                         ಮಾಂಡೂಕ್ಯ ಉಪನಿಷತ್

1) ಇದೆಲ್ಲವೂ ಓಂ ಎಂಬ ಈ ಅಕ್ಷರವು.ಅದರ ಉಪವ್ಯಾಖ್ಯಾನವು ಹೀಗಿದೆ.ಹಿಂದೆ ಆಗಿಹೋದದ್ದು,ಈಗ ಇರುವುದು,ಮುಂದಿನದು ಇದೆಲ್ಲವೂ ಓಂಕಾರವೇ.ತ್ರಿಕಾಲಾತೀತವಾದುದು ಇನ್ನೂ ಯಾವುದಿದೆಯೊ ಅದೂ ಓಂಕಾರವೆ.

2) ಇದೆಲ್ಲವೂ ಬ್ರಹ್ಮವು.ಈ ಆತ್ಮನು ಬ್ರಹ್ಮ.ಆ ಈ ಆತ್ಮನು ನಾಲ್ಕು ಪಾದಗಳುಳ್ಳವನು.

3) ಜಾಗರಿತವೆಂಬ ಸ್ಥಾನವುಳ್ಳವನೂ ಬಹಿಃಪ್ರಜ್ಞನೂ ಸಪ್ತಾಂಗನೂ ಹತ್ತೊಂಬತ್ತು ಮುಖವುಳ್ಳವನೂ, ಸ್ಥೂಲಭೋಗವುಳ್ಳವನೂ,ಆದ ವೈಶ್ವಾನರನು ಒಂದನೆಯ ಪಾದ.

ಜಾಗ್ರತಾವಸ್ಥೆಯಲ್ಲಿ ಆತ್ಮನು ಬಹಿಃ ಪ್ರಜ್ಞನಾಗಿರುತ್ತಾನೆ.ಎಂದರೆ ಹೊರಗಿನ ವಿಷಯಗಳನ್ನು ಅರಿಯುತ್ತಾನೆ1.ಈ ಅವಸ್ಥೆಯಲ್ಲಿ ಆತ್ಮನಿಗೆ ಹತ್ತೊಂಬತ್ತು ದ್ವಾರಗಳು ಇರುತ್ತವೆ.ಇವು ಐದು ಜ್ಞಾನೇಂದ್ರಿಯಗಳು,ಐದು ಕಮೇ೯ಂದ್ರಿಯಗಳು, ಪಂಚಪ್ರ್ರಾಣಗಳು ಹಾಗೂ ಅಂತಃಕರಣ ಚತುಷ್ಟಯಗಳಾದ ಮನಸ್ಸು(ಸಂಶಯಾತ್ಮಕ), ಬುದ್ಧಿ(ನಿಶ್ಚಯಾತ್ಮಕ),ಚಿತ್ತ,ಅಹಂಕಾರ.ಒಟ್ಟು ಹತ್ತೊಂಬತ್ತು ಮುಖಗಳು. (ಇಪ್ಪತ್ತಕ್ಕೆ ಒಂದು ಕಡಿಮೆ)

ಸಪ್ತಾಂಗನು:ದ್ಯುಲೋಕವು ನಡುನೆತ್ತಿ,ಆದಿತ್ಯನು ಚಕ್ಷುಸ್ಸು,ವಾಯುವು ಪ್ರಾಣವು,ಆಕಾಶವು ಶರೀರವು,ಅಪ್ಪು(ನೀರು)ಮೂತ್ರಸಂಗ್ರಹ ಸ್ಥಾನ.ಪೃಥ್ವಿಯು ಪಾದಗಳು,ಅಹವನೀಯಾಗ್ನಿಯೇ ಮುಖ.ಯಾವನು ಹೀಗೆ ಸಪ್ತಾಂಗಗಳಿಂದ ಕೂಡಿದ ವೈಶ್ವಾನರನನ್ನು ತನ್ನ ಆತ್ಮನೆಂದು ಉಪಾಸನೆ ಮಾಡುವರೋ ಅವರಿಗೆ ಸವ೯ ಲೋಕಗಳಲ್ಲಿಯೂ ಸ್ವತಂತ್ರವಾದ ವ್ಯಾಪ್ತಿ ಇರುವುದು.(ಸ್ವರಾಜ್ಯ ಸಾಮ್ರಾಜ್ಯ).ಅವನು ಎಲ್ಲರ ಆತ್ಮನಾಗುವನು.ಎಲ್ಲರ ಭೋಗವೂ ಅವನದೇ ಆಗಿರುವುದು.ಸ್ಥೂಲಭುಕ್ ಎಂದರೆ ಹೊರಗಿನ ಸ್ಥೂಲ ವಿಷಯಗಳನ್ನು ಅರಿಯುವವನು.ಇದು ಆತ್ಮನ ಮೊದಲನೇ ಪಾದ.

ಸ್ವಪ್ನವೆಂಬ ಸ್ಥಾನವುಳ್ಳವನೂ ,ಅಂತಃ ಪ್ರಜ್ಞನೂ ಸಪ್ತಾಂಗನೂ, ಹತ್ತೊಂಬತ್ತು ಮುಖಗಳುಳ್ಳವನೂ , ಸೂಕ್ಷ್ಮ ಭೋಗವುಳ್ಳವನೂ, ಆದ ತೈಜಸನು ಎರಡನೇ ಪಾದ2.ಸ್ವಪ್ನಾವಸ್ಥೆಯಲ್ಲಿ ಆತ್ಮನು ಅಂತಃ ಪ್ರಜ್ಞನಾಗಿರುತ್ತಾನೆ.ಎಂದರೆ ಒಳಗಿನದನ್ನು(ಸ್ವಪ್ನದಲ್ಲಿರುವಂತೆ) ಕಾಣುತ್ತಾನೆ. ಆಗ ನಮಗೂ ಹೊರಗಿನ ಪ್ರಪಂಚಕ್ಕೂ ಸಂಬಂಧವಿರುವುದಿಲ್ಲ.

ಅವನು ನಿದ್ರಿಸುವಾಗ ಈ ಲೋಕದ ಸವ೯ ಸಾಧನ ಸಂಪತ್ತುಳ್ಳ ವಾಸನಾಂಶವನ್ನು ತೆಗೆದುಕೊಂಡು  ಈ ದೇಹವನ್ನು ತಾನೇ ಮತ್ತೊಂದು ದೇಹವನ್ನು ನಿಮಿ೯ಸಿಕೊಂಡು ವಾಸನಾತ್ಮಕವಾದ ಹೊಳಪನ್ನು ತನ್ನ ಜ್ಯೋತಿಯಿಂದ ನೋಡುತ್ತಾ ನಿದ್ರಿಸುತ್ತಾನೆ.(ಬೃ4_3_2) ಇಂದ್ರಿಯಗಳ ವ್ಯಾಪಾರಗಳೆಲ್ಲವೂ ಮನಸ್ಸೊಂದರಲ್ಲಿಯೇ ಸೇರಿಬಿಡುತ್ತವೆ.

ಎಚ್ಚರದ ಇಂದ್ರಿಯ ವ್ಯಾಪಾರವೆಲ್ಲವೂ ನಿಂತುಹೋಗಿ ಮನಸ್ಸೊಂದೇ ತಾನೇ ಎಲ್ಲಾ ಬಗೆಯವಿಷಯಗಳಾಗಿ ಕಾಣುತ್ತಿರುತ್ತದೆ.ಆತ್ಮನು ಇಲ್ಲಿ ಸೂಕ್ಷ್ಮ ಭುಕ್.ಸ್ವಪ್ನದಲ್ಲಿ ನಿಜವಾದ  ಇಂದ್ರಿಯಗಳಿಲ್ಲದಿರುವುದರಿಂದ ಬರಿಯ ಮನಸ್ಸಿನ ವಾಸನಾತ್ಮಕ ಭೋಗವು ಮಾತ್ರ ಇರುತ್ತದೆ.ಆದ್ದರಿಂದ ಅವನು ಇಲ್ಲಿ "ಸೂಕ್ಷ್ಮ ಭುಕ್".ಸ್ವಪ್ನದಲ್ಲಿ ಆತ್ಮನು ತೇಜಸ್ಸಿನಿಂದ ಆದವನು.

ಎಲ್ಲಿ ನಿದ್ರಿಸಿದವನು ಯಾವಕಾಮವನ್ನು ಬಯಸುವುದಿಲ್ಲವೋ ರiÀiÁವ ಕನಸನ್ನು ಕಾಣುವುದಿಲ್ಲವೋ ,ಅದು ಸುಷುಪ್ತವು. ಸುಷುಪ್ತ ಸ್ಥಾನದಲ್ಲಿರುವವನಾಗಿ  ಏಕೀಭೂತನಾಗಿ ಪ್ರಜ್ಞಾನಘನನೇ ಆಗಿ ಆನಂದಮಯನಾಗಿ ಆನಂದ ಭೋಗವುಳ್ಳವನಾಗಿ ಚೇತೋಮುಖನಾಗಿರುವ ಪ್ರಾಜ್ಞನು ಮೂರನೆಯ ಪಾದವು3.

ಜೀವವು ಏನೇನು ಮಾಡುತ್ತಿರುವನೂ ಅದೆಲ್ಲವೂ ಕಾಮದ ವ್ಯಾಪಾರವೇ.ಇದೇ ಎಚ್ಚರದ ಅಸಾಧಾರಣ ಧಮ೯.ಈ ಸ್ವಭಾವವು ಸುಷುಪ್ತಿಯಲ್ಲಿರುವುದಿಲ್ಲ.ಅಲ್ಲಿ ಯಾವ ಕಾಮದ ಬಯಕೆಯೂ ಇರುವುದಿಲ್ಲ.ಎಚ್ಚರ ಕನಸುಗಳಂತೆ ಇಲ್ಲಿ ಯಾವ ಉಪಾಧಿಯೂ ಆತ್ಮನಿಗೆ ಇರುವುದಿಲ್ಲ. ಎಚ್ಚರದಲ್ಲಿಯೂ ಕನಸಿನಲ್ಲಿಯೂ ಆತ್ಮನು ಸಪ್ತಾಂಗನು.ಏಕೋನ ವಿಂಶತಿ ಮುಖನು ಎಂದು ವಣಿ೯ಸಲಾಗಿತ್ತು. ಆದರೆ  ಸುಷುಪ್ತಿಯಲ್ಲಿ ಅಂಥ ಪ್ರಪಂಚವು ಯಾವುದೂ ಇರುವುದಿಲ್ಲ.ಇಲ್ಲಿ ಇರುವುದೆಲ್ಲಾ ಆತ್ಮನೊಬ್ಬನೇ.ಅವನಲ್ಲಿ ಪ್ರಪಂಚವು ಒಂದಾಗಿರುತ್ತದೆ.ಆದ್ದರಿಂದ ಅವನನ್ನು"ಏಕೀಭೂತ"ನು ಎಂದು ಮಂತ್ರದಲ್ಲಿ ಕರೆದಿದೆ.

ಸುಷುಪ್ತಿಯಲ್ಲಿ ನಾವು ಆನಂದವನ್ನು ಭೋಗಿಸುತ್ತೇವೆ.ಆದ್ದರಿಂದ ಅವನು ಆನಂದ ಭುಕ್.(ಆನಂದವನ್ನು ಭೋಗಿಸುವವನು).ಸುಷುಪ್ತಿಯಲ್ಲಿ ಆತ್ಮನು ಪ್ರಜ್ಞಾನ ಸ್ವರೂಪನಾಗಿರುವುದರಿಂದ "ಪ್ರಜ್ಞೆ".

ಈತನೇ ಸವೇ೯ಶ್ವರನು.ಈತನೇ ಸವ೯ಜ್ಞನು.ಈತನೇ ಅಂತಯಾ೯ಮಿಯು.ಈತನೇ ಎಲ್ಲಕ್ಕೂ ಯೋನಿಯು. (ಕಾರಣನು) ಭೂತಗಳ ಪ್ರಭವಾಪ್ಯಯವು.ಅಂತಯಾ೯ಮಿ ಎಂದರೆ ಪ್ರಾಣಿಗಳ ಒಳಹೊಕ್ಕು ಅವುಗಳನ್ನೇ ನಿಯಮಿಸುವವನು.

ಅಂತಪ್ರಜ್ಞನಲ್ಲ.ಬಹಿಃಪ್ರಜ್ಞನಲ್ಲ. ಉಭಯತ ಪ್ರಜ್ಞನಲ್ಲ. ಪ್ರಜ್ಞಾನ ಘನನಲ್ಲ. ಪ್ರಜ್ಞವಲ್ಲ. ಅಪ್ರಜ್ಞನಲ್ಲ. ಅದೃಶ್ಯವು, ಅವ್ಯವಹಾಯ೯ವು, ಅಗ್ರಾಹ್ಯವು, ಅಲಕ್ಷಣವು, ಅಚಿಂತ್ಯವು, ಅವ್ಯಪದೇಶ್ಯವು, ಏಕಾತ್ಮ ಪ್ರತ್ಯಯಸಾರವು,ಪ್ರಪಂಚೋಪಶಮವು,ಶಾಂತವು,ಶಿವವು,ಅದ್ವೈತವು ಇದು ನಾಲ್ಕನೆಯ ಪಾದವೆನ್ನುವರು. ಇವನೇ ಆತ್ಮನು. ಇವನನ್ನು ಅರಿತುಕೊಳ್ಳಬೇಕು4.

ಈ ಶ್ಲೋಕದಲ್ಲಿ ತುರೀಯದ ಸ್ಥಿತಿಯನ್ನು ಹೇಳಿದರೂ ನಿಜವಾಗಿ ನಾಲ್ಕನೆಯ ಸ್ಥಿತಿಯಲ್ಲ.ಇದು ಮೂರು ಅವಸ್ಥೆಗಳಿಗೂ ಹಿನ್ನೆಲೆ.ಸಾಕ್ಷಿ.ಇದಿಲ್ಲದೆ ಬೇರೆ ಯಾವ ಅವಸ್ಥೆಯೂ ಬರಲಾರದು. ವಾಚ್ಯ ದೃಷ್ಟಿಯಿಂದ ಆತ್ಮವು ಬ್ರಹ್ಮವು.ವಾಚಕ ದೃಷ್ಟಿಯಿಂದ ನೋಡಿದರೆ ಆತ್ಮನು ಓಂಕಾರವು5.

ಇವನು ಈ ಆತ್ಮನು ಅಂತಪ್ರಜ್ಞನಲ್ಲ,ಬಹಿಃಪ್ರಜ್ಞನಲ್ಲ.ಉಭಯತ ಪ್ರಜ್ಞನಲ್ಲ,ಪ್ರಜ್ಞನಲ್ಲ.ಎಂದರೆ ಅವನಲ್ಲಿ ಯಾವ ವಿಷಯದ ಜ್ಞಾತೃತ್ವಭಾವವಿಲ್ಲ.ನಾನು ಇದನ್ನು ನೋಡಿದೆ ಅದು ಹಾಗಿದೆ ಹೀಗಿದೆ ಎಂದು ಹೇಳುವುದಿಲ್ಲ.ಅಪ್ರಜ್ಞನಲ್ಲ_ಎಂದರೆ ಇದು ಅಜ್ಞಾನವಲ್ಲ. ಅದೃಶ್ಯನು_ಇವನನ್ನು ನೋಡುವುದಕ್ಕೆ ಆಗುವುದಿಲ್ಲ.ಅವ್ಯವಹಾಯ೯_ವ್ಯವಹಾರಕ್ಕೆ ಸಿಗುವವನಲ್ಲ,ಹಿಡಿಯುವುದಕ್ಕೆ ಆಗುವುದಿಲ್ಲ(ಅಗ್ರಾಹ್ಯ) ಲಕ್ಷಣರಹಿತ, ಅಚಿಂತ್ಯ, ಅವ್ಯಪದೇಶ್ಯ _ಶಬ್ದದಿಂದ ಪ್ರವೇಶಿಸುವುದಕ್ಕೆ ಆಗುವುದಿಲ್ಲ. ಏಕಾತ್ಮ ಪ್ರತ್ಯಯಸಾರನು.ಪ್ರಪಂಚ ಉಪಶಮನನು, ತುರೀಯದಲ್ಲಿ ಯಾವ ಪ್ರಪಂಚವೂ ಇಲ್ಲ.ತುರೀಯ ಸ್ಥಿತಿಯು ಶಾಂತ. ಅವನು ಅದ್ವೈತನು.  ಅವನು ಆತ್ಮನು. ಅವನು ಅರಿಯಲ್ಪಡಬೇಕು. ತುರೀಯನು ಪಾದವೂ ಅಲ್ಲ ಮಾತ್ರೆಯೂ ಅಲ್ಲ6.

ಈ ಆತ್ಮನು ಅಕ್ಷರದ ದೃಷ್ಟಿಯಿಂದ ಓಂಕಾರವು. ಮೋಕ್ಷರೂಪದಲ್ಲಿರುವವನು,ಪಾದಗಳು ಮಾತ್ರೆಗಳು ಮಾತ್ರೆಗಳೇ ಪಾದಗಳು.ಅವೇ ಅಕಾರ ,ಉಕಾರ,ಮಕಾರ. ವ್ಯಾಪ್ತಿಯಿಂದಾಗಲೀ ಅಥವಾ ಆದಿಯುಳ್ಳದ್ದ ರಿಂದಲೇ ಆಗಲಿ ಜಾಗರಿತಾವಸ್ಥೆಯಲ್ಲಿರುವ ವೈಶ್ವಾನರನು ಅಕಾರವೆಂಬ ಮೊದಲನೆ ಮಾತ್ರೆ.ಯಾರು ಹಿಗೆ ಅರಿತುಕೊಳ್ಳುತ್ತಾರೆಯೊ ಅವನು ಎಲ್ಲಾ ಕಾಮಗಳನ್ನೂ ಹೊಂದುತ್ತಾನೆ. ಕನಸಿನ ತೋರಿಕೆಯಂತೆ ಎಚ್ಚರದ ತೋರಿಕೆಯೂ ಹುಸಿ ಎನ್ನಲು ಯಾವ ಅಡ್ಡಿಯೂ ಇಲ್ಲ7.

ಉತ್ಕಷ೯ದಿಂದಾಗಲೀ ಅಥವಾ ಎರಡರ ಮಧ್ಯದಲ್ಲಿರುವುದರಿಂದಾಗಲೀ ಸ್ವಪ್ನಾವಸ್ಥೆಯಲ್ಲಿರುವ ತೈಜಸನು ಉಕಾರವೆಂಬ ಎರಡನೆಯ ಮಾತ್ರೆ. ಯಾವನು ಹೀಗೆ ತಿಳಿದುಕೊಳ್ಳುತ್ತಾನೆಯೋ ಅವನು ಜ್ಞಾನ ಸಂತತಿಯನ್ನು ಹೆಚ್ಚಿಸಿಕೊಳ್ಳುತ್ತಾನೆ.ಇವನ ಕುಲದಲ್ಲಿ ಬ್ರಹ್ಮನನ್ನು ಅರಿಯದವರು ಹುಟ್ಟುವುದಿಲ್ಲ.  ಅಳೆಯುವುದರಿಂದಾಗಲೀ ಅಥವಾ ಒಂದಾಗುವುದರಿಂದಾಗಲೀ ಸುಷುಪ್ತಿ ಸ್ಥಾನದಲ್ಲಿರುವ ಪ್ರಾಜ್ಞನು ಮಕಾರವೆಂಬ ಮೂರನೆಯ ಮಾತ್ರೆ.ಯಾವನು ಹೀಗೆ ತಿಳಿಯುತ್ತಾನೋ ಅವನು ಇದೆಲ್ಲವನ್ನೂ ಅಳೆಯುತ್ತಾನೆ ಮತ್ತು ಒಂದಾಗುತ್ತಾನೆ8.

ಮಾತ್ರೆ ಇಲ್ಲದ ತುರೀಯವು ವ್ಯವಹಾರಕ್ಕೆ ಅತೀತವಾಗಿದೆ.ಪ್ರಪಂಚ ಉಪಶಮವೂ, ಮಂಗಳವೂ, ಅದ್ವೈತವೂ, ಆಗಿದೆ.ಯಾವನು ಹೀಗೆ ತಿಳಿದುಕೊಳ್ಳುತ್ತಾನೆಯೋ ಅವನು ತನ್ನಿಂದ ತನ್ನನ್ನು ಸೇರುವನು.

ತೈತ್ತಿರೀಯ ಉಪನಿಷತ್ತು ಹಾಗೂ ಅದ್ವೈತ

ಯಜ್ಞ ಯಾಗಾದಿ ಕಮ೯ಗಳಿಗೋಸ್ಕರವೇ ಪ್ರವೃತ್ತವಾದ ಯಜುವೇ೯ದವು ಶುಕ್ಲ ಯಜುವೇ೯ದವೆಂದೂ  ಕೃಷ್ಣಯಜುವೇ೯ದವೆಂದೂ ಎರಡು ಭಾಗಗಳಾಗಿವೆ.ಶುಕ್ಲ ಯಜುವೇ೯ದಕ್ಕೆ ವಾಜಸನೇಯ ಸಂಹಿತೆಯೂ  ಕೃಷ್ಣ ಯಜುವೇ೯ದಕ್ಕೆ ತ್ಯತ್ತಿರೀಯ ಸಂಹಿತೆಯೂ ಮುಖ್ಯ ಶಾಖೆಗಳಾಗಿವೆ.

ಕೃಷ್ಣದ್ವೈಪಾಯನ ವೇದವ್ಯಾಸರು ವೇದಸಮೂಹವನ್ನು ಋಗ್ವೇದ,ಯಜುವೇ೯ದ ಸಾಮವೇದ, ಅಥವ೯ಣ ವೇದ ಎಂದು ನಾಲ್ಕು ಭಾಗಗಳನ್ನಾಗಿ ವಿಂಗಡಿಸಿದರು.ಅವುಗಳನ್ನು ಶಿಷ್ಯರಾದ ಪೈಲ, ವೈಶಂಪಾಯನ, ಜೈಮಿನಿ ಮತ್ತು ಸುಮಂತು ಇವರಿಗೆ ಬೋಧಿಸಿದರು.ವೈಶಂಪಾಯನರು ತಮಗೆ ಬಂದ ಯಜುವೇ೯ದವನ್ನು  ಯಾಜ್ಞವಲ್ಕ್ಯರೇ ಮೊದಲಾದ ಶಿಷ್ಯರಿಗೆ ಉಪದೇಶಿಸಿದರು.

ಯಾವುದೊ ಒಂದು ಸಂದಭ೯ದಲ್ಲಿ ವೈಶಂಪಾಯನರಿಗೆ ಯಾಜ್ಞವಲ್ಕ್ಯರ ಮೇಲೆ ಕೋಪವುಂಟಾಗಿ  ಅವರು ಕಲಿತಿರುವ ವೇದವನ್ನು ಹಿಂದಕ್ಕೆ ಕೊಟ್ಟು ಬಿಡುವಂತೆ ಆಜ್ಞಾಪಿಸಿದರು. ಯಾಜ್ಞವಲ್ಕ್ಯರು ತಮ್ಮ ತಪೋಬಲದಿಂದ ವೇದವನ್ನು ವಮನ ಮಾಡಿದರು .

ಆಚಾಯ೯ರ ಆಜ್ಞೆಯ ಪ್ರಕಾರ ಅವರ ಇತರ ಶಿಷ್ಯರು ತಿತ್ತಿರಿ ಪಕ್ಷಿಗಳ ರೂಪವನ್ನು ತಾಳಿ ವಮನ ಮಾಡಿದ ಆ ವೇದವನ್ನೇ ಸ್ವೀಕರಿಸಿದರು. ಆದುದರಿಂದ ಕೃಷ್ಣ ಯಜುವೇ೯ದವು ತೈತ್ತಿರೀಯ ಸಂಹಿತೆಯೆಂದು ಪ್ರಸಿದ್ಧವಾಯಿತು.ಅನಂತರ ಯಾಜ್ಞವಲ್ಕ್ಯರು ಸೂಯ೯ನನ್ನು ಕುರಿತು ತಪಸ್ಸು ಮಾಡಿ ಅವನ ಅನುಗ್ರಹವನ್ನು ಹೊಂದಿದರು.ಸೂಯ೯ನು ವಾಜಿ (ಕುದುರೆ) ರೂಪದಿಂದ ಬಂದು ಯಜುವೇ೯ದವನ್ನು ಪುನಃ ಉಪದೇಶ ಮಾಡಿದನು.ಸೂಯ೯ನಿಂದ ಉಪದಿಷ್ಟವಾದ್ದರಿಂದ ಶುಕ್ಲ ಯಜುವೇ೯ದವೆಂದೂ ವಾಜಿರೂಪದಿಂದ ಉಪದೇಶ¸್ಟಲ್ಪಟ್ಟಿದ್ದರಿಂದ ವಾಜಸನೇಯ ಸಂಹಿತೆಯೆಂದೂ  ಪ್ರಸಿದ್ಧವಾಗಿದೆ.

ಕೃಷ್ಣ ಯಜುವೇ೯ದ ತೈತ್ತಿರೀಯ ಶಾಖೆಯು ಸಂಹಿತೆ,ಬ್ರಾಹ್ಮಣ,ಅರಣ್ಯಕ ಇವುಗಳಿಂದ ಕೂಡಿದೆ. ತ್ಯತ್ತಿರೀಯ ಅರಣ್ಯಕದ ಏಳನೆಯ,ಎಂಟನೆಯ ಹಾಗೂ ಒಂಬತ್ತನೆಯ ಪ್ರಪಾಠಗಳೇ ಶೀಕ್ಷಾವಲ್ಲಿ, ಆನಂದವಲ್ಲಿ, ಭೃಗುವಲ್ಲಿ ಎಂಬ ವಲ್ಲೀತ್ರಯಗಳನ್ನು ಹೊಂದಿರುವ ತೈತ್ತಿರೀಯೋಪನಿಷತ್ತು.ಹತ್ತನೆಯ ಪ್ರಪಾಠವೇ ಯಾಜ್ಞಿಕೀ ಅಥವಾ ಮಹಾನಾರಾಯಣೋಪನಿಷತ್ತು ಎಂದು ಪ್ರಸಿದ್ಧವಾಗಿದೆ.

ಅಧ್ಯಯನದ ಸೌಕಯ೯ಕ್ಕಾಗಿ ಪ್ರತಿಯೊಂದು ವಲ್ಲಿಯಲ್ಲಿಯೂ ಸಣ್ಣ ಸಣ್ಣ ಅನುವಾಕಗಳಿವೆ.

ಶೀಕ್ಷಾವಲ್ಲೀ:

ಶಾಂತಿ ಪಾಠದಿಂದಲೇ ಮೊದಲನೆಯ ಅನುವಾಕವು ಪ್ರಾರಂಭವಾಗಿದೆ.ಎರಡನೆಯ ಅನುವಾಕದಲ್ಲಿ ವಣಾದಿಗಳ ಉಚ್ಛಾರವನ್ನು ನಿರೂಪಿಸಲಾಗಿದೆ.ಉಪನಿಷತ್ ವಾಕ್ಯಗಳಿಗೆ ಅಥ೯ ಜ್ಞಾನವೇ ಮುಖ್ಯವಾಗಿದ್ದರೂ ಗ್ರಂಥಪಾಠದಲ್ಲಿ ಉದಾಸೀನತೆ ಇರಬಾರದು.

ವಣ೯,ಸ್ವರ,ಮಾತ್ರೆಗಳ ಮೇಲೆ ಲಕ್ಷ್ಯವಿದ್ದರೆ ಅಥ೯ವು ಪಾಠಕನಿಗೆ ಹೊಳೆಯುವುದು.ಮೂರನೆಯ ಅನುವಾಕದಲ್ಲಿ ಸಂಹಿತಾ ವಿಷಯವಾದ ಉಪಾಸನೆಯನ್ನು ಹೇಳಿದೆ.ನಾಲ್ಕನೆಯ ಅನುವಾಕದಲ್ಲಿ, ಶ್ರೀಕಾಮ, ಮೇಧಾಕಾಮ ಮೊದಲಾದವರಿಗೆ ವಿವಿಧ ಜಪ, ತಪ,ಹೋಮಗಳನ್ನು ವಿವರಿಸಿದೆ.

ಈ ಅನುವಾಕದ ಕೊನೆಯಲ್ಲಿ ಆಚಾಯ೯ನು"ನೀರು ತಗ್ಗಿನ ಪ್ರದೇಶಕ್ಕೆ ಹರಿಯುವಂತೆ,ತಿಂಗಳುಗಳು ಸಂವತ್ಟರವನ್ನು ಸೇರುವಂತೆ ಬ್ರಹ್ಮಚಾರಿಗಳು ಎಲ್ಲಾ ಕಡೆಯಿಂದಲೂ ಬಂದು ನನ್ನನ್ನು ಸೇರಲಿ"ಎಂದು ಪ್ರಾಥ೯ಸುತ್ತಾನೆ.ಐದನೆಯ ವiತ್ತುಆರನೆಯ ಅನುವಾಕಗಳಲ್ಲಿ ವ್ಯಾಹೃತಿ ರೂಪವಾದ ಬ್ರಹ್ಮದ ಅಂತರುಪಾಸನೆಯನ್ನು ಹೇಳಿದೆ. ಭೂಭು೯ವಃ ಮೊದಲಾದ ವ್ಯಾಹೃತಿಗಳಲ್ಲಿ ನಾಲ್ಕನೆಯ ವ್ಯಾಹೃತಿಯಾದ "ಮಹಃ" ಎಂಬುದನ್ನು ಕಂಡುಹಿಡಿದವನು ಮಹಾಚಮಸ್ಯ ಎಂಬ ಋಷಿ."ಮಹಃ" ಎಂಬುದೆ ಬ್ರಹ್ಮ. ಬ್ರಹ್ಮೋಪಾಸನೆಗೆ ಮತ್ತು ಸಾಕ್ಷಾತ್ಕಾರಕ್ಕೆ ಹೃದಯಾಕಾಶವೇ ವಿಶಿಷ್ಟ ಸ್ಥಾನವೆಂದು ಹೇಳಿದೆ.ವ್ಯಾಹೃತಿ ರೂಪವಾದ ಆ ಬ್ರಹ್ಮವನ್ನು ಪೃಥಿವ್ಯಾದಿ ಪಾಂಕ್ತರೂಪದಿಂದ ಉಪಾಸಿಸ ಬೇಕೆಂದು ಏಳನೆಯ ಅನುವಾಕದಲ್ಲಿ ಹೇಳಿದೆ.

ಎಂಟನೆಯ ಅನುವಾಕದಲ್ಲಿ ಸವೋ೯ಪಾಸನೆಗೂ ಅಂಗವಾಗಿರುವ ಪ್ರಣವದ ಉಪಾಸನೆಯನ್ನು ವಿಧಿಸಿದೆ.ಒಂಬತ್ತನೆಯ ಮತ್ತು ಹನ್ನೊಂದನೆಯ ಅನುವಾಕದಲ್ಲಿ ಸಮಸ್ತ  ಶ್ರೌತ ಸ್ಮಾತ೯ ಕಮ೯ಗಳನ್ನು ನಿಯಮದಿಂದ ಮಾಡಬೇಕೆಂದು ಹೇಳಿದೆ.

ಬ್ರಹ್ಮಾನಂದವಲ್ಲಿ:

"ಬ್ರಹ್ಮವಿದಾಪ್ನೋತಿ ಪರಮ್"ಬ್ರಹ್ಮವಿದನು ಪರವನ್ನು ಹೊಂದುತ್ತಾನೆ ಎಂಬ ವಾಕ್ಯವು ಈ ವಲ್ಲಿಯ ಅಥ೯ಕ್ಕೆಲ್ಲ ಸೂತ್ರವಾಗಿರುತ್ತದೆ.

"ಸತ್ಯಂಜ್ಞಾನಂ ಅನಂತಂ ಬ್ರಹ್ಮ"ಎಂಬುದು ಬ್ರಹ್ಮದ ಲಕ್ಷಣ.ಇಂತಹ ಬ್ರಹ್ಮದಿಂದ ಆಕಾಶವೇ ಮೊದಲಾಗಿ ಅನ್ನರಸಮಯವಾದ ಮನುಷ್ಯನವರೆಗೆ ಜಗತ್ತೆಲ್ಲ ಸೃಷ್ಟಿಯಾಗುತ್ತದೆ.ಎರಡನೆಯ ಅನುವಾಕದಿಂದ ಐದನೆಯ ಅನುವಾಕದವರೆಗೆ ಅನ್ನಮಯ,ಪ್ರಾಣಮಯ,ಮನೋನಯ,ವಿಜ್ಞಾನಮಯ,ಆನಂದಮಯ ಎಂಬ ಐದು ಬಗೆಯ ಆತ್ಮರು ಒಬ್ಬರ ಒಳಗೆ ಒಬ್ಬರು ಇದ್ದಾರೆಂದು ವಿವರಿಸಿದೆ.

ಮುಖ್ಯವಾಗಿ ಬ್ರಹ್ಮದ ಅಸ್ತಿತ್ವವನ್ನು ಪ್ರತಿಪಾದಿಸಿದೆ.ಆನಂದದ ಮೀಮಾಂಸೆ ಎಂಟನೆಯ ಅನುವಾಕದ ವಿಷಯ.ಕಾಮರಹಿತವಾದ ಶ್ರೋತ್ರೀಯ ವೇದ್ಯವಾದ ಆನಂದವು, ಅವಿದ್ಯಾ ಕಾಮಕಮ೯ಗಳು ನಶಿಸಿದಂತೆ ನೂರುಮಡಿಯಾಗಿ ಹೆಚ್ಚಿ ಮನುಷ್ಯ ಗಂಧವ೯ನ ಆನಂದದಿಂದ ಪ್ರಾರಂಬಿಸಿ ಅವನು ಯಾವುದಕ್ಕೂ ಹೆದರುವುದಿಲ್ಲ.ವಿಜ್ಞಾನಮಯನಾದ ಆತ್ಮನಿಗಿಂಲೂ ಬೇರೆಯವನಾದ  ಒಳಗಿರುವ  ಮತ್ತು ಆನಂದಮಯನಾದ ಆತ್ಮನಿರುವನು.

ಭೃಗುವಲ್ಲಿ

ಈ ಕೊನೆಯ ವಲ್ಲಿಯಲ್ಲಿ ಬ್ರಹ್ಮವಿದ್ಯೆಗೆ ಸಾಧನವಾದ ತಪಸ್ಸನ್ನೂ ಅನ್ನಾದಿಗಳ ಉಪಾಸನೆಯನ್ನೂ ಹೇಳಿದೆ.ವರುಣನು ತನ್ನ ಮಗನಾದ ಭೃಗುವಿಗೆ ಶರೀರ,ಪ್ರಾಣ,ಚಕ್ಷುಸ್ಸು,ಶ್ರೋತ್ರ,ವಾಕ್ಕು ಎಂಬ ಜ್ಞಾನದ್ವಾರಗಳನ್ನು ಉಪದೇಶಿಸಿ ಅನಂತರ ಎಲ್ಲಾ ಪ್ರಾಣಿಗಳ ಉತ್ಪತ್ತಿ,ಸ್ಥಿತಿ, ಲಯಗಳಿಗೆ ಯಾವ ವಸ್ತುವು ಕಾರಣವೋ ಅದೇ ಬ್ರಹ್ಮವೆಂದು ಬ್ರಹ್ಮದ ಸಾಮಾನ್ಯ ಲಕ್ಷಣವನ್ನು ವಿವರಿಸುತ್ತಾನೆ.

ಭೃಗುವು ತಪಸ್ಸನ್ನು ಮಾಡಿ ಅನ್ನ,ಪ್ರಾಣ,ಮನಸ್ಸು,ವಿಜ್ಞಾನ ಇವುಗಳನ್ನು ಬ್ರಹ್ಮವೆಂದು ತಿಳಿದುಕೊಂಡನು. ಕೊನೆಗೆ ಅಂತರತಮವಾದ ಆನಂದವನ್ನೇ ಬ್ರಹ್ಮವೆಂದು ನಿಧ೯ರಿಸಿದನು.ಇದು ಮೊದಲನೆಯ ಆರು ಅನುವಾಕಗಳ ಸಾರಾಂಶ.ಒಂದು ದೃಷ್ಟಿಯಿಂದ ಪ್ರಾಣವು ಅನ್ನ ಶರೀರವು ಅನ್ನಾದ.ಅನ್ನೋಪಾಸಕನು ಅನ್ನವನ್ನು ನಿಂದಿಸಬಾರದು.ಹೀಗೆಯೇ ನೀರು,ಜ್ಯೋತಿಸ್ಸು,ಪೃಥ್ವಿ ಆಕಾಶ ಇವು ಪರಸ್ಪರ ಅನ್ನ_ಅನ್ನಾದಗಳು(ಅನ್ನವನ್ನು ತಿನ್ನುವವನು) ಎಂದು ಉಪಾಸಿಸಬೇಕು.ಇದು ಒಂಬತ್ತನೆಯ ಮತ್ತು ಹತ್ತನೆಯ ಅನುವಾಕಗಳ ವಿಷಯ.ಹತ್ತನೆಯ ಅನುವಾಕವು ಅನ್ನದಾನದ ಮಹಾತ್ಮ್ಯದಿಂದ ಪ್ರಾರಂಭವಾಗುತ್ತದೆ.ಯಾರು ಅನ್ನದಾನ ಮಾಡುವರೋ ಅವರಿಗೆ ಫಲವು ಸಿದ್ಧಿಸುವುದು.ಒಂದೇ ಬ್ರಹ್ಮವಸ್ತುವು ಪುರುಷನಲ್ಲಿಯೂ,ಆದಿತ್ಯನಲ್ಲಿಯೂ ಅಂತಯಾ೯ಮಿಯಾಗಿ ಇರುವುದು.ಯಾರು ಹೀಗೆ ಅರಿತುಕೊಳ್ಳುವರೊ ಅವರು ಅನ್ನಮಯದಿಂದ ಹಿಡಿದು ಆನಂದಮಯದವರೆಗೆ ಎಲ್ಲಾ ಆತ್ಮರನ್ನು ಹೊಂದಿ ಬ್ರಹ್ಮಾನಂದದಲ್ಲಿ ಮುಳುಗಿ ಮುಕ್ತಿಯನ್ನು ಹೊಂದುತ್ತಾರೆ.

ತೈತ್ತಿರೀಯೋಪನಿಷತ್ತಿನ ಕೆಲವು ಮುಖ್ಯ ವಾಕ್ಯಗಳು:

ಹನ್ನೊಂದನೆಯ ಅನುವಾಕದಲ್ಲಿ ಹೀಗೆ ಹೇಳಿದೆ.

ವೇದವನ್ನು ಅಧ್ಯಾಪನಮಾಡಿ ಆಚಾಯ೯ನು ಶಿಷ್ಯನಿಗೆ ಹೀಗೆ ಅನುಶಾಸನ ಮಾಡುತ್ತಾನೆ."ಸತ್ಯವನ್ನು ಹೇಳು; ಧಮ೯ವನ್ನು ಆಚರಿಸು.ಅಧ್ಯಯನದಲ್ಲಿ ಪ್ರಮಾದ ಮಾಡಬೇಡ.ಆಚಾಯ೯ನಿಗೆ ಇಷ್ಟವಾದ ಧನವನ್ನು ತಂದುಕೊಟ್ಟು ಸಂತತಿಯನ್ನು  ವಿಚ್ಛಿನ್ನಗೊಳಿಸದಿರು. ಸತ್ಯದಿಂದ ಕದಲಕೂಡದು.ಧಮ೯ದಿಂದ ಕದಲ ಕೂಡದು.ಕುಶಲದಿಂದ ಕದಲ ಕೂಡದು.ಮಂಗಳಯುಕ್ತವಾದ ಕಮ೯ದಿಂದ ಕದಲಕೂಡದು.ಸ್ವಾಧ್ಯಾಯ ಪ್ರವಚನಗಳಿಂದ ಕದಲಕೂಡದು. ದೇವಪಿತೃಗಳ ಕಾಯ೯ದಿಂದ ಕದಲಕೂಡದು.ತಾಯಿಯೇ ನಿನಗೆ ದೇವರಾಗಿರಲಿ. ತಂದೆಯೇ ನಿನಗೆ ದೇವರಾಗಿರಲಿ. ಅತಿಥಿಯೇ ನಿನಗೆ ದೇವರಾಗಿರಲಿ. ಯಾವ ಕಮ೯ಗಳು ಅನಿಂದಿತವೊ ಅವುಗಳನ್ನು ಸೇವಿಸಬೇಕು.ಉಳಿದವುಗಳನ್ನು ಸೇವಿಸಕೂಡದು.ನಮ್ಮಲ್ಲಿ ಯಾವ ಒಳ್ಳೆಯ ನಡತೆಗಳಿವೆಯೊ ಅವುಗಳನ್ನೇ ಸೇವಿಸಬೇಕು.ಉಳಿದವುಗಳನ್ನು ಸೇವಿಸಕೂಡದು.ನಮಗಿಂತ ಉತ್ತಮರಾದ ಯಾವ ಯಾವ ಬ್ರಾಹ್ಮಣರಿರುವರೊ ಅವರನ್ನು ಆಸನಾದಿ ಪೂವ೯ಕ ನೀನು ಸೇವಿಸಬೇಕು. ಪುರುಷ ಸಂಸ್ಕಾರವೇ ಈ ಅನುಶಾಸನ ಶ್ರುತಿಯ ಉದ್ದೇಶ.ಏಕೆಂದರೆ ವಿಶುದ್ಧ ಸತ್ವನಾದವನಿಗೆ ಆತ್ಮಜ್ಞಾನವು ಕೂಡಲೇ ಉಂಟಾಗುವುದು1.

ಶ್ರದ್ಧೆಯಿಂದ ಕೊಡಬೇಕು.ಅಶ್ರದ್ಧೆಯಿಂದ ಕೊಡಬಾರದು.ತನ್ನ ಐಶ್ವಯ೯ಕ್ಕೆ ತಕ್ಕಂತೆ ಕೊಡಬೇಕು. ವಿನಯದಿಂದ ಕೊಡಬೇಕು. ಭಯದಿಂದ ಕೊಡಬೇಕು. ಮಿತ್ರಭಾವದಿಂದ ಕೊಡಬೇಕು. ಇನ್ನು ನಿನಗೆ ಶ್ರೌತ ಸ್ಮಾತ೯ಕಮ೯ ವಿಷಯದಲ್ಲಾಗಲೀ ಆಚಾರ ವಿಷಯದಲ್ಲಾಗಲೀ  ಸಂಶಯವುಂಟಾದರೆ ಅಲ್ಲಿ ವಿಚಾರಕ್ಷಮರೂ ಕಮ೯ದಲ್ಲಿ ಸಮಥ೯ರೂ ,ಅಕ್ರೂರರೂ,ಅಕಾಮಹತರೂ ಆದ ಬ್ರಾಹ್ಮಣರು ಹೇಗೆ ವತಿ೯ಸುವರೊ ಹಾಗೆ ವತಿ೯ಸು.ಇದು ವಿಧಿ ಇದು ಉಪದೇಶ.ಇದು ವೇದರಹಸ್ಯ.ಇದು ಈಶ್ವರಾಜ್ಞೆ.ಹೀಗೆ ಉಪಾಸಿಸಬೇಕು. ಹೀಗೆ ಇದು ಅನುಷ್ಠೇಯ2.

ಮಿತ್ರನು ನಿನಗೆ ಸುಖವನ್ನುಂಟು ಮಾಡಲಿ.ವರುಣನು ನಿನಗೆ ಸುಖವನ್ನುಂಟು ಮಾಡಲಿ.ಆಯ೯ಮನು ನಿನಗೆ ಸುಖವನ್ನುಂಟು ಮಾಡಲಿ. ಇಂದ್ರನೂ ಬೃಹಸ್ಪತಿಯೂ ನಮಗೆ ಸುಖವನ್ನುಂಟುಮಾಡಲಿ.ಬ್ರಹ್ಮಕ್ಕೆ ನಮಸ್ಕಾರ. ಹೇ ವಾಯುವೇ ನಿನಗೆ ನಮಸ್ಕಾರ. ನೀನು ಪ್ರತ್ಯಕ್ಷ ಬ್ರಹ್ಮವಾಗಿರುತ್ತೀಯೆ. ನೀನೇ  ಪ್ರತ್ಯಕ್ಷ ಬ್ರಹ್ಮವೆಂದು ಹೇಳಿದ್ದೇನೆ.ಋತವೆಂದು ಹೇಳಿದ್ದೇನೆ.ಸತ್ಯವೆಂದು ಹೇಳಿದ್ದೇನೆ.ಅದು ನಮ್ಮನ್ನು ಕಾಪಾಡಿತು. ಅದು ಆಚಾಯ೯ನನ್ನು ಕಾಪಾಡಿತು. ನನ್ನನ್ನು ಕಾಪಾಡಿತು.ಆಚಾಯ೯ನನ್ನು ಕಾಪಾಡಿತು.

ಪರಮೇಶ್ವರನು ನಮ್ಮಿಬ್ಬರನ್ನು ಜೊತೆಯಲ್ಲಿ ಕಾಪಾಡಲಿ.ನಮ್ಮಿಬ್ಬರನ್ನೂ ಜೊತೆಯಲ್ಲಿ ಪೋಷಿಸಲಿ.ನಾವು ಜೊತೆಯಲ್ಲಿ ಸಾಮಥ್ಯ೯ವನ್ನುಂಟು ಮಾಡುವಂತಾಗಲಿ.ನಮ್ಮಿಬ್ಬರ ಅಧ್ಯಯನವು ತೇಜಸ್ವಿಯಾಗಲಿ.ನಾವು ಪರಸ್ಪರ ದ್ವೇಷ ಮಾಡದೆ ಇರುವಂತಾಗಲಿ.

"ಬ್ರಹ್ಮವಿದಾಪ್ನೋತಿ ಪರಂ".ಬ್ರಹ್ಮವನ್ನು ತಿಳಿದವನು ಬ್ರಹ್ಮವನ್ನು ಹೊಂದುತ್ತಾನೆ3.ಈ ವಿಷಯದಲ್ಲಿ ಈ ವಾಕ್ಕು ಹೇಳಲ್ಪಟ್ಟಿದೆ.ಬ್ರಹ್ಮವು ಸತ್ಯ ಜ್ಞಾನ ಅನಂತ.ಯಾವನು ಪರಮ ವ್ಯೋಮದಲ್ಲಿರುವ ಗುಹೆಯಲ್ಲಿ ಬ್ರಹ್ಮವನ್ನು ಅರಿತುಕೊಳ್ಳುತ್ತಾನೋ ಅವನು ಸವ೯ಜ್ಞ ಸ್ವರೂಪನಾದ ಬ್ರಹ್ಮವಾಗಿ ಎಲ್ಲ ಕಾಮಗಳನ್ನು ಒಟ್ಟಿಗೆ ಹೊಂದುತ್ತಾನೆ.

ಆತ್ಮನಿಂದ ಆಕಾಶವು ಉತ್ಪನ್ನವಾಯಿತು.ಆಕಾಶದಿಂದ ವಾಯು.ವಾಯುವಿನಿಂದ ಅಗ್ನಿ. ಅಗ್ನಿಯಿಂದ ನೀರು. ನೀರಿನಿಂದ ಪೃಥ್ವಿ. ಪೃಥ್ವಿಯಿಂದ ಸಸ್ಯಗಳು. ಸಸ್ಯಗಳಿಂದ ಅನ್ನ.ಅನ್ನದಿಂದ ಪುರುಷ. ಹೀಗೆ ಉತ್ಪತ್ತಿಯ ಕ್ರಮ. ಆ ಈ ಪುರುಷನು ಅನ್ನರಸಮಯನು4.

ಯಾವ ಯಾವ ಪ್ರಾಣಿಗಳು ಭೂಮಿಯನ್ನು ಆಶ್ರಯಿಸಿರುವುವೊ ಅವೆಲ್ಲವೂ ಅನ್ನದಿಂದಲೇ ಹುಟ್ಟುತ್ತವೆ. ಹಾಗೆಯೇ ಅನ್ನದಿಂದಲೇ ಜೀವಿಸುತ್ತವೆ.ಕೊನೆಯಲ್ಲಿ ಇದನ್ನೇ ಪ್ರವೇಶಿಸುತ್ತವೆ5. ಅನ್ನವೇ ಪ್ರಾಣಿಗಳಲ್ಲಿ ಜ್ಯೇಷ್ಠ.ಆದುದರಿಂದ ಅನ್ನವು ಸವೌ೯ಷಧವೆಂದು ಹೇಳಲ್ಪಡುತ್ತದೆ.ಅನ್ನದಿಂದ ಪ್ರಾಣಿಗಳು ಹುಟ್ಟುತ್ತವೆ. ಹುಟ್ಟಿದವು ಅನ್ನದಿಂದ ವಧಿ೯ಸಲ್ಪಡುತ್ತವೆ.ತಿನ್ನಲ್ಪಡುತ್ತದೆ ಮತ್ತು ಪ್ರಾಣಿಗಳನ್ನು ತಿನ್ನುತ್ತದೆ.ಆದುದರಿಂದ ಅದು ಅನ್ನವೆಂದು ಕರೆಯಲ್ಪಡುತ್ತದೆ.

ಪ್ರಾಣವನ್ನು ಅನುಸರಿಸಿ ದೇವತೆಗಳು ಜೀವಿಸಿರುವರು.ಹಾಗೆಯೇ ಎಲ್ಲಾ ಮನುಷ್ಯರು ಪಶುಗಳೂ ಜೀವಿಸಿರುವುವು.ಯಾರು ಪ್ರಾಣವನ್ನು ಬ್ರಹ್ಮವೆಂದು ಉಪಾಸಿಸುವರೊ ಅವರು ಪೂಣಾ೯ಯಸ್ಸನ್ನು ಹೊಂದುತ್ತಾರೆ.ಯಾವುದರಿಂದ ವಾಕ್ಕುಗಳು ಮನಸ್ಸಿನೊಂದಿಗೆ ಹಿಂದಿರುಗುವವೊ ಆ ಬ್ರಹ್ಮದ ಆನಂದವನ್ನು ತಿಳಿದುಕೊಂಡವನು ಎಂದಿಗೂ ಹೆದರುವುದಿಲ್ಲ.

ವಿಜ್ಞಾನವು ಯಜ್ಞವನ್ನು ಮಾಡುತ್ತದೆ.ಕಮ೯ಗಳನ್ನೂ ಮಾಡುತ್ತದೆ.ಎಲ್ಲ ದೇವತೆಗಳು ವಿಜ್ಞಾನವನ್ನು ಜ್ಯೇಷ್ಠವಾದ ಬ್ರಹ್ಮವೆಂದು ಉಪಾಸನೆ ಮಾಡುತ್ತಾರೆ. ಈ ವಿಜ್ಞಾನಮಯ ಆತ್ಮನಿಗಿಂತಬೇರೆಯವನೂ ಒಳಗಿರುವವನೂ ಆನಂದಮಯನೂ ಆದ ಆತ್ಮನಿರುವನು.

"ನಾನು ಬಹುವಾಗುವೆನು ಹುಟ್ಟುವೆನು" ಎಂದು ಆ ಆತ್ಮನು ಸಂಕಲ್ಪಿಸಿದನು.ಅವನು ತಪಸ್ಸನ್ನು ಮಾಡಿದನು.ನಂತರ  ಇದೆಲ್ಲವನ್ನೂ ಏನೇನಿದೆಯೊ ಸೃಷ್ಟಿಸಿದನು.ಅದನ್ನು ಸೃಷ್ಟಿಸಿ ಅದನ್ನೇ ಪ್ರವೇಶಿಸಿದನು.ನಾಮ ರೂಪಗಳಿಂದ ವಿಭಕ್ತವಾದ ಈ ಜಗತ್ತು ಜೀವನ ಕಮ೯ ಫಲಕ್ಕಾಗಿ ಉಂಟಾಗಿದೆಯೇ ವಿನಾ ಪೂಣ೯ಕಾಮವಾದ ಬ್ರಹ್ಮದ ಪ್ರಯೋಜನಕ್ಕಲ್ಲ.

ಈ ಅವಿಕಾರವೂ ಅಶರೀರವೂ ಅನಿವಾ೯ಚ್ಯವೂ ಆಧಾರರಹಿತವೂ  ಆದ ಬ್ರಹ್ಮದಲ್ಲಿ ಭಯವಿಲ್ಲದೆ ಆತ್ಮಭಾವವನ್ನು ಹೊಂದುತ್ತಾನೆಯೊ ಆಗ ಅವನು ಅಭಯವನ್ನು ಪಡೆದವನಾಗುತ್ತಾನೆ.ಯಾವಾಗ ಈ ಬ್ರಹ್ಮದಲ್ಲಿ ಸ್ವಲ್ಪವಾದರೂ ಭೇದದಶ೯ನ ಮಾಡುತ್ತಾನೋ ಅದರಿಂದ ಅವನಿಗೆ ಭಯವಾಗುತ್ತದೆ.ಬ್ರಹ್ಮವೇ ತೃಪ್ತಿಗೆ ಕಾರಣವಾದ ರಸ.

ಇವನ ಭಯದಿಂದ ವಾಯುವು ಬೀಸುತ್ತಾನೆ. ಸೂಯನು ಉದಯಿಸುತ್ತಾನೆ.ಇವನ ಭಯದಿಂದ ವಾಯುವೂ ಅಗ್ನಿಯೂ ಇಂದ್ರನೂ ತಮ್ಮ ತಮ್ಮ ಕೆಲಸಗಳಲ್ಲಿ ತೊಡಗುತ್ತಾರೆ.ಐದನೆಯವನಾದ ಮೃತ್ಯುವು ಓಡುತ್ತಾನೆ.

ಆನಂದವಲ್ಲಿ:

ಇದು ಆನಂದದ ವಿಚಾರವಾಗಿರುತ್ತದೆ;ವೇದಾಧ್ಯಯನ ಸಂಪನ್ನನೂ,ಅತ್ಯಂತವಾಗಿ ಆಸೆಯುಳ್ಳವನೂ, ದೃಢತಮನೂ,ಬಲಿಷ್ಠನೂ,ಐಶ್ವಯ೯ದಿಂದ ಪೂಣ೯ವಾದ ಪೃಥ್ವಿಯೆಲ್ಲವನ್ನು ಹೊಂದಿದವನೂ ಆದ ಒಬ್ಬ ಒಳ್ಳೆಯ ಯುವಕನಿರಲಿ. ಅವನ ಆನಂದವು ಮನುಷ್ಯರ  ಒಂದು ಆನಂದ.ಆ ನೂರು ಮಾನುಷ ಆನಂದಗಳು ಮನುಷ್ಯ ಗಂಧವ೯ರ ಒಂದು ಅನಂದ ಮತ್ತು ಅಕಾಮಹತನಾದ ಶ್ರೋತ್ರೀಯನ ಒಂದು ಆನಂದ.

ಮನುಷ್ಯ ಗಂಧವ೯ರ ಆ ನೂರು ಆನಂದಗಳು ದೇವ ಗಂಧವ೯ರ ಒಂದು ಆನಂದ ಮತ್ತು ಅಕಾಮಹತನಾದ ಶ್ರೋತ್ರೀಯನ ಆನಂದ.ದೇವ ಗಂಧವ೯ರ ಆ ನೂರು ಆನಂದಗಳು ಚಿರಲೋಕವುಳ್ಳ ಪಿತೃಗಳ ಒಂದು ಆನಂದ ಮತ್ತು ಅಕಾಮಹತನಾದ ಶ್ರೋತ್ರೀಯನ ಆನಂದ.ಚಿರಲೋಕವುಳ್ಳ ಪಿತೃಗಳ ಆ ನೂರು ಆನಂದಗಳು ಅಜಾನಜ ದೇವತೆಗಳ ಒಂದು ಆನಂದಮತ್ತು ಅಕಾಮಹತಗಳ ಆನಂದ ಮತ್ತು ಅಕಾಮಹತನಾದ ಶ್ರೋತ್ರೀಯನ ಆನಂದ.ಅಜಾನಜ ದೇವತೆಗಳ ನೂರು ಆನಂದಗಳು ಕಮ೯ದೇವತೆಗಳಾದ ದೇವತೆಗಳ ಒಂದು ಆನಂದ.ಅವರು ವೈದಿಕ ಕಮ೯ದಿಂದ ದೇವತ್ವವನ್ನು ಹೊಂದಿರುತ್ತಾರೆ ಮತ್ತು ಅದು ಅಕಾಮಹತನಾದ ಶ್ರೋತ್ರೀಯನ ಆನಂದ. ಕಮ೯ದೇವತೆಗಳಾದ  ದೇವತೆಗಳ ಆ ನೂರು ಆನಂದಗಳು ದೇವತೆಗಳ ಒಂದು ಆನಂದ ಮತ್ತು ಅಕಾಮಹತನಾದ ಶ್ರೋತ್ರೀಯನ ಆನಂದ.ದೇವತೆಗಳ ಆ ನೂರು ಆನಂದಗಳು ಇಂದ್ರನ ಒಂದು ಆನಂದ ಮತ್ತು ಅಕಾಮಹತನಾದ ಶ್ರೋತ್ರೀಯನ ಆನಂದ.ಇಂದ್ರನ ಆ ನೂರು ಆನಂದಗಳು ಬೃಹಸ್ಪತಿಯ ಒಂದು ಆನಂದ ಮತ್ತು ಅಕಾಮಹತನಾದ ಶ್ರೋತ್ರೀಯನ ಆನಂದ.ಬೃಹಸ್ಪತಿಯ ಆ ನೂರು ಆನಂದಗಳು ಪ್ರಜಾಪತಿಯ ಒಂದು ಆನಂದ ಮತ್ತು ಅಕಾಮಹತನಾದ ಶ್ರೋತ್ರೀಯನ ಆನಂದ.ಪ್ರಜಾಪತಿಯ ಆ ನೂರು ಆನಂದಗಳು ಬ್ರಹ್ಮನ ಒಂದು ಆನಂದ ಮತ್ತು ಅಕಾಮಹತನಾದ ಶ್ರೋತ್ರೀಯನ ಆನಂದ.

ಆತ್ಮನನ್ನು ಬ್ರಹ್ಮಾನಂದದ ಅನುಭವಕ್ಕಾಗಿ ಲೌಕಿಕ ಆನಂದವು ಇಲ್ಲಿ ನಿದೇ೯ಶಿಸಲ್ಪಟ್ಟಿದೆ.ಧನವೇ ಮೊದಲಾದ ಬಾಹ್ಯ ಸಾಧನಗಳಿಂದಲೂ ಜ್ಞಾನವೇ ಮುದಲಾದ ಅಂತರಿಕ ಸಾಧನ ಗಳಿಂದಲೂ ಉತ್ಕøಷ್ಟವಾದ ಲೌಕಿಕ ಆನಂದವು ಮನುಷ್ಯನಿಗೆ ಉಂಟಾಗುತ್ತದೆ.ನಮ್ಮ ಅನುಭವಕ್ಕೆ ಆನಂದದ ಮೂಲಕವಾಗಿಯೇ ವಿಷಯಾತೀತವಾದ ಬ್ರಹ್ಮಾನಂದವನ್ನು ಅರಿತುಕೊಳ್ಳಲು ಸಾಧ್ಯ.ನಿಜವಾಗಿ ನೋಡಿದರೆ ಬ್ರಹ್ಮಾನಂದವೂ ಲೌಕಿಕ ಆನಂದದ ಒಂದು ಭಾಗವೇ. ಅವಿದ್ಯಾ ಕಲ್ಪಿತವಾದ ವಿಷಯ_ವಿಷಯಿ ಎಂಬ ಭಾವವು ಅವಿದ್ಯೆಯಿಂದ ತೊಲಗಿಸಲ್ಪಟ್ಟರೆ ಸ್ವಾಭಾವಿಕವೂ ಪರಿಪೂಣ೯ವೂ ಏಕವೂ ಆದ ಆ ಅದ್ವೈತಾನಂದವು ಮಾತ್ರ ಉಳಿಯುತ್ತದೆ.

ಆತ್ಮನನ್ನು ಅರಿತುಕೊಳ್ಳುವುದೇ "ಸಂಕ್ರಮಣ"ದ ನಿಜವಾದ ಅಥ೯.ಅವಿದ್ಯೆಯಿಂದ ಹೊಂದದೇ ಇದ್ದ ಆತ್ಮನು ವಿದ್ಯೆಯಿಂದ ಹೊಂದಲ್ಪಡುತ್ತಾನೆ.ಸಂಕ್ರಮಣ ಶಬ್ದವನ್ನು ಉಪಚಾರದಿಂದ ಪ್ರಯೋಗಿಸಿದೆ. ಸವ೯ಗತನಾದ ಆತ್ಮನಿಗೆ ಬೇರೆ ಯಾವ ವಿಧದಿಂದಲೂ ಸಂಕ್ರಮಣವು ಸಾಧ್ಯವಿಲ್ಲ.

ಯಾವುದರಿಂದ ವಾಕ್ಕುಗಳು ಮನಸ್ಸಿನೊಂದಿಗೆ ಅದನ್ನು ಹೊಂದದೆ ಹಿಂತಿರುಗುವವೊ ಆ ಬ್ರಹ್ಮದ ಆನಂದವನ್ನು ತಿಳಿದವನು ಯಾವುದಕ್ಕೂ ಹಿಂದಿರುಗುವುದಿಲ್ಲ."ನಾನು ಒಳ್ಳೆಯದನ್ನು ಏಕೆ ಮಾಡಲಿಲ್ಲ? ನಾನು ಪಾಪವನ್ನು ಏಕೆ ಮಾಡಿದೆನು? "ಎಂಬ ಪಶ್ಚಾತ್ತಾಪವು ಅವನನ್ನು ತಪಿಸುವುದಿಲ್ಲ. ಯಾವನು ಹೀಗೆ ಅರಿತುಕೊಂಡಿರುವನೊ ಅವನು ಈ ಎರಡನ್ನೂ ಆತ್ಮನನ್ನಾಗಿ ಮಾಡಿಕೊಂಡಿರುತ್ತಾನೆ.ಏಕೆಂದರೆ ಯಾವನು ಹೀಗೆ ತಿಳಿಯುವನೊ ಅವನು ಈ ಎರಡನ್ನೂ ಆತ್ಮನನ್ನಾಗಿ ಮಾಡಿಕೊಂಡಿರುತ್ತಾನೆ.

ಭೃಗುವಲ್ಲೀ:

"ಯಾವುದರಿಂದ ಈ ಪ್ರಾಣಿಗಳು ಹುಟ್ಟುವುವೊ ,ಹಾಗೆಯೇ ಹುಟ್ಟಿರುವುವು ಯಾವುದರಿಂದ  ಜೀವಿಸುತ್ತವೆಯೊ ಮತ್ತು ಯಾವುದನ್ನು ಕುರಿತು ಹೋಗಿ ಪ್ರವೇಶಿಸುವವೊ ಅದನ್ನು ತಿಳಿದುಕೊ".

ಇಂದ್ರಿಯಗಳ ಏಕಾಗ್ರತೆಯೇ ಪರಮ ತಪಸ್ಸು.ಅನ್ನವು ಬ್ರಹ್ಮ ಎಂದು ತಿಳಿದುಕೊಂಡನು. ಏಕೆಂದರೆ ಅನ್ನದಿಂದಲೇ ಈಪ್ರಾಣಿಗಳು ಹುಟ್ಟುತ್ತವೆ. ಹುಟ್ಟಿದವುಗಳು ಅನ್ನದಿಂದ ಜೀವಿಸುತ್ತವೆ ಮತ್ತು ಅನ್ನವನ್ನು ಕುರಿತು ಹೋಗಿ ಪ್ರವೇಶಿಸುತ್ತವೆ. ತಂದೆಯಾದ ವರುಣನು ಭೃಗುವನ್ನು ಕುರಿತು ಹೇಳಿದನು "ತಪಸ್ಸಿನಿಂದ ಬ್ರಹ್ಮವನ್ನು ಅರಿತುಕೊ"ತಪಸ್ಸು ಬ್ರಹ್ಮವು. ಎಲ್ಲಿಯ ವರೆಗೆ ಬ್ರಹ್ಮದ ಲಕ್ಷಣವು ನಿರತಿಶಯವಾಗುವುದಿಲ್ಲವೊ ಅಲ್ಲಿಯವರೆಗೆ ತಪಸ್ಸೇ ಸಾಧನ6.

ಪ್ರಾಣವು ಬ್ರಹ್ಮ.ಮನಸ್ಸು ಬ್ರಹ್ಮ.ಏಕೆಂದರೆ ಮನಸ್ಸಿನಿಂದಲೇ ಈ ಪ್ರಾಣಿಗಳು ಹುಟ್ಟುತ್ತವೆ.ವಿಜ್ಞಾನವು ಬ್ರಹ್ಮ ಎಂದು ತಿಳಿಯಬೇಕು.ಆನಂದವು ಬ್ರಹ್ಮ ಎಂದು ತಿಳಿಯ ಬೇಕು.(ಆನಂದೋ ಬ್ರಹ್ಮೇತಿ ವ್ಯಜಾನಾತ್)7. ಆದುದರಿಂದ ಜಿಜ್ಞಾಸುವು ಬಾಹ್ಯ ಅಂತಃಕರಣ ರೂಪವಾದ ತಪಸ್ಸೆಂಬ ಸಾಧನವನ್ನು ಅನುಷ್ಠಿಸಬೇಕು.ಅನ್ನವನ್ನು ನಿಂದಿಸಕೂಡದು.ಅದು ವ್ರತ.ಪ್ರಾಣವೇ ಅನ್ನವು. ಶರೀರವೇ ಅನ್ನಾದವು. ಅನ್ನವನ್ನು ನಿರಾಕರಿಸ ಕೂಡದು.ಅನ್ನವನ್ನು ಬಹುವಾಗಿ ಮಾಡಬೇಕು.ಯಾರು ಹೇಗೆ ಅನ್ನದಾನವನ್ನು ಮಾಡುತ್ತಾರೆಯೊ ಅವರಿಗೆ ಫಲವು ಹಾಗೆಯೇ ಉಂಟಾಗುತ್ತದೆ.

ವಾಕ್ಕಿನಲ್ಲಿ ಕ್ಷೇಮರೂಪದಿಂದ ಬ್ರಹ್ಮವನ್ನು ಉಪಾಸಿಸಬೇಕು."ನಾನು ಅನ್ನ ನಾನು ಅನ್ನಾದ".ಅನ್ನಾದ ಎಂದರೆ ಅನ್ನವನ್ನು ತಿನ್ನುವವನು. ಅನ್ನರೂಪಿಯದ ನಾನು ಇತರರಿಗೆ ಅನ್ನವನ್ನು ಕೊಡದೆ ತಿನ್ನುವವನನ್ನು ತಿನ್ನುತ್ತೇನೆ

ಐತರೇಯ ಉಪನಿಷತ್ತು:

ಮೊದಲನೆಯ ಅಧ್ಯಾಯ:

         ಹರಿ ಓಂ.ಮೊದಲು ಇದು ಆತ್ಮನೇ ಆಗಿತ್ತು.ಅದಲ್ಲದೆ ಇನ್ನು ಯಾವುದೂ ಬೇರೆ ಇರಲಿಲ್ಲ.ಲೋಕಗಳನ್ನು ಸೃಷ್ಟಿಸುವೆನು ಎಂದು ಆಲೋಚಿಸಿದನು.ಅವನು ಈ ಲೋಕಗಳನ್ನು  ಸೃಷ್ಟಿಸಿದನು1. ಅವೇ ಅಂಭೋಲೋಕ,ಮರೀಚಿಲೋಕ,ಮರಲೋಕ,ಆಪೋಲೋಕ, ಅಂಭೋಲೋಕವು ದ್ಯುಲೋಕದ ಆಚೆಗೆ ಇರುವುದು.ದ್ಯುಲೋಕವು ಅದರ ಆಶ್ರಯ.ಅಂತರಿಕ್ಷವು ಮರೀಚಿ ಲೋಕಗಳು.ಪೃಥ್ವಿಯು ಮರಲೋಕ (ಅಮರವಲ್ಲದ್ದು).ಪೃಥ್ವಿಯ ಕೆಳಗೆ ಇರುವುದು ಆಪೋಲೋಕ.

 ಅವನು ಯೋಚಿಸಿದನು.ಇವೇ ನಾನು ಸೃಷ್ಟಿಸಿದ ಲೋಕಗಳು.ಈಗ ಲೋಕಪಾಲನನ್ನು ಸೃಷ್ಟಿಸಿದನು. ಅವನು ನೀರಿನಿಂದಲೂ ಪುರುಷಾಕಾರವನ್ನು ಎತ್ತಿ ನಿಲ್ಲಿಸಿದನು.ಅವನನ್ನು ಕುರಿತು ಧ್ಯಾನಮಾಡಿದನು.ಧ್ಯಾನಿಸಲ್ಪಟ್ಟ ಅವನಿಗೆ ಅಂಡದಂತೆ ಬಾಯಿ ಉಂಟಾಯಿತು.ಬಾಯಿಂದ ವಾಕ್ ಇಂದ್ರಿಯ, ಅಗ್ನಿ ಉತ್ಪನ್ನವಾಯಿತು.ಮೂಗಿನ ಹೊಳ್ಳೆಗಳು ಉತ್ಪನ್ನವಾದವು.ಮೂಗಿನ ಹೊಳ್ಳೆಗಳಗಿಂದ ಘ್ರಾಣೇಂದ್ರಿಯ,ಘ್ರಾಣೇಂದ್ರಿಯದಿಂದ ವಾಯುವು ಉತ್ಪನ್ನವಾಯಿತು.ಕಣ್ಣುಗಳು ಉತ್ಪನ್ನವಾದವು.ಕಣ್ಣುಗಳಿಂದ ನೋಡುವ ಇಂದ್ರಿಯವು ಉತ್ಪನ್ನವಾಯಿತು.ಅದರಿಂದ ಅದರ ದೇವತೆಯಾದ ಸೂಯ೯ನು ಉತ್ಪನ್ನನಾದನು.ಕಿವಿಗಳು ಉತ್ಪನ್ನವಾದವು.ಕಿವಿಗಳಿಂದ ಕೇಳುವ ಇಂದ್ರಿಯಗಳು.ಇದರಿಂದ ದಿಗ್ದೇವತೆಗಳು

ಉತ್ಪನ್ನವಾದವು.ಚಮ೯ ಉತ್ಪನ್ನವಾಯಿತು.ಚಮ೯ದಿಂದ ಕೂದಲುಗಳು,ಕೂದಲುಗಳಿಂದ ಔಷಧಿ ವನಸ್ಪತಿಗಳು ಉತ್ಪನ್ನವಾದವು.ಹೃದಯ ಉತ್ಪನ್ನವಾಯಿತು.ಹೃದಯದಿಂದ ಮನಸ್ಸು,ಮನಸ್ಸಿನಿಂದ ಚಂದ್ರ ಉತ್ಪನ್ನನಾದನು.ನಾಭಿಯು ಉತ್ಪನ್ನವಾಯಿತು.ನಾಭಿಯಿಂದ ಅಪಾನವಾಯುವೂಅಪಾನದಿಂದ ಮೃತ್ಯುವೂ ಉತ್ಪನ್ನವಾದವು.ಶಿಶ್ನ ಉತ್ಪನ್ನವಾಯಿತು.ಶಿಶ್ನದಿಂದ ರೇತಸ್ಸು,ರೇತಸ್ಸಿನಿಂದ ನೀರು ಉತ್ಪನ್ನವಾಯಿತು.

ಮೂರನೆಯ ಖಂಡ;  ಈಶ್ವರನು ಆಲೋಚಿಸಿದನು.ಇವೇ ಲೋಕಗಳು ಮತ್ತು ಲೋಕಪಾಲಕರು. ಇವರಿಗೆ ಅನ್ನವನ್ನು ಸೃಷ್ಟಿಸಿದನು.ಈಶ್ವರನು ಪಂಚಭೂತಗಳನ್ನು ಕುರಿತು  ಧ್ಯಾನಿಸಿದನು.ಅವುಗಳಿಂದ ಒಂದು ಮೂತಿ೯ಯು ಉತ್ಪನ್ನವಾಯಿತು.ಯಾವಮೂತಿ೯ಯು ಉತ್ಪನ್ನವಾಯಿತೋ ಅದೇ ಅನ್ನ. ಸೃಷ್ಟಿಸಲ್ಪಟ್ಟ ಅನ್ನವು ಹಿಂದಿರುಗಿ ಓಡಲು ಪ್ರಯತ್ನಿಸಿತು.ಅದನ್ನು ವಾಕ್ಕಿನಿಂದ ಹಿಡಿಯಲು ಪ್ರಯತ್ನಿಸಿದನು.ಅದನ್ನು ವಾಕ್ಕಿನಿಂದ ಹಿಡಿಯಲು ಸಾಧ್ಯವಾಗಿದ್ದರೆ,ಕೇವಲ ಅನ್ನವನ್ನು ಉಚ್ಛಾರ ಮಾಡಿದರೆ ಮಾತ್ರ ತೃಪ್ತನಾಗಬಹುದಿತ್ತು.ಇದೇ ತತ್ವವು ವಾಸನೆ,ನೋಟ,ಸ್ಪಶ೯,ಯೋಚನೆ(ಮನಸ್ಸು)ಶಿಶ್ನ  ಇವುಗಳಿಗೂ ಅನ್ವಯವಾಗುತ್ತದೆ.

                  ಅವನು ಅದನ್ನು ಅಪಾನವಾಯುವಿನ ಮೂಲಕ ಹಿಡಿಯಲು ಯತ್ನಿಸಿದನು.ಅದನ್ನು ಹಿಡಿದುಕೊಂಡನು.ಈ ಅಪಾನವಾಯುವೇ ಅನ್ನವನ್ನು ತಿನ್ನುವುದು. ವಾಯು ಅನ್ನದಿಂದಲೇ ಬದುಕಿರುವುದು.ಎಲ್ಲಾ ಪ್ರಾಣಕ್ರಿಯೆಗಳಿಗೂ ಶಕ್ತಿಯನ್ನು ಒದಗಿಸುವುದೇ ಅನ್ನ.ಆತ್ಮನು ತಲೆ ಬುರುಡೆಯನ್ನು ಸೀಳಿಕೊಂಡು ಬ್ರಹ್ಮರಂದ್ರದ ಮೂಲಕ ಪ್ರವೇಶಿಸಿದನು.ಈ ದ್ವಾರವು "ವಿಧೃತಿ" ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ2.ಇದು ನಂದನವು.ಅವನಿಗೆ ಮೂರು ವಾಸಸ್ಥಾನಗಳು,ಮೂರು ಸ್ವಪ್ನಗಳು,ಮೂರು ವಾಸಸ್ಥಾನಗಳು ಬಲಕಣ್ಣು,ಮನಸ್ಸು ,ಹೃದಯ.ಇವನ ಹೆಸರು ಇದಂದ್ರ. ಇವನನ್ನು ಇಂದ್ರನೆಂದು ಪರೋಕ್ಷವಾಗಿ ಕರೆಯುತ್ತಾರೆ.ಯಾರು ಎಲ್ಲದಕ್ಕೂ ಒಡೆಯನೋ ಅವನೇ ಇಂದ್ರ3. ಇಂದ್ರನಾದ ಅವನನ್ನು ಪರೋಕ್ಷವಾಗಿ ಇಂದ್ರನೆಂದು ಕರೆಯುತ್ತಾರೆ.ಎಕೆಂದರೆ ದೇವತೆಗಳು ಪರೋಕ್ಷಪ್ರಿಯರು.

ಎರಡನೆಯ ಅಧ್ಯಾಯ:

          ಈ ಜೀವಾತ್ಮನು ಮೊದಲು ಪುರುಷನಲ್ಲಿ ರೇತೋರೂಪವಾದ ಗಭ೯ವಾಗುತ್ತಾನೆ.ಅದನ್ನು ಯಾವಾಗ ಸ್ತ್ರೀಯಲ್ಲಿ ಸೇಚನ ಮಾಡುತ್ತಾನೋ ಆಗ ಇದನ್ನು ಉತ್ಪತ್ತಿ ಮಾಡುವನು.ಅದು ಇವನ ಮೊದಲನೇ ಜನ್ಮ.ತನ್ನ ಗಭ೯ವಾಗಿರುವ ಪತಿಯ ಆತ್ಮವನ್ನು ರಕ್ಷಿಸುತ್ತಾಳೆ.ಮಗುವಿನ ಜನನವೇ ಎರಡನೇಜನ್ಮ.

         ತಂದೆಯ ಪುತ್ರ ರೂಪನಾದ ಈ ಆತ್ಮನು ಪುಣ್ಯಕಮ೯ಗಳಿಗೋಸ್ಕರ ಪ್ರತಿನಿಧಿಯಾಗಿ ಮಾಡಲ್ಪಡುತ್ತಾನೆ.ಅವನು ಬೆಳೆದು ಕೊನೆಗೆ ಜೀಣ೯ನಾಗಿ ಮರಣದ ನಂತರ ಪುನಃ ಹುಟ್ಟುತ್ತಾನೆ.ಇದು ಅವನ ಮೂರನೆಯ ಜನ್ಮ4.

        ವಾಮದೇವ ಮುನಿಯು ಗಭ೯ದಲ್ಲಿರುವಾಗಲೇ ಹೀಗೆ ಹೇಳಿದನು" ಈ   ದೇವತೆಗಳನ್ನಲ್ಲ ಅರಿತುಕೊಂಡೆನು.ನೂರಾರು ಪುರಗಳು ನನ್ನನ್ನು ಅಧೊಲೋಕದಲ್ಲಿ ರಕ್ಷಿಸಿಕೊಂಡಿದ್ದವು.ಅನಂತರ ಗಿಡುಗನಂತೆ ವೇಗದಿಂದ ಹೊರಕ್ಕೆ ಬಂದಿದ್ದೇನೆ."ವಾಮದೇವನು ಹೀಗೆ ಆತ್ಮನನ್ನು ಅರಿತುಕೊಂಡು ಈ ಶರೀರ ನಾಶವಾದ ಮೇಲೆಸ್ವಗ೯ಲೋಕದಲ್ಲಿ ಸವ೯ ಕಾಮಗಳನ್ನು ಹೊಂದಿ ಅಮೃತನಾದನು.

 ಮೂರನೆಯ ಅಧ್ಯಾಯ: ನಾವು "ಇವನು ಆತ್ಮ" ಎಂದು ಯಾವುದನ್ನು ಉಪಾಸಿಸುತ್ತೇವೆಯೊ ಅವನು ಯಾರು?ಇವರಿಬ್ಬರಲ್ಲಿ ಆತ್ಮನು ಯಾರು?ಯಾವುದರಿಂದ ನೋಡುತ್ತಾನೆಯೋ ಯಾವುದರಿಂದ ಕೇಳುತ್ತಾನೆಯೊ, ಯಾವುದರಿಂದ ವಾಸನೆಗಳನ್ನು ಮೂಸುತ್ತಾನೆಯೋ,ಯಾವುದರಿಂದ ಮಾತನಾಡುತ್ತಾನೆಯೋ, ಯಾವುದರಿಂದ ಒಳ್ಳೆಯದು ಕೆಟ್ಟದ್ದು ಇವುಗಳನ್ನು ಅರಿಯುತ್ತಾನೆಯೋ, ಹಿಂದೆಯಾವುದು ಹೇಳಲ್ಪಟ್ಟಿದೆಯೋ ಅದೇ ಈ ಹೃದಯ ಮತ್ತು ಮನಸ್ಸು. ಸಂಜ್ಞಾನ, ಅಜ್ಞಾನ, ವಿಜ್ಞಾನ, ಪ್ರಜ್ಞಾನ, ಮೇಧಸ್ಸು, ದೃಷ್ಟಿ, ಧೃತಿ, ಮನನ, ಮನನ ವಿಷಯದಲ್ಲಿ ಸ್ವಾತಂತ್ರ, ಜೂತಿ, ಸ್ಮರಣೆ, ಸಂಕಲ್ಪ, ಅಧ್ಯವಸಾಯ,ಅನಾತೃಷ್ಣೆ,ವಶ _ಹೀಗೆ ಇವೆಲ್ಲವೂ ಪ್ರಜ್ಞಾನದ ಹೆಸರುಗಳಾಗಿರುತ್ತವೆ.

       ಇವನು ಬ್ರಹ್ಮ,ಇವನು ಇಂದ್ರ,ಇವನು ಪ್ರಜಾಪತಿ,ಇವನೇ ಎಲ್ಲಾ ದೇವತೆಗಳು,ಇವನು ಪೃಥ್ವಿ,ವಾಯು,ಆಕಾಶ,ನೀರು,ಅಗ್ನಿ ಎಂಬ ಪಂಚ ಮಹಾಭೂತಗಳು ಮತ್ತು ಕ್ಷುದ್ರ ಮಿಶ್ರವಾದ ಬೇರೆ ಬೇರೆ ಕಾರಣಗಳು.ಅಂಡಜ,ಸ್ವೇದಜ,ಜರಾಯುಜ,ವೃಕ್ಷಾದಿಗಳು,ಕುದುರೆಗಳು,ಗೋವುಗಳು,ಮನುಷ್ಯರು,ಆನೆ ಮತ್ತು ಕಾಲಿನಿಂದ ನಡೆಯುವುದು,ಹಾರಾಡುವುದು,ಮತ್ತು ಇತರ ಪ್ರಾಣಿವಗ೯ಗಳು,ಯಾವುದು ಸ್ಥಾವರವೊ ಅದೆಲ್ಲವೂ ಪ್ರಜ್ಞಾ ನೇತ್ರವು.ಪ್ರಜ್ಞಾನದಲ್ಲಿ ಪ್ರತಿಷ್ಠಿತವಾಗಿರುವುದು.ಲೋಕವು ಪ್ರಜ್ಞಾ ನೇತ್ರವು.ಪ್ರಜ್ಞೆಯು ಲೋಕಕ್ಕೆ ಪ್ರತಿಷ್ಠೆ.ಪ್ರಜ್ಞಾನ ಬ್ರಹ್ಮ5.

ನಾಲ್ಕನೆಯ ಅಧ್ಯಾಯ:

ಶಾಂತಿಮಂತ್ರ

ನನ್ನಮಾತು ಮನಸ್ಸಿನಲ್ಲಿ ಪ್ರತಿಷ್ಠಿತವಾಗಿರಲಿ.ನನ್ನ ಮನಸ್ಸು ಮಾತಿನಲ್ಲಿ ಪ್ರತಿಷ್ಠಿತವಾಗಿರಲಿ,ಹೇ ಸ್ವಪ್ರಕಾಶನಾದ ಬ್ರಹ್ಮವೇ,ನನಗೆ ಪ್ರತ್ಯಕ್ಷನಾಗು.ವಾಕ್ ಮನಸ್ಸುಗಳೇ ನನಗೆ ವೇದಾಥ೯ಗಳನ್ನು ತರಲು ಸಮಥ೯ರಾಗಿ,ನಾನು ಕಲಿತ ವೇದ ನನ್ನನ್ನು ಬಿಡದಿರಲಿ,ಈ ಅಧ್ಯಯನದಿಂದ ಅಹೋರಾತ್ರಿಗಳನ್ನು ಸೇರಿಸುತ್ತಾನೆ.ಋತವನ್ನು ಹೇಳುತ್ತೇನೆ.ಸತ್ಯವನ್ನು ಹೇಳುತ್ತೇನೆ.ಬ್ರಹ್ಮ ನನ್ನನ್ನು ಕಾಪಾಡಲಿ.ಅದು ಆಚಾಯ೯ನನ್ನು ಕಾಪಾಡಲಿ.

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,end,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

ಛಾಂದೋಗ್ಯ ಉಪನಿಷತ್ತು ಹಾಗೂ ಅದ್ವೈತ:

            ಇದು ಸಾಮವೇದಕ್ಕೆ ಸೇರಿದೆ.ಬೃಹದಾರಣ್ಯಕದೊಂದಿಗೆ ವೇದಾಂತ ದಶ೯ನಕ್ಕೆ ಅನೇಕ ಮೂಲ ವಿಷಯಗಳನ್ನು ಒದಗಿಸಿರುವ ಅತ್ಯಂತ ಪ್ರಾಚೀನ ಗ್ರಂಥವಾಗಿದೆ.ಈ ಉಪನಿಷತ್ತು ತಾಂಡಿಗಳ ಶಾಖೆಗೆ ಸೇರಿರಬಹುದೆಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ.ಛಾಂದೋಗ್ಯವು ಬಹು ಮುಖ್ಯವಾದ ದಹರ ವಿದ್ಯೆ,ಶಾಂಡಿಲ್ಯ ವಿದ್ಯೆ ಮೊದಲಾದ ಉಪಾಸನೆಗಳನ್ನು ಒಳಗೊಂಡಿದೆ.ಈ ಉಪಾಸನೆಗಳು ಛಾಂದೋಗ್ಯ ಉಪನಿಷತ್ತಿನ ಒಂದು ವೈಶಿಷ್ಟ್ಯ.      

      ಈಗ ನಮಗೆ ಸಿಕ್ಕಿರುವ ಛಾಂದೋಗ್ಯ ಉಪನಿಷತ್ ಭಾಷ್ಯಗಳಲ್ಲಿ ಶ್ರೀ ಶಂಕರಾಚಯ೯ರ ಭಾಷ್ಯವು ಅತ್ಯಂತ ಪ್ರಾಚೀನವಾಗಿದೆ. ದ್ರವಿಡಾಚಾಯ೯ರು ಈ ಉಪನಿಷತ್ತಿಗೆ ಒಂದು ಭಾಷ್ಯವನ್ನು ಬರೆದಿದ್ದಾರೆ.

     ಮೊದಲನೆಯ ಅಧ್ಯಾಯ:

ಶಾಸ್ತ್ರವು ತಿಳಿಸಿರುವಂತೆ ಒಂದು ಆಲಂಬನವನ್ನು ತೆಗೆದುಕೊಂಡು ಅದರಲ್ಲಿ ಸಮಾನ ಚಿತ್ತವೃತ್ತಿಯನ್ನುಂಟು ಮಾಡುವುದು ಉಪಾಸನೆ.ಉಪಾಸನೆಯು ಚಿತ್ತಶುದ್ಧಿಯನ್ನುಂಟು ಮಾಡಿ ತತ್ವವನ್ನು ಪ್ರಕಾಶಿಸುವುದರಿಂದ ಅದ್ವೈತ ಜ್ಞಾನಕ್ಕೆ ಉಪಕಾರವಾಗುತ್ತದೆ.ಮೊದಲನೆಯ ಅಧ್ಯಾಯದಲ್ಲಿ ಹದಿನೈದು ಖಂಡಗಳಿವೆ.

ಉದ್ಗೀಥ ಅವಯವವಾದ   ಓಂಕಾರದ ಉಪಾಸನೆಯು ಮೊದಲನೆಯ ಖಂಡದ ವಿಷಯವಾಗಿದೆ. ಓಂಕಾರವು ಪರಮಾತ್ಮನಿಗೆ ಅತ್ಯಂತ ಸಮೀಪವಾದ ಹೆಸರು.ಈ ಪ್ರಿಯವಾದ ಪ್ರಯೋಗದಿಂದ ಪರಮಾತ್ಮನು ಪ್ರಸನ್ನನಾಗುತ್ತಾನೆ.ವಿಗ್ರಹವು ಪರಮಾತ್ಮನ ಪ್ರತೀಕವಾಗಿರುವಂತೆ ಓಂಕಾರವು ಬ್ರಹ್ಮದ ಪ್ರತೀಕವಾಗಿದೆ.ಹೀಗೆ ಓಂಕಾರವು ನಾಮವೂ ಪ್ರತೀಕವೂ ಆಗಿ ಪರಮಾತ್ಮನ ಉಪಾಸನೆಗೆ ಶ್ರೇಷ್ಠವಾದ ಸಾಧನವಾಗಿರುತ್ತದೆ.

 ಸಾಮದ ಭಾಗಗಳಿಗೆ ಭಕ್ತಿಗಳೆಂದು ಹೆಸರು.ಉದ್ಗಾತೃವು ಹಾಡುವ ಭಾಗವು ಉದ್ಗೀಥವೆನಿಸಿದೆ.ಓಂಕಾರವು ಉದ್ಗೀಥವಾಗಿದೆ.ಓಂಕಾರವು ಇಲ್ಲಿ ಸ್ವತಂತ್ರವಾದ ಉಪಾಸನೆಯಾಗಿದೆ.

        ಎರಡನೆಯ ಖಂಡದಲ್ಲಿ ಉದ್ಗೀಥವನ್ನು ಪ್ರಾಣವೆಂದೇ ಉಪಾಸಿಸ ಬೇಕು ಎಂದು ಹೇಳಿದೆ.ಇಲ್ಲಿ ಪ್ರಾಣೋಪಾಸನೆಯ ಮಹತ್ವವನ್ನು ಹೇಳಿದೆ.ಮೂರನೆಯ ಖಂಡದಲ್ಲಿ ಆದಿತ್ಯ ದೃಷ್ಟಿಯಿಂದ ಉದ್ಗೀಥೋಪಾಸನೆಯನ್ನು ಹೇಳಿದೆ.ಉದ್ಗೀಥವನ್ನು ಪ್ರಾಣನೆಂದೂ ಆದಿತ್ಯನೆಂದೂ ಉಪಾಸಿಸಬೇಕು.

 ನಾಲ್ಕನೆಯ ಖಂಡದಲ್ಲಿ ಓಂಕಾರೋಪಾಸನೆಯು ಮುಂದುವರೆಯುತ್ತದೆ.ಈ ಓಂಕಾರವು ಅಮೃತವೂ ,ಅಭಯವೂ ಆಗಿದೆ.ಅಕ್ಷರವು ಅಮೃತ,ಅಭಯ ಎಂಬ ಶಬ್ದಗಳಿಂದ ಕೂಡಿರುವುದೆಂದು ಯಾವನು ಉಪಾಸಿಸುತ್ತಾನೆಯೋ ಅವನು ಅಮೃತನೂ ಅಭಯನೂ ಆಗುತ್ತಾನೆ.ಐದನೆಯ ಖಂಡದಲ್ಲಿ ವಾಗಾದಿ ಪ್ರಾಣಗಳನ್ನೂ ರಶ್ಮಿಗಳನ್ನೂ ವಿಂಗಡಿಸಿಕೊಂಡು ಉಪಾಸಿಸಬೇಕೆಂದು ಹೇಳಿದೆ.ಆರನೆಯ ಖಂಡದಲ್ಲಿಸವ೯ಫಲ ಸಂಪತ್ತಿಗಾಗಿ ಉದ್ಗೀಥದ ಇನ್ನೊಂದು ಉಪಾಸನೆಯನ್ನು ಹೇಳಿದೆ.

        ಎಂಟು ಮತ್ತು ಒಂಬತ್ತನೆಯ ಖಂಡಗಳಲ್ಲಿ  ಪರೋಪಕಾರಿಯು ಸತ್ವಗುಣವೆಂಬ ಫಲವುಳ್ಳ (ಎಂದರೆ ಉತ್ತರೋತ್ತರ ಗುಣವಿಶಿಷ್ಟವಾದ ಫಲವುಳ್ಳ)ಉದ್ಗೀಥದ ಬೇರೊಂದು ಉಪಾಸನೆಯನ್ನು ಹೇಳಿದೆ.ಹತ್ತನೆಯ ಖಂಡದೊಂದಿಗೆ ಹನ್ನೊಂದನೆಯ ಖಂಡ

ದಲ್ಲಿಮುಂದುವರಿದಿದೆ.ದೇವತೆಗಳ ಭಾವವನ್ನು ಪಡೆದಿರುವುದು ಅಥವಾ ಕಮ೯ ಸಮೃದ್ಧಿ ಈ ಉಪಾಸನೆಯ ಫಲ.ಹನ್ನೆರಡನೆಯ ಖಂಡದಲ್ಲಿ ದೇವತೆಗಳ ರೂಪದಲ್ಲಿರುವ ನಾಯಿಗಳಿಗೆ ಗೋಚರವಾದ ಶ್ವಾನ ಉದ್ಗೀಥವನ್ನು ಅನ್ನ ಲಾಭಕ್ಕಾಗಿ ಹೇಳಿದೆ.ಹದಿಮೂರನೆಯ ಖಂಡದಲ್ಲಿ ಸ್ತೋಭಾಕ್ಷರ ವಿಷಯವಾದ ಬೇರೆ ಬೇರೆ ಉಪಾಸನೆಗಳನ್ನು ಹೇಳಿದೆ.  

ಎರಡನೆಯ ಅಧ್ಯಾಯ:

        ಎರಡನೆಯ ಅಧ್ಯಾಯದಲ್ಲಿ ಇಪ್ಪತ್ನಾಲ್ಕು ಖಂಡಗಳಿವೆ.ಮೊದಲನೇ ಖಂಡದಲ್ಲಿ ಸಮಸ್ತ ಅವಯವಗಳಿಂದ ಕೂಡಿದ ಸಾಮದಲ್ಲಿಸಾಧುದೃಷ್ಟಿಯನ್ನು ಹೇಳಿದೆ.ಎರಡರಿಂದ ಏಳನೇ ಖಂಡಗಳಲ್ಲಿ ಉದ್ಗಾತೃವೇ ಮೊದಲಾದವರು ಪಠಿಸುವ ಸಾಮದ ಅವಯವಗಳಾದ ಭಕ್ತಿಗಳನ್ನು ಕುರಿತು ಹೇಳಿದೆ.ಹಿಂಕಾರ,ಪ್ರಸ್ತಾವ,ಉದ್ಗೀಥ,ಪ್ರತಿಹಾರ,ನಿಧನ_ಇವು ಸಾಮದ ಪಂಚ ಅವಯವಗಳು.

ಈ ಪಂಚವಿಧ ಸಾಮವನ್ನು

1) ಪೃಥಿವ್ಯಾದಿ ಲೋಕದ ದೃಷ್ಟಿಯಿಂದಲೂ

2)ಪುರೋವಾತಾದಿ ವ್ಯಷ್ಟಿ ದೃಷ್ಟಿಯಿಂದಲೂ

3)ಮೇಘವೇ ಮುಂತಾದ ನೀರಿನ ದೃಷ್ಟಿಯಿಂದಲೂ

4)ವಸಂತಾದಿ ಋತು ದೃಷ್ಟಿಯಿಂದಲೂ

5)ಆಡು ಕುರಿ ಮುಂತಾದ ಪಶು ದೃಷ್ಟಿಯಿಂದಲೂ

6)ಪ್ರಾಣ ದೃಷ್ಟಿಯಿಂದಲೂ

ಉಪಾಸಿಸಬೇಕು.ಪ್ರತಿಯೊಂದು ಉಪಾಸನೆಗೂ ಒಂದು ವಿಶಿಷ್ಟ ಫಲವಿದೆ.

ಎಂಟನೆಯ ಖಂಡದಲ್ಲಿ ಪಂಚವಿಧ ಸಾಮಕ್ಕೆ ಆದಿ ಉಪದ್ರವಗಳನ್ನು ಸೇರಿಸಿದರೆ ಸಪ್ತವಿಧ ಸಾಮವಾಗುತ್ತದೆ.ಸಪ್ತವಿಧ ಸಾಮವನ್ನು ವಾಕ್ ದೃಷ್ಟಿಯಿಂದ ಉಪಾಸಿಸಬೇಕು.ಅನ್ನಾದನು ಅನ್ನವಂತನೂ ಆಗುವುದು ಈ ಉಪಾಸನೆಯ ಫಲ.ಒಂಬತ್ತನೆಯ ಖಂಡದಲ್ಲಿ ಆದಿತ್ಯನನ್ನು ಸಪ್ತ ವಿಧ ಸಾಮದಲ್ಲಿ ಅವಯವ ವಿಬಾಗಶಃ ಮಾಡಿಕೊಂಡು ಅಭ್ಯಾಸ ಮಾಡಿಕೊಂಡು ಉಪಾಸಿಸಬೇಕೆಂದು ಇಲ್ಲಿ ಹೇಳಿದೆ.ಇಂಥ ಉಪಾಸಕನು ಆದಿತ್ಯ ರೂಪವನ್ನು ಪಡೆಯುತ್ತಾನೆ. 

ಹತ್ತನೆಯ ಖಂಡದಲ್ಲಿ ಉದ್ಗೀಥ ಭಕ್ತಿಯ ನಾಮಾಕ್ಷರಗಳನ್ನು ಉತ್_ಗೀ_ಥ ಎಂದು ಉಪಾಸಿಸಬೇಕೆಂದು ಹೇಳಿದೆ.ಹನ್ನೊಂದನೆಯ ಖಂಡದಲ್ಲಿ ಮನಸ್ಸು,ವಾಕ್ಕು,ಚಕ್ಷುಸ್ಸು,ಶ್ರೋತ್ರ,ಪ್ರಾಣ,ಇವುಗಳ ದೃಷ್ಟಿಯಿಂದ ಗಾಯತ್ರಿ ಸಾಮವನ್ನು ಉಪಾಸಿಸಬೇಕೆಂದು ಹೇಳಿದೆ.ಹನ್ನೆರಡನೆಯ ಖಂಡದಲ್ಲಿ ಮಂಥನ, ಹೋಮ, ಜ್ವಾಲೆ, ಅಂಗಾರ, ಉಪಶಾಂತಿ, ಸಂಶಾಂತಿ ಇವುಗಳ ದೃಷ್ಟಿಯಿಂದ ರಥಂತರ ಸಾಮವನ್ನು ಉಪಾಸಿಸಲು ಹೇಳಿದೆ.ಹದಿಮೂರನೆಯ ಖಂಡದಲ್ಲಿ ಉಪಮಂತ್ರಾದಿಗಳ ದೃಷ್ಟಿಯಿಂದ ವಾಮದೇವ ಸಾಮವನ್ನು ಉಪಾಸಿಸಬೇಕೆಂದು ಹೇಳಿದೆ.

ಹದಿನಾಲ್ಕರಿಂದ ಇಪ್ಪತ್ತೊಂದನೆಯ ಖಂಡದಲ್ಲಿ

1)ಉದಯಿಸುತ್ತಿರುವ ಆದಿತ್ಯ ಮೊದಲಾದ ದೃಷ್ಟಿಯಿಂದ ಬೃಹತ್ಸಾಮ ಉಪಾಸನೆಯನ್ನು

2)ಅಭ್ರಾದಿ ದೃಷ್ಟಿಯಿಂದ ವೈರೂಪ ಸಾಮೋಪಾಸನೆಯನ್ನು

3)ವಸಂತಾದಿ ಋತುಗಳ ದೃಷ್ಟಿಯಿಂದ ವೈರಾಜ ಸಾಮೋಪಾಸನೆಯನ್ನು

4) ಪೃಥಿವ್ಯಾದಿ ದೃಷ್ಟಿಯಿಂದ ಶಕ್ವರೀ ಸಾಮೋಪಾಸನೆಯನ್ನು

5)ಲೋಮಾದಿ ದೃಷ್ಟಿಯಿಂದ ಯಜ್ಞಾ_ಯಜ್ಞೇಯ ಸಾಮೋಪಾಸನೆಯನ್ನು

6)ಅಗ್ನ್ಯಾದಿ ದೃಷ್ಟಿಯಿಂದ ರಾಜನ ಸಾಮೋಪಾಸನೆಯನ್ನು

7)ತ್ರಯೀ ವಿದ್ಯಾ ದೃಷ್ಟಿಯಿಂದ ಸಾಮ ಸಾಮುದಾಯೋಪಾಸನೆಯನ್ನೂ ವಿಧಿಸಿದೆ.

ಇಪ್ಪತ್ತೆರಡನೆಯ ಖಂಡದಲ್ಲಿ ಸಾಮೋಪಾಸನೆಯ ಪ್ರಸಂಗದಿಂದ ಉದ್ಗಾತೃವಿಗೆ ಗಾನವಿಶೇಷಾದಿ ಸಂಪತ್ತಿಯನ್ನು ಉಪದೇಶಿಸಿದೆ.ಇಪ್ಪತ್ಮೂರನೆಯ ಖಂಡದಲ್ಲಿ ಓಂಕಾರೋಪಾಸನೆಯನ್ನು ವಿಧಿಸಿದೆ. ಓಂಕಾರೋಪಾಸಕನಿಗೆ ಅಮೃತತ್ವ ಎಂಬ  ವಿಶಿಷ್ಟ ಫಲವು ಪ್ರಾಪ್ತವಾಗುತ್ತದೆ.ಇಪ್ಪತ್ನಾಲ್ಕನೆಯ ಖಂಡದಲ್ಲಿಪುನಃ ಯಜ್ಞಾಂಗವಾದ ಸಾಮ,ಹೋಮ,ಮಂತ್ರ,ಉತ್ಥಾನ ಇವುಗಳನ್ನು ಉಪದೇಶಿಸಿದೆ.

ಮೂರನೆಯ ಅಧ್ಯಾಯ: ಈ ಅಧ್ಯಾಯದಲ್ಲಿ ಹತ್ತೊಂಬತ್ತು ಖಂಡಗಳಿವೆ.

ಮೊದಲನೆಯ ಹನ್ನೊಂದು ಖಂಡಗಳು:

         ಇಲ್ಲಿ ಮಧುವಿದ್ಯೆಯನ್ನು ಹೇಳಿದೆ. ಆದಿತ್ಯನು ದೇವತೆಗಳಿಗೆ ಮಧು,ಎಂದರೆ ಜೇನುತುಪ್ಪದಂತೆ ಮೋದವನ್ನುಂಟು ಮಾಡುತ್ತಾನೆ.ಈ ಮಧುವಿಗೆ ದ್ಯುಲೋಕವು ಅಡ್ಡತಲೆ.ಅಂತರಿಕ್ಷವು ಜೇನುಗೂಡು ಮತ್ತು ರಶ್ಮಿಯಲ್ಲಿರುವ ಜಲಬಿಂದುಗಳು ಮೊಟ್ಟೆಗಳು.ಋಗ್ವೇದದಲ್ಲಿ ವಿಹಿತವಾದ ಕಮ೯ವು ಪುಷ್ಪ.ಈ ಕಮ೯ದಿಂದಲೇ ಯಶಸ್ಸು ಮೊದಲಾದ "ರಸ"ವು ಉತ್ಪನ್ನವಾಗುತ್ತದೆ.ಉಪಾಸಕನು ತನ್ನ ಕಮ೯ದ ಫಲವಾದ ಬ್ರಹ್ಮಲೋಕಕ್ಕೆ ಹೋಗಿ ಸೇರುವವರೆಗೆ ವಸ್ವಾದಿ ಲೋಕಗಳಲ್ಲಿ ಭೋಗವನ್ನನುಭವಿಸುವರು.

ಹನ್ನೆರಡು ಮತ್ತು ಹದಿಮೂರನೆಯ ಖಂಡಗಳು ಗಾಯತ್ರಿ ಬ್ರಹ್ಮೋಪಾಸನೆಯನ್ನು ಒಳಗೊಂಡಿವೆ.ಶಬ್ದ ರೂಪವಾದ ವಾಕ್ಕು ಗಾಯತ್ರಿ.ಏಕೆಂದರೆ ವಾಕ್ಕೇ ಪ್ರಾಣಿಗಳನ್ನೆಲ್ಲಾ ಹೆಸರಿಸುತ್ತದೆ(ಗಾಯತಿ)ಮತ್ತು ಕಾಪಾಡುತ್ತದೆ(ತ್ರಾಯತೇ).ಆದುದರಿಂದ  ಸ್ಥಾವರ ಜಂಗಮ ರೂಪದಲ್ಲಿರುವುದೆಲ್ಲಾ ಗಾಯತ್ರಿಯೇ. ಹೀಗೆಯೇ ಭೂತಗಳು, ಪೃಥ್ವಿ, ಶರೀರ,ಹೃದಯ,ಪ್ರಾಣ ಇವೂ ಕೂಡ ಗಾಯತ್ರಿಯೇ.

ಗಾಯತ್ರೀ ಬ್ರಹ್ಮಕ್ಕಿಂತಲೂ ಪುರುಷನು ಹೆಚ್ಚಿನವನು.ಈ ಜಗತ್ತೆಲ್ಲ ಇವನ ಒಂದು ಪಾದ.ಉಳಿದ ಮೂರು ಪಾದಗಳು ದ್ಯುಲೋಕದಲ್ಲಿ(ಎಂದರೆ ತನ್ನ ಸ್ವರೂಪದಲ್ಲಿ) ಇವೆ.ಹೊರಗಿನ ಆಕಾಶವೇ ನಮ್ಮ ಒಳಗಿನ ಆಕಾಶವಾಗಿದೆ.ಒಳಗಿರುವ ಅಂಶವೇ ನಮ್ಮ ಹೃದಯಾಕಾಶವಾಗಿದೆ.ಹೃದಯಾಕಾಶದಲ್ಲಿ ಧ್ಯಾನಿಸಲ್ಪಡುವ ಬ್ರಹ್ಮವು ಪೂವ೯ವು ಅವಿನಾಶಿ ಎಂದು ಉಪಾಸಿಸಬೇಕು.

        ಹದಿನಾಲ್ಕನೆಯ ಖಂಡದಲ್ಲಿ ಪ್ರಸಿದ್ದವಾದ ಶಾಂಡಿಲ್ಯವಿದ್ಯೆಯನ್ನು ಹೇಳಿದೆ.ಬ್ರಹ್ಮದಿಂದಲೇ ತೇಜಸ್ಸು,ನೀರು,ಅನ್ನ ಮೊದಲಾದ ಎಲ್ಲವೂ ಹುಟ್ಟಿವೆ.ಆದ್ದರಿಂದ ಅದು ತಜ್ಜಮ್.ಹೀಗೆಯೇ ಪ್ರತಿಲೋಮದಿಂದ ಬ್ರಹ್ಮದಲ್ಲಿಯೇ ಲಯವಾಗುತ್ತದೆ.ಆದ್ದರಿಂದ ಅದು ತಲ್ಲಮ್.ಸ್ಥಿತಿಕಾಲದಲ್ಲಿ ಎಲ್ಲವೂ ಎಲ್ಲವೂ ಜೀವಿಸಿಕೊಂಡು ಇರುತ್ತವೆ.ಆದ್ದರಿಂದ ಅದು ತದನಮ್.ಹೀಗೆ ಜಗತ್ತು ಪ್ರತಿಕಾಲದಲ್ಲಿಯೂ ಬ್ರಹ್ಮ ಸ್ವರೂಪದಲ್ಲಿಯೇ ಇರುವುದರಿಂದ ಅದು ಬ್ರಹ್ಮವೇ.

       ಶಾಂಡಿಲ್ಯ ವಿದ್ಯೆ:ಹೃದಯ ಪುಂಡರೀಕದಲ್ಲಿರುವವನೇ ನನ್ನ ಆತ್ಮನು.ಇವನು ಅಣು ಪರಿಮಾಣದವನೂ ವಿಭುವೂ ಆಗಿದ್ದಾನೆ.ನನ್ನ ಆತ್ಮನೇ ಬ್ರಹ್ಮ.ದೇಹಾಪಿ೯ತವಾದ ಮೇಲೆ ಇವನನ್ನೇ ಸೇರುತ್ತೇನೆ.ಯಾವನಿಗೆ ಇಂಥ ನಿಶ್ಚಯವು(ಕ್ರತು) ಇರುವುದೋ ಅವನು ಈಶ್ವರ ಭಾವವನ್ನು ಹೊಂದುತ್ತಾನೆ.ಇದು ಶಾಂಡಿಲ್ಯನ ಉಪದೇಶ.

     ಹದಿನಾರನೆಯ ಖಂಡದಲ್ಲಿ ಪುರುಷ ವಿದ್ಯೆಯನ್ನು ಹೇಳಿದೆ.ಹದಿನೇಳನೆಯ ಖಂಡದಲ್ಲಿ ಪುರುಷವಿದ್ಯೆಯು ಮುಂದುವರಿಯುತ್ತದೆ.ಹದಿನೆಂಟನೆಯ ಖಂಡದಲ್ಲಿ ಮನ_ಆಕಾಶಗಳಲ್ಲಿ ಸಮಸ್ತ ಬ್ರಹ್ಮದೃಷ್ಟಿಯನ್ನು ವಿಧಿಸಿದೆ.ಇದನ್ನು ಮನೋಬ್ರಹ್ಮ ಎನ್ನುತ್ತಾರೆ.ಆಕಾಶ ಮನಸ್ಸುಗಳು ಸೂಕ್ಷ್ಮವಾಗಿರುವುದರಿಂದ ಅವುಗಳಲ್ಲಿ ಬ್ರಹ್ಮದೃಷ್ಟಿಯನ್ನು ಹೇಳಿದೆ.ಹತ್ತೊಂಬತ್ತನೆಯ ಖಂಡದಲ್ಲಿ ಆದಿತ್ಯನಲ್ಲಿ ಸಕಲ ಬ್ರಹ್ಮದೃಷ್ಟಿಯನ್ನು ವಿಧಿಸಿದೆ.ಆದಿತ್ಯನು ಬ್ರಹ್ಮ ಎಂಬುದು ಆದೇಶ. ಆದಿತ್ಯನನ್ನು ಬ್ರಹ್ಮವೆಂದು ಉಪಾಸಿಸುವವನ ಬಳಿಗೆ ಮಂಗಳ ಘೋಷಗಳು ಬಂದು ಸುಖವನ್ನುಂಟು ಮಾಡುವುವು. 

           ನಾಲ್ಕನೆಯ ಅಧ್ಯಾಯ:

      ಈ ಅಧ್ಯಾಯದಲ್ಲಿ ಹದಿನೇಳು ಖಂಡಗಳಿವೆ.ವಾಯು ಪ್ರಾಣಗಳು ಬ್ರಹ್ಮದ ಪಾದಗಳೆಂದು ಹೇಳಿದೆ.ಈಗ ಅವುಗಳನ್ನು ಸಾಕ್ಷಾತ್ ಬ್ರಹ್ಮವೆಂದೇ ಉಪಾಸಿಸ ಬೇಕೆಂದು ಶ್ರುತಿಯು ಹೇಳುತ್ತದೆ.ಶ್ರದ್ಧೆ,ಅನ್ನದಾನ,ವಿನಯ ಇವು ವಿದ್ಯಾಪ್ರಾಪ್ತಿಗೆ ಸಾಧನಗಳೆಂದು ಇಲ್ಲಿ ಹೇಳಿದೆ. ರೈಕ್ವನು ಜಾನಶ್ರುತಿ ರಾಜನಿಗೆ 'ಸಂವಗ೯'ವಿದ್ಯೆಯನ್ನು ಉಪದೇಶಿಸಿದನು.ಯಾವುದು ತನ್ನಲ್ಲಿ ಎಳೆದುಕೊಂಡು   ಲಯಮಾಡಿಕೊಳ್ಳುವುದೊ ಅದು 'ಸಂವಗ೯'.ದೇವತೆಗಳಲ್ಲಿ ವಾಯು, ಇಂದ್ರಿಯಗಳಲ್ಲಿ ಪ್ರಾಣ ಇವುಗಳನ್ನು ಸಂವಗ೯ವೆಂದು ಉಪಾಸಿಸಬೇಕು.

         ನಾಲ್ಕನೆಯ ಖಂಡದಲ್ಲಿ 'ಷೋಡಶಕಲ ವಿದ್ಯೆ'ಯನ್ನು ವಿವರಿಸಲಾಗಿದೆ.ಜಗತ್ತನ್ನು ಕಾಯ೯ರೂಪದಿಂದ ಏಕವೆಂದು ಭಾವಿಸಿ ಹದಿನಾರು ಪ್ರಕಾರವಾಗಿ ವಿಂಗಡಿಸಿ ಇದರಲ್ಲಿ ಬ್ರಹ್ಮದೃಷ್ಟಿಯನ್ನು ಇಡಬೇಕೆಂದು ಹೇಳಿದೆ. ಐದರಿಂದ ಒಂಬತ್ತನೆಯ ಖಂಡದಲ್ಲಿ ಶ್ರದ್ಧಾ ತಪಸ್ಸುಗಳು ಬ್ರಹ್ಮೋಪಾಸಕನಿಗೆ ಅಂಗವೆಂಬುದನ್ನು ತಿಳಿಸಲು ಸತ್ಯಕಾಮನ ಕತೆಯು ಬಂದಿದೆ. ವಾಯು (ಋಷಭ), ಅಗ್ನಿ, ಸೂಯ೯ (ಹಂಸ) ಪ್ರಾಣ (ನೀರುಕೋಳಿ) ಇವು ಸತ್ಯಕಾಮನಿಗೆ ಬ್ರಹ್ಮದ ನಾಲ್ಕು ಪಾದಗಳನ್ನು ತಿಳಿಸಿಕೊಡುತ್ತವೆ.

1)ನಾಲ್ಕು ದಿಕ್ಕುಗಳು_ಬ್ರಹ್ಮದ ಮೊದಲನೆಯ ಪಾದ_ 'ಪ್ರಕಾಶವಾನ್'

2)ಪೃಥ್ವಿ,ಅಂತರಿಕ್ಷ,ದ್ಯುಲೋಕ,ಸಮುದ್ರ _ಇವುಬ್ರಹ್ಮದ ಎರಡನೆಯ ಪಾದ_ 'ಅನಂತವಾನ್'

3)ಅಗ್ನಿ,ಸೂಯ೯,ಚಂದ್ರ,ಮಿಂಚು_ಇವು ಬ್ರಹ್ಮದ ಮೂರನೆಯ ಪಾದ_'ಜ್ಯೋತಿಷ್ಮಾನ್'

4)ಪ್ರಾಣ,ಕಿವಿ,ಕಣ್ಣು,ಮನಸ್ಸು_ಇವು ಬ್ರಹ್ಮದ ನಾಲ್ಕನೆಯ ಪಾದ._ 'ಆಯತನವಾನ್'

ಸತ್ಯಕಾಮನು ದೇವತೆಗಳಿಂದ ಷೋಡಶಕಲ ವಿದ್ಯೆಯನ್ನು ಪಡೆದಿದ್ದರೂ ತನ್ನ ಆಚಾಯ೯ನಾದ ಹಾರಿದ್ರುಮನಿಂದ ಇದೇ ವಿದ್ಯೆಯನ್ನು ಪುನಃ ಪಡೆಯುತ್ತಾನೆ.ಹತ್ತನೆಯ ಖಂಡದಲ್ಲಿ ಬ್ರಹ್ಮವಿದ್ಯೆಯನ್ನು, ಬ್ರಹ್ಮಜ್ಞಾನಿಯ ಗತಿಯನ್ನು, ಅಗ್ನಿವಿದ್ಯೆಯನ್ನೂ ತಿಳಿಸಲು ಹತ್ತನೆಯ ಖಂಡವನ್ನು ಪ್ರಾರಂಭಿಸಿದೆ.

ಐದನೆಯ ಅಧ್ಯಾಯ:

ಈ ಅಧ್ಯಾಯದಲ್ಲಿ ಇಪ್ಪತ್ನಾಲ್ಕು ಖಂಡಗಳಿವೆ.

ಮೊದಲ ಹಾಗೂ ಎರಡನೆಯ ಖಂಡದಲ್ಲಿಪ್ರಾಣೋಪಾಸನೆ ಹಾಗೂ ಪ್ರಾಣೂೀಪಾಸಕನಿಗೆ ಶ್ರೀಮಂಥ ಕಮ೯ವನ್ನು ಹೇಳಿದೆ.ಪ್ರಾಣವೇ ಜ್ಯೇಷ್ಟ ಮತ್ತು ಪ್ರಾಣವೇ ಶ್ರೇಷ್ಠ ಎನ್ನುವುದನ್ನು ಹೇಳಿದೆ.ಹನ್ನೊಂದನೆಯ ಖಂಡದಲ್ಲಿ ವೈಶ್ವಾನರ ವಿದ್ಯೆಪ್ರಾರಂ¨sವಾಗುತ್ತದೆ.ರಾಜ ಅಶ್ವಪತಿ ಕೈಕೇಯನು  ಈ ರೀತಿ ಬೋಧಿಸಿದನು.ವೈಶ್ವಾನರ ಉಪಾಸಕನುತನ್ನ ಭೋಜನ ಕ್ರಿಯೆಯನ್ನೇ ಪ್ರಾಣಾಗ್ನಿಹೋತ್ರವೆಂದು ಕಲ್ಪಿಸಿಕೊಳ್ಳಬೇಕು.

ಪ್ರಾಣಾಯ ಸ್ವಾಃ_ಮೊದಲನೆಯ ತುತ್ತು.

ವ್ಯಾನಾಯ ಸ್ವಾಃ._ಎರಡನೆಯ ತುತ್ತು

ಅಪಾನಾಯಸ್ವಾಃ _ಮೂರನೆಯ ತುತ್ತು

ಸಮಾನಾಯ ಸ್ವಾಹಾಃ_ನಾಲ್ಕನೆಯ ತುತ್ತು

ಉದಾನಾಯ ಸ್ವಾಹಾಃ_ಐದನೆಯ (ಕೊನೆಯ)ತುತ್ತು.

ಎಂದು ಹೇಳಿದೆ.ಪ್ರತಿಯೊಂದು ಆಹುತಿಗೂ ನಿದಿ೯ಷ್ಟವಾದ ಫಲವಿದೆ.ಇದನ್ನು ಅರಿತುಕೊಂಡು ಪ್ರಾಣಾಗ್ನಿಹೋತ್ರವನ್ನು ಮಾಡುವವನ ಆಹುತಿಯು ಸವ೯ ಲೋಕಗಳಲ್ಲಿಯೂ ಸವ೯ ಪ್ರಾಣಿಗಳಲ್ಲಿಯೂ ಸವಾತ್ಮರಲ್ಲಿಯೂ ಹುತವಾಗುತ್ತದೆ.

 ಆರನೆಯ ಅಧ್ಯಾಯ:

ಮೊದಲ ಐದು ಅಧ್ಯಾಯಗಳು ಉಪಾಸನಾ ಪ್ರಧಾನವಾಗಿದ್ದರೆ ಇಲ್ಲಿ ತತ್ವೋಪದೇಶ ಪ್ರಧಾನವಾಗಿದೆ.ಈ ಅಧ್ಯಾಯವು ಛಾಂದೋಗ್ಯ ಉಪನಿಷತ್ತಿನ ಮುಖ್ಯ ಭಾಗವಾಗಿದೆ.ಈ ಅಧ್ಯಾಯಕ್ಕೆ ಆರು ಖಂಡಗಳಿವೆ.

   ಶ್ವೇತಕೇತುವು ಹನ್ನೆರಡು ವಷ೯ಗಳವರೆಗೆ ವೇದಗಳನ್ನು ಅಧ್ಯಯನ ಮಾಡಿದನು.ಆದರೆ ನಿರಹಂಕಾರಿಯೂ ವಿವೇಕ ಸ್ವಭಾವದವನೂ ಆಗಲಿಲ್ಲ.ಇದನ್ನು ಅರಿತುಕೊಂಡ ಅವನ ತಂದೆಯು ಅವನನ್ನು ಹೀಗೆ ಪ್ರಶ್ನಿಸಿದನು.

1)ಮತವು ಅಮತವಾಗುವುದೋ

2)ಅವಿಜ್ಞಾತವು ವಿಜ್ಞಾತವಾಗುವುದೋ(ಎಂದರೆ ಅರಿಯಲ್ಪಡದಿರುವುದು ಅರಿಯಲ್ಪಡುವುದೋ)

 ಈ ಆದೇಶವನ್ನು ಕೇಳಿದೆಯೋ?ಶ್ವೇತಕೇತುವಿಗೆ ಈ ಆದೇಶವು ತಿಳಿದಿರಲಿಲ್ಲ.ವೇದಗಳನ್ನೆಲ್ಲ ಅಧ್ಯಯನ ಮಾಡಿದ್ದರೂ ಅಮೃತತ್ವವನ್ನು ತಿಳಿದುಕೊಳ್ಳದ್ದರಿಂದ ಅವನು ಅಕೃತಾಥ೯ನಾಗಿಯೇ ಇದ್ದನು.

1)ಮಣ್ಣಿನ ಮುದ್ದೆ 2)ಚಿನ್ನದ ಗಟ್ಟಿ3) ಕಬ್ಬಿಣದ ಉಗುರು ಕತ್ತರಿ ಈ ಮೂರು ಮುಖ್ಯ ದೃಷ್ಟಾಂತಗಳಿಂದ ಕಾಯ೯ಕಾರಣಗಳ ಅಭೇದವನ್ನು ತಿಳಿಸುತ್ತಾನೆ.

      ಗಡಿಗೆ ಮುಂತಾದವಕ್ಕೆ ಮಣ್ಣಿನ ಮುದ್ದೆ  ಕಾರಣವಾಗಿದೆ.ಕಾಯ೯ ಕಾರಣವು ಅನನ್ಯವಾದ್ದರಿಂದ (ಬೇರೆ ಬೇರೆ ಅಲ್ಲದ್ದರಿಂದ) ಒಂದನ್ನು ಅರಿತುಕೊಂಡರೆ ಇನ್ನೊಂದನ್ನು ಅರಿತಂತೆ ಆಗುತ್ತದೆ.ಏಕೆಂದರೆ ವಸ್ತುವಿನ ಪರಿಣಾಮವು ವಾಕ್ಕನ್ನು ಅವಲಂಬಿಸಿರುವ ಹೆಸರೇ 1.

ಸೃಷ್ಟಿಗೆ ಮೊದಲು ಈ ಜಗತ್ತು ಏಕವಾದ ಸತ್‍ಸ್ವರೂಪವೇ ಆಗಿತ್ತು.ಸದ್ವಸ್ತುವು ತಾನೂ ಬಹುವಾಗುವೆನೆಂದು ಸಂಕಲ್ಪಿಸಿ ತೇಜಸ್ಸನ್ನು ಸೃಷ್ಟಿಸಿತು. ತೇಜಸ್ಸು_ನೀರು_ ಪೃಥ್ವಿಯು ಸೃಷ್ಟಿಸಲ್ಪಟ್ಟಿತು.ಈ ಭೂತಗಳಲ್ಲಿ(ಪಂಚ) ಮೂಲಕಾರಣವಾದ ಸದ್ವಸ್ತುವು ಜೀವರೂಪದಿಂದ ಪ್ರವೇಶಿಸಿ  ನಾಮರೂಪಗಳನ್ನು ವಿಂಗಡಿಸಿತು.

 ತ್ರಿವೃತ್ಕರಣದಲ್ಲಿ ಒಂದು ಭೂತದ ಅಂಶವು ಹೆಚ್ಚಾಗಿಯೂ ಉಳಿದ ಎರಡು ಭೂತಗಳ ಅಂಶವು ಕಡಿಮೆಯಾಗಿಯೂ ಇರುತ್ತದೆ.ಎಲ್ಲವೂ ಸದ್ವಸ್ತುವಿನ ವಿಕಾರವಾದ್ದರಿಂದ ಸದ್ವಸ್ತುವನ್ನು ಅರಿತುಕೊಂಡರೆ ಎಲ್ಲವನ್ನೂ ಅರಿತಂತೆ ಆಗುವುದು.ಸದ್ವಸ್ತುವೇ ಸತ್ಯ.ಪ್ರತಿಯೊಂದು ವಸ್ತುವೂ ತ್ರಿವೃತ್ಕøತವಾಗಿದೆ.ಮನುಷ್ಯನು ಹೇಗೆ ಹದಿನಾರು ಕಲೆಗಳುಳ್ಳವನು ಎಂದು ಹೇಳಿದೆ.ಮನುಷ್ಯನು ತನ್ನ ಪ್ರತಿಬಿಂಬದಿಂದ ಕನ್ನಡಿಯನ್ನು ಪ್ರವೇಶಿಸುವಂತೆ ಪರದೇವತೆಯು ಜೀವಾತ್ಮವೇಷದಿಂದ (ಬ್ರಹ್ಮವು ಜೀವನಾಗಿ)ಶರೀರವನ್ನು ಪ್ರವೇಶಿಸುತ್ತದೆ.

ಜೀವನು ಮನೋಮಯನಾದುದರಿಂದ ಶ್ರವಣ -ಮನನಗಳು ಸಾಧ್ಯ.ಮನಸ್ಸು ಸುಷುಪ್ತಿಯಲ್ಲಿ ಉಪರತಿಯನ್ನು ಹೊಂದಿದಾಗ ಜೀವವು ಪರಮಾತ್ಮ ಸ್ವರೂಪವನ್ನು ಪಡೆದು ಕೊಳ್ಳುತ್ತಾನೆ ಎಂದು ಎಂಟನೆಯ ಖಂಡದಲ್ಲಿ ಹೇಳಿದೆ.ಮನುಷ್ಯನು ಯಾವಾಗ ನಿದ್ರಿಸುತ್ತಾನೋ ಆಗ ಪರದೇವತೆಯೊಂದಿಗೆ ಏಕೀಭೂತ ನಾಗುತ್ತಾನೆ.ಸ್ವರೂಪವನ್ನು ಹೊಂದಿರುತ್ತಾನೆ.ಆದ್ದರಿಂದ ಇವನನ್ನು 'ಸ್ವಪಿತಿ' ಎಂದು ಹೇಳುತ್ತಾರೆ.ದಾರದಿಂದ ಕಟ್ಟಲ್ಪಟ್ಟಿರುವ ಹಕ್ಕಿಯು ದಿಕ್ಕು ದಿಕ್ಕಿಗೆ ಹಾರಾಡಿ ಮತ್ತೆಲ್ಲಿಯೂ ಆಶ್ರಯವನ್ನು ಪಡೆಯದೆ ತನ್ನನ್ನು ಬಂಧಿಸಿರುವ ಸ್ಥಳಕ್ಕೆ ಹೇಗೆ ಬರುವುದೋ ಅದೊಂದೆ ಮನಸ್ಸೆಂಬ ಉಪಾಧಿಯನ್ನು ಪಡೆದು ಜೀವನು ಸುಷುಪ್ತಿಯಲ್ಲಿ ಪರದೇವತೆಯನ್ನು ಸೇರುತ್ತಾನೆ.

ಮನುಷ್ಯನು ಸಾಯುತ್ತಿರುವಾಗ ವಾಕ್ಕು ಮನಸ್ಸಿನಲ್ಲಿಯೂ ,ಮನಸ್ಸು ಪ್ರಾಣದಲ್ಲಿಯೂ,ಪ್ರಾಣವು ತೇಜಸ್ಸಿನಲ್ಲಿಯೂ,ತೇಜಸ್ಸು ಪರದೇವತೆಯಲ್ಲಿಯೂ ಲೀನವಾಗುತ್ತದೆ.ಮುಕ್ತನಾದವನು ಹಿಂದಿರುಗುವುದಿಲ್ಲ. ಆದರೆ ಅಜ್ಞಾನಿಯು _ನಿದ್ರೆಯಿಂದ ಎಚ್ಚರಗೊಂಡವನಂತೆ_ತನ್ನ ಮೂಲವಾದ ಸದ್ವಸ್ತುವಿನಿಂದ ಪುನಃ ದೇಹವನ್ನು ಪಡೆಯುತ್ತಾನೆ.

        ಯಾವುದು ಸೂಕ್ಷ್ಮತಮವಾದ ಜಗನ್ಮೂಲವೊ,ಅದರಿಂದಲೇ ಈ ಜಗತ್ತೆಲ್ಲವೂ ಆತ್ಮವಂತವಾಗಿªದೆ. ಅದೇ ಸತ್ಯವು.ಅದೇ ಆತ್ಮನು. 'ಓ ಶ್ವೇತಕೇತು ಅದೇ ನೀನಾಗಿರುವೆ'(ತತ್ವಮಸಿ)ಎಂದು ಉದ್ಧಾಲಕನು ಮಗನಿಗೆ ಹೇಳಿದನು.

ಪ್ರತಿದಿನವೂ ಎಲ್ಲವೂ ಸುಷುಪ್ತಿಯಲ್ಲಿ ಸದ್ವಸ್ತುವನ್ನು ಸೇರುವುದೆಂಬುದಕ್ಕೆ ದೃಷ್ಟಾಂತವಾಗಿ

1)ಜೇನುಹುಳು:ಜೇನುಹುಳುಗಳು ನಾನಾ ವೃಕ್ಷಗಳ ರಸಗಳನ್ನು ಸಂಗ್ರಹಿಸುತ್ತವೆ.ಆದರೆ "ನಾನು ಈಮರದ ರಸ ಆ ಮರದ ರಸ ಎಂದು"ಅರಿಯುವುದಿಲ್ಲ.

2) ಅದೇರೀತಿಯಲ್ಲಿ ಅನೇಕ ನದಿಗಳು ಹರಿದು ಸಮುದ್ರವನ್ನು ಸೇರುತ್ತವೆ.ಆದರೆ "ನಾನು ಆ ನದಿಯ ನೀರು ಈ ನದಿಯನೀರು" ಎನ್ನುವ ಭೇದ ಭಾವ ಇರುವುದಿಲ್ಲ.

 ಜೀವನು ಶರೀರವನ್ನು ಬಿಟ್ಟರೆ  ಅದು ಒಣಗಿ ಸಾಯುತ್ತದೆ.ಜೀವವು ಸಾಯುವುದಿಲ್ಲ. ಅನಂತರ ಶ್ವೇತಕೇತುವು ಅತ್ಯಂತ ಸೂಕ್ಷ್ಮವಾದ ಸದ್ವಸ್ತುವಿನಿಂದ ಅತ್ಯಂತ ಸ್ಥೂಲವಾದ  ಪೃಥ್ವಿ ಮುಂತಾದ ನಾಮ ರೂಪಗಳನ್ನುಳ್ಳ ಈ ಜಗತ್ತು ಹೇಗೆ ಉಂಟಾಯಿತು ಎಂದು ಪ್ರಶ್ನಿಸುತ್ತಾನೆ.

ಒಂದನೇ ದೃಷ್ಟಾಂತ:ಶ್ವೇತಕೇತುವಿಗೆ ಉದ್ಧಾಲಕನು ಆಲದಮರದ ಬೀಜವನ್ನು ಒಡೆದು ನೋಡಲು ಹೇಳುತ್ತಾನೆ.ಅದರಲ್ಲಿ ಸಣ್ಣ ಬೀಜಗಳು ಮಾತ್ರ ಕಾಣುತ್ತವೆಯೆಂದು  ಶ್ವೀತಕೇತುವು ಹೆಳುತ್ತಾನೆ. ಬೀಜದಲ್ಲಿರುವ ಯಾವ ಸೂಕ್ಷ್ಮಾಂಶವು ಹೀಗೆ ಒಂದು ದೊಡ್ಡ ಆಲದಮರ ವಾಗುತ್ತದೆಯೊ  ಅದೇ ರೀತಿ ಈ ಜಗತ್ತು ಹುಟ್ಟಿದೆ ಎಂದು ವಿವರಿಸುತ್ತಾನೆ.

   ಎರಡನೇ ದೃಷ್ಟಾಂತ:(ಉದಕಲೀನ ಲವಣ ದೃಷ್ಟಾಂತ)

              ಉಪ್ಪನ್ನು ನೀರಿಗೆ ಹಾಕಿದರೆ ಕರಗಿ ಹೋಗುತ್ತದೆ.ಅದನ್ನು ನೀರಿನಿಂದ ತೆಗೆಯಲು ಆಗುವುದಿಲ್ಲ.ಆದರೆ ಆ ನೀರನ್ನು ಯಾವ ಭಾಗದಿಂದ ಸವಿದು ನೋಡಿದರೂ ಎಲ್ಲೆಲ್ಲಿಯೂ ಉಪ್ಪೇ ಆಗಿರುತ್ತದೆ.ಹಾಗೆಯೇ ಜಗನ್ಮೂಲವಾದ ಸದ್ವಸ್ತುವು ನಮ್ಮಲ್ಲಿದೆ. ಇಂದ್ರಿಯಗಳಿಗೆ ಗೋಚರವಾಗುವುದಿಲ್ಲ. ಆದರೆ ಬೇರೊಂದು ಉಪಾಯದಿಂದ ಕಂಡುಹಿಡಿಯಬಹುದು. 

3) ಗಂಧಾರ ದೇಶದ ಕಥೆ:

  ದರೋಡೆಕೋರರು ಗಾಂಧಾರ ದೇಶದಿಂದ ಒಬ್ಬ ಮನುಷ್ಯನನ್ನು ಕಣ್ಣು ಕಟ್ಟಿ ಕರೆತಂದು ಅವನನ್ನು ಒಂದು ನಿಜ೯ನ ಪ್ರದೇಶದಲ್ಲಿ ಬಿಟ್ಟರು.ಅವನು ದಾರಿಕಾಣದೆ ಪರಿತಪಿಸುತ್ತಿದ್ದನು.ಆಗ ಪರಮ ಕಾರುಣಿಕನಾದ ದಾರಿಹೋಕನೊಬ್ಬನು ಅವನ ಕಣ್ಣು ಕಟ್ಟನ್ನು ಬಿಚ್ಚಿ "ಗಾಂಧಾರ ದೇಶವು ಈ ದಿಕ್ಕಿನಲ್ಲಿದೆ.ಅಲ್ಲಿಗೆ ಹೋಗು" ಎಂದು ಹೇಳಿದನು.ಅವನು ದಾರಿಯನ್ನು ಕೇಳುತ್ತಾ ಹೋಗುತ್ತಾ ಹೇಗೋ ಗಾಂಧಾರ ದೇಶವನ್ನು ಬಂದು ಸೇರಿದನು.

    ಹಾಗೆಯೇ ಈ ಸಂಸಾರದಲ್ಲಿ ಅಜ್ಞಾನಿಯಾದವನು ಗುರೂಪದೇಶದ ಸಹಾಯದಿಂದ ಸದ್ವಸ್ತುವನ್ನು ಅರಿತುಕೊಂಡು ಅದನ್ನು ಸೇರಬಹುದು.ಪ್ರಾರಬ್ಧ ಕಮ೯ವು  ನಾಶವಾದ ಮೇಲೆ ಅವನು ಸದ್ವಸ್ತುವಿನಲ್ಲೇ ಸೇರಿಕೊಂಡು ಮುಕ್ತನಾಗುತ್ತಾನೆ.ಅಜ್ಞಾನಿಯು ಪುನಃ ಹುಟ್ಟುತ್ತಾನೆ.ಆದರೆ ಜ್ಞಾನಿಯು ಶಾಸ್ತ್ರಾಚಾಯ೯ರ ಉಪದೇಶದಿಂದ ಸದ್ವಸ್ತುವನ್ನು ಹೊಂದಿ ಸಂಸಾರಕ್ಕೆ ಹೋಗುವುದಿಲ್ಲ.ಶ್ವೇೀತಕೇತುವು ಉದ್ಧಾಲಕನಿಂದ ದೃಷ್ಟಾಂತಗಳಿಂದಲೂ "ಅದೇ ನೀನಾಗಿರುವೆ"(ತತ್ವಮಸಿ) ಎಂದು ಉಪದೇಶ ಹೊಂದಿದನು.  

ಏಳನೆಯ ಅಧ್ಯಾಯ:

ಪರಮಾಥ೯ ತತ್ವವೇ ಪ್ರಧಾನವಾಗಿದ್ದ ಆರನೆಯ ಅಧ್ಯಾಯದಲ್ಲಿಜೀವಬ್ರಹ್ಮರ ಏಕತ್ವವು ನಿಣ೯ಯಿಸಲ್ಪಟ್ಟಿತು.ಇಲ್ಲಿ ಭೂಮತತ್ವವನ್ನು ಉಪದೇಶಿಸಿದೆ.ನಾರದ ಸನತ್ಕುಮಾರರ ಆಖ್ಯಾಯಿಕೆಯು ಪರವಿದ್ಯೆಯ ಸ್ತುತಿಗಾಗಿ ಬಂದಿದೆ. ನಾರದರು ಸವ೯ವಿದ್ಯಾ ಪಾರಂಗತರಾಗಿದ್ದರೂ ಆತ್ಮತತ್ವವನ್ನರಿತುಕೊಳ್ಳದೆ ಇದ್ದುದರಿಂದ ಆನಂದವನ್ನು ಹೊಂದದೆ ಶೋಕಿಸುತ್ತಿದ್ದನು. ನಾರದನು ಸನತ್ಕುಮಾರನ ಬಳಿಗೆ ಬ್ರಹ್ಮೋಪದೇಶಕ್ಕಾಗಿ ಬಂದಿದ್ದನು.ಅವನು ಕಲಿತಿದ್ದೆಲ್ಲಾ ಕೇವಲ ನಾಮವೆಂದೂ, ನಾಮವನ್ನು ಬ್ರಹ್ಮವೆಂದು ಉಪಾಸಿಸಬೇಕೆಂದು ಸನತ್ಕುಮಾರನು ಹೇಳುತ್ತಾನೆ.

"ನಾಮಕ್ಕಿಂತ ಅಧಿಕವಾದುದು ಇದೆಯೇ?" ಎಂದು ನಾರದನು ಕೇಳಲು ಆಚಾಯ೯ನು ಅದಕ್ಕಿಂತ ವಾಕ್ಕು ಅಧಿಕವಾದುದು ಎಂದು ಹೆಳುತ್ತಾನೆ.ಹೀಗೆಯೇ 1 ನಾಮ 2 ವಾಕ್ಕು 3 ಮನಸ್ಸು 4 ಸಂಕಲ್ಪ 5 ಚಿತ್ತ 6ಧ್ಯಾನ 7 ವಿಜ್ಞಾನ 8 ಅನ್ನ ೯ ನೀರು 10 ತೇಜಸ್ಸು 11 ಆಕಾಶ12 ಸ್ಮøತಿ 13 ಆಸೆ 14 ಪ್ರಾಣ ಇವು ಒಂದಕ್ಕಿಂತ ಒಂದು ಅಧಿಕವಾದುದೆಂದು ಪ್ರತಿಯೊಂದನ್ನೂ ಬ್ರಹ್ಮವೆಂದು ಉಪಾಸಿಸಬೇಕೆಂದು ಸನತ್ಕುಮಾರನು ಹೆಳುತ್ತಾನೆ.ವಿಜ್ಞಾನವು ಧ್ಯಾನಕ್ಕಿಂತ ಅಧಿಕವಾದುದು2. 

ಪ್ರಾಣಾತ್ಮವಾದಿಯು ನಿಜವಾದ ಅತಿವಾದಿಯಲ್ಲ.ಯಾವನು "ಭೂಮ' ವೆಂಬ ಹೆಸರಿನ ಎಲ್ಲವನ್ನು ಅತಿಕ್ರಮಿಸಿರುವ ಪರಮಾಥ೯ ತತ್ವವನ್ನು ಅರಿತಿರುತ್ತಾನೋ ಅವನೇ ನಿಜವಾದ ಅತಿವಾದಿ.ಪರಮಾಥ೯ ಸತ್ಯವನ್ನು ಅರಿತುಕೊಳ್ಳುವುದೇ ವಿಜ್ಞಾನವು.ವಿಜ್ಞಾನಕ್ಕೆ ಮನನವೂ, ಮನನಕ್ಕೆ ಶ್ರದ್ಧೆಯೂ, ಶ್ರದ್ಧೆಗೆ ನಿಷ್ಠೆಯೂ,ನಿಷ್ಠೆಗೆ ಇಂದ್ರಿಯ ಸಂಯಮವೂ,ಇಂದ್ರಿಯ ಸಂಯಮಕ್ಕೆ ಸುಖವೂ ಆಶ್ರಯವಾಗಿರುತ್ತದೆ.ಆ ಸುಖವು ಭೂಮವು.ಅಲ್ಪವಲ್ಲ.ಏಕೆಂದರ ಅಲ್ಪದಲ್ಲಿ ಸುಖವಿಲ.್ಲಭೂಮವನ್ನೇ ಅರಿತುಕೊಳ್ಳಲು ಬಯಸಬೇಕು.

ಎಲ್ಲಿ ಬೇರೊಂದನ್ನು ನೋಡುವುದಿಲ್ಲವೋ,ಬೇರೊಂದನ್ನು ಕೇಳುವುದಿಲ್ಲವೋ,ಬೇರೊಂದನ್ನು ಅರಿಯುವುದಿಲ್ಲವೋ,ಅದು 'ಭೂಮ'ವು3.ಅದು ತನ್ನ ಮಹಿಮೆಯಲ್ಲಿ ಪ್ರತಿಷ್ಠಿತವಾಗಿದೆ.ಆದರೆ ಅವನು ಪರಮಾಥ೯ವನ್ನು ಕೇಳಲು ಬಯಸಿದರೆ ಭೂಮವು ತನ್ನ ಮಹಿಮೆಯಲ್ಲಿಯೂ ಪ್ರತಿಷ್ಠಿತವಾಗಿಲ್ಲ.ಭೂಮಕ್ಕೆ ನಿಜವಾಗಿ ಯಾವ ಪ್ರತಿಷ್ಠೆಯೂ ಇಲ್ಲ. ಆ ಭೂಮವೇ ಮೇಲೆ ಕೆಳಗೆ ಎಲ್ಲೆಲ್ಲಿಯೂ ಇದೆ. ಅದೇ ಎಲ್ಲರಲ್ಲಿಯೂ 'ನಾನು'ಎಂದು ಕರೆಸಿಕೊಳ್ಳತಕ್ಕದ್ದು.ಅವಿವೇಕಿಗಳು 'ನಾನು' ಎಂಬ ದೇಹಾದಿ ಸಂಘಾತವಲ್ಲ.ಕೇವಲ ಸದ್ರೂಪ ಆತ್ಮನೇ ಬ್ರಹ್ಮವು.ಹೀಗೆ ಅರಿತುಕೊಂಡವನು 'ಸ್ವರಾಟ್' ಆಗುತ್ತಾನೆ.ಅವನಿಗೆ ಸವ೯ಲೋಕಗಳಲ್ಲಿಯೂ ಸ್ವಚ್ಛಂದವಾದ ಗತಿಯಿರುತ್ತದೆ.ಇದಕ್ಕಿಂತ ಬೇರೆಯಾಗಿ ಅರಿತುಕೊಂಡಿರುವವರು ಕ್ಷರವಾದ ಲೋಕಗಳಲ್ಲಿ ವಾಸಿಸುತ್ತಾರೆ.

ಪ್ರಾಣದಿಂದ ಆರಂಭಿಸಿ ನಾಮದವರೆಗೆ ಇರುವ ವಸ್ತುಗಳೆಲ್ಲವುಗಳ ಉತ್ಪತ್ತಿ, ಪ್ರಳಯಗಳು ಆತ್ಮನಿಂದಲೇ ಆಗುತ್ತವೆ.ಇಂಥ ತತ್ವವಿದನಿಗೆ ಮೃತ್ಯು,ರೋಗ,ದುಃಖ ಮೊದಲಾದ ಅನಥ೯ಗಳೂ ಇರುವುದಿಲ್ಲ.ಅವನು ಎಲ್ಲವೂ ಆಗಿ ಎಲ್ಲವನ್ನೂ ಪಡೆದುಕೊಳ್ಳುತ್ತಾನೆ.ಭೂಮವು ಅಹಂಕಾರದ ಮೂಲಕ ಉಪದೇಶಿಸಲ್ಪಡುತ್ತದೆ.ನಾನೇ ಕೆಳಗಿರುವವನು,ನಾನೇ ಮೇಲಿರುವವನು, ಹಿಂದಿರುವೆನು, ಮುಂದಿರುವೆನು, ಬಲಕ್ಕಿರುವೆನು, ಎಡಕ್ಕಿರುವೆನು, ನಾನು ಇದೆಲ್ಲವೂ  ಆಗಿರುವೆನು4.

ಭೂತಗಳ ಉತ್ಪತ್ತಿ, ಪ್ರಳಯ,ಗತಿ,ಅಗತಿ,ವಿದ್ಯೆ,ಅವಿದ್ಯೆ ಇವುಗಳನ್ನು ಯಾವನು ಅರಿತುಕೊಂಡಿರುವನೋ ಅವನನ್ನು ಭಗವಂತನೆಂದು ಕರೆಯುತ್ತಾರೆ5.

ಹೀಗೆ ನೋಡಿ ಮನನ ಮಾಡಿಕೊಂಡು, ಅರಿತುಕೊಂಡು, ಆತ್ಮರತಿಯೂ, ಆತ್ಮಕ್ರೀಡನೂ, ಆತ್ಮ ಮಿಥುನನೂ,ಆತ್ಮಾನಂದನೂ,ಆಗಿ ಅವನು 'ಸ್ವರಾಟ್' ಆಗುತ್ತಾನೆ.ಅವನಿಗೆ ಸವ೯ಲೋಕಗಳಲ್ಲಿಯೂ ಸ್ವಚ್ಛಂದ ಗತಿಯಿರುತ್ತದೆ.ಇನ್ನು ಯಾರು ಇದಕ್ಕಿಂತ ಬೇರೆಯಾಗಿ ಅರಿತುಕೊಂಡಿರುವರೊ ಅವರು ಅನ್ಯ ರಾಜನ ಅಧೀನಕ್ಕೆ ಒಳಪಟ್ಟು ಕ್ಷಯವುಳ್ಳ ಲೋಕಗಳಲ್ಲಿ ವಾಸಿಸುತ್ತಾರೆ.ಅವರಿಗೆ ಯಾವಲೋಕಗಳಲ್ಲಿಯೂ ಸ್ವಚ್ಛಂದ ಗತಿ ಇರುವುದಿಲ್ಲ.

ಜ್ಞಾನಿಯು ಬದುಕಿರುವಾಗಲೇ ಸ್ವಾರಾಜ್ಯದಲ್ಲಿ ಅಭಿಷಿಕ್ತನಾಗಿದ್ದು ದೇಹವು ಹೋದಮೇಲೂ ಸ್ವರಾಟ್ ಆಗುತ್ತಾನೆ.ಎಂದರೆ ಅವನ ಸ್ಥಿತಿಯು ಯಾವ ವಿಧದಿಂದಲೂ ಬದಲಾವಣೆಯನ್ನು ಹೊಂದುವುದಿಲ್ಲ.ಯಾವನು ಹೀಗೆ ನೋಡುತ್ತಾನೆಯೋ,ಮನನ ಮಾಡುತ್ತಾನೆಯೋ, ಅರಿಯುತ್ತಾನೆಯೋ, ಅವನಿಗೆ ಆತ್ಮನಿಂದಲೇ ಆಸೆ ಉಂಟಾಗುತ್ತದೆ. ಆತ್ಮನಿಂದಲೇ ಸ್ಮøತಿ ಉಂಟಾಗುತ್ತದೆ.ಹೀಗೆ ಆಕಾಶ, ತೇಜಸ್ಸು, ನೀರು, ಅವಿಭಾ೯ವ, ತಿರೋಭಾವಗಳು, ಅನ್ನ,ಬಲ, ವಿಜ್ಞಾನ, ಧ್ಯಾನ, ಚಿತ್ತ, ಸಂಕಲ್ಪ, ಮನಸ್ಸು, ವಾಕ್ಕು,ನಾಮ,ಮಂತ್ರಗಳು,ಕಮ೯ಗಳು ಎಲ್ಲವೂ ಆತ್ಮನಿಂದಲೇ ಉಂಟಾಗುತ್ತವೆ.

ಹೀಗೆ ಸಮಸ್ತ ವ್ಯವಹಾರವೂ ಸ್ವಾರಾಜ್ಯವನ್ನು ಹೊಂದಿದ ಜ್ಞಾನಿಗೆ ತನ್ನ ಆತ್ಮನಿಂದಲೇ ಉಂಟಾಗುತ್ತಿರುವುದು. ವಿದ್ಯಾಫಲದ ವಿಷಯದಲ್ಲಿ ಈ ಶ್ಲೋಕವಿದೆ.ತತ್ವವಿದನು ಮೃತ್ಯುವನ್ನು ನೋಡುವುದಿಲ್ಲ. ರೋಗವನ್ನಾಗಲೀ ದುಃವನ್ನಾಗಲೀ ನೋಡುವುದಿಲ್ಲ.ತತ್ವವಿದನು ಅದ್ವಯನಾಗಿ ನೋಡುತ್ತಾನೆ.ಸವ೯ಪ್ರಕಾರದಿಂದಲೂ ಎಲ್ಲವನ್ನೂ ಪಡೆಯುತ್ತಾನೆ.ಸೃಷ್ಟಿಗೆ ಮೊದಲು ತತ್ವವಿದನು ಅದ್ವಯನಾಗಿರುತ್ತಾನೆ. ಅನಂತರ ಸೃಷ್ಟಿಕಾಲದಲ್ಲಿ ಮೂರುಬಗೆಯಾಗುತ್ತಾನೆ. ಐದು, ಏಳು, ಒಂಬತ್ತು, ಹನ್ನೊಂದು,ನೂರಾಹತ್ತು,ಹತ್ತುಸಾವಿರದ ಇಪ್ಪತ್ತು ಬಗೆಯಾಗುತ್ತನೆ.                                                                           

      ಆಹಾರವು ಶುದ್ಧವಾದಾಗ ಅಂತಃಕರಣವು ಶುದ್ಧವಾಗುತ್ತದೆ.ಅಂತಃಕರಣವು ಶುದ್ಧಿಯಾದಾಗ ಸ್ಮøತಿಯು ಅವಿಚ್ಛಿನ್ನವಾಗಿರುತ್ತದೆ.ಸ್ಮøತಿಯನ್ನು ಪಡೆದಾಗ ಎಲ್ಲ ಗ್ರಂಥಿಗಳ ವಿನಾಶವು ಆಗುತ್ತದೆ.ರಾಗ ದ್ವೇಷಾದಿಗಳಿಂದ ವಿಮುಕ್ತನಾದ ನಾರದನಿಗೆ ಭಗವಂತನಾದ ಸನತ್ಕುಮಾರನು ತಮಸ್ಸಿನ ಆಚೆ ದಡವನ್ನು ತೋರಿಸಿದನು.ಅವನನ್ನು ಸ್ಕಂದನೆಂದು ಕರೆಯುತ್ತಾರೆ.ಅವನನ್ನು ಸ್ಕಂದನೆಂದು ಕರೆಯುತ್ತಾರೆ.

ಎಂಟನೆಯ ಅಧ್ಯಾಯ:

ಬ್ರಹ್ಮವು ಕಾಯ೯ಕಾರಣಗಳನ್ನು  ದೇಶ,ಕಾಲ,ದಿಕ್ಕುಗಳಿಲ್ಲದ ಏಕವೂ ಅದ್ವಿತೀಯವೂ ಆದ ಸದ್ವಸ್ತು.ಈ ಅಧ್ಯಾಯದಲ್ಲಿ ಒಟ್ಟು ಹದಿನೈದು ಖಂಡಗಳಿವೆ.'ದಹರ'ವಿದ್ಯೆಯು ಮೊದಲನೆಯ ಖಂಡದಿಂದ ಆರಂಭವಾಗುತ್ತದೆ.ಬ್ರಹ್ಮಪುರವಾದ ನಮ್ಮ ಶರೀರದಲ್ಲಿ 'ದಹರ'ವಾದ ಎಂದರೆ ಸಣ್ಣದಾದ ಹೃದಯಪದ್ಮವೆಂಬ ಮನೆಯಿದೆ.ಅದರಲ್ಲಿರುವ ದಹರಾಕಾಶದಲ್ಲಿ ಯಾವುದಿದೆಯೊ ಅದನ್ನು ಅನ್ವೇಶಿಸಬೇಕು. ಅದನ್ನು ಅರಿತುಕೊಳ್ಳಲು ಬಯಸಬೇಕು.ಈ ದಹರಾಕಾಶವೇ ಬ್ರಹ್ಮ.ಬ್ರಹ್ಮಕ್ಕೆ ಆಕಾಶವೆಂಬುದು ಪ್ರಸಿದ್ಧವಾದ ಹೆಸರು.ಆಕಾಶದಂತೆ ಅಶರೀರವೂ ಸೂಕ್ಷ್ಮವೂ,ಸವ೯ಗತವೂ ಆಗಿರುವುದರಿಂದ ಬ್ರಹ್ಮವು ಆಕಾಶವೆನಿಸಿದೆ.

ಹೃದಯದಲ್ಲಿರುವ ಆಕಾಶವನ್ನು ಬ್ರಹ್ಮವೆಂದು ಹೇಳಿರುವುದರಿಂದ ಅದುಹೃದಯಾಕಾಶದಷ್ಟೇ ಸಣ್ಣದಲ್ಲ.ಇಲ್ಲಿ ದ್ಯುಲೋಕ,ಪೃಥ್ವಿ,ಅಗ್ನಿ,ವಾಯು,ಸೂಯ೯ಚಂದ್ರರು,ಮತ್ತು ಏನೇನಿದೆಯೋ, ಏನೇನಿಲ್ಲವೋ, ಅವೆಲ್ಲವೂ ಅಂತಗ೯ತವಾಗಿದೆ.

ಮೊದಲನೆಯ ಖಂಡ:ದೇಹವು ನಾಶವಾದರೂ ಹೃದಯಾಕಾಶವು ನಾಶವಾಗುವುದಿಲ್ಲ.ಶರೀರದ ಮುಪ್ಪಿನಿಂದ ಆಕಾಶವೆಂಬ ಬ್ರಹ್ಮಕ್ಕೆ ಮುಪ್ಪಿಲ್ಲ, ಯಾರು ಈ ಲೋಕದಲ್ಲಿ ಬ್ರಹ್ಮವನ್ನು ಉಪಾಸಿಸಿ ದೇಹತ್ಯಾಗ ಮಾಡುವರೋ ಅವರು ಸವ೯ಲೋಕಗಳಲ್ಲಿಯೂ ಸ್ವತಂತ್ರ ಗತಿಯನ್ನು ಪಡೆಯುತ್ತಾರೆ.

ಎರಡನೆಯ ಖಂಡ:ಇದರಲ್ಲಿ ಉಪಾಸಕರು ಭೂಮಿಯಲ್ಲಿ ಅಡಗಿರುವ ನಿಧಿಯಮೇಲೆ ನಡೆಯುತ್ತಿದ್ದರೂ ಅದನ್ನು ಅರಿಯದೆ ಅಜ್ಞಾನಿಗಳಂತೆ ಬ್ರಹ್ಮಲೋಕವನ್ನು ಪ್ರತಿದಿನವೂ ಸುಷುಪ್ತಿಕಾಲದಲ್ಲಿ ಸೇರುತ್ತಿದ್ದರೂ ಅದನ್ನು ಪಡೆಯದೆ ಇರುವರು.

ಮೂರನೆಯ ಖ0ಡ:ಅಪಹತ ಪಾಪತ್ವವೇ ಮೊದಲಾದ ಗುಣಗಳಿಂದ ಕೂಡಿದ ಆತ್ಮನು ಹೃದಯ ಲೋಕದಲ್ಲಿರುತ್ತಾನೆ ಎಂದು ಅರಿತುಕೊಂಡವನು ಪ್ರತಿದಿನವೂ ಸುಷುಪ್ತಿಕಾಲದಲ್ಲಿ ದಹರಾಕಾಶವೆಂಬ ಸ್ವಗ೯ಲೋಕಕ್ಕೆ ಹೋಗುತ್ತಾನೆ.ಪರಮಾತ್ಮನ ಲಕ್ಷಣವಾದ ಜ್ಯೋತಿಯನ್ನು ಸೇರಿ ತನ್ನ ಸ್ವರೂಪದಲ್ಲಿಯೇ ನಿಲ್ಲುತ್ತಾನೆ.ಇವನೇ ಆತ್ಮನು ಅಮೃತನು ಅಭಯನು.ಈ ಬ್ರಹ್ಮಕ್ಕೆ ಸತ್ಯವೆಂದು ಹೆಸರು.

ನಾಲ್ಕನೆಯ ಖಂಡ: ಈ ಲೋಕಗಳು ನಾಶವಾಗದಿರಲು ಆತ್ಮನು ಸೇತುವಾಗಿದ್ದಾನೆ.ಈ ಸೇತುವನ್ನು (ಬ್ರಹ್ಮವನ್ನು) ಹಗಲು ರಾತ್ರಿಗಳು ಮುಟ್ಟುವುದಿಲ್ಲ.ಜರಾ ಮೃತ್ಯುವಾಗಲೀ, ಶೋಕವಾಗಲೀ, ಸುಕೃತ್ಯ_ದುಷ್ಕೃತ್ಯಗಳಾಗಲೀ ಮುಟ್ಟುವುದಿಲ್ಲ. ಈ ಬ್ರಹ್ಮಲೋಕವನ್ನು ಬ್ರಹ್ಮಚಯ೯ದಿಂದಲೇ ಪಡೆದುಕೊಳ್ಳಬೇಕು.

ಐದನೆಯ ಖಂಡ:ಇಲ್ಲಿ ಜ್ಞಾನಕ್ಕೆ ಸಹಕಾರಿಂiÀÁದ ಬ್ರಹ್ಮಚಯ೯ವೆಂಬ ಸಾಧನವನ್ನು ಹೇಳಲಾಗಿದೆ.ಯಜ್ಞವೇ ಬ್ರಹ್ಮಚಯ೯ವು.ಏಕೆಂದರೆ ಜ್ಞಾತೃವಾದವನು ಯಜ್ಞಫಲವನ್ನು ಬ್ರಹ್ಮಚಯ೯ದಿಂದಲೇ ಹೊಂದುತ್ತಾನೆ. ಸತ್ತ್ರಾಯಣ,ಮೌನ,ಉಪವಾಸ,ಅರಣ್ಯವಾಸ ಇವೂ ಬ್ರಹ್ಮಚಯ೯ವೇ. ಏಕೆಂದರೆ ಇವೆಲ್ಲವೂ ಬ್ರಹ್ಮಚಯ೯ಕ್ಕೆ ಸಹಕಾರೀ ಸಾಧನಗಳು.ಬ್ರಹ್ಮಚಯ೯ ಉಪಾಸಕರಿಗೆ ಬ್ರಹ್ಮಲೋಕವೂ ಸ್ವತಂತ್ರಗತಿಯೂ ಇರುತ್ತದೆ.

 ಆರನೆಯ ಖಂಡ(ನಾಡೀ ಖಂಡ):ಹೃದಯ ಪುಂಡಲೀಕದಲ್ಲಿರುವ ಬ್ರಹ್ಮವನ್ನು ಉಪಾಸಿಸುವವನಿಗೆ ನೆತ್ತಿಯ ಮೂಲಕ ಹೋಗುವ ನಾಡಿಯಿಂದ ಗತಿಯನ್ನು ಹೇಳಬೇಕಾಗಿದೆ.ಹೃದಯದಿಂದ ನೂರೊ0ದು ನಾಡಿಗಳು ಹೊರಟಿವೆ.ಒಂದು ಮಹಾಪಥವು ಎರಡು ಗ್ರಾಮಗಳನ್ನು ಕೂಡಿಸುವಂತೆ ಆದಿತ್ಯನ ರಶ್ಮಿಗಳು ಹೃದಯವನ್ನು  ಆದಿತ್ಯಮಂಡಲವನ್ನು ಕೂಡಿಸುತ್ತವೆ.ಅಲ್ಲಿ ಯಾವ ಪಾಪವೂ ಅವನನ್ನು ಸೋಂಕುವುದಿಲ್ಲ.ಏಕೆಂದರೆ ದೇಹೇಂದ್ರಿಯಗಳಿಂದ ಕೂಡಿರುವವನನ್ನೇ ಪಾಪವು ಸೋಂಕುತ್ತದೆ. ಈ ಉಪಾಸಕನು ಓಂಕಾರದಿಂದ ಆತ್ಮವನ್ನು ಧ್ಯಾನಿಸುತ್ತಾ ಸುಷುಮ್ನಾನಾಡಿಯ ಮೂಲಕ ನೆತ್ತಿಯನ್ನು ಭೇದಿಸಿಕೊಂಡು ಆದಿತ್ಯನ ಮೂಲಕ ಬ್ರಹ್ಮಲೋಕಕ್ಕೆ ಹೋಗುತ್ತಾನೆ.

ಏಳನೆಯ ಖಂಡ:ಈ ಸಂಪ್ರಸಾದನು ಶರೀರದಿಂದ ಎದ್ದು ಪರಂಜ್ಯೋತಿಯನ್ನು ಸೇರಿ ತನ್ನ ಸ್ವರೂಪದಲ್ಲಿ ಸ್ಥಿತಿಯನ್ನು ಪಡೆಯುತ್ತಾನೆ.ಇವನೇ ಆತ್ಮನು ಎಂದು ಹೇಳಿದೆ.ಈ ಸಂಪ್ರಸಾದನು ಯಾರು?ಅವನನ್ನು ಅರಿತುಕೊಳ್ಳುವುದು ಹೇಗೆ?ಅವನ ನಿವಿ೯ಶೇಷ ರೂಪವು ಹೇಗಿರುತ್ತದೆ? ಇವುಗಳನ್ನು ಉಪದೇಶಿಸಲು ಏಳನೆಯ ಖಂಡವು ಆರಂಭವಾಗಿದೆ.

     "ಯಾವ ಆತ್ಮನು ಪಾಪರಹಿತನೊ,ಸತ್ಯಕಾಮನೊ,ಸತ್ಯಸಂಕಲ್ಪನೂ ಆಗಿರುವನೊ ಅವನನ್ನು ಅನ್ವೇಶಿಸಬೇಕು.ಅವನನ್ನು ಅರಿತುಕೊಳ್ಳಲು ಬಯಸಬೇಕು.ಯಾವನು ಈ ಆತ್ಮನನ್ನು ಕಂಡುಹಿಡಿದು ಅರಿತುಕೊಳ್ಳುವನೊ ಅವನು ಸವ೯ಲೋಕಗಳನ್ನೂ ಸವ೯ಕಾಮಗಳನ್ನೂ ಪಡೆದುಕೊಳ್ಳುತ್ತಾನೆ" ಎಂಬ ಪ್ರಜಾಪತಿಯ ಮಾತನ್ನು ದೇವಾಸುರರು ಕೇಳಿದರು.ಇಂದ್ರ-ವಿರೋಚನ- ಪ್ರಜಾಪತಿ ಸಂವಾದವು ಈ ಅಧ್ಯಾಯದಲ್ಲಿ ಬರುತ್ತದೆ.ಇಂದ್ರನು ಒಟ್ಟು ನೂರಾ ಒಂದು ವಷ೯ದವರೆಗೆ ಬ್ರಹ್ಮಚಯ೯ ಮಾಡಿದನು. ಇದರಿಂದ ಜ್ಞಾನವು ಇಂದ್ರತ್ವಕ್ಕಿಂತಲೂ ಗುರುತರವಾದುದು ಎಂದು ತಿಳಿಯುತ್ತದೆ.

ಆತ್ಮನ ಸ್ವರೂಪವನ್ನು ಪ್ರಜಾಪತಿಯು ಇಂದ್ರನಿಗೆ ಈ ರೀತಿ ಉಪದೇಶಿಸುತ್ತಾನೆ."ಈ ಶರೀರವು ಮತ್ಯ೯ವೇ.ಮೃತ್ಯುವಿನಿಂದ ಗ್ರಸ್ತವಾಗಿರುತ್ತದೆ. ಇದು ಅಶರೀರನೂ ಅಮೃತನೂ ಆದ ಆತ್ಮನಿಗೆ ಅದಿಷ್ಠಾನ. ಶರೀರವಿಲ್ಲದವನಿಗೆ ಪಾಪ ಪುಣ್ಯಗಳು ಸೋಂಕುವುದೇ ಇಲ್ಲ.ನಾನೇ ಶರೀರವು ಶರೀರವು ನಾನೇ ಎಂಬ ಅವಿವೇಕದಿಂದ ತಾದಾತ್ಮ್ಯವನ್ನು ಪಡೆದಿರುವವನು ಶರೀರವುಳ್ಳವನು.ದೇಹಾಭಿಮಾನದಿಂದ ಭಿನ್ನತೆಯನ್ನು ಹೊಂದಿ ಅಶರೀರ ಸ್ವರೂಪ ವಿಜ್ಞಾನದಿಂದ ಅವಿವೇಕ ಜ್ಞಾನವನ್ನು ತೊಲಗಿಸಿಕೊಂಡಿರುವವನು"ಶರೀರವಿಲ್ಲದವನು".

ಹನ್ನೆರಡನೆಯ ಖಂಡ: ಅಶರೀರನೂ ಸಂಪ್ರಸಾದ ಗುಣವುಳ್ಳವನೂ ಆದ ಆತ್ಮನು ತನ್ನ ಶರೀರತ್ವವನ್ನು ಬಿಟ್ಟು ತನ್ನ ಪರಮಾತ್ಮ ಜ್ಯೋತಿಯನ್ನು ಸೇರಿಕೊಂಡು ತನ್ನ ರೂಪದಿಂದ ಕಾಣಿಸಿಕೊಳ್ಳುತ್ತಾನೆ.ಇವನೇ ಉತ್ತಮ ಪುರುಷನು ಮುಕ್ತನು.ಸವಾ೯ತ್ಮ ಭಾವವನ್ನು ಹೊಂದಿ ಸವ೯ಕಾಮಗಳನ್ನೂ ಪಡೆಯುತ್ತಾನೆ.ದೇವತೆಗಳು ಆತ್ಮನನ್ನು ಉಪಾಸಿಸುತ್ತಾರೆ.

ಹದಿಮೂರನೆಯ ಖಂಡ:"ಶ್ಯಾಮಾಚ್ಛ ಬಲಂ ಪ್ರಪದ್ಯೇ" ಎಂಬ ಪವಿತ್ರ ಮಂತ್ರವನ್ನು ಧ್ಯಾನಕ್ಕಾಗಿ ಹೇಳಿದೆ.ಆಕಾಶವೆಂಬ ಹೆಸರಿನಿಂದ ಪ್ರಸಿದ್ಧವಾದ ಬ್ರಹ್ಮವು ನಾಮರೂಪಗಳನ್ನು ವಿಂಗಡಿಸುತ್ತದೆ.

ಹದಿನಾಲ್ಕನೆಯ ಖಂಡ:ನಾಮರೂಪಗಳು ಯಾವುದರಲ್ಲಿ ಇವೆಯೋ ಅದು ಬ್ರಹ್ಮವು6.ಅಮೃತವೂ ಎಂದು ಈ ಖಂಡದಲ್ಲಿ ಹೇಳಿದೆ.

ಹದಿನೈದನೆಯಖಂಡ:ಈ ಆತ್ಮಜ್ಞಾನವನ್ನು ಬ್ರಹ್ಮನು ಪ್ರಜಾಪತಿಗೆ ಹೇಳಿದನೆಂದೂ,ಅವನು ಮನುವಿಗೆ,ಮನುವು ಮಾನವನಿಗೆ ಉಪದೇಶಿಸಿದನೆಂದೂ ಕೊನೆಯ ಖಂಡದಲ್ಲಿ ಹೇಳಿದೆ.ಕೊನೆಯ ಮೂರು ಅಧ್ಯಾಯಗಳಲ್ಲಿ ಬ್ರಹ್ಮವಿದ್ಯೆಯು ಚೆನ್ನಾಗಿ ನಿರೂಪಿಸಲ್ಪಟ್ಟಿದೆ.

b.Áಂದೋಗ್ಯ ಉಪನಿಷತ್ತಿನ ಕೆಲವು ಮುಖ್ಯ ವಾಕ್ಯಗಳು:

ಒಂದು ಮಣ್ಣಿನ ಮುದ್ದೆಯನ್ನು ತಿಳಿಯುವುದರಿಂದ ಮಣ್ಣಿನಿಂದ ಮಾಡಿದ ಎಲ್ಲಾ ವಸ್ತುಗಳನ್ನು ಅರಿತಂತಾಗುತ್ತದೆಯೊ ,ಹಾಗೆಯೇ ಒಂದು ಚಿನ್ನದ ಗಟ್ಟಿಯನ್ನು ತಿಳಿದುಕೊಂಡಿದ್ದರಿಂದ ಚಿನ್ನದಿಂದ ಮಾಡಿದುದೆಲ್ಲಾ ತಿಳಿಯಲ್ಪಡುವುದೊ,ಹಾಗೆಯೇ ಬ್ರಹ್ಮವನ್ನು ಅರಿತರೆ ಎಲ್ಲವನ್ನೂ ಅರಿತಂತಾಗುತ್ತದೆ.ಯಾವುದು ಅಗ್ನಿಯ ಕೆಂಪು ಬಣ್ಣವೊ,ಅದು ತೇಜಸ್ಸಿನ ಬಣ್ಣ.ಯಾವುದು ಬಿಳಿಯ ಬಣ್ಣವೊ ಅದು ನೀೀರಿನ ಬಣ್ಣ.ಯಾವುದು ಅಗ್ನಿಯ ಕಪ್ಪು ಬಣ್ಣವೊ ಅದು ಪೃಥ್ವಿಯ ಬಣ್ಣ.ಹೀಗೆ ಅಗ್ನಿಯಿಂದ ಅಗ್ನಿತ್ವವು ಹೋಯಿತು.ತ್ರಿವೃತ್ಕರಣ ಪ್ರಕ್ರಿಯೆಯಿಂದ ತೇಜಸ್ಸು,ನೀರು, ಅಗ್ನಿಗಳು ಬ್ರಹ್ಮಕ್ಕಿಂತ ಬೇರೆ ಅಲ್ಲ ಎಂಬುದನ್ನು ತಿಳಿಸಿರುತ್ತದೆ 7.

ಪರಿಣಾಮವೆಂಬುದು ವಾಕ್ಕನ್ನು ಅವಲಂಬಿಸಿರುವ ಹೆಸರೇ.ಮೂರು ಬಣ್ಣಗಳೆಂಬುದೇ ಸತ್ಯ.ಅದೇ ರೀತಿ ಆದಿತ್ಯ,ಚಂದ್ರ,ವಿದ್ಯುತ್ ಗಳಿಗೂ ಅನ್ವಯಿಸುತ್ತದೆ.ಕೆಂಪು_ತೇಜಸ್ಸಿನ ಬಣ್ಣ,ಬಿಳಿ_ನೀರಿನ ಬಣ್ಣ,ಕಪ್ಪು _ಪೃಥ್ವಿಯ ಬಣ್ಣ.

ಯಾವಾಗ ಮನುಷ್ಯನು ನಿದ್ರಿಸುತ್ತ್ರಾನೆಯೊ ಆಗ ಸದ್ವಸ್ತುವಿನೊಂದಿಗೆ ಏಕೀಭೂತನಾಗುತ್ತಾನೆ.ಸ್ವರೂಪವನ್ನು ಹೊಂದಿರುತ್ತಾನೆ.ಆದುದರಿಂದ ಇವನನ್ನು 'ಸ್ವಪಿತಿ' ಎಂದು ಕರೆಯುತ್ತಾರೆ8.ಏಕೆಂದರೆ ಸ್ವರೂಪವನ್ನು ಹೊಂದಿರುತ್ತಾನೆ.ಈ ಅವಸ್ಥೆಯನ್ನು ಬಿಟ್ಟರೆ ಮತ್ತೆಲ್ಲಿಯೂ ಶ್ರಮ ಪರಿಹಾರವಾಗುವುದಿಲ್ಲ. ಅನ್ನವೆಂಬ ಅಂಕುರದಿಂದ ನೀರೆಂಬ ಬೇರನ್ನು ಹುಡುಕು.ಸ್ಥಾವರ ಜಂಗಮರೂಪವಾದ ಈ ಪ್ರಾಣಿಗಳೆಲ್ಲ ಸದ್ವಸ್ತುವನ್ನು ಸದ್ವಸ್ತುವನ್ನೇ ಆಶ್ರಯವಾಗಿ ಪಡೆದಿವೆ.ಸದ್ವಸ್ತುವಿನಲ್ಲೇ ಲಯವಾಗುತ್ತವೆ.ಸಾಯುತ್ತಿರುವ ಮನುಷ್ಯನ ವಾಕ್ಕು ಮನಸ್ಸಿನಲ್ಲಿಯೂ,ಮನಸ್ಸು ಪ್ರಾಣದಲ್ಲಿಯೂ ,ಪ್ರಾಣವು ತೇಜಸ್ಸಿನಲ್ಲಿಯೂ ,ತೇಜಸ್ಸು ಪರದೇವತೆಯಲ್ಲಿಯೂ ಲೀನವಾಗುತ್ತದೆ.

ಇದ್ದದ್ದು ಮಾತ್ರವೇ ಹುಟ್ಟುತ್ತದೆ.ಎಳ್ಳಿನಲ್ಲಿ ಎಣ್ಣೆಯಿರುವುದರಿಂದಲೇ ಎಳ್ಳನ್ನು ಹಿಂಡಿದಾಗ ಎಣ್ಣೆಯು ಬರುತ್ತದೆ.ಹಾಗಿಲ್ಲವಾದರೆ ಮರಳಿನಿಂದಲೂ ಎಣ್ಣೆಯನ್ನುತೆಗೆಯಬಹುದಾಗಿತ್ತು.ಅದು ಸಾಧ್ಯವಿಲ್ಲ.ಏಕೆಂದರೆ ಎಣ್ಣೆಯು ಮರಳಿನಲ್ಲಿಲ್ಲ.ಆದ್ದರಿಂದ ಅದು ಮರಳಿನಿಂದ ಹುಟ್ಟುವಂತಿಲ್ಲ.ಇದೇ ಸತ್ಕಾಯ೯ವಾದವು೯.ಬ್ರಹ್ಮ ವಿದ್ಯೆಯೊಂದನ್ನು ಬಿಟ್ಟರೆ ಉಳಿದೆಲ್ಲಾ ವಿದ್ಯೆಗಳೂ 'ಅವಿದ್ಯೆ' ಎಂದೇ ಪರಿಗಣಿತವಾಗಿವೆ.ಯೋಗ ಸಮಾಧಿಯನ್ನಾಗಲೀ ಸಿದ್ಧಿ_ಮಹಿಮೆಗಳನ್ನಾಗಲೀ ಹೊಂದಬೇಕಾಗಿಲ್ಲ. ಎಲ್ಲಿ ಬೇರೊಂದನ್ನು ನೋಡುವುದಿಲ್ಲವೋ, ಬೇರೊಂದನ್ನು ಕೇಳುವುದಿಲ್ಲವೋ, ಬೇರೊಂದನ್ನು ಅರಿಯುವುದಿಲ್ಲವೋ ಅದು ಭೂಮವು. ಯಾವುದು ಭೂಮವೊ ಅದು ಅಮೃತವು10.ಭೂಮವಿದ್ಯೆಯನ್ನು ತಿಳಿದವನು 'ಸ್ವರಾಜ'ನಾಗುತ್ತಾನೆ. ಸ್ವರಾಜನೆಂದರೆ ಇವನನ್ನು ಆಳುವ ಮತ್ತೊಬ್ಬ ಪ್ರಭು ಇರುವುದಿಲ್ಲ.ಇವನೇ ಪ್ರಭುಗಳೆಲ್ಲರಿಗೂ ಪ್ರಭುವಾಗಿರುವನು.

ಬ್ರಹ್ಮವು ನಿವಿ೯ಶೇಷವು.ನಿವಿ೯ಶೇಷವೆಂದರೆ ಆಕಾರ,ಸ್ಥಾನ,ಕಾಲ,ಲೋಕ,ಜಾತಿ,ಗುಣ,ಕ್ರಿಯೆ,ಮುಂತಾದ ಯಾವ ಉಪಾಧಿಗಳೂ ಇಲ್ಲದಿರುವುದು.ಯಾವನು ಏನನ್ನು ಚಿಂತಿಸುವನೋ ಅವನು ಅದೇ ಆಗಿಬಿಡುವನು ಎಂಬ ನ್ಯಾಯದಂತೆ ಬ್ರಹ್ಮೋಪಾಸಕನೂ ಕಡೆಯಲ್ಲಿ ಬ್ರಹ್ಮವೇ ಆಗುತ್ತಾನೆ.ಇದನ್ನೇ 'ಬ್ರಹ್ಮವಿದಃ ಬ್ರಹ್ಮೈವ ಭವತಿ' ಎಂದು ಹೇಳಿದೆ.

ಹೀಗಿರುವಾಗ ಯಾರು ಇಲ್ಲಿ ಆತ್ಮನನ್ನು,ಸತ್ಯವಾದ ಕಾಮಗಳನ್ನು ಅರಿಯದೆ ಹೋಗುವರೋ ಅವರಿಗೆ ಸವ೯ಲೋಕಗಳಲ್ಲಿಯೂ ಸ್ವತಂತ್ರ ಗತಿ ಇರುವುದಿಲ್ಲ.ಆದರೆ ಯಾರು ಇಲ್ಲಿ ಆತ್ಮವನ್ನು,ಈ ಸತ್ಯವಾದ ಕಾಮಗಳನ್ನು ತಿಳಿದುಕೊಂಡು ಹೋಗುವರೋ ಅವರಿಗೆ ಸವ೯ಲೋಕಗಳಲ್ಲಿ ಸ್ವತಂತ್ರ ಗತಿ ಇರುತ್ತದೆ.ಅವನು ಯಾವ ಲೋಕಗಳನ್ನು ಬಯಸುತ್ತಾನೋಅವನ್ನೆಲ್ಲಾ ಪಡೆಯುತ್ತಾನೆ.ಉದಾಹರಣೆಗೆ ಪಿತೃಲೋಕ,ಮಾತೃಲೋಕ,ಭ್ರಾತೃಲೋಕ,ಸ್ನೇಹಿತ ಲೋಕ , ಗಂಧವ೯ಲೋಕ, ಸೋದರಿಯರಲೋಕ, ಅನ್ನಪಾನಗಳ ಲೋಕ, ಗೀತವಾದ್ಯಗಳಲೋಕ, ಸ್ರ್ತೀಲೋಕ.

ಯಾವಯಾª ಅರಿತುಕೊಂಡವನು ದೇಶವನ್ನು ಬಯಸುತ್ತಾನೋ,ಯಾವ ಕಾಯ೯ವನ್ನು ಬಯಸುವನೊ ಅವನ ಸಂಕಲ್ಪದಿಂದಲೆ ಅದು ಏಳುತ್ತದೆ.ಅದರ ಭೋಗದಿಂದ ಸಂಪನ್ನನಾಗಿ ಮಹಿಮೆಯನ್ನು ಅನುಭವಿಸುತ್ತಾನೆ.ಆ ಈ ಆತ್ಮದಲ್ಲಿ ಇರುವನು.ಹೃದಿ+ಅಯಂ=ಹೃದಯ.ಇದೇ ಶಬ್ದ ನಿಷ್ಪತ್ತಿಯ ವಿವರಣೆ.ಆದುದರಿಂದ ಆತ್ಮನೇ ಹೃದಯವು.ಹೀಗೆ ಅರಿತುಕೊಂಡವನು ಹೃದಯ ಬ್ರಹ್ಮವನ್ನು ಪ್ರತಿದಿನವೂ ಸೇರುತ್ತಾನೆ.ಇನ್ನು ಈ ಸಂಪ್ರಸಾದ ಗರಿವುಳ್ಳ ಆತ್ಮನು  ಶರೀರದಿಂದ ಎದ್ದು ಪರಮಜ್ಯೋತಿಯನ್ನು ಸೇರಿ ತನ್ನಸ್ವರೂಪದಲ್ಲಿ  ಸ್ಥಿತಿಯನ್ನು ಪಡೆಯುತ್ತಾನೆ.ಇವನೇ ಆತ್ಮನು ಇದೇ ಅಮೃತವು ಇದೇ ಅಭಯವು ಇದೇ ಬ್ರಹ್ಮವು.ಈ ಬ್ರಹ್ಮಕ್ಕೆ ಸತ್ಯವೆಂದು ಹೆಸರು.

ಬ್ರಹ್ಮದ ಸತ್ಯವೆಂಬ ಹೆಸರು 'ಸ' 'ತೀ' ಮತ್ತು 'ಯಂ'ಎಂಬ ಮೂರು' ಅಕ್ಷರಗಳನ್ನು ಹೊಂದಿದೆ.'ಸತ್' ಎಂಬುದು ಅಮೃತವು.'ತೀ'ಎಂಬುದು ಮತ್ಯ೯ವು.'ಯಮ್' ಇದರಿಂದೆ ಎರಡನ್ನೂ ವಶದಲಿಟ್ಟಿರÀುತ್ತಾನೆ.ಈ ಲೋಕಗಳು ನಾಶವಾಗದಿರಲು ಆತ್ಮನು ಸೇತುವೂ ವಿಧೃತಿಯೂ ಆಗಿದ್ದಾನೆ.ಅಹೋರಾತ್ರಿಗಳು ಈ ಸೇತುವನ್ನು ದಾಡುವುದಿಲ್ಲ.ಎಲ್ಲ ಪಾಪಗಳು ಇದರಿಂದ ಹಿಂತಿರುಗುವುವು.ಏಕೆಂದರೆ ಬ್ರಹ್ಮಲೋಕವು ಪಾಪರಹಿತವಾಗಿದೆ.

ಯಾರು ಇಲ್ಲಿ ಬ್ರಹ್ಮಲೋಕವನ್ನು ಬ್ರಹ್ಮಚಯ೯ದಿಂದ ತಿಳಿದುಕೊಳ್ಳುವರೊ ಅವರಿಗೇ ಈ ಬ್ರಹ್ಮಲೋಕವು ಇರುತ್ತದೆ.ಅವರಿಗೆ ಸವ೯ಲೋಕಗಳಲ್ಲಿಯೂ ಸ್ವತಂತ್ರ ಗತಿಯಿರುಉತ್ತದೆ.ಆಕಾಶವೆಂಬ ಹೆಸರಿನಿಂದ ಪ್ರಸಿದ್ಧವಾದ ಬ್ರಹ್ಮವು ನಾನಾ ರೂಪಗಳನ್ನು ವಿಂಗಡಿಸುತ್ತದೆ.ನಾಮರೂಪಗಳು ಯಾವುದರಲ್ಲಿ ಇವೆಯೊ ಅದು ಬ್ರಹ್ಮವು.ಅದು ಅಮೃತವು. ಅದು ಆತ್ಮನು.

ಗುರುವಿನ ಶುಶ್ರೂಷಾದಿಗಳನ್ನು ಮಾಡಿ ಉಳಿದಕಾಲದಲ್ಲಿ ನಿಯಮಾನುಸಾರವಾಗಿ ವೇದವನ್ನು ಅಧ್ಯಯನ ಮುಗಿಸಿಕೊಂಡು ಗುರುಗೃಹದಿಂದ ಸಮಾವತ೯ನ ಮಾಡಿ ಕುಟುಂಬದಲ್ಲಿ ನಿಂತು ಪವಿತ್ರಸ್ಥಳದಲ್ಲಿ ಸ್ವಾಧ್ಯಾಯ ಮಾಡುತ್ತಾ ಶಿಷ್ಯರನ್ನು ಪುತ್ರರನ್ನು ಧಾರ್ಮಿಕರನ್ನಾಗಿ ಮಾಡುತ್ತಾ,ಆತ್ಮನಲ್ಲಿ ಸವೇ೯ಂದ್ರಿಯಗಳನ್ನು ಉಪಸಂಹರಿಸಿಕೊಂಡು ಬದುಕಿರುವವರೆಗೂ ಹೀಗೆ ಆಚರಿಸುತ್ತಿದ್ದರ  ಅವನು ಬ್ರಹ್ಮ ಲೋಕವನ್ನು ಹೊಂದುತ್ತಾನೆ.ಹಿಂತಿರುಗುವುದಿಲ್ಲ. ಖಂಡಿತವಾಗಿ ಹಿಂತಿರುಗುವದಿಲ್ಲ.

ಉಪಾಸನೆಗಳು  ಚಿತ್ತಶುದ್ಧಿಯನ್ನುಂಟು ಮಾಡಿ ವಸ್ತುತತ್ವವನ್ನು ತೋರಿಸಿಕೊಡುವುದರಿಂದ ಅದ್ವೈತ ಜ್ಞಾನಕ್ಕೆ ಅನುಕೂಲವಾಗುತ್ತದೆ11. ನಾಮ, ವಾಕ್ಕು, ಮನಸ್ಸು, ಸಂಕಲ್ಪ, ಚಿತ್ತ, ಧ್ಯಾನ, ವಿಜ್ಞಾನ, ಅನ್ನ, ಅಪ್ಪು, ತೇಜಸ್ಸು,ಆಕಾಶ,ಸ್ಮøತಿ,ಆಶೆ,ಪ್ರಾಣತತ್ವಗಳನ್ನು ಬ್ರಹ್ಮವೆಂದು ಉಪಾಸಿಸಬೇಕು.ಭೂಮವನ್ನೇ ಅರಿತುಕೊಳ್ಳಬೇಕು12.

ಛಾಂದೋಗ್ಯ ಉಪನಿಷತ್ತಿನಲ್ಲಿ ಬರುವ ಮುಖ್ಯ ಉಪಾಸನೆಗಳು:

ಮೊದಲನೇ ಅಧ್ಯಾಯ

1)ಉದ್ಗೀಥ ಉಪಾಸನೆ

2)ಪ್ರಸ್ತಾವ_ಉದ್ಗೀಥ_ಪ್ರತೀಹಾರಗಳ ಉಪಾಸನೆ.

3)ಶೌವ ಉದ್ಗೀಥ

4)ಸ್ತೋಭಾಕ್ಷರಗಳ ಉಪಾಸನೆ

ಎರಡನೇ ಅಧ್ಯಾಯ:ಸಾಮೋಪಾಸನೆ

ಪಂಚವಿಧಸಾಮ

1) ಲೋಕದೃಷ್ಟಿ

2)ದೃಷ್ಟಿದೃಷ್ಟಿ

3)ಜಲದೃಷ್ಟಿ

4)ಋತದೃಷ್ಟಿ

5)ಪಶುದೃಷ್ಟಿ

6)ಪ್ರಾಣದೃಷ್ಟಿ

7)ವಾಕ್ ದೃಷ್ಟಿ

ಸಪ್ತವಿಧಸಾಮ:

0)ವಾಕ್ದøಷ್ಟಿ,ಆದಿತ್ಯದೃಷ್ಟಿ,ಆತ್ಮಸವಿತತ್ವ_ಅತಿಮೃತ್ಯುದ್ರೃಷ್ಟಿ.

2)ಗಾಯತ್ರಿ ಸಾಮದ ಉಪಾಸನೆ

3)ರಥಂತರ ಸಾಮದ ಉಪಾಸನೆ

4)ವಾಮದೇವ ಸಾಮದ ಉಪಾಸನೆ

5)ಬೃಹತ್ ಸಾಮದ ಉಪಾಸನೆ

6) ವೈರೂಪಸಾಮ

7)ವೈರಾಜ ಸಾಮ

8)ಶಕ್ವರೀ ಸಾಮ

೯)ರೇವತೀಸಾಮ

10)ಯಜ್ಞಾ ಯಜ್ಞೀಯಸಾಮ

11)ರಾಜನ ಸಾಮ

12)ಸವ೯ವಿಷಯಸಾಮ

13 ಷೋಡಶಕಲ ವಿದ್ಯೆಗಾನ ಪ್ರಭೇದದ ಉಪದೇಶ

14)ಆಶ್ರಮತ್ರಯ ಮತ್ತು ಓಂಕಾರೋಪಾಸನೆ

15)ಪ್ರಾತಃ ಸವನಾದಿಗಳುಮತ್ತು ಅವುಗಳ ಫಲ.

ಮೂರನೆಯ ಅದ್ಯಾಯ:

1)ಮಧುವಿದ್ಯೆ

2)ಗಾಯತ್ರಿ ಬ್ರಹ್ಮೋಪಾಸನೆ.

3)ಶಾಂಡಿಲ್ಯ ವಿದ್ಯೆ

4)ಕೋಶೋಪಾಸನೆ

5)ಪುರುಷವಿದ್ಯೆ

6)ಮನ ಆಕಾಶಾದಿಗಳಲ್ಲಿ ಬ್ರಹ್ಮ ದೃಷ್ಟಿ

7)ಆದಿತ್ಯನಲ್ಲಿ ಬ್ರಹ್ಮದೃಷ್ಟಿ

ನಾಲ್ಕನೆಯ ಅಧ್ಯಾಯ:

1)ಸಂವಗ೯ವಿದ್ಯೆ(ಜಾನಶ್ರುತಿ ರೈಕ್ವರ ಉಪಾಖ್ಯಾನ)

2)ಷೋಡಶಕಲ ವಿದ್ಯೆ

3)ಉಪಕೋಸಲ ವಿದ್ಯೆ

4)ಅಕ್ಷಿ ಪುರುಷ ವಿದ್ಯೆ

ಐದನೆಯ ಅಧ್ಯಾಯ:

1) ಪ್ರಾಣ ವಿದ್ಯೆ(ಪ್ರಾಣವೇ ಜ್ಯೇಷ್ಠಮತ್ತು ಶ್ರೇಷ್ಠ)

2)ಪಂಚಾಗ್ನಿ ವಿದ್ಯೆ_ದ್ಯುಲೋಕ,ಪಜ೯ನ್ಯ,ಪೃಥ್ವಿ,ಪುರುಷ,ಸ್ರ್ತೀ ಇವುಗಳಲ್ಲಿ ಅಗ್ನಿ ದೃಷ್ಟಿ

3)ವೈಶ್ವಾನರ ವಿದ್ಯೆ:ದ್ಯುಲೋಕವು ತಲೆ,ಆದಿತ್ಯ ಕಣ್ಣು,ವಾಯು ಪ್ರಾಣ,ಆಕಾಶ ನಡುಮೈ

ನೀರು ಮೂತ್ರಾಶಯ,ಪೃಥ್ವಿಯು ಪಾದ

4) ಸಮಸ್ತ ವೈಶ್ವಾನರ ಉಪಾಸನೆ.

5)ಪ್ರಾಣಾಗ್ನಿಹೋತ್ರ_ಐದು ಆಹುತಿಗಳು:ಪ್ರಾಣಾಯ ಸ್ವಾಃ

ಅಪಾನಾಯ ಸ್ವಾಃ

ವ್ಯಾನಾಯ ಸ್ವಾಃ

ಉದಾನಾಯ ಸ್ವಾಃ

ಸಮಾನಾಯ ಸ್ವಾಃ

ಬ್ರಹ್ಮಣೇಸ್ವಾಃ

ಸತ್ ಕಮ೯ಗಳು ಚಿತ್ತಶುದ್ಧಿಯನ್ನುಂಟು ಮಾಡಿ ಬ್ರಹ್ಮಜ್ಞಾನಕ್ಕೆ ಅನುಕೂಲವನ್ನುಂಟು ಮಾಡುಂiÀತ್ತವೆ.

ಆರು ಏಳು, ಎಂಟನೆಯ ಅಧ್ಯಾಯಗಳಲ್ಲಿ ಬ್ರಹ್ಮಜ್ಞಾನವನ್ನು ಹೇಳಿದೆ.ಯಜ್ಞಾದಿ ಕಮ೯ಗಳಿಂದ ಯಾವಪ್ರಯೋಜನವೂ ಇಲ್ಲವೆಂದು ಸಂದೇಹಪಡಬಾರದು. ನಿಷ್ಕಾಮ ಕಮ೯ಗಳು ವಿಶಿಷ್ಟ ಫಲಗಳನ್ನು ಕೊಡುತ್ತವೆ.

ಆರನೆಯ ಅಧ್ಯಾಯ:

ಮೊದಲನೆಯ ಬ್ರಾಹ್ಮಣದಲ್ಲಿ ಪ್ರಾಣಸಂವಾದವನ್ನು ಹೇಳಿದೆ.ಪ್ರಾಣವೇ ಜ್ಯೇಷ್ಠ ಮತ್ತು ಶ್ರೇಷ್ಠ.

ಎರಡನೆಯ ಬ್ರಾಹ್ಮಣದಲ್ಲಿ ಪಂಚಾಗ್ನಿ ವಿದ್ಯೆ ಮತ್ತು ದೇವಯಾನವನ್ನು ಹೇಳಿದೆ.ಪಂಚಾಗ್ನಿಗಳು1)ದ್ಯುಲೋಕ2)ಪಜ೯ನ್ಯ(ಸೋಮ)3)ಈ ಲೋಕ (ಮಳೆ) 4)ಪುರುಷ (ಅನ್ನ) 

5) ಸ್ರ್ತೀ (ರೇತಸ್ಸು). ಈ ಅಗ್ನಿಯಲ್ಲಿ ದೇವತೆಗಳು ಹೋಮಮಾಡುತ್ತಾರೆ ಐದನೆಯ ಆಹುತಿಯಲ್ಲಿ ನೀರೇ ಪುರುಷ ವಾಕ್ಕಾಗಿ ಎದ್ದು ನಿಲ್ಲುತ್ತದೆ.ಮೂರನೆಯ ಬ್ರ್ರ್ರಾಹ್ಮಣದಲ್ಲಿ ಜ್ಞಾನವು ಮತ್ತೊಂದು ಸಾಮಗ್ರಿಯನ್ನು ಬಯಸದೆಸ್ವತಂತ್ರವಾಗಿರುತ್ತದೆ.ಆದರೆ ಕಮ೯ವು ದೈವ,ಮನುಷ್ಯ ವಿತ್ತಗಳನ್ನು ಅವಲಂಬಿಸಿರುತ್ತದೆ. ಈ ಅಧ್ಯಾಯದಲ್ಲಿ ಬ್ರಹ್ಮವಿದ್ಯೆಗೆ ಸಂಬಂಧಪಟ್ಟ ನೇರವಾದ ವಿಷಯಗಳಿಲ್ಲ.ನಾಲ್ಕನೆಯ ಬ್ರಾಹ್ಮಣದಲ್ಲಿ ಶ್ರೀಮಂಥ ಕಮ೯ವನ್ನು ಹೇಳಿದೆ.ಐದನೆಯ ಬ್ರಾಹ್ಮಣದಲ್ಲಿ ಆಚಾಯ೯ ಪರಂಪರೆಯನ್ನುಹೇಳಿದೆ.

  ಬೃಹದಾರಣ್ಯಕ ಉಪನಿಷತ್ತು ಹಾಗೂ ಅದ್ವೈತ

ಶಾಂತಿ ಪಾಠ

ಹರಿಃ ಓಂ

ಪೂಣ೯ಮದಃ ಪೂಣ೯ಮಿದಂ

ಪೂಣಾ೯ತ್ ಪೂಣ೯ಮುದಚ್ಯತೇ|

ಪೂಣ೯ಸ್ಯ ಪೂಣ೯ಮಾದಾಯ

ಪೂಣ೯ಮೇವಾವಶಿಷ್ಯತೇ|

ಓ ಶಾಂತಿಃ ಶಾಂತಿಃ

ಹರಿಃ ಓಂ

ಅದು (ಪರಬ್ರಹ್ಮವು) ಪೂಣ೯ವು.ಇದು (ವ್ಯಕ್ತವಾದ ಜಗತ್ತು) ಪೂಣ೯ವು; ಪೂಣ೯ದಿಂದ(ಪರಬ್ರಹ್ಮವು) ಪೂಣ೯ವು (ಜಗತ್ತು)ಹೊರಟು ಬಂದಿದೆ;ಪೂಣ೯ದ(ಜಗತ್ತಿನ) ಪೂಣ೯ತ್ವ (ಬ್ರಹ್ಮತ್ವ)ವನ್ನು ತೆಗೆದಮೇಲೆ(ಗ್ರಹಿಸಿದ ಮೇಲೆ) ಪೂಣ೯ವೇ ಉಳಿಯುತ್ತದೆ.

ಓಂ ಶಾಂತಿಃ ಶಾಂತಿಃ ಶಾಂತಿಃ

ಪೀಠಿಕೆ:

     ಬೃಹದಾರಣ್ಯಕೋಪನಿಷತ್ತು ಗಾತ್ರದಿಂದಲೂ ವಿಷಯ ಸಮೃದ್ಧಿಯಿಂದಲೂ ಅತ್ಯಂತ ಬೃಹತ್ತಾಗಿದೆ. ಈ ಉಪನಿಷತ್ತು ಶುಕ್ಲ ಯಜುವೇ೯ದದ ಶತಪಥಬ್ರಾಹ್ಮಣಕ್ಕೆ ಸೇರಿದೆ. ಶತಪಥಬ್ರಾಹ್ಮಣವು ಕಾಣ್ವ, ಮಾಧ್ಯಂದಿನ, ಎಂಬ ಎರಡು ಶಾಖೆಗಳಾಗಿ ಒಡೆದಿವೆ.ಶ್ರೀ ಶಂಕರರು ಕಾಣ್ವ ಶಾಖೆಯನ್ನು ಅನುಸರಿಸಿ ತಮ್ಮ ಬೃಹತ್ ಭಾಷ್ಯವನ್ನು ರಚಿಸಿರುತ್ತಾರೆ. ಸೂತ್ರ ಭಾಷ್ಯಾದಿಗಳಲ್ಲಿ ಮಾಧ್ಯಂದಿನ ಶಾಖೆಯನ್ನು ಅನುಸರಿಸಿರುತ್ತಾರೆ. ಇಲ್ಲಿ ಕಾಣ್ವ ಪಾಠವನ್ನೇ ಅನುಸರಿಸಲಾಗಿದೆ. ಬೃಹದಾರಣ್ಯಕೋಪನಿಷತ್ತಿನ ಅಧ್ಯಾಯಗಳು ನಲವತ್ತೇಳು (47) ಖಂಡಗಳಾಗಿ ವಿಭಜಿಸಲ್ಪಟ್ಟಿವೆ.ಇವುಗಳನ್ನು ಬ್ರಾಹ್ಮಣಗಳೆಂದು ಕರೆಯುತ್ತಾರೆ. 

ಈ ಉಪನಿಷತ್ತುಗಳನ್ನು ಇನ್ನೊಂದು ಬಗೆಯಾಗಿಯೂ ವಿಭಜಿಸಬಹುದು. ಮಧುಕಾಂಡ, ಯಾಜ್ಞವಲ್ಕೀಯಕಾಂಡ (ಮುನಿಕಾಂಡ) ಮತ್ತು ಖಿಲಕಾಂಡ. ಈ ಮೂರು ಕಾಂಡಗಳು ಉಪದೇಶ, ಉಪಪತ್ತಿ. ಉಪಾಸನೆಗಳನ್ನು ನಿರೂಪಿಸುತ್ತವೆ. ಮೊದಲನೆಯ ಎರಡು ಅಧ್ಯಾಯಗಳು ಬಹುದೇವತೋಪಾಸನೆಯನ್ನು ಮೀರಿದ ಆತ್ಮತತ್ವವನ್ನು ಪ್ರತಿಪಾದಿಸುತ್ತವೆ. ಮೂರನೆಯ ಮತ್ತು ನಾಲ್ಕನೆಯ ಅಧ್ಯಾಯಗಳು ಈ ಉಪನಿಷತ್ತಿನ ಸಾರವನ್ನು ಒಳಗೊಂಡಿವೆ. ಯಾಜ್ಞವಲ್ಕ್ಯನು ಈ ಅಧ್ಯಾಯಗಳಲ್ಲಿ ಆತ್ಮ_ಬ್ರಹ್ಮತತ್ವವನ್ನು ಅತ್ಯಂತ ವಿಸ್ತಾರವಾಗಿಯೂ ಸೂಕ್ಷ್ಮವಾಗಿಯೂ ವಿವರಿಸುತ್ತಾನೆ.ಕೊನೆಯ ಎರಡು ಅಧ್ಯಾಯಗಳಲ್ಲಿ ಕೆಲವು ಉಪಾಸನೆಗಳನ್ನೂ ಉತ್ಕ್ರಾಂತಿಯ ಕ್ರಮವನ್ನೂ ಹೇಳಿದೆ.

ಮೊದಲನೆಯ ಅಧ್ಯಾಯ:

         ಮೊದಲನೆಯ ಅಧ್ಯಾಯಕ್ಕೆ ಅಶ್ವಬ್ರಾಹ್ಮಣವೆಂದು ಹೆಸರು.ಇದು ಯಜ್ಞಕ್ಕೆ ಅಹ೯ವಾದ ಕುದುರೆಯ ಶರೀರವನ್ನು ಅಶ್ವಮೇಧ ಯಜ್ಞದ ಪ್ರಜಾಪತಿಯ ವಿರಾಡ್ರೂಪವಾಗಿ ವಣಿ೯ಸುತ್ತದೆ. ಎರಡನೆಯ ಅಧ್ಯಾಯಕ್ಕೆ ಅಗ್ನಿಬ್ರಾಹ್ಮಣವೆಂದು ಹೆಸರು.ಮೃತ್ಯುವೇ ಹಿರಣ್ಯಗಭ೯ ಅಥವಾ ಪ್ರಜಾಪತಿ. ಅಶ್ವದಂತೆ ಈ ಅಗ್ನಿಯನ್ನು ಪ್ರಜಾಪತಿಯಾಗಿ ಅಥವಾ ಪ್ರಥಮ ಶರೀರಿಯಾದ ವಿರಾಟ್ ಪುರುಷನಾಗಿ ಉಪಾಸಿಸಬೇಕು. ಪುನಮ೯ರಣವನ್ನು ಹೊಂದದಿರುವುದೇ ಈ ಉಪಾಸನೆಯ ಫಲ.ಮೂರನೆಯ ಖಂಡಕ್ಕೆ ಉದ್ಗೀಥ ಬ್ರಾಹ್ಮಣವೆಂದು ಹೆಸರು. ವೇದೋಕ್ತವಾದ ಉಪಾಸನಾ ಕಮ೯ಗಳ ಫಲವೆಲ್ಲ ಸಂಸಾರ ವಿಷಯವೆಂಬುದು, ಕೇವಲ ಬ್ರಹ್ಮವಿದ್ಯೆಯು ಮೋಕ್ಷಕ್ಕೆ ಕಾರಣ ಎಂಬುದು ಸಿದ್ಧಾಂತ. ಪ್ರಾಣವೇ ವಿರಾಟ್ ರೂಪದಲ್ಲಿ ಪ್ರಜಾಪತಿಯಾಗಿದೆ. ನಾಲ್ಕನೆಯದು ಪುರುಷವಿಧ ಬ್ರಾಹ್ಮಣ.ಪುರುಷಾಧ೯ಕ್ಕೆ ಮನುವೆಂದೂ ಸ್ತ್ರೀ ಅಧ೯ಕ್ಕೆ ಶತರೂಪೆಯೆಂದೂ ಹೆಸರು.ಇವರ ಸಂಯೋಗದಿಂದ ಮನುಷ್ಯರು ಹುಟ್ಟಿದರು.ಇವರಿಬ್ಬರೂ ಬೇರೆ ಬೇರೆ ವಗ೯ದ ಸ್ತ್ರೀ ಪುರುಷರಾಗಿ ಇರುವುವೆಂದು ಸಮಸ್ತಪಾಣಿಗಳನ್ನು ಸೃಷ್ಟಿಸಿದರು.

ಆತ್ಮನನ್ನೇ ಉಪಾಸಿಸಬೇಕು. ಆತ್ಮನನ್ನೇ ಪ್ರಿಯವೆಂದು ಅರಿಯುವವನ ಪ್ರಿಯವಸ್ತುವು ನಾಶವಾಗುವುದಿಲ್ಲ1. ಸೃಷ್ಟಿಗೆ ಮೊದಲು ಅವ್ಯಾಕೃತವಾಗಿದ್ದ ಜಗತ್ತು ನಾಮರೂಪಗಳಿಂದ ವ್ಯಾಕೃತವಾಯಿತು. ಅನಂತರ ಆತ್ಮನು ಕತ್ತಿಯು ಕೋಶದಲ್ಲಿರುವಂತೆ ಸಮಸ್ತ ಶರೀರಗಳನ್ನು ಪ್ರವೇಶಿಸಿಇರುತ್ತಾನೆ. ಅವನು ಪ್ರಾಣನ ಕ್ರಿಯೆಯನ್ನು ಮಾಡುವಾಗ ಪ್ರಾಣನೆಂದೂ, ಮಾತಾಡುವಾಗ ವಾಕ್ಕೆಂದೂ, ನೋಡುವಾಗ ಕಣ್ಣೆಂದೂ, ಕೇಳುವಾಗ ಶ್ರೋತ್ರವೆಂದೂ , ಮನನ ಮಾಡುವಾಗ ಮನಸ್ಸೆಂದೂ ಕರೆಯಲ್ಪಡುತ್ತಾನೆ. ಇವೆಲ್ಲವೂ ಕಮ೯ ವಿಶೇಷದಿಂದ ಬಂದಿರುವ ಹೆಸರುಗಳು.ಆತ್ಮನು ಉಪಾಧಿಗಳಿಂದ ಕತೃ೯ವಾಗಿ ಭೋಕ್ತøವಾಗಿ ಕಾಣುತ್ತಾನೆ.ಅವಿದ್ಯಾ ನಾಶವೇ ಮುಕ್ತಿ.

ಆದರೆ ಆತ್ಮಜ್ಞಾನವು ಹೊಸದಾಗಿ ಉಂಟಾಗತಕ್ಕ ಕ್ರಿಯೆಯಲ್ಲ.ಅದು ಸಾಕ್ಷಾದಪರೋಕ್ಷವಾಗಿರುವ ಅರಿವು.ಕಾಲವೂ ಕೂಡ ಅವಿದ್ಯೆಯ ಒಂದು ಕಾಯ೯ವಾಗಿದೆ.ಋಷಿ ವಾಮದೇವನು ಜೀವಾತ್ಮವನ್ನು ಪರಮಾತ್ಮನೆಂದು ಅರಿತುಕೊಂಡು'ನಾನು ಮನು ಮತ್ತು ಸೂಯ೯'ಎಂದು ಸಾರಿ ಹೇಳಿದನು.

ದೇವತೆಗಳ ವಗೀ೯ಕರಣ:

1) ಅಗ್ನಿ_ಬ್ರಾಹ್ಮಣ

2) ಇಂದ್ರ,ವರುಣ,ಯಮ,ಈಶಾನ,ಇವರು ಕ್ಷತ್ರಿಯರು.

3) ವಸುಗಳು,ರುದ್ರರು,ಆದಿತ್ಯರು,_ವೈಶ್ಯರು.

4) ಪೂಷನ್_ಶೂದ್ರನು.

ಈ ನಾಲ್ಕು ದೇವಜಾತಿಗಳಿಂದ ನಾಲ್ಕು ಮನುಷ್ಯ ಜಾತಿಗಳು ಹುಟ್ಟಿದವು.ಅಜ್ಞಾನಿಯು ಯಾವ ಜಾತಿಯಲ್ಲಾದರೂ ಹುಟ್ಟಿರಲಿ ದೇವತೆಗಳಿಂದ ಆರಂಭಿಸಿ ಇರುವೆಯವರೆಗೆ ಎಲ್ಲರಿಗೂ ಭೋಗ್ಯನಾಗುತ್ತಾನೆ.ಆತ್ಮೋಪಾಸನೆಯೊಂದೇ ಮನುಷ್ಯನನ್ನು ಕಾಪಾಡಬಲ್ಲದು2.ಯಾವನು ಆತ್ಮನೆಂಬ ಸ್ವರೂಪವನ್ನು ಅರಿತುಕೊಳ್ಳದೆ ಈ ಲೋಕವನ್ನು ಬಿಡುವನೋ ಅವನಿಗೂ ಮಹಾನಷ್ಟವಾಗುವುದು.

ಐದನೆಯ ಖಂಡಕ್ಕೆಸಪ್ತಾನ್ನ ಬ್ರಾಹ್ಮಣವೆಂದು ಹೆಸರು.ಅನ್ನವನ್ನು ಏಳು ಭಾಗಗಳಾಗಿ ವಿಂಗಡಿಸಲಾಗಿದೆ.

1)ಸಾಮಾನ್ಯ ಅನ್ನ

2)ಹುತ_ಪ್ರಹುತ ದೇವತೆಗಳ ಅನ್ನ

3)ಹಾಲು ಪಶುಗಳ ಅನ್ನ

4) ವಾಕ್ ,ಪ್ರಾಣ,ಮನಸ್ಸು_ಪ್ರಜಾಪತಿಯ ಅನ್ನ ವಾಕ್, ಪ್ರಾಣ ಮನಸ್ಸು ಇಡೀ ಜಗತ್ತನ್ನು ವ್ಯಾಪಿಸಿಕೊಂಡಿವೆ. ಪುರುಷನು"ಸವ೯ಪ್ರಾಣಿಗಳಲ್ಲಿರುವ ವಾಕ್ಕೇ ಮೊದಲಾದವು ನನ್ನ ಸ್ವರೂಪವೇ ಆಗಿರುತ್ತದೆ. ನಾನು ಎಲ್ಲವನ್ನೂ ಪರಿಸ್ಪಂದಿಸುವ ಪ್ರಾಣಾತ್ಮನು"ಎಂದು ಪ್ರಾಣೋಪಾಸನೆಯನ್ನು ಮಾಡಬೇಕು.

ವ್ಯಾಕೃತ_ಅವ್ಯಾಕೃತ ಜಗತ್ತೆಲ್ಲವೂ ನಾಮ, ರೂಪ, ಕಮ೯ಎಂಬ ಮೂರೇ ಆಗಿದೆ.ನಾಮ,ರೂಪ,ಕಮ೯ಗಳೆಂಬ ಅನಾತ್ಮದಿಂದ ಯಾರ ಮನಸ್ಸು ಹಿಂದಿರುಗದಿರುವುದೋ ಅವನಿಗೆ ಆತ್ಮಲೋಕದಲ್ಲಿ ಆಸಕ್ತಿ ಇರುವುದಿಲ್ಲ. ಬಾಹ್ಯ ಪ್ರವೃತ್ತಿಗೂ ಪ್ರತ್ಯಗಾತ್ಮ ಪ್ರವೃತ್ತಿಗೂ ಅತ್ಯಂತ ವಿರೋಧವಿದೆ.

ಎರಡನೇ ಅಧ್ಯಾಯದಲ್ಲಿ ಆರು ಬ್ರಾಹ್ಮಣಗಳಿವೆ:

ಮೊದಲನೆಯ ಬ್ರಾಹ್ಮಣವು ಗಾಗ್ಯ೯_ಅಜಾತಶತ್ರುಗಳ ಸಂವಾದ ರೂಪದಲ್ಲಿದೆ.ಗಾಗ್ಯ೯ನು ಅವಿದ್ಯಾ ವಿಷಯಕವಾದ ಸೋಪಾಧಿಕ ಬ್ರಹ್ಮವನ್ನು ಮಾತ್ರ ಅರಿತಿದ್ದನು. ಎಂದರೆ ಆದಿತ್ಯ,ಚಂದ್ರ ವಿದ್ಯುತ್ತು, ಆಕಾಶ, ವಾಯು, ಅಗ್ನಿ, ನೀರು ಕನ್ನಡಿ, ಹೆಜ್ಜೆಯ ಶಬ್ದ, ದಿಕ್ಕುಗಳು,ಕತ್ತಲೆಯ ಗಭ೯,ಇವುಗಳಲ್ಲಿರುವ ಪುರಷನನ್ನೇ ಬ್ರಹ್ಮವೆಂದು ಅರಿತಿದ್ದನು. ಆದರೆ ನಿರುಪಾಧಿಕವಾದ ಆತ್ಮತತ್ವವನ್ನು ಅಜಾತ ಶತ್ರುವು ಒಪ್ಪಿಕೊಂಡಿದ್ದನು.ಅಗ್ನಿಯಿಂದ ಸಣ್ಣ ಕಿಡಿಗಳು ಹಾರುವಂತೆ ಪರಮಾತ್ಮನಿಂದ ಎಲ್ಲಾ ಪ್ರಾಣಿಗಳೂ,ಎಲ್ಲಾ ಲೋಕಗಳೂ,ಎಲ್ಲಾ ದೇವತೆಗಳೂ ಬರುತ್ತವೆ. ಜೀವನು ತನ್ನ ಪರಮಾತ್ಮ ಸ್ವರೂಪವನ್ನು ,"ನೀನು ಈ ಸ್ವರೂಪದವನಲ್ಲ,ಅಸಂಸಾರಿಯಾದ ಪರಬ್ರಹ್ಮನಾಗಿರುವೆ" ಎಂದು ಆಚಾಯ೯ನಿಂದ ಬೋಧಿತನಾಗಿ ಏಷಣಾತ್ರಯದ ಅನುವೃತ್ತಿಯನ್ನು ಬಿಟ್ಟು'ಬ್ರಹ್ಮೈವಾಸ್ಮಿ'ಎಂದು ಅರಿತುಕೊಳ್ಳುತ್ತಾನೆ.

 ಎರಡನೆಯ ಬ್ರಾಹ್ಮಣದಲ್ಲಿ ಪ್ರಾಣಗಳು ಸತ್ಯ.ಪರಮಾತ್ಮನು ಅವುಗಳ ಸತ್ಯ ಎಂದು ಹೇಳಿದೆ.'ಸತ್ಯದ ಸತ್ಯ'ಎಂಬುದು ಪರಮಾತ್ಮನ ರಹಸ್ಯನಾಮ. ಈ ಬ್ರಾಹ್ಮಣದಲ್ಲಿ ಆ ಪ್ರಾಣಗಳು ಯಾವುವು ಎಂಬುದನ್ನೂ, ಅವುಗಳ ರಹಸ್ಯ ನಾಮಗಳು ಯಾವುವೆಂಬುದನ್ನೂ ತಿಳಿಸಿದೆ.

ಮೂರನೆಯ ಬ್ರಾಹ್ಮಣದಲ್ಲಿ ಬ್ರಹ್ಮದ ಎರಡು ರೂಪಗಳನ್ನು ಹೇಳಿದೆ.ಒಂದು ರೂಪವು ಮೂತ೯, ಮತ್ಯ೯,ಪರಿಚ್ಛಿನ್ನರೂಪವುಳ್ಳದ್ದು.ಇನ್ನೊಂದು ರೂಪವು ಅಮೂತ೯,ಅಮೃತ,ಅಪರಿಚ್ಛಿನ್ನವೂ ಆಗಿದೆ.ಪೃಥ್ವಿ ಅಗ್ನಿ,ನೀರು ಮೂತ೯ರೂಪ.'ನೇತಿ ನೇತಿ' ಎಂಬ ಪದಗಳು ಮೂತಾ೯ಮೂತ೯ಗಳಲ್ಲದೆ ಸಮಸ್ತ ವಿಶೇಷಗಳನ್ನೂ  ನಿಷೇಧಿಸಿ ಬ್ರಹ್ಮದ ಸ್ವರೂಪವನ್ನು ನಿರೂಪಿಸುತ್ತದೆ.                             

ನಾಲ್ಕನೆಯ ಬ್ರಾಹ್ಮಣವು ಆತ್ಮಜ್ಞಾನಕ್ಕೆ ಅಂಗವಾಗಿ ಸನ್ಯಾಸವನ್ನು ವಿಧಿಸಲು ಒಂದು ಆಖ್ಯಾಯಿಕೆಯನ್ನು ಹೇಳುತ್ತದೆ. ಇದೇ ಯಾಜ್ಞವಲ್ಕ್ಯ_ಮೈತ್ರೇಯೀ ಸಂವಾದ. ಯಾಜ್ಞವಲ್ಕ್ಯನು ಧನಸಾಧ್ಯವಾದ ಅಗ್ನಿಹೋತ್ರಾದಿ ಕಮ೯ಗಳಿಂದ ಅಮೃತತ್ವದ ಆಸೆಯೇ ಇಲ್ಲವೆಂದು ಹೇಳುತ್ತಾನೆ. ಅಮೃತತ್ವಕ್ಕೆ ಆತ್ಮಜ್ಞಾನವೊಂದೇ ಮುಖ್ಯ ಸಾಧನವೆಂದು ಉಪದೇಶಿಸಿ ಆತ್ಮನ ವೈಭವವನ್ನು ವಿವರಿಸುತ್ತಾನೆ.ಪತಿ,ಪತ್ನಿ,ಮಕ್ಕಳು,ಬ್ರಾಹ್ಮಣ,ಕ್ಷತ್ರಿಯ,ಲೋಕಗಳು.ದೇವತೆಗಳು,ಪ್ರಾಣಿಗಳು ಎಲ್ಲವೂ ತಮ್ಮಪ್ರಯೋಜನಕ್ಕಾಗಿ ತಾವು ಪ್ರಿಯವಾಗಿಲ್ಲ. ಆತ್ಮನ ಪ್ರಯೋಜನಕ್ಕಾಗಿ ಪ್ರಿಯವಾಗಿರುತ್ತವೆ. ಆತ್ಮನನ್ನೇ ಶ್ರವಣ,ಮನನ,ನಿಧಿದ್ಯಾಸನಗಳಿಂದ ಸಾಕ್ಷಾತ್ಕರಿಸಬೇಕು3.

ದುಂದುಭಿ,ಶಂಖ,ವೀಣೆ ಇವುಗಳ ವಿಶೇಷ ಶಬ್ದಗಳನ್ನು ಶಬ್ದ ಸಾಮಾನ್ಯದಿಂದ ಭಿನ್ನವಾಗಿ ಗ್ರಹಿಸಲಾಗದಂತೆ ಯಾವ ವಿಶೇಷವನ್ನೂ ಪ್ರಜ್ಞಾನ ಘನವಾದ ಬ್ರಹ್ಮದಿಂದ ಭಿನ್ನವಾಗಿ ಅರಿತುಕೊಳ್ಳಲು ಸಾಧ್ಯವಿಲ್ಲ. ಪರಮಾಥ೯ದಲ್ಲಿ ವಿಶೇಷ ಜ್ಞಾನವಿರುವಂತೆ ಕಂಡುಬಂದರೆ ಅದಕ್ಕೆ ಉಪಾಧಿಯ ಸಂಬಂಧವೇ ಕಾರಣ. ಎಲ್ಲಿ ದ್ವೈತವಿರುವಂತೆ ತೋರುವುದೋ ಅಲ್ಲಿ ಮನುಷ್ಯನು ನೋಡುತ್ತಾನೆ,ಕೇಳುತ್ತಾನೆ,ಮಾತನಾಡುತ್ತಾನೆ. ಆದರೆ ಆತ್ಮಜ್ಞಾನಿಗೆ ಕರಣ ಕ್ರಿಯಾ ಕಾರಕಗಳಾಗಲೀ, ಜ್ಞಾನ, ಜ್ಞಾತೃ,ಜ್ಞೇಯಗಳಾಗಲಿ ಇರುವುದಿಲ್ಲ.

 ಐದನೆಯ ಬ್ರಾಹ್ಮಣದಲ್ಲಿ ಮೊದಲನೆಯ ಮತ್ತು ಎರಡನೆಯ ಅಧ್ಯಾಯಗಳ ಅಥ೯ವನ್ನು ಸಂಗ್ರಹಿಸಿ ಹೇಳಿದೆ. ಜಗತ್ತು ಆತ್ಮನಿಂದಲೇ ಹುಟ್ಟಿ ,ಆತ್ಮನನ್ನೇ ಹೊಂದಿ ಆತ್ಮನಲ್ಲಿಯೇ ಲಯವಾಗುತ್ತದೆ.ಹೇಗೆ ಅರೆಕಾಲುಗಳು ಚಕ್ರನಾಭಿಯಲ್ಲಿಮತ್ತು ಹೊರವಲಯದಲ್ಲಿ ನಿಲ್ಲಿಸಲ್ಪಟ್ಟಿವೆಯೋ ಹಾಗೆಯೇ ಪರಮಾತ್ಮನಲ್ಲಿ ಎಲ್ಲಾ ಪ್ರಾಣಿಗಳೂ,ಎಲ್ಲಾ ದೇವತೆಗಳೂ ಎಲ್ಲಾ ಲೋಕಗಳೂ ಎಲ್ಲಾ ಜೀವಾತ್ಮಗಳೂ ಸಮಪಿ೯ತರಾಗಿರುವರು.ಪರಮಾತ್ಮನು ಅದ್ವಯನಾಗಿದ್ದರೂ ಮಾಯೆಯಿಂದ ಬಹುರೂಪನಾಗಿ ಕಾಣುತ್ತಾನೆ.ಜೀವತತ್ವವೇ ಅಪವ೯ವೂ , ಅನಪರವೂ ಅನಂತರವೂ,ಅಬಾಹ್ಯವೂ,ಆದ ಬ್ರಹ್ಮವು ಎಂಬುದು ಈ ಪ್ರಕರಣದ ಮತ್ತು ಎಲ್ಲಾ ಉಪನಿಷತ್ತುಗಳ ತಾತ್ಪಯ೯.

ಆರನೆಯ ಬ್ರಾಹ್ಮಣದಲ್ಲಿ ಆಚಾಯ೯ ವಂಶವು ಹಿರಣ್ಯಗಭ೯ನಿಂದಲೇ ಆರಂಭವಾಗುತ್ತದೆ.ಇದಕ್ಕೆ ವಂಶ ಬ್ರಾಹ್ಮಣವೆಂದು ಹೆಸರು.

ಮೂರನೆಯ ಅಧ್ಯಾಯ

ಮಧುಕಾಂಡವು ಆಗಮ ಪ್ರಧಾನ.ಯಾಜ್ಞವಲ್ಕೀಯ ಕಾಂಡವು ಯುಕ್ತಿ ಪ್ರಧಾನ.ಮೂರನೆಯ ಅಧ್ಯಾಯಕ್ಕೆ ಒಂಬತ್ತು ಬ್ರಾಹ್ಮಣಗಳಿವೆ.ಮೊದಲನೆಯ ಬ್ರಾಹ್ಮಣದಲ್ಲಿ  ತಿಳಿದವರೊಂದಿಗೆ ವಾದಿಸುವುದು ಹಾಗೂ ಚಚಿ೯ಸುವುದು ಬ್ರಹ್ಮ ಪ್ರಾಪ್ತಿಗೆ ಉಪಾಯ ಎಂದು ಹೇಳುತ್ತದೆ. ಜನಕ ವೈದೇಹನು 'ಬಹುದಕ್ಷಿಣಾ' ಎಂಬ ಯಜ್ಞವನ್ನು ಮಾಡಿದನು. ಅಲ್ಲಿಗೆ ಕುರು ಪಾಂಚಾಲ ದೇಶಗಳ ಅನೇಕ ಬ್ರಾಹ್ಮಣರು ಬಂದಿದ್ದರು. ಅವರಲ್ಲಿ ಬ್ರಹ್ಮಿಷ್ಠನು ಯಾರೆಂದು ತಿಳಿಯುವ ಇಚ್ಛೆ ಜನಕನಿಗೆ ಉಂಟಾಯಿತು.ಅವನು ಒಂದು ಸಾವಿರ ಗೋವುಗಳನ್ನು ದೊಡ್ಡಿಯಲ್ಲಿ ನಿಲ್ಲಿಸಿ  ಪ್ರತಿಯೊಂದು ಗೋವಿನ ಕೊಂಬುಗಳಿಗೂ ಹತ್ತು ಹತ್ತು ಚಿನ್ನದ ನಾಣ್ಯಗಳನ್ನು ಕಟ್ಟಿಸಿದನು.ಅವುಗಳನ್ನೆಲ್ಲಾ ಬ್ರಹ್ಮಿಷ್ಠನಾದವನು ತೆಗೆದುಕೊಂಡು ಹೋಗಬಹುದೆಂದು ಹೇಳಿದನು. ಅಲ್ಲಿದ್ದ ಯಾಜ್ಞವಲ್ಕ್ಯನು ಗೋವುಗಳನ್ನು ಮನೆಗೆ ತೆಗೆದುಕೊಂಡು ಹೋಗಲು ಶಿಷ್ಯನಾದ ಸಾಮಶ್ರವನಿಗೆ ಹೇಳಿದನು.ಇದನ್ನು ನೋಡಿದ ಬ್ರಾಹ್ಮಣರೆಲ್ಲರೂ ಕೋಪಗೊಂಡು ಯಾಜ್ಞವಲ್ಕ್ಯನಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಸುರಿದರು.

ಮೊದಲನೆಯ ಬ್ರಾಹ್ಮಣದಲ್ಲಿ ಅಶ್ವಲನು ಯಾಜ್ಞವಲ್ಕ್ಯನಿಗೆ ಎರಡು ಪ್ರಶ್ನೆಗಳನ್ನು ಹಾಕಿದನು. ಅವುಗಳಿಗೆ ಯಾಜ್ಞವಲ್ಕ್ಯನು ಸಮಪ೯ಕವಾದ ಉತ್ತರಗಳನ್ನು ಕೊಟ್ಟನು .

ಎರಡನೆಯ ಬ್ರಾಹ್ಮಣದಲ್ಲಿ ಜಾರತ್ಕಾರವ ಆತ೯ಭಾಗನು ಯಾಜ್ಞವಲ್ಕ್ಯನಿಗೆ ಆರು ಪ್ರಶ್ನೆಗಳನ್ನು ಹಾಕಿದನು.ಆರನೆಯ ಪ್ರಶ್ನೆಯು ಸ್ವಾರಸ್ಯಕರವಾಗಿದೆ.ಸಮ್ಯಗ್ದಶಿ೯ಯಲ್ಲದ ಮನುಷ್ಯನು ಮೃತನಾದಮೇಲೆ ಎಲ್ಲಿಗೆ ಹೋಗುತ್ತಾನೆ?ಅನಂತರ ಅವರು ಚಚಿ೯ಸಿ 'ಕಮ೯'ವೊಂದೇ ಮನುಷ್ಯನ ಪುನಜ೯ನ್ಮಕ್ಕೆ ಮುಖ್ಯ ಕಾರಣವೆಂದು ತೀಮಾ೯ನಿಸುತ್ತಾರೆ4.ಮೂರನೆಯ ಬ್ರಾಹ್ಮಣದಲ್ಲಿ ಉಪಾಸನಾ ಸಹಿತವಾದ ಕಮ೯ವು ಮೋಕ್ಷಪ್ರದವಲ್ಲ ಎಂಬುದನ್ನು ತಿಳಿಸಿದೆ.ಈ ಬ್ರಾಹ್ಮಣಕ್ಕೆ ಭುಜ್ಯು ಬ್ರಾಹ್ಮಣ ಎಂದು ಹೆಸರು.

ನಾಲ್ಕನೆಯ ಬ್ರಾಹ್ಮಣಕ್ಕೆ 'ಉಷಸ್ತ'ಬ್ರಾಹ್ಮಣವೆಂದು ಹೆಸರು.ಸಾಕ್ಷಾತ್ ಅಪರೋಕ್ಷ ವಾಗಿರುವ ಬ್ರಹ್ಮವನ್ನು ಸರಿಯಾಗಿ ತಿಳಿಸಬೇಕೆಂದು ಉಷಸ್ತ ಚಾಕ್ರಾಯಣನು ಪ್ರಶ್ನಿಸುತ್ತಾನೆ.

ಯಾಜ್ಞವಲ್ಕ್ಯನು ಹೀಗೆ ಉvರಿಸುತ್ತಾನೆ."ಅದು ಪ್ರಾಣ ವ್ಯಾನಗಳ ಮೂಲಕ ಶರೀರದಲ್ಲಿ ಕೆಲಸ ಮಾಡುತ್ತದೆ.ಅದು ದ್ರಷ್ಟ್ರುವೂ ಮಂತೃವೂ,ಶ್ರೋತ್ರವೂ  ಜ್ಞಾತೃವೂ ಆಗಿರುವುದರಿಂದ ಅದನ್ನು ವಿಷಯ ವಸ್ತುವಿನಂತೆ ಸಾಕ್ಷಾತ್ತಾಗಿ ನೋಡಲು,ಕೇಳಲು,ಭಾವಿಸಲು ಅಥವಾ ಅರಿತು ಕೊಳ್ಳಲು ಸಾಧ್ಯವಿಲ್ಲ. 

ಐದನೆಯದು ಕಹೋಲ ಬ್ರಾಹ್ಮಣ. ಬಂಧನದಿಂದ ಮೋಕ್ಷ ಹೊಂದುವುದಕ್ಕೆ ಸಾಧನವಾದ ಆತ್ಮಜ್ಞಾನವನ್ನು ಇಲ್ಲಿ ಹೇಳಿದೆ. ಆತ್ಮನು ಹಸಿವು ಬಾಯಾರಿಕೆಗಳನ್ನು,ಶೋಕಮೋಹಗಳನ್ನು ಮುಪ್ಪು ಮರಣಗಳನ್ನು ದಾಟಿರುತ್ತಾನೆ. ಇಂಥ ಆತ್ಮನನ್ನು ಅರಿತುಕೊಳ್ಳಲು ಬ್ರಾಹ್ಮಣರು ಪುತ್ರ, ವಿತ್ತ, ಲೋಕಗಳಲ್ಲಿರುವ ಆಸೆಗಳನ್ನು ಬಿಟ್ಟು ಭಿಕ್ಷಾಚಯೆ೯ಯನ್ನು  ಮಾಡುತ್ತಾರೆ. ಬ್ರಹ್ಮಜ್ಞಾನಿಯು ಹೇಗೆ ಆಚರಿಸಿದರೂ ಬ್ರಹ್ಮಜ್ಞಾನಿಯೇ. ಬ್ರಹ್ಮನಿಷ್ಠೆಗೆ ನಾಶವಿಲ್ಲ.ಇದು ಯಾಜ್ಞವಲ್ಕ್ಯನ ಸಿದ್ಧಾಂತ.

ಆರನೆಯ ಬ್ರಾಹ್ಮಣವು 'ಗಾಗೀ೯ ಬ್ರಾಹ್ಮಣ'.ಪಂಚಭೂತಗಳು ಮತ್ತು ವಿವಿಧ ಲೋಕಗಳ ಸೂಕ್ಷ್ಮ ಸೂಕ್ಷ್ಮತರ ತಾರತಮ್ಯವನ್ನು ಗಾಗಿ೯ಯು ಪ್ರಶ್ನಿಸುತ್ತಾಳೆ. ಕೊನೆಗೆ ಬ್ರಹ್ಮಲೋಕವು ಯಾವುದರಿಂದ ವ್ಯಾಪ್ತವಾಗಿದೆ ಎಂದು ಕೇಳಲು, ಪ್ರಶ್ನೆಯ ವಿಷಯವನ್ನು ಮೀರಿದ ದೇವತೆಯನ್ನು ಕುರಿತು ಪ್ರಶ್ನೆಮಾಡಬಾರದೆಂದು ಯಾಜ್ಞವಲ್ಕ್ಯನು ಹೇಳುತ್ತಾನೆ. ಬ್ರಹ್ಮಸ್ವರೂಪವನ್ನು ಅನುಮಾನ ಪ್ರತ್ಯಕ್ಷದಿಂದ ಅರಿಯಲಾಗುವುದಿಲ್ಲ.ಶಾಸ್ತ್ರಾಚಾಯ೯ರಿಂದಲೇ ಅರಿತುಕೊಳ್ಳಬೇಕು.

ಏಳನೆಯದು ಅಂತಯಾ೯ಮೀ ಬ್ರಾಹ್ಮಣ.ಯಾವುದರಿಂದ ಇಹಪರಗಳು ಪೋಣಿಸಲ್ಪಟ್ಟಿವೆಯೊ ಆ ಸೂತ್ರವು ಯಾವುದು?ಯಾವನು ಒಳಗಿದ್ದುಕೊಂಡು ಇಹಪರಲೋಕಗಳನ್ನೂ ಸವ೯ಪ್ರಾಣಿಗಳನ್ನೂ  ನಿಯಮಿಸುವನೊ ಆ ಅಂತಯಾ೯ಮಿಯು ಯಾರು? ಇದು ಉದ್ಧಾಲಕ ಅರುಣಿಯ ಪ್ರಶ್ನೆ.ಯಾಜ್ಞವಲ್ಕ್ಯನ ಉತ್ತರ ಈರೀತಿ ಇದೆ.ವಾಯುವೇ ಆ ಸೂತ್ರವು.ಯಾವನು ಪೃಥ್ವಿ,ನೀರು,ಅಗ್ನಿ,ಅಂತರಿಕ್ಷ, ವಾಯು, ದ್ಯುಲೋಕ, ಆದಿತ್ಯ, ದಿಕ್ಕುಗಳು, ಚಂದ್ರ _ನಕ್ಷತ್ರಗಳು,ಆಕಾಶ,ತಮಸ್ಸು,ತೇಜಸ್ಸು,ಸವ೯ಪ್ರಾಣಿಗಳು, ವಾಗಾದಿ ಇಂದ್ರಿಯಗಳು, ಮನಸ್ಸು ಬುದ್ಧಿ, ರೇತಸ್ಸು ಇವುಗಳ ಒಳಗಿದ್ದುಕೊಂಡು ನಿಯಮಿಸುವನೊ ಅವನೇ ಅಂತಯಾ೯ಮಿಯು. ಈ ಭೂತ ಭೌತಿಕ ವಸ್ತುಗಳ ಒಳಗಿದ್ದುಕೊಂಡು ಒಳಗಿನಿಂದ ನಿಯಮಿಸುತ್ತಿದ್ದರೂ,  ಅವುಗಳ ಆತ್ಮನಾಗಿದ್ದರೂ ಇವನ ಶರೀರವಾದ ಈ ವಸ್ತುಗಳು ಇವನನ್ನು ಅರಿಯವು.

ಇವನು ಸಾಕ್ಷಿ ಆದರೆ ಇವನನ್ನು ನೋಡಲಾಗುವುದಿಲ್ಲ.ಇವನು ಶ್ರೋತೃ ಆದರೆ ಇವನನ್ನು ಕೇಳಲಾಗುವುದಿಲ್ಲ.ಇವನು ಜ್ಞಾತೃ ಇವನನ್ನು ಅರಿಯಲಾಗುವುದಿಲ್ಲ.ಇವನು ಮಂತೃ ಆದರೆ ಇವನು ಮನಸ್ಸಿಗೆ ವಿಷಯನಲ್ಲ.ಇವನಿಗಿಂತ ಬೇರೆಯಾದ ಸಾಕ್ಷಿಯಾಗಲೀ, ಶ್ರೋತೃವಾಗಲೀ, ಮಂತೃವಾಗಲೀ, ಜ್ಞಾತೃವಾಗಲೀ ಇಲ್ಲ.ಇವನೇ ಎಲ್ಲರ  ಅಮೃತನಾದ ಆತ್ಮನು.ಇವನಿಗಿಂತ ಭಿನ್ನವಾದುದೆಲ್ಲ ನಶ್ವರವು.

ಎಂಟನೆಯ  ಬ್ರಾಹ್ಮಣ: ಅಶನಾಯಾದಿಗಳಿಂದ ನಿಮು೯ಕ್ತವೂ,ಸಾಕ್ಷಾದಪರೋಕ್ಷವೂ,ಸವಾ೯ಂತರವೂ ಆದ ಆತ್ಮನನ್ನು ಉಪದೇಶಿಸಲು ಎಂಟನೆಯ ಬ್ರಾಹ್ಮಣವು ಬಂದಿದೆ.ವ್ಯಕ್ತವಾದ ಜಗತ್ತಿಗೆ ಸೂತ್ರವೆಂದು ಹೆಸರು.ಇದು ಅವ್ಯಕ್ತವಾದ ಆಕಾಶದಿಂದ ವ್ಯಾಪ್ತವಾಗಿದೆಯೆಂದು ಯಾಜ್ಞವಲ್ಕ್ಯನು ಹೇಳುತ್ತಾನೆ. ಅದನ್ನು ಅಕ್ಷರವೆಂದು ಹೇಳುತ್ತಾರೆ. ಅದು ಅಸ್ಥೂಲ, ಅನಣು, ಅಹೃಸ್ವ, ಅದೀಘ೯. ಅದಕ್ಕೆ ಇಂದ್ರಿಯಗಳಾಗಳೀ ಪ್ರಾಣಗಳಾಗಲೀ ಇಲ್ಲ. ಅದಕ್ಕೆ ಒಳಗಿಲ್ಲ,ಹೊರಗಿಲ್ಲ.ಅದು ಯಾವುದನ್ನೂ ತಿನ್ನುವುದಿಲ್ಲ.ಅದನ್ನು ಯಾವುದೂ ತಿನ್ನುವುದಿಲ್ಲ.ಈ ಅಕ್ಷರದ ಶಾಸನದಿಂದಲೇ ಸೂಯ೯ ಚಂದ್ರರು ತಮ್ಮ ತಮ್ಮ ಸ್ಥಾನಗಳಲ್ಲಿ

ನಿಲ್ಲಿಸಲ್ಪಟ್ಟಿರುತ್ತಾರೆ. ದ್ಯುಲೋಕ ಪೃಥ್ವಿಗಳೂ ನಿಮಿಷ ಮುಹೂತಾ೯ದಿ ಕಾಲದ ಅವಯವಗಳೂ ತಮ್ಮ ತಮ್ಮ ಸ್ಥಾನಗಳಲ್ಲಿ ನಿಲ್ಲಸಲ್ಪಟ್ಟಿರುತ್ತವೆ. ಈ ಅಕ್ಷರವನ್ನು ತಿಳಿದುಕೊಳ್ಳದೆ ಅನೇಕ ಸಹಸ್ರ ವಷ೯ಗಳವರೆಗೆ ಹೋಮ ಯಾಗ  ತಪಸ್ಸು ಮಾಡಿದರೂ ಅವುಗಳೆಲ್ಲ ನಶ್ವರವೇ ಆಗುವುದು. ಈ ಅಕ್ಷರವನ್ನು ತಿಳಿದುಕೊಳ್ಳದೆ ಈ ಲೋಕವನ್ನು ಬಿಡುವವನು ಕೃಪಣನು. ಆದರೆ ಈ ಅಕ್ಷರವನ್ನು ತಿಳಿದುಕೊಂಡು ಈ ಲೋಕವನ್ನು ಬಿಡುವವನು ಬ್ರಹ್ಮವಿದನು ಎಂದು ಯಾಜ್ಷವಲ್ಕ್ಯನು ಉಪದೇಶ ಮಾಡುತ್ತಾನೆ.

ಒಂಬತ್ತನೆಯದು ಶಾಕಲ್ಯ ಬ್ರಾಹ್ಮಣ.ದೇವತೆಗಳು ಅಸಂಖ್ಯಾತರಾಗಿದ್ದರೂ ಅವರೆಲ್ಲಾ ಒಂದೇ ದೇವತೆಯ ಎಂದರೆ ಹಿರಣ್ಯಗಭ೯ನ ಅಥವಾ ಪ್ರಾಣನ ವಿಭೂತಿಗಳು. ಹಿರಣ್ಯಗಭ೯ನು ಏಕನೂ ಅನಂತನೂ ಆಗಿದ್ದಾನೆ. ಇವನೇ ಒಂದೇ ದೇವತೆಯಾಗುತ್ತಾನೆ.ಅನಂತ ಸಂಖ್ಯಾತನಾಗಿ ವಿಸ್ತರಿಸುತ್ತಾನೆ. ಒಂದೇ ದೇವತೆಯಲ್ಲಿ ಉಂಟಾಗಿರುವ ನಾಮ ರೂಪ ಭೇದಕ್ಕೆ ಉಪಾಸಕರ ಭೇದವೇ ಕಾರಣ. ಯಾಜ್ಞವಲ್ಕ್ಯನು ಅಲ್ಲಿದ್ದ ಬ್ರಾಹ್ಮಣರನ್ನು ಹೀಗೆ ಪ್ರಶ್ನಿಸಿದನು. ಒಂದು ವೃಕ್ಷವನ್ನು ಬೇರುಸಹಿತ ಕಿತ್ತು ಹಾಕಿದರೆ ಅದು ಪುನಃ ಹುಟ್ಟುವುದಿಲ್ಲ. ಮನುಷ್ಯನು ಮೃತ್ಯುವಿನಿಂದ ಕತ್ತರಿಸಲ್ಪಟ್ಟಮೇಲೆ ಯಾವ ಬೇರಿನಿಂದ ಹುಟ್ಟುತ್ತಾನೆ.?ಕಮ೯ವೊಂದೇ ಮನುಷ್ಯನ ಪುನಜ೯ನ್ಮಕ್ಕೆ ಕಾರಣ ಎಂದು ತೀಮಾ೯ನಿಸುತ್ತಾರೆ.4 ಮೃತನಾದವನು ಯಾವುದರಿಂದ ಹುಟ್ಟುತ್ತಾನೆಯೋ ಆ ಜಗನ್ಮೂಲವು ಬ್ರಾಹ್ಮಣರಿಗೆ ತಿಳಿದಿರಲಿಲ್ಲ. ಯಾಜ್ಞವಲ್ಕ್ಯನೇ ಬ್ರಾಹ್ಮಣನೆಂದೂ ಇತರರೆಲ್ಲ ಸೋತರೆಂದೂ ತಿಳಿದು ಬರುತ್ತದೆ. ವಿಜ್ಞಾನವೂ ಆನಂದವೂ ಆದ ಮೂಲದಿಂದಲೇ ಮೃತನಾದ ಮನುಷ್ಯನು ಹುಟ್ಟುತ್ತಾನೆ. 

ನಾಲ್ಕನೆಯ ಅಧ್ಯಾಯದಲ್ಲಿ ಆರು ಬ್ರಾಹ್ಮಣಗಳಿವೆ. ಮೊದಲನೆಯ ಬ್ರಾಹ್ಮಣದಲ್ಲಿ ಜನಕ ವೈದೇಹನು  ಸಭೆಯಲ್ಲಿ ಕುಳಿತಿರುವಾಗ ಯಾಜ್ಞವಲ್ಕ್ಯನು ಬಂದು ಹಲವು ಪ್ರಶ್ನೆಗಳನ್ನು ಹಾಕುತ್ತಾನೆ.ಈ ಪ್ರಶ್ನೆಗಳಿಗೆ ಉತ್ತರವಾಗಿ ಜನಕನು ಹಿಂದೆ ಆರುಜನ ಆಚಾಯ೯ರಿಂದ ಅರಿತುಕೊಂಡ ಬ್ರಹ್ಮದ ಕೆಲವು ಲಕ್ಷಣಗಳನ್ನು ಹೇಳುತ್ತಾನೆ.ವಾಕ್ಕು, ಪ್ರಾಣ,ಮನಸ್ಸು,ಬುದ್ಧಿ,ಇವುಗಳ ಅಧಿಷ್ಠಾತೃ ದೇವತೆಗಳಾದ ಅಗ್ನಿ, ವಾಯು. ಆದಿತ್ಯ, ದಿಗ್ದೇವತೆ, ಚಂದ್ರ, ಪ್ರಜಾಪತಿ(ಹಿರಣ್ಯಗಭ೯) ಇವರನ್ನು ಒಬ್ಬೊಬ್ಬರನ್ನಾಗಿ ಬ್ರಹ್ಮವೆಂದು ಹೇಳುತ್ತಾನೆ.ಈ ಬ್ರಹ್ಮಗಳಿಗೆಲ್ಲ ಒಂದೇ ಕಾಲಿದೆ ಎಂದು ಯಾಜ್ಞವಲ್ಕ್ಯನು ತಿಳಿಸುತ್ತಾನೆ.

ಎರಡನೆಯ ಬ್ರಾಹ್ಮಣದಲ್ಲಿ ಅವಸ್ಠಾತ್ರಯ ವಿವೇಚನೆ ಮಾಡಲಾಗಿದೆ.

ಜಾಗ್ರತ_ವಿಶ್ವ_ _ಅಕಾರ

ಸ್ವಪ್ನ_ತೈಜಸ__ಉಕಾರ

ಸುಷುಪ್ತಿ_ಪ್ರಾಜ್ಞ__ಮಕಾರ

ಸವಾ೯ತ್ಮನಾದ ಪ್ರಾಜ್ಞನಲ್ಲಿ ಎಲ್ಲವನ್ನೂಲಯಗೊಳಿಸಿದ ಮೇಲೆ ಯಾವ ವಿಶೇಷವೂ ಉಳಿಯುವುದಿಲ್ಲ.ಇವನು ಅಗೃಹ್ಯನು,ಅಕ್ಷಯನು,ಅಸಂಗನು ಮತ್ತು ಬಂಧರಹಿತನು.

ಮೂರನೆಯ ಬ್ರಾಹ್ಮಣವು ಜ್ಯೋತಿ ಬ್ರಾಹ್ಮಣ.ಇದು ಅತ್ಯಂತ ದೊಡ್ಡದಾಗಿದೆ.ಸುರೇಶ್ವರಾಚಾಯ೯ರು ಇದರ ಮೇಲೆ 1೯75 ಶ್ಲೋಕಗಳನ್ನು ತಮ್ಮ ವಾತಿ೯ಕದಲ್ಲಿ ಬರೆದಿರುತ್ತಾರೆ.ಶರೀರೇಂದ್ರಿಯಗಳಿಂದ ಕೂಡಿದ ಮನುಷ್ಯನಿಗೆ ಜ್ಯೋತಿ ಯಾವುದೆಂದು ಜನಕನು ಯಾಜ್ಞವಲ್ಕ್ಯನನ್ನು ಪ್ರಶ್ನಿಸುತ್ತಾನೆ.ಆಗ ಯಾಜ್ಷವಲ್ಕ್ಯನು ಆದಿತ್ಯ, ಚಂದ್ರ, ಅಗ್ನಿ, ವಾಕ್ಕು,ಆತ್ಮ ಇವೇ ಜ್ಯೋೀತಿಗಳೆಂದು ಹೇಳುತ್ತಾನೆ. ಸತ್ವಗುಣವುಳ್ಳ ಬುದ್ಧಿಯು ಆತ್ಮನಿಗೆ ಅತ್ಯಂತ ಸಮೀಪದಲ್ಲಿರುವುದರಿಂದ ಆತ್ಮಚೈತನ್ಯವನ್ನು ಪ್ರತಿಬಿಂಬಿಸುತ್ತದೆ.ಜಡವಾಗಿರುವ ಬುದ್ಧಿಯು ಆತ್ಮನಿಂದ ಪ್ರಕಾಶಿಸುವಂತೆ ತೋರುತ್ತದೆ.ಪರಮಾಥ೯ತಃ ಆತ್ಮನು ಸ್ವಯಂಜ್ಯೋತಿಯು.ಇವನ ಜ್ಯೋತಿಯಿಂದಲೇ ಸೂಯ೯ ಚಂದ್ರರು ಪ್ರಕಾಶಿಸುತ್ತಾರೆ5.

ಸ್ವಪ್ನದಲ್ಲಿ ಆತ್ಮನು ತನ್ನ ಶರೀರವನ್ನು ಅಚೇತನಗೊಳಿಸಿ ಜಾಗ್ರತ ಅವಸ್ಥೆಯ ವಾಸನೆಗಳಿಂದ ಸ್ವಪ್ನ ಶರೀರವನ್ನು ನಿಮಿ೯ಸಿ ಕೊಳ್ಳುತ್ತಾನೆ.ಸಾಮಾನ್ಯವಾಗಿ ಸ್ವಪ್ನವು ಒಂದು ಹೊಸ ಅನುಭವವಲ್ಲ.ಅದು ಜಾಗ್ರತ ಅವಸ್ಥೆಯ ಅನುಭವವನ್ನು ಅವಲಂಬಿಸಿರುತ್ತದೆ.ಸ್ವಪ್ನದಲ್ಲಿ ನೋಡುವ ವಿಷಯಗಳೆಲ್ಲ ಅಲ್ಲೇ ನಿಮಿ೯ತವಾದವು.  ಸ್ವಪ್ನದಲ್ಲಿ ಆತ್ಮನು ಪುಣ್ಯ ಪಾಪಗಳ ಫಲವನ್ನು ಸುಮ್ಮನೆ ನೋಡುತ್ತಾನೆಯೇ ಹೊರತು ಸಾಕ್ಷಾತ್ತಾಗಿ ಅನುಭವಿಸುವುದಿಲ್ಲ.ಏಕೆಂದರೆ ಅವನು ಅಸಂಗನು.ಸುಷುಪ್ತಿಯಲ್ಲಿಪೂಣ೯ವಾಗಿ ಪ್ರಸನ್ನನಾಗಿರುತ್ತಾನೆ. ಆದುದರಿಂದ ಸುಷುಪ್ತಿಗೆ 'ಸಂಪ್ರಸಾದ'ವೆಂದು ಹೆಸರು. ಈ ಅವಸ್ಥೆಯಲ್ಲಿ ಎಲ್ಲಾ ಶೋಕಗಳನ್ನು ದಾಟಿರುತ್ತಾನೆ.ಎಂದು ಹೇಳಿದೆ.ಸುಷುಪ್ತಿಯಲ್ಲಿ ಅನುಭವಿಸಲ್ಪಟ್ಟ ಆನಂದವು ಮನುಷ್ಯರು, ಪಿತೃಗಳ, ಗಂಧವ೯ರ, ಕಮ೯ದೇವತೆಗಳ,ಅಜಾನದೇವತೆಗಳ,ಅಥವಾ ಹಿರಣ್ಯಗಭ೯ನ,ಆನಂದಗಳಿಗಿಂತ ಅತಿಶಯವಾಗಿರುತ್ತದೆ. ಇದೇ ಪರಮಾನಂದ,ಬ್ರಾಹ್ಮೀಸ್ಥಿತಿ.ಸುಷುಪ್ತಿಯಲ್ಲಿ ಅರಿವು ಇರುವುದಿಲ್ಲ.ಆಗ ಬುದ್ಧಿಯು ತನ್ನ ಕಾರಣಾವಸ್ಥೆಯಲ್ಲಿ(ಎಂದರೆ ಅವಿದ್ಯೆಯಲ್ಲಿ ) ಇರುತ್ತದೆ. 'ನನಗೇನೂ ತಿಳಿಯಲಿಲ್ಲ'ಎಂಬ ಎಚ್ಚರಗೊಂಡವನ ನೆನಪಿನಿಂದ ಇದು ಸಿದ್ಧವಾಗಿದೆ. ಜೀವನು ದೇಹಾಂತರ ಹೊಂದುವುದನ್ನು ಈ ಬ್ರಾಹ್ಮಣವು ಹೇಳುತ್ತದೆ.

ನಾಲ್ಕನೆಯದು ಶಾರೀರಕ ಬ್ರಾಹ್ಮಣ.ಮುಂದಿನ ಜನ್ಮದ ವಾಸನೆಗಳನ್ನು ಅರಿತುಕೊಂಡು ಜೀವನ ಯಾವುದಾದರೊಂದು ಅಂಗದ ಮೂಲಕ ನಿಷ್ಕ್ರಮಿಸುತ್ತಾನೆ. ಉಪಾಸನೆ,ಕಮ೯ ಮತ್ತು ಹಿಂದಿನ ಕಮ೯ ಪಲಾನುಭವದ ವಾಸನೆ  ಇವು ಇವನನ್ನು ಅನುಸರಿಸುತ್ತವೆ. ಅಕಾಮಿಯೂ, ನಿಷ್ಕಾಮಿಯೂ, _ಅಪ್ತಕಾಮಿಯೂ _ಆತ್ಮಕಾಮಿಯೂ ಆದವನ ಇಂದ್ರಿಯಗಳು ಉತ್ಕ್ರಮಿಸುವುದಿಲ್ಲ. ಬ್ರಹ್ಮವೇ ಆಗಿ ಬ್ರಹ್ಮದಲ್ಲಿ ಲೀನವಾಗುತ್ತಾನೆ.ಸಂಸಾರದಲ್ಲಿರುವಾಗಲೇ ಬ್ರಹ್ಮವನ್ನು ಅರಿತುಕೊಳ್ಳಬೇಕು.ಇಲ್ಲದಿದ್ದರೆ ಬಹಳ ನಷ್ಟವಾಗುತ್ತದೆ. ಬ್ರಹ್ಮದಲ್ಲಿ ಸ್ವಲ್ಪವೂ ನಾನಾತ್ವವಿಲ್ಲ.ಅದರಲ್ಲಿ ನಾನಾತ್ವವನ್ನು ನೋಡುವವನು ಮೃತ್ಯುವಿನಿಂದ ಮೃತ್ಯುವಿಗೆ ಹೋಗುತ್ತಾನೆ. ಸಾಧಕನಾದವನು ಆತ್ಮತತ್ವವನ್ನು ತಿಳಿಸದ ಶಬ್ದಗಳನ್ನು ಚಿಂತಿಸ ಕೂಡದು.'ಬೇರೆ ಮಾತುಗಳನ್ನು ಬಿಡಿರಿ'ಎಂದು ಶೃತಿಯು ಹೇಳುತ್ತದೆ.ಆತ್ಮನು ಶಾಸ್ತ್ರವಿಹಿತವಾದ ಕಮ೯ದಿಂದ ವೃದ್ಧಿಸುವುದಿಲ್ಲ.ಇವನನ್ನೇ ಅರಿತುಕೊಂಡು ಮನುಷ್ಯನು ಮುನಿಯಾಗುತ್ತಾನೆ.

ಈ ಆತ್ಮಲೋಕವನ್ನೇ ಬಯಸುತ್ತ ಮನುಷ್ಯ_ಪಿತೃ_ದೇವಲೋಕವನ್ನು ಬಯಸದೆ ಮುಮುಕ್ಷುಗಳು ಪ್ರವ್ರಜನ ಮಾಡುತ್ತಾರೆ. ಆತ್ಮ ಹೀಗೆ ಎಂದು ಹೇಳಲಾಗುವುದಿಲ್ಲ."ಹೀಗಲ್ಲ ಹೀಗಲ್ಲ" ಎಂದೇ ಹೇಳಬೇಕು. ಅವನು ಅವ್ಯಯನು,ಅಸ್ಪøಹ್ಯನು,ಅಕ್ಷಯನು ಮತ್ತು ಅಸಂಗನು.ಇವನು ಪಾಪರಹಿತನೂ, ವಿರಜನೂ,ಸಂಶಯ ರಹಿತನೂ,ಆಗಿ ಅಭಯವಾದ ಬ್ರಹ್ಮವೇ ಆಗುತ್ತಾನೆ.

ಎರಡನೆಯ ಬ್ರಾಹ್ಮಣದಲ್ಲಿಮಧು ಹಾಗೂ ಮುನಿಕಾಂಡಗಳಲ್ಲಿ ಆಗಮ ಯುಕ್ತಿಗಳಿಂದ ಪ್ರತಿಪಾದಿತವಾದ ಬ್ರಹ್ಮತತ್ವವನ್ನು ಉಪಸಂಹಾರ ಮಾಡಿರುತ್ತದೆ.ಎರಡನೇ ಅಧ್ಯಾಯದ ನಾಲ್ಕನೆಯ ಬ್ರಾಹ್ಮಣವೇ (ಮೈತ್ರೇಯ) ಇಲ್ಲಿ ಮತ್ತೊಮ್ಮೆ ಬಂದಿದೆ.

ಕೊನೆಯದಾದ ಖಿಲಕಾಂಡವು ಐದನೆಯ ಮತ್ತು ಆರನೆಯ ಅಧ್ಯಾಯವನ್ನೊಳಗೊಂಡಿದೆ.'ಖಿಲ" ಎಂದರೆ ಪರಿಶಿಷ್ಟ ಅಥವಾ ಅನುಬಂಧ. ನಿರುಪಾಧಿಕ ಬ್ರಹ್ಮವನ್ನು ಹಿಂದಿನ ನಾಲ್ಕು ಅಧ್ಯಾಯಗಳಲ್ಲಿ ನಿರೂಪಿಸಲಾಗಿದೆ. ಈಗ ಸೋಪಾಧಿಕವೂ ಶಬ್ದಾಥ೯  ವ್ಯವಹಾರಕ್ಕೆ ವಿಷಯವೂ ಅದೇ ಬ್ರಹ್ಮದ ಕೆಲವು ಉಪಾಸನೆಗಳನ್ನು ತಿಳಿಸಲು ಐದನೆಯ ಅಧ್ಯಾಯವು ಬಂದಿದೆ.ಈ ಉಪಾಸನೆಗಳು ಕಮ೯ಗಳಿಗೆ ಅವಿರುದ್ಧವಾಗಿಯೂ, ಅಭ್ಯುದಯಕ್ಕೆ ಸಾಧನಗಳಾಗಿಯೂ, ಕ್ರಮಮುಕ್ತಿಗೆ ಕಾರಣಗಳಾಗಿಯೂ ಇವೆ. ಮೊದಲನೆಯ ಬ್ರಾಹ್ಮಣವು ಪ್ರಸಿದ್ಧವಾದ ಶಾಂತಿ ಪಾಠದಿಂದ ಆರಂಭವಾಗುತ್ತದೆ.ಪೂಣ೯ವಾದ ಜಗತ್ತು ಪೂಣ೯ವಾದ ಬ್ರಹ್ಮದಿಂದ ಹೊರಬಂದಿದೆ.ಬ್ರಹ್ಮವೇ ಜಗತ್ತೆಂದು ಗ್ರಹಿಸಿದ ಮೇಲೆ ಬ್ರಹ್ಮವೊಂದೇ ಉಳಿಯುತ್ತದೆ.ಜಗತ್ತು ಬ್ರಹ್ಮದಿಂದ ಹೊರಬಂದರೂ ಬ್ರಹ್ಮದಲ್ಲಿ ಯಾವ ಪರಿಣಾಮವೂ ಉಂಟಾಗುವುದಿಲ್ಲ. ಓಂಕಾರವು ಬ್ರಹ್ಮಕ್ಕೆ ನಿಕಟವತಿ೯ಯಾದ ಹೆಸರು. ಆ ಬ್ರಹ್ಮಪ್ರಾಪ್ತಿಗೆ ಇದು ಶ್ರೇಷ್ಠವಾದ ಸಾಧನವಾಗಿರುತ್ತದೆ. ಓಂಕಾರವು ¨್ರಹ್ಮದ ಪತೀಕವೂ ನಾಮವೂ ಆಗಿದೆ. 'ಓಂ'ಎಂದು ಆತ್ಮನನ್ನು ಧ್ಯಾನಿಸಬೇಕೆಂದು ಮುಂಡಕ ಶ್ರುತಿಯು ಹೇಳುತ್ತದೆ.

ಎರಡನೆಯ ಬ್ರಾಹ್ಮಣದಲ್ಲಿಧಮ೯,ದಾನ, ದಯೆ ಇವುಗಳನ್ನು ಉಪಾಸನೆಗೆ ಅಂಗವಾಗಿ ಹೇಳಿದೆ.ಮೂರನೆಯ ಬ್ರಾಹ್ಮಣವು ಹೃದಯದಲ್ಲಿರುವ ಬುದ್ಧಿಯನ್ನು ಸ್ತುತಿಸುತ್ತದ.ಬುದ್ಧಿಯು ನಾಮ,ರೂಪ,ಕಮ೯ಗಳ ಪ್ರತಿಷ್ಠೆಯೆಂದು ಸವ೯ಪ್ರಾಣಿಗಳ ಆತ್ಮವೆಂದು ಹೇಳಲ್ಪಟ್ಟಿದೆ.ನಾಲ್ಕನೆಯ ಬ್ರಾಹ್ಮಣವು ಹೃದಯ ಬ್ರಹ್ಮವು ಸತ್ಯವು ಎಂಬ ಉಪಾಸನೆಯನ್ನು ವಿಧಿಸುತ್ತದೆ.

ಐದನೆಯ ಬ್ರಾಹ್ಮಣವು ಸತ್ಯ ಬ್ರಹ್ಮವನ್ನು ಸ್ತುತಿಸುತ್ತದೆ ಮತ್ತು ಅದರ ಶರೀರ ಭಾಗಗಳಲ್ಲಿ ಉಪಾಸನೆಯನ್ನು ಹೇಳುತ್ತದೆ

ಆರನೆಯ ಬ್ರಾಹ್ಮಣವು ಬ್ರಹ್ಮಕ್ಕೆ ಅನೇಕ ವಿಶೇಷಣಗಳೂ ಇರುವುದರಿಂದ ಅದು ಮನಸ್ಸೆಂಬ ಉಪಾಧಿಯಿಂದ ವಿಶಿಷ್ಟವಾಗಿರುವಂತೆ ಉಪಾಸನೆಯನ್ನು ವಿಧಿಸುತ್ತದೆ.ಮೃತ್ಯು,ವಾಗ್ಧೇನು,ಜಾಠರಾಗ್ನಿ ಇವೆಲ್ಲ ಬ್ರಹ್ಮವು ಎಂಬ ಉಪಾಸನೆಗಳನ್ನು ವಿಧಿಸುವುದಕ್ಕೆಏಳು,ಎಂಟು,ಒಂಬತ್ತನೆಯ ಬ್ರಾಹ್ಮಣಗಳು ಬಂದಿವೆ.ಹಿಂದೆ ವಿವರಿಸಿದ ಉಪಾಸನೆಗಳನ್ನು ಅರಿತುಕೊಂಡವನು ಹೋಗುವ ದಾರಿಯನ್ನು ಮತ್ತು ಹೊಂದುವ ಫಲವನ್ನು ಹತ್ತನೆಯ ಬ್ರಾಹ್ಮಣದಲ್ಲಿ ಹೇಳಿದೆ.ಇವರು ಬ್ರಹ್ಮಲೋಕದಲ್ಲಿ ಪ್ರಜಾಪತಿಯ ಜೀವಮಾನದವರೆಗೂ ಇರುತ್ತಾರೆ.

ಜ್ವರವೇ ಮೊದಲಾದವನ್ನು ಅಥವಾ ತನ್ನ ಶರೀರವನ್ನು ದಹನ ಕ್ರಿಯೆಗಾಗಿ ಒಯ್ಯುವುದನ್ನು ಮನುಷ್ಯನು ತಪಸ್ಸೆಂದು ಭಾವಿಸಬೇಕು ಎಂದು ಹನ್ನೊಂದನೆಯ ಬ್ರಾಹ್ಮಣವು ಉಪದೇಶಿಸುತ್ತದೆ. ಪ್ರಾಣಗಳನ್ನು ಬ್ರಹ್ಮವೆಂದು ಉಪಾಸಿಸಬೇಕೆಂದು ಹನ್ನೆರಡನೆಯ ಬ್ರಾಹ್ಮಣದಲ್ಲಿ ಹೇಳಿದೆ. ಪ್ರಾಣವನ್ನು ಉಕ್ಥ, ಯಜಸ್ಸು, ಸಾಮ, ಕ್ಷತ್ರ ಎಂದು ಉಪಾಸಿಸಬೇಕೆಂದು ಹದಿಮೂರನೆಯ ಬ್ರಾಹ್ಮಣವು ತಿಳಿಸುತ್ತದೆ.  

ಬ್ರಹ್ಮವು ಗಾಯತ್ರಿ ಎಂಬ ಉಪಾಧಿಯಿಂದ ವಿಶಿಷ್ಟವಾಗುವಂತೆ ಉಪಾಸನೆಯನ್ನು ವಿಧಿಸಲು  ಹದಿನಾಲ್ಕನೆಯ ಬ್ರಾಹ್ಮಣವು ಬಂದಿದೆ.ಗಾಯತ್ರಿಗೆ ನಾಲ್ಕು ಪಾದಗಳು.

1)ಭೂಮಿ,ಅಂತರಿಕ್ಷ,ದ್ಯುಲೋಕಗಳು _ಮೊದಲನೇ ಪಾದ

2)ಋಕ್,ಯಜುಸ್ಸು,ಸಾಮ_ಎರಡನೇ ಪಾದ

3)ಪ್ರಾಣಾಪಾನ,ವ್ಯಾನಗಳು _ಮೂರನೆಯಪಾದ

ಈ ಮೂರು ಪಾದಗಳು ದೃಶ್ಯವಾಗಿವೆ.

ಗಾಯತ್ರಿಯ ತುರೀಯವಾದ ಕಾಣುವಂತಿರುವ ರಜೋತೀತವಾದ ಪಾದವೇ ಆದಿತ್ಯನು.ಕೊನೆಯದಾದ ಹದಿನೈದನೆಯ ಬ್ರಾಹ್ಮಣವು ಜ್ಞಾನ ಕಮ೯ ಸಮುಚ್ಛಯವನ್ನು ಮಾಡಿರುವವನು ಮರಣ ಕಾಲದಲ್ಲಿ ಆದಿತ್ಯನಿಗೆ ಮಾಡುವ ಪ್ರಾಥ೯ನೆಯಿದೆ.

ಆರನೆಯ ಅಧ್ಯಾಯದಲ್ಲಿ ಐದು ಬ್ರಾಹ್ಮಣಗಳಿವೆ.ಮೊದಲನೆಯ ಬ್ರಾಹ್ಮಣದಲ್ಲಿ ಪ್ರಾಣವೇ ಜ್ಯೇಷ್ಠವು ಮತ್ತು ಶ್ರೇಷ್ಠವು ಎಂಬುದನ್ನು ರೂಪಕದ ಮೂಲಕ ಹೇಳಿದೆ.ಒಮ್ಮೆ ವಾಗಾದಿ ಕರಣಗಳು ತಮ್ಮ ಪ್ರಾಧಾನ್ಯವನ್ನು ಸ್ಥಾಪಿಸಲು ಕಲಹ ಮಾಡುತ್ತಾ ಬ್ರಹ್ಮನ ಬಳಿಗೆ ಹೋಗಿ "ನಮ್ಮಲ್ಲಿ ಶ್ರೇಷ್ಠವು ಯಾವುದು?"ಎಂದು ಪ್ರಶ್ನಿಸಿದವು.ನಿಮ್ಮಲ್ಲಿ ಯಾರು ಉತ್ಕ್ರಮಿಸಿದರೆ ಈ ಶರೀರವು ಎಂದು ಜನರು ಎಣಿಸುತ್ತಾರೆಯೋ ಅದೇ ನಿಮ್ಮಲ್ಲಿ ಶ್ರೇಷ್ಠವು ಎಂದು ಬ್ರಹ್ಮನು ಹೇಳಿದನು.ಆಗ ವಾಕ್ಕೇ ಮೊದಲಾದ ಇಂದ್ರಿಯಗಳು ತಮ್ಮ ಶ್ರೇಷ್ಠತ್ವವನ್ನು ಸ್ಥಾಪಿಸಲು ಶರೀರದಿಂದ ಒಂದೊಂದಾಗಿ ಹೊರಟವು.ಆದರೆ ಶರೀರವು ಮೊದಲಿಗಿಂತ ಹೆಚ್ಚಾಗಿ ಕೆಡಲಿಲ್ಲ.ಕೊನೆಗೆ ಮುಖ್ಯ ಪ್ರಾಣವು ಉತ್ಕ್ರಮಿಸಲು ಸಿದ್ಧವಾದಾಗ ಇಂದ್ರಿಯಗಳೆಲ್ಲ ತಮ್ಮ ತಮ್ಮ  ಸ್ಥಾನದಿಂದ ಕಿತ್ತುಹಾಕಲ್ಪಟ್ಟವು. ಆಗ ಇಂದ್ರಿಯಗಳು ಪ್ರಾಣವನ್ನು ಶರೀರದಿಂದ ಉತ್ಕ್ರಮಿಸಕೂಡದೆಂದು ಬೇಡಿಕೊಂಡು ಅದಕ್ಕೆ ಕಾಣಿಕೆಯನ್ನು ಒಪ್ಪಿಸಿದವು. 

ಎರಡನೆಯ ಬ್ರಾಹ್ಮಣದಲ್ಲಿ ಪಂಚಾಗ್ನಿವಿದ್ಯೆಯನ್ನು ಸಂಸಾರ ಗತಿಗಳನ್ನೂ ಹೇಳಿದೆ.ಉತ್ತರ ಮಾಗ೯ದಲ್ಲಿ (ಅಚಿ೯ರಾದಿ ಮಾಗ೯ಗಳಲ್ಲಿ)ಹೋಗಲು ಸಾಧನವಾದ ಪಂಚಾಗ್ನಿವಿದ್ಯೆಯನ್ನು ಉಪದೇಶಿಸಲು ಈ ಆಖ್ಯಾಯಿಕೆಯು ಬಂದಿದೆ.ಶ್ವೇತಕೇತುವು ತನ್ನ ಪಾಂಡಿತ್ಯವನ್ನು ಪ್ರದಶಿ೯ಸಲು ಪ್ರವಾಹಣ ರಾಜನ ಸಭೆಗೆ ಹೋಗುತ್ತಾನೆ.ರಾಜನು ಇವನಿಗೆ ಐದು ಪ್ರಶ್ನೆಗಳನ್ನು ಹಾಕುತ್ತಾನೆ.

1)ಮೃತರಾದ ಮೇಲೆ ಮನುಷ್ಯರು ಬೇರೆ ಬೇರೆ ಮಾಗ೯ಗಳಲ್ಲಿ ಹೇಗೆ ಹೋಗುತ್ತಾರೆ.

2)ಅವರು ಈ ಲೋಕಕ್ಕೆ ಹೇಗೆ ಹಿಂದಿರುಗುವರು.

3)ಇಲ್ಲಿ ಬಹುಜನರು ಪುನಃ ಪುನಃ ಸಾಯುತ್ತಿದ್ದರೂ ಪರಲೋಕವು ಏಕೆ ಪೂಣ೯ವಾಗುವುದಿಲ್ಲ.

4)ಎಷ್ಟನೆಯ ಆಹುತಿಯಲ್ಲಿ ಹೋಮ ಮಾಡಿದ ಮೇಲೆ ನೀರು ಪುರುಷ ವಾಕ್ಕಾಗಿ ಎದ್ದು ನಿಲ್ಲುತ್ತದೆ.

5)ದೇವಯಾನ_ ಪಿತೃಯಾನ ಗಳನ್ನು ಹೇಗೆ ಪಡೆಯಬಹುದು?

ಶ್ವೇತಕೇತುವಿಗೆ ಒಂದು ಪ್ರಶ್ನೆಗೂ ಉತ್ತರಗೊತ್ತಿರಲಿಲ್ಲ. ಆಗ  ರಾಜನು ಶ್ವೇತಕೇತುವನ್ನು ಅಲ್ಲಿ ವಾಸಮಾಡಲು ಆಹ್ವಾನಿಸಿದನು.ಆದರೆ ಶ್ವೇತಕೇತುವು ಅದಕ್ಕೊಪ್ಪದೆ ತನ್ನ ತಂದೆಯಾದ ಗೌತಮನು ಇದ್ದಲ್ಲಿಗೆ ಬಂದು ರಾಜನು ಪ್ರಶ್ನಿಸಿದ ವಿಷಯಗಳನ್ನೆಲ್ಲ ತನಗೇಕೆ ಹೇಳಿಕೊಡಲಿಲ್ಲವೆಂದು ತಂದೆಯನ್ನು ಆಕ್ಷೇಪಿಸಿದನು.ನನಗೂ ಕೂಡ ಇದು ತಿಳಿದಿರಲಿಲ್ಲವೆಂದು ಗೌತಮನು ಹೇಳಿದನು. ಗೌತಮನೊಬ್ಬನೇ ಹೋಗಿ ಈ ವಿದ್ಯೆಯನ್ನು ಉಪದೇಶಿಸಬೇಕೆಂದು ರಾಜನನ್ನು ಕೇಳಿಕೊಂಡನು. ರಾಜನು ಗೌತಮನ ವಿನಯವನ್ನು ಮೆಚ್ಚಿ ಪಂಚಾಗ್ನಿ ವಿದ್ಯೆಯನ್ನು ಉಪದೇಶಿಸಿದನು.ದ್ಯುಲೋಕ, ಪಜ೯ನ್ಯ, ಈ ಲೋಕ. ಪುರುಷ ಮತ್ತು ಸ್ತ್ರೀ.ವಿದ್ಯೆಯನ್ನು ಅರಿತುಕೊಂಡು ಗೃಹಸ್ಥರೂ, ಶ್ರದ್ಧೆಯಿಂದ ಹಿರಣ್ಯಗಭ೯ನನ್ನು ಉಪಾಸಿಸುವ ವಾನಪ್ರಸ್ಥರೂ ಮತ್ತು ಪರಿವ್ರಾಜಕರೂ ಬ್ರಹ್ಮಲೋಕಕ್ಕೆ ಹೋಗುತ್ತಾರೆ. ಅವರಿಗೆ ಪುನರಾವೃತ್ತಿಯಿಲ್ಲ. ಇದು ದೇವಯಾನ ಅಥವಾ ಉತ್ತರಮಾಗ೯. ಆದರೆ ಯಜ್ಞ, ದಾನ,ತಪಸ್ಸುಗಳನ್ನು ಮಾಡುವವರು ಪಿತೃಯಾನದ ಮೂಲಕ ಚಂದ್ರನನ್ನು ಸೇರುತ್ತಾರೆ. ಇವರು ಉತ್ತರಮಾಗ೯ಕ್ಕೆ ಹೋಗುವವರೆಗೆ ಅಥವಾ ಸದ್ಯೋ ಮುಕ್ತಿಯನ್ನು ಹೊಂದುವವರೆಗೆ ಸಂಸಾರದಲ್ಲಿ ಚಕ್ರದಂತೆ ತಿರುಗುತ್ತಾರೆ. ಈ ಎರಡೂ ಮಾಗ೯ಗಳನ್ನು ಅರಿಯದವರು ಕೀಟ,ಪತಂಗಗಳಾಗಿ ಹುಟ್ಟುತ್ತಾರೆ.

ಮೂರನೆಯ ಬ್ರಾಹ್ಮಣವು ಶ್ರೀಮಂಥ ಕಮ೯ವನ್ನು ಹೇಳುತ್ತದೆ. ಹಿಂದೆ ಉಪದೇಶಿಸಿರುವ ಪ್ರಾಣೋಪಾಸನೆಯನ್ನು ಬಲ್ಲವರಿಗೆ ಮಾತ್ರ ಇದರಲ್ಲಿ ಅಧಿಕಾರ.ನಾಲ್ಕನೆಯ ಬ್ರಾಹ್ಮಣದಲ್ಲಿ ಪುತ್ರಮಂಥ ಕಮ೯ವನ್ನು ಹೇಳಿದೆ. 

ಐದನೆಯದಾದ ವಂಶ ಬ್ರಾಹ್ಮಣವು ಇಡೀ ಉಪನಿಷತ್ತಿನ ಆಚಾಯ೯ವಂಶವನ್ನು -ಹಿರಣ್ಯಗಭ೯ನಿಂದ ಹಿಡಿದು ಪೌತಿಮಾಷೀ ಪುತ್ರನವರೆಗೆ ವಿವರಿಸಿದೆ.

ಕೆಲವು ಮುಖ್ಯ ವಾಕ್ಯಗಳ ವಿವರಣೆ:

ಮೊದಲು ಈಜಗತ್ತು ಪುರುಷಾಕಾರನಾದ ಆತ್ಮನೇ ಆಗಿತ್ತು.ಅವನು ತನಗಿಂತ ಬೇರೆ ಯಾವುದನ್ನೂ ನೋಡಲಿಲ್ಲ.'ನಾನು ಅವನಾಗಿದ್ದೇನೆ'ಎಂದು ಮೊದಲು ಹೇಳಿದನು.ಆದ್ದರಿಂದ ಈಗಲೂ ಯಾರಾದರೂ ಕರದು ಮಾತನಾಡಿಸಿದಾಗ 'ನಾನು'ಎಂದು ಮೊದಲು ಹೇಳಿ ನಂತರ ಹೆಸರನ್ನು ಹೇಳುತ್ತೇವೆ.ಎರಡನೆಯದರಿಂದಲೂ ಭಯ ಉಂಟಾಗುತ್ತದೆ. ಬೇರೆ ಯಾರೂ ಇಲ್ಲದಿರುವಾಗ ಯಾರಿಂದ ತಾನೇ ಭಯ ಉಂಟಾದೀತು. ಇರುವುದೊಂದೇ ಎರಡಾಗಿ ಕಾಣುವುದು ಮಿಥ್ಯೆ. ಅದು ಇದ್ದಂತೆ ತೋರುತ್ತದೆ. ನಿಜವಾಗಿಯೂ ಇರುವುದಿಲ್ಲ. ಇದು ಮೊದಲು ಬ್ರಹ್ಮವೊಂದೇ ಆಗಿತ್ತು.ಅದು ಒಂದೇ ಆದ್ದರಿಂದ ಕಮ೯ವನ್ನು ಮಾಡಲು ಸಮಥ೯ವಾಗಲಿಲ್ಲ. ಅದು ಕ್ಷತ್ರಿಯನನ್ನು ಸೃಷ್ಟಿಸಿತು.

ಈ ಜಗತ್ತೆಲ್ಲಾ ನಾಮ,ರೂಪ,ಕಮ೯ಗಳೆಂದು ಮೂರೇ ಆಗಿದೆ.ಈ ನಾಮಗಳಿಗೆ ವಾಕ್ಕು ಕಾರಣವು.ಏಕೆಂದರ ಎಲ್ಲಾ ನಾಮಗಳೂ ಅದರಿಂದ ಉತ್ಪನ್ನವಾಗಿವೆ ಹಾಗೂ ವಾಕ್ಕು ಎಲ್ಲಾ ನಾಮಗಳಿಗೂ ಸಾಮಾನ್ಯವಾಗಿದೆ . ಈ ಆತ್ಮನಿಂದ ಎಲ್ಲಾ ಪ್ರಾಣಿಗಳೂ, ಎಲ್ಲಾ ಲೋಕಗಳೂ ಎಲ್ಲಾ ದೇವತೆಗಳೂ ಉಂಟಾಗುತ್ತವೆ.

ಧನದ ಮೂಲಕ ಅಮೃತತ್ವದ ಆಸೆ ಇಲ್ಲ.ಕೇವಲ ಧನದಿಂದಲೇ ಅಮೃತತ್ವವನ್ನು ಯಾರೂ ಪಡೆುiÀುಲಾರರು. ಉಪಕರಣವುಳ್ಳವರ ಜೀವಿತವು ಹೇಗೋ ಹಾಗೆಯೇ ನಮ್ಮಜೀವನವೂ ಆಗುವುದು. ಆತ್ಮನನ್ನೇ ನೋಡಬೇಕು, ಶ್ರವಣಮಾಡಬೇಕು.ಮನನ ಮಾಡಬೇಕು.ನಿದಿಧ್ಯಾಸನ ಮಾಡಬೇಕು. ಶ್ರವಣ, ಮನನ, ನಿದಿಧ್ಯಾಸನದಿಂದ ಇವೆಲ್ಲವೂ ತಿಳಿಯಲ್ಪಡುತ್ತವೆ. ಈ ಬ್ರಾಹ್ಮಣ,ಕ್ಷತ್ರಿಯ,ಈ ಲೋಕಗಳು, ಈದೇವತೆಗಳು, ಈ ಪ್ರಾಣಿಗಳು  ಸವ೯ವೂ ಆತ್ಮನೆ.ಆತ್ಮನಿಗಿಂತ ಭಿನ್ನವಾದ ವಸ್ತುವು ಯಾವುದೂ ಇರುವುದಿಲ್ಲ. ಎಲ್ಲವೂ ಆತ್ಮನೆ. ಆತ್ಮನನ್ನು ಅರಿತುಕೊಂಡರೆ ಎಲ್ಲವನ್ನೂ ಅರಿತಂತಾಗುತ್ತದೆ.ಸಮುದ್ರವು ಎಲ್ಲಾ ನೀರುಗಳಿಗೂ ಏಕಮಾತ್ರಗತಿ.ಚಮ೯ವು ಎಲ್ಲಾ ಸ್ಪಶ೯ಗಳಿಗೆ, ಮೂಗು ಎಲ್ಲಾ ಗಂಧಗಳಿಗೆ, ನಾಲಗೆಯು ಎಲ್ಲಾ ರಸಗಳಿಗೆ, ಕಣ್ಣು ಎಲ್ಲಾ ರೂಪಗಳಿಗೆ,ಕಿವಿಯು ಎಲ್ಲಾ ಶಬ್ದಗಳಿಗೆ,ಮನಸ್ಸು ಎಲ್ಲಾ ವಿದ್ಯೆಗಳಿಗೆ,ಬುದ್ಧಿಯು ಎಲ್ಲಾ ವಿದ್ಯೆಗಳಿಗೂ ಏಕಮಾತ್ರ ಗತಿ. ಎಲ್ಲಾ ಕಮ೯ಗಳಿಗೂ ಕೈಗಳು,ಉಪಸ್ಥವು ಎಲ್ಲಾ ಆನಂದಗಳಿಗೂ,ಪಾಯುವು ಎಲ್ಲಾ ವಿಸಗ೯ಗಳಿಗೂ , ಪಾದಗಳು ಎಲ್ಲಾ ನಡೆಗಳಿಗೂ,ವಾಕ್ಕು ಎಲ್ಲಾ ವೇದಗಳಿಗೂ ಏಕಮಾತ್ರಗತಿ.

ಎಲ್ಲಿ ದ್ವೈತವಿರುವಂತೆ ತೋರುವುದೋ ಅಲ್ಲಿ ಒಬ್ಬನು ಇನ್ನೊಂದನ್ನು ನೋಡುತ್ತಾನೆ, ಕೇಳುತ್ತಾನೆ, ಮಾತನಾಡುತ್ತಾನೆ, ಯೋಚಿಸುತ್ತಾನೆ, ತಿಳಿದು ಕೊಳ್ಳುತ್ತಾನೆ. ಎಲ್ಲಿ ಇವನಿಗೆ ಎಲ್ಲವೂ ಆತ್ಮನೇ ಆಗಿರುವುದೊ ಅಲ್ಲಿ ಯಾವುದರಿಂದ ಯಾವುದನ್ನು ಮೂಸಿಯಾನು ಯಾವುದನ್ನು ನೋಡಿಯಾನು,ಕೇಳಿಯಾನು. ಮಾತಾಡಿಯಾನು,ಯೋಚಿಸಿಯಾನು ಅರಿತುಕೊಂಡಾನು?ಯಾವುದರಿಂದ ಇದೆಲ್ಲವನ್ನು ತಿಳಿದುಕೊಳ್ಳುತ್ತಾನೆಯೊ ಅವನನ್ನು ಯಾವುದರಿಂದ ತಿಳಿದುಕೊಂಡಾನು?ವಿಜ್ಞಾತೃವನ್ನು ಯಾವುದರಿಂದ ತಿಳಿದುಕೊಂಡಾನು?

ಈಪೃಥ್ವಿಯು ಎಲ್ಲಾ ಪ್ರಾಣಿಗಳಿಗೂ ಮಧು.ಎಲ್ಲಾಪ್ರಾಣಿಗಳೂ ಪೃಥ್ವಿಗೆ ಮಧು.ಈ ಪೃಥಿವ್ಯಾದಿ ಚತುಷ್ಟಯವು ಆ ಆತ್ಮನೇ.ಈ ಅಮೃತತ್ವವು ಆತ್ಮಜ್ಞಾನಕ್ಕೆ ಕಾರಣವು.

ಇದು ಬ್ರಹ್ಮ;  ಇದು ಎಲ್ಲವೂ. ವಾಯ್ವಾದಿ ಚತುಷ್ಟಯ,ಆದಿತ್ಯಾದಿ ಚತುಷ್ಟಯ,ದಿಗಾದಿ ಚತುಷ್ಟಯ, ಚಂದ್ರಾದಿ ಷತುಷ್ಟಯ, ಮೇಘಗಳ ಘಜ೯ನಾದಿ ಚತುಷ್ಟಯ, ಆಕಾಶಾದಿ ಚತುಷ್ಟಯ,ಧಮಾ೯ದಿ ಚತುಷ್ಟಯ, ಸತ್ಯಾದಿ ಚತುಷ್ಟಯ, ಮನುಷ್ಯಾದಿ ಚತುಷ್ಟಯ,ಶರೀರಾದಿ ಚತುಷ್ಟಯ.

ಹೇಗೆ ಅರೆ ಕಾಲುಗಳು ಚಕ್ರದ ನಾಭಿಯಲ್ಲಿ ಮತ್ತು ಹೊರವಲಯದಲ್ಲಿ ನಿಲ್ಲಿಸಲ್ಪಟ್ಟಿವೆಯೊ,  ಹಾಗೆಯೇ ಈ ಆತ್ಮನಲ್ಲಿ ಎಲ್ಲ ಪ್ರಾಣಿಗಳು ಎಲ್ಲದೇವತೆಗಳು ಎಲ್ಲ ಲೋಕಗಳು, ಎಲ್ಲ ಇಂದ್ರಿಯಗಳು, ಎಲ್ಲ ಜೀವಾತ್ಮರು ನಿಲ್ಲಿಸಲ್ಪಟ್ಟಿರುವರು.

ಮೂರನೆಯ ಅಧ್ಯಾಯದಲ್ಲಿ ಗ್ರಹ-ಅತಿಗ್ರಹಗಳ ಬಗ್ಗೆ ಹೇಳಿದೆ.ಅವು ಈ ರೀತಿ ಇವೆ.ಪ್ರಾಣ-ಅಪಾನ,

ವಾಕ್ಕು-ನಾಮ,ನಾಲಗೆ-ರಸ,ಚಕ್ಷು-ರೂಪ,ಶ್ರೋತೃ-ಶಬ್ದ,ಮನಸ್ಸು-ಬಯಕೆ,ಕೈಗಳು-ಕಮ೯,ಚಮ೯-ಸ್ಪಶ೯. ಗ್ರಹ -ಅತಿಗ್ರಹ ಲಕ್ಷಣವಾದ ಬಂಧನದಿಂದ ಬಿಡುಗಡೆಯನ್ನು ಹೊಂದಿದರೆ ಅಮೃತತ್ವವನ್ನು ಪಡೆಯಬಹುದು.

ಕಮ೯ಗಳು ಎಷ್ಟೇ ಒಳ್ಳೆಯವಾಗಿದ್ದರೂ ಸಂಸಾರದಲ್ಲಿಯೇ ಅಂತಗ೯ತವಾಗಿವೆ.ಉಪಾಸನಾ ಸಹಿತವಾದ ಕಮ೯ವು ಮೋಕ್ಷಪ್ರದವಲ್ಲ.ಆರನೆಯದಾದ 'ಅಂತಯಾ೯ಮೀ'ಬ್ರಾಹ್ಮಣದಲ್ಲಿ 'ಅಂತಯಾ೯ಮಿ' ಎಂದರೆ ಒಳಗಿದ್ದು ನಿಯಮಿಸುವವನು' ಎಂದು ಹೇಳಿದೆ. 'ಯಾವನು ಪೃಥ್ವಿಯಲ್ಲಿರುವವನಾಗಿ ಪೃಥ್ವಿಯ ಒಳಗಿರುವನೊ,ಯಾವನನ್ನು ಪೃಥ್ವಿಯು ತಿಳಿಯದೊ,ಯಾವನಿಗೆ ಪೃಥ್ವಿಯು ಶರೀರವೊ,ಯಾವನು ಒಳಗಿದ್ದುಕೊಂಡು ಪೃಥ್ವಿಯನ್ನು ನಿಯಮಿಸುವನೊ,ಅವನೇ ಅಂತಯಾ೯ಮಿಯು.ನಿನ್ನ ಅಮೃತನಾದ ಆತ್ಮನು.ಇದೇ ರೀತಿ ನೀರು,ಅಗ್ನಿ,ಅಂತರಿಕ್ಷ,ವಾಯು,ದ್ಯುಲೋಕ,ಆದಿತ್ಯ,ದಿಕ್ಕು,ಚಂದ್ರ,ನಕ್ಷತ್ರ, ಆಕಾಶ, ತಮಸ್ಸು ತೇಜಸ್ಸು, ಸವ೯ಪ್ರಾಣಿಗಳು, ಘ್ರಾಣ, ವಾಕ್ಕು, ಕಣ್ಣು, ಶ್ರೋತ್ರ, ಮನಸ್ಸು ಚಮ೯, ಬುದ್ಧಿ, ರೇತಸ್ಸು ಇವುಗಳಿಗೂ ಅನ್ವಯಿಸುತ್ತದೆ. 

ನಾಲ್ಕನೆಯ ಅಧ್ಯಾಯದ ಮೂರನೆಯ ಬ್ರಾಹ್ಮಣದಲ್ಲಿ ಅವಸ್ಥಾತ್ರಯದ ಮೂಲಕ ತಕ೯ದಿಂದ ವಿಸ್ತಾರವಾಗಿ ಆತ್ಮಸ್ವರೂಪವನ್ನು ಉಪದೇಶಿಸಿದೆ."ಧ್ಯಾಯತೀವ ಲೀಲಾಯತೀವ"ಎಂದರೆ,ಆತ್ಮನು ಅಚಲನು.ಆದರೆ ಬುದ್ಧಿಯ ಚಲನೆಯಿಂದ ಆತ್ಮನು ಚಲಿಸುವಂತೆ ತೋರುತ್ತಾನೆ ಎಂದಥ೯.ವಿಜ್ಞಾನಮಯನೂ,ಇಂದ್ರಿಯಗಳ ಮಧ್ಯದಲ್ಲಿರುವವನೂ, ಬುದ್ಧಿಯಲ್ಲಿರುವ ಸ್ವಯಂಜ್ಯೋತಿಯು ಆದ ಈ ಪುರುಷನು ಅವನು ಬುದ್ಧಿಗೆ ಸಮಾನವಾದ ಆಕಾರವನ್ನು ಪಡೆದು ಇಹಲೋಕ ಪರಲೋಕಗಳ ಮಧ್ಯೆ ಸಂಚರಿಸುತ್ತಾನೆ,ಅವನು ಧ್ಯಾನಿಸುವಂತೆ ಚಲಿಸುವಂತೆ ಇರುತ್ತಾನೆ.

ಬೃಹದಾರಣ್ಯಕದಲ್ಲಿ ಸುಷುಪ್ತಿಯನ್ನು ಹೀಗೆ ವಣಿ೯ಸಿರುತ್ತದೆ. 'ಸುಷುಪ್ತಿಯಲ್ಲಿ ತಂದೆಯು ತಂದೆಯಲ್ಲ,ತಾಯಿಯು ತಾಯಿಯಲ್ಲ,ಲೋಕಗಳು ಲೋಕಗಳಲ್ಲ,ದೇವತೆಗಳು ದೇವತೆಗಳಲ್ಲ,ವೇದಗಳು ವೇದಗಳಲ್ಲ.ಈ ಅವಸ್ಥೆಯಲ್ಲಿ ಕಳ್ಳನು ಕಳ್ಳನಲ್ಲ,ಭ್ರೂಣಹತ್ಯೆಯನ್ನು ಮಾಡಿದವನು ಭ್ರೂಣಘ್ನನಲ್ಲ, ಚಾಂಡಾಲನು ಚಾಂಡಾಲನಲ್ಲ, ಪೌಲ್ಕಸನು ಪೌಲ್ಕಸನಲ್ಲ, ಶ್ರಮಣನು ಶ್ರಮಣನಲ್ಲ, ತಾಪಸನು ತಾಪಸನಲ್ಲ,ಈ ರೂಪವು ಪುಣ್ಯದಿಂದ ಸ್ಪøಷ್ಟವಾಗಿಲ್ಲ, ಏಕೆಂದರೆ ಆಗ ಅವನು ಬುದ್ಧಿಯ ಶೋಕಗಳನ್ನೆಲ್ಲ ದಾಟಿರುತ್ತಾನೆ'

ಅವನು ಸುಷುಪ್ತಿಯಲ್ಲಿ ನೋಡದಿರುವುದಕ್ಕೆ ಕಾರಣವೇನೆಂದರೆ ಆಗ ಅವನು ನಿಜವಾಗಿ ನೋಡುತ್ತಿದ್ದರÀೂ ನೋಡುವುದಿಲ್ಲ. ಏಕೆಂದರೆ ದ್ರಷ್ಟ್ರುವು  ಅವಿನಾಶಿ ಯಾಗಿರುವುದರಿಂದ ದ್ರಷ್ಟ್ರುವಿನ ದೃಷ್ಟಿಗೆ ನಾಶವಿಲ್ಲ.ಆದರೆ ನೋಡಬಹುದಾದ ಆ ಎರಡನೆಯ ವಸ್ತುವು ತನಗಿಂತ ಬೇರೆಯಾಗಿ ವಿಂಗಡವಾಗಿರುವುದಿಲ್ಲ. ಇದೇ ರೀತಿ ಘ್ರಾಣಿಸದಿರುವುದಕ್ಕೆ, ಸವಿಯದಿರುವುದಕ್ಕೆ, ಮಾತಾಡದಿರುವುದಕ್ಕೆ, ಕೇಳದಿರುವುದಕ್ಕೆ ಮನನ ಮಾಡದಿರುವುದಕ್ಕೆ, ಸ್ಪಶಿ೯ಸದಿರುವುದಕ್ಕೆ ಅನ್ವಯಿಸುತ್ತದೆ. ಆದರೆ ನಿಜವಾಗಿ ಆತ್ಮನಿಗಿಂತ ಭಿನ್ನವಾದ ಯಾವವಸ್ತುವೂ ಇಲ್ಲ.

ಆತ್ಮನು ಸುಷುಪ್ತಿಯಲ್ಲಿ ನೀರಿನಂತೆ ಏಕನೂ,ದ್ರಷ್ಟøವೂ, ದ್ವೈತರಹಿತನೂ ಆಗಿರುತ್ತಾನೆ.ಇದು ಬ್ರಾಹ್ಮೀಸ್ಥಿತಿ. ಇದು ಇವನ ಪರಮಗತಿ, ಇದು ಇವನ ಪರಮ ಸಂಪತ್ತು, ಇದು ಇವನ ಪರಮಲೋಕ, ಇದು ಇವನ ಪರಮಾನಂದ. ಈ ಆನಂದದ ಒಂದು ಕಲೆಯನ್ನೇ  ಅವಲಂಬಿಸಿ ಇತರ ಪ್ರಾಣಿಗಳು ಜೀವಿಸುತ್ತವೆ. ಯಾಜ್ಞವಲ್ಕ್ಯನು ಜನಕರಾಜನಿಗೆ ಹೇಳಿದನು.  ಯಾವನು ಮನುಷ್ಯರಲ್ಲಿ ಸಮಗ್ರವಾದ ಅವಯವ ಗಳುಳ್ಳವನೊ   ಸಮೃದ್ಧನೊ,  ಇತರರಿಗೆ ಅಧಿಪತಿಯೊ, ಎಲ್ಲಾ ಮನುಷ್ಯ ಭೋಗಗಳಿಂದ ಸಂಪನ್ನತಮನೊ, ಅವನು ಮನುಷ್ಯರ  ಪರಮಾನಂದವು. ಆ ನೂರು ಮಾನುಷ ಆನಂದಗಳು ಲೋಕಗಳನ್ನು ಜಯಿಸಿರುವ ಪಿತೃಗಳ ಒಂದು ಆನಂದ.ಲೋಕಗಳನ್ನು ಜಯಿಸಿರುವ ಪಿತೃಗಳ ಒಂದು ಆನಂದ ಮತ್ತು ಲೋಕಗಳನ್ನು ಜಯಿಸಿರುವ ಪಿತೃಗಳ ಆ ನೂರು ಆನಂದಗಳು ಗಂಧವ೯ಲೋಕದ  ಒಂದು ಆನಂದ. ಗಂಧವ೯ಲೋಕದ ನೂರು ಆನಂದಗಳು ಕಮ೯ದೇವತೆಗಳ ಒಂದು ಆನಂದ.ಅವರು ವೈದಿಕ ಕಮ೯ದಿಂದ ದೇವತ್ವವನ್ನು ಪಡದೆದುಕೊಂಡಿರುತ್ತಾರೆ. ಕಮ೯ದೇವತಗಳ ಆ ನೂರು ಆನಂದಗಳು ಅಜಾನದೇವತೆಗಳ ಒಂದು ಆನಂದ.ಮತ್ತುಅದು ಅಕಾಮಹತನಾದ ಪಾಪರಹಿತನಾದ ಶ್ರೋತ್ರೀಯನ ಒಂದು ಆನಂದ. ಅಜಾನದೇವತೆಗಳ ಆ ನೂರು ಆನಂದಗಳು ಪ್ರಜಾಪತಿ ಲೋಕದ ಒಂದು ಆನಂದ, ಅದು ಅಕಾಮಹತನಾದ ಪಾಪರಹಿತನಾದ ಶ್ರೋತ್ರೀಯನ ಆನಂದ.ಪ್ರಜಾಪತಿ ಲೋಕದ ಆ ನೂರು ಆನಂದಗಳು ಬ್ರಹ್ಮಲೋಕದ ಒಂದು ಆನಂದ ಮತ್ತು ಅದು ಅಕಾಮಹತನಾದ ಪಾಪರಹಿತನಾದ ಶ್ರೋತೀಯನ ಒಂದು ಆನಂದ.ಅನಂತರ ಇದೇ ಪರಮಾನಂದ.ಇದೇ ಬ್ರಾಹ್ಮೀ ಸ್ಥಿತಿ. 

ನಾಲ್ಕನೆಯ ಅಧ್ಯಾಯದಲ್ಲಿ "ಅಯಮಾತ್ಮಾ ಬ್ರಹ್ಮ" ಎಂಬ ಮಹಾವಾಕ್ಯವು ಬರುತ್ತದೆ.ಇದು ಅದ್ವೈತ ವೇದಾಂತದ ಮಹಾವಾಕ್ಯಗಳಲ್ಲಿ ಒಂದು.'ಈ ಆತ್ಮನೇ ಬ್ರಹ್ಮ'ಎಂಬುದು ಈ ವಾಕ್ಯದ ಅಥ೯.ಜೀವ ಬ್ರಹ್ಮೈಕ್ಯವನ್ನು ತಿಳಿಸುವ ವಾಕ್ಯಗಳಿಗೆ ಮಹಾವಾಕ್ಯಗಳೆಂದು ಹೆಸರು.ಇವನು ವಿಜ್ಞಾನಮಯನು, ಮನೋಮಯನು,ಪ್ರಾಣಮಯನು,ಚಕ್ಷುಮ೯ಯನು,ಶ್ರೋತ್ರಮಯನು,ಪೃಥ್ವೀಮಯನು,ಆಪೋಮಯನು, ವಾಯುಮಯನು, ಆಕಾಶಮಯನು, ತೇಜೋಮಯನು, ಅತೇಜೋಮಯನು, ಕಾಮಮಯನು, ಆಕಾಮಮಯನು, ಕ್ರೋಧಮಯನು, ಅಕ್ರೋಧಮಯನು, ಧಮ೯ಮಯನು, ಅಧಮ೯ಮಯನು, ಸವ೯ಮಯನು, ಇವನು ಇದಂ ಮಯನು ಅಧೋಮಯನು, ಎಂಬುದು ಸಿದ್ಧವಾಗಿದೆ.ಇವನು ಹೇಗೆ ಮಾಡುವನೊ ಹೇಗೆ ಆಚರಿಸುವನೊ ಹಾಗೆ ಆಗುವನು.ಸಾಧುಕಾರಿಯಾದವನು ಸಾಧುವಾಗುತ್ತಾನೆ. ಪಾಪಕಾರಿಯಾದವನು ಪಾಪಿಯಾಗುತ್ತಾನೆ.ಪುಣ್ಯಕಮ೯ದಿಂದ ಪುಣ್ಯವಂತನಾಗುವನು.ಪಾಪಕಮ೯ದಿಂದ ಪಾಪಿಯಾಗುವನು. ಇನ್ನು ಕೆಲವರು ಹೀಗೆ ಹೇಳುತ್ತಾರೆ."ಈ ಪುರುಷನು ಕಾಮಮಯನೇ;ಅವನು ಎಂಥ ಕಾಮದವನೊ ಅಂಥ ಕೃತಸಂಕಲ್ಪನಾಗುವನು.ಎಂಥ ಕೃತ ಸಂಕಲ್ಪನೊ ಅಂಥ ಕಮ೯ವನ್ನು ಮಾಡುವನು. ಎಂಥ ಕಮ೯ವನ್ನು ಮಾಡುವನೊ ಅಂಥಕಮ೯ವನ್ನು ಪಡೆಯುತ್ತಾನೆ. ಕಾಮವೇ ಸಂಸ್ಕಾರಕ್ಕೆ ಕಾರಣ.

ಯಾವನು ಅಕಾಮನೊ ನಿಷ್ಕಾಮನೊ ಅಪ್ತಕಾಮನೊ ಆತ್ಮಕಾಮನೊ ಅವನ ಇಂದ್ರಿಯಗಳು ಉತ್ಕ್ರಮಿಸುವುದಿಲ್ಲ.ಬ್ರಹ್ಮವೇ ಆಗಿ ಬ್ರಹ್ಮದಲ್ಲಿ ಲೀನವಾಗುತ್ತಾನೆ. ಬ್ರಹ್ಮಜ್ಞಾನಿಗೆ ಗಮನಾಗಮನವಾಗಲೀ ಶರೀರ ಗ್ರಹಣವಾಗಲೀ ಇಲ್ಲ.  ಇವನ ಹೃದಯದಲ್ಲಿರುವ ಕಾಮನೆಗಳು ಯಾವಾಗ ಬಿಟ್ಟುಹೋಗುವುವವೋ ಆಗ ಮನುಷ್ಯನು ಅಮೃತನಾಗುತ್ತಾನೆ ಮತ್ತು ಈ ಶರೀರzಲ್ಲಿಯೇ ಬ್ರಹ್ಮವನ್ನು ಹೊಂದುತ್ತಾನೆ. ಕಮ೯ಗಳು ಸಮೂಲವಾಗಿ ಹೊರಟುಹೋದರೆ ಅಮೃತತ್ವವು ಉಂಟಾಗುತ್ತದೆ.ವಾಕ್ಯವು ಮತ್ತೊಂದರ ಸಹಾಯವನ್ನು ಬಯಸದೆ ಮೋಕ್ಷವನ್ನುಂಟು ಮಾಡುತ್ತದೆ6. ವಣಾ೯ಶ್ರಮ ಧಮ೯ವೆಲ್ಲವೂ ಅವಿದ್ಯೆಯಲ್ಲಿಯೇ ಅಡಕವಾಗಿರುತ್ತದೆ.ಮತ ಜಾತಿ, ಸ್ತ್ರೀ, ಪುರುಷ, ಬಾಲಕ, ವೃದ್ಧ, ಬಡವ_ಬಲ್ಲಿದ, ಗುರು_ಶಿಷ್ಯ, ಸನ್ಯಾಸಿ_ಗೃಹಸ್ಠ, ಯಾವಭೇದವೂ ಇರುವುದಿಲ್ಲ. ಬ್ರಹ್ಮವಿದ್ಯೆಯ ಫಲವು ಕಾಲಾಂತರದಲ್ಲಿ ಆಗತಕ್ಕದ್ದಲ್ಲ. ಜ್ಞಾನ ಸಮಕಾಲದಲ್ಲಿಯೇ ಉಂಟಾಗುತ್ತದೆ7.ಉಪನಿಷತ್ತುಗಳಲ್ಲಿ ಕಮ೯ವನ್ನು ಅವಿದ್ಯೆಯೆಂದೂ ಬ್ರಹ್ಮಜ್ಞಾನವನ್ನು ವಿದ್ಯೆಯೆಂದೂ ಕರೆಯುತ್ತಾರೆ.ಇಂದ್ರಿಯಗಳ ತಿಳುವಳಿಕೆಯು ಯಾವಾಗಲೂ ಮಾಯೆಯೇ ಆಗಿರುತ್ತದೆ.ಮಾಯೆ ಎಂದರೆ ಇಲ್ಲದ ವಸ್ತುವನ್ನು ಇದ್ದಂತೆ

ಕಾಣುವುದು 8.

ಯಾರಿಗೆ ಜ್ಞಾನವು ಒಮ್ಮೆಗೇ ಅಳವಡುವುದಿಲ್ಲವೋ ಅವರಿಗೆ ಉಪಾಸನೆಯೇ ಗತಿ. ಉಪಾಸನೆಗಳಲ್ಲಿ ಮುಖ್ಯವಾಗಿ ನಿಗು೯ಣ ಬ್ರಹ್ಮವನ್ನು ಮನಸ್ಸಿಗೆ ತಂದುಕೊಳ್ಳುವ ಸಹಾಯಕವಾಗಿ _ಹೊಸದಾಗಿ ಈಜುವವನಿಗೆ ಬುರುಡೆಯನ್ನು ಕಟ್ಟುವಂತೆ ಒಂದಾನೊಂದು ಆಲಂಬನವನ್ನು ಮೊದಲು ಕಟ್ಟಿರುತ್ತದೆ.ಆಲಂಬನ ಪ್ರತೀಕ ಇವು ಪಯಾ೯ಯ ಪದಗಳು.ಈ ಶರೀರವನ್ನು ಪ್ರವೇಶಿಸಿರುವ ಪರಮಾತ್ಮನನ್ನು ಯಾವನು ಪಡೆದುಕೊಂಡಿರುವನೋ ಮತ್ತು ಸಾಕ್ಷಾತ್ಕರಿಸಿರುವನೋ ಅವನು ವಿಶ್ವದ ಕತೃ೯ವಾಗಿರುತ್ತಾನೆ.ಅವನು ಎಲ್ಲದರ ಕತೃ೯ವು.ಸವ೯ವೂ ಅವನ ಆತ್ಮವಾಗಿದೆ ಮತ್ತು ಅವನು ಎಲ್ಲದರ ಆತ್ಮನಾಗಿರುತ್ತಾನೆ.ಯಾವಾಗ ಪುರುಷನು ಆಚಾಯ೯ನಿಂದ ಅನುಗ್ರಹೀತನಾಗಿ  ಪ್ರಕಾಶಮಾನವಾದ ಆತ್ಮನನ್ನು ಸಾಕ್ಷಾತ್ತಾಗಿ ನೋಡುತ್ತಾನೆಯೋ ಆಗ ಅವನಿಂದ ಕಾಪಾಡಿಕೊಳ್ಳಲು ಇಚ್ಛಿಸುವುದಿಲ್ಲ. ಇವನು ಸವ೯ವನ್ನೂ ಆತ್ಮನನ್ನಾಗಿ ನೋಡುವನು.ಇವನು ಯಾರನ್ನೂ ನಿಂದಿಸುವುದಿಲ್ಲ.

ಇಲ್ಲಿ ನಾನಾತ್ವವು ಸ್ವಲ್ಪವೂ ಇಲ್ಲ.ಯಾವನು ಇಲ್ಲಿ ನಾನಾತ್ವವಿರುವಂತೆ ನೋಡುತ್ತಾನೆಯೋ ಅವನು ಮೃತ್ಯುವಿನಮೇಲೆ ಮೃತ್ಯುವನ್ನು ಹೊಂದುತ್ತಾನೆ.ನಾನಾತ್ವವಿಲ್ಲದಿದ್ದರೂ ಅಜ್ಞಾನದಿಂದ ಮಾಯೆಯಿಂದ ನಾನಾತ್ವವು ತೋರಿಕೊಳ್ಳುತ್ತದೆ.ಇರುವುದೊಂದೇ .ಎರಡಾಗಿ ಕಾಣುವುದು ಮಿಥ್ಯೆ. ಎರಡನೆಯದಿಲ್ಲದಿರುದೇ ಜ್ಞಾನ.ಯಾರಿಗೆ ಜ್ಞಾನವು ಒಮ್ಮೆಗೇ ಅಳವಡುವುದಿಲ್ಲವೋ ಅವರಿಗೆ ಉಪಾಸನೆಯೇ ಗತಿ ೯.

ಧೀಮಂತನಾದ ಬ್ರಾಹ್ಮಣನು ಆತ್ಮನನ್ನೇ ತಿಳಿದುಕೊಂಡು ಪ್ರಜ್ಞೆಯನ್ನು ಅವಲಂಬಿಸಬೇಕು.ಬಹು ಶಬ್ದಗಳನ್ನು ಚಿಂತಿಸಕೂಡದು. ಏಕೆಂದರೆ ಅದು ವಾಗಿಂದ್ರಿಯಕ್ಕೆ ಶ್ರಮವನ್ನುಂಟು ಮಾಡುತ್ತದೆ. ವಿಜ್ಞಾನಮಯನೂ, ಜನ್ಮರಹಿತನೂ,  ಇಂದ್ರಿಯಗಳ ಮಧ್ಯದಲ್ಲಿರುವವನೂ, ಆದ ಈ ಆತ್ಮನು ಹೃದಯಾಕಾಶದಲ್ಲಿ ಇರುತ್ತಾನೆ.ಅವನು ಸವ೯ನಿಯಾಮಕನು ಎಲ್ಲರ  ಪ್ರಭುವು.ಅಧಿಪತಿಯು,ಅವನು ಶಾಸ್ತ್ರವಿಹಿತವಾದ ಕಮ೯ದಿಂದ ವಧಿ೯ಸುವುದಿಲ್ಲ. ಶಾಸ್ತ್ರ ಪ್ರತಿಶಿದ್ಧ ಕಮ೯ದಿಂದ ಅಲ್ಪನಾಗುವುದಿಲ್ಲ.ಇವನು ಸವೇ೯ಶ್ವರನು. ಸವ೯ಪ್ರಾಣಿಗಳ ಅಧಿಪತಿಯು. ಸವ೯ಪ್ರಾಣಿಗಳ ಪಾಲಕನು. ಈ ಲೋಕಗಳ ಪರಸ್ಪರ ಮಿಶ್ರಣವಾಗದಿರುವುದಕ್ಕೆ ಇವನು ವಿಧಾರಕನಾದ ಸೇತು.ಈ ಆತ್ಮಲೋಕವನ್ನು ಅರಿತುಕೊಂಡವನಿಗೆ ಅಕ್ಷಯವಾದ ಸವಾ೯ತ್ಮಭಾವವೆಂಬ ಫಲ ಉಂಟಾಗುತ್ತದೆ10.

ಇವನನ್ನು ಅರಿತುಕೊಂಡವನು ಮುನಿಯಾಗುತ್ತಾನೆ.ಸನ್ಯಾಸಿಗಳು ಈ ಆತ್ಮಲೋಕವನ್ನೇ ಬಯಸುತ್ತಾ ಪ್ರವ್ರಜನ ಮಾಡುತ್ತಾರೆ.ಈ ಆತ್ಮನನ್ನೇ ಈ ಲೋಕವನ್ನೇ ಹೊಂದಿರುವ ನಾವು ಸಂತತಿಯಿಂದ ಏನನ್ನು ಮಾಡಿಕೊಳ್ಳೋಣ ಎಂದು ಯೋಚಿಸಿ ಹಿಂದಿನ ಬ್ರಹ್ಮಜ್ಞಾನಿಗಳೂ ಸಂತತಿಯನ್ನು ಬಯಸಲಿಲ್ಲ.ಅವರು ಪುತ್ರರಲ್ಲಿ ವಿತ್ತದಲ್ಲಿ ಲೋಕಗಳಲ್ಲಿ ಇರುವ ಕಾಮನೆಯನ್ನು ಬಿಟ್ಟು ಭಿಕ್ಷಾಚಯೆ೯ಯನ್ನು ಮಾಡುತ್ತಾರೆ.ಯಾವುದು ಪುತ್ರ ಕಾಮನೆಯೋ ಅದು ವಿತ್ತಕಾಮನೆ,ಅದೇ ಲೋಕಕಾಮನೆ,ಏಕೆಂದರೆ ಇವೆಲ್ಲವೂ ಕಾಮನೆಗಳೇ ಆಗಿರುತ್ತವೆ.

'ಹೀಗಲ್ಲ ಹೀಗಲ್ಲ'(ನೇತಿ ನೇತಿ)ಎಂದು ಹೇಳಲ್ಪಟ್ಟಿರುವ ಅವನೇ ಈ ಆತ್ಮನು.ಅವನು ಅಗ್ರಹ್ಯನು ಏಕೆಂದರೆ ಅವನನ್ನು ಹಿಡಿಯಲಾಗುವುದಿಲ್ಲ.ಅವನು ಅಕ್ಷಯನು ಏಕೆಂದರೆ ಕ್ಷೀಣನಾಗುವುದಿಲ್ಲ.ಅವನು ಅಸಂಗನು ಏಕೆಂದರೆ ಆಸಕ್ತನಾಗುವುದಿಲ್ಲ. ಅವನು ಬಂಧರಹಿತನು ಆದುದರಿಂದ ವ್ಯಥೆಪಡುವುದಿಲ್ಲ.ಪಾಪ ಪುಣ್ಯಗಳು ಇವನನ್ನು ವ್ಯಾಕುಲ ಗೊಳಿಸುವುದಿಲ್ಲ.ಇವನು ಇವೆರಡನ್ನೂ ದಾಟಿರುತ್ತಾನೆ.ಮಾಡದ್ದು ಮಾಡದಿರುವುದು ಇವನನ್ನು ತಪಿಸುವುದಿಲ್ಲ.ವೇದಾನುವಚನ,ಯಜ್ಞ,ದಾನ,ತಪಸ್ಸು ಇವು ಸತ್ವಶುದ್ಧಿಯ ದ್ವಾರಾ ಆತ್ಮಜ್ಞಾನಕ್ಕೆ ಕಾರಣಗಳಾಗಿವೆ.ಜ್ಞಾನವು ಇಲ್ಲದ್ದನ್ನು ಉಂಟು ಮಾಡುವುದಿಲ್ಲ.ಇರುವುದನ್ನು

ಇದ್ದಂತೆ ತಿಳಿಸುತ್ತದೆ11.

 ಅವನು ಕನಸುಕಾಣುವಾಗ ಸವ೯ಪಾಲಕವಾದ ಈ ಶರೀರದ ಒಂದು ಅಂಶವನ್ನು ತೆಗೆದುಕೊಂಡು ತನ್ನ ಶರೀರವನ್ನು ಅಚೇತನಗೊಳಿಸಿ ಸ್ವಪ್ನಶರೀರವನ್ನು ನಿಮಿ೯ಸಿಕೊಂಡು ತನ್ನ ಜ್ಯೋತಿಯಿಂದ ತನ್ನ ಪ್ರಕಾಶವನ್ನು ವ್ಯಕ್ತಗೊಳಿಸಿ ಕನಸುಕಾಣುತ್ತಾನೆ.ಈ ಅವಸ್ಥೆಯಲ್ಲಿ ಪುರುಷನು ಸ್ವಯಂ ಜ್ಯೋತಿಯಾಗಿರುತ್ತಾನೆ.ಸ್ವಪ್ನದಲ್ಲಿ ರಥಗಳಾಗಲೀ ಅವುಗಳಿಗೆ ಕಟ್ಟಲ್ಪಡುವ ಕುದುರೆಯೇ ಮುಂತಾದ ಪ್ರಾಣಿಗಳಾಗಲೀ ಇರುವುದಿಲ್ಲ.ಅವನು ರಥಗಳನ್ನು ಪ್ರಾಣಿಗಳನ್ನು ಸೃಷ್ಟಿಸಿಕೊಳ್ಳುತ್ತಾನೆ.ಅಲ್ಲಿ ಆನಂದಗಳಾಗಲೀ ಹಷ೯ಗಳಾಗಲೀ ಪ್ರಮೋದಗಳಾಗಲೀ ಇರುವುದಿಲ್ಲ. ಆದರೆ ಅವನು ಆನಂದಗಳನ್ನೂ ಹಷ೯ಗಳನ್ನೂ ಪ್ರಮೋದಗಳನ್ನೂ ಸೃಷ್ಟಿಸಿಕೊಳ್ಳುತ್ತಾನೆ.ಏಕೆಂದರೆ ಅವನು ಕತೃ೯ವು.

ಜಾಗ್ರದವಸ್ಥೆಯೂ ಕೂಡಾ ಒಂದು ಸ್ವಪ್ನವೇ.ಸುಷುಪ್ತಿಯಲ್ಲಿ ಅವಿದ್ಯೆಯು ನಾಶವಾಗಿರುದಿಲ್ಲ.ಅದರ ಅಭಿವ್ಯಕ್ತತೆ ಮಾತ್ರ ಇರುವುದಿಲ್ಲ. ಸುಷುಪ್ತಿಯಲ್ಲಿ ಅವನು ನೋಡದಿರುವುದಕ್ಕೆ ಕಾರಣವೇನೆಂದರೆ ಆಗ ಅವನು ನಿಜವಾಗಿ ನೋಡುತ್ತಿದ್ದರೂ ನೋಡುವುದಿಲ್ಲ.ಏಕೆಂದರೆ ದೃಷ್ಟøವು ಅವಿನಾಶಿಯಾಗಿರುವುದರಿಂದ ದ್ರಷ್ಟøವಿನ ದೃಷ್ಟಿಗೆನಾಶವಿಲ್ಲ.ಆದರೆ ನೋಡಬೇಕಾದ ಆ ಎರಡನೇ ವಸ್ತುವು ತನಗಿಂತ ಬೇರೆಯಾಗಿ ವಿಂಗಡವಾಗಿರುವುದಿಲ್ಲ.

ಈ ಆತ್ಮವನ್ನು ಅರಿತುಕೊಂಡವನಾಗಿ ವಾಮದೇವ ಋಷಿಯು "ನಾನೇ ಮನುವಾಗಿದ್ದೇನೆ ಸೂಯ೯ನೂ ಆಗಿದ್ದೇನೆ"ಎಂದು ಅನುಭವದಿಂದ ಕಂಡುಕೊಂಡನು. ಆದರೆ ಎಲ್ಲಿ ಭಿನ್ನವಾಗಿ ಮತ್ತೊಂದರಂತೆ ತೋರುವುದೋ ಅಲ್ಲಿ ಒಬ್ಬನು ಮತ್ತೊಂದರಂತೆ ಇರುವುದೋ ಅಲ್ಲಿಒಬ್ಬನು ಇನ್ನೊಂದನ್ನು ಕಾಣಬಲ್ಲನು.ಸೃಷ್ಟಿಗಿಂತ ಮುಂಚೆ ಇಲ್ಲಿ ಏನೊಂದೂ ಇರಲಿಲ್ಲ.ಅವನು ಉಸಿರಾಡುವಾಗ ಮಾತ್ರವೇ  ಪ್ರಾಣವು ಎಂದಾಗುತ್ತಾನೆ.ಮಾತನಾಡುವಾಗ ವಾಕ್ ಆಗಿರುತ್ತಾನೆ.ನೋಡುವಾಗ ಕಣ್ಣು ಎಂದೆನಿಸುತ್ತಾನೆ. ಕೇಳುವಾಗ ಶ್ರೋತೃವೆನಿಸುತ್ತಾನೆ. ಮನನ ಮಾಡುವಾಗ ಮನಸ್ಸು ಎನಿಸುತ್ತಾನೆ.ಹೀಗೆ ಇವೆಲ್ಲವೂ ಅವನಿಗೆ ಆಯಾ ಕ್ರಿಯೆಗಳಿಂದ ಹುಟ್ಟಿರುವ ಹೆಸರುಗಳೇ ಆಗಿರುತ್ತವೆ.

ಪ್ರಮಾತೃವಾಗಿರುತ್ತಾನೆ.ಯಾರು ಆಗಮಗಳಿಂದ ನೇರವಾಗಿ ಅನುಭವವನ್ನು ಪಡೆದುಕೊಳ್ಳುವಷ್ಟು ಬುದ್ಧಿಯಿರುವುದಿಲ್ಲವೋ ಅವರಿಗಾಗಿ ಅದೇ ಅನುಭವವನ್ನು ತಂದುಕೊಳ್ಳುವುದಕ್ಕಾಗಿ ಉಪಯೋಗಿಸುವ ಅವಾಂತರ ಅನುಭವಗಳ ಯೋಜನೆಯೇ ಉಪನಿಷತ್ತು.ಬ್ರಹ್ಮವನ್ನು ತಿಳಿದವನು ಇಲ್ಲಿಯೇ ಬ್ರಹ್ಮವಾಗಿದ್ದುಕೊಂಡು ಬ್ರಹ್ಮದಲ್ಲಿ ಸೇರಿ ಹೋಗುತ್ತಾನೆ12.ತಾನು ಕೃತ ಕೃತ್ಯನೆಂಬ ಅನುಭವವು ಜ್ಞಾನಿಗೆ ಇಲ್ಲಿಯೇ ಆಗುತ್ತದೆ.ಈ ಸಂಸಾರದಲ್ಲಿಯೇ ಬ್ರಹ್ಮವನ್ನು ಅರಿಯಬೇಕು.13.

ಬ್ರಹ್ಮವು ವಿಜ್ಞಾನಮಯನು,ಮನೋಮಯನು, ಪ್ರಾಣಮಯನು, ಚಕ್ಷುಮ೯ಯನು, ಶ್ರೋತ್ರಮಯನು, ಪೃಥ್ವೀಮಯನು ತೇಜೋಮಯನು,ಅತೇಜೋಮಯನು,ಕಾಮಮಯನು,ಅಕಾಮಮಯನು.ಕ್ರೋಧಮಯನು ಅಕ್ರೋಧಮಯನು, ಧಮ೯ಮಯನು, ಅಧಮ೯ಮಯನು, ಸವ೯ಮಯನು, ಇವನು ಇಹಮಯನು ,  ಅಧೋಮಯನು . ಸಾಧುಶಾಲಿಯಾದವನು ಸಾಧುವಾಗುತ್ತಾನೆ.

ಪಾಪಕಾರಿಯಾದವನು ಪಾಪಿಯಾಗುತ್ತಾನೆ. ಪುಣ್ಯಕಮ೯ದಿಂದ ಪುಣ್ಯವಂತನಾಗುವನು. ಈ ಪುರುಷನು ಪಾಮಮಯನು.ಅವನು ಎಂಥಾ ಕಾಮದವನೋ ಅಂಥ ಕಮ೯ವನ್ನು ಪಡೆಯುತ್ತಾನೆ.ಆದುದರಿಂದ ಕಾಮವೇ ಸಂಸಾರಕ್ಕೆ ಕಾರಣ.ಜ್ಞಾನಿಯಾದವನು ಸಂಧಿಯಿಲ್ಲದೆ ಕೆಲಸವನ್ನು ಮಾಡಿದರೆ ಪುನಜ೯ನ್ಮವನ್ನುಂಟು ಮಾಡುವುದಿಲ್ಲ.ಪಾಪ ಪುಣ್ಯಗಳೂ ಉದಯಿಸುವುದಿಲ್ಲ.    

ಯಾವನಿಂದ ಇದೆಲ್ಲವನ್ನೂ ತಿಳಿದುಕೊಳ್ಳುತ್ತಾನೆಯೋ ಅವನನ್ನು ಯಾವುದರಿಂದ ತಿಳಿದುಕೊಂಡಾನು?'ಹೀಗಲ್ಲ ಹೀಗಲ್ಲ'(ನೇತಿ ನೇತಿ) ಎಂದು ಹೇಳಲ್ಪಟ್ಟಿರುವ ಅವನೇ ಈ ಆತ್ಮನು.ಅವನು ಅಗ್ರಹ್ಯನು_ಏಕೆಂದರೆ ಅವನನ್ನು ಹಿಡಿಯಲಾಗುವುದಿಲ್ಲ.ಅವನು ಅಕ್ಷಯನು_ಏಕೆಂದರೆ ಕ್ಷೀಣನಾಗುವುದಿಲ್ಲ.ಅವನು ಅಸಂಗನು _ಏಕೆಂದರೆ ಅವನು ಬಂಧರಹಿತನು.ಆದುದರಿಂದ ವ್ಯಥೆಪಡುವುದಿಲ್ಲ.ಮೈತ್ರೇಯಿ,ಹೀಗೆ ನೀನು ಅನುಶಾಸಿತಳಾಗಿರುವೆ.ಇಷ್ಟೇ ಅಮೃತತ್ವಕ್ಕೆ ಸಾಧನವು. ಸನ್ಯಾಸದಲ್ಲಿ ಪಯ೯ವಸಾನವಾಗುವ ಬ್ರಹ್ಮವಿದ್ಯೆಯು ಮುಗಿಯಿತು. ಇಷ್ಟೇಉಪದೇಶ. ಇದೇ ವೇದಾನುಶಾಸನ. ಇದೇ ಪರಮ ನಿಷ್ಠೆ. ಇದೇ ಪುರುಷಾಥ೯ ಕತ೯ವ್ಯದ ಕೊನೆ.

ಐದನೆಯ ಅಧ್ಯಾಯದ ಮೊದಲನೆಯ ಬ್ರಾಹ್ಮಣದಲ್ಲಿ ದಾಂತರಾಗಿರಿ,ದಾನವಂತರಾಗಿರಿ,ದಯÁವಂತರಾಗಿರಿ ಎಂದು ಹೇಳಿದೆ.ಮೂರನೆಯ ಬ್ರಾಹ್ಮಣವು ಈ ಹೃದಯವು ನಾಮ ರೂಪ ಕಮ೯ಗಳ ಪ್ರತಿಷ್ಠೆಯೆಂದೂ ಸವ೯ ಪÁ್ರಣಿಗಳ ಆತ್ಮನೆಂದೂ ಹೇಳಿದೆ. ಈ ಹೃದಯವು ಬುದ್ಧಿಯು.ಅದು ಬ್ರಹ್ಮ.ಅದು ಎಲ್ಲವೂ.ನಾಲ್ಕನೆಯ ಬ್ರಾಹ್ಮಣದಲ್ಲಿಪ್ರಥಮಜನೆಂದರೆ ಬ್ರಹ್ಮವೆಂದು ಹೇಳಿದೆ.ಮೂತ೯ ಮತ್ತು ಅಮೂತ೯ವಸ್ತುಗಳಿಗಿಂತ ,ಎಲ್ಲಾ ಸಂಸಾರಿಗಳಿಗಿಂತ ಬ್ರಹ್ಮನು ಮೊದಲೇ ಹುಟ್ಟಿದನು.ಐದನೆಯ ಬ್ರಾಹ್ಮಣದಲ್ಲಿ ನೀರು_ಸತ್ಯ_ಹಿರಣ್ಯಗಭ೯_ಪ್ರಜಾಪತಿ _ದೇವತೆಗಳುಸತ್ಯವನ್ನೇ ಉಪಾಸಿಸುತ್ತಾರೆ.'ಸ' ಮತ್ತು 'ಯ'ಅಕ್ಷರಗಳು ಸತ್ಯವು.'ತಿ'ಅಕ್ಷರವು ಅನೃತವು.ಆರನೆಯ ಬ್ರಾಹ್ಮಣದಲ್ಲಿಈ ಪುರುಷನು  ಮನೋಮಯನು, ಭಾಸ್ವರನು,ಬತ್ತದ ಕಾಳಿನಂತೆ ಅಥವಾ ಯವೆಯ ಕಾಳಿನಂತೆ ಅಂತಹೃ೯ದಯದಲ್ಲಿ ಕಾಣುತ್ತಾನೆ.ಇವನು ಎಲ್ಲರ ಈಶ, ಅಧಿಪತಿ ಮತ್ತು ಇರುವುದನ್ನೆಲ್ಲ ಶಾಸನಮಾಡುತ್ತಾನೆ.ಏಳನೆಯ ಬ್ರಾಹ್ಮಣದಲ್ಲಿ ವಿದ್ಯುತ್ತು ಬ್ರಹ್ಮವೆಂದು ಹೇಳಿದೆ.ಎಂಟನೆಯ ಬ್ರಾಹ್ಮಣದಲ್ಲಿ ವೇದವನ್ನು ಧೇನು ಎಂದು ಉಪಾಸಿಸಬೇಕು.ಸ್ವಾಹಾ,ವಷಟ್,ಹಂತ,ಸ್ವಧಾ.ಇವು ಅದರ ಕೆಚ್ಚಲುಗಳು ಎಂದು ಹೇಳಿದೆ.

ಒಂಬತ್ತನೆಯ ಬ್ರಾಹ್ಮಣದಲ್ಲಿ  ಪುರುಷನಲ್ಲಿರುವ  ಮತ್ತು ತಿನ್ನಲ್ಪಟ್ಟ ಆಹಾರವನ್ನು ಪಚನಮಾಡುವ ಈ ಅಗ್ನಿಯು ವೈಶ್ವಾನರನೆಂದು ಹೇಳಿದೆ.ಹತ್ತನೆಯ ಬ್ರಾಹ್ಮಣದಲ್ಲಿ ಹಿಂದಿನವರಿಂದ ಉಪಾಸನೆಗಳನ್ನು ಅರಿತವನು ಹೋಗುವ ಮಾಗ೯ವನ್ನು ಹೊಂದುವ ಫಲವನ್ನು ಹೇಳಿದೆ.ಹನ್ನೊಂದನೆಯ ಬ್ರಾಹ್ಮಣದಲ್ಲಿಅನ್ನವೇ 'ವಿ'ಪ್ರಾಣವೇ 'ರಂ' ಎಂದು  ಹೇಳಿದೆ.ಏಕೆಂದರೆ ಪ್ರಾಣಿಗಳೆಲ್ಲಾ ಪ್ರಾಣವಿದ್ದರೆ ರಮಿಸುತ್ತವೆ.ಹದಿಮೂರನೆಯ ಬ್ರಾಹ್ಮಣವು ಪ್ರಾಣವೇ ಉಕ್ಥವು, ಏಕೆಂದರೆ ಅದು ಇವೆಲ್ಲವನ್ನೂ ಎತ್ತಿ ಹಿಡಿದಿರುತ್ತದೆ.ಪ್ರಾಣವನ್ನು ಯಜುಸ್ಸು,ಸಾಮ,ಕ್ಷತ್ತ್ರವೆಂದು ಉಪಾಸಿಸಬೇಕು .ಯಾವುದು ಕ್ಷತಿ ಅಥವಾ ಗಾಯದಿಂದ ಕಾಪಾಡುತ್ತದೆಯೋ ಅದೇ ಕ್ಷತ್ರ.

ಹದಿನಾಲ್ಕನೆಯ ಬ್ರಾಹ್ಮಣದಲ್ಲಿ  ಬ್ರಹ್ಮವನ್ನು ಗಾಯತ್ರಿ ಸ್ವರೂಪದಲ್ಲ್ರಿ ಉಪಾಸಿಸಲು ಹೇಳಿದೆ.

ಗಾಯತ್ರಿಯ ಮೊದಲನೇ ಪಾದ_ಭೂಮಿ,ಅಂತರಿಕ್ಷ,ದ್ಯುಲೋಕ.

ಎರಡನೇ ಪಾದ_ಋಕ್,ಯಜುಸ್ಸು,ಸಾಮ (ತ್ರಯೀವಿದ್ಯೆಗಳು)

ಮೂರನೆಯ ಪಾದ_ಪ್ರಾಣ,ಅಪಾನ,ವ್ಯಾನ.

ನಾಲ್ಕನೆಯ ಪಾದ_ತುರೀಯ.

ಹದಿನೈದನೆಯ ಬ್ರಾಹ್ಮಣವು ಹೀಗೆ ಹೇಳುತ್ತದೆ.ಸೂಯ೯ನು ಜಗತ್ತನ್ನು ಪೋಷಿಸುವುದರಿಂದ ಪೂಷನ್. ಒಬ್ಬನೇ ಋಷಿಯಾದುದರಿಂದ ಏಕಷಿ೯.ಸೂಯ೯ನು ಏಕಾಂಗಿಯಾಗಿ ಸಂಚರಿಸುತ್ತಾನೆ.

 ಆರನೆಯ ಅಧ್ಯಾಯದ ಮೊದಲನೆಯ ಬ್ರಾಹ್ಮಣವು ಪ್ರಾಣವೇ ಜ್ಯೇಷ್ಠ ಮತ್ತು ಶ್ರೇಷ್ಠ ಎಂಬುದನ್ನು ಪ್ರಾಣ ಸಂವಾದದ ಮೂಲಕ ತಿಳಿಸುತ್ತದೆ.ಎರಡನೆಯ ಬ್ರಾಹ್ಮಣವು ಪಂಚಾಗ್ನಿವಿದ್ಯೆ ಮತ್ತು ದೇವಯಾನವನ್ನು ಕುರಿತು ಹೇಳುತ್ತದೆ. ದ್ಯುಲೋಕ(ಶ್ರದ್ಧೆ), ಪಜ೯ನ್ಯ(ಸೋಮ), ಈಲೋಕ(ಮಳೆ), ಪುರುಷ(ಅನ್ನ) ಸ್ರ್ತೀ(ರೇತಸ್ಸು)ಇವೇ ಪಂಚಾಗ್ನಿಗಳು. ಈ ಅಗ್ನಿಯಲ್ಲಿ ದೇವತೆಗಳು ಹೋಮ ಮಾಡುತ್ತಾರೆ.ಐದನೇ ಆಹುತಿಯಲ್ಲಿ ನೀರೇ ಪುರುಷ ವಾಕ್ಕಾಗಿ ಎದ್ದು ನಿಲ್ಲುತ್ತದೆ.ಮೂರನೆಯ ಬ್ರಾಹ್ಮಣವು 'ಜ್ಞಾನವು ಮತ್ತೊಂದು ಸಾಮಗ್ರಿಯನ್ನು ಅಪೇಕ್ಷಿಸದೆ ಸ್ವತಂತ್ರವಾಗಿರುತ್ತದೆ.ಆದರೆ ಕಮ೯ವು ದೈವ,ಮನುಷ್ಯ,ವಿತ್ತಗಳನ್ನು ಅವಲಂಬಿಸಿರುತ್ತದೆ'ಎಂದು ಹೇಳುತ್ತದೆ. ಈ ಅಧ್ಯಾಯದಲ್ಲಿ ಬ್ರಹ್ಮವಿದ್ಯೆಗೆ ಸಂಬಂಧಪಟ್ಟನೇರವಾದ ವಿಷಯಗಳಿಲ್ಲ.ನಾಲ್ಕನೆಯ ಬ್ರಾಹ್ಮಣವು ಶ್ರೀಮಂಥ ಕಮ೯ವನ್ನು ಕುರಿತು ಹೇಳುತ್ತದೆ.ಐದನೆಯ ಬ್ರಾಹ್ಮಣದಲ್ಲಿಆಚಾಯ೯ ಪರಂಪರೆಯನ್ನು ಹೇಳಿದೆ.

ಈ ಶರೀರವನ್ನು ಪ್ರವೇಶಿಸಿರುವ ಪರಮಾತ್ಮನನ್ನು ಯಾವನು ಪಡೆದುಕೊಂಡಿರುವನೋ ಮತ್ತು ಸಾಕ್ಷಾತ್ಕರಿಸಿರುವನೋ ಅವನು ವಿಶ್ವದ ಕತೃ೯ವಾಗಿರುತ್ತಾನೆ.ಅವನು ಎಲ್ಲದರ ಕತೃ೯ವು.ಸವ೯ವೂ ಅವನ ಆತ್ಮವಾಗಿದೆ ಮತ್ತು ಅವನು ಎಲ್ಲದರ ಆತ್ಮನಾಗಿರುತ್ತಾನೆ.ಯಾವಾಗ ಪುರುಷನು ಆಚಾಯ೯ನಿಂದ ಅನುಗ್ರಹೀತನಾಗಿ  ಪ್ರಕಾಶಮಾನವಾದ ಆತ್ಮನನ್ನು ಸಾಕ್ಷಾತ್ತಾಗಿ ನೋಡುತ್ತಾನೆಯೋ ಆಗ ಅವನಿಂದ ಕಾಪಾಡಿಕೊಳ್ಳಲು ಇಚ್ಛಿಸುವುದಿಲ್ಲ.ಇವನು ಸವ೯ವನ್ನೂ ಆತ್ಮನನ್ನಾಗಿ ನೋಡುವನು.ಇವನು ಯಾರನ್ನೂ ನಿಂದಿಸುವುದಿಲ್ಲ.

ಇಲ್ಲಿ ನಾನಾತ್ವವು ಸ್ವಲ್ಪವೂ ಇಲ್ಲ.ಯಾವನು ಇಲ್ಲಿ ನಾನಾತ್ವವಿರುವಂತೆ ನೋಡುತ್ತಾನೆಯೋ ಅವನು ಮೃತ್ಯುವಿನಮೇಲೆ ಮೃತ್ಯುವನ್ನು ಹೊಂದುತ್ತಾನೆ.ನಾನಾತ್ವವಿಲ್ಲದಿದ್ದರೂ ಅಜ್ಞಾನದಿಂದ ಮಾಯೆಯಿಂದ ನಾನಾತ್ವವು ತೋರಿಕೊಳ್ಳುತ್ತದೆ.ಇರುವುದೊಂದೇ. ಎರಡಾಗಿ ಕಾಣುವುದು ಮಿಥ್ಯೆ.ಎರಡಾಗಿ ಕಾಣುವುದು ಮಿಥ್ಯೆ.ಎರಡನೆಯದಿಲ್ಲದಿರುದೇ ಜ್ಞಾನ.

ಪತಿಯ ಪ್ರಯೋಜನಕ್ಕಾಗಿ ಪತಿಯು ಪತ್ನಿಗೆಪ್ರಿಯನಾಗಿರುವುದಿಲ್ಲ.ತನ್ನ (ಪತ್ನಿಯ)ಪ್ರಯೋಜನಕ್ಕಾಗಿ ಪತಿಯು ಪ್ರಿಯನಾಗಿರುತ್ತಾನೆ.ಪತ್ನಿಯ ಪ್ರಯೋಜನಕ್ಕಾಗಿ ಪತ್ನಿಯು (ಪತಿಗೆ)ಪ್ರಿಯಳಾಗಿರುದಿಲ್ಲ.ತನ್ನ(ಪತಿಯ) ಪ್ರಯೋಜನಕ್ಕಾಗಿ ಪತ್ನಿಯು ಪ್ರಿಯಳಾಗಿರುತ್ತಾಳೆ.ಮಕ್ಕಳ ಪ್ರಯೋಜನಕ್ಕಾಗಿ ಮಕ್ಕಳು (ತಂದೆ ತಾಯಿಗಳಿಗೆ ಪ್ರಿಯರಾಗಿರುವುದಿಲ್ಲ.ತನ್ನ(ತಂದೆ ತಾಯಿಗಳ)ಪ್ರಯೋಜನಕ್ಕಾಗಿ ಮಕ್ಕಳು ಪ್ರಿಯರಾಗಿರುತ್ತಾರೆ.ಧನದ ಪ್ರಯೋಜನಕ್ಕಾಗಿ ಧನವು ಪ್ರಿಯವಾಗಿರುವುದಿಲ್ಲ.ತನ್ನ (ಮನುಷ್ಯನ) ಪ್ರಯೋಜನಕ್ಕಾಗಿ ಧನವು ಮನುಷ್ಯರಿಗೆ ಪ್ರಿಯವೆ,ಗಿರುತ್ತದೆ.ಪಶುಗಳ ಪ್ರಯೋಜನಕ್ಕಾಗಿ ಪಶುಗಳು ಪ್ರಿಯವಾಗಿರುವುದಿಲ್ಲ.ತನ್ನಪ್ರಯೋಜನಕ್ಕಾಗಿಯೇ ಪಶುಗಳು ಪ್ರಿಯವಾಗಿರುತ್ತವೆ.ಬ್ರಾಹ್ಮಣನ ಪ್ರಯೋಜನಕ್ಕಾಗಿ ಬ್ರಾಹ್ಮಣನು ಪ್ರಿಯವಾಗಿರುವುದಿಲ್ಲ.ತನ್ನ(ಇತರರ) ಪ್ರಯೋಜನಕ್ಕಾಗಿಬ್ರಾಹ್ಮಣನು ಇತರರಿಗೆ ಪ್ರಿಯವಾಗಿರುತ್ತಾನೆ.ಇದೇ ರೀತಿಯಲ್ಲಿ,ಲೋಕಗಳು, ಕ್ಷತ್ರಿಯ,ದೇವತೆಗಳಿಗೂ ವೇದಗಳಿಗೂ ಅನ್ವಯಿಸಿಕೊಳ್ಳಬೇಕು.ಎಲ್ಲದರ ಪ್ರಯೋಜನಕ್ಕಾಗಿ ಎಲ್ಲವೂ ಪ್ರಿಯವಾಗಿರುವುದಿಲ್ಲ. ತನ್ನಪ್ರಯೋಜನಕ್ಕಾಗಿ ಎಲ್ಲವೂ ಪ್ರಿಯವಾಗಿರುತ್ತವೆ. ಆತ್ಮನನ್ನು ನೋಡಬೇಕು_ಶ್ರವಣಮಾಡಬ್‍ಏಕು, ಮನನ ಮಾಡಬೇಕು, ನ್ದÁ್ದ್ಧ್ಯಸನ ಮಾಡಬೇಕು. ಆತ್ಮನನ್ನು ನೋಡಿದರೆ, ಕೇಳಿದರೆ, ಮನನ ಮಾಡಿದರೆ, ತಿಳಿದುಕೊಂಡರೆ ಇವೆಲ್ಲವೂ ತಿಳಿಯಲ್ಪಡುತ್ತವೆ.

ಹೇಗೆ ಸಮುದ್ರವು ಎಲ್ಲಾ ನೀರುಗಳಿಗೂ ಏಕಮಾತ್ರಗತಿಯೊ ಹಾಗೆಯೇ ಚಮ೯ವು ಎಲ್ಲಾ ಸ್ಪಶ೯ಗಳಿಗೂ ಏಕಮಾತ್ರಗತಿ. ಹಾಗೆಯೇ ಮೂಗು ಎಲ್ಲಾ ಗಂಧಗಳಿಗೂ ಏಕಮಾತ್ರಗತಿ.ನಾಲಗೆಯು ಎಲ್ಲ ರಸಗಳಿಗೂ ಏಕಮಾತ್ರಗತಿ.ಕಣ್ಣು ಎಲ್ಲಾ ರೂಪಗಳಿಗೂ,ಕಿವಿಯು ಎಲ್ಲಾ ಶಬ್ದಗಳಿಗೂ ಮನಸ್ಸು ಎಲ್ಲಾ ಸಂಕಲ್ಪಗಳಿಗೂ, ಬುದ್ಧಿಯು ಎಲ್ಲಾ ವಿದ್ಯೆಗಳಿಗೂ  ,ಕೈಗಳು ಎಲ್ಲಾ ಕಮ೯ಗಳಿಗೂ ಉಪಸ್ಥವು ಎಲ್ಲಾ ಆನಂದಗಳಿಗೂ,ಪಾಯುವು ಎಲ್ಲಾ ವಿಸಗ೯ಗಳಿಗೂ ,ಪಾದಗಳು ಎಲ್ಲಾ ನಡೆಗಳಿಗೂ,ವಾಕ್ಕು ಎಲ್ಲಾ ವೇದಗಳಿಗೂ ಏಕಮಾತ್ರಗತಿ.

ಧೀಮಂತನಾದ ಬ್ರಾಹ್ಮಣನು ಆತ್ಮನನ್ನೇ ತಿಳಿದುಕೊಂಡು ಪ್ರಜ್ಞೆಯನ್ನು ಅವಲಂಬಿಸಬೇಕು.ಬಹುಶಬ್ದಗಳನ್ನು ಚಿಂತಿಸಕೂಡದು. ಏಕೆಂದರೆ ಅದು ವಾಗಿಂದ್ರಿಯಕ್ಕೆ ಶ್ರಮವನ್ನುಂಟು ಮಾಡುತ್ತದೆ. ವಿಜ್ಞಾನಮಯನೂ, ಜನ್ಮರಹಿತನೂ, ಇಂದ್ರಿಯಗಳ ಮಧ್ಯದಲ್ಲಿರುವವನೂ, ಆದ ಈ ಆತ್ಮನು ಹೃದಯಾಕಾಶದಲ್ಲಿ ಇರುತ್ತಾನೆ.ಅವನು ಸವ೯ನಿಯಾಮಕನು ಎಲ್ಲರ  ಪ್ರಭುವು.ಅಧಿಪತಿಯು,ಅವನು ಶಾಸ್ತ್ರವಿಹಿತವಾದ ಕಮ೯ದಿಂದ ವಧಿ೯ಸುವುದಿಲ್ಲ.ಶಾಸ್ತ್ರ ಪ್ರತಿಶಿದ್ಧ ಕಮ೯ದಿಂದ ಅಲ್ಪನಾಗುವುದಿಲ್ಲಿವನು ಸವೇ೯ಶ್ವರನು.ಸವ೯ಪ್ರಾಣಿಗಳ ಅಧಿಪತಿಯು. ಸವ೯ಪ್ರಾಣಿಗಳ ಪಾಲಕನು.ಈ ಲೋಕಗಳ ಪರಸ್ಪರ ಮಿಶ್ರಣವಾಗದಿರುವುದಕ್ಕೆಇವನು ವಿಧಾರಕನಾದ ಸೇತು.

ಈಶಾವಾಸ್ಯ ಉಪನಿಷತ್ತು ಅಡಿ ಟಿಪ್ಪಣಿಗಳು:

1)ಸ್ವಾಮಿ ಆದಿದೇವಾನಂದ,ಈಶಾವಾಸ್ಯ ಉಪನಿಷತ್,ಶ್ರೀರಾಮಕೃಷ್ಣಾಶ್ರಮ, ಯಾದವಗಿರಿ, ಮೈಸೂರು 20.ಐದನೇ ಮುದ್ರಣ 1೯88.ಪುಟ ೯

2)ಶ್ರೀಸಚ್ಚಿದಾನಂದೇಂದ್ರ ಸರಸ್ಚತಿ ಸ್ವಾಮಿಗಳು, ಈಶಾವಾಸ್ಯೋಪನಿಷತ್ ಮಂಜರಿ, ಅಧ್ಯಾತ್ಮ ಪ್ರಕಾಶ ಕಾಯಾ೯ಲಯ,ಹೊಳೆನರಸಿಪುರ,ಹಾಸನಜಿಲ್ಲೆ.ಎರಡನೇ ಮುದ್ರಣ 2001 ಪುಟ2೯.

3) ಅದೇ ಪುಟ 33

4)ಶ್ರೀ ಸಚ್ಚಿದಾನಂದೇದ್ರ ಸರಸ್ವತೀ ಸ್ವಾಮಿಗಳು,ದಶೋಪನಿಷತ್ತುಗಳಸಾರ ಅಧ್ಯಾತ್ಮ ಪ್ರಕಾಶ ಕಾಯಾಲಯ,ಹೊಳೆನರಸಿಪುರ.ಮೊದಲನೇ ಮುದ್ರಣ2002 ಪುಟ3.

ಕೇನೂಪನಿಷತ್ತು ಅಡಿಟಿಪ್ಪಣಿಗಳು:

1) ಶ್ರೀ ಸಚ್ಚಿದಾನಂದೇಂದ್ರ ಸರಸ್ವತಿ ಸ್ವಾಮಿಗಳು, ಕೇನೋಪನ್ಯಾಸ ಮಂಜರಿ,ಅಧ್ಯಾತ್ಮ ಪ್ರಕಾಶ ಕಾಯಾ೯ಲಯ,ಹೊಳೆನರಸಿಪುರ,ನಾಲ್ಕನೆಯ ಮುದ್ರಣ, 2005, ಪುಟ 5

2)ಶ್ರೀ ಸ್ವಾಮಿ ಆದಿದೇವಾನಂದ,ಕೇನೋಪನಿಷತ್,ರಾಮಕೃಷ್ಣಾಶ್ರಮ,ಮೈಸೂರು,ಆರನೆಯ ಮುದ್ರಣ,1೯೯3 ಪುಟ ೯.

3)ಶ್ರೀ ಸಚ್ಚಿದಾನಂದೇಂದ್ರ ಸರಸ್ವತಿ ಸ್ವಾಮಿಗಳು,ದಶೋಪನಿಷತ್ತುಗಳಸಾರ,ಅಧ್ಯಾತ್ಮ ಪ್ರಕಾಶ ಕಾಯಾ೯ಲಯ,ಹೊಳೆನರಸಿಪುರ,ಮೊದಲನೇ ಮುದ್ರಣ,2002 ಪುಟ13

4)ಸ್ವಾಮಿ ಆದಿದೇವಾನಂದ,ಕೇನೋಪನಿಷತ್,ಪೂವೊ೯ಕ್ತ,ಪುಟ21.

ಕಠೋಪನಿಷತ್ತು ಅಡಿಟಿಪ್ಪಣಿಗಳು:

1)ಸ್ವಾಮಿ ಆದಿದೇವಾನಂದ,ಕಠೋಪನಿಷತ್,ಶ್ರೀರಾಮಕೃಷ್ಣಾಶ್ರಮ,ಯಾದವಗಿರಿ, ಮೈಸೂರು.ಐದನೇ ಮುದ್ರಣ,1೯87,ಪುಟ 3

2) ಅದೇ ಪುಟ7

3)ಅದೇ ಪುಟ 27

4)ಅದೇ ಪುಟ 33

5) ಅದೇ ಪುಟ 53

6) ಅದೇ ಪುಟ 61

7)ಸ್ವಾಮಿ ಸೋಮನಾಥಾನಂದ,ಉಪನಿಷತ್ ಭಾವಧಾರೆ, ಶ್ರೀ ರಾಮಕೃಷ್ಣಾಶ್ರಮ,ಯಾದವಗಿರಿ, ಮೈಸೂರು 20 ನಾಲ್ಕನೆಯ ಮುದ್ರಣ1೯8೯

ಪುಟ 154

8) ಅದೇ ಪುಟ 165

೯) ಶ್ರೀ ಸಚ್ಚಿದಾನಂದೇಂದ್ರ ಸರಸ್ವತಿ ಸ್ವಾಮಿಗಳು,ದಶೋಪನಿಷತ್ತುಗಳ ಸಾರ,ಅಧ್ಯಾತ್ಮ ಪ್ರಕಾಶ ಕಾಯಾ೯ಲಯ.ಹೊಳೆನರಸಿಪುರ,ಹಾಸನ

ಜಿಲ್ಲೆ.ಮೊದಲನೇ  ಮುದ್ರಣ2002 ಪುಟ 47

10) ಅದೇ ಪುಟ 48.                       

ಪ್ರಶ್ನೋಪನಿಷತ್ತು ಅಡಿಟಿಪ್ಪಣಿಗಳು:

1)  ಸ್ವಾಮಿ ಆದಿದೇವಾನಂದ,ಪ್ರಶ್ನೋಪನಿಷತ್,ರಾಮಕೃಷ್ಣಾಶ್ರಮ, ಯಾದವಗಿರಿ,ಮೈಸೂರು,É,೯೯3 ಪುಟ28

2) ಅದೇ ಪುಟ 48

3) ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮಿಗಳು,್ರಪ್ರಶ್ನೋಪನ್ಯಾಸ ಮಂಜರಿ,ಅಧ್ಯಾತ್ಮ ಪ್ರಕಾಶ ಕಾಯಾ೯ಲಯ,ಹೊಳೆನರಸೀಪುರ,ಎರಡನೇ ಮುದ್ರಣ,1೯೯7 ಪುಟ86

4)ಅದೇ ಪುಟ30೯

5)ಸ್ವಾಮಿ ಸೋಮನಾಥಾನಂದ,ಉಪನಿಷತ್ ಭಾವಧಾರೆ,ಶ್ರೀ ರಾಮಕೃಷ್ಣಾಶ್ರಮ,ಮೈಸೂರು.ನಾಲ್ಕನೆಯ ಮುದ್ರಣ,1೯8೯ ಪುಟ287

ಮುಂಡಕೋಪನಿಷತ್ತು ಅಡಿಟಿಪ್ಪಣಗಳು:                                         

1) ಸ್ವಾಮಿ ಆದಿದೇವಾನಂದ,ಮುಂಡಕೋಪನಿಷತ್.ಶ್ರೀರಾಮಕೃಷ್ಣಾಶ್ರಮ,ಮೈಸೂರು.ಐದನೇ ಮುದ್ರಣ,1೯೯3 ಪುಟ 4

2)ಅದೇ ಪುಟ 10

3)ಅದೇ ಪುಟ23

4)ಶ್ರೀ ಸಚ್ಚಿದಾನಂದ ಸರಸ್ವತೀ ಸ್ವಾಮಿಗಳು ಮುಂಡಕೋಪನ್ಯಾಸ ಮಂಜರಿ, ಅಧ್ಯಾತ್ಮ ಪ್ರಕಾಶ ಕಾಯಾ೯ಲಯ,ಹೊಳೆನರಸೀಪುರ ಎರಡನೇ ಮುದ್ರಣ200೯ ಪುಟ2

5)ಅದೇ ಪುಟ3

6)ಅದೇ ಪುಟ43

7) ಸ್ವಾಮಿ ಸೋಮನಾಥಾನಂದ,ಉಪನಿಷತ್ ಭಾವಧಾರೆ,ಶ್ರೀರಾಮಕೃಷ್ಣಾಶ್ರಮ,ಮೈಸೂರುನಾಲ್ಕನೆಯ ಮುದ್ರಣ,1೯8೯,ಪುಟ452

8) ಶ್ರೀ ಸಚ್ಚಿದಾನಂದೆಂದ್ರ ಸರಸ್ವತೀ ಸ್ವಾಮಿಗಳು,ದಶೋಪನಿಷತ್ತುಗಳಸಾರ,ಅಧ್ಯಾತ್ಮ ಪ್ರಕಾಶ ಕಾಯಾ೯ಲಯ,ಹೊಳೆನರಸೀಪುರ,ಮೊದಲನೇ ಮುದ್ರಣ 2002 ಪುಟ 48.

  ಮಾಂಡೂಕ್ಯ ಉಪನಿಷತ್  ಅಡಿಟಿಪ್ಪಣಿಗಳು:

1) ಸ್ವಾಮಿ ಸಚ್ಚಿದಾನಂದೇಂದ್ರ ಸರಸ್ವತಿ. ಮಾಂಡೂಕ್ಯ ಉಪನಿಷತ್ ಮಂಜರಿ, ಅಧ್ಯಾತ್ಮ ಪ್ರಕಾಶ ಕಾಯಾ೯ಲಯ,ಹೊಳೆನರಸೀಪುರ.ಮೂರನೆಯ ಮುದ್ರಣ 2005 ಪುಟ28

2)ಅದೇಪುಟ37

3)ಅದೇ ಪುಟ46

5) ಶ್ರೀ ಸಚ್ಚಿದಾನಂದೇಂದ್ರ ಸರಸ್ವತೀ ಸ್ವಾಮಿಗಳು,ದಶೋಪನಿಷತ್ತುಗಳ ಸಾರ,ಅಧ್ಯಾತ್ಮ ಪ್ರಕಾಶ ಕಾಯಾ೯ಲಯ,ಹೊಳೆನರಸೀಪುರ ಮೊದಲನೇ ಮುದ್ರಣ 2002 ಪಪುಟ 10೯.

6)ಅದೇ ಪುಟ 10೯

7)ಅದೇ ಪುಟ 10೯

8)ಸ್ವಾಮಿ ಸೋಮನಾಥಾನಂದ,ಉಪನಿಷತ್ ಭಾವಧಾರೆ.ಶ್ರೀ ರಾಮಕೃಷ್ಣಾಶ್ರಮ,ಮೈಸೂರು ನಾಲ್ಕನೆಯ ಮುದ್ರಣ1೯8೯.ಪುಟ482

ತೈತ್ತಿರೀಯ ಉಪನಿಷತ್ತು ಅಡಿಟಿಪ್ಪಣಿಗಳು:

1) ಸ್ವಾಮಿ ಆದಿದೇವಾನಂದ,ತೈತ್ತಿರೀಯ ಉಪನಿಷತ್, ಶ್ರೀರಾಮಕೃಷ್ಣಾಶ್ರಮ, ಮೈಸೂರು, ಐದನೆಯ ಮುದ್ರಣ 1೯೯3 ಪುಟ 3೯

2) ಅದೇ ಪುಟ43

3)ಅದೇ ಪುಟ45

4)ಅದೇ ಪುಟ 72

5) ಅದೇ ಪುಟ 73

6)ಸೋಮನಾಥಾನಂದ,ಉಪನಿಷತ್ ಭಾವಧಾರೆ, ಶ್ರೀರಾಮಕೃಷ್ಣಾಶ್ರಮ, ಯಾದವಗಿರಿ,ಮೈಸೂರು,ನಾಲ್ಕನೆಯ ಮುದ್ರಣ,1೯8೯,ಪುಟ134

7) ಅದೇ ಪುಟ 135

ಐತರೇಯ ಉಪನಿಷತ್ತು ಅಡಿಟಿಪ್ಪಣಿಗಳು:

1) ಸೋಮನಾಥಾನಂದ,ಉಪನಿಷತ್ ಭಾವಧಾರೆ,ಶ್ರೀ ರಾಮಕೃಷ್ಣಾಶ್ರಮ, ಯಾದವಗಿರಿ,ಮೈಸೂರು 20,ನಾಲ್ಕನೆಯ ಮುದ್ರಣ,1೯8೯

ಪುಟ563

2) ಅದೇ ಪುಟ 573

3) ಅದೇ ಪುಟ 576

4) ಸ್ವಾಮಿ ಸಚ್ಚಿದಾನಂದೇಂದ್ರ ಸರಸ್ವತಿಗಳು,ದಶೋಪನಿಷತ್ತುಗಳ ಸಾರ,ಅದ್ಯಾತ್ಮ ಪ್ರಕಾಶ ಕಾಯಾ೯ಲಯ,ಹೊಳೆನರಸೀಪುರ,ಹಾಸನ ಜಿಲ್ಲೆ

ಪುಟ 134

5) ಅದೇ ಪುಟ 135

ಛಾಂದೋಗ್ಯ ಉಪನಿಷತ್ ಅಡಿಟಿ¥್ಪಣಿಗಳು:

1)ಸ್ವಾಮಿ ಆದಿದೇವಾನಂದ ಛಾಂದೋಗ್ಯ ಉಪನಿಷತ್,ರಾಮಕೃಷ್ಣಾಶ್ರಮ, ಯಾದವಗಿರಿ ಮೈಸೂರು 20.   ಐದನೆಯ ಮುದ್ರಣ 1೯೯5 ಪುಟ27೯

3)ಅದೇ ಪುಟ 364

4)ಅದೇ ಪುಟ371

5)ಅದೇ ಪುಟ366

6) ಅದೇ ಪುಟ422

7)ಹೆಚ್. ಎಸ್.ಲಕ್ಷ್ಮಿ ನರಸಿಂಹಮೂತಿ೯. ಛಾಂದೋಗ್ಯ ಉಪನಿಷತ್ ಮಂಜರಿ ಅಧ್ಯಾತ್ಮ ಪ್ರಕಾಶ ಕಾಯಾ೯ಲಯ,ಹೊಳೆನರಸಿಪುರ.ಹಾಸನ ಜಿಲ್ಲೆ. ಎರಡನೇಮುದ್ರಣ. 2010 ಪುಟ180

8)ಅದೇ ಪುಟ 1೯1

೯)ಅದೇ ಪುಟ210

10)ಅದೇಪುಟ265

11) ಶ್ರೀ ಸಚ್ಚಿದಾನಂದೇಂದ್ರ ಸರಸ್ವತಿ ಸ್ವಾಮಿಗಳು, ದಶೋಪನಿಷತ್ತುಗಳ ಸಾರ,ಅಧ್ಯಾತ್ಮ ಪ್ರಕಾಶ ಕಾಯಾ೯ಲಯ, ಹೊಳೆನರಸಿಪುರ ಮೊದಲನೇ ಮುದ್ರಣ2007 ಪುಟ165

12)ಅದೇ ಪುಟ238.

ಬೃಹದಾರಣ್ಯಕ ಉಪನಿಷತ್ ಅಡಿಟಿಪ್ಪಣಿಗಳು:

1) ಸ್ವಾಮಿ ಆದಿದೇವಾನಂದ, ಬೃಹದಾರಣ್ಯಕ ಉಪನಿಷತ್,ಶ್ರೀರಾಮಕೃಷ್ಣಾಶ್ರಮ,ಮೈಸೂರು20, ನಾಲ್ಕನೆಯ ಮುದ್ರಣ,1೯೯0,ಪುಟ 6

2)ಅದೇ ಪುಟ 8

3)ಅದೇ ಪುಟ12

4)ಅದೇ ಪುಟ14

5) ಅದೇ ಪುಟ1೯

6)ಶ್ರೀಹೆಚ್.ಎಸ್.ಲಕ್ಷ್ಮೀನರಸಿಂಹಮೂತಿ೯.ಬೃಹದಾರಣ್ಯಕ ಉಪನ್ಯಾಸ ಮಂಜರಿ,ಅಧ್ಯಾತ್ಮ ಪ್ರಕಾಶ ಕಾಯಾ೯ಲಯ,ಹೊಳೆನರಸೀಪುರ,ಹಾಸನ ಜಿಲ್ಲೆ. ಎರಡನೇ ಮುದ್ರಣ 2010 ಪುಟ 14.

7) ಅದೇ ಪುಟ16

8) ಅದೇ ಪುಟ116

೯)ಅದೇಪುಟ 312

10)ಶ್ರೀಸಚ್ಚಿದಾನಂದೇಂದ್ರ ಸರಸ್ವತೀ ಸ್ವಾಮಿಗಳು. ದಶೋಪನಿಷತ್ತುಗಳ ಸಾರ, ಅಧ್ಯಾತ್ಮ ಪ್ರಕಾಶ ಕಾಯ೯ಲಯ,ಹೊಳೆನರಸೀಪುರ. ್ರಮೊದಲನೇ ಮುದ್ರಣ2002 ಪುಟ273

11)ಅದೇ ಪುಟ 300

12)ಅದೇ ಪುಟ300

13) ಅದೇ ಪುಟ 346

No comments:

Post a Comment